ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Saturday, December 31, 2022
ಕ್ಯಾಲೆಂಡರ್ ಹೊಸವರ್ಷ= ಪಂಚಾಂಗದ ಹೊಸವರ್ಷ?
Friday, December 30, 2022
ಹೊಸವರ್ಷ ಯಾವುದು? ಯಾಕೆ?
Saturday, December 24, 2022
ಅಹಿಂಸೆಯ ಸತ್ಯಾಗ್ರಹವೋ ಹಿಂಸೆಯ ಆಗ್ರಹವೋ?
ಅಹಿಂಸೆ,ಸತ್ಯ,ಧರ್ಮ, ನ್ಯಾಯ,ನೀತಿ,ಸತ್ಯಾಗ್ರಹವು ಸತ್ವಗುಣವಾದ್ದರಿಂದ ಭಗವಂತನಿಗೆ ನೇರವಾಗಿ ತಲುಪುತ್ತದೆ ಆದ್ದರಿಂದ ಇದರ ಮೂಲಕವೇ ಮುಕ್ತಿ ಮಾರ್ಗ ಕಂಡುಕೊಂಡಿದ್ದು ಹಿಂದೂ ಧರ್ಮದ ಮೂಲ. ಅದ್ವೈತವು ಇದರ ಪರವಿದ್ದರೆ ದ್ವೈತದ ರಾಜಕೀಯ ಇದನ್ನು ಒಪ್ಪದು. ದುಷ್ಟರಿಗೆ ಅನ್ವಯಿಸುವುದಿಲ್ಲ ಅದ್ವೈತ.
ಅಹಿಂಸೋ ಪರಮೋಧರ್ಮ:
ಹಿಂದೂ ಧರ್ಮದ ಪ್ರಕಾರ ಹಿಂಸೆ ಮಾನಸಿಕವಾಗಿ,
ದೈಹಿಕವಾಗಿ ಮಾಡಲೇಬಾರದೆನ್ನುವರು.
ಹಾಗಾದರೆ ಈಗ ಸಾಧ್ಯವೆ? ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸೋತು ಅಸತ್ಯಕ್ಕೆ ಶರಣಾಗಿ ಧರ್ಮ ರಕ್ಷಣೆ ಮಾಡಲಾಗದು.ಇದೇ ಕಾರಣಕ್ಕಾಗಿ ಹಿಂದೂ ಧರ್ಮ ಹಿಂದುಳಿದಿದೆ.
ಇಲ್ಲಿ ಸತ್ಯವೇ ದೇವರಾದರೆ ಅಸತ್ಯ ಅಸುರರಾಗುತ್ತಾರೆ.
ಅಸತ್ಯಕ್ಕೆ ಸಹಕಾರ ಸಿಕ್ಕರೆ ಅಸುರರೆ ಬೆಳೆಯುತ್ತಾರೆ.ಹಾಗೆ ಧರ್ಮದ ವಿಚಾರ ಬಂದಾಗ ನಮ್ಮ ಧರ್ಮ ವೇ ಶ್ರೇಷ್ಠ ವೆನ್ನುವುದು ಅವರವರ ನಂಬಿಕೆ, ಅವರ ನಂಬಿಕೆಯು ಮನೆಯೊಳಗೆ ಮನಸ್ಸಿನಲ್ಲಿ ಜಾಗೃತವಾಗಿದ್ದರೆ ಹೊರಗಿನವರು ಎಷ್ಟೇ ಆಕ್ರಮಣ ನಡೆಸಿದರೂ ಬದಲಾಗದು. ಯಾವಾಗ ಹೊರಗಿನವರನ್ನೂ ನಮ್ಮೆಡೆಗೆ ಸೇರಿಸಿಕೊಂಡು ಅವರ ಧರ್ಮ ವನ್ನೂ ಬೆಳೆಸುತ್ತಾ ನಮ್ಮತನ ನಮ್ಮವರನ್ನೇ ದ್ವೇಷ ಮಾಡುವ ರಾಜಕೀಯ ಬೆಳೆಯುವುದೋ ಆಗಲೇ ಅಧರ್ಮ ಹೆಚ್ಚುವುದು.
ಭಗವಂತನೆಡೆಗೆ ಹೋಗುವುದಕ್ಕೆ ಸತ್ಯ,ಅಹಿಂಸೆ,ನ್ಯಾಯ,
ನೀತಿ, ಧರ್ಮ ಮಾರ್ಗವನ್ನು ಅರ್ಥ ಮಾಡಿಕೊಂಡು ಆಂತರಿಕ ಸತ್ಯದೆಡೆಗೆ ನಡೆದವರೆ ರಾಜಯೋಗಿಗಳು.
ಅವರಲ್ಲಿ ರಾಜಕೀಯಗುಣವಿರಲಿಲ್ಲ ಆದರೆ, ಸತ್ಯ ತಿಳಿಸುವಾಗ ಅಸತ್ಯದ ಮನಸ್ಸಿಗೆ ಅರ್ಥ ಆಗದ ಕಾರಣ ನಮ್ಮನ್ನು ದಾರಿತಪ್ಪಿಸಿ ಆಳುತ್ತಿದ್ದಾರೆನ್ನಬಹುದಷ್ಟೆ.
ಹೀಗಾಗಿ ಹಿಂದಿನ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ,ಶೂದ್ರರೆಂಬ ನಾಲ್ಕು ವರ್ಣಗಳ ಪ್ರಕಾರ ಅವರವರ ಧರ್ಮ ಕರ್ಮ ಕ್ಕೆ ತಕ್ಕಂತೆ ಶಿಕ್ಷಣ ನೀಡಿ ಒಂದು ಸಮಾಜ,ರಾಜ್ಯ,ರಾಷ್ಟ್ರದ ಹಿತಚಿಂತನೆಯು ಧರ್ಮ ಕರ್ಮದ ಸಮಾನತೆಯಲ್ಲಿತ್ತು.
ಯಾವಾಗ ಮೇಲಿನ ಬ್ರಾಹ್ಮಣ ರ ಜ್ಞಾನಕ್ಕೆ ಬೆಲೆಸಿಗದೆ ರಾಜಕೀಯ ಬೆಳೆಯಿತೋ ನಂತರ ಅದೇ ವ್ಯವಹಾರಕ್ಕೆ ತಿರುಗಿ ಸೇವೆಯನ್ನು ಹಣದಿಂದ ಮಾಡಲಾಯಿತು.
ಜ್ಞಾನವಿಲ್ಲದೆ ಸಂಪಾದಿಸಿದ ರಾಜಕೀಯ ವ್ಯವಹಾರದ ಸೇವೆಯೇ ಅಧರ್ಮದಿಂದ ಹಿಂಸೆಯ ರೂಪ ತಾಳಿತು. ಅಂದರೆ ಹಿಂಸೆಯು ಮನಸ್ಸಿಗೆ ಆದರೂ ಕರ್ಮಫಲ
ಮೈಗೆ ಆದರೂ ಕರ್ಮಫಲ. ಹಾಗಂತ ಕಷ್ಟಪಡದೆ ಸುಖಪಟ್ಟರೆ ಕಷ್ಟದ ಸರದಿ ಮುಂದೆ ಇದ್ದೇ ಇರುತ್ತದೆ. ಹೀಗಾಗಿ ಈಗಲೂ ನಾವು ಎಲ್ಲಾ ಭ್ರಷ್ಟಾಚಾರ ನೋಡಿಕೊಂಡು ಹಿಂಸೆಯಾದರೂ ಅನುಭವಿಸಲೇಬೇಕಾಗಿದೆ ಎಂದರೆ ನಮಗೆ ಸತ್ಯ ತಿಳಿದಿದೆ ಆದರೂ ಹೇಳುವ ಅಧಿಕಾರ ಇಲ್ಲದೆ ಹಿಂಸೆ ತಡೆಯಲಾಗದೆ ಜಗತ್ತಿನಲ್ಲಿ ಇದ್ದೂ ಇಲ್ಲದಂತೆ
ಬದುಕಬೇಕೆಂದರೆ ಇದೊಂದು ಆತ್ಮಹತ್ಯೆ ಎನ್ನುವರು. ಇದಕ್ಕೆ ಕಾರಣವೇ ಅಧ್ಯಾತ್ಮ ವಿಚಾರದಲ್ಲಿ ಸತ್ಯಕ್ಕೆ ಬೆಲೆಕೊಡದೆ ಧರ್ಮ ದ ಹೆಸರಲ್ಲಿ ಒಡೆದು ಆಳಿದ ರಾಜಕೀಯ. ಈ ರಾಜಕೀಯಕ್ಕೆ ಬಲಿಯಾಗಿರೋದು ಜನರ ಜೀವ. ಜೀವರಕ್ಷಣೆ ರಾಜಕೀಯದಿಂದ ಆದರೂ ಆತ್ಮರಕ್ಷಣೆ ಆಗದು.
ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಉಪವಾಸ ಸತ್ಯಾಗ್ರಹವನ್ನು ಸ್ವಾಗತಿಸಿದವರಷ್ಟೆ ವಿರೋಧಿಸಿದವರೂ ಇದ್ದರು. ಕಾರಣವಿಷ್ಟೆ ಶತ್ರುಗಳನ್ನು ಕ್ಷಮಿಸು ಎನ್ನುವ ಹಿಂದೂ ಧರ್ಮಕ್ಕೂ ಶತ್ರುಗಳನ್ನು ಮುಗಿಸು ಎನ್ನುವ ಪರಧರ್ಮಕ್ಕೂ ವ್ಯತ್ಯಾಸವಿದ್ದರೂ ಇಬ್ಬರೂ ದೇವದೂತರೆ
ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡೋದಕ್ಕೆ ಎರಡೂ ಶಕ್ತಿಯ ನಡುವೆ ಯುದ್ದವಾಗಲೇಬೇಕು.ಜೀವ ಹೋದರೂ ಮತ್ತೆ ಜನ್ಮ ಪಡೆಯುತ್ತದೆ ಆದರೆ ಆತ್ಮಜ್ಞಾನವು ಇದ್ದಾಗಲೇ ಸಂಪಾದನೆ ಮಾಡಬೇಕಾದರೆ ಜ್ಞಾನಿಗಳ ಜೀವರಕ್ಷಣೆ ಅಗತ್ಯ. ಇಲ್ಲಿ ಆಂತರಿಕ ಶಕ್ತಿಯನ್ನು ಬೆಳೆಸುವುದು ಕಷ್ಟ.ಭೌತಿಕ ಶಕ್ತಿಯು ಬೆಳೆದಂತೆಲ್ಲಾ ಆಂತರಿಕ ಶಕ್ತಿ ಹಿಂದುಳಿಯುತ್ತದೆ. ಸತ್ಯದ ನಡೆ ನುಡಿಯಿಂದಲೇ ಆತ್ಮಜ್ಞಾನ.ಅಸತ್ಯದ ನಡೆ ನುಡಿಯು ರಾಜಕೀಯವಾಗಿ ಬೆಳೆಸಬಹುದು.ಇದರಿಂದ ಮಾನವನಿಗೆ ಮುಕ್ತಿ ಸಿಗೋದು ಕಷ್ಟವಾದ್ದರಿಂದ ಹಿಂದಿನ ಗುರು ಹಿರಿಯರು ಸತ್ಯಕ್ಕೆ ಬೆಲೆಕೊಟ್ಟು ಅಸತ್ಯಕ್ಕೆ ಶಿಕ್ಷೆಯಿತ್ತು. ಆದರೆ ಇಲ್ಲಿ ಹಿಂಸೆಯ ವಿಚಾರ ಬಂದಾಗ ಯಾವಾಗ ನಾವು ತಪ್ಪು ತಿಳಿದೂ ನಡೆಯುವೆವೋ ಅದು ಮುಂದೆ ಹಿಂಸೆಗೆ ದಾರಿಯಾಗುತ್ತದೆ. ತಿಳಿಯದೆಯೇ ನಡೆದವರಿಗೆ ತಪ್ಪಿನ ಅರಿವಾಗಬಹುದು.ತಿಳಿದೂ ನಡೆದವರನ್ನು ಬದಲಾಯಿಸಲಾಗದು. ನಾಟಕದಲ್ಲಿ ಪಾತ್ರಧಾರಿಗಳಾಗಿರುವಾಗ ಹಿಂಸೆಯಾದರೂ ಸಹಿಸಿಕೊಳ್ಳುವ ಶಕ್ತಿ ಪರಮಾತ್ಮ ನೀಡಬಹುದು.ಆದರೆ ತನ್ನ ಸ್ವಾರ್ಥ ದ ಜೀವನದಲ್ಲಿ ಮಾಡುವ ನಾಟಕದಲ್ಲಿ ನಾಟಕದ ಪಾತ್ರವು ತಪ್ಪಾಗಿದ್ದರೆ ನೋಡುಗರನ್ನೂ ತಪ್ಪುದಾರಿಗೆಳೆದು ಇದಕ್ಕೆ ಕಾರಣವಾಗಿದ್ದ ಪಾತ್ರಧಾರಿಯವರೆಗೂ ಕರ್ಮ ಆವರಿಸಿ ಹಿಂಸೆ ಬೆಳೆಯುತ್ತದೆ.
ಪೋಷಕರು ಮಕ್ಕಳ ತಪ್ಪು ತಿಳಿದೂ ಬೆಳೆಸಿ ದೊಡ್ಡವರಾದ ಮೇಲೆ ಹೇಗೆ ಮಕ್ಕಳಿಂದಲೇ ಹಿಂಸೆ ಅನುಭವಿಸುವರೋ ಹಾಗೆ ದೇಶದ ಪ್ರಜೆಗಳೂ ರಾಜಕಾರಣಿಗಳಿಗೆ, ಭ್ರಷ್ಟರಿಗೆ, ಸಹಕಾರಕೊಟ್ಟರೆ ನಂತರದ ದಿನಗಳಲ್ಲಿ ಅವರಿಂದಲೇ ಹಿಂಸೆ ಅನುಭವಿಸಬೇಕೆನ್ನುವುದೆ ಕರ್ಮ ಸಿದ್ದಾಂತ.
ಹಾಗಾದರೆ ಸತ್ಯ ಹೇಳುವುದು ಹಿಂಸೆಯೆ? ಸತ್ಯ ದೇವರಲ್ಲವೆ?
ದೈವತ್ವಕ್ಕೆ ಸತ್ಯ ಬೇಡವೆ?
ಅಹಿಂಸೆ ಎನ್ನುವ ಪದದೊಳಗೆ ಹಿಂಸೆಯಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲದ ಮನುಕುಲ ಹಿಂಸೆಯ ಮಾರ್ಗ ಹಿಡಿದು ನಡೆದರೆ ಪರಮಾತ್ಮ ಕಾಣದೆ ಜೀವ ಹೋಗುತ್ತದೆ. ಪ್ರತಿಯೊಂದು ಪ್ರಾಣಿ ಪಕ್ಷಿ,ಜೀವ ಜಂತುಗಳು
ಪ್ರಕೃತಿಯ ಪರವಾಗಿದ್ದರೂ ಮಾನವನೆಂಬ ಪ್ರಾಣಿ ಎಲ್ಲಾ ವಶಪಡಿಸಿಕೊಂಡು ಹಿಂಸೆ ಮಾಡಿ ಕೊನೆಗೆ ತಾನೇ ಹಿಂಸೆಗೆ ಗುರಿಯಾದರೂ ಹೇಳೋರಿಲ್ಲ ಕೇಳೋರಿಲ್ಲ. ಇದನ್ನು ಈಗ ಕೊರೊನ ಮಾರಿಯ ಮೂಲಕ ಭಗವಂತನೆ ತಡೆ ಹಾಕಲು ಪ್ರಯತ್ನಪಟ್ಟರೂ ಜ್ಞಾನವಿಲ್ಲದೆ ಜೀವನ ನಡೆಸುವಾಗ ಕೊರೊನ ವೂ ಹಿಂಸೆ ಎಂದರೆ ಪರಿಹಾರವಿಲ್ಲ.
ಇಲ್ಲಿ ರೋಗಕ್ಕೆ ಕಾರಣವೇ ಅತಿಯಾದ ರಾಜಕೀಯತೆ
ಅತಿಯಾದ ಕೂತು ತಿನ್ನುವ ಜನ, ಕೊಟ್ಟು ಆಳುವ
ಜನ,ಕೊಡದೆ ನೋಡುವಜನ,ಕೊಂದು ತಿನ್ನುವ ಜನ, ಕೂಡಿ ಆಡುವ ಜನ, ಕೂಗಿ ಏಳುವ ಜನ, ಈ ಅರಿಷಡ್ವರ್ಗದ ವೈರಿಗಳಿಂದಲೇ ಹಿಂಸೆ ಬೆಳೆದಿರುವಾಗ ಯಾರಲ್ಲಿ ಇವರಿಲ್ಲ?
ನಮ್ಮೊಳಗೇ ಅಡಗಿರುವ ಈ ಹಿತಶತ್ರುಗಳೇ ನಮಗೆ ಹಿಂಸೆ ಕೊಡುವಾಗ ಹೊರಗಿನಿಂದ ಸರಿಪಡಿಸಲಾಗದು. ಒಟ್ಟಿನಲ್ಲಿ ಮಾನವ ಮೊದಲು ಬದಲಾಗಬೇಕು.ಮೊದಲು ಮಾನವನಾಗಬೇಕೆಂದರೆ ನಮ್ಮಲ್ಲಿರುವ ಹಿಂಸಾತ್ಮಕ ಗುಣವು
ಹೋದರೆ ಅಹಿಂಸೆಯ ಅರ್ಥ ತಿಳಿಯಬಹುದು.
ಇದರಲ್ಲಿ ಸಾಮಾನ್ಯವಾದ ಸತ್ಯವಿದ್ದರೂ ಕೆಲವರಿಗೆ ಅರ್ಥ ವಾದರೆ ಕೆಲವರಿಗೆ ತಿಳಿದರೆ ಹಿಂಸೆ ಎನಿಸಬಹುದು. ಹೀಗಾಗಿ
ನಮ್ಮ ಹಿಂಸೆಗೆ ನಾವೇ ತಿಳಿದ ವಿಷಯವಾಗಬಹುದು.
ವಿಷಯದೊಳಗೇ ವಿಷವಿದ್ದರೆ ಸಾಯೋದು ಮನಸ್ಸು.
ಬೆಳೆಯೋದು ಹಿಂಸೆ.ಜೀವವಿದ್ದಾಗಲೇ ಅಧ್ಯಾತ್ಮ ಸತ್ಯ ತಿಳಿಯುವುದು ಉತ್ತಮ
ಹೋದಮೇಲೆ ಮಹಾತ್ಮರ ಹೆಸರಲ್ಲಿ ವ್ಯವಹಾರ ನಡೆಸಿದರೆ ಪ್ರಯೋಜನವಿಲ್ಲವೆನ್ನಬಹುದು.
ನಿಜವಾದ ಬಡತನ ಯಾವುದು?
Monday, December 19, 2022
ಯಾರು ಶ್ರೇಷ್ಠ ರು? ಕನಿಷ್ಠ ಯಾವುದು?
Thursday, December 15, 2022
ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲಿದೆ?
Wednesday, December 14, 2022
ಯುವಕರಿಗೆ ವಿವೇಕಾನಂದರ ಸಂದೇಶವೇನಿತ್ತು?
ಯುವಶಕ್ತಿಗೆ ವಿವೇಕಾನಂದರ ಸಂದೇಶಗಳು
ವಿವೇಕಾನಂದ ಎನ್ನುವ ಹೆಸರಲ್ಲಿರುವ ವಿವೇಕದ ಆನಂದವನ್ನು ಯುವಶಕ್ತಿಯಲ್ಲಿ ಕಾಣುವುದೇ ಸ್ವಾಮೀಜಿಯ
ಮುಖ್ಯಗುರಿಯಾಗಿತ್ತು. ಅವರು ನೀಡಿದ ಪ್ರತಿಯೊಂದು ಸಂದೇಶದಲ್ಲಿಯೂ ರಾಜಯೋಗವನ್ನು ಕಾಣಬಹುದು.
ಯುವಕರು ಸ್ವಯಂ ಶಕ್ತಿಯಾಗಲು ಯೋಗದಿಂದ ಸಾಧ್ಯ ಎನ್ನುವ ಯೋಗಿಗಳಾಗಿದ್ದ ವಿವೇಕಾನಂದರು ಅಂತಹ ಯೋಗ್ಯ ಶಿಕ್ಷಣವನ್ನು ಭಾರತದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ
ಬದಲಾವಣೆಗೆ ಸ್ವಾಮಿ ವಿವೇಕಾನಂದರ ಕೆಲವು ಮುಖ್ಯವಾದ ಸಂದೇಶಗಳನ್ನು ಯುವಕರ ಮುಂದಿಡುವ ಮೂಲಕ ಭಾರತದ ಯುವಶಕ್ತಿಯನ್ನು ಎಚ್ಚರಿಸುವ ಕೆಲಸ ಇಂದಿಗೆ ಅಗತ್ಯವಾಗಿದೆ.
ವಿವೇಕಾನಂದರ ಪ್ರಕಾರ ಶಿಕ್ಷಣವೆಂದರೆ
ನಮ್ಮ ಮೆದುಳಿನಲ್ಲಿ ತುಂಬಿರುವ ಮಾಹಿತಿಗಳ ಮೊತ್ತವಲ್ಲ, ನಮ್ಮ ಜೀವನಕ್ಕೆ ಬೇಕಾದ್ದು ಜೀವನ - ನಿರ್ಮಾಣ, ಮನುಷ್ಯ- ನಿರ್ಮಾಣ, ಚಾರಿತ್ರ್ಯ ನಿರ್ಮಾಣ ಇವುಗಳ ಮೂಲಕ ಉದಾತ್ತ ಭಾವನೆಗಳನ್ನು ಕರಗತ ಮಾಡಿಕೊಂಡು, ಐದೇ ಐದು ಭಾವನೆಗಳನ್ನು ಅರಗಿಸಿಕೊಂಡು,ಅದನ್ನು ನಿಮ್ಮ ಬದುಕನ್ನಾಗಿ ಮತ್ತು ಚಾರಿತ್ರ್ಯ ವನ್ನಾಗಿಸಿಕೊಂಡರೆ ಇಡೀ ಗ್ರಂಥಾಲಯವೇ ಬಾಯಿಪಾಠ ಮಾಡಿದ ಯಾವುದೇ ವ್ಯಕ್ತಿಗಿಂತ ಎಷ್ಟೋ ಹೆಚ್ಚು ಶಿಕ್ಷಣ ಪಡೆದಂತೆ ಎಂದಿದ್ದರು.
ವಾಸ್ತವದ ಸ್ಥಿತಿಯಲ್ಲಿ ಯುವಕರ ಪರಿಸ್ಥಿತಿ ಮನಸ್ಥಿತಿಯು
ಶಿಕ್ಷಣದಲ್ಲಿಯೇ ಹದಗೆಡುತ್ತಿದೆ ಎಂದಾಗ ವಿವೇಕಯುಕ್ತ ವಿಷಯಗಳನ್ನು ಪಠ್ಯ ಪುಸ್ತಕವಾಗಲಿ, ಪೋಷಕರಾಗಲಿ, ಶಿಕ್ಷಣವಾಗಲಿ ಕೊಡಲು ಸೋತಿರುವುದಾಗಿದೆ. ಇದಕ್ಕಾಗಿ ಸಾಕಷ್ಟು ತಯಾರಿಯೂ ಇಂದು ನಡೆಯುತ್ತಿದೆ. ಯುವ ಪೀಳಿಗೆಯು ಆದರ್ಶ ವನ್ನು ಸ್ವೀಕರಿಸಬೇಕಿದೆ.
ವಿವೇಕಾನಂದರು ರಾಜಕೀಯ ನಡೆಸಿರಲಿಲ್ಲ ರಾಜಯೋಗಿಗಳಾಗಿ ಸ್ವತಂತ್ರ ಜ್ಞಾನಿಗಳಾಗಿ ಸಂನ್ಯಾಸಿಗಳಾಗಿದ್ದವರಲ್ಲಿದ್ದ ಅಧ್ಯಾತ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಯೋಗದಿಂದ ಸಾಧ್ಯ. ಯೋಗವೆಂದರೆ
ಸೇರುವುದು ಕೂಡುವುದಾಗುತ್ತದೆ. ಪರಮಾತ್ಮನ ಜೀವಾತ್ಮ ಸೇರೋದು, ದೇಶದೊಳಗಿರುವ ಪ್ರಜೆಗಳು ದೇಶಭಕ್ತಿಯಿಂದ ದೇಶವನ್ನರಿಯೋದಕ್ಕೆ ಯೋಗಬೇಕು.
ದುರ್ಭಲತೆಗೆ ಕಾರಣವೇ ಅಜ್ಞಾನ. ಅದರ ಬಗ್ಗೆ ಚಿಂತಿಸುತ್ತಾ ಕೂರದೆ ಜ್ಞಾನಶಕ್ತಿಯೆಡೆಗೆ ಯುವಕರು ಒಗ್ಗಟ್ಟಿನಿಂದ ನಡೆದು
ಜನರನ್ನು ಒಂದುಗೂಡಿಸಬೇಕು.
ರಾಜಕೀಯಕ್ಕೆ ಇಳಿದಾಗ ನನ್ನ ಅಧಿಕಾರ ಸ್ವಾರ್ಥ ವೇ ಮುಖ್ಯವಾಗುತ್ತದೆ. ಅದಕ್ಕೆ ಬದಲಾಗಿ ನನ್ನ ಆತ್ಮರಕ್ಷಣೆಗಾಗಿ
ಸ್ವಾವಲಂಬನೆ, ಸರಳಜೀವನ,ಸ್ವಾಭಿಮಾನದ ಜೀವನ ನಡೆಸುವ ಬಗ್ಗೆ ಯುವಕರು ಸ್ವತಂತ್ರ ಚಿಂತನೆ ನಡೆಸಿದರಾದರೆ ಇದು ಸಾಧ್ಯ.
ದುರ್ಭಲ ಮನಸ್ಸನ್ನು ಯೋಗಸಾಧನೆಯಿಂದ ಸಬಲವಾಗಿಸಿಕೊಂಡರೆ ಮಾನವ ಪ್ರಕೃತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬಹುದೆನ್ನುವ ಸತ್ಯ ವಿವೇಕಾನಂದರು ತಿಳಿಸುವುದರ ಮೂಲಕ ಯುವಕರನ್ನು ಬಡಿದೆಬ್ಬಿಸುವ ಕೆಲಸ ಅಂದೇ ಮಾಡಿದ್ದರು. 'ಅಮೃತ ರ ನಮ್ಮೊಳಗೇ ಅಡಗಿರುವ ಯಾವತ್ತೂ ಸಾಯದ ಆತ್ಮಶಕ್ತಿಯನ್ನು ಪಡೆದ ಮೇಲೆ ಅಮೃತ ಕುಡಿದವರು ದೇವತೆಗಳು ,ದೇವರಪುತ್ರರು ದೈವತ್ವ ಪಡೆದವರಿಂದ ಎಲ್ಲಾ ಸಾಧ್ಯವಿದೆ ಎನ್ನಬಹುದು.
ಬಾಹ್ಯ ವಿಷಯಗಳನ್ನು ಕಲಿಯುವ ಬದಲಾಗಿ ಆಂತರಿಕ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಯುವಕರಿಗೆ ಅಧ್ಯಾತ್ಮ ವಿದ್ಯೆ ಎಂದರೆ ತನ್ನ ತಾನಾಳಿಕೊಳ್ಳುವ ರಾಜಯೋಗವನ್ನು ವಿವರಿಸಿದ್ದಾರೆ. ಇದು ಯಾವುದೇ ಅಗ್ನಿಪರ್ವತದ ಸ್ಪೋಟಕ್ಕಿಂತಲೂ,ಪ್ರಕೃತಿಯ ಯಾವುದೇ ನಿಯಮಕ್ಕಿಂತಲೂ ಲಕ್ಷಾಂತರ ಪಟ್ಟು ಬಲಶಾಲಿಯಾಗಿರುವುದೆಂದು,ಒಬ್ಬ ಮನುಷ್ಯನಿಗೆ ತಾನು ಯಾರೆಂದು ಭೋದಿಸುವುದೆಂದು ತಿಳಿಸಿದ್ದರು.
ಭೌತಿಕ ವಿಜ್ಞಾನಕ್ಕಿಂತಲೂ ಅಧ್ಯಾತ್ಮ ವಿಜ್ಞಾನ ಲಕ್ಷಾಂತರ ವರ್ಷಗಳ ಪುರಾಣವಾಗಿದೆ. ಆದರೆ ಒಂದು ಸೂಕ್ಮಾತಿಸೂಕ್ಮ ಭಾಗವೂ ಇನ್ನೂ ಪ್ರಕಟವಾಗಿಲ್ಲದಿರುವುದಕ್ಕೆ ದುರ್ಭಲ ಮನಸ್ಸೇ ಕಾರಣ ಆ ಮನಸ್ಸೆಂಬ ಮರ್ಕಟನನ್ನು ಕಟ್ಟಿಹಾಕಲು ಯೋಗ ಮಾರ್ಗ ಒಂದೇ ದಾರಿ ಎನ್ನುವ ಸಂದೇಶವು ಇಂದಿಗೂ ಯುವಜನತೆಗೆ ತಿಳಿಸಿಹೇಳುವ ಪರಿಸ್ಥಿತಿ ಭಾರತಕ್ಕಿದೆ. ಕಾರಣ ಶಿಕ್ಷಣ ಪದ್ದತಿಯು ತನ್ನ ಮೂಲ ಸತ್ಯ,ಸತ್ವವನ್ನು ಕಳೆದುಕೊಂಡು ಪಾಶ್ಚಾತ್ಯ ರ ಅನುಕರಣೆಯ ವಶವಾಗಿರೋದಾಗಿದೆ.
ಯುವಕರಿಗೆ ಎಲ್ಲಾ ತಿಳಿದರೂ ದಾರಿದೀಪವಾಗಿ ನಿಲ್ಲುವ
ಪೋಷಕರು ಶಿಕ್ಷಕರು ಒಂದಾದರೆ ವಿವೇಕಾನಂದರ ಈ ಸಂದೇಶಗಳನ್ನು ಯುವಪೀಳಿಗೆಗೆ ತಲುಪಿಸಿ ರಾಜಕೀಯಕ್ಕೆ ಬದಲಾಗಿ ರಾಜಯೋಗದ ಮೂಲಕ ದೇಶರಕ್ಷಣೆ ಮಾಡಲು
ಸಾಧ್ಯವಾದರೆ ಆತ್ಮನಿರ್ಭರ ಭಾರತ ಸಾಧ್ಯವೆನ್ನಬಹುದು.
ಸಾಕಷ್ಟು ಯುವ ದೇಶಭಕ್ತರು ರಾಜಕೀಯಕ್ಕೆ ದುಮುಕಿ ದೇಶದ ಪರ ನಿಂತ ಹಾಗೆ ಅಧ್ಯಾತ್ಮ ದೆಡೆಗೆ ನಡೆಯುವುದು
ಅಗತ್ಯವಿದೆ.
ಧಾರ್ಮಿಕವಾಗಿ ದೇಶವನ್ನು ನಡೆಸಲು ಯೋಗಿಯಾಗಬೇಕು
ರಾಜಕೀಯದಲ್ಲಿ ಭೋಗವಿದ್ದರೆ ರೋಗವೇ ಹೆಚ್ಚುವುದು.
ಹಣದಿಂದ ದೇಶದ ಸಾಲ ತೀರಿಸುವ ಮೊದಲು ಹಣವನ್ನು
ಸುಜ್ಞಾನದಿಂದ ಸಂಪಾದಿಸುವ ಮಾರ್ಗದರ್ಶಕರು ,ಗುರು ಹಿರಿಯರು,ಶಿಕ್ಷಕರು,ಪೋಷಕರು ಯುವಕರಿಗೆ ಸಿಕ್ಕಿದರೆ
ದೇಶದ ಸರ್ವತೋಮುಖ ಅಭಿವೃದ್ಧಿ ಯುವಕರಿಂದ ಸಾಧ್ಯವಿದೆಯಲ್ಲವೆ?
ಅಧ್ಯಾತ್ಮದ ಪ್ರಕಾರ ನಡೆದರೆ ರಾಜಯೋಗದ ಜೀವನ.
ವಿವೇಕಾನಂದರ ತತ್ವಜ್ಞಾನವನ್ನು ತಂತ್ರಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವರು ಯೋಗಿಗಳು.
ಧರ್ಮದ ವಿಚಾರದಲ್ಲಿ ಅವರು " ಧರ್ಮವು ಹೊಸದೇನನ್ನನ್ನೂ ನೀಡೋದಿಲ್ಲ ಅದು ನಿನ್ನ ಮಾರ್ಗದಲ್ಲಿನ ಅಡೆತಡೆಗಳನ್ನು ನಿವಾರಿಸಿ ನಿನ್ನ ಆತ್ಮವನ್ನು ದರ್ಶಿಸುವಂತೆ ಮಾಡುತ್ತದೆ " ಎಂದಿದ್ದಾರೆ.
ವಾಸ್ತವದ ಸತ್ಯದಲ್ಲಿ ದೇಶವೇ ಧರ್ಮದ ಹೆಸರಲ್ಲಿ ಒಡೆದಿದೆ
ಎಂದರೆ ಯುವಕರಲ್ಲಿದ್ದ ಆತ್ಮಬಲ ಕುಸಿದಿದೆ. ತಪ್ಪು ಗ್ರಹಿಕೆ, ತಪ್ಪು ದಾರಿಯ ನಡೆ ನುಡಿಯು ದೇಶದ ಯುವಕರನ್ನು ವಿದೇಶದೆಡೆಗೆ ನಡೆಸಿ ಸ್ವದೇಶ ಕಟ್ಟುವಲ್ಲಿ ಎಡವಿರೋದಕ್ಕೆ
ತತ್ವವರಿಯದ ತಂತ್ರಜ್ಞಾನವನ್ನು ದುರ್ಭಳಕೆ ಮಾಡಿಕೊಂಡ
ಸಮಾಜ ನಿರ್ಮಾಣದ ರಾಜಕೀಯತೆ,ಎಂದರೆ ತಪ್ಪಾಗಲಾರದು. ಸಾಧ್ಯವಾದವರು ಎಚ್ಚೆತ್ತುಕೊಂಡು ಇಂದಿನ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವುದರ ಮೂಲಕ
ಮುಂದಿನ ಯುವಶಕ್ತಿಯನ್ನು ಕಟ್ಟಬೇಕಿದೆ.
ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು. ಇದರಲ್ಲಿ ಮುಂದಿನ ದೇಶವೆಂದರೆ ವಿದೇಶವಾಗಬಾರದಲ್ಲವೆ?
ಯುವಕರು ಎಲ್ಲೇ ಇರಲಿ ಚಾರಿತ್ರ್ಯ ವಿರಲಿ. ಚಾರಿತ್ರ್ಯ ಹೀನರಿಂದ ಧರ್ಮ ರಕ್ಷಣೆ ಅಸಾಧ್ಯ.ದೇಶರಕ್ಷಣೆಯೂ ಕಷ್ಟ.
ಒಟ್ಟಿನಲ್ಲಿ ಚರಿತ್ರೆಯಿಂದ ಚಾರಿತ್ರ್ಯ ನಿರ್ಮಾಣವಾಗಿದ್ದರೆ ಅದು ವಿವೇಕದಿಂದ ಮಾತ್ರ ಸಾಧ್ಯ.ವಿವೇಕವಿದ್ದರೆ ಆನಂದ.
ವಿಚಾರವನ್ನು ವೇದ ಶಾಸ್ತ್ರ ಪುರಾಣದಿಂದ ಕಂಡು ಹಿಡಿದು ಆತ್ಮಾನಂದ ಪಡೆಯುವುದೇ ವಿವೇಕಾನಂದ.
ವಿಚಾರವನ್ನು ವೇದನೆಯಿಲ್ಲದೆ ಕಾಣುವ ಆನಂದವೇ ವಿವೇಕಾನಂದ.
ವಿವೇಕಾನಂದ ವ್ಯಕ್ತಿಯಲ್ಲ ಆಂತರಿಕ ಶಕ್ತಿಯಾಗಿದೆ ಎನ್ನಬಹುದು. ಅವರನ್ನುಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲು
Tuesday, December 13, 2022
ಅದ್ವೈತದೊಳಗಿನ ವಿಶಿಷ್ಟವಾದ ಧ್ವೈತಾದ್ವೈತ
ಇತ್ತೀಚಿನ ದಿನಗಳಲ್ಲಿ ತತ್ವವನ್ನು ವಾದದಿಂದ ಅರ್ಥ ಮಾಡಿಕೊಳ್ಳಲು ಹೋಗಿ ದ್ವೇಷ ಹೆಚ್ಚಾಗಿದೆ. ವಾಸ್ತವ ಸತ್ಯವೇ ಬೇರೆ ಪುರಾಣದ ತತ್ವವೇ ಬೇರೆ ಎನ್ನುವಂತಹ ಪರಿಸ್ಥಿತಿಯಲ್ಲಿ
ವಾಸ್ತವದಲ್ಲಿ ನಾನ್ಯಾರು ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿ ನಾವ್ಯಾರು ಎನ್ನುವ ಸತ್ಯವನ್ನು ಹಿಂದೆ ಬಿಟ್ಟು ನಾನೇ ಸರಿ ಎನ್ನುವ ಅಹಂಕಾರ ಬೆಳೆದರೆ ಅದ್ವೈತ ದಲ್ಲಿ ದ್ದ ನಾನೆಂಬುದಿಲ್ಲ ಎನ್ನುವುದು ಅರ್ಥ ವಾಗದು. ಇದಕ್ಕೆ ಕಾರಣವೇ ಭೌತಿಕಾಸಕ್ತಿ. ಭೌತಿಕದಲ್ಲಿದ್ದು ಅಧ್ಯಾತ್ಮ ಅಧ್ಯಯನ ಮಾಡುವಾಗ ನಿಸ್ವಾರ್ಥ ನಿರಹಂಕಾರವಿದ್ದು ಪ್ರತಿಫಲಾಪೇಕ್ಷೆ ಯಿಲ್ಲದ ವ್ಯವಹಾರಿಕವಲ್ಲದ ತತ್ವವನ್ನು ಅಳವಡಿಸಿಕೊಂಡರೆ ಉತ್ತಮ ಸ್ಥಿತಿ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳಿಗೇ ಅಧ್ಯಾತ್ಮ ಶಿಕ್ಷಣ ನೀಡದೆ ವ್ಯವಹಾರಕ್ಕೆ ಬಳಸಿದರೆ ತತ್ವವಲ್ಲ ತಂತ್ರವಾಗಿರುತ್ತದೆ. ತತ್ವಜ್ಞಾನ ಅಧ್ಯಾತ್ಮ ತಂತ್ರಜ್ಞಾನ ಭೌತಿಕಸತ್ಯ. ಎಲ್ಲಾ ತತ್ವಜ್ಞಾನಿಗಳಲ್ಲಿ ಸ್ಥಿತಪ್ರಜ್ಞತೆ ಇತ್ತು. ಆ ಕಾಲಕ್ಕೆ ಬೇಕಾದ ತತ್ವ ವನ್ನು ತಿಳಿದು ನಡೆದರು.ಈಗ ಎಲ್ಲಾ ಓದಲು ಇದೆ ನಡೆಯಲಾಗದ ಪ್ರಚಾರವಷ್ಟೆ.ಅಹಂ ಬ್ರಹ್ಮಾಸ್ಮಿ .ನಾನೇ ಬ್ರಹ್ಮ ನಾನೇ ಮಾಡಿಕೊಂಡ ಸೃಷ್ಟಿ ಯು ಸತ್ಯವಿಲ್ಲದೆ ಧರ್ಮ ವಾಗದೆ ಇರೋವಾಗ ಸ್ಥಿತಿಗೂ ನಾನೇ ಕಾರಣ,ಲಯವೂ ನನ್ನಿಂದಲೇ ಆಗಬೇಕಿದೆ ಅಲ್ಲವೆ? ನಾಟಕದಲ್ಲಿ ಪಾತ್ರಧಾರಿ ಆಗಬಹುದು ಸೂತ್ರಧಾರನ ಮರೆಯಬಾರದಿತ್ತು. ಇದೇ ಭಾರತೀಯರ ಸಮಸ್ಯೆಗೆ ಕಾರಣವೆಂದರೆ ಯಾರೂ ಒಪ್ಪೋದಿಲ್ಲ.ಕಾರಣವಿಷ್ಟೆ ಸತ್ಯ ಕಠೋರವಾಗಿರುತ್ತದೆ. ಸತ್ಯ ಹಿಂದುಳಿದಂತೆಲ್ಲಾ ಕಠೋರತೆ ಹೆಚ್ಚಾಗುತ್ತದೆ. ಅದಕ್ಕೆ ಸತ್ಯದ ಜೊತೆಗೆ ಧರ್ಮ ವಿದ್ರೆ ಸಮಾನತೆ,ಶಾಂತಿ,ತೃಪ್ತಿ, ಮುಕ್ತಿ ಎಂದರು. ಅದ್ವೈತ ಒಂದೇ ಎನ್ನುವ ಸಮಾನವೆನ್ನುವ,
ಏಕತೆ,ಐಕ್ಯ್ಯತೆ ಎನ್ನುವತ್ತ ನಡೆದರೆ ಅದರೊಳಗಿನ ದ್ವೈತವೂ ಜೊತೆಗಿರಬಹುದು. ನಾನೇ ಸರಿ ಎಂದರೆ ಬೇರೆ ಬೇರೆಯಂತೆ.ಸಾಮಾನ್ಯಜ್ಞಾನದ ಕೊರತೆಯಿದೆ.
ಇದೊಂದು ಸಾಮಾನ್ಯಜ್ಞಾನವುಳ್ಳ ಸಾಮಾನ್ಯ ಪ್ರಜೆಯ ಅನುಭವದ ಸತ್ಯ. ಇಲ್ಲಿ ತತ್ವದ ಬದಲು ತಂತ್ರವೇ ತನ್ನ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದೆ.ಇದಕ್ಕೆ ಸಾಮಾನ್ಯಜ್ಞಾನ ಬಿಟ್ಟ ಜನರ ಸಹಕಾರವೇ ಕಾರಣವಾಗಿ ತಿರುಗಿ ಪ್ರಜೆಗಳಿಗೇ ಸರಿಯಾದ ಪಾಠ ಕಲಿಸುತ್ತಿದೆ. ಪಾಠ ಕಲಿಯದವರು ತಿರುಗಿ ತಿರುಗಿ ತಂತ್ರವನ್ನೇ ಬಳಸುತ್ತಾ ತನ್ನ ಜೊತೆಗೆ ಮಕ್ಕಳು ಮೊಮ್ಮಕ್ಕಳ ದಾರಿತಪ್ಪಿಸಿದರೆ ಕಷ್ಟ ನಷ್ಟ ಯಾರಿಗೆ?
ರಾಜಪ್ರಭುತ್ವದ ಧಾರ್ಮಿಕ ರಾಜಕೀಯದಲ್ಲಿ ಸ್ವಯಂ ಗುರುವೇ ದೇವರಾಗಿದ್ದರು. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಗುರುವಿಲ್ಲದವರ ಗುರಿಯಿಲ್ಲದವರ ರಾಜಕೀಯವೇ ಪ್ರಜೆಗಳಿಗೆ ದಾರಿತಪ್ಪಿಸಿದೆ. ಯಾವಾಗ ಸತ್ಯ ತಿಳಿಯುವುದೋ ಆಗ ಧರ್ಮ ರಕ್ಷಣೆಆಗುವುದು.ಆದರೆ ಸತ್ಯ ತಿಳಿಯುವುದಕ್ಕೇ ತಯಾರಿಲ್ಲದ ಮಧ್ಯವರ್ತಿಗಳು ಸಾಕಷ್ಟು ರೀತಿಯಲ್ಲಿ ನಾಟಕವಾಡುತ್ತಾ ತಮ್ಮ ವ್ಯವಹಾರಕ್ಕೆ ಜೋತು ಬಿದ್ದರೆ ಸತ್ಯವಿಲ್ಲದೆ ದೇವರನ್ನು ಕಾಣಬಹುದೆ? ಸತ್ಯವೇ ದೇವರು ಎನ್ನುವುದೇ ಸುಳ್ಳಾಯಿತಲ್ಲವೆ?
ಬ್ರಹ್ಮ ಸತ್ಯವಾದರೆ ಕಂಡವರೆಲ್ಲಿ? ಕಂಡವರ ತತ್ವ ಬಿಟ್ಟತಂತ್ರ ಬೆಳೆಯಿತು. ತಂತ್ರವಿದ್ದರೂ ಕುತಂತ್ರವಿರಬಾರದು. ನಮ್ಮ ಜೀವನವೇ ಅತಂತ್ರಸ್ಥಿತಿಗೆ ತಲುಪಿಸುತ್ತದೆ. ಇದೇ ಸ್ವತಂತ್ರ ವಾಗಿರುವ ವಾಸ್ತವ ಸತ್ಯ. ಹಾಗಾದರೆ ನಾನ್ಯಾರು?
ನಾವ್ಯಾರು? ಪ್ರಶ್ನೆಗೆ ಉತ್ತರ ಹೊರಗೆ ನಾವು ಭಾರತೀಯರು.
ಒಳಗಿರುವ ವಿಷಯಜ್ಞಾನದ ಮೇಲೇ ನಾನಿರೋದು. ಎಲ್ಲಾ ಬ್ರಹ್ಮನಾದರೆ ಸೃಷ್ಟಿ ಮಾಡುವ ಯೋಗ ನಮಗಿದೆಯೆ? ಸೃಷ್ಟಿ ಯ ಸಣ್ಣ ಕಣವಾಗಿರುವ ನಾನೇ ಇಷ್ಟು ಸೃಷ್ಟಿ ಮಾಡಿದರೆ ಉಳಿದ ಕಣಗಳ ಗತಿಯೇನು? ಒಟ್ಟಿನಲ್ಲಿ ಭಗವದ್ಗೀತೆಯನ್ನು ಪಠಣ,ಶ್ರವಣ,ಮನನ ಮಾಡಿಕೊಂಡರೆ ಅಂದಿನ ರಾಜಕೀಯದ ಕ್ಷತ್ರಿಯ ಧರ್ಮ, ಇಂದಿನ ರಾಜಕೀಯದ ಪ್ರಜಾಧರ್ಮ ವು ನಮ್ಮದೇ ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸಾಮಾನ್ಯಜ್ಞಾನದ ಸಾಮಾನ್ಯಪ್ರಜೆಗೂ ಸಾಧ್ಯವಿತ್ತು.
ವಿಶೇಷಜ್ಞಾನವನ್ನು ಹೊರಗಿನಿಂದ ತುಂಬಿದ ಪರಿಣಾಮ ಇಂದಿಗೂ ಮಾನವ ಮಾನವನಾಗಿರಲು ಕಷ್ಟ ಪಡುವಂತಾಗಿದೆ.ಮೊದಲು ಮಾನವನಾದರೆ ನಂತರವೇ ಮಹಾತ್ಮನಾಗಲು ಸಾಧ್ಯ. ಆತ್ಮಾನುಸಾರ ನಡೆಯೋದರಲ್ಲಿ ರಾಜಕೀಯವಿದೆಯೆ? ರಾಜಯೋಗದ ಆತ್ಮವಿಶ್ವಾಸವಿದೆಯೆ? ಕೆಲವರಲ್ಲಿದೆ ಹಲವರಲ್ಲಿ ಅಹಂಕಾರ ಇದೆ.ಸ್ವಾರ್ಥ ಅಹಂಕಾರವೇ ಮಾನವನ ಹಿತ ಶತ್ರುವೆನ್ನುವರು. ಇದು ನಮ್ಮೊಳಗೇ ಇರೋವಾಗ ಹೊರಗಿನ ಶತ್ರುಗಳನ್ನು ಓಡಿಸಲಾಗದು. ಅವರೂ ನಮ್ಮ ಹಾಗೆ ಅಲ್ಲವೆ? ಆಂತರಿಕ ಶುದ್ದಿಯಿಂದ ಆತ್ಮಜ್ಞಾನವೆಂದರೆ ಸ್ವಚ್ಚಭಾರತಕ್ಕೆ ಅಧ್ಯಾತ್ಮದ ತತ್ವ ಮುಖ್ಯ. ಭೌತಿಕದ ತಂತ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಆತ್ಮಜ್ಞಾನದಿಂದ ಸಾಧ್ಯವೆಂದರು ಯೋಗಿಗಳು. ಯೋಗಿಗಳ ದೇಶವನ್ನು ದ್ವೇಷದ ರಾಜಕೀಯಕ್ಕೆ ಬಳಸುತ್ತಾ ರೋಗಿಗಳ ದೇಶ ಮಾಡಿರೋದು ಯಾರು?
ಸತ್ಯ ಸತ್ಯವೇ ಅದು ಬದಲಾಗದು.ಮಿಥ್ಯ ಬದಲಾಗುತ್ತದೆ. ಬದಲಾವಣೆ ಜಗದ ನಿಯಮ.ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಮಾನವರು ಕಾರಣಮಾತ್ರರಷ್ಟೆ ಅಂದರೆ ಆಟಕ್ಕೆ ಬಳಸಿಕೊಳ್ಳುವ ಗೊಂಬೆಗಳು. ನಾಟಕದಲ್ಲಿ ಉತ್ತಮ ಪಾತ್ರವಿದ್ದರೆ ಪುಣ್ಯ, ಕೆಟ್ಟದ್ದಿದ್ದರೆ ಪಾಪದ ಫಲ ಜೀವ ಅನುಭವಿಸುತ್ತದೆ. ನಮ್ಮದೇನಿಲ್ಲ ಎಲ್ಲಾ ಭಗವಂತನದ್ದೆ ಆದರೂ ನಾನೇಕೆ ಹೋರಾಟ ನಡೆಸಬೇಕು? ನಾನೆಂಬ ಭಾವನೆಯೇ ಇದಕ್ಕೆ ಕಾರಣ. ನಾನು ಹೋದರೆ ಹೋರಾಟವಿಲ್ಲ ಮುಕ್ತಿ ಎಂದರು. ಹಾಗಂತ ಯಾರಾದರೂ ಸುಮ್ಮನಿರುವರೆ? ಮನಸ್ಸನ್ನು ಯೋಗದತ್ತ ಸೆಳೆಯಲೂ ನನಗೆ ಮನಸ್ಸಿಲ್ಲವೆಂದರೆ ಪರಮಾತ್ಮನಾದರೂ ಏನೂ ಮಾಡಲಾಗದು. ಇದೇ ಜಡಶಕ್ತಿ.ಭೂಮಿಯ ಋಣ ತೀರಿಸಲು ಸೇವೆ ಮಾಡಬೇಕು. ದೇಶಸೇವೆ ಈಶಸೇವೆ,ಪಿ ತೃಸೇವೆ,ಜನಸೇವೆ ಹೀಗೇ ನಿಸ್ವಾರ್ಥ ನಿರಹಂಕಾರದಿಂದ ಸೇವೆ ಮಾಡಿದವರ ಋಣ ಕಳೆದು ಮುಕ್ತಿ ಪಡೆದಿದ್ದಾರೆನ್ನಬಹುದು. ಇಂದಿನಸೇವೆಯ ಹಣ,ಜನರ ಜ್ಞಾನತ ತ್ವದೊಳಗಿದ್ದರೆ ಅದೇ ನಿಜವಾದ ಸೇವೆ.ಒಂದೇ ಭೂಮಿ,ಒಂದೇ ದೇಶ,ಒಂದೇ ಧರ್ಮ, ಒಂದೇ ಶಿಕ್ಷಣ,ಒಂದೇ ದೇವರು ,ಒಂದೆ ಜಾತಿ ಎನ್ನುವ ತತ್ವವು ಅಸಂಖ್ಯಾತ ತಂತ್ರಗಳಿಂದ ಹರಡಿದ್ದರೂ ಮಾನವರು ಒಂದಾಗೋದು ಕಷ್ಟ .ಹಾಗಾಗಿ ಎಲ್ಲಾ ಮಹಾತ್ಮರುಗಳು ಎಲ್ಲರನ್ನೂ ಒಂದಾಗಿಸುವುದು ಸುಲಭವಲ್ಲ.ಎಲ್ಲರ ಜೊತೆಗೆಬಾಳಬಹುದಷ್ಟೆ.
Thursday, December 8, 2022
ರಾಜಕೀಯದಲ್ಲಿ ಗೆದ್ದವರು ಯಾರು? ಸೋತವರು ಯಾರು?
Sunday, December 4, 2022
ಪ್ರತ್ಯಕ್ಷಾನುಮಾನಾಗಮಾ: ಪ್ರಮಾಣಾನಿ
Friday, December 2, 2022
ನಿಜವಾದ ಗುರುಗಳ ಲಕ್ಷಣ
Thursday, December 1, 2022
ಚರಿತ್ರೆಯಿಂದ ಚಾರಿತ್ರ್ಯ ನಿರ್ಮಾಣವಾಯಿತೆ?
Tuesday, November 29, 2022
ಸ್ತ್ರೀ ಯನ್ನು ಹಣದಿಂದ ಅಳೆಯಬಹುದೆ?
Saturday, November 26, 2022
ಮೇಲರಿಮೆ ಕೀಳರಿಮೆ ಇರೋದು ಅರಿವಿನಲ್ಲಿ
Thursday, November 24, 2022
ದೇವರಿಗೆ ಪಂಚಾಮೃತ ಅಭಿಷೇಕ ಸೇವೆ ಯಾಕೆ?
ದೇವರ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಯಾಕೆ ಬೇಕು?
ಪಂಚಾಮೃತ ಎಂದರೆ ಪಂಚ ಅಮೃತ ಸಮಾನವಾಗಿರುವ
ಗೋವಿನ ಹಾಲು, ಮೊಸರು, ತುಪ್ಪ ,ಜೇನಿನ ತುಪ್ಪ, ಸಕ್ಕರೆ.
ಪವಿತ್ರವಾಗಿರುವ ಗೋವಿನ ಹಾಲು ಎಷ್ಟು ಬೆಳ್ಳಗೆ ಶುದ್ದ ನಿರ್ಮ ಲವಾಗಿದೆಯೋ ಅಷ್ಟು ನಮ್ಮಮನಸ್ಸೂ ನಿಷ್ಕಲ್ಮಶ
ಆಗಿರಲೆಂದು, ಇನ್ನು ,ಮೊಸರು ಅಜೀರ್ಣತೆ ನಿವಾರಣೆ ಮಾಡುವ ಶಕ್ತಿ ಹೊಂದಿದೆ ಇನ್ನೊಂದು ಅರ್ಥದಲ್ಲಿ ಮಾನವನಿಗೆ ಎಲ್ಲಾ ಜೀರ್ಣಿಸಿಕೊಳ್ಳಲು ಕಷ್ಟ ಹೀಗಾಗಿ ಇತರರಿಗೆ ಹಂಚಿಕೊಂಡು ಬಾಳುವ ಶುದ್ದ ಬುದ್ದಿ ಬರಲಿ ಎಂದು ಆಗಿದೆ,
ತುಪ್ಪ ದ ಅಭಿಷೇಕದಿಂದ ಮಾನವನಲ್ಲಿ ಅರಿಷಡ್ವರ್ಗ ವೈರತ್ವ ಹೋಗಿ ಜ್ಞಾನ ಭಕ್ತಿ ವೈರಾಗ್ಯ ಹೆಚ್ಚುವುದೆನ್ನುವುದಾಗಿದೆ.
ಜೇನುತುಪ್ಪ ದ ಅಭಿಷೇಕದಿಂದ ದೇವರು ತೃಪ್ತಿ ಹೊಂದುವರು ಯಾಕೆಂದರೆ ಸರ್ವ ಔಷಧ ಗುಣ ಇದರಲ್ಲಿದೆ ಇದರಿಂದಾಗಿ ನಮ್ಮ ಎಲ್ಲಾ ದುರ್ಗುಣಗಳು ದೂರವಾಗಿ ದೈವೀಗುಣ ಭಕ್ತಿ ಜ್ಞಾನಶಕ್ತಿ ದೇವರು ಕರುಣಿಸಲೆನ್ನುವುದಾಗಿದೆ. ಹಾಗೆಯೇ ಸಕ್ಕರೆಯನ್ನು ಕಬ್ಬು ಅರೆದು ತಯಾರಿಸುವ ಹಾಗೆ ,ನಮ್ಮ ಈ ಶರೀರ ಕಬ್ಬಿನಂತೆ ಅದನ್ನು ಅರೆದು ಅಂದರೆ ಭಕ್ತಿಗೆ ಸಿಲುಕಿಸಿ ಜ್ಞಾನ,ವೈರಾಗ್ಯ ಸದ್ಗುಣ ಪಡೆದೆ ಅದನ್ನು ನಿನ್ನಪಾದಕ್ಕೆ ಅರ್ಪಿಸಿ ದ ನನಗೆ ಪಾರಮಾರ್ಥಿಕ ಮೋಕ್ಷವನ್ನು ಕರುಣಿಸು ಭಗವಂತ ಎನ್ನುವ ಭಾವನೆ ಅಡಗಿದೆ. ಒಟ್ಟಿನಲ್ಲಿ ಪಂಚಾಮೃತಗಳ ಅಭಿಷೇಕವು
ಪರಮಾತ್ಮನೆಡೆಗೆ ಜೀವಾತ್ಮನು ಸೇರಿಕೊಳ್ಳುವಾಗ ಅಮೃತ
ಸಮಾನವಾಗಿರುವ ಪಂಚ ಅಮೃತದ ಬಗ್ಗೆ ತಿಳಿದರೆ ಪ್ರತಿ
ಸೇವೆಯ ಹಿಂದಿರುವ ವೈಜ್ಞಾನಿಕ ವೈಚಾರಿಕತೆ ನಂಬಿಕೆಯು
ಅರ್ಥ ವಾಗಬಹುದು.
ಇಲ್ಲಿ ವಿಗ್ರಹ ಬಿಂಬ ,ಶರೀರ ಅದರ ಪ್ರತಿಬಿಂಬ ಆದ್ದರಿಂದ ವಿಗ್ರಹಕ್ಕೆ ಅರ್ಪಿಸಿದ ಅಭಿಷೇಕ ಮಾಡಿದ ಪಂಚಾಮೃತವನ್ನು
ಪರೋಕ್ಷವಾಗಿ ಈ ಶರೀರದ ಒಳಗಿನಪರಮಾತ್ಮನಿಗೆ ನಾವು ಸಲ್ಲಿಸುವಾಗ ಶುದ್ದ ಸ್ವಚ್ಚವಾದ ಮನಸ್ಸಿನಿಂದ ಇದ್ದರೆ ಪರಮಾತ್ಮನಿಗೆ ತಲುಪುತ್ತದೆ.
ಆಚರಣೆಗಳಲ್ಲಿ, ದೇವತಾರಾಧನೆಯಲ್ಲಿರುವ ಸೂಕ್ಷ್ಮ ವಾದ
ವಿಚಾರಗಳನ್ನು ತಿಳಿಸುತ್ತಾ,ತಿಳಿಯುತ್ತಾ ಮುಂದೆ ಬಂದರೆ
ಪ್ರಕೃತಿಯನ್ನು ಬಳಸಿಕೊಂಡು ಜೀವನ ನಡೆಸುತ್ತಾ
ಪರಮಾತ್ಮನೆಡೆಗೆ ಸಾಗಬಹುದು. ದುರ್ಭಳಕೆ ಮಾಡಿಕೊಂಡರೆ ತಕ್ಕ ಪ್ರತಿಫಲವೂ ಜೀವನೆ ಅನುಭವಿಸಬೇಕೆನ್ನುವುದಾಗಿದೆ. ವೈಭವದ ,ಕಾಟಾಚಾರದ
ಭ್ರಷ್ಟಾಚಾರದ ,ಆಚರಣೆಗಳಿಂದ ದೇವರಾಗಲಿ,ಧರ್ಮ ವಾಗಲಿ ಸತ್ಯವಾಗಲಿ ಕಾಣೋದಿಲ್ಲ.
ಪಂಚಾಮೃತವು ಮಾನವನಿಂದ ಸೃಷ್ಟಿ
ಮನೆಯಲ್ಲಿನ ಗೋವಿನಹಾಲು,ಮೊಸರು,ತುಪ್ಪ. ಶುದ್ದ ಜೇನುತುಪ್ಪ, ಶುದ್ದವಾದ ಸಕ್ಕರೆ ಹಿಂದೆ ಮನೆಯಲ್ಲಿಯೇ
ಸಿಗುತ್ತಿತ್ತು. ಆದರೂ ಭಕ್ತಿ ಅಗತ್ಯವಿದೆ.
Wednesday, November 23, 2022
ವಿಗ್ರಹಪೂಜೆಯ ಮಹತ್ವ
Monday, November 21, 2022
ಹರಿಹರರಲ್ಲಿ ಬೇಧಬಾವ ಯಾಕೆ?
Tuesday, November 15, 2022
ನಾವ್ಯಾರು? ಎಲ್ಲಿರುವುದು? ಎಲ್ಲಿಂದ ಬಂದೆವು?
ಮತಾಂತರ ಡೇಂಜರ್
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...