ಈ ಅದ್ವೈತಿಗಳು ಆತ್ಮವನ್ನು ಪರಮಾತ್ಮ ಎನ್ನುವರಲ್ಲ ಎಂದು ಯಾರೋ ಪ್ರಶ್ನೆ ಮಾಡಿದ್ದರು. ಅದ್ವೈತ ದಲ್ಲಿ ಒಂದೇ ಇರೋದು ಬೇರೆಯಿಲ್ಲ.ಅದರೊಳಗೆ ದ್ವೈತ ವಿದ್ದಾಗ ಇದನ್ನು ಅರ್ಥ ಮಾಡಿಕೊಳ್ಳಲು ಒಬ್ಬರಿಂದ ಸಾಧ್ಯ ಇಬ್ಬರೂ ವಾದಕ್ಕಿಳಿದರೆ ದ್ವೈತವಾಗುತ್ತದೆ. ಹೀಗಾಗಿ ಅದ್ವೈತ ವಾದಕ್ಕೆ ನಿಲುಕದ ತತ್ವ.
ಒಂದೇ ಸತ್ಯವಿರೋವಾಗ ಉತ್ತರ ಒಂದೇ ಇರಬೇಕು.ಅದು ತಿಳಿದ ಮೇಲೆ ಮೌನವಾಗಬೇಕಷ್ಟೆ.ಅದ್ವೈತ ವೆಂದರೆ ವಾದ ಮಾಡಲಾಗದ ತತ್ವ. ನಾನು ಬೇರೆ ನೀನು ಬೇರೆ ಎಂದರೆ ಒಪ್ಪಬಹುದು ಇಬ್ಬರಲ್ಲಿ ಇರುವ ಪರಮಾತ್ಮ ಒಬ್ಬನೆ ಎಂದರೆ ಒಪ್ಪೋದಿಲ್ಲ ಇದೇ ವಾದಕ್ಕೆ ಕಾರಣವಾಗಿದೆಯಲ್ಲವೆ? ಅಣುರೇಣುತೃಷಕಾಷ್ಟ ಪರಿಪೂರ್ಣಗೋವಿಂದ.ಇದರಲ್ಲಿ ಪ್ರಾಣಿಪಕ್ಷಿ ಕೀಟ ಜಂತು ಗಿಡಮರ ಪ್ರಕೃತಿ ಪುರುಷರೆಲ್ಲರೂ ಸೇರುವರು. ಪರಮಾತ್ಮನ ಒಳಗೇ ಇರೋವಾಗ ಹೊರಗಣ್ಣಿನ ಕಾಣದ ಸತ್ಯ ತಿಳಿಯಲು ಒಳಗಣ್ಣು ತೆರೆಯಬೇಕು. ಇದೇ ಅಧ್ಯಾತ್ಮ ಸಂಶೋಧನೆ.ಹೊರಗೆ ಹೊಡೆದಾಡಿಕೊಂಡಿದ್ದರೆ ಅರ್ಥ ವಾಗದೆ ಜೀವ ಹೋಗುವುದು.
ಉದಾಹರಣೆಗೆ ಶ್ರೀ ಶಂಕರಾಚಾರ್ಯರು ಸ್ವಯಂ ಶಿವನ ಅವತಾರ ಪುರುಷರೆಂದರೆ ಅಧ್ವೈತ ದಲ್ಲಿ ದ್ವೈತ ವಾಗಬಹುದು. ಪ್ರಕೃತಿ ಪುರುಷನಿಲ್ಲದೆ ಜನ್ಮವಿಲ್ಲ. ಅಧ್ವೈತವೂ ಆಗಬಹುದು. ಹಾಗೆ ಎಲ್ಲಾ ಅವತಾರ ಪುರುಷ ಸ್ತ್ರೀ ದೇವಾನುದೇವತೆಗಳು ಈ ಭೂಮಿಗೆ ಬಂದಿದ್ದಾರೆ ಹೋಗಿದ್ದಾರೆ ಎಂದರೆ ಭಗವಂತನ ಒಂದು ಶಕ್ತಿ ಲೋಕಕಲ್ಯಾಣಕ್ಕಾಗಿ ಭೂಮಿಯಲ್ಲಿ ಅವತರಿಸಿ ದೇವರಾಗಿ ಗುರುವಾಗಿರೋದಾಗಿದೆ.ಗುರುವಾಗಿ ದೇವರನ್ನು ತೋರಿಸುವುದು ಸುಲಭವಿಲ್ಲ.ಅದೂ ತತ್ವಜ್ಞಾನದ ಮೂಲಕ ಆಗಿದೆಯೇ ಹೊರತು ತಂತ್ರಜ್ಞಾನದಿಂದ ದೇವರನ್ನು ಕಂಡಿಲ್ಲ.
ಇಷ್ಟು ತಿಳಿದರೆ ನಮ್ಮ ಇಂದಿನ ಗೊಂದಲ,ಭಿನ್ನಾಭಿಪ್ರಾಯ, ದ್ವೇಷ ವಾದ ವಿವಾದದ ಹಿಂದೆ ತತ್ವವಿದೆಯೆ ತಂತ್ರವಿದೆಯೆ ಕಂಡು ನೆಡೆಯಬಹುದಷ್ಟೆ. ಅತಿಯಾದ ತಂತ್ರ ಜೀವಾತ್ಮನನ್ನುಅತಂತ್ರಸ್ಥಿತಿಗೆ ತಲುಪಿಸುತ್ತದೆ. ಒಟ್ಟಿನಲ್ಲಿ ನಮ್ಮ ಅರಿವೇ ಗುರು.ಅದಕ್ಕೆ ಪೂರಕವಾದ ಶಿಕ್ಷಣವೇ ಗುರುಕುಲವಾಗಿತ್ತು. ಈಗಿದು ಯಾವ ದಿಕ್ಕಿನಲ್ಲಿ ನಡೆದಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿಕೊಂಡರೆ ನಮ್ಮ ಸುತ್ತಮುತ್ತಲಿರುವ ಆ ಪರಮಾತ್ಮನ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಜೀವನ ಸಾಗಿಸಬಹುದು. ಜೀವವಿದ್ದರೆ ಜೀವನವಲ್ಲವೆ? ಜೀವ ಕೊಟ್ಟವರು ಯಾರು? ಭೂಮಿ ಇದ್ದರೆ ಮನುಕುಲವಲ್ಲವೆ? ಶಿವಶಕ್ತಿಯಲ್ಲಿಯೇ ಬೇಧಭಾವ,
ಹರಿಹರರಲ್ಲಿ ಬೇಧ,ತತ್ವಗಳಲ್ಲಿ ಬೇಧ ತಂದವರು ನಾವೇ ಅಲ್ಲವೆ? ಅದಕ್ಕೆ ಅಲ್ಲ ಬೆಳೆದಿರೋದು.
ಪ್ರತಿಯೊಂದರಲ್ಲಿಯೂ ಅದಲ್ಲ ಇದಲ್ಲ ಅವ ಸರಿಯಲ್ಲ ಇವಳು ಸರಿಯಲ್ಲ ಎನ್ನುವುದರಲ್ಲಿ ಅಲ್ಲನೇ ಬೆಳೆದಿರೋದು.ನಕಾರಾತ್ಮಕ ಶಕ್ತಿಯಿಂದ ಸಕಾರಾತ್ಮಕ ಶಕ್ತಿ ಹಿಂದುಳಿದಾಗ ಹಿಂದೂ ಸನಾತನಧರ್ಮ ಅರ್ಥ ವಾಗಲ್ಲ.
ದೇಶದೊಳಗೆ ನಾವಿದ್ದರೂ ನಮ್ಮ ಮನಸ್ಸು ವಿದೇಶದಲ್ಲಿದ್ದರೆ ನಾವು ನಾವಲ್ಲ. ಹೀಗೇ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲಾ ಎಲ್ಲರನ್ನೂ ಒಂದಾಗಿ ಕಾಣುವುದಕ್ಕೆ ಸಾಧ್ಯವಾಗುವ ಒಂದೆ ತತ್ವ. ನಮಗೆ ಅರ್ಥ ವಾಗಿಲ್ಲವೆಂದಾಗ ಮನಸ್ಸು ಪರಮಾತ್ಮನಿಂದ ದೂರವಾಯಿತು. ಪರಮಾತ್ಮನೇ ಎಲ್ಲಾ ಮಾಡೋದಾದರೆ ಜೀವಾತ್ಮನಿಗೆ ಏನೂ ಕೆಲಸವಿಲ್ಲ. ಎಲ್ಲಾ ಸಂನ್ಯಾಸಿಗಳಾದರೆ ಸಂಸಾರವೇ ಇರೋದಿಲ್ಲ. ಸಂನ್ಯಾಸಿಗಳ ಅನುಭವ ಸಂಸಾರಿಗಳಾಗೋದಿಲ್ಲ.ಸಂಸಾರಿಗಳ ಅನುಭವ ಸಂನ್ಯಾಸಿಗಾಗೋದಿಲ್ಲ. ಅದಕ್ಕೆ ಹಿಂದೆ ಮಹರ್ಷಿಗಳು ಸಂಸಾರಕ್ಕೆ ಬಂದು ಬ್ರಹ್ಮಜ್ಞಾನಿಗಳಾದರು. ಬಾಲ್ಯದಲ್ಲೇ ಉತ್ತಮ ಗುರುಕುಲ ಯೌವನದಲ್ಲಿ ಉತ್ತಮ ಗುರೋಪದೇಶ ಗೃಹಸ್ಥಾಶ್ರಮ ದಲ್ಲಿ ಉತ್ತಮ ಗುರು ವಾಗಿ ಎಲ್ಲಾ ತಿಳಿದು ಕಳೆದಮೇಲೆವಾನಪ್ರಸ್ಥದೊಂದಿಗೆ ಸಂನ್ಯಾಸ ಆಶ್ರಮ. ಎಷ್ಟು ಸತ್ಯದ ಅನುಭವವಿತ್ತು. ಓದಿ ತಿಳಿಯುವುದೇ ಬೇರೆ ಅನುಭವಿಸಿ ತಿಳಿಸುವುದೇ ಬೇರೆ.ಒಟ್ಟಿನಲ್ಲಿ ಭೂಮಿ ನಡೆದಿರೋದೆ ದ್ವೈತದಲ್ಲಿ ಹೀಗಿರುವಾಗ ಅದ್ವೈತ ಅರ್ಥ ವಾಗೋದು ಕಷ್ಟ.ಭೂತ ಭವಿಷ್ಯ ಕ್ಕೆ ವರ್ತ ಮಾನವೇ ಸಾಕ್ಷಿ. ವರ್ತ ಮಾನದ ವಾರ್ತೆ ವಾತಾವರಣ ಸ್ವಚ್ಚಗೊಳಿಸಿದರೆ ಭವಿಷ್ಯ ಉತ್ತಮ.
ಮಕ್ಕಳ ಭವಿಷ್ಯ ಪೋಷಕರ ಧರ್ಮಕರ್ಮದೊಳಗಿದೆಯೇ ಹೊರತು ಅವರ ಶಿಕ್ಷಣದಲ್ಲಿಲ್ಲ. ಶಿಕ್ಷಣದ ವಿಷಯ ಧರ್ಮ ದ ಹಾದಿಯಲ್ಲಿದ್ದರೆ ಭವಿಷ್ಯವೂ ಧರ್ಮದ ಕಡೆಗಿರಬಹುದು.ಹಾದಿ ತಪ್ಪಿದರೆ ಅಧರ್ಮ ಬೆಳೆಯುವುದು.
ನಮಗೆ ಸರಳವಾಗಿ ಅರ್ಥ ವಾಗುವ ರೀತಿಯಲ್ಲಿ ತತ್ವ ತಿಳಿದರೆ ನಮ್ಮ ವಾಸ್ತವತೆಗೆ ಕಾರಣವೇ ತಂತ್ರಮಯ ಜೀವನವಾಗಿದೆ.
ಎಲ್ಲರನ್ನೂ ಒಂದು ಮಾಡೋದಕ್ಕೆ ಜನರನ್ನು ಹೊರಗೆಳೆಯೋದೆ ತಂತ್ರ.ಬೇರೆ ಮಾಡೋದು ತಂತ್ರ.ಒಂದು ಮಾಡೋದು ತತ್ವದ ಉದ್ದೇಶ. ಇದಕ್ಕೆ ಒಳಗಣ್ಣು ಅಗತ್ಯ.ಪರಮಾತ್ಮನ ದರ್ಶನ ಒಳಗಣ್ಣಿನಿಂದ ಸಾಧ್ಯವೆಂದರೆ ಯೋಗದಿಂದ ಸಾಧ್ಯ.ಜೀವಾತ್ಮ ಪರಮಾತ್ಮನಲ್ಲಿ ಐಕ್ಯವಾದಾಗ ನಾನಿರೋದಿಲ್ಲ ಎಂದಂತೆ ಅದ್ವೈತ ನಾನೆಂಬುದಿಲ್ಲವೆಂದರೂ ಭೂಮಿಯಲ್ಲಿ ನಾನಿರದೆ ಸಂಸಾರವಿದೆಯೆ? ಹಾಗಾದರೆ ನಾನ್ಯಾರು? ಪ್ರಶ್ನೆ ಜನ್ಮ ಪಡೆಯಿತು. ಪ್ರಶ್ನೆಗೆ ಹಲವಾರು ನಾನು ಸೇರಿಕೊಂಡು ನಾನೇ ದೇವರಾಯಿತು. ದೇವರ ಜೊತೆಗೆ ಅಸುರರೂ ನಾನೂ ದೇವರೆ ಎಂದಾಗಲೇ ಯುದ್ದವಾಯಿತು. ಯುದ್ದದಲ್ಲಿ ಹೋದ ಜೀವ ಮರುಜನ್ಮ ಪಡೆದರೂ ನಾನ್ಯಾರು ಪ್ರಶ್ನೆಗೆ ಉತ್ತರ ಈಗಲೂ ಸಿಕ್ಕಿಲ್ಲ.ಹೊರಗೆ ನಾನು ಬೆಳೆದಿರುವಾಗ ಒಳಗಿನನಾನುಸುಮ್ಮನಿದ್ದರಬೇಕಾಯಿತು..ಮೌನವಾಗಿದ್ದವರಿಗೆ ಉತ್ತರ ಸಿಕ್ಕಿದೆಯಷ್ಟೆ. ನಾನುಮೌನವಾದಾಗ ಪರಮಾತ್ಮ ಒಬ್ಬನೆ ಆಗಿರುವನು ಇದೇ ಅದ್ವೈತ. ದ್ಯಾನದಿಂದ ಯೋಗದಿಂದ ಪರಮಾತ್ಮನ ದರ್ಶನ ಸಾಧ್ಯವೆಂದವರು ಮಹಾತ್ಮರುಗಳು. ಇವರಲ್ಲಿ ತಂತ್ರವಿರದೆ ತತ್ವವಿತ್ತು. ರಾಜಕೀಯವಿರದೆ ರಾಜಯೋಗವಿತ್ತು. ವಿವೇಕದ ಆನಂದವಿತ್ತು.
ವಿಚಾರವನ್ನು ವೇದ ಶಾಸ್ತ್ರ ದಿಂದ ಕಾಣುವ ಆನಂದ ವಿವೇಕಾನಂದ.
ವಿಚಾರವನ್ನು ವೇದನೆಯಿಂದ ತಿಳಿದು ಆನಂದ ಕಾಣಬಹುದೆ? ಇಂದಿನ ಶಿಕ್ಷಣದ ವಿಚಾರ ಹೆಚ್ಚಾಗಿ ಇದೇ ದಾರಿಹಿಡಿದಿದೆ ಅದಕ್ಕೆ ಇಷ್ಟು ದು:ಖ,ದುರಾಸೆ,ದುರಾಚಾರ
,ದುಷ್ಟ,ಭ್ರಷ್ಟರು ಬೆಳೆದಿರೋದು.
ಕ್ಷಮಿಸಿ ಇದರಲ್ಲಿ ಯಾವುದೇ ಪುರಾಣ ಇತಿಹಾಸ ಭವಿಷ್ಯದ ಕಥೆಯಿಲ್ಲ ವಾಸ್ತವ ಸತ್ಯವಿದೆ. ಎಲ್ಲದ್ದಕ್ಕೂ ಕಾರಣ ನಾವೇ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದಾಗಿದೆ. ಇದು ಪರರಿಗೆ ವರದಾನವಾಗಿದೆ.ಪರಮಾತ್ಮನಿಗೆ ಎಲ್ಲಾ ಒಂದೇ.