ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Monday, November 14, 2022

ಮಾನವನಿಗೂ ದೇವಮಾನವನಿಗಿರುವ ವ್ಯತ್ಯಾಸ

ಮಾನವನಾಗೋದಕ್ಕೂ ದೇವ ಮಾನವನಾಗೋದಕ್ಕೂ ವ್ಯತ್ಯಾಸ ಮಾನವನಿಗೆ ಮಾನವೀಯತೆಯ ಗುಣ
ವಿರಬೇಕು.ದೇವಮಾನವನಿಗೆ ದೈವತತ್ವದ ಜ್ಞಾನವಿರಬೇಕು. ತತ್ವಜ್ಞಾನವೂ ಮಾನವೀಯತೆಯನ್ನು ಬೆಳೆಸುತ್ತದೆ. ಆದರೆ, ಮಾನವನ  ಆಂತರಿಕ ಶಕ್ತಿಯಿಂದಲೇ ಇದು ಬೆಳೆಯಬೇಕಷ್ಟೆ. ಮಾನವ ಕೋಟ್ಯಾಂತರ ರೂಪಾಯಿಗಳ ಸಹಾಯ,ದಾನ ಧರ್ಮಗಳನ್ನು ಮಾಡಬಹುದು.
ದೇವಮಾನವನಿಗೆ ಇದು ಕಷ್ಟವಾಗಬಹುದು ಕಾರಣ ಅವನ ದೈವತ್ವದ ಗುಣ ಜ್ಞಾನದಿಂದ ಹಣ ಸಂಪಾದನೆ ಇದ್ದರೂ
 ಅದು ಮಿತಿಮೀರಿ ಬೆಳೆದಿರುವುದಿಲ್ಲ. ತತ್ವದ ಪ್ರಕಾರ
ನಡೆದಾಗ  ಎಲ್ಲರಲ್ಲಿಯೂ ಅಡಗಿರುವ ಆ ಪರಮಾತ್ಮನಿಗೆ ಮೋಸ ,ವಂಚನೆ ಮಾಡಲಾಗದು.ಹೀಗಾಗಿ ದೇವ ಮಾನವರಾದವರಲ್ಲಿ ಎಷ್ಟೋ ಸಂಸಾರಿಗಳು,ಸಂನ್ಯಾಸಿಗಳು
ದೇವರನ್ನು ಕಂಡಿದ್ದರು ತೋರಿಸಲಾಗಿಲ್ಲ.ಇಂದು ಹೊರಗಿನ ದೇವರನ್ನು ತೋರಿಸುವುದಕ್ಕಾಗಿಯೇ  ಕೋಟ್ಯಾಂತರ ಹಣವನ್ನು ಬಳಸುತ್ತಾರೆ ಕಂಡವರಿಲ್ಲ.
ಹೀಗಾಗಿ ನಾವು ಭೌತಿಕದಲ್ಲಿ ಸಾಕಷ್ಟು ದೇವರನ್ನು ಸೃಷ್ಟಿಸಿ ಅಧ್ಯಾತ್ಮದಲ್ಲಿ ಹಿಂದುಳಿದಿರೋದೆಂದರೆ ತಪ್ಪೆನ್ನುವವರಿದ್ದಾರೆ.
ಯುಗಯುಗದಿಂದಲೂ ನಡೆದು ಬಂದಿರುವ ಈ ಜೀವ
ಕೋಟಿಯ ಒಳಗೂ ಹೊರಗೂ ಆ ಪರಮಾತ್ಮನಿದ್ದರೂ
ತತ್ವಜ್ಞಾನವನ್ನು  ಅರ್ಥ ಮಾಡಿಕೊಳ್ಳಲು ಸೋತಿರುವ ನಾವು ತಂತ್ರದಲ್ಲಿ  ಎಷ್ಟೇ ವ್ಯವಹಾರ,ವ್ಯಾಪಾರ, ರಾಜಕೀಯ ನಡೆಸಿ
ಜನಬಲ,ಹಣಬಲ ಅಧಿಕಾರ,ಸ್ಥಾನ ಪಡೆದರೂ ಒಳಗಿರುವ
ದೈವತ್ವದೆಡೆಗೆ ಹೋಗಲು  ತತ್ವಜ್ಞಾನಿಗಳ  ತತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಸಾಧ್ಯ.
ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಶಾಲೆ ಇನ್ನಿತರ ವಿದ್ಯಾ ಸಂಸ್ಥೆ ನಡೆಸುತ್ತಿದ್ದರೂ ಮಕ್ಕಳಿಗೆ ತತ್ವಜ್ಞಾನದ
ಶಿಕ್ಷಣ ನೀಡದೆ ತಂತ್ರದಿಂದ  ಆಳಿದರೆ ಸ್ವತಂತ್ರ ಜ್ಞಾನೋದಯ ಕಷ್ಟ.
ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು ಇದರಲ್ಲಿ ಎರಡರ್ಥವಿದೆ ಒಂದು ಮುಂದಿನ ದೇಶವೆಂದರೆ ನಮ್ಮದೇ ದೇಶ, ಇನ್ನೊಂದು ಹೊರದೇಶದ ಪ್ರಜೆಗಳು.
ಜ್ಞಾನ ವಿಜ್ಞಾನದ ಅಂತರವನ್ನು ಬೆಳೆಸಿಕೊಂಡು ಮಾನವ ಮಹಾತ್ಮನಾಗೋದು ಕಷ್ಟ. ದೇವರನ್ನು ಬೆಳೆಸುವ ಮೊದಲು ಒಳಗಿರುವ ದೈವತ್ವವನ್ನು ಬೆಳೆಸುವ ನೈತಿಕತೆ,ಧಾರ್ಮಿಕತೆ, ಸಂಸ್ಕಾರದ ಮೂಲಕ  ಶಿಕ್ಷಣದಲ್ಲಿಯೇ ನೀಡಿದರೆ ಇಂದಿನ ಮಕ್ಕಳೇ ಮುಂದಿನ ನಮ್ಮ ದೇಶದ ಪ್ರಜೆಯಾಗಿರುವರು.
ಆಚರಣೆಯು ಒಂದು ದಿನದ ಮಟ್ಟಿಗೆ ಆಗದೆ ಪ್ರತಿದಿನವೂ
ಪೋಷಕರಾದ ನಾವು ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತೇವೆ.ಆದರೆ ಮಕ್ಕಳೇ ಪೋಷಕರ ಭವಿಷ್ಯದ ಬಗ್ಗೆ  ಧಾರ್ಮಿಕ ಚಿಂತನೆ ನಡೆಸದೆ ದೂರ ದೂರ ಹೋದರೆ ತಪ್ಪು ಮೂಲದಲ್ಲಿದೆ. ದೇವಮಾನವರನ್ನು ಬೆಳೆಸಿದ ಭಾರತದ ಶಿಕ್ಷಣದಲ್ಲಿ  ಮಾನವೀಯ ಗುಣವನ್ನು ‌ತುಂಬಬಹುದಷ್ಟೆ.
ಅದನ್ನು ಅಳವಡಿಸಿಕೊಳ್ಳಲು ಪೋಷಕರ ಸಹಕಾರ ಬೇಕು. ಮಂತ್ರಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಸುರತೆ ಬೆಳೆಯುವುದು. ಹೀಗಾಗಿ ದೇವಾಸುರರ ಪ್ರತಿಬಿಂಬವಾಗಿ ಮಕ್ಕಳಿರುವಾಗ ದೈವತ್ವ,ತತ್ವ, ಸತ್ಯವನ್ನು ತಿಳಿಸುತ್ತಾ ಬೆಳೆಸುವ ಶಿಕ್ಷಣ ಅಗತ್ಯ.
 ಯಾವುದೂ ಅತಿಯಾದರೆ ಗತಿಗೇಡು ಇದು ಅಧ್ಯಾತ್ಮ ಹಾಗು ವೈಜ್ಞಾನಿಕ  ಚಿಂತನೆಗಳಿಂದ ದೇಶದ ಮಕ್ಕಳಿಗೆ  ಆಂತರಿಕ ಜ್ಞಾನದ ನಂತರ ಭೌತಿಕ ವಿಜ್ಞಾನ ನೀಡಬೇಕಿದೆ. ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರದ ಹಿಂದೆ ನಡೆಯೋ ಬದಲಾಗಿ ರಾಜಕೀಯ ಕ್ಷೇತ್ರವನ್ನು ಧಾರ್ಮಿಕತೆ ಕಡೆಗೆ ತರುವ ಮೂಲಕ ದೇಶರಕ್ಷಣೆ ಮಾಡಬೇಕಿತ್ತು.
ಇತ್ತೀಚೆಗೆ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಇದೆ.ಆದರೆ ಬದಲಾವಣೆಗೆ ತತ್ವಜ್ಞಾನವನ್ನು ಅಳವಡಿಸಿ
ಕೊಳ್ಳಲು ಬೇಕಿದೆ ಶಿಕ್ಷಣ. ಶಿಕ್ಷಣವನ್ನು ವಿದೇಶಿಗಳ ಕಡೆ ಬಿಟ್ಟು  ವಿದೇಶಿ ಬಂಡವಾಳದಲ್ಲಿ ದೇವಾಲಯ ಕಟ್ಟಿದರೆ ದೇವರು ಹೊರಗಿರುತ್ತಾರೆ.ತಂತ್ರವೇ ಕುತಂತ್ರಿಗಳಿಗೆ ವರವಾಗಿ
ಕುತಂತ್ರಿಗಳೇ ಆಳುವಾಗ ನಮ್ಮ ಸ್ವತಂತ್ರ ಜ್ಞಾನದ ಗತಿ ಅದೋಗತಿ.
ಪೋಷಣೆ ಮಾಡಬೇಕಾಗಿರೋದು ತತ್ವಜ್ಞಾನವನ್ನು ತಂತ್ರವಲ್ಲ.ರಾಜಕೀಯ ಬೆಳೆದಿರೋದೆ ತಂತ್ರದಿಂದ. ಇದರಲ್ಲಿ
ಸ್ವತಂತ್ರ ಜ್ಞಾನ ಬೆಳೆಯಿತೆ? ಬೆಳೆದರೂ  ಅದರಿಂದಾಗಿ ದೇವ ಮಾನವರೆಷ್ಟು? ಮಹಾತ್ಮರೆಷ್ಟು? ಸಂತರು,ಸಾದು,ಸಂನ್ಯಾಸಿ,ದಾಸ,ಶರಣರು ಎಲ್ಲಿರುವರು?
ಪ್ರಶ್ನೆಗೆ ಉತ್ತರ  ನಿಜವಾದ ದೇವಮಾನವರು ನೀಡಬಹುದು.
ಮೊದಲು ಮಾನವ  ತತ್ವಜ್ಞಾನಿಂದ ದೇವಮಾನವ ಆಗುವುದು. ಅದೂ  ಒಳಗೆ ಅಳವಡಿಸಿಕೊಂಡು  ಸ್ಥಿತಪ್ರಜ್ಞಾವಂತರಾದರೆ ಸಾಧ್ಯ. ಓದಿ ಪ್ರಚಾರಕ್ಕೆ ಸೀಮಿತ ಆಗಿದ್ದರೆ  ನೋಡುಗರ ಕಣ್ಣಿಗೆ  ದೇವಮಾನವರಾಗಬಹುದು
ಬಹಳ ಕಷ್ಟಪಡಲು ಕಷ್ಟ. ಹೀಗಾಗಿ ಇಂದಿಗೂ ನಮಗೆ ದೈವತ್ವ ಪದಕ್ಕೆ ಪೂರ್ಣ ಅರ್ಥ ತಿಳಿದಿಲ್ಲ. 
ಜೀವವಿರೋವಾಗ ನಾನುಹೋಗಲ್ಲ. ನಾನು ಹೋದಾಗಲೇ
 ದೇವರು ಕಾಣೋದು ಎಂದರೆ  ಜೀವಾತ್ಮ ಪರಮಾತ್ಮನಿಗೆ ಶರಣಾಗಿ,ದಾಸನಾಗಿದ್ದರೆ ದೇವಮಾನವ.ಇಲ್ಲಿ ನಾನೆಂಬುದಿಲ್ಲ  ಎನ್ನುವ ಅಧ್ವೈತ,ನಾನಿದ್ದೇನೆ ಎನ್ನುವ 
ದ್ವೈತ, ವಿಶಿಷ್ಟಾದ್ವೈತ  ಎಲ್ಲಾ ತತ್ವಗಳಿವೆ ಆದರೆ ಎಲ್ಲಾ ಒಂದಾಗದೆ ಅತಂತ್ರಸ್ಥಿತಿಗೆ ಮನುಕುಲ ತಲುಪಿದೆ.  ಬೇಧ ಭಾವ ಸರ್ವ ಕಾಲದಲ್ಲಿಯೂ ಇದ್ದದ್ದೇ. ಹೀಗಾಗಿ ಇದೇ
 ಹೆಚ್ಚಾದರೆ  ಅಜ್ಞಾನವಷ್ಟೆ.
ಮಕ್ಕಳ ಸೂಕ್ಮವಾದ  ಮನಸ್ಸು  ಬಯಸುವುದು  ಸಂತೋಷ ಮಾತ್ರ. ಆತ್ಮಸಂತೋಷಕ್ಕೆ ಅವರಿಗೆ ಆತ್ಮಜ್ಞಾನವಿರಬೇಕು.
ಭೌತಿಕ ಸಂತೋಷದಲ್ಲಿ  ಆತ್ಮವಂಚನೆಯಾಗದಂತೆ  ಪೋಷಕರು  ಮಕ್ಕಳನ್ನು ದೈವತ್ವದೆಡೆಗೆ ನಡೆಸಿದರೆ ಪೋಷಕರು ದೇವರಾಗುತ್ತಾರೆ. ಇಲ್ಲವಾದರೆ ಅಸುರೀ ಶಕ್ತಿಯೇ ಪೋಷಕರ ಶೋಷಣೆ ಮಾಡುತ್ತದೆ. 
ಎಲ್ಲಿರುವುದು  ದೇವರು ?ಅಸುರರು?

Thursday, November 10, 2022

ಅದೃಷ್ಟವನ್ನು ಹೇಗೆ ಅಳೆಯಬೇಕು?

**ಅದೃಷ್ಟ ನಮ್ಮ ಕೈಯಲ್ಲಿ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನಿರ್ಧಾರ ಮಾತ್ರ ಯಾವಾಗಲು ನಮ್ಮ ಕೈಯಲ್ಲಿ ಇರುತ್ತದೆ.**
ಅದೃಷ್ಟವನ್ನು   ಯಾರೋ ಅಳೆದು ತೂಗಿ ಕೊಡಲಾಗದು.
ನಿನ್ನ ಶ್ರಮಕ್ಕೆ ತಕ್ಕಂತೆ  ಫಲ ಸಿಕ್ಕಾಗ. ಅದನ್ನು ಅದೃಷ್ಟ ಎಂದರೆ  ಶ್ರಮವಿಲ್ಲದೆಯೇ  ಸಿಗುವ ಅಧಿಕಾರ, ಸ್ಥಾನಮಾನದ  ಅದೃಷ್ಟವನ್ನು  ಏನು ತಿಳಿಯಬೇಕು?
 ಅಧ್ಯಾತ್ಮ ಮತ್ತು ಭೌತಿಕದಲ್ಲಿ ಅದೃಷ್ಟ ದುರಾದೃಷ್ಟವನ್ನು ವಿರುದ್ದವಾಗಿ ಅಳೆಯಲಾಗುತ್ತದೆ. ಶ್ರಮಪಟ್ಟವನಿಗೆ ಅದೃಷ್ಟ
ಎನ್ನದೆ ಶ್ರಮವಿಲ್ಲದೆ ಸಂಪಾದಿಸುವವನಿಗೆ ಅದೃಷ್ಟ ವಂತನೆಂದು ಪರಿಗಣಿಸುವುದು ಭೌತಿಕ ಜಗತ್ತು. ಅಧ್ಯಾತ್ಮ ಜಗತ್ತಿನಲ್ಲಿ ಅದೃಷ್ಟ ವೆನ್ನುವ ಪದವನ್ನು ಬಳಸುವುದು ಯಾವಾಗಧಾರ್ಮಿಕ ಪೀಠದಅಧಿಕಾರ,ಸ್ಥಾನಮಾನ,ಸನ್ಮಾನ
ಗಳು  ಸುಲಭವಾಗಿ ಸಿಗುವುದೋ ಆಗ. ಅದೃಷ್ಟ ಎನ್ನಬಹುದು. ಕಾರಣ ಭೌತಿಕದಲ್ಲಿದ್ದು ಇಂತಹ ಅವಕಾಶ ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ. ಎರಡೂ ಕಡೆಯಿಂದಲೂ
 ಆ ಪರಮಾತ್ಮನ ಕೃಪೆ,ಆಶೀರ್ವಾದ ಅಗತ್ಯವಾಗಿದೆ. ಒಂದೆಡೆ
ಹೆಚ್ಚು  ಅಧ್ಯಾತ್ಮ  ಜ್ಞಾನದೆಡೆಗೆ ನಡೆದಿರಬೇಕು,ಇನ್ನೊಂದು ಕಡೆ ಭೌತಿಕ ವಿಜ್ಞಾನ ತಿಳಿದಿರಬೇಕಷ್ಟೆ. ಏನೂ ತಿಳಿಯದೆ,
ನಡೆಯದೆ ಯಾರೋ ಬಂದು ಹಣವಿದೆಯೆಂದು
ಅಧಿಕಾರಕ್ಕೆ ಏರಿಸಿದರೆ  ಮಾತ್ರ ಕುಳಿತ ಸ್ಥಳದ ಜೊತೆಗೆ ಸುತ್ತಮುತ್ತಲಿನ ಪರಿಸರವೂ ಹಾಳಾಗುತ್ತಾ  ಅದೃಷ್ಟ ಹೋಗಿ
ದುರಾದೃಷ್ಟವೆ  ಬೆಳೆಯೋದು.  ಇಂದಿನ ರಾಜಕೀಯದಲ್ಲಿ ಯಾರು ಯಾವಾಗ ಮೇಲೇರುವರೋ ಕೆಳಗಿಳಿಯುವರೋ ಗೊತ್ತೇ ಆಗಲ್ಲ. ಅಜ್ಞಾನದ ಕೈಗೆ  ಮತದಾನದ ಹಕ್ಕು ನೀಡಿ ಹಣದಿಂದ  ಅದೃಷ್ಟ ಖರೀದಿಸಿ ಕೊನೆಗೆ ಅಧಿಕಾರವೂ ಹಣವೂ ನೀರುಪಾಲು.ಇದು ಒಬ್ಬ ವ್ಯಕ್ತಿಗಲ್ಲ ಇಡೀ ಸಮಾಜಕ್ಕೆ ಕಂಟಕಪ್ರಾಯವಾದರೆ ಇದರ ಪ್ರತಿಫಲವನ್ನು
ಎಲ್ಲಾ ಸೇರಿ ಅನುಭವಿಸಬೇಕು. ಹಾಗಾಗಿ,
ಭೂಮಿಯಲ್ಲಿ ಹುಟ್ಟುವುದೇ ಅದೃಷ್ಟವೆನ್ನಬಹುದು.ಕಾರಣ ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯದ ಲೆಕ್ಕಾಚಾರವನ್ನು  ಜೀವ ಕಳೆದುಕೊಂಡು ಹೋಗುವುದಕ್ಕೆ ಜನನವಿದೆ. ಎಷ್ಟೋ
ಅತೃಪ್ತ ಆತ್ಮಗಳು ಜನ್ಮವಿಲ್ಲದೆ ಸುತ್ತಾಡುತ್ತಿರುವುದನ್ನು  ಅರ್ಥ ಮಾಡಿಕೊಳ್ಳಲು  ಜ್ಞಾನದಿಂದ ಸಾಧ್ಯ. ಜ್ಞಾನ ಸಂಪಾದನೆಗೆ  ಜನ್ಮವಿದೆ. ಯಾವಾಗ ಜ್ಞಾನವನ್ನು  ದುರ್ಭಳಕೆ
ಮಾಡಿಕೊಂಡು ಅಧಿಕಾರ,ಹೆಸರು,ಹಣ,ಸ್ಥಾನಮಾನ ಪಡೆದು
ನನ್ನ ಅದೃಷ್ಟ ವೆನ್ನುವ ಅಹಂಕಾರದಿಂದ  ಮಾನವ ಮೆರೆಯುವನೋ ಆಗಲೇ ದುರಾದೃಷ್ಟವೂ ಹಿಂದಿನಿಂದ  ಆವರಿಸುತ್ತದೆ.ಹೊರಗಿನ.  ರಾಜಕೀಯ ವ್ಯಕ್ತಿಗಳನ್ನು 
ಅದೃಷ್ಟವಂತರೆನ್ನಬಹುದೆ? 
ಜನರನ್ನು ದೇಶವನ್ನು ಆಳುವುದು ಸಾಮಾನ್ಯರಿಗೆ ಕಷ್ಟ 
ಹೀಗಿರುವಾಗ ಅಂತಹ ದೊಡ್ಡ ವ್ಯಕ್ತಿಗಳು ಅದೃಷ್ಟದ 
ಕೆಲಸ ಮಾಡಿದ್ದರೆ  ಮಾತ್ರ ರಾಜಕೀಯ ನಡೆಸಲು
ಸಾಧ್ಯ. ಇಲ್ಲಿ ಧರ್ಮದಿಂದ ರಾಜಕೀಯ ನಡೆಸುವುದು ಕಷ್ಟ.
ಅಧರ್ಮದಿಂದ ಸುಲಭ ಹೀಗಾಗಿ ಅಧರ್ಮಕ್ಕೆ ಅದೃಷ್ಟ ವೆಂದರೆ  ತಪ್ಪು. ಒಂದು ಕಣ್ಣಿಗೆ ಕಾಣುವ ಅದೃಷ್ಟ ಇನ್ನೊಂದು ಕಣ್ಣಿಗೆ ಕಾಣದ ಅದೃಷ್ಟ.
ಹಿಂದಿನ ಮಹಾತ್ಮರುಗಳು ಅದೃಷ್ಟವಂತರೆ? ಅವರ  ಜೀವನದಲ್ಲಿ  ಭೌತಿಕ ಸುಖವಿರಲಿಲ್ಲ  ಆದರೆ ಅಧ್ಯಾತ್ಮ ದ ಸುಖದಲ್ಲಿ  ಮೈಮರೆತಿದ್ದರು. ಹೀಗಾಗಿ  ಯಾವುದೋ ಒಂದು
ರೀತಿಯಲ್ಲಿ ಎಲ್ಲಾ ಅದೃಷ್ಟವಂತರೆ.  ಯಾವ ರೀತಿಯ ಅದೃಷ್ಟ ನಮಗಿದೆ ಎನ್ನುವ ಸತ್ಯವನ್ನು ನಾವೇ ಅರಿತರೆ ಹೊರಗಿನವರಿಂದ ಅದೃಷ್ಟವಂತರು ಎನ್ನಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲರೊಳಗಿದ್ದೂ ನಡೆಸೋ ಮಹಾಶಕ್ತಿಯನ್ನು
ಎಲ್ಲಾ ಅದೃಷ್ಟವಂತರೂ ಗುರುತಿಸಲಾಗದು. ಆದರೂ ಇದು
ಸತ್ಯವಾದಾಗ ನಮ್ಮ ಈ ಜನ್ಮದ ಉದ್ದೇಶ ತಿಳಿದು ನಡೆದರೆ
ಅದೃಷ್ಟ. ಯಾರೋ ಒಬ್ಬರು  ಅಧ್ಯಾತ್ಮ ದ ವಿಚಾರವನ್ನು  ಬರೆಯುತ್ತಿರುವುದಕ್ಕೆ‌ ನೀವು ಅದೃಷ್ಟವಂತರು ಎಂದಿದ್ದರು.
ಆದರೆ, ಅಂತಹ ಜ್ಞಾನವುಳ್ಳವರೊಡನೆ, ಸತ್ಸಂಗದೊಡನೆ
ಬೆರೆತು ಜೀವನ  ನಡೆಸೋರೆ ಅದೃಷ್ಟವಂತರು. 
ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂದಂತೆ. ಕೆಲವರಿಗೆ
ಜನ್ಮದಾರಂಭದಿಂದಲೇ ಅಂತಹ ಸಂಗವಿದ್ದು ಮುಂದೆ ಬಂದರೆ ಕೆಲವರಿಗೆ ಯಾವುದೇ  ರೀತಿಯ ಸಂಗವಿಲ್ಲದೆ  ಜ್ಞಾನ ಬರಬಹುದು.
ಮತ್ತೆ ಕೆಲವರಿಗೆ  ಸಂಗವಿದ್ದರೂ ಅಜ್ಞಾನವೇಇರಬಹುದು. 
ಇಲ್ಲಿ ಜ್ಞಾನದಿಂದ  ಅದೃಷ್ಟ  ಎನ್ನುವ ಬದಲು ಅಜ್ಞಾನದಲ್ಲಿ
 ಅದೃಷ್ಟ ನೋಡುವವರ ಸಂಖ್ಯೆ ಹೆಚ್ಚು.ಹೀಗಾಗಿಸಾಮಾನ್ಯ
ಜ್ಞಾನ ಬಿಟ್ಟು ಅಜ್ಞಾನದಲ್ಲಿ  ಅದೃಷ್ಟವನ್ನು ಅಳೆದು ಹಂಚಲಾಗುವ ರಾಜಕೀಯವಿದೆ. ರಾಜಯೋಗ ಹಿಂದುಳಿದು
ಹಿಂದುಳಿದವರನ್ನು ಅದೃಷ್ಟವಂತರೆಂದರೆ ತಪ್ಪು. ಹಿಂದಿನ ಧರ್ಮ ವೇ ಹಿಂದೂ ಧರ್ಮ. ಯಾರು ಅವರವರ ಹಿಂದಿನ ಧರ್ಮ ಕರ್ಮ ಕ್ಕೆ  ತಲೆಬಾಗಿರುವರೋ ಅವರಿಗೆ ಜ಼ೀವನ್ಮುಕ್ತಿ
ಎಂದಾಗ ನಿಜವಾದ ಅದೃಷ್ಟವಂತರು  ಯಾರು?
ಸಾಲ ತೀರಿಸಲು ಬಂದ ಜೀವಾತ್ಮನಿಗೆ  ಹಣವಿಲ್ಲದೆಯೂ  ಜ್ಞಾನದಿಂದ  ಜೀವನ ನಡೆಸಿ ಮುಕ್ತಿ ಪಡೆದವರೆ ಶರಣರು..
ಪರಮಾತ್ಮನಿಗೆ ದಾಸರಾಗೋದು ಶರಣಾಗೋದೆಂದರೆ ಸತ್ಯ
ಮತ್ತು ಧರ್ಮದ  ಪರ ನಡೆಯೋದು. ಇಲ್ಲಿ  ಯಾರೋ ಬಂದು ಯಾರದ್ದೋ ದೇಶವನ್ನು ಧರ್ಮ ವನ್ನು ಹಾಳು ಮಾಡುತ್ತಿದ್ದಾರೆನ್ನುವ ಬದಲಾಗಿ  ನಮ್ಮವರಲ್ಲಿಯೇ ಇರದ ಒಗ್ಗಟ್ಟಿನ‌  ಕೊರತೆಯಿಂದಲೇ  ನಾವು ಹಿಂದುಳಿದಿರುವು
ದೆನ್ನುವ ಸತ್ಯ ತಿಳಿದು ನಮ್ಮ ನಮ್ಮ ಅದೃಷ್ಟವನ್ನು ಅಧ್ಯಾತ್ಮದಿಂದ  ಅರ್ಥ ಮಾಡಿಕೊಂಡರೆ ಉತ್ತಮ. 
ಕಲಿಗಾಲದಲ್ಲಿ  ಕರ್ಮ ಯೋಗಿಗಳು ಅದೃಷ್ಟ ವಂತರಂತೆ.
ಮಾಧ್ಯಮಗಳಲ್ಲಿ ಹಲವು  ಪ್ರತಿಭಾವಂತರು  ಒಮ್ಮೆಗೇ ಕಾಣಿಸಿಕೊಂಡರೂ ಕೊನೆಯವರೆಗೂ  ಅವರನ್ನು  ನೋಡಲು ಕಷ್ಟ. ಹೀಗಾಗಿ ಅದೃಷ್ಟ ವೆನ್ನುವುದು  ಬದಲಾಗುತ್ತಾ ಹೋಗುತ್ತದೆ. ಇಂದಿನ ರಾಜ ‌ಮುಂದಿನ‌ ಬಿಕ್ಷುಕನಾಗಬಹುದು, ಬಿಕ್ಷುಕ  ಬಿಕ್ಷುವಾಗಿಬದಲಾಗಬಹುದು.

ನಾಲ್ಕು ವರ್ಣ  ಇಂದು ಒಡೆದು ಅಸಂಖ್ಯಾತ ಜಾತಿಗಳಾಗಿ
ಧರ್ಮ ವಾಗಿದೆ. ಇದನ್ನು  ಅರ್ಥ ಮಾಡಿಕೊಂಡರೆ ವಾಸ್ತವದ ಸತ್ಯದರ್ಶನ. ಪ್ರಜಾಪ್ರಭುತ್ವದ ಪ್ರಜೆಗಳು ಭಾರತದಲ್ಲಿ ಜನ್ಮ ಪಡೆಯಲು ಅದೃಷ್ಟ ಮಾಡಿರಬೇಕೆಂಬ ಸತ್ಯ  ತಿಳಿಯೋದಿಲ್ಲ.
ಕಾರಣ ಇಲ್ಲಿ ಸತ್ಯವೇ ಇಲ್ಲ. ಹೀಗಾಗಿ ವಿದೇಶಗಳಿಗೆ ಹೋಗಿ
ಅದೃಷ್ಟವನ್ನು  ಕೊಂಡಾಡುತ್ತಾರೆ. ಹೀಗಾದರೆ ಅದೃಷ್ಟ ಕೇವಲ
ಹಣದ ಆಧಾರದ ಮೇಲೆ ಅಳೆಯಲಾಗುತ್ತಿದೆ. ಜ್ಞಾನವಲ್ಲ.
ಅಧ್ಯಾತ್ಮ ದಲ್ಲಿ ಜ್ಞಾನವೇ ಅದೃಷ್ಟವನ್ನು ತೋರಿಸುತ್ತದೆ.
ಎಲ್ಲೇ ಇರು ಹೇಗೇ ಇರು ಭಾರತೀಯನಾಗಿರು,
ಕನ್ನಡಿಗನಾಗಿರು  ಎನ್ನುವ ಬದಲು ಮಾನವನಾಗಿರು ಎನ್ನಬಹುದು. ಅದೃಷ್ಟವಂತರು  ಅವರವರ ಧರ್ಮ, ಕರ್ಮ ,ದೇಶ,ರಾಜ್ಯ,ಭಾಷೆ,ಸಂಸ್ಕೃತಿಯ ಒಳಗಿದ್ದರೆ
  ಉತ್ತಮ.ಹೊರಗೆ ಹೋಗಿದ್ದರೆ ಅಧಮ.ದೂರ ಹೋದಷ್ಟೂ ಅದೃಷ್ಟ ಹಿಂದುಳಿಯುತ್ತದೆ.  ಹಿಂದೂ ಧರ್ಮ
ಹಾಳಾಗಿಲ್ಲ. ಇಡೀ ವಿಶ್ವ ಹರಡಿದೆ ಆದರೆ ಹಿಂದೂಸ್ತಾನ್  ಹೆಸರಿನಲ್ಲಿದೆ ,ಹಿಂದೂಸ್ತಾನದಲ್ಲಿ  ಹಿಂದೂಗಳಿಲ್ಲ. ಕಾರಣ ಇಲ್ಲಿ ಹಿಂದಿನ ಶಿಕ್ಷಣ  ಪ್ರಜೆಗಳಿಗೆ ಕೊಟ್ಟಿಲ್ಲ.ಅವರವರ ಹಿಂದಿನ ಧರ್ಮ ಬಿಟ್ಟು  ಹೊರಗಿನ ಹೋರಾಟ,ಹಾರಾಟ,
ಮಾರಾಟದಿಂದ ಧರ್ಮ ರಕ್ಷಣೆ ಆಗದೆ ತಮ್ಮ ತಮ್ಮ 
ಅದೃಷ್ಟವನ್ನು ಅಳೆಯಲಾಗಿದೆ. ಅಧಿಕಾರ,ಹಣ,ಸ್ಥಾನವಿದ್ದವರಿಗೆ ವಾಸ್ತವ ಸತ್ಯದ ಅರಿವಿಲ್ಲ. ಅರಿವಿದ್ದವರಿಗೆ ಹೇಳುವ  ಅಧಿಕಾರವಿಲ್ಲ.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ. ಯಾರು ಅದೃಷ್ಟವಂತರು? ಮೂರನೆಯವರು ಯಾರು?
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಪರಮಾತ್ಮನ ಜೊತೆಗಿರೋದು ಅದೃಷ್ಟ. ಇದಕ್ಕೆ ಪರಮ ಸತ್ಯದ ಅಗತ್ಯವಿದೆ.

Monday, November 7, 2022

ಯೋಗ. ಭೋಗದ ವಿಜ್ಞಾನ

ಯೋಗದ ವಿಚಾರದಲ್ಲಿ ಸಾಕಷ್ಟು  ಪ್ರಯೋಗಗಳು ಪರೀಕ್ಷೆ ಗಳು ನಡೆದವು.ಆದರೆ ಯೋಗಿಯಾಗಲಾಗಲಿಲ್ಲ. ಎಲ್ಲಿಯವರೆಗೆ ಈ ಹೊರಗಿನ‌ ಪ್ರಯೋಗ,ಪರೀಕ್ಷೆ ಇರುವುದೋ ಅಲ್ಲಿಯವರೆಗೆ ನಮ್ಮ ಮನಸ್ಸು ಆಂತರಿಕವಾಗಿ
ಶರಣಾಗಲು ಕಷ್ಟ. ಇಲ್ಲಿ ಜೀವಾತ್ಮ‌ಪರಮಾತ್ಮನೊಂದಿಗೆ ಸೇರುವ‌ ಯೋಗವೇ ಅಂತಿಮ ಯೋಗ.ಇದನ್ನು ಜ್ಞಾನದಿಂದ ಭಕ್ತಿ ಯಿಂದ ಕರ್ಮ ದಿಂದ ಕಂಡುಕೊಂಡವರು ಪರಮಾತ್ಮನ  ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು. ಹೀಗಾಗಿ ಆಂತರಿಕ ವಾಗಿ ಶುದ್ದವಾಗುತ್ತಾ ಆತ್ಮಸಾಕ್ಷಾತ್ಕಾರ ವಾಗಿ ಮುಕ್ತಿ  ಮಾರ್ಗ ಹಿಡಿದರು. ಇಂದಿನ ಯೋಗ ಪರಕೀಯರೆಡೆಗೆ ಸಾಗಿದೆ. ವಿದೇಶಕ್ಕೆ ಯಾವಾಗ ಹೋಗುವುದು ಎನ್ನುವ ತಯಾರಿ ಮಕ್ಕಳಿರುವಾಗಲೇ ಶಿಕ್ಷಣದ ಮೂಲಕ ಪೋಷಕರೆ  ಹೊರಗೆ ನಡೆದು ಸಾಕಷ್ಟು ವೈಜ್ಞಾನಿಕ ಪ್ರಯೋಗಗಳಾಗುತ್ತಿದೆ. ದೈಹಿಕವಾಗಿ ನಡೆಸುವ ಪ್ರಯೋಗದಲ್ಲಿ  ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಮಾನಸಿಕ ನೆಮ್ಮದಿಗಾಗಿ ಯೋಗಾಸನವನ್ನು ಬಳಸುತ್ತಾ  ಪ್ರಯೋಗ ಮಾತ್ರ ಭೌತಿಕದಲ್ಲಿ ಯೇ ಹೆಚ್ಚಾದಂತೆ ಹೊರಗಿನ ಯೋಗ ಕೂಡಿಬರುತ್ತದೆ. 
ವಿದೇಶ ಪ್ರಯಾಣವೂ ಒಂದು ಯೋಗ. ಸ್ವದೇಶದ ಋಣ ತೀರಿಸುವ ಯೋಗವನ್ನು ಅಧ್ಯಾತ್ಮ ತಿಳಿಸುತ್ತದೆ.
 ಇಲ್ಲಿದ್ದು  ಮಾಡಲಾಗದ್ದು ಅಲ್ಲಿ ಹೋಗಿ ಮಾಡಲು ಸಾಧ್ಯವೆಂದರೆ  ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನಬಹುದು. 
ಅಧ್ಯಾತ್ಮ ದ ಮೂಲ ಮನೆಯಿಂದ ಹೊರಟ ಜೀವ ಭೌತಿಕಾಸಕ್ತಿ  ಬೆಳೆದಂತೆಲ್ಲಾ ಮೂಲ ಮನೆ ಬಿಟ್ಟು ಹೊರನಡೆದು  ಯೋಗವಿಲ್ಲದೆ  ತಿರುಗಿ ತಿರುಗಿ ಎಲ್ಲೋ ಮರೆಯಾಗುತ್ತದೆ. ಯೋಗವನ್ನು  ಮಾನವ ಮನಸ್ಸಿಗೆ ಬಂದಂತೆ ತಿಳಿಯಲಾಗದು. ಅದನ್ನು ಅಧ್ಯಾತ್ಮ ದ ಪ್ರಕಾರ ತಿಳಿಯುತ್ತಾ ಅಳವಡಿಸಿಕೊಂಡರೆ ಇದ್ದಲ್ಲಿಯೇ ಮಹಾಯೋಗ. ಅಳವಡಿಸಿಕೊಳ್ಳುವುದೇ  ಕಷ್ಟ. ಇದಕ್ಕೆ ಬೇಕಿದೆ ಯೋಗ ಶಿಕ್ಷಣ,ಯೋಗ್ಯ ಶಿಕ್ಷಣ,ಯೋಗ್ಯ ಗುರು.
ಭಗವದ್ಗೀತೆ ತಿಳಿಸುವ ‌ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗವು
ರಾಜಕೀಯದಿಂದ  ಬೆಳೆಸಲಾಗದು. ಹೊರಗೆ ಬೆಳೆಸುವುದು ಕೇವಲ ರಾಜಕೀಯ. ಒಳಗೇ  ಅಡಗಿರುವ  ಶಕ್ತಿಯನ್ನು ಒಳಗೇ ತಿಳಿದು  ಅಧ್ಯಾತ್ಮ ದಿಂದ ಬೆಳೆಸಿಕೊಂಡು ‌ ಯೋಗಿ ಆಗುವುದನ್ನು  ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ತಿಳಿಸಿದ  ರಾಜಯೋಗವಾಗಿತ್ತು. ತನ್ನ ಧರ್ಮ, ಕರ್ಮ ವನ್ನು
ಯೋಗ್ಯರೀತಿಯಲ್ಲಿ ಅರಿತು ಅಳವಡಿಸಿಕೊಂಡು ಸ್ವತಂತ್ರ ಜೀವನ‌ ನಡೆಸುವ  ಯೋಗವು ಮಹಾಯೋಗ. ಹಿಂದಿನ ಮಹಾರಾಜರಿಗೆ ಕೊಡುತ್ತಿದ್ದ  ಕ್ಷತ್ರಿಯ ಧರ್ಮದ ಶಿಕ್ಷಣವನ್ನು
ಇಂದಿನ‌  ರಾಜಕಾರಣಿಗಳಿಗೆ ಕೊಟ್ಟರೂ  ಅಂದಿನ ರಾಜಪ್ರಭುತ್ವ ಇಂದಿಲ್ಲ. ಹೋರಾಟ,ಯುದ್ದವೂ ರಾಜಕಾರಣಿಗಳು ಮಾಡೋದಿಲ್ಲ.ಏನಿದ್ದರೂ ನಮ್ಮ ಸೈನಿಕರೆ
 ಇಂದಿನ ರಾಜರು. ಆದರೆ  ಅವರನ್ನೇ ತಮ್ಮ ವಶದಲ್ಲಿ  ಬಳಸಿ 
ವಿದೇಶಿಗರನ್ನು ಸ್ವಾಗತಿಸುವ‌ ಮಟ್ಟಿಗೆ  ವಿದೇಶದ ಯೋಗ  ಬೆಳೆದಿದೆ. ಎಲ್ಲಾ ಮಾನವರೆ ಆದರೂ ಯೋಗಿಗಳಲ್ಲ.
ಯೋಗಿಗಳ ದೇಶವನ್ನು ಭೋಗಿಗಳ ದೇಶವಾಗಿ ಬದಲಾವಣೆ
ಮಾಡಲು ಹೋದರೆ ರೋಗಿಗಳ ದೇಶವಾಗುತ್ತದೆ.ಅವರವರ ಮೂಲ ಶಕ್ತಿಯೇ ಅವರನ್ನು ರಕ್ಷಿಸುವಾಗ ಹೊರಗಿನಿಂದ ತೇಪೆ ಹಾಕಿ‌ ಬದಲಾಯಿಸಹೋದರೆ ಇರುವ ಯೋಗವೂ
ಹಿಂದುಳಿಯುತ್ತದೆ.
ಒಟ್ಟಿನಲ್ಲಿ  ಯೋಗವು ಕಾಲಬಂದಾಗ ಕೂಡಿ ಬರಬೇಕು.
ಇದರಲ್ಲಿ ಸಾಕಷ್ಟು ವಿಚಾರವಿದೆ. ಮನೆ,ಮದುವೆ,ಮಕ್ಕಳು, ವಿದೇಶ, ಶಿಕ್ಷಣ,....ಇನ್ನಿತರ ಭೌತಿಕ ಯೋಗಕ್ಕೆ ಹೊರಗಿನ ಪ್ರಯತ್ನ ವಾದರೆ, ಪರಮಾತ್ಮನ ಸೇರುವ ಯೋಗಕ್ಕೆ ಒಳಗಿನ
ಪ್ರಯತ್ನ,ಪರೀಕ್ಷೆ,ಶೋಧನೆ,ಪ್ರಯೋಗಗಳು ಅಗತ್ಯ. ಎಷ್ಟೇ ಹೊರಗಿನ‌ಪ್ರಯೋಗ ಯಶಸ್ವಿಯಾದರೂ ಒಳಗಿನ ಶೋಧನೆ
ಆಗದಿದ್ದರೆ ಸಂಶೋಧನೆಗಳೇ ಬೆಳೆಯೋದು. 
ಕಾಲಮಾನಕ್ಕೆ ತಕ್ಕಂತೆ ಎಲ್ಲಾ  ನಡೆಯುತ್ತದೆ. ಆದರೆ ಕಾಲದ  ಮಿತಿ ಇದೆ. ಇತಿಮಿತಿಗಳನ್ನು  ತಿಳಿದು ಯೋಗ ಬೆಳೆದರೆ ಉತ್ತಮ ಪರಿಸ್ಥಿತಿ. ಜೀವನಿರೋವಾಗಲೇ‌  ಪರಜೀವ ಕಾಣೋದು. ಹಾಗೆಯೇ ಆತ್ಮ ದೇಹದೊಳಗಿರುವಾಗಲೇ ಪರಮಾತ್ಮನ ಕಾಣೋದೆ ಯೋಗ ಎಂದರು ಮಹಾ
ಜ್ಞಾನಿಗಳು.  

ಮಹಾಭಾರತ ಯುದ್ದದ ಸಮಯದಲ್ಲಿ ಶ್ರೀ ಕೃಷ್ಣ ನ ಸಹಕಾರಕ್ಕಾಗಿ ಅರ್ಜುನನ ಜೊತೆಗೆ ದುರ್ಯೋಧನನೂ  ತನ್ನ  ಜೊತೆಗೆ ಇರಲು ಕೇಳಿಕೊಂಡಾಗ ಶ್ರೀ ಕೃಷ್ಣ  ಇಬ್ಬರಿಗೂ ಸಹಾಯ ಮಾಡಲು ಒಂದೆಡೆ ಶಸ್ತ್ರ ಸಹಿತ ಸೈನ್ಯ ,ಇನ್ನೊಂದು ಕಡೆ ಶಸ್ತ್ರ ರಹಿತ ಸ್ವಯಂ ಶ್ರೀ ಕೃಷ್ಣ ಪರಮಾತ್ಮ.ಅಜ್ಞಾನಿ ದುರ್ಯೋಧನ ಕೇಳಿದ್ದು ಸೈನ್ಯವನ್ನು ಜ್ಞಾನಿಯಾದ ಅರ್ಜುನ ಬೇಡಿದ್ದು ಸ್ವಯಂ ಶ್ರೀ ಕೃಷ್ಣನನ್ನು.ಇಲ್ಲಿ  ಗೆದ್ದ ಅರ್ಜುನ  ಯೋಗಿಯಾದ.
ಹಾಗೆಯೇ ಇಂದಿನ ಭಾರತದ ಪ್ರಜೆಗಳಿಗೆ ಒಳಗಿರುವ  ಯೋಗ ಶಕ್ತಿಯ ಜ್ಞಾನವಿಲ್ಲದೆ ಹೊರಗಿನ ‌ಭೋಗ ಶಕ್ತಿಯ ಹಿಂದೆ ನಿಂತು ಬೇಡುವ ಪರಿಸ್ಥಿತಿಯಿದೆ.  ಸಾಲ ತೀರಿಸಲು ಯೋಗವಿರಬೇಕು. ಭೋಗದಿಂದ ಸಾಲ ಬೆಳೆದು ನಿಂತರೆ ರೋಗವೇ ಹೆಚ್ಚುತ್ತದೆ. ಮನಸ್ಸು ಹೊರನಡೆದಷ್ಟೂ ನಾನೇ ಬೆಳೆಯುವಾಗ  ಯೋಗ  ಕೂಡಿ ಬರಲು ನಾನು ಹೋಗಬೇಕೆನ್ನುವ ಮಹಾತ್ಮರಾಗಲಿ,ದೇವರಾಗಲಿ,
ತತ್ವವಾಗಲಿ ಕಾಣದು.  ನಾನೇ ದೇವರಾದರೆ ನನಗೆ ಮರಣ ಇಲ್ಲವೆ? ಆತ್ಮಕ್ಕೆ ಸಾವಿಲ್ಲ.ಪರಮಾತ್ಮನ ಸೇರೋದೆ ಮಹಾಯೋಗವೆಂದರೆ  ಆತ್ಮವೆ ನಾನೇ? ನಾನೆಂಬುದಿಲ್ಲ ಎಂದರೆ  ಅರ್ಥ ವೇನು? ಅದ್ವೈತ ಸಂಶೋಧನೆ ಒಳಗಿದ್ದು ಮಾಡಿದರೆ ಉತ್ತರವಿದೆ. ..ಹೊರಗೆ ನಡೆದಷ್ಟೂ  ಉತ್ತರ ಸಿಗದು.. ಯೋಗಿಯಾಗೋದೂ ಕಷ್ಟವೆನ್ನುವ  ಹಿಂದೂ ಧರ್ಮದ ರಕ್ಷಣೆ ಯೋಗಿಗಳಿಂದ ಸಾಧ್ಯ.   ರಾಜಯೋಗವನ್ನು ರಾಜಕೀಯವನ್ನಾಗಿಸಹೋದರೆ ಅಧರ್ಮ. ನಾನೇ  ಸರಿಯಿಲ್ಲದೆ ಪರರನ್ನು ಸರಿಪಡಿಸ
ಬಹುದೆ?  
ಅಂದು ಕೌರವರ ಅಧರ್ಮಕ್ಕೆ  ಯುದ್ದ ನಡೆದು  ಧರ್ಮ ಕ್ಕೆ ಜಯ ತಂದು ಕೊಟ್ಟ  ಮಹಾಯೋಗಿ ಶ್ರೀ ಕೃಷ್ಣ ತನ್ನ ಜೀವನದಲ್ಲಿ ಭೋಗವನ್ನೂ ಯೋಗದಲ್ಲಿಯೇ ಕಂಡಿದ್ದನು.
ಅತಿಯಾದ ರಾಜಕೀಯ ದ್ವೇಷದಿಂದ ಯೋಗಿ ಆಗೋದಿಲ್ಲ.
ನಾನೇ ರಾಜನಾದರೆ  ಪ್ರಜಾಪ್ರಭುತ್ವ ಎಲ್ಲಿದೆ?

Sunday, November 6, 2022

ಗ್ರಹಣವನ್ನು ಹೀಗೂ ಅರ್ಥ ಮಾಡಿಕೊಳ್ಳಬಹುದು

ಗ್ರಹಣಗಳು  ಹೆಚ್ಚಾಗುವುದಕ್ಕೆ ಕಾರಣವೇ ಮಾನವನ ಅಜ್ಞಾನದ ಜೀವನ ಶೈಲಿ ಎನ್ನುತ್ತಾರೆ ತಿಳಿದವರು.
ಗ್ರಹ ದೋಷ ಗಳಿಗೆ ಸಾಕಷ್ಟು ಧಾರ್ಮಿಕ ಪರಿಹಾರ ಕಾರ್ಯ ಇದೆ. ಆದರೆ ಗ್ರಹಚಾರದ ಬಗ್ಗೆ ತಿಳಿಯುವ ಜ್ಞಾನದ ಕೊರತೆ ಮಾನವನಲ್ಲಿ ಬೆಳೆದು ನಿಂತಿದೆ. ಭೂಮಿ ಎನ್ನುವ ಗ್ರಹವನ್ನು
ಹೇಗೆ ಬಳಸಿಕೊಂಡರೆ  ಜ್ಞಾನ ಬೆಳೆಯುವುದೆನ್ನುವ ನಮ್ಮ ಹಿಂದಿನ ಧರ್ಮ ಕರ್ಮ  ಸಿದ್ಧಾಂತ ತತ್ವಗಳನ್ನು  ನಮ್ಮ ಮನಸ್ಸಿಗೆ ಬಂದಂತೆ  ಹೊರ ಹಾಕುವಾಗ ಇದೇ ಮುಂದಿನ ಪೀಳಿಗೆಗೆ ಗ್ರಹಚಾರ ಬೆಳೆಸಿದರೆ ವ್ಯರ್ಥ .ಆದರೆ  ಲೋಕ ಕಲ್ಯಾಣಾರ್ಥ ವಾಗಿ   ಭೂ ಗ್ರಹದಲ್ಲಿ ನಡೆಸುವ ಧಾರ್ಮಿಕ ಕಾರ್ಯಕ್ರಮ  ಜನಸಾಮಾನ್ಯರಿಗೆ ಅರ್ಥ ವಾಗುವಂತೆ ವಿವರಿಸುತ್ತಾ ಅವರವರ ಗ್ರಹಚಾರಕ್ಕೆ ಅವರ ಧರ್ಮ ಕರ್ಮ ಕಾರಣವೆನ್ನುವ ಸತ್ಯ ತಿಳಿಸುವತ್ತ  ನಮ್ಮ ಸೇವೆಯು ಶುದ್ದತೆ ಕಡೆಗಿದ್ದರೆ  ಶುದ್ದ ಮನಸ್ಸಿನಿಂದಲೇ ಎಲ್ಲಾ ಕಾರ್ಯಕ್ರಮ ನಡೆದು  ಗ್ರಹಗಳು ತಮ್ಮ ಸ್ವಸ್ಥಾನದಲ್ಲಿ ಚಲಿಸಬಹುದು. ಯಾವಾಗ  ಮನಸ್ಸು ಹೊರ ನಡೆದು ಸ್ವೇಚ್ಚಾಚಾರಕ್ಕೆ ತಿರುಗಿ
ಇತರರನ್ನು ದಾರಿತಪ್ಪಿಸಿ ಆಳುವುದೋ ಆಗಲೇ ಪ್ರಕೃತಿವಿಕೋಪ, ಗ್ರಹಣಗಳು, ಭೂ ಕಂಪಗಳು ಹೆಚ್ಚುತ್ತಾ  ಮನುಕುಲಕ್ಕೆ ಮಾರಕವಾಗುತ್ತದೆ. ಒಟ್ಟಿನಲ್ಲಿ ಭೂಮಿಯನ್ನು
ಮಾನವ ಹೇಗೆ ಬಳಸುವನೋ ಹಾಗೆ ಗ್ರಹಗಳ ಚಲನೆಯೂ
ನಡೆಯುತ್ತದೆ. ಭೂಮಿಯನ್ನು ಸುತ್ತುವ ಚಂದ್ರನಿಗೂ ಗ್ರಹಣ
ಭೂಮಿ ಸುತ್ತುವ ಸೂರ್ಯ ನಿಗೂ ಗ್ರಹಣ ಹಿಡಿಯುವುದು
ಯುಗಯುಗದಿಂದಲೂ ಇದೆ. ಅಂದರೆ ಗ್ರಹಣವನ್ನು ಮುಂದೆ ಇಟ್ಟುಕೊಂಡು ಹಣ ಮಾಡೋರೂ ಇದ್ದಾರೆ. ಗ್ರಹಣದಿಂದ ಹಣ ಕಳೆದುಕೊಳ್ಳುವ ಜನರೂ ಇದ್ದಾರೆ. ಗ್ರಹಣವು  ಹಿಡಿಯೋದು ಗ್ರಹಚಾರವಿದ್ದವರಿಗೆ .ಗ್ರಹಚಾರ ಮಾನವನಿಗೆ ಇದ್ದೇ ಇರುತ್ತದೆ. ಇದನ್ನು ಸರಿಯಾದ ಆಚಾರ,ವಿಚಾರ, ಪ್ರಚಾರದಿಂದ  ಅರ್ಥ ಮಾಡಿಕೊಳ್ಳಲು ನಮ್ಮಲ್ಲಿರಬೇಕು ಶಿಷ್ಟಾಚಾರ. ಶಿಷ್ಟರೆಂದರೆ  ಯಾರು? 
ಗುರುವಾದವರು ಶಿಷ್ಯರಿಗೆ ದಾರಿದೀಪವಾದಂತೆ, ಪ್ರಜೆಗಳಾದವರು ದೇಶಕ್ಕೆ ದಾರಿದೀಪಗಳು.ದಾರಿಹೋಕರನ್ನು ಬೆಳೆಸುವ ಭ್ರಷ್ಟಾಚಾರ ಕ್ಕೆ ಸರಿಯಾಗಿ ಗ್ರಹಣಹಿಡಿಯುತ್ತದೆ. ಜೀವವೇ ಅನುಭವಿಸಬೇಕು. ಒಟ್ಟಿನಲ್ಲಿ ಮಾಧ್ಯಮಗಳಿಗೆ ಹಿಡಿದಷ್ಟು ಗ್ರಹಣ  ಯಾರಿಗೂ ಹಿಡಿಯೋದಿಲ್ಲ.ಅದರ ಹಿಂದೆ ನಡೆದರೆನಮಗೂ ಗ್ರಹಣ ಹಿಡಿಯುವುದು. 
ಉತ್ತಮ ಸುದ್ದಿ ಪ್ರಸಾರಮಾಡಿದರೆ ಇಡೀ ದೇಶಕ್ಕೆ ವಿಶ್ವಕ್ಕೆ 
ಗ್ರಹಣ ದೋಷ ಇರದು.
ಸಾಧ್ಯವೆ? ಎಲ್ಲಿರುವರು ಗ್ರಹ ದೇವತೆಗಳು?
ಭಾನು,ಸೋಮ,ಮಂಗಳ,ಭುಧ,ಗುರು,ಶುಕ್ರ,ಶನಿ..ನಿರಂತರ
ವಾರದ ಏಳೂ ದಿನಗಳಂದು  ನೆನಿಸಿಕೊಳ್ಳುವ ಮಾನವನಿಗೆ
ಅವರೊಂದಿಗಿರುವ ಶಕ್ತಿವಿಶೇಷತೆ ಬಗ್ಗೆ ಅರಿವಿಲ್ಲದೆ ಕೇವಲ
ವಾರ ಎನ್ನುವ ಹಂತಕ್ಕೆ ಬಂದು ಮಾಡಬಾರದ ರಾಜಕೀಯ ಮಾಡುತ್ತಾ ಆಳಿದರೆ  ಗ್ರಹಣ ಹಿಡಿಯುವುದು ಸಹಜ.
ಇದನ್ನು ಸರಿಯಾದ ದಾನ,ಧರ್ಮ,ಪೂಜೆ,ದ್ಯಾನ,ಯೋಗದ ಮೂಲಕ ಕಳೆದುಕೊಳ್ಳಲು  ಪುರೋಹಿತರು,ಧಾರ್ಮಿಕ ಜನರು, ಗುರು ಹಿರಿಯರು, ಜ್ಞಾನಿಗಳು,ಭವಿಷ್ಯ ಹೇಳುವವರು ಇನ್ನಿತರ ಹಿಂದೂ ಧರ್ಮದವರು ತಿಳಿಸಿದ್ದಾರೆ
ಅವರು  ತತ್ವಜ್ಞಾನದಿಂದ ತಿಳಿದು ಪರಿಹಾರ ಸೂಚಿಸಿದ್ದಾರೆ
ನಮ್ಮದೇ ತಂತ್ರದಿಂದ ಅದನ್ನು ತಿಳಿದು ಇನ್ನಷ್ಟು ಗ್ರಹ ಗಳ ಸೃಷ್ಟಿ ಮಾಡುತ್ತಾ ಕಾಲಹರಣ ಮಾಡಿದರೆ ನಿಜವಾದ ಗ್ರಹಣ
ಹಿಡಿದವರೆ ಹೆಚ್ಚಾಗುತ್ತಾರೆ. ಸತ್ಯವಿದೆ ಧರ್ಮ ವಿದೆ.ಆದರೆ ಪೂರ್ಣವಾಗಿ ತಿಳಿದವರಿಲ್ಲದೆ ಅರ್ಧ ಸತ್ಯದಲ್ಲಿ ರಾಜಕೀಯ
ಬೆಳೆದಿದೆ. ಹಾಗಾದರೆ ನಾವ್ಯಾರು? ನಾನ್ಯಾರು ಪ್ರಶ್ನೆಗೆ ಉತ್ತರ
ಒಳಗಿರುವಾಗ ಹೊರಗೆ ಹುಡುಕಿದರೆ ಸಿಗುವುದೆ? ಗ್ರಹದೋಷ ಒಳಗಿರುವಾಗ ಒಳಗಿನ ಶುದ್ದಿಯಾಗಬೇಕಷ್ಡೆ.
ಒಳಗೇ  ಇರುವ ಅಂತರಾತ್ಮನ  ಅರಿವಿಲ್ಲದೆ ಹೊರಗಿನ ಪರಮಾತ್ಮನ ಕಾಣಬಹುದೆ? ಗ್ರಹಗಳ ಚಲನ ವಲನದಿಂದಲೇ ಮಾನವನ ಜೀವನ ನಡೆದಿರುವಾಗ ಅದರ ಬಗ್ಗೆ ಸರಿಯಾದ ಶಿಕ್ಷಣ ನೀಡದೆ ನಾವೇ ಗ್ರಹಗಳಾದರೆ ಮೇಲೆ ಇರುವ ಗ್ರಹಗಳಿಗೇನೂ ಸಮಸ್ಯೆಯಿಲ್ಲ. ಗ್ರಹದೋಷ
ಇದ್ದರೆ  ಮಾನವನಿಗಷ್ಟೆ. ಅಂದರೆ  ಎಲ್ಲದ್ದಕ್ಕೂ ಕಾರಣವೆ ಮಾನವನ ಸ್ವಾರ್ಥ ಅಹಂಕಾರಯುಕ್ತ ರಾಜಕೀಯ ಜೀವನ.
ಹಿಂದಿನ ಜನ್ಮದ ಋಣ ಮತ್ತು ಕರ್ಮ ಫಲ. ಜನ್ಮ ಜನ್ಮಾಂತರದವರೆಗೂ ಹರಿದು ಬಂದಿದೆ.ಭೂಮಿಯಲ್ಲಿದ್ದೇ ಕಳೆದುಕೊಳ್ಳಲು ಬೇಕಿದೆ ಆತ್ಮ ಜ್ಞಾನ. ಆತ್ಮನಿರ್ಭರ ಭಾರತ  ಆತ್ಮಜ್ಞಾನದಿಂದ ಸಾಧ್ಯವಿದೆ. ಆತ್ಮಜ್ಞಾನಿಗಳ ಶುದ್ದತೆಗೆ ಗ್ರಹಗಳು ಶಾಂತವಾಗಿರುತ್ತದೆ.ಗ್ರಹಶಾಂತಿ ಮಾಡಲು ಹಣ ಬೇಕು.ಅದೂ ಶಿಷ್ಟಾಚಾರ ದ ಹಣವಿರಬೇಕು.ಭ್ರಷ್ಟಾಚಾರ ದ ಹಣದಲ್ಲಿ ಏನೇ ಧರ್ಮ ಕಾರ್ಯ ಮಾಡಿದರೂ ನಮ್ಮ
ಕರ್ಮ ಶುದ್ದಿಯಾಗದೆ ಯಾವ ಗ್ರಹಚಾರವೂ  ಹೋಗದು.
ಇದೇ ಕಾರಣದಿಂದ ಮಹಾತ್ಮರುಗಳು ಪ್ರತಿಯೊಂದು ಆಚಾರ ವಿಚಾರ, ರೀತಿ ನೀತಿ ಸಂಸ್ಕೃತಿ ಸಂಪ್ರದಾಯವು ಶಾಸ್ತ್ರ ದ ಮೂಲಕ ತಿಳಿಸಿ ನಡೆಯಲು ದಾರಿತೋರಿದರು.
ಆದರೀಗ ಶಾಸ್ತ್ರ ದ ಮೂಲ ಉದ್ದೇಶ ಅರ್ಥ ಆಗದೆ ಕಾಟಾಚಾರ ಬೆಳೆದು ಹಣಕ್ಕಾಗಿ  ಜನರ ದಾರಿತಪ್ಪಿಸಿ ಕೆಲವು ಭೌತಿಕ ಆಚರಣೆಯಲ್ಲಿ ಭ್ರಷ್ಟಾಚಾರ ತುಂಬಿಹೋಗಿದೆ.ಇದೇ
ಗ್ರಹಣಗಳು, ಪ್ರಕೃತಿವಿಕೋಪ,ರೋಗರುಜಿನ,ಪರಿಸರ ನಾಶಕ್ಕೆ  ಕಾರಣವಾದರೆ  ಪರಿಹಾರವಾಗಿ ಮಾನವ ಹಿಂದೆ ತಿರುಗಿ ಸತ್ಯವನ್ನು  ತನ್ನಲ್ಲಿ ಅಳವಡಿಸಿಕೊಂಡು  ಮೂಲ ಉದ್ದೇಶ ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಡಬೇಕಿತ್ತು.
ಶಂಖದಿಂದ ಬಂದದ್ದೇ  ತೀರ್ಥ .ಅಂದಿನ ಶಂಖ ಶುದ್ದ ಸತ್ಯ ಧರ್ಮ ದಲ್ಲಿತ್ತು.ಇಂದು  ಕಲುಷಿತ ವಾಗಿದೆ.ಕೆಲವಷ್ಟೇ ಶುದ್ದ ಇದ್ದರೂ  ಮಾನವನಿಗೆ ಅರಿವಿಲ್ಲದೆ ಎಲ್ಲಾ ಶುದ್ದವಾಗಲು ಕಷ್ಟ.ಅವರವರ ಮನಸ್ಸಿನ ಶುದ್ದತೆಗೆ ಸ್ವಚ್ಚ ಶಿಕ್ಷಣಬೇಕು.
ವಿದೇಶಿಗಳು ಭಾರತೀಯತೆಯನ್ನು ಅಳವಡಿಸಿಕೊಂಡು ಅವರ ದೇಶವನ್ನು ಬೆಳೆಸಿಕೊಂಡರೆ  ಸಂತೋಷಪಡುವ ನಾವು ನಮ್ಮಮಕ್ಕಳಿಗೆ ಕಲಿಸಲಾಗದಿದ್ದರೆ ನಮ್ಮದೇ ದೋಷ.
ಆ ದೋಷವೇ ಗ್ರಹವಾಗಿ  ತಿರುಗಿ ಹೊಡೆಯುವಾಗ  ಯಾರೂ ಇರೋದಿಲ್ಲ. ಒಟ್ಟಿನಲ್ಲಿ ಮಾನವನಿಗೆ ತನ್ನ ತಾನು ಬದಲಾಯಿಸಿಕೊಳ್ಳುವುದೇ ಕಷ್ಟ. ಕಾರಣ ಅವನೊಳಗೆ ದೇವಾಸುರರ ಶಕ್ತಿಯಿದೆ. ಅವರಿಬ್ಬರಲ್ಲಿ ಯಾರು ಶ್ರೇಷ್ಠ ಕನಿಷ್ಟವೆನ್ನುವ  ಪೈಪೋಟಿಯಿದೆ. ಜ್ಞಾನವಿಜ್ಞಾನದ ನಡುವೆ ಸಾಮಾನ್ಯಜ್ಞಾನ ಇದ್ದ ಹಾಗೆ ಮಾನವನಿಗೆ ತನ್ನದೇ ಆದ ಸಾಮಾನ್ಯಜ್ಞಾನ  ಇದ್ದು ಅದರ ಮೂಲಕ  ತನ್ನ‌ಜೀವಾತ್ಮನಿಗೆ
ಮುಕ್ತಿ ಸಿಗುವವರೆಗೆ ಸುಖವಿಲ್ಲ. ಇದಕ್ಕಾಗಿ ಆಂತರಿಕ ಶುದ್ದಿಅಗತ್ಯ.ಕಷ್ಟಪಟ್ಟು ಆಂತರಿಕ ಶಕ್ತಿ ಬೆಳೆಸಿಕೊಳ್ಳಲು ರಾಜಯೋಗ ಬೇಕು. ಯೋಗವೆಂದರೆ ಸೇರುವುದೆಂದರ್ಥ ಒಳ್ಳೆಯದಕ್ಕೆ ನಮ್ಮ‌ಮನಸ್ಸು ಸೇರಿದರೆ ಯೋಗ.ಸತ್ಯಕ್ಕೆ ಸೇರಿದರೆ ಯೋಗ,ಧರ್ಮ ಕರ್ಮ ಕ್ಕೆ ತತ್ವಜ್ಞಾನ ಸೇರಿದರೆ ಮಹಾಯೋಗ. ಇದನ್ನು ಪುರಾಣ ಇತಿಹಾಸದ ಕಥೆ ತಿಳಿಸುವುದೆ? ಅದರಲ್ಲೂ ಇದೇ ಅಡಗಿರೋದಾಗಿದೆ.
ವಾಸ್ತವದಲ್ಲಿ ಪ್ರಜಾಪ್ರಭುತ್ವದ  ದೇಶದ ಈ ಸ್ಥಿತಿಗೆ ಪ್ರಜೆಗಳ 
ಅಜ್ಞಾನದ ಜೀವನ ಶೈಲಿ ಕಾರಣ. ಜೀವನಶೈಲಿಗೆ ಶಿಕ್ಷಣದ ವಿಷಯಗಳೇ ಕಾರಣ. 'ವಿಷ'ಯ ವಿಷವನ್ನು ಉಣ್ಣಿಸಿದರೆ ಅಮೃತ ತತ್ವ ಅರ್ಥ ವಾಗದು.ಸ್ವಾಮಿ ವಿವೇಕಾನಂದರು ಶಿಕ್ಷಣದಲ್ಲಿಯೇ ಅಮೃತ ತತ್ವ ಅಳವಡಿಸಲು ಹೇಳಿದ್ದರು.
ಅವರ  ಹೆಸರು ಅಮೇರಿಕಾದಂತಹ ಮಹಾದೇಶದವರೆಗೂ
ಹರಡಿದ್ದರೂ  ಭಾರತದಲ್ಲಿನ ಶಿಕ್ಷಣ ಮಾತ್ರ ಅಮೇರಿಕದ ವಿಷಯವನ್ನು ಬೆಳೆಸಿ ಮಕ್ಕಳಿಗೆ ವಿದೇಶ ವ್ಯಾಮೋಹ ಹೆಚ್ಚಿಸಿ
ತಂತ್ರಜ್ಞಾನದಿಂದ ದೇಶ ಆಳಲು ಹೋದರೆ ಮೂಲದ ತತ್ವಕ್ಕೆ
ಮಾಡಿದ ಅವಮಾನ. ಇದಕ್ಕೆ ಗ್ರಹಣವನ್ನು  ತಪ್ಪಿಸಲಾಗದು.
ಹಣದ ಹಿಂದೆ ಬಿದ್ದರೆ ಜ್ಞಾನದ  ನಷ್ಟ.ಜ್ಞಾನದ ಹಿಂದೆ ಬಿದ್ದರೆ ಹಣದ ನಷ್ಟ. ಇವೆರಡನ್ನೂ ಸರಿಸಮನಾಗಿ ಕಂಡರೆ ಉತ್ತಮ ಸ್ಥಿತಿ. ಸೃಷ್ಟಿ ಸರಿಯಾಗಿದ್ದರೆ  ಉತ್ತಮಸ್ಥಿತಿ ನಂತರ ಮುಕ್ತಿ.
ಸೃಷ್ಟಿ  ಸರಿಯಿಲ್ಲದೆ ಸ್ಥಿತಿಗೆ  ಹಳಿಯುತ್ತಾ  ಲಯವನ್ನು ಹೆಚ್ಚಿಸಿ ಜೀವ ಹೋದರೆ  ಯಥಾ ಪ್ರಕಾರ ಸೃಷ್ಟಿ ಯಾಗುತ್ತದೆ. ಉತ್ತಮ ಶಿಕ್ಷಣದಿಂದ ಸೃಷ್ಟಿ ಯನ್ನು ಅರ್ಥ ಮಾಡಿಕೊಂಡು
ಜನರ ಸ್ಥಿತಿಗೆ ಕಾರಣವನ್ನು ತಿಳಿಯುತ್ತಾ ಸತ್ಯಜ್ಞಾನದಿಂದ ಮುಕ್ತಿ ಪಡೆದ ದೇಶವೇ ಭಾರತ. ಇದು ಭಾರತೀಯ ಹಿಂದಿನ
ಶಿಕ್ಷಣದಲ್ಲಿತ್ತು. ಬದಲಾವಣೆ ಶಿಕ್ಷಣದಲ್ಲಿಯೇ ಆಗಬೇಕಿತ್ತು.
ಅದರಲ್ಲೂ ರಾಜಕೀಯ ಬೆಳೆದು ಭ್ರಷ್ಟಾಚಾರ ತುಂಬಿದರೆ ಮಕ್ಕಳು  ಎತ್ತ ಹೋಗಬೇಕು? ಪೋಷಕರಾದವರೆ ಶೋಷಣೆ ಮಾಡುವವರಾದರೆ  ಬೇಲಿಯೇ ಎದ್ದು ಹೊಲಮೇಯ್ದರೆ  ಕಾಯೋರು ಯಾರು? ದೇವರು ವ್ಯಕ್ತಿ ಯಲ್ಲ ಶಕ್ತಿ.ಅಣು ಪರಮಾಣುಗಳ ವಿಜ್ಞಾನ ಜಗತ್ತಿನಲ್ಲಿ ಜೀವಾತ್ಮ ಪರಮಾತ್ಮ
ಕಾಣದೆ  ಜಗತ್ತಿನಲ್ಲಿ ಗ್ರಹಗಳ‌ಮೇಲೆ ಲಗ್ಗೆ ಹಾಕುವ ವ್ಯಕ್ತಿ ಯ ಬುದ್ದಿಶಕ್ತಿಯಿದೆ.ಆದರೆ ಜ್ಞಾನಶಕ್ತಿಯಿಲ್ಲ. ಸಾಮಾನ್ಯಜ್ಞಾನ ದ
ಕೊರತೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣವೆನ್ನಬಹುದಷ್ಟೆ.

Tuesday, November 1, 2022

ಕನ್ನಡದ ರಕ್ಷಣೆ ರಾಜಕೀಯದಿಂದ ಸಾಧ್ಯವೆ?

ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು. ಭಾಷೆಯ ರಕ್ಷಣೆ ಹಣದಿಂದ, ಅಧಿಕಾರದಿಂದ, ರಾಜಕೀಯದಿಂದ  ಮಾಡೋ ಮೊದಲು ಶಿಕ್ಷಣದಿಂದ ಧರ್ಮದಿಂದ ಮಾಡಿದ್ದರೆ ಇಂದು ಕರ್ನಾಟಕದಲ್ಲಿ ಇಷ್ಟೊಂದು ಹೋರಾಟ,ಹಾರಾಟ ಮಾರಾಟದ  ಗೋಳಾಟವಿರುತ್ತಿರಲಿಲ್ಲ. ಜ್ಞಾನದಿಂದ ಮಾತ್ರ ಧರ್ಮ ಸತ್ಯ ಬೆಳೆಯೋದು. ಇದು ಅವರವರ ರಾಜ್ಯ,ದೇಶ,
ಸ್ಥಳದ ಮೂಲವನ್ನು ಅನುಸರಿಸಿದ್ದರೆ ಬುಡ ಗಟ್ಟಿ. ಅದನ್ನು ಬಿಟ್ಟು ನೇರವಾಗಿ ಹೊರನಡೆದರೆ ರೆಂಬೆಕೊಂಬೆಗಳ ಆಯಸ್ಸು ಕ್ಷೀಣವೆನ್ನುತ್ತಾರೆ ಮಹಾತ್ಮರು.
ಹಿಂದೂ ಧರ್ಮದ ಆಳ ಅಗಲ ಹೇಗೆ ಅಳೆಯಲಾಗದೋ ಹಾಗೆ ಕನ್ನಡ ಹಾಗು ಸಂಸ್ಕೃತ ಭಾಷೆಯೂ ಆಳವಾಗಿರುವ ಜ್ಞಾನವನ್ನು  ಒಳಗಿನಿಂದ ಬೆಳೆಸಿದೆ. ಹೀಗಾಗಿ ಇದನ್ನು ಉಳಿಸಿ ಬೆಳೆಸೋದಕ್ಕೆ ಹೊರಗಿನ ಶಿಕ್ಷಣದ ಅಗತ್ಯವಿಲ್ಲ.ಒಳಗಿನ ಹಿಂದಿನ ಶಿಕ್ಷಣದ ಅಗತ್ಯವಿತ್ತು.  ಕನ್ನಡವನ್ನು  ವ್ಯವಹಾರಿಕ ದೃಷ್ಟಿಯಿಂದ ಅಳೆದರೆ ಈಗಲೂ ಸಾಕಷ್ಟು ಬೆಳೆದಿದೆ.ಆದರೆ ಧರ್ಮದ ದೃಷ್ಟಿಯಿಂದ ಹಿಂದುಳಿಯುತ್ತಿದೆ. ಕನ್ನಡದಿಂದ ನಮ್ಮ ಜೀವನ ನಡೆದಿದೆ.ನಮ್ಮಿಂದ ಕನ್ನಡ ಬೆಳೆದಿಲ್ಲ. ಇಲ್ಲಿ ನಮ್ಮ ಶಿಕ್ಷಣವು ವ್ಯವಹಾರಕ್ಕೆ ತಿರುಗಿದಂತೆಲ್ಲಾ  ಹೆಚ್ಚು ಹಣಗಳಿಸುವ ಸಾಧನವಾಗುತ್ತದೆ. ಅದೇ ಅದರಲ್ಲಿ ಧರ್ಮ ವಿದ್ದರೆ ಕನ್ನಡದಲ್ಲಿ ಧರ್ಮ ತಿಳಿಸಿ ಬೆಳೆಸುವ ವಿಷಯವಿರುತ್ತದೆ. ಕನ್ನಡದ ವಿಷಯ ಭಾಷಾಂತರ ಮಾಡಿ ಜ್ಞಾನ ಹೆಚ್ಚಿಸಲಾಗದು.ಭಾಷಾಂತರದಲ್ಲಿ ಸಾಕಷ್ಟು ಪದಗಳ ಅರ್ಥ ವ್ಯತ್ಯಾಸವಾಗುತ್ತದೆ. ಹೀಗಾಗಿ ಮೂಲ ಪ್ರತಿ ಯಾವತ್ತೂ ಶುದ್ದವಾಗಿರಬೇಕು. ವಿಷಯಗಳ ಬದಲಾವಣೆಯ ಜೊತೆಗೆ ಭಾಷೆಯೂ ಬದಲಾಗುತ್ತಾ ಮೂಲ ಧರ್ಮ ಭಾಷೆ ಹಿಂದುಳಿದು ಹೊರಗಿನ ಆಚರಣೆ ಮುಂದೆ ನಡೆಯಿತು. ಈಗಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ 
ವಿದೆ. ಶಾಸ್ತ್ರೀಯ ಶಿಕ್ಷಣದ ಕೊರತೆಯಿದೆ. ಕೆಲವು ವಿಚಾರಗಳನ್ನು  ನನ್ನ ಮೊದಲ ಪುಸ್ತಕದಲ್ಲಿ  ತಿಳಿಸಲಾಗಿತ್ತು. ಅನುಭವಕ್ಕೆ ಬರುವ ವರೆಗೂನಮಗೆ ಸತ್ಯ ಅರ್ಥ ವಾಗದು. 
ಯಾವುದೇ ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ, ಭಾಷೆಯ ಬೆಳವಣಿಗೆ ರಾಜಕೀಯ ದಿಂದ ಬೆಳೆಸಲಾಗದೆನ್ನುವ ಕಾರಣಕ್ಕಾಗಿ ಹಿಂದೆ ಗುರುಕುಲ ಪದ್ದತಿಯ ಶಿಕ್ಷಣದಲ್ಲಿ 
ಮಕ್ಕಳನ್ನು ರಾಜಕೀಯತೆ ಬಿಟ್ಟು ರಾಜರೂ ಕೂಡ  ಗುರುಕುಲದಲ್ಲಿ ಬಿಟ್ಟು ಕಲಿಸುತ್ತಿದ್ದರು. ಕಾರಣವಿಷ್ಟೆ ರಾಜಕೀಯವೆಂಬುದು ನನ್ನ ಬೆಳೆಸುತ್ತದೆ .ನಾನೆಂಬ ಅಹಂಕಾರ ಸ್ವಾರ್ಥ ನನ್ನ ಹಾಳೂ ಮಾಡುತ್ತದೆ.ಮಕ್ಕಳಿಗೆ ಮೂಲದಲ್ಲಿ ಜೀವನದ ಸತ್ಯ ತಿಳಿದರೆ ಮುಂದೆ ಸ್ವತಂತ್ರ
 ಜ್ಞಾನದಿಂದ ಜೀವನ ಸಾಗಿಸುತ್ತಾರೆ ಎನ್ನುವ ಸತ್ಯ ತಿಳಿಯಬಹುದು.
ಮಾತೃಭಾಷೆಗೆ ಮಾತೆಯರೆ ವಿರೋಧ ವ್ಯಕ್ತಪಡಿಸಿದರೆ ಮಕ್ಕಳು ಕಲಿಯಲು ಕಷ್ಟ. ನಾವಿರುವ ನಾಡು ನುಡಿಯನ್ನು
ಬೆಳೆಸಿ ಉಳಿಸುವುದು ಎಲ್ಲರ ಧರ್ಮ. ಹೊರಗಿನಿಂದ ಬಂದು  ಮೂಲವನ್ನು ಅಳಿಸೋದು ಅಧರ್ಮ.ಇಲ್ಲ ಹೊರಗೆ ಹೋಗಿ ಮೂಲವನ್ನು ಮರೆಯುವುದೂ ಅಧರ್ಮ. ನಮ್ಮ ಜೀವನಕ್ಕೆ ಬೇಕಾದಷ್ಟು  ಹಣ ಸಂಪಾದನೆಗೆ ಮೂಲ ಭಾಷೆ
ಯಲ್ಲಿ ಸಾಧ್ಯ ಇದ್ದವರೂ  ಪರಭಾಷಾ ವ್ಯಾಮೋಹದಿಂದ 
ದೂರಹೋಗಿ ದುಡಿದು ಸಂಪಾದಿಸಿದರೂ  ಮೂಲದ ಋಣ ತೀರಿಸದಿದ್ದರೆ ತೃಪ್ತಿ ಸಿಗೋದಿಲ್ಲವೆನ್ನುವ ಕಾರಣಕ್ಕಾಗಿ
 ಹಿಂದೆ ಇದ್ದಲ್ಲಿಯೇ ಅವರವರ ಧರ್ಮಭಾಷೆಯ ತತ್ವಜ್ಞಾನ
ದಿಂದ ಒಗ್ಗಟ್ಟು, ಏಕತೆ, ಐಕ್ಯತೆ,ಸಮಾನತೆಯನ್ನು  ಸಾರಿದರು. ಕಾಲ ಬದಲಾದಂತೆ ಶಿಕ್ಷಣವೂ ಬದಲಾಯಿತು ತತ್ವ ತಂತ್ರವಾಯಿತು ತತ್ವದಿಂದ ರಾಜಯೋಗ ತಂತ್ರದಿಂದ
 ರಾಜಕೀಯ  ಬೆಳೆಯಿತು.ಅಂತರದಲ್ಲಿ  ಮಧ್ಯವರ್ತಿಗಳು ನಿಂತು ಇದೂ ಸರಿ ಅದೂ ಸರಿ ಎಂದರು. ಆದರೆ  ಈಗ ಸರಿಯಾಗಿರುವುದು  ಯಾವುದು?
ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಬರುವ ಉತ್ತರ ನಾನೇ ಸರಿ ಎಂದು. ಎಲ್ಲಾ ಸರಿಯಾಗೇ ಇದೆ ತಪ್ಪು ಎಲ್ಲಿದೆ? ನಡೆಯೋದನ್ನು  ತಡೆಯಲಾಗದು.ಯಾಕೆ ನಡೆದಿದೆ
ಎಂದು ಪ್ರಶ್ನೆ ಮಾಡೋಹಾಗಿಲ್ಲ.ನಡೆದ ಮೇಲೇ ಯಾಕೆ ಹೀಗಾಯಿತೆಂದು  ತಿಳಿಯಲು ಹಿಂದಿರುಗಿಬರಬೇಕಷ್ಟೆ. ಇದು ಹಿಂದಿನಿಂದಲೂ ನಡೆದು ಬಂದ ಹಿಂದೂ ಧರ್ಮ. ಹಿಂದಿನ ಶಿಕ್ಷಣ ಹಿಂದೂ ಧರ್ಮ, ಇಂದಿನ ಶಿಕ್ಷಣ ಇಸ್ಲಾಂ ಮುಂದಿನ ಶಿಕ್ಷಣ ಮುಸ್ಲಿಂ ಧರ್ಮ ಎಂದರೆ ತಪ್ಪೆ?
ಎಷ್ಟೇ ಮುಂದುವರಿದರೂ ಯಂತ್ರಮಾನವರಾಗಿರಬೇಕಷ್ಟೆ
ಸ್ವತಂತ್ರ ಜ್ಞಾನ ಹಿಂದಿತ್ತು. ಈಗ ತಂತ್ರವಾಗಿದೆ ಮುಂದೆ ಯಂತ್ರದ ದಾಸರಾಗಬೇಕು. ಪ್ರತಿಯೊಂದು ಆ ಪರಮಾತ್ಮನ
ಅಂಶವೇ ಆದರೆ , ಧಾರ್ಮಿಕ ದೃಷ್ಟಿಯಿಂದ ಬೇರೆ ಬೇರೆ ಕಾಣುತ್ತದೆ. ದೇವನೊಬ್ಬನೆ ನಾಮ ಹಲವು,ದೇಶ ಒಂದೇ ಭಾಷೆ ಹಲವು...ತತ್ವ ಒಂದೇ ತಂತ್ರ ಹಲವು...
 ನರೇಂದ್ರರು ವಿವೇಕಾನಂದರಾಗಿದ್ದು ತತ್ವಜ್ಞಾನದಿಂದ ಇಂದಿನ ತಂತ್ರದಿಂದ  ತತ್ವ ಹಿಂದುಳಿಯುತ್ತಿದೆ ಇಷ್ಟೇ ವ್ಯತ್ಯಾಸ.
ಮೇಲೇರಿದವರು ಕೆಳಗಿಳಿಯಬೇಕು.ಕೆಳಗಿದ್ದವರು ಮೇಲೆ ಹೋಗಲೇಬೇಕು.  ಕಾಲಚಕ್ರ ನಿಲ್ಲೋದಿಲ್ಲ.ನಿಲ್ಲಿಸುವ ಶಕ್ತಿ ವಿಜ್ಞಾನಕ್ಕಿಲ್ಲ.

Monday, October 31, 2022

ಮಾತೃಭಾಷೆಯ ಅಗತ್ಯತೆ ಎಷ್ಟಿದೆ?

ಕನ್ನಡ ರಾಜ್ಯೋತ್ಸವ ಶುಭಾಶಯಗಳು.
ಕನ್ನಡವನ್ನು ಕಟ್ಟಿ ಬೆಳೆಸಿ ಉಳಿಸಲು ನಾವು ಮಾಡಬೇಕಾಗಿರುವುದೇನು?
ಕರ್ನಾಟಕದಲ್ಲಿ  ಇದ್ದವರು ಕನ್ನಡ ಕಲಿತರೆ ಕನ್ನಡಮ್ಮನಿಗೆ ಕೊಡುವ ಗೌರವ. ತಾಯಿಗೆ ನೀಡುವ ಗೌರವದಿಂದ ತಾಯಿ ಶಕ್ತಿ ಬೆಳೆಯುತ್ತದೆ. ಹಾಗೆಯೇ ಭಾರತಾಂಬೆಯ ಒಳಗಿನ ಧರ್ಮ ಜ್ಞಾನವನ್ನು   ಸರಿಯಾಗಿ ಅರ್ಥ ಮಾಡಿಕೊಂಡು ದೇಶದೊಳಗಿದ್ದರೆ ದೇಶ ಸುರಕ್ಷಿತ. ಅದ್ವೈತ ತತ್ವದ ಪ್ರಕಾರ ಇಲ್ಲಿ ದೇಶ ಒಂದೇ  ರಾಜ್ಯವೂ ಒಂದೇ. ದೇಶದೊಳಗಿರುವ ರಾಜ್ಯಗಳಿಗೆ ಅದರದೇ ಆದ ಮೂಲ ಭಾಷೆಯಿದೆ. ಯಾವಾಗ ಇದನ್ನು ಹೊರಗಿನವರು ಬಂದು ಅಳಿಸುವ ವ್ಯಾಪಾರಕ್ಕೆ ಇಳಿಯುವರೋ ಹಾಗೆ ಯಾವಾಗ ಮೂಲದವರೆ ಇದನ್ನು ಬಿಟ್ಟು ಹೊರನಡೆಯುವರೋ ಆಗ ಅಧರ್ಮ ಬೆಳೆಯುತ್ತದೆ. ಇದನ್ನು ನಮ್ಮ ನಮ್ಮ ಮೂಲದ ಧರ್ಮ ಕರ್ಮ, ಶಿಕ್ಷಣ,ಸ್ಥಳವನ್ನು ನಾವೇ ತಿಳಿದು ಅಲ್ಲಿದ್ದೇ
ಬೆಳೆಸಬಹುದೇ ಹೊರತು ಹೊರಗೆ ಹೋಗಿ ಒಳಗಿನ ಕಸವನ್ನು ,ತಪ್ಪನ್ನು, ದೋಷವನ್ನು ಹೇಳಿಕೊಂಡು ಹರಡಿದರೆ ಸಾಧ್ಯವಿಲ್ಲದ ಮಾತು. ಸತ್ಯ ಒಳಗಿದೆ ಅದನ್ನು ಹೊರಗಿನ ಸತ್ಯದಿಂದ ಮುಚ್ಚಿಟ್ಟು  ರಾಜಕೀಯ ನಡೆಸಿದರೆ ಅಧರ್ಮ. ಹಾಗೆಯೇ  ಅವರವರ ಧರ್ಮವನ್ನು ಅವರುಗಳೇ ಒಳಗೆ ಅಳವಡಿಸಿಕೊಂಡು ಸ್ವತಂತ್ರ ಜೀವನ ನಡೆಸುವಾಗ ಮೂಲದ ಭಾಷೆ ಮಾತೃಭಾಷೆ ಅಗತ್ಯವಾಗಿದೆ. ಯಾರದ್ದೋ ಭಾಷೆಯ ಮೂಲಕ ಎಷ್ಟೇ ವಿಚಾರ ತಿಳಿದರೂ ಸಂಪೂರ್ಣ ಅರ್ಥ ಆಗದೆ ಅನೇಕ ಭಾಷೆಗಳು ಜನ್ಮತಾಳುತ್ತವೆ.ಆದರೆ ಮೂಲ ಭಾಷೆ ಹಿಂದುಳಿಯುತ್ತದೆ. ಇದು ಸರ್ವ ಕಾಲಿಕ ಸತ್ಯ. ಸರ್ವರಿಗೂ ಅನ್ವಯಿಸುವ  ಸತ್ಯ. ಶಿಕ್ಷಣದಲ್ಲಿ ಸಾತ್ವಿಕತೆ ಇಲ್ಲದೆ ರಾಜಕೀಯತೆ ಬೆಳೆಸಿ ತಾಮಸ ಗುಣವನ್ನು ಹೆಚ್ಚಿಸಿ ಆಳಿದಷ್ಟೂ ಹಿಂದುಳಿಯುವುದು ನಾವೇ ಎನ್ನುವ ಸತ್ಯ ತಿಳಿದರೆ  ಇಂದಿನ ನಮ್ಮ ಹೊರಗಿನ ಆಚರಣೆಯಲ್ಲಿ ಬದಲಾವಣೆ ತರಬಹುದು. ಆಚರಣೆಯು ಆಂತರಿಕ ಶುದ್ದಿಯ ಕಡೆಗಿದ್ದರೆ  ಜ್ಞಾನ, ಭೌತಿಕದ ತೋರುಗಾಣಿಕೆ
ಯಾದರೆ ಕರ್ -ನಾಟಕ. ನಾಟಕದ ಜೀವನದೊಳಗೊಂದು  ನಮ್ಮದೇ ನಾಟಕ  ಸೃಷ್ಟಿ ಮಾಡಿಕೊಂಡಿದ್ದರೆ  ನೋಡುಗರಿಗೊಂದು ಮನರಂಜನೆ ಆದರೆ ಅದು ನಮ್ಮ ಆತ್ಮವಂಚನೆ ಆಗದಂತಿದ್ದರೆ ಉತ್ತಮ.
ಕರ್ನಾಟಕದಲ್ಲಿ ಕನ್ನಡದ ಹೆಸರಲ್ಲಿ, ಧರ್ಮ,ಸಂಸ್ಕೃತಿ, ಭಾಷೆ ಹೆಸರಲ್ಲಿ  ಸಾಕಷ್ಟು ಕಾರ್ಯಕ್ರಮ ಗಳು ಸಂಘ ಸಂಸ್ಥೆಗಳಿಂದ ವರ್ಷ ಪೂರ್ತಿ ನಡೆಯುತ್ತಿದೆ ಆದರೂ ಯಾಕೆ  ಧರ್ಮ,
ಸಂಸ್ಕೃತಿ,  ಭಾಷೆಯ ಜ್ಞಾನವಿಲ್ಲದೆ ಯುವಕರು ಹೊರ 
ನಡೆದಿದ್ದಾರೆ? ದಾರಿತಪ್ಪುತ್ತಿದ್ದಾರೆ? ಅಧರ್ಮ ಬೆಳೆದು ಭ್ರಷ್ಟಾಚಾರ ಹೆಚ್ಚಾಗಿದೆ? ಉತ್ತರ  ಕಾರ್ಯಕ್ರಮ,ಉತ್ಸವ  ನಡೆಸೋರು ತಿಳಿಸೋದು, 'ಸರ್ಕಾರ ಸರಿಯಿಲ್ಲ 'ಎಂದು. 
ಸರ್ಕಾರ ಎಂದರೇನು? ಸಹಕಾರವಲ್ಲವೆ? ಹಾಗಾದರೆ ಯಾರ ಸಹಕಾರ ಸರಿಯಿಲ್ಲ? ಮಕ್ಕಳ ಸಹಕಾರವಿಲ್ಲವಾದರೆ ಅವರಿಗೆ ನೀಡಿದ ಶಿಕ್ಷಣ ಸರಿಯಿಲ್ಲವೆಂದರ್ಥ. ಅವರಿಗೆ ನೀಡದ ಸಂಸ್ಕಾರವೇ ಕಾರಣ ಸಂಸ್ಕಾರ  ಕಲಿಸಲು ಪೋಷಕರಲ್ಲಿರಬೇಕು . ಪೋಷಕರಿಗೇ ಅಂತಹ ಶಿಕ್ಮೂಷಣ ಸಿಗಲಿಲ್ಲಲವೆಂದರೆ ಹೊರಗಿನ ಗುರುಗಳು ಅಂತಹ ಶಿಕ್ದಷಣ ನೀಡುವುದು ಧರ್ಮ ವಾಗಿತ್ತು. ದೇಶದ ತುಂಬಾ ದೇವಸ್ಥಾನವಿದೆ ದೈವತ್ವದ ಶಿಕ್ಷಣವಿಲ್ಲವಾದರೆ ಹೇಗೆ? ಧರ್ಮ ಕರ್ಮ ಭಾಷೆ,ಸಂಸ್ಕೃತಿ ಬಗ್ಗೆ ಮನೆಯೊಳಗೇ ಶಿಕ್ಷಣ ನೀಡದೆ ಹೊರಗಿನ ಪರಕೀಯರ ಶಿಕ್ಷಣ ನೀಡಿರುವಾಗ ಒಳಗೆ ಹಾಕಿದ ವಿಚಾರವೇ ದೇಹವನ್ನು ದೇಶವನ್ನು,ರಾಜ್ಯವನ್ನು ಆಳುತ್ತಿದೆ.
ಇಷ್ಟು ಸಾಮಾನ್ಯಜ್ಞಾನ ನಮಗಿದ್ದರೆ ನಮ್ಮ ಸಹಕಾರದ ಪ್ರತಿ ಫಲವೇ ಇಂದಿನ ಸ್ಥಿತಿಗೆ ಕಾರಣವಾದಾಗ ನಾವೇ ಕಾರಣ.
ನಮ್ಮ ಜೀವ ಒಳಗಿದೆ. ಜೀವ ರಕ್ಷಣೆ ಸರ್ಕಾರ ಮಾಡುವುದೆ?
ನಮ್ಮ ಜ್ಞಾನ ಒಳಗಿದೆ ಅದಕ್ಕೆ ಪೂರಕದ ಶಿಕ್ಷಣ ನೀಡುವುದು ನಮ್ಮ ಧರ್ಮ ಕರ್ಮ. ಇದಕ್ಕೆ ನಮ್ಮದೇ ವಿರೋಧವಿದ್ದರೆ ಸರ್ಕಾರ ಕಾರಣವೆ? ನಮ್ಮವರನ್ನೇ ನಾವು ಮನೆಯಿಂದ ಹೊರ ಕಳಿಸುತ್ತಾ ಹೊರಗಿನವರನ್ನು ಸ್ವಾಗತಿಸಿದರೆ ಹೊರಗಿನವರೆ ನಮ್ಮನ್ನು ಆಳುತ್ತಾರಲ್ಲವೆ? ಜನ್ಮಕ್ಕೆ ಕಾರಣ ಹಿಂದಿನ ಜನ್ಮದ ಋಣ ಹಾಗು ಕರ್ಮ. ಯಾವ ಕುಟುಂಬ
ದಲ್ಲಿ, ಸ್ಥಳದಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಜೀವ ಹುಟ್ಟಿದೆಯೋ ಅದರ ಬಗ್ಗೆ ಸರಿಯಾಗಿ ತಿಳಿದು ಅದರ ಋಣ ತೀರಿಸುವ ಜ್ಞಾನ ಪಡೆದರೆ ಅಲ್ಲಿಯೇ ಮುಕ್ತಿ ಪಡೆಯಬಹುದು. ಇದು ಹಿಂದಿನ ಕಾಲದಲ್ಲಿದ್ದ  ವ್ಯವಸ್ಥಿತ ಕುಟುಂಬ ಪದ್ದತಿ. ಅದರಿಂದ ಹೊರಬಂದು ಹೊರಗಿನ ಅವ್ಯವಸ್ಥೆ ಯನ್ನು  ಎಷ್ಟೇ ತಿದ್ದಲು ಹೋದರೂ ಇನ್ನಷ್ಟು ಸಮಸ್ಯೆಗಳೇ ಬೆಳೆಯೋದಲ್ಲವೆ? 
ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದಿರುವ ದಾಸಶರಣರ ತತ್ವಜ್ಞಾನವನ್ನು ‌ನಾವು ತಂತ್ರದಿಂದ ತಿಳಿದು ಸ್ವತಂತ್ರ ಜೀವನ ನಡೆಸುತ್ತಿದ್ದವರನ್ನೂ ಅತಂತ್ರಸ್ಥಿತಿಗೆ ಎಳೆದು ಆಳಿದರೆ ನಮ್ಮ ಸ್ಥಿತಿಗೆ  ನಮ್ಮ ರಾಜಕೀಯವೇ ಕಾರಣವಲ್ಲವೆ? ಇಲ್ಲಿ ರಾಜಕೀಯ ಬೆಳೆದಿರೋದು ನಮ್ಮ ಸ್ವಾರ್ಥ ಅಹಂಕಾರದಿಂದ
ಇದೇ ನಮ್ಮ ಶತ್ರುವಾದಾಗ ಹೊರಗಿನಿಂದ ಎಷ್ಟೇ ಶತ್ರುಗಳ ನಾಶ ಮಾಡೋದಕ್ಕೆ  ನಮಗೆ ಸಾಧ್ಯವಿಲ್ಲ. ನಮ್ಮವರನ್ನೇ ನಾವು ದ್ವೇಷಿಸುವಾಗ ಹೊರಗಿನವರಿಗೆ ಇನ್ನಷ್ಟು ಶಕ್ತಿ ನಾವೇ ಕೊಡುತ್ತಿದ್ದೇವೆ. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಬಾಳುವುದಕ್ಕಾಗಿ ಭೂಮಿಗೆ ಬಂದ ಜೀವಕ್ಕೆ ಸರಿಯಾದ ಶಿಕ್ಷಣ ನೀಡದೆ ಆಳಿ ಅಳಿಸಿದವರೆ ಆಳಾಗಿ ಮತ್ತೆ ಮತ್ತೆ ಜನ್ಮ ತಾಳುವುದನ್ನು ತಪ್ಪಿಸಲು ರಾಜಯೋಗದ ಶಿಕ್ಷಣದ ಅಗತ್ಯವಿದೆ.
ರಾಜಯೋಗ ಎಂದರೆ ನಮ್ಮನ್ನು ನಾವು ಸರಿಯಾಗಿ ತಿಳಿದು ಬದಲಾಯಿಸಿಕೊಂಡು ಬದುಕೋದಷ್ಟೆ. ಜೀವನ  ಶಾಶ್ವತವಲ್ಲ ಜೀವವೂ ಶಾಶ್ವತವಲ್ಲ.
ಆತ್ಮಜ್ಞಾನ ಶಾಶ್ವತ.ಆತ್ಮಜ್ಞಾನಕ್ಕೆ ಮೂಲದ ಧರ್ಮ, ಸಂಸ್ಕೃತಿ, ಭಾಷೆಯ ಶಿಕ್ಷಣದ ಅಗತ್ಯವಿತ್ತು. ಇದೀಗ ವ್ಯವಹಾರಿಕ ರೂಪ ಪಡೆದು ರಾಜಕೀಯವಾಗಿ ಬೆಳೆದು ದೇಶ ವಿದೇಶದೆಡೆಗೆ ಪ್ರಚಾರಕ್ಕೆ ಸೀಮಿತವಾಗಿದ್ದರೆ ಸ್ವದೇಶ
ದೊಳಗಿದ್ದು ಬೆಳೆಸೋರು ಯಾರು?
ದೇಶದಿಂದ ರಾಜ್ಯದಿಂದ ಸಾಕಷ್ಟು ಹಣ,ಹೆಸರು,ಸ್ಥಾನ
,ಅಧಿಕಾರ ಪಡೆದರೂ ಅದರ ಋಣ ತೀರಿಸುವ ಜ್ಞಾನವಿಲ್ಲವಾದರೆ  ವ್ಯರ್ಥ. ಇದೇ ಇಂದಿನ ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪು ಎನ್ನುವವರೆ ಹೆಚ್ಚು.
ಕಾರಣವಿಷ್ಟೆ ಸಾಧನೆ ಭೌತಿಕದಲ್ಲಿ ಬೆಳೆದಿದೆ ಅಧ್ಯಾತ್ಮ ಸಾಧನೆ
ಕುಸಿದಿದೆ.ಓದಿ ತಿಳಿದವರಿಗೆ  ಅಳವಡಿಸಿಕೊಳ್ಳಲು ಕಷ್ಟ.
.ಅಳವಡಿಸಿಕೊಂಡವರನ್ನು ಓದಿದವರು ಸಹಕರಿಸೋದಿಲ್ಲ. ನಮ್ಮ ಜೀವನ ಶೈಲಿಯೇ ಆಧುನಿಕತೆಯ ವಶದಲ್ಲಿರುವಾಗ 
ಅಧ್ಯಾತ್ಮ  ಚಿಂತನೆ ಕಷ್ಟ. ಒಟ್ಟಿನಲ್ಲಿ ಕನ್ನಡ ಭಾಷೆಯಾಗಲಿ ಇತರ ಭಾಷೆಯಾಗಲಿ ಅದರ ಜನ್ಮಸ್ಥಳದಲ್ಲಿ ಬೆಳೆಸದೆ
 ಹೊರಗೆ ಹರಡಿದರೆ ಶಕ್ತಿಹೀನವಾಗುತ್ತದೆ.ಅದರ ಅಂತರ
ದಲ್ಲಿ ಪರಭಾಷೆಗಳು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿ
ಕೊಂಡರೂ ಅಧರ್ಮಕ್ಕೆ ತಕ್ಕಂತೆ ಪ್ರತಿಫಲವಿದೆ.ಇಲ್ಲಿ ಯಾರೂ ಸ್ವತಂತ್ರ ರಲ್ಲ.ಅವರವರ ಮೂಲವನ್ನರಿತರೆ ಒಳಗೆ ಸ್ವತಂತ್ರ ಜ್ಞಾನವಿದೆ. ಅದರಿಂದ ನಿಜವಾದ ಸ್ವತಂತ್ರ ಜೀವನ ಅಡಗಿದೆ.ಹಿಂದೂ ಧರ್ಮವನ್ನು ಓದಿಕೊಂಡು ತಿಳಿಯ
ಲಾಗದು. ಅಳವಡಿಸಿಕೊಂಡು ಅನುಭವದಿಂದ ತಿಳಿದರೆ  ಮಾನವ ಮಹಾತ್ಮರಾಗಬಹುದಷ್ಟೆ. ಯುಗಯುಗದಿಂದಲೂ  ಈ ಭೂಮಿಯ ಮೇಲೆ ನಡೆದು ಬಂದ ಮನುಕುಲಕ್ಕೆ  ತತ್ವಜ್ಞಾನದಿಂದ ಸ್ವತಂತ್ರ ಸಿಕ್ಕಿದೆ.ತಂತ್ರಜ್ಞಾನದ ಯುಗದಲ್ಲಿ ನಾವು ಸತ್ಯ ಹುಡುಕಿದರೆ ಸಿಗೋದಿಲ್ಲ. ಸತ್ಯ ಒಳಗಿದೆ ಮಿಥ್ಯ ಹೊರಗಿದೆ.ಬದಲಾವಣೆ ಜಗದ ನಿಯಮ.ನಾವು ಬದಲಾಗದೆ ಪರರನ್ನು ಬದಲಾಯಿಸಲಾಗದು. ನಮ್ಮದೇ ಭ್ರಷ್ಟಾಚಾರದ ಹಣದಲ್ಲಿ ಮಕ್ಕಳಿಗೆ ಶಿಷ್ಟಾಚಾರದ ಶಿಕ್ಷಣ ನೀಡಲು ಸಾಧ್ಯವೆ?
ಋಣ ಎಂದರೆ ಸಾಲ, ಕರ್ಮ ಎಂದರೆಕೆಲಸ ಕಾಯಕ ಎಂದಾಗ ಸತ್ಕರ್ಮದಿಂದ,ಸ್ವಧರ್ಮದಿಂದ,ಸತ್ಯದಿಂದ, ನ್ಯಾಯ,ನೀತಿ,ಸಂಸ್ಕೃತಿ ಸದಾಚಾರದಿಂದ  ಋಣ ಮುಕ್ತರಾಗಲು ಅಂತಹ ಜ್ಞಾನದ ಅಗತ್ಯವಿದೆ.ಜ್ಞಾನ ನೀಡದೆ ಆಳಿದರೆ ಅಧರ್ಮ ವೇ ಬೆಳರಯೋದಷ್ಟೆ. ಇಲ್ಲಿ ನಾಟಕ
ವಿದ್ದರೂ ಅದರಲ್ಲಿ ಉತ್ತಮ ಪಾತ್ರವಿದ್ದು ಜನರನ್ನು ಸನ್ಮಾರ್ಗದಲ್ಲಿ ನಡೆಸುವಂತಿದ್ದರೆ ಉತ್ತಮ. ಅದು ಬಿಟ್ಟು ನಮ್ಮ ಸ್ವಾರ್ಥ ಸುಖಕ್ಕಾಗಿ  ಅಧರ್ಮ, ಅನ್ಯಾಯ, ಅಸತ್ಯ ಹಿಂಸೆ,ಭ್ರಷ್ಟಾಚಾರ ವೇ ಜನರೊಳಗೆ ತುಂಬುವ ಪ್ರಯತ್ನದಲ್ಲಿ
ಕೇವಲ ಹಣಸಂಪಾದನೆಗೆ ತೊಡಗಿಸಿಕೊಂಡರೆ  ಒಮ್ಮೆ ಹೆಣ ಆಗೋದು ಸತ್ಯ. ಆದರೆ ಮಹಾತ್ಮರಾಗದೆ ಹೋದರೆ ಅದೇ ಮುಂದೆ ಪ್ರೇತಾತ್ಮವಾಗಿ,ಭೂತ,ದೆವ್ವಗಳಾಗಿ ಕಾಡುವುದಲ್ಲವೆ? ದೆವ್ವ ಭೂತ,ದೇವರು ......ಇರುವುದೆ? 
ಕೆಲವರಿಗೆ ಅಗೋಚರ ಶಕ್ತಿ ಕಾಣೀದಿಲ್ಲ.ಕೆಲವರಿಗೆ ಕಂಡರೂ ತೋರಿಸಲಾಗದು. ಹೀಗಾಗಿ ಕಣ್ಣಿಗೆ ಕಂಡದ್ದೇ ಸತ್ಯವೆಂಬ ಭ್ರಮೆಯಲ್ಲಿ ನಾನೇ ದೇವರು ಎಂದು ಮಾನವ ಮುಂದೆ ನಡೆದು ದೈವತ್ವ ಕಳೆದುಕೊಂಡು  ಮೂಲವನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದಾಗಿದೆ. ಶಾಶ್ವತ ಯಾವುದು?
ಭೂಮಿಯ ಮೇಲಿರೋವಾಗ ಭೂ ತತ್ವ ,ರಾಜ್ಯದೊಳಗಿನ
ಧರ್ಮ,ಸಂಸ್ಕೃತಿ, ಭಾಷೆ,ದೇಶದ ಮೂಲ ಶಿಕ್ಷಣವನ್ನು  ಯಾರೂ ಆಳಬಾರದಷ್ಟೆ. ಆಳಿದವರು ಅಳುವುದಂತೂ ಸತ್ಯ.
ಕಾರಣ ಆಶ್ರಯ ಕೊಟ್ಟವರನ್ನು ಆಳುವ ಅಧಿಕಾರ ಮಾನವ ಪಡೆದಿಲ್ಲವಲ್ಲ. ಇದನ್ನು  ಆ ಆ ಮೂಲ ತಿಳಿದು ನಡೆದವರೆ ತಿಳಿದು ತಿಳಿಸಿರುವುದಾಗಿದೆ. ವಿದೇಶದೊಳಗೆ ದೇಶವಿದೆ. ಅದ್ವೈತ ದೊಳಗೆ ದ್ವೈತವಿದೆ, ಅಧರ್ಮದೊಳಗೆ ಧರ್ಮ ಸೇರಿದೆ, ಅಜ್ಞಾನದೊಳಗೇ ಜ್ಞಾನ ಸಿಕ್ಕಿಹಾಕಿಕೊಂಡಿದೆ ಕಾರಣ
ಮಾನವ ತನ್ನೊಳಗಿರುವ ಸತ್ಯ ಬಿಟ್ಟು ಹೊರಗಿನ ಸತ್ಯದ ಹಿಂದೆ ನಡೆದಿರೋದಷ್ಟೆ. ನಾನೇ ನನ್ನ ಅರ್ಥ ಮಾಡಿಕೊಳ್ಳಲು ಸೋತಿರುವಾಗ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಕಷ್ಟ.ಅದಕ್ಕೆ ಪರದೇಶ,ಪರಧರ್ಮ, ಪರಭಾಷೆ ಪರಕೀಯರು
ಬೆಳೆದು ಪರತಂತ್ರದಲ್ಲಿ  ಸ್ವತಂತ್ರ  ಕಳೆದುಕೊಂಡಿರೋದು. ಇಲ್ಲಿ ಸತ್ಯ ಕಠೋರವೆನಿಸಿದರೂ ಸತ್ಯವೇ ದೇವರು. ದೈವತ್ವ ತತ್ವದಿಂದ ಬೆಳೆಯುತ್ತದೆ ತಂತ್ರದಿಂದ ಅಳಿಯುತ್ತದೆ. 
ನಾವೇನೂ ಬೆಳೆಸಿಲ್ಲ,ಬೆಳೆಸಲಾಗಿಲ್ಲ ಪರವಾಗಿಲ್ಲ ಕೊನೆಪಕ್ಷ ಅಳಿಸುವ ಕೆಲಸಕ್ಕೆ ಸಹಕರಿಸದಿದ್ದರೆ ಉತ್ತಮ. ನಮ್ಮ ಸಹಕಾರವೇ ಎಲ್ಲಾ  ಸಮಸ್ಯೆಗಳಿಗೆ ಕಾರಣ. ಯಾರ ಋಣ ಯಾರೋ ತೀರಿಸಲಾಗದು.ಯಾರದ್ದೋ ಧರ್ಮವನ್ನು ಯಾರೋ ಉಳಿಸಲಾಗದು.ಯಾರದ್ದೋ ದೇಶದ ಸಾಲವನ್ನು ಯಾರೋ ಬಂದು ತೀರಿಸಲಾಗದು. ಹೀಗಾಗಿ ನಮ್ಮ ಜೀವದ ಋಣವನ್ನು  ನಾವೇ ಸತ್ಕರ್ಮದಿಂದ ತೀರಿಸಲು ಮೂಲ
ದೆಡೆಗೆ ನಡೆದರೆ ಇದ್ದಲ್ಲಿ ಜ್ಞಾನೋದಯವಾಗಿ ಶಾಂತಿ ತೃಪ್ತಿ, ಮುಕ್ತಿ ಸಿಗುತ್ತದೆ ಎನ್ನುವುದೇ ಹಿಂದಿನವರ ನಡೆ ನುಡಿಯ ತತ್ವವಾಗಿತ್ತು. 
ಧರ್ಮ ರಕ್ಷಕರು ರಾಜಕೀಯ ವ್ಯಕ್ತಿಗಳ ಹಿಂದೆ ನಿಂತು ಬೇಡೋ ಪರಿಸ್ಥಿತಿ ಬರಬಾರದು.ಅವರ ಜ್ಞಾನವನ್ನು ರಾಜಕೀಯ ವ್ಯಕ್ತಿಗಳು ಸದ್ಬಳಕೆ ಮಾಡಿಕೊಂಡು ಸರ್ಕಾರ ನಡೆಸಲು ಪ್ರಜೆಗಳಿಗೆ ಸರಿಯಾದ ಶಿಕ್ಷಣ ನೀಡುವುದಷ್ಟೆ ಈಗ ಮುಖ್ಯವಾಗಿದೆ. ಇದೊಂದು  ಸಾಮಾನ್ಯಜ್ಞಾನದ ಸಾಮಾನ್ಯ
ಪ್ರಜೆಯ  ವಿಚಾರವಾಗಿದೆ .ಇದನ್ನು ಜನಸಾಮಾನ್ಯರೆ ವಿರೋಧಿಸಿದರೆ ಸಿಗೋದು ಜ್ಞಾನವಲ್ಲ ಅಜ್ಞಾನವಷ್ಟೆ.ಅಜ್ಞಾನದಲ್ಲಿ ಯಾರಿಗೂ ಜೀವನ್ಮುಕ್ತಿ ಪಡೆದಿಲ್ಲವಲ್ಲ? ಎಲ್ಲಿಗೆ ಹೊರಟಿದೆ ರಾಜ್ಯ ದೇಶದ ಆಚರಣೆ?
ಒಳಗಿನ ಶುದ್ದಿಯ ಕಡೆಗೆ ಇದ್ದರೆ ಉತ್ತಮ ಪ್ರಗತಿ ಸಾಧ್ಯ.
ಇಂತಹ ಲೇಖನಗಳು ಸಾಧ್ಯವಾದಷ್ಟು ಜನಸಾಮಾನ್ಯರು ಹಂಚಿಕೊಳ್ಳಬೇಕಿತ್ತು.ವಿಪರ್ಯಾಸವೆಂದರೆ ಇತ್ತೀಚೆಗೆ  ಮುಖ ಚಿತ್ರವೇ  ಮುಖ್ಯವಾಗಿ ಮುಖನೋಡಿ ಮಣೆಹಾಕುವವರ ಸಂಖ್ಯೆ ಬೆಳೆದು ಸತ್ಯ ಮುಚ್ಚಿಹೋಗುತ್ತಿದೆ. ಬೂದಿಮುಚ್ಚಿದ ಕೆಂಡದೊಳಗೆ ಕಾಲಿಟ್ಟು ಸುಟ್ಟ ಮೇಲೇ ಬುದ್ದಿ ಕಲಿಯ
ಬೇಕಿದೆ.  ಸತ್ಯ ಕಠೋರವಾಗುವುದು ಅದನ್ನು ತಡೆದು ನಿಲ್ಲಿಸಿದಾಗಷ್ಟೆ. ನಮ್ಮ ಸತ್ಯಕ್ಕೆ ನಾವು ತಲೆಬಾಗಿದರೆ ಅದೇ ಧರ್ಮದೆಡೆಗೆ ನಡೆಸುತ್ತದೆ. ಧರ್ಮದೆಡೆಗೆ ನಡೆದಂತೆಲ್ಲಾ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗುತ್ತದೆ. ಇದು ಹೊರಗಿಲ್ಲ ಒಳಗೇ ಇದೆ. ನಮ್ಮ ಕಾಲುಬುಡವಿದೆ.ನಡೆಯಬೇಕಷ್ಟೆ.
ಕೈ ಕೆಸರಾದರೆ ಬಾಯಿ ಮೊಸರು ಎಂದರು. ಆದರೆ ಇಂದಿನ‌ಕೈ
ಕೆಸರಲ್ಲಿದ್ದ ಕಮಲವನ್ನು ನೇರವಾಗಿ ಕಿತ್ತು ಲಕ್ಮಿ ಪೂಜೆ ಮಾಡಿ ಮೈಯನ್ನು ಸರಿಯಾಗಿ ತೊಳೆದುಕೊಳ್ಳದೆ  ಶುದ್ದವೆನ್ನುವ ಭ್ರಮೆಯಲ್ಲಿ ರಾಜಕೀಯ ನಡೆಸುತ್ತಾ ಸ್ವಚ್ಭಭಾರತದಲ್ಲಿ  ತಂತ್ರಜ್ಞಾನವನ್ನು  ಬೆಳೆಸುತ್ತಾ ಹೊರಗೆ ನಡೆದರೆ ಮೂಲದ ತತ್ವ ತಿಳಿಯಲಾಗದೆ ಅಜ್ಞಾನದ ಅಮಲಿನಲ್ಲಿಯೇ ಜೀವ ಹೋಗುತ್ತದೆ. ಸತ್ಯವನ್ನು ಎಷ್ಟೇ ತಿರುಚಿದರೂ ಇರೋದು ಒಂದೇ ಸತ್ಯ,ತತ್ವ,ಭೂಮಿ,ದೇಶ,ರಾಜ್ಯ,ಧರ್ಮ, ಜಾತಿ ದೇವರು .ಇದನ್ನು ಮಹಾತ್ಮರುಗಳು ಆತ್ಮಜ್ಞಾನದಿಂದ ತಿಳಿದರು.ವಿಜ್ಞಾನ ಜಗತ್ತಿನಲ್ಲಿ ಇದನ್ನು ಒಪ್ಪದಿದ್ದರೂ ಸತ್ಯ ಸತ್ಯವೇ ಮಿಥ್ಯ ಮಿಥ್ಯವೇ ಅಲ್ಲವೆ? 
ದೇಶ ವಿದೇಶ ಮಾಡೋದು ಅಧರ್ಮ. ಮಂತ್ರ,ತಂತ್ರ,ಯಂತ್ರಗಳಿಂದ  ಸ್ವತಂತ್ರ ಜ್ಞಾನ ಬೆಳೆಯಬೇಕು.ಸಾಧ್ಯವೆ? ಸದ್ಬಳಕೆ ಮಾಡಿಕೊಂಡರೆ ಸಾಧ್ಯ.
ಜ್ಞಾನವನ್ನು ಹಂಚಿಕೊಳ್ಳಲು ರಾಜಯೋಗ ಬೇಕು. ರಾಜಕೀಯಕ್ಕೆ  ಬಳಸಿದಷ್ಟೂ  ಅಜ್ಞಾನ ಬೆಳೆಯುತ್ತದೆ.

Sunday, October 30, 2022

ತಪ್ಪು ಮಾಡದೆ ಸುಳ್ಳಾಡದೆ ಇರೋರು ಯಾರು?

ತಪ್ಪು ಮಾಡದವರಿದ್ದಾರೆಯೆ?
ಸುಳ್ಳು ಹೇಳದವರಿದ್ದಾರೆಯೆ? 
ಮಾನವನ ಜನ್ಮಕ್ಕೆ ಕಾರಣವೆ ಇದಾಗಿರುವಾಗ ಇದನ್ನು ಬಿಟ್ಟು ಜೀವನ‌ ನಡೆಸಿದವರಿದ್ದಾರೆಯೆ?
ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಅಸತ್ಯಗಳು  ಜೀವನದ ಅಂಗವಾಗಿ  ಅದನ್ನು ಸರಿಪಡಿಸಿಕೊಂಡು ಮುಂದೆ ನಡೆಯುವುದು ಸಹಜ. ಎಲ್ಲಿಯವರೆಗೆ ತಪ್ಪು ತಿದ್ದಿಕೊಳ್ಳಲು
ಆಗದೆ ಅಸತ್ಯವನ್ನು ಬಂಡವಾಳವಾಗಿಟ್ಟುಕೊಂಡು ಜೀವನ ನಡೆಸುವರೋ ಅಲ್ಲಿಯವರೆಗೆ  ಈ ನಾಟಕದ ಜೀವನದ ಸತ್ಯ ತಿಳಿಯಲು ಕಷ್ಟ. ನಮ್ಮ ತಪ್ಪು  ನಮಗೆ ತಿಳಿಯದಿದ್ದರೂ ತಿಳಿಸುವವರು ಇರುತ್ತಾರೆ. ಅವರೆ  ನಿಜವಾದ ಗುರು. 
ತಾಯಿ,ತಂದೆ,ಬಂಧು ಬಳಗ,ಸ್ನೇಹಿತರುಗಳಿಂದ ಸಾಕಷ್ಟು  ಕಲಿಯಬಹುದು  ಆದರೆ  ನಮ್ಮ ತಪ್ಪನ್ನು  ತಿಳಿಸಿ ಹೇಳುವ  ಹೊರಗಿನವರಿಂದ ತಪ್ಪು ತಿದ್ದುವ ಕೆಲಸ ಮಾಡಲಾಗದು. ಕಾರಣ, ತಪ್ಪು ಕಾಣುವುದು ತಪ್ಪು ಮಾಡಿದವರಿಗಷ್ಟೆ. ಮಕ್ಕಳ ತಪ್ಪು  ಪೋಷಕರಿಗೆ ಕಂಡರೂ ಅದೇ ತಪ್ಪು ನಾವು
ಮಾಡುತ್ತಿದ್ದರೆ  ಮಕ್ಕಳು ಸರಿಯಾಗೋದಿಲ್ಲ.ಮೂಲವನ್ನು
ಅರ್ಥ ಮಾಡಿಕೊಂಡರೆ ಅಲ್ಲಿ ಸರಿಪಡಿಸಿದರೆ‌ ತಪ್ಪು ಬೆಳೆಯೋದಿಲ್ಲ. ನಾವೆಲ್ಲರೂ ತಪ್ಪಿರೋದೆಲ್ಲಿ? ಎಂದಾಗ ಶಿಕ್ಷಣದಲ್ಲಿ  ಎನ್ನುವ ಉತ್ತರಕ್ಕೆ ಅನೇಕರ ವಿರೋಧವಿದ್ದರೂ
ಸತ್ಯ ಒಂದೇ. ಆ ಒಂದೇ ಸತ್ಯದೆಡೆಗೆ ತಿರುಗಿ ಬರೋವರೆಗೆ
ತಪ್ಪು ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಜಕೀಯದ ಕುಂಟು ನೆಪಗಳೂ ಬೆಳೆಯುತ್ತಾ ಕೊನೆಯಲ್ಲಿ ಪಶ್ಚಾತ್ತಾಪ ಪಟ್ಟರೂ ಹಿಂದಿರುಗಲಾಗದೆ ಜೀವ ಹೋಗುತ್ತದೆ.
ಸತ್ಯವು ನಿಧಾನವಾಗಿ  ಎದುರು ಬರುವಾಗ ಅಸತ್ಯವು ತನ್ನ ಪ್ರಭಾವದಿಂದಾಗಿ  ಇಡೀ ಜಗತ್ತನ್ನು ಆಳಲು ಹೋಗಿ ಸೋತು ಹೋಗಿರುತ್ತದೆ. ಮಾನವನಿಗೆ ಅಸತ್ಯ ಪ್ರಿಯವಾಗಲು ಕಾರಣ
ಅವನ ತಪ್ಪುಗಳನ್ನು  ಅದು ಮುಚ್ಚಿಡುತ್ತದೆ. ಮುಚ್ಚಿಟ್ಟರೂ ಆತ್ಮರಕ್ಷಣೆಗೆ ಸತ್ಯವೇ ಬೇಕು ಎನ್ನುವ ಜ್ಞಾನವಿದ್ದರೆ ಸತ್ಯದ ದಾರಿ ಹಿಡಿಯುತ್ತಾನೆ. 

** ತಪ್ಪು ಮಾಡಿದಾಗಲಷ್ಟೇ ನಮಗೆ ನೆಪಗಳು, ಸಮರ್ಥನೆಗಳು ಬೇಕಾಗುತ್ತವೆ. ಪ್ರಾಮಾಣಿಕವಾಗಿದ್ದಾಗ ಅವ್ಯಾವುಗಳ ಅವಶ್ಯಕತೆಯೇ ಇರುವುದಿಲ್ಲ. ಎಲ್ಲ  ಬೇಕೆಂಬ ಆಸೆಯಿಂದ ಶುರುವಾಗಿ,ಕೊನೆಗೆ ಏನು ಬೇಡವೆಂದು ಕೋರಿಕೊಳ್ಳುವುದೇ ಜೀವನ.*

** ನಿನ್ನೆಯವರೆಗೆ ಕಲಿತ ಪಾಠಗಳನ್ನೆಲ್ಲ ಮನನ ಮಾಡಲು ಇಂದು ಸರಿಯಾದ ಸಮಯ . ನಾಳೆಗಳನ್ನು ಎದುರಿಸಲು ಅದು ಸಹಾಯವಾಗುತ್ತದೆ. 🙏

🙏 ಅತ್ಯಂತ ಪ್ರಾಮಾಣಿಕರಾಗಿ ಇರುವುದೂ ಅಪಾಯಕಾರಿ. ನೇರವಾದ ಮರವೇ ಮೊದಲು ನೆಲಕ್ಕುರುಳುವುದು. ನಂತರ ಡೊಂಕು ಮರದ ಸರದಿ. ಸಜ್ಜನರ ಸಹವಾಸ, ಸುಗಂಧ ದ್ರವ್ಯಗಳ ಅಂಗಡಿಗೆ ಹೋದಂತೆ. ಅಲ್ಲಿ ನಾವು ಕೊಂಡುಕೊಳ್ಳದಿದ್ದರೂ ಪರಿಮಳದ ಸುವಾಸನೆ ಸಿಗುತ್ತದೆ.**

*ಬೇರೆಯವರಿಗೆ ಒಳಿತಾಗಲಿ ಅಂತಾ ಸದಾ ಹಂಬಲಿಸೋರಿಗೆ ಬರಸಿಡಿಲು ಬಂದರೆಗಿದಾಗ ಯಾವುದೇ ವ್ಯಕ್ತಿ ಮಾನಸಿಕವಾಗಿ ಕುಗ್ಗುತ್ತಾನೆ. ಆಗ ಆತನ ಆತ್ಮವಿಶ್ವಾಸವೇ ಅವನಿಗೆ ಶ್ರೀರಕ್ಷೆ.🙏

*ಶ್ರೇಷ್ಠರಾಗುವುದಕ್ಕೆ ಪ್ರಯತ್ನಿಸಬೇಕು. ಆದರೆ ಬೇರೆಯವರನ್ನು ಕುಬ್ಜರಾಗಿಸುವ ಮೂಲಕ ಯಾರೂ ಶ್ರೇಷ್ಠರಾಗಲಾರರು ಎಂಬುದನ್ನು ನೆನಪಿಡಬೇಕು. ***

*ಜೀವನದಲ್ಲಿ ಎದುರಾಳಿ ಇದ್ದರೆ ಚೆಂದ ಅದು ನಮಗೆ ಸಮನಾದ ಪ್ರತಿಸ್ಪರ್ದಿ  ಇದ್ದರೆ ಇನ್ನೂ ಚೆಂದ. ಎದುರಾಳಿ ಇದ್ದರೇನೆ ಜೀವನದಲ್ಲಿ ಒಂದು ಮಜಾ, ಲಯ  ,ಸ್ಪೂರ್ತಿ ಹುಟ್ಟೋದು ಗೆಲ್ಲಲ್ಲೇಬೇಕೆಂಬ  ಛಲ, ಹುಮ್ಮಸ್ಸು  ಗಟ್ಟಿಗೊಳ್ಳುವುದು ಮತ್ತು ಮನಸ್ಸು ಏಕಾಗ್ರತೆಗೊಂಡು ಕಠಿಣ ಪರಿಶ್ರಮಕ್ಕೆ  ನಾಂದಿ ಹಾಡುವುದು. ಆದುದರಿಂದ ಯಾವಾಗಲೂ ನಮ್ಮ ಪ್ರತಿಸ್ಪರ್ಧಿಯನ್ನು ಗೌರವಿಸಬೇಕು***

🙏ಬೇರೆಯವರನ್ನು ಮೆಚ್ಚಿಸಲು ನೀನು ಎಂದಿಗೂ ಜೀವಿಸಬೇಡ. ಯಾಕೆಂದರೆ ಪ್ರತಿಯೊಬ್ಬರ ಅಭಿಪ್ರಾಯಗಳು ಸಂದರ್ಭಕ್ಕನುಸಾರ ಹೇಗೆ ಬದಲಾಗುತ್ತದೆ. ಬದುಕು ವರ್ಣಮಯವಾಗಿರಬೇಕೆ ಹೊರತು,ಇಡಿ ಜೀವನ ನಾಟಕೀಯವಾಗಿರಬಾರದು. 

ಹೊಟ್ಟೆಪಾಡಿಗಾಗಿ ರಾಜನ ವೇಷ ಹಾಕಿ ನಟಿಸಬಹುದು.ಆದರೆ ನಾನೇ ರಾಜನೆಂದು ಬದುಕಲಾಗದು.
ಹಾಗೇನಾದರೂ  ಹೇಳಿಕೊಂಡರೆ ತಪ್ಪು ಅಸತ್ಯ ಎರಡೂ ಹೆಚ್ಚುತ್ತದೆ. 
ನಾಟಕದೊಳಗೊಂದು ನಾಟಕವಾಡಿ ತಾನೊಬ್ಬ ಶ್ರೀಮಂತ, ರಾಜ,ಮಹಾತ್ಮ,ದೇವರು, ಸಾದು,ಸಂತ,ಸಂನ್ಯಾಸಿ, ಜ್ಞಾನಿ
ಎನ್ನುವವರ ಹಿಂದಿನ ನಾಟಕೀಯ ಗುಣ ಸ್ವಭಾವ ತಕ್ಷಣ ಕಾಣದಿದ್ದರೂ , ನಿಜ ಜೀವನದಲ್ಲಿಯೂ  ಅದೇ ರೀತಿ ನಡೆಯಲಾಗದೆ ತಪ್ಪನ್ನು ಮಾಡಿದರೂ‌  ಅಜ್ಞಾನಿಗಳು ಕ್ಷಮಿಸಬಹುದು ದೇವರಲ್ಲ. 

ಗೊಂಬೆಯಾಟವಯ್ಯಾ ಆ ದೇವನಾಡುವ ಗೊಂಬೆಯಾಟವಯ್ಯಾ
ನಿನ್ನ ಆತ್ಮ ಸಾಕ್ಷಿಯನ್ನು ಬದಿಗಿಟ್ಟು ಜೀವಿಸಬೇಡ. ನಿನಗೆ ಯಾರು ಇಲ್ಲದ ಸಮಯದಲ್ಲಿ ನಿನ್ನ ಜೊತೆ ಇರುವುದೇ ಆತ್ಮ ಸಾಕ್ಷಿ. 🙏

ಪುರಾಣದ ಧರ್ಮಾಧರ್ಮಗಳು


ಪುರಾಣ,ಇತಿಹಾಸದ ಕಥೆಗಳನ್ನು  ನಾವು ಕೇಳುವಾಗ,
ಹೇಳುವಾಗ ಈಗಿನ  ಮಾನವರ ಪರಿಸ್ಥಿತಿ, ಮನಸ್ಥಿತಿ, ಜ್ಞಾನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಬೌತಿಕ ಸತ್ಯವನ್ನಷ್ಟೇ  ತಿಳಿದವರಿಗೆ ಅಂದಿನ‌ಧರ್ಮ ಜ್ಞಾನ ಕೇವಲ ಕ್ರೂರತೆ, ಅಸಹಾಯಕತೆ, ಕಠೋರತೆ, ಅಶಾಂತಿಯ ರಾಜಕೀಯತೆ, ಸ್ತ್ರೀ ಶಕ್ತಿಯ ದುರುಪಯೋಗ  ಇದೇ ಕಾಣುತ್ತದೆ. ಹೀಗಿರುವಾಗ  ಸಮಾಜ ಅದರೊಳಗಿನ ಧಾರ್ಮಿಕತೆ, ಪಾರಮಾರ್ಥಿಕ ಸತ್ಯಜ್ಞಾನ ತಿಳಿಯದೆ
ಅದಕ್ಕೆ ವಿರುದ್ದ ನಡೆಯುವುದು ಸಹಜ. ಇದನ್ನು ನಾಸ್ತಿಕತೆ ಎನ್ನಲಾಗದು. ಮಾನವೀಯತೆ ಬಿಟ್ಟು ಕೇವಲ  ಪ್ರಚಾರಕ್ಕೆ ಸೀಮಿತ ಮಾಡಿದರೆ  ಧರ್ಮ ರಕ್ಷಣೆ ಕಷ್ಟ.
ಬದಲಾವಣೆ  ನಮ್ಮಿಂದ  ಆಗಬೇಕು. ನಾನೆಂಬುದು ಬದಲಾಗಬೇಕು.ಇದನ್ನು ಶಿವ ಶರಣರು  ತಿಳಿಸಿದ್ದಾರೆ.
ಸತ್ಯ ಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗ ಇವು
ನಾಲ್ಕು ವರ್ಣಗಳನ್ನು ತಿಳಿಸುತ್ತದೆ. ಬ್ರಾಹ್ಮಣ ,ಕ್ಷತ್ರಿಯ ವೈಶ್ಯ
ಶೂದ್ರದ ಧರ್ಮ ಕರ್ಮದ ಪ್ರಕಾರ ಸತ್ಯಯುಗದ ಬ್ರಾಹ್ಮಣ
,ತ್ರೇತಾಯುಗದ ಕ್ಷತ್ರಿಯ, ದ್ವಾಪರದ ವೈಶ್ಯ, ಹಾಗು ಕಲಿಯುಗದ ಶೂದ್ರರ   ಧರ್ಮ ಕರ್ಮಕ್ಕೆ ತಕ್ಕಂತೆ  ಭೂಮಿ
ನಡೆಯುತ್ತದೆ. ಅಂದರೆ, ಈಗಿನ ಸಾಮಾನ್ಯಜ್ಞಾನದ ಶೂದ್ರರ
ಸೇವಾಗುಣದಿಂದ ಮಾತ್ರ ಭೂಮಿಯ ರಕ್ಷಣೆ ಸಾಧ್ಯ ಎಂದರ್ಥ. 
ಇಲ್ಲಿ ಮೇಲು ಕೀಳೆಂಬುದಿಲ್ಲ. ಅವರವರ ಮೂಲ ಧರ್ಮ ಕರ್ಮ ಅವರನ್ನು  ನಡೆಸುತ್ತದೆ. ಅದನ್ನು ತಿರಸ್ಕರಿಸಿ ನಡೆದರೆ
ಅಧರ್ಮ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಅಸತ್ಯದ
ಜೀವನದಲ್ಲಿ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರವಾಗಿರುತ್ತದೆ.
ಸಾತ್ವಿಕ ವಿಚಾರವೆಂದರೆ ಸತ್ಯದ ವಿಚಾರ. ಸತ್ಯ ನಮ್ಮ ಧರ್ಮ
ಕರ್ಮದೊಳಗಿದೆ. ನಮ್ಮ ಆತ್ಮಸಾಕ್ಷಿಗೆ ನಾವೇ ರಾಜರು.
ಹೀಗಿರುವಾಗ, ಅದನ್ನು ಮರೆತು ಹೊರಗಿನ ರಾಜಕೀಯಕ್ಕೆ
ಶರಣಾದರೆ ನಷ್ಟ ಯಾರಿಗೆ?
ಒಟ್ಟಿನಲ್ಲಿ  ಮಾನವನ  ಸಕಲ ಸಂಕಷ್ಟ ಕ್ಕೆ ಅವನೇ ಕಾರಣ.
ಇದನ್ನು ಸರ್ಕಾರ ಸರಿಪಡಿಸಹೋದರೆ ಇನ್ನಷ್ಟು ಅಧರ್ಮ
ಅನ್ಯಾಯ, ಅಶಾಂತಿ,ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹಣದಿಂದ
ಏನೂ ಬದಲಾವಣೆ ಆಗೋದಿಲ್ಲ. ಆದರೂ ಅದೊಂದು ಸಾಲದ ರೂಪದಲ್ಲಿ  ನಿಂತು ಮುಂದಿನ ಪೀಳಿಗೆಯಿಂದ ವಸೂಲಿ  ಮಾಡುವುದು ಸತ್ಯ.
ಒಂದು ಪಕ್ಷ  ಪ್ರಜೆಗಳಿಗೆ ಅನಾವಶ್ಯಕ ಸಾಲ ಸೌಲಭ್ಯಗಳನ್ನು
ನೀಡಿ ಸೋಮಾರಿ ಮಾಡಿ  ಬೆಳೆಸಿದರೆ, ಇನ್ನೊಂದು ಪಕ್ಷ ಅದನ್ನು  ವಸೂಲಿ ಮಾಡಲು  ಹೊರಟಿತು. ಹಾಗಾದರೆ ಇಲ್ಲಿ
ತಪ್ಪು ಮಾಡಿದವರು ಯಾರು? ಸಾಲ ಕೊಡುವುದು ಎಷ್ಟು ತಪ್ಪೋ ಹಾಗೇ ಪಡೆಯುವುದೂ ತಪ್ಪು ಎನ್ನುತ್ತಾರೆ ಮಹಾತ್ಮರು. 
ಮಹಾತ್ಮರಿಗೆ ಸಾಲದ ಹೊರೆ ಏರಿಸಿ  ಸಾಕೋ ಸರ್ಕಾರದ ಹಿಂದೆ  ನಡೆದವರನ್ನು ಹಿಂದುಳಿದವರು ಎಂದರೆ  ಈಗ ಅವರ ಸಮಸ್ಯೆಗೆ ಪರಿಹಾರವಾಗಿ ಹಣ ನೀಡುವ 
ಬದಲು  ಕೆಲಸ ಕೊಟ್ಟು  ದುಡಿಯಲು ಸಹಕರಿಸಿ. ಇಲ್ಲ ಅವರ ಮೂಲ ಧರ್ಮ ಕರ್ಮದಲ್ಲಿ  ಜೀವನ ನಡೆಸಲು ಬಿಡಿ. ಅವರವರ ಸ್ವಾವಲಂಬನೆ ಅವರನ್ನು ಮೇಲೆತ್ತುವುದು.
 ಇದಕ್ಕೆ ಮಧ್ಯೆ ರಾಜಕೀಯತೆ ಯಾಕೆ?
ಪ್ರತಿಯೊಂದರಲ್ಲಿಯೂ ನಮ್ಮ ದೇಶವನ್ನು ಹಿಂದೆ ತಳ್ಳುವ
ಪ್ರಯತ್ನ ವಿಜ್ಞಾನದಿಂದ ನಡೆದಿದೆ. ವಿದೇಶಿಗಳ ಶಿಕ್ಷಣ, ಧರ್ಮ
ವ್ಯವಹಾರಜ್ಞಾನ, ಬಂಡವಾಳ, ರೀತಿ,ನೀತಿ,ಸಂಸ್ಕೃತಿ....
ಇದನ್ನು ಈಗಲೂ ಬೆಳೆಸಿರುವುದು ಭಾರತೀಯರೆ ಎಂದರೆ
ನಾವು ಬದಲಾಗದೆ  ಬೇರೆಯವರನ್ನು ಬದಲಾವಣೆ ಮಾಡಲು ಸಾಧ್ಯವೆ?
ಆಧ್ಯಾತ್ಮಿಕ ಸತ್ಯ ಕಣ್ಣಿಗೆ ಕಾಣದ ಕಾರಣ  ಇದೊಂದು ವಿಷಯ  ಕೇವಲ ಪ್ರಚಾರಕ್ಕೆ ಸೀಮಿತವಾಗಿ,ಜನರನ್ನು ಮನೆ
ಹೊರಗಿನ ದೇವರೆಡೆಗೆ ಎಳೆದಿದೆ. ಮನೆಯೊಳಗಿನ ದೇವರು
ಕಾಣುವರೆ? ಸ್ತ್ರೀ ದೇವತೆಗಳನ್ನು ಆರಾಧಿಸುವವರೆ ಮನೆಯ
ಒಳಗಿನ ಸ್ತ್ರೀ ಯರಿಗೆ  ಸರಿಯಾದ ಜ್ಞಾನದೆಡೆಗೆ  ನಡೆಸೋ
ಶಿಕ್ಷಣ ನೀಡದೆ ರಾಜಕೀಯ ನಡೆಸಿದರೆ, ಇಲ್ಲಿ ರಾಜಯೋಗ
ಎಲ್ಲಿರುತ್ತದೆ?
ರಾಜಯೋಗ ಎಂದರೆ ಆತ್ಮಾನುಸಾರ ಸ್ವತಂತ್ರ ವಾಗಿ ಜೀವನ
ನಡೆಸೋದು. ರಾಜಕೀಯ ಮನಸ್ಸಿಗೆ ಬಂದಂತೆ ಇತರರನ್ನು
ಆಳುವುದು.

Friday, October 28, 2022

ಆತ್ಮಾವಲೋಕನ ಅಗತ್ಯವಿದೆ.

ದೇಶ ವಿದೇಶವಾದರೂ ಚಿಂತೆಯಿಲ್ಲ
ಧರ್ಮ ಅಧರ್ಮ ವಾದರೂ  ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲವೆನ್ನುವವರ ರಾಜಕೀಯದಲ್ಲಿ ದೇಶ ನಡೆದಿದೆ. ಇದಕ್ಕೆ ಸಹಕಾರ ಕೊಟ್ಟು ನಮ್ಮತನವನ್ನು ಬಿಟ್ಟು
ನಡೆದಂತೆಲ್ಲಾ ಆತ್ಮಹತ್ಯೆಗಳೂ ಬೆಳೆಯುತ್ತದೆ.
ಆತ್ಮಹತ್ಯೆ ಎಂದರೆ ಜೀವ  ಹೋಗುವುದೆಂದಲ್ಲ ಜೀವಾತ್ಮನಿಗೆ ಜ್ಞಾನೋದಯವಾಗದೆ ಹೋಗೋದು. ಎಲ್ಲಿಯವರೆಗೆ ಸತ್ಯ ಹಾಗು ಧರ್ಮ ವನ್ನು ತಿರುಚಿಕೊಂಡು ಭೌತಿಕದಲ್ಲಿ ರಾಜಕೀಯ ನಡೆಸುವರೋ ಅಲ್ಲಿಯವರೆಗೆ ಜೀವನ್ಮುಕ್ತಿಯಿಲ್ಲ ಎನ್ನಬಹುದಷ್ಟೆ. ಕೆಳಗಿನ ಫೋಟೊ ವಿಚಾರಗಳು  ಸಾಮಾನ್ಯಜ್ಞಾನದ ಕಡೆಗಿದೆ.ಮಾನವ ಸಾಮಾನ್ಯಜ್ಞಾನದಿಂದ ನಿಧಾನವಾಗಿ ವಿಶೇಷಜ್ಞಾನ ಪಡೆದರೆ
ಅನುಭವದಿಂದ ಸತ್ಯ ದರ್ಶನ .ಇದು ಹಿಂದಿನ
ಮಹಾತ್ಮರುಗಳು ನಡೆದು ತೋರಿಸಿದ್ದಾರೆ.
ಅವರ ನಡೆ ಬಿಟ್ಟು ನುಡಿಯನ್ನು ಬಂಡವಾಳ ಮಾಡಿಕೊಂಡರೆ ಅವರು ಬೇರೆ ನಾವೇ ಬೇರೆ.ಧರ್ಮ ವೇ ಬೇರೆ ವ್ಯವಹಾರವೇ ಬೇರೆ.
ಧರ್ಮ ಕರ್ಮ, ಸತ್ಯ ಧರ್ಮ, ಜ್ಞಾನ ವಿಜ್ಞಾನ, ಹಣ ಜ್ಞಾನ, ಸ್ತ್ರೀ ಪುರುಷರ ನಡುವಿರುವ ಅಂತರದಲ್ಲಿ  ಅಜ್ಞಾನದ  ವ್ಯವಹಾರ ಬೆಳೆದು ಸಾಲವನ್ನು ತೀರಿಸಲಾಗದೆ ಜನನ ಮರಣದ ಮಧ್ಯೆ ನಿರಂತರ ಜೀವನ ಚಕ್ರ ತಿರುಗಿದೆ.  ನೀವ್ಯಾಕೆ ಮಾಧ್ಯಮದಲ್ಲಿ ಇಂತಹ ವಿಚಾರ ಹಂಚಿಕೊಳ್ಳಬಾರದೆನ್ನುವ ಪ್ರಶ್ನೆಗೆ ಉತ್ತರ ಮಾಧ್ಯಮಗಳಿಗೆ ಸತ್ಯದ ಅಗತ್ಯವಿಲ್ಲ.ಧರ್ಮವಂತೂ ಬೇಡವೇಬೇಡ ಎನ್ನುವ ಹಂತದ ವ್ಯವಹಾರದಲ್ಲಿ ಮುಳುಗಿರುವಾಗ ಅಧ್ಯಾತ್ಮ ಸತ್ಯಕ್ಕೆ
ವಿರೋಧಿಗಳೇ ಹೆಚ್ಚು. ಹಣವುಳ್ಳವರಿಗೆ ಅರ್ಥ ವಾಗದು.
ಹಾಗೆ  ಜಾಹಿರಾತುಗಳೂ ಸಿಗೋದಿಲ್ಲ. ಅವರವರ ಮಾಧ್ಯಮದ ಹೊಟ್ಟೆ ತುಂಬಲು ಜಾಹಿರಾತುಗಳಿರೋದು ಯಾರು ಏನಾದರೂ ಆಗಲಿ ನಾವು ಬದಲಾಗೋದಿಲ್ಲ ಎನ್ನುವ ಸತ್ಯ ಜನಸಾಮಾನ್ಯರಿಗೂ ಗೊತ್ತು. ಇನ್ನು ಕ್ರಾಂತಿಯ ಮೂಲಕ ಸತ್ಯ ಹೊರಬಂದರೂ ಅರ್ಥ ಮಾಡಿಕೊಳ್ಳಲು ಜನರಿಗೆ ಜ್ಞಾನವಿರಬೇಕು.ಶಿಕ್ಷಣವೇ ಕೊಡದೆ ಆಳಿದವರು ಹೆಚ್ಚಾಗಿರುವಾಗ ಹಿಂದೂ ಧರ್ಮ ಎಂದರೆ ನಮ್ಮ ನಮ್ಮ ಹಿಂದಿನ ಮಹಾತ್ಮರುಗಳು  ನಡೆದ ತತ್ವಜ್ಞಾನದಿಂದ ತಿಳಿದ ಧರ್ಮ . ಇದು ಅವರವರ ಗುರು ಹಿರಿಯರು  ತಮಗೆ ತಿಳಿದಂತೆ ಬದಲಾವಣೆ ಮಾಡಿಕೊಂಡರೆ ಈಗಿನ‌ಪರಿಸ್ಥಿತಿಗೆ ಅದೇ ದೊಡ್ಡ ಸಮಸ್ಯೆಯಾಗದಂತೆ ಮಾನವೀಯತೆಯನ್ನು,
ಮಕ್ಕಳು ಮಹಿಳೆಯರನ್ನು,‌ಉಳಿಸಿ ರಕ್ಷಿಸುವಂತಿರಬೇಕು. ಇದನ್ನು  ತತ್ವಜ್ಞಾನ ತಿಳಿಸುತ್ತದೆ. ತಂತ್ರವಲ್ಲ. ತಂತ್ರ ಶಾಶ್ವತವಲ್ಲ.ತಂತ್ರದಿಂದ ರಾಜಕೀಯ ತತ್ವದಿಂದ ರಾಜಯೋಗ. ತತ್ವ ಒಳಗಿದೆ.ತಂತ್ರ ಹೊರಗಿದೆ.  ಹಾಗಾದರೆ ನಾವ್ಯಾರು ತತ್ವಜ್ಞಾನಿಗಳೆ ?ತಂತ್ರಜ್ಞಾನಿಗಳೆ? ಇವೆರಡರ ನಡುವಿನ. ಸಾಮಾನ್ಯಜ್ಞಾನ ಇದ್ದರೆ ಸತ್ಯ ತಿಳಿಯಬಹುದಷ್ಟೆ.
ಶ್ರೀ ಕೃಷ್ಣ ಪರಮಾತ್ಮನ  ಭಗವದ್ಗೀತೆ ಯಲ್ಲಿ  ಎಲ್ಲಾ ಜ್ಞಾನವಡಗಿದೆ.ಯಾರಿಗೆ ಹೇಗೆ ತಿಳಿಯುವುದೋ ಹಾಗೇ ವಿವರಿಸಿದ್ದಾರೆ ಆದರೆ ಅಂದಿನ ವಾಸ್ತವ ಸ್ಥಿತಿಗೆ ತಕ್ಕಂತೆ  ಅರ್ಜುನನಿಗೆ ಧರ್ಮ ಬೋಧನೆ ಮಾಡಿರುವುದು ಒಂದೇ ಸತ್ಯ. ಈಗಿನ ರಾಜಕೀಯದಲ್ಲಿ  ಧರ್ಮ ಯಾವುದು? ಅಧರ್ಮ ಯಾವುದು? ದೇಶವನ್ನು ವಿದೇಶ ಮಾಡುವುದು ಧರ್ಮವೆ? ಪ್ರಜಾಪ್ರಭುತ್ವದ ಪ್ರಜೆಗಳನ್ನು ಅಜ್ಞಾನದಲ್ಲಿ ಬಿಟ್ಟು ಆಳುವುದೆಷ್ಟು ಧರ್ಮ? ಈ ಪ್ರಶ್ನೆಗೆ ಉತ್ತರವನ್ನು ನಾವೇ ಕಂಡುಕೊಳ್ಳಲು ಬೇಕಿದೆ ಆತ್ಮಾವಲೋಕನ.

Thursday, October 27, 2022

ದೀಪಗಳ ಮಹತ್ವ

ದೀಪಾವಳಿಯ ಶುಭಾಶಯಗಳು.
ದೀಪಗಳು  ಜೀವನಕ್ಕೆ ಬೆಳಕನ್ನು ನೀಡುವ ಸಾಧನ. ಇದನ್ನು ಯಾವ ಕಾರ್ಯಕ್ಕೆ ಹೇಗೆ ಹೇಗೆ ಬಳಸಬೇಕೆಂಬುದೂ ಹಿಂದೂ ಧರ್ಮ ದಲ್ಲಿದೆ. ದೀಪ ಬೆಳಗುವ ಕಾರ್ಯಕ್ರಮ ಪ್ರತಿಯೊಂದು ಶುಭ ಸಮಾರಂಭದಲ್ಲಿ ಕಾಣಬಹುದು. ಇದಕ್ಕೆ
ಕಾರಣವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ದೀಪದಿಂದ
ಉತ್ತಮ ಬದಲಾವಣೆಯೂ ಸಾಧ್ಯ. ಇತ್ತೀಚಿನ ದಿನಗಳಲ್ಲೊ
ಎಷ್ಟು ದೀಪ ಹಚ್ಚಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತದೆ.
ದೀಪ ಒಂದಾದರೂ ಶುದ್ದವಿದ್ದರೆ ಅದರಿಂದ ಜ್ಞಾನ ಬರುತ್ತದೆ.
ಆಂತರಿಕ ಶಕ್ತಿಯನ್ನು ಹೆಚ್ಚಿಸುವ  ಜ್ಞಾನ ದೀಪವನ್ನು ಯಾರೂ ಕಣ್ಣಿನಿಂದ ಕಾಣಲಾಗದು. ಅವರವರ ಜ್ಞಾನ  ಒಳಗೇ ಇದ್ದು ಅದನ್ನು ತಿಳಿಯಲು ಹೊರಗಿನ ಕಾರ್ಯ ಕ್ರಮದಲ್ಲಿ ದೀಪವನ್ನು ಬೆಳಗಲಾಗುತ್ತದೆ. ಇಲ್ಲಿ ಧಾರ್ಮಿ ಕ,ರಾಜಕೀಯ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ,ಸಾಹಿತ್ಯಿಕ ಕ್ಷೇತ್ರವೆಲ್ಲವೂ ಶುಭ ಸಮಾರಂಭದಲ್ಲಿ ದೀಪ ಬೆಳಗಿಸುತ್ತಾರೆ. ಆದರೆ ಆರ್ಥಿಕವಾದ ಅಭಿವೃದ್ಧಿಗೆ  ಹೆಚ್ಚು ಹೆಚ್ಚು ಪ್ರಾಧಾನ್ಯತೆ
ಯನ್ನು ಪಡೆದುಕೊಂಡು  ಧಾರ್ಮಿಕ ವಾಗಿ ಹಿಂದುಳಿದರೆ ದೀಪದ ಎಣ್ಣೆಯಿಂದ ಹಿಡಿದು‌ಉರಿಸುವ ಬತ್ತಿಯೂ ಕಲಬೆರಕೆಯಾಗಿ ಅದರ ಸತ್ವವನ್ನು ‌ಕಳೆದುಕೊಂಡು ಲಕ್ಷಾಂತರ  ದೀಪಗಳನ್ನುಹಚ್ಚಿದರೂ ಪ್ರಕೃತಿ ವಿರುದ್ದ 
ನಡೆದಾಗ ಪ್ರಕೃತಿ ವಿಕೋಪ ಹೆಚ್ಚಿಸಮಸ್ಯೆ  ಸುತ್ತಿಕೊಳ್ಳುತ್ತದೆ. 
ದ್ಯಾನ,ಜಪ,ತಪ,ಯೋಗ ,ಯಾಗ, ದಾನ,ಧರ್ಮ,ಸೇವೆ,
ಪೂಜೆ, ಪುನಸ್ಕಾರಗಳು,ಸಂಸ್ಕಾರಯುಕ್ತವಾಗಿದ್ದು
 ಉತ್ತಮ ಶಾಂತಿ,ಸಮೃದ್ಧಿಯನ್ನು  ದೇಶದ ಜನತೆ,ದೇಶ,ವಿಶ್ವ ಕಂಡರೆ  ಅದು ನಿಜವಾದ ಜ್ಞಾನದಿಂದ ಮಾತ್ರ ಸಾಧ್ಯವೆನ್ನುವರು ಮಹಾತ್ಮರುಗಳು. ಯಾವಾಗ  ಆಚರಣೆ
ಗಳಾಗಲಿ,ಕಾರ್ಯ ಕ್ರಮಗಳಾಗಲಿ ತಮ್ಮ ಸ್ವಾರ್ಥ ಅಹಂಕಾರದ  ರಾಜಕೀಯ ರೂಪ ಪಡೆದು  ಅಜ್ಞಾನ  ಬೆಳೆಯುವುದೋ  ಎಷ್ಟೇ ದೀಪ  ಹಚ್ಚಿದರೂ ಅದರ ಎಣ್ಣೆಯಾಗಲಿ,ಬತ್ತಿಯಾಗಲಿ,ಹಣವಾಗಲಿ,ಹಣತೆಯಾಗಲಿ
 ಜನರಾಗಲಿ ಸ್ವಚ್ಚ ಮನಸ್ಸಿನಿಂದ  ಬಳಸಿ ಬೆಳಗುವರೋ ಅದೇ ರೀತಿಯಲ್ಲಿ   ಪ್ರತಿಫಲವನ್ನೂ  ಮನುಕುಲ  
ಪಡೆಯುತ್ತಾನೆ. ಹೊರಗಿನಿಂದ ಮಾನವ ಬೆಳಗುವ ದೀಪ ಒಳಗೇ ಇರುವ   ದೇವರ ಶಕ್ತಿಯಾದ ಆತ್ಮಜ್ಯೋತಿ ಒಂದಾಗಲು ಎರಡೂ ಕಡೆಯಿಂದಲೂ ಶುದ್ದವಾಗಬೇಕು.
ಆತ್ಮ ಯಾವತ್ತೂ ಸ್ವಚ್ಚವೆ ಆದರೆ ಮನಸ್ಸು ಸ್ವಚ್ಚವಾಗದಿದ್ದರೆ
ಒಳಗಿನ ದೀಪದವರೆಗೆ ತಲುಪದೆ ಜ್ಞಾನದೀಪ ಬೆಳೆಯುವುದಿಲ್ಲ. ಒಟ್ಟಿನಲ್ಲಿ ದೀಪದ ಶಕ್ತಿ  ಎಲ್ಲೆಡೆಯೂ ಒಂದೇ  ಸಮನಾಗಿರೋದಿಲ್ಲ. 
ಶುಭಕ್ಕೆ ದೀಪ ಹಚ್ಚುತ್ತಾರೆ. ಅದು ಶುದ್ದವಾಗಿದ್ಧಷ್ಟೂ ಉತ್ತಮ .
ದೀಪಾವಳಿ ದೀಪಗಳ ಸಾಲಿನಲ್ಲಿ‌ ಸಾಕಷ್ಟು  ಶಕ್ತಿ  ಅಡಗಿರುತ್ತದೆ. ದೀಪ ಎನ್ನುವ ಪದವನ್ನು  ಮನೆಯ ದೀಪ, ದೇವಸ್ಥಾನ,ಮಠ,ಮಂದಿರ,ಮಹಲ್,ಮಹಾದೇಶ,ಮಹಾವಿಶ್ವದೆಲ್ಲೆಡೆಯೂ ಹರಡಿದೆ.ಆದರೆ ಮನಸ್ಸಿನ ಒಳಗಿರುವ ಜ್ಞಾನದ ದೀಪವನ್ನು  ಹೊರಗಿನವರು ಕಾಣದಿದ್ದರೂ ಇದೇ ಎಲ್ಲಾ ದೀಪಗಳ ಮೂಲ ಶಕ್ತಿಯಾಗಿದ್ದು ಒಳಗಿನಿಂದಲೇ
 ಬೆಳಗುತ್ತದೆ. ಯಾರೆಷ್ಟೇ  ಇಲ್ಲವೆಂದರೂ ನಾವು ಕಂಡು
ಕೊಂಡಿದ್ದನ್ನು ಆರಿಸಲಾಗದು.ಇದನ್ನು ನಮ್ಮ ಆಸ್ತಿ
ಯನ್ನಾಗಿಟ್ಟುಕೊಂಡು ಇಡೀ ಭೂಮಂಡಲವನ್ನು ಅರ್ಥ
 ಮಾಡಿಕೊಂಡರೆ  ಆತ್ಮರಕ್ಷಣೆ ಆಗುತ್ತದೆ.ಆರದ ದೀಪವೇ ಆತ್ಮಜ್ಯೋತಿ.ಇದನ್ನುಕಂಡುಕೊಂಡವರೆಮಹಾತ್ಮರಾಗಿದ್ದಾರೆ. 
ಹೊರಗಿನಿಂದ  ಬೆಳಗುವ ದೀಪಗಳುಪ್ರಕೃತಿಯ ಪರ ನಿಂತು
 ಸ್ವಚ್ಚ ವಾದರೆ ನಿಜವಾದ ದೀಪಾವಳಿ.
ಹಬ್ಬ ಹರಿದಿನಗಳಲ್ಲಿ ಬೆಳಗುವ ದೀಪಗಳ ಸಂಖ್ಯೆ ಅಧಿಕ. ದಿನವೂ ಬೆಳಗುವ ದೀಪಗಳ ಸಂಖ್ಯೆ ಕಡಿಮೆಯಿದ್ದರೂ ಇದು
ವರ್ಷ ವಿಡೀ ಬೆಳಗಿಸುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ.
ಹಾಗೆಯೇ ಮನೆಯ ದೀಪ ಎನ್ನುವ ಸ್ತ್ರೀ ಶಕ್ತಿ ಪ್ರತಿದಿನವೂ
ಸಂಸಾರಕ್ಕಾಗಿ ಭಗವಂತನಿಗೆ ದೀಪ ಬೆಳಗಿ ಶುದ್ದ ಭಾವನೆಯಲ್ಲಿ ಬೇಡಿದರೆ  ಅದಕ್ಕಿಂತ ದೊಡ್ಡ  ಶಕ್ತಿ ಬೇರಿಲ್ಲ.
ಮನೆಯಲ್ಲಿ ದೀಪ ಹಚ್ಚಲು ಸಮಯವಿಲ್ಲದೆ ಹೊರಗಿನ ಕಾರ್ಯ ಕ್ರಮದಲ್ಲಿನ  ದೀಪ ಹಚ್ಚುವುದರಿಂದ ಹೊರಗಿನ  ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಹಣ ಸಂಪಾದನೆ ಗಾಗಿ ನಡೆಸುವ ವ್ಯವಹಾರದಲ್ಲಿ ದೀಪದಲ್ಲಿ ಸಮಾನತೆಯ ಅಗತ್ಯವಿದೆ. ಸಂಸಾರದ ಜೊತೆಗೆ ಸಮಾಜದ ದೀಪವೂ ಸ್ವಚ್ಚ
ಸುಂದರವಾಗಿರಿಸೋದೆ ದೊಡ್ಡ ಸಾಧನೆ. ಇದಕ್ಕೆ ಸಹಕಾರದ ಅಗತ್ಯವಿದೆ.ಕೇವಲ ತನ್ನ ಮನೆಗಾಗಿ ಮಾಡಿಕೊಂಡರೆ ಇದು ಸಾಧನೆಯಾಗದೆ ಸಮಾಜದಲ್ಲಿಯೂ ಜ್ಞಾನಜ್ಯೋತಿ ಬೆಳಗಿಸಿದರೆ  ದಾರಿ ದಾರಿಯಲ್ಲಿ ಉರಿಸುವ ದೀಪದೊಳಗಿನ
ಆ ಮಹಾಶಕ್ತಿ  ಕಾಣಬಹುದು.
ಭಾರತದಂತಹ  ಮಹಾ ದೇಶದಲ್ಲಿನ ಸ್ತ್ರೀ ಶಕ್ತಿಯಿಂದ ಮನೆ ಮನೆಯೊಳಗೆ ಜ್ಞಾನ ಜ್ಯೋತಿ ಬೆಳಗಿತ್ತು. ವಿದೇಶಿಗರಿಂದ ವಿಜ್ಞಾನ ಬೆಳೆದಿರೋದು ಸ್ತ್ರೀ ಸಹಕಾರದಿಂದಲೇ.ಆದರೆ ಎರಡೂ ದೀಪಗಳ ಉದ್ದೇಶ  ಒಂದಾಗದೆ ವಿರುದ್ದ ನಡೆದಾಗ
ದ್ವೇಷ,ಸೇಡು,ಪೈಪೋಟಿ, ಹಗೆ,ಬಡತನ,ಯುದ್ದದಂತಹ ಅಸುರಿ ಶಕ್ತಿಯನ್ನು ಹಿಮ್ಮೆಟ್ಟಿಸಲಾಗದು.  ಮನುಕುಲವು ಆತ್ಮಜ್ಯೋತಿಯನ್ನು‌ ಬೆಳಗಿಸುವ  ಹಿಂದೂ ಧರ್ಮದ ದೀಪವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಕ್ಯಾಂಡಲ್ ಮೂಲಕ ಬೆಳಗಿಸುತ್ತಾ ಪಟಾಕಿಯಂತಹ ಸಿಡಿಮದ್ದುಗಳಿಂದ  ಶಬ್ದ,ಸದ್ದು,ಗದ್ದಲ,ಗಲಭೆಗಳನ್ನು ಸೃಷ್ಟಿಮಾಡಿ ಕಿಡಿಕಾರಿದರೆ ಇದರಿಂದಾಗಿ ಕಷ್ಟ ನಷ್ಟಗಳನ್ನು ಜೀವವೇ ಅನುಭವಿಸುವು
ದೆನ್ನುವುದೇ  ಜ್ಞಾನದ ದೀಪ.ಇದನ್ನು ಸೂಕ್ಷ್ಮ ವಾಗಿ ಕಂಡವರಿಗೆ  ನಿಜವಾದ ಸತ್ಯದರ್ಶನ. ಇಲ್ಲವಾದರೆ ಮಿಥ್ಯದ ಹೊರಗಿನ ದೀಪ ಬೇರೆ ಬೇರೆ ರೂಪ ಪಡೆದು  ಹೊತ್ತಿ ಉರಿಯಬಹುದು. ಎರಡೂ ದೀಪಗಳೂ ಬೆಳಕನ್ನು
ನೀಡುವುದು ಸತ್ಯವಾದರೂ ಒಂದು ಶಾಶ್ವತ ಇನ್ನೊಂದು ತಾತ್ಕಾಲಿಕ. ಅತಿಯಾಗಿ ಉರಿಯುವುದನ್ನು ಬಿಟ್ಟರೆ ಶಾಂತಿ ಕಾಣಬಹುದು. ಉರಿಯಲ್ಲಿಯೂ ಎರಡು ರೀತಿಯಿದೆ.
ಬೆಂಕಿಯೂ ಅಗ್ನಿ, ದೀಪವೂ ಅಗ್ನಿ.   ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. 
ವಾಮನಾವತಾರದಲ್ಲಿ ಇದನ್ನು ಮಹಾವಿಷ್ಣುವೇ ತೋರಿಸಿಕೊಟ್ಟಿದ್ದು  ಇದಕ್ಕಾಗಿಯೇ, ಅತಿಯಾದ ಸಂಪತ್ತಿದೆ ಎಂದು ದಾನ ಮಾಡಿದರೂ ಕಷ್ಟ.ಹೀಗಾಗಿ ಇತಿಮಿತಿಯಲ್ಲಿ ಸಂಪತ್ತಿದ್ದರೆ ಆಪತ್ತಿರೋದಿಲ್ಲ.  ಒಂದು ಭೂಮಿಯನ್ನೇ ಅರ್ಥ ಮಾಡಿಕೊಳ್ಳದೆ ಇತರ ಲೋಕವನ್ನೆಲ್ಲಾ ಗೆದ್ದು ಆಳುವ
ಅಸುರರನ್ನು  ಹೇಗೆ ಸಂಹಾರ ಮಾಡಲಾಯಿತೆನ್ನುವ ಪುರಾಣ ಕಥೆ ಕೇಳಿದರೂ ಭೂಮಿಯನ್ನು ಆಳೋದಕ್ಕಾ
ಗಿಯೇ  ಅಧರ್ಮ, ಅಸತ್ಯ,ಅನ್ಯಾಯ,ಭ್ರಷ್ಟಾಚಾರದಲ್ಲಿ
ದುಷ್ಟರು ಹುಟ್ಟಿ ಬೆಳೆದು ದೀಪ ಹಚ್ಚಿ ಸಂಭ್ರಮಿಸಿದರೆ ದೀಪದ ಮಹತ್ವ ತಿಳಿಯದೆ ಆತ್ಮಜ್ಯೋತಿ ಹಿಂದುಳಿಯುತ್ತದೆ.
 ಹೊರಗಿನಿಂದ ಕಾಣುವ ಬೆಳಕನ್ನು ನಂಬಿ ಕೆಟ್ಟವರೇ 
ಹೆಚ್ಚು. ಕತ್ತಲು ಬೆಳಕಿನಗ್ರಹಣವನ್ನು  ಎಷ್ಟು ಭಯದಿಂದ 
ಕಾಣುವರೋ  ಒಳಗಿನ  ಈ ಕತ್ತಲೆಯನ್ನು  ಭಯವಿಲ್ಲದೆ ಬೆಳೆಸಿಕೊಂಡು  ಆಳುವವರ ಸಂಖ್ಯೆ ಬೆಳೆದು ನಿಂತಿದೆ ಇದನ್ನು ಯಾರೂಕಾಣುತ್ತಿಲ್ಲವೆಂದರೆ ನಮಗೆ ನಾವೇ ಕತ್ತಲೆಯೊಳಗಿರುವುದು ಸತ್ಯ.
 ಹೊರಗಿನ ದೀಪದಿಂದ ದೀಪವನ್ನು  ಹಚ್ಚಬಹುದು.ಒಳಗಿನ ದೀಪದಿಂದ ಇನ್ನೊಂದು ದೀಪ ಹಚ್ಚಲು ಜ್ಞಾನದ ಶಿಕ್ಷಣ ಬೇಕು.
ಸತ್ಯಜ್ಞಾನವನ್ನು   ಸತ್ಯದಿಂದಲೇ  ಬೆಳಗಿಸಿಕೊಳ್ಳಬೇಕಿದೆ. ಈ ಕಷ್ಟ  ಯಾರೂ ಇಷ್ಟಪಡದೆ   ಇಂದು ಅಜ್ಞಾನದ ರಾಜಕೀಯ ಬೆಳೆದಿದೆ.