ಶೈಲಪುತ್ರಿ
ದಕ್ಷ ಪ್ರಜಾಪತಿಯ ಆ ಬೃಹತ್ ಯಾಗಶಾಲೆಯಲ್ಲಿ ಅಂದು ಧಗಧಗನೆ ಉರಿಯುತ್ತಿದ್ದದ್ದು ಕೇವಲ ಹವಿಸ್ಸಿನ ಬೆಂಕಿಯಲ್ಲ, ಜಗತ್ತಿನ ಮೂಲಶಕ್ತಿಯ ಸ್ವಾಭಿಮಾನ. ತನ್ನ ಪತಿ ಮಹಾದೇವನಿಗೆ ಆ...
Wednesday, January 18, 2023
ವಾಸ್ತವಸತ್ಯ ಸಾಮಾನ್ಯರಿಗೆ ಅರ್ಥ ವಾಗುವುದೆ?
Tuesday, January 17, 2023
ಸಂಕ್ರಾಂತಿ, ಸಮ್ ಕ್ರಾಂತಿ, ಸನ್ ಕ್ರಾಂತಿ
ಸಂಕ್ರಾಂತಿಯನ್ನು ಸಮ್ ಕ್ರಾಂತಿ ,ಸನ್ ಕ್ರಾಂತಿಯೆಂದು
ಕಂಗ್ಲೀಷ್ ನಲ್ಲಿ ಹೇಳಿದರೂ ಸಂಕ್ರಾಂತಿಯ ಸತ್ವ,ಸತ್ಯಕ್ಕೆ
ಚ್ಯುತಿ ಬರೋದಿಲ್ಲ. ಆದರೆ ಮಾನವ ಜ್ಞಾನದಿಂದ ಸಂಕ್ರಾಂತಿ ಆಚರಿಸುವುದಕ್ಕೂ ಅಜ್ಞಾನದಿಂದ ಆಚರಿಸುವುದಕ್ಕೂ ವ್ಯತ್ಯಾಸವಿದೆ. ಪ್ರಕೃತಿಯೊಂದಿಗೆ ಬೆರೆತು ಬಾಳುವುದಕ್ಕೂ ಪ್ರಕೃತಿ ವಿರುದ್ದ ಬಾಳುವುದಕ್ಕೂ ವ್ಯತ್ಯಾಸವಿದ್ದ ಹಾಗೆ ಒಂದು ರಾಜಯೋಗ ಇನ್ನೊಂದು ರಾಜಕೀಯ.
ಕ್ರಾಂತಿಯ ನಂತರವೇ ಶಾಂತಿ ಎನ್ನುವ ಬದಲು ಶಾಂತಿಯಿಂದ ಕ್ರಾಂತಿಗೆ ಕಾರಣ ತಿಳಿಯುವುದು ಜ್ಞಾನ.
ಅತಿಯಾದ ಶಾಂತಿ ಕ್ರಾಂತಿಗೆ ಕಾರಣವಾದಂತೆ ಅತಿಯಾದ ಕ್ರಾಂತಿ ಶಾಂತಿಗೆ ಕಾರಣವಾಗೋದಿಲ್ಲ. ಹೀಗಾಗಿ ಯಾವುದೇ ವಿಚಾರವಿರಲಿ ಮಿತಿಮೀರಿದರೆ ಅಧೋಗತಿ.
ಹಿಂದೂ ಧರ್ಮವನ್ನು ವೇದಗಳಿಗಿಂತ ಹೆಚ್ಚಾಗಿ ಗಾದೆಗಳಿಂದ ಉಳಿಸಿ ಬೆಳೆಸಿದರೆ ಮಾನವನಾಗಿದ್ದು ಭೂಮಿಯಲ್ಲಿ ಹೇಗೆ ಜೀವಿಸಬೇಕೆಂಬುದು ಸರಳವಾಗಿ ಅರ್ಥವಾಗಬಹುದು.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವುದು ಸತ್ಯ. ವೇದಕಾಲದ ಸತ್ಯಾಸತ್ಯತೆಯನ್ನು ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಬಂದು ಅದರ ಅನುಭವವನ್ನು ಗಾದೆ ಮೂಲಕ ಜನಸಾಮಾನ್ಯರು ಅರ್ಥಮಾಡಿಕೊಂಡವರು
ವೇದಕಾಲದಲ್ಲಿದ್ದವರೂ ಕಲಿಯುಗದವರೆಗೂ ಇರುವವರೆಂದರೆ ಮಾನವನ ಮೂಲ ಯಾರೂ ತಿಳಿಸಲಾಗದು. ಅವರವರ ಜನ್ಮಕ್ಕೆ ತಕ್ಕಂತೆ ಧರ್ಮ ಕರ್ಮ ವೂ ಪುರಾಣಕಾಲದಿಂದಲೂ ಇದೆ.ಈಗಲೂ ಇದೆ.ವ್ಯತ್ಯಾಸ ವಿಷ್ಟೆ ಅಂದು ಧರ್ಮ ಕರ್ಮ ದ ಪ್ರಕಾರ ಶಿಕ್ಷಣವಿದ್ದು ಸ್ವತಂತ್ರ ಜ್ಞಾನವಿತ್ತು. ಈಗ ಧರ್ಮ ವೇ ಬೇರೆ ಕರ್ಮವೇ ಬೇರೆ ಶಿಕ್ಷಣವೇ ಬೇರೆ ಒಂದಕ್ಕೊಂದು ಹೊಂದಿಕೆ ಆಗದೆ ಸ್ವತಂತ್ರ ಜ್ಞಾನವಿಲ್ಲದವರು ಪರರ ತಂತ್ರದಲ್ಲಿ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆದಿದೆ.
ಭಗವದ್ಗೀತೆ ಯ ಸಾರ ಕನ್ನಡದ ಭಗವದ್ಗೀತೆ ಎಂದು ಕರೆಯೋ ಡಿ.ವಿ.ಗುಂಡಪ್ಪನವರ ಕಗ್ಗದ ಸಾರ ಒಂದೇ ಆದರೂ ಭಗವದ್ಗೀತೆ ಪವಿತ್ರ ಗ್ರಂಥ ಭಗವಂತನ ವಾಣಿಯು ಜಗತ್ತಿಗೇ ಬೆಳಕನ್ನು ಕೊಡುವ ಮಟ್ಟಿಗೆ ಪ್ರಚಾರವಾಗುತ್ತದೆ.
ಆದರೆ, ಕನ್ನಡದ ಕಗ್ಗ ಅರ್ಥ ಮಾಡಿಕೊಳ್ಳಲು ಕನ್ನಡಿಗರಿಗೇ ಕಷ್ಟವಾದರೂ ಗುಂಡಪ್ಪನವರಂತಹ ಮಹಾತ್ಮರ ವಾಸ್ತವತೆಯ ಸತ್ಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು
ನಾವು ತಯಾರಿಲ್ಲ.ಕಾರಣ. ನಾನಿರುವಾಗ ನನಗೆ ನನ್ನ ವಾಸ್ತವ ಸತ್ಯವನ್ನು ಬೇರೆಯವರು ಹೇಳಿದರೆ ಇಷ್ಟವಾಗೋದಿಲ್ಲ. ಹೀಗಾಗಿ ಸತ್ಯ ನಾನು ಒಪ್ಪೋದಿಲ್ಲ
ವಾದಾಗ ನನಗೆ ನಾನೇ ಸರಿ. ನನ್ನೊಳಗೇ ಇರುವ ಸತ್ಯ ನನಗೇ ವೈರಿಯಾದರೆ ಹಿಂದಿನ ಕಾಲದ ವೇದವಾಗಲಿ ಗಾದೆಯಾಗಲಿ ನನಗೆ ಅರ್ಥ ವಾಗದು. ಇದು ನನ್ನದೇ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವೂ ನನ್ನೊಳಗೇ ಇದೆ. ಹೊರಗಿರುವ ಸತ್ಯಾಸತ್ಯತೆಯನ್ನು ಎಲ್ಲಿಯವರೆಗೆ ನಾನು ಹಿಡಿದುಕೊಂಡು ನಡೆಯುವೆನೋ ಅಲ್ಲಿಯವರೆಗೆ ನನ್ನೊಳಗೇ ಅಡಗಿರುವ ಸತ್ಯಕ್ಕೆ ನಾನು ಸ್ಪಂದಿಸೋದು ಕಷ್ಟ. ಅದರಲ್ಲೂ ಯಾವಾಗ ನನಗೆ ಹೊರಗೆ ಅಸತ್ಯ,ಅನ್ಯಾಯ,
ಭ್ರಷ್ಟಾಚಾರ ಸಹಕರಿಸಿ ಅಧಿಕಾರ,ಹಣ, ಹೆಸರು,ಸ್ಥಾನ ಕೊಡುವುದೋ ನಾನು ಹೊರಗಿನವನಾಗೇ ಇರುತ್ತೇನೆ. ಈ ಕಾರಣಕ್ಕಾಗಿ ನಾನು ಹಿಂದಿನವರೆಡೆಗೆ ಹೋಗದೆ ಮುಂದೆ ನಡೆದು ಮೂಲದಿಂದ ದೂರವಾಗಿ ಪರಕೀಯರ ವಶದಲ್ಲಿ ನಾನಿರುವಾಗ ಒಳಗಿನ ಪರಮಾತ್ಮನನಗೆ ಸಿಗೋದಿಲ್ಲವಲ್ಲ.
ನಾನಿರುವಾಗ ಪರಮಾತ್ಮ ಕಾಣದುಪರಕೀಯತೆ ಹೋದಾಗ
ಪರಮಾತ್ಮನ ದರ್ಶನ. ನನ್ನೊಳಗೇ ಇರುವ ಪರಕೀಯರ
ಜ್ಞಾನವೇ ಭೌತಿಕದೆಡೆಗೆ ಸೆಳೆದಿರುವಾಗ ಅಧ್ಯಾತ್ಮದ
ಪರಮಾತ್ಮನ ಜ್ಞಾನದ ಅನುಭವ ನನಗೆ ಆಗದು.
ಆಳವಾಗಿರುವ ಬೇರನ್ನು ಕೀಳಲಾಗದು. ಬೆಳೆದಿರುವ ರೆಂಬೆ ಕೊಂಬೆಗಳನ್ನು ಮುರಿದರೂ ಬೇರು ಚಿಗುರುತ್ತದೆ. ಹಾಗಾಗಿ ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಶಿಕ್ಷಣದಲ್ಲಿಯೇ ಮಾಡಿ ಭಾರತವನ್ನು ಆಳುವ ತಂತ್ರಕ್ಕೆ ನಮ್ಮವರ ಸಹಕಾರ
ಹೆಚ್ಚಾಗಿರುವಾಗ ಎಷ್ಟೇ ತತ್ವಜ್ಞಾನದ ಪ್ರಚಾರ ಮಾಡಿದರೂ
ತತ್ವವನ್ನು ವೇದದಿಂದಾಗಲಿ,ಗಾದೆಯಿಂದಾಗಲಿ ಅಳವಡಿಸಿಕೊಳ್ಳಲು ಸೋತರೆ ಹಿಂದುಳಿದ ಜನರಷ್ಟೆ ಕಾಣೋದು ಹಿಂದೂ ಧರ್ಮದ ಸಾರವಲ್ಲ. ಒಟ್ಟಿನಲ್ಲಿ ಸಂಸಾರ ಬಿಟ್ಟು ಹೊರಗೆ ಬಂದವರಿಗೆ ಮುಕ್ತಿ ಎನ್ನುವುದು ಅಸತ್ಯ. ಸಂಸಾರದಲ್ಲಿದ್ದು ಅದರ ಸಾರವನ್ನು ಅರ್ಥ ಮಾಡಿಕೊಳ್ಳಲು ಸಂನ್ಯಾಸಿಗಳ ಅಗತ್ಯಕ್ಕಿಂತ ಯೋಗಿಗಳ ಅಗತ್ಯವಿದೆ. ಯೋಗಿಗಳು ಸಂನ್ಯಾಸಿಗಿಂತ ದೊಡ್ಡವರು.
ಯೋಗ್ಯ ಜೀವನ ನಡೆಸೋದು ಯೋಗಿಗಳಾಗುತ್ತಾರೆ.
ಎಲ್ಲವೂ ನಶ್ವರ ಎಂದು ಸತ್ಯ ತಿಳಿಯದೆ ಸಂನ್ಯಾಸಿ
ಯಾದರೂ ಕಾಡಿನಲ್ಲಿದ್ದು ಸಾಧನೆ ಮಾಡಿದವರು
ಶ್ರೇಷ್ಠ ಜ್ಞಾನಿಗಳಾಗುತ್ತಾರೆ. ಅನುಭವಿಸಿಯೇ ಸತ್ಯ ದರ್ಶನ ಎನ್ನುವುದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಇದರಲ್ಲಿ ಅಧ್ಯಾತ್ಮ ಭೌತಿಕ ವಿಜ್ಞಾನದ ಅಂತರ ಹೆಚ್ಚಾದರೆ ಕಷ್ಟ ನಷ್ಟ ಹೆಚ್ಚುತ್ತದೆ. ಆಕಾಶದೊಳಗಿರುವ ಭೂಮಿ,ಭೂಮಿ ಮೇಲಿರುವ ಮಾನವ,ಮಾನವನೊಳಗಿರುವ ಸತ್ಯಜ್ಞಾನದವರೆಗೂ ಒಂದೇ ಶಕ್ತಿ ಇರೋದು. ಆ ಶಕ್ತಿಯನ್ನು ಹೊರಗೆ ತೋರಿಸಲಾಗದು ಒಳಗೇ ತಿಳಿಯುವುದೇ ಅಧ್ಯಾತ್ಮ.
ಸಮಾಜದ ಋಣದಲ್ಲಿರುವ ಎಲ್ಲರೂ ಸಂಸಾರಿಗಳೇ. ಋಣ ಮುಕ್ತನಾಗೋದಕ್ಕೆ ಸೇವೆ ಮಾಡಬೇಕು.ಭೂ ಸೇವೆಯನ್ನು
ನಿಸ್ವಾರ್ಥ ನಿರಹಂಕಾರದಿಂದ ಜ್ಞಾನದಿಂದ ಮಾಡಲು ಸತ್ಯ ತಿಳಿಯಬೇಕು. ಆತ್ಮಸಾಕ್ಷಿಯಂತೆ ನಡೆಯುವವರಿಗೆ ಆತ್ಮಜ್ಞಾನವಾದ ನಂತರವೇ ಎಲ್ಲಾ ಸೇವೆಯಲ್ಲಿ ಪರಮಾತ್ಮನ ಕಾಣಲು ಸಾಧ್ಯವಾಗಿ ನಾನಿರೋದಿಲ್ಲ. ಇದನ್ನು ಅದ್ವೈತ ಸಿದ್ದಾಂತದ ಪ್ರಕಾರ ನಾನೆಂಬುದಿಲ್ಲ ಎಂದರು.
ವಾಸ್ತವದಲ್ಲಿ ಎಲ್ಲಾ ನಡೆದಿರೋದಕ್ಕೆ ನಾನೇ ಕಾರಣವೆಂದಾಗ
ಅದರ ಪ್ರತಿಫಲ ನಾನೇ ಪಡೆಯಬೇಕಷ್ಟೆ.ಒಳ್ಳೆಯದಾದರೆ ಉತ್ತಮ ಫಲ ಕೆಟ್ಟದ್ದಾದರೆ ಕೆಟ್ಟಫಲ.ಹಾಗಾದರೆ ನಾನ್ಯಾರು?
ಜೀವವೋ ? ಪರಮಾತ್ಮವೋ?
ಪರಮಾತ್ಮ ಒಬ್ಬನಾದರೆ ಎಲ್ಲರಲ್ಲಿಯೂ ಇರುವ ನಾನೇ ಪರಮಾತ್ಮನೆ? ಪರಮಾತ್ಮನಲ್ಲಿ ಅಧರ್ಮವಿದೆಯೆ? ಅಸುರತೆ ಇದೆಯೇ? ಅಸತ್ಯ,ಅನ್ಯಾಯ,ಭ್ರಷ್ಟಾಚಾರ ವಿದೆಯೆ? ಎಲ್ಲಾ ಇರುವುದು ಯಾರಲ್ಲಿ? ನನ್ನಲ್ಲಿ. ನಾನೇ ಬೇರೆ ಪರಮಾತ್ಮನೆ ಬೇರೆ ಎನ್ನುವ ದ್ವಂದ್ವ ನಿಲುವಲ್ಲಿ ನನಗೆ ಭೂಮಿ ಮೇಲಿರುವ ಜ್ಞಾನವೂ ಇಲ್ಲ. ಆಕಾಶಕ್ಕೆ ಹಾರೋ ಜ್ಞಾನವೂ ಇಲ್ಲ. ಹೀಗಾಗಿ ಮಧ್ಯೆ ಇರುವ ಮಾನವನಾಗಿರಲು ಸಾಧ್ಯವಾಗದೆ ನನಗೆ ನಾನೇ ಮೋಸ ಹೋದರೂ ಚಿಂತೆಯಿಲ್ಲ. ಸ್ವಾಮಿವಿವೇಕಾನಂದರ ವಿವೇಕದ ರಾಜಯೋಗ ಅರ್ಥ ವಾಗಲ್ಲ. ರಾಜಕೀಯ ಬಿಟ್ಟು ಜೀವನ ನಡೆಸಲಾಗುತ್ತಿಲ್ಲ. ಆದರೂ ನಾನು ಸ್ವತಂತ್ರ ಭಾರತದ ಪ್ರಜೆಯಾಗಿದ್ದು ಸ್ವತಂತ್ರ
ಚಿಂತನೆ ನಡೆಸುವ ಸ್ವಾತಂತ್ರ್ಯ ಇನ್ನೂ ಇರೋದು ಆ ಪರಮಾತ್ಮನ ಕೃಪೆ ನನ್ನ ಮೇಲಿದೆ. ಪರಮಾತ್ಮನಿಲ್ಲದೆ ನಾನಿಲ್ಲ.
ನಾನಿಲ್ಲದ ಪರಮಾತ್ಮನಿಲ್ಲ. ಅದ್ಯಾತ್ಮ ದ ಅನುಭವದಲ್ಲಿ ಸ್ತ್ರೀ ಗಾದ ಅನುಭವ ಪುರುಷರಿಗಾಗಿಲ್ಲ.ಪುರುಷರಿಗಾದ ಅನುಭವ ಸ್ತ್ರೀ ಗಾಗಿಲ್ಲ. ಹೀಗಿರುವಾಗ ಭೂಮಿ ಮೇಲಿರುವ
ಇಬ್ಬರಿಗೂ ಅನುಭವದಲ್ಲಿ ವ್ಯತ್ಯಾಸವಿದೆ.ನಮ್ಮ ಅನುಭವವೇ ನಮಗೆ ಸಮಸ್ಯೆ ಯಾಗಿರುವಾಗ ಬೇರೆಯವರ ಅನುಭವದಿಂದ ಸಮಸ್ಯೆ ನಿವಾರಣೆ ಸಾಧ್ಯವಾಗೋದಾದರೆ ಅದು ಯೋಗಿಗಳ ಅನುಭವವಾಗಿರಬೇಕು.ಅದ್ವೈತ ದಲ್ಲಿದ್ದು
ಸಾಧನೆ ಮಾಡಿರಬೇಕು. ವೇದದ ಜೊತೆಗೆ ಗಾದೆಯ ಸತ್ಯವೂ
ಸೇರಿರಬೇಕು. ಅಂತಹವರಿಗೆ ಪರಮಾತ್ಮನೇ ನೇರವಾಗಿ ನಡೆಸುವಾಗ ಒಂದೇ ಸತ್ಯವಿರುತ್ತದೆ. ಕಾರಣ ಮೂಲ ಒಂದೇ. ಆ ಮೂಲದಕಡೆಗೆ ಹೊರಟವರಿಗೆ ನೆಮ್ಮದಿ ,ಶಾಂತಿ
ತೃಪ್ತಿ ಮುಕ್ತಿ ಸಿಕ್ಕಿದೆ. ಅದನ್ನು ಬಿಟ್ಟು ಹೊರಬಂದವರನ್ನು ಇಲ್ಲಿ ಸಾಧಕರನ್ನಾಗಿಸಿದರೆ ಅಧ್ಯಾತ್ಮ ವಾಗದೆ ರಾಜಕೀಯ
ತಂತ್ರವಷ್ಟೆ ಆಗಿರುತ್ತದೆ. ಯಾರನ್ನೋ ಯಾರೋ ಆಳಲು ಇದು ರಾಜಪ್ರಭುತ್ವದ ದೇಶವಲ್ಲ. ಪ್ರಜಾಪ್ರಭುತ್ವದ ದೇಶ.
ಇದಕ್ಕೆ ಸಹಕರಿಸುವ ಪ್ರಜೆಗಳಿಗೆ ವೇದವೂ ಗೊತ್ತಿಲ್ಲ. ಗಾದೆಯೂ ಅರ್ಥ ವಾಗಿಲ್ಲ. ಅಜ್ಞಾನಿಗಳನ್ನು ಬೆಳೆಸುತ್ತಾ ಹೊರಬಂದ ಶಿಕ್ಷಣವೇ ಇದಕ್ಕೆ ಕಾರಣವಾಗಿದ್ದರೂ ಹೇಳಿದರೂ ಕೇಳಿ ತಿಳಿಯುವ ಜ್ಞಾನವಿಲ್ಲದೆ ಮನೆಯಿಂದ ಹೆಚ್ಚು ಮಹಿಳೆ ಮಕ್ಕಳು ಹೊರಬಂದು ಹೋರಾಟ,ಹಾರಾಟ,
ಮಾರಾಟದ ವ್ಯವಹಾರಿಕ ಹಾಗು ರಾಜಕೀಯದಲ್ಲಿ ದೈವತ್ವವಿಲ್ಲ.
ಕಾಲಚಕ್ರ ತಿರುಗುವಾಗ ಕೆಳಗಿರುವ ಹಿಂದುಳಿದವರು ಮೇಲೆ ಬರುತ್ತಾರೆ.ಮೇಲಿನವರು ಕೆಳಗಿರುತ್ತಾರೆ. ಪರಮಾತ್ಮನಿಗೇನೂ ನಷ್ಟವಿಲ್ಲ. ಜೀವಾತ್ಮನೇ ಎಲ್ಲದ್ದಕ್ಕೂ ಕಾರಣಕರ್ತನಾಗಿರುತ್ತಾನೆ.
ಭಾರತೀಯರಲ್ಲಿ ಭಾರತೀಯತೆ ದೇಶದೊಳಗಿದ್ದರೆ ದೇಶದ ಋಣ ತೀರಿಸಬಹುದು. ದೇಶದ ಹೊರಗೆ ಹೋಗಿದ್ದರೆ ಹೇಗೆ ಋಣ ತೀರಿಸಲಾಗುತ್ತದೆ? ಹಾಗೇ ದೈವತ್ವ ಒಳಗಿದ್ದರೆ ದೇವರ ದರ್ಶನ. ಹೊರಗಿದ್ದರೆ ಪ್ರತಿಮೆಯಷ್ಟೆ ಕಾಣೋದು. ಪ್ರತಿಮೆ ಶಾಶ್ವತವಲ್ಲ. ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿತಾಣವಾಗಿಸುವ ಬದಲು ಯಾತ್ರಸ್ಥಳ ಮಾಡಿದರೆ ಧರ್ಮ, ಎಲ್ಲಿ ವ್ಯವಹಾರವಿರುವುದೋ ಅಲ್ಲಿ ಅಸತ್ಯ,ಅನ್ಯಾಯ, ಅಧರ್ಮ, ನಾನೆಂಬ ರಾಜಕೀಯತೆ ಹೆಚ್ಚು. ಹೀಗಾಗಿ ಹಿಂದಿನ ಭಾರತದಲ್ಲಿ ಮನೆ ಮನೆಯೂ ಗುರುಕುಲವಾಗಿತ್ರು ದೇವಸ್ಥಾನವಿತ್ತು. ಆದರೀಗ ಮನೆ ಬಿಟ್ಟು ಹೊರಗೆ ದೇವರನ್ನು ಹುಡುಕುತ್ತಾ, ಹೊರಗಿನ ಶಿಕ್ಷಣಕ್ಕಾಗಿ ಮನೆ ಬಿಟ್ಟು ನಡೆದವರಿಗೆ ಪೋಷಕರ ಸಹಕಾರ,ಗುರುಗಳ ಆಶೀರ್ವಾದ, ಹಿರಿಯರ ಪ್ರೋತ್ಸಾಹ. ಪುರಸ್ಕಾರ ಸಿಗುತ್ತದೆ. ಮನೆಯೊಳಗಿದ್ದು ಧರ್ಮ ಕರ್ಮ ವನ್ನು ತಿಳಿದವರಿಗೆ ತಿರಸ್ಕಾರವಿದೆ ಎಂದರೆ ಭಾರತೀಯರು ಎಲ್ಲಿರುವರು?
Wednesday, January 11, 2023
ತ್ಯಾಗರಾಜರ ಆರಾಧನೆಯಲ್ಲಿ ತ್ಯಾಗಮನೋಭಾವವಿರಲಿ
Monday, January 9, 2023
ಮಾತು ಬೆಳ್ಳಿ ಮೌನ ಬಂಗಾರವಂತೆ ಯಾಕೆ?
.
ಮಾತು ಬೆಳ್ಳಿ ಮೌನ ಬಂಗಾರ
*ತನ್ನಷ್ಟಕ್ಕೆ ತಾನು ಪ್ರಶಾಂತವಾಗಿರುವ ಮನುಷ್ಯನನ್ನು, ಈ ಜಗತ್ತು ಎಂದಿಗೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.**
**ಮಕ್ಕಳ ಮುಂದಿನ ಭವಿಷ್ಯಕ್ಕಾಗಿ,
ಹೆತ್ತವರು ವರ್ತಮಾನವನ್ನು ಕಳೆದುಕೊಳ್ಳಲೇಬೇಕು.ಅದರ ಫಲಾಫಲವನ್ನೂ ಕೂಡ ಭವಿಷ್ಯದಲ್ಲೇ ನೋಡಬೇಕು.**
**ಜಗತ್ತಿನಲ್ಲಿ ತುಂಬ ಸುಲಭದ ಮತ್ತು ಕಷ್ಟದ ಸಂಗತಿ ಎಂದರೆ "ತಪ್ಪನ್ನು" ಇನ್ನೊಬ್ಬರು ಮಾಡಿದರೆ
ಗಮನಿಸುವುದು 'ಸುಲಭ',ನಾವೇ ಮಾಡಿದರೆ ಒಪ್ಪುವುದು 'ಕಷ್ಟ".**
ಸಾಧನೆಯ ಮಾರ್ಗದಲ್ಲಿ ಇನ್ನೂ
ಬಹಳ ದೂರಕ್ರಮಿಸಬೇಕಾಗಬಹುದೆಂದು ನಿಮಗೆ
ಚಿಂತೆ ಆಗಬಹುದು.ಆದರೆ ಒಮ್ಮೆ ಹಿಂತಿರುಗಿ ನೋಡಿದಾಗ,ನೀವು ಆಗಲೇ ಸಾಧನೆಗೆ ಹತ್ತಿರ
ಬಂದಿರುವುದು ಮನವರಿಕೆಯಾಗಬಹುದು.**
ನಡೆಯುವಾಗ ಒಂದು ಕಾಲು ಮುಂದೆ
ಮತ್ತು ಒಂದು ಕಾಲು ಹಿಂದೆ ಇರುತ್ತವೆ. ಮುಂದಿನ ಕಾಲಿಗೆ ಗರ್ವವಿರುವುದಿಲ್ಲ ಹಿಂದಿನ ಕಾಲಿಗೆ ಬೇಸರವಿರುವುದಿಲ್ಲ.ಏಕೆಂದರೆ ,ಅವುಗಳಿಗೆ ಗೊತ್ತು.ಇದುಕ್ಷಣಾರ್ಧದಲ್ಲಿ ಬದಲಾಗುವುದಿದೆಎಂದು. ಜೀವನವು ಹೀಗೆ ಯಾವಾಗಲೂ ಸ್ಥಿರವಾಗಿರುವುದಿಲ್ಲ.**
**FAITH is Like a Small LAMP in a Dark FOREST. It does not Show Everything at Once but gives Enough Light for the Next Step to be SAFE.**
** Do not Cry over the Past, it is Gone. Do not Stress about the Future, it has not arrived. Live in the Present and make it Beautiful.**
**Everything in the World is BEAUTIFUL depending on your THOUGHTS. A SCHOOL BELL Sounds Irritating at 8 A M, but the same BELL Sounds MELODIOUS at 2 P M.**
**Self Confidence us a Super Power. Once you start to Believe in Yourself, Magic Starts Happening.**
*^APPRECIATE the Space between Where You are and Where You are Going.**
**TWO things Define You: Your PATIENCE When You have Nothing and Your ATTITUDE When you have EVERYTHING.**
—————————————————-
ಮೌನ ಮತ್ತು ಮಾತು ಅತಿಯಾದರೆ ಯೋಗಿಯಾಗಲಾರನು.
ಯೋಗವೆಂದರೆ ಸೇರುವುದು,ಕೂಡುವುದೆಂದರ್ಥ ವಾದರೆ ಇಲ್ಲಿ ಪರಮಾತ್ಮನ ಜೀವಾತ್ಮ ಸೇರುವುದು, ಮನಸ್ಸು ಮತ್ತು ಆತ್ಮ ಒಂದಾಗೋದು,ನಡೆ ನುಡಿ ಸಮಾನವಾಗಿರೋದು, ಆತ್ಮಾನುಸಾರ ನಡೆಯೋದು,
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗದಲ್ಲಿ
ಕರ್ಮ ಮಾಡದೆಯೇ ಜ್ಞಾನವಿಲ್ಲ.ಜ್ಞಾನವಿಲ್ಲದ ಕರ್ಮದಿಂದ ಮುಕ್ತಿಯಿಲ್ಲ ಯೋಗವಿಲ್ಲ. ದೇಶವನ್ನು ಯೋಗದ ದೃಷ್ಟಿಯಿಂದ ನೋಡಿದರೆ ನಮ್ಮಲ್ಲಿ ದೇಶದ ಜ್ಞಾನವಿರಬೇಕು,ದೇಶಭಕ್ತಿಯಿರಬೇಕು,ದೇಶಕ್ಕಾಗಿ ದುಡಿಯಬೇಕು ಆಗಲೇ ನಾನ್ಯಾರೆಂಬ ಸತ್ಯದರ್ಶನವಾಗುವುದು.ಅಂದರೆ ಭಾರತಮಾತೆಯ ದರ್ಶನ ವಾಗಲು ಯೋಗಿಗಳಾಗಬೇಕೆಂದಂತೆ ದೇವರ ದರ್ಶನ ವಾಗೋದಕ್ಕೂ ಯೋಗಿಯಾಗಬೇಕು. ಯೋಗಿಗಳ ಲಕ್ಷಣವನ್ನು ಭಗವದ್ಗೀತೆ ಯಲ್ಲಿ ವಿವರಿಸಿರುವ ಶ್ರೀ ಕೃಷ್ಣ ಯೋಗಿ,ಅರ್ಜುನ ಯೋಗಿಯಾಗುವಂತೆ ಉಪದೇಶ ನೀಡಿದ ಸಾಮಾನ್ಯಜ್ಞಾನ ನಾವರಿತರೆ ಭಗವದ್ಗೀತೆ ಯು ಆತ್ಮಜ್ಞಾನದೆಡೆಗೆ ನಡೆಸುತ್ತದೆ. ಆದರೆ ಅದನ್ನು ರಾಜಕೀಯವಾಗಿ ಬಳಸಿದರೆ ಭೋಗ ಜೀವನದಲ್ಲಿ ರೋಗ ಹೆಚ್ಚುವುದು. ಗೀತೆಯಲ್ಲಿ ರಾಜಯೋಗದ ಜೊತೆಗೆ ರಾಜಕೀಯ ವಿದ್ದರೂ ಧರ್ಮ ರಕ್ಷಣೆಗಾಗಿ ಕ್ಷತ್ರಿಯನಾದವನು ಹೇಗಿರಬೇಕೆನ್ನುವ ಸತ್ಯವಿದೆ. ಇಂದಿನ ರಾಜಕಾರಣದ ಹೋರಾಟ ಕೇವಲ ತಮ್ಮ ಅಧಿಕಾರ ,ಸ್ಥಾನ ಉಳಿಸಿಕೊಳ್ಳುವ ಮಟ್ಟಕ್ಕೆ ನಿಂತಿದೆ ಎಂದರೆ ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯವಿದೆ.
ಯೋಗಾಸನದಿಂದ ಯೋಗಿಯಾಗೋದಿಲ್ಲ. ಆರೋಗ್ಯಕರ ಜ್ಞಾನದಿಂದ ಯೋಗಿಯಾಗಬೇಕೆನ್ನುವುದು ಜ್ಞಾನಯೋಗ, ತನ್ನ ತಾನರಿತು ತನ್ನ ಜೀವನದ ಉದ್ದೇಶ ತಿಳಿದ ಮಹಾತ್ಮರಾಗಲು ರಾಜಯೋಗ ಬೇಕು, ಪರಮಾತ್ಮನಲ್ಲಿ ಮನಸ್ಸನ್ನು ನಿಲ್ಲಿಸಿ ಭಕ್ತಿಯಿಂದ ಎಲ್ಲರಲ್ಲಿಯೂ ಅಡಗಿರುವ ಆ ಶಕ್ತಿಯನ್ನರಿಯುವುದು ಭಕ್ತಿಯೋಗ, ಕಾಯಕವೇ ಕೈಲಾಸ ಎನ್ನುವ ಮಂತ್ರದ ಅರ್ಥ ಸತ್ಕರ್ಮದಿಂದ ಪರಮಾತ್ಮನ ಸೇವೆ ಮಾಡುತ್ತಾ ಜೀವನ ನಡೆಸುವುದಾಗಿದೆ. ಇದರಲ್ಲಿ ಜ್ಞಾನ ವಿಜ್ಞಾನ ಯೋಗವಿದೆ.ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನವೆಂದರೆ ತಿಳುವಳಿಕೆಯನ್ನು ಉತ್ತಮ ಶಿಕ್ಷಣದಿಂದ ವಿಶೇಷವಾಗಿ ತಿಳಿದು ಸದ್ಬಳಕೆ ಮಾಡಿಕೊಂಡಿರೋದು.
ಇವೆಲ್ಲವೂ ಅಧ್ಯಾತ್ಮ ಶಕ್ತಿಯನ್ನು ಹೆಚ್ಚಿಸುತ್ತಾ ಮೇಲಿರುವ ಪರಾಶಕ್ತಿ ಪರಮಾತ್ಮನಲ್ಲಿ ಲೀನವಾದರೆ ಯೋಗ.
ತಾತ್ಕಾಲಿಕ ಯೋಗಗಳು ನಿರಂತರ ನಡೆಯುತ್ತದೆ.ಮಾನವನ ಪ್ರಯತ್ನಕ್ಕೆ ತಕ್ಕಂತೆ ಫಲ ಸಿಗೋದು ಯೋಗ.ಇದು ಅಧಿಕಾರ, ಹಣ,ಸ್ಥಾನ,ವಸ್ತು,ಒಡವೆ, ಆಹಾರ,ವಿಹಾರ, , ವಿದ್ಯೆ, ಮದುವೆ, ಮನೆ,ಮಠ ಇನ್ನಿತರ ವಿಷಯದಲ್ಲಿ ಆಸೆಯಿಂದ ಮುಂದೆ ಹೋದವರಿಗೂ ಯೋಗವಿದೆ. ಆದರೆ ಇದರಿಂದ ಜೀವನ್ಮುಕ್ತಿ ? .ಹೀಗಾಗಿ ಸಂನ್ಯಾಸಿ ಗಳು, ಯೋಗಿಗಳು ಸ್ವತಂತ್ರ ವಾಗಿ ಸತ್ಯ ತಿಳಿದು ಆತ್ಮಶುದ್ದಿಯಿಂದ ಪರಮಾತ್ಮನೆಡೆಗೆ ಹೋಗಲು ಸಾಧ್ಯವಾಯಿತು. ಭಗವದ್ಗೀತೆ ಯು ಸರ್ವ ಕಾಲಿಕ ಸತ್ಯವಾದರೂ, ಅವರವರ ಜ್ಞಾನಕ್ಕೆ ತಕ್ಕಂತೆ ಅನುಭವಕ್ಕೆ ಬಂದ ಕಾರಣ ಸಾಕಷ್ಟು ರೀತಿಯಲ್ಲಿ ವಿವರಣೆ ಕೊಟ್ಟರೆ ಓದುಗರ ,ಕೇಳುಗರ ಯೋಗಶಕ್ತಿಗೆ ತಕ್ಕಂತೆ ಅನುಭವಕ್ಕೆ ಬರುತ್ತದೆ.ಹಾಗೆಯೇ ದೇಶ ಹಾಗು ದೇವರನ್ನು ತೋರಿಸಲಾಗದು.ಅಂತರಾಳದ ಅರಿವಿಲ್ಲದೆ ಏನೂ ಅರ್ಥ ಆಗದು. ರಾಜಯೋಗವೆಂದರೆ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಯೋಗ.ರಾಜಕೀಯದಲ್ಲಿ ಯೋಗ
ವಿಲ್ಲದೆ ಜನರನ್ನು ಆಳಿದರೆ ಅಧರ್ಮ.ಈ ವಿಚಾರಗಳು ಮೊದಲು ಸಂನ್ಯಾಸಿಗಳು ಅರ್ಥ ಮಾಡಿಕೊಂಡರೆ ಸಂಸಾರಿಗಳ ಈ ಸ್ಥಿತಿಗೆ ಕಾರಣ ತಿಳಿಸಬಹುದು. ಸಂಸಾರದಲ್ಲಿದ್ದವರು ಯೋಗಿಗಳಾಗಬಹುದು.ಸಂನ್ಯಾಸಿಯಾಗೋದಕ್ಕೆ ಮೆಟ್ಟಿಲು ಹತ್ತಬೇಕು. ಇತ್ತೀಚೆಗೆ ಸಾಕಷ್ಟು ಮಂದಿ ಮನೆ ಬಿಟ್ಟು ಹೊರ ಬಂದು ಆಶ್ರಮ ಸೇರಿದ್ದಾರೆ. ಆದರೆ ಯೋಗಿಗಳಾಗಿಲ್ಲ ಹಾಗೆ ಸಂನ್ಯಾಸಧರ್ಮವೂ ಪೂರ್ಣ ಪ್ರಮಾಣದಲ್ಲಿ ಅರ್ಥ ವಾಗಿಲ್ಲ.
ಜನಬಲ,ಹಣಬಲ,ಅಧಿಕಾರಬಲದ ಜೊತೆಗೆ ನಡೆಯುವಾಗ
ಪರಮಾತ್ಮ ಕಾಣೋದಿಲ್ಲವೆನ್ನಬಹುದು.ಅದಕ್ಕೆ ದೇಶ ಹೀಗಿದೆ. ಯೋಗ ಕೂಡಿಬರುವವರೆಗೂ ತಾಳ್ಮೆ ಬೇಕು.
ತಾಳಿದವನು ಬಾಳಿಯಾನು, ಇದು ವೈಜ್ಞಾನಿಕ ಜಗತ್ತಿಗೆ
ವಿರುದ್ದವಾಗಿರುವಾಗ ಶೀಘ್ರವಾಗಿ ಮೇಲೇರಿದವರು ಹಾಗೇ ಕೆಳಗೆ ಕುಸಿಯುವುದೂ ಸಹಜವಾಗುತ್ತಿದೆ. ನಮ್ಮಲ್ಲೇ ಇದ್ದ ದೈವಶಕ್ತಿಗೆ ಪೂರಕವಾದ ಶಿಕ್ಷಣ ನೀಡದೆ ಆಳಿದರೆ ರಾಜಕೀಯ ಮಾತ್ರ ಬೆಳೆಯುತ್ತದೆ ರಾಜಯೋಗವಲ್ಲ
ವೆನ್ನಬಹುದು. ಅದ್ವೈತ ದೊಳಗೆ ದ್ವೈತ ವಿದ್ದರೂ ಬೇರೆ ಮಾಡಿದರೆ ಅಧರ್ಮವಾಗುತ್ತದೆ. ಹಾಗೆ ದೇಶದೊಳಗಿರುವ ಪ್ರಜೆಗಳೇ ದೇಶ ಬೇರೆ ನಾನೇ ಬೇರೆ ಎಂದರೆ ವಿದೇಶವೆ ಬೆಳೆಯೋದು. ಪರಮಾತ್ಮನೊಳಗಿರುವ ಜೀವಾತ್ಮನು ನಾನೇ ಬೇರೆ ನೀನೇ ಬೇರೆ ಎಂದರೆ ಯೋಗಿಯಾಗಲಾರ. ಯಾವ ಪುರಾಣ ಇತಿಹಾಸದ ಕಥೆಗಳೂ ಈ ಸತ್ಯವನ್ನು ತಿಳಿಸಲಾಗದು ಕಾರಣವಿಷ್ಟೆ ಅವು ನಡೆದು ಹೋದ ಪುರಾಣ ಸತ್ಯ, ಇದು ವಾಸ್ತವ ಸತ್ಯ. ವಾಸ್ತವದಲ್ಲಿದ್ದು ಸತ್ಯ ತಿಳಿದರೆ ಭವಿಷ್ಯದಲ್ಲಿಯೂ ಸತ್ಯವಿರುತ್ತದೆ. ಒಂದೇ ಸತ್ಯ ಎಷ್ಟೋ ರೂಪ ತಳೆದರೂ ಸೇರೋದು ಒಂದೇ ಕಡೆ.ಅದೇ ಸತ್ಯಯೋಗ. ಸತ್ಯಾಸತ್ಯತೆ,ಜ್ಞಾನವಿಜ್ಞಾನ,ದೇವಾಸುರರು ಇರೋದು ಮಾನವನೊಳಗಿನ ಜ್ಞಾನದಲ್ಲಿ. ಹಾಗಾದರೆ ಇಲ್ಲಿ ನಮ್ಮೊಳಗೇ ಹುಡುಕಿಕೊಂಡು ಮನಸ್ಸನ್ನು ಸೇರಿಸಲು ಹೊರ ನಡೆದರೆ ಆಗುವುದೆ? ಹೊರಗೆ ಹೋದರೂ ಕಾಡಿನಲ್ಲಿ ಒಬ್ಬಂಟಿಯಾಗಿ ತಪಸ್ಸು ಮಾಡಬೇಕು.ಸಾಧ್ಯವೆ? ಇದಕ್ಕಾಗಿ ಮೌನ ಬಂಗಾರ ಮಾತು ಬೆಳ್ಳಿ ಎಂದರು. ಸತ್ಯ ತಿಳಿದ ಮೇಲೆ ಯೋಗಿ ಮೌನವಾಗುತ್ತಾನೆ. ಆದರೆ ಸಂಸಾರಿಗೆ ಕಷ್ಟವಾಗಿ ಮಾತಾಡಿ ಸತ್ಯ ತಿಳಿಯುತ್ತಾನೆ.
Sunday, January 8, 2023
ಸ್ತ್ರೀ ಶಕ್ತಿಯ ಮಹತ್ವ
ಸ್ತ್ರೀ ವಾದ
ಸ್ತ್ರೀ ವಾದ ವಿಭಿನ್ನ ದೃಷ್ಟಿಕೋನ.
'ಒಲಿದರೆ ನಾರಿಮುನಿದರೆ ಮಾರಿ' ಸ್ತ್ರೀ ಶಕ್ತಿಯ ಸಹಕಾರವಿಲ್ಲದೆ ಭೂಮಿ ನಡೆದಿಲ್ಲ ನಡೆಯುತ್ತಿಲ್ಲ ನಡೆಯೋದಿಲ್ಲ. ಸಹನಾ ಮೂರ್ತಿ ಯಾಗಿದ್ದ ಸ್ತ್ರೀ ಇಂದು ಅಸಹನೆಯಿಂದ ಬಳಲುತ್ತಿರುವುದಕ್ಕೆ ಕಾರಣ ಅನಾರೋಗ್ಯಕರವಾದ ವಿಷಯಗಳಾಗಿವೆ.
ಸ್ತ್ರೀ ಯನ್ನು ಮಹಾಶಕ್ತಿ ಎನ್ನುವ ಹಿಂದೂ ಧರ್ಮದ ಅಳಿವು ಉಳಿಯುವಿಕೆಯು ಸ್ತ್ರೀ ಶಕ್ತಿಯ ಮೇಲಿದೆ. ಪುರಾಣ ಇತಿಹಾಸದ ಕಾಲದಿಂದಲೂ ಸ್ತ್ರೀ ಯನ್ನು ಮುಂದಿಟ್ಟುಕೊಂಡು ರಾಜಕೀಯ ಬೆಳೆದಿದೆ.ಮನುಕುಲ ಇರುವ ಭೂ ತಾಯಿಯ ಋಣ ತೀರಿಸಲಾಗದು. ಇದಕ್ಕಾಗಿ ಸತ್ಯ ಧರ್ಮ, ನ್ಯಾಯ ನೀತಿ ,ಸಂಸ್ಕೃತಿ, ಸಂಪ್ರದಾಯದಂತಹ ಅನೇಕ ಆಚರಣೆಗಳಲ್ಲಿ ಸ್ತ್ರೀ ಪಾತ್ರ ದೊಡ್ಡದು.
ಎಲ್ಲಿ ಸ್ತ್ರೀ ಗೆ ಗೌರವಾದರಗಳಿರುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆನ್ನುವ ಮುಖ್ಯ ಕಾರಣ ಸ್ತ್ರೀ ತನ್ನ ಜ್ಞಾನದಿಂದ ಇಡೀ ಬ್ರಹ್ಮಾಂಡವನ್ನಾವರಿಸಿದ್ದರೂ ಭೂಮಿಯ ಮೇಲಿರುವ ಲಿಂಗಬೇಧದಿಂದಾಗಿ ಸಾಕಷ್ಟು ಯುದ್ದಗಳು,ಅಧರ್ಮ
,ಅನ್ಯಾಯ,ಅಸತ್ಯವು ಬೆಳೆಯಲು ಸ್ತ್ರೀ ಸಹಕಾರವೂ ಕಾರಣವೆನ್ನುತ್ತಾರೆ. ಜ್ಞಾನ ದೇವತೆಯನ್ನು ಶ್ರದ್ದಾಭಕ್ತಿಯಿಂದ ಆರಾಧಿಸುವ ಮನುಕುಲಕ್ಕೆ ತನ್ನ ಹತ್ತಿರವಿರುವ ಸ್ತ್ರೀ ಗೆ ಸರಿಯಾದ ಗೌರವ ಕೊಡುವ ಸಾಮಾನ್ಯಜ್ಞಾನ ಇಲ್ಲವಾಗಿರೋದೆ ಇದಕ್ಕೆ ಕಾರಣವೆಂದರೆ ಸ್ವಯಂ ಸ್ತ್ರೀ ವಿರೋಧಿಸುವ ಕಾಲದಲ್ಲಿ ನಾವಿದ್ದೇವೆ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಸ್ತ್ರೀ ಪುರುಷರಿಗೆ ಇರುತ್ತದೆ. ಯಾವಾಗ ಈ ಆಸೆಗೆ ತಡೆಗೋಡೆಗಳು ಹೆಚ್ಚುವುದೋ ಆಗಲೇ ಗೋಡೆ ಒಡೆದು ಹೊರಗೆ ಬರುವುದು. ಆಸೆಯೇ ದು:ಖಕ್ಕೆ ಕಾರಣವಲ್ಲ.
ಅತಿಆಸೆಯೇ ದು:ಖಕ್ಕೆ ಕಾರಣ. ಆಸೆಯಲ್ಲಿ ಅಧ್ಯಾತ್ಮ ಹಾಗು ಭೌತಿಕ ವಿಷಯವಿದೆ.ಅದರಲ್ಲೂ ಸತ್ವ,ರಾಜಸ್ಸು,ತಾಮಸಿಕ ಆಸೆಗಳು ಮನುಕುಲದ ಭವಿಷ್ಯವನ್ನು ನಿರ್ಧರಿಸುತ್ತದೆ.
ಸಾತ್ವಿಕ. ಸತ್ವಯುತ,ಸತ್ಯದ ಮಾರ್ಗದಲ್ಲಿ ನಡೆಯೋ ಆಸೆ ಬೆರಳೆಣಿಕೆಯಷ್ಟು ಜನರಲ್ಲಿದ್ದರೆ ರಾಜಸಿಕ ಆಸೆಯು ಬಹಳ ಜನರಲ್ಲಿರುತ್ತದೆ ಅತಿಯಾದ ರಾಜಕೀಯವೇ ಕೆಳಮಟ್ಟದ ತಾಮಸ ಜನರನ್ನು ಬೆಳೆಸುತ್ತದೆ. ಹಾಗಾಗಿ ಭೂಮಿಯ ರಕ್ಷಣೆಗಾಗಿ ಸ್ತ್ರೀ ಸಾತ್ವಿಕ ಆಸೆಯನ್ನು ಬೆಳೆಸಿಕೊಳ್ಳಲು ಜ್ಞಾನದ ಶಿಕ್ಷಣದ ಅಗತ್ಯವಿದೆ.
ಸಾತ್ವಿಕ ಗುಣ ಬರಿಗಣ್ಣಿಗೆ ಕಾಣದು, ರಾಜಸಿಕ ಗುಣ ಕಂಡರೂ ಹೇಳಲಾಗದು,ತಾಮಸಿಕ ಗುಣದಿಂದ ರೋಗವೇ ಹೆಚ್ಚುವುದು.ಅಧ್ಯಾತ್ಮ ಎಂದರೆ ತನ್ನ ತಾನರಿಯುವ ಆಂತರಿಕ ಜ್ಞಾನವಾದರೆ ಪರರನ್ನು ಆಳುವ ರಾಜಕೀಯದ ಆಸೆ ತೊಲಗಿ ತಾಮಸ ಗುಣ ಕುಸಿಯುತ್ತದೆ.
ಸ್ತ್ರೀ ಸ್ವಾತಂತ್ರ್ಯ ವು ಅಧ್ಯಾತ್ಮ ಕ್ಷೇತ್ರದಲ್ಲಿ ಕುಸಿದ ಪರಿಣಾಮದಿಂದಾಗಿ ಇಂದು ಭೌತಿಕ ವಿಜ್ಞಾನ ಮಿತಿಮೀರಿ ಬೆಳೆದಿದೆ. ಸ್ತ್ರೀ ಭೌತಿಕದಲ್ಲಿ ಪುರುಷನನ್ನೂ ಮೀರಿ ಬೆಳೆದರೆ ಹಿಡಿಯಲಾಗದು. ಭೂಮಿ ಆಕಾಶದ ಒಂದು ಭಾಗವಾದಾಗ ಆಕಾಶವನ್ನೂ ಮೀರಲು ಕಷ್ಟ ವೆನ್ನುವ ಸತ್ಯ ತಿಳಿದರೆ ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ಮನುಕುಲ ಸುಖವಾಗಿರಲು ಸಾಧ್ಯ.
ಎಷ್ಟೇ ಎತ್ತರ ಏರಿದರೂ ಜೀವ ಹುಟ್ಡಿ ಸಾಯೋದು ಭೂಮಿಮೇಲೆ.ಇದು ಪುರಾಣ,ಇತಿಹಾಸ,ವೇದಗಳ ಕಾಲದಿಂದಲೂ ನಡೆದು ಬಂದಿರುವ ಸತ್ಯ.ಅಂದಿನ ಮಹಾತ್ಮರ ಜ್ಞಾನಕ್ಕೂ ಇಂದಿನ ವೈಜ್ಞಾನಿಕ ಜ್ಞಾನಕ್ಕೂ ಅಂತರ ಹೆಚ್ಚಾಗುತ್ತಾ ಮಧ್ಯವರ್ತಿತನ್ನ ಅಹಂಕಾರ ಸ್ವಾರ್ಥ ಕ್ಕೆ ಭೂಮಿಯನ್ನು, ಸ್ತ್ರೀ ಯನ್ನು, ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಸುರರ ಶಕ್ತಿ ಹೆಚ್ಚುತ್ತಾ ತಿರುಗಿ ಸ್ತ್ರೀ ಗೆ ಹೆಚ್ಚು ಸಮಸ್ಯೆ . ಇಲ್ಲಿ ದೇವಾಸುರರ ಶಕ್ತಿ ಮಾನವನ ಗುಣಜ್ಞಾನದಲ್ಲಿದೆ. ಇದನ್ನರಿತರೆ ನಮ್ಮಲ್ಲಿರುವ ದೈವೀ ಶಕ್ತಿಯ ಕಡೆಗೆ ಆತ್ಮಜ್ಞಾನದ ಕಡೆಗೆ ನಡೆದವರು ಮಹಾತ್ಮರಾದರು. ಆದರೆ ಇದಕ್ಕೆ ಸ್ವತಂತ್ರಜ್ಞಾನದ ಅಗತ್ಯವಿದೆ .ಸ್ವತಂತ್ರ ಜೀವನದ ಅಗತ್ಯವಿದೆ. ಸಂನ್ಯಾಸಿಗಳಿಗೆ ಸಾಧ್ಯವಾದಂತೆ ಸಂಸಾರಿಗಳಿಗೆ ನಡೆಯೋದು ಕಷ್ಟ. ವಾಸ್ತವತೆಯಲ್ಲಿ ಮಹಿಳೆಯ ವೈಜ್ಞಾನಿಕ ಚಿಂತನೆಯಿಂದ ಭೌತಿಕದಲ್ಲಿ ಸಾಧನೆ ಮಾಡುತ್ತಾ ಅಧ್ಯಾತ್ಮ ಚಿಂತನೆಗಳ ವಿರುದ್ದ ಹೋರಾಟ ನಡೆಸಿ ಮನೆಯಿಂದ ಹೊರಗಿದ್ದು ಸ್ವತಂತ್ರ ಜೀವನ ನಡೆಸಬಹುದಾದರೂ, ಸಂಸಾರದೊಳಗಿದ್ದು ಜೀವನದ ಮುಖ್ಯ ಗುರಿ ತಲುಪಿದವರ ಆತ್ಮಜ್ಞಾನಕ್ಕೂ, ಸಂಸಾರದಿಂದ ದೂರವಿದ್ದು ಅಧ್ಯಾತ್ಮದ ವಿಚಾರ ಓದಿ,ಕೇಳಿ,ನೋಡಿ,ಹೇಳುವುದಕ್ಕೂ ವ್ಯತ್ಯಾಸವಿದೆ.
ಒಂದು ಅನುಭವದ ಸತ್ಯ, ಇನ್ನೊಂದು ಅನುಭವಿಸದೆ ತಿಳಿದ ಸತ್ಯ. ಪ್ರತಿಯೊಬ್ಬರಿಗೂ ಸತ್ಯ ತಿಳಿದರೂ ಅದರ ಅನುಭವ ಒಂದೆ ರೀತಿಯಲ್ಲಿರಲು ಕಷ್ಟ.ಆದರೂ ಅನುಭವಿಸಿದಾಗ ಒಪ್ಪಲೇ ಬೇಕು.
ಯಾವುದೇ ವಿಚಾರವಿರಲಿ ಅದು ರಾಜಯೋಗದೆಡೆಗೆ ನಡೆಸಿದರೆಮುಕ್ತಿ, ರಾಜಕೀಯಕ್ಕೆ ಬಳಸಿದರೆ ?
ಮನುಕುಲ ಭೂಮಿ ಮೇಲಿರುವುದನ್ನು ಯಾರೂ ಅಸತ್ಯವೆನ್ನಲಾಗದು. ಆದರೆ ಪ್ರತಿಕ್ಷಣವೂ ಈ ಸತ್ಯವನ್ನರಿತು ಭೂಮಿಯ ಮೇಲಿರೋರನ್ನು ಕಾಣಲಾಗದು. ಹಾಗೆ ತಾಯಿಯಿಂದ ಜನ್ಮಪಡೆದ ಮಗು ಸಣ್ಣದರಲ್ಲಿರುವಾಗ ಅಮ್ಮನಿಂದ ದೂರವಿರಲು ಬಯಸೋದಿಲ್ಲ.ದೊಡ್ಡವರಾದ ಮೇಲೆ ದೂರ ಇರಲು ಬಯಸಿದರೆ ಇದರಲ್ಲಿ ಸ್ವಾರ್ಥ ,ಅಹಂಕಾರವಿದೆ ಎನ್ನಲಾಗದು.ಪ್ರಕೃತಿಯ ಸಣ್ಣ ಜೀವದ ಭಾಗವಾದ ಮಾನವನಿಗೆ ಪ್ರಕೃತಿವಿರುದ್ದವೇ ನಡೆದಂತೆಲ್ಲಾ ಜೀವಶಕ್ತಿ ಕುಸಿಯುತ್ತದೆ.ಆತ್ಮಶಕ್ತಿ ಕುಗ್ಗುತ್ತದೆ. ಭೂಮಿ,ಪ್ರಕೃತಿ ಮಾತೆ,ವಿಶ್ವಮಾತೆ,ಭಾರತಮಾತೆ,ಕನ್ನಡಮ್ಮ,ಹೆತ್ತತಾಯಿ,ಇನ್ನಿತರ ಶಕ್ತಿದೇವತೆಗಳಲ್ಲಿ ಕೊನೆಯದಾಗಿರುವ ಸ್ತ್ರೀ, ತಾಯಿ,ಸಹೋದರಿ,ಸ್ನೇಹಿತೆಯರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ,ಅಸೂಯೆ,ಜಗಳ,ಮನಸ್ತಾಪಗಳಿದ್ದರೆ ಸಂಸಾರದಲ್ಲಿ ಬಿಕ್ಕಟ್ಟು, ಸಮಾಜದಲ್ಲಿ ಬಿಕ್ಕಟ್ಟು, ದೇಶದಲ್ಲಿ ಒಡಕು ಹರಡುತ್ತಾ ತಿರುಗಿ ಅದರ ಫಲವನ್ನೂ ಸ್ತ್ರೀ ಅನುಭವಿಸಬೇಕೆನ್ನುವ ಕಾರಣಕ್ಕಾಗಿ ಹಿಂದೆ ಸನಾತನ ಧರ್ಮದಲ್ಲಿ ಸಾಕಷ್ಟು ದೇವತಾರಾಧನೆ, ಧಾರ್ಮಿಕ ಕಾರ್ಯಕ್ರಮ, ಶಾಸ್ತ್ರ, ಸಂಪ್ರದಾಯ ಉತ್ಸವಗಳ ಮೂಲಕ ಸ್ತ್ರೀ ಶಕ್ತಿಯರನ್ನು ಒಂದಾಗಿಸಿ ಆತ್ಮಶಕ್ತಿ ಹೆಚ್ಚಿಸಿಕೊಂಡು ಜೀವನದ ಮುಖ್ಯಗುರಿ ತಲುಪುವ ಮುಕ್ತಿ ಮಾರ್ಗವನ್ನು ಹಿಡಿದರು. ಆದರೆ ಯಾವಾಗ ಸ್ತ್ರೀ ಅಧರ್ಮಕ್ಕೆ, ಅನ್ಯಾಯ,ಅಸತ್ಯಕ್ಕೆ ಸಹಕರಿಸಿ ಪುರುಷಶಕ್ತಿಯನ್ನು ಬೆಳೆಸಿ ಸ್ತ್ರೀ ಶಕ್ತಿಯ ವಿರುದ್ದ ನಿಂತು ಸ್ವಾರ್ಥ ದ ಬಲೆಯಲ್ಲಿ ಅಜ್ಞಾನದಿಂದ ಸಿಕ್ಕಿದಳೋ ಆಗಲೇ ಭೂಮಿಯ ಸತ್ವ,ಸತ್ಯ ಕುಸಿದು ಅಸುರ ಶಕ್ತಿಗೆ ತಾನೇ ಬಲಿಯಾದರೂ ಇದೊಂದು ಕರ್ಮ ಫಲವೆಂದು ಹೇಳುವ ಮೂಲಕ ಎಲ್ಲದ್ದಕ್ಕೂ ಕಾರಣ ಸ್ತ್ರೀ ಎಂದೇ ಇಂದಿಗೂ ರಾಮಾಯಣ, ಮಹಾಭಾರತದ ಯುದ್ದಕ್ಕೆ ಸ್ತ್ರೀ ಕಾರಣವೆಂದರೆ ಸತ್ಯವೆ?
ಸ್ತ್ರೀ ತನ್ನ ಆತ್ಮಜ್ಞಾನದಿಂದ ಧರ್ಮ ರಕ್ಷಣೆ ಮಾಡುವಾಗ ಅಹಂಕಾರ ಸ್ವಾರ್ಥ ಬಿಟ್ಟು ನಡೆದಿರುತ್ತಾಳೆ. ಸ್ತ್ರೀ ಸಂನ್ಯಾಸಿಯಾದರೆ ಸಂಸಾರದ ಗತಿ ಏನು? ಎನ್ನುವ ಕಾರಣಕ್ಕಾಗಿ ಸ್ತ್ರೀ ಗೆ ಅಧ್ಯಾತ್ಮ ಸತ್ಯ ತಿಳಿಸದೆ ಒಂದು ಚೌಕಟ್ಟನ್ನು ಹಾಕಿ ಮನೆಯೊಳಗೆ ದಾಸಿಯನ್ನಾಗಿಸಿದ ಅಜ್ಞಾನದ ರಾಜಕೀಯಕ್ಕೆ ನಾರಿಯಾಗಿದ್ದ ಸ್ತ್ರೀ ಶಕ್ತಿ ಮಾರಿಯಾಗಿ ಸಿಡಿದೇಳಲು ಕಾರಣವಾಯಿತು. ರಾಜಯೋಗದ ಪ್ರಕಾರ ಸ್ತ್ರೀ ಪುರುಷರಲ್ಲಿರುವ ಆ ಒಂದೇ ಶಕ್ತಿಯನ್ನು ಇಬ್ಬರೂ ಸಮನಾಗಿ ಅರಿತರೆ ಸಂಸಾರದ ಜೊತೆಗೆ ಸಮಾಜ,ರಾಷ್ಟ್ರ,ವಿಶ್ವವೇ ಶಾಂತಿ ಕಾಣಬಹುದೆನ್ನುವರು.ಆದರೆ ಆ ಮಾರ್ಗದಲ್ಲಿ ನಡೆಯಲು ಒಳಗಿರುವ ಚಕ್ರ. ಶುದ್ದಿ ಅಗತ್ಯವಿದೆ. ಕೆಲವರು ಈ ದ್ಯಾನ ಮಾರ್ಗದಲ್ಲಿ ಸತ್ಯ ತಿಳಿದು ಸ್ವತಂತ್ರ ಜೀವನ ನಡೆಸಿದ್ದರೂ ಉಳಿದ ಸಾಮಾನ್ಯರಿಗೆ ಶಿಕ್ಷಣವಿಲ್ಲದೆ,ಸರಿಯಾದ ಗುರು,ಗುರಿಯಿಲ್ಲದೆ ಹೊರಗಿನ ರಾಜಕೀಯದ ಹಿಂದೆ ನಡೆದು ಭ್ರಷ್ಟಾಚಾರ ಬಲವಾಗಿದೆ. ನಮ್ಮ ಸಹಕಾರವೇ ಎಲ್ಲಾ ಸಮಸ್ಯೆಗೆ ಕಾರಣ ಹಾಗೆ ಪರಿಹಾರವೂ ನಮ್ಮ ಸಹಕಾರವಿದ್ದರೆ ಮಾತ್ರ ಸಾಧ್ಯ.ಉತ್ತಮ ಸದ್ವಿಚಾರಕ್ಕೆ ಸ್ತ್ರೀ ವಿರೋಧವಿದ್ದರೆ ಅವಳ ಆತ್ಮಶಕ್ತಿ ಭೌತಿಕದೆಡೆಗೆ ಹೆಚ್ಚಾಗುತ್ತಾ ಜೀವಹೋದಮೇಲೆ ಆತ್ಮಜ್ಞಾನ ಬೆಳೆಸಲಾಗುವುದೆ?
ಇದಕ್ಕೆ ಹಿಂದೆ ಅನೇಕ ಧರ್ಮ ಯುದ್ದಗಳಲ್ಲಿ ದೇವತೆಗಳು ,ದೇವಿಯರ ಸಹಾಯದಿಂದ ಅಸುರರ ಸಂಹಾರ ಮಾಡಿದ್ದರು. ಇಲ್ಲಿ ಹೊತ್ತು ,ಹೆತ್ತು,ಸಾಕಿ,ಸಲಹಿದ ಸ್ತ್ರೀ ಗೆ ಸಹನೆ,ಪ್ರೀತಿ,ಕರುಣೆ,ಮಮಕಾರ ಹೆಚ್ಚಾದಾಗ ಮಕ್ಕಳ ತಪ್ಪು ತಿದ್ದದೆ ಬೆಳೆಸುವುದರಿಂದ ಭೂಮಿಯನ್ನು ಅಧರ್ಮದಿಂದ ಆಳುವ ಅಸುರ ಕುಲ ಹೆಚ್ಚುವುದೆನ್ನುವ ಕಾರಣಕ್ಕಾಗಿ ಹಿಂದೂ ಧರ್ಮದ ಸ್ತ್ರೀ ಯರಿಗೆ ಸಂಸ್ಕಾರದ ಕಟ್ಟುಪಾಡುಗಳಿಂದ ಭೌತಿಕ ವಿಜ್ಞಾನದಿಂದ ದೂರವಿಟ್ಟು ಕೊನೆಗೆ ಅದೇ ಶೋಷಣೆಯ ಹಾದಿ ಹಿಡಿಯಿತು.
ಯಾವುದೇ ಇರಲಿ ಅತಿಯಾದರೆ ಗತಿಗೇಡು. ಇದಕ್ಕಾಗಿ ಇಂದಿನ ಅಧರ್ಮಕ್ಕೆ ಸಹಕರಿಸುವ ಸ್ತ್ರೀ ಯರಿಗೆ ಜ್ಞಾನದ ಶಿಕ್ಷಣದ ಕೊರತೆಯಿರುವಾಗ ಅದನ್ನು ನೀಡದೆ ಧಾರ್ಮಿಕ ವರ್ಗ ರಾಜಕೀಯ ನಡೆಸಿದರೆ ಭೂಮಿಯಲ್ಲಿ ಧರ್ಮ ದೇವತೆ ಇರುವಳೆ?
ಜ್ಞಾನದ ನಂತರವೇ ವಿಜ್ಞಾನ ಅಧ್ಯಾತ್ಮ ಚಿಂತನೆಯ ಮೂಲಕವೇ ಭೌತಿಕ ಚಿಂತನೆ ನಡೆಸಿದರೆ ಸಮಾನತೆಯ ಸಮಾಜನಿರ್ಮಾಣ ಸಾಧ್ಯ.
ಸ್ತ್ರೀ ಸಮಾನತೆಯ ಹೋರಾಟ ರಾಜಕೀಯ ರೂಪ ಪಡೆದರೂ ಸ್ವಯಂ ಸ್ತ್ರೀ ತನ್ನ ಅಧಿಕಾರವನ್ನು ಇನ್ನೊಂದು ಸ್ತ್ರೀ ಜೊತೆ ಹಂಚಿಕೊಳ್ಳಲು ಕಷ್ಟ.ಹೀಗಿರುವಾಗ ಪುರುಷರ ವಿರುದ್ದ ತಮ್ಮ ಆರೋಪಮಾಡಿ ತಾನೇ ಸರಿ ಎನ್ನುವ ಅಹಂಕಾರ, ಸ್ವಾರ್ಥ ಸ್ತ್ರೀ ಯರಲ್ಲಿ ಬಿಕ್ಕಟ್ಟು ತರಬಹುದು. ಇದು ನಮ್ಮಮನಸ್ಸು,ಮನೆ,ಕುಟುಂಬ, ಗ್ರಾಮ,ಜಿಲ್ಲೆ, ರಾಜ್ಯಮಟ್ಟದಲ್ಲಿ ನಮ್ಮ ಹೆಸರನ್ನು ಬೆಳೆಸಿದ್ದರೂ ಮಕ್ಕಳ ವಿಚಾರದಲ್ಲಿ ಸೋತರೆ ನಷ್ಟ ಯಾರಿಗೆ? ಅದಕ್ಕಾಗಿ ಮನೆಯೊಳಗಿದ್ದ ಗೃಹಿಣಿಯರಿಗೆ ಉತ್ತಮ ಸಂಸ್ಕಾರವಿದ್ದರೆ ಸಂಸಾರ ಮಾತ್ರವಲ್ಲ ಸಮಾಜವೂ ಉತ್ತಮ ಪ್ರಜೆಗಳನ್ನು ಕಾಣಬಹುದೆಂದರೆ.ಸ್ತ್ರೀ ಒಬ್ಬಳು ಕಲಿತರೆ ಇಡೀ ಸಂಸಾರವೇ ಕಲಿತಂತೆ ಎಂದರೆ ಸ್ತ್ರೀ ಯ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ದೊರೆತರೆ ಪ್ರತಿಯೊಬ್ಬಳೂ ಒಂದು ಶಕ್ತಿದೇವತೆಯೆ. ವಿಪರ್ಯಾಸವೆಂದರೆ ಭಾರತದಂತಹ ಮಹಾಪವಿತ್ರ ದೇಶದಲ್ಲಿ ಸ್ತ್ರೀ ಯರಿಗೆ ಧಾರ್ಮಿಕ ಶಿಕ್ಷಣದ ಕೊರತೆಯಿದೆ.ಭೌತಿಕದಲ್ಲಿ ಸಾಧನೆ ಮಾಡಿದ್ದರೂ ಧಾರ್ಮಿಕ ಸತ್ಯವನ್ನರಿಯದಿದ್ದರೆ ಮಧ್ಯವರ್ತಿ ಯಾಗಿ ಅತಂತ್ರ ಜೀವನ
ಇಲ್ಲಿ ಯಾರೂ ಪರಿಪೂರ್ಣರೂ ಇಲ್ಲ ಸರ್ವಜ್ಞ ರೂ ಅಲ್ಲ.ಆದರೂ ಎಲ್ಲರಿಗೂ ಎಲ್ಲರನ್ನೂ ಆಳುವ ರಾಜಕೀಯದ ಆಸೆ ಇದೆ.ಸಾತ್ವಿಕ ವಿಚಾರಗಳನ್ನು ಪ್ರಚಾರ ಮಾಡುವುದು ಪುಣ್ಯದ ಕೆಲಸ, ಎಲ್ಲಾ ದೇವರ ಪ್ರತಿನಿಧಿಗಳು. ಅದರಲ್ಲೂ ಶಕ್ತಿಯಿಲ್ಲದ ಮಾನವನಿಲ್ಲ.ಶಿವಶಕ್ತಿಯರ ಸಮಾನತೆಯೇ ಅಧ್ಯಾತ್ಮದ ಪ್ರಗತಿ.
ಯಾವಾಗ ಸ್ತ್ರೀ ಶಕ್ತಿ ಕುಸಿಯುವುದೋ ಪುರುಷ ಶಕ್ತಿ ಬೆಳೆಯುವುದೋ ಭೂಮಿ ನಡುಗುತ್ತದೆ. ನಡುಗುವಾಗ ಹೊತ್ತು ನಡೆಯೋ ಜೀವವನ್ನು ಉಳಿಸಲು ಅಸಾಧ್ಯ.ಹೀಗೇ ಈಗಲೂ ಪ್ರಕೃತಿವಿಕೋಪಗಳು,ಪ್ರವಾಹ,ಅಪಘಾತ,ಇನ್ನಿತರ ರೂಪ ಪಡೆದಿರೋದು ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡ ರಾಜಕೀಯದಿಂದ ಎಂದರೆ ನಂಬದಿದ್ದರೂ ಸರಿ. ಕೊರೊನ ಇದರ ಒಂದು ರೂಪ. ಯಾರಾದರೂ ಗಾಳಿಯನ್ನು ತಡೆಯಬಹುದೆ? ಗಾಳಿಸುದ್ದಿಯನ್ನು ತಡೆಯಬಹುದು.ಆದರೆ ಇದು ಮಾಧ್ಯಮಗಳು, ಮಧ್ಯವರ್ತಿಗಳು ಪ್ರಚಾರಮಾಡಿ ಮನೆಯೊಳಗಿರುವವರಿಗೂ ತಲುಪಿಸಿ ರೋಗವನ್ನು ಹರಡುವುದರ ಮೂಲಕ ಸಾಧಕರಾದವರಿಗೆ ನಮ್ಮ ಸಹಕಾರವಿದೆ. ಆದರೆ ಇದು ಬರದಂತೆ ಮನಸ್ಸನ್ನು ತಡೆದು ಸಾತ್ವಿಕತೆಯನ್ನು ಹೆಚ್ಚಿಸುವ ವಿಷಯಗಳು ಮೂಲೆ ಸೇರುತ್ತದೆ. ಇದನ್ನು ಪುರುಷರು ಸ್ತ್ರೀ ಯರು ನಡೆಸಿದರೂ ತಪ್ಪು ನಮ್ಮೊಳಗೇ ಇರುತ್ತದೆ.
ಒಟ್ಟಿನಲ್ಲಿ ಆಂತರಿಕ ಶಕ್ತಿ ಹೆಚ್ಚಾಗಿರುವ ಸ್ತ್ರೀ ಯರಿಗೆ ಅಧ್ಯಾತ್ಮದ ಸತ್ವಯುತ ವಿಚಾರ ತಿಳಿಸುವುದರಲ್ಲಿ ಸೋತಿರುವ ಭಾರತೀಯರಿಗೆ ಈಗಿನ ಮಿತಿಮೀರಿದ ಪರಿಸ್ಥಿತಿಗೆ ಕಾರಣ ತಿಳಿದರೂ ತಿರುಗಿ ಬರಲಾಗದ ಪರಿಸ್ಥಿತಿ ಮನೆಯೊಳಗೆ ಇದೆ.ಮನೆಯೊಳಗೆ ಇದ್ದು ತಮ್ಮ ಸಂಸಾರದಲ್ಲಿ ಧರ್ಮ ಕರ್ಮಕ್ಕೆ ಬೆಲೆಕೊಟ್ಟು ಸಹಕರಿಸುವ ಸ್ತ್ರೀ ಯರಲ್ಲಿರುವ ಶಾಂತಿ,ಸಮಾಧಾನ,ನೆಮ್ಮದಿ ಎಲ್ಲವನ್ನೂ ಬಿಟ್ಟು ಹೊರಬಂದವರಿಗೆ ಸಿಕ್ಕಿದ್ದರೆ ಅದು ಹೊರಗಿನವರಿಂದ ಮಾತ್ರ.
ನಮ್ಮವರನ್ನೇ ದ್ವೇಷ ಮಾಡುವ ಮನಸ್ಥಿತಿ ಎಲ್ಲಿಯವರೆಗೆ ನಮ್ಮಲ್ಲಿ ಹೋಗದೋ ,ಎಲ್ಲಿಯವರೆಗೆ ನಮ್ಮತನ ನಮ್ಮ ಧರ್ಮ, ನಮ್ಮ ಸತ್ಯ ನಮ್ಮ ದೇಶದ ಶಿಕ್ಷಣಕ್ಕೆ ನಾವೇ ವಿರುದ್ದವಿರುವೆವೋ ಅಲ್ಲಿಯವರೆಗೆ ಆಂತರಿಕ ಶಾಂತಿ ಸಿಗದು.
ಇದನ್ನು ನಮ್ಮ ಮಹಾತ್ಮರುಗಳು ಮೊದಲೇ ತಿಳಿಸಿದ್ದಾರೆ.ರಾಜಯೋಗವನ್ನು ರಾಜಕೀಯವಾಗಿ ಪ್ರಚಾರ ಮಾಡದೆ ರಾಜಕೀಯದಲ್ಲಿ ರಾಜಯೋಗವನ್ನು ಅಳವಡಿಸಿಕೊಂಡರೆ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಜ್ಞಾನ ಹೆಚ್ಚುವುದು. ಸ್ತ್ರೀ ಯನ್ನು ತಾಯಿ,ಮಾತೆ,ದೇವಿ,ಶಕ್ತಿ,ಜ್ಞಾನಿ ಎನ್ನುವ ಗೌರವದಿಂದ ಕಂಡವರಷ್ಟೆ ಮಹಾತ್ಮರಾಗಿರೋದು. ಇದಕ್ಕೆ ಕಾರಣವೆ ಸ್ತ್ರೀ ಸಹಕಾರ ಧರ್ಮದ ಪರವಿತ್ತು.ಅಧರ್ಮದ ವಿರುದ್ದವಿತ್ತು.ಧಾರ್ಮಿಕ ವಿಚಾರಗಳೇ ಇಂದು ರಾಜಕೀಯತೆ ಬೆಳೆಸಿ ಜನಸಾಮಾನ್ಯರ ಮಹಿಳೆ,ಮಕ್ಕಳ ಸಾಮಾನ್ಯಜ್ಞಾನ ಕುಸಿಯುವಂತೆ ಮಾಡಿ ವೈಜ್ಞಾನಿಕ ಚಿಂತನೆಗಳಿಗೆ,ವಿದೇಶಿಗಳಿಗೆ, ವಿಜ್ಞಾನಕ್ಕೆ ಸಹಕರಿಸುತ್ತಾ ಕಂಕಳಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಟ ನಡೆದಿದೆ ಎಂದರೆ ತಪ್ಪಿಲ್ಲ.
ನಮ್ಮೊಳಗೇ ಇರುವ ಅತಿಯಾದ ಸ್ವಾರ್ಥ ಅಹಂಕಾರ ದ ಜೊತೆಗೆ ಅರಿಷಡ್ವರ್ಗ ವೆಂಬ ಹಿತಶತ್ರುಗಳೂ ಸೇರಿದರೆ ಮಾನವನ ಮನಸ್ಸು ಮರ್ಕಟದಂತೆ ಕುಣಿದು ಕುಣಿಸುವುದರಲ್ಲಿ ಆಶ್ಚರ್ಯವಿಲ್ಲ. ಭೂಮಿಯಿಲ್ಲದೆ ಮನುಕುಲವಿಲ್ಲ, ತಾಯಿಯಿಲ್ಲದೆ ಜನ್ಮವಿಲ್ಲ. ಸ್ತ್ರೀ ಗೆ ಆತ್ಮಜ್ಞಾನವಿಲ್ಲವಾದರೆ ಸೃಷ್ಟಿ ಯ ರಹಸ್ಯ ಅರ್ಥ ವಾಗದೆ ಸಂಸಾರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಜೀವ ಹೋಗುತ್ತದೆ. ಜನ್ಮ ಜನ್ಮಂತರದ ಈ ಋಣ ಮತ್ತು ಕರ್ಮ ವನ್ನು ಯಾರೋ ತೀರಿಸುತ್ತಾರೆಂದರೆ
ಸತ್ಯವಲ್ಲ. ನಮ್ಮಲ್ಲಿ ದೈವತ್ವದ ಸಾತ್ವಿಕ ಜ್ಞಾನವಿದ್ದರೆ ಮಾತ್ರ ಈ ಭೂಮಿಯ ಋಣ ತೀರಿಸುವ ಯೋಗ.ಯೋಗವೆಂದರೆ ಸೇರುವುದು.ಜೀವಾತ್ಮ ಪರಮಾತ್ಮನ ಸೇರುವ ಮಹಾಯೋಗವೇ ರಾಜಯೋಗ. ರಾಜಕೀಯದಲ್ಲಿ ಇನ್ನೊಬ್ಬರನ್ನು ಆಳಬಹುದು ಸೇರಲಾಗದು. ಆಕಾಶದಲ್ಲಿದೆ ಭೂಮಿ,ಭೂಮಿಯಲ್ಲಿ ಸ್ತ್ರೀ ಶಕ್ತಿಅಡಗಿದೆ,ಸ್ತ್ರೀ ಯಿಂದಲೇ ಮನುಕುಲ ನಡೆದಿದೆ, ಮಾನವನೊಳಗೆ ಆತ್ಮಶಕ್ತಿಯಿದೆ ಆತ್ಮಶಕ್ತಿಯೇ ದೇವರಾಗಿದೆ, ದೈವತ್ವವು ತತ್ವದಲ್ಲಿದೆ, ತತ್ವಜ್ಞಾನದಿಂದ ಶಾಂತಿ.ಭೂಮಿಯು ಇಂದು ತಂತ್ರಜ್ಞಾನದೆಡೆಗೆ ನಡೆದಿದೆ.ತಂತ್ರದಲ್ಲಿ ರಾಜಕೀಯವಿದೆ. ಸ್ತ್ರೀ ತನ್ನ ತಾನು ಆಳಿಕೊಳ್ಳಲು ರಾಜಯೋಗದ ಸದ್ವಿಚಾರ ತಿಳಿಯುವುದು ಅಗತ್ಯ.ಮೊದಲು ಪುರುಷರಿಗೆ ಇದರ ಅಗತ್ಯವಿದೆ.ಕಾರಣವೇನೆಂದರೆ ಭೂಮಿಯಲ್ಲಿ ಹೇಗೆ ಜೀವನ ನಡೆಸಿದರೆ ಭೂಮಿಯ ಋಣ ತೀರಿಸಿ ಮುಕ್ತಿ ಪಡೆಯಬಹುದೆನ್ನುವುದು ಪುರುಷ ತಿಳಿದರೆ ಸ್ತ್ರೀ ಶಕ್ತಿ ದುರ್ಭಳಕೆ ಆಗದೆ ಅಸುರ ಶಕ್ತಿ ಹಿಂದುಳಿಯಬಹುದು.ಆದರೆ ಇದು ಕಷ್ಟ ಕಾರಣ ಸ್ತ್ರೀ ಮನಸ್ಸು ಚಂಚಲ ಎನ್ನುವ ಕಾರಣಕ್ಕಾಗಿ ಅವಳಿಗೆ ಲಕ್ಮಿ ಯಾಗಿಸಿ ಸರಸ್ವತಿಯ ಪರಿಚಯ ಮಾಡಿಕೊಡಲು ಸೋತಿರುವುದಾಗಿದೆ. ಇದರ ಫಲವೇ ಇಂದು ಹಣವಿದೆ ಜ್ಞಾನದ ಕೊರತೆ ಹೆಚ್ಚಾಗಿ ಅಸುರರ ಸಂಖ್ಯೆ ಬೆಳೆದಿದೆ. ಇದಕ್ಕೆ ಪರಿಹಾರ ಒಳಗಿದೆ ಹೊರಗಿಲ್ಲ .
ರೋಗದ ರೂಪದಲ್ಲಿರುವ ಕೊರೊನಮಾರಿಯ ದರ್ಶನ ಆಗುತ್ತಿದೆ. ಇದಕ್ಕೆ ಪರಿಹಾರ ರಾಜಯೋಗದಲ್ಲಿ ಕಾಣಬಹುದು.
ಕೊ ರೊ ನ ಎಂದರೆ ಕೂತು ರೋಗದಿಂದ ನರಳುವುದು. ಸ್ತ್ರೀ ಯ ಸಹಕಾರ ಭ್ರಷ್ಟರಿಗೆ ದೊರೆತರೆ ಹಣಕ್ಕಾಗಿ ಅಧಿಕಾರಕ್ಕಾಗಿಜನರಿಗೆ ಶಿಕ್ಷಣ ನೀಡದೆ ಕೂರಿಸಿ ತಿನ್ನಿಸಿ ಬೆಳೆಸಿದರೆ ರೋಗ ಹೆಚ್ಚುವುದು.
2.ಕೊಂದು ರೋಗದಿಂದ ನರಳುವುದು- ಮನೆಯೊಳಗಿನ ಸ್ತ್ರೀ ಮನಸ್ಸನ್ನು ನೋಯಿಸಿ, ಕೊಂದು ತನ್ನ ಆಸೆ ಪೂರೈಸಿಕೊಂಡರೆ ಅದೇ ಮಾರಿ ರೂಪದಲ್ಲಿ ತಿರುಗಿ ಬರುವಾಗ ಕಾಣೋದಿಲ್ಲ.ಹಾಗೆಯೇ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರ ಪ್ರಾಣಿ,ಜೀವಿಗಳನ್ನು ಕೊಂದು ತಿಂದರೆ ರೋಗ.ಇದು ಚೀನಾದಿಂದ ಹರಡಿರುವ ರೋಗಕ್ಕೆ ಕಾರಣ ಅವರ ಆಹಾರ ಪದ್ದತಿ ಎನ್ನುವುದೂ ಕಾರಣ.ಇದಕ್ಕೆ ಸ್ತ್ರೀ ಸಹಕಾರವಿದ್ದರೆ ಜೀವ ಕೊಟ್ಟು ಬದುಕುವ ಶಕ್ತಿಯೇ ಜೀವತೆಗೆದು ಆಳಿದಂತೆ.ಇದೊಂದು ಸೂಕ್ಮವಾದ ಅಧ್ಯಾತ್ಮ ಸತ್ಯವಾಗಿದೆ. ಈ ಕಾರಣಕ್ಕಾಗಿ ಹಿಂದೂ ಋಷಿಮುನಿಗಳ ಆಹಾರ ಸತ್ವಯುತವಾಗಿತ್ತು.
ಕೊಟ್ಟು ರೋಗದಿಂದ ನರಳುವುದು .ಉಚಿತ ಕೊಟ್ಟಷ್ಟೂ ಸಾಲ ಖಚಿತ,ಸಾಲ ತೀರಿಸಲು ಭ್ರಷ್ಟಾಚಾರ ಕ್ಕೆ ಸಹಕಾರ,ಭ್ರಷ್ಟಾಚಾರ ಬೆಳೆದರೆ ಪ್ರಕೃತಿ ವಿಕೋಪ ಹೆಚ್ಚು.
3.ಕೊಡದೆ ರೋಗದಿಂದ ನರಳುವುದು. ಸಮಾನವಾಗಿ ಹಂಚಿ ತಿನ್ನುವ ಜ್ಞಾನದ ಕೊರತೆಯಿಂದ ಸಾಕಷ್ಟು ಶ್ರೀಮಂತ ಜನರಿಗೆ ರೋಗವೇ ಹೆಚ್ಚು.
4. ಕೂಗಿ ರೋಗದಿಂದ ನರಳುವುದು ಮಧ್ಯವರ್ತಿಗಳ ರೋಗ. ಈಕಡೆ ತಾವೂ ಬದಲಾಗದೆ ಇತರರನ್ನು ಬದಲಾವಣೆಗೆ ಬಿಡದೆ ಮಧ್ಯೆನಿಂತು ಸರಿಯಿಲ್ಲ ಎಂದು ಕೂಗಿದರೂ ರೋಗವೇ.ನಮ್ಮ ಜೀವ,ಜೀವನ ಎಲ್ಲಾ ಭೂಮಿ ಮೇಲಿದೆ ತಾಯಿಯ ಋಣ ತೀರಿಸಲು ನಿಸ್ವಾರ್ಥ ಸೇವೆಯ ಅಗತ್ಯವಿದೆ.ಯೋಗದಿಂದ ರೋಗನಿವಾರಣೆ ಸಾಧ್ಯ. ಯೋಗವೆಂದರೆ ಸೇರುವುದು.ಜೀವಾತ್ಮ ಪರಮಾತ್ಮನ ಸೇರುವುದು ಇದಕ್ಕೆ ಸತ್ಯ ಧರ್ಮದ ಆತ್ಮಜ್ಞಾನ ಅಗತ್ಯವಿದೆ.
ವಿವೇಕಾನಂದರ ರಾಜಯೋಗಕ್ಕೂ ಇಂದಿನ ರಾಜಕೀಯಕ್ಕೂ ಅಂತರ ಬೆಳೆಸಿಕೊಂಡಷ್ಟೂ ಮಧ್ಯವರ್ತಿ ಮಹಿಳೆ ಮಕ್ಕಳ ಗತಿ ಅಧೋಗತಿ. ಸಾಮಾನ್ಯ ಜ್ಞಾನವಿಲ್ಲದ ವಿಜ್ಞಾನ ಅಜ್ಞಾನದ ಅಸುರರ ಜ್ಞಾನವಾಗಬಹುದು.
ಕನ್ನಡದ ರಕ್ಷಣೆ ಹೇಗೆ?
Thursday, January 5, 2023
ಪ್ರಶಸ್ತಿ, ಪದಕ,ಸನ್ಮಾನಗಳ ಹಂಗಿಲ್ಲ ಮಹಾತ್ಮರಿಗೆ
Wednesday, January 4, 2023
ಗುಡಿ ಬೇಡ,ಸಮಾಧಿ ಬೇಡ ಶ್ರೀ ಸಿದ್ದೇಶ್ವರ ಸ್ವಾಮಿ
ಗುಡಿ ಬೇಡ ಸಮಾಧಿ ಬೇಡ ಶ್ರೀ ಸಿದ್ದೇಶ್ವರ ಸ್ವಾಮಿಯವರ ಈ ನುಡಿಯಲ್ಲಿರುವ ಮುತ್ತುಗಳ ಅರ್ಥ ವೇನು?
ಒಂದು ಶುದ್ದವಾದ ಮುತ್ತು ತಯಾರಾಗಲು ಸಮುದ್ರದ ಆಳಕ್ಕೆ ಇಳಿಯುವ ಜೀವಿಯಂತೆ ಮಾನವನೂ ತನ್ನ ಜೀವಾತ್ಮನನ್ನು ಪರಮಾತ್ಮನೊಂದಿಗೆ ಸೇರಿಸಲು ಆಳವಾದ ಜ್ಞಾನದಿಂದ ಸಾಧ್ಯ.
ಸಾಮಾನ್ಯವಾಗಿ ಹಿಂದೂಗಳು ಸಾಕಾರಮೂರ್ತಿಯಿಂದ ನಿರಾಕಾರ ಬ್ರಹ್ಮನೆಡೆಗೆ ಸಾಗುವುದನ್ನು ಮೊದಲಿನಿಂದಲೂ ಕಾಣುತ್ತಿರುವ ಸತ್ಯ. ಸಾಕಾರ ಮೂರ್ತಿಗಳಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳೀಗ ನಿರಾಕಾರ ಶಿವನಲ್ಲಿ ಐಕ್ಯವಾಗಿ ಶಿವಸಾನಿದ್ಯ ಪಡೆದಿರುವ ಮಹಾಸಂತರಾಗಿರುವಾಗ ಅವರ ಹೆಸರಲ್ಲಿ ಸಮಾಧಿ ಹಾಗು ಗುಡಿಯನ್ನು ಭೂಮಿಯಲ್ಲಿ ಕಟ್ಟಿ ಭಕ್ತರು ಅವರನ್ನು ನೆನಪಿಸಿಕೊಂಡರೆ ತಪ್ಪಿಲ್ಲ ಆದರೆ ಅವರ ಹೆಸರಿನಲ್ಲಿ ವ್ಯವಹಾರದ ರಾಜಕೀಯಕ್ಕೆ ಇಳಿದರೆ ಜನರ ಅಲ್ಪ ಸ್ವಲ್ಪ ಜ್ಞಾನವೂ ಕುಸಿಯುವ ಸಾಧ್ಯತೆ ಇದೆ ಎನ್ನುವ ಸತ್ಯವನ್ನು ಅವರು ಈಗ ನಡೆಯುತ್ತಿರುವ ಅನೇಕ ಕಡೆಯ ಧಾರ್ಮಿಕ, ರಾಜಕೀಯ, ಆರ್ಥಿಕ ,ಸಾಮಾಜಿಕ ,ಶೈಕ್ಷಣಿಕ,ಸಾಹಿತ್ಯದ ಕ್ಷೇತ್ರದಲ್ಲಿ ಕಣ್ಣಾರೆ
ಸೂಕ್ಮದೃಷ್ಟಿಯಿಂದರಿತಿದ್ದರೆನ್ನುವುದು ಸ್ಪಷ್ಟವಾಗುತ್ತದೆ.
ನಮ್ಮ ದೇಶದಲ್ಲಿ ರುವ ಎಲ್ಲಾ ದೇವಾನುದೇವತೆಗಳ ಮಂದಿರ,ಮಠ,ದೇವಸ್ಥಾನ, ಗುಡಿ ಇನ್ನಿತರ ದಾಸರು,ಶರಣರು,ಸಾದು,ಸಂತರು ಮಹಾತ್ಮರು,ಜ್ಞಾನಿಗಳು ನಮಗೆ ಪ್ರತಿಮೆ ರೂಪದಲ್ಲಿ ಕಂಡರೂ ಅವರಲ್ಲಿದ್ದ ತತ್ವ,ಸತ್ವ
ಸತ್ಯ,ನ್ಯಾಯ,ನೀತಿ, ಧರ್ಮ ವು ಎಷ್ಟು ಮಂದಿಗೆ ಅರಿವಿಗೆ ಬಂದಿದೆಯೋ ದೇವರಿಗಷ್ಟೆ ಗೊತ್ತು. ಹಾಗಾದರೆ ದೇವರು ಯಾರು? ಎಲ್ಲಿರುವರು? ಹೇಗಿರುವರೆಂಬ ಪ್ರಶ್ನೆಗೆ ಉತ್ತರ ಒಂದೇ ನಿರಾಕಾರದಲ್ಲಿರುವ ಆತ್ಮವೇ ದೇವರು. ಎಲ್ಲರ ಹೃದಯದಲ್ಲಿ ನೆಲೆಸಿರುವ ಆ ಪರಾಶಕ್ತಿಯನ್ನು ಹೃದಯವಂತಿಕೆಯುಳ್ಳವರು ಕಾಣಬಹುದು. ಹೃದಯ ಎಲ್ಲರ ದೇಹದ ಪ್ರಮುಖ ಭಾಗವಾದರೂ ಅದನ್ನು ಯಾವ ಮಾರ್ಗದಲ್ಲಿ ನಡೆದರೆ ಹೃದಯಮಂದಿರವಾಗುವುದೆನ್ನುವ
ಜ್ಞಾನವಿದ್ದವರಷ್ಟೆ ಹೃದಯವಂತರು. ಇವರು ತತ್ವದ ಮೇಲೆ ನಂಬಿಕೆಇಟ್ಟು ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ಕಾಣುವಲ್ಲಿ ಯಶಸ್ಸು ಪಡೆದಿದ್ದರೂ ಯಾವುದೇ ರೀತಿಯ ರಾಜಕೀಯಕ್ಕೆ ಬಲಿಯಾಗದೆ ಸ್ವತಂತ್ರ ಜೀವನ ನಡೆಸಿ ಇದ್ದಾಗಲೇ ಪರಮಾತ್ಮನಲ್ಲಿ ಐಕ್ಯವಾಗಿರುವಾಗ ದೇಹತ್ಯಾಗದ ನಂತರ ಅವರು ಭೂಮಿಯಲ್ಲಿರಲು ಬಯಸೋದಿಲ್ಲ. ಹೀಗಾಗಿ ಅವರ ಶಿಷ್ಯರು,ಅನುಯಾಯಿಗಳು, ಭಕ್ತರು ಎಲ್ಲರೂ ಅವರು ಬಿಟ್ಟುಕೊಟ್ಟು ಹೋದ ಜೀವನಸಾರದ ಸತ್ಯವನ್ನರಿತು ತಮ್ಮೊಳಗೆ ಅಳವಡಿಸಿಕೊಂಡರೆ ಅದೇ ಅವರಿಗೆ ಕೊಡುವ ಗೌರವ. ಮಾನವ ಮಧ್ಯವರ್ತಿಯಾಗಿ ಈ ಕಡೆ ದೇವರು ಇನ್ನೊಂದು ಕಡೆ ಅಸುರರ ಗುಣವನ್ನರಿತು ನಡೆಯುವಾಗ
ತನ್ನ ಆತ್ಮಜ್ಞಾನದ ಪ್ರಕಾರ ನಡೆಯುವವರು ದೈವತ್ವಪಡೆದು ಮುಕ್ತಿ ಪಡೆದರೆ ಅಸುರರ ಕಡೆಗೆ ನಡೆದವರು ಭೂಮಿಯ ಋಣ ತೀರಿಸಲು ಕಷ್ಟ ಹೀಗಾಗಿ ಜನ್ಮ ಜನ್ಮಗಳಿಂದ ಹೊತ್ತು ಬಂದ ಸಾಲವನ್ನು ತೀರಿಸಬೇಕಾದರೆ ತತ್ವಜ್ಞಾನದೆಡೆಗೆ ಸತ್ಯ ಧರ್ಮದ ಕಡೆಗೆ ನಡೆಯುವವರು ಮಹಾತ್ಮರಾಗುತ್ತಾರೆ.
ಇಂತಹ ಶಕ್ತಿ ಬರಲು ಕಾರಣವೆ ಪೂರ್ವಜನ್ಮದ ಪುಣ್ಯ. ಪುಣ್ಯ ಮಾಡಲು ಸತ್ಕರ್ಮ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯವೇ ಮೆಟ್ಟಿಲುಗಳು. ಇವುಗಳನ್ನು ಒಳಗೇ ಬೆಳೆಸಿಕೊಳ್ಳಲು ಗುರು ಬೇಕು. ಗುರುಗಳೂ ತಮ್ಮ ನಡೆ ನುಡಿಯಲ್ಲಿ ಶುದ್ದವಾಗಿದ್ದರೆ ಶಿಷ್ಯರೂ ಹಾಗೇ ಇರುತ್ತಾರೆ.
ಶಿಕ್ಷಣವೇ ಇದಕ್ಕೆ ಮೂಲಾಧಾರ. ಉತ್ತಮ ಸಾತ್ವಿಕ ಶಿಕ್ಷಣ
ಸಾತ್ವಿಕರನ್ನು ಬೆಳೆಸಿದರೆ, ರಾಜಸಿಕ ಶಿಕ್ಷಣ ರಾಜಕೀಯವನ್ನು ಎತ್ತಿ ಹಿಡಿಯುವತ್ತ ನಡೆಸುತ್ತದೆ.ಬೇಡದ ಅನಾವಶ್ಯಕವಾದ ವಿಷಯಗಳನ್ನು ತಿಳಿಸುವ ಶಿಕ್ಷಣವೇ ತಾಮಸಗುಣವನ್ನು ಬೆಳೆಸುತ್ತಾ ಸತ್ಯದ ಅರಿವಿಲ್ಲದೆ ರಾಜಕೀಯದೆಡೆಗೆ ಹೋಗಿ ತನ್ನಲ್ಲಿರುವ ಉತ್ತಮ ಗುಣವನ್ನು ತಿಳಿಯಲಾಗದೆ ಒಮ್ಮೆ ಮರೆಯಾಗುತ್ತದೆ.
ಭಾರತೀಯ ಶಿಕ್ಷಣದಲ್ಲಿದ್ದ ಅತ್ಯುತ್ತಮ ಸಾತ್ವಿಕ,ತಾತ್ವಿಕ ಶಕ್ತಿ
ವಿದೇಶಿ ಶಿಕ್ಷಣದಲ್ಲಿರಲಿಲ್ಲ. ಇತ್ತೀಚೆಗೆ ಅವರು ಭಾರತೀಯರ ತತ್ವದೆಡೆಗೆ ನಡೆಯುತ್ತಿರುವುದು ಉತ್ತಮವಾದರೂ ನಮ್ಮ ಶಿಕ್ಷಣವು ವಿದೇಶಿತಂತ್ರಕ್ಕೆ ಒಳಪಟ್ಟಿರೋದು ದುರಂತ.
ಕೆಲವರಷ್ಟೆ ನಮ್ಮಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ತೆರೆದು ಧರ್ಮ ಸತ್ಯ,ನ್ಯಾಯ,ನೀತಿಯನ್ನು ಬೆಳೆಸುವಲ್ಲಿದ್ದರೂ ಸರ್ಕಾರ ಹಾಗು ಇನ್ನಿತರ ಖಾಸಗಿ ಶಾಲೆಯಲ್ಲಿ ಬದಲಾವಣೆ ಆಗುವುದು ಅಗತ್ಯವಿದೆ. ಇದರಿಂದಾಗಿ ಮನುಕುಲಕ್ಕೆ ತನ್ನ
ಈ ಜನ್ಮಕ್ಕೆ ಕಾರಣ ತಿಳಿದು ಜನ್ಮಸಾರ್ಥಕತೆಯತ್ತ ಉತ್ತಮ ಜೀವನದತ್ತ ಒಗ್ಗಟ್ಟಿನಿಂದ ತತ್ವದೆಡೆಗೆ ನಡೆಯಬಹುದು.
ಹೇಳಿದಷ್ಟು ಸುಲಭದವಿಷಯವಲ್ಲ. ಮಾನವ ಬೇರೆಯವರನ್ನು ಬದಲಾಯಿಸುವಷ್ಟು ಸುಲಭವಲ್ಲ ತನ್ನ ತಾನರಿತು ಬದಲಾಯಿಸಿಕೊಳ್ಳುವುದು. ಬದಲಾವಣೆ ಜಗದ ನಿಯಮ ಅಸಾಧ್ಯವೇನಿಲ್ಲ.
ಸಾಧನೆ ಬೇರೆಯವರು ನೋಡಬೇಕೆಂದು ಮಾಡಿದರೆ ಭೌತಿಕ ವಿಜ್ಞಾನ. ತನ್ನ ತಾನರಿತು ಶುದ್ದವಾಗಲು ಅಧ್ಯಾತ್ಮ ಸಾಧನೆ
ಅಗತ್ಯ. ನಾನೆಂಬುದಿಲ್ಲ ಎಂದಾಗ ನನಗಾಗಿ ಗುಡಿ ಯಾಕೆ? ದೇಹದೊಳಗೆ ಆತ್ಮವೇ ಹೊರಬಂದ ಮೇಲೆ ದೇಹಕ್ಕೆ ಸಮಾಧಿ ಯಾಕೆ? ಪಂಚಭೂತಗಳಿಂದಾದ ಈ ದೇಹವನ್ನು ತಿರುಗಿ ಪಂಚಭೂತಗಳಿಗೇ ಅರ್ಪಿಸಿದರೆ ಉಳಿಯೋದು ಶೂನ್ಯ. ಶೂನ್ಯದಿಂದ ಬಂದ ಆತ್ಮ ಶೂನ್ಯಕ್ಕೆ ತಲುಪಿದರೆ ಮುಕ್ತಿ.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ತತ್ವಜ್ಞಾನದಿಂದ ಹೊರಬಂದ ಸಂದೇಶಗಳಲ್ಲಿ ಅದ್ವೈತ ವಿದೆ. ಯಾವುದೇ ರೀತಿಯ ರಾಜಕೀಯವಿಲ್ಲ. ಆತ್ಮಕ್ಕೆ ಸ್ವತಂತ್ರ ಸಿಕ್ಕಾಗ ಅದನ್ನು ತಿರುಗಿ ಹಿಡಿದಿಟ್ಟುಕೊಂಡು ತಮ್ಮ ಸ್ವಾರ್ಥ ಕ್ಕೆ ಬಳಸುವ ಬದಲು ಸ್ವತಂತ್ರವಾಗಿ ಬಿಟ್ಟರೆ ಇನ್ನಷ್ಟು ಮತ್ತಷ್ಟು ಬಲ ಹೆಚ್ಚುವುದು.
ಕೆಲವೊಮ್ಮೆ ನಮಗೇ ತಿಳಿಯದೆ ರಾಜಕೀಯದ ವಶದಲ್ಲಿ
ನಮಗೆ ನಾವೇ ಮೋಸಹೋಗಿದ್ದರೂ ಇದು ಸಹಜ ಎಂದು ತಳ್ಳಿ ಹಾಕಿದರೂ ಅದರ ಫಲ ಅನುಭವಿಸುವುದೂ ನಾವೇ
ಎನ್ನುವ ಸತ್ಯದ ಅರಿವಾಗೋದಿಲ್ಲ. ಹೀಗಾಗಿ ಅತಿಯಾದ ರಾಜಕೀಯವು ಮಾನವ ಮಾನವನಲ್ಲಿಯೇ ಒಡಕು ಮೂಡಿಸಿ ಆಳುತ್ತದೆ. ಆಳುವವರೂ ಆಳಾಗಿ ಜೀವನ ನಡೆಸೋದೂ ಸತ್ಯವೆ. ಹೀಗಾಗಿ ಮಹಾತ್ಮರುಗಳು ಯಾವ ರಾಜಕೀಯದ ಬಲೆಗೆ ಬೀಳದೆ ಸ್ವತಂತ್ರ ರಾಗಿದ್ದರು.
Sunday, January 1, 2023
ದಾರಿ ಯಾವುದಯ್ಯಾ ವೈಕುಂಠಕ್ಕೆ?
ಯಾರ ಜೀವನ ದೊಡ್ಡದು ?
-
ನನಗೆ ಸಣ್ಣ ವಯಸ್ಸಿನಿಂದಲೇ ಸತ್ಯ ಯಾವುದು ಸತ್ಯವೇ ದೇವರೆಂದಾಗ ಸತ್ಯ ಯಾಕೆ ಹೇಳಬಾರದು. ಹೀಗೇ ಮನಸ್ಸಿನಲ್ಲಿ ಪ್ರಶ್ನೆಗಳೇಳುತ್ತಿತ್ತು. ದೊಡ್ಡವರು ಸುಳ್ಳುಹೇಳಬಹುದು ಸಣ್ಣ...
-
ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರ...
-
ಭಯ ಭಕ್ತಿ ಇರಬೇಕು .ಆದರೆ ಯಾವುದಕ್ಕೆ ಯಾರಲ್ಲಿ ಎನ್ನುವ ಅರಿವಿರಬೇಕು. ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ ಎಲ್ಲರಲ್ಲಿಯೂ ತಿಳುವಳಿಕೆಯಿದೆ. ಕೆಲವರಿಗೆ ಹೊರಜಗತ್ತಿನ...