ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, October 31, 2022

ಮಾತೃಭಾಷೆಯ ಅಗತ್ಯತೆ ಎಷ್ಟಿದೆ?

ಕನ್ನಡ ರಾಜ್ಯೋತ್ಸವ ಶುಭಾಶಯಗಳು.
ಕನ್ನಡವನ್ನು ಕಟ್ಟಿ ಬೆಳೆಸಿ ಉಳಿಸಲು ನಾವು ಮಾಡಬೇಕಾಗಿರುವುದೇನು?
ಕರ್ನಾಟಕದಲ್ಲಿ  ಇದ್ದವರು ಕನ್ನಡ ಕಲಿತರೆ ಕನ್ನಡಮ್ಮನಿಗೆ ಕೊಡುವ ಗೌರವ. ತಾಯಿಗೆ ನೀಡುವ ಗೌರವದಿಂದ ತಾಯಿ ಶಕ್ತಿ ಬೆಳೆಯುತ್ತದೆ. ಹಾಗೆಯೇ ಭಾರತಾಂಬೆಯ ಒಳಗಿನ ಧರ್ಮ ಜ್ಞಾನವನ್ನು   ಸರಿಯಾಗಿ ಅರ್ಥ ಮಾಡಿಕೊಂಡು ದೇಶದೊಳಗಿದ್ದರೆ ದೇಶ ಸುರಕ್ಷಿತ. ಅದ್ವೈತ ತತ್ವದ ಪ್ರಕಾರ ಇಲ್ಲಿ ದೇಶ ಒಂದೇ  ರಾಜ್ಯವೂ ಒಂದೇ. ದೇಶದೊಳಗಿರುವ ರಾಜ್ಯಗಳಿಗೆ ಅದರದೇ ಆದ ಮೂಲ ಭಾಷೆಯಿದೆ. ಯಾವಾಗ ಇದನ್ನು ಹೊರಗಿನವರು ಬಂದು ಅಳಿಸುವ ವ್ಯಾಪಾರಕ್ಕೆ ಇಳಿಯುವರೋ ಹಾಗೆ ಯಾವಾಗ ಮೂಲದವರೆ ಇದನ್ನು ಬಿಟ್ಟು ಹೊರನಡೆಯುವರೋ ಆಗ ಅಧರ್ಮ ಬೆಳೆಯುತ್ತದೆ. ಇದನ್ನು ನಮ್ಮ ನಮ್ಮ ಮೂಲದ ಧರ್ಮ ಕರ್ಮ, ಶಿಕ್ಷಣ,ಸ್ಥಳವನ್ನು ನಾವೇ ತಿಳಿದು ಅಲ್ಲಿದ್ದೇ
ಬೆಳೆಸಬಹುದೇ ಹೊರತು ಹೊರಗೆ ಹೋಗಿ ಒಳಗಿನ ಕಸವನ್ನು ,ತಪ್ಪನ್ನು, ದೋಷವನ್ನು ಹೇಳಿಕೊಂಡು ಹರಡಿದರೆ ಸಾಧ್ಯವಿಲ್ಲದ ಮಾತು. ಸತ್ಯ ಒಳಗಿದೆ ಅದನ್ನು ಹೊರಗಿನ ಸತ್ಯದಿಂದ ಮುಚ್ಚಿಟ್ಟು  ರಾಜಕೀಯ ನಡೆಸಿದರೆ ಅಧರ್ಮ. ಹಾಗೆಯೇ  ಅವರವರ ಧರ್ಮವನ್ನು ಅವರುಗಳೇ ಒಳಗೆ ಅಳವಡಿಸಿಕೊಂಡು ಸ್ವತಂತ್ರ ಜೀವನ ನಡೆಸುವಾಗ ಮೂಲದ ಭಾಷೆ ಮಾತೃಭಾಷೆ ಅಗತ್ಯವಾಗಿದೆ. ಯಾರದ್ದೋ ಭಾಷೆಯ ಮೂಲಕ ಎಷ್ಟೇ ವಿಚಾರ ತಿಳಿದರೂ ಸಂಪೂರ್ಣ ಅರ್ಥ ಆಗದೆ ಅನೇಕ ಭಾಷೆಗಳು ಜನ್ಮತಾಳುತ್ತವೆ.ಆದರೆ ಮೂಲ ಭಾಷೆ ಹಿಂದುಳಿಯುತ್ತದೆ. ಇದು ಸರ್ವ ಕಾಲಿಕ ಸತ್ಯ. ಸರ್ವರಿಗೂ ಅನ್ವಯಿಸುವ  ಸತ್ಯ. ಶಿಕ್ಷಣದಲ್ಲಿ ಸಾತ್ವಿಕತೆ ಇಲ್ಲದೆ ರಾಜಕೀಯತೆ ಬೆಳೆಸಿ ತಾಮಸ ಗುಣವನ್ನು ಹೆಚ್ಚಿಸಿ ಆಳಿದಷ್ಟೂ ಹಿಂದುಳಿಯುವುದು ನಾವೇ ಎನ್ನುವ ಸತ್ಯ ತಿಳಿದರೆ  ಇಂದಿನ ನಮ್ಮ ಹೊರಗಿನ ಆಚರಣೆಯಲ್ಲಿ ಬದಲಾವಣೆ ತರಬಹುದು. ಆಚರಣೆಯು ಆಂತರಿಕ ಶುದ್ದಿಯ ಕಡೆಗಿದ್ದರೆ  ಜ್ಞಾನ, ಭೌತಿಕದ ತೋರುಗಾಣಿಕೆ
ಯಾದರೆ ಕರ್ -ನಾಟಕ. ನಾಟಕದ ಜೀವನದೊಳಗೊಂದು  ನಮ್ಮದೇ ನಾಟಕ  ಸೃಷ್ಟಿ ಮಾಡಿಕೊಂಡಿದ್ದರೆ  ನೋಡುಗರಿಗೊಂದು ಮನರಂಜನೆ ಆದರೆ ಅದು ನಮ್ಮ ಆತ್ಮವಂಚನೆ ಆಗದಂತಿದ್ದರೆ ಉತ್ತಮ.
ಕರ್ನಾಟಕದಲ್ಲಿ ಕನ್ನಡದ ಹೆಸರಲ್ಲಿ, ಧರ್ಮ,ಸಂಸ್ಕೃತಿ, ಭಾಷೆ ಹೆಸರಲ್ಲಿ  ಸಾಕಷ್ಟು ಕಾರ್ಯಕ್ರಮ ಗಳು ಸಂಘ ಸಂಸ್ಥೆಗಳಿಂದ ವರ್ಷ ಪೂರ್ತಿ ನಡೆಯುತ್ತಿದೆ ಆದರೂ ಯಾಕೆ  ಧರ್ಮ,
ಸಂಸ್ಕೃತಿ,  ಭಾಷೆಯ ಜ್ಞಾನವಿಲ್ಲದೆ ಯುವಕರು ಹೊರ 
ನಡೆದಿದ್ದಾರೆ? ದಾರಿತಪ್ಪುತ್ತಿದ್ದಾರೆ? ಅಧರ್ಮ ಬೆಳೆದು ಭ್ರಷ್ಟಾಚಾರ ಹೆಚ್ಚಾಗಿದೆ? ಉತ್ತರ  ಕಾರ್ಯಕ್ರಮ,ಉತ್ಸವ  ನಡೆಸೋರು ತಿಳಿಸೋದು, 'ಸರ್ಕಾರ ಸರಿಯಿಲ್ಲ 'ಎಂದು. 
ಸರ್ಕಾರ ಎಂದರೇನು? ಸಹಕಾರವಲ್ಲವೆ? ಹಾಗಾದರೆ ಯಾರ ಸಹಕಾರ ಸರಿಯಿಲ್ಲ? ಮಕ್ಕಳ ಸಹಕಾರವಿಲ್ಲವಾದರೆ ಅವರಿಗೆ ನೀಡಿದ ಶಿಕ್ಷಣ ಸರಿಯಿಲ್ಲವೆಂದರ್ಥ. ಅವರಿಗೆ ನೀಡದ ಸಂಸ್ಕಾರವೇ ಕಾರಣ ಸಂಸ್ಕಾರ  ಕಲಿಸಲು ಪೋಷಕರಲ್ಲಿರಬೇಕು . ಪೋಷಕರಿಗೇ ಅಂತಹ ಶಿಕ್ಮೂಷಣ ಸಿಗಲಿಲ್ಲಲವೆಂದರೆ ಹೊರಗಿನ ಗುರುಗಳು ಅಂತಹ ಶಿಕ್ದಷಣ ನೀಡುವುದು ಧರ್ಮ ವಾಗಿತ್ತು. ದೇಶದ ತುಂಬಾ ದೇವಸ್ಥಾನವಿದೆ ದೈವತ್ವದ ಶಿಕ್ಷಣವಿಲ್ಲವಾದರೆ ಹೇಗೆ? ಧರ್ಮ ಕರ್ಮ ಭಾಷೆ,ಸಂಸ್ಕೃತಿ ಬಗ್ಗೆ ಮನೆಯೊಳಗೇ ಶಿಕ್ಷಣ ನೀಡದೆ ಹೊರಗಿನ ಪರಕೀಯರ ಶಿಕ್ಷಣ ನೀಡಿರುವಾಗ ಒಳಗೆ ಹಾಕಿದ ವಿಚಾರವೇ ದೇಹವನ್ನು ದೇಶವನ್ನು,ರಾಜ್ಯವನ್ನು ಆಳುತ್ತಿದೆ.
ಇಷ್ಟು ಸಾಮಾನ್ಯಜ್ಞಾನ ನಮಗಿದ್ದರೆ ನಮ್ಮ ಸಹಕಾರದ ಪ್ರತಿ ಫಲವೇ ಇಂದಿನ ಸ್ಥಿತಿಗೆ ಕಾರಣವಾದಾಗ ನಾವೇ ಕಾರಣ.
ನಮ್ಮ ಜೀವ ಒಳಗಿದೆ. ಜೀವ ರಕ್ಷಣೆ ಸರ್ಕಾರ ಮಾಡುವುದೆ?
ನಮ್ಮ ಜ್ಞಾನ ಒಳಗಿದೆ ಅದಕ್ಕೆ ಪೂರಕದ ಶಿಕ್ಷಣ ನೀಡುವುದು ನಮ್ಮ ಧರ್ಮ ಕರ್ಮ. ಇದಕ್ಕೆ ನಮ್ಮದೇ ವಿರೋಧವಿದ್ದರೆ ಸರ್ಕಾರ ಕಾರಣವೆ? ನಮ್ಮವರನ್ನೇ ನಾವು ಮನೆಯಿಂದ ಹೊರ ಕಳಿಸುತ್ತಾ ಹೊರಗಿನವರನ್ನು ಸ್ವಾಗತಿಸಿದರೆ ಹೊರಗಿನವರೆ ನಮ್ಮನ್ನು ಆಳುತ್ತಾರಲ್ಲವೆ? ಜನ್ಮಕ್ಕೆ ಕಾರಣ ಹಿಂದಿನ ಜನ್ಮದ ಋಣ ಹಾಗು ಕರ್ಮ. ಯಾವ ಕುಟುಂಬ
ದಲ್ಲಿ, ಸ್ಥಳದಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಜೀವ ಹುಟ್ಟಿದೆಯೋ ಅದರ ಬಗ್ಗೆ ಸರಿಯಾಗಿ ತಿಳಿದು ಅದರ ಋಣ ತೀರಿಸುವ ಜ್ಞಾನ ಪಡೆದರೆ ಅಲ್ಲಿಯೇ ಮುಕ್ತಿ ಪಡೆಯಬಹುದು. ಇದು ಹಿಂದಿನ ಕಾಲದಲ್ಲಿದ್ದ  ವ್ಯವಸ್ಥಿತ ಕುಟುಂಬ ಪದ್ದತಿ. ಅದರಿಂದ ಹೊರಬಂದು ಹೊರಗಿನ ಅವ್ಯವಸ್ಥೆ ಯನ್ನು  ಎಷ್ಟೇ ತಿದ್ದಲು ಹೋದರೂ ಇನ್ನಷ್ಟು ಸಮಸ್ಯೆಗಳೇ ಬೆಳೆಯೋದಲ್ಲವೆ? 
ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದಿರುವ ದಾಸಶರಣರ ತತ್ವಜ್ಞಾನವನ್ನು ‌ನಾವು ತಂತ್ರದಿಂದ ತಿಳಿದು ಸ್ವತಂತ್ರ ಜೀವನ ನಡೆಸುತ್ತಿದ್ದವರನ್ನೂ ಅತಂತ್ರಸ್ಥಿತಿಗೆ ಎಳೆದು ಆಳಿದರೆ ನಮ್ಮ ಸ್ಥಿತಿಗೆ  ನಮ್ಮ ರಾಜಕೀಯವೇ ಕಾರಣವಲ್ಲವೆ? ಇಲ್ಲಿ ರಾಜಕೀಯ ಬೆಳೆದಿರೋದು ನಮ್ಮ ಸ್ವಾರ್ಥ ಅಹಂಕಾರದಿಂದ
ಇದೇ ನಮ್ಮ ಶತ್ರುವಾದಾಗ ಹೊರಗಿನಿಂದ ಎಷ್ಟೇ ಶತ್ರುಗಳ ನಾಶ ಮಾಡೋದಕ್ಕೆ  ನಮಗೆ ಸಾಧ್ಯವಿಲ್ಲ. ನಮ್ಮವರನ್ನೇ ನಾವು ದ್ವೇಷಿಸುವಾಗ ಹೊರಗಿನವರಿಗೆ ಇನ್ನಷ್ಟು ಶಕ್ತಿ ನಾವೇ ಕೊಡುತ್ತಿದ್ದೇವೆ. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಬಾಳುವುದಕ್ಕಾಗಿ ಭೂಮಿಗೆ ಬಂದ ಜೀವಕ್ಕೆ ಸರಿಯಾದ ಶಿಕ್ಷಣ ನೀಡದೆ ಆಳಿ ಅಳಿಸಿದವರೆ ಆಳಾಗಿ ಮತ್ತೆ ಮತ್ತೆ ಜನ್ಮ ತಾಳುವುದನ್ನು ತಪ್ಪಿಸಲು ರಾಜಯೋಗದ ಶಿಕ್ಷಣದ ಅಗತ್ಯವಿದೆ.
ರಾಜಯೋಗ ಎಂದರೆ ನಮ್ಮನ್ನು ನಾವು ಸರಿಯಾಗಿ ತಿಳಿದು ಬದಲಾಯಿಸಿಕೊಂಡು ಬದುಕೋದಷ್ಟೆ. ಜೀವನ  ಶಾಶ್ವತವಲ್ಲ ಜೀವವೂ ಶಾಶ್ವತವಲ್ಲ.
ಆತ್ಮಜ್ಞಾನ ಶಾಶ್ವತ.ಆತ್ಮಜ್ಞಾನಕ್ಕೆ ಮೂಲದ ಧರ್ಮ, ಸಂಸ್ಕೃತಿ, ಭಾಷೆಯ ಶಿಕ್ಷಣದ ಅಗತ್ಯವಿತ್ತು. ಇದೀಗ ವ್ಯವಹಾರಿಕ ರೂಪ ಪಡೆದು ರಾಜಕೀಯವಾಗಿ ಬೆಳೆದು ದೇಶ ವಿದೇಶದೆಡೆಗೆ ಪ್ರಚಾರಕ್ಕೆ ಸೀಮಿತವಾಗಿದ್ದರೆ ಸ್ವದೇಶ
ದೊಳಗಿದ್ದು ಬೆಳೆಸೋರು ಯಾರು?
ದೇಶದಿಂದ ರಾಜ್ಯದಿಂದ ಸಾಕಷ್ಟು ಹಣ,ಹೆಸರು,ಸ್ಥಾನ
,ಅಧಿಕಾರ ಪಡೆದರೂ ಅದರ ಋಣ ತೀರಿಸುವ ಜ್ಞಾನವಿಲ್ಲವಾದರೆ  ವ್ಯರ್ಥ. ಇದೇ ಇಂದಿನ ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪು ಎನ್ನುವವರೆ ಹೆಚ್ಚು.
ಕಾರಣವಿಷ್ಟೆ ಸಾಧನೆ ಭೌತಿಕದಲ್ಲಿ ಬೆಳೆದಿದೆ ಅಧ್ಯಾತ್ಮ ಸಾಧನೆ
ಕುಸಿದಿದೆ.ಓದಿ ತಿಳಿದವರಿಗೆ  ಅಳವಡಿಸಿಕೊಳ್ಳಲು ಕಷ್ಟ.
.ಅಳವಡಿಸಿಕೊಂಡವರನ್ನು ಓದಿದವರು ಸಹಕರಿಸೋದಿಲ್ಲ. ನಮ್ಮ ಜೀವನ ಶೈಲಿಯೇ ಆಧುನಿಕತೆಯ ವಶದಲ್ಲಿರುವಾಗ 
ಅಧ್ಯಾತ್ಮ  ಚಿಂತನೆ ಕಷ್ಟ. ಒಟ್ಟಿನಲ್ಲಿ ಕನ್ನಡ ಭಾಷೆಯಾಗಲಿ ಇತರ ಭಾಷೆಯಾಗಲಿ ಅದರ ಜನ್ಮಸ್ಥಳದಲ್ಲಿ ಬೆಳೆಸದೆ
 ಹೊರಗೆ ಹರಡಿದರೆ ಶಕ್ತಿಹೀನವಾಗುತ್ತದೆ.ಅದರ ಅಂತರ
ದಲ್ಲಿ ಪರಭಾಷೆಗಳು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿ
ಕೊಂಡರೂ ಅಧರ್ಮಕ್ಕೆ ತಕ್ಕಂತೆ ಪ್ರತಿಫಲವಿದೆ.ಇಲ್ಲಿ ಯಾರೂ ಸ್ವತಂತ್ರ ರಲ್ಲ.ಅವರವರ ಮೂಲವನ್ನರಿತರೆ ಒಳಗೆ ಸ್ವತಂತ್ರ ಜ್ಞಾನವಿದೆ. ಅದರಿಂದ ನಿಜವಾದ ಸ್ವತಂತ್ರ ಜೀವನ ಅಡಗಿದೆ.ಹಿಂದೂ ಧರ್ಮವನ್ನು ಓದಿಕೊಂಡು ತಿಳಿಯ
ಲಾಗದು. ಅಳವಡಿಸಿಕೊಂಡು ಅನುಭವದಿಂದ ತಿಳಿದರೆ  ಮಾನವ ಮಹಾತ್ಮರಾಗಬಹುದಷ್ಟೆ. ಯುಗಯುಗದಿಂದಲೂ  ಈ ಭೂಮಿಯ ಮೇಲೆ ನಡೆದು ಬಂದ ಮನುಕುಲಕ್ಕೆ  ತತ್ವಜ್ಞಾನದಿಂದ ಸ್ವತಂತ್ರ ಸಿಕ್ಕಿದೆ.ತಂತ್ರಜ್ಞಾನದ ಯುಗದಲ್ಲಿ ನಾವು ಸತ್ಯ ಹುಡುಕಿದರೆ ಸಿಗೋದಿಲ್ಲ. ಸತ್ಯ ಒಳಗಿದೆ ಮಿಥ್ಯ ಹೊರಗಿದೆ.ಬದಲಾವಣೆ ಜಗದ ನಿಯಮ.ನಾವು ಬದಲಾಗದೆ ಪರರನ್ನು ಬದಲಾಯಿಸಲಾಗದು. ನಮ್ಮದೇ ಭ್ರಷ್ಟಾಚಾರದ ಹಣದಲ್ಲಿ ಮಕ್ಕಳಿಗೆ ಶಿಷ್ಟಾಚಾರದ ಶಿಕ್ಷಣ ನೀಡಲು ಸಾಧ್ಯವೆ?
ಋಣ ಎಂದರೆ ಸಾಲ, ಕರ್ಮ ಎಂದರೆಕೆಲಸ ಕಾಯಕ ಎಂದಾಗ ಸತ್ಕರ್ಮದಿಂದ,ಸ್ವಧರ್ಮದಿಂದ,ಸತ್ಯದಿಂದ, ನ್ಯಾಯ,ನೀತಿ,ಸಂಸ್ಕೃತಿ ಸದಾಚಾರದಿಂದ  ಋಣ ಮುಕ್ತರಾಗಲು ಅಂತಹ ಜ್ಞಾನದ ಅಗತ್ಯವಿದೆ.ಜ್ಞಾನ ನೀಡದೆ ಆಳಿದರೆ ಅಧರ್ಮ ವೇ ಬೆಳರಯೋದಷ್ಟೆ. ಇಲ್ಲಿ ನಾಟಕ
ವಿದ್ದರೂ ಅದರಲ್ಲಿ ಉತ್ತಮ ಪಾತ್ರವಿದ್ದು ಜನರನ್ನು ಸನ್ಮಾರ್ಗದಲ್ಲಿ ನಡೆಸುವಂತಿದ್ದರೆ ಉತ್ತಮ. ಅದು ಬಿಟ್ಟು ನಮ್ಮ ಸ್ವಾರ್ಥ ಸುಖಕ್ಕಾಗಿ  ಅಧರ್ಮ, ಅನ್ಯಾಯ, ಅಸತ್ಯ ಹಿಂಸೆ,ಭ್ರಷ್ಟಾಚಾರ ವೇ ಜನರೊಳಗೆ ತುಂಬುವ ಪ್ರಯತ್ನದಲ್ಲಿ
ಕೇವಲ ಹಣಸಂಪಾದನೆಗೆ ತೊಡಗಿಸಿಕೊಂಡರೆ  ಒಮ್ಮೆ ಹೆಣ ಆಗೋದು ಸತ್ಯ. ಆದರೆ ಮಹಾತ್ಮರಾಗದೆ ಹೋದರೆ ಅದೇ ಮುಂದೆ ಪ್ರೇತಾತ್ಮವಾಗಿ,ಭೂತ,ದೆವ್ವಗಳಾಗಿ ಕಾಡುವುದಲ್ಲವೆ? ದೆವ್ವ ಭೂತ,ದೇವರು ......ಇರುವುದೆ? 
ಕೆಲವರಿಗೆ ಅಗೋಚರ ಶಕ್ತಿ ಕಾಣೀದಿಲ್ಲ.ಕೆಲವರಿಗೆ ಕಂಡರೂ ತೋರಿಸಲಾಗದು. ಹೀಗಾಗಿ ಕಣ್ಣಿಗೆ ಕಂಡದ್ದೇ ಸತ್ಯವೆಂಬ ಭ್ರಮೆಯಲ್ಲಿ ನಾನೇ ದೇವರು ಎಂದು ಮಾನವ ಮುಂದೆ ನಡೆದು ದೈವತ್ವ ಕಳೆದುಕೊಂಡು  ಮೂಲವನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದಾಗಿದೆ. ಶಾಶ್ವತ ಯಾವುದು?
ಭೂಮಿಯ ಮೇಲಿರೋವಾಗ ಭೂ ತತ್ವ ,ರಾಜ್ಯದೊಳಗಿನ
ಧರ್ಮ,ಸಂಸ್ಕೃತಿ, ಭಾಷೆ,ದೇಶದ ಮೂಲ ಶಿಕ್ಷಣವನ್ನು  ಯಾರೂ ಆಳಬಾರದಷ್ಟೆ. ಆಳಿದವರು ಅಳುವುದಂತೂ ಸತ್ಯ.
ಕಾರಣ ಆಶ್ರಯ ಕೊಟ್ಟವರನ್ನು ಆಳುವ ಅಧಿಕಾರ ಮಾನವ ಪಡೆದಿಲ್ಲವಲ್ಲ. ಇದನ್ನು  ಆ ಆ ಮೂಲ ತಿಳಿದು ನಡೆದವರೆ ತಿಳಿದು ತಿಳಿಸಿರುವುದಾಗಿದೆ. ವಿದೇಶದೊಳಗೆ ದೇಶವಿದೆ. ಅದ್ವೈತ ದೊಳಗೆ ದ್ವೈತವಿದೆ, ಅಧರ್ಮದೊಳಗೆ ಧರ್ಮ ಸೇರಿದೆ, ಅಜ್ಞಾನದೊಳಗೇ ಜ್ಞಾನ ಸಿಕ್ಕಿಹಾಕಿಕೊಂಡಿದೆ ಕಾರಣ
ಮಾನವ ತನ್ನೊಳಗಿರುವ ಸತ್ಯ ಬಿಟ್ಟು ಹೊರಗಿನ ಸತ್ಯದ ಹಿಂದೆ ನಡೆದಿರೋದಷ್ಟೆ. ನಾನೇ ನನ್ನ ಅರ್ಥ ಮಾಡಿಕೊಳ್ಳಲು ಸೋತಿರುವಾಗ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಕಷ್ಟ.ಅದಕ್ಕೆ ಪರದೇಶ,ಪರಧರ್ಮ, ಪರಭಾಷೆ ಪರಕೀಯರು
ಬೆಳೆದು ಪರತಂತ್ರದಲ್ಲಿ  ಸ್ವತಂತ್ರ  ಕಳೆದುಕೊಂಡಿರೋದು. ಇಲ್ಲಿ ಸತ್ಯ ಕಠೋರವೆನಿಸಿದರೂ ಸತ್ಯವೇ ದೇವರು. ದೈವತ್ವ ತತ್ವದಿಂದ ಬೆಳೆಯುತ್ತದೆ ತಂತ್ರದಿಂದ ಅಳಿಯುತ್ತದೆ. 
ನಾವೇನೂ ಬೆಳೆಸಿಲ್ಲ,ಬೆಳೆಸಲಾಗಿಲ್ಲ ಪರವಾಗಿಲ್ಲ ಕೊನೆಪಕ್ಷ ಅಳಿಸುವ ಕೆಲಸಕ್ಕೆ ಸಹಕರಿಸದಿದ್ದರೆ ಉತ್ತಮ. ನಮ್ಮ ಸಹಕಾರವೇ ಎಲ್ಲಾ  ಸಮಸ್ಯೆಗಳಿಗೆ ಕಾರಣ. ಯಾರ ಋಣ ಯಾರೋ ತೀರಿಸಲಾಗದು.ಯಾರದ್ದೋ ಧರ್ಮವನ್ನು ಯಾರೋ ಉಳಿಸಲಾಗದು.ಯಾರದ್ದೋ ದೇಶದ ಸಾಲವನ್ನು ಯಾರೋ ಬಂದು ತೀರಿಸಲಾಗದು. ಹೀಗಾಗಿ ನಮ್ಮ ಜೀವದ ಋಣವನ್ನು  ನಾವೇ ಸತ್ಕರ್ಮದಿಂದ ತೀರಿಸಲು ಮೂಲ
ದೆಡೆಗೆ ನಡೆದರೆ ಇದ್ದಲ್ಲಿ ಜ್ಞಾನೋದಯವಾಗಿ ಶಾಂತಿ ತೃಪ್ತಿ, ಮುಕ್ತಿ ಸಿಗುತ್ತದೆ ಎನ್ನುವುದೇ ಹಿಂದಿನವರ ನಡೆ ನುಡಿಯ ತತ್ವವಾಗಿತ್ತು. 
ಧರ್ಮ ರಕ್ಷಕರು ರಾಜಕೀಯ ವ್ಯಕ್ತಿಗಳ ಹಿಂದೆ ನಿಂತು ಬೇಡೋ ಪರಿಸ್ಥಿತಿ ಬರಬಾರದು.ಅವರ ಜ್ಞಾನವನ್ನು ರಾಜಕೀಯ ವ್ಯಕ್ತಿಗಳು ಸದ್ಬಳಕೆ ಮಾಡಿಕೊಂಡು ಸರ್ಕಾರ ನಡೆಸಲು ಪ್ರಜೆಗಳಿಗೆ ಸರಿಯಾದ ಶಿಕ್ಷಣ ನೀಡುವುದಷ್ಟೆ ಈಗ ಮುಖ್ಯವಾಗಿದೆ. ಇದೊಂದು  ಸಾಮಾನ್ಯಜ್ಞಾನದ ಸಾಮಾನ್ಯ
ಪ್ರಜೆಯ  ವಿಚಾರವಾಗಿದೆ .ಇದನ್ನು ಜನಸಾಮಾನ್ಯರೆ ವಿರೋಧಿಸಿದರೆ ಸಿಗೋದು ಜ್ಞಾನವಲ್ಲ ಅಜ್ಞಾನವಷ್ಟೆ.ಅಜ್ಞಾನದಲ್ಲಿ ಯಾರಿಗೂ ಜೀವನ್ಮುಕ್ತಿ ಪಡೆದಿಲ್ಲವಲ್ಲ? ಎಲ್ಲಿಗೆ ಹೊರಟಿದೆ ರಾಜ್ಯ ದೇಶದ ಆಚರಣೆ?
ಒಳಗಿನ ಶುದ್ದಿಯ ಕಡೆಗೆ ಇದ್ದರೆ ಉತ್ತಮ ಪ್ರಗತಿ ಸಾಧ್ಯ.
ಇಂತಹ ಲೇಖನಗಳು ಸಾಧ್ಯವಾದಷ್ಟು ಜನಸಾಮಾನ್ಯರು ಹಂಚಿಕೊಳ್ಳಬೇಕಿತ್ತು.ವಿಪರ್ಯಾಸವೆಂದರೆ ಇತ್ತೀಚೆಗೆ  ಮುಖ ಚಿತ್ರವೇ  ಮುಖ್ಯವಾಗಿ ಮುಖನೋಡಿ ಮಣೆಹಾಕುವವರ ಸಂಖ್ಯೆ ಬೆಳೆದು ಸತ್ಯ ಮುಚ್ಚಿಹೋಗುತ್ತಿದೆ. ಬೂದಿಮುಚ್ಚಿದ ಕೆಂಡದೊಳಗೆ ಕಾಲಿಟ್ಟು ಸುಟ್ಟ ಮೇಲೇ ಬುದ್ದಿ ಕಲಿಯ
ಬೇಕಿದೆ.  ಸತ್ಯ ಕಠೋರವಾಗುವುದು ಅದನ್ನು ತಡೆದು ನಿಲ್ಲಿಸಿದಾಗಷ್ಟೆ. ನಮ್ಮ ಸತ್ಯಕ್ಕೆ ನಾವು ತಲೆಬಾಗಿದರೆ ಅದೇ ಧರ್ಮದೆಡೆಗೆ ನಡೆಸುತ್ತದೆ. ಧರ್ಮದೆಡೆಗೆ ನಡೆದಂತೆಲ್ಲಾ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗುತ್ತದೆ. ಇದು ಹೊರಗಿಲ್ಲ ಒಳಗೇ ಇದೆ. ನಮ್ಮ ಕಾಲುಬುಡವಿದೆ.ನಡೆಯಬೇಕಷ್ಟೆ.
ಕೈ ಕೆಸರಾದರೆ ಬಾಯಿ ಮೊಸರು ಎಂದರು. ಆದರೆ ಇಂದಿನ‌ಕೈ
ಕೆಸರಲ್ಲಿದ್ದ ಕಮಲವನ್ನು ನೇರವಾಗಿ ಕಿತ್ತು ಲಕ್ಮಿ ಪೂಜೆ ಮಾಡಿ ಮೈಯನ್ನು ಸರಿಯಾಗಿ ತೊಳೆದುಕೊಳ್ಳದೆ  ಶುದ್ದವೆನ್ನುವ ಭ್ರಮೆಯಲ್ಲಿ ರಾಜಕೀಯ ನಡೆಸುತ್ತಾ ಸ್ವಚ್ಭಭಾರತದಲ್ಲಿ  ತಂತ್ರಜ್ಞಾನವನ್ನು  ಬೆಳೆಸುತ್ತಾ ಹೊರಗೆ ನಡೆದರೆ ಮೂಲದ ತತ್ವ ತಿಳಿಯಲಾಗದೆ ಅಜ್ಞಾನದ ಅಮಲಿನಲ್ಲಿಯೇ ಜೀವ ಹೋಗುತ್ತದೆ. ಸತ್ಯವನ್ನು ಎಷ್ಟೇ ತಿರುಚಿದರೂ ಇರೋದು ಒಂದೇ ಸತ್ಯ,ತತ್ವ,ಭೂಮಿ,ದೇಶ,ರಾಜ್ಯ,ಧರ್ಮ, ಜಾತಿ ದೇವರು .ಇದನ್ನು ಮಹಾತ್ಮರುಗಳು ಆತ್ಮಜ್ಞಾನದಿಂದ ತಿಳಿದರು.ವಿಜ್ಞಾನ ಜಗತ್ತಿನಲ್ಲಿ ಇದನ್ನು ಒಪ್ಪದಿದ್ದರೂ ಸತ್ಯ ಸತ್ಯವೇ ಮಿಥ್ಯ ಮಿಥ್ಯವೇ ಅಲ್ಲವೆ? 
ದೇಶ ವಿದೇಶ ಮಾಡೋದು ಅಧರ್ಮ. ಮಂತ್ರ,ತಂತ್ರ,ಯಂತ್ರಗಳಿಂದ  ಸ್ವತಂತ್ರ ಜ್ಞಾನ ಬೆಳೆಯಬೇಕು.ಸಾಧ್ಯವೆ? ಸದ್ಬಳಕೆ ಮಾಡಿಕೊಂಡರೆ ಸಾಧ್ಯ.
ಜ್ಞಾನವನ್ನು ಹಂಚಿಕೊಳ್ಳಲು ರಾಜಯೋಗ ಬೇಕು. ರಾಜಕೀಯಕ್ಕೆ  ಬಳಸಿದಷ್ಟೂ  ಅಜ್ಞಾನ ಬೆಳೆಯುತ್ತದೆ.

Sunday, October 30, 2022

ತಪ್ಪು ಮಾಡದೆ ಸುಳ್ಳಾಡದೆ ಇರೋರು ಯಾರು?

ತಪ್ಪು ಮಾಡದವರಿದ್ದಾರೆಯೆ?
ಸುಳ್ಳು ಹೇಳದವರಿದ್ದಾರೆಯೆ? 
ಮಾನವನ ಜನ್ಮಕ್ಕೆ ಕಾರಣವೆ ಇದಾಗಿರುವಾಗ ಇದನ್ನು ಬಿಟ್ಟು ಜೀವನ‌ ನಡೆಸಿದವರಿದ್ದಾರೆಯೆ?
ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಅಸತ್ಯಗಳು  ಜೀವನದ ಅಂಗವಾಗಿ  ಅದನ್ನು ಸರಿಪಡಿಸಿಕೊಂಡು ಮುಂದೆ ನಡೆಯುವುದು ಸಹಜ. ಎಲ್ಲಿಯವರೆಗೆ ತಪ್ಪು ತಿದ್ದಿಕೊಳ್ಳಲು
ಆಗದೆ ಅಸತ್ಯವನ್ನು ಬಂಡವಾಳವಾಗಿಟ್ಟುಕೊಂಡು ಜೀವನ ನಡೆಸುವರೋ ಅಲ್ಲಿಯವರೆಗೆ  ಈ ನಾಟಕದ ಜೀವನದ ಸತ್ಯ ತಿಳಿಯಲು ಕಷ್ಟ. ನಮ್ಮ ತಪ್ಪು  ನಮಗೆ ತಿಳಿಯದಿದ್ದರೂ ತಿಳಿಸುವವರು ಇರುತ್ತಾರೆ. ಅವರೆ  ನಿಜವಾದ ಗುರು. 
ತಾಯಿ,ತಂದೆ,ಬಂಧು ಬಳಗ,ಸ್ನೇಹಿತರುಗಳಿಂದ ಸಾಕಷ್ಟು  ಕಲಿಯಬಹುದು  ಆದರೆ  ನಮ್ಮ ತಪ್ಪನ್ನು  ತಿಳಿಸಿ ಹೇಳುವ  ಹೊರಗಿನವರಿಂದ ತಪ್ಪು ತಿದ್ದುವ ಕೆಲಸ ಮಾಡಲಾಗದು. ಕಾರಣ, ತಪ್ಪು ಕಾಣುವುದು ತಪ್ಪು ಮಾಡಿದವರಿಗಷ್ಟೆ. ಮಕ್ಕಳ ತಪ್ಪು  ಪೋಷಕರಿಗೆ ಕಂಡರೂ ಅದೇ ತಪ್ಪು ನಾವು
ಮಾಡುತ್ತಿದ್ದರೆ  ಮಕ್ಕಳು ಸರಿಯಾಗೋದಿಲ್ಲ.ಮೂಲವನ್ನು
ಅರ್ಥ ಮಾಡಿಕೊಂಡರೆ ಅಲ್ಲಿ ಸರಿಪಡಿಸಿದರೆ‌ ತಪ್ಪು ಬೆಳೆಯೋದಿಲ್ಲ. ನಾವೆಲ್ಲರೂ ತಪ್ಪಿರೋದೆಲ್ಲಿ? ಎಂದಾಗ ಶಿಕ್ಷಣದಲ್ಲಿ  ಎನ್ನುವ ಉತ್ತರಕ್ಕೆ ಅನೇಕರ ವಿರೋಧವಿದ್ದರೂ
ಸತ್ಯ ಒಂದೇ. ಆ ಒಂದೇ ಸತ್ಯದೆಡೆಗೆ ತಿರುಗಿ ಬರೋವರೆಗೆ
ತಪ್ಪು ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಜಕೀಯದ ಕುಂಟು ನೆಪಗಳೂ ಬೆಳೆಯುತ್ತಾ ಕೊನೆಯಲ್ಲಿ ಪಶ್ಚಾತ್ತಾಪ ಪಟ್ಟರೂ ಹಿಂದಿರುಗಲಾಗದೆ ಜೀವ ಹೋಗುತ್ತದೆ.
ಸತ್ಯವು ನಿಧಾನವಾಗಿ  ಎದುರು ಬರುವಾಗ ಅಸತ್ಯವು ತನ್ನ ಪ್ರಭಾವದಿಂದಾಗಿ  ಇಡೀ ಜಗತ್ತನ್ನು ಆಳಲು ಹೋಗಿ ಸೋತು ಹೋಗಿರುತ್ತದೆ. ಮಾನವನಿಗೆ ಅಸತ್ಯ ಪ್ರಿಯವಾಗಲು ಕಾರಣ
ಅವನ ತಪ್ಪುಗಳನ್ನು  ಅದು ಮುಚ್ಚಿಡುತ್ತದೆ. ಮುಚ್ಚಿಟ್ಟರೂ ಆತ್ಮರಕ್ಷಣೆಗೆ ಸತ್ಯವೇ ಬೇಕು ಎನ್ನುವ ಜ್ಞಾನವಿದ್ದರೆ ಸತ್ಯದ ದಾರಿ ಹಿಡಿಯುತ್ತಾನೆ. 

** ತಪ್ಪು ಮಾಡಿದಾಗಲಷ್ಟೇ ನಮಗೆ ನೆಪಗಳು, ಸಮರ್ಥನೆಗಳು ಬೇಕಾಗುತ್ತವೆ. ಪ್ರಾಮಾಣಿಕವಾಗಿದ್ದಾಗ ಅವ್ಯಾವುಗಳ ಅವಶ್ಯಕತೆಯೇ ಇರುವುದಿಲ್ಲ. ಎಲ್ಲ  ಬೇಕೆಂಬ ಆಸೆಯಿಂದ ಶುರುವಾಗಿ,ಕೊನೆಗೆ ಏನು ಬೇಡವೆಂದು ಕೋರಿಕೊಳ್ಳುವುದೇ ಜೀವನ.*

** ನಿನ್ನೆಯವರೆಗೆ ಕಲಿತ ಪಾಠಗಳನ್ನೆಲ್ಲ ಮನನ ಮಾಡಲು ಇಂದು ಸರಿಯಾದ ಸಮಯ . ನಾಳೆಗಳನ್ನು ಎದುರಿಸಲು ಅದು ಸಹಾಯವಾಗುತ್ತದೆ. 🙏

🙏 ಅತ್ಯಂತ ಪ್ರಾಮಾಣಿಕರಾಗಿ ಇರುವುದೂ ಅಪಾಯಕಾರಿ. ನೇರವಾದ ಮರವೇ ಮೊದಲು ನೆಲಕ್ಕುರುಳುವುದು. ನಂತರ ಡೊಂಕು ಮರದ ಸರದಿ. ಸಜ್ಜನರ ಸಹವಾಸ, ಸುಗಂಧ ದ್ರವ್ಯಗಳ ಅಂಗಡಿಗೆ ಹೋದಂತೆ. ಅಲ್ಲಿ ನಾವು ಕೊಂಡುಕೊಳ್ಳದಿದ್ದರೂ ಪರಿಮಳದ ಸುವಾಸನೆ ಸಿಗುತ್ತದೆ.**

*ಬೇರೆಯವರಿಗೆ ಒಳಿತಾಗಲಿ ಅಂತಾ ಸದಾ ಹಂಬಲಿಸೋರಿಗೆ ಬರಸಿಡಿಲು ಬಂದರೆಗಿದಾಗ ಯಾವುದೇ ವ್ಯಕ್ತಿ ಮಾನಸಿಕವಾಗಿ ಕುಗ್ಗುತ್ತಾನೆ. ಆಗ ಆತನ ಆತ್ಮವಿಶ್ವಾಸವೇ ಅವನಿಗೆ ಶ್ರೀರಕ್ಷೆ.🙏

*ಶ್ರೇಷ್ಠರಾಗುವುದಕ್ಕೆ ಪ್ರಯತ್ನಿಸಬೇಕು. ಆದರೆ ಬೇರೆಯವರನ್ನು ಕುಬ್ಜರಾಗಿಸುವ ಮೂಲಕ ಯಾರೂ ಶ್ರೇಷ್ಠರಾಗಲಾರರು ಎಂಬುದನ್ನು ನೆನಪಿಡಬೇಕು. ***

*ಜೀವನದಲ್ಲಿ ಎದುರಾಳಿ ಇದ್ದರೆ ಚೆಂದ ಅದು ನಮಗೆ ಸಮನಾದ ಪ್ರತಿಸ್ಪರ್ದಿ  ಇದ್ದರೆ ಇನ್ನೂ ಚೆಂದ. ಎದುರಾಳಿ ಇದ್ದರೇನೆ ಜೀವನದಲ್ಲಿ ಒಂದು ಮಜಾ, ಲಯ  ,ಸ್ಪೂರ್ತಿ ಹುಟ್ಟೋದು ಗೆಲ್ಲಲ್ಲೇಬೇಕೆಂಬ  ಛಲ, ಹುಮ್ಮಸ್ಸು  ಗಟ್ಟಿಗೊಳ್ಳುವುದು ಮತ್ತು ಮನಸ್ಸು ಏಕಾಗ್ರತೆಗೊಂಡು ಕಠಿಣ ಪರಿಶ್ರಮಕ್ಕೆ  ನಾಂದಿ ಹಾಡುವುದು. ಆದುದರಿಂದ ಯಾವಾಗಲೂ ನಮ್ಮ ಪ್ರತಿಸ್ಪರ್ಧಿಯನ್ನು ಗೌರವಿಸಬೇಕು***

🙏ಬೇರೆಯವರನ್ನು ಮೆಚ್ಚಿಸಲು ನೀನು ಎಂದಿಗೂ ಜೀವಿಸಬೇಡ. ಯಾಕೆಂದರೆ ಪ್ರತಿಯೊಬ್ಬರ ಅಭಿಪ್ರಾಯಗಳು ಸಂದರ್ಭಕ್ಕನುಸಾರ ಹೇಗೆ ಬದಲಾಗುತ್ತದೆ. ಬದುಕು ವರ್ಣಮಯವಾಗಿರಬೇಕೆ ಹೊರತು,ಇಡಿ ಜೀವನ ನಾಟಕೀಯವಾಗಿರಬಾರದು. 

ಹೊಟ್ಟೆಪಾಡಿಗಾಗಿ ರಾಜನ ವೇಷ ಹಾಕಿ ನಟಿಸಬಹುದು.ಆದರೆ ನಾನೇ ರಾಜನೆಂದು ಬದುಕಲಾಗದು.
ಹಾಗೇನಾದರೂ  ಹೇಳಿಕೊಂಡರೆ ತಪ್ಪು ಅಸತ್ಯ ಎರಡೂ ಹೆಚ್ಚುತ್ತದೆ. 
ನಾಟಕದೊಳಗೊಂದು ನಾಟಕವಾಡಿ ತಾನೊಬ್ಬ ಶ್ರೀಮಂತ, ರಾಜ,ಮಹಾತ್ಮ,ದೇವರು, ಸಾದು,ಸಂತ,ಸಂನ್ಯಾಸಿ, ಜ್ಞಾನಿ
ಎನ್ನುವವರ ಹಿಂದಿನ ನಾಟಕೀಯ ಗುಣ ಸ್ವಭಾವ ತಕ್ಷಣ ಕಾಣದಿದ್ದರೂ , ನಿಜ ಜೀವನದಲ್ಲಿಯೂ  ಅದೇ ರೀತಿ ನಡೆಯಲಾಗದೆ ತಪ್ಪನ್ನು ಮಾಡಿದರೂ‌  ಅಜ್ಞಾನಿಗಳು ಕ್ಷಮಿಸಬಹುದು ದೇವರಲ್ಲ. 

ಗೊಂಬೆಯಾಟವಯ್ಯಾ ಆ ದೇವನಾಡುವ ಗೊಂಬೆಯಾಟವಯ್ಯಾ
ನಿನ್ನ ಆತ್ಮ ಸಾಕ್ಷಿಯನ್ನು ಬದಿಗಿಟ್ಟು ಜೀವಿಸಬೇಡ. ನಿನಗೆ ಯಾರು ಇಲ್ಲದ ಸಮಯದಲ್ಲಿ ನಿನ್ನ ಜೊತೆ ಇರುವುದೇ ಆತ್ಮ ಸಾಕ್ಷಿ. 🙏

ಪುರಾಣದ ಧರ್ಮಾಧರ್ಮಗಳು


ಪುರಾಣ,ಇತಿಹಾಸದ ಕಥೆಗಳನ್ನು  ನಾವು ಕೇಳುವಾಗ,
ಹೇಳುವಾಗ ಈಗಿನ  ಮಾನವರ ಪರಿಸ್ಥಿತಿ, ಮನಸ್ಥಿತಿ, ಜ್ಞಾನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಬೌತಿಕ ಸತ್ಯವನ್ನಷ್ಟೇ  ತಿಳಿದವರಿಗೆ ಅಂದಿನ‌ಧರ್ಮ ಜ್ಞಾನ ಕೇವಲ ಕ್ರೂರತೆ, ಅಸಹಾಯಕತೆ, ಕಠೋರತೆ, ಅಶಾಂತಿಯ ರಾಜಕೀಯತೆ, ಸ್ತ್ರೀ ಶಕ್ತಿಯ ದುರುಪಯೋಗ  ಇದೇ ಕಾಣುತ್ತದೆ. ಹೀಗಿರುವಾಗ  ಸಮಾಜ ಅದರೊಳಗಿನ ಧಾರ್ಮಿಕತೆ, ಪಾರಮಾರ್ಥಿಕ ಸತ್ಯಜ್ಞಾನ ತಿಳಿಯದೆ
ಅದಕ್ಕೆ ವಿರುದ್ದ ನಡೆಯುವುದು ಸಹಜ. ಇದನ್ನು ನಾಸ್ತಿಕತೆ ಎನ್ನಲಾಗದು. ಮಾನವೀಯತೆ ಬಿಟ್ಟು ಕೇವಲ  ಪ್ರಚಾರಕ್ಕೆ ಸೀಮಿತ ಮಾಡಿದರೆ  ಧರ್ಮ ರಕ್ಷಣೆ ಕಷ್ಟ.
ಬದಲಾವಣೆ  ನಮ್ಮಿಂದ  ಆಗಬೇಕು. ನಾನೆಂಬುದು ಬದಲಾಗಬೇಕು.ಇದನ್ನು ಶಿವ ಶರಣರು  ತಿಳಿಸಿದ್ದಾರೆ.
ಸತ್ಯ ಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗ ಇವು
ನಾಲ್ಕು ವರ್ಣಗಳನ್ನು ತಿಳಿಸುತ್ತದೆ. ಬ್ರಾಹ್ಮಣ ,ಕ್ಷತ್ರಿಯ ವೈಶ್ಯ
ಶೂದ್ರದ ಧರ್ಮ ಕರ್ಮದ ಪ್ರಕಾರ ಸತ್ಯಯುಗದ ಬ್ರಾಹ್ಮಣ
,ತ್ರೇತಾಯುಗದ ಕ್ಷತ್ರಿಯ, ದ್ವಾಪರದ ವೈಶ್ಯ, ಹಾಗು ಕಲಿಯುಗದ ಶೂದ್ರರ   ಧರ್ಮ ಕರ್ಮಕ್ಕೆ ತಕ್ಕಂತೆ  ಭೂಮಿ
ನಡೆಯುತ್ತದೆ. ಅಂದರೆ, ಈಗಿನ ಸಾಮಾನ್ಯಜ್ಞಾನದ ಶೂದ್ರರ
ಸೇವಾಗುಣದಿಂದ ಮಾತ್ರ ಭೂಮಿಯ ರಕ್ಷಣೆ ಸಾಧ್ಯ ಎಂದರ್ಥ. 
ಇಲ್ಲಿ ಮೇಲು ಕೀಳೆಂಬುದಿಲ್ಲ. ಅವರವರ ಮೂಲ ಧರ್ಮ ಕರ್ಮ ಅವರನ್ನು  ನಡೆಸುತ್ತದೆ. ಅದನ್ನು ತಿರಸ್ಕರಿಸಿ ನಡೆದರೆ
ಅಧರ್ಮ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಅಸತ್ಯದ
ಜೀವನದಲ್ಲಿ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರವಾಗಿರುತ್ತದೆ.
ಸಾತ್ವಿಕ ವಿಚಾರವೆಂದರೆ ಸತ್ಯದ ವಿಚಾರ. ಸತ್ಯ ನಮ್ಮ ಧರ್ಮ
ಕರ್ಮದೊಳಗಿದೆ. ನಮ್ಮ ಆತ್ಮಸಾಕ್ಷಿಗೆ ನಾವೇ ರಾಜರು.
ಹೀಗಿರುವಾಗ, ಅದನ್ನು ಮರೆತು ಹೊರಗಿನ ರಾಜಕೀಯಕ್ಕೆ
ಶರಣಾದರೆ ನಷ್ಟ ಯಾರಿಗೆ?
ಒಟ್ಟಿನಲ್ಲಿ  ಮಾನವನ  ಸಕಲ ಸಂಕಷ್ಟ ಕ್ಕೆ ಅವನೇ ಕಾರಣ.
ಇದನ್ನು ಸರ್ಕಾರ ಸರಿಪಡಿಸಹೋದರೆ ಇನ್ನಷ್ಟು ಅಧರ್ಮ
ಅನ್ಯಾಯ, ಅಶಾಂತಿ,ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹಣದಿಂದ
ಏನೂ ಬದಲಾವಣೆ ಆಗೋದಿಲ್ಲ. ಆದರೂ ಅದೊಂದು ಸಾಲದ ರೂಪದಲ್ಲಿ  ನಿಂತು ಮುಂದಿನ ಪೀಳಿಗೆಯಿಂದ ವಸೂಲಿ  ಮಾಡುವುದು ಸತ್ಯ.
ಒಂದು ಪಕ್ಷ  ಪ್ರಜೆಗಳಿಗೆ ಅನಾವಶ್ಯಕ ಸಾಲ ಸೌಲಭ್ಯಗಳನ್ನು
ನೀಡಿ ಸೋಮಾರಿ ಮಾಡಿ  ಬೆಳೆಸಿದರೆ, ಇನ್ನೊಂದು ಪಕ್ಷ ಅದನ್ನು  ವಸೂಲಿ ಮಾಡಲು  ಹೊರಟಿತು. ಹಾಗಾದರೆ ಇಲ್ಲಿ
ತಪ್ಪು ಮಾಡಿದವರು ಯಾರು? ಸಾಲ ಕೊಡುವುದು ಎಷ್ಟು ತಪ್ಪೋ ಹಾಗೇ ಪಡೆಯುವುದೂ ತಪ್ಪು ಎನ್ನುತ್ತಾರೆ ಮಹಾತ್ಮರು. 
ಮಹಾತ್ಮರಿಗೆ ಸಾಲದ ಹೊರೆ ಏರಿಸಿ  ಸಾಕೋ ಸರ್ಕಾರದ ಹಿಂದೆ  ನಡೆದವರನ್ನು ಹಿಂದುಳಿದವರು ಎಂದರೆ  ಈಗ ಅವರ ಸಮಸ್ಯೆಗೆ ಪರಿಹಾರವಾಗಿ ಹಣ ನೀಡುವ 
ಬದಲು  ಕೆಲಸ ಕೊಟ್ಟು  ದುಡಿಯಲು ಸಹಕರಿಸಿ. ಇಲ್ಲ ಅವರ ಮೂಲ ಧರ್ಮ ಕರ್ಮದಲ್ಲಿ  ಜೀವನ ನಡೆಸಲು ಬಿಡಿ. ಅವರವರ ಸ್ವಾವಲಂಬನೆ ಅವರನ್ನು ಮೇಲೆತ್ತುವುದು.
 ಇದಕ್ಕೆ ಮಧ್ಯೆ ರಾಜಕೀಯತೆ ಯಾಕೆ?
ಪ್ರತಿಯೊಂದರಲ್ಲಿಯೂ ನಮ್ಮ ದೇಶವನ್ನು ಹಿಂದೆ ತಳ್ಳುವ
ಪ್ರಯತ್ನ ವಿಜ್ಞಾನದಿಂದ ನಡೆದಿದೆ. ವಿದೇಶಿಗಳ ಶಿಕ್ಷಣ, ಧರ್ಮ
ವ್ಯವಹಾರಜ್ಞಾನ, ಬಂಡವಾಳ, ರೀತಿ,ನೀತಿ,ಸಂಸ್ಕೃತಿ....
ಇದನ್ನು ಈಗಲೂ ಬೆಳೆಸಿರುವುದು ಭಾರತೀಯರೆ ಎಂದರೆ
ನಾವು ಬದಲಾಗದೆ  ಬೇರೆಯವರನ್ನು ಬದಲಾವಣೆ ಮಾಡಲು ಸಾಧ್ಯವೆ?
ಆಧ್ಯಾತ್ಮಿಕ ಸತ್ಯ ಕಣ್ಣಿಗೆ ಕಾಣದ ಕಾರಣ  ಇದೊಂದು ವಿಷಯ  ಕೇವಲ ಪ್ರಚಾರಕ್ಕೆ ಸೀಮಿತವಾಗಿ,ಜನರನ್ನು ಮನೆ
ಹೊರಗಿನ ದೇವರೆಡೆಗೆ ಎಳೆದಿದೆ. ಮನೆಯೊಳಗಿನ ದೇವರು
ಕಾಣುವರೆ? ಸ್ತ್ರೀ ದೇವತೆಗಳನ್ನು ಆರಾಧಿಸುವವರೆ ಮನೆಯ
ಒಳಗಿನ ಸ್ತ್ರೀ ಯರಿಗೆ  ಸರಿಯಾದ ಜ್ಞಾನದೆಡೆಗೆ  ನಡೆಸೋ
ಶಿಕ್ಷಣ ನೀಡದೆ ರಾಜಕೀಯ ನಡೆಸಿದರೆ, ಇಲ್ಲಿ ರಾಜಯೋಗ
ಎಲ್ಲಿರುತ್ತದೆ?
ರಾಜಯೋಗ ಎಂದರೆ ಆತ್ಮಾನುಸಾರ ಸ್ವತಂತ್ರ ವಾಗಿ ಜೀವನ
ನಡೆಸೋದು. ರಾಜಕೀಯ ಮನಸ್ಸಿಗೆ ಬಂದಂತೆ ಇತರರನ್ನು
ಆಳುವುದು.

Friday, October 28, 2022

ಆತ್ಮಾವಲೋಕನ ಅಗತ್ಯವಿದೆ.

ದೇಶ ವಿದೇಶವಾದರೂ ಚಿಂತೆಯಿಲ್ಲ
ಧರ್ಮ ಅಧರ್ಮ ವಾದರೂ  ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲವೆನ್ನುವವರ ರಾಜಕೀಯದಲ್ಲಿ ದೇಶ ನಡೆದಿದೆ. ಇದಕ್ಕೆ ಸಹಕಾರ ಕೊಟ್ಟು ನಮ್ಮತನವನ್ನು ಬಿಟ್ಟು
ನಡೆದಂತೆಲ್ಲಾ ಆತ್ಮಹತ್ಯೆಗಳೂ ಬೆಳೆಯುತ್ತದೆ.
ಆತ್ಮಹತ್ಯೆ ಎಂದರೆ ಜೀವ  ಹೋಗುವುದೆಂದಲ್ಲ ಜೀವಾತ್ಮನಿಗೆ ಜ್ಞಾನೋದಯವಾಗದೆ ಹೋಗೋದು. ಎಲ್ಲಿಯವರೆಗೆ ಸತ್ಯ ಹಾಗು ಧರ್ಮ ವನ್ನು ತಿರುಚಿಕೊಂಡು ಭೌತಿಕದಲ್ಲಿ ರಾಜಕೀಯ ನಡೆಸುವರೋ ಅಲ್ಲಿಯವರೆಗೆ ಜೀವನ್ಮುಕ್ತಿಯಿಲ್ಲ ಎನ್ನಬಹುದಷ್ಟೆ. ಕೆಳಗಿನ ಫೋಟೊ ವಿಚಾರಗಳು  ಸಾಮಾನ್ಯಜ್ಞಾನದ ಕಡೆಗಿದೆ.ಮಾನವ ಸಾಮಾನ್ಯಜ್ಞಾನದಿಂದ ನಿಧಾನವಾಗಿ ವಿಶೇಷಜ್ಞಾನ ಪಡೆದರೆ
ಅನುಭವದಿಂದ ಸತ್ಯ ದರ್ಶನ .ಇದು ಹಿಂದಿನ
ಮಹಾತ್ಮರುಗಳು ನಡೆದು ತೋರಿಸಿದ್ದಾರೆ.
ಅವರ ನಡೆ ಬಿಟ್ಟು ನುಡಿಯನ್ನು ಬಂಡವಾಳ ಮಾಡಿಕೊಂಡರೆ ಅವರು ಬೇರೆ ನಾವೇ ಬೇರೆ.ಧರ್ಮ ವೇ ಬೇರೆ ವ್ಯವಹಾರವೇ ಬೇರೆ.
ಧರ್ಮ ಕರ್ಮ, ಸತ್ಯ ಧರ್ಮ, ಜ್ಞಾನ ವಿಜ್ಞಾನ, ಹಣ ಜ್ಞಾನ, ಸ್ತ್ರೀ ಪುರುಷರ ನಡುವಿರುವ ಅಂತರದಲ್ಲಿ  ಅಜ್ಞಾನದ  ವ್ಯವಹಾರ ಬೆಳೆದು ಸಾಲವನ್ನು ತೀರಿಸಲಾಗದೆ ಜನನ ಮರಣದ ಮಧ್ಯೆ ನಿರಂತರ ಜೀವನ ಚಕ್ರ ತಿರುಗಿದೆ.  ನೀವ್ಯಾಕೆ ಮಾಧ್ಯಮದಲ್ಲಿ ಇಂತಹ ವಿಚಾರ ಹಂಚಿಕೊಳ್ಳಬಾರದೆನ್ನುವ ಪ್ರಶ್ನೆಗೆ ಉತ್ತರ ಮಾಧ್ಯಮಗಳಿಗೆ ಸತ್ಯದ ಅಗತ್ಯವಿಲ್ಲ.ಧರ್ಮವಂತೂ ಬೇಡವೇಬೇಡ ಎನ್ನುವ ಹಂತದ ವ್ಯವಹಾರದಲ್ಲಿ ಮುಳುಗಿರುವಾಗ ಅಧ್ಯಾತ್ಮ ಸತ್ಯಕ್ಕೆ
ವಿರೋಧಿಗಳೇ ಹೆಚ್ಚು. ಹಣವುಳ್ಳವರಿಗೆ ಅರ್ಥ ವಾಗದು.
ಹಾಗೆ  ಜಾಹಿರಾತುಗಳೂ ಸಿಗೋದಿಲ್ಲ. ಅವರವರ ಮಾಧ್ಯಮದ ಹೊಟ್ಟೆ ತುಂಬಲು ಜಾಹಿರಾತುಗಳಿರೋದು ಯಾರು ಏನಾದರೂ ಆಗಲಿ ನಾವು ಬದಲಾಗೋದಿಲ್ಲ ಎನ್ನುವ ಸತ್ಯ ಜನಸಾಮಾನ್ಯರಿಗೂ ಗೊತ್ತು. ಇನ್ನು ಕ್ರಾಂತಿಯ ಮೂಲಕ ಸತ್ಯ ಹೊರಬಂದರೂ ಅರ್ಥ ಮಾಡಿಕೊಳ್ಳಲು ಜನರಿಗೆ ಜ್ಞಾನವಿರಬೇಕು.ಶಿಕ್ಷಣವೇ ಕೊಡದೆ ಆಳಿದವರು ಹೆಚ್ಚಾಗಿರುವಾಗ ಹಿಂದೂ ಧರ್ಮ ಎಂದರೆ ನಮ್ಮ ನಮ್ಮ ಹಿಂದಿನ ಮಹಾತ್ಮರುಗಳು  ನಡೆದ ತತ್ವಜ್ಞಾನದಿಂದ ತಿಳಿದ ಧರ್ಮ . ಇದು ಅವರವರ ಗುರು ಹಿರಿಯರು  ತಮಗೆ ತಿಳಿದಂತೆ ಬದಲಾವಣೆ ಮಾಡಿಕೊಂಡರೆ ಈಗಿನ‌ಪರಿಸ್ಥಿತಿಗೆ ಅದೇ ದೊಡ್ಡ ಸಮಸ್ಯೆಯಾಗದಂತೆ ಮಾನವೀಯತೆಯನ್ನು,
ಮಕ್ಕಳು ಮಹಿಳೆಯರನ್ನು,‌ಉಳಿಸಿ ರಕ್ಷಿಸುವಂತಿರಬೇಕು. ಇದನ್ನು  ತತ್ವಜ್ಞಾನ ತಿಳಿಸುತ್ತದೆ. ತಂತ್ರವಲ್ಲ. ತಂತ್ರ ಶಾಶ್ವತವಲ್ಲ.ತಂತ್ರದಿಂದ ರಾಜಕೀಯ ತತ್ವದಿಂದ ರಾಜಯೋಗ. ತತ್ವ ಒಳಗಿದೆ.ತಂತ್ರ ಹೊರಗಿದೆ.  ಹಾಗಾದರೆ ನಾವ್ಯಾರು ತತ್ವಜ್ಞಾನಿಗಳೆ ?ತಂತ್ರಜ್ಞಾನಿಗಳೆ? ಇವೆರಡರ ನಡುವಿನ. ಸಾಮಾನ್ಯಜ್ಞಾನ ಇದ್ದರೆ ಸತ್ಯ ತಿಳಿಯಬಹುದಷ್ಟೆ.
ಶ್ರೀ ಕೃಷ್ಣ ಪರಮಾತ್ಮನ  ಭಗವದ್ಗೀತೆ ಯಲ್ಲಿ  ಎಲ್ಲಾ ಜ್ಞಾನವಡಗಿದೆ.ಯಾರಿಗೆ ಹೇಗೆ ತಿಳಿಯುವುದೋ ಹಾಗೇ ವಿವರಿಸಿದ್ದಾರೆ ಆದರೆ ಅಂದಿನ ವಾಸ್ತವ ಸ್ಥಿತಿಗೆ ತಕ್ಕಂತೆ  ಅರ್ಜುನನಿಗೆ ಧರ್ಮ ಬೋಧನೆ ಮಾಡಿರುವುದು ಒಂದೇ ಸತ್ಯ. ಈಗಿನ ರಾಜಕೀಯದಲ್ಲಿ  ಧರ್ಮ ಯಾವುದು? ಅಧರ್ಮ ಯಾವುದು? ದೇಶವನ್ನು ವಿದೇಶ ಮಾಡುವುದು ಧರ್ಮವೆ? ಪ್ರಜಾಪ್ರಭುತ್ವದ ಪ್ರಜೆಗಳನ್ನು ಅಜ್ಞಾನದಲ್ಲಿ ಬಿಟ್ಟು ಆಳುವುದೆಷ್ಟು ಧರ್ಮ? ಈ ಪ್ರಶ್ನೆಗೆ ಉತ್ತರವನ್ನು ನಾವೇ ಕಂಡುಕೊಳ್ಳಲು ಬೇಕಿದೆ ಆತ್ಮಾವಲೋಕನ.

Thursday, October 27, 2022

ದೀಪಗಳ ಮಹತ್ವ

ದೀಪಾವಳಿಯ ಶುಭಾಶಯಗಳು.
ದೀಪಗಳು  ಜೀವನಕ್ಕೆ ಬೆಳಕನ್ನು ನೀಡುವ ಸಾಧನ. ಇದನ್ನು ಯಾವ ಕಾರ್ಯಕ್ಕೆ ಹೇಗೆ ಹೇಗೆ ಬಳಸಬೇಕೆಂಬುದೂ ಹಿಂದೂ ಧರ್ಮ ದಲ್ಲಿದೆ. ದೀಪ ಬೆಳಗುವ ಕಾರ್ಯಕ್ರಮ ಪ್ರತಿಯೊಂದು ಶುಭ ಸಮಾರಂಭದಲ್ಲಿ ಕಾಣಬಹುದು. ಇದಕ್ಕೆ
ಕಾರಣವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ದೀಪದಿಂದ
ಉತ್ತಮ ಬದಲಾವಣೆಯೂ ಸಾಧ್ಯ. ಇತ್ತೀಚಿನ ದಿನಗಳಲ್ಲೊ
ಎಷ್ಟು ದೀಪ ಹಚ್ಚಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತದೆ.
ದೀಪ ಒಂದಾದರೂ ಶುದ್ದವಿದ್ದರೆ ಅದರಿಂದ ಜ್ಞಾನ ಬರುತ್ತದೆ.
ಆಂತರಿಕ ಶಕ್ತಿಯನ್ನು ಹೆಚ್ಚಿಸುವ  ಜ್ಞಾನ ದೀಪವನ್ನು ಯಾರೂ ಕಣ್ಣಿನಿಂದ ಕಾಣಲಾಗದು. ಅವರವರ ಜ್ಞಾನ  ಒಳಗೇ ಇದ್ದು ಅದನ್ನು ತಿಳಿಯಲು ಹೊರಗಿನ ಕಾರ್ಯ ಕ್ರಮದಲ್ಲಿ ದೀಪವನ್ನು ಬೆಳಗಲಾಗುತ್ತದೆ. ಇಲ್ಲಿ ಧಾರ್ಮಿ ಕ,ರಾಜಕೀಯ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ,ಸಾಹಿತ್ಯಿಕ ಕ್ಷೇತ್ರವೆಲ್ಲವೂ ಶುಭ ಸಮಾರಂಭದಲ್ಲಿ ದೀಪ ಬೆಳಗಿಸುತ್ತಾರೆ. ಆದರೆ ಆರ್ಥಿಕವಾದ ಅಭಿವೃದ್ಧಿಗೆ  ಹೆಚ್ಚು ಹೆಚ್ಚು ಪ್ರಾಧಾನ್ಯತೆ
ಯನ್ನು ಪಡೆದುಕೊಂಡು  ಧಾರ್ಮಿಕ ವಾಗಿ ಹಿಂದುಳಿದರೆ ದೀಪದ ಎಣ್ಣೆಯಿಂದ ಹಿಡಿದು‌ಉರಿಸುವ ಬತ್ತಿಯೂ ಕಲಬೆರಕೆಯಾಗಿ ಅದರ ಸತ್ವವನ್ನು ‌ಕಳೆದುಕೊಂಡು ಲಕ್ಷಾಂತರ  ದೀಪಗಳನ್ನುಹಚ್ಚಿದರೂ ಪ್ರಕೃತಿ ವಿರುದ್ದ 
ನಡೆದಾಗ ಪ್ರಕೃತಿ ವಿಕೋಪ ಹೆಚ್ಚಿಸಮಸ್ಯೆ  ಸುತ್ತಿಕೊಳ್ಳುತ್ತದೆ. 
ದ್ಯಾನ,ಜಪ,ತಪ,ಯೋಗ ,ಯಾಗ, ದಾನ,ಧರ್ಮ,ಸೇವೆ,
ಪೂಜೆ, ಪುನಸ್ಕಾರಗಳು,ಸಂಸ್ಕಾರಯುಕ್ತವಾಗಿದ್ದು
 ಉತ್ತಮ ಶಾಂತಿ,ಸಮೃದ್ಧಿಯನ್ನು  ದೇಶದ ಜನತೆ,ದೇಶ,ವಿಶ್ವ ಕಂಡರೆ  ಅದು ನಿಜವಾದ ಜ್ಞಾನದಿಂದ ಮಾತ್ರ ಸಾಧ್ಯವೆನ್ನುವರು ಮಹಾತ್ಮರುಗಳು. ಯಾವಾಗ  ಆಚರಣೆ
ಗಳಾಗಲಿ,ಕಾರ್ಯ ಕ್ರಮಗಳಾಗಲಿ ತಮ್ಮ ಸ್ವಾರ್ಥ ಅಹಂಕಾರದ  ರಾಜಕೀಯ ರೂಪ ಪಡೆದು  ಅಜ್ಞಾನ  ಬೆಳೆಯುವುದೋ  ಎಷ್ಟೇ ದೀಪ  ಹಚ್ಚಿದರೂ ಅದರ ಎಣ್ಣೆಯಾಗಲಿ,ಬತ್ತಿಯಾಗಲಿ,ಹಣವಾಗಲಿ,ಹಣತೆಯಾಗಲಿ
 ಜನರಾಗಲಿ ಸ್ವಚ್ಚ ಮನಸ್ಸಿನಿಂದ  ಬಳಸಿ ಬೆಳಗುವರೋ ಅದೇ ರೀತಿಯಲ್ಲಿ   ಪ್ರತಿಫಲವನ್ನೂ  ಮನುಕುಲ  
ಪಡೆಯುತ್ತಾನೆ. ಹೊರಗಿನಿಂದ ಮಾನವ ಬೆಳಗುವ ದೀಪ ಒಳಗೇ ಇರುವ   ದೇವರ ಶಕ್ತಿಯಾದ ಆತ್ಮಜ್ಯೋತಿ ಒಂದಾಗಲು ಎರಡೂ ಕಡೆಯಿಂದಲೂ ಶುದ್ದವಾಗಬೇಕು.
ಆತ್ಮ ಯಾವತ್ತೂ ಸ್ವಚ್ಚವೆ ಆದರೆ ಮನಸ್ಸು ಸ್ವಚ್ಚವಾಗದಿದ್ದರೆ
ಒಳಗಿನ ದೀಪದವರೆಗೆ ತಲುಪದೆ ಜ್ಞಾನದೀಪ ಬೆಳೆಯುವುದಿಲ್ಲ. ಒಟ್ಟಿನಲ್ಲಿ ದೀಪದ ಶಕ್ತಿ  ಎಲ್ಲೆಡೆಯೂ ಒಂದೇ  ಸಮನಾಗಿರೋದಿಲ್ಲ. 
ಶುಭಕ್ಕೆ ದೀಪ ಹಚ್ಚುತ್ತಾರೆ. ಅದು ಶುದ್ದವಾಗಿದ್ಧಷ್ಟೂ ಉತ್ತಮ .
ದೀಪಾವಳಿ ದೀಪಗಳ ಸಾಲಿನಲ್ಲಿ‌ ಸಾಕಷ್ಟು  ಶಕ್ತಿ  ಅಡಗಿರುತ್ತದೆ. ದೀಪ ಎನ್ನುವ ಪದವನ್ನು  ಮನೆಯ ದೀಪ, ದೇವಸ್ಥಾನ,ಮಠ,ಮಂದಿರ,ಮಹಲ್,ಮಹಾದೇಶ,ಮಹಾವಿಶ್ವದೆಲ್ಲೆಡೆಯೂ ಹರಡಿದೆ.ಆದರೆ ಮನಸ್ಸಿನ ಒಳಗಿರುವ ಜ್ಞಾನದ ದೀಪವನ್ನು  ಹೊರಗಿನವರು ಕಾಣದಿದ್ದರೂ ಇದೇ ಎಲ್ಲಾ ದೀಪಗಳ ಮೂಲ ಶಕ್ತಿಯಾಗಿದ್ದು ಒಳಗಿನಿಂದಲೇ
 ಬೆಳಗುತ್ತದೆ. ಯಾರೆಷ್ಟೇ  ಇಲ್ಲವೆಂದರೂ ನಾವು ಕಂಡು
ಕೊಂಡಿದ್ದನ್ನು ಆರಿಸಲಾಗದು.ಇದನ್ನು ನಮ್ಮ ಆಸ್ತಿ
ಯನ್ನಾಗಿಟ್ಟುಕೊಂಡು ಇಡೀ ಭೂಮಂಡಲವನ್ನು ಅರ್ಥ
 ಮಾಡಿಕೊಂಡರೆ  ಆತ್ಮರಕ್ಷಣೆ ಆಗುತ್ತದೆ.ಆರದ ದೀಪವೇ ಆತ್ಮಜ್ಯೋತಿ.ಇದನ್ನುಕಂಡುಕೊಂಡವರೆಮಹಾತ್ಮರಾಗಿದ್ದಾರೆ. 
ಹೊರಗಿನಿಂದ  ಬೆಳಗುವ ದೀಪಗಳುಪ್ರಕೃತಿಯ ಪರ ನಿಂತು
 ಸ್ವಚ್ಚ ವಾದರೆ ನಿಜವಾದ ದೀಪಾವಳಿ.
ಹಬ್ಬ ಹರಿದಿನಗಳಲ್ಲಿ ಬೆಳಗುವ ದೀಪಗಳ ಸಂಖ್ಯೆ ಅಧಿಕ. ದಿನವೂ ಬೆಳಗುವ ದೀಪಗಳ ಸಂಖ್ಯೆ ಕಡಿಮೆಯಿದ್ದರೂ ಇದು
ವರ್ಷ ವಿಡೀ ಬೆಳಗಿಸುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ.
ಹಾಗೆಯೇ ಮನೆಯ ದೀಪ ಎನ್ನುವ ಸ್ತ್ರೀ ಶಕ್ತಿ ಪ್ರತಿದಿನವೂ
ಸಂಸಾರಕ್ಕಾಗಿ ಭಗವಂತನಿಗೆ ದೀಪ ಬೆಳಗಿ ಶುದ್ದ ಭಾವನೆಯಲ್ಲಿ ಬೇಡಿದರೆ  ಅದಕ್ಕಿಂತ ದೊಡ್ಡ  ಶಕ್ತಿ ಬೇರಿಲ್ಲ.
ಮನೆಯಲ್ಲಿ ದೀಪ ಹಚ್ಚಲು ಸಮಯವಿಲ್ಲದೆ ಹೊರಗಿನ ಕಾರ್ಯ ಕ್ರಮದಲ್ಲಿನ  ದೀಪ ಹಚ್ಚುವುದರಿಂದ ಹೊರಗಿನ  ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಹಣ ಸಂಪಾದನೆ ಗಾಗಿ ನಡೆಸುವ ವ್ಯವಹಾರದಲ್ಲಿ ದೀಪದಲ್ಲಿ ಸಮಾನತೆಯ ಅಗತ್ಯವಿದೆ. ಸಂಸಾರದ ಜೊತೆಗೆ ಸಮಾಜದ ದೀಪವೂ ಸ್ವಚ್ಚ
ಸುಂದರವಾಗಿರಿಸೋದೆ ದೊಡ್ಡ ಸಾಧನೆ. ಇದಕ್ಕೆ ಸಹಕಾರದ ಅಗತ್ಯವಿದೆ.ಕೇವಲ ತನ್ನ ಮನೆಗಾಗಿ ಮಾಡಿಕೊಂಡರೆ ಇದು ಸಾಧನೆಯಾಗದೆ ಸಮಾಜದಲ್ಲಿಯೂ ಜ್ಞಾನಜ್ಯೋತಿ ಬೆಳಗಿಸಿದರೆ  ದಾರಿ ದಾರಿಯಲ್ಲಿ ಉರಿಸುವ ದೀಪದೊಳಗಿನ
ಆ ಮಹಾಶಕ್ತಿ  ಕಾಣಬಹುದು.
ಭಾರತದಂತಹ  ಮಹಾ ದೇಶದಲ್ಲಿನ ಸ್ತ್ರೀ ಶಕ್ತಿಯಿಂದ ಮನೆ ಮನೆಯೊಳಗೆ ಜ್ಞಾನ ಜ್ಯೋತಿ ಬೆಳಗಿತ್ತು. ವಿದೇಶಿಗರಿಂದ ವಿಜ್ಞಾನ ಬೆಳೆದಿರೋದು ಸ್ತ್ರೀ ಸಹಕಾರದಿಂದಲೇ.ಆದರೆ ಎರಡೂ ದೀಪಗಳ ಉದ್ದೇಶ  ಒಂದಾಗದೆ ವಿರುದ್ದ ನಡೆದಾಗ
ದ್ವೇಷ,ಸೇಡು,ಪೈಪೋಟಿ, ಹಗೆ,ಬಡತನ,ಯುದ್ದದಂತಹ ಅಸುರಿ ಶಕ್ತಿಯನ್ನು ಹಿಮ್ಮೆಟ್ಟಿಸಲಾಗದು.  ಮನುಕುಲವು ಆತ್ಮಜ್ಯೋತಿಯನ್ನು‌ ಬೆಳಗಿಸುವ  ಹಿಂದೂ ಧರ್ಮದ ದೀಪವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಕ್ಯಾಂಡಲ್ ಮೂಲಕ ಬೆಳಗಿಸುತ್ತಾ ಪಟಾಕಿಯಂತಹ ಸಿಡಿಮದ್ದುಗಳಿಂದ  ಶಬ್ದ,ಸದ್ದು,ಗದ್ದಲ,ಗಲಭೆಗಳನ್ನು ಸೃಷ್ಟಿಮಾಡಿ ಕಿಡಿಕಾರಿದರೆ ಇದರಿಂದಾಗಿ ಕಷ್ಟ ನಷ್ಟಗಳನ್ನು ಜೀವವೇ ಅನುಭವಿಸುವು
ದೆನ್ನುವುದೇ  ಜ್ಞಾನದ ದೀಪ.ಇದನ್ನು ಸೂಕ್ಷ್ಮ ವಾಗಿ ಕಂಡವರಿಗೆ  ನಿಜವಾದ ಸತ್ಯದರ್ಶನ. ಇಲ್ಲವಾದರೆ ಮಿಥ್ಯದ ಹೊರಗಿನ ದೀಪ ಬೇರೆ ಬೇರೆ ರೂಪ ಪಡೆದು  ಹೊತ್ತಿ ಉರಿಯಬಹುದು. ಎರಡೂ ದೀಪಗಳೂ ಬೆಳಕನ್ನು
ನೀಡುವುದು ಸತ್ಯವಾದರೂ ಒಂದು ಶಾಶ್ವತ ಇನ್ನೊಂದು ತಾತ್ಕಾಲಿಕ. ಅತಿಯಾಗಿ ಉರಿಯುವುದನ್ನು ಬಿಟ್ಟರೆ ಶಾಂತಿ ಕಾಣಬಹುದು. ಉರಿಯಲ್ಲಿಯೂ ಎರಡು ರೀತಿಯಿದೆ.
ಬೆಂಕಿಯೂ ಅಗ್ನಿ, ದೀಪವೂ ಅಗ್ನಿ.   ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. 
ವಾಮನಾವತಾರದಲ್ಲಿ ಇದನ್ನು ಮಹಾವಿಷ್ಣುವೇ ತೋರಿಸಿಕೊಟ್ಟಿದ್ದು  ಇದಕ್ಕಾಗಿಯೇ, ಅತಿಯಾದ ಸಂಪತ್ತಿದೆ ಎಂದು ದಾನ ಮಾಡಿದರೂ ಕಷ್ಟ.ಹೀಗಾಗಿ ಇತಿಮಿತಿಯಲ್ಲಿ ಸಂಪತ್ತಿದ್ದರೆ ಆಪತ್ತಿರೋದಿಲ್ಲ.  ಒಂದು ಭೂಮಿಯನ್ನೇ ಅರ್ಥ ಮಾಡಿಕೊಳ್ಳದೆ ಇತರ ಲೋಕವನ್ನೆಲ್ಲಾ ಗೆದ್ದು ಆಳುವ
ಅಸುರರನ್ನು  ಹೇಗೆ ಸಂಹಾರ ಮಾಡಲಾಯಿತೆನ್ನುವ ಪುರಾಣ ಕಥೆ ಕೇಳಿದರೂ ಭೂಮಿಯನ್ನು ಆಳೋದಕ್ಕಾ
ಗಿಯೇ  ಅಧರ್ಮ, ಅಸತ್ಯ,ಅನ್ಯಾಯ,ಭ್ರಷ್ಟಾಚಾರದಲ್ಲಿ
ದುಷ್ಟರು ಹುಟ್ಟಿ ಬೆಳೆದು ದೀಪ ಹಚ್ಚಿ ಸಂಭ್ರಮಿಸಿದರೆ ದೀಪದ ಮಹತ್ವ ತಿಳಿಯದೆ ಆತ್ಮಜ್ಯೋತಿ ಹಿಂದುಳಿಯುತ್ತದೆ.
 ಹೊರಗಿನಿಂದ ಕಾಣುವ ಬೆಳಕನ್ನು ನಂಬಿ ಕೆಟ್ಟವರೇ 
ಹೆಚ್ಚು. ಕತ್ತಲು ಬೆಳಕಿನಗ್ರಹಣವನ್ನು  ಎಷ್ಟು ಭಯದಿಂದ 
ಕಾಣುವರೋ  ಒಳಗಿನ  ಈ ಕತ್ತಲೆಯನ್ನು  ಭಯವಿಲ್ಲದೆ ಬೆಳೆಸಿಕೊಂಡು  ಆಳುವವರ ಸಂಖ್ಯೆ ಬೆಳೆದು ನಿಂತಿದೆ ಇದನ್ನು ಯಾರೂಕಾಣುತ್ತಿಲ್ಲವೆಂದರೆ ನಮಗೆ ನಾವೇ ಕತ್ತಲೆಯೊಳಗಿರುವುದು ಸತ್ಯ.
 ಹೊರಗಿನ ದೀಪದಿಂದ ದೀಪವನ್ನು  ಹಚ್ಚಬಹುದು.ಒಳಗಿನ ದೀಪದಿಂದ ಇನ್ನೊಂದು ದೀಪ ಹಚ್ಚಲು ಜ್ಞಾನದ ಶಿಕ್ಷಣ ಬೇಕು.
ಸತ್ಯಜ್ಞಾನವನ್ನು   ಸತ್ಯದಿಂದಲೇ  ಬೆಳಗಿಸಿಕೊಳ್ಳಬೇಕಿದೆ. ಈ ಕಷ್ಟ  ಯಾರೂ ಇಷ್ಟಪಡದೆ   ಇಂದು ಅಜ್ಞಾನದ ರಾಜಕೀಯ ಬೆಳೆದಿದೆ.

Friday, October 21, 2022

ಜ್ಞಾನದಿಂದ ಸತ್ಯದರ್ಶನ.

ಸಣ್ಣವಯಸ್ಸಿನಲ್ಲಿಯೇ ಸತ್ಯದ ಹುಡುಕಾಟ, ಸತ್ಯದ ಹಿಂದೆ ನಡೆದಷ್ಟೂ ಸಂಕಟದ ಜೊತೆಗೆ ದ್ವಂದ್ವ. ಸತ್ಯವೆಂದು
ಹೊರಗೆ ನಡೆದಷ್ಟೂ ಅಲೆದಾಟ ,ಸುಸ್ತು,ನಿರಾಸೆ ಕೊನೆಗೆ ನಿರಾಸಕ್ತಿ. ಬೆಳೆದಂತೆಲ್ಲಾ  ಹೊರಗಿನ ಶಿಕ್ಷಣದಲ್ಲಿ ಏನಿದೆ ಎನ್ನುವ ಪರೀಕ್ಷೆ. ಪರೀಕ್ಷೆಯಲ್ಲಿ ಬರೆದು ಬರೆದು ಏನೂ ಸಿಗದ ಪರಿಸ್ಥಿತಿ, ಸ್ಥಿತಿಯನ್ನು ಸರಿಯಾಗಿಟ್ಟುಕೊಳ್ಳಲು  ಹಣದ ಅಗತ್ಯತೆ.ಹಣ ಸಂಪಾದಿಸಲಾಗದ  ವಿದ್ಯೆಯ ಅರ್ಧ ಸ್ಥಿತಿ.ಕೊನೆಗೆ ಎಲ್ಲರಂತೆ ಬದುಕಬೇಕೆಂಬುದರ ನಡೆ ನುಡಿಯ ಮಧ್ಯೆ ಆತ್ಮಾವಲೋಕನ ಮಾಡಿಕೊಂಡರೆ ಎಲ್ಲೋ  ಸೋತಿರುವ ಅನುಭವ. ಆದರೂ ಎಲ್ಲಿ ಸೋತಿದ್ದು ಗೆಲುವು ಯಾವುದೆನ್ನುವ ದ್ವಂದ್ವದ  ಜೀವನದಲ್ಲಿ ಡಿಗ್ರಿ ಮುಗಿಸೋ ಹೊತ್ತಿಗೆ  ಇಷ್ಟೇ ಜೀವನ. ಏನೂ ಸರಿಯಾಗಿ ಪೂರ್ಣ ಕಲಿಯಲಾಗಿಲ್ಲ. ಎಲ್ಲರಲ್ಲಿಯೂ  ಸುಖ ದು:,ಖವಿದ್ದರೂ  ಎಲ್ಲಾ  ಸುಖಿಗಳೆನ್ನುವ ನಾಟಕದಲ್ಲಿ ಸಂತೋಷವಾಗಿದ್ದಾರೆ. ನಾಟಕರಂಗದೊಳಗೆ ಹೊಕ್ಕಿ ನೋಡಿದರೆ ಎಲ್ಲಾ ನಾಟಕಕ್ಕೆ ಸೀಮಿತ. ದೇವಾಲಯಗಳಲ್ಲಿ ದೇವರು ಕಾಣದಿದ್ದರೂ ರಾಜಕೀಯವಿದೆ. ಕೊನೆಗೆ ಸಂಸಾರದೊಳಗೆ  ಹೋದಂತೆ ಇನ್ನಷ್ಟು  ಮತ್ತಷ್ಟು ಸತ್ಯ ಶೋಧನೆ ಉತ್ತರ ಹೊರಗೆ ಸಿಗದೆ
ಒಳಗೇ ಹುಡುಕುತ್ತಾ  ಬಂದದ್ದೆಲ್ಲಾ ಬರಲಿ ಎನ್ನುವ ಹಾಗೂ ಇಲ್ಲ. ಕೊನೆಗೂ  ತನ್ನೊಳಗೆ ಇದ್ದ ಅಲ್ಪ ಸ್ವಲ್ಪ ಜ್ಞಾನವನ್ನು ಬೆಳೆಸಿಕೊಳ್ಳುತ್ತಾ ಅದನ್ನು ಮಕ್ಕಳಿಗೆ ತಿಳಿಸಿ ಬೆಳೆಸುತ್ತಾ ಹೊರಗಿನವರೂ ಹೇಳುತ್ತಾ ಹಾಡುತ್ತಾ ಕಲಿಸುತ್ತಾ ಭಜನೆಯ ಮೂಲಕ ಇನ್ನಿತರ ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ  ತೊಡಗಿಸಿ ಕೊಂಡು  ಸತ್ಯವನ್ನು ಒಳಗೇ‌ ಹುಡುಕಿಕೊಂಡು ಹೋದ ಮೇಲೆ ಸಿಕ್ಕಿದ್ದು ಸತ್ಯ ಹೊರಗಿಲ್ಲ ಒಳಗೇ ಇದೆ ಎನ್ನುವ ಜ್ಞಾನ.
ಇದನ್ನು  ಯಾರಿಗಾದರೂ ಹೇಳಿದರೆ ಹುಚ್ಚು ಎನ್ನಬಹುದಷ್ಟೆ
ಈ ಕಾಲದಲ್ಲಿ  ಇದನ್ನು ನಂಬುವುದು ಕಷ್ಟ. ಹೀಗಾಗಿ ಒಳಗಿನಿಂದ ಹರಿದುಬರುವ ಸದ್ವಿಚಾರವನ್ನು ಹೊರಗೆ ಇಳಿಸುವ ಪ್ರಯತ್ನದಲ್ಲಿ ಕಾಲಕಳೆದರೂ ಎಲ್ಲೋ ಒಂದೆಡೆ  ತಡೆಯುತ್ತಿದೆ. ಯಾರಿಗೂ ನೋವಾಗದಂತಿರಬೇಕಾದರೆ ಎಲ್ಲರನ್ನೂ ಒಪ್ಪಿ ನಡೆಯಬೇಕು. ಅದರಲ್ಲಿ ಸತ್ಯವೇ ಇಲ್ಲದೆ ಒಪ್ಪಿದರೆ ಆತ್ಮಸಾಕ್ಷಿಗೆ ವಿರುದ್ದ. ಹೀಗಾಗಿ ಈ ಭೂಮಿಯಲ್ಲಿ  ಜ್ಞಾನದ ನಂತರ ಜೀವನ‌ನಡೆಸೋದು ಕಷ್ಟದ ಕೆಲಸ. ಹಾಗಂತ ಇದಕ್ಕೆ ಉತ್ತಮ ಸತ್ಸಂಗ ದೊರೆತರೆಸಂತೋಷವಿದೆ.
 ಸತ್ಯವು  ಮೂರು ರೀತಿಯಲ್ಲಿ ಇರುತ್ತದೆ. ಒಂದು ಪೂರ್ಣ ಸತ್ಯ,ಅರ್ಧ ಸತ್ಯ ಇನ್ನೊಂದು  ವ್ಯವಹಾರಿಕ ಸತ್ಯ. ವ್ಯವಹಾರಿಕ ಸತ್ಯದಲ್ಲಿ ಹಣವಿದ್ದರೂ  ಜ್ಞಾನದ ಕೊರತೆ, 
ಪೂರ್ಣ ಸತ್ಯವೆ ಅದ್ವೈತ.
ಅರ್ಧ ಸತ್ಯ ಧ್ವೈತ. ಮಾನವ ಮಧ್ಯವರ್ತಿಯಾಗಿ  ನಿಂತಾಗ
ತನ್ನ ಜೀವನದ ಜೊತೆಗೆ ಇತರರ ಜೀವನವೂ ಮುಖ್ಯ. ತನ್ನ ಜೀವನಕ್ಕಾಗಿ ಸಂಸಾರ ಬಿಟ್ಟು ಹೊರನಡೆದವರು ಮಹಾತ್ಮ ರೆನ್ನಿಸಿಕೊಂಡರೆ  ಸಂಸಾರದ ಜವಾಬ್ದಾರಿ ಹೊತ್ತುಕೊಂಡು ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಿದ ಹಲವರು ಇನ್ನೂ ಹೆಚ್ಚಿನ ಮಹಾತ್ಮರು. ಸಂನ್ಯಾಸಿಯಾಗೋದು ಸುಲಭ.
ಸಂಸಾರಿಯಾಗಿದ್ದು  ಅಧ್ಯಾತ್ಮ ದೆಡೆಗೆ ನಡೆಯೋದು ಕಷ್ಟ.ಇಲ್ಲಿ  ಜೀವ ನಮ್ಮ ಒಳಗಿದ್ದರೂ ಜೀವನ ಹೊರಗಿದೆ.
ಒಳಗಿನ ಜೀವಕ್ಕಾಗಿ ಜೀವನವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಬೇಕಿದೆ. ಜೀವನ ಎಂದರೆ ಜೀವಿಗಳ ವನ. ಪ್ರತಿಯೊಂದು ಜೀವಿಗೂ ತನ್ನದೇ ಆದ ಅಸ್ತಿತ್ವ ಇದೆ.ಮಾನವ
ಮಹಾತ್ಮನಾದಾಗಲೇ ಆ ಜೀವದ ಬಗ್ಗೆ ಚಿಂತನೆ ನಡೆಸುವ ಜ್ಞಾನ ಬರೋದು. ಇಲ್ಲವಾದರೆ ಜೀವಿಗಳನ್ನು ದುರ್ಭಳಕೆ ಮಾಡಿಕೊಂಡಾದರೂ ಜೀವನ‌ ನಡೆಸುತ್ತಾನೆ.  ಒಟ್ಟಿನಲ್ಲಿ ಯುಗಯುಗದಿಂದಲೂ ಭೂಮಿಯಲ್ಲಿ ಜೀವನ ನಡೆಯುತ್ತಿದೆ. ಅಂದಿನ‌ ಜ್ಞಾನಕ್ಕೆ ತಕ್ಕಂತೆ   ಶಿಕ್ಷಣವೂ ಇತ್ತು.ಆದರೆ ಇಂದು ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡದೆ ಅಜ್ಞಾನ ಬೆಳೆದಿದೆ.ಅಜ್ಞಾನದಲ್ಲಿ  ಸತ್ಯಾಸತ್ಯತೆಯನ್ನು  ಅರ್ಧಕ್ಕೆ ನಿಲ್ಲಿಸಿ
ಆಳುವುದರಿಂದ  ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ. ಸರ್ವಜ್ಞ  ಕೇವಲ ಭಗವಂತನೊಬ್ಬನೆ.ಅವನೊಳಗಿರುವ ಜೀವಾತ್ಮರೆಲ್ಲರಲ್ಲಿಯೂ ವಿಶೇಷವಾಗಿ ಒಂದು ಸಣ್ಣ ಜ್ಞಾನವಿದೆ.ಅದನ್ನು ಗಮನಿಸಿ ಪೋಷಣೆ ಮಾಡಿ ಬೆಳೆಸುವ ಶಿಕ್ಷಣ ನೀಡಿದಾಗಲೇ ಒಳಗಿರುವ ಸತ್ಯದ ಜೊತೆಗೆ ಹೊರಗಿನ ಸತ್ಯ ತಿಳಿದು  ಅಸತ್ಯವನ್ನು ಹಿಮ್ಮೆಟ್ಟಿಸಬಹುದೆನ್ನುವರು ಮಹಾತ್ಮರುಗಳು. ನಾನಿದ್ದಾಗ  ದೇವರು ಕಾಣೋದಿಲ್ಲ.
ನಾನು ಹೋದ ಮೇಲೆ ದೇವರುಕಾಣೋದು ಎಂದರೆ ನಮ್ಮೊಳಗೇ ಅಡಗಿರುವ ದೈವತ್ವವನ್ನು ಬೆಳೆಸಿಕೊಳ್ಳಲು 
ನಾನೇ  ಅಡ್ಡದಾರಿ ಹಿಡಿದರೆ  ತತ್ವ ಕಾಣೋದಿಲ್ಲ.  
ತಂತ್ರವೇ ಕಾಣೋದು.ತಂತ್ರ ಹೊರಗಿದೆ ತತ್ವ ಒಳಗಿದೆ.  ಇದೊಂದು  ನನ್ನ ಜೀವನಾನುಭವದ ಸತ್ಯ ವಿಚಾರವಾಗಿದೆ. ಇಲ್ಲಿ  ನಾವು ಹೊರಗೆ ಕಾಣುವ ರಾಜಕೀಯದಲ್ಲಿ ಧರ್ಮ ಸತ್ಯವಿಲ್ಲ.ಆದರೂ ಅದರ ಹಿಂದೆ ನಡೆಯುತ್ತಾ ನಮ್ಮನ್ನು  ನಾವೇ ಹಿಂದುಳಿದರೆ ಪರರು ಬೆಳೆಯುವುದರಲ್ಲಿ ತಪ್ಪಿಲ್ಲ.
ಪರರಲ್ಲಿರುವ‌ ಒಗ್ಗಟ್ಟು ಒಂದೆ ಧರ್ಮ, ಶಿಕ್ಷಣವು ನಮ್ಮಲ್ಲಿ ಇಲ್ಲವಾದರೆ  ತತ್ವದ ಪ್ರಕಾರ ಒಗ್ಗಟ್ಟಿನಲ್ಲಿದೆ ಬಲ. ಎಲ್ಲಾ ಒಂದೇ ಎನ್ನುವ ಹಿಂದೆ ರಾಜಕೀಯವಿರಬಾರದು. ರಾಜಯೋಗದ ಹಿಂದೆ ನಡೆದರೆ  ಯೋಗ ಕೂಡಿಬರುವುದು.
ಯೋಗವೆಂದರೆ ಕೂಡುವುದು ಸೇರುವುದಾದರೆ ಆ ನಿರಾಕಾರ ಬ್ರಹ್ಮನ ಸೇರಲು ಯೋಗಬೇಕು. ಎಲ್ಲರಲ್ಲಿಯೂ
ಸತ್ಯವಿದೆ  ಕಂಡುಕೊಳ್ಳಲು ಕಷ್ಟವಾಗಿದೆಕಾರಣ ಹೊರಗಿನ ಅಸತ್ಯವನ್ನು ನಂಬಿಕೊಂಡು ಮುಂದೆ ದೂರ ದೇಶದವರೆಗೂ
ಜೀವ ಹೋಗಿದೆ.ತಿರುಗಿ ಬರೋದು ಕಷ್ಟ.ಕೊನೆಪಕ್ಷ ಹತ್ತಿರವಿರುವ ಜೀವಕ್ಕೆ ಸತ್ಯಜ್ಞಾನದ ಶಿಕ್ಷಣ ನೀಡಿ ಬೆಳೆಸಿದರೆ
ಮುಂದೆ  ಬೆಳೆದು  ನಿಜವಾದ ಮನುಕುಲದ ಉದ್ದಾರ ಸಾಧ್ಯ.
ಆಗೋದನ್ನು ತಡೆಯಲಾಗದು, ಆಗೋದೆಲ್ಲಾ ಒಳ್ಳೆಯದಕ್ಕೆ
ಯಾಕೆ ಆಗುತ್ತಿದೆ ಎನ್ನುವ ಬಗ್ಗೆ ಇದ್ದಾಗಲೆ ಆತ್ಮಾವಲೋಕನ ಮಾಡಿಕೊಂಡರೆ ಎಲ್ಲವೂ ನನ್ನಿಂದಲೇ, ನನಗಾಗಿಯೇ,ನಾನೇ
ಮಾಡಿಕೊಂಡಿರುವ ವ್ಯವಸ್ಥೆ. ಈ ಅವಸ್ಥೆಗೂ ನಾನೇ ಕಾರಣ ಎನ್ನುವ ಸತ್ಯ ತಿಳಿಯುವುದೇ ನಿಜವಾದ ಅಧ್ಯಾತ್ಮ. ನನ್ನ ನಾ ತಿಳಿದ ಮೇಲೇ ಪರರನ್ನು ತಿಳಿಯಲು ಸಾಧ್ಯ. ಆಂತರಿಕ ಶಕ್ತಿ ಬಿಟ್ಟು ಹೊರನಡೆದರೆ ಭೌತಿಕ ಶಕ್ತಿ ಬೆಳೆಯುತ್ತದೆ. ಇದಕ್ಕೆ ಶ್ರೀ ಶಂಕರ ಭಗವದ್ಪಾದರು ಜಗತ್ತು ಮಿಥ್ಯ ಎಂದರು.
ಬದಲಾವಣೆ ಜಗದ ನಿಯಮ. ಮೇಲೆ ಹೋದವರು ತಿರುಗಿ ಬರಲೇಬೇಕು.ಕೆಳಗಿದ್ದವರು ಮೇಲೆ ಹೋಗಲೇಬೇಕು. ಭೂಮಿಯ ಒಂದು ದ್ರುವ ಇನ್ನೊಂದು ಧ್ರುವವನ್ನು   ಸೇರದಿದ್ದರೂ ಇರೋದು ಒಂದೇ ಭೂಮಿ. ನಾಣ್ಯದ ಎರಡೂ ಮುಖ  ಒಟ್ಟಿಗಿದ್ದರೂ ಒಂದರ ಹಿಂದೆ ಇನ್ನೊಂದು ಇರುತ್ತದೆ. ಆದರೆ ಜ್ಞಾನದ ನಂತರ ವಿಜ್ಞಾನ ಬೆಳೆದರೆ  ಎರಡರ ಸಮಾನತೆ ಅರ್ಥ ವಾಗಬಹುದು. ಕಾರಣ ಜ್ಞಾನ  ಕಣ್ಣಿಗೆ ಕಾಣದಿದ್ದರೂ ಅನುಭವಕ್ಕೆ ಬರುತ್ತದೆ.  ಇದಕ್ಕೆ ಹೇಳೋದು  ಕಣ್ಣಿಗೆ ಕಾಣೋದೆಲ್ಲ ಸತ್ಯವಲ್ಲ. ಕಾಣದಿರೋದು ಅಸತ್ಯ ವಲ್ಲ. ಸತ್ಯಾಸತ್ಯತೆಯನ್ನು  ಎಷ್ಟು ಬಗೆದರೂ‌ ಬೆಳೆಯುತ್ತದೆ.  ಜೀವ ಭೂಮಿಗೆ ಬಂದ ಉದ್ದೇಶ ಒಂದೇ ಜೀವನ್ಮುಕ್ತಿ ಎನ್ನುವ ಪರಮಸತ್ಯದ  ಹಿಂದೆ ನಡೆಯೋದು  ಅಲ್ಪಮಂದಿ. ತಮ್ಮ ಆಸೆ ತೀರಿಸಿಕೊಳ್ಳಲು ಸಾಕಷ್ಟು ಜೀವ ಕಾಯುತ್ತವೆ. ತೀರದ ಪಕ್ಷದಲ್ಲಿ ಮತ್ತೆ ಮತ್ತೆ ಹುಟ್ಟುವುದು.ಹೀಗಾಗಿ ಆಸೆಯು ಸಾತ್ವಿಕವಾಗಿದ್ದರೆ  ಶಾಂತಿ.
ರಾಜಸವಾಗಿದ್ದರೆ ಕ್ರಾಂತಿ. ತಾಮಸಗುಣವಾಗಿದ್ದರೆ ಅಶಾಂತಿ.
ಆಸೆಯೇ ದು:ಖಕ್ಕೆ ಕಾರಣವೆಂದರು. ಅತಿಆಸೆಯೇ ದು:ಖಕ್ಕೆ ಕಾರಣವೆನ್ನಬಹುದಷ್ಟೆ.ಆಸೆಯಿಲ್ಲದೆ ಜನ್ಮವಿಲ್ಲ.
ಜನ್ಮಪಡೆದವರೆಲ್ಲರ ಆಸೆಯೂ ಸಮಾನವಾಗಿರಲ್ಲ. ಅವರವರ ಆಸೆಗೆ ತಕ್ಕಂತೆ  ಪರಮಾತ್ಮ ನಡೆಸುವಾಗ  ಆಸೆಯು ದುರಾಸೆಯಾಗದಂತೆ ತಡೆಯುವುದೇ ಜ್ಞಾನ.
ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ. ವಿದ್ಯೆಯಿಲ್ಲದೆಯೂ ಜ್ಞಾನಿಗಳಿದ್ದರು. ಆಂತರಿಕವಾಗಿರುವ ಸಾಮಾನ್ಯಜ್ಞಾನ  ಎಲ್ಲರ ಸಂಪತ್ತು. ಸಂಪತ್ತನ್ನು ವೃದ್ದಿಗೊಳಿಸಿಕೊಳ್ಳಲು ಒಳಗೆ ನಡೆದರೆ ಆತ್ಮಜ್ಞಾನ, ಹೊರಗೆ ಬಂದರೆ  ಬೌತಿಕದ ವಿಜ್ಞಾನ.
ಎರಡನ್ನೂ ಅರ್ಥ ಮಾಡಿಕೊಳ್ಳಲು ಬೇಕಿದೆ ಸಾಮಾನ್ಯಜ್ಞಾನ
ಅತಿಯಾದರೆ ಗತಿಗೇಡು. ಮಾನವ ಕಾರಣಮಾತ್ರದ ಮಧ್ಯವರ್ತಿ ಎಂದಾಗ ಇಲ್ಲಿ ನಾನ್ಯಾರು ಉತ್ತರವಿದೆ. ನನ್ನೊಳಗಿರುವ  ದೇವಾಸುರರ ಶಕ್ತಿಯನ್ನು  ತಿಳಿದು ನಡೆದರೆ
ನನ್ನ ಸ್ವಂತ ಬುದ್ದಿಗೆ ಕೆಲಸವಿದೆ. ಇಲ್ಲವಾದರೆ ಕೆಲಸವಿಲ್ಲದೆ ಜಡ್ಡುಗಟ್ಟುತ್ತದೆ. ಲೋಕದ ಡೊಂಕನ್ನು ನೀವ್ಯಾಕೆ ತಿದ್ದುವಿರಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದರು ಶರಣರು.ಪರಮಾತ್ಮನಿಗೆ ಶರಣಾಗೋದು ಬಹಳ ಕಷ್ಟ. ಪರಕೀಯರಿಗೆ ಶರಣಾದರೆ ನಷ್ಟ. ಇಬ್ಬರ ನಡುವಿನ‌ಮಾನವನಿಗೆ ಸಂಕಷ್ಟ ತಪ್ಪಿದ್ದಲ್ಲ. 
ದೇವತೆಗಳನ್ನು  ಪೂಜಿಸುವವರು ದೇವಲೋಕ ಸೇರಿದರೆ
ಪಿತೃಗಳನ್ನು ಪೂಜಿಸಿದರೆ ಪಿತೃಲೋಕ, ಭೂತಗಳನ್ನು ಪೂಜಿಸಿದರೆ ಭೂತಲೋಕವಾದರೆ  ಕೃಷ್ಣನ ಭಕ್ತರಿಗೆ ವೈಕುಂಠ ಎನ್ನುವುದು ಶ್ರೀ ಕೃಷ್ಣನ ಸಂದೇಶ. ಇದನ್ನು ಭೂಲೋಕದಲ್ಲಿದ್ದು ಎಲ್ಲಾ ತಿಳಿಯಬೇಕೆಂಬುದಷ್ಟೆ ಸತ್ಯ.
ಅವರವರ ದೇವರು ಅವರನ್ನು ನಡೆಸುತ್ತಾನೆ.ಪರಕೀಯರ ದೇವರ ಹಿಂದೆ ನಡೆದರೂ ನಡೆಸುತ್ತಾನೆ. ಆದರೆ ಮೂಲ ದೇವರು ಹಿಂದುಳಿದರೆ  ತಿರುಗಿ ಬರೋದಷ್ಟೆ ಕಷ್ಟ. ಒಟ್ಟಿನಲ್ಲಿ
ಎಲ್ಲಾ ದೇವರಿರೋದೂ ಒಂದೇ ಶಕ್ತಿಯೊಳಗೆ. ಒಳಗಿನ ಶಕ್ತಿಯನ್ನು  ಒಳಗೇ ಹುಡುಕಿದರೆ ಸಿಗೋದು. ಹೊರಗೆ ಹುಡುಕಿದರೆ ಸಿಗೋದಿಲ್ಲ.ಹಾಗೆ ಒಳಗಿನ ಸತ್ಯ ಬಿಟ್ಟು ಹೊರಗೆ ನಡೆದರೆ ದೇವರು ಸಿಗೋದಿಲ್ಲವೆನ್ನುವುದೇ ಅದ್ವೈತ. ದ್ವೈತವೂ ಒಳಗಿರುವಾಗ ಬೇರೆ ಬೇರೆ ಆಗೋದಿಲ್ಲ.  ಇದನ್ನು ಅನುಭವದಿಂದ ಮಾತ್ರ  ತಿಳಿಯಬೇಕಿದೆ. ದೇಶದೊಳಗಿರುವ
ಎಲ್ಲಾ ದೇಹದಲ್ಲಿಯೂ  ದೇಶಭಕ್ತಿ ಇಲ್ಲದಿದ್ದರೆ ದೇಶ ಬೇರೆ ದೇಹ ಬೇರೆ . ಮುಕ್ತಿ ಯಿಲ್ಲ.ಹಾಗೆ ದೇವರೂ ಕೂಡ..
ತತ್ವದೊಳಗೆ ಇರೋವಾಗ ತಂತ್ರವಿದ್ದರೆ ಸಿಗೋದಿಲ್ಲ.

ಲೇಖನದಿಂದಾಗುವ ಬದಲಾವಣೆ ಏನು?

ಯಾರೋ ಮಹಾಪ್ರಚಾರಕರೊಬ್ಬರು ಒಂದು ಲೇಖನದ ಮೂಲಕ ವಾಸ್ತವದಲ್ಲಿ ನಡೆಯುತ್ತಿರುವ ಅಧರ್ಮ ಅನ್ಯಾಯ, ಅಸತ್ಯವನ್ನು ವಿವರಿಸುತ್ತಾ  ರಾಜಕಾರಣಿಗಳನ್ನು ಧಾರ್ಮಿಕ ಮುಖಂಡರನ್ನು, ಭಯೋತ್ಪಾದಕರನ್ನು ಹಾಗು ಜನಸಾಮಾನ್ಯರನ್ನು  ಎಚ್ಚರಿಸುವತ್ತ   ಬರೆದಿದ್ದರು. ಬರವಣಿಗೆಯು ವಾಸ್ತವತೆಯನ್ನು ಎತ್ತಿ ಹಿಡಿಯಬಹುದು.
ಪುರಾಣ ಇತಿಹಾಸದ ರಾಜಕೀಯವಿರಬಹುದು, ಮುಗಿದ ಕಥೆ ಕಾದಂಬರಿ ಯ ಪಾತ್ರವಾಗಬಹುದು, ಮನರಂಜನೆಯಾಗಬಹುದು  ಹೆಚ್ಚು  ಹೆಚ್ಚು ಓದಿದಷ್ಟೂ ಮನಸ್ಸು ಶಾಂತವಾಗೋದಾದರೆ ಉತ್ತಮ.
 ಅಶಾಂತಿಯಿಂದ ಹೊರಗೆ ಬಂದರೆ ಅಧಮ. ಕೇವಲ ಮನರಂಜನೆ, ಸಮಯ ದೂಡುವುದಾಗಿದ್ದರೆ  ವ್ಯರ್ಥ. 
ಮಧ್ಯವರ್ತಿ ಮಾನವನಿಗೆ ತನ್ನೊಳಗೆ ಇದ್ದು
 ಅಡಿಸುವ ಎಷ್ಟೋ ಶಕ್ತಿಗಳ ಪರಿಚಯವಿಲ್ಲ. ಹೊರಗೆ ನಿಂತು ಆಟವಾಡಿಸುವವರ ಪರಿಚಯ ಸಾಕಷ್ಟು ಇದ್ದರೂ  ಅವರನ್ನು ಸರಿಯಾಗಿ ತಿಳಿಯುವ ಜ್ಞಾನವಿಲ್ಲ. 
ಬರವಣಿಗೆಯಿಂದ  ಜನರಲ್ಲಿ ಜ್ಞಾನ ಮೂಡುವಂತಿದ್ದರೆ ಇತ್ತೀಚಿನ ದಿನಗಳಲ್ಲಿ ಅಸಂಖ್ಯಾತ ಪುಸ್ತಕಗಳು ಪ್ರಕಟವಾಗಿ ಮಾರಾಟವಾಗಿ ಜನರ ಕೈ ಸೇರಿ ಓದುತ್ತಿದ್ದಾರೆ.ಆದರೆ, ಬರವಣಿಗೆಯು ತಮ್ಮ ಸ್ವಂತ ಜ್ಞಾನದಿಂದ ಅನುಭವದಿಂದ ತಿಳಿದ ವಿಚಾರವಿದ್ದು ಸಾಮಾನ್ಯಜ್ಞಾನ ಬೆಳೆಸುವಂತಿದ್ದರೆ ಮಾತ್ರ  ಮಾನವೀಯತೆ ಎಂದರೆ ಏನು? ಮಾನವನ ಜನ್ಮಕ್ಕೆ ಕಾರಣವೇನು? ನಾನ್ಯಾರು? ನನ್ನಿಂದ ಏನಾಗಬೇಕು? ಎಲ್ಲಿದ್ದೇನೆ? ಏನು ಮಾಡಿದರೆ ಸರಿ.ಯಾವ ಕಡೆ ನಡೆಯಬೇಕು? ದೇವರು ಯಾರು? ಅಸುರತೆ ಎಲ್ಲಿದೆ? ನನ್ನ ನಾ ತಿಳಿಯೋದೆಂದರೆ ಏನು? ಈ ಎಲ್ಲಾ ಪ್ರಶ್ನೆಗೆ ಉತ್ತರ ಒಳಗಿರುವ ಸತ್ಯಜ್ಞಾನದಿಂದ ಕಂಡುಕೊಳ್ಳಲು ಸಾಧ್ಯವೆನ್ನುವ ದಾಸರು,ಶರಣರು,ಸಂತರು,ಮಹಾತ್ಮರುಗಳು,ದೇವ
ಮಾನವರು,ಶಕ್ತಿ ದೇವತೆಗಳು ಕಾಣಬಹುದಿತ್ತು.ಆದರೆ ವಿಪರ್ಯಾಸವೆಂದರೆ ಅವರನ್ನು ಹೊರಗೆಳೆದು ಮಧ್ಯೆ ನಿಲ್ಲಿಸಿ
ವ್ಯವಹಾರಕ್ಕೆ ಇಳಿದಿರುವ ನಮಗೆ ಹಣ ಇದೆ ಅವರ ಜ್ಞಾನವಿಲ್ಲ. ಅಧಿಕಾರವಿದೆ  ಸರಿಯಾದ ದಾರಿ ಹಿಡಿದಿಲ್ಲ. ದೇಶವಿದೆ ದೇಶದ ಶಿಕ್ಷಣ ಬೆಳೆಸಲಾಗಿಲ್ಲ. ಸಹಕಾರವಿದೆ ಇದಕ್ಕೆ  ಆಂತರಿಕ  ಶಕ್ತಿಯ  ಬೆಂಬಲವಿಲ್ಲ. ಇಲ್ಲ ಇಲ್ಲ ಎನ್ನುವ ಜೊತೆಗೆ ಅಲ್ಲ ಅಲ್ಲ ಎನ್ನುವವರೂ ಬೆಳೆದು  ಅಂತರದಲ್ಲಿ ಮಧ್ಯವರ್ತಿಗಳು ಇವರಿಬ್ಬರ ನಡುವೆ ಅಂತರ ಬೆಳೆಸಿಕೊಂಡು
ಶಿಕ್ಷಣ, ಧರ್ಮ, ದೇಶವನ್ನು ವಿದೇಶ ಮಾಡುತ್ತಾ ಹೋದರೆ ಇಬ್ಬರ  ಜಗಳದಲ್ಲಿ ಮೂರನೆಯವರಿಗೆ   ಲಾಭವಾಗುತ್ತಿದೆ.
ಈ ಮೂರನೆಯವರಿಗೆ ಸರಿಯಾದ ಸತ್ಯಾಸತ್ಯತೆಯನ್ನು  ಅರ್ಥ ಮಾಡಿಕೊಳ್ಳಲು ಕಷ್ಟ. ತಮ್ಮ ಸ್ವಾರ್ಥ ವಷ್ಟೆ ಮುಖ್ಯ.
ಹೀಗಾಗಿ ಮನುಕುಲವು ಅತಂತ್ರಸ್ಥಿತಿಗೆ  ತಲುಪುತ್ತದೆ. ಒಂದು ತತ್ವ ಮೂರಾದರೂ ಕೂಡಿದರೆ ಒಂದೇ. ಆದರೆ ಅಸಂಖ್ಯಾತ ತಂತ್ರವನ್ನು ಒಂದು ಮಾಡಲಾಗದು. ಅದಕ್ಕಾಗಿ ಮೊದಲು ತತ್ವಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಬೇಕಿದೆ ಶಿಕ್ಷಣ. ನಂತರ ಅವರವರ  ಪ್ರತಿಭೆ,ಜ್ಞಾನದಿಂದ ತಂತ್ರವನ್ನಾಗಲಿ,ಯಂತ್ರವನ್ನಾಗಲಿ ಇತಿಮಿತಿಯಲ್ಲಿ ಬಳಸಿದರೆ ಸ್ವತಂತ್ರ ಜ್ಞಾನ‌  ಒಳಗಿರುತ್ತದೆ. ಅರ್ಧ ಸತ್ಯದಲ್ಲಿ ಆಳಿ ಅಳಿಸಿದರೆ ಅತಂತ್ರಸ್ಥಿತಿಗೆ ಜೀವ ತಲುಪಿದರೆ ಭೂತವೆ ಆಗೋದು. ಭೂತವೆಂದರೆ ಗೊತ್ತಲ್ಲ.ಕೇವಲ ಹಿಂದಿನದ್ದನ್ನೇ ಕೆದಕಿಕೊಂಡು ತನಗೂ ಮುಕ್ತಿಯಿಲ್ಲದೆ ಇತರರಿಗೂ ಮುಕ್ತಿ ಕೊಡದೆ  ಅಲೆಯುವುದೆಂದರ್ಥ. ಇಲ್ಲಿ ಸಾಕಷ್ಟು ಭೂತಗಳು‌
ಮಾನವನನ್ನು ಆವರಿಸಿದೆ. ಇವುಗಳ ಉದ್ದೇಶ ಯಾವುದೆನ್ನುವ ಬಗ್ಗೆ ತಿಳಿಯಲು ಜ್ಞಾನವಿರಬೇಕಷ್ಟೆ.ಒಂದೇ ಭೂಮಿಯೊಳಗೆ ದೇವರು,ದೆವ್ವಗಳು,ಭೂತಗಳು, ಪಿತೃಗಳು ನಡೆಸಿರುವ ಈ ಜಗತ್ತನ್ನು ಮಾನವರು ಆಳಲಾಗುವುದೆ? ಆಳಿದರೂ ಅಗೋಚರ ಶಕ್ತಿಯ ಸಹಕಾರವಿಲ್ಲದೆ ಸಾಧ್ಯವಿಲ್ಲ. ಹಾಗಾದರೆ ಇಂದಿನ‌ ಈ ಸ್ಥಿತಿಗೆ ಅಗೋಚರ ಶಕ್ತಿಗಳೇ ಕಾರಣ ನಾನಲ್ಲ. ನಾನ್ಯಾರು ಪ್ರಶ್ನೆಗೆ ಉತ್ತರವಿಷ್ಟೆ ನಾನು ಕಾರಣ
ಮಾತ್ರದ ಒಬ್ಬ ಮಾನವ. ಮಾನವೀಯತೆ ಇರಬೇಕು  ಅದು ಅಮಾನುಷರಿಗೆ ಇಷ್ಟವಾಗುವುದಿಲ್ಲ.ಇದಕ್ಕಾಗಿ  ಈ ಅಧರ್ಮ, ಅನ್ಯಾಯ  ಅಸತ್ಯ,  ಭ್ರಷ್ಟಾಚಾರ  ಮುಗಿಲು
ಮುಟ್ಟಿದೆ. 
ಭೂಮಿ ಮೇಲಿದ್ದು ಸಾಧಿಸಿದ್ದು ಏನಾಗುತ್ತಿದೆ? 
ಸಾಧನೆ ಅಧ್ಯಾತ್ಮ ದೆಡೆಗೆ ಹೋದರೆ ನಾನಿರೋದಿಲ್ಲ. ಭೌತಿಕದ ರಾಜಕೀಯದೆಡೆಗೆ ಹೋದರೆ ನಾನೇ ಕಾಣೋದು ಅಗೋಚರ ಶಕ್ತಿಯಲ್ಲ. ಸೂಕ್ಮವಾಗಿರುವ  ವಿಚಾರ ವಿಜ್ಞಾನದ ಕಣ್ಣಿಗೆ ಕಾಣದು.ವಿಜ್ಞಾನದ ಕಣ್ಣಿಗೆ ಕಂಡದ್ದು ಕೇವಲ ಭ್ರಮೆ. ಜನಮರುಳೋ ಜಾತ್ರೆಯೋ ಎಂದಂತಿದೆ ಸಮಾಜ. ಒಳಗಿನ ಸತ್ಯ ಬಿಟ್ಟು ಹೊರಗೆ ಹುಡುಕಿದರೆ ಸಿಗೋದಿಲ್ಲ. ತತ್ವ ಬಿಟ್ಟು ತಂತ್ರದಿಂದ ಭೂಮಿಯಲ್ಲಿ  ನಡೆಸೋದು ನಾಟಕವಷ್ಟೆ.
ಪಾತ್ರಧಾರಿಗಳ ಹಿಂದಿನ ಸೂತ್ರಧಾರ ಕಾಣೋದಿಲ್ಲವಲ್ಲ. 
ಇಂದಿನ‌ಪರಿಸ್ಥಿತಿಗೆ ನಮ್ಮ ಸಹಕಾರವೇ ಕಾರಣ. ನಮ್ಮ ಸ್ವಾರ್ಥ ಚಿಂತನೆಗಳೇ ಕಾರಣ ನಾವೇ ಬೆಳೆಸಿಕೊಂಡು ಬಂದ  ಭಿನ್ನಾಭಿಪ್ರಾಯವೆ ಕಾರಣ.  ಇವುಗಳಿಗೆಲ್ಲ ರಾಜಕೀಯವೆ ಕಾರಣವಾದಾಗ  ಅದರ ಹಿಂದೆ ನಿಂತು  ನಮಗಮನಗನು ನಾವು ಬದಲಾಯಿಸಿಕೊಳ್ಳದಿದ್ದರೆ ಬದಲಾವಣೆ ಜನ್ಮ ಜನ್ಮಕ್ಕೆ
ಸಾಧ್ಯವೆ? ಹಿಂದಿನ ಸಾಲವೇ ಬೆಟ್ಟದಷ್ಟಿದೆ ಇದನ್ನು ತೀರಿಸದೆ ಮತ್ತಷ್ಟು ಸಾಲದ ಸುಳಿಗೆ ಜೀವ ಹೋದರೆ ಮುಕ್ತಿ ಎಲ್ಲಿರುತ್ತದೆ? ಮಾನವ‌ಮುಕ್ತಿ ಕೊಡುವನೆ? ತಂತ್ರದಿಂದ ಮುಕ್ತಿ ಸಿಗುವುದೆ? ತತ್ವದಿಂದಲೆ? ಸ್ವತಂತ್ರ ಜ್ಞಾನವನ್ನು ಬಿಟ್ಟು ಹೊರಗಿನ‌ವಿಜ್ಞಾನ ಹಿಡಿದರೆ  ಹೊರಗಿನವರ ಹಿಂದೆ ಹೋಗಬೇಕು. ಒಳಗಿರುವ ಶಕ್ತಿ ಹಿಂದುಳಿಯುವುದು. ಇದನ್ನು ಮಹಾತ್ಮರುಗಳು ‌ತಿಳಿದು ನಡೆದು ನುಡಿದಿದ್ದರು. 
ಪ್ರಚಾರಕರ ಮನಸ್ಥಿತಿ,ಪರಿಸ್ಥಿತಿ,ಆರ್ಥಿಕವಾಗಿ ಬೆಳೆಯುತ್ತಿದ್ದರೆ  ಭೌತಿಕ ಸಾಧನೆ. ಜ್ಞಾನದಿಂದ ಬೆಳೆದಿದ್ದರೆ 
ಅಧ್ಯಾತ್ಮ ಸಾಧನೆ. ಇದರ ಬಗ್ಗೆ ಜನಸಾಮಾನ್ಯರು ದೃಷ್ಟಿ ಹರಿಸುವುದಕ್ಕೂ ಬೇಕಿದೆ ಆತ್ಮ ಜ್ಞಾನದ ಶಿಕ್ಷಣ. ಇಲ್ಲವಾದರೆ  ಕೇವಲ ವ್ಯಾಪಾರದ ಶಿಕ್ಷಣವಾಗೇ  ಜೀವ ಮಾರಾಟ
ವಾಗುತ್ತದೆ. ಎಲ್ಲಿಗೆ  ನಡೆದಿದೆ ಮನುಕುಲ? ಆಕಾಶ ಭೂಮಿ ಪಾತಾಳ.ಕೆಳಗಿಳಿದ ಅಜ್ಞಾನ ಜ್ಞಾನದಿಂದ ಮೇಲೇರಲು ಆಂತರಿಕ  ಶಕ್ತಿಯನ್ನು ಅರ್ಥ ಮಾಡಿಕೊಂಡರೆ  ಸಾಧ್ಯ
ವೆನ್ನುವರು ಮಹಾತ್ಮರು.ಜ್ಞಾನ ಬಂದಾಗಿನಿಂದ  ಸತ್ಯವನ್ನು ಅನುಭವದಿಂದ ತಿಳಿದು ಲೇಖನದ ಮೂಲಕ ತಿಳಿಸುವ ಪ್ರಯತ್ನ  ನಡೆದಿದೆ.ಇದನ್ನುಅಪಾರ್ಥ ಮಾಡಿಕೊಂಡವರು 
ಹಲವರು,ರಾಜಕೀಯವಾಗಿ ತಿಳಿದವರು ಹಲವರು,ಅರ್ಥ ವಾಗದೆ ಹೋದವರು ಹಲವರು ಅರ್ಥ ವಾದರೂ  ಪ್ರತಿಕ್ರಿಯೆ ನೀಡದಿರುವವರು ಹಲವರು, ತಡೆಯಲು ಪ್ರಯತ್ನಿಸಿದವರು ಹಲವರು. ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟವರು ಕೆಲವರು,  ಹೀಗೇ‌ ದೇಶದ ಸಮಸ್ಯೆಗಳನ್ನು ‌ನಾನಾ ರೀತಿಯಲ್ಲಿ  ಹೇಳುವವರು  ಹಲವರಿದ್ದರೂ ನಮ್ಮ ಸಮಸ್ಯೆಗೆ ನಾವೇ ಕಾರಣವೆನ್ನುವ ಸತ್ಯ ನಾವೇ ತಿಳಿಯುವುದೇ ಕಷ್ಟ. ಇದನ್ನು ತಿಳಿದು ಪರಿಹಾರ ಒಳಗಿನಿಂದಲೇ ಕಂಡುಕೊಳ್ಳಲು  ಅಧ್ಯಾತ್ಮ ದಿಂದ ಮಾತ್ರ ಸಾಧ್ಯವೆನ್ನುತ್ತಾರೆ  ಮಹಾತ್ಮರುಗಳು. ಯಾವುದೇ ಮಧ್ಯವರ್ತಿಗಳು  ಇದಕ್ಕೆ  ಸಹಕರಿಸಿದರೂ ಪೂರ್ಣ ಸತ್ಯಕ್ಕೆ ನಾವೇ ನೇರವಾಗಿ ಸರಿಮಾರ್ಗ ಹಿಡಿಯುವುದು ಅಗತ್ಯ. ಇದಕ್ಕೆ ನಮ್ಮ ಹಿಂದಿನ ಗುರು ಹಿರಿಯರ ಧರ್ಮ ಕರ್ಮವು ಶುದ್ದವಾಗಿದ್ದರೆ ಸುಲಭ. ಅದರೊಳಗೆ ರಾಜಕೀಯವೆ ಇದ್ದರೆ
ಕಷ್ಟ. ರಾಜಪ್ರಭುತ್ವದ ಸಾತ್ವಿಕ ಶಿಕ್ಷಣವಿಲ್ಲ ರಾಜರಂತೆ ಜೀವನ ನಡೆಸಬೇಕೆಂಬ ಆಸೆ. ಪ್ರಜಾಪ್ರಭುತ್ವದ ಅರ್ಥ ತಿಳಿದಿಲ್ಲ.ಕಾಲ ಬದಲಾದಂತೆ  ಮಾನವನ ಜ್ಞಾನವೂ ಬದಲಾಗುತ್ತಿದೆ...ಇದು ಅಜ್ಞಾನವಾದರೆ   ಭೌತಿಕ ಸತ್ಯವಷ್ಟೆ ಕಾಣೋದು.
ಬ್ರಹ್ಮಪುರಾಣ,ವಿಷ್ಣುಪುರಾಣ,ಶಿವಪುರಾಣದಲ್ಲಿ ಶಕ್ತಿ ಪುರಾಣವಿದೆಯೆ? ಇದ್ದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಈ ಹಿಂದಿನ ಇತಿಹಾಸದ ಪುರಾಣಗಳ  ಹಿಂದಿನ ಸತ್ಯ ಅರ್ಥ ವಾಗುತ್ತದೆ.ಭೂಮಿ ಮೇಲೆ ನಿಂತು ಆಳುವ ಮೊದಲು ಜ್ಞಾನವಿರಬೇಕು. ಸ್ಥಿತಿಯನ್ನು ಸರಿಯಾಗಿ ತಿಳಿಯಬೇಕು. ಆಗ ನಾವು ಕೇವಲ ಮಾನವರೆನ್ನುವ   ಸತ್ಯ ತಿಳಿದು ಮಹಾತ್ಮರನ್ನು  ತಿಳಿಯಬಹುದು.ನಾವೇ ದೇವರಾದರೆ ದೈವತ್ವ ಅಗತ್ಯ.ಅಸುರರ ಹಿಂದೆ ನಡೆದರೆ ದೈವ ಶಕ್ತಿ ವ್ಯರ್ಥ. ಯಾರ ಹಿಂದೆ ಯಾರು ನಡೆದಿರೋದು ಗಮನಿಸಿಸಹಕರಿಸಿ ಬೆಳೆಸಿದರೆ ಅದೇ ನಾವಾಗಿರುತ್ತೇವೆ. 
ಭಾರತದೊಳಗಿದ್ದು ವಿದೇಶ ಬೆಳೆಸಿದರೆ? ವಿದೇಶಕ್ಕೆ ಹೋಗಿ ನಾನು ಭಾರತೀಯನೆಂದರೆ ಹೇಗೆ ಕಷ್ಟವೋ ಹಾಗೆ ದೇವರನ್ನು  ಅಸುರರಲ್ಲಿ ಕಾಣಬಹುದೆ? ಒಳಗಿರುವ. ಶಕ್ತಿಯನ್ನು ಹೊರಗೆ ಹುಡುಕಿದರೆ ಸಿಗೋದಿಲ್ಲ. ಸಾಮಾನ್ಯ ಜ್ಞಾನದ ಅಗತ್ಯವಿದೆ.ವಿಶೇಷಜ್ಞಾನ ಹೊರಗಿನಿಂದ ತುಂಬಲಾಗಿದೆ. ಇದನ್ನು ಸ್ವಚ್ಚ ಮಾಡಿಕೊಂಡರೆ ಸ್ವಚ್ಚ ಭಾರತ.

Monday, October 17, 2022

ಬಡತನ ಯಾವುದು? ಎಲ್ಲಿದೆ? ಪರಿಹಾರ ಏನು?

ಅಂತರಾಷ್ಟ್ರೀಯ ಬಡತನ ನಿರ್ಮೂಲನೆ ದಿನವಾದ ಇಂದು ಬಡತನಕ್ಕೆ ಕಾರಣ ಮತ್ತು ಪರಿಹಾರ ತಿಳಿಯುವ ಪ್ರಯತ್ನ ಮಾಡೋಣವೆ?
ಬಡತನದಲ್ಲಿ ಎರಡು ರೀತಿಯಿದೆ ಜ್ಞಾನದಿಂದ ಬಡವರಾಗೋದು,ಅಜ್ಞಾನದಿಂದ ಬಡವರಾಗೋದು.ಹಿಂದಿನ ಮಹಾತ್ಮರುಗಳಲ್ಲಿ ಜ್ಞಾನವಿತ್ತು ಹಣವಿರಲಿಲ್ಲ  ಅವರನ್ನು ಬಡವರೆಂದು ಅಜ್ಞಾನಿಗಳು ತಿಳಿದು ತಿರಸ್ಕಾರದಿಂದ ಕಂಡಿದ್ದರು. ಹಾಗೆ ಹಣದಲ್ಲಿ ಶ್ರೀಮಂತ ರಾಗಿ
ಆತ್ಮಜ್ಞಾನದಲ್ಲಿ ಬಡವರಾದ ಎಷ್ಟೋ ಮಂದಿ ಭೌತಿಕದಲ್ಲಿ ಸಾಕಷ್ಟು ಆಸ್ತಿ ಅಂತಸ್ತು  ಹೆಸರು,ಹಣ,ಪದವಿ ಪಟ್ಟ ಪಡೆದರೂ ತೃಪ್ತಿ ಸಿಗದೆ ಜನರ ಹಿಂದೆ ನಡೆದವರನ್ನು ನಿಜವಾದ ಬಡವರೆಂದು ಅಧ್ಯಾತ್ಮ ತಿಳಿಸುತ್ತದೆ. ಈಗಲೂ  ಅಂತಹವರ ಸಂಖ್ಯೆ ಬೆಳೆದು ನಿಂತಿದೆ.ನಿಜವಾದ ಜ್ಞಾನಿಗಳ ಸಂಖ್ಯೆ ಇಳಿದಿದೆ ಹೀಗಾಗಿ  ಸಾಕಷ್ಟು ಸಮಸ್ಯೆಗಳು ಮಾನವ ಹೊತ್ತು ನಡೆಯಬೇಕಾಗಿದೆ.ಕಾರಣವಿಷ್ಟೆ ಮಾನವ ಭೂಮಿಯಲ್ಲಿ ಜನ್ಮ ತಾಳುವುದೇ ಜ್ಞಾನ ಪಡೆದು ಜೀವನ್ಮುಕ್ತಿ ಪಡೆಯಲೆನ್ನುವ ಮಹಾತ್ಮರ ಸಂದೇಶವನ್ನು  ಕೇಳಿದರೂ ಅವರಂತೆ ನಡೆಯಲಾಗದೆ ಅವರ ನುಡಿಯನ್ನು ಮಾತ್ರ ಪ್ರಚಾರ ಮಾಡುತ್ತಾ ಜನರನ್ನು  ಸ್ವತಂತ್ರವಾಗಿ ಸತ್ಯದ ಹಾದಿಯಲ್ಲಿ  ನಡೆಯುವ ಶಿಕ್ಷಣ ಕೊಡದೆ ಆಳಿದ ರಾಜಕೀಯದ ಪ್ರಭಾವ. ಭಾರತದಂತಹ ಮಹಾ ಜ್ಞಾನಿಗಳ ದೇಶವು ಅಜ್ಞಾನದೆಡೆಗೆ ಹೋಗುತ್ತಾ  ಹಣವೇನೂ ಎಲ್ಲರಲ್ಲಿದೆ ಅದನ್ನು ಸದ್ಬಳಕೆ ಮಾಡಿಕೊಂಡು ಹಂಚಿ ಬಾಳುವ ಸುಜ್ಞಾನದ ಕೊರತೆಯಿದೆ. ಹಾಗಂತ ಹಂಚಿಕೆಯು ಸರ್ಕಾರದ ಮೂಲಕ ನಡೆಯುತ್ತಿದೆ. ಎಷ್ಟೇ ಉಚಿತ ಸಾಲ,ಸೌಲಭ್ಯಗಳನ್ನು  ಹಂಚಿದರೂ ಅದನ್ನು ಸರಿಯಾದ ಜನರಿಗೆ ತಲುಪಿಸಲಾಗದೆ ಸರ್ಕಾರಗಳು ಸೋತಿವೆ.ಮಧ್ಯವರ್ತಿಗಳು ಮಧ್ಯದಲ್ಲಿಯೇ ತಡೆದು ತಮ್ಮ‌ಪಾಲನ್ನು ಇಟ್ಟುಕೊಂಡು ಅಳಿದುಳಿದದ್ದನ್ನು ಹಂಚಿ ಜನರನ್ನು  ತಮ್ಮೆಡೆ ಸೆಳೆದು ಆಳುವ ರಾಜಕೀಯದಿಂದ ಬಡತನವು ಬೆಳೆದು ನಿಂತಿದೆ. ಬಡತನವನ್ನು  ಉತ್ತಮ ಜ್ಞಾನದ ಶಿಕ್ಷಣದಿಂದ ಸರಿಪಡಿಸಲು  ಜ್ಞಾನಿಗಳೇ ತಯಾರಿಲ್ಲ ಎಂದರೆ ಜನರ ಬಡತನ ನಿವಾರಣೆ ಹಣದಿಂದ ಅಸಾಧ್ಯ.
ಹಣ ಪಡೆದರೂ ಸಾಲವಾಗಿ ಅದೇ ಶೂಲವಾಗುವಾಗ ಯಾವ ಸರ್ಕಾರವೂ ಇರೋದಿಲ್ಲ.ಹೀಗಾಗಿ ಹಿಂದಿನ ಮಹಾತ್ಮರುಗಳು ,ರಾಜರುಗಳು ಅವರವರ ಮೂಲ ಧರ್ಮ ಕರ್ಮ ಬಿಡದೆ ಸ್ವತಂತ್ರ ಜ್ಞಾನಿಗಳಾಗಿ  ಸ್ವತಂತ್ರ ಜೀವನ‌ನಡೆಸುತ್ತಾ ಪಾಲಿಗೆ ಬಂದದ್ದೆ ಪಂಚಾಮೃತವೆಂದು ಅಮೃತವಾದ ಶಿಕ್ಷಣ ಪಡೆದು  ಜ್ಞಾನದಲ್ಲಿ ಶ್ರೀಮಂತ ರಾಗಿ ಅಮರರಾದರು. ವಿಶ್ವದ ತುಂಬಾ  ಬಡತನ ಹರಡುತ್ತಿರುವುದು  ಅಜ್ಞಾನದ ಸಂಕೇತ.ಅಜ್ಞಾನವೆಂದರೆ ಅರ್ಧ ಸತ್ಯವನ್ನರಿತು ನಡೆಯೋದೆನ್ನಬಹುದು. ಸತ್ಯಾಸತ್ಯತೆಯನ್ನು ಓದಿ,ಕೇಳಿ,ನೋಡಿ ತಿಳಿಯೋದೆ ಬೇರೆ ಅನುಭವಿಸಿ ಅರ್ಥ ಮಾಡಿಕೊಳ್ಳುವುದೇ ಬೇರೆ.ಅನುಭವ,
ಅನುಭವದಿಂದ  ಸತ್ಯ ದರ್ಶನ ಮಾಡಿಕೊಂಡವರೆ ದಾಸರು,ಸಂತರು,ಶರಣರು. ಇವರ ನಡೆ ನುಡಿಯು ಹಣದಿಂದ ಬೆಳೆದಿರಲಿಲ್ಲ ಜ್ಞಾನದಿಂದ ಬೆಳೆದಿತ್ತು.
ಯಾವಾಗ ಅವರನ್ನು ಸಮಾಜ ಅಜ್ಞಾನದ ದೃಷ್ಟಿಯಿಂದ ಅಳೆದು ಬಡವರೆನ್ನುವ‌ ಪಟ್ಟ ಕಟ್ಟಿದರೂ ಆಗಲೇ ಅಧರ್ಮ ಬೆಳೆದಿದೆ. ಕಲಿಗಾಲವಾದರೂ  ಮಾನವನ ಜೀವಕ್ಕೆ ಮುಕ್ತಿ ಸಿಗಬೇಕಾದರೆ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸುತ್ತಾ ಇತರರಿಗೂ ಜೀವಿಸಲು ಸಹಕರಿಸಬೇಕಿದೆ. ಈಗಿನ ಭಾರತದಲ್ಲಿ ಸಾಕಷ್ಟು ಆರ್ಥಿಕಾಭಿವೃದ್ದಿಗೆ ಸಹಕಾರವಿದೆ.
ಅದೇ ಜ್ಞಾನಾಭಿವೃದ್ದಿಗೆ  ಸ್ವಾತಂತ್ರ್ಯ ವಿಲ್ಲವಾಗಿದೆ. ಇದಕ್ಕೆ ಕಾರಣ ನಮ್ಮ ವೈಜ್ಞಾನಿಕ ಸಂಶೋಧನೆ.
ಅಧ್ಯಾತ್ಮ ಸಂಶೋಧನೆ ಕಣ್ಣಿಗೆ ಕಾಣದ ಕಾರಣ ಕಷ್ಟಪಟ್ಟು ಒಳಗಿನ ಜ್ಞಾನದ ಸಂಪತ್ತನ್ನು ಬಳಸಿಕೊಳ್ಳಲು ಕಷ್ಟ.ಹೀಗಾಗಿ ಹೊರಗಿನ ಸಂಪತ್ತನ್ನು ಭೂಮಿ ಅಗೆದು ಮೇಲೆ ತಂದು ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡು  ರಾಜನಂತೆ ಜೀವನ ನಡೆಸಲು ಹೋಗಿ ತಾನೇ ಸೇವಕನಾಗಿ ಬಡವನಾಗಿ ಜನ್ಮ ತಾಳಬೇಕಾಗಿದೆ. ಇದೊಂದು ಕರ್ಮ ಫಲ ಎಂದು ಸುಮ್ಮನೆ ನೋಡಲು ಮಾನವನಿಗೆ ಕಷ್ಟ. ಮನಸ್ಸನ್ನು ತಡೆಹಿಡಿದು  ತಪಸ್ಸನ್ನು ಮಾಡಿಕೊಂಡು  ಮುಕ್ತಿ ಪಡೆದ ಯೋಗಿಗಳ ದೇಶದಲ್ಲಿ  ಭೋಗ ಜೀವನಕ್ಕಾಗಿ ಸಾಲ ಮಾಡಿ ತುಪ್ಪ ತಿನ್ನುವ ಮಟ್ಟಿಗೆ ಅಜ್ಞಾನ ಬೆಳೆದಿರೋದು ಶಿಕ್ಷಣದಿಂದ.
ಕಣ್ಣಿಗೆ ಕಾಣುವ ಶಿಕ್ಷೆಗಿಂತ ಕಾಣದ ಆತ್ಮವಂಚನೆಯ ಮಾನಸಿಕ ಹಿಂಸೆಯೇ ಯಾರಿಗೂ ಕಾಣದು. ಹೀಗಾಗಿ ಹಣವಿದ್ದರೂ ಮಾನಸಿಕವಾಗಿ ಕೊರಗಿ,ಸೊರಗಿ ನೋವನ್ನು
ಅನುಭವಿಸುವವರಿಗೆ ಸರ್ಕಾರ ಹಣ ನೀಡಲಾಗದು.ಜ್ಞಾನದ ಶಿಕ್ಷಣದಿಂದ ಮೇಲೆತ್ತುವ ಶಕ್ತಿ ಭಾರತಕ್ಕೆ ಇದೆ.ಇದನ್ನು ವಿದೇಶಿಗರು ಅವರ ದೇಶದಲ್ಲಿ ಅಳವಡಿಸಿಕೊಂಡಿದ್ದಾರೆಂದರೆ
ಭಾರತದ ಬಡತನಕ್ಕೆ ನಮ್ಮದೇ ಆದ  ಅಜ್ಞಾನದ ಸಹಕಾರವೆ ಕಾರಣ. ಜ್ಞಾನಕ್ಕೆ ನೀಡದ ಸಹಕಾರದಿಂದ ಮಾನವ‌ ಮಹಾತ್ಮನಾಗದೆ ಅಸುರರ ಸಾಮ್ರಾಜ್ಯ ಕ್ಕೆ  ದಾರಿಮಾಡಿದೆ.
ಯಾರಿಲ್ಲಿ ದೇವರು ಅಸುರರು?
ಜೀವ ಎಲ್ಲರಿಗೂ ಅಗತ್ಯ.ಜೀವನ ಎಲ್ಲರ ಒಗ್ಗಟ್ಟಿನಿಂದ  ನಡೆಸಬೇಕು.ಒಗ್ಗಟ್ಟು ತತ್ವದ ಮೂಲಕ ಬೆಳೆಯಬೇಕಿದೆ.
ಆದರೆ ಇಲ್ಲಿ ತತ್ವದಲ್ಲಿಯೇ  ಭಿನ್ನಾಭಿಪ್ರಾಯದ
ರಾಜಕೀಯವಿದೆ .
ಅದ್ವೈತ ಸಂಶೋಧನೆ, ದ್ವೈತ ಸಂಶೋಧನಾ ಕೇಂದ್ರದಿಂದ ಜನರಲ್ಲಿ  ಜ್ಞಾನದ  ಶ್ರೀಮಂತಿಕೆ ಬೆಳೆಸಿದ್ದರೆ  ಬಡವರ ಸಂಖ್ಯೆ ಬೆಳೆಯುತ್ತಿರಲಿಲ್ಲ.ಸಾಲ ಮಾಡದೆಯೇ ಜೀವನ‌
ನಡೆಸುವವರು ಹೆಚ್ಚುತ್ತಿದ್ದರು.ದೇಶದ ಸಾಲ ತೀರಿಸಲು ವಿದೇಶಕ್ಕೆ ಹೋಗುವ ಅಗತ್ಯವಿರಲಿಲ್ಲ. ಆದರೂ ಅದನ್ನು ಪ್ರಗತಿ ಎನ್ನುವ ಮಟ್ಟಿಗೆ  ಪ್ರೋತ್ಸಾಹ ,ಸಹಕಾರ, ಸಹಾಯ ನೀಡುತ್ತಿರುವುದು  ಶ್ರೀಮಂತ ವರ್ಗ ವೆ. ಇದರಿಂದ ಅವರಿಗೇ  ಕೊನೆಯಲ್ಲಿ ವೃದ್ದಾಶ್ರಮ,ಅನಾಥಾಶ್ರಮ,ಅಬಲಾ
ಶ್ರಮದ ಆಸರೆ ಆಗಿದೆ. ಶ್ರಮಪಡದೆ ಜ್ಞಾನ ಸಿಗದು. ಶ್ರಮಪಡದೆ ಹಣ ಪಡೆದರೆ ಸಾಲವಾಗುವುದು .ಇವು ತತ್ವಜ್ಞಾನಿಗಳೇ ಅನುಭವದಿಂದ ತಿಳಿಸಿದ ಸತ್ಯ. ಇದರಲ್ಲಿ ನಮ್ಮ ಶ್ರಮ ಎಷ್ಟಿದೆ ಎನ್ನುವ ಬಗ್ಗೆ ನಾವೇ ಆತ್ಮಾವಲೋಕನ ನಡೆಸಿಕೊಂಡರೆ ನಮ್ಮ ಸಾಲವನ್ನು ನಾವೇ ಜ್ಞಾನದಿಂದ ದುಡಿದು ತೀರಿಸಬಹುದು. ಸ್ವಾವಲಂಬನೆ ಸ್ವರ್ಗ ಪರಾವಲಂಬನೆ ನರಕವೆಂದರು. ಆದರೆ,ವಿಪರ್ಯಾಸವೆಂದರೆ ನಿಜವಾದ ಸ್ವಾವಲಂಬಿಗಳನ್ನು ಬಡವರೆಂದು  ಕರೆದು ಪರಾವಲಂಬನೆಗೆಳೆದು ಆಳಿದರೆ ಇಲ್ಲಿ ಅಧರ್ಮ ವಿದೆ. ಬಡಶಿಕ್ಷಕ,ಬಡರೈತ,ಬಡಬ್ರಾಹ್ಮಣ,ಬಡ ಸೈನಿಕರ ಜ್ಞಾನ ಗುರುತಿಸದೆ ಶಿಕ್ಷಣವನ್ನು  ಅಜ್ಞಾನಕ್ಕೆ ತಿರುಚಿ ದೇಶವನ್ನು ವಿದೇಶ ಮಾಡಲು ಹೊರಟರೆ ಆತ್ಮನಿರ್ಭರ ಭಾರತಕ್ಕೆ ಅರ್ಥ ವಿದೆಯೆ? ಸರ್ಕಾರ ಈ ನಿಟ್ಟಿನಲ್ಲಿ ಬದಲಾವಣೆ ಮಾಡಲು ಮುಂದೆ ಬಂದರೂ ಅಜ್ಞಾನಿಗಳಿಗೆ ಕಾಣೋದೆ ಬೇರೆ. ಒಟ್ಟಿನಲ್ಲಿ ಬಡತನಕ್ಕೆ ಅಜ್ಞಾನದ ಶಿಕ್ಷಣ ಕಾರಣ.

ಸ್ವಾರ್ಥ ಅಹಂಕಾರದಿಂದ ಮಾನವ ಮಾನವನಿಗೇ ಶತ್ರುವಾದರೆ ದೇವಾಸುರ ಗುಣಗಳೇ ಅರ್ಥ ವಾಗದು. ದೈವತ್ವ ಬೆಳೆಸಿಕೊಳ್ಳಲು ತತ್ವವನ್ನು ಅರ್ಥ ಮಾಡಿಕೊಳ್ಳುವ  ಸತ್ಯ ಜ್ಞಾನ ಇರಬೇಕು.ಸತ್ಯವನ್ನು ತಿರುಚಿ ಆಳಿದರೆ ಅಸತ್ಯವಾಗುತ್ತದೆ. ಧರ್ಮ  ಹಿಂದುಳಿಯುತ್ತದೆ.ಮಾನವ ಧರ್ಮ  ಎಲ್ಲರಿಗೂ ಸಮಾನವಿದ್ದರೂ ಅದನ್ನು ಮಾನವೀಯತೆ ಶಿಕ್ಷಣ,ನೈತಿಕ ಶಿಕ್ಷಣ,ಯೋಗಶಿಕ್ಷಣವಿಲ್ಲದೆ
ಬೆಳೆಸಲಾಗದು. ಯಾವಾಗ ಈ ಅಜ್ಞಾನದ  ರಾಜಕೀಯಕ್ಕೆ
ಶಿಕ್ಷಣ ಬಲಿಯಾಯಿತೋ ಆಗಲೇ ಮಾನವನ ಜೀವನ ಬಡತನದೆಡೆಗೆ ನಡೆಯಿತು. ಅತಿಯಾದ ಶೋಷಣೆಯಿಂದ ಯಾವುದೇ ಜ್ಞಾನ ಬೆಳೆಸಲಾಗದು.ಸ್ತ್ರೀ ಶಕ್ತಿಯ ಜ್ಞಾನವನ್ನು ಗುರುತಿಸದೆ ಶೋಷಣೆಯಿಂದ ಅವಳನ್ನು ಹಿಂಸೆ ಮಾಡಿಯಾದರೂ ಭೂಮಿ ಆಳುವ ಅಸುರ ಶಕ್ತಿ ಇಂದಿಗೂ ಹೆಸರುವಾಸಿಯಾಗಿದೆ. ಕಾರಣ ಜ್ಞಾನ ಖರೀದಿಸಲು ಕಷ್ಟ.ಹಣವನ್ನು  ಜ್ಞಾನದಿಂದ ಸಂಪಾದಿಸೋದು ಬಹಳ ಕಷ್ಟ. ಆದರೂ ತನ್ನ ಜೀವ ರಕ್ಷಣೆಗೆ ಜೀವಕ್ಕೆ ಬೇಕಾದಷ್ಟು  ಜ್ಞಾನ ಹುಟ್ಟಿದಾಗಲೇ ಪಡೆದಿರೋದನ್ನು ಗುರುತಿಸಿ ಅದನ್ನು ಸರಿಯಾದ ಶಿಕ್ಷಣದಿಂದ ಬೆಳೆಸಿ ಸರಳ,ಸುಲಭ,ಸ್ವತಂತ್ರವಾಗಿ ಜೀವನ‌ ನಡೆಸುವ ಶಕ್ತಿಯನ್ನು ಎಲ್ಲರಲ್ಲಿಯೂ ಇದ್ದರೂ ಮೂಲದ ಧರ್ಮ ಕರ್ಮ ವನ್ನು ಬಿಟ್ಟು ಅತಿಯಾದ ಸ್ವಾರ್ಥ ಅಹಂಕಾರದ ರಾಜಕೀಯಕ್ಕೆ ಮುಖ ಮಾಡಿ  ಮುಂದೆ ನಡೆದವರಿಗೆ ಹಿಂದಿನ ಸತ್ಯ,ಧರ್ಮ ,ನ್ಯಾಯ ,ನೀತಿ ,ಸಂಸ್ಕೃತಿ ಯ ಬಗ್ಗೆ ಅರಿವಿಲ್ಲದೆ  ಹಿಂದುಳಿದವರನ್ನು ಬಡವರೆಂದು ಪರಿಗಣಿಸಿ ಶಿಕ್ಷಣ ನೀಡದೆ ಹಣ ನೀಡಿ ಸಾಲದ ದವಡೆಗೆ ತಳ್ಳಿ ಶೋಷಣೆ ಮಾಡಿ ಶ್ರೀಮಂತರಾದವರು ತಮ್ಮ ಭೌತಿಕದ ಜ್ಞಾನದಿಂದ  ದೊಡ್ಡವರಾದರೂ ಅಧ್ಯಾತ್ಮದಲ್ಲಿ ಅವರೆ ನಿಜವಾದ ಬಡವರು. ಪರರ ಶಿಕ್ಷಣ,ಪರಾವಲಂಬನೆ ಪರಕೀಯರ  ಆಡಳಿತದಲ್ಲಿದ್ದು ಸ್ವಂತ ಬುದ್ದಿ,ಜ್ಞಾನವನ್ನು ಬೆಳೆಸಿಕೊಳ್ಳಲು  ಕಷ್ಟ.ಜೀವ ಯಾವತ್ತೂ ಪರಕೀಯರ ವಶದಲ್ಲಿಯೇ ಇರೋವಾಗ ಪರಮಾತ್ಮನೆಡೆಗೆ  ಹೋಗುವುದಕ್ಕೆ ಆತ್ಮಜ್ಞಾನ   ಬೇಕೆಂಬುದೆ ಎಲ್ಲಾ ಶರಣರು, ದಾಸರು,ಮಹಾತ್ಮರುಗಳು,ದೇಶಭಕ್ತರು  ತತ್ವದಿಂದ ಸ್ವತಂತ್ರ ಗಳಿಸಿದ್ದರು. ಆದರೆ ತತ್ವ ಕಣ್ಣಿಗೆ ಕಾಣದು ತಂತ್ರ ಕಂಡರೂ ಅದರಲ್ಲಿ ಹಣವಿರುತ್ತದೆ.ಹಣಕ್ಕಾಗಿ ಹೆಣವನ್ನೂ ಮಾರುವಷ್ಟು ಬಡತನವಿದೆ. ಇದನ್ನು  ಹಣದಿಂದ  ಸರಿಪಡಿಸಲಾಗದು.ಸತ್ಯಜ್ಞಾನದಿಂದ ಅರ್ಥ ಮಾಡಿಸುವ ಶಿಕ್ಷಣವನ್ನು ಜಾರಿಗೆ ತಂದರೆ ಮಾನವ ನಿಜವಾದ ಮನುಷ್ಯ ಆಗಬಹುದೇನೋ. ಮಹಾತ್ಮರ ದೇಶವನ್ನು ಆಳುವವರಿಗೆ ಆತ್ಮಜ್ಞಾನವಿರಬೇಕಿದೆ. ಸತ್ತವರಿಗೆ ಹಣ ನೀಡುತ್ತಾ ಸಾಲ ಹೆಚ್ಚಿಸುವ ಬದಲಾಗಿ ಇದ್ದವರಿಗೆ ಜ್ಞಾನದ ಶಿಕ್ಷಣ ಉಚಿತವಾಗಿ ನೀಡುವತ್ತ ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರ ಒಂದಾಗಿ ನಿಂತರೆ  ದೇಶದ ಆರ್ಥಿಕ ಸ್ಥಿತಿ ಬಲವಾಗುತ್ತಾ ಸಾಮಾಜಿಕ ಕ್ಷೇತ್ರದಲ್ಲಿ  ಸಮಾನತೆ ಹೆಚ್ಚಬಹುದಲ್ಲವೆ? ಇದಕ್ಕೆ ವಿದೇಶದ ಹಣ,ಸಾಲ,ಬಂಡವಾಳ,ವ್ಯವಹಾರದ ಅಗತ್ಯವಿದೆಯೆ? ಸ್ವದೇಶದ ಶಿಕ್ಷಣ,ಧರ್ಮ, ಸತ್ಯ,ನ್ಯಾಯ,
ನೀತಿ,ಸಂಸ್ಕೃತಿ ಸದಾಚಾರವನ್ನು ವಿರೋಧಿಸಿ ಹೊರಗೆ ನಾಟಕವಾಡಿ  ಆಳುವುದು  ಅಧರ್ಮವಲ್ಲವೆ? ಎಲ್ಲಿರುವರು ಜ್ಞಾನಿಗಳು? ಮಹಾತ್ಮರು? ದೇಶಭಕ್ತರು,ದೇವರಭಕ್ತರು? 
ಬಡವರನ್ನು ದುರ್ಭಳಕೆ ಮಾಡಿಕೊಂಡು ಅಜ್ಞಾನದಿಂದ ಆಳಿದವರೆ  ನಿಜವಾದ ಬಡವರು. ನಾವ್ಯಾರು?   ಅಗತ್ಯಕ್ಕಿಂತ ಹೆಚ್ಚಿನ  ಹಣ ಸಂಗ್ರಹಣೆ  ಯಾರ ಪಾಲಾಗಿತ್ತು? ಇದರಿಂದಾಗಿ ಯಾರಿಗೆ ಲಾಭ ನಷ್ಟವಾಗುತ್ತಿದೆ. ಚಿಂತನೆ  ಒಳಗೆ ನಡೆಸಿದರೆ ಜ್ಞಾನೋದಯವಾಗಬಹುದು. 
ಯಾರನ್ನೂ ಯಾರೋ ಆಳುವುದಕ್ಕೆ  ಸಾಧ್ಯವೆ?  ಅಜ್ಞಾನದಲ್ಲಿ  ರಾಜಕೀಯವಿದೆ.
ಜ್ಞಾನದಲ್ಲಿ ರಾಜಯೋಗವಿದೆ. ರಾಜಕೀಯದಿಂದ ಬಡತನ ಬೆಳೆದಿದೆ.ರಾಜಯೋಗದಿಂದ ಬಡತನ ನಿರ್ಮೂಲನೆ ಮಾಡಬಹುದು.  ಇದಕ್ಕೆ ಹೊರಗಿನ ಸರ್ಕಾರದ ಅಗತ್ಯವಿಲ್ಲ.
ಒಳಗಿನ ಸಹಕಾರದ ಅಗತ್ಯವಿದೆ.
ಮನೆ ಮನೆಯೊಳಗೆ ಅಡಗಿರುವ ಅಜ್ಞಾನದ ಅಹಂಕಾರ ಸ್ವಾರ್ಥ ವೇ ಅಸುರೀ ಶಕ್ತಿಯಾಗಿದೆ. ಮಾನವನೊಳಗೇ ಇರುವ ದೇವಾಸುರರ ಗುಣಗಳೇ  ಬಡವ ಶ್ರೀಮಂತರೆನ್ನುವ ಬೇಧ ಭಾವ ಹುಟ್ಟಿಸಿ ಆಳುತ್ತಿದೆ.  ಹಾಗಾದರೆ ನಾನ್ಯಾರು? ನಾವ್ಯಾರ ಸೇವಕರು? ದಾಸರು? ಶರಣರು? ಪರಮಾತ್ಮ ಪರಕೀಯರ ನಡುವೆ ಬಡವರ ಜೀವನವಿದೆ. ಭಗವಂತನ 
ಸೊಂಟಭಾಗದಲ್ಲಿ ಭೂಮಿಯಿದೆಯಂತೆ.ಭೂಮಿಯ ಮೇಲೆ ಮನುಕುಲವಿರೋವಾಗ  ನಾವಿರೋದೆಲ್ಲಿ? ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದೆವು? ಇದರ ಮೂಲ ತಿಳಿಯಲು ಆಂತರಿಕ ಜ್ಞಾನವಿರಬೇಕು.ಭೌತಿಕ ವಿಜ್ಞಾನದಲ್ಲಿ ಈ ಸೂಕ್ಮವಿಚಾರ ತಿಳಿಯಲಾಗದು ಅಲ್ಲವೆ? ನಾವೆಲ್ಲರೂ ಸಾಮಾನ್ಯರಷ್ಟೆ.ಸಾಮಾನ್ಯಜ್ಞಾನ ಅಗತ್ಯವಾಗಿದೆ. ಇದಿಲ್ಲದೆ ವಿಜ್ಞಾನ ಬೆಳೆದರೆ ಅಜ್ಞಾನವಾಗುತ್ತದೆ. ಪುರಾಣ,ಇತಿಹಾಸದ ಕಥೆಯ ವ್ಯಥೆಯನ್ನು  ಬಿಟ್ಟು  ವಾಸ್ತವತೆಯ ಸತ್ಯದೆಡೆಗೆ  ನಿಂತು  ಚಿಂತನೆ ಮಾಡಿದರೆ   ಇಲ್ಲಿ  ಬಡವರನ್ನು, ಬಡತನವನ್ನು ತಮ್ಮ ರಾಜಕೀಯದ ದಾಳವಾಗಿಟ್ಟುಕೊಂಡು
ಆಟ,ನಾಟಕವಾಡಿಕೊಂಡಿರುವ ಮಧ್ಯವರ್ತಿಗಳೇ ಹೆಚ್ಚು.
ಇದರಿಂದಾಗಿ ಅತಂತ್ರಸ್ಥಿತಿಗೆ ಜೀವ ನಿಂತಿದೆ. 

Friday, October 14, 2022

ಇರೋದೊಂದೆ ಜೀವನ

ಇರೋದು ಒಂದೇ ಜೀವನ  ಇದನ್ನು ಸಂತೋಷದಿಂದ ಕಳೆಯಿರಿ ಎನ್ನುವ ಹಲವು ಮಂದಿಯ  ಹಿಂದೆ ಕೆಲವರು ಜೀವನದ ಮುಖ್ಯ ಉದ್ದೇಶ ತಿಳಿದು  ಜಾಗರೂಕರಾಗಿ  ನಡೆಯಿರಿ.ದಾರಿತಪ್ಪಿದರೆ ತಿರುಗಿ ಬರೋದು ಕಷ್ಟವೆಂದು
ಹೇಳುತ್ತಿದ್ದರೂ  ಮನರಂಜನೆಯೆಡೆಗೆ ನಡೆದ ಮನಸ್ಸಿಗೆ ಇದು ಕೇಳೋದೇ ಇಲ್ಲ. ಏನಾಗುತ್ತದೆ ನೋಡೇ ಬಿಡೋಣವೆಂಬ ಹಠದಲ್ಲಿ ಅಧರ್ಮ, ಅಸತ್ಯ,ಅನ್ಯಾಯದ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ಇದೇ ಜೀವನ ಎಂದು ಇತರರಿಗೂ ಹೇಳುತ್ತಾ ಒಮ್ಮೆ ಮರೆಯಾಗುತ್ತಾರೆ. ನಂತರದ ದಿನಗಳಲ್ಲಿ ಅವರನ್ನು ಅನುಸರಿಸಿದವರಿಗೆ ಅವರ ಪ್ರತಿಮೆಯೆ ಗತಿ. ಪ್ರತಿಭೆಯನ್ನು ಬೆಳೆಸಿಕೊಂಡು ಜ್ಞಾನ ಸಂಪಾದನೆ ಮಾಡಿಕೊಂಡವರಿಗೆ  ಸರಿದಾರಿ ಕಾಣಬಹುದು.
ಹೀಗಾಗಿ ಎಲ್ಲರನ್ನೂ  ನಂಬುವ ಮೊದಲು ನಮ್ಮಲ್ಲಿ ಆತ್ಮವಿಶ್ವಾಸ ವಿದ್ದರೆ ನಂಬಿ ಕೆಡೋದಿಲ್ಲ. ಇದು ದೈವತ್ವದೆಡೆಗೆ
ನಡೆಸಿದರೆ  ಮುಕ್ತಿ ಎನ್ನಬಹುದು. ಜ್ಞಾನವನ್ನು ಬೆಳೆಸದ ವಿಜ್ಞಾನವು ಕುಂಟುತ್ತದೆ. ವಿಜ್ಞಾನದ ಮೂಲ ಅರ್ಥ ತಿಳಿಯದ ಜ್ಞಾನ ಕುರುಡಾಗಿರುತ್ತದೆ. ಅಂದರೆ ವಿಜ್ಞಾನ  ಆಂತರಿಕ  ಜ್ಞಾನವನ್ನು ವಿಶೇಷವಾಗಿ ತಿಳಿಯುವುದಾಗಬಹುದು. ಹೊರಗಿನಿಂದ ವಿಶೇಷವಾಗಿ ಬೆಳೆಸುವುದಾಗಬಹುದು.ಆದರೆ ಮೂಲವನ್ನರಿತು 
ಅದಕ್ಕೆ ಹೊಂದುವ ವಿಶೇಷಜ್ಞಾನದಿಂದಲೇ ಪೂರ್ಣ ಸತ್ಯದ ಅರಿವಾಗುವುದು. ಅದಕ್ಕೆ ವಿರುದ್ದ  ನಡೆದಂತೆಲ್ಲಾ ವಿಶೇಷವೆನಿಸಿದರೂ ಮೂಲದ ಜ್ಞಾನ ಸಶೇಷವಾಗಿಯೇ ಉಳಿದು ತಿರುಗಿ ಬರಲೇಬೇಕು.ಮೂಲವನ್ನರಿತು ರೆಂಬೆಗಳನ್ನು ಬೆಳೆಸಿದರೆ  ಉತ್ತಮ. ಯಾರೋ ಹೇಳಿದರು,ನಡೆದರು,ಅನುಭವಿಸಿ ತಿಳಿದರು  ಹೋದರು. ಅನುಭವವು ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ,ರಾಜಕೀಯ ಪರಿಸ್ಥಿತಿ ಗೆ ತಕ್ಕಂತೆ ಇರುತ್ತದೆ. ಬದಲಾವಣೆ  ಆಗುತ್ತಿರುವ ಹಾಗೆ ಅನುಭವವೂ ಬದಲಾಗಬಹುದು. ಆದರೆ ತತ್ವ ಒಂದೇ. ಸತ್ಯ ಒಂದೇ. ನ್ಯಾಯ,ನೀತಿ ಒಂದೇ. ಒಂದೇ ಭೂಮಿಯಲ್ಲಿಒಂದೇ ಜನ್ಮ ಎನ್ನುವುದನ್ನು 
ಎಲ್ಲಾ ಒಪ್ಪದ ಕಾರಣ ಈ ಜನ್ಮದಲ್ಲಿ ಯಾವುದನ್ನು ತಿಳಿಯಬೇಕೆನ್ನುವ  ಜ್ಞಾನ ನಮಗಿದ್ದರೆ ಯಾರೋ ಕುಣಿಸಿದಂತೆ ಕುಣಿಯುವ ಅಗತ್ಯವಿರೋದಿಲ್ಲ.
ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ."ಮಾನವ ಜನ್ಮ ದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರ" ಎಂದು
ಪರಮಾತ್ಮನ ದಾಸರೆ ಹೇಳಿದ್ದಾರೆ ಎಂದರೆ ಪರಮಾತ್ಮನ ಸೇವೆ ಅಧ್ಯಾತ್ಮ ದಲ್ಲಿದ್ದರೆ  ಅದೇ ಆತ್ಮಸಂತೋಷ.

Wednesday, October 12, 2022

ನಾವ್ಯಾರು ಉತ್ತರ ನಾನ್ಯಾರು ಉತ್ತರ ಒಂದೇ?

ನಾವ್ಯಾರು?
ಈ ಪ್ರಶ್ನೆಗೆ ಮೊದಲ ಉತ್ತರ ಮಾನವರು ನಂತರದ ಉತ್ತರಗಳು  ಆ ದೇಶದ ಪ್ರಜೆಗಳು ಹಾಗೆಯೇ ಹಿಂದೂ,ಇಸ್ಲಾಂ, ಮುಸ್ಲಿಂ  ಪಂಗಡ ಜಾತಿಯ ಆಧಾರದಲ್ಲಿ
ಮತ್ತೆ ನಾನು ಹೆಚ್ಚಾಗುತ್ತಾ ಕೊನೆಯವರೆಗೂ ನಾನ್ಯಾರು ಎನ್ನುವ ಒಳಗಿನ ಪ್ರಶ್ನೆ ಹಾಕಿಕೊಳ್ಳಲಾಗದೆ ನಾವೆಲ್ಲರೂ ಹೋಗುತ್ತೇವೆ. ನಾನ್ಯಾರು ಪ್ರಶ್ನೆ  ಎಲ್ಲಿಯವರೆಗೆ ನನ್ನೊಳಗೆ
ಬರುವುದಿಲ್ಲವೋ ಅಲ್ಲಿಯವರೆಗೆ ಈ ಭೂಮಿಯ ಮೇಲಿದ್ದು  ಜೀವ  ತನ್ನ ಕರ್ಮಕ್ಕೆ ತಕ್ಕಂತೆ ಜನ್ಮ ಪಡೆಯುತ್ತಲೇ ಇರುತ್ತದೆ ಎನ್ನುವ ಸತ್ಯ ಮಾತ್ರ ಒಂದೇ. ಇದನ್ನು ಯಾವ ರಾಜಕೀಯದಿಂದಲೂ ಅರ್ಥ ಮಾಡಿಸಲು ಕಷ್ಟ.ಯಾವುದೇ ಒಂದು ಧರ್ಮದಿಂದಲೂ ತಿಳಿಯಲಾಗದು.ಕಾರಣ ನಾವೇ ಹುಟ್ಟಿಸಿಕೊಂಡಿರುವ ಅಸಂಖ್ಯಾತ ದೇವಾನುದೇವತೆಗಳು,ಧರ್ಮ, ಪಂಗಡ,ಜಾತಿ ಪದ್ದತಿ ಕಾನೂನು ಕಟ್ಟಳೆಗಳನ್ನು ಮೀರಿದ ಸತ್ಯಜ್ಞಾನದಿಂದ  ಈ  ಪ್ರಶ್ನೆಗೆ ಉತ್ತರ ಸಿಗೋವಾಗ ಇದನ್ನು ಓದಿ,ಕೇಳಿ,ನೋಡಿ
ತಿಳಿದಿದೆ ಎನ್ನುವುದು ಅಗತ್ಯವಾಗುತ್ತದೆ. ಯಾರಿಗೆ ಇದರ ಬಗ್ಗೆ ಸರಿಯಾದ ಜ್ಞಾನವಿದೆಯೋ ಅವರು ಈಗಿಲ್ಲ.ಇದ್ದರೂ ರಾಜಕೀಯಕ್ಕೆ  ಇಳಿಯೋದಿಲ್ಲ. ಹೀಗಾಗಿ ನಾವೆಲ್ಲರೂ ರಾಜಕೀಯದ ಹಿಂದೆ ನಡೆದಷ್ಟೂ ಈ ಪ್ರಶ್ನೆಯೂ ಒಳಗೇ
ಹಿಂದಕ್ಕೆ ಹೋಗುತ್ತಾ ಜೀವ ಹೋಗುತ್ತದೆ. ಜೀವ ಹೋದ ಮೇಲೆ ನಾನ್ಯಾರು ಎನ್ನುವ ಬಗ್ಗೆ ಯಾರಿಗೂ ತಿಳಿಯದು.
ಜಗತ್ತಿನಲ್ಲಿ  ಎಲ್ಲಾ ಶಾಶ್ವತವಲ್ಲವೆನ್ನುವ ಸತ್ಯಎಲ್ಲರಿಗೂ 
ಅರ್ಥ ವಾದರೂ ಎಲ್ಲದರ ಹಿಂದೆ ನಡೆಯೋದು ತಪ್ಪಿಲ್ಲ. ಎಲ್ಲರಿಗೂ ಮುಕ್ತಿ ಕೊಡುತ್ತೇನೆ ಎನ್ನುವವರಿಗೆ ನಾನ್ಯಾರು ಎನ್ನುವ ಸತ್ಯದ ಅರಿವಿಲ್ಲ.ಹಾಗಾದರೆ ಮುಕ್ತಿ ಎನ್ನುವ ಹೆಸರಲ್ಲಿ  ನಡೆದಿರೋದು ಏನು? ವ್ಯವಹಾರವೆ ಧರ್ಮ ವೆ? 
ಅವರವರ ಜನ್ಮಕ್ಕೆ ತಕ್ಕಂತೆ ಧರ್ಮಕರ್ಮ ಗಳಿವೆ. ಹಿಂದಿನ
ಗುರು ಹಿರಿಯರ ಹಾದಿಯಲ್ಲಿ ನಡೆದವರಿಗೆ ಮುಕ್ತಿ ಸಿಗುತ್ತದೆ
ಎನ್ನುವ ಹಿಂದೂ ಧರ್ಮ  ಇಂದು ಹಿಂದೆ ತಿರುಗಿ ನೋಡದೆ
ಮುಂದೆ ನಡೆದರೆ  ಹೊರಗಿನ ಸತ್ಯವಷ್ಟೆ ಕಾಣೋದು.ಹಿಂದೆ
ಕಷ್ಟವಿತ್ತು ಈಗ ಸುಖವಿದೆ ಎಂದು ಮಂತ್ರ,ತಂತ್ರ ಯಂತ್ರದ ಸಹಾಯದಿಂದ  ಸ್ವತಂತ್ರವಾಗಿ ಮುಂದೆ ನಡೆದರೂ ಈಗಿನ
ಪರಿಸ್ಥಿತಿಯನ್ನು ನೋಡಿದಾಗ ಯಾರಿಗೆ ಸುಖ,ಯಾರಿಗೆ ದು:ಖ ಎಂದರೆ ಅಧಿಕಾರ,ಹಣ,ಸ್ಥಾನ ಪಡೆದವರಿಗೆ ಸುಖ
ಎಂದು  ಬಡವರು ಹೇಳಿದರೆ, ಬಡವರಾದರೂ ತನ್ನ ಪಾಡಿಗೆ
ತಾನು ದುಡಿದು ಸುಖನಿದ್ರೆ ಮಾಡುತ್ತಾ ಎಲ್ಲರೊಳಗೊಬ್ಬರಾಗಿ  ಸಂತೋಷದಿಂದ ಬದುಕುವಂತಹ
ಸ್ಥಿತಿ ಶ್ರೀಮಂತ ಪಡೆದಿಲ್ಲವಾದರೆ ಅವನು ದು:ಖಿಯೆ? ದೂರದ ಬೆಟ್ಟ ನುಣ್ಣಗೆ ಎಂದಂತೆ  ಹತ್ತಿರದವರ ಕಷ್ಟಕ್ಕೆ  ಸ್ಪಂದಿಸುವ ಜ್ಞಾನವಿದ್ದರೆ  ಕಷ್ಟ ಬಂದರೂ ಸಹಿಸಿಕೊಂಡು ಹೋಗುವ ಶಕ್ತಿಯಿರುತ್ತದೆ. ನಂತರ  ಸುಖವಿರುತ್ತದೆ.
ಹೀಗೇ  ಪ್ರತಿಯೊಂದರಲ್ಲೂ ನಾವು ಸೂಕ್ಮವಾಗಿ ನೋಡಿದರೆ
ಭೂಮಿಯಲ್ಲಿ  ಸುಖವಾಗಿರೋದೆಂದರೆ ಜ್ಞಾನದಿಂದ ಮಾತ್ರ
ಜ್ಞಾನ ಪಡೆಯಲು ಕಷ್ಟಪಡಲೇಬೇಕು. ಹಿಂದಿನ ಮಹಾತ್ಮರುಗಳು ಮುಕ್ತಿ ಪಡೆದರೆಂದರೆ ಅವರ ನಡೆ ನುಡಿ
ರಾಜಕೀಯದೆಡೆಗೆ ಇರಲಿಲ್ಲ.ಸ್ವತಂತ್ರವಾಗಿ ಸರಳವಾಗಿ,ಸತ್ಯ ಧರ್ಮದಲ್ಲಿದ್ದ ಕಾರಣ ಆತ್ಮಕ್ಕೆ ಮುಕ್ತಿ ಸಿಕ್ಕಿತು ಎಂದಾಗ ನಾವ್ಯಾರು? ಎಲ್ಲಿಂದ ಬಂದೆವು? ಎಲ್ಲಿಗೆ ಹೋಗುವೆವು? ಏನು ಮಾಡಿದರೆ ಸರಿ? ತಪ್ಪು? ಇವೆಲ್ಲವೂ ಅವರವರ ಮೂಲವೇ ತಿಳಿಸಬಹುದು.ಪ್ರತಿಯೊಂದು ಮನೆಯೊಳಗೆ ಸಮಸ್ಯೆ ಯಿದೆ.ಪರಿಹಾರವೂ ಒಳಗೇ ಇದ್ದರೂ ಒಗ್ಗಟ್ಟು ಇಲ್ಲದೆ ಹೊರಗೆ ಬಂದು ಎಲ್ಲರಿಗೂ ಹೇಳುತ್ತಾ,ಬೇಡುತ್ತಾ
ಕಾಡುತ್ತಿದ್ದರೆ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಭೂಮಿಯ ಋಣ ತೀರಿಸಲು ಬಂದಿರುವ ಜೀವಾತ್ಮ ಪರಮಾತ್ಮನ ಕಡೆಗೆ ಸತ್ಯದ ಕಡೆಗೆ ಧರ್ಮದ ಕಡೆಗೆ ನಡೆದಂತೆಲ್ಲಾ ಋಣ ತೀರುತ್ತಾ ಹಗುರವಾಗಿ ಮೇಲೆ ಮೇಲಕ್ಕೆ ಹೋಗಿ ಮೇಲಿರುವ ಆ ಮಹಾಶಕ್ತಿಯಲ್ಲಿ ಲೀನವಾದರೆ ಮುಕ್ತಿ ಎನ್ನುವುದು ಸತ್ಯ.
ಆದರೆ ಭೂಮಿಯಲ್ಲಿ ಹೇಗೆ ಜೀವನ‌ನಡೆಸಬೇಕೆಂಬ ಜ್ಞಾನವೇ ಇಲ್ಲದೆ ಎಷ್ಟೇ  ಹಣಸಂಪಾದಿಸಿ  ನಾನು ಬೆಳೆದರೂ
ನಾನು ಹೋಗುವವರೆಗೂ ಎಲ್ಲಾ ಕರ್ಮವೂ  ವಿಕರ್ಮ ವಾಗಿ ವಿಕೃತ ಬುದ್ದಿಯಿಂದ ಆತ್ಮಶುದ್ದಿಯಾಗದೆ ಜಡತ್ವ ಹೆಚ್ಚಾಗಿ ಆತ್ಮಕ್ಕೆ ಮುಕ್ತಿ ಸಿಗದೆ ಮತ್ತೆ ಋಣ ತೀರಿಸಲು ಜನ್ಮ ಪಡೆದರೂ ಹಿಂದಿನ ಜನ್ಮದ ನೆನಪಿಲ್ಲದೆ ಕೇವಲ ಮಾಡಿದ ಪಾಪ ಪುಣ್ಯಕ್ಕೆ ತಕ್ಕಂತೆ ಜೀವನ  ನಡೆಯುತ್ತದೆ. ಇದನ್ನು ಸರ್ಕಾರ ಸರಿಪಡಿಸಬಹುದೆ? ಜ್ಞಾನದ ಶಿಕ್ಷಣವೇ ಕೊಡದೆ
ಆಳುವುದೇ ಅಧರ್ಮ. ಪರಕೀಯರನ್ನು ಓಲೈಸಿಕೊಂಡು ಎಷ್ಟೇ ವ್ಯಾಪಾರ,ವ್ಯವಹಾರದಿಂದ ದೇಶ ನಡೆಸಿದರೂ ಸಾಲ ತೀರಿಸುವ ಜ್ಞಾನವಿಲ್ಲವಾದರೆ  ಸಮಸ್ಯೆಗೆ ಪರಿಹಾರವಿಲ್ಲ.
ನಾವ್ಯಾರು  ಎನ್ನುವ ಪ್ರಶ್ನೆಗೆ ಉತ್ತರ ಭಾರತೀಯರಾದರೆ ನಮ್ಮೊಳಗೆ ಭಾರತಾಂಬೆಯ ಜ್ಞಾನವಿದೆಯೆ?
ಇನ್ನು ನಾವು ಹಿಂದೂಗಳಾದರೆ ನಮ್ಮೊಳಗೆ ಹಿಂದಿನವರ ಧರ್ಮ, ಕರ್ಮ, ಶಿಕ್ಷಣ,ಜ್ಞಾನವಿದೆಯೆ?
ನಾನು ಮಾನವನಾದರೆ ಮಾನವೀಯತೆಯ ಗುಣವಿದೆಯೆ?
ನಾನು ಒಂದು ಜಾತಿಗೆ ಸೀಮಿತವಾಗಿದ್ದರೆ ನಾನು ಬೇರೆ ಜಾತಿಯವರೊಡನೆ ವ್ಯವಹಾರ ನಡೆಸಿಲ್ಲವೆ?
ನಾನು ಒಂದು ಧರ್ಮಕ್ಕೆ ಸೀಮಿತವಾಗಿದ್ದರೆ ಅದೇ ಧರ್ಮದ ಪ್ರಕಾರ ನಡೆಯಲು ಸಾಧ್ಯವಾಗಿದೆಯೆ? ಪರಧರ್ಮದವರ
ವ್ಯವಹಾರ,ಶಿಕ್ಷಣ,ಸಾಲದಲ್ಲಿ ನನ್ನ ಜೀವನ ಇಲ್ಲವೆ?
ನಾನು  ಹೋದರೆ ಮುಕ್ತಿ ಎಂದಾಗ ಯಾರಲ್ಲಿ ನಾನಿಲ್ಲ?
ಭಾರತಾಂಬೆಯ ಒಳಗಿದ್ದವರೆಲ್ಲರೂ ಭಾರತೀಯ ರಾಗಿದ್ದರೆ ಯಾಕಿಷ್ಟು  ಅಶಾಂತಿ? ಅಧರ್ಮ, ಅನ್ಯಾಯ, ಭ್ರಷ್ಟಾಚಾರ?
ಭಾರತಮಾತೆ ವಿಶ್ವಗುರು ಆಗಿದ್ದರೆ  ಗುರುವಿದ್ದ ಕಡೆ ಶಾಂತಿ ಇರಬೇಕಿತ್ತಲ್ಲವೆ? ಹಾಗಾದರೆ ಇಲ್ಲಿ ಕೇವಲ ನಾಟಕವಿದೆ.
ಆಟವಿದೆ,ಮನರಂಜನೆಯಿದೆ,ರಾಜಕೀಯವಿದೆ ಎಂದರ್ಥ.
ಇದರ ಹಿಂದೆ ನಡೆದಷ್ಟೂ ದಾರಿತಪ್ಪಿಸಿಕೊಂಡು ಅತಂತ್ರರಾಗಿ
ಜೀವನದ ಮೂಲ ಸತ್ಯವನ್ನರಿಯದೆ  ಹೋಗುವವರೆ ಹೆಚ್ಚು
ಹೀಗಾಗಿ ನಮ್ಮ ಹಿಂದಿನ ಮಹಾತ್ಮರುಗಳು  ನಾಲ್ಕು ವರ್ಣ, ನಾಲ್ಕು ವೇದಗಳ ಮೂಲಕ ಧರ್ಮ ಕರ್ಮ ವನ್ನು ವಿಂಗಡಣೆ
ಮಾಡುತ್ತಾ ಆ ಭಗವಂತನ ಸೇರುವ ಬಗೆಯನ್ನು ಅವರವರ ಜನ್ಮದ ಪ್ರಕಾರ  ಶಿಕ್ಷಣದಲ್ಲಿಯೇ ಸರಿಯಾದ ಸಂಸ್ಕಾರ,ರೀತಿ ನೀತಿ,ಸಂಸ್ಕೃತಿ ಕಲಿಸುತ್ತಾ ಸ್ವತಂತ್ರವಾಗಿ ಜೀವಿಸಲು ಬಿಟ್ಟು
ಮಾನವ ಮಹಾತ್ಮನಾಗಲು  ಜ್ಞಾನ ನೀಡುತ್ತಿದ್ದರು.ಆದರೆ ಕಲಿಗಾಲದ ಅಜ್ಞಾನದ ಕಣ್ಣಿಗೆ ಇದೊಂದು  ಅಜ್ಞಾನವಾಗಿ
ಕಂಡು ಕಣ್ಣಿಗೆ ಕಾಣೋದರ ಹಿಂದೆ ಹೋಗಿ ಕಾಣದ ಹಿಂದಿನ ಶಕ್ತಿಯಿಂದ ದೂರವಾಗಿ ಈಗ ಜೀವಾತ್ಮನಿಗೆ ಒಳಗೇ ಇದ್ದ ಪರಮಶಕ್ತಿಯ ಪರಿಚಯವಿಲ್ಲ.ಹೊರಗಿನ ಶಕ್ತಿಯ ಪರಿಚಯ ಮಾಡಿಕೊಂಡು ಹಿಂದೆ ಹೋದಷ್ಟೂ ಸಾಲದ ಹೊರೆ ಜೀವ ಹೊತ್ತು ನಡೆಯಬೇಕಿದೆ. ಇದನ್ನು ತತ್ವಜ್ಞಾನದ
ಪ್ರಕಾರ ತಿಳಿಸುವುದರ ಮೂಲಕ ಅನೇಕ ಜ್ಞಾನಿಗಳು ಬಂದು ಹೋದರು. ಈಗ ಆ ತತ್ವವನ್ನು ಅಪಾರ್ಥ ಮಾಡಿಕೊಂಡು ತಂತ್ರದಿಂದ ಜನರನ್ನು ಆಳುವುದರ ಮೂಲಕ ಸ್ವತಂತ್ರ ಜ್ಞಾನ
ಹಿಂದುಳಿದಿದೆ. ಅಂದರೆ ಅದ್ವೈತ ದೊಳಗೇ ಧ್ವೈತವಿದೆ.
ಒಳಹೊಕ್ಕಿ ನೋಡುತ್ತಿಲ್ಲ.ನಾನೇ ಬೇರೆ ನೀನೇ ಬೇರೆ ಎಂದಾಯಿತು,ಕೊನೆಯಲ್ಲಿ ವಿಶಿಷ್ಟಾದ್ವೈತ ದೊಳಗೂ ವಿಶೇಷವಾದ ಅದ್ವೈತ ಇರೋವಾಗ ಮೂರು ಕಂಡರೂ
ಒಂದೇ ಭೂಮಿಯಲ್ಲಿ ಮೂವರೂ ಇರೋದಲ್ಲವೆ? ಭೂ ತಾಯಿ ಸೇವೆ ಮಾಡೋ ಬದಲಾಗಿ ತಾಯಿಯನ್ನೇ ಆಳುವ
ಮಟ್ಟಿಗೆ ರಾಜಕೀಯ ಬೆಳೆದಿದೆ. ಯಾಕೆ ತಾಯಿಯ ಜ್ಞಾನಪಡೆಯಲು ಅವಳಿಗೆ ಶಿಕ್ಷಣ ನೀಡಿಲ್ಲವೆಂದರೆ  ಜ್ಞಾನ ಬಂದರೆ ನಮ್ಮ ರಾಜಕೀಯಕ್ಕೆ ಪೆಟ್ಟು. ಇದೀಗ ಇಡೀ ಮನುಕುಲಕ್ಕೆ  ಕಷ್ಟ ನಷ್ಟವಾದರೂ ಹೊರಗಿನಿಂದ ಹೆಸರು,ಹಣ,ಅಧಿಕಾರ,ಸ್ಥಾನವಿದ್ದರೆ ಅದೃಷ್ಟ ವೆನ್ನುವುದು
ಅರ್ಧ ಸತ್ಯ. ಅದೇ ಆತ್ಮನಿಗೆ  ಸಾಲದ ಹೊರೆ ಏರಿಸುವ ಸಾಧನ ಎನ್ನುವರು ಮಹಾತ್ಮರು.ಈ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು ಯಾವುದೇ ಅಧಿಕಾರ,ಹಣ,ಸ್ಥಾನಕ್ಕೆ ಹೋರಾಟ ನಡೆಸದೆ ಭಗವಂತ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಾಮಾನ್ಯರಂತೆ ಜೀವನ‌ ನಡೆಸಿ ಮಹಾತ್ಮರಾದರು. ಈಗ ಅಂತಹವರನ್ನು ಸಮಾಜವೇ ತಿರಸ್ಕಾರದಿಂದ ಕಾಣುತ್ತದೆ. ಸರ್ಕಾರ ಹಣ ನೀಡಿ ಸಾಲದ ಹೊರೆ ಹಾಕುತ್ತಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಹೆಚ್ಚುತ್ತಿದೆ. ಶಿಕ್ಷಣವನ್ನೇ ಬುಡ ಮೇಲು ಮಾಡಲು ಹೋಗಿ ಜ್ಞಾನ ಬಿಟ್ಟು ಅಜ್ಞಾನವೇ ತಾಂಡವವಾಡುತ್ತಿದೆ. ಹಿಂದಿನ ಶಿಕ್ಷಣ ಹಿಂದೂ ಶಿಕ್ಷಣ,ಇಂದಿನ ಶಿಕ್ಷಣ ಇಸ್ಲಾಂ ಶಿಕ್ಷಣ,ಮುಂದಿನ ಶಿಕ್ಷಣ   ಮುಸ್ಲಿಂ ಶಿಕ್ಷಣ. ಅಂದರೆ ಇಲ್ಲಿ ಶಿಕ್ಷಣದಿಂದಲೇ ಎಲ್ಲಾ ಬದಲಾವಣೆ ಆಗಿರುವಾಗ  ನಾವು ಯಾರು? ಮೂರೂ ಶಿಕ್ಷಣದ ವಿಚಾರ ನಮ್ಮೊಳಗಿದೆ. ಅದನ್ನು ಬಳಸಿಕೊಂಡೆ ಬೆಳೆಸಿಕೊಂಡೇ ದೇಶ ನಡೆದಿದೆ. ಯಾರ ಶಿಕ್ಷಣದಿಂದ ಏನು ಸಿಗುತ್ತದೆ ಎನ್ನುವ ಜ್ಞಾನವಿಲ್ಲದೆ ಎಲ್ಲವನ್ನೂ ಎಲ್ಲರನ್ನೂ ಎಲ್ಲೆಡೆಯೂ ಹರಡಿಕೊಂಡು ನಾವೆಲ್ಲ ಒಂದೇ ದೇಶದ ಪ್ರಜೆಗಳು, ಸರ್ವಧರ್ಮ ಸಮ್ಮೇಲನಗಳು, ಧಾರ್ಮಿಕ ಆಚರಣೆಗಳು, ದೇವಸ್ಥಾನ,ಚಚ್೯, ಮಸೀದಿ,ಮಂದಿರ,ಮಠಗಳು  ಬೆಳೆದಿದ್ದರೂ  ಈವರೆಗೆ ದೇವರು ಯಾರಿಗೂ ಕಂಡಿಲ್ಲವೆಂದರೆ ಯಾರಿಗಾಗಿ ಎಲ್ಲಾ ಮಾಡುತ್ತಿರುವುದು ಎಂದಾಗ ನನಗಾಗಿ,ನನ್ನ ಸಂಸಾರಕ್ಕಾಗಿ,ನನ್ನ ಸಮಾಜಕ್ಕಾಗಿ,ನನ್ನ ದೇಶಕ್ಕಾಗಿ ಎನ್ನಬಹುದು.ಶಾಂತಿ ಸಿಗಬೇಕಾದ ಸ್ಥಳದಲ್ಲಿ ಕ್ರಾಂತಿ ಬೆಳೆದಿದೆ ಎಂದರೆ ನಮ್ಮ  ದಾರಿ ಸರಿಯಿಲ್ಲವೆಂದರ್ಥ. ಮೊದಲು ಮಾನವನಾಗು ನಂತರ ಮಹಾತ್ಮನಾಗಬಹುದು ಎಂದರೆ ಮಾನವೀಯತೆ ಬೆಳೆಸೋ ಶಿಕ್ಷಣವೇ ಸಂಸ್ಕಾರವೇ ಮಕ್ಕಳಿಗೆ ಕೊಡದೆ ಆಳಿದರೆ ನಾವು ಪೋಷಣೆ ಮಾಡಿರೋದೆ ನಮಗೆ ತಿರುಗಿ ಸಿಗುತ್ತಿದೆ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಪ್ರಚಾರಕ್ಕಷ್ಟೆನಾವು ಬಂದಿರೋದು. ಹಿಂದಿನ  ಆಚರಣೆಯ ಉದ್ದೇಶ ಸತ್ವಯುತ,ಸತ್ಯದಿಂದ ಕೂಡಿತ್ತು.
ಪರಿಸರ ಮಾಲಿನ್ಯವೇ ಹೆಚ್ಚಾಗಿ ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡು ಎಷ್ಟುದೇವಸ್ಥಾನ ಕಟ್ಟಿದರೂ ದೈವ ಗುಣಕ್ಕೆ ಬೇಕಾದ  ಶಿಕ್ಷಣವೇ ಕೊಡದೆ ಆಳಿದರೆ ದೇವರು
ಒಲಿಯೋದಿಲ್ಲ. ಶಿವಶರಣರ ವಚನಗಳು ದಾಸಸಾಹಿತ್ಯ ಇನ್ನಿತರ. ಸಾಹಿತ್ಯಗಳು ಪ್ರಚಾರವಾದರೂ ಮಕ್ಕಳು ಮಹಿಳೆಯರವರೆಗೆ ತಲುಪದೆ ವ್ಯವಹಾರಕ್ಕೆ ಇಳಿದಾಗ ಹಣ,ಅಧಿಕಾರ,ಸ್ಥಾನವೇನೂ ಹೊರಗೆ ಸಿಕ್ಕಿತು.ಒಳಗಿದ್ದ ಆತ್ಮಸಾಕ್ಷಿ  ಹಿಂದುಳಿಯಿತು. ಇದೇ ಹಿಂದೂ ಧರ್ಮದ ಹಿಂದುಳಿಯುವಿಕೆಗೆ ಕಾರಣವಾಯಿತು.ಈಗಲೂ ರಾಜಕೀಯ ಬಿಡದೆ ಹೊರಗೆ ಹೋರಾಟದಿಂದ ಧರ್ಮ ರಕ್ಷಣೆ ಮಾಡಿದರೂ  ಪರಧರ್ಮವೂ ಹೋರಾಡುತ್ತದೆ.
ಆದರೆ,ಅವರಿಗೆ ಪೂರ್ಣ ಸತ್ಯ ತಿಳಿಯದ ಕಾರಣ  ಮತ್ತೆ ಮತ್ತೆ ಜನ್ಮ ಪಡೆದು ಇದೇ ಹೋರಾಟದಲ್ಲಿ ಜೀವನ
ವಿರುತ್ತದೆ.ಹೋಗೋದು ಜೀವ ಮಾತ್ರ.ಸಣ್ಣ ಇರುವೆಯೂ ಜೀವನ‌ ನಡೆಸುತ್ತದೆ.ನಿರಂತರವಾಗಿ ತನ್ನ ಆಹಾರ ಹುಡುಕಾಟದಲ್ಲಿ ನಡೆಯುತ್ತಾ ತನ್ನ ಬಳಗದೊಡನೆ ಒಗ್ಗಟ್ಟಿನಿಂದ ಇರುತ್ತದೆ. ಆದರೆ ಮಾನವನಿಗೆ ಆ ಇರುವೆಗೆ
ಇರುವ ಜ್ಞಾನವಿಲ್ಲವಾದರೆ  ದೈಹಿಕವಾಗಿ ಬಲಶಾಲಿ ಆತ್ಮಶಕ್ತಿ
ಇಲ್ಲವಾದರೆ ಜೀವನವೇ  ವ್ಯರ್ಥ ಎನ್ನುವರು ಮಹಾತ್ಮರು. 
ಇಡೀ ವಿಶ್ವವೇದೇವಾಲಯವಾದರೂ ದೈವತ್ವದ ಗುಣವುಳ್ಳ ಮಾನವರಿಲ್ಲದೆ  ಯಾತ್ರಸ್ಥಳ,ಪ್ರವಾಸಿತಾಣವಾಗುತ್ತಿದೆ.
ಮನರಂಜನೆಯ ಮಾಧ್ಯಮಗಳು,ಮಧ್ಯವರ್ತಿಗಳು ಆತ್ಮವಂಚನೆಯಲ್ಲಿದ್ದರೂ ನಾಟಕವಾಡುತ್ತಿದ್ದಾರೆ.ಆದರೆ
ಮೇಲಿರುವ ಆ ಮಹಾ ಶಕ್ತಿಯ ಮುಂದೆ ಯಾವ ನಾಟಕವೂ ನಡೆಯೋದಿಲ್ಲವೆನ್ನುವ ಅರಿವಿದ್ದರೆ ಜೀವನವೆಂಬ ಒಂದು ನಾಟಕರಂಗದಲ್ಲಿ ಉತ್ತಮವಾದ ಪಾತ್ರಧಾರಿಯಾಗಿದ್ದು ಮುಂದೆ ಹೋಗಬಹುದು.ಹೀಗಾಗಿ ನಾವೆಲ್ಲರೂ ಆ ದೇವರ ಪ್ರತಿನಿಧಿಗಳಷ್ಟೆ. ಪಾತ್ರವಹಿಸುವಾಗ  ಉತ್ತಮ ಪಾತ್ರವಿದ್ದರೆ  ಸದ್ಗತಿ. ಇಲ್ಲವಾದರೆ ದುರ್ಗತಿ. ದುರ್ಗಾದೇವಿ ಯನ್ನು,
ಕಾಳಿಯನ್ನು,ಶಿವನನ್ನು  ಆಹ್ವಾನಿಸುವಾಗ  ಅವರ ಉಗ್ರ ರೂಪವನ್ನು  ಅರ್ಥ ಮಾಡಿಕೊಂಡರೆ ಉತ್ತಮ. ಜೀವ ಶಾಶ್ವತವಲ್ಲ. ಆತ್ಮಶಾಶ್ವತ.ಆತ್ಮಾನುಸಾರ ನಡೆದಾಗಲೇ ಆತ್ಮನಿರ್ಭರ ಭಾರತವಾಗುತ್ತದೆ. ಒಟ್ಟಿನಲ್ಲಿ ನಮಗೆ ಸುಖ ಬೇಕು,ಶಾಂತಿಯೂ ಬೇಕು ಎಂದಾಗ ಕಷ್ಟಪಟ್ಟು ಜ್ಞಾನದ ಕಡೆಗೆ ನಡೆಯಲೇಬೇಕು.ಸುಖವಾಗಿದ್ದು ಜ್ಞಾನಿಗಳಾಗಲು  ಅಸಾಧ್ಯ.ಯಾರಾದರೂ  ಹೀಗಿದ್ದರೆ ಜನರು ಎಚ್ಚರವಾದರೆ ಉತ್ತಮ. ನಾವೇ ನಾಟಕದಲ್ಲಿರುವಾಗ ನಮ್ಮ‌ಪಾತ್ರವನ್ನು
ನಾವು ಸರಿಯಾಗಿ ನಡೆಸುವುದಕ್ಕಾಗಿ ಪ್ರಯತ್ನಪಟ್ಟರೆ ಉತ್ತಮ.ಪರರು ದಾರಿತಪ್ಪುವ ಅಗತ್ಯವಿರೋದಿಲ್ಲ. ಪರರನ್ನು ದಾರಿತಪ್ಪಿಸಿ ಮನರಂಜನೆ ಹೆಚ್ಚಿಸಿಕೊಂಡರೆ ಸರಿಯಾದ ಆತ್ಮವಂಚನೆಗೆ ಪ್ರತಿಫಲವೂ ಸಿಗುತ್ತದೆ. ಇದನ್ನು ಯಾವ ಸರ್ಕಾರವೂ ತಡೆಯಲಾಗದು.
ದೇವರ ಸರ್ಕಾರ, ಮಾನವರ ಸರ್ಕಾರ, ಅಸುರರ ಸರ್ಕಾರದಲ್ಲಿ ಮಧ್ಯದಲ್ಲಿರುವ ಮಾನವರ ಸಹಕಾರ ವೇ ಮುಖ್ಯ. ತನ್ನ ಮನಸ್ಸನ್ನು ಹಿಡಿದಿಟ್ಟುಕೊಳ್ಳಲಾಗದವರು ಬೇರೆಯವರ ಮನಸ್ಸನ್ನು ಕದ್ದು ಆಳುವುದರಿಂದ ಅಧರ್ಮ ,ಅನ್ಯಾಯ,ಅಸತ್ಯ,ಭ್ರಷ್ಟಾಚಾರ ನಡೆಸೋ ಅಸುರರ ಸರ್ಕಾರ  ಬೆಳೆಸುತ್ತಾರೆ. 
ಒಂದೇ ಭೂಮಿಯಲ್ಲಿ,ಒಂದೇ ದೇಶದಲ್ಲಿ,ಒಂದೇ ತತ್ವದಲ್ಲಿ
ಒಂದೇ ಜನ್ಮದಲ್ಲಿ  ಎಲ್ಲವನ್ನೂ ಒಂದಾಗಿಸಲಾಗದು.ಇದಕ್ಕೆ
ಮೂರೂ  ಒಂದೇ ಆದರೂ ಮೂರರ ಒಳಗಿರುವ ಉದ್ದೇಶ
ಒಂದಾಗಿಲ್ಲ. 
ದೇವರು,ಮಾನವರು,ಅಸುರರು
ಆಕಾಶ,ಭೂಮಿ,ಪಾತಾಳ, ಸೃಷ್ಟಿ, ಸ್ಥಿತಿ,ಲಯ,  ತಂದೆ,ತಾಯಿ ಮಕ್ಕಳು,  ವಿಶ್ವ,ದೇಶ,ವಿದೇಶ,   ಭೂಮಿಯ ಋಣ ತೀರಿಸಲು ಮಧ್ಯದಲ್ಲಿ ರುವವರನ್ನು ಮಧ್ಯವರ್ತಿಗಳನ್ನು
ಹಿಡಿದು ನಡೆಯುವಾಗ ಸತ್ಯಾಸತ್ಯತೆಯನ್ನು ಜ್ಞಾನದಿಂದ ಅರ್ಥ ಮಾಡಿಕೊಂಡರೆ ಉತ್ತಮ ಜೀವನ ಯಾತ್ರೆ ಸಾಧ್ಯ.


Tuesday, October 11, 2022

ಮೊದಲು ಮಾನವನಾಗೋದೆಂದರೆ ಏನು?

ಮೊದಲು ಮಾನವನಾಗು ಎಂದಿರುವ  ಮಹಾತ್ಮರ ಹಿಂದಿನ ಸತ್ಯವನ್ನು ಅಧ್ಯಾತ್ಮ ದಿಂದ ತಿಳಿಯಬಹುದಷ್ಟೆ.ಇಲ್ಲಿ ಭೂಮಿ ಮೇಲಿರುವ  ಚರಾಚರಗಳಲ್ಲಿ  ಜೀವ ಪ್ರಾಣ ಶಕ್ತಿಯುಳ್ಳ  ಮಾನವನಿಗಷ್ಟೆ  ಆರನೇ ಅರಿವಿರೋದು. ಇದನ್ನು ಹೊರಗೆ ಹುಡುಕಿದರೆ ಸಿಗದು.ಒಳಗೇ ಅಡಗಿರುವುದರಿಂದ ಸಾಧ್ಯವಾದಷ್ಟು  ಮಟ್ಟಿಗೆ  ದೇಹ ಹಾಗುಮನಸ್ಸನ್ನು ಸ್ವಚ್ಚ ಮಾಡಿಕೊಂಡರೆ  ಅದರ ಅರಿವಾಗುತ್ತದೆ. ಹೀಗಾಗಿ ಮಹಾತ್ಮರುಗಳು ಆತ್ಮಜ್ಞಾನವನ್ನು ತನ್ನ ತಾನರಿತು ನಡೆಯಲು ಬಳಸಿಕೊಂಡು ಆಂತರಿಕ ಶುದ್ದಿಯಿಂದ ಮಾನವೀಯತೆ ಬೆಳೆಸಿಕೊಂಡು ಮಹಾತ್ಮರಾಗಿ ಮುಕ್ತ
ರಾದರು. ನೋಡುವುದಕ್ಕೆ ಮಾನವ, ನಡೆ ನುಡಿಯಲ್ಲಿ
ಅಸುರತೆಯ ಗುಣವಿದ್ದರೆ  ಸತ್ಯದ ಅರಿವಾಗದು.ತನ್ನ ದೇಹ ಸುಖಕ್ಕಾಗಿ ಸಂಸಾರ,ಸಮಾಜ,ದೇಶವನ್ನು  ಅಧರ್ಮದ ಕಡೆ
ತಿರುಗಿಸಿಕೊಂಡು  ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂದರೆ ಆ ಸಾಲದ ಹೊರೆ ಹೊತ್ತು ಮತ್ತೆ ಜನ್ಮ ತಳೆಯಲೇ
ಬೇಕು ಎನ್ನುವ ಕಾರಣಕ್ಕಾಗಿ  ಹಿಂದಿನ ಜ್ಞಾನಿಗಳು ಸಾಲ 
ತೀರಿಸುವ ಸನ್ಮಾರ್ಗ, ಸ್ವಧರ್ಮ, ಸತ್ಕರ್ಮ, ಸದಾಚಾರ,ಸತ್ಯ,
ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ವಾಗಿ  ನಡೆದರು.


ಯಾವಾಗ ರಾಜಕೀಯ ಬೆಳೆಯಿತೋ ಆಗ ತನ್ನ 
ತಾನರಿಯದೆ ಜನರನ್ನು ಆಳುವ‌ ಮಟ್ಟಿಗೆ ಹಣ,ಅಧಿಕಾರ, ಸ್ಥಾನಕ್ಕಾಗಿ ಅಧರ್ಮ, ಅಸತ್ಯ, ಅನ್ಯಾಯವನ್ನು  ನ್ಯಾಯ
ವೆನ್ನುವ   ಕಾನೂನನ್ನು ತಂದು ಜನರ ಸಹಕಾರದಿಂದಲೇ 
ಜನರನ್ನು ಆಳುವ ಅರಸರು ಹೆಚ್ಚಾದರು. ಈಗಲೂ ಪುರಾಣ,ಇತಿಹಾಸದ ರಾಜರನ್ನು  ರಾಜಕೀಯವನ್ನು  ಎತ್ತಿ ಹಿಡಿಯುತ್ತಾ ಹಿಂದಿನ ಧರ್ಮ ಸೂಕ್ಮವನ್ನು ಜ್ಞಾನದಿಂದ 
ಅರ್ಥ ಮಾಡಿಕೊಳ್ಳದೆ  ಆಳಿದರೆ  ಮಧ್ಯವರ್ತಿಗಳು ಮಾತ್ರ ಬೆಳೆಯೋದು.ಯಾರೇ ಇರಲಿ ಮಾನವರಾಗಿದ್ದು ಭೂಮಿಯ ಸೇವೆ ಮಾಡುತ್ತಾ ಋಣ ತೀರಿಸುವ ಸಾಮಾನ್ಯಜ್ಞಾನ  ಸರಿಯಾಗಿ ತಿಳಿಯದೆ ಹೊರನಡೆದರೆ  ನಮ್ಮನ್ನು, ನಮ್ಮತನ
ವನ್ನು ನಾವೇ ಸ್ವತಃ ಬಿಟ್ಟು ನಡೆದಂತೆ ಎನ್ನುತ್ತಾರೆ ಮಹಾತ್ಮ
ರು. 
ಹೀಗಾಗಿ ಮೊದಲ ಶಿಕ್ಷಣವು ಮಾನವೀಯತೆಯ ಕಡೆಗೆ  ಇತ್ತು.ನಂತರ ಮಹಾತ್ಮರ ಕಡೆಗೆ ಇತ್ತು. 
ಆದರೆ ಇಂದು ನಾವು ಮಕ್ಕಳ ಒಳಗಿನ ಆ ಸದ್ಗುಣ,ಸತ್ಯವನ್ನು ಗಮನಿಸಲಾಗದೆ ಹೊರಗಿನ ಶಿಕ್ಷಣಕ್ಕೆ ದಾಸರಾಗಿಸಿ ಹಣ
ನೀಡಿ  ಮಕ್ಕಳ ಮೇಲೇ ಸಾಲದ ಹೊರೆ ಹಾಕಿದರೆ ಅದನ್ನು 
ತೀರಿಸಲು ಅವರಿಗೆ ಜ್ಞಾನ ಬೇಕು.
ಹಣ ಸಂಪಾದನೆಯ‌ ಮಾರ್ಗ ಧರ್ಮ ಯುಕ್ತವಾಗಿದ್ದರೆ ಹಣದ ಕೊರತೆ.ಅಧರ್ಮ ದೆಡೆಗೆ ನಡೆದರೆ ಜ್ಞಾನದ ಕೊರತೆ
ಇವೆರಡರ ನಡುವಿನ‌ ಮಾನವನಿಗೆ ಈ ಕಡೆ ಸಾಲ
ಇನ್ನೊಂದು ಕಡೆ  ಧರ್ಮ ಸಂಕಟ.
ಇದಕ್ಕೆ ದಾರಿ  ಶಿಕ್ಷಣದ ಮೂಲಕವೇ ತೋರಿಸುವುದಾಗಿತ್ತು. ಕಷ್ಟಪಟ್ಟು ಮುಂದೆ ನಡೆದ ಮಹಾತ್ಮರಿಗೂ ಕಷ್ಟಪಡದೆ ಅಡ್ಡದಾರಿ ಹಿಡಿದ ಮಹಾ ಜನರಿಗೂ ವ್ಯತ್ಯಾಸವಿಷ್ಟೆ. ಆತ್ಮಜ್ಞಾನದೆಡೆಗೆ ಹೋಗಲು  ಆಂತರಿಕ ಶುದ್ದಿಯಿರಬೇಕು.
ಮಾನವೀಯತೆ ,ನೈತಿಕತೆ,ಧಾರ್ಮಿಕತೆ ಬೇಕು. ಮಾನವನಾಗದೆ ಹೊರಗಿನಿಂದ ಮಹಾತ್ಮರನ್ನು  ಅರ್ಥ ಮಾಡಿಕೊಳ್ಳಲು ಕಷ್ಟವಿದೆ. ಯಾರಲ್ಲಿಯೇ ಆಗಲಿ ಅಧಿಕಾರ, ಹಣ,ಸ್ಥಾನ,ಪ್ರತಿಷ್ಟೆಗಳಿದೆ ಎಂದರೆ ಅವರ ಹಿಂದೆ ಸಾಕಷ್ಟು ಜನಬಲ,ಹಣಬಲ,ಅಧಿಕಾರಬಲವೂ ಇದೆ ಎಂದು.ಇದರಲ್ಲಿ ಸ್ವತಂತ್ರ ಎಲ್ಲಿದೆ? ಏಕತೆ  ,ಐಕ್ಯತೆ,ಒಗ್ಗಟ್ಟು ಸೂಚಿಸುವ ತತ್ವಕ್ಕೂ  ಬಿಕ್ಕಟ್ಟನ್ನು ಬೆಳೆಸಿ ಆಳುವತಂತ್ರಕ್ಕೂವ್ಯತ್ಯಾಸವಿದೆ. 
ಆದರೂ, ತತ್ವದ ನಂತರವೇ ತಂತ್ರಜ್ಞಾನದ ಬಳಕೆಯಾದರೆ ಉತ್ತಮ. ಕಾರಣ ಮಾನವನಾದ ಮೇಲೇ ಮಹಾತ್ಮರ ದರ್ಶನ ಸಾಧ್ಯ. ಮಾನವೀಯತೆಯ ಗುಣವನ್ನು ಒಳಗೇ 
ಬೆಳೆಸಿಕೊಳ್ಳುತ್ತಾ ಹೋದವರು ಮಹಾತ್ಮರಾದರು.
ಇವರುಗಳಿಗೆ ಯಾವುದೇ ಅಧಿಕಾರ, ಹಣ,ಸ್ಥಾನವಿರಲಿಲ್ಲ. ಇವು ನಶ್ವರ ಎನ್ನುವ ಜ್ಞಾನವಿತ್ತು. ಅಧಿಕಾರ ಹಣವನ್ನು ಧರ್ಮದೆಡೆಗೆ  ಬಳಸುವ ಜ್ಞಾನವಿತ್ತು.  ಹೀಗಾಗಿ ಕಾಣದ ದೇವರನ್ನು ಕಂಡರು, ಕಾಣದ ಆತ್ಮವನ್ನು ಅರ್ಥ ಮಾಡಿ
ಕೊಂಡರು. ಕಾಣದ ಬ್ರಹ್ಮನೆಡೆಗೆ ನಡೆದರು.  ಇಂದು ಕಾಣುವ ಹೊರಗಿನ ಸತ್ಯದ ಹಿಂದೆ ನಡೆದವರಿಗೆ ಕಾಣದ ಒಳಗಿನ ಸತ್ಯ
ಶೋಧನೆ ಕಷ್ಟ.ಹೀಗಾಗಿ ಅಂತರ ಬೆಳೆಯುತ್ತಾ  ಅಂತರದಲ್ಲಿ
ಅವಾಂತರಗಳು ಸೃಷ್ಟಿ ಯಾಗಿದೆ. ಎಷ್ಟೇ ಅಂತರವಿದ್ದರೂ
ಅದನ್ನು ಸತ್ಯ ಧರ್ಮದಿಂದ ಕಡಿಮೆ ಮಾಡಿದರೆ  ಉತ್ತಮ.
ಅಸತ್ಯ ಅಧರ್ಮ ವೇ ಬೆಳೆದರೆ ಅಧಮ.ಇಂದಿನ ಪರಿಸ್ಥಿತಿ
 ಹಿಂದೆಯೂ ಇತ್ತು. ಹಿಂದಿನ‌  ಧರ್ಮ   ಪ್ರಚಾರದಲ್ಲಿ ಇದೆ ಆಚಾರವಂತರಾಗಬೇಕಷ್ಟೆ.   ಜ್ಧಞಾನ ಬಂದ ನಂತರ ಧರ್ಮವಿಲ್ಲದ  ಸ್ಥಿತಿಯಲ್ಲಿ ಬದುಕುವುದು ಕಷ್ಟ. ಧರ್ಮದ ಜೊತೆಗೆ ಸತ್ಯವಿಲ್ಲದಿರೋದೆ  ಕಷ್ಟ. ಇದಕ್ಕಾಗಿ ಪರಮಾತ್ಮನೆ ಧರ್ಮ ರಕ್ಷಣೆಗಾಗಿ ಅವತಾರ ಎತ್ತಿ ಬರೋದಾದರೆ ಯಾವ ರೂಪದಲ್ಲಿ ಬಂದರೂ  ಮಾನವನಾಗೇ ಕಾಣೋದು. 
 ಮಕ್ಕಳನ್ನು ದೇವರ ಸಮಾನವೆನ್ನುತ್ತಾರೆ.ಅವರಲ್ಲಿ ಅಸತ್ಯ,ಅಧರ್ಮ, ಅನ್ಯಾಯದ ಸುಳಿವಿರದೆ ಸ್ವಚ್ಚವಾದ ಮನಸ್ಸಿರುತ್ತಿತ್ತು. ಮಕ್ಕಳಿಗೆ ಸರಿಯಾದ ಧರ್ಮ ಶಿಕ್ಷಣವಿಲ್ಲದಿದ್ದರೆ ದೈವತ್ವ ಬೆಳೆಯದು. ದೇವರನ್ನು ಹೊರಗೆ ಹುಡುಕಿಕೊಂಡು ಬೆಳೆಸುವ ಬದಲಾಗಿ ಒಳಗಿರುವ‌ ದೈವ ಗುಣವನ್ನು ಬೆಳೆಸುವ ಶಿಕ್ಷಣ ನೀಡುವುದೇ  ಧರ್ಮ ಕಾರ್ಯ.
ಶಿಕ್ಷಣ ದಾಸೋಹವು ಇಡೀ ರಾಷ್ಟ್ರದ, ವಿಶ್ವದ ಮಾನವರಿಗೆ
ಕೊಡುವ  ವರದಾನವಾಗಿದೆ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳಿಗೆ ಅಜ್ಞಾನವನ್ನು ಉಣಬಡಿಸಿ ಆಳುವುದಕ್ಕಿಂತ ಜ್ಞಾನದಿಂದ ಹಿಡಿದೆತ್ತಿ ಸ್ವತಂತ್ರವಾಗಿ ಜೀವನ ನಡೆಸಲು ಸಹಕರಿಸುವವರೆ ನಿಜವಾದ ಮಹಾತ್ಮರು. ಈ ಕೆಲಸವನ್ನು ಸರ್ಕಾರ ಮಾಡಬಹುದೆ? ಸರ್ಕಾರ ನಡೆಸೋರಿಗೆ ಮೊದಲು ಅಂತಹ ಶಿಕ್ಷಣ ಸಿಕ್ಕಿದ್ದರೆ ಆಗುತ್ತದೆ. ಅದಕ್ಕೆ ಮೊದಲು ಪೋಷಕರಿಗೆ ಜ್ಞಾನವಿದ್ದರೆ ಸಾಧ್ಯವಿದೆ.ರಾಜಕೀಯವನ್ನು ರಾಜಯೋಗವೆಂಬ ಭ್ರಮೆಯಲ್ಲಿ  ತಿಳಿದು ಜನರನ್ನು ಅಡ್ಡ ದಾರಿಗೆಳೆದರೆ  ಇರುವ ಜ್ಞಾನವೂ ಹಿಂದುಳಿಯುತ್ತದೆ. ಆದರೆ
ಭಗವಂತನ  ಒಳಗಿರುವ  ಎಲ್ಲಾ ಒಂದೇ ದಾರಿಯಲ್ಲಿ ನಡೆಯಲು ಕಷ್ಟ.ಹೀಗಾಗಿ ದಾರಿ ತಪ್ಪಿಸಿ ನಡೆಸಿಕೊಂಡು  ದಾರಿ  ಕಾಣದೆ ಶರಣಾದಾಗ ಹಿಡಿದೆತ್ತುವ ಕೆಲಸವನ್ನು ಅವನೆ ಮಾಡೋದು.ಹಾಗಾದರೆ ಭಗವಂತ ಇರೋದೆಲ್ಲಿ?
ಮಹಾತ್ಮರಲ್ಲಿ  ಹತ್ತಿರವಿದ್ದರೆ ಅಸುರರಲ್ಲಿ ದೂರವಿದ್ದು ನಡೆಸುತ್ತಾನೆ ಎನ್ನುವರು. ಹತ್ತಿರವಿದ್ದವರಿಗೆ ಕಷ್ಟಕೊಟ್ಟು ಸುಖ ನೀಡಿದರೆ,ದೂರವಿದ್ದವರಿಗೆ ಸುಖದ ನಂತರ ಕಷ್ಟ.
ಹೀಗಾಗಿ  ಯಾರು ಯಾವಾಗ ಹೇಗೆ,ಎಲ್ಲಿ,ಯಾಕೆ ಬದಲಾಗುವರೋ ಅವರಿಗೇ ಗೊತ್ತಿರುವುದಿಲ್ಲ.ಮಾನವರು
ತನ್ನ  ತಾನರಿತು ನಡೆಯೋದಷ್ಟೆ  ಉತ್ತಮ ಮಾರ್ಗ.ಇದು ನಮಗೆ ಬಿಟ್ಟ ವಿಚಾರ.ಬೇರೆಯವರ ಹಿಂದೆ ನಡೆದರೆ ಅದು
ಉತ್ತಮ ಮಾರ್ಗ ವಿದ್ದರೆ ಸರಿ. ಬರೋವಾಗ ಒಬ್ಬರೆ ಹೋಗುವಾಗ ಒಬ್ಬರೆ ಇದರ‌ ನಡುವೆ ಬಂದು ಹೋಗುವವರು  ಹಲವರು. ದೇವನೊಬ್ಬನೆ  ಆದರೂ ಅಸಂಖ್ಯಾತ ದೇವರುಗಳ ಸೃಷ್ಟಿ ಮಾನವನೇ ಮಾಡಿಕೊಂಡರೆ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಎಲ್ಲಾ  ಒಂದೇ ಶಕ್ತಿಯ ಅಂಗಗಳು.ಒಂದಕ್ಕೆ ನೋವಾದರೂ
ಇಡೀ ದೇಹ ನೋವು ಅನುಭವಿಸುತ್ತದೆ.ಹಾಗೆ ದೇಶದ ಒಂದೊಂದು ಭಾಗವೂ  ಸೂಕ್ಮವಾಗಿದೆ. ಇದನ್ನು ಸರಿಯಾಗಿ
ತಿಳಿಯದೆ ದುರ್ಭಳಕೆ ಮಾಡಿಕೊಂಡರೆ  ಅದರ ಪರಿಣಾಮ
ದೇಶವಾಸಿಗಳೇ ಎದುರಿಸಬೇಕಷ್ಟೆ.ಪರಮಾತ್ಮನಿಗೇನೂ ನಷ್ಟವಿಲ್ಲ.ಜೀವಾತ್ಮನಿಗೇ ಕಷ್ಟ ನಷ್ಟ.ಹಾಗೆಯೇ ಭಾರತಮಾತೆಯೊಳಗಿರುವಾಗ ಆ ತಾಯಿಯ ಮಹಾತ್ಮೆ ಜ್ಞಾನದಿಂದ ತಿಳಿಯದೆ ಅಜ್ಞಾನದಲ್ಲಿಯೇ ಇದ್ದರೆ  ಇದರ ಪ್ರತಿಫಲ ಜೀವವೇ  ಅನುಭವಿಸೋದು. ಹೆತ್ತ ತಾಯಿಯನ್ನು
ಸಾಕುವ ಮಕ್ಕಳು ದೊಡ್ಡವರೆನಿಸಿಕೊಳ್ಳುವರು.ಹಾಗೇ ಹೊತ್ತ ಭೂ ಸೇವೆ ಮಾಡುವವರೂ ಮಹಾತ್ಮರೆ. ಸೇವೆಯು
ಜ್ಞಾನದಿಂದ ಮಾನವೀಯತೆಯಿಂದ ನಡೆಸುವುದಕ್ಕೆ ಜ್ಞಾನ
ಬೇಕಷ್ಟೆ.ಸ್ವಾರ್ಥ ಅಹಂಕಾರದಿಂದ  ಸೇವೆ ಮಾಡುವ ನಾಟಕ
ನಾಟಕವಾಗೇ ಉಳಿಯುತ್ತದೆ. ಜೀವನವೇ ಒಂದು ನಾಟಕ
ಅದರ ಪಾತ್ರಧಾರಿ ಮಾನವ. ನಾಟಕದೊಳಗೆ ನಾಟಕ ಮಾಡುವಾಗ ಪಾತ್ರ ಉತ್ತಮವಾಗಿರಬೇಕು.  ನೋಡದವರು
ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು.  ಜೀವನ ಎಂದರೆ ಜೀವಿಗಳ ವನ. ಎಲ್ಲಾ ಜೀವಕ್ಕೂ ತನ್ನದೇ ಆದ ಅಸ್ತಿತ್ವ ಇದೆ. ಅಸ್ತಿತ್ವಕ್ಕೆ  ಹೋರಾಟ ಮಾಡುವುದು ಮಾನವ‌ ಮಾತ್ರ.ಹೋರಾಟವು ಆಂತರಿಕವಾಗಿದ್ದರೆ ಶಾಂತಿ,ತೃಪ್ತಿ, ಮುಕ್ತಿ. ಅಧರ್ಮದಿಂದ ದೂರವಾದಷ್ಟು ಧರ್ಮ ರಕ್ಷಣೆ.ರಾಜಕೀಯದಿಂದ ದೂರವಾದಷ್ಟು ರಾಜಯೋಗ.
ಅಜ್ಞಾನದಿಂದ ದೂರವಾದಷ್ಟು ಜ್ಞಾನೋದಯ.
ಅಹಂಕಾರದಿಂದ ದೂರವಾದಷ್ಟೂ ಆತ್ಮವಿಶ್ವಾಸ. ಅಸತ್ಯದಿಂದ ದೂರವಾದಷ್ಟೂ ಸತ್ಯದರ್ಶನ.
ಸತ್ಯವೇ ದೇವರಾದಾಗ ಅಸತ್ಯವನ್ನು ಏನೆನ್ನಬೇಕು?
ಇಲ್ಲಿ ಯಾರೋ ಯಾರನ್ನೋ ಆಳುವಷ್ಟು  ಆತ್ಮಜ್ಞಾನಿಗಳಿಲ್ಲ
ಆದರೆ ಅಜ್ಞಾನಿಗಳಿರುವುದರಿಂದಲೇ ಸಾಕಷ್ಟು ರಾಜಕೀಯ ಬೆಳೆಯುತ್ತಿದೆ. ಇದಕ್ಕೆ ಸಹಕರಿಸಿದಷ್ಟೂ ಅಧರ್ಮ ಬೆಳೆದು ಇನ್ನಷ್ಟು ಸಮಸ್ಯೆಗಳು ಮನುಕುಲವನ್ನು ಆವರಿಸುವ ಮೊದಲು ಮಾನವರು ಎಚ್ಚರವಾದರೆ ನಮ್ಮೊಳಗೇ ಇರುವ
ದೇವಾಸುರರ ಗುಣವನ್ನು ನಾವೇ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ನಮಗೆ ನಾವೇ ಮೋಸಹೋಗಿರುವಾಗ,ನಮಗೆ ನಾವೇ ಶತ್ರುವಾಗಿರುವಾಗ ಹೊರಗಿನವರು ಏನು ಮಾಡಲು ಸಾಧ್ಯ? ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. ಕೆಟ್ಟವರಿಗೆ ಕೆಟ್ಟದ್ದೇ ಆಗುತ್ತದೆ ಎಂದರೆ ಕೆಟ್ಟವರಿಗೆ ಕೆಟ್ಟಬುದ್ದಿ  ಬಿಡಿಸಲು
ಒಳ್ಳೆಯವರಿಗೆ ಸಾಧ್ಯವೆ? ಶಿಕ್ಷಣದಲ್ಲಿಯೇ ಇದನ್ನು ತಿಳಿಸುವ
ಮೂಲಕ  ಒಳ್ಳೆಯವರನ್ನು ಬೆಳೆಸಬಹುದು. ಕಲಿಸುವವರಲ್ಲಿ
ಮೊದಲು ಒಳ್ಳೆಯದು ಕೆಟ್ಟದ್ದು ಎನ್ನುವ ಜ್ಞಾನವಿರಲು ಸರಿಯಾದ ಗುರುಗಳ ಅಗತ್ಯವಿದೆ. ಸ್ವತಂತ್ರ ಜೀವನ ನಡೆಸಿ
ಗುರುಕುಲದಲ್ಲಿ ಶಿಷ್ಯರನ್ನು ತಯಾರಿಸುತ್ತಿದ್ದ ಹಿಂದಿನ ಮಹರ್ಷಿಗಳು  ಭಾರತವನ್ನು ಆಧ್ಯಾತ್ಮ ದಿಂದ  ವಿಶ್ವಗುರು
ಮಾಡಿದ್ದರು. ಈಗ ಶಿಕ್ಷಣದಲ್ಲಿಯೇ ವಿದೇಶ ಮಾಡುವ ತಯಾರಿ ನಡೆದಿರೋದೆ ದೊಡ್ಡ ದುರಂತ. ಬದಲಾವಣೆ ಆಗುತ್ತಿದೆ. ಜನಸಹಕಾರ ಅಗತ್ಯವಿದೆ. ರಾಜಕೀಯ ಬಿಟ್ಟು
ರಾಜಯೋಗದ ಸತ್ಯ ತಿಳಿಯುವುದು ಅತ್ಯವಶ್ಯಕ. ಕೇವಲ ಪ್ರಚಾರದಿಂದ ಸಾಧ್ಯವಿಲ್ಲ.ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದಂತೆ ಗುರು ಮೊದಲು ಸರಿಯಿದ್ದರೆ ಶಿಷ್ಯರೂ ಅವರ ದಾರಿಯಲ್ಲಿ ನಡೆಯುತ್ತಾರೆ. ಯಥಾ ರಾಜ ತಥಾ ಪ್ರಜಾ ಕಾಲ ಹೋಗಿದೆ.ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ.

Sunday, October 9, 2022

ಮೀಸಲು ಯಾರಿಗೆ ಇಡಬೇಕು

ನಮ್ಮ ಕಾಯಕ,ಕರ್ಮವು ಭಗವಂತನಿಗೆ ಮೀಸಲಾಗಿಟ್ಟರೆ
ಕೈಲಾಸ ಕಾಣಬಹುದು. ಕಾಯಕವೇ ಕೈಲಾಸ ಎನ್ನುವ ಮಂತ್ರದ ಅರ್ಥ ವಿಷ್ಟೆ.ಯಾರ  ಕಾಯಕವು ಧರ್ಮ, ಸತ್ಯದ ಮಾರ್ಗದಲ್ಲಿ ಇರುವುದೋ ಅದು ಭಗವಂತನಿಗೇ ಮೀಸಲು.
ಮೀಸಲಾಗಿಟ್ಟುಕೊಂಡು ನಾವೆಷ್ಟೇ ರಾಜಕೀಯದೆಡೆಗೆ ಹೋದರೂ ಅದೊಂದು ಅಕರ್ಮ, ಅಧರ್ಮ, ಅಸತ್ಯದ ಜೀವನವಾದರೆ  ಪರಕೀಯರ ವಶದಲ್ಲಿ ನಮ್ಮ ಜೀವ‌ಮೀಸಲಾದಂತೆಯೇ .ಶರಣಾಗೋದು ಎಂದಾಗ ಆ ಸತ್ಯಕ್ಕೆ ಧರ್ಮಕ್ಕೆ ಎನ್ನುವ ಅರ್ಥ ದಲ್ಲಿ  ಇಂದಿನ ಸಮಾಜವು ಯಾವ‌ಮಾರ್ಗದಲ್ಲಿ ನಡೆಯುತ್ತಿದೆ? ಯಾವ ದಿಕ್ಕಿನೆಡೆಗೆ ಜನರನ್ನು ಎಳೆದುಕೊಂಡು ಆಳುತ್ತಿದ್ದಾರೆ. ನಿಜವಾಗಿಯೂ ಇಲ್ಲಿ ಶರಣರು,ದಾಸರು,ಭಕ್ತರು,ಜ್ಞಾನಿಗಳು,ಗುರುಗಳು ಯಾರು ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಿಜ ಮಾನವನ ಆಸೆಗೆ ತಕ್ಕಂತೆ ಭಗವಂತನ ಸೃಷ್ಟಿ ಯೂ ಇದೆ.ಅದಕ್ಕೆ ತಕ್ಕಂತೆ ಸ್ಥಿತಿ ಕೊನೆಗೆ ಲಯವೂ ಆಗುತ್ತಿದೆ.ಇದನ್ನು ಯಾರಾದರೂ ತಡೆಯಲು ಸಾಧ್ಯವಾಗಿದ್ದರೆ  ನಾವು ನಿಜವಾದ ದೇವರೆ ಎನ್ನಬಹುದು.ದೇವಾನುದೇವತೆಗಳು  ಅವತಾರವೆತ್ತಿದ ಭೂಮಿ ಭಾರತದಲ್ಲಿ ಭಗವಂತನಿಗೆ ತಮ್ಮ ಜ್ಞಾನ,ಪ್ರತಿಭೆ,ಕರ್ಮ ವನ್ನರ್ಪಿಸುತ್ತಾ ಮುಕ್ತಿ ಪಡೆದವರು ಭಗವಂತನಿಗೆ ಮೀಸಲಾಗಿದ್ದರು.ಯಾವುದೇ ರಾಜರ ಹತ್ತಿರ
ಬೇಡದೆ,ಕಾಡದೆ ಸ್ವತಂತ್ರ ವಾಗಿದ್ದು ತಮ್ಮ ಜ್ಞಾನವನ್ನು  ಲೋಕ ಕಲ್ಯಾಣಕ್ಕಾಗಿ ಮೀಸಲಾಗಿಟ್ಟು ಧರ್ಮ ರಕ್ಷಣೆ ಮಾಡಿದ ಮಹಾತ್ಮರನ್ನು ಮುಂದಿಟ್ಟುಕೊಂಡು ನಾನೇ ಮಹಾತ್ಮನೆಂದರೆ  ಸತ್ಯವಲ್ಲ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು
ಸಮಸ್ಯೆಗಳು ಎದುರಿಸುತ್ತಿರುವುದು  ಶ್ರೀಮಂತ ವರ್ಗವೆ ಇವರ ಜೊತೆಗೆ ಕಡುಬಡವರೂ  ಯಾರಿಗೂ ಹೇಳಿಕೊಳ್ಳದ
ಸ್ಥಿತಿಯಲ್ಲಿದ್ದಾರೆ.ಇವರಿಬ್ಬರ ನಡುವಿನ‌ ಮಧ್ಯವರ್ತಿಗಳು ಅತಂತ್ರಸ್ಥಿತಿಗೆ  ಜನರನ್ನು ತಲುಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.ಅಂದರೆ ಶ್ರೀಮಂತ ರ ಹಣವನ್ನು ಬಡವರವರೆಗೆ ತಲುಪಿಸುವ‌ಕೆಲಸದಲ್ಲಿ ತಮ್ಮ ಪಾಲನ್ನು ಹಿಡಿದಿಟ್ಟುಕೊಂಡು  ನಾವು ಬಹಳ ಶುದ್ದರೆನ್ನುವಂತೆ ನಾಟಕ ಆಡಿಕೊಂಡು ಜನರಲ್ಲಿದ್ದ ಸ್ವತಂತ್ರ ಜ್ಞಾನ ಹಿಂದುಳಿಯುತ್ತಿದೆ.
ಜನಸೇವೆಯೇ ಜನಾರ್ದನನನ ಸೇವೆ,ದೇಶ ಸೇವೆಯೇ ಈಶ ಸೇವೆ ಎಲ್ಲಾ ಸೇವಕರಾದರೂ ಯಾಕೆ  ಭಗವಂತನ ದರ್ಶನ ಆಗಿಲ್ಲ? ದೇವಸ್ಥಾನ, ಮಠ,ಮಂದಿರ ಸುತ್ತಿದರೂ ದೈವತ್ವ ಯಾಕೆ ಜನರಲ್ಲಿಲ್ಲ? ಇಷ್ಟು  ವರ್ಷಗಳಿಂದ ಮಾಡಿದ ಸೇವೆಗೆ
ತಕ್ಕಂತೆ ಪ್ರತಿಫಲವಾಗಿ ಜನರಿಗೆ ಏನು ಸಿಕ್ಕಿದೆ? ಬಡತನವು
ಮಾಯವಾಗುವಷ್ಟು  ಸರ್ಕಾರದ ಸೇವಾಕೇಂದ್ರ,ಸಾಲ,ಸೌಲಭ್ಯ, ಉಚಿತ  ಶಿಕ್ಷಣ,ಉಡುಗೆ,ತೊಡುಗೆ,ಉದ್ಯೋಗ ಇನ್ನಿತರ ಗೃಹಬಳಕೆ ವಸ್ತುಗಳನ್ನು ಬಡವರಿಗೆ ಹಂಚಲಾಗುತ್ತಿದೆ. ಆದರೂ ಯಾಕೆ
ಭಾರತದಲ್ಲಿರುವಷ್ಟು ಸಮಸ್ಯೆ ಬೇರೆ ದೇಶದಲ್ಲಿ ಕಾಣುತ್ತಿಲ್ಲ?
ಕಾರಣವಿಷ್ಟೆ. ಅವರವರ ದೇಶದ ಮೂಲ ಶಿಕ್ಷಣವನ್ನು ಅವರ ಭಾಷೆ,ಜ್ಞಾನಕ್ಕೆ ತಕ್ಕಂತೆ  ಪ್ರಜೆಗಳಿಗೆ  ವಿದೇಶಿಗಳಲ್ಲಿ
ಸರ್ಕಾರ ನೀಡುತ್ತಿದೆ ಇದಕ್ಕೆ ಅಲ್ಲಿಯ ಪ್ರಜೆಗಳೂ ಸಹಕಾರ ನೀಡಿ ಉತ್ತಮವಾದ  ಆರ್ಥಿಕ ಸ್ಥಿತಿಗೆ ಬದ್ದರಾಗಿದ್ದಾರೆ. ಹಾಗೆ ಕಾನೂನು ಕೂಡ ಅಷ್ಟೇ ಕಟ್ಟುನಿಟ್ಟಾಗಿ ಅಚ್ಚುಕಟ್ಟಾಗಿ ದೆ. ಆದರೆ ಭಾರತದಲ್ಲಿ  ಮೂಲದ ಶಿಕ್ಷಣವೇ ಕೊಡದೆ ವಿದೇಶಿ ಶಿಕ್ಷಣವನ್ನು ಮೂಲದಲ್ಲಿ ಕೊಡುತ್ತಾ ಭೌತಿಕದಲ್ಲಿ  ಮುಂದೆ ನಡೆಯುತ್ತಾ ಅಧ್ಯಾತ್ಮ ದಲ್ಲಿ ಹಿಂದುಳಿದವರೆ ಹೆಚ್ಚುತ್ತಿದ್ದಾರೆ.
ಇವರನ್ನು ಆಳೋದಕ್ಕೆ  ವಿದ್ಯಾವಂತರೇನೂ ಇದ್ದರೂ ಜ್ಞಾನ ಇಲ್ಲದೆ  ತಾನೇ ಅಜ್ಞಾನದಲ್ಲಿದ್ದರೂ ಮಕ್ಕಳನ್ನೂ ಅಜ್ಞಾನಕ್ಕೆ
ಮೀಸಲಾಗಿಟ್ಟುಕೊಂಡು  ಆಂತರಿಕ ಸತ್ಯ,ಸತ್ವವಿಲ್ಲದ ಶಿಕ್ಷಣ
ನೀಡುತ್ತಾ ಹೊರಜಗತ್ತಿಗೆ ಒಂದು ಪ್ರದರ್ಶನದ ವಸ್ತುವಂತೆ
ಕುಣಿಸಿದರೆ  ಇದೊಂದು  ದೊಡ್ಡ ಪಿಡುಗು. ಅಜ್ಞಾನದ ರೋಗಕ್ಕೆ ಮದ್ದು ಜ್ಞಾನದ ಶಿಕ್ಷಣ.ಅದರಲ್ಲೂ ರಾಜಕೀಯ
ತೂರಿಸಿದರೆ   ಮಾನವನಿಂದ ಬದಲಾವಣೆ ಕಷ್ಟವಾದರೂ 
ಆ ದೈವಶಕ್ತಿಯಿಂದ ಸಾಧ್ಯ. ಇದಕ್ಕಾಗಿ ಭೂಮಿ ಶುದ್ದಿಗಾಗಿ
ಪ್ರಕೃತಿವಿಕೋಪ,ರೋಗ,ಯುದ್ದ,ಹೋರಾಟ,ಕೊಲೆ,ಸುಲಿಗೆ
ಭಯೋತ್ಪಾದನೆ ಹೆಚ್ಚುತ್ತಿದೆ. ಇವರೆಲ್ಲರೂ ಆ ಭಗವಂತನ
ಪ್ರೇರಕರೆ ಆದಾಗ  ಭಗವಂತನಿರೋದೆಲ್ಲಿ? ಚರಾಚರದಲ್ಲಿಯೂ ಅಡಗಿರುವ ಈ ಅಣು ಪರಮಾಣುಗಳ
ಒಕ್ಕೂಟ ಒಂದು ಜೀವಿಯಾಗಿ,ಪ್ರಾಣಿಯಾಗಿ,ಗಿಡ,ಮರ ಇನ್ನಿತರ ಚರಾಚರದಲ್ಲಿಯೂ ಅಡಗಿದ್ದು ಮಾನವನಿಗೆ  ಕಂಡೂ ಕಾಣದಂತೆ ತನ್ನ‌ಕೆಲಸ ಮಾಡುತ್ತಿರುವುದೇ ಆ ಮಹಾಶಕ್ತಿ. ಭೂಮಿತಾಯಿಯ ಋಣ ತೀರಿಸಲು ನಮ್ಮ ಸೇವೆಯು ದೇವರಿಗೆ ಮೀಸಲಿಟ್ಟ ಹಿಂದಿನ ಮಹಾತ್ಮರುಗಳು
ಎಲ್ಲಿರುವರು? ಅವರನ್ನು ಮಧ್ಯೆ ನಿಲ್ಲಿಸಿ ಜನರನ್ನು ದಾರಿ ತಪ್ಪಿಸಿ ಆಳುವವರನ್ನು ನಾವು ದೇವರೆನ್ನಬಹುದೆ? ಒಟ್ಟಿನಲ್ಲಿ ದೈವತ್ವವು ತತ್ವದಿಂದ ಬೆಳೆದಾಗಲೇ ದೇವರಿಗೆ ನಮ್ಮ ಸೇವೆ ಮೀಸಲಾಗುತ್ತದೆ. ತಂತ್ರದಿಂದ ಬೆಳೆದದ್ದು ಅಸುರರ ಪಾಲಾಗಿ  ಕಷ್ಟ ನಷ್ಟ ಇನ್ನಷ್ಟು ಬೆಳೆಯುತ್ತದೆ. ತಂತ್ರಜ್ಞಾನವು
ಮಾನವನ ಸೃಷ್ಟಿ. ತತ್ವಜ್ಞಾನ ದೈವಸೃಷ್ಟಿ.ತತ್ವಜ್ಞಾನಿಗಳ ನಡೆ ನುಡಿ ಯು ಸತ್ಯ ಧರ್ಮದಡಿಯಿತ್ತು.ಹೀಗಾಗಿ ಬಹಳ‌ ಕಷ್ಟಪಟ್ಟು  ಭೂಮಿಯಲ್ಲಿದ್ದೇ ಆತ್ಮಸಾಕ್ಷಾತ್ಕಾರ ಮಾಡಿ ಕೊಂಡು ಅಮರರಾದರು.ಇಲ್ಲಿ ಜೀವವಿರೋವಾಗಲೇ ಆತ್ಮಸಾಕ್ಷಿಯಂತೆ‌  ನಡೆಯುವುದು ಕಷ್ಟ.ಅಜ್ಞಾನಿಗಳ ಮಧ್ಯೆ ಜೀವನ ನಡೆಸುವಾಗ ಸತ್ಯವನ್ನು ಅಸತ್ಯವೆನ್ನುವವರೆ ಹೆಚ್ಚು.
ಹಾಗಂತ ಅಂತರಾತ್ಮದ ವಿರುದ್ದ ನಡೆಯುವುದೂ ಸಂಕಟ
ಈ ಕಾರಣಕ್ಕಾಗಿ ಹೆಚ್ಚು ಮಂದಿ ಸಂನ್ಯಾಸಸ್ವೀಕರಿಸಿ ಮುಂದೆ ನಡೆದರು. ಆದರೆ ಸಂಸಾರದಲ್ಲಿದ್ದೂ ಸಾಧನೆ ಮಾಡಿದ ಮಹರ್ಷಿಗಳೂ ಇದ್ದರು. ಹಿಂದಿನ ಕಾಲದಲ್ಲಿದ್ದ ಶಿಕ್ಷಣವೇ
ಜ್ಞಾನದ ಸೋಪಾನವಾಗಿತ್ತು.ಇಂದು ಶಿಕ್ಷಣವೇ ಅಜ್ಞಾನದ ಸೋಪಾನವಾಗಿ ಮಾನವನ ಮಾನವನನ್ನು ಆಳೋದಕ್ಕೆ ಹೋಗಿ ಅಳುವ ಪರಿಸ್ಥಿತಿಯನ್ನು ತಲುಪಿದ್ದಾನೆ.ಇಷ್ಟಕ್ಕೂ ನಮ್ಮ ಈ ಸಣ್ಣ ಬಿಂದು ಮಾತ್ರದ  ಜೀವ ರಕ್ಷಣೆಗಾಗಿ ಇಷ್ಟು
ಕಷ್ಟಪಡಬೇಕೆ? ಯಾರಿಗಾಗಿ ಯಾತಕ್ಕಾಗಿ ಇಲ್ಲಿಗೆ ಬಂದಿದೆ ಎಂದಾಗ ಅನೇಕ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು
ಬಂದಿದೆ.ಇದು ಹಿಂದಿನ ಜನ್ಮದ ಆಸೆಯಾಗಿರಬಹುದು,ಈಗಿನ‌ತಂದೆ ತಾಯಿಯರಿಂದ,ಸಮಾಜದಿಂದ ಬೆಳೆದಿರಬಹುದು. ಆಸೆಯೇ  ದು:ಖಕ್ಕೆ ಕಾರಣವೆಂದರೆ ಯಾವ ಆಸೆ ಭೌತಿಕದಲ್ಲಿ ಮುಳುಗಿಸುತ್ತಿದೆಯೋ ಅ ದೇ ದು:ಖಕ್ಕೆ ಕಾರಣ
ಎನ್ನಬಹುದಷ್ಟೆ.ನಿರಾಸೆಯಿಂದ ಸಾದು,ಸಂತ,ದಾಸ,ಶರಣರು ಇದ್ದರೆ ಅದು ಸಾತ್ವಿಕ ಆಸೆ. ರಾಜಸ,ತಾಮಸ ಗುಣವನ್ನು ಹೆಚ್ಚಿಸುವ ಆಸೆಯಿಂದ ಹೆಚ್ಚು ದು:ಖವಿರುತ್ತದೆ ಎನ್ನುವ 
ಅನುಭವ ಕಂಡುಕೊಂಡ ಎಷ್ಟೋ ಮಹಾರಾಜರುಗಳು ಕೊನೆಗೆ ವಾನಪ್ರಸ್ತ, ಸಂನ್ಯಾಸ ಸ್ವೀಕರಿಸಿ ಮುಕ್ತರಾಗಿದ್ದರು.
ಇಂದು ರಾಜಕಾರಣಿಗಳಾಗಲಿ ಶ್ರೀಮಂತ ಮಂದಿ,ಗುರು,
ಪ್ರತಿಷ್ಠಿತ ರು  ಕೊನೆಯವರೆಗೂ ತಮ್ಮ ಸ್ಥಾನ ಪ್ರತಿಷ್ಟೆ ಗಾಗಿ 
 ಹೋರಾಟ‌ ನಡೆಸುವವರಿದ್ದಾರೆ.
ಇದಕ್ಕೆ ಸಹಕರಿಸುವ‌ ಮಧ್ಯವರ್ತಿಗಳಿಗೂ‌ ಪೂರ್ಣ ಸತ್ಯದ ಅರಿವಿಲ್ಲದೆ ಪ್ರಚಾರಕರಾಗಿದ್ದರೆ ಜೀವನ‌ ನಡೆಸಬಹುದು.
ಆದರೆ ಆತ್ಮಜ್ಞಾನದ ಸಾಧನೆಗೆ ಇದೇ ತೊಡಕಾಗುತ್ತದೆ.
ಮಕ್ಕಳಿಗೆ ಸತ್ಯಜ್ಞಾನದ ಶಿಕ್ಷಣ ಮೀಸಲಿಟ್ಟು ಜೀವನದ 
ಸತ್ಯಾಸತ್ಯತೆಯನ್ನು ಅವರೆ ಅನುಭವಿಸುತ್ತಾ ಸ್ವತಂತ್ರ ಜ್ಞಾನವನ್ನು ಬೆಳೆಸಿಕೊಂಡರೆ ಇದು ಆತ್ಮನಿರ್ಭರ
ಭಾರತವಾಗುತ್ತದೆ.ಇದು ಬಿಟ್ಟು ಕೇವಲ ವಿರೋಧಿಗಳನ್ನು
ಬೆಳೆಸುತ್ತಾ ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರದ
ಹಣದಲ್ಲಿ  ಭಗವಂತನಿಗೆ ಸೇವೆ ಮಾಡಿದರೆ  ಏನು ಕೊಡುವೆವೋ ಅದೇ ತಿರುಗಿ ಬರೋದಾದರೆ  ಭ್ರಷ್ಟಾಚಾರವೆ
ಗಟ್ಟಿಯಾಗೋದು. ಒಟ್ಟಿನಲ್ಲಿ  ಮೀಸಲನ್ನು ಸತ್ಯ ಧರ್ಮ, ನ್ಯಾಯ,ನೀತಿ, ಸಂಸ್ಕೃತಿ, ಸಂಪ್ರದಾಯ,ಕಲೆ,ಯೋಗವು
ಹಿಂದಿನ ಶಿಕ್ಷಣವೇ ಬೆಳೆಸಿತ್ತು.ಈಗಿದುಅಳಿಸಿ ಆಳುವ‌ಮಟ್ಟಿಗೆ
ಬೆಳೆದುನಿಂತಿದ್ದರೂ ನಮ್ಮ ಮಕ್ಕಳಿಗೆ ನಾವೇ ಶತ್ರುವಾಗಿದ್ದು
ಅನಾವಶ್ಯಕ ವಿಚಾರಗಳನ್ನು ತಲೆಗೆ ತುಂಬಿ ಬುದ್ದಿವಂತರ ಸಾಲಿಗೆ ನಿಲ್ಲಿಸುತ್ತಿರುವುದು ಪ್ರಗತಿಯೇ ಅದೋಗತಿಯೆ?
ಇದಕ್ಕೆ ನಮ್ಮದೇ ಸಹಕಾರವಿದ್ದರೆ ಅಜ್ಞಾನವೇ
ಬೆಳೆಯೋದಲ್ಲವೆ?  ಮುಳ್ಳಿನ‌ ನಡುವೆ ಒಳ್ಳೆಯ ಹೂವು ಗಿಡದಲ್ಲಿ ಬಂದರೂ  ಅದು ಪರಮಾತ್ಮನ‌ ಪಾದಕ್ಕೆ ಮೀಸಲಿಡದೆ ಮಾನವನ ಕೊರಳಿಗೇ  ಸೇರಿದರೆ  ವ್ಯರ್ಥ.
ಹೀಗೇ ಭಕ್ತ ಪ್ರಹ್ಲಾದನು ರಕ್ಕಸರ ವಂಶದಲ್ಲಿ ಜನ್ಮ ತಾಳಿದರೂ ಅವನ‌ ಜೀವಾತ್ಮನು ಪರಮಾತ್ಮನಿಗೆ ಮೀಸಲಾಗಿತ್ತು ಇದರಿಂದಾಗಿ ಎಷ್ಟೋ ಕಷ್ಟವನ್ನನುಭವಿಸಿ
ಕೊನೆಗೆ  ಮಹಾವಿಷ್ಣುವಿನ ದರ್ಶನ ವಾಯಿತು.ಹೀಗೆಯೇ
ಎಷ್ಟೋ  ಸತ್ಪರುಷ,ಸ್ತ್ರೀ ಶಕ್ತಿ ಜನ್ಮ ತಾಳಿದ್ದರೂ ಯಾರದ್ದೋ
ರಾಜಕೀಯಕ್ಕೆ  ಸಿಲುಕಿ  ಇರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೋತರೆ  ಪರಮಾತ್ಮ ಕಾಣೋದಿಲ್ಲ.
ಇವೆಲ್ಲವೂ ಅಸುರ ಶಕ್ತಿಯ ವಶವಾಗುತ್ತದೆ.
ಮಾನವನೊಳಗೇ ಇರುವ ದೇವಾಸುರರ ಗುಣ ಜ್ಞಾನವು ಅವನಿಗೆ ತಿಳಿಯಲು ಉತ್ತಮ ಗುರು ಬೇಕುಶಿಕ್ಷಣ ಬೇಕಿದೆ.
ಇದನ್ನು ಕೊಡುವುದಷ್ಟೆ ಮಾನವನ ಧರ್ಮಉಳಿದದ್ದು
 ಅವರವರ ಕರ್ಮ ಕ್ಕೆ ತಕ್ಕಂತೆ ಜನ್ಮವಿರುತ್ತದೆ. 
ಮನರಂಜನೆಯಿರಲಿ ಆತ್ಮವಂಚನೆಯಲ್ಲ. ಇಷ್ಟು ದೊಡ್ಡ ದೇಹವನ್ನು  ಹಿಡಿದಿಟ್ಟುಕೊಂಡ ಆತ್ಮವೇ ದೇವರು.ಸತ್ಯವೆ ದೇವರು, ಧರ್ಮವೆ  ದೇವರು.ಇದು ತತ್ವಜ್ಞಾನದಿಂದ ಕಂಡು ಕೊಂಡಿರುವ‌  ಮಹಾತ್ಮರುಗಳು ಯಾವುದೇ ರಾಜಕೀಯಕ್ಕೆ
ಒಳಗಾಗದೆ ಸ್ವತಂತ್ರವಾಗಿ ದ್ದರು.ಕಾರಣ  ಒಂದೆ ಸತ್ಯ,ಒಂದೇ ತತ್ವವನ್ನು  ಅರ್ಥ ಮಾಡಿಕೊಳ್ಳಲು ಒಬ್ಬರಿಗೆ ಸಾಧ್ಯ. ಎಲ್ಲರಿಗೂ ತಿಳಿಸಬಹುದಾದರೂ ಅದರೊಳಗೆ ಹೊಕ್ಕಿ ನೋಡಲು ಒಬ್ಬರೆ ಹೋಗಬೇಕು. ಅದೇ ನಾನು. ನಾನು ಹೋಗುತ್ತಿದೆ ಅಹಂಕಾರ ಅಳಿಯುತ್ತಿದೆ ಎನಿಸಿದರೆ ಅಧ್ಯಾತ್ಮ ಸಾಧನೆ ಎನ್ನಬಹುದು.ಇದು ಹೆಚ್ಚುತ್ತಿದೆ ಎಂದರೆ
ಭೌತಿಕವಾಗಿದೆ.ಇವೆರಡರ ಉದ್ದೇಶ ಒಂದೇ ಆಗಿತ್ತು.ಹಿಂದೆ
ಅಧ್ಯಾತ್ಮ ದಲ್ಲಿಯೇ ವಿಶೇಷಜ್ಞಾನಿಗಳಿದ್ದರು.ಪರಕೀಯರು ದೂರವಿದ್ದು ನಮ್ಮದೇ ಶಿಕ್ಷಣದಿಂದ ನಮ್ಮಸಂಸಾರ,
ಸಮಾಜ, ದೇಶ ನಡೆಸೋ  ಮಹಾತ್ಮರು ಇದ್ದರು.
ಈಗಲೂ ಇದ್ದರೂ ಕಣ್ಣಿಗೆ ಕಾಣದೆ ಮರೆಯಲ್ಲಿದ್ದಾರೆ.
ಹೀಗಾಗಿ ಸ್ವಲ್ಪ ಮಳೆ,ಬೆಳೆ,ಶಾಂತಿ ಒಳಗಿದೆ. ಇದಕ್ಕೆ ಸರ್ಕಾರದ  ಮೀಸಲಿಗಿಂತ ಭಗವಂತನಿಗೆ ನಮ್ಮ ಕಾಯಕ
ವನ್ನು ಭಕ್ತಿ,ಶ್ರದ್ಧೆಯಿಂದ ಮೀಸಲಿಟ್ಟರೆ ಮುಕ್ತಿ. ಇದ್ದಲ್ಲಿಯೇ ಸಿಗುತ್ತದೆ. ಕನಕದಾಸ,ಪುರಂಧರ ದಾಸಶರಣಾಧಿಯಾಗಿ ಎಲ್ಲಾ  ರಾಜಕೀಯದಿಂದ  ದೂರವಿದ್ದು  ಅಧ್ಯಾತ್ಮ ಸಾಧಕರಾಗಿದ್ದರು.ಅಂದರೆ ತಮ್ಮ  ಸೇವೆಯನ್ನು
ಪರಮಾತ್ಮನ ದ್ಯಾನದಲ್ಲಿ ಮಾಡುತ್ತಾ ಪರಮಾತ್ಮನಿಗೇ ಮೀಸಲಾಗಿಟ್ಟಿದ್ದರು. ನಾವೀಗ ಎಲ್ಲಿ ಎಡವಿರೋದು?
ನಿಜವಾದ ಗುರು ಹಿರಿಯರು ಶಿಕ್ಷಕರು, ರಾಜರು ಎಲ್ಲಿರುವರು? ಬೇಲಿಯೇ ಎದ್ದು ಹೊಲ ಮೇಯ್ದರೆ ಅಧರ್ಮ. ಬೇಲಿ ಇಲ್ಲದ ಹೊಲದಲ್ಲಿ ಉತ್ತಮ ಸಸಿ
ಇರೋದಿಲ್ಲ ಇದ್ದರೂ  ದುಷ್ಟರ ಪಾಲಾಗುತ್ತದೆ ಎನ್ನುವರು.
ಸತ್ಯ ತಿರುಚಿ ಆಳಿದರೂ ಸತ್ಯಕ್ಕೆ ಸಾವಿಲ್ಲ.  ಜ್ಞಾನ ವಿಜ್ಞಾನದ ಅಂತರದಲ್ಲಿ ಅಜ್ಞಾನ ಮನೆ ಮಾಡಿದೆ.  ಅಜ್ಞಾನದಲ್ಲಿ ರುವ ಜೀವಿಗಳು ಪರಕೀಯರ ವಶವಾಗಿ ಸಾಯುತ್ತಿದೆ. ಅಂದರೆ
ಅಜ್ಞಾನಿಗಳನ್ನು ಬಳಸಿಕೊಂಡು ದುಷ್ಟಶಕ್ತಿಗಳು‌ ಬೆಳೆದಿದೆ.

ವಾಲ್ಮೀಕಿ ಜಯಂತಿ

 ಹಿಂದೂಗಳ ‌ಮಹಾಗ್ರಂಥ  ರಾಮಾಯಣ ರಚನಾಕಾರರಾದ ವಾಲ್ಮೀಕಿ ಮಹರ್ಷಿ ಗಳ ಜಯಂತಿಯ ಶುಭಾಶಯಗಳು.
ರತ್ನಾಕರನೆಂಬ ದಾರಿಕೋರ ವಾಲ್ಮೀಕಿಯಾಗಿದ್ದು, ನರೇಂದ್ರನೆಂಬ ಮಹಾತ್ಮ ವಿವೇಕಾನಂದರಾಗಿದ್ದು  ಹೀಗೇ ಇನ್ನೂ ಅನೇಕ ಮಹಾತ್ಮರುಗಳು ಹುಟ್ಟುವಾಗ ಸಾಮಾನ್ಯರಂತಿದ್ದು ನಂತರ ಮಹಾತ್ಮರಾಗಿ,ದೇವರಾಗಿ  ಗುರುವಾಗಿ, ಪೂಜನೀಯರಾಗಿದ್ದು  ಅವರ ತಪಸ್ಸು ಯೋಗ ಜ್ಞಾನದಿಂದ ಇಂತಹ  ಮಹಾತ್ಮರುಗಳು ನಮ್ಮ ದೇಶದಲ್ಲಿ ಮಹಾತ್ಮರಾಗಿರೋದು. ಅವರು,ಧರ್ಮ, ಪಂಗಡ,ಪಕ್ಷ ಕಟ್ಟಿಕೊಂಡು ರಾಜಕೀಯ ಮಾಡಿಲ್ಲ. ಇದನ್ನು ನಾವೀಗ ಅರ್ಥ ಮಾಡಿಕೊಳ್ಳದೆ ಇದ್ದರೆ ಇರುವ ಅಲ್ಪ ಸ್ವಲ್ಪ ಜ್ಞಾನವನ್ನೂ ಕಳೆದುಕೊಂಡು ಹಿಂದುಳಿಯೋದು ಸತ್ಯ.
ಭೂಮಿಯಲ್ಲಿ ಮೂರು ರೀತಿಯ  ಜನರಿದ್ದಾರೆ.ದೇವಮಾನವರು,ಮಾನವರು,ಅಸುರರು. ದೇವಮಾನವರಲ್ಲಿ  ಆತ್ಮಜ್ಞಾನವಿದ್ದು  ಭೂಮಿಯಲ್ಲಿ ಧರ್ಮ ಸತ್ಯ ನೆಲೆಸಲು  ಸಾಧಕರಾದರೆ ಮಾನವರು ಮಧ್ಯವರ್ತಿಗಳು, ಅಸುರರು ತನ್ನ ಸ್ವಾರ್ಥ ಸುಖಕ್ಕಾಗಿ ಪರರನ್ನು  ಅಧರ್ಮ ಅನ್ಯಾಯದಲ್ಲಿ ತೊಡಗಿಸಿಕೊಂಡು ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುವ ಅಜ್ಞಾನಿಗಳು. 
 ಹಿಂದೂ ಧರ್ಮ ಎಂದರೆ ನಮ್ಮ ನಮ್ಮ ಹಿಂದಿನವರ ಧರ್ಮ ವಾಗುತ್ತದೆ.ಅವರ ಕರ್ಮ ವನ್ನೇ ತಿರಸ್ಕರಿಸಿ ಮುಂದೆ  ನಡೆದವರು ಧರ್ಮ ರಕ್ಷಣೆಗಾಗಿ 
ಹೋರಾಟ ಮಾಡಿದರೂ ರಾಜಕೀಯವಾಗುತ್ತದೆ. ಮೊದಲು ನೀನು ನಿನ್ನ ಮೂಲ ಧರ್ಮವನ್ನರಿತು ನಡೆ,ನಿನ್ನ ನೀ ತಿಳಿದು ಆಂತರಿಕ ಶುದ್ದಿ ಪಡೆದು ಸಂಸಾರ ನಡೆಸು, ನಂತರ ಸಮಾಜವೇ ಶುದ್ದವಾಗುವುದು. ಪ್ರಜಾಪ್ರಭುತ್ವದ ಪ್ರಜೆಗಳಿಗೆ
ಧರ್ಮ ಪದಕ್ಕೆ ಅರ್ಥ ತಿಳಿಸುವ ಶಿಕ್ಷಣವೇ ಕೊಡದೆ ಆಳಿದರೆ
ಜ್ಞಾನ ಬರುವುದೆ? ಮಹಾತ್ಮರುಗಳು ಯಾರು?ಹೇಗಿದ್ದರು? ಎಲ್ಲಿದ್ದರು? ಅವರ ತತ್ವದ ನಡೆ ನುಡಿಯಲ್ಲಿದ್ದ ಸತ್ಯ ಧರ್ಮ ಈಗ ಎಲ್ಲಿದೆ? ಹಣದಿಂದ  ಧರ್ಮರಕ್ಷಣೆ ಸಾಧ್ಯವೆ?
ದೇಶದ ಮೂಲವೇ ಹಿಂದುಳಿದರೆ ಮೇಲಿನ ರೆಂಬೆ ಕೊಂಬೆಗಳನ್ನು ಬೆಳೆಸಿರೋದು ಯಾರು? ನಮ್ಮ ಸಹಕಾರವೇ ಎಲ್ಲಾ ಬದಲಾವಣೆಗೆ ಕಾರಣವಾದಾಗ  ಅದರ ಪ್ರತಿಫಲವೂ ಅನುಭವಿಸಬೇಕು. ಕರ್ಮಕ್ಕೆ ತಕ್ಕಂತೆ ಫಲ. ಎಷ್ಟೇ ಜಾತಿ ಹುಟ್ಟಿದರೂ ಮಾನವ ಜಾತಿ ಒಂದೇ. ಮಾನವೀಯತೆ ಮಾನವನಿಗೆ ಅಗತ್ಯ. ಇದನ್ನು ಸರ್ಕಾರ ಬೆಳೆಸಲಾಗದು. ಹಣದಿಂದ ಋಣ ಬೆಳೆಯುತ್ತದೆ.ಎಷ್ಟು ಪರಾವಲಂಬಿಗಳು ಹೆಚ್ಚುವರೋ ಅಷ್ಟೇ ಸ್ವಾತಂತ್ರ್ಯ ಹರಣವಾಗುತ್ತದೆ.. ಹಿಂದಿನ ಮಹಾತ್ಮರುಗಳು ಯೋಗಿಗಳು ಪರಮಾತ್ಮನೆಡೆಗೆ ಸಾಗಲು ಸ್ವತಂತ್ರ ಜ್ಞಾನದಿಂದ  ಹಿಂದಿನ ಧರ್ಮದ ಪ್ರಕಾರ  ನಡೆದು ಇದ್ದಲ್ಲಿಯೇ  ಪರಮಾತ್ಮನ ದರ್ಶನ ಮಾಡಿಕೊಂಡರು.ಈಗ ದೇಶ ಸುತ್ತು ಕೋಶ ಓದು ಎಂದು ಎಷ್ಟು ಸುತ್ತಿದರೂ ಓದಿದರೂ ಪರಮಾತ್ಮ ಕಾಣಲಿಲ್ಲ ಪರದೇಶ,ಪರಕೀಯರೆ ಬೆಳೆದು  ಪರಾವಲಂಬನೆಯಲ್ಲಿದ್ದೂ ಸ್ವಾವಲಂಬಿ ಎನ್ನುವ ಭ್ರಮೆಯಲ್ಲಿ  ಅಸಂಖ್ಯಾತ ಜನರು ಮೂಲ ಬಿಟ್ಟು ಹೊರಗೆ ಹೋದರೆ ಉಳಿಯೋದು ಯಾರು? ಇಲ್ಲಿ ಜ್ಞಾನವನ್ನು ಹೊರಗಿನಿಂದ  ತುಂಬುತ್ತಾ ಒಳಗಿದ್ದ ಸಾಮಾನ್ಯಜ್ಞಾನ ಹಿಂದುಳಿದಿದೆ. ಹೀಗಾಗಿ ಎಲ್ಲಾ ಸರ್ಕಾರದ ಹಿಂದೆ ನಿಂತು ರಾಜಕೀಯದಲ್ಲಿ ಮೈ ಮರೆತು ದೇಶವನ್ನು ವಿದೇಶ ಮಾಡುವ
ವಿಜ್ಞಾನ ಜಗತ್ತು ಬೆಳೆದಿದೆ. ಯಾರೂ ಶಾಶ್ವತರಲ್ಲ.ಮಹಾತ್ಮ ನಾಗಲು ಆತ್ಮಾವಲೋಕನ ಆತ್ಮವಿಶ್ವಾಸ,ಆತ್ಮಜ್ಞಾನದ ಅಗತ್ಯವಿತ್ತು. ಆತ್ಮನಿರ್ಭರ ಭಾರತವನ್ನು ಅಧ್ಯಾತ್ಮ ದಿಂದ ಮಾಡಬಹುದಿತ್ತು.ಅಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು.ಇದಕ್ಕೆ ಮಹಾತ್ಮರುಗಳು ಸ್ವತಂತ್ರ ಜ್ಞಾನದಿಂದ
ಸರಳ ಜೀವನದಲ್ಲಿ, ಸ್ವಾವಲಂಬನೆ ಜೊತೆಗೆ ಅವರ ಮೂಲ ಧರ್ಮ ಕರ್ಮಕ್ಕೆ ಒತ್ತುಕೊಟ್ಟು  ರಾಜಕೀಯದಿಂದ ದೂರವಿದ್ದರು. ಈಗ ಎಲ್ಲಿರುವರು ಮಹಾತ್ಮರುಗಳು? ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರದ ಹಿಂದೆ ನಡೆದರೆ ಪ್ರಗತಿಯೆ? ಭ್ರಷ್ಟಾಚಾರದ ಹಣದಲ್ಲಿ ಎಷ್ಟೇ  ಸಾಧಕರಾದರೂ ಪರಮಾತ್ಮನೆಡೆಗೆ ಹೋಗಲು ಆಗದ ಮೇಲೆ
ವೈಭವ,ಆಡಂಬರಗಳಿಂದ ಜನರನ್ನು ಸೆಳೆಯೋ ಪ್ರಯತ್ನ ನಡೆಸಿದರೂ ಜ್ಞಾನದೊರೆಯದು. ಶಿಕ್ಷಣವೇ ವ್ಯಾಪಾರ
ವಾದರೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಅದೂ ಕೂಡ ಪರಕೀಯ ಭಾಷೆಯಲ್ಲಿ ಶಿಕ್ಷಣ ನೀಡಿ ಮಕ್ಕಳೇ  ಪರಕೀಯರ ವಶವಾದರೆ ನಮ್ಮದೇನಿದೆ. ದೇಶ ರಕ್ಷಣೆ,ಭಾಷೆರಕ್ಷಣೆ,ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆ..ಹೀಗೇ ಕೋಟ್ಯಾಂತರ ರೂ ವ್ಯರ್ಥ
ಮಾಡಿ ಯಾರ ರಕ್ಷಣೆ ಆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ನಮ್ಮ ರಕ್ಷಣೆ ನಾವು ಮಾಡಿಕೊಳ್ಳಲು ಬೇಕಿದೆ ಆತ್ಮರಕ್ಷಣೆ.ಜೀವ ಶಾಶ್ವತವಲ್ಲ ಆತ್ಮಶಾಶ್ವತವೆನ್ನುವ ಮಹಾತ್ಮರ ದೇಶವನ್ನು ಮಹಾತ್ಮರೆ ರಕ್ಷಣೆ  ಮಾಡಬೇಕಾದರೆ ಅಧ್ಯಾತ್ಮ ಶಿಕ್ಷಣವು
ಪ್ರಜೆಗಳಿಗೆ ನೀಡುವುದು ಧರ್ಮ ವಾಗಿತ್ತು. ಇದನ್ನು ಸರ್ಕಾರ ಕೊಡುವ ಬದಲಾಗಿ ಧಾರ್ಮಿಕ ಕ್ಷೇತ್ರದವರೆ ಕೊಡಬೇಕಿತ್ತು. ಆದರೆ ಅಲ್ಲಿಯೇ ಹೇಳಿಕೊಳ್ಳಲಾಗದ ರಾಜಕೀಯದಲ್ಲಿ ದೇವರೆ ಬಂಧನದಲ್ಲಿರುವರೆ? ದೈವತ್ವ ಪಡೆಯಲು ದೈವ ಗುಣ ಬೆಳೆಸೋ ಶಿಕ್ಷಣ ಬೇಕು.ಗುರು ಬೇಕು.ಮೊದಲ ಗುರು ತಾಯಿಯನ್ನೇ  ಇದರಿಂದ ದೂರವಿಟ್ಟಿದ್ದರೆ  ಮಕ್ಕಳ ಗತಿ?
ಭಾರತಮಾತೆ ಆತ್ಮಜ್ಞಾನಿಯಾಗಿದ್ದಳು. ಇಂಗ್ಲೇಂಡಿನ ರಾಣಿ  ಭೌತಿಕ ವಿಜ್ಞಾನಿ. ಇದರಲ್ಲಿ ಸ್ಮಾರ್ಟ್ ಆಗಿರೋರ ಹಿಂದೆ ನಡೆದರೆ ಹೊರಗಿನ‌ ಸುಂದರದಲ್ಲಿ ಒಳಗಿನ ಸುಂದರವನ್ನು ಗುರುತಿಸಲಾಗದು.ಇದನ್ನು ಅಜ್ಞಾನವೆಂದರು. ಅಜ್ಞಾನ ಎಂದರೆ ಜ್ಞಾನವಿಲ್ಲ ಎಂದಲ್ಲ ಜ್ಞಾನವನ್ನು ಸರಿಯಾಗಿ ತಿಳಿದಿಲ್ಲ
ಅರ್ಧ ಸತ್ಯವಷ್ಟೆ ಹೊರಗೆ ಕಾಣೋದು. ಉಳಿದರ್ದ ಒಳಗೇ ಇರುತ್ತದೆ.ನಾವೇ ಬೆಳೆಸಿಕೊಂಡರೆ ಉತ್ತರ ಸಿಗುತ್ತದೆ.
ನಾವ್ಯಾರು? ನಾನ್ಯಾರು ? ಪ್ರಶ್ನೆಗೆ  ನಾವು  ಮಾನವರು ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಒಳಗಿನ‌ ಜ್ಞಾನ  ಮಾತ್ರ ಉತ್ತರಿಸಬಹುದು. ಯಾರಿಗೆ ಗೊತ್ತು ಯಾರಲ್ಲಿ ಯಾವ‌ ಮಹಾತ್ಮನಿರುವರೋ?  ನಾವು ನೋಡುವ,ಕೇಳುವ,ಓದುವ,
ಹೋಗುವ  ದಾರಿ ಸರಿಯಿದ್ದರೆ ಉತ್ತರ ಸರಿಯಾಗಿರುತ್ತದೆ.
 ತಪ್ಪಿದ್ದರೆ ಹಿಂದಿನವರಿಗಿಂತ ವಿರುದ್ದವಿದ್ದರೆ ತಿರುಗಿ ಬರೋವರೆಗೂ  ಉತ್ತರ ಸಿಗೋದಿಲ್ಲ. ಯಾರೋ ಬರೆದಿಟ್ಟದ್ದು ನಮ್ಮದಾಗದು.ಯಾರದ್ದೋ ಕಥೆ ಬರೆದು ನನ್ನ ಕಥೆ  ಎಂದರೆ ಸರಿಯೆ? ನಾವೇ ಮೋಸಹೋಗಿ ಯಾರಿಗೋ 
ಮೋಸ ಮಾಡೋದರಲ್ಲಿಯೇ ಮಾನವ ಕಾಲ ಕಳೆದರೆ  ಮಹಾತ್ಮರನ್ನು  ಅರಿಯಲಾಗದು. ದೇಶ ಒಂದೇ ಅದರೊಳಗೆ ಇರುವ ಈ ಅಸಂಖ್ಯಾತ ದೇವರು,ಧರ್ಮ ಜಾತಿ ಪಕ್ಷ ಪಂಗಡಗಳು ಒಂದಾಗಲು ಅಸಾಧ್ಯವಾದರೆ ಅದ್ವೈತ ತತ್ವ, ದ್ವೈತ,ವಿಶಿಷ್ಠಾದ್ವೈತದ ಒಗ್ಗಟ್ಟು  ಎಲ್ಲಿರುತ್ತದೆ. ಭೂಮಿ ಮೇಲೆ ಬಂದಿರುವ‌ಮೂಲ ಉದ್ದೇಶ ಋಣ ತೀರಿಸಿ ಮುಕ್ತಿ ಪಡೆಯೋದು.ಸರ್ಕಾರದ ಹಿಂದೆ ನಡೆದಷ್ಟೂ ಸಾಲ ಬೆಳೆದರೆ
ಇದನ್ನು ತೀರಿಸಲು ಜ್ಞಾನ ಬೇಡವೆ? ಸರಸ್ವತಿಯನ್ನು ಲಕ್ಮೀಯಾಗಿ ತೋರಿಸುವ ವೈಭವವಿದ್ದರೂ  ದೇಶದೊಳಗಿರುವ ಸಾಲಕ್ಕೆ ಅಜ್ಞಾನವೇ ಕಾರಣವೆನ್ನುವ ಸಾಮಾನ್ಯಜ್ಞಾನ  ಪ್ರಜೆಗಳಿಗೆ ಇಲ್ಲವಾದರೆ ಯಾವ ದೇವರೂ ಏನೂ ಮಾಡಲಾಗದು.ಮಧ್ಯವರ್ತಿಗಳು  ಮಾನವ ದೇವರ ನಡುವೆ ತಮ್ಮ ವ್ಯವಹಾರ ನಡೆಸಿದ್ದರೂ ಹಣದಿಂದ ಧರ್ಮ ರಕ್ಷಣೆ ಮಾಡಬಹುದೆ? ಆಂತರಿಕ ಜ್ಞಾನ ಭೌತಿಕ ಜ್ಞಾನದ ನಡುವೆ ಸಾಮಾನ್ಯಜ್ಞಾನ ಸಿಕ್ಕಿ ಗೊತ್ತು ಗುರಿ ಯಿಲ್ಲದೆ  ನಿಂತ ನೀರಾಗಿ ಕೊಳಕಾದರೆ ಶುದ್ದ ಮಾಡೋದು ಕಷ್ಟ. ಸ್ವಚ್ಚಭಾರತ
ಸ್ವಚ್ಚ ಶಿಕ್ಷಣದಲ್ಲಿದೆ.
ರಾಜಕೀಯದಲ್ಲಿಲ್ಲ.ರಾಜಯೋಗದಲ್ಲಿತ್ತು.
ಇದಕ್ಕೆ ಪ್ರತಿಕ್ರಿಯೆ ಕೊಡೋರಿಲ್ಲವೆ?ಪ್ರತಿಕ್ರಿಯೆ ನೀಡಬಹುದು.ನಷ್ಟವಿಲ್ಲ

Thursday, October 6, 2022

ಜನ್ಮನಾಮದಲ್ಲಿ ನಾನಿದ್ದರೆ, ಅಂಕಿತ ನಾಮದಲ್ಲಿ ನಾನಿರೋದಿಲ್ಲ.

ನವರಾತ್ರಿಯ ಸಮಯದಲ್ಲಿ ನನ್ನ‌ ಜನ್ಮವಾಯಿತು. ಆದರೆ ಭಗವತಿಯ ಕೃಪಾಕಟಾಕ್ಷದಿಂದ ಲೇಖಕಿಯಾಗಿ 16 ವರ್ಷ ಆಯಿತು.  ಹೀಗಾಗಿ ಭಗವತಿ ಇದು ನನ್ನ ಅಂಕಿತ ನಾಮ.
ಸತ್ಯದ ಹಿಂದೆ ನಡೆಯುತ್ತಾ ಹೋದಂತೆ ಹೊರಗಿನ ಅಸತ್ಯ ಅರ್ಥ ವಾಗುತ್ತದೆ.ಹೊರಗಿನ ಅಸತ್ಯ ಅರ್ಥ ವಾದಷ್ಟೂ  ಒಳಗೇ ಅಡಗಿದ್ದ ಸತ್ಯವನ್ನು  ಹೊರಹಾಕುವುದೂ ಕಷ್ಟ.
ಇದನ್ನು ಧರ್ಮ ಸಂಕಟವೆನ್ನುತ್ತಾರೇನೋ. ಕಾಣದ ಸತ್ಯವನ್ನು ಕಂಡವರಿಗಷ್ಟೇ ತಿಳಿಸಬಹುದು. ಕಾಣದವರಿಗೆ ತಿಳಿಸಿದರೆ ಇನ್ನಷ್ಟು  ಅಸತ್ಯ ಬೆಳೆಯುತ್ತದೆ ಎನ್ನುವ ಕಾರಣಕ್ಕಾಗಿ  ಅಧ್ಯಾತ್ಮ ಚಿಂತಕರು ಭೌತಿಕದ ಗೊಡವೆಗೆ ಹೋಗದೆ ತಮ್ಮ ಸಾಧನೆಯಲ್ಲಿದ್ದು ಮರೆಯಾದರು. ಆದರೆ ಇದರಿಂದ ಭೂಮಿಯಲ್ಲಿ ಆದ ಬದಲಾವಣೆ ? ಕೊನೆಪಕ್ಷ  ತನ್ನ ತಾನರಿತು  ನಡೆಯೋ ಜ್ಞಾನದ ಶಿಕ್ಷಣ ನೀಡಿದ್ದರೆ ಎಲ್ಲರೂ ಮಾನವರೆ ಆದರೂ  ಜ್ಞಾನದಿಂದ ಸತ್ಯದ ಕಡೆಗೆ ನಡೆಯೋ ಶಕ್ತಿ ಸಿಗುತ್ತದೆ. ಭಾರತೀಯರ ರಾಜಕೀಯದಲ್ಲಿ ಯಾರಲ್ಲಿ ಸತ್ಯವಿದೆಯೋ ಕಾಣೋದಿಲ್ಲ.ಹಣ,ಅಧಿಕಾರ ಇದೆಯೋ ಕಾಣುತ್ತದೆ ಆದರೆ ಜ್ಞಾನವಿಲ್ಲದೆ ಅಧಿಕಾರವನ್ನು ಜನರ ಮೇಲೆ ಪ್ರಯೋಗಿಸಿ ಆಳಿದರೆ ಅಧರ್ಮ ವಾಗುತ್ತದೆ.
ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಿಗಬೇಕಾದ ಜ್ಞಾನದ ಶಿಕ್ಷಣ ದ ಕೊರತೆ ಇಂದಿಗೂ ಭಾರತವನ್ನು  ಪರಕೀಯರು ಆಳುತ್ತಿದ್ದಾರೆ. ಸರಸ್ವತಿಯನ್ನು ಲಕ್ಮಿ ಆಗಿಸಬಹುದು. ಆದರೆ ಲಕ್ಮಿಯನ್ನು ಸರಸ್ವತಿಯಾಗಿಸೋದು ಕಷ್ಟ. ಮೂಲವನ್ನರಿತು ಮೇಲೆ ಏರಿದರೆ ಜೀವನಕ್ಕೆ  ಅರ್ಥ ವಿದೆ.
ಸರಸ್ವತಿ,ಲಕ್ಮಿ ದುರ್ಗೆ ಯರು ಎಲ್ಲೋ ಮರೆಯಾಗಿಲ್ಲ. ನಮ್ಮ ಸುತ್ತಮುತ್ತಲೇ ಇರೋದು.ನಿಜವಾದ ಜ್ಞಾನವನ್ನು ಗುರುತಿಸದೆ ಹಣದ ಹಿಂದೆ ನಡೆದರೆ ದುರ್ಗೆ ಯಾಗಿ ಸಂಹಾರ
ಮಾಡಲು ಮುಂದಾಗುವಳು.ಒಟ್ಟಿನಲ್ಲಿ ದೇವನೊಬ್ಬನೆ ನಾಮ ಹಲವು ಎಂದಂತೆ ದೇವಿ ಒಬ್ಬಳೇ ನಾಮ ಹಲವು.
ದೇಶ ಒಂದೇ ಆದರೂ ಪ್ರಜೆಗಳ  ಜ್ಞಾನ ವಿಜ್ಞಾನದ ರಾಜಕೀಯ ಹಲವಾಗಿ ನಿಂತು ರಾಜಯೋಗದಿಂದ ಮುಂದೆ ನಡೆದ ಭಾರತ ರಾಜಕೀಯದಲ್ಲಿ ಮುಂದೆ ವಿದೇಶದತ್ತ ನಡೆದಿದೆ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ನಮ್ಮ ಜ್ಞಾನಿಗಳನ್ನಾಗಲಿ,ಮಹಾತ್ಮರನ್ನಾಗಲಿ,ದೇವರನ್ನಾಗಲಿ
ಮೆರೆಸುವ ಅಗತ್ಯವಿಲ್ಲವಾದರೂ ಅವರ ಹೆಸರಲ್ಲಿ ನಮ್ಮ ಮೆರೆದಾಟ  ಇಲ್ಲವಾದರೆ ಅವರ ಜ್ಞಾನಕ್ಕೆ ಬೆಲೆಯಿದೆ.
.ಶಿಕ್ಷಣದಲ್ಲಿಯೇ  ಅಧರ್ಮ ಇರೋವಾಗ ಅದನ್ನುಪಡೆದ
 ಪ್ರಜೆಗಳಿಗೆ  ಹಿಂದೂಧರ್ಮದ  ಉದ್ದೇಶ ಕಾಣೋದು ಕಷ್ಟ. ಇಲ್ಲಿ ಅಜ್ಞಾನವೆಂದರೆ ಪೂರ್ಣ ಸತ್ಯದ ಅರಿವಿಲ್ಲದಿರೋದಷ್ಟೆ.
ಹಾಗೆ ಅಧರ್ಮ ಎಂದರೆ ಧರ್ಮದ ಮೂಲವನ್ನರಿಯದೆ  ಹೊರಗೆ ಬೆಳೆಸಿರೋದು. ಒಟ್ಟಿನಲ್ಲಿ ಬದಲಾವಣೆ ಜಗದ ನಿಯಮ.
ಸೃಷ್ಟಿ ಗೆ ತಕ್ಕಂತೆ ವಿದ್ಯೆ,ಸ್ಥಿತಿಯನ್ನು  ಲಯವನ್ನು ಮಾಡುತ್ತದೆ.
ತ್ರಿಮೂರ್ತಿಗಳನ್ನು ನಡೆಸೋ ಮಹಾಶಕ್ತಿಯನ್ನು ಮರೆತು ಭೂಮಿ ಆಳಿದರೆ ಮಾರಿಯೇ ಸಂಹಾರ ಕಾರ್ಯ ನಡೆಸೋದು. ಯಾರೂ ಶಾಶ್ವತವಲ್ಲ.ಆತ್ಮ ಶಾಶ್ವತ.ಯಾರಿಗೆಗೊತ್ತು ಯಾವ ದೇಹದಲ್ಲಿ ಯಾವ ಮಹಾತ್ಮರಿರುವರೋ? ಗುರುತಿಸುವ ಜ್ಞಾನ ಬೇಕು.ಗುರು ಬೇಕು. ಅಧ್ಯಾತ್ಮ ದ ಗುರಿಯೇ ಬೇರೆ ಭೌತಿಕದ ಗುರಿಯೇ ಬೇರೆ ಆದರೂ ಎರಡೂ ಇರೋದು ಭೂಮಿ ಮೇಲೇ.ಒಂದೆ ಭೂಮಿ,ಒಂದೇ ಸತ್ಯ ಒಂದೇ ದೇಶ,ಧರ್ಮ.....ಆದರೆ ಒಗ್ಗಟ್ಟು ಇಲ್ಲದೆ ತತ್ವಹೋಗಿ ತಂತ್ರ ಬೆಳೆದಿದೆ. ಇದೇ ಮಾನವನನ್ನು ಯಂತ್ರಮಾನವನಾಗಿಸಿದೆ.  ಶ್ರೀಮಂತ ದೇವ ದೇವಿಯರಿಗೇನೋ ಕೊರತೆಯಿಲ್ಲ.ಹಾಗೆಯೇ ಶ್ರೀಮಂತ ಮಾನವರೂ ಇದ್ದಾರೆ. ದೇಶದ ಸಾಲ ತೀರಿಸಲಾಗದೆ ಜನರ
ಸಮಸ್ಯೆ ಬೆಳೆಯುತ್ತಿದೆ. ಹಾಗಾದರೆ ದೇವರಿರೋದೆಲ್ಲಿ? ದೈವತ್ವವನ್ನು ತತ್ವಜ್ಞಾನದಿಂದ ಪಡೆದ ಹಿಂದಿನ‌ ಮಹಾತ್ಮರು ಎಲ್ಲಿ? ಯೋಗಿಗಳ ದೇಶ ರೋಗಿಗಳ ದೇಶವಾಗಲು ಶಿಕ್ಷಣವೆ
ಕಾರಣವೆಂದಾಗ ಶಿಕ್ಷಣ ಯಾರುಕೊಡಬೇಕಿತ್ತು? ಹೇಗೆ ಯಾಕೆ ಯಾರಿಗೆ ಎಲ್ಲಿ ಕೊಡಬೇಕಿತ್ತು? 
ಆಳುವವರೂ ಆಳಾಗಿದ್ದು ಕಷ್ಟ ಅನುಭವಿಸಲೇಬೇಕೆನ್ನುವ ಕರ್ಮ ಸಿದ್ದಾಂತವನ್ನು ಅರ್ಥ ಮಾಡಿಕೊಳ್ಳಲು  ಯೋಗಿಯಾಗಬೇಕಂತೆ.ಅಂದರೆ ಜೀವಾತ್ಮ ಪರಮಾತ್ಮನೆಡೆಗೆ ಹೋಗಿ ಸೇರೋದೆ ಯೋಗ.
ಇದನ್ನು ಜ್ಞಾನ ಯೋಗ,ರಾಜಯೋಗ,ಭಕ್ತಿ ಯೋಗ,ಕರ್ಮ ಯೋಗದ ಮೂಲಕ ಪಡೆಯಲು ಭಗವದ್ಗೀತೆ ತಿಳಿಸುತ್ತದೆ.
ಈಗಿನ ಪರಿಸ್ಥಿತಿಯಲ್ಲಿ  ಎಲ್ಲಾ ಒಂದು ರೀತಿಯ ಸಾಲಗಾರರೆ.
ಮೂಲದ ಧರ್ಮ ಕರ್ಮವನ್ನರಿತು  ಜ್ಞಾನದಿಂದ ‌ ನಡೆದರೆ ಇದ್ದ ಕಡೆಯೇ ಮುಕ್ತಿ. ಹೊರಗೆ ನಡೆದಷ್ಟೂ ಸಾಲದ ಹೊರೆ.ಇಷ್ಟೇ ಭೂಮಿಯ ಋಣ ತೀರಿಸಲು ಬಂದ ಜೀವಾತ್ಮನ‌ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿದರೆ ತೀರಿಸಲು ಕಷ್ಟಪಡಲೇಬೇಕು.ಕಷ್ಟಪಟ್ಟವರಿಗಷ್ಟೆ ಸುಖ.ಇದು ಆಂತರಿಕ ಸುಖ,ಭೌತಿಕ ಸುಖ ಕೇವಲ ಕ್ಷಣಿಕವಾದರೂ  ಪರಮಾತ್ಮನ  ಭಕ್ತರಿಗೆ  ಇದರಲ್ಲಿ ಆಸಕ್ತಿ ಕಡಿಮೆ. ಹೀಗಾಗಿ ಸಮಾಜದಲ್ಲಿ ನಿರ್ಲಕ್ಷ್ಯ ಗೊಳಗಾದರು. ಅವರ ಪ್ರತಿಮೆ  ಮಧ್ಯೆ ನಿಲ್ಲಿಸಿ ವ್ಯವಹಾರಕ್ಕೆ ಬಳಸಿದರೆ ಜ್ಞಾನಸಿಗದೆ ಹಣದ. ಜೊತೆಗೆ ಅಜ್ಞಾನದ ಅಹಂಕಾರ ಸ್ವಾರ್ಥ ಬೆಳೆದರೆ ನಷ್ಟ.
ದೇವತೆಗಳು ಕೇಳಿದ್ದೆಲ್ಲಾ ಕೊಡಬಹುದು. ಜ್ಞಾನ ಪಡೆಯಲು ಕಷ್ಟಪಡಬೇಕಷ್ಟೆ.ಹಣ ಪಡೆಯಲು  ಸತ್ಯದಿಂದ ಕಷ್ಟ. ಹೀಗಾಗಿ ಜ್ಞಾನದ ನಂತರ ಹಣಸಂಪಾದಿಸಿ ದಾನ ಧರ್ಮ ಮಾಡುವ  ಹಿಂದೂ ಧರ್ಮದಲ್ಲಿ ಮುಕ್ತಿ ಮೋಕ್ಷ ಕಾಣಬಹುದೆನ್ನುವರು. ಪರಧರ್ಮದ ಶಿಕ್ಷಣ,ಹಣ ಪಡೆದರೆ
ಬೆಳೆಯೋದು ಅದೇ ಧರ್ಮ. ಒಟ್ಟಿನಲ್ಲಿ ಯಾವುದೇ ಇರಲಿ ಅದು  ಮಾನವನ ಮಹಾತ್ಮನಾಗಿಸುವತ್ತ ನಡೆಸಿದರೆ ಅದೇ
ನಿಜವಾದ ಧರ್ಮ. ಮನಸ್ಸಿಗೆ ಶಾಂತಿ, ಸಮಾಧಾನ,ತೃಪ್ತಿ ಸಿಕ್ಕರೆ  ಜೀವಕ್ಕೆ ಮುಕ್ತಿ. ಇವು ಒಳಗೆ ಇರೋವಾಗ ಹೊರಗೆ ಹುಡುಕಿದರೆ ಸಿಗೋದಿಲ್ಲವಲ್ಲ. ಹಿಂದೂಸ್ತಾನ್ ಒಳಗಿರುವ ಎಲ್ಲಾ ಹಿಂದೂಗಳೆ.ದೇಶದ ಋಣ ತೀರಿಸಲು ವಿದೇಶದವರೆಗೆ ಹೋಗುವ ಅಗತ್ಯವಿಲ್ಲ. ದೇಶದ ಶಿಕ್ಷಣ ನೀಡಿ ಸಂಸ್ಕಾರ ಕೊಟ್ಟು ಶುದ್ದಗೊಳಿಸಿಕೊಳ್ಳವುದೇ ಶುದ್ದಾತ್ಮನೆಡೆಗೆ  ಹೋಗುವ ದಾರಿ. ಇದು ಹೊರಗಿನಿಂದ ಒಳಗೆ ನಡೆಸಬೇಕಿತ್ತು
ಈಗ  ನಮ್ಮವರೆ ನಮಗೆ ಶತ್ರುವಾಗಿ ಒಳಗಿನವರೆ ಹೊರಗಿನವರ ಹಿಂದೆ ಹೊರಟರೆ  ಮನಸ್ಸು ಹೊರಗೇ ಇರುತ್ತದೆ. ಬದಲಾವಣೆ ಆಗುತ್ತದೆ,ಆಗುತ್ತಿದೆ,ಆಗಲೇಬೇಕಿದೆ.
ಜನ್ಮದಿನವನ್ನು ಅವರವರ ತಿಥಿ ನಕ್ಷತ್ರಕ್ಕನುಸಾರ ಹಿಂದಿನ
ಹಿಂದೂಗಳು ಆಚರಿಸಿಕೊಳ್ಳುತ್ತಿದ್ದರು. ಆದರೂ ಹೊರಗಿನ
ಎಲ್ಲಾ ಸ್ನೇಹಿತರಿಗೆ ಇದನ್ನು ತಿಳಿಸಲಾಗದು ಅವರ ಪ್ರೀತಿ ವಿಶ್ವಾಸವೂ ಬಹಳ ಮುಖ್ಯ.ಆಶೀರ್ವಾದದಿಂದ ಏನಾದರೂ
ಸಾಧಿಸಬಹುದು. ಉತ್ತಮ ಸ್ನೇಹಕ್ಕೆ ಬೆಲೆ ಕಟ್ಟಲಾಗದು.
 ಶುಭಾಶಯಗಳನ್ನು ತಿಳಿಸಿದ ಎಲ್ಲಾ ಆತ್ಮೀಯರಿಗೆ   ಧನ್ಯವಾದಗಳು.