ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, June 28, 2025

ದ್ವೇಷದಿಂದ ಅಧ್ಯಾತ್ಮ ಸಾಧನೆ ಸಾಧ್ಯವೆ?

ದ್ವೇಷ ಸೇಡು ಕೋಪ ಹಠ  ಎಲ್ಲವೂ ಸಾಧನೆಗೆ ಅಡೆತಡೆಗಳನ್ನು ಸೃಷ್ಟಿ ಮಾಡುವುದೆನ್ನುವುದು  ಅಧ್ಯಾತ್ಮ ಸತ್ಯ. ಹಾಗಾದರೆ ವಾಸ್ತವದಲ್ಲಿ ಇವೆಲ್ಲವೂ ರಾರಾಜಿಸುತ್ತಿವೆ ಹರಡುತ್ತಿದೆ ಬೆಳೆದು‌ಕುಣಿದು ಕುಣಿಸುತ್ತಿದೆ ಎಂದರೆ ಇದರ ಹಿಂದೆ ಸಾಧನೆ ಆಗಿದೆಯೆ?
ಆದರೂ  ಇದನ್ನು ಮಾನವ ಹೆಚ್ಚಾಗಿ ಬಳಸಿಕೊಂಡು ಸಾಧಕ ಎಂದು ಕರೆಸಿಕೊಂಡರೆ  ಅಧ್ಯಾತ್ಮ ವಾಗದಷ್ಟೆ.
ಇಲ್ಲಿ ಅಧ್ಯಾತ್ಮ ಸಾಧನೆಗೆ ಇವುಗಳಿಂದ ದೂರವಿರಬೇಕಿದೆ.
ಭೌತಿಕದೆಡೆಗೆ ನಡೆದಷ್ಟೂ ಸ್ಪರ್ಧೆ ಹೆಚ್ಚು. ಯಾರೊಂದಿಗೆ ಸ್ಪರ್ಧೆ ಎಂದರೆ ನಮ್ಮವರೊಂದಿಗೇ ಸ್ಪರ್ಧೆ ‌ನಡೆಸಿಕೊಂಡು ಸೋಲು ಗೆಲುವಿನ ಅಂತರ‌ಬೆಳೆಸಿ ಅದರಿಂದ ಜನ್ಮ. ಪಡೆದ ದ್ವೇಷ ಹೊತ್ತು  ಸೇಡು ತೀರಿಸಿಕೊಳ್ಳಲು ಮತ್ತೊಂದು ಜನ್ಮದವರೆಗೂ ಕಾಯುವ  ಅತೃಪ್ತ ಆತ್ಮಗಳಿಗೆ  ಜನ್ಮ ಸಿಗದೆ ಕೋಪಬಂದು ಹಠದಿಂದ. ಯಾರೊಳಗೋ ಸೇರಿಕೊಂಡು ಆಟವಾಡುವಾಗ  ಹೊರಗಿನ ಕಣ್ಣಿಗೆ  ಸತ್ಯ ಅರ್ಥ ವಾಗದೆ ಇನ್ನಷ್ಟು  ಸಮಸ್ಯೆಗಳನ್ನು ಹೊತ್ತು ಜೀವ ಹೋಗುತ್ತದೆ.
ಇದನ್ನು ತಡೆಯುವುದೇ ಅಧ್ಯಾತ್ಮ ಸಾಧನೆಯ ಗುರಿ. ಅಲ್ಲೂ  ಅಂತರ ಬೆಳೆದಷ್ಟೂ ಅತಂತ್ರಸ್ಥಿತಿಗೆ ತಲುಪುತ್ತದೆ ಮನುಕುಲ.
ಭೂಮಿ ಇರೋದೆ ಒಂದು. ಅದರಲ್ಲಿ ಮನುಕುಲದ ಸಂಸಾರ ಇದೆ. ಸಂಸಾರದೊಳಗಿದ್ದು ಸಾಧನೆ ಮಾಡೋದೆಂದರೆ  ಬಹಳ ಕಷ್ಟ. ಹೀಗಾಗಿ   ಅಡ್ಡದಾರಿಹಿಡಿದವರು ಹೆಚ್ಚು.ಎಷ್ಟು ಅಡ್ಡ ಹೋದರೂ ಸೀದಾ ನಡೆಯೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು ಎನ್ನುವ ಸನಾತನ ಧರ್ಮ ವನ್ನು ಅಲ್ಲಗೆಳೆದಷ್ಟೂ ಅಲ್ಲ ಬೆಳೆಯುವುದು. ನಕಾರಾತ್ಮಕ ಶಕ್ತಿ ಬೆಳೆದಷ್ಟೂ ಸಕಾರಾತ್ಮಕ ಶಕ್ತಿಯ ಪರಿಚಯವಾಗದು.  ಒಟ್ಟಿನಲ್ಲಿ ಕಣ್ಣಿಗೆ ಕಾಣದ ಅಗೋಚರ ಶಕ್ತಿಗಳ ನಡುವಿನ  ಹೋರಾಟದಲ್ಲಿ  ಕಣ್ಣಿಗೆ ಕಾಣುವ ಮಾನವನ ಜೀವನ ಮಧ್ಯೆ ಸಿಲುಕಿ ಮಧ್ಯವರ್ತಿ ಮಾನವ ಆಟಕ್ಕುಂಟು  ಲೆಕ್ಕಕ್ಕಿಲ್ಲ. ತಾನೇ ತಿಳಿದೋ ತಿಳಿಯದೆಯೋ ಮಾಡುವ ಕರ್ಮ ಕ್ಕೆ ತಕ್ಕಂತೆ ಫಲ ಅನುಭವಿಸೋದನ್ನು ಯಾರೂ ತಡೆಯಲಾಗದು ಎಂದರೆ ನಮ್ಮ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ  ಯಾರ ಆಟ  ನಡೆದಿದೆ?ಇದರಿಂದಾಗಿ  ಬದಲಾವಣೆ   ಒಳ್ಳೆಯ ದು ಆಗುವುದೆ ? ಕೆಟ್ಟದ್ದೆ? ಹಣದಿಂದ. ‌ಬದಲಾದರೆ ಕೆಟ್ಟದ್ದೆ ಜ್ಞಾನದಿಂದ ಬದಲಾದರೆ ಒಳ್ಳೆಯದು. ಇದ್ದಾಗಲೇ ಸತ್ಯ ತಿಳಿದು  ಸನ್ಮಾರ್ಗ ಹಿಡಿದವರು ಮಹಾತ್ಮರಾಗಿದ್ದಾರೆಂದರೆ  ಮಹಾತ್ಮರ ದಾರಿ ರಾಜಕೀಯ ಆಗಿರದೆ ರಾಜಯೋಗವಿತ್ತು.
ತನ್ನ ತಾನರಿತಾಗಲೇ  ಆತ್ಮನ ಉನ್ನತಿ.  ಆತ್ಮನಿರ್ಭರ ಆಗದೆ ಇದ್ದರೆ  ಅಧ್ಯಾತ್ಮ ವಾಗದು. ಹೀಗೇ ಎಲ್ಲಾ ಹಿಂದಿನ ಧರ್ಮ ಕರ್ಮ  ಜೊತೆಯಲ್ಲಿ  ನಡೆದರೆ  ಕ್ಷೇಮ. ಆಗೋದನ್ನು ತಡೆಯಲಾಗದು. ‌ಆಗಿದ್ದೆ ಒಳ್ಳೆಯದು.ಆದ‌ಮೇಲೆ ತಿಳುವಳಿಕೆ ಬರೋದು..ಅನುಭವಿಸಿಯೇ ಸತ್ಯ ತಿಳಿಯಬೇಕಿದೆ ಎಂದು ಅಂತರಂಗದೆಡೆಗೆ ಸಾಗಿದರು  ಮಹರ್ಷಿಗಳು ಮಹಾತ್ಮರು.

ಆತ್ಮನಿರ್ಭರ ಯಾವ ದಿಕ್ಕಿನೆಡೆಗೆ?

ಆತ್ಮನಿರ್ಭರ ಭಾರತದ‌ ಕನಸಿನಲ್ಲಿ  ವೈಜ್ಞಾನಿಕ ಸಂಶೋಧನೆಗಳ ಮೂಲಕ ಭಾರತವನ್ನು ಸ್ಮಾರ್ಟ್ ಮಾಡಲು ವಿದೇಶಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ಆದರೆ ಇದರೊಂದಿಗೆ ಕೈ ಜೋಡಿಸಿರುವ ವಿದೇಶಿಗಳ ಧರ್ಮ ಸಂಸ್ಕೃತಿ ಭಾಷೆ ವ್ಯವಹಾರಿಕ ಜ್ಞಾನವು ಶಿಕ್ಷಣಕ್ಷೇತ್ರವನ್ನು ಆಳೋದನ್ನು  ಯಾರು ತಡೆಯಬಹುದು? ಹೊರಗೆ ತಳುಕುಬಳುಕಿನ‌ಜೀವನ ಒಳಗಿನ ಹುಳುಕನ್ನು ಸರಿಪಡಿಸಬಹುದೆ?
ಸ್ವಚ್ಚ ಭಾರತಕ್ಕೆ ಹೊರಗೆ ಕಸಗುಡಿಸುವುದಕ್ಕೆ ಕೋಟ್ಯಂತರ ಹಣ ಬಳಸಿದರೂ  ಮನುಷ್ಯನೊಳಗಿರುವ  ಅಶುದ್ದತೆಯ  ವಿಷಯಾಸಕ್ತಿಯನ್ನು  ದೂರ ಮಾಡುವ ಸಂಸ್ಕಾರದ ಶಿಕ್ಷಣ‌ ಕೊಡುವುದಕ್ಕೆ  ಹಣ ಬೇಕೆ ಸತ್ಯಜ್ಞಾನವೇ?
ಯಾರೋ ಹೊರಗಿನಿಂದ ಬಂದವರಿಗೆ ಮಾಡುವ‌ ಅತಿಥಿ ಸತ್ಕಾರ ನಮ್ಮವರನ್ನೇ ದೂರ ಮಾಡದಿದ್ದರೆ ಸಾಕು.
ಒಳಗಿದ್ದ ಗೃಹಿಣಿಯರಿಗೆ ಕೊಡದ ಗೌರವ ಹೊರಗಿನ ಮಹಿಳೆಗೆ‌ನೀಡಿದರೆ  ಮನೆಯಿಂದ ಹೊರಬರುವ ಮಹಿಳೆಯರು  ಸ್ವತಂತ್ರವಾಗಿ  ದೂರವಿರುವರು.ಆದರೆ ಇದು  ಭ್ರಮೆಯಷ್ಟೆ. ಎಷ್ಟು ಹೊರಬಂದರೂ ಒಳಗಿರುವ ‌ ಸತ್ಯ ಸತ್ವ ತತ್ವಕ್ಕೆ  ವಿರುದ್ದ  ನಿಂತರೆ  ತಂತ್ರದಡಿ ಜೀವ‌ಅತಂತ್ರಸ್ಥಿತಿಗೆ ತಲುಪಿದಾಗ  ಯಾರೂ ಇರೋದಿಲ್ಲ. ಒಟ್ಟಿನಲ್ಲಿ ವ್ಯವಹಾರ ಇರಲಿ ಅದರೊಳಗೆ ಧರ್ಮ ವಿರಲಿ. ನಮ್ಮತನ ನಮ್ಮವರನ್ನೇ‌ಬಿಟ್ಟು  ಹೊರಗಿನವರೊಂದಿಗೆ ಸಂಬಂಧ  ಬೆಳೆಸಿದರೆ  ಅಂತರವೇ ಹೆಚ್ಚಾಗಿ ಅಂತರದಲ್ಲಿ  ಅವಾಂತರ ಆಗೋದು ಸಹಜ.
 ಬದಲಾವಣೆ ಜಗದ‌ನಿಯಮ ಎಂದಂತೆ ಭೂಮಿ ತಿರುಗೋದನ್ನು ತಡೆಯಲಾಗದು.ಮೇಲಿದ್ದವರು ಕೆಳಗಿರುವರು.ಕೆಳಗಿದ್ದವರು ಮೇಲಿರುವರು. ಹಾಗಾದರೆ ಯಾರು ಮೇಲು ಕೀಳು? ಪ್ರತಿಯೊಂದು ಜನ್ಮದಲ್ಲಿ ಮಾಡಿದ ಋಣ ಅಥವಾ ಸಾಲ ತೀರಿಸಲು  ಭೂಮಿ ಒಂದು ಮಾಧ್ಯಮವಷ್ಟೆ.
ಇಲ್ಲಿ ಎಲ್ಲಾ  ಜೀವಾತ್ಮರೂ ಪರಮಾತ್ಮನ ಅಧೀನರೆ. ನಮ್ಮ ಜನ್ಮ ಎಲ್ಲಿ ಆಗಿದೆಯೋ ಅದರ ಮೂಲ ಧರ್ಮ ಕರ್ಮ ಅರಿತು  ಸಾಲ ತೀರಿಸುವ ಸೇವೆಯಲ್ಲಿ  ಮಾನವ ತೊಡಗಿಸಿಕೊಂಡು   ಮನೆಲಕ್ಮಿಯರನ್ನು  ಗೌರವಿಸಿ  ಸ್ತ್ರೀ ಋಣ ತಾಯಿ ಋಣ ಭೂಮಿ ಋಣ ತೀರಿಸಲು ಸುಜ್ಞಾನ ಅಗತ್ಯವಿದೆ. ‌ವಿಜ್ಞಾನ  ಭೌತಿಕದಲ್ಲಿ ಸಾಕಷ್ಟು  ಮುಂದೆ ನಡೆದರೂ ಅಧ್ಯಾತ್ಮ ಜ್ಞಾನದ ಕೊರತೆಯಿಂದ ಈಗಲೂ  ಹೊರಗಿನವರ ದಾಸರಾಗಿ ಹಣ ಮಾಡೋದೇ ಸರ್ವಸ್ವ ಮಾಡಿಕೊಂಡರೆ ಅಧೋಗತಿ.
ಕಳ್ಳ ಕಳ್ಳತನ ಮಾಡಿದರೆ ವೃತ್ತಿ ಧರ್ಮ ವಾಗುತ್ತದೆ.
ಅದೇ ಪೋಲಿಸ್ ಕಳ್ಳತನಕ್ಕೆ ಸಹಕರಿಸಿ ಹಣ ಮಾಡಿದರೆ ಅಧರ್ಮಕ್ಕೆ ತಕ್ಕಂತೆ ಫಲ.ಹಾಗೆ ಶಿಕ್ಷಕರು ಗುರು ಹಿರಿಯರು
ತಮ್ಮ ತಮ್ಮ ಋಣಭಾರವನ್ನು ತೀರಿಸಿಕೊಳ್ಳಲು ಸ್ವಧರ್ಮ ಸತ್ಕರ್ಮ ಸುಜ್ಞಾನದ ಶಿಕ್ಷಣ ನೀಡುವುದೇ ಆಗಿತ್ತು. ಇದು ದೇಶದೊಳಗೆ ನಡೆಸೋ ಬದಲು ವಿದೇಶದೊಳಗೆ ಹೋಗಿ  ಹಣಮಾಡಿದರೆ  ಭಾರತೀಯರಾಗುವರೆ? ಒಟ್ಟಿನಲ್ಲಿ ಜೀವನ ನಡೆಸಲು  ಹಣ ಬೇಕು.ಅದಕ್ಕೆ ‌ಮೊದಲು ಜೀವಾತ್ಮನ ಋಣ ತೀರಿಸುವ ಸತ್ಯಜ್ಞಾನ ಅಗತ್ಯವಿದೆ.ಇದನ್ನು ಅಧ್ಯಾತ್ಮ ಸಂಶೋಧನೆಯಿಂದ ಮಾಡಬೇಕಿದೆ. ಅಧ್ಯಾತ್ಮ ಕಣ್ಣಿಗೆ ಕಾಣದು.ಅರಿವಿಗೆ ಬರದೆ ಸತ್ಯ ಅರ್ಥ ವಾಗದು. ಅರಿವೇ ಹೊರಗಿನದ್ದಾದರೆ ಸತ್ಯವೂ ಹೊರಗಷ್ಟೆ ಕಾಣೋದು.ಹೊರಗಿನ ಸತ್ಯ   ಅರ್ಧ ಸತ್ಯವಾಗಿ ಅತಂತ್ರಗೊಳಿಸಿದರೆ ಆಳೋದು ಹೊರಗಿನವರೆ ಆಗಿರುವರು.
ಇಲ್ಲಿ ರಾಜಯೋಗದ ಶಿಕ್ಷಣದಲ್ಲಿ  ಆತ್ಮನಿರ್ಭರ ಆಗಬಹುದು.
ರಾಜಕೀಯಕ್ಕೆ ಇಳಿದಷ್ಟೂ ಆತ್ಮದುರ್ಭಲವೇ. ಪ್ರಜೆಗಳ ಜ್ಞಾನಕ್ಕೆ ತಕ್ಕಂತೆ ಪ್ರಜಾಪ್ರಭುತ್ವ. ಪ್ರಜೆಗಳ ಸಹಕಾರಕ್ಕೆ ತಕ್ಕಂತೆ ಸರ್ಕಾರ. ಪೋಷಕರಂತೆ ಮಕ್ಕಳ ಭವಿಷ್ಯ ನಿರ್ಧಾರ. ಗುರುವಿನಂತೆ ಶಿಷ್ಯ. ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ.
ನಮ್ಮ ಸಹಕಾರವಿಲ್ಲದೆ ಏನೂ‌ನಡೆಯುತ್ತಿಲ್ಲ. ಹಾಗಾದರೆ ನಮ್ಮ ಸಹಕಾರ ಸತ್ಯದಲ್ಲಿದೆಯೆ? ಸತ್ಯವೇ ದೇವರಾದಾಗ ಸತ್ಯವಿಲ್ಲದೆ  ದೇವರನ್ನು ಕಾಣಬಹುದೆ? ಕಾಣದ ದೇವರಿಗೆ ದೊಡ್ಡ ನಮಸ್ಕಾರ. ಮಾಡಬಹುದು.ಕಾಣುವ ದೇವರಿಗೆ ನಮಸ್ಕಾರ  ಯಾವ ಕಡೆಗೆ‌ನಡೆದಿದೆ? ಒಳಗಿದ್ದ ತಂದೆತಾಯಿ ಸಂಬಂಧ ಗಳು ವ್ಯವಹಾರಕ್ಕೆ ಇಳಿದರೆ  ಮನೆ ಮನಸ್ಸು ಖಾಲಿಸ್ಥಾನವಾಗುತ್ತದೆ.  ಇದನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ತುಂಬು ಹೃದಯ,ತುಂಬು ಮನಸ್ಸು,ತುಂಬು ಕುಟುಂಬ ತುಂಬಿದ‌ಕೊಡ ಯಾವತ್ತೂ ತುಳುಕುವುದಿಲ್ಲ. ದೇಶವನ್ನು ಹೇಗೆ ಯಾವುದರಿಂದ‌ಯಾರನ್ನು ತುಂಬಿಸಿಕೊಂಡು  ನಡೆಸಿರೋದು? ವಾಸ್ತವದಲ್ಲಿ  ನಿಂತರೆ  ನಮ್ಮ ನೆಲ ಜಲದ ಋಣ ತೀರಿಸುತ್ತಿದ್ದೇವೆಯೆ? ಅಥವಾ ಪರರ  ಋಣ  ಮೈ ಮನೆಯೊಳಗೆ ಸೇರಿಸಿ   ಹೊರಗೆ ನಡೆದಿರುವೆವೋ ? ಇಲ್ಲಿ ಯಾರ ಸಾಲವನ್ನು ಯಾರೂ ತೀರಿಸಲಾಗದು. ಋಣ ತೀರಿಸಲು  ನಮ್ಮ ಸ್ವತಂತ್ರ ಜ್ಞಾನ ಸದ್ಬಳಕೆ ಮಾಡಬೇಕಿತ್ತು.
ಕಲಿಕೆಯ ದಾರಿ ತಪ್ಪಿದಂತೆ ವ್ಯವಹಾರದಲ್ಲೂ ದಾರಿ ತಪ್ಪುತ್ತದೆ. ಆದರೆ ಮೂಲ ತಿಳಿದು ಹಿಂದಕ್ಕೆ ಬರೋದು ಹಿಂದೂ ಸನಾತನದ ಗುರಿಯಾಗಿದೆ. ಮುಂದೆ ಹೋದಷ್ಟೂ ಅಂತರದಲ್ಲಿ ಮಧ್ಯವರ್ತಿಗಳು ಬೆಳೆಯುವರಷ್ಟೆ .ಹಿಂದೆ  ಬರುವ ಮಕ್ಕಳ  ಆಧ್ಯಾತ್ಮಿಕ ‌ಪ್ರಗತಿಯ‌ಬಗ್ಗೆ ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ವ್ಯವಹಾರಕ್ಕೆ ಇಳಿದಾಗ ಹಣವೇ ಸರ್ವಸ್ವ ವಾಗುತ್ತಾ ಜ್ಞಾನ ‌ಹಿಂದುಳಿದಾಗಲೇ ಹೊರಗಿನವರ ವಶವಾಗೋದು ಜೀವನ. ಇದು ದೇಶಕ್ಕೂ ಅನ್ವಯಿಸುತ್ತದೆ.  ಏನಂತೀರ.
ಭಾರತ ಬಿಟ್ಟು ತೊಲಗಿ, ಅಸಹಕಾರ ಚಳುವಳಿ,ಉಪ್ಪಿನ ಸತ್ಯಾಗ್ರಹ...ಇವೆಲ್ಲದರ ಹಿಂದೆ ಅಧ್ಯಾತ್ಮ ಅಡಗಿದೆ.
ಕಣ್ಣಿಗೆ ಕಾಣದ ಅಧ್ಯಾತ್ಮ ಸತ್ಯ ಬಿಟ್ಟು ಕಣ್ಣಿಗೆ ಕಾಣುವ ಭೌತಿಕ ಸತ್ಯ ಹಿಡಿದು ಹೊರಗಿನವರೊಂದಿಗೆ ಗುದ್ದಾಡಿ ದ್ವೇಷ ಹರಡಿದರೆ  ಒಳಗಿನ ಸತ್ಯ ಅರ್ಥ ವಾಗದೆ ಜೀವ‌ಹೋಗುತ್ತದೆ.
ಇದರಿಂದಾಗಿ ಲಾಭ ನಷ್ಟ ಯಾರಿಗೆ? ಎಲ್ಲಾ ಜೀವಾತ್ಮನಿಗಷ್ಟೆ ಪರಮಾತ್ಮನಿಗೇನೂ ನಷ್ಡವಿಲ್ಲ.ಕಾರಣ ಎಲ್ಲರೊಳಗೂ ಇದ್ದು ನಡೆಸೋ ಶಕ್ತಿ ಪರಮಾತ್ಮನೇ ಆಗಿರೋದು. ಅವರವರ ಜ್ಞಾನ  ಅವರ ಜೀವನಕ್ಕೆ ಬಂಡವಾಳ ಆಸ್ತಿ. ಇದು ಹೊರಗಿದೆಯೋ ಒಳಗಿದೆಯೋ ಎನ್ನುವುದು ಮುಖ್ಯ.

Tuesday, June 24, 2025

ಉದ್ಯೋಗಮ್ ಸ್ತ್ರೀ ಲಕ್ಷಣಮ್?

ಇತ್ತೀಚಿನ ದಿನಗಳಲ್ಲಿ  "ಉದ್ಯೋಗಮ್ ಸ್ತ್ರೀ ಲಕ್ಷಣಮ್" ಎನ್ನುವ ಮಟ್ಟಿಗೆ ಸ್ತ್ರೀ ಯರಿಗೆ ಉದ್ಯೋಗ ವಿಲ್ಲದಿದ್ದರೆ ಗೌರವವೇ  ಇಲ್ಲದಂತಹ ಪರಿಸ್ಥಿತಿ ಮನೆ‌ಮಾಡಿದೆ ಎಂದರೆ ಭಾರತ ನಿಜವಾಗಿಯೂ ಜ್ಞಾನಿಗಳ ದೇಶವೋ ಅಜ್ಞಾನಿಗಳ ದೇಶವೋ ಎಂದು  ಪ್ರಶ್ನೆ ಏಳುತ್ತದೆ.
ಪರೀಕ್ಷೆಗಳಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸುವುದರಿಂದ ಅರ್ಥ ವಾಗುತ್ತದೆ ಹೆಣ್ಣು ಬುದ್ದಿವಂತೆ ಜೊತೆಗೆ ಜ್ಞಾನ ದೇವತೆಯೂ ಆಗಿರುವಳು.
ಹಿಂದಿನ ಕಾಲದಲ್ಲಿದ್ದಂತೆ ಹೆಣ್ಣಿಗೆ ಶಿಕ್ಷಣ ಕೊಡದೆ  ನಾಲ್ಕು ಗೋಡೆಯೊಳಗೆ ಬಂಧನ ದಲ್ಲಿಡುವವರು ಕಡಿಮೆ. ವಿದ್ಯೆ ಬುದ್ದಿ ಜ್ಞಾನ ಬಂದ ಮೇಲೆ ಹಣ ಸಂಪಾದನೆಯೂ  ಅವಳೇ ಮಾಡುವಳೆಂದರೆ ಗಂಡಿನ ಕೆಲಸವೇನು? 
ಭೂಮಿಯ ಋಣ ತೀರಿಸಲು  ಜನ್ಮ ಪಡೆದ  ಜೀವಾತ್ಮನಿಗೆ ಮುಕ್ತಿ ಸಿಗಬೇಕಾದರೆ ಭೂ ಸೇವೆ ಅಗತ್ಯವೆಂದರು. ಸಂಸಾರಕ್ಕೆ ‌ಬಂದ ಮೇಲೆ ತಾಯಿ ತಂದೆ ಬಂಧು ಬಳಗ ಪತ್ನಿ ಪುತ್ರರನ್ನು  ಒಂದು ಮಾಡೋದಕ್ಕೆ ತತ್ವಜ್ಞಾನ ಅಗತ್ಯವಿದೆ.
ಇದರಲ್ಲಿ ಸ್ತ್ರೀ ಋಣ ತಾಯಿ ಋಣ ತೀರಿಸಲು  ಗಂಡು ಧರ್ಮ ಮಾರ್ಗದಲ್ಲಿ ನಡೆದು ದುಡಿದು ಸಂಪಾದಿಸಿದ ಹಣವನ್ನು ಸದ್ಬಳಕೆ ಮಾಡಲು ಜ್ಞಾನ ಅಗತ್ಯವಿದೆ. ಹೊರಗಿನ ವಿದ್ಯೆ ಇಂದು ಹಣಕ್ಕಾಗಿ ಕಲಿಯುವಂತಾಗಿದ್ದರೂ ಅದರೊಂದಿಗೆ ಅಧ್ಯಾತ್ಮಿಕ ಸತ್ಯಜ್ಞಾನವನರಿತು ತನ್ನ ನಂಬಿ ಬಂದಿರುವ ಹೆಣ್ಣಿನ ಗುಣಜ್ಞಾನವನ್ನು ಗೌರವಿಸಿ  ಮನೆಲಕ್ಮಿಯ ಸ್ಥಾನಕೊಟ್ಟು ಗೃಹಮಂತ್ರಿಯ ಅಧಿಕಾರ ಕೊಟ್ಟವರು ಎಲ್ಲಿರುವರು? ಹೆಣ್ಣು ಯಾವ ಕೆಲಸದಲ್ಲಿರೋದು? ಏನು ಓದಿರೋದು? ನೋಡಲು ಚೆನ್ನಾಗಿರುವಳೆ? ಉತ್ತಮ ಗುಣವಂತಳೆ? ಹೆಣ್ಣಿನ ಮನೆತನ ಎಂತದ್ದು....ಹೀಗೇ ಪಟ್ಟಿ ಇಟ್ಟು  ಹುಡುಗಿಯನ್ನು ‌ಮದುವೆ ಆಗೋರು  ಬಹಳ. 
ಅಧ್ಯಾತ್ಮ ದ ಪ್ರಕಾರ  ಇವೆಲ್ಲವೂ ಗಂಡಿನಲ್ಲಿದ್ದರಷ್ಟೆ ನಿಜವಾದ ಜೀವನವಾಗುತ್ತದೆ. ಉತ್ತಮ ಸಂಸ್ಕಾರ  ಸಂಪಾದನೆ  ಗುಣಧರ್ಮ ವಿದ್ದ  ಗಂಡು ಮಾತ್ರ ಹೆಣ್ಣಿನ  ಪವಿತ್ರತೆ  ಗುಣಕ್ಕೆ ಗೌರವಿಸಿ  ಅವಳನ್ನು ಗೃಹಿಣಿಯಾಗಿ ಸುಖವಾಗಿರಿಸಲು ಸಾಧ್ಯ. ಯಾವಾಗ  ನಿರೀಕ್ಷೆಗಳು ಭೌತಿಕಾಸಕ್ತಿಯ ಕಡೆಗೆ ಹೋಗುವುದೋ ಆಗ ಇಬ್ಬರೂ ದುಡಿದರೂ ನೆಮ್ಮದಿ ಶಾಂತಿ ತೃಪ್ತಿ ಸಿಗದೆ ಜೀವನದ ರಹಸ್ಯ ಅರ್ಥ ವಾಗದೆ  ಜೀವ ಹೋಗುತ್ತದೆ.
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಹಿಂದೆ  ಹೆಣ್ಣಿನ ಕಷ್ಟ ನೋಡಿಯೂ ನೋಡದಂತೆ  ತವರುಮನೆಯವರು ಇದ್ದರು.ಆದರೆ  ಆ ಹೆಣ್ಣಿನ ಸಂಕಟವೇ ಇಂದಿಗೂ ಭೂಮಿಯಲ್ಲಿ ಮಾರಿಯ ರೂಪದಲ್ಲಿ ನಿಂತಿದೆ. ಜೀವ ಕೊಟ್ಟರೆ ಸಾಲದು ಜೀವನ‌ಕೊಟ್ಟರೂ ಮುಗಿಯದು.ಜೀವಾತ್ಮನಿಗೆ  ಸರಿಯಾದ ಗೌರವ ಅದರ ಮುಖ್ಯ.ಇದರಲ್ಲಿ ಲಿಂಗಬೇಧ,ಧರ್ಮ ಬೇಧ ಜಾತಿ ಬೇಧ  ಎಬ್ಬಿಸಿ  ತನ್ನೊಳಗೆ ಇರುವ ಅಜ್ಞಾನವನ್ನು ಬೆಳೆಸಿದರೆ  ಹಣವೇ ಸರ್ವಸ್ವ ವೆನಿಸುತ್ತಾ ಹೆಣ್ಣು ತನ್ನ ಜೀವರಕ್ಷಣೆಗೆ ತಾನೇ ದುಡಿದು ಬದುಕಲು ಹೊರಗೆ ಹೊರಡುವಳು.
ಆದರೆ ಇದರಿಂದ  ಗಂಡಿನ ಭೂ ಸಾಲ ಹೆಣ್ಣಿನ ಋಣ ತೀರದೆ ಇನ್ನಷ್ಟು ಕೆಳಗೆ ಹುಟ್ಟುವುದು  ವಿಧಿ ಲಿಖಿತವಾಗುತ್ತದೆ.
ಯಾರಿಗೆ ಗೊತ್ತು ಯಾವ ಜನ್ಮದಲ್ಲಿ ಯಾವ ಲಿಂಗದಲ್ಲಿದ್ದು ಯಾರ ಋಣ ತೀರಿಸಬೇಕಿದೆಯೋ.ಒಟ್ಟಿನಲ್ಲಿ ಋಣ ತೀರಿಸಲು ಸುಜ್ಞಾನ ಅಗತ್ಯವಿದೆ. ಅಧ್ಯಾತ್ಮ ವಿದ್ಯೆಯ ನಂತರ ಭೌತಿಕ ವಿದ್ಯೆ  ಪಡೆದರೆ ಇಬ್ಬರೂ ಸರಿಸಮಾನರು. ಇದರಲ್ಲಿ ಯಾರನ್ನು ಯಾರೂ ಆಳೂ ಅಲ್ಲ ಅರಸರೂ ಅಲ್ಲ. ಹೊಂದಿಕೊಂಡು ಬಾಳುವ ಗುಣವಿದ್ದರೆ  ಸಾವಿರದಲ್ಲೂ ಸಂಸಾರಸುಖ,ಇಲ್ಲದಿದ್ದರೆ ಕೋಟಿ  ಇದ್ದರೂ ವ್ಯರ್ಥ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ...ಅಂದರೆ ಹೆಣ್ಣು ಹೊರಗೆ ಹೊರಟರೆ ಆಸೆ ಆಕಾಂಕ್ಷೆಗಳು  ಬೆಳೆಯುತ್ತದೆ.ದುಡಿದು ತಂದರಂತೂ ಮಿತಿಇರದು. ಮನೆಯೊಳಗೆ ಕೆಲಸದ ಜೊತೆಗೆ ಧಾರ್ಮಿಕ ಪೂಜೆ ಕಾರ್ಯ  ನಡೆಯದು. ಹೀಗಾಗಿ  ಸಂಸ್ಕಾರರಹಿತ ಸಂಸಾರದಲ್ಲಿ ಸುಖ ಶಾಂತಿ ಕಡಿಮೆಯಿರುತ್ತದೆ. ಹೊರಗಿನ  ಉಡುಗೆ ತೊಡುಗೆ ಊಟ  ಪ್ರವಾಸಗಳಲ್ಲಿಯೇ ಹಣ ಕಳೆದು ಸಾಲ ಮಾಡಿಯಾದರೂ  ಜೀವನ‌ನಡೆಸುವರು. ಇದರ ಜೊತೆಗೆ ಅನಾರೋಗ್ಯ ಅತೃಪ್ತಿ ಅಶಾಂತಿಯಿಂದ ಎಷ್ಟು ಹಣಗಳಿಸಿ ಉಪಯೋಗವಿಲ್ಲ. 
ಆದರೆ ಇತ್ತೀಚಿನ ದಿನಗಳಲ್ಲಿ  ಜೀವನದ ಭದ್ರತೆಯು‌ ಹಣದಿಂದ ನಡೆದಿರುವಾಗ  ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಸ್ತ್ರೀ ಸ್ವತಂತ್ರ ವಾಗಿ ಜೀವನ‌ನಡೆಸುವಷ್ಟು ವಿದ್ಯೆಯ ಜೊತೆಗೆ ಜ್ಞಾನವನ್ನು ಪಡೆದಿರುವುದರಿಂದ ನಿಜವಾದ ಸಂಸಾರ ಸ್ತ್ರೀ ನಡೆಸಿರುವುದು ಹೆಚ್ಚಾಗಿದೆ.ಹೀಗಾಗಿ ಗಂಡುಮಕ್ಕಳು ಸ್ವೇಚ್ಚಾಚಾರಕ್ಕೆ ಇಳಿದು ಸಮಾಜ ಘಾತುಕಕಾರ್ಯಕ್ಕೆ ಇಳಿದಿರೋದು ಹೆಚ್ಚು. ಪುರುಷ ಮಾಡಬೇಕಾದ ಕೆಲಸ ಮಹಿಳೆ ಮಾಡಿ‌ಮುಗಿಸಿದರೆ ಕೆಲಸವಿಲ್ಲದೆ ಅಲೆಯುವವರು ಪುರುಷರೆ ಆದಾಗ  ತಮ್ಮ  ಆತ್ಮರಕ್ಷಣೆ ಮಾಡಿಕೊಳ್ಳುವ ಆತ್ಮಜ್ಞಾನದ ಕೊರತೆ ಗಂಡಿಗೆ ಹೆಚ್ಚಾಗಿರೋದು ಭಾರತ ದೇಶದ ಈ ಸ್ಥಿತಿಗೆ ಕಾರಣ. ರಾಜಕೀಯ ಕ್ಷೇತ್ರದಿಂದ ಹಿಡಿದು ಸಾಮಾಜಿಕ ಕ್ಷೇತ್ರದಲ್ಲಿ ಸ್ತ್ರೀ ಮೇಲುಗೈ ಸಾಧಿಸಿ ಧಾರ್ಮಿಕವಾಗಿ ಹಿಂದುಳಿದರೆ  ಯಾರಿಗೆ ನಷ್ಟ?
ವಿಶ್ವ ಗುರು ಭಾರತದ  ಜ್ಞಾನಸಂಪತ್ತನ್ನು ಮರೆತು ಹಣಕ್ಕಾಗಿ ಹೊರಗೆ ಹೊರಟವರು ಶ್ರೀಮಂತ ರಾಗಬಹುದು.ಆದರೆ ಆ ಹಣ‌ಯಾವ ರೀತಿಯಲ್ಲಿ  ಬಳಕೆಯಾಗುತ್ತಿದೆ ಹೆಣ್ಣನ್ನು ಹೇಗೆ ಬಳಸಿಕೊಂಡು ಮನರಂಜನೆ ನಡೆದಿದೆ.ಭೂಮಿಯಲ್ಲಿ ಧರ್ಮ ಸತ್ಯ ತತ್ವ ಸತ್ವ ಎಷ್ಟು  ಮರೆಯಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಸದೆ  ಎಲ್ಲದ್ದಕ್ಕೂ ಕಾರಣ ಸ್ತ್ರೀ ಎಂದರೆ  ಅವಳನ್ನು ಅಜ್ಞಾನದೆಡೆಗೆ ನಡೆಸಿದವರೆ ನಿಜವಾದ ಕಾರಣಕರ್ತರಾಗುವರು. ಇದು ಎಲ್ಲಾ ಧಾರ್ಮಿಕ ಗುರುಹಿರಿಯರು  ಅರ್ಥ ಮಾಡಿಕೊಂಡರೆ ಸ್ತ್ರೀ ಯಾವತ್ತೂ ಪವಿತ್ರಳೆ ಆಗಿದ್ದರೂ ಅವಳನ್ನು ನೋಡುವ ದೃಷ್ಟಿ ಅಪವಿತ್ರ ಆಗಿರುವಾಗ  ಇದರ ಹೊಣೆಗಾರರು ಯಾರು? ಈಗಲೂ ಎಷ್ಟೋ ಸ್ತ್ರೀ ಯರಿಗೆ  ಸಾಕಷ್ಟು ಆಸ್ತಿ ಹಣವಿದ್ದರೂ  ಮನೆಯಲ್ಲಿ ಗೌರವ ಸಿಗದೆ ಹೊರಗೆ ದುಡಿಯಲು‌ ಹೊರಟಿರುವುದನ್ನು  ನೋಡಿದರೆ  ಮನುಕುಲ ಎತ್ತ ಸಾಗಿದೆ?
ಭೂಮಿಯ ಋಣ ತೀರಿಸಲು ಬಂದವರು ಇನ್ನಷ್ಟು ದುಡಿಸಿಕೊಂಡು ಸಾಲ  ತಲೆಮೇಲೆ ಹಾಕಿಕೊಂಡರೆ  ಜನ್ಮಜನ್ಮದವರೆಗೂ  ತೀರಿಸಲೇಬೇಕು. ಹಿಂದಿನ ಜನ್ಮದ ಗಂಡು ಈ ಜನ್ಮದ ಹೆಣ್ಣಾಗಬಹುದು.ಹಾಗೆ ಹೆಣ್ಣು ಗಂಡಾಗಬಹುದು.  ಆತ್ಮಕ್ಕೆ ಲಿಂಗ ಬೇಧವಿರದು.ಅವರವರ ಸಾಲ ಅವರೆ ದುಡಿದು ತೀರಿಸಬೇಕೆನ್ನುತ್ತದೆ ಸನಾತನಧರ್ಮ.
ಸೋಮಾರಿತನ ಇಬ್ಬರಿಗೂ ಸಮಸ್ಯೆ ತರುತ್ತದೆ. ಮನೆಯೊಳಗೆ ಹೊರಗೆ  ಸನ್ಮಾರ್ಗದಲ್ಲಿ‌ನಡೆದರಷ್ಟೆ ಧರ್ಮ ಜ್ಞಾನ. ಜ್ಞಾನದಿಂದ  ಮುಕ್ತಿ  ಆತ್ಮತೃಪ್ತಿಯಿಂದ‌ಮೋಕ್ಷ. ಮೋಕ್ಷ ಎಂದರೆ‌  ಮೋಹದ‌ಕ್ಷಯ.ಮೋಹಮಾಯೆಯ ವಶದಲ್ಲಿರುವ ಜೀವಾತ್ಮನಿಗೆ ತನ್ನ ತಾನರಿತು ನಡೆಯೋದಕ್ಕೆ ಸ್ವತಂತ್ರ ಜ್ಞಾನ ಅಗತ್ಯವಿದೆ. ಹಣ ಒಂದು ಮಾಧ್ಯಮವಷ್ಟೆ.ಇದನ್ನು ಸದ್ಬಳಕೆ ಮಾಡಿಕೊಳ್ಳುವ ಗುಣಜ್ಞಾನದ ಕೊರತೆ ಇಂದು ಹೆಚ್ಚಲು ಕಾರಣವೇ  ಶಿಕ್ಷಣದ ವಿಷಯವಾಗಿದೆ. ಶಿಕ್ಷಣ ಜ್ಞಾನ ನೀಡದೆ  ಬೆಳೆಸಿದರೆ ಹಣ ದುರ್ಭಳಕೆ ಆದಂತೆ ಜನ ಹೆಣ್ಣು ಹೊನ್ನು ‌ಮಣ್ಣಿನ ದಾಸರಾಗೇ ಇರುವರು. ಕಲಿಗಾಲವಲ್ಲವೆ?

Saturday, June 21, 2025

ಒಳ್ಳೆಯಮುಖ ಒಳ್ಳೆಯಗುಣ ಎರಡೂ ಅದೃಷ್ಟ

*ಸ್ಪೂರ್ತಿ ಕಿರಣ*
*ಒಳ್ಳೆಯ ಮುಖಗಳ ಪರಿಚಯ ಎಷ್ಟಾದರೂ ಸಿಗಬಹುದು*,
*ಆದರೆ*....
*ಒಳ್ಳೆಯ ಮನಸ್ಸಿರುವವರ ಪರಿಚಯ ಸಿಗುವುದು  ನಮ್ಮ  ಅದೃಷ್ಟದಿಂದ ಮಾತ್ರ.ಅಸಫಲ ಎನ್ನುವುದು ಒಂದು ಸವಾಲಿದ್ದಂತೆ*. *ಸ್ವೀಕರಿಸಿ,ಎಲ್ಲಿ ಎಡವಿದೆವೆಂದು ಯೋಚಿಸಿ ಸುಧಾರಣೆ ಮಾಡಿಕೊಂಡು ಮುನ್ನಡೆಯಬೇಕು*.
*ಮತ್ತೆ ಮತ್ತೆ ಪ್ರಯತ್ನ ಮಾಡುವವರಿಗೆ ಎಂದಿಗೂ ಸೋಲಿರುವುದಿಲ್ಲ.**...

ಮುಖನೋಡಿ ಮಣೆ ಹಾಕುವುದು ತಪ್ಪು ಎನ್ನುವರು.ಹಾಗೆ ಮನಸ್ಸನ್ನು ನೋಡಿ ಮಣೆ ಹಾಕೋದು ಕಷ್ಟವಿದೆ. ಯಾರಿಗೂ ಯಾರ ಮನಸ್ಸೂ ಪೂರ್ಣ ಅರ್ಥ ವಾಗದು. ಮನಸ್ಸಿನ ಮೂಲೆ ಮೂಲೆಯಲ್ಲಿರುವ ಒಳ್ಳೆಯ ಕೆಟ್ಟ ಗುಣಗಳು  ಮಾತನಾಡುವಾಗ ಇಣುಕಿ ಹೋಗುತ್ತವೆ. ಆದರೆ ಮನುಷ್ಯ ಎಂದ ಮೇಲೆ ಇವು ಇದ್ದೇ ಇರುತ್ತದೆನ್ನುವುದು ಸತ್ಯ. ಒಳ್ಳೆಯದನ್ನು   ನೋಡುವ ಶಕ್ತಿಯಿದ್ದರೆ ಒಳ್ಳೆಯದು ಬೆಳೆಯುತ್ತದೆ. ಕೆಟ್ಟದ್ದನ್ನು ನೋಡುವವರಿಗೆ ಕೆಟ್ಟದ್ದೇ ಕಾಣುತ್ತದೆ.
ಹಾಗಾದರೆ  ಒಳ್ಳೆಯದು ಯಾವುದು? 
ಸತ್ಯ ಹೇಳುವುದು ಒಳ್ಳೆಯದಾದರೆ ಸತ್ಯ ಯಾವುದು? ಹೀಗೇ ಹಲವು  ದಿಕ್ಕುಗಳಿಗೆ ಹಲವು ಸತ್ಯಧರ್ಮ ಹೊರಗೆ ಬೆಳೆದಿವೆ.
ಆದರೆ ಎಲ್ಲರಲ್ಲಿಯೂ ಅಡಗಿರುವ ಒಂದೇ ಸತ್ಯಕ್ಕೆ ಒಂದೇ ದಿಕ್ಕು. ಹೀಗಾಗಿ  ಆ ಒಂದೇ ದಿಕ್ಕಿನೆಡೆಗೆ ನಡೆಯುವಾಗ ಕೆಟ್ಟವರು ಒಳ್ಳೆಯವರು ಅಡ್ಡಬರಬಹುದು. ಅಡ್ಡ ಬಂದಾಗ ನಿಂತು  ನಮ್ಮಲ್ಲಿ ಏನಾದರೂ ತಪ್ಪಾಗಿದೆಯೆ ಎಂದು ಪ್ರಶ್ನೆ ಮಾಡಿಕೊಳ್ಳಲು  ಸಮಯಸಿಕ್ಕಿದೆ ಎನ್ನುವ. ತಾಳ್ಮೆ ನಮಗಿದ್ದರೆ ಇಲ್ಲಿ ಎಲ್ಲಾ ಒಳ್ಳೆಯವರೆ ಆಗಿರುವರು.
ಕೆಟ್ಟದ್ದನ್ನು  ಬೆಳೆಸುವುದರಿಂದ  ಕೆಟ್ಟದ್ದೆ  ಆಗುತ್ತದೆ ಎನ್ನುವರು
ಒಳ್ಳೆಯವರು. ಆದರೆ ಅವರನ್ನು  ಕೆಟ್ಟವರು ಎಂದರೆ  ಸತ್ಯ ಮುಂದೆ ಅರಿವಿಗೆ ಬರೋದಿಲ್ಲ. ಕೆಲವರಿಗೆ  ಅದೇ ಕೆಲಸ ಮಾಡೋದೇ ಒಳ್ಳೆಯದೆನಿಸುತ್ತದೆ. ಸಾಮಾನ್ಯವಾಗಿ ಜನಸೇವೆ ಮಾಡೋದು ದೇವರ ಸೇವೆ ಮಾಡೋದು ಎಲ್ಲಾ ಒಳ್ಳೆಯದೆ ಆದರೆ ಅದಕ್ಕೆ ಹಣಗಳಿಸಲು ಕೆಟ್ಟ ಕೆಲಸಕ್ಕೆ ಸಹಕಾರ ಕೊಡೋದು,ಮಾಡೋದರಿಂದ. ಅದು ಸೇವೆ ಆಗದು. ನೋಡುವವರಿಗಷ್ಟೆ ಒಳ್ಳೆಯವರು.ಒಳಗಿನ ಮನಸ್ಸು  ದಾರಿತಪ್ಪಿ ಕೆಟ್ಟಕರ್ಮಕ್ಕೆ  ತೊಡಗಿರುವುದನ್ನು ಸ್ವತಃ  ಅರಿತು  ನಿಸ್ವಾರ್ಥ ನಿರಹಂಕಾರ ಹಾಗು ಸ್ವಚ್ಚ ಮನಸ್ಸಿನಿಂದ  ಇದ್ದದ್ದರಲ್ಲಿ ಹಂಚಿ ಜೀವನ ನಡೆಸೋದರಿಂದ ಮೇಲಿನ ಪರಮಾತ್ಮನ ದರ್ಶನ. ಪರಮಾತ್ಮನ ಸೇವೆಗೆ ದಾಸ ಶರಣರು ಸಂತರು ಮಹಾತ್ಮರುಗಳು  ಒಳ್ಳೆಯವರಂತೆ ವೇಷ ಧರಿಸದೆ ನೇರವಾದ ನಡೆ ನುಡಿಯಲ್ಲಿ ಸತ್ಯ ದೆಡೆಗೆ ನಡೆದರು. ಆದರೆ ಕಾಣುವ ಜಗತ್ತಿಗೆ ಅವರ  ಒಳ್ಳೆಯ ಗುಣ ಜ್ಞಾನ ಕಾಣದೆ  ಹೀಯಾಳಿಸಿತ್ತು. ಅವರೊಂದಿಗೆ  ಹೊರಟವರಿಗಷ್ಟೆ ಉತ್ತಮ ಗುಣ  ಕಂಡಿತ್ತು ಎಂದರೆ ಒಳ್ಳೆಯವರಲ್ಲಿ ಹಣದ. ಕೊರತೆ ಇರುತ್ತದೆ. ಹಣವಿಲ್ಲದೆ ಜನಸೇವೆ ಮಾಡಲಾಗದು.ಜನಸೇವೆ ಮಾಡದವರನ್ನು ಜನ  ಹಿಂಬಾಲಿಸದ  ಕಾರಣ ಅವರ ಸಂಗ ಸಣ್ಣದಾಗಿದ್ದರೂ  ಸ್ವಚ್ಚವಾಗಿರುತ್ತದೆನ್ನಬಹುದು.

ಯುಗಯುಗದಿಂದಲೂ  ಇದು ಭೂಮಿಯಲ್ಲಿ  ನಡೆದಿದೆ.
ಸತ್ಯಯುಗದಲ್ಲಿ ಸತ್ಯವಂತರು ಒಳ್ಳೆಯವರೆನಿಸಿದರೆ ಮಿಥ್ಯ ಯುಗದ ಕಲಿಯುಗದಲ್ಲಿ ಮಿಥ್ಯವೇ ಒಳ್ಳೆಯದೆಂದು ವಾದ ಮಾಡುವವರು ಒಳ್ಳೆಯವರಾಗಿ ಕಾಣುವರಷ್ಟೆ.
ಯುಗ  ಒಂದೇ ರೀತಿಯಲ್ಲಿ ಇರೋದಿಲ್ಲವೆಂದಾಗ ಮನಸ್ಸು ಬದಲಾಗುತ್ತದೆ. ಅದೃಷ್ಟವನ್ನು ಹಣದಿಂದ ಅಳೆಯುವವರಿಗೆ ಹಣವಿದ್ದವರು ಒಳ್ಳೆಯವರು. ಇಲ್ಲದವರಿಗೆ   ಸುಜ್ಞಾನವಿದ್ದರೂ ಅದನ್ನು ಒಳ್ಳೆಯದಾಗಿ ಬಳಸಿಕೊಳ್ಳುವ ಅವಕಾಶವಿರದು, ಸಹಕಾರವಿರದು..ಕೆಲವರಿಗಷ್ಟೆ  ಇದರ  ಅನುಭವವಾಗುವುದು. 
ಹಣೆ ಬರಹದಲ್ಲಿ ಅದೃಷ್ಟ ವಿದೆಯೋ  ಇಲ್ಲವೋ ಆದರೆ ನಮ್ಮ  ನಡೆ ನುಡಿಯಲ್ಲಿ  ಸ್ವಚ್ಚತೆಯಿದ್ದರೆ ಒಳ್ಳೆಯದಾಗುವುದು.

Sunday, June 15, 2025

ಅಮ್ಮ ಜ್ಞಾನಿ ಅಪ್ಪ ವಿಜ್ಞಾನಿ

ಅಮ್ಮ ಭೂಮಿ ಅಪ್ಪ ಆಕಾಶ.ಮಕ್ಕಳು ನಕ್ಷತ್ರಗಳು. ನಕ್ಷತ್ರ ಸ್ವಯಂ ಪ್ರಕಾಶಮಾನವಾಗಿ ಬೆಳಗಬೇಕಾದರೆ ಉತ್ತಮ ಸಂಸ್ಕಾರದ ಶಿಕ್ಷಣ ನೀಡುವುದು ಪೋಷಕರ ಧರ್ಮ.
ಅಮ್ಮನ ಜ್ಞಾನ ಅಪ್ಪನ ವಿಜ್ಞಾನದ ನಡುವಿರುವ ಮಕ್ಕಳ ಸಾಮಾನ್ಯಜ್ಞಾನವನ್ನು ಸರಿಯಾಗಿ  ಅರ್ಥ ಮಾಡಿಕೊಂಡು ವಿಶೇಷವಾಗಿ  ಬೆಳೆಸುವಾಗ ಇಬ್ಬರೂ ಜೋಪಾನವಾಗಿರಬೇಕು. ಇಬ್ಬರ ಜ್ಞಾನ ಬಿಟ್ಟು ಮೂರನೆಯವರ ಜ್ಞಾನ ತಲೆಗೆ ತುಂಬುವುದರಿಂದ ಅಜ್ಞಾನ ಆವರಿಸಬಹುದು. 
ಇದು ಬಹಳ ಕಷ್ಟದ‌ಕೆಲಸ. ಹೀಗಾಗಿ ಇಂದು ಅಮ್ಮನ ಜ್ಞಾನ ಅಪ್ಪನ ವಿಜ್ಞಾನ ಹೊರಜಗತ್ತಿಗೆ ಸೀಮಿತವಾಗಿ ಒಳ ಜಗತ್ತಿನಿಂದ  ಜನ್ಮ ಪಡೆದ ಮಕ್ಕಳ ಜ್ಞಾನ  ಗುರುತಿಸುವುದರಲ್ಲಿ  ಗೆದ್ದವರು ವಿರಳ.
ಹಾಗೇನಾದರೂ ಗೆದ್ದವರಿದ್ದರೆ ಅವರು ಅಧೃಷ್ಟವಂತರೆ ಸರಿ.
ಅಜ್ಜ  ಅಪ್ಪ ಮಗ ಮೊಮ್ಮಗನವರೆಗೂ  ಆಸ್ತಿ ಸುಲಭವಾಗಿ  ಹರಡಬಹುದು.ಆದರೆ ಜ್ಞಾನ ವಿಜ್ಞಾನದ ವಿಚಾರದಲ್ಲಿ ಇದು  ಹರಡದೆ  ಅನ್ಯರ ಜ್ಞಾನ ಹೊರಗಿನಿಂದ ಸೇರಿದಾಗ ಸಂಬಂಧಕ್ಕೆ ‌ಬೆಲೆ ಕೊಡೋದು ಆಸ್ತಿಯಿಂದ ಮಾತ್ರ.
ಕಲಿಗಾಲದಲ್ಲಿ  ಕಾಲ ಸರಿಯಿಲ್ಲ ಎನ್ನುವ ಬದಲು ಕಲಿಕೆಯಲ್ಲಿ ಹೊಂದಾಣಿಕೆಯಿಲ್ಲ ಎಂದಾಗ  ಸರಿಪಡಿಸುವ ಪ್ರಯತ್ನ ನಡೆಸಬಹುದು.
ಅಮ್ಮನ ಸೀರೆ ಮಡಿಸಲಾಗದು ಅಪ್ಪನ ದುಡ್ಡು ಎಣಿಸಲಾಗದು  ಎನ್ನುವರು. ನಕ್ಷತ್ರಗಳನ್ನು ಎಣಿಸಲಾಗದು ಸರಿ ಮಕ್ಕಳನ್ನು  ಸ್ವಯಂ ಪ್ರಕಾಶಮಾನವಾಗಿ ಬೆಳಗುವ ನಕ್ಷತ್ರವಾಗಿ  ಬೆಳೆಸಲು ಸ್ವಯಂ ಪ್ರಯತ್ನದ ಜೊತೆಗೆ ಇಬ್ಬರ ಸಹಕಾರ ಅಗತ್ಯವಿದೆ.  ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನದಿಂದ  ವಿಶೇಷ ಜ್ಞಾನದ ಕಡೆಗೆ ಹೋದವರು ಸ್ವಯಂ ಪ್ರಕಾಶಕರಾಗಿದ್ದಾರೆ. ಇದು ಅಮ್ಮನ  ಜ್ಞಾನದ ಜೊತೆಗೆ ಅಪ್ಪನ  ವಿಜ್ಞಾನ ಕೂಡಿ ಆಧ್ಯಾತ್ಮ ವಾದಾಗ  ಅಪ್ಪನ ವ್ಯಕ್ತಿತ್ವದ ಜೊತೆಗೆ ಅಮ್ಮನ ಶಕ್ತಿ ಕೂಡಿ ಭೂಮಿಯಲ್ಲಿ  ಮಕ್ಕಳು  ಪ್ರಕಾಶಮಾನರಾಗಿ ಮಾನವರಾಗಿರಬಹುದು.
ವಿರುದ್ದವಿದ್ದರೆ  ಪ್ರಕಾಶವಿದ್ದರೂ  ಅಮಾನವೀಯರಾಗಿ ಬಾಳುವರು. ಆಚರಣೆ ಒಂದು ದಿನ ಸೀಮಿತವಾಗಿರೋದು ಪಾಶ್ಚಾತ್ಯ ಸಂಸ್ಕೃತಿಯಿಂದ  ಬೆಳೆದ ಅಂತರ ಕಾರಣ. ಈಗ ಭಾರತದಲ್ಲೂ  ಪೋಷಕರ ನಡುವಿನ ಅಂತರದಲ್ಲಿ ಮಕ್ಕಳಿಗೆ  ಅಮ್ಮ ಅಪ್ಪ ರ ಹಣಸಂಪಾದನೆ ಕಣ್ಣಿಗೆ ಕಾಣುತ್ತಿದೆ ಎಂದರೆ ಹಣದಿಂದ  ಅಮ್ಮ ಅಪ್ಪ ಸಿಗುವರೆ? ಸಾಮಾನ್ಯ ಜ್ಞಾನದ ಕೊರತೆಯಿದೆ.
ಹಿಂದಿನ  ಜ್ಞಾನ ಇಂದಿನ ವಿಜ್ಞಾನದ ನಡುವಿನ ಅಂತರದಲ್ಲಿ ಮಧ್ಯವರ್ತಿಗಳು ಸೇರಿಕೊಂಡು  ಅಂತರ ಹೆಚ್ಚಿಸುವರೆ? ಕಡಿಮೆಮಾಡಿ  ಮಕ್ಕಳೊಂದಿಗೆ ಒಗ್ಗಟ್ಟಿನಿಂದ ಬಾಳಲು ಬಿಡುವರೆ? 

Saturday, June 14, 2025

ಜೀವನರಥದ ಸಾರಥಿ ಯಾರು?

ಜೀವನವೆನ್ನುವ ರಥವನ್ನು ನಡೆಸುವುದು  ಮೇಲಿರುವ ಭಗವಂತನ ಕೆಲಸವೆನ್ನುವುದರ ಹಿಂದೆ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲವೂ ಅಡಗಿದೆ. ಆದರೆ ಈವರೆಗೆ ಯಾರೂ ಒಬ್ಬ ಭಗವಂತನಿಗೆ ರಥ ಓಡಿಸು ಎಂದು ಸುಮ್ಮನೆ ಕುಳಿತು ಕೊಂಡಿಲ್ಲ. ಕಾರಣ ನಮ್ಮ ಈ ದೈಹಿಕ ಶರೀರದೊಳಗಿರುವ ಅನೇಕ ಶಕ್ತಿ ತಮ್ಮ ಕೆಲಸ ತಾವು ಮಾಡಲು ತಯಾರಿದ್ದಾರೆಂದ ಮೇಲೆ ಕೆಲಸ ಕೊಡದಿದ್ದರೆ ಶಕ್ತಿಹೀನವಾಗಿ ರಥ ನಡೆಯೋದಿಲ್ಲ. ಹಾಗೆ ರಥವನ್ನು ನಡೆಸೋ ಸಾರಥಿಯೂ ಹತ್ತಿರವಾಗೋದಿಲ್ಲ. ಎಲ್ಲಾ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೂ ಮೂಲ ಶಕ್ತಿಯಕಡೆಗೆ ರಥ ಓಡಿಸೋದು ಕಷ್ಟವೆ. ಒಟ್ಟಿನಲ್ಲಿ ಎಲ್ಲರ ಸಹಕಾರದಿಂದ ನಡೆಯೋದಕ್ಕೂ ನೇರವಾಗಿ  ಒಬ್ಬಂಟಿಯಾಗಿ  ರಥವನ್ನು ನಡೆಸೋದಕ್ಕೂ  ವ್ಯತ್ಯಾಸವಿದೆ. ಒಬ್ಬಂಟಿಯಾಗಿರುವ ರಥ ಯಾರೊಂದಿಗೂ ಯುದ್ದಕ್ಕೆ ಇಳಿಯೋದಿಲ್ಲ. ಯಾವಾಗ  ಇನ್ನೊಬ್ಬರ ಸಹಕಾರವಿರುವುದೋ ಆಗ  ಹೋರಾಟ ಹಾರಾಟ ಮಾರಾಟ ಹೆಚ್ಚಾಗಿ ಓಡಾಟದಲ್ಲಿ ರಥದ ಬಳಕೆ ದುರ್ಭಳಕೆ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ದೇಹದೊಳಗಿರುವ ಆತ್ಮನ ದರ್ಶನ ವಾಗದೆ ಓಡಿದಷ್ಟೂಜೀವಕ್ಕೆ  ಸುಸ್ತು. ಅದೇ  ನಡೆ ನುಡಿಯಲ್ಲಿ  ಸರಳ ಸ್ವಚ್ಚ ಶುದ್ದ ಸತ್ಯ ಸತ್ವ ತತ್ವವಿದ್ದಾಗ ರಥವು  ಪರಮಾತ್ಮನ ವಶವಾಗುತ್ತಾ  ನಿರಾತಂಕವಾಗಿ ಮುಂದೆ ಸಾಗುತ್ತದೆ.
ಅದಕ್ಕೆ ಮಹಾತ್ಮರಾದವರು ಒಳಗಿರುವ  ಜೀವಾತ್ಮನಿಗೆ ಪರಮಾತ್ಮನ ರಥದಲ್ಲಿ ಕುಳ್ಳಿರಿಸಲು ಸತತ ಪ್ರಯತ್ನಗಳನ್ನು ನಡೆಸುತ್ತಾ  ಮುಂದೆ ಸಾಗಿದ್ದಾರೆ.
ನಮ್ಮೊಳಗೆ ಇರುವ ಸಾರಥಿ ಯಾರು? ಯಾರ ಸಾರಥ್ಯದಲ್ಲಿ ನಮ್ಮ ಜೀವನ ರಥ ನಡೆಯುತ್ತಿದೆ. ಸಾರಥಿ ಎತ್ತ ಕಡೆ ನಡೆಸಿರುವನು.ಸಾರಥಿಯ ಗುರಿ ಯಾವುದು? ಎಲ್ಲವೂ ನಮ್ಮ ಜ್ಞಾನದ ಮೇಲೇ ನಿಂತಿರುವಾಗ  ಸತ್ಯ ತಿಳಿಯುವವರೆಗೆ  ಜೀವಕ್ಕೆ  ಸಾರಥಿಯ ಪರಿಚಯ ಆಗದು.
ಸಾರಥಿಯ ಪರಿಚಯವಾದಾಗ ಸತ್ಯ  ಬಿಡದೆ ನಡೆಯಬಹುದು. ಸತ್ಯದಲ್ಲಿ ‌ನಡೆದವರಿಗೆ ಸಮಾಜದಲ್ಲಿ ಬೆಲೆ ಸಿಗದು. ಹಾಗಂತ  ಸಮಾಜವು‌ಬದಲಾಗುತ್ತಲೇ ಇರೋವಾಗ
ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳದೆ ಬೇರೆಯವರನ್ನು ಬದಲಾಯಿಸಲಾಗದು. 
ಆಗೋದೆಲ್ಲಾ ಒಳ್ಳೆಯದಕ್ಕೆ. ಆಗೋದನ್ನು ತಡೆಯಲಾಗದು
ಆಗಿರೋದರ ಹಿಂದೆ ನಿಂತಿರುವ ಸಾರಥಿಯ ಬಗ್ಗೆ ಅರಿವಿದ್ದರೆ    ಜೀವನದ ರಥ ಸರಿಯಾದ ಮಾರ್ಗದಲ್ಲಿ ನಡೆಯುವುದು.
ಭಗವಂತನೆ  ಮುಂದೆ ಕುಳಿತು ಅರ್ಜುನನ ರಥವನ್ನು ನಡೆಸಿ ಧರ್ಮ ಕ್ಕೆ ಜಯ  ಸಿಗುವಂತೆ ಮಾಡಿದ ಕುರುಕ್ಷೇತ್ರ ಯುದ್ದ
ಇಂದಿಗೂ ಗೋಜಲಾಗಿರೋದಕ್ಕೆ ಕಾರಣ ಮಾನವ ತನ್ನ ಒಳಗೇ ಇದ್ದು ನಡೆಸೋ  ಆ ಸಾರಥಿಯನ್ನು ಸರಿಯಾಗಿ ನಡೆಯಲು ಬಿಡದೆ ಹೊರಗಿನವರ ಸಾರಥ್ಯದಲ್ಲಿ  ತಮ್ಮ ಜೀವನ  ನಡೆಸಿರೋದಾಗಿದೆ. ಇದನ್ನು ಜ್ಞಾನ ಎನ್ನಬೇಕೋ ವಿಜ್ಞಾನ ಎನ್ನಬೇಕೋ ಅಜ್ಞಾನ ಎನ್ನಬೇಕೋ ನಮಗೆ ಬಿಟ್ಟ ವಿಚಾರವಾಗಿದೆ. ನಾವೆಲ್ಲರೂ 'ಭಾ ರತ'ದ ನಿವಾಸಿಗಳು.
ಭಾ ರಥದಲ್ಲಿ ಕುಳಿತಿರುವೆವೋ ಎನ್ನುವ ಪ್ರಶ್ನೆ ಮಾಡಿಕೊಳ್ಳಲು  ಸಮಯವಿಲ್ಲದೆ  ಹೊರಗೆ ಓಡುತ್ತಿದ್ದರೆ ಸಾರಥಿಗೇನು ಕೆಲಸ? ನಾನೇ  ನನ್ನ ರಥ ನಡೆಸುತ್ತೇನೆಂದು ಎರಡೂ ಕಡೆ  ಓಡಿಸಿದರೆ  ಮುಂದೆ ಹೋಗದೆ ಹಿಂದೂ ಬರದೆ ಮಧ್ಯದಲ್ಲಿ  ರಥ ನಿಂತು  ಅತಂತ್ರಸ್ಥಿತಿಗೆ ತಲುಪುತ್ತದೆ.
ಎರಡೂ ಕಡೆಯಿಂದ ಶತ್ರುಗಳು ಬಂದಾಗ ಸೋಲುವುದು ಸಹಜ. ಹೀಗೇ ಅರಿಷಡ್ವರ್ಗವೆನ್ನುವ ಶತ್ರುಗಳು ಮಿತಿಮೀರಿ ದೇಹವನ್ನು ಆಕ್ರಮಣಮಾಡಿದಾಗ ಒಳಗಿರುವ ದೈವಶಕ್ತಿ ಮೌನವಾಗಿ ನೋಡೋದೇ ಸರಿ. ಜೀವಾತ್ಮ ಇರೋವಾಗಷ್ಟೆ ದೇಹವೆನ್ನುವ ರಥಕ್ಕೆ  ಸಾರಥಿಯ ಕೆಲಸ ಹೋದ ಮೇಲೆ ?

ಭೂಮಿಯನ್ನು ನಡೆಸೋದು ಪರಮಾತ್ಮ.ಮನುಕುಲವನ್ನು ನಡೆಸೋದು ಭೂ ತಾಯಿ. ಹಾಗಾದರೆ ಭೂಮಿಯ ರಥ ನಡೆಸೋದು  ಪರಮಾತ್ಮನ ಶಕ್ತಿಯಾದರೂ  ಭೂಮಿಯಲ್ಲಿ ಜನ್ಮ ಪಡೆಯುವ ಮಾನವನ ರಥದ ಮೂಲ ಭೂಮಿ. ಭೂಮಿಯನ್ನೇ ಬಿಟ್ಟು ಆಕಾಶದೆತ್ತರ ಹಾರೋದೇ ಜೀವನ ಆದರೆ  ಮೇಲಿನ ರಥ  ತಯಾರಾಗಿರುತ್ತದೆ. ಎಲ್ಲವೂ ನಮ್ಮ ಇಚ್ಚೆಯಂತೆ ನಡೆಯೋದಿಲ್ಲ ಆದರೂ ಎಲ್ಲಾ ನಮ್ಮ ಇಚ್ಚೆಯಂತೆ ನಡೆಯಬೇಕೆಂಬ ಆಸೆಯಲ್ಲಿಯೇ ಬದುಕೋದು
ಬಿಡೋದಿಲ್ಲ. ಇದನ್ನು ಮಾಯೆ ಎಂದರು. ಎಲ್ಲಾ ಒಮ್ಮೆ ಮಾಯವಾಗೋರೆ  ಎಂದಾಗ  ರಥವೂ ಮಾಯವಾಗುತ್ತದೆ. ನಡೆಸೋ ಸಾರಥಿ ಮಾತ್ರ  ಯಾವಾಗಲೂ ಮಾಯೆಯ ರೂಪದಲ್ಲಿರುತ್ತಾನೆ.

Tuesday, June 10, 2025

ರಾಜಯೋಗ ತನ್ನ ತಾನು ಆಳಿಕೊಳ್ಳುವ ಅರಿತು ನಡೆಯುವ ಯೋಗ

ರಾಜಯೋಗವೆಂದರೆ ತನ್ನ ತಾನರಿತು ತನ್ನ ತಾನು ಆಳಿಕೊಳ್ಳುವುದಾಗಿತ್ತು.ತನ್ನ ಭುಜಬಲದಿಂದ ಕ್ಷಾತ್ರಧರ್ಮ  ಹಾಗು ಸತ್ಯದ ಮಾರ್ಗದಲ್ಲಿ ನಡೆದಾಗಲೇ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪ್ರಕೃತಿ ಪುರುಷರ ಸಮಾನತೆಯನರಿತು ನಡೆದವರು ಯೋಗಿಗಳಾದರು. ಪ್ರಕೃತಿಯನ್ನು ತನ್ನಾಧೀನದಲ್ಲಿಟ್ಟುಕೊಳ್ಳಲು ಮಾನವರು ಮನಸ್ಸಿಗೆ ಬಂದಂತೆ  ಪ್ರಕೃತಿಯನ್ನು  ಬಳಸಿ ತಾತ್ಕಾಲಿಕ ವಾಗಿ ಪ್ರಕೃತಿಯಿಂದ ಪಡುವ ಸುಖದ ಹಿಂದೆ ಸಾಕಷ್ಟು ದು:ಖವೂ ಇರುವುದೆನ್ನುವ ಜ್ಞಾನವಿದ್ದರೆ ಇತಿಮಿತಿಯಲ್ಲಿ ಜೀವನ ನಡೆಸಬಹುದು. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ ಮಾನವನಲ್ಲಿದ್ದರೆ  ನಿಜವಾದ  ಜೀವನದ ರಹಸ್ಯವನರಿತು ತನ್ನ ಹಿಂದಿನ ಋಣ ತೀರಿಸುವ ಕರ್ಮ ದಲ್ಲಿ ಸ್ವತಂತ್ರ ವಾಗಿ ನಡೆಯುವ ಆತ್ಮಜ್ಞಾನದೆಡೆಗೆ ಸಾಗಬಹುದು.
ಯಾವಾಗ ಪ್ರಕೃತಿ ಮತ್ತು ಸ್ತ್ರೀ ಯ ದುರ್ಭಳಕೆ ಆಗುವುದೋ ಋಣ ಸಂದಾಯವಾಗದೆ ಮತ್ತೆ ಜನನ ಮರಣದ ಸರಪಳಿಗೆ ಸಿಲುಕುತ್ತಾ ಜೀವಾತ್ಮನು ಸಾಗುವನು.
ಭೂ ಋಣ ತೀರಿಸಲು ಭೂ ಸೇವೆ ಅಗತ್ಯ. ತಾಯಿ ಸೇವೆ ಅಗತ್ಯ. ತಾಯಿಯನ್ನೇ ಆಳಿ ಅಳಿಸಿದರೆ  ನಾರಿ ಮಾರಿಯಾಗುವುದು ಸಹಜ. 
ಮಾನವನಿಗೆ  ಮಾನವನೇ ಶತ್ರು ಎಂದಂತೆ ಅವನ ಅಜ್ಞಾನದ ಅವನ ಅಹಂಕಾರ ಸ್ವಾರ್ಥ ವು ಮಿತಿಮೀರಿದಾಗ ತನ್ನ ತಾನರಿಯದೆ  ಹೋಗುವನು. ಒಟ್ಟಿನಲ್ಲಿ ಮಹಾತ್ಮರು ತಮ್ಮ ಆತ್ಮಾನುಸಾರ ನಡೆಯುವಾಗ ಪ್ರಕೃತಿ ಪುರುಷರ ಸಹಕಾರ ಅಗತ್ಯವಾಗಿದೆ. ಜೀವ ಇಲ್ಲದೆ ಜೀವನವಿಲ್ಲ. ಜೀವನದಲ್ಲಿ ಜ್ಞಾನ ಸದ್ಬಳಕೆಯಾದರೆ ಸುಗಮ.  ಇಲ್ಲವಾದರೆ ಅಜ್ಞಾನದಲ್ಲಿ ಜೀವ ನಿರ್ಗಮ.
ಜಗತ್ತನ್ನು ಕಾಯುವ ಜಗಧೀಶ್ವರನ ಜೊತೆಗೆ ಜಗಧೀಶ್ವರಿಯ ಸಹಕಾರವಿರೋದನ್ನು  ಮಾನವ ಪ್ರತಿಕ್ಷಣ ಅರ್ಥ ಮಾಡಿಕೊಳ್ಳಲು ಕಷ್ಟ. ಕಾರಣ  ಭೌತಿಕಾಸಕ್ತಿ ಮೋಹ ಮಾಯೆಯ ವಶದಲ್ಲಿರುವ ಮನಸ್ಸಿಗೆ  ಹಿಡಿತ ಸಿಗೋದು ಯೋಗದಿಂದ ಮಾತ್ರ ಸಾಧ್ಯ. ಭೋಗ ಹತ್ತಿರವಿರುವಾಗ ಯೋಗದೆಡೆಗೆ ಮನಸ್ಸು ಹೋಗದ ಕಾರಣದಿಂದ ಸಂನ್ಯಾಸಿಗಳಾದವರು  ಸಂಸಾರದಿಂದ ದೂರವಿದ್ದು ಬ್ರಹ್ಮಸತ್ಯವನರಿತರು.
ಇಡೀ ಬ್ರಹ್ಮಾಂಡ ನಡೆದಿರೋದೇ ಬ್ರಹ್ಮಸತ್ಯದಲ್ಲಿ. ಸೃಷ್ಟಿ ಗೆ ಕಾರಣವೇ ಭೂ ತಾಯಿ.ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿರುವ ಜೀವಾತ್ಮರಿಗೆ  ಮೇಲಿರುವ  ಮೇರುಸತ್ಯವು ಯೋಗದಿಂದ ಸಿಗುವುದರಿಂದ  ಪರಮಾತ್ಮನಿಗೆ ಪರಮಸತ್ಯ ಧರ್ಮ ಕ್ಕೆ ಶರಣಾಗಿ ದಾಸರಾಗಿ ಮುಂದೆ ನಡೆದವರಿಗೆ  ಯಾವುದೇ  ಅಂತರ  ಬೇಧ ಕಾಣದೆ  ಜೀವನ್ಮುಕ್ತರಾಗಿದ್ದಾರೆ.  ಕಲಿಯುಗದ ಕಲಿಕೆ ಹೊರಮುಖವಾಗಿರುವುದರಿಂದ  ಒಳಮುಖದಲ್ಲಿರುವ ಮೂಲ ಸತ್ಯ ಕಣ್ಣಿಗೆ ಕಾಣದು.ಹೀಗಾಗಿ ಅಧ್ಯಾತ್ಮ ಸಂಶೋಧನೆಗೆ  ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಲು ಆತ್ಮಜ್ಞಾನವೇ ಮೂಲಾಧಾರ. ಇದು ನಮ್ಮ ಭಾರತೀಯ ಶಿಕ್ಷಣವಾಗಿದೆ. ರಾಜಯೋಗದ ಯೋಗದಿಂದ  ಪ್ರಕೃತಿಯ ರಹಸ್ಯವರಿಯಬಹುದು.ಇದನ್ನು ವಿವೇಕಾನಂದರು ಶಿಕ್ಷಣದ ಮೂಲಕ  ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ  ಭಾರತದೇಶದ ಪವಿತ್ರತೆ ತಿಳಿಸಿದ್ದರು. ಇದಕ್ಕೆ ಶಾಂತಿಯುತ ಮನಸ್ಸು ಅಗತ್ಯ.ಶಾಂತಿ ಒಳಗಿನಿಂದ ಬೆಳೆಸಿಕೊಳ್ಳಲು ಧ್ಯಾನಯೋಗ  ಅಗತ್ಯ. ಧ್ಯಾನ ಪರಮಾತ್ಮನೆಡೆಗೆ ಹೋಗಲು  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯೇ ಕರ್ಮ ಯೋಗ. ಕಾಯಕವೇ ಕೈಲಾಸವೆಂದರು,ಜನರ ಸೇವೆಯೇ ಜನಾರ್ಧನನನ ಸೇವೆ ಎಂದರು.ದೇಶ ಸೇವೆಯೇ ಈಶ ಸೇವೆ ಎಂದರು. ಇದು ಯೋಗಿಗಳಿಂದ ಸಾಧ್ಯವೆಂದರು.
ಸ್ಥಿತಪ್ರಜ್ಞಾವಂತರಾಗೋದಕ್ಕೆ ಸ್ಥಿತಿಗೆ ಕಾರಣ ತಿಳಿಯುವುದು ಅಗತ್ಯವೆಂದರು.
ಅಂದಿನ‌ಮಹಾಭಾರತ ಯುದ್ದವಾಗಲಿ ರಾಮಾಯಣವಾಗಲಿ  ಸ್ಥಿತಿಯನ್ನು  ಸರಿಪಡಿಸಲು ಸ್ವಯಂ ಪರಮಾತ್ಮನೇ  ಭೂಮಿಯಲ್ಲಿ ಅವತರಿಸಿ ನಡೆಸಿರುವ ಲಯ ಕಾರ್ಯ. ಪ್ರತಿಯೊಂದು ಸಮಸ್ಯೆಯ ಮೂಲವೇ ಮನಸ್ಸು.ಆ ಮನಸ್ಸನ್ನು  ಹಿಡಿದಿಡುವುದೇ  ಯೋಗ. ಆ ಉಸಿರೇ  ಪ್ರಕೃತಿಯ ಕೊಡುಗೆ. ಇದಿಲ್ಲದೆ ಜೀವವಿಲ್ಲ.
ಜೀವವಿಲ್ಲದೆ ಜೀವನವಿಲ್ಲ. ಜೀವಿಗಳ ವನ...ಪ್ರತಿಯೊಂದು ಜೀವಿಯೂ ಪ್ರಕೃತಿಯ ಅಧೀನವೇ ಆದರೆ ಪ್ರಕೃತಿ ಪರಮಾತ್ಮನ ಅಧೀನ. ಪುರುಷನ ಅಧೀನ.ಇಲ್ಲಿ ಪುರುಷ ಎಂದರೆ ಆತ್ಮನಾಗಿದ್ದಾನೆ. ಇದಕ್ಕೆ ಯಾವುದೇ ಜಾತಿ ಧರ್ಮ ಪಕ್ಷ, ಲಿಂಗ ಬೇಧವಿಲ್ಲ. ಪ್ರತಿಯೊಬ್ಬರೂ ಪರಮಾತ್ಮನ  ಶಕ್ತಿಯ ಒಂದು ಬಿಂದುಗಳಾದರೂ ಯಾರು ಪರಮಾತ್ಮನ ಅರ್ಥ ಮಾಡಿಕೊಳ್ಳುವರೋ  ಅವರು ಅವನನ್ನೇ ಸೇರಿ ಮುಕ್ತರಾಗುವರೆಂದಿರುವರು.
ಪುರುಷೋತ್ತಮಯೋಗದಲ್ಲಿ ಎಲ್ಲಾ ಜೀವಾತ್ಮರಿಗೂ ಮೀರಿದ ಉತ್ತಮ ಪುರುಷನೇ  ನಾನು ಎಂದು ಶ್ರೀ ಕೃಷ್ಣ ತಿಳಿಸಿರುವುದರ ಹಿಂದೆ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲವೂ ನನ್ನೊಳಗೇ ಇದೆ ಎಂದರ್ಥ ವಾಗುತ್ತದೆ.
ಭಿನ್ನತೆಯಿಂದ  ಅಂತರ ಬೆಳೆಯುತ್ತ  ದ್ವೇಷ ವೂ ಬೆಳೆದು ಕೊನೆಯಲ್ಲಿ  ಅತಂತ್ರಸ್ಥಿತಿಗೆ ಆತ್ಮ ತಲುಪುತ್ತದೆ .ಇದನ್ನು ಸರಿಪಡಿಸಲು  ಮಾನವನಿಗೆ ಕಷ್ಟ. ಹೀಗಾಗಿ ಮಹಾತ್ಮರು ಧರೆಗಿಳಿದು ಲೋಕಕಲ್ಯಾಣಕ್ಕಾಗಿ  ತಮ್ಮ ಜೀವನ ನಡೆಸುವರು. ಇಂದಿಗೂ  ಎಷ್ಟೋ ಶ್ರಮ ಜೀವಿಗಳು ತಮ್ಮ ಸ್ವತಂತ್ರ ಜ್ಞಾನದಿಂದ  ಪರಮಾತ್ಮನ ಸೇವೆಯಲ್ಲಿರುವರು. ಯಾವಾಗ ಅವರನ್ನು ಬಡವರೆಂದು ಹಣ ಕೊಟ್ಟು ಸಾಲಕ್ಕೆ ಎಳೆಯುವರೋ  ಅದೇ ದೊಡ್ಡ ಸಮಸ್ಯೆ ಯಾಗುವುದು.
ಒಟ್ಟಿನಲ್ಲಿ ಇಲ್ಲಿ ಯಾರನ್ನೂ ಯಾರೂ ಆಳಲಾಗದು.ಪ್ರಕೃತಿಯನ್ನು ಆಳಲು ಹೋಗಿ ಪ್ರಕೃತಿ ವಿಕೋಪ ದಲ್ಲಿ ಜೀವ ಹೋಗಿದೆ. ಇನ್ನು ಎಲ್ಲದರಿಂದ ದೂರವಿದ್ದು  ಎಲ್ಲರನ್ನೂ ನಡೆಸುವ ಪರಮಾತ್ಮನ ಅರಿಯುವುದಕ್ಕೆ  ಕಷ್ಟಪಟ್ಟು ಅಂತರಾತ್ಮನೆಡೆಗೆ ಸಾಗಬೇಕಿದೆ.ಹೊರಗೆ ಬಂದಷ್ಟೂ  ಅಸತ್ಯ ಅನ್ಯಾಯ ಅಧರ್ಮ ವೇ ಕಣ್ಣಿಗೆ ಕಾಣೋದು.
ಅವರವರ ಧರ್ಮ ಕರ್ಮ ದಲ್ಲಿ ಸತ್ಯವಿದ್ದರೆ ಅದೇ ಸೇವೆ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿರದು.ದೇವಾಸುರರ ನಡುವಿರುವ ಮಾನವನಲ್ಲಿ  ಎರಡೂ ಶಕ್ತಿ ಇರುತ್ತದೆ. ಜ್ಞಾನದಿಂದ ವಿಜ್ಞಾನ ಬೆಳೆಯುತ್ತದೆ.ವಿಜ್ಞಾನದ ಒಳಗೇ ಜ್ಞಾನ ಇರುತ್ತದೆ. ಜ್ಞಾನಕ್ಕೆ ಒಳಗೆ ಹುಡುಕಿಕೊಂಡು ಸದ್ಬಳಕೆಯಾದರೆ  ಅಧ್ಯಾತ್ಮ ವಿಜ್ಞಾನ ವಾಗುತ್ತದೆ.  ಮೊದಲೇ ಹೊರಗಿನ ಜ್ಞಾನಕ್ಕೆ ಶರಣಾದರೆ ಒಳಗೇ ಇದ್ದ ಸುಜ್ಞಾನದ ಗತಿ?
ಎರಡೂ ಒಂದೇ ನಾಣ್ಯದ ಎರಡು ಮುಖ.ವ್ಯವಹಾರಕ್ಕೆ ನಾಣ್ಯ ಬಳಸೋದು ಸುಲಭ.ಧರ್ಮದ ಪ್ರಕಾರ ಬಳಸೋದು ಕಷ್ಟ. ಋಣ ಸಂಧಾಯವಾಗದೆ ಜ್ಞಾನ ಬರದು. ಸಾಲ ತೀರದೆ ಜೀವಕ್ಕೆ ಮುಕ್ತಿ ಸಿಗದು. ಹಾಗಾಗಿ ಇತಿಮಿತಿಯಲ್ಲಿ ಹಣಗಳಿಸಿ ಧರ್ಮ ದಾನದ ಮೂಲಕ  ಸದ್ಬಳಕೆ ಮಾಡಿಕೊಳ್ಳಲು ಮಾನವನಿಗೆ  ಸ್ವತಂತ್ರ ಜ್ಞಾನ  ಅಗತ್ಯ.ಎಲ್ಲರಲ್ಲಿಯೂ ಅಡಗಿರುವ ಬ್ರಹ್ಮನ ಅರಿಯುವುದಕ್ಕೆ ಮೂರನೇ ಕಣ್ಣಿನ ಅಗತ್ಯವಿದೆ. ಶಿವನ ಮೂರನೇ ಕಣ್ಣು  ತೆರೆದಾಗ ಲಯ ಆಗುತ್ತದೆ. ಲಯದ ನಂತರ ಮತ್ತದೇ ಸೃಷ್ಟಿ. ಸೃಷ್ಟಿ  ಉತ್ತಮವಾದ ಜ್ಞಾನದಿಂದ ಆಗಲು ಉತ್ತಮ ಶಿಕ್ಷಣ ಅಗತ್ಯವಿದೆ. ಒಟ್ಟಿನಲ್ಲಿ  ನಮ್ಮ ಪ್ರಯತ್ನ ಒಳಗಿನ ಅರಿವನ್ನು ‌ಬೆಳೆಸುತ್ತದೆ. ಅದು ನಮಗೆ ಅನುಭವಜ್ಞಾನ‌ನೀಡುತ್ತಾ ಒಳಗೇ ಆವರಿಸಿರುವ ಎಲ್ಲಾ ದೇವತಾಶಕ್ತಿಯೆಡೆಗೆ  ನಿಧಾನವಾಗಿ ಸಾಗಿದವರಿಗೆ ಮೂಲದ ಪರಮಾತ್ಮ ನ ದರ್ಶನ ವಾಗಿದೆ.ನಿರಾಕಾರದಲ್ಲಿರುವ  ಪರಮಾತ್ಮನ ಕಾಣೋದು  ಎಂದರು ಅವನಲ್ಲಿ ಲೀನವಾಗೋದು ಎಂದರ್ಥ. ಎಲ್ಲರೂ ಅವನೊಳಗೇ ಇದ್ದರೂ ಅವನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ಹಾಗೆಯೇ ಒಂದು ದೇಶದೊಳಗೆ ಎಲ್ಲಾ ಇದ್ದರೂ ದೇಶಭಕ್ತಿ ಎಲ್ಲರಲ್ಲಿಯೂ ಇರದ ಕಾರಣದಿಂದ  ಅಸುರಿ ಶಕ್ತಿ ದೇಶವನ್ನು ದುರ್ಭಳಕೆ ಮಾಡಿಕೊಂಡು ಆಳುತ್ತದೆ. ನಮ್ಮ ಸಹಕಾರವಿಲ್ಲದೆ ಏನೂ ನಡೆಯದು. ಯಾವಾಗ  ಅಧರ್ಮ ಅಸತ್ಯ ಅನ್ಯಾಯ ಭ್ರಷ್ಟಾಚಾರ ಕ್ಕೆ ಸಹಕಾರ ಸಿಗುವುದೋ ಅ ಅದೇ ಬೆಳೆದು ನಿಲ್ಲುವುದಷ್ಟೆ. ಇದಕ್ಕೆ ಜೀವಾತ್ಮರೇ ಕಾರಣವಾದಾಗ ಅದರ ಫಲವೂ ಜೀವವೇ ಅನುಭವಿಸಬೇಕೆನ್ನುವುದು ಕರ್ಮ ಸಿದ್ದಾಂತ.
ಸಿದ್ದರು ಕಂಡುಹಿಡಿದದ್ದನ್ನು ಹರಡಿ ಪ್ರಸಿದ್ದರಾಗಬಹುದು.
ವಾಸ್ತವದಲ್ಲಿ ನಾವೆಷ್ಟು ಸತ್ಯ ತಿಳಿಯಲು ಸಿದ್ದರಿದ್ದೇವೆನ್ನುವುದೇ ಮುಖ್ಯವಾಗಿರುತ್ತದೆ.  ತಿಳಿದಷ್ಟು ಸುಲಭವಿಲ್ಲ  ನಡೆಯೋದು. ನಡೆಯುವಾಗ ಎಡವಬಹುದು ಬೀಳಬಹುದು.ಅದನ್ನು ನೋಡಿ ನಗೋರಿಗೇನೂ ಕಡಿಮೆಯಿರದು. ಆದರೆ  ಎದ್ದು ಬಿದ್ದು ಎಡವಿದ ಮೇಲೇ ಸತ್ಯದ ಅರಿವಾಗೋದು. ಒಟ್ಟಿನಲ್ಲಿ  ಕಷ್ಟ ಎಲ್ಲರಿಗೂ ಇದೆ.
ನಮ್ಮ ದಾರಿ ಸರಿಯಿದೆಯೆ ಎನ್ನುವ ಜ್ಞಾನ ಬೇರೆ ಬೇರೆ ಆಗಿದೆ.  ದಾರಿ ಬೇರೆಯಾದರೂ ಸೇರೋದು ಒಂದೇ ಕಡೆ.
ಇಡೀ ವಿಶ್ವ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು  ಯೋಗದಿಂದ ಸಾಧ್ಯ. ಆದರೆ ನೋಡಲಾಗದು ಕಾರಣ ಇದು ನಿರಾಕಾರವಾಗಿದೆ. ಸಾಕಾರದಿಂದ ‌ನಿರಾಕಾರದೆಡೆಗೆ ನಡೆದರೆ ಅದ್ವೈತ. ನಿರಾಕಾರದಿಂದ ಸಾಕಾರಕ್ಕೆ ಬಂದರೆ ದ್ವೈತ.
ಎರಡೂ ಒಂದೇ ನಾಣ್ಯದ ಎರಡು ಮುಖ. ಪರಮಾತ್ಮ ಸಾಕಾರರೂಪಿಯೂ ನಿರಾಕಾರ ರೂಪಿಯೂ ಆಗಿ ಎಲ್ಲರಲ್ಲಿ ಅಡಗಿರುವುದು  ಸತ್ಯವೆಂದಾಗ ನಮ್ಮ ಕಣ್ಣಿಗೆ ಕಾಣೋದಿಲ್ಲ.

Wednesday, June 4, 2025

ತತ್ವದರ್ಶನ × ತತ್ವಪ್ರದರ್ಶನ?

ತತ್ವ ದರ್ಶನಕ್ಕೂ ತತ್ವ ಪ್ರದರ್ಶನಕ್ಕೂ ವ್ಯತ್ಯಾಸವಿದೆ. ತತ್ವದರ್ಶನ ಆದ ಮೇಲೆ ಪ್ರದರ್ಶನ ಇಷ್ಟವಾಗದು. ಪ್ರದರ್ಶನವೇ ಮುಖ್ಯವಾದವರಿಗೆ ತತ್ವದರ್ಶನ ಆಗಿರದು. ಒಗ್ಗಟ್ಟು ಹೊರಗಿನ ಪ್ರದರ್ಶನವಾದಾಗ ಸಾಕಷ್ಟು ಅಪ್ರದಕ್ಷಿಣೆ‌ ಮಾಡೋರನ್ನು  ಸರಿಪಡಿಸೋದರಲ್ಲಿಯೇ ಕಾಲಹೋಗುತ್ತದೆ. ಕೊನೆಗೆ ನಾವೇ ಅಪ್ರದಕ್ಷಿಣೆಯ ಕಡೆಗೆ ಹೋಗಿರೋದೂ ತಿಳಿಯದೆ  ನಿಂತಿರುತ್ತೇವೆ.
ಯಾರಿಗೆ  ದರ್ಶನ ಮಾಡಿಸಬೇಕು? ಎಂದರೆ ಒಳಗಿನ ಶಕ್ತಿಯ ದರ್ಶನ  ಆಗೋದಕ್ಕೆ  ಮಾಡಿಸಬೇಕಿದೆ. ಯಾವಾಗ ಒಳಗಿನ ಶಕ್ತಿಯ ಅರಿವಿಲ್ಲದೆ ಹೊರಗಿನವರಿಗೆ ಪ್ರದಕ್ಷಿಣೆ ಹೆಚ್ಚಾಗುವುದೋ  ಆಗ ಹೊರಗಿನವರ ಸುತ್ತಲಿರುವ  ಶಕ್ತಿಯೇ  ಮತ್ತಷ್ಟು ಸುತ್ತುವಂತೆ ಮಾಡಿಕೊಂಡಿರುತ್ತದೆ.ಏನೇ ಇರಲಿ ಉತ್ತಮರ ಪ್ರದಕ್ಷಿಣೆಯಿಂದ ಉತ್ತಮ ಕಾರ್ಯ ನಡೆಯುತ್ತದೆ.
ಅಧಮರನ್ನು ಪ್ರದಕ್ಷಿಣೆ ಮಾಡಿದರೆ  ಅಧರ್ಮ ವೇ  ಬೆಳೆಯೋದು.
ಜೀವನ‌ ಒಂದು ನಾಟಕವೆಂದರು ಜೀವನ‌ ಒಂದು ಆಟ ಎಂದರು...ಹೀಗೇ‌ ನಾಟಕದಲ್ಲಿ ನಟನೆ ಮಾಡೋರ ‌ಹಿಂದೆ ಹೋದವರು  ಜೀವನದ ಸತ್ಯ ತಿಳಿದರೆ ಉತ್ತಮ. 

ಹಾಗೆಯೇ ಆಟ ಆಡೋರನ್ನು ನೋಡುತ್ತಾ  ಕಾಲಕಳೆದವರು ಜೀವನದಲ್ಲಿ  ಗೆದ್ದವರಿದ್ದರೆ  ಉತ್ತಮ.  ಯಾರದ್ದೋ ಆಟಕ್ಕೆ ನಮ್ಮ ಜೀವ ಹೋದರೆ  ಅಧೋಗತಿ. ನಾಟಕದಲ್ಲಿ  ಪಾತ್ರ ಮಾಡೋರಿಗೆ  ಆಟ ಆಡೋರಿಗೆ ಆಡಿಸುವವರಿಗೆ  ಹಣದ ಸಮಸ್ಯೆಯಿರದು. ನೋಡೋರಿಗೆ  ಹಣದ‌ ಜೊತೆಗೆ ಸಮಯವೂ ವ್ಯರ್ಥ  ಜ್ಞಾನವೂ ಇರದು. 
ಎಲ್ಲರನ್ನೂ ಒಂದು ಮಾಡುವ ತತ್ವದಲ್ಲಿ ತಂತ್ರ ಬೆರೆಸಿ ಆಳಿದರೆ ಅತಂತ್ರಸ್ಥಿತಿಗೆ ಜೀವನ ತಲುಪಬಹುದು. 
ಮಾನವನ ಸ್ವತಂತ್ರ ಜ್ಞಾನದಿಂದ  ತತ್ವದರ್ಶನ ಮಾಡಿಕೊಂಡ ಮಹಾತ್ಮರನ್ನು ಪ್ರದರ್ಶನ ಮಾಡಿಸದೆ ಅವರಲ್ಲಿದ್ದ ಸತ್ಯಜ್ಞಾನ  ದರ್ಶನವಾದರೆ  ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ದರ್ಶನ ಆದಂತೆಯೇ.

ನೇರವಾಗಿ ಸತ್ಯ ತಿಳಿಸಿದರೂ ಅರ್ಥ ವಾಗದಿದ್ದರೆ  ಏನೂ ಮಾಡಲಾಗದು. ಹೊರಗಿನ‌ಕಲಿಕೆ ಪ್ರದರ್ಶ ನಕ್ಕೆ ಸೀಮಿತವಾದಷ್ಟೂ  ಒಳಗಿನ ಕಲಿಕೆ  ಹಿಂದುಳಿಯುತ್ತದೆ.
ಆತ್ಮನಿರ್ಭರ ಭಾರತವು ಆತ್ಮದುರ್ಭಲರ  ಪ್ರದರ್ಶನ ಮಾಡಿಸದಿದ್ದರೆ  ಉತ್ತಮ. ಜೀವನದ ಆಟದಲ್ಲಿ ಗೆದ್ದವರು ಯಾರು? ಸೋತವರು ಯಾರು? 

ಜನಮರುಳೋ ಜಾತ್ರೆಯೋ ಎಂದಂತೆ ಸಮಾವೇಶ ಸಮಾರಂಭ ಸಮಾರಾಧನೆ ಗಳು ಹೊರಗಿನ ಜನರಿಗೆ ಪ್ರದರ್ಶನವಷ್ಟೆ.

Tuesday, June 3, 2025

ಋಣಮುಕ್ತರಾಗೋದು ಸಾಧ್ಯವೆ?

ಮೇಲಿನ ಲೋಕಕ್ಕೆ ಹೋಗೋ ಮೊದಲು ನಿನ್ನ ಕೆಳಗಿನ ಲೆಕ್ಕ ಚುಕ್ತಾ ಆಗಬೇಕು. ಇದು ಅಧ್ಯಾತ್ಮ
ಆದರೆ ಇಂದು ಲೆಕ್ಕಾಚಾರವೇ  ಮುಗಿಯದ ವ್ಯವಹಾರಕ್ಕೆ  ಅಂಟಿಕೊಂಡು  ಜೀವನವೇ ದುಸ್ತರವಾದರೂ ಸರಿ ನಾನು ಬಿಡೋದಿಲ್ಲ ಎನ್ನುವ ಹಠ ಹೆಚ್ಚಾಗುತ್ತಾ‌ಮಠ ಮಠಗಳು ವ್ಯವಹಾರದಲ್ಲಿ  ಹೊರಗೆ ಬೆಳೆಯುತ್ತಿದೆ. ಎಂದರೆ ಭೂಮಿ ಋಣ ತೀರಿಸಲು  ಹಠಯೋಗಿ  ಲೆಕ್ಕಚುಕ್ತ ಮಾಡಬೇಕು.
ದೇವರು ,ಧರ್ಮ, ದೇಶದಲ್ಲಿ  ಯಾವುದು ಮೊದಲು ಎಂದರೆ ಹಲವರು ದೇವರೆಂದರೆ ಕೆಲವರು ಧರ್ಮ ಎನ್ನುವರು ಇನ್ನೂ ಕೆಲವರು ದೇಶವೇ ಮೊದಲು ಎನ್ನುವರು. ಹೀಗಾದರೆ ಅವರವರ ದೇವರ ಋಣ ಧರ್ಮದ ಋಣ ದೇಶದ ಋಣ ತೀರಿಸಲು  ಸತ್ಯಜ್ಞಾನ ಬೇಡವೆ?
ಹೊರಗಿನ ವ್ಯವಹಾರಕ್ಕೆ ಸತ್ಯವೂ ಬೇಡ ಧರ್ಮ ವೂ ಬೇಡ. ಹಣ ಒಂದೇ ಮುಖ್ಯ. ಆದರೆ ಸತ್ಯ ಧರ್ಮ ಇಲ್ಲದಿರುವ ಕರ್ಮದಿಂದ ಋಣ ತೀರದು. 
ಮೇಲ್ಮಟ್ಟದ ಚಿಂತನೆ ನಡೆಸೋರು  ತನ್ನ ಕಾಲುಬುಡದ ಸತ್ಯ ಗಮನಿಸೋದಿಲ್ಲ. ಹೀಗಾಗಿ ತಾವು‌ಮೇಲಕ್ಕೆ ಮೊದಲು ಹೋಗಬೇಕೆಂದು  ಕಾಲಕೆಳಗಿರುವವರನ್ನು ತುಳಿದರೆ  ಪರಮಾತ್ಮನೆಡೆಗೆ  ಹೋಗಬಹುದೆ?
ಎಷ್ಟು ‌ಮಂತ್ರ ತಂತ್ರ ಯಂತ್ರ ಬಳಸಿದರೂ  ಸ್ವತಂತ್ರ ಜ್ಞಾನಕ್ಕೆ ದಕ್ಕೆಯಾದರೆ ಜೀವನ ಅತಂತ್ರವೆ ಆಗಿರುತ್ತದೆ.
ಎಲ್ಲಾ ತಾತ್ಕಾಲಿಕ ವಷ್ಟೆ. ಶಾಶ್ವತವಿರೋದು  ಋಣ ಮತ್ತು ಕರ್ಮಫಲವಷ್ಟೆ. ಇದನ್ನು ಧಾರ್ಮಿಕವಾಗಿ ಅರಿಯುವುದಕ್ಕೆ ದೇವರನ್ನು ಬೆಳೆಸೋದಲ್ಲ ದೈವತ್ವದ ಗುಣಜ್ಞಾನ‌ ಬೆಳೆಸಿಕೊಂಡು  ಶಿಕ್ಷಣದ‌ಮೂಲಕ ಜನಸಾಮಾನ್ಯರಿಗೆ ತಲುಪಿಸಿದಾಗಲೇ  ನಿಜವಾದ ಧರ್ಮ. ಧರ್ಮ ಹಣದಿಂದ ರಕ್ಷಣೆ ಆಗೋಹಾಗಿದ್ದರೆ ಎಲ್ಲಾ ಉಚಿತ ಕೊಟ್ಟರೂ ಯಾಕೆ ಆಗಿಲ್ಲ?
ಉಚಿತ ಪಡೆದಷ್ಟೂ ಸಾಲ ಖಚಿತ.
ಸಾಲವೇ ಶೂಲವಾದಾಗ ಮೇಲಕ್ಕೆ ಏರೋದು ಅಸಾಧ್ಯ.
ಬಡವರ ಹೆಸರಿನಲ್ಲಿ  ಸಾಕಷ್ಟು   ರಾಜಕೀಯ ವ್ಯವಹಾರ‌
ನಡೆಯುತ್ತದೆ.ಅದಕ್ಕೆ ಬಡವರ ಸಹಕಾರವೂ ಇರುತ್ತದೆ. ಆದರೆ  ಸಾಲ‌ಮಾತ್ರ ಬಡವರ ಪಾಲಿಗೆ ದೇಶದ ತಲೆಗೆ ಕಟ್ಟಿದರೆ  ದೇಶದ ತಲೆಗೇ ಅಪಾಯ.
ಭಗವಂತ ಯಾವ ರೂಪದಲ್ಲಿ ಬಂದು ತಲೆ ತೆಗೆದುಕೊಂಡು ಹೋಗುವನೋ  ತಿಳಿಯದು.‌ಅಂದರೆ ತಲೆ ಜ್ಞಾನದ ಸಂಕೇತ.
ಅದಕ್ಕೆ ತುಂಬುವ ವಿಷಯಗಳು  ಜೀವನವಾಗಿರುತ್ತದೆ.
ಅದರೊಳಗೆ ಭ್ರಷ್ಟ ದುಷ್ಟರ ವಿಷಯ ತುಂಬಿದರೆ  ಸ್ವಚ್ಚ ಮಾಡಲಾಗದು. ಹೀಗಾಗಿ  ಸ್ವಚ್ಚ ಕಾರ್ಯ  ಸ್ವಯಂ ಪರಮಾತ್ಮನೇ ಮಾಡಿದರೂ ಅದರೊಳಗೂ  ಮಾನವನ  ತಪ್ಪು ಲೆಕ್ಕಾಚಾರ. ಪಾಪಪುಣ್ಯ ದ ಲೆಕ್ಕಾಚಾರವನ್ನು ಜ್ಞಾನದಿಂದ ಮಾಡಬೇಕಿತ್ತು.
ಆದರೆ ಇಂದು ಪಾಪ ಮಾಡಿದವರನ್ನು ರಕ್ಷಸಿ ಪುಣ್ಯವಂತರಿಗೆ ಶಿಕ್ಷೆ. ಇದೂ ಒಂದು ಮೇಲಿರುವವನ ಲೆಕ್ಕಾಚಾರವೇ.ಕಾರಣ ಪುಣ್ಯವಂತರನ್ನು ಬೇಗ‌ಮೇಲಕ್ಕೆ ಕರೆಸಿಕೊಳ್ಳಲು ತಯಾರಿ‌ ನಡೆದಿದೆ .
ಹೀಗಾಗಿ ಸಾಧ್ಯವಾದಷ್ಟು  ನಿಮ್ಮ ನಿಮ್ಮ ಅನಗತ್ಯ ಅಸ್ತಿ ಅಂತಸ್ತು ಅಧಿಕಾರ  ಸ್ಥಾನ ಬಿಟ್ಟು  ಮೇಲಕ್ಕೆ ಹೊರಡಲು ತಯಾರಿ ನಡೆಸಿಕೊಂಡರೆ  ಆತ್ಮಕ್ಕೆ ತೃಪ್ತಿ.
ಆತ್ಮಕ್ಕೆ ತೃಪ್ತಿ ಸಿಗಬೇಕಾದರೆ ಋಣಮುಕ್ತರಾಗಬೇಕು.
ಋಣಮುಕ್ತರಾಗಬೇಕೆಂದರೆ  ಪರಮಾತ್ಮನ ಸೇವೆ ಮಾಡಬೇಕು. ಪರಮಾತ್ಮ ಇರೋದೆಲ್ಲಿ ಎಂದರೆ ಸತ್ಯ ಧರ್ಮ ದಲ್ಲಿ.ಸತ್ಯ ಯಾವುದು ಧರ್ಮ ಯಾವುದು ಎಂದಾಗಲೇ ಬರೋದು  ಪ್ರಶ್ನೋತ್ತರ ಸರಮಾಲೆ.
ಆ ಪ್ರಶ್ನೆಗೆ ಸರಿಯಾಗಿ ಉತ್ತರ ಸಿಗದಿದ್ದರೆ ಮತ್ತದೇ ವ್ಯವಹಾರ. ನಿರಂತರವಾಗಿ ನಡೆದಿರುವ ಈ ವ್ಯವಹಾರ ಮಾಧ್ಯಮ  ಕಣ್ಣಿಗೆ ಕಾಣೋದಕ್ಕೆ  ಬೆಲೆಕೊಡುತ್ತದೆ.ಕಾಣದ್ದಕ್ಕೆ  ವಿರೋಧಿಸುವ ಕಾರಣದಿಂದ  ಜನ್ಮ ಜನ್ಮಗಳ ಋಣ ತೀರದೆ  ಎಷ್ಟು ದುಡಿದರೂ ತೃಪ್ತಿ ಯಿಲ್ಲ. ಒಬ್ಬ ಬಡ ಬ್ರಾಹ್ಮಣನಿಗಿರುವ ನೆಮ್ಮದಿ ಶ್ರೀಮಂತ ಬ್ರಾಹ್ಮಣನಿಗಿರದು.
ಬ್ರಾಹ್ಮಣ ಎಂದರೆ ಬ್ರಹ್ಮನ ಅರಿತವ. ಎಲ್ಲರಲ್ಲಿಯೂ ಒಂದು ಜ್ಞಾನಶಕ್ತಿ ಬ್ರಹ್ಮನ ಸೃಷ್ಟಿ ಯಿಂದಲೇ ಸೇರಿದೆ. ಅದನ್ನು  ಹುಡುಕಿಕೊಂಡು  ಅದರಂತೆ ಸ್ವತಂತ್ರ ವಾಗಿ  ನಡೆದರೆ ಆತ್ಮಕ್ಕೆ ತೃಪ್ತಿ. ಯಾವಾಗ  ಇದನ್ನು ಗುರುತಿಸದೆ ಹೊರಗಿನ ಜ್ಞಾನ ಸೇರಿಸಲಾಯಿತೋ  ಒಂದನ್ನೊಂದು  ಸರಿಮಾಡಲಾಗದೆ ಜೀವಕ್ಕೆ ಸಮಸ್ಯೆ ಆಗುವುದು. ಇದೇ ಕಾರಣದಿಂದ ಹಿಂದಿನ ಹಿಂದೂಗಳಲ್ಲಿ  ತತ್ವಜ್ಞಾನವಿದ್ದು‌ ಋಣ ತೀರಿಸಲು  ಸ್ವಂತ ಜ್ಞಾನ ಬಳಸಿಕೊಂಡು ಸರಳಜೀವನದಲ್ಲಿ‌ನೆಮ್ಮದಿಯಿಂದ ಬಾಳುತ್ತಿದ್ದರು.ಯಾವಾಗ ಬಾಳೋದು ಬಿಟ್ಟು ಆಳೋದಕ್ಕೆ ವ್ಯವಹಾರ ಹೆಚ್ಚಾಯಿತೋ ಆಗಲೇ ಸಾಲ ಬೆಳೆಯುತ್ತಾ
ಹತ್ತಿರವಿರುವ ಜ್ಞಾನದ ಆಸ್ತಿ  ಕಾಣದೆ ಹೊರಗಿನ ಜ್ಞಾನದ ದಾಸರಾಗಿ ಹಿಂದಿನ ಗುರುಹಿರಿಯರ ಋಣ ತೀರಿಸಲಾಗದ ಅಕರ್ಮಕ್ಕೆ ಅಧರ್ಮಕ್ಕೆ  ತಲೆಓಡಿಸುವಂತಹ ತಂತ್ರ ಬೆಳೆದು ಯಾಂತ್ರಿಕ  ಸಂಸಾರವಾಯಿತು.

ಯಂತ್ರವೂ ಮಾತನಾಡುತ್ತದೆ ಆದರೆ  ಇದರಲ್ಲಿ ಸತ್ಯವಿರದು.
ಹಾಗೆ ಮೂರು ಪಂಗಡಗಳಿಗೂ ಮಾತು‌ಬರುತ್ತದೆ. ಸತ್ಯದಲ್ಲಿ ವ್ಯತ್ಯಾಸವಿರುತ್ತದೆ. ಸೃಷ್ಟಿ ಸ್ಥಿತಿ ಲಯ ಇದಕ್ಕೆ ತಕ್ಕಂತೆ ನಡೆಯುತ್ತದೆ. ಇದನ್ನು ಯಾರೂ‌ ಮೀರಿಸಲಾಗದು. ಕೊನೆಪಕ್ಷ ಸೃಷ್ಟಿ ಸರಿಯಾದರೆ  ಬದಲಾವಣೆ ಉತ್ತಮ.ಅದರ ಮೂಲ ಜ್ಞಾನದೆಡೆಗೆ ಹೊರಡಲು  ಸರಿಯಾದ ದಾನಧರ್ಮ ಕಾರ್ಯ ಅಗತ್ಯ. ಇದು ಮನೆಯೊಳಗಿದ್ದೇ  ಮಾಡಿದರೆ ಮನೆಯವರಿಗೂ ಒಳ್ಳೆಯದು. ಹೊರಗೆ ಮಾಡಿದರೂ ಸಮಾಜದ ಋಣ ತೀರುವುದು.ಆದರೆ  ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದ ದಾನ ಧರ್ಮದಿಂದ ಮಾತ್ರ ಮೇಲಿನ ಲೋಕಕ್ಕೆ ಆತ್ಮನ ಪ್ರಯಾಣ ಎನ್ನುವುದು ಎಲ್ಲರಿಗೂ ಅನ್ವಯಿಸುತ್ತದೆ.
ಅದಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿನ ಸಂಪಾದನೆ ಕಷ್ಟ ತರುತ್ತದೆ.
ಕಷ್ಟ ಬಂದಾಗ  ಅದೇ ಹಣವನ್ನು  ದಾನಧರ್ಮ ಕ್ಕೆ ಕೊಡಬೇಕು. ಕೊಟ್ಟು  ಮತ್ತೆ ಅದೇ ರೀತಿಯಲ್ಲಿ  ನಡೆದರೆ ಮತ್ತದೇ ಕಷ್ಟ ನಷ್ಟ.
ಒಟ್ಟಿನಲ್ಲಿ ನಾವು ದೇವರಿಗಾಗಲಿ ಜನರಿಗಾಗಲಿ ಸೇವೆ ಮಾಡುವುದರಿಂದ  ನಮ್ಮ ಋಣ ತೀರಬೇಕೆಂದರೆ  ಅದು ಯೋಗದಿಂದ ಇರಬೇಕು. ಅಂದರೆ  ಪರಮಾತ್ಮನಿಗೇ  ಸೇವೆ ಮಾಡುವ ಯೋಗಿಗೆ ಮುಕ್ತಿ ಮೋಕ್ಷ ಎಂದಿರುವರು .

ಹಾಗಾದರೆ  ನಮ್ಮ ಸೇವೆ ಪರಮಾತ್ಮನಿಗೆ ತಲುಪಿದೆಯೆ?
ತಲುಪಿದ್ದರೆ  ನಮಗೇಕೆ ಸಮಸ್ಯೆ ಸಂಕಟ ನೋವು?
ಆತ್ಮಕ್ಕೆ ತೃಪ್ತಿ ಸಿಗುವ ಧರ್ಮ ಕರ್ಮ ದಿಂದ ಋಣ ತೀರುವುದು. ಎಲ್ಲಾ ಕಾಲದಲ್ಲಿಯೂ  ಈ ಜೀವ ಇದ್ದರೂ ಅದರ ಅರಿವಿಲ್ಲದ ಕಾರಣದಿಂದ ಅಜ್ಞಾನದಲ್ಲಿ  ಭೂಮಿಯ ಋಣ ಏರಿಸಿಕೊಂಡು  ಮಾನವ  ಅಸುರರಿಗೆ  ದಾನ ಧರ್ಮ ಮಾಡಿದರೆ  ಇದ್ದವರಿಗೇ ಎಲ್ಲಾ ಸೇರುತ್ತದೆ. ಎಲ್ಲಾ ಸೇರಿದ‌ಮೇಲೆ ಅಧಿಕಾರ ಅಹಂಕಾರ ಸ್ವಾರ್ಥ ವೂ ಬೆಳೆಯುತ್ತದೆ. ಒಳಗೇ ಅಸುರಶಕ್ತಿ ಆಳುತ್ತಿದ್ದರೆ ದೇವರು ಕಾಣೋದಿಲ್ಲ. ದೇವರನ್ನು ದ್ವೇಷ ಮಾಡೋದೇ  ವ್ಯವಹಾರ ಆಗಿರುತ್ತದೆ. ಒಟ್ಟಿನಲ್ಲಿ ಹಣ ಬೇಕು.ಇದು ಸದ್ವಿದ್ಯೆ ಸತ್ಕರ್ಮ ಸ್ವಧರ್ಮ ದಿಂದ  ಗಳಿಸಿದರಷ್ಟೆ  ಮಾನವನಿಗೆ ಸಮಾಧಾನ.
ಎಷ್ಟೋ ಶ್ರೀಮಂತ ರಿಗೆ ಮಕ್ಕಳ ಭಾಗ್ಯವಿಲ್ಲ.ಮಕ್ಕಳಿದ್ದರೂ ಆಸ್ತಿ ಅನುಭವಿಸೋ ಭಾಗ್ಯವಿರದು. ಆಸ್ತಿ ಇದೆಯೆಂದು ದುರ್ಭಳಕೆ ಮಾಡಿದರಂತೂ ಮುಗಿಯಿತು ಕಥೆ. ಹಾಗಾಗಿ ಜ್ಞಾನಿಗಳಾದವರು  ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳ ಜ್ಞಾನವನ್ನು  ಬೆಳೆಸುತ್ತಾ ಅವರನ್ನು ಸಮಾಜದ ದೇಶದ ಆಸ್ತಿ ಆಗಿಸಿದ್ದರು. ಆದರೆ ಕಾಲಾನಂತರದಲ್ಲಿ ಜ್ಞಾನವನ್ನು ಗುರುತಿಸುವ ಶಿಕ್ಷಣವಿಲ್ಲದೆ  ಹೊರಗಿನ ಜ್ಞಾನ ಬೆಳೆಯಿತು.‌ಒಟ್ಟಿನಲ್ಲಿ ಜ್ಞಾನವನ್ನು ಸದ್ಬಳಕೆ ಮಾಡುವುದರಿಂದ  ಉತ್ತಮ  ಜೀವನ ನಡೆಸಬಹುದು. 
ಹಿಂದೆ ಅವರವರ ಮೂಲ ಧರ್ಮ ಕರ್ಮವೇ ಆಧಾರವಾಗಿ ಜನಜೀವನ ನೆಮ್ಮದಿ ತೃಪ್ತಿ ಪಡೆದಿತ್ತು. ಈಗ ಕಲಿಕೆ ಹೊರಗಿನವರದ್ದು  ಹಣ ಆಸ್ತಿ ಒಳಗಿನವರದ್ದು  ಹೀಗಾಗಿ ಎರಡೂ ಕಡೆ ಋಣಭಾರ ಹೊತ್ತು ತೀರಿಸಲಾಗದೆ ಜೀವಹೋಗುತ್ತಿದೆ. ಒಂದೇ ವಿಷಯ ಎರಡೂ ಕಡೆ ಇದ್ದರೆ ಸಮಾಧಾನ.‌ವಿರುದ್ದ ಇದ್ದರೆ ಗೊಂದಲವೇ ಹೆಚ್ಚು. ಅದಕ್ಕಾಗಿ ದೇಶದ ಋಣ ತೀರಿಸಲು ದೇಶೀಯ ಜ್ಞಾನ ಅಗತ್ಯವಿದೆ. ವಿದೇಶಿ ಬಂಡವಾಳ, ಸಾಲ,ವ್ಯವಹಾರದಿಂದ  ದೇಶದ ಸಾಲ ತೀರುವುದೆ?  ಒಳಗೆಳೆದುಕೊಂಡ ಮೇಲೆ ಹೊರಗೆ ಕೊಡುವುದು ಬಹಳ ಕಷ್ಟ. 

ಅಪ್ಪ ನೆಟ್ಟ ಆಲದ‌ಮರವೆಂದು‌ ನೇಣು ಹಾಕಿಕೊಳ್ಳುವರೆ? ಅಥವಾ ಆಲದ ಮರದ ನೆರಳಿನಲ್ಲಿ ಜೀವನದ ಶಾಂತಿ ಕಾಣುವರೆ? ಇತ್ತೀಚಿನ ದಿನಗಳಲ್ಲಿ ಅತಿಯಾದ ಆಸ್ತಿಯೂ ಪೋಷಕರಿಗೆ ತಕ್ಕ ಶಾಸ್ತಿ ಮಾಡುತ್ತಿದೆ. ಮಕ್ಕಳೇ ದೂರವಾದರೆ ಆಸ್ತಿ  ಯಾರಿಗೆ? ಕೊನೆಪಕ್ಷ ಸಮಾಜದ ಋಣ ತೀರಿಸಲು ಬಳಸುವ ಜ್ಞಾನವಿದ್ದರೆ ಉತ್ತಮ .
ಮಹಾತ್ಮರ ಹೆಸರಿನಲ್ಲಿ  ಕಾರ್ಯಕ್ರಮ ನಡೆಸಿ ಹಣಮಾಡುವ‌ ಮೊದಲು  ಅವರ ಜ್ಞಾನದೊಳಗಿರುವ‌ಹೂರಣ ಅರ್ಥ ಆದರೆ ಋಣ ತೀರಬಹುದು.
ಭ್ರಷ್ಟಾಚಾರ ದಲ್ಲಿ ಎಷ್ಟು ದುಡಿದರೂ ಸಾಲ ತೀರದು.
ಇದು ಕೆಳಗಿನ‌ಲೋಕಕ್ಕೆ  ಜೀವವನ್ನು ಕಳಿಸುತ್ತದೆ. ಕಾಣದ ಲೋಕಗಳ ಅರಿವಿಲ್ಲದೆ ಭೂಮಿ ಮೇಲಿದ್ದರೆ  ಭೂಮಿಯ ಋಣವೇ ಮುಗಿಯದು. 

Monday, June 2, 2025

ಭಾಷೆ ಎಂದರೆ ಮಾಧ್ಯಮ

ಭಾಷೆ ಎನ್ನುವುದು ಒಂದು ಮಾದ್ಯಮ. ಈ ಮಾದ್ಯಮ ಕಲಬೆರೆಕೆಯಾದಷ್ಟೂ ಸಮಸ್ಯೆ. ಒಟ್ಟಿನಲ್ಲಿ  ಮಾತು ಬೆಳ್ಳಿ ಮೌನ ಬಂಗಾರವೆಂದರು. ಬೆಳ್ಳಗಿರೋದೆಲ್ಲ ಹಾಲಲ್ಲ ಬೆಳ್ಳಿಯೂ ಆಗಿರೋದಿಲ್ಲ. ಹೀಗಿರುವಾಗ ಮೌನ ವಾಗಿ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ ಜೀವನ.
ಎಷ್ಟು ಮಾತಿನಿಂದ ಒಲಿಸಿಕೊಂಡರೂ  ಓಲೈಕೆ  ಭಾಷೆಯನ್ನು ರಕ್ಷಣೆ ಮಾಡುವುದಾದರೆ ಸರಿ. ಅನ್ಯ ಭಾಷೆ   ಅವರವರ ಸಂಪತ್ತು. ಅದೇ ನಮಗೆ ಆಪತ್ತನ್ನು ತಂದರೆ  ವ್ಯರ್ಥ. ನಮ್ಮ ಭಾರತೀಯರ ಒಂದು ದೋಷವೇನೆಂದರೆ  ನಮ್ಮ ಅಧಿಕಾರ ಹೆಸರು ಸ್ಥಾನಮಾನ ಉಳಿಸಿಕೊಳ್ಳಲು ‌ ಅನ್ಯರನ್ನು ಸ್ವಾಗತಿಸಿ ಅತಿಥಿ ಸತ್ಕಾರ ಮಾಡುತ್ತಾ ಕೊನೆಗೆ ತಮ್ಮ ಭಾಷೆ ಬಿಟ್ಟು ಹೋಗಿರುವುದಾಗಿದೆ.ಈಗಲೂ ಅದೇ ರೀತಿಯಲ್ಲಿ ಹೋರಾಟ ಹಾರಾಟ‌ ಮಾರಾಟ ಹೊರಗೆ ನಡೆದಿದೆ.ಒಳಗಿನ ಭಾಷೆ  ಹಿಂದುಳಿದಿದೆ. ಇದಕ್ಕೆ ಹಿಂದೂಗಳ ಸಹಕಾರವೇ ಕಾರಣವಾಗಿದೆ. 
ಭಾಷೆ ಎಂದರೆ ಮಾತು ಆಗಬಹುದು. ಯಾರೊಂದಿಗೆ ಮಾತನಾಡಬೇಕು ಯಾವ ಭಾಷೆ ಕಲಿಯಬೇಕು ಹೇಗೆ ಬಳಸಬೇಕು‌ ಎನ್ನುವ ಜ್ಞಾನ ಭಾಷೆಯಿಂದ ಸಿಗಬೇಕು.
ಮೌನವಾಗಿರುವಾಗಲೂ ಒಳಗೆ ಭಾಷೆ ಮಾತನಾಡುತ್ತದೆ.
ಆದರೆ ಇದು ನಮಗಷ್ಟೆ ಕೇಳುತ್ತದೆ. ಸತ್ಯವಿದ್ದರೆ ಭಾಷೆ ಉಳಿಯುತ್ತದೆ. ಅಸತ್ಯವಿದ್ದರೆ ಭಾಷೆ ಹಿಂದುಳಿಯುತ್ತದೆ.
ಒಟ್ಟಿನಲ್ಲಿ ಒಳಗಿದ್ದು ಭಾಷೆ ರಕ್ಷಣೆ ಮಾಡಿದಂತೆ ಧರ್ಮ ಸಂಸ್ಕೃತಿಯನ್ನು  ಒಳಗೇ ಬೆಳೆಸಿದರೆ  ಸಮಸ್ಯೆ ಇರದು.
ಯಾವಾಗಿದು‌ ಬೆಳೆಸದೆ ಅಪಾರ್ಥ ಮಾಡಿಕೊಂಡು ಹೊರಗೆಳೆದು  ವ್ಯವಹಾರಕ್ಕೆ ಬಳಸುವರೋ  ಹಣವಿದ್ದರೂ ಸಮಸ್ಯೆ ಇಲ್ಲದಿದ್ದರೂ ಸಮಸ್ಯೆ. ಭಾಷೆಯಿಂದ ಜ್ಞಾನೋದಯ. ಶಿಕ್ಷಣದಲ್ಲಿಯೇ ಅನ್ಯಭಾಷೆ ಪ್ರಥಮ ಸ್ಥಾನಮಾನ ಪಡೆದಿರುವಾಗ  ಯಾರೋ ಹೊರಗಿನವರು ಬಂದು ಭಾಷೆ ಹಾಳು‌ಮಾಡಿದರೆಂದರೆ ಇದಕ್ಕೆ ಸಹಕಾರ ಕೊಟ್ಟವರು ನಾವೇ ಎನ್ನುವುದು  ಸತ್ಯ. ಹಾಗಾದರೆ ಭಾಷೆ ಯಾರು ತಪ್ಪಿರುವುದು?
"ಕೊಟ್ಟ ಮಾತಿಗೆ ತಪ್ಪಿ‌ನಡೆದರೆ ಮೆಚ್ಚನಾ  ಪರಮಾತ್ಮನು"
ದಾಸರ ವಚನಗಳಲ್ಲಿ  ಶರಣರ ಸಾಹಿತ್ಯವನ್ನು ವೇದ ಶಾಸ್ತ್ರ ಪುರಾಣಗಳನ್ನು  ಅರ್ಥ ಮಾಡಿಕೊಳ್ಳಲು ಮಾತೃಭಾಷೆಯ ಅಗತ್ಯವಿದೆ. ಯಾವಾಗಿದು  ಬೇರೆ ಭಾಷೆಗಳಿಂದ ಬೇರೆ ಬೇರೆ ಅರ್ಥ ಪಡೆದು  ಹೊರಬಂದಿತೋ  ಆಗಲೇ ಅರ್ಧ ಸತ್ಯದ  ಭಾಷಾಂತರದಲ್ಲಿ ಸತ್ಯ ಹಿಂದುಳಿಯಿತು.ಸತ್ಯ ಇಲ್ಲದೆ ಜ್ಞಾನ‌ಬೆಳೆಯಿತು. ಜ್ಞಾನವೇ ಅಜ್ಞಾನವಾದಾಗ  ಮಾನವನಿಗೆ ಭಾಷೆಯ ಮಹತ್ವ  ಅರಿಯದಾಯಿತು. ಎಷ್ಟೋ ಗ್ರಂಥಗಳು ಉಚಿತವಾಗಿ  ಸಿಗಬಹುದು.ಆದರೆ ಅದನ್ನು ನಮ್ಮ ಸ್ವಂತ ಭಾಷೆಯಲ್ಲಿ  ತಿಳಿಸುವವರಾಗಲಿ ತಿಳಿಯುವವರಾಗಲಿ ಸಿಗೋದಿಲ್ಲ.
ಸತ್ಯವೇ ದೇವರೆಂದು  ಎಲ್ಲಾ ಭಾಷೆ ತಿಳಿಸುತ್ತದೆ.ಹಾಗಂತ ಎಲ್ಲಾ ಸತ್ಯ ಹೇಳೋದಿಲ್ಲ. ಹಾಗಾದರೆ ಜ್ಞಾನ ಬರುವುದೆ?
ಸಣ್ಣ ವಿಷಯ ಅರ್ಥ ಆದರೆ ದೊಡ್ಡ ವಿಚಾರ ಅರ್ಥ ಮಾಡಿಕೊಳ್ಳಲು ಸಾಧ್ಯ.ಸಣ್ಣ ವಿಷಯ‌ನಿರ್ಲಕ್ಯ ಮಾಡಿ ದೊಡ್ಡ ವಿಷಯಕ್ಕೆ ಲಕ್ಷ ಹಣ ‌ಕೊಟ್ಟರೆ  ಅಜ್ಞಾನವಲ್ಲವೆ?
ಭೂತ ಭವಿಷ್ಯದ‌ನಡುವಿರುವ ವಾಸ್ತವದಲ್ಲಿ ಭಾಷೆ ಎಷ್ಟು ಬೆಳೆದಿದೆ ಹಾಳಾಗಿದೆ ಎನ್ನುವ ಅರಿವಿದ್ದರೆ ನಮ್ಮ ಭಾಷೆ ನಮ್ಮ ಜ್ಞಾನ ಎರಡೂ ಒಳಗೇ ರಕ್ಷಣೆ ಆಗಬಹುದು. ಅನ್ಯರನ್ನು ಪ್ರಶ್ನೆ ಮಾಡೋ ಮೊದಲು ನಮ್ಮವರನ್ನೇ ಪ್ರಶ್ನೆ ಮಾಡೋದು ಉತ್ತಮ. ಉತ್ತರ ಕೊಡದಿದ್ದರೆ  ಮೌನವಾಗಿ  ಭಾಷೆಯ ಕಡೆ ಇರಬೇಕು.ಅಶಾಂತಿಯಲ್ಲಿ  ಭಾಷೆಯ ಆಳ ಅಗಲ ಅರ್ಥ ಆಗದು. ಪ್ರಶಾಂತವಾಗಿದ್ದರೆ  ಭಾಷೆ  ಯಾವ ರಾಜಕೀಯವಿಲ್ಲದೆ ಸ್ವತಂತ್ರವಾಗಿ ಬೆಳೆಯುತ್ತದೆ. ಮಕ್ಕಳಿಗೆ ಭಾಷೆ ಕಲಿಸುವ ಮೊದಲು ಪೋಷಕರ ಭಾಷೆ ಎಷ್ಟು ಶುದ್ದವಿದೆ ಎನ್ನುವ ಅರಿವಿರಬೇಕು.
ತಪ್ಪು ಎಲ್ಲರಲ್ಲಿಯೂ ಇದೆ. ಅಧಿಕಾರ ಹಣ ಸ್ಥಾನವಿದ್ದರೆ ತಪ್ಪು ಹೊರಗೆ  ಪ್ರಚಾರ ಮಾಡುವರು.ಇದರಿಂದಾಗಿ  ಸಮಸ್ಯೆ  ಬೆಳೆಯುತ್ತದೆ. ಆಚಾರ ವಿಚಾರ ಪ್ರಚಾರ ಮಾಧ್ಯಮಗಳು  ಭಾಷೆಯನ್ನು ವ್ಯವಹಾರಕ್ಕೆ ಬಳಸಿ ಒಳಗಿದ್ದ ಸತ್ಯ ಧರ್ಮ ಸತ್ವ ತತ್ವ ಹಿಂದುಳಿದರೆ  ಪರಮಾತ್ಮ ‌ಮೆಚ್ಚುವುದಿಲ್ಲ.
ವ್ಯಾಮೋಹ  ಅತಿಯಾದರೆ   ಮುಕ್ತಿ ಮೋಕ್ಷವಿಲ್ಲ ಎಂದಿರುವರು ಮಹಾತ್ಮರಾದವರು.
ನಿಮ್ಮ‌ನಿಮ್ಮ ‌ಮನವ ಸಂತೈಸಿಕೊಳ್ಳಿ ನಿಮ್ಮ‌ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ‌ನಿಮ್ಮ ಭಾಷೆಯನ್ನು ಉಳಿಸಿಕೊಳ್ಳಿ ನಿಮ್ಮ ನಿಮ್ಮ ಧರ್ಮ ಕರ್ಮ ಕ್ಕೆ ಋಣಿಯಾಗಿರಿ.ಇರುವ ನೆಲ ಜಲದ ಋಣ ತೀರಿಸುವ ಸತ್ಕರ್ಮದಿಂದ  ಋಣಮುಕ್ತರಾಗೋದಕ್ಕೆ  ಜ್ಞಾನದ ಶಿಕ್ಷಣ ಪಡೆಯಿರಿ. ಆಂತರಿಕ ಶುದ್ದಿಯಾಗದೆ  ಹೊರಬಂದರೆ ರೋಗವೇ ಗತಿ.
ಪ್ರಕೃತಿಯನ್ನು ಆಳೋದಕ್ಕೆ ಹೊರಟವರಿಗೆ ಮುಕ್ತಿ ಸಿಕ್ಕಿದೆಯೆ?
 ಯಾರಿಗೂ ಗೊತ್ತಿಲ್ಲದ ಅನುಭವಕ್ಕೆ ಬರದ ವಿಚಾರವನ್ನು ತಲೆಗೇರಿಸಿದರೆ  ಅನರ್ಥ ವಾಗುತ್ತದೆ. ಅರ್ಥ ವಾಗುವ ಭಾಷೆಯಿಂದ ಜ್ಞಾನ ಬೆಳೆಯುತ್ತದೆ. ಇದಕ್ಕಾಗಿ ಎಷ್ಟೋ ‌ಮಹಾತ್ಮರುಗಳು‌ ಮಾತೃಭಾಷೆಯನ್ನು ಬಿಡದೆ ಜ್ಞಾನಿಗಳಾದರು. 
ಸಂಸ್ಕೃತ ಭಾಷೆಯಲ್ಲಿ ಸಾಕಷ್ಟು ಜ್ಞಾನವಿತ್ತು.ಶಿಕ್ಷಣದಿಂದ ದೂರವಾದಂತೆ  ಇಂದು ಅಜ್ಞಾನ ಬೆಳೆದಿದೆ. ಹಾಗಂತ ಸಂಸ್ಕೃತ  ಕಲಿತವರೆಲ್ಲರೂ ಜ್ಞಾನಿಗಳಾಗಿಲ್ಲ.ಕಾರಣ ಭಾಷೆಯ ಗೂಡಾರ್ಥ ವನ್ನು ಅನುಭವಿಸಿಯೇ ಜ್ಞಾನ ಬರೋದು. ರಕ್ತಗತವಾಗಿ ಬಂದಿರುವ ಮಾತೃಭಾಷೆಯಲ್ಲಿ ಮಕ್ಕಳ ಜ್ಞಾನ  ಬೆಳೆಯುತ್ತದೆನ್ನುವ ಕಾರಣದಿಂದ ಮಾತೃಭಾಷೆಯ ಶಿಕ್ಷಣ ಕಡ್ಡಾಯಗೊಳಿಸುವ ಹೋರಾಟ ನಡೆದಿತ್ತು. ಪೋಷಕರೆ ಅರ್ಥ ಮಾಡಿಕೊಳ್ಳಲು ಸೋತರೆ ಮಕ್ಕಳ ಗತಿ ಏನು?ಎಲ್ಲಾ ಕಲಿಕಾ ಮಾಧ್ಯಮದ ಪ್ರಭಾವ.
ಇದನ್ನು ಹೊರಗಿನ‌ಮಾಧ್ಯಮಗಳು ತಮ್ಮ ವ್ಯವಹಾರಕ್ಕೆ ಬಳಸಿ ಜನರನ್ನು ಹೊರಗೆಳೆದರೆ ಮುಗಿಯಿತು ಕಥೆ.

ಎಲ್ಲಾ ಸಮಸ್ಯೆ ಮಧ್ಯವರ್ತಿಗಳು ಮಾದ್ಯಮ ಗಳು ಮಹಿಳೆಯರು,ಮಕ್ಕಳು  ಅರ್ಧ ಸತ್ಯವನರಿತು ಬೆಳೆಸಿದರೆ ಅದರ ಪ್ರತಿಫಲ ಹಾಗೇ ಇರುತ್ತದೆ. ಮೇಲಿರುವ ದೈವಶಕ್ತಿ ಕೆಳಗಿರುವ ಅಸುರಶಕ್ತಿಯ ನಡುವಿರುವ ಮಾನವಶಕ್ತಿಯ ಭಾಷೆ  ಯಾರೂ ಅರ್ಥ ಮಾಡಿಕೊಳ್ಳದಿದ್ದರೆ ಮನುಕುಲಕ್ಕೆ  ಕಷ್ಟ ನಷ್ಟ. ಭಾಷೆ ಇರೋದೆಲ್ಲಿ? ಒಳಗೋ ಹೊರಗೋ?

ನನ್ನ ಲೇಖನಗಳ ಮೊದಲ ಪುಸ್ತಕವೇ "ಮಾತೃಭಾಷಾ ಶಿಕ್ಷಣದ‌ಮಹತ್ವ" ಇವನ್ನು ಹಿಡಿದುಕೊಂಡು ಎಷ್ಟೋ ಸಾಹಿತ್ಯ‌ಕ್ಷೇತ್ರ ಧಾರ್ಮಿಕ ಕ್ಷೇತ್ರ ಸಂಘ ಸಂಸ್ಥೆ ಶಾಲೆ ತಿರುಗಿದರೂ  ಅದನ್ನು ಗಮನಿಸುವಷ್ಟು  ಸಮಯವಿಲ್ಲದೆ ಅಥವಾ  ಸಾಮಾನ್ಯರ ವಿಚಾರವೆಂದು‌ನಿರ್ಲಕ್ಯ ಮಾಡಿ ಈವರೆಗೆ  ಭಾಷೆ ರಕ್ಷಣೆಗಾಗಿ ಹೋರಾಟ ಹಾರಾಟ ಮಾರಾಟ ನಡೆದಿದೆ.  ಇದರಿಂದ ಬೆಳೆದವರು ಯಾರು?

Sunday, June 1, 2025

ದೇಶಭಕ್ತರು‌ ಹೊರಗಿರುವರೋ ಒಳಗೋ?

ದೇಶಭಕ್ತರು ದೇಶದೊಳಗೆ ಸೇವೆ ಮಾಡಿದರೆ  ದೇಶ ಗೌರವಿಸುವುದಿಲ್ಲ. ಅದೇವಿದೇಶದೊಳಗಿದ್ದು  ಸ್ವದೇಶದ ಸೇವೆ ಮಾಡಿದರೆ ಗೌರವ ಹೆಚ್ಚುವುದು. ಯಾವುದು ಸರಿ?
ಎರಡೂ ಸೇವೆಯೇ ಆಗಿದೆ  ಯಾವುದರಲ್ಲಿ ಪ್ರತಿಫಲಾಪೇಕ್ಷೆ  ಇಲ್ಲವೋ ಅದು ನಿಜವಾದ ಸೇವೆಯಾಗಿರುತ್ತದೆ.
ದೇಶದೊಳಗೆ  ಸೇವೆ ಮಾಡೋದು  ಧರ್ಮ. ಧರ್ಮ ಕಾರ್ಯ ನಿಸ್ವಾರ್ಥ ‌ನಿರಹಂಕಾರದಿಂದ‌ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದರೆ ಪರಮಧರ್ಮ. ಇದು  ಋಣದಿಂದ‌‌ ಬಿಡುಗಡೆ‌ಗೊಳಿಸಿ ಆತ್ಮಕ್ಕೆ ಶಾಂತಿ ಕೊಡುತ್ತದೆ.
ಅಂತರಾತ್ಮನ ಶಾಂತಿಗಾಗಿಯೇ ಪರಮಾತ್ಮನ ಸೇವೆ ಎಂದಾಗ ತಾಯಿ ಸೇವೆ,ಭೂ ಸೇವೆ ಪ್ರಜಾಸೇವೆ,ದೇಶಸೇವೆ,ಸಮಾಜಸೇವೆ, ಸಂಸಾರ ಸೇವೆಯು  ಪರಮಾತ್ಮನಿಗೆ  ಸಲ್ಲಬೇಕೆಂದರೆ  ಸತ್ವ ಸತ್ಯ ತತ್ವದಲ್ಲಿರಬೇಕು.

ಒಳಗಿನಿಂದ ಅರಿವು ಮೂಡುವುದಕ್ಕೂ‌ಹೊರಗಿನಿಂದ ಅರಿವು‌ ಬೆಳೆಯುವುದಕ್ಕೂ  ಅಂತರವಿದ್ದರೂ ಎರಡೂ  ಸೇರಿದಾಗ ಒಂದೇ  ಆಗುತ್ತದೆ. ಜ್ಞಾನ ವಿಜ್ಞಾನ ದ ಅಂತರದಲ್ಲಿ ಸಾಮಾನ್ಯ ಜ್ಞಾನ‌ನಿರ್ಲಕ್ಯ ಮಾಡಿದರೆ  ಮಾನವ‌
ಮಾನವನಾಗಿರೋದಿಲ್ಲ. ಮನುಕುಲಕ್ಕೆ ‌ಮಾಧ್ಯಮವಾಗಿರುವ ಭೂಮಿಯನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಕಾಶಕ್ಕೆ   ಏಣಿ ಹಾಕೋ  ವಿಜ್ಞಾನವೂ ಅಜ್ಞಾನವಾಗುತ್ತದೆ.
ಅಧ್ಯಾತ್ಮ ಸಂಶೋಧನೆಯಾಗದೆ  ಭೌತಿಕದಲ್ಲಿ ಸಂಶೋಧನೆ ಮಾಡುತ್ತಾ ಸೇವೆ ಎಂದರೆ  ಅಸುರರೂ ಬೆಳೆಯುವರು.
ದಾನಧರ್ಮ  ಅಸುರರಿಗೂ  ಇದ್ದರೂ  ಅದರ ಮೂಲ ಗುರಿ ಸ್ವಾರ್ಥ ಅಹಂಕಾರ  ಪ್ರತಿಫಲಾಪೇಕ್ಷೆ  ಆದಾಗ  ಅಧರ್ಮ ಬೆಳೆಯುತ್ತದೆ. ಭ್ರಷ್ಟ ದುಷ್ಟರಲ್ಲಿ‌ಹಣವಿದ್ದರೂ  ಅದರ ದುರ್ಭಳಕೆ ಹೆಚ್ಚಾಗಿರುತ್ತದೆ. ಇತರರಿಗೆ  ಕೊಟ್ಟರೂ  ಅದೂ ಕೂಡ ಪಾಪದ ಹಣವಾಗಿದ್ದು ಪಡೆದವರಿಗೂ ಕಷ್ಟ ನಷ್ಟ.
ಹಾಗಾಗಿ ಹಣದಿಂದ ಸೇವೆ ಮಾಡೋದಕ್ಕೂ ಸತ್ಯಜ್ಞಾನದಿಂದ ಸೇವಕರಾಗೋದಕ್ಕೂ ವ್ಯತ್ಯಾಸವಿದೆ. 
ದೇವರು ಕೇಳಿದ್ದೆಲ್ಲಾ ಕೊಡಬಹುದು. ಕೊಟ್ಟದ್ದನ್ನು ಬಳಸುವ‌ ಜ್ಞಾನ‌ ಮಾನವನಿಗಿರಬೇಕು. ಅಥವಾ  ಏನು ಕೇಳಿದರೆ ಆತ್ಮತೃಪ್ತಿ ಸಿಗಬಹುದೆನ್ನುವ ಆತ್ಮಜ್ಞಾನವಿದ್ದರೆ  ಕೇಳೋದೆ ಇಲ್ಲ. ಕೊಡೋನು‌ ಕೊಡಬಹುದಷ್ಟೆ.
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ‌ನಾಮ ಒಂದಿದ್ದರೆ ಸಾಕು.. ದಾಸರಂತೆ  ಬದುಕುವುದು ಕಷ್ಟ.ಕೊನೆಪಕ್ಷ ದೇಶ ಸೇವೆಯಲ್ಲಿ ದಾಸರಾಗಿ  ಸತ್ಯ ಧರ್ಮ ಕ್ಕೆ ಸಹಕರಿಸುವ‌ಗುಣ ಇದ್ದರೆ ಈ ದಾಸ್ಯತ್ವದಿಂದ  ಬಿಡುಗಡೆ ಸಾಧ್ಯ.
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ? ಪ್ರಜೆಗಳು ಯಾರ ದಾಸರಾಗಿ   ಸೇವಕರಾಗಿದ್ದಾರೆ? 
"ಸರ್ಕಾರದ ಕೆಲಸ ದೇವರ‌ ಕೆಲಸ" ಎಂದರು ಈಗ ಹೇಗಿದೆ?
ದೈವತ್ವದ ವಿರುದ್ದವಿದ್ದರೆ  ಸೇವೆ ಯಾರದ್ದಾಗುತ್ತದೆ?
ಸತ್ಯದ ವಿರುದ್ದವಿದ್ದರೆ  ದೇವರು ಕಾಣುವರೆ?
ದೇಶ ಒಂದೇ ಇದ್ದರೂ  ಅದರ ಒಳಗಿದ್ದು ವಿದೇಶ ಸೇವೆ ಮಾಡಿದರೆ  ಋಣ ತೀರುವುದೆ? ಭೂಮಿಯನ್ನು ಮಾರಿಕೊಂಡು ಹಣಗಳಿಸಿ   ಭೂ ತಾಯಿಯ ಮಕ್ಕಳನ್ನು ಆಳಿದರೆ  ಭೂ ಸೇವೆ ಆಗುವುದೆ? ಹೀಗೇ ಪ್ರತಿಯೊಂದು ಧರ್ಮ , ಜಾತಿ,ಪಂಗಡ,ಭಾಷೆ, ಸಂಸ್ಕೃತಿ ಶಾಸ್ತ್ರ  ಮಾನವನ ಸೃಷ್ಟಿ. ಮೂಲವನ್ನರಿಯದೆ ಹೊರಗೆ ಬೆಳೆದಿರುವ ಹಲವುಗಳು  ಮೂಲಶಕ್ತಿಯಿಂದ ದೂರವಾದಷ್ಟೂ  ಅಜ್ಞಾನ ಆಗುತ್ತದೆ. ಅಂತರ‌ಬೆಳೆದಷ್ಟೂ ಅವಾಂತರ ಸೃಷ್ಟಿ ಮಾಡುವ ಮಧ್ಯವರ್ತಿಗಳು  ಅತಂತ್ರಸ್ಥಿತಿಗೆ  ತಲುಪಿದಾಗ  ಇದನ್ನು ಸರಿಪಡಿಸಲು ಮಹಾತ್ಮರ ಜನ್ಮಗಳಾಗಿವೆ. ಆ ಮಹಾತ್ಮರ ಸೇವೆ ಪರಮಾತ್ಮನೆಡೆಗೆ ನಡೆಸಿತ್ತು .ಯಾವಾಗಿದು ದೇಶ ಬಿಟ್ಟು ವಿದೇಶಕ್ಕೆ  ಹೋಯಿತೋ  ದೇಶ ಹಿಂದುಳಿಯಿತು. ಒಟ್ಟಿನಲ್ಲಿ ತತ್ವದಿಂದ ಸಮಾನತೆ ಬೆಳೆಯಬೇಕು. ಸಮಾನತೆ ಶಾಂತಿಯೆಡೆಗೆ ನಡೆಸುತ್ತದೆ. ಶಾಂತಿಯಿಂದ  ಮನಸ್ಸು ಧ್ಯಾನ ಕ್ಕೆ  ಇಳಿಯುತ್ತದೆ. ಧ್ಯಾನದಿಂದ ಆತ್ಮಜ್ಞಾನ.ಆತ್ಮಜ್ಞಾನದಿಂದ ಆತ್ಮಾವಲೋಕನ. ಆತ್ಮಾವಲೋಕನದಿಂದ ಮಾನವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅರಿವೇ ಗುರು.ಗುರು ಸೇವೆಯೇ  ಶ್ರೇಷ್ಠ ವಾಗಿರುತ್ತದೆ. ಇದರಲ್ಲಿ ತಾಯಿಯೇ ಮೊದಲ ಗುರು.‌ತಂದೆ ಎರಡನೇ ಗುರು.ಯಾವಾಗ ತಂದೆತಾಯಿಯರಿಗೆ  ಜ್ಞಾನ ಬರುವುದೋ ಮಕ್ಕಳು ಅದೇ ಮಾರ್ಗ ಹಿಡಿಯುವರು. ಇದರ ಮೂಲ ಶಿಕ್ಷಣ ವಾಗಿದೆ.
ಒಂದು ದೇಶದ ಸೇವೆ ಮಾಡೋದು ಸುಲಭವಿಲ್ಲ. ಮೊದಲು ಮನೆಯೊಳಗೆ  ಸೇವೆಯ ಅರ್ಥ ತಿಳಿದವರು ಸಮಾಜ ಮತ್ತು ದೇಶ ಸೇವೆಯನ್ನು ಮನೆಯೊಳಗೆ ಇದ್ದೂ ಮಾಡುವರು. ಅಂದರೆ ಇದು ತೋರುಗಾಣಿಕೆಯಾಗಿರದು.

ವಿದ್ಯೆ ಬುದ್ದಿ ಜ್ಞಾನದೇವತೆ

ವಿದ್ಯಾ ಬುದ್ದಿ ಜ್ಞಾನ‌ಕೊಟ್ಟು ಕರುಣಿಸು ತಾಯಿ ಎಂದು ಬೇಡುವರು. ಇದರಲ್ಲಿ ವಿದ್ಯೆಯಿಂದ‌ಬುದ್ದಿ ಕಲಿತು ಜ್ಞಾನದಿಂದ ಜೀವನ ನಡೆಸುವುದು ಧರ್ಮ. ಹಾಗಾದರೆ ವಿದ್ಯೆ ಧರ್ಮ ಪರವಿರದಿದ್ದರೆ ಎಷ್ಟು ಜ್ಞಾನಗಳಿಸಿದರೂ ಬುದ್ದಿಶಕ್ತಿ  ವ್ಯರ್ಥ. ತಾಯಿಯ ಗರ್ಭದೊಳಗಿರುವಾಗಲೇ  ಗರ್ಭ ಸಂಸ್ಕಾರದ ಮೂಲಕ  ಹುಟ್ಟುವ ಮಗುವನ್ನು ಶುದ್ದಗೊಳಿಸಿ‌ ಹುಟ್ಟಿದ ‌ನಂತರ  ಹೊರಗಿನ ವಿದ್ಯೆ ಕಲಿಸಿದರೆ ಏನು ಬಂತು ಜ್ಞಾನ?
 ಭಾರತೀಯರ ಈ ಸ್ಥಿತಿಗೆ ಕಾರಣವಾಗಿರುವ ಇಂದಿನಶಿಕ್ಷಣ ಪದ್ದತಿಯನ್ನು  ಪೋಷಕರೆ  ಒಪ್ಪಿಕೊಂಡು ಮಕ್ಕಳ ತಲೆಗೆ  ತುಂಬುವ ವಿದ್ಯೆ ಕಲಿಸಲು  ಶಾರದಾಪೀಠಗಳಲ್ಲಿ ಅಕ್ಷರಾಭ್ಯಾಸ  ಮಾಡಿಸುವರು. ನಾವೇನು ಕೇಳುವೆವೋ ಅದನ್ನು ಕೊಡುವುದು ದೇವರ ಕೆಲಸ. ಅದರ ಫಲವನ್ನು ನಾವೇ ಅನುಭವಿಸುವುದೆನ್ನುವುದೂ ಅಷ್ಟೇ ಸತ್ಯ.  ಹಾಗಾದರೆ  ಎಲ್ಲದ್ದಕ್ಕೂ ಕಾರಣವೇ  ನಮ್ಮ ‌ಬೇಡಿಕೆಯಾಗಿದೆ.
ಇದು ಸರ್ಕಾರವಾಗಬಹುದು, ದೇವರಾಗಬಹುದು, ಪೋಷಕರಾಗಬಹುದು, ಶ್ರೀಮಂತ ‌ಬಡವನಾಗಿರಬಹುದು.ಅವರವರ ಜ್ಞಾನಕ್ಕೆ ತಕ್ಕಂತೆ ಬೇಡುವರು. ಎಲ್ಲರಲ್ಲಿಯೂ  ಜ್ಞಾನವಿದೆ. ಆದರೆ ಅದರಲ್ಲಿ ಸತ್ಯ ಮಿಥ್ಯವೂ ಇರುತ್ತದೆ. ಸತ್ಯಜ್ಞಾನಕ್ಕೆ ಸಂಸ್ಕಾರದ ವಿದ್ಯೆ ಬುದ್ದಿ   ಶಿಕ್ಷಣ ಮತ್ತು ಗುರು ಅಗತ್ಯವಿದೆ.
ಎಲ್ಲಿಯವರೆಗೆ  ಅಂತಹ ಗುರು ಸಿಗುವುದಿಲ್ಲವೋ ಅಲ್ಲಿಯವರೆಗೆ  ಸತ್ಯ ಅರಿವಾಗದು. ಗುರು ವ್ಯಕ್ತಿಯಲ್ಲ ಶಕ್ತಿ.
ಇಲ್ಲಿ ಲಿಂಗಬೇಧವಿಲ್ಲ ಧರ್ಮ ಬೇಧ  ಜಾತಿ ಬೇಧ...ಯಾವುದೂ  ಶಕ್ತಿಯಲ್ಲಿರದು. ಆದರೆ ಆಶಕ್ತಿಯನ್ನು ತನ್ನ ವಶದಲ್ಲಿಟ್ಟುಕೊಂಡ ವ್ಯಕ್ತಿಯಲ್ಲಿದ್ದರೆ ಅಧರ್ಮ ವೇ ಬೆಳೆಯುತ್ತದೆ. 
ಒಂದು ಕಲ್ಲನ್ನು ದೇವರೆಂದು ಪೂಜಿಸುವ ಮಾನವನಿಗೆ  ಮಕ್ಕಳಲ್ಲಿ ದೈವತ್ವ ತುಂಬುವ ಶಕ್ತಿಯಿಲ್ಲವೆಂದರೆ  ಏನರ್ಥ.
ಒಟ್ಟಿನಲ್ಲಿ ಕಲಿಯುಗದ ಕಲಿಕೆಯೇ ಅಜ್ಞಾನದೆಡೆಗೆ ಸಾಗಿದರೆ  ಒಳಗೆ ಸೇರಿಸಿಕೊಂಡ ಅಜ್ಞಾನವೇ ಜಗತ್ತನ್ನು ಆಳುತ್ತದೆ.
ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಹೋರಾಟ ಹಾರಾಟ‌ ಮಾರಾಟದೊಳಗಿರುವ ರಾಜಕೀಯ  ಪ್ರೇರಿತ ದ್ವೇಷವನ್ನು ದೇವರು ಕೊಟ್ಟಿರುವುದೆ? ಅಥವಾ ಮಾನವರ ಸೃಷ್ಟಿ ಯೆ?
ಅಸುರರಾದರೂ  ಒಮ್ಮೆ ‌ಬದಲಾಗಬಹುದು.ಮಾನವನನ್ನು ಬದಲಾಯಿಸೋದು ಅಸಾಧ್ಯ.
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ಏನು ಕಲಿತೆವೋ ಅದೇ  ನಮಗೆ ಬುದ್ದಿ ಕಲಿಸುತ್ತದೆ. ಅದು ಸತ್ಯಜ್ಞಾನವಾದರೆ ಶಾಂತಿ. ಇಲ್ಲವಾದರೆ ಕ್ರಾಂತಿ.

ಲೇಖನಿ ಲೇಖಕ ಲೇಖನ

ಲೇಖಕನಿಗೂ ಲೇಖನಿಗೂ ಒಟ್ಟಿಗಿರುವಾಗ ಯಾವುದೇ ಅಂತರವಿರದು. ಯಾವಾಗ ಲೇಖನ ಪೂರ್ಣ ವಾಗುವುದೋ ಆಗ ಇಬ್ಬರೂ ಬೇರೆ ಬೇರೆ.ಕೈಯಲ್ಲಿ ಹಿಡಿದ ಲೇಖನಿ ಒಳಗಿದ್ದು ಬರೆಸೋ ಲೇಖಕನ ಶಕ್ತಿಯನ್ನು  ಲೇಖನ  ಹೊರಹಾಕುತ್ತದೆ. 
ಇವರಿಬ್ಬರ ನಡುವಿರುವ ಮಾನವ ಲೇಖನವನ್ನು ಹೇಗೆ ಬಳಸಿಕೊಳ್ಳುವನೆಂಬುದರ ಮೇಲೇ ನಿಂತಿದೆ ಜೀವನ.
 ಹಿಂದೆ ಎಷ್ಟೋ ಸಾಹಿತಿಗಳು ಬಡತನದಲ್ಲಿದ್ದರು.‌ಈಗ ಅವರ  ಸಾಹಿತ್ಯ ದೊಡ್ಡ ಸಂಪತ್ತಾಗಿದೆ. ಅಂದರೆ ಲೇಖನಿಯೂ ಲೇಖಕನೂ  ಬಳಸದೆ  ಇರುವ ಆಸ್ತಿಯನ್ನು  ಹೊರಹಾಕಿದವ ಪಡೆದ ನಂತರ ಓದುಗನೂ ಲಾಭ ಪಡೆದ. ಇಲ್ಲಿ  ಜ್ಞಾನವನ್ನು ಅಳೆಯುವ  ಹಾಗಿಲ್ಲ. ಆದರೂ  ಅದರ‌ಬೆಲೆ ಅರಿವಿಗೆ ಬರುವ ಹೊತ್ತಿಗೆ ಮಾನವನಿರೋದಿಲ್ಲ. ಇದ್ದಾಗಲೇ  ಅರಿವಿದ್ದರೆ  ಬೆಲೆ  ಕೊಡೋರಿಗೆ  ಗೌರವ. ಇದ್ದಾಗ ಕೊಡದ ಗೌರವ ಹೋದ‌ಮೇಲೆ  ಕೊಟ್ಟರೆ ನಾಟಕವಾಗುತ್ತದೆ.
ಆದರೂ ಚೈತನ್ಯಶಕ್ತಿ ಅಮರ. ಯಾರು ಎಷ್ಟು ಹಣಪಡೆದು ಮೇಲಕ್ಕೆ ಏರಿದರೂ  ಸತ್ಯವಿಲ್ಲದಿದ್ದರೆ  ಒಮ್ಮೆ ಧರೆಗಿಳಿದು‌ಬರಬೇಕು ಎನ್ನುವ ಕಾರಣದಿಂದ. ಮಹಾತ್ಮರು ಸತ್ಯ ಬಿಡದೆ  ಮೇಲಕ್ಕೆ ಏರಿದ್ದಾರೆ. ಈಗಲೂ  ಸತ್ಯವಿದೆ‌  ಆದರೆ ಅದನ್ನು ಹೊರಗೆ ಹುಡುಕುವುದೇ  ಲೇಖನಗಳ ಕೆಲಸವಾಗುತ್ತದೆ. ಕಣ್ಣಿಗೆ ಕಾಣುವ ಸತ್ಯ ತಾತ್ಕಾಲಿಕ ವಷ್ಟೆ.ಕಾಣದ ಸತ್ಯ ಬಹಳಷ್ಟಿದೆ.
ರವಿ ಕಾಣದ್ದನ್ನು ಕವಿ ಕಂಡ ಎಂದಂತೆ. ಅವರವರ ಭಾವಕ್ಕೆ ಭಕುತಿಗೆ  ತಕ್ಕಂತೆ ಸತ್ಯದರ್ಶನ. ಆದರೆ ಇರೋದೊಂದೆ ಸತ್ಯ. ಮೇರುಸತ್ಯ.

ಹಿಂದೆ ಬಡ ಬ್ರಾಹ್ಮಣರು ಹೇಗಿದ್ದರು?

ಜ್ಞಾನದಿಂದ ಬ್ರಾಹ್ಮಣನಾಗೋದಕ್ಕೆ ಹಣದ ಅಗತ್ಯವಿರಲಿಲ್ಲ.‌ಸತ್ಯ ಧರ್ಮ ದ ಜ್ಞಾನವೇ ಅವರ ಬಂಡವಾಳವಾಗಿತ್ತು. ಆದರೆ ಸಮಾಜ ಅವರನ್ನು ಬಡವ ಎಂದು ಅಂದು ಕಾಣುತ್ತಿರಲಿಲ್ಲ ಕಾರಣ ಅವರು ಗುರು ಹಾಗು ಶಿಕ್ಷಕರಾಗಿ  ಗೌರವದಿಂದ. ಜೀವನ ನಡೆಸಿದ್ದರು.
ಡಿ ವಿ.ಜಿ.ದ ರಾ ಬೇಂದ್ರೆ .ಇನ್ನಿತರ ಮಹಾಸಾಹಿತಿಗಳು  ಹಣಕ್ಕಾಗಿ  ಸಾಹಿತ್ಯ ರಚನೆ ಮಾಡಿರಲಿಲ್ಲ.ಅವರ ಒಳಗಿನ ಜ್ಞಾನದಿಂದ ಸಾಹಿತ್ಯ ಹೊರಬಂದಿತ್ತು. ಇದರಿಂದ ಸಮಾಜ ಸುಧಾರಣೆ‌  ಮಾಡುವಷ್ಟು ಅಧಿಕಾರ ಹಣವಿರದ‌ಕಾರಣ  ಇಂದಿಗೂ ಸಾಹಿತ್ಯ ತನ್ನ ದಾರಿ ತಪ್ಪಿ ನಡೆದಿದೆ. ಹಾಗೆ ಶಿಕ್ಷಣ ಹಾಗು ಧರ್ಮ ವೂ‌  ದಾರಿತಪ್ಪಿದೆ. ಇದಕ್ಕೆ ಕಾರಣ‌ ಅಜ್ಞಾನ.
ಬಡ ಬ್ರಾಹ್ಮಣ‌ಬಡ ರೈತ,ಬಡ  ಸೈನಿಕ, ಬಡ ಶಿಕ್ಷಕ....
ಹೀಗೇ‌ಬಡಬಡಿಸುತ್ತಾ ತಮ್ಮ ಸ್ವಾರ್ಥ ಕ್ಕೆ ಬಡವರನ್ನು‌ಬಳಸಿಕೊಂಡವರು  ಇಂದಿಗೂ ಶ್ರೀಮಂತ ಅಜ್ಞಾನಿಗಳಾಗಿರುವರು. ಅವರ ಹಣಕ್ಕಾಗಿ ‌ ಜನ ಬೇಡುವರು.
ಒಳಗಿದ್ದ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ಕೊಡದೆ ಆಳೋದು ಅಧರ್ಮ. ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಜ್ಞಾನ ದುರ್ಭಳಕೆ ಮಾಡಿಕೊಂಡು  ಆಳೂ ಅರಸನಾಗುತ್ತಿರುವುದು ದುರಂತ.

ಒಬ್ಬ ರೈತನಿಗೆ ನಾಲ್ಕು ಮಕ್ಕಳಿರುವರು.ಅದರಲ್ಲಿ ಮೊದಲನೆಯವನಿಗೆ ಓದು‌ಬರಹದಲ್ಲಿ ಆಸಕ್ತಿ ಇರದೆ ಭೂ ಸೇವೆ ಮಾಡಿಕೊಂಡು  ತಂದೆಯೊಂದಿಗೆ ಕೆಲಸ ಮಾಡುವನು.
ಎರಡನೆಯವ. ತನ್ನ ಪಾಲಿಗೆ ಬಂದ ಭೂಮಿ ಮಾರಿ  ರಾಜಕೀಯಕ್ಕೆ ಇಳಿದು ಆಳುವನು, ಮೂರನೆಯವ ಭೂಮಿಯ ಹಣದಲ್ಲಿ ವ್ಯಾಪಾರ ನಡೆಸಿದರೆ ನಾಲ್ಕನೆಯವ
ಹಣದಿಂದ  ವೈಧ್ಯಕೀಯ ಶಿಕ್ಷಣ ಪಡೆದು ವೈಧ್ಯನಾದ.
ಈಗ ಇದರಲ್ಲಿ ಯಾರು ಬಡವರು ಶ್ರೀಮಂತ ರು?
ಅಧ್ಯಾತ್ಮ ದ ಪ್ರಕಾರ ಮೊದಲನೆಯವನಿಗೆ ಮುಕ್ತಿ ಹತ್ತಿರವಿದೆ. ಅವನ ಮೂಲ ಧರ್ಮ ಕರ್ಮ ಸರಿಯಾಗಿದೆ.
ಎರಡನೆಯವ ರಾಜಕೀಯದಿಂದ  ಹಣಗಳಿಸಿ ದೊಡ್ಡ ವ್ಯಕ್ತಿ ಆದರೂ ಭೂಮಿ ಋಣ ತೀರಿಸಲು  ತನ್ನ ಅಧಿಕಾರವನ್ನು ಧರ್ಮ ದಲ್ಲಿ ನಡೆಸಬೇಕು. ಮೂರನೆಯವನೂ ವ್ಯವಹಾರದಲ್ಲಿ ಧರ್ಮ ವಿರಬೇಕು. ಕಲಬೆರೆಕೆ ಅತಿಯಾದ  ಲಾಭದ ಆಸೆ,ಮೋಸ ವಂಚನೆ ಇಲ್ಲದೆ ಇರಬೇಕು.
ನಾಲ್ಕನೆಯವ  ಕಷ್ಟಪಟ್ಟು ಓದಲು  ಭೂಮಿಯ ಹಣ ಬಳಸಿರುವಾಗ  ಆಋಣ ತೀರಿಸಲು ಸೇವೆಯಲ್ಲಿ  ಶುದ್ದವಿರಬೇಕು.  ರೋಗಿಗಳ ಸೇವೆ ಮಾಡೋದರಿಂದ  ಋಣ. ತೀರುತ್ತದೆ. ಇವೆಲ್ಲವೂ  ಸುಲಭವೆ ಆಗಿದ್ದರೂ  ಇಂದಿನ ಕಾಲದಲ್ಲಿ  ಅಂತಹ ನಿಸ್ವಾರ್ಥ ಸೇವೆ ಮಾಡುವ ಜನರನ್ನು  ಹಿಂದೆ ತಳ್ಳುವವರೆ ಹೆಚ್ಚು. ಕಾರಣವಿಷ್ಟೆ ಜ್ಞಾನ ಎಲ್ಲರಲ್ಲಿಯೂ  ಒಂದೇ ಸಮನಾಗಿರದು.
ಆ ಒಂದೇ  ಮನೆಯಲ್ಲಿ ಒಬ್ಬೊಬ್ಬರ ಅನುಭವ ಒಂದೊಂದು ದಿಕ್ಕಿನಲ್ಲಿ  ಹರಡಿರುತ್ತದೆ.ಆದರೆ ಭೂಮಿಯ ಋಣ ಎಲ್ಲರ‌ಮೇಲೂ ಇರುತ್ತದೆ ಜೊತೆಗೆ ಒಂದೇ ತಂದೆತಾಯಿಯ ಮಕ್ಕಳಾಗಿರುವರು. ಹಣದಿಂದ  ವ್ಯಕ್ತಿಯನ್ನು ಅಳೆಯುವುದೆ ಅಜ್ಞಾನ. 
ಹೀಗಾಗಿ  ಜ್ಞಾನಿಗಳಾದವರು  ಹಣಕ್ಕಾಗಿ   ಸೇವೆ ಮಾಡದೆ ಋಣಮುಕ್ತರಾಗಲು  ಸೇವಕರಾದರು. ದಾಸರಾದರು,ಶರಣರಾದರು,ಮಹಾತ್ಮರಾದರು. ಅವರ ಹೆಸರಿನಲ್ಲಿ  ಹಣಗಳಿಸಬಹುದು ಆದರೆ ಜ್ಞಾನಕ್ಕೆ ಅವರ ದಾರಿಯಲ್ಲಿ ನಡೆಯಬೇಕು.‌
ಈಗ ಹೇಗಿದೆ ರಾಮ ರಾಜ್ಯ? ರಾವಣರಾಜ್ಯ ಮಾಡುತ್ತಾ ವೈಭೋಗದೆಡೆಗೆ  ಸಾಗಿದವರು  ಜ್ಞಾನಿಗಳಾಗುವರು.
ಜೀವನಸತ್ಯ ತಿಳಿದು  ಸ್ವತಂತ್ರ ವಾಗಿ ಸರಳ ಜೀವನ,ಸತ್ಯ ಧರ್ಮ ದಲ್ಲಿದ್ದವರಿಗೆ  ಅವಮಾನ ಮಾಡುವರು.
ಮಾನಾಪಮಾನಗಳಿಗೆ ಅಂಜದೆ ಅಳುಕದೆ ಮುಂದೆ ನಡೆದವರು  ಮಹಾತ್ಮರಾಗಿ ಪೂಜನೀಯ ಸ್ಥಾನ ಪಡೆದರು.
ಸಾಗರದ ಅಲೆಗಳು ಅಪ್ಪಳಿಸುತ್ತದೆ  ಹಾಗಂತ ಸಾಗರಕ್ಕೆ ಸಮಸ್ಯೆ ಯಿರದು.ಅದರ ಕೆಳಭಾಗ ಶಾಂತವಾಗಿರುತ್ತದೆ.
ಹಾಗೆ ಜೀವನದಲ್ಲಿ ಬರುವ ಅಡೆತಡೆಗಳನ್ನು ದಾಟಿ ಮುಂದೆ ನಡೆಯುವುದೆ‌  ಸಾಧನೆ. ಇದರಲ್ಲಿ ಸತ್ಯ ಧರ್ಮ ಇದ್ದರೆ ನಿಧಾನ. ಅಸತ್ಯ ಅಧರ್ಮ ವಿದ್ದರೆ  ನಿಧನ.ಇದ್ದೂ ಸತ್ತಂತೆ ಎನ್ನುವರಲ್ಲ  ಇದೇ  ಕಾರಣಕ್ಕಾಗಿ. ಸತ್ಯ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟ. ಕಷ್ಟಪಟ್ಟರೆ ಸುಖವಿದೆ...
ಬ್ರಾಹ್ಮಣನ ಕಷ್ಟ  ಕ್ಷತ್ರಿಯನಿಗೆ ಅರ್ಥ ವಾಗದು,ಕ್ಷತ್ರಿಯನ ಕಷ್ಟ ವೈಶ್ಯನಿಗಾಗಿರದು ಹಾಗೆ ಶೂದ್ರರ ಕಷ್ಟ  .
ಇಂದು  ಸೇವೆ ಮಾಡೋರೆಲ್ಲರೂ ಶೂದ್ರರೆ. ದೇಶ ಸೇವೆ ಮಾಡೋದು ಪುಣ್ಯ ಸೇವೆ. ಇದು ನಿಸ್ವಾರ್ಥ ನಿರಹಂಕಾರ ದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ನಡೆದವರು ಮಹಾತ್ಮರು.

ಶ್ರೀ ಕೃಷ್ಣ ಸುಧಾಮನ‌ಕಥೆ ಗೊತ್ತಲ್ಲ. ಸುಧಾಮನಿಗೆ ಅರಮನೆಯಂತಹ ಮನೆ ಕಟ್ಟಿಕೊಡುತ್ತೇನೆಂದಾಗ ಅವನು ನೀನು ಕಟ್ಟಿಕೊಡುವುದಾದರೆ ನಮ್ಮ ನಗರದಲ್ಲಿರುವ ಎಲ್ಲಾ  ಬಡಬ್ರಾಹ್ಮಣರಿಗೆ ಕೊಡು ಇಲ್ಲಾಂದರೆ ನನಗೆ‌ಬೇಡ  ಎಂದನಂತೆ.ಅಂದರೆ ಜ್ಞಾನಿಗಳಿಗೆ‌ ಬೇಧವಿರದು. ಬೇಡೋದೂ  ಇಷ್ಟವಾಗದು. ಕೊಡೋನು‌ಮೇಲಿರುವಾಗ ಯಾರ ಮೂಲಕವಾದರೂ ಕೊಡುವನೆಂಬ ದೃಢ ಆತ್ಮವಿಶ್ವಾಸ ವಾಗಿರುತ್ತದೆ. ಕೊಟ್ಟದ್ದನ್ನು ಸದ್ಬಳಕೆಯಾದರೆ  ಉತ್ತಮ ಜೀವನ.
ಹಾಗಾಗಿ ಜ್ಞಾನದ‌ ನಂತರವೇ  ಸಮಾಧಾನ ತೃಪ್ತಿ ಮುಕ್ತಿ ಎಂದರು.

ಬ್ರಹ್ಮಜ್ಞಾನಿಗಳು ಬ್ರಾಹ್ಮಣರು

ಇಂದು ಬ್ರಾಹ್ಮಣ ದಿನಾಚರಣೆಯಂತೆ.ನಾನೂ ಒಂದು ಬ್ರಾಹ್ಮಣ ಕುಲದಲ್ಲಿ ಜನಿಸಿರುವ ಕಾರಣದಿಂದ ಬ್ರಾಹ್ಮಣ ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಬ್ರಹ್ಮನನ್ನು ಅರಿತವ ಬ್ರಾಹ್ಮಣನಾಗಿದ್ದಾನೆ. ಮಾನವ ಜನ್ಮವೇ ದೊಡ್ಡದು ಅದರಲ್ಲೂ ಬ್ರಾಹ್ಮಣ ಜನ್ಮ ಅತಿದೊಡ್ಡದು.
ಜ್ಞಾನದಿಂದ ಬ್ರಾಹ್ಮಣನಾಗೋದು ಬಹಳ ಮುಖ್ಯ. ಹಣ ಇಂದಲ್ಲ ನಾಳೆ ಬರುತ್ತದೆ ಹೋಗುತ್ತದೆ.ಇರುತ್ತದೆ ಆದರೆ ಜ್ಞಾನ ಒಮ್ಮೆ ಬಂದ ಮೇಲೆ  ಬ್ರಹ್ಮಲೋಕದೆಡೆಗೆ‌ನಡೆಸುತ್ತದೆ.
ಹೀಗಾಗಿ ಅಹಂ ಬ್ರಹ್ಮಾಸ್ಮಿ ಎಂದರು ಶ್ರೀ ಶಂಕರ ಭಗವತ್ಪಾದರು. ಇದನ್ನು ಅಪಾರ್ಥ ಮಾಡಿಕೊಂಡವರು ಕೆಳಗಿಳಿದರು.ಅರ್ಥ ಮಾಡಿಕೊಂಡವರು  ಜ್ಞಾನದಿಂದ ಮೇಲೇರಿದರು.
ತನ್ನ ಸೃಷ್ಟಿ ಗೆ ಕಾರಣವಾಗಿರುವ ಸೃಷ್ಟಿ ಕರ್ತ ಬ್ರಹ್ಮನ ಅರಿಯದೆ ಸ್ಥಿತಿಯನ್ನು ಸರಿಯಿಲ್ಲವೆಂದರೆ ಲಯವಾಗೋದು ನಿಲ್ಲದು.ಎಲ್ಲಾ ನಿರಂತರವಾಗಿ ನಡೆಯುತ್ತಲೇ ಇರುವ ಕ್ರಿಯೆ.
ಇದರಲ್ಲಿ ಕಾರಣಮಾತ್ರದವನಾದ ಮಾನವ ಮಾತ್ರ ಎಲ್ಲಾ ನನ್ನಿಂದಲೇ ನಡೆದಿರೋದೆನ್ನುವ ಭ್ರಮೆಯಲ್ಲಿ  ಜೀವನ‌ನಡೆಸಿ ಒಮ್ಮೆ ಮಾಯಾಲೋಕದಲ್ಲಿ ಮಾಯವಾಗೋನು. ತನ್ನ ಹಿಂದಿನ ಜನ್ಮದ ಋಣ ಮತ್ತು ಕರ್ಮಾನುಸಾರ ಮತ್ತೆ ಮತ್ತೆ ಜನನ ಮರಣಗಳ ಚಕ್ರದಲ್ಲಿ ತಿರುಗುತ್ತಲೇ ಇರುವನು.
ಇದರಲ್ಲಿ ದೇವತೆಗಳು ಮಾನವರು ಅಸುರರು ಎಂದು ಮೂರು ವರ್ಗ ವಿದೆ.ಯಾರು ದೇವರನ್ನು ಆಶ್ರಯಿಸುವರೋ ಅವರು ದೇವರ ವಶ ಯಾರು ಸಾಮಾನ್ಯ ಮಾನವರನ್ನು ಆಶ್ರಯಿಸುವರೋ ಅವರು ಮಾನವರ  ವಶ, ಯಾರು ಅಸುರರನ್ನು ಆಶ್ರಯಿಸುವರೋ ಅವರ ಜೀವ ಕೊನೆಯಲ್ಲಿ ಅಸುರರ ವಶವಾಗಿ ಹೋಗುತ್ತದೆ.
ಬ್ರಹ್ಮನ ಸೃಷ್ಟಿ  ಶುದ್ದವಿದ್ದರೂ  ಅದನ್ನು ಸರಿಯಾಗಿ ಅರಿಯದೆ ತಮ್ಮದೇ ಆದ  ಧರ್ಮ, ಜಾತಿ,ಪಂಗಡ,ಪಕ್ಷಗಳ ಸುಳಿಯಲ್ಲಿ  ಮನಸ್ಸು  ಸಿಲುಕಿದರೆ  ಧರ್ಮ ಕರ್ಮ ಸತಿಯಾಗಿ ನಡೆಯದೆ  ಜೀವನ ಮಧ್ಯದಲ್ಲಿ ಸಿಲುಕಿ ಅತಂತ್ರಸ್ಥಿತಿಗೆ  ತಲುಪಿ ದಾರಿತಪ್ಪಬಹುದೆನ್ನುವ ಕಾರಣದಿಂದ ಹಿಂದೆ  ಜನ್ಮದ ಮೂಲದ ಧರ್ಮ ಕರ್ಮ ಕ್ಕೆ  ಬೆಲೆಕೊಟ್ಟು ಮಕ್ಕಳ ಜ್ಞಾನವನ್ನು ಸಂಸ್ಕಾರದ ಶಿಕ್ಷಣದಿಂದ ಬೆಳೆಸುತ್ತಾ ಉತ್ತಮ ಗುಣಗಳನ್ನು  ಗೌರವಿಸುವುದರ ಮೂಲಕ ಬ್ರಾಹ್ಮಣರು ಶಿಕ್ಷಣ ಕ್ಷೇತ್ರದ ಅಧಿಕಾರಿಗಳಾಗಿ ಗುರುಗಳಾಗಿ ಸೇವೆ ಸಲ್ಲಿಸಿದ್ದರು.ಕಾಲಾನಂತರದಲ್ಲಿ ಶಿಕ್ಷಣವೇ  ವಿರುದ್ದ ದಿಕ್ಕಿನಲ್ಲಿ  ತಿರುಗಿದಾಗ  ಭೂಮಿಯೇ ಕಾಣಲಿಲ್ಲ ಇನ್ನು ನಿರಾಕಾರ ಬ್ರಹ್ಮ ಕಾಣುವನೆ?
ಒಟ್ಟಿನಲ್ಲಿ ಬ್ರಾಹ್ಮಣ ಎನ್ನುವುದು ಜಾತಿಯಲ್ಲ. ಜ್ಞಾನದಿಂದ  ಮಾನವ ಬ್ರಾಹ್ಮಣನಾಗುವನು. ಬಹುಜನ ಪ್ರಿಯ ಇರೋದು ಭೋಜನ ಪ್ರಿಯನಾಗಿ  ಹೊಟ್ಟೆಪಾಡಿಗಾಗಿ  ಜೀವನ ನಡೆಸುವ ಪರಿಸ್ಥಿತಿ  ಬಂದಿರೋದು ಒಂದು ದುರಂತ. ಆದರೆ ಬ್ರಾಹ್ಮಣರಲ್ಲಿಯೂ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ  ಕರ್ಮ ದವರಿದ್ದಾರೆ. ಕಲಿಯುಗದಲ್ಲಿ  ಮಹಾಬ್ರಾಹ್ಮಣರಿಲ್ಲ.ಕ್ಷತ್ರಿಯರು ವೈಶ್ಯರು ಶೂದ್ರರಿದ್ದರೂ ಮೂಲದ ಜ್ಞಾನದ ಕೊರತೆಯಿಂದ ಈಗಲೂ ಎಷ್ಟೋ ಜನ ಬ್ರಾಹ್ಮಣರನ್ನು ದ್ವೇಷ ಮಾಡುವರು. ದ್ವೇಷವೆನ್ನುವುದೆ ಒಂದು ಅಜ್ಞಾನದ ರೋಗ. ಅಜ್ಞಾನ ಬೆಳೆದರೆ  ಅದೇ ಭ್ರಷ್ಟಾಚಾರ ಎನ್ನುವ ರೋಗವಾಗುತ್ತದೆ. ಭ್ರಷ್ಟಾಚಾರ ಎಲ್ಲಿರುವುದೋ ಅಲ್ಲಿ ಬ್ರಹ್ಮಜ್ಞಾನಕ್ಕೆ  ಸ್ಥಳವಿರದು. ಇಂದಿನ ಶಿಕ್ಷಣವೇ  ವ್ಯವಹಾರಕ್ಕೆ ಇಳಿದು ಭ್ರಷ್ಟ ತೆ  ಎದ್ದು ಕಾಣುತ್ತಿದೆ ಆದರೂ ಪೋಷಕರು ಮೌನವಾಗಿ ಅದನ್ನು ಒಳಗೇ ಸೇರಿಸಿಕೊಂಡು ಮಕ್ಕಳಿಗೂ ಕಲಿಸುವುದು ಅನಿವಾರ್ಯ ಆಗಿದೆ ಎಂದರೆ  ಬ್ರಹ್ಮನ ಸೃಷ್ಟಿ ಸರಿಯಿಲ್ಲವೋ ಅಥವಾ ಮಾನವನ ದೃಷ್ಟಿ ಸರಿಯಿಲ್ಲವೋ?
ಒಟ್ಟಿನಲ್ಲಿ  ಬ್ರಾಹ್ಮಣರಿಂದ ಲೋಕೋದ್ದಾರವಾಗುವುದು ಅವರ  ಜ್ಞಾನಶಕ್ತಿಯಿಂದ.ಇಲ್ಲಿ ವ್ಯಕ್ತಿ ಬ್ರಾಹ್ಮಣನಾಗಿ ಜನ್ಮ ಪಡೆದರೂ  ಬ್ರಹ್ಮಜ್ಞಾನದೆಡೆಗೆ ನಡೆಯದಿದ್ದರೆ  ಭೂ ಲೋಕದಿಂದ ಪಾತಾಳಕ್ಕೆ ಇಳಿಯಬಹುದು. ಕೆಲವರು ಶೂದ್ರರಾಗಿ ಜನ್ಮ‌ಪಡೆದರೂ ಉತ್ತಮ ಸಂಸ್ಕಾರದ ವಿದ್ಯೆಗಳಿಸಿನಮ ಬ್ರಹ್ಮನನ್ನು ಅರಿಯಬಹುದು. ಹೀಗಾಗಿ ಯಾರೂ ಮೇಲಲ್ಲ ಕೀಳಲ್ಲ.ಅವರವರ ಅರಿವೇ ಅವರ ಗುರು.
ಬ್ರಾಹ್ಮಣ ಎನ್ನುವ ಮೇಲ್ವರ್ಗ ತಲೆಗೆ ಹೋಲಿಸಿ ಶೂದ್ರರನ್ನು ಪರಮಾತ್ಮನ ಪಾದಕ್ಕೆ ಹೋಲಿಸಿದ್ದರೆಂದರೆ ಉತ್ತಮ ಜ್ಞಾನದಿಂದ ನಡೆದವರು ಬ್ರಹ್ಮಜ್ಞಾನಿಗಳಾಗುವರೆಂದರ್ಥ.
ಈಗಲೂ ಇದ್ದಾರೆ. ಆದರೆ  ಮಧ್ಯವರ್ತಿಗಳ ತಂತ್ರಕ್ಕೆ  ಸಿಲುಕಿ ಅತಂತ್ರಸ್ಥಿತಿಗೆ  ಬಂದವರಿದ್ದಾರೆ. ಸ್ವತಂತ್ರ ವಾಗಿ ನಡೆಯುವ ಶಕ್ತಿ  ಕುಸಿದಿದೆ  ಕಾರಣ ರಾಜಕೀಯ‌ ಮತ್ತು ವ್ಯವಹಾರ  ಪ್ರಧಾನವಾಗಿರುವ ಪ್ರಜಾಪ್ರಭುತ್ವದಲ್ಲಿ  ಶಿಕ್ಷಣವೇ  ಇದಕ್ಕೆ ಮೂಲ ಕಾರಣ.ಎಷ್ಟು ಶಾಸ್ತ್ರ ‌ಪುರಾಣ ಕಥೆಗಳನ್ನು ಓದಿದರೂ  ಒಳಗಿರುವ ಸ್ವತಂತ್ರ ಬುದ್ದಿ ಜ್ಞಾನ ಬಳಸದಿದ್ದರೆ ಬ್ರಹ್ಮನಾಗೋದಿಲ್ಲ. ಅಂದರೆ ನಮ್ಮ ಈ ಜನ್ಮಕ್ಕೆ ಕಾರಣವಾಗಿರುವ ಮೂಲ ಶಕ್ತಿಯ ಜ್ಞಾನವನ್ನು ಅರಿಯದ ಶಿಕ್ಷಣದಿಂದ  ಬ್ರಹ್ಮಜ್ಞಾನ ಹಿಂದುಳಿದಿದೆ.ಪ್ರತಿಯೊಂದು ಹಣದಿಂದ ಖರೀದಿಸಲು  ಸಾಧ್ಯ.ಆದರೆ ಸತ್ಯ ಖರೀದಿ ಮಾಡಲಾಗದು.
ಸತ್ಯವಿಲ್ಲದ ಜ್ಞಾನ ಪಡೆದು ಹಣಗಳಿಸಿ ಹೊರಗಿನ ಜಗತ್ತನ್ನು ಆಳಬಹುದು. ಆದರೆ ಒಳಜಗತ್ತಿಗೆ ಆಧಾರವಾಗಿರುವ ಸತ್ಯದ ಹಿಂದೆ ನಡೆದವರು ಬ್ರಾಹ್ಮಣರು. ಆತ್ಮಸಾಕ್ಷಿಗೆ‌ಮೀರಿದ ಸತ್ಯ ಯಾವುದಿದೆ? ಆತ್ಮಜ್ಞಾನಕ್ಕೆ ‌ಮೀರಿದ‌ಜ್ಞಾನ ಯಾವುದಿದೆ?
ಆತ್ಮಜ್ಞಾನಿಗಳನ್ನು ಶ್ರೇಷ್ಠ ರೆಂದರು.ಇದು ಎಲ್ಲರಲ್ಲಿಯೂ ಅಡಗಿದೆ.ಒಳಹೊಕ್ಕಿ ನೋಡುವ  ಶಿಕ್ಷಣದ‌ಕೊರತೆಯಿದೆ.ಸ್ವತಂತ್ರ ಭಾರತಕ್ಕೆ ಸ್ವತಂತ್ರ ಜ್ಞಾನದ ಕೊರತೆಯಿದೆ. ಯಾರದ್ದೋ ಜ್ಞಾನದಲ್ಲಿ ಯಾರನ್ನೂ ಆಳುತ್ತಾ ಯಾರೋ  ಜ್ಞಾನಿಗಳೆಂದರೆ ನಮ್ಮದೇನಿರುತ್ತದೆ? ಕೇವಲ ಬುದ್ದಿ ಕಲಿಯಬಹುದು.ಜ್ಞಾನ ಅದೇ ಬರಬೇಕಿದೆ. ನಾವು ಬ್ರಹ್ಮಲೋಕದಿಂದ‌ಬಂದಿರಬಹುದಷ್ಟೆ ಬ್ರಹ್ಮನೇ ಆಗಲು ಜ್ಞಾನ ಅಗತ್ಯವಿದೆ. ಇದನ್ನು ಶ್ರೀ ಶಂಕರಭಗವತ್ಪಾದರಂತಹ ಮಹಾಜ್ಞಾನಿಗಳು ಅನುಭವಿಸಿ  ನಾನೇ ಬ್ರಹ್ಮನಾಗಿರುವೆ ಎಂದರು ಕಾರಣ ಅವರ ಜ್ಞಾನ ಬ್ರಹ್ಮನಲ್ಲಿ ಐಕ್ಯವಾಗಿತ್ತು.
ಹಾಗೆ ಶ್ರೀ  ಕೃಷ್ಣ  ನಾನೇ ಮಹಾವಿಷ್ಣು ಎಂದರೆ ಒಪ್ಪಿಕೊಳ್ಳುತ್ತೇವೆ. ಇದನ್ನು ಅದ್ವೈತ ಎನ್ನುವುದು. ನಾನು ಹೋದರೆ ಪರಮಾತ್ಮ ಕಾಣುವನು. ಪರಮಾತ್ಮನ ಒಂದು ಸಣ್ಣ ಅಣುಗಾತ್ರದ ಜೀವಹೊತ್ತು ಭೂಮಿಯಲ್ಲಿ ಜನ್ಮ ಪಡೆಯುವುದು ಋಣ ಭಾರದಿಂದ. ಈ ಋಣ ತೀರಿಸಲು ಜ್ಞಾನ ಅಗತ್ಯವಿದೆ. ಜ್ಞಾನದಲ್ಲಿ ಸತ್ಯಾಸತ್ಯಗಳಿವೆ.ಯಾವಾಗ ಅಸತ್ಯ ಬೆಳೆಯುವುದೋ ಋಣಭಾರವೂ ಹೆಚ್ಚುವುದು. ಸತ್ಯ ಬೆಳೆದಂತೆಲ್ಲಾ ಋಣ ತೀರುತ್ತಾ ಜೀವಾತ್ಮನು ಪರಲೋಕಕ್ಕೆ ಏರಲು ಸಾಧ್ಯವಾಗುವುದು.ಅದಕ್ಕೆ ಮೇಲಿರುವ ಲೋಕ ಕಣ್ಣಿಗೆ ಕಾಣದು.ಹಾಗೆ ಕೆಳಗಿರುವ ಲೋಕವೂ ಬೆಳೆದಿದೆ.
ಎರಡರ ಮಧ್ಯೆ ಇರುವ ಭೂಲೋಕ ಮಾತ್ರ ಜೀವ ಸಂಕುಲಗಳಿಗೆ ಆಧಾರವಾಗಿದೆ. ಭೂಮಿಗೆ ಬರಲು ಕಾರಣವಾಗಿರುವ ಋಣವನ್ನು ತೀರಿಸಲು ಸತ್ಕರ್ಮ ಸ್ವಧರ್ಮ ಸರಳ ಜೀವನ,ಸ್ವಾಭಿಮಾನ, ಸ್ವಾವಲಂಬನೆ ಸ್ವತಂತ್ರ ಜ್ಞಾನ ವನ್ನು ಒಳಗಿನಿಂದ ಬೆಳೆಸಿಕೊಳ್ಳುವುದೆ ನಿಜವಾದ ಜೀವನವಾಗಿತ್ತು. ಆಗಿತ್ತು ಎನ್ನುವ ಕಾಲದಲ್ಲಿ ನಾವಿದ್ದೇವೆಂದರೆ ಹಿಂದಿರುಗಿ ನಡೆದರೆ  ಹಿಂದೂಬ್ರಾಹ್ಮಣ.
ಮುಂದೆ ಮುಂದೆ ಹೋದಷ್ಟೂ  ಸಂಕಷ್ಟವೇ  .ತತ್ವದಿಂದ ಅರಿತು ನಡೆಯೋದು  ಕಷ್ಟ ತಂತ್ರದಿಂದ ನಡೆಯೋದು ಸುಲಭ ಆದರೆ ಅಜ್ಞಾನವೂ ಅದರ ಹಿಂದೆ ಇರುತ್ತದೆ.
ಕೆಲವು ಸತ್ಯ ನಮ್ಮ ಅರಿವಿಗೆ ಅರ್ಥ ವಾದರೂ ಪರಿಸ್ಥಿತಿ ಮನಸ್ಥಿತಿ ಆರ್ಥಿಕ ಸ್ಥಿತಿ ಹದಗೆಟ್ಟಾಗ  ದಿಕ್ಕು ತೋರಿಸಿದ ಕಡೆ ಮಾನವ ನಡೆಯುವುದು  ಕಾಲ ಪ್ರಭಾವ.ಕಾಲು ತಲೆ ಹೇಳಿದಂತೆ ನಡೆಯುತ್ತದೆ. ತಲೆಗೆ ತುಂಬುವ ವಿಚಾರವೇ ಬುದ್ದಿ ಕಲಿಸುತ್ತದೆ. ಬುದ್ದಿ ಕಲಿತವರು  ಜ್ಞಾನಿಗಳಾಗುವರು.
ಆದರೆ ಆತ್ಮಜ್ಞಾನ ವಿಜ್ಞಾನವಾದಾಗ  ಇದ್ದಲ್ಲೇ ಇದ್ದು ಸತ್ಯ ತಿಳಿಯುವರು. ಅಲೆದಾಡುತ್ತಿದ್ದರೆ  ಕಷ್ಟ. ಮನಸ್ಸನ್ನು ಹಿಡಿದಿಟ್ಟುಕೊಳ್ಳುವ  ಶಕ್ತಿ  ಬ್ರಾಹ್ಮಣರಿಗೆ ಹೆಚ್ಚಾಗಿದೆ. ಇದನ್ನು ದೈವಶಕ್ತಿ ಎಂದರು.ಹಾಗಾಗಿ ಬ್ರಾಹ್ಮಣರು ದೇವರ ಸಮಾನ.
ದೇವರಾಗೋದಕ್ಕೆ  ಹಾಗೇ ನಡೆಯಬೇಕಿದೆ.  
ನಮ್ಮ ಜ್ಞಾನಕ್ಕೆ ನಾವೇ ಸರಿಯಾದ ಶಿಕ್ಷಣ ಕೊಡದಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಒಟ್ಟಿನಲ್ಲಿ ಬದುಕಬೇಕು. ಜೀವನದ ರಹಸ್ಯವರಿತು ಬದುಕಿದರೆ ಮುಕ್ತಿ ಮೋಕ್ಷ. ಮೋಕ್ಷ ಎಂದರೆ ಮೋಹದ ಕ್ಷಯ. ಮೋಹಮಾಯೆಯೊಳಗೆ ಸಿಲುಕಿದ ಮನಸ್ಸನ್ನು  ಹಿಡಿದಿಡಲು ಇರುವ‌ಒಂದೇ ಮಾರ್ಗ ಯೋಗ.
ಇದರಲ್ಲಿ ಜ್ಞಾನಯೋಗ ರಾಜಯೋಗ,ಭಕ್ತಿಯೋಗ,ಕರ್ಮ ಯೋಗ ಯಾವುದಾದರೂ  ಸರಿ ಪರಮಾತ್ಮನ ಕಡೆಗೆ ನಡೆಸುತ್ತದೆ. ಜ್ಞಾನವು ಸ್ವತಂತ್ರ ವಾಗಿಸಬೇಕಿದೆ ಇದು ಮುಖ್ಯ.
ನಂತರ ನಮ್ಮನ್ನು ನಾವರಿತು ಭಕ್ತಿ ಶ್ರದ್ಧೆ ಯಿಂದ  ದುಡಿದು ಹಣಗಳಿಸಿ ನಮ್ಮ ಋಣ ತೀರಿಸಿ ಮುಕ್ತರಾಗಬಹುದು.
ಎಷ್ಟೋ ಜನ್ಮಗಳ ಲೆಕ್ಕಾಚಾರ ಚುಕ್ತ ಮಾಡಲು ಒಂದು ಜನ್ಮದಲ್ಲಿ ಕಷ್ಟ.ಆದರೂ ಪ್ರಯತ್ನ ಪಟ್ಟರೆ  ಸಾಧ್ಯ ಎಂದು ಮಹಾಬ್ರಾಹ್ಮಣರಾದವರು  ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ  ಇಲ್ಲದೆ ಪರಮಾತ್ಮನ ಸೇವೆ ಮಾಡುತ್ತಾ ಸರ್ವಜ್ಞ ರಾಗಿ ಮೋಕ್ಷ ಪಡೆದರು.ಇದೀಗ ಸಾಧ್ಯವಿಲ್ಲ. ಸಾಧ್ಯವಾದಷ್ಟು  ಮಟ್ಟಿಗೆ  ಪ್ರಯತ್ನ ನಡೆಸಬಹುದು.
ಯಾವುದೂ ಯಾರ ಕೈಯಲ್ಲಿ ಇಲ್ಲ.ಅವರವರ ಜ್ಞಾನದಲ್ಲಿದೆ.ಅದನ್ನು ಯಾರೂ ಕದಿಯಲಾಗದು.
ಒಗ್ಗಟ್ಟಿನಿಂದ ನಡೆದರಷ್ಟೆ ಇದು ಸಾಧ್ಯ ವಿದೆ. ಜ್ಞಾನಕ್ಕೆ ಬೇಧವಿದೆಯೆ? ಬ್ರಹ್ಮನೊಬ್ಬನೆ ಆದರೂ ಬ್ರಾಹ್ಮಣ ಹಲವರು.ದೇವನೊಬ್ಬನೆ ಆದರೂ ನಾಮ ಹಲವು.
ಆದರೆ ವಾಸ್ತವದಲ್ಲಿ ನಾವೆಲ್ಲರೂ ಭಾರತೀಯರಾಗಲು ಭಾರತೀಯ ಜ್ಞಾನದ ಶಿಕ್ಷಣ ನಮ್ಮೊಳಗಿದೆಯೆ ಎಂದು ಪ್ರಶ್ನೆ ಮಾಡಿಕೊಂಡರೆ ಉತ್ತಮ. ಬ್ರಹ್ಮನಾಗೋದಕ್ಕೆ ಬ್ರಹ್ಮಜ್ಞಾನ ಅಗತ್ಯ.ಬ್ರಹ್ಮನೊಂದಿಗಿರುವ ಜ್ಞಾನ ದೇವತೆಯನ್ನು ದೂರ ಇಟ್ಟರೆ ಜ್ಞಾನ ಬರುವುದೆ? ಲಿಂಗಬೇಧ ಧರ್ಮ ಬೇಧ ಜಾತಿ ಬೇಧ ಪಕ್ಷ ಬೇದದಿಂದ ವೇದ ಅರ್ಥ ಆಗದು.ಅದರಿಂದ ಹೊರ ಬಂದು ನೋಡಿದವರಿಗೆ ಬ್ರಹ್ಮಾಂಡ ಕಾಣುವುದು.ಇದನ್ನು ಬ್ರಹ್ಮಜ್ಞಾನ ಎಂದರು...
ಕ್ಷಮಿಸಿ  ಏನಾದರೂ ತಪ್ಪು ಕಂಡರೆ ದಯವಿಟ್ಟು ತಿಳಿಸಿ. ಸರಿ ಎನಿಸಿದರೆ ಹಂಚಿಕೊಂಡರೆ ಉತ್ತಮ ಜೀವನ.
ಬ್ರಾಹ್ಮಣ ಯಾರನ್ನೂ ಆಳುವುದಿಲ್ಲ ಕಾರಣವಿಷ್ಟೆ ಆಳಿದವನು ಆಳಾಗಿ ಜನ್ಮ ಪಡೆಯಲೇಬೇಕು.ಜ್ಞಾನ ಬಂದ‌ಮೇಲೆ ಮೌನವಾಗಿನಮ ಪರಮಾತ್ಮನ ಕಡೆಗೆ ಹೋಗುವನು ಮಾನವ. ಆದರೆ ಅಧರ್ಮ ವನ್ನು ಸಹಿಸಿಕೊಂಡು  ಇದ್ದಷ್ಟೂ ಧರ್ಮ ಕ್ಷೀಣವಾಗುವುದು. ಅಜ್ಞಾನಿಗಳು ಜ್ಞಾನಿಗಳನ್ನು ಆಳುವರಷ್ಟೆ.‌ಸ್ಥಿತಪ್ರಜ್ಞಾವಂತರಾದರೆ‌  ಈ ವಿಷಯ ಅರ್ಥ ಆಗುತ್ತದೆ. ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟ ಜನರಿಗೆ ಸುಭಿಕ್ಷ ಕಾಲ ಎಂದ ದಾಸರ ಕಾಲ ಈಗಲೂ ಇದೆ.ಆದರೆ ಸರ್ಕಾರದ ದಾಸರ ಸಂಖ್ಯೆ ಮಿತಿಮೀರಿದೆ. ಎಲ್ಲಾ ಉಚಿತವಾದಷ್ಟೂ ಸಾಲ ಖಚಿತ.