ಇದು ಅದ್ವೈತ. ಆಳವಾದ ಅರಿವು ಎಂದರೆ ನಾನು ಹೋಗಿ ನೀನೇ ಎನ್ನುವ ಶರಣಾಗತಿಯಲ್ಲಿ ಜೀವಿಸೋದಾಗಿತ್ತು. ವಾಸ್ತವದಲ್ಲಿ ನಾವು ಬದುಕಿದ್ದೇವೆಯೇ ಸತ್ತಿರುವೆವೆ ಎನ್ನುವ ಪ್ರಶ್ನೆಗೆ ಉತ್ತರ ಒಳಗಿದೆ.ಹೊರಗಿನಿಂದ ಬದುಕಿದಂತೆ ಕಂಡರೂ ಒಳಗಿನಮನಸ್ದು ಸತ್ತಂತಿರುತ್ತದೆ.ಎಲ್ಲಾ ಸತ್ಯ ತಿಳಿದರೂ ತಿಳಿಸೋಹಾಗಿಲ್ಲ.ತಿಳಿಸಿದರೂ ಅರ್ಥ ವಾಗಲ್ಲ ಎನ್ನುವವರ ಜೊತೆಗೆ ಸತ್ಸಂಗ ನಡೆಸಿದರೂ ಸತ್ಯವಿಲ್ಲದೆ ನಾನೇ ಮಾಡುತ್ತಿರೋದು ನಾನೇ ಹೇಳುತ್ತಿರೋದು ನಾನೇ ಎಲ್ಲಾ ಎನ್ನುವವರ ಜೊತೆಗೆ ನಾನಿರುವಾಗ ನಾನೆಂಬುದಿಲ್ಲ ಎನ್ನುವ ಅದ್ವೈತ ಭಾವನೆ ಇರೋದಿಲ್ಲ.ಹಾಗಾಗಿ ಭೂಮಿ ನಡೆದಿರೋದು ದ್ವೈತದಲ್ಲಿ .ಈ ದ್ವೈತ ಹೊರಗೆ ಬಂದಷ್ಟೂ ಭಿನ್ನವೆ ಒಂದಾಗೋದುಕಷ್ಟ.ಇದು ಎಲ್ಲಾ ಯುಗಯುಗದ ಕಥೆಯಾಗಿರುವಾಗ ಕಲಿಯುಗದಲ್ಲಿ ಇದನ್ನು ವಿರೋಧಿಸಿದರೆ ಅದ್ವೈತವಾಗದು.ಒಟ್ಟಿನಲ್ಲಿ ಒಂದನ್ನೊಂದು ಸೇರಿದರೆ ಒಗ್ಗಟ್ಟು ಇಲ್ಲವಾದರೆ ಬಿಕ್ಕಟ್ಟು.
ಭಾರತೀಯರ ಒಂದು ಸಮಸ್ಯೆ ಮೂಲ ಜ್ಞಾನವನ್ನು ಮರೆತು ಹೊರಗೆ ಬಂದು ರಾಜಕೀಯ ನಡೆಸಿರೋದು.ಎಷ್ಟೋ ರಾಜಾಧಿರಾಜರು ದೇಶ ಆಳಿದ್ದರೂ ಅವರ ಶ್ರೇಷ್ಠ ಜ್ಞಾನ ಅರಿಯದೆ ಕೇವಲ ಅವರನ್ನು ಪ್ರತಿಮೆಯ ರೂಪದಲ್ಲಿ ಕೂರಿಸಿ ಜನರನ್ನು ಆಳಿರೋದು. ಇಂದಿಗೂ ಒಳಗೆ ಹುಳುಕು ಹೊರಗೆ ತಳುಕು ಬಳುಕಿನ ಜೀವನವೇ ಜನಸಾಮಾನ್ಯರ ಸಾಮಾನ್ಯಜ್ಞಾನವನ್ನು ನಿರ್ಲಕ್ಷ್ಯ ಮಾಡಿದೆ .ಪ್ರಜಾಪ್ರಭುತ್ವ ವ್ಯವಸ್ಥೆಯ ಅವಸ್ಥೆ ಗೆ ಈ ನಾನೇ ಎನ್ನುವ ಅಹಂಕಾರ ಕಾರಣವೆಂದಾಗ ನಾನು ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದಿರುವ ದಾಸರ ಯೋಗ ಅರ್ಥ ವಾಗದು.
ಜನಸಾಮಾನ್ಯರ ಸಹಕಾರವಿಲ್ಲದೆ ನಾನು ಬೆಳೆದಿಲ್ಲವೆಂದರೆ ಇದಕ್ಕೆ ಕಾರಣವೇ ಜನಸಾಮಾನ್ಯರ ಅಜ್ಞಾನದ ಸಹಕಾರ.
ಅಜ್ಞಾನಕ್ಕೆ ಕಾರಣವೇ ಶಿಕ್ಷಣದ ವಿಷಯ. ಶಿಕ್ಷಣದಿಂದ ಹಣಗಳಿಸಿದ್ದರೂ ಹಣದ ದುರ್ಭಳಕೆ ಮಾಡುವ ಅಜ್ಞಾನ ಹೋಗದೆ ಒಳಗಿನ ಜ್ಞಾನ ಸಿಗದು.
ಎಷ್ಟೋ ಮಹಾತ್ಮರುಗಳ ಸಂದೇಶ ಹಿಡಿದು ಜನರನ್ನು ಮನೆಯಿಂದ ಹೊರಗೆಳೆದು ಹಣ ಅಧಿಕಾರ ಸ್ಥಾನಮಾನ ಗಳಿಸಿ ಕೊನೆಗೆ ಜನರನ್ನೇ ಸೇವಕರಂತೆ ಕಾಣುವ ಅಸುರ ಶಕ್ತಿ ಗಮನಿಸುವ ಬುದ್ದಿವಂತಿಕೆ ಇದ್ದರೆ ಗಂಜಿಅನ್ನ ತಿಂದಾದರೂ ಅಂಜಿಕೆಯಿಲ್ಲದೆ ಜೀವನ ನಡೆಸಬಹುದು.
ಇದು ಸಾಧ್ಯವಾಗಬೇಕಾದರೆ ಮೊದಲು ಮನೆಯೊಳಗೆ ತನ್ನ ಅನ್ನ ತಾನೇ ಬೇಯಿಸಿಕೊಂಡು ತಿನ್ನುವ ಸ್ವಾಭಿಮಾನ ಅಗತ್ಯ.
ಸಂಸಾರಕ್ಕೆ ಬಂದ ಮೇಲೆ ಸಂಸಾರದ ಜವಾಬ್ದಾರಿ ಹೊತ್ತು ನಡೆಯೋದು ಧರ್ಮ .ಅದನ್ನು ಏನೇ ಸಾಧನೆ ಮಾಡಿದಂತೆ ಹೇಳಿದರೆ ನಡೆಸೋ ಶಕ್ತಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದರ್ಥ.
ಒಟ್ಟಿನಲ್ಲಿ ಭೂಮಿಯ ಆಸರೆ ಸಹಕಾರ ಸಹಾಯವಿಲ್ಲದೆ ಯಾವ ಜೀವಿಯೂ ಇಲ್ಲಿ ಬದುಕಲಾಗದು.ಹೀಗಾಗಿ ಭೂ ಋಣ ತೀರಿಸಲು ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರ ದಲ್ಲಿ ಸ್ವತಂತ್ರ ಜ್ಞಾನದಿಂದ ಸತ್ಯ ಧರ್ಮ ದಿಂದ ನಡೆದವರಿಗಷ್ಟೆ ನಾನೆಂಬುದಿಲ್ಲ ಎನ್ನುವ ಅದ್ವೈತ ಸತ್ಯದ ಅರಿವಿಗೆ ಬಂದಿದೆ.ಹಾಗಂತ ಇದು ಎಲ್ಲರಿಗೂ ಬರೋದಿಲ್ಲ.ಬಂದರೆ ಸಂಸಾರವೇ ಇರೋದಿಲ್ಲ.ಎಲ್ಲಾ ಸಂನ್ಯಾಸಿಗಳಾಗಲು ಸಾಧ್ಯವೆ?
ಆದರೆ ಸಂನ್ಯಾಸಿಯ ವೇಷಧರಿಸಿ ಅಧರ್ಮ ಅನ್ಯಾಯ ಅಸತ್ಯದ ರಾಜಕೀಯದೆಡೆಗೆ ಹೊರಟರೆ ಭ್ರಷ್ಟಾಚಾರ.
ಕಾಲ ಸರಿಯಿಲ್ಲ ಕಾಲು ಸರಿಯಿಲ್ಲ ಹಾಗಾದರೆ ತಲೆ ಸರಿಯಿದೆಯೆ? ತಲೆಗೆ ತುಂಬಿರುವ ವಿಷಯದಲ್ಲಿ ವಿಷ ಇದ್ದರೆ ದ ಅಮೃತಜ್ಞಾನ ಹಿಂದುಳಿಯುವುದು ಸಹಜ.
ಈಗಲೂ ಕಾಲಮಿಂಚಿಲ್ಲ.ಸತ್ಯ ಎಲ್ಲಿಂದಲಾದರೂ ಯಾವ ರೂಪದಲ್ಲಾದರೂ ಹರಿದು ಬರುತ್ತಿರುವುದು.ಆದರೆ ನಾವು ನಮ್ಮ ಸ್ವಾರ್ಥ ಚಿಂತನೆಯಿಂದ ಹೊರಬರದೆ ಅದರೊಳಗೇ ಇದ್ದು ನನಗೇನು ಲಾಭ ಎಂದರೆ ನಷ್ಟ ಕಟ್ಟಿಟ್ಟ ಬುತ್ತಿ.
ಒಂದು ಮಗು ಜ್ಞಾನದೆಡೆಗೆ ನಡೆದರೂ ಭವಿಷ್ಯ ಉತ್ತಮ.
ಅದೇ ಮಗು ಅಜ್ಞಾನದೆಡೆಗೆ ನಡೆದಷ್ಟೂ ಭವಿಷ್ಯ ಅಧಮ.
ಅಸುರರೊಳಗೇ ಸುರ ಅಡಗಿದ್ದರೂ ಆ ಶಕ್ತಿಯನ್ನು ಗುರುತಿಸುವ ಶಿಕ್ಷಣ ಕೊಡದಿದ್ದರೆ ಅಸುರರೆ ಸುರರನ್ನು ಆಳೋದು.
ಮೇಲಿರುವ ಆ ಭಗವಂತನಿಗೇನೂ ನಷ್ಟವಿಲ್ಲ ಕಾರಣ ಇಲ್ಲಿ ಜೀವಾತ್ಮರ ಸಾಮ್ರಾಜ್ಯ ವಿದ್ದರೂ ಅದರೊಳಗಿರುವ ಧರ್ಮ ಕರ್ಮದ ಫಲ ಅದೇ ಜೀವವೇ ಅನುಭವಿಸಲೇಬೇಕೆಂಬ ವಿಧಿನಿಯಮವನ್ನು ಸ್ವಯಂ ಅವತಾರ ಪುರುಷರೆ ತಡೆಯಲಾಗಿಲ್ಲವೆಂದರೆ ಇದರಮೂಲ ಒಳಗಿರುವ ಧರ್ಮ ಕರ್ಮಕ್ಕೆ ಅಂಟಿಕೊಂಡಿದೆ ಎಂದರ್ಥ.
ಭಾರತ ಸ್ವಾತಂತ್ರ್ಯ ಗಳಿಸಿ ಇಷ್ಟು ವರ್ಷ ಕಳೆದರೂ ನಮ್ಮನ್ನು ಆಳುತ್ತಿರುವುದು ಪರಕೀಯರೆ ಎನ್ನುವ ಸತ್ಯ ಇಂದಿಗೂ ಹಸಿರಾಗಿದೆ.ಕಣ್ಣಿಗೆ ಕಾಣುತ್ತಿಲ್ಲವಷ್ಟೆ.
ವಿದೇಶಿ ಕಂಪನಿಗಳ ಸಾಮ್ರಾಜ್ಯವನ್ನು ಸ್ವತಃ ರಾಜಕಾರಣಿಗಳೆ ಸ್ವಾಗತಿಸಿರುವಾಗ ಆಳುವವರ ಅಜ್ಞಾನವನ್ನು ಎತ್ತಿ ಏರಿಸಿರುವ ಪ್ರಜಾಪ್ರಭುತ್ವ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಪ್ರಜೆಗಳ ಅಜ್ಞಾನಕ್ಕೆ ಸರಿಯಾದ ಹಣಸಂಪಾದನೆ. ಹಣದ ದುರ್ಭಳಕೆ ಯಾದಷ್ಟೂ ಸಾಲದ ಹೊರೆ. ಸಾಲ ಬೆಳೆದಷ್ಟೂ ತೀರಿಸಲು ಅಡ್ಡದಾರಿಹಿಡಿಯೋದು ಸಹಜ. ಅಡ್ಡ ದಾರಿ ಹಿಡಿದಮೇಲೆ ಸೀದಾ ಬರೋದು ಬಹಳಕಷ್ಟ.ಕಷ್ಟಪಡದೆ ಸುಖ ಅನುಭವಿಸಿದವರಿಗಂತೂ ಸತ್ಯ ಅರ್ಥ ವಾಗದು.
ಹೀಗೇ ಒಂದನ್ನೊಂದು ಸೇರಿಕೊಂಡು ಮೇಲ್ಮಟ್ಟಕ್ಕೆ ಏರಿ ಒಮ್ಮೆ ಕೆಳಗೆ ಬಿದ್ದು ಹೋಗುವ ಜೀವಕ್ಕೆ ಬೆಲೆಯಿಲ್ಲ. ಸತ್ತ ಹೆಣಕ್ಕೆ ಬೆಲೆಕೊಟ್ಟು ಖರೀದಿಸುವಷ್ಟು ಸತ್ಯಕ್ಕೆ ಬೆಲೆಕೊಡದ ಅಸುರ ಗುಣ ದೈವತ್ವದೆಡೆಗೆ ಹೋಗೋದು ಕಷ್ಟ.ಇದಕ್ಕೆ ಕಾರಣ ಅಹಂಕಾರ ಸ್ವಾರ್ಥ ದ ಜೀವನ ಎನ್ನುವ ಕಾರಣದಿಂದ ಮಹಾತ್ಮರುಗಳು ಅಹಂಬ್ರಹ್ಮಾಸ್ಮಿ ಎಂದರು.
ನಾನು ಬ್ರಹ್ಮನ ಒಂದು ಅಂಶವಾದ್ದರಿಂದ ನನ್ನೊಳಗೆ ಬ್ರಹ್ಮನಿರೋವಂತೆ ನಾನು ಬ್ರಹ್ಮನಾಗಬಹುದು.
ಮೂಲ ಬ್ರಹ್ಮನಾಗೋದು ಅಸಾಧ್ಯ. ಹೇಗೆ ವಿಷ್ಣುವಿನವತಾರ ನಡೆದಿದೆಯೋ ಹಾಗೆಯೇ ದೇವಾನುದೇವತೆಗಳ ಅವತಾರವಾಗಿದೆ.ಅದರಲ್ಲಿ ಸ್ತ್ರೀ ಶಕ್ತಿಯೂ ಅಡಗಿರುವಾಗ ಅವಳನ್ನು ನಿರ್ಲಕ್ಷ್ಯ ಮಾಡಿದಷ್ಟೂ ಭೂಮಿಯ ಸತ್ಯ ಸತ್ವ ತತ್ವ ಕುಸಿಯುತ್ತದೆ.
ಇದನ್ನರಿತವರು ವಿರಳ.ಒಟ್ಟಿನಲ್ಲಿ ಭೂಮಿಯಲ್ಲಿ ನಾನಿದ್ದೇನೆ .ಆ ನಾನು ಹೋದ ಮೇಲೆ ಭೂಮಿಯಿಂದ ಮುಕ್ತಿ. ಹಾಗಾದರೆ ಭೂಮಿ ಮೇಲಿರುವಾಗಲೇ ನಾನೆಂಬ ಅಹಂಕಾರ ತೊಲಗಿದವರು ಮಹಾತ್ಮರಾಗಿರುವರಲ್ಲವೆ?
ಅವರ ತತ್ವಜ್ಞಾನದಿಂದ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆ ಬೆಳೆದಿದೆಯೆ? ಇಲ್ಲವೆಂದರೆ ಪ್ರಚಾರ ಮಾಡಿದವರಲ್ಲಿ ನಾನೆಂಬ ಅಹಂಕಾರ ವಿತ್ತು. ಒಬ್ಬ ಗುರು ಅಥವಾ ಶಿಕ್ಷಕನಾಗಲು ಅಹಂಕಾರ ಸ್ವಾರ್ಥ ವಿರಬಾರದು.ಇಲ್ಲಿ ಅಧ್ಯಾತ್ಮ ಸತ್ಯ ಭೌತಿಕ ಸತ್ಯದ ನಡುವಿನ ಅಂತರದಿಂದ ದ ಸಮಸ್ಯೆ ಮಧ್ಯೆ ಬೆಳೆದಿದೆ. ನಾನೂ ಇದ್ದರೂ ಪರಮಾತ್ಮ ನಿಲ್ಲದೆ ನಾನಿಲ್ಲವೆಂದಾಗ ಪರಮಸತ್ಯ ಪರಮಶಕ್ತಿ ನನ್ನ ಒಳಗೇ ಬೆಳೆಸುವ ಶಿಕ್ಷಣ ನಾನೂ ಪಡೆದು ಎಲ್ಲರಿಗೂ ಕೊಡುವವರೆ ನಿಜವಾದ ಗುರು ಅಥವಾ ಶಿಕ್ಷಕ. ನಾನ್ಯಾರು ಎನ್ನುವ ಪ್ರಶ್ನೆ ಒಳಗಿನಿಂದ ಜನ್ಮ ಪಡೆದಾಗಲೇ ಅದ್ವೈತ ದರ್ಶನ. ಶ್ರೀ ಶಂಕರಾಚಾರ್ಯರು ಶ್ರೀ ಮಧ್ವಾಚಾರ್ಯರು ಶ್ರೀ ರಾಮಾನುಜಾಚಾರ್ಯರು ಇಂದಿಗೂ ಸ್ಮರಣೀಯರು.
ಅವರು ಕಾಲಮಾನವನರಿತು ಜನರನ್ನು ಒಂದು ಮಾಡುವ ತತ್ವಜ್ಞಾನಕ್ಕೆ ಒತ್ತುಕೊಟ್ಟು ಧರ್ಮ ಸೂಕ್ಮದ ಕಡೆಗೆ ನಡೆಸಿದ ಸ್ವಯಂ ಭಗವಂತನ ಅವತಾರಿಗಳು ಗುರುಗಳು. ಆದರೆ ಇಂದು ಇದರಲ್ಲಿ ತಂತ್ರವೇ ಹೆಚ್ಚಾಗಿ ಕಂಡಾಗ ಜನರಲ್ಲಿ ಸತ್ಯ ಹಿಂದುಳಿಯುವುದು ಸಹಜ. ದೈವತ್ವದೆಡೆಗೆ ನಡೆಯಲು ತತ್ವ ಅಗತ್ಯ.ಹಿಂದಿನವರಷ್ಟು ನಮ್ಮಲ್ಲಿ ಜ್ಞಾನವಿಲ್ಲ ವಿಜ್ಞಾನವಿದೆ.ವಿಜ್ಞಾನ ಹೊರಗಿನ ಸತ್ಯವಾಗಿದೆ. ಹೊರಗಿನ ಸತ್ಯ ತಾತ್ಕಾಲಿಕ ವಾಗಿರುವ ಬದಲಾಗುವ ಕಾರಣದಿಂದ ಜೀವಕ್ಕೆ ತೃಪ್ತಿ ಸಿಗದು. ಹೀಗಾಗಿ ಜೀವಾತ್ಮ ಪರಮಾತ್ಮನ ಕಡೆಗೆ ನಡೆಯದೆ ಪರಕೀಯರ ವಶವಾಗಿ ಮುಂದೆ ನಡೆದಿದೆ.
ಹಿಂದುಳಿದವರನ್ನು ಕಡೆಗಣಿಸಿದಷ್ಟೂ ಹಿಂದೂ ಬೆಳೆಯೋದಿಲ್ಲ. ಹಿಂದಿನ ಸತ್ಯವೇ ಬೇರೆ ವಾಸ್ತವ ಸತ್ಯವೇ ಬೇರೆ.ಹಿಂದೆ ರಾಜಯೋಗದ ಜೀವನಕ್ಕೆ ಪೂರಕ ಶಿಕ್ಷಣವಿತ್ತು.ಈಗ ರಾಜಕೀಯಕ್ಕೆ ಒತ್ತುಕೊಡುವ ಶಿಕ್ಷಣವಿದೆ.
ರಾಜಕೀಯ ಒಬ್ಬರನ್ನು ಆಳೋದು ಗುರಿ ಎಂದರೆ ರಾಜಯೋಗ ನಿನ್ನ ನೀ ಅರಿತು ನಿನ್ನ ನೀ ಆಳಿಕೊಂಡಿರೋದೆ ಗುರಿ ಎನ್ನುತ್ತದೆ.
ವಿವೇಕವನ್ನು ಅಧ್ಯಾತ್ಮ ದಿಂದರಿತು ನಡೆದರೆ ವಿವೇಕದ ಆನಂದ.
ಜ್ಞಾನವಿಜ್ಞಾನದನಡುವಿರುವ ಸಾಮಾನ್ಯ ಜ್ಞಾನದ ಸದ್ಬಳಕೆ ಆದರೆ ಮಾನವನಾಗಿ ಮಹಾತ್ಮರಾಗೋದು.ಎಲ್ಲಾ ಭೂಮಿಯ ದಾಸರೆ ಆಳೋದಕ್ಕೆ ಹೋಗಿ ಆಳಾಗಿದ್ದವರೆ. ಆದರೂ ಅವರಲ್ಲಿದ್ದ ಯೋಗದಿಂದ ಮುಕ್ತಿಗಳಿಸಿ ಇಂದಿಗೂ ಮಹಾತ್ಮರಾಗಿರುವರು ದೇವರಾಗಿರುವರು..ದೇವನೊಬ್ಬನೆ ನಾಮ ಹಲವು ಎಂದಂತೆ ಒಂದೇ ಸತ್ಯ ಒಂದೇ ದೇವರು ಒಂದೆ ದೇಶವನ್ನು ಒಬ್ಬೊಬ್ಬರು ಒಂದೊಂದು ಕಡೆಗೆ ಎಳೆದರೆ ಅದರೊಳಗೆ ಹೋರಾಟ ಹಾರಾಟ ಮಾರಾಟದ ರಾಜಕೀಯ ಬೆಳೆಯೋದು. ರಾಜಯೋಗವಲ್ಲ. ಇದನ್ನು ದುರ್ಭಳಕೆ ಮಾಡಿಕೊಳ್ಳುವ ಅಸುರಶಕ್ತಿಗೆ ಮನರಂಜನೆಯಷ್ಟೆ.
ಆತ್ಮವಂಚನೆಯಲ್ಲಿ ಮನರಂಜನೆಯಿದ್ದರೆ ಧರ್ಮವಲ್ಲ.
ಎಲ್ಲಾ ನಕಾರಾತ್ಮಕ ಚಿಂತನೆ ಎಂದರೆ ಹಿಂದಿನ ಮಹಾತ್ಮರ ದೃಷ್ಟಿ ಕೋನವೇ ನಕಾರಾತ್ಮಕ ವಾಗಿ ಕಾಣುತ್ತದೆ.ಕಾರಣ ಅವರು ಕಣ್ಣಿಗೆ ಕಾಣದ ಸತ್ಯವನ್ನು ಬಿಚ್ಚಿಟ್ಟರು ಇದನ್ನು ವಿರೋಧಿಸಿ ನಡೆದವರೆ ಅಸುರರಾದರು.ಈಗಲೂ ಇದೇ ನಮ್ಮನ್ನು ನಡೆಸಿದೆ ವಿರೋಧಿಗಳೂ ನಮ್ಮನ್ನು ಆಳುತ್ತಿವೆ ಎಂದರೆ ನಮ್ಮ ಸಹಕಾರ ಒಳಗಿಲ್ಲ ಹೊರಗಿದೆ ಎಂದರ್ಥ.
ಶ್ರೀ ಕೃಷ್ಣ ಪರಮಾತ್ಮನೆ ತಿಳಿಸಿರುವಂತೆ ನಾವೆಲ್ಲರೂ ಸತ್ತವರೆ.
ಯುಗಯುಗದಿಂದಲೂ ಇದೇ ಭೂಮಿಯಲ್ಲಿ ಜನ್ಮ ಪಡೆದು ಹೋರಾಟ ಹಾರಾಟ ಮಾರಾಟದಲ್ಲಿ ಜೀವನಕಟ್ಟಿಕೊಂಡು ಜನನ ಮರಣವನ್ನು ತಡೆಯಲಾಗದ ನಿಶ್ಯಕ್ತ ಜೀವಾತ್ಮರು ನಾವೇ ಆದಾಗ ಜ್ಞಾನಸಂಪಾದನೆಯನಂತರವೇ ಜೀವಕ್ಕೆ ಮುಕ್ತಿ .ಇದಕ್ಕಾಗಿ ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಿತ್ತು.ರಾಜಕೀಯದ ಗುದ್ದಾಟದಲ್ಲಿ ಪ್ರಜಾಪ್ರಭುತ್ವ ತನ್ನ ಸ್ವಂತ ಜ್ಞಾನ ಬಿಟ್ಟು ಹೊರಗೆ ಬಂದರೆ ಯಾರ ತಪ್ಪು?
ನಮ್ಮ ಅಜ್ಞಾನಕ್ಕೆ ನಮ್ಮದೇ ಸಹಕಾರವಿದ್ದಾಗ ಸರ್ಕಾರ ಏನು ಮಾಡಿದರೂ ತಪ್ಪು ಕಾಣುತ್ತದೆ.ಅತಿಯಾದ ಪರಾವಲಂಬನೆ ಪರಮಾತ್ಮನಿಂದ ದೂರ ಮಾಡಿಸಿದ್ದರೂ ಅವನೊಳಗೇ ಇರೋದು ಸತ್ಯ.ತಲೆಯನರಿಯದಿದ್ದರೂ ಕಾಲು ನಡೆಯದೆ ಇರದು. ಹೀಗಾಗಿ ನಮ್ಮ ಸೇವೆ ಉತ್ತಮ ಗುರುಗಳ ಸನ್ನಿದಿಯಲ್ಲಿ ನಡೆದರೂ ಮುಕ್ತಿ ಮೋಕ್ಷದೆಡೆಗೆ ನಿಧಾನವಾಗಿ ನಡೆಯುವುದು. ಸದ್ಗುರುಗಳ ಕೃಪೆ ಆಶೀರ್ವಾದ ಸಹಕಾರವಿಲ್ಲದೆ ಏನೂ ನಡೆಯದು.ಇದು ಧರ್ಮ ಅಧರ್ಮ ಬೆಳೆಯಲು ಕಾರಣ. ಅಧರ್ಮದೊಳಗೇ ಧರ್ಮ, ಅಜ್ಞಾನದೊಳಗೇ ಜ್ಞಾನ,ಅಸತ್ಯದೊಳಗೆ ಸತ್ಯ,ವಿಜ್ಞಾನದೊಳಗೆ ಜ್ಞಾನ,ವಿದೇಶದೊಳಗೆ ದೇಶ ಅಡಗಿರುವಂತೆ ಅದ್ವೈತ ದೊಳಗೇ ದ್ವೈತ ವಿದೆ.ಒಳಹೊಕ್ಕು ತನ್ನ ತಾನರಿಯುವ ಪ್ರಯತ್ನಪಟ್ಟರೆ ಬಿಡುಗಡೆ ಸಾಧ್ಯವೆನ್ನುವರು. ಪ್ರಯತ್ನ ನಮ್ಮದು ಫಲ ಭಗವಂತನದು.
ಮಂತ್ರ ತಂತ್ರ ಯಂತ್ರದಿಂದ ಸ್ವತಂತ್ರ ಜ್ಞಾನ ಒಳಗೇ ಬೆಳೆಸುವ ಶಿಕ್ಷಣ ನೀಡುವ ಗುರುಪರಂಪರೆ ನಮ್ಮ ಭಾರತವನ್ನು ಆತ್ಮನಿರ್ಭರ ಭಾರತ ಆಗಿಸುತ್ತದೆ.ಆದರೆ ಕುತಂತ್ರವಿದ್ದರೆ ಆತ್ಮದುರ್ಭಲ ಭಾರತವಾಗೋದನ್ನು ತಡೆಯಲಾಗದು.
ಹೊರಗಿನ ಯುದ್ದ ಸಂಧಾನ ದಿಂದ ತಡೆಯಬಹುದು.ಆದರೆ ಒಳಗಿನ ಧರ್ಮ ಯುದ್ದ ತಡೆಯಲಾಗದು. ವ್ಯವಹಾರಿಕ ಸಂಬಂಧ ತಾತ್ಕಾಲಿಕ ತೃಪ್ತಿ ನೀಡಿದರೂ ಸಾಲ ಖಚಿತ.
ಧಾರ್ಮಿಕ ಸಂಬಂಧ ದಿಂದ ಋಣ ತೀರಿಸಿದರೆ ಮುಕ್ತಿ ನಿಶ್ಚಿತ.
ಸಾಧ್ಯವಾದಷ್ಟು ಧಾರ್ಮಿಕ ಗುಂಪಿಗೆ ಹಂಚಿಕೊಂಡು ದೇಶದ ಋಣ ತೀರಿಸುವ ಜ್ಞಾನ ಬೆಳೆದರೆ ಅದೇ ನಮ್ಮ ಪುಣ್ಯವಷ್ಟೆ.
ಯಾರ ಋಣ ಯಾರೋ ತೀರಿಸಲಾಗದು. ಅವರವರ ಕರ್ಮಕ್ಕೆ ತಕ್ಕಂತೆ ಫಲ ನೀಡೋ ಶಕ್ತಿ ಒಳಗೇ ಇರೋವಾಗ ಒಳಗಿನ ಸತ್ಯ ಧರ್ಮ ಬೆಳೆದರೆ ಅದ್ವೈತ. ಅದು ಹೊರಗೆ ಕಾಣೋದಿಲ್ಲ.
ದೇವರು ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿಕೊಟ್ಟು ಏನೂ ಮಾಡದಿರುವ ಪರಿಸ್ಥಿತಿ ತಂದಿಡುವವನೂ ಅವನೇ ಎಂದರೆ ದೇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟವಿದೆ. ಸತ್ಯವೇ ದೇವರೆನ್ನುವರು ಸತ್ಯ ತಿಳಿದ ಮೇಲೆ ದೇವರೆ ಇಲ್ಲವೆನ್ನುವರು.
ಅಂದರೆ ಸತ್ಯ ಎರಡೂ ಕಡೆಯಿದೆ ಒಳಸತ್ಯ ಹೊರಸತ್ಯ.ಎರಡರ ನಡುವೆ ಇರೋರು ಮಾನವರಷ್ಟೆ. ಮಾನವನೊಳಗಿರುವ ದೇವಾಸುರರ ಶಕ್ತಿಯ ಪ್ರೇರಣೆಯಂತೆ ಜಗತ್ತು ನಡೆದಿದೆ ಇದು ತನ್ನ ಮನಸ್ಸಿಗೆ ಸತ್ಯ ಅರ್ಥ ವಾಗದಿದ್ದರೆ ತಪ್ಪು ಮನಸ್ಥಿತಿ ಯದ್ದಾಗಿದೆ. ಸ್ಥಿತಿಗೆ ಕಾರಣ ನಾನೇ ಆದಾಗ ನಾನು ಹೋದರೆ ಸ್ಥಿತಿ ಚೆನ್ನಾಗಿ ಇರುವುದು. ನಾನೇ ಕಾರಣವಾದಾಗ ನಾನು ಕಾರಣಕರ್ತ ನಷ್ಟೆ ಎನ್ನುವ ಸತ್ಯದ ಅರಿವಾಗದು.
ಮಠದಿಂದ ಹಿಡಿದು ಎಲ್ಲಾ ಕಡೆ ಸಂಘ ಶಾಲೆ ಕಾಲೇಜ್ ಸಂಸ್ಥೆ ಸಂಘಟನೆಯೂ ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಧಾರ್ಮಿಕ ಕೆಲಸಮಾಡಿದ್ದರೂ ಅಧರ್ಮ ಮುಗಿಲುಮುಟ್ಟಲು ಕಾರಣ ನಮ್ಮ ಸ್ವಾರ್ಥ ಪೂರ್ಣ ಅಹಂಕಾರದ ರಾಜಕೀಯ ಸಹಕಾರವಾದಾಗ ನನ್ನ ಈ ಸಹಕಾರವಿಲ್ಲದೆ ಏನೂ ನಡೆದಿಲ್ಲ ಬೆಳೆದಿಲ್ಲವೆಂದರೆ ಇದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆದಿದೆಯೆ?
ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಅಧ್ಯಾತ್ಮ ಅಗತ್ಯವಿದೆ.ಅಧ್ಯಾತ್ಮ ಶಕ್ತಿ ಒಳಗಿದೆ. ಒಳಗಿದ್ದೇ ಹುಡುಕಿಕೊಂಡು ಆತ್ಮನಿರ್ಭರ ಭಾರತ ಮಾಡಬೇಕು.ಹೊರಗೆ ಬಂದಷ್ಟೂ ಅತಂತ್ರಭಾರತ. ಆದರೂ ಭಗವಂತನ ಮುಂದೆ ಎಲ್ಲಾ ನಗಣ್ಯ. ಜನಸಹಕಾರದಿಂದಗಣ್ಯವ್ಯಕ್ತಿಯಾಗಬಹುದು.ಜನ ಹೋದ ಮೇಲೆ ನಗಣ್ಯರೆ ಎಲ್ಲಾ. ನಾನಿದ್ದಾಗ ದೇವರು ಕಾಣೋದಿಲ್ಲ.ನಾನು ಹೋದ ಮೇಲೆ ದೇವರಿರೋದಿಲ್ಲ ಎಂದರೆ ದೇವರು ನಿರಾಕಾರಶಕ್ತಿಯಾಗಿ ನನ್ನೊಳಗೇ ಹೊರಗೆ ಇದ್ದರೂ ನನಗೆ ಕಾಣೋದಿಲ್ಲವೆಂದರೆ ನನ್ನದೆ ದೃಷ್ಟಿ ಸರಿಯಿಲ್ಲವೆಂದರ್ಥ. ಏನೂ ಮಾಡದಿರೋದಕ್ಕೂ ನನ್ನ ಬಿಡೋದಿಲ್ಲ.ಮಾಡಿದರೂ ನಾನು ಮಾಡಿರೋದಲ್ಲ ಇದೇ ಅಧ್ವೈತಾನುಭವದ ಸತ್ಯ.
ಇದನ್ನು ಪ್ರತಿಯೊಬ್ಬರೂ ಅನುಭವಿಸುವರು ಆದರೆ ಒಳ್ಳೆಯದಾದರೆ ನಾನು ಮಾಡಿದ್ದು ಕೆಟ್ಟದ್ದಾದರೆ ಬೇರೆಯವರು ದೇವರು ಮಾಡಿಸಿದ್ದು ಎನ್ನುವುದು ಬಿಡೋದಿಲ್ಲ.ಅದಕ್ಕೆ ಬಿಡುಗಡೆಯಿಲ್ಲದ ಬದುಕು ನಡೆಯುತ್ತದೆ. ಬರವಣಿಗೆಯ ಹಿಂದೆ ಇರುವ ಶಕ್ತಿ ಕಾಣೋದಿಲ್ಲನಾನು ಕಾಣುತ್ತೇನೆಂದರೆ ವಿರೋಧಿಗಳೆ ಹೆಚ್ಚು.
ಇದರಿಂದಾಗಿ ನಮ್ಮ ಕರ್ಮ ನಾವೇ ಮಾಡೋದು . ಫಲ ಭಗವಂತನೇ ಕೊಡೋದು. ಒಳ್ಳೆಯವರಿಗೆ ಕಷ್ಟ ಕೆಟ್ಟವರಿಗೆ ಸುಖ ಎಂದರೆ ಕೆಟ್ಟದ್ದಕ್ಕೆ ಸಹಕಾರಕೊಟ್ಟರೆ ಹಣಗಳಿಸಿ ಶ್ರೀಮಂತ ನಾಗಬಹುದು. ಅದೇ ಶ್ರೀಮಂತ ನನ್ನ ಆಳುವನೆಂದರೂ ನನ್ನ ಸಹಕಾರವಿದ್ದರೆ ಕರ್ಮಕ್ಕೆ ತಕ್ಕಂತೆ ಫಲ. ಇದನ್ನು ದೇವಾನುದೇವತೆಗಳೆ ಸಾಕ್ಷಿಭೂತರಾಗಿದ್ದಾರೆ.
ಎಷ್ಟು ಅಸುರರ ಹಿಂದೆ ನಡೆದರೂ ಅಥವಾ ವಿರೋಧಿಸಿದರೂ ಸತ್ಯ ಒಂದೇ ಇರೋದು.
ಅನ್ಯಧರ್ಮ ದವರನ್ನು ದೇವರನ್ನು ವಿರೋಧಿಸಿ ಅವರ ಕಂಪನಿ,ದೇಶ ಭಾಷೆ ಶಿಕ್ಷಣ ವ್ಯವಹಾರಕ್ಕೆ ಕೈಜೋಡಿಸಿದರೆ ದೇವರು ಮೆಚ್ಚುವನೆ? ಸತ್ಯ ಎಲ್ಲರೊಳಗೂ ಇದ್ದರೂ ಗುರುತಿಸಿ ಬೆಳೆಸುವಜ್ಞಾನದ ಶಿಕ್ಷಣವೇ ಕೊಡದಿದ್ದರೆ ಅಜ್ಞಾನ.