ಹೃದಯವಂತಿಕೆ ಅಧ್ಯಾತ್ಮದ ಶಕ್ತಿ ಹೃದಯಹೀನತೆ ಭೌತಿಕ ಶಕ್ತಿ. ಯಾವಾಗ ಮಾನವ ಹೃದಯವನ್ನು ಗೆದ್ದು ಬಾಳುವನೋ ಅಧ್ಯಾತ್ಮ ಸಾಧಕ ಹೃದಯ ಕದ್ದು ಬದುಕುವನೋ ಭೌತಿಕದ ತಾತ್ಕಾಲಿಕ ಸಾಧಕ.ಸಾಧನೆಯು ಇನ್ನೊಬ್ಬರ ಹೃದಯವಂತಿಕೆ ಹಾಳಾಗದಂತಿರಲಿ.
ಇತ್ತೀಚೆಗೆ ಹೃದಯದ ಸಮಸ್ಯೆ ಸಾಧಾರಣವಾಗಿ ಎಲ್ಲರಿಗೂ ಬರುತ್ತಿದೆ ಎಂದರೆ ಇದಕ್ಕೆ ಕಾರಣ ಹೃದಯಹೀನ ವಿಷಯವನ್ನು ಮೈ ಮನಸ್ಸಿನೊಳಗೆ ತುಂಬಿಕೊಂಡು ಬದುಕುವ ಜೀವನ ಶೈಲಿ. ಇದಕ್ಕಾಗಿ ಸಾಕಷ್ಟು ಹಣವನ್ನು ವೈದ್ಯ ರಿಗೆ ಕೊಟ್ಟು ಹೃದಯದ ಕಸಿ ಮಾಡಿಕೊಂಡು ಮತ್ತಷ್ಟು ವರ್ಷ ಜೀವಿಸುವ ಬದಲಾಗಿ ಅದೇ ಹಣವನ್ನು ಹೃದಯವಂತಿಕೆ ಬೆಳೆಸುವ ಶಿಕ್ಷಣಕ್ಕೆ ಕೊಟ್ಟರೆ ಮಕ್ಕಳ ಹೃದಯ ಸ್ವಚ್ಚವಾಗಿರುವುದಲ್ಲವೆ? ನಮ್ಮ ಭಾರತೀಯರು ಹೃದಯವಂತರಾಗಿದ್ದರು.ಈಗಲೂ ನಮ್ಮ ಈ ಗುಣಕ್ಕೆ ಎಲ್ಲಾ ದೇಶದವರೂ ಅತಿಥಿಗಳಾಗಿ ಬಂದು ಸೇರುತ್ತಿದ್ದಾರೆ.ಆದರೆ ಅವರ ಹೃದಯಹೀನ ಕೆಲಸಕ್ಕೆ ಸಹಕಾರ ಕೊಡುತ್ತಾ ಬೆಳೆಸಿ ನೆಲಜಲ ಬಿಟ್ಟುಕೊಟ್ಟು ಧರ್ಮ ವನ್ನು ಹಾಳು ಮಾಡಿದರೂ ಪ್ರಶ್ನೆ ಮಾಡದ ನಮ್ಮಲ್ಲಿ ಹೃದಯವಂತಿಕೆ ಹೆಚ್ಚಾಗಿದೆಯೆ ಅಥವಾ ಹೃದಯವೇ ಇಲ್ಲದಂತೆ ಮಾಡಿದ್ದಾರೆಯೆ? ನಮ್ಮವರ ಹೃದಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತವರು ಪರಕೀಯರ ಹೃದಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಪರಕೀಯರನ್ನು ಓಲೈಸಿಕೊಂಡು ರಾಜಕೀಯ ನಡೆಸುವುದಕ್ಕೆ ನಮ್ಮ ಸಹಕಾರವಿದೆ.ಆದರೆ ನಮ್ಮವರ ಹೃದಯಕ್ಕೆ ದಕ್ಕೆ ಬಂದಾಗ ಸಹಕಾರ ನೀಡದೆ ದೂರವಾಗುತ್ತಿರುವ ಯುವಪೀಳಿಗೆಯೂ ಬೆಳೆದಿದ್ದಾರೆಂದರೆ ಇದಕ್ಕೆ ಕಾರಣವೇ ವೈಜ್ಞಾನಿಕ ಪ್ರಗತಿಯಾಗಿದೆ.ಪ್ರತಿಯೊಂದು ಹಣದಿಂದ ಖರೀದಿಸಬಹುದೆನ್ನುವ ಅಜ್ಞಾನ ಮಿತಿಮೀರಿದೆ. ಸರ್ಕಾರದ ಅತಿಯಾದ ವಿದೇಶಿ ವ್ಯವಹಾರ,ವೈಜ್ಞಾನಿಕ ಚಿಂತನೆ ಜನತೆ ಪಡೆದ ಶಿಕ್ಷಣಕ್ಕೆ ಸರಿಯಾಗಿ ದೇಹದ ಹಾಗು ದೇಶದ ಆರೋಗ್ಯವಿರುತ್ತದೆ.ಯಾವಾಗ ಆಂತರಿಕ ಶಕ್ತಿಯನ್ನು ಮರೆತು ಭೌತಿಕ ಶಕ್ತಿ ದುರ್ಭಳಕೆ ಯಾಗುವುದೋ ಆಗಲೇ ಹೃದಯಹೀನರು ಜನ್ಮಪಡೆಯುವರು. ಇದನ್ನು ಯಾವುದೇ ಆಪರೇಷನ್ ನಿಂದ ಪೂರ್ಣ ಸರಿಪಡಿಸಲಾಗದು.ತಾತ್ಕಾಲಿಕ ಪರಿಹಾರಕ್ಕೆ ಕೋಟ್ಯಾಂತರ ರೂ ಸುರಿಯುವ. ಬದಲಾಗಿ ಶಾಶ್ವತ ಪರಿಹಾರವಾಗಿ ಹೃದಯವಂತಿಕೆ ಬೆಳೆಸುವ ಶಿಕ್ಷಣ ಕೊಟ್ಟರೆ ಆತ್ಮನಿರ್ಭರ ಭಾರತವಾಗುತ್ತದೆ.ಈವರೆಗೆ ಇಂತಹ ಅಸಂಖ್ಯಾತ ಲೇಖನಗಳನ್ನು ಮಠ ಮಾನ್ಯ, ಶಾಲಾಕಾಲೇಜ್, ಸಂಘಸಂಸ್ಥೆಗಳ ಮುಖ್ಯಸ್ಥ ರಿಗೆ ತಲುಪಿಸಿ ಇದನ್ನು ಸರ್ಕಾರದವರೆಗೆ ತಲುಪಿಸುವ ಕೆಲಸವಾಗಿದ್ದರೂ ಇಲ್ಲಿ ರಾಜಕೀಯವೆನ್ನುವ ಮಹಾಶಕ್ತಿಗೆ ಹೃದಯವಂತಿಕೆ ಲೆಕ್ಕಕ್ಕಿಲ್ಲ. ಯಾವಾಗ ಹೃದಯವಂತರು ಬೆಳೆಯುವರೋ ಆಗ ರಾಜಕೀಯದ ಉದ್ದೇಶ ಅರ್ಥ ವಾಗಿ ರಾಜಕೀಯಕ್ಕೆ ಯಾವುದೇ ಸಹಕಾರ ಸಿಗದೆ ಹೋಗುತ್ತದೆ.ಈ ವಿಚಾರ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯತೆಗೆ ಗೊತ್ತಿರುವ ಕಾರಣ ರಾಜಕಾರಣಿಗಳನ್ನು ದಾಳವಾಗಿ ಬಳಸುತ್ತಾ ಹೃದಯದ ಕಸಿಗೆ ಸಹಕಾರ ನೀಡುವ ಜನಸಂಖ್ಯೆ ಬೆಳೆಯುತ್ತಿದೆ. ಎಷ್ಟು ಕಸಿ ಮಾಡಿದರೂ ಸಸಿಗೆ ಸರಿಯಾದ ಗೊಬ್ಬರ ಹಾಕದಿದ್ದರೆ ಮುಖಕ್ಕೆ ಮಸಿಬಳಿದುಕೊಂಡಂತೆ. ಒಟ್ಟಿನಲ್ಲಿ ಹೃದಯದ ಕಸಿ ಮಾಡುವ ವೈದ್ಯರ ಸಾಧನೆಗೆ ಹೆಚ್ಚಿದ ಬೇಡಿಕೆ ಹೃದಯವಂತಿಕೆಯ ಜನರಿಗೆ ಸಿಗದೆ ಭಾರತದಂತಹ ಮಹಾ ಪವಿತ್ರ ದೇಶ ಅಪವಿತ್ರವಾಗುತ್ತಿದ್ದರೂ ನಮ್ಮ ಹೃದಯ ಸುರಕ್ಷಿತವೆನ್ನುವ ಭ್ರಮೆಯಲ್ಲಿ ಜೀವಿಸೋದರಲ್ಲಿ ಅರ್ಥ ವಿಲ್ಲ.ಸಣ್ಣ ಸಣ್ಣ ಮಕ್ಕಳಿಗೇ ಹೃದಯದ ರೋಗ ಬರುತ್ತಿದೆ ಎಂದರೆ ಪೋಷಕರು ಎಚ್ಚರವಾಗಬೇಕಿದೆ.ಅವರ ಹೃದಯವಂತಿಕೆ ಬೆಳೆಸೋ ಕಾರ್ಯಕ್ರಮ ನಡೆಸಿ. ಅವರನ್ನು ಪರಮಾತ್ಮನ ಸೇವಕರಾಗಿಸಿ, ಅವರನ್ನು ದೇಶದ ಆಸ್ತಿಯಾಗಿಸಿ, ನಮ್ಮ ಭೌತಿಕ ಆಸ್ತಿಯ ಹಿಂದಿರುವ ಋಣ ತೀರಿಸುವ ಬಗ್ಗೆ ಯೋಚಿಸಿ,ಉತ್ತಮ ಶಿಕ್ಷಣ ನೀಡಿದರೆ ಒಳಗಿನ ರೋಗ ತೊಲಗಬಹುದು. ನೆಲಜಲದ ಹೋರಾಟಕ್ಕೆ ಜನರನ್ನು ಮಕ್ಕಳು ಮಹಿಳೆಯರನ್ನು ಮನೆಯಿಂದ ಹೊರಗೆ ಕರೆತಂದರೆ ಮಳೆಬೆಳೆಯಾಗುವುದೆ? ಇರುವುದನ್ನು ಸರಿಯಾಗಿ ಹಂಚಿಕೊಂಡು ಬದುಕುತ್ತಿದ್ದ ಹಿಂದಿನವರಲ್ಲಿದ್ದ ಹೃದಯವಂತಿಕೆ ನಮ್ಮಲ್ಲಿ ಯಾಕಿಲ್ಲ? ಕಾರಣ ಅತಿಯಾದ ಸ್ವಾರ್ಥ ಅಹಂಕಾರದ ವೈಭೋಗದ. ಜೀವನಕ್ಕಾಗಿ ಹೊರಗಿನ ಸತ್ಯವಷ್ಟೆ ಶಾಶ್ವತವೆಂದರಿತು ಭೂಗಳ್ಳರೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಭೂಮಿಯನ್ನೇ ಆಳಲಾಗದೆ ಪರರ ವಶದಲ್ಲಿರುವವರಿಗೆ ಹೃದಯವಂತಿಕೆ ಇರದು.ಒಟ್ಟಿನಲ್ಲಿ ಕೊಟ್ಟು ಕೆಟ್ಟ ಮುಟ್ಟಿಕೆಟ್ಟ ಎಂದು ಕರ್ಣ, ರಾವಣರಿಗೆ ಹೇಳಿದಂತೆ ನಮ್ಮ ಭೂಮಿಯನ್ನು ಮಹಿಳೆಯರನ್ನು ವಿದೇಶಿಗರಿಗೆ ಕೊಟ್ಟು ಅವರ ವ್ಯವಹಾರ ಬಂಡವಾಳ ಸಾಲದ ಜೊತೆಗೆ ಧರ್ಮ ವನ್ನು ಮುಟ್ಟಿಕೊಂಡು ಕೆಟ್ಟರೆ ಇದು ಅವರ ತಪ್ಪಲ್ಲ .ನಾವೇ ಕೊಟ್ಟಿರುವ ಶಿಕ್ಷಣದ ದೋಷ.ಇದನ್ನು ಸರಿಪಡಿಸಲು ನಮ್ಮವರೆ ತಯಾರಿಲ್ಲವೆಂದರೆ ಸರಿಯಾಗದು.
ಒಳಗಿನ ಹೃದಯಕ್ಕೆ ಸಾತ್ವಿಕ ಶಿಕ್ಷಣದ ಅಗತ್ಯವಿದೆ.ಸತ್ಯ ಎಲ್ಲಿದೆ? ಧಾರ್ಮಿಕ ಕ್ಷೇತ್ರವೇ ರಾಜಕೀಯಕ್ಕೆ ಸಹಕರಿಸಿ ಹೊರಬಂದರೆ ಒಳಗಿರುವ ಸತ್ಯ ತಿಳಿಸುವವರು ಯಾರು? ಭಾರತ ಸ್ವತಂತ್ರ ದೇಶವಾಗೋದಕ್ಕೆ ನಮ್ಮ ಮಹಾತ್ಮರುಗಳು ಹೃದಯವಂತರಾಗಿದ್ದರು. ಹೃದಯದಿಂದ ದೇಶಭಕ್ತಿ ಬೆಳೆಸಿಕೊಂಡು ಹೋರಾಡಿದ್ದರು.ಈಗ ಇದಕ್ಕೆ ವಿರುದ್ದ ನಿಂತು ಹೃದಯದ ಕಸಿಗೆ ಸಹಕರಿಸುವವರೆ ಹೆಚ್ಚು.ಕಾರಣ ಹಣವಿದೆ ಜ್ಞಾನವಿಲ್ಲ.ಒಟ್ಟಿನಲ್ಲಿ ಬಡವರಲ್ಲಿರುವ ಹೃದಯವಂತಿಕೆಯನ್ನು ದುರ್ಭಳಕೆ ಮಾಡಿಕೊಂಡು ರಾಜಕೀಯ ನಡೆಸೋರಿಂದ ಆತ್ಮನಿರ್ಭರ ಭಾರತವಾಗದು.ಆಡೋದೊಂದು ಮಾಡೋದೊಂದು ನಡೆಯೋದೆ ಒಂದು. ಎಲ್ಲರನ್ನೂ ಒಂದಾಗಿಸೋದಕ್ಕೆ ರಾಜಕೀಯ ಬಿಡದು. ಜನರು ಎಷ್ಟು ಒಂದಾಗಿ ಹೊರಗೆ ಹೋರಾಟ ನಡೆಸಿದರೂ ನಮ್ಮಲ್ಲಿ ಹೃದಯವಂತಿಕೆ ಇಲ್ಲದಿದ್ದರೆ ಪ್ರಯೋಜನವಿರದು. ಸಾಕಷ್ಟು ಹೃದಯದ ರೋಗಿಗಳಿಗೆ ಹೊರಗಿನ ಚಿಕಿತ್ಸೆ ಇದ್ದರೂ ಒಳಗಿನ ಚಿಕಿತ್ಸೆ ಗೆ ಉತ್ತಮ ಸತ್ಸಂಗ,ಯೋಗ,ಪ್ರಾಣಾಯಾಮ,ದಾನಧರ್ಮ ಕಾರ್ಯಕ್ರಮವೇ ಹೆಚ್ಚು ಫಲಕಾರಿಯಾಗಿರೋದು. ಇದಕ್ಕೆ ಭಾರತವನ್ನು ವಿಶ್ವಗುರು ಯೋಗಗುರು ಎಂದಿರೋದು.ವಿದೇಶಗಳಲ್ಲಿ ಈಗಾಗಲೇ ಇದನ್ನರಿತು ದೇಶದ ಜನತೆಗೆ ಉತ್ತಮ ಯೋಗಶಿಕ್ಷಣ ನೀಡುತ್ತಿರುವುದು ನಮ್ಮ ಹೆಮ್ಮೆ.ಆದರೆ ವಿಪರ್ಯಾಸವೆಂದರೆ ನಮ್ಮ ಮಕ್ಕಳಿಗೇ ಇಂತಹ ಶಿಕ್ಷಣ ಕೊಡದೆ ಸರ್ಕಾರದ ಹಿಂದೆ ಬೇಡುವ ಪರಿಸ್ಥಿತಿ ಬಂದಿರೋದು ಆತ್ಮದುರ್ಭಲ ತೆಗೆ ಹೃದಯಹೀನತೆಗೆ ಕಾರಣವಾಗಿದೆ ಎನ್ನಲು ಬೇಸರವಾಗುತ್ತದೆ.ಇದೊಂದು ಸಾಮಾನ್ಯಜ್ಞಾನದ ಸಾಮಾನ್ಯಪ್ರಜೆಯ ಸಾಮಾನ್ಯ ವಿಷಯ ಎಂದು ಎಲ್ಲಾ ಓದುಗರೂ ಸಾಮಾನ್ಯವಾಗಿ ತಳ್ಳಿಹಾಕಬಹುದು.ಆದರೆ ಮಾನವನಾಗೋದಕ್ಕೆ ಸಾಮಾನ್ಯ ಜ್ಞಾನವೇ ಮೂಲಾಧಾರವೆನ್ನುವ ಸತ್ಯವರಿತವರಿಗೆ ಇದರಲ್ಲಿನ ವಿಶೇಷ ಜ್ಞಾನವೂ ಅರ್ಥ ವಾಗಬಹುದಷ್ಟೆ. ಓದಿ ತಿಳಿಸುವವರು ಹೃದಯವಂತರಾಗಿರಲೇಬೇಕೆಂದಿಲ್ಲ ಆದರೆ ಅನುಭವಿಸಿ ಸತ್ಯ ತಿಳಿದವರು ಹೃದಯಹೀನರಾಗಿರೋದಿಲ್ಲ. ಹೃದಯವಿಲ್ಲದೆ ಜೀವನ ನಡೆಸಲಾಗದು ಹಾಗೆಯೇ ಹೃದಯವಂತಿಕೆಯಿಲ್ಲದ ಜೀವನ ಜೀವನವೇ ಅಲ್ಲ ಎನ್ನುವರು ನಮ್ಮ ಮಹಾತ್ಮರುಗಳು. ಏನಂತೀರ? ನೀವು ಹೃದಯವಂತರಾಗಿದ್ದರೆ ಇದನ್ನು ಶೇರ್ ಮಾಡುವಿರೆನ್ನಬಹುದೆ? ಇದರ ಒಳಗಿರುವ ಸದುದ್ದೇಶ ಒಂದೇ .ಯಾರ ಹೃದಯವನ್ನೂ ಕದ್ದು ಮಾರುವ ಅಸುರಿತನ ಬೆಳೆಯಬಾರದಷ್ಟೆ. ಇಲ್ಲಿ ವ್ಯವಹಾರಕ್ಕೆ ಇಳಿದಾಗ ಹೆಚ್ಚಿನ ಹಣಕ್ಕಾಗಿ ಮಾನವನ ಅಂಗಾಂಗಗಳನ್ನು ಬಳಸುವರು.ಅದೇ ಅಧ್ಯಾತ್ಮದ ದೃಷ್ಟಿಯಿಂದ ನೀಡಿದಾಗ ಪ್ರತಿಯೊಂದು ಅಂಗದಲ್ಲಿಯೂ ಮಹಾಶಕ್ತಿಯ ದರ್ಶನ ವಾಗುವುದು .ಇದಕ್ಕೆ ಹೃದಯವಂತಿಕೆ ಇರಬೇಕಷ್ಟೆ.
ಎಚ್ಚರವಾದರೆ ಭಾರತೀಯತೆ ಉಳಿಸಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಒಳಗಿರುವ ಹೃದಯವಂತೂ ತನ್ನ ಕೆಲಸ ನಿಲ್ಲಿಸದೆ ಬಡಿಯುತ್ತದೆ.ನಿಂತರೆ ಮುಗಿಯಿತು ಜೀವದ ಕಥೆ.ಇದನ್ನು ಯಾವ ವೈದ್ಯರೂ ತಿರುಗಿ ತರಲಾಗದಲ್ಲವೆ? ವೈದ್ಯೋ ಹರಿ: ನಾರಾಯಣನ ಸ್ವರೂಪದಲ್ಲಿ ಇರುವ ವೈದ್ಯರನ್ನು ಗೌರವಿಸಲೇಬೇಕಿದೆ. ಅವರ ಹೃದಯದ ಪರೀಕ್ಷೆ ಮಾಡಿ ಬಂದ್ ಆಗಿರುವ ಕೋಶಗಳನ್ನು ತೆರೆಸುವರು. ಹಾಗೆಯೇ ಎಷ್ಟೋ ಯೋಗಿಗಳಾದವರು ದ್ಯಾನ,ಪ್ರಾಣಾಯಾಮ,
ಯೋಗದಂತಹ ಅಧ್ಯಾತ್ಮದ ಚಿಕಿತ್ಸೆ ಯ ಮೂಲಕವೂ ಈ ಕೆಲಸ ಮಾಡುತ್ತಿದ್ದಾರೆ. ಯೋಗವೆಂದರೆ ಯೋಗಾಸನ ಸದ್ವಿಚಾರದೊಂದಿಗೆ ಮನಸ್ಸು ಸೇರಿಕೊಂಡು ನಡೆಯುವುದೇ ಯೋಗ. ಇದರಲ್ಲಿ ಪರಮಾತ್ಮನ ಸತ್ಯ ಪರಮಧರ್ಮ ಎರಡೂ ಇದ್ದರೆಮಹಾಯೋಗವಾಗುತ್ತದೆನ್ನುವರು ಮಹಾತ್ಮರು. ಕರ್ಮವಿಲ್ಲದ ಜ್ಞಾನದಿಂದ ಯೋಗವಾಗದು, ಜ್ಞಾನವಿಲ್ಲದ ಕರ್ಮ ವೂ ಯೋಗವಾಗದು. ಇದರ ನಡುವಿರುವ ರಾಜಕೀಯ ವ್ಯವಹಾರಗಳು ಮಿತಿಮೀರಿದಷ್ಟೂ ರೋಗವೇ ಹೆಚ್ಚುವುದು. ಯಾರಾದರೂ ರಾಜಕೀಯದಿಂದ ಹೃದಯವಂತಿಕೆ ಬೆಳೆಸಿಕೊಂಡಿರುವರೆ? ಅಥವಾ ವ್ಯವಹಾರಿಕ ಜೀವನದಿಂದ ಹೃದಯವಂತಿಕೆ ಬೆಳೆಸಬಹುದೆ? ಸಾಧ್ಯವಾಗಿಲ್ಲವೆಂದರೆ ಇಂದಿನ ಈ ಸ್ಥಿತಿಗೆ ಕಾರಣವೇ ರಾಜಕೀಯತೆ ತುಂಬಿದ ವ್ಯವಹಾರಿಕ ಜೀವನ ಶೈಲಿಯಿಂದಾಗಿ ಹೃದಯದ ರೋಗ ಹೆಚ್ಚಾಗಿದೆ ಎಂದರ್ಥ ವಾಗುತ್ತದೆ. ಹೀಗೆ ಆಗಲು ಕಾರಣವೇ ಒಳಗೆ ಹಾಕಿಕೊಳ್ಳುತ್ತಿರುವ ಆಹಾರ, ಶಿಕ್ಷಣದ ವಿಷಯ,ಭೌತಿಕದ ಭೋಗಜೀವನವೇ ಮುಖ್ಯವೆಂದರಿತು ಅಧ್ಯಾತ್ಮ ಸತ್ಯವನರಿಯದೆ ನಡೆದಿರುವ ಭೌತವಿಜ್ಞಾನದ ಅತಿಯಾದ ಬಳಕೆಯಾಗಿದೆ. ಭೌತವಿಜ್ಞಾನ ಅಗತ್ಯವಾದರೂ ಅದರ ಸದ್ಬಳಕೆ ಅತ್ಯಗತ್ಯ ವಾಗಿತ್ತು. ಭೂಮಿಯ ಮೇಲಿದ್ದು ಆಕಾಶದೆತ್ತರ ಹಾರೋದು ಕೆಲವರಿಗಷ್ಟೆ ಸಾಧ್ಯ. ಆದರೆ ಭೂಮಿಯ ಮೇಲಿದ್ದು ಆಕಾಶತತ್ವವನರಿತು ನಡೆಯುತ್ತಿದ್ದ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸೋತರೆ ಅದು ಸಾಧನೆಯಾಗದು. ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.ನಂತರವೇ ವಿಶೇಷ ವಿಜ್ಞಾನ ಬೆಳೆಸಿಕೊಂಡರೆ ಎಲ್ಲರೊಳಗೂ ಅಡಗಿರುವ ಹೃದಯದ ರೋಗಕ್ಕೆ ಕಡಿವಾಣ ಹಾಕಬಹುದು. ಅದನ್ನು ತಿಳಿದು ಹಿಂದಿನವರಂತೆ ಆರೋಗ್ಯಕರ ವಿಚಾರದ ಶಿಕ್ಷಣ, ಸ್ವಚ್ಚ ಆಹಾರ ವಿಹಾರ ಯೋಗ ಜೀವನ ನಡೆಸಿದರೆ ಹೃದಯವೂ ಕ್ಷೇಮ ಹೃದಯವಂತರೂ ಕ್ಷೇಮ.ಇದು ಆತ್ಮನಿರ್ಭರ ಭಾರತ.
ಯಾರದ್ದೋ ದುಡ್ಡು ಯಲ್ಲಮ್ಮನಜಾತ್ರೆ ಮಾಡಬಹುದು.
ಆದರೆ ಯಾರದ್ದೋ ಹೃದಯ ಕದ್ದು ದೈವತ್ವ ಪಡೆಯಲಾಗದು.ಕಾರಣ ಅವರವರ ಹೃದಯದ ಬಡಿತಕ್ಕೆ ತಕ್ಕಂತೆ ಜೀವನ ನಡೆಯುತ್ತದೆ. ಸಮಾಧಾನ,ಶಾಂತಿ,ತೃಪ್ತಿ ಕರ ಜೀವನಕ್ಕೆ ಹೃದಯವಂತಿಕೆಯ ಗುಣಜ್ಞಾನವೇ ಮದ್ದು.
ವಿಷ್ಣುವಿನ ಹೃದಯದಲ್ಲಿ ಲಕ್ಮಿಯಿರುವಾಗ ಹೃದಯವಂತಿಕೆ ಯಿಂದ ಸಂಪಾದಿಸಿದ ಹಣದಿಂದ ಧಾರ್ಮಿಕ ಕಾರ್ಯ ನಡೆಸಿದರೆ ಮುಕ್ತಿ ಸಾಧ್ಯ. ಅಯೋಗ್ಯರ ಸಂಪಾದನೆಯಲ್ಲಿ ಎಷ್ಟು ಹೃದಯದ ಕಸಿ ಮಾಡಿದರೂ ಒಳಗೇ ರೋಗ ಹೆಚ್ಚುವುದು. ಹೊರಗಿನಿಂದ ಮಾಡಿದ ಆಪರೇಷನ್ ತಾತ್ಕಾಲಿಕವಷ್ಟೆ.ಇದು ಪಕ್ಷಪಕ್ಷಗಳನ್ನು,ಧರ್ಮ ಧರ್ಮ, ಜಾತಿ ಜಾತಿ,ದೇಶದೇಶವನ್ನು ಸೇರಿಸುವ ವ್ಯವಹಾರಿಕ ರಾಜಕೀಯದಷ್ಟು ಸುಲಭವಿಲ್ಲದ ಕಾರಣ ಹೊರಗಿನ ಆಪರೇಷನ್ ಹೆಚ್ಚಾಗುತ್ತಾ ಹೃದಯವಂತರ ಸತ್ಯವನ್ನು ಕಡೆಗಣಿಸುತ್ತಾ ಹೃದಯಹೀನರಿಗೆ ಮಣೆಹಾಕಿ ಹೃದಯದ ರೋಗ ಬೆಳೆಸಲಾಗುತ್ತಿದೆ. ಇದಕ್ಕೆ ನಮ್ಮದೇ ಸಹಕಾರವಿರೋವಾಗ ಯಾರನ್ನೋ ತಪ್ಪಿತಸ್ಥರೆಂದರೆ ಹೃದಯಸರಿಯಾಗಿ ಕೆಲಸಮಾಡಲಾಗದು.