ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, December 17, 2024

ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು.
ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿಯ ಮೇಲೇ ಎಲ್ಲಾ ನಿಂತಿದೆ.
ಹಿಂದೂ ದೇವರು ಕ್ರಿಶ್ಚಿಯನ್ ದೇವರು ಮುಸ್ಲಿಂ ದೇವರು ಎಂದು  ದೇವರಲ್ಲಿಯೇ‌ಮೂರು ಭಾಗ. ಅದರೊಳಗೆ ಸಾಕಷ್ಟು ಪಂಗಡ,ಪಂಥ,ವರ್ಗ  ಜಾತಿ....ಹೀಗೇ ಹೊರಗೆ ಬಂದಂತೆಲ್ಲಾ ಭೂಮಿಯಲ್ಲಿ ದೇವರಿಗೇ ಸ್ಥಾನ ಇಲ್ಲದೆ ಮಾನವ ಬೆಳೆದು  ಅನ್ಯರ ಸ್ವಾರ್ಥ ಕ್ಕೆ  ದೈವತ್ವವೇ ಬಲಿ.

ಪರಮಾತ್ಮನೊಳಗಿರುವ ಈ ಮೂರೂ ಶಕ್ತಿಯಿಂದಲೇ ಜಗತ್ತು ನಡೆದಿದೆ. ಯಾವಶಕ್ತಿ ಬೆಳೆಯುವುದೋ ಅದರ ಬಲ ಹೆಚ್ಚಾಗಿ ತಾಳತಪ್ಪುತ್ತದೆ.

ವಿದ್ಯಾಭ್ಯಾಸದಲ್ಲಿ ಮಕ್ಕಳು ಎಲ್ಲಾ ವಿಷಯದಲ್ಲಿಯೂ ಹೆಚ್ಚಿನ ಅಂಕ ಗಳಿಸಿದರೆ ಬುದ್ದಿವಂತರು. ಒಂದು ವಿಷಯದಲ್ಲಿ ಕಡಿಮೆಯಾದರೂ  ಅದರಲ್ಲಿ ದಡ್ಡರೆಂದಲ್ಲ  ಆದರೂ ಅದರಲ್ಲಿ ಆಸಕ್ತಿಯಿಲ್ಲವೆನ್ನಬಹುದು. ಹೀಗಾಗಿ ಪ್ರತಿಯೊಂದು ವಿಷಯವೂ  ಅದರದೇ ಆದ  ಶಕ್ತಿಯನ್ನು ಹೊಂದಿದ್ದು‌ಜೀವನ ನಡೆಸಲು ಸಹಕಾರಿಯಾಗಿರುತ್ತದೆ.
ಸತ್ವ ರಜಸ್ಸು ತಮಸ್ಸಿನ  ಗುಣಗಳು ಹೇಗೇ ಬೇರೆ ಬೇರೆ ಪ್ರಭಾವ ಬೀರುವುದೋ ಹಾಗೆಯೇ ದೇವರು,ಮಾನವರು,ಅಸುರರು ತಮ್ಮ ಶಕ್ತಿಯನ್ನು ಬಳಸಿಕೊಳ್ಳುವುದು ಬೇರೆ ಆಗಿರುತ್ತದೆ. ಭೂಮಿಯಲ್ಲಿ ಮನುಕುಲವಿದೆ ಆದರೆ ಆ ಮನುಕುಲದ ಒಳಗಿರುವ  ದೈವೀ ಶಕ್ತಿ ಅಸುರಿ ಶಕ್ತಿಯ  ನಡುವೆ ಮಾನವ ತನ್ನ ಶಕ್ತಿಯನ್ನು ಪ್ರದರ್ಶನ ಮಾಡುವುದೇ‌ಒಂದು ನಾಟಕವಾಗಿದೆ. ಇದರಲ್ಲಿ ದೈವೀ ಶಕ್ತಿಯಪಾತ್ರ  ಹೆಚ್ಚಾಗಿದ್ದರೆ‌  ಸಾತ್ವಿಕತೆ ಬೆಳೆಯಬಹುದು. ಅಸುರರ ಪಾತ್ರ ಹೆಚ್ಚಾದರೆ ಕಷ್ಟ ನಷ್ಟ.
ಪಾತ್ರಧಾರಿಗಳ ‌ ಉದ್ದೇಶ  ಸಮಾಜದಲ್ಲಿ  ಶಾಂತಿ ಸಮಾಧಾನ  ಸಮಾನತೆ ತರುವುದಾಗಿರದೆ‌ಕೇವಲ ಹಣ ಹೆಸರು ಸ್ಥಾನ ಪಡೆಯೋದಾದಾಗ  ಎಂತಹ ಪಾತ್ರ ಮಾಡಿದರೂ ಕ್ರಾಂತಿಯೆ.

ದೇವತೆಗಳ ಪುರಾಣ ಕಥೆ ಓದಿ ಮಹಾತ್ಮರಾಗಿದ್ದ ಹಿಂದೂಗಳು ಈಗ  ವ್ಯಕ್ತಿ ಪುರಾಣಕ್ಕೆ ಹೆಚ್ಚು ಬೆಲೆಕೊಡುವ ಕಾರಣ ಅದೇ ಸುದ್ದಿಯಾಗಿ ಪ್ರಸಿದ್ದರಾಗುವರು. ಇದರಿಂದಾಗಿ  ದೈವಶಕ್ತಿ ಹೆಚ್ಚುವುದೆ‌ಮಾನವ ಶಕ್ತಿಯೆ?
ಮಾನವ ಸಂಘ ಜೀವಿ. ಸಂಘಟನೆಯಿಂದ  ಒಗ್ಗಟ್ಟು ಏಕತೆ ಐಕ್ಯತೆಯ ಕಡೆಗೆ ನಡೆಯುವುದೇ ಜೀವನದ ಗುರಿ. ತತ್ವದಿಂದ  ಬೆರೆತರೆ ಶಾಂತಿ ತಂತ್ರದಿಂದ  ಬೆರೆತರೆ  ಅತಂತ್ರ ಸ್ಥಿತಿ.
ಇಲ್ಲಿ ತಂತ್ರದ ಹಿಂದೆ ಸ್ವತಂತ್ರ ಜ್ಞಾನವಿದ್ದರೆ ಸರಿ ಇಲ್ಲವಾದರೆ ಅತಂತ್ರವೇ.ಕಾರಣ ಯಾವಾಗ ನಾನು ಬೇರೆ ನೀನು ಬೇರೆ ಎನ್ನುವ ಭಿನ್ನಾಭಿಪ್ರಾಯ ಹೆಚ್ಚುವುದೋ ತಿಳಿಯದು.
ಒಟ್ಟಿನಲ್ಲಿ  ಮಾನವನಿಗೆ ಒಳಗೆ ಅಡಗಿರುವ ಸ್ವಾರ್ಥ ದ ಅಹಂಕಾರ  ಮಿತಿಮೀರಿದರೆ  ಅಸುರಶಕ್ತಿಯ ವಶದಲ್ಲಿ ಜೀವವಿದೆ ಎಂದರ್ಥ. ಇದರಿಂದ ಜೀವನ್ಮುಕ್ತಿ ಸಿಗದು.

Monday, December 16, 2024

ಕೃಷ್ಣ ಪ್ರೇಮಕ್ಕೂ ಮಾನವ ಪ್ರೀತಿಗೂ ವ್ಯತ್ಯಾಸವಿದೆ

ಪ್ರೀತಿ ಪ್ರೇಮಗಳ ಬಲೆಯಲ್ಲಿ ಮಾನವ ಸಿಲುಕಿದಷ್ಟೂ ನೋವು ಅಸಮಾಧಾನ ಆತ್ಮಹತ್ಯೆಗಳಾದರೆ  ಇದಕ್ಕೆ ಕಾರಣರು ಯಾರು?

ಎಷ್ಟೋ ಯುವ ಪೀಳಿಗೆ ಇದರಿಂದ ಹೊರಬರಲಾಗದೆ  ದಾರಿತಪ್ಪಿದ್ದರೂ  ಅದನ್ನು  ಇನ್ನಷ್ಟು ಮತ್ತಷ್ಟು ಮಾಧ್ಯಮಗಳು ಎತ್ತಿಹಿಡಿಯುತ್ತಾ  ಮಕ್ಕಳ ವರೆಗೂ ತಲುಪಿಸಿ ಸಣ್ಣ ವಯಸ್ಸಿನಲ್ಲಿಯೇ ಪ್ರೀತಿಯ ಕೊರತೆಯಾಗಿ ಮಕ್ಕಳು ಹೊರಗೆ ಬರುತ್ತಿದ್ದಾರೆಂದರೆ  ಪ್ರೇಮ ಕುರುಡು ಎನ್ನಬಹುದು.

ಕುರುಡು ಜಗತ್ತಿನಲ್ಲಿ ಪ್ರೇಮವನ್ನು  ಅಪಾರ್ಥ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳುವ‌ ಯುವಪೀಳಿಗೆಗೆ ಸರಿಯಾದ ಜ್ಞಾನದ ಶಿಕ್ಷಣ‌ ಕೊಡದಿರೋದೆ ಇದಕ್ಕೆ ಕಾರಣ.

ಮದುವೆಗಳು ವೈಭೋಗದಲ್ಲಿ ನಡೆಸುವರು ಅಷ್ಟೇ ವೇಗವಾಗಿ ವಿಚ್ಚೇಧನಗಳೂ ಸಿಗುತ್ತವೆಂದರೆ  ಪ್ರೇಮಕ್ಕೆ ಅರ್ಥ ವಿಲ್ಲ.ಕಾಮಕ್ಕೆ ಮಿತಿಯಿಲ್ಲವೆಂದರ್ಥ.
ಶ್ರೀ ಕೃಷ್ಣ ಪ್ರೇಮದಲ್ಲಿ ಜಗತ್ತನ್ನು ನೋಡುವ ದೃಷ್ಟಿ ಮಾನವನಿಗಿಲ್ಲ. ಸಂಸಾರವನ್ನು ನಡೆಸುತ್ತಿರುವ ಆ ಮಹಾಶಕ್ತಿಯ ಅರಿವಿಲ್ಲದೆ ನಾನೇ ಎನ್ನುವ ಅಹಂಕಾರವೇ  ಶತ್ರುವಾಗಿರುವಾಗ ಹೊರಗಿನ ಪ್ರೀತಿ ಪ್ರೇಮ ವ್ಯವಹಾರಕ್ಕೆ ಇಳಿದಾಗ ಹೆಚ್ಚು ಕಡಿಮೆ  ಹಣವೇ ಸರ್ವಸ್ವ ವಾಗುತ್ತದೆ.

ಭೂಮಿಯ ಮೇಲೆ  ಬರಲು ತಾಯಿ ತಂದೆಯರು ಕಾರಣ.ಅವರ ಪ್ರೀತಿಯ ಲಾಲನೆ ಪೋಷಣೆಯಿಂದ ಬೆಳೆದ ದೇಹಕ್ಕೆ ಉತ್ತಮ ಸಂಸ್ಕಾರದ ಶಿಕ್ಷಣ ಕೊಟ್ಟರೆ ಆಗ ಜೀವನಕ್ಕೆ ಅರ್ಥ ವಿರುತ್ತದೆ. ಸಂಸ್ಕಾರವಿಲ್ಲದೆ ಹಣ ಕೊಟ್ಟು ಬೆಳೆಸಿ ಪ್ರೇಮ ಪ್ರೀತಿಯ‌ಬಲೆಯೊಳಗೆಬಿಟ್ಟರೆ ಮುಗಿಯಿತು ಕಥೆ.
ಹೀಗಾಗಿ ಎಷ್ಟೋ ‌ಯುವಪೀಳಿಗೆ ದಾರಿತಪ್ಪಿ ಮುಂದೆ ನಡೆದು ಸಮಾಜವನ್ನು ಹಾಳು ಮಾಡುತ್ತಿರುವುದನ್ನು ಈಗ ಕಂಡರೂ ಕಾಲವೇ ಕಾರಣವೆಂದರೆ ತಪ್ಪು . ಕಾಲಮಾನಕ್ಕೆ ತಕ್ಕಂತೆ ಮನಸ್ಸು ಬದಲಾಗುತ್ತದೆ.ಮನಸ್ಸು  ಒಳಗಿರುವಾಗ ಅದರ ಬದಲಾವಣೆ ಯಾರಿಗೂ ಕಾಣದು. ಆದರೆ ಇದಕ್ಕೆ ಪೂರಕವಾದ  ವಿಷಯಗಳನ್ನು ಹೊರಗಿನ ಶಿಕ್ಷಣ ನೀಡಿ ಬೆಳೆಸಿರುವುದನ್ನು  ಒಪ್ಪಲೇಬೇಕಷ್ಟೆ. ಎಲ್ಲಿಯವರೆಗೆ ಯುವ ಜನತೆಗೆ ಯೋಗದ ಯೋಗ್ಯತೆಗೆ ತಕ್ಕಂತಹ  ನೈತಿಕ ಶಿಕ್ಷಣ ಸಿಗುವುದಿಲ್ಲವೋ  ಅಲ್ಲಿಯವರೆಗೆ  ಹೀಗೇ ಅನಾವಶ್ಯಕ ಅಗತ್ಯಕ್ಕೆ ಮೀರಿದ  ವಿಚಾರಗಳನ್ನು ಒಳಗೆಳೆದು ಕೊಂಡು  ಅಸುರಿ ಶಕ್ತಿಯ ಗುಲಾಮರಾಗುತ್ತಾ ಆತ್ಮಹತ್ಯೆಯ ಕಡೆಗೆ ನಡೆಯುವರು.

ನಾಟಕದ ಜಗತ್ತಿನಲ್ಲಿ ನಿಜವಾದ ಪ್ರೀತಿ ಪ್ರೇಮವಿರದು. ಎಲ್ಲಾ ವ್ಯವಹಾರಕ್ಕೆ ಇಳಿದಾಗ  ಸತ್ಯ ಧರ್ಮ ವಿರದು.ಸತ್ಯಧರ್ಮ ವೇ ಇಲ್ಲದ ಜೀವನ ಜೀವನವಾಗದು. 
ಕಲಿಕೆಯ ವಿಷಯವೇ ಸರಿಯಿಲ್ಲವಾದರೆ ಜ್ಞಾನಕ್ಕೆ ಬೆಲೆಯಿರದು. ಎಷ್ಟೋ ಗಂಡು ಮಕ್ಕಳಿಗೆ ಹೆಣ್ಣು ಸಿಗದ ಕಾರಣ ಹೆಚ್ಚು ಹಣಸಂಪಾದನೆಗಾಗಿ ಅಧರ್ಮ ಅನ್ಯಾಯ ಅಸತ್ಯಕ್ಕೆ ಶರಣಾಗುತ್ತಿದ್ದಾರೆಂದರೆ ಹೆಣ್ಣು  ಹಣ ನೋಡಿ ಒಪ್ಪುತ್ತಿದ್ದಾಳೆಯೆ? ಹಾಗಾದರೆ ಜ್ಞಾನದೇವತೆಯಾಗಬೇಕಿದ್ದ  ಸ್ತ್ರೀ ಗೆ ಅಜ್ಞಾನ‌ಮಿತಿಮೀರಿದೆ ಎಂದಾಗುತ್ತದೆ.
ಎಲ್ಲರೂ ಹಾಗಿರೋದಿಲ್ಲ.ಕೆಲವೆಡೆ ಸ್ತ್ರೀ ಶೋಷಣೆಗಳಿಗೆ ಕಾರಣವೇ ಬಡತನವಾಗುತ್ತಿದೆ. ಇಲ್ಲಿ ಹಣದಿಂದ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ ಎಂದರೂ ಅಸತ್ಯ ಅಜ್ಞಾನವೆ.

ಮನುಷ್ಯ ಜನ್ಮ ಪಡೆಯಲು  ಪುಣ್ಯ ಮಾಡಿರಬೇಕೆನ್ನುವರು.
ಮನುಷ್ಯನಿಗೆ ಜ್ಞಾನವಿಲ್ಲವಾದರೆ ವ್ಯರ್ಥ ಜೀವನ. ಈಗಲೂ ಎಷ್ಟೋ ಮಹಾತ್ಮರುಗಳಿದ್ದಾರೆ ಆದರೆ ಮದುವೆಯಾಗದೆ ಉಳಿದಿರುವರು. ಸಂಸಾರಕ್ಕೆ ಬಂದರೆ ಕಷ್ಟ ಎನ್ನುವ ಹಂತಕ್ಕೆ ಜ್ಞಾನಿಗಳಾದವರು ಹಿಂದುಳಿದಷ್ಟೂ ಅಜ್ಞಾನಿಗಳ ಸಂಖ್ಯೆ ಬೆಳೆಯುತ್ತದೆ.ಹೊರಗೆ ಪ್ರೀತಿಸುವ‌ನಾಟಕದಲ್ಲಿ  ಸಾಮಾನ್ಯರ ಪಾಡು ಹೇಳೋಹಾಗಿಲ್ಲ. ದುಷ್ಟ ಭ್ರಷ್ಟರ  ಹಣ‌ದಲ್ಲಿ ಹೆಣ್ಣು ಹೊನ್ನು ಮಣ್ಣು ಮುಳುಗಿದರೆ ಭೂಮಿಯಲ್ಲಿ ಧರ್ಮ/ ಇರುವುದೆ?
ಎಲ್ಲರೂ ಹಾಗಿರೋದಿಲ್ಲ.ಹಾಗಾಗಿ ಹಿಂದೂ ಧರ್ಮ ದ ಶಾಸ್ತ್ರ ಸಂಪ್ರದಾಯ ಹಲವರಿಗೆ ಮೂಡನಂಬಿಕೆಯಾಗಿ ಕಾಣುತ್ತದೆ. 
ಎಷ್ಟೋ  ಸನಾತನ ಶಾಸ್ತ್ರ ಪದ್ದತಿ ಸಂಪ್ರದಾಯಗಳ ಹಿಂದೆ ವಿಜ್ಞಾನವಿದ್ದರೂ ಅರ್ಥ ಮಾಡಿಸುವವರ ಸಂಖ್ಯೆ ಕುಸಿದು
ಮಕ್ಕಳು ಪ್ರಭುದ್ದರಾಗಿ ಹೊರಗೆ ಬೆಳೆದರೂ ಒಳಗೇ ಇರುವ ಅಜ್ಞಾನಕ್ಕೆ ಯಾವುದು ನಿಜವಾದಪ್ರೇಮ ಪ್ರೀತಿ ಎನ್ನುವ ಸತ್ಯದ ಅರಿವಿರದು.
ಆತ್ಮಹತ್ಯೆ ಮಹಾಪಾಪ ಎನ್ನುವರು. ಆದರೂ ಪಾಪ ಕಾರ್ಯ ಮಾಡುವರೆಂದರೆ ಅತೃಪ್ತ ಆತ್ಮಗಳು  ಹೆಚ್ಚು ಹರಡುತ್ತಿವೆ.
ಜಾತಿ, ಧರ್ಮ, ದೇಶ, ಲಿಂಗ ತಾರತಮ್ಯದಲ್ಲಿ  ಗೆದ್ದವರು ಯಾರು? ಸೋತವರು ಯಾರು?
ಅಂತರ ಬೆಳೆಸುತ್ತಾ ಹೋಗಿ ಅವಾಂತರಗಳೇ ಬೆಳೆದರೂ  ಸರಿ ನಾನು ಬದಲಾಗೋದಿಲ್ಲವೆಂದರೆ ನಾನು ಯಾರು? ನಾನೆಂಬುದಿಲ್ಲವೆಂದರೆ  ಒಪ್ಪಬಹುದೆ?
ಒಟ್ಟಿನಲ್ಲಿ ಜೀವನದಲ್ಲಿ ಪ್ರೀತಿ ವಿಶ್ವಾಸ ಸಂತೋಷ  ಸುಖವನ್ನು ಹೊರಗಿನಿಂದ ಬಯಸಿದಷ್ಟೂ  ಅತೃಪ್ತಿಯೇ ಹೆಚ್ಚುವುದು. ಒಳಗೇ ಕಂಡುಕೊಂಡರೆ  ತೃಪ್ತಿ . ಇದಕ್ಕೆ ಅಧ್ಯಾತ್ಮ ಅಗತ್ಯವಿದೆ.ತನ್ನ ತಾನರಿತು ಪರರನ್ನು ಪರಮಾತ್ಮನನ್ನು  ತಿಳಿಯುವುದೇ ಯೋಗಮಾರ್ಗ. ಯೋಗ್ಯ ಮಾರ್ಗ. ಇದಕ್ಕೆ ಸರಿಯಾದ ಗುರು ಶಿಕ್ಷಣ ಪೋಷಕರು ಬೆಳೆದಾಗ  ಬದಲಾವಣೆ ಸಾಧ್ಯ.
ಮದುವೆ  ಆಗದೆ  ಸಂಸಾರದ ಬಗ್ಗೆ ಉಪದೇಶ ಮಾಡೋದು ಸುಲಭ. ಮದುವೆ ಆಗಿ ಮಕ್ಕಳಾಗಿ  ಧರ್ಮ ಮಾರ್ಗದಲ್ಲಿ  ಮುಂದೆ ನಡೆದವರೆ ನಿಜವಾದ ಜ್ಞಾನಿಗಳಾಗಿರುವರು. 
ಹೊರಗಿನ ಮಂತ್ರ ತಂತ್ರ ಯಂತ್ರವನ್ನು ಪ್ರೀತಿಸುವ‌ ಮನಸ್ಸು  ಒಳಗಿದ್ದ  ಸತ್ಯ ಸತ್ವ ತತ್ವವನರಿಯದೆ  ಹೋದರೆ  ಮೋಸ ಹೋಗುತ್ತದೆ.

ಬಾಲ್ಯ ಯೌವನ,ಗೃಹಸ್ಥ ವಾನಪ್ರಸ್ಥ ಸಂನ್ಯಾಸವನ್ನು  ದಾಟಿ ಸಂಸಾರ ಬಂಧನದಿಂದ ಮುಕ್ತಿಗಳಿಸಿದವರು   ಮಹಾತ್ಮರು.

ಈಗ  ಹಣ ಅಧಿಕಾರ ಇದ್ದರೆ‌ ಸಂನ್ಯಾಸ ದೀಕ್ಷೆ‌ ಕೊಡುವ ಕಾಲ ಬಂದಿದೆ.ಜ್ಞಾನದ ಕೊರತೆಯಿದ್ದರೆ  ಯಾರಿಗೆ ಕಷ್ಟ ನಷ್ಟ?
ಒಳಗಿನ ಶಕ್ತಿ ಬಳಸಿ ಸ್ವತಂತ್ರ ಜೀವನ‌ ನಡೆಸಲು ಗುರು ವಾದವರು  ಸಹಕರಿಸಬೇಕು‌.ಹೊರಗಿನ ಸರ್ಕಾರದ ಹಿಂದೆ  ಜನರನ್ನು  ನಡೆಸಿ  ಇನ್ನಷ್ಟು ಸಾಲದ ಸುಳಿಗೆ ಸಿಲುಕಿಸಿದರೆ ಪ್ರೀತಿ ವಿಶ್ವಾಸ ವಿರದು.ಹೆಣವಾದರೂ‌ ಹಣಕ್ಕೆ‌ ಜೀವ‌ಬಾಯಿ‌ ಬಿಡುವಂತಾಗುತ್ತದೆನ್ನುವರು ತಿಳಿದವರು.. ಅತೃಪ್ತ ಆತ್ಮಗಳಾಗಿ  ಪರರನ್ನು ಕಾಡುತ್ತದೆ. ಕಾಣದ ಆತ್ಮಗಳ ಸಾಮ್ರಾಜ್ಯವನ್ನು  ಕಾಣೋದು ಕಷ್ಟವಿದೆ.. 
ಸತ್ಯ ಧರ್ಮ ದೆಡೆಗೆ ನಡೆಯುವುದೇ ಇದಕ್ಕೆ ಇರುವ ಏಕೈಕ ಮಾರ್ಗ.
ಇದು ಒಳಗಿದೆ ಹೊರಗಿಲ್ಲವೆನ್ನುವುದೂ ಸತ್ಯ. ಆತ್ಮಸಾಕ್ಷಿಗೆ ‌ಮೀರಿದ ಸತ್ಯವಿಲ್ಲ..ಆತ್ಮಹತ್ಯೆ ಮಹಾಪಾಪ ಎನ್ನುವರು.
ಹಲವು  ಕಡೆ  ಸಮಾಜದ ರೀತಿ ನೀತಿ ಸಂಸಾರದ ಕಟ್ಟುನಿಟ್ಟಿಗೆ  ಜೀವ ಬಲಿಯಾಗುತ್ತವೆ. ಇದಕ್ಕೆ ಹೊಣೆ ಯಾರು?  ಹಣೆಬರಹ  ಬದಲಾಯಿಸಿಕೊಳ್ಳಲು  ಸಾಧ್ಯವೆ?

ಕಾವಿಧರಿಸಿದಾಕ್ಷಣ ವೈರಾಗ್ಯ ಬರುವುದಾದರೆ ನಾಟಕದಲ್ಲಿ ಪಾತ್ರ ಮಾಡೋರಿಗೂ ಬರುತ್ತದೆಯೆ?
ಯಾರದ್ದೋ ಸಂತೋಷಕ್ಕಾಗಿ ಯಾರನ್ನೂ  ಬಲಿಕೊಡುವುದರಲ್ಲಿ  ಅರ್ಥ ವಿರದು.ಆದರೂ ಎಲ್ಲಾ ಕಾಲದ‌ಮಹಿಮೆ ಎನ್ನುವರು. ಕಲಿಕೆಯ ಮಹಿಮೆ ಎಂದರೆ ಸರಿಯಾಗಬಹುದು.

ಸಂಸಾರ ಬಂಧನದಿಂದ ‌ಬಿಡುಗಡೆಗಾಗಿ ಪ್ರಾರ್ಥ ನೆ ಮಾಡುತ್ತಿದ್ದ ಅಂದಿನ‌ ಗೃಹಸ್ಥ ರು  ಈಗ ಮದುವೆಯಾಗದೆಯೇ  ಉಳಿದರೂ ಸಮಾಜಕ್ಕೆ ನಷ್ಟವೆ.‌ಸಮಾಜದ‌ ಹಣ‌ ಜನರ ಋಣ ತೀರಿಸದೆ  ಜನ್ಮ ಕಳೆಯದು. ಕೊನೆಪಕ್ಷ  ಸಂಸಾರದಲ್ಲಿದ್ದೇ  ತನ್ನ ಋಣ ತೀರಿಸಲು ಸಾಧ್ಯವಾದರೆ ಅದೃಷೃ.  ಶುದ್ದ ಪ್ರೀತಿ ಪ್ರೇಮವಿದ್ದರೆ ಯಾವುದೂ ಕಷ್ಟವಿರದು. ಅದಕ್ಕೆ ಆತ್ಮಜ್ಞಾನ ಅಗತ್ಯ.

ಶ್ರೀ ಕೃಷ್ಣ ಪರಮಾತ್ಮನೇ ದೇವರೆ?

ಗಾಂಧಾರಿಯ ಶಾಪಕ್ಕೆ ಗುರಿಯಾದ ಶ್ರೀ ಕೃಷ್ಣನನ್ನು ಪರಮಾತ್ಮನೆನ್ನಬಹುದೆ? ಪರಮಾತ್ಮನಿಗೆ ಯಾವುದೂ ಅಂಟೋದಿಲ್ಲವೆಂದರೆ ಇದು ಹೇಗೆ ಸಾಧ್ಯ? ಎನ್ನುವ ಪ್ರಜಾಪಿತ ಬ್ರಹ್ಮಕುಮಾರಿ ಯ ಪೋಸ್ಟ್ ನೋಡಿದೆ ನಿಮ್ಮ  ಅಭಿಪ್ರಾಯ  ಅವರಿಗೆ ತಿಳಿಸಿ

ಇವರ ಪ್ರಕಾರ ಪರಮಾತ್ಮನಿಗೆ ಜನನ ಮರಣವಿಲ್ಲ ಎನ್ನುವುದಷ್ಟೆ ಸತ್ಯ. ಆದರೆ ಇವರು ಅವತಾರಗಳನ್ನು ನಂಬೋದಿಲ್ಲವೆಂದಾಗ  ಹಿಂದಿನ ಪುರಾಣಗಳನ್ನೂ ನಂಬೋದಿಲ್ಲ.ಅಲ್ಲಿನ ದೇವಾನುದೇವತೆಗಳೆಲ್ಲರೂ  ಪರಮಾತ್ಮರಲ್ಲವೆನ್ನುತ್ತಾರೆ.ಕಾರಣ ಅವರುಗಳಿಗೂ ಜನನ ಮರಣವಿತ್ತು ಎಂದು. ನೇರವಾಗಿ ಓದಿದವರಿಗೆ ಇದರಲ್ಲಿ ಸತ್ಯ ಕಾಣಬಹುದಷ್ಟೆ.ಆದರೆ ಆಳವಾದ ಅಧ್ಯಯನ ಮಾಡಿ ಅನುಭವಿಸಿ ತಿಳಿದ ಜ್ಞಾನಿಗಳು ಒಪ್ಪಲಾಗದು.ಕಾರಣ ಭೂಮಿ ಇರೋದೆ ಆ ಒಬ್ಬ ಭಗವಂತನ ಸೊಂಟದ ಭಾಗದಲ್ಲಿ ಎಂದಾಗ ಭೂಮಿಯಲ್ಲಿ ಅವತರಿಸೋದು  ಬೇರೆ ಜನಿಸೋದು ಬೇರೆ. ಜನನ ತಾಯಿ ಗರ್ಭದಿಂದಾದಾಗ ಅದನ್ನು  ಸ್ವಾಭಾವಿಕವಾಗಿರುತ್ತದೆ. ಹಾಗೆ ಎಷ್ಟೋಮಹಾ ಸ್ತ್ರೀ ‌ಪುರುಷರ ಜನನ ವಿಶೇಷವಾಗಿದೆ. ಈಗಿನ‌ಕಲಬೆರಕೆಯ ವಿಚಾರದಲ್ಲಿ ಇದು ಅರ್ಥ ವಾಗದೆ ಯಾರೋ ಹೊರಗಿನವರು  ಹೇಳಿದ್ದನ್ನು ಕೇಳಿಕೊಂಡು ಒಳಗೇ ಇದ್ದ ಪರಮಾತ್ಮನ‌ಮರೆತು ದೂರಹೋದವರ ಪಾಡು ಹೇಳಲು ಕಷ್ಟ. ಹೀಗಿರುವಾಗ  ಪರಮಾತ್ಮನ ವಿಚಾರ ಉಪದೇಶ ಮಾಡುವಷ್ಟು ಶಕ್ತಿ‌ ಇಂದು ಹೊರಗಿನವರಿಗಿಲ್ಲ.
ಈ ವಿಚಾರಕ್ಕೆ ಸಾಕಷ್ಟು  ಪ್ರತಿಕ್ರಿಯೆ ಉತ್ತರ ಬಂದವು. ಇಲ್ಲಿ ಪ್ರಜಾಪಿತ ಬ್ರಹ್ಮನೇ ಮಹಾವಿಷ್ಣುವಿನ  ಹೊಕ್ಕಳಿನಿಂದ ಹೊರಬಂದು ಮನುಕುಲದ ಸೃಷ್ಟಿ ಯಾಗಿದೆ ಎಂದು ಬ್ರಹ್ಮಜ್ಞಾನಿಗಳೇ ತಿಳಿಸಿರುವುದನ್ನು ಪುರಾಣ ತಿಳಿಸಿವೆ ಎಂದರೆ ಮಹರ್ಷಿಗಳಿಗಿಂತ  ಮಾನವರು ಬುದ್ದಿವಂತರೆ? ಜ್ಞಾನಿಗಳೆ? ಎನ್ನುವ ‌ಪ್ರಶ್ನೆ ಏಳುತ್ತದೆ. 
ಒಟ್ಟಿನಲ್ಲಿ ಕೇಳೋರಿದ್ದರೆ ಹೇಳೋರಿಗೇನೂ ಕೊರತೆಯಿಲ್ಲ.
ಕೇಳೋರು ಮೊದಲು ಆತ್ಮಾವಲೋಕನ ಮಾಡಿಕೊಂಡರೆ ಹೇಳೋರು  ಸುಮ್ಮನಿರಬಹುದು.
ಎಷ್ಟೋ ದೇವರಿದ್ದರೂ ದೈವತ್ವವಿಲ್ಲದೆ ಪರಮಾತ್ಮನ ಅರ್ಥ ತಿಳಿಯಲಾಗದು. ಜನನ ಮರಣದ‌ನಡುವೆ ಜೀವನವಿದೆ.
ಜೀವಿಗಳ ವನವಿದೆ. ಅದರ ಅರಿವಿನಲ್ಲಿ ಬದುಕಿದರೆ  ಭೂಮಿಯ  ಸತ್ಯ ಸತ್ವ ತತ್ವ ಒಳಗೇ ಕಾಣಬಹುದು. ಸಂಸಾರ ಬಿಟ್ಟು ನಡೆಯುವುದು ಸುಲಭ. ಅದರಲ್ಲೂ ಜನಬಲ ಹಣಬಲ ಅಧಿಕಾರಬಲ ಇದ್ದರೆ  ಯಾರೂ ಹೇಳೋರಿಲ್ಲ ಕೇಳೋದಿಲ್ಲವೆನ್ನುವ ಪರಿಸ್ಥಿತಿಯಲ್ಲಿ ಅವರವರ ಮನೆಯೊಳಗೆ ದೇವರನ್ನು ಪರಮಾತ್ಮನನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಡೆಯುವ ಜ್ಞಾನ ಅಗತ್ಯವಿತ್ತು.
ಪುರಾಣಗಳಿಂದ ಜ್ಞಾನ ಬರುತ್ತದೆ.ಅದನ್ನು  ಬಿಟ್ಟು ಅಥವಾ ಅದನ್ನು ಅಪಾರ್ಥ ಮಾಡಿಕೊಂಡು  ಹೊರಗೆ ಹರಡಿದರೆ ಇದೇ ರೀತಿಯಲ್ಲಿ  ಪ್ರಚಾರವಿರುತ್ತದೆ. 
ಏನೇ ಹೇಳಿದರೂ ಪರಮಾತ್ಮನೊಳಗಿರುವ ಜೀವಾತ್ಮರಿಗೆ  ಪರಮಸತ್ಯ ಪರಮಸುಖ,ಶಾಂತಿ ಸಿಗಲು ಆಂತರಿಕ ಶುದ್ದಿ ಅಗತ್ಯವೆಂದಿದ್ದಾರೆ ಮಹಾತ್ಮರು.
ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ....ಬಸವಣ್ಣನವರಂತೆ ಇದನ್ನು ತತ್ವಜ್ಞಾನಿಗಳು  ಅನುಭವಿಸಿ ತಿಳಿಸಿರುವಾಗ. ಈಗ ನಮ್ಮಲ್ಲಿ ಅಡಗಿರುವ ಲೋಪದೋಷಗಳನ್ನು  ಹೊರಗಿನವರು ಸರಿಪಡಿಸಲಾಗದು. ನಮ್ಮ  ಸತ್ಯವೇ ನಮಗೆ ದೇವರು. ಪರಮಾತ್ಮನಲ್ಲಿ ಸತ್ಯವೂ ಇದೆ ಮಿಥ್ಯವೂ ಇದೆ. ನಾವ್ಯಾರು ಎನ್ನುವುದು  ನಮಗೆ ತಿಳಿದರೆ ಸಾಕು. ಸತ್ಯದಿಂದ  ದೈವತ್ವ.ದೈವತ್ವದಿಂದ ಮುಕ್ತಿ ಮೋಕ್ಷ ಸಾಧನೆ ..ಕಣ್ಣಿಗೆ ಕಾಣದ ಬ್ರಹ್ಮನ ಕಾಣುವ ಬ್ರಹ್ಮಕುಮಾರ,ಬ್ರಹ್ಮಕುಮಾರಿಯರು ತೋರಿಸುವುದಾದರೆ  ಬಹಳ ಸಂತೋಷ.
 ಆದರೆ   ಇವರಲ್ಲಿ ಹಲವರು ಕಂಡ ಸತ್ಯ ಬೇರೆ ಇದೆ .ಕೆಲವೆಡೆ ಉತ್ತಮವಿರಬಹುದು. ಎಲ್ಲಾ ಪರಮಾತ್ಮನ ಇಚ್ಚೆಯೇ ಆಗಿದೆಯೆ? ಅಥವಾ ಮಾನವ ಇಚ್ಚೆಯೆ? 

ಇಲ್ಲಿ  ಅವತಾರಗಳ ಹಿಂದೆ ಪರಮಾತ್ಮನಿದ್ದರೂ ಕಾಣೋದಿಲ್ಲ
ನಾಟಕದಲ್ಲಿ  ಪಾತ್ರ ಮಾಡುವವರನ್ನು ದೇವರೆಂದರೆ  ನಂತರ ಅವರು  ಮಾನವರೆ . ಹಾಗೆ ಎಷ್ಟೋ ದೇವತೆಗಳ ಅವತಾರಗಳನ್ನು   ಜ್ಞಾನದಿಂದ ನೋಡದ ಕಣ್ಣುಗಳಿಗೆ  ಅವರು  ಮಾನವರಂತೆ ಕಾಣುವರು. ಹೋದ ಮೇಲೆ ದೇವರಾಗುವರೆಂದರೆ  ಮಾನವ ಇದ್ದಾಗ  ದೇವರಲ್ಲವೆಂದರ್ಥ ವೆ?
ದೈವತ್ವದ ಗುಣಜ್ಞಾನ ಹೊಂದಿದ್ದರೆ ಸ್ವಯಂ  ದೇವತೆಗಳೇ ನಡೆಸುವರು ಅದ್ವೈತ ದ ಪ್ರಕಾರ ಅವರಲ್ಲಿ ನಾನೇ ಎನ್ನುವ ಅಹಂಕಾರ ವಿರದು. ನಾನೆಂಬುದಿಲ್ಲವೆಂದರೆ  ಪರಮಾತ್ಮನೇ ನಾನು ಎಂದರ್ಥ ವಲ್ಲ  ನನ್ನ ನಡೆಸಿರುವುದೇ ಪರಮಶಕ್ತಿ ಎಂದಾಗುತ್ತದೆ.
ಒಟ್ಟಿನಲ್ಲಿ ಭೂಮಿಯಲ್ಲಿ ಜನ್ಮ ಪಡೆಯಲು  ಹಿಂದಿನ ಜನ್ಮದ ಋಣ ಕರ್ಮ ವೇ ಕಾರಣವೆನ್ನಲಾಗಿದೆ. ಇದು ಪರಮಾತ್ಮನಿಗೆ ಅನ್ವಯಿಸುವುದಿಲ್ಲವೆನ್ನುವುದೂ ಸತ್ಯ.
ಕಾರಣ ಎಲ್ಲರನ್ನೂ ಒಳಗಿಟ್ಟುಕೊಂಡು ನಡೆಸೋ ಪರಮಾತ್ಮನಿಗೇನೂ  ಜನನ ಮರಣವಿರದು. 
ಇದನ್ನು  ನಾವು ಸಾಮಾನ್ಯ ಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸಾಮಾನ್ಯರಲ್ಲಿ ಸಾಮಾನ್ಯರಂತಿರಬೇಕಷ್ಟೆ
ಯಾವಾಗ ನಮ್ಮಲ್ಲಿ ಅಹಂಕಾರ ಸ್ವಾರ್ಥ ಹೆಚ್ಚುವುದೋ  ಬೇರೆಯವರೊಳಗಿರುವ ಪರಮಾತ್ಮನ ಶಕ್ತಿ ಕಾಣದು. ಇದು ವ್ಯವಹಾರಕ್ಕೆ ಇಳಿದಾಗ ಹೆಚ್ಚಾಗುತ್ತದೆ.
ಕಲಿಕೆಯಲ್ಲಿ ವ್ಯವಹಾರವೇ ಮುಖ್ಯವಾದಾಗ ಇದು ಸಹಜ.
ಕಲಿಕೆ ಧರ್ಮ ಯುಕ್ತವಾಗಿದ್ದರೆ  ದೈವತ್ವ ವಾಗುತ್ತದೆ.ಎಲ್ಲದ್ದಕ್ಕೂ ಮೂಲವೇ ಶಿಕ್ಷಣ ಎನ್ನಬಹುದು. ‌

ವಾಸ್ತವದಲ್ಲಿ,

ಬ್ರಹ್ಮಕುಮಾರಿ ಇವರ ಉಪದೇಶ ಕೇಳಲು ಹೋದವರು ಸಂಸಾರ ಬಿಟ್ಟು ಹೊರಬಂದಿದ್ದಾರೆ.ಕೆಲವರಂತೂ ಸಂಸಾರದಲ್ಲಿದ್ದೇ ಕಲಹ ಸೃಷ್ಟಿ ಮಾಡಿಕೊಂಡಿರುವರು. ಹೋದವರು ಹಣ ನೀಡದೆ ಹೊರಗೆ ಬರುತ್ತಿಲ್ಲ. ಇದು ಸಣ್ಣ ಪುಟ್ಟ ಊರಲ್ಲಿ ನಡೆಯುತ್ತಿರುವ ಸತ್ಯ. ಆದರೆ ಯಾವ‌ ಮಠಾಧೀಶರೂ ಧಾರ್ಮಿಕ ಮುಖಂಡರೂ ಪ್ರಶ್ನೆ ಮಾಡಿಲ್ಲ ವೆಂದರೆ ಇವರನ್ನು ಪರಮಾತ್ಮ ನಡೆಸಿರುವುದೆ ?
 
ಭಗವದ್ಗೀತೆ ಯಲ್ಲಿ  ಪರಮಾತ್ಮ ತಿಳಿಸಿರುವಂತೆ  ಎಲ್ಲಾ ನನ್ನೊಳಗೇ ಇದ್ದರೂ ಎಲ್ಲಾ ನನ್ನ ಅರಿತಿಲ್ಲ . ಇದರರ್ಥ ನಾನೇ ಬೇರೆ ನೀನೇ ಬೇರೆ ಎಂದರೆ ಒಂದೇ ಎನ್ನುವ ಸತ್ಯದ ಅರಿವಾಗದು. 
ಉದಾಹರಣೆಗೆ ಭಾರತದೊಳಗೆ ಪ್ರಜಾಪ್ರಭುತ್ವ ವಿದೆ. ಪ್ರಜೆಗಳಿಲ್ಲದೆ  ಪ್ರಜಾಪ್ರಭುತ್ವ ವಿರದು.ಪ್ರಜೆಗಳಲ್ಲಿ ಜ್ಞಾನವಿಲ್ಲವಾದಾಗಲೇ  ಪ್ರಜಾಪ್ರಭುತ್ವ ಹದಗೆಡೋದು. ಇದಕ್ಕೆ  ಭಾರತಮಾತೆ ಕಾರಣವೆಂದರೆ ತಪ್ಪು. ಅವಳಿಗೇನೂ ಅಂಟದು.  ಅಂಟೋದು ಅಜ್ಞಾನವನ್ನು ಬೆಳೆಸಿರುವ ಪ್ರಜೆಗಳಿಗೇ ಎನ್ನಬಹುದು. ಹೀಗೇ  ಸಂಸಾರ ಸರಿಯಿಲ್ಲ ಎನ್ನುವ ಮೊದಲು ನಾನೆಷ್ಟು ಸರಿ ಎಂದು ತಿಳಿದರೆ ಉತ್ತಮ.
ಸರ್ಕಾರ ಸರಿಯಿಲ್ಲ ಎನ್ನುವ ಬದಲು ನನ್ನ ಸಹಕಾರ ಹೇಗಿದೆ ಯಾರಿಗಿದೆ ಎಂದು ತಿಳಿಯಬೇಕು.
ಮಕ್ಕಳು ಸರಿಯಿಲ್ಲ ಎನ್ನುವ ಬದಲು ಅವರಿಗೆ ಯಾವ ಜ್ಞಾನದ ಶಿಕ್ಷಣ ತಲೆಗೆ ತುಂಬಲಾಗಿದೆ ಎನ್ನುವ ವಿಚಾರ ಅಗತ್ಯ.
ಎಲ್ಲಾ ಸರಿಯಿದ್ದರೂ ತಪ್ಪು ಎಲ್ಲಿದೆ? ಎನ್ನುವಂತೆ ಎಲ್ಲಾ ದೇವತೆಗಳಿದ್ದರೂ ದೈವತ್ವದ ಕೊರತೆಯಿದೆ ಎಂದರೆ ದೈವೀಕ ಗುಣಜ್ಞಾನ ನಮ್ಮಲ್ಲಿ ಕುಸಿದಿದೆ. ..ಹಾಗಾಗಿ ದೇವರನ್ನು ಹೊರಗೆ ನೋಡುವಷ್ಟು ಒಳಗೆ ನೋಡಲಾಗದೆ ಪರಮಾತ್ಮನ ವಿಚಾರದಲ್ಲಿ  ಭಿನ್ನಾಭಿಪ್ರಾಯ ಬೆಳೆದುನಿಂತಿದೆ.ಇದರಿಂದ ಪರಮಾತ್ಮನಿಗೆ ಸಮಸ್ಯೆಯಿಲ್ಲ ಜೀವಾತ್ಮನಿಗೇ ಸಮಸ್ಯೆ.
ಜ್ಞಾನಕ್ಕೆ ಕೊರತೆಯಿಲ್ಲ ಆದರೆ ಗುರುತಿಸಿ ಬೆಳೆಸುವ ಗುರುವಿನ ಕೊರತೆಯಿದೆ. ಗುರುವಿನಿಂದ ದೇವರನ್ನು ಕಾಣಬಹುದು.‌ದೇವರಿಂದ ಪರಮಾತ್ಮನ ತಲುಪಬಹುದು...

ಸ್ತ್ರೀ ಗೆ ವೈರಾಗ್ಯ ಬಂದರೆ ಸಂಸಾರ ನಡೆಯದು. ಇದೀಗ ಎತ್ತ ಸಾಗಿದೆ.. 
ಬ್ರಹ್ಮಜ್ಞಾನಕ್ಕೆ ಸೃಷ್ಟಿ ಯ ರಹಸ್ಯ ಅರ್ಥ ವಾಗಬೇಕು.‌ನಂತರ ಸ್ಥಿತಿಗೆ ಕಾರಣ ತಿಳಿದು ಲಯಕಾರಕ ಶಿವನ ಮುಕ್ತಿಯ ಮಾರ್ಗ ಹಿಡಿಯುವ ಕರ್ಮ ಮಾಡಬಹುದು.
ಏನೂ ಕೆಲಸ ಮಾಡದೆ  ಉಪದೇಶ ಮಾಡಿದರೆ ಅರ್ಥ ವಿರದು.‌ಭೂಮಿ ನಡೆದಿರೋದೆ ಕರ್ಮ ಯೋಗಿಗಳಿಂದ.ಇದಕ್ಕೆ ಜ್ಞಾನವೇ ಮುಖ್ಯ.ಶಿಕ್ಷಣವೇ ದಾರಿತಪ್ಪಿರುವಾಗ ಎಲ್ಲಿಯ ಬ್ರಹ್ಮಜ್ಞಾನ?

 ಅವತಾರ  ಲೋಕಕಲ್ಯಾಣಕ್ಕಾಗಿ ನಡೆಯುವುದು. ಭೂಮಿಯ ಮಾಯೆ ಯಾರನ್ನು ಬಿಡದು. ಮಾಯೆಯ ವಶದಲ್ಲಿದ್ದರೂ ಸ್ಥಿತಪ್ರಜ್ಞಾವಂತನಾಗಿರೋದು  ಅವತಾರಿಗಳ ವಿಶೇಷ ಶಕ್ತಿ. 
ವಿಷ್ಣುವಿನ  ಅವತಾರಗಳಲ್ಲಿ  ಬದಲಾವಣೆ ಕಂಡರೂ  ಶಕ್ತಿ ಒಂದೇ ರೂಪ ಹಲವು. 

ಗುರುವೇ ದೇವರು

ದೇವರಿಗಿಂತ ಗುರು ದೊಡ್ಡವರು ಎನ್ನುವರು. ನಿರಾಕಾರ ದೇವರು ಸಾಕಾರ ಗುರುವಿನ ಮೂಲಕ ಕೆಲಸ ಮಾಡಿಸುವಾಗ ಗುರು ಒಲಿದರೆ ಜ್ಞಾನ ಮುನಿದರೆ ಅಜ್ಞಾನ.

ದತ್ತಾತ್ರೇಯ ಅವತಾರ :-

'ಅನುಸೂಯ' ಎಂದರೆ “ಅಸೂಯೆ” ಇಲ್ಲದವಳು. ಇದು ಎಲ್ಲಿ ಇರುವುದಿಲ್ಲವೋ ಅದೇ “ಅತ್ರಿ”. ಹಾಗೆಯೇ ಮೂರು ವಿಚಾರಗಳಾದ, ಜಾಗೃತ್ -ಸ್ವಪ್ನ - ಸುಷುಪ್ತಿ, ಮತ್ತು  ಬಾಲ್ಯ -ಯೌವನ -ಜರಾ, ಹಾಗೆ ಸತ್ವ- ರಜ -ತಮ ಗುಣಗಳಂಥ ಅವಸ್ಥೆಗಳನ್ನು ಹಾಗೂ ಕರ್ತೃ -ಕರ್ಮ- ಕರಣ  ಇವುಗಳನ್ನು  ಮೀರಿದವನು, ಕಾಮ, ಕ್ರೋಧ, ಲೋಭ ಎಂಬ ಇಂದ್ರಿಯ ಗಳನ್ನು ಜಯಿಸಿದವರು,'ಅತ್ರಿ'ಆಗುತ್ತಾರೆ. ಇವರ ಆತ್ಮದಲ್ಲಿ ಭಗವಂತ ನೆಲೆಸುತ್ತಾನೆ. ಈ ಎಲ್ಲವನ್ನೂ ಮೀರಿದ “ಅತ್ರಿ” 
ಗಳನ್ನು ಯಾವುದೇ ಮನುಷ್ಯ ಶ್ರದ್ಧೆ- ಭಕ್ತಿಯಿಂದ ಆರಾಧಿ ಸುತ್ತಾನೋ, ಪೂಜಿಸುತ್ತಾರೋ ಅವರ ತಾಪತ್ರಯಗಳು ನೀಗುತ್ತದೆ. ಅದಿ ಭೌತಿಕ -ಅದಿ ದೈವಿಕ- ಆಧ್ಯಾತ್ಮಿಕ ಎಂಬ ಮೂರು ವಿಧದ ತಾಪತ್ರಯಗಳು  ಅಂದರೆ ದೇಹಕ್ಕೆ ಬರುವ ರೋಗರುಜನಿಗಳು, ದೈವಾನುಗ್ರಹ ಇಲ್ಲದವರಿಗೆ ಬರುವಂತ ಹದು, ಹಾಗೂ ಒಂದು ತರ ಪ್ರಾರಬ್ಧ ಕರ್ಮಗಳು, ಪೂರ್ವ ಜನ್ಮದಲ್ಲಿ ಮಾಡಿದ ಸಂಚಿತ ಪಾಪ ಅಂದರೆ ಉಳಿದ ಪಾಪಗಳನ್ನು ತುಂಬಿಸಿಟ್ಟ ಚೀಲ ಸಂಚಿತ ಪಾಪದ ಗಂಟು. ಇಂಥ ಪಾಪ ಗಳಿಂದ ಮುಕ್ತರಾಗ ಬೇಕು ಎಂದರೆ ಎಲ್ಲವನ್ನು ಮೀರಿದ ಅತ್ರಿ ಮಹರ್ಷಿಗಳನ್ನು ಪೂಜಿಸುವ ಮೂಲಕ   ಪಾಪ ಕರ್ಮಗಳು ಕಳೆಯುತ್ತವೆ.  

ಅತ್ರಿ ಮಹರ್ಷಿ, ಇವರು ತಮ್ಮ ತಪಸ್ಸು, ಧ್ಯಾನ, ಸತ್ಯ, ನಿಷ್ಠೆ,
ತಾಳ್ಮೆ, ಶ್ರದ್ಧೆ, ನಿಷ್ಕಲ್ಮಶ ಪ್ರೀತಿ ಗಳಿಂದ ಶ್ರೇಷ್ಠರಾದವರು. ಭಗವಂತನ ಮತ್ಸ್ಯ,ಕೂರ್ಮ,ವಾಮನ, ನರಸಿಂಹ, ರಾಮ, ಕೃಷ್ಣ ಅವತಾರಗಳ ಉದ್ದೇಶ ರಾಕ್ಷಸ ಸಂಹಾರ ಮಾಡುವುದ   ಆಗಿತ್ತು. ಆದರೆ “ಅಜ್ಞಾನ ಸಂಹಾರ' ಮಾಡುವ ಸಲುವಾಗಿ ಗುರು ಸ್ವರೂಪ 'ದತ್ತಾತ್ರೇಯರು' ಅವತಾರ ತಾಳಿದರು.
ದತ್ತಾವತಾರ ಆಗಿದ್ದು ಹೇಗೆ?

ಭಗವಂತನ “ದತ್ತಾತ್ರೇಯ” ಅವತರಣ ಆಗುವ ಒಂದು ಸಂದರ್ಭ ಹೀಗಿತ್ತು. ಒಮ್ಮೆ ಭಗವಂತ  ವೈಕುಂಠದಲ್ಲಿರುವ ಎಲ್ಲಾ ಸಂಪತ್ತನ್ನು ಖಾಲಿ ಮಾಡಬೇಕೆಂದು ನಿರ್ಧರಿಸಿದನು. (ಮನುಷ್ಯನೂ ಹಾಗೆ ಮನಸ್ಸಿನ ವಿಷಯಗಳನ್ನು ಖಾಲಿ ಮಾಡುವುದರ ಜೊತೆಗೆ, ಗಳಿಸಿದ ಸಂಪತ್ತನ್ನು ಖಾಲಿ ಮಾಡಿ ದಾಗ  ಕಲಿತ ಜ್ಞಾನ ಮಾತ್ರ ಉಳಿಯುವುದು) ಹಾಗೆ ದಾನ ಮಾಡಲು ಒಂದು ಯಾಗವನ್ನು ಕೈಗೊಂಡನು. ಈ ಯಜ್ಞದ ಮುಖ್ಯ ಉದ್ದೇಶ ತನ್ನಲ್ಲಿರುವ  ಸಕಲ ಸಂಪತ್ತು- ವಸ್ತುಗಳ ನ್ನು ಖಾಲಿ ಮಾಡುವುದೇ ಆಗಿತ್ತು. ಯಾಗದ ದಿನವನ್ನು  ಗೊತ್ತು ಮಾಡಿ,  ಚಕ್ರವರ್ತಿಗಳು, ಋಷಿಮುನಿಗಳು ಮತ್ತು ಬ್ರಾಹ್ಮಣರಿಗೆ ವೈಕುಂಠಕ್ಕೆ ಬರಲು ಆಹ್ವಾನ ಕಳಿಸಿದನು. 

ಯಾಗದ ದಿನ ಮಹರ್ಷಿಗಳಾದ ಭೃಗು- ವಿಶ್ವಾಮಿತ್ರ-  ಭಾರದ್ವಾಜ- ವಸಿಷ್ಠರು - ಅಗಸ್ತ್ಯರು- ಕಶ್ಯಪ- ಜಮದಗ್ನಿ- ವಸಿಷ್ಠ- ಗೌತಮ ಮಹರ್ಷಿ, ಚಕ್ರವರ್ತಿಗಳು,  ಬ್ರಾಹ್ಮಣರು 
ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯಜ್ಞಕ್ಕೆ  ಬಂದರು. ಯಜ್ಞ ಮುಗಿಯಿತು ಪೂರ್ಣಾಹುತಿ ಕೊಟ್ಟು. ಎಲ್ಲರಿಗೂ ಭಗವಂತನೇ ಮುಂದೆ ನಿಂತು ಅತಿಥಿ ಸತ್ಕಾರ ಮಾಡಿ, ಸತ್ಕರಿಸಿ ಅತಿಥಿಗಳಿಗೆ ಹೇಳಿದ, ಈ ವೈಕುಂಠದಲ್ಲಿರುವ ಸಂಪತ್ತನ್ನು  ಯಾರಿಗೆ ಏನೇನು ಬೇಕೋ  ತೆಗೆದುಕೊಂಡು  ಹೋಗಿ, ಇಲ್ಲಿ ಅಪ್ಸರೆಯರು ಆನೆ, ಕುದುರೆ, ಗೋವು, ರಥ, ಚಿನ್ನ, ವಜ್ರ -ವೈಡೂರ್ಯ, ಸಿಂಹಾಸನ, ರತ್ನ- ಧನ- ಕನಕ  ಪಿತಾಂಬರ ಮುತ್ತು ರತ್ನಗಳಿಂದ ಕಟ್ಟಿದ ವೈಕುಂಠದ ಕಂಬ ತೊಲೆ ಬಾಗಿಲು ಎಲ್ಲವನ್ನು ಅತಿಥಿಗಳು ತೆಗೆದುಕೊಂಡು ಹೋದರು. ಕೊನೆಗೆ ದ್ವಾರಪಾಲಕರಾದ ಜಯ -ವಿಜಯ ರ ಕೈಲಿದ್ದ ಬೆಳ್ಳಿ ದಂಡವನ್ನು  ತೆಗೆದುಕೊಂಡು ಹೋದರು. ವೈಕುಂಠ ಖಾಲಿ. ಖಾಲಿಯಾದ ವೈಕುಂಠದಲ್ಲಿ ಭಗವಂತ ಒಬ್ಬನೇ ಕುಳಿತಿದ್ದಾನೆ. ಯಜ್ಞ ಕಾರ್ಯಕ್ಕೆ ಬಂದವರೆಲ್ಲ ಸ್ಮೃತಿ ಪಟಲದಲ್ಲಿ ಬಂದರು. ಆದರೆ ಅತ್ರಿ ಮಹರ್ಷಿಗಳು ಬಂದಿಲ್ಲ ಎಂಬುದು ಗಮನಕ್ಕೆ ಬಂದು ಅವರನ್ನು ಕರೆ ತರಲು ಜಯ ವಿಜಯರನ್ನು ಕಳಿಸಿದನು.

ದ್ವಾರಪಾಲಕರು ಅತ್ರಿ ಮಹರ್ಷಿಗಳನ್ನು ಕರೆಯಲು ಬಂದಾಗ,ಅತ್ರಿಗಳು  ಜಪ -ತಪ  ನಿತ್ಯಾನುಷ್ಟಾನಗಳಲ್ಲಿ ತೊಡಗಿದ್ದು, ಇನ್ನೂ ಮುಗಿದಿರಲಿಲ್ಲ. ಅಹ್ನಿಕ ಮಾಡುವುದು ಬಾಕಿ ಇತ್ತು ಅವರು ಅನುಷ್ಠಾನಗಳನ್ನು ಮುಗಿಸಿ ಬರುತ್ತೇನೆ,
ಎಂದು ಕೈ ಸನ್ನೆ ಮಾಡಿ ಹೇಳಿ, ನೀವು ಹೋಗಿ ಎಂದರು. ಮಹರ್ಷಿಗಳು ಎಲ್ಲಾ ಮುಗಿಸಿ ವೈಕುಂಠಕ್ಕೆ ಬಂದರು. ದ್ವಾರಪಾಲಕರು, ಮಹರ್ಷಿಗಳೇ ಈಗ ಬಂದಿರಲ್ಲ ಇಲ್ಲಿ ಏನೂ ಉಳಿದಿಲ್ಲ  ಎಲ್ಲಾ ಖಾಲಿ ಎಂದರು. ಅತ್ರಿಗಳು ಹೇಳಿದರು ನಾನು ಬಂದಿರುವ ವಿಷಯ ಭಗವಂತನಿಗೆ ಹೇಳು ಎನ್ನುತ್ತಿದ್ದಂತೆ. ಸ್ವತಃ ಭಗವಂತನೇ ಎದ್ದು ಬಂದು ಅತ್ರಿ ಮಹರ್ಷಿಗಳನ್ನು ಒಳಗೆ ಕರೆದೊಯ್ದು ಹೇಳಿದ, ಮಹರ್ಷಿಗಳೇ ನಿಮ್ಮನ್ನು ಕೂರಿಸಲು ಒಂದು ಆಸನವೂ ಇಲ್ಲ. ನಿಮಗೆ ಏನು ಕೊಡಲಿ ಮಹರ್ಷಿಗಳೇ ಎಂದನು.  ಏಕೆ ಹಾಗೆ ಹೇಳುವೆ ನಾರಾಯಣ, ಎಲ್ಲಾ ಖಾಲಿಯಾದರೆ ಆಗಲಿ 
ನನಗೆ ನೀನಿರುವೆಯಲ್ಲ ಎಂದರು.

ಭಗವಂತನಿಗೆ  ಅದೇ ಬೇಕಾಗಿತ್ತು ಅವರ ಮಾತನ್ನು ಒಪ್ಪಿ ಹೇಳಿದ, ನನ್ನ ವಿನಃ ನಿಮಗೆ ಕೊಡಲು ಬೇರೆ ಎನೂ ಇಲ್ಲ ನಾನು  ನಿಮ್ಮ ನಿಷ್ಠೆ- ಅನುಷ್ಠಾನವನ್ನು ಮೆಚ್ಚಿದ್ದೇನೆ. ಆದ್ದರಿಂದ ನಾನೇ ಸ್ವತಃ ನನ್ನನ್ನೇ  ನಿಮಗೆ ದಾನ ಕೊಡುವೆ ಎಂದನು. ಭಗವಂತ ತನ್ನನ್ನು ತಾನೇ ಅತ್ರಿ ಮಹರ್ಷಿಗಳಿಗೆ ದಾನ ಕೊಟ್ಟನು. ಹೀಗೆ ಅತ್ರಿಗಳಿಗೆ ಪಾನಿ ದಾನವಾಗಿ ಕೊಟ್ಟುಕೊಂಡ ಕಾರಣ 'ದತ್ತ' ಎಂಬ ಹೆಸರು ಬಂದಿತು. ಮುಂದೆ ಅತ್ರಿ- ಅನುಸೂಯಾ ದಂಪತಿಗಳ ಮಗನಾಗಿ  ಭಗವಂತನೇ “ದತ್ತಾತ್ರೇಯ”ನಾಗಿ ಅವತರಿಸಿದನು. 

ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ
ದೇವ: ಸದಾಶಿವ: ! 
ಮೂರ್ತಿ ತ್ರಯ ಸ್ವರೂಪಾಯ
ದತ್ತಾತ್ರೇಯ ನಮೋಸ್ತುತೆ!!

 ವಾಟ್ಸಪ್  ಸಂಗ್ರಹ---

ನಮ್ಮ ಅಜ್ಜಿ ನಾವು ಸಣ್ಣವರಿರುವಾಗ ಶಾಲೆಗೆ ರಜೆ ಬಂತೆಂದರೆ  ಮನೆಗೆ ಬರೋರು. ಆಗ ರಾಮಾಯಣ ‌ ಶನಿಮಹಾತ್ಮೆ, ಗುರು ಚರಿತ್ರೆ ಹೀಗೇ ಪುರಾಣದ ಪುಸ್ತಕ ಓದಿಸುತ್ತಿದ್ದರು. ನನಗೆ ಆಗ  ಅದರಲ್ಲಿ ಏನೂ ಅರ್ಥ ವಾಗುತ್ತಿರಲಿಲ್ಲ.ಅಕ್ಕಂದಿರು ಓದಿದರೆ ಜೊತೆಗೆ ಕುಳಿತು ಕೇಳೋದಷ್ಟೆ.  ಆದರೆ ಅದರ ಪ್ರಭಾವ ನಿಧಾನವಾಗಿ ಆಗೇ ಆಗುವುದೆನ್ನುವುದರ ಅರಿವು ಈಗ ಆಗಿದೆ. ಈ ಜನ್ಮದಲ್ಲಿ  ಭಗವದ್ಗೀತೆ ಓದಿರಲಿಲ್ಲ   ೩೬ನೇ ವಯಸ್ಸಿನಲ್ಲಿ ಅದರ ವಿಚಾರ ಒಳಗಿನಿಂದ ತಿಳಿಯುತ್ತಾ ಅದರೊಂದಿಗೆ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ತನ್ನ ತಾನರಿಯುವ ಪ್ರಯತ್ನದಲ್ಲಿ  ಇಲ್ಲಿಯವರೆಗೆ  ಅನುಭವಿಸಿ ತಿಳಿದ ವಿಚಾರವನ್ನು ಲೇಖನಗಳ ಮೂಲಕ ಹೊರಹಾಕುವ ಪ್ರಯತ್ನ  ಆಗಿದೆ. ಆತ್ಮಜ್ಞಾನ ಓದಿ ಬರೋದಲ್ಲ ಅನುಭವಿಸಿ ತಿಳಿಯೋದು  ಎನ್ನುವ ಸತ್ಯ ಅರ್ಥ ವಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಒಳಗೆ ಹೊರಗೆ  ಹುಡುಕಿ ಕೇಳಿ,ನೋಡಿ,ಮಾಡಿದ ಮೇಲೆ ಎರಡೂ ಕಡೆಯೂ ಒಂದೇ ಶಕ್ತಿ ಇರೋವಾಗ ಅರಿವೇ ಗುರು.
ಸಣ್ಣವಳಿದ್ದಾಗ ಇದ್ದ ಪ್ರಶ್ನೆಗೂ ಈಗಿನ ಪ್ರಶ್ನೆಗೂ ಅಂತರವಿದೆ.
ಅಂದು ನನಗೇನೂ ತಿಳಿದಿರಲಿಲ್ಲವೆಂದು ಪ್ರಶ್ನೆ ಮಾಡಿದರೆ ಈಗ  ತಿಳಿದ ಮೇಲೂ ಹೊರಗಿರುವ  ಅಸತ್ಯ ಅ ನ್ಯಾಯ ಅಧರ್ಮ ವನ್ನು ಪ್ರಶ್ನೆ ಮಾಡುವ ಅಧಿಕಾರಯಾಕಿಲ್ಲ ಎಂದು ತಿಳಿದವರಿಗೆ ಪ್ರಶ್ನೆ ಮಾಡಿದರೂ ಉತ್ತರವಿಲ್ಲ.
ಕೆಲವರಿಗೆ ತಪ್ಪು ಎಂದು ತಿಳಿದರೂ ತಿಳಿಸೋದಿಲ್ಲ.
ಹಲವರಿಗೆ  ಸತ್ಯದ ಅರಿವಿಲ್ಲದೆ ತಪ್ಪು ದಾರಿ ಹಿಡಿಯುವರು.
ಇದರಲ್ಲಿ  ನಿಜವಾದ ತಪ್ಪಿತಸ್ಥ ರು ಯಾರು? ಎಂದರೆ ತಿಳಿದವರು ಎನ್ನುವರು. ಹೀಗಾಗಿ ಶಿಕ್ಷಣದಲ್ಲಿ ತಪ್ಪಾದರೆ  ಮಕ್ಕಳ ತಪ್ಪಲ್ಲ. ಬೇಲಿಯೇ ಎದ್ದು ಹೊಲಮೇಯ್ದರೆ  ಕಾಯೋರಿಲ್ಲವೆನ್ನುವಂತಹ ಪರಿಸ್ಥಿತಿಗೆ  ಬಂದಾಗಲೇ ಅವತಾರವೆತ್ತಿ ಬರೋದು ಗುರುಗಳು. 
ದತ್ತಾತ್ರೇಯ ತ್ರಿಮೂರ್ತಿಗಳ ಅಂಶದಿಂದ ಅವತಾರ ತಾಳಿದ ಮಹಾವಿಷ್ಣುವಿನ ಗುರುಸ್ವರೂಪರು. ಎಲ್ಲಾ ಪುರಾಣ ಓದಿ ದೇವತೆಗಳನ್ನು ತಿಳಿಯಬಹುದು. ಗುರು ಚರಿತ್ರೆ ಓದಿದರೆ  ನಮ್ಮ ಈ ಸ್ಥಿತಿಗೆ‌ ಕಾರಣದ ಜೊತೆಗೆ ಪರಿಹಾರವೂ ಸಿಗಬಹುದು. 
ನಮ್ಮಜ್ಜಿ ಸೀತಮ್ಮನವರು ಬಹಳ ದೈವಭಕ್ತರು ಜ್ಞಾನಿಗಳು  ಸತ್ಯ ಅನುಭವಿಸಿ  ತಿಳಿದವರು.ಕಷ್ಟಪಟ್ಟು ಜೀವನ ಸಾಗಿಸಿದವರು.ನಮ್ಮಮ್ಮ ಶ್ರೀಮತಿ ಮಹಾಲಕ್ಷ್ಮಿ ಪತಿವ್ರತೆ ಸಾದ್ವಿ ಆಚಾರವಂತರಾಗಿ  ಸರಳ ಜೀವನದ ಜೊತೆಗೆ ಸಾತ್ವಿಕರಾಗಿದ್ದರು. ತಂದೆಯವರು  ದಿವಂಗತರಾದ ಶ್ರೀ ಶೇಷಭಟ್ಟರು ಶಿಕ್ಷಕರಾಗಿ,ಶಾಲಾತನಿಖಾಧಿಕಾರಿಗಳಾಗಿ ನಿವೃತ್ತಿ ಹೊಂದಿದ ಮೇಲೆ ದೇವತಾಕಾರ್ಯದಲ್ಲಿ ತೊಡಗಿಸಿಕೊಂಡು ದೊಡ್ಡ ಸಂಸಾರದ ಜವಾಬ್ದಾರಿಯನ್ನು  ಸುಸೂತ್ರವಾಗಿ ಮುಗಿಸಿ ಸ್ವರ್ಗಸ್ಥರಾದರು. ಅಮ್ಮ ಹೋದ ವರ್ಷದಲ್ಲಿಯೇ ಅಪ್ಪನ ಕಳೆದುಕೊಂಡ  ಮೇಲೆ  ನನ್ನ  ಬರವಣಿಗೆಯಲ್ಲಿ  ಹೊರಬರುವ ವಿಚಾರದಲ್ಲಿ  ಹೆಚ್ಚು ಗಮನಿಸುತ್ತಾ ಮುಂದೆ ಬಂದ ನನಗೆ  ಕೆಲವು  ಸತ್ಯ  ತಡವಾಗಿ ಸ್ಪಷ್ಟ ವಾದರೂ  ಮೊದಲಿನಿಂದಲೂ  ನನ್ನ  ಪ್ರಶ್ನೆಗೆ ಉತ್ತರ ನೀಡದವರ  ಜೊತೆಗೆ ಇದ್ದರೂ  ಪ್ರಶ್ನೆ ಮಾಡುವುದನ್ನು ಬಿಟ್ಟಿದ್ದೇನೆಂದರೆ ಉತ್ತರ ಒಳಗೇ ಸಿಗುವಾಗ ಪ್ರಶ್ನೆ  ಬರೋದಿಲ್ಲ.
ಆದರೆ ಭೌತಿಕ ಜಗತ್ತಿನಲ್ಲಿ  ಉತ್ತರಕ್ಕಾಗಿ ಸಾಕಷ್ಟು ಪ್ರಯೋಗ ನಡೆಯುತ್ತದೆ. ಆ ಪ್ರಯೋಗ ಯೋಗದಿಂದ  ಆದಾಗ ಉತ್ತರ ಸಿಗಬಹುದು. ಹೀಗಾಗಿ ಭಗವಂತ ಯೋಗಿಗಳಲ್ಲಿ ಹೆಚ್ಚಾಗಿ ಕಾಣುವನು. ಭೋಗದಲ್ಲಿ‌  ಕಾಣೋದು ಕಷ್ಟ.

ಯೋಗವೆಂದರೆ  ಸೇರೋದು ಕೂಡೋದು ಸಹಕರಿಸೋದು
ಇದರಲ್ಲಿ ಸತ್ಯಕ್ಕೆ ಸತ್ಯ ಸೇರಬೇಕು, ಸತ್ಯಕ್ಕೆ ಧರ್ಮ ಸೇರಬೇಕು
ಜೀವಾತ್ಮನು ಪರಮಾತ್ಮನ ಸೇರಬೇಕು. ಯಾವಾಗಿದು ವಿರುದ್ದ ಹೋಗುವುದೋ  ಅದೇ ಅಧರ್ಮ ವಾಗುತ್ತದೆ.

ಪರಮಾತ್ಮನ  ಅವತಾರಗಳಲ್ಲಿ  ಬದಲಾವಣೆ ಆಗಿದ್ದರೂ ಭಗವಂತನೊಬ್ಬನೆ. ಭಗವದ್ಗೀತೆ ಯಲ್ಲಿಯೇ  ನಾವು ಒಮ್ಮೊಮ್ಮೆ  ಪರಮಾತ್ಮ,ಭಗವಂತ..ಶ್ರೀ ಕೃಷ್ಣನಿಗೆ ಹಲವು ಹೆಸರಿದ್ದರೂ ಎಲ್ಲಾ ಶಕ್ತಿಯೂ ಅವನ‌ಹೆಸರಿನಲ್ಲಿದೆಂದರ್ಥ.
ಹಾಗಾಗಿ  ಕೃಷ್ಣ ಪರಮಾತ್ಮನಲ್ಲ ಎನ್ನುವುದು ತಪ್ಪಾಗುತ್ತದೆ.

ಹಿಂದಿನ ಪೋಸ್ಟ್  ಇದೇ ವಿಚಾರವಾಗಿ ಚರ್ಚೆಯ ರೂಪ ತಳೆದಿತ್ತು. ಅದ್ವೈತ ದೊಳಗೇ ದ್ವೈತ ಇರೋಹಾಗೆ ದ್ವೈತದಿಂದ ಭೂಮಿ ಇದೆ. ಭಗವಂತನೊಳಗೆ ಭೂಮಿ ಇದೆ. ಭೂಮಿ ಮೇಲಿನ‌ಮನುಕುಲಕ್ಕೆ ಪರಮಾತ್ಮನ ಅರ್ಥ ಮಾಡಿಕೊಳ್ಳುವ ಜ್ಞಾನವಿದೆ. ಜ್ಞಾನಕ್ಕೆ ಸರಿಯಾದ ಗುರು ಇದ್ದರೆ ಮಾತ್ರ ಇದು ಸಾಧ್ಯವಿದೆ. 

ಒಟ್ಟಿನಲ್ಲಿ ದೇವತೆಗಳಿಗೂ ಗುರುವಿದ್ದರು,ಅಸುರರಿಗೂ ಗುರುವಿದ್ದರು,ಮಾನವರಿಗೂ ಇದ್ದಾರೆ. ಗುರು ಯಾವ ಮಾರ್ಗ ದಲ್ಲಿ  ನಡೆಸುವರೋ ಶಿಷ್ಯ ನಡೆಯುವರಷ್ಟೆ. ಅದಕ್ಕೆ ಗುರುವೇ ದೇವರೆಂದರು.
ಯಾವಾಗ ಅಸುರ ಗುರುಗಳು ಹಣ,ಅಧಿಕಾರ,ಸ್ಥಾನಕ್ಕಾಗಿ ಮಾನವರನ್ನು ಹೊರಗೆಳೆಯುವರೋ ಆಗ ದೇವಗುರುಗಳು  ಅರ್ಥ ವಾಗದೆ  ಹಿಂದುಳಿಯುವರು... ಈಗಿನ ಸ್ಥಿತಿ ಹೀಗಿದೆ.

ಓದದೆಯೇ  ಅಧ್ಯಾತ್ಮ ವಿಚಾರಗಳು  ಒಳಗಿನಿಂದ ತಿಳಿಯಬೇಕಾದರೆ  ಅದೊಂದು ದೈವಪ್ರೇರಣೆಯಷ್ಟೆ. ನಮ್ಮನ್ನು ದೇವರು ನಡೆಸೋದಕ್ಕೂ‌ ನಾವು ದೇವರನ್ನು ನಡೆಸೋದಕ್ಕೂ ವ್ಯತ್ಯಾಸವಿದೆ. ನಮ್ಮನ್ನು ದೇವರು ನಡೆಸುವಾಗ ನಾನೆಂಬುದಿರದು ಅಧ್ವೈತ.
ನಾನೇ ದೇವರನ್ನು ನಡೆಸುವಾಗ ನಾನಿರುತ್ತೇನೆ ದ್ವೈತ.
ಎರಡೂ ಒಂದೇ ನಾಣ್ಯದ ಎರಡು‌ ಮುಖ. ಒಂದೇ ಮುಖ ನೋಡಿದರೆ ಇನ್ನೊಂದು ಅರ್ಥ ವಾಗದು. ಹಾಗಾಗಿ ಭೂಮಿಯ ಮೇಲಿರುವ ನಾವು  ದೇವರ ಮಕ್ಕಳು  ನಿಜ
ಹಾಗಾದರೆ ನಮ್ಮಲ್ಲಿ ದೈವತ್ವವಿದೆಯೆ? ಈ ಪ್ರಶ್ನೆಗೆ ಉತ್ತರ ಒಳಗಿನಿಂದ ಸಿಕ್ಕರೆ ಆತ್ಮಾವಲೋಕನ. ಹೊರಗೆ ಹುಡುಕಿದರೆ ಸಿಗದೆ ಅಹಂಕಾರ ಆವರಿಸಬಹುದು.
 
ಮಾಯಾಮೋಹದ  ಮುಸುಕಿನಲ್ಲಿ  ಮಲಗಿರುವ ನಾವು ಮಾನವರು. ನಮ್ಮನ್ನು ದೇವಾಸುರರ ಶಕ್ತಿ ಒಳಗಿದ್ದೇ‌
ನಡೆಸುತ್ತಿದ್ದರೂ‌ ಕಾಣಿಸುತ್ತಿಲ್ಲ.ಇದು ಪುರಾಣದಲ್ಲಿಯೂ ಕಾಣುತ್ತೇವೆ, ಈಗಲೂ ಇದೆ ಎಂದರೆ ನಾವು ಕಾರಣಮಾತ್ರರಷ್ಟೆ. 
ಕಲಿಯುಗದಲ್ಲಿ  ಹೊಂದಾಣಿಕೆ ಕಷ್ಟವಿದೆ. ಹಾಗಂತ ಹೊಂದಿಕೊಂಡು ಹೋಗದಿದ್ದರೆ ನಷ್ಟ ಕಷ್ಟ ಹಿಂದೂಗಳಿಗೆ ಕಟ್ಟಿಟ್ಟ ಬುತ್ತಿ. ಎಲ್ಲಿಯವರೆಗೆ  ಒಗ್ಗಟ್ಟು ಇರುವುದಿಲ್ಲವೋ ಭಿನ್ನಾಭಿಪ್ರಾಯ ದ್ವೇಷ,ಅಸೂಯೆ ಅಸಹಕಾರದ  ಕ್ರಾಂತಿ ಇರುತ್ತದೆ. ಶಾಂತಿಯಿಂದಷ್ಟೇ ಗುರಿ ತಲುಪಬಹುದೆಂದರೆ ಶಾಂತಿ  ಹೊರಗಿದೆಯೋ ಒಳಗೋ? 
 
ಪ್ರಕೃತಿಯ ಸಣ್ಣ ಬಿಂದು ಮಾನವನೊಳಗಿದ್ದು ಪ್ರಕೃತಿಯನ್ನು ಹಿಡಿತದಲ್ಲಿಡಬಹುದೆ? ಹಿಡಿತದಿಂದ  ಭಗವಂತನೆಡೆಗೆ ಸಾಗಬಹುದೆ?  

ಭೂಮಿ ವಿಶಾಲವಾಗಿದೆ, ಪ್ರಕೃತಿ ಉಚಿತವಾಗಿದೆ ,ಪಂಚಭೂತಗಳಿಂದಾದ ಶರೀರದಲ್ಲಿ ಶಕ್ತಿ ಅಡಗಿದೆ. ಆದರೆ  ಪರಾವಲಂಬನೆ ಮಿತಿಮೀರಿದೆ. ಇದೇ ಭ್ರಷ್ಟಾಚಾರವಾಗುತ್ತಿದೆ.  ಸರ್ಕಾರ ಏನು ಕೊಡುತ್ತದೆ ಎಂದು ಕುಳಿತಷ್ಟೂ ಸಾಲ ಬೆಳೆಯುತ್ತದೆ ಜೀವ ಹೋಗುತ್ತದೆ. 

"ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ ಬನ್ನ ಪಡುತ ಈ‌ಕ್ಷುದ್ರ ಜೀವನದಿ ಇನ್ನೂ ತೊಳಲದಿರು ಮುನ್ನೆಡೆ ಸಖನೆ.. "ಸ್ವಾಮಿ ವಿವೇಕಾನಂದರನ್ನು ಹೊರಗಿನಿಂದ ಬೆಳೆಸಿದರೆ ರಾಜಕೀಯ ಒಳಗಿನಿಂದ ಕಂಡರೆ ರಾಜಯೋಗ ಏನಂತೀರಾ?

ಒಂದರ್ಥದಲ್ಲಿ ಎಲ್ಲಾ ಗುರು.ಇನ್ನೊಂದು ರೂಪದಲ್ಲಿ ಯಾರೂ ಇಲ್ಲ.ದತ್ತಾತ್ರೇಯರು 24 ಗುರುಗಳನ್ನು  ಸೃಷ್ಟಿ ಯಲ್ಲಿ ನೋಡಿದ್ದರೆಂದರೆ  ಪ್ರಕೃತಿಯಿಂದ ತಿಳಿಯುವುದು ಬಹಳವಿದೆ ಅಲ್ಲವೆ?

Tuesday, October 22, 2024

ಆತ್ಮಸಾಕ್ಷಿಗಿಂತ ದೊಡ್ಡದೇನಿದೆ?

ಸಣ್ಣ ವಯಸ್ಸಿನಿಂದಲೇ ಮನಸ್ಸಿನ ಒಂದು ಮೂಲೆಯಲ್ಲಿ  ಏಳುತ್ತಿದ್ದ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದರೂ  ಸಿಗದಕಾರಣಪ್ರಶ್ನೆಯೇ ಸರಿಯಿಲ್ಲವೇನೋ ಎನ್ನುವ ಮಟ್ಟಕ್ಕೆ ಬಂದು ಎಲ್ಲರಂತೆ ಬದುಕಲು ಪ್ರಯತ್ನ ಪಟ್ಟರೂ ಎಲ್ಲೋ ಮನಸ್ಸಿಗೆ ಸಮಾಧಾನವಿಲ್ಲ.ಸಂತೋಷ ತಾತ್ಕಾಲಿಕ ಸುಖ ಮರೀಚಿಕೆಯಾಗೇ ಉಳಿದಿತ್ತು. ಒಳಗಿನ ಪ್ರಶ್ನೆ ನಿರಂತರವಾಗಿ  ಎಚ್ಚರವಾಗುವಂತೆ ಮಾಡಿದ್ದರೂ  ಉತ್ತರ ಕ್ಕಾಗಿ  ಎಷ್ಟೋ ಜನರಲ್ಲಿ  ಹುಡುಕಿದರೂ ಸಿಗದೆ  ಮುಂದೆ ನಡೆದಂತೆಲ್ಲಾ ಜಗತ್ತು ನಡೆದಿರೋದೆ ಪ್ರಶ್ನೆಗಳ ಸರಮಾಲೆಯಲ್ಲಿ ಎಂದಾಯಿತು.ಇದಕ್ಕೆ ಸೂಕ್ತವಾದ ಉತ್ತರ ಯಾರಲ್ಲೂ ಇಲ್ಲ ಆದರೂ ಒಬ್ಬೊಬ್ಬರು ಒಂದೊಂದು ನೀಡುತ್ತಿದ್ದರು. ಅದರಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಹುಡುಕಿದರೆ ಸರಿಕಾಣದೆ  ಆತ್ಮಾವಲೋಕನ ಮಾಡಿಕೊಂಡು ನಡೆಯುವುದೇ ಸರಿ ಎಂದು ಸತ್ಯದ ಬೆನ್ನೆತ್ತಿದಾಗ  ಉತ್ತರ ಸಿಕ್ಕಿದ್ದು ಒಳಗೆ ಹೊರತು  ಹೊರಗಲ್ಲ.ಆದರೆ ಹೊರಗಿನವರ  ಜೊತೆಗಿದ್ದೇ ಒಳಗಿನ  ಪ್ರಶ್ನೆ ಗೆ  ಉತ್ತರ ಹುಡುಕುವುದು  ಸಂಸಾರಕ್ಕೆ ಅನಿವಾರ್ಯ ವಾಗುತ್ತದೆ .
 ಬಾಲ್ಯ. ಯೌವನ ಗೃಹಸ್ಥ ವಾನಪ್ರಸ್ಥ  ಸಂನ್ಯಾಸ..ಆಶ್ರಮ ದಲ್ಲಿ ಶ್ರಮ ಇದ್ದೇ ಇದೆ..ಆದರೆ ಅದರಲ್ಲಿ ನಮ್ಮ ಶ್ರಮ ಇದೆಯೋ ಅಥವಾ ಬೇರೆಯವರ ಶ್ರಮ ವೋ ಎನ್ನುವ ಪ್ರಶ್ನೆ ಹಾಕಿಕೊಂಡರೆ ನಮ್ಮ ಶ್ರಮ ಅಲ್ಪ  ಪರರ ಶ್ರಮ ಹೆಚ್ಚು.
ಆ ಹೆಚ್ಚಾದ ಶ್ರಮದಿಂದ  ದೂರವಿದ್ದು ನಮ್ಮ ಶ್ರಮ ಹೆಚ್ಚಿಸಿಕೊಳ್ಳಲು  ಆತ್ಮಬಲ ಆತ್ಮವಿಶ್ವಾಸ ಅಗತ್ಯವಿದೆ.
ಈಗಲೂ ನಮ್ಮ ದೇಶ ನಡೆದಿರೋದೆ ಶ್ರಮಿಕರಿಂದ .ಜನರು ಅಜ್ಞಾನದಲ್ಲಿದ್ದು ಶ್ರಮವಹಿಸಿ ದುಡಿದು ಸಂಪಾದಿಸಿದ ಹಣ ಸದ್ಬಳಕೆ  ಆಗದೆ ದುರ್ಭಳಕೆ ಆದರೆ  ಎಲ್ಲಾ ವ್ಯರ್ಥ.
ವೈಜ್ಞಾನಿಕ ಚಿಂತನೆಗಳಿಗೆ ಹೆಚ್ಚಿನ ಬೆಲೆ ವೈಚಾರಿಕತೆಗೆ ಬೆಲೆ ಕಡಿಮೆ. ಕಾರಣ ವೈಜ್ಞಾನಿಕ ಸುಖದ ಮುಂದೆ ವೈಚಾರಿಕತೆಯ ಕಷ್ಟ  ಯಾರೂ ಇಷ್ಟಪಡರು.ಆತ್ಮಜ್ಞಾನಕ್ಕೆ  ಅಧ್ಯಾತ್ಮಿಕ ವಿಜ್ಞಾನವೇ ಮೂಲಾಧಾರವಾದಾಗ ಇದನ್ನು ಬಿಟ್ಟು ಹೊರ ಬಂದಷ್ಟೂ ಕಷ್ಟ ನಷ್ಟ ತಪ್ಪಿದ್ದಲ್ಲ. ಅದನ್ನು  ತಡೆಯಲು ಅಸತ್ಯ ಅನ್ಯಾಯದ ಭ್ರಷ್ಟಾಚಾರ ಬೆಳೆದಿದೆ ಇದು ಧಾರ್ಮಿಕ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸದ್ದು ಮಾಡಿದರೆ ಮುಗಿಯಿತು ಕಥೆ. ಒಟ್ಟಿನಲ್ಲಿ  ಅಧ್ಯಾತ್ಮವಿಜ್ಞಾನಕ್ಕೆ ಸತ್ಯ ಅಗತ್ಯವಿದೆ. ಸತ್ಯವೇ ದೇವರೆನ್ನುವವರೂ ಸತ್ಯ ತಿಳಿಸಬಾರದೆಂದರೆ ದೇವರು ಕಾಣೋದಿಲ್ಲ. ಹೀಗಾಗಿ ಶಿವಶರಣರು  ದಾಸ ಸಂತರು ಮಹಾತ್ಮರುಗಳು  ಆಳವಾಗಿದ್ದ ಸತ್ಯದೆಡೆಗೆ ಹೊರಟು ಜಗತ್ತಿನ ಸತ್ಯಾಸತ್ಯತೆಯನ್ನು ಅನುಭವದ  ವಚನ ಸಾಹಿತ್ಯದಮೂಲಕ ಹೊರಹಾಕಿದರು
ಸಾಹಿತ್ಯ ಕ್ಷೇತ್ರ  ಹಣ ಮಾಡುವ ಕ್ಷೇತ್ರವಲ್ಲ.ಸತ್ಯವನ್ನು ಬಿಚ್ಚಿಡುವ ಕ್ಷೇತ್ರ..ಅದರಲ್ಲಿ ಕೇವಲ ಹೊರಗಿನ ಸತ್ಯವೇ ತುಂಬಿದರೆ ಒಳಗಿನ ಸತ್ಯಹಿಂದುಳಿದು  ಸಮಾಜ ದಾರಿತಪ್ಪಿ ನಡೆಯುತ್ತದೆ.
ಸಾಹಿತ್ಯ ಸಾಮಾಜಿಕ‌ಹಿತಕ್ಕಾಗಿ ಸತ್ಯವನ್ನು ಹೊರಹಾಕುವ ಒಂದು ಪ್ರಾಕಾರವಾಗಿದ್ದರೂ ಇತ್ತೀಚೆಗೆ ಇದರ ದುರ್ಭಳಕೆ ಹೆಚ್ಚಾಗಿರೋದನ್ನು ಕಾಣುತ್ತಿದ್ದೇವೆಂದರೆ ಇದಕ್ಕೆ ಕಾರಣ ಜನರ ಸಹಕಾರವಷ್ಟೆ.
ಯಾರೋ ಹೆಸರು‌ಮಾಡಿದವರು ಒಂದು ಲೇಖನಬರೆದರೆ ಹಣಕೊಟ್ಟು ಖರೀದಿಸುವ ಜನ ತಮ್ಮ ಒಳಗೇ ಇರುವ ಸತ್ಯದಜೊತೆಗೆ ನಡೆಯುತ್ತಿದ್ದೇವೆಯೆ ಅಥವಾ ಯಾರದ್ದೋ ಸತ್ಯ ನಂಬಿ ಬದುಕಿದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಂಡರೆ ನಮ್ಮ ಒಳಗಿರುವ ಪ್ರಶ್ನೆಗೆ ಉತ್ತರ ಒಳಗೇ ಸಿಗುತ್ತದೆ.ಆದರೆ ನಾವು  ಶುದ್ದವಾಗೋದಕ್ಕೆ‌ಕಷ್ಟಪಡಲೇಬೇಕು. ಜನ್ಮಜನ್ಮಗಳ ಪಾಪ ಪುಣ್ಯಗಳ ಸಂಗ್ರಹ ಒಳಗಿರುವಾಗ ಹೊರಗಿನ ಸಂಗ್ರಹಗಳನ್ನು ನೋಡಿಕೊಂಡು ಕೇಳಿಕೊಂಡು ಕಾಲಕಳೆಯಲು ಹಣಬೇಕು.ಹಣಸಂಪಾದನೆಗೆ ಜ್ಞಾನ ಬೇಕು.
ಜ್ಞಾನದಲ್ಲಿ ಸತ್ಯವಿರಬೇಕು.ಆತ್ಮಸಾಕ್ಷಿಗಿಂತದೊಡ್ಡಸತ್ಯವಿದೆಯೆ?
ಇದರಲ್ಲಿ ಮೂರು  ಪಂಗಡವಿದೆ ದೈವ ಸಾಕ್ಷಿ, ಮನುಷ್ಯ ಸಾಕ್ಷಿ ಅಸುರ ಸಾಕ್ಷಿ.
ನ್ಯಾಯಾಲಯಗಳಿಗೇನೂ ಕೊರತೆಯಿಲ್ಲ.ನ್ಯಾಯಾಧೀಶರೂ ಬೆಳೆಯುವರು ಆದರೆ  ನ್ಯಾಯ ಬೆಳೆಯದಿರೋದಕ್ಕೆ ಕಾರಣ ಮನುಷ್ಯ ಸಾಕ್ಷಿ ಅಸುರರಿಗೆ ವರವಾಗಿದೆ.ಹಣಕೊಟ್ಟರೆ ಜೀವ ಬರುವುದಿಲ್ಲವೆಂದುತಿಳಿದೂ ಹಣಕ್ಕಾಗಿ ಜೀವಹತ್ಯೆ ಮಾಡಿದರೆ  ಇದರ ಫಲ ಕಠೋರವೆ. 
ಕಲಿಗಾಲದಲ್ಲಿ ಹೇಗಿರುವುದೆಂದು ಶ್ರೀ ಕೃಷ್ಣ ಪರಮಾತ್ಮಮೊದಲೇ  ತಿಳಿಸಿದಂಂತೆ ಬೇಲಿಯೇಎದ್ದುಹೊಲಮೇಯ್ದರೆ ಕಾಯೋರಿಲ್ಲ.ಆದರಿದು ತಾತ್ಕಾಲಿಕ. ಎಷ್ಟೋ ಯುಗಯುಗದಿಂದಲೂ ಭೂಮಿಯಿದೆ. ಭೂಮಿಯ ಋಣ ತೀರಿಸೋರು ಇಂದು ಕಡಿಮೆಯಾಗಿ ಜನಸಂಖ್ಯೆ ಬೆಳೆದಿದೆಯಷ್ಟೆ.
ಜನ್ಮವೇ ಇಲ್ಲದೆ ಜೀವನವಿಲ್ಲ. ಜೀವನದಲ್ಲಿಯೇ ಜೀವಿಗಳ ವನ ವಿದೆ. ಆ ವನವನ್ನೇ ನಾಶ ಮಾಡಿ ಬದುಕುವುದು ಅಧರ್ಮ. ಅಧರ್ಮಕ್ಕೆ ಕಾರಣ ಅಜ್ಞಾನ.ಅಜ್ಞಾನಕ್ಕೆ ಕಾರಣ ಶಿಕ್ಷಣದ ವಿಷಯ. ವಿಷಯದಲ್ಲೇ  ಸತ್ಯವಿಲ್ಲದಿದ್ದರೆ ದೈವತ್ವ ಇರುವುದೆ?
ಆಕಾಶದೆತ್ತರ ಹಾರುವ ಮಾನವ ಬುದ್ದಿವಂತಿಕೆಗೂ ಆಕಾಶದಲ್ಲೇ ನೆಲೆಸಿರುವ ಗ್ರಹನಕ್ಷತ್ರ ದೇವತೆಗಳಿಗೂ  ಎಷ್ಟೋ ಅಂತರವಿದೆಯಲ್ಲವೆ?
ಹಾಗಾದರೆ ನಾನ್ಯಾರು? ನಾವ್ಯಾರು? ಪ್ರಶ್ನೆಗೆ ಉತ್ತರ ಹೊರಗೆ ಸಿಗುವುದೆ? ಒಳಗೋ? 
ಎಲ್ಲರಲ್ಲಿಯೂ ಅಡಗಿರುವ‌ಪರಾಶಕ್ತಿ ಪರಮಾತ್ಮನ ಅರ್ಥ ಮಾಡಿಕೊಳ್ಳಲು  ಇಂದಿನ ಶಿಕ್ಷಣದಿಂದ ಸಾಧ್ಯವೆ?
ಇಲ್ಲವಾದರೆ ಶಿಕ್ಷಣವೇ ಎಲ್ಲದ್ದಕ್ಕೂ ಕಾರಣವೆಂದಾಯಿತು. ಇದನ್ನು ಎಷ್ಟು ಧಾರ್ಮಿಕ ವರ್ಗ ಸಂಘಗಳು  ಬೆಳೆಸಲಾಗಿದೆ?
ಮಕ್ಕಳ ನ್ನು ದೇವರೆಂದರು. ದೇವರಿಗೆ ಕೊಡುವ ಶಿಕ್ಷಣದ ವಿಚಾರ ಹೇಗಿದೆ?
ಇದರ ಬಗ್ಗೆ ತಿಳಿದ‌ಮೇಲೆ ಮಾಡಿದ ಪ್ರಯತ್ನ ದಲ್ಲಿ  ಸಾಕಷ್ಟು ಅನುಭವವಾದರೂ  ಯಾವ ಉಪಯೋಗವಾಗಿಲ್ಲ.ಕಾರಣ ಸತ್ಯ ತಿಳಿಸಿದರೆ ಸತ್ಯ ಹೇಳಬಾರದೆನ್ನುವವರೆ ಹೆಚ್ಚು. ಅಧಿಕಾರ ಹಣವಿದ್ದರೆ ಸತ್ಯ ಹೇಳಬಹುದು ಎಂದರೆಅಷ್ಟು ಹಣಗಳಿಸಲು ಸತ್ಯದಿಂದ ಕಷ್ಟ. ಹೀಗಾಗಿ ಇಂದಿಗೂ ಭಾರತ ವಿಶ್ವ ಗುರು  ಆಗಿದ್ದರೂ ವಿಶ್ವೇಶ್ವರ ನ ಜೊತೆಗಿರುವ ಜಗದೀಶ್ವರಿಯನ್ನು  ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಡೆದಿದೆ. ಇಲ್ಲಿ ಸ್ತ್ರೀ ಶಕ್ತಿಯನ್ನು ಹೊರಗೆಳೆದು ದುಡಿಸಿಕೊಂಡು  ರಾಜಕೀಯ‌ ನಡೆಸೋದರಿಂದ ಒಳಗಿರುವ ಪ್ರಶ್ನೆಗೆ ಉತ್ತರ ಸಿಗೋದಿಲ್ಲ.
ಅದ್ವೈತ ದೊಳಗೇ ಅಡಗಿರುವ ದೈತ ಕಣ್ಣಿಗೆ ಕಂಡರೂ ಎರಡೂ ಬೇರೆ ಎಂದು ರಾಜಕೀಯ ನಡೆಸಬಹುದು.ಇದಕ್ಕೆ ಸಹಕಾರವೂ ಇರುತ್ತದೆ.ಆದರೆ ಎರಡರ ಸಮಾನತೆಯನ್ನು ಎತ್ತಿ ಹಿಡಿಯುವ ಸತ್ಯಕ್ಕೆ ಬೆಲೆಯಿರದು.ಎಲ್ಲಿ ಸತ್ಯವಿರದೋ ಅಲ್ಲಿ ದೇವರಿರೋದಿಲ್ಲ.ಎಲ್ಲಿ ದೇವರಿರುವುದಿಲ್ಲವೋ ಅಲ್ಲಿ ಶಾಂತಿಯಿರದು ಅಸುರ ಶಕ್ತಿ ಜಾಗೃತವಾಗಿರುತ್ತದೆ.ಹೀಗಾಗಿ ಮನೆ ಮನೆಯೊಳಗೆ ರಾಮಾಯಣ ಮಹಾಭಾರತ ಪ್ರಚಾರ ನಡೆದರೂ ಯುದ್ದ ಕಲಹ ಜಗಳ ದ್ವಂದ್ವ ಭಿನ್ನಾಭಿಪ್ರಾಯ ದ ರಾಜಕೀಯವಿದೆ.. ರಾಜಯೋಗ ಯೋಗದಿಂದಷ್ಟೆ ಸಾಧ್ಯ.
ಬದಲಾವಣೆ ಒಳಗೇ ಆಗಬೇಕು. ನಮ್ಮ ಕರ್ಮ ಧರ್ಮದ ಪ್ರಕಾರ ಇರಬೇಕು.ಹಾಗಾದರೆ ಶಿಕ್ಷಣ ಧರ್ಮದಲ್ಲಿದೆಯೆ? ದೇಶದ ಪ್ರಜೆಗಳಿಗೆ ವಿದೇಶದ ಅನ್ಯರ ಶಿಕ್ಷಣ  ಮೂಲವಾದರೆ ಜ್ಞಾನವೂ  ಹೊರಗಿನವರದ್ದೇ ಆಗಿರುತ್ತದೆ ಇದು ಸಹಜ. 
ಎಲ್ಲಾ ಆಗಿಹೋಗಿದೆ ಆಗಬೇಕಿತ್ತು ತಡೆಯಲಿಲ್ಲ ತಡೆಯಲಾಗಲಿಲ್ಲ ಎಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಆದರೆ ನಮ್ಮ ತಲೆಯಲ್ಲಿ ಬುದ್ದಿಯಿದೆ ಜ್ಞಾನವಿದೆ ಅದನ್ನು ನಮ್ಮ ಆತ್ಮಕ್ಕೆ ತೃಪ್ತಿ ಶಾಂತಿ  ನೀಡುವತ್ತ ಬಳಸಿದರೆ ಆತ್ಮನಿರ್ಭರ ಭಾರತ.ಇಲ್ಲವಾದರೆ ಆತ್ಮದುರ್ಭಲವೆ.
 ಜ್ಞಾನ ಬಂದಾಗಿನಿಂದ ಒಂದೇ ವಿಷಯದ ಬಗ್ಗೆ ಚಿಂತನೆ ನಡೆಸಿ ಪರೀಕ್ಷಿಸಿದರೂ ಸತ್ಯ ಒಂದೇ .ಅದು ಒಳಗೇ ಇದೆ ಅದನ್ನು ಬಿಟ್ಟು ಎಲ್ಲಾ ಅಸತ್ಯವೂ ಹೊರಗೆ ಹೋರಾಟ ಹಾರಾಟ ಮಾರಾಟದೆಡೆಗೆ  ಹೊರಟಾಗ  ಇದು ಅಸುರ ಶಕ್ತಿ ಬೆಳೆದು ನಿಲ್ಲುತ್ತದೆ.

ಎಲ್ಲಿಯವರೆಗೆ ಸತ್ಯ ಧರ್ಮ ಒಂದಾಗುವುದಿಲ್ಲವೋ ಅಲ್ಲಿಯವರೆಗೆ ಅಧ್ವೈತವಾಗದು. ದೇಶದ ಪ್ರಶ್ನೆ ಬಂದಾಗ ದೇಶ ಒಂದೇ ಇದ್ದರೂ ಇದರೊಳಗಿನ ಪ್ರಜೆಗಳಲ್ಲಿ ಒಗ್ಗಟ್ಟಿನ ಸಮಸ್ಯೆ ಯಿದೆ.ಇದಕ್ಕೆ ಮಧ್ಯವರ್ತಿಗಳ ಅರ್ಧ ಸತ್ಯದ ಅಜ್ಞಾನದ ರಾಜಕೀಯವೇ ಕಾರಣ. ಸ್ವಾರ್ಥ ಪೂರ್ಣ ವಾದ ಜೀವನದಲ್ಲಿ  ಪರಮಾತ್ಮನಿರುವನೆ? ಪರಮಸತ್ಯವಿರುವುದೆ?
ಭಗವದ್ಗೀತೆ ಓದಿ ಎಷ್ಟೋ ಮಹಾತ್ಮರು ಯೋಗಿಗಳಾದರು
ಈಗ ಎಷ್ಟೋ ಜನರು ಭೋಗದೆಡೆಗೆ ನಡೆದಿರುವರುಎಂದರೆ ಹಣಕ್ಕಾಗಿ ಗೀತೆಯಲ್ಲ. ಜ್ಞಾನಕ್ಕಾಗಿ ಗೀತೆ. 
ಅನುಭವರಹಿತ ಪ್ರಚಾರದಿಂದ ಅಧರ್ಮ ವೂ ಬೆಳೆಯುತ್ತದೆ.
ಮಠ ಮಂದಿರ ಮಸೀದಿ ಚರ್ಚ್... ಧಾರ್ಮಿಕ ಸಂಸ್ಥೆಗಳು ಒಂದೇ ಭೂಮಿಯಲ್ಲಿ ಒಂದೇ ದೇಶದೊಳಗೆ ಬೆಳೆದಿದ್ದರೂ ಒಳಗಿರುವ ದೈವೀಕ ಗುಣಜ್ಞಾನವನ್ನು ಬೆಳೆಸದಿದ್ದರೆ  ನೀರಿನಲ್ಲಿ ಹೋಮಮಾಡಿದಂತಾಗುತ್ತದೆ.
ಭೂಮಿ ಆಕಾಶ ಪಾತಾಳದ ಮಧ್ಯವರ್ತಿ. ಮಧ್ಯವರ್ತಿಗೆ ಸರಿಯಾದ ಜ್ಞಾನವಿದ್ದರೆ ಸರಿ. ಸ್ತ್ರೀ ಶಕ್ತಿಯನ್ನು  ಹೇಗೆ ಬಳಸಬೇಕು ಬೆಳೆಸಬೇಕೆಂಬ ಜ್ಞಾನವಿಲ್ಲದವರೆ ಭೂಮಿ ಆಳಿದರೆ  ಆಳೋರೂ ಆಳೇ ಆಗುವರು. ಕರ್ಮಕ್ಕೆ ತಕ್ಕಂತೆ ಜನ್ಮ. ಒಟ್ಟಿನಲ್ಲಿ ಭೂ ವಶದಲ್ಲಿರುವ ಮಾನವನಿಗೆ  ಮಾಯೆ ಆವರಿಸಿ ಮಾಯಾಮೃಗಗಳು  ಬೆಳೆದಿರೋದಕ್ಕೆ ಕಾರಣ ಅಜ್ಞಾನ.ಅಜ್ಞಾನವೆಂದರೆ ಜ್ಞಾನವಿಲ್ಲವೆಂದಲ್ಲ ಸತ್ಯಜ್ಞಾನ ಇಲ್ಲ ಎಂದರ್ಥ. ಇದು ನಮ್ಮೆಲ್ಲರ ಸಮಸ್ಯೆ. ನಮ್ಮದೇ ಸಹಕಾರದ ಸಮಸ್ಯೆ. ಒಳಗೇ  ಅಸಹಕಾರವಿದ್ದರೆ  ಹೊರಗೆ ಬರೋದು ಕಷ್ಟವಿದೆ. ನಮಗೆನಾವೇ ಶತ್ರುವಾದರೆ ಮಿತ್ರರು ಕಾಣರು.
ಹಾಗೆ ಅತಿಯಾದ ಆಸೆ ಅಹಂಕಾರ ಸ್ವಾರ್ಥ ದ ಜೀವನದಲ್ಲಿ ಗೆದ್ದವರು ಯಾರು? ಸೋತವರು ಎಲ್ಲಿ? 
ಹಿಂದೆ ಇಂದು  ಮುಂದೆ ಇರುವ ಆತ್ಮಕ್ಕೆ ಸಾವಿಲ್ಲ.ಸತ್ಯಕ್ಕೂ ಸಾವಿಲ್ಲ. ಎರಡೂ ಒಳಗೇ ಅಡಗಿರುವಾಗ ಅದರಹಿಂದೆನಡೆದರೆ ಹಿಂದೂ ಬಿಟ್ಟು ಮುಂದೆ ನಡೆದರೆ ಮುಸ್ಲಿಂ. ಮುಸ್ಲಿಂ  ಜನಾಂಗ ಎಷ್ಟೋ  ವಿಚಾರದಲ್ಲಿ ಒಗ್ಗಟ್ಟು ತೋರಿಸಿದರೂ ಅವರ ಯಾಂತ್ರಿಕ ಜೀವನದಲ್ಲಿ ಸತ್ಯವಿರದು.
ಹಾಗಾಗಿ‌ಇಡೀ ಜಗತ್ತು ಜನಸಂಖ್ಯೆಯಿಂದ ತುಂಬಿದೆ.ಅಷ್ಟೇ ಸಾವು ನೋವು ಹೆಚ್ಚಾಗಿದೆ. ಜೀವನ್ಮುಕ್ತಿ  ಕೊಡುವ ಶಿವನನ್ನು ಎಲ್ಲಾ ಒಪ್ಪಬಹುದು.ಆದರೆ ಲಯವನ್ನು ಒಪ್ಪುವುದು ಕಷ್ಟ.
ಸಾವು  ನಿಶ್ಚಿತ ಎಂದು ತಿಳಿದರೂ  ಸತ್ತ ನಂತರ ಇದಕ್ಕೆ ಕಾರಣಕರ್ತ  ಶಿವ ಎಂದು ತಿಳಿಯದೆ ಮಾನವರು ಅಪಾರ್ಥ ಮಾಡಿಕೊಂಡು  ಹೋರಾಟ ಹಾರಾಟ ಮಾರಾಟ ಕಾದಾಟಕ್ಕೆ ಸಹಕರಿಸಿದರೆ  ಎಲ್ಲಿ ಆತ್ಮಕ್ಕೆ ಶಾಂತಿ?
ಯುದ್ದದಲ್ಲಿ ಮರಣಹೊಂದಿದರೆ ಸದ್ಗತಿ. ಯುದ್ದಕ್ಕೆ ಪ್ರೇರಣೆ ಕೊಟ್ಟು ಬದುಕಿದರೆ ದುರ್ಗತಿ. ಹೀಗೆ ಕರ್ಮ ಫಲ ಬೇರೆಯೇ ಆದಾಗ  ಎರಡೂ ಸತ್ಯವನರಿತು ಜೀವನ ಮಾಡೋದು   ಮನುಕುಲಕ್ಕೆ  ಸಮ್ಮತಿಯಾಗಬೇಕಷ್ಟೆ.ಒಪ್ಪಲಿ ಬಿಡಲಿ ಆಗೋದನ್ನು ತಡೆಯಲಾಗಿಲ್ಲ ತಡೆದವರೂ ಇಲ್ಲ.

ಪುರಾಣ ಓದುತ್ತಾ  ವಾಸ್ತವ ಸತ್ಯ ತಿಳಿಯದೆ  ಭವಿಷ್ಯ. ಹೇಳಿ ಕೇಳಿ ಉಪಯೋಗವಿಲ್ಲ. ಹಾಗಾಗಿ  ವಾಸ್ತವದಲ್ಲಿ ನಾವು ದೇಶದ ಒಂದು  ಜವಾಬ್ದಾರಿಯುತ ಪ್ರಜೆಯಾದರೂ  ಹಿಂದೆ ರಾಜರು  ಆಳಿದಂತೆ  ಜನರನ್ನು  ಆಳಲು ಸಾಧ್ಯವೆ? 
ಧರ್ಮದ  ಮಾರ್ಗ ಒಳಗಿಲ್ಲದೆ  ಹೊರಗೆ  ತಿರುಗಿದರೆ ಧರ್ಮ ಉಳಿಯುವುದೆ? ಸತ್ಯ  ಅರ್ಥ ವಾಗಲು ಅದರ ಹಿಂದೆ  ನಡೆಯಬೇಕು ಎಂದರೆ  ಅದಕ್ಕೆ ವಿರುದ್ದವಿರುವವರ ಸಂಗವಿದ್ದರೆ  ಅಸಾಧ್ಯ. 
ಒಬ್ಬಂಟಿಯಾಗಿ  ನಿಂತ ಸತ್ಯದ   ವಿರುದ್ದ  ನಡೆದಷ್ಟೂ  ಅಸುರ ಶಕ್ತಿ ಜೊತೆಗಿರುತ್ತದೆ. ಹಾಗಂತ ಭೂಮಿ  ದೇವಾಸುರರ  ನಡುವಿರುವ  ಮಾನವನಿಲ್ಲದೆ  ನಡೆದಿಲ್ಲ. ಎಚ್ಚರವಾಗಬೇಕಿರೋದು ಮಾನವ. ತಾನೇ  ಸಹಕಾರ ಕೊಟ್ಟು ಬೆಳೆಸಿದ  ಶಕ್ತಿಯೇ  ತನ್ನ ಸಮಸ್ಯೆಗೆ ಕಾರಣವೆಂದರೆ ಆ ಶಕ್ತಿಯಿಂದ ದೂರವಾಗುವ ಶಕ್ತಿಯೂ ಒಳಗೇ ಇದೆ ಎಂದರ್ಥ. ಅದನ್ನು ಬಳಸಿಕೊಳ್ಳುವ  ಅವಕಾಶ ಸ್ವಾತಂತ್ರ್ಯ ವಿದ್ದರೂ  ಬೆಳೆಸಿದ ಶಕ್ತಿ ಬಿಡದು. ಹೀಗಾಗಿ ಮಕ್ಕಳಿರುವಾಗಲೇ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವುದೇ ಪರಿಹಾರ ಎನ್ನುವರು ಮಹಾತ್ಮರು. ಇದು ಪೋಷಕರ ಧರ್ಮ. ದೇಶದ ಪೋಷಣೆಯೂ ಪ್ರಜಾಪ್ರಭುತ್ವ ದ ಪ್ರಜಾಧರ್ಮ. ಕಲಿಕೆಯ ಪ್ರಭಾವ ಕಲಿಗಾಲವಾಗಿದೆ.

ವೇದಕಾಲದ ಸ್ತ್ರೀ ಜ್ಞಾನ ಇಂದು ಇದೆಯೆ?

ಸ್ತ್ರೀ ಯರಿಗೆ ವೇದಕಲಿಯಲು ನಿಷೇಧ ವಿದೆ ಆದರೂ ಕೆಲವರು ಕಲಿಸುತ್ತಿದ್ದಾರೆ  ಎಂದರೆ  ಬೆಳವಣಿಗೆಯ ಲಕ್ಷಣವೆ?

ನಿಷೇಧದ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ .ಸ್ತ್ರೀ ಭೂಮಿಯ ಮಹಾಶಕ್ತಿ. ಭೂಮಿ ನಡೆದಿರೋದು ಮನುಕುಲದ ಸಂತಾನದಿಂದ  ಸಂತಾನದಲ್ಲಿ ಗಂಡುಹೆಣ್ಣಿಗೆ ತನ್ನದೇ ಆದ ವಿಶೇಷ ಶಕ್ತಿಯಿದೆ.. ವೇದಕಾಲದಲ್ಲಿದ್ದ ಸತ್ವ ತತ್ವ ಸತ್ಯಜ್ಞಾನ ಇಂದಿಲ್ಲ.  ಪರಮಾತ್ಮನೆಡೆಗೆ  ಹೋಗಲು  ಆತ್ಮಶುದ್ದಿಚಿತ್ತಶುದ್ದಿ ಮನಸ್ಸಿನ ಶುದ್ದಿ..ಮಂತ್ರಶುದ್ದಿಯಿಂದ ಮಾಡಲಾಗಿದೆ. ಇದನ್ನು  ಯಾರೇ ಆಗಲಿ ತಪ್ಪಾಗಿ ಹೇಳಿದರೂ ವಿರುದ್ದ  ಪ್ರತಿಫಲ ಅನುಭವಿಸೋದು ಜೀವವೇ.ಜೀವಾತ್ಮರಾಗಿರುವ  ಮಾನವರಿಗೆ ಉತ್ತಮವಾದ ಗುರು ಶಿಕ್ಷಣ  ಸಿಗುವುದೇ ಅಪರೂಪವಾಗಿರುವ ಇಂದು ವೇದಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ಬೇಧವಿದೆಯೋ  ಇಲ್ಲವೋ ಒಟ್ಟಿನಲ್ಲಿ ನಾವುಕಲಿತಿರುವ ಶಿಕ್ಷಣದಲ್ಲೇ ಬೇಧವಿದೆ. ಇದರಿಂದಾಗಿ ಹಿಂದಿನ ಜ್ಞಾನಶಕ್ತಿ ನಮಗಿಲ್ಲ. ಜ್ಞಾನಿಎನಿಸಿಕೊಂಡ ಸ್ತ್ರೀ ಯನ್ನೇ ಶಿಕ್ಷಣದಿಂದ ದೂರವಿಟ್ಟು ಏನೋ ಸಾಧನೆ ಮಾಡಿದಂತೆ  ವಾದ ಮಾಡುವುದರಿಂದ  ಸಂಸಾರ ನಡೆಯೋದಿಲ್ಲ.  ಉಭಯಭಾರತಿ ದೇವಿಯೊಂದಿಗೆ ಶ್ರೀ ಶಂಕರಭಗವದ್ಪಾದರು ವಾದ ಮಾಡಿ ಗೆಲ್ಲಲು ಪರಕಾಯ ಪ್ರವೇಶ ಮಾಡಿದ್ದರಂತೆ.
ಅಂದರೆ ಸ್ತ್ರೀ ಜ್ಞಾನವನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು  ಅಸಾಧ್ಯ. ಅನುಭವದಲ್ಲಿ ಬೇರೆಯೇ ಇರುತ್ತದೆ ಎನ್ನುವ ಕಾರಣಕ್ಕಾಗಿ ಕೆಲವೊಂದು ಸೂಕ್ಷ್ಮ ವಿಚಾರಕ್ಕೆ ನಿಷೇಧಿಸಿ  ಸಂಸಾರ ಸುಸೂತ್ರವಾಗಿ ನಡೆಯಲು ಮಾಡಿದ್ದಾರೆನ್ನಬಹುದು. ಈಗ ಬಿಡಿ ಎಲ್ಲಾ ಓದಿದರೂ  ನಮ್ಮ ಭೌತವಿಜ್ಞಾನವೇ ಶ್ರೇಷ್ಠ ಎನ್ನುವ ಮಟ್ಟಿಗೆ ಹೊರಗೆ ನಡೆದಿದೆ ಜೀವನ. ವೇದಕಾಲಕ್ಕೂ ವಾಸ್ತವ ಕ್ಕೂ ಅಂತರ ಬೆಳೆದು ಅರ್ಧ ಸತ್ಯವೇ ಅತಂತ್ರಸ್ಥಿತಿಗೆ ತಂದಿಟ್ಟಿದೆ. 
ಹಿಂದಿನಂತೆ  ಗುರುಮುಖೇನ ಕಲಿಯುವ ಶಿಕ್ಷಣವೂ ದೂರವಾಗುತ್ತಿದೆ. ಆನ್ಲೈನ್ ನಲ್ಲಿ  ಏನು ಬೇಕಾದರೂ ಓದಿ ತಿಳಿಯಬಹುದು. ಆದರೆ ತಿಳಿದಮೇಲೆ ಅದಕ್ಕೆ ಪೂರಕವಾದ ಸಹಕಾರವಿಲ್ಲವಾದರೆ  ಸ್ತ್ರೀ ಎಲ್ಲಿಗೆ ಹೋಗಬೇಕು?
ಮನೆಯೊಳಗೆ  ಇದ್ದಂತೆಹೊರಗೆ ಸುರಕ್ಷೆ ಇದೆಯೆ?ಸಂನ್ಯಾಸಿಯಾದವರೆ  ರಾಜಕೀಯ ನಡೆಸಿರುವಾಗ ಸಂಸಾರಿಗಳ ಪಾಡೇನು? ಎಲ್ಲಾ ಸಂನ್ಯಾಸಿ ವೇಷಧರಿಸಿದಾಕ್ಷಣ ಸಂನ್ಯಾಸವಾಗದು.ಹಾಗೆ ಸಂಸಾರಕ್ಕೆ ಬಂದವರೆಲ್ಲರೂ  ಅಜ್ಞಾನಿಗಳಾಗರು. ಬಾಲ್ಯ ಯೌವನ  ಗೃಹಸ್ಥ  ವಾನಪ್ರಸ್ಥ ಸಂನ್ಯಾಸವೆನ್ನುವ  ಆಶ್ರಮ ದಾರಿಯಲ್ಲಿ    ಕಷ್ಟ ಪಟ್ಟು    ನಡೆದ ಎಷ್ಟೋ ವೇದ ಪುರುಷ ಸ್ತ್ರೀ ಯರು  ಇಂದಿಗೂ  ಅಮರರು. ಆದರೆ  ಅವರಂತೆ  ವಾದಕ್ಕೆ ನಿಂತರೆ  ಸೋಲುವುದು  ಶತಸಿದ್ದ ಕಾರಣ ಅವರ ಅನುಭವ ಜ್ಞಾನವಿಲ್ಲದ ಮೊಂಡುವಾದದಿಂದ  ಸತ್ಯ ತಿಳಿಯದು ಧರ್ಮ ಉಳಿಯದು.ಪ್ರಚಾರಕ್ಕೆ ಅಡ್ಡಿಯಿಲ್ಲ.ಆಚಾರ ವಿಚಾರಕ್ಕೆ ಅಡೆತಡೆಯಿದೆ. 
ಲಿಂಗಕ್ಕೆ ಬೇಧವಿರಲಿಲ್ಲ ಆದರೆ ಅಧಿಕಾರಕ್ಕೆ  ಇಂದೂ ಬೇಧವಿದೆ .ಭೂಮಿ ಆಳೋದಕ್ಕೆ ಭೂಮಿಯನ್ನೇ ಅಜ್ಞಾನಕ್ಕೆ ಎಳೆದರಾಯಿತು. ಜನರನ್ನು ಆಳೋದಕ್ಕೆ ಉತ್ತಮ ಶಿಕ್ಷಣ ಕೊಡದೆ ಹೋದರಲ್ಲಹಾಗೆ ಸ್ತ್ರೀ ಗೆ ಸತ್ಯ ತಿಳಿದರೆ ಕಷ್ಟವಿದೆ.

ಈಗ ಗಂಡುಮಕ್ಕಳಿಗೇ ವೇದ ಶಾಸ್ತ್ರ ಪುರಾಣ ಸರಿಯಾಗಿ ತಿಳಿಯದೆ ವ್ಯವಹಾರನಡೆಸಿರುವಾಗ ಮೊದಲು ಅವರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ. ಮನೆಯಜಮಾನನೇ ಅಜ್ಞಾನಿಯಾದರೆ ಯಜಮಾನಿಯ ಜ್ಞಾನ ಅರ್ಥ ವಾಗದು.
ಕಲಿಕೆಗೆ ನಿಷೇಧವಿಲ್ಲ ಆದರೆ ಮೂಲಸಂಸ್ಕಾರ ಗಟ್ಟಿಯಿರಬೇಕು. ಇದೊಂದು ಅಭಿಪ್ರಾಯವಷ್ಟೆ.

Saturday, October 5, 2024

ಬ್ರಹ್ಮಚಾರಣಿ ದೇವಿ

ಬ್ರಹ್ಮ ಪುರಾಣ ವಿಷ್ಣುಪುರಾಣ ಶಿವಪುರಾಣ ಹೀಗೇ ಅನೇಕ ದೇವತೆಗಳ ಪುರಾಣಗಳಿವೆ ದೇವೀ ಪುರಾಣ ಮಾತ್ರ ನವರಾತ್ರಿ ಸಮಯದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.ಅಂದರೆ ದೇವಿ ಶಕ್ತಿಯಿಲ್ಲದೆ ಜೀವನವಿಲ್ಲ. ಹರಿಹರ ಬ್ರಹ್ಮಾದಿ ದೇವಾನುದೇವತೆಗಳೂ ದೇವಿಯ ಉಪಾಸಕರಾಗಿರುವುದನ್ನು ಪುರಾಣಗಳು ತಿಳಿಸಿವೆ.ಇಲ್ಲಿ  ಪರಮಾತ್ಮನೆಡೆಗೆ ಸಾಗಲು ಜ್ಞಾನಶಕ್ತಿ ಅಗತ್ಯವಿದೆ.ಜ್ಞಾನ ದೇವತೆಯ ಸಹಕಾರವಿಲ್ಲದೆ ಸೃಷ್ಟಿ ಯ ರಹಸ್ಯವರಿಯಲು ಅಸಾಧ್ಯ. ಇದನ್ನರಿಯದ ಹುಲುಮಾನವ ಸ್ತ್ರೀ ಶಕ್ತಿಯನ್ನು  ತಿರಸ್ಕರಿಸಿ ಅಥವಾ ದುರ್ಭಳಕೆ ಮಾಡಿಕೊಂಡು ಎಷ್ಟು ಹೊರಗೆ  ದೇವರಿಗೆ ಮಾಡಿದರೂ ಜ್ಞಾನ ಬರದು.

ನವಶಕ್ತಿಯರನ್ನು ಆರಾಧಿಸುವ‌ ನವರಾತ್ರಿಯ ವಿಶೇಷತೆಯನ್ನು  ಎಷ್ಟು ವರ್ಣಿಸಿದರೂ ಕಡಿಮೆಯೆ.ವರ್ಷ ವಿಡೀ ಕಾಯುವ ದೇವಿಗೆ ಎಷ್ಟು ಶಕ್ತಿಯಿರಬಹುದು? ಬಹಳ ಎತ್ತರಕ್ಕೆ ಹೋದವರ ವ್ಯವಹಾರದಲ್ಲಿ  ಲಕ್ಮಿ ಕೃಪೆ ಇರುತ್ತದೆ. ಅದರ ಮೂಲವೇ ಜ್ಞಾನ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು  ದಾನಧರ್ಮದೆಡೆಗೆ  ಮಾನವಹೋದರೆ ದಾನವಕುಲ ಹೆಚ್ಚುವುದಿಲ್ಲ.ಮಾನವನಿಗೆ  ಭೂಮಿಯಲ್ಲಿ ಎಲ್ಲಾ ಉಚಿತವೆ ಆದರೆ ವ್ಯವಹಾರಕ್ಕೆ ಇಳಿದಾಗ ಪಂಚಭೂತಗಳ ಬೆಲೆ ಅರ್ಥ ಆಗೋದಿಲ್ಲ. ಭೂಮಿ ಆಕಾಶ ,ವಾಯು,ಅಗ್ನಿ ನೀರು  ಸ್ವಚ್ಚಗೊಳಿಸುವುದಕ್ಕೆ  ಸಾಧ್ಯವೆ?
ಹೀಗಿರುವಾಗ  ಕಲ್ಮಶವಾಗಿಸುವ ಅಧಿಕಾರವೂ ಇರಲಿಲ್ಲ.
ಹಾಗೆ ತಾಯಿಯಿಲ್ಲದೆ ಜನ್ಮವಿಲ್ಲವಾದಾಗ ತಾಯಿಯನ್ನು ಹೇಗೆ ನೋಡಬೇಕೆಂಬ ಅರಿವೇ ಇಲ್ಲದಿದ್ದರೆ ಜೀವನವೇ ಅಲ್ಲ.

ಅಲ್ಲದರ ಹಿಂದೆ  ಹೋದವರಿಗೆ ಅಲ್ಲಾನೇ‌ ಕಾಣೋದು. ಅಂದರೆ ನಾನಲ್ಲ  ನೀನು ಎಂದ ಹಿಂದೂ ಧರ್ಮದ ಹಿಂದೆ ಶಕ್ತಿಯಿದೆ. ಅದನ್ನು ಹೊರಗೆ ಹುಡುಕಿದರೆ ಸಿಗದು.ಒಳಗೆ ಹುಡುಕಿಕೊಳ್ಳಲು ನಾನು ಹೋಗಬೇಕು. ಹೀಗಾಗಿ ಇನ್ನೂ ಹುಡುಕಾಟ ನಡೆದೇ ಇದೆ.
ಹುಡುಕಾಟವೇ ಜೀವನ. ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ  ಹೋರಾಟ ಹಾರಾಟ ಮಾರಾಟಕ್ಕೆ ಕೊನೆಯಿಲ್ಲ. 
ನವರಾತ್ರಿ ವಿಶೇಷ

2.. ದಿನದ ನವರಾತ್ರಿ ಆರಾಧನೆ  👏ಬ್ರಹ್ಮಚಾರಿಣೀ ದೇವಿ*👏

*ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ*
*ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|*
*ನಮಸ್ತೇ ಜಗದ್ವಂದ್ಯ ಪಾದಾರವಿಂದೇ*
*ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ||*

ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂಬೆಲ್ಲಾ ವ್ಯಾಪಿಸಿರುವ ವಿಶ್ವರೂಪಿಣಿಯೇ, ನಿನಗೆ ನಮಸ್ಕರಿಸುತ್ತೇನೆ. ಜಗದ್ವಂದ್ಯಳಾದ ನೀನು ಶ್ರೇಷ್ಠಳಾಗಿರುವೆ. ಎಲ್ಲರಿಂದಲೂ ನಮಸ್ಕರಿಸಲ್ಪಡುವ ಪರಮಪವಿತ್ರವಾದ ಪಾದಕಮಲಗಳನ್ನು ಹೊಂದಿದವಳು. ಜಗತ್ತಿನ ರಕ್ಷಕಳು. ಬರುವ ಎಲ್ಲಾ ದುರಂತಗಳನ್ನು ದೂರಮಾಡಿ ರಕ್ಷಿಸು ಮಹಾತಾಯೇ.

ಸೃಷ್ಟಿ -ಸ್ಥಿತಿ -ಲಯಗಳನ್ನು ಮಾಡಬಲ್ಲ ಶಕ್ತಿ ಸ್ವರೂಪಳು, ಸನಾತಳು, ತ್ರಿಗುಣಗಳಿಗೆ ಆಶ್ರಯದಾತಳು, ತ್ರಿಗುಣಾಮಯಳು, ನಾರಾಯಿಣೀ ಮಾತೆಯೆ ನಿನಗೆ ನಮಸ್ಕರಿಸುವೆನು.

*ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿ ಭೂತೇ ಸನಾತಿನಿ|*
*ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಸ್ತುತೇ||*

ನವದುರ್ಗೆಯ *ಎರಡನೇ ದಿನದ ರೂಪವೇ ‘ಬ್ರಹ್ಮಚಾರಿಣೀ ದೇವಿ’.* ದೈವಿಕ ಅಂಶವನ್ನು ಮೈಗೂಡಿಸಿಕೊಂಡು, ಶಕ್ತಿ ಸ್ವರೂಪಿಣಿಯಾಗಿ, ಶುದ್ಧಳಾಗಿ, ಶ್ವೇತವಸ್ತ್ರಧಾರಿಣಿಯಾಗಿ, ಗುಲಾಬಿ ಹೂವು, ಜಪಮಾಲೆ ಮತ್ತು ನೀರಿನಿಂದ ತುಂಬಿದ ಕಮಂಡಲವನ್ನು ಕರಗಳಲ್ಲಿ ಹಿಡಿದು ಶೋಭಿಸುತ್ತಿರುವಳು. ಶಾಂತಿ, ಸಮೃದ್ಧಿಯ ಅಧಿದೇವತೆಯಾಗಿ ಭಕುತವೃಂದವ ಸಲಹುವ ಮಾತೆ. ತನ್ನನ್ನೇ ನಂಬಿ ಬಂದವರಿಗೆ ಅಭಯವನ್ನು ನೀಡಿ ಹರಸುವಳು. ನಮ್ಮಲ್ಲಿ ಜ್ಞಾನವನ್ನು, ಆತ್ಮವಿಶ್ವಾಸವನ್ನು ಮೂಡಿಸಿ, ಮನಸ್ಸಿನ ಪ್ರಶಾಂತತೆಗೆ ದಾರಿಯನ್ನು ತೋರಿಸುವಳು ಮಾತೆ.

ಹಿಮವಂತನ ಪುತ್ರಿ ಕಠಿಣ ತಪಸ್ಸನ್ನು ಮಾಡಿದ ಕಾರಣ ‘ತಪಶ್ಚಾರಿಣೀ’- ಅರ್ಥಾತ್ ‘ಬ್ರಹ್ಮಚಾರಿಣೀ’ ಎಂದು ಕರೆಯಲ್ಪಟ್ಟಳು. *ಕೇವಲ ಪರ್ಣ ಎಲೆಗಳನ್ನು ಆಹಾರವಾಗಿ ಸ್ವೀಕರಿಸಿ ‘ಅಪರ್ಣಾ’ ,ಅಪರ್ಣೆ ಎಂದೂ ನಾಮಾಂಕಿತಗೊಂಡಳಂತೆ.*

ಕಾಠಿಣ್ಯತೆಯಪ್ರತಿರೂಪ ಈಕೆ.ಯಾವುದೇ ಕ್ಲಿಷ್ಟ ಕರವಾದ ಸಮಸ್ಯೆಗಳಿಗೆ ಮೋಕ್ಷವನ್ನು ಕಾಣಿಸುವ ತಾಯಿ.ತನ್ನ ಭಕ್ತ ಸಂಕುಲಕ್ಕೆ ಸಂತಸವನ್ನು ನೀಡುವವಳು ಮಹಾಮಾತೆ. ನೆಮ್ಮದಿ, ಶಾಂತಿ, ಕರುಣಿಸುವ ತಾಯಿ. ಜ್ಯೋತಿರ್ಮಯವಾದ ಮತ್ತು ಭವ್ಯವಾದ ರೂಪಗುಣ ಸಂಪನ್ನಳೀಕೆ. ತಾಯಿಯ ಕಠಿಣ, ಏಕಾಗ್ರತೆ, ವೈರಾಗ್ಯ, ಪಡೆದೇ ತೀರಬೇಕೆಂಬ ಹಠ, ಹಂಬಲ ಎಲ್ದಕ್ಕೂ ಒಲಿದವ ಆ ಪರಮೇಶ್ವರನಂತೆ. ಬ್ರಹ್ಮ ಜ್ಞಾನ ಸಿದ್ಧಿಸಲು ಕಾಠಿಣ್ಯತೆ ಬೇಕು. ಯೋಗಿಗಳು, ಋಷಿಮುನಿಗಳು ಬ್ರಹ್ಮಚಾರಿಣೀ ದೇವಿಯನ್ನು ಪೂಜಿಸುವಾಗ *ಸ್ವಾಧಿಷ್ಠಾನ ಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತಾರಂತೆ.*

ಈ ದಿನದ ಪೂಜೆ, ನಿಷ್ಠೆಗಳು ತಪಸ್ಸಿಗೆ ಸಮ. ಮಾಂಗಲ್ಯ ಭಾಗ್ಯವನ್ನು ಕರುಣಿಸುವ ಮಾತೆ. ನಮಗಿರುವ ಎಲ್ಲಾ ಎಡರುತೊಡರುಗಳನ್ನು ದೂರೀಕರಿಸಿ ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ. ಲೋಕಕ್ಕೆ ಆವರಿಸಿದ ಎಲ್ಲಾ ಕಷ್ಟಗಳು ತೊಲಗಿ ಕ್ಷೇಮವುಂಟಾಗಲಿ.👏

*(ಆಕರಗ್ರಂಥ:ಪುರಾಣ ಮಾಲಾ ಗ್ರಂಥ))

      
*ಶಕ್ತಿ ದೇವತೆ ದುರ್ಗಾ ಮಾತೆಯ ೨ ನೇ ಅವತಾರ ಬ್ರಹ್ಮಚಾರಿಣೀ, ತಪಶ್ಚಾರಿಣೀ ದೇವಿ. ಕಠಿಣತೆ ಹಾಗೂ ಸೌಮ್ಯತೆ ಎರಡನ್ನೂ ಸಹಿಸುವ ಶಕ್ತಿ ದಯಪಾಲಿಸುವ ಮಾತೆ. ಬ್ರಹ್ಮಚಾರಿಣಿ ಎಂದರೆ ಸುಲಭದ ಮಾತಲ್ಲ, ಕಠಿಣ ತಪಸ್ಸಿನಂತೆ ಅದು. ತಪಸ್ಸಿನ ಹಿಂದೆ ಒಂದು ಯೋಚನೆಯಿರುತ್ತದೆ. ಯಾವುದನ್ನೋ ಸಾಧಿಸಲು ತಪಸ್ಸು ಮಾಡುವುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ಶಕ್ತಿಸ್ವರೂಪಿಣಿ ತಾಯಿ ಇಲ್ಲಿ ಶಿವನನ್ನು ಒಲಿಸಿಕೊಳ್ಳಲು, ಲೋಕಕ್ಷೇಮಕ್ಕಾಗಿ ಮಹಾತಪಸ್ಸನ್ನು ಕೈಗೊಂಡಳಂತೆ. ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಜಯ ಸಾಧಿಸಿದಳೆಂದು ಉಲ್ಲೇಖವಿದೆ. ಆಕೆ ಯುವತಿಯಾಗಿ, ಶ್ವೇತವಸ್ತ್ರಧಾರಿಣಿಯಾಗಿ ನಾರದರ ಉಪದೇಶದಂತೆ ತಪಸ್ಸು ಮಾಡಿದ ಕಾರಣ ತಪಶ್ಚಾರಿಣೀ ದೇವಿಯಾಗಿ, ಹೂವು ಎಲೆ ಮಾತ್ರ ಸೇವಿಸಿದ ಕಾರಣ ಅಪರ್ಣಾ ಎಂದೂ ಕರೆಯಲ್ಪಟ್ಟಳು. ದೇವಿಯ ಶಾಂತತೆ, ಅಪಾರ ಜ್ಞಾನ, ಅಖಂಡತೆ ಶಿವನನ್ನು ಒಲಿಯುವಂತೆ ಮಾಡಿತು. ನಮಗೂ ಸಹ ಬದುಕಿನ ಹಾದಿಯಲ್ಲಿ ಎದುರಾಗುವ ಕಾಠಿಣ್ಯವನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿಯನ್ನು, ತಾಳ್ಮೆ, ಸಂಯಮವನ್ನು ಆ ಮಹಾಮಾತೆ ನೀಡಿ ಅನುಗ್ರಹಿಸಲಿ*.🤝🙏

Wednesday, September 25, 2024

ಜನಸಂಖ್ಯೆಯಲ್ಲಿ ಜ್ಞಾನಿಗಳ ಸಂಖ್ಯೆ ದೊಡ್ಡದಿರಬೇಕು

ದೇಶದ ತುಂಬಾ ಜನಸಂಖ್ಯೆ ಇದ್ದರೂ ಜನರಲ್ಲಿ ದೇಶಭಕ್ತಿಯೇ ಇಲ್ಲವಾದರೆ ವ್ಯರ್ಥ. ಹಾಗೆ ಮನೆತುಂಬ ಜನರಿದ್ದರೂ ಜನರೊಳಗೆ ಸತ್ಯಜ್ಞಾನವೇ ಇಲ್ಲವಾದರೆ ವ್ಯರ್ಥ. ಇದು ದೇವಸ್ಥಾನ ಮಠ ಮಂದಿರ ಚರ್ಚ್ ಮಸೀದಿಯವರೆಗೂ ಜನಸಂಖ್ಯೆ ಬೆಳೆಸುವತ್ತ ನಡೆದು  ಒಳಗೇ  ಇದ್ದ ದೈವತ್ವಕ್ಕೆ ಕೊರತೆಯಾದಾಗಲೇ ಅಸುರಿ ಶಕ್ತಿ‌ಜಾಗೃತವಾಗಿ ಆಳೋದು. ಇದನ್ನು ಪುರಾಣಗಳೇ ತಿಳಿಸಿವೆ.
ದೇವತೆಗಳು ಸ್ವರ್ಗದಲ್ಲಿ ಮೈ‌ಮರೆತಾಗ ಅಸುರರು ಆಕ್ರಮಣ ಮಾಡಿ ಸ್ವರ್ಗದಿಂದ ಓಡಿಸಿದರಂತೆ‌ ಸುರರು ಬ್ರಹ್ಮಾದಿ ದೇವರುಗಳ ಮೊರೆ ಹೋಗಿ ಯುದ್ದ ಮಾಡಿ ಅಸುರರ ಸಂಹಾರವಾಯಿತಂತೆ, ಧರ್ಮ ಕ್ಕೆ ಜಯದೊರೆಯಿತಂತೆ... ಹೀಗೇ ಎಷ್ಟೋ ಪುರಾಣ ಕಥೆಗಳ ಹಿಂದೆ ‌ಇರುವ ಸತ್ಯವನ್ನು  ವಾಸ್ತವದಲ್ಲಿ ಅರ್ಥ ಮಾಡಿಕೊಳ್ಳಲು  ಒಳಗಿರುವ  ಆತ್ಮಸಾಕ್ಷಿ   ಅಗತ್ಯವಿದೆ.
ನಾನೇ ಎಲ್ಲಾ ನನ್ನಿಂದಲೇ‌ಎಲ್ಲಾ ನನಗಾಗಿಯೇ ಎಲ್ಲಾ ಎನ್ನುವಾಗಲೇ ಅಲ್ಲ ಅಲ್ಲ ಎನ್ನುವವರು  ಬೆಳೆಯೋದು. ಹಾಗಾದರೆ ನಾನಲ್ಲ ಎಂದರೆ ಸರಿಯೆ?  ಪ್ರಶ್ನೆಗೆ ಉತ್ತರ ಒಂದೇ ನಾನೆಂಬುದಿಲ್ಲ. ನಾನೆಂಬ ಅಹಂಕಾರ ಹೋಗಿ ಆತ್ಮವಿಶ್ವಾಸ ದೆಡೆಗೆ  ನಡೆದವರನ್ನು ಮಹಾತ್ಮರೆಂದರು.
ಮಹಾತ್ಮರ ಸಂಖ್ಯೆ ಬೆಳೆಯಲು  ಅಂತಹ ಜ್ಞಾನದ ಶಿಕ್ಷಣ ಕೊಡಬೇಕು. ಮಕ್ಕಳೇ ಬೇಡ ಎನ್ನುವ ಸ್ಥಿತಿಗೆ ತಲುಪಿರುವಾಗ  ,ಸಂಸಾರವನ್ನು ಬಿಟ್ಟು ಹೊರಬಂದವರು ಬೆಳೆದಿರುವಾಗ  ಸತ್ಯ ಸತ್ವ ತತ್ವದ ಬಗ್ಗೆ  ಸ್ತ್ರೀ ತಿಳಿಸಬಹುದೆ?
ತಿಳಿಸಿದರೂ ಸಮಾಜ ಒಪ್ಪುವುದೆ? ಹಿಂದಿನಿಂದಲೂ  ಸ್ತ್ರೀ ಜ್ಞಾನ ದೇವತೆ ಎಂದವರೆ ಜ್ಞಾನದಿಂದ ದೂರವಿಟ್ಟವರು ಹೊರಗೆ  ರಾಜಕೀಯದಲ್ಲಿ ಬೆಳೆದರು. ಆದರೆ ರಾಜಕೀಯದಲ್ಲಿ ಸತ್ಯವಿರದು. ಹೀಗಾಗಿ ಅಸತ್ಯ ಅನ್ಯಾಯ ಅಧರ್ಮ ವೂ ಜೊತೆಯಾಗಿ ಬೆಳೆಯಿತು.  ಬೆಳೆದು ನಿಂತ ಮೇಲೆ ಸರಿಪಡಿಸಲಾಗದು. ಹಾಗಾಗಿ ಗಿಡವಾಗಿರುವಾಗಲೇ ಸತ್ವಯುತ ಆಹಾರ ಫೋಷಣೆ ಮಾಡಿದರೆ ಉತ್ತಮ ಫಲ ಕೊಡುತ್ತದೆ. ಈಗಲೂ ಮಕ್ಕಳಿಗೆ ಕೊಡಲೇಬೇಕಾದ ಸಂಸ್ಕಾರದ ಶಿಕ್ಷಣ ಮನೆಯೊಳಗೆ ಹೊರಗೆ ಕೊಟ್ಟರೆ  ಮಕ್ಕಳು ಮಹಾತ್ಮರಾಗಬಹುದು. ಅತಿಯಾದ ಜ್ಞಾನವೂ ಅಹಂಕಾರ ಆಗಬಹುದು.ಅಜ್ಞಾನದಿಂದ ಜನ್ಮ ಪಡೆದ ಅಹಂಕಾರ ವನ್ನು ಸರಿಪಡಿಸಬಹುದು.ಆದರೆ ಅರ್ಧ ಸತ್ಯ ತಿಳಿದು ನಡೆದವರ ಅಹಂಕಾರ  ವಿನಾಶಕ್ಕೆ ಕಾರಣವಾಗಬಹುದು.
ಎಲ್ಲಿಯವರೆಗೆ  ಜ್ಞಾನಿಗಳ ಸಂಖ್ಯೆ ಬೆಳೆಯದೋ ಅಲ್ಲಿಯವರೆಗೆ ಅಜ್ಞಾನಿಗಳೇ ಭೂಮಿ ಆಳೋದು. ಭೂ ಭಾರ ಹೆಚ್ಚಾದಾಗ  ಭೂಕಂಪ ಪ್ರಳಯ . ಯುದ್ದ ರೋಗ.ದಂತಹ ಪ್ರಕೃತಿ ವಿಕೋಪದಲ್ಲಿ ಜೀವಹೋಗೋದು.
ನಿರಂತರವಾಗಿ ನಡೆದು ಬಂದಿರುವ ಈ ಮನುಕುಲವನ್ನು ನಡೆಸಿರೋದೆ ಮಾನವನ ಧರ್ಮ ಕರ್ಮ ಫಲವಾಗಿದೆ.

ಸಾಲ ಅಥವಾ ಋಣ ತೀರಿಸಲು ಸ್ವಧರ್ಮ, ಸತ್ಕರ್ಮ,ಸ್ವಾಭಿಮಾನ ಸ್ವಾವಲಂಬನೆ ಸತ್ಯಜ್ಞಾನದ ಶಿಕ್ಷಣವೇ ಮೂಲಧಾರ. ಇದೇ ಮಹಾತ್ಮರ ಜೀವನ.

ಸಮ್ಮಿಶ್ರ ಸರ್ಕಾರ ಅಂದರೆ‌ ಮಿಶ್ರಣಕ್ಕೆ ನೀಡಿದ ಸಹಕಾರ

ಮಿಶ್ರ ತುಪ್ಪದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಎಲ್ಲಾ   ವಿಚಾರದಲ್ಲಿ ತೆಗೆದುಕೊಂಡರೆ  ಈ ಮಿಶ್ರ ಜಾತಿ,ವರ್ಣ, ಧರ್ಮ, ದೇಶ ಸಮ್ಮಿಶ್ರ ಸರ್ಕಾರವೇ ಇಲ್ಲದೆ ಸ್ವತಂತ್ರ ವಾಗಿ  ತಮ್ಮನ್ನು ತಾವು ಆಳಿಕೊಳ್ಳುವ ಜ್ಞಾನವಿರುತ್ತಿತ್ತು ಮಾನವನಿಗೆ. ಎಲ್ಲಾ ಕಲಬೆರೆಕೆಯ ಜೀವನದಲ್ಲಿ ಶುದ್ದವಾಗಿರೋದು ಯಾರು?

ಹೊರಗೆ ತಳುಕುಬಳುಕು ಒಳಗೆ ಹುಳುಕು.

ಪರಮಾತ್ಮನೊಬ್ಬನೆ ಶುದ್ದ ಆದ್ದರಿಂದ ಶುದ್ದ ಸತ್ಯ ಧರ್ಮ ಆಚಾರ ವಿಚಾರ ಪ್ರಚಾರ ಶಿಕ್ಷಣದ ಕಡೆಗೆ ನಡೆಯೋದೆ ಯೋಗ ಮಾರ್ಗ. ಹೊರಗೆ ನಡೆದು  ತಿಂದಷ್ಟೂ ರೋಗ. 
ಏನೇ  ತಿಂದರೂ ಪರಮಾತ್ಮನ ಪ್ರಸಾದ ಎನ್ನುವ ಭಕ್ತರು ಇದ್ದರೆ  ಪರಮಾತ್ಮನ ರಕ್ಷಣೆ ಇರುವುದಂತೆ ಹಾಗಾಗಿ ಹೊರಗಿನ  ಪ್ರಸಾದಕ್ಕಾಗಿ ಕಾದು ನಿಲ್ಲುವರು.  ಪಾಪಕ್ಕೆ ತಕ್ಕಂತೆ ಫಲವಿರುತ್ತದೆ.ಪ್ರಸಾದವೇ ಭ್ರಷ್ಟರ ವಶವಾದರೆ  ಗೋವಿಂದನೇ ಗತಿ.

ಸಾಕಾರದಿಂದ ನಿರಾಕಾರದೆಡೆಗೆ ನಡೆದ  ಧರ್ಮ ಇಂದು ಸರ್ಕಾರದ ಹಿಂದೆ ನಡೆದಿದೆ ಎಂದರೆ  ದಾರಿತಪ್ಪಿದೆಯೆ?

ಸ್ವಚ್ಚ ಭಾರತಕ್ಕೆ  ಸ್ವಚ್ಚ ಜ್ಞಾನದ ಶಿಕ್ಷಣ ಕೊಡದೆ ಉಚಿತವಾಗಿ ತಿನ್ನಿಸಿದರೆ  ದೇವರು ಕಾಣೋದಿಲ್ಲ. ಅತೃಪ್ತ ಆತ್ಮಗಳೇ ಕಾಣೋದು.

ಆಹಾರವಿಲ್ಲದೆ ತಪಶ್ಯಕ್ತಿಯಿಂದ ಸಾವಿರ ವರ್ಷ ಬದುಕಿದ ತಪಸ್ವಿಗಳ  ದೇಶದಲ್ಲಿ  ತಾಮಸಗುಣದವರು  ಬೆಳೆಯಲು ಕಾರಣವೇ ಅಜ್ಞಾನ. ಪರಮಾತ್ಮನಿಗೆ ತಲುಪದ ಕರ್ಮ ವೇ ಅಕರ್ಮ, ವಿನಯವನ್ನು ಬೆಳೆಸದ ವಿದ್ಯೆಯೇ ಅವಿದ್ಯೆ.
ಸತ್ಯವನ್ನು ತಿಳಿಸದ  ತಿಳುವಳಿಕೆಯೇ ಅಜ್ಞಾನ.

ಹಿಂದೆ  ಅವರವರ ಜನ್ಮದ‌ಮೂಲ ಧರ್ಮ/ ಕರ್ಮಕ್ಕೆ‌ತಕ್ಕಂತೆ ಜೀವನ ನಡೆಸುತ್ತಾ ಸಮಾಜದ ಒಂದು ಹಿತದೃಷ್ಟಿಯಿಂದ ಸಂಸಾರದಲ್ಲಿ ಒಗ್ಗಟ್ಟು ಇತ್ತು. ಈಗಿದು ವಿರುದ್ದವಾಗಿದ್ದು ಹೊರಗಿನವರ ಜೊತೆಗೆ ಬೆರೆತು ಒಳಗಿನವರನ್ನೇ‌ಮರೆತು  ಅಂತರ ಬೆಳೆಸಿಕೊಂಡರೆ  ಜೀವನಕ್ಕೆ ಅರ್ಥ ವಿರದು ಜೀವಕ್ಕೆ ಶಾಂತಿ ಸಿಗದು. ಇದೇ ಎಲ್ಲಾ ಅನರ್ಥಗಳಿಗೆ ಅವಾಂತರಕ್ಕೆ ಕಾರಣ.

Sunday, September 22, 2024

ಜ್ಞಾನ ಬೇರೆ ವಿದ್ಯೆ‌ಬೇರೆಯೆ?

ನಾವು ಈವರೆಗೆ ಕಲಿತಿರೋದು ಜ್ಞಾನವಲ್ಲ ವಿದ್ಯೆ ಎಂದರೆ ಅರ್ಥ ವಾಗದು.
ಇಲ್ಲಿ ಜ್ಞಾನ ಆಂತರಿಕ ವಾಗಿರುವ ಶಕ್ತಿ ವಿದ್ಯೆ ಹೊರಗಿನ ಶಕ್ತಿ. ಅದನ್ನು ಯಾರು ಸದ್ಬಳಕೆ ಮಾಡಿಕೊಂಡು ಜೀವನದ ಸತ್ಯ ತಿಳಿದು ನಡೆಯುವರೋ ಅವರು ಜ್ಞಾನಿಗಳು ಎಂದರ್ಥ.
  ಜ್ಞಾನ ಎಂದರೆ ತಿಳುವಳಿಕೆ ವಿಜ್ಞಾನ ವಿಶೇಷವಾದ ತಿಳುವಳಿಕೆ.ಇದರಲ್ಲಿ ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ಒಂದೇ ನಾಣ್ಯದ ಎರಡು ಮುಖ. ಮಾನವನಲ್ಲಿ ಸಾಮಾನ್ಯ ಜ್ಞಾನ ಅಡಗಿದೆ. ಇತಿಮಿತಿಯಲ್ಲಿ ಜ್ಞಾನ ವಿಜ್ಞಾನವನರಿತವರು ಜೀವನದಲ್ಲಿ ಸಾಧನೆ ಮಾಡಿರುವರು. ಅಂದರೆ ಎರಡೂ ಸಮಾನವಾಗಿ ಬಳಸುವಾಗ  ಸ್ಥಿತಪ್ರಜ್ಞಾವಂತರಾಗಿರಬೇಕು.
ಅತಿಯಾಗಿ ತಿಂದರೂ ಕಷ್ಟ ತಿನ್ನದೆ ಬಿಟ್ಟರೂ ಕಷ್ಟ. ಹಾಗೆ ಹಸಿದವನಿಗೆ ಅನ್ನದಾನ ಮಾಡಿದರೆ ಪುಣ್ಯ ಹೊಟ್ಟೆ ತುಂಬಿದವನಿಗೆ ಅತಿಥಿಸತ್ಕಾರವೂ  ಪಾಪವಾಗಬಹುದು.
ಅತಿಯಾದ ಬಡತನ ಅತಿಯಾದ ಸಿರಿತನ ಮಾನವನಿಗೆ ಶಾಪವಾಗುತ್ತದೆಂದರ್ಥ.
ವಾಸ್ತವದಲ್ಲಿ ನಾವೆಲ್ಲರೂ ಪುರಾಣ ಇತಿಹಾಸ ಶಾಸ್ತ್ರ ಕಥೆಗಳನ್ನು ತಿಳಿದು  ವಿದ್ಯಾವಂತರೆನಿಸಿದ್ದರೂ  ನಮ್ಮ ಈಸ್ಥಿತಿಗೇ  ಏನು ಕಾರಣವೆನ್ನುವ ಸತ್ಯದ ಅರಿವಿಲ್ಲವಾದರೆ ನಾವು ಜ್ಞಾನಿಗಳಲ್ಲ. ನಮ್ಮ ಸಮಸ್ಯೆಯ ಮೂಲವೇ ಅಜ್ಞಾನದ ನಡೆನುಡಿಯ  ಕರ್ಮ ವಾಗಿದೆ. ಆ ಕರ್ಮ ವೇ ಹಿಂದಿರುಗಿ ಬಂದು ಫಲ ನೀಡುತ್ತಿದೆ. ಹಣವಿದ್ದರೂ ಸಾಲದ ಹೊರೆ ಎಂದಾಗ ಯಾವುದಕ್ಕಾಗಿ ಸಾಲ ಮಾಡಿದ್ದೆವು? 
ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ. ರೂ ಕಟ್ಟುವರೆಂದರೆ ಆ ಶಿಕ್ಷಣದಲ್ಲಿ ಜ್ಞಾನವಿತ್ತೆ? ಅದೇ ಮುಂದೆ ಮಕ್ಕಳ ತಲೆಯ ಮೇಲಿನ ಸಾಲವಾಗಬಾರದೆಂದರೆ ಶಿಕ್ಷಣದವಿಷಯದಲ್ಲಿ ಸತ್ಯ ಜ್ಞಾನವಿರಲಿ. ಆಗ ಸಾಲದ ಅರ್ಥ ಋಣ ತೀರಿಸುವ ಜ್ಞಾನ ಬರುತ್ತದೆ.
ದೇಶದ ಒಳಗಿದ್ದು  ದೇಶ ಬೇರೆ  ನಾನೇ ಬೇರೆ ದೇವರು ಬೇರೆ ನಾನೇ ದೇವರು ಎಂದರೆ  ಸತ್ಯವಿರದು.
ನನ್ನೊಳಗೆ ದೇವಶಕ್ತಿ ಇದ್ದರೂ ದೈವೀಕ ಗುಣಜ್ಞಾನದಿಂದ ಬೆಳೆಯದಿದ್ದರೆ  ದೇವರನ್ನು ನಂಬಲಾಗದು. ಇದಕ್ಕಾಗಿ ನಮ್ಮ ಶಿಕ್ಷಣದಲ್ಲಿಯೇ  ಸತ್ವಯುತ ವಿಷಯ ಗಳನ್ನು ತಿಳಿಸಿದರೆ ಮಕ್ಕಳು ಮಹಾತ್ಮರಾಗಿ  ಋಣಮುಕ್ತರಾಗಬಹುದು.
ಕಷ್ಟ ವಿದೆ. ಹಾಗಂತ ಅಸಾಧ್ಯವಲ್ಲ.ನಮ್ಮ ಹಿಂದಿನ ಮಹಾತ್ಮರುಗಳೆ ಇದಕ್ಕೆ ಸಾಕ್ಷಿ.
ದೇವರಾಗದಿದ್ದರೂ ಸರಿ ಅಸುರರ ವಶವಾಗದಿದ್ದರೆ ಉತ್ತಮ.
ಎಲ್ಲಿ ಸತ್ವ ಸತ್ಯ ತತ್ವ ಜ್ಞಾನವಿರುವುದೋ ಅಲ್ಲಿ ದೇವರಿರುವರು.ಶಾಂತಿಯಿರುವುದು. ಶಾಂತಿಯಿಂದ ಆತ್ಮಜ್ಞಾನ ಪ್ರಾಪ್ತಿ. ಆತ್ಮಜ್ಞಾನದ ನಂತರವೆ ಆತ್ಮಕ್ಕೆ ತೃಪ್ತಿ ಮುಕ್ತಿ ಇದು ಅಧ್ಯಾತ್ಮ ಸತ್ಯ.
ಭೌತಿಕದಲ್ಲಿ ಇದನ್ನು ಕಾಣಲಾಗದು. ಹಾಗಂತ ಭೌತವಿಜ್ಞಾನದಿಂದ ಮಾನವ ದೂರವಾಗಿರೋದು ಕಷ್ಟ.
ಜ್ಞಾನವಿಜ್ಞಾನವು ಒಂದೇ ನಾಣ್ಯದ ಎರಡು ಮುಖ. ಒಂದು ಬಿಟ್ಟರೆ ಇನ್ನೊಂದು ಮುಂದೆ ನಡೆಯುತ್ತದೆ. ಎರಡನ್ನೂ ಸದ್ಬಳಕೆ ಮಾಡಿಕೊಂಡು ನಡೆದರೆ ಸ್ಥಿತಪ್ರಜ್ಞಾವಂತ
ಆಗಬಹುದು.ಅಂದರೆ ನಮ್ಮ ಸ್ಥಿತಿಗೆ ‌ನಾನೇ ಕಾರಣವೆನ್ನುವ ಸತ್ಯ ತಿಳಿದು ನನ್ನನ್ನು ನಾನರಿತು ನಡೆಯಬಹುದು. ಇದು ರಾಜಯೋಗದ ವಿಚಾರ.
ಇಂದು ಭೋಗದ ರಾಜಕೀಯವನ್ನು ಎತ್ತಿ ಹಿಡಿದು ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿರುವವರ ಹಿಂದೆ ನಡೆದವರು ಸಾಲದ ಸುಳಿಯಲ್ಲಿ ಸಿಲುಕಿ ಸಾಲ ತೀರಿಸಲು ಯಾವ ಕೆಲಸವಾದರೂ ಸರಿ ಯಾವ ದೇಶವಾದರೂ ಸರಿ ಎನ್ನುವ ಮಟ್ಟಿಗೆ ಪರಿಸ್ಥಿತಿ ಇದೆ. ಆದರೆ,ಒಳಜಗತ್ತಿನ ಸಾಲ ತೀರಿಸಲು ಸದ್ವಿದ್ಯೆಯಿಂದ ಸುಜ್ಞಾನದಿಂದ ಮಾತ್ರ ಸಾಧ್ಯ ಎನ್ನುವಾಗ ಅದನ್ನು ಶಿಕ್ಷಣದಿಂದಲೇ ಕೊಡುವುದು ಧರ್ಮ.
ಇದಕ್ಕೆ ವಿರೋಧಿಸುವ ಪೋಷಕರಿರುವವರೆಗೂ ವಿದ್ಯೆ ಅವಿದ್ಯೆಯಾಗೇ ಇರುತ್ತದೆ.

ಶಿಕ್ಷಕರಾಗಲಿ ಗುರುವಾಗಲಿ‌ ನಿಸ್ವಾರ್ಥ, ನಿರಹಂಕಾರ ,ಪ್ರತಿಫಲಾಪೇಕ್ಷೆ ಯಿಲ್ಲದ ಸೇವೆ ಮಾಡುವ‌ ಪರಮಾತ್ಮನ ದಾಸರು. ಹಾಗಾಗಿ ಗುರುವನ್ನು ದೇವರೆಂದರು.  ಇವರಲ್ಲಿ ಸ್ವಾರ್ಥ ಅಹಂಕಾರವಿರದಿರಲು ಕಾರಣವೇ ತತ್ವಜ್ಞಾನ. ಎಲ್ಲರಲ್ಲೂ ಆ ಪರಾಶಕ್ತಿ ಪರಮಾತ್ಮಶಕ್ತಿ  ಕಾಣೋದಕ್ಕೆ ಕಷ್ಟಪಟ್ಟು ಅಧ್ಯಾತ್ಮ ಸಾಧನೆ ಮಾಡಿದವರು ಗುರುವಾಗಬಹುದು. 
ಒಳಗಿರುವ ಅರಿವೇ ಗುರುವಾದಾಗ ದೇಹವೇ ದೇಗುಲ ಆಗುತ್ತದೆ. ಎಲ್ಲಿ ಹೋದರೂ  ದೇವರಿರುವರು. ನಿರಾಕಾರ ಬ್ರಹ್ಮನ್  ಕಡೆಗೆ ನಡೆಸೋ ಗುರುವೇ ನಿಜವಾದ ಜ್ಞಾನಿ ವಿಜ್ಞಾನಿ  ಎಂದಿರುವರು. ಯಾರಿಗೆ ಗೊತ್ತು ನಮ್ಮೊಳಗೆ  ದೇವರಿರುವರೋ ಅಸುರರೋ?
ಗುಣಜ್ಞಾನದಿಂದಲೇ ಜೀವನ ನಡೆದಿರೋದು. ವ್ಯಕ್ತಿಗಿಂತ ವ್ಯಕ್ತಿತ್ವ ಶ್ರೇಷ್ಠ. ಹಾಗೆ ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ವೆನ್ನುವರು.
ಇತರರ ಒಳಿತಿಗಾಗಿ ಬದುಕೋದು ದೇವರು
ತನ್ನ ಜೊತೆಗೆ ತನ್ನವರ ಒಳಿತನ್ನು ಬಯಸೋದು ಮಾನವ
ಕೇವಲ ತನ್ನ ಸ್ವಾರ್ಥ ಅಹಂಕಾರಕ್ಕೆ ಇತರರನ್ನು ಬಲಿಕೊಡೋದೆ  ಅಸುರ ಬುದ್ದಿ..ಎಷ್ಟು ವರ್ಷ ಬದುಕಿದರೂ ಸೂಕ್ಮ.  ಜ್ಞಾನವಿಲ್ಲವಾದರೆ ಅತಂತ್ರಸ್ಥಿತಿಯೇ ಗತಿ.
ವಿದ್ಯಾವಂತರೆಲ್ಲ ಜ್ಞಾನಿಗಳಾಗಿಲ್ಲ.ಜ್ಞಾನಿಗಳಾದವರೆಲ್ಲರೂ ವಿದ್ಯೆ  ಕಲಿತಿರಲಿಲ್ಲ. ಆದರೆ ಈಗ  ಎಲ್ಲಾ ಮಿಶ್ರ.

ಅದ್ವೈತ ದ ಆಳ ಅಗಲ ಅಳೆಯಲಾಗದು.ಅರ್ಥ ವಾಗಬಹುದು

ಇದು ಅದ್ವೈತ. ಆಳವಾದ ಅರಿವು ಎಂದರೆ ನಾನು ಹೋಗಿ ನೀನೇ ಎನ್ನುವ ಶರಣಾಗತಿಯಲ್ಲಿ ಜೀವಿಸೋದಾಗಿತ್ತು. ವಾಸ್ತವದಲ್ಲಿ ನಾವು ಬದುಕಿದ್ದೇವೆಯೇ ಸತ್ತಿರುವೆವೆ ಎನ್ನುವ ಪ್ರಶ್ನೆಗೆ ಉತ್ತರ ಒಳಗಿದೆ.ಹೊರಗಿನಿಂದ ಬದುಕಿದಂತೆ ಕಂಡರೂ ಒಳಗಿನ‌ಮನಸ್ದು ಸತ್ತಂತಿರುತ್ತದೆ.ಎಲ್ಲಾ ಸತ್ಯ ತಿಳಿದರೂ ತಿಳಿಸೋಹಾಗಿಲ್ಲ.ತಿಳಿಸಿದರೂ  ಅರ್ಥ ವಾಗಲ್ಲ ಎನ್ನುವವರ ಜೊತೆಗೆ ಸತ್ಸಂಗ  ನಡೆಸಿದರೂ ಸತ್ಯವಿಲ್ಲದೆ ನಾನೇ ಮಾಡುತ್ತಿರೋದು ನಾನೇ ಹೇಳುತ್ತಿರೋದು ನಾನೇ ಎಲ್ಲಾ ಎನ್ನುವವರ ಜೊತೆಗೆ  ನಾನಿರುವಾಗ ನಾನೆಂಬುದಿಲ್ಲ ಎನ್ನುವ ಅದ್ವೈತ ಭಾವನೆ ಇರೋದಿಲ್ಲ.ಹಾಗಾಗಿ ಭೂಮಿ ನಡೆದಿರೋದು ದ್ವೈತದಲ್ಲಿ .ಈ ದ್ವೈತ ಹೊರಗೆ ಬಂದಷ್ಟೂ ಭಿನ್ನವೆ  ಒಂದಾಗೋದು‌ಕಷ್ಟ.ಇದು ಎಲ್ಲಾ ಯುಗಯುಗದ ಕಥೆಯಾಗಿರುವಾಗ ಕಲಿಯುಗದಲ್ಲಿ ಇದನ್ನು ವಿರೋಧಿಸಿದರೆ ಅದ್ವೈತವಾಗದು.ಒಟ್ಟಿನಲ್ಲಿ ಒಂದನ್ನೊಂದು ಸೇರಿದರೆ‌ ಒಗ್ಗಟ್ಟು  ಇಲ್ಲವಾದರೆ ಬಿಕ್ಕಟ್ಟು.

ಭಾರತೀಯರ ಒಂದು ಸಮಸ್ಯೆ ಮೂಲ ಜ್ಞಾನವನ್ನು ಮರೆತು ಹೊರಗೆ ಬಂದು ರಾಜಕೀಯ ನಡೆಸಿರೋದು.ಎಷ್ಟೋ ರಾಜಾಧಿರಾಜರು ದೇಶ ಆಳಿದ್ದರೂ ಅವರ ಶ್ರೇಷ್ಠ ಜ್ಞಾನ ಅರಿಯದೆ ಕೇವಲ ಅವರನ್ನು ಪ್ರತಿಮೆಯ ರೂಪದಲ್ಲಿ ಕೂರಿಸಿ  ಜನರನ್ನು ಆಳಿರೋದು. ಇಂದಿಗೂ ಒಳಗೆ ಹುಳುಕು ಹೊರಗೆ ತಳುಕು ಬಳುಕಿನ ಜೀವನವೇ ಜನಸಾಮಾನ್ಯರ ಸಾಮಾನ್ಯಜ್ಞಾನವನ್ನು ನಿರ್ಲಕ್ಷ್ಯ ಮಾಡಿದೆ .ಪ್ರಜಾಪ್ರಭುತ್ವ ವ್ಯವಸ್ಥೆಯ ಅವಸ್ಥೆ ಗೆ  ಈ ನಾನೇ ಎನ್ನುವ ಅಹಂಕಾರ ಕಾರಣವೆಂದಾಗ ನಾನು ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದಿರುವ ದಾಸರ ಯೋಗ ಅರ್ಥ ವಾಗದು.
 
ಜನಸಾಮಾನ್ಯರ ಸಹಕಾರವಿಲ್ಲದೆ ನಾನು ಬೆಳೆದಿಲ್ಲವೆಂದರೆ ಇದಕ್ಕೆ ಕಾರಣವೇ ಜನಸಾಮಾನ್ಯರ ಅಜ್ಞಾನದ ಸಹಕಾರ.
ಅಜ್ಞಾನಕ್ಕೆ ಕಾರಣವೇ ಶಿಕ್ಷಣದ ವಿಷಯ. ಶಿಕ್ಷಣದಿಂದ ಹಣಗಳಿಸಿದ್ದರೂ  ಹಣದ ದುರ್ಭಳಕೆ ಮಾಡುವ ಅಜ್ಞಾನ ಹೋಗದೆ  ಒಳಗಿನ ಜ್ಞಾನ  ಸಿಗದು.
ಎಷ್ಟೋ ಮಹಾತ್ಮರುಗಳ ಸಂದೇಶ ಹಿಡಿದು ಜನರನ್ನು ಮನೆಯಿಂದ ಹೊರಗೆಳೆದು ಹಣ ಅಧಿಕಾರ ಸ್ಥಾನಮಾನ ಗಳಿಸಿ ಕೊನೆಗೆ ಜನರನ್ನೇ ಸೇವಕರಂತೆ ಕಾಣುವ ಅಸುರ ಶಕ್ತಿ ಗಮನಿಸುವ ಬುದ್ದಿವಂತಿಕೆ ಇದ್ದರೆ  ಗಂಜಿಅನ್ನ ತಿಂದಾದರೂ ಅಂಜಿಕೆಯಿಲ್ಲದೆ ಜೀವನ ನಡೆಸಬಹುದು.
ಇದು ಸಾಧ್ಯವಾಗಬೇಕಾದರೆ ಮೊದಲು ಮನೆಯೊಳಗೆ ತನ್ನ ಅನ್ನ ತಾನೇ ಬೇಯಿಸಿಕೊಂಡು ತಿನ್ನುವ ಸ್ವಾಭಿಮಾನ ಅಗತ್ಯ.
ಸಂಸಾರಕ್ಕೆ ಬಂದ ಮೇಲೆ ಸಂಸಾರದ ಜವಾಬ್ದಾರಿ ಹೊತ್ತು ನಡೆಯೋದು ಧರ್ಮ .ಅದನ್ನು ಏನೇ ಸಾಧನೆ ಮಾಡಿದಂತೆ ಹೇಳಿದರೆ  ನಡೆಸೋ ಶಕ್ತಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದರ್ಥ.
ಒಟ್ಟಿನಲ್ಲಿ ಭೂಮಿಯ ಆಸರೆ ಸಹಕಾರ ಸಹಾಯವಿಲ್ಲದೆ ಯಾವ ಜೀವಿಯೂ ಇಲ್ಲಿ ಬದುಕಲಾಗದು.ಹೀಗಾಗಿ ಭೂ ಋಣ ತೀರಿಸಲು ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರ ದಲ್ಲಿ ಸ್ವತಂತ್ರ ಜ್ಞಾನದಿಂದ ಸತ್ಯ ಧರ್ಮ ದಿಂದ ನಡೆದವರಿಗಷ್ಟೆ  ನಾನೆಂಬುದಿಲ್ಲ ಎನ್ನುವ ಅದ್ವೈತ ಸತ್ಯದ ಅರಿವಿಗೆ ಬಂದಿದೆ.ಹಾಗಂತ ಇದು ಎಲ್ಲರಿಗೂ ಬರೋದಿಲ್ಲ.ಬಂದರೆ ಸಂಸಾರವೇ ಇರೋದಿಲ್ಲ.ಎಲ್ಲಾ ಸಂನ್ಯಾಸಿಗಳಾಗಲು ಸಾಧ್ಯವೆ?
ಆದರೆ ಸಂನ್ಯಾಸಿಯ ವೇಷಧರಿಸಿ ಅಧರ್ಮ ಅನ್ಯಾಯ ಅಸತ್ಯದ ರಾಜಕೀಯದೆಡೆಗೆ ಹೊರಟರೆ  ಭ್ರಷ್ಟಾಚಾರ.
ಕಾಲ ಸರಿಯಿಲ್ಲ  ಕಾಲು ಸರಿಯಿಲ್ಲ ಹಾಗಾದರೆ ತಲೆ ಸರಿಯಿದೆಯೆ? ತಲೆಗೆ ತುಂಬಿರುವ ವಿಷಯದಲ್ಲಿ ವಿಷ ಇದ್ದರೆ ದ ಅಮೃತಜ್ಞಾನ  ಹಿಂದುಳಿಯುವುದು ಸಹಜ.
ಈಗಲೂ ಕಾಲಮಿಂಚಿಲ್ಲ.ಸತ್ಯ ಎಲ್ಲಿಂದಲಾದರೂ ಯಾವ ರೂಪದಲ್ಲಾದರೂ ಹರಿದು ಬರುತ್ತಿರುವುದು.ಆದರೆ ನಾವು ನಮ್ಮ ಸ್ವಾರ್ಥ ಚಿಂತನೆಯಿಂದ  ಹೊರಬರದೆ ಅದರೊಳಗೇ ಇದ್ದು ನನಗೇನು ಲಾಭ ಎಂದರೆ ನಷ್ಟ ಕಟ್ಟಿಟ್ಟ ಬುತ್ತಿ.
ಒಂದು ಮಗು ಜ್ಞಾನದೆಡೆಗೆ ನಡೆದರೂ ಭವಿಷ್ಯ ಉತ್ತಮ.
ಅದೇ ಮಗು ಅಜ್ಞಾನದೆಡೆಗೆ ನಡೆದಷ್ಟೂ ಭವಿಷ್ಯ ಅಧಮ.
ಅಸುರರೊಳಗೇ ಸುರ ಅಡಗಿದ್ದರೂ ಆ ಶಕ್ತಿಯನ್ನು ಗುರುತಿಸುವ ಶಿಕ್ಷಣ ಕೊಡದಿದ್ದರೆ ಅಸುರರೆ ಸುರರನ್ನು ಆಳೋದು.
ಮೇಲಿರುವ  ಆ ಭಗವಂತನಿಗೇನೂ ನಷ್ಟವಿಲ್ಲ ಕಾರಣ ಇಲ್ಲಿ ಜೀವಾತ್ಮರ ಸಾಮ್ರಾಜ್ಯ ವಿದ್ದರೂ ಅದರೊಳಗಿರುವ ಧರ್ಮ ಕರ್ಮದ ಫಲ ಅದೇ ಜೀವವೇ ಅನುಭವಿಸಲೇಬೇಕೆಂಬ ವಿಧಿ‌ನಿಯಮವನ್ನು ಸ್ವಯಂ ಅವತಾರ ಪುರುಷರೆ ತಡೆಯಲಾಗಿಲ್ಲವೆಂದರೆ  ಇದರ‌ಮೂಲ ಒಳಗಿರುವ ಧರ್ಮ ಕರ್ಮಕ್ಕೆ ಅಂಟಿಕೊಂಡಿದೆ ಎಂದರ್ಥ.
ಭಾರತ ಸ್ವಾತಂತ್ರ್ಯ ಗಳಿಸಿ ಇಷ್ಟು ವರ್ಷ ಕಳೆದರೂ ನಮ್ಮನ್ನು ಆಳುತ್ತಿರುವುದು ಪರಕೀಯರೆ ಎನ್ನುವ ಸತ್ಯ ಇಂದಿಗೂ ಹಸಿರಾಗಿದೆ.ಕಣ್ಣಿಗೆ ಕಾಣುತ್ತಿಲ್ಲವಷ್ಟೆ.
ವಿದೇಶಿ ಕಂಪನಿಗಳ ಸಾಮ್ರಾಜ್ಯವನ್ನು ಸ್ವತಃ ರಾಜಕಾರಣಿಗಳೆ ಸ್ವಾಗತಿಸಿರುವಾಗ ಆಳುವವರ ಅಜ್ಞಾನವನ್ನು ಎತ್ತಿ ಏರಿಸಿರುವ ಪ್ರಜಾಪ್ರಭುತ್ವ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಪ್ರಜೆಗಳ  ಅಜ್ಞಾನಕ್ಕೆ ಸರಿಯಾದ ಹಣಸಂಪಾದನೆ. ಹಣದ ದುರ್ಭಳಕೆ ಯಾದಷ್ಟೂ ಸಾಲದ ಹೊರೆ. ಸಾಲ ಬೆಳೆದಷ್ಟೂ ತೀರಿಸಲು ಅಡ್ಡದಾರಿಹಿಡಿಯೋದು ಸಹಜ. ಅಡ್ಡ ದಾರಿ ಹಿಡಿದ‌ಮೇಲೆ ಸೀದಾ ಬರೋದು ಬಹಳ‌ಕಷ್ಟ.ಕಷ್ಟಪಡದೆ ಸುಖ  ಅನುಭವಿಸಿದವರಿಗಂತೂ ಸತ್ಯ ಅರ್ಥ ವಾಗದು.
ಹೀಗೇ ಒಂದನ್ನೊಂದು ಸೇರಿಕೊಂಡು ಮೇಲ್ಮಟ್ಟಕ್ಕೆ ಏರಿ ಒಮ್ಮೆ ಕೆಳಗೆ ಬಿದ್ದು ಹೋಗುವ ಜೀವಕ್ಕೆ  ಬೆಲೆಯಿಲ್ಲ. ಸತ್ತ ಹೆಣಕ್ಕೆ ಬೆಲೆಕೊಟ್ಟು ಖರೀದಿಸುವಷ್ಟು  ಸತ್ಯಕ್ಕೆ ಬೆಲೆಕೊಡದ ಅಸುರ ಗುಣ  ದೈವತ್ವದೆಡೆಗೆ ಹೋಗೋದು ಕಷ್ಟ.ಇದಕ್ಕೆ ಕಾರಣ ಅಹಂಕಾರ ಸ್ವಾರ್ಥ ದ ಜೀವನ ಎನ್ನುವ ಕಾರಣದಿಂದ  ಮಹಾತ್ಮರುಗಳು ಅಹಂ‌ಬ್ರಹ್ಮಾಸ್ಮಿ ಎಂದರು.
ನಾನು ಬ್ರಹ್ಮನ ಒಂದು ಅಂಶವಾದ್ದರಿಂದ ನನ್ನೊಳಗೆ ಬ್ರಹ್ಮನಿರೋವಂತೆ ನಾನು ಬ್ರಹ್ಮನಾಗಬಹುದು. 
ಮೂಲ ಬ್ರಹ್ಮನಾಗೋದು ಅಸಾಧ್ಯ. ಹೇಗೆ ವಿಷ್ಣುವಿನವತಾರ ನಡೆದಿದೆಯೋ ಹಾಗೆಯೇ ದೇವಾನುದೇವತೆಗಳ ಅವತಾರವಾಗಿದೆ.ಅದರಲ್ಲಿ ಸ್ತ್ರೀ ಶಕ್ತಿಯೂ ಅಡಗಿರುವಾಗ ಅವಳನ್ನು ನಿರ್ಲಕ್ಷ್ಯ ಮಾಡಿದಷ್ಟೂ ಭೂಮಿಯ ಸತ್ಯ ಸತ್ವ ತತ್ವ ಕುಸಿಯುತ್ತದೆ.
ಇದನ್ನರಿತವರು  ವಿರಳ.ಒಟ್ಟಿನಲ್ಲಿ ಭೂಮಿಯಲ್ಲಿ ನಾನಿದ್ದೇನೆ .ಆ ನಾನು ಹೋದ ಮೇಲೆ ಭೂಮಿಯಿಂದ ಮುಕ್ತಿ. ಹಾಗಾದರೆ ಭೂಮಿ ಮೇಲಿರುವಾಗಲೇ ನಾನೆಂಬ ಅಹಂಕಾರ ತೊಲಗಿದವರು ಮಹಾತ್ಮರಾಗಿರುವರಲ್ಲವೆ?
ಅವರ ತತ್ವಜ್ಞಾನದಿಂದ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆ ಬೆಳೆದಿದೆಯೆ? ಇಲ್ಲವೆಂದರೆ ಪ್ರಚಾರ ಮಾಡಿದವರಲ್ಲಿ ನಾನೆಂಬ ಅಹಂಕಾರ ವಿತ್ತು. ಒಬ್ಬ ಗುರು ಅಥವಾ ಶಿಕ್ಷಕನಾಗಲು ಅಹಂಕಾರ ಸ್ವಾರ್ಥ ವಿರಬಾರದು.ಇಲ್ಲಿ ಅಧ್ಯಾತ್ಮ ಸತ್ಯ ಭೌತಿಕ ಸತ್ಯದ ನಡುವಿನ ಅಂತರದಿಂದ  ದ ಸಮಸ್ಯೆ ಮಧ್ಯೆ ಬೆಳೆದಿದೆ. ನಾನೂ ಇದ್ದರೂ ಪರಮಾತ್ಮ ನಿಲ್ಲದೆ ನಾನಿಲ್ಲವೆಂದಾಗ ಪರಮಸತ್ಯ ಪರಮಶಕ್ತಿ  ನನ್ನ ಒಳಗೇ ಬೆಳೆಸುವ ಶಿಕ್ಷಣ ನಾನೂ ಪಡೆದು ಎಲ್ಲರಿಗೂ ಕೊಡುವವರೆ ನಿಜವಾದ ಗುರು ಅಥವಾ ಶಿಕ್ಷಕ. ನಾನ್ಯಾರು ಎನ್ನುವ ಪ್ರಶ್ನೆ ಒಳಗಿನಿಂದ ಜನ್ಮ ಪಡೆದಾಗಲೇ  ಅದ್ವೈತ ದರ್ಶನ. ಶ್ರೀ ಶಂಕರಾಚಾರ್ಯರು ಶ್ರೀ ಮಧ್ವಾಚಾರ್ಯರು ಶ್ರೀ ರಾಮಾನುಜಾಚಾರ್ಯರು ಇಂದಿಗೂ ಸ್ಮರಣೀಯರು.
ಅವರು ಕಾಲಮಾನವನರಿತು ಜನರನ್ನು ಒಂದು ಮಾಡುವ ತತ್ವಜ್ಞಾನಕ್ಕೆ ಒತ್ತುಕೊಟ್ಟು ಧರ್ಮ ಸೂಕ್ಮದ ಕಡೆಗೆ ನಡೆಸಿದ ಸ್ವಯಂ ಭಗವಂತನ ಅವತಾರಿಗಳು ಗುರುಗಳು. ಆದರೆ ಇಂದು ಇದರಲ್ಲಿ ತಂತ್ರವೇ ಹೆಚ್ಚಾಗಿ ಕಂಡಾಗ ಜನರಲ್ಲಿ ಸತ್ಯ ಹಿಂದುಳಿಯುವುದು ಸಹಜ. ದೈವತ್ವದೆಡೆಗೆ ನಡೆಯಲು ತತ್ವ ಅಗತ್ಯ.ಹಿಂದಿನವರಷ್ಟು ನಮ್ಮಲ್ಲಿ ಜ್ಞಾನವಿಲ್ಲ ವಿಜ್ಞಾನವಿದೆ.ವಿಜ್ಞಾನ ಹೊರಗಿನ ಸತ್ಯವಾಗಿದೆ. ಹೊರಗಿನ ಸತ್ಯ ತಾತ್ಕಾಲಿಕ ವಾಗಿರುವ ಬದಲಾಗುವ ಕಾರಣದಿಂದ ಜೀವಕ್ಕೆ ತೃಪ್ತಿ ಸಿಗದು. ಹೀಗಾಗಿ ಜೀವಾತ್ಮ ಪರಮಾತ್ಮನ ಕಡೆಗೆ ನಡೆಯದೆ ಪರಕೀಯರ ವಶವಾಗಿ ಮುಂದೆ ನಡೆದಿದೆ.
ಹಿಂದುಳಿದವರನ್ನು ಕಡೆಗಣಿಸಿದಷ್ಟೂ ಹಿಂದೂ ಬೆಳೆಯೋದಿಲ್ಲ. ಹಿಂದಿನ ಸತ್ಯವೇ ಬೇರೆ  ವಾಸ್ತವ ಸತ್ಯವೇ ಬೇರೆ.ಹಿಂದೆ ರಾಜಯೋಗದ ಜೀವನಕ್ಕೆ ಪೂರಕ ಶಿಕ್ಷಣವಿತ್ತು.ಈಗ ರಾಜಕೀಯಕ್ಕೆ ಒತ್ತುಕೊಡುವ ಶಿಕ್ಷಣವಿದೆ.
ರಾಜಕೀಯ ಒಬ್ಬರನ್ನು ಆಳೋದು ಗುರಿ ಎಂದರೆ ರಾಜಯೋಗ ನಿನ್ನ ನೀ ಅರಿತು ನಿನ್ನ ನೀ ಆಳಿಕೊಂಡಿರೋದೆ ಗುರಿ ಎನ್ನುತ್ತದೆ.
ವಿವೇಕವನ್ನು ಅಧ್ಯಾತ್ಮ ದಿಂದರಿತು ನಡೆದರೆ ವಿವೇಕದ ಆನಂದ.
ಜ್ಞಾನವಿಜ್ಞಾನದ‌ನಡುವಿರುವ ಸಾಮಾನ್ಯ ಜ್ಞಾನದ ಸದ್ಬಳಕೆ ಆದರೆ ಮಾನವನಾಗಿ ಮಹಾತ್ಮರಾಗೋದು.ಎಲ್ಲಾ ಭೂಮಿಯ ದಾಸರೆ ಆಳೋದಕ್ಕೆ ಹೋಗಿ ಆಳಾಗಿದ್ದವರೆ. ಆದರೂ  ಅವರಲ್ಲಿದ್ದ ಯೋಗದಿಂದ ಮುಕ್ತಿಗಳಿಸಿ ಇಂದಿಗೂ ಮಹಾತ್ಮರಾಗಿರುವರು ದೇವರಾಗಿರುವರು..ದೇವನೊಬ್ಬನೆ ನಾಮ ಹಲವು ಎಂದಂತೆ  ಒಂದೇ ಸತ್ಯ ಒಂದೇ ದೇವರು ಒಂದೆ ದೇಶವನ್ನು  ಒಬ್ಬೊಬ್ಬರು ಒಂದೊಂದು ಕಡೆಗೆ ಎಳೆದರೆ  ಅದರೊಳಗೆ ಹೋರಾಟ ಹಾರಾಟ ಮಾರಾಟದ ರಾಜಕೀಯ ಬೆಳೆಯೋದು. ರಾಜಯೋಗವಲ್ಲ. ಇದನ್ನು ದುರ್ಭಳಕೆ ಮಾಡಿಕೊಳ್ಳುವ ಅಸುರಶಕ್ತಿಗೆ  ಮನರಂಜನೆಯಷ್ಟೆ. 
ಆತ್ಮವಂಚನೆಯಲ್ಲಿ ಮನರಂಜನೆಯಿದ್ದರೆ  ಧರ್ಮವಲ್ಲ.
ಎಲ್ಲಾ ನಕಾರಾತ್ಮಕ ಚಿಂತನೆ  ಎಂದರೆ  ಹಿಂದಿನ ಮಹಾತ್ಮರ ದೃಷ್ಟಿ ಕೋನವೇ ನಕಾರಾತ್ಮಕ ವಾಗಿ ಕಾಣುತ್ತದೆ.ಕಾರಣ ಅವರು ಕಣ್ಣಿಗೆ ಕಾಣದ ಸತ್ಯವನ್ನು ಬಿಚ್ಚಿಟ್ಟರು ಇದನ್ನು ವಿರೋಧಿಸಿ‌ ನಡೆದವರೆ ಅಸುರರಾದರು.ಈಗಲೂ ಇದೇ ನಮ್ಮನ್ನು ನಡೆಸಿದೆ ವಿರೋಧಿಗಳೂ ನಮ್ಮನ್ನು ಆಳುತ್ತಿವೆ ಎಂದರೆ ನಮ್ಮ ಸಹಕಾರ ಒಳಗಿಲ್ಲ ಹೊರಗಿದೆ ಎಂದರ್ಥ.
ಶ್ರೀ ಕೃಷ್ಣ ಪರಮಾತ್ಮನೆ ತಿಳಿಸಿರುವಂತೆ ನಾವೆಲ್ಲರೂ ಸತ್ತವರೆ.
ಯುಗಯುಗದಿಂದಲೂ ಇದೇ ಭೂಮಿಯಲ್ಲಿ ಜನ್ಮ ಪಡೆದು ಹೋರಾಟ ಹಾರಾಟ ಮಾರಾಟದಲ್ಲಿ ಜೀವನ‌ಕಟ್ಟಿಕೊಂಡು ಜನನ ಮರಣವನ್ನು ತಡೆಯಲಾಗದ ನಿಶ್ಯಕ್ತ ಜೀವಾತ್ಮರು‌ ನಾವೇ ಆದಾಗ ಜ್ಞಾನಸಂಪಾದನೆಯ‌ನಂತರವೇ ಜೀವಕ್ಕೆ ಮುಕ್ತಿ .ಇದಕ್ಕಾಗಿ ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಿತ್ತು.ರಾಜಕೀಯದ ಗುದ್ದಾಟದಲ್ಲಿ  ಪ್ರಜಾಪ್ರಭುತ್ವ ‌ತನ್ನ ಸ್ವಂತ ಜ್ಞಾನ ಬಿಟ್ಟು ಹೊರಗೆ ಬಂದರೆ  ಯಾರ ತಪ್ಪು?
ನಮ್ಮ ಅಜ್ಞಾನಕ್ಕೆ ನಮ್ಮದೇ ಸಹಕಾರವಿದ್ದಾಗ ಸರ್ಕಾರ ಏನು ಮಾಡಿದರೂ  ತಪ್ಪು ಕಾಣುತ್ತದೆ.ಅತಿಯಾದ ಪರಾವಲಂಬನೆ  ಪರಮಾತ್ಮನಿಂದ ದೂರ ಮಾಡಿಸಿದ್ದರೂ ಅವನೊಳಗೇ ಇರೋದು ಸತ್ಯ.ತಲೆಯನರಿಯದಿದ್ದರೂ ಕಾಲು ನಡೆಯದೆ ಇರದು. ಹೀಗಾಗಿ ನಮ್ಮ ಸೇವೆ ಉತ್ತಮ ಗುರುಗಳ ಸನ್ನಿದಿಯಲ್ಲಿ ನಡೆದರೂ  ಮುಕ್ತಿ ಮೋಕ್ಷದೆಡೆಗೆ ನಿಧಾನವಾಗಿ ನಡೆಯುವುದು. ಸದ್ಗುರುಗಳ  ಕೃಪೆ ಆಶೀರ್ವಾದ ಸಹಕಾರವಿಲ್ಲದೆ  ಏನೂ ನಡೆಯದು.ಇದು ಧರ್ಮ ಅಧರ್ಮ ಬೆಳೆಯಲು ಕಾರಣ. ಅಧರ್ಮದೊಳಗೇ ಧರ್ಮ, ಅಜ್ಞಾನದೊಳಗೇ ಜ್ಞಾನ,ಅಸತ್ಯದೊಳಗೆ ಸತ್ಯ,ವಿಜ್ಞಾನದೊಳಗೆ ಜ್ಞಾನ,ವಿದೇಶದೊಳಗೆ ದೇಶ ಅಡಗಿರುವಂತೆ ಅದ್ವೈತ ದೊಳಗೇ ದ್ವೈತ ವಿದೆ.ಒಳಹೊಕ್ಕು ತನ್ನ ತಾನರಿಯುವ ಪ್ರಯತ್ನಪಟ್ಟರೆ ಬಿಡುಗಡೆ ಸಾಧ್ಯವೆನ್ನುವರು. ಪ್ರಯತ್ನ ನಮ್ಮದು ಫಲ ಭಗವಂತನದು.
ಮಂತ್ರ ತಂತ್ರ ಯಂತ್ರದಿಂದ ಸ್ವತಂತ್ರ ಜ್ಞಾನ ಒಳಗೇ ಬೆಳೆಸುವ ಶಿಕ್ಷಣ ನೀಡುವ ಗುರುಪರಂಪರೆ ನಮ್ಮ ಭಾರತವನ್ನು ಆತ್ಮನಿರ್ಭರ ಭಾರತ ಆಗಿಸುತ್ತದೆ.ಆದರೆ ಕುತಂತ್ರವಿದ್ದರೆ ಆತ್ಮದುರ್ಭಲ ಭಾರತವಾಗೋದನ್ನು ತಡೆಯಲಾಗದು.
ಹೊರಗಿನ ಯುದ್ದ ಸಂಧಾನ ದಿಂದ ತಡೆಯಬಹುದು.ಆದರೆ ಒಳಗಿನ ಧರ್ಮ ಯುದ್ದ ತಡೆಯಲಾಗದು. ವ್ಯವಹಾರಿಕ  ಸಂಬಂಧ ತಾತ್ಕಾಲಿಕ ತೃಪ್ತಿ ನೀಡಿದರೂ ಸಾಲ ಖಚಿತ.
ಧಾರ್ಮಿಕ ಸಂಬಂಧ ದಿಂದ  ಋಣ ತೀರಿಸಿದರೆ ಮುಕ್ತಿ ನಿಶ್ಚಿತ.
ಸಾಧ್ಯವಾದಷ್ಟು ಧಾರ್ಮಿಕ ಗುಂಪಿಗೆ ಹಂಚಿಕೊಂಡು ದೇಶದ ಋಣ ತೀರಿಸುವ ಜ್ಞಾನ ಬೆಳೆದರೆ ಅದೇ ನಮ್ಮ ಪುಣ್ಯವಷ್ಟೆ.
ಯಾರ ಋಣ ಯಾರೋ ತೀರಿಸಲಾಗದು. ಅವರವರ ಕರ್ಮಕ್ಕೆ ತಕ್ಕಂತೆ ಫಲ ನೀಡೋ ಶಕ್ತಿ ಒಳಗೇ ಇರೋವಾಗ ಒಳಗಿನ ಸತ್ಯ ಧರ್ಮ ಬೆಳೆದರೆ ಅದ್ವೈತ. ಅದು ಹೊರಗೆ ಕಾಣೋದಿಲ್ಲ.
ದೇವರು ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿಕೊಟ್ಟು ಏನೂ ಮಾಡದಿರುವ ಪರಿಸ್ಥಿತಿ ತಂದಿಡುವವನೂ ಅವನೇ ಎಂದರೆ ದೇವರನ್ನು  ಅರ್ಥ ಮಾಡಿಕೊಳ್ಳಲು ಕಷ್ಟವಿದೆ. ಸತ್ಯವೇ ದೇವರೆನ್ನುವರು ಸತ್ಯ ತಿಳಿದ ಮೇಲೆ ದೇವರೆ ಇಲ್ಲವೆನ್ನುವರು.
ಅಂದರೆ ಸತ್ಯ ಎರಡೂ ಕಡೆಯಿದೆ ಒಳಸತ್ಯ ಹೊರಸತ್ಯ.ಎರಡರ ನಡುವೆ ಇರೋರು ಮಾನವರಷ್ಟೆ. ಮಾನವನೊಳಗಿರುವ ದೇವಾಸುರರ ಶಕ್ತಿಯ ಪ್ರೇರಣೆಯಂತೆ ಜಗತ್ತು ನಡೆದಿದೆ ಇದು  ತನ್ನ ಮನಸ್ಸಿಗೆ ಸತ್ಯ ಅರ್ಥ ವಾಗದಿದ್ದರೆ ತಪ್ಪು ಮನಸ್ಥಿತಿ ಯದ್ದಾಗಿದೆ. ಸ್ಥಿತಿಗೆ ಕಾರಣ ನಾನೇ ಆದಾಗ  ನಾನು ಹೋದರೆ ಸ್ಥಿತಿ ಚೆನ್ನಾಗಿ ಇರುವುದು. ನಾನೇ ಕಾರಣವಾದಾಗ  ನಾನು ಕಾರಣಕರ್ತ ನಷ್ಟೆ ಎನ್ನುವ ಸತ್ಯದ ಅರಿವಾಗದು. 
 ಮಠದಿಂದ ಹಿಡಿದು ಎಲ್ಲಾ ಕಡೆ ಸಂಘ ಶಾಲೆ ಕಾಲೇಜ್ ಸಂಸ್ಥೆ ಸಂಘಟನೆಯೂ ದೇಶದಲ್ಲಿ  ಶಾಂತಿ ಸ್ಥಾಪನೆಗಾಗಿ  ಧಾರ್ಮಿಕ ಕೆಲಸಮಾಡಿದ್ದರೂ ಅಧರ್ಮ  ಮುಗಿಲುಮುಟ್ಟಲು ಕಾರಣ   ನಮ್ಮ ಸ್ವಾರ್ಥ ಪೂರ್ಣ ಅಹಂಕಾರದ ರಾಜಕೀಯ ಸಹಕಾರವಾದಾಗ  ನನ್ನ ಈ ಸಹಕಾರವಿಲ್ಲದೆ  ಏನೂ ನಡೆದಿಲ್ಲ ಬೆಳೆದಿಲ್ಲವೆಂದರೆ  ಇದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆದಿದೆಯೆ?
ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಅಧ್ಯಾತ್ಮ ಅಗತ್ಯವಿದೆ.ಅಧ್ಯಾತ್ಮ ಶಕ್ತಿ ಒಳಗಿದೆ. ಒಳಗಿದ್ದೇ ಹುಡುಕಿಕೊಂಡು ಆತ್ಮನಿರ್ಭರ ಭಾರತ ಮಾಡಬೇಕು.ಹೊರಗೆ ಬಂದಷ್ಟೂ ಅತಂತ್ರಭಾರತ. ಆದರೂ ಭಗವಂತನ ಮುಂದೆ ಎಲ್ಲಾ ನಗಣ್ಯ. ಜನಸಹಕಾರದಿಂದಗಣ್ಯವ್ಯಕ್ತಿಯಾಗಬಹುದು.ಜನ ಹೋದ ಮೇಲೆ ನಗಣ್ಯರೆ ಎಲ್ಲಾ.  ನಾನಿದ್ದಾಗ ದೇವರು ಕಾಣೋದಿಲ್ಲ.ನಾನು ಹೋದ ಮೇಲೆ ದೇವರಿರೋದಿಲ್ಲ ಎಂದರೆ ದೇವರು ನಿರಾಕಾರಶಕ್ತಿಯಾಗಿ ನನ್ನೊಳಗೇ ಹೊರಗೆ ಇದ್ದರೂ ನನಗೆ ಕಾಣೋದಿಲ್ಲವೆಂದರೆ ನನ್ನದೆ ದೃಷ್ಟಿ ಸರಿಯಿಲ್ಲವೆಂದರ್ಥ.  ಏನೂ ಮಾಡದಿರೋದಕ್ಕೂ ನನ್ನ ಬಿಡೋದಿಲ್ಲ.ಮಾಡಿದರೂ ನಾನು ಮಾಡಿರೋದಲ್ಲ ಇದೇ ಅಧ್ವೈತಾನುಭವದ ಸತ್ಯ.
ಇದನ್ನು ಪ್ರತಿಯೊಬ್ಬರೂ ಅನುಭವಿಸುವರು  ಆದರೆ ಒಳ್ಳೆಯದಾದರೆ ನಾನು ಮಾಡಿದ್ದು ಕೆಟ್ಟದ್ದಾದರೆ ಬೇರೆಯವರು ದೇವರು ಮಾಡಿಸಿದ್ದು ಎನ್ನುವುದು ಬಿಡೋದಿಲ್ಲ.ಅದಕ್ಕೆ ಬಿಡುಗಡೆಯಿಲ್ಲದ ಬದುಕು ನಡೆಯುತ್ತದೆ. ಬರವಣಿಗೆಯ ಹಿಂದೆ ಇರುವ ಶಕ್ತಿ ಕಾಣೋದಿಲ್ಲ‌ನಾನು ಕಾಣುತ್ತೇನೆಂದರೆ ವಿರೋಧಿಗಳೆ ಹೆಚ್ಚು.
ಇದರಿಂದಾಗಿ  ನಮ್ಮ ಕರ್ಮ ನಾವೇ ಮಾಡೋದು . ಫಲ ಭಗವಂತನೇ ಕೊಡೋದು. ಒಳ್ಳೆಯವರಿಗೆ ಕಷ್ಟ ಕೆಟ್ಟವರಿಗೆ ಸುಖ ಎಂದರೆ ಕೆಟ್ಟದ್ದಕ್ಕೆ ಸಹಕಾರಕೊಟ್ಟರೆ ಹಣಗಳಿಸಿ ಶ್ರೀಮಂತ ನಾಗಬಹುದು. ಅದೇ ಶ್ರೀಮಂತ ನನ್ನ ಆಳುವನೆಂದರೂ ನನ್ನ ಸಹಕಾರವಿದ್ದರೆ  ಕರ್ಮಕ್ಕೆ ತಕ್ಕಂತೆ ಫಲ. ಇದನ್ನು ದೇವಾನುದೇವತೆಗಳೆ ಸಾಕ್ಷಿಭೂತರಾಗಿದ್ದಾರೆ.
ಎಷ್ಟು ಅಸುರರ ಹಿಂದೆ ನಡೆದರೂ ಅಥವಾ ವಿರೋಧಿಸಿದರೂ  ಸತ್ಯ ಒಂದೇ ಇರೋದು.
ಅನ್ಯಧರ್ಮ ದವರನ್ನು ದೇವರನ್ನು ವಿರೋಧಿಸಿ ಅವರ ಕಂಪನಿ,ದೇಶ ಭಾಷೆ ಶಿಕ್ಷಣ ವ್ಯವಹಾರಕ್ಕೆ ಕೈಜೋಡಿಸಿದರೆ ದೇವರು ಮೆಚ್ಚುವನೆ? ಸತ್ಯ ಎಲ್ಲರೊಳಗೂ ಇದ್ದರೂ ಗುರುತಿಸಿ ಬೆಳೆಸುವ‌ಜ್ಞಾನದ ಶಿಕ್ಷಣವೇ ಕೊಡದಿದ್ದರೆ ಅಜ್ಞಾನ.

ಆಧ್ಯಾತ್ಮಿಕ ಚರ್ಚೆ ಭೌತಿಕ ವಾದ ಎರಡೂ ಒಂದೇ?

ಹಿಂದಿನ ಕಾಲದಲ್ಲಿ ಆಧ್ಯಾತ್ಮಿಕ ಚರ್ಚೆ ವಾದಗಳು  ಜ್ಞಾನಿಗಳ ನಡುವೆ ನೇರವಾಗಿ ನಡೆಯುತ್ತಿತ್ತು. ಇಂದು ಇದಕ್ಕೆ ಅವಕಾಶ ಕೇವಲ ಹೆಚ್ಚುಹಣ ಹೆಚ್ಚು ಓದಿದವರಿಗೆ ಹಾಗು ಅಧಿಕಾರ ಇದ್ದವರಿಗಷ್ಡೆ ಅವಕಾಶವಿರುವ‌ಕಾರಣ ಎಷ್ಟೋ ಸತ್ಯಗಳು ಸತ್ತು ಹೋಗುತ್ತಿದೆ. ಸತ್ಯ ಸಾಯೋದಿಲ್ಲವೆನ್ನುವುದೂ ಸತ್ಯ.
ಯಾವಾಗ ಅಸತ್ಯ ಮುಂದೆ ನೆಡೆಯುವುದೋ ಸತ್ಯ ಹಿಂದುಳಿಯುವುದು. ಹಿಂದುಳಿಯುವುದು ಎಂದರೆ ಒಳಗೇ ಇರುವುದೆಂದು. ಒಳಗೇ ಸತ್ಯ ಹಿಡಿದಿಟ್ಟುಕೊಂಡರೂ ಒಮ್ಮೆ ಸಾವು ಬಂದಾಗ  ಹೊರಬರಲೇಬೇಕಷ್ಟೆ.ಅದಕ್ಕೆ ಹೇಳೋದು ನಾನಿರುವಾಗ ದೇವರು ಕಾಣಲ್ಲವೆಂದು.ಸತ್ಯವೇ ದೇವರು. ಎಷ್ಟೋ ಮಹಾತ್ಮರುಗಳು ಭೂಮಿಯಲ್ಲಿದ್ದರೂ  ಸತ್ಯ ಕಾಣದು. ಸತ್ಯವೆನ್ನುವುದು ಒಂದೇ ಇರೋದರಿಂದ ಅದನ್ನು ಒಂದು  ಮಾಡೋದರ ಅಗತ್ಯವಿಲ್ಲ.ಎರಡು ಮೂರು.....ಇದ್ದರೆ ಜೋಡಿಸುವ‌ಕೆಲಸವಾಗುತ್ತದೆ.ಆದರೆ ಅದು ಒಂದೇ ಸತ್ಯದ ಕವಲುಗಳಷ್ಟೆ ಎನ್ನುವುದೆ ಸತ್ಯ.
ಒಂದು ತಾಯಿಗೆ ಅನೇಕ ಮಕ್ಕಳು ಇದ್ದರೂ ತಾಯಿ ಒಬ್ಬಳೆ ಹಾಗೆ ತಂದೆಯೂ ಒಬ್ಬನೆ. ಇವರಿಬ್ಬರೂ ದೇವಸ್ವರೂಪರು ಎಂದರೆ ಸತ್ಯ. ಇದನ್ನು  ಯಾರಾದರೂ ಅಸತ್ಯ ಎಂದರೆ ನಂಬುವ ಜನರಿದ್ದಾರೆ.ಕಾರಣ ಪರಮಾತ್ಮನು ಒಬ್ಬನೆ ಎನ್ನುವ ಮಹಾಸತ್ಯದ ಮುಂದೆ ಇದು‌ನಗಣ್ಯ. ಆದರೆ ಭೂಮಿಯಲ್ಲಿ ನಾನಿದ್ದೇನೆಂದರೆ ಇದರ‌ಮೂಲ ತಂದೆತಾಯಿಯಲ್ಲವೆ?
ಯಾರೋ ಪ್ರವಚನ ಮಾಡುವಾಗ ಕೇಳಿದ ಮಾತಿದು.ಪರಮಾತ್ಮ ನೊಬ್ಬನೆ ಸತ್ಯವೆಂದು ಆ ಪರಮಾತ್ಮನ ತಿಳಿಯಲು  ಜೀವಾತ್ಮರು  ಇಲ್ಲವೆ? ಲೋಕ ನಡೆದಿರೋದು ಜೀವಾತ್ಮರಿಂದಲೇ ಎನ್ನುವ ಸತ್ಯ ಕಣ್ಣಿಗೆ ಕಾಣುತ್ತದೆ. ಆದರೆ ಇದು ಅಸತ್ಯವೆಂದರೆ ನಾನಿಲ್ಲವೆ? ನಾನಿದ್ದರೆ‌ ನಾನ್ಯಾರು?
ಜಗತ್ ಮಿಥ್ಯ ಎಂದಿದ್ದಕ್ಕೆ  ಸಾಕಷ್ಟು ವಾದವಿವಾದಗಳಾಗುತ್ತದೆ. ಹಾಗಾದರೆ ಜಗತ್‌ಮಿಥ್ಯ ಎನ್ನುವ ಸತ್ಯವನ್ನು  ಪರಮಾತ್ಮನೊಬ್ಬನೆ  ಎನ್ನುವ ಅದ್ವೈತ ತಿಳಿಸಿದೆ.
ಏನೇ ಆದರೂ ಈ ವಾದ ವಿವಾದಗಳಿಗೆ‌ಮನುಕುಲಕ್ಕೆ ಆಸರೆ ಆಗಿರುವ ಭೂ ಲೋಕದಲ್ಲಿ ಚರ್ಚೆ ವಾದ ವಿವಾದವಿಲ್ಲದೆ‌ನಡೆದಿಲ್ಲ,ನಡೆಯೋದಿಲ್ಲ,ನಡೆಯಲಾಗದು.
ನಿರಂತರವಾಗಿ ಚಲನೆಯಲ್ಲಿರುವ ಸತ್ಯಾಸತ್ಯತೆಯನ್ನು ‌ಕೇವಲ ಕಣ್ಣಿನಿಂದ ಅಳೆಯಲಾಗದು .ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಆಗುವ ಪ್ರತಿಯೊಂದು  ಪೂರ್ಣ ಸತ್ಯವಿರದು. ಹಾಗಾಗಿ ಒಂದೇ ಸತ್ಯದೆಡೆಗೆ ಒಳಹೊಕ್ಕಿದವರಿಗೆ ಪರಮಾತ್ಮ ನ ದರ್ಶನ ವಾಗಿದೆ.  
ದೇವನೊಬ್ಬನೆ ನಾಮ‌ಹಲವು, ದೇಶ ಒಂದೇ ರಾಜ್ಯ ಹಲವು ಈ ಹಲವುಗಳ ನಡುವಿರುವ ಭಿನ್ನಾಭಿಪ್ರಾಯ ದಿಂದ ಸತ್ಯ‌ ಮರೆಯಾಗಿದೆ  ಸತ್ತಿಲ್ಲ.

ಅಧ್ಯಾತ್ಮ ಆಂತರಿಕ ಶಕ್ತಿಯಾಗಿದೆ.

ಯಾವಾಗ ನನ್ನೊಳಗೇ ಅಧ್ಯಾತ್ಮಿಕ ವಿಚಾರಗಳು ಬರತೊಡಗಿತೋ ಆಗಲೇ ಗೊತ್ತಾಗಿದ್ದು ಸತ್ಯ ಬನ ಒಳಗೇ ಇದೆ ಹೊರಗಿಲ್ಲವೆಂದು. ಇದನ್ನು ಹೊರಹಾಕಲು ಪ್ರಾರಂಭಿಸಿ್ ‌ಮೇಲೇ ತಿಳಿದದ್ದು ಶತ್ರು ಒಳಗಿಲ್ಲ ಹೊರಗೇ ಇರೋದೆಂದು. ಹಾಗಂತ ನಮ್ಮ ಶತ್ರುವಾಗಿರುವ ಅಹಂಕಾರ ಸ್ವಾರ್ಥ ಬೆಳೆಸಿಕೊಂಡರೆ  ಹೊರಗೆ ಗೆಲ್ಲಬಹುದು ಒಳಗೆ ಸೋಲುವುದು ಖಚಿತವಾದ್ದರಿಂದ ಒಳಗಿದ್ದೇ ಹೊರಗಿನ ಸತ್ಯಾಸತ್ಯತೆಯನ್ನು  ತಿಳಿದು ನಡೆಯುವುದೇ ಉತ್ತಮ ಎನ್ನುವ  ಹಂತಕ್ಕೆ  ಬಂದಾಗ ಯಾವುದೇ ಸಹಕಾರ ಸಹಾಯ ಆಶೀರ್ವಾದ ಇಲ್ಲದೆ ಒಬ್ಬಂಟಿ ಆದರೂ  ಪರಮಶಕ್ತಿಯ ಪ್ರೇರಣೆಯಿಂದ  ದೂರವಿರುವುದಿಲ್ಲ. ಇದನ್ನು ಅದ್ವೈತ ಎನ್ನಬೇಕೋ ದ್ವೈತ ವೋ ವಿಶಿಷ್ಟಾದ್ವೈತ ವೋ ಒಟ್ಟಿನಲ್ಲಿ ನಮ್ಮಿಂದ  ಆಗಬೇಕಾದ ಕೆಲಸ ಕಾರ್ಯ  ನಡೆಯುತ್ತಲೇ ಇರುತ್ತದೆ.ಅದರಲ್ಲಿ ನಾನು ಬೆಳೆದರೆ  ಜನಬಲ ಹಣಬಲ ಅಧಿಕಾರಬಲವೂ ಸೇರಿ   ಆತ್ಮನಿರ್ಭರ ಭಾರತವಾಗಲೂಬಹುದು. ದುರ್ಭಲವೂ ಆಗಬಹುದು.
ಎಷ್ಟೇ  ಸತ್ಯ  ತಡೆದರೂ  ಒಂದಲ್ಲ ಒಂದು ರೀತಿಯಲ್ಲಿ ಹೊರಬರೋದು ಸತ್ಯ ವೇ ಎನ್ನುವಂತೆ  ಕಣ್ಣಿಗೆ ಕಾಣುತ್ತಿರುವ ಶಿಕ್ಷಣದ ಭ್ರಷ್ಟಾಚಾರ ಮಾತ್ರ ಜನಸಾಮಾನ್ಯರ ಅರಿವಿಗೆ ಬರದಂತೆ ತಡೆಯುತ್ತಿರುವ  ತಂತ್ರಜ್ಞಾನದಿಂದ  ಮಕ್ಕಳ ಭವಿಷ್ಯವನ್ನು ತಡೆಯಲಾಗದು. ಅತಿಯಾದರೆ ಗತಿಗೇಡು.
ತತ್ವ ಬಿಟ್ಟು ತಂತ್ರದ ದುರ್ಭಳಕೆ ಆದಷ್ಟೂ ಅತಂತ್ರ ಜೀವನ.
ಹಿಂದೆ ಯಾವುದೇ ತಂತ್ರಜ್ಞಾನವಿಲ್ಲದೆ ಸ್ವತಂತ್ರ ಜ್ಞಾನದಿಂದ ಜೀವನ‌ನಡೆಸಿದ್ದರು. ಈಗ ಮೊದಲೇ ತಂತ್ರಕ್ಕೆ ಸಿಲುಕಿ ಅತಂತ್ರಸ್ಥಿತಿಗೆ ಜೀವನ ತಲುಪಿದರೆ  ಇದಕ್ಕೆ ಕಾರಣ ಶಿಕ್ಷಣವೆ ಆಗಿರುತ್ತದೆ.
ಶಿಕ್ಷಣದ ವಿಷಯಕ್ಕೆ ಬಂದಾಗ  ಸಾಕಷ್ಟು ಬದಲಾವಣೆ ಆಗಬೇಕಿದೆ. ಆದರೂ  ಬದಲಾವಣೆಗೆ ಪೋಷಕರ ಸಹಕಾರ ಗುರುಹಿರಿಯರ ಸಹಕಾರ ವಿಲ್ಲವಾದರೆ ಏನೂ ಮಾಡಲು ಕಷ್ಟ. ಪತ್ರಿಕೆ ನಡೆಸುವಾಗ ತಡೆಯಲು ಅಸಹಕಾರ ತೋರಿಸಿದವರು  ಈಗ ಅದೇ ವಿಚಾರದಲ್ಲಿ ಚರ್ಚೆ ನಡೆಸುವರು.ಅಂದರೆ  ಪೋಷಕರ ಸಮಸ್ಯೆ ಪೋಷಕರಾಗಿಯೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಮೇಲಾಧಿಕಾರಿಗಳಾಗಿ ನಿಂತು ಮಕ್ಕಳು ಪೋಷಕರು ಸರಿಯಿಲ್ಲವೆನ್ನುವ ಬದಲು ಕೆಳಗಿಳಿದು ವಾಸ್ತವತೆಯನ್ನು ಅರ್ಥ ಮಾಡಿಕೊಂಡರೆ ಭೂಮಿಯಲ್ಲಿ ಹೇಗೆ ಬದುಕಬಹುದೆನ್ನುವುದರ ಅರಿವಿರುತ್ತದೆ. ಒಟ್ಟಿನಲ್ಲಿ ಮೇಲೇರಿದವರಿಗೆ ಕೆಳಗಿನವರ ಸಹಕಾರ ಸಹಾಯ ಹೆಚ್ಚು.ಅದೇ ಕೆಳಗಿದ್ದವರಿಗೆ ಮೇಲಿನವರ ಸಹಾಯವಿದ್ದರೆ ಎರಡೂ ಕಡೆ ಸಮಾನತೆಯ ಶಾಂತಿ.ಶಾಂತಿ ಒಳಗಿದ್ದೇ ಪಡೆಯಲು  ಹೊರಗಿನವರ ಸಹಕಾರದ ಅಗತ್ಯವಿಲ್ಲ. ಆದರೆ ಭೌತಿಕದಲ್ಲಿರುವಾಗ  ಬದಲಾವಣೆಗೆ  ಅಗತ್ಯವಿದೆ. ತಿಳಿದವರಿಗೆ ಹೇಳೋ ಅಧಿಕಾರವಿಲ್ಲ.ಹೇಳೋರಿಗೆ ಸತ್ಯದ ಅರಿವಿಲ್ಲವಾದರೆ‌ಮಧ್ಯದಲ್ಲಿರುವ ಮಕ್ಕಳ ಭವಿಷ್ಯ ಅತಂತ್ರ.
ಗೃಹಿಣಿ ಮನೆಯೊಳಗೆ ಇದ್ದು ಸಂಸಾರ ನೋಡಿಕೊಂಡರೆ ಗೌರವವಿಲ್ಲ. ಅದೇ ಹೊರಗೆ ಹೋಗಿ ದುಡಿದು ಬಂದರೆ ಮಕ್ಕಳನ್ನು ಗಮನಿಸುವ ಸಮಯವಿರದು. ಹಾಗೆ ಯಾರಲ್ಲಿ ಏನಿದೆಯೋ ಅದೇ ಬೆಳೆಯೋದು.ನಾವಲ್ಲ.

ಸಂಸ್ಕಾರದ ಶಿಕ್ಷಣದಿಂದ ಮಹಾತ್ಮರಾಗಬಹುದು

ಸಾಮಾನ್ಯವಾಗಿ ನಾವು ಕಾಣುವ ಸತ್ಯದಲ್ಲಿ ಯಾರ ಮಕ್ಕಳು ಸಣ್ಣವರಿರುವಾಗಲೇ ಸಂಸ್ಕಾರಯುತ ಶಾಸ್ತ್ರೀಯ ವಿದ್ಯೆ ಕಲಿತಿರುವರೋ ಅವರು ನಿರಹಂಕಾರದಿಂದ  ವಿದ್ಯಾ ದಾನದ ಮಹತ್ವವರಿತು ಸಜ್ಜನರಾಗಿರುವರು. ಆದರೆ ಯಾವ ಮಕ್ಕಳು ಪೋಷಕರ ಹೆಸರು ಹಣ ಅಧಿಕಾರ ಸ್ಥಾನಮಾನದಿಂದ ಒಮ್ಮೆಲೆ ‌ಮೇಲೇರಿರುವರೋ ಅವರಿಗೆ ಅಹಂಕಾರ ಸ್ವಾರ್ಥ ಹೆಚ್ಚಾಗಿ ಜನರನ್ನು ತನ್ನ ವಶದಲ್ಲಿಟ್ಟುಕೊಳ್ಳುವ ಕೊಳ್ಳುಬಾಕ ಸಂಸ್ಕೃತಿಗೇ ಹೆಚ್ಚಿನ ಮಹತ್ವ ಕೊಟ್ಟಿರುವರು.
ಅದಕ್ಕೆ ಮಕ್ಕಳಿಗೆ ಸಂಸ್ಕಾರಯುತ ವಿದ್ಯೆ‌ನಿಧಾನವಾದರೂ ಸರಿ ಮನೆಯೊಳಗಿನಿಂದ ಯಾವುದೇ ಒತ್ತಡವಿಲ್ಲದೆ ಕಲಿಸಿದರೆ ಉತ್ತಮ ಭವಿಷ್ಯವಿದೆ.
ಆದರಿದು‌ಎಲ್ಲರಿಗೂ ಕಷ್ಟ.ವ್ಯವಹಾರದ ಜಗತ್ತಿನಲ್ಲಿ  ಹೆಚ್ಚು ಹೆಸರು ಮಾಡಿದವರಿಗೆ ಸಮಯವಿರದು. ಹೆಚ್ಚು ಸಮಯವಿದ್ದವರ ವಿದ್ಯೆಗೆ ಬೆಲೆಕೊಡೋರು ವಿರಳ.
ಕೆಲವು ಪೋಷಕರು  ವಿದ್ಯೆ ಕಲಿಸೋ‌ ಮೊದಲೇ ಕೇಳುವರು ನಮ್ಮ ಮಗುವಿಗೆ ಯಾವಾಗ  ಸ್ಟೇಜ್ ಕಾರ್ಯಕ್ರಮ ಕೊಡಿಸುವಿರಿ?.  ಕೆಲವರು  ಹಾಗಿಲ್ಲ.ಅಂದರೆ ವಿದ್ಯೆ ತೋರುಗಾಣಿಕೆಯಾದಷ್ಟೂ  ಜ್ಞಾನ ಕುಸಿಯುತ್ತದೆ ಜೊತೆಗೆ  ಅಹಂಕಾರ ಸ್ವಾರ್ಥ ‌ಬೆಳೆಯುತ್ತದೆ.
ಹಿಂದೆ ಎಷ್ಟೋ ಮಹಾರಾಜರುಗಳು  ಅತ್ಯುತ್ತಮ ಕಲಾವಿದರನ್ನು ಗೌರವಿಸಲು ಇದ್ದಲ್ಲಿಯೇ ಹೋಗಿ ಕಲೋಪಾಸಕರಾಗಿದ್ದರು.ಕಾರಣ ಕಲಾಸೇವೆ ಪರಮಾತ್ಮನಿಗೆ ಮೀಸಲಿಟ್ಟ ಮಹಾತ್ಮರುಗಳಿಗೆ ಹೆಸರು ಹಣ ಪ್ರತಿಷ್ಟೆ ಪದಕ ಸನ್ಮಾನದ ಹಂಗಿರಲಿಲ್ಲ. 
 ಈಗ ಕಾಲಬದಲಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸ  ಹೆಚ್ಚಿಸುವ ಶಿಕ್ಷಣವಿರಲಿ ಅಹಂಕಾರ ದ ಶಿಕ್ಷಣದ ಅಗತ್ಯವಿಲ್ಲ..
ಸ್ಪರ್ಧೆ ನಡೆಸೋದಾದರೆ  ಅಧ್ಯಾತ್ಮ ದಲ್ಲಿ ರಲಿ. ನಾನು ಸತ್ಯ ಬಿಡೋದಿಲ್ಲ ಧರ್ಮ ಬಿಡೋದಿಲ್ಲ  ನ್ಯಾಯದಲ್ಲಿರುವೆ ಭ್ರಷ್ಟರಿಂದ ದೂರವಿರುವೆ, ರಾಜಕೀಯದಿಂದ ದೂರವಿರುವೆ..ಕಲಬೇಡ ಕೊಲಬೇಡ.......ಅಂತರಂಗ ಶುದ್ದಿಯ ನಂತರವೇ ಆತ್ಮಜ್ಞಾನದ ಆತ್ಮವಿಶ್ವಾಸ,.. ಅಲ್ಲಿಯವರೆಗೂ ಕೇವಲ ಶ್ವಾಸವಿರುತ್ತದೆನ್ನುವರು. ಶ್ವಾಸವನ್ನು ವಿಶೇಷವಾಗಿ ಹಿಡಿದುಕೊಂಡು  ನಡೆಯೋ ಮಾರ್ಗ ವೇ ಯೋಗ ಮಾರ್ಗ ವಾಗಿತ್ತು.ಈಗಂತೂ ಮಕ್ಕಳಿಗೆ ಉಸಿರಾಡೋದಕ್ಕೆ ಸಮಯವಿಲ್ಲ.ಅಷ್ಟು ಕಲಿಕೆ.ಆದರೆ ಕಲಿತಿರುವ ವಿಷಯದಲ್ಲಿ ಸಂಸ್ಕಾರವಿದೆಯೆ ಸಂಸ್ಕೃತಿಯಿದೆಯೆ ಗುರುತಿಸುವುದು ಗುರುಗಳ ಧರ್ಮವಾಗಿದೆ. ಮೊದಲ ಗುರು ತಾಯಿಂದ ಹಿಡಿದು ಹೊರಗಿರುವ ಎಲ್ಲರಿಗೂ ಒಂದೇ  ಜ್ಞಾನವಿರೋದಿಲ್ಲವಲ್ಲ.ಅದಕ್ಕೆ ಹೊರಗಿನ ವಿದ್ಯೆಗೂ ಒಳಗಿನ ಜ್ಞಾನಕ್ಕೂ  ಅಂತರ ಬೆಳೆದು ಅವಿದ್ಯೆ ಹೆಚ್ಚಾಗಿ ಅಹಂಕಾರ ಬೆಳೆದಿದೆ.

ಯೋಗದಿಂದ ಮಾಡಿದ ಕರ್ಮ ದಿಂದ ಮುಕ್ತಿ ಮೋಕ್ಷ

ನಾವು ಏನೇ ಸತ್ಯಾಸತ್ಯತೆಯನ್ನು ಪ್ರಚಾರ ಮಾಡಿ ಹೆಸರು,ಹಣ,ಅಧಿಕಾರ ಪಡೆದರೂ  ಅದೊಂದು ರಾಜಕೀಯವಾಗಿ  ಧಾರ್ಮಿಕ ಪ್ರಜ್ಞೆ ಹಿಂದುಳಿಯುತ್ತದೆ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಇದನ್ನು ತಿಳಿಸಿದ್ದಾನೆ. ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ನಿರಹಂಕಾರದ ಕರ್ಮದಿಂದ ಮಾತ್ರ ಧರ್ಮ  ರಕ್ಷಣೆ. ಭಾರತದಲ್ಲಿ  ಇದನ್ನು ಗಮನಿಸದೆ ರಾಜಾರೋಷವಾಗಿ ಪ್ರಚಾರ ನಡೆಯುತ್ತಿದೆ. ಆತ್ಮಾವಲೋಕನ ಅಗತ್ಯವಾಗಿದೆ. ಯಾವುದೇ ಸರ್ಕಾರ ಬಂದರೂ ಜನರಲ್ಲಿ  ಸತ್ಯದ ಅರಿವಿಲ್ಲವಾದರೆ ವ್ಯರ್ಥ. ಹಿಂದಿನ ಸರ್ಕಾರ ಕ್ಕೆ ಬೆಂಬಲ ನೀಡಿದವರೆ ಇಂದಿನ ಸರ್ಕಾರದ ಪರವಿರೋದು.ಇಂದಿನ ಸರ್ಕಾರದ ವಿರೋಧಿಗಳೂ ಮುಂದೆ ತಿರುಗಿ ನಿಲ್ಲುವುದು.ಕಾರಣ ಸರ್ಕಾರ ಕೊಡುವ ಹಣ,ಸಾಲ,
ಸೌಲಭ್ಯಗಳ ಆಧಾರದ ಮೇಲೆ ಪ್ರಜೆಗಳ ಸಹಕಾರವಿದೆ.
ಸಮಾ'ವೇಷ ' ಮಾಡಿದರೆ ಮರುಳಾಗುವ ಅಜ್ಞಾನಿಗಳಿಗೆ ಜ್ಞಾನವೇ  ಇಲ್ಲದೆ  ಮುಕ್ತಿ ಸಿಗುವುದೆ?  ಹಾಗಾದರೆ ಆ ಸಾಲ,ಸೌಲಭ್ಯಗಳನ್ನು ಪಡೆದವರ  ಧಾರ್ಮಿಕ ಜ್ಞಾನ ಬೆಳೆದಿದೆಯೆ? ಆತ್ಮಜ್ಞಾನದ ಶಿಕ್ಷಣವನ್ನೇ ಕೊಡದೆ ಆಳಿದ ಸರ್ಕಾರದಿಂದ ದೇಶದ ಸಾಲದ ಜೊತೆಗೆ  ಜ್ಞಾನದ ಬಡತನವೇ  ಹೆಚ್ಚಾಗುತ್ತಿದ್ದರೆ  ಇದರಿಂದಾಗಿ  ಯಾರಿಗೆ ಮುಕ್ತಿ ಸಿಗುವುದು?ಹಿಂದಿನ ಭಾರತೀಯ ಶಿಕ್ಷಣದ ವಿಷಯಗಳಿಂದ ಅಮೃತಪುತ್ರರು  ಹೆಚ್ಚಾಗಿ ಮಹಾತ್ಮರ ದೇಶ ಯೋಗಿಗಳ ದೇಶ ವಾಗಿತ್ತು. ಈಗಿನ ಶಿಕ್ಷಣದ ವಿಷಯದಲ್ಲಿಯೇ ವಿಷ ಇರುವ ರಾಜಕೀಯದಿಂದ  ಆಂತರಿಕ ಶಕ್ತಿ  ಕುಗ್ಗಿ ಪರಾವಲಂಬಿಗಳು  ಪರಮಾತ್ಮನ ಮರೆತು ಪರಕೀಯರ ವಶದಲ್ಲಿದ್ದೂ ನಾನೇ  ರಾಜ ಎಂದರೆ ಸತ್ಯವೆ? ಇದನ್ನು ಸಾಮಾನ್ಯಜ್ಞಾನವುಳ್ಳವರು ಅರ್ಥ ಮಾಡಿಕೊಂಡರೆ  ನಮ್ಮ ಹತ್ತಿರವಿರುವ ಒಳಗಿನ ಸತ್ಯದಿಂದ ಹಿಂದಿರುಗಬಹುದು. ಯಾರ ಜೀವವೂ ಶಾಶ್ವತವಲ್ಲ.ಯಾರ ಅಧಿಕಾರವೂ ಶಾಶ್ವತವಲ್ಲ.ನಮ್ಮ ನಮ್ಮ ಆತ್ಮ ಶಾಶ್ವತ.
ದೇಶದ ಪ್ರಜೆಗಳು ಆತ್ಮಾವಲೋಕನ ಮಾಡಿಕೊಳ್ಳಲು ರಾಜಕೀಯ ಬಿಡದೆ ಅಸಾಧ್ಯ. ಇದನ್ನು ಸ್ವಾಮಿ ವಿವೇಕಾನಂದರು  ಅಧ್ಯಾತ್ಮ ಶಿಕ್ಷಣದ ಮೂಲಕ ದೇಶ ಕಟ್ಟುವ  ರಾಜಯೋಗದಲ್ಲಿ  ತಿಳಿಸಿದ್ದರು.ಆದರೆ ಅವರ ಹೆಸರಲ್ಲಿ ರಾಜಕೀಯ ಬೆಳೆದು ಅಮೇರಿಕಾದಂತಹ ಮಹಾದೇಶ ಅವರ ವಿಚಾರವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟಿದೆ ಭಾರತವೇ ಹಿಂದುಳಿದು ಅಮೇರಿಕಾವನ್ನು ಬೆಳೆಸಲು ಹೊರಟಿದೆ ಎಂದರೆ ನಮ್ಮವರೆ ನಮಗೆ ಶತ್ರುಗಳೆ?

ಕಲ್ಲು ಮೂರ್ತಿಯಾದರೆ ದೇವರು ಮೆಟ್ಟಿಲಾದರೆ ?

ಒಂದು ಕಲ್ಲು ಮೆಟ್ಟಿಲಾಗುವುದು ಸಹಜ ಆದರೆ  ಮೂರ್ತಿಯಾಗೋದು ಕಷ್ಟ. ಮೂರ್ತಿ ದೇವರಾಗಲೂಬಹುದು  ಆದರೆ ಮೆಟ್ಟಿಲು ಹತ್ತದೆ ಮೇಲಿರುವ  ಮೂರ್ತಿಯನ್ನು ನೋಡುವುದು ಕಷ್ಟ.
ಇಲ್ಲಿ ಮೂರ್ತಿ  ಮಾಡೋರಿಗೆ  ಹಣ ಗೌರವ  ಹೆಚ್ಚಾಗಿ ಸಿಗುತ್ತದೆ ಆದರೆ‌ಮೆಟ್ಟಿಲು ಮಾಡಿದವರು ಲೆಕ್ಕಕ್ಕಿಲ್ಲ. 
ಆದರೆ  ಇಂದು ಪರಮಾತ್ಮನಿರೋದು‌ಮೆಟ್ಟಿಲುಗಳ ಮೇಲೇ ಮೇಲಿನ ಮೂರ್ತಿಯಲ್ಲಿ  ಇದ್ದಾನೋ ಇಲ್ಲವೋ  ಎನ್ನುವುದೇ ಸಂಶಯ.ಕಾರಣ ಮೂರ್ತಿ ನೋಡಲು ಸರದಿ ಸಾಲಿನಲ್ಲಿ ಮೆಟ್ಟಿಲುಗಳಲ್ಲಿ ಸಾಕಷ್ಟು ಭಕ್ತರಿರುವರು. ಅದೇ ಮೂರ್ತಿ ನೋಡಲು ಹಣವಂತರುಪ್ರತಿಷ್ಟಿತರು ಬೇರೆ ಮಾರ್ಗದಲ್ಲಿ ಮೇಲಕ್ಕೆ ಹೋದಾಗ ಮೆಟ್ಟಿಲಲ್ಲಿ ನಿಂತಿರುವ ಎಲ್ಲಾ ದೈವಭಕ್ತರ ದರ್ಶನವೇ ಆಗದು.
 ಹೀಗೇ ನಾವು ಹಣವನ್ನು ಸಂಪಾದನೆ ಮಾಡುವಾಗಲೂ ಸ್ವಧರ್ಮ ಸತ್ಕರ್ಮ, ಸ್ವಾಭಿಮಾನ ಸ್ವಾವಲಂಬನೆ ಯ ಕಡೆಗೆ ಗಮನಹರಿಸಿದರೆ ಒಂದೊಂದು ಮೆಟ್ಟಿಲು ಹತ್ತಿ ಹೋಗೋದು  ಕಷ್ಟವೆನಿಸಿದರೂ ಗುರಿ ತಲುಪಬಹುದು. ಆದರೆ ಅವಸರದಲ್ಲಿ  ಅಡ್ಡದಾರಿಹಿಡಿದಷ್ಟೂ ಕೆಳಗಿಳಿಯೋದು ಸತ್ಯ.
ಎಷ್ಟು ಹಣ ಗಳಿಸಿದರೂ  ಅದರ ಹಿಂದೆ  ಯಾರಿದ್ದರು? ಯಾವ ಧರ್ಮ ವಿದೆ ಯಾವ ಸತ್ಯವಿದೆ ಎನ್ನುವ ಜ್ಞಾನ ಅಗತ್ಯವಿದೆ.
ಬಿಕ್ಷುಗಳಿಗೂ ಬಿಕ್ಷುಕರಿಗೂ ವ್ಯತ್ಯಾಸವಿದೆ. ಬಿಕ್ಷುಗಳಲ್ಲಿ  ಜ್ಞಾನದ ಹಸಿವಿದ್ದು ನಿಧಾನವಾಗಿ ದೈವತ್ವದೆಡೆಗೆ ಜೀವನ ನಡೆಸುವರು.ಆದರೆ ಬಿಕ್ಷುಕರ ಹೊಟ್ಟೆಯ ಹಸಿವಿನಲ್ಲಿ ಅನ್ನ ಸಿಕ್ಕರೆ  ಅದೇ ಸ್ವರ್ಗ ಅದೇ ದೇವರು. ಮೆಟ್ಟಿಲಕೆಳಗೇ ಇರುವರು.ಆದರೂ  ಇಬ್ಬರಲ್ಲೂ ಅಹಂಕಾರ ವಿರದು .
ಹೊಟ್ಟೆ ತುಂಬಿದ್ದರೂ ಹಸಿದವರ ಪಾಲನ್ನೂ ಕಸಿಯುವ ಭ್ರಷ್ಟರಿಗೆ  ಮೂರ್ತಿ ಮಾತ್ರ ಕಾಣೋದು ಅದರೊಳಗೆ ಅಡಗಿರುವ ದೈವಶಕ್ತಿ ಕಾಣೋದಿಲ್ಲ.ಹೀಗಾಗಿ  ಅಡ್ಡದಾರಿ ಹಿಡಿದು ಮೇಲಕ್ಕೆ ಹೋಗೋರು  ಹೆಚ್ಚಾಗಿ ದೇವರನ್ನು ಬೇಡೋದು ಅಧಿಕಾರ ಹಣವನ್ನೇ. ಇದರಿಂದಾಗಿ ಅಜ್ಞಾನ ಬೆಳೆದು ಅಹಂಕಾರ ಸ್ವಾರ್ಥ ಆವರಿಸಿ  ಅಸುರಶಕ್ತಿಯ. ವಶವಾಗಿರುವುದು ಜೀವಾತ್ಮ.
ಇವರಿಗೆ ಸಹಕಾರ ಕೊಟ್ಟವರು  ಅಸುರರ ಗುಲಾಮರು.
ಭೂಮಿಯಲ್ಲಿರುವ ಮೂರೂ ಶಕ್ತಿಯಲ್ಲಿ ಮಾನವ ಶಕ್ತಿ ಮಧ್ಯವರ್ತಿ. ದೇವರಾಗಲಿ ಅಸುರರಾಗಲಿ ಕಲ್ಲಿನಲ್ಲಿ  ಕಾಣುವ  ಬುದ್ದಿ  ಬೆಳೆದು  ಒಳಗಿದ್ದ  ಸತ್ಯ ಧರ್ಮ ಅರಿಯದೆ ಇದ್ದರೆ  ಮೆಟ್ಟಿಲಿನ ಮಹತ್ವವರಿಯದೆ  ಹೋಗುವುದು ಜೀವ.

ಹಿಂದೂಗಳು ಹಿಂದುಳಿದವರೆ?

ಯಾಕಿಷ್ಟು ಹಿಂದೂಗಳು ಹಿಂದುಳಿದರೆನ್ನುವ ಪ್ರಶ್ನೆಗೆ ಉತ್ತರ ಒಗ್ಗಟ್ಟಿನ‌ಕೊರತೆ, ಮನೆಯೊಳಗಿನ ರಾಜಕೀಯ ಬುದ್ದಿವಂತಿಕೆ, ಹೊರಗಿನವರೊಂದಿಗೆ ವ್ಯವಹಾರ, ನಮ್ಮವರೆ  ನಮಗೆ ಶತ್ರುವಾಗಿ  ವಿರೋಧಿಯಾಗಿ ಆಳಲು ಹೊರಟಿರೋದು, ಅತಿಯಾದ ಭೌತಿಕ ಆಸ್ತಿ ಸಂಪಾದನೆಗಾಗಿ ಅಧ್ಯಾತ್ಮ ದಿಂದ ದೂರವಾಗಿರೋದು,‌ಪರರನ್ನು ದ್ವೇಷ ಮಾಡಿ  ಅವರ ವ್ಯವಹಾರ ಬಿಡದಿರೋದು, ಅಸತ್ಯ ಅನ್ಯಾಯ  ಅಧರ್ಮ ವನ್ನು ಹಣದಿಂದ ಅಳೆದಿರೋದು, ಲಿಂಗತಾರತಮ್ಯದಿಂದಾದ ಜೀವಹತ್ಯೆ, ಅಂತರಗಳಿಂದ ಸೃಷ್ಟಿ ಆಗಿರುವ ಅರ್ಧ ಸತ್ಯದ ಮಧ್ಯವರ್ತಿಗಳಿಗೆ ಕೊಟ್ಟಿರುವ ಸ್ಥಾನಮಾನ , ಇವೆಲ್ಲದರ ಮೂಲವೇ ನಮ್ಮದಲ್ಲದ ಶಿಕ್ಷಣ ಪದ್ದತಿಯನ್ನು  ಪ್ರೀತಿಯಿಂದ ಸ್ವೀಕರಿಸಿ ನಮ್ಮ ಶಿಕ್ಷಣವನ್ನು ವಿರೋಧಿಸಿ ಹೊರಗೆ ನಡೆದಿರೋದಾಗಿದೆ. ಒಟ್ಟಿನಲ್ಲಿ ಪ್ರತಿಯೊಂದು ಸಮಸ್ಯೆಯ ಮೂಲವೇ  ಅಜ್ಞಾನ. ಅಜ್ಞಾನಕ್ಕೆ ಕಾರಣವೇ ಶಿಕ್ಷಣ ಶಿಕ್ಷಣವನ್ನು ಕೊಡಬೇಕಾದವರೆ ಅವಿದ್ಯೆ ಗೆ ಶರಣಾಗಿ ದಾಸರಾಗಿದ್ದರೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ.
ಹಿಂದಿನ ಯುಗಗಳಿಂದಲೂ ಈ ತಾರತಮ್ಯವಿತ್ತು.ಈಗಲೂ ಇದೆ ಮುಂದೆಯೂ ಇರುತ್ತದೆ.ಕಾರಣ ಅಜ್ಞಾನ ಹೋಗದೆ ಜೀವನ್ಮುಕ್ತಿ ಸಿಗದು.ಜನ್ಮಜನ್ಮಗಳ ಪಾಪ ಪುಣ್ಯದ ಕರ್ಮ ಫಲ ಅನುಭವಿಸಲು ಜನ್ಮ ಪಡರಯಲೇಬೇಕೆನ್ನುತ್ತದೆ ಹಿಂದೂ ಸಮಾಜ. ಇದಕ್ಕೆ ವಿರುದ್ದವಿರುವ ಅನ್ಯಧರ್ಮದ ಪ್ರಕಾರ ಇದ್ದಾಗಲೇ ಸುಖ ಅನುಭವಿಸೋದೆ ಧರ್ಮ ಎನ್ನುತ್ತದೆ.
ಸನಾತನಧರ್ಮದ ಸುಖ ಅಧ್ಯಾತ್ಮ ದೆಡೆಗಿದ್ದರೆ ಅನ್ಯಧರ್ಮದ ಸುಖ ಹೊರಗಿದೆ. ಇವೆರಡರ ಮಧ್ಯೆ ನಿಂತ ಮನುಕುಲವನ್ನು  ಎರಡೂ ಕಡೆಯಿಂದ ಎಳೆದು ಆಳುವ ಅರಸರೆ ಮಧ್ಯವರ್ತಿಗಳು. ತಾವೂ ಅತಂತ್ರ ತಮ್ಮವರೂ ಅತಂತ್ರ.ಹೀಗಾಗಿ ಅತೃಪ್ತ ಆತ್ಮಗಳ ಸಾಮ್ರಾಜ್ಯ ದಲ್ಲಿ ಸ್ವತಂತ್ರ  ಎಲ್ಲಿರುವುದು? ಒಟ್ಟಿನಲ್ಲಿ  ನಾವು ನಾವಾಗಿರೋದೆಂದರೆ ನಮ್ಮ ಒಳಗಿರುವ ಸ್ವತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ತಾವೂ ಬದುಕಿ ಇತರರನ್ನು ಬದುಕಲು ಬಿಡೋದಷ್ಟೆ.ಅವರವರ ಕರ್ಮಕ್ಕೆ ತಕ್ಕಂತೆ ಫಲ ಮೇಲಿನ ಶಕ್ತಿ ಕಾಲಕಾಲಕ್ಕೆ ನೀಡುವುದು  ನಿರಂತರವಾಗಿ ನಡೆಯುತ್ತದೆ.
ಯಾರಾದರೂ ಸೃಷ್ಟಿ ಸ್ಥಿತಿ ಲಯವನ್ನು ತಡೆಯಬಹುದೆ?
ಬ್ರಹ್ಮ ವಿಷ್ಣು ,ಮಹೇಶ್ವರರನ್ನು ಕಂಡಿರುವರೆ? ಅವರೊಳಗೇ ಇರೋವಾಗ ಕಾಣಲಸಾಧ್ಯ.ಒಳಹೊಕ್ಕಿ ನೋಡಿದವರಿಗೆ ಅರ್ಥ ವಾಗಿದೆ ಎಂದರೆ ನಿರಾಕಾರ ಬ್ರಹ್ಮನ್ ಸತ್ಯ.ಸಾಕಾರ ಬ್ರಹ್ಮನ್‌ಮಿಥ್ಯ.
ವ್ಯಕ್ತಿ ಮಿಥ್ಯ ವ್ಯಕ್ತಿತ್ವ ಸತ್ಯ. ಹೀಗೇ ಹಿಂದೂಗಳಾದವರು ತಮ್ಮ ಒಳಗೆ ಸತ್ಯ ಹುಡುಕಿಕೊಂಡಿದ್ದರೆ ತತ್ವದ ಮೂಲಕ ಧರ್ಮ ರಕ್ಷಣೆ ಹೊರಗೆಳೆದಷ್ಟೂ ಮಿಥ್ಯವೇ ಆಳೋದು.ಆಳಿದವರು ಅಳುವ ಪರಿಸ್ಥಿತಿ ಬರಬಹುದು. ಇಲ್ಲಿ ಯಾರೂ ಆಳೂ ಇಲ್ಲ ಅರಸರೂ ಇಲ್ಲ.ಎಲ್ಲಾ ಪರಮಾತ್ಮನ ದಾಸರು ಶರಣರಷ್ಟೆ.
ಆದರೆ ನಮ್ಮ ‌ಹಿಂದಿನ ದಾಸ ಶರಣರ ಜ್ಞಾನ ನಮ್ಮಲ್ಲಿಲ್ಲ ಎಂದರೆ ಹಿಂದುಳಿಯಲು ಕಾರಣ ತತ್ವ ಬಿಟ್ಟು ತಂತ್ರ ಹಿಡಿದು ಮುಂದೆ  ಹೊರಗೆ ಬಂದಿರೋದು.ಒಳಗೆ ಸೇರೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು.ಅದಕ್ಕೆ ಜನಸಂಖ್ಯೆ ಬೆಳೆದರೂ  ಅಧ್ಯಾತ್ಮ ಬೆಳೆದಿಲ್ಲ. ತನ್ನ ತಾನರಿತು ನಡೆಯಲು ಹೊರಗಿನ ರಾಜಕೀಯ ಬಿಡದು. ರಾಜಕೀಯ ವಿರಲಿ ಅದರಲ್ಲಿ ಧರ್ಮ ವಿರಲಿ.ಸತ್ಯವಿಲ್ಲದ ಧರ್ಮ ಕುಂಟುತ್ತಿದೆ.ಧರ್ಮ ವಿಲ್ಲದ ಸತ್ಯ ಕುರುಡುರನ್ನು ಸೃಷ್ಟಿ ಮಾಡುತ್ತಿದೆ.ಇದೇ ಕಲಿಯುಗ

ಕಲಿಯುವುದು ಬಹಳಷ್ಟಿದೆ ಕಲಿತದ್ದನ್ನು ಸದ್ಬಳಕೆ ಆಗಬೇಕಿದೆ ಕಲಿತಿರೋದೆ ಸರಿಯಿಲ್ಲವಾದಾಗಲೇ ಸಮಸ್ಯೆ ಒಳಗೇ ಬೆಳೆದಿರುತ್ತದೆ.ಒಳಗೆ ಶುದ್ದಿಯಾಗುವ ಸಂಸ್ಕಾರ ಇದ್ದರೆ ಅದೇ ಜೀವನವಾಗುತ್ತದೆ. ಸಂಸ್ಕಾರ ವೇ ಸರಿಯಿಲ್ಲವಾದರೆ  ಹೊರಗಿನಿಂದ ತೇಪೆ ಹಾಕುವ ಕೆಲಸವಾಗುತ್ತದೆ. ಒಟ್ಟಿನಲ್ಲಿ ಎಲ್ಲರೂ ಹೊರಗಿನಿಂದ ತೇಪೆ ಹಾಕಿಕೊಂಡು ಮುಂದೆ ಮುಂದೆ ನಡೆದ ಹಿಂದೂಗಳೆ  ಅದರಲ್ಲಿ ಹಿಂದೆ ಹಿಂದೆ ನಡೆದವರಿದ್ದರೆ  ಮೂಲ ಸರಿಯಾಗಿರುತ್ತದೆ. ಮೂಲ ಸರಿಯಾಗದೆ ರೆಂಬೆಕೊಂಬೆಗಳು ಸರಿಯಾಗದು. ಆತ್ಮಕ್ಕೆ ಯಾವುದೇ ಬೇದವಿರಲಿಲ್ಲ ಶುದ್ದವಾಗೇ ಇರುತ್ತದೆ. ಮನಸ್ಸಿನ ಶುದ್ದತೆಗೆ ಬೇಕಿದೆ ಮನುಷ್ಯತ್ವ. ಮೊದಲು ಮಾನವನಾಗು ನಂತರ‌ಮಹಾತ್ಮನಾಗುವೆ ಎಂದಂತೆ ಇಂದು‌ನಾವು ಮಕ್ಕಳನ್ನು ಮಾನವರಾಗಿಸಬೇಕಿದೆ. ಮಾನ ಉಳಿಸಿಕೊಳ್ಳಲು ತತ್ವಜ್ಞಾನ ಅರ್ಥ ವಾಗಬೇಕು. ತಂತ್ರದಿಂದ  ಅತಂತ್ರ ‌ಕುತಂತ್ರ ಬೆಳೆದರೆ ಸ್ವತಂತ್ರ ಜ್ಞಾನದ ಗತಿ ಅಧೋಗತಿ. 
ಸಾಮಾನ್ಯರ ಜ್ಞಾನಕ್ಕೆ ಬೆಲೆಯಿಲ್ಲ ವಿಶೇಷಜ್ಞಾನಕ್ಕೆ ನೆಲೆಯಿಲ್ಲ.
ಒಂದು ಕಡೆ ನಿಂತು ಚಿಂತನೆ ಮಾಡೋದಕ್ಕೆ ಸಮಯವೇ ಇಲ್ಲ.ಎಲ್ಲಾ ಎಲ್ಲರನ್ನೂ ನಡೆಸೋರೆ ಆದರೆ ಕುಳಿತು ಅರ್ಥ ಮಾಡಿಕೊಳ್ಳುವುದು ಕಷ್ಟ. ಒಟ್ಟಿನಲ್ಲಿ ಒಂದೆಡೆ ಕುಳಿತು ದ್ಯಾನ ಮಾಡೋದೆಂದರೆ  ಮಹಾಸಾಧನೆ ಎನ್ನಬಹುದು.ಆದರೆ ಆ ಧ್ಯಾನದಿಂದ ಯಾರಿಗೆ ಸುಖ ಸಿಗುತ್ತದೆ ಎಂದಾಗ ನನಗೇ ಅಲ್ಲವೆ? ನನಗಾಗಿ ದ್ಯಾನ ಮಾಡೋದು ಸಾಧನೆಯಾದರೆ ಪರಮಾತ್ಮನ ದ್ಯಾನ ಮಾಡೋದು ಉನ್ನತ ಸಾಧನೆ.ಇದು ಪರರಿಗೆ ಒಳ್ಳೆಯದಾಗಲಿ ಎನ್ನುವುದಾಗಿದ್ದರೆ  ಹಿಂದೂ ಧರ್ಮ ಉನ್ನತಮಟ್ಟಕ್ಕೆ ಬೆಳೆಯುತ್ತದೆ. ಪರರನ್ನು ಸೋಲಿಸಿ ಮುಂದೆ ನಡೆಯೋ ದ್ವೇಷ ಪೈಪೋಟಿಯೇ ಮುಖ್ಯವಾದರೆ ಅದೇ ಇನ್ನಷ್ಟು ಕೆಳಗಿಳಿಸುತ್ತದೆ.
ಆದರೆ, ಎದುರಿದ್ದವರ ಉದ್ದೇಶ  ಏನಾಗಿದೆ ಎನ್ನುವ ಬಗ್ಗೆ ಅರಿವಿದ್ದರೆ ಯಾರನ್ನು ದ್ವೇಷ ಮಾಡಬೇಕು.ಪ್ರೀತಿ ಮಾಡಬೇಕು ಸಹಕಾರ ಕೊಡಬೇಕು ಎಂಬ ಸತ್ಯಜ್ಞಾನದಿಂದ ನಮ್ಮ ಧರ್ಮ ನಾವು ಅನುಸರಿಸಬೇಕಷ್ಟೆ. ಯಾರದ್ದೋ ಹಿಂದೆ ನಮ್ಮವರು ಹೋಗುತ್ತಿದ್ದರೂ ಇವರು ನಮ್ಮವರು ಎಂದು  ಅವರ ಹಿಂದೆ ನಡೆದಷ್ಟೂ  ದೂರವಾಗುತ್ತದೆ ಧರ್ಮ.
ಕಲಿಯುಗದ ಧರ್ಮ ಕರ್ಮ ಸತ್ಯಯುಗದ ಧರ್ಮ ಕರ್ಮಕ್ಕೆ ವಿರುದ್ದ ಕಾಣಿಸುತ್ತದೆಂದರೆ ಇಲ್ಲಿ ಅಸತ್ಯವನ್ನು ಸತ್ಯವೆಂದು ವಾದ ಮಾಡುವವರು ಹೆಚ್ಚು. ತತ್ವಕ್ಕಿಂತ ತಂತ್ರವೇ ಮೇಲು ಎನ್ನುವ ಜನ ಹೆಚ್ಚು.ಆದರೂ ಬದುಕಬೇಕು ಬಾಳಬೇಕು ಈಸಬೇಕು ಇದ್ದು ಜೈಸಬೇಕು. ಅದರಲ್ಲಿ ಸತ್ಯ ಧರ್ಮ ವಿದ್ದರೆ ಜೀವನ್ಮುಕ್ತಿ.ಇಲ್ಲವಾದರೆ ಪುನರ್ಜನ್ಮ .ಇದನ್ನು ಯಾರಾದರೂ ತಪ್ಪು ಎನ್ನುವವರಿದ್ದರೆ  ಯಾವುದೆಂದು ತಿಳಿಸಿದರೆ ಒಳ್ಳೆಯದು. ತಪ್ಪಿಲ್ಲವೆಂದರೆ ಹಿಂದೆ ನಡೆದು ಸತ್ಯ ತಿಳಿಯುವುದು ಧರ್ಮ. ಇಲ್ಲಿ ಯಾರನ್ನೂ ಯಾರೂ ನಡೆಸುತ್ತಿಲ್ಲ.ಒಬ್ಬ ಹೀರೋ ಮಗ ವಿಲನ್ ಆಗಬಹುದು.ವಿಲನ್ ಮಗ ಹೀರೋ ಆಗಿ ನಟಿಸಬಹುದು.ಆದರೆ ನಿಜವಾದ  ಸತ್ಯ ಬಣ್ಣಕಳಚಿದಾಗ ಕಾಣೋದಷ್ಟೆ. ನಾವೆಲ್ಲರೂ ಬಣ್ಣಬಳಿದುಕೊಂಡಿರುವ  ನಾಟಕದ ಪಾತ್ರಧಾರಿಗಳಷ್ಟೆ.ಪರಮಾತ್ಮನ ದೃಷ್ಟಿಯಲ್ಲಿ  ಯಾರ ಪಾತ್ರ ಉತ್ತಮ ಅಧಮವೆಂದು ತಿಳಿಯುವುದು ಅಗತ್ಯವಿದೆ.
ವೈದೀಕ ಪರಂಪರೆಯನ್ನು ಹೀನಾಯವಾಗಿ ಕಾಣುವುದು ಅಜ್ಞಾನ. ಅದಕ್ಕೆ ಸರಿಯಾಗಿ ಸಹಕಾರ ನೀಡುವುದು ಅಧರ್ಮ. ಅಧರ್ಮಕ್ಕೆ ತಕ್ಕಂತೆ ಜನ್ಮ.ಹೀಗಾಗಿ ಹಿಂದೂಗಳ ಸಂಖ್ಯೆ ಕುಸಿದಿದೆ  ಬಿಟ್ಟುಮುಂದೆ ಹೋದವರ ಜನ್ಮ ಹೆಚ್ಚಾಗಿದೆ. ಇದರಲ್ಲಿ ತಪ್ಪು ಯಾರದ್ದು? ನಮ್ಮದೇ ಸಹಕಾರದಿಂದ ಬೆಳೆದಿರುವಾಗ ಅದರ ಪ್ರತಿಫಲ ಹಿಂದಿರುಗಿ ಬರೋದು ಸಹಜ. ದೈವತ್ವ ಬೆಳೆಸುವ ಶಿಕ್ಷಣವಿಲ್ಲದೆ ದೇವರನ್ನು ಹೊರಗೆಳೆದು ವ್ಯವಹಾರ ನಡೆಸಿ  ಜನರನ್ನು ಆಳೋದರಿಂದ ಜನರಲ್ಲಿ ಜ್ಞಾನ ಬರುವುದಾಗಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಸ್ಥಿತಿಗೆ ಕಾರಣ ಸೃಷ್ಟಿ. ಸೃಷ್ಟಿ ಚೆನ್ನಾಗಿ ಇದ್ದರೆ ಪರಿಸ್ಥಿತಿ ಚೆನ್ನಾಗಿರುತ್ತದೆ.
ಮನೆಮನೆಯೊಳಗೆ ರಾಮಾಯಣ ಮಹಾಭಾರತ ಪ್ರಸಾರ ಆಗುತ್ತದೆ.ಅದರೊಳಗಿನ ಧರ್ಮ ಸೂಕ್ಷ್ಮ ಎಷ್ಟು ಜನರಿಗೆ ಅರ್ಥ ವಾಗಿರಬಹುದು?  ವಿನಾಶಕಾಲೇ ವಿಪರೀತ ಬುದ್ದಿ.
ಬುದ್ದಿವಂತರ ಮುಂದೆ ಜ್ಞಾನ ಕುಸಿದಿದೆ. ಹಿಂದೂಗಳೇ  ಹಿಂದಿನ ಸತ್ಯ ಅರ್ಥ ಮಾಡಿಕೊಳ್ಳಲು ಸೋತರೆ ಅನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಈ ಕೆಳಗಿನ‌ಪುಸ್ತಕದಲ್ಲಿ 18 ವರ್ಷದ ಸಂಶೋಧನೆಯ ಸತ್ಯ ಅಡಗಿದೆ. ಸತ್ಯ ಯಾವತ್ತೂ ಹಿಂದುಳಿಯುವುದರಿಂದ ಧರ್ಮ ವೂ ಹಿಂದೆಯೇ ಇರುತ್ತದೆ. ಇದನ್ನು ಖರೀದಿಸಿ ಓದುವ‌
ಮನಸ್ಸು  ಕೆಲವರಿಗಷ್ಟೆ ಇರುತ್ತದೆ. ಅವರು ಮೇಲಿರುವ ದೇವರಿಗಷ್ಟೆ ಕಾಣುವರು.ಕೆಳಗಿರುವವರಿಗೆ ಕಾಣೋದಿಲ್ಲ.
ಜ್ಞಾನಯೋಗ,ರಾಜಯೋಗ,ಭಕ್ತಿ ಯೋಗ,ಕರ್ಮ ಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಳಗಿನ ಯೋಗ ಬೇಕು.ಯೋಗವೆಂದರೆ ಸೇರುವುದು.
ಒಂದು ಕುಟುಂಬದಲ್ಲಿ ಜನ್ಮ ಪಡೆದೆವೆಂದರೆ ಅದರ ಗುರುಹಿರಿಯರ ಜ್ಞಾನ ಧರ್ಮ ಕರ್ಮದೊಂದಿಗೆ ನಾವು ಸೇರಿದ್ದರೆ ಶಾಂತಿ.ವಿರುದ್ದವಿದ್ದರೆ ಅಧರ್ಮಕ್ಕೆ ಜಯ. ಇಲ್ಲಿ ನಮ್ಮ ತಪ್ಪನ್ನು ಸರ್ಕಾರದ ಮೇಲೆ ಹೋರಿಸಿಕೊಂಡು ಮುಂದೆ ಹೋದವರೆ ಹೆಚ್ಚಾದ ಕಾರಣ ಸರ್ಕಾರ ಸರಿಯಿಲ್ಲ ಎನ್ನಬಹುದು. ಅಂದರೆ ನಮ್ಮ ಸಹಕಾರವೇ ಸರಿಯಿರಲಿಲ್ಲ.

ನಾನು ಇಷ್ಟೆಲ್ಲಾ  ಇಷ್ಟು ವರ್ಷದಿಂದಲೂ ಬರೆದು ಹಾಕಿದ್ದರೂ ಈವರೆಗೆ ಯಾವುದೇ ಮಠಾಧೀಶರು,ಜ್ಞಾನಿಗಳು,ಸಾಹಿತಿಗಳು ದೇಶಭಕ್ತರು  ಯಾಕೆ ಹೀಗೆ ಬರೆದಿರೋದೆಂದುಪ್ರಶ್ನೆ ಮಾಡಿಲ್ಲ.
ನನ್ನ ಉದ್ದೇಶ  ತಪ್ಪಿದ್ದರೆ ತಿಳಿಸಲೆಂದಾಗಿತ್ತು. ಇದರಿಂದಾಗಿ  ಸತ್ಯ ಇದೇ ಎಂದು‌ಮುಂದೆ ಬಂದಂತೆಲ್ಲಾ  ಅಸತ್ಯ ಎದುರಿಗೆ ಬರುತ್ತಿತ್ತು. ಅದರೊಂದಿಗೆ  ವಾದ ಮಾಡಿದರೂ  ಸತ್ಯದಿಂದ ಸಿಗುವ ತೃಪ್ತಿ ನೆಮ್ಮದಿಯನ್ನು ಹಿಡಿದು ಹಿಂದೆ ನಿಲ್ಲಬೇಕಾಯಿತು. ಅಂದರೆ ಹಿಂದಿನ ಎಷ್ಟೋ ಆಚಾರ ವಿಚಾರ  ಪ್ರಚಾರದಲ್ಲಿ ಅಸತ್ಯವೂ ಇತ್ತು.ಆದರೆ ಅದರಿಂದ ಧರ್ಮ ರಕ್ಷಣೆಯಾಗಿತ್ತು. ಹೀಗಾಗಿ ಸತ್ಯಾಸತ್ಯತೆಯನ್ನು ಕಾಲಕ್ಕೆ ತಕ್ಕಂತೆ ಅನುಭವಿಸಿ ತಿಳಿಯುವುದು ಅಗತ್ಯವಿದೆ.
ಹೇಳಿದ ಮಾತ್ರಕೆ ನಂಬದಿರು ಸ್ವತಃ ಚಿಂತಿಸಿ ತಿಳಿದು ನಡೆ..
ಕಾಲಪ್ರಭಾವದಲ್ಲಿ ಹುಲುಮಾನವರಿಗೆ  ಮನಸ್ಸು ಹಾಳಾಗಿದೆ.
ಮನಸ್ಸಿನ ರೋಗಕ್ಕೆ ದೇಹಕ್ಕೆ ಔಷಧ ಕೊಡುವವರು ಬೆಳೆದಿದ್ದಾರೆ. ದೇಹ ಔಷಧದಿಂದ  ಶಕ್ತಿಹೀನವಾದಾಗ  ಆತ್ಮಸಾಕ್ಷಿಯ ಕಡೆಗೆ ಹೋಗದು. ಇದರಿಂದಾಗಿ ಆತ್ಮವಿಶ್ವಾಸ ಕಳೆದುಹೋಗುತ್ತದೆ. ಒಂದಕ್ಕೊಂದು ಜೋಡಿಸಿಕೊಂಡಿರುವ ಕೊಂಡಿಯನ್ನು ಮಧ್ಯವರ್ತಿಗಳು  ಮಧ್ಯೆ ಪ್ರವೇಶ ಮಾಡಿ ಕಳಚಿದರಂತೂ ಮುಗಿಯಿತು ಕಥೆ. ಅತಂತ್ರ ‌ಜೀವನ.
ಇದಕ್ಕೆ ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆಯ ಮಂತ್ರ ಬೆರೆಸಿ ಜಾತ್ಯಾಂತರ,ಮತಾಂತರ, ಧರ್ಮಾಂತರ,ಪಕ್ಷಾಂತರಗಳು ಬೆಳೆದು  ಅವಾಂತರ ಸೃಷ್ಟಿ ಮಾಡಿ ಆಳೋದು. ಈಗಲೂ  ಬದಲಾವಣೆಗೆ ಅವಕಾಶವಿದೆ,ಸ್ವತಂತ್ರ ವಿದೆ, ಜ್ಞಾನವಿದೆ.ಮನಸ್ಸು  ನಾವೇ ಮಾಡಿಕೊಳ್ಳಬೇಕಷ್ಟೆ.ಇದು ನಮ್ಮ ಕರ್ಮಫಲವಷ್ಟೆ. 
ಹಿಂದೂಗಳಾದವರು ಹಿಂದಿನವರ ಧರ್ಮ ಕರ್ಮದ ಮೇಲೆ ದೃಷ್ಟಿ ಹರಿಸದೆ  ಮುಂದೆ ಹೋದವರ ಮೇಲೆ ದೃಷ್ಟಿ ಹರಿಸಿ ಸರಿಯಿಲ್ಲವೆಂದರೆ  ಅದೇ ಒಳಗೆ ಸೇರುತ್ತದೆ. ಮೊದಲು ನಮ್ಮ ಮಕ್ಕಳ ದೃಷ್ಟಿ ದೋಷ ಸರಿಪಡಿಸುವ ಶಿಕ್ಷಣ ಕೊಟ್ಟರೆ ಧರ್ಮ. ನಿಧಾನವಾದರೂ ಸರಿ ಹೆಜ್ಜೆಯಿಟ್ಟರೆ  ಜೀವನದಲ್ಲಿ ಬದಲಾವಣೆ  ಇದ್ದಲ್ಲಿಯೇ ಆಗಬಹುದು. 
ನಿಧಾನವೇ ಪ್ರಧಾನ. ಎಷ್ಟು ರೆಂಬೆಕೊಂಬೆ ಕಡಿದರೂ ಬೇರು ಗಟ್ಟಿಯಿದ್ದರೆ  ಮರ ಸುರಕ್ಷಿತ. ಉದುರಿಹೋಗುವ ಎಲೆಗಳಿಗೆ ಆಯಸ್ಸು ಇರೋದಿಲ್ಲ.ಹಾಗೆ ನಾವೆಲ್ಲರೂ ಆ ಪರಮಾತ್ಮನ ಎಲೆಯಾಗಿದ್ದರೂ ಉತ್ತಮ ಬೇರಿನ ಒಂದು ಸಣ್ಣ ಭಾಗ.ಇದ್ದಾಗಲೇ ಸತ್ಯ ತಿಳಿಸಿ ಹೋದರೆ  ಧರ್ಮ ಸುರಕ್ಷಿತ.
ಆದರೆ,  ಪರಮಸತ್ಯ  ಆಳವಾಗಿರುವಾಗ ಒಳಹೊಕ್ಕಿ ನೋಡಿದವರಿಗೆ ಅರ್ಥ ವಾಗಿದೆ. ಹೊರಗಿನ‌ ಮಿಥ್ಯ ಜಗತ್ತಿನಲ್ಲಿ ಸತ್ಯ ಕಾಣುತ್ತಿಲ್ಲ. ಅಸತ್ಯದೊಳಗೆ ಅಡಗಿದೆ. ಅಧರ್ಮದೊಳಗೆ ಧರ್ಮ ಸಿಲುಕಿದೆ, ಅಜ್ಞಾನದೊಳಗೆ ಜ್ಞಾನ ಮರೆಯಾಗಿದೆ.ಕಣ್ಣಿನ ಪೊರೆ ಕಳಚಿದರೆ ಸ್ವಚ್ಚವಾಗುತ್ತದೆ.
ಎರಡೂ ಕಣ್ಣಿನ ಸತ್ಯ ಮೂರನೆ ಕಣ್ಣಿಗೆ ವಿರುದ್ದವಿದ್ದರೆ ಅಸತ್ಯ.

ಪಿತೃಋಣ ತೀರಿಸಲು ಪಿತೃಪಕ್ಷ

ವರ್ಷದಲ್ಲಿ ಬರುವ ಪಿತೃಪಕ್ಷದ ಬಗ್ಗೆ ಅರಿವಿದ್ದವರು ಭೂಮಿಗೆ  ಬರಲು ಕಾರಣರಾಗಿರುವ ಪಿತೃಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಹೋದ ಮೇಲೆ ಮಾಡುವ ಶ್ರಾದ್ಧ ಕರ್ಮ ಕ್ಕೂ ಇದ್ದಾಗಲೇ ನಡೆಸುವ ಶ್ರದ್ಧೆಯ ಧಾರ್ಮಿಕ ದೇವತಾರಾಧನೆಗೂ ಅಂತರವಿದ್ದರೂ  ಇದ್ದಾಗ ಮಾಡುವ ಕ್ರಿಯೆಯಿಂದ  ಜೀವಾತ್ಮನಿಗೆ ಮುಕ್ತಿ ತೃಪ್ತಿ ಸಿಕ್ಕಿರುವುದನ್ನು ಅನುಭವಿಸಬಹುದು. ಹೋದ ಮೇಲೆ ಯಾರೋ ಮಾಡುವ ಶ್ರಾಧ್ದ ಕರ್ಮ ದ ಫಲ ಪಿತೃಗಳ ತೃಪ್ತಿ ಹೊಂದಿದ್ದರೆ ಸಿಗುವುದು.ಆದರಿದು ತಿಳಿಯುವುದು ಕಷ್ಟ.
ಹೋದ ಜೀವ ಮರಳಿಬರದಿದ್ದರೂ  ಮರುಜನ್ಮ ದ ಬಗ್ಗೆ ಹಿಂದೂಗಳ ನಂಬಿಕೆಯಿದೆ. ಇದು ಪುರಾಣಗಳಲ್ಲಿಯೇ ತಿಳಿಸಿದ್ದಾರೆ.  ಅಷ್ಟೇ ಯಾಕೆ ಸ್ವಯಂ ಶ್ರೀ ಕೃಷ್ಣಪರಮಾತ್ಮನೇ ಭಗವದ್ಗೀತೆ ಯಲ್ಲಿ ತಿಳಿಸಿರುವಾಗ ಜನ್ಮವೇ ಇಲ್ಲ ಎನ್ನುವುದು ಅಸತ್ಯ.
ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಅಂತರವಿರಬಹುದಷ್ಟೆ.ಆ ಅಂತರದಲ್ಲಿ ಪಿತೃ ಲೋಕದಲ್ಲಿ  ಜೀವಾತ್ಮನಿಗೆ  ಸ್ಥಾನವೆಂದು ತಿಳಿಸುವ ವೈದೀಕರಿಗೆ  ಅಲ್ಲಿನ ಪಿತೃಗಳ ಆಶೀರ್ವಾದ ದೇವತೆಗಳಿಗಿಂತ ದೊಡ್ಡದು. ಕಾರಣ ಮಧ್ಯವರ್ತಿ ಯಾಗಿರುವವರ ಸಹಕಾರವಿಲ್ಲದೆ ಯಾವುದೇ ಕೆಲಸ ಕಾರ್ಯ  ನೇರವಾಗಿ ನಡೆಯದು. ಹೀಗಾಗಿ ಮಧ್ಯವರ್ತಿ ಗಳೇ ಅತಂತ್ರಸ್ಥಿತಿಗೆ ತಲುಪಿದ್ದರೆ  ಜೀವನ ಅತಂತ್ರವೆ.
ಅತಂತ್ರಸ್ಥಿತಿಗೆ ತಲುಪಲು ಕಾರಣವೇ ಅಧರ್ಮ ಅನ್ಯಾಯ ಅಸತ್ಯದ ನಡೆ ನುಡಿ.ಅದಕ್ಕೆ ಹೇಳೋದು ಸ್ವತಂತ್ರ ವಾಗಿ ಸತ್ಯದ ಕಡೆಗೆ ನಡೆದವರಿಗಷ್ಟೆ ಮುಕ್ತಿ ಮೋಕ್ಷವೆಂದು. 

ತಾಯಿತಂದೆಯರಬಿಟ್ಟುಜಪವ‌ಮಾಡಲುಬಹುದು,ದಾಯಾದಿ ಬಂಧುಗಳ ಬಿಡಲು ಬಹುದೂ ಆದರೆ ಹರಿಯನ್ನು ಬಿಟ್ಟು ಬಿಡಲಾಗದೆನ್ನುವುದು ಮಹಾಯೋಗಿಗಳ ಅನುಭವ.
ಸರ್ಕಾರದ ಹಿಂದೆ ನಡೆದಿರುವ ಇಂದಿನ ಪರಿಸ್ಥಿತಿ ಯಲ್ಲಿ  ಮನೆ ಮನೆಯ ಸಾಲ ತೀರಿಸಲು ಸರ್ಕಾರಕ್ಕೆ ಅಸಾಧ್ಯ. ಕಾರಣ ಇಲ್ಲಿ ಹೊರಗಿನಿಂದ ಸಾಲ ಬೆಳೆದಿದೆ. ಮೂಲ ಶಕ್ತಿ ಮರೆತು ದೂರ ಹೋದವರ ಹಿಂದೆ ನಡೆದವರ ಸಾಲ ತೀರಿಸಲು ಮೂಲದಲ್ಲಿಯೇ ಶಕ್ತಿಯಿಲ್ಲವಾದಾಗ ಹೊರಗೆ ಹೋಗಿ ಶಕ್ತಿಮೀರಿ ದುಡಿದು ಸಾಲ ತೀರಿಸುವುದು ಅಗತ್ಯ. ಹೀಗಾಗಿ ಎಷ್ಟು ಆಸ್ತಿಯಿದ್ದರೂ ಸಾಲ ಮಾಡೋದು ತಪ್ಪಿಲ್ಲ.
 ದಾಸ ಶರಣರು ಮಹಾತ್ಮರುಗಳು ತಮ್ಮೆಲ್ಲಾ ಭೌತಿಕ ಆಸ್ತಿ ಬಿಟ್ಟು ಪರಮಾತ್ಮನ ದಾಸರಾಗಿ  ಸಂಸಾರದಿಂದ ದೂರವಾದರು ಎಂದರೆ ಎಲ್ಲಾ ನಿನ್ನದೇ ನನ್ನದೇನಿಲ್ಲ ಎನ್ನುವ ಶರಣಾಗತಿ ಭಾವ ದಾಸ ಪ್ರಜ್ಞೆ ಮಹಾತ್ಮರಲ್ಲಿತ್ತು. ಈಗಿನ ಹೊರಗಿನ  ವ್ಯವಹಾರ  ಒಳಗಿನ ಧರ್ಮ ಬಿಟ್ಟು ನಡೆಸಿದೆ.

 ಯಾವಾಗ ಸಾಮಾನ್ಯರಿಗೆ ಸಂಬಂಧ ಒಂದು ವ್ಯವಹಾರವಾಗಿ ,ಎಲ್ಲಿಯವರೆಗೆ ಹಣವಿರುವುದೋ ಹೆಣವಾದರೂ ಬೆಲೆ.ಆದರೆ ಜ್ಞಾನ ಮಾತ್ರ ಅಮರ.
ಜನ್ಮದ ಮೂಲಕವೇ ಪಿತೃಗಳ ಋಣವಿರೋವಾಗ ಅವರ ಧರ್ಮ ಕರ್ಮ ವೂ ಮಕ್ಕಳಿಗೆ ತಿಳಿಸಿ ಕಲಿಸುವುದು ಪೋಷಕರ ಧರ್ಮ. ಪಿತೃಗಳ ಭೌತಿಕ ಆಸ್ತಿ ಬೇಕು  ಅವರ ಋಣ ಬೇಡವೆಂದರೆ  ಅಜ್ಞಾನವಷ್ಟೆ. ಒಟ್ಟಿನಲ್ಲಿ ಯಾವುದೋ ರೂಪದಲ್ಲಿ ಋಣ ಸಂದಾಯವಾಗಲೇಬೇಕೆನ್ನುತ್ತದೆ ಸನಾತನ ಧರ್ಮ. ಇದು ಪರಮಾತ್ಮನದ್ದಾಗಿದೆಯೋ ಪರಕೀಯರದ್ದಾಗಿದೆಯೋ  ಎಲ್ಲಾ ಸತ್ಕರ್ಮ ಸ್ವಧರ್ಮ ಸುಜ್ಞಾನದ ಮೂಲಕವೇ ಕಳೆಯೋದು. ಹೀಗಾಗಿ ಎಷ್ಟು ಹಣಗಳಿಸಿದರೂ  ಅದರ ಹಿಂದಿನ  ಧರ್ಮ ಕರ್ಮ ದ ಮೇಲೇ ಋಣ ಅಥವಾ ಸಾಲದ ಲೆಕ್ಕಾಚಾರದಿಂದ ಮೇಲಿರುವ  ಜಗತ್ತನ್ನು  ಅರ್ಥ ಮಾಡಿಕೊಂಡರು ಮಹಾತ್ಮರುಗಳು.
ಆತ್ಮನಿರ್ಭರ ಭಾರತ ಅಧ್ಯಾತ್ಮ ಸಂಶೋಧನೆಯಿಂದ ಸಾಧ್ಯ.
"ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮವೊಂದಿದ್ದರೆ ಸಾಕೋ " ಎಂದಿದ್ದಾರೆ ದಾಸಶ್ರೇಷ್ಟರು.
ಮೂಲವನ್ನರಿತರೆ ಮೂಲ ತಲುಪಬಹುದು. ಮೂಲಾಧಾರದ ಶುದ್ದತೆಗೆ ಮೂಲಶಿಕ್ಷಣ ಶುದ್ದವಿರಬೇಕು. ಇದು ಭಾರತೀಯ ಶಿಕ್ಷಣದ ಮೂಲವಾಗಿದೆ. ಸಾತ್ವಿಕ ಶಿಕ್ಷಣ  ಗುರುವಾಗಿಸಿದರೆ ರಾಜಸಿಕ ಶಿಕ್ಷಣ ರಾಜಕೀಯಕ್ಕೆ ಇಳಿಸುತ್ತದೆ. ಆದರೆ ರಾಜಕಾರಣಿಗಳೇ ಗುರುವನ್ನು  ಆಳುತ್ತಿದ್ದರೆ ಅಧರ್ಮ ವಷ್ಟೆ.
ಹಾಗೆ ಪೋಷಕರನ್ನು ಶೋಷಣೆ ಮಾಡುವುದೂ ಅಧರ್ಮ.
ಇದಕ್ಕೆ  ಪೋಷಕರು ನೀಡಿದ  ಶಿಕ್ಷಣವೂ ಕಾರಣವಾಗಬಹುದು.  ಯಾರೂ  ವಯಸ್ಸಿನಿಂದ ಹಿರಿಯರಲ್ಲ ಕಿರಿಯರಲ್ಲ.ಅವರವರ ಜ್ಞಾನದ ಮೇಲೇ ಎಲ್ಲಾ ನಡೆದಿರೋದು. ಜ್ಞಾನ ಒಳಗಿದೆ ವಿಜ್ಞಾನ ಹೊರಗಿದೆ. ಸತ್ಯದ ವಿಜ್ಞಾನ ಒಳಜಗತ್ತನ್ನು ಆಳುತ್ತಿದೆ.ಮಿಥ್ಯದ ವಿಜ್ಞಾನ ಹೊರಜಗತ್ತನ್ನು ಆಳುತ್ತಿದೆ.ಇವೆರಡ ನಡುವಿನ ಮಾನವನಲ್ಲಿ ಸಾಮಾನ್ಯಜ್ಞಾನವಿದ್ದರೆ ಎರಡರ ಸದ್ಬಳಕೆ ಆಗಬಹುದು.

ಅದ್ವೈತ ದಿಂದ ದ್ವೈತ ಹೊರಬಂದರೆ ಎಲ್ಲಾ ದ್ವೈತ ವೆ

ಅದ್ವೈತ ದರ್ಶನವಾದಾಗ ದ್ವೈತ ಬೇರೆ ಎನಿಸುತ್ತದೆ. ಯಾವಾಗ ಬೇರೆಕಾಣುತ್ತದೋ ಅದೇ ದ್ವೈತವಾಗುತ್ತದೆ. ಹಾಗೆ ಆಕಾಶದೆತ್ತರ ಬೆಳೆದವನಿಗೆ ಭೂಮಿ ಬೇರೆಯಾದರೂ ಭೂಮಿ ಬಿಟ್ಟು ಜೀವವಿರದು ಎನ್ನುವ ಸತ್ಯ ತಿಳಿದರೆ ಎರಡೂ ಅರ್ಥ ವಾಗೋದು.
ಇದನ್ನು ಯಾವುದೇ ಪುರಾಣ ಇತಿಹಾಸದ ರಾಜಕೀಯದಿಂದ ತಿಳಿಯಲಾಗದು.ಸಂಸಾರದೊಳಗೆ ಪ್ರವೇಶ ಮಾಡಿದ ಜೀವಕ್ಕೆ ಭೂಮಿಯ ಆಸರೆಯಿಲ್ಲದೆ ಏನೂ ಮಾಡಲಾಗದು.
ಯಾವುದೇ ಸಂಶೋಧನೆಯಾಗಲಿ ಭೂಮಿ ಮೇಲಿದ್ದೇ ನಡೆಸಿರೋದು.ಇದಕ್ಕೆ  ಪರಮಾತ್ಮನ ಸಹಕಾರವೂ ಇದೆ.ಹಾಗಾದರೆ ಪರಮಾತ್ಮ ಬೇರೆಯಾಗಲು ಸಾಧ್ಯವೆ?
ಜೀವಾತ್ಮನ  ಒಳಗೆ ಹೊರಗೆ  ಆವರಿಸಿರುವ ಈ ಶಕ್ತಿಯನ್ನು ಅರಿತು ನಡೆಯುವುದೇ ಅಧ್ಯಾತ್ಮ ಸಂಶೋಧನೆ.
ಇದನ್ನು ದುರ್ಭಳಕೆ ಮಾಡಿಕೊಂಡಷ್ಟೂ ಆತ್ಮಹತ್ಯೆ ಎನ್ನಬಹುದು. 
ಏನೂ ಅರಿಯದ ಮಕ್ಕಳಿಗೆ ಕಲಿಸಬಹುದು
ಎಲ್ಲಾ ತಿಳಿದವರಿಗೆ ತಿಳಿಸೋ ಅಗತ್ಯವಿರದು
ಅರ್ಧ ತಿಳಿದು ತಿಳಿಸುವವರನ್ನು ತಡೆಯಲಾಗದು.

ಸತ್ಯವಿರದ ಧರ್ಮ ಕ್ಕೆ ವಿರುದ್ದವಿರುವ ಎಲ್ಲಾ ಕರ್ಮ  ಅಕರ್ಮ ವಾಗಿರುತ್ತದೆನ್ನುವರು ಮಹಾತ್ಮರುಗಳು.
ಅದ್ವೈತ ದೊಳಗೇ ದ್ವೈತ ವಿದ್ದಂತೆ ಪರಮಾತ್ಮನೊಳಗೇ ಜೀವಾತ್ಮನಿರೋದು. ಒಂದೇ ನಾಣ್ಯದ ಎರಡು ಮುಖವು ವ್ಯವಹಾರಕ್ಕೆ ಇಳಿದಾಗ ಹಣಸಂಪಾದನೆಯೇ ಗುರಿಯಾಗಿಸಿ ಜ್ಞಾನದ ನಷ್ಟವಾಗುತ್ತದೆ. ಧರ್ಮ ನಾವಂದುಕೊಂಡಂತಿಲ್ಲ  ಹೀಗಾಗಿ ಧರ್ಮ ಕುಸಿದಿದೆ. ಸತ್ಯ ನಾವು ಸರಿಯಾಗಿ ತಿಳಿದಿಲ್ಲ ಅದಕ್ಕೆ ಅಸತ್ಯ ಬೆಳೆದಿದೆ. ಹಾಗೆ ಭೂಮಿ ನಮ್ಮನ್ನೇನೂ ಕೇಳುತ್ತಿಲ್ಲವಾದರೂ ಭೂಮಿಯನ್ನು ಆಳುವುದೇ ಪ್ರಗತಿ ಎನ್ನುವ  ಅಜ್ಞಾನ ಮಿತಿಮೀರಿದೆ.ಆಳೋದಕ್ಕೆ ನಾವ್ಯಾರು? ಈ ಪ್ರಶ್ನೆಗೆ  ಒಂದೇ ಉತ್ತರ ನಾನೆಂಬುದಿಲ್ಲ ಇದು ಅದ್ವೈತ, ನಾನಿದ್ದೇನೆ ದ್ವೈತ ನಾನೇ ಎಲ್ಲರಲ್ಲೂ ಇರೋನು ವಿಶಿಷ್ಟಾದ್ವೈತ. ಎಲ್ಲವನ್ನೂ ತನ್ನೊಳಗೇ ಇಟ್ಟುಕೊಂಡು ಅವರವರ ಹಿಂದಿನ ಋಣ ಕರ್ಮಕ್ಕೆ ತಕ್ಕಂತೆ ನಡೆಸೋ ಶಕ್ತಿ ನಾನೇ ಎಂದರೆ ನಾನ್ಯಾರು? ದೇವರೆ? ಅಸುರರೆ? ಮಾನವರೆ? ನಿರಾಕಾರ ಬ್ರಹ್ಮನೇ ನಾನು. ಸೃಷ್ಟಿಯ ರಹಸ್ಯವರಿತು ಸ್ಥಿತಿಗೆ ಕಾರಣ ತಿಳಿದು ಲಯಕಾರಕನಿಗೆ ಶರಣಾಗೋದು ಜೀವಾತ್ಮವೇ ನಾನು. ನಾನು ಹೋದರೆ ಸ್ವರ್ಗ. ಇದ್ದರೆ ನರಕ ಎಂದರು ಮಹಾತ್ಮರು.

ಹಿಂದೂ ಹಾಳಾಗಿರೋದೆ ಹಿಂದೂ ಧರ್ಮ ವೆ?

ಹಿಂದೂ ಧರ್ಮ ಹಾಳಾಗುತ್ತಿದೆ ಹಿಂದುಳಿಯುತ್ತಿದೆ ಇದಕ್ಕೆ ಕಾರಣ ಅನ್ಯಧರ್ಮದವರು ಎನ್ನುವವರೊಮ್ಮೆ‌ ಚಿಂತನೆ ನಡೆಸಿದರೆ  ಅನ್ಯರ ಮಾತಿಗೆ ಬೆಲೆಕೊಟ್ಟು ಅವರ ಶಿಕ್ಷಣ,ಧರ್ಮ ಕ್ಕೆ ಸಹಕರಿಸಿ ವಿದೇಶದವರೆಗೂ ನಡೆದವರು ಯಾರು? ವಿದೇಶಕ್ಕೆ ಹೋದವರನ್ನು ಎತ್ತಿ ಏಣಿಗೇರಿಸಿದ ಪೋಷಕರು ಯಾರು? ದೇಶದೊಳಗೇ ಇದ್ದು ದೇಶಕ್ಕೂ‌ನನಗೂ ಸಂಬಂಧ ವಿಲ್ಲವೆಂದಂತೆ  ಜೀವನ ನಡೆಸಿದವರು ಯಾರು? ನಮ್ಮನ್ನು ಆಳಿದವರ  ವ್ಯವಹಾರಿಕ ಶಿಕ್ಷಣವನ್ನು ಪಡೆದವರು ಯಾರು? ನಮ್ಮೊಳಗೇ ಅಡಗಿದ್ದ ಸತ್ಯ ಧರ್ಮ ಕ್ಕೆ ವಿರುದ್ದ‌ನಡೆದವರು ಯಾರು? ಸರ್ಕಾರದ ದಾರಿ ತಪ್ಪಿಸಿ  ಜನರಲ್ಲಿ ಭಯ ಹುಟ್ಟಿಸಿ ಇಲ್ಲಸಲ್ಲದ ವಿಚಾರಗಳನ್ನು ಚರ್ಚಿಸುತ್ತಾ ಮನರಂಜನೆಯಲ್ಲಿ ಮೈಮರೆತವರು ಯಾರು? ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರದಲ್ಲಿ  ತಮ್ಮವರೊಂದಿಗೆ  ಬೆರೆಯಲಾಗದೆ ದ್ವೇಷ ಬೆಳೆಸಿಕೊಂಡವರು ಯಾರು? ಪುಣ್ಯ ಭೂಮಿಯಲ್ಲಿ ಪಾಪಿಷ್ಟರು ಬೆಳೆದಿರುವುದು ಪಾಪ ಮಾಡಿದವರಿಗೆ ಸಹಾಯ ಮಾಡಿರುವುದು  ರಾಜಕೀಯಕ್ಕೆ ಸಹಕರಿಸಿ ರಾಜಯೋಗದಿಂದ ದೂರವಾಗಿರುವುದು ಕಲಿಕೆಯ ಪ್ರಭಾವ.ಶಿಕ್ಷಣ ಸರಿಯಿಲ್ಲವೆಂದು ತಿಳಿದರೂ ಅದೇ ಶಿಕ್ಷಣಕ್ಕೆ ಪ್ರಜೆಗಳು ದಾಸರಾಗಿ ಸಾಲ ಮಾಡಿ ಹೊರಗೆ ದುಡಿಯಲು ಹೊರಟರೆ ಮನೆಯೊಳಗೆ ಸೇರೋದು ಅನ್ಯರೆ ಆಗುವರು. ಭಾರತದ ಈ ಸ್ಥಿತಿಗೆ  ಕಾರಣ ಅಜ್ಞಾನ.ಅಜ್ಞಾನ ಎಂದರೆ ಸತ್ಯವಿಲ್ಲದ ವಿಷಯ ತಿಳಿಯುವುದು.ಹಾಗಾದರೆ ನಾವು ಕಲಿತ ವಿಷಯದಲ್ಲಿ ಸತ್ಯವಿರಲಿಲ್ಲವೆ? ಕಾಲಮಾನಕ್ಕೆ ತಕ್ಕಂತೆ ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.ಆದರೆ ಸತ್ಯ ಯಾವತ್ತೂ ಒಂದೇ ಇರುತ್ತದೆನ್ನುವುದು ಅಧ್ಯಾತ್ಮ. ಆ ಒಂದು ಸತ್ಯವರಿತು ಉಳಿದ ಸತ್ಯವನ್ನು ಅರ್ಥ ಮಾಡಿಕೊಂಡರೆ ವಾಸ್ತವದಲ್ಲಿ ಬದುಕಿ ಪುರಾಣ ಇತಿಹಾಸ ತಿಳಿದು ಭವಿಷ್ಯ ಅರ್ಥ ವಾಗುತ್ತದೆ. ಯಾವುದೂ ನಮ್ಮ ಕೈಯಲ್ಲಿ ಇಲ್ಲ ಇದು ಸತ್ಯ.ಆದರೆ ಎಲ್ಲಾ ನಮ್ಮ ಕೈಯಿಂದಲೇ ಆಗಬೇಕಿದೆ ಇದೂ ಸತ್ಯ.ಕೈ ಕೆಸರಾದರೆ ಬಾಯಿ ಮೊಸರು ಇದು ಸತ್ಯ .ಕೈಗೆ ಕೆಲಸವೇ ಕೊಡದೆ ತಿನ್ನಿಸಿದರೆ ?  
ನಮ್ಮ ಇಂದಿನ‌ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣದಲ್ಲಿ ಸತ್ಯಕ್ಕೆ ಸ್ಥಾನಮಾನವಿಲ್ಲ. ಕುಳಿತಲ್ಲಿಯೇ ಎಲ್ಲಾ  ಸೌಕರ್ಯ ಕೊಟ್ಟು ತಿನ್ನಿಸಿ ಬೆಳೆಸಿದ ಪೋಷಕರ ಸ್ಥಿತಿ ಕೊನೆಯಲ್ಲಿ ಕಾಣುತ್ತಿದೆ.
ಎಲ್ಲರೂ ಹಣದ ಶ್ರೀಮಂತ ರೆ ಆದರೆ ಅದರೊಂದಿಗೆ ಸಾಲವೂ  ಬೆರೆತಿದೆ. ದೇಶದ ತುಂಬಾ  ಸಂಪತ್ತಿದೆ ಆದರೆ ದೇಶ ಆಪತ್ತಿನಲ್ಲಿದೆ. ರಾಜಕೀಯಕ್ಕೂ ಧರ್ಮ ಕ್ಕೂ ಯಾವ ಸಂಬಂಧ ವಿಲ್ಲವೆಂದವರು ರಾಜಕೀಯದೆಡೆಗೆ ನಡೆಯೋ ಪರಿಸ್ಥಿತಿ ಬಂದಿದೆ. ಯಾವಾಗ ಹೊರಗಿನ ಸತ್ಯ ಪ್ರಚಾರ ಹೆಚ್ಚುವುದೋ ಒಳಗಿನ ಸತ್ಯ ಅರ್ಥ ವಾಗದೆ ಹಿಂದುಳಿಯುತ್ತದೆ.
ಅಸುರರೊಳಗೇ ಸುರರು, ವಿದೇಶದೊಳಗೇ ದೇಶ, ಅಧರ್ಮದೊಳಗೇ ಧರ್ಮ, ಅಜ್ಞಾನದೊಳಗೇ ಜ್ಞಾನ ಅವಿದ್ಯೆ ಒಳಗೆ ವಿದ್ಯೆ ಹುಡುಕುವುದು ಕಷ್ಟವಿದೆ. ಕಾರಣ ಇದು ಒಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದಿಲ್ಲ. ಒಳಗಿನವರೆ ಸಹಕಾರ ಕೊಡದಿದ್ದರೆ  ಹೊರಗಿನವರು ಕೊಡುವರೆ? ಹೀಗಾಗಿ ಒಳಗಿನ ಸ್ವಚ್ಚತೆಗೆ ಒಳಗಿನ ಶಿಕ್ಷಣ ಕೊಟ್ಟು  ಹೊರಗೆ ಬರೋದೇ ಸರಿಯಾದ  ಪರಿಹಾರ.ಈಗ ಮನೆಯೊಳಗೆ ಕೂತರೆ ಸಂಸಾರ ನಡೆಸೋದೆ ಕಷ್ಟ ಎನ್ನುವ ಪರಿಸ್ಥಿತಿ ಇದೆ ಕಾರಣ ಅತಿಯಾದ ಸಾಲದ ಹೊರೆ. 
ಸರ್ಕಾರ ಕೊಡುವ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳದೆ  ಸಾಲಮನ್ನಾ ಮಾಡಿಸಿಕೊಂಡವರೂ ಮೇಲಿನ ಶಕ್ತಿಯ ಸಾಲಮನ್ನಾ ಆಗೋದಕ್ಕೆ ಸತ್ಕರ್ಮ, ಸ್ವಧರ್ಮ, ಸುಶಿಕ್ಷಣ,ಸುಜ್ಞಾನ,ಸತ್ಯವೇ ಬಂಡವಾಳವಾಗಿದೆ.
ಈಗಲೂ  ಕಾಲಮಿಂಚಿಲ್ಲ.ಯಾರನ್ನು ದ್ವೇಷ ಮಾಡಿದರೂ ಅದರಲ್ಲೂ ಪರಮಾತ್ಮನೇ ಇರೋವಾಗ  ದ್ವೇಷದಿಂದ ದೇಶ ಕಟ್ಟಲು ಕಷ್ಟ. ಹಾಗೆ ಸಂಸಾರದಲ್ಲಿ ಮುಳುಗಿರುವ ಎಷ್ಟೋ ಜೀವಾತ್ಮರಿಗೆ ಪರಮಾತ್ಮನ ತೋರಿಸುವ‌ಗುರುವಿನ ಅಗತ್ಯವಿದೆ. ಒಳಗೇ ಇರುವ ಗುರುವನ್ನು ತಿರಸ್ಕರಿಸಿ ಹೊರಗೆ ಹೊರಟವರ ಗತಿ ಅಧೋಗತಿ.ತಾಯಿಯ ಋಣ ತಂದೆಯ ಋಣ ತೀರಿಸಲು ಅವರ ಧರ್ಮ ಕರ್ಮ ಅರ್ಥ ವಾಗಬೇಕು.
ಅನ್ಯರ ಹಿಂದೆ ನಡೆದರೆ ಹಣ ಸಿಗಬಹುದು ಜ್ಞಾನದ ನಷ್ಟವನ್ನು ತುಂಬಲು ಅಧ್ಯಾತ್ಮ ಅಗತ್ಯ.ಇಲ್ಲಿ ಅಧ್ಯಾತ್ಮ ಎಂದರೆ ಪುರಾಣ ಇತಿಹಾಸವಲ್ಲ ತನ್ನ ತಾನರಿತು ಆತ್ಮರಕ್ಷಣೆಯ ಕಡೆಗೆ ನಡೆಯೋದು. ಇದು ಕಣ್ಣಿಗೆ ಕಾಣದ ಜಗತ್ತು.ಕತ್ತಲಿನಲ್ಲಿರುವ ಬೆಳಕನ್ನು ಕಾಣುವ ಜ್ಞಾನಸಂಪತ್ತು.
ಅನ್ಯರನ್ನು ಶಿಕ್ಷಣದೊಳಗೇ ವ್ಯವಹಾರದೊಳಗೇ ಭಾಷೆ ಸಂಸ್ಕೃತಿ ,ದೇಶದೊಳಗೇ  ಅತಿಥಿಸತ್ಕಾರ ಮಾಡುವಾಗ ನಮ್ಮವರ ಸ್ಥಿತಿಗತಿಯ ಬಗ್ಗೆ ಎಚ್ಚರವಿರದು.ಯಾವಾಗ ಅವರು ನಮ್ಮ ತಿಥಿ ಮಾಡಲು ಮನೆಯೊಳಗೆ ಇರುವರೋ ಆಗ ಎಚ್ಚರವಾದರೆ  ಏನೂ ಉಪಯೋಗವಿಲ್ಲ. ಇದು ಇಂದಿನ ಭಾರತೀಯರ ಸ್ಥಿತಿ ಗೆ ಕಾರಣ.
ಭಾರತೀಯ ವಿಧ್ಯಾವಂತ ಬುದ್ದಿವಂತ ಜ್ಞಾನಿಗಳು ವಿದೇಶದಲ್ಲಿ ಬೆಳೆದಿದ್ದಾರೆ. ಅಲ್ಲಿದ್ದ ಅಜ್ಞಾನಿಗಳು ವ್ಯವಹಾರಕ್ಕೆ ನಮ್ಮಲ್ಲಿ ಬಂದು ನೆಲೆಸಿ ಹಣಕ್ಕಾಗಿ  ಜ್ಞಾನವನ್ನು ತಿರಸ್ಕರಿಸಿ ಧರ್ಮ ಭ್ರಷ್ಟರಾಗಿರುವರು.ಇದಕ್ಕೆ ಸಹಕಾರ ಕೊಟ್ಟ ಪ್ರಜಾಪ್ರಭುತ್ವ ದ ಜನರ ಗೋಳು ದೇವರಿಗೂ ಕೇಳದು.ದೈವತ್ವ ತತ್ವದಲ್ಲಿತ್ತು  ಆದರಿದು ತಂತ್ರದ ವಶವಾಗಿದೆ.ಸ್ವತಂತ್ರ ಭಾರತವನ್ನು ಸ್ವತಂತ್ರ ಜ್ಞಾನದಿಂದ  ಆತ್ಮನಿರ್ಭರ ಮಾಡಬೇಕಿದೆ. ಇದು ಸಾಧ್ಯವೆ? ಇದರ ಬಗ್ಗೆ ಚರ್ಚೆ ನಡೆಸಿದರೆ ನಮ್ಮ ಆತ್ಮಕ್ಕೆ ನಾವೇ ದ್ರೋಹವೆಸಗಿ ಯಾರದ್ದೋ ದೋಷ ಎತ್ತಿ ಹಿಡಿಯುವ ರಾಜಕೀಯ ದರ್ಶನ ಆಗುತ್ತದೆ.
ಒಟ್ಟಿನಲ್ಲಿ ರಾಜಕೀಯದಿಂದ  ರಾಜಯೋಗಿಯಾಗೋದಿಲ್ಲ.
ಅಧ್ಯಾತ್ಮ ದಿಂದ ಮಾತ್ರ ಯೋಗಿಯಾಗಿರೋದನ್ನು ಪುರಾಣ ತಿಳಿಸಿದೆ.ಪುರಾಣದ ರಾಜಕೀಯದಲ್ಲಿ ಧರ್ಮ ತತ್ವವಿತ್ತು ಗಮನಿಸಿ ತಮ್ಮ ಆತ್ಮರಕ್ಷಣೆಗಾಗಿ  ತಾವೇ ಎಚ್ಚರವಾಗೋದು ಅಗತ್ಯವಿದೆ. 
ಶ್ರೀ ಕೃಷ್ಣ ಪರಮಾತ್ಮ‌ಹೇಳಿದಂತೆ ಇಲ್ಲಿ ಎಲ್ಲರೂ ಸತ್ತಿರುವವರೆ
ಸತ್ಯವಿಲ್ಲದ ಜಗತ್ತಿನಲ್ಲಿ ಬದುಕಿರೋರು ವಿರಳ. ಸಾವು ನಿಶ್ಚಿತ ಆತ್ಮ ಅಮರ. ಶಿಕ್ಷಣ ಶಿಷ್ಟಾಚಾರದ ಕಡೆಗಿದ್ದರೆ ಜನ್ಮಸಾರ್ಥಕ.
ಶಿಷ್ಟಾಚಾರದ ಹೆಸರಿನಲ್ಲಿ ಭ್ರಷ್ಟಾಚಾರ ಬೆಳೆಯಬಾರದು.

ಎಷ್ಟೋ  ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸುತ್ತಿದ್ದೆ ಅಧ್ಯಾತ್ಮ ವಿಚಾರ ಸತ್ಯದ ವಿಚಾರವೆಂದು ತಿರಸ್ಕರಿಸಿದ್ದರು.ಈಗ ಕೇಳಿದವರಿಗಷ್ಟೆ ನಮ್ಮ ಅರಿವಿಗೆ ಬರುವ ವಿಚಾರ ಕಳಿಸುತ್ತೇನೆ. ಕಾಲ ಒಂದೇ ಸಮನಾಗಿರದು ಸತ್ಯ ಮಾತ್ರ ಒಂದೇ ಇರುತ್ತದೆ.ಆ ಒಂದರ ಕಡೆ ನಡೆದವರ ಮನಸ್ಸು ಒಂದೇ ಇರುತ್ತದೆ.ಹೀಗಾಗಿ ಎಲ್ಲರಲ್ಲೂ ಅಡಗಿರುವ ಶಕ್ತಿ ಒಂದೇ ಆದರೂ ಅವರವರ ಪರಿಸ್ಥಿತಿ ಒಂದೇ ಇರದು. ಒಗ್ಗಟ್ಟು ತತ್ವಜ್ಞಾನ ದಿಂದ ಬೆಳೆಸಬಹುದು.ತಂತ್ರದಲ್ಲಿ ಕಷ್ಟ.
ಸಾಧ್ಯವಾದವರು ಮನೆಯೊಳಗಿದ್ದು ಸ್ವತಂತ್ರ ಜ್ಞಾನ ಪಡೆದರೆ ಆಗದವರು ಹೊರಗೆ ಬಂದು ಸ್ವತಂತ್ರ ಜೀವನನಡೆಸುವರು.
ಹೊರಗಿನ ಸ್ವಾತಂತ್ರ್ಯ ತಾತ್ಕಾಲಿಕ ತೃಪ್ತಿ ನೀಡಿದರೆ ಒಳಗಿನ ಸ್ವಾತಂತ್ರ್ಯ ಶಾಶ್ವತ ತೃಪ್ತಿಯ ಕಡೆಗೆ ನಡೆಸುವುದು.ಇದಕ್ಕೆ ದ್ಯಾನದಿಂದ ಮುಕ್ತಿ ಎಂದರು.

ಒಂದೊಂದು ಯುಗದ ದೃಷ್ಟಿ ಬೇರೆಯಾಗಿದ್ದರೂ ಧರ್ಮ ಒಂದೇ .ಜೀವನದ ಗುರಿ ಒಂದೇ ಅದೇ ಜೀವಾತ್ಮನ ಮುಕ್ತಿ.
ಮೇಲಿರುವ ಅಸಂಖ್ಯಾತ ನಕ್ಷತ್ರಗಳಂತೆ ಸೂರ್ಯ ನೂ ಒಂದು  ನಕ್ಷತ್ರ.ಆದರೆ ಅವನಿಲ್ಲದೆ ಭೂಮಿಯಲ್ಲಿ ಮನುಕುಲ ಬದುಕೋದೆ ಕಷ್ಟ.ಹಾಗಾದರೆ ನಮ್ಮ ಜೀವ ಇರೋದು ಎಲ್ಲಿ?
ಜೀವನದ ಗುರಿ ಯಾವುದು?

ಅಂತರಕ್ಕೆ ಅಜ್ಞಾನವೇ‌ ಕಾರಣ

ಎಷ್ಟು ಅಂತರವಿದೆ‌ನೋಡಿ. ಒಬ್ಬ ರೈತನಿಗೂ ಒಬ್ಬ ವೈಧ್ಯನ ಸೇವೆಗೂ ದೃಷ್ಟಿಯಲ್ಲಿ ಅಂತರವಿದೆ. ರೈತನೂ ವರ್ಣದ ಪ್ರಕಾರ ಶೂದ್ರನೆ ವೈಧ್ಯನೂ ಶೂದ್ರನೆ ಇಲ್ಲಿ ಶೂದ್ರನೆಂದರೆ ಸೇವೆ ಮಾಡುವವರಾಗಿದ್ದಾರೆ. ಪರಮಾತ್ಮನ ಸೇವೆಗೆ ಯಾವುದೇ ಬೇಧವಿಲ್ಲ.ಮಾನವನ ದೃಷ್ಟಿ ಯಲ್ಲಿ‌ಬೇಧವಿದೆ.ಹೀಗಾಗಿ ಭೂ ಸೇವಕರಿಗೆ ಬೆಲೆಯಿಲ್ಲವಾಗಿದೆ. ಒಬ್ಬ ರೈತನ ದುಡಿಮೆಯಿಂದ ಸಾಕಷ್ಟು ಜೀವ ಉಳಿಸಬಹುದು ಹಾಗೆ ಜೀವಕ್ಕೆ ರೋಗ ಬಂದಾಗ ಉಳಿಸುವ ವೈಧ್ಯನೂ  ನಾರಾಯಣನ ರೂಪದವರೆ. ರೈತನ ದುಡಿಮೆಯಲ್ಲಿ ಲೋಪಧೋಷಗಳಾದರೆ ರೋಗ ಬರೋದು.
ರೈತನಿಗೆ ಸಿಗದ ಗೌರವ ವೈಧ್ಯರಿಗೆ ಸಿಕ್ಕರೆ ಓದಿ ವೈಧ್ಯರಾಗೋರೆ ಹೆಚ್ಚು. 
ರೋಗ ಬರೋದಕ್ಕೆ  ಮುಂಚೆಯೇ ಆರೋಗ್ಯದ ಕಡೆಗೆ ಗಮನವಿಡಲು ಯೋಗಿಯಾಗಬೇಕು. ರೈತರನ್ನು ಯೋಗಿ ಎಂದು  ಕರೆಯುವರೆಂದರೆ‌ವಾಸ್ತವದಲ್ಲಿ ರೈತರ ಸ್ಥಿತಿಗೆ ಕಾರಣವೇನು? ಜನ್ಮ ಪಡೆದಾಗಲೇ ಭೂತಾಯಿಯ ಸೇವೆಗೆ ಅರ್ಹತೆ ಪಡೆದವರಿಗೆ ನಮ್ಮಲ್ಲಿ  ಬೆಲೆ ಕೊಟ್ಟು ಸಾಲದ ಹೊರೆ ಹಾಕಿದರೆಬನ ಸಾಲ ತೀರಿಸಲು ಭೂಮಿ ಮಾರಿ ಹೋಗೋದು  ಸಹಜ. ಕೆಲವರಷ್ಟೆ ಸೇವಕರಾಗಿದ್ದಾರೆ ಹಲವರು ಸರ್ಕಾರದ ಹಿಂದೆ ಹೋಗಿ ಸಾಲದ ಸುಳಿಯಲ್ಲಿರುವರು. ಹೊರಗೆ ಕಾಣುವ ಸೇವೆಗೂ ಒಳಗಿನ ಸೇವೆಗೂ  ಅಂತರವಿದ್ದಂತೆ ರೈತನ ಸೇವೆಗೂ ವೈಧ್ಯನ ಸೇವೆಗೂ ಅಂತರಬೆಳೆದಿದೆ.ಯೋಗಿಗಳ ದೇಶವನ್ನು ರೋಗಿಗಳ ದೇಶವಾಗಿಸಿರೋದು ಅಧರ್ಮ ಅಜ್ಞಾನ. ಕಲಿಗಾಲದ ಕಲಿಕೆಯ ಪ್ರಭಾವ  ಕಲಿಕೆ ಶುದ್ದವಾದರೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ರೈತ  ಕರ್ಮ ಯೋಗಿಯಾದರೆ  ಜೀವನ ಸಾರ್ಥಕ. ವೈದ್ಯನೂ ಯೋಗ್ಯ ಚಿಕಿತ್ಸೆ ನೀಡಿದರೆ  ಜೀವ ಉಳಿಸಬಹುದು. ಆದರೆ ಇಲ್ಲಿ  ವ್ಯವಹಾರಕ್ಕಿಂತ ಧರ್ಮ ವೇ ಮುಖ್ಯವಾಗಿದೆ. ಹಣದಿಂದ ಧರ್ಮ ಉಳಿಯದು  ಸತ್ಯಜ್ಞಾನದಿಂದ ಉಳಿಯುವುದು.
ಭೂ ತಾಯಿ ಸೇವೆ ಮಾಡೋದರಿಂದ ಭೂಮಿಯ ಋಣ ತೀರುತ್ತದೆ.ಸೇವೆ ನಿಸ್ವಾರ್ಥ ನಿರಹಂಕಾರ ದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದೆ ಇರಬೇಕೆಂದರೆ ಈಗ ಸಾಧ್ಯವೆ?
ಹಣಕ್ಕಾಗಿ ಭೂಮಿ ಮಾರೋದು  ಹಣಕ್ಕಾಗಿ ಹೆಣವನ್ನು ಮಾರೋದು  ಕಲಿಗಾಲವೆನ್ನಬಹುದು.