ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, July 28, 2025

ಒಳಗಿನ ಸಂಬಂಧ ಗಟ್ಟಿಯಾಗಿದ್ದರೆ ಉತ್ತಮ

ನಗೆಯು ಬರುತಿದೆ ನಮಗೆ‌ ನಗೆಯು ಬರುತಿದೆ ಜಗದೊಳಿರುವ‌ ಮನುಜರೆಲ್ಲ ಹಗರಣ ಮಾಡುವುದ ಕಂಡು‌ ನಗೆಯು ಬರುತಿದೆ‌‌ ನಮಗೆ ನಗೆಯುಬರುತಿದೆ.. ದಾಸರ ಅಂದಿನ  ವಚನ ಇಂದಿಗೂ‌  ವಾಚನ ಮಾಡಬಹುದು.
ಕಾರಣವಿಷ್ಟೆ ಜಗತ್ತು ಇರೋದೇ ಹೀಗೆ ಬದಲಾವಣೆ ಒಳಗೆ ಮಾಡಿಕೊಳ್ಳದೆ ಹೊರಗೆ ಬದಲಾವಣೆ ಮಾಡಲು ಹೊರಟಾಗ  
ಜಗತ್ತಿಗೇನೂ  ಸಮಸ್ಯೆಯಿರದು. ಮನುಕುಲಕ್ಕೆ ಸಮಸ್ಯೆ.
ಇಲ್ಲಿ ರಾಜಪ್ರಭುತ್ವದ  ಹಿಂದಿನ  ವಿಜ್ಞಾನಕ್ಕೂ ಪ್ರಜಾಪ್ರಭುತ್ವದ ವಿಜ್ಞಾನಕ್ಕೂ ಅಂತರ ಬೆಳೆಸಿರೋದೆ  ಜ್ಞಾನವಿಜ್ಞಾನವಾಗಿದೆ. ಈ ಅಂತರದಲ್ಲಿ ಆಳುವವರು ಅರಸರು ಎಂದರೆ ತಪ್ಪು . ಇದನ್ನು ದಾಸರು ತಮ್ಮ ಜ್ಞಾನದ ದೃಷ್ಟಿಯಿಂದ ನೋಡಿ  ಹಗರಣಗಳಿಂದ‌ ನಗು ಬರುತ್ತಿದೆ ಎಂದಿದ್ದಾರೆಂದರೆ  ಇಂದಿನ ಹಗರಣಗಳನ್ನು ನೋಡಿದರೆ  ನಗು ಬರುವುದೆ ಅಳು ಬರುವುದೆ?
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?
ಇಂದಿನ ಪರಿಸ್ಥಿತಿ ಹದಗೆಡಲು ಕಾರಣವೇ ಅಸತ್ಯ ಅನ್ಯಾಯ ಅಧರ್ಮ ವೆಂದು ತಿಳಿದವರೂ ಸರ್ಕಾರದ ಹಿಂದೆ ‌ನಡೆದು  ನಮ್ಮದೇನೂ ತಪ್ಪಿಲ್ಲ ಎಲ್ಲಾ ಸರ್ಕಾರವೇ ಕಾರಣ ಎಂದು ಹೊರಗೆ ಹೋರಾಟ ನಡೆಸಿ ಒಳಗೆ‌ಬದಲಾಗದೆ ಇರೋದು.
ಇದನ್ನು ಜನಸಾಮಾನ್ಯರು ಸರಿ ಎಂದು ತಿಳಿದು‌ಮನೆಯೊಳಗೆ ಇದ್ದ ದೇವರನ್ನು ‌ಮರೆತು ಹೊರಗೆ ಬಂದಿರೋದು ದುರಂತ.
ಹೊರಗೆ ಬಂದ‌ಮೇಲೆ ಒಳಗೆ ಸೇರುಸುವುದು ಬಹಳ‌ಕಷ್ಟದ ಕೆಲಸ. ಕಷ್ಟಪಡದೆ  ಉಚಿತವಾಗಿ ಎಲ್ಲಾ ಸಿಗುವಂತಿದ್ದರೆ ಮನುಷ್ಯ ಸೋಮಾರಿಯಾಗೋದು ಖಚಿತ. ಸೋಮಾರಿಯ ಜೊತೆಗೆ ‌ಮಾರಿಯೂ ಇರೋದು ಸತ್ಯ. ರೋಗ ಬಂದಾಗ ಯಾರೂ ಅದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.ಅದನ್ನು ‌ಜೀವವೇ ಅನುಭವಿಸೋದು  ಸಾಮಾನ್ಯಜ್ಞಾನ.
ಭಾರತದಂತಹ‌ಪವಿತ್ರ ದೇಶ ಇಂದು  ಭೋಗಕ್ಕೆ ಬಲಿಯಾಗಿ ರೋಗದೆಡೆಗೆ ನಡೆದು  ಹಿಂದಿರುಗಿ ಬರಲು ಯೋಗ ಮಾಡುತ್ತಿದೆ. ಯೋಗ ಅಷ್ಟು ಸುಲಭವಾಗಿ ಸಿಗೋದಿಲ್ಲ ಎನ್ನುವುದು ಸತ್ಯ.ಯೋಗದಲ್ಲಿ ಪರಮಾತ್ಮ ಜೀವಾತ್ಮ ಸೇರೋದಕ್ಕೆ ಅಧ್ಯಾತ್ಮ ಅಗತ್ಯವಿದೆ. ಅಧ್ಯಾತ್ಮ ದಲ್ಲಿ ಆತ್ಮಸಂಶೋಧನೆಯಾಗುತ್ತಾ ಸಂಸ್ಕಾರದ ಶಿಕ್ಷಣ ಕೊಡುತ್ತಾ ಆತ್ಮಾವಲೋಕನದಿಂದ ಒಳಗಿನ ಶುದ್ದಿಯಾಗಬೇಕು.
ಇದಕ್ಕೆ ರಾಜಕೀಯದ ಅಗತ್ಯವಿಲ್ಲ ರಾಜಯೋಗದ ಅಗತ್ಯವಿದೆ. ಸ್ವಾಮಿ ವಿವೇಕಾನಂದರು ಅಂದೇ ತಿಳಿಸಿದಂತೆ ನಮ್ಮ ಭಾರತೀಯ ಶಿಕ್ಷಣದಿಂದಷ್ಟೆ  ಯೋಗ್ಯ ಪ್ರಜಾಪ್ರಭುತ್ವ ಸಾಧ್ಯವಿತ್ತು.ಶಿಕ್ಷಣ ಅನ್ಯರದ್ದು ಅನ್ಯರ ಧರ್ಮ, ಅನ್ಯರ ವ್ಯವಹಾರ,ತಂತ್ರ ಯಂತ್ರ ಬೇಕು  ಎಂದವರು ದೂರದ ಆಲೋಚನೆ ಮಾಡುತ್ತಾ ದೂರವಾದರು. ಹತ್ತಿರವಿದ್ದ ನಮ್ಮವರನ್ನೇ  ದೂರವಾದರೆ  ಒಳಗಿದ್ದ ಜ್ಞಾನದ ಅರಿವಾಗದೆ  ನಮ್ಮವರನ್ನೇ ಆಳುವ ರಾಜಕೀಯ ಬೆಳೆಯಿತು.‌ಕಲಿಕೆಯ ಪ್ರಭಾವದಿಂದಾಗಿ  ಯುಗ ಬದಲಾದರೂ ಆತ್ಮ ಒಂದೇ.
ಹಿಂದೆ ಇಂದು ಮುಂದೆ ಇರುವ ಒಂದೇ ಆತ್ಮಕ್ಕೆ ಸತ್ಯ ಒಂದೇ.
ಆ ಒಂದೇ ಸತ್ಯವೇ ಆತ್ಮಸಾಕ್ಷಿಯಾಗಿದೆ. ಇಂದು ಆತ್ಮಸಾಕ್ಷಿಗೆ ತಕ್ಕಂತೆ ನಡೆಯಲಾಗದೆ  ಪರಕೀಯರಿಗೆ  ಮಣೆ ಹಾಕುವ ಮಟ್ಟಿಗೆ  ವ್ಯವಹಾರ ನಡೆದಿದೆ.ವ್ಯವಹಾರದಲ್ಲಿ ಲಾಭ ನಷ್ಟ ಸಹಜ. ಒಬ್ಬರಿಗೆ ಮೋಸ ಮಾಡಿ ಲಾಭಗಳಿಸಿದರೂ ಮತ್ತೊಬ್ಬರು ತಮಗೇ ಮೋಸ ಮಾಡುವರೆನ್ನುವ ಕರ್ಮ ಸಿದ್ದಾಂತದ ಅರಿವಿದ್ದರೆ ತಾವೂ ಬದುಕಿ ಇತರರನ್ನು ಬದುಕಲು ಬಿಡಬಹುದು. ಒಟ್ಟಿನಲ್ಲಿ ಎಲ್ಲಾ ಮಾನವರೆ ಎಲ್ಲರಿಗೂ ಅವರದೇ ಆದ ಸ್ವತಂತ್ರ ಜ್ಞಾನವೂ ಇದೆ. ಆದರೆ ಬುದ್ದಿವಂತಿಕೆ ಬೇರೆ ಬೇರೆಯಾಗುತ್ತಾ ವಿದ್ಯೆಯ ದುರ್ಭಳಕೆ ಆದಾಗ ಅಜ್ಞಾನ ಆವರಿಸಿ ಅಹಂಕಾರ ಸ್ವಾರ್ಥಕ್ಕೆ ತಾನೇ ಬಲಿಯಾದರೂ  ಅರಿವಿರದು.
ಏನೇ  ಮಾಡಿದರೂ  ಅದರ ಫಲ ಹಿಂದಿರುಗಿ ಬರುತ್ತದೆ ಎನ್ನುವ ಸತ್ಯವನ್ನು ಯಾರೂ ಬದಲಾಯಿಸಲಾಗದು.

ಇದಕ್ಕೆ ದಾಸರು ನಗೆಯು ಬರುತಿದೆ ನನಗೆ ನಗೆಯು ಬರುತಿದೆ....ಎಂದರು.ಇಂದಿಗೂ ನಾವು ನಮಗೆ‌ ಮೋಸ ಮಾಡುವ ಸರ್ಕಾರದ ಹಿಂದೆ ನಗುತ್ತಾ ಹೋಗುತ್ತಿರೋದು ನೋಡಿದರೆ  ಆಳು ಯಾರು ಅರಸರು ಯಾರು ಎನ್ನುವ ಪ್ರಶ್ನೆ ಏಳುತ್ತದೆ.
ಸರ್ಕಾರ ಎಂದರೆ ಸಹಕಾರ. ನಾವು ಯಾರಿಗೆ ಸಹಕಾರ ಕೊಡುವೆವೋ ಅವರು  ಬೆಳೆಯುವರಷ್ಟೆ ಜೀವನ.
ಮನೆಯೊಳಗೆ ಹೊರಗೆ  ಆವರಿಸಿರುವ ಆ ಪರಮಾತ್ಮನ ಶಕ್ತಿ ನಮ್ಮೊಳಗೇ ಅಡಗಿದೆ ಆದರೆ ಅದನ್ನು ಅರಿಯದೆ ಹೊರಗೆ ಹೋದಷ್ಟೂ  ಅಹಂಕಾರ ಸ್ವಾರ್ಥ ಹೆಚ್ಚುವುದು. ಇದನ್ನು ಅಧ್ಯಾತ್ಮ ಎನ್ನಬಹುದೆ? ಸತ್ಯ ಒಳಗಿದೆ  ಅಸತ್ಯಕ್ಕೆ ಸಹಕಾರವಿದೆ ಎಂದರೆ ದೇವರಿರೋದೆಲ್ಲಿ?
ಮೂರ್ಖರಿಗೆ ಸಹಕರಿಸುವವ ನಾವೂ ಮೂರ್ಖರೆ .
ಭ್ರಷ್ಟಾಚಾರ ಕ್ಕೆ ಸಹಕರಿಸುವ ನಾವೂ ಭ್ರಷ್ಟರೆ
ಅಸತ್ಯ ಅನ್ಯಾಯ ಅನ್ಯಾಯವನ್ನು ಹಣದಿಂದ ಅಳೆಯುವ ನಾವು ಅಜ್ಞಾನಿಗಳೇ ಆದಾಗ  ಯೋಗವಾಗದು. ಪರಮಾತ್ಮನ ಸೇರುವ ಯೋಗದಲ್ಲಿ ಜ್ಞಾನಯೋಗ,ರಾಜಯೋಗ ಭಕ್ತಿಯೋಗ, ಕರ್ಮ ಯೋಗವಿದೆ. ನಮ್ಮ ಜ್ಞಾನ,ರಾಜಕೀಯ, ಭಕ್ತಿ,ಕರ್ಮ ಎಲ್ಲವೂ  ಹೊರಗಿನ ತೋರುಗಾಣಿಕೆಯ ಆಡಂಬರಕ್ಕೆ ಇಳಿದರೆ  ಏನರ್ಥ?
ಜನಸಾಮಾನ್ಯರು  ಅಂತರಂಗಶುದ್ದಿಯೆಡೆಗೆ ನಡೆಯಲು ಕಲಿಸದ ಶಿಕ್ಷಣ ಶಿಕ್ಷಣವೇ ಆಗಿರದು..ಇದರ ಬಗ್ಗೆ ಪೋಷಕರು ಎಚ್ಚರವಾಗದೆ ಏನೂ ಬದಲಾಗದು. ದೇಶದ ತುಂಬಾ ದೇವಸ್ಥಾನ. ಆದರೆ ದೇಶವಾಸಿಗಳಲ್ಲಿ ದೈವತ್ವದ ಕೊರತೆಯ ಶಿಕ್ಷಣವೂ ತುಂಬಿರುವಾಗ ಇದರ ಮೂಲ ಯಾವುದು? 
ಶಿಕ್ಷಣ ತಜ್ಞ ರು  ಶಾಲಾ ಕಾಲೇಜ್ ಗಳಲ್ಲಿ ಅತಿಥಿಗಳು. ಪಾಠ ಮಾಡುವ ಶಿಕ್ಷಕರಿಗೆ ಮಕ್ಕಳ  ಆಸಕ್ತಿ ಜ್ಞಾನ ಗುರುತಿಸುವ  ಜ್ಞಾನದ ಕೊರತೆ.ಪಠ್ಯ ಪುಸ್ತಕದ ವಿಚಾರದಲ್ಲಿ ರಾಜಕೀಯತೆ ಬೆಳೆದಿದೆ.ಇನ್ನು ಪೋಷಕರ ಪರಿಸ್ಥಿತಿ ಮನಸ್ಥಿತಿ ಮನೆಯ ಸ್ಥಿತಿ ಯಾರೂ ಹೇಳುವ ಹಾಗಿಲ್ಲ. ಇವೆಲ್ಲರ‌ಮಧ್ಯೆ ಸಿಲುಕಿರುವ ಮಕ್ಕಳನ್ನು ಹೊರಗೆ ಕಳಿಸುವ ವ್ಯವಸ್ಥೆ  ಜೋರಾಗಿದೆ.ಮಕ್ಕಳು ಮುಗ್ದರೆ ಪ್ರಭುದ್ದರೆ? ಪ್ರಭುದ್ದರಿಗೆ ಹೊರಗಿನ  ವಿಚಾರ ಅರ್ಥ ವಾಗುತ್ತದೆ. ಒಳಗೇ ಇರುವ ಸದ್ವಿಚಾರ ಅರ್ಥ ವಾದರೆ ಮಾತ್ರ ಬದಲಾವಣೆ ಸಾಧ್ಯ.

ಸಹಕಾರ = ಸರ್ಕಾರ .ಪ್ರಜಾಸಹಕಾರವೇ ಎಲ್ಲಾ ಸಮಸ್ಯೆಯ ಮೂಲ. ಅಜ್ಞಾನವೇ ಮೂಲ. ಸತ್ಯದ ತಿಳುವಳಿಕೆಯಿಲ್ಲದ ವ್ಯವಹಾರವೇ ಮೂಲ. ಅಕರ್ಮವೇ ಅಧರ್ಮಕ್ಕೆ ಕಾರಣ.
ಕಷ್ಟಪಟ್ಟು ದುಡಿದ ಹಣವನ್ನು  ಸರಿಯಾಗಿ ಬಳಸಲು ಸುಜ್ಞಾನ ಅಗತ್ಯವಿದೆ. ಯಾರೋ ಹೇಳಿದ್ದನ್ನು ಸತ್ಯವೆಂದು ತಿಳಿಯುವ ನಮಗೆ ನಮ್ಮವರ ಸತ್ಯ ಅರ್ಥ ಮಾಡಿಕೊಂಡು ನಡೆಯೋ  ಜ್ಞಾನವಿಲ್ಲ.ಹಿಂದಿನ ಶಿಕ್ಷಣದಲ್ಲಿ ಸತ್ಯವಿತ್ತು.ಈಗ ಮರೆಯಾಗಿದೆ. ಸರಿಪಡಿಸೋದು ಯಾರು? ಹೇಗೆ?

ಜ್ಞಾನ ವಿಜ್ಞಾನ ‌ಮಧ್ಯೆ ಸಾಮಾನ್ಯ ಜ್ಞಾನವಿದೆ. ಮಾನವ ಅದನ್ನರಿತು ಪಾಲಿಗೆ ಬಂದದ್ದು ಪಂಚಾಮೃತ ಎಂದರಿತು ನಡೆದರೆ ಸ ಹಾಸಿಗೆ ಇದ್ದಷ್ಟು ಕಾಲು ಚಾಚಬಹುದು.ಇಲ್ಲ ಎಂದರೆ ಸಾಲಕ್ಕೆ‌ಬಡ್ಡಿ ಚಕ್ರಬಡ್ಡಿ ಬೆಳೆಯುತ್ತಲೇ ಇರುತ್ತದೆ.
ಪುನರಪಿ ಜನನಂ ಪುನರಪಿ ಮರಣಂ...
ಜನನ ಮರಣದ ನಡುವಿರುವ ಋಣದ ಲೆಕ್ಕಾಚಾರಕ್ಕೆ ಅಂತ್ಯ ಹಾಡಲು ಸತ್ಯಜ್ಞಾನ ಅಗತ್ಯವಿದೆ ಎಂದರು ಮಹಾತ್ಮರುಗಳು.

ಸಂಬಂಧಗಳು ಸಹಜ ಸಾವು ಹೊಂದುವುದಿಲ್ಲ.
ಅವುಗಳು ಯಾವಾಗಲೂ
ಅಹಂಕಾರ, ವರ್ತನೆ , ಮತ್ತು ಅಜ್ಞಾನ ದಿಂದಾಗಿ
ಕೊಲೆಯಾಗುತ್ತವೆ .
.
ಹೊರಗಿನ ಸಂಬಂಧದಿಂದ ಒಳಗಿನ ಸಂಬಂಧ ಗಟ್ಟಿಯಾದರೆ ಯೋಗ. ಇಲ್ಲವೆಂದರೆ ರೋಗ.

Saturday, July 26, 2025

ಕೋಟಿ ವಿದ್ಯೆಗಿಂತ ಮೇಟಿ‌ವಿದ್ಯೆಯೇ‌ ಮೇಲು

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವಪೀಳಿಗೆ ಸಾಲ ಮಾಡಿ ಓದಿ ವಿದೇಶ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು  ಜೀವನ‌ನಡೆಸುವಾಗ ಮಧ್ಯದಲ್ಲಿ ‌ಕಂಪನಿಯವರು ಹೊರಗೆ ಕಳಿಸುವುದು ಅಥವಾ ಕಂಪನಿಯೇ‌ಮುಚ್ಚಿ ಹೋಗೋದು ಸಾಮಾನ್ಯವಾಗುತ್ತಿದೆ.ಕೊರೊನ ಸಮಯದಲ್ಲಿ ಇದರ ಅನುಭವ ಆದವರು ಹಿಂದಿರುಗಿ  ಸ್ವಸ್ಥಾನದಲ್ಲಿ ಭೂ ಸೇವೆ ಮಾಡಲು  ಬಂದಿರೋದು ಅದೃಷ್ಟ ವಷ್ಟೆ. ಕೆಲವರು ಭೂಮಿ ಮಾರಿ  ವಿದ್ಯೆಗೆ ಸಾಲ‌ಮಾಡಿದ್ದಾಗ ಏನೂ‌ಮಾಡಲಾಗದೆ  ಪರದಾಡುವ ಪರಿಸ್ಥಿತಿ ಬರುತ್ತದೆ. ಹೀಗಾಗಿನಮ ನಾವು ನಮ್ಮ ಮೂಲ ಶಿಕ್ಷಣ ಧರ್ಮ/ ಕರ್ಮ ಭೂಮಿಯ ಋಣ ತೀರಿಸಲು  ಹತ್ತಿರವಿರುವ ವಿದ್ಯೆ ಕಲಿತು ಸ್ವಾವಲಂಬನೆ ಸರಳ ಜೀವನ ಸ್ವಾಭಿಮಾನದ ಜೀವನ ನಡೆಸುವಂತಿದ್ದರೆ ವಿದ್ಯೆಗೆ ಕೋಟಿ ಕೊಡುವ ಅಗತ್ಯವಿಲ್ಲ. 
ಇದರ ಬಗ್ಗೆ ಚಿಂತನೆ ‌ನಡೆಸೋದೇ‌ಕಷ್ಟವೆಂದಾಗ ಹಿಂದಿರುಗೋದು ಬಹಳ ಕಷ್ಟ.ಕೊನೆಪಕ್ಷ  ಇದ್ದವರನ್ನು ಸ್ವತಂತ್ರ ವಾಗಿ‌ ಬದುಕಲು ಬಿಟ್ಟರೆ ಅದೇ ಪುಣ್ಯದ ಕೆಲಸ.

ಕೋಟಿ ವಿದ್ಯೆಗಿಂತ ಮೇಟಿವಿದ್ಯೆಯೇ ಮೇಲೆಂದು ಹಿಂದೆಯೇ ತಿಳಿಸಿರುವರು. ಕೋಟಿ ಕೊಟ್ಟು ಕಲಿಯುವ ಬದಲು ಅದನ್ನು ಕಲಿಯದೆ ಕೋಟಿ ಉಳಿಸುವುದು ಸುಜ್ಞಾನ.
ನಮ್ಮ ಭಾರತೀಯ ಶಿಕ್ಷಣ ಇದೇ ಆಗಿತ್ತು.ವಿದೇಶಿಗಳ ಹಿಂದೆ ‌ನಡೆದು ದೇಶ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಅವಿದ್ಯೆ.

ಕಲಿತ ವಿಷಯಕ್ಕೆ ಸರಿಯಾದ ಕೆಲಸ ಸಿಗದೆ ಅನ್ಯರ ಕೆಳಗೆ ದುಡಿಯುವ ಎಷ್ಟೋ ಯುವ ಪೀಳಿಗೆ ಜೀವನದ ಸತ್ಯ ಅರ್ಥ ಆಗದಿರೋದು ದುರಂತ. ಲಕ್ಷ ಲಕ್ಷ ಸಂಪಾದಿಸಿ ಮಕ್ಕಳ ಶಿಕ್ಷಣಕ್ಕೆ  ಕೊಟ್ಟು  ಸಾಲ ತೀರಿಸಲಾಗದೆ ಮಹಿಳೆಯೂ ಮನೆಯಿಂದ ಹೊರಬಂದಾಗ ಮಕ್ಕಳ ಮೇಲೆ ಅಲಕ್ಷ್ಯ. ಯಾರೋ ಹೊರಗಿನವರು ಬಂದು ನಮ್ಮ ‌ಸಾಲ ತೀರಿಸಲಾಗದು. ನಮ್ಮ ಸಾಲಕ್ಕೆ ನಾವೇ ಜವಾಬ್ದಾರರು.
ಇನ್ನು ಸರ್ಕಾರಗಳಂತೂ ವಿದೇಶಿ ಬಂಡವಾಳ ಸಾಲ ವ್ಯವಹಾರಕ್ಕೆ  ದೇಶವನ್ನು ಬಿಟ್ಟುಕೊಟ್ಟು ಜನರನ್ನು ಆಳಲು ಹೊರಟಿರೋದಕ್ಕೆ ಕಾರಣವೇ ಜನರ ಸಹಕಾರ.ಪ್ರಜಾಪ್ರಭುತ್ವ ದಲ್ಲಿ  ದೇಶ ಬಡವಾಗುತ್ತಿದೆ.ಜನರ ಸಾಲ  ಮಿತಿಮೀರಿದೆ ಎಂದರೆ ಅಜ್ಞಾನದ ಲಕ್ಷಣ.

ಆತ್ಮನಿರ್ಭರ ಅಧ್ಯಾತ್ಮ ಸಂಶೋಧನೆಯಲ್ಲಿದೆ. ವೈಜ್ಞಾನಿಕ ಸಂಶೋಧನೆಗೆ ಕೋಟಿ ಕೋಟಿ ಬಳಸಲಾದರೆ ಸಾಲ ತೀರಿಸುವವರು ಯಾರು? 
ಹಿಂದಿನ ದಾಸ ಶರಣರು ಮಹಾತ್ಮರು ಯೋಗದಿಂದ  ಪರಮಾತ್ಮನ ಸೇರಿದ್ದರೆ ಈಗಿನ‌ಯುವಪೀಳಿಗೆ ಭೋಗಕ್ಕೆ ಸಿಲುಕಿ ಪರದೇಶಿಗಳಿಗೆ ಪರಕೀಯರಿಗೆ ದಾಸ ಶರಣರಾಗಿ ಸೇವಕರಾಗುತ್ತಿರೋದನ್ನು ಪ್ರಗತಿ ಎನ್ನಬಹುದೆ?
ಆತ್ಮಾವಲೋಕನ  ಅಗತ್ಯವಿದೆ. ದೇವರನ್ನು ಹೊರಗೆಳೆದಷ್ಟೂ ದೈವತ್ವ  ಬೆಳೆಯುವುದೆ? ದೈವತ್ವ ಇರೋದು ಒಳಗೇ ಆದಾಗ ಒಳಗಿನಿಂದ  ಸ್ವಯಂ ಪ್ರಕಾಶಕರಾಗುವ ಸುಜ್ಞಾನದ ವಿದ್ಯೆ ಅಗತ್ಯವಿದೆ. ಮನೆ‌ಮನೆ ಗುರುಕುಲವಾಗಿದ್ದ ವಿಶ್ವಗುರು ಭಾರತ ಇಂದು ದೊಡ್ಡ ಮನೆಯಲ್ಲಿ ಸಣ್ಣ ಮನಸ್ಸಿನ ಮಾನವನಿಂದ  ನಡೆದಿದೆ. 
ಮನೆಯು ಸಣ್ಣದಾದರೂ ಮನಸ್ಸು ದೊಡ್ಡದಾಗಿದ್ದರೆ ಮಕ್ಕಳು ಮರಿಗಳೂ ಉತ್ತಮವಾಗಿ  ಬೆಳೆಯುವರು.ಆದರೆ  ಮಕ್ಕಳೇ‌ಬೇಡ ಎನ್ನುವ ಮನಸ್ಥಿತಿಯಲ್ಲಿದ್ದವರಿಗೆ ಏನೂ ಮಾಡಲಾಗದು. ಒಟ್ಟಿನಲ್ಲಿ ಗುರುಹಿರಿಯರ ಸಹಕಾರ ಸಹಾಯ ಹೊರಗೆ ಬೆಳೆದಷ್ಟೂ ಒಳಗಿನ ದೊಡ್ಡತನ ಬೆಳೆಯದು. ಸಹಕಾರ  ಹಣದಿಂದ ಆದಷ್ಟೂ ಗುಣಜ್ಞಾನ ಹೊರಬರದು.‌ಎಲ್ಲೋ  ಒಳಗೇ ಒಂದು ಸಣ್ಣ ಬೆಳಕು ಕಾಣುತ್ತದೆ. ಅದನ್ನು ಹಿಡಿದು  ಹಿಂದೆ ನಡೆದರೆ  ಉತ್ತಮ.
ಆತ್ಮಜ್ಯೋತಿ  ಎಲ್ಲರೊಳಗಿರುವ ದೇವರು. ಆ ದೀಪ ಎಲ್ಲರ ಕಣ್ಣಿಗೆ ಕಾಣದ ಕಾರಣ‌ಹೊರಗಿನ ದೀಪ ಹೆಚ್ಚುತ್ತಿದೆ.  ದೀಪಕ್ಕೆ ಉತ್ತಮ ಎಣ್ಣೆ  ಅಗತ್ಯವಿದೆ.ಅದೇ ಶಿಕ್ಷಣ.

ಸೋಲೇ ಗೆಲುವಿನ ‌ಸೋಪಾನ

ಜೀವನದಲ್ಲಿ ಸೋಲು ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು‌ ಮುಖವಿದ್ದಂತೆ. ಮಾನವನ ಸೋಲು  ದೇವಾಸುರರುಗಳ ಗೆಲುವಾಗಬಹುದು ಸೋಲು ಆಗಬಹುದು.ಮಾನವ ಕೇವಲ‌ ಕಾರಣಮಾತ್ರದವನಷ್ಟೆ. ಇದನ್ನು ಅದ್ವೈತ ದಲ್ಲಿ  ನಾನೆಂಬುದಿಲ್ಲ‌ ಎಂದರೆ ದ್ವೈತದಲ್ಲಿ ನಾನು ಕಾರಣಮಾತ್ರ.
ಹಾಗಾದರೆ ನಾನ್ಯಾರು? ಪ್ರಶ್ನೆ ಹುಟ್ಟಿದ್ದು ಒಳಗಿಂದಲೆ ಹೊರಗಿಂದಲೆ?
ಎಲ್ಲಾ ನಾನೇ ಎನ್ನುವ ಪರಮಾತ್ಮನ ಸತ್ಯವನರಿತವರು  ಎಲ್ಲರಲ್ಲಿಯೂ ನಿಂತು‌ನಡೆಸೋ‌ಪರಮಾತ್ಮನ ಕಂಡು ಸೋಲು ಗೆಲುವುಗಳನ್ನು  ಮೀರಿ ನಡೆದರು. 
ಒಟ್ಟಿನಲ್ಲಿ ನಮ್ಮ ನಡೆ ನುಡಿಯ ಅಂತರಗಳಲ್ಲಿ ಸಾಕಷ್ಟು ಏರು ಪೇರುಗಳಾಗುತ್ತಲೇ ಹೋಗುತ್ತದೆ. ಏರಿದವರು ಇಳಿಯಲೇಬೇಕು‌ ಆಗ ಇಳಿದವರು ಏರುವುದು   ಸಹಜ.
ಸೋತವರು ಗೆದ್ದವರಿಗಿಂತ ಸಣ್ಣವರಲ್ಲ.ಗೆದ್ದವರು ಸೋತವರಿಗಿಂತ ದೊಡ್ಡವರಾಗಲ್ಲ. ಯಾವಾಗ ಸೋಲನ್ನು ಒಪ್ಪಿ ‌ ಮುಂದೆ ಮುಂದೆ ಸರಿಯಾದ ದಾರಿಯಲ್ಲಿ ‌ನಡೆಯಲು ಕಲಿಯುವರೋ  ಆಗಲೇ ಗೆಲುವು.ತಪ್ಪು ‌ಮಾಡೋದು ಸಹಜ.ತಪ್ಪನ್ನು ತಿದ್ದಿ ನಡೆಯೋದೆ ಸಾಹಸ. 
ಸಾಹಸ ಕಾರ್ಯದ ಮಧ್ಯೆ ಸಾಕಷ್ಟು ಅಸಹಕಾರ  ಅಸಹ್ಯಕರ  ಅಸಮಾನತೆ ,ಅಸತ್ಯಗಳು ಎದುರಾಗುತ್ತವೆ. ಆದರೆ ಅದನ್ನು ದಾಟಿಕೊಂಡು  ಹೋಗುವವರು ವಿರಳ. ಅಂತಹವರು ಅಧ್ಯಾತ್ಮಿಕ ಸಾಧಕರೂ ಆಗಿರುವರು.ಭೌತಿಕದಲ್ಲಿಯೂ ಸಾಧಕರಾಗಿರುವರು.ಇವರಿಬ್ಬರ ನಡುವೆ ನಿಂತು ಅಡೆತಡೆಗಳನ್ನು ಸೃಷ್ಟಿ ಮಾಡುವ‌  ಮಾನವರೂ  ಈ ಕಡೆ ಸತ್ಯ ಇನ್ನೊಂದು ಕಡೆ ಅಸತ್ಯವನ್ನು ಹಿಡಿದು  ನಿಲ್ಲುವರು.
ಯಾವುದೂ ಅತಿಯಾಗದಂತೆ ತಡೆಯುವವರು ಇವರೆ ಆಗಿರುವರು. 

Saturday, July 19, 2025

ಶಾಸ್ತ್ರ ಮೊದಲೋ ಶಸ್ತ್ರ ವೋ



ಸೃಷ ಶಾಸ್ತ್ರ ದ ಹಿಂದೆ ಒಂದು ವಿಜ್ಞಾನ ಅಡಗಿರುತ್ತದೆ.ಆ ವಿಜ್ಞಾನದಿಂದ  ಮನಸ್ಸಿಗೆ ಶಾಂತಿ ಆತ್ಮಕ್ಕೆ ತೃಪ್ತಿ ಸಿಗುವುದೆಂದರೆ ಶಾಸ್ತ್ರ ಕ್ಕೆ‌ಬೆಲೆ. ಇಲ್ಲವೆಂದರೆ  ಅಪ್ಪ ನೆಟ್ಟ ಆಲದ ಮರವೆಂದು ನೇಣುಹಾಕಿಕೊಂಡರೆ  ವ್ಯರ್ಥ ವಷ್ಟೆ. ಶಾಸ್ತ್ರ ‌ಮರೆತಷ್ಟೂ ಶಸ್ತ್ರ ಪ್ರಯೋಗ ಆಗುತ್ತದೆ. ಆದರೆ ಶಾಸ್ತ್ರ ಅರ್ಥ ವಾಗದಿದ್ದರೂ ಶಸ್ತ್ರ ಹಿಡಿದು ಹೋರಾಡೋರೂ ಬೆಳೆಯಬಹುದು. ಅದಕ್ಕಾಗಿ ಶಾಸ್ತ್ರ ಸಮ್ಮತವಾದ ಕರ್ಮಗಳ ಮೂಲಕವೇ ಶಾಸ್ತ್ರೀಯ ಸ್ಥಾನ ‌ಮಾನ  ಸಿಗೋದು.
ಇದು ಧರ್ಮ ,ಭಾಷೆ, ಸಂಸ್ಕೃತಿ  ದೇಶ,ದೇಹದಿಂದ ಮನಸ್ಸಿನ ಜೊತೆಗೆ  ಆತ್ಮಕ್ಕೂ  ಶಾಂತಿ ಕೊಡಬೇಕಾದರೆ ಶಾಸ್ತ್ರ ಜ್ಞಾನ ಅಗತ್ಯವಿದೆ.
ಭಾರತೀಯ ಶಾಸ್ತ್ರ ಜ್ಞಾನ  ಶಾಸ್ತ್ರೀಯ ಸಂಗೀತ,ನೃತ್ಯ....ಎಲ್ಲಾ ಕಲೆಯೂ  ಜನರನ್ನು ಒಂದು ಮಾಡುವ ಗುರಿಯೆಡೆಗೆ  ಅಂದರೆ ತತ್ವಜ್ಞಾನದೆಡೆಗೆ‌ನಡೆಸಿ ವಿಶ್ವವನ್ನು ಒಂದು ಕುಟುಂಬ ಎಂದಿದೆ.

ಪಾಶ್ಚಾತ್ಯರ ಪ್ರವೇಶದಿಂದ ಒಳಗಿದ್ದ ತತ್ವ ಹಿಂದುಳಿದು ಹೊರಗಿನ ತಂತ್ರ ಮುಂದೆ ನಡೆದು ಈಗಲೂ ತಂತ್ರಕ್ಕೆ ಸ್ಥಾನಮಾನ ಇದರಿಂದ ಸ್ವತಂತ್ರ ಜ್ಞಾನಕ್ಕೆ ಪೆಟ್ಟು.  ಕೃಷ್ಣನನ್ನು ಜಗದ್ಗುರು  ಎಂದಿದೆ. ಜಗತ್ತಿಗೇ ಜ್ಞಾನದ ಬೆಳಕನ್ನು ಕೊಡುವ ಭಾರತ ವಿಶ್ವಗುರು ಸ್ಥಾನಮಾನ ಪಡೆದಿದೆ  ಎಂದಾಗ ನಾವೀಗ ಶಸ್ತ್ರ ಹಿಡಿದು ಹೊರಗೆ ಹೊರಡಲು ಕಾರಣವೇನಾಗಿದೆ?  ಶಾಸ್ತ್ರ ವಿದ್ಯೆಗಿಂತ ಶಸ್ತ್ರ ವಿದ್ಯೆಗೇ ಹೆಚ್ಚು ಮಹತ್ವ ಕೊಟ್ಟಿರೋದು ಎಂದರೆ  ತಪ್ಪಾಗುವುದೆ?
ಯಾವಾಗಲೂ ಅಷ್ಟೇ  ಯಾವುದೂ ಅತಿಯಾಗಬಾರದು. ಶಾಸ್ತ್ರ  ನಮ್ಮ ಮನಸ್ಸಿಗೆ  ಹಿಡಿಸದಿದ್ದರೂ ಶಸ್ತ್ರ ಕ್ರಿಯೆ ಆಗುತ್ತದೆ. ಒತ್ತಡ ಒತ್ತಾಯದ ಯಾವುದೂ ಕೆಲಸವಾದರೂ  ಮನಸ್ಸನ್ನು  ಹದಗೆಡಿಸುತ್ತದೆ.ಹದಗೆಟ್ಟ ಮನಸ್ಸು  ಶಸ್ತ್ರ ಹಿಡಿಯುವಷ್ಟು ಬೆಳೆಯುತ್ತದೆ. ಇದನ್ನು ತಡೆಯಲು ಶಾಸ್ತ್ರ ದ ಹಿಂದಿನ ವಿಜ್ಞಾನ ಅರ್ಥ ಮಾಡಿಕೊಂಡು ಮಾಡಿಸೋದು ಅಗತ್ಯ. ಯಾರೋ ಯಾವುದೋ ಕಾಲದಲ್ಲಿ  ತಮ್ಮ ಮನಸ್ಸಿಗೆ  ಶಾಂತಿ ಸಿಗಲು ಮಾಡಿರುವ ಶಾಸ್ತ್ರ ಕ್ಕಿಂತ ಜ್ಞಾನಿಗಳಾದವರು ಮನುಕುಲದ ಒಳಿತಿಗಾಗಿ ಆತ್ಮಶಾಂತಿಗಾಗಿ ಮಾಡಿರುವ ಶಾಸ್ತ್ರ ಬಹಳ ಅಗತ್ಯ. ಮೂಲ ಬಿಟ್ಟು ರೆಂಬೆಕೊಂಬೆಗಳನ್ನು ನೆಚ್ಚಿಕೊಂಡರೆ  ಕಷ್ಟವಿದೆ. ನಷ್ಟವೂ ಇದೆ. ಒಟ್ಟಿನಲ್ಲಿ ಶಾಸ್ತ್ರ ಸಂಪ್ರದಾಯ ಆಚಾರ ವಿಚಾರ‌ಪ್ರಚಾರಗಳು ಹೊರಗೆ ಬೆಳೆಸುವ‌ಮೊದಲು ಒಳಗಿದ್ದು ಅದರ  ವಿಚಾರ  ಅರ್ಥ ಮಾಡಿಕೊಂಡರೆ  ಉತ್ತಮ ಶಾಂತಿ ಸಮಾಧಾನ ತೃಪ್ತಿ ಸಿಗುತ್ತದೆ ಎನ್ನುವುದು ಸನಾತನ ಧರ್ಮ.

ಮೂಲಾಧಾರವನರಿತು ಸಹಸ್ರಾರದವರೆಗೆ ಏರುವುದು ಶಾಸ್ತ್ರ. ಮೂಲವನ್ನೇ‌ಮರೆತು ಎತ್ತರಕ್ಕೆ ಹಾರುವುದರಿಂದ ಶಸ್ತ್ರ ಕ್ರಿಯೆ  ಹೆಚ್ಚುವುದು. ನಿಧಾನವೇ ಪ್ರಧಾನ. ಅವಸರವೇ ಅಪಘಾತಕ್ಕೆ ಕಾರಣ. ಇದು ಕಲಿಕೆಯ ಪ್ರಭಾವ. ತಲೆಗೆ ಕೊಡುವ  ಕೆಲಸ ಹೃದಯಕ್ಕೆ ಭಾರವಾಗಬಾರದು. ಹೃದಯವಂತಿಕೆ  ಬೆಳೆಸಬೇಕಿದೆ ಎನ್ನುವುದು  ಸನಾತನ ಮಾನವ  ಧರ್ಮ.

Wednesday, July 16, 2025

ಸ್ಪರ್ಧೆ ಪೈಪೋಟಿ ಯಾವ ಕಡೆಗಿರಬೇಕು?

ಎಲ್ಲಿ ನೋಡಿದರೂ ರಾಜಕೀಯದ ಆಟವೇ ನಾನೇ ಗೆಲ್ಲಬೇಕೆಂಬ ಪೈಪೋಟಿ ಸ್ಪರ್ಧೆ ಹೊರಗೆ  ಹೋರಾಟ ಹಾರಾಟ ಮಾರಾಟದ  ಮಧ್ಯೆ ಮಾನವನ ಜೀವನದ ಆಟ ನಡೆದಿದೆ ಆದರೆ ಇದರ ಹಿಂದೆ ‌ನಿಂತು ಆಡಿಸುವ ಶಕ್ತಿಯ ಮುಖಪರಿಚಯವಿಲ್ಲದ ಮಾನವನಿಗೆ ನಾನು ಸೋಲುತ್ತಿರುವ ಸತ್ಯದ ಅರಿವಿಲ್ಲದೆ  ಅಸತ್ಯ ಅನ್ಯಾಯ ಅಧರ್ಮಕ್ಕೆ ಸಹಕಾರ ಕೊಟ್ಟು ಹೆಚ್ಚು ಅಧಿಕಾರ,ಹಣ ಜನಬಲದೆಡೆಗೆ ಮುಂದೆ ಮುಂದೆ  ಸಾಗುವಾಗ  ಒಳಗೇ ಇದ್ದ ತನ್ನದೇ ಆದ ಆತ್ಮಸಾಕ್ಷಿ ಹಿಂದುಳಿಯುತ್ತದೆ. ಆತ್ಮಸಾಕ್ಷಿಗೆ ವಿರುದ್ದ ನಡೆದವರಿಗೆ ನಿಜವಾದ ಮುಕ್ತಿ ಮೋಕ್ಷ ಸಿಗದೆನ್ನುವ ಅಧ್ಯಾತ್ಮ ದ ವಿಚಾರದಲ್ಲಿ  ಯಾರೂ ಯಾರನ್ನೂ  ಸ್ಪರ್ಧೆ ಮಾಡುವುದಿಲ್ಲ.ಕಾರಣ ಅವರವರ. ಧರ್ಮ ಕರ್ಮಕ್ಕೆ ತಕ್ಕಂತೆ ಋಣವೂ  ಬೆಳೆಯುವಾಗ ಸತ್ಯ ಒಂದೇ  ಆಗಿರುತ್ತದೆ. ಆ ಒಂದು ಸತ್ಯದೆಡೆಗೆ  ಅವರು‌ನಡೆಯಲು ಬಿಡುವುದೇ ಧರ್ಮ.
ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದರೆ  ಆತ್ಮಸಾಕ್ಷಿಯೊಂದಿಗೆ  ಒಳಗಿರುವ ಪರಮಾತ್ಮನ ಕಡೆಗೆ ಜೀವಾತ್ಮ ನಡೆಯುವುದೇ  ಮುಕ್ತಿ ಮಾರ್ಗ. ಇದಕ್ಕಾಗಿ ಹೊರಜಗತ್ತಿನಲ್ಲಿ ಸನ್ಮಾರ್ಗ ಹಿಡಿದು ಸತ್ಸಂಗ ಸದಾಚಾರ ಸತ್ಯ ಸ್ವಾಭಿಮಾನ ಸ್ವಾವಲಂಬನೆ ಸರಳ ಜೀವನ ನಡೆಸಿದವರು ಮಹಾತ್ಮರಾದರು. ಮಹಾತ್ಮರಲ್ಲಿಯೂ ಬೇರೆ ಬೇರೆ ರೀತಿಯ  ಜೀವನ‌ನಡೆಸಿದ್ದರೂ ಅವರು ಆತ್ಮಸಾಕ್ಷಿಯೆಡೆಗೆ‌ನಡೆದ ಕಾರಣ ಪರಮಾತ್ಮನ ಸತ್ಯವರಿತರು.ಸ್ಪರ್ಧೆ ನಡೆಸೋದಾದರೆ ಸತ್ಯ ಧರ್ಮ ದೆಡೆಗೆ ಹೋರಾಟ  ಇರಬೇಕು.ಯಾವಾಗಿದು ಮಾರಾಟಕ್ಕೆ  ಸೀಮಿತವಾಗುವುದೋ ಹಣದ ಲಾಭಕ್ಕಾಗಿ ಸತ್ಯ ಬಿಡಬೇಕು.ಸತ್ಯ ಇಲ್ಲದೆ ಧರ್ಮ ಇರದು. ಜೋಡಿಯಾಗಿ  ಹೋಗುವುದು ಕಷ್ಟ.ಅದಕ್ಕೆ ಒಂಟಿಯಾಗಿ ಸಂನ್ಯಾಸಿಗಳು ನಡೆದರು.ಇಂದು ಸಂನ್ಯಾಸವೂ ಅಧಿಕಾರಕ್ಕಾಗಿ ಸ್ವೀಕರಿಸುವ‌ಮಟ್ಟಕ್ಕೆ ಬಂದಿರೋದು ಕಲಿಯುಗದ ಪ್ರಭಾವ.
ಇವರಿಗೆ ಸಿಗುವ  ಗೌರವಾದರದ ಹಿಂದೆ ರಾಜಕೀಯ ಶಕ್ತಿ ನಿಂತು ಜನರನ್ನು ಹೊರಗೆಳೆದರೆ  ಮುಗಿಯಿತು ಧರ್ಮದ ಕಥೆ.
ಜೀವ ಇದ್ದರೆ ಜೀವನ ಆದರೆ ಜೀವಾತ್ಮನ ಅರಿಯದೆ ‌ಮಾನವ‌ನಡೆದಷ್ಟೂ ಪರಮಾತ್ಮನ ಆಟ ಅರ್ಥ ವಾಗದೆ ಜೀವ ಹೋಗುತ್ತದೆ. ಜೀವ ಹಿಡಿದುಕೊಂಡು ಸ್ಪರ್ಧೆ ಪೈಪೋಟಿ ನಡೆಸಿದರೆ  ಆತ್ಮಕ್ಕೆ ತೃಪ್ತಿ ಸಿಗುವಂತಿದ್ದರೆ ಪ್ರತಿಕ್ಷಣ ಸಾಯುವ ಜೀವದಿಂದ ಎಷ್ಟೋ  ಜನಸಂಖ್ಯೆ  ಕಡಿಮೆಯಾಗುತ್ತಿತ್ತು. ಎಷ್ಟು ಜೀವ ಹೋದರೂ ಜನನ ಪ್ರಮಾಣದಲ್ಲಿ  ಅಡೆತಡೆಗಳಿದ್ದರೂ ಜನಸಂಖ್ಯೆಗೇನೂ ಕೊರತೆಯಾಗಿಲ್ಲ ಎಂದರೆ  ಮಾನವನ ಕೈಯಲ್ಲಿ ಏನೂ ಇಲ್ಲ.
ಸೃಷ್ಟಿ ಸ್ಥಿತಿ ಲಯದ ಕಾರ್ಯ ನಿರಂತರವಾಗಿ ಯಾವುದೇ ಸ್ಪರ್ಧೆ ಪೈಪೋಟಿ ಗೆ ಇಳಿಯದೆ  ನಡೆಸುತ್ತಿರುವ ಮೇಲಿರುವ ಶಕ್ತಿಯನ್ನು  ಮಾನವ ತಡೆಯಬಹುದೆ? ಮೂಲ ಸರಿಯಾಗಿ ತಿಳಿಯದೆ ರೆಂಬೆಕೊಂಬೆಗಳನ್ನು ಬೆಳೆಸಿ ಕಡಿಯುವುದೇ ದೊಡ್ಡ ಸಾಧನೆಯಾಗುತ್ತಿದೆ. ಎಷ್ಟು ಕಡಿದರೂ ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತದೆ. ಹೀಗಿರುವಾಗ  ಮೂಲದ‌ಬೇರಿನ ಕಡೆಗೆ  ನಡೆಯುವುದು  ಉತ್ತಮ. ಎಲ್ಲರಿಗೂ ಕಷ್ಟ.ಕಷ್ಟಪಟ್ಟವರಿಗೆ ಸಾಧ್ಯವಾಗಿದೆ. ಈಗಲೂ ಎಷ್ಟೋ ಜನ ಹಿಂದಿರುವ ಸತ್ಯವರಿತು ಹಿಂದಿರುಗುವ ಪ್ರಯತ್ನದಲ್ಲಿದ್ದರೂ ಮುಂದೆ ಹೋದ ಮೇಲೆ  ಮಾಡಿದ ಸಾಲ ತೀರಿಸುತ್ತಾ ಹಿಂದೆ ನಡೆದು ಬರೋದಕ್ಕೆ  ಮನಸ್ಸು ಕೇಳದು.ಹಾಗಂತ ಒಮ್ಮೆ ಹಿಂದೆ ಬರಲೇಬೇಕಿದೆ.ಇದು ನಮ್ಮ ಹಿಂದಿನ ಗುರು ಹಿರಿಯರ ಋಷಿಮುನಿಗಳ  ಋಣ ಸಂದಾಯವಾಗಿರುವಾಗ ಅಧ್ಯಾತ್ಮ ಚಿಂತನೆಯಿಂದಷ್ಟೇ ಸಾಧ್ಯವಾಗುತ್ತದೆ. ಕಣ್ಣಿಗೆ ಕಾಣದ ಋಣ ಕಾಣುವ ಸಾಲದ ಹೊರೆ ಎರಡೂ  ಜೀವಾತ್ಮನಿಗೆ ಸವಾಲಾಗಿ‌ನಿಂತಿದೆ.ಇದಕ್ಕೆ ಜ್ಞಾನವೇ ಅಡಿಪಾಯವಾದಾಗ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿಯೇ  ಋಣ ಸಂದಾಯದ  ಮಾರ್ಗ ತೋರಿಸುವ ಗುರುವಿನ ಅಗತ್ಯವಿದೆ. ಯಾವಾಗ ಗುರು ವೇ ಶಿಷ್ಯನಿಗೆ  ಹೊರಗಿನ ಮಾರ್ಗ ತೋರಿಸುವ ಸ್ಪರ್ಧೆ ಪೈಪೋಟಿಗಿಳಿಯುವರೋ   ಆಗ ಲಯದ ಕಾರ್ಯ ಹೆಚ್ಚುವುದು. ಇಲ್ಲಿ  ಒಳಗೆ ಹೊರಗೆ  ಸ್ಪರ್ಧೆ ಪೈಪೋಟಿ ಅಜ್ಞಾನದಿಂದ  ಬೆಳೆದಷ್ಟೂ  ಅಧರ್ಮ ಮಿತಿಮೀರಿ ಅಶಾಂತಿ ಸೃಷ್ಟಿ ಯಾಗುತ್ತದೆ. ಅಶಾಂತಿಯ ಮನಸ್ಸಿಗೆ  ಸತ್ಯಜ್ಞಾನ ಅರ್ಥ ಆಗದು.ಸತ್ಯ ಅರ್ಥ ವಾಗದೆ ಧರ್ಮ ವೂ ನಡೆಯದು.
ಧರ್ಮಕ್ಕೆ ಚ್ಯುತಿ ಬರುವ ಸ್ಪರ್ಧೆ ಪೈಪೋಟಿ ಗಳಿಂದ‌ಮನುಕುಲದ ಉದ್ದಾರವಾಗದು. ಒಟ್ಟಿನಲ್ಲಿ ಮಾನವ ಆಟಕ್ಕುಂಟು ಲೆಕ್ಕಕ್ಕಿಲ್ಲದ ದೇವಾಸುರರ‌ ಮಧ್ಯವರ್ತಿ .ಇಲ್ಲಿ ಯಾರು ಯಾರನ್ನು ಸೋಲಿಸಿದರೂ  ಸೋಲೇ ಆಗುವುದು. ಹೀಗಿರುವಾಗ  ನಮ್ಮ ಆತ್ಮರಕ್ಷಣೆಗಾಗಿ  ಆತ್ಮಾವಲೋಕನ ಮಾಡಿಕೊಂಡರೆ  ಅಲ್ಪಸ್ವಲ್ಪ ನೆಮ್ಮದಿ ಶಾಂತಿ ಒಳಗಿರುತ್ತದೆ.ಹೊರಗೆ ಬಂದಷ್ಟೂ  ಅಲ್ಲೊಲ ಕಲ್ಲೊಲ.
ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ...ವಿವೇಕದಿಂದ ವಿವೇಕಾನಂದ. ಅವಿವೇಕದ ಸ್ಪರ್ಧೆ ಪೈಪೋಟಿ ಯಲ್ಲಿರುವ  ಆನಂದದ ಹಿಂದೆ ನಡೆದವರನ್ನು  ಜಗತ್ತು ಎತ್ತಿ ಏಣಿಗೇರಿಸಿದಷ್ಟೂ  ಎಲ್ಲೋ  ಕೆಳಗೆ ಬಿದ್ದು‌ಮರೆಯಾಗೋದನ್ನು  ಯಾರೂ ತಪ್ಪಿಸಲಾಗದು. ಸಾಧನೆ  ಒಳಗಿನ ಶುದ್ದಿಯೆಡೆಗೆ ನಡೆದರೆ ಸ್ಪರ್ಧೆ  ಇರದು. ಕಾರಣ ನಮ್ಮ ಕರ್ಮಕ್ಕೆ ತಕ್ಕಂತೆ ಫಲ ಅನುಭವಿಸಬೇಕೆನ್ನುವುದನ್ನು  ತಡೆದಷ್ಟೂ‌ ಸಮಸ್ಯೆ ಹೆಚ್ಚುವುದೆನ್ನುವುದು  ಅಧ್ಯಾತ್ಮ  ಸತ್ಯ. ತಡೆಯಲು ಸಾಕಷ್ಟು ‌ಮಂತ್ರ ತಂತ್ರ ಯಂತ್ರಗಳಿದ್ದರೂ  ಯಾವುದೂ ಸ್ವತಂತ್ರ ವಲ್ಲ.ಎಲ್ಲಾ ಪರಮಾತ್ಮನ ಅಧೀನದಲ್ಲಿರುವಾಗ. ಅನಾವಶ್ಯಕ ಸ್ಪರ್ಧೆ ‌ಪೈಪೋಟಿಗಳಿಂದ  ಜೀವಾತ್ಮ ‌ಪರಮಾತ್ಮನಿಂದ ದೂರ ಉಳಿಯುವುದು ಸತ್ಯ.

ಸೋಲೇ ಗೆಲುವಿನ‌ಮೆಟ್ಟಿಲು

ಪ್ರತಿಯೊಂದು ಸ್ಪರ್ಧೆಯಲ್ಲಿ ಸೋಲು ಗೆಲುವಿರುತ್ತದೆ. ಸೋತವರು ಗೆದ್ದವರನ್ನು ಅನುಸರಿಸುತ್ತಾರೆ.ಆದರೆ ಸೋತವರನ್ನು ಗೆದ್ದವರು ಅನುಸರಿಸುವುದಿಲ್ಲ.ಇದು ಕೇವಲ ಭೌತಿಕದ ಸ್ಪರ್ಧೆಯಷ್ಟೆ. ಅಧ್ಯಾತ್ಮ ದಲ್ಲಿ ಸೋಲೇ ಗೆಲುವಿನ ಮೆಟ್ಟಿಲು . ಒಬ್ಬ ವ್ಯಕ್ತಿ ಸೋತಾಗ ಅವನ ಜೊತೆಗೆ ಯಾರೂ ಇರೋದಿಲ್ಲ ಆದರೆ ಅದೇ ಅವನನ್ನು ಗೆಲುವಿನತ್ತ ನಡೆಸುತ್ತದೆ.ಗೆದ್ದವನೊಂದಿಗೆ ಜನರಿದ್ದರೂ ಅವನು ಇನ್ನೊಮ್ಮೆ ಸೋಲಲೇ ಬೇಕು. ಜೀವನವಿಡೀ ಗೆದ್ದವರಿಲ್ಲ ಹಾಗೆ ಸೋತವರಿಲ್ಲ. ಕಾಲಚಕ್ರ ತಿರಯಗುತ್ತಲೇ ಇರುತ್ತದೆ.
ದುಷ್ಟರು ಒಳ್ಳೆಯವರಾಗಬಹುದು.ಒಳ್ಳೆಯವರು ದುಷ್ಟರಾಗಬಹುದು.ಯಾವುದೂ ಶಾಶ್ವತವಲ್ಲ.ಹೀಗಾಗಿ ಭಗವದ್ಗೀತೆ ಯಲ್ಲಿ  ಸ್ಥಿತಪ್ರಜ್ಞಾವಂತರಾಗಲು  ತಿಳಿಸಿರೊದು.
ಒಮ್ಮೆ ನಾವು ಗೆದ್ದರೆ ಜನ ಹತ್ತಿರವಿರುವರು ಸೋತಾಗ ದೂರ ಹೋಗುವರೆಂದರೆ ನಮ್ಮ ಸ್ಥಿತಿಗೆ ತಕ್ಕಂತೆ ಜನಬಲ ಹಣಬಲ ಅಧಿಕಾರಬಲ. ಯಾವಾಗಿದು ಪರಿಸ್ಥಿತಿ ಮೀರಿ ಹೋಗುವುದೋ ಎಲ್ಲಾ ಬಲವೂ ಕುಸಿಯುತ್ತದೆ. ಹೀಗಾಗಿ ಯಾವುದಕ್ಕೂ ಅಂಟಿಕೊಳ್ಳದೆ ಇದ್ದೂ ಇಲ್ಲದಂತಿರಬೇಕು ಎಂದರು. 
ಈಗಿನ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವೇ ಸ್ಪರ್ಧೆಯ ಕೇಂದ್ರಬಿಂದು. ಯಾರಿಗೆ ಯಾವಾಗ ಯಾಕೆ ಸ್ಪರ್ಧೆ ನಡೆಸಬೇಕು ಯಾವ ಸ್ಪರ್ಧೆ ಯಾರೊಂದಿಗೆ  ಎಷ್ಟು ನಡೆಸಬೇಕೆಂಬ ಅರಿವಿಲ್ಲದೆ  ಸ್ಪರ್ಧೆಗಿಳಿದರೆ  ಗೊತ್ತಿಲ್ಲದೆ ಜೀವನದ ಅತ್ಯುತ್ತಮ ಸಮಯವನ್ನು ಕಳೆದುಕೊಂಡವರೆ ಹೆಚ್ಚು. ಕೊನೆಯಲ್ಲಿ  ವಯಸ್ಸು ಮೀರಿ ಆಯಸ್ಸು ಇಲ್ಲದೆ  ಸೋತಮುಖಹಾಕಿಕೊಂಡರೆ ಉಪಯೋಗವಿಲ್ಲ.
ಸ್ಪರ್ಧೆ ಯಾವತ್ತೂ ಯೋಗ್ಯವಿಷಯಗಳತ್ತ ನಡೆಸಿದರೆ ಜ್ಞಾನ ಬರುತ್ತದೆ. ಮಕ್ಕಳಿರುವಾಗ ಒಂದು ಸಣ್ಣ ಆಟದ ಸ್ಪರ್ಧೆ ಸಂತೋಷಕೊಡುತ್ತದೆ.ಅದೇ ದೊಡ್ಡವರಾದ ಮೇಲಿರದು.ಅಂದರೆ ನಮ್ಮ ಜ್ಞಾನ ಬೆಳೆಯುವ ಸ್ಪರ್ಧೆಗಳು ಅಧ್ಯಾತ್ಮ ದ ಉನ್ನತಿಗೆ ಸಹಕರಿಸಿದರೆ ಸೋತರೂ ಗೆದ್ದಂತೆ.
ಕಾರಣ ಒಳಗಿಳಿಯೋದು ಕಷ್ಟ. ಈ ಕಷ್ಟದ ಕೆಲಸದಲ್ಲಿ ಕೆಲವರಿಗೆ ಬೇಗ ಗೆಲುವು ಸಿಕ್ಕರೆ ಕೆಲವರಿಗೆ ನಿಧಾನ. ಆದರೆ ನಿಧಾನವೇ ಪ್ರಧಾನವಾಗಿರುವುದು ಅಧ್ಯಾತ್ಮ ಸಾಧನೆ.ಕಾರಣ ಕಾಲ ಬದಲಾದಂತೆಲ್ಲಾ ಹೊಸಹೊಸ ವಿಷಯಗಳು ಬೆಳಕಿಗೆ ಬರುತ್ತದೆ. ಅದು ಸತ್ಯವಾಗಿದ್ದರೆ ಸಮಾಧಾನ.ಹೀಗಾಗಿ ಮೊದಲು ಸೋತರೂ ಕೊನೆಯಲ್ಲಿ ಗೆಲ್ಲೋದು ಸತ್ಯವೇ ಎನ್ನುವುದು ಸನಾತನ ಧರ್ಮ. ಇದನ್ನು ರಾಜಕೀಯದಿಂದ ತಿಳಿಯಲಾಗದು.ರಾಜಕೀಯ ಹೊರಗಿನ ಸತ್ಯ ತಿಳಿಸಿದರೆ ರಾಜಯೋಗ ಒಳಗಿನ ಸತ್ಯದೆಡೆಗೆ ನಡೆಸುತ್ತಾ ತನ್ನ ತಾನರಿಯಲು  ಸೋಲಿನ  ಪಾಠ ಕಲಿಸುತ್ತಲೇ ಗೆಲುವಿನೆಡೆಗೆ ನಡೆಸುವುದರಿಂದ ಹೆಚ್ಚಿನ ಜನ ಆ ದಾರಿಯಲ್ಲಿ ನಡೆಯಲು‌ ನಿರಾಕರಿಸುವುದರಿಂದ  ಸತ್ಯ  ಅರ್ಥ ವಾಗದು. ಒಟ್ಟಿನಲ್ಲಿ ಮಹಾತ್ಮರುಗಳಾದವರು‌  ಹೊರಗಿನ ಸ್ಪರ್ಧೆ ಯಿಂದ ದೂರ ಉಳಿದಿದ್ದರು.  ಆದರೆ ಅವರನ್ನು ಹೊರಗಿನವರು  ಗೆಲ್ಲಲು ತಡೆಒಡ್ಡಿದ್ದರೂ  ಪರಮಾತ್ಮನ  ಸಾಕ್ಷಾತ್ಕಾರ ಕ್ಕಾಗಿ ಪ್ರಯತ್ನ ನಡೆದಿತ್ತು. ಇದೇ ಇಂದಿಗೂ ಅವರು ಪೂಜನೀಯ ಸ್ಥಾನ ಪಡೆಯಲು  ಕಾರಣ.ಕಷ್ಟಪಟ್ಟರೆ ಸುಖವಿದೆ. ಆದರೆ ದಾರಿ ಸರಿಯಿದ್ದರೆ  ಆತ್ಮಕ್ಕೆ ಸುಖ.

Tuesday, July 1, 2025

ಜನ್ಮಗಳು ಇದೆಯೆ? ಇಲ್ಲವೆ?

ಇತ್ತೀಚೆಗೆ  ಕೆಲವರು ವಿಷ್ಣು ಸಹಸ್ರನಾಮ, ಲಲಿತಸಹಸ್ರನಾಮ, ಇನ್ನೂ ಅನೇಕ ದೇವತೆಗಳ ಸಹಸ್ರನಾಮದ ಹೆಸರನ್ನು ಇಡುತ್ತಿರುವುದು ಶುಭಸೂಚನೆಯೆ ಆಗಿದೆ.ಆದರೆ, ಮಕ್ಕಳಿಗೆ ಕೊಡುವ ಶಿಕ್ಷಣವೇ ಸರಿಯಿಲ್ಲವಾದರೆ ದೇವರಾದರೂ ಏನು ಮಾಡಲು ಸಾಧ್ಯ? ಅಸುರರ ಹೆಸರಿನಲ್ಲಿ ಸುರರ ಜಪವಾದಂತಾಗುತ್ತದೆ.ಹೆಸರಿನಲ್ಲೇನಿದೆ ? ಹೆಸರಿನಲ್ಲೇ ಎಲ್ಲಾ ಇರೋದು.ಹಿಂದಿನ ಕಾಲದಲ್ಲಿ ದೇವತೆಗಳ ಹೆಸರಿಟ್ಟು ಕೊನೆಪಕ್ಷ ಮಕ್ಕಳನ್ನು ಕರೆಯುವಾಗ ದೇವರ ಹೆಸರು ಬಾಯಲ್ಲಿ ಬರುವುದೆನ್ನುವ ಉದ್ದೇಶವಿತ್ತು. ಆದರೆ ಇಂದಿನ ಮಕ್ಕಳು ಮಾಡುವ‌ತಪ್ಪು ಹೆಚ್ಚಾದಂತೆ  ದೇವರ ಹೆಸರನ್ನು ಇಟ್ಟವರು ಬೈದರೂ ತಪ್ಪಾಗುತ್ತದೆ ಅಂತಹ ಶಿಕ್ಷಣ ಕೊಟ್ಟು ತಮ್ಮ ತಪ್ಪಿಗೆ ತಾವೇ ಬೆಲೆ ಕಟ್ಟಬೇಕಾಗುತ್ತಿದೆ ಎಂದರೆ ತಪ್ಪಿಲ್ಲ.
ಹೆಸರು‌ಮಾಡೋದಕ್ಕಾಗಿಯೇ ಅಡ್ಡದಾರಿ ಹಿಡಿದವರು ಬೆಳೆದು ನಿಂತು  ನಿಜವಾಗಿಯೂ  ಒಳ್ಳೆಯ ದಾರಿಯಲ್ಲಿ ನಡೆದವರ ಹೆಸರು ಕೆಡಿಸುವವರೂ  ಇದ್ದಾರೆಂದರೆ ಕಲಿಕೆಯಲ್ಲಿ ದೋಷವಿದೆ. ಕಲಿಯುಗದ ಪ್ರಭಾವದಿಂದಾಗಿ  ಅಸುರರ ವಶದಲ್ಲಿ ಸುರರು ಇದ್ದು ತಮ್ಮ ಹೆಸರಿಗಾಗಿ ಜನರನ್ನು ಅಸುರರಿಗೆ ಒಪ್ಪಿಸುವುದು ಅಧರ್ಮ. ಹೀಗಾಗಿ ಹಿಂದೂ ಸನಾತನ ಧರ್ಮ  ದೈವತ್ವಕ್ಕಾಗಿ  ಬೆಲೆಕೊಟ್ಟಿದೆ. ಜೀವಾತ್ಮನಿಗೆ  ಇಡುವ ಹೆಸರು ಪರಮಾತ್ಮನ ಒಂದು ಸಣ್ಣ ಬಿಂದುವಷ್ಟೆ. ಹೀಗಿರುವಾಗ  ಪರಮಾತ್ಮನೆಡೆಗೆ ಆ ಹೆಸರು ನಡೆದಾಗ  ಜೀವನ ಸಾರ್ಥಕ ಎನ್ನುವರು. 
ಪ್ರತಿಯೊಂದು ಜೀವಿಗೂ ಹೆಸರಿದೆ  ಅದು ಮಾನವನೇ ಇಟ್ಟ ಹೆಸರಾಗಿದೆ. ದೇವನೊಬ್ಬನೆ ‌ನಾಮ ಹಲವು, ದೇಶ ಒಂದೇ ಪ್ರಜೆಗಳು ಹಲವರು, ಈ ಹಲವು  ದೈವತ್ವದೆಡೆಗೆ ನಡೆದರೆ ಶಾಂತಿ ಸಮೃದ್ದಿ ಸಂತೋಷ ಆತ್ಮತೃಪ್ತಿ ಜೀವನ್ಮುಕ್ತಿ.
ಅಸುರತ್ವದೆಡೆಗೆ ಹೊರಟರೆ ಅತೃಪ್ತಿ,ಅಶಾಂತಿ,ಅಸಮಧಾನ, ಕ್ರಾಂತಿಕಾರಕ ಜೀವನ. ಕ್ರಾಂತಿ ಮಾಡುವವರಿಗೆ ಹೆಚ್ಚಿನ ಸಹಕಾರ ಕೊಟ್ಟರೆ ಶಾಂತಿ ಕಳೆದುಕೊಂಡಂತೆ.ಹಾಗೆ ಸತ್ಯ ಧರ್ಮದಲ್ಲಿ ನಡೆದವರನ್ನು ನಿರ್ಲಕ್ಷ್ಯ ಮಾಡಿ ಹೊರಗೆ ನಡೆದಷ್ಟೂ ಲಕ್ಷ ಲಕ್ಷ ಹಣವಿದ್ದರೂ  ಹೆಸರು ಮಾಡಿ ಉಪಯೋಗವಿಲ್ಲ. ಜನ ಹಣ,ಅಧಿಕಾರವಿರೋವರೆಗೆ ಹೆಸರಿನ ಹಿಂದೆ ನಿಲ್ಲುವರು.ಹೋದ‌ಮೇಲೆ ದೂರತಳ್ಳುವರು. ಆದರೆ ಪರಮಾತ್ಮನ ಹೆಸರಿನ ಹಿಂದೆ ನಡೆದವರನ್ನು ಪರಮಾತ್ಮ ರಕ್ಷಣೆ ಮಾಡಿರೋದನ್ನು ನಮ್ಮ ಪುರಾಣ ತಿಳಿಸಿದೆ. ಒಟ್ಟಿನಲ್ಲಿ ಹೆಸರಿಗಾಗಿ ನಡೆಸೋ ಹೋರಾಟ ಹಾರಾಟ ಮಾರಾಟದಲ್ಲಿ  ಸತ್ಯ ಧರ್ಮ ವಿದ್ದರೆ  ದೈವರಕ್ಷಣೆ.ಇಲ್ಲವಾದರೆ ಅಸುರರ ಶಿಕ್ಷೆ ಅನುಭವಿಸಬೇಕು.
ದೈವಶಕ್ತಿ ಒಳಗಿರುವುದರಿಂದ  ಒಳಗೇ ಕಂಡುಕೊಂಡವರು ಮಹಾತ್ಮರಾದರು. ಈಗ ಮಹಾತ್ಮರ ಹೆಸರಿನಲ್ಲಿ ತಮ್ಮ ಹೆಸರು ಬೆಳೆಸಿಕೊಂಡು ಅಸುರರಿಗೆ ಮಣೆ ಹಾಕಿದರೆ ಏನರ್ಥ? ಅನರ್ಥಕ್ಕೆ  ಕಾರಣವಾಗದಂತೆ ಹೆಸರನ್ನು ಬಳಸುವುದು  ಅಗತ್ಯವಾಗಿದೆ. ಮಕ್ಕಳ ಜ್ಞಾನ ಗುರುತಿಸಿ  ಶಿಕ್ಷಣ ನೀಡಿದಾಗ  ಹೆಸರುವಾಸಿಯಾಗುವರು.ಅದೇ ಮಕ್ಕಳು ಯಾರದ್ದೋ ಜ್ಞಾನವನ್ನು ಅರ್ಧ ತಿಳಿದು ಹೊರನಡೆದು  ಹೆಸರಿಗಾಗಿ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೂ ಹೆಸರುಗಳಿಸಬಹುದು ಆದರೆ ಇದು ಶಾಶ್ವತವಿರದು.ಶಾಂತಿ ತೃಪ್ತಿ ಸಿಗದು. ಪ್ರಾಣಿಪಕ್ಷಿ ಜೀವ‌ಜಂತುಗಳಿಗೂ ಹೆಸರಿದೆ ಆದರೆ ಅದರ ಮೇಲೆ ಅವುಗಳ ಜೀವನವಿಲ್ಲ.ಮಾನವನಿಗಷ್ಟೆ
ಇದು ಅಗತ್ಯವಾಗಿದೆ.ತಮ್ಮ ಹೆಸರನ್ನು ಉಳಿಸಿಕೊಳ್ಳಲು ಇತರರ ಹೆಸರನ್ನು ಬಳಸುವಾಗ ಎಚ್ಚರವಿರಬೇಕು. ಸುಪ್ರಸಿದ್ದ, ಪ್ರಸಿದ್ದ, ಕುಪ್ರಸಿದ್ದವಾಗೋದು ಹೆಸರಿನಿಂದಲೇ ಆದರೆ  ಅದಕ್ಕೆ  ಬೇರೆ ಬೇರೆ ಮಾರ್ಗವೂ ಇದೆ. ಶಾಶ್ವತ ವಾದ ಹೆಸರು  ಪರಮಾತ್ಮನ ಒಳಗಿದೆ. 
ಮಹಾತ್ಮರ ಹೆಸರಿನಲ್ಲಿ  ಭ್ರಷ್ಟರ ರಾಜಕೀಯ ಒಳ್ಳೆಯದಲ್ಲ. 
ಮಹಿಳೆ ಮಕ್ಕಳನ್ನು ರಾಜಕೀಯಕ್ಕೆಳೆದು ಹೆಸರು ಮಾಡೋದು ಅಧರ್ಮಕ್ಕೆ  ದಾರಿಯಾಗಬಹುದು ಆಗಿದೆ. ಪುರಾಷ ಪುರುಷ ಸ್ತ್ರೀ ಯರಲ್ಲಿದ್ದ ಧಾರ್ಮಿಕ ಶಕ್ತಿ ಈಗಿಲ್ಲ ಕಾರಣ ಅವರ ಹೆಸರಿನಲ್ಲಿ ವ್ಯವಹಾರ ಬೆಳೆದಿದೆ ಹಣ ಅಧಿಕಾರ  ಸಿಕ್ಕಿದೆ ಜ್ಞಾನದ ಶಿಕ್ಷಣ ಸಿಗಲಿಲ್ಲವಷ್ಟೆ.ಇದಕ್ಕೆ ಕಾರಣರು ಯಾರು? ನಾವೇ ಪೋಷಕರೆ ಕಾರಣವೆಂದರೂ ತಪ್ಪಾಗಬಹುದು. ಶಿಕ್ಷಣ ವ್ಯವಸ್ಥೆ  ಹೆಸರಿಗಾಗಿ  ಮಕ್ಕಳನ್ನು ಬಳಸಿರುವುದು ದುರಂತ. ಕೆಲವೆಡೆ ಬದಲಾವಣೆ ಆಗಿದ್ದರೂ ಹೆಚ್ಚಿನ ಕಡೆ ಬದಲಾವಣೆ ಆಗಿಲ್ಲ.ದೇಶದ‌ಹೆಸರಿಗೇಮಸಿ ಬಳಿದು ದೇಶದೊಳಗೆ ಹೆಸರು ಮಾಡಿದರೆಉಪಯೋಗವಿಲ್ಲ. 
ನಾವು ಇರೋದೆಲ್ಲಿ?
ಪರಮಾತ್ಮನ ಒಳಗಿರೋದು ಸತ್ಯ ಹಾಗೆ ದೇಶ,ರಾಜ್ಯ,
ಗ್ರಾಮ,ಕುಟುಂಬ, ಸಂಸಾರದೊಳಗೇ ಇರುವ ಈ ಹೆಸರನ್ನು ಇಟ್ಟವರು ಯಾರೆಂಬ ಸತ್ಯ ಅರ್ಥ ವಾದರೆ  ಅವರ ಹೆಸರಿನ ಹಿಂದೆ ದೈವಶಕ್ತಿ ಇತ್ತೋ ಇಲ್ಲವೋ ತಿಳಿದು ನಡೆಯುವುದಕ್ಕೂ ಜ್ಞಾನದ ಶಿಕ್ಷಣ ಬೇಕು. ನಮ್ಮ ಭಾರತೀಯ ಶಿಕ್ಷಣದಲ್ಲಿ  ಆತ್ಮತೃಪ್ತಿ  ಸಿಗುತ್ತಿತ್ತು.ಇಂದು ಅತೃಪ್ತರೆ ಹೆಚ್ಚಾಗಿದ್ದಾರೆ ಕಾರಣ ರಾಜಕೀಯವಷ್ಟೆ. ಜನ್ಮ ಜನ್ಮಕ್ಕೂ ಬದಲಾಗುವಹೆಸರಿನ  ಹಿಂದಿರುವ ಶಕ್ತಿ  ಯಾವುದು? ದೈವಶಕ್ತಿ ಯೋ? ಅಸುರಿ ಶಕ್ತಿಯೋ?

ಶ್ರೀ ಕೃಷ್ಣ ಪರಮಾತ್ಮನೇ ನನಗೂ ಜನ್ಮಗಳಿವೆ ಎಂದಾಗ ಹುಲು ಮಾನವನಿಗಿಲ್ಲವೆ?

ಅಮ್ಮ ಭೂಮಿ ಅಪ್ಪ ಆಕಾಶ

ಅಪ್ಪಂದಿರ ದಿನಾಚರಣೆ

ವಿಶ್ವ ಅಮ್ಮಂದಿರ ದಿನಾಚರಣೆ ಅಪ್ಪಂದಿರ ದಿನಾಚರಣೆ ಪ್ರತಿವರ್ಷ ಎಲ್ಲಾ ಆಚರಣೆಯಂತೆ ನಡೆದು ಬಂದಿದೆ. ಭಾರತದಂತಹ  ಕುಟುಂಬ ವ್ಯವಸ್ಥೆ ಯಲ್ಲಿ ಇದರ ಅಗತ್ಯವಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ  ಇದು ಅಗತ್ಯವೆನಿಸುತ್ತದೆ. ಕೂಡು ಕುಟುಂಬ ಮರೆಯಾಗುತ್ತ ಮಕ್ಕಳು ಪೋಷಕರ ನಡುವೆ ಅಂತರ ಬೆಳೆದಂತೆಲ್ಲಾ  ವಿದೇಶಿಗಳ ಆಚರಣೆಯೂ  ಜಾರಿಗೆ‌ಬರುತ್ತವೆ. ಇಲ್ಲಿ ಒಂದು ದಿನ ನೆನಪಿಸಿಕೊಳ್ಳಲು ಅವರೇನು ದೂರದವರಲ್ಲ. ಹೀಗೇ ದೇವಾನುದೇವತೆಗಳನ್ನು ಪ್ರತಿದಿನ ನೆನಪಿಸಿಕೊಳ್ಳುವಂತೆ ಪೋಷಕರನ್ನು ಮಕ್ಕಳು ನೆನಪಿಸಿಕೊಳ್ಳಲು ಕಷ್ಟ. ಕಾರಣ ದೊಡ್ಡವರಾದ ಮೇಲೆ ಮಕ್ಕಳ ಮನಸ್ಸು  ಹೊರಗಿನ ಜಗತ್ತಿನಲ್ಲಿ ಹರಿದಾಡುವಾಗ ಒಳಜಗತ್ತಿನ ಸತ್ಯದ ಅರಿವಿರದು.
ಏನೇ ಇರಲಿ ತಾಯಿ ತಂದೆಯರಾಗಿ ತಮ್ಮ ಧರ್ಮ ಕರ್ಮ ಕ್ಕೆ ತಕ್ಕಂತೆ ಸಂಸಾರ ನಡೆಸುತ್ತಾ ಮಕ್ಕಳನ್ನು ಒಂದು ಘಟ್ಟಕ್ಕೆ ತರುವುದು  ದೊಡ್ಡ ಸಾಧನೆ ಎನ್ನುವ ಕಾಲದಲ್ಲಿದ್ದೇವೆ. ಹಿಂದಿನ ಕಾಲದಲ್ಲಿ ಅನೇಕಮಕ್ಕಳನ್ನು ಸಾಕಿಸಲಹಿ  ಸ್ವತಂತ್ರ ಜೀವನ‌ನಡೆಸಲು ಸಹಕಾರ ಕೊಟ್ಟು ತಮ್ಮ ನ್ನು ಗೌರವದಿಂದ ಕಾಣುವಂತಹ ಜ್ಞಾನವುಳ್ಳ ಮಕ್ಕಳಿಗೆ ಈ ಒಂದು ದಿನದ ಆಚರಣೆಯ ಅಗತ್ಯವಿರಲಿಲ್ಲ. ಈಗ‌ಮಕ್ಕಳು ಮೊಮ್ಮಕ್ಕಳವರೆಗೂ ತಾವೇ ಜವಾಬ್ದಾರಿ ಹೊತ್ತು ಅವರ ಹಿಂದೆ ಹೋಗುವ‌ ಹಿರಿಯರಿಗೆ ಕಿರಿಯರು ಗೌರವಿಸೋದಿಲ್ಲ.ಕಾರಣವಿಷ್ಟೆ  ಜ್ಞಾನದ ಕೊರತೆ. ಭಕ್ತಿ ಭಯವಿಲ್ಲದ ಶಿಕ್ಷಣ ನೀಡಿ   ದೈಹಿಕಶಕ್ತಿ ಬಂದಾಗ  ಇದೇ ಆಗೋದು ವ್ಯಕ್ತಿಯ ಕಥೆ. ಏನಂತೀರ?
ಹಲವು ಸಂಸಾರದಲ್ಲಿ ಗೌರವದಿಂದ ನಡೆಸುಕೊಳ್ಳುವ‌ಮಕ್ಕಳಿದ್ದಾರೆ. ಇದು ನಮ್ಮ  ಸನಾತನಧರ್ಮದ ಪ್ರಭಾವವಷ್ಟೆ.   ನಾವೆಲ್ಲರೂ
ಪರಮಾತ್ಮನ ಮಕ್ಕಳು, ಭಗವಂತನ‌ಮಕ್ಕಳು  ದೇವರ‌ಮಕ್ಕಳು ಎನ್ನುವುದು  ಸುಲಭ. ಆದರೆ ಭೂಮಿಯಲ್ಲಿ ಜನ್ಮ ಪಡೆಯಲು  ಕಾರಣರಾದ ತಂದೆತಾಯಿಯರನ್ನು ಬಿಟ್ಟು  ಯಾರಾದರೂ  ದೇವರನ್ನು  ನೋಡಲು ಹೋದವರಿಗೆ ದೇವರು ಕಂಡಿರಬಹುದು ಪರಮಾತ್ಮನ ದರ್ಶನವಾಗಿರದು. ಅದರಲ್ಲಿ ತಂದೆತಾಯಿಯರ ಸಹಕಾರವಿಲ್ಲದೆ  ವಿರೋಧವಿದ್ದರಂತೂ  ಅತಂತ್ರ ಜೀವನ. ಅವರ ಒಪ್ಪಿಗೆ ಇಲ್ಲದೆ ಸಂನ್ಯಾಸ ಸ್ವೀಕರಿಸುವುದೂ ಧರ್ಮಕ್ಕೆ ವಿರುದ್ದ. ಒಟ್ಟಿನಲ್ಲಿ  ಜೀವ ಕೊಟ್ಟು ಜೀವನ ನಡೆಸಲು ಬಿಟ್ಟು  ಭೂಮಿಯ ಮೇಲಿರುವ  ತಂದೆತಾಯಿಯರ ಮಕ್ಕಳು  ಆಕಾಶದಲ್ಲಿ ಹೊಳೆಯುವ ನಕ್ಷತ್ರವಾಗೋದು  ಕನಸು. ಹೀಗಾಗಿ ನಾಟಕದ ನಕ್ಷತ್ರದೆಡೆಗೆ  ಮನೆಯಿಂದ ದೂರ ಹೋಗುತ್ತಿದ್ದರೆ  ಸಾಧಕರು ಎನ್ನಿಸಿಕೊಂಡರೆ  ಅಧ್ಯಾತ್ಮ ಜಗತ್ತು ಒಪ್ಪುವುದೆ?  
ಮಕ್ಕಳಿಲ್ಲದ ಮನೆ ಹಿಂದಿರಲಿಲ್ಲ. ಈಗ ಮಕ್ಕಳಿರದ ಮನೆಯೇ  ಹೆಚ್ಚಾಗುತ್ತಿದೆ.. ಕಾರಣ ಮಕ್ಕಳಿಗೆ ಹಣ ತೋರಿಸಿ  ಹೊರಗೆ ಬೆಳೆಸಿರೋದು. ಅದೇ ಹಣದಿಂದ  ಒಳಗಿರುವ  ಜ್ಞಾನಕ್ಕೆ ಉತ್ತಮ ಶಿಕ್ಷಣ ಕೊಟ್ಟು ‌ ಸಂಸ್ಕಾರ ನೀಡಿದರೆ  ದೇಶದ ನಕ್ಷತ್ರಗಳಾಗುವರು. ಸ್ವಯಂ ಪ್ರೇರಿತ ರಾಗೋದಕ್ಕೆ ಸ್ವತಂತ್ರ ಜ್ಞಾನ ಅಗತ್ಯವಿದೆ. ಇದನ್ನು  ತಂದೆ ತಾಯಿಯರು  ಗಮನಿಸುವುದು ಬೆಳೆಸುವುದು  ಅವರ ಜ್ಞಾನದ ಮೇಲಿದೆ. ಅವರಿಗೇ ಸ್ವತಂತ್ರ ವಿಲ್ಲವಾದಾಗ. ಮಕ್ಕಳು  ಎತ್ತ ಸಾಗುವರು?

ನಾನಿಲ್ಲದೆ ನೀನು ಕಾಣದು ನೀನಿಲ್ಲದೆ ನಾನಿರದು

ನಾನಿಲ್ಲದೆ ನೀನಿಲ್ಲ ಎನ್ನುವ  ಅರ್ಥದಲ್ಲಿ  ಜೀವಾತ್ಮನಿಲ್ಲದೆ ಪರಮಾತ್ಮನ  ಅರಿಯಲಾಗದು. ಹಾಗೆ ಜೀವನ‌ ನಡೆಸಲು  ಹಣ ಬೇಕು. ಹಣವನ್ನು  ಉತ್ತಮ ಮಾರ್ಗದಲ್ಲಿ ಸಂಪಾದನೆ ಮಾಡಬೇಕು. ಅದಕ್ಕಾಗಿ  ನಮ್ಮ ಜ್ಞಾನ ಸದ್ಬಳಕೆ ಆಗಬೇಕು. ಆಗ ಹಣವೂ  ಇರುತ್ತದೆ ಜ್ಞಾನವೂ ಬೆಳೆಯುತ್ತದೆ.
ಆದರೆ  ನಾನೇ ಎಲ್ಲಾ ನನ್ನಿಂದಲೇ ಎಲ್ಲಾ ಎನ್ನುವ ಅಹಂಕಾರ  ಹಣದಿಂದ ಬೆಳೆದರೆ  ಅಜ್ಞಾನವೂ ಹಿಂದಿನಿಂದ ಆವರಿಸಿ ಜೀವನ ಕತ್ತಲಾಗುತ್ತದೆ. ಕತ್ತಲೆಂದರೆ ಸತ್ಯದ ಅರಿವಿರದ ಜೀವನ ಎಂದರ್ಥ. ಹಾಗಾಗಿ ಹಣವಿದ್ದರೂ ಸಾಲದ ಹೊರೆ ಹೊತ್ತು ಹೋಗುತ್ತದೆ ಜೀವಾತ್ಮ.

ಈಗ ಹಣಮಾಡಲು ಸಾಕಷ್ಟು ತಂತ್ರಜ್ಞಾನದ ‌ಬಳಕೆಯಿದೆ.ಆದರೆ ಇದು ತತ್ವಕ್ಕೆ ವಿರುದ್ದ ಧರ್ಮಕ್ಕೆ ವಿರುದ್ದ ಇದ್ದರೆ  ಅಧರ್ಮ ಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ನಿಧಾನವಾದರೂ ಸರಿ  ತತ್ವ ಬಿಡದೆ ನಡೆದವರಿಗೆ  ಪರಮಾತ್ಮನ ದರ್ಶನ ವಾಗಿದೆ.  ಪುಣ್ಯಫಲವು ನಿಧಾನವಾಗಿರುವುದರಿಂದ ಪಾಪದ ಕೆಲಸಕ್ಕೆ ಕೈ ಹಾಕಿ ಹಣಗಳಿಸುವುದರಿಂದ  ಸಮಾಜದ ಜೊತೆಗೆ ಸಂಸಾರವೂ ದಾರಿತಪ್ಪುವುದೆನ್ನುವುದು ಸತ್ಯ. 
ತಾಳಿದವನು ಬಾಳಿಯಾನು. ನಿಧಾನವೇ‌ಪ್ರಧಾನ ಇವೆಲ್ಲವೂ ಅನುಭವದ ನುಡಿಮುತ್ತುಗಳಾಗಿವೆ.
ದಾನಧರ್ಮಕ್ಕೆ ಹಣ ಬಳಸಬಹುದು. ಆದರೆ ಇದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ  ಬಳಸಲು ಸುಜ್ಞಾನ ಅಗತ್ಯವಿದೆ. ಯಾರಲ್ಲಿ  ಸ್ವಾರ್ಥ ಅಹಂಕಾರ ಫಲಾಪೇಕ್ಷೆ  ಹೆಚ್ಚಾಗುವುದೋ  ಅದೇ ಮುಂದೆ ರಾಜಕೀಯವಾಗುತ್ತಾ ಜನರನ್ನು ದಾರಿತಪ್ಪಿಸಿ ಆಳುತ್ತದೆ.

ರಾಜಕಾರಣಿಗಳು ಹಣ  ಆಸ್ತಿ ಮಾಡುವರೆಂದರೆ  ಇದಕ್ಕೆ ಕಾರಣ ಅವರ ಅಧಿಕಾರದ ದಾಹ. ಇದನ್ನು ಬೆಳೆಸಿದವರು  ಜನರು. ಯಾವಾಗ ಹಣಪಡೆದು ಮತದಾನ ಮಾಡುವರೋ  ಆಗ  ದಾನ ವ್ಯರ್ಥ ವಾಗುತ್ತದೆ.ಜೊತೆಗೆ ಧರ್ಮ ವೂ ಕುಸಿಯುತ್ತದೆ.  ಸಾಲವೂ  ಬೆಳೆಯುತ್ತದೆ.ಕೈ ಕೈ ಸೇರಿದರಷ್ಟೆ ಚಪ್ಪಾಳೆ ಎಂದಾಗ  ಯಾರ ಕೈ ಯಾರ ಕೈ ಸೇರುವುದೋ ತಿಳಿಯದು.
ನಮ್ಮ ಎರಡೂ ಕೈ ಸ್ವಚ್ಚವಾಗಿದ್ದರೆ  ಚಪ್ಪಾಳೆ ಉತ್ತಮವಾಗಿರುತ್ತದೆ. ಯಾರ ಕೈ ಕೆಲಸದ ಫಲ ಇನ್ನೊಬ್ಬರ ಕೈಗೆ ಕೆಲಸವಿಲ್ಲದಂತೆ ಮಾಡಿದರೆ ಹಣವಿದ್ದರೂ ಅಧರ್ಮ ವೆ.

ಶೂರವೀರರಿಗೆ ಸತ್ಯ ಧರ್ಮ ಬೇಡವೆ?

ನಾವೆಷ್ಟೇ ವೀರ ಶೂರರಾಗಿದ್ದರೂ ಭೂಮಿ ಆಳೋದಕ್ಕೆ  ಸತ್ಯಧರ್ಮ ಅಗತ್ಯವಿದೆ. ಹೆಣ್ಣು ಹೊನ್ನು ಮಣ್ಣಿನ ಋಣ ಸಂಧಾಯ ಕಷ್ಟ. ಧರ್ಮಕ್ಕೆ ಜಯ ಸತ್ಯವೇ ದೇವರು ಎಂದು ಎಷ್ಟೋ  ಮಹಾತ್ಮರುಗಳು  ಭೂಮಿಯಲ್ಲಿದ್ದು ಜೀವನ‌ನಡೆಸಿದರು. ಅದರಲ್ಲಿ ವೀರರು ಶೂರರು ಎನ್ನುವ ರಾಜಮಹಾರಾಜರುಗಳಿದ್ದಾರೆ. ಮಹಾಯತಿಗಳು‌ ಮಹರ್ಷಿಗಳು  ಇದ್ದರು, ಮಹಾಪಂಡಿತರು ಜ್ಞಾನಿಗಳಿದ್ದರು.
ಮಹಾ ಕವಿ ಸಾಹಿತಿಗಳಿದ್ದರು.  ಕಾಯಕವೇ ಕೈಲಾಸವೆಂದ ಕರ್ಮ ಯೋಗಿಗಳಿದ್ದರು.
 ಭೂ ಸೇವೆಯಲ್ಲಿ ಎಲ್ಲರಿಗಿಂತ ಹತ್ತಿರವಿದ್ದವರು  ಕರ್ಮ ಯೋಗಿಗಳೆ ಆಗಿದ್ದರು. ಹೀಗಾಗಿ ಭೂಮಿಯ ಋಣ ತೀರಿಸಲು ಸರಳ ಜೀವನದಲ್ಲಿಯೇ ಸಾಧ್ಯವಾಗಿತ್ತು.
ವೈಭೋಗದೆಡೆಗೆ‌ನಡೆದವರಿಗೆ ಭೂಮಿ ಕಾಣದೆ ಆಕಾಶದೆತ್ತರ ಬೆಳೆದರೂ ಕೊನೆಗಾಲದಲ್ಲಿ ಭೂ ತಾಯಿಯ‌ಮಡಿಲಲ್ಲೇ ಸಾಯೋದನ್ನು ತಡೆಯಲಾಗಿಲ್ಲ. 
ಭೂತಾಯಿಯನ್ನು  ಅರಿತು‌ನಡೆಯುವುದು ಕಷ್ಟ. ಕಾರಣ ತಮ್ಮ ಕಾಲುಬುಡ ನೋಡಿಕೊಂಡು ನಡೆಯೋದು ಕಲಿಯಬೇಕಿದೆ. ಇಂದು ನಾವು ಹೊರಗಿನ ಕಸ ಸ್ವಚ್ಚ ಮಾಡಲು ಸಾಕಷ್ಟು  ರಾಜಕೀಯ‌ನಡೆಸುತ್ತಿದ್ದೇವೆ.ಒಳಗೇ ತುಂಬಿರುವ ನಕಾರಾತ್ಮಕ ವಿಷಯಗಳನ್ನು ಹೊತ್ತು ಜೀವನ ನಡೆದಿದೆ ಎಂದರೆ ಸ್ವಚ್ಚತೆ ಎಲ್ಲಿ ಕಾಣುತ್ತದೆ?
 ಮಾನಸಿಕ‌ನೆಮ್ಮದಿಗಾಗಿ ಮನೆ ಬಿಟ್ಟು ಕಾಡಿಗೆ ಹೋಗುತ್ತಿದ್ದ ಅಂದಿನ ಸಂನ್ಯಾಸಿಗೂ  ನಾಡಿನಲ್ಲಿದ್ದೇ ಬಂಗಲೆಗಳಲ್ಲಿ  ಏಕಾಂತವಾಗಿರುವವರಿಗೂ ವ್ಯತ್ಯಾಸವಿದೆ. ಕಾಡಿನಲ್ಲಿ ಕಷ್ಟ ಪಟ್ಟು  ಜೀವಿಸಬೇಕು.ನಾಡಿನಲ್ಲಿ  ಕಷ್ಟಪಡದೆ ಇಷ್ಟದಿಂದ ಜೀವನ ನಡೆಸಬಹುದು. ಆದರೆ ಸಮಾಜದ ಋಣ ತೀರದು,ಭೂ ಋಣ ತೀರದು. ಹೀಗಾಗಿ ಪರಮಾತ್ಮನ ಅರಿಯಲಾಗದು. ಭೂಮಿ ಆ ಪರಮಾತ್ಮನ ಸೊಂಟದ ಭಾಗದ ಒಂದು ಗ್ರಹವಷ್ಟೆ. ಅದರಲ್ಲಿ ‌ಮನುಕುಲದ ವಾಸ. ಆ ವಾಸದಲ್ಲಿ ಸಾಕಷ್ಟು ವಾಸನೆಗಳ ಆಸೆ. ಆಸೆಯೇ ದು;ಖದ ಮೂಲ. ಎಲ್ಲಿಯವರೆಗೆ ಇತರರ ಹಂಗಿನಲ್ಲಿದ್ದು ಸಾಲ ತೀರಿಸದ  ಕರ್ಮ  ಮಾಡುವನೋ ಅಲ್ಲಿಯವರೆಗೆ ಕರ್ಮ ಯೋಗಿಯಾಗಲಾರ. ಕರ್ಮ ವೇ ಮಾಡದ‌ಜ್ಞಾನ ಇದ್ದು ಉಪಯೋಗವಿಲ್ಲ. ಜ್ಞಾನಯೋಗವೆಂದರೆ ಅದು ಒಳಗಿನ ಶಕ್ತಿ. ಮಾನವನಲ್ಲಿ ಮೊದಲೇ ಇರುವ ಜ್ಞಾನ ಅಂದರೆ ತಿಳುವಳಿಕೆಯನ್ನು ಇನ್ನಷ್ಟು ವಿಶೇಷವಾಗಿ ಅರಿತು  ಯೋಗಿ ಆಗಿ ಬಾಳುವವರೆ ಜ್ಞಾನಯೋಗಿ.ಇದು ಸತ್ವತತ್ವ ಸತ್ಯದ ಪರವಾಗಿದ್ದರೆ ಸಾತ್ವಿಕ ಜೀವನದಿಂದ ಋಣ ಕಳೆಯುವುದು.
ರಾಜಸಿಕ ತಾಮಸಿಕತೆಯ ಕಡೆಗೆ ಹೊರಟರೆ  ಭೌತ ವಿಜ್ಞಾನ
ಆಳುವುದು. ಎರಡೂ ಒಂದೇ ನಾಣ್ಯದ ಎರಡು‌ಮುಖ.
ಯಾವ‌ಮುಖ ಗೆಲ್ಲುವುದೋ ಅದು  ನಮ್ಮ ಕರ್ಮದ ಮೇಲಿರುವುದು.
ಜ್ಞಾನದಾಸೋಹ,ಅನ್ನದಾನ, ಇನ್ನಷ್ಟು ಉಚಿತ ದಾನಗಳಿವೆ.
ಉಚಿತವಾಗಿ ಪಡೆದದ್ದನ್ನು  ಸಾಲವೆಂದರಿತು ಅದಕ್ಕೆ ತಕ್ಕಂತೆ ಜಪ ತಪ ಧ್ಯಾನ ಪೂಜೆ ಸೇವಾಕಾರ್ಯ ನಡೆಸಿದಾಗಲೇ ನಿಜವಾದ ಶಾಂತಿ ಒಳಗೆ ಕಾಣಬಹುದು.ಶಾಂತಿ ಹಣದಿಂದ ಗಳಿಸಲಾಗದು.ಜ್ಞಾನದಿಂದ ಗಳಿಸಬೇಕು.
ರಾಜರ ಕಾಲ ಹೋಗಿ ಪ್ರಜಾಪ್ರಭುತ್ವ ಬಂದರೂ ಜನರಿಗೆ ಜ್ಞಾನದ ಶಿಕ್ಷಣ ಕೊಡದೆ ಆಳೋದೇ ರಾಜಕೀಯದ ಗುರಿ ಎಂದರೆ ಅಧರ್ಮಕ್ಕೆ ತಕ್ಕಂತೆ ಫಲವೂ ಇದೆ. ಯಾರಿಗೋ ಉಪದೇಶ ಉಪಕಾರ ‌ ಮಾಡೋ‌ಮೊದಲು ನಮ್ಮೊಳಗೇ ಏನಿದೆ ಎನ್ನುವ ಜ್ಞಾನದಿಂದ ಜೀವನ ನಡೆಸಿದವರಿಗೆ ಭೂಮಿಯ ಸತ್ಯ ಸತ್ವ ತತ್ವದ ಅರಿವಾಗುತ್ತದೆ.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದಂತೆ
ಹೆಣ್ಣಿಗೊಂದು  ಕಾಲ   ಗಂಡಿಗೊಂದು ಕಾಲ. ಯಾವಾಗ ಭಾರತ  ವಿದೇಶಿಗಳ ಗುಲಾಮಗಿರಿಯನ್ನು ಪ್ರಗತಿ ಎಂದು ಸ್ವೀಕರಿಸಿತೋ ಅಂದಿನಿಂದಲೂ  ಅವರ ಕೈ ಕೆಳಗೆ ದುಡಿಯುವುದೇ  ಆಗಿದೆ. ಭೂ ತಾಯಿ ಸೇವೆಗೆ ಹೊರಗೆ ಹೋಗುವ ಅಗತ್ಯವಿಲ್ಲ.ಒಳಗಿದ್ದೆ  ಮಾಡಲು ಮನಸ್ಸಿಲ್ಲದ ಮಂದಿ  ಹೊರಗಿನ ಹೋರಾಟ ಹಾರಾಟ ಮಾರಾಟದಲ್ಲಿ ‌ಮೈ ಮರೆತರೆ ಭೂ ತಾಯಿ ಕಾಣಳು.

ಯೋಗದಿಂದ ಆರೋಗ್ಯ

ನಾಳೆ ವಿಶ್ವ ಯೋಗ ದಿನಾಚರಣೆ ವಿಶ್ವಕ್ಕೆ ಯೋಗ‌ ಪರಿಚಯ ಮಾಡಿಸಿದ ನಮ್ಮ  ಯೋಗಿಗಳನ್ನು  ನೆನಪಿಸಿಕೊಂಡು  ಆಚರಣೆ ಮಾಡಿದರೆ ಸಾಕಷ್ಟು ‌ಬದಲಾವಣೆ ಸಾಧ್ಯವಿದೆ. ಇಷ್ಟಕ್ಕೂ ಯೋಗ ಎಂದರೆ ಏನು? ಆಸನಗಳೆ? ಪ್ರಾಣಾಯಾಮವೆ?..
ಯೋಗ ಎಂದರೆ ಸೇರೋದು ಯಾರನ್ನು ಯಾರು ಸೇರಬೇಕು ಎಂದರೆ ಒಳಗಿರುವ‌ಜೀವಾತ್ಮ‌ಪರಮಾತ್ಮನ ಸೇರೋದೇ‌.ಮಹಾಯೋಗ..
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ  ನೀನು ಯೋಗಿ ಆಗು ಯೋಗಿಗಳು ನನ್ನ ಸೇರುವರು ಎಂದಿರೋದು   ತಿಳಿದಿದೆ.ಇದಕ್ಕೆ ‌ನಾಲ್ಕು ಮಾರ್ಗ ವನ್ನು ತಿಳಿಸಿ‌ಜ್ಞಾನ ಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗವನ್ನು ವಿವರವಾಗಿ ಅರ್ಥ ಮಾಡಿಸುವುದರ‌ಮೂಲಕ ಅರ್ಜುನನ ವಿಷಾಧ ಯೋಗವನ್ನು ದೂರ.ಮಾಡಿ‌ಧರ್ಮ ಯುದ್ದ ನಡೆಸಿರೋದನ್ನು  ನಾವು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದು?

ಮಾನವನು ಯೋಗಿಯಾಗಬೇಕಾದರೆ ಅಧ್ಯಾತ್ಮ ದೆಡೆಗೆ ನಡೆಯಬೇಕು.
ಅದರಿಂದ ಜ್ಞಾನಗಳಿಸಿ ತನ್ನ ತಾನರಿತು,ಭಕ್ತಿಯಿಂದ ಭಗವಂತನೆಡೆಗೆ  ನಡೆಯುತ್ತಾ ಕಾಯಕಯೋಗಿ‌ ಆಗೋದು ನಿಜವಾದ ಯೋಗಿಗಳ ಲಕ್ಷಣ.
ಇಂದಿನ ಶಿಕ್ಷಣವೇ ಯೋಗದಿಂದ ದೂರವಾಗಿ ಭೋಗದೆಡೆಗೆ ಸಾಗುತ್ತಾ ರೋಗ ಬಂದಾಗ ಯೋಗಾಭ್ಯಾಸ ಮಾಡುವ ಸ್ಥಿತಿಗೆ ತಲುಪಿದೆ.ದೈಹಿಕ ಆರೋಗ್ಯವಿಲ್ಲದೆ ಮಾನಸಿಕ ರೋಗ ಹೋಗದು. ಮಾನಸಿಕ ಆರೋಗ್ಯವಿಲ್ಲದೆ  ಯೋಗಿಯಾಗಲಾರದು. ಧ್ಯಾನದಿಂದ ಜ್ಞಾನ ಎಂದರೆ ಧ್ಯಾನ ಮಾಡಲು ಒಳಗೆ ಶಾಂತಿ ಇರಬೇಕು.ಶಾಂತಿ ಇರಬೇಕೆಂದರೆ ಸಾತ್ವಿಕ ಆಹಾರ ವಿಹಾರ  ಶಿಕ್ಷಣವಿರಬೇಕು.ಈ ಮೂರೂ ಒಳಗೆ‌ಹಾಕದೆ ಇದ್ದರೆ ಒಳಗಿರುವ ನಕಾರಾತ್ಮಕ ಗುಣಗಳು ಮಹಾತ್ಮರನ್ನು ಅರಿಯದಂತೆ  ಮಾಡುವವು.
ಹೀಗಾಗಿ ಸ್ವಚ್ಚ ಭಾರತಕ್ಕೆ ‌ಬೇಕಾಗಿರುವ ಸ್ವಚ್ಚ ಶಿಕ್ಷಣದ ಜೊತೆಗೆ ಸ್ವಚ್ಚ ಆಹಾರದ ಅಗತ್ಯವಿದೆ.
ಎಷ್ಟೋ  ಕಲಬೆರಕೆಯ ಅಸತ್ಯದ ಅಧರ್ಮದ‌ ವಿಷಯಗಳು ಆಹಾರಗಳು ಆಚಾರ ವಿಚಾರ ಪ್ರಚಾರಗಳು ಮಾನವನ‌ ಮನಸ್ಸನ್ನು ವಿಷಪೂರಿತವಾಗಿಸಿ ದ್ವೇಷದಿಂದ ಅಂತರ ಸೃಷ್ಟಿ ಮಾಡಿರುವ ಈ ಸಮಯದಲ್ಲಿ   ಯೋಗದ ಮೂಲಕ ಒಂದು ಮೆಟ್ಟಿಲು ಮೇಲಕ್ಕೆ ಏರಿ ತಮ್ಮೊಳಗಿನ  ಸಕಾರಾತ್ಮಕ  ಉತ್ತಮ ಗುಣಗಳನ್ನು ಬೆಳೆಸಿಕೊಂಡು  ಮಕ್ಕಳು ಮಹಿಳೆಯರಿಗೆ  ದಾರಿದೀಪವಾಗೋದು ಯೋಗಿಗಳ ಲಕ್ಷಣ.
ಇದರಲ್ಲಿ ರಾಜಕೀಯವಾಗಲಿ ವ್ಯವಹಾರವಾಗಲಿ ಆಡಂಬರವಾಗಲಿ  ಬೆರಸದೆ  ಇದ್ದರೆ  ಪ್ರತಿಯೊಬ್ಬರಲ್ಲಿಯೂ ಅಡಗಿರುವ ಯೋಗ್ಯ ಗುಣಲಕ್ಷಣ ಜ್ಞಾನ ಬೆಳೆಯಬಹುದು.
ಇದು ಮುಖ್ಯವಾಗಿ ಪ್ರತಿಯೊಂದು ಶಾಲಾಕಾಲೇಜ್ಗಳಲ್ಲಿ  ಮಕ್ಕಳಿಗೆ  ಕಲಿಸುವುದೇ‌ ನಿಜವಾದ  ಯೋಗ್ಯಶಿಕ್ಷಣವಾಗಿದೆ.
ಈಗ ಎಲ್ಲಿದೆ?
ಒಂದು ತಾಸು ಯೋಗ ಕಲಿಸಿ ಉಳಿದೆಲ್ಲ ತಾಸು ಅನಾವಶ್ಯಕ ವಿಷಯಗಳನ್ನು ತಲೆಗೆ ತುಂಬಿದರೆ ಯೋಗಿಯಾಗುವರೆ?
ಎಲ್ಲಿ ರಾಜಕೀಯ ದುರುದ್ದೇಶವಿರುವುದೋ ಅಲ್ಲಿ ಭೋಗವೇ ಪ್ರಧಾನವಾಗಿರುತ್ತದೆ. ಇದನ್ನು  ಯಾರೂ ಸರಿಪಡಿಸಲಾಗದು.
ನಮ್ಮ ಅಂತರಾತ್ಮದ ಕಡೆಗೆ ನಡೆಯಲು ನಮ್ಮ ಪ್ರಯತ್ನವೇ ಮೊದಲ ಮೆಟ್ಟಿಲು.ಇದೇ ಯೋಗಾಭ್ಯಾಸ.
ಪೋಷಕರು  ಮಕ್ಕಳನ್ನು ಯೋಗಿಯಾಗಿಸುವರೋ ಭೋಗಕ್ಕೆ ಎಳೆದು ರೋಗಿಯಾಗಿಸುವರೋ  ಅದು ಪೋಷಕರಿಗೇ‌ಬಿಟ್ಟ ವಿಚಾರ.  ಅಧ್ಯಾತ್ಮ  ತನ್ನ ತಾನರಿಯುವತ್ತ ನಡೆಸುತ್ತದೆ.

ವಿಶ್ವಕ್ಕೆ  ವಿಶ್ವಗುರು ಎನ್ನಿಸಿದ ಭಾರತ‌ ಯೋಗಿಗಳ ದೇಶ.
ವಿಶ್ವದ ಎಲ್ಲಾ  ಶಿಕ್ಷಣ  ಭಾರತದಲ್ಲಿದೆ.ಆದರೆ ಭಾರತೀಯರ ಯೋಗಶಿಕ್ಷಣ ಮೂಲೆ ಸೇರುತ್ತಿದೆ ಎಂದರೆ  ತಪ್ಪು ಯಾರದ್ದು? ಯೋಗಕೇಂದ್ರ ಸಾಕಷ್ಟಿದೆ.ಆದರೆ ಪ್ರತಿಯೊಂದು ಶಾಲೆಯಲ್ಲಿ ಯೋಗವಿಲ್ಲ. ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪರಿಸ್ಥಿತಿಯಲ್ಲಿ  ಮಕ್ಕಳು  ರೋಗಕ್ಕೆ ಗುರಿಯಾಗುತ್ತಿರೋದು ದುರಂತ ವಷ್ಟೆ.
ಸರ್ಕಾರಗಳೇನೂ ಯೋಗಕ್ಕೆ  ದಾರಿತೋರಿಸಬಹುದು.  ತಾವೇ ಭೋಗದಲ್ಲಿದ್ದರೆ  ಯಥಾ ರಾಜ ತಥಾ ಪ್ರಜಾ.ಹಾಗೆ ಪೋಷಕರೂ ಮಕ್ಕಳಿಗೆ ಯೋಗ ಕಲಿಸಬಹುದು ಯೋಗಿಯಂತೆ ಜೀವಿಸಲು ಬಿಡಲು ಸಾಧ್ಯವೆ? ಕಾರಣ
ಪ್ರಜೆಗಳಿಗೆ ಯೋಗ ಪದಕ್ಕೆ ಸರಿಯಾದ ಅರ್ಥ ತಿಳಿಸುವ ಶಿಕ್ಷಣ ಕೊಡೋದು  ಯಾರು? 

ಶಿಕ್ಷಕರೆ  ಭೋಗಕ್ಕೆ  ಬಲಿಯಾದರೆ  ಮಕ್ಕಳ ಪಾಡೇನು? ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಕಲಿಕೆಯ ಪ್ರಭಾವ ಕಲಿಗಾಲವಾಗುತ್ತಿದೆ.
ಯೋಗ ಮಾಡೋರೆಲ್ಲ ಯೋಗಿಗಳಲ್ಲ
ಮಾಡದವರೆಲ್ಲ ರೋಗಿಗಳೂ ಆಗಿಲ್ಲ. ಅಧ್ಯಾತ್ಮದ ಯೋಗವೇ ಬೇರೆ ಮಾರ್ಗ ದಲ್ಲಿದೆ. ಜ್ಞಾನಯೋಗ,ರಾಜಯೋಗ ಭಕ್ತಿಯೋಗ ಕರ್ಮ ಯೋಗ.
ಇವರೆಲ್ಲರೂ ಪರಮಸತ್ಯ ಧರ್ಮ ದಿಂದ ಯೋಗಿಗಳಾದರು.
ಈಗ ಸತ್ಯ ಧರ್ಮ ಎತ್ತ ಸಾಗಿದೆ? ಒಳಗೋ ಹೊರಗೋ?
ಒಟ್ಟಿನಲ್ಲಿ ಪ್ರತಿಯೊಂದು ಪದವೂ ಎರಡು ಅರ್ಥ ತಿಳಿಸುತ್ತದೆ.
ಎರಡರ ಸಮಾನತೆ‌ಗೆ,ಐಕ್ಯವಾಗೋದಕ್ಕೆ ಮಧ್ಯವರ್ತಿ ಬಿಡೋದಿಲ್ಲ ಅದಕ್ಕೆ ಸಮಸ್ಯೆ  ಅಂತರ ಹೆಚ್ಚಿಸುತ್ತಾ  ಜೀವ ಹೋಗುತ್ತದೆ. 
ಒಂದು ದಿನದ ಯೋಗದಿಂದ ಬದಲಾವಣೆ  ಕಷ್ಟ
ಬದಲಾವಣೆಯ  ಸಣ್ಣ ಗಾಳಿ ಬೀಸಿದರೂ ಸರಿ.

ದೇಶದ ಪ್ರಜೆಯಾಗಿ ದೇಶಕ್ಕಾಗಿ ನಾನೇನು ಮಾಡಬಹುದು ಎನ್ನುವ ಚಿಂತನೆ ಬರೋದು ಯೋಗಿಗಷ್ಟೆ. ವಿದೇಶ ಸುತ್ತಿದರೆ ಯೋಗಿಯಾಗಲಾರ.

ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡದಿದ್ದರೆ ಕರ್ಮ ಯೋಗಿ ಆಗಲಾರ

ದೇಶದೊಳಗೆ ಇದ್ದು ದೇಶಭಕ್ತಿ ಇಲ್ಲದಿದ್ದರೆ ಯೋಗವಾಗದು
ದೇಶದ ಧರ್ಮ ಸಂಸ್ಕೃತಿ ಭಾಷೆಯ ಜ್ಞಾನವಿಲ್ಲದಿದ್ದರೆ ಜ್ಞಾನಯೋಗವಾಗದು

ಆತ್ಮಜ್ಞಾನದ ವ್ಯವಹಾರದಿಂದ ಆತ್ಮನಿರ್ಭರ

ಆತ್ಮನಿರ್ಭರ ಭಾರತದ‌ ಕನಸಿನಲ್ಲಿ  ವೈಜ್ಞಾನಿಕ ಸಂಶೋಧನೆಗಳ ಮೂಲಕ ಭಾರತವನ್ನು ಸ್ಮಾರ್ಟ್ ಮಾಡಲು ವಿದೇಶಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ಆದರೆ ಇದರೊಂದಿಗೆ ಕೈ ಜೋಡಿಸಿರುವ ವಿದೇಶಿಗಳ ಧರ್ಮ ಸಂಸ್ಕೃತಿ ಭಾಷೆ ವ್ಯವಹಾರಿಕ ಜ್ಞಾನವು ಶಿಕ್ಷಣಕ್ಷೇತ್ರವನ್ನು ಆಳೋದನ್ನು  ಯಾರು ತಡೆಯಬಹುದು? ಹೊರಗೆ ತಳುಕುಬಳುಕಿನ‌ಜೀವನ ಒಳಗಿನ ಹುಳುಕನ್ನು ಸರಿಪಡಿಸಬಹುದೆ?
ಸ್ವಚ್ಚ ಭಾರತಕ್ಕೆ ಹೊರಗೆ ಕಸಗುಡಿಸುವುದಕ್ಕೆ ಕೋಟ್ಯಂತರ ಹಣ ಬಳಸಿದರೂ  ಮನುಷ್ಯನೊಳಗಿರುವ  ಅಶುದ್ದತೆಯ  ವಿಷಯಾಸಕ್ತಿಯನ್ನು  ದೂರ ಮಾಡುವ ಸಂಸ್ಕಾರದ ಶಿಕ್ಷಣ‌ ಕೊಡುವುದಕ್ಕೆ  ಹಣ ಬೇಕೆ ಸತ್ಯಜ್ಞಾನವೇ?
ಯಾರೋ ಹೊರಗಿನಿಂದ ಬಂದವರಿಗೆ ಮಾಡುವ‌ ಅತಿಥಿ ಸತ್ಕಾರ ನಮ್ಮವರನ್ನೇ ದೂರ ಮಾಡದಿದ್ದರೆ ಸಾಕು.
ಒಳಗಿದ್ದ ಗೃಹಿಣಿಯರಿಗೆ ಕೊಡದ ಗೌರವ ಹೊರಗಿನ ಮಹಿಳೆಗೆ‌ನೀಡಿದರೆ  ಮನೆಯಿಂದ ಹೊರಬರುವ ಮಹಿಳೆಯರು  ಸ್ವತಂತ್ರವಾಗಿ  ದೂರವಿರುವರು.ಆದರೆ ಇದು  ಭ್ರಮೆಯಷ್ಟೆ. ಎಷ್ಟು ಹೊರಬಂದರೂ ಒಳಗಿರುವ ‌ ಸತ್ಯ ಸತ್ವ ತತ್ವಕ್ಕೆ  ವಿರುದ್ದ  ನಿಂತರೆ  ತಂತ್ರದಡಿ ಜೀವ‌ಅತಂತ್ರಸ್ಥಿತಿಗೆ ತಲುಪಿದಾಗ  ಯಾರೂ ಇರೋದಿಲ್ಲ. ಒಟ್ಟಿನಲ್ಲಿ ವ್ಯವಹಾರ ಇರಲಿ ಅದರೊಳಗೆ ಧರ್ಮ ವಿರಲಿ. ನಮ್ಮತನ ನಮ್ಮವರನ್ನೇ‌ಬಿಟ್ಟು  ಹೊರಗಿನವರೊಂದಿಗೆ ಸಂಬಂಧ  ಬೆಳೆಸಿದರೆ  ಅಂತರವೇ ಹೆಚ್ಚಾಗಿ ಅಂತರದಲ್ಲಿ  ಅವಾಂತರ ಆಗೋದು ಸಹಜ.
 ಬದಲಾವಣೆ ಜಗದ‌ನಿಯಮ ಎಂದಂತೆ ಭೂಮಿ ತಿರುಗೋದನ್ನು ತಡೆಯಲಾಗದು.ಮೇಲಿದ್ದವರು ಕೆಳಗಿರುವರು.ಕೆಳಗಿದ್ದವರು ಮೇಲಿರುವರು. ಹಾಗಾದರೆ ಯಾರು ಮೇಲು ಕೀಳು? ಪ್ರತಿಯೊಂದು ಜನ್ಮದಲ್ಲಿ ಮಾಡಿದ ಋಣ ಅಥವಾ ಸಾಲ ತೀರಿಸಲು  ಭೂಮಿ ಒಂದು ಮಾಧ್ಯಮವಷ್ಟೆ.
ಇಲ್ಲಿ ಎಲ್ಲಾ  ಜೀವಾತ್ಮರೂ ಪರಮಾತ್ಮನ ಅಧೀನರೆ. ನಮ್ಮ ಜನ್ಮ ಎಲ್ಲಿ ಆಗಿದೆಯೋ ಅದರ ಮೂಲ ಧರ್ಮ ಕರ್ಮ ಅರಿತು  ಸಾಲ ತೀರಿಸುವ ಸೇವೆಯಲ್ಲಿ  ಮಾನವ ತೊಡಗಿಸಿಕೊಂಡು   ಮನೆಲಕ್ಮಿಯರನ್ನು  ಗೌರವಿಸಿ  ಸ್ತ್ರೀ ಋಣ ತಾಯಿ ಋಣ ಭೂಮಿ ಋಣ ತೀರಿಸಲು ಸುಜ್ಞಾನ ಅಗತ್ಯವಿದೆ. ‌ವಿಜ್ಞಾನ  ಭೌತಿಕದಲ್ಲಿ ಸಾಕಷ್ಟು  ಮುಂದೆ ನಡೆದರೂ ಅಧ್ಯಾತ್ಮ ಜ್ಞಾನದ ಕೊರತೆಯಿಂದ ಈಗಲೂ  ಹೊರಗಿನವರ ದಾಸರಾಗಿ ಹಣ ಮಾಡೋದೇ ಸರ್ವಸ್ವ ಮಾಡಿಕೊಂಡರೆ ಅಧೋಗತಿ.
ಕಳ್ಳ ಕಳ್ಳತನ ಮಾಡಿದರೆ ವೃತ್ತಿ ಧರ್ಮ ವಾಗುತ್ತದೆ.
ಅದೇ ಪೋಲಿಸ್ ಕಳ್ಳತನಕ್ಕೆ ಸಹಕರಿಸಿ ಹಣ ಮಾಡಿದರೆ ಅಧರ್ಮಕ್ಕೆ ತಕ್ಕಂತೆ ಫಲ.ಹಾಗೆ ಶಿಕ್ಷಕರು ಗುರು ಹಿರಿಯರು
ತಮ್ಮ ತಮ್ಮ ಋಣಭಾರವನ್ನು ತೀರಿಸಿಕೊಳ್ಳಲು ಸ್ವಧರ್ಮ ಸತ್ಕರ್ಮ ಸುಜ್ಞಾನದ ಶಿಕ್ಷಣ ನೀಡುವುದೇ ಆಗಿತ್ತು. ಇದು ದೇಶದೊಳಗೆ ನಡೆಸೋ ಬದಲು ವಿದೇಶದೊಳಗೆ ಹೋಗಿ  ಹಣಮಾಡಿದರೆ  ಭಾರತೀಯರಾಗುವರೆ? ಒಟ್ಟಿನಲ್ಲಿ ಜೀವನ ನಡೆಸಲು  ಹಣ ಬೇಕು.ಅದಕ್ಕೆ ‌ಮೊದಲು ಜೀವಾತ್ಮನ ಋಣ ತೀರಿಸುವ ಸತ್ಯಜ್ಞಾನ ಅಗತ್ಯವಿದೆ.ಇದನ್ನು ಅಧ್ಯಾತ್ಮ ಸಂಶೋಧನೆಯಿಂದ ಮಾಡಬೇಕಿದೆ. ಅಧ್ಯಾತ್ಮ ಕಣ್ಣಿಗೆ ಕಾಣದು.ಅರಿವಿಗೆ ಬರದೆ ಸತ್ಯ ಅರ್ಥ ವಾಗದು. ಅರಿವೇ ಹೊರಗಿನದ್ದಾದರೆ ಸತ್ಯವೂ ಹೊರಗಷ್ಟೆ ಕಾಣೋದು.ಹೊರಗಿನ ಸತ್ಯ   ಅರ್ಧ ಸತ್ಯವಾಗಿ ಅತಂತ್ರಗೊಳಿಸಿದರೆ ಆಳೋದು ಹೊರಗಿನವರೆ ಆಗಿರುವರು.
ಇಲ್ಲಿ ರಾಜಯೋಗದ ಶಿಕ್ಷಣದಲ್ಲಿ  ಆತ್ಮನಿರ್ಭರ ಆಗಬಹುದು.
ರಾಜಕೀಯಕ್ಕೆ ಇಳಿದಷ್ಟೂ ಆತ್ಮದುರ್ಭಲವೇ. ಪ್ರಜೆಗಳ ಜ್ಞಾನಕ್ಕೆ ತಕ್ಕಂತೆ ಪ್ರಜಾಪ್ರಭುತ್ವ. ಪ್ರಜೆಗಳ ಸಹಕಾರಕ್ಕೆ ತಕ್ಕಂತೆ ಸರ್ಕಾರ. ಪೋಷಕರಂತೆ ಮಕ್ಕಳ ಭವಿಷ್ಯ ನಿರ್ಧಾರ. ಗುರುವಿನಂತೆ ಶಿಷ್ಯ. ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ.
ನಮ್ಮ ಸಹಕಾರವಿಲ್ಲದೆ ಏನೂ‌ನಡೆಯುತ್ತಿಲ್ಲ. ಹಾಗಾದರೆ ನಮ್ಮ ಸಹಕಾರ ಸತ್ಯದಲ್ಲಿದೆಯೆ? ಸತ್ಯವೇ ದೇವರಾದಾಗ ಸತ್ಯವಿಲ್ಲದೆ  ದೇವರನ್ನು ಕಾಣಬಹುದೆ? ಕಾಣದ ದೇವರಿಗೆ ದೊಡ್ಡ ನಮಸ್ಕಾರ. ಮಾಡಬಹುದು.ಕಾಣುವ ದೇವರಿಗೆ ನಮಸ್ಕಾರ  ಯಾವ ಕಡೆಗೆ‌ನಡೆದಿದೆ? ಒಳಗಿದ್ದ ತಂದೆತಾಯಿ ಸಂಬಂಧ ಗಳು ವ್ಯವಹಾರಕ್ಕೆ ಇಳಿದರೆ  ಮನೆ ಮನಸ್ಸು ಖಾಲಿಸ್ಥಾನವಾಗುತ್ತದೆ.  ಇದನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ತುಂಬು ಹೃದಯ,ತುಂಬು ಮನಸ್ಸು,ತುಂಬು ಕುಟುಂಬ ತುಂಬಿದ‌ಕೊಡ ಯಾವತ್ತೂ ತುಳುಕುವುದಿಲ್ಲ. ದೇಶವನ್ನು ಹೇಗೆ ಯಾವುದರಿಂದ‌ಯಾರನ್ನು ತುಂಬಿಸಿಕೊಂಡು  ನಡೆಸಿರೋದು? ವಾಸ್ತವದಲ್ಲಿ  ನಿಂತರೆ  ನಮ್ಮ ನೆಲ ಜಲದ ಋಣ ತೀರಿಸುತ್ತಿದ್ದೇವೆಯೆ? ಅಥವಾ ಪರರ  ಋಣ  ಮೈ ಮನೆಯೊಳಗೆ ಸೇರಿಸಿ   ಹೊರಗೆ ನಡೆದಿರುವೆವೋ ? ಇಲ್ಲಿ ಯಾರ ಸಾಲವನ್ನು ಯಾರೂ ತೀರಿಸಲಾಗದು. ಋಣ ತೀರಿಸಲು  ನಮ್ಮ ಸ್ವತಂತ್ರ ಜ್ಞಾನ ಸದ್ಬಳಕೆ ಮಾಡಬೇಕಿತ್ತು.
ಕಲಿಕೆಯ ದಾರಿ ತಪ್ಪಿದಂತೆ ವ್ಯವಹಾರದಲ್ಲೂ ದಾರಿ ತಪ್ಪುತ್ತದೆ. ಆದರೆ ಮೂಲ ತಿಳಿದು ಹಿಂದಕ್ಕೆ ಬರೋದು ಹಿಂದೂ ಸನಾತನದ ಗುರಿಯಾಗಿದೆ. ಮುಂದೆ ಹೋದಷ್ಟೂ ಅಂತರದಲ್ಲಿ ಮಧ್ಯವರ್ತಿಗಳು ಬೆಳೆಯುವರಷ್ಟೆ .ಹಿಂದೆ  ಬರುವ ಮಕ್ಕಳ  ಆಧ್ಯಾತ್ಮಿಕ ‌ಪ್ರಗತಿಯ‌ಬಗ್ಗೆ ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ವ್ಯವಹಾರಕ್ಕೆ ಇಳಿದಾಗ ಹಣವೇ ಸರ್ವಸ್ವ ವಾಗುತ್ತಾ ಜ್ಞಾನ ‌ಹಿಂದುಳಿದಾಗಲೇ ಹೊರಗಿನವರ ವಶವಾಗೋದು ಜೀವನ. ಇದು ದೇಶಕ್ಕೂ ಅನ್ವಯಿಸುತ್ತದೆ.  ಏನಂತೀರ.
ಭಾರತ ಬಿಟ್ಟು ತೊಲಗಿ, ಅಸಹಕಾರ ಚಳುವಳಿ,ಉಪ್ಪಿನ ಸತ್ಯಾಗ್ರಹ...ಇವೆಲ್ಲದರ ಹಿಂದೆ ಅಧ್ಯಾತ್ಮ ಅಡಗಿದೆ.
ಕಣ್ಣಿಗೆ ಕಾಣದ ಅಧ್ಯಾತ್ಮ ಸತ್ಯ ಬಿಟ್ಟು ಕಣ್ಣಿಗೆ ಕಾಣುವ ಭೌತಿಕ ಸತ್ಯ ಹಿಡಿದು ಹೊರಗಿನವರೊಂದಿಗೆ ಗುದ್ದಾಡಿ ದ್ವೇಷ ಹರಡಿದರೆ  ಒಳಗಿನ ಸತ್ಯ ಅರ್ಥ ವಾಗದೆ ಜೀವ‌ಹೋಗುತ್ತದೆ.
ಇದರಿಂದಾಗಿ ಲಾಭ ನಷ್ಟ ಯಾರಿಗೆ? ಎಲ್ಲಾ ಜೀವಾತ್ಮನಿಗಷ್ಟೆ ಪರಮಾತ್ಮನಿಗೇನೂ ನಷ್ಡವಿಲ್ಲ.ಕಾರಣ ಎಲ್ಲರೊಳಗೂ ಇದ್ದು ನಡೆಸೋ ಶಕ್ತಿ ಪರಮಾತ್ಮನೇ ಆಗಿರೋದು. ಅವರವರ ಜ್ಞಾನ  ಅವರ ಜೀವನಕ್ಕೆ ಬಂಡವಾಳ ಆಸ್ತಿ. ಇದು ಹೊರಗಿದೆಯೋ ಒಳಗಿದೆಯೋ ಎನ್ನುವುದು ಮುಖ್ಯ.

ಹೃದಯವಂತಿಕೆಯಿಂದ ಹೃದಯದ ಆರೋಗ್ಯ

ಮಕ್ಕಳು ಯುವಪೀಳಿಗೆಯವರೆಗೂ ಹೃದಯಾಘಾತ  ಹೆಚ್ಚಾಗುತ್ತಿದೆ ಎಂದರೆ ಹೃದಯವಂತಿಕೆ ಇಲ್ಲದ ಶಿಕ್ಷಣದ ಪ್ರಭಾವ ಎಂದರೆ ನಂಬದಿದ್ದರೂ ಇದೇ ಸತ್ಯ.
ಹಿಂದಿನ ಕಾಲದಲ್ಲಿಯೂ ಇಂತಹ ಹೃದಯಹೀನರಿದ್ದರು ಈಗಲೂ ಇದ್ದಾರೆ ಮುಂದೆಯೂ ಇರುವರು ಹೃದಯವನ್ನು ಕದ್ದು ಮಾರೋ ಸ್ಥಿತಿಗೆ  ವಿಜ್ಞಾನ ಬೆಳೆದಿದೆ.ಆದರೆ ಅದರೊಳಗೆ ಇದ್ದ  ಅಮೃತದಂತಹ ಗುಣಜ್ಞಾನದ ಕೊರತೆ ಹೃದಯವನ್ನು ಹಾಳು ಮಾಡುತ್ತಿದೆ. ಮಾನವನ ಹೃದಯಚಿಕಿತ್ಸೆ ಅಧ್ಯಾತ್ಮ ದಿಂದ ಮಾಡೋದಕ್ಕೆ  ಸತ್ಯ ಜ್ಞಾನ ಅಗತ್ಯ.ದೈವೀಕ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ  ಹೃದಯವಂತಿಕೆ ಬರೋದಿಲ್ಲ.ಮಕ್ಕಳು ದೇವರ ಸಮಾನ ಎಂದರು ಆದರೆ ಅವರಿಗೆ ಕೊಡುವ ಶಿಕ್ಷಣ ,ಆಹಾರ ವಿಷಯಗಳು  ಯಾವ ಮಾರ್ಗ ಹಿಡಿದಿವೆ ಎಂದು ಪೋಷಕರು ಗಮನಿಸುವುದಕ್ಕೂ  ಜ್ಞಾನವಿರಬೇಕಿದೆ.
ಪ್ರತಿಯೊಂದು ರಾಜಕೀಯದಿಂದ ಸರಿಪಡಿಸಲಾಗದು. ಹೀಗಾಗಿ ಅವರವರ ಒಳಗಿರುವ ಹೃದಯವನ್ನು  ರಕ್ಷಣೆ ಮಾಡಿಕೊಂಡರೆ  ಭಾರತ ನಿಜವಾದ  ಜ್ಞಾನದ ಬೆಳಕಿನಲ್ಲಿರುವ ಹೃದಯವಂತ ಪ್ರಜೆಗಳನ್ನು ಕಾಣಬಹುದು.
ಕಲಿಕೆಯ ಪ್ರಭಾವ ಕಲಿಗಾಲವು ಕಲಿಸುತ್ತದೆ. ಜೀವನ ಎಂದರೆ ಜೀವಿಗಳ ವನ. ಜೀವವಿದ್ದರಷ್ಟೆ ಜೀವನ. ಜೀವ ಕೊಟ್ಟು ಜೀವನ ಕೊಟ್ಟಿರುವ ಪೋಷಕರು ಮಕ್ಕಳ ಹೃದಯವಂತಿಕೆ  ಬೆಳೆಸುವ  ಸುಜ್ಞಾನ ನೀಡುವುದು ಧರ್ಮ.
ಹಾಗಾದರೆ ಸುಜ್ಞಾನ ಎಲ್ಲಿದೆ? ಹೊರಗಿದೆಯೋ ಒಳಗಿದೆಯೋ?
ನಮ್ಮೊಳಗೇ ಅಡಗಿರುವ  ಉತ್ತಮ ಗುಣವನ್ನು ಮಕ್ಕಳಿಗೆ ತಿಳಿಸಿ ಬೆಳೆಸಿ ಸಂಸ್ಕಾರದ ಕಡೆಗೆ ನಡೆದರೆ ಕಲ್ಮಶದಿಂದ ತನ್ನ ಕೆಲಸ ಮಾಡದ ಎಷ್ಟೋ ನರನಾಡಿಗಳು  ಚುರುಕಾಗುತ್ತದೆ. ಹೃದಯವೂ ಉತ್ತಮವಾಗಿ ಕೆಲಸ ಮಾಡಿದಾಗ  ಈ ಆಘಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ನಮಗೆ ಸಂಬಂಧ ಪಡದ ಅನಾವಶ್ಯಕ ನಕಾರಾತ್ಮಕ ವಿಷಯವಾಗಲಿ ವಸ್ತು ಒಡವೆ ಆಸ್ತಿಯಾಗಲಿ ದೇಹವನ್ನು ಅಶುದ್ದಗೊಳಿಸಿ ಅಸುರಿ ಶಕ್ತಿ ಬೆಳೆಯುತ್ತದೆ. ಅಸುರಿ ಶಕ್ತಿ  ತನ್ನ ಸ್ವಾರ್ಥ ಅಹಂಕಾರ ಕ್ಕೆ ಪ್ರಚೋಧನೆ ನೀಡುತ್ತಾ ಹೃದಯವಂತಿಕೆ  ಹಿಂದುಳಿದರೆ ಹೃದಯ ಸಂಬಂಧಿ ರೋಗ ಬರುತ್ತದೆ. ಇಷ್ಟೇ  ಅಧ್ಯಾತ್ಮ. ವಿಜ್ಞಾನ ತಿಳಿಸೋದಲ್ಲವೆ?
ದೇವರ ಧರ್ಮ ಜಾತಿ ಪಕ್ಷ ಗಳ ಅಂತರದಲ್ಲಿ  ಹೃದಯವಂತಿಕೆ ಮರೆಯಾಗುತ್ತದೆ ಎಂದರೆ ಎತ್ತ ಸಾಗಿದೆ ಮನುಕುಲ?
ಶಂಖದಿಂದ ಬಂದದ್ದೆಲ್ಲಾ ತೀರ್ಥ ವೆಂದರಿತು  ದೈವತ್ವ‌ಮರೆತರೆ  ತೀರ್ಥ ವೂ  ಸ್ವಚ್ಚವಿರದು.
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದಿದ್ದು  ಈಗ ಎಲ್ಲರೂ‌ಮಾಡೋದು ಓಟಿಗಾಗಿ ನೋಟು ಸೀಟಿಗಾಗಿ ಎನ್ನುವ ರಾಜಕೀಯಮಯವಾಗುತ್ತಿದೆ.ಯಾರನ್ನೂ ಯಾರೋ ಆಳಲು ಹೋಗಿ ಹೃದಯಹೀನರಾಗುತ್ತಿರೋದು ದುರಂತ.
ಸಾವು ಎಲ್ಲರಿಗೂ ಇದೆ,ಹೃದಯವೂ ಎಲ್ಲರಿಗೂ ಇದೆ.ಆದರೆ ಹೃದಯವಂತಿಕೆ ಎಲ್ಲರಲ್ಲಿಯೂ ಒಂದೇ ಸಮನಾಗಿರದು. ಇದು ಅವರ ಜ್ಞಾನದ ಮೇಲೇ ನಿಂತಿದೆ. ಯೋಗದಿಂದ ಆರೋಗ್ಯ ರಕ್ಷಣೆ  ಸಾಧ್ಯ.

ವೇದಕ್ಕೂ ಗಾದೆಗೂ ಅಂತರವಿದೆಯೆ?

"ವೇದ ಸುಳ್ಳಾದರೂ  ಗಾದೆ ಸುಳ್ಳಾಗದು" ಎಂದಿರುವರು. ವೇದಕಾಲದಿಂದಲೂ ಜಗತ್ತು ಬದಲಾಗುತ್ತಲೇ ಇದೆ. ಇದಕ್ಕೆ ಕಾರಣವೇ ಅನುಭವದ ಜ್ಞಾನ. ಇದು ಕೆಟ್ಟದ್ದೋ ಒಳ್ಳೆಯದೋ ಒಟ್ಟಿನಲ್ಲಿ ಜೀವಾತ್ಮನ ಅನುಭವಕ್ಕೆ ‌ಬಂದದ್ದೇ  ಗಾದೆ ಮಾತಾಗುತ್ತಾ ಮುಂದೆ ನಡೆದಿದೆ. ವೇದ ಶಾಸ್ತ್ರ ಪುರಾಣಗಳ ಹಿಂದಿರುವ ಅಧ್ಯಾತ್ಮಿಕ ಸತ್ಯವರಿತವರಿಗೆ ವಿವೇಕ ಹೆಚ್ಚಾಯಿತು. ವಿವೇಕಾನಂದ ವಿಚಾರವನ್ನು  ವೇದನೆಯಿಲ್ಲದೆ ಕಾಣುವ ಆನಂದ. ಹಾಗೆ ವಿಷಯವನ್ನು ವೇದ ಶಾಸ್ತ್ರ ಪುರಾಣಗಳಿಂದ ಅರಿತು  ಕಾಣುವ ಆತ್ಮಾನಂದ ಎಂದರೆ ಸರಿಯಾಗಬಹುದು.
ಕಾಲದ ಪ್ರಭಾವದಿಂದಾಗಿ ಕಲಿಕೆಯ ದಾರಿ ತಪ್ಪಿದೆ. ವಿವೇಕವನ್ನು ಹೊರಗಿನಿಂದ ಬೆಳೆಸುವ. ಪ್ರಯತ್ನ ಸಾಗಿದೆ. ಆದರೆ ಆನಂದ ಯಾರಿಗೆ ಸಿಕ್ಕಿದೆ? ಯಾವುದರಲ್ಲಿ ಸಿಗುತ್ತಿದೆ? ಯಾರು ಕೊಡುತ್ತಿರುವುದು ಎಂದರೆ ತಾತ್ಕಾಲಿಕ ಸಂತೋಷಕ್ಕಾಗಿ ಶಾಶ್ವತವಾದ ವಿವೇಕ ಮರೆತು , ಸಂಸಾರದ ಜವಾಬ್ದಾರಿಯನ್ನು  ಸರ್ಕಾರದ ಮೇಲೆ ಏರಿಸಿ,  ನಿಷ್ಟೆಯಿಲ್ಲದೆ ಪ್ರಾಮಾಣಿಕತೆಯೂ ಇಲ್ಲದೆ  ಹಣದ ಹಿಂದೆ ನಡೆದಷ್ಟೂ ಅವಿವೇಕತನದಿಂದ  ಮಾನವನ ಜೀವನ  ವ್ಯರ್ಥ ವಾದರೂ ಯಾರೂ ಸತ್ಯ ತಿಳಿಸೋದಿಲ್ಲ.ತಿಳಿಸಿದರೂ ಅರ್ಥ ವಾಗದ ಪರಿಸ್ಥಿತಿ. ಒಟ್ಟಿನಲ್ಲಿ ಮೇಲಿರುವ ಶಕ್ತಿಗಿಂತ ಕೆಳಗಿರುವ ಶಕ್ತಿಯ ದಾಸರಾದವರ  ಸಂಖ್ಯೆ ಬೆಳೆದಷ್ಟೂ ಅಸುರಿ ಶಕ್ತಿಯ ಅಧೀನದಲ್ಲಿ  ದೈವಶಕ್ತಿ. ಇದಕ್ಕೆ ಕಾರಣವೇ ಮಧ್ಯವರ್ತಿ ಮಾನವನ ಸಹಕಾರ. ನಮ್ಮ ಒಳ್ಳೆಯ ಶಕ್ತಿಯನ್ನು ಯಾರಿಗೆ ಕೊಡಬೇಕಿದೆ? ಯಾರೊಳಗೆ ಯಾರು  ಇರೋದು? ಕಣ್ಣಿಗೆ ಕಾಣದ ಶಕ್ತಿಯಿಂದ ಏನಾದರೂ ಸಾಧಿಸಬಹುದು.ಆದರೆ ಅದರ ಹಿಂದಿನ ಗುರಿ ಉತ್ತಮವಿದ್ದರೆ ಸದ್ಗತಿ.ಇಲ್ಲದಿದ್ದರೆ ದುರ್ಗತಿ.

ನಾಮಸ್ಮರಣೆಯಿಂದಲೇ ಪರಮಾತ್ಮನ ದರ್ಶನ

🚩🔯🌸🌄⚛🌅🌸🔯

*ಧ್ಯಾಯನ್ ಕೃತೇ ಯಜನ್ ಯಜ್ಞೈಃ ಸ
*ತ್ರೇತಾಯಾಂ ದ್ವಾಪರೇಽರ್ಚಯನ್ |*
*ಯದಾಪ್ನೋತಿ ತದಾಪ್ನೋತಿ*
*ಕಲೌ ಕೇಶವಕೀರ್ತನಾತ್ ||*
(ವಿಷ್ಣುಪುರಾಣ)

ಕೃತಯುಗದಲ್ಲಿ ಧ್ಯಾನಾದಿಗಳ ಮೂಲಕ, ತ್ರೇತಾಯುಗದಲ್ಲಿ ಯಜ್ಞಯಾಗಾದಿಗಳ ಮೂಲಕ, ದ್ವಾಪರಯುಗದಲ್ಲಿ ಅರ್ಚನಾದಿಗಳ ಮೂಲಕ ಯಾವ ಪರಮಪದವನ್ನು ಪಡೆಯಲಾಗುತ್ತಿತ್ತೋ, ಅದೇ ಪರಮಪದವು ಕಲಿಯುಗದಲ್ಲಿ ಕೇಶವನನ್ನು (ಪರಮಾತ್ಮನನ್ನು) ಕೀರ್ತಿಸುವುದರ ಮೂಲಕವೇ ದೊರೆಯುತ್ತದೆ.

 ಕೃತಯುಗದ ಸತ್ಯದ ಧ್ಯಾನವೇ ದೈವತ್ವ ತ್ರೇತಾದ ಯಜ್ಞ ಯಾಗವೇ ಪ್ರಧಾನ ಪರಮಾತ್ಮನ ಸೇವೆ, ದ್ವಾಪರದಲ್ಲಿ ದೇವತಾರ್ಚನೆಗಳಿಂದ‌ ಪರಮಾತ್ಮನ  ಸೇವೆ ಆಗಿತ್ತು ಕಲಿಯುಗದಲ್ಲಿ  ದೇವರ ನಾಮ ಸಂಕೀರ್ತನೆಯಿಂದಲೇ  ತಮ್ಮ ಕಾಯಕವನ್ನು ಸತ್ಯ ಧರ್ಮ ದಿಂದ ‌ನಡೆಸಿದವರಿಗೆ ಪರಮಾತ್ಮನ ದರ್ಶನ ವಾಗಿದೆ ಎಂದಾಗ  ಇಂದು‌ ನಾಮಜಪದಿಂದಲೇ  ಪರಮಾತ್ಮನ ಕಡೆಗೆ ನಡೆಯುವ  ಅವಕಾಶವಿದೆ. ಆದರೆ‌, ಕಲಿಕೆಯೇ  ಹೊರಮುಖವಾದಾಗ ಇದು ಕಷ್ಟವಾಗುತ್ತದೆ. ಮನಸ್ಸು  ಅಂತರಾತ್ಮನ ಕಡೆಗೆ ನಡೆಸೋದೇ ಅಧ್ಯಾತ್ಮ ಸಾಧನೆ.  ಹೊರಗಿನ ದೇವರನ್ನು  ಬೇಡುತ್ತಾ ಹೋದಷ್ಟೂ ಒಳಗಿನ ದೇವರ ಸಾಲ ಬೆಳೆಯುತ್ತದೆ. ಆತ್ಮಕ್ಕೆ ತೃಪ್ತಿ ಸಿಗಬೇಕಾದರೆ  ಬೇಡೋದರ ಬದಲು ನೀಡೋದರತ್ತ ನಡೆಯಬೇಕು. ಬೇಡೋನು ದೀನ ಸ್ಮರಿಸೋನೆ ಜಾಣ. ನಾಮಸ್ಮರಣೆಯಿಂದ  ನೀಡೋ ಶಕ್ತಿ ಹೆಚ್ಚಾದಾಗ  ಹಾಸಿಗೆ ಇದ್ದಷ್ಟು ಕಾಲುಚಾಚುವ ಬುದ್ದಿಯೂ ಬೆಳೆಯುತ್ತದೆ. ಯಾವುದೂ ಅತಿಯಾಗಬಾರದು.
ಅತಿಯಾದದ್ದನ್ನು  ದಾನ ಮಾಡಬೇಕು.ದಾನ ಸತ್ಪಾತ್ರರಿಗೆ ಆಗಬೇಕು, ನಮ್ಮದಲ್ಲದ ಅನಾವಶ್ಯಕವಾದದ್ದು ಕೊಟ್ಟರೆ ದಾನವಾಗದು. ದಾನ ದಾನವರಿಗೆ ಮಾಡಬಾರದು. ಹೀಗೇ ಕೆಲವು ನಿಶಿದ್ದವಾದದ್ದನ್ನು  ಅರಿತು  ಅದನ್ನು ಬಿಟ್ಟು ಮಾನವ ನಡೆದರೆ, ಯಾರ ನಾಮ ಸ್ಮರಣೆ ಮಾಡಿದರೆ ಉತ್ತಮ ಅಧಮ ಎನ್ನುವ ಸತ್ಯ ಅರ್ಥ ವಾಗುತ್ತದೆ.
ಯಾವಾಗಲೂ ರಾಜಕೀಯ ಆಟ,ಊಟ,ಓಟ ಮಾರಾಟದಲ್ಲಿರುವ ಮನಸ್ಸಿಗೆ  ಅದರದ್ದೇ ಧ್ಯಾನವಾದಾಗ ಅದೇ ಕಾಣೋದು. ಇದರಿಂದಾಗಿ ಕಷ್ಟ ನಷ್ಟ  ಒಂದರ ಹಿಂದೆ ಒಂದು ಬರುತ್ತದೆ. ಹಾಗಂತ ಅದಿಲ್ಲದೆ ಜೀವನವಿಲ್ಲ,ಅದರ ಜೊತೆಗೆ ಪರಮಾತ್ಮನ ಧ್ಯಾನ ಬೆರೆತು ಇತಿಮಿತಿಗಳನ್ನು ಕಾದುಕೊಂಡರೆ ಸದ್ಗತಿ. 
ದೇವಸ್ಥಾನದಲ್ಲಿ  ದೇವರ ಸ್ಮರಣೆ ಮಾಡೋದು ಸರಿ.ಅದರಲ್ಲಿ ರಾಜಕೀಯ ತಂತ್ರ ನಡೆಸೋದು ಸರಿಯಲ್ಲ. ಕಾರಣ ಭಕ್ತರೆ  ದೇವರಿಗೆ ಪ್ರಿಯ.ಅವರನ್ನು  ಆಳೋದರಲ್ಲಿ  ಧರ್ಮ ವಿರದು. ಒಟ್ಟಿನಲ್ಲಿ ಕಲಿಯುಗದಲ್ಲಿ  ತಲೆಗೆ ತುಂಬಿದ ವಿಚಾರವೇ ಮೈಯೆಲ್ಲಾ ಹರಡಿಕೊಂಡು ನಡೆಸುವುದರಿಂದ, ತಲೆಯಲ್ಲಿ  ದೇವರಿಗೆ ಸ್ಥಾನ ಇದ್ದರೆ ದೇಹವೇ ದೇಗುಲ.
ಇದನ್ನು  ದಾಸ ಶರಣರು ತಿಳಿಸುತ್ತಾ ನಡೆದು‌ ಪರಮಾತ್ಮನ ಸೇರಿದ್ದಾರೆಂದರೆ  ಕಲಿಯುಗದ ಕಲಿಕೆಯಲ್ಲಿ ಬದಲಾವಣೆ ಅಗತ್ಯವಿದೆ. 

ತಾಯಿಯೇ ಮೊದಲ ಗುರು,ತಂದೆ ಎರಡನೇ ಗುರು ನಂತರ ಹೊರಗಿನ ಗುರುವರ್ಯರ ಉಪದೇಶ ಆದೇಶ ಸಂದೇಶಗಳನ್ನು  ಅನುಸರಿಸುತ್ತಾ ಮಕ್ಕಳು ಜೀವನದ ಸತ್ಯಾಸತ್ಯತೆಯನರಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವರು. ಆದರೆ ಇದರಲ್ಲಿ ಧರ್ಮ ಮತ್ತು ಸತ್ಯ ಇಲ್ಲದೆ ಹೋದಾಗ  ದಾರಿತಪ್ಪಿ ನಡೆಯೋದು ಸಹಜ. ಎಲ್ಲರಿಗಿಂತ ಮೊದಲೇ ಒಳಗೆ ಸೇರಿರುವ ಆತ್ಮನ ಬಗ್ಗೆ ತಿಳಿಸೋರೆ ನಿಜವಾದ ಗುರುವಾಗುವರೆನ್ನುವುದು ಅಧ್ಯಾತ್ಮ .
ಕಾಣದ ದೇವರನ್ನು ಕಾಣುವ ಗುರು ತೋರಿಸಬೇಕಾದರೆ  ಕಷ್ಟಪಟ್ಟು ಕಾಣದ  ಲೋಕದೆಡೆಗೆ  ನಡೆದವರು  ಗುರುವಾದರು. ಭೂಮಿಯ ಮೇಲಿರುವಾಗ ಎಲ್ಲಾ ಮಾನವರೆ ಹೋದ ಮೇಲೆ ಅವರು ಏನು ಬಿಟ್ಟು ಕೊಟ್ಟು ಕಲಿಸಿ ತಿಳಿಸಿದ್ದರೂ ಅದರ ಮೇಲೇ  ಜೀವದ ಪಯಣ.
ಪ್ರತಿಯೊಬ್ಬರೂ ವಿಶೇಷ ಶಕ್ತಿಯಿರುವ ವಿಜ್ಞಾನಿಗಳಾಗಬಹುದು. ಆದರೆ ಎಲ್ಲರಿಗೂ ವಿಶೇಷಜ್ಞಾನದ ಗುರು ಸಿಗದ ಕಾರಣ ಗುರುತಿಸಲಾಗದೆ ಜೀವಾತ್ಮ ಹಿಂದುಳಿಯುವುದಷ್ಟೆ. ಎಲ್ಲಾ ನಮ್ಮ ಕೈಯಲ್ಲಿಲ್ಲವಾದರೂ ನಾವೇ ಕೈ ಜೋಡಿಸಿ ಬೆಳೆಸಿರುವಾಗ ಕೈ  ಸರಿಯಿಲ್ಲ ಎಂದರೆ ನಮ್ಮದೇ ತಪ್ಪಾಗುತ್ತದೆ. ಕೈ ಕೈ ಸೇರಿಯೇ ಚಪ್ಪಾಳೆ. ಚಪ್ಪಾಳೆ ಸದ್ದು‌ ಹೆಚ್ಚಾದಾಗ  ನಮ್ಮ  ಮನಸ್ಸು ಪರಮಾತ್ಮನ ಸ್ಮರಣೆ ಮಾಡುವುದೆ? ಇಲ್ಲವೆಂದರೆ  ಚಪ್ಪಾಳೆಯ ಹಿಂದೆ ಪರಮಾತ್ಮ  ಇರುವನೆ? ಇದ್ದರೆ  ಕಾಣುವುದಿಲ್ಲ ಜೊತೆಗೆ ಆ ಕ್ಷಣ‌ನೆನಪಿಗೂ ಬರೋದಿಲ್ಲವೆಂದರೆ‌ನಷ್ಟ ಯಾರಿಗೆ? ಎಲ್ಲಾ ಕೆಲಸವೂ ಅವನ ಪ್ರೇರಣೆಯಿಂದ ನಡೆಯುವಾಗ  ಎಲ್ಲವೂ ಅವನ ವಶವೇ. ಹೀಗಾಗಿ  ಅವನು ಬೇರೆಯಾಗಿಲ್ಲ.ಪ್ರತಿಯೊಂದು ಉಸಿರಿನಲ್ಲೂ ಹೆಸರಿನಲ್ಲೂ‌  ಇದ್ದು  ನಡೆಸುವಾಗ ಅವನ ಸ್ಮರಣೆಯಲ್ಲಿಯೇ ಇದ್ದು  ಕಾಯಕವೇ ಕೈಲಾಸವೆಂದು ನಡೆದವರು  ಪರಮಾತ್ಮನಿಗೆ ಶರಣಾಗಿದ್ದರು. ಈಗಿದು ಹೊರಜಗತ್ತಿನಲ್ಲಿ   ಹೊರಗಿನ ವ್ಯವಹಾರದಲ್ಲಿ  ಮನಸ್ಸು  ಓಡುತ್ತಾ ಒಳಗಿದ್ದ  ನಮ್ಮವರ ಹೆಸರೇ ನಮಗೆ ತಿಳಿಯದು.ಇನ್ನು ಒಳಗೇ ಕುಳಿತು ನಡೆಸಿರುವ ಆ‌ಶಕ್ತಿಯ ಹೆಸರು ನೆನಪಾಗುವುದೆ? ಆದರೆ ಮಾತ್ರ  ಸೇವೆಯಾಗುತ್ತದೆ.

ಭಾಗ್ಯವಂತರು ಒಳಗಿರುವರು

🌹 *ಸ್ಪೂರ್ತಿ ಕಿರಣ* 🌹
*ಜಗತ್ತಿನ ಭಾಗ್ಯವಂತ ವ್ಯಕ್ತಿ ಯಾರೆಂದರೆ.ಅವನ ಹತ್ತಿರ ಆಹಾರ ಜೊತೆ ಹಸಿವು ಇರಬೇಕು.ಹಾಸಿಗೆ ಜೊತೆ ನಿದ್ರೆ ಇರಬೇಕು.ಹಣದ ಜೊತೆ ಧರ್ಮ ಇರಬೇಕು.ಜೀವನದಲ್ಲಿ ಶಾಂತವಾಗಿರಬೇಕೆಂದರೆ ಮರೆಯಲಾಗದ ವ್ಯಕ್ತಿಗಳನ್ನು ಕ್ಷಮಿಸಿಬಿಡಬೇಕು,ಕ್ಷಮಿಸಲಾಗದ ವ್ಯಕ್ತಿಗಳನ್ನು ಮರೆತುಬಿಡಬೇಕು*.*

ಭಾಗ್ಯ ಹೊರಗಿನ ಸರ್ಕಾರದಿಂದ ಸೇರೋದೇ ಬೇರೆ ಒಳಗಿನ ಸರ್ಕಾರದಿಂದ ಸೇರೋದೆ ಬೇರೆ. ಒಂದು ಭೌತಿಕದೆಡೆಗೆ ನಡೆಸಿದರೆ ಇನ್ನೊಂದು ಅಧ್ಯಾತ್ಮದೆಡೆಗೆ ನಡೆಸುತ್ತದೆ.ಒಂದು ಸಾಲ ಬೆಳೆಸಿದರೆ  ಇನ್ನೊಂದು ಸಾಲದಿಂದ ಬಿಡುಗಡೆಗೊಳಿಸುತ್ತದೆ.ಇಲ್ಲಿ ಸರ್ಕಾರ ಎಂದರೆ ಸಹಕಾರ ಎಂದರ್ಥದಲ್ಲಿ  ಮಾನವನಿಗೆ  ಬೇಕಾಗಿದ್ದೆಲ್ಲ ಸುಲಭವಾಗಿ ಹೊರಗೆ ಹಾಗು ಒಳಗೆ ಕೊಡುವವರು ಇದ್ದಾಗ ಸ್ವಾರ್ಥ ಅಹಂಕಾರ  ಬೆಳೆದು ಅತಿಆಸೆಯ ದಾಸರಾಗಿ ಸಾಲದ. ಶೂಲದಲ್ಲಿ  ಜೀವಾತ್ಮ‌ನರಳುವುದು ಸಹಜ.ಸಾಲ ತೀರಿಸದೆ ನಿದ್ರೆ ಬರದು.ನಿದ್ರೆ ಬರದೆ ಆಹಾರ ಸೇವಿಸಿದರೆ ಜೀರ್ಣ ವಾಗದು. ಜೀರ್ಣವಾಗದೆ  ಆರೋಗ್ಯ ವೃದ್ದಿಯಾಗದು. ಆರೋಗ್ಯ ಭಾಗ್ಯವೇ ಎಲ್ಲದಕ್ಕಿಂತ ಶ್ರೇಷ್ಠ. ಆದರೆ  ಇದನ್ನು ಹೊರಗಿನ ಔಷಧದಿಂದ ಸರಿಪಡಿಸಲು ಸಾಕಷ್ಟು ಹಣ ಬೇಕು. ಇದನ್ನು ಅಧ್ಯಾತ್ಮದ ಯೋಗದಿಂದ  ಗಳಿಸಲು ಸುಜ್ಞಾನ ಅಗತ್ಯವಿದೆ. ಸುಜ್ಞಾನದಿಂದ ಗಳಿಸಿದ ಹಣವನ್ನು ದಾನಧರ್ಮ ಕ್ಕೆ ಬಳಸಲು ಉತ್ತಮ ಸರ್ಕಾರದ ಅಗತ್ಯವಿದೆ. ಮನೆಯೊಳಗೆ ಹೊರಗೆ ಇಂತಹ ಸರ್ಕಾರವಿದ್ದರೆ  ಸುಖನಿದ್ರೆ ಸಾಧ್ಯ.
ಸುಖನಿದ್ರೆ ಎಂದು ಸಾವಿಗೆ ಹೇಳುವರು.
ಯಾರಿಗೆ ಕೊನೆಗಾಲದಲ್ಲಿ ಸುಖ ನಿದ್ರೆ,ನೆಮ್ಮದಿ ಆತ್ಮತೃಪ್ತಿ ಇರುವುದೋ  ಅದೇ‌ನಿಜವಾದ ಸ್ವರ್ಗ ಎನ್ನುವುದು ಅಧ್ಯಾತ್ಮ ಸತ್ಯ. ಇದು ಕರ್ಮ ಫಲದ ಲೆಕ್ಕಾಚಾರವಾಗಿರುತ್ತದೆ. ಯಾರಿಗೂ ಈ ಲೆಕ್ಕಾಚಾರ ಸಂಪೂರ್ಣ ಅರ್ಥ ವಾಗದು. ಪರಮಾತ್ಮನ  ವಶದಲ್ಲಿರುವ ಜೀವಾತ್ಮನಿಗೆ ಪಾಪ ಪುಣ್ಯ ಲಾಭ‌ನಷ್ಟಗಳ ಸುಳಿಯಲ್ಲಿ  ಸುಖ ದು:ಖಗಳ ನಡುವೆ ಜೀವನ ನಡೆಸೋದನ್ನು ಯಾವುದೇ  ಸರ್ಕಾರ ತಡೆಯಲಾಗದು ಎನ್ನುವುದು  ಪೂರ್ಣ ಸತ್ಯ. ನಾನು ಹೋಗುವ ವರೆಗೆ ಲೆಕ್ಕಾಚಾರ ಮುಗಿಯದು. ಆದ್ದರಿಂದ ಸಾಧ್ಯವಾದಷ್ಟು  ಲೆಕ್ಕಾಚಾರದಿಂದ ದೂರವಿದ್ದು ಪಾಲಿಗೆ ಬಂದದ್ದು ಪಂಚಾಮೃತವೆಂದು ಸೇವಿಸಿದರೆ ಉತ್ತಮ ನಿದ್ರೆ.ಇದೇ ಜೀವನ್ಮುಕ್ತಿಯ ಮಾರ್ಗ ಎಂದಿರುವರು ಮಹಾತ್ಮರಾದವರು. ಆದರೆ ಮಾಯಾವಶದಲ್ಲಿರುವ ಜೀವನಿಗೆ ಪರಮಾತ್ಮನ ದರ್ಶ ನವಾಗದೆ  ಭೂಮಿಯಲ್ಲಿ ‌ಮಲಗಿ‌ನಿದ್ರೆ ಮಾಡೋದೇ ಸುಖವಾದಾಗ  ಮಲಗುವ‌ ಮೊದಲು  ಪರಮಾತ್ಮನ ಸ್ಮರಣೆ ಮಾಡುವ ಭಾಗ್ಯವಿದ್ದರೆ ಅದೇ  ಯೋಗವಾಗಬಹುದು.  ಬೇಡೋನು ದೀನ ಸ್ಮರಿಸೋನೇ ಜಾಣ. ಯಾರನ್ನು ಬೇಡಿದರೂ ಸಾಲವೇ.
ಸಾಲವೇ ಅದು. 
ವ್ಯಕ್ತಿಗಳ‌ಮೂಲಕವೇ ಶಕ್ತಿ ತನ್ನ ಕೆಲಸ ಮಾಡಿಸೋದು. ತನ್ನ ದೈಹಿಕಸುಖಕ್ಕೆ ಸ್ಪಂದಿಸುವವರು ಒಳ್ಳೆಯವರೆನಿಸಿ ಅಧ್ಯಾತ್ಮ ಸುಖವನ್ನು ‌ನಿರ್ಲಕ್ಯ ಮಾಡಿದರೆ ಕೊನೆಯಲ್ಲಿ  ದೈಹಿಕ ಸುಖವೂ ಇರದು ಅಧ್ಯಾತ್ಮ ಸುಖವೂ ಇರದು. ಯಾರನ್ನು ದ್ವೇಷ ಮಾಡಿದರೂ ಪರಮಾತ್ಮನ ಅರಿವಾಗದು.‌ಹೀಗಾಗಿ ಆಗೋದೆಲ್ಲಾ ಒಳ್ಳೆಯದಕ್ಕೆ ಎಲ್ಲರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ನಾವು ಹೇಗೆ ಬಳಸಿಕೊಳ್ಳುವೆವೋ ಹಾಗೆ ಬೆಳೆಯುತ್ತದೆ. ಇದರಿಂದ ಸಾಲಮನ್ನಾ ಆಗುವುದೆ? ಅಥವಾ ಬೆಳೆಯುವುದೆ ಎನ್ನುವ ಅರಿವಿದ್ದರೆ  ಅದೇ ಜ್ಞಾನದ ಲಕ್ಷಣವಾಗುತ್ತದೆ. ಕಷ್ಟ ನಷ್ಟ ಲಾಭ‌ನಷ್ಟ ಎಲ್ಲಾ ವ್ಯವಹಾರಿಕವಾದರೆ ಧರ್ಮ ಕುಸಿಯುತ್ತದೆ. ಧರ್ಮ ಕುಸಿದಾಗ ಸತ್ಯ ಅರ್ಥ ವಾಗದೆ ಜೀವಹೋಗುತ್ತದೆ .ಜೀವವೇ ಹೋದ‌ಮೇಲೆ  ಆಸ್ತಿ ಹಣ ಅಧಿಕಾರ ಎಲ್ಲಾ ಪರರ ಪಾಲಾಗುತ್ತದೆ. ಹಾಗಾಗಿ ಜ್ಞಾನವನ್ನು ಆಸ್ತಿ ಮಾಡಿಕೊಂಡವರು  ಹೊರಗಿನ ಸರ್ಕಾರ ಒಳಗಿನ ಸರ್ಕಾರಕ್ಕೆ ಒತ್ತುಕೊಡದೆ ಸ್ವತಂತ್ರ ವಾಗಿ  ಆತ್ಮರಕ್ಷಣೆಯ ಕಡೆಗೆ ನಡೆದರು.
ಈಗ ಕಾಲ ಬದಲಾಗಿದೆ ಜನಬಲ ಹಣಬಲ ಅಧಿಕಾರ ‌ಬಲ ಒಳಗೆ ಹೊರಗೆ ಓಡುತ್ತಿದೆ. ಓಡುತ್ತಿರುವವರ ಹಿಂದೆ ಮನಸ್ಸೂ ಓಡುತ್ತಿದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಯೋಗ  ಜನ‌ಕಲಿಯುತ್ತಿದ್ದಾರೆಂದರೆ  ಮಾನವನಿಗೆ ಬದಲಾವಣೆ ಒಳಗೇ ಆದಾಗ  ನಿಜವಾದ ಸುಖದ ಅರಿವಾಗುತ್ತದೆ. ಹೀಗಾಗಿ‌ಹಿಂದಿನವರು ಹಿಂದೂಗಳಾಗಿಯೇ ಸನಾತನ ಧರ್ಮದ ಸೂಕ್ಮ ಸತ್ಯವನರಿತು ಅವರವರ‌ಮನೆ ಮನಸ್ಸನ್ನು  ಸ್ವತಂತ್ರ ವಾಗಿರುವ ಆತ್ಮಜ್ಞಾನದ ಶಿಕ್ಷಣ ಪಡೆದು ಅಧ್ಯಾತ್ಮ ಸಂಶೋಧನೆಯಿಂದ  ದೇಹವನ್ನು ದೇಶವನ್ನು ವಿಶ್ವ ಗುರು ಸ್ಥಾನಕ್ಕೆ ತಂದಿದ್ದರು.ಈಗ ಹೊರಗೆ ನಡೆದರೆ ಸತ್ಯ ಅರಿವಿಗೆ ಬರುವುದೆ? ಒಟ್ಟಿನಲ್ಲಿ ದಾರಿ ಒಳಗಿದೆ. ನಿದ್ರೆ ಊಟ ಮಾಡಲು ಪುರುಸೊತ್ತಿಲ್ಲದೆ ಹಣಸಂಪಾದನೆಯತ್ತ ನಡೆದ ಮಾನವನಿಗೆ  ತನಗೆ ತಾನೇ ಶತ್ರುವಾಗಿರುವ ಸತ್ಯದ ಅರಿವಿಲ್ಲದೆ  ಹೊರಗಿನವರನ್ನು ಎಲ್ಲದ್ದಕ್ಕೂ ಕಾರಣವೆಂದು ಹೋರಾಟಕ್ಕೆ ಇಳಿದರೆ ಜ್ಞಾನ ಬರೋದಿಲ್ಲ.