ನಾನ್ಯಾರು?

“ದೇವರೊಂದಿಗೆ ಮಾತನಾಡಲು ಪದಗಳೇ ಬೇಕಿಲ್ಲ… ಕೆಲವೊಮ್ಮೆ ಮೌನವಾಗಿ ಅವನ ನೆಲೆಯಲ್ಲಿ ಕುಳಿತುಕೊಳ್ಳುವುದೇ ಸಾಕು. ನಮ್ಮ ಮನಸ್ಸು ಹೇಳಲಾಗದ್ದನ್ನೂ ಅವನು ಕೇಳುತ್ತಾನೆ. ಹಾಗಾ...

Sunday, April 9, 2023

ಭಕ್ತಿಯೋಗದಲ್ಲಿ ದೇಶಭಕ್ತಿ ಇಲ್ಲವೆ?

ಭಗವದ್ಗೀತೆ ಯ 12 ನೇ ಅಧ್ಯಾಯವು ಭಕ್ತಿಯೋಗವನ್ನು ತಿಳಿಸುತ್ತದೆ. ಇಲ್ಲಿ ಭಕ್ತಿ ಆಂತರಿಕ ಶಕ್ತಿ, ಯೋಗವು ಪರಮಾತ್ಮನ ಸೇರುವುದಾಗಿದೆ. ಇದನ್ನು ದೇಶಭಕ್ತಿಯ ವಿಚಾರಕ್ಕೆ ತಂದರೆ ಭಗವಂತನೊಳಗೆ  ದೇಶವಿದೆ, ದೇಶದೊಳಗೆ ದೇಶಭಕ್ತರಿರಬೇಕು, ದೇಶಭಕ್ತರಿಂದ ದೇಶದ ಧರ್ಮ ರಕ್ಷಣೆ  ಆಗಬೇಕು. ವಿದೇಶದಲ್ಲಿ ‌ಕುಳಿತು ದೇಶದ ಬಗ್ಗೆ ಚಿಂತನೆ ನಡೆಸುವುದಕ್ಕೂ ದೇಶದೊಳಗೆ ಇದ್ದು ದೇಶಭಕ್ತಿ ಬೆಳೆಸಿಕೊಂಡು   ಯೋಗದಿಂದ ಸೇರುವುದಕ್ಕೂ ವ್ಯತ್ಯಾಸವಿಷ್ಟೆ. ಹೊರಗಿನದು ತಾತ್ಕಾಲಿಕ ಒಳಗಿನ ಶಕ್ತಿ ಭಕ್ತಿ ಶಾಶ್ವತ.
ಶಾಶ್ವತವನ್ನು ಬಿಟ್ಟು ತಾತ್ಕಾಲಿಕ ತಂತ್ರವನ್ನು ಸತ್ಯವೆಂದು  ನಂಬಿ ನಡೆದವರಿಗೆ  ಒಳಗೇ ಇದ್ದ ಶಕ್ತಿಯ ಅರಿವಿಲ್ಲ. ಎಲ್ಲಾ ರಾಜಕೀಯಮಯವಾದರೆ ತಂತ್ರವೇ  ತತ್ವ ಬಿಟ್ಟು ನಡೆಯುತ್ತದೆ.ತತ್ವಜ್ಞಾನದಿಂದ ಮಾತ್ರ ಯೋಗ ಕೂಡಿ ಬರೋದು. ಭಗವಂತನು ಸರ್ವಾಂತರ್ಯಾಮಿ. ಇಡೀ ವಿಶ್ವವ್ಯಾಪಿಯಾಗಿರುವ ಪರಮಾತ್ಮನ ಕಾಣೋದು ಎಲ್ಲರಿಗೂ ಅಸಾಧ್ಯ. ಆದರೆ ದೇಶಭಕ್ತಿ ಹಾಗಲ್ಲ. ದೇಶದೊಳಗೆ ಇದ್ದು ದೇಶ ಕಾಣದೆ ವಿದೇಶ ಕಂಡರೆ ಉಪಯೋಗವಿಲ್ಲ. ಹೀಗಾಗಿ   ಪ್ರಜಾಪ್ರಭುತ್ವದ ಭವಿಷ್ಯ ನಿರ್ಣಯ ಮಾಡುವ‌  ದೇಶಭಕ್ತಿ ಯು ಪ್ರಜೆಗಳ ಒಳಗೆ ಇದ್ದರೆ  ಮತದಾನ  ಉತ್ತಮವಾಗಿರುತ್ತದೆ.  
ಶಾಶ್ವತವನ್ನು ಬಿಟ್ಟು ತಾತ್ಕಾಲಿಕ ತಂತ್ರವನ್ನು ಸತ್ಯವೆಂದು  ನಂಬಿ ನಡೆದವರಿಗೆ  ಒಳಗೇ ಇದ್ದ ಶಕ್ತಿಯ ಅರಿವಿರಲ್ಲ. ಎಲ್ಲಾ ರಾಜಕೀಯಮಯವಾದರೆ ತಂತ್ರವೇ  ತತ್ವ ಬಿಟ್ಟು ನಡೆಯುತ್ತದೆ.ತತ್ವಜ್ಞಾನದಿಂದ ಮಾತ್ರ ಯೋಗ ಕೂಡಿ ಬರೋದು. ಭಗವಂತನು ಸರ್ವಾಂತರ್ಯಾಮಿ. ಇಡೀ ವಿಶ್ವವ್ಯಾಪಿಯಾಗಿರುವ ಪರಮಾತ್ಮನ ಕಾಣೋದು ಎಲ್ಲರಿಗೂ ಅಸಾಧ್ಯ. ಆದರೆ ದೇಶದೊಳಗೆ ಇದ್ದು ದೇಶ ಕಾಣದೆ ವಿದೇಶ ಕಂಡರೆ ಉಪಯೋಗವಿಲ್ಲ. ಹೀಗಾಗಿ ದೇಶದ ಭವಿಷ್ಯ ನಿರ್ಣಯ ಮಾಡುವ‌ ಮತದಾನ  ಶ್ರೇಷ್ಠ. ಅದನ್ನು ಕನಿಷ್ಟಬೆಲೆಗೆ ಮಾರಿಕೊಂಡರೆ ಜೀವನವೇ ಹಾಳು.
ಮತದಾತರ ಅಜ್ಞಾನದ ಅಸಹಾಯಕತೆಯನ್ನು  ದುರ್ಭಳಕೆ ಮಾಡಿಕೊಂಡು ಯಾರೇ ಗೆದ್ದರೂ  ಅಧರ್ಮ. ಒಟ್ಟಿನಲ್ಲಿ ವಾಸ್ತವದಲ್ಲಿ ಪ್ರಜಾಪ್ರಭುತ್ವದ  ಪ್ರಜೆಗಳಿಗೆ ಸ್ವಾತಂತ್ರ್ಯವಿದೆ. ತಮ್ಮ ಜ್ಞಾನದಿಂದ ಸತ್ಯ ತಿಳಿದು ದಾನ ಮಾಡಿದರೆ ಉತ್ತಮ ಜೀವನ. ದೇಶವನ್ನು  ನಡೆಸುವುದಕ್ಕೆ ಜನಬಲ ಹಣಬಲ ಬೇಕು. ಈ ಜನರಲ್ಲಿ ಅಜ್ಞಾನದ ಶಿಕ್ಷಣ ಭ್ರಷಚಾರದ ಹಣ ಹಂಚಿಕೊಂಡು  ಅಧಿಕಾರ ಚಲಾಯಿಸಿದರೆ  ಸಾಮಾನ್ಯಜ್ಞಾನ ಹಿಂದುಳಿಯುವುದು. ಸಾಮಾನ್ಯ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ  ನಡೆಸೋ ಸರ್ಕಾರವೆ ಪ್ರಜಾಪ್ರಭುತ್ವ ದೇಶ. ಆದರೆ ಇಲ್ಲಿ  ಎಲ್ಲಾ ರಾಜಕಾರಣಿಗಳ ಕೈಕೆಳಗೆ ನಿಂತು ಬೇಡುವ  ಸ್ಥಿತಿಯಲ್ಲಿ  ಪಕ್ಷಪಕ್ಷಗಳ  ದ್ವೇಷದ ರಾಜಕೀಯಕ್ಕೆ ಜನಜೀವನ  ಬಲಿಯಾಗುತ್ತಿರೋದು‌   ದುರಂತ. ಭೌತಿಕದ ಹೋರಾಟದಲ್ಲಿ ಮತಗಳು ಮಾರಾಟವಾದರೆ
ಅಧ್ಯಾತ್ಮದ ಹೋರಾಟದಲ್ಲಿ ಮತಗಳು ದಾನದ ರೂಪ ಪಡೆಯುತ್ತದೆ. ದಾನವಿರಲಿ ದಾನವರಿಗೆ ಆಗದಿರಲಿ.
ಯೋಗವು ಪರಮಾತ್ಮನ ಕಡೆಗಿದ್ದರೆ ಶಾಂತಿ ಪರಕೀಯರ ಕಡೆಗಿದ್ದರೆ  ರಾಜಕೀಯ ಕ್ರಾಂತಿ. ಯಾರದ್ದೋ  ದೇಶದೊಳಗೆ ಇದ್ದು ನನ್ನ ದೇಶವೆಂದರೆ  ಸರಿಯಲ್ಲ. ಯಾರದ್ದೋ ಮತವನ್ನು  ಕದಿಯುವುದಾಗಲಿ,ಮಾರುವುದಾಗಲಿ,
ನಾಟಕವಾಡಿ ಗಳಿಸುವುದರಿಂದ  ಭವಿಷ್ಯ ಉತ್ತಮವಾಗುವಂತಿದ್ದರೆ ಇಂದು ನಮ್ಮ ದೇಶ ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲಾ ಮಾಡುವುದು ನೋಟಿಗಾಗಿ ಓಟು ಸೀಟಿಗಾಗಿ ಇದು ಅಧಿಕಾರ ಪಡೆಯುವವರೆಗೆ ನಂತರ ತಾವೇ ಕೊಟ್ಟ ಆಶ್ವಾಸನೆ ಈಡೇರಿಸಲು  ನಡೆಸೋ ಪ್ರಯತ್ನದಲ್ಲಿ ಯಶಸ್ವಿಯಾದರೂ ನಿಜವಾದ ಫಲಾನುಭವಿಗಳ ಕೈ ಸೇರೋ ಮೊದಲು ಮಧ್ಯವರ್ತಿಗಳ ಕೈ ಚಳಕ ಹೆಚ್ಚಾಗಿ ಸಾಲ ಮಾತ್ರ ದೇಶಕ್ಕೆ. ಇದನ್ನು ಸರಿಪಡಿಸಲು ವಿದೇಶಿಗಳ ಒಪ್ಪಂದಕ್ಕೆ  ಹೋಗಿ ಅವರ ಕೈಕೆಳಗೆ ಸೇವೆ ಮಾಡುವ  ನಮಗೆ ನಮ್ಮೊಳಗೇ ಅಡಗಿದ್ದ ಜ್ಞಾನವನ್ನು  ಬಳಸಲಾಗದೆ  ದಾನ ಮಾಡಿದರೂ  ಅದರ ಪೂರ್ಣಫಲ  ಸಿಗದು. ಕಾರಣ ನಮ್ಮ ಸಂಪಾದನೆಯು  ವಿದೇಶಿ ಸಾಲದ ಒಂದು ಭಾಗ. ಶಿಕ್ಷಣದಿಂದ ಜ್ಞಾನ. ಶಿಕ್ಷಣವೇ ತಂತ್ರವಾಗಿದ್ದರೆ  ತತ್ವದ ಸ್ವತಂತ್ರ ಜ್ಞಾನ ಹಿಂದುಳಿಯುತ್ತದೆ. ಭೌತಿಕದ ರಾಜಕೀಯದ ದಾನ ಅಧ್ಯಾತ್ಮದ ರಾಜಯೋಗದ ದಾನ  ಬೇರೆ ಬೇರೆಯೆ? ಒಂದೇ?
ಧರ್ಮದಲ್ಲಿ ರಾಜಕೀಯ ನಡೆದರೆ ಒಂದೇ. ಧರ್ಮವೇ ರಾಜಕೀಯಕ್ಕೆ ಬಲಿಯಾದರೆ ಬೇರೆ ಬೇರೆ. ದಾನವು ಸುಜ್ಞಾನದಿಂದ ಮಾಡುವುದು ಯೋಗ. ಅಜ್ಞಾನದಿಂದ ದಾನ ಮಾಡುವುದರ ಹಿಂದೆ ಭೋಗದ ನಿರೀಕ್ಷೆ ಹೆಚ್ಚು. ಯಾರೂ ಯಾರನ್ನೂ ಆಳಲಾಗದು. ಅಜ್ಞಾನದ ಜನರನ್ನು ಆಳುವುದು ಸುಲಭ.ಜ್ಞಾನಿಗಳನ್ನು ಆಳಲಾಗದು. ಹಾಸಿಗೆ ಇದ್ದಷ್ಟು ಕಾಲುಚಾಚಿದರೆ ಉತ್ತಮವೆಂದಿದ್ದಾರೆ. ಪ್ರಜೆಗಳು ಎಚ್ಚರವಾಗಿದ್ದರೆ ದಾನಕ್ಕೆ ಬೆಲೆಯಿದೆ.ಬೆಲೆಕಟ್ಟಲಾಗದ ದಾನ ಮತದಾನವಾಗಿತ್ತು.
ಪ್ರತಿಯೊಂದು ಪಕ್ಷವೂ  ತಮ್ಮದೇ ಆದ ಆಶ್ವಾಸನೆಗಳ ಪಟ್ಟಿ ಹಿಡಿದು ಮತದಾತರನ್ನು ಓಲೈಸಿಕೊಳ್ಳುವ‌ತ್ತ ನಡೆದಿದೆ. ಗೆದ್ದ ಪಕ್ಷದಲ್ಲಿ ಇದಕ್ಕೆ ಅವಕಾಶವಿದೆ.‌ಅದಕ್ಕಾಗಿ ಸಾಕಷ್ಟು ಸಾಲ ಮಾಡಬೇಕು. ಸಾಲ ತೀರಿಸುವುದಕ್ಕೆ ಪ್ರಜೆಗಳೇ ತಯಾರಿರಬೇಕು. ಸತ್ಯ ಕಠೋರವಾಗಲು ಕಾರಣ ಸತ್ಯ ಹಿಂದೆ ಬಿಟ್ಟು ಮುಂದೆ ನಡೆಯೋದಷ್ಟೆ. ಒಟ್ಟಿನಲ್ಲಿ ಸತ್ಯಕ್ಕೆ ಜಯ.ಸತ್ಯಕ್ಕೆ ಸಾವಿಲ್ಲ. ಸತ್ಯವೇ ದೇವರು. ಸತ್ಯವನ್ನೇ ದಾನ ಮಾಡಿ ಅಸತ್ಯ  ಬೆಳೆಸಿದರೂ ಕಷ್ಟ ನಷ್ಟ. ಮಾರಿಕೊಂಡರೆ ಜೀವನವೇ ಹಾಳು.
ಮತದಾತರ ಅಜ್ಞಾನದ ಅಸಹಾಯಕತೆಯನ್ನು  ದುರ್ಭಳಕೆ ಮಾಡಿಕೊಂಡು ಯಾರೇ ಗೆದ್ದರೂ  ಅಧರ್ಮ. ಒಟ್ಟಿನಲ್ಲಿ ವಾಸ್ತವದಲ್ಲಿ ಪ್ರಜಾಪ್ರಭುತ್ವದ  ಪ್ರಜೆಗಳಿಗೆ ಸ್ವಾತಂತ್ರ್ಯವಿದೆ. ತಮ್ಮ ಜ್ಞಾನದಿಂದ ಸತ್ಯ ತಿಳಿದು ದಾನ ಮಾಡಿದರೆ ಉತ್ತಮ ಜೀವನ. ದೇಶವನ್ನು  ನಡೆಸುವುದಕ್ಕೆ ಜನಬಲ ಹಣಬಲ ಬೇಕು. ಈ ಜನರಲ್ಲಿ ಅಜ್ಞಾನದ ಶಿಕ್ಷಣ ಭ್ರಷಚಾರದ ಹಣ ಹಂಚಿಕೊಂಡು  ಅಧಿಕಾರ ಚಲಾಯಿಸಿದರೆ  ಸಾಮಾನ್ಯಜ್ಞಾನ ಹಿಂದುಳಿಯುವುದು. ಸಾಮಾನ್ಯ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ  ನಡೆಸೋ ಸರ್ಕಾರವೆ ಪ್ರಜಾಪ್ರಭುತ್ವ ದೇಶ. ಆದರೆ ಇಲ್ಲಿ  ಎಲ್ಲಾ ರಾಜಕಾರಣಿಗಳ ಕೈಗೆಳಗೆ ನಿಂತು ಬೇಡುವ  ಸ್ಥಿತಿಯಲ್ಲಿ  ಪಕ್ಷಪಕ್ಷಗಳ  ದ್ವೇಷದ ರಾಜಕೀಯಕ್ಕೆ ಜನಜೀವನ  ಬಲಿಯಾಗುತ್ತಿರೋದು‌  ಅಧ್ಯಾತ್ಮ ಸತ್ಯ. ಭೌತಿಕದ ಹೋರಾಟದಲ್ಲಿ ಮತಗಳು ಮಾರಾಟವಾದರೆ
ಅಧ್ಯಾತ್ಮದ ಹೋರಾಟದಲ್ಲಿ ಮತಗಳು ದಾನದ ರೂಪ ಪಡೆಯುತ್ತದೆ. ದಾನವಿರಲಿ ದಾನವರಿಗೆ ಆಗದಿರಲಿ.
ಯೋಗವು ಪರಮಾತ್ಮನ ಕಡೆಗಿದ್ದರೆ ಶಾಂತಿ ಪರಕೀಯರ ಕಡೆಗಿದ್ದರೆ  ರಾಜಕೀಯ ಕ್ರಾಂತಿ. ಯಾರದ್ದೋ  ದೇಶದೊಳಗೆ ಇದ್ದು ನನ್ನ ದೇಶವೆಂದರೆ  ಸರಿಯಲ್ಲ. ಯಾರದ್ದೋ ಮತವನ್ನು  ಕದಿಯುವುದಾಗಲಿ,ಮಾರುವುದಾಗಲಿ,
ನಾಟಕವಾಡಿ ಗಳಿಸುವುದರಿಂದ  ಭವಿಷ್ಯ ಉತ್ತಮವಾಗಿದ್ದರೆ ಇಂದು ನಮ್ಮ ದೇಶ ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲಾ ಮಾಡುವುದು ನೋಟಿಗಾಗಿ ಓಟು ಸೀಟಿಗಾಗಿ ಇದು ಅಧಿಕಾರ ಪಡೆಯುವವರೆಗೆ ನಂತರ ತಾವೇ ಕೊಟ್ಟ ಆಶ್ವಾಸನೆ ಈಡೇರಿಸಲು  ನಡೆಸೋ ಪ್ರಯತ್ನದಲ್ಲಿ ಯಶಸ್ವಿಯಾದರೂ ನಿಜವಾದ ಫಲಾನುಭವಿಗಳ ಕೈ ಸೇರೋ ಮೊದಲು ಮಧ್ಯವರ್ತಿಗಳ ಕೈ ಚಳಕ ಹೆಚ್ಚಾಗಿ ಸಾಲ ಮಾತ್ರ ದೇಶಕ್ಕೆ. ಇದನ್ನು ಸರಿಪಡಿಸಲು ವಿದೇಶಿಗಳ ಒಪ್ಪಂದಕ್ಕೆ  ಹೋಗಿ ಅವರ ಕೈಕೆಳಗೆ ಸೇವೆ ಮಾಡುವ  ನಮಗೆ ನಮ್ಮೊಳಗೇ ಅಡಗಿದ್ದ ಜ್ಞಾನವನ್ನು  ಬಳಸಲಾಗದೆ  ದಾನ ಮಾಡಿದರೂ  ಅದರ ಪೂರ್ಣಫಲ  ಸಿಗದು. ಕಾರಣ ನಮ್ಮ ಸಂಪಾದನೆಯು  ವಿದೇಶಿ ಸಾಲದ ಒಂದು ಭಾಗ. ಶಿಕ್ಷಣದಿಂದ ಜ್ಞಾನ. ಶಿಕ್ಷಣವೇ ತಂತ್ರವಾಗಿದ್ದರೆ  ತತ್ವದ ಸ್ವತಂತ್ರ ಜ್ಞಾನ ಹಿಂದುಳಿಯುತ್ತದೆ. ಭೌತಿಕದ ರಾಜಕೀಯದ ದಾನ ಅಧ್ಯಾತ್ಮದ ರಾಜಯೋಗದ ದಾನ  ಬೇರೆ ಬೇರೆಯೆ? ಒಂದೇ?

Saturday, April 8, 2023

ಎಲ್ಲದ್ದಕ್ಕೂ ಯೋಗವಿರಬೇಕು.

ಭ್ರಷ್ಟಾಚಾರದಿಂದ ಹಣ ಸಂಪಾದನೆ ಮಾಡಲು ಮನಸ್ಸಿರುತ್ತದೆ  ಪರಮಾತ್ಮನಲ್ಲ. ಆದರೆ ಶಿಷ್ಟಾಚಾರದಲ್ಲಿ ಹೆಚ್ಚು ಹಣ ಸಂಪಾದನೆಯಾಗದು . ಆತ್ಮನೊಂದಿಗೆ ಬೆರೆತ ಮನಸ್ಸಿಗೆ ಹಣಕ್ಕಿಂತ ಜ್ಞಾನವೇ ಮುಖ್ಯವಾಗಿರುತ್ತದೆ. ಜ್ಞಾನದಲ್ಲೂ ಅಧ್ಯಾತ್ಮ ಭೌತಿಕವೆಂಬುದಿದೆ. ಅಧ್ಯಾತ್ಮ ಜ್ಞಾನ ಹೆಚ್ಚಾದರೆ  ಸಿದ್ದಪುರುಷರಾಗುವರು.ಭೌತಿಕ ಜ್ಞಾನ ಬೆಳೆದಂತೆಲ್ಲಾ ಪ್ರಸಿದ್ದರಾಗುವರು. ಪ್ರಸಿದ್ದರಾದಂತೆಲ್ಲಾ  ಆತ್ಮಜ್ಞಾನ ಹಿಂದುಳಿಯುವುದು..ಒಂದರ ಹಿಂದೆ ಇನ್ನೊಂದು ಇದೆ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ  ತಿಳಿದುಕೊಳ್ಳಲು ಸಮಯ ಬೇಕು. ವ್ಯಕ್ತಿಯ ಅಧಿಕಾರ,ಹಣ,ಸ್ಥಾನಮಾನ ಹೆಚ್ಚಾದಂತೆ ಒಳಗಿನ ತತ್ವ ಹಿಂದುಳಿದು  ತಂತ್ರವೇ ಆಳುವುದು.  ಒಬ್ಬ ಕಡುಬಡವನಿಗೆ  ಅಧಿಕಾರ ಕೊಟ್ಟರೆ  ಹಣವೇ ಸರ್ವಸ್ವ ಎಂದು ವಾದಿಸಬಹುದು.ಆದರೆ ಒಬ್ಬ ಜ್ಞಾನಿಯಾದವನಿಗೆ ಅಧಿಕಾರ ಸಿಕ್ಕರೆ ಜ್ಞಾನವೇ ಶ್ರೇಷ್ಠ ವೆನ್ನುವನು.ತತ್ವಜ್ಞಾನಿ ತತ್ವದ ಕಡೆಗೆ ಹೋದರೆ ತಂತ್ರಜ್ಞಾನಿ ಕೇವಲ ತಂತ್ರವನ್ನೇ ಬಂಡವಾಳವಾಗಿಸಿಕೊಂಡಿರುವನು. ಒಟ್ಟಿನಲ್ಲಿ ಎರಡೂ ಒಂದೇ ನಾಣ್ಯದ ಮುಖವಾದರೂ ಒಂದೇ ಮುಖ ಹೆಚ್ಚು ಜನರನ್ನು ನೋಡುವುದಿಲ್ಲ.ಗುರುತಿಸುವುದೂ ಇಲ್ಲ. ಕಾಣದ ದೇವರನ್ನು ತೋರಿಸುವವರು ವಿರಳ. ಕಾಣದ ದೇವರನ್ನು ಬೆಳೆಸುವುದು ಸರಳ. ತತ್ವದಿಂದ ದೈವತ್ವ ಬೆಳೆದರೆ ಶಾಂತಿ,
ತಂತ್ರದಿಂದ  ಬೆಳೆಸಲು ಹೋದರೆ ಕ್ರಾಂತಿ.ಕಾರಣ ಇಲ್ಲಿ ಎಲ್ಲರಲ್ಲಿಯೂ ಅಡಗಿರುವ ದೇವ ಒಬ್ಬನೇ ಆದರೂ ಕೋಟ್ಯಾಂತರ ದೇವರಿದ್ದರೂ ಕಂಡವರಿಲ್ಲ ಬೆಳೆಸಿದವರಿದ್ದಾರೆ. ದೈವತ್ವವು ಆಂತರಿಕ ಮನಸ್ಸಿನ ಶಕ್ತಿಯಾಗಿದೆ ಕಾಣೋದಿಲ್ಲ.ದೇವಾಸುರ ಗುಣಗಳು ಮಾನವನೊಳಗಿರುವ ಶಕ್ತಿಯಾಗಿದೆ.ಅನುಭವಿಸಿಯೇ ತಿಳಿಯಬೇಕು.
ಇಂತಹ ವಿಚಾರಗಳು ಹೇಗೆ  ಬೇರೆಯವರೊಂದಿಗೆ ಹಂಚಿಕೊಳ್ಳಲು ಮನಸ್ಸು ಬರುವುದಿಲ್ಲವೋ  ಹಾಗೆಯೇ ದೈವತ್ವದೆಡೆಗೆ ಹೋದಂತೆಲ್ಲಾ  ನಾವೂ ದೂರವಾಗುತ್ತೇವೆ.
ಭೂಮಿಗೆ ಬರೋವಾಗ ಬರೀ ಕೈ ಹೋಗುವಾಗಲೂ ಬರಿಕೈಯಿದ್ದರೆ ಯೋಗ. ಅದಕ್ಕಾಗಿ ಹಿಂದಿನ ಮಹಾತ್ಮರುಗಳು  ಕೊನೆಗಾಲದಲ್ಲಿ ಎಲ್ಲಾ ಜವಾಬ್ದಾರಿ ಅಧಿಕಾರ ಅಂತಸ್ತು ತ್ಯಜಿಸಿ ವಾನಪ್ರಸ್ಥಾಶ್ರಮ ಸೇರಿ ಮುಕ್ತರಾದರು.ಇದ್ದಾಗಲೇ ಯೋಗಿಗಳಾಗಿದ್ದವರಿಗಷ್ಟೆ ಈ ಮನಸ್ಸು ಬರುವುದು. ಜನನ ಮರಣದ  ನಡುವಿನ ಜೀವನ  ಸಾರ್ಥ ಕವಾಗುವುದು. ಎಷ್ಟು ಗಳಿಸಿದರೂ ಅದು ಯೋಗದಲ್ಲಿದ್ದರೆ  ಮಾತ್ರ ದಕ್ಕುವುದು.ಅಯೋಗ್ಯರನ್ನು ಕೂಡಿಕೊಂಡಿದ್ದರೆ ಇರುವ ಯೋಗವೂ ನಾಶ.ವಾಗುವುದು.
ತಾಳಿದವನು ಬಾಳಿಯಾನು, ನಿಧಾನವೇ ಪ್ರಧಾನವೆಂದಿದ್ದಾರೆ
ದಾನ ಮಾಡುವಷ್ಟು ಗಳಿಸಬಾರದು. ದಾನವರಿಗೆ ದಾನ ನೀಡಬಾರದು. ಸತ್ಪಾತ್ರರನ್ನು ಗುರುತಿಸುವ ಜ್ಞಾನವಿರಬೇಕು.

Friday, April 7, 2023

ಸ್ಥಿತಪ್ರಜ್ಞ ಎಂದರೇನಿರಬಹುದು?

ಸ್ಥಿತಪ್ರಜ್ಞನೆಂದರೆ ?
ಸ್ಥಿತಿಯನ್ನು  ಧಾರ್ಮಿಕವಾಗಿ ಅರ್ಥ, ಮಾಡಿಕೊಂಡು
ಪ್ರಜ್ಞಾವಂತರಾಗೋದೆ  ಸ್ಥಿತಪ್ರಜ್ಞರ  ಲಕ್ಷಣ.
ತಟಸ್ಥ ರಾಗಿರೋದೆಂದು  ಕೆಲವರು ತಿಳಿದು, ತಮ್ಮ
ಅಧಿಕಾರವನ್ನೇ  ಸರಿಯಾಗಿ ತಿಳಿಯದೆ,ಸತ್ಯಧರ್ಮ
ಹಿಂದೆ  ನಿಂತಿದೆ. ರಾಜರ ಕಾಲದಲ್ಲಿದ್ದ  ರಾಜಕೀಯತೆ
ಇಂದಿಲ್ಲ.ಅಂದರೆ, ಆಗ ಪ್ರಜೆಗಳ ಜ್ಞಾನ ರಾಜನ ನಡೆ
ನುಡಿಗಳ ಮೇಲಿತ್ತು. ಇಂದು   ಪ್ರಜೆಗಳ   ಜ್ಞಾನ ರಾಜಕಾರಣಿಗಳ  ಮೇಲೆ ನಿಂತಿದೆ. ಹೀಗಿರೋವಾಗ
ರಾಜಕಾರಣಿಗಳ  ನಡೆ ನುಡಿಯಲ್ಲಿನ  ತಪ್ಪನ್ನು ಎತ್ತಿ
ಹಿಡಿದು  ಕೇಳೋ ಸ್ವಾತಂತ್ರ್ಯ  ಪ್ರಜಾಪ್ರಭುತ್ವದ ಪ್ರಜೆ
ಪಡೆದಿದ್ದರೂ, ಧರ್ಮಸತ್ಯದ ಮೂಲವನ್ನೇ ತಿಳಿಯದೆ
ಅರ್ಧಸತ್ಯ ವೇ  ಪೂರ್ಣಸತ್ಯ ವೆಂದು ಒತ್ತಡ,ಒತ್ತಾಯದಿಂದ  ತಲೆಗೆ ತುಂಬಿ ನಾವೇ ಸರಿ ಎಂದು  ಮುನ್ನಡೆದವರ‌ 
ಹಿಂದೆ  ನಡೆದವರ ಸ್ಥಿತಿಗೆ ಪ್ರಜ್ಞಾವಂತರಲ್ಲಿ  ಸರಿಯಾದ 
ಉತ್ತರವಿದ್ದರೆ ,ಅದನ್ನು ನೇರವಾಗಿ  ತಿಳಿದು,ತಿಳಿಸಿ 
ಮಾರ್ಗದರ್ಶನ ನೀಡಿದರೆ ಧರ್ಮ. ಇಲ್ಲ ನಾವು ಸತ್ಯ ತಿಳಿದರೂ  ತಿಳಿಸದೆ,ತಟಸ್ಥರಾಗಿ  ತಮ್ಮ  ಸ್ಥಾನ ಮಾನಕ್ಕೆ  ಬೆಲೆಕೊಟ್ಟರೆ ಅದು ಸ್ಥಿತಪ್ರಜ್ಞತೆ  ಎನಿಸುವುದೆ?.
 ನಡೆಯುವುದನ್ನು  ತಡೆಯಲಾಗದು. ಹಾಗಂತ
ಈಗ  ಪ್ರಚಾರಕರ್ಯಾರು  ಸುಮ್ಮನೆ ಮಾತಾಡದೆ ತನ್ನದೇ  ದಾರಿಯಲ್ಲಿ  ನಡೆಯುತ್ತಿಲ್ಲ. ಶಿಷ್ಯರ ಸಹಕಾರ,ಸಹಾಯ
ವಿಲ್ಲದೆ  ಗುರುವಿಲ್ಲ.ಹಿಂದಿನ ಕಾಲದಲ್ಲಿದ್ದ  ಗುರುಕುಲ ಪದ್ದತಿ  ಇಂದಿಲ್ಲ. ಅಂದಿನ ರಾಜ ಜ್ಞಾನ   ರಾಜಕಾರಣಿಗಳಿಗಿಲ್ಲ. ಆದರೂ, ಎಲ್ಲರ ಒಳಗಿನ  ಪರಮಾತ್ಮ ಒಬ್ಬನೆ. ಇದರಲ್ಲಿ  ಅಧಿಕಾರ ಹಣ ಪಡೆದವರಿಗೆ ಸ್ಥಾನ ಮಾನ ಪದವಿ,ಪಟ್ಟ.ಜ್ಞಾನವನ್ನೇ  ಹಿಂದೆ ತಳ್ಳಿ ನಡೆಸೋ  ರಾಜಕೀಯಪ್ರಚಾರ ಆಚಾರ,ವಿಚಾರಗಳಿಂದ  ಧರ್ಮದ ಬದಲು ಅಧರ್ಮ  ಬೆಳೆದರೆ, ನಮ್ಮಲ್ಲೇ  ಇರೋ  ಭಿನ್ನಾಭಿಪ್ರಾಯ ದ  ಅತಿಯಾದ ಅಹಂಕಾರ,ಸ್ವಾರ್ಥ ಒಂದೆಡೆ ಆದರೆ ಇನ್ನೊಂದು ಕಡೆ  ಅತಿಯಾದ ಪರಮಾತ್ಮನ  ಅವಲಂಬನೆಯ  ಆತ್ಮವಿಶ್ವಾಸ.
ಯಾವುದೇ  ಆಗಲಿ ಅತಿಯಾದರೆ ಗತಿಗೇಡು.
ಗುರು ಹಿರಿಯರ   ಆಶೀರ್ವಾದ, ಮಾರ್ಗದರ್ಶನದಲ್ಲಿ
ಮುನ್ನಡೆದ    ದೇಶವೀಗ ,  ರಾಜಕೀಯದಲ್ಲಿ  ಮುನ್ನಡೆದು ,ಗುರು ಹಿರಿಯರ  ಉಪದೇಶವನ್ನು ಸರಿ ಅರ್ಥಮಾಡಿ
ಕೊಳ್ಳದೆ  ಧರ್ಮ ಹಿಂದೆ ನಿಂತಿದೆ. ಇದುನಮ್ಮ   ಅತಿಯಾದ 
 ಹೊರಜ್ಞಾನದ  ಪ್ರಭಾವ.
ಕೆಲವರಷ್ಟೇ  ಶಿಕ್ಷಣಕ್ಷೇತ್ರದಿಂದ  ತಮ್ಮ  ಧಾರ್ಮಿಕ
ಸೇವೆ  ನಡೆಸಿ  ಭಾರತೀಯರನ್ನು  ಬೆಳೆಸಿದ್ದಾರೆ. ಆ
ಮಹಾತ್ಮರಲ್ಲಿ  ಪ್ರಮುಖರಾದ  ಶ್ರೀ ಶ್ರೀ ಶಿವಕುಮಾರ
ಸ್ವಾಮಿಗಳವರಿಗೆ ಅನಂತಾನಂತ ವಂದನೆಗಳು.
ಶಂಕರಾಚಾರ್ಯರ  ಕಾಲದಲ್ಲಿದ್ದ  ಅಧರ್ಮದ  ಸ್ಥಿತಿ
ಇಂದಿಗೂ ಇದೆ.ಇಲ್ಲಿ ಅದ್ವೈತ ವೆಂದರೆ  ಸಮಾನತೆ,
ಒಗ್ಗಟ್ಟು, ಒಂದು ಎಂದಾದರೂ  ಧರ್ಮದ ಒಳಗಿನ
ರಾಜಕೀಯ  ಬೇರೆ ಬೇರೆಯಾಗಿದೆ. ರಾಜಕೀಯ ಕ್ಷೇತ್ರ
ಭೇರೆ, ಧಾರ್ಮಿಕ ಕ್ಷೇತ್ರ ಬೇರೆ ಎಂದು ಒಂದು ದೇಶದ
ಧರ್ಮವನ್ನು  ಒಂದಾಗಿಸಲಾಗದು. ಹಾಗಂತ  ಇಲ್ಲಿ
ತಪ್ಪು  ಯಾರೋ ಒಬ್ಬರದಾಗಿದ್ದರೆ  ಸರಿಪಡಿಸಲು
ಕಷ್ಟವಿಲ್ಲ. ಹಿಂದಿನ  ರಾಜಪ್ರಭುತ್ವ ದಲ್ಲಿ  ರಾಜನನ್ನು
ಸರಿಪಡಿಸಿದರೆ  ಪ್ರಜೆಗಳು ಸರಿಯಾಗಬಹುದಿತ್ತು.
ಹಾಗೆ, ಸರಿಪಡಿಸೋ  ಗುರು ಸರಿಯಾಗಿರುತ್ತಿದ್ದರು.
ಇಂದಿನ ಪ್ರಜಾಪ್ರಭುತ್ವದ  ಪ್ರಜೆಗಳಲ್ಲೇ ಅಜ್ಞಾನ
ಬೆಳೆದಿದೆ.ಇದನ್ನು  ಜ್ಞಾನಿಗಳಾದವರೆ ಸರಿಪಡಿಸೋ
ಮೊದಲು  ಅವರು ಪೂರ್ಣಸತ್ಯ  ಅರ್ಥಮಾಡಿಕೊಂಡು, ನಡೆಯಬೇಕಿತ್ತು. ಅವರೇ ಪ್ರಜೆಗಳ ಋಣದಲ್ಲಿರೋವಾಗ 
 ಸರಿಯಾಗಲು ಕಷ್ಟ.
ಹೀಗೆ, ರಾಜಯೋಗವಿಲ್ಲದ  ರಾಜಕೀಯದಲ್ಲಿ ಅದ್ವೈತ ತತ್ವ  ಹಿಂದುಳಿದಿದೆ. ಹಾಗಂತ ಪ್ರಚಾರಕರು ಹಿಂದುಳಿದಿಲ್ಲ. 
ಇದರಲ್ಲಿ  ಕೆಲವರಷ್ಟೇ  ದೇಶದ ಪರ ದೇಶಭಕ್ತಿಯ
 ಮೂಲಕ ಧರ್ಮರಕ್ಷಣೆಗಾಗಿ ನಿಜವಾದ ಸಂನ್ಯಾಸ 
ಧರ್ಮದಲ್ಲಿದ್ದು  ಸಮಾಜ ಸೇವೆ ಮಾಡಿ ತತ್ವೋಪದೇಶದ
ಮೂಲಾರ್ಥ ತಿಳಿದು  ನಡೆದಿದ್ದಾರೆ.
ಅದ್ವೈತ ದಲ್ಲಿ  ರಾಜಕೀಯ ಬರೋದೆ ಇಲ್ಲ. ಎಲ್ಲರೂ
ಸಮಾನರೆಂದ ಮೇಲೆ  ರಾಜ ಯಾರು?.ಅದರಲ್ಲೂ
ಪ್ರಜಾಪ್ರಭುತ್ವ  ಸರ್ಕಾರದಲ್ಲಿ  ಪ್ರಜೆಗಳಿಗೆ  ಜ್ಞಾನದ
ಶಿಕ್ಷಣ  ನೀಡದೆ,  ಉಪದೇಶ  ನೀಡಿದರೆ  ಸತ್ಯ  ಅರ್ಥ
ಆಗೋದಕ್ಕೆ ಅಸಾಧ್ಯ.
ರಾಜಯೋಗ ದೊಡ್ಡದು ರಾಜಕೀಯವಲ್ಲ.ಹಾಗೆ
ಅದ್ವೈತದ ಪ್ರಕಾರ  ದೇವನೊಬ್ಬನೆ ನಾಮ ಹಲವು.
ದೇಶ ಒಂದೆ, ಧರ್ಮ ಒಂದೆ,ಜಾತಿ ಒಂದೆ,ಕುಲ ಒಂದೆ.
ಇದನ್ನು ಒಂದಾಗಿಸಲು  ಯಾರಿಗೂ ಸಾಧ್ಯವಿಲ್ಲವೆ?
ಸತ್ಯಜ್ಞಾನದಿಂದ  ಮಾತ್ರ ಮಾನವ  ಮಹಾತ್ಮನಾಗಿ
ನೇರವಾಗಿ  ಸತ್ಯದರ್ಶನ  ಮಾಡಿಕೊಳ್ಳಬಹುದು.
ಸರ್ಕಾರದಿಂದ, ಹಣದಿಂದ,ಅಧಿಕಾರದಿಂದ,ಪುರಾಣ
ಇತಿಹಾಸದಿಂದ  ರಾಜಕೀಯ ನಡೆಸಬಹುದಷ್ಟೆ.
ರಾಜಯೋಗಕ್ಕೆ  ಸ್ವತಃ  ಸತ್ಯದಲ್ಲಿ  ನಡೆಯಬೇಕು
ಎಂದು  ಪುರಾಣ,ಇತಿಹಾಸದ ಮಹಾತ್ಮರ  ನಡೆ ನುಡಿ ತಿಳಿಸಿದೆ. ಇದನ್ನು ದಾಸ,ಶರಣರು ತೋರಿಸಿಕೊಟ್ಟರು.
 ನಾವೀಗ ಎಲ್ಲಾಸತ್ಯ  ಪ್ರಚಾರಮಾಡಿ, ನಮ್ಮೊಳಗಿನ. ಅಸತ್ಯ ಬಿಡದೆವ್ಯವಹಾರ ನಡೆಸಿರೋದೆ  ಅಧರ್ಮ.
ಕಾಲಪ್ರಭಾವ, ಮಾನವ ಕಾರಣ ಮಾತ್ರನೆಂಬ ಸತ್ಯ
ಅದ್ವೈತ ತಿಳಿಸಿ, ಮಾನವನಿಗೆ ಸ್ವಾತಂತ್ರ್ಯ ಕೊಟ್ಟು
ನಿನ್ನ ಆತ್ಮರಕ್ಷಣೆ ನೀನು ಮಾಡಿಕೊಳ್ಳಬಹುದೆಂದು
ದ್ವೈತ  ಬೆಳೆಸಿ, ಕೊನೆಯಲ್ಲಿ  ಪ್ರಾಣಿ,ಪಕ್ಷಿ,ಚರಾಚರ
ವಸ್ತುಗಳಲ್ಲಿ  ಅಡಗಿರೋ  ಪರಮಾತ್ಮನ  ಇರುವಿಕೆ
ಎತ್ತಿ ಹಿಡಿದ ವಿಶಿಷ್ಟಾದ್ವೈತ   ದಾಸ,ಶರಣರವರೆಗೆ
ತಲುಪಿಸಿದೆ.ಇಂದು ನಾನೇ ದೇವರೆಂಬ ಅಹಂಕಾರ
ಸ್ವಾರ್ಥ ಬಿಡಲಾಗದೆ, ಪ್ರಜಾಪ್ರಭುತ್ವ ದೇಶವನ್ನೇ
ರಾಜಪ್ರಭುತ್ವ ದ  ರೀತಿಯಲ್ಲಿ  ಅಧರ್ಮದಿಂದ ಆಳಲು   ಬಿಟ್ಟಿರೋದೆ  ನಮ್ಮ ಅಜ್ಞಾನದ ಶಿಕ್ಷಣ.
ಭಾರತೀಯರಾಗಿ ಗುರುವಾಗಿ, ಪ್ರಜೆಯಾಗಿ,ಪೋಷಕ
ರಾಗಿ  ನಮ್ಮ ಮಕ್ಕಳಿಗೆ  ಸಾಮಾನ್ಯಜ್ಞಾನ ತಿಳಿಸದೆ
ವಿಶೇಷಜ್ಞಾನ,ವಿದೇಶಿ ಜ್ಞಾನವನ್ನು ಓದಿ ತಿಳಿಸಿದರೆ
ಅನುಭವಜ್ಞಾನ ಎಲ್ಲಿರುತ್ತದೆ. ಇದು ಪ್ರಜೆಗಳೇ  ಸಹಕಾರ. ನೀಡಿ ಬೆಳೆಸಿದ  ರಾಜಕೀಯ.ಅದಕ್ಕೆ ಸರಿ  ಆಗಿ  
ರಾಜಕಾರಣಿಗಳೇ  ತಮ್ಮ  ಅಜ್ಞಾನ ಎತ್ತಿ ಹಿಡಿದು
ದೇಶವಾಳುತ್ತಿದ್ದಾರೆ.
ತತ್ವದೊಳಗಿನ. ಸತ್ಯ ಒಂದೆ.ಎಲ್ಲರೂ ಮಾನವರಷ್ಟೆ.
ಮಹಾತ್ಮರಾಗಲೂ  ಆತ್ಮಾನುಸಾರ ಸತ್ಯ ತಿಳಿಯಬೇಕು. ಇದು ಹೊರಗಿಲ್ಲ.ನಮ್ಮೊಳಗೇ ಇದೆ.

Thursday, April 6, 2023

ಯಾವುದು ಕ್ಷಾತ್ರಧರ್ಮ? ಎಲ್ಲಿದೆ ಧರ್ಮ?

ಭಾರತದಲ್ಲಿ ಕ್ಷಾತ್ರವು ಕೇವಲ ಒಂದು ಸಾಹಸ ಪ್ರವೃತ್ತಿ/ ಆಳುವ ಸಾಮರ್ಥ್ಯ‌ವಷ್ಟೇ ಆಗಿರದೆ ಒಂದು ಧರ್ಮವಾಗಿ, ಆತ್ಮೋನ್ನತಿಯ ಸೋಪಾನವಾಗಿ ಹೃನ್ಮನಗಳಲ್ಲಿ ಆರಾಧನೆಯನ್ನೇ ಪಡೆದಿದೆ. ಆತ್ಮರಕ್ಷ ಣೆಗೆ ನಿಲ್ಲುವುದೂ ಕ್ಷಾತ್ರವೇ. ರಕ್ಷ ಣೆ ಕೋರಿದವರ ಸಹಾಯಕ್ಕೆ ನುಗ್ಗುವುದು ಉನ್ನತ ಮಟ್ಟದ ಕ್ಷಾತ್ರ.
ಕ್ಷೇತ್ರರಕ್ಷ ಣಾತ್‌ ಕ್ಷತ್ರಿಯಃ- ದೇಶದ ಸೀಮೆಯನ್ನೂ, ಶಾಂತಿ- ಸಮರಸತೆಗಳನ್ನೂ ಕಾಪಾಡುವುದೇ 'ಕ್ಷಾತ್ರ'. ಭಾರತದಲ್ಲಿ ಕ್ಷಾತ್ರವು ಕೇವಲ ಒಂದು ಸಾಹಸ ಪ್ರವೃತ್ತಿ/ ಆಳುವ ಸಾಮರ್ಥ್ಯ‌ವಷ್ಟೇ ಆಗಿರದೆ ಒಂದು ಧರ್ಮವಾಗಿ, ಆತ್ಮೋನ್ನತಿಯ ಸೋಪಾನವಾಗಿ ಹೃನ್ಮನಗಳಲ್ಲಿ ಆರಾಧನೆಯನ್ನೇ ಪಡೆದಿದೆ
ತ್ಯಾಗ- ಪರಾಕ್ರಮಗಳನ್ನು ಮೆರೆಯುವುದು ಉನ್ನತತಮ ಕ್ಷಾತ್ರ. ಜಗತ್ತಿನಲ್ಲಿ ಎಲ್ಲೇ ನ್ಯಾಯಕ್ಕೆ ಕುತ್ತು ಒದಗಿದರೂ, ದುಷ್ಟದಮನಕ್ಕಾಗಿ ಅಲ್ಲಿಗೇ ಧಾವಿಸುವುದು ಅತ್ಯುನ್ನತ ಕ್ಷಾತ್ರ. ಇಂತಹ ಕ್ಷಾತ್ರವು ಮನುಕುಲದಲ್ಲಿ ಇರುವುದರಿಂದಾಗಿಯೇ ಲೋಕದಲ್ಲಿ ಸತ್ಯಧರ್ಮ ಸುಖಶಾಂತಿಗಳು ಇನ್ನೂ   ಸ್ವಲ್ಪ ಉಳಿದಿವೆ.
ತತ್ವದಿಂದ ಆಡಳಿತ ನಡೆಸುತ್ತಿದ್ದ ಶ್ರೀ ರಾಮನ ಕಾಲ ಹೋಗಿ ತಂತ್ರದ ಶ್ರೀ ಕೃಷ್ಣನ ಕಾಲದ ನಂತರ  ಸ್ವತಂತ್ರ ಭಾರತದಲ್ಲಿ ನಾವಿದ್ದೇವೆಂದರೆ ನಮ್ಮಲ್ಲಿ ತತ್ವವಿದ್ದರೆ  ನಿಜವಾದ ಆತ್ಮಜ್ಞಾನದ ಶಾಂತಿ ಕೇವಲ ತಂತ್ರವೇ ಬೆಳೆದರೆ ವಿಜ್ಞಾನದ ಕ್ರಾಂತಿ. ಯಾವುದು ಬೇಕು? ಎಷ್ಟು ಬೇಕು? ಯಾರಿಗೆ ಕೊಡಬೇಕು? ಹೇಗೆ ಯಾರು ಕೊಡಬೇಕೆನ್ನುವ‌ ಪ್ರಶ್ನೆಗೆ ಉತ್ತರ  ನಾವೇ ನಮ್ಮ‌ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಮನೆಯೊಳಗಿನಿಂದಲೇ  ಕೊಟ್ಟು ಬೆಳೆಸಿದರೆ ಹೊರಗೆ ಬಂದಾಗ ಉತ್ತಮ ಪ್ರಜೆಗಳಾಗಿ ರಾಜಯೋಗದೆಡೆಗೆ ನಡೆಯಬಹುದು. ಹೊರಗಿನ ರಾಜಕೀಯದ ಹಿಂದೆ ನಾವೇ ನಿಂತು  ಬೇಡಿದಷ್ಟೂ ಸಾಲ ಬೆಳೆದು ಅಜ್ಞಾನ ಆವರಿಸಿ ಭ್ರಷ್ಟರ ದುಷ್ಡರ ಕೆಳಗೆ ಜೀವನ‌ ನಡೆಸುವುದು ತಪ್ಪೋದಿಲ್ಲ.
ಇದು ಮಕ್ಕಳು ಮೊಮ್ಮಕ್ಕಳವರೆಗೂ  ಬೆಳೆದರೆ ಸ್ವತಂತ್ರ ಜ್ಞಾನ ಪಡೆಯಲಾಗದು.ಏನೇ ಇರಲಿ ಶಿಕ್ಷಣವು ಒಂದು  ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸಬೇಕಾದರೆ ಅದು ತತ್ವದ  ಮಾರ್ಗದಲ್ಲಿದ್ದರೆ ಉತ್ತಮ..ಮೂಲ ಶಿಕ್ಷಣವೇ ತಂತ್ರಮಯವಾದರೆ ಒಳಗಿದ್ದ ಸ್ವತಂತ್ರ  ತನ್ನ ಅಸ್ತಿತ್ವ ಕಳೆದುಕೊಂಡು ಪರ ತಂತ್ರದ ವಶವಾಗುತ್ತದೆನ್ನಬಹುದು. ಶಾಸ್ತ್ರ ಗಳಿಂದ  ಶಾಂತ ಜೀವನ ಇದನ್ನು ದುರ್ಭಳಕೆ ಮಾಡಿಕೊಂಡರೆ ಶಸ್ತ್ರ ಹಿಡಿದು ಹೋರಾಡುವುದು ತಪ್ಪೋದಿಲ್ಲ. ಮೊದಲೇ ಶಸ್ತ್ರ ಹಿಡಿಸುವ ಶಿಕ್ಷಣದಲ್ಲಿ ಶಾಸ್ತ್ರದ ಅರಿವಿರೋದಿಲ್ಲ.ಇಷ್ಟಕ್ಕೂ ನಾವೀಗ ಪ್ರಜಾಪ್ರಭುತ್ವದ ಸಾಮಾನ್ಯಜ್ಞಾನವುಳ್ಳ ಸಾಮಾನ್ಯಪ್ರಜೆಯಾಗಿ ದೇಶದ ಈ ಸ್ಥಿತಿಗೆ ಕಾರಣ ತಿಳಿದು ತಿಳಿಸುವ  ತತ್ವಶಾಸ್ತ್ರ ಮಕ್ಕಳಿಗೆ ತಿಳಿಸಿರುವೆಯೇ? ಇಲ್ಲವಾದರೆ ಮೊದಲು ಆ ಕೆಲಸ ಮನೆ ಮನೆಯೊಳಗೆ ಆದರೆ  ಹೊರಗಿನಿಂದ ನಡೆಯುತ್ತಿರುವ ಶಸ್ತ್ರ ಕ್ರಿಯೆ  ನಿಲ್ಲಿಸಿ ಆರೋಗ್ಯವಂತ ಪ್ರಜೆಗಳನ್ನು ಕಾಣಬಹುದು.ಇದಕ್ಕೆ ಎಲ್ಲಾ ಧಾರ್ಮಿಕ ಕ್ಷೇತ್ರದವರೂ ಒಗ್ಗಟ್ಟನ್ನು ಕಾಪಾಡಿಕೊಂಡು ತಾರತಮ್ಯವನ್ನು ಬಿಟ್ಟು ತತ್ವದ ಮೂಲ ಉದ್ದೇಶವಾಗಿರುವ ಏಕತೆ,ಐಕ್ಯತೆ,ಸಮಾನತೆ ಕಡೆಗೆ ಇದ್ದಲ್ಲಿಯೇ ಒಂದಾದರೆ ಹೊರಗಿನ ದುಷ್ಟರ ಶಕ್ತಿ ಅಡಗಿ  ಹೋಗುತ್ತದೆ. ದುಷ್ಟರು ಯಾರು? ಅಜ್ಞಾನದ ವಶದಲ್ಲಿ ಭೌತಿಕಾಸಕ್ತಿ ಬೆಳೆದು ದೈಹಿಕಸುಖಕ್ಕಾಗಿ ಪರರನ್ನು ಹಿಂಸೆ ಮಾಡಿ ಅಥವಾ ಮೋಸ,ವಂಚನೆ ಭ್ರಷ್ಟಾಚಾರದಿಂದ  ತಮ್ಮ ಕಡೆ ಓಲೈಸಿಕೊಂಡು ತಾನೂ ಹಾಳಾಗಿ ಎಲ್ಲರನ್ನೂ  ಹಾಳು ಮಾಡುವ ಪ್ರವೃತ್ತಿಯುಳ್ಳವರು ದುಷ್ಟರು. ಈ ಶಕ್ತಿ ಒಳಗೇ ಇದೆ. ಪ್ರಜೆಗಳೇ  ಆಶಕ್ತಿಯ ಒಡೆಯರು.ಯಾವುದಕ್ಕೆ ಸಹಕಾರ ಕೊಟ್ಟರೂ ಬೆಳೆಯುತ್ತದೆ.ಅದೇ ನಮ್ಮನ್ನು ಆಳುತ್ತದೆ.ಹೀಗಿರುವಾಗ  ನಮ್ಮೊಳಗೇ ಇರುವ ಶಕ್ತಿಯನ್ನು ಅರ್ಥ ಮಾಡಿಕೊಂಡರೆ  ನಮ್ಮ ಭವಿಷ್ಯವೂ ಅರ್ಥ ಆಗುತ್ತದೆ. ಹೊರಗಿನ ಭವಿಷ್ಯಕ್ಕಿಂತ ಒಳಗಿನ ಭವಿಷ್ಯ ಮುಖ್ಯ. ಒಳಗೇ  ಭವಿಷ್ಯ ಹಾಳಾಗಿದ್ದರೆ ಹೊರಗೆ ಸರಿ ಮಾಡಲು ಕಷ್ಟವಿದೆ. ಇದೊಂದು ಅಧ್ಯಾತ್ಮ ಸತ್ಯ. ದೇವತೆಗಳು ಶಸ್ತ್ರ ಹಿಡಿದು ಯುದ್ದ ಮಾಡಿರುವುದು ಧರ್ಮ ರಕ್ಷಣೆಗಾಗಿಯೇ ಹೊರತು ಜೀವರಕ್ಷಣೆಗಲ್ಲ. ಆತ್ಮರಕ್ಷಣೆಯ ಧರ್ಮ ಯುದ್ದ ನಮ್ಮ ಪುರಾಣ ಕಥೆಗಳಾಗಿವೆ. ಇದನ್ನು ಆತ್ಮವಂಚಕರು ಪ್ರಚಾರ ಮಾಡಿದರೆ  ಅರ್ಥ ವಾಗದು. ಹಾಗೆ
ಎಲ್ಲಾ ಶುದ್ದತೆಯೂ ಒಳಗಿನ ತತ್ವಜ್ಞಾನದಿಂದ ನಡೆದಾಗಲೇ ತಂತ್ರಜ್ಞಾನದ ಸದ್ಬಳಕೆ ಸಾಧ್ಯವಿದೆ. ಅಲ್ಲಿಯವರೆಗೆ ತಂತ್ರವೇ ತತ್ವವನ್ನು ಕಡೆಗಣಿಸಿ ಆಳುತ್ತದೆ.ಮಾನವನಿಗೆ ನೀಡಿದ ಸ್ವತಂತ್ರ ಸ್ಬೇಚ್ಚಾಚಾರವಾಗುತ್ತದೆನ್ನಬಹುದು. 
ಆಗಮೋಕ್ತ ದೇವತಾಮೂರ್ತಿಗಳೂ ಆಯುಧಗಳನ್ನು ಹಿಡಿದಿರುತ್ತಾರೆ. ವಿಷ್ಣುವು ಶಂಖ- ಚಕ್ರ- ಗದೆಗಳನ್ನೂ, ಶಿವನು ತ್ರಿಶೂಲವನ್ನೂ, ಗಣೇಶನು ಅಂಕುಶವನ್ನೂ, ಕಾರ್ತಿಕೇಯನು ಶೂಲವನ್ನೂ, ದುರ್ಗೆಯು ಬಗೆಬಗೆಯ ಪ್ರಹರಣಗಳನ್ನೂ ಧರಿಸಿರುತ್ತಾರೆ. ಪಾಪ ತುಂಬಿದ ಹೃದಯಗಳಿಗೆ ಈ ಆಯುಧಗಳು ಭಯವನ್ನುಂಟುಮಾಡಿದರೆ, ಸಜ್ಜನ ಮನಸ್ಸಿಗೆ ಧೈರ್ಯ- ಆಶ್ವಾಸನೆಗಳು ಸಿಗುತ್ತವೆ.. ಮಿತಿಮೀರಿದ ಅಜ್ಞಾನಕ್ಕೆ ಇವು ಕೇವಲ ಪ್ರತಿಮೆಗಳಷ್ಟೆ. ಪ್ರತಿಮೆಯನ್ನು ರಾಜಕೀಯಕ್ಕೆ ಬಳಸಿದರೆ ಮುಗಿಯಿತು ಅದರ ಸತ್ವ ತತ್ವ ಸತ್ಯವೇ ಕಾಣೋದಿಲ್ಲ.
ನಿಜವಾದ ಪ್ರತಿಭೆ ಜ್ಞಾನ ಹಿಂದುಳಿಸಿ ಆಳುವ ಅಸುರರೆ ಬೆಳೆಯೋದು.ಇದಕ್ಕೆ ಸಹಕಾರ ನೀಡಿದವರಿಗೇ ದೊಡ್ಡ ಕಷ್ಟ ನಷ್ಟ ಸಮಸ್ಯೆ ಹೆಚ್ಚುವುದು.
ಸತ್ಯವಿಲ್ಲದ ಧರ್ಮ ಕುಂಟುತ್ತದೆ. ಧರ್ಮ ವಿಲ್ಲದ ಸತ್ಯ ಕುರುಡಾಗಿರುತ್ತದೆ.ಸತ್ಯದ ಜೊತೆಗೆ ಧರ್ಮ ವಿದ್ದಾಗ ದೈವತ್ವ ಬೆಳೆಯುತ್ತದೆನ್ನುವರು. ಅಂತಹವರು ದೇವರಾಗುವರು.
ರಾಜಕೀಯ ಸತ್ಯದಲ್ಲಿ ನಡೆಸಲಾಗದು.ಅದಕ್ಕೆ ಹರಿಶ್ಚಂದ್ರ ಸತ್ಯಕ್ಕೆ ಹೆಸರಾದನು.ಹಾಗೆ ಶ್ರೀರಾಮ ಧರ್ಮಾತ್ಮನಾದನು. ಸುಲಭವಾದದ್ದು ಎಲ್ಲಾ ಮಾಡುವರು.ಕಷ್ಟವಾದದ್ದು ಕೆಲವರಷ್ಟೆ ಮಾಡಿ ಸಾಧಕರಾದರು.
ಆರೋಗ್ಯಕರ ಶಿಕ್ಷಣ ಹಾಗು ಆಹಾರದಿಂದ ಜ್ಞಾನೋದಯ
‍ದೈಹಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಆರೋಗ್ಯಕ್ಕೆ ಏನು ಬೇಕು?  •             ಪೌಷ್ಠಿಕ ಆಹಾರ (ಧಾನ್ಯ, ಹಣ್ಣು, ತರಕಾರಿ, ಹಾಲು,ಮೊಟ್ಟೆ,ಮೀನು, ಮಾಂಸ ಇತ್ಯಾದಿ ಸಮತೋಲನ ಆಹಾರ)  •             ಶುದ್ಧ ಕುಡಿಯುವ ನೀರು, ಉತ್ತಮ ಪರಿಸರ  •             ಮನೆಯ ಮತ್ತು ಸುತ್ತಮುತ್ತ ಶುದ್ಧಗಾಳಿ, ಸಾಕಷ್ಟು ಬೆಳಕು,ಈಗ ಇವೆಲ್ಲವೂ ಕಲುಷಿತವಾಗಿರುವ ಕಾರಣ ಆರೋಗ್ಯ ಹದಗೆಟ್ಟಿದೆ.ಶುದ್ದವಾಗಲು ಮೂಲದೆಡೆಗೆ ಸಾಗಬೇಕು.
ಶೈಕ್ಷಣಿಕ ಕಾರಣಗಳು:ಅನಕ್ಷರತೆ,ಮೂಢನಂಬಿಕೆಗಳು ಆರೋಗ್ಯದ ಬಗ್ಗೆ ಅರಿವಿಲ್ಲದಿರುವುದು. ಅತಿಯಾಗಿ ಯಂತ್ರ ಮಂತ್ರ ಇತ್ಯಾದಿಗಳ ಮೊರೆ ಹೋಗುವುದು. ಇವೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ವಾಸ್ತವತೆಯನ್ನರಿತು ಪುರಾಣ ಇತಿಹಾಸ ತಿಳಿದು ಭವಿಷ್ಯ ನಿರ್ಧಾರ ಮಾಡುವ‌ ಶಕ್ತಿ ಮಾನವನಿಗಿದೆ. ದೇವರಾಗಲಿ ಅಸುರರಾಗಲಿ ಮಧ್ಯವರ್ತಿಗಳಾಗಿದ್ದು ವಿಚಾರ ತಿಳಿಸಬಹುದು. ತನ್ನ ಆತ್ಮರಕ್ಷಣೆಗೆ ತಾನೇ ಪ್ರಯತ್ನ ಪಟ್ಟು ಅಳವಡಿಸಿಕೊಳ್ಳುವ ಸ್ವಾತಂತ್ರ್ಯ ಮಾನವನಿಗೇ ಬಿಟ್ಟಿದೆ. ಆದರೆ ಅದು ಅಧರ್ಮದೆಡೆಗೆ ಸಾಗಿದರೆ  ಆತ್ಮಹತ್ಯೆ.ಧರ್ಮದೆಡೆಗೆ ನಡೆದರೆ ಆತ್ಮಜ್ಞಾನದ ಉನ್ನತ ಸ್ಥಿತಿ.

ಮತದಾನ ದಾನವರ ಪಾಲಾದರೆ ದುರ್ಗತಿ



ಮತದಾನ ದೇಶದ ಭವಿಷ್ಯ ನಿರ್ಧಾರ ಮಾಡುತ್ತದೆ. ದಾನದಿಂದ  ಮಾನವನ ಜ್ಞಾನ ಬೆಳೆಯುತ್ತದೆ ಎಂದರೆ  ಮತದಾನದಿಂದ ಪ್ರಜೆಗಳ ಜ್ಞಾನ ಬೆಳೆಯಿತೆ ?  ಕಾರಣ ನಮ್ಮಲ್ಲಿ ಜ್ಞಾನದ ಶಿಕ್ಷಣವಿಲ್ಲದೆ  ರಾಜಕೀಯ ನಡೆಸಿ ಈಗ  ಸಾಲ ಬೆಳೆದು ಭ್ರಷ್ಟಾಚಾರ  ಮುಗಿಲುಮುಟ್ಟಿದೆ.
ಇದರಿಂದಾಗಿ  ಸದ್ಗತಿ ಸಿಗದ ಜೀವ ದುರ್ಗತಿ ಕಡೆಗೆ ನಡೆದಿದೆ. ದೇಶವನ್ನು ಯಾರು ಬೇಕಾದರೂ ಆಳಬಹುದೆನ್ನುವ ಸ್ವತಂತ್ರ ಪ್ರಜಾಪ್ರಭುತ್ವದ ಮಧ್ಯೆ ನಿಂತಿರುವ ನಿಜವಾದ ದೇಶಭಕ್ತರು,ಜ್ಞಾನಿಗಳು, ವಿದ್ಯಾವಂತರು,ಸಾಹಿತಿಗಳು,
ಆಧ್ಯಾತ್ಮಿಕ ಚಿಂತಕರು ,ಮಾಧ್ಯಮದವರು  ಈವರೆಗೆ 
 ರಾಜಕೀಯ ಕ್ಷೇತ್ರಕ್ಕೆ ಬಂದು ಗೆದ್ದವರು ವಿರಳ. ಕಾರಣವಿಷ್ಟೆ ರಾಜಕೀಯ ನಡೆಸುವುದಕ್ಕೆ  ಧೈರ್ಯದ ಜೊತೆಗೆ ಹಣಬಲ ವಿರಬೇಕು.  ಇವರಿಗೆ ರಾಜಕೀಯ ವ್ಯಕ್ತಿಗಳನ್ನು  ತಮ್ಮೆಡೆ ಸೆಳೆದುಕೊಳ್ಳುವ ಜ್ಞಾನವಿದೆ ಆದರೆ ದೇಶವನ್ನು ಆಳುವ ಶಕ್ತಿಯಿಲ್ಲ ಎಂದರೆ ಇಲ್ಲಿ  ನಾವು ಪ್ರಜಾಪ್ರಭುತ್ವದ ಪ್ರಜೆಗಳಾಗಿದ್ದು ದೇಶ ಆಳುವ ಅಧಿಕಾರವನ್ನು  ಬೇರೆಯವರಿಗೆ ಬಿಟ್ಟು ಮಧ್ಯವರ್ತಿ ಆಗಿದ್ದು  ಸರಿತಪ್ಪುಗಳ ಲೆಕ್ಕಾಚಾರ ಹಾಕುವ ಬದಲು ನೇರವಾಗಿ  ರಂಗಕ್ಕೆ ಇಳಿದಾಗಲೇ  ಅದರ ಪ್ರಭಾವ ಎಷ್ಟಿದೆ ಎಂದು ಅನುಭವಿಸಿ ಸರಿಯಾದ ಮಾರ್ಗದಲ್ಲಿ  ದೇಶ ಕಟ್ಟಿ ನಡೆಸುವ ಕಡೆ  ಮೇಲ್ಮಟ್ಟದ ಬುದ್ದಿ ವಂತ ಜ್ಞಾನಿಗಳು  ತಯಾರಾದರೆ ಹೊರಗಿನಿಂದ ಬಂದು  ಜನರ ದಾರಿತಪ್ಪಿಸಿ  ತಮ್ಮ ಸ್ವಾರ್ಥ ಸುಖಕ್ಕಾಗಿ ಸರ್ಕಾರ ನಡೆಸುವವರ ಹೆಸರಿನಲ್ಲಿ ನಡೆಸುವ ಭ್ರಷ್ಟರು ದುಷ್ಟರು,ವೈರಿಗಳು,ವಿರೋಧಿಗಳ ನಿಜವಾದ ಬಣ್ಣ ಬಯಲಾಗಬಹುದು. ಇದಕ್ಕೆ ಮುಖ್ಯವಾಗಿ ನಮ್ಮ ಮಾಧ್ಯಮ ಮಿತ್ರರು  ದೇಶದ ಪರವಾಗಿ ನಿಲ್ಲುವುದು ಅಗತ್ಯ. ವ್ಯವಹಾರದ ವಿಚಾರಕ್ಕೆ ಬಂದಾಗ ಸರ್ಕಾರದ ಎಲ್ಲಾ ಭಾಗ್ಯ ಗಳು ಜನರೆಡೆಗೆ ತಲುಪಿಸುವುದು ಧರ್ಮ. ಆದರೆ ಮಧ್ಯವರ್ತಿಗಳೆ  ತಡೆದು ನುಂಗಿ ನೀರು ಕುಡಿದು ಫಲಾನುಭವಿಗಳ  ಮೂತಿಗೆ ಒರೆಸಿ ತಿಂದಿದ್ದಾರೆಂದರೆ ಇದಕ್ಕೆ ಸಾಕ್ಷಿ ಹೇಳೋರು ಯಾರು?  ದೇಶದ ಒಂದೊಂದು ರೂಗಳು  ದೇಶದ ಸಾಲವೆಂದು ಪರಿಗಣಿಸಿ ಹಿಂದಿರುಗಿಸಬೇಕೆಂದು  ಪ್ರಜೆ ಬಳಸಿದ್ದರೆ ಪ್ರಜೆಗಳಲ್ಲಿ ಉತ್ತಮ   ಜ್ಞಾನದ  ಪ್ರಗತಿ ಸಾಧ್ಯವಿತ್ತು. ದುಡಿಯದೆ ಕುಳಿತು  ತಿಂದು ಕೂಗಿ ಕಾರಿದರೆ ರಾಜಕೀಯ ಎತ್ತ ಸಾಗುತ್ತಿದೆ?
ಇಷ್ಟೆಲ್ಲಾ ನಡೆದರೂ ತಿಳಿದವರು  ಎದುರಾಡದೆ ಅದರೊಳಗೆ ಒಪ್ಪಂದ ಮಾಡಿಕೊಂಡು  ಮುಚ್ಚಿಹಾಕಿದರೂ ಸಾಲ ಸಾಲವೇ ಮುಂದೆ ತೀರಿಸಬೇಕಾದವರೂ ಪ್ರಜೆಗಳೇ. ಈಗಲೇ ಸರ್ಕಾರದ ಹಣದ ಮೂಲ  ಪ್ರಜೆಗಳ  ಹಣದ ಜೊತೆಗೆ ವಿದೇಶಿ ಹಣವೂ ಇದೆ. ಸ್ವದೇಶಿ ಋಣದ ಜೊತೆಗೆ ವಿದೇಶಿ ಋಣ ತೀರಿಸಲು ಎಷ್ಟು ಜನ್ಮ ಪಡೆಯಬೇಕೋ.ಅಜ್ಞಾನದ ಜಗತ್ತಿನಲ್ಲಿ  ಜ್ಞಾನಿಗಳಾದವರು ರಾಜಕೀಯಕ್ಕೆ ಮೊರೆಹೋಗಿ ಬೇಡುತ್ತಿರುವುದು ದೊಡ್ಡ ಅಜ್ಞಾನ ವೆಂದರೆ ತಪ್ಪಲ್ಲ. ಇಲ್ಲಿ ಸ್ಥಿತಿ ಹದಗೆಟ್ಟಿರುವುದು ಸಾಲದಿಂದ, ಸಾಲ ತೀರಿಸಲು ಪ್ರಜೆಗಳೆ ದುಡಿಯಬೇಕು. ದುಡಿದರೂ ಅದರ ಲಾಭ ದೇಶಕ್ಕೆ ಆಗಬೇಕು.ವಿದೇಶಿ ಕಂಪನಿಗಳ ಲಾಭ ವಿದೇಶಕ್ಕೆ ಸೇರಿದರೆ ದೇಶದ ಗತಿ? ಭೂಮಿ,ನೀರು ಸರ್ಕಾರದ  ಎಲ್ಲಾ ಸೌಕರ್ಯಗಳನ್ನು ಪಡೆದು ದೇಶದ  ಸಾಲ ತೀರಿಸಲು ಸೋತರೆ ಧರ್ಮ ವೆ? ತಿಳಿದವರೆ ಸಹಕಾರ ನೀಡಿ ಬೆಳೆಸಿ ಈಗ ರಾಜಕೀಯ ಸರಿಯಿಲ್ಲ ಎಂದು ಒಂದು ಮಾತಿನಿಂದ ಜನರನ್ನು ದಾರಿತಪ್ಪಿಸಿದರೆ  ಇದನ್ನು  ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವರು. ದೇಶದ ಎಲ್ಲ ಅಧ್ಯಾತ್ಮ ಶಕ್ತಿ ಹಿಂದುಳಿಸಿ ಭೌತಿಕದಲ್ಲಿ ಹೆಸರು,ಹಣ,ಅಧಿಕಾರ ಸ್ಥಾನಮಾನ‌ಪಡೆದು ಜನರಲ್ಲಿದ್ದ ಸಾಮಾನ್ಯಜ್ಞಾನ ತಿಳಿಯದೆ ನೀಡಿದ ವಿಶೇಷ ಜ್ಞಾನದ ವಿಷಯ, ವಿಜ್ಞಾನದ ಪ್ರಗತಿಯಿಂದ ಮನುಕುಲ  ಮೂಲ ಮರೆತು ಮುಂದೆ ನಡೆದರೂ ತಿರುಗಿ ಬರಲಾಗದೆ ಯಾವ ತೃಪ್ತಿ ಸಿಗದು. 
ಆತ್ಮತೃಪ್ತಿ ಹೊಂದಿದ ಮೇಲೆ ಮುಕ್ತಿ ಎಂದರು.ರಾಜಕೀಯಕ್ಕೆ ಇಳಿದಾಗ ತೃಪ್ತಿ ಪಡೆಯಲು ಅಸಾಧ್ಯ. ಹಾಗಾಗಿ ಯಾರೇ ಆಗಲಿ ರಾಜಕೀಯದ ಹಿಂದೆ ನಡೆದಷ್ಟೂ  ಸಾಲದ ಹೊರೆ ಏರಿಸಿಕೊಂಡು ತೀರಿಸಲಾಗದೆ  ತಿರುಗಿತಿರುಗಿ ಜನ್ಮ ಪಡೆದರೂ ಸರಿಯಾದ ಸಾತ್ವಿಕ ಸತ್ಯದ ಶಿಕ್ಷಣ ಪಡೆಯುವವರೆ  ಒಳಗಿನ ಶುದ್ದತೆ ಸಿದ್ದಿಯಾಗದು. ಸಿದ್ದಿಪುರುಷರನ್ನು ಮುಂದಿಟ್ಟುಕೊಂಡು ಪ್ರಸಿದ್ದರಾದರೂ ಅವರ ಜ್ಞಾನದ ಆಳಕ್ಕೆ ಇಳಿಯುವವರೆಗೆ  ಮುಕ್ತಿಯಿಲ್ಲ
ವೆಂದರು. ಅನುಭವವಿಲ್ಲದ  ಅರ್ಧ ಸತ್ಯವಷ್ಟೆ ರಾಜಕೀಯ ನಡೆಸಬಹುದು. ಪೂರ್ಣ ಸತ್ಯವು ರಾಜಯೋಗದೆಡೆಗೆ ನಡೆಸಿ  ಆತ್ಮತೃಪ್ತಿ  ಸಿಗುವುದು. ಒಟ್ಟಿನಲ್ಲಿ ರಾಜಕೀಯವು ಮಾನವನ ಭೌತಿಕ ಜೀವನದಲ್ಲಿ ಸಂತೋಷ ನೀಡಿದರೆ  ರಾಜಯೋಗವು ಅಧ್ಯಾತ್ಮ ಜಗತ್ತಿನಲ್ಲಿ ಸಂತೋಷಕೊಡುತ್ತದೆ. ರಾಜಯೋಗಿಗೆ ಯಾವುದೇ ರೀತಿಯ ಸ್ವಾರ್ಥ ಅಹಂಕಾರ ವಿರದೆ ಲೋಕಕಲ್ಯಾಣಕ್ಕಾಗಿ ತನ್ನ ಜೀವನವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿರುತ್ತದೆ. ಆದರೆ ಇದಕ್ಕೆ ವಿರುದ್ದವಾದ ರಾಜಕೀಯದಲ್ಲಿ ಹಣ,ಅಧಿಕಾರದ ಜೊತೆಗೆ ಜನಬಲವೂ ಇದ್ದು  ಜನರ ಹಣವನ್ನು ಜನರಿಗೆ ಕೊಡುತ್ತಿರುವ ಸಾಮಾನ್ಯ ಜ್ಞಾನವಿಲ್ಲದೆ   ದುರ್ಭಳಕೆ ಮಾಡಿಕೊಂಡು  ಈ ಕಡೆ ದೇಶದ ಪ್ರಗತಿಯೂ ಆಗದೆ ಜನರಲ್ಲಿ ಶಾಂತಿಯೂ  ಬೆಳೆಯದೆ ಕ್ರಾಂತಿಗೆ ದಾರಿಮಾಡಿಕೊಟ್ಟು  ಜೀವನ ಅತಂತ್ರಸ್ಥಿತಿಗೆ ತಲುಪಿಸುತ್ತದೆ. ಇದು ನಾವೀಗ ಪ್ರಜಾಪ್ರಭುತ್ವದಲ್ಲಿ ಕಾಣುತ್ತಿರುವುದರ ಹಿಂದೆ ಪ್ರಜೆಗಳ ಸಹಕಾರವಿದೆ.ಇದನ್ನು ರಾಜಕಾರಣಿಗಳ ದೋಷ ಎನ್ನುವ ಜೊತೆಗೆ ಸಹಕರಿಸಿದ  ಪ್ರಜೆಗಳ ಸಹಕಾರವೇ ಕಾರಣ.
ಅಜ್ಞಾನದ ಶಿಕ್ಷಣ  ಪಡೆದು ಜ್ಞಾನದ ರಾಜಕೀಯ  ನಡೆಸಲಾಗದು.ಒಳಗಿರುವ  ಶಕ್ತಿಯೇ ಎಲ್ಲವನ್ನೂ ನಡೆಸುವುದಾದರೆ  ಆಂತರಿಕ ಪ್ರಜ್ಞೆ  ಹೆಚ್ಚಾದರೆ  ಎಲ್ಲಾ  ಸತ್ಯದರ್ಶನವಾಗುತ್ತದೆ.ಶ್ರೀ ರಾಮರಾಜ್ಯ ಸ್ಥಾಪನೆಗೆ ಶ್ರೀ ರಾಮನ ತತ್ವಜ್ಞಾನದ ಅಗತ್ಯವಿದೆ. ತಂತ್ರದಿಂದ ರಾಮನ ಹೆಸರಿನಲ್ಲಿ ತಾನು ಬೆಳೆದರೆ ಅಧರ್ಮ. ಇದಕ್ಕಾಗಿ ಭೂಮಿ ಆಳುವುದು ತಪ್ಪಲ್ಲ ಅಧರ್ಮದಿಂದ ಭೂಮಿ ಆಳುವುದರಿಂದ  ಭೂಮಿಯಲ್ಲಿ ಶಾಂತಿಯಿರದು. ಕಲಿಗಾಲದ ಪ್ರಭಾವ  ಮಾನವನಿಗೆ  ಸರಿಯಾದ ಪಾಠ ಕಲಿಸುತ್ತದೆ. ಇಲ್ಲಿ ಯಾರೂ ಯಾರನ್ನೂ ಆಳಲು ಸಾಧ್ಯವಿಲ್ಲ.ನಮ್ಮನ್ನು ನಾವು ಆಳಿಕೊಳ್ಳಲು ರಾಜಯೋಗ
ದೆಡೆಗೆ ಹೊರಟ ನಮ್ಮ ಹಿಂದಿನ ಮಹಾತ್ಮರಲ್ಲಿದ್ದ ಸತ್ಯ ಸತ್ವ,ತತ್ವ ಬಿಟ್ಟು ಅಸತ್ಯ ಹಾಗು ತಂತ್ರದಿಂದ ಈವರೆಗೆ ದೇಶವನ್ನೇ ವಿದೇಶಿ ಶಿಕ್ಷಣದಿಂದ ನಡೆಸಿ ಸ್ವದೇಶದ ತತ್ವ ಹಿಂದುಳಿದು, ಇನ್ನಷ್ಟು ಸಾಲ ಏರಿಸಿರುವ ರಾಜಕೀಯ ವ್ಯವಸ್ಥೆ  ಇಂದಿಗೂ  ಒಗಟಾಗಿ ಉಳಿದಿದೆ.ನಿಜ, 
ಭೌತಿಕದಲ್ಲಿ ಬದುಕಲು ಹಣ ಬೇಕು. ಹಣ ಸಂಪಾದಿಸಲು ಜ್ಞಾನವಿರಬೇಕು.ಜ್ಞಾನ ಸಂಪಾದನೆಗೆ ಶಿಕ್ಷಣ ಬೇಕು. ಯಾವ ರೀತಿಯ ಶಿಕ್ಷಣ ಬೇಕಿತ್ತು? ಮಾನವೀಯತೆ,ನೈತಿಕತೆ,ತತ್ವವನ್ನು ಅರ್ಥ ಮಾಡಿಕೊಳ್ಳುವ ಶಿಕ್ಷಣವೇ ನಿಜವಾದ ಶಿಕ್ಷಣವೆಂದರು. ಈಗಲೂ ಕಾಲ ಮಿಂಚಿಲ್ಲ. 
ಹಿಂದಿರುಗಿ  ಬಂದರೆ ಭಗವಂತ ನೀಡಿದ್ದನ್ನು ಪ್ರಸಾದ ವೆಂದು ಭಕ್ತಿಯಿಂದ ಸ್ವೀಕರಿಸಿ ಎಲ್ಲರಲ್ಲಿಯೂ ಅಡಗಿರುವ ಆ ಪರಾಶಕ್ತಿಯನ್ನರಿತು ಹಂಚಿಕೊಂಡು ಬಾಳಿ ಬದುಕುವ ಕಲೆ ಮಾನವನೊಳಗಿದೆ. ಬೆಳೆಸಿಕೊಂಡರೆ ಉತ್ತಮ ಶಾಂತಿ ಸಮಾಧಾನ,ತೃಪ್ತಿ, ಮುಕ್ತಿ ಇದ್ದಲ್ಲಿಯೇ ಸಿಗಬಹುದು. ಎಷ್ಟು ಸರ್ಕಾರ ಬೇಡಿಕೊಂಡಿರುವೆವೋ ಅಷ್ಟು ಭ್ರಷ್ಟಾಚಾರ ಬೆಳೆಯುತ್ತದೆ. ಅಂದರೆ ಸರ್ಕಾರದ ಹಣ ಜನರ ಋಣ.ಋಣ ತೀರಿಸಲು ಸತ್ಕರ್ಮ ಮಾಡಬೇಕಿದೆ.ನಮ್ಮ ಗುರುಹಿರಿಯರು ಹಾಕಿಕೊಟ್ಟ  ಧರ್ಮ ಕರ್ಮದಲ್ಲಿದ್ದ ಶುದ್ದ ಸತ್ಯ,ತತ್ವವನ್ನರಿತರೆ ಎಲ್ಲಾ ಹಿಂದಿನ  ಮಹಾತ್ಮರು ತಿಳಿಸಿದ ಅಧ್ಯಾತ್ಮ ಸತ್ಯವೂ ಅನುಭವಕ್ಕೆ ಬರುತ್ತದೆ. ಅಂದು ಇಂದು ಮುಂದೆಯೂ ಮನುಕುಲ ಭೂಮಿಯಲ್ಲಿರುತ್ತದೆ.ಆದರೆ ಸತ್ಯಾಸತ್ಯತೆಯು  ಕಾಲಮಾನಕ್ಕೆ ತಕ್ಕಂತೆ  ತಕ್ಕಂತೆ ಬದಲಾಗೋದು ಮಾತ್ರ ರಾಜಕೀಯದ ಪ್ರಭಾವ. ಸತ್ಯ ಹಾಗು ತತ್ವ ಬದಲಾಗದು.
ಮನಸ್ಸನ್ನು  ತಡೆಹಿಡಿಯೋದು ಹೊರಗೆ ಆಗದು ಒಳಗೆ ಸಾಧ್ಯವಿದೆ ಇದೇ ಯೋಗ.
ಪರಮಾತ್ಮನ ಜೀವಾತ್ಮ ಸೇರೋದು.
ಪರದೇಶ ಸೇರುವ ರಾಜಕೀಯವೆಲ್ಲಿ? ಪರಮಾತ್ಮನ ಸೇರುವ ರಾಜಯೋಗವೆಲ್ಲಿ?  

Wednesday, April 5, 2023

ಮಕ್ಕಳಿಗೆ ಜ್ಞಾನ ಸಂಪಾದನೆ ಮಾಡಿಡಬೇಕು

ಒಬ್ಬರ ಸ್ವತ್ತನ್ನು ಇನ್ನೊಬ್ಬರು ಪಡೆದು ಅನುಭವಿಸುವುದು ಸುಲಭ. ಆದರೆ ಆ ಸ್ವತ್ತಿನ ಹಿಂದೆ ಇದ್ದ ಕರ್ಮ ಫಲವನ್ನು ಅನುಭವಿಸುವಾಗ ಯಾರೂ ಸಹಕರಿಸುವುದಿಲ್ಲ. ಇದೊಂದು ರೋಗವಿದ್ದಂತೆ. ಪಾಲುದಾರರ ಕಥೆ ಹೀಗೇ ತಾನೂ ಸುಖವಾಗಿರೋದಿಲ್ಲ ಇನ್ನೊಬ್ಬರಿಗೂ ಸುಖವಾಗಿರಲು ಬಿಡೋದಿಲ್ಲ. ಇದು ಮನೆ ಮನೆಯ ಕಥೆ.ನಂತರ ಸಮಾಜಕ್ಕೆ ಬಂದು ದೇಶದ ತುಂಬಾ ಹರಡಿಕೊಂಡಾಗ ಪಾಲು ಕೇಳದವರೂ ಅನುಭವಿಸಬೇಕು. ಜನ್ಮ ಪಡೆದಾಗಲೇ ಅವರವರ ಪಾಲನ್ನು ಕೊಟ್ಟು ಕಳಿಸುವ ಪರಮಾತ್ಮ ತಾಳುವುದನ್ನು ಕಲಿಸಲಿಲ್ಲವೆ?  ತಾಳುವ ಗುಣವಿದ್ದರೂ ಪೋಷಕರಲ್ಲಿ ತಾಳ್ಮೆಯಿಲ್ಲದೆ ಹೋಗಿದ್ದರೆ ಮಕ್ಕಳಾದರೂ ಏನು ಮಾಡಬಹುದು?
ಹಾಗೆಯೇ ಸಮಾಜದ ಮಧ್ಯೆ ಇದ್ದಾಗ ಒಬ್ಬರಿಗೊಬ್ಬರು ಹೊಂದಿಕೊಂಡು ತಾಳ್ಮೆಯಿಂದ ನಡೆದರೆ ನಿಜವಾದ ಸುಖ ಹತ್ತಿರವೇ ಇರುತ್ತದೆ. ತಾಳ್ಮೆಯಿಲ್ಲದೆ  ಸಮಾಜ ಬೇರೆ ನಾನೇ ಬೇರೆ ಎಂದು ಸಮಾಜದ ಸ್ವತ್ತನ್ನು ಬಳಸಿ ದುವರ್ತನೆ ತೋರಿದರೆ ಸಮಾಜ ಒಮ್ಮೆ ಎತ್ತಿ ಒಗೆಯುತ್ತದೆ. ಹಾಗೆಯೇ ದೇಶದ ಮೂಲ ಸಂಪತ್ತನ್ನು  ಸರಿಯಾಗಿ ತಿಳಿದು ಬಳಸಿ ಸಮಾಜದ ಏಳಿಗೆಗೆ ಶ್ರಮಿಸಿದರೆ ಸಮಾಜಕಲ್ಯಾಣವಾಗುತ್ತದೆ. ಇಲ್ಲವಾದರೆ  ಸಮಾಜ ದ್ರೋಹಿಗಳೇ ಹೆಚ್ಚಾಗಿ ದೇಶವನ್ನು  ಆಳಲು ಹೊರಟು  ವಿದೇಶ ಮಾಡುವಾಗ ದೇಶದ ಮೂಲ ಸಂಪತ್ತು ಕುಸಿದು ಹೋಗುತ್ತದೆ. ಯಾವುದೇ ಆಗಲಿ  ಹೊಂದಿಕೆಯಾಗದಿದ್ದರೆ ಬಿಟ್ಟು ಬಿಡಬೇಕು. ಒತ್ತಾಯದಿಂದ, ಆಪರೇಷನ್ ನಿಂದ, ಅಧಿಕಾರದಿಂದ, ಹಣದಿಂದ  ಒಂದಾಗಿಸುವ‌ಪ್ರಯತ್ನ ಮಾಡಿದರೆ  ತಾತ್ಕಾಲಿಕ ಸಾಧನೆಯಾದರೂ  ಹೊರಗಿನ ಶಕ್ತಿ ತನ್ನ ಬಲಪ್ರಯೋಗ ಒಳಗೆ ನಡೆಸುವಾಗ  ಒಳಗಿರುವವರ ಶಕ್ತಿ ಇನ್ನೂ ಹೀನಸ್ಥಿತಿಗೆ ತಲುಪಬಹುದು.ಅದಕ್ಕೆ ಹೇಳಿದ್ದು ತಾಳಿದವನು ಬಾಳಿಯಾನು ಎಂದು ಹಾಗೆಯೇ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು. ಇದಕ್ಕೆ ಬೇಕಿದೆ ತಾಳ್ಮೆಯ ಜೀವನ. ತಾಳ್ಮೆ  ಆಂತರಿಕ ಶಕ್ತಿಯಾದ್ದರಿಂದ ಆತ್ಮಜ್ಞಾನ‌ದ ನಂತರ ತಾಳ್ಮೆ ಹೆಚ್ಚುವುದು. ವೈಜ್ಞಾನಿಕ ಜಗತ್ತಿನಲ್ಲಿ ಜನರ ಮನಸ್ಸು  ತಾಳ್ಮೆಯಿಲ್ಲದೆ  ಚಲಿಸುತ್ತಿದೆ.ಇದಕ್ಕೆ ಪರಿಹಾರ ಅಧ್ಯಾತ್ಮ ಜಗತ್ತಿನಲ್ಲಿದೆ. ತುಂಬಾ ಮುಂದೆ ಹೋದವರಿಗೆ ತಿರುಗಿ ಬರಲಾಗದಿದ್ದರೂ ಹಿಂದೆ ನಡೆಯುತ್ತಿರುವವರಿಗೆ ಸರಿಯಾದ ಮಾರ್ಗದರ್ಶನ ವಾದರೆ ಯಾರ ಸ್ವತ್ತಿಗೂ ಆಸೆ ಪಡದೆ ಅವರ ಸ್ವತ್ತನ್ನು ಉತ್ತಮವಾಗಿ ಬೆಳೆಸಿಕೊಂಡು ಬಾಳುವ ಜೀವನ ನಮ್ಮದಾಗಬಹುದು. ಬಹಳ ಕಷ್ಟ ಆಸೆ ಬಿಡೋದು.ಅತಿಆಸೆ ಬಿಟ್ಟರೆ ಸಾಕು. ಬೇರೆಯವರ ಸ್ವತ್ತು ಋಣ ಅಥವಾ ಸಾಲ ಎನ್ನುವ ಸತ್ಯ ತಿಳಿದು ನಡೆದರೆ ಸಾಕಷ್ಟು  ಪ್ರಗತಿ ಕಾಣಬಹುದು. ಭೌತಿಕ ಜೀವನ ಅಧ್ಯಾತ್ಮ ಜೀವನ ಒಂದೇ ನಾಣ್ಯದ ಎರಡು ಮುಖಗಳೆ ಆದರೂ  ವ್ಯವಹಾರಕ್ಕೆ  ಎರಡೂ ಒಂದೇ ಸಮ ನಡೆಸಲಾಗದು.
ಕಾರಣ ಇಲ್ಲಿ ಸಾಲ ತೀರಿಸಲು ಹಣವನ್ನು ದಾನ ಮಾಡಬೇಕು. ದಾನ ಮಾಡಿದರೆ ಹಣದ ನಷ್ಟ ಎನಿಸಿದರೂ ನಮ್ಮ ಸಾಲ ತೀರಿತೆನ್ನುವ ಜ್ಞಾನ ಒಳಗೆ ಇರುತ್ತದೆ. ಬೇರೆಯವರಿಗೆ ದಾನಮಾಡುವಷ್ಟು ಇದೆ ಎಂದರೆ ಬೇರೆಯವರ ಪಾಲು ನಮ್ಮ ಬಳಿ ಇತ್ತು ಎಂದರ್ಥ ವಲ್ಲವೆ?ಸಮಸ್ಯೆಗಳು ರೋಗಗಳೂ  ಅದರೊಂದಿಗೆ ಸೇರಿರುವಾಗ ಅದನ್ನು ಅನುಭವಿಸುವ ಬದಲಾಗಿ ಉತ್ತಮ‌ಕಾರ್ಯಕ್ಕೆ ಬಳಸುತ್ತಾ ಹೋದರೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದಂತೆ ಪರಮಾತ್ಮನು ಯಾರಿಗೆ ಸೇರಬೇಕೋ ಕೊಡುತ್ತಾನೆ. ಹೀಗಾಗಿ ಪಿತ್ರಾರ್ಜಿತ ಸ್ವಯಾರ್ಜಿತ ಆಸ್ತಿ ಯಾವ ಮಾರ್ಗದ ಸಂಪಾದನೆ ಎನ್ನುವುದರ ಮೇಲಿದೆ ನಮ್ಮ ಹಾಗು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ.
ಮತದಾನವೂ ಇದಕ್ಕೆ ಹೊರತಾಗಿಲ್ಲ. ನಾವು ಮಾಡಿದ ದಾನಕ್ಕೆ ಪ್ರತಿಯಾಗಿ  ಬಯಸಬಾರದೆನ್ನುವರು.ಆದರೆ ಇಂದು ಬೇಡಿಕೆಯ ಸರಮಾಲೆ ಮೊದಲೇ ತಯಾರಿಟ್ಟುಕೊಂಡು ಮತ ಹಾಕಿ  ದಾನವರು ಹೆಚ್ಚಾಗಿದ್ದಾರೆ. ಯಾರ ಹಣವನ್ನೋ ಯಾರ ಭಾಗ್ಯವನ್ನೋ ಯಾರ ಸಾಲವನ್ನೋ  ಎಲ್ಲರಿಗೂ ಹಂಚಿದರೆ ಯಾರದ್ದೋ ಕರ್ಮ  ಅನುಭವಿಸಲೇಬೇಕಷ್ಟೆ.
ದೇಶದ ಆರ್ಥಿಕ ಸ್ಥಿತಿ ಹದಗೆಟ್ಟರೂ  ವಿದೇಶಿ ಬಂಡವಾಳ ಸಾಲ,ವ್ಯವಹಾರಕ್ಕೆ ‌ ಹೆಚ್ಚು ಒತ್ತುಕೊಡುವ ಬದಲು ನಮ್ಮ ಸಂಪಾದನೆಯಾಗಲಿ ಅತಿಯಾದ ಆಸ್ತಿಯಾಗಲಿ ದೇಶದ ಋಣ ತೀರಿಸಲು ಬಿಟ್ಟು ಕೊಡುವ ಜ್ಞಾನ ಪ್ರಜೆಗಿದ್ದರೆ ನಿಜವಾದ ಪ್ರಜಾಪ್ರಭುತ್ವ ದೇಶವಾಗಿ  ಉತ್ತಮ ಹಿಂದೂ ದೇಶವಾಗಿರುತ್ತದೆ. ಪರಧರ್ಮ, ಪರದೇಶದ ಋಣ ಏರಿಸಿ ರಾಜನಂತೆ ಬದುಕುತ್ತೇನೆಂದರೆ  ಧರ್ಮ ವಲ್ಲ. ಇಲ್ಲಿ ಯಾವ ಪಕ್ಷ,ರಾಜಕಾರಣಿ, ವ್ಯಕ್ತಿ,ಧರ್ಮ, ಜಾತಿಯನ್ನು  ಹಿಡಿದು ಹೇಳಿಲ್ಲ.ಮನುಕುಲಕ್ಕೆ  ಈ ಸ್ವಾರ್ಥದ ಜೀವನ ಎಷ್ಟು ಅಪಾಯಕಾರಿ ಎನ್ನುವ ಸತ್ಯ ಇದರಲ್ಲಿದೆ. ಸ್ವಾರ್ಥಿಗಳು ಅಹಂಕಾರಿಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ ಎಂದರೆ ನಮ್ಮ ಸಹಕಾರವಿಲ್ಲದೆ ಹೇಗೆ ಬೆಳೆಯಲಾಗುವುದು?
ಇಂತಹ ಸಹಕಾರವು ಸತ್ಯ ಧರ್ಮ, ನ್ಯಾಯ ನೀತಿಯ ಶಿಷ್ಟರಿಗೆ  ಸಿಗದ ಕಾರಣ ಭ್ರಷ್ಟಾಚಾರ ಮುಗಿಲುಮುಟ್ಟಿದೆ.
ಒಮ್ಮೆ ಕೆಳಗೆ ಬೀಳಲೇಬೇಕು. ಇದನ್ನು ತಡೆಯಲು ಕಷ್ಟ.
ಮೂರುತಲೆಮಾರು ಕುಳಿತು ತಿನ್ನುವ ಭೌತಿಕ ಆಸ್ತಿಗಿಂತ ನೂರು ತಲೆ ಓಡಿಸಿ  ಸ್ವಾವಲಂಬನೆ  ಜೀವನ ನಡೆಸುವ ಜ್ಞಾನವನ್ನು  ಮುಂದಿನ ಪೀಳಿಗೆ ಪಡೆದರೆ ಎಲ್ಲರೂ ಕ್ಷೇಮ.ಇದು ಸಾಧ್ಯವಾಗದ  ಸತ್ಯವಾದರೂ ಇದೇ ಜೀವನ ಸತ್ಯ. ಜೀವನದ ಗುರಿಯೇ ಜ್ಞಾನಸಂಪಾದಿಸಿ ದಾನ ಮಾಡಿ ಹೋಗುವುದು. ಜೀವವಿರೋವರೆಗೂ ಹಣ  ಸಂಪಾದನೆ ಮಾಡಿದರೂ  ಸತ್ಕರ್ಮ ವಿಲ್ಲವಾದರೆ   ದಾನವೂ ವ್ಯರ್ಥ. 

ದಾನವರ ಸಂಪಾದನೆಯ ಹಣ  ಅಧರ್ಮದ್ದಾಗಿರಬಹುದು. ಹಣದ ಮೂಲಕ ಋಣ ಹಾಗು ಪಾಪಕರ್ಮಗಳೂ ಪಡೆದವರಿಗೆ ಸುತ್ತಿಕೊಳ್ಳುವುದು.ಇದನ್ನು ವೈಜ್ಞಾನಿಕ ಸಂಶೋಧನೆ ಒಪ್ಪಲಿ ಬಿಡಲಿ ಸತ್ಯ ಒಂದೇ ಅದೇ ಅಧ್ಯಾತ್ಮ

ಮತದಾನ ದೇಶದ ಭವಿಷ್ಯ ನಿರ್ಧರಿಸುವ ಸಾಧನ

ನಮ್ಮ ಏರಿಯಾದಲ್ಲಿ ಇಂದು ಎಲ್ಲರ ಮನೆಗೂ ಹೋಗಿ ಗೃಹಲಕ್ಮಿ ಗ್ಯಾರಂಟಿ ಕಾರ್ಡ ಬೇಕ ಎಂದು ಕೇಳಿ ಕೊಟ್ಟು ಹೋಗುತ್ತಿದ್ದರು. ನಾವಂತೂ ಪಡೆದಿಲ್ಲ.ಈಗಾಗಲೇ ಸಾಕಷ್ಟು ಕಾರ್ಡ ತುಂಬಿಹೋಗಿದೆ. ಪಾನ್, ಆಧಾರ್ ಎಲೆಕ್ಷನ್,ಇನ್ನಿತರ ಸಂಘದ ಸದಸ್ಯತ್ವದ ಗುರುತಿನ ಚೀಟಿ ಉಳಿದ ಉಚಿತ ಕಾರ್ಡ ಈವರೆಗೆ ನಮಗೆ ಸಿಕ್ಕಿಲ್ಲ ಬೇಕಾಗಿಲ್ಲ. ಈಗಾಗಲೇ ಸಾಕಷ್ಟು  ಶ್ರಮಪಟ್ಟು ನಮ್ಮ ಸಂಸಾರವನ್ನು ‌ನಡೆಸಿರುವಾಗ ಶ್ರಮಕ್ಕೆ ಬೆಲೆಕೊಡುವವನು ಮೇಲಿದ್ದಾನಲ್ಲ.ಒಟ್ಟಿನಲ್ಲಿ  ಜನಬಲ ಹಣಬಲದ  ಆಡಳಿತದಲ್ಲಿ  ಯಾರಿಗೆ ಲಾಭ ನಷ್ಟ ಎನ್ನುವ ಲೆಕ್ಕಾಚಾರದಲ್ಲಿ ಸೋತಿರುವ ಪ್ರಜಾಪ್ರಭುತ್ವ  ಎಷ್ಟೇ
ಮೇಲೆ ಕೆಳಗಾದರೂ  ಮತದಾನದ ಅರ್ಥ ತಿಳಿಯುವುದರಲ್ಲೇ ಜೀವ ಹೋಗಿರುತ್ತದೆ. ದೇಶದ ಭವಿಷ್ಯ ನಿರ್ಧಾರ ಮಾಡುವ ಮತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠ.
ನಮ್ಮ ಹಣೆಬರಹವನ್ನು  ಸರ್ಕಾರ ನಿರ್ಧಾರ ಮಾಡುವಂತಿದ್ದರೆ  ಇಷ್ಟು ‌ಕುಲಗೆಟ್ಟು ಹೋಗುತ್ತಿರಲಿಲ್ಲ ಜನರ ಜೀವನ. ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ ಸಂಪ್ರದಾಯ, ಭಾಷೆ,ಸಾಹಿತ್ಯಗಳು  ಆತ್ಮಜ್ಞಾನದಿಂದ ಬೆಳೆಸಿ ಜನರ ಭವಿಷ್ಯಕ್ಕೆ ಆಧಾರವಾಗಿದ್ದ  ಕಾಲವೆಲ್ಲಿ? ಹೊರಗಿನ ಸರ್ಕಾರದ ಆಧಾರಕ್ಕಾಗಿ  ಅಲೆದಾಡುತ್ತಿರುವ  ಈಗಿನ ಕಾಲ ಎಲ್ಲಿ? ಹಿಂದಿನ ಆಧಾರದಿಂದ  ಜನರು ಜೀವನ್ಮುಕ್ತಿ‌ಕಡೆಗೆ ನಡೆದರೆ ಈಗಿನವರು  ಹೊರಗೆ ನಡೆಯುತ್ತಾ ಬಹಳ ದೂರ ನಡೆದು ಸುಸ್ತಾಗಿ ಕುಸಿದು ಬೀಳುವಂತಾಗಿದೆ. ಯಾರನ್ನು ಯಾರು  ನಡೆಸಬೇಕು? ಗೃಹಲಕ್ಮಿ ಯ ಸ್ಥಿತಿ ಹೇಗಾಗಿದೆ?ಹಣದಿಂದ  ಬದಲಾವಣೆ ತರುವ ಮೊದಲು ಜ್ಞಾನವನ್ನು ಬೆಳೆಸುವತ್ತ ನಡೆದಿದ್ದರೆ  ದೇಶ ಸುರಕ್ಷಿತವಾಗಿರುತ್ತಿತ್ತು.

ಮತದಾನ ಮಾಡದವರ ಸಂಖ್ಯೆ ಹೆಚ್ಚಾಗಿದೆ.ಆದರೆ ಸರ್ಕಾರ ಕೊಡುವ ಎಲ್ಲಾ ಭಾಗ್ಯಗಳೂ ಎಲ್ಲರಿಗೂ ಬೇಕಿದೆ. ಮತದಾನ  ಮಾಡಿದವರಿಗೊಂದು ಗುರುತಿನ ಚೀಟಿ ಕೊಡಿ
ಸರ್ಕಾರದ ಸಾಲ,ಸೌಲಭ್ಯಗಳನ್ನು   ಪಡೆಯುವ  ಹಕ್ಕು ಅವರಿಗಷ್ಟೆ ಎನ್ನುವ‌  ಕಾನೂನು ಚುನಾವಣಾ ಆಯೋಗ ತಂದರೆ  ಎಷ್ಟೋ ಉಳಿತಾಯವಾಗಬಹುದು.ಅಥವಾ ಮತದಾನ ಹೆಚ್ಚಾಗಬಹುದು. ದೇಶದವರಲ್ಲದವರು, ರಾಜ್ಯದವರಲ್ಲದವರು  ವಿದೇಶಿದಲ್ಲಿರುವವರು ಚುನಾವಣಾ ಸಮಯದಲ್ಲಿ  ಎದ್ದು ಬಂದು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದರೂ ಹೇಳೋರಿಲ್ಲ ಕೇಳೋರಿಲ್ಲ.  ಚುನಾವಣ ಸಮಯದಲ್ಲಿ ನಡೆಯುವ ಭ್ರಷ್ಟಾಚಾರ  ಬೇರೆ ಸಮಯದಲ್ಲಾಗದು. ಇದಕ್ಕೆ ಜನರೆ ಸಹಕರಿಸುವಾಗ ಯಾರಿಗೆ ಹೇಳಿ ಉಪಯೋಗವಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೈರ್ಯದಿಂದ  ಮುಂದೆ ನಡೆಯುವವರ ಧೈರ್ಯಕ್ಕೆ ಜನಬಲ ಹಣಬಲ ಅಧಿಕಾರ ಬಲವೇ ಕಾರಣ. ಇದು ಹೊರಗಿನ ಕಾನೂನಿಗೆ ವಿರುದ್ದವಾದರೂ ಎಲ್ಲವನ್ನೂ  ಕಾಣುತ್ತಿರುವ  ಮೇಲಿನ ಕಾನೂನು ಸರಿಯಾದ  ಫಲಿತಾಂಶ ಕೊಡುವುದೆನ್ನುವ ಭಯವಿದ್ದವರು  ನೇರವಾದ ದಾರಿ ಹಿಡಿಯುವರು. ಎಲ್ಲಾ ಮಾಡೋದು ನೋಟಿಗಾಗಿ ಓಟು ಸೀಟಿಗಾಗಿ ಎನ್ನುವ ಕಾಲ ಬಂದಿದೆ. ಪಾಪ ಬಡಜನ ಮಾತ್ರ ಎಲ್ಲಾ ಮಾಡೋದು  ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವುದು ತಪ್ಪಿಲ್ಲ. ಹೊಟ್ಟೆತುಂಬಿದವರಿಗೆ  ಹಸಿವಿನ ಅನುಭವವಿಲ್ಲ. ದೇಶದ  ಭವಿಷ್ಯ ಮತದಾತರ ಜ್ಞಾನದಲ್ಲಿದೆ.  ಸ್ವತಂತ್ರ ಭಾರತದ ಸ್ವತಂತ್ರ ಜ್ಞಾನ  ಪ್ರಜೆಗಳೊಳಗೇ ಇದೆ. ಹೊರಗಿನವರ ವಿಜ್ಞಾನ  ಪಡೆದಷ್ಟೂ ಮೂರ್ಖರಾಗಿ  ಹಿಂದುಳಿಯುವುದು ತಪ್ಪುತ್ತಿಲ್ಲ. ಹೊರಗಿನವರ ತಂತ್ರ ಒಳಗಿದ್ದವರ ತತ್ವವನ್ನು ಹಾಳುಮಾಡಿದರೆ  ಪ್ರಗತಿಯೆ? ಅಧೋಗತಿಯೆ? ಆದರೂ  ಇವರದ್ದೇ ದೊಡ್ಡ ಪ್ರಚಾರ. ವಿದೇಶಿ ವ್ಯಾಮೋಹ ಎಲ್ಲಿಗೆ ಹೋಗುತ್ತಿದೆ ? ಇದು ದೇಶದ ಚುನಾವಣೆಯೋ? ವಿದೇಶದ್ದೋ?  

ಅಧ್ಯಾತ್ಮದ  ಪ್ರಕಾರ  ಚಿಂತನೆ ‌ನಡೆಸಿದರೆ ಭಾರತವನ್ನು ಉಳಿಸಿ ಬೆಳೆಸುವುದಕ್ಕೆ  ಪ್ರಜೆಗಳ  ಮತದಾನ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ನಡೆಯಬೇಕಿತ್ತು. 
ಈಗ ಹೇಗಿದೆ? ಇದಕ್ಕೆ ಕಾರಣವೆ ಅಜ್ಞಾನದ ರಾಜಕೀಯ ಶಿಕ್ಷಣ. ಯಾರದ್ದೋ ಶಿಕ್ಷಣ ಪಡೆದು ಯಾರದ್ದೋ ದೇಶದಲ್ಲಿ ಕುಳಿತು ಯಾರದ್ದೋ ಮನೆಗೆ ಸಂದೇಶ ಸಮಾಚಾರ ಕೊಡುವ‌  ಮಧ್ಯವರ್ತಿಗಳ  ಸ್ವೇಚ್ಚಾಚಾರಕ್ಕೆ ಯಾರದ್ದೋ ಜೀವನ  ಹಾಳುಮಾಡಿದರೆ  ಅಧರ್ಮಕ್ಕೆ ತಕ್ಕಂತೆ ಫಲವಿದೆ.

Tuesday, April 4, 2023

ಯೋಗವೆಂದರೇನು?

ವೈಜ್ಞಾನಿಕ ಜಗತ್ತಿನಲ್ಲಿ ಯೋಗ ಮಾನವನ ಇಚ್ಚೆಯಂತೆ ಕೂಡಬಹುದು. ವೈಚಾರಿಕತೆಗೆ ಬಂದಾಗ ಶುದ್ದತೆಯಿಲ್ಲದ ಆಚಾರ ವಿಚಾರ ಪ್ರಚಾರ ಅಧ್ಯಾತ್ಮ ಜಗತ್ತಿನಲ್ಲಿ  ಪರಮಾತ್ಮನ ಇಚ್ಚೆಯಿಲ್ಲದೆ ಯೋಗ ಕೂಡಿ ಬರಲಾರದು. 
ಭಗವದ್ಗೀತೆ ತಿಳಿಸಿರುವ ನಾಲ್ಕು ಯೋಗವು ಭೌತಿಕದಲ್ಲಿ ತಿಳಿಯಬಹುದು  ಅನುಭವಿಸಲು ಅಧ್ಯಾತ್ಮದೆಡೆಗೆ ಸಾಗಬೇಕು. ಅಧ್ಯಾತ್ಮ ಎಂದರೆ ತನ್ನ ತಾನರಿಯುವ ಜ್ಞಾನ.

ಯೋಗದ ಪ್ರಕಾರ ಬ್ರಾಹ್ಮಣ ಜ್ಞಾನದಿಂದ, ಕ್ಷತ್ರಿಯ ರಾಜಯೋಗದ ಕ್ಷಾತ್ರಧರ್ಮದಿಂದ, ವೈಶ್ಯ ಸಮಾನತೆಯ ವ್ಯವಹಾರಿಕ ಧರ್ಮದಿಂದ ಶೂದ್ರ ಪರಮಪವಿತ್ರವಾದ ಸತ್ಕರ್ಮದ ಸೇವೆಯಿಂದ  ಪರಮಾತ್ಮನ ಸೇರುವುದೇ ಮಹಾಯೋಗ. ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗದಲ್ಲಿ  ಕರ್ಮಯೋಗವಿಲ್ಲದೆ ಜ್ಞಾನಯೋಗ ರಾಜಯೋಗ ಭಕ್ತಿಯೋಗ ಅರ್ಥ ವಾಗದ  ಕಾರಣ  ದಾಸ ಶರಣರು ಕರ್ಮ ಯೋಗಿಗಳಿಗೆ ಕಾಯಕವೇ ಕೈಲಾಸವೆಂದರು. 
ಪ್ರಜಾಪ್ರಭುತ್ವದ ಪ್ರಜೆಗಳಾಗಿರುವ ನಾವೆಲ್ಲರೂ ಈಗ ದೇಶದ ಸೇವಕರಾಗಿ  ಏನು ನಮ್ಮಲ್ಲಿ   ಒಳ್ಳೆಯದಿದೆಯೋ ಹಂಚಿಕೊಂಡರೆ  ದೇಶದ ಸಾಲ ತೀರುವುದು.ಇದು ಸ್ವಾರ್ಥದ ರಾಜಕೀಯವಾಗಬಾರದು. ಇದನ್ನು ನಮ್ಮ ದೇಶಭಕ್ತರಲ್ಲಿ ಕಂಡಿದ್ದೆವು.

ಪರಮಾತ್ಮನೆಡೆಗೆ ಜೀವಾತ್ಮ ನಡೆಯುವುದೇ ವರ್ಣ ದ ಉದ್ದೇಶವಾಗಿತ್ತು.ಇದನ್ನು ನಾಲ್ಕು ವರ್ಣ ನಾಲ್ಕು ವೇದ ನಾಲ್ಕು ಯೋಗವಾಗಿ ಕಂಡಿದ್ದರೆನ್ನುವುದು ಸನಾತನ ಧರ್ಮದ ತಿರುಳು. ತಿರುಳನ್ನು ಬಿಟ್ಟು ಸಿಪ್ಪೆ ತಿಂದರೆ ಸತ್ವ ಸತ್ಯ ಅರ್ಥ ವಾಗದು. ತೆಂಗಿನಮರ ಬಾಳೆಮರವನ್ನು ಹೇಗೆ ಪರಮಾತ್ಮನ ಪೂಜೆಗೆ ಶ್ರೇಷ್ಠ ವೆಂದು  ಬಳಸುವರೋ ಹಾಗೆ ಬೀಜ ಹಲವಿದ್ದರೂ ಅದರ ಮೂಲ ಒಂದೇ. ಬೀಜ
ವಿಲ್ಲದೆಯೇ ಸ್ವತಂತ್ರ ವಾಗಿ ಬೆಳೆದದ್ದು ಶುದ್ದವಾಗಿರುತ್ತದೆ
 ಎಂದರ್ಥ. ಎಂದರೆ ಪ್ರತಿಯೊಬ್ಬರಲ್ಲಿಯೂ ಸ್ವತಂತ್ರವಾಗಿ
ರುವ  ಆತ್ಮಜ್ಞಾನ ಶ್ರೇಷ್ಠ ವಾದದ್ದು.ಹೊರಗಿನ ಕಲಬೆರಕೆ
ಯಿಂದ ಅಶುದ್ದವಾಗದಂತಹ ಶಿಕ್ಷಣದ ಅಗತ್ಯವಿದೆ. ಸತ್ಯ ಒಂದೇ  ಅಸತ್ಯ ಹಲವು. ಆತ್ಮಸಾಕ್ಷಿಯಂತೆ ನಡೆದಾಗಲೇ ಯೋಗಿಯಾಗೋದು. ಮಕ್ಕಳಿಗೆ ಯೋಗ್ಯ ಶಿಕ್ಷಣ ಪ್ರಾರಂಭದಲ್ಲಿಯೇ ಸಿಕ್ಕಿದಾಗಲೇ ಯೋಗ್ಯ ಪ್ರಜೆ ಆಗಲು ಸಾಧ್ಯ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ ಎಂದಂತೆ ಅಧ್ಯಾತ್ಮ ವಿಜ್ಞಾನ ಭೌತಿಕ ವಿಜ್ಞಾನದ ಸಂಶೋಧನೆಯು  ವಿರುದ್ದದಿಕ್ಕಿನಲ್ಲಿ ನಡೆದರೂ ಕೂಡೋದು ಒಂದೇ ಸ್ಥಳದಲ್ಲಿ. ಮೇಲಿರುವ ಆಕಾಶದಲ್ಲಿ ಭೂಮಿ ತಿರುಗುತ್ತಿದೆ ಭೂಮಿಯ ಮೇಲೆ ಮನುಕುಲ ತಿರುಗುತ್ತಿದೆ.ಜೀವ ಭೂಮಿಯ ಮೇಲಿದ್ದರೂ ಆಕಾಶದಿಂದ ಬೇರೆಯಾಗಿಲ್ಲ. ಜನನ ಮರಣದ ಮಧ್ಯೆ ಜೀವನವಿದೆ.
ಯೋಗದಿಂದ ಶಾಂತಿ ಭೋಗದಿಂದ ಕ್ರಾಂತಿ. 

Monday, April 3, 2023

ತತ್ವಕ್ಕೆ ರಾಜಕೀಯ ಬೇಕೆ?

ಅದ್ವೈತ ದರ್ಶನಕ್ಕೆ ರಾಜಕೀಯ ಬೇಕೆ?
ಶ್ರೀ ರಾಮನ ನಡೆ ಶ್ರೀ ಕೃಷ್ಣನ ನುಡಿ ಹಿಂದೂ ಸನಾತನ ಧರ್ಮ ವನ್ನು ಎತ್ತಿ ಹಿಡಿದಿತ್ತು. ಶ್ರೀ ರಾಮಚಂದ್ರನಂತಹ ಮಹಾತ್ಮ ಭೂಮಿಗೆಮಗನಾಗಿ,ಅಣ್ಣನಾಗಿ,ಸೀತಾಪತಿಯಾಗಿ, ಧರ್ಮರಾಜನಾಗಿ,ಸಾಮ್ರಾಟನಾಗಿ,ಪ್ರಜಾಪಾಲಕನಾಗಿ ಪ್ರಜಾಸೇವಕನಾಗಿದ್ದರ ಹಿಂದೆ  ಅಹಲ್ಯಾ,ಸೀತ,ತಾರಾ ಮಂಡೋದರಿಯಂತಹ ಮಹಾಪತಿವ್ರತೆಯರೂ ಇದ್ದರು. ಶ್ರೀ ಕೃಷ್ಣನ ಕಾಲಕ್ಕೆ ದ್ರೌಪದಿಯೊಬ್ಬಳೇ ಪಂಚಮಹಾವೀರರ ಪತ್ನಿಯಾಗಿದ್ದು  ಧರ್ಮ ಯುದ್ದಕ್ಕೆ ಕಾರಣಕರ್ತಳಾದಳು.
ಅಂದರೆ ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ
ನ್ನುವುದನ್ನು ನಾವೀಗಲೂ ಕಾಣುತ್ತೇವೆ.ಆದರೆ ಆ ಯಶಸ್ಸು ಭೌತಿಕದ ಮಟ್ಟದಲ್ಲಿದೆ ಅಧ್ಯಾತ್ಮದ ವಿಚಾರದಲ್ಲಿ ಕುಸಿದಿದೆ.
ಈ ಕಾರಣಕ್ಕಾಗಿ ಶ್ರೀ ರಾಮನ ನಡೆಯಿಲ್ಲದ ಪುರುಷರು ಶ್ರೀ ಕೃಷ್ಣನ‌ನುಡಿಯಲ್ಲಿದ್ದ ಯೋಗವನ್ನು ಅರ್ಥ ಮಾಡಿಕೊಳ್ಳಲು ಸೋತಿರುವವರ ಸಂಖ್ಯೆ ಬೆಳೆದಿದೆ. ಇದರಿಂದಾಗಿ ಯಾರಿಗೆ ಲಾಭವಾಗಿದೆ? ನಷ್ಟವಾಗಿದೆ? ಪರಮಾತ್ಮನಿಗೇನೂ  ಸಮಸ್ಯೆಯಿಲ್ಲ ಆಗಿರೋದು ಜೀವಾತ್ಮರಾಗಿರುವ ಮನುಕುಲಕ್ಕೆ.ಭೂಮಿಗೆ  ಆ ಪರಮಾತ್ಮನು ಅವತಾರವೆತ್ತಿ  ಧರ್ಮ ಯಾವುದೆನ್ನುವುದನ್ನು ನಡೆದು ನುಡಿದು ಹೋಗಿದ್ದರೂ ಮಾನವ ಮಾತ್ರ ಪರಮಾತ್ಮನೆ ಬೇರೆ ಜೀವಾತ್ಮನೆ ಬೇರೆ ನಾನೇ ದೇವರು ಎನ್ನುವ  ಅಹಂಕಾರ ಸ್ವಾರ್ಥ ಕ್ಕೆ ಸಿಲುಕಿ ತನ್ನ ಅಧಿಕಾರವನ್ನು ದುರ್ಭಳಕೆ ಮಾಡಿಕೊಂಡು ಮಕ್ಕಳು ಮಹಿಳೆಯರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹೊರಟು ಈಗ ಸರಿಯಾದ ಸತ್ಯದರ್ಶನ ವಾಗದೆ ಎಲ್ಲಾ ಅಸತ್ಯ ನಾನೇ ಸತ್ಯವೆಂದರೆ ನಾನು ಶಾಶ್ವತವಲ್ಲ.ಸತ್ಯ ಶಾಶ್ವತವಾದಾಗ ಆ ಸತ್ಯವನ್ನು ಒಳಗೇ ಕಂಡುಕೊಳ್ಳಲು ಶ್ರೀ ರಾಮನ ತತ್ವದ ನಡೆ ಶ್ರೀ ಕೃಷ್ಣನ ಯೋಗದ ಕಡೆಗೆ ನಡೆಯಬೇಕು.ಎಷ್ಟೇ ಅರ್ಧ ಸತ್ಯ ಪ್ರಚಾರ ಮಾಡಿದರೂ ಅದರೊಂದಿಗೆ ಅಸತ್ಯವೂ ಬೆಳೆಯುತ್ತದೆ. ಭೌತಿಕದಲ್ಲಿ ಅಸತ್ಯವೇ ಆಳುತ್ತಿದ್ದರೆ ಸತ್ಯ ಕಾಣದೆ ಜೀವ ಹೋಗುತ್ತದೆ. ಈ ಕಾರಣದಿಂದಾಗಿ  ಧರ್ಮ ರಕ್ಷಣೆ  ರಾಜಕೀಯದಿಂದ ಕಷ್ಟವಾಗಿದೆ.ಪ್ರಜಾಪ್ರಭುತ್ವದ ಎಲ್ಲಾ ಪ್ರಜೆಗಳಿಗೂ ಸ್ವತಂತ್ರ ಜ್ಞಾನವಿದ್ದರೂ ಅದನ್ನು ಬಳಸಿ ಜೀವನ‌ ನಡೆಸೋ ಭಾಗ್ಯವಿಲ್ಲ.ಕಾರಣ ಸರ್ಕಾರ ಕೊಡುವ ಎಲ್ಲಾ ಭಾಗ್ಯಗಳು ಉಚಿತವಾಗಿ ಯಾವುದೇ ಶ್ರಮವಿಲ್ಲದೆ ಅನುಭವಿಸಿದವರಿಗೆ ಒಳಹೊಕ್ಕಿ ನೋಡುವ ಶಕ್ತಿಯಿಲ್ಲ. ಒಳಗೇ ಕಾದು ಕುಳಿತಿರುವ ಆ ಪರಮಾತ್ಮನ  ಶಕ್ತಿ ಸ್ವತಂತ್ರ ಜೀವನಕ್ಕೆ ಬಳಸಲು ಅಂತಹ ಜ್ಞಾನದ ಶಿಕ್ಷಣ ಅಗತ್ಯವಿತ್ತು.
ಮಕ್ಕಳಿಗೆ ಭೌತಿಕಾಸಕ್ತಿ ಹೆಚ್ಚಿಸುವ‌ ಶಿಕ್ಷಣ ಕೊಟ್ಟು ಯುವಜನರು ದಿಕ್ಕುತಪ್ಪಿದಾಗ  ಕಾನೂನಿನಿಂದ ತಡೆಯಬಹುದೆನ್ನುವ  ಭ್ರಮೆಯಲ್ಲಿರುವ  ನಾವು ಈಗಲೂ ಎಲ್ಲಾ ದೇವರೇ ನೋಡಿಕೊಳ್ಳಲಿ ಸರ್ಕಾರವೇ ಮಾಡಲಿ ಎಂದು  ಇದರ ಬಗ್ಗೆ ಗಮನಕೊಡದಿದ್ದರೆ‌ ಇದಕ್ಕೆ ಕೊನೆಯಿಲ್ಲ.
ಎಲ್ಲಾ ಸರ್ಕಾರ ಮಾಡುತ್ತಿದ್ದರೂ ಕೊಡುತ್ತಿದ್ದರೂ ಯಾಕಿಷ್ಟು ಸಮಸ್ಯೆ? ಸರ್ಕಾರ ಎಂದರೆ ನಮ್ಮ ಸಹಕಾರವಷ್ಟೆ. ಅಧರ್ಮ ಅನ್ಯಾಯದೆಡೆಗೆ ತಂತ್ರ ನಡೆದರೂ ಸಹಕಾರ ನೀಡಿದರೆ ನಮ್ಮ ಸ್ವತಂತ್ರ ಜ್ಞಾನವೇ ಬೆಳೆಯೋದಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಎಷ್ಟೇ ಸುಖಪಟ್ಟರೂ ದು:ಖ ಕಟ್ಟಿಟ್ಟ ಬುತ್ತಿ. ಒಳಗಿನ  ಶಕ್ತಿ ಹೊರಗಿನ ಶಕ್ತಿಯನ್ನು ಆಳುವುದು ಸರಿ,ಹೊರಗಿನ ಶಕ್ತಿಯೇ ಒಳಗಿನ ಶಕ್ತಿಯನ್ನು ಆಳಿದರೆ ಇದರರ್ಥ ಜೀವಾತ್ಮ ಪರಮಾತ್ಮನನ್ನು ಆಳುವುದಾದರೆ ಇದು ಸತ್ಯವೆ? ಮಿಥ್ಯವೆ? ಅದ್ವೈತ ದೊಳಗಿರುವ ದ್ವೈತ ಸತ್ಯವಾದರೂ ಭೂಮಿಗೆ ಬಂದಾಗ ಭೂಮಿ ಒಂದೇ ಇರೋದು. ಭೂಮಿಗೆ ಬಂದಿದೆ ಎಂದರೆ ಋಣವಿದೆ ಎಂದರ್ಥ ಅದನ್ನು ತೀರಿಸಲು ಧರ್ಮದಿಂದ  ಸತ್ಕರ್ಮದ ನಡೆ ನುಡಿಯಿಂದಷ್ಟೇ ತೀರಿಸಲು ಸಾಧ್ಯವೆಂದರು ಮಹರ್ಷಿಗಳು ಹಾಗೆ ನಡೆದರೆ ಧರ್ಮ ರಕ್ಷಣೆ.ಅಧರ್ಮದಿಂದ  ಭೂಮಿ ಆಳಲು ಹೊರಟರೆ ಅಧರ್ಮ ವೇ ಬೆಳೆಯೋದಲ್ಲವೆ? ಶ್ರೀ ವಿಷ್ಣುವಿನವತಾರದ ಮಹಾ ಅವತಾರ ಪುರುಷರ ನಡುವೆಯೇ ಮಾನವರು  ಮಧ್ಯವರ್ತಿಯಾಗಿ ಅರ್ಧ ಸತ್ಯ ತಿಳಿದು ನಿಂತರೆ ತತ್ವ ಹಾಗು ತಂತ್ರದ ಉದ್ದೇಶ ಅರ್ಥ ವಾಗದು. ಈ ಲೇಖನದಲ್ಲಿರುವ ಸತ್ಯ ತಿಳಿಯಲು ತತ್ವದರ್ಶನ ವಾಗಬೇಕಿದೆ. ನಂತರವೇ ತಂತ್ರದರ್ಶನ.
ಹೊರಗಿರುವ ತಂತ್ರ ತಾತ್ಕಾಲಿಕವಾದರೆ ಒಳಗಿನ ತತ್ವ ಶಾಶ್ವತ.ಒಟ್ಟಿನಲ್ಲಿ ಎಲ್ಲಾ ತತ್ವಜ್ಞಾನಿಗಳ ಉದ್ದೇಶ ಧರ್ಮ ದ ಮೂಲಕ ಒಂದಾಗಿಸುವುದಾಗಿತ್ತು.ಅದರಲ್ಲಿ ರಾಜಕೀಯತೆ ಇರಲಿಲ್ಲ ರಾಜಯೋಗದ ಸ್ವತಂತ್ರ ಜ್ಞಾನವಿತ್ತು. ತಂತ್ರದಿಂದ ಅದನ್ನು  ತಿಳಿದವರಿಗೆ ತತ್ವದ ಅನುಭವವಾಗದೆಯೇ ಅಧಿಕಾರ ಸ್ಥಾನಮಾನ,ಹೆಸರು,ಹಣ ಸಿಕ್ಕಿದ ಪರಿಣಾಮ ಇಂದಿಗೂ ಜನಸಾಮಾನ್ಯರ ಒಳಗಿರುವ ಸಾಮಾನ್ಯಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಕಷ್ಟಪಡುವಂತಾಗಿದೆ.  ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿತ್ತು ಆದರೆ ಶಿಕ್ಷಣದ ಕೊರತೆಯಿದೆ.ಶಿವಶರಣರ ಕಾಲಕ್ಕೆ ಇದನ್ನು ಎತ್ತಿಹಿಡಿದಿದ್ದರು.ಅವರ ತತ್ವವು ಸಮಾಜದ ಸಮಾನತೆಯು ಯೋಗದಿಂದ ಬೆಳೆಸುವುದಾಗಿತ್ತು.ಭೋಗದ ಜೀವನ ಭೌತಿಕದಲ್ಲಿ ಹೆಚ್ಚಾದಂತೆಲ್ಲಾ ಅಂತಹ ಸರಳ ಜೀವನ ನಡೆಸೋರನ್ನು ಬಡವರು ಹಿಂದುಳಿದವರು,ದೀನ  ದಲಿತ ಎನ್ನುವ ಹೆಸರಿನಲ್ಲಿ  ಸರಿಯಾದ ಶಿಕ್ಷಣ ನೀಡದೆ ಹಣ ಕೊಟ್ಟು ಒಳಗಿದ್ದ ಜ್ಞಾನ ಗುರುತಿಸದೆ ಭೌತಿಕದೆಡೆಗೆ ನಡೆಸುತ್ತಾ ತಮ್ಮ ಅಧಿಕಾರ ಹೆಚ್ಚಿಸಿಕೊಂಡು ಆಳಿ ಪರಕೀಯರ ತಂತ್ರದ ಶಿಕ್ಷಣ ಹಣವನ್ನು ಗಳಿಸಿದರೂ ಅದನ್ನು ಹೇಗೆ ಬಳಸಿದರೆ ಶಾಂತಿ ಸಮಾಧಾನ ತೃಪ್ತಿ ಮುಕ್ತಿ ಸಿಗುವುದೆನ್ನುವ ಜ್ಞಾನವಿಲ್ಲದೆ ಇಂದಿಗೂ ಕೋಟ್ಯಾಂತರ ರೂ ದೇಶದ ಹಣ ದುರ್ಭಳಕೆ ಆದರೂ ಕೇಳೋಹಾಗಿಲ್ಲ. ಲಕ್ಷಲಕ್ಷ ಸಾಲ ಮಾಡಿ ಕೊಡುವ ಶಿಕ್ಷಣದಲ್ಲಿಯೇ ಮಕ್ಕಳ ಒಳಗಿನ ಜ್ಞಾನ ಬೆಳೆಸುವ ವಿಷಯ
ವಿಲ್ಲವಾದರೆ ಶಿಕ್ಷಣದ ಉದ್ದೇಶ ಏನಾಗಿತ್ತು? ಈಗ ಏನಾಗಿದೆ? ಎತ್ತ ಸಾಗಿದೆ ಭಾರತೀಯ ಶಿಕ್ಷಣ?
ಈ ಪ್ರಶ್ನೆಗೆ ಉತ್ತರಿಸುವವರಿಲ್ಲದೆ  ಮಕ್ಕಳ ಶಿಕ್ಷಣ ಸ್ವೇಚ್ಚಾಚಾರದೆಡೆಗೆ ಸಾಗಿದಂತೆಲ್ಲಾ  ಯಥಾ ಶಿಕ್ಷಣ ತಥಾ ಜ್ಞಾನ.  ಜ್ಞಾನದಂತೆ ಜೀವನ.
ಮಾನವಜನ್ಮ ದೊಡ್ಡದು ಹಾಳುಮಾಡದಿರಿ ಹುಚ್ಚಪ್ಪಗಳಿರ ಎಂದ ದಾಸರನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ಇಂದಿನ ಯುವಪೀಳಿಗೆ ಹುಚ್ಚರಂತೆ ಹೊರಗೆ ಸುಖಕ್ಕಾಗಿ ಹೋರಾಟ ನಡೆಸಿರೋದು  ಕಾಲದ ಪ್ರಭಾವ ಎಂದು ಸುಮ್ಮನೆ ಕೂತರೆ ಬದಲಾವಣೆ ಸಾಧ್ಯವೆ? ಎಲ್ಲಾ ನಡೆಯುತ್ತಿರೋದು ಸತ್ಯ ಆದರೆ ನಡೆಯುತ್ತಿರುವ ದಾರಿ ಸತ್ಯದೆಡೆಗಿಲ್ಲ.ಹಾಗಾದರೆ ದಾರಿ ಎಲ್ಲಿದೆ? ಹೊರಗೋ ಒಳಗೋ? ಆತ್ಮಾವಲೋಕನ ಮಾಡಿಕೊಳ್ಳಲೂ ಮನಸ್ಸು ಶಾಂತವಾಗಿರಬೇಕು.ಮನಸ್ಸಿನ ಶಾಂತಿಗೆ ಕಣ್ಣುಮುಚ್ಚಿ ದ್ಯಾನ ಮಾಡಬೇಕು. ದ್ಯಾನದ ನಂತರ ಸತ್ಕರ್ಮದಿಂದ ಸ್ವಧರ್ಮ ದೆಡೆಗೆ ನಡೆಯಬೇಕು. ಸ್ವಾಭಿಮಾನ ಸ್ವಾವಲಂಬನೆ ಸತ್ಯ ಸರಳ ಜೀವನವೇ ಸ್ವತಂತ್ರ ಜ್ಞಾನದೆಡೆಗೆ ನಡೆಸುವುದೆಂದಾಗ
ನಮ್ಮ  ನಡೆ ಆ ಕಡೆ ಇದ್ದರೆ ಪರಮಾತ್ಮನೆಡೆಗೆ  ಹೋಗುತ್ತಿರುವುದು ಸತ್ಯವಾಗಿದೆ ಎಂದರ್ಥ. ಕೇವಲ ಪ್ರಚಾರದಲ್ಲಿದೆ ಎಂದರೆ ವ್ಯವಹಾರದಲ್ಲಿದೆ ಜೀವನ ಎಂದರ್ಥ.ಎರಡೂ ಇಲ್ಲದೆ ಪರಕೀಯರ ವಶದಲ್ಲಿದೆ ಎಂದರೆ ನಮಗೆ ಸ್ವತಂತ್ರ ವಿಲ್ಲ ಎಂದರ್ಥ. ನಮ್ಮ ಇಂದಿನ ಸ್ಥಿತಿಗೆ ನಮ್ಮ ಸಹಕಾರವೇ ಕಾರಣ. ಸಹಕಾರ  ಧಾರ್ಮಿಕ ಮಾರ್ಗ ಹಿಡಿದರೆ ಉತ್ತಮ ಪ್ರಗತಿ ಸಾಧ್ಯ. ರಾಜಕೀಯ ಎಲ್ಲಾ ಕ್ಷೇತ್ರ ಆವರಿಸಿದೆ. ಅದನ್ನು ರಾಜಯೋಗದೆಡೆಗೆ ಹರಿಸಲು ನಮ್ಮ ಸಹಕಾರ ಬೇಕಷ್ಟೆ. ಇದರಿಂದ ನಮ್ಮ ಆತ್ಮತೃಪ್ತಿ ಸಾಧ್ಯ. ಆತ್ಮಕ್ಕೆ ತೃಪ್ತಿ ಶಾಂತಿ ಸಿಗೋದು ಆಂತರಿಕ ಶುದ್ದಿಯಿಂದ ಮಾತ್ರ ಎಂದಿದ್ದಾರೆ ಮಹಾತ್ಮರು. ಎಲ್ಲೆಡೆಯೂಆವರಿಸಿರುವ
 ಈ ಚೈತನ್ಯ ಶಕ್ತಿಯನ್ನು ಮಾನವ ಹೇಗೆ ಬಳಸುವನೋ ಹಾಗೇ  ಜೀವನ ನಡೆಯುತ್ತದೆ.  ಇದರ ಬಳಕೆಗೆ ಹಣ,ಅಧಿಕಾರದ ಅಗತ್ಯವಿರಲಿಲ್ಲ ಜ್ಞಾನದ ಅಗತ್ಯವಿತ್ತು.
ಮನಸ್ಸನ್ನು ತಡೆಹಿಡಿಯೋದು ಕಷ್ಟ.ಮನುಷ್ಯನ ತಡೆದರೂ ಸಂಕಷ್ಟ. ಇದರಲ್ಲಿ ಏನಾದರೂ ದೋಷ ಕಂಡರೆ ತಿಳಿಸಬಹುದು.ಕಾರಣ ಇಲ್ಲಿ ಯಾರೂ ಸರ್ವಜ್ಞ ರಿಲ್ಲ. ಶ್ರೀ ರಾಮನಂತೆ ಶ್ರೀ ಕೃಷ್ಣ ಇರಲಿಲ್ಲ ಎಂದರೆ ಹುಲುಮಾನವರಾದ ನಾವೆಲ್ಲಿರೋದನ್ನು ತಿಳಿಸುವ ಪ್ರಯತ್ನವಷ್ಟೆ.ಭೂಮಿಗೆ ಬಂದ ಮೇಲೆ ಋಣ ತೀರಿಸಲು ಧರ್ಮ ದ ಜೊತೆಗೆ ಸತ್ಯವಿರಬೇಕು.
ಸತ್ಯವೇ ಇಲ್ಲದ ರಾಜಕೀಯ ತುಂಬಿದ ಧರ್ಮದ ಹಿಂದೆ ನಡೆದರೆ ತಿರುಗಿ ಬರಲೇಬೇಕು. ಹಾಗೆ ಧರ್ಮ ವಿಲ್ಲದ ಭೌತಿಕ ಸತ್ಯದೆಡೆಗೆ ಎಷ್ಟೇ ನಡೆದರೂ ಸುಸ್ತಾಗೋದು ದೇಹಕ್ಕೆ ಹೊರತು ಆತ್ಮಕ್ಕಲ್ಲ.ದೇಹ ಹೋದರೂ ಆತ್ಮನ‌ ನಡಿಗೆ ನಿಲ್ಲದು. ಇದನ್ನು ಎಲ್ಲಾ ಧಾರ್ಮಿಕಾಸಕ್ತರು ಗಮನಿಸಿದರೆ ಸತ್ಯ  ಒಳಗೇ ಕಾಣುತ್ತದೆ. ಹೊರಗೆ ಹುಡುಕಿದರೂ ಸಿಗದು. ಲೇಖನ  ಭಗವತಿಯ ಕೃಪಾಕಟಾಕ್ಷದಿಂದ ಹೊರಬರುವ ಕಾರಣ  ಇದರಲ್ಲಿ ಯಾವ ಅಸತ್ಯವಿಲ್ಲ.ಅನುಭವಕ್ಕೆ ಬರದೆ ಅರ್ಥ ವಾಗದು. ಅರ್ಥ ವಾದರೂ  ಸತ್ಯ ತೋರಿಸಲಾಗದು.
ಅದನ್ನು ಅವಳೇ ಪ್ರಕೃತಿ ಮೂಲಕ ತೋರಿಸುವಾಗ  ಜೀವ ಇದ್ದರೆ  ಒಪ್ಪಬಹುದು. ಒಪ್ಪದೆಯೂ ಹೋಗಬಹುದು.ಎಲ್ಲಾ  ಒಳ ಹಾಗು ಹೊರಮನಸ್ಸಿನ ಮೇಲಿದೆ. ಮನಸ್ಸೇ ಎಲ್ಲದ್ದಕ್ಕೂ ಕಾರಣ.ಮಾನವನ ಮನಸ್ಸೇ ಎಲ್ಲಾ ನಡೆಯಲು ಕಾರಣ.
ಇದರ ನಿಯಂತ್ರಣವೇ ಯೋಗಸಾಧನೆ. ಯೋಗದ ಶಿಕ್ಷಣವೇ ಕೊಡದೆ ಆಳಿದರೆ ಅಧರ್ಮ. ಇದರ ಬಗ್ಗೆ  ಧಾರ್ಮಿಕ ವರ್ಗ ಚರ್ಚೆ  ನಡೆಸಬಹುದು. ವಾದವಿವಾದಕ್ಕಿಂತ ಚರ್ಚೆ ಉತ್ತಮವಾಗಿದೆ. ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳಲು ಶ್ರಮಪಡುವ ಮಾನವ ತಾನಿರುವ ಭೂಮಿ,ದೇಶ,ಸ್ಥಳದ ಮಹಿಮೆಯನ್ನು  ತಿಳಿದರೆ  ಇನ್ನಷ್ಟು ಮರ್ಯಾದೆ ಒಳಗೇ ಹೆಚ್ಚುವುದು. ಆತ್ಮಗೌರವ  ಅಗತ್ಯ. 
ಪ್ರಜಾಪ್ರಭುತ್ವ ರಾಜಪ್ರಭುತ್ವ ವಾದರೆ ಅಧರ್ಮ. ರಾಜಕೀಯ ಧರ್ಮದ ಕಡೆಗೆ  ಯಾವ ಸ್ವಾರ್ಥ ವಿಲ್ಲದೆ ನಡೆದರೆ ಉತ್ತಮ. ಧರ್ಮ ವೇ ಸ್ವಾರ್ಥ ಕ್ಕಾಗಿ ರಾಜಕೀಯಕ್ಕೆ ಬಲಿಯಾದರೆ? 
ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ ದೇವಾಸುರ ಶಕ್ತಿಯ ಮಧ್ಯೆ ನಿಂತಿರುವ‌ ಮಧ್ಯವರ್ತಿ ಮಾನವನಿಗೆ ಅಗತ್ಯ ವಿದೆ. 
"ಸ್ಮರಣೆಯೊಂದೆ ಸಾಲದೆ ಗೋವಿಂದನಾ ನಾಮವೊಂದೆ ಸಾಲದೆ ಗೋವಿಂದನಾ.."" ಪುರಂಧರದಾಸರು ತಿಳಿಸಿದಂತೆ ನಾಮಸ್ಮರಣೆಯಿಂದಲೇ ಸತ್ಕರ್ಮ ಸ್ವಧರ್ಮದ ಮೂಲಕ ಜೀವನ್ ಮುಕ್ತಿ  ಪಡೆಯಬಹುದಾದರೆ  ಎಷ್ಟು ಸುಲಭ.
ಆದರೆ ಕಷ್ಟವಿದೆ.ಕಷ್ಟಪಡದೆ ಸುಖವಿಲ್ಲ.ಕೈ ಕೆಸರಾದರೆ ಬಾಯಿ ಮೊಸರು. ಕೆಸರಿನಲ್ಲಿನ ಕಮಲ ಕಿತ್ತು ಲಕ್ಮಿ ಪೂಜೆ ಮಾಡಿದರೆ ಹಣ ಸಿಗಬಹುದು. ಹಣದ ಸದ್ಬಳಕೆಯ ಜ್ಞಾನ ಒಳಗಿನಿಂದ ಬೆಳೆಸಿಕೊಳ್ಳಲು ಕಷ್ಟಪಡಬೇಕು. ಇದೇ ಜೀವನ ರಹಸ್ಯವೆಂದಿದ್ದಾರೆ  ಜ್ಞಾನಿಗಳು.

Sunday, April 2, 2023

ಸಮಯ ಪ್ರಜ್ಞೆ ಎಷ್ಟು ಅಗತ್ಯವಿದೆ?

———————————- - - - -  
 **ಗಡಿಯಾರ ಕೆಟ್ಟರೆ ಗಡಿಯಾರ ನಿಲ್ಲುತ್ತದೆ,ಸಮಯ ನಿಲ್ಲುವುದಿಲ್ಲ.ಸುಳ್ಳನ್ನು ಮುಚ್ಚಿಟ್ಟರೆ ಸುಳ್ಳು ಮುಚ್ಚಬಹುದು,ಆದರೆ ಸತ್ಯ ಮುಚ್ಚಿಡಲಾಗದು.**

*ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು,
ಆದರೆ ದುರಾಸೆಗಳನ್ನಲ್ಲ.**
ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಮಾನವನಲ್ಲ ಎನ್ನುವರು ಆದರೂ ಭೂಮಿಯ ಮೇಲೆ ಮಾನವನೇ ಎಲ್ಲಾ ಸಮಯವನ್ನೂ ನಿರ್ಧಾರ ಮಾಡಲು ಹೋಗಿ ಸಮಯಸಾಧಕನೆಂಬ ಬಿರುದನ್ನು ಪಡೆದು ಮರೆಯಾಗುತ್ತಾನೆ. ಇಲ್ಲಿ ಪ್ರತಿಯೊಬ್ಬರೂ ಅವರವರ ಸಮಯ ಪ್ರಜ್ಞೆ  ಕಾಯ್ದುಕೊಂಡು ಯಾವುದು ಸರಿ ಯಾವುದು ತಪ್ಪು ಎನ್ನುವ  ಸತ್ಯಜ್ಞಾನವನ್ನು ಪಡೆಯುವ  ಅವಕಾಶವಿದ್ದರೂ ಯಾರದ್ದೋ ಪ್ರಜ್ಞೆ ಯನ್ನು ಯಾವುದೋ ಸಮಯದಲ್ಲಿ  ಬಳಸಲು ಹೋಗಿ ಕೊನೆಗೆ ಸೋತುಹೋಗುವಾಗ  ಎಚ್ಚೆತ್ತುಕೊಳ್ಳಲು ಸಮಯವೇ ಇರೋದಿಲ್ಲ. ಇಷ್ಟಕ್ಕೂ ಇಲ್ಲಿ ಸಮಯವನ್ನು ನಿಲ್ಲಿಸೋ ಶಕ್ತಿ ಯಾರಲ್ಲೂ ಇಲ್ಲ ಎಂದರೆ ಸರಿಯಾದ ಸಮಯ ಕೆಟ್ಟ ಸಮಯ ಒಳ್ಳೆಯ ಸಮಯ ಹೀಗೇ ಸಮಯವನ್ನು ನಿರ್ಧಾರ ಮಾಡುವುದರಲ್ಲಿ ಸಾಕಷ್ಟು ಸಮಯ ಹೋಗಿರುತ್ತದೆ.
ರಾಹುಕಾಲ ಗುಳಿಕಕಾಲ ಯಮಗಂಡಕಾಲ ಹೀಗೇ ಅನೇಕ ಕಾಲವನ್ನು ಸಮಯಕ್ಕೆ ತಕ್ಕಂತೆ ನಿರ್ಧರಿಸಲಾಗಿದೆ.ಅದನ್ನು ನೋಡಿಕೊಂಡು ಶುಭಾಶುಭ ಫಲವನ್ನು ನಿರ್ಧಾರ ಮಾಡಿ ಯೋಗ್ಯ ಕೆಲಸಕ್ಕೆ ಯೋಗ್ಯ ಸಮಯ ನಿಶ್ಚಿತ ಮಾಡುವುದರ ಮೂಲಕ ಸಮಯಕ್ಕೆ ಗೌರವ ಹಾಗು ಬೆಲೆ ಕೊಡುವ ನಮ್ಮ ಸನಾತನ ಧರ್ಮವು ಇಂದು ಹಿಂದುಳಿದಿರೋದಕ್ಕೂ ಕಾರಣ ಆ ಧರ್ಮ ವನ್ನು ಸಮಯಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸಮಯ ಮೀರಿದ ನಂತರ  ಅನರ್ಥ ವಾಯಿತೆಂದು ವಿರೋಧಿಸಿ ಹೋರಾಟಕ್ಕಿಳಿದಿರೋದು. ಭೌತಿಕದ ಸಮಯ ಮತ್ತೆ ಬಾರದಿರಬಹುದು.ಅಧ್ಯಾತ್ಮದ ಸಮಯಕ್ಕೆ  ಸಾಕಷ್ಟು ಅವಕಾಶವಿದ್ದರೂ ಮನಸ್ಸು ಹೊರಳದಿದ್ದರೆ  ತಿರುಗಿ ಹೋಗಲಾಗದು. ಹೀಗಾಗಿ ಸಮಯ ಎಲ್ಲರಿಗೂ ಒಂದೇ ಆದರೂ ಕೆಲವರು ಅದನ್ನು ಸದ್ಬಳಕೆ ಮಾಡಿಕೊಂಡರೆ ಕೆಲವರು ದುರ್ಭಳಕೆ ಮಾಡಿಕೊಂಡು ಇದ್ದ ಉತ್ತಮ ಸಮಯ ಹಾಳು ಮಾಡುತ್ತಾರೆ. ಪ್ರತಿದಿನವೂ ಇರುವ ಸಮಯದಲ್ಲಿ  ಭಗವಚ್ಚಿಂತನೆಯಲ್ಲಿ ಕಾಲ ಕಳೆಯಬಹುದು ,ರಾಜಕೀಯ ಚಿಂತನೆಯಲ್ಲೂ ಕಾಲ
ಕಳೆಯಬಹುದು.ಮನರಂಜನೆಯಲ್ಲಿ ಕಾಲಹಾಕಬಹುದು   ದುಷ್ಟರ ಚಿಂತನೆಯಲ್ಲಿ ಮುಳುಗಿರಬಹುದು.  ಯಾವುದಕ್ಕೆ ಸಮಯಕೊಡುವರೋ ಅದು ಬೆಳೆಯುವುದು.

ಹೆಚ್ಚಿನ‌ ಜನರು ರಾಜಕೀಯದಲ್ಲಿ ಮುಳುಗಿರುವಾಗ ಸಮಯ ಹೋಗಿದ್ದೇ ತಿಳಿಯೋದಿಲ್ಲ. ಇಂತಹ ವಿಚಾರವಂತೂ ಗಮನಿಸಲು ಸಮಯವಿರದು. ಪ್ರತಿಯೊಂದು ಸಮಯವೂ ತನ್ನದೇ ಆದ  ಏಳು ಬೀಳುಗಳನ್ನು ಹೊಂದಿದೆ. ಅತಿಯಾದರೆ ಕಷ್ಟ. ಭೂಮಿಯ ಮೇಲಿದ್ದು ಭೂಮಿಯ ಸತ್ಯ ಸತ್ವದ ಬಗ್ಗೆ ತಿಳಿಯದೆ ಮೇಲಿರುವ ಆಕಾಶದತ್ತ ತಲೆಎತ್ತಿ ನಡೆದರೆ ಎಡವಿ ಬೀಳೋದಕ್ಕೂ ಸಮಯವಿದೆ. ಅದಕ್ಕೆ ಹಿರಿಯರು ಹೇಳಿದರು ಎಲ್ಲದ್ದಕ್ಕೂ ಸಮಯ ಕೂಡಿ ಬಂದಾಗಲೇ ಆಗೋದು ಎಂದು.ನಾವು ಎಲ್ಲರಿಗೂ ಒಳ್ಳೆಯದಾಗಲೆಂದು ಬಯಸಿದರೂ ಸಮಯ  ಅವರು ಬಳಸಿದಂತೆ  ನಡೆಸುವುದು.
ಒಟ್ಟಿನಲ್ಲಿ  ಒಳ್ಳೆಯ ಸಮಯಕ್ಕೆ ತಡವಾಗುತ್ತದೆ.ಕೆಟ್ಟ ಸಮಯ ಬೇಗ ಬರುತ್ತದೆ. ಕಾರಣ ಹೆಚ್ಚಿನ‌ ಜನರು ಬಳಸೋದು ಕೆಟ್ಟದ್ದಕ್ಕೆ. ಇದರ ಫ್ರಭಾವ ಎಲ್ಲಾ ಅನುಭವಿಸಲು ಕಾರಣ ಕೆಟ್ಟದ್ದನ್ನು  ನೋಡಿ ಸುಮ್ಮನಿರೋದು. ಕೆಲವರಿಗೆ ಒಳ್ಳೆಯದು ಕೆಟ್ಟದ್ದರ ಅರಿವಿರದು.ಅರಿವಿದ್ದವರು  ಕಲಿಸಿ ತಿಳಿಸಿ ಸಂಸ್ಕಾರ ನೀಡಿದ್ದರೆ ಒಳ್ಳೆಯವರ ಸಂಖ್ಯೆ ಬೆಳೆಯುವುದು. ತಿಳಿದವರಿಗೆ ಅವಕಾಶವಿರದು ಹೀಗಾಗಿ ಸಮಯ ಎಲ್ಲರಿಗೂ ಒಂದೇ ಆದರೂ ಅವರವರ ಜ್ಞಾನಕ್ಕೆ ತಕ್ಕಂತೆ ಬಳಸುವಾಗ  ಬೇರೆ ಬೇರೆ ಕಾಣುವುದು. 
 ಮಾನವ ತಯಾರಿಸಿದ ಗಡಿಯಾರ ನಿಲ್ಲಬಹುದು.
ದೈವನಿರ್ಮಿತ‌ ಕಾಲದ ಸಮಯ ಬದಲಾಗಬಹುದು ನಿಲ್ಲೋದಿಲ್ಲ. ಹಾಗಾಗಿ ಪ್ರತಿಕ್ಷಣವೂ ದೈವ ಪ್ರಾರ್ಥನೆ  ಮಾಡಿಕೊಂಡಿರಲಾಗದು ಸಮಯವನ್ನು ದೈವೀಕ ಶಕ್ತಿಯ ಕಡೆಗೆ ತಿರುಗಿಸಿಕೊಂಡಿರಬಹುದು.ಕಾಯಕವೇ ಕೈಲಾಸವೆನ್ನುವುದೂ ಒಂದು ಮಾರ್ಗ. ಕೈಲಾಸವನ್ನು ಕಾಯಕ ಮಾಡಿಕೊಂಡರೂ ಅಲ್ಲಿಯೂ ಸಮಯ ನೋಡಿ ನಡೆಯಬೇಕಿದೆ. ಎಲ್ಲಾ ಸಮಯವೂ ಉತ್ತಮವೂ ಅಲ್ಲ.ಹಾಳೂ ಇರೋದಿಲ್ಲ.ನಮ್ಮ ಕಾಯಕದಲ್ಲಿದೆ .
 ಒಬ್ಬ  ಅಧ್ಯಾತ್ಮ ಗುರುವಿಗೂ ಭೌತಿಕ ಶಿಕ್ಷಕನಿಗೂ ಸಮಯ ಒಂದೇ ಆದರೂ ಅವನು ಕಲಿಸುವ ವಿದ್ಯೆ ಮೇಲೆ ಅವನ ಭವಿಷ್ಯವಿರುತ್ತದೆ. 
ಅತಿಯಾದ ರಾಜಕೀಯವೇ ಸಮಯವನ್ನು ಹಾಳು ಮಾಡುತ್ತದೆ. ಯುಗಯುಗದಿಂದಲೂ  ನಡೆದು ಬಂದಿರುವ ಭೂಮಿಯ ಮೇಲಿರುವ ರಾಜಕೀಯ ಇಂದು ದುರ್ಭಳಕೆ  ಹೆಚ್ಚಾಗಿದ್ದರೂ ನಮ್ಮ ಸಮಯವನ್ನು ಅದಕ್ಕೆ ಕೊಟ್ಟರೆ ಇನ್ನಷ್ಟು ಸಮಯ ವ್ಯರ್ಥ. ನಮ್ಮದೇ ಆದ ಧರ್ಮ ಕರ್ಮಕ್ಕೆ ಬಳಸಿ ಶಾಂತಿಯಿಂದ  ಬದುಕುವವರು ವಿರಳ.ಕ್ರಾಂತಿಗೆ ಸಮಯ ಕೊಡುವವರು ಬಹಳ ಮಂದಿ  ಹೊರಗಿದ್ದಾರೆ. ಇದನ್ನು ನೋಡಿಕೊಂಡು ಕಾಲ ಕಳೆಯುವವರು ಮನೆಯೊಳಗೆ ಹೆಚ್ಚಾಗುತ್ತಿರುವುದು  ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಯಾರ ಸಮಯವನ್ನು ಯಾರೋ ವ್ಯರ್ಥವಾಗಿಸಿದರೆ ಯಾರಿಗೂ ಉಪಯೋಗವಿಲ್ಲ.ಹಾಗೆ ಅವರವರ ಕರ್ಮ ಫಲವನ್ನು  ಯಾರೋ ಬಂದು ಅನುಭವಿಸುವಂತಿದ್ದರೆ  ಚೆನ್ನಾಗಿರುತ್ತಿತ್ತು. ತಂದೆ ಮಾಡಿದ ಸಾಲ ಮಕ್ಕಳು ತೀರಿಸಲು ತಂದೆಯ ಸಮಯ ತಿರುಗಿ ಬರೋದಿಲ್ಲವಲ್ಲ..ಆದರೂ  ಇದನ್ನು ಬದಲಾಯಿಸಲು ತಂತ್ರ ಮಾರ್ಗ ಹಿಡಿದು ಇರುವ ಸ್ವತಂತ್ರ ಜ್ಞಾನವನ್ನು ಹಾಳು
ಮಾಡಿಕೊಳ್ಳುವುದು ಮಾನವನಿಗೆ ನುಂಗಲಾರದ ತುತ್ತಾಗಿದೆ.
ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲವೆಂದಿದ್ದಾರೆ.‌ಆದರೂ  ಹೋದ ಕಾಲವನ್ನು ನೆನೆಯುತ್ತಾ ಕಾಲಕಳೆಯುತ್ತಿರುವುದು ತಪ್ಪಿಲ್ಲ ಹೀಗಾದರೆ ಸಮಯ ತಿರುಗಿ ಬರುವುದೆ? ಉತ್ತಮ ವಿಚಾರಗಳನ್ನು ನೆನಪಿಸಿಕೊಂಡರೆ  ಮುಂದೆ ಉತ್ತಮ ಸಮಯ ಬರುತ್ತದೆ.