ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, December 31, 2023

ಶ್ರೀ ರಾಮನವಮಿಯ ಶುಭಾಶಯಗಳು

ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀ ರಾಮಚಂದ್ರನು ಧರ್ಮದ ಪ್ರಕಾರ ಕಾಡಿಗೆ ಹೋದನು ಅಲ್ಲಿ ತಂದೆಯ ಮಾತನ್ನು ಮೀರಿದರೆ ಪಿತೃಗಳಿಗೇ ಮೋಕ್ಷವಿಲ್ಲವೆನ್ನುವುದಾಗಿತ್ತು. ಕಲಿಗಾಲದಲ್ಲಿ ತಂದೆಯ. ವಿರುದ್ದ ನಿಂತು ವಿದೇಶಕ್ಕೆ ಹಾರುವುದು ಒಂದು ಸಾಮಾನ್ಯವಾಗಿದ್ದು ತಂದೆಯ ಅಂತಿಮ‌ಕಾರ್ಯ ಅಲ್ಲಿಯೇ  ಮಾಡುವವರಿದ್ದಾರೆ. ಇದ್ದಾಗ ಮಾತು ಕೇಳದವರು ಹೋದ ಮೇಲೆ ಕರ್ಮ ಮಾಡಿ ಫಲವೇನು?
ಯಾವುದೇ  ರೀತಿಯ ಸುಖಾಭೋಗವಿಲ್ಲದೆಯೆ ರಾಮನೊಡನೆ ಪತಿವ್ರತೆ ಸೀತೆ ಹೊರಟಳು,ಜೊತೆಗೆ ಸೇವೆಗಾಗಿ ಪತ್ನಿಯನ್ನು  ಬಿಟ್ಟು ಅಣ್ಣ ಅತ್ತಿಗೆಯೊಂದಿಗೆ ಹೊರಟ ಲಕ್ಮಣ ಬೇರೆ‌ .ವನವಾಸ ಮುಗಿಯುವವರೆಗೂ ಶ್ರೀ ರಾಮನಿಗಾಗಿ ಕಾದು ಕುಳಿತ ಎಲ್ಲಾ ತಮ್ಮಂದಿರು ಅವರ ಪತ್ನಿಯರ  ಧಾರ್ಮಿಕ ಪ್ರಜ್ಞೆ  ಇಡೀ  ಅಯೋದ್ಯಾವಾಸಿಗಳು 
ಶ್ರೀ ರಾಮನ ಆಡಳಿತಕ್ಕಾಗಿ  ಕಾದಿದ್ದರು. ತಿರುಗಿಬಂದ ನಂತರ ಎಲ್ಲರಿಗೂ ಸಮಾಧಾನ ಸಂತೋಷ ಸುಖ ಆದರೆ  ಕೊನೆಯಲ್ಲಿ  ಶ್ರೀ ರಾಮನೆ ಸೀತಾಮಾತೆಯನ್ನು ಬಿಡುವ ಹಾಗಾಗಿ  ದೊಡ್ಡ ಧರ್ಮ ಸಂಕಟ ಎದುರಾದಾಗಲೂ ಕಂಗೆಡದ ಧರ್ಮಾತ್ಮ  ಸೀತೆಯನ್ನು  ಬಿಟ್ಟರೂ ತನ್ನ ಆಡಳಿತಕ್ಕೆ ಲೋಪಬರದಂತೆ  ಸಾಮ್ರಾಟನಾಗಿದ್ದ ಶ್ರೀ ರಾಮನ  ಕಥೆ ರಾಮಾಯಣವಾಯಿತು.
ಹಿಂದೂಗಳ ಪವಿತ್ರಗ್ರಂಥದ ಇದರಲ್ಲಿನ‌ಪ್ರತಿಯೊಂದು ಪಾತ್ರವೂ  ಮಹಾತ್ಮರದ್ದಾಗಿತ್ತು. ಧರ್ಮ ರಕ್ಷಣೆಗಾಗಿಯೇ ದುಷ್ಟಶಿಕ್ಷಣೆಗಾಗಿಯೇ ಶ್ರೀ ರಾಮಾವತಾರವಾದಂತೆ ಶ್ರೀ ಕೃಷ್ಣಾವತಾರವಾಗಿದೆ. ಇವರಿಬ್ಬರ ಕಾಲದಲ್ಲಿ ಅಂತರವಿದ್ದ ಕಾರಣ ರಾಮಬ ಕಾಲದ ತತ್ವ ಶ್ರೀ ಕೃಷ್ಣನ‌ಕಾಲಕ್ಕೆ ತಂತ್ರವಾಗಿ ಬದಲಾಗಿತ್ತು. ಒಂದೇ ವಸ್ತು ಎರಡಾಗಿಸಿದರೂ ಒಂದೇ ಸತ್ಯ ಎರಡು ರೀತಿಯಲ್ಲಿ ತಿಳಿಸಿದರೂ ಎರಡು ಎರಡೆ ಒಂದು ಒಂದೇ. ಒಂದು
ಒಂದು ರಾಜಯೋಗ ಇನ್ನೊಂದು ರಾಜಕೀಯ..ಒಂದು ಶಾಂತಿ ಇನ್ನೊಂದು ಕ್ರಾಂತಿ.ಒಂದು ಯೋಗದ‌ಮಾರ್ಗ ಇನ್ನೊಂದು ಭೋಗದ ಮಾರ್ಗ.ಎರಡನ್ನು  ಎಷ್ಟೇ ಬೇರೆ ಮಾಡಿದರೂ ಒಂದಾಗದಿದ್ದ  ಮೇಲೆ  ತತ್ವದರ್ಶನ ವಾಗಿದ್ದರೆ ಇದು ಅಧ್ಯಾತ್ಮ ವಾಗುತ್ತದೆ. 
ಶ್ರೀ ರಾಮನಿರೋದೆಲ್ಲಿ ಭಕ್ತರ ನಾಮ‌ಜಪದಲ್ಲೋ? ರಾಮಭಕ್ತರಾದ ಸಾದು ಸಂತ,ದಶಸ,ಶರಣರು ನಾಮಜಪದಿಂದಲೇ ಶ್ರೀ ರಾಮನ ದರ್ಶನ ಮಾಡಿದ್ದರು

ನವಗ್ರಹ ಮಂತ್ರ ಮತ್ತು ಅದರ ಅರ್ಥ

*ನವಗ್ರಹ ಮಂತ್ರವನ್ನು ಅದರ ಭಾವಾರ್ಥ ಸಹಿತ ವಿವರಿಸಲಾಗಿದೆ ಸನ್ಮಾನ್ಯಆಸ್ತಿಕ   ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಫಲ ಕಂಡುಕೊಳ್ಳಬಹುದಾಗಿದೆ*

*🌟🌷ನವಗ್ರಹ ಸ್ತೋತ್ರ🌷🌟*

*🌷ಸೂರ್ಯ ಗ್ರಹ ಮಂತ್ರ*

*ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ ।*
*ತಮೋsರಿಮ್ ಸರ್ವಪಾಪಘ್ನಮ್ । ಪ್ರಣತೋsಸ್ಮಿ ದಿವಾಕರಂ*

*ಭಾವಾರ್ಥ : ದಾಸವಾಳ ಹೂಗಳಂತೆ ಕಂಗೊಳಿಸುವ, ಕಶ್ಯಪನ ಮಗನಾದ, ಶತ್ರುವೋ ಎಂಬಂತೆ ಕತ್ತಲನ್ನು ಅಟ್ಟುವ, ಸಕಲ ಪಾಪಗಳನ್ನು ಪರಿಹರಿಸುವ ದಿವಾಕರನಿಗೆ ನಮಸ್ಕರಿಸುತ್ತೇನೆ.*

*🌷ಚಂದ್ರ ಗ್ರಹ ಮಂತ್ರ*

*ಓಂ ದಧಿಶಂಖತುಷಾರಾಭಂ । ಕ್ಷೀರೋದಾರ್ಣವಸಂಭವಮ್।*
*ನಮಾಮಿ ಶಶಿನಂ ಸೋಮಂ । ಶಂಬೋರ್ಮುಕುಟ ಭೂಷಣಂ ।।*

*ಭಾವಾರ್ಥ : ಮೊಸರು, ಶ೦ಖ, ಹಿಮದ೦ತೆ ಹೊಳೆಯುವ; ಕ್ಷೀರಸಾಗರದಿಂದ ಹೊರಹೊಮ್ಮಿದ, ಕಾಂತಿಯುಕ್ತನಾದ, ಮಹಾದೇವನ ಶಿರಸ್ಸನ್ನು ಅಲಂಕರಿಸಿರುವ ಚಂದ್ರದೇವನಿಗೆ ನಮಸ್ಕರಿಸುತ್ತೇನೆ.*

*🌷ಕುಜ ಗ್ರಹ ಮಂತ್ರ*

*ಓಂ ಧರಣೀಗರ್ಭ ಸಂಭೂತಂ । ವಿದ್ಯುತ್ ಕಾಂತಿ ಸಮಪ್ರಭಮ್ ।*
*ಕುಮಾರಂ ಶಕ್ತಿ ಹಸ್ತಾಂಚ । ಮಂಗಳಂ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಧರಣೀದೇವಿಯ ಗರ್ಭದಲ್ಲಿ ಜನಿಸಿದ, ವಿದ್ಯುತ್ ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ, ಶಕ್ತ್ಯಾಯುಧದಿಂದ ಶೋಭಿಸುವ, ತರುಣನಾದ ಮಂಗಳನಿಗೆ (ಕುಜ / ಅಂಗಾರಕ) ನಮಸ್ಕರಿಸುತ್ತೇನೆ.*

*🌷ಬುಧ ಗ್ರಹ ಮಂತ್ರ*

*ಓಂ ಪ್ರಿಯಂಗುಕಾಲಿಕ ಶ್ಯಾಮಂ । ರೂಪೇಣಾಮ್ ಪ್ರತಿಮಂ ಬುಧಮ್ ।*
*ಸೌಮ್ಯಮ್ ಸೌಮ್ಯ ಗುಣೋಪೇತಂ । ತಮ್ ಬುಧಮ್ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಪ್ರಿಯ೦ಗು ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ ಸುಂದರನೂ ಸೌಮ್ಯಗುಣಸಂಪನ್ನನೂ ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.*

*🌷ಗುರು ಗ್ರಹ ಮಂತ್ರ*

*ಓಂ ದೇವಾನಾಮ್ ಚ ಋಷಿಣಾಮ್ ಚ । ಗುರುಮ್ ಕಾಂಚನ ಸನ್ನಿಭಮ್ ।*
*ಬುದ್ಧಿ ಭೂತಂ ತ್ರಿಲೋಕೇಶಂ । ತಮ್ ನಮಾಮಿ ಬೃಹಸ್ಪತಿಮ್ ।।*

*ಭಾವಾರ್ಥ : ದೇವತೆಗಳಿಗೂ ಋಷಿಗಳಿಗೂ ಪ್ರಿಯನಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳಲ್ಲೂ ಸಾಟಿಯಿಲ್ಲದಷ್ಟು ಬುದ್ಧಿಮತ್ತೆ ಹೊಂದಿರುವ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.*

*🌷ಶುಕ್ರ ಗ್ರಹ ಮಂತ್ರ*

*ಓಂ ಹಿಮಕುಂದ ಮೃಣಾಲಾಭಂ*
*। ದೈತ್ಯಾನಾಮ್ ಪರಮಮ್ ಗುರುಮ್ ।*
*ಸರ್ವಶಾಸ್ತ್ರ ಪ್ರವಕ್ತಾರಮ್ । ಭಾರ್ಗವಂ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಸಕಲ ಶಾಸ್ತ್ರ ಪರಿಣತನಾದ, ಭೃಗು ಮಹರ್ಷಿಯ ಕುಲದವನಾದ ಶುಕ್ರನಿಗೆ ನಮಸ್ಕರಿಸುತ್ತೇನೆ.*

*🌷ಶನಿ ಗ್ರಹ ಮಂತ್ರ*

*ಓಂ ನೀಲಾಂಜನ್ ಸಮಾಭಾಸಂ । ರವಿಪುತ್ರಂ ಯಮಾಗ್ರಜಮ್ ।*
*ಛಾಯಮಾರ್ತಾಂಡ ಸಮಭೂತಂ । ತಮ್ ನಮಾಮಿ ಶನೈಶ್ಚರಮ್ ।।*

*ಭಾವಾರ್ಥ : ನೀಲವರ್ಣದಿಂದ ಶೋಭಿಸುವ, ಸೂರ್ಯದೇವನ ಮಗನೂ ಯಮನ ಹಿರಿಯ ಸಹೋದರನೂ ಆದ ಛಾಯಾಪುತ್ರ ಶನಿದೇವನಿಗೆ ನಮಸ್ಕರಿಸುತ್ತೇನೆ.*

*🌷ರಾಹು ಗ್ರಹ ಮಂತ್ರ*

*ಓಂ ಅರ್ಧಕಾಯಂ ಮಹಾವೀರ್ಯಮ್ ।* *ಚಂದ್ರಾದಿತ್ಯ ವಿಮರ್ದನಂ ।*
*ಸಿಂಹಿಕಾಗರ್ಭಸಂಭೂತಂ ।* *ತಮ್ ರಾಹುಮ್ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ, ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.*

*🌷ಕೇತು ಗ್ರಹ ಮಂತ್ರ*

*ಓಂ ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ ಮಸ್ತಕಂ ।*
*ರೌದ್ರಂ ರೌದ್ರಾತ್ಮಕಂ ಘೋರಂ । ತಮ್ ಕೇತುಂ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು*

*🌷ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ|*
*ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||*

*ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ|*
*ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||*

*ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವವು*🙏🏻🌷🌷
ವ್ಯಾಸಾಯ ವಿಷ್ಣು ರೂಪಾಯ ವ್ಯಶಸರೂಪಾಯ ವಿಷ್ಣುವೆ ನಮೋ ವೈಬ್ಹ್ಮನಿಧಯೆ ವಾಸಿಷ್ಟಾಯ ನಮೋ ನಮ:
 ಶ್ರೀ ಮಹಾವಿಷ್ಣುವಿನ  ಅವತಾರರಾದ  ವೇದವ್ಯಾಸರು ರಚಿಸಿದ  ನವಗ್ರಹ  ಸ್ತೋತ್ರ ಮಾನವನಿಗೆ  ಬರುವ ಗ್ರಹಚಾರ ದೋಷದಿಂದ  ಬಿಡುಗಡೆ ಪಡೆಯಲು  ಸೂಕ್ತ ವಾಗಿದೆ. ಯಾವುದು ಸರಿತಪ್ಪು ತಿಳಿಯದೆ  ಎಷ್ಟೋ ಗ್ರಹ ದೋಷಗಳನ್ನು  ಜೀವಾತ್ಮ ಹೊತ್ತುಕೊಂಡು  ಭೂಮಿಯಲ್ಲಿ  ಜೀವನ ನಡೆಸುವಾಗ  ಇಂತಹ ಸ್ತೋತ್ರದಿಂದ ಪರಿಹಾರ ಕಂಡುಕೊಳ್ಳಲು ಮಹರ್ಷಿಗಳು  ನೀಡಿದ ವರವಾಗಿದೆ. 

Saturday, December 30, 2023

ಭಾಷಾರಕ್ಷಣೆಗೆ ಆತ್ಮವಿಶ್ವಾಸಬೇಕು ಅಹಂಕಾರ ವಲ್ಲ

ಕನ್ನಡ ರಕ್ಷಣೆಗಾಗಿ ಸಾಕಷ್ಟು ಹೋರಾಟ ಹಾರಾಟ ಮಾರಾಟಗಳು ನಡೆದಿದೆ ಆದರೆ  ಬೆಳೆದಿರೋದು ಪರಭಾಷಿಗಳೇ ಎನ್ನುವ ಸತ್ಯ ಸಾಭೀತಾಗುತ್ತಿದೆ.ಕಾರಣವಿಷ್ಟೆ ಹೋರಾಟ ಹೊರಗೆ ಮಾಡುತ್ತಾ ನಮ್ಮೊಳಗೇ  ಇದ್ದ ಭಾಷೆಗೆ ಬೆಲೆಕೊಡದೆ ಮಕ್ಕಳಿಗೂ ಪರಭಾಷೆಯ ಶಿಕ್ಷಣಕೊಟ್ಟು ವಿದೇಶಿ ವ್ಯವಹಾರಕ್ಕೆ ಸಹಕರಿಸಿ ಒಳಗೆ  ಕರೆತಂದು ಅವರ ಕಂಪನಿಗಳಲ್ಲಿಯೇ  ಕೆಲಸಮಾಡುತ್ತಾ  ಸಂಸಾರ ನಡೆಸುವಾಗ. ಅವರನ್ನು ವಿರೋಧಿಸುವುದು ಸಾಧ್ಯವೆ?
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮವರೆ ಬ್ರಿಟಿಷ್ ಪರ ನಿಂತು  ತಮ್ಮ ಸ್ವಾರ್ಥ ದ ಜೀವನ ನಡೆಸಬೇಕಾಗಿತ್ತು.ಆದರೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಅವರನ್ನು ವಿರೋಧಿಸುತ್ತಾ ಅಸಹಕಾರ ಚಳುವಳಿ,ಉಪವಾಸ ಸತ್ಯಾಗ್ರಹ ದಂತಹ ಅಧ್ಯಾತ್ಮಿಕ ಮಾರ್ಗ ದಲ್ಲಿ ನಡೆದಾಗಲೇ  ಬಿಡುಗಡೆ ಸಿಕ್ಕಿದ್ದು. ಇದನ್ನು ಈಗ  ಸರಿಯಾಗಿ ಅರ್ಥ ಮಾಡಿಕೊಳ್ಳದೆ ಪರರ ವಶದಲ್ಲಿದ್ದು ಅವರ ವ್ಯವಹಾರಕ್ಕೆ ಸಹಕರಿಸಿ,ಅವರ ಶಿಕ್ಷಣವನ್ನು ಮಕ್ಕಳಿಗೂ ಕೊಟ್ಟು ಅವರದೇ ಕೈಕೆಳಗೆ ಕೆಲಸ ಮಾಡಿ ಹಣಗಳಿಸಿ  ಅವರು ಸರಿಯಿಲ್ಲವೆಂದರೆ  ಸರಿಯಾಗಿರೋದು ಯಾರು? ನಮ್ಮೊಳಗೇ ಇರುವ ಸ್ವಾರ್ಥ ಅಹಂಕಾರ  ಪ್ರತಿಫಲಾಪೇಕ್ಷೆಯ ರಾಜಕೀಯ ಗುಣಗಳಿಂದ ಯಾವುದೇ  ಧರ್ಮ ,ಸಂಸ್ಕೃತಿ, ಭಾಷೆ ಉಳಿಸಲಾಗದು ಎನ್ನುವ ಭಗವದ್ಗೀತೆ ಯನ್ನು  ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮ ಹೋರಾಟದಿಂದಒಳಗಿನ ನೆಮ್ಮದಿ ಶಾಂತಿ ತೃಪ್ತಿ ನೀಡುವುದೆ ಇಲ್ಲವೆ ಎನ್ನುವ ಸತ್ಯದರ್ಶನವಾಗುತ್ತದೆ. ಕನ್ನಡರಕ್ಷಣಾವೇದಿಕೆ ಸಾಕಷ್ಟಿದೆ,ಸಂಘಗಳೂ ಸಾಕಷ್ಟಿದೆ,ಪ್ರಾಧಿಕಾರವೂ ಬೆಳೆದಿದೆ ಆದರೆ ಶಾಲಾಕಾಲೇಜ್ ಗಳಲ್ಲಿ‌ಮಕ್ಕಳು ಆಂಗ್ಲ ಭಾಷೆಯಲ್ಲಿ ಮಾತನಾಡದಿದ್ದರೆ ಶಿಕ್ಷೆ ಇದೆ ಎಂದರೆ ಭಾಷೆಯನ್ನು ಎಲ್ಲಿ ಬೆಳೆಸಬೇಕಿತ್ತು?
ಕಾನೂನಿನ‌ಪ್ರಕಾರ ಶಿಕ್ಷಣ ನೀಡಲಾಗಿದೆಯೆ? ಪೋಷಕರು ನಿಜವಾದ  ರಾಜ್ಯ ದೇಶದ ಪರ‌ನಿಲ್ಲಲು ಸಾಧ್ಯವಾಗಿದೆಯೆ?
ಇಲ್ಲ ಎಂದರೆ  ಪರಕೀಯರಿಗೆ ಮಣೆ ಹಾಕಿ ಸ್ವಾಗತಿಸುವ ಕಾರ್ಯ ಬಿಟ್ಟು ನಮ್ಮವರ ಜ್ಞಾನವನ್ನು  ಗೌರವಿಸುತ್ತಾ ಎಲ್ಲಾ ಒಂದಾಗೋದನ್ನು ಕಲಿತರೆ ಹೊರಗಿನವರು ಬೆಳೆಯೋದಿಲ್ಲ.
ಕಾಲೆಳೆದು ಬೀಳಿಸಿ ಆಟವಾಡುವ‌ಬದಲು ಕೈಹಿಡಿದು ನಡೆಸುವ  ಕೆಲಸವಾದರೆ ಭಾಷೆಯ ಜೊತೆಗೆ ಜ್ಞಾನವೂ ಬೆಳೆಯುತ್ತದೆ. ಕನ್ನಡಮ್ಮ,ಭಾರತಾಂಬೆ ಎನ್ನುವ ನಮ್ಮ ಮನಸ್ಸು ತಾಯಿಯ ಹೃದಯವಂತಿಕೆಯೆಡೆಗೆ ಇದ್ದರೆ  ಒಳಗೇ  ಇದ್ದು  ಧರ್ಮ,ಸಂಸ್ಕೃತಿ, ಭಾಷೆ,ದೇಶದ ಸ್ಥಿತಿಗತಿಗೆ ಕಾರಣ ತಿಳಿದು ಪರಿಹಾರವೂ ಒಳಗೇ ಸಿಗುತ್ತದೆ.
ವೈಜ್ಞಾನಿಕತೆಯ ಹಿಂದೆ ಹೊರಟವರಿಗೆ ವೈಚಾರಿಕತೆಯ ಅರ್ಥ ಆಗದೆ ಏನೇನೂ ತಿರುಚಿ ಕೊಂಡು ತಾವೂ ಸೀದಾ ನಡೆಯದೆ‌ ನಡೆಯುತ್ತಿದ್ದವರನ್ನೂ  ತಡೆದು ಮಧ್ಯವರ್ತಿಗಳು ಅತಂತ್ರಸ್ಥಿತಿಗೆ ತಂದಿರೋದು ದುರಂತಕ್ಕೆ ಕಾರಣ. ಇಲ್ಲಿ ಯಾರೂ ಯಾರನ್ನೂ ಉಳಿಸಲಾಗದು ಬೆಳೆಸಲೂ ಆಗದು.
ಮೊದಲು ನಮ್ಮ ನಮ್ಮ ಧರ್ಮ, ಕರ್ಮ ಭಾಷೆ,ಸಂಸ್ಕೃತಿ ಅರ್ಥ ಮಾಡಿಕೊಂಡು ಹೊರಗೆ ಬಂದರೆ ಹೊರಗೂ ಸರಿ ಆಗಬಹುದಷ್ಟೆ.  ಎಲ್ಲಿಯವರೆಗೆ  ಮಾನವನ‌ಮನಸ್ಸು ಶುದ್ದವಾಗದೋ ಅಲ್ಲಿಯವರೆಗೆ ಶಾಂತಿ ಸಿಗದು.ಸತ್ಯ ತಿಳಿಯದು, ಸತ್ಯವೇ ಇಲ್ಲದ ಧರ್ಮ ಕುಂಟುತ್ತದೆ.ಧರ್ಮ ವಿಲ್ಲದ ಸತ್ಯ ಕುರುಡಾಗಿರುತ್ತದೆ.
ಪರಕೀಯರನ್ನು  ಮೆಚ್ಚಿಸುವುದಕ್ಕಾಗಿ ನಮ್ಮತನ ಬಿಟ್ಟರೆ ನಾಟಕವಾಗುತ್ತದೆ. ನಾಟಕ ಅರ್ಧ ಸತ್ಯವಷ್ಡೆ.ಅರ್ಧ ಸತ್ಯ‌ ಅಸತ್ಯಕ್ಕಿಂತ ಅಪಾಯಕರ. ಕಾರಣ ಅಸತ್ಯವನ್ನಾದರೂ  ತಡೆಯಬಹುದು. ಕಾರಣ ಸತ್ಯ ಒಂದೇ ಇರುತ್ತದೆ.ಅಸತ್ಯ ಹೋದ ಮೇಲೆ ಕಾಣುತ್ತದೆ. ಆದರೆ ಈ ಮಧ್ಯವರ್ತಿಗಳ ಅರ್ಧ ಸತ್ಯ  ಈಕಡೆಯೂ ಹೋಗದೆ ಆಕಡೆಯೂ ಹೋಗದೆ ತಡೆಯುವುದೇ ಕೆಲಸ ಮಾಡುತ್ತದೆ. ಹೀಗಾಗಿ ದೇವರು ಅಸುರರ‌ ನಡುವಿರುವ ಮಾನವನಿಗೆ ಸಮಸ್ಯೆ ಹೆಚ್ಚು. ಈ ಕಡೆ ಕಾಣದ ದೇವರು ಆ ಕಡೆ ಕಾಣುವ ಅಸುರರು‌ ಇಬ್ಬರ ನಡುವೆ ಮಾನವರು ಭೂಮಿಯನ್ನು  ಆಳೋದಕ್ಕೆ ಹೋಗುತ್ತಾ ತಾವೇ ಆಳಾಗಿ ಹಾಳಾಗಿ ಹೋದರೂ‌ ಕೇಳೋರಿಲ್ಲ ಹೇಳೋರಿಲ್ಲದೆ ನಿರ್ಗತಿಕರಾಗಿರುವರು.ಹಣದಿಂದ ಸರಿಪಡಿಸಲಾಗದ್ದನ್ನು ಸತ್ಯಜ್ಞಾನದಿಂದ ಸರಿಪಡಿಸಬಹುದು ಎನ್ನುವ ಮಹಾತ್ಮರನ್ನು ಪೂಜಿಸುವ ಬದಲು ಅವರ ನಡೆ ನುಡಿಯಲ್ಲಿದ್ದ ತತ್ವವನರಿತರೆ  ನಮ್ಮೊಳಗೇ ಇರುವ‌ಮಹಾತ್ಮರ ದರ್ಶನ ಸಾಧ್ಯವಿದೆ. ಹೋರಾಟವೇ ಜೀವನ.ಆದರೆ ಇದರಲ್ಲಿ ಸತ್ಯ ಧರ್ಮದ ಜ್ಞಾನವಿರಬೇಕಷ್ಟೆ ಇದೇ ನಮಗೆ ಸನ್ಮತಿ, ಸದ್ಗತಿ  ಕೊಡುತ್ತದೆಂದಿರುವರು  ಮಹಾತ್ಮರುಗಳು. ಹಣ ಇಂದು ಬಂದು ನಾಳೆ ಹೋಗಬಹುದು. ಜ್ಞಾನ ಶಾಶ್ವತವಾಗಿರುವುದು.
ಯಾರೇ ಆಗಲಿ ಪರರ ಧರ್ಮ, ಭಾಷೆ ಸಂಸ್ಕೃತಿ ಯನ್ನು ಅಳಿಸುವ ಕೆಲಸ ಮಾಡಿದರೆ ವಿನಾಶ ಕಟ್ಟಿಟ್ಟ ಬುತ್ತಿ.ಇಷ್ಟು ತಿಳಿದರೆ ತಾವಿರುವ‌ ನೆಲಜಲದ ಋಣ ತೀರಿಸಲು ‌ಅದನ್ನು ಬೆಳೆಯಲು ಬಿಡಬೇಕು.  ನಮ್ಮಲ್ಲಿ ಹಣವಿದೆ ಅಧಿಕಾರವಿದೆ ಸ್ಥಾನಮಾನ ಸಿಕ್ಕಿದೆ ಎಂದರೆ ನಾವು ಮಾಡಿದ್ದೆಲ್ಲಾ ಸರಿಎಂದಲ್ಲ ಅದರಲ್ಲಿ ಸತ್ಯ ಧರ್ಮ ನ್ಯಾಯ ನೀತಿ ಸಂಸ್ಕೃತಿ ಎಷ್ಟಿದೆ ಎನ್ನುವುದನ್ನು  ಜ್ಞಾನದಿಂದ ತಿಳಿದಾಗಲೇ  ನಿಜವಾದ ಜೀವನವಾಗಿರುತ್ತದೆ.ಇಲ್ಲವಾದರೆ  ಸಮಾಜದ ಜೊತೆಗೆ ಸಂಸಾರದ ಸಮಸ್ಯೆಯೂ ಹೆಚ್ಚಾಗಿ  ಅಶಾಂತಿಯಿಂದ ಜೀವ ಹೋಗುತ್ತದೆ. ಎಲ್ಲಿಯವರೆಗೆ ಆತ್ಮಕ್ಕೆ ಶಾಂತಿ ಸಿಗದೋ ಅಲ್ಲಿಯವರೆಗೆ ಜನ್ಮ ಶತಸಿದ್ದ. ಒಟ್ಟಿನಲ್ಲಿ ಅಧ್ಯಾತ್ಮ ಎಂದರೆ ತನ್ನ ತಾನರಿತು ಎಲ್ಲರಲ್ಲಿಯೂ ಅಡಗಿರುವ ಸತ್ಯಧರ್ಮ ದಿಂದ  ಒಳಗೂ ಹೊರಗೂ ಶಾಂತಿ ಬೆಳೆಸೋದಾಗಿತ್ತು.ಈಗ ಕಲಿಗಾಲ ಕಲಿಕೆಯೇ ದಾರಿತಪ್ಪಿಸಿ ನಡೆಸಿರುವಾಗ ಎಲ್ಲಿದೆ ಶಾಂತಿ?  ಎಲ್ಲರಿಗೂ  ಒಂದೇ ಭೂಮಿ,ಒಂದೇ ತಾಯಿ,ಒಂದೇ ದೇಶ ಒಂದೇ ಮತ,ಒಂದೇ ಧರ್ಮ ಒಂದೇ ದೇವರು ಎನ್ನುವುದು ಸುಲಭ. ಆ ಒಂದರ ಹಿಂದೆ ನಡೆದವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಕಷ್ಟಪಡದೆ ಬೇರೆ ಬೇರೆ ಮಾಡಿ‌ಕೊನೆಗೆ ಒಂದು ಮಾಡೋದಕ್ಕೆ ಸಾಕಷ್ಟು ಕಷ್ಟವಿದೆ.
ಕಷ್ಟದ ಹಿಂದೆ ಸುಖವಿದ್ದಂತೆ ಸುಖದ ಹಿಂದೆ ಕಷ್ಟವಿದೆ.
ಎಲ್ಲರನ್ನೂ ಒಂದಾಗಿಸಲು ಹೋದರೆ ಅವರೊಳಗಿದ್ದ ಜ್ಞಾನ ಒಂದೇ ಆಗಬೇಕಾದರೆ ಶಿಕ್ಷಣ ಒಂದೇ ಕೊಡಬೇಕು.ಸಾಧ್ಯವೆ?
ದೇಶೀಯ ಶಿಕ್ಷಣ ದೇಶದ ಪರವಿದ್ದರೆ ದೇಶಭಕ್ತರು.ದೇಶಕ್ಕೆ ವಿರುದ್ದವಿದ್ದರೆ ದೇಶದ್ರೋಹಿಗಳು.ಎಷ್ಟು ಸರಳವಾಗಿದೆ ಸತ್ಯ.
ನಾವೆಲ್ಲರೂ  ಮಧ್ಯದಲ್ಲಿ  ನಿಂತ ದೋಣಿಯಲ್ಲಿರುವ ಪ್ರಯಾಣಿಕರಷ್ಟೆ. ಸರಿಯಾದ ದಡ ತಲುಪಬೇಕಾದರೆ ಹಿಂದೆ ಮುಂದೆ ನೋಡಬೇಕಷ್ಟೆ. ಮದ್ಯದಲ್ಲಿ ನಿಂತು ಯುದ್ದ ನಡೆಸಿದರೆ  ಎಲ್ಲಾ ನೀರಿನಲ್ಲಿ ಮುಳುಗುವುದಂತೂ ಸತ್ಯ. ಜೀವ ಹೋದರೆ ಜನ್ಮ ಪಡೆಯಬಹುದು. ಜ್ಞಾನವಿದ್ದರೆ ಉತ್ತಮ‌ಜನ್ಮ.ಜನ್ಮವೇ ಇಲ್ಲವೆಂದವರನ್ನು  ಏನೂ ಮಾಡಲಾಗದು..ಸತ್ಯ ಸತ್ಯವೇ ಅಲ್ಲವೆ? ಮನುಕುಲದ ಒಳಿತಿಗಾಗಿ ಮಾನವೀಯತೆಯ ಜೊತೆಗೆ ದೈವೀಕತೆಯು ಅಗತ್ಯವಿದೆ.
ದೈವೀಕ ಗುಣಜ್ಞಾನದಿಂದ ಧರ್ಮ, ಸತ್ಯ ಭಾಷೆಯ‌ಮಹತ್ವವರಿತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಲ್ಲವಾದರೆ ಅಹಂಕಾರವೇ ಬೆಳೆದು  ಆಳಿ ಆಳಿಸುತ್ತದೆ.

ರವಿ ಕಾಣದ್ದನ್ನು ಕವಿ ಕಂಡ

ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ...

ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ? ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇಃ ಇನ್ನು ಗೋವು, ಕಡಿಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ? ಬೇರೆ ಪ್ರಾಣಿಗಳೇನು ಪಾಪ ಮಾಡಿದ್ದಾವೆ? ಅವೂ ಅಷ್ಟೇ ಮುಖ್ಯ. ಪೂಜೆ, ಪುನಸ್ಕಾರ, ವಿಧಿ ಇಂಥವುಗಳನ್ನು ಮಾಡೋರು ಹಿಂದುಗಳಾದರೆ, ಇದಾವುದನ್ನೂ ನಾನೂ ಮಾಡೋದಿಲ್ಲ. ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ.
-ಕುವೆಂಪು 
ಪುಸ್ತಕದ ಮಾಹಿತಿ: ಕುವೆಂಪು ಸಮಗ್ರ ಗದ್ಯ,

ಇಲ್ಲಿ ವಿಶ್ವಮಾನವನಾಗಿ,ವಿಶ್ವಶಕ್ತಿಯ ಮಗನಾಗಿ, ಭಾರತಾಂಬೆಯ ಕುಡಿಯಾಗಿ ಕನ್ನಡಮ್ಮನೊಳಗಿದ್ದು ಪ್ರಕೃತಿಯ ಸಣ್ಣ ಜೀವವನ್ನೂ  ಪ್ರಕೃತಿಯೊಳಗೆ 
ಗಮನಿಸುವ ಮಹಾತ್ಮರಿಗೆ ಎಲ್ಲಾ ಒಂದೇ ಎನ್ನುವ 
ಅದ್ವೈತ ತತ್ವದ ಅರಿವಾಗಲು ಸಾಧ್ಯವಿದೆ. ಕುವೆಂಪು ರವರು  ಅಂತಹ ಮಹಾತ್ಮರಾಗಿ ಹಿಂದುಳಿಯದೆ ಹಿಂದೂ ಆಗಿದ್ದರೂ ನಾನೊಬ್ಬ ವಿಶ್ವ ಮಾನವನೆಂಬ  ಅರಿವಿನಲ್ಲಿ ಭಾರತದ  ಪವಿತ್ರತೆಯನ್ನು ಎತ್ತಿ ಹಿಡಿದಿದ್ದಾರೆ. ಹಾಗೆಯೇ ಸ್ತ್ರೀ ಶಕ್ತಿಗೆ
ಹೇಗೆ ಗೌರವಿಸಿದರೆ ಭೂಮಿ, ಭಾರತಮಾತೆ, ಗಾಯತ್ರಿ ಮಾತೆ, ಗಂಗಾಮಾತೆ,ಗೋಮಾತೆಯನ್ನು ಉಳಿಸಿ ಬೆಳೆಸಬಹುದೆನ್ನುವ ಸಂದೇಶ  ಇದರಲ್ಲಿದೆ. ನಾವು ನಮ್ಮವರನ್ನು  ದ್ವೇಷ ಮಾಡುತ್ತಾ ನಡೆದರೆ ಸರಿ ಎನ್ನುವುದಾದರೆ ಪರರನ್ನು ದ್ವೇಷ ಮಾಡುವುದೂ ಸರಿ.
ಆದರೆ,ಹಿಂದೂ ಧರ್ಮದ ಪ್ರಕಾರ  ಶತ್ರುಗಳನ್ನು ಪ್ರೀತಿಸುವಷ್ಟು  ಆಧ್ಯಾತ್ಮ ಶಕ್ತಿ ನಮ್ಮೊಳಗಿದ್ದಾಗಲೆ ಜ್ಞಾನದಿಂದ ಪರಮಾತ್ಮನ ನೋಡಲು ಸಾಧ್ಯವೆನ್ನಬಹುದು. 
"ಪರರೆಲ್ಲಾ ಮಿತ್ರರಾದರೆ ಸ್ವರ್ಗ
ನಮ್ಮವರೆ ಶತ್ರುಗಳಾದರೆ ನರಕ."
"ರವಿ ಕಾಣದ್ದನ್ನು ಕವಿ ಕಾಣುತ್ತಾನೆ"
ಎನ್ನುವುದು ಸತ್ಯ. ರವಿ ಇರೋದು ಹೊರಗಿನ ಬೆಳಕಿನಲ್ಲಿ. ಕವಿ ಬರೆಯೋದು ಒಳಗಿನ ಚೈತನ್ಯ ದಿಂದ.
ಸತ್ಯಜ್ಞಾನ ಒಳಗಿದೆ ಮಿಥ್ಯಜ್ಞಾನ ಹೊರಗಿದೆ. ವಿಜ್ಞಾನ ಜಗತ್ತಿನಲ್ಲಿ  ಹೊರಗಿನ ದೇಹ ಬೆಳೆಸಿಕೊಂಡು  ದೇಹಕ್ಕೆ ಆಹಾರ ಕೊಟ್ಟು ಬೆಳೆದರೆ, ಜ್ಞಾನದ ಜಗತ್ತಿನಲ್ಲಿ  ಒಳಗಿನ  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಸತ್ಯವನ್ನರಿತು ಮಿತವಾದ ಹಿತವಾದ ಆಹಾರ,ವಿಹಾರದಿಂದ ಸಾತ್ವಿಕತೆಯ  ಶಿಕ್ಷಣ ಪಡೆದು ಅಮರರಾದರು. ಈಗ ನಾವು ಅಮರರಾದವರ ಹೆಸರಲ್ಲಿ ನಮ್ಮ‌ಹೆಸರು ಬೆಳೆಸಿಕೊಳ್ಳುವ
ರಾಜಸ,ತಾಮಸದೆಡೆಗೆ  ನಡೆದರೆ  ಕವಿ ಕಾಣೋದನ್ನು 
ಕಾಣಲಾಗದು. 
ರವಿಯಷ್ಟೆ ಕಾಣಬಹುದು.ಇದೂ ಅರ್ಧದಿನವಷ್ಟೆ.ಅಂದರೆ ಅರ್ಧಸತ್ಯ ತಿಳಿದರೆ ಅತಂತ್ರ ಜೀವನವಾಗುತ್ತದೆ.
ತಿನ್ನುವುದಕ್ಕಾಗಿ ಜೀವನವಲ್ಲ.ತಿಳಿಯುವುದಕ್ಕಾಗಿಯೂ ಜೀವನವಲ್ಲ. ತಿಳಿದು ತಿರುಗಿ ನಡೆಯುವುದೇ ಜೀವನ.
ಹಿಂದೂ ಧರ್ಮ ಶ್ರೇಷ್ಠ ವಾದದ್ದೆ. ಆದರೆ ಹಿಂದೂಗಳೆಲ್ಲರೂ ಶ್ರೇಷ್ಠ ರೆಂದಲ್ಲ.ಶ್ರೇಷ್ಠ ತೆಗೆ ಬೇಕಿದೆ ಶ್ರೇಷ್ಠ ಸತ್ಯಜ್ಞಾನ.
ಕನಿಷ್ಠ ವಿಚಾರವನ್ನು ಎತ್ತಿ ಹಿಡಿದು ಜೀವನ ನಡೆಸದೆ,ಶ್ರೇಷ್ಠ ವಿಚಾರವನ್ನು  ತಿಳಿದು ಜೀವನ ನಡೆಸಿದಾಗಲೆ ಹಿಂದೂಗಳು ಮುನ್ನೆಡೆಯಲು ಸಾಧ್ಯ. ಹಿಂದುಳಿದವರನ್ನು  ಉನ್ನತ  ವ್ಯಕ್ತಿತ್ವ,ತತ್ವಗಳ ಶಿಕ್ಷಣದಿಂದ ಮೇಲೆ ತರುವ‌ ಬದಲಾಗಿ  ಸಾಲ,ಹಣ ,ಅಧಿಕಾರ ನೀಡಿ ಮೇಲೆತ್ತಿ ನಿಲ್ಲಿಸಿದರೆ
 ,ನಿಲ್ಲಿಸಿ ದವರು ಶಾಶ್ವತವೆ? ಅಥವಾ ಮೇಲೆ ನಿಂತವರು ಶಾಶ್ವತವೆ? ಜೀವ‌ ಮತ್ತೆ ಭೂಮಿ ಮೇಲಿದ್ದೇ ಹೋದರೂ ಜ್ಞಾನವಿಲ್ಲದ ಕಾರಣ ಜನಿಸಿ ಮತ್ತೆ ಸತ್ಯ ತಿಳಿದು  ಧರ್ಮ ಕರ್ಮದ ಹಾದಿ ಹಿಡಿಯಲೇಬೇಕೆನ್ನುತ್ತದೆ ಹಿಂದೂ ಧರ್ಮ. ಪರಧರ್ಮ ಇದನ್ನು ಒಪ್ಪದಿದ್ದರೂ ಇದೇ ಸತ್ಯ. ಭೂಮಿಯಲ್ಲಿ ಮಾತ್ರ ಅನೇಕ ದೇವರು,ಧರ್ಮ,ಜಾತಿ,ಜೀವ ಇರೋದು.
ಪರಲೋಕದಲ್ಲಿ  ಇದಕ್ಕೆ ಬೆಲೆಯಿಲ್ಲ."ಅಲ್ಲಿರುವುದು ನಮ್ಮನೆ 
ಇಲ್ಲಿ ಬಂದೆ ಸುಮ್ಮನೆ"
ಎಲ್ಲರೊಳಗಿರುವ ಪ್ರಾಣ,ಜೀವ ಶಾಶ್ವತವಲ್ಲ. ಹೊರಗಿನಿಂದ  ಒಳ ಹಾಕಿಕೊಳ್ಳುವ ಮೊದಲು   ಚಿಂತನೆ ನಡೆಸಿದರೆ ಉತ್ತಮ.  ಮೂಲ ಪ್ರಾಣಿಗಳಾದರೂ ಪ್ರಕೃತಿಯ ಪರ ಜೀವನ ನಡೆಸುತ್ತವೆ.ಆದರೆ,ಮಾನವ?
ವಿಶ್ವದೊಳಗೆ ಮಾನವನಾಗಿರೋದಕ್ಕೆ ವಿಶೇಷಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಅಗತ್ಯವಿದೆ. ಸಾಮಾನ್ಯರಲ್ಲಿ ಸಾಮಾನ್ಯರಾದಾಗಲೇ ಒಳಗಿರುವ ಅಹಂಕಾರ ‌ಅಳಿದು ಆತ್ಮವಿಶ್ವಾಸ  ಬೆಳೆಯೋದು.ಆತ್ಮವಿಶ್ವಾಸ ದಿಂದ ಆತ್ಮಜ್ಞಾನ ಆತ್ಮಜ್ಞಾನದಿಂದ ಮಾತ್ರ  ಕಾಣದ ಸತ್ಯದರ್ಶನ ಸಾಧ್ಯ.

Wednesday, December 27, 2023

ಲಕ್ಮಿ ನಾರಾಯಣರಲ್ಲಿ ಬಡತನವಿದೆಯೆ?

ನಾವು ಹಲವಾರು ವಿಚಾರಗಳನ್ನು ಹಂಚಿಕೊಳ್ಳಬಹುದು ಆದರೆ ಹಲವಾರು ಕರ್ಮ ಫಲವನ್ನು ಹಂಚಿಕೊಳ್ಳಲಾಗದು.
ಹಿಂದಿನ ಜನ್ಮದಲ್ಲಿ ಮಾಡಿದ ಸಾಲಕ್ಕೆ ತಕ್ಕಂತೆ ಈ ಜನ್ಮದಲ್ಲಿ  ತೀರಿಸಲು  ಬಡತನ  ವರವಾಗಲೂಬಹುದು ಶಾಪವಾಗಲೂಬಹುದು. ವರವೆಂದು ತಿಳಿಯುವ ಜ್ಞಾನ ಬೇಕು. ತಿಳುವಳಿಕೆಯೇ ಇಲ್ಲವಾದರೆ ಅದೇ ದೊಡ್ಡ ಸಮಸ್ಯೆ.
 ದಾನ ಶೂರ‌ಕರ್ಣ ನಿಗೂ   ಮಹಾದಾನಿಯಾದ  ಬಲಿಚಕ್ರವರ್ತಿಗೂ  ವ್ಯತ್ಯಾಸವಿಷ್ಟೆ. ಇಬ್ಬರೂ ಮಹಾಶೂರರೆ ಆದರೆ  ಕರ್ಣ ನ ಜನ್ಮ ಕಥೆ ಬಲಿಯ ಜನ್ಮಕಥೆ ಬೇರೆ ಬೇರೆ.
ಹಣ ಅಧಿಕಾರವಿಲ್ಲದೆ  ಮುಂದೆ ಬಂದ ಕರ್ಣ  ಕೇಳಿದ್ದನ್ನು ಕೊಡುವಷ್ಟು ದಾನಶೂರನಾದ  ಆದರೆ ಅಂತಿಮವಾಗಿ  ಅದೇ ದೊಡ್ಡ ಶಾಪವಾದಂತಾಯಿತು ಹಾಗೇ ಬಲಿಚಕ್ರವರ್ತಿಯ ದಾನವೂ ಇದೆ ರೀತಿಯಾಗಿದೆ.ಇಲ್ಲಿ ಯಾರ ಹಣವನ್ನು ಯಾರು ಯಾರಿಗೆ ಕೊಡುವರೆಂಬುದರ ಮೇಲಿದೆ‌  ಋಣ ಭಾರ. ಭೂಮಿಯಲ್ಲಿ ಸಾಕಷ್ಟು ಸಂಪತ್ತಿದೆ.ಹಾಗಂತ ಎಲ್ಲವೂ‌ ಮಾನವನೇ ಅನುಭವಿಸಲಾಗದು. ಇಲ್ಲಿಗೆ ಬರುವ ಉದ್ದೇಶ ವೇ ಋಣ ತೀರಿಸುವುದೆಂದಾಗ ಅತಿಯಾಗಿ‌   ಕೊಡುವುದೂ ಪಡೆಯುವುದೂ ಸಾಲವಾಗಿರುತ್ತದೆ ಎನ್ನಬಹುದು. ಬಡತನವನ್ನು ಹಣದಿಂದ ಅಳೆಯಬಹುದು ಗುಣಜ್ಞಾನದಲ್ಲಿ ಅಳೆಯಲಾಗದು.ಹೀಗಾಗಿ  ನಮ್ಮ ಈ ಬಡತನವನ್ನು ನಿವಾರಣೆ ಮಾಡಿಕೊಳ್ಳಲು ಬೇಕಾದ ಜ್ಞಾನ ವನ್ನು ಭಗವಂತ ಕೊಟ್ಟು ಕಳಿಸಿರುವಾಗ ಅದನ್ನು  ಬೆಳೆಸದೆ,ಬಳಸದೆ‌ ಹೊರಗಿನ ಜ್ಞಾನದಿಂದ  ಸಾಧನೆ ಮಾಡಲು ಹೋದರೆ ಹೊರಗಿನ ಸಾಲ ಅತಿಯಾಗಿ ಒಳಗಿದ್ದ ಸಾಲ ಇನ್ನಷ್ಟು ಬೆಳೆಯುತ್ತದೆ.
ಉದಾಹರಣೆಗೆ, ಒಬ್ಬ ರೈತನಿಗೆ ಭೂಮಿ ವರದಾನವಾಗಿರುತ್ತದೆ. ಆ ಭೂಮಿಯನ್ನು ಅವನು ತನ್ನ ಸ್ವಂತ ಬುದ್ದಿ ಜ್ಞಾನದಿಂದ ‌ಎಷ್ಟು ಸದ್ಬಳಕೆ ಮಾಡಿಕೊಂಡು ಅದರಿಂದ ಹಣಗಳಿಸಿ  ಸ್ವತಂತ್ರ ಜೀವನ ನಡೆಸುವನೋ ಆಗವನ ಆತ್ಮತೃಪ್ತಿ ಯಾಗಲು ಸಾಧ್ಯ. ಅದನ್ನು ಮಾರಿಬಂದ ಹಣದಿಂದ ಹೊರಗಿನ ವ್ಯವಹಾರ ನಡೆಸಿ ಇನ್ನಷ್ಟು ಲಾಭಗಳಿಸಿದರೂ  ನಷ್ಟವೂ ಹಿಂದೇ ಇರುತ್ತದೆ.ಭೂಮಿಯ ಸತ್ವ ಉಳಿಯೋದು ಅದನ್ನು ಸರಿಯಾಗಿ ಬಳಸಿದರೆ ಮಾತ್ರ.
ಫಲವತ್ತಾದ ಭೂಮಿಯಲ್ಲಿ  ಕಾರ್ಖಾನೆ ಗಳು ಮನೆಗಳು ಎದ್ದು ನಿಂತರೆ  ಫಲವಿಲ್ಲ.ಹೀಗೇ ಪ್ರತಿಯೊಂದು  ಸ್ಥಳಕ್ಕೂ ಅದರದೇ ಆದ ವಿಶೇಷ ಸ್ಥಾನಮಾನವಿರುತ್ತದೆ. ಒಂದು ದೇವಸ್ಥಾನ ಕಟ್ಟುವುದು ಕಷ್ಟ.ಅದರೊಳಗೆ ದೇವರನ್ನು ನಿಲ್ಲಿಸುವುದು ಇನ್ನೂ ಕಷ್ಟ.ನಿಂತ ದೇವರನ್ನು ಸಾಕುವುದು ಬಹಳ ಕಷ್ಟ. ಕಾರಣ ದೇವರು ಕಣ್ಣಿಗೆ ಕಾಣದ ಶಕ್ತಿ.ಎಲ್ಲಾ ಕಡೆ ಇದ್ದರೂ ಒಂದು ಕಡೆ ನಿಲ್ಲಿಸಿ  ನೋಡೋದು ಕಷ್ಟದ ಕೆಲಸ.
ಇದಕ್ಕಾಗಿ ಸಾಕಷ್ಟು ಜನಬಲ ಹಣಬಲವಿದ್ದರೂ ಜ್ಞಾನದಬಲ ಇಲ್ಲವಾದರೆ ಯಾತ್ರಸ್ಥಳಹೋಗಿಪ್ರವಾಸಿತಾಣವಾಗಬಹುದು. 
ಪ್ರವಾಸದಲ್ಲಿ ಭಕ್ತಿಯ ಕೊರತೆಯಿದ್ದರೆ  ಜೀವನ ಯಾತ್ರೆಯಾಗದು.
 ಒಟ್ಟಿನಲ್ಲಿ ಬಡತನವನ್ನು ವರವಾಗಿ ಸ್ವೀಕರಿಸಿದ ಹಿಂದಿನ ಮಹಾತ್ಮರಂತೆ ನಾವಿಲ್ಲ.ಆದರೆ  ಅವರಿಗಿಂತ  ಹೆಚ್ಚು ಹೆಸರು ಹಣ ಅಧಿಕಾರ ಸ್ಥಾನಮಾನ  ಪಡೆಯುವವರು ನಮ್ಮೊಳಗಿದ್ದಾರೆಂದರೆ ಅಜ್ಞಾನವೆಂದರ್ಥ. ಅಜ್ಞಾನದಲ್ಲಿ ನಾವು ಹೆಚ್ಚಾಗಿ ‌ಬಯಸೋದು  ಹೆಸರು,ಹಣ ಅಧಿಕಾರ ಸ್ಥಾನಮಾನ ಇದು ಪರಮಾತ್ಮನ ಹತ್ತಿರ ಹೋಗಲು ಇರುವ ಅಡ್ಡಿಗಳೆಂದು ಇದರಿಂದ ದೂರವಿದ್ದವರನ್ನು ಬಡವರೆಂದರೆ ನಿಜವಾದ ಬಡತನ  ಯಾವುದರಲ್ಲಿರುತ್ತದೆ? 
ಹಿಂದೆ ಮನೆತುಂಬ ಮಕ್ಕಳು ಇದ್ದು ದುಡಿಯುವ‌ಕೈಗಳು ಕಡಿಮೆಯಿದ್ದ ಕಾರಣ ಹಣದ ಕೊರತೆಯಲ್ಲಿ ಪಾಲಿಗೆ ಬಂದದ್ದು ಪಂಚಾಮೃತವಾಗಿ ಹಂಚಿ ಹೊಂದಿಕೊಳ್ಳುವ ಗುಣವಿತ್ತು.ಈಗಿದು‌ಬದಲಾಗಿದೆ ಮನೆಮಂದಿಯೆಲ್ಲಾ ದುಡಿಯುತ್ತಾರೆ‌  ಮಕ್ಕಳಿಲ್ಲ.  ಇದ್ದರೂ  ಅವರಿಗೆ ಕಷ್ಟದ ಅರಿವಿಲ್ಲದೆ ಬೆಳೆಸಿ ಕೊನೆಯಲ್ಲಿ ಸಂಪತ್ತಿಗಾಗಿ  ಪೋಷಕರನ್ನೇ ಆಪತ್ತಿಗೆ ತಳ್ಳಿ ಹೋಗುವವರಿದ್ದಾರೆ. ಸಾಲ ಎಂದರೆ ಏನು ಎನ್ನುವ ಸಾಮಾನ್ಯ ಜ್ಞಾನದ ಕೊರತೆಯೇ ಇದಕ್ಕೆಲ್ಲಾ ಕಾರಣ.
ಹಣದಿಂದ ಸಾಲ ತೀರಿಸುವುದಾಗಿದ್ದರೆ ದೇಶದ ತುಂಬಾ ಹಣವಂತರಿದ್ದಾರೆ ಆದರೆ ಅವರಿಗೆ ದೇಶದ ಸಾಲ ತೀರಿಸುವ‌ಜ್ಞಾನದ ಕೊರತೆಯಿಂದ. ಮೈತುಂಬ ಸಾಲವಿದ್ದು ಜೀವಹೋದರೂ ಸರಿ  ಸದ್ಬಳಕೆ ಮಾಡಲಾಗುತ್ತಿಲ್ಲ.ಇದು ಎಲ್ಲಾ ದೇಶದಲ್ಲಿಯೂ ಇದ್ದರೂ ಭಾರತದಂತಹ ಮಹಾದೇಶಕ್ಕೆ ನುಂಗಲಾರದ ತುತ್ತಾಗಿದೆ. ಜನರಿಗೆ ಉಚಿತಕೊಟ್ಟು ಇನ್ನಷ್ಟು ಸಮಸ್ಯೆ ಏರಿಸುವ‌ಬದಲಾಗಿ ಯಾರಿಗೆ ನಿಜವಾಗಿಯೂ ಅಗತ್ಯವಿದೆಯೋ ಅದನ್ನು ಖಚಿತಪಡಿಸಿಕೊಂಡು ಕೊಟ್ಟು  ಹಿಂದಿರುಗಿಸಲು  ಉದ್ಯೋಗ ಕೊಟ್ಟರೆ ಉತ್ತಮ. 
ಎಷ್ಟೋ ಯುವಪೀಳಿಗೆ ಶ್ರೀಮಂತ ರಾಗಿದ್ದರೂ  ಹಣದ ದುರ್ಭಳಕೆ ಯಿಂದಾಗಿ ಸಾಲದ ಹೊರೆ ಹೊತ್ತು ಭ್ರಷ್ಟರ ವಶದಲ್ಲಿದ್ದಾರೆಂದರೆ  ಇವರಲ್ಲಿದ್ದ ವಿವೇಕ ಶಕ್ತಿಯನ್ನು ಜಾಗೃತಗೊಳಿಸುವುದು ಧರ್ಮ ವಾಗಿದೆ.ಕೆಲವೆಡೆ ನಡೆದಿದೆ.ಹಲವು ಕಡೆ ಅವಿವೇಕಿಗಳೇ ಹೆಚ್ಚಾಗಿದ್ದಾರೆಂದಾಗ ಬಡತನವು ಶಾಪವಾಗಿದೆ. ಉತ್ತಮ ಸಂಸ್ಕಾರದ ಶಿಕ್ಷಣಪಡೆದವರಿಗೆ  ಮಾತ್ರ ಜ್ಞಾನದಿಂದ ಜೀವನ ನಡೆಸೋ ಶಕ್ತಿಯಿದ್ದು ಯಾವ ಸರ್ಕಾರದ ಹಂಗಿರದೆ ಸ್ವತಂತ್ರ ವಾಗಿರುವರು. 
ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆಬಿದ್ದವರ ತುಳಿಯುತಲಿತ್ತು ಕುರುಡು ಕಾಂಚಾಣ....

ಹಿಂದಿನ ದಾನವರಿಗೂ ಈಗಿನ ದಾನವರಿಗೂ ವ್ಯತ್ಯಾಸವಿದೆ. ಹಿಂದೆ ತಮ್ಮ ಪಾಲಿಗೆ ಬಂದದ್ದರಲ್ಲಿ  ಕೊಟ್ಟು ಕೈಮುಗಿಯುತ್ತಿದ್ದರು.ಈಗ ಬೇರೆಯವರಿಗೆ ಸೇರಬೇಕಾದ್ದನ್ನು ಕಿತ್ತುಕೊಂಡು  ಕೊಟ್ಟು ಕೈಮುಗಿಸಿಕೊಳ್ಳುವರು. ಎಷ್ಟು ಅಂತರವಿದೆ.ಈ ಅಂತರದಲ್ಲಿ ಮಧ್ಯವರ್ತಿಗಳು  ಅವಾಂತರ ಎಬ್ಬಿಸಿ ಜನರನ್ನು ಆಳುತ್ತಿರೋದು ದುರಂತವಷ್ಟೆ. ಏನೇ ಇರಲಿ ಯಾರ ಹಣವನ್ನು ಯಾರೋ ಯಾರಿಗೋ ಕೊಟ್ಟರೂ ಪಡೆದವನು ತೀರಿಸುವವರೆಗೂ ನೆಮ್ಮದಿಯಿರದು.
ಅದಾಗೇ ಬಂದರೆ ಪರಮಾತ್ಮನ  ಕೊಡುಗೆ ಕಿತ್ತು ಪಡೆದರೆ ಪರಕೀಯರ ಉಡುಗೊರೆ. ಉಡುಗೊರೆ ಶಾಶ್ವತವಲ್ಲ.

ಲಕ್ಮಿನಾರಾಯಣರಲ್ಲಿ  ಯಾರು ದೊಡ್ಡವರೆಂದರೆ ಮಾನವ ಲಕ್ಮಿ ಎನ್ನಬಹುದು. ನಾರಾಯಣನ ಹೃದಯದವರೆಗೆ ಹೋಗಿ ಅವಳನ್ನು ಒಲಿಸಿಕೊಂಡು  ಬದುಕುವುದು ಸುಲಭವೆ?

ಹಿಂದಿನ ಸನಾತನ ಧರ್ಮಕ್ಕೂ ಈಗಿನ ಧರ್ಮಕ್ಕೂ ವ್ಯತ್ಯಾಸವಿಷ್ಟೆ ಅಂದಿನ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು ಈಗ  ನಮ್ಮೊಳಗೇ ತಿಳಿಯದೆ ಅಹಂಕಾರ ಹೆಚ್ಚಾಗುತ್ತಿದೆ.

Friday, December 22, 2023

ಭಗವಂತನ ಗೀತೆಯಲ್ಲಿದೆ ಯೋಗ

ಯೋಗವೆಂದರೆ ಸೇರುವುದು ಕೂಡುವುದು ಒಂದಾಗುವುದು ಒಗ್ಗಟ್ಟು , ಏಕತೆ,ಐಕ್ಯತೆಯವರೆಗೂ ತಿಳಿದಾಗ ಭಗವದ್ಗೀತೆ ಸರಿಯಾಗಿ ಅರ್ಥ ವಾಗುತ್ತದೆ.ಧರ್ಮರಕ್ಷಣೆಗಾಗಿ ಕೂಡಿಕೊಳ್ಳುವವರು ಕೆಲವರು ಧರ್ಮ ಭಕ್ಷಣೆಗಾಗಿ ಸೇರುವವರು ಹಲವರಾದಾಗಲೇ ಅಯೋಗ್ಯರ ಸಂಖ್ಯೆ ಮುಗಿಲುಮುಟ್ಟುವುದು.
ಹಾಗಾದರೆ ಯೋಗವೆಂದಾಗ‌  ವಿದ್ಯಾಯೋಗ, ಧನಕನಕಯೋಗ,ಮದುವೆಯೋಗ,ಮಕ್ಕಳಯೋಗ...

ಎಲ್ಲವನ್ನೂ ಪಡೆಯಲು  ಯೋಗ್ಯ ಜ್ಞಾನದಿಂದ ಸಾಧ್ಯವಿದೆ ಆದ್ದರಿಂದ ಜ್ಞಾನಯೋಗವೇ   ದೊಡ್ಡದು ಎಂದರು ಶ್ರೀ ಶಂಕರ ಭಗವತ್ಪಾದರು. ಜ್ಞಾನದಿಂದ ನಾನ್ಯಾರು‌ ನನ್ನ ಕೆಲಸವೇನು ನನ್ನ ವ್ಯವಹಾರ ದಿಂದ ಸಿಗುವ ಲಾಭ ನಷ್ಟದ ಲೆಕ್ಕಾಚಾರದ ಹಿಂದಿರುವ ಋಣ ವನ್ನು  ಅರ್ಥ ಮಾಡಿಕೊಳ್ಳಲು ಸಾಧ್ಯ.ಎಲ್ಲದ್ದಕ್ಕೂ ಮೂಲವೇ ಸತ್ಕರ್ಮ ಕರ್ಮ ಯೋಗದಿಂದ  ಸಾಧ್ಯವಿದೆ ಎನ್ನಬಹುದು.

ಶಿಕ್ಷಣವೇನೂ ಇದೆ ಯೋಗಶಿಕ್ಷಣವಿಲ್ಲ.ಅಂದರೆ ಮಕ್ಕಳ ಒಳಗಿರುವ ಜ್ಞಾನಕ್ಕೆ ಪೂರಕವಾದ ಶಿಕ್ಷಣವಿಲ್ಲ.ಹೊರಗಿನ ಜ್ಞಾನಕ್ಕೆ ಶಿಕ್ಷಣ ನೀಡಿ ಒಳಗಿನ ಜ್ಞಾನ ಹಿಂದುಳಿದರೆ  ಒಂದನ್ನೊಂದು ಸೇರದೆ ವಿರುದ್ದದ ಅಜ್ಞಾನ ಬೆಳೆಯುತ್ತದೆ.

ವಿದ್ಯೆಯಿಂದ ವಿನಯ ಮೂಡುವುದು ಇಂದಿನ ವಿಧ್ಯಾರ್ಥಿಗಳು ವಿನಯವಂತರೆ ಗಮನಿಸಿದರೆ ಪೋಷಕರು  ಮನೆಯೊಳಗೆ ವಿನಯವಂತಿಕೆಯ ವಿಚಾರ ವಿಷಯ ಸಂಸ್ಕಾರ ಕಲಿಸಬಹುದು. ಇದು ವಿದ್ಯಾ ಯೋಗ .

ಮದುವೆಯೋಗ ಇಲ್ಲಿ ಹೆಣ್ಣು ಗಂಡಿನ‌ಗುಣಸಾಮ್ಯತೆಯೇ ಮುಖ್ಯವಾಗಿರುತ್ತದೆ ಹಣವಲ್ಲ. ಯಾವಾಗ ಹಣದ ಹಿಂದೆ ಸಂಬಂಧ ಕೂಡುವಿಕೆ ಹೆಚ್ಚಾಯಿತೋ ವಿಚ್ಚೇದನ ಗಳು ಬೆಳೆದವು. ಮದುವೆಯನ್ನು ಆಟದಂತೆ  ಆಡುವುದಕ್ಕೆ ಕಾನೂನಿನಲ್ಲಿಯೇ ಅವಕಾಶವಿದ್ದರೆ ಮುಗಿಯಿತು ಕಥೆ. ಸ್ವೇಚ್ಚಾಚಾರಿಗಳ ಸಂತೆ ಅದಕ್ಕೆ ತಕ್ಕಂತೆ ಮಕ್ಕಳು ಮೊಮ್ಮಕ್ಕಳ ಕಂತೆ .

ಜ್ಞಾನವೆಂದರೆ ತಿಳುವಳಿಕೆ ಇದರಲ್ಲಿ ಸತ್ಯ ಅಸತ್ಯ ಎರಡೂ ಇದೆ. ಆಂತರಿಕ ವಾಗಿರುವ ಸತ್ಯಜ್ಞಾನದಿಂದ ನಾನ್ಯಾರೆಂಬ ಪ್ರಶ್ನೆಗೆ ಉತ್ತರ ತಿಳಿಯಲು ಸ್ವಯಂ ಪ್ರಕಾಶಕರಾಗಬೇಕಿದೆ .ಹೊರಗಿನಿಂದ  ನಾನು ಬೇರೆಯಾಗಿ ಕಂಡರೂ ಒಳಗಿನ‌ಜಗತ್ತಿನಲ್ಲಿ ನಾನೆಂಬುದಿಲ್ಲ. ನನ್ನ ಭೂ ಋಣವನ್ನು  ಸತ್ಕರ್ಮದಿಂದ ಸ್ವಾಭಿಮಾನ, ಸ್ವಾವಲಂಬನೆ ಸ್ವತಂತ್ರ ಬುದ್ದಿಯಿಂದ  ತಿಳಿಯುವಾಗ  ರಾಜಕೀಯದ ಹಂಗಿರದು. ಇದನ್ನು  ನಮ್ಮ ಮಹಾತ್ಮರುಗಳು ನಡೆದು ನುಡಿದು ಯೋಗಿಗಳಾಗಿದ್ದರು. ಪರಮಾತ್ಮನ ಪರಮಸತ್ಯವ ಅರಿತು ಜೀವನ ನಡೆಸೋರನ್ನು ಯೋಗಿಗಳೆಂದರೆ ಸರಿಯಾಗಬಹುದಷ್ಟೆ.ಪರಮಾತ್ಮ ಇರೋದೆಲ್ಲಿ ? ಚರಾಚರದಲ್ಲಿಯೂ ಅಣು ಪರಮಾಣುಗಳ ರೂಪದಲ್ಲಿರುವ ಈ ಶಕ್ತಿಯ ಒಕ್ಕೂಟವೇ  ಪರಮಶಕ್ತಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ  ಯೋಗ.ಭೋಗಕ್ಕೆ ದುರ್ಭಳಕೆ ಮಾಡಿಕೊಂಡರೆ ರೋಗ. ಇದನ್ನು  ಯಾವ ಪುರಾಣ ಗ್ರಂಥ ತಿಳಿಸದಿದ್ದರೂ  ಅಂದಿನ‌ಮಹಾತ್ಮರುಗಳು ಇದನ್ನರಿತು ನಡೆದ ಕಾರಣ ಭೂಮಿಯಲ್ಲಿ ಧರ್ಮ ರಕ್ಷಣೆಯಾಗಿತ್ತು.ಯಾವಾಗ ಅಸುರಿ ಶಕ್ತಿ ಇದನ್ನರಿಯದೆ ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೋ ಆಗ ದೇವಾನುದೇವತೆಗಳ ಸಹಕಾರದಿಂದ ಯುದ್ದ ನಡೆದಿದೆ. ದೇವರು ಎಂದಾಗ ಒಳ್ಳೆಯದೆ  ಕಾಣುವ ನಮ್ಮ ಮನಸ್ಸು ದೇವರಂತ ಮನಸ್ಸು. ಅದೇ ಮನಸ್ಸು ಕೆಟ್ಟದ್ದೇ ಬಯಸಿದರೆ ಅಸುರಿ ಮನಸ್ಸು.
ಮಾನವನ ಮನಸ್ಸೇ ಎಲ್ಲದ್ದಕ್ಕೂ ಕಾರಣವೆನ್ನುವುದು ಸತ್ಯ.
ಆತ್ಮಾನುಸಾರ ಸತ್ಯ ಧರ್ಮವನರಿತವರು ಭೂಮಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆಂದರೆ ಇದು ಯೋಗಿಗಳಿಗೆ ಸಾಧ್ಯವಾಗಿತ್ತು. ಅಂದರೆ ಎಲ್ಲರಲ್ಲಿಯೂ ಯೋಗವಿದೆ ಅದರ ಬಗ್ಗೆ  ಸತ್ಯಜ್ಞಾನವಿಲ್ಲ.ಇದಕ್ಕೆ ಕಾರಣವೇ ಯೋಗ್ಯ ಶಿಕ್ಷಣದ ಕೊರತೆ. ಎಷ್ಟೇ ಭಗವದ್ಗೀತೆ ಓದಿದರೂ  ಯೋಗ ಶಿಕ್ಷಣ ಕೊಡದಿದ್ದರೆ ಮಕ್ಕಳು ಯೋಗ್ಯಪ್ರಜೆಯಾಗೋದು ಕಷ್ಟವಿದೆ.
ಭಗವಂತನು ಎಲ್ಲರ ಹೃದಯ ಶ್ರೀಮಂತಿಕೆಯಲ್ಲಿರುವಾಗ ಹೃದಯಹೀನರ ವಶದಲ್ಲಿದ್ದು ಶ್ರೀಮಂತರಾದರೆ   ಹಣಬಂದರೂ ಜ್ಞಾನ ಬರದಲ್ಲವೆ?

2.ಗೀತಾಜಯಂತಿ

ಗೀತಾಜಯಂತಿಯ ಶುಭಾಶಯಗಳು. ಭಗವದ್ಗೀತೆಯ  ಕುರಿತು  ಚಿಂತನೆ ನಡೆಸುವಾಗ ಅದರಲ್ಲಿದ್ದ ಯೋಗಶಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಯೋಗದಿಂದಲೇ ಪರಮಾತ್ಮನ ದರ್ಶನ. ಪರಮಾತ್ಮ ಜೀವಾತ್ಮನ ಸೇರುವಿಕೆಯೇ ಯೋಗ. ಹಾಗಾದರೆ ಇದಕ್ಕೆ ಇರುವ ಮಾರ್ಗದಲ್ಲಿ ಜ್ಞಾನಯೋಗ, ರಾಜಯೋಗ,ಭಕ್ತಿಯೋಗ ಕರ್ಮ ಯೋಗ ಇಂದಿನ ಪರಿಸ್ಥಿತಿಗೆ ಕಾರಣ ಮತ್ತು ಪರಿಹಾರವನ್ನು ಒಳಗಿನಿಂದ ಕೊಡಬಹುದೇ ಹೊರತು ಹೊರಗಿನಿಂದ  ಕಷ್ಟವಿದೆ. ಮನಸ್ಸಿನ ಯುದ್ದ ಕ್ಕೂ ಮನುಷ್ಯನ ಯುದ್ದಕ್ಕೂ ವ್ಯತ್ಯಾಸವಿದ್ದರೂ ಯುದ್ದದಿಂದ  ಮನಸ್ಸು ಸತ್ತರೆ ವೈರಾಗ್ಯ ಬರಬಹುದು ಮನುಷ್ಯ ಸತ್ತರೆ ಜನ್ಮಪಡೆಯಲೂ ಬಹುದು.
ಹೀಗಿರುವಾಗ ಭಗವಂತನ‌ ಗೀತೆಯನ್ನು ಸರಿಯಾದ ಮನಸ್ಸಿನಿಂದ ಅರ್ಥ ಮಾಡಿಕೊಂಡರೆ ಮನುಷ್ಯ ಮಹಾತ್ಮನಾಗಿ ಹೋಗಬಹುದಷ್ಟೆ. ಹೊರಗಿನ‌ಮನಸ್ಸು ಕೆಟ್ಟಾಗ ಯಾವ ಗೀತೆಯ ಒಳಾರ್ಥ ತಿಳಿಯದೆ ವಿರೋಧ ಹೆಚ್ಚಾದರೆ  ನಷ್ಟ  ನಮಗೇ .ಎಷ್ಟು ಅಧ್ಯಾತ್ಮ ಸತ್ಯದ ವಿರುದ್ದ ರಾಜಕೀಯ ಬೆಳೆಸಿದರೂ  ಮನುಷ್ಯ ಅಸುರರಾಗುವುದು ಸತ್ಯ. ಹಿಂದಿನ ರಾಜರ ಕಾಲದ ಧರ್ಮ ದ ಪ್ರಕಾರ ಪ್ರಜೆಗಳ ಸುಖಕ್ಕಾಗಿ ರಾಜ ಧರ್ಮ ನಿಷ್ಠನಾಗಿದ್ದರೆ ಪ್ರಜೆಗಳೂ ಧರ್ಮ ಕ್ಕೆ ತಕ್ಕಂತೆ ಕರ್ಮ ಮಾಡಿ ಸಮಾಜ ರಾಜ್ಯ ಲೋಕವೂ ನಡೆಯುತ್ತಿತ್ತು.
ಈಗ  ರಾಜಪ್ರಭುತ್ವ ವಿಲ್ಲವಾದರೂ ರಾಜಕೀಯತೆ ಮನೆ ಮಾಡಿ ಮನುಷ್ಯನ‌ಮನಸ್ಸು ಹೊರಗುಳಿದಿದೆ ಒಳಮನಸ್ಸಿನ ಕಥೆ ಕೇಳೋರಿಲ್ಲವಾಗಿದೆ. ಒಳಗೇ ಕುದಿಯುತ್ತಿರುವ ದ್ವೇಷದ ಕಿಡಿ ಹೊರಗೆ ತಂದು ಹರಡುವ ಮಂದಿಗೆ  ಭಗವಂತನ ಇರುವಿಕೆಯನ್ನು ನಂಬಲಸಾಧ್ಯವಾದರೂ  ನಂಬಿದವರ ಪಾಲಿಗೆ ಇದ್ದೇ ಇದ್ದಾನೆ. ಆ ನಂಬಿಕೆಯೂ ತಮ್ಮ ದೈಹಿಕ ಸುಖಕ್ಕಾಗಿ  ಹೆಚ್ಚಾದರೆ  ಇದರಲ್ಲಿ ಯೋಗವಿರದು ಭೋಗವೇ ಇರೋದು. ಭೋಗದಿಂದ  ಭಗವಂತನ ಕಾಣೋದಕ್ಕೆ ಕಷ್ಟ.
ಹೀಗಾಗಿ ಹಣವಿದ್ದರೂ ಶಾಂತಿ ನೆಮ್ಮದಿಯ ಕೊರತೆ.ಎಲ್ಲಿ ಪರಮಾತ್ಮನಿರುವನೋ ಅಲ್ಲಿ ಶಾಂತಿಯಿರುತ್ತದೆ ಎಂದಾಗ ಪರಮಾತ್ಮನ ಇರುವಿಕೆಯನ್ನು ಕಂಡುಕೊಳ್ಳಲು ಶಾಂತಿಯಿಂದ  ಒಳಗಿರಬೇಕು. ಸಾಧ್ಯವೆ? ಸಾಲದ ಮಿತಿ ಮೀರಿದಾಗ  ಪರರ ಸಾಲವನ್ನು ತೀರಿಸಲು ಪರಕೀಯರ ಸೇವೆ ಅಗತ್ಯ. ಸೇವೆಯಲ್ಲಿ ಸ್ವಾರ್ಥ ಅಹಂಕಾರ ಅಪೇಕ್ಷೆ ನಿರೀಕ್ಷೆಗಳು ಬೆಳೆದಂತೆಲ್ಲಾ ಮತ್ತಷ್ಟು  ಗೊಂದಲ ಕಳವಳ ಕಲಹದ ಮನಸ್ಸು  ತಿಳಿಯೋದು  ಅಸತ್ಯ ಅನ್ಯಾಯ ಅಧರ್ಮಕ್ಕೆ ಕಾರಣವೇ  ದೇವರೆಂದು. ದೇವರನ್ನು ಬಿಟ್ಟು ಹೊರಬಂದರೆ ಮುಗಿಯಿತು ಕಥೆ. ನಿರಾಕಾರ  ಪರಮಾತ್ಮನ ಸೇರೋದೆಂದರೆ  ಒಳಗಿರುವ ಜೀವಾತ್ಮನ ಸಂಸ್ಕಾರ ಅಗತ್ಯ.
ಸಂಸ್ಕಾರವಿಲ್ಲದೆ  ಕಂಡದ್ದೇ ಸತ್ಯವೆಂದು ತಿಳಿದು ತಿಂದರೆ ಆರೋಗ್ಯ ಹಾಳಾಗುತ್ತದೆ.ಹಾಳಾದ ದೇಹದೊಳಗೆ  ಸೂಕ್ಮವಾಗಿರುವ  ಆತ್ಮನ ಕಾಣೋದಕ್ಕೆ ಮನಸ್ಸಿನಿಂದ ಕಷ್ಟ.
ಯೋಗದ ಪ್ರಕಾರ ಮನಸ್ಸು ಆತ್ಮಾನುಸಾರ ನಡೆದಾಗ  ಒಳಗಿನ‌ಕಲ್ಮಶಯುಕ್ತ ವಿಚಾರಗಳಲ್ಲಿ ಅಡಗಿರುವ ಅಸತ್ಯ ಅನ್ಯಾಯ ಅಧರ್ಮ ಕ್ಕೆ ಕಾರಣವಾಗಿರುವ ಹೊರಗಿನ ತಂತ್ರದ ರಾಜಕೀಯದ ಉದ್ದೇಶ, ದುರುದ್ದೇಶ ಎರಡೂ ಅರ್ಥ ವಾಗುತ್ತಾ ಭಗವಂತನೆಡೆಗೆ ಹೋಗುವ ದಾರಿ ಒಳಗೇ ಕಾಣುತ್ತದೆ. ಇದಕ್ಕಾಗಿ  ಯಾವ ಅಧಿಕಾರ ಹಣ ಜಾತಿ ಧರ್ಮದ ಬಗ್ಗೆ ಚಿಂತನೆ ಮಾಡದೆ ಮಹಾತ್ಮರುಗಳು ಸ್ವತಂತ್ರ ಬುದ್ದಿ ಜ್ಞಾನದಿಂದ  ಒಳನಡೆದು ಅಧ್ಯಾತ್ಮ ಸಾಧಕರಾಗಿದ್ದರು.
ಭೌತಿಕದ ಸಾಧನೆಗಾಗಿ  ಪುಸ್ತಕದ ವಿಷಯ ಮಸ್ತಕದವರೆಗೆ ತಂದು  ಹೊರಹಾಕಬಹುದು.ಅದರಲ್ಲಿನ ತತ್ವ,ಸತ್ವ ಸತ್ಯಕ್ಕೆ ತಲೆಬಾಗದೆ ಹೃದಯ ವೈಶಾಲ್ಯತೆಯಿಂದ ದೂರವಾಗುತ್ತಾ ಒಳಗೆ ದ್ವೇಷ ಬೆಳೆದಂತೆಲ್ಲಾ  ಅಧರ್ಮ ಕ್ಕೆ ಬಲಬಂದು ಮನುಷ್ಯರನ್ನು  ಅಸುರರು ಆಳುವರು.ದೈವತ್ವಕ್ಕೆ ರಾಜಕೀಯ ಬೇಡ.ಅದರಲ್ಲೂ ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಸ್ವತಂತ್ರ ಜ್ಞಾನಕ್ಕೆ  ಸರಿಯಾದ ಶಿಕ್ಷಣವಿದ್ದರೆ  ಗೀತೆಯೊಳಗಿರುವ ತತ್ವದರ್ಶನ ಯೋಗದರ್ಶನ ಸಾಧ್ಯವೆನ್ನುವರು. ಯೋಗಿಗಳ ದೇಶ ರೋಗಿಗಳ ದೇಶ ಮಾಡಿಕೊಂಡು  ಹೊರಗಿನ ಔಷಧಕ್ಕೆ ಹಣಸುರಿದರೆ ಒಳಗಿರುವ ಜ್ಞಾನ ಬೆಳೆಸುವುದು ಕಷ್ಟ. ಒಟ್ಟಿನಲ್ಲಿ ಭಗವದ್ಗೀತೆ ಯನ್ನು ಪಠ್ಯಪುಸ್ತಕ ಕ್ಕೆ ಸೇರಿಸಲು ಪೋಷಕರೆ ವಿರೋಧಿಸಿದರೆ  ಧರ್ಮ ಗ್ರಂಥವಾಗಲು ಸಾಧ್ಯವೆ? ಗ್ರಂಥಕ್ಕೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆ ಎಂದರೆ ಅದನ್ನು ಅರ್ಥ ಮಾಡಿಕೊಂಡು ನಡೆಯಲು ಸಾಧ್ಯವಾದರೆ ಜ್ಞಾನೋದಯವಾಗುತ್ತದೆ. ಜ್ಞಾನಯೋಗವಿಲ್ಲದೆ ಕರ್ಮ ಯೋಗ ಸಿದ್ದಿಸುವುದೆ? ಕರ್ಮ ಯೋಗವಾದರೂ ಸತ್ಕರ್ಮ ವಾಗಿರಬೇಕಲ್ಲವೆ? ಯಾರದ್ದೋ ಕೈಕೆಳಗೆ ದುಡಿಯುವುದು ತಪ್ಪಲ್ಲವಾದರೂ ಅಧರ್ಮಿಗಳ ಪರಧರ್ಮಿಗಳ ವಶದಲ್ಲಿ ದುಡಿದು ಸತ್ಕರ್ಮ ಸ್ವಧರ್ಮ ಸ್ವಾಭಿಮಾನ ಸ್ವತಂತ್ರ ಜ್ಞಾನ  ಸಂಪಾದನೆ ಮಾಡಬಹುದೆ?
ಹಣದಿಂದ ಪುಸ್ತಕ ಖರೀದಿಸಿ ಓದಬಹುದು. ಆದರೆ ಹಣದ ಮೂಲ  ಮುಖ್ಯವಾಗಿರುವುದು. ಎಷ್ಟೇ ಪರಕೀಯರು ದೇಶಕ್ಕೆ ವಿರುದ್ದ ನಿಂತು ಜನರನ್ನು ದಾರಿತಪ್ಪಿಸಿದರೂ ದೇಶದ ಋಣ ತೀರಿಸಲು ಯೋಗಮಾರ್ಗ ಅಗತ್ಯವಾಗಿದೆ ಎನ್ನುವ ಸಂದೇಶ ಭಗವದ್ಗೀತೆ ತಿಳಿಸುತ್ತದೆ. ಅಂದಿನ ಧರ್ಮ ಯುದ್ದ ದಾಯಾದಿಗಳ ನಡುವೆ ನಡೆದಿದ್ದರೂ ಸೋತವರು ಗೆದ್ದವರು ಒಂದೇ ದೇಶದ ನೆಲದ ಮೇಲಿನ ಋಣ ತೀರಿಸಲಾಗಿತ್ತು.
ಈಗಲೂ ಇದೇ ನಡೆದಿದೆ ಜೀವ ಇರೋವರೆಗೆ  ಹೋರಾಟ ಹೋದ ಮೇಲೆ ಏನಿರುತ್ತದೆ? ಹೋದವರನ್ನು ತಿರುಗಿ ಎಳೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಮಾರಾಟವಾದರೆ ಇದರಲ್ಲಿ ಹಣದ ಲಾಭವಿದ್ದರೆ ಜ್ಞಾನದ ನಷ್ಟವೂ ಇರುತ್ತದೆ. ಒಟ್ಟಿನಲ್ಲಿ ಮಾನವ ಮಧ್ಯವರ್ತಿ ಯಾಗಿ ಅರ್ಧ ಸತ್ಯದಲ್ಲಿ ನಿಂತು ಈ ಕಡೆ ದೇವರು ಆಕಡೆ ಅಸುರರ ವಶದಲ್ಲಿರೋವಾಗ ಯೋಗ .ಒಳ್ಳೆಯವರೊಂದಿಗೆ ಸತ್ಯದೊಂದಿಗೆ ಧರ್ಮ ದಿಂದ ಒಂದಾಗಿದ್ದರೆ ಒಳ್ಳೆಯ ಯೋಗ.ಇಲ್ಲವಾದರೆ ಕೆಟ್ಟಯೋಗ ಎನ್ನಬಹುದೆ?
ಆಂತರಿಕವಾಗಿರುವ ಆತ್ಮಜ್ಞಾನದಿಂದ ತಿಳಿಯುವ. ಸತ್ಯವೇ ಬೇರೆ ಯೋಗ.ಭೌತಿಕದ ಸತ್ಯದ ಯೋಗವೇ ಬೇರೆ ಎಂದಾಗ ಭಗವಂತನಿಗೆ ಎರಡೂ ಒಂದೇ ನಾಣ್ಯದ ಎರಡು ಮುಖ.
ಭೂಮಿಯ ಒಂದು ಭಾಗದ ಜನರಿಗೆ ಕತ್ತಲಾದಾಗ ಇನ್ನೊಂದು ಭಾಗದಲ್ಲಿ ಬೆಳಕಿರುತ್ತದೆ.ನಂತರ ಕತ್ತಲು ಬಂದೇ ಬರುತ್ತದೆ. ಆದರೆ ಜ್ಞಾನದ ನಂತರ ಇವೆರಡೂ ಬೆಳಕಿನೆಡೆಗೆ ನಡೆದಿರುತ್ತದೆಯಾದರೂ  ಹೊರಗೆ ಹುಡುಕಿದರೆ ಸಿಗದು. 
ದಾರಿಯಾವುದಯ್ಯ ವೈಕುಂಟಕ್ಕೆ? ಕುಂಟು ನೆಪಹಿಡಿದು ಹೊರಟವರಿಗೆ  ಕುಂಟುತ್ತಲೇ ಇರಬೇಕು. ಯಾವುದೋ ಒಂದು   ಜನ್ಮದಲ್ಲಿ ಸ್ಥಳ ತಲುಪಬಹುದು.ಪ್ರಯತ್ನ  ನಮ್ಮದು ಫಲ ಭಗವಂತನದು. ಶ್ರೀ ಕೃಷ್ಣನು ಅರ್ಜುನನಿಗೆ ಕೊನೆಯಲ್ಲಿ ಹೇಳಿದ್ದು ಇಷ್ಟೆ.ಎಲ್ಲಾ ತಿಳಿಸಿದ ಮೇಲೆ ನಿನ್ನಿಚ್ಚೆಯಂತೆ ನೀ ನಡೆ ಎಂದು. ಆಗೋದನ್ನು ತಡೆಯಲಾಗದು ಯಾಕೆ ಆಗುತ್ತಿದೆ ಎಂದು ಯೋಗದಿಂದ ತಿಳಿದಾಗಲೇ ಮುಕ್ತಿ.

3.ಮಾನವ ಮಹಾತ್ಮನಾಗೋದು ಹೇಗೆ?

ಮಾನವನಿಗೆ ಆತ್ಮಜ್ಞಾನ  ಹೆಚ್ಚಾದಂತೆ ಇನ್ನೊಬ್ಬರನ್ನು ನೋಡಿ ಪಾಠ ಕಲಿಯುವನು, ಅದಕ್ಕಿಂತ ಕೆಳಗಿನವನು ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಂಡು ನಡೆಯುವನು,ಅದಕ್ಕಿಂತ ಕೆಳಗಿನವನು ಇನ್ನೊಬ್ಬರು ಹೇಳೋವರೆಗೂ ಕಾದು  ಸರಿಯಾಗುವನು, ಅದಕ್ಕಿಂತ ಕೆಳಗಿನವನು  ಹೇಳಿಕೇಳಿ ನೋಡಿಯೂ ಪಾಠ ಕಲಿಯದೆ ಇರುವನು. ಒಟ್ಟಿನಲ್ಲಿ  ಹೊರಗಿನಿಂದ ಕಲಿಕೆಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದನ್ನು  ಹೇಗೆ ಅರ್ಥ ಮಾಡಿಕೊಂಡರೆ  ಯಾವ ಜ್ಞಾನ ಬರುವುದೆನ್ನುವುದು ಅವರವರ ಅನುಭವಕ್ಕೆ ಬಿಟ್ಟ ವಿಚಾರ. ಹಿಂದಿನವರಲ್ಲಿದ್ದ ಸತ್ಯಜ್ಞಾನಕ್ಕೂ ಈಗಿನವರ ಮಿಥ್ಯಜ್ಞಾನ ಕ್ಕೂ ವ್ಯತ್ಯಾಸವಿದ್ದರೂ  ಎರಡರ ಅಂತರದಲ್ಲಿ ಸಾಮಾನ್ಯ ಜ್ಞಾನ ಎಲ್ಲರಲ್ಲಿಯೂ ಅಡಗಿದೆ. ಮೊದಲು ಅದರಿಂದ ಸತ್ಯಾಸತ್ಯತೆ ಅರ್ಥ ಮಾಡಿಕೊಳ್ಳಲು ಕಲಿತರೆ ಸಾಮಾನ್ಯರಂತಿದ್ದರೂ ಅಸಮಾನ್ಯ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವ  ಸಂದೇಶವನ್ನು ನಮ್ಮ ಮಹಾತ್ಮರುಗಳು ತಮ್ಮ ನಡೆ ನುಡಿಯಿಂದಲೇ ತಿಳಿಸಿದ್ದಾರೆ.
ಮಹಾತ್ಮರ ಹೆಸರಿನಲ್ಲಿ ರಾಜಕೀಯ ನಡೆಸಿ ಹಣ ಅಧಿಕಾರ ಸ್ಥಾನಮಾನ ಕ್ಕಾಗಿ  ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೆ ಮಹಾತ್ಮರ ತತ್ವ ಕಾಣೋದಿಲ್ಲ.ಮಾನವನ ತಂತ್ರವೇ ಕಾಣೋದು. ತಂತ್ರದಿಂದ ಸ್ವತಂತ್ರ ಜ್ಞಾನ ಸಿಗೋದಿಲ್ಲ ಇದು ಸತ್ಯ. ಪ್ರತಿಯೊಬ್ಬರೊಳಗೂ ಅಡಗಿರುವ  ಒಂದು ವಿಶೇಷ ಶಕ್ತಿ  ಸ್ವತಂತ್ರ ವಾಗಿ  ಬೆಳೆದಿದ್ದರೆ  ಈ ಅತಂತ್ರಸ್ಥಿತಿಗೆ  ಸ್ಥಳ ವೇ ಇರುತ್ತಿರಲಿಲ್ಲ.  ಇಂದಿನ ಬಡವ ಮುಂದಿನ ಶ್ರೀಮಂತ ನಾಗಬಹುದು. ಇಂದಿನ ಜ್ಞಾನಿ ಮುಂದೆ ಅಜ್ಞಾನಿಯಾಗಲಾರ.
ಆದರೆ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡರೆ  ಅಜ್ಞಾನ. 

ಸಾದು ಸಂತ ದಾಸ ಶರಣ ಮಹಾತ್ಮರನ್ನು ಬೆಳೆಸುವ ಅಗತ್ಯವಿಲ್ಲ ಅವರಂತೆ ನಡೆಯುವುದು ಅಗತ್ಯವಾಗಿತ್ತು ಹಿಂದೂ ಧರ್ಮ ವು ವ್ಯಕ್ತಿಯನ್ನು  ನೋಡಿ ಮುಂದೆ ನಡೆದಿಲ್ಲ ಆತ್ಮಶಕ್ತಿಯಿಂದ ಮುಂದೆ ನಡೆದಿತ್ತು. ಈಗಿನ ರಾಜಕೀಯ ವ್ಯಕ್ತಿಯ ಅಧಿಕಾರ ಹಣ ಸ್ಥಾನದ ಮೇಲಿದೆ ಎಂದರೆ ಧರ್ಮ ಯಾವುದು? ಪರಕೀಯರನ್ನು ದ್ವೇಷ ಮಾಡುವವರೆ ಅವರ ಬಂಡವಾಳ ಸಾಲ ವ್ಯವಹಾರದಲ್ಲಿ ಮುಳುಗಿರುವಾಗ  ಸತ್ಯ ಯಾವುದು? ನಮಗೆ ನಾವೇ ವೈರಿಗಳಾಗಿರುವಾಗ ಹೊರಗಿನ ವೈರಿಗಳ ಅಗತ್ಯವಿಲ್ಲ. 

.  
———————————————
* ನುಡಿ ಮುತ್ತುಗಳು:-  
——————————
ಒಂದು ಕೆಲಸ ಯಶಸ್ವಿಯಾಗಬೇಕಾದರೆ, ಆ ಕೆಲಸ ಮಾಡುವವರು ಮೊದಲು ಅದನ್ನ  ಪ್ರೀತಿಸಬೇಕು.**

**ಆಕಸ್ಮಿಕವಾಗಿ ಏನೂ ಆಗುವುದಿಲ್ಲ.ನಿಮ್ಮ ಕ್ರಿಯೆಯಿಂದ ನಿಮ್ಮ ಸ್ವಂತ ಹಣೆಬರಹವನ್ನು ನೀವು ರಚಿಸುತ್ತೀರಿ.ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ .**

*ತಲೆಯ ಮೇಲಿನ ಭಾರವನ್ನು ಹೊರೆ ಎಂದುಕೊಂಡರೆ ಇಳಿಸಿಬಿಡಬೇಕೆನ್ನಿಸುತ್ತದೆ,
ಜವಾಬ್ದಾರಿ ಎಂದು ತಿಳಿದರೆ ಹೊರಲು ಪ್ರೇರಣೆಯಾಗುತ್ತದೆ.*

**ತಪ್ಪುಗಳಿಂದ ಪಾಠ ಕಲಿಯಬಹುದು  .ಹೌದು ಹಾಗೆಂದು ಪಾಠ ಕಲಿಯಲೆಂದೇ ತಪ್ಪು ಮಾಡಬಾರದು.**

**ಯಾವುದೇ ಎತ್ತರದ
ಸ್ಥಾನಕ್ಕೇರಿದರೂ ಸಮಯ ಬಂದಾಗ ಕೆಳಗಿಳಿಯಲೇಬೇಕು.ಹಕ್ಕಿ ಕೂಡ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಬಾಯಾರಿದಾಗ ನೀರು ಕುಡಿಯಲು ಕೆಳಗಿಳಿಯಲೇಬೇಕು.ಎತ್ತರ ಸ್ಥಾನ ಶಾಶ್ವತವಲ್ಲ.ಹೃದಯ ಸ್ಥಾನ ಶಾಶ್ವತ**

 **ಸಮಯಕ್ಕೆ ತಕ್ಕಂತೆ ನಿಮ್ಮನ್ನು 
ಒಳ್ಳೆಯವರು ಅಥವಾ ಕೆಟ್ಟವರು 
ಎಂದು  ನಿರ್ಧರಿಸುವವರ ಜೊತೆ ಹೆಚ್ಚು ಸಮಯ ಕಳೆಯುವದನ್ನು ನಿಲ್ಲಿಸಿ.**

**The Sea is Same for all But Some Find PEARLS,Some find Fishes and Some Just Find their Feet Wet. LiFE is Common for All But We can only get what We Try For.**

**A Very Simple Theory for Your PEACE of MIND, do not try to Understand Everything.*

**IN LIFE,You Cannot Control anything around You,But, You can definitely Control Everything Inside You.**

**Do not Struggle to make your Presence Noticed.Just make your Absence Felt.**

**Courage isn’t having the strength to go on, it is going on when you don’t have the strength.**
      - Napoleon Bonaparte -

**Your bad time is a litmus test to know the values of your Friends. Real friends don't have to speak to or see each other daily to remain in each other's hearts always. 

It is better to have a friend who lends his shoulders when you cry,  than a friend who comes forward to hold your hand in good times. 

We never lose friends .We simply learn who the real ones are.**
 
 **Whole World is in need of light; India alone has that Light.**
          - Swamy Vivekananda - 
 
 **THE THINGS WE DO WITH ANGER WILL END UP WITH REPENTANCE.*

**AT THE SAME TIME IF WE TALK SENSIBLY AND HEARTFULLY, EVEN OUR ENEMIES WILL BE CONVINCED AND BECOME FRIENDS.**

4 ಅಸುರರೊಳಗಿರುವ ಸುರರು

.ಒಂದು ಸೂಕ್ಮವಾಗಿರುವ ಅಧ್ಯಾತ್ಮ ಸತ್ಯ  ಗಮನಿಸಿದರೆ ಭಗವಂತ ಮಾನವನಿಗೆ ಪಾಠ ಕಲಿಸುವುದಕ್ಕೆ ಅಸುರರೊಳಗೆ ಸುರರನ್ನು,ಸುರರೊಳಗೆ ಅಸುರರನ್ನು ಹಿಡಿದು ಆಟವಾಡಿಸಿ ಕೊನೆಗೆ ಸುರರನ್ನು ಗೆಲ್ಲಿಸೋದಾಗಿರತ್ತೆ.ಆದರೆ  ಮಾನವನಿಗೆ  ಸುರರತತ್ವ ಅಸುರರ ತಂತ್ರವನ್ನು ಗಮನಿಸುವ ಜ್ಞಾನ ಬೇಕಷ್ಟೆ. ಇಲ್ಲವಾದರೆ  ಎಲ್ಲರಲ್ಲಿಯೂ ಅಡಗಿರುವ ಅಸುರ ಶಕ್ತಿ ಜಾಗೃತವಾಗಿ ಜೀವ ಹೋದರೂ ಸತ್ಯ ತಿಳಿಯದು. ಇದನ್ನೇ ಮಾಯೆ ಎಂದರು. ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲ  ಆದರೂ ಹೋರಾಟ ಹಾರಾಟ ಮಾರಾಟಕ್ಕೆ  ಬೆಲೆ ಹೆಚ್ಚು. ಇದು ಕೂಡ ಭಗವಂತನ ಆಟ. ಹಾಗಾದರೆ ಭಗವಂತನಿರೋದೆಲ್ಲಿ ಎಂದರೆ ಚರಾಚರದಲ್ಲಿರುವ ಅಣುರೇಣುತೃಣಕಾಷ್ಟದೊಳಗೇ  ಸೂಕ್ಮವಾಗಿರುವ  ಶಕ್ತಿ.ಸೂಕ್ಮ ಶಕ್ತಿಯನ್ನು ಕಣ್ಣು ನೋಡದೆ  ಪ್ರತಿಕ್ಷಣ ಅನುಭವಿಸುತ್ತಿದ್ದರೂ  ನಾನೇ ಬೇರೆ ನೀನೇ ಬೇರೆ ಎನ್ನುವ ದ್ವಂದ್ವವೇ ದ್ವೇಷವಾಗಿ‌ ಬದಲಾದಾಗ ಸುರಾಸುರರ ಕಾಳಗ  ನಡೆದಿರೋದನ್ನು ಪುರಾಣ ತಿಳಿಸಿದೆ.  ದೇವತೆಗಳು ಮಾಡಿದ್ದನ್ನೇ ಅಸುರರು ಮಾಡಿದರೆ ತಪ್ಪೇನು? ಎನ್ನುವ ಪ್ರಶ್ನೆ ಎದ್ದಾಗ  ದೇವತೆಗಳು  ಆತ್ಮಕ್ಕೆ ಬೆಲೆಕೊಟ್ಟು ಸತ್ಯ ಧರ್ಮದ ಪರವಿದ್ದರೆ ಅಸುರರು  ದೇಹಕ್ಕೆ ಬೆಲೆಕೊಟ್ಟು  ಅಧರ್ಮ ಅಸತ್ಯದಿಂದ  ಭೂಮಿಯನ್ನು ಆಳುವರಷ್ಟೆ ವ್ಯತ್ಯಾಸ.
ಈಗಲೂ  ಪಕ್ಷ ಪಕ್ಷಗಳ ನಡುವೆ ನಡೆದಿರುವ   ರಾಜಕೀಯದ ಆಟದಲ್ಲಿ  ಜನರನ್ನು  ಯಾರು ಯಾವ ದಿಕ್ಕಿನಲ್ಲಿ ನಡೆಸಿದ್ದಾರೆಂದು ಸೂಕ್ಮವಾಗಿ ಗಮನಿಸಿದರೆ  ದೇಶದ ಪರ ನಿಂತವರಿಗಿಂತ ದೇಶದ ವಿರುದ್ದ ನಿಂತವರಿಗೇ ಸಹಕಾರ ಹೆಚ್ಚು. ಕಾರಣ ವಿದೇಶದ ಸಾಲ ಬಂಡವಾಳ, ವ್ಯವಹಾರದಿಂದ  ಸಾಕಷ್ಟು  ಹಣದ ಹರಿವು ಒಳಗಾದರೂ ಅದನ್ನು  ತೀರಿಸಲು  ಪ್ರಜೆಗಳೇ ಕಷ್ಟಪಟ್ಟು ದುಡಿಯಲೇಬೇಕೆಂಬುದು  ಅಧ್ಯಾತ್ಮ ಸತ್ಯ.ಹೀಗಾಗಿ ಅದರ ಬದಲಾಗಿ ನಮ್ಮ ನಮ್ಮ ಮೂಲ ಧರ್ಮ ಕರ್ಮ ದೆಡೆಗೆ ಹಿಂದಿರುಗಿ  ಸ್ವತಂತ್ರವಾಗಿ  ದುಡಿದು ಸೇವೆ ಮಾಡಿದವರ ಸಾಲ ಇದ್ದಲ್ಲಿಯೇ ತೀರಬಹುದು.ಇದಕ್ಕಾಗಿ ವಿದೇಶದವರೆಗೆ ಹೋಗುವ ಅಗತ್ಯವೇ ಇರೋದಿಲ್ಲ ಎಂದಾಗ ಆತ್ಮನಿರ್ಭರ ಭಾರತ. ಇದನ್ನು ಒಪ್ಪದವರು  ವಿರೋಧಿಸಿ  ಪಕ್ಷ ತೊರೆದರೆ  ದೇಶ ಒಂದೇ ಇರೋದು.ದೇಶದ ಸಾಲ ತೀರಿಸಲು ದೈವತತ್ವ ಅಗತ್ಯವಿದೆ. ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆಯ ಮಂತ್ರ ಹೇಳೋದು ಸುಲಭ ಅದರಂತೆ ನಡೆಯದಿದ್ದರೆ ತಂತ್ರದಿಂದ ಅತಂತ್ರಜೀವನ. ಒಟ್ಟಿನಲ್ಲಿ ಎಲ್ಲರಲ್ಲಿಯೂ ದೇವಾಸುರರ ಗುಣವಿದೆ ಎಂದಾಗ  ದೇವರನ್ನು  ಬೇಡೋರಲ್ಲಿ ದೈವಸಂಪತ್ತಿದೆ ಎಂದರ್ಥ ವಲ್ಲ. ಸಂಪತ್ತು ಸತ್ಯ ಜ್ಞಾನದಿಂದ ಸಂಪಾದಿಸಿದರೆ  ದೈವಶಕ್ತಿ ಹೆಚ್ಚುವುದು. ಅಸತ್ಯದಿಂದ ಸಂಪಾದಿಸಿದರೆ ಅಸುರಿಶಕ್ತಿ  ಹೆಚ್ಚುವುದಷ್ಟೆ ವ್ಯತ್ಯಾಸ. ದೇವರಿರೋದೆಲ್ಲಿ? ಸತ್ಯದಲ್ಲಿ ಧರ್ಮ ದಲ್ಲಿ. ಸತ್ಯ ಒಂದೇ ಅದು ನಮ್ಮೊಳಗೇ ಇರುವ ಆತ್ಮಸಾಕ್ಷಿಯಾಗಿದೆ. ಯಾವಾಗ ಮಾನವ ಅಸತ್ಯದಿಂದ. ಮುಂದೆ ನಡೆಯುವನೋ ಸತ್ಯ ಹಿಂದೆ ಉಳಿದು  ಅರ್ಥ ವಾಗದಷ್ಟೆ.ಹಾಗಂತ ಸತ್ಯ ಒಳಗಿಲ್ಲ ಎಂದಲ್ಲ ಇದ್ದರೂ  ಅರ್ಥ ವಾಗದಷ್ಟು ಅಸತ್ಯ ಒಳಗಿದೆ ಎಂದಾಗುತ್ತದೆ. ಹಾಗಾಗಿ ಜಗತ್ತನ್ನು ಮಿಥ್ಯ ಎಂದರು.ಬ್ರಹ್ಮ ಸತ್ಯ ಎಂದರು.ಬ್ರಹ್ಮ ಕಣ್ಣಿಗೆ ಕಾಣದು ಜಗತ್ತು ಕಾಣುತ್ತದೆ ಆದರೂ ಶಾಶ್ವತವಲ್ಲ.ಬದಲಾಗುವ ಜಗತ್ತಿನಲ್ಲಿ ಬ್ರಹ್ಮಜ್ಞಾನ ಹುಡುಕಲಾಗದು.ಹೀಗಾಗಿ ಒಳಗಿನ‌ಜಗತ್ತನ್ನು ಒಳಗೇ ಹುಡುಕಿಕೊಳ್ಳಲು ಯೋಗದೆಡೆಗೆ ನಡೆದರು. ಯೋಗವೆಂದರೆ ಆಸನವಲ್ಲ ಸೇರುವುದು ಕೂಡುವುದು ಒಂದಾಗುವುದು.
ಪರಮಾತ್ಮನ ಜೀವಾತ್ಮ ಒಂದಾಗಲು ಒಳಗಿನ ಸತ್ಯ ಧರ್ಮ ದಿಂದ ಕೂಡಿಕೊಳ್ಳುವುದೇ ಯೋಗ.
ಹೊರಗಿನ ಸತ್ಯ ಧರ್ಮ ದ ಬೇಧಭಾವದಲ್ಲಿ  ಕೂಡುವುದು ಕಷ್ಟ ಹಾಗಾಗಿ ನಾವು ಪುಣ್ಯದ ಕೆಲಸ ಮಾಡಿ ಕೂಡಬೇಕು
ಪಾಪದ ಕೆಲಸ ಕಳೆದು ನಡೆಯಬೇಕು, ಜ್ಞಾನವನ್ನು ಗುಣಿಸಿಕೊಂಡು ಅಜ್ಞಾನವನ್ನು ಭಾಗಿಸಿಕೊಳ್ಳುವ ಲೆಕ್ಕಾಚಾರದ  ವ್ಯವಹಾರದಲ್ಲಿ  ಸತ್ಸಂಗ ಸಂಘಟನೆಗಳನ್ನು ಸೃಷ್ಟಿ ಮಾಡಿದರೆ ಸ್ಥಿತಿಯೂ ಉತ್ತಮ ಮುಕ್ತಿಯೂ ಸುಗಮ.
ಇಲ್ಲಿ ಲೆಕ್ಕಾಚಾರದಲ್ಲಿ  ಕೇವಲ ಹಣ ಮಾತ್ರ ಕಾಣುತ್ತಾ ಅಜ್ಞಾನ ಅಧರ್ಮ ಅನ್ಯಾಯ ಭ್ರಷ್ಟಾಚಾರ ವಿದ್ದರೂ ಸರಿ ನಾನು ಬೆಳೆಯಬೇಕೆಂದರೆ ಒಳಗಿರುವ  ಜ್ಞಾನ ಕುಸಿಯುತ್ತಾ ಜೀವ ಹೋಗುತ್ತದೆ .ಪರಮಾತ್ಮನಿಗೇನೂ ನಷ್ಟವಿಲ್ಲ ಕಾರಣ ಅವನೊಳಗೇ ಎಲ್ಲಾ ಇರೋವಾಗ  ಒಮ್ಮೆ ಮೇಲೆ ಬಂದರೆ  ಇನ್ನೊಮ್ಮೆ ಕೆಳಗಿಳಿಯುವರಷ್ಟೆ.ಕೆಳಗಿದ್ದವರು ಮೇಲೆ ಬರುವರು.ಹಾಗೆ ಸುರರ ಅಹಂಕಾರ ಮಿತಿಮೀರಿದಾಗ ಅಸುರಶಕ್ತಿ ಬೆಳೆದರೆ ಅಸುರರ ಅಹಂಕಾರ ಬೆಳೆದಾಗ ಸುರರ ಜ್ಞಾನ ಮೇಲೇರುವುದು.ತಲೆ ಸರಿಯಿದ್ದರೆ ಕಾಲೂ ಸರಿದಾರಿಗೆ ನಡೆಯಬಹುದು. ತಲೆಯೇ ಸರಿಯಿಲ್ಲವಾದರೆ  ನಡಿಗೆ ಸರಿಯಿರದು. ಒಂದು ಶರೀರದೊಳಗೆ ಎಲ್ಲಾ ಅಂಗಾಂಗಗಳಿಗೂ ಅದರದೇ ಆದ ವಿಶೇಷಶಕ್ತಿಯಿರುತ್ತದೆ. ಹಾಗಂತ ಮಾನವನಿಗೆ ಪ್ರತಿಕ್ಷಣ  ಅದನ್ನು ನೋಡಿಕೊಂಡು ಬದುಕಲಾಗದು. ಅಂಗಕ್ಕೆ ಸಮಸ್ಯೆಯಾದಾಗಲೇ ಪರೀಕ್ಷೆ ನಡೆಯುತ್ತದೆ ಅದಕ್ಕೆ ಕಾರಣ ತಿಳಿದು ಉಪಚಾರ ಮಾಡಬಹುದು. ಇದು ಎಲ್ಲರಿಗೂ ಕಷ್ಟ ಹೀಗಾಗಿ ನಮ್ಮ ಗುಣದ ಬಗ್ಗೆ ನಾವೇ ಚಿಂತನೆ ಮಾಡಿದರೆ  ಒಳಗೆ ಯಾವ ಶಕ್ತಿಯಿದೆ ನಡೆಸುತ್ತಿದೆ ಎನ್ನುವ ವಿಚಾರ ಅರ್ಥ ವಾಗುತ್ತದೆ.
ಹೊರಗಿನವರು ನಮ್ಮನ್ನು ಸಾಕಬೇಕು,ನೋಡಿಕೊಳ್ಳಬೇಕು ಎನ್ನುವ ಸ್ಥಿತಿಗೆ ಬಂದಿದೆ ಎಂದರೆ  ನಮ್ಮಲ್ಲಿ ರೋಗ ಹೆಚ್ಚಾಗಿದೆ ಎಂದರ್ಥ. ಆ ರೋಗಕ್ಕೆ ಔಷಧ ಒಳಗಿದ್ದರೆ ಉತ್ತಮ ಹೊರಗೇ  ಇದ್ದರೆ  ಹೊರಗಿನ ರೋಗವೇ  ಒಳಗಿದೆ ಎಂದರ್ಥ.
ಇದರಲ್ಲಿ ಭ್ರಷ್ಟಾಚಾರ ವೂ ಒಂದು ರೋಗವೇ. ಇದಕ್ಕೆ ಶಿಷ್ಟಾಚಾರದ ಔಷಧವಿದ್ದರೆ  ಉತ್ತಮ ದೇಹಾರೋಗ್ಯ ಸಾಧ್ಯ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತಾಗುವಷ್ಟು ಮುಳ್ಳು  ಒಳಗೆ ಬೆಳೆಸಿಕೊಂಡರೆ  ಹೆಚ್ಚು ನೋವಾಗುತ್ತದೆ.ಹೀಗೇ ನಾವು  ಅನೇಕ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು  ಸಮಸ್ಯೆಯ ಮೂಲ ತಿಳಿಯುವುದು ಅಗತ್ಯವಿದೆ. ಮನೆಯೊಳಗೆ  ಸಮಸ್ಯೆಯಿದ್ದರೆ ಒಳಗೇ ಪರಿಹಾರವಿದ್ದರೆ ಉತ್ತಮ. ಹೊರಗಿನಿಂದ ಸಮಸ್ಯೆ ಒಳಗೆ ಬಂದಾಗ ಸಮಸ್ಯೆಯಿಂದ ದೂರವಿರೋದಷ್ಟೂ ಉತ್ತಮ.  ಮಾನವನ ಸಮಸ್ಯೆಗೆ  ಅವನ ಕರ್ಮ ಋಣವೇ ಕಾರಣವೆಂದಾಗ ಸತ್ಕರ್ಮದಿಂದ ಋಣಮುಕ್ತನಾಗೋದೆ ಧರ್ಮ.  ಮಹಾತ್ಮರಾಗೋದಕ್ಕೆ  ಹೊರಗೆ ನಡೆಯಬೇಕೆಂದಿಲ್ಲ ಒಳಗೆ ನಡೆಯಬೇಕು. ಆತ್ಮಾವಲೋಕನ ನಕ್ಕೆ ಸರ್ಕಾರದ ಹಣ. ಬೇಡ ಜ್ಞಾನಿಗಳ ಸಹಕಾರ ಅಗತ್ಯ. ಜ್ಞಾನಿಗಳೆನ್ನಿಸಿಕೊಂಡವರೆ ರಾಜಕೀಯದ ಸುಳಿಯಲ್ಲಿದ್ದರೆ  ಸರ್ಕಾರದ ಗತಿ ಏನು?
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ  ಎನ್ನುವ ಪ್ರಶ್ನೆಗೆ ಉತ್ತರ  ಅಜ್ಞಾನಕ್ಕೆ ಸ್ವತಂತ್ರ ವಿದೆ. ಅಜ್ಞಾನವನ್ನು ಹಣಕೊಟ್ಟು ಖರೀದಿಸುತ್ತಿದ್ದಾರೆ. ಅದರಿಂದ ಇನ್ನಷ್ಟು ಸಾಲ ಬೆಳೆದು ಆತ್ಮಹತ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಜ್ಞಾನದ ಶಿಕ್ಷಣ  ನೀಡೋದು.ಶಿಕ್ಷಕರು ಗುರುಗಳು  ಸತ್ಯ ಧರ್ಮದ ಪಾಠ  ಕಲಿತು ಕಲಿಸೋದು.ಕೆಲವರಿದ್ದಾರೆ ಅವರನ್ನು ಕೇವಲವಾಗಿಸಿ ಕಾಣೋರು ಬೆಳೆದಿದ್ದಾರೆಂದರೆ  ಕಲಿಗಾಲದ ಮಹಿಮೆಯೆನ್ನಬೇಕೋ ಹಿರಿಮೆ ಎನ್ನಬೇಕೋ?
ಹಿಂದೆ  ಯಾವುದೇ ಭೌತಿಕಸುಖವಿರದೆ  ಶಾಂತಿಯಿಂದ ಜ್ಞಾನ ಪಡೆಯುತ್ತಿದ್ದರು .ಈಗ ಭೌತಿಕಾಸಕ್ತಿ ಮಿತಿಮೀರಿ ಅಜ್ಞಾನದಲ್ಲಿ ಸುಖಕ್ಕಾಗಿ  ಹಾತೊರೆಯುವ ಜೀವನವಿದೆ. ಯಾವುದೂ ಅತಿಯಾದರೆ ಗತಿಗೇಡು. ಸುಖದು:ಖವಿಲ್ಲದ ಜೀವನ ಜೀವನವೇ ಅಲ್ಲ. ಅಲ್ಲ ಅಲ್ಲ ಎನ್ನುವುದರಿಂದ ಏನೂ ಸಿಗೋದಿಲ್ಲ. ಹಾಗಾಗಿ ಇದೆ ಎಂದುಕೊಂಡರೆ ಎಲ್ಲಾ ಇದೆ. ಇಲ್ಲವೆಂದರೆ ದೇವರೇ ಇಲ್ಲವೆನ್ನಬಹುದು.ಆದರೆ ತತ್ವ ಒಂದೇ  ಇರುತ್ತದೆ. ಒಂದೇ ಭೂಮಿಯಲ್ಲಿ          ದೇವಾಸುರರು   ಮಹಿಳೆ ಮಕ್ಕಳು ಪುರುಷರು  ಒಂದಾಗಿ ಬಾಳೋದು  ಯೋಗಜ್ಞಾನವಿರಬೇಕಷ್ಟೆ. ಅಯೋಗ್ಯರಿಗೆ ಯೋಗ್ಯ ಶಿಕ್ಷಣ ನೀಡುವುದಕ್ಕೂ ಯೋಗಬೇಕು.‌ಕಾಲ ಕೂಡಿಬಂದಾಗ ಆಗುತ್ತದೆ  ಹಾಗಾಗಿ ಮಾನವ ಕಾರಣಮಾತ್ರನಾದರೂ ಎಲ್ಲದ್ದಕ್ಕೂ ಕಾರಣನಾಗಿಯೇ ಇದ್ದಾನೆ. ಇದಕ್ಕೆ ಸ್ತ್ರೀ ಶಕ್ತಿಯೂ ಸೇರಿದಾಗ  ಕಾರಣಾಂತರ ಸಮಸ್ಯೆ ಹೆಚ್ಚುವುದು. ಪರಿಹಾರ ಒಳಗೇ ಹುಡುಕಿಕೊಂಡರೆ ಸಿಗುವುದೆನ್ನುವ ಕಾರಣಕ್ಕಾಗಿ ಅಧ್ಯಾತ್ಮ ಜಗತ್ತು  ಬೆಳೆದಿದೆ.

5.ಸಂಬಂಧ  ಜೋಡಣೆಯ ಉದ್ದೇಶ ವೇನು?

*ಸಂಬಂಧಗಳನ್ನು ಜೋಡಿಸುವದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸಾಧನೆ. ಜೀವನದಲ್ಲಿ ನಾವು ಎಷ್ಟು ಒಳ್ಳೆಯವರು,ಎಷ್ಟು ಕೆಟ್ಟವರು ಎಂಬುದು ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ನಮ್ಮೆಲ್ಲರ "ಪರಮಾತ್ಮ" ಮತ್ತು ನಮ್ಮ "ಅಂತರಾತ್ಮ"*

ಸಂಬಂಧ ಗಳು ದ್ವೇಷದಿಂದ ಕೂಡಿಕೊಂಡರೆ  ಸಮಸ್ಯೆಗಳನ್ನು ಕೂಡಿಸಿಕೊಂಡಂತೆ. ಇದು ಖಾಸಗಿ ಜೀವನದಲ್ಲಿ ನಡೆಯೋದಿಲ್ಲ ರಾಜಕೀಯ ಜೀವನದಲ್ಲಿ ನಡೆಯುತ್ತದೆ. ಅಂದರೆ ಒಂದು ಪಕ್ಷವನ್ನು  ನಾಶ ಮಾಡಿ ಇನ್ನೊಂದು ಪಕ್ಷ ಕಟ್ಟುವಾಗ. ಬೇರೆ ಸಣ್ಣ ಪಕ್ಷಗಳ ಸಹಕಾರ ಸಹಾಯ ಬೇಕು. ಇಂತಹ ಸ್ಥಿತಿಯಲ್ಲಿ ಉತ್ತಮ ಉದ್ದೇಶವನ್ನು ಇಟ್ಟುಕೊಂಡವರ ಸಂಬಂಧ ವಿದ್ದರೆ ಉತ್ತಮ ಪಕ್ಷದಿಂದ  ಭವಿಷ್ಯದಲ್ಲಿ  ಪ್ರಗತಿ ಕಾಣಬಹುದು. ಯಾವಾಗ ದ್ವೇಷದಿಂದ  ಕೂಡಿದ್ದನ್ನು ಸೇರಿಸಿಕೊಂಡೆವೋ ಆಗ ನಮ್ಮಲ್ಲಿದ್ದ ಒಗ್ಗಟ್ಟೂ ಮರೆಯಾಗುತ್ತಾ ಇಡೀ ಪಕ್ಷದೊಳಗೇ ಭಿನ್ನಾಭಿಪ್ರಾಯ ದ್ವೇಷ ಅಸೂಯೆಯ ಹೊಗೆ ಹೆಚ್ಚಾಗುತ್ತಾ ಬೆಂಕಿಯಾಗಿ ಉರಿದು ತಾವೂ ನಾಶವಾಗೋದರ ಜೊತೆಗೆ  ಸುತ್ತಮುತ್ತಲಿನ ಪಕ್ಷಗಳೂ  ನಾಶವಾಗುತ್ತದೆ. ಇದಕ್ಕೆ ಪರಿಹಾರವೆಂದರೆ ನಮ್ಮ ದ್ವೇಷ ವನ್ನು ಬಿಟ್ಟು  ಉತ್ತಮ ಸಂಬಂಧ ವನ್ನು  ನಿಸ್ವಾರ್ಥ ನಿರಹಂಕಾರದಿಂದ  ಕೂಡಿಸಿಕೊಳ್ಳುವುದಾಗಿದೆ.ಇದು ಹೊರಗಿನ ರಾಜಕೀಯ ದಲ್ಲಿ ಕಷ್ಟವಿದೆ.ಒಳಗಿರುವ ರಾಜಯೋಗದಿಂದ ಸಾಧ್ಯವಿದೆ. ದ್ವೇಷದಿಂದ ಏನೂ ಸಾಧನೆ ಮಾಡಲಾಗದು. ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತೆ ಒಂದು ಪಕ್ಷ ಕಟ್ಟುವುದಕ್ಕೆ ಧರ್ಮ ಸತ್ಯವನರಿಯುವುದು ಬಹಳ ಕಷ್ಟದಕೆಲಸ.ಕಟ್ಟಿದ ಮೇಲೆ ಅದನ್ನು  ನಡೆಸುವುದು ಬಹಳ ಕಷ್ಟ ಕಾರಣ ನಡೆಯುವಾಗ‌ ಮಧ್ಯೆ ಬರುವ ಅಧರ್ಮ, ಅಸತ್ಯವನ್ನು  ದ್ವೇಷ ಮಾಡಿದರೆ ಅವು ಮೈಮೇಲೆರಗಿ ಬೀಳಿಸುವ  ಕೆಲಸ ಮಾಡೋದು ಸಹಜ ಹೀಗಾಗಿ ಅವುಗಳನ್ನು ನಿರ್ಲಕ್ಷಿಸಿ   ಶಾಂತವಾಗಿರೋದಕ್ಕೆ ಮಹಾತ್ಮರಿಗಷ್ಟೆ ಸಾಧ್ಯ. 
ಒಮ್ಮೆ  ಭಗವಾನ್ ಬುದ್ದ ಅಂಗುಲಿಮಾಲರ ಒಂದು ಕಥೆ ಇದಕ್ಕೆ ಸಾಕ್ಷಿ. ಹಾಗೆಯೇ ಇನ್ನೂ ಕೆಲವು ಮಹಾತ್ಮರ ಜೀವನದಲ್ಲಿಯೂ  ಇಂತಹ ಸನ್ನಿವೇಶ ನಡೆದು ದುಷ್ಟರೂ ಶಿಷ್ಟರಾಗಿರುವ ಕಥೆಗಳಿವೆ. ಹಾಗಂತ ಈಗಿನ ಪರಿಸ್ಥಿತಿ ಯಲ್ಲಿ ಇಷ್ಟೊಂದು ಶಾಂತಿದೂತರಿಲ್ಲದಿದ್ದರೂ ಶಾಂತಿಯನ್ನು ಕಾಪಾಡುವವರ ಸಂಬಂಧ ಬೆಳೆಸಿಕೊಂಡರೆ ನಮ್ಮೊಳಗೆ ಇನ್ನಷ್ಟು ಶಾಂತಿ ಹೆಚ್ಚುವುದಲ್ಲವೆ?
ಕ್ರಾಂತಿಗೆ ಹೆಚ್ಚು ಮಂದಿ ಕೈ ಜೋಡಿಸಿಕೊಂಡು ಹೊರಗೆ ಬಂದರೆ  ಒಳಗಿದ್ದ ಸತ್ಯ ಧರ್ಮ ದ ಸೂಕ್ಮ ತೆ ಅರ್ಥ ವಾಗದೆ ಜೀವ ಹೋಗುತ್ತದೆ. ಎಲ್ಲಿಯವರೆಗೆ  ಆತ್ಮಕ್ಕೆ ಶಾಂತಿ ಸಿಗದೆ ಜೀವ ಹೋಗುವುದೋ ಮತ್ತದೇ  ಸ್ಥಿತಿಯಲ್ಲಿ ಜನ್ಮ ಪಡೆದು ಅದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತದೆ.ಹೀಗಾಗಿ ನಮ್ಮ ಸನಾತನ ಧರ್ಮ ವು ಶಾಂತಿಯನ್ನು ಬಯಸುತ್ತದೆ. ದುಷ್ಟರನ್ನು ಶಾಂತಿಯಿಂದಲೂ ಗೆಲ್ಲಬಹುದೆನ್ನುವುದು ಸತ್ಯವಾದರೂ ರಾಜಕೀಯಕ್ಕೆ ಇಳಿದ ಮನಸ್ಸಿನಲ್ಲಿ ಶಾಂತಿ ಯಿರದು.ಹಾಗಾಗಿ ರಾಜಕೀಯದಿಂದ ಶಾಂತಿ ಸೃಷ್ಟಿ ಮಾಡಲು ಕಷ್ಟವಿದೆ.ಆದರೆ ಧರ್ಮ ರಕ್ಷಣೆಗಾಗಿ ಹೋರಾಟ ಮಾಡುವಾಗ ಧರ್ಮ ಸೂಕ್ಮವನ್ನರಿಯುವುದು ಬಹಳ ಅಗತ್ಯವಾಗಿದೆ.ಇತ್ತೀಚೆಗೆ ಸಾಕಷ್ಟು ತಿಳಿದವರೂ ದುಷ್ಟರ ಸಂಬಂಧ ಮಾಡಿಕೊಂಡು  ದಾರಿತಪ್ಪಿರುವುದು ಸತ್ಯ.

6.ಸಂಸ್ಕಾರ ಒಂದು ಕಡೆಯಲ್ಲ ಎರಡೂ ಕಡೆ ಮುಖ್ಯ

ನಾವೆಷ್ಟೇ ಸಂಸ್ಕಾರ ಸಂಸ್ಕೃತಿ ಸದಾಚಾರದ‌ ಪಾಠ ಹೇಳಿ ಮಕ್ಕಳನ್ನು ಬೆಳೆಸಿದರೂ ಅವರು ಸೇರುವ ಮನೆಯಲ್ಲಿ ಇದಕ್ಕೆ ವಿರೋಧವಿದ್ದರೆ ವ್ಯರ್ಥ. ಇಲ್ಲಿ ಗಂಡು ಹೆಣ್ಣಿನ ಪ್ರಶ್ನೆ ಬರೋದಿಲ್ಲ ಈಗಿನ ಕಾಲದಲ್ಲಿ ಕೂಡುಕುಟುಂಬವಿರೋದು ಅಪರೂಪ ಇದ್ದರೂ ಅದೇ ಹಳೇ ಕಂದಾಚಾರವಿದ್ದರೆ ವಾಸ್ತವತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ.
ಇಲ್ಲಿ ಒಳ್ಳೆಯ ಗುಣವನ್ನು ಎತ್ತಿ ಹಿಡಿದು ಕೆಟ್ಟಗುಣವನ್ನು  ತೆಗೆದು ಹಾಕುವುದೇ ಸಂಸ್ಕಾರ. ನಾವು ಒಳ್ಳೆಯವರೆ ಕೆಟ್ಟವರೆ ಎನ್ನುವುದನ್ನು  ಹೊರಗಿನವರು ನಿರ್ಧಾರ ಮಾಡೋದಕ್ಕೆ ಸಮಯ ಹಿಡಿಯುತ್ತದೆ. ಆದರೆ ಮನೆಯವರು ಗುರುತಿಸಲು ಸಾಧ್ಯವಾಗೋದು ಜ್ಞಾನದಿಂದ ಮಾತ್ರ.ಹಣದ ವಿಚಾರದಲ್ಲಿ  ಇದರ ಲೆಕ್ಕಾಚಾರ ತಪ್ಪಾಗಿರುತ್ತದೆ. ಹಾಗಾಗಿ ಶುದ್ದವಾದ ಶಿಕ್ಷಣವನ್ನು ಮನೆಯೊಳಗೆ ಹೊರಗೆ ಕೊಡುವುದಷ್ಡೆ ನಮ್ಮ ಧರ್ಮ ವಾಗಿದೆ.  ಪ್ರಕೃತಿ ಎಲ್ಲರನ್ನೂ ಸಮಾನವಾಗಿ ಕಂಡಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಲು  ನಮ್ಮಲ್ಲಿ ಸಂಸ್ಕಾರವಿರಬೇಕು. ಇಂದಿನ ಕಾಲದ ಹುಡುಗರು ಸರಿಯಿಲ್ಲ ಹುಡುಗಿಯರು ಸರಿಯಿಲ್ಲ ಎನ್ನುವ ಬದಲು ನಾವೇನು ಶಿಕ್ಷಣ ಕೊಟ್ಟಿದ್ದೇವೆನ್ನುವ ಕಡೆ‌ಲಕ್ಷ್ಯ ಕೊಟ್ಟರೆ ಲಕ್ಷ ಲಕ್ಷಕೊಟ್ಟು ಕಲಿಸಿದ ಶಿಕ್ಷಣದಲ್ಲಿಯೇ ಸಂಸ್ಕಾರವಿರಲಿಲ್ಲವಾದಾಗ ಅದೇ ದೊಡ್ಡದಾಗಿ ಬೆಳೆದಿದೆಯಷ್ಟೆ. ಸಂಸ್ಕಾರಕ್ಕೆ ಲಕ್ಷ ಹಣ ಸುರಿದು ಸಾಲ ಮಾಡೋ ಬದಲು ಮನೆಯೊಳಗೇ ಮಕ್ಕಳಿಗೆ ಉತ್ತಮ ವಿಷಯ ಆಹಾರ ಜ್ಞಾನವನ್ನು ಹೆಚ್ಚಿಸುವ  ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರೆ  ಸಾಲವಿಲ್ಲದೆಯೇ ಜ್ಞಾನೋದಯವಾಗುತ್ತದೆ.
ಹಿಂದಿನ ಗುರುಕುಲದಲ್ಲಿದ್ದಂತೆ ಇಂದಿನ ಗುರುಕುಲಗಳಲ್ಲಿ  ಶ್ರಮವಿಲ್ಲದೆಯೇ ಶಿಕ್ಷಣ ಕೊಡುತ್ತಿರುವುದರಿಂದ  ವೇದ ಪಾಠ ತಲೆಗೆ ಹತ್ತದೆ ಮನೆ ಸೇರಿದವರಿದ್ದಾರೆ. ಹಾಗಂತ ಎಲ್ಲಾ ವೇದಪಂಡಿತರಾಗಲು ಅಸಾಧ್ಯವಾದರೂ ಎಲ್ಲರಲ್ಲಿಯೂ ಮಹಾತ್ಮರಿದ್ದಾರೆ. 
ಮಹಾತ್ಮ ಗಾಂಧೀಜಿಯ ಬಗ್ಗೆ  ತಿಳಿಸಿದರೆ ಕೆಲವರಿಗೆ ಅವರು ರಾಷ್ಟ್ರ ಪಿತರಾಗಿ ಕಂಡರೆ ಕೆಲವರಿಗೆ ಅವರಲ್ಲಿದ್ದ ದೋಷಗಳೇ ಕಾಣುತ್ತದೆ. ಅವರ ಖಾಸಗಿ ಬದುಕಿನಲ್ಲಿಯೂ ಇಬ್ಬರು ಮಕ್ಕಳಲ್ಲಿ  ಅಂತರವಿತ್ತು. ಹಾಗಾದರೆ  ಇದಕ್ಕೆ ಕಾರಣ  ಅವರ ಹೋರಾಟದ ಜೀವನವೆಂದರೆ ತಪ್ಪು.  ಮಕ್ಕಳ ಪೂರ್ವ ಜನ್ಮದ ಸಂಸ್ಕಾರವೂ ಆಗಿರಬಹುದು.ಅಸುರ ಕುಲದಲ್ಲಿ ಸುರರೂ ಜನ್ಮತಾಳಿದರೂ  ಸಂಸ್ಕಾರದಿಂದ ಸುರರಾಗೇ ಬೆಳೆಯಬಹುದು.ಹಾಗೆಯೇ ಸುರರ ಕುಲದಲ್ಲಿ ಅಸುರರ ಜನ್ಮವಾದಾಗಲೂ ಸಂಸ್ಕಾರದಿಂದ ತಿದ್ದಬಹುದು. ಆದರೆ ಇದು ಹೊರಗಿನಿಂದ  ನಡೆಸೋದಕ್ಕಿಂತ ಒಳಗಿನಿಂದ ನಡೆಸಿದಾಗಲೇ ಸಂಪೂರ್ಣ ವಾಗೋದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂದಂತೆ ಸಣ್ಣ ತಪ್ಪನ್ನು ತಿದ್ದದೆ ದೊಡ್ಡ ತಪ್ಪಿಗೆ ಶಿಕ್ಷೆ ನೀಡಿದರೂ ತಪ್ಪು ಅಳಿಸೋದು ಕಷ್ಟ. ಹೀಗಾಗಿ ದೇಶದ   ಇಂದಿನ ಯುವಪೀಳಿಗೆಯ  ಅತಿಯಾದ ಅಜ್ಞಾನವನ್ನು  ಹೊರಗಿನ ಕಾನೂನಿನಿಂದ ತಡೆಯುವುದು ಕಷ್ಟವಿದೆ. ಸಣ್ಣ ಮಕ್ಕಳಿಗೆ  ಸರಿಯಾದ ಸಂಸ್ಕಾರವಿದ್ದರೆ ಮುಂದಿನ ಪೀಳಿಗೆಯಿಂದ  ಸ್ವಚ್ಚಭಾರತ ಸಾಧ್ಯ.ಇದನ್ನು ಹೊರಗಿನ ಸರ್ಕಾರದ ಹಣದಿಂದ ಸರಿಪಡಿಸಲಾಗದು ಒಳಗಿನ ಗುಣಸುಜ್ಞಾನದಿಂದ ಸಾಧ್ಯವಾದಾಗ ಅದಕ್ಕೂ ಪೋಷಕರ ವಿರೋಧವಿದ್ದರೆ ಮಾಡಿದ್ದುಣ್ಣೋ ಮಹಾರಾಯ.ಕರ್ಮಕ್ಕೆ ತಕ್ಕಂತೆ ಫಲ ನಿಶ್ಚಿತ.
ಮಕ್ಕಳು ಬೇಗ ಬೇಗ ಬುದ್ದಿವಂತರಾಗಲು ತಂತ್ರ ಬಳಸಿದರೆ ಒಳಗಿದ್ದ ತತ್ವಜ್ಞಾನಕ್ಕೆ ಬೆಲೆಯಿರದು.
ಸಂಸ್ಕಾರವೆಂದರೆ‌ ಅಸತ್ಯ ಅಧರ್ಮ ಅನ್ಯಾಯ ಭ್ರಷ್ಟಾಚಾರ ವನ್ನು ಬೆಳೆಸುವ  ದುರ್ಗುಣದಿಂದ   ದೂರವಿರೋದು. ಮೊದಲು ಪೋಷಕರಿಗೆ ಸಂಸ್ಕಾರವಿದ್ದರೆ‌ ಮಕ್ಕಳಲ್ಲಿ ಬದಲಾವಣೆ ಸಾಧ್ಯ. ಅತಿಯಾದ ಸ್ವಾರ್ಥ ಅಹಂಕಾರವೇ  ಮಾನವನ ನಿಜವಾದ ಶತ್ರುಗಳಾಗಿದೆ.  ಇದನ್ನು ಹೊರಗಿನವರು ಬೆಳೆಸಿರುವಾಗ  ಒಳಗಿದ್ದು  ಬಿಡುವ ಪ್ರಯತ್ನ ಮಾಡಿದರೆ ಉತ್ತಮ.

7.ಜ್ಯೋತಿಷ್ಯ  ಸತ್ಯ ಜ್ಯೋತಿಷಿ ಸತ್ಯವಂತರಾದರೆ ಜ್ಯೋತಿಷ್ಯವೂ ಸತ್ಯವೇ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹಲವರಿಗೆ  ಗೊಂದಲವಿದೆ.ಇದು ಸರಿಯೋ ತಪ್ಪೋ ಎನ್ನುವ  ವಾದ ವಿವಾದದಲ್ಲಿ ಜ್ಯೋತಿಷ್ಯ ಸತ್ಯವಿದ್ದರೂ ಜ್ಯೋತಿಷ್ಯ ನುಡಿದವರಲ್ಲಿ ತಪ್ಪಾಗಿದೆ. ಹಾಗೆ ಸನಾತನ ಹಿಂದೂ ಧರ್ಮದ ಉದ್ದೇಶ ಸರಿಯಿದ್ದರೂ ಎಲ್ಲಾ ಹಿಂದೂಗಳು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಾಗ  ಪರಕೀಯರು ಹಿಂದೂ ಧರ್ಮ ವೇ ಇಲ್ಲವೆಂದರೆ ತಪ್ಪು ಪರರದ್ದಲ್ಲ ನಮ್ಮವರದ್ದೇ.
ಹೀಗೇ ದೇಶದ. ವಿಚಾರಕ್ಕೆ ಬಂದಾಗ ಎಲ್ಲಾ ಧರ್ಮ ದವರೂ ಭಾರತದ ಋಣ ತೀರಿಸಲು  ಅದರ ಧರ್ಮ ಕರ್ಮ ದ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಲು  ಅವಕಾಶವಿರಬೇಕು. ಅವಕಾಶ ಇದ್ದರೂ  ಕೊಡದಿದ್ದರೆ ಅದು ನಮ್ಮ ತಪ್ಪು. ಸಹಕಾರವೇ ಇಲ್ಲವಾದರೆ ಅದು ನಮ್ಮ ಕರ್ಮ ಫಲ. ಹಾಗಂತ ನಮ್ಮ  ಆತ್ಮಸಾಕ್ಷಿಗೆ  ನಾವೇ ವಿರುದ್ದ ನಡೆದಾಗ ಇದರ ಫಲವನ್ನು  ಯಾರೋ ಅನುಭವಿಸಲಾಗದು. ಹಾಗಾಗಿ ಭವಿಷ್ಯದ ಚಿಂತನೆ ಮಾಡುವಾಗ‌ಹಿಂದಿರುವ ಗ್ರಹಗತಿಗಳ ಚಲನವಲನದಿಂದ ಮಾನವನ ಜೀವನದಲ್ಲಾಗುವ ಪರಿಣಾಮವನ್ನು ಸೂಕ್ಮವಾಗಿ ತಿಳಿದು ಸೂಕ್ತ ಮಾರ್ಗದರ್ಶನ ಪರಿಹಾರ ಸೂಚಿಸುವ ಜ್ಯೋತಿಷ್ಯ ಶಾಸ್ತ್ರ  ಎಲ್ಲರಿಗೂ ಒಂದೇ ರೀತಿಯಲ್ಲಿ  ಕಲಿಯಲಾಗದಿದ್ದರೂ  ಕಲಿತವರ ನಡೆ ನುಡಿಯ ಮೇಲೇ  ಹೇಳಿಕೆಯೂ  ಇರುತ್ತದೆ. ನಾನೆಂಬುದಿಲ್ಲವೆಂದಿರುವ  ಸತ್ಯದಲ್ಲಿ ಆ ಅಗೋಚರ ಶಕ್ತಿ ಯ ಒಳಗಿನಹೇಳಿಕೆ ಯಾರಿಗೂ ಕಾಣೋದಿಲ್ಲ.ಸ್ವಚ್ಚ ಶುದ್ದ ವ್ಯಕ್ತಿತ್ವವುಳ್ಳವರು  ಏನು ಹೇಳಿದರೂ ಸತ್ಯವಾಗಿರುತ್ತದೆ ಅವರಿಗೆ ಶಾಸ್ತ್ರ ಓದುವ ಅವಕಾಶವಿಲ್ಲದೆಯೂ ಭವಿಷ್ಯ ಅರ್ಥ ವಾಗಬಹುದು. ಹಾಗಂತ ಬೇರೆಯವರ ಭವಿಷ್ಯವನ್ನು ಬದಲಾಯಿಸುವ  ಹಠಕ್ಕೆ ಬಿದ್ದರೆ  ಅದೇ ಭವಿಷ್ಯವನ್ನು ಹಾಳುಮಾಡಲೂಬಹುದು. ಕಾರಣ ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಅವರ ಭವಿಷ್ಯ ವಿರುತ್ತದೆ.  ಇದು ಮನೆಯಿಂದ ಹಿಡಿದು ಮಠ ಮಂದಿರ, ಮಾಧ್ಯಮ, ಮಂತ್ರಿ ಮಹೋದಯರವರೆಗೂ‌    ಒಂದೇ ಸಮನಾಗಿರಲು‌ ಕಷ್ಟ. ಮನೆಯೊಳಗೆ  ಸ್ವಚ್ಚ ಮನಸ್ಸಿನ ಮಾನವರಿರಬೇಕು.
ಸಾಧ್ಯವಿಲ್ಲದ ಕಾರಣ ಹೊರಗೆ ಬಂದವರು ಹೊರಗಿನವರಿಂದ ತನ್ನ ಭವಿಷ್ಯ ಕೇಳಿಕೊಂಡು ನಡೆಯಬೇಕಾಯಿತು.ಆದರೆ ಗ್ರಹಗತಿಗಳಿಗೆ  ಯಾರು ಶ್ರೇಷ್ಠ ಕನಿಷ್ಟವೆನ್ನುವುದನ್ನು  ತಾಳೆಹಾಕುವ ಲೆಕ್ಕಾಚಾರದಲ್ಲಿ ಹಣ ಬರೋದಿಲ್ಲ ಜ್ಞಾನವೇ ಬರೋದು. ಹಾಗಾಗಿ ಜ್ಯೋತಿಷ್ಯ ‌ ಆತ್ಮಜ್ಯೋತಿಯ. ಒಂದು ಸಂದೇಶ. ಹೇಳುವವರಲ್ಲಿ ಆತ್ಮಜ್ಞಾನವಿದ್ದರೆ  ಹೇಳಿದ್ದು ಸತ್ಯವಾಗೇ ಇರುತ್ತದೆ. ಕಲಿತು ಹೇಳುವಾಗ. ಸ್ವಲ್ಪ ತಪ್ಪಾದರೂ  ಕೇಳುವವರ ಹಣೆಬರಹವನ್ನು ಅಳಿಸಲು ಜ್ಯೋತಿಷ್ಯ ಶಾಸ್ತ್ರ ವೂ ಸಹಕರಿಸದು.ಎಲ್ಲಾ ಮೇಲಿನ ಶಕ್ತಿಯ ಆದೇಶದಂತೆ‌ನಡೆದರೂ ಮಧ್ಯದಲ್ಲಿ ತಡೆದು ನಿಲ್ಲಿಸುವ ಶಕ್ತಿ ಕೆಲವರಿಗಷ್ಟೆ ಇದೆ. ಅವರೂ ಮುಂದೆ ಹೋದ ಮೇಲೆ ಆಗೋದನ್ನು ತಡೆಯಲಾಗದು.ಅದಕ್ಕೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದರು ದಾಸ ಶ್ರೇಷ್ಠ ರು.
ಈಗಿನ ಭಾರತದ ಭವಿಷ್ಯವನ್ನು ‌ಹಿಂದೆಯೇ ತಿಳಿಸಿದ್ದರು. ಕಲಿಯುಗದ ಭವಿಷ್ಯವನ್ನು  ಹಿಂದಿನ ಯುಗದಲ್ಲೇ ತಿಳಿಸಿದ್ದರು. ಹಾಗಾದರೆ ಆಗೋದನ್ನು ಮೊದಲೇ ತಿಳಿಸಿರುವ ಹಿಂದಿನ ವಿಜ್ಞಾನ  ಆತ್ಮಜ್ಞಾನವಾಗಿದೆ. ಆತ್ಮಜ್ಞಾನದಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದಾಗ  ನಮ್ಮ ಮೂಲ ಶಿಕ್ಷಣ ಆತ್ಮಜ್ಞಾನದೆಡೆಗೆ  ನಡೆದರೆ ಮಕ್ಕಳ ಭವಿಷ್ಯ ಉತ್ತಮವಾಗಿರಬಹುದಲ್ಲವೆ? ಒಳಗೆ ಅಡಗಿರುವ ಜ್ಞಾನಶಕ್ತಿ ಗುರುತಿಸಿ  ಶಿಕ್ಷಣ ನೀಡಿದರೆ‌ ಸರ್ವಜ್ಞ ರಾಗದಿದ್ದರೂ ವಿಜ್ಞಾನಿಗಳಾಗಬಹುದು.ಇಲ್ಲಿ ವಿಜ್ಞಾನ ವಿಶೇಷವಾದ ಜ್ಞಾನ. ಒಳಗಿನ  ಜ್ಞಾನದ ಜೊತೆಗೆ ಹೊರಗಿನ ಜ್ಞಾನ ಹೊಂದಿಕೊಂಡು ನಡೆದಾಗ  ಪರಿಪೂರ್ಣತೆ ಕಾಣಬಹುದು.
ಇಂದು ಒಳಗಿನ ಜ್ಞಾನಕ್ಕೆ ವಿರುದ್ದದ ಹೊರಗಿನ ಶಿಕ್ಷಣವೇ ಮಕ್ಕಳನ್ನು ದಾರಿತಪ್ಪಿಸಿ ನಡೆಸಿರೋದೇ ಅಜ್ಞಾನಕ್ಕೆ ಕಾರಣ. ಇದನ್ನು  ಯಾವ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲು ಸಾಧ್ಯ?
ಮಕ್ಕಳ ಶಿಕ್ಷಣದ ವಿಚಾರ ಬಂದಾಗ ಹೇಳೋದು ಬಹಳ ದೊಡ್ಡ ಅಧಿಕಾರಿ ಆಗುವನು, ಇಂಜಿನಿಯರಿಂಗ್, ಡಾಕ್ಟರ್ ವಿಜ್ಞಾನಿ ಆಗುವನೆಂದರೆ ಬಹಳ ಸಂತೋಷ. ಅದೇ ಓದು ಹತ್ತದಿದ್ದರೆ ದನ ಕಾಯೋ ಎಮ್ಮೆ ಮೇಯಿಸೋ,ಮಠ ಸೇರೋ, ಕೂಲಿ ಮಾಡೋ‌  ಎನ್ನುವ  ವ್ಯಂಗ್ಯ ಪದವನ್ನು ಬಳಸುವವರೊಮ್ಮೆ  ಚಿಂತನೆ ಮಾಡಿದರೆ ಶ್ರೀ ಕೃಷ್ಣ ನಿಗೆ ಗೋವಿಂದ ಎನ್ನುವರು, ಗೋಸೇವೆಯಿಂದ ಕೋಟ್ಯಾಂತರ ದೇವತೆಗಳ ಸೇವೆ ಮಾಡಿದಂತಾಗಿ ಋಣ ಕಳೆಯುತ್ತದೆ. ಸೇವೆಯಲ್ಲಿ ಕೂಲಿಯೂ ಒಂದು. ಅಂದಿನ ದಿನದ ಹಣದಲ್ಲಿ ತನ್ನ ಸಂಸಾರದ  ಹೊಟ್ಟೆ ತುಂಬಿಸುವುದರ ಮೂಲಕ ಯಾವ‌ಭ್ರಷ್ಟತೆಯಿಲ್ಲದೆ ಹಣ ಸಂಗ್ರಹಣೆಯಿಲ್ಲದೆಯೂ
ಕೂಲಿಮಾಡುವವರ ಸಂಸಾರದಲ್ಲಿ ಸಂತೋಷವಿರುವುದು, ಮಠಗಳಲ್ಲಿ ನಡೆಸುವ ಧಾರ್ಮಿಕ ಕ್ರಿಯೆಗಳಿಂದಲೇ ಸಮಾಜದಲ್ಲಿ ಧರ್ಮ ನಿಂತಿರೋದು. ಬಡಬ್ರಾಹ್ಮಣ,ಬಡರೈತ,ಬಡಸೈನಿಕ ಬಡ ಶಿಕ್ಷಕ ಎಂದರೆ ಅಜ್ಞಾನ. ಅವರ ಜ್ಞಾನವನ್ನು ಗುರುತಿಸದ ಕಣ್ಣಿಗೆ  ಹಣವಷ್ಟೆ ಕಾಣೋದು. ಹೀಗಾಗಿ ಸಾಲ ಮಾಡಿಯಾದರೂ ಹೊರಗಿನ ಶಿಕ್ಷಣ ಪಡೆದಯಾವ ಇಂಜಿನಿಯರಿಂಗ್, ಡಾಕ್ಟರ್ ಇನ್ನಿತರ ಅಧಿಕಾರಿಗಳು  ನೇರವಾಗಿ   ಯಾರ ಸಹಕಾರ,ಹಣ,
ಸಾಲವಿಲ್ಲದೆ ಓದಿ ಮೇಲೇರಿಲ್ಲ.ಸ್ವತಂತ್ರ ವಾಗಿ ಜೀವನ‌ ನಡೆಸಲು  ಹೊರಗಿನ ಜ್ಞಾನ ಕ್ಕಿಂತ ಒಳಗಿನ ಜ್ಞಾನವೇ ಆಸ್ತಿಯಾಗಿದೆ. ಅದನ್ನು ಹೆಚ್ಚಿಸಿಕೊಂಡು  ಎಲ್ಲರಿಗೂ  ಉಪಯೋಗವಾಗುವ  ಕೆಲಸ ಮಾಡುವುದರಿಂದ ಭವಿಷ್ಯ ಚೆನ್ನಾಗಿ ಇರುತ್ತದೆ.ದುರ್ಭಳಕೆ  ಮಾಡಿಕೊಂಡರೆ  ಭವಿಷ್ಯ ಹಾಳಾಗಿರುವುದು.

8.ಸೃಷ್ಟಿ ಸ್ಥಿತಿ ಲಯದಲ್ಲಿ     ಸ್ತ್ರೀ   ಶಕ್ತಿಯ ಪಾತ್ರ

ಬ್ರಹ್ಮನ ಸೃಷ್ಟಿ ಗೆ ಜ್ಞಾನಕೊಡುವ ದೇವಿ,ವಿಷ್ಣುವಿನ ಕಾರ್ಯಕ್ಕೆ ಲಕ್ಮಿಯ ಸಹಕಾರ, ಶಿವನ ಕಾರ್ಯದಲ್ಲಿ ಸಮನಾಗಿ ನಿಂತು ನಡೆಸೋ ಸ್ತ್ರೀ ಶಕ್ತಿಯನ್ನು  ಅರ್ಥ ಮಾಡಿಕೊಳ್ಳಲು ಸೋತರೆ ಭೂಮಿಯಿಂದ ಜೀವಾತ್ಮನಿಗೆ ಮುಕ್ತಿಯಿಲ್ಲ ಅತೃಪ್ತ ಆತ್ಮಗಳ ಭೂಲೋಕವಾದರೆ ನರಕ. ನರಕಾಸುರನ ವಧೆ ಮಾಡಿದ ಶ್ರೀ ಕೃಷ್ಣ ನಿಗೆ ಹದಿನಾರು ಸಾವಿರ ಸ್ತ್ರೀ ಯರೊಂದಿಗೆ ಮದುವೆ ಆಯಿತಂತೆ. ಒಂದು ಸ್ತ್ರೀ ಜನ್ಮ ಸಾರ್ಥಕ ವಾಗೋದು ವಿವಾಹದಿಂದ ಎಂದರೆ  ವಿವಾಹವು ಒಂದು ದೇವತಾಕಾರ್ಯವಾಗಿದೆ. ಶಾಸ್ತ್ರದ ಪ್ರಕಾರ ನಡೆಸೋ ವಿವಾಹದಿಂದ ಉತ್ತಮ ಸಂತಾನವನ್ನು ಮುಂದೆ ಪಡೆಯುವರೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸಿದೆ.
ಈಗಿನ ಸ್ಥಿತಿಯಲ್ಲಿ  ವಿವಾಹವೇನೋ ವೈಭವದಿಂದ ನಡೆಯುತ್ತದೆ. ಆದರೆ ಅಲ್ಲಿ ಶಾಸ್ತ್ರ ಸಂಪ್ರದಾಯ ವೇದ ಪಠಣಗಳಲ್ಲಿ  ಕಡಿವಾಣವಿರುತ್ತದೆ. ಜನಸಾಗರವಿದ್ದರೂ ಅವರನ್ನು  ಉಪಚರಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ.ಹಾಗಾಗಿ ಅನ್ನದಾನದಿಂದ ಸಂತೋಷ ಪಡಲು ಅನೇಕ  ರೀತಿಯಲ್ಲಿ  ವಿಶೇಷ ಭೋಜನವಿರುತ್ತದೆ. ಅನ್ನಬ್ರಹ್ಮನ ನೆನಪಿಸಿಕೊಂಡು ಅನ್ನಪೂರ್ಣ ವಾದಾಗ‌ಜ್ಞಾನ ಹೆಚ್ಚುವುದು. ಇದನ್ನು ಪ್ರತಿದಿನದ ಊಟದಲ್ಲಿಯೂ ಮಾಡಿದಾಗ ನಾವು ತಿಂದ ಅನ್ನವು  ಒಂದು ಯಜ್ಞ ದ ರೂಪದಲ್ಲಿ ಪರಮಾತ್ಮನ ತಲುಪಲು ಸಾಧ್ಯ. ಆತ್ಮ ಕ್ಕೆ ಜ್ಞಾನದ ಹಸಿವಿರೋದರಿಂದ ಜ್ಞಾನದಿಂದ ಸಂಪಾದಿಸಿದ ಅನ್ನವನ್ನು ಯಜ್ಞ ದ ರೀತಿಯಲ್ಲಿ ಸೇವಿಸಿದರೆ ಒಳಗಿರುವ ಎಲ್ಲಾ ದೇವಾಂಶಗಳಿಗೂ ತಲುಪಿ  ಸಂತೃಪ್ತ ರಾಗಿರುವರು. ಆಗ ದೈವೀಕ ಗುಣ ಸಂಪತ್ತು ಲಭಿಸುವುದು.ಇದೇ ಆರೋಗ್ಯದ ಗುಟ್ಟು. ಅನ್ನಾಹಾರವಿಲ್ಲದೆ ಎಷ್ಟೋ ವರ್ಷಗಳ ತಪಸ್ಸಿನಿಂದ ಪರಮಾತ್ಮನ ಸೇರಿದ ಋಷಿಗಳಾಗಲು ಕಷ್ಟ.ಆದರೆ ಅನ್ನ ಆಹಾರದಲ್ಲಿ ಪರಮಾತ್ಮನ ಸತ್ವವ ಕಂಡು  ಸೇವಿಸುವ ಜ್ಞಾನವಿದ್ದರೆ  ಅದೇ ಖುಷಿ. ಋಷಿಗಳಂತಿರಲಾಗದಿದ್ದರೂ ಸರಿ ಖುಷಿಯನ್ನು ಒಳಗಿನಿಂದ ಬೆಳೆಸಿಕೊಂಡರೆ  ಉತ್ತಮ. 
ಕಲುಷಿತ  ನೀರು ಆಹಾರಗಳನ್ನು ಸೇವಿಸಿಯೂ  ಬದುಕುತ್ತಿರುವ  ಮಾನವನೊಳಗೇ ಅಡಗಿರುವ ದೈವ ಶಕ್ತಿಗೆ 
ಜ್ಞಾನದ ಹಸಿವಿದೆ  ಹೊರಗಿನ ಆಹಾರದ ತಯಾರಿಕೆಯಲ್ಲಿ ಜ್ಞಾನವಿದ್ದರೆ  ಇದು ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿ ದೈವಬಲದಿಂದ  ದೇಹದ ಆರೋಗ್ಯವೃದ್ದಿಯಾಗುತ್ತದೆ . ಒಂದು ಹಿಡಿ ಅನ್ನವಿದ್ದರೂ ಜೀವ ಬದುಕುತ್ತದೆ ಆದರೆ ಇದು ಸಾತ್ವಿಕ ಜ್ಞಾನದಿಂದ ಸಂಪಾದಿಸಿದ್ದರೆ ಸಂತೃಪ್ತಿ. ಶಿಷ್ಟಾಚಾರದ ಸಂಪಾದನೆಯಲ್ಲಿ ಸತ್ಯಜ್ಞಾನವನ್ನು  ಕಾಣಬಹುದು.ಇದು ದೈವೀಕ ಸಂಪತ್ತು. ದೇಹವೇ ದೇಗುಲವಾದಾಗ ಅದರೊಳಗೆ ನಾವು ಹಾಕುವ ಆಹಾರ ವಿಷಯಗಳು ಹೇಗಿರಬೇಕಿತ್ತು? .
ಆರೋಗ್ಯವು ಯೋಗದಿಂದ ವೃದ್ದಿಯಾದರೆ ಮುಕ್ತಿ.

9.ಲಿಂಗತಾರತಮ್ಯದಿಂದಾಗುವ  ಅನಾಹುತ

ಜೀವಕ್ಕಾಗುವ ನೋವು ನಲಿವಿನ ಅನುಭವದಲ್ಲಿ ಲಿಂಗ ತಾರತಮ್ಯ  ಹೆಚ್ಚಾಗಿರುತ್ತದೆ. ಭೂಮಿಯ ಮೇಲಿರುವ ಎಲ್ಲಾ ರೀತಿಯ ಜೀವ ಸಂಕುಲಗಳಲ್ಲಿ ಮಾನವನ ಜೀವಕ್ಕೆ ಹೆಚ್ಚಿನ‌ಬೆಲೆ. ಹೀಗಾಗಿ ಪ್ರಾಣಿ ಪಕ್ಷಿ ಜಂತುಹುಳ ಕೀಟಗಳಂತಹ ಅತಿಸಣ್ಣ ಜೀವಿಗಳಿಗೆ ಬೆಲೆಕೊಡದೆ ತನ್ನ. ಜೀವನಕ್ಕಾಗಿ  ಇತರ ಜೀವಿಗಳನ್ನು ದುರ್ಭಳಕೆ ಮಾಡಿಕೊಂಡಾಗಲೇ ಒಳಗಿನ ಜೀವಾತ್ಮನಿಗೆ ಹಿಂಸೆಯಾಗುತ್ತಾ ಆರೋಗ್ಯ ಹಾಳಾಗಿ ಜೀವ ಹೋಗುತ್ತದೆ.

ಪ್ರತಿಯೊಂದು ಜೀವಿ ಯಲ್ಲಿಯೂ ಅಡಗಿರುವ ಶಕ್ತಿಯಲ್ಲಿ ವ್ಯತ್ಯಾಸವಿದೆ. ಆರೋಗ್ಯ ಉತ್ತಮವಾಗಿರಲು ಆ ಶಕ್ತಿಯ ಗುಣವಿಶೇಷತೆ ತಿಳಿದು  ಬಳಸುವುದು ಅಗತ್ಯ.ಹಾಗಂತ ನಾವು ಸೇವಿಸುವ ಗಾಳಿ,ನೀರಲ್ಲಿ  ಶಕ್ತಿಯನ್ನು ಹುಡುಕಿದರೆ ಜೀವವೇ ಇರೋದಿಲ್ಲ. ಉಳಿದ  ಧಾನ್ಯ ಅಕ್ಕಿ ಬೇಳೆ ಕಾಳುಗಳಲ್ಲಿ , ತರಕಾರಿ ಹಣ್ಣು ಗಳಲ್ಲಿ  ಅಡಗಿರುವ ಸತ್ವಕ್ಕೂ, ಮಾಂಸಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.  ಹೀಗಾಗಿ ಆಹಾರವನ್ನು ಸತ್ವ ರಜಸ್ಸು ತಾಮಸ್ಸೆಂಬ ಮೂರು ಗುಂಪಾಗಿ ಪರಿಗಣಿಸಿದ್ದಾರೆ. ಇದನ್ನು ಭಗವದ್ಗೀತೆ ಯಲ್ಲಿ  ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿರುವುದನ್ನು ನಾವು ತಿಳಿದಿದ್ದರೂ ಈಗಿನ  ಆರೋಗ್ಯದ ಸಮಸ್ಯೆನ ಸಾತ್ವಿಕ ಆಹಾರ ಪಡೆದವರಲ್ಲಿಯೂ ಕಾಣುತ್ತಿರೋದರೋದು  ನಮ್ಮ ಹಣ  ಸಂಪಾದನೆಯ  ಹಿಂದೆ ಇರುವ ಸತ್ವ,ರಜಸ್ಸು ತಮಸ್ಸಿನ ಮಾರ್ಗವಾಗಿದೆ.
ಅನ್ನದಾನ ಮಹಾದಾನವಾದರೂ ದಾನ ಯಾರಿಗೆ ಯಾವಾಗ ಹೇಗೆ ಎಷ್ಟು ಯಾಕೆ ಮಾಡಬೇಕೆಂಬ ಜ್ಞಾನ ಅಗತ್ಯವಿದೆ.
 ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವಿರದು. ಹೊಟ್ಟೆ ತುಂಬಿದವರಿಗೆ  ಅನ್ನದಾನ ಮಾಡಬಾರದು. ಇದೇ ರೀತಿ ಭ್ರಷ್ಟಾಚಾರದ  ವಶದಲ್ಲಿ ದ್ದವರ  ದಾನ ಧರ್ಮ ವು ಪರಮಾತ್ಮನವರೆಗೆ ತಲುಪಿಸುವುದು ಬಹಳ‌ಕಷ್ಟ. ಆದರೂ  ಪ್ರತಿಯೊಬ್ಬರಲ್ಲಿಯೂ ಅಡಗಿರುವ  ಪರಮಾತ್ಮನ ಶಕ್ತಿಯನ್ನು  ಕಂಡವರು ಮಾಡುವ ದಾನ ಶ್ರೇಷ್ಠ. ಹಾಗಾಗಿ ಹಿಂದೆ  ಎಷ್ಟೋ ಯೋಗಿಗಳು ಭಕ್ತರು  ಪರಮಾತ್ಮನಿಗಾಗಿಯೇ  ಸೇವೆ ಮಾಡುತ್ತಾ‌ಜನರ ಸೇವೆಯಲ್ಲಿ ಜನಾರ್ದನ ನನ್ನು, ದೇಶ ಸೇವೆಯಲ್ಲಿ ಈಶ್ವರನನ್ನು, ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಿದ್ದರು. ಇದರಿಂದಾಗಿ ಸಮಾನತೆಯಲ್ಲಿ ಲಿಂಬೇಧ, ಜಾತಿಬೇಧಧರ್ಮ ಬೇಧ, ಪಕ್ಷಬೇಧವ ಮರೆತು ರಾಜಯೋಗದೆಡೆಗೆ ನಡೆದಿದ್ದರು.

ತಿನ್ನುವುದಕ್ಕಾಗಿಯೇ ಜೀವಿಸೋದಲ್ಲ ಜೀವಿಸುವುದಕ್ಕಾಗಿ ತಿನ್ನಬೇಕೆಂದರು. ಆದರೆ ಏನೂ ತಿನ್ನದೆ ಸಾವಿರಾರು ವರ್ಷ ತಪಸ್ಸು ಮಾಡಿದವರಿದ್ದರೆಂದರೆ ಆತ್ಮಜ್ಞಾನವು ತಿನ್ನುವುದರಿಂದ ಬರೋದಿಲ್ಲವೆಂದು ಕೆಲವು ವ್ರತನಿಯಮ ಜಪತಪ ಯಾಗಯಜ್ಞ  ಹಲವು ಯೋಗ ಮಾರ್ಗ ಧರ್ಮ ನಿಷ್ಠೆ  ಉಪವಾಸ ಉಪಕಾರ ಉಪಚಾರ....ಬೆಳೆಯುತ್ತಾ ಹೋಗಿ ಈಗ ಊಟವೇ ಎಲ್ಲದರ ಮೂಲವಾಗಿದೆ. ಅಂದರೆ ಯಾವುದೇ ಕಾರ್ಯಕ್ರಮ ಮಾಡಿದರೂ ಅನ್ನದಾನವಿಲ್ಲದೆ ಸಂಪನ್ನವಾಗದು. 

ದೇವತಾಕಾರ್ಯಗಳಲ್ಲಿ  ಹಂಚುವ ಆಹಾರ
 ಇದು ಪ್ರಸಾದವಾಗಿರುತ್ತದೆ. ಹಾಗಾಗಿ ಈ ಪ್ರಸಾದವು ಸಾತ್ವಿಕವಾಗಿ ಸತ್ವಪೂರ್ಣ ವಾಗಿ ಸತ್ಯ ಧರ್ಮ ದಲ್ಲಿದ್ದರೆ ಆರೋಗ್ಯ ಪೂರ್ಣ ಜೀವನ. ಪ್ರತಿಯೊಂದು ಮನೆಯ ಅನ್ನವೂ ಅನ್ನಪೂರ್ಣೇಶ್ವರಿ ಯ ಪ್ರಸಾದವಾಗಬೇಕಾದರೆ  ಅನ್ನಬ್ರಹ್ಮನ ಸ್ಮರಣೆಯಿಂದ ತಯಾರಿಸುವುದು ಅಗತ್ಯ. ಇದು ಸಾಧ್ಯವಾಗುವುದಕ್ಕೆ ನಮ್ಮಲ್ಲಿ ಬ್ರಹ್ಮಜ್ಞಾನವಿರಬೇಕು.
ಎಲ್ಲಾ ಬ್ರಹ್ಮರೆ ಎನ್ನುವುದು ಸುಲಭ. ಎಲ್ಲಾ ಬ್ರಹ್ಮಚಾರಿ ಬ್ರಹ್ಮಚಾರಣಿಯರಾಗೋದು ಕಷ್ಟ. ಹೀಗಾಗಿ ಬ್ರಹ್ಮಚಾರಿಗಳ ಜ್ಞಾನ ಬ್ರಹ್ಮಚಾರಿಣಿಯರ ಜ್ಞಾನದಲ್ಲೂ ಬೇರೆ ಬೇರೆ ಕಾಣುತ್ತಾ ಜೀವ ಹಿಂಸೆ ಹೆಚ್ಚಾಗುತ್ತಾ  ಭೂಮಿಯಲ್ಲಿ  ಜೀವನ 
 ಬಲಿಕೊಟ್ಟು  ಮುಂದೆ ನಡೆದವರಿಗೆ ಕೊನೆಗಾಲದಲ್ಲಿ ಜೀವನದ ಸತ್ಯವೂ ಅರ್ಥ ವಾಗದೆ ತನ್ನ ಜೀವಕ್ಕೆ ಸಮಸ್ಯೆ ಹೆಚ್ಚಾಗುತ್ತಾ  ಹೋಗುತ್ತದೆ. ಜೀವಕ್ಕೆ ಲಿಂಗಬೇಧವಿಲ್ಲ. ಲಿಂಗಬೇಧವು  ಧರ್ಮ ರಕ್ಷಣೆಗೆ ಅಪಾಯಕಾರಿ.
ಆತ್ಮಜ್ಞಾನದಿಂದ ಧರ್ಮ ರಕ್ಷಣೆಯಾಗಬೇಕಾದರೆ ಅವರವರ  ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಅದೇ ಸಂತೋಷಕರ ಜೀವನ.ಹೆಣ್ಣು ಜೀವಕ್ಕೆ ಸಹನಾಶಕ್ತಿ ಹೆಚ್ಚಾಗಿರುವ‌ ಕಾರಣ ಭೂಮಿಯಲ್ಲಿ  ಹೆಣ್ಣಿಗೆ  ಹೆಚ್ಚು ಜ್ಞಾನಶಕ್ತಿ . ಅದಕ್ಕಾಗಿ  ಸ್ತ್ರೀ  ಸಹನೆ,ಕರುಣೆ ಪ್ರೀತಿವಿಶ್ವಾಸ ಗಳಿಸಿದನ್ನು  ರಾಜಕೀಯದಲ್ಲಿ ಕಳೆದುಕೊಳ್ಳುವುದೂ ಹೆಚ್ಚಾಗಿದೆ. ಗಳಿಸುವುದು ಕಷ್ಟ ಕಳೆದುಕೊಳ್ಳುವುದು ಸುಲಭ. ಯಾರೇ ಏನೇ ಪಡೆದರೂ
ಕೊಟ್ಟು ನಡೆಯಲೇಬೇಕಷ್ಟೆ ಅದರಲ್ಲಿ ಜೀವವೂ ಒಂದಾಗಿದೆ.
ಧರ್ಮ ಸತ್ಯದ ರಕ್ಷಣೆಗಾಗಿ ಜೀವಕೊಡೋದಕ್ಕೂ ಅಧರ್ಮ ಅಸತ್ಯದ ರಕ್ಷಣೆಗಾಗಿ ಜೀವನ ನಡೆಸೋದಕ್ಕೂ ವ್ಯತ್ಯಾಸವಿದೆ.  ಮಕ್ಕಳು ಮಹಿಳೆಯರ  ಒಂದು ಸಣ್ಣ ಜೀವವೂ ಮನುಕುಲಕ್ಕೆ ಒಂದು ಭಾರವಾದರೆ ಇತರ ಪ್ರಾಣಿ ಪಕ್ಷಿ ಮರಗಿಡಗಳಲ್ಲಿ ಅಡಗಿರುವ  ಜೀವಕ್ಕೆ ಬೆಲೆಕಟ್ಟಲು ಮಾನವನಿಗೆ ಸಾಧ್ಯವೆ?

ನಿಜ ಸ್ತ್ರೀ  ಹೃದಯಕ್ಕೆ  ಬೆಲೆಕೊಡುವಾಗ ಅಸುರರನ್ನು ತಿಳಿಯದೆ ಪ್ರೀತಿಸುವ ಕಾರಣ   ಭೂಮಿಯಲ್ಲಿ ಅಸುರಿ ಶಕ್ತಿ ಬೆಳೆಯುವುದು ಸುಲಭವಾಗಿರುತ್ತದೆ.  ಇದನ್ನು ತಡೆಯಲು ಪುರುಷಶಕ್ತಿಗೂ ಕಷ್ಟವಾದಾಗಲೇ ಸ್ವಯಂ ದುರ್ಗೆ ಯಾಗಿ ಅವತಾರವೆತ್ತಿಅಸುರರ  ಸಂಹಾರ ನಡೆದಿರುವ  ದೇವಿಪುರಾಣ  ಶ್ರೇಷ್ಠ ವಾಗಿದೆ.

10.ಸಾಲ ಅಥವಾ ಋಣ ತೀರಿಸುವ ಬಗೆ 

ಒಂದು ಸಾಲ ತೀರಿಸಲು ಇನ್ನೊಂದು ಸಾಲ ಅದನ್ನು ತೀರಿಸಲು ಮತ್ತೊಂದು ಹೀಗೇ ಸಾಲದ ಪಟ್ಟಿ ಬೆಳೆದಂತೆಲ್ಲಾ  ಮಾನವನ ಸಮಸ್ಯೆಗೆ ಪರಿಹಾರ ಸಿಗದೆ ಜೀವ ಹೋದರೂ ಮತ್ತೆ ಸಾಲ ತೀರಿಸಲು ಬರಲೇಬೇಕು ಎನ್ನುವ ಸತ್ಯ ಅರ್ಥ ವಾದವರು  ಸಾಲ ತೀರಿಸುವ ಸತ್ಕರ್ಮ, ಸ್ವಧರ್ಮ, ಸರಳ ಜೀವನ, ಪರಮಾತ್ಮನ ಸೇವೆಯ ಕಡೆಗೆ  ನಡೆದು ಮುಕ್ತಿ ಪಡೆಯುವರು. ಈಗಂತೂ  ಒಂದೊಂದು ದೇವರ ಮೇಲೂ ಸಾಲದ ಹೊರೆಹಾಕಿಕೊಂಡು  ವೈಭವದ ಕಾರ್ಯಕ್ರಮ ನಡೆಸುವುದು  ನೋಡಿದರೆ  ದೇವರ ಸಾಲ ತೀರಿಸಲು ಮಾನವನಿಗೆ ಸಾಧ್ಯವೆ? 
ತಿರುಪತಿ ತಿಮ್ಮಪ್ಪನ ಬಳಿ  ಇರುವ  ಆಸ್ತಿ ಯನ್ನು ಕಬಳಿಸಿಕೊಂಡು ಶ್ರೀಮಂತ ರಾದವರು ತಿರುಪತಿ ತಿಮ್ಮಪ್ಪನ ಸಾಲ ತೀರಿಸುವರಂತೆ .ತಿಮ್ಮಪ್ಪ ತನ್ನ ಮದುವೆಯಲ್ಲಿ ಕುಬೇರನ ಬಳಿ ಸಾಲ ಪಡೆದದ್ದನ್ನು ತೀರಿಸಲೆಂದೆ ತಿರುಪತಿಯಲ್ಲಿರುವನಂತೆ. ಲಕ್ಮಿ ಪತಿಯಾದವನಿಗೇ ಸಾಲದ ಹೊರೆ ಇದ್ದರೆ ಅಲಕ್ಮಿಯಾಗಿರುವವರ ಸಂಸಾರದ ಗತಿ ಏನು?

ತಿರುಪತಿಯಿಂದ ದೂರವಿರುವ ಲಕ್ಮಿ ಯನ್ನು ನೋಡಲು ಜನಸಾಗರ ಹರಿದುಬರುತ್ತದೆ. ತಿರುಪತಿಗೆ  ಬಂದಷ್ಟು  ಆಸ್ತಿ ಹಣ ಸಂಪತ್ತು ಸ್ವಯಂ ಲಕ್ಮಿ ನಿವಾಸಕ್ಕೆ ಬರೋದಿಲ್ಲ. ಎಂದಾಗ  ತಿರುಪತಿ ತಿಮ್ಮಪ್ಪನ ಸಾಲ ಎಂದೋ ತೀರಿದೆ ಎಂದರ್ಥ. ದೇಶದೊಳಗೆ ಇರುವ  ದೇವಾನುದೇವತೆಗಳ ಸಂಪತ್ತನ್ನು ಅಸುರರು ಲೂಟಿಹೊಡೆದು ದೇಶದ ಸಾಲ ಏರಿಸಿ ವಿದೇಶಿ ಸಾಲದಿಂದ ದೇಶ ನಡೆಸಿದರೂ  ಹೇಳೋರಿಲ್ಲ ಕೇಳೋರಿಲ್ಲ. ಯಾರನ್ನು ಯಾರು ಆಳುತ್ತಿರುವುದು? ದೇವರನ್ನು ಮಾನವರೋ? ಮಾನವರನ್ನು ದೇವರೋ?  ದೇವರನ್ನು ಅಸುರರೋ? ಅಸುರರನ್ನು ದೇವರೋ?
ಮಾನವರನ್ನು‌ ಅಸುರರೋ? ಅಸುರರನ್ನು ಮಾನವರೋ?
ಆಳುವವರು ಆಳಾಗೇ ಇರುವರು.ಕಾರಣ ಆಳಿಸಿಕೊಳ್ಳುವವರ ಪಾಲನ್ನು ತಾವೇ ಹಿಡಿದಿಟ್ಟುಕೊಂಡಾಗ  ಸೇವೆ ಮಾಡದೆ  ಬೇರೆದಾರಿಯಿಲ್ಲ.
ಒಟ್ಟಿನಲ್ಲಿ ಸೇವೆಯಿಂದ ಸಾಲಮನ್ನಾ ಸಾಧ್ಯವಿದೆ.ಇದು ಸತ್ವಯುತವಾಗಿದ್ದರೆ ಉತ್ತಮ. 
 ಭಗವಂತನ ಸೇವೆ   ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ  ಮಾಡಿದರೆ ಮುಕ್ತಿ ಮೋಕ್ಷವೆಂದರು. ಭೌತಿಕಾಸಕ್ತಿ ಹೆಚ್ಚಿದಂತೆಲ್ಲ  ಇಂತಹ  ಸೇವೆ ನಡೆಯೋದಿಲ್ಲ.ಹಾಗಾಗಿ ಜೀವನ್ಮುಕ್ತಿ  ಕಷ್ಟವಿದೆ. ಏನೇ ಇರಲಿ  ಭಗವಂತನ  ಪರಮಾತ್ಮನ ದಾಸರಾಗೋದರಿಂದ‌  ಕಷ್ಟ ನಷ್ಟಗಳೇ ಹೆಚ್ಚು.ಕಾರಣ  ಅವನ ಋಣ ತೀರಿಸಲು  ಆಸೆ ಬಿಡಬೇಕು. ಆಸೆ ಬಿಡೋದೇ ಬಹಳ ಕಷ್ಟ. ಆಸೆ ಬಿಟ್ಟಂತೆಲ್ಲಾ  ದಾನ ಧರ್ಮ ದ ಮೂಲಕ ಹಣ ಅಧಿಕಾರದಿಂದ  ದೂರವಾಗಿ ನಷ್ಟ ಅನುಭವಿಸಿದ ಮೇಲೇ  ಜ್ಞಾನೋದಯ. ಜೀವಾತ್ಮನು ಪರಮಾತ್ಮನೊಂದಿಗೆ ಬೆರೆತಾಗಲೇ  ಮುಕ್ತಿ ಮೋಕ್ಷ.  ಹೀಗಾಗಿ ದಾಸ ಸಂತ ಶರಣರಲ್ಲಿ ಭೌತಿಕ ಆಸ್ತಿ ಯಿರದೆ  ಅಧ್ಯಾತ್ಮಿಕ ಆಸ್ತಿ  ಹೆಚ್ಚಾಗಿತ್ತು. ಮಹಾತ್ಮರಾಗಲು  ದೇವರಾಗಬೇಕಿಲ್ಲ‌ ದೈವತ್ವವರಿತರೆ ಸಾಕು. ದೇವರ ದಾಸರಂತೆ ಅಸುರರ ದಾಸರೂ ಭೂಮಿಯಲ್ಲಿರುವರು. ಆದರೆ ಅವರಿಗೆ ಸತ್ಯ. ಧರ್ಮದ ಅರಿವಿರೋದಿಲ್ಲವಾದ್ದರಿಂದ ಅಸತ್ಯ ಅಧರ್ಮಕ್ಕೆ ಸಹಕಾರ ಕೊಟ್ಟು ದೇವರ ಹೆಸರಿನಲ್ಲಿ ಅಸುರರನ್ನು ಬೆಳೆಸುವರು. ಇದರಿಂದಾಗಿ ಹಣ ಅಧಿಕಾರ ಸ್ಥಾನ ಪದವಿ ಪಡೆದರೂ  ಅದೊಂದು ಋಣವಾಗಿರುವುದು.  

ಬ್ರಹ್ಮನ ಸೃಷ್ಟಿ ಗೆ ಜ್ಞಾನ ನೀಡುವ  ದೇವಿ, ವಿಷ್ಣುವಿನ ಕಾರ್ಯಕ್ರಮಕ್ಕೆ ಧನ ನೀಡುವ ಹೃದಯ ಲಕ್ಮಿ, ಶಿವನ ಅರ್ಧ ಶರೀರವನ್ನು ಆವರಿಸಿಕೊಂಡು ಜಗತ್ತನ್ನು ನಡೆಸೋ ಜಗಧೀಶ್ವರಿಯರಲ್ಲಿ  ಬೇಧ ಭಾವ  ತೋರಿಸಿ ಆಳುವ ಅಸುರರಿಗೆ  ಬ್ರಹ್ಮಜ್ಞಾನ  ಬರೋದಿಲ್ಲ. ಸತ್ಯಯುಗಕ್ಕೂ ಕಲಿಯುಗಕ್ಕೂ ವ್ಯತ್ಯಾಸವಿಷ್ಟೆ. ಸತ್ಯಯುಗ ದೇವತೆಗಳ ಕಾಲ ಕಲಿಯುಗ ಅಸುರರ ಕಾಲ. ಯಾರಲ್ಲಿ ಹಣವಿದೆಯೋ ಅವರು ದೇವರೆಂದರೆ  ತಪ್ಪು ತಿಳುವಳಿಕೆ. ತಿಳುವಳಿಕೆಯನ್ನು ದುರ್ಭಳಕೆ ಮಾಡಿಕೊಂಡರೆ  ಇನ್ನಷ್ಟು ನಷ್ಟ. ಸದ್ಬಳಕೆ ಮಾಡಲು‌ ಇಷ್ಟಪಡದ ಜನರಿಗೆ  ಕಷ್ಟ ತಪ್ಪಿದ್ದಲ್ಲ. ಹಾಗಾದರೆ ನಾವ್ಯಾರು? ಯಾರಿಗೆ ಸಹಕರಿಸುವೆವೋ  ಅವರ ಪಕ್ಷ ನಾವು. ನಮ್ಮೊಳಗೇ ಇರುವ  ದೇವಾಸುರ ಗುಣಗಳಿಂದ  ಯಾರಿಗೆ ಲಾಭ ನಷ್ಟ ಎನ್ನುವ ಲೆಕ್ಕಾಚಾರವೇ ಋಣ ಸಂದಾಯ ವಾಗದೆ  ಉಳಿಯಲು ಕಾರಣ.
 - - - -

Friday, December 15, 2023

ಜೀವನದಲ್ಲಿ ಲಿಂಗತಾರತಮ್ಯ ಬೇಕೆ?

ಜೀವಕ್ಕಾಗುವ ನೋವು ನಲಿವಿನ ಅನುಭವದಲ್ಲಿ ಲಿಂಗ ತಾರತಮ್ಯ  ಹೆಚ್ಚಾಗಿರುತ್ತದೆ. ಭೂಮಿಯ ಮೇಲಿರುವ ಎಲ್ಲಾ ರೀತಿಯ ಜೀವ ಸಂಕುಲಗಳಲ್ಲಿ ಮಾನವನ ಜೀವಕ್ಕೆ ಹೆಚ್ಚಿನ‌ಬೆಲೆ. ಹೀಗಾಗಿ ಪ್ರಾಣಿ ಪಕ್ಷಿ ಜಂತುಹುಳ ಕೀಟಗಳಂತಹ ಅತಿಸಣ್ಣ ಜೀವಿಗಳಿಗೆ ಬೆಲೆಕೊಡದೆ ತನ್ನ. ಜೀವನಕ್ಕಾಗಿ  ಇತರ ಜೀವಿಗಳನ್ನು ದುರ್ಭಳಕೆ ಮಾಡಿಕೊಂಡಾಗಲೇ ಒಳಗಿನ ಜೀವಾತ್ಮನಿಗೆ ಹಿಂಸೆಯಾಗುತ್ತಾ ಆರೋಗ್ಯ ಹಾಳಾಗಿ ಜೀವ ಹೋಗುತ್ತದೆ.

ಪ್ರತಿಯೊಂದು ಜೀವಿ ಯಲ್ಲಿಯೂ ಅಡಗಿರುವ ಶಕ್ತಿಯಲ್ಲಿ ವ್ಯತ್ಯಾಸವಿದೆ. ಆರೋಗ್ಯ ಉತ್ತಮವಾಗಿರಲು ಆ ಶಕ್ತಿಯ ಗುಣವಿಶೇಷತೆ ತಿಳಿದು  ಬಳಸುವುದು ಅಗತ್ಯ.ಹಾಗಂತ ನಾವು ಸೇವಿಸುವ ಗಾಳಿ,ನೀರಲ್ಲಿ  ಶಕ್ತಿಯನ್ನು ಹುಡುಕಿದರೆ ಜೀವವೇ ಇರೋದಿಲ್ಲ. ಉಳಿದ  ಧಾನ್ಯ ಅಕ್ಕಿ ಬೇಳೆ ಕಾಳುಗಳಲ್ಲಿ , ತರಕಾರಿ ಹಣ್ಣು ಗಳಲ್ಲಿ  ಅಡಗಿರುವ ಸತ್ವಕ್ಕೂ, ಮಾಂಸಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.  ಹೀಗಾಗಿ ಆಹಾರವನ್ನು ಸತ್ವ ರಜಸ್ಸು ತಾಮಸ್ಸೆಂಬ ಮೂರು ಗುಂಪಾಗಿ ಪರಿಗಣಿಸಿದ್ದಾರೆ. ಇದನ್ನು ಭಗವದ್ಗೀತೆ ಯಲ್ಲಿ  ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿರುವುದನ್ನು ನಾವು ತಿಳಿದಿದ್ದರೂ ಈಗಿನ  ಆರೋಗ್ಯದ ಸಮಸ್ಯೆನ ಸಾತ್ವಿಕ ಆಹಾರ ಪಡೆದವರಲ್ಲಿಯೂ ಕಾಣುತ್ತಿರೋದರೋದು  ನಮ್ಮ ಹಣ  ಸಂಪಾದನೆಯ  ಹಿಂದೆ ಇರುವ ಸತ್ವ,ರಜಸ್ಸು ತಮಸ್ಸಿನ ಮಾರ್ಗವಾಗಿದೆ.
ಅನ್ನದಾನ ಮಹಾದಾನವಾದರೂ ದಾನ ಯಾರಿಗೆ ಯಾವಾಗ ಹೇಗೆ ಎಷ್ಟು ಯಾಕೆ ಮಾಡಬೇಕೆಂಬ ಜ್ಞಾನ ಅಗತ್ಯವಿದೆ.
 ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವಿರದು. ಹೊಟ್ಟೆ ತುಂಬಿದವರಿಗೆ  ಅನ್ನದಾನ ಮಾಡಬಾರದು. ಇದೇ ರೀತಿ ಭ್ರಷ್ಟಾಚಾರದ  ವಶದಲ್ಲಿ ದ್ದವರ  ದಾನ ಧರ್ಮ ವು ಪರಮಾತ್ಮನವರೆಗೆ ತಲುಪಿಸುವುದು ಬಹಳ‌ಕಷ್ಟ. ಆದರೂ  ಪ್ರತಿಯೊಬ್ಬರಲ್ಲಿಯೂ ಅಡಗಿರುವ  ಪರಮಾತ್ಮನ ಶಕ್ತಿಯನ್ನು  ಕಂಡವರು ಮಾಡುವ ದಾನ ಶ್ರೇಷ್ಠ. ಹಾಗಾಗಿ ಹಿಂದೆ  ಎಷ್ಟೋ ಯೋಗಿಗಳು ಭಕ್ತರು  ಪರಮಾತ್ಮನಿಗಾಗಿಯೇ  ಸೇವೆ ಮಾಡುತ್ತಾ‌ಜನರ ಸೇವೆಯಲ್ಲಿ ಜನಾರ್ದನ ನನ್ನು, ದೇಶ ಸೇವೆಯಲ್ಲಿ ಈಶ್ವರನನ್ನು, ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಿದ್ದರು. ಇದರಿಂದಾಗಿ ಸಮಾನತೆಯಲ್ಲಿ ಲಿಂಬೇಧ, ಜಾತಿಬೇಧಧರ್ಮ ಬೇಧ, ಪಕ್ಷಬೇಧವ ಮರೆತು ರಾಜಯೋಗದೆಡೆಗೆ ನಡೆದಿದ್ದರು.

ತಿನ್ನುವುದಕ್ಕಾಗಿಯೇ ಜೀವಿಸೋದಲ್ಲ ಜೀವಿಸುವುದಕ್ಕಾಗಿ ತಿನ್ನಬೇಕೆಂದರು. ಆದರೆ ಏನೂ ತಿನ್ನದೆ ಸಾವಿರಾರು ವರ್ಷ ತಪಸ್ಸು ಮಾಡಿದವರಿದ್ದರೆಂದರೆ ಆತ್ಮಜ್ಞಾನವು ತಿನ್ನುವುದರಿಂದ ಬರೋದಿಲ್ಲವೆಂದು ಕೆಲವು ವ್ರತನಿಯಮ ಜಪತಪ ಯಾಗಯಜ್ಞ  ಹಲವು ಯೋಗ ಮಾರ್ಗ ಧರ್ಮ ನಿಷ್ಠೆ  ಉಪವಾಸ ಉಪಕಾರ ಉಪಚಾರ....ಬೆಳೆಯುತ್ತಾ ಹೋಗಿ ಈಗ ಊಟವೇ ಎಲ್ಲದರ ಮೂಲವಾಗಿದೆ. ಅಂದರೆ ಯಾವುದೇ ಕಾರ್ಯಕ್ರಮ ಮಾಡಿದರೂ ಅನ್ನದಾನವಿಲ್ಲದೆ ಸಂಪನ್ನವಾಗದು. 

ದೇವತಾಕಾರ್ಯಗಳಲ್ಲಿ  ಹಂಚುವ ಆಹಾರ
 ಇದು ಪ್ರಸಾದವಾಗಿರುತ್ತದೆ. ಹಾಗಾಗಿ ಈ ಪ್ರಸಾದವು ಸಾತ್ವಿಕವಾಗಿ ಸತ್ವಪೂರ್ಣ ವಾಗಿ ಸತ್ಯ ಧರ್ಮ ದಲ್ಲಿದ್ದರೆ ಆರೋಗ್ಯ ಪೂರ್ಣ ಜೀವನ. ಪ್ರತಿಯೊಂದು ಮನೆಯ ಅನ್ನವೂ ಅನ್ನಪೂರ್ಣೇಶ್ವರಿ ಯ ಪ್ರಸಾದವಾಗಬೇಕಾದರೆ  ಅನ್ನಬ್ರಹ್ಮನ ಸ್ಮರಣೆಯಿಂದ ತಯಾರಿಸುವುದು ಅಗತ್ಯ. ಇದು ಸಾಧ್ಯವಾಗುವುದಕ್ಕೆ ನಮ್ಮಲ್ಲಿ ಬ್ರಹ್ಮಜ್ಞಾನವಿರಬೇಕು.
ಎಲ್ಲಾ ಬ್ರಹ್ಮರೆ ಎನ್ನುವುದು ಸುಲಭ. ಎಲ್ಲಾ ಬ್ರಹ್ಮಚಾರಿ ಬ್ರಹ್ಮಚಾರಣಿಯರಾಗೋದು ಕಷ್ಟ. ಹೀಗಾಗಿ ಬ್ರಹ್ಮಚಾರಿಗಳ ಜ್ಞಾನ ಬ್ರಹ್ಮಚಾರಿಣಿಯರ ಜ್ಞಾನದಲ್ಲೂ ಬೇರೆ ಬೇರೆ ಕಾಣುತ್ತಾ ಜೀವ ಹಿಂಸೆ ಹೆಚ್ಚಾಗುತ್ತಾ  ಭೂಮಿಯಲ್ಲಿ  ಜೀವನ 
 ಬಲಿಕೊಟ್ಟು  ಮುಂದೆ ನಡೆದವರಿಗೆ ಕೊನೆಗಾಲದಲ್ಲಿ ಜೀವನದ ಸತ್ಯವೂ ಅರ್ಥ ವಾಗದೆ ತನ್ನ ಜೀವಕ್ಕೆ ಸಮಸ್ಯೆ ಹೆಚ್ಚಾಗುತ್ತಾ  ಹೋಗುತ್ತದೆ. ಜೀವಕ್ಕೆ ಲಿಂಗಬೇಧವಿಲ್ಲ. ಲಿಂಗಬೇಧವು  ಧರ್ಮ ರಕ್ಷಣೆಗೆ ಅಪಾಯಕಾರಿ.
ಆತ್ಮಜ್ಞಾನದಿಂದ ಧರ್ಮ ರಕ್ಷಣೆಯಾಗಬೇಕಾದರೆ ಅವರವರ  ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಅದೇ ಸಂತೋಷಕರ ಜೀವನ.ಹೆಣ್ಣು ಜೀವಕ್ಕೆ ಸಹನಾಶಕ್ತಿ ಹೆಚ್ಚಾಗಿರುವ‌ ಕಾರಣ ಭೂಮಿಯಲ್ಲಿ  ಹೆಣ್ಣಿಗೆ  ಹೆಚ್ಚು ಜ್ಞಾನಶಕ್ತಿ . ಅದಕ್ಕಾಗಿ  ಸ್ತ್ರೀ  ಸಹನೆ,ಕರುಣೆ ಪ್ರೀತಿವಿಶ್ವಾಸ ಗಳಿಸಿದನ್ನು  ರಾಜಕೀಯದಲ್ಲಿ ಕಳೆದುಕೊಳ್ಳುವುದೂ ಹೆಚ್ಚಾಗಿದೆ. ಗಳಿಸುವುದು ಕಷ್ಟ ಕಳೆದುಕೊಳ್ಳುವುದು ಸುಲಭ. ಯಾರೇ ಏನೇ ಪಡೆದರೂ
ಕೊಟ್ಟು ನಡೆಯಲೇಬೇಕಷ್ಟೆ ಅದರಲ್ಲಿ ಜೀವವೂ ಒಂದಾಗಿದೆ.
ಧರ್ಮ ಸತ್ಯದ ರಕ್ಷಣೆಗಾಗಿ ಜೀವಕೊಡೋದಕ್ಕೂ ಅಧರ್ಮ ಅಸತ್ಯದ ರಕ್ಷಣೆಗಾಗಿ ಜೀವನ ನಡೆಸೋದಕ್ಕೂ ವ್ಯತ್ಯಾಸವಿದೆ.  ಮಕ್ಕಳು ಮಹಿಳೆಯರ  ಒಂದು ಸಣ್ಣ ಜೀವವೂ ಮನುಕುಲಕ್ಕೆ ಒಂದು ಭಾರವಾದರೆ ಇತರ ಪ್ರಾಣಿ ಪಕ್ಷಿ ಮರಗಿಡಗಳಲ್ಲಿ ಅಡಗಿರುವ  ಜೀವಕ್ಕೆ ಬೆಲೆಕಟ್ಟಲು ಮಾನವನಿಗೆ ಸಾಧ್ಯವೆ?

ತ್ರಿಮೂರ್ತಿ ಗಳೊಂದಿಗೆ ತ್ರಿದೇವಿಯರ ಮಹಿಮೆ

ಬ್ರಹ್ಮನ ಸೃಷ್ಟಿ ಗೆ ಜ್ಞಾನಕೊಡುವ ದೇವಿ,ವಿಷ್ಣುವಿನ ಕಾರ್ಯಕ್ಕೆ ಲಕ್ಮಿಯ ಸಹಕಾರ, ಶಿವನ ಕಾರ್ಯದಲ್ಲಿ ಸಮನಾಗಿ ನಿಂತು ನಡೆಸೋ ಸ್ತ್ರೀ ಶಕ್ತಿಯನ್ನು  ಅರ್ಥ ಮಾಡಿಕೊಳ್ಳಲು ಸೋತರೆ ಭೂಮಿಯಿಂದ ಜೀವಾತ್ಮನಿಗೆ ಮುಕ್ತಿಯಿಲ್ಲ ಅತೃಪ್ತ ಆತ್ಮಗಳ ಭೂಲೋಕವಾದರೆ ನರಕ. ನರಕಾಸುರನ ವಧೆ ಮಾಡಿದ ಶ್ರೀ ಕೃಷ್ಣ ನಿಗೆ ಹದಿನಾರು ಸಾವಿರ ಸ್ತ್ರೀ ಯರೊಂದಿಗೆ ಮದುವೆ ಆಯಿತಂತೆ. ಒಂದು ಸ್ತ್ರೀ ಜನ್ಮ ಸಾರ್ಥಕ ವಾಗೋದು ವಿವಾಹದಿಂದ ಎಂದರೆ  ವಿವಾಹವು ಒಂದು ದೇವತಾಕಾರ್ಯವಾಗಿದೆ. ಶಾಸ್ತ್ರದ ಪ್ರಕಾರ ನಡೆಸೋ ವಿವಾಹದಿಂದ ಉತ್ತಮ ಸಂತಾನವನ್ನು ಮುಂದೆ ಪಡೆಯುವರೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸಿದೆ.
ಈಗಿನ ಸ್ಥಿತಿಯಲ್ಲಿ  ವಿವಾಹವೇನೋ ವೈಭವದಿಂದ ನಡೆಯುತ್ತದೆ. ಆದರೆ ಅಲ್ಲಿ ಶಾಸ್ತ್ರ ಸಂಪ್ರದಾಯ ವೇದ ಪಠಣಗಳಲ್ಲಿ  ಕಡಿವಾಣವಿರುತ್ತದೆ. ಜನಸಾಗರವಿದ್ದರೂ ಅವರನ್ನು  ಉಪಚರಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ.ಹಾಗಾಗಿ ಅನ್ನದಾನದಿಂದ ಸಂತೋಷ ಪಡಲು ಅನೇಕ  ರೀತಿಯಲ್ಲಿ  ವಿಶೇಷ ಭೋಜನವಿರುತ್ತದೆ. ಅನ್ನಬ್ರಹ್ಮನ ನೆನಪಿಸಿಕೊಂಡು ಅನ್ನಪೂರ್ಣ ವಾದಾಗ‌ಜ್ಞಾನ ಹೆಚ್ಚುವುದು. ಇದನ್ನು ಪ್ರತಿದಿನದ ಊಟದಲ್ಲಿಯೂ ಮಾಡಿದಾಗ ನಾವು ತಿಂದ ಅನ್ನವು  ಒಂದು ಯಜ್ಞ ದ ರೂಪದಲ್ಲಿ ಪರಮಾತ್ಮನ ತಲುಪಲು ಸಾಧ್ಯ. ಆತ್ಮ ಕ್ಕೆ ಜ್ಞಾನದ ಹಸಿವಿರೋದರಿಂದ ಜ್ಞಾನದಿಂದ ಸಂಪಾದಿಸಿದ ಅನ್ನವನ್ನು ಯಜ್ಞ ದ ರೀತಿಯಲ್ಲಿ ಸೇವಿಸಿದರೆ ಒಳಗಿರುವ ಎಲ್ಲಾ ದೇವಾಂಶಗಳಿಗೂ ತಲುಪಿ  ಸಂತೃಪ್ತ ರಾಗಿರುವರು. ಆಗ ದೈವೀಕ ಗುಣ ಸಂಪತ್ತು ಲಭಿಸುವುದು.ಇದೇ ಆರೋಗ್ಯದ ಗುಟ್ಟು. ಅನ್ನಾಹಾರವಿಲ್ಲದೆ ಎಷ್ಟೋ ವರ್ಷಗಳ ತಪಸ್ಸಿನಿಂದ ಪರಮಾತ್ಮನ ಸೇರಿದ ಋಷಿಗಳಾಗಲು ಕಷ್ಟ.ಆದರೆ ಅನ್ನ ಆಹಾರದಲ್ಲಿ ಪರಮಾತ್ಮನ ಸತ್ವವ ಕಂಡು  ಸೇವಿಸುವ ಜ್ಞಾನವಿದ್ದರೆ  ಅದೇ ಖುಷಿ. ಋಷಿಗಳಂತಿರಲಾಗದಿದ್ದರೂ ಸರಿ ಖುಷಿಯನ್ನು ಒಳಗಿನಿಂದ ಬೆಳೆಸಿಕೊಂಡರೆ  ಉತ್ತಮ. 
ಕಲುಷಿತ  ನೀರು ಆಹಾರಗಳನ್ನು ಸೇವಿಸಿಯೂ  ಬದುಕುತ್ತಿರುವ  ಮಾನವನೊಳಗೇ ಅಡಗಿರುವ ದೈವ ಶಕ್ತಿಗೆ 
ಜ್ಞಾನದ ಹಸಿವಿದೆ  ಹೊರಗಿನ ಆಹಾರದ ತಯಾರಿಕೆಯಲ್ಲಿ ಜ್ಞಾನವಿದ್ದರೆ  ಇದು ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿ ದೈವಬಲದಿಂದ  ದೇಹದ ಆರೋಗ್ಯವೃದ್ದಿಯಾಗುತ್ತದೆ . ಒಂದು ಹಿಡಿ ಅನ್ನವಿದ್ದರೂ ಜೀವ ಬದುಕುತ್ತದೆ ಆದರೆ ಇದು ಸಾತ್ವಿಕ ಜ್ಞಾನದಿಂದ ಸಂಪಾದಿಸಿದ್ದರೆ ಸಂತೃಪ್ತಿ. ಶಿಷ್ಟಾಚಾರದ ಸಂಪಾದನೆಯಲ್ಲಿ ಸತ್ಯಜ್ಞಾನವನ್ನು  ಕಾಣಬಹುದು.ಇದು ದೈವೀಕ ಸಂಪತ್ತು. ದೇಹವೇ ದೇಗುಲವಾದಾಗ ಅದರೊಳಗೆ ನಾವು ಹಾಕುವ ಆಹಾರ ವಿಷಯಗಳು ಹೇಗಿರಬೇಕಿತ್ತು? .
ಆರೋಗ್ಯವು ಯೋಗದಿಂದ ವೃದ್ದಿಯಾದರೆ ಮುಕ್ತಿ.

ಜ್ಯೋತಿಷ್ಯ ಶಾಸ್ತ್ರ

ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹಲವರಿಗೆ  ಗೊಂದಲವಿದೆ.ಇದು ಸರಿಯೋ ತಪ್ಪೋ ಎನ್ನುವ  ವಾದ ವಿವಾದದಲ್ಲಿ ಜ್ಯೋತಿಷ್ಯ ಸತ್ಯವಿದ್ದರೂ ಜ್ಯೋತಿಷ್ಯ ನುಡಿದವರಲ್ಲಿ ತಪ್ಪಾಗಿದೆ. ಹಾಗೆ ಸನಾತನ ಹಿಂದೂ ಧರ್ಮದ ಉದ್ದೇಶ ಸರಿಯಿದ್ದರೂ ಎಲ್ಲಾ ಹಿಂದೂಗಳು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಾಗ  ಪರಕೀಯರು ಹಿಂದೂ ಧರ್ಮ ವೇ ಇಲ್ಲವೆಂದರೆ ತಪ್ಪು ಪರರದ್ದಲ್ಲ ನಮ್ಮವರದ್ದೇ.
ಹೀಗೇ ದೇಶದ. ವಿಚಾರಕ್ಕೆ ಬಂದಾಗ ಎಲ್ಲಾ ಧರ್ಮ ದವರೂ ಭಾರತದ ಋಣ ತೀರಿಸಲು  ಅದರ ಧರ್ಮ ಕರ್ಮ ದ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಲು  ಅವಕಾಶವಿರಬೇಕು. ಅವಕಾಶ ಇದ್ದರೂ  ಕೊಡದಿದ್ದರೆ ಅದು ನಮ್ಮ ತಪ್ಪು. ಸಹಕಾರವೇ ಇಲ್ಲವಾದರೆ ಅದು ನಮ್ಮ ಕರ್ಮ ಫಲ. ಹಾಗಂತ ನಮ್ಮ  ಆತ್ಮಸಾಕ್ಷಿಗೆ  ನಾವೇ ವಿರುದ್ದ ನಡೆದಾಗ ಇದರ ಫಲವನ್ನು  ಯಾರೋ ಅನುಭವಿಸಲಾಗದು. ಹಾಗಾಗಿ ಭವಿಷ್ಯದ ಚಿಂತನೆ ಮಾಡುವಾಗ‌ಹಿಂದಿರುವ ಗ್ರಹಗತಿಗಳ ಚಲನವಲನದಿಂದ ಮಾನವನ ಜೀವನದಲ್ಲಾಗುವ ಪರಿಣಾಮವನ್ನು ಸೂಕ್ಮವಾಗಿ ತಿಳಿದು ಸೂಕ್ತ ಮಾರ್ಗದರ್ಶನ ಪರಿಹಾರ ಸೂಚಿಸುವ ಜ್ಯೋತಿಷ್ಯ ಶಾಸ್ತ್ರ  ಎಲ್ಲರಿಗೂ ಒಂದೇ ರೀತಿಯಲ್ಲಿ  ಕಲಿಯಲಾಗದಿದ್ದರೂ  ಕಲಿತವರ ನಡೆ ನುಡಿಯ ಮೇಲೇ  ಹೇಳಿಕೆಯೂ  ಇರುತ್ತದೆ. ನಾನೆಂಬುದಿಲ್ಲವೆಂದಿರುವ  ಸತ್ಯದಲ್ಲಿ ಆ ಅಗೋಚರ ಶಕ್ತಿ ಯ ಒಳಗಿನಹೇಳಿಕೆ ಯಾರಿಗೂ ಕಾಣೋದಿಲ್ಲ.ಸ್ವಚ್ಚ ಶುದ್ದ ವ್ಯಕ್ತಿತ್ವವುಳ್ಳವರು  ಏನು ಹೇಳಿದರೂ ಸತ್ಯವಾಗಿರುತ್ತದೆ ಅವರಿಗೆ ಶಾಸ್ತ್ರ ಓದುವ ಅವಕಾಶವಿಲ್ಲದೆಯೂ ಭವಿಷ್ಯ ಅರ್ಥ ವಾಗಬಹುದು. ಹಾಗಂತ ಬೇರೆಯವರ ಭವಿಷ್ಯವನ್ನು ಬದಲಾಯಿಸುವ  ಹಠಕ್ಕೆ ಬಿದ್ದರೆ  ಅದೇ ಭವಿಷ್ಯವನ್ನು ಹಾಳುಮಾಡಲೂಬಹುದು. ಕಾರಣ ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಅವರ ಭವಿಷ್ಯ ವಿರುತ್ತದೆ.  ಇದು ಮನೆಯಿಂದ ಹಿಡಿದು ಮಠ ಮಂದಿರ, ಮಾಧ್ಯಮ, ಮಂತ್ರಿ ಮಹೋದಯರವರೆಗೂ‌    ಒಂದೇ ಸಮನಾಗಿರಲು‌ ಕಷ್ಟ. ಮನೆಯೊಳಗೆ  ಸ್ವಚ್ಚ ಮನಸ್ಸಿನ ಮಾನವರಿರಬೇಕು.
ಸಾಧ್ಯವಿಲ್ಲದ ಕಾರಣ ಹೊರಗೆ ಬಂದವರು ಹೊರಗಿನವರಿಂದ ತನ್ನ ಭವಿಷ್ಯ ಕೇಳಿಕೊಂಡು ನಡೆಯಬೇಕಾಯಿತು.ಆದರೆ ಗ್ರಹಗತಿಗಳಿಗೆ  ಯಾರು ಶ್ರೇಷ್ಠ ಕನಿಷ್ಟವೆನ್ನುವುದನ್ನು  ತಾಳೆಹಾಕುವ ಲೆಕ್ಕಾಚಾರದಲ್ಲಿ ಹಣ ಬರೋದಿಲ್ಲ ಜ್ಞಾನವೇ ಬರೋದು. ಹಾಗಾಗಿ ಜ್ಯೋತಿಷ್ಯ ‌ ಆತ್ಮಜ್ಯೋತಿಯ. ಒಂದು ಸಂದೇಶ. ಹೇಳುವವರಲ್ಲಿ ಆತ್ಮಜ್ಞಾನವಿದ್ದರೆ  ಹೇಳಿದ್ದು ಸತ್ಯವಾಗೇ ಇರುತ್ತದೆ. ಕಲಿತು ಹೇಳುವಾಗ. ಸ್ವಲ್ಪ ತಪ್ಪಾದರೂ  ಕೇಳುವವರ ಹಣೆಬರಹವನ್ನು ಅಳಿಸಲು ಜ್ಯೋತಿಷ್ಯ ಶಾಸ್ತ್ರ ವೂ ಸಹಕರಿಸದು.ಎಲ್ಲಾ ಮೇಲಿನ ಶಕ್ತಿಯ ಆದೇಶದಂತೆ‌ನಡೆದರೂ ಮಧ್ಯದಲ್ಲಿ ತಡೆದು ನಿಲ್ಲಿಸುವ ಶಕ್ತಿ ಕೆಲವರಿಗಷ್ಟೆ ಇದೆ. ಅವರೂ ಮುಂದೆ ಹೋದ ಮೇಲೆ ಆಗೋದನ್ನು ತಡೆಯಲಾಗದು.ಅದಕ್ಕೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದರು ದಾಸ ಶ್ರೇಷ್ಠ ರು.
ಈಗಿನ ಭಾರತದ ಭವಿಷ್ಯವನ್ನು ‌ಹಿಂದೆಯೇ ತಿಳಿಸಿದ್ದರು. ಕಲಿಯುಗದ ಭವಿಷ್ಯವನ್ನು  ಹಿಂದಿನ ಯುಗದಲ್ಲೇ ತಿಳಿಸಿದ್ದರು. ಹಾಗಾದರೆ ಆಗೋದನ್ನು ಮೊದಲೇ ತಿಳಿಸಿರುವ ಹಿಂದಿನ ವಿಜ್ಞಾನ  ಆತ್ಮಜ್ಞಾನವಾಗಿದೆ. ಆತ್ಮಜ್ಞಾನದಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದಾಗ  ನಮ್ಮ ಮೂಲ ಶಿಕ್ಷಣ ಆತ್ಮಜ್ಞಾನದೆಡೆಗೆ  ನಡೆದರೆ ಮಕ್ಕಳ ಭವಿಷ್ಯ ಉತ್ತಮವಾಗಿರಬಹುದಲ್ಲವೆ? ಒಳಗೆ ಅಡಗಿರುವ ಜ್ಞಾನಶಕ್ತಿ ಗುರುತಿಸಿ  ಶಿಕ್ಷಣ ನೀಡಿದರೆ‌ ಸರ್ವಜ್ಞ ರಾಗದಿದ್ದರೂ ವಿಜ್ಞಾನಿಗಳಾಗಬಹುದು.ಇಲ್ಲಿ ವಿಜ್ಞಾನ ವಿಶೇಷವಾದ ಜ್ಞಾನ. ಒಳಗಿನ  ಜ್ಞಾನದ ಜೊತೆಗೆ ಹೊರಗಿನ ಜ್ಞಾನ ಹೊಂದಿಕೊಂಡು ನಡೆದಾಗ  ಪರಿಪೂರ್ಣತೆ ಕಾಣಬಹುದು.
ಇಂದು ಒಳಗಿನ ಜ್ಞಾನಕ್ಕೆ ವಿರುದ್ದದ ಹೊರಗಿನ ಶಿಕ್ಷಣವೇ ಮಕ್ಕಳನ್ನು ದಾರಿತಪ್ಪಿಸಿ ನಡೆಸಿರೋದೇ ಅಜ್ಞಾನಕ್ಕೆ ಕಾರಣ. ಇದನ್ನು  ಯಾವ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲು ಸಾಧ್ಯ?
ಮಕ್ಕಳ ಶಿಕ್ಷಣದ ವಿಚಾರ ಬಂದಾಗ ಹೇಳೋದು ಬಹಳ ದೊಡ್ಡ ಅಧಿಕಾರಿ ಆಗುವನು, ಇಂಜಿನಿಯರಿಂಗ್, ಡಾಕ್ಟರ್ ವಿಜ್ಞಾನಿ ಆಗುವನೆಂದರೆ ಬಹಳ ಸಂತೋಷ. ಅದೇ ಓದು ಹತ್ತದಿದ್ದರೆ ದನ ಕಾಯೋ ಎಮ್ಮೆ ಮೇಯಿಸೋ,ಮಠ ಸೇರೋ, ಕೂಲಿ ಮಾಡೋ‌  ಎನ್ನುವ  ವ್ಯಂಗ್ಯ ಪದವನ್ನು ಬಳಸುವವರೊಮ್ಮೆ  ಚಿಂತನೆ ಮಾಡಿದರೆ ಶ್ರೀ ಕೃಷ್ಣ ನಿಗೆ ಗೋವಿಂದ ಎನ್ನುವರು, ಗೋಸೇವೆಯಿಂದ ಕೋಟ್ಯಾಂತರ ದೇವತೆಗಳ ಸೇವೆ ಮಾಡಿದಂತಾಗಿ ಋಣ ಕಳೆಯುತ್ತದೆ. ಸೇವೆಯಲ್ಲಿ ಕೂಲಿಯೂ ಒಂದು. ಅಂದಿನ ದಿನದ ಹಣದಲ್ಲಿ ತನ್ನ ಸಂಸಾರದ  ಹೊಟ್ಟೆ ತುಂಬಿಸುವುದರ ಮೂಲಕ ಯಾವ‌ಭ್ರಷ್ಟತೆಯಿಲ್ಲದೆ ಹಣ ಸಂಗ್ರಹಣೆಯಿಲ್ಲದೆಯೂ
ಕೂಲಿಮಾಡುವವರ ಸಂಸಾರದಲ್ಲಿ ಸಂತೋಷವಿರುವುದು, ಮಠಗಳಲ್ಲಿ ನಡೆಸುವ ಧಾರ್ಮಿಕ ಕ್ರಿಯೆಗಳಿಂದಲೇ ಸಮಾಜದಲ್ಲಿ ಧರ್ಮ ನಿಂತಿರೋದು. ಬಡಬ್ರಾಹ್ಮಣ,ಬಡರೈತ,ಬಡಸೈನಿಕ ಬಡ ಶಿಕ್ಷಕ ಎಂದರೆ ಅಜ್ಞಾನ. ಅವರ ಜ್ಞಾನವನ್ನು ಗುರುತಿಸದ ಕಣ್ಣಿಗೆ  ಹಣವಷ್ಟೆ ಕಾಣೋದು. ಹೀಗಾಗಿ ಸಾಲ ಮಾಡಿಯಾದರೂ ಹೊರಗಿನ ಶಿಕ್ಷಣ ಪಡೆದಯಾವ ಇಂಜಿನಿಯರಿಂಗ್, ಡಾಕ್ಟರ್ ಇನ್ನಿತರ ಅಧಿಕಾರಿಗಳು  ನೇರವಾಗಿ   ಯಾರ ಸಹಕಾರ,ಹಣ,
ಸಾಲವಿಲ್ಲದೆ ಓದಿ ಮೇಲೇರಿಲ್ಲ.ಸ್ವತಂತ್ರ ವಾಗಿ ಜೀವನ‌ ನಡೆಸಲು  ಹೊರಗಿನ ಜ್ಞಾನ ಕ್ಕಿಂತ ಒಳಗಿನ ಜ್ಞಾನವೇ ಆಸ್ತಿಯಾಗಿದೆ. ಅದನ್ನು ಹೆಚ್ಚಿಸಿಕೊಂಡು  ಎಲ್ಲರಿಗೂ  ಉಪಯೋಗವಾಗುವ  ಕೆಲಸ ಮಾಡುವುದರಿಂದ ಭವಿಷ್ಯ ಚೆನ್ನಾಗಿ ಇರುತ್ತದೆ.ದುರ್ಭಳಕೆ  ಮಾಡಿಕೊಂಡರೆ  ಭವಿಷ್ಯ ಹಾಳಾಗಿರುವುದು.

ಅಸುರರೊಳಗಿರುವ ಸುರರನ್ನು ಬಿಡಿಸೋದು ಮುಖ್ಯ

ಒಂದು ಸೂಕ್ಮವಾಗಿರುವ ಅಧ್ಯಾತ್ಮ ಸತ್ಯ  ಗಮನಿಸಿದರೆ ಭಗವಂತ ಮಾನವನಿಗೆ ಪಾಠ ಕಲಿಸುವುದಕ್ಕೆ ಅಸುರರೊಳಗೆ ಸುರರನ್ನು,ಸುರರೊಳಗೆ ಅಸುರರನ್ನು ಹಿಡಿದು ಆಟವಾಡಿಸಿ ಕೊನೆಗೆ ಸುರರನ್ನು ಗೆಲ್ಲಿಸೋದಾಗಿರತ್ತೆ.ಆದರೆ  ಮಾನವನಿಗೆ  ಸುರರತತ್ವ ಅಸುರರ ತಂತ್ರವನ್ನು ಗಮನಿಸುವ ಜ್ಞಾನ ಬೇಕಷ್ಟೆ. ಇಲ್ಲವಾದರೆ  ಎಲ್ಲರಲ್ಲಿಯೂ ಅಡಗಿರುವ ಅಸುರ ಶಕ್ತಿ ಜಾಗೃತವಾಗಿ ಜೀವ ಹೋದರೂ ಸತ್ಯ ತಿಳಿಯದು. ಇದನ್ನೇ ಮಾಯೆ ಎಂದರು. ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲ  ಆದರೂ ಹೋರಾಟ ಹಾರಾಟ ಮಾರಾಟಕ್ಕೆ  ಬೆಲೆ ಹೆಚ್ಚು. ಇದು ಕೂಡ ಭಗವಂತನ ಆಟ. ಹಾಗಾದರೆ ಭಗವಂತನಿರೋದೆಲ್ಲಿ ಎಂದರೆ ಚರಾಚರದಲ್ಲಿರುವ ಅಣುರೇಣುತೃಣಕಾಷ್ಟದೊಳಗೇ  ಸೂಕ್ಮವಾಗಿರುವ  ಶಕ್ತಿ.ಸೂಕ್ಮ ಶಕ್ತಿಯನ್ನು ಕಣ್ಣು ನೋಡದೆ  ಪ್ರತಿಕ್ಷಣ ಅನುಭವಿಸುತ್ತಿದ್ದರೂ  ನಾನೇ ಬೇರೆ ನೀನೇ ಬೇರೆ ಎನ್ನುವ ದ್ವಂದ್ವವೇ ದ್ವೇಷವಾಗಿ‌ ಬದಲಾದಾಗ ಸುರಾಸುರರ ಕಾಳಗ  ನಡೆದಿರೋದನ್ನು ಪುರಾಣ ತಿಳಿಸಿದೆ.  ದೇವತೆಗಳು ಮಾಡಿದ್ದನ್ನೇ ಅಸುರರು ಮಾಡಿದರೆ ತಪ್ಪೇನು? ಎನ್ನುವ ಪ್ರಶ್ನೆ ಎದ್ದಾಗ  ದೇವತೆಗಳು  ಆತ್ಮಕ್ಕೆ ಬೆಲೆಕೊಟ್ಟು ಸತ್ಯ ಧರ್ಮದ ಪರವಿದ್ದರೆ ಅಸುರರು  ದೇಹಕ್ಕೆ ಬೆಲೆಕೊಟ್ಟು  ಅಧರ್ಮ ಅಸತ್ಯದಿಂದ  ಭೂಮಿಯನ್ನು ಆಳುವರಷ್ಟೆ ವ್ಯತ್ಯಾಸ.
ಈಗಲೂ  ಪಕ್ಷ ಪಕ್ಷಗಳ ನಡುವೆ ನಡೆದಿರುವ   ರಾಜಕೀಯದ ಆಟದಲ್ಲಿ  ಜನರನ್ನು  ಯಾರು ಯಾವ ದಿಕ್ಕಿನಲ್ಲಿ ನಡೆಸಿದ್ದಾರೆಂದು ಸೂಕ್ಮವಾಗಿ ಗಮನಿಸಿದರೆ  ದೇಶದ ಪರ ನಿಂತವರಿಗಿಂತ ದೇಶದ ವಿರುದ್ದ ನಿಂತವರಿಗೇ ಸಹಕಾರ ಹೆಚ್ಚು. ಕಾರಣ ವಿದೇಶದ ಸಾಲ ಬಂಡವಾಳ, ವ್ಯವಹಾರದಿಂದ  ಸಾಕಷ್ಟು  ಹಣದ ಹರಿವು ಒಳಗಾದರೂ ಅದನ್ನು  ತೀರಿಸಲು  ಪ್ರಜೆಗಳೇ ಕಷ್ಟಪಟ್ಟು ದುಡಿಯಲೇಬೇಕೆಂಬುದು  ಅಧ್ಯಾತ್ಮ ಸತ್ಯ.ಹೀಗಾಗಿ ಅದರ ಬದಲಾಗಿ ನಮ್ಮ ನಮ್ಮ ಮೂಲ ಧರ್ಮ ಕರ್ಮ ದೆಡೆಗೆ ಹಿಂದಿರುಗಿ  ಸ್ವತಂತ್ರವಾಗಿ  ದುಡಿದು ಸೇವೆ ಮಾಡಿದವರ ಸಾಲ ಇದ್ದಲ್ಲಿಯೇ ತೀರಬಹುದು.ಇದಕ್ಕಾಗಿ ವಿದೇಶದವರೆಗೆ ಹೋಗುವ ಅಗತ್ಯವೇ ಇರೋದಿಲ್ಲ ಎಂದಾಗ ಆತ್ಮನಿರ್ಭರ ಭಾರತ. ಇದನ್ನು ಒಪ್ಪದವರು  ವಿರೋಧಿಸಿ  ಪಕ್ಷ ತೊರೆದರೆ  ದೇಶ ಒಂದೇ ಇರೋದು.ದೇಶದ ಸಾಲ ತೀರಿಸಲು ದೈವತತ್ವ ಅಗತ್ಯವಿದೆ. ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆಯ ಮಂತ್ರ ಹೇಳೋದು ಸುಲಭ ಅದರಂತೆ ನಡೆಯದಿದ್ದರೆ ತಂತ್ರದಿಂದ ಅತಂತ್ರಜೀವನ. ಒಟ್ಟಿನಲ್ಲಿ ಎಲ್ಲರಲ್ಲಿಯೂ ದೇವಾಸುರರ ಗುಣವಿದೆ ಎಂದಾಗ  ದೇವರನ್ನು  ಬೇಡೋರಲ್ಲಿ ದೈವಸಂಪತ್ತಿದೆ ಎಂದರ್ಥ ವಲ್ಲ. ಸಂಪತ್ತು ಸತ್ಯ ಜ್ಞಾನದಿಂದ ಸಂಪಾದಿಸಿದರೆ  ದೈವಶಕ್ತಿ ಹೆಚ್ಚುವುದು. ಅಸತ್ಯದಿಂದ ಸಂಪಾದಿಸಿದರೆ ಅಸುರಿಶಕ್ತಿ  ಹೆಚ್ಚುವುದಷ್ಟೆ ವ್ಯತ್ಯಾಸ. ದೇವರಿರೋದೆಲ್ಲಿ? ಸತ್ಯದಲ್ಲಿ ಧರ್ಮ ದಲ್ಲಿ. ಸತ್ಯ ಒಂದೇ ಅದು ನಮ್ಮೊಳಗೇ ಇರುವ ಆತ್ಮಸಾಕ್ಷಿಯಾಗಿದೆ. ಯಾವಾಗ ಮಾನವ ಅಸತ್ಯದಿಂದ. ಮುಂದೆ ನಡೆಯುವನೋ ಸತ್ಯ ಹಿಂದೆ ಉಳಿದು  ಅರ್ಥ ವಾಗದಷ್ಟೆ.ಹಾಗಂತ ಸತ್ಯ ಒಳಗಿಲ್ಲ ಎಂದಲ್ಲ ಇದ್ದರೂ  ಅರ್ಥ ವಾಗದಷ್ಟು ಅಸತ್ಯ ಒಳಗಿದೆ ಎಂದಾಗುತ್ತದೆ. ಹಾಗಾಗಿ ಜಗತ್ತನ್ನು ಮಿಥ್ಯ ಎಂದರು.ಬ್ರಹ್ಮ ಸತ್ಯ ಎಂದರು.ಬ್ರಹ್ಮ ಕಣ್ಣಿಗೆ ಕಾಣದು ಜಗತ್ತು ಕಾಣುತ್ತದೆ ಆದರೂ ಶಾಶ್ವತವಲ್ಲ.ಬದಲಾಗುವ ಜಗತ್ತಿನಲ್ಲಿ ಬ್ರಹ್ಮಜ್ಞಾನ ಹುಡುಕಲಾಗದು.ಹೀಗಾಗಿ ಒಳಗಿನ‌ಜಗತ್ತನ್ನು ಒಳಗೇ ಹುಡುಕಿಕೊಳ್ಳಲು ಯೋಗದೆಡೆಗೆ ನಡೆದರು. ಯೋಗವೆಂದರೆ ಆಸನವಲ್ಲ ಸೇರುವುದು ಕೂಡುವುದು ಒಂದಾಗುವುದು.
ಪರಮಾತ್ಮನ ಜೀವಾತ್ಮ ಒಂದಾಗಲು ಒಳಗಿನ ಸತ್ಯ ಧರ್ಮ ದಿಂದ ಕೂಡಿಕೊಳ್ಳುವುದೇ ಯೋಗ.
ಹೊರಗಿನ ಸತ್ಯ ಧರ್ಮ ದ ಬೇಧಭಾವದಲ್ಲಿ  ಕೂಡುವುದು ಕಷ್ಟ ಹಾಗಾಗಿ ನಾವು ಪುಣ್ಯದ ಕೆಲಸ ಮಾಡಿ ಕೂಡಬೇಕು
ಪಾಪದ ಕೆಲಸ ಕಳೆದು ನಡೆಯಬೇಕು, ಜ್ಞಾನವನ್ನು ಗುಣಿಸಿಕೊಂಡು ಅಜ್ಞಾನವನ್ನು ಭಾಗಿಸಿಕೊಳ್ಳುವ ಲೆಕ್ಕಾಚಾರದ  ವ್ಯವಹಾರದಲ್ಲಿ  ಸತ್ಸಂಗ ಸಂಘಟನೆಗಳನ್ನು ಸೃಷ್ಟಿ ಮಾಡಿದರೆ ಸ್ಥಿತಿಯೂ ಉತ್ತಮ ಮುಕ್ತಿಯೂ ಸುಗಮ.
ಇಲ್ಲಿ ಲೆಕ್ಕಾಚಾರದಲ್ಲಿ  ಕೇವಲ ಹಣ ಮಾತ್ರ ಕಾಣುತ್ತಾ ಅಜ್ಞಾನ ಅಧರ್ಮ ಅನ್ಯಾಯ ಭ್ರಷ್ಟಾಚಾರ ವಿದ್ದರೂ ಸರಿ ನಾನು ಬೆಳೆಯಬೇಕೆಂದರೆ ಒಳಗಿರುವ  ಜ್ಞಾನ ಕುಸಿಯುತ್ತಾ ಜೀವ ಹೋಗುತ್ತದೆ .ಪರಮಾತ್ಮನಿಗೇನೂ ನಷ್ಟವಿಲ್ಲ ಕಾರಣ ಅವನೊಳಗೇ ಎಲ್ಲಾ ಇರೋವಾಗ  ಒಮ್ಮೆ ಮೇಲೆ ಬಂದರೆ  ಇನ್ನೊಮ್ಮೆ ಕೆಳಗಿಳಿಯುವರಷ್ಟೆ.ಕೆಳಗಿದ್ದವರು ಮೇಲೆ ಬರುವರು.ಹಾಗೆ ಸುರರ ಅಹಂಕಾರ ಮಿತಿಮೀರಿದಾಗ ಅಸುರಶಕ್ತಿ ಬೆಳೆದರೆ ಅಸುರರ ಅಹಂಕಾರ ಬೆಳೆದಾಗ ಸುರರ ಜ್ಞಾನ ಮೇಲೇರುವುದು.ತಲೆ ಸರಿಯಿದ್ದರೆ ಕಾಲೂ ಸರಿದಾರಿಗೆ ನಡೆಯಬಹುದು. ತಲೆಯೇ ಸರಿಯಿಲ್ಲವಾದರೆ  ನಡಿಗೆ ಸರಿಯಿರದು. ಒಂದು ಶರೀರದೊಳಗೆ ಎಲ್ಲಾ ಅಂಗಾಂಗಗಳಿಗೂ ಅದರದೇ ಆದ ವಿಶೇಷಶಕ್ತಿಯಿರುತ್ತದೆ. ಹಾಗಂತ ಮಾನವನಿಗೆ ಪ್ರತಿಕ್ಷಣ  ಅದನ್ನು ನೋಡಿಕೊಂಡು ಬದುಕಲಾಗದು. ಅಂಗಕ್ಕೆ ಸಮಸ್ಯೆಯಾದಾಗಲೇ ಪರೀಕ್ಷೆ ನಡೆಯುತ್ತದೆ ಅದಕ್ಕೆ ಕಾರಣ ತಿಳಿದು ಉಪಚಾರ ಮಾಡಬಹುದು. ಇದು ಎಲ್ಲರಿಗೂ ಕಷ್ಟ ಹೀಗಾಗಿ ನಮ್ಮ ಗುಣದ ಬಗ್ಗೆ ನಾವೇ ಚಿಂತನೆ ಮಾಡಿದರೆ  ಒಳಗೆ ಯಾವ ಶಕ್ತಿಯಿದೆ ನಡೆಸುತ್ತಿದೆ ಎನ್ನುವ ವಿಚಾರ ಅರ್ಥ ವಾಗುತ್ತದೆ.
ಹೊರಗಿನವರು ನಮ್ಮನ್ನು ಸಾಕಬೇಕು,ನೋಡಿಕೊಳ್ಳಬೇಕು ಎನ್ನುವ ಸ್ಥಿತಿಗೆ ಬಂದಿದೆ ಎಂದರೆ  ನಮ್ಮಲ್ಲಿ ರೋಗ ಹೆಚ್ಚಾಗಿದೆ ಎಂದರ್ಥ. ಆ ರೋಗಕ್ಕೆ ಔಷಧ ಒಳಗಿದ್ದರೆ ಉತ್ತಮ ಹೊರಗೇ  ಇದ್ದರೆ  ಹೊರಗಿನ ರೋಗವೇ  ಒಳಗಿದೆ ಎಂದರ್ಥ.
ಇದರಲ್ಲಿ ಭ್ರಷ್ಟಾಚಾರ ವೂ ಒಂದು ರೋಗವೇ. ಇದಕ್ಕೆ ಶಿಷ್ಟಾಚಾರದ ಔಷಧವಿದ್ದರೆ  ಉತ್ತಮ ದೇಹಾರೋಗ್ಯ ಸಾಧ್ಯ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತಾಗುವಷ್ಟು ಮುಳ್ಳು  ಒಳಗೆ ಬೆಳೆಸಿಕೊಂಡರೆ  ಹೆಚ್ಚು ನೋವಾಗುತ್ತದೆ.ಹೀಗೇ ನಾವು  ಅನೇಕ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು  ಸಮಸ್ಯೆಯ ಮೂಲ ತಿಳಿಯುವುದು ಅಗತ್ಯವಿದೆ. ಮನೆಯೊಳಗೆ  ಸಮಸ್ಯೆಯಿದ್ದರೆ ಒಳಗೇ ಪರಿಹಾರವಿದ್ದರೆ ಉತ್ತಮ. ಹೊರಗಿನಿಂದ ಸಮಸ್ಯೆ ಒಳಗೆ ಬಂದಾಗ ಸಮಸ್ಯೆಯಿಂದ ದೂರವಿರೋದಷ್ಟೂ ಉತ್ತಮ.  ಮಾನವನ ಸಮಸ್ಯೆಗೆ  ಅವನ ಕರ್ಮ ಋಣವೇ ಕಾರಣವೆಂದಾಗ ಸತ್ಕರ್ಮದಿಂದ ಋಣಮುಕ್ತನಾಗೋದೆ ಧರ್ಮ.  ಮಹಾತ್ಮರಾಗೋದಕ್ಕೆ  ಹೊರಗೆ ನಡೆಯಬೇಕೆಂದಿಲ್ಲ ಒಳಗೆ ನಡೆಯಬೇಕು. ಆತ್ಮಾವಲೋಕನ ನಕ್ಕೆ ಸರ್ಕಾರದ ಹಣ. ಬೇಡ ಜ್ಞಾನಿಗಳ ಸಹಕಾರ ಅಗತ್ಯ. ಜ್ಞಾನಿಗಳೆನ್ನಿಸಿಕೊಂಡವರೆ ರಾಜಕೀಯದ ಸುಳಿಯಲ್ಲಿದ್ದರೆ  ಸರ್ಕಾರದ ಗತಿ ಏನು?
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ  ಎನ್ನುವ ಪ್ರಶ್ನೆಗೆ ಉತ್ತರ  ಅಜ್ಞಾನಕ್ಕೆ ಸ್ವತಂತ್ರ ವಿದೆ. ಅಜ್ಞಾನವನ್ನು ಹಣಕೊಟ್ಟು ಖರೀದಿಸುತ್ತಿದ್ದಾರೆ. ಅದರಿಂದ ಇನ್ನಷ್ಟು ಸಾಲ ಬೆಳೆದು ಆತ್ಮಹತ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಜ್ಞಾನದ ಶಿಕ್ಷಣ  ನೀಡೋದು.ಶಿಕ್ಷಕರು ಗುರುಗಳು  ಸತ್ಯ ಧರ್ಮದ ಪಾಠ  ಕಲಿತು ಕಲಿಸೋದು.ಕೆಲವರಿದ್ದಾರೆ ಅವರನ್ನು ಕೇವಲವಾಗಿಸಿ ಕಾಣೋರು ಬೆಳೆದಿದ್ದಾರೆಂದರೆ  ಕಲಿಗಾಲದ ಮಹಿಮೆಯೆನ್ನಬೇಕೋ ಹಿರಿಮೆ ಎನ್ನಬೇಕೋ?
ಹಿಂದೆ  ಯಾವುದೇ ಭೌತಿಕಸುಖವಿರದೆ  ಶಾಂತಿಯಿಂದ ಜ್ಞಾನ ಪಡೆಯುತ್ತಿದ್ದರು .ಈಗ ಭೌತಿಕಾಸಕ್ತಿ ಮಿತಿಮೀರಿ ಅಜ್ಞಾನದಲ್ಲಿ ಸುಖಕ್ಕಾಗಿ  ಹಾತೊರೆಯುವ ಜೀವನವಿದೆ. ಯಾವುದೂ ಅತಿಯಾದರೆ ಗತಿಗೇಡು. ಸುಖದು:ಖವಿಲ್ಲದ ಜೀವನ ಜೀವನವೇ ಅಲ್ಲ. ಅಲ್ಲ ಅಲ್ಲ ಎನ್ನುವುದರಿಂದ ಏನೂ ಸಿಗೋದಿಲ್ಲ. ಹಾಗಾಗಿ ಇದೆ ಎಂದುಕೊಂಡರೆ ಎಲ್ಲಾ ಇದೆ. ಇಲ್ಲವೆಂದರೆ ದೇವರೇ ಇಲ್ಲವೆನ್ನಬಹುದು.ಆದರೆ ತತ್ವ ಒಂದೇ  ಇರುತ್ತದೆ. ಒಂದೇ ಭೂಮಿಯಲ್ಲಿ          ದೇವಾಸುರರು   ಮಹಿಳೆ ಮಕ್ಕಳು ಪುರುಷರು  ಒಂದಾಗಿ ಬಾಳೋದು  ಯೋಗಜ್ಞಾನವಿರಬೇಕಷ್ಟೆ. ಅಯೋಗ್ಯರಿಗೆ ಯೋಗ್ಯ ಶಿಕ್ಷಣ ನೀಡುವುದಕ್ಕೂ ಯೋಗಬೇಕು.‌ಕಾಲ ಕೂಡಿಬಂದಾಗ ಆಗುತ್ತದೆ  ಹಾಗಾಗಿ ಮಾನವ ಕಾರಣಮಾತ್ರನಾದರೂ ಎಲ್ಲದ್ದಕ್ಕೂ ಕಾರಣನಾಗಿಯೇ ಇದ್ದಾನೆ. ಇದಕ್ಕೆ ಸ್ತ್ರೀ ಶಕ್ತಿಯೂ ಸೇರಿದಾಗ  ಕಾರಣಾಂತರ ಸಮಸ್ಯೆ ಹೆಚ್ಚುವುದು. ಪರಿಹಾರ ಒಳಗೇ ಹುಡುಕಿಕೊಂಡರೆ ಸಿಗುವುದೆನ್ನುವ ಕಾರಣಕ್ಕಾಗಿ ಅಧ್ಯಾತ್ಮ ಜಗತ್ತು  ಬೆಳೆದಿದೆ.

ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದು ಒಂದು ಕಲೆ

*ಸಂಬಂಧಗಳನ್ನು ಜೋಡಿಸುವುದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸಾಧನೆ. ಜೀವನದಲ್ಲಿ ನಾವು ಎಷ್ಟು ಒಳ್ಳೆಯವರು,ಎಷ್ಟು ಕೆಟ್ಟವರು ಎಂಬುದು ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ನಮ್ಮೆಲ್ಲರ "ಪರಮಾತ್ಮ" ಮತ್ತು ನಮ್ಮ "ಅಂತರಾತ್ಮ"*
 
ಸಂಬಂಧ ಗಳು ದ್ವೇಷದಿಂದ ಕೂಡಿಕೊಂಡರೆ  ಸಮಸ್ಯೆಗಳನ್ನು ಕೂಡಿಸಿಕೊಂಡಂತೆ. ಇದು ಖಾಸಗಿ ಜೀವನದಲ್ಲಿ ನಡೆಯೋದಿಲ್ಲ ರಾಜಕೀಯ ಜೀವನದಲ್ಲಿ ನಡೆಯುತ್ತದೆ. ಅಂದರೆ ಒಂದು ಪಕ್ಷವನ್ನು  ನಾಶ ಮಾಡಿ ಇನ್ನೊಂದು ಪಕ್ಷ ಕಟ್ಟುವಾಗ. ಬೇರೆ ಸಣ್ಣ ಪಕ್ಷಗಳ ಸಹಕಾರ ಸಹಾಯ ಬೇಕು. ಇಂತಹ ಸ್ಥಿತಿಯಲ್ಲಿ ಉತ್ತಮ ಉದ್ದೇಶವನ್ನು ಇಟ್ಟುಕೊಂಡವರ ಸಂಬಂಧ ವಿದ್ದರೆ ಉತ್ತಮ ಪಕ್ಷದಿಂದ  ಭವಿಷ್ಯದಲ್ಲಿ  ಪ್ರಗತಿ ಕಾಣಬಹುದು. ಯಾವಾಗ ದ್ವೇಷದಿಂದ  ಕೂಡಿದ್ದನ್ನು ಸೇರಿಸಿಕೊಂಡೆವೋ ಆಗ ನಮ್ಮಲ್ಲಿದ್ದ ಒಗ್ಗಟ್ಟೂ ಮರೆಯಾಗುತ್ತಾ ಇಡೀ ಪಕ್ಷದೊಳಗೇ ಭಿನ್ನಾಭಿಪ್ರಾಯ ದ್ವೇಷ ಅಸೂಯೆಯ ಹೊಗೆ ಹೆಚ್ಚಾಗುತ್ತಾ ಬೆಂಕಿಯಾಗಿ ಉರಿದು ತಾವೂ ನಾಶವಾಗೋದರ ಜೊತೆಗೆ  ಸುತ್ತಮುತ್ತಲಿನ ಪಕ್ಷಗಳೂ  ನಾಶವಾಗುತ್ತದೆ. ಇದಕ್ಕೆ ಪರಿಹಾರವೆಂದರೆ ನಮ್ಮ ದ್ವೇಷ ವನ್ನು ಬಿಟ್ಟು  ಉತ್ತಮ ಸಂಬಂಧ ವನ್ನು  ನಿಸ್ವಾರ್ಥ ನಿರಹಂಕಾರದಿಂದ  ಕೂಡಿಸಿಕೊಳ್ಳುವುದಾಗಿದೆ.ಇದು ಹೊರಗಿನ ರಾಜಕೀಯ ದಲ್ಲಿ ಕಷ್ಟವಿದೆ.ಒಳಗಿರುವ ರಾಜಯೋಗದಿಂದ ಸಾಧ್ಯವಿದೆ. ದ್ವೇಷದಿಂದ ಏನೂ ಸಾಧನೆ ಮಾಡಲಾಗದು. ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತೆ ಒಂದು ಪಕ್ಷ ಕಟ್ಟುವುದಕ್ಕೆ ಧರ್ಮ ಸತ್ಯವನರಿಯುವುದು ಬಹಳ ಕಷ್ಟದಕೆಲಸ.ಕಟ್ಟಿದ ಮೇಲೆ ಅದನ್ನು  ನಡೆಸುವುದು ಬಹಳ ಕಷ್ಟ ಕಾರಣ ನಡೆಯುವಾಗ‌ ಮಧ್ಯೆ ಬರುವ ಅಧರ್ಮ, ಅಸತ್ಯವನ್ನು  ದ್ವೇಷ ಮಾಡಿದರೆ ಅವು ಮೈಮೇಲೆರಗಿ ಬೀಳಿಸುವ  ಕೆಲಸ ಮಾಡೋದು ಸಹಜ ಹೀಗಾಗಿ ಅವುಗಳನ್ನು ನಿರ್ಲಕ್ಷಿಸಿ   ಶಾಂತವಾಗಿರೋದಕ್ಕೆ ಮಹಾತ್ಮರಿಗಷ್ಟೆ ಸಾಧ್ಯ. 
 ಭಗವಾನ್ ಬುದ್ದ ಅಂಗುಲಿಮಾಲರ ಒಂದು ಕಥೆ ಇದಕ್ಕೆ ಸಾಕ್ಷಿ. ಹಾಗೆಯೇ ಇನ್ನೂ ಕೆಲವು ಮಹಾತ್ಮರ ಜೀವನದಲ್ಲಿಯೂ  ಇಂತಹ ಸನ್ನಿವೇಶ ನಡೆದು ದುಷ್ಟರೂ ಶಿಷ್ಟರಾಗಿರುವ ಕಥೆಗಳಿವೆ. ಹಾಗಂತ ಈಗಿನ ಪರಿಸ್ಥಿತಿ ಯಲ್ಲಿ ಇಷ್ಟೊಂದು ಶಾಂತಿದೂತರಿಲ್ಲದಿದ್ದರೂ ಶಾಂತಿಯನ್ನು ಕಾಪಾಡುವವರ ಸಂಬಂಧ ಬೆಳೆಸಿಕೊಂಡರೆ ನಮ್ಮೊಳಗೆ ಇನ್ನಷ್ಟು ಶಾಂತಿ ಹೆಚ್ಚುವುದಲ್ಲವೆ?
ಕ್ರಾಂತಿಗೆ ಹೆಚ್ಚು ಮಂದಿ ಕೈ ಜೋಡಿಸಿಕೊಂಡು ಹೊರಗೆ ಬಂದರೆ  ಒಳಗಿದ್ದ ಸತ್ಯ ಧರ್ಮ ದ ಸೂಕ್ಮ ತೆ ಅರ್ಥ ವಾಗದೆ ಜೀವ ಹೋಗುತ್ತದೆ. ಎಲ್ಲಿಯವರೆಗೆ  ಆತ್ಮಕ್ಕೆ ಶಾಂತಿ ಸಿಗದೆ ಜೀವ ಹೋಗುವುದೋ ಮತ್ತದೇ  ಸ್ಥಿತಿಯಲ್ಲಿ ಜನ್ಮ ಪಡೆದು ಅದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತದೆ.ಹೀಗಾಗಿ ನಮ್ಮ ಸನಾತನ ಧರ್ಮ ವು ಶಾಂತಿಯನ್ನು ಬಯಸುತ್ತದೆ. ದುಷ್ಟರನ್ನು ಶಾಂತಿಯಿಂದಲೂ ಗೆಲ್ಲಬಹುದೆನ್ನುವುದು ಸತ್ಯವಾದರೂ ರಾಜಕೀಯಕ್ಕೆ ಇಳಿದ ಮನಸ್ಸಿನಲ್ಲಿ ಶಾಂತಿ ಯಿರದು.ಹಾಗಾಗಿ ರಾಜಕೀಯದಿಂದ ಶಾಂತಿ ಸೃಷ್ಟಿ ಮಾಡಲು ಕಷ್ಟವಿದೆ.ಆದರೆ ಧರ್ಮ ರಕ್ಷಣೆಗಾಗಿ ಹೋರಾಟ ಮಾಡುವಾಗ ಧರ್ಮ ಸೂಕ್ಮವನ್ನರಿಯುವುದು ಬಹಳ ಅಗತ್ಯವಾಗಿದೆ.ಇತ್ತೀಚೆಗೆ ಸಾಕಷ್ಟು ತಿಳಿದವರೂ ದುಷ್ಟರ ಸಂಬಂಧ ಮಾಡಿಕೊಂಡು  ದಾರಿತಪ್ಪಿರುವುದು ಸತ್ಯ. ಯಾರೋ ಹೊರಗಿನವರು ಏನೋ ತಿಳಿಸಿದರೆಂದು ನಂಬಿ ನಮ್ಮವರನ್ನೇ ಅಪಾರ್ಥ ಮಾಡಿಕೊಂಡು ಧರ್ಮ ಸತ್ಯ ಬಿಟ್ಟು ಹೊರಗೆ ನಡೆದು ಹೊರಗಿನ ಸಂಬಂಧ ಗಟ್ಟಿಗೊಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಒಳಗಿನ ಶಕ್ತಿಯ ವಿರುದ್ದ ನಡೆದಂತೆಲ್ಲಾ  ಆತ್ಮಹತ್ಯೆಗಳೇ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಅಷ್ಟು ಬೇಗ ಬೆಳೆಯೋದಿಲ್ಲ ಹಾಗಾಗಿ ಇತ್ತೀಚೆಗೆ ಯುವಪೀಳಿಗೆಯಲ್ಲಿ ಆತ್ಮವಿಶ್ವಾಸ ಕುಸಿದು ಅಹಂಕಾರ ಮಿತಿಮೀರಿದೆ. ತನ್ನ ತಾನರಿಯದ ಜೀವಕ್ಕೆ ಪರಕೀಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಇನ್ನು ಪರಮಾತ್ಮ ಅರ್ಥ ಆಗುವನೆ? ಆತ್ಮನಿರ್ಭರ ಭಾರತಕ್ಕೆ ಅಧ್ಯಾತ್ಮಿಕ ಸಂಬಂಧ ಅಗತ್ಯವಿದೆಯೇ ಹೊರತು ಭೌತಿಕದ ಸಂಬಂಧ ವಲ್ಲ. ಮೊದಲು ಆಂತರಿಕ ಶುದ್ದಿಗಾಗಿ ಮನಸ್ಸನ್ನು ಒಳಗೆಳೆದುಕೊಂಡು ಒಳಗೇ ಅಡಗಿರುವ ನಮ್ಮ ಹಿತಶತ್ರುಗಳಾದ ಅಹಂಕಾರ ಸ್ವಾರ್ಥ ಪೂರಿತ ಸಂಬಂಧ ದಿಂದ ದೂರವಾದರೆ  ನಿಜವಾದ ಮಿತ್ರ ಒಳಗಿದ್ದಾನೆ. ಅವನೆ ಪರಮಾತ್ಮ. ಆ ಪರಮಾತ್ಮನ ಜೀವಾತ್ಮ ಸೇರೋದೆ  ಯೋಗ ಸಂಬಂಧ.
ನಮ್ಮ  ಹಿಂದಿನ ಕಾಲದಲ್ಲಿ ಹಿರಿಯರು ಹತ್ತಿರದ ಸಂಬಂಧ ಕ್ಕೆ ಹೆಚ್ಚು ಹತ್ತಿರವಾಗೋದಕ್ಕೆ ಕಾರಣವಿಷ್ಡೆ ಇದು ಹಿಂದಿನ ಜನ್ಮದ ಋಣ ಸಂಬಂಧ. ಇದನ್ನು ತೀರಿಸಲು ನಮ್ಮ ಹಿಂದಿನ ಧರ್ಮ ಕರ್ಮ ವೂ ನಮ್ಮ ಹತ್ತಿರವೇ ಇದ್ದಾಗ ಸುಲಭವಾಗಿ ಋಣ ತೀರಿಸಲು ಸಾಧ್ಯವಾಗಿತ್ತು.ಯಾವಾಗ ಹೊರಗಿನವರ ಮಧ್ಯೆ ಪ್ರವೇಶವಾಗಿ ಅಂತರ ಬೆಳೆಯಿತೋ‌ ಹಣ ಮಾತ್ರ ಕಣ್ಣಿಗೆ ಕಾಣುತ್ತಾ ಜ್ಞಾನ ಲೆಕ್ಕಿಕ್ಕಿಲ್ಲವಾಗಿ ಹೆಣ್ಣು ಹೊನ್ನು ಮಣ್ಣಿನ ದಾಸರಾಗಿ ಸಂಬಂಧ ಟೊಳ್ಳಾಗುತ್ತಾ  ಭೂಮಿಗೆ ಜೀವ ಭಾರ ವಾಗಿ ಹೋಯಿತು.ಆತ್ಮ ಯಾವತ್ತೂ ಶುದ್ದ ಸತ್ಯ ಹೀಗಾಗಿ‌ ಮನಸ್ಸು ಹಗುರವಾಗಲು ಆತ್ಮಜ್ಞಾನ ಅಗತ್ಯವಿದೆ.
ಒಟ್ಟಿನಲ್ಲಿ ಸಂಬಂಧ ಗಳು ಜ್ಞಾನದಿಂದ ಜೋಡಿಸಿದರೆ‌ ಜೀವನ ಹಗುರವಾಗಿರುತ್ತದೆ.ಹಣದಿಂದ ಜೋಡಿಸಿದರೆ ಹೆಣಭಾರವಾಗುತ್ತಾ ಋಣ ತೀರಿಸಲಾಗದೆ ಹೋಗುತ್ತದೆ. ಇದಕ್ಕೆ ಯಾವ ಪುರಾಣ ಇತಿಹಾಸದ ಸಾಕ್ಷಿಯ ಅಗತ್ಯವಿಲ್ಲವಲ್ಲ. ಇತ್ತೀಚೆಗೆ ಏನೇ ಸತ್ಯ ಹೇಳಿದರೂ ಸಾಕ್ಷಿ ಏನಿದೆ ಎನ್ನುವ ಜನರಿದ್ದಾರೆ. ಆತ್ಮಸಾಕ್ಷಿಗಿಂತ ಬೇರೆ ಸಾಕ್ಷಿಯಿಲ್ಲವೆನ್ನುವುದು ಎಲ್ಲರಿಗೂ ತಿಳಿದರೂ ಅದರೊಂದಿಗೆ ನಡೆಯೋದೇ ಕಷ್ಟವಾದಾಗ ಹೊರಗಿನ ಸಾಕ್ಷಿ ಸುಳ್ಳಿನ‌ ಕಂತೆ ಇಟ್ಟುಕೊಂಡು ಆಟವಾಡಿಸೋದು ಸಹಜ. ಒಟ್ಟಿನಲ್ಲಿ ನಮ್ಮ ಈ ಸ್ಥಿತಿಗೆ ನಮ್ಮ ಹೊರಗಿನ ಸಂಬಂಧವೇ ಕಾರಣವೆಂದರೆ  ನಂಬದಿದ್ದರೂ ಸತ್ಯ ಒಂದೇ.
ಪ್ರಕೃತಿ ಪುರುಷರ ಮಹಾಸಂಗಮವು ಜ್ಞಾನದಿಂದಾಗಬೇಕಾದರೆ‌  ಮಾನವನಿಗೆ ತನ್ನೊಳಗೇ ಅಡಗಿರುವ ದೈವತತ್ವದ ಅರಿವಿರಬೇಕು.ಹೊರಗಿರುವ ಅಸುರರಿಗೆ  ಸಹಕಾರ ಕೊಟ್ಟು ಹೊರಬಂದು ಹಣದ ಶ್ರೀಮಂತ ರ ಸಂಬಂಧ  ಹೆಚ್ಚಿಸಿಕೊಂಡರೆ  ಋಣ ತೀರಿಸಲು ಮತ್ತೆ ತಿರುಗಿ ಬರಲೇಬೇಕು.  ಭೋಗವಿರಲಿ ಯೋಗದಿಂದ ಕೂಡಿಬರಲಿ.ಅಂದರೆ ಕಷ್ಟಪಟ್ಟು  ಸತ್ಕರ್ಮದಿಂದ ಸಂಪಾದಿಸಿದ ಹಣದಿಂದ ಭೋಗ ಜೀವನ ನಡೆಸಲು  ಆತ್ಮಜ್ಞಾನ ಅಗತ್ಯವಿದೆ. ಇದಕ್ಕೆ ಮೂಲವೇ ಸಾಮಾನ್ಯ ಜ್ಞಾನ.
ಮೊದಲು ಮಾನವನಾದರೆ ನಂತರ ಮಹಾತ್ಮರ ಸಂಬಂಧ ಯೋಗದ ಮೂಲಕ ನಡೆಯುತ್ತದೆ. ಇದು ಶೀಘ್ರವಾಗಿ ನಡೆಯೋ ಕ್ರಿಯೆಯಲ್ಲದ ಕಾರಣ ಅವಸರದ ಅಪಘಾತಗಳು ಹೆಚ್ಚಾಗುತ್ತಿದೆ. ತಾಳಿದವನು ಬಾಳಿಯಾನು.ನಿಧಾನವೇ ಪ್ರಧಾನ. ಒಳ್ಳೆಯದು ಬೇಗ ಬೆಳೆಯದು. ಹಾಗಾಗಿ ಕೆಟ್ಟ ಸಂಬಂಧ ಬೆಳೆಯುತ್ತಿದೆ ಎಂದರೆ ಒಳ್ಳೆಯದು ಇಲ್ಲವೆಂದಲ್ಲ  ಕಾಣುವ ದೃಷ್ಟಿ ಯಿಲ್ಲವಷ್ಟೆ. ಕಣ್ಣಿಗೆ ಕಾಣೋದೆಲ್ಲಾ ಸತ್ಯವಲ್ಲ ಕಾಣದ್ದು ಇಲ್ಲವೆಂದಲ್ಲ. ದೈವಶಕ್ತಿ ಯಾವತ್ತೂ ಕಣ್ಣಿಗೆ ಕಾಣೋದಿಲ್ಲವಾದರೂ ಅದೇ ಗೆಲ್ಲುವುದು. ಸತ್ಯಕ್ಕೆ ಸಾವಿಲ್ಲವೆಂದರೆ ಆತ್ಮಸಾಕ್ಷಿ ಯಾವತ್ತೂ ಸತ್ಯ. ಆದರೆ ಅಜ್ಞಾನದಲ್ಲಿರುವಾಗ ಮನಸ್ಸನ್ನು ಆತ್ಮವೆಂದರಿತು ಮುಂದೆ ನಡೆಯುತ್ತಾರೆ.ಮನಸ್ಸು ಚಂಚಲ ಆತ್ಮಸ್ಥಿರವಾಗಿರುವ ಆಂತರಿಕ ಶಕ್ತಿಯಾಗಿದೆ ಎಂದಿರುವರು ಮಹಾತ್ಮರುಗಳು. ಅವರ ಹೆಸರಿನಲ್ಲಿ ಸಂಬಂಧ ಬೆಳೆಸೋ ಮೊದಲು ಅವರ ತತ್ವಜ್ಞಾನವನರಿತರೆ ಉತ್ತಮ.

Monday, December 11, 2023

ಅನ್ನಬ್ರಹ್ಮನೊಂದಿಗೆ ಅನ್ನಪೂರ್ಣೇಶ್ವರಿ ಇದ್ದರೆ‌ ಆರೋಗ್ಯ

ಬ್ರಹ್ಮನ ಸೃಷ್ಟಿ ಗೆ ಜ್ಞಾನಕೊಡುವ ದೇವಿ,ವಿಷ್ಣುವಿನ ಕಾರ್ಯಕ್ಕೆ ಲಕ್ಮಿಯ ಸಹಕಾರ, ಶಿವನ ಕಾರ್ಯದಲ್ಲಿ ಸಮನಾಗಿ ನಿಂತು ನಡೆಸೋ ಸ್ತ್ರೀ ಶಕ್ತಿಯನ್ನು  ಅರ್ಥ ಮಾಡಿಕೊಳ್ಳಲು ಸೋತರೆ ಭೂಮಿಯಿಂದ ಜೀವಾತ್ಮನಿಗೆ ಮುಕ್ತಿಯಿಲ್ಲ ಅತೃಪ್ತ ಆತ್ಮಗಳ ಭೂಲೋಕವಾದರೆ ನರಕ. ನರಕಾಸುರನ ವಧೆ ಮಾಡಿದ ಶ್ರೀ ಕೃಷ್ಣ ನಿಗೆ ಹದಿನಾರು ಸಾವಿರ ಸ್ತ್ರೀ ಯರೊಂದಿಗೆ ಮದುವೆ ಆಯಿತಂತೆ. ಒಂದು ಸ್ತ್ರೀ ಜನ್ಮ ಸಾರ್ಥಕ ವಾಗೋದು ವಿವಾಹದಿಂದ ಎಂದರೆ  ವಿವಾಹವು ಒಂದು ದೇವತಾಕಾರ್ಯವಾಗಿದೆ. ಶಾಸ್ತ್ರದ ಪ್ರಕಾರ ನಡೆಸೋ ವಿವಾಹದಿಂದ ಉತ್ತಮ ಸಂತಾನವನ್ನು ಮುಂದೆ ಪಡೆಯುವರೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸಿದೆ.
ಈಗಿನ ಸ್ಥಿತಿಯಲ್ಲಿ  ವಿವಾಹವೇನೋ ವೈಭವದಿಂದ ನಡೆಯುತ್ತದೆ. ಆದರೆ ಅಲ್ಲಿ ಶಾಸ್ತ್ರ ಸಂಪ್ರದಾಯ ವೇದ ಪಠಣಗಳಲ್ಲಿ  ಕಡಿವಾಣವಿರುತ್ತದೆ. ಜನಸಾಗರವಿದ್ದರೂ ಅವರನ್ನು  ಉಪಚರಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ.ಹಾಗಾಗಿ ಅನ್ನದಾನದಿಂದ ಸಂತೋಷ ಪಡಲು ಅನೇಕ  ರೀತಿಯಲ್ಲಿ  ವಿಶೇಷ ಭೋಜನವಿರುತ್ತದೆ. ಅನ್ನಬ್ರಹ್ಮನ ನೆನಪಿಸಿಕೊಂಡು ಅನ್ನಪೂರ್ಣ ವಾದಾಗ‌ಜ್ಞಾನ ಹೆಚ್ಚುವುದು. ಇದನ್ನು ಪ್ರತಿದಿನದ ಊಟದಲ್ಲಿಯೂ ಮಾಡಿದಾಗ ನಾವು ತಿಂದ ಅನ್ನವು  ಒಂದು ಯಜ್ಞ ದ ರೂಪದಲ್ಲಿ ಪರಮಾತ್ಮನ ತಲುಪಲು ಸಾಧ್ಯ. ಆತ್ಮ ಕ್ಕೆ ಜ್ಞಾನದ ಹಸಿವಿರೋದರಿಂದ ಜ್ಞಾನದಿಂದ ಸಂಪಾದಿಸಿದ ಅನ್ನವನ್ನು ಯಜ್ಞ ದ ರೀತಿಯಲ್ಲಿ ಸೇವಿಸಿದರೆ ಒಳಗಿರುವ ಎಲ್ಲಾ ದೇವಾಂಶಗಳಿಗೂ ತಲುಪಿ  ಸಂತೃಪ್ತ ರಾಗಿರುವರು. ಆಗ ದೈವೀಕ ಗುಣ ಸಂಪತ್ತು ಲಭಿಸುವುದು.ಇದೇ ಆರೋಗ್ಯದ ಗುಟ್ಟು. ಅನ್ನಾಹಾರವಿಲ್ಲದೆ ಎಷ್ಟೋ ವರ್ಷಗಳ ತಪಸ್ಸಿನಿಂದ ಪರಮಾತ್ಮನ ಸೇರಿದ ಋಷಿಗಳಾಗಲು ಕಷ್ಟ.ಆದರೆ ಅನ್ನ ಆಹಾರದಲ್ಲಿ ಪರಮಾತ್ಮನ ಸತ್ವವ ಕಂಡು  ಸೇವಿಸುವ ಜ್ಞಾನವಿದ್ದರೆ  ಅದೇ ಖುಷಿ. ಋಷಿಗಳಂತಿರಲಾಗದಿದ್ದರೂ ಸರಿ ಖುಷಿಯನ್ನು ಒಳಗಿನಿಂದ ಬೆಳೆಸಿಕೊಂಡರೆ  ಉತ್ತಮ. 
ಕಲುಷಿತ  ನೀರು ಆಹಾರಗಳನ್ನು ಸೇವಿಸಿಯೂ  ಬದುಕುತ್ತಿರುವ  ಮಾನವನೊಳಗೇ ಅಡಗಿರುವ ದೈವ ಶಕ್ತಿಗೆ 
ಜ್ಞಾನದ ಹಸಿವಿದೆ  ಹೊರಗಿನ ಆಹಾರದ ತಯಾರಿಕೆಯಲ್ಲಿ ಜ್ಞಾನವಿದ್ದರೆ  ಇದು ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿ ದೈವಬಲದಿಂದ  ದೇಹದ ಆರೋಗ್ಯವೃದ್ದಿಯಾಗುತ್ತದೆ . ಒಂದು ಹಿಡಿ ಅನ್ನವಿದ್ದರೂ ಜೀವ ಬದುಕುತ್ತದೆ ಆದರೆ ಇದು ಸಾತ್ವಿಕ ಜ್ಞಾನದಿಂದ ಸಂಪಾದಿಸಿದ್ದರೆ ಸಂತೃಪ್ತಿ. ಶಿಷ್ಟಾಚಾರದ ಸಂಪಾದನೆಯಲ್ಲಿ ಸತ್ಯಜ್ಞಾನವನ್ನು  ಕಾಣಬಹುದು.ಇದು ದೈವೀಕ ಸಂಪತ್ತು. ದೇಹವೇ ದೇಗುಲವಾದಾಗ ಅದರೊಳಗೆ ನಾವು ಹಾಕುವ ಆಹಾರ ವಿಷಯಗಳು ಹೇಗಿರಬೇಕಿತ್ತು? .
ಆರೋಗ್ಯವು ಯೋಗದಿಂದ ವೃದ್ದಿಯಾದರೆ ಮುಕ್ತಿ.

Sunday, November 26, 2023

ಎಲ್ಲದ್ದಕ್ಕೂ ಇತಿಮಿತಿ ಇರಬೇಕು

ಎಲ್ಲದ್ದಕ್ಕೂ ಒಂದು ಇತಿಮಿತಿಯಿರಬೇಕೆಂದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇತಿಮಿತಿ ಯಾವುದರಲ್ಲಿರಬೇಕೆಂಬುದೇ ಪ್ರಶ್ನೆಯಾಗಿದೆ. ಭ್ರಷ್ಟಾಚಾರ, ಸಾಲ, ಮನರಂಜನೆ, ಆಸ್ತಿ,ಅಂತಸ್ತು, ಹೆಸರು,ಹಣದ ವಿಚಾರ ಬಂದಾಗ ಆಸೆ‌ ಎದ್ದು ನಿಲ್ಲುತ್ತದೆ. ಆಸೆಯನ್ನು ಹಿಡಿತದಲ್ಲಿಟ್ಟುಕೊಳ್ಳದೆ ಮಿತಿ ಮೀರಿ ಬೆಳೆದಾಗwaegಲೇ ಮೇಲಿರುವ ಎಲ್ಲಾ  ಸೇರುವುದು. ಸೇರಿದಂತೆಲ್ಲಾ  ನಾನು ಶ್ರೀಮಂತ ಅದೃಷ್ಟವಂತ,ಪುಣ್ಯವಂತ,ಬುದ್ದಿವಂತ ಎನ್ನುವ  ಅಹಂಕಾರದ ಜೊತೆಗೆ ಸ್ವಾರ್ಥ ವೂ ಜೊತೆಯಾಗುತ್ತಾ ಕೊನೆಗೆ  ಹಿಂದಿರುಗಿ ಕೊಡುವಾಗ  ಕೊಡಲಾಗದೆ ಇಟ್ಟುಕೊಂಡರೂ ಸಂತೋಷ ಸಿಗದೆ ಪರಿತಪಿಸುವಂತಹ ಪರಿಸ್ಥಿತಿಯಲ್ಲಿ   ಧರ್ಮದ ಮೊರೆ ಹೊಕ್ಕರೂ‌  ಹೆಚ್ಚುವರಿಯನ್ನು  ಹೊರಹಾಕದೆ  ಶಾಂತಿ,ಸುಖ ಸಮಾಧಾನ ತೃಪ್ತಿ ಮುಕ್ತಿ ಸಿಗೋದಿಲ್ಲವೆನ್ನುವುದೇ ಸನಾತನ ಧರ್ಮ ತಿಳಿಸುತ್ತದೆ. ಅದಕ್ಕಾಗಿ  ಹೆಚ್ಚು ಜ್ಞಾನದ ಸಂಪಾದನೆಯೂ ಹಣವನ್ನು  ಕೊಡುತ್ತದೆ. ಆದರೆ ಆ ಹಣ ಸದ್ಬಳಕೆ ಮಾಡುವ ಜ್ಞಾನವಿದ್ದವರು ಎಲ್ಲಾ ಇತಿಮಿತಿಗಳನ್ನು ತಿಳಿದು ನಡೆಯುವರು. ಕೆಲವರು  ಅರ್ಧ ಸತ್ಯ ತಿಳಿದವರು ಈ ಕಡೆ ಮುಂದೂ ನಡೆಯದೆ ಹಿಂದೆ ಬರದೆ  ಅಡ್ಡದಾರಿಯಲ್ಲಿ ಅಡ್ಡಲಾಗಿರುವರು. ಇವರಿಂದಲೇ  ದೊಡ್ಡ ದೊಡ್ಡ ಸಮಸ್ಯೆ ಜನ್ಮತಾಳುವುದು ಹೆಚ್ಚಾಗುತ್ತಿದೆ.  ಹಣಕ್ಕಾಗಿ ಭ್ರಷ್ಟ ದುಷ್ಟ ಕಳ್ಳ ಸುಳ್ಳರಿಗೆ ಮಣೆ ಹಾಕುವುದರಿಂದ  ಸಮಸ್ಯೆ ಬೆಳೆಯುತ್ತದೆ. ಇವರು ಮಿತಿಮೀರಿದರೆ ಮನುಕುಲಕ್ಕೆ   ಕಷ್ಟ ನಷ್ಟ.ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ.ಇವರಿಬ್ಬರ ನಡುವಿರುವವರ‌ ಬಯಕೆಯಿಂದ ರೋಗಿಗಳು ಬೆಳೆದಿರೋದು.  ಪರಮಾತ್ಮ‌ಜೀವಾತ್ಮನ ಸೇರೋದು  ಅಧ್ಯಾತ್ಮಿಕ ಯೋಗ, ಪರದೇಶದೊಳಗೆ ಸ್ವದೇಶ ಸೇರಿಸೋದು ಭೋಗಿಗಳ ಭೌತಿಕ ಯೋಗ. ಇವರಿಬ್ಬರ ನಡುವಿದ್ದು ತಮ್ಮ ಯೋಗಾಭೋಗದ ಲೆಕ್ಕಾಚಾರದಲ್ಲಿ ಕಷ್ಟ ನಷ್ಟ ಅನುಭವಿಸುತ್ತಾ ತಮ್ಮ ಮಾನಸಿಕ ನೆಮ್ಮದಿ ಜೊತೆಗೆ ಎಲ್ಲರ ಮನಸ್ಸನ್ನೂ ಕೆಡಿಸಿ ಆರೋಗ್ಯ ಹಾಳು ಮಾಡೋದು ಮಧ್ಯವರ್ತಿಗಳ ರೋಗಕ್ಕೆ ಕಾರಣ. ದೇವಾಸುರರ ನಡುವಿನ ಮಾನವನ ರೋಗಕ್ಕೆ ಇದೇ ಕಾರಣವಾದಾಗ  ಆರೋಗ್ಯದ ಕಡೆಗೆ‌ನಡೆಯಲು ದೈವಗುಣಸಂಪತ್ತು ಅಗತ್ಯವಿದೆ. ಇದುಭೌತಿಕ ಸಂಪತ್ತಿನೆಡೆಗೆ  ವಿಪರೀತವಾಗಿ ಬೆಳೆದರೆ ಅಸುರಿ ಶಕ್ತಿಯಿಂದ ಆಪತ್ತು. Ferrer's dresser Ferrer's r

Wednesday, November 15, 2023

ಭಗವಂತ ಅಧರ್ಮಕ್ಕೆ ಸಹಕರಿಸುವನೆ?

ಬದುಕಿರುವಾಗ  ಅರ್ಥ ವಾದ ಸತ್ಯವನ್ನು  ಹೇಳುವ ಅಧಿಕಾರವಿದ್ದರೆ ಅದನ್ನು ಕೇಳೋರು ಹಲವರು.ಅದೇ ಸತ್ಯ ಸತ್ತನಂತರ ಬೇರೆಯವರು ಹೇಳಿದರೆ  ವಿರೋಧಿಸುವವರೂ ಅನೇಕರು ಆಗಿರಬಹುದು. ಕಾರಣ  ಅನುಭವದಿಂದ ಒಬ್ಬರು ತಿಳಿದದ್ದೇ ಇನ್ನೊಬ್ಬರ ಅನುಭವವಾಗಿರದು ಇದರಲ್ಲಿ ಅಸತ್ಯವಿದ್ದರೆ ವಿರೋಧವಿರುತ್ತದೆ. ಶ್ರೀ ಶಂಕರಭಗವತ್ಪಾದರು  ಅಂದಿನ ಕಾಲದಲ್ಲಿದ್ದ  ಅಧರ್ಮ ವನ್ನು  ಹೋಗಿಸಲು  ಒಬ್ಬಂಟಿಯಾಗಿ ಸತ್ಯದೆಡೆಗೆ ನಡೆಯಲು ಅಂದಿನ ಸಮಾಜದ ವಿರೋಧವಿತ್ತು.ಆದರೂ ವಾದದಲ್ಲಿ ಗೆದ್ದು ಜಗದ್ಗುರುಗಳಾದರು. ಸತ್ಯಸಂಶೋಧನೆಗೆ ಆತ್ಮಸಾಕ್ಷಿಯ ಅಗತ್ಯವಿದೆ. ಹೊರಗಿನವರ ಕಣ್ಣಿಗೆ  ನಮ್ಮ ಅನುಭವ ತಿಳಿಸಬೇಕಾದರೆ ಅವರೂ  ಆ ಅನುಭವವದೆಡೆಗೆ  ನಡೆದಿದ್ದರೆ  ಒಪ್ಪಬಹುದು. ಒಟ್ಟಿನಲ್ಲಿ ಒಂದೇ ಸತ್ಯ  ಒಂದೇ ವ್ಯಕ್ತಿ ಒಂದೇ ದೇಶ, ಒಂದೇ ಧರ್ಮದೊಳಗಿದ್ದು  ಹೊರಗಿನ ಅನೇಕವನ್ನು ಒಂದು ಮಾಡೋದು‌ ಬದುಕಿರುವಾಗ ಕಷ್ಟ. ಹಾಗಾಗಿ ಸತ್ಯದಲ್ಲಿ ಬದುಕುವುದೇ ಕಷ್ಟವಾದವರೂ‌ ಅಸತ್ಯದ ಪರ ನಿಂತಾಗ ಅಸತ್ಯದ ಬದುಕಾಗುತ್ತದೆ.  
"ಬ್ರಹ್ಮನ್ ಸತ್ಯ ಜಗತ್ ಮಿಥ್ಯ," "ಅಹಂ ಬ್ರಹ್ಮಾಸ್ಮಿ" "ತತ್ವಮಸಿ" ಇವುಗಳಲ್ಲಿ ಅಡಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಅಧಿಕಾರ ಹಣ ಜನರ ಅಗತ್ಯವಿಲ್ಲವಾದರೂ  ಅವರಿಂದಲೇ  ಅರ್ಥ ಮಾಡಿಸುವ ಜಗತ್ತಿನಲ್ಲಿದ್ದೇ ತಿಳಿಯಬೇಕಿದೆ. ಎಲ್ಲೋ ಕಾಣದ ಜಗತ್ತಿನಲ್ಲಿ ಕುಳಿತು ತಪಸ್ಸು ಮಾಡಿದವರಿಗೂ  ಇದರ ಅನುಭವವಾಗದು. ಇದನ್ನು  ಅಧ್ವೈತ, ದ್ವೈತ ವಿಶಿಷ್ಟಾದ್ವೈತ ಗಳಲ್ಲೂ  ಒಂದಾಗಿ ಕಾಣೋದು ಮುಖ್ಯವಾಗಿದೆ. 
ಸಂನ್ಯಾಸಿಗಳ ಅನುಭವ ಜ್ಞಾನ ಸಂಸಾರಿಗಳಿಗಿರದು,
ಸಂಸಾರಿಗಳ ಅನುಭವ ಜ್ಞಾನ ಸಂನ್ಯಾಸಿ ಅನುಭವಿಸಲಾಗದು. ಹೀಗಿರುವಾಗ ಸಂನ್ಯಾಸಿಗೆ ಸಂನ್ಯಾಸಿಯೇ  ಸತ್ಯ ತಿಳಿಸಿದರೂ  ಅವರವರ ನಡುವಿನ ಶಿಷ್ಯರು ಬಿಡರು.ಇದು  ಇಂದಿನ ಸ್ಥಿತಿಗೆ ಕಾರಣ. ಸ್ವತಂತ್ರ ವಾಗಿರುವ ಸತ್ಯ ಒಳಗಿತ್ತು.ಮಿಥ್ಯ ಹೊರಗೆ ಬೆಳೆಯಿತು. ಇವೆರಡರ ನಡುವಿನ ರಾಜಕೀಯ ಜನರನ್ನೇ ಆಳಲು ಹೊರಟಿತು. 
ಇದಕ್ಕೆ  ಪರಿಹಾರ ಮಾರ್ಗ ಒಂದೇ  ಪ್ರತಿಮೆಗಳ ಹೆಸರಿನಲ್ಲಿ ಜನರನ್ನು ಒಂದಾಗಿಸೋ ಬದಲು  ಪ್ರತಿಭೆ ಹಾಗು ಜ್ಞಾನಗುರುತಿಸಿ ಬೆಳೆಸುವ ಶಿಕ್ಷಣ ಕೇಂದ್ರ‌ತೆರೆದು ಉತ್ತಮಜ್ಞಾನಿಗಳಿಗೆ ಶಿಕ್ಷಕ ಸ್ಥಾನ ನೀಡಿ ಜೊತೆಗೆ ದೇವಸ್ಥಾನ ವಿದ್ದರೆ  ಮಕ್ಕಳು ದೇವರ ಸನ್ನಿದಿಯಲ್ಲಿದ್ದೇ ಸತ್ಯ ಧರ್ಮದ ಪಾಠ ಕಲಿಯಬಹುದು. ಒಂದು ಪ್ರತಿಮೆಯಿಂದ ಅಸಂಖ್ಯಾತ ಜನರು ಒಮ್ಮೆ ಬೇಟಿನೀಡಿ  ಪ್ರವಾಸ ಮಾಡಬಹುದು. ಅದೇ ಸ್ಥಳದಲ್ಲಿ ಶಾಲೆಯಿದ್ದರೆ ಅಸಂಖ್ಯಾತ ಮಕ್ಕಳ ಜ್ಞಾನೋದಯದ ಕೇಂದ್ರವಾಗಬಹುದು. ಪೋಷಕರಾದವರು ತಮ್ಮ ಮಕ್ಕಳ ಜ್ಞಾನ ಬೆಳೆಸಲು ಹಣ ನೀಡುವುದರಿಂದ  ದಾನ ಧರ್ಮ ಕಾರ್ಯ ಕ್ರಮವಾಗುತ್ತದೆ. ಲಕ್ಷಾಂತರ ಕೋಟ್ಯಾಂತರ  ಹಣದಿಂದ  ಯಾರಾದರೂ ಜ್ಞಾನಿಗಳಾಗಿರುವರೆ?  ಎತ್ತ ಸಾಗುತ್ತಿದೆ ಭಾರತ? 

ಒಮ್ಮೆ ಸಂದರ್ಶಕರೊಬ್ಬರು ರಮಣರನ್ನು ಕೇಳಿದರು, ದೇವರು  ಈ ಭೂಮಿಯ ಮೇಲೆ ಇಷ್ಟೊಂದು ಅನ್ಯಾಯಗಳು ನಡೆಯುತ್ತಿದ್ದರೂ ಸುಮ್ಮನೆ ಏಕಿದ್ದಾನೆ, ಏಕೆ ಎಲ್ಲಾ ಅನ್ಯಾಯಗಳಿಗೆ ಅನುಮತಿಸುತ್ತಾನೆ ಮತ್ತು ನಮ್ಮಲ್ಲಿ ಏಕೆ ಇಷ್ಟೊಂದು ಕೊರತೆಗಳಿವೆ..? ಎಂದು 

ಮಹರ್ಷಿ ಉತ್ತರಿಸಿದರು, ದೇವರ ಬಳಿಗೆ ಹೋಗಿ ಅದರ ಬಗ್ಗೆ ನೀನು ಕೇಳು. ನೀವು ಒಪ್ಪಿಕೊಂಡಂತೆ ನೀವು ಅವನ ಬಳಿಗೆ ಹೋಗಲು ಸಾಧ್ಯವಾಗದಿದ್ದರೆ, ಪ್ರಶ್ನೆಯನ್ನು ಹೇಗೆ ಕೇಳುವುದು..? ದುರ್ಬಲರಿಗೆ ಇಲ್ಲಿ ಮುಕ್ತಿ ಸಿಗುವುದಿಲ್ಲ ಎಂದು 

ಇನ್ನೊಂದು ಪ್ರಶ್ನೆಗೆ ಉತ್ತರವಾಗಿ, ಮಹರ್ಷಿ ಹೇಳಿದರು, ದೇಹವು ಇರುವವರೆಗೆ, ಕೆಲವು ಚಟುವಟಿಕೆಗಳು ಸಂಭವಿಸುತ್ತವೆ. ನಾನೇ ಮಾಡುವವನು’ ಎಂಬ ಧೋರಣೆಯನ್ನು ಮಾತ್ರ ಬಿಡಬೇಕು. ಚಟುವಟಿಕೆಗಳು ಅಡ್ಡಿಯಾಗುವುದಿಲ್ಲ. ಇದು ನಾನು ಮಾಡಿದ್ದೇನೆ ಎಂಬ ಮನೋಭಾವ. ಅದು ಅಡಚಣೆಯಾಗಿದೆ. ಇದಲ್ಲದೆ, ಬಾಹ್ಯ ವಸ್ತುವಿನ ಅಗತ್ಯವಿರುವವರೆಗೆ ಸಂತೋಷಕ್ಕಾಗಿ, ಅಪೂರ್ಣತೆಯ ಭಾವನೆ ಉಂಟಾಗುತ್ತದೆ. ಆತ್ಮನೊಬ್ಬನೇ ಇದ್ದಾನೆ ಎಂದು ಭಾವಿಸಿದಾಗ, ಶಾಶ್ವತ ಸಂತೋಷವು ಉಳಿಯುತ್ತದೆ.

ಧ್ಯಾನಿಸುವಾಗ ನಾನು ಅವನ ಕಣ್ಣುಗಳನ್ನು ನೋಡಬೇಕೇ ಅಥವಾ ಅವನ ಮುಖವನ್ನು ನೋಡಬೇಕೇ ಅಥವಾ ನನ್ನ ಕಣ್ಣುಗಳನ್ನು ಮುಚ್ಚಿ ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕೇ ಎಂದು ನಾನು ಕೇಳಿದಾಗ, ಅವರು ಉತ್ತರಿಸಿದರು. ನಿಮ್ಮ ಸ್ವಂತ ನೈಜ ಸ್ವಭಾವವನ್ನು ನೋಡಿ. ಇಲ್ಲಿ ಇರುವುದು ಒಂದೇ, ಎಲ್ಲೆಲ್ಲೂ  ಅದು ಒಂದೇ ಆಗಿದೆ, ಹಾಗಾಗಿ ಕಣ್ಣು ತೆರೆದರೂ ಮುಚ್ಚಿದರೂ ಒಂದೇ. ನೀವು ಧ್ಯಾನ ಮಾಡಲು ಬಯಸಿದರೆ, ನಿಮ್ಮಲ್ಲಿರುವ ನಾನು ಮೇಲೆ ಮಾಡಿ. ಅದುವೇ  ಇದು ಆತ್ಮ.

 - ಶ್ರೀ ರಮಣ ಮಹರ್ಷಿಯೊಂದಿಗೆ ಮುಖಾಮುಖಿ ಸ್ವಾಮಿ ಮಾಧವತೀರ್ಥ.

Tuesday, November 14, 2023

ಮಕ್ಕಳಿಗೆ ದಾನದ‌ಮಹತ್ವ ತಿಳಿಸಿ ಬೆಳೆಸಿದರೆ ಉತ್ತಮ

ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ದಾನ ಪರಮಾತ್ಮನಿಗೆ  ಸಲ್ಲುವುದಂತೆ. ದಾನ ಕೊಡೋದು ಸರಿ , ತಪ್ಪಲ್ಲ ಎಷ್ಟು ಯಾರಿಗೆ ಯಾಕೆ ಹೇಗೆ ಕೊಟ್ಟರೆ  ಉತ್ತಮ ಫಲ ಸಿಗೋದೆನ್ನುವ ಅರಿವಿರಬೇಕು. ಕಲಿಗಾಲದಲ್ಲಿ  ಕೊಟ್ಟವರನ್ನೇ  ಕೆಟ್ಟದಾಗಿ ನಡೆಸಿಕೊಳ್ಳುವ ಅಸುರರಿರುವರು.ದಾನವರಿಗೆ ಕೊಟ್ಟರೆ ಮುಗಿಯಿತು ಕಥೆ. ಮತದಾನ ದೇಶದ ಭವಿಷ್ಯವಾದರೆ ಉಳಿದ ಸಣ್ಣ ಪುಟ್ಟ ದಾನ  ಮಕ್ಕಳ ಭವಿಷ್ಯವಾಗಿರುವುದು. ಮಕ್ಕಳು ದೇಶದ ಒಳಗಿರಬೇಕಾದರೆ  ದಾನ ಉತ್ತಮವಾಗಿರಬೇಕು. 
ಮಕ್ಕಳ ದಿನಾಚರಣೆಯಂದು  ಮಕ್ಕಳಿಗೆ ದಾನದ ಬಗ್ಗೆ ಅರಿವು ಮೂಡಿಸುವ ಶಿಕ್ಷಣವಿರಲಿ. ಮಕ್ಕಳನ್ನೇ ದಾನವರಿಗೆ ಒಪ್ಪಿಸಿ  ಹಣಕೊಟ್ಟು ಕಳಿಸಬೇಡಿ. ಹಣದ ಹಿಂದಿನ ಋಣ ತೀರಿಸುವ‌ ಜ್ಞಾನಿಗಳಿಂದ  ಮಕ್ಕಳ ಭವಿಷ್ಯ ಉತ್ತಮವಾಗಿರಲಿ. 
ಬಲಿಚಕ್ರವರ್ತಿ ಕರ್ಣ ನಂತಹ ಮಹಾದಾನಿಗಳ  ಅತಿಯಾದ ದಾನವೇ ಕೊನೆಯಲ್ಲಿ  ಉರುಳಾಯಿತು. ಆಗಿನ ಕಾಲದಲ್ಲಿ ಭೂಮಿ ಸಂಪತ್ತಿನಿಂದ ಕೂಡಿತ್ತು ಈಗಿದು ಆಪತ್ತಿನಲ್ಲಿದೆ. ಕಾರಣ ದಾನವರು ಭೂಮಿಯನ್ನೇ ಹಾಳು ಮಾಡುವ ದಾನಕ್ಕೆ  ಹೊರಟಿದ್ದಾರೆ.ಇದಕ್ಕೆ ಸಹಕಾರವೂ ಹೆಚ್ಚಾಗಿದೆ ಎಂದರೆ ದಾನದ  ಬಗ್ಗೆ ಸರಿಯಾದ ಜ್ಞಾನವಿಲ್ಲದ ಜನಸಂಖ್ಯೆ ಬೆಳೆದಿದೆ ಎಂದರ್ಥ. ಯಾವುದೇ ವಿಷಯ,ವಸ್ತು, ಒಡವೆ,ವಸ್ತ್ರ ದಾನ ಮಾಡಿದರೂ  ಅದು ಜ್ಞಾನದಿಂದ ಗಳಿಸಿದ್ದಾಗಿ ಶುದ್ದವಾಗಿರಬೇಕೆನ್ನುವರು ಜ್ಞಾನಿಗಳು .ಹೆಚ್ಚು ಹಣಸಂಪಾದನೆ ಹೆಚ್ಚು ದಾನಧರ್ಮಕ್ಕೆ  ಕಾರಣವಾಗುತ್ತದೆ.
ಹಣಸಂಪಾದನೆ ಅಧರ್ಮದಲ್ಲಾಗಿದ್ದರೆ  ಜ್ಞಾನವಿಲ್ಲದ ದಾನವರಿಗೇ ಶಕ್ತಿ ಹೆಚ್ಚುವುದು.ಇದನ್ನು ಹೊರಗೆ ಪ್ರಗತಿ ಎಂದರೆ ಅಜ್ಞಾನವಷ್ಟೆ. ಮಿತಿಮೀರಿದ ಯಾವುದೇ ಆದರೂ ಧರ್ಮ ವಾಗಿರದು. 
ಅಸುರರೊಳಗೇ ಸುರರು ಸಿಲುಕಿದರೆ ಅಧರ್ಮ. ಇದಕ್ಕೆ ಕಾರಣ ಸುರರ ಹಣದ ವ್ಯಾಮೋಹ.
ವ್ಯಾಮೋಹವೇ‌  ಮೋಸಕ್ಕೆ  ಕಾರಣವಾಗಬಹುದು.ಮಕ್ಕಳ ಮೇಲಿನ ವ್ಯಾಮೋಹದಲ್ಲಿ ತಪ್ಪಿ ನಡೆದರೂ  ತಪ್ಪಿ ಸಿಕೊಂಡು ಮುಂದೆ ಹೋಗಬಹುದು ಆದರೆ ಹಿಂದೆ ಬರೋದು ಕಷ್ಟ. ಹೀಗಾಗಿ ತಪ್ಪಿಗೆ ಶಿಕ್ಷೆ ನೀಡಿ ಸರಿಪಡಿಸುವುದಾಗಿತ್ತು. ಇಂದಿನ  ಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ವಿಷಯವೇ  ಸರಿಯಿಲ್ಲ. ಸತ್ಯದಲ್ಲಿ ನಡೆಯಲು  ಪೋಷಕರಿಗೆ ಸಾಧ್ಯವಾಗದಿರೋವಾಗ  ಮಕ್ಕಳನ್ನು ಸತ್ಯದೆಡೆಗೆ ನಡೆಸಲು ಸಾಧ್ಯವಾಗದೆ  ಅಸತ್ಯ ಅನ್ಯಾಯ ಅಧರ್ಮ ವೆಂದು ತಿಳಿದೂ ಅದೇ ದಾರಿಯಲ್ಲಿ  ಸಹಿಸಿಕೊಂಡು ಬದುಕಲು ಹೋದರೆ ಸಹನೆಗೂ ಇತಿಮಿತಿ ಇರುತ್ತದೆ. ಹೀಗಾಗಿ ಯಾವುದೂ ಅತಿಯಾದರೆ ಗತಿಗೇಡು.ಮಕ್ಕಳಿಗಾಗಿ  ಮಾಡುವ ಆಸ್ತಿ ಮಕ್ಕಳು ಅನುಭವಿಸದೇ ಇರಬಹುದು. ಆದರೆ ಅವರಿಗೆ ನೀಡುವ‌ಜ್ಞಾನದ ಆಸ್ತಿ‌ ಎಲ್ಲರನ್ನೂ ರಕ್ಷಿಸಬಹುದು. ಒಂದು ದಿನದ ಮಕ್ಕಳ ದಿನಾಚರಣೆಯ  ಬದಲಾಗಿ ಪ್ರತಿಕ್ಷಣವೂ ಮಕ್ಕಳಿಂದಲೇ ದಿನ‌ನಡೆದಿದೆ‌ ಎನ್ನುವ ಸತ್ಯ ತಿಳಿದರೆ ಅವರ ಕ್ಷಣಕ್ಷಣದ‌  ನಡೆ ನುಡಿಯೇ ಭವಿಷ್ಯವಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದವರ ಭವಿಷ್ಯವೂ  ಉತ್ತಮವಾಗಿರುತ್ತದೆನ್ನುವರು.ಇಲ್ಲಿ ಸಂಸ್ಕಾರ ಎಂದರೆ ಬೇಡದ ವಿಚಾರ ವಿಷಯವನ್ನು ಬಿಟ್ಟು  ಕಲಿಸುವುದಾಗಿತ್ತು.ಶುದ್ದ ಸತ್ವಸತ್ಯದ  ವಿಚಾರಗಳು ಯಾವತ್ತೂ ಮನಸ್ಸನ್ನು ಶುದ್ದಗೊಳಿಸುತ್ತದೆ. ಅದೇ ಶಾಂತಿಯ ಕಡೆಗೆ ನಡೆಸುತ್ತಾ ಯೋಗ ಮಾರ್ಗ ವಾಗುತ್ತದೆ. ಯೋಗ್ಯ ಗುರು‌ ಯೋಗ್ಯ ಶಿಷ್ಯ‌  ಹೊರಗಿನಿಂದ ಬೆಳೆಸುವುದು ಕಷ್ಟ ಒಳಗಿನಿಂದ  ಕಲಿಸಿ ಬೆಳೆಸುವುದೇ ಗುರುಕುಲ. 
ಹಿಂದೆ ಮನೆಮನೆಯು ಗುರುಕುಲವಾದ ಹಾಗೆ ಮನೆಮನೆಯಲ್ಲಿ ಗೋಕುಲವಿತ್ತು. ಈಗ ಇವೆರಡೂ  ಮರೆಯಾಗುತ್ತಿರುವುದಕ್ಕೆ   ಗೋವಿಂದನಿಲ್ಲ. ಮಕ್ಕಳನ್ನು ಕೃಷ್ಣನೆಂದು  ಕರೆಯುತ್ತಿದ್ದ‌ಕಾಲವಿತ್ತು. ಕಾಲದ ಅಂತರದಲ್ಲಿ  ಅಜ್ಞಾನ‌ ಬೆಳೆದಂತೆಲ್ಲಾ  ಸತ್ಯ ಧರ್ಮ ಹಿಂದುಳಿದು ಈಗ ಹೊರಗಿದೆ ಒಳಗಿಲ್ಲ. ದೇವರು ಧರ್ಮ ಜಾತಿ ಪಂಗಡ, ಪಕ್ಷಗಳ  ರಾಜಕೀಯದೆಡೆಗೆ ಮಕ್ಕಳು ಮಹಿಳೆಯರೂ‌
ಮನೆಯಿಂದ ಹೊರಬಂದರೆ   ಏನಾಗುವುದೆನ್ನುವುದು ಕೆಲವರಿಗೆ ಅನುಭವಕ್ಕೆ ಬಂದರೂ ಅನೇಕರಿಗೆ  ಅನುಭವಕ್ಕೆ ಬರದೆ  ಮನಸ್ಸು ಹೊರಗುಳಿದಿದೆ.

Monday, November 13, 2023

ದಾನ ಅತಿಯಾದರೆ ದಾನವರು ಬೆಳೆಯುವರು

ಬಲಿ ಚಕ್ರವರ್ತಿಯ  ಅತಿಯಾದ ದಾನವೂ  ಕೊನೆಯಲ್ಲಿ ಕಡೆಗಣಿಸಲಾಯಿತು ಕರ್ಣನ ಕಥೆಯೂ ಹಾಗೇ ಆಗಿದೆ ಅಂದರೆ ದಾನ ಮಾಡೋ ಮೊದಲು ಯಾರಿಗೆ ಯಾವುದಕ್ಕೆ ಯಾವಾಗ ಯಾಕೆ ಕೊಡಬೇಕೆಂಬ ಅರಿವಿದ್ದರೆ  ಉತ್ತಮವೆನ್ನಬಹುದೆ? ದಾನ ಮಾಡುವಷ್ಟು ಸಂಪತ್ತಿರುವಾಗ  ಆ ಸಂಪತ್ತನ್ನು ತಿರುಗಿ ಕೊಡುವುದೂ ಕಷ್ಟವಾಗುತ್ತದೆ. ತಿರುಗಿ ಕೊಡುವಾಗ  ಅರಿವಿನಲ್ಲಿರೋದೂ ಕಷ್ಟ. ಹೀಗಾಗಿ ದಾನವರು ಎಂದರು. ಬಲಿ ಚಕ್ರವರ್ತಿಯು  ಅಸುರನೆಂದರೆ ಸರಿಯೆನಿಸುವುದಿಲ್ಲವಲ್ಲ.  ಇಲ್ಲಿ  ಅಸುರರೊಳಗೇ ಸುರರಿದ್ದರೂ ಕಾಣೋದಿಲ್ಲ.  ಸುರರು ಮಾಡಬೇಕಾದ್ದನ್ನು ಅಸುರರು ಮಾಡಲು ಹೋದರೆ ಸರಿಯಾಗಿರದು. ಕೆಲವು ಸೂಕ್ಷ್ಮ ಸತ್ಯ ವಿಚಾರಗಳು ಅಸುರರಿಗೆ ಅರ್ಥ ವಾಗದು ಆದರೂ ಅಧಿಕಾರ ಸ್ಥಾನ ಸಿಕ್ಕಾಗ. ಸುರರಂತೆ  ದಾನ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡು  ಲೋಕದ ಜನತೆಗೆ ಸಂತೋಷ ಸುಖ  ಕೊಟ್ಟರೂ   ಅಸುರರೆಂದರೆ‌ಈಗ ಒಪ್ಪೋದಿಲ್ಲ. 
ಸರ್ಕಾರ  ಎಲ್ಲರಿಗೂ  ಉಚಿತವಾಗಿ  ಸಾಲ ಸೌಲಭ್ಯಗಳನ್ನು ಭಾಗ್ಯಗಳನ್ನು ಹಂಚಿದ್ದರೂ  ಬಡತನ ಮಾತ್ರ  ಕಡಿಮೆಯಾಗದೆ ಅಜ್ಞಾನ ಮಿತಿಮೀರಿದೆ ಅಸುರಿ ಗುಣ ಜನಸಾಮಾನ್ಯವರೆಗೂ‌  ಹರಡುತ್ತಿದೆ  ಎಂದಾಗ ತಪ್ಪಾಗಿದ್ದು ಎಲ್ಲಿ?  ಕೊಡೋದು ತಪ್ಪಲ್ಲ.ಯಾರಿಗೆ ಯಾವಾಗ ಎಷ್ಟು ಯಾಕೆ ಹೇಗೆ ಕೊಡಬೇಕೆಂಬುದೇ ಮುಖ್ಯವಾಗಿತ್ತು.  ಉಚಿತದ ಹಿಂದಿರುವ  ಸಾಲವನ್ನು ತೀರಿಸಲು  ಕಷ್ಟಪಟ್ಟು ದುಡಿಯಲೇಬೇಕು ಅದೇ ಧರ್ಮ. ದುಡಿಯದೆ ಕುಳಿತು ತಿಂದರೆ  ಸೋಮಾರಿತನ ಹೆಚ್ಚಾಗಿ  ರೋಗಗಳು  ಬಂದು ಜೀವಹೋಗುತ್ತದೆ.ಜೀವ ಆರೋಗ್ಯವಾಗಿತ್ತು ಹೊರಗಿನಿಂದ  ಒಳಗೆಳೆದುಕೊಂಡ  ರೋಗದಿಂದ ಹೋಯಿತೆಂದರೆ   ನಂಬಲಾಗದು. ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಸರಿ ಕಷ್ಟಪಡದವರಿಗೆ ಸಹಾಯ ಮಾಡೋದು ಸರಿಯಲ್ಲ.ಹಾಗೆ ದಾನ ಮಾಡುವುದು ಸರಿ ಆದರೆ ದಾನವರಿಗೆ  ದಾನ ಮಾಡಬಾರದೆನ್ನುವರು.ಕಾರಣ ಅಸುರರಿಗೆ ಸತ್ಯಧರ್ಮದ ಬಗ್ಗೆ ಅರಿವಿರದು. ಒಳಗಿನ ಆತ್ಮಸಾಕ್ಷಿಯಂತೆ ನಡೆಯುವುದಕ್ಕೆ  ಕಷ್ಟ. ಕಣ್ಣಿಗೆ ಕಂಡದ್ದೇ ಸತ್ಯವೆಂದು ನಂಬಿ ನಡೆಯುವಾಗ  ಕಾಣದ ಶಕ್ತಿಗಳ ಕೈಚಳಕದಲ್ಲಿ ಮಾನವ ಮೋಸಹೋಗೋದೇ ಹೆಚ್ಚು.ಹೀಗಾಗಿ ಪುರಾಣ ಕಥೆಗಳಲ್ಲಿ  ಕೆಲವೆಡೆ ಧರ್ಮ ಸೂಕ್ಮವನ್ನು  ಭೌತಿಕದ ಅಂದಿನ ಪರಿಸ್ಥಿತಿಗೆ  ಅರ್ಥ ಮಾಡಿಕೊಂಡರೆ  ಕೆಲವನ್ನು ಇಂದಿನ ಪರಿಸ್ಥಿತಿಯನ್ನರಿತು ತಿಳಿಯಬೇಕಿದೆ. ಅಂದು ಭೂಮಿಯಲ್ಲಿ ಸಾಕಷ್ಟು ಸಂಪತ್ತಿತ್ತು.ಜನರಲ್ಲಿ  ಧಾರ್ಮಿಕ ಶ್ರದ್ದೆಯಿತ್ತು ಶಿಕ್ಷಣವೂ ಉತ್ತಮವಾಗಿತ್ತು.ಆದರೂ  ರಾಜರ ಕಾಲವಾಗಿದ್ದರಿಂದ  ಒಬ್ಬನೇ ರಾಜ ಕೊನೆಯವರೆಗೂ ಒಂದೇ  ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿರಲಿಲ್ಲ . ಯುದ್ದಗಳು ನಡೆಯುತ್ತಿತ್ತು.ಚಕ್ರವರ್ತಿಗಳಾಗುತ್ತಿದ್ದರು. ಎತ್ತರಕ್ಕೆ ಬೆಳೆದಾಗ ಅಧರ್ಮ ವೂ  ಬೆಳೆಯುತ್ತಿತ್ತು.ಇದನ್ನು ತಡೆಯಲು  ದೇವತೆಗಳಿಗೇ ಸಾಧ್ಯವಾಗದಿದ್ದಾಗ ಭಗವಂತನ  ಅವತಾರಗಳು ನಡೆದವು.  ಬಲಿಚಕ್ರವರ್ತಿ ಯಂತಹ ಮಹಾದಾನಶೂರನ  ಸೋಲಿಸಲು  ವಾಮನಾವತಾರವಾಯಿತು. ಮೂರ್ತಿಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಾಯಿತು. ಕಣ್ಣಿಗೆ ಕಾಣೋದೆಲ್ಲಾ ದಾನವಾಗಿರದು.ಅದರ ಹಿಂದಿನ ಋಣಭಾರ ತೀರಿಸುವ‌ ಜ್ಞಾನವಿದ್ದರೆ    ದಾನ‌ಪಡೆಯಬಹುದು.ಸರ್ಕಾರದ ಉಚಿತಗಳು  ದೇಶದ ಸಾಲವಷ್ಟೆ. ದೇಶಸೇವೆ ಮಾಡುವವರಿಗೆ ಕೊಟ್ಟರೆ ದಾನಕ್ಕೆ ಬೆಲೆಯಿರುತ್ತದೆ.ದೇಶವನ್ನೇ  ಹಾಳು ಮಾಡುವವರಿಗೆ ಹಂಚಿದರೆ ದಾನವರಿಗೇ ಕೊಟ್ಟಂತಾಗುತ್ತದೆ.ಇದರಿಂದಾಗಿ  ಎಲ್ಲರಿಗೂ ಕಷ್ಟ ನಷ್ಟ.  ಮೊದಲು  ಶಿಕ್ಷಣದಲ್ಲಿ   ಇದನ್ನು ತಿಳಿಸುವ ಅಗತ್ಯವಿದೆ.ಶಿಕ್ಷಣದ ವಿಷಯವೇ  ಸರಿಯಿಲ್ಲವಾದರೆ ಶಿಕ್ಷಣಕೊಟ್ಟು ಉಪಯೋಗವಿಲ್ಲ. ಹೀಗೆ ಆಹಾರ ವಿಹಾರದಲ್ಲಿಯೂ   ಯಾವುದನ್ನು ತಿನ್ನಬಾರದೋ ಮಾಡಬಾರದೋ ನೋಡಬಾರದೋ ಅವುಗಳಿಗೆ ಹೆಚ್ಚಿನ ಹಣ ನೀಡಲಾಗಿ  ಬೆಳೆಸಿದ ಮೇಲೇ‌  ಅಸುರರನ್ನು ತಡೆಯಲಾಗದೆ   ಪರಿತಪಿಸುವಂತಾಗಿರೋದು. ಒಳಗಿದ್ದ ಜ್ಞಾನ  ಸದ್ಭಳಕೆ  ಮಾಡಿಕೊಳ್ಳುವ ಶಿಕ್ಷಣವೇ ನಿಜವಾದ ಶಿಕ್ಷಣ.ಈಗಿನ ಶಿಕ್ಷಣವೇ ಹೊರಗಿನ ವಿಷಯದ್ದಾಗಿರುವಾಗ  ಶಿಕ್ಷಣ ದಾಸೋಹವಾಯಿತೆ.ಶಿಕ್ಷಣವೇ  ಪರಕೀಯರ ದಾಸ್ಯಕ್ಕೆ ಒಳಗಾಯಿತೆ? ಈಗಲೂ ಕಾಲಮಿಂಚಿಲ್ಲ.ಆತ್ಮರಕ್ಷಣೆಗಾಗಿ  ದಾನ ಧರ್ಮ ಕಾರ್ಯ ನಡೆಸಲು ಆತ್ಮಜ್ಞಾನವಿರಬೇಕು.. ಎಷ್ಟೇ ದಾನ ಧರ್ಮ   ಮಾಡಿದರೂ  ನಾನು ಎನ್ನುವ ಅಹಂಕಾರ  ಹೋಗದೆ ಹೆಚ್ಚಾಗುತ್ತಿದ್ದರೆ  ದಾನವರಾಗುವರು.  
ಮಕ್ಕಳ ದಿನಾಚರಣೆಯಂದು  ಬಲಿಪಾಡ್ಯಮಿ ಬಂದಿದೆ. ಮಕ್ಕಳಿಗೆ ದಾನದ ಬಗ್ಗೆ ತಿಳಿಸಿ ಬೆಳೆಸಿ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಉತ್ತಮ  ದಾನಿಗಳಾಗುವರು. ಒಳ್ಳೆಯದನ್ನು ಹಂಚಿದರೆ ಒಳ್ಳೆಯದಾಗುವುದು.ಕೆಟ್ಟದ್ದನ್ನು ಹಂಚಿದರೆ ಕೆಟ್ಟದ್ದಾಗುವುದು. ಇಷ್ಟೇ  ಜೀವನ.ಒಳ್ಳೆಯದು ಯಾವುದು, ದಾನ ಯಾವುದು ಸತ್ಯ ಯಾವುದೆನ್ನುವ  ಅರಿವೇ ನಿಜವಾದ ಗುರು  ಜೀವನದ ಗುರಿಯೆಡೆಗೆ ನಡೆಸುತ್ತದೆ. ಹಿಂದೆ ಇಂದು ಮುಂದೆ  ಇರುವ ಈ ಗುರು ಒಳಗೇ ಇರೋವಾಗ  ಹುಡುಕಿಕೊಂಡು  ಸತ್ಯ ತಿಳಿದರೆ  ಮಕ್ಕಳೇ ದೇವರಾಗಬಹುದು. 

ಗುರುಗಳಲ್ಲಿಯೂ ದೇವಗುರು ಅಸುರಗುರು ಎನ್ನುವರಿದ್ದರು.ಈಗಲೂ ಇದ್ದಾರೆ ಕಾಣೋ ದೃಷ್ಟಿ ಸರಿಯಿಲ್ಲವಷ್ಟೆ. ಯಾವುದೂ ಅತಿಯಾಗಬಾರದು ಯಾರೂ ಅತಿಯಾಗಿ ಬೆಳೆಯಬಾರದು  ಅಜ್ಞಾನದ ಜೊತೆಗೆ ಅಹಂಕಾರ ಸ್ವಾರ್ಥ ವೇ ಮಾನವನ ಶತ್ರುವಾಗಿರುತ್ತದೆ. ಆಗೋದೆಲ್ಲಾ  ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. 

ಕೊಟ್ಟ ಮಾತಿಗೆ( ಭಾಷೆ) ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

ಸಂಸ್ಕೃತ ಭಾಷೆ ಅರ್ಥ ವಾಗದಿದ್ದರೂ ಪರವಾಗಿಲ್ಲರಿ ಸಂಸ್ಕಾರಯುತ ಶಿಕ್ಷಣ ಸಿಕ್ಕಿದ್ದರೆ  ಜ್ಞಾನಿಗಳಾಗಲು ಸಮಸ್ಯೆಯಿಲ್ಲ.ಜ್ಞಾನಕ್ಕೆ ಭಾಷೆ ಮುಖ್ಯವಲ್ಲ ಕೊಟ್ಟ ಭಾಷೆ ಉಳಿಸಿ ಬೆಳೆಸೋದೇ ಮುಖ್ಯ. ಭಾಷಾಂತರದಿಂದಾಗುತ್ತಿರುವ ಅವಾಂತರಗಳು ಜ್ಞಾನ ಕುಸಿಯುವಂತೆ ಮಾಡುತ್ತಿವೆ. ಒಂದೇ ವಿಷಯವನ್ನು ಹಲವಾರು ಭಾಷೆಗಳಲ್ಲಿ ಹಲವಾರು ಶಬ್ದಕೋಶ ಹಿಡಿದು ಹಲವಾರು ರೀತಿಯ ಗೊಂದಲ ಸೃಷ್ಟಿ ಮಾಡೋ ಬದಲು ತಮ್ಮ ಸ್ವಂತ ಭಾಷೆಯಲ್ಲಿ ಒಮ್ಮೆ ತಿಳಿದು ಕಲಿಯುವುದೇ ಶ್ರೇಷ್ಠ.
ಸಂಸ್ಕೃತ  ಪುರಾತನ ದೇವಭಾಷೆಯಾಗಿದ್ದು ಎಲ್ಲಾ ವೇದ ಪುರಾಣಗಳ ವಿಷಯ  ಓದಿ ತಿಳಿಯುವಲ್ಲಿ ಸಹಾಯಕವಾಗಿದ್ದರೂ  ಮುಖ್ಯವಾಗಿ ಶಿಕ್ಷಣ ಕ್ಷೇತ್ರದಿಂದ ದೂರವಾಗುತ್ತಾ ಪರಭಾಷೆಗಳಿಗೆ ಜಾಗ ಮಾಡಿಕೊಟ್ಟಿತು. ಹೊರಗಿನಿಂದ ಬೆಳೆದ ಭಾಷೆ ಕೇವಲ ಹೊರಗಿನ ವಿಷಯವನ್ನು ಸರಿಯಾಗಿ ಅರ್ಥ ಮಾಡಿಸಬಹುದು.ಆದರೆ ಮೂಲ ಭಾಷೆಯನ್ನರಿಯದೆ ಹೊರ ನಡೆದವರಿಗೆ ಮೂಲದ ಭಾಷೆ ಅನಗತ್ಯವೆನಿಸಿದರೂ  ತಪ್ಪು. ಹೀಗಾಗಿ ತಿರುಗಿ ಮೂಲಕ್ಕೆ ಹೋಗುವಾಗ ಹೊರಗಿನ ಭಾಷೆಯ ಮೂಲಕವೇ ಅರ್ಥ ತಿಳಿಯುವಂತಾಗಿ ಅನರ್ಥಗಳೇ ಹೆಚ್ಚಾದವು. ಈ ಅನರ್ಥ ವಿರೋಧಿಸಿದವರನ್ನು ಮೂಲೆಗುಂಪು ಮಾಡಿಯಾದರೂ  ಭಾಷೆ  ಬೆಳೆಯಿತು. ಆದರೆ ಇದರಿಂದ ಯಾರಿಗಾದರೂ‌ ಲಾಭವಾಯಿತೆ? ಜ್ಞಾನ ಬಂದಿತೆ? ಸತ್ಯ ತಿಳಿಯಿತೆ ಎಂದರೆ  ಹೊರಗಿನ ಸತ್ಯ ಮೇಲೆ ಬಂತು ಹೊರಗಿನ ಜ್ಞಾನ ಬೆಳೆಯಿತು‌ ಒಳಗೇ ಇದ್ದ  ಸತ್ಯ ಧರ್ಮ ಹಿಂದುಳಿಯಿತು.
ಈಗ ಮತ್ತೆ ಸಾಕಷ್ಟು ಜನರು ಸಂಸ್ಕೃತ ಕಲಿಯಲು ಕಲಿಸಲು ಪ್ರಾರಂಭ ಮಾಡಿರೋದರಿಂದ ವೇದಕಾಲದ ಗ್ರಂಥಗಳನ್ನು ಓದಲು ಸಾಧ್ಯ.ಕೆಲವು ಗ್ರಂಥ ಮೂಲದ ಸತ್ಯ ತಿಳಿಸಿದ್ದರೆ ಅದನ್ನು ತಮ್ಮ ಅನುಭವದಿಂದ ತಿಳಿದು ಅಂದಿನ ಕಾಲಕ್ಕೆ ತಕ್ಕಂತೆ ವಿವರಿಸಿರುವುದನ್ನು  ಇಂದಿನ ಕಾಲದ ಜನರ ಜ್ಞಾನ ಪರಿಸ್ಥಿತಿ ಮನಸ್ಥಿತಿ ಯ ಆಧಾರದ ಮೇಲೆ ಕೂಲಂಕುಶವಾಗಿ ಅರ್ಥ ಮಾಡಿಕೊಳ್ಳಲು ‌ಇಂದಿನ ಭಾಷೆಯೂ ಅಗತ್ಯವಿದೆ.
ಕಾರಣ‌ ಹಿಂದಿನ ಧರ್ಮ ಸಂಸ್ಕೃತಿ ಸಂಪ್ರದಾಯ‌ಶಿಕ್ಷಣ ಭಾಷೆ ಹೇಗೆ ಜನರನ್ನು ಮುಂದೆ ನಡೆಸಿದೆಯೋ ಹಾಗೆ ಈಗಿನದ್ದೂ ನಡೆಸಿದೆ. ದಾರಿ  ಮಾತ್ರ ಬದಲಾಗಿದೆ. ಆತ್ಮಜ್ಞಾನದೆಡೆಗೆ ಹಿಂದೆ ನಡೆಸಿತ್ತು ಈಗಿದು ವಿಜ್ಞಾನದೆಡೆಗೆ  ನಡೆಸಿದೆ. ಎರಡೂ ಮುಖ್ಯವೆ ಆದ್ದರಿಂದ ಮೂಲ ಸತ್ಯವರಿತು  ಹೊರಗಿನ ಸತ್ಯ ತಿಳಿದು  ಜೀವನದಲ್ಲಿ  ಬದಲಾಗುವುದನ್ನು  ಕಂಡುಕೊಳ್ಳಲು ನಮ್ಮ ಮಾತೃಭಾಷೆ ಅಗತ್ಯ. ಯಾವ ಭಾಷೆಯೇ ಇರಲಿ ಅದರಲ್ಲಿ ಸತ್ವ ಸತ್ಯ ತತ್ವವಿದ್ದರೆ  ಶಾಂತಿಯ ಜ್ಞಾನ.
ವಿರುದ್ದವಿದ್ದರೆ ಕ್ರಾಂತಿಯ ಅಜ್ಞಾ‌ನ. ಕ್ರಾಂತಿಯಿಂದ ಭಾಷೆ ಉಳಿಯದು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಕ್ರಾಂತಿಯಾಗುವುದು. ಈ ಮಾತು ಗುರುಹಿರಿಯರಿಗೂ ಅನ್ವಯಿಸುತ್ತದೆ. ದೇವಾನುದೇವತೆಗಳು ಋಷಿಮುನಿಗಳೂ ಧರ್ಮ ಸಂಕಟದಲ್ಲಿ ಮಾತಿಗೆ ತಪ್ಪಿರುವಾಗ ನಾವೇನು ಲೆಕ್ಕ? ಎನ್ನುವ ಹಾಗಿಲ್ಲ.ಅಲ್ಲಿ ಧರ್ಮ ವಿತ್ತು ಇಲ್ಲಿ ಅಧರ್ಮ ವಿದೆ. ಅವರೊಳಗೆ ನಾವಿರೋವಾಗ. ಅಧರ್ಮ ಬೆಳೆದಂತೆಲ್ಲಾ ದೈವಶಕ್ತಿ ಗುರುಶಕ್ತಿಗೇ ದಕ್ಕೆಯಾಗುವುದಲ್ಲವೆ? 
ಇದರಲ್ಲಿನ ಅಧ್ವೈತ ವನ್ನು ಗಮನಿಸಿದರೆ  ನಾನೆಂಬುದಿಲ್ಲ ಎಂದಾಗುತ್ತದೆ. ನಾನು ನೀನು ಒಂದೇ ಆಗುತ್ತದೆ.ಎಲ್ಲಾ ಒಂದೇ ಶಕ್ತಿಯ ಅಧೀನದಲ್ಲಿರುವಾಗ ನಾವು ಮಾಡುವ ತಪ್ಪು ನಮ್ಮ ಶಕ್ತಿಯನ್ನು  ಹಿಂದುಳಿಸುವುದು. ಆತ್ಮಶಕ್ತಿಗೆ ಭಾಷೆ ಮುಖ್ಯವಲ್ಲ ಅದರೊಳಗಿನ ಸತ್ಯ ಸತ್ವ ತತ್ವವೇ ಮುಖ್ಯ. ಈಗಲಾದರೂ ಭಾಷೆ ಹೆಸರಿನಲ್ಲಿ ರಾಜಕೀಯ ಹೋರಾಟ ನಡೆಸಿ ಇನ್ನಷ್ಟು  ಭಾಷಾಂತರವಾದರೆ  ಇದರಿಂದ ಭಾಷೆಯ ಮೂಲವೇ  ಮೂಲೆಸೇರಬಹುದು. ಹೊರಗಿನವರಿಗೆ‌ಬೇಕಾಗಿರೋದು ಇದೇ. ಭಾಷೆ ಬೆಳೆಸಲು ಹೊರಗೆ ಹೋಗುವ ಅಗತ್ಯವಿರಲಿಲ್ಲ ಒಳಗಿದ್ದೇ ರಕ್ಷಣೆ ಮಾಡಬಹುದಿತ್ತು. ಆದರೆ ಆಗಿದ್ದೇ ಬೇರೆ. ಒಟ್ಟಿನಲ್ಲಿ ಭಾಷೆ ನಮ್ಮ ಆತ್ಮಶಕ್ತಿ ಬೆಳೆಸಬೇಕು. ಜ್ಞಾನ ಬೆಳೆದರೆ ಸಾಧ್ಯವಿದೆ.ಯಾರದ್ದೋ ಭಾಷೆ ಯಾರದ್ದೋ ವಿಷಯ,ಯಾರೋ‌  ಬೆಳೆಸಿ ಯಾರೋ ಕೇಳಿ,ಓದಿ ತಿಳಿದು ಇನ್ಯಾರೋ ತಲೆಗೆ ಒತ್ತಾಯದಿಂದ ತುಂಬಿದರೆ  ಆ ತಲೆಯಲ್ಲಿ ಮೊದಲೇ ಇದ್ದ ಜ್ಞಾನದ ಜೊತೆಗೆ ಭಾಷೆಗೂ ಅಡ್ಡಿಯಾಗಿ ತಲೆನೋವು ಹೆಚ್ಚಾಗುತ್ತದೆ.ಮಕ್ಕಳ ತಲೆಗೆ ವಿಷಯ ತುಂಬುವಾಗ ಎಚ್ಚರವಿದ್ದರೆ ಉತ್ತಮ. ಶಾಂತವಾಗಿದ್ದ ಮನಸ್ಸನ್ನು ಹದಗೆಡಿಸೋದೇ ಪರಭಾಷೆಯವಿಷಯಜ್ಞಾನ. ಇದನ್ನು ಸರ್ಕಾರವಾಗಲಿ, ರಾಜಕಾರಣಿಗಳಾಗಲಿ, ಪೋಷಕರಾಗಲಿ, ಪ್ರತಿಷ್ಠಿತ ಶಿಕ್ಷಣತಜ್ಞರು, ಜ್ಞಾನಿಗಳು,ಶಿಕ್ಷಕರು, ಸಂಸ್ಕೃತ ಪಂಡಿತರು, ನೇರವಾಗಿ ಮಕ್ಕಳಿಗೆ ತಿಳಿಸಲಾರರು. ಮಕ್ಕಳ ಮನಸ್ಸನ್ನು ಅರಿಯುವ ಕಲೆ ಕೇವಲ ಪೋಷಕರಿಗಿದೆ. ಈಗ  ಈ ಪೋಷಕರೆ ಮಕ್ಕಳನ್ನು  ಹೊರಗಟ್ಟಿ ಪರಭಾಷೆಯ ವ್ಯಾಮೋಹಕ್ಕೆ ಸಿಲುಕಿ ಸಂಸ್ಕಾರವಿಲ್ಲದ  ವಿಷಯವನ್ನು ತಲೆಗೆ ತುಂಬಿ ಮಕ್ಕಳೇ ಸರಿಯಿಲ್ಲವೆಂದರೆ  ಮಕ್ಕಳು ದೇವರ ಸಮಾನರು.ಆ ದೇವರಿಗೆ ತಿಳಿಯುವ ಭಾಷೆ  ಕಲಿಸಬೇಕಷ್ಟೆ.ವಿಚಾರವನ್ನು  ಯಾರಿಗೋ ತಿಳಿಸುತ್ತಿಲ್ಲ.ಪ್ರಜಾಪ್ರಭುತ್ವದ ಈ ಸ್ಥಿತಿಗೆ ಕಾರಣ ಭಾಷೆಯೇ  ಆಗಿರುವಾಗ ನಮ್ಮ ಮಾತನ್ನು ಮಕ್ಕಳು ಕೇಳುತ್ತಿಲ್ಲವೆಂದರೆ ನಾವು ನಮ್ಮ ಭಾಷೆಯನ್ನು ಉಳಿಸಿಕೊಂಡಿಲ್ಲವೆಂದರ್ಥ ವಾಗಬಹುದು. ನಮ್ಮ ನಮ್ಮ ಮನೆಯ  ಭಾಷೆ  ಕಲಿಸುವುದಕ್ಕೆ ಹೊರಗಿನವರ ಅಗತ್ಯವಿಲ್ಲ. ಹೊರಗಿನಿಂದ ಬಂದವರು ಅವರ ಭಾಷೆಯ ಹೇರಿದರೂ ನಾವು  ಯಾಕೆಂದು ಕೇಳಲಿಲ್ಲ.ಹಾಗಾಗಿ ಅವರು ಬೆಳೆದರು ನಾವು ಹಿಂದುಳಿದೆವು.ಇದನ್ನು ಸರಿಪಡಿಸಲು ಹಣದಿಂದ ಸಾಧ್ಯವಿಲ್ಲವಾದರೂ ಸರ್ಕಾರದ ಹಣವನ್ನು ನೀರಿನಂತೆಬಳಸಿ   ಪ್ರಚಾರ ಮಾಡುವವರ ಹೊಟ್ಟೆ ತುಂಬಿದರೂ ಜ್ಞಾನಬರಲಿಲ್ಲ. ಹಿಂದಿನ  ಜ್ಞಾನಿಗಳಲ್ಲಿದ್ದ ಭಕ್ತಿ ಶ್ರದ್ದೆ ಶಾಂತಿ ಈಗಿಲ್ಲವೆಂದರೆ ನಾವು ಅವರಂತೆ ಬದುಕಲಾಗಿಲ್ಲ. 
ಹೇಗೆ ಹಬ್ಬಗಳ ಹಿಂದೆ ಕಥೆಯಿರುವುದೋ ಹಾಗೆ ಭಾಷೆಗೂ ಕಥೆಯಿರುತ್ತದೆ. ಕಥೆ ಸರಿಯಾಗಿ ಅರ್ಥ ವಾಗಲು ಭಾಷೆ ನಮಗೆ ಅರ್ಥ ವಾಗುವಂತಿರಬೇಕು.ಯಾರದ್ದೋ ಒತ್ತಾಯಕ್ಕೆ  ಭಾಷೆ ಬೆಳೆಯೋದಿಲ್ಲ ನಾವೇ ಬೆಳೆಸಬೇಕು.
ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ ಧರ್ಮ ಗ್ರಂಥ ಗಳ  ವಿಷಯ  ಸಂಸ್ಕೃತ ದಲ್ಲಿದ್ದರೂ ಭಾಷಾಂತರ ಮಾಡಿದವರಿಗೆ ಏನೇನೋ ವಿಷಯ ಹೇಗೇಗೋ ಅರ್ಥ ವಾಗಿ ಅವರ ಭಾಷೆಗೆ ಇಳಿಸಲಾಯಿತು.ಆ ಕಾಲಕ್ಕೆ ತಕ್ಕಂತೆ ಕಥೆಯನ್ನು ತಿರುಚಲಾಗಿದ್ದರೆ ಸತ್ಯವಿರದು. ಹಾಗೆ  ಮಾಡಿದ್ದರಿಂದ ಧರ್ಮ ಉಳಿಯಿತೆ ಇಲ್ಲವಾದರೆ  ಅದೂ ಕಷ್ಟ ನಷ್ಟಕ್ಕೆ ಕಾರಣವಾಯಿತು.  ಪುರಾಣದ ತತ್ವ ವಾಸ್ತವದ ತಂತ್ರ ಭವಿಷ್ಯದ ಕುತಂತ್ರಕ್ಕೆ ದಾರಿಯಾಗದಂತೆ ಭಾಷೆಯ ಜೊತೆಗೆ  ಸತ್ಯ ಧರ್ಮವನರಿತರೆ  ಉತ್ತಮ.ರಾಮನಂತೆ ಶ್ರೀ ಕೃಷ್ಣ ನ ಕಾಲ ನಡೆದಿಲ್ಲವೆಂದರೆ  ಇಂದಿನ‌ ಕಲಿಯುಗದಲ್ಲಿ ಸಣ್ಣಪುಟ್ಟ ಸಮಸ್ಯೆ ಯನ್ನು ಬಂಡವಾಳವಾಗಿಸಿಕೊಂಡು ಹೊರಬರುವವರಿಗೆ ಭಾಷೆಯ ಮಹತ್ವ  ತಿಳಿಸುವ ಪ್ರಯತ್ನ ಮಾಡಿದರೆ ಉತ್ತಮ. ಆದರೂ ಎಲ್ಲರಿಗೂ ಜ್ಞಾನ ವಿದೆ. ಆದರೆ ಎಲ್ಲರಿಗೂ ಅವರ ಮಾತೃಭಾಷೆಯ ಜ್ಞಾನವಿಲ್ಲದೆ ಪೂರ್ಣ ಸತ್ಯ ಅರ್ಥ ವಾಗಿಲ್ಲ. ಇದಕ್ಕೆ ಸರ್ಕಾರ ಹೊಣೆಯಾಗದು ನಮ್ಮದೇ ಅಸಹಕಾರವೇ ಹೊಣೆಯಾಗಿದೆ. ಆಂಗ್ಲ ಮಾಧ್ಯಮವಿರಲಿ  ಪರಭಾಷೆಯೇ ಇರಲಿ ವಿಷಯದಲ್ಲಿ ಸತ್ವ ಸತ್ಯ ತತ್ವವಿದ್ದರೆ ಜ್ಞಾ‌ನ ಬರುತ್ತದೆ.