ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, June 28, 2024

ವಾರಗಳ ಮಹತ್ವವೇನು

ಶುಕ್ರವಾರದಲ್ಲಿ  ಲಕ್ಮಿಪೂಜೆ  ಮಾಡಿ  ಸಿರಿಸಂಪತ್ತನ್ನು
ಮಾನವರು  ಗಳಿಸಬಹುದು.ಆದರೆ,ಗುರುವಾರದಲ್ಲಿ
ಗುರುವನ್ನ  ಬೇಡುವವರ. ಸಂಖ್ಯೆ  ಕಡಿಮೆಯಾಗಿದೆ.
ಅದಕ್ಕೆ  ಶನಿವಾರ. ಶನಿಮಹಾತ್ಮ ಬಂದು ಸರಿದಾರಿಗೆ
ಎಳೆದೊಯ್ಯುವುದು.
ಗುರುಗಳಲ್ಲಿ  ದೇವಗುರು,ಅಸುರರ ಗುರುಗಳಿದ್ದಾರೆ.
ನಮಗೆ ಹೊರಪ್ರಪಂಚದಲ್ಲಿ  ಶ್ರೀಮಂತ ರನ್ನಾಗಿಸೋ
ಗುರು ಅಸುರಗುರು, ಹಾಗೆ ಒಳಪ್ರಪಂಚದ ಜ್ಞಾನದ
ಶ್ರೀಮಂತರಾಗಿಸೋರೇ  ದೇವಗುರು. ಇಂದು  
ಹೊರಪ್ರಪಂಚದ  ಗುರುಗಳು  ಹೆಚ್ಚು ಶ್ರೀಮಂತರು.ಅವರ ಹಿಂದೆ ನಡೆಯುವ ಶಿಷ್ಯರ ಸಂಖ್ಯೆ   ದೊಡ್ಡದು. ಹೀಗಾಗಿ  ಮಾನವನೊಳಗೇ ಅಸುರೀ ಶಕ್ತಿ  
ಬೆಳೆದಿದೆ ಎಂದರೆ ಒಪ್ಪಲು ಸಾಧ್ಯವೆ? ಹಣವನ್ನು ಸದ್ಬಳಕೆ ಮಾಡಿಕೊಳ್ಳುವವರಲ್ಲಿ ಸತ್ಯಜ್ಞಾನವಿರುತ್ತದೆ. ಹೀಗಾಗಿ ಧಾರ್ಮಿಕ ಕಾರ್ಯ ನಡೆದಿದೆ.ಅದನ್ನು ಉಚಿತವಾಗಿ ಬಳಸಿ ತನ್ನ ಸ್ವಾರ್ಥ ಸುಖಕ್ಕಾಗಿ  ದುರ್ಭಳಕೆ  ಮಾಡಿಕೊಂಡು ನಾನೇ ದೇವರು ಗುರು ಎನ್ನುವವರ  ಹಿಂದೆ ಸಾಕಷ್ಟು ಜನಬಲವೂ ಇರುತ್ತದೆ.  ಯಾವಾಗ ಇದು ಅತಿಯಾದ ಪ್ರದರ್ಶನ ಮಾಡಿ ಜನರ ದಾರಿತಪ್ಪಿಸಿ ಆಳಲು ರಾಜಕೀಯ ಹೆಚ್ಚುವುದೋ ಮೇಲಿರುವ ಗುರು ಎಚ್ಚರವಾಗಿ ಶಿಷ್ಯನಿಗೆ ಶಿಕ್ಷೆಯೂ ಆಗುವುದು.

ಸತ್ಯ,ಧರ್ಮದ ಹೆಸರಲ್ಲಿ  ಶಿಕ್ಷಣದ  ಹೆಸರಲ್ಲಿ  ಈ ಶಕ್ತಿ
ಮಕ್ಕಳನ್ನ  ಆಟವಾಡಿಸಿ  ಜೀವನದಲ್ಲೇ  ಸೋಲಿಸಿದೆ
ಈ ಒಳ ಸತ್ಯ ತಿಳಿಯದ   ಮಾನವ  ತನ್ನ ಜೀವಕ್ಕೆ
ತಾನೇ  ಅಪಚಾರ  ಮಾಡಿಕೊಂಡು ನೋವಿನಲ್ಲಿ
ನರಳುವಂತಾಗಿದೆ.
ಆಸೆಯೇ ದು:ಖಕ್ಕೆ ಮೂಲ.ಅತಿಆಸೆಯೇ ಅಜ್ಞಾನದ
ಸಂಕೇತ.
ಒಟ್ಟಿನಲ್ಲಿ  ನಮ್ಮ  ಗ್ರಹಚಾರಕ್ಕೆ  ಗ್ರಹಗಳನ್ನ ಸರಿಯಾಗಿ  ತಿಳಿಯದೆ  ನಡೆದಿರೋದೇ  ಕಾರಣ.
ವಿಜ್ಞಾನದ ಪ್ರಕಾರ  ಗ್ರಹಗಳ  ಚಲನವಲನದಿಂದ
ಭೂಮಿಯ ಮೇಲೆ ಆಗೋ ವ್ಯತ್ಯಾಸ ತಿಳಿಯಬಹುದು.
ಆದರೆ,ಭೂಮಿಯ ಮೇಲಿದ್ದು  ತನ್ನ ರಾಜಕೀಯದಲ್ಲಿ  ಮಾನವ  ಯಾವ ರೀತಿ ನಡೆದರೆ ಗ್ರಹಗಳು  ಯಾವ  ಪರಿಣಾಮ ಬೀರುವುದೆಂಬ  ಒಳಸತ್ಯ ತಿಳಿಸುವವರೇ  ಜ್ಞಾನಿಗಳು.
ಭಾರತ  ಜ್ಞಾನಿಗಳ‌ ದೇಶವಾಗಿತ್ತು.ವಿದೇಶದ ವಿಜ್ಞಾನ
ಹೆಚ್ಚಾದ  ಕಾರಣ  ಇಂದಿನ  ಭಾರತ  ಹಿಂದುಳಿದವರ
ಪಾಲಾಗಿದೆ.ಆಡಳಿತ ನಡೆಸೋರಿಗೆ   ಹಣ,ಅಧಿಕಾರ
ಬೇಕು .ಜ್ಞಾನದ  ಸತ್ಯ ತಿಳಿಯದೆ, ಗ್ರಹಚಾರವನ್ನ
ದೇಶಕ್ಕೆ  ಅಂಟಿಸಿಕೊಂಡು   ಗ್ರಹಗಳಂತೆ  ಜನರಿಗೆ
ಆಚಾರ,ವಿಚಾರ,ಪ್ರಚಾರ ಮಾಡೋರಿಗೆ  ಗ್ರಹಚಾರ
ಇಲ್ಲವೆ?.ಇದ್ದರೂ  ಯಾರ ಕಣ್ಣಿಗೆ ಕಾಣದೆ, ಅದಕ್ಕೂ
ಸರ್ಕಾರ  ಕಾರಣವೆಂದು  ಪ್ರಚಾರ ಮಾಡಬಹುದು.
ಇದು  ಸತ್ಯ. ಇಲ್ಲಿ ಸರ್ಕಾರ. ಎಂದರೆ ಸಹಕಾರ.
ಎಲ್ಲಿಯವರೆಗೆ ಮಾನವ ಸತ್ಕರ್ಮದಿಂದ,ಸ್ವಾಭಿಮಾನ, ಸ್ವಾವಲಂಬನೆಯ ಜೀವನ ನಡೆಸದೆ,ಪರಾವಲಂಬನೆಯಲ್ಲಿ  ಸರ್ಕಾರದ ಹಿಂದೆ  ನಡೆದು  ದುಡಿಯದೆ  ಸಾಲ  ಮಾಡುತ್ತಾನೋ ಅಲ್ಲಿಯವರೆಗೆ   ಹಣವೇನೂ  ಸಿಗುತ್ತದೆ.ಅದರಿಂದ ಜ್ಞಾನ ಕುಸಿದು  ಸಾಲ ಬೆಳೆದು  ಆತ್ಮಹತ್ಯೆಗೆ   ಶರಣಾಗುತ್ತಾನೆ.ಸ್ವಲ್ಪ  ಜ್ಞಾನವಿರೋರಿಗೆ  ಸತ್ಯದರ್ಶನ ಮಾಡಿಸಲು ಶನಿಮಹಾತ್ಮ ತನ್ನ ದಾರಿಗೆಳೆದು   ಜೀವನದ ಸತ್ಯದರ್ಶನ  ಮಾಡಿಸುತ್ತಾನೆ.ಅಂದರೆ  ಗ್ರಹಗಳನ್ನು ಸೂಕ್ಷ್ಮವಾಗಿ ತಿಳಿದು‌ ಮಾನವ ಬದುಕಿದರೆ,
ಗ್ರಹಚಾರದ  ಪ್ರಭಾವ   ತೀರ್ವವಾಗಿರೋಲ್ಲ.
ಮಾನವನ  ಧರ್ಮಕರ್ಮಕ್ಕನುಗುಣವಾಗಿ  ಭೂಮಿ
ನಡೆದಿದೆ.ಭೂತಾಯಿಯನ್ನೇ   ಅಗೆದು  ಬದುಕಿದರೆ
ಗ್ರಹಚಾರ  ಹೆಚ್ಚು.  ಭೂಮಿಯನ್ನು  ಸರಿಯಾಗಿ ತಿಳಿ
ದು  ಆಕಾಶಕ್ಕೆ  ಹಾರಬಹುದು.ಆದರೂ  ಮಾನವನ
ಜನ್ಮ  ಭೂಮಿಯಲ್ಲೇ  ಮರಣವೂ  ಇಲ್ಲೇ.ಇದನ್ನ
ತಪ್ಪಿಸಲು  ,ತಡೆಯಲು  ಮಾನವನಿಗೆ  ಅಸಾಧ್ಯ.
ಯೋಗಿಗಳಂತೆ   ಬದುಕಿದರೆ  ರೋಗ ಬರುವುದಿಲ್ಲ.
ಯೋಗಿಯ  ಹೆಸರಲ್ಲಿ  ಭೋಗ ಜೀವನ  ನಡೆಸುವುದು
ರೋಗವೆ.
ಯೋಗಾ + ಯೋಗ  =  ನಿರೋಗದಯೋಗ
ಯೋಗ+ಭೋಗ= ರೋಗ
ಭೋಗ+ಭೋಗ=ಭವರೋಗ.
ಜ್ಞಾನದಿಂದ ಯೋಗ,ಭಕ್ತಿ ಯಿಂದ  ಯೋಗ,ಕರ್ಮದಿಂದ   ಯೋಗ  ದೊರೆಯಲು  ಮಾನವ  ಮೈ ಮನಸ್ಸನ್ನ  ಒಂದಾಗಿಸಿ  ಬದುಕಬೇಕು.ಯೋಗ ಎಂದರೆ ಸೇರುವುದು.
ರಾಜಯೋಗವೆಂದರೆ  ರಾಜನಂತೆ ಆಳೋದಲ್ಲ.
ತನ್ನತಾನರಿತು ಧರ್ಮದ  ಜೀವನ ನಡೆಸೋದು.
ಈಗಿನ  ಪ್ರಚಾರಕರಿಗೆ ಅಧಿಕಾರ,ಹಣವಿದ್ದರೂ  ತನ್ನ ತಾನು
ತಿಳಿದು  ಸ್ವತಂತ್ರ ಜ್ಞಾನದಿಂದ ನಡೆಯಲಾಗದೆ ಅರ್ಧಸತ್ಯದ
ವಿಚಾರಗಳಿಂದ ಜನರನ್ನು ಮುಂದೆ ನಡೆಯದಂತೆ ತಡೆದರೆ
ಕಷ್ಟ ನಷ್ಟ  ಮನುಕುಲಕ್ಕೆ  ತಪ್ಪಿದ್ದಲ್ಲ. ಗುರುವಿನಿಂದ  ಸತ್ಯಜ್ಞಾನ , ಸತ್ಯದಿಂದ ಧರ್ಮ ಕರ್ಮ, ಹಣ ಅಧಿಕಾರ  ಇವು
ಅತಿಯಾದರೆ ಅಹಂಕಾರ ಸ್ವಾರ್ಥ ಕ್ಕೆ ಜೀವ ಕಟ್ಟುಬಿದ್ದು ಮತ್ತೆ 
ಸಂಕಷ್ಟ ಸಮಸ್ಯೆ,ಇದನ್ನು ತಡೆಯಲು  ತಿರುಗಿ ದಾನ ಧರ್ಮ
ಗುರು ಗುರಿಯ ಕಡೆಗೆ ಜೀವನ ಪ್ರಯಾಣ. ಹೀಗೆ  ಮರಳಿ ಭಗವಂತನೆಡೆಗೆ  ಸಾಗಲು ಗುರುವಿನ ಜೊತೆಗೆ ಗುರಿ ಅಗತ್ಯ.
ಗುರಿ ಆಧ್ಯಾತ್ಮದ ಕಡೆ ಇದ್ದರೆ ಮುಕ್ತಿ. ಜನನ ಮರಣದ ನಡುವಿನ ಮಾನವನ ಜೀವನ  ಅರ್ಧಸತ್ಯದಲ್ಲಿ ಅತಂತ್ರವಾಗಿ
ಸಮಸ್ಯೆಗಳನ್ನು  ಹೆಚ್ಚಿಸಿಕೊಂಡು ರೋಗಕ್ಕೆ ಒಳಗಾದರೆ  ಇದಕ್ಕೆ ಔಷಧ ಆಧ್ಯಾತ್ಮದಲ್ಲಿರುತ್ತದೆ. 
ಇದು  ಕಾಯಕವೇ  ಕೈಲಾಸವಾದರೆ  ಕರ್ಮಯೋಗಿ.

ಜ್ಞಾನವನ್ನು  ಹಂಚಿಕೊಳ್ಳಬಹುದು. ಆದರೆ ಎಂತಹ ಜ್ಞಾನವನ್ನು ಹಂಚಿಕೊಂಡರೆ ದೈವತ್ವದೆಡೆಗೆ ನಡೆಯಬಹುದೆನ್ನುವ ಸತ್ಯ ತಿಳಿದು ತಿಳಿಸುವವರಿಗೆ  ಇಂದಿಗೂ ಅವಮಾನ. ಹೀಗಾಗಿ ಅಭಿಮಾನಿ ದೇವತೆಗಳೆನ್ನಿಸಿಕೊಂಡವರು  ಹೊರಗೆ ಗುರುವನ್ನು ಅರಸುತ್ತಾ ಗುರಿ ಸರಿಯಿಲ್ಲದೆ ದಾರಿತಪ್ಪಿದಾಗ ನಿಜವಾದ ಗುರುವಿಗಾಗಿ ಹಿಂದಿರುಗಿ ಹಿಂದೂ ಧರ್ಮಕ್ಕೆ ಬರಲೇಬೇಕು.
ವಿಶ್ವದ ತುಂಬಾ ಹಿಂದೂಗಳಿರುವರು ಹಿಂದೂಸ್ತಾನ್ ಎನಿಸಿಕೊಂಡಲ್ಲಿ  ಹಿಂದುಳಿದಿರುವರು ಬೆಳೆದಿರುವರೆಂದರೆ ನಮ್ಮ ಮೂಲ ಗುರುವನ್ನು ಶಿಕ್ಷಣವನ್ನು ಬಿಟ್ಟು ಹೊರನಡೆದವರು  ಮುಂದೆ ಹೋಗಿದ್ದರೂ ಸತ್ಯ ಒಂದೇ .ಒಳಗಿರುವ ಆತ್ಮ ಬಿಟ್ಟು ಹೊರಗಿನ ಆತ್ಮನೊಂದಿಗೆ ಬದುಕಬಹುದೆ? ಕಣ್ಣಿಗೆ ಕಾಣದ ಶಕ್ತಿ ಬಿಟ್ಟು ಕಾಣುವ ಶಕ್ತಿ ಇದೆಯೆ?  ಎಲ್ಲೆಡೆಯೂ ಸಮಾನವಾಗಿ ಹರಡಿಕೊಂಡಿರುವ ಅಣು ಪರಮಾಣುಗಳಾಗಲಿ,ಜೀವಾತ್ಮ ಪರಮಾತ್ಮನ ಸತ್ಯ ಅರ್ಥ ವಾಗೋದಕ್ಕೆ  ಆತ್ಮಜ್ಞಾನಬೇಕಿದೆ.

ಜ್ಞಾನ ಎಂದರೆ ತಿಳುವಳಿಕೆ. ಇದರಲ್ಲಿ ಆತ್ಮಜ್ಞಾನ,ವಿಜ್ಞಾನವೆರಡೂ ಸಮಾನವಾಗಿ ಅರ್ಥ ಮಾಡಿಕೊಂಡರೆ ಆತ್ಮವಿಶ್ವಾಸದ ಸುಜ್ಞಾನ. ವಿರುದ್ದದಿಕ್ಕಿನಲ್ಲಿ ನಡೆದರೆ ಅಜ್ಞಾನದ ಅಹಂಕಾರವಾಗುತ್ತದೆ. 
ಭೂಮಿ ಆಕಾಶದಲ್ಲಿ ಚಲಿಸುತ್ತಿದ್ದರೂ ಮನುಕುಲದ ಚಲನೆ ಭೂಮಿಯಮೇಲೇ ಇರುತ್ತದೆ.ಈ ಸಾಮಾನ್ಯ ಜ್ಞಾನವಿಲ್ಲದೆ ಆಕಾಶದೆತ್ತರ ಹಾರಿ ಅಹಂಕಾರ ಪಟ್ಟವರು ಕೆಳಗೆ ಭೂಮಿಯ ಮೇಲೆ ಬಿದ್ದೇ  ಜೀವ ಹೋಗಬೇಕು. ದೇವಾನುದೇವತೆಗಳಿಗೂ  ಇದು ಅನ್ವಯಿಸುತ್ತದೆ ಎನ್ನುವ ಸತ್ಯಜ್ಞಾನವಿದ್ದರೆ  ಉತ್ತಮ ಜೀವನವಾಗುತ್ತದೆ.

ವಿವೇಕಾನಂದರ ಯುವಶಕ್ತಿ ಇಂದಿದೆಯೆ?

ದೇಶದ ಯುವಕರು ವಿದೇಶದೆಡೆಗೆ ಮುಖಮಾಡಿಕೊಂಡು ಸ್ವದೇಶ ದ ವಿರುದ್ದ ಕೂಗುತ್ತಿರುವುದರ ಹಿಂದೆ ಯಾರ ಕೈವಾಡವಿದೆ? 
ಪ್ರಜಾಪ್ರಭುತ್ವ ದ ಅರ್ಥ ತಿಳಿದವರು ಎಚ್ಚರವಾದರೆ ಉತ್ತಮ ಇಲ್ಲಿ ಯುವಪೀಳಿಗೆಗೆ ಹಣ ಅಧಿಕಾರದ ಆಮಿಷ ಒಡ್ಡಿ ತಮ್ಮ ಬೇಳೆ ಬೇಯಿಸಿಕೊಂಡು ಆಳುವವರೆ ಹೆಚ್ಚು.ರಾಜಕೀಯತೆ ಧಾರ್ಮಿಕ ಕ್ಷೇತ್ರವನ್ನೂ ಆವರಿಸಿರುವಾಗ ಇದರಿಂದ ಹೊರ ಬಂದು ವಾಸ್ತವತೆಯನ್ನು ಸರಿಯಾಗಿ ತಿಳಿಯುವುದಕ್ಕೂ ಯುವಶಕ್ತಿಗೆ  ಸಮಯವಿಲ್ಲವೆ? ಅಥವಾ ತಿಳಿಸುವವರಲ್ಲಿಯೆ ರಾಜಕೀಯವಿದೆಯೆ?
ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದ್ದನ್ನು ಹಿಡಿದುಕೊಂಡು ಅಮೇರಿಕಾದೆಡೆಗೆ ಹೋಗಲು ದೇಶದ  ಹಣ ಬಳಸುವರು.ಒಂದೊಂದು ಕಾರ್ಯಕ್ರಮ ನಡೆಸಲೂ ಹಣ ಬೇಕು ಆದರೆ ಅವರಲ್ಲಿದ್ದ ದೇಶಭಕ್ತಿ ಇಲ್ಲದ ಯುವಪೀಳಿಗೆ ವಿದೇಶದಲ್ಲಿ ಕುಳಿತು ದೇಶದ ಬಗ್ಗೆ ಮಾತಾಡಿ ಒಳಗಿದ್ದ ನಿಜವಾದ ದೇಶಭಕ್ತರನ್ನು  ಗಮನಿಸುವ ಜ್ಞಾನವಿಲ್ಲದೆ ತಾವೇ ಸಾಧಕರೆನ್ನುವಂತೆ ವರ್ತಿಸಿ  ಆಳುವುದು ಅಧರ್ಮ . ಇದು  ಧರ್ಮ, ದೇವರು, ಜಾತಿ,ಪಕ್ಷಗಳವರೆಗೆ ಹರಡಿಕೊಂಡು ದ್ವೇಷ ಹೆಚ್ಚಿಸುವವರಿಗೆ ಒಳ್ಳೆಯ ಸಹಕಾರ ಕೊಟ್ಟಂತಿದೆ. ವಿದೇಶಿಗಳು ಭಾರತದೇಶದ ಜ್ಞಾನಿಗಳು ಬುದ್ದಿವಂತರನ್ನು  ಖರೀದಿಸಲು  ಹೊರಟಿವೆ.ನಮ್ಮವರು ಇದನ್ನು ಪ್ರಗತಿ ಎಂದು ಮಕ್ಕಳನ್ನು ಕಳಿಸುತ್ತಿದ್ದಾರೆಂದರೆ ಇಲ್ಲಿ ದೇಶಭಕ್ತಿಯಿಲ್ಲ. ತೋರುಗಾಣಿಕೆಯ ನಾಟಕವನ್ನು ಸತ್ಯವೆಂದರಿತ ಜನಸಾಮಾನ್ಯರು ಕುರಿಗಳಂತೆ  ಹಿಂದೆ ನಡೆದು ತಿರುಗಿ ಬರಲಾಗದೆ ಸಾಯುತ್ತಿದ್ದಾರೆ. ಹಣದಿಂದ ಜನರನ್ನು ಖರೀದಿಸುವುದೇ ಅಜ್ಞಾನ.  ರಾಜಕಾರಣಿಗಳಂತೂ ದೇಶವನ್ನು  ವಿದೇಶಿ ಬಂಡವಾಳ ,ಸಾಲದ ವ್ಯವಹಾರಕ್ಕೆ  ಬಳಸಿಕೊಂಡು  ವೈಭೋಗದೆಡೆಗೆ  ನಡೆದಿರೋದು ದುರಂತ.
ಹಿಂದೂ ರಾಷ್ಟ್ರ ಮಾಡೋರ ಲಕ್ಷಣವೆ ಇದು? ಮೊದಲು ನಾವುಬದಲಾಗಬೇಕು. ನಾವುಹಿಂದಿನ ಮಹಾತ್ಮರಂತೆ ಅಧ್ಯಾತ್ಮದಲ್ಲಿ  ನಡೆದು ನುಡಿಯಬೇಕು.  ಇಲ್ಲಿ ಎಲ್ಲಾ ಮುಂದಿನ ಚಿಂತೆ ಇಂದಿನ ಸತ್ಯ ಅರ್ಥ ವಾಗದೆ ಹಿಂದಿನ ಸತ್ಯವರಿತು ಮುಂದೆ ನಡೆದರೆ  ಆಗೋದೇ ಹೀಗೆ.  ಯೋಗದಿನಾಚರಣೆಯ ಮೂಲಕ ಯೋಗಾಸನದ ಮೂಲಕ ದೇಶದ ಜನರನ್ನು ಯೋಗಿ ಮಾಡಲಾಗದು. ಪ್ರತಿದಿನ ಯೋಗ್ಯ ವಿಚಾರಗಳಿಂದ ತಮ್ಮ ಯೋಗ್ಯತೆಯ ಕಡೆಗೆ ಗಮನಹರಿಸಿ ಯೋಗ್ಯದಿಕ್ಕಿನಲ್ಲಿನಡೆದುಯೋಗ್ಯಪ್ರಜೆಗಳಾಗು
ವಂತಹ ಶಿಕ್ಷಣವನ್ನೇ ಕೊಡದೆ ಯೋಗ ಮಾಡುತ್ತಾ ವಿದೇಶದೆಡೆಗೆ ನಡೆದರೆ  ಇದರಲ್ಲಿ ಯಾವ  ಉದ್ದೇಶವಿದೆ? ಒಟ್ಟಿನಲ್ಲಿ ದೇಶಕ್ಕಾಗಿ ನಾವೇನೂ ಮಾಡುವ ಅಗತ್ಯವಿಲ್ಲ. ಕೊನೆಪಕ್ಷ ವಿದೇಶ ಮಾಡದಿದ್ದರೆ ಸಾಕು. ಅಂದರೆನಮ್ಮೊಳಗೇ
 ಇರುವ ಸತ್ಯಜ್ಞಾನದಿಂದ ಸತ್ಯ ತಿಳಿದು ಹಿಂದಿರುಗಿ ಬಂದರೆ  ನಮ್ಮ ಮೂಲದ ಧರ್ಮ ಕ್ಕೆ ಬಲ ಬರುವುದು. ಧರ್ಮ ಹೊರಗಿಲ್ಲ ಒಳಗೇ ಇದೆ.ಎಲ್ಲಾ ದೇಶದ ಮೂಲ ಧರ್ಮ ಕರ್ಮ  ಆ ದೇಶದ ಶಿಕ್ಷಣದಲ್ಲಿಯೇ ತಿಳಿಸಿ ಕಲಿಸುವುದರ ಮೂಲಕದೇಶಭಕ್ತಿಹೆಚ್ಚುವುದು.ಆತ್ಮವಿಶ್ವಾಸಆತ್ಮಜ್ಞಾನದಿಂದ 
 ಆತ್ಮನಿರ್ಭರ ಆಗುವುದು. ಇದನ್ನು ಯಾರೋ ಹೊರಗಿನಿಂದ ಬಂದು ಕೊಡಲಾಗದು ಒಳಗಿರುವವರೆ ಬೆಳೆಸಬೇಕಿದೆ. ಒಟ್ಟಿನಲ್ಲಿ ರಾಜಕೀಯವೆಂದರೆ ಬೇರೆಯವರನ್ನು ಆಳುವುದಾಗಿದೆ. ಪ್ರಜಾಪ್ರಭುತ್ವ ಎಂದರೆ ನಮ್ಮನ್ನು ನಾವು ಆಳಿಕೊಳ್ಳಬೇಕಿತ್ತು. ಈಗ ದೇಶದಿಂದ ನನಗೇನೂ ಲಾಭವಿಲ್ಲವೆಂದು ವಿದೇಶಿಗರ ಕೈಕೆಳಗೆ ದುಡಿಯುವ ಯುವಪೀಳಿಗೆಯಲ್ಲಿ ದೇಶಭಕ್ತಿ ಇರಲು ಸಾಧ್ಯವೆ? ವಿದೇಶದ ಋಣ ತೀರಿಸದೆ ದೇಶದ ಋಣ ತೀರಿಸಲಾಗದು.ಆದರೂ ಇಲ್ಲಿನ ನೆಲಜಲದ ಋಣ ತೀರಿಸಲು  ದೇಶಕ್ಕಾಗಿ ಸೇವೆ ಮಾಡುವುದು  ಧರ್ಮ. ಅದು ಬಿಟ್ಟು ಇನ್ನೂ ಸರ್ಕಾರವೇ ನಮ್ಮ ನ್ನು ಸಾಕಬೇಕೆಂದರೆ  ಅಜ್ಞಾನ.
ಸಾಲದ ಹಣದಲ್ಲಿ ಎಷ್ಟೇ ಆಸ್ತಿ ಅಂತಸ್ತು ಅಧಿಕಾರ ಪಡೆದರೂ  ಅದನ್ನು  ತೀರಿಸಲು ಜ್ಞಾನ ಅಗತ್ಯವಿದೆ. ಜ್ಞಾನ ಎಂದರೆ ಹೊರಗಿನ  ವಿಜ್ಞಾನವಲ್ಲ ಒಳಗಿರುವ ಆತ್ಮಜ್ಞಾನ.
ಒಂದು  ಸಣ್ಣ ಜೀವ ಸಾಕಿಕೊಳ್ಳುವ ಯೋಗ್ಯತೆ ಇಲ್ಲದವರು ದೇಶ ಕಟ್ಟಿ ಬೆಳೆಸಬಹುದೆ? ಜನರ ಹಣದಲ್ಲಿ  ಜೀವನ ನಡೆಸಿ ಜನರನ್ನು ದಾರಿತಪ್ಪಿಸಿ ಆಳುವವರ ಸಂಖ್ಯೆ ಬೆಳೆದಿರೋದು  ಅಧರ್ಮ ಭ್ರಷ್ಟಾಚಾರವಾಗಿದೆ. ತನ್ನದಲ್ಲದ ವಿಷಯ ವಸ್ತು ಒಡವೆ, ದೇಶ,ಭಾಷೆ,ಧರ್ಮ ವನ್ನು ತನ್ನದೆನ್ನುವಂತೆ ನಾಟಕ ಆಡಿ ಜನರನ್ನು ಮೋಸಮಾಡುವುದೇ  ಅಧರ್ಮ ಕ್ಕೆ ಕಾರಣ. ಇದು ಪ್ರತಿಷ್ಠಿತ  ಶ್ರೀಮಂತ ವರ್ಗ ಮಧ್ಯವರ್ತಿಗಳ ಸಹಾಯದಿಂದ  ನಡೆಸುತ್ತಿರುವ ರಾಜಕೀಯವಾಗಿದೆ. ಇದರಲ್ಲಿ  ದೇಶಕ್ಕೆ ಏನು ಸಿಕ್ಕಿದೆ? ಜನರ ಸಾಲ ತೀರಿತೆ? ನಮ್ಮ ಧರ್ಮ ರಕ್ಷಣೆಯಾಗಿದೆಯೆ?  ಪ್ರಜೆಗಳೇ ಸಾಮಾನ್ಯಜ್ಞಾನದಿಂದ ತಿಳಿಯುವವರೆಗೆ ಬದಲಾವಣೆ ಕಷ್ಟ.
ಮಹಾತ್ಮರು ಹೇಳಿದ್ದೇ ಒಂದು ಮಹೋದಯರು ಹೇಳೋದೆ ಬೇರೊಂದು. ಎಲ್ಲಾ ತಮ್ಮ ಸ್ವಾರ್ಥ ದ ರಾಜಕೀಯಮಯ ಜಗತ್ತು. ಆದರೆ  ಒಳಗಿನ ಜಗತ್ತು ಎಲ್ಲದ್ದಕ್ಕೂ ಸಾಕ್ಷಿಯಾಗಿದೆ. ತಿರುಗಿ ಬರೋವಾಗ ಕಾದಿದೆ ಆಪತ್ತು.ದೇಶವನ್ನು ವಿದೇಶ ಮಾಡಿದರೆ ವಿದೇಶದೊಳಗೆ ದೇಶ ಸಿಲುಕುತ್ತದೆ  ಅಂದರೆ ವಿದೇಶಿಗಳ ಅಧಿಕಾರಕ್ಕೆ  ದೇಶದ ಯುವಪೀಳಿಗೆ ಬಲಿಯಾಗುತ್ತಾರೆ. ಹಿಂದೆ ಹೀಗೇ ನಡೆದಿತ್ತು ಈಗ ಇತಿಹಾಸ  ಪ್ರಚಾರ ಮಾಡಿ ಇತಿಹಾಸದೆಡೆಗೆ ಹೊರಟಿದ್ದಾರೆ.ಇದಕ್ಕೆ ಕಾರಣ ಇತಿಹಾಸ ಪುರಾಣ ಕಾಲದಲ್ಲಿದ್ದ ಶಿಕ್ಷಣ ಕೊಡದೆ ಆಳಿದ ರಾಜಕೀಯ ವ್ಯವಸ್ಥೆ. ಎಲ್ಲಾ ಪಕ್ಷಗಳಿಗೂ ದೇಶದ ಆರ್ಥಿಕ ಸ್ಥಿತಿ  ಉತ್ತಮವಾಗಿಡುವ ಉದ್ದೇಶ. ಆದರೆ ಜನರ ಜ್ಞಾನ ಗುರುತಿಸುವ ಶಿಕ್ಷಣವಿಲ್ಲದೆ ವಿದೇಶಿ ವಿಜ್ಞಾನದಿಂದ ಜನರನ್ನು ವಿದೇಶದವರೆಗೆ ಕಳಿಸಿ  ಅಳಿದುಳಿದವರನ್ನು ಆಳಿ ಅಳಿಸುವುದೇ  ಆಗಿದೆ. ವಿದೇಶಕ್ಕೆ ಹೋದವರ ಆಸ್ತಿ ಪಾಸ್ತಿಗೆ ವಾರಸುದಾರರಿಲ್ಲದೆ ಕೊಳೆತರೂ ಕೇಳೋರಿಲ್ಲ. ಎಂತಹ ಅಜ್ಞಾನ. ನಮ್ಮ ಪೂರ್ವಜರ ಆಸ್ತಿ ಬೇಕು ಅವರ ಧರ್ಮ ಕರ್ಮ ಭೂಮಿ ಸೇವೆಯ ಜ್ಞಾನ ಬೇಡವೆಂದರೆ  ಹಿಂದೂ ಧರ್ಮದ  ಹಿಂದುಳಿಯುವಿಕೆಗೆ ಇದೇ ಕಾರಣ.ನಮ್ಮವರನ್ನೇ ನಮ್ಮತನ ವನ್ನೇ ಮರೆತು ಬಿಟ್ಟು ಹೋದರೆ ನಮ್ಮವರು ಯಾರು? ಪರಕೀಯರೆ? ಇರಬಹುದು ಕಾರಣ ಅವರು ನಮಗೆ ಆಶ್ರಯ ಕೊಟ್ಟಿರುವಾಗ ಅವರ ಋಣ ನಮಗಿದೆ. ಇದಕ್ಕೆ ಕಾರಣವೇ  ಶಿಕ್ಷಣ.ಹಾಗಾಗಿ ಅವರ ಧರ್ಮಕ್ಕೆ ಜಯ.ಹಿಂದೂಗಳ ಮಂತ್ರ ಇಸ್ಲಾಂ ರ ತಂತ್ರ ಮುಸ್ಲಿಂ ರ ಯಂತ್ರದಿಂದ  ಮನುಕುಲ ಸ್ವತಂತ್ರವಾಗಿದ್ದರೂ ಅತಂತ್ರಸ್ಥಿತಿಗೆ  ತಲುಪಲು ಕಾರಣವೇ  ದ್ವೇಷದ ರಾಜಕೀಯ.
ಒಂದಂತೂ ಸತ್ಯ ಮನುಕುಲವಿರೋದು ಭೂಮಿ ಮೇಲೆ.
ಭೂಮಿಯ ಋಣ ತೀರಿಸಲು  ಭೂ ಸೇವೆ ಮಾಡಬೇಕು. ಸೇವೆಯಲ್ಲಿ  ಸತ್ಯ ಧರ್ಮ ವಿರಬೇಕು. ಈಗ ಎಲ್ಲಿದೆ ಹುಡುಕಬೇಕಿದೆ.ಸಿಗದಿದ್ದರೆ ಒಳಗೇ ಇರುತ್ತದೆ ಬೆಳೆಸಿಕೊಂಡರೆ  ಆತ್ಮಜ್ಞಾನದಿಂದ ಶಾಂತಿ ಮುಕ್ತಿ. ಹೊರಗೆ ನಡೆದಷ್ಟೂ ಸಿಗೋದಿಲ್ಲ. ದೇವರನ್ನು ಹೊರಗೆ  ಬೆಳೆಸೋ ಮೊದಲು ದೈವತ್ವದ ಜ್ಞಾನ ಒಳಗಿದ್ದರೆ ಉತ್ತಮ . ದೇವರಿರೋದೆಲ್ಲಿ?ಅಸುರರೊಳಗೇ ಸುರರು  ಸೇರಿಕೊಂಡರೆ ಆಗೋದೇ ಹೀಗೆ.ರಾಜಕೀಯ ಧರ್ಮ ದ ಹಾದಿಯಲ್ಲಿರಬೇಕಿತ್ತು ಆದರೆ ಧರ್ಮದ ಹೆಸರಿನಲ್ಲಿ ರಾಜಕೀಯ ಬೆಳೆದು ಆಧರ್ಮ  ಮಿತಿಮೀರಿದೆ.  ಯಾರೋ ಯಾರದ್ದೋ ಸಾಲ ತೀರಿಸಲಾಗದು ಎನ್ನುವ ಸತ್ಯ ತಿಳಿದಾಗಲೇ ಅವರವರ ಸಾಲ ತೀರಿಸಲು  ಜನ ಮುಂದೆ ಬರುವರು. ಇದಕ್ಕೆ ಸರ್ಕಾರಗಳೇ ಬಿಡದೆ  ಉಚಿತ ಕೊಟ್ಟು ಸಾಲ ಬೆಳೆಸಿದರೆ  ಸಮಸ್ಯೆಗೆ ಪರಿಹಾರ ಸಿಗದು. ಅನುಭವಿಸಿಯೇ ತೀರಬೇಕಷ್ಟೆ.  ಕಲಿಗಾಲದಲ್ಲಿ ಹೆಚ್ಚು ಜನರು ಧರ್ಮದ ಹೆಸರಿನಲ್ಲಿ ಅಧರ್ಮದ ರಾಜಕೀಯ  ಬೆಳೆಸಿ  ನಮ್ಮವರನ್ನೇ ಆಳುವಾಗ  ಕಲಿಕೆಯಲ್ಲಿ  ಅಜ್ಞಾನವಿದೆ ಎಂದರ್ಥ. ಶಿಕ್ಷಣದ ವಿಚಾರವನ್ನು  ತಿಳಿಸಿದರೂ  ತಲೆಕೆಡಿಸಿಕೊಳ್ಳದವರು  ಧರ್ಮದ ವಿಚಾರದಲ್ಲಿ ತಲೆಕೆಡಿಸಿಕೊಂಡರೆ  ಉಪಯೋಗವಿಲ್ಲ. ಒಳಗೆ ಸೇರಿಸುವ ವಿಷಯದಲ್ಲಿಯೇ ಅಧರ್ಮ ವಿದ್ದರೆ  ಧರ್ಮ ರಕ್ಷಣೆ ಹೇಗೆ ಆಗುತ್ತದೆ. ಸಾಮಾನ್ಯಜ್ಞಾನದ ಕೊರತೆ ವಿಜ್ಞಾನ ಜಗತ್ತನ್ನು ಆಳಲು ಹೊರಟು ಅಜ್ಞಾನವೇ ಹೆಚ್ಚಾಗಿದೆ.

ಆತ್ಮವಿಶ್ವಾಸ ಒಳಗಿದೆಯೋ ಹೊರಗಿದೆಯೋ?

🌹 *ಸ್ಪೂರ್ತಿ ಕಿರಣ*🌹

*ನಿಮಗೆ ಯಾವುದು ಭಯ ಅಥವಾ ಅಂಜಿಕೆ ಹುಟ್ಟಿಸುತ್ತದೋ*, *ಅದನ್ನೇ ಧೈರ್ಯದಿಂದ ಮಾಡಿ ಯಶಸ್ವಿಯಾಗುವುದು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬಹುದಾದ ಸುಲಭ ಮಾರ್ಗ*. 

*ಯಾವತ್ತೂ ಠೇವಣಿಯಾಗಿ ಇರುವಂಥದ್ದು ಮಾತ್ರ ಆತ್ಮವಿಶ್ವಾಸ. ಅದನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು.

ಸತ್ಯಂ ವದ ಧರ್ಮಂ ಚರ. ಸತ್ಯ ಹೇಳೋದು‌ಕಷ್ಟ. ಹೇಳಿದರೆ ಯಾರಿಗೂ ಇಷ್ಟವಾಗೋದಿಲ್ಲ ಹಾಗಾದರೆ ಧರ್ಮದಲ್ಲಿ ‌ನಡೆಯಲು ಸಾಧ್ಯವೆ? ಸತ್ಯ ಧರ್ಮ ವೆನ್ನುವ ಜೋಡಿ ಪದದ ಮಧ್ಯೆ  ಅಸತ್ಯ ಅಧರ್ಮ ಗಳು  ಸ್ಥಾನಮಾನ ಪಡೆದಾಗ  ಮೂಲ ಸತ್ಯ ಮೇಲಿನ ಧರ್ಮ ಅಂತರ ಬೆಳೆಯುತ್ತಾ ಹೋಗುತ್ತದೆ. ಈ ಅಂತರವೇ ಅವಾಂತರ ಸೃಷ್ಟಿ ‌ಮಾಡಿ ಆಳುತ್ತವೆ. 
ಮಧ್ಯವರ್ತಿ ಮಾನವ ಮಹಿಳೆ ‌ಮಕ್ಕಳ  ಮಧ್ಯಸ್ಥಿಕೆ ಯಿಂದ ಸತ್ಯ ಬೆಳೆಯುವುದಕ್ಕೆ  ಅವಕಾಶವಿಲ್ಲವಾದರೆ  ಅಸತ್ಯದ ರಾಜಕೀಯವೇ ಬೆಳೆಯುತ್ತದೆ. 
ಒಬ್ಬರನ್ನು ಇನ್ನೊಬ್ಬರು ಆಳೋದೆಂದರೆ ಸುಲಭವಿಲ್ಲ. ಅದಕ್ಕೆ ಅವಕಾಶ ಸಹಕಾರ ಕೊಟ್ಟವರೆ ಆಳಾಗಿ ಹಾಳಾಗಿ ಹೋಗಿರೋದು ಇತಿಹಾಸ ಪುರಾಣ ತಿಳಿಸುತ್ತದೆ.
ಹಾಗಾಗಿ ನಮ್ಮನ್ನು ನಾವೇ ಅರ್ಥ ಮಾಡಿಕೊಂಡು ಪರಮಾತ್ಮನ ದಾಸರಾಗಿ,ಶರಣರಾಗಿದ್ದವರಲ್ಲಿ ಸತ್ತದ ಜೊತೆಗೆ ಧರ್ಮ ವಿತ್ತು. ಏಕಪಕ್ಷೀಯವಾಗಿ ಯಾವುದೇ ಧರ್ಮ ನಿಲ್ಲಬಾರದು. ಆದರೆ ಇಂದಿನ ಪ್ರಜಾಪ್ರಭುತ್ವದಲ್ಲಿ  ಎಲ್ಲಿ ಹಣ ಅಧಿಕಾರವಿದೆಯೋ ಅದು‌  ಭಗವಂತನ ಕೃಪೆ.ಅದನ್ನು ಸರಿಯಾಗಿ‌ಬಳಸದೆ ಭ್ರಷ್ಟಾಚಾರ ಕ್ಕೆ  ದಾರಿ ಮಾಡಿಕೊಟ್ಟರೆ  ಮುಗಿಯಿತು ಕಥೆ. ಹಾಗಾಗಿ ಆತ್ಮವಿಶ್ವಾಸ
ಇರಬೇಕು ಅಹಂಕಾರ ವಿರಬಾರದೆಂದರು.
ಭಯ ಭಕ್ತಿ  ಪರಮಾತ್ಮನಲ್ಲಿರಬೇಕು.ಪರಮಾತ್ಮನ ಅರಿವಿದ್ದರೆ  ಮಹಾತ್ಮರಾಗಬಹುದು. ಒಟ್ಟಿನಲ್ಲಿ ಸತ್ಯಕ್ಕೆ ಬೆಲೆಯಿಲ್ಲ ಧರ್ಮಕ್ಕೆ  ನೆಲೆಯಿಲ್ಲ ಎನ್ನುವ ಕಾಲದಲ್ಲಿರುವ ನಮ್ಮೊಳಗೇ ಸತ್ಯವಿದೆಯೆ ಧರ್ಮ ವಿದೆಯೆ ಕೇಳಿಕೊಳ್ಳಲು ಸಮಯವಿಲ್ಲವೆಂದರೆ ಹೊರಗಿನವರ ಸತ್ಯ ಧರ್ಮ ವನ್ನು ಟೀಕಿಸುವ ಅಗತ್ಯವಿಲ್ಲ.
ಆಧ್ಯಾತ್ಮದಿಂದ ಆತ್ಮನಿರ್ಭರ ವಾಗಬೇಕು. ಯಾವುದೋ ಹೊರದೇಶದ ಶಿಕ್ಷಣಬಂಡವಾಳ,ಧರ್ಮ ಸಂಸ್ಕೃತಿ ಭಾಷೆಯ ಜಪಮಾಡಿಕೊಂಡಿರುವ ಅಸಂಖ್ಯತ  ಜನರನ್ನು ಹಿಂದೆ ತರುವ ಪ್ರಯತ್ನ ಬಿಟ್ಟು ಹಿಂದೆ‌ನಡೆದು ಬರುತ್ತಿರುವ ಮುಂದಿನ ಪ್ರಜೆಗಳನ್ನು ಹಿಡಿದು ಬುದ್ದಿಕಲಿಸುವುದರಿಂದ ಪೋಷಕರಲ್ಲಿ ಅಡಗಿರುವ ಭವಿಷ್ಯದ ಚಿಂತೆ ಕರಗುತ್ತದೆ.
ಕಾಯೋನು ಒಳಗೇ ಇರೋವಾಗ ಮಕ್ಕಳನ್ನು ಅವನೆಡೆಗೆ ಕರೆದೋಯ್ಯುವ  ಸಂಸ್ಕಾರಯುತ ಶಿಕ್ಷಣ ನೀಡುವ ಸ್ವಾತಂತ್ರ್ಯ ನಮಗಿತ್ತು.ಬಳಸಿಲ್ಲವೆಂದರೆ ಈಗಲೂ ಸಮಯವಿದೆ. ಸಾಧ್ಯವಾದವರು  ಸದ್ಬಳಕೆ ಮಾಡಿಕೊಂಡರೆ ಪ್ರಜೆಗಳಾಗಿದ್ದಕ್ಕೆ ಸಾರ್ಥಕ. ಇದಕ್ಕೆ ಯಾಕೆ ಬೇಕು ಸರ್ಕಾರದ ಹಣದಿಂದ ಎಲ್ಲಾ ಸಾಧ್ಯವೆ?
ಸತ್ಯವೇ ದೇವರು.ಸತ್ಯವೇ ಗೆಲ್ಲೋದು, ಆತ್ಮಸಾಕ್ಷಿಯ ಮುಂದೆ ಯಾವ ಸತ್ಯವೇ ಇಲ್ಲ

ನಿಜವಾದ ಸಿರಿತನ ಯಾವುದು?

ಒಬ್ಬ ವ್ಯಕ್ತಿಯು ಸಿರಿವಂತನೋ, ಬಡವನೋ ಆಗಿರಬಹುದು ಆದರೆ ಅವರಲ್ಲಿರುವ ಜೀವಜ್ಯೋತಿಯು ಸಿರಿವಂತವಲ್ಲ ಬಡವವಲ್ಲ. ಒಬ್ಬ ವ್ಯಕ್ತಿಯು ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷ ಓದಿದರೆ ಅವನಿಗೆ ವೈದ್ಯ, ವಕೀಲ, ಅಭಿಯಂತರ ಪದವಿಗಳನ್ನು ಕೊಡುತ್ತಾರೆ. ಆದರೆ ಒಬ್ಬ ವ್ಯಕ್ತಿಯು ನೂರು ವರುಷ ಬದುಕಿದರೂ ಅವನಲ್ಲಿರುವ ಜೀವಜ್ಯೋತಿಗೆ ಯಾವ ಪದವಿ ಪ್ರಶಸ್ತಿಗಳಿಲ್ಲ. ಲೌಕಿಕವಾದ ಭೌತಿಕವಾದ ನಮ್ಮ ಎಲ್ಲ ಪದವಿ, ಪ್ರಶಸ್ತಿಗಳನ್ನು ಮಾನ ಸನ್ಮಾನಗಳನ್ನು ಮೀರಿದ್ದು ಈ ಜೀವಜ್ಯೋತಿ ಪರಂಜ್ಯೋತಿ! ಮನೆ-ತೋರಿಸಬಹುದು, ಮನೆಯೊಳಗಿರುವ ಬಯಲನ್ನು ತೋರಿಸಲು ಬರುವುದಿಲ್ಲ. ನಮ್ಮ ದೇಹವೆಂಬ ಮನೆಯೊಳಗಿರುವ ಜೀವಜ್ಯೋತಿಯನ್ನು ಆತ್ಮವನ್ನು ತೋರಿಸಲಾಗದು. ನಾವು ಕಟ್ಟಿಸಿದ ಮನೆ ಒಮ್ಮೆ ಬೀಳಬಹುದು ಮತ್ತೆ ಅದನ್ನು ಕಟ್ಟಲು ಬರುತ್ತದೆ. ಮನೆಯೊಳಗಿರುವ ಬಯಲು ಬೀಳುವುದೂ ಇಲ್ಲ ಏಳುವುದೂ ಇಲ್ಲ. ಹಾಗೇ ದೇಹವು ಹೋಗಬಹುದು, ಬರಬಹುದು ಆದರೆ ಜೀವಜ್ಯೋತಿ, ಆತ್ಮಜ್ಯೋತಿ ಬರುವುದಿಲ್ಲ, ಹೋಗುವುದಿಲ್ಲ. ಅದು ನಿತ್ಯ ನೂತನ ಶಾಶ್ವತ.
 
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ದೇವಮಂಡಲ* ಪುಸ್ತಕದಿಂದ ಪುಟ ೨೩.

ಬಡತನ ಸಿರಿತನದ  ಅಂತರದಲ್ಲಿ ಮನೆತನವೂ  ಮರೆತು ಹೋಗುತ್ತಿದೆ. ನಮ್ಮದು ಸಿರಿವಂತರ ಕುಟುಂಬವಾಗಿತ್ತು.ಈಗ ನಮ್ಮಲ್ಲಿ ಬಡತನವಿದೆ ಎನ್ನುವವರೊಮ್ಮೆ ಯೋಚಿಸಿದರೆ ಅಂದಿನ ಕಾಲದ ಶ್ರೀಮಂತ ರಲ್ಲಿದ್ದ  ಜ್ಞಾನಕ್ಕಿಂತ ಉನ್ನತಮಟ್ಟದ ಜ್ಞಾನ ನಮ್ಮೊಳಗೇ ಇದ್ದರೂ ಗುರುತಿಸುವ  ಶಿಕ್ಷಣವಿಲ್ಲದೆ  ಇಂದು ಬಡವರನ್ನು ಹಣದಿಂದ ಅಳೆಯುವ ಕಾಲ ಬಂದಿದೆ. ಅದೇ ಹಣವಂತರಲ್ಲಿ ಹೃದಯವಂತಿಕೆಯ ಕೊರತೆಯಿದೆ ಎಂದರೆ ಭಗವಂತನಿಗೆ ಹತ್ತಿರವಾಗಿರೋದು  ಹೃದಯವಂತಿಕೆಯುಳ್ಳ  ಬ್ರಾಹ್ಮಣ. ಇಲ್ಲಿ ಬ್ರಾಹ್ಮಣ ಎಂದರೆ ಜಾತಿಯಾಗೋದಿಲ್ಲ ಬ್ರಹ್ಮನ ಸತ್ಯವನರಿತು ಬ್ರಹ್ಮಾಂಡದಲ್ಲಿ  ಇದ್ದವರಾಗುವರು.ಎಲ್ಲಾ ಬ್ರಹ್ಮಾಂಡದ ಒಂದು ಸಣ್ಣ‌ಕಣವೆ ಆಗಿದ್ದರೂ ಅದನ್ನರಿಯದೆ  ಹೊರಗಿನಿಂದ ಮೇಲು ಕೀಳಿನ ರಾಜಕೀಯ ನಡೆಸಿದರೆ ನಿಜವಾದ ‌ಬಡವ ಎಲ್ಲೂ ಇಲ್ಲ. ಇದ್ದರೆ ಅದು ನಮ್ಮೊಳಗೇ ಇರೋದು.  ಎಷ್ಟು ಸಾಲ ಮಾಡಿ ಶ್ರೀಮಂತ ನಾಗಿದ್ದರೂ  ಅದನ್ನು  ತೀರಿಸಿ ಕೊಟ್ಟು ಹೋಗೋ ವರೆಗೂ ಆತ್ಮಕ್ಕೆ ಶಾಂತಿ ಮುಕ್ತಿ ಸಿಗದೆನ್ನುವುದು ಸನಾತನ ಧರ್ಮ.

ಯೋಗಕ್ಷೇಮಕ್ಕಾಗಿ ಸ್ತೋತ್ರ

ವಿಷ್ಣು ಸಹಸ್ರನಾಮದ ವಿಶೇಷ ಸ್ತೋತ್ರದಲ್ಲಿ ಎಲ್ಲಾ ಕ್ಷೇಮದಿಂದಿರಲು ಹೇಳಿಕೊಳ್ಳಬೇಕಾದ ಸ್ತೋತ್ರ 64 ನೇ ದಾಗಿದೆಯಂತೆ. ನಾವು ಎಷ್ಟೋ ಪೂಜೆ ಪುನಸ್ಕಾರ,ವ್ರತ ಕಥೆ ಸ್ತೋತ್ರ ಮಂತ್ರ ತಂತ್ರ ಯಂತ್ರಗಳಿಂದ  ಪರಮಾತ್ಮನ ಸೇವೆ ಮಾಡಿದರೂ ಈ ಭಯವೆನ್ನುವುದು ಒಳಗೇ ಇರುತ್ತದೆ ಎಂದರೆ  ಯಾವುದೇ ಸೇವೆ  ಮಾಡುವುದಕ್ಕೆ ನಮಗೆ ಹೊರಗಿನವರೆ ತಿಳಿಸಿರುವರು. ಒಳಗಿರುವವರು ಮಾಡಿಕೊಂಡು ಬಂದಿದ್ದರೂ  ನಮಗೆ ಅದರ ಅರಿವಿರೋದಿಲ್ಲ.ಕಾರಣ ನಮ್ಮ  ವಿಧ್ಯಾಭ್ಯಾಸವೇ  ಹಾಗಿದೆ.
ಮಕ್ಕಳಿಗೆ  ಸಂಸ್ಕಾರ ಸಂಸ್ಕೃತಿ ಭಾಷೆ ಧರ್ಮ ಸತ್ಯವನ್ನು ತಿಳಿಸಿ‌ಬೆಳೆಸುವುದೆ ಪರಮಾತ್ಮನ ಸೇವೆ ಎಂದಾಗ ಮಾತ್ರ
ಅದರೊಂದಿಗೆ ಬೆಳೆದವರಲ್ಲಿ ಭಯವಿರದು. ಹೊರಗೆ ಹೋದರೂ ಕಾಯುವ ಪರಮಾತ್ಮನಿದ್ದಾನೆಂದುಕೊಂಡು ತಮ್ಮ  ಧಾರ್ಮಿಕ ಸೇವೆ ಮಾಡಿಕೊಂಡವರು ನಮ್ಮ ಹಿಂದಿನ ಹಿರಿಯರಾಗಿದ್ದರು. ಅದರಲ್ಲೂ ತುಂಬಾ ದೂರ ಕಳಿಸದೆ ಹತ್ತಿರದಲ್ಲಿದ್ದೇ  ಕುಟುಂಬದ ಸದಸ್ಯರಿಗೆ ಆಶೀರ್ವಾದ ಸಹಕಾರ ಸಹಾಯ ಮಾಡುವ ಕಾಲವಾಗಿತ್ತು.
ಕಾಲಬದಲಾದಂತೆಲ್ಲಾ ಹೊರಗಿನ ಶಿಕ್ಷಣ ಬೆಳೆದಂತೆಲ್ಲಾ ಮಕ್ಕಳು  ಹೊರಗೆ ಹೋಗುತ್ತಾ ದೂರದೂರದ ಊರಿನಲ್ಲಿ ದೇಶದಲ್ಲಿ ನೆಲೆಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ತಮ್ಮ  
ವರು ಸುರಕ್ಷಿತವಾಗಿರಲೆಂದು ಪರಮಾತ್ಮನ ಲ್ಲಿ  ಕೇಳಿಕೊಳ್ಳುವುದಕ್ಕೆ  ಸ್ತೋತ್ರವಿದೆ ಎಂದರೆ ನಮ್ಮ ಮಹಾತ್ಮರುಗಳಿಗೆ ಇಂತಹ ಕಾಲ  ಬರುತ್ತದೆನ್ನುವ ಅರಿವು ಮೊದಲೇ ಇತ್ತು ಎನ್ನಬಹುದು. ಈ ರೀತಿಯಲ್ಲಿ ಅನೇಕ ಸ್ತೋತ್ರಗಳಿವೆ. ಪಠಣ ಮಾಡುವುದರಿಂದ ಪುಣ್ಯ ಬರುತ್ತದೆ.ಅರ್ಥ ಮಾಡಿಕೊಂಡು  ಪ್ರಾರ್ಥನೆ ಮಾಡುವುದರಿಂದ  ಭಯ  ನಿವಾರಣೆಯಾಗಿ ಭಕ್ತಿ ಹೆಚ್ಚುವುದು. ಪ್ರತಿದಿನ 11 ಬಾರಿ ಭಕ್ತಿ ಶ್ರದ್ಧೆಯಿಂದ  ಹೇಳಿದರೆ ಫಲ ಸಿಗುವುದಾದರೆ ನಮ್ಮೊಳಗೇ ಭಕ್ತಿ ಶ್ರದ್ಧೆ 
ನಮಗಾಗಿ ಇರಲೇಬೇಕು,ಇರುತ್ತದೆ.
ಸರ್ವೇ ಜನಾ: ಸುಖಿನೋ ಭವಂತು.

ಪ್ರಮಾಣ ದಿಂದ ಪ್ರಾಮಾಣಿಕತೆ ಬೆಳೆಯುವುದೆ?

ಮಕ್ಕಳು ಪ್ರಾಮಾಣಿಕರಾಗಿರುವುವಂತೆ ಮಾಡುವುದೇ ಶಿಕ್ಷಣದ ಪ್ರಾರಂಭ.  ಆಣೆಪ್ರಮಾಣಗಳನ್ನು ಮಾಡಿಕೊಂಡು ತಮ್ಮ ಆತ್ಮದ್ರೋಹಕ್ಕೆ ತಾವೇ ಕಾರಣವಾಗುತ್ತಿರುವ  ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಮಕ್ಕಳ ಪ್ರಾಮಾಣಿಕತೆಯನ್ನಾಗಲಿ,ಸತ್ಯವನ್ನಾಗಲಿ ಗಮನಿಸಲು ಗುರು ಶಿಕ್ಷಕರಿಗೇ ಸಾಧ್ಯವಾಗದೆ  ಮಕ್ಕಳನ್ನು ಸೇರಿಸಿಕೊಂಡು ಅಸತ್ಯ ಅಧರ್ಮ ಅನ್ಯಾಯ ಅನೀತಿಯ ಕಡೆಗೆ ಹೊರಗಿನ ರಾಜಕೀಯದ ಹಿಂದೆ ನಿಂತವರಿಗೆ ಶಿಕ್ಷಣದೊಳಗೇ  ಆಗಿರುವ ಮೋಸ ಅರ್ಥ ವಾಗದೆ ಅದೇ ಶಿಕ್ಷಣಕ್ಕೆ ತಲೆಬಾಗಿ ಸಾಲ ಮಾಡುತ್ತಾ‌ ಹೊರಗಿನ ವಿಷಯಾಸಕ್ತಿಯಲ್ಲಿ‌ಮೈಮರೆತು ಸ್ವಾತಂತ್ರ್ಯ ವನ್ನು ದುರ್ಭಳಕೆ ಮಾಡಿಕೊಂಡವರಿಂದ ಆತ್ಮನಿರ್ಭರ ಕನಸು ನನಸಾಗುವುದೆ? 
ಮಧ್ಯವರ್ತಿಗಳು ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಹದಗೆಟ್ಟ ಮಾನಗೆಟ್ಟಿರುವ ವಿಷಯವನ್ನು ಪ್ರಚಾರ ಮಾಡೋದಕ್ಕೆ ಸಾಕಷ್ಟು  ಹೊರನಡೆದಿದೆ. ಅದೇ  ಸಮಯದಲ್ಲಿ ಜನರಿಗೆ ಉತ್ತಮ ಸದ್ವಿಚಾರ ರ ತಿಳಿಸುವುದಕ್ಕೆ  ತಡೆಗೋಡೆ ಹಾಕಿಕೊಂಡಿರೋದನ್ನು ಜನಸಾಮಾನ್ಯರು ತಿಳಿದು  ತಿಳಿಯದಂತಿರೋದು ದುರಂತವಷ್ಟೆ. ಕೆಲವು ಮಾಧ್ಯಮಗಳು ಉತ್ತಮ ಕಾರ್ಯಕ್ರಮದ ಮೂಲಕ ಜನರನ್ನು  ಸನ್ಮಾರ್ಗದಲ್ಲಿ ನಡೆಸಲು ಪ್ರಯತ್ನಪಟ್ಟರೂ ಸರಿಯಾದ ಸಹಕಾರವಿಲ್ಲದೆ ಹಿಂದುಳಿದಿವೆ. ಒಟ್ಟಿನಲ್ಲಿ ವ್ಯವಹಾರಕ್ಕೆ ಇಳಿದಾಗ ಹಣದ ಲಾಭವಿಲ್ಲದೆ ಮುಂದೆ ನಡೆಯಲಾಗದು. ಇದನ್ನು ಶಿಕ್ಷಣ ಕ್ಷೇತ್ರ ಧಾರ್ಮಿಕ ಕ್ಷೇತ್ರ ಸಾಹಿತ್ಯ ಕ್ಷೇತ್ರ ಮುಂದುವರಿಸಿದರೆ ಮುಗಿಯಿತು ಧರ್ಮದ ಗತಿ ಅಧೋಗತಿ.
 ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದ ಸೇವೆಯು  ಯಾವಾಗ ಹಣಸಂಪಾದನೆ ಮುಖ್ಯ ಗುರಿ ಹಿಡಿಯುವುದೋ ಅಲ್ಲಿ  ಸತ್ಯಜ್ಞಾನವಿರದು. ಅಜ್ಞಾನವೇ ಬೆಳೆದಿರುತ್ತದೆ. 
ಒಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಿಂದ ಮನುಕುಲ ಜ್ಞಾನ ಗಳಿಸಿ ಮೇಲ್ಮಟ್ಟದ ಚಿಂತನೆಗಳಿಂದ ಆತ್ಮರಕ್ಷಣೆಯತ್ತ ನಡೆದಿರುವುದು  ಸನಾತನ ಧರ್ಮದಲ್ಲಿ  ಕಂಡಿದ್ದೆವು.ಈಗ?
ಮಠ ಮಂದಿರ ಚರ್ಚ್, ಮಸೀದಿಯಂತಹ  ಧಾರ್ಮಿಕ ಕೇಂದ್ರ ಬೆಳೆದಿರೋದೆ ಹಣದಿಂದ.ಅದೂ ಜನರ ಹಣವೇ, ದೇಶದ ಋಣವೇ ಆದಾಗ ದೇಶ ಸೇವೆ ಜನಸೇವೆ ಯಾರು ಮಾಡುತ್ತಿರುವುದು? ದೈವತ್ವ ಪಡೆಯುವ ಶಿಕ್ಷಣ ಕೊಡದೆ ಆಳಿದವರನ್ನು ಏನೆಂದು ಕರೆಯಬೇಕು?
ಸ್ವಲ್ಪ ಸಾಮಾನ್ಯ ಜ್ಞಾನ ಬಳಸಿ ಚಿಂತನೆ ನಡೆಸಿದರೆ ಎಲ್ಲಾ ಸಮಸ್ಯೆಯ ಮೂಲ ಶಿಕ್ಷಣ.ಶಿಕ್ಷಣವೇ ಪರಕೀಯರ ವಶದಲ್ಲಿ ಇರೋವಾಗ ನಾವು ಸ್ವತಂತ್ರ ವೆ? ಮಕ್ಕಳ ಭವಿಷ್ಯ ಹೊರಗಿಲ್ಲ ಒಳಗೇ ಇದೆ.ಪೋಷಕರು ಎಚ್ಚರವಾಗಿದ್ದರೆ  ಉತ್ತಮ.

Sunday, June 16, 2024

ಆಧ್ಯಾತ್ಮ ವಿಜ್ಞಾನ ಭೌತಿಕ ಜ್ಞಾನ

ಭೌತಿಕದಲ್ಲಿದ್ದು ಅಧ್ಯಾತ್ಮ ವಿಚಾರ ತಿಳಿಯುವುದು‌ಜ್ಞಾನ, ಅಧ್ಯಾತ್ಮ ದೊಳಗಿದ್ದು ಅಧ್ಯಾತ್ಮ ಸಂಶೋಧನೆಯೊಳಗಿರೋದು ಆತ್ಮ ಜ್ಞಾನ. ಇಂದು ಸಾಕಷ್ಟು ಜ್ಞಾನಿಗಳಿದ್ದರೂ ಆತ್ಮಜ್ಞಾನಿಗಳ ಸಂಖ್ಯೆ ಕುಸಿದಿದೆ.ಅಧ್ಯಾತ್ಮ ವಿಚಾರವನ್ನು ಪ್ರಚಾರ ಮಾಡೋರೆಲ್ಲರೂ ಅದರೊಳಗೆ ಹೊಕ್ಕಿ ‌ವಾಸ್ತವದಲ್ಲಿ  ಎಷ್ಟು ಸತ್ಯ‌ಮಿಥ್ಯವೆನ್ನುವ ಬಗ್ಗೆ ಸಂಶೋಧನೆಯಾಗದ ಅನೇಕ ವಿಚಾರಗಳಿಂದ ಜನರಲ್ಲಿ  ಆಸಕ್ತಿಯಿಲ್ಲದೆ  ಆಚರಣೆಯ ಮೂಲಕ  ಪ್ರಚಾರ ನಡೆದಾಗ ಪರಮಾತ್ಮನೆಡೆಗೆ‌ ಹೋಗೋದು ಕಷ್ಟ. ಭೌತಿಕದಲ್ಲಿ ನಮ್ಮ ‌ಹೆಸರು ಹಣ ಅಧಿಕಾರಕ್ಕೆ ತಕ್ಕಂತೆ  ಜೀವನ ನಡೆಯುತ್ತದೆ.ಆದರೆ, ಅಧ್ಯಾತ್ಮ ದೆಡೆಗೆ ಹೋದಂತೆಲ್ಲಾ ಇವು‌ತೃಣವೆನಿಸುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಾವು ಸಾಮಾನ್ಯ ಜ್ಞಾನದಿಂದ ನಮ್ಮ ಹಿಂದಿನ ಮಹಾತ್ಮರುಗಳನ್ನು ಅರ್ಥ ಮಾಡಿಕೊಂಡರೆ  ಕೊನೆಗಾಲದಲ್ಲಿ  ಈ ಭೌತಿಕ‌ಜಗತ್ತನ್ನು  ಮಿಥ್ಯವೆಂದು ಬ್ರಹ್ಮನೇ ಸತ್ಯವೆಂದು ಹಿಂದೆ ಅಂದರೆ  ಅಂತರ್ಮುಖಿಗಳಾದವರು  ಮಹಾಜ್ಞಾನಿಗಳು.

ಸಾಮಾನ್ಯರೊಳಗೇ ಅಡಗಿರುವ ಈ ಸಾಮಾನ್ಯಜ್ಞಾನವನ್ನು  ಒಳಗಿದ್ದೇ  ಅರ್ಥ ಮಾಡಿಕೊಳ್ಳಲು ಹೊರಗಿನ ವಿಜ್ಞಾನ ಬಿಡದೆ ಮನೆಯಿಂದ ಹೊರಗೆಳೆದು  ಹಣಸಂಪಾದನೆ ಯ ಮಾದ್ಯಮ ಮಾಡಿಕೊಂಡಿದೆ. ಹಣವಿದ್ದರೂ ಸದ್ಬಳಕೆಯ ಜ್ಞಾನವಿಲ್ಲದವರು ಸಾಮಾನ್ಯರನ್ನೇ ಗುಲಾಮರನ್ನಾಗಿಸಿಕೊಂಡು ಶ್ರೀಮಂತ ರಾದರು. ಇದರಲ್ಲಿ ಎಲ್ಲಾ ಕ್ಷೇತ್ರ ಧರ್ಮ, ಜಾತಿ,ಪಂಗಡ,ಪಕ್ಷ,ದೇಶವೂ ಸೇರಿದೆ.
ಹಾಗಾದರೆ ದೇವರು ಕಂಡರೆ? ಕಂಡವರು ತೋರಿಸಲಾಯಿತೆ?
ಕಾಣದ ದೇವರನ್ನು ಹೊರಗಿಟ್ಟು ತೋರಿಸಬಹುದಷ್ಟೆ.ಒಳಗೆ ನಮ್ಮನ್ನು ಕ್ಷಣಕ್ಷಣಕ್ಕೂ ಎಚ್ಚರಿಸಿ ನೆಡೆಸೋ ಆಶಕ್ತಿಯ‌ಮಾತು ಕೇಳಿಸಿಕೊಳ್ಳಲು  ಸಮಯವಿಲ್ಲದ ನಮಗೆ ಹೊರಗಿನ‌ದೇವರು ತಾತ್ಕಾಲಿಕ ಸಹಕಾರ ನೀಡಬಹುದು. ಯಾವಾಗ ಒಳಗಿನ ಹಾಗು ಹೊರಗಿನ ದೈವಶಕ್ತಿ‌ಕೂಡಿ‌
ನಡೆಸುವುದೋ ಅದೇ ಅದ್ವೈತ.  ಮೂಲ ಬಿಟ್ಟು ಹೊರಗೆ‌ನಡೆದಷ್ಟೂ ಅಂತರದಿಂದ ಅವಾಂತರ ಸೃಷ್ಟಿ ಯಾಗಿ ಜೀವ ಹೋಗುತ್ತದೆ. 
ಶ್ರೀ ಶಂಕರ ಭಗವತ್ಪಾದರ ಭಜಗೋವಿಂದಮ್  ಒಳಗಿರುವ ರಾಜಯೋಗದ ಅರ್ಥ ಈಗಲೂ ಅರ್ಥ ಮಾಡಿಕೊಂಡು  ನಡೆದರೆ ಸನಾತನಧರ್ಮ ಕ್ಕೆ ಯಾವುದೇ ಅಪಾಯವಿಲ್ಲ.
ಅಪಾಯವಿರೋದು ನಮ್ಮ ಜೀವಾತ್ಮನ ಹೊರಗಿನ‌ನಡೆ ನುಡಿಯೊಳಗಿರುವ ರಾಜಕೀಯತೆಗಷ್ಟೆ.
ಬಹಳ ದೊಡ್ಡದಿದೆ..ತಾಳ್ಮೆಯಿಂದ ಓದಬೇಕಷ್ಟೆ.ಇದು ವಾಟ್ಸಪ್ ಕೃಪೆ

ಆದಿ ಶಂಕರಾಚಾರ್ಯ ವಿರಚಿತ *ಭಜ ಗೋವಿಂದಂ* ಗದ್ಯಾರ್ಥ ಸಹಿತ. ಸ್ವಲ್ಪ ದೀರ್ಘವಾಗಿದೆ. ಆದರೆ ಜೀವನದಲ್ಲಿ ಒಮ್ಮೆ ಓದಲೇ ಬೇಕಾದಂಥ ಪವಿತ್ರ ಕೃತಿ.  ಒಮ್ಮೆ ಓದಿ ಬಿಡಿ ಸಾಕು,  ಇಡೀ ಜನ್ಮದ ಪುಣ್ಯ ನಿಮ್ಮದಾಗುವುದು  !! 

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..! ಅಂತ್ಯ ಕಾಲವು ಸಮೀಪಿಸಿರುವಾಗ ಈ ಹಣ, ದ್ರವ್ಯ  ನಿನ್ನನ್ನು ಎಂದಿಗೂ ರಕ್ಷಿಸುವುದಿಲ್ಲ.

ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜ ಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||

ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.
ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡ ಬೇಕೆಂಬ ಬುದ್ಧಿಯನ್ನು ತಂದುಕೊ. ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.

 ನಾರೀ ಸ್ತನಭರನಾಭೀದೇಶಂ
ದೃಷ್ಟ್ವಾಮಾ ಗಾ ಮೋಹಾವೇಶಮ್|
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||3||

ಸ್ತೀಯರ ಸ್ತನಗಳನ್ನು ನಾಭಿ ಪ್ರದೇಶವನ್ನು ನೋಡಿ ಮೋಹಾವಿಷ್ಟನಾಗಬೇಡ.
ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ಗುಣಿಸಿ ನೋಡು.

ನಲಿನೀದಲಗತಜಲಮತಿತರಲಂ ತದ್ವಜ್ಜೀವಿತಮತಿಶಯ ಚಪಲಮ್|
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||4||

ತಾವರೆ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹು ಬೇಗನೆ ಜಾರುತ್ತದೆ. ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ ಯಾವ ಕ್ಷಣದಲ್ಲಾದರೂ ಜಾರಿ ಹೋಗ ಬಹುದು. ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.

ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ|
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||

ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ. ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.

ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ|
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||

ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸ ಬಹುದು.
ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ.

ಬಾಲಸ್ತಾವತ್ಕ್ರೀಡಾಸಕ್ತ-
ಸ್ತರುಣಸ್ತಾವತ್ತರುಣೀಸಕ್ತಃ|
ವೃದ್ಧಸ್ತಾವತ್ಚಿಂತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||

ಹುಡುಗನಿಗಾದರೋ ಆಟದಲ್ಲಿ ಆಸಕ್ತಿ. ಯುವಕನಿಗೆ ತರುಣಿಯರಲ್ಲಿ ಆಸಕ್ತಿ ಮುದುಕನು ಯಾವುದೋ ಒಂದು ಚಿಂತೆಯಲ್ಲಿ ಮುಳುಗಿರುತ್ತಾನೆ.
ಏವಂಚ ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ!

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ|
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||

ಈ ಸಂಸಾರವು ಅತೀವ ವಿಚಿತ್ರವಾದದ್ದು. ನಿನ್ನ ಕಾಂತೆ ಎಂದು ಕೊಳ್ಳುವೆಯಲ್ಲ, ಅವಳು ಯಾರು? ನನ್ನ ಪುತ್ರ ಎಂದು ಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ? ಎಲೈ ಸೋದರನೇ. ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||

ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ. ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ. ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ. ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತ ಆಯಿತೆಂದು ತಿಳಿಯ ಬೇಕು.

ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ ಕಃ ಕಾಸಾರಃ|
ಕ್ಷೀಣೇ ವಿತ್ತೇ ಕಃ ಪರಿವಾರೋ
ಜ್ಞಾತೇ ತತ್ತ್ವೇ ಕಃ ಸಂಸಾರಃ ||10||

ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರ ಎಲ್ಲಿರುತ್ತದೆ? ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು? ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರ ಎಲ್ಲಿರುತ್ತದೆ? ತತ್ತ್ವಜ್ಞಾನ ಆದಾಗ ಈ ಸಂಸಾರ ಎಲ್ಲಿದ್ದೀತು?

ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್|
ಮಾಯಾಮಯಮಿದಮಖಿಲಂ ಮತ್ವಾ ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||

ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವ ಪಡ ಬೇಡ. ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡ ಬಲ್ಲದು. ಇದೆಲ್ಲವೂ ಮಾಯಾ ಕಲ್ಪಿತವಾದದ್ದು (ವಸ್ತುತಃ ಇಲ್ಲ) ಎಂದು ನಿಶ್ಚಯಿಸಿ, ಶಾಶ್ವತವಾದ ಬ್ರಹ್ಮವೆಂದರೆ ಏನೆಂಬುದನ್ನರಿತು ಅದರಲ್ಲಿ ಸೇರಿಕೋ.

ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ|
ಕಾಲಃಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮುಂಚತ್ಯಾಶಾವಯುಃ ||12||

ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತದೆ, ಹೋಗುತ್ತವೆ, ಇದು ಕಾಲಪುರುಷನ ಒಂದು ಆಟ.
ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದು ಹೋಗುತ್ತದೆ. ಇದೆಲ್ಲಾ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.

ಕಾ ತೇ ಕಾಂತಾ ಧನಗತ ಚಿಂತಾ ವಾತುಲ ಕಿಂ ತವ ನಾಸ್ತಿ ನಿಯಂತಾ|
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||13||

ಎಲೈ ವಾತರೋಗಿ! ನಿನಗೆ ಪ್ರಿಯಳಾದ ಮಡದಿ ಯಾರು? ಏನು ಮಾಡಿಯಾಳು? ಇನ್ನೂ ಹಣದ ಆಸೆ ಏಕೆ? ನಿನಗೆ ಬುದ್ದಿ ಹೇಳು ದಾರಿ ತೋರಿಸ ತಕ್ಕವರಿಲ್ಲವೇನು?
ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗ ಎಂಬುದೊಂದೇ ಸಂಸಾರ ಸಾಗರವನ್ನು ದಾಟಿಸ ಬಲ್ಲ ದೋಣಿಯಾಗಿರುತ್ತದೆ.

ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ|
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||14||

ಒಬ್ಬನು ಜಟೆಬಿಟ್ಟವನು, ಇನ್ನೊಬ್ಬನು ತಲೆ ಬೋಳಿಸಿ ಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತು ಹಾಕಿ  ಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿ ಕೊಂಡವನು.
ಕಣ್ಣಿಂದ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.

ಅಂಗಂ ಗಲಿತಂ ಪಲಿತಂ ಮುಂಡಂ ದಶನವಿಹೀನಂ ಜಾತಂ ತುಂಡಮ್|
ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾಪಿಂಡಮ್||15||

ವಯಸ್ಸಾದ ಮೇಲೆ ಅವಯವವು ಬಲಹೀನ ಆಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿ ಹೋಗಿರುತ್ತವೆ. ಇಷ್ಟಾದರೂ ಮುದುಕನು ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ.
ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ|
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ ||16||

ಛಳಿಯನ್ನು ತಡೆಯಲಾರದೆ ಎದುರಿಗೆ ಬೆಂಕಿಯನ್ನು ಹಾಕಿ ಕೊಂಡು ಮೈಯನ್ನು ಕಾಯಿಸುತ್ತಾನೆ. ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷೆ ಪಾತ್ರೆಯ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ. ಮರದ ಬುಡದಲ್ಲಿ ಮಲಗುತ್ತಾನೆ. ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲವಲ್ಲ!

ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್|
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮಶತೇನ||17||

ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ! ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ. ಆದರೆ ಆತ್ಮಜ್ಞಾನವಿಲ್ಲದ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷವು ಸಿಗುವುದಿಲ್ಲ. ಜ್ಞಾನ ಒಂದೇ ಮೋಕ್ಷಕ್ಕೆ ಸಾಧನ.ಇದು ಎಲ್ಲ ಉಪನಿಷತ್ತುಗಳ ಸಿದ್ಧಾಂತ.

ಸುರಮಂದಿರತರುಮೂಲನಿವಾಸಃ ಶಯ್ಯಾ ಭೂತಲಮಜಿನಂ ವಾಸಃ|
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ ||18||

ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿ ಕೊಂಡು ಕೃಷ್ಣಾಜಿನವನ್ನು ಹೊದ್ದು ಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ. ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||19||

ಒಬ್ಬನು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗ ರಹಿತನಾಗಿರಲಿ.
ಯಾವಾತನ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆತನು ಆನಂದದಲ್ಲಿ ಮುಳುಗುತ್ತಾನೆ.
ಆನಂದದಲ್ಲಿರುತ್ತಾನೆ, ಆನಂದಿಸುತ್ತಲೇ ಇರುತ್ತಾನೆ, ಇದು ನಿಶ್ಚಿತ.

ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ|
ಸಕೃದಪಿ ಯೇನ ಮುರಾರಿ ಸಮರ್ಚಾ ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||

ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು.
ಶ್ರೀಮನ್ನಾರಾಯಣನನ್ನು ಒಂದು ಸಲ ಪೂಜಿಸಿದರೂ ಸಾಕು, ಆತನ ವಿಷಯದಲ್ಲಿ ಯಮನು ಯಾವ ಚರ್ಚೆಯನ್ನೂ ಮಾಡುವುದಿಲ್ಲ. (ಯಮನಿಂದ ಅವನಿಗೆ ಯಾವ ಬಾಧೆಯೂ ಇರುವುದಿಲ್ಲ).

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||

ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.

ಕಸ್ತ್ವಂ ಕೋsಹಂ ಕುತ ಆಯಾತಃ ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||

ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು. ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನದ ವಿಚಾರವೇ ಎಂದು ತಿಳಿದು ದೂರವಿಟ್ಟು ಪರ್ಯಾಲೋಚಿಸು.

ರಥ್ಯಾಕರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ|
ಯೋಗೀ ಯೋಗನಿಯೋಜಿತ ಚಿತ್ತೋ ರಮತೇ ಬಾಲೋನ್ಮತ್ತವದೇವ ||23||

ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿ ಕೊಳ್ಳುತ್ತಾನೆ. ಪಾಪ- ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ. ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದು ಕೊಳ್ಳುತ್ತಾನೆ.

ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||

ನಿನ್ನಲ್ಲಿ ನನ್ನಲ್ಲಿ ಅನ್ಯತ್ರ ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ. ಸಹನೆಯನ್ನು ಕಳೆದ ಕೊಂಡು ವ್ಯರ್ಥವಾಗಿ ನನ್ನ ಮೇಲೇಕೆ ಕೋಪಿಸಿ ಕೊಳ್ಳುತ್ತೀಯೆ. ಎಲೈ ಮಾನವ, ಶೀಘ್ರವಾಗಿ ನೀನೇ ವಿಷ್ಣುವಾಗ ಬೇಕೆಂಬ ಬಯಕೆ ಇದ್ದರೆ, ಸರ್ವತ್ರ ವಿಷ್ಣು ಒಬ್ಬನೇ ಇದ್ದಾನೆಂದು ತಿಳಿದು ಸಮಚಿತ್ತನಾಗು.

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ|
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||25||

ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸ ಬೇಡ.
ಎಲ್ಲಾವುದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ.
ಸರ್ವ ವಸ್ತುಗಳಲ್ಲಿಯೂ ಭೇದ ಬುದ್ಧಿಯನ್ನು ತೊಡೆದು ಹಾಕು.

ಕಾಮಂ ಕ್ರೋಧಂ ಲೋಭಂ ಮೋಹಂ ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||26||

ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ.
ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.

ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿ ರೂಪಮಜಸ್ರಮ್|
ನೇಯಂ ಸಜ್ಜನಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ ||27||

ಭಗವದ್ಗೀತೆಯನ್ನು, ಭಗವಂತನ ಸಹಸ್ರ ನಾಮಗಳನ್ನು ಹಾಡಿ ಪಾರಾಯಣ ಮಾಡುತ್ತಿರ ಬೇಕು. ಶ್ರೀಹರಿಯ ದಿವ್ಯರೂಪವನ್ನು ಸತತವೂ ಧ್ಯಾನಿಸುತ್ತಿರ ಬೇಕು.
ಸಜ್ಜನರ ಸಹವಾಸದಲ್ಲಿರುವಂತೆ ಮನಸ್ಸನ್ನು ಪ್ರೇರೇಪಿಸ ಬೇಕು. ದೀನ ಜನರಿಗೆ ಹಣದ ಸಹಾಯವನ್ನು ಮಾಡ ಬೇಕು.

 ಅರ್ಥಮನರ್ಥಂ ಭಾವಯ ನಿತ್ಯಂ ನಾಸ್ತಿ ತತಃ ಸುಖಲೇಶಃ ಸತ್ಯಮ್|
ಪುತ್ರಾದಪಿ ಧನಭಾಜಾಂ ಭೀತಿಃ ಸರ್ವತ್ರೈಷಾ ವಿಹಿತಾ ರೀತಿಃ ||28||

ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ. ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.
ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಮ್|
ಜಾಪ್ಯಸಮೇತ ಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||29||

ಪ್ರಾಣಾಯಾಮ, ಪ್ರತ್ಯಾಹಾರ, ಜಪ, ಸಮಾಧಿ ಇವುಗಳನ್ನು ಮಾಡು. ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸು. ಮಹಾತ್ಮರು ಆದರಿಸಿದ ಪೂರ್ವಚರಿತೆ ಇದು.

ಸುಖತಃ ಕ್ರಿಯತೇ ರಾಮಾಭೋಗಃ ಪಶ್ಚಾದ್ಧಂತ ಶರೀರೇ ರೋಗಃ|
ಯದ್ಯಪಿ ಲೋಕೇ ಮರಣಂ ಶರಣಂ ತದಪಿ ನ ಮುಂಚತಿ ಪಾಪಾಚರಣಮ್ ||30||

ಜನರು ಸುಖಕ್ಕಾಗಿ ವೇಶ್ಯಾ ಸಹವಾಸವನ್ನೂ ಮಾಡುತ್ತಾರೆ.
ಅಯ್ಯೋ! ಆಮೇಲೆ ಶರೀರ ರೋಗದ ಗೂಡಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಮರಣವೇ ಗತಿ. ಆದರೂ ಪಾಪಾಚರಣೆಯನ್ನು ಬಿಡುವುದಿಲ್ಲ.

ಗುರುಚರಣಾಂಬುಜನಿರ್ಭರಭಕ್ತಃ ಸಂಸಾರಾದಚಿರಾದ್ಭವ ಮುಕ್ತಃ|ಸೇಂದ್ರಿಯಮಾನಸನಿಯಮಾದೇವಂ ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್||31||

ಶ್ರೀ ಗುರು ಚರಣ ಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು. ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು. ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿ ಕೊಳ್ಳುತ್ತೀಯೆ.

 (ಇಂದುಗುರುವಾದವರೆ ಭೌತಿಕದ ಸತ್ಯದೆಡೆಗೆ ಎಳೆಯುತ್ತಿದ್ದರೆ ಯೋಚಿಸಬೇಕಾಗಿದೆ. ಸದ್ಗುರುಗಳಿರಬೇಕು)

ಭಜಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ ||

||ಇತಿ ಶ್ರೀಮದ್ಜಗದ್ಗುರು ಶಂಕರಾಚಾರ್ಯವಿರಚಿತಂ ಭಜಗೋವಿಂದ ಸ್ತೋತ್ರಂ ಸಂಪೂರ್ಣಮ್||

ಅವಸರವೇ ಅಪಘಾತಕ್ಕೆ ಕಾರಣ

ಸಣ್ಣ ವಯಸ್ಸಿನಿಂದಲೇ  ಅಪ್ಪ ಅಮ್ಮನವರ ಮೇಲೆ ಪ್ರೀತಿ ವಿಶ್ವಾಸ.ತಪ್ಪು ಮಾಡಿದಾಗ ಬೈಸಿಕೊಂಡು ತಿದ್ದಿ ನಡೆಯುವುದು ಸಹಜವಾಗಿತ್ತು. ಸತ್ಯದ ವಿಚಾರದಲ್ಲಿ ಸಾಕಷ್ಟು ಬಾರಿ ಬೈಸಿಕೊಂಡಿದ್ದೆ ಕಾರಣ ದೊಡ್ಡವರು ಮಾಡಿದ್ದನ್ನು ಸಣ್ಣವರು ಮಾಡಿದರೆ ತಪ್ಪೇನು ಎನ್ನುವ ಚಿಂತನೆ ಯಲ್ಲಿದ್ದ ನನ್ನ ಪ್ರಶ್ನೆಗೆ ಉತ್ತರಿಸುವವರಿರಲಿಲ್ಲ. ತಪ್ಪು ಮಾಡಿ  ತಪ್ಪು ಮಾಡಿದೆ ಎನ್ನುವ ಬದಲು ಮಾಡದಿದ್ದರೆ ಬೈಸಿಕೊಳ್ಳುವುದು ತಪ್ಪುತ್ತದೆ ಎಂದರೂ ತಿಳಿಯದೆ ನಡೆದೇ ಹೋದಾಗ ಸತ್ಯ ಹೇಳಿದರೂ ನಂಬದ ಪರಿಸ್ಥಿತಿ. ಸುಳ್ಳು ಹೇಳಿದರೆ ಒಳಗಿನ ಕೂಗು ನೀನು ಸುಳ್ಳು ಹೇಳಿದ್ದೀಯ..ಹೊರಗಿನವರಿಂದ ಬೈಸಿಕೊಂಡರೂ ಸರಿ ಒಳಗಿನ‌ಕೂಗಿಗೆ ಸರಿಯಿರಬೇಕಷ್ಟೆ.  ಇಲ್ಲವಾದರೆ ಇದು ಪ್ರತಿಯೊಬ್ಬರ ಸಮಸ್ಯೆಗೆ ಕಾರಣವಾಗುತ್ತದೆ. 

ಹೇಗೆ ಧರ್ಮ ರಾಯನಿಗೆ  ಕೆಟ್ಟವರು ಕಾಣಲಿಲ್ಲವೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ನಮ್ಮ ಮನಸ್ಸು ಇದ್ದಂತೆ ಲೋಕದ ಜನ ಕಾಣುವರು. ಇಂದಿಗೂ ಎಷ್ಟೋ ಒಳ್ಳೆಯವರನ್ನು ಕೆಟ್ಟದೃಷ್ಟಿಯಿಂದ ಕಂಡು ಹಿಂದೆ ಉಳಿಸಿರುವರು ಅದಕ್ಕೆ ಕೆಟ್ಟವರು ಮುಂದೆ ನಡೆದಿರೋದು.
ಇಷ್ಟಕ್ಕೂ  ಯಾರನ್ನು ಯಾರು ನಡೆಸುವರು? ಪರಮಾತ್ಮನ ಒಳಗೆ ಅಡಗಿರುವ ಎಲ್ಲಾ ಜೀವಾತ್ಮರಿಗೆ ತನ್ನೊಳಗೆ ಅಡಗಿರುವ ಜ್ಞಾನದ ಆಸ್ತಿಯನ್ನು  ಬಳಸಿಕೊಳ್ಳಲು ಹೊರಗಿನ ಸಹಕಾರ  ಬೇಕೆ?
ಸರ್ಕಾರದಿಂದ ಶಿಕ್ಷಣ ಬದಲಾವಣೆ‌ಮಾಡಲಾಗಿದೆಯೆ?
ಇಲ್ಲವೆಂದರೆ ಯಾರು ಬದಲಾಯಿಸಬೇಕು? ಪ್ರಜಾಪ್ರಭುತ್ವ ‌ನಡೆದಿರೋದು ಪ್ರಜೆಗಳ ಸಹಕಾರದಿಂದ. ಈ ಸಹಕಾರವೇ ಅಜ್ಞಾನದೆಡೆಗೆ ನಡೆದರೆ ಅದಕ್ಕೆ ತಕ್ಕಂತೆ ಜೀವನವಿರುತ್ತದೆ.
ಆದರೆ ಸನಾತನ ಧರ್ಮದಲ್ಲಿ  ನಡೆಯುವುದಕ್ಕೆ ಕಷ್ಟವಿದೆ.
ವೈಜ್ಞಾನಿಕ ವಾಗಿ ಮುಂದೆ ಬೆಳೆದಿರುವ ಮನಸ್ಸಿಗೆ ಕಣ್ಣಿಗೆ ಕಾಣೋದಷ್ಟೆ ಸತ್ಯ. ಕಾಣದ ಸತ್ಯ ನಮ್ಮ ಹಿಂದೆ ಒಳಗೇ ಇದ್ದು  ನಡೆಸಿದರೂ  ನಾನು ಒಪ್ಪೋದಿಲ್ಲವೆಂದರೆ ನಡೆಸೋದು ಬಿಡೋದಿಲ್ಲ. ಇದಕ್ಕಾಗಿ ಹೊರಗಿನಿಂದ  ಅಸತ್ಯ ಅನ್ಯಾಯ ಅಧರ್ಮ ಬೆಳೆದು  ಪ್ರತಿಫಲವಾಗಿ ಹಿಂದಿರುಗಿ‌ಬರುತ್ತಿದೆ. ಒಂದು ಘಟ್ಟದವರೆಗೆ  ಅಸತ್ಯ ಬೆಳೆಸಬಹುದು ಮಿತಿಮೀರಿದರೆ ಕೆಳಗಿಳಿದು ಬರಲೇಬೇಕು. ಹಾಗಾಗಿ ನಮ್ಮ ಗುರುಹಿರಿಯರು ಸತ್ಯದ ಪರ ನಿಂತು  ಆಕಾಶದೆತ್ತರ ಬೆಳೆದರು. ಈಗಲೂ ಆಕಾಶದೆತ್ತರ ಹಾರಿದರೂ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದಿದ್ದರೆ  ವ್ಯರ್ಥ ಜೀವನವೆನ್ನುವರು
ಇದಕ್ಕಾಗಿ  ಆತ್ಮಸಾಕ್ಷಿ ಯೇ ದೊಡ್ಡದು. 
ದೇಶ ಹಿಂದುಳಿದಿಲ್ಲ ಹಿಂದಿನವರಂತೆ ದೇಶವಾಸಿಗಳಲ್ಲಿ ಸತ್ಯ ಜ್ಞಾನವಿಲ್ಲ. ಹಾಗಾದರೆ ರಾಜಕೀಯದಲ್ಲಿ ಅಡಗಿದೆಯೆ? ಇಲ್ಲ
ಮನೆಯೊಳಗೆ ಇದೆಯೆ? ಮನಸ್ಸಿನಲ್ಲಿದೆಯೆ?
ಸತ್ಯ ಯಾವತ್ತೂ ಒಂದೇ.. ಅದರೊಂದಿಗೆ ಹೋದವರಿಗೆ ಅರ್ಥ ವಾಗಿದೆಯಷ್ಟೆ.ಅದನ್ನು ಬೆಳೆಸೋದಾಗಲಿ ಅಳಿಸೋದಾಗಲಿ  ಒಬ್ಬರಿಂದ ಸಾಧ್ಯವಿಲ್ಲ.ಅವರವರ ಸತ್ಯಕ್ಕೆ ತಕ್ಕಂತೆ ಧರ್ಮ ಬೆಳೆದಿದೆ.  ಒಂದೇ ಸತ್ಯ  ಅಸಂಖ್ಯಾತ ಸತ್ಯ ಆಗಿರೋದು ಹೊರಗಿನ ಜಗತ್ತಿನ ಪ್ರಭಾವ.
ಆ ಜಗತ್ತಿನೊಳಗಿದ್ದು  ಒಂದೇ ಸತ್ಯದೆಡೆಗೆ ನಡೆದವರು ಮಹಾತ್ಮರುಗಳು. ಮಹಾತ್ಮರುಗಳು  ಮೇಲಿನಿಂದ ಬಂದರೋ ಕೆಳಗಿನಿಂದ ಮೇಲೇರಿದರೋ  ಒಟ್ಟಿನಲ್ಲಿ  ಸತ್ಯವೇ ದೇವರೆಂದರು. 
ಹೇಳಿದ್ದು ಕೇಳಿದ್ದು ಮಾಡಿದ್ದು ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿ ಚಿಂತಿಸಿ  ಅನುಭವಿಸಿದ ಮೇಲೇ ಸತ್ಯ ತಿಳಿಯುವುದು..ನಿಧಾನವೇ ಪ್ರಧಾನ.ತಾಳಿದವನು ಬಾಳಿಯಾನು. ಒಳ್ಳೆಯದನ್ನು ಹೇಳಿ,ಕೇಳಿ ಮಾಡಿ ನೋಡಿದವರಿಗೆ  ಜೀವನದಲ್ಲಿ ಒಳ್ಳೆಯದು ಆಗಿದೆ. ಆಯಸ್ಸು ಕಡಿಮೆಯಾಗಿದೆ ಎಂದರೂ ಒಳ್ಳೆಯದೆ ಕಾರಣ ಜೀವನ್ಮುಕ್ತಿ ಬೇಗ ಸಿಕ್ಕಿದೆ ಎನ್ನಬಹುದಲ್ಲವೆ?
ಹಿಂದಿನ  ಮಹಾತ್ಮರ ಕಥೆಗಳಲ್ಲಿ ಹೆಚ್ಚು ಆಯಸ್ಸಿರುವ ಮಗು ಬೇಕೋ ಕಡಿಮೆ ಆಯಸ್ಸಿನ‌ಜ್ಞಾನಿಯಾದ ಮಗು ಬೇಕೋ ಎಂದರೆ ಕಡಿಮೆ ಆಯಸ್ಸಾದರೂ ಸರಿ ಜ್ಞಾನಿಯಾದ ಮಗುವಿರಲಿ ಎಂದು ದೇವರನ್ನು ಬೇಡುತ್ತಿದ್ದರಂತೆ.‌
ಅಜ್ಞಾನದಲ್ಲಿ ಹೆಚ್ಚು ವರ್ಷ ಭೂಮಿಯಲ್ಲಿದ್ದರೆ ಭೂಮಿಗೇ ಭಾರ.

Friday, June 14, 2024

ಸೋತವರು ಯಾರು ಗೆದ್ದವರು ಎಲ್ಲಿ?

ಸೋತು ಗೆಲ್ಲುವುದು ಗೆದ್ದು ಸೋಲುವುದು ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ  ಇದರಲ್ಲಿ ಎರಡೂ ರೀತಿಯಲ್ಲಿ ‌ಗೆಲುವು ಸೋಲನ್ನು ಕಾಣಬಹುದು.
ನಾನು ಸೋತಿಲ್ಲವೆನ್ನುವವರು ಹೊರಗೆ ಗೆಲ್ಲಲು ಹೊರಟರೆ  ಒಳಗಿನ‌ ಸೋಲು ಇದ್ದೇ ಇರುತ್ತದೆ. ಸತ್ಯದೊಂದಿಗೆ ಗುದ್ದಾಡಿದರೂ ಸೋಲು ನಿಶ್ಚಿತ. ಅಸತ್ಯದೊಂದಿಗೆ‌  ಸೇರಿದರೂ ಸೋಲು ನಿಶ್ಚಿತ. ಸತ್ಯ ದೇವರು,ಅಸತ್ಯ ಅಸುರರು. ಇವರಿಬ್ಬರ ನಡುವೆ ಮನುಕುಲವಿದೆ..ಒಮ್ಮೆ ದೇವತೆಗಳು ಗೆದ್ದರೆ ಇನ್ನೊಮ್ಮೆ ಅಸುರರ ಗೆಲುವು ಇದಕ್ಕೆ ಸಹಕಾರ ಕೊಟ್ಟ ಹುಲುಮಾನವನಿಗೆ  ಸೋಲು ಗೆಲುವಿನ ಆಟವಾಡೋದಷ್ಟೆ ಕರ್ಮ. ಅದನ್ನು ನೋಡಿಕೊಂಡು  ಇದ್ದವರಿಗೆ ಮನರಂಜನೆ .ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ. ಎಲ್ಲಾ ಒಮ್ಮೆ ಗೆದ್ದವರೆ ಹಾಗೆ ಸೋತವರೆ.
ಪ್ರಳಯಕಾಲದಲ್ಲಿ ಎಲ್ಲಾ ಮುಳುಗಿದ ಮಾನವರೆ ಆಗಿರುವರು.
ಪರಮಸತ್ಯ ಧರ್ಮ ಕ್ಕೆ ತಲೆಬಾಗಿದರೆ ಗೆದ್ದಂತೆ ವಿರುದ್ದ ನಿಂತರೆ ಸೋತಂತೆ.

ಅಹಂಕಾರ ಆತ್ಮವಿಶ್ವಾಸವಾಗದು

ನನ್ನ ಮಾತನ್ನು ಕೇಳಿ ಹಲವರು ನನ್ನಲ್ಲಿ ಅಹಂಕಾರವಿದೆ ಎಂದು ತಿಳಿಯುವರು ಆದರೆ ಅಹಂಕಾರ ಪಡಲು ನನ್ನಲ್ಲಿ ಏನಿದೆ ಎಂದು ನಾನೇ ಪ್ರಶ್ನೆ ಮಾಡಿಕೊಂಡಾಗ  ನನ್ನದೇನೂ ಇಲ್ಲ ಎಲ್ಲಾ ಆ ಭಗವತಿಯ ಪ್ರೇರಣೆ ಎನ್ನುವ ಸತ್ಯ ತಿಳಿದಾಗ ಸತ್ಯ ತಿಳಿಸುವುದನ್ನು ಅಹಂಕಾರ ವೆಂದುಕೊಂಡರೆ ತಪ್ಪು ಅದನ್ನು ಆತ್ಮವಿಶ್ವಾಸವೆಂದುಕೊಂಡಾಗ  ಸತ್ಯದರ್ಶನ ನಮಗೆ ಒಳಗೇ ಆಗುತ್ತದೆ. ಯಾರೇ ಆಗಿರಲಿ  ಸತ್ಯದ ದಾರಿಯಲ್ಲಿ ನಡೆಯುವಾಗ  ಆತ್ಮವಿಶ್ವಾಸ ಹೆಚ್ಚುತ್ತದೆ ಅಹಂಕಾರ ಕರಗುತ್ತದೆ. ಇಷ್ಟಕ್ಕೂ ಅಹಂಕಾರ ಪಡಲು ನಾವ್ಯಾರು? ಎಲ್ಲಿಂದ‌ಬಂದೆವು? ಯಾಕೆ ಬಂದೆವು? ಎಲ್ಲಿಗೆ ಸೇರಬೇಕು? ಯಾಕೆ  ಸೇರಬೇಕೆಂಬ ವಿಷಯ ಅಧ್ಯಾತ್ಮ ದ ಮೂಲಕ ತಿಳಿಯುವಾಗ ಅಹಂಕಾರ ಹೆಚ್ಚಾಗುವುದೆ ಆತ್ಮವಿಶ್ವಾಸವೆ? 
ಅದಕ್ಕೆ ಮಾತಿಗಿಂತ ಕೃತಿಯೇ ಮೇಲೆಂದರು. ಇಂದು ಹೆಚ್ಚು ಕೃತಿಚೌರ್ಯ ಹೆಚ್ಚಾಗಿದೆ  ಕಾರಣ ಮೂಲದ ಕೃತಿಯಲ್ಲಿ ಅಡಗಿದ್ದ ಸತ್ಯ ಧರ್ಮ ಅರ್ಥ ವಾಗಿಲ್ಲವಷ್ಟೆ.ಕೃತಿಚೌರ್ಯಕ್ಕೆ ಹೆಚ್ಚು ಬೆಲೆಕೊಟ್ಟು ಕೊಂಡುಕೊಳ್ಳುವವರಿದ್ದಾರೆಂದರೆ ಅಸತ್ಯ  ಬೆಳೆಯುತ್ತಿದೆ ಎಂದರ್ಥ. ಎಷ್ಟು ಬೆಳೆದರೂ ಹೊರಜಗತ್ತಿನಲ್ಲಿ  ಹರಡುತ್ತದೆ ಅದೇ ಒಳಜಗತ್ತನ್ನು ಹಿಂದುಳಿಸುತ್ತದೆ.
ಆಕಾಶದೆತ್ತರ ಹಾರಬಹುದು ಅಲ್ಲಿಯೇ ವಾಸ ಮಾಡಲು ಸಾಧ್ಯವೆ? ಇಲ್ಲವೆಂದರೆ ನಾವು ಅರಿತಿರೋದು ಅಲ್ಪ ಸ್ವಲ್ಪ ವಾದರೂ ಇಷ್ಟೊಂದು ಹಾರಾಟ ಮಾರಾಟ ಹೋರಾಟ ನಡೆಸುತ್ತಿರೋದರ ಹಿಂದೆ  ಏನರ್ಥ ವಿದೆ?  ಶಾಂತವಾಗಿದ್ದ ಮನಸ್ಸಿಗೆ ಹೊರಗಿನ  ಅಸತ್ಯದ ವಿಷಯತುಂಬಿ  ಅಶಾಂತಿಯ ಗೂಡಾಗಿಸಿಕೊಂಡರೆ  ಕಷ್ಟ ‌ನಷ್ಟ ಯಾರಿಗೆ?
ಮನಸ್ಸು ಸ್ಥಿರವಾಗಲು ಅಧ್ಯಾತ್ಮ ಸತ್ಯ ಅಗತ್ಯವೆಂದರು.
ಅಧ್ಯಾತ್ಮ ಎಂದರೆ ತನ್ನತಾನರಿಯುವ  ಆತ್ಮಜ್ಞಾನವಾಗಿತ್ತು.
ಯಾರನ್ನೂ ಅರಿತು ನಡೆಯುವ ಮೊದಲು ಪರಮಾತ್ಮನ ಅರ್ಥ  ತಿಳಿದರೆ ಎಲ್ಲೋ ಹುಡುಕುವ ಬದಲು ಒಳಗೇ ಸಂಶೋಧನೆ ಆಗಬಹುದು. ಎಲ್ಲಾ ಕಾಲದ ಮಹಿಮೆ.
ಜಗತ್ತು ನಡೆದಿದೆ ನಡೆಯುತ್ತಿದೆ ನಡೆಯುತ್ತಲೇ ಇರಬೇಕು
 
ಅಧಿಕಾರ ಸ್ಥಾನ ಹಣವಿದ್ದವರು  ಅಸತ್ಯ ನುಡಿದರೂ ಸತ್ಯ ಎಂದು ತಿಳಿಯುವ ಜನರಿಗೆ  ಸತ್ಯ ನುಡಿಯುವವರ ಮಾತು ಅಹಂಕಾರ ಎನಿಸುವುದು ಸಹಜ. ವ್ಯಕ್ತಿಯನ್ನು ಕಾಣುವಾಗ ವ್ಯಕ್ತಿತ್ವದ ಪರಿಚಯವಾಗೋದು ಕಷ್ಟವಿದೆ. ಹೀಗಾಗಿ‌ಜಗತ್ತು ವ್ಯಕ್ತಿಯಿಂದ ನಡೆಯುತ್ತಿದೆ ವ್ಯಕ್ತಿತ್ವ ಕುಸಿಯುತ್ತಿದೆ. 

ಎಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಸಾಧಕರೆ. ಈ ಭೂಮಿಯಲ್ಲಿ ಜನ್ಮ ಪಡೆಯಲು ಎಷ್ಟೋ ಜನ್ಮಗಳನ್ನು ಪಡೆದು ಮಾನವನಾಗಿರೋದೆ ದೊಡ್ಡ ಸಾಧನೆ. ಮಾನವನಾಗಿ ಜನ್ಮ ಪಡೆದ ಮೇಲೆ ತನ್ನ ಜನ್ಮಕ್ಕೆ ಕಾರಣರಾದ  ಪೋಷಕರ ಋಣದಿಂದ ಹಿಡಿದು ನಡೆಸುತ್ತಿರುವ ಪರಮಾತ್ಮನ ವರೆಗೆ  ತಿಳಿದು ನಡೆಯುವುದೆ ಜೀವನದ ಗುರಿ.
ಇದರಲ್ಲಿ ಯಾರು ಎಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವೋ ಅಷ್ಟು ತಿಳಿದು ಮೇಲೇರಿರುವರು. ಮೇಲೆ ಹೋದವರ ಹೆಸರು ಹಿಡಿದು ಕೆಳಗೆ ನಡೆಸುವರು.ಕೆಳಗಿದ್ದವರ ಹೆಸರು ಹಿಡಿದು ವ್ಯವಹಾರದೊಳಗಿರುವರು.ಏನೂ ಅರಿಯದವರ ಹಿಡಿದು ರಾಜಕೀಯ ಮಾಡುತ್ತಿರುವವರೆಲ್ಲರೂ ಸಾಧಕರೆ.
ಒಬ್ಬೊಬ್ಬರು  ಒಂದೊಂದು ಕಲೆಯಲ್ಲಿ ಆಸಕ್ತಿ ಹೊಂದಿ ಮುಂದೆ ನಡೆಯುವರು.ಇದರಲ್ಲಿ ಸತ್ಯಧರ್ಮ ಇದೆಯೋ ಇಲ್ಲವೋ ಎನ್ನುವ  ಜ್ಞಾನದಿಂದ  ನಡೆದಾಗಲೇ ಆತ್ಮಕ್ಕೆ ತೃಪ್ತಿ.
ಒಟ್ಟಿನಲ್ಲಿ ಅವರವರ ಆತ್ಮರಕ್ಷಣೆಗೆ ಸತ್ಯವೇ ದೇವರು.
ಅಸತ್ಯದಿಂದ  ದೈವತ್ವಕ್ಕೆ  ತಡೆಯಾದರೂ  ಕೊನೆಗೆ ಸತ್ಯದ‌ಕಡೆಗೆ ನಡೆದವರು  ಅನುಭವಿಗಳು. ಮಾಯೆಯ ಒಳಗಿರುವ‌ಮನಸ್ಸಿಗೆ ಸತ್ಯ ಅಸತ್ಯ ಎರಡೂ ಕಾಣುತ್ತದೆ.ಆದರೆ ಒಳಜಗತ್ತು ಸತ್ಯದಿಂದ ನಡೆಯುತ್ತದೆ. ಎರಡನ್ನೂ  ಬಳಸಿಕೊಂಡು ಮನುಕುಲ ನಡೆಯುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ ಇದು ಸತ್ಯ.

ಅಂದೇ  ಪುರಂಧರ ದಾಸರು ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟ ಜನರಿಗೇ ಸುಭಿಕ್ಷಕಾಲವೆಂದಿದ್ದರು.ಈಗಿದು ಪುರಂಧರ ದಾಸರ  ಹೆಸರಿನಲ್ಲೇ ಅಸತ್ಯ ಬೆಳೆಸಿದರೂ  ಕೇಳೋರಿಲ್ಲವಾಗಿದೆಯಷ್ಟೆ. ಇದು ಕಲಿಯುಗ.ಕಲಿಯುವ ಯುಗ ಹೊರಗೆ ಕಲಿತಷ್ಟೂ ಅಸತ್ಯವೇ ಬೆಳೆಯೋದು.ಒಳಗೆ ಸ್ವಚ್ಚವಾಗುವ‌ ಕಲಿಕೆಯಿದ್ದರೆ ಉತ್ತಮ. ಯಾರಿಗೆ ಗೊತ್ತು ಯಾರೊಳಗೆ ಯಾವ‌ ಮಹಾತ್ಮರಿರುವರೋ  ಅಸುರರಿರುವರೋ?  ಕಾಲಾಯ ತಸ್ಮೈ ನಮ:

Monday, June 10, 2024

ಸಾಲ ಅಥವಾ ಋಣಮುಕ್ತರಾಗಲು ಯೋಗ ಮಾರ್ಗಅಗತ್ಯ

ಉಚಿತ ಪಡೆದಷ್ಟೂ ಸಾಲ ಖಚಿತ ಎನ್ನುವುದು ಸತ್ಯ. ಇಂದಿನ ಭಾರತ ಸಾಲದೊಳಗೆ ಮುಳುಗಿದೆ ಅದನ್ನು ತೀರಿಸಲು ಸಾಕಷ್ಟು ರಾಜಕೀಯ ಶಕ್ತಿ ಬೆಳೆದಿದೆ ಆದರೆ ಅದಕ್ಕೆ ಬೇಕಾಗಿದ್ದು ರಾಜಯೋಗದ ಆತ್ಮಶಕ್ತಿ.ಆತ್ಮನಿರ್ಭರ ಭಾರತಕ್ಕೆ  ಎಷ್ಟೋ ಪ್ರಯತ್ನಗಳು ನೆಡೆದಿದೆ.ಇದರಲ್ಲಿ ಮುಖ್ಯವಾಗಿರುವ ಶಿಕ್ಷಣದ ಬದಲಾವಣೆಗೆ ಸ್ವಯಂ ಪೋಷಕರೆ ವಿರೋಧಿಗಳಾಗಿದ್ದು ತಮ್ಮ ‌ಮಕ್ಕಳಜ್ಞಾನ ಗುರುತಿಸುವುದರಲ್ಲಿ ಸೋತು ಹೊರಗಿನವರ ಜ್ಞಾನಕ್ಕೆ  ಸಾಲ ಮಾಡಿ ಬೆಲೆಕಟ್ಟಿ ಮಕ್ಕಳನ್ನು ದೂರ ಮಾಡಿಕೊಂಡರೆ ಅದು ಧರ್ಮ ವಾಗದು. ಒಟ್ಟಿನಲ್ಲಿ ಸರ್ಕಾರ ನಮ್ಮ ಸಹಕಾರದಿಂದ ನಡೆದಿರುವಾಗ  ಅದನ್ನು  ಯಾವ ಮಾರ್ಗದಲ್ಲಿ ನಡೆಸಬೇಕೆಂಬ ಜ್ಞಾನ ನಮ್ಮೊಳಗೇ ಇರೋವಾಗ ಅದನ್ನು ತಿರಸ್ಕರಿಸಿ ಹೊರಗೆ ನಡೆದಷ್ಟೂ ಸಾಲದ ಹೊರೆಯೇ ಹೆಚ್ಚು ಬೆಳೆದು ಜೀವ ಹೋಗುತ್ತದೆ.
ಭಾರತದ ಭೂಮಿ ಪವಿತ್ರವಾಗಿತ್ತು. ಈಗಲೂ ಕೆಲವೆಡೆ ಇದೆ.
ಯಾತ್ರಾಸ್ಥಳವನ್ನು  ಪ್ರವಾಸಿತಾಣ ಮಾಡಿದರೆ ಹಣ ಬರುತ್ತದೆ. ಆ ಹಣದಿಂದ ವ್ಯವಹಾರಕ್ಕೆ ಇಳಿದರೆ  ಅಸತ್ಯ ಅಧರ್ಮ ಅನ್ಯಾಯವೂ ಜೊತೆಗೆ ಸೇರುತ್ತದೆ. ದೈವತ್ವಕ್ಕೆ ಸತ್ಯ ಧರ್ಮ ನ್ಯಾಯ ನೀತಿ ಸಂಸ್ಕೃತಿ ಸಂಸ್ಕಾರ ಅಗತ್ಯವೆಂದಿದ್ದಾರೆ ನಮ್ಮ ಮಹಾತ್ಮರುಗಳು. ಹಾಗಾದರೆ ಈಗ ಇದು ಎಲ್ಲಿದೆ?
ಸತ್ಯ ತಿಳಿಸಿದರೆ ನಮ್ಮವರೆ ನಮಗೆ ಶತ್ರುಗಳಾಗುವರೆಂದರೆ ಇದಕ್ಕೆ ಕಾರಣವೇನು?
ಕಲಿಕೆಯ ಪ್ರಭಾವದಿಂದಾಗಿ ನಮ್ಮೊಳಗೇ ಹೊಕ್ಕಿರುವ ವಿಷಯದಲ್ಲಿ  ಸತ್ಯಕ್ಕಿಂತ ಮಿಥ್ಯವೇ ಬೆಳೆದಿದೆ. ಈ ಮಿಥ್ಯದ ಜಗತ್ತಿನಲ್ಲಿ  ನನ್ನ ನಾ ಮರೆತು ನಡೆಯುವಂತಾಗಿದೆ. ನನ್ನ ಜೀವ ಒಳಗಿದೆ ಇದನ್ನು ಸರ್ಕಾರ ಉಳಿಸುತ್ತದೆನ್ನುವ ಭ್ರಮೆ ಹೊರಗಿದೆ. ಸರ್ಕಾರಗಳು ಜನರಿಗಾಗಿ ಸಾಕಷ್ಟು ಉಚಿತ ಯೋಜನೆಯ ಜೊತೆಗೆ  ಶುಲ್ಕವನ್ನೂ ತಲೆಗೆ ಕಟ್ಟಿ ದೇಶ ನಡೆಸುತ್ತಿವೆ. ಸಾಲಕ್ಕೆ ಹೊರದೇಶದವರೊಂದಿಗೆ ಒಪ್ಪಂದ ಮಾಡಿಕೊಂಡು ವೈಜ್ಞಾನಿಕವಾಗಿ  ಮುಂದುವರಿಯುತ್ತಿದೆ. ಇದರಿಂದಾಗಿ ಎಷ್ಟೋ ಯುವಕರಿಗೆ ಉದ್ಯೋಗ ಸೃಷ್ಟಿ ಯಾಗಿ ದೇಶದೊಳಗೆ  ದುಡಿಯುವ ಅವಕಾಶವೂ ಇದೆ. ಲಕ್ಷಾಂತರ ಹಣ ಗಳಿಸಿ ಸ್ವಂತ ಮನೆ ಆಸ್ತಿ ಅಂತಸ್ತು ಮಾಡಿಕೊಂಡವರಲ್ಲಿ ಕೆಲವರು ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಹಲವು ಸಂಘಟನೆಯ ಮೂಲಕ  ಜನಜಾಗೃತಿ ಜನಸೇವೆ ನಡೆಸಿದ್ದಾರೆ.
ಆದರೆ ಹಲವರಿಗೆ ಇದರ ಬಗ್ಗೆ  ಚಿಂತೆಯಿಲ್ಲ. ದೇಶದಿಂದ ನನಗೇನು ಲಾಭವಾಗಬಹುದೆನ್ನುವ ಚಿಂತನೆಯಲ್ಲಿದ್ದರೆ ಹಲವರು ದೇಶವಿರೋಧ ಕೆಲಸದಲ್ಲಿ ಕೈ ಸೇರಿಸಿಕೊಂಡಿರೋದು  ಅಜ್ಞಾನದ ಸಂಕೇತ. ಇದಕ್ಕಾಗಿ  ವೈರಿಗಳಿಗೆ ಶಕ್ತಿ ಹೆಚ್ಚಾಗಿ  ತಾವೂ ಹಾಳಾಗುವುದರ ಜೊತೆಗೆ ‌ಮಕ್ಕಳು ಮಹಿಳೆಯರನ್ನೂ ಹೊರಗೆಳೆದು ಹಾಳು ಬಾವಿಗೆ ನೂಕುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರದಿಂದ ಕಷ್ಟ.
ಕಾರಣವಿಷ್ಟೆ ಮಾನವನ‌ಮನಸ್ಸು ಅವನಿಗೆ ಮಿತ್ರನಾಗಲೂಬಹುದು ಶತ್ರು ವಾಗಲೂಬಹುದು. ಯಾವಾಗ  ಆತ್ಮವಂಚನೆಯಡಿ ಜೀವನ‌ ಸಿಲುಕುವುದೋ  ಆಗಲೇ  ಅವನಿಗೆ ಅವನೇ ಶತ್ರು.
ಎಲ್ಲರೂ ಭೂಮಿ ಮೇಲೇ ಇರೋದು. ಎಲ್ಲರೂ ಭೂಮಿಯ ಮಕ್ಕಳೆ ಆಗಿದ್ದರೂ ಎಲ್ಲರಿಗೂ ಭೂ ಸೇವೆ ಮಾಡಿ ಋಣ ತೀರಿಸುವ‌ಜ್ಞಾನವಿರದು. ಇಂತಹ ಶಿಕ್ಷಣ ಕೊಡುವ ಗುರು ಸಿಗದು. ಗುರುತಿಸುವ  ಗುರುತ್ವಾಕರ್ಷಣೆಯ ಗುಣವಿರದು.
ಇದು ಮೇಲಿರುವ ಪರಮಾತ್ಮನಿಂದ  ಸಿಗೋವಾಗ ನಮ್ಮ ಕರ್ಮ ಪರಮಾತ್ಮನಿಗೆ ಅರ್ಪಣೆ ಆಗುವ ಸೇವೆಯಲ್ಲಿದೆ.
ಸೇವೆ ನಿಸ್ವಾರ್ಥ ನಿರಹಂಕಾರ ,ಪ್ರತಿಫಲಾಪೇಕ್ಷೆಯಿಲ್ಲದೆ  ಮಾಡಬೇಕೆಂದು ಪರಮಾತ್ಮನೆ ತಿಳಿಸಿರುವಾಗ ಈಗಿನ ನಮ್ಮ ಮನಸ್ಸು  ಎಷ್ಟು ಒಳಗೆ ಎಳೆದುಕೊಂಡರೂ  ಹೊರಗಿನ ರಾಜಕೀಯದ ವಿಚಾರಕ್ಕೆ ಬಂದಾಗ  ಇದು ಮರೆತುಹೋಗಿ ನಾನೇ ಮುಂದೆ ನಡೆಯುವುದು. ಕಷ್ಟವಿದೆ ಪರಮಾತ್ಮನ ಸತ್ಯ ಅರಿಯುವುದು.
ಆದರೂ ಕೆಲವರಿಗೆ ಸಾಧ್ಯವಾಗಿದೆ ಎಂದರೆ ಕಷ್ಟಪಟ್ಟು ಅವರು ಆತ್ಮಾವಲೋಕನ ದಿಂದ ನಡೆದಿದ್ದಾರೆ.ಹಾಗಂತ ಇದು ಎಲ್ಲರೂ ಒಪ್ಪಿಕೊಳ್ಳಲು ಕಷ್ಟ. ತನ್ನ ಜೀವನದಲ್ಲಾದ ಬದಲಾವಣೆಗೆ ಕಾರಣವೇ ನಮ್ಮವರ ಸಹಕಾರವಿರಬಹುದು.ಅಸಹಕಾರವೂ ಇರಬಹುದು.
ಯಾವಾಗ‌ಮನುಷ್ಯ ಸತ್ಯದ ದಾರಿ ಹಿಡಿಯುವನೋ ಹೊರಗಿನವರ ಅಸಹಕಾರ ಹೆಚ್ಚುವುದು. ಅದೇ ಸತ್ಸಂಗವಿದ್ದರೆ ಸಹಕಾರವೂ ಸಿಗಬಹುದು. ಇದು ಭೌತಿಕ ಸಾಧನೆಗೂ ಅನ್ವಯಿಸುತ್ತದೆ. ದುಷ್ಟರೊಂದಿಗೆ ದುಷ್ಟರಿಗೆ ಸಹಕಾರ ಸಿಗುತ್ತದೆ. ಇದು ಬೆಳೆದಂತೆಲ್ಲಾ ಭ್ರಷ್ಟಾಚಾರ ವಾಗುತ್ತದೆ. ಎಲ್ಲರೂ  ಅಸತ್ಯದಿಂದಲೇ ಭೂಮಿಯನ್ನು ಆಳೋದು.ಸತ್ಯದಿಂದ ಆಳೋದು ಸಾಧ್ಯವಿಲ್ಲ.ಆಳು ಆಳೋದಕ್ಕೆ ಸಹಕಾರ ಸಿಗೋದಿಲ್ಲವೆಂದರೂ  ಭೂಮಿಯನ್ನು ಆಳುತ್ತಿರುವ ಮಾನವನಿಗೆ ಸಹಕಾರ ಸಿಗುತ್ತಿದೆ.ಇದರರ್ಥ ಅಸತ್ಯಕ್ಕೆ ಸಹಕಾರ ಹೆಚ್ಚು. ಭೂಮಿ ಮನುಕುಲಕ್ಕೆ ಒಂದು ಮಾಧ್ಯಮವಷ್ಟೆ.ಇಲ್ಲಿ ತನ್ನ ಋಣ ತೀರಿಸಲು ಸೇವಕರೂ ಇರುವರು  ಋಣ ಬೆಳೆಸಿಕೊಳ್ಳುವ ಸೇವೆ ಮಾಡಿಸಿಕೊಳ್ಳುವವರೂ ಇರುವರು. ಇದರಿಂದಾಗಿ ಭೂಮಿಗೆ ಯಾವ ಕಷ್ಟ ನಷ್ಟವಿಲ್ಲ.ಯಾವಾಗ ಇವರಿಬ್ಬರಲ್ಲಿ ಅಜ್ಞಾನ ಬೆಳೆಯುವುದೋ ಆಗ ಭೂಮಿಯ ಸತ್ಯ ಸತ್ವ ತತ್ವಕ್ಕೆ ದಕ್ಕೆಯಾಗುತ್ತಾ ಭೂಕಂಪ,ಪ್ರಳಯ,ಪ್ರಕೃತಿ ವಿಕೋಪದಿಂದ ಜೀವ ಹೋಗುತ್ತದೆ. ಜೀವಕ್ಕೆ ಸಾವಿದ್ದರೂ ಆತ್ಮಕ್ಕಿಲ್ಲವೆಂಬ ಸತ್ಯ ತಿಳಿದವರು ಜೀವವಿರೋವಾಗ ಸತ್ಯ ಧರ್ಮವರಿತು ಹಿಂದಿನ ಗುರುಹಿರಿಯರ ಹಿಂದೆ ನಡೆಯುವರು.ತಿಳಿಯದವರು ವಿರೋಧಿಸುತ್ತಾ ಮುಂದೆ ಹೋಗಿ ಮರೆಯಾಗುವರು.ಇಷ್ಟೇ ಜೀವನದ ರಹಸ್ಯ.
ಬ್ರಹ್ಮಜ್ಞಾನಕ್ಕೆ  ತನ್ನ ಸೃಷ್ಟಿ ಯ ಮೂಲವನರಿತು ಅದರಲ್ಲಿರುವ ತತ್ವ ಸತ್ವ ತತ್ವ ತಿಳಿಯುವ‌ಪ್ರಯತ್ನ ಮಾಡಲು ನಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು.ಇದಕ್ಕೆ ಉತ್ತಮ ಗುರು ಶಿಕ್ಷಣವಿರಬೇಕು.ಗುರುವಾದವರು ಶಿಷ್ಯನ ಆತ್ಮದರ್ಶನ ಮಾಡಿರಬೇಕು ಶಿಷ್ಯನ ಹಣವನ್ನಲ್ಲ. ಇದನ್ನು ಪೋಷಕರು ಸ್ವಾಗತಿಸುವ‌ ಗುಣವಿರಬೇಕು. ಇಂತಹ ಪ್ರಜ್ಞೆ ಇರುವ ಯಾವುದೇ ಸಂಸಾರ,ಕುಟುಂಬ, ಗ್ರಾಮ,ರಾಜ್ಯ,ದೇಶ
ವಿಶ್ವ  ಸತ್ಯಯುಗವಾಗಿತ್ತು. ನಂತರ ಅಜ್ಞಾನ ಬೆಳೆಯುತ್ತಾ ಧರ್ಮ ಕುಸಿಯುತ್ತಾ  ಕೆಳಗಿಳಿದ ಮಾನವನ ಶಿಕ್ಷಣವೇ ಸಂಪೂರ್ಣ  ಬದಲಾಗಿ ಕಣ್ಣಿಗೆ ಕಂಡದ್ದೆ ಸತ್ಯ ಆತ್ಮವಿಲ್ಲ ಪರಮಾತ್ಮನೂ ಇಲ್ಲ ನಾನೇ ದೇವರು ಎನ್ನುವ ಹಂತಕ್ಕೆ ಈಗ ಶಿಕ್ಷಣವಿದೆ ಸತ್ಯವಿಲ್ಲ ಧರ್ಮ ವಿಲ್ಲ.ಸತ್ಯವಿದ್ದರೂ ಕಣ್ಣಿಗೆ ಕಾಣುವ ಸತ್ಯವಾಗಿದೆ. ಕಾಣದ ಸತ್ಯ ಎಲ್ಲರನ್ನೂ ನಡೆಸಿ ತನ್ನ ಕೆಲಸ ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣವಾಗಿದೆ. 
ಹಾಗಾದರೆ  ಭೂಮಿಯಲ್ಲಿ ಧರ್ಮ ಸ್ಥಾಪನೆಗೆ  ನಾವೇನು ಮಾಡಬಹುದು? ನಮ್ಮ ಮೂಲದ ಧರ್ಮ ರಕ್ಷಣೆ ನಾವೇ ಮಾಡಿಕೊಂಡರೆ ಸಾಕು. ಅದಕ್ಕೆ ಪೂರಕವಾದ ಶಿಕ್ಷಣ ಮನೆಯೊಳಗೆ ಕೊಡಬಹುದು.ಅಥವಾ ಹೊರಗಿನ ಶಿಕ್ಷಣದಲ್ಲಿಯೇ ಅಳವಡಿಸಬಹುದು.ಆದರೆ ಸಮಸ್ಯೆ ಇರೋದು ಕಲಿಸುವ ಶಿಕ್ಷಕರಿಗೆ ಇದರ ಅರಿವಿರಬೇಕು.
ಸಾಕಷ್ಟು ಅರ್ಧ ಸತ್ಯದ ಧರ್ಮ ಪ್ರಚಾರವಾಗುತ್ತಿದೆ. ಇದಕ್ಕೆ ಎಷ್ಟೋ ಸಂಸಾರಗಳು ಹೊರಬಂದು ಮೂಲದಿಂದ ದೂರವಿದೆ. ದೂರಹೋದ ಮೇಲೆ ಆ ಸ್ಥಳವನ್ನು ಅನ್ಯರು ಬಂದು ಆಕ್ರಮಣ ಮಾಡಿಕೊಂಡು ಅಂತರ ಬೆಳೆಸುತ್ತಿದ್ದಾರೆ.ಯಾವಾಗ ಅಂತರ ಬೆಳೆಯುವುದೋ ಅತಂತ್ರ ಜೀವನವಾಗುತ್ತದೆ.ತತ್ವಹೋಗಿ ತಂತ್ರ ಬೆಳೆದರೆ  ಮುಕ್ತಿಯಿಲ್ಲ.ಹೀಗಾಗಿ ನಮ್ಮ ಗುರುಹಿರಿಯರು ಸಾಲವೇ ಶೂಲವೆಂದರು,ಸಾಲ‌ಮಾಡಿ ಕೆಟ್ಟ ಎಂದರು.ಈಗ ಸಾಲ ಕೊಡೋದಕ್ಕೆ ಸಾಕಷ್ಟು ವ್ಯವಹಾರವಿದೆ.ಬಡ್ಡಿ ಕಟ್ಟಲಾಗದೆ ಭ್ರಷ್ಟಾಚಾರ ದ ಮಾರ್ಗ ಹಿಡಿದರೂ ಭ್ರಷ್ಟಾಚಾರ ಕ್ಕೆ ತಕ್ಕಂತೆ ಜನ್ಮ ಪಡೆಯುವುದನ್ನು ಯಾರೂ ತಪ್ಪಿಸಲಾಗದು.
ಜನನ ಮರಣ ಮಾನವನ ಕೈಯಲ್ಲಿ ಇದ್ದಿದ್ದರೆ ಯಾರೂ ಸಾಯುತ್ತಿರಲಿಲ್ಲ.  ಒಟ್ಟಿನಲ್ಲಿ ಪ್ರಕೃತಿ ಪುರುಷರ ನಡುವಿನ ಅಂತರವೇ ಅವಾಂತರಕ್ಕೆ ಕಾರಣವಾಗಿದೆ. ಇದಕ್ಕಾಗಿ ಮಧ್ಯೆ ಜನ್ಮ ಪಡೆದ ಜಾತಿ ಪಂಗಡ,ಪಕ್ಷ,ಗಳು ದೈಹಿಕಸುಖಕ್ಕಾಗಿ ಆತ್ಮವಂಚನೆಯಲ್ಲಿ ಮನರಂಜನೆಯಲ್ಲಿ ಮೈಮರೆತರೆ ಇದು ಅಧ್ಯಾತ್ಮ ಸಂಶೋಧನೆಗೆ  ಮಾರಕವಾಗುತ್ತದೆ.
ಹಣೆಬರಹ ಅಳಿಸಲಾಗದು. ಹುಟ್ಟುಗುಣ ಸುಟ್ಟರೂ ಹೋಗದು.ಮಾಡಿದ್ದುಣ್ಣೋ ಮಹಾರಾಯ ಎಂದಂತೆ ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯದ ಪ್ರತಿಫಲವೇ ಈ ಜನ್ಮ.ಈ ಜನ್ಮದ ಪಾಪಪುಣ್ಯವೇ ಮುಂದಿನ‌ಜನ್ಮದ ಆರಂಭ. ಯಾರೋ ಜನ್ಮವೇ ಇಲ್ಲವೆಂದರೆ ಅದು ಸತ್ಯವಾಗದು.ಶ್ರೀ ಕೃಷ್ಣ ಪರಮಾತ್ಮನಿಗೇ ಜನ್ಮವಿದೆ ಎಂದಾಗ ಅವನೊಳಗಿನ ಭಕ್ತರಿಗಿಲ್ಲವೆ? ಯೋಗದಿಂದ ಭಕ್ತಿ ಹೆಚ್ಚಾದರೆ ಆತ್ಮಕ್ಕೆ ತೃಪ್ತಿ ಶಾಂತಿ ಸದ್ಗತಿ.ಮುಕ್ತಿ ಎನ್ನುವ ಎರಡಕ್ಷರದೊಳಗಿನ ಶಕ್ತಿ ಒಳಗಿರುವ ಜ್ಞಾನದಲ್ಲಿದೆ.ಅದರ ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಪಟ್ಟರೆ ಫಲವಿದೆ.

ಯಾರೋ ಮಾಡಿಟ್ಟುಹೋದ ಆಸ್ತಿಯನ್ನು ಹಂಚಿಕೊಂಡು ಬದುಕಬಹುದು.ಆದರೆ ಅವರಲ್ಲಿದ್ದ ಜ್ಞಾನವನ್ನು ಹಂಚಿಕೊಳ್ಳದಿದ್ದರೆ ಅದೇ ಸಾಲವಾಗುತ್ತದೆ. ಎಷ್ಟು ಭೂಮಿ ಖರೀಧಿಸಿದರೂ ಹೋಗುವಾಗ ಭೂಮಿ ಹೊತ್ತು ಹೋಗೋದಿಲ್ಲ.ಅದರ ಋಣ ಮಾತ್ರ ಹೊತ್ತು ಜೀವ ಹೋಗುತ್ತದೆ.ತೀರಿಸಲು ಮತ್ತೆ ಬರಲೇಬೇಕೆಂದಾಗ ಇದ್ದಾಗ ಸತ್ಕರ್ಮ ಸ್ವಧರ್ಮ,ಸುಜ್ಞಾನದಿಂದ  ಸತ್ಯವರಿತು ಜೀವನ ನಡೆಸೋದಕ್ಕೆ ಸಂಸ್ಕಾರದ ಶಿಕ್ಷಣ ಬೇಕಷ್ಟೆ.ಶುದ್ದವಾದ ವಿಷಯವನ್ನು ಮಕ್ಕಳಿಗೆ ಕಲಿಸುವುದರಿಂದ ಅವರೊಳಗಿದ್ದ ಅಶುದ್ದತೆ ಹೋಗಿ ಸ್ವಚ್ಚ ಮನಸ್ಸಿನಿಂದ ಮಹಾತ್ಮರಾಗುವರು.
ಇದು ಭಾರತೀಯ ಶಿಕ್ಷಣದ‌ಮುಖ್ಯ ಗುರಿಯಾಗಿತ್ತು.ಈಗ ಹೇಗಿದೆ?
ಕಾಲಮಾನಕ್ಕೆ ತಕ್ಕಂತೆ ಜೀವನ ನಡೆಸೋದು ಅನಿವಾರ್ಯ.ಆದರೂ ಸಾಧ್ಯವಾದಷ್ಟು ಒಳಗಿನ  ಶುದ್ದತೆಗೆ ಸ್ವಯಂ ಪ್ರಯತ್ನಪಟ್ಟರೆ ಅದೇ ಯೋಗ. ಜ್ಞಾನಯೋಗ ನಮ್ಮ ಲ್ಲಿ ಒಳಗೇ ಅಡಗಿರುವ ವಿಶೇಷ ಜ್ಞಾನ ಗುರುತಿಸಿಕೊಂಡು ಯೋಗಿಗಳ ಮಾರ್ಗದಲ್ಲಿ ನಡೆಯುವುದಾಗಿದೆ.
ರಾಜಯೋಗ ತನ್ನ ತಾನರಿತು ತನ್ನ ಆತ್ಮಾನುಸಾರ ನಡೆಯುತ್ತಾ ತನ್ನ ಜೀವದ ಋಣ ತೀರಿಸಲು ಬೇಕಾದ ಕರ್ತವ್ಯ ಕರ್ಮದೆಡೆಗೆ ನೆಡೆದರೆ ನನಗೆ ನಾನೇ ರಾಜ.
ಭಕ್ತಿಯೋಗ- ತನ್ನೊಂದಿಗಿರುವ ಆ ಪರಮಶಕ್ತಿಯನರಿತು  ಶಕ್ತಿಯನ್ನು ಭಕ್ತಿಭಾವದಿಂದ ಪೂಜಿಸಿ ನಡೆಯುವುದು. ಇದು ದೇಶಭಕ್ತಿಯೂ ಆಗಬಹುದು.
ಕರ್ಮ ಯೋಗ- ತನ್ನ ಕೆಲಸವನ್ನು ತಾನೇ ಮಾಡಿಕೊಂಡು ಸತ್ಯ ಧರ್ಮವ ಬಿಡದೆ ಪರಮಾತ್ಮನ ಸೇವಾಭಾವದಲ್ಲಿ ಜೀವನ ಸಾಗಿಸುವುದು.ಪರಮಾತ್ಮನಿಗೆ ದಾಸರಾಗೋದು ಶರಣಾಗೋದು...
ಭಗವದ್ಗೀತೆ  ಹಿಂದೂಗಳ ಧರ್ಮ ಗ್ರಂಥ. ರಾಮಾಯಣ ಮಹಾಭಾರತ ವೇದ ಉಪನಿಷತ್ತುಗಳ ಕಥೆಗಳಲ್ಲಿ ಅಡಗಿರುವ ಯೋಗ ಶಕ್ತಿಯಲ್ಲಿ ದೈವತ್ವ ಅರ್ಥ ವಾದರೆ ನಮ್ಮಲ್ಲಿ ಅಡಗಿರುವ ಅತಿಯಾದ ಸ್ವಾರ್ಥ ಅಹಂಕಾರವೆಂಬ ಅಸುರಿ ಶಕ್ತಿಯೇ ಎಲ್ಲದ್ದಕ್ಕೂ ಕಾರಣವೆನ್ನಬಹುದು.
ಹಿಂದಿನವರಲ್ಲಿದ್ದ ಆಳವಾದ ಸತ್ಯಜ್ಞಾನಕ್ಕೂ ಈಗಿನ‌ಮೇಲಿನ ಮಿಥ್ಯಜ್ಞಾನಕ್ಕೂ ಅಂತರ ಬೆಳೆದಿದೆ.ಅಂತರದಲ್ಲಿ ಅಜ್ಞಾನ ತನ್ನ ಸ್ಥಾನಮಾನಕ್ಕೆ ಹೋರಾಡುತ್ತಿದೆ.ಸಾಮಾನ್ಯಜ್ಞಾನ ಮೌನವಹಿಸಿ ನೋಡುತ್ತಿದೆ. ಇದರಿಂದಾಗಿ ಮಾನವನಿಗೆ ತನ್ನ ಅರಿವು ಹಿಂದುಳಿದಿದೆ.  ಅರಿವನ್ನು ಸದ್ಬಳಕೆ ಮಾಡಿಕೊಂಡರೆ ಸಾಲ ತೀರುತ್ತದೆ.ಸಾಲ ತೀರಿದ ಕ್ಷಣವೇ ಜೀವನ್ಮುಕ್ತಿ. ಆದರೆ ಎಷ್ಟೋ ಜೀವಕ್ಕೆ ಸಾಲ ತೀರದೆ ಹೋಗಿ ಅತೃಪ್ತಿಯಿಂದ ಅಲೆದಾಡುತ್ತಿದೆ. ಇದರ ಪರಿಣಾಮದಿಂದ  ಜನಜೀವನ ಅಸ್ತವ್ಯಸ್ತವಾಗುತ್ತಿದೆ.ಕಣ್ಣಿಗೆ ಕಾಣದ ಅತೃಪ್ತ ಆತ್ಮಗಳು ಮಧ್ಯವರ್ತಿಗಳ ಮೂಲಕ  ಆಟವಾಡಿಸುತ್ತಿವೆ. ಸೂಕ್ಮವಾಗಿರುವ ಈ ಸತ್ಯ ಬರಿಗಣ್ಣಿಗೆ ಕಾಣದು.ದೇಹದೊಳಗಿನ ಶಕ್ತಿಯ ಪ್ರೇರಣೆಯೇ ಎಲ್ಲದ್ದಕ್ಕೂ ಕಾರಣವೆಂದಾಗ‌  ನಾನೆಂಬುದಿಲ್ಲ.ನನ್ನಿಂದ ಏನೂ ನಡೆಯುತ್ತಿಲ್ಲ ನಮ್ಮಿಂದ ನಡೆಯುತ್ತಿದೆ.ನಮ್ಮ ಒಂದು ಹೆಜ್ಜೆ ಹಿಂದೆ ಇಟ್ಟರೆ ಹಿಂದಿನವರ ಧರ್ಮ, ಮುಂದೆ ಇಟ್ಟರೆ ಮುಂದಿನ ಕರ್ಮ. ಇದ್ದಲ್ಲಿಯೇ ಸತ್ಯ ತಿಳಿದರೆ ಸ್ಥಿತಪ್ರಜ್ಞಾ.
ಒಟ್ಟಿನಲ್ಲಿ  ಯಾರೂ ಸ್ಥಿರವಲ್ಲ.ಸತ್ಯ ಒಂದೇ ಎಂದಂತೆ ಭೂಮಿಯೂ ಒಂದೇ ಇರೋದು.ದೇಶವೂ ಒಂದೇ ಇರೋದು. ಹೊರದೇಶಕ್ಕೆ ಹೋಗಿ ನಾನು ಸ್ವದೇಶದಲ್ಲಿದ್ದೇನೆ ಎಂದರೂ  ಅಸತ್ಯ.ಆದರೆ ಅದರ ಸಾಲ ತೀರಿಸಲು ಅಲ್ಲಿದ್ದೇ ದುಡಿಯುವುದು ಧರ್ಮ.ದುಡಿಮೆಯಲ್ಲಿ ನಿಷ್ಟೆಯಿರಲಿ.ಎಲ್ಲಿದ್ದರೇನು  ನಾವೆಲ್ಲರೂ ದೇವರ ಮಕ್ಕಳು
ಭೂತಾಯಿಯ ಋಣಿಗಳೆ.ಋಣಮುಕ್ತರಾಗಲು ಸೇವಕರಾಗಿರಬೇಕು.ಹಣವಿಲ್ಲದವರಲ್ಲಿ ಗುಣಜ್ಞಾನವಿರುತ್ತದೆ.ಹೀಗಾಗಿ ಆ ಗುಣವನ್ನು ಬಳಸಿಕೊಂಡು ಋಣಮುಕ್ತರಾಗಬಹುದು.ಅಗೋಚರ ಶಕ್ತಿಯನ್ನು ಅರಿತ ಮೇಲಿನ ಎಲ್ಲಾ ಕರ್ಮ ಗಳೂ ಯೋಗವಾಗಿರುತ್ತದೆ.

ಚುನಾವಣೆಯಿಂದ ಪಾಠ ಕಲಿಯಬಹುದೆ?

. ಚುನಾವಣಾ ಫಲಿತಾಂಶದಿಂದ ಜನ ಬುದ್ದಿ ಕಲಿತರೋ ಅಥವಾ ರಾಜಕಾರಣಿಗಳೋ ? ಇಲ್ಲಿ ಬುದ್ದಿವಂತಿಕೆ ಕೆಲಸವೇ ಮಾಡಿಲ್ಲ.ನಾವು ಯಾರನ್ನು ಆಳಬೇಕು,ಗೆಲ್ಲಬೇಕು,ಸೋಲಿಸಬೇಕು ಯಾವುದಕ್ಕೆ ಸೋಲಬೇಕೆನ್ನುವ ಜ್ಞಾನವಿದ್ದರೆ  ಸೋಲು ಗೆಲುವಿನ ಆಟದಲ್ಲಿ  ಯಾರೂ ಸೋತಿಲ್ಲ ಗೆದ್ದೂ ಇಲ್ಲ ಎನ್ನಬಹುದು.
ಆದರೆ ಪ್ರಜಾಪ್ರಭುತ್ವದ ಸೋಲು ಪ್ರಜೆಗಳ ಜ್ಞಾನದಲ್ಲಿ ಮುಂದುವರಿದಿದೆ  ಇದು ಸತ್ಯ. ಇಬ್ಬರ ಜಗಳ ಮೂರನೆಯವರಿಗೆ ಲಾಭ ವಾದಾಗ ಆ ಮೂರನೆ ಮಧ್ಯವರ್ತಿ ಚೆನ್ನಾಗಿ ಆಟವಾಡಿಸೋದಂತೂ ಸತ್ಯ. ನಮ್ಮ ಆತ್ಮಕ್ಕೆ ನಾವೇ ಒಡೆಯರಾದರೆ ಪರಮಾತ್ಮನ ಆಟವೂ ಅರ್ಥ ವಾಗುತ್ತದೆ. ಇದು ಸನಾತನ ಧರ್ಮ ತಿಳಿಸುತ್ತದೆ.
ಇದನ್ನರಿಯದವರು ಅನ್ಯಧರ್ಮದವರ ದಾಸರಾಗಲು ಹೋಗಿ ತಾವೇ ದಾಸ್ಯತ್ವಕ್ಕೆ ಬಲಿಯಾಗುವ ಜೊತೆಗೆ ತನ್ನ ನಂಬಿದವರನ್ನೂ  ಬೀಳಿಸುವಾಗ ಯಾರೂ ಎತ್ತಿ ಹಿಡಿಯಲಾಗದು.ಮಾಡಿದ್ದುಣ್ಣೋ ಮಹಾರಾಯ ಎಂದರೆ ಹೀಗೆಯೇ .
"ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ಕೂಡಲಸಂಗಮನೊಲಿಯುವ ಪರಿ.." ಬಸವಣ್ಣನವರು ಆತ್ಮಶುದ್ದಿಗಾಗಿ ರಾಜರ ವಶದಿಂದ ಹೊರಬಂದು ತತ್ವಜ್ಞಾನಿಗಳಾಗಿ ಮಹಾತ್ಮರಾದರು. ಈಗ‌ನಾವು ತತ್ವ ಬಿಟ್ಟು ರಾಜಕೀಯದ ತಂತ್ರದೊಳಗೆ ಸೇರಿಕೊಂಡು  ಭ್ರಷ್ಟರಿಗೆ ದುಷ್ಟರಿಗೆ  ಸಹಕಾರ ಕೊಟ್ಟರೆ ಆತ್ಮಹತ್ಯೆಯಲ್ಲವೆ?
ಇದನ್ನು ತಿಳಿಸಬೇಕಾದವರೆ ರಾಜಕಾರಣಿಗಳ ಹಿಂದೆ ನಡೆದರೆ ಬೇಲಿಯೇ ಎದ್ದು ಹೊಲಮೇಯ್ದರೆ  ಕಾಯೋರಿಲ್ಲ.
ಮೇಲಿರುವ ಪರಮಾತ್ಮನ ಕಡೆಗೆ‌ ಇಂದು‌ ನಡೆಯೋದು ಬಹಳ ಕಷ್ಟವಿದೆ. ಕೊನೆಪಕ್ಷ ದೇಶದ ಹಿತದೃಷ್ಟಿಯಿಂದ  ತಮ್ಮ ಸ್ವಾರ್ಥ ಅಹಂಕಾರದ ರಾಜಕೀಯ ಬಿಟ್ಟು ಸ್ವತಂತ್ರ ಪ್ರಜೆಗಳು  ಸತ್ಯಜ್ಞಾನದ ಕಡೆಗೆ ದೃಷ್ಟಿ ಹರಿಸಿದರೆ  ತಾವೇ ತೋಡಿಕೊಂಡಿರುವ ಹೊಂಡದಿಂದ ಮೇಲಕ್ಕೆ ಬರಬಹುದು.
ಇಲ್ಲಿ ಏನೂ ಆಗೇ ಇಲ್ಲ ಎನ್ನುವ ಬದಲು ಏನೋ‌ ಹಿಂದೆ ಕುತಂತ್ರ ನೆಡೆಯುತ್ತಿದೆ  ಎಂದು ಅರ್ಥ ಮಾಡಿಕೊಳ್ಳಲು ನಮ್ಮ ಮನಸ್ಸನ್ನು ಸ್ವಚ್ಚಗೊಳಿಸಿಕೊಂಡರೆ ಅರ್ಥ ವಾಗುತ್ತದೆ.
ಸತ್ಯ ಯಾವತ್ತೂ ಸತ್ಯವೆ. ಮಿಥ್ಯದಿಂದ ತೇಪೆ ಹಾಕಿ ಮುಚ್ಚಿದರೂ  ಒಳಗಿನ ಸತ್ಯ ಬದಲಾಗದು. ಇದು ನಮ್ಮ ಆತ್ಮಸಾಕ್ಷಿಯಾಗಿದೆ.
ಪ್ರಜಾಪ್ರಭುತ್ವದ ಈ ಸ್ಥಿತಿಗೆ ಮುಖ್ಯಕಾರಣಕರ್ತರೆ ಅರ್ಧ ಸತ್ಯ ತಿಳಿದಿರುವ‌ಮಧ್ಯವರ್ತಿಗಳ ವ್ಯವಹಾರ ಜ್ಞಾನ. ಇದು ಧಾರ್ಮಿಕ ಶೈಕ್ಷಣಿಕ ,ಸಾಹಿತ್ಯ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶ ಮಾಡುತ್ತಾ ಜನರ ಒಳಗಿದ್ದ ಸಾಮಾನ್ಯ ಜ್ಞಾನಕ್ಕೆ ಲಕ್ಷ್ಯ ಕೊಡದೆ  ಲಕ್ಷ ಲಕ್ಷ ಹಣಗಳಿಸಿ ಧರ್ಮ ಕುಸಿದಿದೆ.
ಇದನ್ನು ಹೇಳಲು ಹೋದವರನ್ನು ನಿರ್ಲಕ್ಷ್ಯ ಮಾಡುತ್ತಾ  ಅಸಹಕಾರ ಅನಾಧರ, ಅಪಹಾಸ್ಯ  ಮಾಡಿದವರಿಗೆ ಈಗಲೂ ಸ್ಥಾನಮಾನ ಸನ್ಮಾನ ಅಧಿಕಾರ ಜನರೆ ನೀಡಿ ಬೆಳೆಸಿರುವಾಗ ಅವರ ತಪ್ಪು ಕಾಣೋದಿಲ್ಲ. ಎಲ್ಲಿಯವರೆಗೆ ಮಾನವನಿಗೆ  ಜನಬಲ ಹಣಬಲ ಇರುವುದೋ ಅಲ್ಲಿಯವರೆಗೆ ಸತ್ಯದ ಬಲ ಅರ್ಥ ವಾಗದು. ಜನರಲ್ಲಿ ಸತ್ಯವಿದ್ದರೆ ಸರಿ ಆದರೆ ಇಂದು ಸತ್ಯವಿಲ್ಲದ ಶಿಕ್ಷಣ  ಅಜ್ಞಾನವನ್ನು  ಬೆಳೆಸಿ ಹೊರಜಗತ್ತಿನೆಡೆಗೆ  ನೆಡೆಸಿ ಒಳಗೇ ಇದ್ದ ಜಗತ್ತಿನಿಂದ  ಮನಸ್ಸನ್ನು ದೂರ ಮಾಡಿದೆ. ಹೀಗಾಗಿ ಅರಿವೇ ಗುರು ಎನ್ನುವುದು  ಹೊರಗಿನ ವಿಷಯಕ್ಕೆ ಸೀಮಿತವಾಗುತ್ತಾ  ಅಸತ್ಯ ಅನ್ಯಾಯ ಅಧರ್ಮ ದಿಂದ ಭ್ರಷ್ಟಾಚಾರ ಬೆಳೆದಿದೆ. ಇದೇ ಸ್ವರ್ಗ ವೆಂದು ಮಕ್ಕಳು ಮಹಿಳೆಯರನ್ನು ಬಳಸಿಕೊಂಡು  ರಾಜಕೀಯದಲ್ಲಿ ದ್ವೇಷದ ವಿಷಬೀಜ ಬಿತ್ತಿ ಸಾಕಷ್ಟು ಮಧ್ಯವರ್ತಿಗಳು ಮಾಧ್ಯಮಗಳು ದೇಶ ಏನಾದರೇನು ನಾವು ಮನರಂಜನೆಯಲ್ಲಿರಬೇಕೆಂದು ವಿಷಯ ಪ್ರಚಾರದಲ್ಲಿದೆ. ಕೆಲವು ಉತ್ತಮವಿದ್ದರೂ ನೆಡೆಸಲಾಗದೆ ಹಿಂದುಳಿದಿದೆ.  ಆದರೂ  ಮೇಲಿರುವ ಶಕ್ತಿಯ ಮುಂದೆ ಎಲ್ಲಾ ‌ನಗಣ್ಯವೆ.
ಸಾಮಾಜಿಕ ಜಾಲತಾಣವನ್ನೇ  ನೋಡಿದಾಗ ಯಾರದ್ದೋ ಒಂದು ಮುಖಚಿತ್ರಕ್ಕೆ  ಕೊಡುವ  ಪ್ರೋತ್ಸಾಹ  ಲೈಕ್ಸ ಜನರ ದೃಷ್ಟಿ ಅರ್ಥ ಮಾಡಿಕೊಳ್ಳಲು ಸಾಧ್ಯ.
ಆದರೂ  ಮಾನವನಿಗೆ ಮನರಂಜನೆ ಅಗತ್ಯ..ಇಲ್ಲವಾದರೆ ಸತ್ತ ಹೆಣದಂತಿರಬೇಕು.ಇದು ಆತ್ಮವಂಚನೆಯಾಗದಂತಿರಬೇಕಷ್ಟೆ.
ಉದಾಹರಣೆಗೆ ಬದಲಾವಣೆ ನಮ್ಮಿಂದ ಆದಾಗಲೇ ಆತ್ಮಕ್ಕೆ ತೃಪ್ತಿ ಮುಕ್ತಿ .ಅಂದರೆ ಎಲ್ಲಾ  ತಪಸ್ವಿಗಳಾಗರು,ಯೋಗಿಯಾಗರು,ಸಂನ್ಯಾಸಿಯಾಗರು,ಸಂಸಾರಿಯಾಗರು,ದೇಶಭಕ್ತರಾಗರು,ದೇವರಭಕ್ತರಾಗರು ಆದರೂ ಎಲ್ಲಾ ಪರಮಾತ್ಮನ ಸೇವಕರೆ ಆಗಿರುವರು.
ಯಾವಾಗ ಈ ಸೇವೆ ರಾಜಕೀಯಕ್ಕೆ ಬಳಸಲಾಗುವುದೋ ಆಗ ಅಹಂಕಾರ ಸ್ವಾರ್ಥ ತಿಳಿಯದೆಯೇ ದಾರಿತಪ್ಪಿಸಿ ಆಳುವುದು. 
ಇದನ್ನು ಪುರಾಣ ಇತಿಹಾಸದಿಂದಲೂ ತಿಳಿದು  ತಿಳಿಸುತ್ತಾ ಬಂದಿದ್ದರೂ   ನಮ್ಮ ಅಸುರಿ ಶಕ್ತಿಯನ್ನು ನಾವು ಬಿಡದೆ ಹೊರಗಿನ ಅಸುರಿ ಶಕ್ತಿಯನ್ನು ದ್ವೇಷ ಮಾಡುತ್ತಾ ನಡೆದರೆ
ಒಳಗೆ ದೈವತ್ವವಿರುವುದೆ?
ಶ್ರೀ ಕೃಷ್ಣ ಪರಮಾತ್ಮ ಪಾಂಡವ ಕೌರವರ ಜೊತೆಗೆ ಇದ್ದೇ ಧರ್ಮ ರಕ್ಷಣೆ ಮಾಡಿದನೆಂದರೆ  ಪರಮಾತ್ಮನಿಗೆ ಯಾರಲ್ಲೂ ದ್ವೇಷವಿಲ್ಲ. ಹಾಗಂತ ದುಷ್ಟರನ್ನು ಬೆಳೆಸೋದಿಲ್ಲ. ನಮ್ಮ ಮನಸ್ಸು ಹದಗೆಡಲು ಕಾರಣವೇ ಈ ದ್ವೇಷ. ಇದರ ಮೂಲ ನಮ್ಮ ಹಿಂದಿನವರೆ ಆಗಿರುವರು. ಅಂದಿನ ಕಾಲದಲ್ಲಿದ್ದ ಧರ್ಮದ ಕಟ್ಟುಪಾಡುಗಳನ್ನು  ಅರ್ಥ ಮಾಡಿಕೊಳ್ಳಲು ಸೋತವರು ಅದನ್ನು ಬಿಟ್ಟು ಹೊರಗೆ ಬಂದಿದ್ದರೂ ಅದೇ ದ್ವೇಷ  ಇಂದಿಗೂ ಬಂದಿದೆ.ಒಳಗೇ ಅಡಗಿರುವುದೇ ಹೆಚ್ಚು ಪ್ರಚಾರ ಪಡೆಯುತ್ತದೆ.ಒಟ್ಟಿನಲ್ಲಿ ದ್ವೇಷದಿಂದ ದೇಶಕಟ್ಟಲು ಆಗದು. ಧರ್ಮ ವೂ ಉಳಿಯದು. 
ಈಗಲಾದರೂ ಹಿಂದೂಗಳು ಎಚ್ಚರವಾದರೆ  ಅಪಾರ್ಥ ಕ್ಕೆ ಒಳಗಾಗಿರುವ ಪಾರ್ಥ ಸಾರಥಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ಧರ್ಮ ರಕ್ಷಣೆಗಾಗಿ ಪರಮಾತ್ಮ ಯಾವ ರೂಪವಾದರೂ ತಾಳಬಹುದು, ಯಾರ ಸೇವಕನೂ ಆಗಬಹುದು, ಸಾರಥಿಯೂ ಆಗಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ  ಸತ್ಯಜ್ಞಾನವಿರಬೇಕಷ್ಟೆ..ವಿಜ್ಞಾನ ಹೊರಗಿನ ಸತ್ಯ ತಿಳಿಸಬಹುದು ಆದರೆ ಇದು ತಾತ್ಕಾಲಿಕ ಸತ್ಯವಾಗಿರುತ್ತದೆ.ಬದಲಾಗುತ್ತಲೇ ಇರುತ್ತದೆ. ಅಧ್ಯಾತ್ಮ ಸಂಶೋಧನೆ ಪುರಾಣ ಪಠಣದಿಂದ ಆಗಿದೆಯೆ? ಅಥವಾ ಸಾಮಾನ್ಯ ಜ್ಞಾನದೊಳಗೇ ಅಡಗಿದೆಯೆ? 
ಕಲಬೇಡ ಕೊಲಬೇಡ.....ಅರಿಷಡ್ವರ್ಗ ಮಿತಿಮೀರಿದರೆ ಅಜ್ಞಾನದ ಅಂಧಕಾರದಲ್ಲಿ ಅಶುದ್ಧ ವಿಷಯಪ್ರಚಾರದ ಮೂಲಕ  ಪರಿಸರ ಮಾಲಿನ್ಯ ಹೆಚ್ಚುವುದು.
ಪರಿಸರ ಸಂರಕ್ಷಣಾ ದಿನಾಚರಣೆಗೆ ಕೋಟ್ಯಾಂತರ ರೂ ಬಳಸಿ ಅರಿವಿನ‌ಕಾರ್ಯಕ್ರಮ ನೆಡೆಸಿ ಊಟ ಉಪಚಾರ ಆಟ ಪಾಠಗಳೇನೂ ನೆಡೆದರೂ ವರ್ಷ ಪೂರ್ತಿ ತಲೆಗೆ ತುಂಬುವ ಅಶುದ್ದ  ಪ್ರಭುದ್ದ ವಿಷಯಗಳಿಂದ ಮಕ್ಕಳ ಮಹಿಳೆಯರ ಅಂತರಾತ್ಮ ಶುದ್ದವಾಗಿದೆಯೆ ಎನ್ನುವ ಚಿಂತನೆ ಮನೆಯೊಳಗೆ ನೆಡೆಸಿಕೊಂಡರೆ  ಒಳಗೇ ಅಡಗಿರುವ ಶಾಂತಿ ಕಾಣಬಹುದು.

ಬರವಣಿಗೆಯ ಮೂಲಕ ವಿಚಾರ ತಿಳಿಸುವಾಗ ನಾನು ಕಾಣೋದಿಲ್ಲ ಅದೇ ಮಾತಿನ‌ಮೂಲಕ ಹೇಳುವಾಗ ನಾನಿರುತ್ತೇನೆ ಸತ್ಯ ಕಾಣೋದಿಲ್ಲ. ಸತ್ಯ ಕಾಣದಿದ್ದರೆ ಧರ್ಮಸೂಕ್ಮ ಅರ್ಥ ವಾಗದು. ಹೀಗಾಗಿ ಎಲ್ಲದ್ದಕ್ಕೂ ನನ್ನ ಹೋರಾಟ ಯಾವ ದಿಕ್ಕಿನಲ್ಲಿ ನಡೆದಿದೆ ಎನ್ನುವುದೆ ಕಾರಣ.ಅಂತರಾತ್ಮನ ಬಿಟ್ಟು ಅಂತರಾಷ್ಟ್ರೀಯ ದ ಕಡೆಗೆ ಹೋಗಬಹುದೆ? ಹೋದರೂ  ಶಾಶ್ವತ ಸುಖ ಸಿಗುವುದೆ?

ನುಡಿಮುತ್ತುಗಳು:- *  
  - - - — - - - - - - - -
**ಮನಸ್ಸಿಗೆ ಹಿತ ಎನಿದರೆ ಮಾತ್ರ ಸ್ನೇಹ ಬೆಳೆಸಿ.ಮನೆಯವರ ಜೊತೆಗೆ ಸಂಬಂಧ ಚೆನ್ನಾಗಿರಲಿ.ಮನಸ್ಸಿಗೆ ಬಂದಂತೆ ಮಾತಾಡುವವರ ಬಳಿ ಹುಷಾರಾಗಿರಿ.ಮನದ ಭಾವನೆಗಳನ್ನು  ಹಂಚಿಕೊಳ್ಳುವಾಗ ಸ್ವಲ್ಪ ಯೋಚಿಸಿರಿ.*
 
 **ಕೆಲವರು ಸುಂದರವಾದ ಸ್ಥಳವನ್ನು ಹುಡುಕುತ್ತಾರೆ.ಇತರರು ಇರುವ ಸ್ಥಳವನ್ನೇ ಸುಂದರವಾಗಿಸುತ್ತಾರೆ.**

**ಆಸೆ ಮತ್ತು ದುಃಖ ಎರಡೂ ಧ್ಯಾನದಲ್ಲಿ ಭಂಗ ತರಬಹುದು. ಅವೆಲ್ಲಿವೆಯೋ ಅಲ್ಲಿಯೇ ಬಿಟ್ಟು ಮುಂದೆ ಸಾಗಿರಿ.ಆಸೆಯೇ   ದುಃಖಕ್ಕೆ ಮೂಲ.**

**ಸರಳ ಜೀವನ ಸಂಯಮವನ್ನು ಕಲಿಸುತ್ತದೆ,ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ,*ಸರಳ ನಡೆ ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ.**

ನಮ್ಮ ಮನಸ್ಸು ಎಷ್ಟೇ ಕಠೋರವಾಗಿ, ನಾವು ಎಷ್ಟೇ ಶಕ್ತಿಯುತರಾಗಿ ಇದ್ದರೂ,ನಮ್ಮ ಜೊತೆಯೇ ನಾವು ಹೋರಾಡಲು ಸಾಧ್ಯವಿಲ್ಲ.*
 

ದಡ ಸೇರಲು ದೋಣಿ ಬದಲಿಸಬೇಕಿಲ್ಲ. ದಿಕ್ಕು ಬದಲಿಸಿದರೆ
ಸಾಕು.**

 **ನಾವು ನಮ್ಮ ಕ್ರಿಯೆಯ ಮೂಲಕ ಎದುರಿನವರನ್ನು ಗೆಲ್ಲಬೇಕೇ ವಿನಃ ವಾದದಿಂದಲ್ಲ. ಭಾವೋದ್ರೇಕದ ಮಾತುಗಳು ಯಾವ ಸಮಸ್ಯೆಯನ್ನೂ ಪರಿಹರಿಸಲಾರವು.**

**ಮತ್ತೊಬ್ಬರನ್ನು ಖುಷಿ ಪಡಿಸುವ ಬದುಕು ನಮ್ಮದಾದಾಗ ಒತ್ತಡ,  ಆತಂಕ ಮತ್ತು ಖಿನ್ನತೆ ಇವುಗಳು ನಮ್ಮನ್ನು ಅತಿಯಾಗಿ ಬಾಧಿಸುತ್ತವೆ.*

ಸದಾ ನಾವು ಬೇರೆಯವರ ಅಭಿಪ್ರಾಯಕ್ಕೆ ತಲೆಕೆಡಿಸಿಕೊಳ್ಳುತ್ತಿದ್ದರೆ ನಮ್ಮ ಜೀವನವು ನಮ್ಮದಾಗಿರುವುದಿಲ್ಲ.**

**ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದು ಮಹತ್ವದ ವಿಷಯವಲ್ಲ. ನಿಮ್ಮನ್ನು ನೀವು ಹೇಗೆ ಕಾಣುತ್ತೀರಿ ಎಂಬುದೇ ನಿಮ್ಮ ಸರ್ವಸ್ವ.**

Life is so confusing. What we want we do not get.What we get we are not satisfied. What we expect never happens and what we hate generally repeats. That is  Life.** 

 
** Memory is the space in which, a thing happens for a second time.**

When You Blame And Criticize Others ,You Are Avoiding Some Truth About Yourself.**

 
**He has the most, who is most content with the least.*

 
**Nothing can be learnt from life if you think you are right.*

 
**Don't Just Do Things As They Come Your Way, Plan & Work On Priorities & You Won't Have Pending Important Things Giving You Stress At The End Of The Day. Amongst The Most Important Things Do The Toughest First And Always So Relaxed Will Be Your Day.**

 *Dont cry over what is gone. Smile about what remains. No matter what is lost. You can still always find value in what is left.**

 
*We Always Have Problems. Learn To Enjoy Life While Solving Them. Life Is A Challenge.**

 
**Kindness through your words creates Confidence in the person that hears it. Kindness in your thoughts creates Profoundness to live by.**

**Your greatest tool against stress is positivity.**
———————————————- - - 
 ——————————————-

ಆಧ್ಯಾತ್ಮದಿಂದ ದ್ವೇಷ ನಾಶ

 ದ್ವೇಷ ಒಂದು ನಕಾರಾತ್ಮಕ ಶಕ್ತಿ ಇದನ್ನು ಬಿಟ್ಟು  ಜೀವನ ನಡೆಸುವುದೇ ಅಧ್ಯಾತ್ಮಿಕ ಶಕ್ತಿ ಆಗಲೇ ಆತ್ಮಕ್ಕೆ ತೃಪ್ತಿ ಮುಕ್ತಿ
ಹಾಗಾದರೆ ದುಷ್ಟರನ್ನು ದ್ವೇಷ ಮಾಡಬಾರದೆ ? ಮಾಡಿದರೆ ಇನ್ನಷ್ಟು ದ್ವೇಷ ಒಳಗೇ ಬೆಳೆಯುವುದೆಂದಾಗ  ದ್ವೇಷಕ್ಕೆ ಮೂಲ ಕಾರಣ ತಿಳಿದು ಅದನ್ನು ಸರಿಪಡಿಸುವತ್ತ‌ಪ್ರಯತ್ನ ಪಟ್ಟರೆ ಫಲ ಉತ್ತಮವಿರುವುದು. 
ದೇಶ ದೇಶದ ನಡುವೆ ಸ್ನೇಹದ ಪಂದ್ಯಾವಳಿ ನಡೆಯುತ್ತದೆ.‌ಆದರೆ, ಅದನ್ನು ವೀಕ್ಷಣೆ ಮಾಡುವ ಜನರಲ್ಲಿ ದ್ವೇಷ ಬೆಳೆಯಲು ಕಾರಣ ಪಂದ್ಯವನ್ನು  ನೋಡುವ ದೃಷ್ಟಿ ಸರಿಯಿಲ್ಲವೆಂದರ್ಥ. ಹಾಗೆಯೇ ಒಡಹುಟ್ಟಿದವರು ಬೆಳೆದು ದೊಡ್ಡವರಾದಂತೆಲ್ಲಾ  ದೈಹಿಕವಾಗಿ ಬೆಳೆದರೂ ಮಾನಸಿಕತೆಯಲ್ಲಿ  ಬೆಳೆದಿರೋದಿಲ್ಲ. ಸಂಕುಚಿತ ಮನಸ್ಸಿನಲ್ಲಿ  ನೋಡುವ ದೃಷ್ಟಿ ಕೋನವೇ‌ಬೇರೆಯಾದಾಗ ನಮ್ಮವರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾದರೆ  ಜ್ಞಾನ.ಕುಸಿದರೆ ಅಜ್ಞಾನ.ಇದಕ್ಕೆ ಕಾರಣ  ನಾವು ಕೊಡುವ ಶಿಕ್ಷಣ. ಶಿಕ್ಷಣದಲ್ಲಿಯೇ ಸಂಸ್ಕಾರದ ವಿಷಯವಿಲ್ಲದೆ  ತಲೆಗೆ ಒತ್ತಾಯದಿಂದ ತುಂಬಿದ್ದರೆ ಬೆಳೆದಂತೆಲ್ಲಾ ಅನಾವಶ್ಯಕ ವಿಷಯಗಳು ಮನಸ್ಸಿನಲ್ಲಿ ಹರಿದಾಡಿಕೊಂಡು ಮನಸ್ಸನ್ನು ಮನೆಯನ್ನು  ಅರ್ಥ ಮಾಡಿಕೊಳ್ಳಲು ಸೋತರೆ  ನಮಗೆ ನಾವೇ ಶತ್ರುಗಳು.
ಕಲಿಯುಗ ಕಲಿಕೆಯ ಪ್ರಭಾವದಿಂದಾಗಿ ಹೊರಗಿನ ರಾಜಕೀಯ ಮಿತಿಮೀರಿದೆ ಒಳಗಿದ್ದ ರಾಜಯೋಗದ ವಿಷಯ ಕುಸಿಯುತ್ತಿದೆ. ಕೆಲವರು ಎಚ್ಚರವಾಗಿ ಹಿಂದೆ ತಿರುಗಿ ತಮ್ಮ ಮೂಲ ಧರ್ಮ ಕರ್ಮ ದೆಡೆಗೆ ಬಂದರೆ ಹಲವರು ಹಿಂದಿರುಗಲಾಗದೆ ತಮ್ಮ ಭೂಮಿಯನ್ನು ‌ಮಾರಿ ಪರಕೀಯರ ಕೈವಶವಾಗಿದ್ದರೂ ದ್ವೇಷ ಬಿಡಲಾಗುತ್ತಿಲ್ಲ.
ಮನಸ್ಸಿನ ಈ ಸಮಸ್ಯೆಯ‌ಮೂಲ ನಮ್ಮವರೆ ಹಿಂದಿನವರೆ ಆದಾಗ ಹೋದವರು ಇನ್ನೂ ಇಲ್ಲೇ ಇರುವರೆಂದರ್ಥ. ಆತ್ಮಕ್ಕೆ ಸಾವಿಲ್ಲ. ಪರಮಾತ್ಮನಿಗೆ ಯಾರೂ ವೈರಿಗಳಿಲ್ಲ.
ನಮ್ಮ ಭೂಮಿಯನ್ನು ಹೆಚ್ಚಿನ ಬೆಲೆ ಬರುವುದೆಂದು ಅನ್ಯಧರ್ಮ ದವರಿಗೆ  ಮಾರೋ ಬದಲು  ಸ್ವಧರ್ಮದವರಿಗೆ ಕಡಿಮೆ ಬೆಲೆಗೆ ಕೊಟ್ಟರೆ  ಉತ್ತಮ .
 ದೇಶದಲ್ಲಿ ಫ್ರೀ ಗಳನ್ನು ಫ್ರೀಯಾಗಿ ಜನರೆಡೆಗೆ ತಲುಪಿಸುವ ಮಧ್ಯವರ್ತಿಗಳು ಮಾತ್ರ ಫ್ರೀಯಾಗಿ ಉಂಡುತಿಂದು ತಿರುಗುತ್ತಿದ್ದಾರಷ್ಟೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಉಚಿತದಿಂದ ಸಾಲ ಖಚಿತ

ಪ್ರಚಾರಕ್ಕೆ ತಕ್ಕಂತೆ ಆಚಾರ ವಿಚಾರ

ಇತ್ತೀಚಿನ ದಿನಗಳಲ್ಲಿ ಯಾವುದು ಆಗಬಾರದಿತ್ತೋ ಅದೇ ಆಗುತ್ತಿದೆ ಎಂದರೆ ಆಗಬಾರದ ವಿಚಾರವನ್ನು ಹೆಚ್ಚು ಪ್ರಚಾರ ಮಾಡಲಾಗಿ ಬೆಳೆಸುತ್ತಿರುವುದಾಗಿದೆ. ಒಳ್ಳೆಯದನ್ನು ‌ಪ್ರಚಾರ ಮಾಡಿದರೆ ಒಳ್ಳೆಯದೆ ಆಗುತ್ತದೆ. ಕೆಟ್ಟದ್ದು ಕೆಟ್ಟದ್ದನ್ನು ಬೆಳೆಸುತ್ತದೆ. ಇದು ಮಾನವನೊಳಗೇ ಬೆಳೆದಿರುವಾಗ ಹೊರಗೂ ಹರಡಿಕೊಂಡಿದೆ ಅಷ್ಟೆ. ಇದಕ್ಕೆ ಪರಿಹಾರ ಕಣ್ಣು ‌ಮುಚ್ಚಿಕೊಂಡು ಒಳ್ಳೆಯ ದ್ಯಾನ ಮಾಡೋದು.‌ಕಣ್ಣು‌ಬಿಟ್ಟರೆ ಕೆಟ್ಟದ್ದು ಕಂಡರೂ ಒಳಗಿರುವ ಒಳ್ಳೆಯದರಿಂದ ಒಳಿತಾಗಬಹುದು. ಒಳಮನಸ್ಸು ಸ್ವಚ್ಚಮಾಡಲು ಸರ್ಕಾರದಿಂದ ಅಸಾಧ್ಯ. ಸತ್ಸಂಗದಿಂದ ಸದಾಚಾರದಿಂದ ಸಾಧ್ಯವಿದೆ ಆದರೆ ಇದು ರಾಜಕೀಯ ವ್ಯವಹಾರಕ್ಕೆ ಇಳಿದರೆ ಅಪಾಯವೇ ಹೆಚ್ಚು. 
ನುಡಿಮುತ್ತುಗಳು:- *  
  - - - — - - - - - - - -
**ಹೇಳುವವರಿಗಿಂತ ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚು.ಸತ್ಯ ಹೇಳುವವನು, ಸ್ವಾರ್ಥವನ್ನು ಗೆದ್ದವನು ಸದಾ ಸುಖಿ.* 

**ಒಳ್ಳೆಯವರಾಗಿರುವುದಕ್ಕಿಂತ ಪ್ರಾಮಾಣಿಕರಾಗಿರುವುದು ಕಠಿಣ.**

**ಬಡವನಿಗೆ ನೆಮ್ಮದಿ ಇರುತ್ತೆ  ಆದರೆ  ಹಣ ಇರಲ್ಲ,*ಸಾಹುಕಾರನಿಗೆ ಹಣ ಇರುತ್ತೆ  ಆದರೆ ನೆಮ್ಮದಿ ಇರಲ್ಲ.ಹಣ ಮತ್ತು ನೆಮ್ಮದಿ ಇದ್ದವರಿಗೆ ಒಳ್ಳೆಗುಣ ಇರಲ್ಲ,.*ಹಣ, ಗುಣ, ನೆಮ್ಮದಿ ಇದ್ದವರಿಗೆ.* ಈ ಭೂಮಿಯ ಮೇಲೆ ಜಾಸ್ತಿ ದಿನ ಬದುಕುವ ಋಣ ಇರಲ್ಲ.

**ಎಷ್ಟೇ ಗಟ್ಟಿಯಾದ ಕಲ್ಲು ಸುಂದರ ಮೂರ್ತಿಯಾಗಿ ರೂಪುಗೊಳ್ಳಲು, ಉಳಿಯ ಪೆಟ್ಟು ಬೀಳಲೇಬೇಕು. ಹಾಗೆಯೇ ಜೀವನದಲ್ಲಿ ಪ್ರಬುದ್ಧತೆ ಬರಲು, ಮನಸ್ಸು ಗಟ್ಟಿಯಾಗಲು, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕು. ಸಂಕಟಗಳು ಬಂದರೆ ಅವು ನಿಮ್ಮನ್ನು ಗಟ್ಟಿಗೊಳಿಸಲು ಬರುತ್ತವೆ ಎಂಬುದು ಗೊತ್ತಿರಬೇಕು.**

*ಮನದಲ್ಲಿ ಕಾಡೋ ಪ್ರತಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಜೀವನದ ನೆಮ್ಮದಿ ಕಳೆದುಹೋಗುತ್ತದೆ, ಆದ್ದರಿಂದ ಕೆಲವು ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸುವುದು ಉತ್ತಮ.**

ನಮಗೆ ಸಂತೋಷ ದೊರೆಯಬೇಕೆಂದರೆ ಬಯಸಿದ್ದೆಲ್ಲವೂ ಸಿಗಬೇಕು ಎಂದಲ್ಲ, ನಮ್ಮ ಬಳಿ ಇರುವುದರ ಬಗ್ಗೆ ನಾವು ಕೃತಜ್ಞರಾಗಿದ್ದರೆ ಸಾಕು.**

**ಸೋತ ಮಾತ್ರಕ್ಕೆ ಜಗತ್ತೇ ಮುಗಿಯುವುದಿಲ್ಲ. ಪ್ರಯತ್ನದ ಹಾದಿಯಲ್ಲಿನ ಅನುಭವ ಎಂದು ಭಾವಿಸಿ, ಗೆಲುವಿನ ಗುರಿಯತ್ತ ನಿಮ್ಮ ಪಯಣ ಮುಂದುವರಿಸಿ.**

**ನಿಮ್ಮ ಬಗ್ಗೆ ನೀವೇ ವರ್ಣನೆ ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ನೈಜ ಮಿತ್ರರಿಗೆ ಅದರ ಅಗತ್ಯವಿಲ್ಲ.  ನಿಮಗಾಗದವರು ಅದನ್ನು ನಂಬುವುದಿಲ್ಲ.**

**ನಿಮ್ಮ ಸಂತೋಷದ ಕೀಲಿಕೈ ನಿಮ್ಮಲ್ಲಿರಬೇಕೇ ಹೊರತು ಬೇರೆಯವರ ಕೈಯಲ್ಲಿ ಅಲ್ಲ.**

**ಲೋಕದಲ್ಲಿ ಜನರು,
ಮಾತನಾಡದೇ ಇರುವವರನ್ನು ನಿಂದಿಸುತ್ತಾರೆ.
      ತುಂಬಾ ಮಾತನಾಡುವವರನ್ನೂ ನಿಂದಿಸುತ್ತಾರೆ.
ಮಿತವಾಗಿ ಮಾತನಾಡುವವರನ್ನೂ ನಿಂದಿಸುತ್ತಾರೆ.
ಹೀಗೆ ನಿಂದನೆಗೆ ಗುರಿಯಾಗದ ಜನ ಜಗತ್ತಿನಲ್ಲಿಲ್ಲ.**

{ ಸುವಚನ ರತ್ನಾವಳಿ }

ಕನಸಿಗೆ ಒಳ್ಳೆಯ ನಿದ್ದೆಬೇಕು.ಗುರಿಗೆ ನಿದ್ದೆಯೇ ಅಡಚಣೆ.ಕನಸಿಗಾಗಿ ನಿದ್ರಿಸಿ,ಗುರಿಗಾಗಿ ಎಚ್ಚರವಾಗೋಣ.**

**Life is the hardest school, as you never know what level of class you are in, what exam you will have next & you can't cheat bcoz nobody else will have the same question.**
 

**Imagination gives you the picture . Vision gives you the impulse to make picture of your own.**
 

**Instead of worrying about what you cannot control, shift your energy to what you can create.**
 

**Reflection cannot be seen in boiling water. Similarly solution cannot be seen with a disturbed mind. Be cool and you will find solution for all your problems.**

 
A life spent making mistakes is not only more honourable, but more useful than a life spent doing nothing.We should not regret anything we did. If it was not right,it taught us a lesson for life, and if it was right, we need to be proud of it.**

 
*Experiences are gained not by age, but by circumstances.

 
**Sometimes in the winds of change we find our greatest direction.**

 
**Fear never builds the future, but hope does.**

ಪಕ್ಷಪಾತಕ್ಕೆ ಕಾರಣರು ಯಾರು?

ಆ ಪಕ್ಷ ಬಂದರೆ‌ ನಮಗೆ ಒಳ್ಳೆಯದಾಗುವುದೆಂದು ಜನ ನಂಬಿಕೊಂಡು  ಹಿಂದಿನಿಂದಲೂ ಬಂದಿದ್ದರೂ ಪಕ್ಷ ಪಕ್ಷಗಳು ಒಂದಾಗಿ ಸರ್ಕಾರ ನಡೆಸುವಾಗ ಪಕ್ಷಬೇಧವೇ ಇರಬಾರದು.
ಒಟ್ಟಿನಲ್ಲಿ ದೇಶಕ್ಕೆ ಒಳಿತಾದರೆ ಅದೇ ನಮಗೆ ಶ್ರೀ ರಕ್ಷೆ.ಕಾರಣ ನಾವೆಲ್ಲರೂ ದೇಶವಾಸಿಗಳಲ್ಲವೆ?
 
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರನು ತನ್ನ ಭಾಮೆಗೆ ಹೇಳಿದ ಮಂತ್ರರಾಮಮಂತ್ರವಾ ಜಪಿಸೋ ಹೇ‌ಮನುಜ...
ರಾಮರಾಜ್ಯದ ಕನಸು ರಾಜಕೀಯದಲ್ಲಿಲ್ಲದ ಕಾರಣ ನಮ್ಮ ‌ಮನಸ್ಸು  ರಾಜಯೋಗದೆಡೆಗೆ‌ ನಡೆದರೆ ಸ್ವತಂತ್ರ ಭಾರತದಲ್ಲಿ ಶ್ರೀ ರಾಮನ ಒಳಗೇ ಕಾಣಬಹುದು.
ಸ್ವಾಮಿ ವಿವೇಕಾನಂದರು ಶಿಕ್ಷಣದಲ್ಲಿಯೇ ರಾಜಯೋಗದ ವಿಚಾರ ತಿಳಿಸುವ ಸಂದೇಶ ಕೊಟ್ಟು ಏಳಿ ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲದಿರಿ ಎಂದಿದ್ದರು. ಇಂದಿನ ಯುವ ಪೀಳಿಗೆಯ ಗುರಿ ವಿದೇಶದೆಡೆಗೆ ಸಾಗಿದೆ ಎಂದರೆ ದೇಶಭಕ್ತಿ ಒಳಗಿದೆಯೋ ಹೊರಗಿದೆಯೋ?
 ಸರ್ಕಾರ ಯಾವುದೇ ಬಂದರೂ ಅದು ಪ್ರಜೆಗಳ ಸಹಕಾರವೇ ಆಗಿರುತ್ತದೆ.ಪ್ರಜೆಗಳ ಸಹಕಾರದಲ್ಲಿ ರಾಜಕೀಯವೇ ರಾಜಯೋಗಕ್ಕಿಂತ ದೊಡ್ಡದಾಗಿದ್ದರೆ ಯೋಗ ಹಿಂದುಳಿಯುತ್ತದೆ. ವೈಭೋಗದ ಜೀವನಕ್ಕೆ  ಹಣ ಬೇಕು. ಹಣ ಸಂಪಾದನೆ ಸತ್ಯಜ್ಞಾನದಿಂದ ಆಗಿರಬೇಕು. ಸತ್ಯ ತಿಳಿದ ನಂತರ ಹಣ ಸದ್ಬಳಕೆ ಆಗುತ್ತದೆ. ಸದ್ಬಳಕೆಯಾದಾಗ ನಮ್ಮ ಜ್ಞಾನ ಇನ್ನಷ್ಟು ಹೆಚ್ಚುತ್ತದೆ. ಆದರೆ ಯಾವಾಗ ಹಣ ಭ್ರಷ್ಟಾಚಾರ ದಿಂದ ‌ಗಳಿಸಲಾಗುವುದೋ ಅಧರ್ಮ ಅಸತ್ಯ ಅನ್ಯಾಯದಿಂದ ಕೂಡಿ ಹಾಕಲಾಗುವುದೋ‌ ಲಕ್ಮಿ ಅಲಕ್ಮಿಯಾಗಿ  ಲಕ್ಷ ಲಕ್ಷ ಬಂದರೂ ನಿರ್ಲಕ್ಷ್ಯಕ್ಕೆ ಒಳಗಾಗಿ ದುರ್ಭಳಕೆ ಹೆಚ್ಚಾಗುತ್ತಾ ಸಾಲದೊಳಗೆ ಜೀವನ ನಡೆಯುತ್ತದೆ.
ಸಾಲ ತೀರಿಸಲು ‌ಬಂದಜೀವಾತ್ಮನಿಗೆ ಇನ್ನಷ್ಟು ಸಾಲದ ಹೊರೆ ಹಾಕಿದರೆ ಏನಾಗಬಹುದು. 
ಪಕ್ಷಗಳಾದರೂ ಒಂದಾಗಿ  ದೇಶ ನಡೆಸಬಹುದು.ಆದರೆ ಈ ಮಧ್ಯವರ್ತಿಗಳು ಮಾಧ್ಯಮಗಳು ಅವರನ್ನು ಒಂದಾಗಿರದಂತೆ ಸುದ್ದಿ ಮಾಡಿ ಜನರಿಗೆ ತಲುಪಿಸುವುದರಿಂದ  ಯಾರಿಗೆ ಲಾಭ‌ ?ಯಾರಿಗೆ‌ನಷ್ಟ?
ಎಲ್ಲಾ  ವ್ಯವಹಾರಕ್ಕಿಳಿದ ಪ್ರಜೆಗಳೇ ಆಗಿದ್ದರೂ ಧರ್ಮ ಸತ್ಯದ ವಿಚಾರದಲ್ಲಿ ಎಲ್ಲರೂ ಬೇರೆ ಬೇರೆ. ಈ ಅಂತರವೇ ಮತಾಂತರ, ಜಾತ್ಯಾಂತರ, ಧರ್ಮಾಂತರ, ಪಕ್ಷಾಂತರಕ್ಕೆ ಕಾರಣವಾಗಿ  ದೇಶಾಂತರ ಹೋದವರ ಮಾತಿಗೆ ಕೊಡುವ ಗೌರವವನ್ನು  ಜೊತೆಗಿದ್ದವರಿಗೆ ಕೊಡಲಾಗದಿದ್ದರೆ  ಅಧರ್ಮ.ಅದಕ್ಕೆ ತಕ್ಕಂತೆ  ಕರ್ಮ ಫಲ.
ಪ್ರಜಾಪ್ರಭುತ್ವದಲ್ಲಿ  ರಾಜರು ಯಾರು?

Friday, June 7, 2024

ದೊಡ್ಡವರ ಸಣ್ಣತನವೇ ದಡ್ಡತನ

ನುಡಿಮುತ್ತುಗಳು:- *  
  - - - — - - - - - - - -
**ಮನುಷ್ಯನಲ್ಲಿ ದಡ್ಡತನ ಇದ್ದರೂ ಪರವಾಗಿಲ್ಲ,ಆದರೆ ಸಣ್ಣತನ ಇರಬಾರದು.ಏಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು ದಡ್ಡತನದಿಂದಲ್ಲ ,ಬದಲಾಗಿ ತನ್ನ ಸಣ್ಣತನದಿಂದ.**

ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ  ಗುರುಗಳು ಸರಿಯಾಗಿ ಸಿಕ್ಕಿದರೆಲ್ಲಾ  ಜ್ಞಾನಿಗಳಾಗುವರೆಲ್ಲ...

**ಹೋಲಿಕೆ ಒಂದೇ ಇದ್ದರೆ ಅಣ್ಣಾ ತಂಗಿ ಆಗ್ತಾರೆ, ಒಂದೇ ಬುದ್ದಿ ಇದ್ದರೆ ಒಳ್ಳೆ ಫ್ರೆಂಡ್ಸ್ ಆಗ್ತಾರೆ, ಯಾವುದೂ ಹೊಂದಾಣಿಕೆ ಆಗದಿದ್ದರೆ ಗಂಡ ಹೆಂಡತಿ ಆಗ್ತಾರೆ.**

ಕಲಿಯುಗದಲ್ಲಿ ಪತಿಪತ್ನಿಯರಲ್ಲಿ ಕಲಹಗಳೇ ಹೆಚ್ಚಾಗಿರುವುದಂತೆ ಕಾರಣ  ಜ್ಞಾನದ ಅಂತರ...

***ದೇವರು ಬೇಕಂತಲೇ ಕೆಲವು ಸಂಬಂಧಗಳನ್ನು ನಮ್ಮಿಂದ ದೂರ ಮಾಡಿ ಬಿಡುತ್ತಾನೆ,*
         ಕಾರಣ ಇಷ್ಟೇ...
*ನಮಗೆ ತಿಳಿಯದ ಸತ್ಯ ದೇವರಿಗೆ ತಿಳಿದಿರುತ್ತದೆ.**

ಸಂಬಂಧ ದೂರವಾಗಿದೆ ಎಂದರೆ ಋಣ ತೀರಿದೆ ಎಂದುಕೊಂಡರೆ ದೈವೇಚ್ಚೆ ಎನಿಸುತ್ತದೆ.

*^ಔಷದೀಯ ಹಾಗೆ ಮಿತವಾಗಿ ಆಹಾರ ಸೇವಿಸಿರಿ ,ಇಲ್ಲದಿದ್ದರೆ ಔಷದಿಗಳನ್ನೇ ಊಟದ ಹಾಗೆ ಸೇವಿಸಬೇಕಾಗುತ್ತದೆ .
ಊಟಬಲ್ಲವನಿಗೆ ರೋಗವಿಲ್ಲ..

ತಪ್ಪಿನ ಅರಿವಾಗುವ ವೇಳೆಗೆ ಸಾಕಷ್ಟು ಸಮಯ ವ್ಯರ್ಥವಾಗಿರುತ್ತದೆ. ಮತ್ತೆ ಅದೇ ತಪ್ಪಿನ ಬಗ್ಗೆ ಚಿಂತಿಸುತ್ತಾ ಮತ್ತಷ್ಟು ಸಮಯ ವ್ಯರ್ಥ ಮಾಡಬೇಡಿ.**

ಮನುಷ್ಯ ತಪ್ಪಿನಿಂದಲೇ ಬುದ್ದಿ ಕಲಿಯೋದು..

**ಅರ್ಥವಿಲ್ಲದ ಮಾತುಗಳಿಗಿಂತ ಅರ್ಥಪೂರ್ಣ ಮೌನಕ್ಕೆ ಹೆಚ್ಚು ಗೌರವವಿದೆ.**
ಅನರ್ಥಕ್ಕೆ ಕಾರಣವಾಗುವ ಹೆಚ್ಚು ಮಾತಿಗಿಂತ ಮೌನವೇ ಲೇಸು.

**ನಮ್ಮ ಮೇಲೆ ನಮಗಿರುವ ನಂಬಿಕೆಯು ಶತ್ರುಗಳಲ್ಲಿ ಭಯ ಹುಟ್ಟಿಸುತ್ತದೆ, ನಮ್ಮ ಮೇಲೆ ನಮಗಿರುವ ಅಪನಂಬಿಕೆ ಶತ್ರುಗಳ ಬಲ ಹೆಚ್ಚಿಸುತ್ತದೆ.**

ನಮ್ಮಲ್ಲಿ ಒಗ್ಗಟ್ಟಿದ್ದರೆ  ನಂಬಿಕೆಯಿದೆ ಎಂದರ್ಥ ಬಿಕ್ಕಟ್ಟು ಹೆಚ್ಚಾದಂತೆ  ಶತ್ರುಗಳ ಕಾಟ..

**ಇತರರಲ್ಲಿ ಒಳಿತನ್ನು ಕಾಣುವವೇ ಸುಂದರ ಕಂಗಳು. ಕರುಣೆಯ ಮಾತುಗಳನ್ನು ಆಡುವವೇ ಸುಂದರ ತುಟಿಗಳು. ನಾನು ಒಂಟಿಯಲ್ಲ ಎಂಬ ಅರಿವೇ ಫನತೆ.**

           (ಆಡ್ರೆ ಹೆಬ್ಬರ್ನ್)
ಪರಮಾತ್ಮನಿದ್ದಾನೆ ಎನ್ನುವ ಅರಿವಿನಲ್ಲಿರುವಾಗ ಪ್ರತಿಯೊಬ್ಬರಲ್ಲೂ ಪರಮಾತ್ಮನ   ಕಾಣುವರು. ಜೀವಕ್ಕೆ ಕಷ್ಟವಾದಾಗ  ಆತ್ಮರಕ್ಷಣೆಗಾಗಿ ಸಹಕರಿಸುವರು. ಒಮ್ಮೆ ಹುಟ್ಟಿದ ಮೇಲೇ ಸಾಯೋದು ನಿಶ್ಚಿತ. ಆದರೆ ಮರುಹುಟ್ಟು ಸುಲಭವಾಗಿರದು ಕಾಯಬೇಕು..ಅದಕ್ಕೆ  ಈ ಜನ್ಮದಲ್ಲಿ ಸತ್ಕರ್ಮ ಮಾಡೋದೆ  ಧರ್ಮ.

**ನಮ್ಮಲ್ಲಿರುವ ಎಲ್ಲ ಸಂಪತ್ತು ಖಾಲಿಯಾದ ಬಳಿಕವೂ ನಮ್ಮ ಮೌಲ್ಯ ಎಷ್ಟಿರುತ್ತದೆ ಎನ್ನುವುದೇ ಶ್ರೀಮಂತಿಕೆಯ ನಿಜವಾದ ಮಾನದಂಡ. **

ಸಂಪತ್ತುಸತ್ಯ ಜ್ಞಾನದಿಂದ ಬೆಳೆದಿದ್ದರೆ ಆತ್ಮತೃಪ್ತಿ ಇಲ್ಲವಾದರೆ ಅತೃಪ್ತ ಆತ್ಮ

ಸಾಮ್ಯತೆಗಳನ್ನು ಸಂಭ್ರಮಿಸಿದಾಗ ಮತ್ತು ಅಭಿಪ್ರಾಯ ಭೇದಗಳನ್ನು ಗೌರವಿಸಿದಾಗ ಮಾತ್ರ ಸಂಬಂಧ ತುಂಬಾ ಗಟ್ಟಿಯಾಗುತ್ತದೆ.**

ಗುಣಸಾಮ್ಯತೆಯೇ ಸಂಬಂಧ ಉತ್ತಮವಾಗಿರಲು ಕಾರಣ.

 
**ಯಶಸ್ಸು ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. ಹೃದಯ ಪೂರ್ವಕವಾಗಿ ಮಾಡುವ ಯಾವ ಕೆಲಸವೂ ವಿಫಲವಾಗುವುದಿಲ್ಲ.**

ಮನಸ್ಸಿಟ್ಟು ಮಾಡುವ ಕೆಲಸದಲ್ಲಿ ಸಂತೃಪ್ತಿ ಸಿಗುತ್ತದೆ. ಒತ್ತಾಯದಿಂದ ಮಾಡುವ ಕೆಲಸ ಅತೃಪ್ತಿಗೆ ಕಾರಣವಾಗುತ್ತದೆ.

 **Life is like a chocolate box, Each chocolate is like a portion of life, Some are crunchy, some are rnutty, Some are soft, but all are DELICIOUS.**

 
**Trust but with caution because sometimes even your own teeth bite your own tongue.**

 
*Good manners sometimes  mean putting up with bad manners of others, too.**

 
**Future is not what we planned for tomorrow. Actually, it is the result of what we do today.Let us do the best in present.We will definitely enjoy the future. Do your best today for better future.**

 
Life would be perfect if anger had mute button, mistake had back button, hard time had fast forward button and good times had pause button.**

**Relationships always work when Trust is bigger than doubt & Mutual respect is bigger than expectations.**

 
**If you dislike someone, dislike them alone. Do not recruit others to join your case.**

 
As long as we have Memories, Yesterday Remains. As long as we have Hope, Tomorrow Awaits.**

Thursday, June 6, 2024

ಆಸೆ ಅತಿಯಾದರೆ ನಿರಾಸೆಯೇ ಗತಿ

ಅಪೇಕ್ಷೆಗಳ ಸೋಲೇ
ಅನೇಕ ದೋಷಗಳಿಗೆ ಮೂಲ,
ನಿಮ್ಮ ಅಪೇಕ್ಷೆಗಳ ನಿರಾಸೆಗೆ
ಜನರನ್ನು ನಿಂದಿಸಬೇಡಿ,
ಬದಲಿಗೆ ಅವರಲ್ಲಿ ಅತಿಯಾದ ಅಪೇಕ್ಷೆ ಇಟ್ಟುಕೊಂಡ ನಿಮ್ಮನ್ನು ನೀವೇ ನಿಂದಿಸಿಕೊಳ್ಳಿ..🌹🙏🏻
ವಾಟ್ಸಪ್ ಕೃಪೆ.
ವಾಸ್ತವದಲ್ಲಿ ನಾವು ಬದುಕುತ್ತಿಲ್ಲ ಹಿಂದಿನದ್ದನ್ನೇ ಕೆದಕಿ ಗಾಯ ಮಾಡಿ ಹುಣ್ಣು ಮಾಡಿ ಅದಕ್ಕೆ ಮೇಲಿನ ಔಷಧ ಹಚ್ಚಿಕೊಂಡು  ಆದ ಗಾಯವನ್ನು ಜನರಿಗೆ ಹಂಚಿಕೊಂಡು ಹರಡಿಕೊಂಡಿದ್ದರೆ  ನಮ್ಮ ಆಸೆ ಆಕಾಂಕ್ಷೆಗಳನ್ನು  ಇನ್ಯಾರೋ  ಮಧ್ಯೆ ಬಂದು ಅರ್ಥ ಮಾಡಿಕೊಂಡು ‌ ಬದುಕುವರು. ಇದನ್ನು ತಪ್ಪು ಎಂದರೆ  ಸರಿ ಯಾವುದು? ನಾವೆಲ್ಲರೂ ಹಿಂದೂಗಳು‌ ಒಂದು ಎನ್ನುವ ಕೂಗಿನಲ್ಲಿ ಮೂಗುತೂರಿಸಿಕೊಂಡು  ಸ್ವಾರ್ಥ ದ ಬೇಳೆ ಬೇಯಿಸಿಕೊಂಡವರನ್ನು  ಕೇಳೋದಿಲ್ಲ.ಅದೇ ನಮ್ಮವರೆ ಮಾಡಿದರೆ ಎಲ್ಲಾ ವಿರೋಧಿಸುವರು. ಹಿಂದೂ ಧರ್ಮ ಪ್ರಚಾರ  ಜಗತ್ತಿನಾದ್ಯಂತ ಬೆಳೆದಿದೆ ಆದರೆ ಹಿಂದೂಸ್ತಾನದ ಶಿಕ್ಷಣದಲ್ಲಿಯೇ ಹಿಂದುಳಿದಿರುವಾಗ  ಅದನ್ನು ಸರಿಪಡಿಸಲು ಹಿಂದೂಗಳು ಮುಂದಾಗುತ್ತಿಲ್ಲ.ಮುಂದೆ ಹೋದವರಿಗೆ ಅಸಹಕಾರ ಕೊಡುವವರೂ ಹಿಂದೂಗಳೇ ಎನ್ನುವ ಕಠೋರ ಸತ್ಯ  ಅನುಭವಿಸಿದವರಿಗಷ್ಟೆ ಗೊತ್ತು. ಒಟ್ಟಿನಲ್ಲಿ ಯಾವುದೇ ದೇಶದ ಸಂಪತ್ತು  ಅದರ ಪ್ರಜೆಗಳ ಜ್ಞಾನವಾಗಿದೆ. ಸತ್ಯವೇ ತಿಳಿಯದ ಅಮಾಯಕರನ್ನು ಅಸತ್ಯದೆಡೆಗೆ ಎಳೆದು ಆಳಿದರೆ ಬೆಳೆಯೋದು ಧರ್ಮ ವಲ್ಲ ಅಧರ್ಮ. ಹಿಂದಿನಿಂದಲೂ  ನಡೆದು ಬಂದಿರುವ  ಈ ಎಳೆದಾಟದಲ್ಲಿ ಬಿದ್ದವರು ಮೇಲೆ ಏಳಲಾಗದೆ ಹೋದರು.ಕೆಲವರು  ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂದರು.ಹಲವರಿಗೆ  ನಮ್ಮೊಳಗೇ ಇದ್ದ ಸತ್ಯ ತಿಳಿಯದೆ  ಹೊರಗಿನವರ ಅಸತ್ಯದೊಳಗೆ ಅಧರ್ಮಕ್ಕೆ ಶರಣಾಗಿ ದಾಸರಾಗಿದ್ದರೆ  ಇದೇ  ಸ್ವರ್ಗ ಸುಖವೆಂದು ನಂಬಿ ನಡೆದರು. ಈಗ  ಯಾರಿಗೆ ಸಿಕ್ಕಿದೆ ಸ್ವಾತಂತ್ರ್ಯ?
ಒಟ್ಟಿನಲ್ಲಿ  ನಮ್ಮ ಆಸೆ ಪೂರೈಸಿಕೊಳ್ಳಲು ಜನರನ್ನು ಬಳಸಿದರೆ ನಿರಾಸೆಯಾಗೋದು ಸಹಜ. ಆಸೆಯೇ ದು:ಖಕ್ಕೆ ಕಾರಣ. ಆಸೆ ಇರಲಿ ಸತ್ಕರ್ಮ,ಸ್ವಧರ್ಮ, ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ಜ್ಞಾನದೆಡೆಗೆ ನಡೆದರೆ  ಉತ್ತಮ.
ಇದಕ್ಕಾಗಿ ಮನೆಯೊಳಗೆ ಇದ್ದು ಬೆಳೆಸುವ  ಶಿಕ್ಷಣವನ್ನು  ಪೋಷಕರೆ ವಿರೋಧಿಸಿದರೆ  ಆಗಬಾರದ್ದು ಆಗುತ್ತದೆ.  ಆಗ ಹೊರಗೆ ಬಂದು ಹೋರಾಡಿ ಜೀವ ಹೋದರೂ ಕೇಳೋರಿರೋದಿಲ್ಲ. ಒಟ್ಟಿನಲ್ಲಿ ಜೀವ ಶಾಶ್ವತವಲ್ಲ ಆತ್ಮಶಾಶ್ವತ. ಇದನ್ನರಿತು ನಡೆದವರು ಮಹಾತ್ಮರಾದರು.
ಅಂತಹ ದೇಶಭಕ್ತರು ದೇವರ ಭಕ್ತರಲ್ಲಿದ್ದ ಯೋಗ ಶಕ್ತಿಯನ್ನು  ಅರ್ಥ ಮಾಡಿಕೊಳ್ಳದೆ ಹಿಂದೂ ಸನಾತನ ಧರ್ಮ  ಮುಂದುವರಿಯದು. ಇಡೀ ವಿಶ್ವ  ಧರ್ಮದ ಆಧಾರದಲ್ಲಿದೆ. ಯಾರು ಯಾವುದನ್ನು ಹಿಡಿದರೂ  ಅದಕ್ಕೆ ತಕ್ಕಂತೆ  ಜೀವನವಿರುತ್ತದೆ. ಇದು ತತ್ವದಿಂದ ತಿಳಿದು ಒಂದು  ಮಾಡಲು  ಹೋದವರನ್ನು  ಹಿಂದೆಯೂ ವಿರೋಧಿಸಿ ಹಿಂದೆ ತಳ್ಳಿದ್ದರು.ಈಗಲೂ ನಡೆದಿದೆಯಷ್ಟೆ. ಕಾರಣ ಇಲ್ಲಿ ಹಣವಿದ್ದರೆ ಅಧಿಕಾರವಿದ್ದರೆ  ಜನಬಲಹಣಬಲದಿಂದ ರಾಜಕೀಯ ನಡೆಯುತ್ತದೆ. ಅದಕ್ಕಾಗಿ ಸಾಕಷ್ಟು  ವಾಮಮಾರ್ಗ ಹಿಡಿದರೂ  ಜನಕೇಳೋದಿಲ್ಲ.ಆದರೆ ಇದೇ ಮನುಕುಲದ ವಿನಾಶಕ್ಕೆ ಕಾರಣವಾಗುತ್ತಿರುವುದು ದುರಂತ.
ನಾವೆಷ್ಟು  ಹೆಸರು ಹಣ ಅಧಿಕಾರ ಪಡೆದರೂ ಒಳಗಿನ ಸತ್ಯ ಬಿಟ್ಟು ಹೊರಗಿರಬೇಕು. ಕಾರಣ ಒಳಗಿರುವ ಒಂದೇ ಸತ್ಯ ಹೊರಗಿರುವ ಅಸಂಖ್ಯಾತ ಅಸತ್ಯಕ್ಕೆ ವಿರುದ್ದವಾದಾಗ ಒಪ್ಪಿ ನಡೆಯೋರಿಗೆ ಒಂದೇ ಸತ್ಯದ ಅರಿವಿರಬೇಕು. ಇದೇ ಕಷ್ಟ.

ಸತ್ಸಂಗದಲ್ಲಿ ಸತ್ಯವಿದ್ದರೆ ಸರಿ. ಅಲ್ಲಿಯೂ ಅಸತ್ಯದ ರಾಜಕೀಯ ವಿದ್ದರೆ ಅಸಮಾನತೆ ಎದ್ದು ನಿಲ್ಲುತ್ತದೆ.ಅದೇ ದ್ವೇಷವಾಗಿ ದೇಶದ ತುಂಬಾ ಹರಡುತ್ತದೆ. ಪ್ರಚಾರಕರ ಅರ್ಧ ಸತ್ಯ ಅಸತ್ಯಕ್ಕಿಂತಲೂ ಅಪಾಯಕಾರಿ.
ದೇವಾಸುರರಿಗಿಂತ ಮಧ್ಯವರ್ತಿ ಮಾನವ ಅಪಾಯಕಾರಿ.
ಇಲ್ಲಿ ಮಾನವನ ಚಂಚಲ ಮನಸ್ಸಿಗೆ ಕಾಣೋದು ಭೌತವಿಜ್ಞಾನವಾದ್ದರಿಂದ ಭೂಮಿಯ ಮೇಲೆ ನಿಂತಿರುವ ಸತ್ಯವನ್ನು ಅಲ್ಲಗೆಳೆಯುವನು. ಹೀಗಾಗಿ‌ನಿಂತ ನೆಲ ಜಲದ ಋಣ ತೀರಿಸಲು ಕಷ್ಟಪಡೋದು ತಪ್ಪಿಲ್ಲ. ಪ್ರತಿಜನ್ಮವೂ  ಒಂದೇ ರೀತಿಯಲ್ಲಿ ಇರೋದಿಲ್ಲವೆಂದರೆ ಜನ್ಮವೇ ಇಲ್ಲ ಎನ್ನುವವರೂ ಇರುವರು. ಹೀಗಾಗಿ ಸ್ವತಂತ್ರ ಇಂದು ಸ್ವೇಚ್ಚಾಚಾರವಾಗಿದೆ. 

 

Wednesday, June 5, 2024

ಆತ್ಮವಿಶ್ವಾಸ ಹಣ ಅಧಿಕಾರದಿಂದ ಖರೀದಿಸಲಾಗದು.


 -  
ನುಡಿಮುತ್ತುಗಳು:- *  
  - - - — - - - - - - - -
**ಯಾವತ್ತಾದರೂ ಹಣ ಮತ್ತು ವಿಶ್ವಾಸದ ಮಧ್ಯೆ ಒಂದನ್ನು ಆಯ್ಕೆ ಮಾಡುವ ಸಂದರ್ಭ ಬಂದರೆ ವಿಶ್ವಾಸವನ್ನೇ ಆಯ್ದುಕೊಳ್ಳಿ. ಯಾಕೆಂದರೆ ಹಣವನ್ನು ಯಾವಾಗ ಬೇಕಾದರೂ ಗಳಿಸಬಹುದು.**

ಹಣವಿದ್ದವರೊಂದಿಗೆ ಜನ ವಿಶ್ವಾಸವಿಡುತ್ತಾ ತಮ್ಮ ಶ್ವಾಸದ ಬಗ್ಗೆಯೇ ಅರಿವಿಲ್ಲದೆ ಹೋಗುತ್ತಾರೆ.

**ಚಿಂತೆ ಮಾಡುವುದರಿಂದ ನಾಳೆಯ ಸಮಸ್ಯೆಗಳು ದೂರವಾಗುವುದಿಲ್ಲ. ಬದಲಿಗೆ ಅದು ಇಂದಿನ ನೆಮ್ಮದಿಯನ್ನು ಸಹ ಕಸಿದು ಕೊಳ್ಳುತ್ತದೆ.*
ಚಿಂತೆಗೂ ಚಿತೆಗೂ ಒಂದು ಸೊನ್ನೆ ಅಂತರವಿದೆ.  ಉತ್ತಮ ಚಿಂತನೆಯಿಂದ ಚಿತೆಗೂ ಬೆಲೆಯಿರುತ್ತದೆ

**ಬೇಡವಾದ ವಿಷಯಗಳಿಂದ ದೂರವಿದ್ದರೆ,ಬದುಕಿನಲ್ಲಿ
ಬೇಕಾದಷ್ಟು ನೆಮ್ಮದಿ ತಾನಾಗಿಯೇ ಸಿಗುತ್ತದೆ.*

ಬೇಡದ್ದಕ್ಕೆ ಹೆಚ್ಚು ಬೇಡಿಕೆಯಾದರೆ  ನೆಮ್ಮದಿಯೇ ಇರದು.

**ಧೈರ್ಯ ಎಂಬುದು ಭೀತಿಯ ಅನುಪಸ್ಥಿತಿಯಲ್ಲ;ಬದಲಿಗೆ ಭೀತಿಯ ಮೇಲಿನ ದಿಗ್ವಿಜಯ. ***
(ನೆಲ್ಸನ್ ಮಂಡೇಲಾ)
ಧೈರ್ಯ ಆತ್ಮವಿಶ್ವಾಸದಿಂದ ಬೆಳೆದಾಗ ಜೀವಭಯವಿರದು

ಸಮಯ ಇಲ್ಲ ಎನ್ನುವುದು ನೆಪವಷ್ಟೇ, ದೊಡ್ಡ ಸಾಧನೆ ಮಾಡಿದವರಿಗೂ ದಿನದಲ್ಲಿ ಸಿಕ್ಕಿದ್ದು 24 ಗಂಟೆಯೇ ಎಂಬುದನ್ನು ಮರೆಯಬೇಡಿ.**
ಇಂದು ಸಮಯಸಾಧಕರಿಗೇನೂ ಕಡಿಮೆಯಿಲ್ಲ.

**ನಾವು ಎಷ್ಟೇ ದೊಡ್ಡ ವ್ಯಕ್ತಿಯಾಗಿ ಬೆಳೆದರೂ ನಾವು ಕೊಟ್ಟ ಮಾತು ಇಟ್ಟ ನಂಬಿಕೆ ಸುಳ್ಳಾದರೆ, ಜೀವನದಲ್ಲಿ ನಮ್ಮ ಬೆಲೆ ಶೂನ್ಯವೆ. ಅನುಭವ ಇರುವುದು ಅಹಂಕಾರ ವಿಲ್ಲದಿರುವುದು ನೊಂದಿರುವವರು ಮತ್ತು ಸೋತಿರುವವರು ಅಂತಹರೊಡನೆ ಸ್ವಲ್ಪ ಸಮಯ ಕುಳಿತುಕೊಳ್ಳಿ.ಎಲ್ಲರನ್ನು ಮೆಚ್ಚಿಸಿ ಬದುಕಲಾಗದು .ಅದು ನಮ್ಮ ನಿಜವಾದ ಬದುಕಲ್ಲ .ಇಚ್ಛೆಇದ್ದಂತೆ ಇಚ್ಛಿಸಿ ಬದುಕುವುದು ಅದು ನಮ್ಮ ಪೂರ್ಣ ಬದುಕು.**
                 -  ಗಿರೀಶ್ -

**ಹಾಲು ಮತ್ತು ಸಕ್ಕರೆ ಸಿಗುವ ತನಕ ಕಾಫಿಗೆ ತನ್ನ ರುಚಿ ಏನು ಎಂಬುದು ಗೊತ್ತಿರುವುದಿಲ್ಲ. ನೀವು ಒಬ್ಬ ವ್ಯಕ್ತಿಯಾಗಿ ಉತ್ತಮರಾಗಿರಬಹುದು, ಆದರೆ ಅತ್ಯುತ್ತಮ ಜನರ ಸಂಪರ್ಕಕ್ಕೆ ಬಂದಾಗ ನೀವು ಇನ್ನಷ್ಟು ಉತ್ತಮರಾಗುತ್ತೀರಿ. ನಿಮ್ಮ ಜತೆ ಯಾರು ಇರುತ್ತಾರೆ ಎಂಬುದು ಬಹಳ ಮುಖ್ಯ.**

ಸತ್ಯ ನುಡಿಯುವವರು ಒಬ್ಬಂಟಿಯಾಗೋದು ಸಹಜ.ಆದರೆ ಅವರೊಂದಿಗೆ ಬಾಳಿ ಬದುಕುವುದೇ ಕಷ್ಟ. ಕಷ್ಟಪಡದೆ ಸುಖವಿರದು.

**ಅವಕಾಶ ಸಿಕ್ಕಾಗ ಪುಣ್ಯದ ಕೆಲಸಗಳನ್ನು ಮಾಡಿ, ಪಾಪಗಳಿಗೇನು ಅವುಗಳ ಪಾಡಿಗೆ ಅವು ಆಗ್ತಾನೇ ಇರುತ್ತವೆ.**

ಪ್ರತಿಕ್ಷಣವೂ  ಭಗವಂತ ನೀಡಿದ ಅವಕಾಶವೆ ಆದರೂ ನಮ್ಮ ಅರಿವಿಗೆ ಬರೋದು ಕೆಲವೇ ಕೆಲವು ಕ್ಷಣಗಳಷ್ಟೆ ಪುಣ್ಯದ ವಿಚಾರವಾಗಿರುತ್ತದೆ.ಕಲಿಕೆಯ ಪ್ರಭಾವ

** Life gives us new lessons each day,not for learning but to improve our understanding.

 
**Life is a series of experiences lived by us from moment to moment.**

 
*No one in this world is pure and perfect. If you avoid people for their mistakes, you will be alone in this world.** 

 
**Be Blind To The Fault Of Others. Because People Won’t Change; You Have To Change Your Way Of Accepting Others.*
 
 **In life you will never know what you have been missing until it arrives & you will never know you have got until it's missing.**

 
**Two principles for a happy life:_*
1. Use things, not people.
 2. Love people, not things.*

 
**Most people will not change even if they see the light. But they will surely change when they feel the heat.**

 
**Motivation usually lives within your mind but needs a knock from the outside.**

Tuesday, June 4, 2024

ದ್ವೇಷವೆಂಬ ಅಜ್ಞಾನದ ಅಸುರಿಗುಣ

🌺 🍁 *ಸ್ಪೂರ್ತಿ ಕಿರಣ*🌺 🍁 ꧂     
*☘“ನೀವು ಒಬ್ಬರನ್ನು ಕ್ಷಮಿಸಿದ ನಂತರ, ನಿಮ್ಮಲ್ಲಿರುವ ಸಿಟ್ಟು ತನ್ನಷ್ಟಕ್ಕೆ ತಣಿದುಹೋಗುತ್ತದೆ. ದ್ವೇಷವನ್ನು ಸದಾ ಬೆಳೆಯಲು ಬಿಟ್ಟರೆ ಅದು ನಿಮ್ಮನ್ನು ಸುಡುತ್ತಲೇ ಹೋಗುತ್ತದೆ. ನಿಮ್ಮೊಳಗಿನ ನೆಮ್ಮದಿ ಹೊರಟುಹೋಗುತ್ತದೆ. ಕೆಲವು ಕಲಹ, ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ನಿಮ್ಮ ನೆಮ್ಮದಿಯ ದೃಷ್ಟಿಯಿಂದ ಒಳ್ಳೆಯದು.ಸಂತಸ ಮತ್ತು ನೆಮ್ಮದಿಯು ನಿಮ್ಮಲ್ಲಿ ಎಷ್ಟು ಆಸ್ತಿ ಇದೆ ಅಥವಾ ನೀವು ಯಾರು ಎಂಬುದನ್ನು ಆಧರಿಸಿರುವುದಿಲ್ಲ. ಇದು ನೀವು ಏನನ್ನು ಯೋಚಿಸುತ್ತಿದ್ದೀರಿ ಎಂಬುದನ್ನಷ್ಟೇ ಆಧರಿಸಿರುತ್ತದೆ. ಸಂತಸ ನಮ್ಮೊಳಗೇ ಅರಳಿಸಿಕೊಳ್ಳುವಂಥದ್ದು.

ದ್ವೇಷವೆಂಬುದು ಅಜ್ಞಾನದ ಸಂಕೇತ.ಇದು ಪುರಾಣ ಇತಿಹಾಸದಿಂದಲೂ ಬೆಳೆದ ಬಂದ ಅಸುರಿ ಶಕ್ತಿ.ಈಗಲೂ ಹರಡಿಕೊಂಡು ವ್ಯವಹಾರ ನೆಡೆಸಿ ಹಣ,ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದೆ ಇದರಿಂದ ಲಾಭ ನಷ್ಟ ನಿರಂತರವಾಗಿ ಆಗುತ್ತಿದೆ. ಆದರೆ, ಮಾನವನ ಬುದ್ದಿ ಬೆಳೆದಂತೆಲ್ಲಾ ಇದು ರಾಜಕೀಯ ಪ್ರೇರಿತ ವಾಗುತ್ತಾ ಜ್ಞಾನ ಕುಸಿದು ತನ್ನ ತಾನರಿಯದಂತೆ ವಿನಾಶದೆಡೆಗೆ ನೆಡೆದಿರೋದೆ ದುರಂತ.
ಜೀವ ಇದ್ದರೆ ತಾನೆ ಜೀವನ. ಈ ದ್ವೇಷದಿಂದ ಜೀವ ಹೋದರೆ   ಏನರ್ಥ?
ಒಟ್ಟಿನಲ್ಲಿ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸಂತೋಷಕ್ಕಾಗಿ  ಬಿಚ್ಚಿಟ್ಟ ದ್ವೇಷದ ಕಿಡಿ ಹತ್ತಿ ಉರಿಯುವಾಗ ಎಷ್ಟೋ ಒಳ್ಳೆಯ ಕೆಟ್ಟ ಜನರ ಜೀವಹೋಗುತ್ತದೆ. ಇದರಿಂದ ಧರ್ಮ ರಕ್ಷಣೆ  ಆಗಿದೆಯೋ ಅಧರ್ಮ ವೋ ಎನ್ನುವ ಚಿಂತನೆ ನಡೆಸುವಷ್ಟು ಸಮಯವಿಲ್ಲದೆ ಹೋದವರನ್ನು ಹಿಡಿದು ತಮ್ಮ ವ್ಯವಹಾರ ನೆಡೆಸೋ ಮಟ್ಟಿಗೆ  ಅಸುರರು ಬೆಳೆದರೆ ಭೂಮಿಯಲ್ಲಿ ಅಸುರರ ಸಂತಾನವೇ ಹೆಚ್ಚುವುದು.
ದೇವಾಸುರರ ಹಿಂದಿನ ಕಾಳಗದಲ್ಲಿ ಸಾಮಾನ್ಯರ ಜೀವಕ್ಕೆ ಬೆಲೆಯೇ ಇರಲಿಲ್ಲ.ವೀರ ಮರಣವನ್ನು  ಹೊಂದಿರುವ ಎಷ್ಟೋ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಿದ ಕಥೆಯಿಲ್ಲ.ಆದರೆ ಅವರ ಸಂಸಾರದ ದುರ್ಗತಿಗೆ  ಈ ದ್ವೇಷದ ರಾಜಕೀಯವೆ ಕಾರಣವಾಗಿ ಅದೇ ದ್ವೇಷ. ಮುಂದೆಯೂ  ಹರಡಿಕೊಂಡಿದೆ.
ಸ್ವಲ್ಪ ನಿಧಾನವಾಗಿ ಚಿಂತನೆ ನಡೆಸಿದರೆ ವಾಸ್ತವದಲ್ಲಿ ಯಾರಿಗೆ ಯಾರು ಶತ್ರುಗಳು?
ವ್ಯವಹಾರಕ್ಕೆ ಇಳಿದಾಗ ಯಾವ ಧರ್ಮ, ಪಂಗಡ,ಪಕ್ಷ,ದೇಶ,ಜಾತಿ,ದೇವರು ಅಡ್ಡಬರೋದಿಲ್ಲ. ಹಣದ ಲಾಭವಾದರೆ ಸಂತೋಷ ನಷ್ಟವಾದರೆ ದು:ಖ. ಆ ದು:ಖವೇ ಮುಂದೆ ದ್ವೇಷಕ್ಕೆ ಕಾರಣವಾಗುತ್ತಾ ಕೊನೆಗೊಮ್ಮೆ ಜೀವ ಹೋಗುತ್ತದೆ. ಹಾಗಾದರೆ ಭೂಮಿಯಲ್ಲಿ ಜನ್ಮ ಪಡೆಯಲು ದ್ವೇಷ ಕಾರಣವೆ?
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ದ್ವೇಷ‌ಹರಡಲು ಹೆಚ್ಚು ಹಣಬಳಕೆಯಾಗುತ್ತಿದೆ.ಒಳ್ಳೆಯ ಸುದ್ದಿ ತಿಳಿಸುವುದೇ ತಪ್ಪು ಎನ್ನುವ ಮಟ್ಟಿಗೆ ಅಜ್ಞಾನ ಆವರಿಸಿದೆ. ಸತ್ಯ ತಿಳಿಸಿದರೂ ದ್ವೇಷ ಮಾಡುವ ನಮ್ಮವರೆ ನಮಗೆ ಶತ್ರುಗಳಂತೆ ಕಂಡರೆ ಎಲ್ಲಿಯ ಪ್ರೀತಿ ವಿಶ್ವಾಸ ನೆಮ್ಮದಿ ಶಾಂತಿ?
ತತ್ವದ ನಡುವೆ ಅಂತರ, ಲಿಂಗದ ನಡುವೆ ಅಂತರ, ಜಾತ್ಯಾಂತರ,ಧರ್ಮಾಂತರ,ಪಕ್ಷಾಂತರ,ಮತಾಂತರಗಳು ಸಾಮಾನ್ಯವಿಚಾರವಾಗುತ್ತಿದೆ. ಆ ಅಂತರಗಳೇ ಅವಾಂತರಕ್ಕೆ ಕಾರಣವಾದರೂ  ಅದಕ್ಕೆ ಕಾರಣ ನಾವೇ ಸೃಷ್ಟಿ ಮಾಡಿಕೊಂಡ ದ್ವೇಷ ಎನ್ನುವ ಸಾಮಾನ್ಯ ಜ್ಞಾನದ ಕೊರತೆ ಮಾನವನಿಗಿರೋವಾಗ. ಮಾನವನ ಶತ್ರು ಎಲ್ಲೂ ಇಲ್ಲ ಒಳಗೇ ಕುಳಿತಿರುವ ಅಹಂಕಾರ ಸ್ವಾರ್ಥ ದ ರಾಜಕೀಯ ಬುದ್ದಿವಂತಿಕೆ  ಅವನಿಗೇ ಮುಳುವಾಗುತ್ತಿದೆ.
ಎಲ್ಲಿರುವುದು ಮಹಾತ್ಮರುಗಳು ದೇವತೆಗಳು ಅಸುರರು ಎಂದರೆ ಎಲ್ಲಾ ನಮ್ಮೊಳಗೇ ಅಡಗಿರುವ ಗುಣವಾಗಿದೆ. ಆದರೆ ಅಸುರಿ ಗುಣವನ್ನು ಬಹಳ ಬೇಗ ಬೆಳೆಸುವುದೇ ಹೊರಗೆ  ಹೆಚ್ಚಾಗಿರುವ ದ್ವೇಷಕ್ಕೆ ಕಾರಣ. 
ಮಕ್ಕಳು ಮಹಿಳೆಯರು ಮನೆಯೊಳಗೆ ಸುರಕ್ಷಿತವಾಗಿರಲು ಅವರಲ್ಲಿ ಸುಶಿಕ್ಷಣವಿರಬೇಕಷ್ಟೆ. ಇದನ್ನು ಕೊಡದೆ ಹೊರಗಿನ ಶಿಕ್ಷಣದ. ದಾಸರಾಗಿಸಿದರೆ ಹೊರಗಿನವರು ಆಳುವರು.‌ಆಳುವುದನ್ನು ದ್ವೇಷದಿಂದ ವಿರೋಧ ಮಾಡಿದರೆ ಇನ್ನಷ್ಟು ದ್ವೇಷವೇ ಹೆಚ್ಚುವುದು. ಒಟ್ಟಿನಲ್ಲಿ ಮನರಂಜನೆ ಬೇಕು ಹಣ ಬೇಕು, ವ್ಯವಹಾರ ಬೇಕು, ಸುಖವಿರಬೇಕು...ಎಲ್ಲಾ ಬೇಕುಗಳ ನಡುವೆ ಆತ್ಮವಂಚನೆ ಆಗುತ್ತಿದ್ದರೆ ದೇವರಿಲ್ಲ ನಾನೇ ಎಲ್ಲಾ ಎನ್ನುವ ಅಸುರ ಶಕ್ತಿ ಬೆಳೆದಿರೋದು ಕಾಣೋದೇ ಇಲ್ಲ.
ಇದನ್ನು ಮೊದಲು ಧಾರ್ಮಿಕ ವರ್ಗ, ಶಿಕ್ಷಕವರ್ಗ ಅರ್ಥ ಮಾಡಿಕೊಂಡು  ದೇಶದ ಪೋಷಕ ರಾಗಿ ನಮ್ಮ ಸಂಸಾರದ ಜವಾಬ್ದಾರಿ  ನಮ್ಮ ಕೈಯಲ್ಲಿದೆ ಸರ್ಕಾರದ ಕೈವಶದಲ್ಲಿಲ್ಲ ಎನ್ನುವ ಸತ್ಯವರಿತರೆ ಸ್ವಲ್ಪ ಮಟ್ಟಿಗೆ ನಮ್ಮ ದ್ವೇಷದ ಪ್ರಭಾವ ಕಡಿಮೆಯಾಗಿ ವಾಸ್ತವದಲ್ಲಿ ಬದುಕಬಹುದಷ್ಟೆ.
ಎಂತೆಂತಹ ಮಹಾತ್ಮರುಗಳು, ದೇವಾನುದೇವತೆಗಳು, ದಾಸ ಸಂತ ಶರಣರು ಜನ್ಮ ಪಡೆದ ಭಾರತ  ಇಂದು ಎಂತಹ ಪರಿಸ್ಥಿತಿ ಯಲ್ಲಿದೆ ಎಂದರೆ ವಿದೇಶದೊಳಗೆ ಸಿಲುಕಿದೆ.
ಅಜ್ಞಾನವನ್ನು ಜ್ಞಾನವೆಂದು ನಂಬಿದೆ,ಅಧರ್ಮವನ್ನು ಧರ್ಮ ಎಂದು ಬೆಳೆಸಿದೆ, ಅನ್ಯಾಯವನ್ನು ನ್ಯಾಯವೆಂದು ವಾದಿಸಿದೆ, ಅಸತ್ಯವನ್ನೇ ಸತ್ಯವೆಂಬ ಭ್ರಮೆಯಲ್ಲಿ  ಬೆಳೆಸಿದೆ
ಇದನ್ನು ಕಲಿಗಾಲವೆಂದು ಒಪ್ಪಿಕೊಂಡು ನಡೆದವರು ನಮ್ಮವರೆ  ,ನಮ್ಮವರನ್ನೇ  ಮೆಚ್ಚಿಕೊಂಡು ಅನುಸರಿಸಿದವರೂ ನಮ್ಮವರೆ, ಈಗ ನಮ್ಮವರನ್ನೇ ದೂರಿಕೊಂಡು ದ್ವೇಷ  ಹರಡುವವರೂ ನಮ್ಮವರೆ ಎಂದರೆ ದ್ವೇಷ  ನಮ್ಮವರೊಂದಿಗೆ ಬೆಳೆಸಿಕೊಂಡಾಗ ಇದರ ಪ್ರತಿಫಲ ಅನುಭವಿಸೋರು ಯಾರು?
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂದಂತೆ.ಮಧ್ಯವರ್ತಿಗಳು ರಾಜಾರೋಷವಾಗಿ  ನಮ್ಮದೇನೂ ತಪ್ಪಿಲ್ಲವೆಂದು ಸುದ್ದಿ ಹರಡಿಕೊಂಡಿದ್ದರೆ ಮುಂದೆ  ಅದೇ ತಮ್ಮ ಸಂಸಾರದೊಳಗೇ ಗ
ನುಗ್ಗಿ ಬರೋದಂತೂ ಸತ್ಯ. ಮಾಡಿದ್ದುಣ್ಣೋ ಮಹಾರಾಯ.
ಯಾರಾದರೂ ಹಣದಿಂದ ದ್ವೇಷ ಶಮನ ಮಾಡಿರೋದಿದೆಯೆ?
ಜ್ಞಾನದಿಂದ  ಮಾಡಿಕೊಂಡಿದ್ದಾರಷ್ಟೆ.ಅದಕ್ಕೆ ಸನಾತನ ಧರ್ಮ ಶತ್ರುಗಳನ್ನು ಪ್ರೀತಿಸುವ ಶಕ್ತಿ ಪಡೆದಿರೋದು.ಅದನ್ನು  ಯಾರೋ ಹೊರಗಿನಿಂದ  ಬೆಳೆಸಿಲ್ಲ.ಒಳಗಿರುವ ಈ ಶಕ್ತಿಯನ್ನು  ಒಳಗಿದ್ದೇ ಬೆಳೆಸಿಕೊಂಡರೆ ಆತ್ಮಕ್ಕೆ ಶಾಂತಿ.
ಮನುಷ್ಯ ಬದುಕಿದ್ದಾಗ ಸಿಗದ ಶಾಂತಿ ಹೋದ‌ಮೇಲೆ ಸಿಗದು.
ಕಣ್ಣಿಗೆ ಕಾಣದಿರೋರನ್ನು  ಹಿಡಿದು  ಪೂಜಿಸಬೇಕೆಂದರೆ ಕಷ್ಟ.
ದೇವರನ್ನು ಹಿಡಿದು ರಾಜಕೀಯ ನೆಡೆಸುವುದು ಕಷ್ಟ. ಎಷ್ಟೇ  ಒಳ್ಳೆಯವರಿದ್ದರೂ ಕೆಟ್ಟವರಿರೋವರೆಗೆ  ಒಳ್ಳೆಯದು ಬೆಳೆಯದು. ಕಾರಣ ರಾಜಕೀಯ ದ್ವೇಷಕ್ಕೆ ಬಲಿಯಾಗೋದು ಒಳ್ಳೆಯವರೆ. ಹೀಗಾಗಿ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಸಾಧಕರಾದರು. ಈಗಿದು ಪ್ರಜಾಪ್ರಭುತ್ವದಲ್ಲಿ  ಕಷ್ಟವಿದೆ.ಕಾರಣ ದೇವರು ಪ್ರಜೆಗಳ ಮೂಲಕವೇ ದೇಶ ನೆಡಸಿರೋದರಿಂದ ಪ್ರಜೆಗಳೇ ಅಜ್ಞಾನದ ದ್ವೇಷಕ್ಕೆ ಬಲಿಪಶು ಆಗಿದ್ದರೆ  ಎಲ್ಲಿರುವುದು ಶಾಂತಿ?
ಮನೆಯೊಳಗೆ ಕುಳಿತು ಮಾಧ್ಯಮದ ಮೂಲಕ ಸುದ್ದಿ ತಿಳಿದು ಇದೇ ಸತ್ಯವೆಂದು ಒಳಗೆ ವಿಷ ತುಂಬಿಕೊಂಡು ಹೊರಬರುವ ಮಹಿಳೆ ಮಕ್ಕಳನ್ನು ತಡೆಯುವವರಿಲ್ಲ.ಮನಸ್ಸು ಬಹಳ ಸೂಕ್ಮ. ಇದನ್ನು ಹಿಡಿದುಕೊಂಡು ಒಂದೆಡೆ ಕೂರುವುದು ಬಹಳ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ  ಇನ್ನಷ್ಟು ಅಪಪ್ರಚಾರ
ಕೆಟ್ಟ ಸುದ್ದಿಗಳು, ದ್ವೇಷದ ಕಿಡಿ ಹರಡುವ ಧಾರಾವಾಹಿ,ಚಲನಚಿತ್ರ,ಕಾರ್ಯಕ್ರಮ ಗಳಿಂದ  ಮಾನವ ಶಾಂತಿ ಪಡೆಯಲಾಗದು. ಇಂತಹ ಕಾರ್ಯಕ್ರಮಕ್ಕೆ ಸಾಕಷ್ಟು ಹಣಬಳಸಲಾಗುತ್ತದೆಂದರೆ ನಮ್ಮ ಜೀವನ ಎತ್ತ ಸಾಗಿದೆ?
ಒಳ್ಳೆಯ ಕಾರ್ಯಕ್ರಮ ಕ್ಕೆ ಜನಬಲ ಹಣಬಲ ಇಲ್ಲ ಎಂದರೆ ಮಾನವನ ಮನಸ್ಸು ಎಷ್ಟು ಹದಗೆಟ್ಟಿದೆ ಎಂದು ತಿಳಿಯಬಹುದು. ಈ ವಿಚಾರವೂ  ಹರಡೋದಿಲ್ಲಕಾರಣ ಇದು ನಮ್ಮ  ತಪ್ಪನ್ನು ಎತ್ತಿ ಹಿಡಿಯುತ್ತಿದೆ. ಇದರಿಂದಾಗಿ ನಮಗೆ ಅವಮಾನವಾಗುತ್ತದೆ. ಆದರೆ ಅವಮಾನ ದೇಶಕ್ಕೆ ಆದಾಗ ಅದರೊಳಗಿರುವ ನಾವೂ ಕಾರಣರೆ ಎಂದರ್ಥ.
ನಮ್ಮ ಸಹಕಾರವಿಲ್ಲದೆ ಯಾರೂ ಬೆಳೆದಿಲ್ಲ. ರಾಜಕಾರಣಿಗಳ ನಡುವೆ,ಜನರ ನಡುವೆ,ಪಕ್ಷ,ಧರ್ಮ, ಜಾತಿಗಳ ನಡುವೆ ಅಂತರ ಬೆಳೆಸುತ್ತಾ ಕೋಟ್ಯಾಂತರ ಹಣಗಳಿಸಿ ಶ್ರೀಮಂತರಾದರೂ ಒಮ್ಮೆ ಜೀವ ಹೋಗೋದೆ.ಪರಮಾತ್ಮನಿಗೆ  ಯಾರೂ ಶ್ರೀಮಂತ ರಲ್ಲ.ಯಾರ ಮೇಲೂ ದ್ವೇಷವಿಲ್ಲ. ಆದರೆ ಪರಮಾತ್ಮನನ್ನು ದ್ವೇಷ ಮಾಡಿ  ಮಹಾತ್ಮರಾದವರಿಲ್ಲ. ಮಹಾತ್ಮರಿಂದ ಯೋಗಿಗಳಿಂದ ವಿಶ್ವಗುರು ವಾಗಿದ್ದ ಭಾರತ ಇಂದು ಪಾಪಿಷ್ಟರಿಂದ  ತುಂಬಿ ಭ್ರಷ್ಟಾಚಾರದ ರೋಗ ಹರಡುವ ಹಂತಕ್ಕೆ ಬಂದಿರೋದಕ್ಕೆ ಪ್ರಜೆಗಳ ಸಹಕಾರವೇ ಕಾರಣ. ಇದರ ಮೂಲವೇ ಶಿಕ್ಷಣ ವ್ಯವಸ್ಥೆ.
ಸೇವೆಯ ಹೆಸರಿನಲ್ಲಿ  ಸಾಕಷ್ಟು ಸೇವಕರು ಬೆಳೆದಿದ್ದರೂ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಸೇವಕರ ಕೊರತೆ  ಎದ್ದು  ಕಾಣುತ್ತಿದೆ. ಹಣವಿದ್ದರೆ ಮಾತ್ರ ಬೆಲೆ. ಸತ್ಯಜ್ಞಾನಕ್ಕೆ ಕೊರತೆ. 
ಸತ್ಯವಿಲ್ಲದ ಧರ್ಮದ ಆಚರಣೆ ನೀರಿನಲ್ಲಿ ಹೋಮಮಾಡಿದಂತೆ. ಹಾಗೆ ಧರ್ಮವಿಲ್ಲದ ಸತ್ಯ.ಒಂದು ಕುಂಟು, ಇನ್ನೊಂದು ಕುರುಡು.ಇವೆರಡೂ ದ್ವೇಷದ ವಿಷಬೀಜ ಬಿತ್ತಿ ಅಧರ್ಮ ಬೆಳೆದಿದೆ. ಯಾರನ್ನೋ ಯಾರೋ ಆಳುವ‌ಪರಿಸ್ಥಿತಿ ನಿರ್ಮಾಣವಾದರೆ  ಸ್ವಾತಂತ್ರ್ಯ ಪಡೆದು ಪ್ರಯೋಜನವೇನು?
ಕಲಿಗಾಲದ ಕಲಿಕೆಯ ಪ್ರಭಾವ  ಪ್ರಾರಂಭದಲ್ಲಿಯೇ ಹೀಗಾದರೆ ಮುಂದೆ ಗತಿ ಏನು? ಬದಲಾವಣೆ ಒಳಗೇ ಆಗಬೇಕಷ್ಟೆ.ಹೊರಗೆ ತೇಪೆ ಹಾಕಿ ಆಪರೇಷನ್ ಮಾಡಿ ತಿರುಗಿದರೂ ಒಳಗಿನ ರೋಗ ವಾಸಿಯಾಗದು.

Monday, June 3, 2024

ಹಣೆಬರಹ ನುಡಿಮುತ್ತುಗಳ ಮೇಲಿದೆಯೆ?

ನುಡಿಮುತ್ತುಗಳು:- *  
  - - - — - - - - - - - -
*”ನಾವು ಬಲಶಾಲಿಗಳು"*ಏಕೆಂದರೆ
*ನಾವು ಇದ್ದುದ್ದರಲ್ಲೇ "ಸುಖ" ಕಾಣುವ ಸಾಮರ್ಥ್ಯ ನಮಗಿದೆ.**
ಆತ್ಮಬಲವಿದ್ದರೆ  ತೃಪ್ತಿಕರ ಜೀವನ ಸಾಧ್ಯವಿದೆ.
 
ಯೋಗ್ಯ ಮಕ್ಕಳಿಗೆ ಆಸ್ತಿ ಮಾಡಿ ಇಡುವ ಅವಶ್ಯಕತೆಯೇ ಇರುವುದಿಲ್ಲ. ಯೋಗ್ಯವಲ್ಲದ ಮಕ್ಕಳಿಗೆ ಎಷ್ಟೇ ಆಸ್ತಿ ಮಾಡಿಟ್ಟರೂ ಪ್ರಯೋಜನವಿರಲ್ಲ.**

ಮಕ್ಕಳಿಗೆ ಜ್ಞಾನದ ಆಸ್ತಿ  ಬಿಟ್ಟು ಹೋದರೆ ಹಣ ಸದ್ಬಳಕೆ ಆಗುತ್ತದೆ.
 
**ಎಷ್ಟೇ ಚಿಕ್ಕ ವಯಸ್ಸಿನವರಾದರೂ ಸರಿ, ಗೌರವವನ್ನು ಕೊಟ್ಟು ಮಾಡನಾಡಿಸಿದಾಗ ಅವರು ಗೌರವ ಕೊಡುವರು.**

ಏನು ಕೊಡುವೆವೋ ಅದೇ ತಿರುಗಿ ಬರೋದು.ಮಕ್ಕಳಿಗೆ ಗೌರವಿಸೋದೆಂದರೆ ಅವರ ಆತ್ಮವಿಶ್ವಾಸ ಬೆಳೆಸೋದಷ್ಟೆ.

**ದೂಷಿಸಿಕೊಂಡು ಕೂರುವ ಕಾಲವಿದಲ್ಲ,ಕೊರಗಿಕೊಂಡು
ಮಲಗಲು ಸಾಧ್ಯವಿಲ್ಲ,ಜೀವನವೆಂಬ ಚಕ್ರ ನಮ್ಮ ಮುಂದಿದೆ..
ಪಾಪ ಪುಣ್ಯದ ಗಂಟು ಹೊರುವವರು ನಾವೇ, ಮರೆಯುವರು ನಾವೇ, ಅನುಭವಿಸುವವರೂ ನಾವೇ. ನೀವು ಮಾಡಿದ ಪಾಪದ ಗಂಟನ್ನು ನೀವೇ ಹೊರ ಬೇಕು. ನಂಬಿದವರ ಬೆನ್ನಿಗೆ ಇರಿದ ನಿಮಗೆ ಖಂಡಿತ  ಮುಂದೆ , ದೇವರ ಘೋರ ಶಿಕ್ಷೆ  ಕಾದಿದೆ. ಸರ್ವ ನಾಶ ತಪ್ಪಿದ್ದಲ್ಲ.
                ಅಂತರಾಳಕ್ಕಿಂತ ದೊಡ್ಡ ನ್ಯಾಯಾಧೀಶ ಯಾರೂ ಇಲ್ಲಾ, ಅದರೂ ಗಮನಿಸದೆ ಮುಂದೆ ಸಾಗುವ ನಿಮ್ಮ  ಜಾಯಾಮಾನಕ್ಕೆ ಒಂದೊಮ್ಮೆ ಮಹಾನ್ ಹೊಡೆತ ನಿಶ್ಚಿತ .**
ಕರ್ಮಕ್ಕೆ ತಕ್ಕಂತೆ ಫ್ರತಿಫಲ
 

**ಈ ಲೋಕದಲ್ಲಿ ಅತ್ಯಂತ ಮೂಢರಾಗಿರುವವರು ಸುಖವಾಗಿರುತ್ತಾರೆ.
                   ಹಾಗೆಯೇ ಅತ್ಯಂತ ಬುದ್ಧಿಶಾಲಿಗಳಾಗಿರುವವರೂ ಸುಖವಾಗಿರುತ್ತಾರೆ.
                   ಮೂಢನಿಗೆ ಯಾವುದರ ಬಗ್ಗೆಯೂ ಚಿಂತೆ ಇಲ್ಲ.
                   ಬುದ್ಧಿವಂತನು ಕಷ್ಟ-ಸುಖಗಳೆರಡನ್ನೂ ಅನುಭವಿಸಲು ಸಿದ್ಧನಾಗಿರುತ್ತಾನೆ.
              ಕಷ್ಟಪಡುವುದೇನಿದ್ದರೂ
#ಮಧ್ಯಮ_ದರ್ಜೆಯವರು ಮಾತ್ರ.*

( ಮಹಾಭಾರತ ಶಾಂತಿಪರ್ವ )

ಮಧ್ಯವರ್ತಿಗಳು ಮಾಧ್ಯಮದವರು ಎರಡೂ ಕಡೆ ವಾಲಿಕೊಂಡು ಜೀವನ‌ನೆಡೆಸೋದಕ್ಕೆ ಪಡುವ ಕಷ್ಟ ಮೇಲಿನ ಕೆಳಗಿನ ಜನ ಪಡೋದಿಲ್ಲ.

**ಯಶಸ್ವಿಯಾಗುವವರೆಗೆ ಹೆದರಿಕೆ 
ಗೆಲ್ಲುವವರೆಗೆ ಅನುಮಾನ,ಗುರಿ ತಲುಪುವವರೆಗೆ ಸಮಸ್ಯೆಗಳಿರುತ್ತವೆ.

ಸಮಸ್ಯೆಗೆ ಕಾರಣ ಒಳಗಿನ ಚಿಂತನೆ ಅದು ಸರಿಯಾಗಿದ್ದರೆ ಒಳಗೇ ಪರಿಹಾರವಿರುತ್ತದೆ.ಹೊರಗಿನ ಯಶಸ್ಸು ಒಳಗಿನ ಯಶಸ್ಸಾಗೋದು ಕಷ್ಟವಿದೆ.

**ಬೇಡಿಕೆಗೂ ಮತ್ತು ಅಧಿಕಾರಕ್ಕೂ, ವ್ಯತ್ಯಾಸ ಇದೆ.ಅರ್ಥ ಮಾಡಿಕೊಳ್ಳಬೇಕು ಅಷ್ಟೇ.**
 ಮತಕ್ಕಾಗಿ ಬೇಡೋದು ನಂತರ ಅಧಿಕಾರ ಪಡೆದ ಮೇಲೆ ಜನರನ್ನು ಆಳೋದು  ಇದಕ್ಕೆ ಅರ್ಥ ವಿದೆಯೆ?

**ಸತ್ಯದ ಮಾರ್ಗದಲ್ಲಿ ಒಂಟಿಯಾಗಿ ಪ್ರಯಾಣಿಸಿದರೂ ಪರವಾಗಿಲ್ಲ, ತಪ್ಪನ್ನು ಸಮರ್ಥಿಸುವ ಗುಂಪಿನೊಳಗೆ ಎಂದೂ ಸೇರಿಕೊಳ್ಳಬಾರದು.** 
ಅಧ್ವೈತ ತತ್ವ ಯಾವತ್ತೂ ಒಬ್ಬಂಟಿಯಾಗಿರುತ್ತದೆ. ಕಾರಣ ಇದು ಒಂದನ್ನು ಎರಡಾಗಿಸೋದಿಲ್ಲ.ಒಂದೇ ಸತ್ಯದೆಡೆಗೆ ಸಾಗಿಸುವ ಸಿದ್ದಾಂತ.ಹಾಗಾಗಿ ಇದು ನಿಜವಾದ ಸಂನ್ಯಾಸಿಗಳು ಯೋಗಿಗಳಷ್ಟೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ.

** If you have a dream, don’t just sit there. Gather courage to believe that you can succeed & leave no stone unturned to make it a reality. Don't be satisfied with stories, how things have gone with others. Unfold your own myth.

If one advances confidently in the direction of his dreams, to live the life which he has imagined, he will meet with success . If you believe it will work out, you’ll see opportunities. If you believe it won’t you will see obstacles.

Stop doubting yourself. Work hard, and make it happen .There can be no failure to a man who has not lost his courage & self-respect.**

**The most valuable gift you can receive is an honest friend. **

Everyone you meet in life, is a part of your journey, but not all of them are meant to stay in your life. Some people are just passing through to bring you gifts; either their blessings or lessons.***

**"Truth does not mind being questioned, but lies do not like being challenged.**

**"If you have the choice,  choose the best. If you don't  have the choice,  then do the best.**

ನುಡಿದರೆ ಮುತ್ತಿನಹಾರದಂತಿರಬೇಕು

.   
ನುಡಿಮುತ್ತುಗಳು:- *  
  - - - — - - - - - - - -
**ಮನುಷ್ಯನ ತಲೆಯಲ್ಲಿ ಎರಡು ಕುದುರೆಗಳು ಓಡುತ್ತಿರುತ್ತವೆ. ಒಂದು ಸಕಾರಾತ್ಮಕ,ಇನ್ನೊಂದು ನಕಾರಾತ್ಮಕ. ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಆಹಾರ ಕೊಟ್ಟು  ಬೆಳೆಸುವರೋ ಅದೇ ಗೆಲ್ಲುತ್ತದೆ.**

ರಾಜಕೀಯದಲ್ಲಿ ನಕಾರಾತ್ಮಕ ಗೆದ್ದರೆ ರಾಜಯೋಗದಲ್ಲಿ ಸಕಾರಾತ್ಮಕ ಶಕ್ತಿ ಗೆಲ್ಲುತ್ತದೆ.

**ಕನಸಿನಲ್ಲಿ ಸುಖದ ಕ್ಷಣಗಳು ಎದುರಾದರೆ ನಿಜವೆಂದು ಭಾವಿಸಬೇಕು.
            *ಹಾಗೆಯೇ...*
ಬದುಕಿನಲ್ಲಿ ಕಷ್ಟಗಳು ಬಂದರೆ ಕನಸಿನಂತೆ ಮರೆಯಬೇಕು.*

ಒಳ್ಳೆಯ ಕನಸು ನನಸಾಗುವಂತಾಗಬೇಕಾದರೆ ಚಿಂತನೆಯೂ ಒಳ್ಳೆಯದಿರಬೇಕು
 

*ಬಹುತೇಕ ಒತ್ತಡಗಳು ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಆದರಿಸಿರುತ್ತವೆಯೇ ಹೊರತು ವಾಸ್ತವಕ್ಕೆ ಅಥವಾ ಬದುಕಿಗೆ ಸಂಬಂಧಿಸಿರುವುದಿಲ್ಲ. ನಾವು ನಮ್ಮ ಮನೋಭಾವವನ್ನು ಬದಲಿಸಿಕೊಂಡರೆ ಆ ಒತ್ತಡವನ್ನು ನಾವೇ ನಿವಾರಿಸಿಕೊಳ್ಳಬಹುದು.**

ಚಿಂತನೆ ಚಿಂತೆಯೆಡೆಗೆ ನಡೆಸುತ್ತಿದ್ದರೆ  ಒತ್ತಡ ಹೆಚ್ಚಾಗುತ್ತದೆ.

*ಜೀವನದಲ್ಲಿ ಇನ್ನೊಬ್ಬರ ಸೋಲಿಗೆ ಕಾದು ಕೂತವರು, ತಮ್ಮ ಗೆಲುವನ್ನು ಎಂದಿಗೂ ಕಾಣಲಾರರು.**

ಸೋಲು ಗೆಲುವು ತಾತ್ಕಾಲಿಕ ವಷ್ಟೆ ಎನ್ನುವ ಸತ್ಯವರಿತು ಜೀವನ ನೆಡೆಸಬೇಕು

**ಕೇಳದೆ ಯಾರ ಮನೆಯ ಅಡ್ರಸ್ ಕೂಡ ಸಿಗಲ್ಲ,ಹುಡುಕದೆ ಯಾವ ವಸ್ತು ಸಿಗಲ್ಲ,ಅವಕಾಶವು ಅಷ್ಟೇ ಪ್ರಯತ್ನಿಸದೆ ಸಿಗುವುದಿಲ್ಲ.**

ಸದವಕಾಶ ಸಾವಕಾಶವಾಗಿ ಬಳಸಿದರೆ ಉತ್ತಮ.ಎಲ್ಲಾ ಅವಕಾಶಗಳೂ ಉತ್ತಮವಾಗಿರದು.

 
**ನೀನು ಜೀವಿಸಿದ ಪ್ರತಿಕ್ಷಣವೂ ನಿನ್ನದೇ,ಆ ಅವಧಿಯಲ್ಲಿ ನೀನು ಗಳಿಸಿದ *ಒಳ್ಳೆಯದು ಕೆಟ್ಟದ್ದು* ಎಲ್ಲದರ ಫಲ ನಿನಗೇ ಸಲ್ಲುವುದು
ಅದಕ್ಕೇ ಪ್ರತಿಕ್ಷಣ *ಒಳ್ಳೆಯದನ್ನು ಮಾಡು, ಒಳ್ಳೆಯದನ್ನೇ ಯೋಚಿಸು, ಒಳ್ಳೆಯದನ್ನೇ ಚಿಂತಿಸು.**
 ಪ್ರತಿಕ್ಷಣ ಒಳ್ಳೆಯದಾಗಿರದು ಮಧ್ಯೆ ಕೆಟ್ಟದ್ದೂ ಬರುತ್ತದೆ ಆಗಲೂ ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವ ಚಿಂತನೆಯಿರಬೇಕು.

**ನೀವು ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ, ಯಾರೋ ಒಬ್ಬರ ಕಥೆಯಲ್ಲಿ ಯಾವಾಗಲೂ ಕೆಟ್ಟವರೇ ಆಗಿರುತ್ತೀರಿ.**
ಜಗತ್ತು ನಡೆದಿರೋದೆ ಕೆಟ್ಟವರಿಂದ ಕೆಟ್ಟವರು ಒಂದೆಡೆ ಕುಳಿತಿರುವ ಒಳ್ಳೆಯವರನ್ನು ಕೆಟ್ಟವರೆಂದೆ ಪರಿಗಣಿಸುವರು.

 
ಕೆಟ್ಟ ಮನಸ್ಸುಗಳು, ಕೆಟ್ಟ ನೆನಪುಗಳು ಹೆಣವಿದ್ದಂತೆ. ಹೊತ್ತುಕೊಂಡು ತಿರುಗಿದಷ್ಟೂ ಭಾರ.ಅವುಗಳನ್ನು ಮನಸ್ಸಿನಿಂದ ಸುಟ್ಟ ಬಿಡಬೇಕು.**
 
ಕೆಟ್ಟ ಶಕ್ತಿಗಳು ಬಹಳ ಬೇಗ ಆಕರ್ಷಣೆ ಆಗುತ್ತದೆ.ಹಾಗೆ ಕೆಟ್ಟ ಸುದ್ದಿಗಳೂ ಬಹಳ ಬೇಗ ಒಳಸೇರುತ್ತವೆ.ಸೇರಿದ ಮೇಲೆ ಹೊರಹಾಕೋದೆ ಕಷ್ಟ.ಹಾಕದಿದ್ದರೆ ಹೆಣಭಾರ

**ಹೆಚ್ಚು ಮಾತನಾಡುವುದಕ್ಕಿಂತ ಇನ್ನೂ ಹೆಚ್ಚು ಕೇಳುಗರಾಗುವುದು ಒಳ್ಳೆಯದು. ಮಾತುಗಾರರಾಗಿ ನೀವು ಇಕ್ಕಟ್ಟಿಗೆ ಸಿಲುಕಬಹುದು.ಆದರೆ, ಕೇಳುಗರಾಗಿ ಎಂದೂ ಪೇಚಿಗೆ ಸಿಲುಕುವುದಿಲ್ಲ.ಆದ್ದರಿಂದ ಗಮನವಿಟ್ಟು ಕೇಳುವುದನ್ನು ರೂಢಿಸಿಕೊಳ್ಳಬೇಕು.**

ಮಾತಿಗಿಂತ ಮೌನ ದೊಡ್ಡದು ಎನ್ನುವರು. ಮೌನವಾಗಿದ್ದವರಿಗೆ ಇತರರ ಮಾತು ಕೇಳುವ ತಾಳ್ಮೆ ಇರುತ್ತದೆ.

Cheating on a friend is a clear indication of a person’s lack of character and integrity The greatest betrayal is when a friend knowingly cheats and still expects forgiveness.

A friend who cheats is not worth sacrificing your own self-respect and happiness .Trust is the foundation of any friendship, and once broken, it’s challenging to rebuild.

They are not open to criticism & correction because they do not want to improve themselves.They will put others down to make themselves look better in comparison or just for fun at someone else's expense !  They will manipulate others into doing what they want..
 
**Don't get depressed if everything goes wrong. Don't get over confident if everything goes fine. Always be in equilibrium position because nothing is permanent.

Happiness has two great advantages over money. People cannot borrow it from you &  You can  love sharing it with everyone willingly.

All your dreams cannot be translated into reality. But they can act as a foundation stone of your glorious future. Build your future as you like. For every positive step you take, you are building a strong future.**
 

 **The more powerful and original a mind, the more it will incline towards the religion of solitude. The mind becomes much more beautiful, when man could see his own weaknesses.

Knowing yourself is the beginning of all wisdom.Your visions will become clear only when you can look into your own heart. Who looks outside - dreams, who looks inside - awakes.

When you see a good person, think of becoming like her/him. When you see someone bad , reflect on your own weak points.**