ಶೈಲಪುತ್ರಿ

ದಕ್ಷ ಪ್ರಜಾಪತಿಯ ಆ ಬೃಹತ್ ಯಾಗಶಾಲೆಯಲ್ಲಿ ಅಂದು ಧಗಧಗನೆ ಉರಿಯುತ್ತಿದ್ದದ್ದು ಕೇವಲ ಹವಿಸ್ಸಿನ ಬೆಂಕಿಯಲ್ಲ, ಜಗತ್ತಿನ ಮೂಲಶಕ್ತಿಯ ಸ್ವಾಭಿಮಾನ. ತನ್ನ ಪತಿ ಮಹಾದೇವನಿಗೆ ಆ...

Friday, May 12, 2023

ಅಸಮಾನತೆ ಯಾವುದು? ಎಲ್ಲಿದೆ? ಯಾಕಿದೆ? ಹೇಗಿದೆ?

ಭಾರತದ ಇತಿಹಾಸದಲ್ಲಿ ಸಮಾನತೆಯ ಹೋರಾಟದ ಯುದ್ದದಲ್ಲಿ ಗೆದ್ದವರು ಯಾರು ಸೋತವರು ಯಾರು ಎನ್ನುವ ಪ್ರಶ್ನೆ ಗೆ ಉತ್ತರ ಈಗಿನ ಅಸಮಾನತೆ ತಿಳಿಸುತ್ತದೆ. ಇಲ್ಲಿ ಸಮಾನತೆಯನ್ನು ರಾಜಕೀಯವಾಗಿ ಅರ್ಥ ಮಾಡಿಕೊಂಡವರೆ ಹೆಚ್ಚು ರಾಜಯೋಗದಿಂದ  ಸಮಾನತೆಯನ್ನು ತಿಳಿಸಿದ ಮಹಾತ್ಮರನ್ನು ಅನುಸರಿಸಿದವರು ವಿರಳ.ಹೀಗಾಗಿ ಸರಳವಾಗಿದ್ದ ತತ್ವ ತಂತ್ರಕ್ಕೆ ಬಳಕೆಯಾಗುತ್ತಾ ಅಸಮಾನತೆಯು ತಾಂಡವವಾಡಿ ತನ್ನ  ಅಸ್ತಿತ್ವಕ್ಕೆ ತಾನೇ ಹೋರಾಟ ಮಾಡುವ ಪರಿಸ್ಥಿತಿ ಮಾನವನಿಗೆ ಹೆಚ್ಚಾಗಿದೆ. ಹಾಗಾದರೆ ಸಮಾನತೆ ಎಂದರೇನು?
ಎಲ್ಲಾ ಸಮಾನರಾದರೆ ಯಾಕಿಷ್ಟು ರಾಜಕೀಯ ದ್ವೇಷ?
ಎಲ್ಲಾ ಸರಿಸಮಾನರಾಗಿದ್ದರೆ  ಎಲ್ಲರಲ್ಲಿಯೂ ಅಡಗಿರುವ ಆ ಪರಮಶಕ್ತಿ  ಯಾಕೆ ಜಾಗೃತವಾಗಿಲ್ಲ?
ದೇವರಿರೋದು ಸತ್ಯವೆಂದಿರುವ ಮಹಾತ್ಮರನ್ನು ನಂಬುವ ನಮಗೆ ದೇವರು ಕಾಣುತ್ತಿಲ್ಲ  ಯಾಕೆ?
 ಕಾರಣವೇನೆಂದರೆ  ನಮ್ಮ ಕಲಿಕೆಯಲ್ಲಿ  ಆಗಿರುವ ವ್ಯತ್ಯಾಸ.
ಅಂದಿನ ಕಲಿಕೆಯು ಆಂತರಿಕ ಶುದ್ದಿಯ ಕಡೆಗೆ ನಡೆದಿತ್ತು ನಂತರ ಭೌತಿಕದೆಡೆಗೆ  ಮಾನವ ನಡೆದು ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿತ್ತು.
ಅಧ್ಯಾತ್ಮ   ಮಾನವನಲ್ಲಿ  ಆತ್ಮಚೈತನ್ಯ ಹೆಚ್ಚಿಸುವಂತಿದ್ದು
ಇದರಲ್ಲಿ ರಾಜಕೀಯ ಒಂದು ಭಾಗವಷ್ಟೆ.ಅದೂ ಕೂಡ ಧರ್ಮದ ತಳಹದಿಯಲ್ಲಿತ್ತು.
ಧರ್ಮದಲ್ಲಿಯೂ ಮೂರು ರೀತಿಯ ಧರ್ಮ ಕಾಣಬಹುದು
ಒಂದು ದೇವತೆಗಳ ಧರ್ಮ, ಮಾನವಧರ್ಮ, ಅಸುರಧರ್ಮ.
ಈಗಲೂ ಈ. ಮೂರೂ ಗುಣಗಳ ಜನರಿದ್ದರೂ ಧರ್ಮ ವೇ ರಾಜಕೀಯದ ವಶದಲ್ಲಿರುವಾಗ ಸ್ವತಂತ್ರ ವಾಗಿರುವ  ಸ್ವಧರ್ಮ  ಮಾನವನಿಗೆ ಕಾಣಲಾಗುತ್ತಿಲ್ಲ.
 ದೇಶದೊಳಗೆ ಅಸಂಖ್ಯಾತ ಧರ್ಮ, ಜಾತಿ,ಪಕ್ಷಗಳು ದೇವರ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ   ವ್ಯವಹಾರಕ್ಕೆ ಇಳಿದು ಹಣ  ಹೆಸರು ಅಧಿಕಾರ ಪಡೆದರೂ  ಅದು ಶಾಶ್ವತ ಸುಖ ನೀಡುವುದಿಲ್ಲ ಎನ್ನುವ ಸತ್ಯಜ್ಞಾನವಿಲ್ಲದೆ  ಅಸಮಾನತೆ ಬೆಳೆದಿದೆ.
ಒಂದೇ ಸತ್ಯವನ್ನು ಹಲವಾರು ರೀತಿಯಲ್ಲಿ ಹಲವಾರು ಪುರಾಣ, ಇತಿಹಾಸವನ್ನು  ಅಸಂಖ್ಯಾತ ಸಂಶೋಧಕರಿಗೆ ಕಂಡಂತೆ ವಿವರಿಸಿದ್ದರೂ ಅದರಿಂದ  ಸಮಾಜದಲ್ಲಿ ಶಾಂತಿ ಬೆಳೆದಿದ್ದರೆ ಸರಿ ಇಲ್ಲವಾದರೆ ಅದು ಅಸತ್ಯವಾಗಿರುತ್ತದೆ.
 ಅನುಭವಜ್ಞಾನವು  ಅವರವರ  ಮನಸ್ಸಿಗೆ ಸರಿಯಾಗಿದ್ದರೂ
ಆ ಆ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಲು ಸಹಾಯ ಮಾಡಿದ್ದರೂ  ವಾಸ್ತವದಲ್ಲಿ ನಾವೆಷ್ಟು  ಅದರಲ್ಲಿದ್ದ ಸತ್ಯ ಸತ್ವ‌ತತ್ವವನ್ನು ನಮ್ಮೊಳಗೇ ಅಳವಡಿಸಿಕೊಂಡು ಸತ್ಯ ತಿಳಿದೆವು ಎನ್ನುವುದು ಬಹಳ ಮುಖ್ಯ.
ರಾಜಕೀಯಕ್ಕೆ ಇಳಿದಾಗ ಆತ್ಮವಿಮರ್ಷೆಗೆ ಸಮಯವಿರದು
ಹೀಗಿರುವಾಗ ನಾನೇ ಸರಿಯಿಲ್ಲದೆ ಪರರನ್ನು ಸರಿಪಡಿಸಲಾಗದು. ಆಗೋದಾದರೂ ಅದು ನಮ್ಮ ಜೊತೆಗೆ ಇರುವ‌ ಮಹಾತ್ಮರುಗಳ ಸಹಕಾರ, ಸಹಾಯ,ಆಶೀರ್ವಾದದಿಂದ ಸಾಧ್ಯವಿದೆ. ಹಾಗಾಗಿ ಇಲ್ಲಿ ಏನೇ ಬದಲಾವಣೆ ಆಗಬೇಕಾದರೆ ಮೊದಲು ನಾವು ಬದಲಾಗಬೇಕಿದೆ.ನಮ್ಮ ದಾರಿ ಸರಿಯಿದ್ದರೆ ಗುರಿ ತಲುಪಬಹುದು. ಸತ್ಯವಿದ್ದರೆ ಧರ್ಮ ವಿರುತ್ತದೆ. ಹಾಗೆಯೇ
ಪೋಷಕರು  ಉತ್ತಮ ಮಾರ್ಗದಲ್ಲಿದ್ದರೆ ಮಕ್ಕಳೂ ಉತ್ತಮ ಮಾರ್ಗದಲ್ಲಿರುವರು. ಹೊರಗೆ ಕಾಣುವುದಕ್ಕಿಂತ ಒಳಗಿನ ಸಂಶೋಧನೆಯೇ ಮುಖ್ಯ. 
ಅಂದರೆ ಅಧ್ಯಾತ್ಮದ ನಂತರವೇ ಭೌತಿಕದ ಸತ್ಯ ದರ್ಶನ ಸಾಧ್ಯ.
ಅಧ್ಯಾತ್ಮ ದ ಹೆಸರಿನಲ್ಲಿ  ಅಸತ್ಯ ಅನ್ಯಾಯ ಅಸಮಾನತೆ ಹೆಚ್ಚಿದಂತೆಲ್ಲ ಭೌತಿಕದಲ್ಲಿ ಭ್ರಷ್ಟಾಚಾರ ಹೆಚ್ಚುವುದು. ದೈವತ್ವಕುಸಿದಂತೆಲ್ಲಾ ಅಸುರೀ ಗುಣಗಳು ಮಾನವನೊಳಗೆ ಪ್ರವೇಶಿಸಿ‌ ಆಳುವುದು.
ಹಿಂದೆ ಇಂದು ಮುಂದೆ  ಯಾವಾಗಲೂ ಈ ಮೂರೂ ಶಕ್ತಿಯ ಪ್ರೇರಣೆಯಂತೆ  ಮನುಕುಲ ನಡೆದಿದೆ.ಶ್ರೀ ರಾಮಚಂದ್ರನು ಸಾಮಾನ್ಯಪ್ರಜೆಯ ಮಾತಿಗೆ ಬೆಲೆಕೊಟ್ಟು  ಪತಿವ್ರತೆಯಾದ ಸೀತಾಮಾತೆಯನ್ನೇ ತೊರೆದ ಕಾಲವನ್ನೂ ಈ  ಜಗತ್ತು ನೋಡಿದೆ  ಹಾಗೆ ಎಷ್ಟೋ  ದೇವಾನುದೇವತೆಗಳ ಕಾಲದ ಕಥೆಯೂ ಕೇಳಿದೆ ಈಗಿನ  ಕಥೆಯೂ  ಪ್ರಚಾರದಲ್ಲಿದೆ ಅಂದರೆ ಕಥೆಯ ಹಿಂದಿನ ತತ್ವ ಉತ್ತಮವಾಗಿದ್ದರೆ ಜೀವನದಲ್ಲಿ ವ್ಯಥೆ ಇರದು. ತಂತ್ರವೇ ಹೆಚ್ಚಾಗಿದ್ದರೆ ಸ್ವತಂತ್ರ ಇರದು. ಎಷ್ಟೇ  ಮೇಲೆ ಕೆಳಗೆ ಮಾಡಿದರೂ ಈ ಭೂಮಿಯಿಂದ   ಮುಕ್ತಿ ಪಡೆಯುವುದಕ್ಕೆ ತತ್ವಜ್ಞಾನವೇ‌
ಬೇಕು.
ತಂತ್ರದಿಂದ ಭೂಮಿಯನ್ನು ಆಳಬಹುದಾದರೂ  ಅದರ ಫಲ ತಿರುಗಿ ಬರೋವಾಗ ಆಳಾಗಿ ದುಡಿಯುವುದು ಅಗತ್ಯ.

ವಾಸ್ತವತೆಗೆ ಬಂದರೆ ಪುರಾಣ ಇತಿಹಾಸದ ತತ್ವ ಶಾಸ್ತ್ರ ಒಂದೇ ಆದರೂ ಅದರ ಪ್ರಚಾರಕರು ಒಂದಾಗಿಲ್ಲ ಇಲ್ಲಿ ಅಸಮಾನತೆ ತಾಂಡವವಾಡುತ್ತಿರುವಾಗ ಮಧ್ಯವರ್ತಿಗಳು ಮಾಧ್ಯಮಗಳು  ಮಧ್ಯೆ ಇರುವ‌ ಮಾನವರು ಮುಂದೆ ನಡೆಯುವುದೇ‌ ದೊಡ್ಡ ಸಮಸ್ಯೆ. ಹಾಗೇ ಮುಂದೆ ನಡೆದವರೆ ಮಹಾತ್ಮರಾಗಿರೋದು ಅವರಿಗೆ ಯಾವುದೇ ರಾಜಕೀಯ ಬೆಂಬಲವಿರಲಿಲ್ಲ.ಸಮಾಜದ ಸಹಕಾರವಿರಲಿಲ್ಲ ಆದರೂ ಸ್ವತಂತ್ರ ಜ್ಞಾನವಿದ್ದ ಕಾರಣ  ಮುಂದೆ ನಡೆದರು.ಈಗಲೂ ಭಾರತದ ಸಾಮಾನ್ಯಪ್ರಜೆಗಳಿಗೆ ಸ್ವತಂತ್ರ ಜ್ಞಾನ ಒಳಗಿದೆ.ಅದನ್ನು ಸ್ವತಂತ್ರವಾಗಿ ಬೆಳೆಸಿಕೊಳ್ಳಲು  ನಮ್ಮ ಶಿಕ್ಷಣ  ಅವಕಾಶ ಕೊಟ್ಟಿಲ್ಲವೆನ್ನುವುದೇ ಭಾರತೀಯರ ಈ ಸಮಸ್ಯೆಗಳಿಗೆ ಕಾರಣ. ಇಲ್ಲಿ ವಿದೇಶಿಗಳ ಶಿಕ್ಷಣಕ್ಕೆ ಸಹಕಾರ ಹೆಚ್ಚಾಗಿ ಕೊಟ್ಟು ಸ್ವದೇಶ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಿದವರಿಗೆ ವಿದೇಶಿ ಸಂಸ್ಥೆ ಕೆಲಸ ಕೊಟ್ಟು ವಿದೇಶದವರೆಗೆ ಕರೆಸಿಕೊಂಡಿತು. ಹಣ ಅಧಿಕಾರವಿದ್ದರೂ ಸ್ವದೇಶದ ಮೂಲ ಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು  ತಂತ್ರದಿಂದ ಅಸಾಧ್ಯವಾಗಿದೆ. ಸಮಸ್ಯೆ ಒಳಗಿದೆ ಪರಿಹಾರ ಹೊರಗಿನಿಂದ ಪಡೆದಷ್ಟೂ ಹೆಚ್ಚುವುದು.ಅಧ್ಯಾತ್ಮದ ಪ್ರಕಾರ ನಾವೆಷ್ಟೇ ಹೊರಗಿನಿಂದ ಸೇರಿಸಿದರೂ  ಒಳಗೆ ಬೆಳೆಯುತ್ತದೆ.ಅದು ಸದ್ಗುಣವಾಗಿದ್ದರೆ ಉತ್ತಮ ಶಾಂತಿ.ದುರ್ಗುಣವಾಗಿದ್ದರೆ ಕ್ರಾಂತಿಯ ಅಶಾಂತಿ.
ನಮ್ಮ ಗುಣಕ್ಕೆ ಹೊಂದಿಕೊಳ್ಳುವ  ಗುಣವನ್ನು ಹೊರಗಿನಿಂದ ಸೇರಿಸಿದರೆ ಉತ್ತಮ.ಇದರಲ್ಲಿ ದೈವಗುಣ, ಮಾನವಗುಣ ಅಸುರಗುಣವಿದೆ. ದೈವಗುಣಕ್ಕೆ ಸಾಕಷ್ಟು ಕಷ್ಟಪಟ್ಟು ತ್ಯಾಗ ಮಾಡಬೇಕು ಹೀಗಾಗಿ ಮಾನವ ಇದನ್ನು ಇಷ್ಟಪಡೋದಿಲ್ಲ
ಮಾನವಗುಣದಲ್ಲಿ ಪ್ರತಿಫಲಾಪೇಕ್ಷೆ ಬಯಸೋದು ಸಹಜ ಇದರಿಂದ ಋಣ ತೀರೋದಿಲ್ಲ.
ಇನ್ನು ಅಸುರಗುಣವಂತೂ ಅತಿಯಾದ ಸ್ವಾರ್ಥ ಅಹಂಕಾರದೆಡೆಗೆ  ನಡೆಸುವುದಾದರೆ ಮಾನವನಿಗೆ ಮಾನವನೆ ಶತ್ರು. ಈ ಮೂರರಲ್ಲಿ ನಮ್ಮೊಳಗಿರುವ ಯಾವ ಗುಣದಿಂದ ನಮಗೆ  ಕಷ್ಟ ನಷ್ಟ ಅತೃಪ್ತಿ ಅಸಹಾಯಕತೆ ಅನ್ಯಾಯ ಅಧರ್ಮ ಅಸತ್ಯ  ಹೆಚ್ಚಿಗೆಯಾಗಿದೆ ಇದರಿಂದಾಗಿ ನಮ್ಮ ಆತ್ಮಬಲ ಎಷ್ಟು  ಕ್ಷೀಣಿಸಿದೆ ಬೆಳೆದಿದೆ ಎನ್ನುವ ಪ್ರಶ್ನೆ  ಎಲ್ಲಾ ಮಾನವರೂ  ಸ್ವಯಂ ಚಿಂತನೆ ನಡೆಸುವುದಕ್ಕೂ  ಯೋಗವಿರಬೇಕು. ಕಾರಣ ಯೋಗಾಸನದಿಂದ ಯೋಗ ಎನ್ನುವ ಬದಲು  ಯೋಗಾಸನದಿಂದ ನಮ್ಮ ಮನಸ್ಸಿನ ನಿಗ್ರಹ ಎಷ್ಟರ ಮಟ್ಟಿಗೆ ಆಗಿದೆ ಎನ್ನುವ ಬಗ್ಗೆ ಚಿಂತನೆ ಅಗತ್ಯ.
ಮನಸ್ಸೇ ಮನುಷ್ಯನ ಶತ್ರುವೂ ಹೌದು ಮಿತ್ರನೂ ಹೌದು.
ಮನಸ್ಸಿನಲ್ಲೇ ಅಡಗಿರುವ ಅಸಮಾನತೆಯೆನ್ನುವ ವಿಷ ಬೀಜ ಬಿತ್ತಿದವರು ಈಗಿಲ್ಲವಾದರೂ ಬೆಳೆದು ಹರಡಿರುವುದು ನಾವೇ ಆದಾಗ ನಿಜವಾಗಿಯೂ  ಅಸಮಾನತೆ ಎಂದರೇನು?
ಸಮಾನವಾಗಿ ಎಲ್ಲಾ ಇರಲು ಸಾಧ್ಯವೆ? ಯಾವ ಕಾಲದಲ್ಲಿ ಇತ್ತು? ಶ್ರೀ ರಾಮನ ಕಾಲದಲ್ಲೇ  ಅಲ್ಲಲ್ಲಿ  ಇದ್ದ ಇದನ್ನು ಸ್ವಯಂ ಮಹಾರಾಜನಾಗಿ ಹೇಗೆ  ಧರ್ಮದ ಹಾದಿಯಲ್ಲಿ ನಡೆದು ಜನಪ್ರಿಯನಾಗಿ ದೇವನಿಗೆ ದೇವನಾಗಿ ಮಹಾದೇವನಾದರೂ ಈಗಿನ‌ಮಾನವರು ಆ ರಾಮನನ್ನೂ ಬಿಡದೆ ರಾಜಕೀಯ ನಡೆಸಿರುವ ಕಲಿಗಾಲದ  ಇಂದಿನ ಭಾರತದಲ್ಲಿ ಜನ ಬುದ್ದಿವಂತರು ಸತ್ಯ ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ. ಆದರೆ ಇದನ್ನು ರಾಜಕೀಯವಾಗಿಸಿದರೆ ಅಧರ್ಮ ವಾಗಿ ಇರುವ ಸತ್ಯವೂ ಹಿಂದುಳಿಯುವುದು.
ಇಡೀ ಭಾರತ ದೇಶವು ಸ್ವತಂತ್ರವಾಗಿ  ಉಳಿಯಲು ದೇಶಭಕ್ತರು  ಹೋರಾಡಿದ್ದರು. ಈಗ ಆ ಸ್ವತಂತ್ರ ಜ್ಞಾನ ಬಿಟ್ಟು  ಪರತಂತ್ರಜ್ಞಾನ  ಒಳಗೆಳೆದುಕೊಂಡಂತೆ ಆಳವಾದ ತತ್ವಜ್ಞಾನದ ಸಮಾನತೆ ಅರ್ಥ ವಾಗದೆ ಅತಂತ್ರಸ್ಥಿತಿಗೆ ತಲುಪಿತು. ಆದರೂ ಈಗಲೂ ಒಗ್ಗಟ್ಟನ್ನು ಬೆಳೆಸಿಕೊಳ್ಳಲು ಸಾಕಷ್ಟು ಕಾರ್ಯಕ್ರಮ ಹೊರಗೆ ನಡೆದಿದೆ.ಇದೇ ರೀತಿ ಮನೆಯ ಒಳಗೆ  ಒಗ್ಗಟ್ಟನ್ನು ಬೆಳೆಸಿಕೊಂಡರೆ  ಹೊರಗಿನ ಶತ್ರುಗಳಿಗೆ ಸ್ಥಳವಿರದು.ಯಾವಾಗ ಮನೆಯವರನ್ನೇ ಹೊರಗೆ ಕಳಿಸಿ ಹೊರಗಿನವರನ್ನು ಸ್ವಾಗತಿಸುವ  ಪಾಶ್ಚಾತ್ಯ ಸಂಸ್ಕೃತಿ  ಬೆಳೆಯಿತೋ ಅದೇ ಈಗ ಮನೆ ಒಡೆಯುವ ಕೆಲಸಮಾಡುತ್ತಿದೆ.  ಮನರಂಜನೆಯ ಹಿಂದಿರುವ ಆತ್ಮವಂಚನೆ ಗಮನಕೊಡದ ಅಜ್ಞಾನ ಬೆಳೆದಿದೆ.ಇದಕ್ಕೆ ಸಹಾಯಕರಾಗಿರೋದೂ ನಮ್ಮವರೆ ಅಂದರೆ ಅಜ್ಞಾನದಲ್ಲಿ ನಮಗೆ ನಾವೇ ಶತ್ರುವಾಗಿ ನಿಂತಾಗ  ಇದನ್ನು ತಡೆಯಲಾಗದು.
ಒಟ್ಟಿನಲ್ಲಿ ಮಕ್ಕಳು ಮಹಿಳೆಯರು ಈ ದೇಶದ ಆಸ್ತಿ.‌ಇವರ ಒಳಗಿರುವ ಸತ್ಯಜ್ಞಾನ  ಎಷ್ಟು  ಸದ್ಬಳಕೆ ಆಗುವುದೋ ಅದು ಭಾರತಮಾತೆಯ ಶಕ್ತಿಯಾಗುತ್ತದೆ. ಯಾವಾಗ ವಿಶ್ವಗುರು ಶಕ್ತಿಯುತವಾಗಿ ಬೆಳೆಯುವಳೋ ವಿಶ್ವವೇ ಜಾಗೃತವಾಗುತ್ತದೆ.
 ಇಷ್ಟಕ್ಕೂ  ಸಾವನ್ನು ಗೆದ್ದವರಿಲ್ಲ. ಇದ್ದೂ ಇಲ್ಲದಂತಿರೋ
ದೆಂದರೆ  ಏನೂ ಮಾಡದಿರೋದಲ್ಲ. ಸತ್ಯಕ್ಕೆ ಬೆಲೆಕೊಟ್ಟು ಆತ್ಮಸಾಕ್ಷಿ ಯಂತೆ ನಡೆಯುವುದು ಮಹಾತ್ಮರ ಲಕ್ಷಣ. ಇವರಿಗೆ ಜೀವಕ್ಕಿಂತ ಆತ್ಮರಕ್ಷಣೆಯೇ ಮುಖ್ಯ.ಹೀಗಾಗಿ ದೇಶಕ್ಕಾಗಿ ಧರ್ಮ ಕ್ಕಾಗಿ  ಹೋರಾಟ ಮಾಡಲು ಮುಂದಾಗುವರು.  ದೇಶ ಆಳುವ‌ಮೊದಲು ನನ್ನ ನಾನು ಆಳಿಕೊಳ್ಳುವ ಜ್ಞಾನ‌  ಮುಖ್ಯವೆಂದಿದ್ದಾರೆ ವಿವೇಕಾನಂದರು. ಯುವಪೀಳಿಗೆಗೆ ಪಾಶ್ಚಾತ್ಯ ಶಿಕ್ಷಣ ನೀಡಿ ದೇಶರಕ್ಷಿಸಿ ಎಂದರೆ ಅವರಲ್ಲಿರುವ ರಕ್ತದಲ್ಲಿ  ವಿದೇಶಿ ತಂತ್ರವಿರುತ್ತದೆ ಸ್ವದೇಶದ ತತ್ವವಲ್ಲ.ನಮ್ಮವರನ್ನೇ ಬಿಟ್ಟು ವಿದೇಶಕ್ಕೆ ಹೋದವರಿಗೆ ದೇಶಭಕ್ತಿ ಇರಲು ಸಾಧ್ಯವೆ?  ನಿಜವಾದ ದೇಶಭಕ್ತರು ದೇಶಕ್ಕಾಗಿ  ಒಳಗಿದ್ದು ದುಡಿದು  ಸ್ವಯಂ ಸೇವಕರಾಗಿರುವರು  ಇಂತವರಿಗೆ ಸಹಕಾರ ನೀಡಿದರೂ ಪುಣ್ಯಕಾರ್ಯ ವಾಗುವುದು.
ಹಿಂದಿನಿಂದಲೂ ಭಾರತವನ್ನು ಆಳಲು ಬಂದ ಅನ್ಯಧರ್ಮಕ್ಕೆ ಭಾರತದ  ಸತ್ವ ಸತ್ಯ ತತ್ವ ತಿಳಿಯಲಾಗಿಲ್ಲ. ಕಾರಣ ಮೇಲೆ ಕಾಣುವ ಸತ್ಯಕ್ಕೂ ಒಳಗಿರುವ ಸತ್ಯಕ್ಕೂ ಬಹಳ ಅಂತರವಿದೆ.
ಅಂತರಾಳಕ್ಕೆ ಇಳಿದಾಗಲೇ ಇದು ಅರ್ಥ ವಾಗುತ್ತದೆ. ಹಾಗೇ ಇಳಿಯುವುದಕ್ಕೆ ಎಲ್ಲರಿಗೂ ಸ್ವತಂತ್ರ ಜ್ಞಾನವಿದೆ.ಆದರೂ ಇಳಿಯಲು ಭೌತಿಕದ ಶಿಕ್ಷಣ ಬಿಡದೆ  ಹೊರಗೆಳೆದರೆ ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ.
ಯಾರೋ ಯಾರನ್ನೂ ಆಳುವುದಕ್ಕೆ ರಾಜಪ್ರಭುತ್ವ ವಿಲ್ಲ.
ಆದರೂ ಪ್ರಜೆಗಳಾಗಿ ದೇಶದ ಭವಿಷ್ಯಕ್ಕೆ  ಉತ್ತಮವಾದ  ಆಡಳಿತ  ನಡೆಸುವವರು ಅಗತ್ಯವಾಗಿದ್ದಾರೆ.
ಇದಕ್ಕೆ ಪೂರಕವಾದ ಜ್ಞಾನ ಪ್ರಜೆಗಳಿಗೆ ಕೊಟ್ಟಾಗಲೇ ದೇಶ ಭಕ್ತಿ ಹೆಚ್ಚಾಗಲು ಸಾಧ್ಯ.ಹೇಗೆ ದೇವರು ಕಾಣದಿದ್ದರೂ ದೇವರನ್ನು ಪೂಜಿಸುವರೋ ದೇಶವನ್ನು  ನೋಡುವ ದೃಷ್ಟಿ ಇದ್ದರೆ ಸಮಾನತೆಗೆ ಅರ್ಥ ವಿದೆ.  ಅಸುರರಿಗೆ ಅಧಿಕಾರ ಕೊಟ್ಟು ದೇಶವನ್ನು ವಿದೇಶ ಮಾಡಬೇಕೋ ಅಥವಾ ಉತ್ತಮರಿಗೆ ಸಹಕರಿಸಿ ಸ್ವದೇಶವನ್ನು ಸ್ವಧರ್ಮ ವನ್ನು ಉಳಿಸಿಕೊಳ್ಳಬೇಕೋ ತೀರ್ಮಾನ ಮಾಡುವುದು ಪ್ರಜೆಗಳ ಧರ್ಮ ಹಾಗು ಕರ್ಮ ವಷ್ಟೆ. ಇದಕ್ಕೆ ತಕ್ಕಂತೆ  ನಮ್ಮೊಳಗಿನ ‌ಜೀವನದ ಪಯಣವಿದೆ. ಜೀವ ಒಳಗಿದೆ ನಮ್ಮ‌ ನಡೆ ಹೊರಗಿದೆ.ಸಮಾನತೆ ಎಲ್ಲಿದೆ? ಆತ್ಮಾವಲೋಕನ ಅಗತ್ಯವಿದೆ.
ಪ್ರಜೆಗಳ ತಪ್ಪು ನಡೆ ನುಡಿಯೇ ಅಸಮಾನತೆಗೆ ಕಾರಣ.
ಇದನ್ನು ದುರ್ಭಳಕೆ ಮಾಡಿಕೊಂಡು ಆಳುವವರಿಗೆ ನಮ್ಮದೇ ಸಹಕಾರ ಸಿಕ್ಕಿದರಂತೂ  ಆತ್ಮಹತ್ಯೆಯೇ ಹೆಚ್ಚುವುದು.
ಆತ್ಮನಿರ್ಭರ ಭಾರತವು ಅಧ್ಯಾತ್ಮದ ತತ್ವಜ್ಞಾನದಿಂದ ಬೆಳೆದರೆ  ಶಾಂತಿ,ಸಮೃದ್ದಿ ,ತೃಪ್ತಿ ಮುಕ್ತಿ. ಇದು ಕೇವಲ ನಾಟಕೀಯವಾಗಿ ರಾಜಕಾರಣದೆಡೆಗೆ ನಡೆದಿದ್ದರೆ ಆತ್ಮದುರ್ಭಲ ಭಾರತವಾಗುವುದು. ಇದರಲ್ಲಿ  ಸತ್ಯ ನಮ್ಮ ಅನುಭವಕ್ಕೆ ಬರುತ್ತಿದೆ.ನಾವು ಒಪ್ಪಲು ಕಷ್ಟವಿದೆ.ಅದಕ್ಕೆ ಜೀವನ ಕಷ್ಟವಾಗಿದೆ. ಉತ್ತಮ ವಿಚಾರದಲ್ಲಿ ಸಮಾನತೆ ಇದ್ದರೆ ಉತ್ತಮ ಪ್ರಗತಿ. ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಕಾಲದಲ್ಲಿ ಶಂಖದಲ್ಲಿ  ಕುಳಿತ ಕೊಳೆ ನೋಡಲು ಕಷ್ಟ
ಸತ್ಯ ಒಂದೇ  ಇದ್ದರೂ ಅಸತ್ಯ ಬೆಳೆಯುತ್ತಿರುವುದು ಎಲ್ಲಿಂದ? ನಮ್ಮೊಳಗಿಂದಲೇ  ಬೆಳೆಯುತ್ತಿರುವ ಅಸತ್ಯವೇ ಅಸಮಾನತೆಗೆ ಕಾರಣವಾಗಿರುವಾಗ  ನಾವು ಸತ್ಯದ ಪರ ನಿಂತರೆ  ಸಮಾನತೆಯ ತತ್ವದರ್ಶನ ಸಾಧ್ಯವಿದೆ. ಇಲ್ಲವಾದರೆ ತಂತ್ರದೆಡೆಗೆ ಹೊರಟವರ ಜೀವನವೇ ಅತಂತ್ರಸ್ಥಿತಿಗೆ ತಲುಪುತ್ತದೆ.  ಇದೊಂದು ಸಾಮಾನ್ಯಜ್ಞಾನವಷ್ಟೆ. ಬ್ರಹ್ಮನ ಅರ್ಥ ಮಾಡಿಕೊಳ್ಳಲು  ಕಷ್ಟವಾದರೂ ನಮ್ಮ ಸೃಷ್ಟಿ ಯ ಮೂಲ ತಿಳಿಯಬಹುದಲ್ಲ. ಅದರ ಧರ್ಮ ಕರ್ಮ ದಲ್ಲಿ ಸತ್ಯ ಸತ್ವ ತತ್ವ ಬೆಳೆಸಬಹುದಲ್ಲ. ಇದಕ್ಕೆ ಹೊರಗಿನ  ರಾಜಕೀಯ ಬೇಕೆ? ಒಳಗಿನ ರಾಜಯೋಗವೆ? ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿರೋದೆ ರಾಜಕೀಯವಾಗಿರುವಾಗ ಇದರಿಂದ ರೋಗ ಹರಡಿರೋದಕ್ಕೆ ನಮ್ಮ ಸಹಕಾರ ಕಾರಣ.
ನಾನೇ ಕಾರಣವಾಗಿರುವಾಗ ನನ್ನ  ಬದಲಾವಣೆ ನಾನೇ ಕಷ್ಟಪಟ್ಟು ಮಾಡಿಕೊಳ್ಳಲು ದೈವತ್ವದ  ಜ್ಞಾನವಿರಬೇಕೆನ್ನುವುದೇ ಅಧ್ಯಾತ್ಮ ಸತ್ಯ. ಕಣ್ಣಿಗೆ ಕಾಣದ ಈ ಶಕ್ತಿಯನ್ನು ದುರ್ಭಳಕೆ ಮಾಡಿಕೊಳ್ಳುವುದು ಸುಲಭ ಆದರೆ ಅದರ ಪ್ರತಿಫಲ ಅನುಭವಿಸುವುದೇ ಕಷ್ಟ. ರೋಗವನ್ನು ಯಾರೂ ಹಂಚಿಕೊಳ್ಳಲು ಬರೋದಿಲ್ಲ. ಇದು ಕೊರೊನ ಮಹಾಮಾರಿ ತೋರಿಸಿದ್ದಾಳೆ. ಜನಸಾಮಾನ್ಯರ ಸಾಮಾನ್ಯಜ್ಞಾನವನ್ನು ಬೆಳೆಯಲು ಬಿಟ್ಟರೆ ಸ್ವತಂತ್ರ ವಾಗಿ ಸತ್ಯ ತಿಳಿಯುತ್ತಾ  ದೈವತ್ವದೆಡೆಗೆ ಮನುಕುಲ ಹೋಗಬಹುದು. ಅಸುರರ ಹಿಂದೆ ನಡೆದಷ್ಟೂ  ಆತ್ಮಹತ್ಯೆ ಹೆಚ್ಚುವುದು. ಹಣದಿಂದ ಜ್ಞಾನವಲ್ಲ. ಗುಣದಿಂದ ಜ್ಞಾನ ಬೆಳೆದಿದೆ.  ಇದರಲ್ಲೂ ಸದ್ಗುಣ ದುರ್ಗುಣ  ಎರಡಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖವಷ್ಟೆ.ಸದ್ಗುಣ ಹೆಚ್ಚಾದಂತೆ ದುರ್ಗುಣದವರು ಕಾಣಿಸುವುದು.
ದುಷ್ಟರಿಗೆ ಸಹಕರಿಸುತ್ತಿರುವವರನ್ನು  ದುಷ್ಟರು ಎನ್ನುವ ಬದಲು ಅಜ್ಞಾನಿಗಳೆಂದರೆ ಸರಿಯಾಗಬಹುದಷ್ಟೆ. ಇವರ ಸಹಕಾರದಿಂದ  ದುಷ್ಟ ಶಕ್ತಿ  ತಡೆದುಕೊಂಡಿರಬಹುದು ಅಥವಾ  ಇನ್ನಷ್ಟು ಬೆಳೆದು ತಮ್ಮ ವಿನಾಶ ತಾವೇ ಮಾಡಿಕೊಳ್ಳಬಹುದು. 
ಶ್ರೀ ಕೃಷ್ಣಾವತಾರದಲ್ಲಿ ಕಂಸನ ಒಳ್ಳೆಯ ಗುಣದಿಂದ ದೇವಕಿಯ ಮೊದಲ. ಮಕ್ಕಳ ಹತ್ಯೆ ಮಾಡಿರಲಿಲ್ಲ ನಾರದರು ಬಂದು  ಪ್ರಚೋಧನೆಕೊಟ್ಟು ತನ್ನ ಅಂತ್ಯಕ್ಕೆ ತಾನೇ ತಯಾರಿ ಮಾಡಿಕೊಂಡ ಕಂಸ. ಒಟ್ಟಿನಲ್ಲಿ ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು, ನಡೆಯುತ್ತಿಲ್ಲ.ನಡೆಯುವುದೂ ಇಲ್ಲ.
ಹೀಗಾಗಿ ಅವರವರ ಆತ್ಮರಕ್ಷಣೆ ಅವರೆ ಮಾಡಿಕೊಂಡರೆ ಉತ್ತಮ. 
ದುರ್ಗುಣದವರು ಹೆಚ್ಚಾದಂತೆ ಸದ್ಗುಣದವರು  ಸಹಕಾರ ನೀಡಿ ಸುಮ್ಮನಿದ್ದರೆ ಅವರನ್ನೂ ಆಳುವರು.ಸಮಾನತೆಗೆ ಭೂಮಿಯ ಸಮತೋಲನಕ್ಕೆ  ಇವೆರಡೂ ತಮ್ಮದೇ ಆದ  ಕೆಲಸದಲ್ಲಿ  ತೊಡಗಿರುವುದೇ ಜಗತ್ತಿನ‌‌ ನಿಯಮ.
ಯಾವುದೂ ಅತಿಯಾದರೆ ಗತಿಗೇಡು. 

Wednesday, May 10, 2023

ಅಧ್ಯಾತ್ಮ, ಅಧ್ವೈತ ಪ್ರಜಾಪ್ರಭುತ್ವ

ಆಧ್ಯಾತ್ಮ  ಅದ್ವೈತ  ಪ್ರಜಾಪ್ರಭುತ್ವ.
ಆದಿಆತ್ಮ,  ಅ ದ್ವೈತ, ಪ್ರಜೆಗಳ  ಪ್ರಭುತ್ವ. ಇದರಲ್ಲಿ
ಮಾನವನ ಮೂಲ ಧರ್ಮ  ಒಂದೆ ಎನ್ನೋ ಸತ್ಯವಿದೆ
ಆದರೆ, ಸತ್ಯವನ್ನು  ತಿಳಿಯಲು  ಆತ್ಮಾನುಸಾರ ನಡೆ
ಯಲು  ಕಷ್ಟವಾಗಿದೆ. ಅದ್ವೈತ ದೊಳಗಿನ  ದ್ವೈತ ವೆ
ಎಲ್ಲರಿಗೂ  ಕಾಣುತ್ತಿದೆ. ಪ್ರಜಾಪ್ರಭುತ್ವವನ್ನು ತಮ್ಮ
ಸ್ವಾರ್ಥ ಕ್ಕೆ  ಬಳಸಿಕೊಂಡು  ದೇಶವನ್ನೇ  ಆಳೋರಿಗೆ
ಧರ್ಮದ  ಮೂಲಾರ್ಥ  ತಿಳಿಯದೆ, ರಾಜಪ್ರಭುತ್ವ
ನಡೆದಿದೆ. ಅದ್ವೈತ  ಸಂನ್ಯಾಸಿಗಳಿಗೆ  ಸುಲಭವಾಗಿ
ಅರ್ಥವಾಗೋ  ಹಾಗೆ  ದ್ವೈತ ದ  ಸಂಸಾರ  ನಡೆಸಲು
ಕಷ್ಟ. ಆದರೂ, ಇಂದಿನ  ಪ್ರಜಾಪ್ರಭುತ್ವದ  ಧರ್ಮ
ಸಂನ್ಯಾಸಿ, ಸಂಸಾರಿಗಳೆಂದು ಬೇಧ ಬಾವ ತಿಳಿಸದೆ
ಎಲ್ಲರೂ ದೇಶದೊಳಗಿನ  ಸಾಮಾನ್ಯಜ್ಞಾನದ ಪ್ರಜೆ
ಗಳೆಂಬ  ಸತ್ಯ  ತಿಳಿಯದೆ, ಯಾವುದೇ ತತ್ವದಿಂದ‌
ಮತದಿಂದ ,ಜಾತಿ,ಪಂಗಡ,ಪಕ್ಚಗಳಿಂದ  ದೇಶವನ್ನು
ಆಳುತ್ತೇನೆಂದು  ನಮ್ಮವರನ್ನೇ   ವಿರೋಧಿಸಿ ವಿದೇಶಿ
ಗಳನ್ನು  ಅತಿಯಾಗಿ ಗೌರವಿಸಿ, ‌ಕರೆದು ಕೂರಿಸಿದರೆ
ಅತಿಥಿ ಸತ್ಕಾರ ವೆಂದು  ಕಂಡರೂ, ಕೊನೆಯಲ್ಲಿ ಆ
ಅಥಿತಿಗಳ ಸಂಖ್ಯೆ  ಮಿತಿಮೀರಿ  ಸ್ವದೇಶವೇ ವಿದೇಶ
ಆಗೋದಕ್ಕೆ ನಮ್ಮಲ್ಲಿಯ  ವಿಶೇಷಜ್ಞಾನವೆ‌ಕಾರಣ.
ಹೊರಗಿನ  ವಿಶೇಷ‌ವಿಜ್ಞಾನ,‌ಒಳಗಿನ ವಿಶೇಷಜ್ಞಾನ
ಓದಿ,ನೋಡಿ,ಕೇಳಿ,ಆಚರಿಸಿ,ಪರೀಕ್ಷಿಸೋದರಿಂದ
ಇನ್ನಷ್ಟು  ಮಾನವೀಯತೆ ಬೆಳೆದು ಆತ್ಮಜ್ಞಾನ ದೊರೆಯುತ್ತದೆ.ಎಂಬ  ಉದ್ದೇಶದಲ್ಲಿ  ಹಿಂದಿನ ಗುರು
ಹಿರಿಯರು  ನಮಗೆ ತೋರಿಸಿಟ್ಟ. ಧರ್ಮ ಸತ್ಯದಲ್ಲಿ
ರಾಜಕೀಯ. ಬೆರೆಸಿಕೊಂಡು, ನಾನೇ ಸರಿ ಎಂದರೆ
ನಾನೆಂಬ ಅಹಂಕಾರವೆನ್ನಬೇಕೋ? ಆತ್ಮವಿಶ್ವಾಸ
ಎನ್ನಬೇಕೋ. ಒಟ್ಟಿನಲ್ಲಿ  ಇಲ್ಲಿ ತತ್ವಪ್ರಚಾರವಿದೆ.
ಹಾಗೆ ಆಚರಣೆಯಿದೆ, ಗುರು ಹಿರಿಯರು ಇದ್ದಾರೆ. ಮಹಾತ್ಮರುಗಳು  ಕಡಿಮೆಯಾಗಿಸರ್ಕಾರನಡೆಸೋರ
ಹಿಂದೆ ನಡೆದು ಏನು  ಸಿಕ್ಕಿದೆ?.
ಶ್ರೀ ಶಂಕರಾಚಾರ್ಯರು  ಅವರ  ತತ್ವವನ್ನರಿತವರಲ್ಲಿ
ಇದ್ದಾರೆ.ಮದ್ವಾಚಾರ್ಯರೂ  ಅವರ  ತತ್ವ ಸಿದ್ದಾಂತ
ತಿಳಿದು ನಡೆದವರಲ್ಲಿದ್ದಾರೆ,ಹಾಗೆ ರಾಮಾನುಜಾಚಾರ್ಯರು ,ಶಿವಶರಣರು,ದಾಸ,ಸಂತ ದೇಶಭಕ್ತರು,ದೇವರಭಕ್ತರೆಲ್ರೂ  ಆ ಮೂಲ ಶಕ್ತಿಯ ಒಳಗಿದ್ದರೂ   ಹೊರಗಿನ   ದೇಶದೊಳಗಿದ್ದರೂ ರಾಜಕೀಯದಲ್ಲಿ  ಮೈ ಮರೆತು ,ನಾನೆಂಬ ಅಹಂಕಾರ ಸ್ವಾರ್ಥ ಕ್ಕೆ  ಬಲಿಯಾದರೆ ಜೀವಾತ್ಮನಿಗೆಮುಕ್ತಿ ಹೇಗೆ ದೊರೆಯುತ್ತದೆ..?
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರ  ಕಾಯಕವೇ ಕೈಲಾಸ,ಧರ್ಮ ಕರ್ಮಗಳ  ಲೆಕ್ಕಚಾರದ ವ್ಯವಹಾರ
ಮಾನವನನ್ನು  ರಾಜಕೀಯಕ್ಕಿಳಿಸಿ  ನಾನ್ಯಾರು? ಈ
ಪ್ರಶ್ನೆ ಕೇಳಿ ಕೊಳ್ಳ ದಂತೆ  ಮಾಡಿದರೆ  ನಷ್ಟ ಯಾರಿಗೆ
ಕಾಲಮಾನಕ್ಕೆ ತಕ್ಕಂತೆ  ನಡೆಯೋ ಜೀವನದಲ್ಲಿ  ಸತ್ಯ
ಮರೀಚಿಕೆಯಂತೆ  ಮರೆಯಾದರೆ ಧರ್ಮ  ಎಲ್ಲಿದೆ?.
ಸ್ವಾರ್ಥ ರಹಿತ  ಸೇವಕರಾಗಲು ಸಂನ್ಯಾಸಿಗಳಿಗೆ
ಸಾಧ್ಯ. ಸಂಸಾರದಲ್ಲಿನ  ಸ್ವಾರ್ಥ ಪೂರ್ಣ  ರಾಜಕೀಯ  ಸಮಾಜವನ್ನೇ  ತುಂಬಿದೆ. ಹಾಗಾದರೆಇಲ್ಲಿ ಸಂನ್ಯಾಸಿ ಗಳ 
 ಪ್ರಚಾರಕ್ಕೆ  ಮಾತ್ರ ಸೀಮಿತವೆ? 

ಕಲಬೇಡ, ಕೊಲಬೇಡ,ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ.ಎನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ.. ಇದೇಅಂತ
ರಂಗ ಶುದ್ದಿ ಇದೇ  ಬಹಿರಂಗ ಶುದ್ದಿ. ಇದೇ ಕೂಡಲ
ಸಂಗಮನೊಲಿಯೋ ಪರಿ.ಈ ರೀತಿಯಲ್ಲಿ  ಬದುಕಲು 
 ಅದ್ವೈತ ದಿಂದ  ಮಾತ್ರಸಾಧ್ಯ. ಸಂನ್ಯಾಸಿ,ಯೋಗಿಗಳ.
 ಜೀವನ  ನಿಸ್ವಾರ್ಥನಿರಹಂಕಾರದಿಂದ  ನಡೆಯುವಾಗ 
ಈ ಮೇಲಿನ ಎಲ್ಲಾ  ಗುಣಲಕ್ಷಣಗಳನ್ನು  ಅವರಲ್ಲಿ ಕಾಣಬಹುದು.
ಆದರೆ, ಅಧಿಕಾರ ,ಹಣದಲ್ಲಿರೋ  ಮನಸ್ಸನ್ನು  ತಡೆ
ಹಿಡಿದು, ಸಮಾಜಸೇವೆ  ಮಾಡೋದು ಕಷ್ಟ.
ಹಾಗಾಗಿ ಇಂದು  ತತ್ವಗಳಿದೆ,ತತ್ವೋಪದೇಶವಿದೆ.
ತತ್ವಜ್ಞಾನಿಗಳು    ಕಡಿಮೆ.   ಅದ್ವೈತ,   ದ್ವೈತ, ವಿಶಿಷ್ಟಾದ್ವೈತ   ತತ್ವಗಳಲ್ಲಿ  ಮಾನವೀಯತೆಯನ್ನುಎತ್ತಿ ಹಿಡಿದು ಎಲ್ಲರೂ 
 ಮಾನವರೆಂಬುದಿದೆ. ಆದರೆ, ಭಿನ್ನಾಭಿಪ್ರಾಯ  ಬೆಳೆದು 
 ನಾನೇ ಬೇರೆ ನೀನೆ ಬೇರೆ ಆಗಿ  ಇಂದು  ನಾನೇ
  ದೇವರು ಎನ್ನೋ ಮಟ್ಟಿಗೆನಮ್ಮಲ್ಲಿ  ಅಹಂ  ಬೆಳೆದರೂ, 
ನಾನೆಂಬುದಿಲ್ಲ  ಎನ್ನೋ  ಸತ್ಯದ ಹಿಂದಿನ  ವಿಜ್ಞಾನ  ಕೇವಲ ಹೊರಜಗತ್ತಿನಲ್ಲಿ  ಅಣು ಪರಮಾಣುಗಳನ್ನು  ತನ್ನ 
ಮನಸ್ಸಿಗೆ  ಬಂದಂತೆ  ಬಳಸಿಕೊಂಡಿದೆ.
ಕಾಲಕ್ಕೆ ತಕ್ಕಂತೆ  ನಡೆಯಬೇಕೆ ಅಥವಾ   ನಡತೆಗೆ ತಕ್ಕಂತೆ ಕಾಲ ಬದಲಾವಣೆಯೆ?.

ದ್ವೇಷದ ತಂತ್ರ ಹೋಗುವತನಕ ದೇಶದ ಸ್ವತಂತ್ರ ಅತಂತ್ರ

ಎಲ್ಲಿಯವರೆಗೆ ಈ ದ್ವೇಷದ ದ್ವಂದ್ವದ ರಾಜಕೀಯ ಬಿಟ್ಟು ಮಾನವ ಸ್ವತಂತ್ರ ವಾಗಿ ನಡೆಯಲಾಗದೋ ಅಲ್ಲಿಯವರೆಗೆ ಮಾನವನ‌ಜೀವನವೇ ಅತಂತ್ರವಾಗಿರುತ್ತದೆ.  ಇದು ಧಾರ್ಮಿಕ ಶೈಕ್ಷಣಿಕ ಕ್ಷೇತ್ರದವರೆಗೆ ಹರಡಿದೆ ಎಂದರೆ ದುರಂತ.
ಧರ್ಮದ ವಿಚಾರದಲ್ಲಿ  ದ್ವೈತ ಅದ್ವೈತ ವಿಶಿಷ್ಟಾದ್ವೈತ ದ ಮೂಲಕ  ಸಮಾನತೆಯನ್ನು ಸಾರಲು ಬಂದ ತತ್ವಜ್ಞಾನಿಗಳನ್ನು  ಅರ್ಥ ಮಾಡಿಕೊಳ್ಳಲು ಸೋತವರು ಮಹಾ ಪಂಡಿತರಾದರು. ಆ ಪಾಂಡಿತ್ಯದಿಂದ ಸಾಕಷ್ಟು ಹಣ ಅಧಿಕಾರದ ಜೊತೆಗೆ ಜನಬಲವೂ ಸಿಕ್ಕಿತು .ಇದೇ ಮುಂದೆ ತಂತ್ರವಾಗಿ ಯಂತ್ರವಾಗಿ ಬದಲಾವಣೆ ಆಗಿ ಮಾನವ‌ಮಾನವನಿಗೇ ಶತ್ರುವಾದರೆ  ಇದರಿಂದ ಮುಕ್ತಿ ಸಿಗುವುದೆ? ಹಿಂದೂ ಧರ್ಮದಲ್ಲಷ್ಟೇ ಶತ್ರುವನ್ನು ಪ್ರೀತಿಸು ಎಂದಿರುವುದು.ಅಂತಹ‌ಮಹಾ ಆತ್ಮಶಕ್ತಿ  ಇರಬೇಕಾದರೆ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಆ ಪರಮಾತ್ಮನ ಕಾಣಬೇಕು.ಪರಮಾತ್ಮ ಇರೋದು ತತ್ವಜ್ಞಾನದಲ್ಲಿ ತತ್ವವು ಒಂದು ಮಾಡಿದರೆ ತಂತ್ರ ಬೇರೆ ಮಾಡುತ್ತದೆ. ಸರಿ ಭೂಮಿಗಿಂತ ಆಕಾಶ ದೊಡ್ಡದಾದರೂ ಭೂಮಿ ಬಿಟ್ಟು ಮಾನವ ಆಕಾಶದಲ್ಲಿ ಜೀವನ ನಡೆಸಬಹುದೆ? ಮೊದಲು ಭೂಮಿಯ ಸತ್ಯ,ಸತ್ವ,ತತ್ವವರಿತರೆ  ನಂತರ ಆಕಾಶದೆತ್ತರ  ಮನಸ್ಸು ಹಾರಬಹುದು.ದೇಹವನ್ನು ಹೊತ್ತಿರುವ‌ಜೀವಾತ್ಮ
ಪರಮಾತ್ಮನೆಡೆಗೆ  ಸಾಗೋದಕ್ಕೆ ದೇಹ ಶುದ್ದವಾಗಿರಬೇಕು.
ಸ್ವಚ್ಚ ಭಾರತವೆಂದು ಪೊರಕೆ ಹಿಡಿದು ಗುಡಿಸಿದರೆ ಒಳಗಿನ ಕಲ್ಮಶ ಹೋಗುವುದಿಲ್ಲ.ಇದಕ್ಕೆ ಮುಖ್ಯವಾಗಿ ಬೇಕಾಗಿರೋದು ಸ್ವಚ್ಚ ಶಿಕ್ಷಣ ಪದ್ದತಿ.ಆತ್ಮಶುದ್ದಿ ಇಲ್ಲದೆ ದೇಹ ಶುದ್ದಿ ಮಾಡಿದರೂ ಹೊರಗಿನಿಂದ ಶುದ್ದವಾಗಿ ಕಾಣುವ ನಾಟಕವಷ್ಟೆ. ಇಲ್ಲಿ ಯಾರನ್ನೂ ಯಾರೋ ಶುದ್ದಿಮಾಡಲು ಕಷ್ಟ.ನಮ್ಮನ್ನು ನಾವು ಶುದ್ದವಾಗಿಟ್ಡುಕೊಳ್ಳಲು ಜ್ಞಾನವೇ ಬಂಡವಾಳ.ಅದು ಸತ್ಯಶುದ್ದವಾಗಿರಬೇಕು. ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲ ಅಪೇಕ್ಷೆಯಿಲ್ಲದೆ  ನಡೆಸುವ ಕರ್ಮವಾಗಿರಬೇಕು.ಸೇವೆಯಾಗಿರಬೇಕು.ದಾನದಿಂದ  ಆತ್ಮತೃಪ್ತಿ ಹೊಂದುತ್ತದೆ ಎಂದರೆ ಎತ್ತ ಸಾಗುತ್ತಿದೆ ಭಾರತ?
ವಿದೇಶಿಗಳನ್ನು ಶುದ್ದ ಗೊಳಿಸುವುದಿರಲಿ ಸ್ವದೇಶದವರಲ್ಲಿದ್ದ ಶುದ್ದ ಹೃದಯವಂತರನ್ನು ಆಳಿ ಅಳಿಸುವ ರಾಜಕೀಯತೆ ಧಾರ್ಮಿಕ ಕ್ಷೇತ್ರವನ್ನೂ ಬಿಡದೆ ಆವರಿಸಿದೆ.ಧರ್ಮ ಶಿಕ್ಷಣ ದೇಶದ ಪ್ರಜೆಗಳಿಗೆ ಕೊಡುವುದು ಧಾರ್ಮಿಕ ಕ್ಷೇತ್ರದ ಧರ್ಮ.
ಎಲ್ಲಿದೆ? ಬಡವರನ್ನು  ಹಿಂದುಳಿಸುತ್ತಾ ಶ್ರೀಮಂತ ಜನರನ್ನು ಸ್ವಾಗತಿಸುತ್ತಾ  ಹಣ,ಆಸ್ತಿ ಅಂತಸ್ತು ಬೆಳೆದಿದ್ದರೂ ಒಳಗಿನ ತತ್ವದೆಡೆಗೆ  ನಡೆಯಲಾಗದ ತಂತ್ರವೇ  ಧರ್ಮ ರಕ್ಷಣೆ ಮಾಡಲು ಹೊರಟಿದೆ.
ಇದರ ಪರಿಣಾಮವೇ ಪರಕೀಯರ ಪರಧರ್ಮದವರ ಪ್ರವೇಶ. ಅವರಿಗಾದರೂ ಮೂಲಸತ್ಯದೆಡೆಗೆ ಹೋಗುವಷ್ಟು ಜ್ಞಾನವಿಲ್ಲ. ಹೀಗಾಗಿ ಮೇಲಿನ  ಕಣ್ಣಿಗೆ ಕಾಣುವ ಈ ದ್ವೇಷ ದ್ವಂದ್ವಗಳನ್ನು  ತಮ್ಮ  ಸ್ವಾರ್ಥ ಕ್ಕೆ ಬಳಸಿಕೊಂಡು ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಹೊರಟರು.ಜನಸಂಖ್ಯೆ ಬೆಳೆಸಿದರೆ ಪ್ರಗತಿಯಾಗದು.ಜ್ಞಾನ ಬೆಳೆಸಬೇಕಿದೆ. ಸತ್ಯ ಒಂದೇ ಆ ಸತ್ಯದ ಕಡೆಗೆ ಎಲ್ಲಾ ಒಂದಾಗಿ ನಡೆಯುವುದೇ ಕಷ್ಟ.ಹೀಗಾಗಿ ನಮ್ಮ ಮಹಾತ್ಮರುಗಳು ರಾಜಕೀಯ ಬಿಟ್ಟು ಸ್ವತಂತ್ರ ವಾಗಿ ಆ ಪರಮಸತ್ಯದೆಡೆಗೆ ನಡೆದರು.
ಪುರಾಣ ಇತಿಹಾಸದಿಂದಲೂ  ಈ ರಾಜಕೀಯವಿದೆ.ಆದರೆ ಅಂದು ಧರ್ಮ ಶಿಕ್ಷಣವಿತ್ತು.ರಾಜರಲ್ಲಿ ಧಾರ್ಮಿಕ ಜ್ಞಾನಶಕ್ತಿ ಇತ್ತು.ಜನರನ್ನು ಸ್ವತಂತ್ರವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು.ಈಗಿನಂತೆ ಮತಬೇಟೆ ಮಾಡುವ‌ ಪ್ರಜಾಪ್ರಭುತ್ವ ಇರಲಿಲ್ಲ. ಮತದಾನದ ಅರ್ಥ ವೇ ತಿಳಿಯದ ಅಮಾಯಕರನ್ನು ಆಳುವುದರಿಂದ ಏನಾದರೂ ಸಾಧನೆ ಮಾಡಿದ್ದೇವೆಂದರೆ  ಇದೊಂದು ಪ್ರಜಾಪ್ರಭುತ್ವಕ್ಕೆ ಅವಮಾನ.
ಒಟ್ಟಿನಲ್ಲಿ  ಎಲ್ಲಾ ಕ್ಷೇತ್ರದಲ್ಲೂ  ಭ್ರಷ್ಟಾಚಾರ ಹೆಚ್ಚಾಗಿದೆ.ಇಲ್ಲಿ ಭ್ರಷ್ಟಾಚಾರ ಎಂದರೆ  ಅಸತ್ಯ ಅನ್ಯಾಯ,ಅಧರ್ಮದ ಆಚಾರ,ವಿಚಾರ,ಪ್ರಚಾರ.,ಶಿಕ್ಷಣವೇ ಇದರ ಮೂಲವಾಗಿದೆ.ನಮ್ಮದಲ್ಲದ್ದನ್ನು ನಮ್ಮದೆಂದು ಪಡೆಯುವುದು ಭ್ರಷ್ಟಾಚಾರ. ಹಾಗಾದರೆ ತತ್ವವಿಲ್ಲದ ತಂತ್ರದ ಶಿಕ್ಷಣದಿಂದ ಸ್ವತಂತ್ರ ಸಿಕ್ಕಿತೆ? ಇದು ಭಾರತೀಯರಿಗಷ್ಟೆ ಸೀಮಿತವಲ್ಲ ವಿದೇಶಿಗಳಿಗೂ ತತ್ವಜ್ಞಾನದಿಂದ ಸ್ವತಂತ್ರ ಜೀವನ ಎನ್ನುವ ಅಧ್ಯಾತ್ಮ  ಎಲ್ಲಾ ರೀತಿಯಿಂದಲೂ ‌ ಅಗತ್ಯ.
ತನ್ನ ತಾನು ಆಳಿಕೊಳ್ಳಲು ಬೇಕಾದ ಜ್ಞಾನ ಬಿಟ್ಟು ಪರರನ್ನು ಆಳುವ  ಅಜ್ಞಾನವೇ  ಆತ್ಮಹತ್ಯೆ ಗೆ ಕಾರಣ. ಒಳಗಿರುವ‌ಸತ್ಯ ಬಿಟ್ಟು ಹೊರಗಿರುವ ತಾತ್ಕಾಲಿಕ ಸತ್ಯವನ್ನು ಬೆಳೆಸಿದರೆ ಅಸತ್ಯವೇ ಆಳುವುದು.ಒಳಗಿದ್ದ ದೈವತ್ವ ಮರೆತು ಹೊರಗಿನ ಅಸುರರಿಗೆ ಮಣೆ ಹಾಕಿದರೆ ಅಸುರರೆ ಅತಿಥಿಗಳಾಗಿದ್ದು ತಿಥಿ ಮಾಡುವರು. ಹೀಗೇ  ಇದನ್ನು ಸರಿಪಡಿಸಲು ಹೊರಗಿನ ರಾಜಕೀಯದಿಂದ ಅಸಾಧ್ಯ.ಒಳಗಿರುವ ರಾಜಯೋಗದಿಂದ ಸಾಧ್ಯವಿದೆ. ಆದರೆ ಮನಸ್ಸನ್ನು ಒಳಗೆ ಸೇರಿಸಿಕೊಳ್ಳಲು ನಮ್ಮ ಪ್ರಯತ್ನವಿರಬೇಕಿದೆ.ಹೊರಗಿನ ರಾಜಕೀಯ ಮನಸ್ಸನ್ನು ಹಾಳುಮಾಡಿ ದ್ವೇಷ ತುಂಬಿರುವಾಗ ಇದರಿಂದ ಬಿಡುಗಡೆ ಪಡೆಯುವುದಕ್ಕೆ ಎಷ್ಟು ಜನ್ಮ ಬೇಕೋ.ಈ ಜನ್ಮದಲ್ಲಿ ಅಂತಹ ದಾರಿಯಲ್ಲಿ ನಡೆಯುತ್ತಿರುವವರ ಹಿಂದೆ ನಡೆದರೆ ಉತ್ತಮ .ಒಟ್ಟಿನಲ್ಲಿ  ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ  ದೇಶದೊಳಗೆ ಸೇರಿಕೊಂಡಿರುವ  ಹಲವಾರು ಧರ್ಮ, ದೇಶ,ಜಾತಿ, ದೇವರು  ದೇಶವನ್ನು ಒಂದು ಮಾಡುವ ಬದಲು ಒಡೆದು ತಮ್ಮ ತಮ್ಮ ಸ್ವಾರ್ಥ ದ ಬೇಳೆಬೇಯಿಸಿಕೊಂಡರೂ  ಇದಕ್ಕೆ ತಕ್ಕಂತೆ ಪ್ರತಿಫಲ ಕೊಡುವ ಮೇಲಿರುವ ಆ ಮಹಾ ಶಕ್ತಿ ಒಬ್ಬಳೆ. ಪರಮಾತ್ಮನಿಂದಲೂ  ಸರಿಪಡಿಸಲಾಗದ್ದು ಪರಾಶಕ್ತಿ ಸರಿಪಡಿಸಬಹುದು. 
ಈಗ ರಾಜ್ಯದ  ಚುನಾವಣೆಯ ಫಲಿತಾಂಶವೇ ಅತಂತ್ರಸ್ಥಿತಿಗೆ
ತಲುಪಿದೆ ಎಂದರೆ ನಾವೆಲ್ಲರೂ ಎಷ್ಟು ಸ್ವತಂತ್ರರು? 
ಪ್ರಜಾಪ್ರಭುತ್ವ ದೇಶದೊಳಗೆ  ಸ್ವಾತಂತ್ರ್ಯ ಸ್ವೇಚ್ಚಾಚಾರದೆಡೆಗೆ ನಡೆದಿದೆ ಎಂದರೆ ಇದಕ್ಕೆ ತಂತ್ರದ ರಾಜಕೀಯವೇ ಕಾರಣ.
ಯಾರೂ ಸ್ವತಂತ್ರ ರಲ್ಲ. ಎಲ್ಲಾ ಅತಂತ್ರರೆ.ಇದಕ್ಕೆ ನಮ್ಮದೆ ಸಹಕಾರ ಕಾರಣವಾಗಿದ್ದರೆ ಉತ್ತಮ  ವಿಚಾರಕ್ಕೆ  ಸಹಕಾರ ಕೊಡುವುದಷ್ಟೆ ಇರುವ ಮಾರ್ಗ. 
ಮತದಾನದ ಅರ್ಥ ತಿಳಿಯದವರಷ್ಟೆ ಮತಬೇಟೆಗೆ ಸಹಕಾರ ಕೊಟ್ಟು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಲು ಸಾಧ್ಯ.ಇದಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ. 

ದೇಶದೊಳಗೆ ಸೇರಿಕೊಂಡಿರುವ  ಅಸುರಶಕ್ತಿ  ದೇಶದ ಭೌತಿಕ ಸಂಪತ್ತನ್ನು ಲೂಟಿಹೊಡೆದರೂ ಜ್ಞಾನ ಸಂಪತ್ತನ್ನು  ಲೂಟಿ ಮಾಡಲಾಗದು. ಸ್ವತಂತ್ರ ಜೀವನಕ್ಕೆ  ಬೇಕಾದ ಜ್ಞಾನದ ಶಿಕ್ಷಣ ಸ್ವದೇಶದದ್ದಾದರೆ  ದೇಶರಕ್ಷಣೆ ಧರ್ಮ ರಕ್ಷಣೆ ಸಾಧ್ಯವಿತ್ತು.
ವಿಪರ್ಯಾಸವೆಂದರೆ  ಪ್ರಚಾರಕರಿಗೇ  ಆಳವಾಗಿರುವ ಸತ್ಯದ ಅರಿವಿಲ್ಲದೆ ಮಕ್ಕಳನ್ನು  ಹೊರಜಗತ್ತಿನಲ್ಲಿ  ಬಿಡುತ್ತಿರುವುದು  ಹಿಂದೂ ಸನಾತನ ಧರ್ಮದ ಹಿಂದುಳಿಯುವಿಕೆಗೆ ಕಾರಣ. ಹಣದಿಂದ ಜ್ಞಾನೋದಯವಲ್ಲ
ಜ್ಞಾನದಿಂದ ಹಣಸಂಪಾದನೆಯಾಗಿತ್ತು.ಅದೂ ತತ್ವಜ್ಞಾನದ ನಂತರ ತಂತ್ರಜ್ಞಾನದ ಶಿಕ್ಷಣವಿತ್ತು. ಮನುಕುಲ ತನಗೆ ತಾನೇ ಮೋಸಹೋದರೆ ಪರಮಾತ್ಮನಾದರೂ ಏನು ಮಾಡಿಯಾನು.ಅವನೊಳಗಿರುವ ಜೀವಾತ್ಮರು ಅವರವರ ಹಿಂದಿನ ಋಣ ಕರ್ಮಕ್ಕೆ ತಕ್ಕಂತೆ  ಜನ್ಮ ಪಡೆದು ಮರೆಯಾಗುವುದು  ಜಗತ್ತಿನ ನಿಯಮ. ಬದಲಾವಣೆಯು ಶಿಕ್ಷಣದಲ್ಲಾಗಬೇಕಿತ್ತು. ಕೆಲವೆಡೆ ನಡೆದರೂ ಅದೂ ಭ್ರಷ್ಟರ ಹಣದಲ್ಲಿ  ನಡೆದಿದ್ದರೆ  ಪೂರ್ಣಫಲವಿಲ್ಲ.  ಮೂಲ ಸ್ವಚ್ಚವಾಗಿದ್ದರೆ ರೆಂಬೆಗಳು ಗಟ್ಟಿಯಾಗಿರುತ್ತದೆ.ಕಲಿಗಾಲ ಕಲಿಸುತ್ತದೆ.ಯಾವುದನ್ನು ಕಲಿತರೆ ಆತ್ಮತೃಪ್ತಿ ಸಿಗುತ್ತದೆ. ಯಾವುದರಿಂದ ಆತ್ಮಹತ್ಯೆ ಆಗುತ್ತದೆ ಎನ್ನುವ ಜ್ಞಾನ ಅಗತ್ಯ.
ಇದು ಎಲ್ಲರೊಳಗಿದೆ ಹೊರಗಿಲ್ಲ.ಹೊರಗೆ ಬಂದಷ್ಟೂ ಕಷ್ಟ ನಷ್ಟ. ಇನ್ನಾದರೂ ಭಾರತೀಯರಾಗಿ ಚಿಂತನೆ ನಡೆಸಿದರೆ ಭಾರತೀಯ ತತ್ವಜ್ಞಾನದ ಅರ್ಥ ಎಲ್ಲರಲ್ಲಿಯೂ ಅಡಗಿರುವ ಜ್ಞಾನವನ್ನು  ಜೋಡಿಸಿಕೊಂಡು  ದೇಶದ ಪ್ರಗತಿಗಾಗಿ ಕಷ್ಟಪಟ್ಟು ದುಡಿಯುವುದಾಗಿದೆ. ಜನಸೇವೆಯೇ ಜನಾರ್ದನನ ಸೇವೆ,ದೇಶಸೇವೆ ಈಶಸೇವೆ, ಕಾಯಕವೇ ಕೈಲಾಸ.ಈ ಮಂತ್ರದಲ್ಲಿರುವ ‌ನಿಸ್ವಾರ್ಥ ನಿರಹಂಕಾರದ ಭಕ್ತಿಯೋಗ ಅಗತ್ಯವಾಗಿದೆ. ದೇವರ ಭಕ್ತರು ದೇಶಭಕ್ತರಾದರೆ  ಉತ್ತಮ. ದ್ವೇಷ ಬೆಳೆಸಿದರೆ ಅಧಮ.
ಅಧರ್ಮ.
ಸಾಮಾನ್ಯಪ್ರಜೆಯಾಗಿದ್ದು  ಸಾಮಾನ್ಯಜ್ಞಾನವನ್ನು ಅರ್ಥ ಮಾಡಿಕೊಳ್ಳಲು ರಾಜಕೀಯ ಬೇಡ. ಮನೆಯೊಳಗೆ ಇದ್ದು ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಸ್ವತಂತ್ರ ಜ್ಞಾನವಿರಬೇಕಷ್ಟೆ.
ಇಂದು ಮನೆ ಮನೆಯೊಳಗೆ ಹರಡುತ್ತಿರುವ ಈ ದ್ವೇಷದ ಕಿಡಿ ಇಡೀ ದೇಶ ಹತ್ತಿ ಉರಿಯುವಂತೆ ಮಾಡಿರುವುದೆ ಮಾಧ್ಯಮಗಳು. ಮಧ್ಯವರ್ತಿಗಳು, ಅರ್ಧ ಸತ್ಯದ ಪ್ರಚಾರಕರು,ಮಾನವರು,ಮಹಿಳೆಯರು, ಮಕ್ಕಳು.
ಈ 'ಮ' ಮಧ್ಯದ ಅಕ್ಷರ 'ಅ' ಎನ್ನುವ ಮೊದಲ ಅಕ್ಷರವಾದ ಅಧ್ಯಾತ್ಮ ಬಿಟ್ಟು' ಜ್ಞ' ಎನ್ನುವ ಕೊನೆಯನ್ನು ತಲುಪಲಾರದ ಅತಂತ್ರಸ್ಥಿತಿಗೆ  ಜೀವ ತಂದಿಟ್ಟಿದೆ.
 ಸತ್ಯವಿಲ್ಲದ ಧರ್ಮ ಕುಂಟುತ್ತಿದೆ, ಧರ್ಮವಿಲ್ಲದ ಭೌತಿಕ ಸತ್ಯ ಕುರುಡರನ್ನು ಸೃಷ್ಟಿ ಮಾಡುತ್ತಿದೆ.  
ಕುರುಡುಕಾಂಚಾಣ ಕುಣಿಯುತಲಿತ್ತ ಕಾಲಿಗೆ ಬಿದ್ದವರ ತುಳಿಯುತಲಿತ್ತ ಎಂದಂತೆ. ಕತ್ತಲನ್ನು ಬೆಳಕು ಎನ್ನುವುದೆ ಅಜ್ಞಾನ.ಕತ್ತಲಿನಲ್ಲಿ ಬೆಳಕನ್ನು ಕಾಣುವುದೇ ಜ್ಞಾನ.

Sunday, May 7, 2023

ನಮ್ಮ ಸಹಕಾರ ಯಾರ ಕಡೆಗಿದೆ?

ಜನರ ಸಹಕಾರವೇ ಹದಗೆಟ್ಟು ಹೋಗಿರುವಾಗ ಯಾವ ಪಕ್ಷ ಬಂದರೇನು ಹೋದರೇನು? ಸರ್ಕಾರದ ಹಣ ಬೇಕು ಸೇವೆ ಮಾಡಲಾಗೋದಿಲ್ಲ ಎನ್ನುವ ಜನಸಂಖ್ಯೆ ದೇಶವನ್ನು ಹಾಳು ಮಾಡುತ್ತಿದ್ದರೂ  ಜಾತಿ,ಧರ್ಮ, ಪಕ್ಷದ ನಡುವೆ ಅಂತರ ಹೆಚ್ಚಿಸಿಕೊಂಡಿರುವುದು  ದಾನವರಿಗೆ ವರದಾನವಾಗುತ್ತಿದೆ.
ಒಟ್ಟಿನಲ್ಲಿ  ಭಾರತವನ್ನು ಸ್ಮಾರ್ಟ್ ಮಾಡಲು ವಿದೇಶಿ ತಂತ್ರಜ್ಞಾನ ಬಳಸಿಕೊಂಡು ದೇಶದ  ಧರ್ಮ ತತ್ವ ಹಿಂದುಳಿದರೆ ಇದಕ್ಕೆ ನಾನು ಕಾರಣವಲ್ಲ ಸರ್ಕಾರ ಕಾರಣ ಎನ್ನುವ. ನಮ್ಮ ಅಜ್ಞಾನವೇ ಸತ್ಯವನ್ನು ಮರೆಮಾಚಿದೆ.
.ಪ್ರಜಾಪ್ರಭುತ್ವ ದೇಶ ನಡೆದಿರೋದೆ ಪ್ರಜೆಗಳ ಸಹಕಾರದಲ್ಲಿ. ಎಷ್ಟೋ ವರ್ಷಗಳಾದವು ಸ್ವಾತಂತ್ರ್ಯ ಬಂದು ಅಂದಿನಿಂದಲೂ ಅಧಿಕಾರಕ್ಕಾಗಿ  ಪೈಪೋಟಿ ನಡೆಸಿಕೊಂಡು ಬಂದಿರುವವರಿಗೆ ಜನಬಲ ಹಣಬಲ  ಅಧಿಕಾರ ಸಿಕ್ಕಿದೆ.ಪಕ್ಷ ಬದಲಾದರೂ ಮೀಸಲಾತಿ,ಭ್ರಷ್ಟಾಚಾರ  ಹೋಗದಿದ್ದರೆ  ಏನು ಪ್ರಗತಿಯಾಯಿತು? ಇವೆರಡೂ ಅಜ್ಞಾನದ ಸಂಕೇತ.
ಇಡೀ ವಿಶ್ವದ  ದೇವರ ಮೂಲೆಯಲ್ಲಿರುವ ಭಾರತ ದೇಶ ದೈವತ್ವ ಕಳೆದುಕೊಂಡರೆ  ಪ್ರಗತಿಯೆ?
ಎಲ್ಲಿದೆ  ನ್ಯಾಯ,ನೀತಿ,ಸಂಸ್ಕೃತಿ, ಧರ್ಮ? ಶಿಕ್ಷಣದಲ್ಲಿಯೇ  ಇಲ್ಲದೆ ಹೊರಗೆ ಪ್ರಚಾರ ಮಾಡಿದರೆ ಮಕ್ಕಳು ಮಹಿಳೆಯರು ಎಷ್ಟು ಹೊರಗೆ ಬರುವರೋ ಅಷ್ಟು  ಅಸುರಕ್ಷತೆಯ ಸಂಸಾರ ಬೆಳೆಯುವುದು. ಇದಕ್ಕೆ ಯಾವ ಗ್ರಂಥ ಓದುವ ಅಗತ್ಯವಿಲ್ಲ. ವಿಶೇಷ ಜ್ಞಾನದ ಮೊದಲು  ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ. ನಮ್ಮ ಭಾರತ ನಡೆದಿರೋದೆ ಸಾಮಾನ್ಯರಿಂದ.
ಅಂತಹ ಶ್ರಮ ಜೀವಿಗಳ ಒಳಗಿರುವ ಜ್ಞಾನವನ್ನು ತಿರಸ್ಕಾರ ಮಾಡಿ ಹೊರಗಿನ ವಿಜ್ಞಾನ  ಬೆಳೆಸಿದರೆ ಅಧರ್ಮ. ಮಕ್ಕಳ ಮುಗ್ದ  ಮನಸ್ಸಿಗೆ ಪ್ರಭುದ್ದವಾದ ವಿಷಯ ತುಂಬಿದರೆ  ಬುದ್ದಿವಂತಿಕೆ ಬೆಳೆದರೂ ಜ್ಞಾನ ಬೆಳೆಯದು.ಆಂತರಿಕ ಜ್ಞಾನಕ್ಕೂ  ಭೌತಿಕ ವಿಜ್ಞಾನಕ್ಕೂ  ಅಂತರ ಬೆಳೆದಷ್ಟೂ ಅಜ್ಞಾನ ಆವರಿಸಿ ಒಮ್ಮೆ ಜೀವ ಹೋಗುತ್ತದೆ. ಹೋದ ಜೀವ ಮರಳಿ ತರುವ ಶಕ್ತಿ ಮಾನವನಿಗಿದೆಯೆ? ದೇವಾನುದೇವತೆಗಳೇ ಮರೆಯಾಗಿರುವಾಗ ಸಾಮಾನ್ಯ ಮಾನವ ಎಲ್ಲಿಯ ಲೆಕ್ಕ.
ಸರ್ಕಾರ ಸತ್ತವರಿಗೆ ಕೊಡುವ  ಹಣಕ್ಕೆ ಬದಲಾಗಿ ಇದ್ದವರಿಗೆ ಜ್ಞಾನ ಬರುವ ಶಿಕ್ಷಣ ಕೊಟ್ಟಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲಾ ನಮ್ಮ ಸಹಕಾರದ ಫಲವಷ್ಟೆ.ಅಧಿಕಾರ ಹಣದಿಂದ ಜ್ಞಾನ ಬರದು. ಅದರಿಂದ ದೂರವಿದ್ದವರಷ್ಟೆ ಜ್ಞಾನಿಗಳಾಗಿರೋದು.ಇದು ನಮ್ಮ ಮಹಾತ್ಮರುಗಳಿಂದ ತಿಳಿದು ಅವರಲ್ಲಿದ್ದ ಆ ಜ್ಞಾನಕ್ಕೆ ಅವರ ನಡೆ ನುಡಿಯಲ್ಲಿದ್ದ ಸತ್ಯ ಧರ್ಮ ವೇ ಕಾರಣ. ಇಲ್ಲಿ ಅಸತ್ಯ ಅಧರ್ಮ ವನ್ನು ಬಂಡವಾಳ ಮಾಡಿಕೊಂಡು ಜನರನ್ನು ಆಳುವ ರಾಜಕೀಯ ಮನೆಮಾಡಿದೆ. ಇದರಲ್ಲಿ ಗೆದ್ದವರು ಇನ್ನಷ್ಟು ಆಳುವರು, ಸೋತವರು ಪರದಾಡುವರು ಹೋರಾಟ ಮಾಡುತ್ತಾ ವಿರೋಧ ಮಾಡುತ್ತಾ ಜನರಲ್ಲಿದ್ದ  ಸ್ವಲ್ಪ ಜ್ಞಾನವನ್ನೂ ಅಳಿಸಿ ತಾವೂ ಒಮ್ಮೆ ಮರೆಯಾಗುವರು. ಹಾಗಾದರೆ ಶಾಶ್ವತ ಯಾರು? ಯಾವುದು ಶಾಶ್ವತ? ದೇಶ ಯಾವಾಗಲೂ ಇರೋದೆ.ಆದರೆ ಅದರೊಳಗೆ ಯಾರಿರುವರೋ ಅವರು ದೇಶದ ಪ್ರಜೆಗಳಷ್ಟೆ. ದೇಶ ಸೇವೆಗೆ ಹಣಕ್ಕಿಂತ ಜ್ಞಾನಮುಖ್ಯ.
ಎಷ್ಟು   ದೇಶಭಕ್ತರಿರುವರೋ ಆ ದೇಶ ಸುರಕ್ಷಿತವಾಗಿರುವುದು. ದೇಶದೊಳಗೆ ವಿದೇಶಿಗಳನ್ನು ತುಂಬಿ ಕೊಂಡಿದ್ದರೆ ಸ್ವದೇಶವಾಗುವುದೆ? ಇದೊಂದು ಭ್ರಮೆಯಷ್ಟೆ.ಭೌತಿಕಾಸಕ್ತಿ ಬೆಳೆಸಿಕೊಂಡರೆ  ಹೊರಗಿನ ಸತ್ಯವೆ ಕಾಣೋದು ಒಳಗಿರುವ ಸತ್ಯವೇ ದೇವರೆಂದಾಗ ದೈವತ್ವ ಹಿಂದುಳಿದರೆ ನಮ್ಮನ್ನು ಅಸುರರೆ ಆಳೋದಲ್ಲವೆ?
ಇಲ್ಲಿ ಯಾವ ಪಕ್ಷ ಭ್ರಷ್ಟಾಚಾರ ಮಾಡಿಲ್ಲ? ಭ್ರಷ್ಟಾಚಾರಕ್ಕೆ  ಜನಬಲ ಸಿಕ್ಕಿಲ್ಲವೆ? ಮೀಸಲಾಗಿರುವ ಎಷ್ಟೋ  ಜನರನ್ನು ದುರ್ಭಳಕೆ ಮಾಡಿಕೊಂಡು  ಸಾಲದ ಹೊಳೆಯಲ್ಲಿ ಮುಳುಗಿಸಿರುವಾಗ ಸಾಲ ತೀರಿಸಲು ಸರ್ಕಾರವೇ ಮತ್ತಷ್ಟು ಭ್ರಷ್ಟಾಚಾರಿಗಳಿಗೇ ಅಧಿಕಾರ ಕೊಟ್ಟರೆ ಶಿಷ್ಟಾಚಾರ ಎಲ್ಲಿರುವುದು? ಇಲ್ಲಿ ಒಬ್ಬ ವ್ಯಕ್ತಿಯಿಂದ ದೇಶ ಹಾಳಾಗಿಲ್ಲ ಒಳಿತೂ ಆಗಿಲ್ಲ.ಜನರ  ಅಜ್ಞಾನದ ಸಹಕಾರದಿಂದ  ಬೆಳೆದಿದೆ.
ಈ ಸಹಕಾರ ಜ್ಞಾನದ ಮೂಲಕ ಬೆಳೆದಾಗಲೇ ಆತ್ಮನಿರ್ಭರ ಭಾರತ. ಆತ್ಮಜ್ಞಾನ ಒಳಗಿದೆ.ವಿಜ್ಞಾನ ಹೊರಗಿದೆ.ಮೂಲ ಸರಿಪಡಿಸದೆ ಬೆಳೆದ ರೆಂಬೆ ಕೊಂಬೆಗಳನ್ನು ಕತ್ತರಿಸಿದರೆ ಏನು ಉಪಯೋಗವಿಲ್ಲ. ಮೂಲದ ಬೇರನ್ನು ಅರ್ಥ ಮಾಡಿಕೊಂಡು  ಕಿತ್ತು ಹೊಸ ಸಸಿ ನೆಡಬೇಕು.  ಆ ಸಸಿ ಸತ್ಪಲ ನೀಡುವಂತಿರಬೇಕು. ಅದೂ ಹೊರಗಿನ ಬಳುವಳಿಯಾದರೆ ?
ಬೆಳೆಯುವ ಪೈರು ಮೊಳಕೆಯಲ್ಲಿಯೇ ಎನ್ನುವಂತೆ ಮೊಳಕೆ ಸರಿಯಿಲ್ಲದೆಯೇ ಬೆಳೆಸಿದರೆ ದೊಡ್ಡದಾಗಿ ಬೆಳೆದು ಎಲ್ಲವನ್ನೂ ಸುತ್ತಿಕೊಂಡು ಬೆಳೆಯದಂತೆ ಮಾಡುವುದಲ್ಲವೆ?
ಈಗಲಾದರೂ ಸಾಮಾನ್ಯರ ಸಾಮಾನ್ಯಪ್ರಜ್ಞೆ ಕಡೆಗೆ ಗಮನ ಕೊಟ್ಟರೆ  ಪ್ರಜಾಪ್ರಭುತ್ವ ಉಳಿಸಬಹುದಷ್ಟೆ. ಇಲ್ಲಿ ಎಲ್ಲಾ ಕ್ಷೇತ್ರವೂ  ಜನರ ಹಣದಲ್ಲಿಯೇ ಬಲದಲ್ಲಿಯೇ ಭ್ರಷ್ಟಾಚಾರ ಕ್ಕೆ ಸಹಕರಿಸಿರುವಾಗ ಇದರ ಫಲ ಜನರೆಡೆಗೇ ತಿರುಗಿ ಬರಲು ಕಾರಣವೇ ಸಹಕಾರ. ನಮ್ಮ ಸಹಕಾರವೇ ಎಲ್ಲಾ ಅನರ್ಥಕ್ಕೆ ಕಾರಣವಾಗಿರುವಾಗ ಮೇಲೇರಿದವರನ್ನು ಕೇಳುವ ಅಧಿಕಾರ ಇಲ್ಲ. ಕೇಳಿದರೂ ಅರ್ಥ ವಾಗದು. ಮೇಲೆ ಹೋದವರನ್ನು ಸರಿಪಡಿಸಲಾಗದ ಮೇಲೆ ಕೆಳಗಿದ್ದವರನ್ನು ಎಚ್ಚರಿಸಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬಹುದು.ಮಕ್ಕಳಿಗೆ ಶಿಕ್ಷಣ ನೀಡುವಾಗ ಅವರೊಳಗಿನ‌ಜ್ಞಾನ,ಆಸಕ್ತಿ, ಪ್ರತಿಭೆ ಜೊತೆಗೆ ನಮ್ಮ ಮೂಲ ಧರ್ಮ ಕರ್ಮ ಸಂಸ್ಕಾರದ ಬಗ್ಗೆ ಮನೆಯ ಒಳಗಿನ ಗುರು ಹಿರಿಯರು ಪೋಷಕರು ಗಮನಕೊಟ್ಟರೆ ಹತ್ತಿರವೇ ಇರುವ ಆಶಕ್ತಿ ನಮ್ಮನ್ನು ಕಾಯುವುದು.ಅದನ್ನು ಬಿಟ್ಟು ಹೊರಹೋದಷ್ಟೂ ಅಂತರ ಬೆಳೆದು ಜೀವನವೇ ಅತಂತ್ರಸ್ಥಿತಿಗೆ ತಲುಪುವುದರಲ್ಲಿ ಸಂದೇಹವಿಲ್ಲ.
ಹಣದ ಬಡತನವಿರುವವರಲ್ಲಿ ಜ್ಞಾನದ ಸಿರಿತನವಿರುವುದು.
ಹಣದ ಸಿರಿತನವಿದ್ದವರಿಗೆ ಜ್ಞಾನದ ಬಡತನವಿರುವುದು.
ಇವೆರಡೂ ಒಂದೇ ನಾಣ್ಯದ ಮುಖವಾಗಿ ವ್ಯವಹಾರಕ್ಕೆ ಇಳಿದಾಗಲೇ  ಅಜ್ಞಾನ ಇನ್ನಷ್ಟು ಬೆಳೆಯುವುದು. ಧರ್ಮದ ಹಾದಿಯಲ್ಲಿ ನಡೆದವರಿಗಷ್ಟೆ  ಇದರ ಜ್ಞಾನವಿದ್ದು ಸದ್ಬಳಕೆ ಆಗುತ್ತದೆ. ಹಾಗಾಗಿ ಇಲ್ಲಿ ಅಜ್ಞಾನದ ಕಾರಣದಿಂದಾಗಿ ದೇಶ ವಿದೇಶದಕಡೆಗೆ ವೇಗವಾಗಿ ನಡೆಸಿದ್ದಾರೆ. ವೈಜ್ಞಾನಿಕ ಚಿಂತನೆ ವೈಚಾರಿಕ ಚಿಂತನೆ  ನಡುವಿನ  ಸಾಮಾನ್ಯರ ಚಿಂತನೆಗೆ ಬೆಲೆ ಕೊಡದ ಮಧ್ಯವರ್ತಿಗಳು  ಮನರಂಜನೆಗಾಗಿ ಆತ್ಮವಂಚನೆಗೆ ಬೆಲೆಕೊಟ್ಟರೆ ಇದು ಮನುಕುಲಕ್ಕೆ ನಷ್ಟ. ದೇವಾಸುರರ ನಡುವೆ ಮಾನವ ತನ್ನ ನಿಜವಾದ ಅಸ್ತಿತ್ವಕ್ಕೆ ಹೋರಾಟ ನಡೆಸುವಂತಾಗಿರೋದು  ವಾಸ್ತವ ಸತ್ಯ. ಯಾವ ಪಕ್ಷ ಬಂದರೂ ಪ್ರಜೆಗಳಲ್ಲಿ ದೇಶಭಕ್ತಿ ಇಲ್ಲವಾದರೆ ಉಪಯೋಗವಿಲ್ಲ.ಭಕ್ತಿ  ಆಂತರಿಕ ಶಕ್ತಿ. ಇದನ್ನು ಯಾರೂ ಹೊರಗಿನಿಂದ ತುಂಬಲಾಗದು. ಒಳಗಿನವರೆ  ಕಂಡುಕೊಂಡು ತಿಳಿದು ತಿಳಿಸಿದಾಗಲೇ ಆತ್ಮನಿರ್ಭರ ಭಾರತ. ಅದು ಬಿಟ್ಟು ಮಹಿಳೆ ಮಕ್ಕಳೆ ಮನೆಯಿಂದ ಹೊರಬಂದರೆ ಸಾಧ್ಯವೆ? ಎಷ್ಟೇ ಹಣಸಂಪಾದಿಸಿದರೂ ಸದ್ಬಳಕೆ ಮಾಡಿಕೊಂಡು ಉಳಿತಾಯ ಮಾಡುವ ಜ್ಞಾನವಿಲ್ಲವಾದರೆ ಸಾಲದಿಂದ ಬಿಡುಗಡೆ ಸಿಗದು. ಅಧ್ಯಾತ್ಮ  ಭೌತಿಕದ  ನಡುವಿರುವ  ಅಜ್ಞಾನಕ್ಕೆ ಕಾರಣ ರಾಜಕೀಯತೆ. ಯಾರನ್ನೂ ಯಾರೋ ಆಳುವುದೆ ಅಜ್ಞಾನ. ಆಳುವುದಿದ್ದರೆ ಮೊದಲು ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಜ್ಞಾನವಿರಬೇಕಿತ್ತು. ಹಣದಿಂದ ಆಳುವುದಾಗಲಿ ಅದರಲ್ಲೂ ವಿದೇಶಿ ಶಿಕ್ಷಣ ಬಳಸಿ ಬಂಡವಾಳ,ಸಾಲ, ವ್ಯವಹಾರದಿಂದ ದೇಶ ಆಳುವುದರಲ್ಲಿ ಧರ್ಮ ವಿದೆಯೆ? ಜನಮರುಳೋ ಜಾತ್ರೆಯೋ ಎಂದಂತಾಗಿದೆ. ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು.
ಕೋಟ್ಯಾಂತರ ರೂ ಚುನಾವಣೆಗೆ ಬಳಸಲಾಗುತ್ತಿದೆ ಎಂದರೆ ಯಾರದ್ದೂ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ. ಇದು ಎಲ್ಲಾ ಪಕ್ಷಗಳ ಕಥೆ. ಇದೇ ಜನರ ವ್ಯಥೆಯಾಗದಿದ್ದರೆ ಸರಿ.ಪ್ರಜ್ಞಾವಂತರ ಭಾರತ ಪ್ರಜ್ಞೆ ತಪ್ಪಿ ನಡೆದಿದೆ ಎಂದರೆ ತಪ್ಪೆ? ಎಲ್ಲಿರುವುದು ಧರ್ಮ? ದೇವರು? ದೇಶ? 
ನಾಟಕದಲ್ಲಿ ನಾಟಕವಾಡುವಾಗ ನಮ್ಮ ಪಾತ್ರ ಪರಿಚಯ ಅಗತ್ಯವಾಗಿರಬೇಕು. ಯಾರೋ ಪಾತ್ರ ಕೊಟ್ಟು ಖಾಲಿ ಪಾತ್ರೆ ಹಿಡಿಯುವಂತಾಗಬಾರದಲ್ಲವೆ?

ಮತದಾನ ಎಲ್ಲಾ ಪ್ರಜೆಗಳ ಧರ್ಮ. ಇದು ಧರ್ಮದ ಪರ ಇದ್ದರೆ ನಿಜವಾದ ದಾನ. ಅಧರ್ಮಿಗಳಿಗೆ ದಾನವರಿಗೆ ಕೊಟ್ಟರೆ  ಅದೇ ಮುಂದೆ  ಸಮಸ್ಯೆಗೆ ಕಾರಣ. ಒಟ್ಟಿನಲ್ಲಿ ದೇಶದ ನಾಡಿನ ಹಿತವನ್ನು  ತಿಳಿದವರು ಮತವನ್ನು ಹಣದಿಂದ ಖರೀದಿಸುವುದಿಲ್ಲ. ಜನರು ಮತ ಹಾಕೋದಕ್ಕೆ ಮತವನ್ನು ಮಾರಿಕೊಳ್ಳುವುದಿಲ್ಲ.  ಇದು ನಿಜವಾದ ಚುನಾವಣೆಯಾಗಿರುತ್ತದೆ.50ಶೇ ಜನರು ಮತಚಲಾಯಿಸದೆ
ದೇಶದೊಳಗೆ  ಇದ್ದಾರೆಂದರೆ ಇದನ್ನು ಕಾನೂನಿನಿಂದ  ಸರಿ ಪಡಿಸಲಾಗದೆ? ಇದರ ಬಗ್ಗೆ ಪ್ರಶ್ನೆ ಮಾಡಬಾರದೆ? 

Saturday, May 6, 2023

ಮತದಾನವು ದೇಶದ ಭವಿಷ್ಯವಾಗಿದೆ

ಕೊಟ್ಟು ಕೆಟ್ಟ ಮುಟ್ಟಿ ಕೆಟ್ಟ ಎಂದು ಕರ್ಣ ಮತ್ತು ರಾವಣರಿಗೆ ಹೇಳುತ್ತಾರೆ.
ಇಲ್ಲಿ ದಾನ ಶೂರ‌ಕರ್ಣ ನಿಗೆ ಕೊನೆಗೆ  ಪಟ್ಟಕಟ್ಟಿದ್ದು ಕೊಟ್ಟು ಕೆಟ್ಟ ಅಂತ.ರಾವಣನಂತಹ ಮಹಾಶೂರ ಮಹಾಶಿವಭಕ್ತನೂ ಮುಟ್ಟಿ ಕೆಟ್ಟ ಎನ್ನುವ  ಪಟ್ಟಿಗೆ ಸೇರಿದ.ಭೂಮಿಗೆ  ಬಂದ ಮೇಲೇ ಇಲ್ಲಿ ಕೊಟ್ಟಿದ್ದು ಮುಟ್ಟಿದೆಲ್ಲವೂ  ಕೆಟ್ಟಪರಿಣಾಮ ಬೀರುತ್ತದೆಂದರೆ ಸರಿಯೆ? ಒಂದರ್ಥದಲ್ಲಿ ಇಲ್ಲಿ ಯಾರೂ ಬರೋವಾಗ ತಂದಿರೋದಿಲ್ಲ ಹೋಗುವಾಗ ಕೊಂಡೂ ಹೋಗಲ್ಲ. ಪಾಪ ಪುಣ್ಯಗಳ ಫಲವಷ್ಟೆ  ಜೊತೆಗೆ ನಡೆಯೋದು.ಹೀಗಿರುವಾಗ ಯಾರದ್ದೂ ಹಣವನ್ನಾಗಲಿ ಆಸ್ತಿಯನ್ನಾಗಲಿ,ಅಧಿಕಾರವನ್ನಾಗಲಿ ,ಹೆಸರನ್ನಾಗಲಿ ನಮ್ಮದು ಎಂದರೆ ಪಾಪದ ಕರ್ಮ. ನಮ್ಮದೇನಿದ್ದರೂ ನಾವೇ ಕಷ್ಟಪಟ್ಟು  ಸಂಪಾದಿಸಿರಬೇಕು.ಅದನ್ನು ಸದ್ಬಳಕೆ ಮಾಡಿ  ಕೊಟ್ಟಿರಬೇಕು  ಸಾತ್ವಿಕತೆಯಿರಬೇಕೆನ್ನುವರು. ಇಲ್ಲಿ ರಾಜಸೀಕತೆಯಲ್ಲಿ  ಕೊಡುವುದು ಪಡೆಯುವುದು  ವ್ಯವಹಾರವಷ್ಟೆ ಧರ್ಮ ವಾಗದು.  ಕರ್ಣನ ಉತ್ತಮಗುಣವೆ ದಾನ ಮಾಡುವುದಾಗಿತ್ತು.ಆದರೆ ಅವನಿಗೆ ಸ್ವಂತದ  ದುಡಿಮೆಯ  ಯಾವುದೇ ಆಸ್ತಿಯಿರದೆ ದುರ್ಯೋಧನನ ಸಹಾಯದಿಂದ  ಅಧಿಕಾರ ಪಡೆದು ಅವನ ರಾಜ್ಯದಲ್ಲಿ ದ್ದು ದಾನ ಮಾಡಿದ ಕಾರಣ‌ ದಾನದ ಫಲ ದುರ್ಯೋಧನ ನಿಗೂ ಸಿಗುತ್ತಿತ್ತು. ಆದರೆ ಕೌರವರಲ್ಲಿದ್ದ ಅಧರ್ಮ ಹೆಚ್ಚಾದಂತೆಲ್ಲಾ  ಕರ್ಣನ  ಸಹಕಾರವೂ ಅನಿವಾರ್ಯ ವಾಗಿ  ದುಷ್ಟರಿಗೆ ರಕ್ಷಣೆ ಕೊಟ್ಟರೆ ಮಹಾ ಪಾಪ ಎಂದಂತೆ ಕೊನೆಯಲ್ಲಿ  ವಿನಾಶದ ಯುದ್ದ ನಡೆಯಿತು.
ಪುರಾಣ ಕಥೆ ಕೇಳುವಾಗ ಹೇಳುವಾಗ ಅದರಲ್ಲಿನ ಧರ್ಮ ಸೂಕ್ಷ್ಮ ತಿಳಿದರೆ ಈಗಲೂ ಪಾಂಡವಕೌರವರ ಗುಣಗಳು ನಮ್ಮಲ್ಲಿದೆ.ಎಲ್ಲಾ ದಾನ ಧರ್ಮಗಳೂ ನಡೆದಿದೆ.ಆದರೆ ಅದರ ಮೂಲ ಧನ ಭ್ರಷ್ಟಾಚಾರ ಆಗಿದ್ದರೆ ಭ್ರಷ್ಟಾಚಾರಕ್ಕೆ ಬಲ. ಹೀಗಾಗಿ ಮಾನವರು  ನಾವೆಷ್ಟೇ ಸಂಪತ್ತು ಗಳಿಸಿದರೂ
ಅದರಲ್ಲಿ ಸತ್ವ,ಸತ್ಯ,ತತ್ವವಿಲ್ಲವಾಗಿದ್ದರೆ  ಅದರ ಪ್ರತಿಫಲ ತಿರುಗಿ ಬರುತ್ತದೆ  .ಇದು ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ ಹೋಗುವ ಮೊದಲು ನಮ್ಮ ಸಂಪತ್ತನ್ನು ಸತ್ಕರ್ಮಕ್ಕೆ ಸ್ವಧರ್ಮ ಕಾರ್ಯಕ್ಕೆ ಸದ್ವಿನಿಯೋಗ ಮಾಡಿದರೆ ಪುಣ್ಯಸಂಚಯವಾಗಿ  ಋಣಮುಕ್ತರಾಗಬಹುದು. ಭೌತಿಕದ ಆಸ್ತಿ ಅಂತಸ್ತು  ನಮ್ಮ ಪುಣ್ಯಕಾರ್ಯದಿಂದ  ಬೆಳೆಯುವುದು ಭಗವಂತನ  ಬಿಕ್ಷೆ. ಆ ಬಿಕ್ಷೆಯನ್ನು  ಸದ್ವಿನಿಯೋಗ ಮಾಡುವ ಜ್ಞಾನವಿದ್ದರೆ  ಯಾವುದೇ ದಾನವಿರಲಿ ದಾನವರಿಗೆ ಮಾಡದೆ ಸತ್ಪಾತ್ರರಿಗೆ  ಮಾಡಬಹುದು. ಆಗ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುವುದು.  ದೇಶದ ತುಂಬಾ ಶ್ರೀಮಂತ ರಿದ್ದರೂ ದೇಶದ ಸಾಲ ತೀರಿಸಲಾಗದೆ  ವಿದೇಶದ ಸಾಲಕ್ಕೆ ಕೈಚಾಚಿದರೆ ಅಧರ್ಮ, ಭ್ರಷ್ಟಾಚಾರವಾಗುತ್ತದೆನ್ನುವರು.
ಅತಿಯಾದ ಆಸ್ತಿ ಮಾಡಿಡುವ ಬದಲಾಗಿ ಮಕ್ಕಳಿಗೆ ಉತ್ತಮ ಜ್ಞಾನಸಂಸ್ಕಾರದ ಶಿಕ್ಷಣ ನೀಡಿದರೆ  ಅವರು ದೇಶದ ಆಸ್ತಿ ಆಗುವರಲ್ಲವೆ? ದೇಶದೊಳಗೆ ನಾವಿರುವಾಗ ನಾವು ಬೇರೆ ದೇಶ ಬೇರೆಯೆ? ದೇಶದಿಂದ ಪಡೆದದ್ದು ತೀರಿಸುವ ಜ್ಞಾನ ಪ್ರಜೆಗಳಿಗೆ ಅಗತ್ಯವಾಗಿತ್ತು. ದೇಶರಕ್ಷಕರ ಸಂಖ್ಯೆ ಬೆಳೆಯಲು ದೇಶೀಯ ಜ್ಞಾನದ ಶಿಕ್ಷಣ ಕೊಡುವುದು ಪ್ರಜಾಧರ್ಮ.
ಯಾರದ್ದೋ ಹಿಂದೆ ಬೇಡುವ ಬದಲಾಗಿ ನಮ್ಮಲ್ಲೇ ಇರುವ  ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಅದನ್ನು ಯಾರೂ ಕದಿಯಲಾಗದು. ಜ್ಞಾನವೇ  ನಿಜವಾದ ಆಸ್ತಿ. ಜ್ಞಾನವನ್ನು ದಾನ ಮಾಡಿದರೂ ಇನ್ನಷ್ಟು ಬೆಳೆಯುತ್ತದೆ. ಆದರೆ ಹಣ ದಾನ ಮಾಡುವಾಗ  ಅದರ ಮೂಲ ತಿಳಿಯುವುದು ಅಗತ್ಯ.ಹಾಗೇ ಯಾರಿಗೆ ದಾನ ಮಾಡಬೇಕೆಂಬುದರ ಅರಿವು ಅಗತ್ಯವೆಂದಿರುವರು. ಮಂತ್ರ ತಂತ್ರ ಯಂತ್ರ ವಿದ್ಯೆಯಿಂದ ಸ್ವತಂತ್ರ ಜ್ಞಾನ ಬೆಳೆದರೆ ಉತ್ತಮ. ಅತಂತ್ರಸ್ಥಿತಿಗೆ ಹೋದರೆ ಅಧಮ. ದುರ್ಭಳಕೆ ಮಾಡಿಕೊಂಡರೆ ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆನ್ನುವ ಕಾರಣಕ್ಕಾಗಿ ಎಷ್ಟೋ  ಪವಿತ್ರ ಮಂತ್ರ ಪ್ರಚಾರಕ್ಕೆ ಬಂದಿರಲಿಲ್ಲ. ಪವಿತ್ರತೆ ಕಾಪಾಡುವುದು ಕಷ್ಟ.
ಏನೇ ಇರಲಿ ದಾನ ಮಾಡುವಷ್ಟು ಸಂಗ್ರಹ ಮಾಡಬಾರದು.
ಕಾರಣ ಹೆಚ್ಚು ಸಂಗ್ರಹಣೆ  ಮಾನವನಿಗೆ ಕಷ್ಟಕೊಡುತ್ತದೆ.
ಸಂಸಾರಿಗಳಿಗೆ ಅನಿವಾರ್ಯ ವಾದರೂ ಸಂನ್ಯಾಸಿಗಳಿಗೆ ಅಗತ್ಯವಿರಲಿಲ್ಲ.  ಜ್ಞಾನ ಹೆಚ್ಚಾದರೆ ಅಭಿವೃದ್ಧಿ. ಅದು ಅಧ್ಯಾತ್ಮ ಜ್ಞಾನವಾಗಿರಬೇಕೆನ್ನುವುದೇ ಹಿಂದೂ ಧರ್ಮ.
ಜ್ಞಾನದಿಂದ ಶಾಂತಿ ಸಿಗುವುದು ಭೌತಿಕ ಜ್ಞಾನ ಹೆಚ್ಚಾದಂತೆ ಅಶಾಂತಿಯೇ ಹೆಚ್ಚಾಗಿದೆ ಎಂದರೆ ಆಂತರಿಕ ಶುದ್ದಿಯಾಗದ ದಾನ ಧರ್ಮದಿಂದ  ಉಪಯೋಗವಿಲ್ಲವೆಂದರ್ಥ. ನಿಸ್ವಾರ್ಥ ನಿರಹಂಕಾರದಿಂದ  ಪ್ರತಿಫಲಾಪೇಕ್ಷೆ ಯಿಲ್ಲದ ದಾನವೇ ಶ್ರೇಷ್ಠ ಎಂದರು. ದೇಶದ  ಭವಿಷ್ಯ ನಿರ್ಧಾರ ಮಾಡುವ ಮತದಾನ
ಎತ್ತ ಸಾಗಿದೆ? 
ಪ್ರಜಾಪ್ರಭುತ್ವದ  ಜವಾಬ್ದಾರಿಯುತ ಪ್ರಜೆಗಳಾಗಿ ಪ್ರಶ್ನೆಗೆ ಉತ್ತರ  ಒಳಗಿನ ಜ್ಞಾನದಿಂದ ತಿಳಿದರೆ ನಮ್ಮ  ಭವಿಷ್ಯ ನಮ್ಮ ಮತದಲ್ಲಿದೆ. ಅದು  ಸಾತ್ವಿಕರಿಗೆ ಕೊಟ್ಟರೆ  ಧರ್ಮ ರಕ್ಷಣೆ ಸಾಧ್ಯವಿದೆ. ನಮ್ಮನ್ನು ಯಾರು ಆಳುವರೆನ್ನುವುದು ಮುಖ್ಯವಲ್ಲ ನಾವು ಯಾರ ಆಳಾಗಿರುವೆವೆನ್ನುವುದೂ ಮುಖ್ಯ. ಅಜ್ಞಾನಕ್ಕೆ ಮದ್ದು ಜ್ಞಾನದ ಶಿಕ್ಷಣವಾಗಿದೆ.

Friday, May 5, 2023

ಸರ್ಕಾರ ಹಣೆಬರಹ ಬದಲಾಯಿಸುವುದೆ?

ಮಾನವರು ಒಂದು ಸ್ಪಷ್ಟವಾಗಿ  ಅರ್ಥ ಮಾಡಿಕೊಳ್ಳಲು ಕಲಿತರೆ ಎಲ್ಲಾ ಅರ್ಥ ವಾಗಬಹುದು. ಭೂಮಿಯ ಮೇಲೆ ಬರುವ ಉದ್ದೇಶ ಒಂದೇ ಆದರೂ ಬಂದ ಮೇಲೆ  ಅಲ್ಲಿ  ಬೇರೆ ಬೇರೆ  ಉದ್ದೇಶಗಳಾಗುತ್ತದೆ ಎಂದರೆ ಜೀವ ಹೋಗುವಾಗ  ಯಾವ ಉದ್ದೇಶ ಹೊತ್ತು ಹೋಗುವುದೋ ಅದೇ ಮುಂದುವರಿದಿರುತ್ತದೆನ್ನುವುದೆ ಅಧ್ಯಾತ್ಮ ಸತ್ಯ.
ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿದಂತೆ ಮಾನವನ ಜೀವಾಂತ್ಯದಲ್ಲಿರುವ ಯೋಚನೆಗೆ ತಕ್ಕಂತೆ ಪುನರ್ಜನ್ಮ ಪಡೆಯುವುದಾಗಿದೆ.ಹೀಗಾಗಿ ಪ್ರಾರಂಭದಲ್ಲಿ  ಯಾವ ಚಿಂತನೆಗಳು  ಬರುವವೋ ಅದೇ ಮುಂದೆ ದೊಡ್ಡದಾಗಿ ಬೆಳೆದು ಕೊನೆಗಾಣುವುದು.ಇದರಲ್ಲಿ ಕೆಲವರಿಗೆ ಸಾತ್ವಿಕ ಚಿಂತನೆ ಇದ್ದರೆ ಮತ್ತೆಕೆಲವರಿಗೆ ರಾಜಸಿಕ ಚಿಂತನೆ ಹಲವರಿಗೆ ತಾಮಸಿಕ ಚಿಂತನೆ. ಭೂಮಿಯಲ್ಲಿ ಸುಖ ಕಾಣುವುದಕ್ಕಾಗಿ ಮಾಡಬಾರದ  ಕರ್ಮಕ್ಕೆ  ಕೈ ಹಾಕಿ ಸೋತರೂ ಬುದ್ದಿಬರದೆ ಅಧರ್ಮದೆಡೆಗೇ ಜೀವಹೋಗಿರುತ್ತದೆ ಮತ್ತೆ ಮತ್ತೆ ಜನ್ಮ ಪಡೆದರೂ ಸರಿಯಾದ ಜ್ಞಾನ ಸಿಗದೆ  ಅವರ ಸಂಖ್ಯೆ ಭೂಮಿಯಲ್ಲಿ ಬೆಳೆಯುತ್ತಾ ಅಸುರ ಆಗಿರುತ್ತಾರೆ. ಇನ್ನೂ ಕೆಲವರಿಗೆ ಆ ಅಸುರರನ್ನು ಆಳುವ ರಾಜಸಿಕ ಬುದ್ದಿ ತೀವ್ರವಾಗಿ ಕೊನೆಗೆ ತಾನೂ ಅದೇ ದಾರಿಯಲ್ಲಿ ನಡೆಯುತ್ತಿರುವ ಜ್ಞಾನವಿಲ್ಲದೆ  ಆ ಶಕ್ತಿಯನ್ನು ಇನ್ನಷ್ಟು ಬೆಳೆಸಿ ಭೂಮಿಯಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಾರೆ. ಕೆಲವರಷ್ಟೆ  ಸಾತ್ವಿಕ ವಿಚಾರಗಳತ್ತ ಜನರನ್ನು ಸೆಳೆಯುವ ಪ್ರಯತ್ನ ಮಾಡಿ ತಾನೂ  ಅದರಲ್ಲಿ ನಡೆಯುತ್ತಾ  ಕೊನೆಗೆ ಆ ದೈವತ್ವದಲ್ಲಿ ಮರೆಯಾಗುತ್ತಾರೆ. ಮೂರೂ  ತರಹದ ಜನರೂ ಭೂಮಿಗೆ
ಮಕ್ಕಳಾದರೂ ಭೂಮಿಯ ಋಣ ತೀರಿಸಲು ಸಾಧ್ಯವಾಗುವುದು ಕೇವಲ ಕೆಲವೇ ಸಾತ್ವಿಕರಿಗಷ್ಟೆ. ಸಾತ್ವಿಕರೆನಿಸಿಕೊಂಡವರೂ ರಾಜಸಿಕ ತಾಮಸಿಕ ಜನರ ಒಡನಾಟದಲ್ಲಿದ್ದರೆ ತಾವೂ ತಿಳಿಯದೆ ದಾರಿತಪ್ಪಬಹುದು. ಈ ಕಾರಣಕ್ಕಾಗಿ  ಹಿಂದಿನ ಮಹಾತ್ಮರುಗಳು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ  ಇಳಿಯದೆ ಸ್ವತಂತ್ರ ಜೀವನ ನಡೆಸಿಕೊಂಡು  ಪರಮಾತ್ಮನ  ಸತ್ಯವರಿತು ಒಂದೇ ಮಾರ್ಗ ಹಿಡಿದಿದ್ದರು. 
ಯಾವುದೇ ಸತ್ಯವಿರಲಿ ಅದು ನಮ್ಮ ಅನುಭವದಿಂದ ಸ್ಪಷ್ಟವಾಗಿ  ತಿಳಿದಾಗಲೇ  ಅದು ಸತ್ಯವಾಗುತ್ತದೆ. ಯಾರೋ ಹೇಳಿದ್ದಾರೆಂದರೆ  ಅಂದಿನ ಕಾಲಮಾನಕ್ಕೂ ಈಗಿನ ಕಾಲಕ್ಕೂ ಹೊಂದಿಕೆಯಾಗುವುದೆ ಎನ್ನುವ ಬಗ್ಗೆ ಚಿಂತನೆ ನಡೆಸಿ ನಮ್ಮ ಮನಸ್ಥಿತಿ, ಪರಿಸ್ಥಿತಿ ಆರ್ಥಿಕ ಸ್ಥಿತಿ ಗತಿ ಎಲ್ಲವೂ  ಒಂದೇ ಸಮನಾಗಿದ್ದರೆ ಒಂದೇ ಸತ್ಯವನ್ನು ಎಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯ.ಆದರೆ ಇದು ಕಾಲಕಾಲಕ್ಕೆ ಬದಲಾದಂತೆ  ಒಂದೇ ಸತ್ಯವೂ ಹಲವರಿಗೆ ಹಲವು ರೀತಿಯಲ್ಲಿ  ಕಂಡು ಪ್ರಚಾರವಾಗಿ ಒಂದೇ ಧರ್ಮ ದೇವರು  ಜಾತಿ ಎಲ್ಲಾ ಬೇರೆ ಬೇರೆಯಾಗಿದೆ. ಹಾಗಂತ ಭೂಮಿ ಎರಡಿಲ್ಲ, ದೇಶ ಎರಡಿಲ್ಲ,ತಾಯಿ ಒಬ್ಬಳೆ ಆದಾಗ ನಮ್ಮ ಈ ಜನ್ಮದಲ್ಲಿ  ಹತ್ತಿರವಿರುವ ಈ ಶಕ್ತಿಯನರಿಯುವತ್ತ ನಮ್ಮ ಚಿತ್ತವಿದ್ದರೆ ಎಷ್ಟೋ ಬದಲಾವಣೆ ಸಾಧ್ಯ. ಇಲ್ಲಿ ಸ್ತ್ರೀ ಯನ್ನು ಆಳುವುದಕ್ಕಾಗಿ ಅವಳನ್ನು ದುರ್ಭಳಕೆ ಮಾಡಿಕೊಂಡು  ಮುಂದೆ ನಡೆದವರಿಗೆ ಸಾತ್ವಿಕತೆಯ ಅರ್ಥವಾಗದೆ ರಾಜಸಿಕತೆ ಬೆಳೆದು ತಾನೇ ಸೋಮಾರಿಯಾಗಿದ್ದರೂ  ಬೇರೆಯವರಿಗೆ ದುಡಿದು ತಿನ್ನುವಂತಹ ಉಪದೇಶ ನೀಡುವವರ ಸಂಖ್ಯೆ ಬೆಳೆದಿರೋದೆ ಭಾರತೀಯರ ಸಮಸ್ಯೆಗಳಿಗೆ ಕಾರಣವೆಂದರೂ  ಹೇಳುವುದಕ್ಕೆ ಕೇಳುವುದಕ್ಕೆ ನಿಮಗೇನು ಅಧಿಕಾರವಿದೆ ಎನ್ನುವವರಿದ್ದಾರೆಂದರೆ ನಾವು ಪ್ರಜಾಪ್ರಭುತ್ವದ  ಪ್ರಜೆಗಳಾಗಿ ಚಿಂತನೆ ನಡೆಸದೆ ರಾಜಕೀಯಕ್ಕೆ ಹೆಚ್ಚು ಬೆಲೆಕೊಟ್ಟು ಬೆಳೆಸುವುದರಲ್ಲಿಯೇ  ಜೀವನ ನಡೆದಿದೆ ಎಂದರ್ಥ. ಇದರಿಂದಾಗಿ  ಏನು ಸಾಧನೆ ಆಯಿತು? ಧರ್ಮ ಉಳಿಯಿತೆ? ಸತ್ಯ ತಿಳಿಯಿತೆ? ಆತ್ಮಜ್ಞಾನ ಹೆಚ್ಚಾಯಿತೆ? ಶಾಂತಿ ಸಿಕ್ಕಿತೆ? ದೇಶ  ಯಾವ ದಾರಿಗೆ  ನಡೆದಿದೆ? ಮನೆಯೊಳಗೆ ಸುರಕ್ಷಿತವಾಗಿದ್ದ ಮಹಿಳೆ ಮಕ್ಕಳು ಹೊರಗೆ ಬಂದು ಹೋರಾಟ ಮಾಡುವ ಸ್ಥಿತಿಗೆ ಭಾರತ ಬಂದಿದೆ ಎಂದರೆ  ಯಾರ ವಿರುದ್ದ ಯಾರು ಹೋರಾಟ ನಡೆಸುತ್ತಿರುವುದೆನ್ನುವ ಬಗ್ಗೆ  ಶಾಂತಿಯಿಂದ  ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ನಮ್ಮವರ ವಿರುದ್ದ ನಾವೇ ನಿಂತಿದ್ದೇವೆ. ಇದರ ಫಲ ಪರರು ಬೆಳೆದಿರೋದು. 
ನಾವೆಲ್ಲರೂ ದೇವರ ಮಕ್ಕಳು ಎಂದರೆ  ದೇವರ ಅಂಶ ನಮ್ಮಲ್ಲಿದೆಯೆ? ಆ ಸತ್ವ,ಸತ್ಯ,ತತ್ವ ಒಳಗಿದೆಯೆ? ಇದ್ದರೆ ಮನಸ್ಸು ಶಾಂತವಾಗಿರಬೇಕಿತ್ತು. ಇದನ್ನು ಹಿಂದಿನ‌ಮಹಾತ್ಮರು ಎಷ್ಟೋ ರೀತಿಯಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲಾ ಓದಿ ತಿಳಿದರೂ ಹೊರಗಿನ. ರಾಜಕೀಯಕ್ಕೆ ಇಳಿದ ಮನಸ್ಸಿಗೆ ಒಳಗಿರುವ ಆ ಸತ್ಯವನ್ನು ಜೀರ್ಣಿಸಿಕೊಳ್ಳಲು  ಶಕ್ತಿಯಿಲ್ಲವಾಗಿದೆ ಎಂದರೆ ಆ ಶಕ್ತಿಗೆ ಪೂರಕವಾದ ಆಹಾರ, ಶಿಕ್ಷಣಜ್ಞಾನ ನೀಡದೆ ಹಿಂದುಳಿದಿದೆ.
ಇದನ್ನು ಮನೆಯೊಳಗೆ ಕೊಟ್ಟು ಬೆಳೆಸಿದರೆ  ಇದ್ದಲ್ಲಿಯೇ ಶಾಂತಿ ಕಾಣಬಹುದು. ಬಹಳ ಕಷ್ಟಪಡಬೇಕಿದೆ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಯೋಗಮಾರ್ಗ ಅಗತ್ಯವಿದೆ.ಭೋಗಕ್ಕೆ ಹೊರಟರೆ ರೋಗವೇ ಹೆಚ್ಚಾಗಿ ಜೀವ ಹೋಗುವುದು.ಮತ್ತೆ ರೋಗದಿಂದ ಜನ್ಮ ಪಡೆಯುವುದು.ರೋಗಕ್ಕೆ ಔಷಧವೇ ಆರೋಗ್ಯಕರ ಶಿಕ್ಷಣ. ಆರೋಗ್ಯ ಎಂದರೆ ಆರು ಯೋಗ್ಯವಾಗಿರೋದು. ಕಾಮ ಕ್ರೋಧ ಲೋಭ,ಮೋಹ ಮಧ,ಮತ್ಸರವೆಂಬ ಗುಣವನ್ನು ಮಾನವ ಎಷ್ಟು ಅರ್ಥ ಪೂರ್ಣವಾಗಿ ಅರಿತು ನಡೆಯುವನೋ ಅವನಿಗೆ ಮಾತ್ರ ಜೀವನದ ಸತ್ಯ ತಿಳಿಯುವುದು. ಇತಿಮಿತಿಗಳನ್ನು  ಕಾಯ್ದು ಕೊಂಡಿರೋದೆ  ಸಾಧನೆ.ಅತಿಯಾದರೆ ಅಮೃತವೂ ವಿಷ.
ಇಷ್ಟೇ ಜೀವನದ ರಹಸ್ಯ. ಭಾರತೀಯರಲ್ಲಿ ವಿದೇಶಿಯತೆ ಅತಿಯಾದರೆ ವಿಷವೇ. ಹಾಗೆ ಮಕ್ಕಳಲ್ಲಿ ಪ್ರಭುದ್ದತೆ ಹೆಚ್ಚಾದರೆ ವಿಷ. ಮಹಿಳೆಯರಲ್ಲಿ ರಾಜಕೀಯತೆ ಹೆಚ್ಚಿದರೆ ವಿಷ. ಪುರುಷರಲ್ಲಿ  ವ್ಯಾಮೋಹ ಅತಿಯಾದರೆ ವಿಷ.
ಒಟ್ಟಿನಲ್ಲಿ ಕಲಿಯುಗದ ಜನರಲ್ಲಿ ಅಜ್ಞಾನ ಮಿತಿಮೀರಿದರೆ ಅಸುರರೆ ಬೆಳೆಯೋದು. ಇದಕ್ಕೆ ಪರಿಹಾರ ಜ್ಞಾನದ ಶಿಕ್ಷಣ.
ಇದಕ್ಕೆ ಯಾವುದೇ ರಾಜಕೀಯವಿರದೆ ಜಾತಿಬೇಧವಿರದೆ, ಲಿಂಗಬೇಧವಿರದೆ, ಸಮಾನತೆ ಇದ್ದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಗುರು ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಅರಿವೇ ಗುರು.ಸ್ವಾನುಭವವೇ ಸ್ವಾವಲಂಬನೆ. ಸ್ವತಂತ್ರ ಜ್ಞಾನ,ಸ್ವಾಭಿಮಾನ,ಸತ್ಯ ಧರ್ಮದೆಡೆಗೆ ನಡೆಸುತ್ತದೆ.ಈಗಾಗಲೇ ಸಾಕಷ್ಟು ಅನುಭವಿಸಿರುವ ಸಾಮಾನ್ಯ ಪ್ರಜೆಗಳು ಎಚ್ಚೆತ್ತುಕೊಳ್ಳದಿದ್ದರೆ   ಏನೂ ಬದಲಾವಣೆ ಆಗದು. ಅಸುರರೊಳಗೆ ಸುರರಿದ್ದರೆ ಅವರನ್ನು ಹೊರತರಲು ಭಗವಂತ ಅಸುರರಿಂದಲೇ ಮಾನವರಿಗೆ ಪಾಠ ಕಲಿಸುವುದು.ಭಗವಂತನಿಗೇನೂ ನಷ್ಟವಿಲ್ಲ ಲಾಭವೂ ಇಲ್ಲ
ಕಾರಣ ಎಲ್ಲಾ ಅವನೊಳಗಿರುವಾಗ ಮೇಲಿದ್ದವರು ಕೆಳಗೆ ಹೋಗಬಹುದು ಕೆಳಗಿದ್ದವರು ಮೇಲೇರಬಹುದು. ಹೀಗಾಗಿ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡುವಾಗ  ಅಸುರರ ಜೊತೆಗೆ ಸುರರೂ  ಹೋಗಬಹುದು. ಯಾವಾಗ ಕೆಟ್ಟವರಿಗೆ ಸಹಕಾರ ನೀಡುವರೋ  ಅವರೊಂದಿಗೆ  ಹೋಗುವರು.ಎಲ್ಲರಿಗೂ ಸಾವಿದೆ .ಸಾಯೋ ಮೊದಲು ನಮ್ಮೊಳಗೇ ಏನಿದೆ  ಯಾರಿರುವರು ಎನ್ನುವ ಬಗ್ಗೆ ನಾವೇ ತಿಳಿಯದಿದ್ದರೆ ವ್ಯರ್ಥ. ಯಾರಿಗೆ ಗೊತ್ತು ಯಾರೊಳಗೆ ಯಾವ ದೇವಾಸುರರು ಇರುವರೋ?

"ತೊರೆದು ಹೋಗಲು ಬಹುದೆ ಹರಿನಿನ್ನ ಚರಣವನು ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯಾ" ಕನಕದಾಸರು.
ಧನಕನಕ ಬಿಟ್ಟು ಪರಮಾತ್ಮನ ದಾಸರಾಗಿ ಸತ್ಯದರ್ಶನ ಮಾಡಿಕೊಂಡವರನ್ನು  ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ? 
ಸರ್ಕಾರ ಕೊಡುವ ಧನ ಕನಕಕ್ಕಾಗಿ ಒಳಗಿದ್ದ ಜ್ಞಾನವನ್ನು ಕಳೆದುಕೊಂಡರೆ  ನಷ್ಟ ಯಾರಿಗೆ?  ಭಾರತೀಯರಿಗೆ ಆತ್ಮಾವಲೋಕನ ಅಗತ್ಯವಿದೆ.

ಯಾರಿಂದ ಯಾರಿಗೆ ಮೋಸವಾಗಿದೆ?

ಸರ್ಕಾರಗಳು ರೈತಪರ,ಜನಪರ,ಮಹಿಳಾಪರ ಇನ್ನಿತರ ಸಾಮಾಜಿಕ ವಿಚಾರಗಳ ಪರವಾಗಿ ನಿಂತು ಯೋಜನೆಗಳನ್ನು  ತಯಾರಿಸಿ ಎಲ್ಲರ  ಮತಬಳಸಿ ಗೆದ್ದರೂ  ದೇಶದ ಪರ ಯಾವುದೇ  ರೀತಿಯ ಚಿಂತನೆ ನಡೆಸದ ಪ್ರಜೆಗಳಿದ್ದರೆ  ವ್ಯರ್ಥಫಲ. 
ದೇಶದೊಳಗೆ ಇರುವ ಪ್ರಜೆಗಳಲ್ಲಿ ದೇಶಭಕ್ತಿ  ಸರ್ಕಾರದಿಂದ 
ಬೆಳೆಸಲಾಗದು.ಕಾರಣ ಸರ್ಕಾರದ ಸಾಲ,ಸೌಲಭ್ಯಗಳನ್ನು  ಉಳ್ಳವರೂ ಪಡೆದು ಶ್ರೀಮಂತರಾದಾಗ  ನಿಜವಾದ ಬಡವ ದೇಶದ ಪರ ನಿಲ್ಲಲಾಗದು. ಹಸಿದವನಿಗೆ‌ ಉತ್ತಮವಾದ ಆಹಾರ ನೀಡುವುದು ಸರಿ. ಹಾಗೆಯೇ  ಜ್ಞಾನದ ಹಸಿವಿದ್ದವರಿಗೆ ಸರಿಯಾದ ಸಾತ್ವಿಕ ಶಿಕ್ಷಣ ನೀಡುವುದು ಧರ್ಮ. ಇಲ್ಲಿ ಬಡವರಲ್ಲಿರುವ‌ ಜ್ಞಾನ ಗಮನಿಸದೆ ಶಿಕ್ಷಣ ನೀಡದೆ ಶ್ರೀಮಂತ ರು ಆಳಿದರೆ  ಇದೊಂದು ಅಜ್ಞಾನದ ಭ್ರಷ್ಟಾಚಾರ. ಹೀಗಾಗಿ ಭಾರತೀಯತೆ ಹೋಗಿ ವಿದೇಶಿಯತೆ ಮೆರೆದಾಡುತ್ತಿದೆ. ಯಾರು ದೇಶ ಆಳುತ್ತಿರುವರೋ ಯಾರು ದೇಶರಕ್ಷಕರೋ ಎನ್ನುವುದನ್ನು ಗಮನಿಸಲು ನಮಗೆ ಜ್ಞಾನದ ಅಗತ್ಯವಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ,
ಯಾರದ್ದೋ ಹೆಸರಿನಲ್ಲಿ  ರಾಜಕೀಯ ನಡೆಸಿಕೊಂಡು ಜನರ ದಾರಿತಪ್ಪಿಸುವ  ಮಧ್ಯವರ್ತಿಗಳು ಸಾಕಷ್ಟು ಬೆಳೆದಿರುವರು.
ಹಲವರು ದೇಶದ ಪ್ರಜೆಗಳೆ  ಆಗಿಲ್ಲ.ಮತಹಾಕುವ ಅಧಿಕಾರ ಪಡೆಯದವರು ಮತದಾನ ಮಾಡಲು ಮನೆ ಮನೆಗೆ ಹೋಗಿ ಪಕ್ಷದ ಪರ ನಿಲ್ಲುವರೆಂದರೆ  ಇದಕ್ಕೆ ಕಾರಣ ಹಣಗಳಿಕೆಯಷ್ಟೆ.
ಮತದಾರರನ್ನು, ಮಕ್ಕಳು,ಮಹಿಳೆಯರಿಗೆ ಹಣ ನೀಡಿ ಖರೀದಿಸುವ ಮಟ್ಟಿಗೆ  ರಾಜಕೀಯ ಬೆಳೆದಿದೆ. ಹಣದ ಮೂಲ  ತಿಳಿದರೆ  ಸಾಕು ಭ್ರಷ್ಟಾಚಾರ  ಯಾವ ರೀತಿಯಲ್ಲಿ ಹರಡಿಕೊಂಡು ಆಳುತ್ತಿದೆ.
ಇದಕ್ಕೆ ರಾಜಕಾರಣಿಗಳು ಕಾರಣರಲ್ಲ. ಯಾವ ವ್ಯಕ್ತಿಯೇ ಆಗಲಿ ಒಮ್ಮೆ ಅಧಿಕಾರ,ಸ್ಥಾನಮಾನ ಪಡೆದ ಮೇಲೆ ಅವನ ಜೀವನವೇ ಬದಲಾಗುತ್ತದೆ. ಅದರಿಂದ ಹೊರಬರುವುದು ಕಷ್ಟ. ಹೊರಬಂದವರನ್ನು ಸಮಾಜವೇ ಹೀನವಾಗಿ ನೋಡುವಾಗ ಯಾರಿಗೇ ಆಗಲಿ ಅಧಿಕಾರ ಬೇಕೆನಿಸುತ್ತದೆ.ಹಾಗಂತ ಪ್ರತಿ ಬಾರಿ ಗೆದ್ದು ಬರಲು ಜನ ಬಿಡೋದಿಲ್ಲ. ಅವರಿಗೆ ಪ್ರತಿಸಲವೂ  ಸಾಕಷ್ಟು  ತಿನ್ನಿಸುತ್ತಿದ್ದರೆ ಆ ಋಣಕ್ಕಾಗಿ ಹಿಂದೆ ನಿಂತು 
ಗೆಲ್ಲಿಸುವರು.ಈ ಕಾರಣದಿಂದಚುನಾವಣೆಯ ಸಮಯದಲ್ಲಿ 
 ಮನೆಯೊಳಗಿದ್ದವರನ್ನೂ ಬಳಸಿಕೊಂಡು  ಮತಪ್ರಚಾರ ಮಾಡಲು ಹಣದ ಜೊತೆಗೆ ಇನ್ನಷ್ಟು ಬೇಡವಾದದ್ದನ್ನು ಹಂಚಿಕೊಂಡು ದಿನನಿತ್ಯದ ಕಾಯಕಬಿಡಿಸಿ ದುಡಿಸಿಕೊಳ್ಳುವರು. ಗೆದ್ದವರ ಹಿಂದೆ ಜನ  ತಮ್ಮ ಬೇಡಿಕೆಗಳ ಪಟ್ಟಿ ಇಟ್ಟು ಹಿಂದಿರುವರು.ಸೋತವರ ವಿರುದ್ದ ನಿಂತು ಕೂಗುವರು. ಒಟ್ಟಿನಲ್ಲಿ ಇಲ್ಲಿ ಕುರಿಗಳನ್ನು ಸಾಕುವಂತೆ ಸಾಕಿಕೊಂಡು ನಂತರ ಜೀವ ಹೋದರೂ ಹೇಳೋರಿಲ್ಲ ಕೇಳೋರಿಲ್ಲ. ಇದಕ್ಕೆ ಕಾರಣವೇ ಅಜ್ಞಾನದ ಜೀವನಶೈಲಿ.
ಸಾಲ ಮಾಡಿಯಾದರೂ ತುಪ್ಪತಿನ್ನುವ ಅತಿಆಸೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು  ಕೆಲವರಿಗಷ್ಟೆ ಸೀಮಿತವಾಗಿದೆ. 
ಒಂದು ಮನೆಯಲ್ಲಿಯೇ  ಮೇಲು ಕೀಳಿನ ರಾಜಕೀಯ ಇದ್ದರೆ ಸಮಾಜದಲ್ಲಿರುವ ಈ ಅಸಮಾನತೆಯನ್ನು ಸರಿಪಡಿಸಲು ಕಷ್ಟ. ಅವರವರ ಯೋಗಾಯೋಗಕ್ಕೆ  ಅವರವರ ಋಣ ಕರ್ಮವೇ ಕಾರಣ. ಋಣ ತೀರಿಸಲು ಸತ್ಕರ್ಮ ಮಾಡಬೇಕು. ಸತ್ಕರ್ಮ ಯಾವುದೆಂದು ತಿಳಿಯಲು ಸುಜ್ಞಾನವಿರಬೇಕು. ಸುಜ್ಞಾನ ಪಡೆಯಲು ಸುಶಿಕ್ಷಣವಿರಬೇಕು.ಸುಶಿಕ್ಷಣ ಪಡೆಯಲು ಸದ್ಗುರು ಬೇಕು. ಹೀಗಾಗಿ ಗುರುವೇ ದೇವರೆಂದರು. ದೈವತ್ವದೆಡೆಗೆ ನಡೆಸುವ ಗುರುವೇ ಸದ್ಗುರು.
ಗುರುವೇ ರಾಜಕೀಯದಲ್ಲಿದ್ದರೆ ರಾಜಕೀಯದಲ್ಲಿ ದೈವತ್ವಕ್ಕೆ ಸ್ಥಳವಿಲ್ಲ. ಸತ್ಯ ಧರ್ಮ ದಿಂದ  ರಾಜಕೀಯ ನಡೆಸಲಾಗಲ್ಲ.
ಶ್ರೀ ರಾಮಚಂದ್ರನಂತೆ  ಎಲ್ಲರೂ  ಇರಲಾಗದು. ಹಾಗಾಗಿ ದೇವರ ಹೆಸರಿನಲ್ಲಿ ಸಾಕಷ್ಟು ರಾಜಕೀಯ ಬೆಳೆದಿದೆ. ತತ್ವವಿದ್ದರೆ ಧರ್ಮ ರಕ್ಷಣೆ ತಂತ್ರವಿದ್ದರೆ ಅತಂತ್ರ ಜೀವನ.ಶ್ರೀ ರಾಮರಾಜ್ಯದ ಕನಸು ಕಾಣೋದು ಸುಲಭ 
ಆದರೆ ಶ್ರೀ ರಾಮರಾಜ್ಯ ಮಾಡೋದಕ್ಕೆ  ಎಲ್ಲಾ ಬುದ್ದನಂತೆ ಬದ್ದರಾಗಿ ನಿಲ್ಲಬೇಕಿದೆ. ಭಗವಾನ್ ಬುದ್ದ ಜಯಂತಿ ಆಚರಣೆಯಿದೆ.
ಆದರೆ ಅವರಂತೆ ರಾಜಕೀಯ ಬಿಟ್ಟು ಅಧ್ಯಾತ್ಮ ದೆಡೆಗೆ ಹೊರಡುವವರು ಎಷ್ಟಿರುವರು? ರಾಜಕೀಯ ನಡೆಸಲು ಸಹಕರಿಸುವುದೂ ರಾಜಕೀಯದ ಭಾಗವೇ .ಪ್ರಜಾಪ್ರಭುತ್ವ ದೇಶದಲ್ಲಿ ಇದು ಅನಿವಾರ್ಯ ವಾಗಿದೆ. ಆದರೆ  ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸಹಕರಿಸುವ ‌ಜ್ಞಾನ ಇದಕ್ಕಿಂತ ಮುಖ್ಯವಾಗಿದೆ. ಪ್ರಜೆಗಳಲ್ಲಿ ಅಜ್ಞಾನ ತುಂಬಿ ಆಳಿದರೆ  ಸಾಧನೆಯಾಗದು. ವಿದೇಶಿಗಳ ಹಣದಲ್ಲಿ ದೇಶ ನಡೆಸಿದರೆ ಸಾಲ ತೀರದು. ವಿದೇಶಿ ಶಿಕ್ಷಣವನ್ನು ಕೊಡುತ್ತಾ ನಮ್ಮವರನ್ನೇ ವಿದೇಶಿಗಳಿಗೆ  ಬಿಡುವುದು ಧರ್ಮವಲ್ಲ.
ಹಾಗೆಯೇ ದೇಶದೊಳಗೆ ಇದ್ದು ದೇಶದಿಂದ ನನಗೇನು ಲಾಭ‌ನಷ್ಟ ಎನ್ನುವ  ಮನಸ್ಥಿತಿ ಇರುವ ವರೆಗೂ ದೇಶದ ಸಾಲ ತೀರದು.
ಪಕ್ಷಗಳೇನೂ  ಗೆದ್ದರೆ ನಿಮಗೆ ಉಚಿತವಾದ ಸಾಲ,ಸೌಲಭ್ಯಗಳನ್ನು ಕೊಡಬಹುದು.ಆದರೆ  ಉಚಿತ ಪಡೆದಷ್ಟೂ ಸಾಲ ಬೆಳೆಯುವುದು ಖಚಿತ. ಉಚಿತ ಪಡೆದು  ಯಾರು  ಉದ್ದಾರ ಆಗಿದ್ದಾರೆಂಬುದರ ಅರಿವಿದ್ದರೆ
ನಾವೇ ಉಚಿತ ಕೊಟ್ಟು ಸಾಲ ಬೆಳೆಸುವ   ಸರ್ಕಾರದ  ವಿರುದ್ದ ನಿಲ್ಲಬಹುದು.ಅಥವಾ ದೂರವಿದ್ದು ಸ್ವತಂತ್ರ ಜೀವನ ನಡೆಸಲು  ತತ್ವದೆಡೆಗೆ ನಡೆಯಬಹುದು, ಇದೂ ಸಾಧ್ಯವಿಲ್ಲ ಎಂದರೆ  ದಾರಿ ತಪ್ಪಿ ನಡೆಯುತ್ತಿರುವ ಜನರಿಗೆ ಉತ್ತಮ ದಾರಿದೀಪವಾಗಬಹುದು.  ಕೆಲವೆಡೆ ಈ ಕಾರ್ಯ ನಡೆದಿದೆ.ಎಲ್ಲಾ ಮಾನವ ಮನಸ್ಸು ಮಾಡಿದರೆ ಸಾಧ್ಯ. ಆದರೆ ಮನಸ್ಸನ್ನು ಮಾರಿಕೊಂಡರೆ ಅಸಾಧ್ಯ.  ಒಂದಂತೂ ಸತ್ಯ ಮಾನವ ಒಂದು ನೆನೆದರೆ ದೈವ ಸಂಕಲ್ಪವೇ ಬೇರೆಯಾಗಿರುತ್ತದೆ. ಯಾರೂ ಯಾವುದನ್ನೂ ಬದಲಾಯಿಸಲಾಗದು.ಬದಲಾವಣೆ ನಮ್ಮ ಮನಸ್ಸಿನ ಚಿಂತನೆಯಲ್ಲಿದೆ.ಅದು ರಾಜಕೀಯವಾಗಿದ್ದರೆ ಅಧರ್ಮ
ರಾಜಯೋಗವಾಗಿದ್ದರೆ ಧರ್ಮ. ಈಗ ನಾವೆಲ್ಲರೂ ಒಂದೇ ದೇಶದ ಪ್ರಜೆಗಳಾಗಿದ್ದರೂ ರಾಜಕೀಯ ವಿಚಾರದಲ್ಲಿ ಪಕ್ಷ ಪಕ್ಷಗಳ ಅಂತರದಲ್ಲಿ  ಬೇರೆ ಬೇರೆ ಚಿಂತನೆ ನಡೆಸಿ ಮನಸ್ಸು ಹೊರಗಿದೆ.  ವಿದೇಶಿ ಬಂಡವಾಳದ ಜೊತೆಗೆ ಅವರ ಧರ್ಮ,ಸಂಸ್ಕೃತಿ, ಭಾಷೆ ಶಿಕ್ಷಣ,ವ್ಯವಹಾರವೂ ಇರುತ್ತದೆ. ಇದರಿಂದ ಆತ್ಮಜ್ಞಾನ ಬರುವುದೆ?ಇದರ  ಕೆಟ್ಪಪರಿಣಾಮ  ಸಂಸಾರದೊಳಗೆ ಹೊರಗೆ ನಡೆಯುವಾಗ ಯಾವ ಪಕ್ಷವೂ ಸರಿಪಡಿಸಲಾಗದು. ಹಾಗೆ ನಮ್ಮ ಚಿಂತನೆ  ಅಂತರ್ಮುಖ
ವಾಗಿದ್ದರೆ ಒಂದೇ ದೇಶದಲ್ಲಿ  ಅಸಂಖ್ಯಾತ ಧರ್ಮ, ಜಾತಿ,ಪಂಗಡ,ದೇವರು,ಸಂಘಟನೆಗಳು,ಪಕ್ಷಗಳು ಯಾವ ರೀತಿಯಲ್ಲಿ ದೇಶವನ್ನು ಒಡೆದು ಆಳಲು ಹೊರಟಿದ್ದಾರೆಂಬ ಸತ್ಯ  ತಿಳಿಯಬಹುದು. ಇದಕ್ಕೆ  ನಮ್ಮ ಮನಸ್ಸನ್ನು  ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು  ನಾವೇ ಯೋಗದ ಮೂಲಕ ಪ್ರಯತ್ನಪಟ್ಟು ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಒಳಗಿರುವ ಪರಮಾತ್ಮನ ಸತ್ಯ ಅರ್ಥ ವಾಗುತ್ತದೆ. ಎಷ್ಟು ಹೊರಗೆ  ಬರುವುದೋ ಅಷ್ಟು ನಷ್ಟ .
ದೇಶಭಕ್ತಿ ದೇವರ ಭಕ್ತಿಗಿಂತ ದೊಡ್ಡದಾದರೂ  ದೇಶದ ಒಳಗಿದ್ದವರಿಗೆ ಇದು ಅಗತ್ಯವೇ ಹೊರತು ವಿದೇಶದವರೆಗೆ ಹೋದವರಿಗಿದ್ದರೆ ಏನು ಉಪಯೋಗ?  ಭಕ್ತಿ ಆಂತರಿಕ ಶಕ್ತಿ.
ಆತ್ಮನಿರ್ಭರ ಭಾರತಕ್ಕೆ ಅಧ್ಯಾತ್ಮ ಚಿಂತನೆ ಅಗತ್ಯ.ಇಲ್ಲಿ ಅಧ್ಯಾತ್ಮ  ಓದಿ ತಿಳಿಯುವುದಲ್ಲ.ನಡೆದು ನುಡಿದು ತಿಳಿದು ತಿಳಿಸುವುದಾಗಿದೆ. ಪೂರ್ಣ ಹಿಂದೆ ಹೋಗಲಾಗದಿದ್ದರೂ ನಮ್ಮ ಹತ್ತಿರದ ಗುರು ಹಿರಿಯರ  ಸಾತ್ವಿಕ ಶಕ್ತಿಯನರಿತರೆ ನಮ್ಮಲ್ಲಿ ಅಡಗಿರುವ ಆಶಕ್ತಿ  ಬೆಳೆಯುತ್ತದೆ. ಇದು ಶಿಕ್ಷಣ.
ಮೊದಲೇ ಮಕ್ಕಳಲ್ಲಿ ಅಡಗಿರುವ  ಸತ್ವ,ಸತ್ಯ,ತತ್ವವನ್ನು  ತಿಳಿದು ಅದಕ್ಕೆ ಸರಿಹೊಂದುವ ಶಿಕ್ಷಣ ನೀಡುವುದೆ ಪೋಷಕ ಧರ್ಮ ವಾಗಿತ್ತು. ಇದನ್ನರಿಯದೆ ವಿರುದ್ದವಾದ ವಿಷಯ ತುಂಬಿದರೆ ಒಳಗಿದ್ದ ಸತ್ವ ತತ್ವಸತ್ಯ ಹಿಂದುಳಿದು ಹಿಂದುಳಿದ ಹಿಂದೂಗಳಾಗೇ  ಹೋಗಬೇಕಷ್ಟೆ. ಒಟ್ಟಿನಲ್ಲಿ ಭಗವಂತನ ಸಮೀಪಕ್ಕೆ  ಹೋಗೋದು ಕಷ್ಟ.ಆದರೆ ಜನ್ಮ ಪಡೆದಾಗ ಭಗವಂತನ ಹತ್ತಿರವೇ ಮಕ್ಕಳಿರುವರು. ಪೋಷಕರು ಅವರನ್ನು ಹೊರಗಿನ ಶಿಕ್ಷಣದ ಮೂಲಕ ದೂರಮಾಡಿ ಅಜ್ಞಾನದೆಡೆಗೆ ನಡೆಸಿ ಹಣದ ಹಿಂದೆ ಬೀಳುವ ಅಜ್ಞಾನಿಗಳಾಗಿಸಿದರೆ ಇದರಲ್ಲಿ ಸರ್ಕಾರದ ತಪ್ಪು ಎಲ್ಲಿದೆ? ಜ್ಞಾನ ಬೆಳೆಸಿಕೊಳ್ಳಲು ಭೌತಿಕ ಸರ್ಕಾರವೇ  ಅಡ್ಡಲಾಗಿದ್ದರೆ ಅಜ್ಞಾನಕ್ಕೆ ತಕ್ಕಂತೆ  ಜನಸಂಖ್ಯೆ ಬೆಳೆಯುತ್ತದೆ. ಇದೊಂದು ಸಾಧನೆಯಾಗಿದ್ದರೆ  ನಮಗಿಂತ  ಮೋಸಹೋದವರು ಯಾರೂ ಇಲ್ಲವೆನ್ನಬಹುದಷ್ಟೆ.
ಎಷ್ಟೋ ಮಹಾತ್ಮರು  ದೇವಾನುದೇವತೆಗಳು  ಈ ಭೂಮಿಗೆ ಬಂದು  ಸತ್ಯ ತಿಳಿಸಿ ತತ್ವ ತಿಳಿಸಿ ಧರ್ಮ ತಿಳಿಸಿ‌ನಡೆದು ಹೋಗಿದ್ದರೂ ಈಗಲೂ  ಆ ಸತ್ಯಧರ್ಮದ ದಾರಿ ಬಿಟ್ಟು ಹೊರಗಿನ ಅಸತ್ಯ ಅಧರ್ಮ ಭ್ರಷ್ಟಾಚಾರದ ಸುಳಿಯಲ್ಲಿ  ನಿಂತರೆ ಹೊರಗೆ ಬರೋದು ಕಷ್ಟ. ಸಮಸ್ಯೆ ಹೊರಗಿನಿಂದ ಒಳಗೆಳೆದುಕೊಂಡಿರುವಾಗ ಒಳಗಿದ್ದೇ ಅದನ್ನು ಬಿಟ್ಟು ನಡೆಯಬೇಕು. ಇನ್ನಷ್ಟು ಒಳಗೆ ಬೆಳೆಸಿಕೊಂಡರೆ ಅದೇ ದೇಹದ ಜೊತೆಗೆ ದೇಶವನ್ನಾವರಿಸಿ  ಜೀವ ಹೋಗುವುದು.
ಮಾನವ ತನಗೆ ತಾನೇ ಮೋಸಹೋಗುವುದರಲ್ಲಿ ನಿಸ್ಸೀಮ
ಎಂದಿದ್ದಾರೆ ಅನುಭವ ಪಡೆದ ಮಹಾತ್ಮರು.ಬದಲಾವಣೆ ಜಗದ ನಿಯಮ. ನಿಯಮವನ್ನು ಮೀರಿ ನಡೆಯಲಾಗದು. ಪ್ರಗತಿ ವೇಗ ವಾಗಿ  ಆದಷ್ಟೂ ಅಧೋಗತಿಯೂ  ವೇಗ ವಾಗಿರುತ್ತದೆ.

Thursday, May 4, 2023

ಪ್ರಶ್ನೆಗೆ ಒಂದೇ ಉತ್ತರವೆ?

ಮಾನವನ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲವಾದರೂ ಪ್ರಶ್ನೆ ಮಾಡೋದನ್ನು ಬಿಟ್ಟಿಲ್ಲ ಬಿಡೋದೂ ಇಲ್ಲ ಕಾರಣ ಮಾನವನ ಸಹಜ ಗುಣವೇ ಪ್ರಶ್ನೆ ಮಾಡಿ ತಿಳಿಯೋದು. ಪುರಾಣ ಇತಿಹಾಸ ವೇದಕಾಲದಿಂದಲೂ ಈ ಪ್ರಶ್ನೋತ್ತರ  ಸರಮಾಲೆ ಹೆಣೆದುಕೊಂಡು ಬಂದಿದೆ. ಪ್ರಶ್ನೆಗೆ ಮಹಾತ್ಮರು ಕೊಟ್ಟ ಉತ್ತರ ಮಾನವನಿಗೆ ಅರ್ಥ ವಾಗಿಲ್ಲದಿರೋದೆ  ದೊಡ್ಡ ಸಮಸ್ಯೆಗಳಿಗೆ ಕಾರಣವಾಗಿದೆ.
ಪ್ರಶ್ನೆ ಮಾನವರಿಗಷ್ಟೆ  ಇರೋದು. ಸಮಸ್ಯೆಯೂ ಮನುಕುಲವೇ ಅನುಭವಿಸೋದು.ಹಿಂದೆ ಉತ್ತರ ದೇವರು ಕೊಡೋವಾಗ  ಮಹಾತ್ಮರಾಗಿದ್ದರೆ ಅರ್ಥ ವಾಗುತ್ತಿತ್ತು ಕಷ್ಟ ಸಹಿಸಿಕೊಂಡು  ದೈವತ್ವದೆಡೆಗೆ ಹೋಗುವ ಆತ್ಮಜ್ಞಾನವಿತ್ತು.ಇಲ್ಲಿ ಅಧ್ಯಾತ್ಮದ ಪ್ರಶ್ನೆಗೆ ಉತ್ತರ ಮಹಾತ್ಮರು ನೀಡಿದ್ದಾರೆ ಆದರೆ, ಅದರ ಅನುಭವವಾಗದೆ ಒಪ್ಪದವರ ಸಂಖ್ಯೆ ಮಿತಿಮೀರಿದರೆ ದೇವರಾದರೂ‌ಏನು ಉತ್ತರ ಕೊಡಬಹುದು? ಇಂತಹ  ಪ್ರಶ್ನೆ ಸಾಮಾನ್ಯರನ್ನು ಕೇಳಿದರೆ  ಇನ್ನಷ್ಟು ಗೊಂದಲ ದ್ವೇಷ ಬೆಳೆಯೋದು ಸತ್ಯ. ಒಟ್ಟಿನಲ್ಲಿ ಹೇಳುವುದಾದರೆ ಅದ್ವೈತ ದಲ್ಲಿ  ದ್ವೈತ ದ ಪ್ರಶ್ನೆಯಿದೆ.ಕಾರಣ ಅಲ್ಲಿ ನಾನೆಂಬ ಅಹಂಬಾವ ಇದೆ. ಇದು ಹೋಗದೆ ಉತ್ತರ ಸಿಗದು. ಸಿಕ್ಕಿದವರು ಹೇಳಿದರೂ ಅರ್ಥ ವಾಗದು. ಅಧ್ಯಾತ್ಮದ ಪ್ರಶ್ನೆಗೆ ಉತ್ತರ  ಅಧ್ಯಾತ್ಮದ ಲ್ಲಿಯೇ ಸಿಗೋದು. ಭೌತಿಕದ ಪ್ರಶ್ನೆಗೆ ಉತ್ತರ ಭೌತಿಕದಲ್ಲಿ ಸಿಗುತ್ತದೆ.
ಅದ್ವೈತ ದೊಳಗಿರುವ ದ್ವೈತ ನೋಡುತ್ತಿದ್ದರೆ ಅಧ್ವೈತ ಕಾಣೋದಿಲ್ಲ. ಅದ್ವೈತ ಎಂದರೆ ಒಂದು ಗೂಡಿಸಿ,ಸೇರಿಸಿ,ಕೂಡಿಸುವುದಾದರೆ  ಈ ಕೆಲಸ ಮಾಡಲು ಭೌತವಿಜ್ಞಾನಕ್ಕಿಂತ ಅಧ್ಯಾತ್ಮ ವಿಜ್ಞಾನ ಅಗತ್ಯವಿದೆ. ಕೇವಲ ಪ್ರಶ್ನೆ ಯಾರೋ ಮಾಡಿದ್ದಾರೆ ನಾನೂ ಮಾಡುವೆ ಎನ್ನದೆ
ನನ್ನೊಳಗೇ  ಸದಾ ಕಾಡುವ ಪ್ರಶ್ನೆಗೆ ಉತ್ತರ ತಿಳಿಯುವ  ಜಿಜ್ಞಾಸೆ ಎಷ್ಟಿದೆ ಎನ್ನುವುದು  ಮುಖ್ಯ. ಎಲ್ಲರಿಗೂ ಒಂದೇ ಪ್ರಶ್ನೆ ನಾನ್ಯಾರು? ಯಾಕೆ ಬಂದೆ? ಎಲ್ಲಿಗೆ ಹೋಗುವೆ? ಎಲ್ಲಿಂದ ಬಂದೆ?....ಇವು ಸಾಮಾನ್ಯವಾಗಿ ಹಿಂದಿನಿಂದಲೂ ಬಂದಿರುವ‌ ಪ್ರಚಾರವಾಗಿರುವ ಪ್ರಶ್ನೆಗಳೆ ಆದರೂ ಇದಕ್ಕೆ ಉತ್ತರ ಕಂಡುಕೊಂಡವರು ವಿರಳ. ಅದನ್ನು ತಿಳಿಸಲು ಪ್ರಯತ್ನಪಟ್ಟವರಂತೂ ಅತಿವಿರಳ. ಕೇಳಿಸಿಕೊಂಡು ಉತ್ತರ ತನ್ನೊಳಗೆ  ಕಂಡುಕೊಂಡವರು  ಇಲ್ಲವೇ ಇಲ್ಲ.ಕಾರಣ ಪ್ರಶ್ನೆ ಒಂದೇ ಆದರೂ ಅದರ ಉತ್ತರ ಹಲವು.  
ಶ್ರೀ ಶಂಕರಭಗವತ್ದಾದರಂತಹ ಮಹಾ ಸಂನ್ಯಾಸಿ, ವಿಶ್ವಗುರು
ಸರ್ವಜ್ಞ ರನ್ನೇ  ಪ್ರಶ್ನೆ ಮಾಡುವಷ್ಟು  ನಮ್ಮಲ್ಲಿ ಬುದ್ದಿವಂತಿಕೆ ಇದೆ ಆದರೆ ಜ್ಞಾನದ ಕೊರತೆ ಬಹಳಷ್ಟಿದೆ. "ಅಹಂ ಬ್ರಹ್ಮಾಸ್ಮಿ"
ನಾನೇ ಬ್ರಹ್ಮ ಎನ್ನುವುದೇ ದೊಡ್ಡ ವಾದ ವಿವಾದವಾಗಿ ಈಗ ಬ್ರಹ್ಮಾಂಡವೇ ನಾನು ಎನ್ನುವ ಹಂತಕ್ಕೆ ಮನಸ್ಸು ಹೊರನಡೆದಿರುವಾಗ ಆಂತರಿಕವಾಗಿರುವ ಒಂದೇ ಸತ್ಯದ ಕಡೆಗೆ  ಹೋಗುವುದು ಕಷ್ಟ. ನಾವೇ ಸೃಷ್ಟಿ ಮಾಡಿಕೊಂಡ  ಮಂತ್ರ ತಂತ್ರ ಯಂತ್ರವು ನನ್ನನ್ನೇ ಆಳುತ್ತಿದೆ ಎಂದರೆ ನನಗೆ ಸ್ವತಂತ್ರ ಎಲ್ಲಿದೆ? ನಾನೆಂಬುದಿಲ್ಲವಾಗಿದ್ದರೆ ಒಳಗಿರುವ ನಾನು ಯಾರು? ನಾನೇ  ಪರಮಾತ್ಮನಾದರೆ  ಯಾಕಿಷ್ಟು ಅಧರ್ಮ, ಅನ್ಯಾಯ ಭ್ರಷ್ಟಾಚಾರ? ಹೀಗೇ ಪ್ರಶ್ನೆಗಳು
ನಮಗೆ ಗೊಂದಲ ಸೃಷ್ಟಿ ಮಾಡುವ  ಕಾರಣ ಒಂದೇ ಪ್ರಶ್ನೆಗೆ ಅವರವರೆ ಒಳಹೊಕ್ಕಿ ಉತ್ತರ ಕಂಡುಕೊಂಡರೆ ಅದ್ವೈತ ವಾಗುತ್ತದೆ ಎನ್ನುವ‌ಕಾರಣಕ್ಕಾಗಿ  ಉತ್ತರವಿದ್ದರೂ ಹೇಳದೆ ಕೇಳದೆ ಮುಂದೆ ನಡೆದರು. 
ಇದು ಎಷ್ಟು ಮಂದಿಗೆ ತಿಳಿಯಿತೋ ಇಲ್ಲವೋ ಗೊತ್ತಿಲ್ಲ ಕಾರಣ  ನನಗೆ ತಿಳಿದದ್ದು ಇಷ್ಟೆ. ಅದಕ್ಕೆ ವಾದ ವಿವಾದಕ್ಕೆ ನಿಲುಕದ ತತ್ವವೇ ಅದ್ವೈತ ವಾಗಿದೆ. ವಾದ ಮಾಡಲು ಹೋದರೆ  ಕಷ್ಟ ನಷ್ಟ ಎರಡೂ ಹೆಚ್ಚುವುದು.
ಮೌನವಾದಷ್ಟು  ಪ್ರಶ್ನೆ ಕಡಿಮೆ ಉತ್ತರ  ಒಳಗೆ ಸಿಗುವುದಂತೆ.
ಅದಕ್ಕೆ ನಮ್ಮ ಮಹಾತ್ಮರು ಮೌನ ಬಂಗಾರವೆಂದರು. ಈಗ ಮೌನವಾದವರನ್ನೂ ಬಿಡದೆ ಪ್ರಶ್ನೆ ಕೇಳಿ ಮಾತಿಗೆಳೆಯುತ್ತಾರೆ. ಮಾತಿಗಿಂತ ಕೃತಿಯೇ ಮೇಲೆಂದರು. ಕೃತಿಚೌರ್ಯ ಮಾಡಿ  ಮಾನವನಿಗೆ  ಪ್ರಶ್ನೆ ಮೇಲೆ ಪ್ರಶ್ನೆ ಬೆಳೆದು ಉತ್ತರಕ್ಕಾಗಿ ಹೊರಗೆ ಹುಡುಕುವುದರಲ್ಲಿಯೇ ಜೀವನ‌ ಮುಗಿದಿದೆ. ಆದರೆ ಸರಿಯಾದ ಉತ್ತರ ಒಳಗಿತ್ತು ಹೊರಗೆ  ಹುಡುಕಿ  ಸೋಲುತ್ತಿರುವುದು ಭೌತಿಕವಿಜ್ಞಾನದ ಪ್ರಭಾವ. ಅದರಿಂದ ಹಿಂದೆ ಬಂದು ಅಧ್ಯಾತ್ಮ ವಿಜ್ಞಾನದಲ್ಲಿ ಆತ್ಮಾವಲೋಕನ ಮಾಡಿಕೊಂಡರೆ  ಉತ್ತರ ಸಿಕ್ಕಿದಹಾಗೇ. ಇದಕ್ಕೆ ಯಾವ ರಾಜಕೀಯದ ಹಂಗಿಲ್ಲ.

ನರಸಿಂಹ ನಾರಸಿಂಹನ ಅವತಾರ

ದ್ವೇಷ  ಬೆಳೆಸುವುದು ಸುಲಭ ,ವೇಷ ಹಾಕಿಕೊಂಡು ತಿರುಗುವುದು ಸುಲಭ  ಆದರೆ, ಅದರಿಂದ  ಹುಟ್ಟಿಕೊಂಡು  ಬೆಳೆಯುವ  ಅಸುರರನ್ನು ದೇಶದಿಂದ, ದೇಹದಿಂದ ಹೊರಹಾಕುವುದು ಬಹಳ ಕಷ್ಟ. ಅದಕ್ಕೆ ಸ್ವಯಂ ಶಕ್ತಿ ಪರಮಾತ್ಮನೇ  ಬರಬೇಕು.ಇದು ಸರ್ವಕಾಲಿಕ ಸತ್ಯ. ಅಧ್ವೈತ ದ್ವೈತ ವಿಶಿಷ್ಟಾದ್ವೈತ  ಎಲ್ಲದರಲ್ಲೂ ದ್ವೈತವಿದೆ ಆದರೆ ಸಮಾನತೆಯಿಲ್ಲದೆ ದ್ವೇಷದಿಂದ ದೇಶ ಬೆಳೆದಿದೆ. 

ನರಸಿಂಹ ಜಯಂತಿಯ ಶುಭಾಶಯಗಳು
ನರಸಿಂಹನ ರೂಪ ತಳೆದು ನಾರಸಿಂಹನಾದ ಮಹಾವಿಷ್ಣುವು ನರರನ್ನು ರಕ್ಷಣೆ ಮಾಡಿದ ಕಥೆ ಎಲ್ಲರಿಗೂ ತಿಳಿದಿದೆ.ಹೀಗೇ ಅನೇಕ  ದೇವಾನುದೇವತೆಗಳ ಅವತಾರಗಳಿವೆ ಶ್ರೀ ವಿಷ್ಣುವಿನವತಾರದ ಬಗ್ಗೆ ವಿಷ್ಣುಪುರಾಣದಲ್ಲಿದ್ದರೆ ಬ್ರಹ್ಮನ ಅವತಾರ ಬ್ರಹ್ಮ ಪುರಾಣ,ಶಿವನ ಅವತಾರ  ಶಿವಪುರಾಣಗಳಾದರೆ ಶಕ್ತಿಯ ಅವತಾರ  ಎಲ್ಲಾ ಪುರಾಣಗಳಲ್ಲಿದೆ. ಆದರೆ  ತ್ರಿಮೂರ್ತಿ ಗಳಂತೆ ತ್ರಿದೇವಿಯರ ಶಕ್ತಿ  ಅಷ್ಟು  ಪ್ರಚಾರವಾಗದಿದ್ದರೂ ಶಕ್ತಿಯಿಲ್ಲದೆ ಭೂಮಿಯಿಲ್ಲ.ಭೂಮಿಯಿಲ್ಲದೆ ಮನುಕುಲವಿಲ್ಲ ಎಂದರೆ ತಪ್ಪಿಲ್ಲ. 
ದೇವಾನುದೇವತೆಗಳು ಈಗಲೂ  ಎಲ್ಲಾ ಕಡೆ ತಮ್ಮದೇ ಆದ ಕಾರ್ಯ ನಡೆಸಿದ್ದರೂ ಮಾನವರು ಮಾತ್ರ ಎಲ್ಲಾ ನಾನೇ ನಡೆಸಿರೋದೆಂದು  ಅಸುರರ ಜೊತೆಗೆ ಸೇರಿಕೊಂಡು ಇನ್ನಷ್ಟು  ಮತ್ತಷ್ಟು  ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೆ  ಶಕ್ತಿಯ ಅವತಾರ  ಹೆಚ್ಚಾಗುತ್ತದೆ. ಇದು ಕೊರೊನದಂತಹ ಮಹಾಮಾರಿಯೇ ತೋರಿಸಿದೆ. ಅಗೋಚರ  ಶಕ್ತಿಯನ್ನು  ಕಾಣದಿದ್ದರೆ ಇಲ್ಲವೇ ಇಲ್ಲ ಎನ್ನುವ ಅಸತ್ಯ,ಅಧರ್ಮ ಅನ್ಯಾಯದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಮಾನವನಿಗೇ ನಷ್ಟ. ಪ್ರತಿಯೊಬ್ಬರಲ್ಲಿಯೂ ಅಡಗಿರುವ ಆ ದೈವೀ ಶಕ್ತಿ  ಎಲ್ಲವನ್ನೂಸೂಕ್ಮರೂಪದಲ್ಲಿದ್ದು 
 ನೋಡುತ್ತಿರುವಾಗ  ಭೌತಿಕದಲ್ಲಿ ನಡೆಸುವ ನಾಟಕ ಕೇವಲ ಕ್ಷಣಿಕವಷ್ಟೆ. ಆಂತರಿಕ  ಶಕ್ತಿಯ ಮುಂದೆ ಯಾವ ಭೌತವಿಜ್ಞಾನ ನಿಲ್ಲೋದಿಲ್ಲ. ನಿಂತರೂ  ಉತ್ತಮ ಕಾರ್ಯ ಆಗಿರಬೇಕಷ್ಟೆ.
ಪ್ರಹ್ಲಾದ ನಂತಹ ಮಹಾಭಕ್ತನು ಹಿರಣ್ಯಕಶ್ಯಪುವಿನಂತಹ  ಮಹಾವೀರ ಅಸುರನಿಗೆ ಮಗನಾಗಿ ಜನ್ಮಪಡೆಯುವುದಕ್ಕೂ
ಶಕ್ತಿಯ ಪ್ರೇರಣೆಯೇ ಕಾರಣ. ಶಿಶುವನ್ನು ಗರ್ಭದೊಳಗಿಂದಲೇ  ಸಂಸ್ಕರಿಸಿ ಜನ್ಮ ಪಡೆಯಲು ದೇವತೆಗಳೆ ಸಹಕಾರ ನೀಡಿದ್ದನ್ನು ಕಥೆ ಹೇಳುತ್ತದೆ. ಈಗ ಮಕ್ಕಳು ಹುಟ್ಟುವ ಮೊದಲೇ ಯಾವ‌ ದೇಶದ ಶಿಕ್ಷಣ ನೀಡಬೇಕು  ಏನಾಗಬೇಕೆಂದು ಪೋಷಕರು ನಿರ್ಧಾರ ಮಾಡಿದಂತೆ ಅಂದು ದೇವತೆಗಳು ನಿರ್ಧಾರ ಮಾಡುತ್ತಿದ್ದರು. ಭಗವಂತನ ಅವತಾರಗಳಲ್ಲಿ ಯಾವುದು ಶ್ರೇಷ್ಠ ಕನಿಷ್ಟ ಎನ್ನುವಂತಿಲ್ಲ.  ಯಾವ ರೂಪದಲ್ಲಾದರೂ  ಬಂದು  ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಬಹುದು. ಇದನ್ನು ಮಾನವ ಅರ್ಥ ಮಾಡಿಕೊಂಡರೆ  ನಮ್ಮ ಸುತ್ತಮುತ್ತಲಿನ  ಜನರನ್ನು ಜೀವಿಗಳನ್ನು ಪ್ರಾಣಿ ಪಕ್ಷಿಗಳನ್ನು  ದುರ್ಭಳಕೆ ಮಾಡಿಕೊಳ್ಳದೆ ಸ್ವತಂತ್ರ ಜೀವನ‌
ನಡೆಸುತ್ತಾ ಯೋಗಿಯಾಗಬಹುದು. ಆದರೆ ಇದಕ್ಕೆ ಮುಖ್ಯವಾಗಿರುವ ಆತ್ಮಜ್ಞಾನದ ಅಗತ್ಯವಿದೆ.ವಿಜ್ಞಾನ ಜಗತ್ತು
ಎಲ್ಲಾ ತನ್ನ ಹತೋಟಿಗೆ ತರಲು ಪ್ರಯತ್ನಪಟ್ಟು ತನ್ನ ಹತೋಟಿಯಲ್ಲಿ ತಾನೇ ಇಲ್ಲದಂತಾಗಿ ಸ್ವೇಚ್ಚಾಚಾರದೆಡೆಗೆ  ನಡೆದಿದೆ. ಹಾಗಾದರೆ ಇದನ್ನು ತಡೆಯಲು  ದೇವತೆಗಳಿಗೆ ಸಾಧ್ಯವೆ? ದೇವತೆಗಳಿರೋದೆಲ್ಲಿ?
ಮಾನವರೂಪತಳೆದಿರುವ ಮಹಾತ್ಮರಲ್ಲಿ ದೇವತೆಗಳಿರುತ್ತಾರೆ.ಮಹಾತ್ಮರೆಂದರೆ ಯಾರು? ಆತ್ಮಾನುಸಾರ,ಸತ್ಯ ಧರ್ಮದ ಹಾದಿಯಲ್ಲಿ ನಡೆದವರು ಮಹಾತ್ಮರಾಗಿದ್ದರು. ದೇವಾನುದೇವತೆಗಳು  ಭೂಮಿಯಲ್ಲಿ ಪೂಜಿಸಲ್ಪಡುತ್ತಿದ್ದರೂ ಯಾಕಿಷ್ಟು ಅಸುರ ಶಕ್ತಿ ಬೆಳೆದಿದೆ?
ಕಾರಣವಿಷ್ಟೆ ದೇವರನ್ನು ಅಸುರರು  ತಮ್ಮ ಸ್ವಾರ್ಥ ಸುಖಕ್ಕೆ ಬಳಸಿಕೊಂಡು  ಭೌತಿಕದಲ್ಲಿ ಹೆಚ್ಚು ಅಧಿಕಾರ, ಹಣ,ಸ್ಥಾನಮಾನ ಪಡೆಯುತ್ತಾ ಮಾನವರನ್ನು ತಮ್ಮ ವಶಕ್ಕೆ ಪಡೆದು  ದೇವರಿಲ್ಲ ನಾನೇ ಎಲ್ಲಾ ಎನ್ನುವ ಹಂತಕ್ಕೆ ಬಂದಿದ್ದಾರೆಂದರೆ ಇದಕ್ಕೆ ಸಹಕಾರ ಕೊಟ್ಟವರೆ ಮಾನವರು.
ಅವರಿಂದ ಸಾಧ್ಯವಾದಷ್ಟು ದೂರವಿದ್ದು ದೈವಗುಣವನ್ನು ಬೆಳೆಸಿಕೊಂಡರೆ  ಆ ಭಗವಂತನು ನರಸಿಂಹನಾಗಿ ನರನ ರೂಪದಲ್ಲಿ  ಅಸುರರನ್ನು ಸಂಹಾರ ಮಾಡಬಹುದಷ್ಟೆ.
ಕಾಣದ ದೇವರಿಗೆ ಕಟ್ಟುವ ಗುಡಿ ಗೋಪುರ ದೇವಾಲಯಗಳು ಅಸುರರಿಂದ ನಾಶವಾಗಬಹುದು.ಆದರೆ
ಮಾನವನೊಳಗಿರುವ ಆತ್ಮಚೈತನ್ಯ ಹೆಚ್ಚಿಸುವ  ವಿದ್ಯೆಯನ್ನು ಯಾರು ಮಕ್ಕಳು ಮಹಿಳೆಯರಿಗೆ  ಕೊಟ್ಟು  ಆಂತರಿಕ ವಾಗಿ ಸಬಲರಾಗಿಸಿ  ಜ್ಞಾನದೆಡೆಗೆ ನಡೆಸುವರೋ  ಅವರು ಗುರು.
ಇಂತಹ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಕಾಣೋದೂ ಕಷ್ಟ.ಕಷ್ಟವಾಗಿದ್ದನ್ನು  ಅಸುರರು  ಇಷ್ಟಪಡದೆ  ದೂರವಿರುವರೆಂದರೆ   ಮಾನವರಾದವರು ದೇವರ ರಕ್ಷಣೆಗೆ ಆತ್ಮಾನುಸಾರ ನಡೆದು ಆತ್ಮಜ್ಞಾನ ಪಡೆದರೆ ಬಂದಿರುವ
 ಸಂಕಷ್ಟದಿಂದ ಮುಕ್ತಿ. ಇದು ಬಿಟ್ಟು ಇನ್ನಷ್ಟು ದುಷ್ಟರನ್ನು ದೂರಿಕೊಂಡು ಜನರ ದಾರಿತಪ್ಪಿಸಿಕೊಂಡು ಮನೆಯಿಂದ ಹೊರಗೆ ಕರೆತಂದರೆ ಮನಯಲ್ಲಿದ್ದ ಅಲ್ಪ ಸ್ವಲ್ಪ ನೆಮ್ಮದಿಯೂ ಬೀದಿಪಾಲು. ಹೊರಗೆ ಬರೋದನ್ನೇ ಕಾದು ಕುಳಿತವರಿಗೆ ಇನ್ನಷ್ಟು ಬಲ ಬಂದು ಮನೆ ಸೇರದಂತೆ ಮಾಡುವರು. ಇದರಲ್ಲಿನ ಸತ್ಯ  ಗಮನಿಸಲು  ನಾವು ಶಾಂತ ಮನಸ್ಸುಳ್ಳವರಾಗಿರಬೇಕು. ಎಲ್ಲೇ ಇರಲಿ ಹೇಗೆ ಇರಲಿ ಮಾನವರಾಗಿರಬೇಕು. ಮನಸ್ಸು ಅಂತರ್ಮುಖಿಯಾದರೆ  ಮಾತ್ರ ದೇವರನ್ನು ಕಾಣಬಹುದು.ನಿರಾಕಾರದ ದೇವರು ಕಾಣೋದು ಹೇಗೆ ? ಆಕಾರ ಕೊಟ್ಟವರು ನಾವೇ ಆದಾಗ ಯಾವ ಆಕಾರದಲ್ಲಾದರೂ ನೋಡಬಹುದಲ್ಲ. 
ಹೇಗೆ ಹೊರಗಿನ  ವ್ಯಕ್ತಿಗಳು ದೇವರಂತೆ ಕಾಣುವರೋ ಹಾಗೇ ಒಳಗಿನ ವ್ಯಕ್ತಿಗಳಲ್ಲಿ ಯಾಕೆ ಕಾಣಬಾರದು? ಎಲ್ಲರಲ್ಲಿಯೂ ಇರೋದು ಒಂದೇ ಶಕ್ತಿಯಾದರೂ ಯಾಕೆ ಕಾಣುತ್ತಿಲ್ಲ? ಇದಕ್ಕೆ ಕಾರಣ ನಮ್ಮ ದೃಷ್ಟಿ ಸರಿಯಿಲ್ಲ.ನಮ್ಮ ಸ್ವಾರ್ಥ ಸುಖಕ್ಕಾಗಿ  ಯಾರನ್ನು ಬಳಸಿದರೂ  ವ್ಯರ್ಥ. ಇದು ದೇವರಾಗಬಹುದು ಅಸುರರಾಗಬಹುದು ಮಾನವರಾಗಬಹುದು.ಅಂದರೆ ಇಲ್ಲಿ ದೇಹಕ್ಕೆ ಕೊಡುವ ಬೆಲೆ ಆತ್ಮಕ್ಕೆ ಕೊಡದಿದ್ದರೆ ನಮ್ಮೊಳಗೇ ಅಡಗಿರುವ ಈ ಮೂರೂ ಗುಣಗಳಲ್ಲಿ ಯಾವುದಾದರೂ ಒಂದು ಬೆಳೆದು ದೇಹ ಹೋಗುತ್ತದೆ. ಅಧ್ಯಾತ್ಮ ಎಂದರೆ ತನ್ನೊಳಗೆ ಇರುವ ಆತ್ಮಶಕ್ತಿಯಿಂದ ತನ್ನ ತಾನರಿತು ತನ್ನ ತಾನು ಆಳಿಕೊಳ್ಳಲು ಬೇಕಾದ ಜ್ಞಾನಪಡೆಯೋದು.ಇತರನ್ನು ಆಳಲು ಹೋಗಿ ತಾನೇ ಆಳಾಗಿರುವ ಸತ್ಯ ತಿಳಿಯದಿದ್ದರೆ ಮುಂದೆ ಅಳುವ ಸರದಿ ಬರುತ್ತದೆ. ಒಟ್ಟಿನಲ್ಲಿ  ದೇವರು ನಿರಾಕಾರರೂಪದಲ್ಲಿ ಆತ್ಮನಾಗಿ ಎಲ್ಲರೊಳಗಿದ್ದು  ನಡೆಸುವಾಗ  ನಾನೆಂಬುದಿಲ್ಲ.
ನಾನೊಬ್ಬನೇ ಇಲ್ಲ.ನನ್ನಿಂದಲೇ ಎಲ್ಲಾ ಬದುಕಿಲ್ಲ.ನಾನೇ ರಾಜನಲ್ಲ .ನಾನೇ  ಎಲ್ಲದ್ದಕ್ಕೂ ಕಾರಣನಾಗಿರುವಾಗ  ಇದನ್ನು ತಿಳಿದು ನಡೆಯುವುದು ಅಗತ್ಯವಿದೆಯಲ್ಲ. ಯಾರೋ ಹೊರಗಿನವರು ಬಂದು ನನ್ನ ಜೀವ ಉಳಿಸುವರೆಂದರೆ ಜೀವ ಶಾಶ್ವತವಲ್ಲ. ಇಷ್ಟೆಲ್ಲಾ  ತಿಳಿದರೂ ಎಲ್ಲರೂ  ಒಗ್ಗಟ್ಟನ್ನು ಬೆಳೆಸಿಕೊಳ್ಳದೆ  ಹೊರಗೆ ನಡೆದಷ್ಟೂ  ಮನೆ ಖಾಲಿ. ಆ ಖಾಲಿಮನೆಯಲ್ಲಿ  ಸೇರಿಕೊಂಡು ಆಳುವುದು ಅಸುರರಷ್ಟೆ ದೇವರಲ್ಲ. ಇದು ಧಾರ್ಮಿಕ ವರ್ಗ  ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಭಾರತದ ಭವಿಷ್ಯಕ್ಕೆ ಅಗತ್ಯವಿದೆ. ಧರ್ಮ ಒಳಗಿದೆಯೋ ಹೊರಗಿದೆಯೋ?
ಹೊರದೇಶಕ್ಕೆ ಹೋಗಿ ಪ್ರಚಾರ ಮಾಡಿದರೆ ಪ್ರಗತಿ ಯಾದರೆ ದೇಶದೊಳಗೆ ಅಂತಹ ಶಿಕ್ಷಣ ನೀಡಿದ್ದರೆ ಎಷ್ಟು ಪ್ರಗತಿ ಆಗುತ್ತಿತ್ತು. ಪುರಾಣ,ಇತಿಹಾಸದ ಪ್ರತಿಯೊಂದರಲ್ಲಿಯೂ ಧರ್ಮದ ಜೊತೆಗೆ ಅಧರ್ಮ ವಿದೆ.ಅಧರ್ಮದ ಪ್ರಚಾರ ಮಾಡುತ್ತಾ  ಮಾನವನೊಳಗೆ ಅಧರ್ಮ ವೇ‌
ಬೆಳೆದಿದೆ.ರಾಜಕೀಯದಲ್ಲಿ ಧರ್ಮ ವಿರಲಿಲ್ಲ.ಆದರೂ ರಾಜಕೀಯ ಮನೆಮಾತಾಗಿದೆ.ಏನು ಹರಡುವೆವೋ ಅದೇ ಬೆಳೆಯೋದು .ಇದನ್ನು ಯಾವ ದೇವರೂ ಬಂದು ತಡೆಯಲಾಗದು. ಮನಸ್ಸನ್ನು ಹರಿಯಲು ಬಿಟ್ಟರೆ ತಡೆಯಲು ಕಷ್ಟ.ಹಾಗಾಗಿಯೇ ಹಿಂದೆ  ಮನೆಯೆ ಗುಡಿ ಮನಸ್ಸು ಆಲಯ ಎಂದರು. ದೇವನೊಬ್ಬನೆ ಎಂದಂತೆ  ಧರ್ಮವೂ ಒಂದೇ.
ಆದರಿದು ಮೂರಾಗಿದೆ ದೇವರ ಧರ್ಮ, ಮಾನವರ ಧರ್ಮ, ಅಸುರರ ಧರ್ಮ.
ಮಧ್ಯವರ್ತಿ ಮಾನವ ಧರ್ಮವನ್ನು ದುರ್ಭಳಕೆ ಮಾಡಿಕೊಂಡು ತನಗೆ ತಾನೇ ಮೋಸಹೋದರೆ‌ ಕಷ್ಟ ನಷ್ಟ ಅವನ ಜೀವವೇ ಅನುಭವಿಸಬೇಕೆಂದು ಕರ್ಮ ಸಿದ್ದಾಂತ ತಿಳಿಸಿದೆ. 
ನರ ನಾರಾಯಣನ ಸಣ್ಣ ಅಂಶವಷ್ಟೆ. ನಾರಾಯಣನಾಗಲು ಅಸಾಧ್ಯ. ಈ ಸತ್ಯ ತಿಳಿದವರು ದಾಸರಾದರು,ಶರಣರಾದರು ಸಾದು,ಸಂತ,ಸಂನ್ಯಾಸಿ,ಮಹಾತ್ಮರಾದರು.  ಈಗವರು ಎಲ್ಲಿರುವರು?

Wednesday, May 3, 2023

ಪರತಂತ್ರದಲ್ಲಿ ಸ್ವತಂತ್ರ ಜ್ಞಾನವಿದೆಯೆ?

ಈವರೆಗೆ  ಎಷ್ಟೋ  ಪಕ್ಷಗಳು ದೇಶವನ್ನಾಳಲು ಬಳಸಿದ ತಂತ್ರದಿಂದ ದೇಶದ  ಸಾಲ ತೀರಿತೆ? ದೇಶದ ಧರ್ಮ ಉಳಿಯಿತೆ? ದೇಶದಲ್ಲಿ ಶಾಂತಿ ನೆಲೆಸಿತೆ?  ಬಡವರ ಸಂಖ್ಯೆ  ಇಳಿಯಿತೆ? ಭ್ರಷ್ಟಾಚಾರ  ತೊಲಗಿತೆ? ಇಲ್ಲ ಎಂದರೆ ಇದಕ್ಕೆ ಕಾರಣ ಪಕ್ಷವಲ್ಲ ಶಿಕ್ಷಣ .ಈ ಸತ್ಯ ಹಿಂದಿನ ಎಲ್ಲಾ ಮಹಾತ್ಮರು ಸಾಹಿತಿಗಳು ದೇಶಭಕ್ತರು  ತಿಳಿಸಿದ್ದಾರೆ.ಯಾವ ದೇಶದ ಮೂಲ ಶಿಕ್ಷಣ ಗಟ್ಟಿಯಾಗಿರುವುದೋ ಅದನ್ನು ಯಾವ ಹೊರಗಿನವರೂ ಅಲ್ಲಾಡಿಸಲಾಗದು.ಶಿಕ್ಷಣವೇ ನಮ್ಮದಲ್ಲದ ಮೇಲೆ ನಮ್ಮ ಜ್ಞಾನ  ನಮ್ಮದಾಗಿರುವುದೆ?
ಹೊರಗಿನ ಶಿಕ್ಷಣ  ಮನಸ್ಸನ್ನು ಹೊರಗೇ ಕಳಿಸುತ್ತದೆ. ಆಂತರಿಕ ಶಕ್ತಿಯನ್ನು ಕಳೆದುಕೊಂಡವರನ್ನು ಆಳುವುದು ಸುಲಭ. ಹೀಗಾಗಿ ಭಾರತವಾಳಲು  ಬಂದವರು ಶಿಕ್ಷಣವನ್ನು ಸರಿಪಡಿಸಲಿಲ್ಲ ಬದಲಾಗಿ  ತಮ್ಮದೇ ಶಿಕ್ಷಣ ನೀಡುತ್ತಾ ಗುಲಾಮರಾಗಿಸಿಕೊಂಡರು.ಇದು ಬ್ರಿಟಿಷ್ ಸರ್ಕಾರ  ಬೆಳೆಯಲು ಕಾರಣವಾದಂತೆ ಈಗಲೂ  ಸರ್ಕಾರ ನಡೆಸುವವರಿಗೆ   ನಮ್ಮದೇ ಶಿಕ್ಷಣ ನೀಡಲು ನಮ್ಮವರೆ ವಿರೋಧ ವ್ಯಕ್ತಪಡಿಸಲು ಕಾರಣ  ನಮ್ಮಲ್ಲಿ  ಆಂತರಿಕ ಜ್ಞಾನವಿಲ್ಲ ಭೌತಿಕಜ್ಞಾನ ಅತಿಯಾಗಿದೆ. ಹಿಂದಿನವರ ಶಿಕ್ಷಣ ಬೇಡ ಅವರ ಭೂಮಿ,ಆಸ್ತಿ ಅಂತಸ್ತು ಬೇಕೆಂದರೆ ಹೇಗಿದೆ ನಮ್ಮ ಅಜ್ಞಾನ. ಸರ್ಕಾರ ದಿಂದ ದೇಶ ಬದಲಾಗದು. ಶಿಕ್ಷಣದಿಂದ ಬದಲಾಗಬಹುದು ಇದಕ್ಕೆ ಪೋಷಕರ ಸಹಕಾರ ಬೇಕಷ್ಟೆ. 
ಒಂದನ್ನು ಗಳಿಸಲು ಒಂದನ್ನು ಕಳೆಯಬೇಕು
ಹಣಗಳಿಸಲು ಜ್ಞಾನ ಕಳೆದುಕೊಳ್ಳಬೇಕು.ಜ್ಞಾನ ಸಂಪಾದನೆಗೆ ಹಣವನ್ನು ಸತ್ಕರ್ಮದಿಂದ ಸಂಪಾದಿಸಿ ದಾನ ಧರ್ಮಕ್ಕೆ ಬಳಸಿದರೆ  ಪಾಪ ಕಳೆದು ಪುಣ್ಯ ಗಳಿಸಬಹುದು.ಇವುಗಳು ಯೋಗಮಾರ್ಗದಲ್ಲಿರಬೇಕೆನ್ನುವುದೆ ಹಿಂದೂ  ಧರ್ಮದ ತತ್ವ.
ಭೋಗದೆಡೆಗೆ ವೇಗವಾಗಿ ನಡೆದಂತೆಲ್ಲಾ ಹೊರಗಿನ ಹಣ ಗಳಿಸಿ ವ್ಯರ್ಥ ವಾಗಿ  ದುರ್ಭಳಕೆ, ದುಂದುವೆಚ್ಚ ಮಾಡಿದರೆ ಸಾಲವಾಗುತ್ತದೆ.ಸಾಲ ತೀರಿಸಲು  ಇನ್ನಷ್ಟು ಕಷ್ಟಪಡಬೇಕು ಇಲ್ಲವಾದರೆ ರಾಜಕೀಯ ನಡೆಸಿ,ನಾಟಕವಾಡಿಕೊಂಡು ಭ್ರಷ್ಟರಿಗೆ ಶರಣಾಗಬೇಕು.ದಾಸರಾಗಬೇಕು. 
ಹಿಂದಿನ ಮಹಾತ್ಮರುಗಳು  ಪರಮಸತ್ಯಕ್ಕೆ ಧರ್ಮಕ್ಕೆ ಶರಣಾಗಿ ದಾಸರಾಗಿದ್ದರು ಇದರಿಂದ ಧರ್ಮ ರಕ್ಷಣೆಯಾಗಿತ್ತು. ಈಗ ಧರ್ಮ ವೇ ರಾಜಕೀಯಕ್ಕೆ ಶರಣಾದರೆ  ಅಧರ್ಮವಾಗುತ್ತದೆ. ವಿದೇಶದೊಳಗಿರುವ ದೇಶವನ್ನು ಬಿಡುಗಡೆ ಮಾಡಲು ಜೀವ ಬಿಟ್ಟ ದೇಶಭಕ್ತರು
ಸ್ವತಂತ್ರ ವಾದ ಜ್ಞಾನಿಗಳಾಗಿದ್ದರು. ದೇಶವನ್ನು ವಿದೇಶದ  ಹಾದಿಗೆ ನಡೆಸುವ  ಇಂದಿನ ಸ್ವಾತಂತ್ರ್ಯ ಸ್ವೇಚ್ಚಾಚಾರದೆಡೆಗೆ ನಡೆದಿದೆ. ಇದಕ್ಕೆ ಕಾರಣ  ಅಜ್ಞಾನ. ಪರಿಹಾರ   ಸತ್ಯಜ್ಞಾನ.
ಅಮಾಯಕ ಮುಗ್ದ ಮಕ್ಕಳನ್ನು  ಅಸಹಾಯಕ ಪ್ರಭುದ್ದ ಪ್ರಜೆಗಳಾಗಿಸಿರೋದು ಪ್ರಜಾಪ್ರಭುತ್ವದ  ದುರಂತ. ಈಗ ಎಚ್ಚೆತ್ತುಕೊಳ್ಳದಿದ್ದರೆ  ಮುಂದೆ ಎಚ್ಚರವಾಗೋದಿಲ್ಲ . 
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದಂತೆ ನಿಮ್ಮ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ. ಇವರ ರಕ್ಷಣೆ ಸರ್ಕಾರದ ಕೆಲಸವಲ್ಲ.
ಹಿಂದಿನ ಪುರಾಣ ಇತಿಹಾಸದ ರಾಜಕೀಯವು ರಾಜಪ್ರಭುತ್ವದಲ್ಲಿತ್ತು ಒಬ್ಬ ರಾಜ ಧರ್ಮದೆಡೆಗೆ ನಡೆದರೆ  ಶಾಂತಿ ಸಮೃದ್ದಿ ಆದರೆ ಇಂದು ಪ್ರಜೆಗಳ  ಮಧ್ಯೆ ಧರ್ಮದ  ವಿಷಬೀಜಬಿತ್ತಿ ಧಾರ್ಮಿಕ ಶಿಕ್ಷಣ ನೀಡದೆ ಆಳುವ ರಾಜಕೀಯತೆ ಹೆಚ್ಚಾಗಿದೆ.

ದೇಶ ನಡೆದಿರೋದು ಪ್ರಜಾಶಕ್ತಿಯಿಂದ ಪ್ರಜಾಶಕ್ತಿ ದುರ್ಭಳಕೆ ಆಗಿರೋದು ತಂತ್ರಜ್ಞಾನದಿಂದ  ತಂತ್ರವೇ ಪರಕೀಯರವಶದಲ್ಲಿದ್ದು ತತ್ವವನರಿಯದಿದ್ದರೆ ಸ್ವತಂತ್ರ ಎಲ್ಲಿರುವುದು?

ಎಲ್ಲಿಯವರೆಗೆ ಹಿಂದೂ ಸಂಘಟನೆ,ಧರ್ಮ,ಪಂಗಡಗಳ ನಡುವಿನ ದ್ವೇಷ ಹೋಗದೋ ಅಲ್ಲಿಯವರೆಗೆ ನಮ್ಮ ದೇಶ ತತ್ವದೆಡೆಗೆ ನಡೆಯದು ಪರಕೀಯರ ಒಗ್ಗಟ್ಟು  ನಮ್ಮವರ ಬಿಕ್ಕಟ್ಟನ್ನು ದುರ್ಭಳಕೆ ಮಾಡಿಕೊಂಡಿದೆ.

ದ್ವೇಷದಿಂದ  ದೇಶ ಕಟ್ಟಲಾಗದು ದ್ವೇಷದಿಂದ ತತ್ವ ತಿಳಿಯದು, ದ್ವೇಷ ವೇ ಎಲ್ಲಾ ವಿನಾಶಕ್ಕೆ ಕಾರಣವಾದರೆ ಇಲ್ಲಿ ಯಾರನ್ನು ಯಾರು ದ್ವೇಷಿಸುತ್ತಿರುವುದು? ವಿದೇಶಿಗಳನ್ನು  ಪ್ರೀತಿಸಿ ಸ್ವದೇಶಿಗಳನ್ನು ದ್ವೇಷ ಮಾಡುತ್ತಾ  ಸ್ವದೇಶವನ್ನು ಆಳುವುದರಿಂದ  ಶಾಂತಿ ಸಿಗುವುದೆ? 

ಪ್ರತಿಷ್ಟಿತರಿಗೆ  ತೋರಿಸುವ ಗೌರವ, ಹಣ,ಸಮಯ,ಸಹಕಾರ ನಮ್ಮವರಿಗೆ  ನಮ್ಮನೆಯವರಿಗೆ, ಒಡಹುಟ್ಟಿದವರಿಗೇ  ಕೊಡದೆ  ಇದ್ದರೆ ಧರ್ಮ ವೆ? 
ಆತ್ಮಾವಲೋಕನ ಪ್ರಜೆಗಳೇ ಮಾಡಿಕೊಳ್ಳಲು ಆತ್ಮಜ್ಞಾನದ ಶಿಕ್ಷಣವಿರಬೇಕಿತ್ತು. ನಂತರವೇ ವಿಜ್ಞಾನದೆಡೆಗೆ  ನಡೆದಿದ್ದರು  ಮಹಾತ್ಮರುಗಳು.