ಸಾಹಿತ್ಯ ಕ್ಷೇತ್ರದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೆ?
ಸಾಮಾಜಿಕ ಕಳಕಳಿಯುಳ್ಳ ಸಾಹಿತ್ಯದಿಂದ ಜನರಲ್ಲಿ ಅರಿವು ಮೂಡಿಸುವುದರ ಮೂಲಕ ನಮ್ಮ ಹಿಂದಿನ ಅನೇಕ ಸಾಹಿತಿಗಳು ಬಹಳ ಶ್ರಮಪಟ್ಟು ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ತಾವೂ ಜನರೊಂದಿಗೆ ಬೆರೆತು ಬಾಳುತ್ತಿದ್ದರು. ಅಂದಿನ ಸಾಹಿತ್ಯ ಪುರಾಣ ಇತಿಹಾಸದ ಜೊತೆಗೆ ವಾಸ್ತವದಲ್ಲಾಗುತ್ತಿರುವ ಬದಲಾವಣೆಗಳನ್ನು ಭವಿಷ್ಯವನ್ನರಿತು ಸರಿತಪ್ಪುಗಳ ಬಗ್ಗೆ ಚರ್ಚೆ ಮಾಡುವ ಮೂಲಕ ಶಿಕ್ಷಣದಿಂದ ಹಿಡಿದು ರಾಜಕೀಯದವರೆಗೆ ದೇಶೀಯ ಮನೋಭಾವನೆ ಬೆಳೆಸುವ ಪ್ರಯತ್ನ ಅಂದಿತ್ತು.
ಕಾಲಾನಂತರದಲ್ಲಿ ಆದ ವ್ಯವಹಾರಿಕ ಮನೋಭಾವನೆಯು ಧಾರ್ಮಿಕ ನೆಲೆಗಟ್ಟಿನಿಂದ ದೂರವಾಗಿ ಹಣ,ಹೆಸರು,ಸ್ಥಾನಮಾನದ ಆಮಿಷಗಳಿಗೆ ಬಲಿಯಾಗುತ್ತಾ ವೈಜ್ಞಾನಿಕತೆಯ ಹೆಸರಿನಲ್ಲಿ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಹೋಗಿ ಕಣ್ಣಿಗೆ ಕಾಣುವುದಷ್ಟೆ ಸತ್ಯ ಕಾಣದ್ದು ಅಸತ್ಯವೆಂದು ಕೆಲವರು ವಾದ ಮಾಡಿ ಗೆದ್ದು ಶಿಕ್ಷಣದ ದಾರಿ ತಪ್ಪಿಸುವವರೊಂದಿಗೆ ಬೆರೆತು ರಾಜಕೀಯದ ಹಾದಿ ಹಿಡಿದರು. ಸಮಾಜದಲ್ಲಿ ಈಗಲೂ ಎಷ್ಟೋ ಸಾಹಿತಿಗಳ. ಸತ್ಯಕ್ಕೆ ಬೆಲೆಕೊಡದೆ ಹಿಂದುಳಿದಿರೋದು ವಾಸ್ತವತೆಯನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಸೋತಿದೆ.
ಆದರೆ, ಪ್ರಜಾಪ್ರಭುತ್ವದ ಭಾರತದಂತಹ ಪವಿತ್ರ ದೇಶದಲ್ಲಿ ಅನಾವಶ್ಯಕವಾದ ವಿಷಯಗಳನ್ನು ಬರೆದುಕೊಂಡು ಮನರಂಜನೆಯ ಮೂಲಕ ಜನಸಾಮಾನ್ಯರವರೆಗೆ ತಲುಪಿಸುವುದರ ಮೂಲಕ ಸಾಕಷ್ಟು ಹಣ,ಹೆಸರು,ಅಧಿಕಾರ,ಸ್ಥಾನಮಾನ ಸನ್ಮಾನ ಪಡೆದವರು ದೇಶದ ಈ ಸ್ಥಿತಿಗೆ ಕಾರಣ ತಿಳಿಯುವಲ್ಲಿ ಸೋತಿದ್ದಾರೆ.
ಹಾಗಂತ ಇದು ಅವರ ತಪ್ಪಲ್ಲ.ಸಾಹಿತ್ಯ ಕ್ಷೇತ್ರದ ರಾಜಕೀಯತೆ ಅದರೊಳಗಿರುವವರಿಗೂ ಗೊತ್ತು ಹೊರಗೆ ಇದ್ದವರಿಗೂ ಗೊತ್ತು.ಆದರೆ ಹೇಳೋ ಹಾಗಿಲ್ಲದ ಪರಿಸ್ಥಿತಿ.
ಭಾಷೆಯ ರಕ್ಷಣೆಯಾಗಿಲ್ಲ,ಧರ್ಮ ರಕ್ಷಣೆಯಾಗಿಲ್ಲ,ಸಂಸ್ಕೃತಿ ತನ್ನ ಪಾಡಿಗೆ ತಾನು ನಡೆದಿದೆ ಜೊತೆಗೆ ಪಾಶ್ಚಾತ್ಯರನ್ನೂ ಸೇರಿಸಿಕೊಂಡು ವೈಭವದ ಕಾರ್ಯಕ್ರಮದಲ್ಲಿ ನಡೆದಿದೆ.ಸಾಲ ಮಿತಿಮೀರಿದೆ. ಜನಸಾಮಾನ್ಯರವರೆಗೆ ಉತ್ತಮ ಸಾಹಿತ್ಯಗಳು ತಲುಪುವಲ್ಲಿ ಸೋತಿದೆ.ಇಲ್ಲಿ ಉತ್ತಮ ಎಂದರೆ ಅನುಭವಪೂರಿತ, ವಾಸ್ತವ ಸತ್ಯವನ್ನು ತಿಳಿಸುವ ಅಧ್ಯಾತ್ಮದ ಸಾಹಿತ್ಯವು ಕೇವಲ ಕೆಲವು ಗುಂಪಿಗೆ ಸೀಮಿತವಾಗಿ ಚರ್ಚೆ ಯಿಲ್ಲದೆ ಮುಂದೆ ನಡೆದಿದೆ. ಸಾಹಿತ್ಯ ಎಂದರೆ ಸಾಮಾಜಿಕ ಹಿತಕ್ಕಾಗಿ ಸತ್ಯವನ್ನು ಹ ಬರವಣಿಗೆ ಮೂಲಕ ಹೊರಹಾಕುವ ಒಂದು ಪ್ರಾಕಾರವೆಂದರೆ ಸತ್ಯ ಯಾವುದು? ಎಲ್ಲಿದೆ ? ಎನ್ನುವ ಪ್ರಶ್ನೆ ಬರುತ್ತದೆ.ನಿಜ ಹಿಂದೆ ನಡೆದ ಪುರಾಣ ಇತಿಹಾಸದ ಜೊತೆಗೆ ಕಥೆಗಳನ್ನು ಬರವಣಿಗೆಯಲ್ಲಿ ಇಳಿಸುವಾಗ ವಾಸ್ತವ ಜಗತ್ತಿನ ಬಗ್ಗೆ ಅರಿವಿದ್ದರೆ ಅಂದಿನ ರಾಜಪ್ರಭುತ್ವದ ಧರ್ಮ ಕರ್ಮ ಇಂದಿನ ಪ್ರಜಾಪ್ರಭುತ್ವದ ಧರ್ಮ ಕರ್ಮ ಒಂದೇ ಆಗಿದ್ದರೆ ಸರಿ. ಶಿಕ್ಷಣದಲ್ಲಿಯೇ ಧರ್ಮ ಕುಸಿದು ಅಧರ್ಮ ವಿದ್ದರೆ ಸಾಹಿತಿಗಳು,ಜ್ಞಾನಿಗಳು, ಗುರುಹಿರಿಯರು ಶಿಕ್ಷಣಕ್ಷೇತ್ರದ ಸೇವೆ ಮಾಡುತ್ತಾ ಅಲ್ಲಿರುವ ಲೋಪಧೋಷಗಳ ಬಗ್ಗೆ ಗಮನಹರಿಸಿ ಸರಿಪಡಿಸೋದು ನಿಜವಾದ ಸಾಹಿತ್ಯ ಸೇವೆ.
ನಮ್ಮ ಹಿಂದಿನ ಹಲವಾರುಮಹಾ ಸಾಹಿತಿಗಳು ಶಿಕ್ಷಕರಾಗಿಮಕ್ಕಳ ಜ್ಞಾನವನ್ನು ಬೆಳೆಸುವ ಕೆಲಸ ಮಾಡುತ್ತಾ ಸಾಮಾಜಿಕ ಕ್ಷೇತ್ರದಲ್ಲಿಯೂ ಸೇವೆ ಮಾಡಿ ಹೆಸರುಗಳಿಸಿದ್ದರು. ಇತ್ತೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಸಂಘಗಳಿವೆ. ಕಾರ್ಯ ಕ್ರಮಗಳೂ ಲೆಕ್ಕವಿಲ್ಲದ್ದಷ್ಟು ನಡೆಯುತ್ತವೆ. ಸಾಕಷ್ಟು ಹಣಬಳಕೆಯಾಗುತ್ತದೆ.ಸರ್ಕಾರದ ಹಣದ ಜೊತೆಗೆ ಹೊರಗಿನವರ ದೇಣಿಗೆಯೂ ಸೇರಿ ಹಣದ ಹೊಳೆ ಹರಿಸಲಾಗುತ್ತದೆ.ಸಾಹಿತ್ಯ ಉತ್ಸವಗಳಂತೂ ಊಟ ಉಪಚಾರ,ಉಡುಗೊರೆಗಳಿಂದ ನಡೆಯುತ್ತದೆ. ಆದರೆ , ಶಿಕ್ಷಣದಲ್ಲಿಯೇ ಉತ್ತಮ ಸಾಹಿತಿಗಳಾಗಲಿ,ಸಾಹಿತ್ಯವಾಗಲಿ ಕಂಡುಬರುತ್ತಿಲ್ಲ. ಕನ್ನಡದ ವಿಚಾರಕ್ಕೆ ಬಂದರೆ ಕನ್ನಡ ಭಾಷೆ ಬರದವರೂ ಶಿಕ್ಷಕರಾಗಿರೋದು ಖಾಸಗಿ ಶಾಲೆಗಳ ದುರಂತ.
ಪೋಷಕರೆ ಕನ್ನಡದ ಬಗ್ಗೆ ಒಲವು ತೋರಿಸದಿರೋದು ಇನ್ನಷ್ಟು ಭಾಷೆ ಹಿಂದುಳಿಯಲು ಕಾರಣ. ಶಾಲಾ ಕಾಲೇಜುಗಳಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಗೆ ಒತ್ತುಕೊಟ್ಟಷ್ಟು ಪ್ರಾದೇಶಿಕ ಭಾಷೆಗೆ ಕೊಡದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿರೋದನ್ನು ಎಷ್ಟು ಸಾಹಿತಿಗಳು ಅರಿತಿರುವರೋ? ಕನ್ನಡ ಹಿಂದುಳಿದಿರೋದಕ್ಕೆ ಕಾರಣ ನಮ್ಮದೇ ನಿರ್ಲಕ್ಷ್ಯ ತನ. ಹೋರಾಟದ ವಿಚಾರದಲ್ಲಿಯೂ ರಾಜಕೀಯತೆ. ಸರ್ಕಾರದ ಹಣವನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಕಾಲೇಜ್ಗಳಿಗೆ ಬೇಟಿ ಕೊಟ್ಟು ಅಲ್ಲಿಯ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮವಾಗಲಿ, ಸಂಸ್ಕಾರಯುತ ವಿಷಯವಾಗಲಿ, ಸಂಗೀತ,ನಾಟಕ,ಇನ್ನಿತರ ವಿಷಯಗಳ ಮೂಲಕ ಸಣ್ಣ ಕಾರ್ಯಕ್ರಮ ನಡೆಸಿ ಮಕ್ಕಳು ಯುವಕ ಯುವತಿಯರಿಗೆ ದೇಶಭಕ್ತಿ ಹೆಚ್ಚಿಸುವುದರಿಂದ ಮುಂದೆ ಅವರಿಂದಲೂ ಉತ್ತಮ ಸಾಹಿತ್ಯ ಹೊರಬರಬಹುದು.
ಎಷ್ಟೋ ಯುವಪೀಳಿಗೆಯ ಜ್ಞಾನಕ್ಕೆ ಸರಿಯಾದ ಪ್ರೋತ್ಸಾಹ ಸಹಕಾರ ವಿಲ್ಲದೆ ಹಿಂದುಳಿದಿರುವುದು ಸಾಮಾನ್ಯವಾಗಿದೆ. ಸಾಹಿತ್ಯದಿಂದ ಸಾಮಾಜಿಕ ಬೆಳವಣಿಗೆಯಾಗಬೇಕು. ಆದರೆ ಇತ್ತೀಚೆಗೆ ಅಧ್ಯಾತ್ಮ ಬೇರೆ ಭೌತಿಕ ಬೇರೆ ಎನ್ನುವ ವಾದವಿವಾದಕ್ಕೆ ನಿಜವಾದ ಮಾನವೀಯತೆ ಹಿಂದುಳಿದು ರಾಜಕೀಯತೆಯೇ ತನ್ನ ಸ್ಥಾನಮಾನಕ್ಕೆ ಹೋರಾಡುತ್ತಾ ಸತ್ಯನಾಶಮಾಡುವ ಹಲವು ವಿಷಯಗಳು ಮಕ್ಕಳ ಮಹಿಳೆಯರ ಭವಿಷ್ಯ ಹಾಳುಮಾಡಿದರೂ ಕೇಳೋರಿಲ್ಲ.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಕ್ರಾಂತಿಕಾರಕ ಧಾರಾವಾಹಿ,ಚಲನಚಿತ್ರಗಳಿಗೆ ಸಾಕಷ್ಟು ಬೇಡಿಕೆಯಿದೆ ಆದರೆ ಶಾಂತಿಯನ್ನು ಹೆಚ್ಚಿಸುವ ಸತ್ಯದ ವಿಷಯಗಳು ಮರೆಯಾಗುತ್ತಿದೆ ಎಂದರೆ ಎತ್ತ ಸಾಗುತ್ತಿದೆ ಭಾರತ? ಇದಕ್ಕೆ ಹೊರಗಿನವರು ಕಾರಣವಾಗೋದಿಲ್ಲ ಒಳಗಿನವರ ರಾಜಕೀಯವೇ ಕಾರಣವಾಗಿದೆ. ಎಷ್ಟೇ ಹೆಸರು ಹಣ ಅಧಿಕಾರ ಪಡೆದರೂ ಸತ್ಯಕ್ಕೆ ಧರ್ಮಕ್ಕೆ ಬೆಲೆಕೊಡದ ಸಾಹಿತ್ಯವಿದ್ದರೆ ಅಧರ್ಮ ಕ್ಕೆ ಪರಿಸ್ಥಿತಿ . ಕಾಲದ ಇತಿಮಿತಿಯಲ್ಲಿದ್ದು ಭವಿಷ್ಯವನ್ನರಿತು ವಾಸ್ತವದಲ್ಲಿ ದ್ದು ನಾನೇನು ಬರೆದರೆ ಹೇಳಿದರೆ ಸಮಾಜದಲ್ಲಿ ಸುಧಾರಣೆ ಸಾಧ್ಯವೆನ್ನುವ ಬಗ್ಗೆ ಸಾಹಿತಿಗಳಾದವರು ಚಿಂತನೆ ನಡೆಸಿದರೆ ಉತ್ತಮ.
ಒಟ್ಟಿನಲ್ಲಿ ಎಲ್ಲರಿಗೂ ತಮ್ಮದೇ ಆದ ಚಿಂತನೆಗಳಿದ್ದರೂ ಎಲ್ಲರೂ ದೇಶದೊಳಗೆ ರಾಜ್ಯದೊಳಗೆ ಇರುವ ಸಾಮಾನ್ಯ ಪ್ರಜೆಗಳಷ್ಟೆ. ನಮ್ಮಿಂದ ದೇಶವಲ್ಲ ದೇಶದಿಂದ ನಾವು ಗುರುತಿಸಲ್ಪಟ್ಟಿರುವಾಗ ದೇಶಕ್ಕಾಗಲಿ, ರಾಜ್ಯಕ್ಕಾಗಲಿ, ಧರ್ಮ ಕ್ಕಾಗಲಿ ಭಾಷೆಗಾಗಲಿ ಅಪಾಯವಾಗುವ ವಿಷಯಕ್ಕೆ ಸಹಕಾರ ನೀಡದಿರೋದು ಸಾಹಿತಿಗಳ ಧರ್ಮ.
ಭ್ರಷ್ಟಾಚಾರ ಮುಗಿಲುಮುಟ್ಟಿದೆ ಎಂದರೆ ಅಲ್ಲಿ ಅಜ್ಞಾನವಿದೆ ಎಂದರ್ಥ. ಜೊತೆಗೆ ಸಹಕಾರವೂ ಸಿಗುತ್ತಿದೆ ಎಂದರೆ ಇದಕ್ಕೆ ಸಹಕರಿಸಿದವರು ಸಾಹಿತಿಗಳಾಗಿದ್ದರೆ ಅಧರ್ಮ. ಹಾಗೆ ಪಠ್ಯಪುಸ್ತಕಗಳಿಂದ ಮಕ್ಕಳಿಗೆ ಯಾವ ಜ್ಞಾನ ಸಿಗುತ್ತಿದೆ ಎನ್ನುವ ಬಗ್ಗೆ ತಿಳಿಯಲು ಶಾಲಾಕಾಲೇಜ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿಂದಿನ ಸಾಹಿತಿಗಳು ಯಾವುದೇ ಹೆಸರು ಹಣ ಅಧಿಕಾರದ ದಾಹಕ್ಕೆ ಒಳಗಾಗಿರದೆ ಸ್ವತಂತ್ರರಾಗಿದ್ದರು. ಕಾಲಬದಲಾದರೂ ಸತ್ಯ ಬದಲಾಗದು. ಸತ್ಯದ ಆಳ ಅಗಲ ಇದ್ದರೂ ಅದರೊಂದಿಗೆ ಹೋಗುವುದು ಮುಖ್ಯವಾಗಿತ್ತು. ಏನೇ ಇರಲಿ ಎಷ್ಟೇ ಮುಂದೆ ನಡೆದರೂ ಹಿಂದಿನ ಸತ್ಯ ಬಿಡದೆ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಭವಿಷ್ಯ ರೂಪಿಸುವ ಜವಾಬ್ದಾರಿ ಸಾಹಿತ್ಯ ಮಾಡಬೇಕು .ಕೆಲವರು ಮಾಡುತ್ತಿದ್ದರೂ ಅದು ಜನಸಾಮಾನ್ಯರವರೆಗೆ ತಲುಪುವಲ್ಲಿ ಹಿಂದುಳಿದಿದೆ. ಇದಕ್ಕೆ ಸಮಾಜ ಹೀಗಿದೆ.