ಅನುಮಾನಂ ಪೆದ್ದರೋಗಂ ಎನ್ನುವುದು ಸತ್ಯ. ಮಾನವನಿಗೆ ಅನುಮಾನವೇ ದೊಡ್ಡ ಶತ್ರು ಎಂದರೆ ತಪ್ಪಲ್ಲ.
ಬೇರೆಯವರ ಮೇಲೆ ಅನುಮಾನಪಟ್ಟಂತೆ ನಮ್ಮ ಮೇಲೇ ಅನುಮಾನ ಹೆಚ್ಚಾಗುವುದು ಸತ್ಯ. ಇಲ್ಲಿ ಯಾವುದೇ ಕೆಲಸ ಯಾರ ಸಹಕಾರ ಸಹಾಯವಿಲ್ಲದೆ ನಡೆಯದು ನಡೆಯುತ್ತಿಲ್ಲ ನಡೆದಿಲ್ಲ.ಹಿಂದಿನ ಪುರಾಣ ಇತಿಹಾಸ ಕೆದಕಿದರೂ ಸಂಪೂರ್ಣ ಸ್ವತಂತ್ರ ಜೀವನ ನಡೆಸಿ ಹೋದವರಿಲ್ಲ.ಭೂಮಿಯ ಮೇಲೇ ಅನುಮಾನ ಪಟ್ಟ ಪೆದ್ದರಿದ್ದರೆಂದರೆ ಆಸರೆಯಾಗಿ ನಿಂತವರನ್ನೇ ಅವಮಾನ ಅನುಮಾನದಿಂದ ಕಾಣುವಮನಸ್ಸಿನ ಸ್ಥಿತಿ ಹೇಗಿರಬಹುದು?
ಹಾಗೆ ಇಂದಿಗೂ ಈ ಪೆದ್ದರ ಸಂಖ್ಯೆ ಬೆಳೆಯುತ್ತಾ ತನ್ನ ಜೀವನಕ್ಕೆ ತಾನೇ ಮೋಸಮಾಡಿಕೊಂಡವರಿದ್ದಾರೆ. ಇದಕ್ಕೆ ಕಾರಣವೇ ಹೊರಗಿನವರ ಮಧ್ಯಸ್ಥಿಕೆ ಯಾಗಬಹುದು.ಒಳಗಿನವರ ಷಡ್ಯಂತ್ರವಾಗಿರಬಹುದು.ಎಲ್ಲಾ ಸತ್ಯವಾಗಿರದು.ಹಾಗಂತ ಎಲ್ಲಾ ಅಸತ್ಯವೂ ಇರದು. ಇವೆರಡರ ನಡುವಿರುವ ಮಾನವನಿಗೆ ಮಾನವೇ ಮುಖ್ಯವಾದಾಗ ಕೆಲವು ಅನುಮಾನದ ಹುಳಗಳು ಬೆಳೆಯುತ್ತದೆ. ಇಂದಿನ ಪರಿಸ್ಥಿತಿ ನೋಡಿದಾಗ ಮಾನ ಮರ್ಯಾದೆ ಸಿಗೋದು ಹಣ ಅಧಿಕಾರ ಸ್ಥಾನವಿದ್ದಾಗ ಮಾತ್ರ.ಹೀಗಾಗಿ ಹಣಕ್ಕಾಗಿ ಮಾನ ಮರ್ಯಾದೆ ಬಿಟ್ಟು ಹೋದವರಿದ್ದಾರೆ. ಈ ಮಾರ್ಗದಲ್ಲಿ ಕೆಲವರು ಸತ್ಯಜ್ಞಾನದೆಡೆಗೆ ನಡೆದು ಅಸತ್ಯವನ್ನು ಅವಮಾನ ಮಾಡಿದ್ದರೆ ಹಲವರು ಅಸತ್ಯದೆಡೆಗೆ ನಡೆಯುತ್ತಾ ಸತ್ಯಕ್ಕೆ ಅವಮಾನ ಮಾಡಿದ್ದಾರೆ. ಹಾಗಾದರೆ ನಮ್ಮ ಅನುಮಾನಕ್ಕೆ ಕಾರಣ ಸತ್ಯವೋ ಅಸತ್ಯವೋ ಎನ್ನುವುದಾಗಿದೆ.
ಯಾರೋ ದೊಡ್ಡ ವ್ಯಕ್ತಿ ಅಸತ್ಯ ನುಡಿದರೆ ಅನುಮಾನಪಡದೆ ಒಪ್ಪುವ ಮನಸ್ಸಿಗೆ ನಿಜವಾದ ಸತ್ಯ ನುಡಿದವರನ್ನು ಅವಮಾನ ಮಾಡಿಯಾದರೂ ಗೆಲ್ಲುವ ಹಠವಿರುತ್ತದೆ.ಅದೇ ಸತ್ಯ ತಿಳಿದವರ ಮನಸ್ಸಿಗೆ ಅಸತ್ಯವನ್ನು ಅಲ್ಲಗೆಳೆಯುವ ಹಠ ಇರದು.ಕಾರಣ ಇರೋದು ಒಂದೇ ಸತ್ಯ.ಅದಕ್ಕೆ ಎಷ್ಟು ಅವಮಾನ ಅಪಚಾರ ಅನ್ಯಾಯ ಮಾಡಿದರೂ ಸ್ಥಿರವಾಗಿ ನಿಂತು ತನ್ನ ಸ್ಥಾನವನ್ನು ಬಿಡೋದಿಲ್ಲ.ಇದರ ನಷ್ಟ ಅವಮಾನ ಮಾಡಿದ ವ್ಯಕ್ತಿಯೇ ಅನುಭವಿಸಬೇಕೆಂಬುದು ಅಧ್ಯಾತ್ಮ ಸತ್ಯ.
ಹೀಗಾಗಿ ಭೌತಿಕದಲ್ಲಿ ವ್ಯಕ್ತಿ ವ್ಯಕ್ತಿಗೆ ಮಾಡುವ ಅವಮಾನ, ಅಪಚಾರ, ಅನುಮಾನಗಳಿಂದ ಅವನೊಳಗಿರುವ ಶಕ್ತಿ ಹಿಂದುಳಿಯುತ್ತದೆ. ಇದರಿಂದಾಗಿ ಆಗುವನಷ್ಟ ಕಷ್ಟ ಜೀವಾತ್ಮ ಅನುಭವಿಸುವುದನ್ನು ಈವರೆಗೆ ಯಾರೂ ತಡೆದಿಲ್ಲ
ಇವೆಲ್ಲದರ ಹಿಂದೆ ಅಜ್ಞಾನವಿರುತ್ತದೆ ರಾಜಕೀಯ ಸ್ವಾರ್ಥ ಅಹಂಕಾರ ಮನೆ ಮಾಡಿರುತ್ತದೆ. ಇದು ಮನೆಒಳಗೂ ಹೊರಗೂ ಇದ್ದೇ ಇರುತ್ತದೆ. ಹೊರಗಿನ ಅವಮಾನದಿಂದ ಮನೆಯೊಳಗೆ ಕುಳಿತು ಚಿಂತನೆ ನಡೆಸಬಹುದು.ಆದರೆ ಮನೆಯೊಳಗಿನ ಅನುಮಾನ ಅವಮಾನದಿಂದ ಮನೆಯ ಹೊರಗೆ ಬಂದವರೆ ಇಂದು ಹೆಚ್ಚಾಗಿರುವ ಕಾರಣ ಸಮಾಜವೇ ಅನುಮಾನದ ಹುತ್ತವಾಗಿದ್ದು ಒಳಗಿರುವ ವಿಷಸರ್ಪ,ಗಳು ಎಲ್ಲೆಂದರಲ್ಲಿ ಹರಿದಾಡುತ್ತಾ ನಿಜವಾದ ಸತ್ಯವನರಿಯದೆ ಕಚ್ಚುತ್ತಿದೆ. ಇದರಲ್ಲಿ ಧರ್ಮ ವಿದೆಯೆ? ಅಧರ್ಮ ವಿದೆಯೆ ಎನ್ನುವ ಚಿಂತನೆ ನಡೆಸಲು ಹೊರಗೆ ಸಾಧ್ಯವಾಗದೆ ಅಧರ್ಮ ವನ್ನು ಧರ್ಮ ವೆಂದು ವಾದ ಮಾಡುತ್ತಾ ಹಣ ಅಧಿಕಾರ ಸ್ಥಾನ ಪಡೆದರೆ ಜಗತ್ತು ಹೇಗಿರುತ್ತದೆ?
ಪುರಾಣಕಾಲದಿಂದಲೂ ಈ ಅನುಮಾನದ ಪಿಶಾಚಿ ದೊಡ್ಡವರನ್ನೂ ಬಿಡದೆ ಕಾಡಿದೆ. ಅದರಿಂದ ಸಾಕಷ್ಟು ಅಧರ್ಮ ಬೆಳೆದಿದೆ. ಅದರಲ್ಲೂ ಸ್ತ್ರೀ ಶಕ್ತಿಯ ಮೇಲೆ ಅನುಮಾನ ಪಟ್ಟು ಹಾಗೆ ಅವಳನ್ನು ಅವಮಾನಮಾಡಿದ ಪರಿಣಾಮ ಯುದ್ದವೇ ನಡೆದಿದೆ .ಕಾರಣ ಸ್ತ್ರೀ ಭೂಮಿಯ ಮಹಾಶಕ್ತಿ. ಅವಳ ಮೇಲೆ ನಿಂತು ಮಾಡುವ ಅವಮಾನಕ್ಕೆ ಯಾವುದೇ ಉತ್ತಮ ಫಲಸಿಗದು.ಹಾಗಾಗಿ ಸ್ತ್ರೀ ಯನ್ನು ದೇವಿಯೆಂದು ಗೌರವದಿಂದ ಕಂಡವರು ಈಗಲೂ ಮಹಾತ್ಮರೆ.ದೇವತೆಗಳಾದರೂ ಸ್ತ್ರೀ ಯನ್ನು ಅವಮಾನ ಅನುಮಾನದಿಂದ ಕಂಡಿರಬಹುದು ಆದರೆ ಮಹಾತ್ಮರು ಕಂಡಿಲ್ಲ.ಹೀಗಾಗಿ ದೇವರಿಗಿಂತ ದೊಡ್ಡವರು ಮಹಾತ್ಮರು.
ಮಹಾತ್ಮರುಗಳು ಅವರನ್ನು ಅವರು ಅರ್ಥ ಮಾಡಿಕೊಂಡು ಭೂಮಿಗೆ ಬಂದಿರುವಉದ್ದೇಶದೆಡೆಗೆ ಸ್ವತಂತ್ರ ವಾಗಿ ನಡೆಯುವರು. ಭೂಮಿಯನ್ನು ಆಳೋದಕ್ಕೆ ಧರ್ಮ ಸತ್ಯವೆ ಬಂಡವಾಳವಾದ್ದರಿಂದ ಧರ್ಮ ತತ್ವದಲ್ಲಿ ಅನುಮಾನವಿದ್ದರೆ ಅದರಿಂದ ಅಧರ್ಮ ಬೆಳೆಯುತ್ತದೆ. ಹಾಗೆ ಯಾವುದೇ ಧರ್ಮವನ್ನುಅವಮಾನ ಮಾಡಿದರೆ ಆಗುವ ದುರಂತಕ್ಕೆ ಮಾನವನೇ ಬಲಿಪಶು. ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಜೀವನ. ಎಷ್ಟೇ ದೊಡ್ಡ ಅವಮಾನವಾದರೂ ಸಹಿಸಿಕೊಂಡು ನಡೆಯೋ ಶಕ್ತಿ ಕೇವಲ ದೊಡ್ಡ ದೊಡ್ಡ ವ್ಯಕ್ತಿಗಿರುವುದು.ಹಾಗೆ ಜ್ಞಾನಿಗಳಿಗಿರುವುದು. ಅರ್ಧ ಸತ್ಯದಲ್ಲಿರುವವರಿಗೆ ಯಾವಾಗಲೂ ಅನುಮಾನವೇ ಅವಮಾನವೇ ಆಗುತ್ತದೆ.
ಇದರಿಂದಾಗಿ ಮಧ್ಯವರ್ತಿ ಮಾನವನ ಸ್ವಭಾವವಾಗಿರುವ ಈ ಅನುಮಾನವನ್ನು ಪೆದ್ದರೋಗ ಎಂದರು. ಬುದ್ದಿಶಕ್ತಿ ಬೆಳೆದರೂ ಜ್ಞಾನಶಕ್ತಿ ಬೆಳೆಯದಿದ್ದರೆ ಉಪಯೋಗವಿಲ್ಲ.
ಜ್ಞಾನ ಒಳಗಿರುವ ಆತ್ಮವಿಶ್ವಾಸ ಬೆಳೆಸಿದರೆ ಬುದ್ದಿ ಹೊರಗಿನ ಅಹಂಕಾರ ಬೆಳೆಸುತ್ತದೆ.
ನಾನು ಮಾತ್ರ ಸರಿ ಎನ್ನುವ ಬದಲಾಗಿ ನನ್ನಲ್ಲಿ ತಪ್ಪು ಎಷ್ಟಿದೆ ಎನ್ನುವ ಬಗ್ಗೆ ಆತ್ಮಾವಲೋಕನ ನಡೆಸಿಕೊಂಡಾಗಲೇ ಈ ಪೆದ್ದ ಅನುಮಾನ ಕಡಿಮೆಯಾಗಿ ಮುಂದೆ ಆಗುವ ಅವಮಾನದಿಂದ ಬಿಡುಗಡೆ ಪಡೆಯಬಹುದು.ನಾವು ಯಾರನ್ನಾದರೂ ಅನುಮಾನಿಸುವಾಗ ನಮ್ಮೊಳಗೇ ಸಾಕಷ್ಟು ನಕಾರಾತ್ಮಕ ಶಕ್ತಿ ಜನ್ಮಪಡೆದಿರುವುದರಿಂದ ಅದೇ ಮುಂದೆ ಬೆಳೆದು ನಿಂತಾಗ ಅವಮಾನವಾಗುತ್ತದೆ.ಒಟ್ಟಿನಲ್ಲಿ ಈ ಗುಣ ಮಾನವನಿಗೆ ವರವೋ ಶಾಪವೋ ಎನ್ನುವುದು ಮುಖ್ಯ.
ಅಸುರರವಿಚಾರದಲ್ಲಿ ಅನುಮಾನ ಸಹಜ ಸುರರ ವಿಚಾರದಲ್ಲಿ ಅಸುರರಿಗೆ ಅನುಮಾನವಿದ್ದರೆ ಸುರರಿಗೆ ಅಸುರರಲ್ಲಿ ಅನುಮಾನ.ಇವರಿಬ್ಬರ ಮದ್ಯೆ ನಿಂತು ನೋಡುವ ಸಾಮಾನ್ಯರ ಜೀವನದಲ್ಲಿ ಸಾಕಷ್ಟು ಅವಮಾನವಾಗಿರುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು? ಯಾರು? ಎಂದರೆ ನಾವು ಯಾರೋ ಹೊರಗಿನವರ ಮಾತು ಕೇಳಿ ಒಳಗಿರುವ ಆತ್ಮಜ್ಞಾನದಿಂದ ದೂರವಿರೋದು.ಆತ್ಮಜ್ಞಾನದ ನಂತರವೇ ಈ ಅನುಮಾನ ಅವಮಾನಕ್ಕೆ ಮುಕ್ತಿ ಸಿಗೋದು. ಎಲ್ಲಾ ಆ ಪರಮಾತ್ಮನಿಗೆ ತಲುಪುವಾಗ ನನಗೆ ಮಾಡುವ ಅವಮಾನ ಅವಮಾನ ಸನ್ಮಾನಗಳು ಅವನಪ್ರೇರಣೆಯಷ್ಟೆ ಎನ್ನುವ ಮನಸ್ಥಿತಿಗೆ ಬಂದ ಮಹಾತ್ಮರುಗಳು ಎಷ್ಟೇ ಮಾನಾಪಮಾನಗಳಿಗೆ ಅಂಜದೆ ಮುಂದೆ ನಡೆದಿದ್ದರೆಂದರೆ ಇದಕ್ಕೆ ಕಾರಣವೇ ಸತ್ಯಜ್ಞಾನ. ಸತ್ಯವಿಲ್ಲದ ಅಜ್ಞಾನವೇ ಈ ಅನುಮಾನವೆಂಬ ಪೆದ್ದ ರೋಗಕ್ಕೆ ಕಾರಣ. ಸತ್ಯ ಎಲ್ಲಿದೆ ಎಂದರೆ ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.
ಸರ್ಕಾರದ ವಿಚಾರದಲ್ಲಿ ಅನುಮಾನವಿದ್ದರೆ ನಮ್ಮ ಸಹಕಾರ ಸರಿಯಿಲ್ಲವೆಂದರ್ಥ. ಪ್ರಜಾಪ್ರಭುತ್ವ ದೇಶವನ್ನು ಇಂದು ಅನುಮಾನದ ಹುತ್ತ ಮಾಡಿಕೊಂಡು ಸರ್ಪಗಳನ್ನು ಹೊರಗೆಳೆದು ಜನರನ್ನು ಆಳುತ್ತಿರುವುದು ದುರಂತಕ್ಕೆ ಕಾರಣ.
ಎಷ್ಟು ವರ್ಷ ಹೀಗೇ ದ್ವೇಷ ಬೆಳೆಸಿಕೊಂಡು ಬದುಕಬಹುದು?
ಪ್ರೀತಿವಿಶ್ವಾಸ ಕರುಣೆ ಕ್ಷಮೆ ಸಹನೆಯ ಗಣಿಯಾಗಿದ್ದ ಭಾರತ ಇಂದು ಯಾವಸ್ಥಿತಿಗೆ ಬಂದಿದೆ ಎಂದರೆ ತಮ್ಮ ಮಕ್ಕಳನ್ನು ತಾವೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಅಂದರೆ ನಮ್ಮದೇ ಜೀವವನ್ನು ನಾವೇ ಅನುಮಾನಿಸುವಂತಾಗಿರೋದು ಆತ್ಮಜ್ಞಾನದ ಸಂಕೇತವಲ್ಲ.
ನಿಜ ಇದರ ಮೂಲವೇ ನಮ್ಮ ಜ್ಞಾನದ ಶಿಕ್ಷಣ ಮಕ್ಕಳಿಗೆ ಕೊಡದಿರೋದು. ಇದರಿಂದಾಗಿ ಮನಸ್ಸಿನ ಚಿಂತನೆ ಬೇರೆ ಬೇರೆಯಾಗುತ್ತಾ ಒಬ್ಬರ ಮಾತನ್ನು ಇನ್ನೊಬ್ಬರು ಕೇಳದಪರಿಸ್ಥಿತಿಯಲ್ಲಿ ನಮಗೆ ನಾವೇ ಮೋಸಹೋಗುವುದು ಸಹಜ. ಇಲ್ಲಿ ಇದಕ್ಕೆ ಕಾರಣ ಹೊರಗಿನವರ ಅತಿಯಾದ ಸಹಾಯ ಸಹಕಾರವಾಗಬಹುದು. ಯಾರೇ ಸಹಾಯ ಮಾಡಿದರೂ ಅದರಲ್ಲಿ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿರಲಾರರು ಇದು ಕಲಿಕೆಯ ಪ್ರಭಾವ. ಅಧ್ಯಾತ್ಮ ದಿಂದಮಾತ್ರ ಈ ಪೆದ್ದುತನದಿಂದ ಬಿಡುಗಡೆ ಸಾಧ್ಯವೆನ್ನುವುದು ಸನಾತನ ಧರ್ಮ. ಆದರೆ ಧರ್ಮದ ಮೂಲವರಿಯದೆ ರೆಂಬೆಕೊಂಬೆಗಳನ್ನು ಹಿಡಿದು ತಮ್ಮವರನ್ನೇ ಅನುಮಾನಿಸಿ ಅವಮಾನಗೊಳಿಸಿದರೆ ಹೊರಗಿನವರು ಸನ್ಮಾನ ಮಾಡುವರೆಂದರೆ ಏನರ್ಥ? ಇದು ಬುದ್ದಿವಂತಿಕೆಯೋ ದಡ್ಡತನವೋ?
ಇದು ಧಾರ್ಮಿಕ ವರ್ಗದವರು ಚರ್ಚೆ ಮಾಡುವ ವಿಚಾರ.
ಈಗಾಗಲೇ ಸಾಕಷ್ಟು ವಿಷಸರ್ಪದ ಹುತ್ತಗಳು ಬೆಳೆದಿವೆ. ಅದರೊಳಗೆ ಕೈಹಾಕಿಕೊಂಡು ಕಚ್ಚಿಸಿಕೊಂಡರೂ ಬುದ್ದಿ ಬರದೆ ಇರೋರ ಹಿಂದೆ ಇನ್ನಷ್ಟು ಜನರು ನಡೆದಿರುವರು.
ಹಿಂದೆ ನಡೆಯುವುದು ತಪ್ಪಲ್ಲ ಯಾರ ಹಿಂದೆ ನಡೆದಿದ್ದೇವೆ ಎನ್ನುವ ಬಗ್ಗೆ ಅರಿವಿಲ್ಲದಿರೋದು ತಪ್ಪಾಗಿದೆ.ಒಟ್ಟಿನಲ್ಲಿ ಹಣವಿದೆ ಅಧಿಕಾರವಿದೆ ಸ್ಥಾನವಿದೆ ಎಂದು ನಡೆದವರಿಗೆ ಸನ್ಮಾನ ಮಾಡುವವರಿದ್ದಾರೆ. ಸನ್ಮಾನ ಮಾಡುವವರ ಉದ್ದೇಶ ಏನಾಗಿದೆ ಎನ್ನುವ ಬಗ್ಗೆ ಅನುಮಾನವಿದ್ದರೆ ಉತ್ತಮ.ಕಾರಣ ಸನ್ಮಾನಕ್ಕೆ ಯೋಗ್ಯತೆಯಿಲ್ಲದವರನ್ನೂ ಬೆಳೆಸುತ್ತಿರುವವರ ಸಂಖ್ಯೆ ಮಿತಿಮೀರಿದೆ. ಇದರಿಂದಾಗಿ ದೇಶಕ್ಕೆ ಅವಮಾನವಾಗುತ್ತಿದೆ ಎಂದಾಗ ನಾವಿರೋದು ದೇಶದೊಳಗೆ ಅಂದರೆ ನಮಗೂ ಅವಮಾನವಲ್ಲವೆ? ದೇಶ ಬೇರೆ ನಾನೇ ಬೇರೆ ಎನ್ನುವ ರಾಜಕೀಯದಲ್ಲಿ ಸತ್ಯವಿದೆಯೆ? ಧರ್ಮ ಎಲ್ಲಿದೆ?
ಮಾನವಕಾರಣಮಾತ್ರನೆಂದರೆ ಅವಮಾನವಾಗಬಹುದು. ಆದರೆ ಇದೇ ಸತ್ಯ. ನಮ್ಮೊಳಗೇ ಇರುವ ಈ ಅಪಾರ್ಥ ಮನೋಭಾವನೆಯೇ ಎಲ್ಲಾ ಅನುಮಾನ ಅವಮಾನಗಳ ಮೂಲವಾಗಿದೆ. ಸರಿಯಾಗಿ ಅರ್ಥ ಮಾಡಿಕೊಳ್ಳಲು ಬೇಕಿದೆ ಆತ್ಮಜ್ಞಾನ. ಇದು ಹೊರಗಿನಿಂದ ಕಲಿಸುವಾಗ ಗುರುಹಿರಿಯರು ಎಚ್ಚರವಾಗಿರಬೇಕು. ಒಳಗಿನಿಂದಲೇ ಕಲಿತರೆಉತ್ತಮ. ಆದರೆ ಕಷ್ಟವಿದೆ. ಒಳಗಿನವರೆ ಅನುಮಾನ ಪಟ್ಟರೆ ಸತ್ಯ ತಿಳಿಯದೆ ಧರ್ಮ ಉಳಿಯದು. ಎಲ್ಲಾ ಮಾಯೆ.
ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು.
ಎಷ್ಟೋ ಜ್ಞಾನಿಗಳು ಆ ಮೇಲಿನಪರಮಾತ್ಮನ ಒಲಿಸಿಕೊಳ್ಳಲು ಅವಮಾನ ಅನುಮಾನಕ್ಕೆ ಬೆಲೆಕೊಡದೆ ಹೋದರು. ಹಾಗೆ ಎಷ್ಟೋ ಅಸುರರು ಅವಮಾನ ಅನುಮಾನಕ್ಕೆ ಹೆದರಿಕೊಂಡು ಸತ್ಯದಿಂದ ದೂರವಾದರು. ಹೀಗಾಗಿ ಭೂಮಿಯಲ್ಲಿ ಮನುಕುಲವಿದೆ ಅವನೊಳಗೇ ಅನುಮಾನ ಅವಮಾನಗಳ ಗಣಿಯಿದೆ. ಆ ಗಣಿಯಿಂದ ದ್ವೇಷ ಅಸೂಯೆ ಬೆಳೆದಿದೆ. ಇದರಿಂದಾಗಿ ಯಾರಿಗೆ ಲಾಭ ನಷ್ಟವಾಗುತ್ತಿದೆ? ಮಾನವ ತನಗೆ ತಾನೇ ಶತ್ರುವಾಗಿರುವ ಸತ್ಯ ತಿಳಿದಾಗಲೇ ಪೆದ್ದತನದಿಂದ ದೂರವಾಗೋದಂತೆ.
ಒಳಗಿರುವಪೆದ್ದರಿಗೆ ಹೊರಗಿನಬುದ್ದಿವಂತರು ಆಳುತ್ತಿರುವರು.ಆಳೋರೂ ಒಂದು ರೀತಿಯಲ್ಲಿ ಆಳುಗಳೇ ಆಗಿರೋದು ಸತ್ಯವಾಗಿದೆ.
ಯಾರನ್ನು ಯಾರು ಹೇಗೆ ಆಳಬೇಕೆಂಬ ಅರಿವಿದ್ದರೆ ಸಾಕು.
ಭೂಮಿಯನ್ನು ಆಳೋಮೊದಲು ಭೂಮಿಗೆ ಬಂದ ಉದ್ದೇಶ ತಿಳಿಯೋದೇ ಬುದ್ದಿವಂತರ ಲಕ್ಷಣ. ಅವಳ ಸಾಲ ತೀರಿಸದೆ ಆಳೋದೇ ದಡ್ಡರ ಲಕ್ಷಣ. ನಾವೆಲ್ಲರೂ ಒಂದು ರೀತಿಯಲ್ಲಿ ದಡ್ಡರೆ.ಕಾರಣ ದಡ್ಡರ ಹಿಂದೆ ನಡೆದವರೂ ದಡ್ಡರಲ್ಲವೆ ?
ಇದರಲ್ಲಿ ಯಾರಿಗಾದರೂ ಅವಮಾನವಾಗಿದ್ದರೆ ಅಥವಾ ಅನುಮಾನವಿದ್ದರೆ ತಿಳಿಸಿ.ಇದೊಂದು ದೇಶದ ಮಾನಮರ್ಯಾದೆಯ ವಿಚಾರವಾಗಿದೆ. ದೇಶದ ಸಾಮಾನ್ಯ ಪ್ರಜೆಯಾಗಿ ಚಿಂತನೆ ನಡೆಸಿದರೆ ಎಲ್ಲಾ ಸತ್ಯ ಅರ್ಥ ವಾಗುತ್ತದೆ. ಇದೇ ನಮಗೆ ಕಷ್ಟವಾಗುತ್ತಿದೆ.ಯಾರೋ ಹೊರಗಿನವರು ಮಾಡುವ ವಾದ ವಿವಾದನೋಡಿಕೊಂಡು ಕೇಳಿಕೊಂಡು ಕಾಲಕಳೆದರೆ ನಮ್ಮೊಳಗೇ ಅಡಗಿರುವ ಅನುಮಾನ ಪರಿಹಾರವಾಗುವಂತಿದ್ದರೆ ಇಷ್ಟು ಅಧರ್ಮ ಬೆಳೆಯುತ್ತಿರಲಿಲ್ಲ. ಒಟ್ಟಿನಲ್ಲಿ ಮಂತ್ರ ತಂತ್ರ ಯಂತ್ರದಿಂದ ಅನುಮಾನಕ್ಕೆ ಪರಿಹಾರ ಸಿಗಬೇಕಾದರೆ ನಮ್ಮ ಸ್ವತಂತ್ರ ಜ್ಞಾನ ಸದ್ಬಳಕೆ ಆಗಬೇಕಿತ್ತು. ಯಾರದ್ದೋ ವಿಜ್ಞಾನ ಬಳಸಿ ಸಾಮಾನ್ಯ ಜ್ಞಾನ ಬಿಟ್ಟು ಮುಂದೆ ನಡೆದಾಗಲೇ ನಮ್ಮಲ್ಲಿ ಅನುಮಾನದ ರೋಗ ಹೆಚ್ಚುವುದು. ಇದೀಗ ಕಣ್ಣಿಗೆ ಕಾಣುವಷ್ಟು ಬೆಳೆದಿದೆಯಷ್ಟೆ. ನಾವು ಭೂಮಿಯಲ್ಲಿ ಬದುಕಿರೋದೇ ಅನುಮಾನವಾಗುತ್ತಿದೆ .ಎಲ್ಲರೂ ಆಧಾರ್ ಕಾರ್ಡ ಹಿಡಿದು ತೋರಿಸುವಂತಾಗಿದೆ ಎಂದರೆ ಆತ್ಮನಿರ್ಭರ ಭಾರತವೆ? ದುರ್ಭಲತೆಯ ಲಕ್ಷಣವೆ?
ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ನೇ ತಿಳಿಸಿದಂತೆ ಇಲ್ಲಿ ಯಾರೂ ಸಾಯೋದಿಲ್ಲ ಬದುಕಿಯೂ ಇಲ್ಲವೆನ್ನಬಹುದು. ದೇಹದೊಳಗೆ ಜೀವಾತ್ಮನಿರೋವಾಗಲೇ ಸತ್ಯದರ್ಶನ ವಾದರೆ ಮುಕ್ತಿ. ಇದನ್ನು ಮಹಾತ್ಮರು ತಿಳಿಸಿರೋದನ್ನೂ ಅನುಮಾನದಿಂದ ಕೇಳಿದರೆ ಅನರ್ಥ ವಾಗುತ್ತದೆ. ಶರಣರು ದಾಸರು ಸಂತ ಮಹಾತ್ಮರುಗಳಿಗೆ ಪರಮಾತ್ಮನ ಮೇಲೆ ಅನುಮಾನ ವಿರಲಿಲ್ಲ.ಹಾಗೆ ಪರಾಶಕ್ತಿಯ ಮೇಲೂ ಅನುಮಾನ ವಿರದೆ ನಡೆದಿದ್ದರು. ಈಗಿನ ಅಂತರಗಳೇ ಅವಾಂತರ ಕ್ಕೆ ದಾರಿಮಾಡಿಕೊಟ್ಟು ಮಧ್ಯವರ್ತಿಗಳು ಇನ್ನಷ್ಟು ಅನುಮಾನ ಅವಮಾನವನ್ನು ಸುದ್ದಿಮಾಡಿಕೊಂಡಿದ್ದರೆ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುವುದು ಸತ್ಯ. ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಇದೆ ಅನುಮಾನವೇ ಬೇಡ.
ನಾಟಕವಾಡೋರನ್ನು ಅನುಮಾನ ಪಡದೆ ಬೆಳೆಸುವರು.
ಅದೇ ಸತ್ಯ ಹೇಳುವವರನ್ನು ಅವಮಾನಮಾಡಿ ಹಿಂದೆ ತಳ್ಳುವರೆಂದರೆ ಸತ್ಯಕ್ಕೆ ಅವಮಾನವಾದಷ್ಟೂ ಕಠೋರವಾಗಿಮುಂದೆ ನಿಲ್ಲುತ್ತದೆ.ಸತ್ಯವೇ ದೇವರಲ್ಲವೆ?
ಕಣ್ಣಿಗೆ ಕಾಣದ ದೇವರನ್ನು ಅವಮಾನಮಾಡಿದರೆ ನಷ್ಟ ಯಾರಿಗೆ?
ದೇವರನ್ನು ಆವಾಹನೆ ಮಾಡಿ ಹೊರಗಿನಿಂದ ಬೆಳೆಸೋದಕ್ಕೂ ದೇವರೇ ಮಾನವನೊಳಗೇ ಪ್ರವೇಶಿಸಿ ನಡೆಯುವುದಕ್ಕೂ ವ್ಯತ್ಯಾಸವಿದೆ. ಒಂದು ಮಾನವನ ಇಚ್ಚೆ
ಇನ್ನೊಂದು ಪರಮಾತ್ಮನ ಇಚ್ಚೆ. ಒಂದು ಎಲ್ಲರಿಗೂ ಕಾಣಿಸುತ್ತದೆ.ಇನ್ನೊಂದು ಯಾರಿಗೂ ಕಾಣೋದಿಲ್ಲ. ಒಂದು ದ್ವೈತ ಇನ್ನೊಂದು ಅದ್ವೈತ.