ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, August 30, 2022

ಗೌರಿ ಮತ್ತು ವರಸಿದ್ದಿವಿನಾಯಕ ವ್ರತ ಮಹಿಮೆ

ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು. ಗಣಪತಿಯ ತಾಯಿ,ಗೌರೀ ಮಾತೆ .ಗೌರ ವರ್ಣದವಳಾದ ಗೌರಿ ದೇವಿ.ಬಿಳಿ ಬಣ್ಣ ಶುಭ್ರತೆಯ,ಸ್ವಚ್ಚತೆಯ ಸಂಕೇತ. ಏನನ್ನು ಸ್ವಚ್ಚ ಮಾಡಿಕೊಳ್ಳಬೇಕೆಂದರೆ ಮನಸ್ಸನ್ನು ಸ್ವಚ್ಚಮಾಡಿಕೊಂಡು ಶುಭ್ರವಾಗಿದ್ದು ಗೌರಿಯನ್ನು ಪೂಜಿಸಿ ಮುಕ್ತಿಪಡೆಯುವುದು. ಸ್ತ್ರೀ ಶಕ್ತಿಯ ಜ್ಞಾನ ಅಪಾರವಾದದ್ದು.
ಜ್ಞಾನದೇವತೆಯನ್ನು ಮರೆತು ಮುಂದೆ ನಡೆದಷ್ಟೂ ಸ್ತ್ರೀ ಗೆ
ಸಮಸ್ಯೆಗಳೇ ಹೆಚ್ಚುತ್ತದೆ. ಭೂಮಿಯ ಪವಿತ್ರತೆ,ಸಾತ್ವಿಕತೆ ಇರೋದು ಸ್ತ್ರೀ ಯ ರ ಜ್ಞಾನದಲ್ಲಿ ಎನ್ನುವ ಕಾರಣಕ್ಕಾಗಿ ಭಾರತೀಯರ ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಸ್ತ್ರೀ ಯರು  ಮುಂದಾಗಿರುತ್ತಾರೆ. 4 ಕೈಗಳು,4,ಭುಜಗಳುಳ್ಳ, ವೃಷಭ ವಾಹಿನಿಯಾದ ಗೌರಿ ಶಂಖ,ಚಕ್ರ,ಚಂದ್ರನ ಸಹಿತ ಕಂಗೊಳಿಸುತ್ತಾಳೆ. ವೃಷಭವಾಹನ ಅಹಂಕಾರವನ್ನು ದೂರ ಮಾಡುವ ಸಂಕೇತ, 4 ಕೈಗಳ ಭುಜ , ಬಾಲ್ಯ,ಕೌಮಾರಿ,  ಯೌವನ,ವಾರ್ಧಕ್ಯ,ಧರ್ಮ ಅರ್ಥ,ಕಾಮ,ಮೋಕ್ಷ ಪ್ರತಿಯೊಂದು  ರೂಪದಲ್ಲಿದ್ದು   ಅನುಗ್ರಹಿಸುವ ತಾಯಿಯ ವ್ರತ,ಪೂಜೆ,ಸ್ಮರಣೆ ಯಿಂದ  ಪುನೀತರಾಗಿರುವ ಭಕ್ತರು ಅನೇಕರು. ಉತ್ತಮವಾದ ರೀತಿಯಲ್ಲಿ  ದೇವಿಯನ್ನು  ನೋಡಿ,ಪ್ರಾರ್ಥಿಸಿದರೆ ಉತ್ತಮವಾದದ್ದನ್ನೇ ಕೊಡುತ್ತಾಳೆ.
ಹಾಗೆಯೇ ಯಾವುದೇ ಸ್ತ್ರೀ ಗೆ ಎಲ್ಲಿ ಉತ್ತಮ ಗೌರವ,ಪ್ರೀತಿ,ವಿಶ್ವಾಸವಿರುವುದೋ  ಅಲ್ಲಿ ದೇವತೆಗಳು
ನೆಲೆಸಿರುವರು. ದೇವ ದಾನವರ ಗುಣ ಲಕ್ಷಣಗಳು ಮಾನವನೊಳಗೆ ಹೊರಗೆ ಇರೋವಾಗ ಯಾವ ಗುಣದಿಂದ
ಮನಸ್ಸು ಶುದ್ದವಾಗುವುದೋ ಅದೇ ದೈವ ಗುಣ. ಗೌರಿ ಗೌರವರ್ಣದವಳಾಗಿದ್ದು ಪತಿವ್ರತೆ,ಧರ್ಮ. ಪತ್ನಿಯಾಗಿದ್ದುಶಿವಸಾನಿದ್ಯದಲ್ಲಿದ್ದು ಮಾನವನರಿಗೆ ಸಕಲ ಸೌಭಾಗ್ಯವನ್ನು ಕರುಣಿಸಲೆಂದೇ ಭಾದ್ರಪದ ಶುಕ್ಲ ತದಿಗೆಯ ದಿನವನ್ನು ಮಹಾಗೌರಿ ವ್ರತವನ್ನಾಚರಿಸಲಾಗುತ್ತದೆ.  ನಂತರದ ದಿನ ಬರುವ ವರಸಿದ್ದಿವಿನಾಯಕನೂ ಬೇಡಿದ ವರ ನೀಡುವ‌ ನಾಯಕ. ಒಂದು ಮಾತ್ರ ಮಾನವ ಅರ್ಥ ಮಾಡಿಕೊಂಡರೆ ಉತ್ತಮ. ನಾವು ಏನು ಬೇಡಿದರೆ ತಿರುಗಿ ಕೊಟ್ಟರೂ ಹೆಚ್ಚಾಗುವುದೋ ಅಂತಹ ಜ್ಞಾನವನ್ನು ಬೇಡದೆ
ಹಣವನ್ನು ಬೇಡಿದರೆ ಹೊರಗಿನಿಂದ ಹಣಬಂದರೂ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕು. ದೇವತಾರಾಧನೆಗೆ
ಕಡಿಮೆಯಾಗಿಲ್ಲ ಆದರೆ  ದೈವತ್ವ  ಬೆಳೆಯದೆ ಸಮಸ್ಯೆಗೂ ಮಿತಿಯಿಲ್ಲ ವಾದರೆ‌ ಬೇಡಿ ಉಪಯೋಗವಿಲ್ಲ. ಹೀಗಾಗಿ "ತಲ್ಲಣಿಸದಿರು ಕಂಡ್ಯಾ ತಾಳು ಮನವೆ ಎಲ್ಲರನ್ನೂ ಸಲಹುವನು ಇದಕೆ ಸಂಶಯವಿಲ್ಲ" ದಾಸರೆಂದರು. ಕಾರ್ಯವು ಕ್ರಮಬದ್ದವಾಗಿದ್ದರೆ ಕಾರ್ಯಕ್ರಮ ಯಶಸ್ವಿ.
ಕ್ರಮರಹಿತವಾಗಿ,ಅಕ್ರಮ ಹಣದಲ್ಲಿ ಎಷ್ಟೇ  ದೇವರನ್ನು ಬೇಡಿದರೂ ವಿಘ್ನಗಳೇ ಹೆಚ್ಚು. ಸಿದ್ದಿವಿನಾಯಕಸ್ವಾಮಿ ಒಲಿಯೋದು ಸಿದ್ದರಿಗೆ. ಸಿದ್ದಿಪಡೆದವರ ಹೆಸರಲ್ಲಿ ಪ್ರಸಿದ್ದ ರಾದರೆ  ಅರ್ಧ ಸತ್ಯವಷ್ಡೆ. ಆಂತರಿಕ ಶುದ್ದಿಯಿಂದ ಸಿದ್ದಿ ಪಡೆದವರೆಲ್ಲರೂ ಪ್ರಸಿದ್ದರಾಗಿರಲಿಲ್ಲ.ಕಾರಣವಿಷ್ಟೆ ಅವರಿಗೆ
ಪರಾಶಕ್ತಿ,ಪರಮಾತ್ಮನೇ ಸಿಕ್ಕಿದ ಮೇಲೆ ಹೊರಗಿನ ಸಾಮಾನ್ಯ   ಪ್ರಸಿದ್ದಿಯ ಅಗತ್ಯವಿರಲಿಲ್ಲ. ಕಾಲಬದಲಾದರೂ ಒಳಗಿನ‌ ಜಗತ್ತು  ಶುದ್ದವಾಗಿರುತ್ತದೆ ಕಾರಣ ಆತ್ಮ ಪರಿಶುದ್ದವಾದ ಮಹಾಚೇತನ.
ಎಲ್ಲರಿಗೂ  ಮಹಾಗೌರಿ ಹಾಗು ವರಸಿದ್ದಿವಿನಾಯಕ  ಹಬ್ಬದ
ಶುಭಾಶಯಗಳು.

Sunday, August 28, 2022

ವಿಜ್ಞಾನದೊಳಗಿರುವ ಜ್ಞಾನ ಯಾವುದು?

ಒಳಗೊಳಗಿರುವ ಸತ್ಯವನ್ನು ಗಮನಿಸಲು ಒಳಹೊಕ್ಕಿ ನೋಡಬೇಕು.ಹೊರಗೆಬಂದಷ್ಟೂ ಅಸತ್ಯವೇ ಬೆಳೆಯೋದು.
ಅಸತ್ಯದೊಳಗಿರುವ ಸೂಕ್ಷ್ಮ ವಾದ ಸತ್ಯ, ಅಧರ್ಮದೊಳಗಿರುವ ಸೂಕ್ಮವಾದ ಧರ್ಮ, ಅಕರ್ಮದೊಳಗಿನ‌ಕರ್ಮ, ವಿಜ್ಞಾನದೊಳಗಿನ ಜ್ಞಾನ,ಅದ್ವೈತ ದೊಳಗಿನ ದ್ವೈತ ,ವಿದೇಶದೊಳಗಿನ ದೇಶ
ಅಜ್ಞಾನದೊಳಗಿರುವ ಜ್ಞಾನ.ಒಟ್ಟಿನಲ್ಲಿ  ಹೊರಗಿನಿಂದ ಕಾಣೋದೇ ಬೇರೆ ಒಳಹೊಕ್ಕಿ ನೋಡಿ ತಿಳಿಯೋದೇ ಬೇರೆ.
ಅಧ್ಯಾತ್ಮ ಸತ್ಯಕ್ಕೂ ಭೌತಿಕ ದ ಸತ್ಯಕ್ಕೂ  ವ್ಯತ್ಯಾಸವಿಷ್ಟೆ.
ಒಂದು ಒಳಗಿನಿಂದ ಕಂಡುಹಿಡಿದ ಸತ್ಯ ಇನ್ನೊಂದು ಹೊರಗಿನಿಂದ ಕಂಡುಕೊಂಡ ಸತ್ಯ. ಆದರೆ ಇಲ್ಲಿ ಹೊರಗಿನ ಸತ್ಯ ಒಳಗಿನ ಸತ್ಯವನ್ನು ಅಲ್ಲಗೆಳೆದಷ್ಟೂ ಅಸತ್ಯ ಬೆಳೆದು ಅಧರ್ಮ ,ಅನ್ಯಾಯ,ಅಹಂಕಾರ, ಸ್ವಾರ್ಥ ದಲ್ಲಿ ಜೀವನವೇ  ಮುಗಿಯುತ್ತದೆ .ಆದರೆ ಆಂತರಿಕ ಸತ್ಯ ಬಿಟ್ಟು ಈವರೆಗೆ ಯಾವ ಜೀವಾತ್ಮನೂ ಮುಕ್ತಿ ಪಡೆದಿಲ್ಲವೆನ್ನುವ ಮಹಾಸತ್ಯವನ್ನು ಅರಿತು ನಡೆಯುವುದೇ  ಜೀವನದ ಗುರಿ.
ಗುರುವಾದವರು ಈ ಸತ್ಯದೆಡೆಗೆ ಶಿಷ್ಯರನ್ನು ನಡೆಸುವಾಗ ತಾನು ಒಳಗಿರುವ ಸತ್ಯವನ್ನು ಕಂಡುಕೊಳ್ಳುವುದು ಮುಖ್ಯ.
ನಂತರವಷ್ಟೆ ಶಿಷ್ಯನ ಜಿಜ್ಞಾಸೆ ಪೂರೈಸಬಹುದೆನ್ನುವುದನ್ನು ಅಧ್ಯಾತ್ಮ ಸಾಧಕರು ತಿಳಿಸಿದ್ದಾರೆ.
ಎಲ್ಲಿ ಸತ್ಯವಿರುವುದೋ ಅಲ್ಲಿ ದೈವತ್ವ ಬೆಳೆಯುವುದು. ಎಲ್ಲಿ ನ್ಯಾಯವಿರುವುದೋ ಅಲ್ಲಿ ನ್ಯಾಯದೇವತೆಯಿರುವಳು,ಎಲ್ಲಿ ಶಾಂತಿಯಿರುವುದೋ ಅಲ್ಲಿ  ದೇವಾನುದೇವತೆಗಳಿರುವರು. ಇದು ಹಿಂದಿನ ಮಹರ್ಷಿಗಳು ಕಂಡುಕೊಂಡ ಸತ್ಯ.ಯುಗಾಂತರದೊಳಗಿರುವ ಅಂತರಕ್ಕೆ ಕಾರಣವನ್ನು ಜ್ಞಾನದಿಂದ ತಿಳಿದುಕೊಂಡರೆ ಅಂತರ ಕಡಿಮೆಯಾಗುತ್ತದೆ.ಅಜ್ಞಾನದಿಂದ ಬೆಳೆಸಿದರೆ ಅಂತರ ಬೆಳೆಯುತ್ತದೆ. ಇಲ್ಲಿ ಮಾನವನ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದಕ್ಕೂ ಕಾರಣವಿದ್ದರೂ ಪರಿಹಾರ ಜ್ಞಾನದಿಂದ ತಿಳಿಯದೆ ಹೊರಗೆ ಪರಿಹಾರದ ಹಣ ಪಡೆದಷ್ಟೂ ಋಣ ಹೆಚ್ಚಾಗಿ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಅಜ್ಞಾನ್ ಶಿಕ್ಷಣದಿಂದ ಎನ್ನಬಹುದಾದರೂ ಆ ಶಿಕ್ಷಣವನ್ನು ಬದಲಾವಣೆ ಮಾಡಿಕೊಳ್ಳಲು ಒಬ್ಬರಿಂದ ಸಾಧ್ಯವಿಲ್ಲ. ಇದು ರಾಜಕೀಯದ ಮಟ್ಟಕ್ಕೆ ಬೆಳೆದಿರುವಾಗ ಒಳಗಿರುವ ರಾಜಯೋಗವನ್ನು ಅರ್ಥ ಮಾಡಿಕೊಳ್ಳಲು ಮಾನವ ಸೋತಿರೋದು  ಕಾಲದ ಪ್ರಭಾವ. ಕಾಲಮಾನಕ್ಕೆ ತಕ್ಕಂತೆ ಬೆಳೆದ ಸಮಾಜದ ಬದಲಾವಣೆಯನ್ನು ಸ್ವೀಕರಿಸುತ್ತಾ ಮುಂದೆ  ನಡೆದ  ಮಾನವನಿಗೆ  ತನ್ನ ತಾನರಿಯಲಾಗದೆ ಪರರನ್ನು ಅರ್ಥ ಮಾಡಿಕೊಳ್ಳಲು ಹೋಗಿ ಪರರೂ ದಾರಿ ತಪ್ಪಿದರು. ಒಟ್ಟಿನಲ್ಲಿ ಹಿಂದಿರುವಹಿಂದೂ ಧರ್ಮದ ಉದ್ದೇಶ ಎಲ್ಲರನ್ನೂ ತತ್ವಜ್ಞಾನದಿಂದ ಒಗ್ಗೂಡಿಸಿ ಸಮಾಜದಲ್ಲಿ  ಯಾವ ಭೇಧಭಾವವಿಲ್ಲದೆ ಬಾಳಿ ಬದುಕಿ ಪರಮಾತ್ಮನೆಡೆಗೆ ಸಾಗೋದು.ಆದರೆ ಪರಮಾತ್ಮನಿರೋದು ಆಂತರಿಕ ಶುದ್ದಿಯಲ್ಲಿ ಎಂದಾಗ ಆಂತರಿಕ ವಾದ  ಜ್ಞಾನವನ್ನು ಗುರುತಿಸಿ ಬೆಳೆಸಿದ್ದ ಶಿಕ್ಷಣವೇ ಹಿಂದುಳಿದಾಗ ಇಲ್ಲಿ  ಬೆಳೆಯೋದು ಭೌತಿಕ ಸತ್ಯ ಮಾತ್ರ. ತಾತ್ಕಾಲಿಕ ವಾದ ಸತ್ಯವನ್ನು ಶಾಶ್ವತವೆಂಬ ಭ್ರಮೆ ಯಲ್ಲಿ ಭೂಮಿಯನ್ನು ಆಳಲು ಹೋದವರು ಹಿಂದೆಯೂ ಇದ್ದರು,ಈಗಲೂ ಇರುವರು,ಮುಂದೆಯೂ ಇರುವರು. ಆದರೆ  ಆಳಾಗಿ ಜನ,ಸೇವಕರಾಗಿರುವುದನ್ನು  ಅರ್ಥ ಮಾಡಿಕೊಳ್ಳದೆ ಜನರ ಹಣ, ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ಅಸುರರಂತೆ
ಇದ್ದರೆ ಭೂ ತಾಯಿ ಸುಮ್ಮನಿರಲು ಸಾಧ್ಯವೆ? ಭೂಮಿಯ ಋಣ ತೀರಿಸಲು ಬಂದ ಜೀವ  ಇನ್ನಷ್ಟು ಸಾಲದ ಸುಳಿಗೆ ಸಿಕ್ಕರೆ ಮುಕ್ತಿ ಸಿಗುವುದೆ? ಈ ವಿಚಾರ ಎಲ್ಲಾ ಧಾರ್ಮಿಕ ಜನತೆ ಅರ್ಥ ಮಾಡಿಕೊಂಡರೆ ಧರ್ಮ ರಕ್ಷಣೆ ಸಾಧ್ಯ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯುವವರು ಯಾರು? ಮೇಲಿರುವ ಭಗವಂತನಿಗೆ ಎಲ್ಲಾ ಒಂದೇ. ಅವನೊಳಗೇ ಇರುವ ಅಸಂಖ್ಯಾತ ಜೀವರಾಶಿಗಳಲ್ಲಿ ಬುದ್ದಿವಂತ ಜ್ಞಾನವಂತ ಮಾನವನೂ ಒಬ್ಬನಾದರೂ ಇಲ್ಲಿ ಎಲ್ಲಾ ಪ್ರಾಣಿಗಳನ್ನು ಜೀವಿಗಳನ್ನು ಆಳಿ ಅಳಿಸುವುದು ಅಧರ್ಮ. ಹೀಗಿರುವಾಗ ಅಧರ್ಮಕ್ಕೆ ತಕ್ಕಂತೆ  ಪ್ರತಿಫಲ ವು ಒಳಗಿನ ಜೀವವೇ ಅನುಭವಿಸಬೇಕೆಂಬ‌ ನಿಯಮವನ್ನು ಯಾವ  ರಾಜಕೀಯ ದಿಂದ ಬದಲಾಯಿಸಲಾಗದು. ಇದನ್ನು ರಾಜಯೋಗದಿಂದ ಕಂಡುಕೊಂಡವರು ಮಹಾತ್ಮರಾದರು.ದೇವರಾದರು,ಸಾದು,ಸಂತ,ದಾಸ,ಶರಣರ ತತ್ವದೊಳಗಿರುವ ಸತ್ಯವನ್ನರಿತರೆ ಜೀವನದ ಮುಖ್ಯ ಉದ್ದೇಶ ವೂ ಅರ್ಥ ವಾಗುತ್ತದೆ. ಇದನ್ನು ಪ್ರಚಾರ ಮಾಡಿ ಹಣಬಲ,ಜನಬಲ,ಅಧಿಕಾರ, ಸ್ಥಾನಮಾನ ಪಡೆದರೂ ಕ್ಷಣಿಕ ಎನ್ನುವ ಕಾರಣಕ್ಕಾಗಿ ಮಹಾತ್ಮರುಗಳು ಪರಮಾತ್ಮನ ಸೇವೆ ಎನ್ನುವ ಸೇವಾಮನೋಭಾವದಲ್ಲಿ ಸಮಾಜದ ಮಧ್ಯೆ ಇದ್ದು  ಸಮಾಜಸುಧಾರಣೆಗೆ ಶ್ರಮಿಸಿದ್ದರು. ಅಂದಿನ  ಅನುಭವಿ ಜ್ಞಾನಿಗಳ  ಶ್ರಮದಿಂದ ಸಮಾಜ,ದೇಶದಲ್ಲಿ ಶಾಂತಿ ನೆಲೆಸಿತ್ತು.ಈಗಲೂ ಮೂಲೆ ಮೂಲೆಯಲ್ಲಿದ್ದಾರೆ. ಸರ್ಕಾರದ ಕಣ್ಣಿಗೆ ಬೀಳದಿರೋದು  ಪರಮಾತ್ಮನ ಕರುಣೆ ಭಾರತಾಂಬೆಯ ಅದೃಷ್ಟವೆನ್ನಬಹುದಷ್ಟೆ. ಕಾಡಿನಲ್ಲಿರುವ ಅಂತಹ ಸ್ವಾವಲಂಬಿ, ಸ್ವಾಭಿಮಾನಿ, ಸ್ವತಂತ್ರ ಜ್ಞಾನದ ಮಾನವರಿಂದ  ಭೂಮಿ ನಡೆದಿದೆ.ಎಲ್ಲರಿಗೂ ಸ್ವತಂತ್ರ. ಜ್ಞಾನವಿದ್ದರೂ ಪರತಂತ್ರದಲ್ಲಿದ್ದು ಪರಕೀಯರ ಹಿಂದೆ ನಡೆದು ಮೂಲವನ್ನು ಬಿಟ್ಟು ಅತಂತ್ರಸ್ಥಿತಿಗೆ ಬಂದಿರೋದಕ್ಕೆ  ಕಾರಣವೆ ಅತಿಯಾದ ಸ್ವಾರ್ಥ ಅಹಂಕಾರದಿಂದ 
ಕೂಡಿದ  ಜೀವನ.ಇದಕ್ಕೆ ಶಿಕ್ಷಣದ ವಿಷಯವೇ ಕಾರಣ. ಮೊದಲು ಮಾನವನಾಗುವ ಮಾನವೀಯತೆ ಬೆಳೆಸುವ ನೈತಿಕ ಶಿಕ್ಷಣ ಧಾರ್ಮಿಕವರ್ಗ ನೀಡಿದರೆ  ಭಾರತದ  ಸ್ವಾತಂತ್ರ್ಯ ಕ್ಕೆ ದಕ್ಕೆ ಯಾಗದು. ಈಗ ಅಂತಹ ಕಾರ್ಯ ನಡೆದಿದೆ.ಎಲ್ಲರ ಸಹಕಾರದ ಅಗತ್ಯವಿದೆ.ಇದು ನಮ್ಮ ಮಕ್ಕಳಿಗೆ ನಾವು ಬಿಟ್ಟು ಹೋಗುವ ಆಸ್ತಿ.ಜ್ಞಾನದ ಆಸ್ತಿ ಮಕ್ಕಳಿಗೆ ಅಗತ್ಯ.ಇದು ಅವರ ಒಳಗಿದೆ .ಗುರುತಿಸಿ ಗುರುವಿನ ಮೂಲಕ ಬೆಳೆಸುವುದಕ್ಕೆ ಪೋಷಕರು ಒಳಗಿನ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಹಿಂದಿರುಗಬೇಕು. ಹಿಂದೂ ಧರ್ಮ ಹಿಂದಿನ ಶಿಕ್ಷಣದಲ್ಲಿತ್ತು.
ಈಗಲೂ ಇದೆ ಆದರೆ ರಾಜಕೀಯದ ಕಡೆಮುಖಮಾಡುತ್ತಿದೆ.
ಗಮನಿಸಿ ಸಹಕರಿಸಿ ಬೆಳೆಸಿದರೆ ನಮ್ಮ ಆತ್ಮನಿರ್ಭರ ಭಾರತ ಸಾಧ್ಯವಿದೆ.

Saturday, August 27, 2022

ರಾಜಯೋಗ ಎಂದರೆ..

ರಾಜಯೋಗ ಎಂದರೆ..

ವಿವೇಕಾನಂದ ಎಂದರೇನು?

ಗಂಡು ಹೆಣ್ಣು ಯಾವುದರ ಸಂಕೇತ?

ಹೊಸಬೇರು ಹಳೇ ಚಿಗುರು

ಮೂಲಾಧಾರ ಚಕ್ರ ಗಟ್ಟಿಯಾಗದೆ ಸಹಸ್ರಾರ ಗಟ್ಟಿಯಾಗದು

ಆಧ್ಯಾತ್ಮ ಮತ್ತು ಆತ್ಮನಿರ್ಭರ ಭಾರತ

ಪ್ರಜಾಪ್ರಭುತ್ವ ಮತ್ತು ಧರ್ಮ

ಯುಗಾಂತರದಲ್ಲಿ ರಾಜಕೀಯ ಬದಲಾವಣೆ

ತ್ತ್ರೇತಾಯುಗದಿಂದ ದ್ವಾಪರದವರೆಗೆ ರಾಜಕೀಯದಲ್ಲಿ  ಆದ ಬೆಳವಣಿಗೆ  ನಂತರದ ಕಲಿಯುಗದಲ್ಲಿ ಅತಿಯಾಗಿದೆ.ಆದರೆ ಅಂದಿನ ಕ್ಷತ್ರಿಯ ಧರ್ಮ  ಇಂದಿನ ಪ್ರಜಾಧರ್ಮದಲ್ಲಿ ಸ್ವಾತಂತ್ರ್ಯ ವನ್ನು  ಸ್ವೇಚ್ಚಾಚಾರವೆಂದರಿತು ನಡೆದವರೆ ಹೆಚ್ಚು.ಭೂಮಿಯ  ಸಾತ್ವಿಕ ಸತ್ಯವನ್ನು ಅಲ್ಲಗೆಳೆದು ಆಳಿದವರ ಅಜ್ಞಾನವೇ ಇದಕ್ಕೆಲ್ಲಾ ಕಾರಣ.ಅಜ್ಞಾನಕ್ಕೆ ಶಿಕ್ಷಣ ಕಾರಣ. ಶಿಕ್ಷಣ ನೀಡಬೇಕಾದವರೆ ಭೌತಿಕಾಸಕ್ತಿ ಯಲ್ಲಿ ಮುಳುಗಿದ್ದರೆ  ಯಥಾ ರಾಜ ತಥಾ ಪ್ರಜಾ,ಯಥಾ ಗುತು ತಥಾ ಶಿಷ್ಯರು, ಯಥಾ ಪ್ರಜೆ  ತಥಾ ಪ್ರಜಾಪ್ರಭುತ್ವ ದೇಶ.

ಶ್ರೀ ಕೃಷ್ಣ ನಲ್ಲಿದ್ದ ರಾಜಯೋಗವನ್ನರಿತು ತತ್ವಜ್ಞಾನ ದಿಂದ
ಮುಂದೆ ನಡೆದವರಿಗೆ ಮುಕ್ತಿ .ತಂತ್ರದಿಂದ ಕೃಷ್ಣನನ್ನು ಆಳಲು ಹೊರಟವರಿಗೆ ಪುನರ್ಜನ್ಮದ  ಪ್ರತಿಫಲ. ಹಾಗಾಗಿ ಇಂದು ಜನಸಂಖ್ಯೆ ಮಿತಿಮೀರಿ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ವ್ಯವಹಾರದಲ್ಲಿ ಲಾಭ‌ನಷ್ಟವನ್ನರಿತು ಜೀವನ ನಡೆಸೋದು ಸಹಜ. ಆದರೆ ವ್ಯವಹಾರ ಜೀವನದ ಮೂರನೆ ಅಂಗ. ಧಾರ್ಮಿಕವಾಗಿ ನಡೆಯುವಾಗ  ಜ್ಞಾನ ಹೆಚ್ಚುತ್ತದೆ ಹಣವನ್ನು ಸತ್ಕರ್ಮಕ್ಕೆ  ಉಪಯೋಗಿಸಿ ಶಾಂತಿ ಸಿಗುತ್ತದೆ. ಶ್ರೀ ಕೃಷ್ಣನ ಅರ್ಥ ಮಾಡಿಕೊಳ್ಳಲು ಭಕ್ತರಿಗೆ,ದಾರ,ಶರಣರಿಗೆ ಸಾದು ಸಂತರಿಗೆ ಮಹಾತ್ಮರಿಗಷ್ಟೆ ಸಾಧ್ಯವೆಂದಾಗ ಇವರೆಲ್ಲರೂ ಜ್ಞಾನವನ್ನು ಬಂಡವಾಳಗಿಟ್ಟುಕೊಂಡಿದ್ದರು ಇದನ್ನು ನಾವು ಅವರ ನಡೆ ನುಡಿಯಲ್ಲಿದ್ದ ಸದ್ವಿಚಾರ,ಸದಾಚಾರ,ಸತ್ಯ,ಧರ್ಮ, ನ್ಯಾಯ,ನೀತಿ,ಸಮಾನತೆ ,ಸರಳತೆ,ಶಾಂತತೆಯನ್ನರಿತರೆ  ಸಾಧ್ಯ. ಭಗವದ್ಗೀತೆ ಯೂ ಇದನ್ನು ತಿಳಿಸಿದೆ. ಭಗವದ್ಗೀತೆ ಮಹಾಗ್ರಂಥವೆಂದು ಪೂಜಿಸಿ ಓದಿ ಪ್ರಚಾರ ಮಾಡುವುದರಿಂದಲೂ ಪುಣ್ಯ ಸಂಪಾದನೆ 
ಸಾಧ್ಯ.ಆದರೆ, ಅದರೊಳಗಿರುವ ಧಾರ್ಮಿಕ ಸೂಕ್ಷ್ಮ  ಸರಳ ವಿಚಾರವನ್ನು ನಾವೆಷ್ಟು ಜೀವನದಲ್ಲಿ ತಿಳಿದು ನಡೆಯಲು ನಮ್ಮ ಸಮಾಜ, ಗುರುಹಿರಿಯರು, ರಾಜಕಾರಣಿಗಳು ಇನ್ನಿತರ ಪ್ರತಿಷ್ಠಿತ ಜ್ಞಾನಿಗಳು ಈಗಲೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.ಸತ್ಯ ಕಠೋರವಾಗುವುದಕ್ಕೆ ಕಾರಣ ಅದನ್ನು ತಿರಸ್ಕರಿಸಿ ಮುಂದೆ ನಡೆದಿರೋದು.ಸತ್ಯವೇ ದೇವರು ಎಂದಾಗ ದೇವರಿರೋದು ಎಲ್ಲಿ? ಸತ್ಯಕ್ಕೆ ಬೆಲೆಕೊಡದೆ ರಾಜಕೀಯವನ್ನು ಬೆಳೆಸಿದವರಿಗೆ ಇಂದಿನ ರಾಜಕೀಯದೊಳಗೇ ಅಡಗಿರುವ  ಅಧರ್ಮ, ಅಸತ್ಯ,ಅನ್ಯಾಯದ ಭ್ರಷ್ಟಾಚಾರವನ್ನು  ತಡೆಯಲಾಗುತ್ತಿಲ್ಲ.
ಕಾರಣವಿಷ್ಟೆ ನಮ್ಮ ಸಹಕಾರದಿಂದಲೇ ಇದು ಬೆಳೆದಿರುವಾಗ ನಮ್ಮೊಳಗೂ ಇದೇ ಇರುತ್ತದೆ.ಮೊದಲು ಒಳಗಿರುವ  ಇದನ್ನು ತೊಳೆದು ಸ್ವಚ್ಚ ಮಾಡಿಕೊಂಡರೆ  ಹೊರಗಿನ ಭ್ರಷ್ಟಾಚಾರ ನಿಧಾನವಾಗಿ ಹೋಗಿ ಸ್ವಚ್ಚ ಭಾರತವಾಗುತ್ತದೆ. ಜಗದ್ಗುರು ಆಗೋ ಮೊದಲು ದೇಶಕ್ಕೆ ಗುರುವಾಗಬೇಕು.
ದೇಶಕ್ಕೆ ಗುರು ವಾಗೋ ಮೊದಲು  ಸಮಾಜಕ್ಕೆ 
ಗುರುವಾಗಬೇಕು.ಇದಕ್ಕೂ ಮೊದಲು ಸಂಸಾರಕ್ಕೆ ಗುರುವಾಗಬೇಕು. ಇದೂ ಸಾಧ್ಯ ಆಗಬೇಕಾದರೆ ನಮ್ಮನ್ನು ನಾವೇ ಯಾರೆಂದು ಅಧ್ಯಾತ್ಮ ಸತ್ಯ ತತ್ವದಿಂದ ಅರ್ಥ ಮಾಡಿಕೊಳ್ಳಬೇಕೆನ್ನುವುದೇ  ಅದ್ವೈತದ ಅಹಂ ಬ್ರಹ್ಮಾಸ್ಮಿ. ಇಲ್ಲಿ  ನಾನೇ ಬ್ರಹ್ಮನಾಗಿದ್ದರೆ ನಾನೇ ಸೃಷ್ಟಿಸಿದ. ಹಲವು ಧರ್ಮ, ಪಂಗಡ,ಪಕ್ಷ,ಜಾತಿ,‌ಇನ್ನಿತರ ಭೌತಿಕ 'ವಿಷ'ಯ ಗಳಿಂದ  ನಮ್ಮ ಗುರಿ ತಲುಪಲಾಯಿತೆ? ದಾರಿ ತಪ್ಪಿದವರ ಹಿಂದೆ ನಡೆದು ದಾರಿ ತಪ್ಪಿದರೆ ತಪ್ಪು ಯಾರದ್ದು? ಪರಮಾತ್ಮನಿರೋದು ಎಲ್ಲರ ಒಳಗೇ ಎಂದಾಗ
ಒಳಹೊಕ್ಕಿ ನೋಡುವ ಶಿಕ್ಷಣವನ್ನು ಶಿಕ್ಷಕರು,ಗುರುಗಳು ಪೋಷಕರು,ಹಿರಿಯರು, ಜ್ಞಾನಿಗಳು, ಸಾಹಿತಿಗಳು, ಇನ್ನಿತರ
ಅಧಿಕಾರ ಪಡೆದ ಪ್ರತಿಷ್ಡಿತರು ಜನರಿಗೆ ಕೊಡದೆ ಆಳಿದರೆ ಶ್ರೀ ಕೃಷ್ಣನ ಕೃಪೆ ಆಗುವುದೆ? ಕಲಿಗಾಲದ ಪ್ರಭಾವವೆಂದರಿತು ಈಗ ಇದ್ದಲ್ಲಿಯೇ ಮೂಲದ ಧರ್ಮ, ಕರ್ಮ, ಭಾಷೆ ಶಿಕ್ಷಣ ಬೆಳೆಸುವತ್ತ ನಡೆದರೆ ದಾರಿ ಹತ್ತಿರವಿದೆ. ಹಿಂದೆ ಇತ್ತು.ಹಿಂದಿನವರಲ್ಲಿತ್ತು. ಎಲ್ಲಿಯವರೆಗೆ ಮಾನವನ‌ಪ್ರಾಣಿ ಗುಣ. ಹೋಗುವುದಿಲ್ಲವೋ ಪ್ರಾಣಕ್ಕೆ ಮುಕ್ತಿ ಯಿಲ್ಲ.ಪ್ರಾಣಿಗಳ ಸ್ವತಂತ್ರ ಜೀವನಕ್ಕೂ  ಮುಳ್ಳಾಗಿರುವ ಮಾನವನಿಗೆ  ದೇವರು ಕಾಣಲು ಕಷ್ಟ ಕಷ್ಟ. ಸತ್ಯವನ್ನು ಸುಳ್ಳು ಮಾಡಿ ರಾಜಕೀಯ ನಡೆಸಿದರೂ ಸತ್ಯಕ್ಕೆ ಸಾವಿಲ್ಲ.ರಾಜಕೀಯದಿಂದ ಮುಕ್ತಿ ಸಿಗೋದಿಲ್ಲ. ಶ್ರೀ ಕೃಷ್ಣ ನ
ಯೋಗ  ಜೀವನ ಧರ್ಮದಾರಿತವಾಗಿತ್ತು. ಸ್ವಯಂ ಭಗವಂತನೆಗೆ  ಭೂಮಿ ಆಳಲಾಗಲಿಲ್ಲಕಾರಣ ದೇವಾಸುರರನ್ನು ಒಳಗೇ ಇಟ್ಟುಕೊಂಡಿರುವಾಗ ಯಾರನ್ನೂ ಪೂರ್ಣ ತಪ್ಪಿತಸ್ಥರೆಂದು  ಹೇಳಲಾಗದು.ಕೈ ಕೈ ಸೇರಿದರೆ ಚಪ್ಪಾಳೆ. ಸದ್ದು ಮಾಡುತ್ತಿರುವಮಾಧ್ಯಮ,ಮಧ್ಯವರ್ತಿಗಳು
ಮಾನವರಷ್ಟೆ,ಮಹಿಳೆ ಮಕ್ಕಳನ್ನು ಹೊರಗೆಳೆದು ಆಳಿದರೆ ಅಧರ್ಮ. ‌ಹಣದಿಂದ  ಏನಾದರೂ ಜೀವ ಖರೀದಿ ಮಾಡಿದರೂ ಅದರ ಫಲವನ್ನು ಉಣ್ಣುವ ಜೀವ ಒಳಗಿದೆ
ಕರ್ಮಕ್ಕೆ ತಕ್ಕಂತೆ ಪ್ರತಿಫಲ.



ಸಿದ್ದರು, ಪ್ರಸಿದ್ದರು

ಸಿದ್ದಿಪುರುಷರಿಗೂ  ಪ್ರಸಿದ್ದಿ ಪುರುಷರಿಗಿರೋ
ವ್ಯತ್ಯಾಸವೆಂದರೆ,ಒಂದು ಅನುಭವದ ಜ್ಞಾನಿ
ಇನ್ನೊಂದು  ಅನುಭವವಿಲ್ಲದ  ಪ್ರಸಿದ್ದರಾದ ಜ್ಞಾನಿ.
ನಮ್ಮಲ್ಲಿ  ಸಿದ್ದಿ  ಪಡೆದವರ  ಹೆಸರಲ್ಲಿ  ಪ್ರಸಿದ್ದರಾದವ
ರ ಸಂಖ್ಯೆ  ಹೆಚ್ಚು.ಸಿದ್ದಿಯನ್ನ ಪ್ರಚಾರಮಾಡೋದು
ಪ್ರಸಿದ್ದರು.ಇದರಿಂದ ಪೂರ್ಣಧರ್ಮ,ಪೂರ್ಣಸತ್ಯ
ಇಲ್ಲದೆ  ವ್ಯವಹಾರದ  ರಾಜಕೀಯ ಹೆಚ್ಚಾಗಿದೆ.ಇಂದು
ಸ್ವಾವಲಂಬನೆಗೆ  ಬದಲು  ಪರಾವಲಂಬನೆ ಹೆಚ್ಚು.
ಹಾಗೆ  ಜ್ಞಾನವಿಲ್ಲದೆ ಸಾಲ ಬೆಳೆಯುತ್ತದೆ ಕರ್ಮವಿಲ್ಲದ  ಧರ್ಮಪ್ರಚಾರ.ಪುರಾಣ ಇತಿಹಾಸದ ರಾಜಪ್ರಭುತ್ವದ ರಾಜಕೀಯದಲ್ಲಿ ಧರ್ಮ ವಿತ್ತು.ಇಂದು ಧರ್ಮದ ಹೆಸರಲ್ಲಿ ರಾಜಕೀಯ ಬೆಳೆದು ಸಿದ್ದಾಂತ ಗಳು  ಪ್ರಸಿದ್ದಿ ಪಡೆದರೂ ಮೂಲದ ಸಿದ್ದ ಪುರುಷರ  ಜ್ಞಾನ ಪಡೆಯಲಾಗಿಲ್ಲ. 

ವಿದೇಶಿ ವ್ಯಾಮೋಹವೆ? ಸಾಲದ ಪ್ರಭಾವವೆ?

ವಿದೇಶಿ ವ್ಯಾಮೋಹವೇ? ವಿದೇಶಿ ಸಾಲದ ಪ್ರಭಾವವೆ?
ಮಕ್ಕಳು ಮೊಮ್ಮಕ್ಕಳವರೆಗೂ ಭೌತಿಕ ಆಸ್ತಿ ಮಾಡಿದವರ ಮಕ್ಕಳು ಮೊಮ್ಮಕ್ಕಳು ವಿದೇಶದೆಡೆಗೆ ಹೋಗುತ್ತಿರುವ ಸತ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಾರಣವಿಷ್ಟೆ ವಿದೇಶಿ ಶಿಕ್ಷಣದ ಪ್ರಭಾವ ನಮ್ಮ ಸ್ವಾರ್ಥ ದ ಜೀವನಕ್ಕೆ ಮಾಡಿ
ಕೊಂಡ  ಆಸ್ತಿ ಅಂತಸ್ತು, ಅಧಿಕಾರದ ದಾಹ. ಇದನ್ನು  ತೀರಿಸಲು ಜನ್ಮ ಜನ್ಮಗಳೇ ಬೇಕು. ಹಾಸಿಗೆ ಇದ್ದಷ್ಟು ಕಾಲುಚಾಚು ಎನ್ನುವ ಹಿಂದಿನ ಉದ್ದೇಶ ನಿನ್ನ ಸಾಲವನ್ನು ನೀನು ತೀರಿಸಲು ಸರಳವಾಗಿ ಬದುಕು ಎಂದಾಗಿತ್ತು. ಆಸ್ತಿಯೇನೂ ಮಾಡಿದ್ದರೂ ಅನುಭವಿಸಲು ಮಕ್ಕಳು ಇಲ್ಲವಾದರೆ ಇದು ಸಮಾಜಕ್ಕಾದರೂ ತಿರುಗಿ ಕೊಟ್ಟು ಹೋಗುವ‌ಜ್ಞಾನವಿದ್ದರೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದ ಹಾಗಾಗುತ್ತದೆ. ದೇಶದ ಸಾಲ ತೀರಿಸಲು  ಸಾಧ್ಯವಾಗದವರು ವಿದೇಶದ ಸಾಲ ತೀರಿಸಲು ಹೊರಗೆ ಹೋಗಿ ದುಡಿಯಲೇ
ಬೇಕು ಆದರೆ ,ವಿದೇಶಕ್ಕೆ ಹೋದರೆ ದೊಡ್ಡ ಸಾಧನೆ ಎನ್ನುವ ಭ್ರಮೆ ಇಂದಿಗೂ  ಹೆಚ್ಚಾಗಿರೋದಕ್ಕೆ  ದೇಹಕ್ಕಾಗಲಿ,
ದೇಶಕ್ಕಾಗಲಿ   ಪ್ರಯೋಜನವಿಲ್ಲದ ಅಜ್ಞಾನವೇ 
ಮನುಕುಲವನ್ನು ಆಳುತ್ತಿದೆ. ಇಲ್ಲಿ ವಿದೇಶದೆಡೆಗೆ ಹೋಗಬಾರದೆಂಬುದಿಲ್ಲ.ಅನಿವಾರ್ಯ ಪರಿಸ್ಥಿತಿ ಅನೇಕರಲ್ಲಿದೆ.ಶಿಕ್ಷಣಕ್ಕೆ ಮಾಡಿಕೊಂಡ ಸಾಲ ತೀರಿಸಲು  ಹೆಚ್ಚು ಹಣ ಸಂಪಾದನೆ ಅಗತ್ಯ.ಇದು ಭಾರತದೊಳಗೇ ಸಿಕ್ಕಿದರೆ ‌ ದೂರ ಹೋಗುವ ಅಗತ್ಯವಿರಲಿಲ್ಲ.ಆದರೆ ಭಾರತದಲ್ಲಿ ಅಂತಹ  ಉದ್ಯೋಗ ಸಿಗುವುದು ಅಲ್ಪ ಮಂದಿಗಷ್ಟೆ. ವಿದೇಶಿಗರು ಜನರ ಬುದ್ದಿಶಕ್ತಿಯನ್ನು ಗಮನಿಸಿ ಭಾರತೀಯರನ್ನು ತಮ್ಮೆಡೆಗೆ ಎಳೆದುಕೊಂಡು ಬಳಸಿದರೆ, ಭಾರತೀಯರು ಹಣವನ್ನಷ್ಟೇ ನೋಡಿಕೊಂಡು  ಜನರನ್ನು ಬಳಸುತ್ತಾರೆ.ಹಾಗಾದರೆ ಜ್ಞಾನದ ಗತಿ ಏನು? ಸಾಮಾನ್ಯರೊಳಗೇ ಅಡಗಿರುವ ಅಸಮಾನ್ಯ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡದೆ ಆಳಿದವರಿಂದ ದೇಶ ಉದ್ದಾರ
ವಾಯಿತೆ? ಮಹಾತ್ಮರ ದೇಶವನ್ನು ಯಾರು ಆಳುತ್ತಿದ್ದಾರೆ? ನಮ್ಮ ಮಕ್ಕಳೇ ಪರಕೀಯರಾದರೆ ಪರಕೀಯರು ನಮ್ಮವ
ರಾಗಲು ಸಾಧ್ಯವೆ? ಎಲ್ಲಾ ಪ್ರಶ್ನೆಗೆ ಉತ್ತರ  ಪೋಷಕರೆ ಕಂಡುಕೊಳ್ಳಲು ಆತ್ಮಜ್ಞಾನದ ಅಗತ್ಯವಿದೆ. ವೈಜ್ಞಾನಿಕ ವಾಗಿ ದೇಶವನ್ನು  ಬೆಳೆಸಿದ್ದರೂ ಆಂತರಿಕ ಶಕ್ತಿಯೇ ಕುಸಿದರೆ ಕಷ್ಟ ನಷ್ಟ ತಪ್ಪಿದ್ದಲ್ಲ.
ಮಕ್ಕಳು ವಿದೇಶದಲ್ಲಿದ್ದರೆ ಪೋಷಕರು ವೃದ್ದಾಶ್ರಮದಲ್ಲಿ ತಮ್ಮ ಕೊನೆಉಸಿರೆಳೆಯುವುದರಲ್ಲಿ ಯಾವಧರ್ಮ ಅಡಗಿದೆ?
ಇದಕ್ಕೆ ಕಾರಣಕರ್ತರು ಪೋಷಕರೆ ಆದಾಗ ಇದನ್ನು ಸರ್ಕಾರ ಸರಿಪಡಿಸಬಹುದೆ? ಸರಿಪಡಿಸಬೇಕಾದರೆ ಒಂದು ಕಾನೂನು ತರಬೇಕಿದೆ. ವಿದೇಶದಲ್ಲಿರುವ ಸ್ವದೇಶಿಗಳ ಆಸ್ತಿ ಪಾಸ್ತಿಗೆ ಒಂದು ಚೌಕಟ್ಟು ಹಾಕಿ ಮಿತಿ ಮೀರಿದ್ದರೆ  ಸರ್ಕಾರದ ವಶವಾದರೆ ಆ ಆಸ್ತಿ ರಕ್ಷಣೆಗಾಗಿಯಾದರೂ ತಿರುಗಿ ಬಂದು ದೇಶದಲ್ಲಿ ಸೇವೆ ಮಾಡಲು ಸಾಧ್ಯವಾಗಬಹುದು.ಯಾಕೆ? ಆಸ್ತಿ ಬೇಕು  ದೇಶ ಬೇಡ, ಪೋಷಕರು ಬೇಡ? ಈ ಅಜ್ಞಾನಕ್ಕೆ ಕಾರಣವೇ ವಿದೇಶಿ  ಶಿಕ್ಷಣ ನೀತಿ. ಅಲ್ಲಿರುವ ವೈಭವದ ಜೀವನ ಶೈಲಿ. ಆದರೆ ಇದರಿಂದಾಗುತ್ತಿರುವ   ಕಷ್ಟ ನಷ್ಟ ಸರ್ಕಾರ ಭರಿಸಲಾಗದು.  ಧರ್ಮ, ಸಂಸ್ಕೃತಿ, ಭಾಷೆ,ಶಿಕ್ಷಣ ನಮ್ಮ ದೇಶದೊಳಗಿದ್ದು ಬೆಳೆಸುವುದೇ ಬೇರೆ.ಹೊರಗಿದ್ದು ಬೆಳೆಸುವುದೇ ಬೇರೆ.ದೇಶದೊಳಗಿರುವ ಪ್ರಜೆಗಳಿಂದಲೇ ದೇಶದ ಭವಿಷ್ಯವಿರೋದು ಹೊರಗಿರುವವರಿಂದಲ್ಲ.
ಹೀಗಿರುವಾಗ ಹೊರಗಿನವರಿಗೆ ಯಾಕೆ ದೇಶದಲ್ಲಿ ಆಸ್ತಿ ಮಾಡಿಡಬೇಕು? ಒಟ್ಟಿನಲ್ಲಿ ಅಧರ್ಮದೆಡೆಗೆ ಹೋದವರನ್ನು ರಾಜಕೀಯವಾಗಿ ಬೆಳೆಸಿಕೊಂಡು  ನಡೆಸಿದ್ದಷ್ಟೂ ಸಂಕಷ್ಟಗಳಿಂದ ಬಿಡುಗಡೆ ಯಿಲ್ಲ.
ಒಂದು ಮಗುವಿಗೆ ಎರಡು ಮೂರು ಮನೆ? ಸಾಮಾನ್ಯಜ್ಞಾನ ಬೇಕಷ್ಟೆ. ಎಷ್ಟು ಹೊರಗಿನಿಂದ ಪಡೆದರೂ ಸಾಲದ ಹೊರೆಯೇ  ಇದನ್ನು ತೀರಿಸದೆ ಜೀವಕ್ಕೆ ಮುಕ್ತಿ ಯಿಲ್ಲವೆನ್ನಬಹುದು.ಪುರಾಣ,ಇತಿಹಾಸದ ಕಥೆಯಲ್ಲಿ ಇದನ್ನು ತಿಳಿಯಲಾಗದು.ಮೊದಲು ಸಾಮಾನ್ಯಜ್ಞಾನದಿಂದ ಸರಳವಾಗಿ ಸಾಮಾನ್ಯಸತ್ಯವನ್ನು ಅರ್ಥ ಮಾಡಿಕೊಂಡರೆ ವಿಶೇಷ ಜ್ಞಾನದ ಒಳಗಿರುವ ರಾಜಕೀಯವೂ ಅರ್ಥ ವಾಗುತ್ತದೆ. ಹಾಗೆಯೇ ರಾಜಯೋಗವೂ ಅರ್ಥ ವಾಗುತ್ತದೆ. ಸಾಲವಿಲ್ಲದೆ ಜನ್ಮವಿಲ್ಲ.ಸಾಲ ತೀರದೆ  ಜೀವಕ್ಕೆ ಮುಕ್ತಿ ಯಿಲ್ಲ
ಹಾಗಾದರೆ ಸಾಲ ಯಾರದ್ದು ಅವರ ಹಿಂದಿನ  ಉದ್ದೇಶವೇನು? ಯಾರ ಹಿಂದೆ ನಡೆದಿದ್ದೇವೆ? ಎಲ್ಲಿಗೆ ಹೋಗುತ್ತಿದೆ ಜೀವ? ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದರೆ ಮೂಲದ ಮನೆ ಬಿಟ್ಟು ಹೊರಗೆ ಹೋದಷ್ಟೂ ತಿರುಗಿ ಬರೋದು ಕಷ್ಟ.
ಈ ಕಾರಣಕ್ಕಾಗಿ ಹಿಂದಿನ ಕಾಲದಲ್ಲಿ ಅವರವರ ಮೂಲ ಧರ್ಮ ಕರ್ಮ ಬಿಡದೆ ಒಗ್ಗಟ್ಟಿನಿಂದ ಒಂದೇ ಸ್ಥಳದಲ್ಲಿ ಅವರವರ ಶಿಕ್ಷಣ ಪಡೆದು ನೆಮ್ಮದಿಯಿಂದ ಜೀವನ ನಡೆಸುತ್ತಾ ಧರ್ಮ ರಕ್ಷಣೆ ಆಗಿತ್ತು.ಈಗ ಗುರು ಹಿರಿಯರೇ  ದೂರ ಹೋಗುತ್ತಿರುವಾಗ ಅವರ ಅನುಚರರ ಗತಿಯೇನು?  ಕಾಲದ ಪ್ರಭಾವ,  ಜ್ಞಾನ ಸದ್ಬಳಕೆ ಮಾಡಿಕೊಂಡರೆ ದಾನ ಧರ್ಮಕ್ಕೆ  ಬಳಕೆಯಾಗುತ್ತದೆ.ಋಣ ತೀರುತ್ತದೆ. ಆದರೆ ಹಣಸಂಪಾದನೆಯೇ ಅಜ್ಞಾನದಿಂದಾದರೆ ಅದನ್ನು ದಾನ ಧರ್ಮಕ್ಕೆ ಬಳಸಿದರೆ ಅಧರ್ಮಕ್ಕೆ ಜಯ. ಇದೊಂದು ಸಾಮಾನ್ಯ ಜ್ಞಾನವಷ್ಟೆ.ಮಾನವನ ಜೀವನ ಒಂದು ಚದುರಂಗದಾಟದಂತೆಇಲ್ಲಿ ಕಾಲಾಳುಗಳೂ ರಾಜನನ್ನು ಮತ್ತೆ ಬದುಕಿಸಬಹುದು.ಪ್ರಜಾಪ್ರಭುತ್ವದ ಭಾರತದಲ್ಲಿನ ಪ್ರತಿಯೊಬ್ಬ ಪ್ರಜೆಯೂ  ಕಾಲಾಳುಗಳೇ ಆದರೆ  ಅವರಿಗೆ ಗೊತ್ತಿಲ್ಲ ನಮ್ಮಲ್ಲಿಕ್ಷತ್ರಿಯಗುಣವಿದೆಯೆಂದು.ದೇಶರಕ್ಷಣೆಗಾಗಿ ಹೊರಗಿನ ಹೋರಾಟಕ್ಕಿಂತ ಒಳಗಿನ ಹೋರಾಟ ಅತಿಮುಖ್ಯ.ನಮ್ಮತನ ನಮ್ಮಧರ್ಮ, ನಮ್ಮ ದೇಶವನ್ನು ನಮ್ಮದೇ ಜ್ಞಾನದ ಶಿಕ್ಷಣದಿಂದ ಬೆಳೆಸುವುದಕ್ಕೆ ವಿದೇಶದವರೆಗೆ ಹೋಗುವ ಅಗತ್ಯವಿದೆಯೆ? ಹೋಗುವುದಕ್ಕೆ ಸುರಿಯುತ್ತಿರುವ ಲಕ್ಷಾಂತರ ರೂಗಳು ದೇಶದ ಸಾಲವಲ್ಲವೆ? ಈ ಸಾಲ ತೀರಿಸಲು ಮತ್ತೆ ಬರಲೇಬೇಕಷ್ಟೆ? ಇದೇ ಹಣವನ್ನು ಸದ್ಬಳಕೆ ಮಾಡಿಕೊಂಡು ಸ್ವತಂತ್ರ ಜೀವನ ನಡೆಸುವ ಜ್ಞಾನವಿಲ್ಲವೆ? ಕೆಲವರಿದ್ದಾರೆ ಅವರಿಂದ ದೇಶ ನಡೆಯುತ್ತಿದೆ. ಆದರೆ ಸಾಕಷ್ಟು ಜನರ ಆಸ್ತಿ ಇಲ್ಲಿ ಕೊಳೆಯುತ್ತಿದೆ. ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದರೆ ಮುಂದಿನ ದಿನಗಳಲ್ಲಿ ಅಂತಹ ಬುದ್ದಿವಂತರಿಗೆ ದೇಶದೊಳಗೇ ಉದ್ಯೋಗ ಸೃಷ್ಟಿ ಮಾಡಬಹುದು
ಆದರೆ ವಿದೇಶಿಗಳ ಕೈ ಕೆಳಗೆ ದುಡಿಯುವಂತಾಗಬಾರದು. ಮೂಲ ಕರ್ಮಕ್ಕೆ ತಕ್ಕಂತೆ ಶಿಕ್ಷಣ ನೀಡಿದರೆ ಆತ್ಮನಿರ್ಭರ ಭಾರತ ಸಾಧ್ಯ. ಈಗಾಗಲೇ ಎಷ್ಟೋ ಮಕ್ಕಳಿಗೆ ಸಾಲ  ನೀಡಿ ಬೆಳೆಸಲಾಗಿದೆ.ಆ ಸಾಲ ತೀರಿಸಲು ಕಷ್ಟಪಟ್ಟು ದೇಶದಲ್ಲಿದ್ದೇ ದುಡಿದರೆ ದೇಶವೂ ಸುರಕ್ಷಿತ ಜೀವಕ್ಕೂ ತೃಪ್ತಿ, ಮುಕ್ತಿ. ಇಂತಹ ಲೇಖನಗಳನ್ನು ಯಾರೂ ಇಷ್ಟಪಡೋದಿಲ್ಲ.ಕಾರಣ ಇದರೊಳಗಿರುವ ಸ್ವಾವಲಂಬನೆ, ಸರಳ ಜೀವನ,ಸತ್ಯ,
ಧರ್ಮ,ಸ್ವಾಭಿಮಾನ ಸ್ವತಂತ್ರ ಜೀವನ  ನಡೆಸುವವರನ್ನು ಸಮಾಜವೇ ತಿರಸ್ಕರಿಸಬಹುದೆನ್ನುವ ಬಾವನೆ ಹೆಚ್ಚಾಗಿ ಪರಾವಲಂಬಿಗಳು ಬೆಳೆದಿದ್ದಾರೆ. ಒಂದು ಸತ್ಯ ಜೀವಾತ್ಮ ಪರಮಾತ್ಮನೆಡೆಗೆ ಹೋಗಲು ಸಾಲ ತೀರಿಸಲೇಬೇಕು. ಅದೂ ತಂದೆ ತಾಯಿ,ಬಂದುಬಳಗ,ಗುರು, ದೇಶ ಭೂಮಿ  ಹೀಗೇ
ಮುಂದೆ ಮುಂದೆ ಬೆಳೆದಂತೆಲ್ಲಾ ತಿರುಗಿ ಬರಲಾಗದೆ ದಾರಿತಪ್ಪಿದ ಮಗನಾಗೋದು ಸತ್ಯ. ನಾನೆಷ್ಟು ಹಣಸಂಪಾದಿಸಿದರೂ ಸತ್ಯಜ್ಞಾನವಿಲ್ಲದೆ  ಸಾಲ ತೀರಿಸೋದು ಕಷ್ಟ. ಹೀಗಾಗಿ ಸತ್ಯ ಧರ್ಮ ದಿಂದ ಮಹಾತ್ಮರುಗಳು  ಪರಮಾತ್ಮನೆಡೆಗೆ ಸಾಗಿದ್ದರು.ಈಗಿನ‌ ಪರದೇಶ ಪರಮಾತ್ಮನ ದರ್ಶನ ಮಾಡಿಸುವುದೆ? ಸತ್ಯವಾಗಿಯೂ ದೂರದ ಬೆಟ್ಟ ನುಣ್ಣಗೆ ಎನ್ನುತ್ತಾರೆ. ಅಲ್ಲಿದ್ದವರು ಇಲ್ಲಿದ್ದವರನ್ನು ಅಧೃಷ್ಟವಂತರೆನ್ನಲು ಜ್ಞಾನಿಗಳಿಗಷ್ಟೆ ಸಾಧ್ಯ.ಜ್ಞಾನವಿದ್ದವರು ಅಲ್ಲಿಯವರೆಗೆ ಹೋಗುತ್ತಿರಲಿಲ್ಲ. ಆದರೆ ಈಗ  ಹೋಗುತ್ತಿರುವುದೇ ಜನರಿಗೆ ಸಮಸ್ಯೆಯಾಗುತ್ತಿದೆ. ಹಿಂದೂ ಧರ್ಮ  ಎಲ್ಲೆಡೆಯೂ ಇದೆ.ಆದರೆ ಭಾರತದಲ್ಲಿ ಹಿಂದುಳಿಯುತ್ತಿದೆ. ಮೂಲ ಬಿಟ್ಟು ಹೊರಗೆ ನಡೆದವರೆ ಹೆಚ್ಚು.ಹೊರಗಿನಿಂದ ಒಳಗೆ ಬಂದವರಲ್ಲಿ ಹಿಂದಿನ ಸತ್ಯದ ಅರಿವಿಲ್ಲ. ನಮ್ಮ ಹಿಂದಿನವರ ಸತ್ಯಜ್ಞಾನ ಬಿಡದೆ ನಡೆದರೆ ಹಿಂದೂಧರ್ಮ ರಕ್ಷಣೆ
ಯಾಗುತ್ತದೆ.ಇದನ್ನು ಇತರ ಧರ್ಮದವರು ಮಾಡಿದ್ದಾರೆ.ಆದರೆ ಅವರಲ್ಲಿ  ಸತ್ಯದ ಅರಿವಿಲ್ಲವಷ್ಟೆ. ಧರ್ಮ ಸೂಕ್ಷ್ಮ ವನ್ನರಿಯಲು ಆಂತರಿಕ ಶುದ್ದಿ ಅಗತ್ಯ. 
ಈ ಕಾರಣಕ್ಕಾಗಿಯೇ ಹಿಂದೆ ಅವರವರ ಜನ್ಮ ಸ್ಥಳ, ಮೂಲ ಧರ್ಮ ಶಿಕ್ಷಣ ಅದಕ್ಕೆ ತಕ್ಕಂತೆ ಕಾಯಕ ತತ್ವದರ್ಶನದಿಂದ  ಜನರಲ್ಲಿ ದೈವೀಕ  ಜ್ಞಾನ ಬೆಳೆಸುವತ್ತ ಶಿಕ್ಷಣವಿತ್ತು. ದೂರದ ದೇಶದವರನ್ನು ಪರದೇಶಿಗಳೆಂದು ಪರಕೀಯರೆಂದು ಕರೆದು ಹತ್ತಿರಬರದಂತೆ ನೋಡಿಕೊಂಡಿದ್ದರು. ಆದರೆ ಕಾಲ ಬದಲಾದಂತೆ  ಭೌತಿಕಾಸಕ್ತಿ ಹೆಚ್ಚಾಗಿ ಪರಕೀಯರ  ಕಡೆಗೆ ಶಿಕ್ಷಣ ನಡೆಯುತ್ತಾ  ಹಿಂದಿನ ಸತ್ವ,ಸತ್ಯ,ಧರ್ಮವು ಬೇರೆ ಆಗಿ  ಅಂತರ ಬೆಳೆಯಿತು. ಅಂತರದಲ್ಲಿ  ಅಜ್ಞಾನದ ವ್ಯವಹಾರ ಹೆಚ್ಚುತ್ತಾ ಸರಸ್ವತಿಗಿಂತ ಮೊದಲೇ ಲಕ್ಮಿ ಯ ಹಿಂದೆ ನಡೆದವರ ಹಿಂದೆ ನಡೆಯುತ್ತಾ ಸಮಾಜದಲ್ಲಿ ಅಸಮಾನತೆ,ಅಸಹಿಷ್ಣುತೆ,ಹಿಂಸೆ, ಅಧರ್ಮ ವೇ ತನ್ನ ಸ್ಥಾನ ಭದ್ರಗೊಳಿಸಿಕೊಂಡು ಮನುಕುಲದ ದಾರಿ ತಪ್ಪಿ ನಡೆಯಿತು. ದೇಹವಿರುವಾಗಲೇ ಒಳಗಿನ ಜೀವಾತ್ಮನಿಗೆ ಪರಮಾತ್ಮನ ದರ್ಶನ ವಾದರೆ ಅದೇ ಮುಕ್ತಿ. ಇದಕ್ಕಾಗಿ ಒಳಗೆ ಶುದ್ದ ಮಾಡಿಕೊಳ್ಳಲು ಸಾಧ್ಯವಾದಷ್ಟು ಸಾಲದಿಂದ ದೂರವಾಗಿ ಸತ್ಯದೆಡೆಗೆ ಧರ್ಮ ದೆಡೆಗೆ ನಡೆದವರೆ ಮಹಾತ್ಮರುಗಳು. ಇದನ್ನು ಬಿಟ್ಟು ಹೊರನಡೆದರೆ  ಅಂತರದಲ್ಲಿ ಮಧ್ಯವರ್ತಿಗಳು ನಿಂತು ಆಟವಾಡಿಸುವುದು ಸಹಜ.ಈಗ  ಮಾಧ್ಯಮವಾಗಲಿ,ಮಧ್ಯವರ್ತಿಗಳಾಗಲಿ ವ್ಯವಹಾರ ಬಿಟ್ಟು ಯೋಚಿಸಲು ಸಾಧ್ಯವೆ? ವ್ಯವಹಾರದಲ್ಲಿ ಲಾಭ ಬಿಟ್ಟು ನಡೆಸಬಹುದೆ.ಲಾಭ ಹೆಚ್ಚಲು ಅಸತ್ಯ ದಿಂದ ಮಾತ್ರ ಸಾಧ್ಯ. ಸತ್ಯವೇ ದೇವರಾದಾಗ ಅಸತ್ಯ ಯಾರು? ನಾವು ಯಾರ ಹಿಂದೆ ನಡೆದಿದ್ದೇವೆ.ಎಲ್ಲಿಗೆ ಹೋಗುತ್ತೇವೆ? ಇದರ ಬಗ್ಗೆ ಧಾರ್ಮಿ ಕ ಚಿಂತಕರು ಆತ್ಮಾವಲೋಕನ ಮಾಡಿಕೊಳ್ಳಲು ಸಮಯವಿದೆ. ತತ್ವಕ್ಕೂ ತಂತ್ರಕ್ಕೂ ವ್ಯತ್ಯಾಸವಿಲ್ಲವೆ? ರಾಜಯೋಗಕ್ಕೂ ರಾಜಕೀಯಕ್ಕೂ   ವ್ಯತ್ಯಾಸವಿಲ್ಲವೆ? ದೇವರಿಗೂ ಅಸುರರಿಗೂ ವ್ಯತ್ಯಾಸವಿಲ್ಲವೆ? ಭೂಮಿಯ ಮೇಲಿರುವಾಗ ಎಲ್ಲಾ ಮಾನವರೆ.ಅವರೊಳಗಿರುವ ತತ್ವ ಹಾಗು ತಂತ್ರದ. ಆಧಾರದಲ್ಲಿದೆ ಅವರವರ ಜೀವನ.ಒಟ್ಟಾರೆ ಒಬ್ಬರನ್ನೊಬ್ಬರು ಅವಲಂಬಿಸಿ ನಡೆಯುವಾಗ  ಎಚ್ಚರಿಕೆ ಅಗತ್ಯವೆನ್ನಬಹುದಷ್ಟೆ.ಜ್ಞಾನವಿಲ್ಲದವರಿಗೆ ಜ್ಞಾನವಿದ್ದವರು ತಿಳಿಸಿ ಕಲಿಸಬೇಕು. ಹಣವಿದ್ದವರಿಗೂ ಜ್ಞಾನ ಕೊಟ್ಟು ಹಣ ಸಧ್ಬಳಕೆ ಮಾಡಿಕೊಳ್ಳಲು ಸಹಕರಿಸಬೇಕು. ಇದಕ್ಕಾಗಿ ಜ್ಞಾನಿಗಳೇ ದೇಶದ ಆಸ್ತಿ.ಜ್ಞಾನವೇ ಮಾನವನ ಆಸ್ತಿ.  

Wednesday, August 24, 2022

ನಿಮ್ಮದು ಯಾವ‌ ಪಕ್ಷ?

    ಹಿಂದೂ ಪಕ್ಷ, ಮುಸ್ಲಿಂ ಪಕ್ಷ, ಕ್ರೈಸ್ತ ಪಕ್ಷದಲ್ಲಿ ಪಿತೃಪಕ್ಷವೇ ಇಲ್ಲವಾದರೆ  ಮಾತೆಗೆ ಪಕ್ಷಪಾತವೇ ಗತಿ. ಹಿಂದೂ ಧರ್ಮ ಎಂದರೆ ಅವರವರ ಹಿಂದಿನ ಗುರು ಹಿರಿಯರು ನಡೆದ ದಾರಿ, ಧರ್ಮ,ಕರ್ಮವಾಗುತ್ತದೆ. ಹಾಗಾದರೆ ಭಾರತೀಯರ ಧರ್ಮ ಒಂದೇ. ಅದೇ ಭಾರತೀಯತೆಯನ್ನು ಬೆಳೆಸಿ  ಕಲಿಸಿ,vಉಳಿಸುವುದಾಗಿತ್ತು. ಇದನ್ನು ಹಿಂದಿನ ಕಾಲದಲ್ಲಿದ್ದ ಶಿಕ್ಷಣದಲ್ಲಿಯೇ ಮಕ್ಕಳಿಗೆ ಮನೆ ಮನೆಯಲ್ಲಿ ಕಲಿಸುವ‌ ಅವಕಾಶದ ಜೊತೆಗೆ  ಗುರುಕುಲಗಳಿದ್ದವು.ಯಾವುದೇ ರಾಜಕೀಯ ಲೇಪನವಿಲ್ಲದೆ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಶಿಕ್ಷಣ ನೀಡಿ ಸ್ವಾವಲಂಬನೆ, ಸ್ವಾಭಿಮಾನ, ಸರಳ ಜೀವನದಲ್ಲಿ ಸ್ವತಂತ್ರ ಕಂಡಿದ್ದ ಭಾರತವನ್ನು ಆಳಲು ಬಂದವರ ಹಿಂದೆ ನಡೆದವರು ಈಗಲೂ ಧರ್ಮದ ಹುಡುಕಾಟ ನಡೆಸುತ್ತಾ ರಾಜಕೀಯ ಬಿಡದೆ  ಮುಂದೆ ಹೋಗಿ ಅತಂತ್ರಸ್ಥಿತಿಗೆ ತಾವೂ ತಲುಪಿ ಹಿಂದೆ ಬಂದವರಿಗೂ ದಾರಿತಪ್ಪಿಸಲಾಗಿದೆ. 
    ಹಾಗಾದರೆ ದಾರಿ ತಪ್ಪಿಸಿರೋರನ್ನು ದೂರಿಕೊಂಡಿದ್ದರೆ ದಾರಿ  ಸರಿಯಾಗುವುದೆ? ಅಥವಾ ನಮ್ಮ ಹತ್ತಿರವಿರುವ ಸರಿಯಾದ ದಾರಿ ನಾವೇ ಆರಿಸಿಕೊಂಡು ಮೂಲ ಸೇರಬೇಕೆ? ಎಲ್ಲಿದೆ ಧರ್ಮ? ಎಲ್ಲಿದೆ  ಶಿಕ್ಷಣ ನೀತಿ? ಎಲ್ಲಿಗೆ  ಹೋಗುತ್ತಿದೆ ಭಾರತ? ಒಳಗಿನ  ಹುಳುಕನ್ನು ಮುಚ್ಚಿ ಹೊರಗೆ ತೇಪೆ ಹಾಕಿದರೂ ಒಳಗೇ ಕೊಳೆತು ನಾರುವ  ಕೆಟ್ಟ ಮನಸ್ಸನ್ನು ಸರಿಪಡಿಸಲು ಯಾವ ಸರ್ಕಾರದಿಂದಲೂ ಕಷ್ಟ. ಇದೊಂದು ಪ್ರಜಾಪ್ರಭುತ್ವ ದೇಶ. ಪ್ರಜೆಗಳೇ ಸರಿಯಾದ ಮಾರ್ಗವನ್ನು ಧರ್ಮದ ಕಡೆಗೆ ಆರಿಸಿಕೊಂಡು ಅವರವರ ಸಂಸಾರವನ್ನು ಭದ್ರಗೊಳಿಸಿಕೊಂಡರೆ ಹೊರಗಿನವರಿಗೆ ಕೆಲಸವಿರೋದಿಲ್ಲ. ಒಟ್ಟಿನಲ್ಲಿ ಹೊರಗಿನವರ ಹಿಂದೆ ಹೋದರೆ ಧರ್ಮ ಉಳಿಯೋದಿರಲಿ ಅಳಿಯದಿದ್ದರೆ ಸಾಕು. ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ,  ಧರ್ಮವನ್ನು ಯಾರು ಉಳಿಸುವರೋ ಅವರಿಗೆ ಮುಕ್ತಿ. ಅಂದರೆ ದೇಶಭಕ್ತಿ ಪ್ರಜೆಗಳಿಗೆ ಅಗತ್ಯವಿದೆ. ಇದಕ್ಕೆ ರಾಜಕೀಯಕ್ಕಿಂತ ರಾಜಯೋಗದ ಅವಶ್ಯಕತೆ ಇದೆ. ಇದನ್ನು ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಪೂರ್ವದಲ್ಲಿಯೇ ತಿಳಿಸಿದ್ದರು. ಆದರೆ ವಿಪರ್ಯಾಸವೆಂದರೆ ವಿವೇಕಾನಂದರ ಸಂದೇಶಗಳನ್ನು ಶಿಕ್ಷಣದಲ್ಲಿ  ಅಳವಡಿಸದೆ ಪ್ರಚಾರಕ್ಕಷ್ಟೇ ಬಳಸಿದವರೆ  ಹೆಚ್ಚು.             ವಿಚಾರವನ್ನು ವೇದನೆಯಿಲ್ಲದೆ ತಿಳಿದು ಪಡೆಯುವ ಆನಂದ ವಿವೇಕಾನಂದ. ವಿಚಾರವನ್ನು ವೇದ ಶಾಸ್ತ್ರಗಳಲ್ಲಿ ಅಡಗಿರುವ ಸತ್ಯಜ್ಞಾನದಿಂದ ಅರ್ಥಮಾಡಿಕೊಂಡು ಕಾಣುವ ಆತ್ಮಾನಂದವೇ ವಿವೇಕಾನಂದ. ವಿವೇಕವನ್ನು ಹೆಚ್ಚಿಸಿಕೊಳ್ಳಲು ರಾಜಯೋಗದ ಅಗತ್ಯವಿದೆ.ವಿವೇಕವುಳ್ಳವರ ಪಕ್ಷ ಯಾವುದಿದೆ? 


ಆರೋಗ್ಯ ಮತ್ತು ಯೋಗ

ಆರೋಗ್ಯ ಮತ್ತು ಯೋಗ

    ಆರೋಗ್ಯವೆಂದರೆ ಆರು ಯೋಗ್ಯವಾಗಿ ಬಳಸಿಕೊಂಡು ರೋಗವಿಲ್ಲದಿರೋದೆಂದರ್ಥದಲ್ಲಿ ಯೋಗವನ್ನು ತಿಳಿದಾಗ ಯಾವುದೇ ವಿಚಾರವಿರಲಿ ನಮ್ಮ ಮನಸ್ಸು ಮತ್ತು ಆತ್ಮನ ಸೇರುವಿಕೆ ಎಂದಾಗುತ್ತದೆ. ಪ್ರತಿಯೊಂದು ಚರಾಚರದಲ್ಲಿಯೂ ಅಡಗಿರುವ ಅಣುಶಕ್ತಿಯಲ್ಲಿ ತನ್ನದೇ ಆದ ವಿಶೇಷವಿರುತ್ತದೆ. ಆ ಅಣುಶಕ್ತಿಗಳ ಒಕ್ಕೂಟದಿಂದ ಇಡೀ ಬ್ರಹ್ಮಾಂಡ ನಡೆಯುತ್ತಿದೆ. ಒಳ್ಳೆಯದಕ್ಕೆ ಬಳಸಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದಕ್ಕೆ ಬಳಸಿದರೆ ಕೆಟ್ಟದ್ದಾಗಿ ಬೆಳೆದು ತಿರುಗಿ  ಹೊಡೆಯುತ್ತದೆ. ಭೂಮಿಯನ್ನು ಸದ್ಬಳಕೆ ಮಾಡಿಕೊಂಡರೆ  ಆರೋಗ್ಯಕರ ಜೀವನ ನಡೆಸಬಹುದು.
    ಹೀಗೇ ಮಾನವನ ಆಹಾರ, ವಿಹಾರಗಳ ಮೇಲೇ ಆರೋಗ್ಯವಿದೆ. ರಾಜಯೋಗದ ಪ್ರಕಾರ ಹೇಳುವುದಾದರೆ ಮಾನವ ತನ್ನ ತಾನರಿತು ನಡೆಯೋದೇ ಕಷ್ಟ. ಕಾರಣ ನಮ್ಮ ಮನಸ್ಸನ್ನು ತಡೆಹಿಡಿದು ಪರಿಶುದ್ದವಾದ ನಿಯಮಗಳನ್ನು ಅನುಸರಿಸುವುದಕ್ಕೆ ಯೋಗವಿರಬೇಕು. ಪರಿಶುದ್ಧವಾದ ಮನಸ್ಸನ್ನು ಕೊಡುವ ಆಹಾರ ಸೇವನೆ ಎಲ್ಲರಿಗೂ ಕಷ್ಟ. ಮೃಗಾಲಯದಲ್ಲಿರುವ ಆನೆಗೂ ಸಿಂಹಕ್ಕೂ ಎಷ್ಟು ವ್ಯತ್ಯಾಸವೆಂದರೆ, ದೊಡ್ಡ ಗಾತ್ರದ ಆನೆ ಶಾಂತವಾಗಿದ್ದರೆ ಸಿಂಹ ಚಂಚಲತೆಯಿಂದ  ತಿರುಗುತ್ತಿರುತ್ತದೆ ಕಾರಣ ಅವುಗಳ ಆಹಾರ ಸೇವನೆ. ಸಾತ್ವಿಕ, ರಾಜಸ ಹಾಗು ತಾಮಸ ಆಹಾರದ ಗುಣವೇ ಇದಕ್ಕೆ ಕಾರಣ.
    ಉಪವಾಸದಿಂದ ಆರೋಗ್ಯವೃದ್ದಿಯಾಗುತ್ತದೆ ಎನ್ನುತ್ತಾರೆ. ಆದರೆ, ಉಪವಾಸ ಮಾಡಿದರೆ ಶರೀರ ದುರ್ಭಲವಾಗಿ, ಕ್ಷೀಣಿಸಿ, ಶಕ್ತಿಹೀನ ಸ್ಮೃತಿ, ಹೀನ ಸ್ಥಿತಿಗೆ ಬರೋವಷ್ಟು ಮಾಡಬಾರದೆನ್ನುತ್ತಾರೆ ಯೋಗಿಗಳು. ಕಾರಣ ಅಧ್ಯಾತ್ಮ ಸಾಧನೆಗೆ ಅಡ್ಡಿಯಾಗುವುದೆಂದು. ಮೊದಲು ಮಾನವನಾಗು ನಂತರ ಮಹಾತ್ಮನಾಗಬಹುದು.ಆಂತರಿಕ ಶುದ್ದಿಯ ಜೊತೆಗೆ ಬಾಹ್ಯ ಶುದ್ದಿ ಮಾಡಿಕೊಂಡರೆ ಪರಿಪೂರ್ಣತೆ .ಹೀಗಾಗಿ ಆರೋಗ್ಯ ಚೆನ್ನಾಗಿರಬೇಕಾದರೆ ಯೋಗ ಮುಖ್ಯ.  ಯೋಗಾಸನ‌ ಮಾಡುತ್ತಿದ್ದೇನೆಂದು  ಚೆನ್ನಾಗಿ ತಿಂದರೆ ಆಗೋದಿಲ್ಲ. ಯೋಗವೆಂದರೆ  ಕೂಡುವುದು ಸೇರುವುದು ಎಂದರೆ ನಮ್ಮ‌ಮೂಲದ ಧರ್ಮ, ಕರ್ಮ, ಜ್ಞಾನ, ಆಹಾರ, ಸಂಸ್ಕೃತಿ, ಸಂಪ್ರದಾಯ, ಸತ್ಯದೆಡೆಗೆ ಮನಸ್ಸನ್ನು ಸೇರಿಸಿಕೊಳ್ಳುವುದು ಯೋಗ. ಒಳಗಿನ ಶಕ್ತಿ ಹೊರಗಿನ ಶಕ್ತಿಯನ್ನು ಅರ್ಥ ಮಾಡಿಕೊಂಡು ನಡೆಯುವುದೇ ಯೋಗ.  ನಮ್ಮದಲ್ಲದ  ವಿಚಾರ, ವಿಷಯ, ವಸ್ತು, ಜ್ಞಾನದೆಡೆಗೆ ನಡೆದಂತೆಲ್ಲಾ ಒಳಗಿನ ಆರೋಗ್ಯಕ್ಕೆ ಹಾನಿ. ಸಕಾರಾತ್ಮಕ ನಕಾರಾತ್ಮಕ ಎರಡೂ ಒಂದೇ ಮಾರ್ಗದಲ್ಲಿ ನಡೆಯಲಾಗದು. ಹೀಗಾಗಿ ಅಧ್ಯಾತ್ಮ ಹಾಗು ಭೌತಿಕ ಜಗತ್ತಿನ ಮಧ್ಯೆ ಬೆಳೆದಿರುವ ಅಂತರಕ್ಕೆ ಕಾರಣವೇ ಇದರಲ್ಲಿರುವ  ಸಾತ್ವಿಕ ಸತ್ಯವನ್ನು  ಬಿಟ್ಟು ಭೌತಿಕದಲ್ಲಿ ನಡೆದಿರುವುದು. ಹೀಗಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ‌  ಸಂಸಾರವು ಸಮಾಜದೊಳಗಿದೆ  ಎನ್ನುವ ಸತ್ಯ ತಿಳಿದು, ಒಳಗಿರುವ ಸಮಾಜವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅವರವರ ಮೂಲದ ಆಹಾರವನ್ನು, ಶಿಕ್ಷಣವನ್ನು, ಧರ್ಮ ಕರ್ಮವನ್ನರಿತರೆ  ಆರೋಗ್ಯವಂತ ರಾಷ್ಟ್ರ ನಿರ್ಮಾಣ ಸಾಧ್ಯ.ಇದಕ್ಕಾಗಿ  ನಮ್ಮ ನಮ್ಮ ಆಂತರಿಕ ಶುದ್ದಿಗಾಗಿ ಪ್ರಯತ್ನ ಪಟ್ಟರೆ ಒಳಗೇ ಇರುವ ಆ ದೈವಶಕ್ತಿಯಿಂದ  ಆರೋಗ್ಯ ರಕ್ಷಣೆ ಸಾಧ್ಯ.
    ಯೋಗಿಗಳಿಂದ ದೇಶೋದ್ದಾರ, ಧರ್ಮದ ಉದ್ದಾರ ಸಾಧ್ಯ. ಇಡೀ ದೇಶವನ್ನು ಒಬ್ಬರಿಂದ ಸರಿಪಡಿಸಲಾಗದು. ಪ್ರತಿಯೊಬ್ಬರೂ ಅವರವರ  ಮೂಲವನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾದರೆ ಯಾವ ಸರ್ಕಾರದ ಹಣವೂ ಬೇಡ. ಸಾಲವೂ ಬೆಳೆಯಲ್ಲ, ಔಷಧವಂತೂ ಬೇಡ. ಆರೋಗ್ಯ ರಕ್ಷಣೆಗೆ ಯೋಗ ಬೇಕು. ಯೋಗ್ಯ ಶಿಕ್ಷಣ ಬೇಕು. ಆರು ಯೋಗ್ಯ ರೀತಿಯಲ್ಲಿ ಬಳಸಬೇಕು. ಇದೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಷಡ್ವರ್ಗದ ಅತಿರೇಖವೇ  ಅನಾರೋಗ್ಯಕರ ಸಮಾಜ ನಿರ್ಮಾಣ ಮಾಡಿ ಆಳುತ್ತಿದೆ. ಇದಕ್ಕೆ ನಮ್ಮದೇ ಸಹಕಾರ ಇದ್ದಾಗ  ದೇಹವನ್ನು ಅದೇ ನಡೆಸಿದೆಯಲ್ಲವೆ? ಎಲ್ಲಿರುವುದು ಆರೋಗ್ಯ? ಕೊನೆಪಕ್ಷ  ರೋಗಕ್ಕೆ ಔಷಧವಾಗಿ  ಆಯುರ್ವೇದ ವನ್ನಾದರೂ ಬಳಸಬಹುದೆ? ಹೊರಗಿನ ರೋಗಕ್ಕೆ ಔಷಧವೂ ಹೊರಗಿನಿಂದ  ಪಡೆಯುವ ಸ್ಥಿತಿಗೆ  ಬಂದಿರುವುದೇ ದೊಡ್ಡ ಸಮಸ್ಯೆ. ಇದರಿಂದ ಬಿಡುಗಡೆ ಪಡೆಯಲು ಒಳಗಿನ ಆರೋಗ್ಯಕರ ಶಿಕ್ಷಣವಿದ್ದರೆ ಉತ್ತಮ.ಇದರಲ್ಲಿ ರಾಜಕೀಯ ಇಲ್ಲದೆ ಮಕ್ಕಳ ಜ್ಞಾನಕ್ಕೆ ತಕ್ಕಂತೆ  ಇದ್ದರೆ  ಆರೋಗ್ಯವಂತ ಮಕ್ಕಳಿಂದ ಆರೋಗ್ಯವಂತ ಪ್ರಜೆಗಳು ಬೆಳೆಯಬಹುದು. ಇದಕ್ಕೆ ಪೋಷಕ ಪ್ರಜೆಗಳೇ ವಿರೋಧಿಗಳಾದರೆ  ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದ ಹೀಗಾಗುತ್ತದೆ. 



Tuesday, August 23, 2022

ಆತ್ಮಜ್ಞಾನಿ=ಭೌತವಿಜ್ಞಾನಿ?

ಅಧ್ಯಾತ್ಮ  ವಿಜ್ಞಾನ ಮತ್ತು ಭೌತ ವಿಜ್ಞಾನ  ಎರಡೂ ಸೇರೋದೂ ಒಂದೇ ಕಡೆ. ಆಕಾಶತತ್ವವನ್ನು ಭೂಮಿ ಮೇಲಿದ್ದೇ ಯಾವುದೇ ಜೀವ ಜಂತುಗಳಿಗೆ ತೊಂದರೆ ಕೊಡದೆ ತಪ್ಪಸ್ಸಿನಿಂದ ತಿಳಿದ ಆತ್ಮಜ್ಞಾನಿಗಳಿಗೂ, ಆಕಾಶದೆತ್ತರ ಹಾರಿ,ಬೇರೆ ಬೇರೆ ಗ್ರಹಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ  ಭೂಮಿಯ ಮೇಲಿದ್ದರೂ ಆಕಾಶದೆತ್ತರ ದ ಚಿಂತನೆಯಲ್ಲಿಯೆ ಜೀವನ ನಡೆಸುವ ಭೌತ ವಿಜ್ಞಾನಿಗೂ ವ್ಯತ್ಯಾಸವಿಷ್ಡೆ. ಇವರಿಂದ ಅಲ್ಪ ಸ್ವಲ್ಪ ಜ್ಞಾನ‌ಪಡೆದು ಭೂಮಿಯಲ್ಲಿ ಜೀವನ‌ನಡೆಸುವ ಮಾನವರಿಗೆ ಮಾತ್ರ ಇಬ್ಬರ ಶಕ್ತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅರ್ಧ ಸತ್ಯದ ರಾಜಕೀಯದಲ್ಲಿಯೇ ಕಾಲಹರಣ ಮಾಡಿಕೊಂಡು  ಜೀವನದ ಸತ್ಯಾಸತ್ಯತೆಯನ್ನು  ತಿಳಿಯಲಾಗದೆ ಭೂಮಿಯಲ್ಲಿ ಸಮಸ್ಯೆಗಳೇ ಬೆಳೆಸಿರೋದು. ಆ ಸಮಸ್ಯೆಯೊಳಗೇ  ಜೀವನ ನಡೆಸೋ ಏಕೈಕ ಪ್ರಾಣಿಸಂಸಾರಿ. ಸಸ್ಯಗಳನ್ನು ತಿಂದು ಬದುಕಿದವರು ಸಸ್ಯಹಾರಿ, ಪ್ರಾಣಿಗಳನ್ನು ತಿಂದು  ಬದುಕಿದವರು ಶಾಕಾಹಾರಿಗಳು,ಸಮಸ್ಯೆಗಳನ್ನು ತಿಂದು ಬದುಕಿದವರೆ ಸಂಸಾರಿಗಳು. ಒಟ್ಟಿನಲ್ಲಿ ಸಂಸಾರಿಗಳಿಗಿರುವಷ್ಡು ಸಮಸ್ಯೆ ಯಾವ ಆತ್ಮಜ್ಞಾನಿಗೂ ಇಲ್ಲ ವಿಜ್ಞಾನಿಗೂ ಇಲ್ಲ. ಇದಕ್ಕೆ ಕಾರಣವೇ ಯಾರೋ ಕಂಡುಹಿಡಿದಸತ್ಯವನ್ನು ನಾನು ಕಂಡು ಹಿಡಿದೆ ಎನ್ನುವ ಅಹಂಕಾರ,ಸ್ವಾರ್ಥ ದ ವ್ಯವಹಾರ ಜ್ಞಾನ. ಅತಿಯಾದರೆ ಗತಿಗೇಡು.

ಅರ್ಜುನನ ಧರ್ಮ ಸಂಕಟ ನಮಗಿದೆಯೆ?

ಅರ್ಜುನನ ಧರ್ಮ ಸಂಕಟ  ಸಾಮಾನ್ಯವಾಗಿ ಇಂದು ಎಲ್ಲರೊಳಗೂ ಅಡಗಿದ್ದರೂ ಅದನ್ನು ಬಗೆಹರಿಸುವ‌ಕೃಷ್ಣನ ತತ್ವ ಜ್ಞಾನದ ಕೊರತೆ ಮನುಕುಲವನ್ನು ದಾರಿ ತಪ್ಪಿಸುತ್ತಿದೆ. ಹಾಗಾದರೆ ಇಲ್ಲಿ  ಅರ್ಜುನ ಯಾರು? ಕೃಷ್ಣನೆಲ್ಲಿರೋದು?  ಅಂದಿನ ಕ್ಷತ್ರಿಯರು ಇಂದಿಲ್ಲ. ಅಂದಿನ ರಾಜಪ್ರಭುತ್ವ ಇಂದಿಲ್ಲ.ಅಂದಿನ ಶಿಕ್ಷಣ ಇಂದಿಲ್ಲ.ಅಂದಿನ ಗುರು ಹಿರಿಯರು ಇಂದಿಲ್ಲ.ಅಂದಿನ ಧಾರ್ಮಿಕ  ಕಾರ್ಯಕ್ರಮದೊಳಗಿದ್ದ ಸತ್ಯ ಇಂದಿಲ್ಲ.ಹಾಗಾದರೆ ಅಂದಿನ  ಪುರಾಣ,ಇತಿಹಾಸದ ಪ್ರಚಾರ ಇಂದು ಯಾಕೆ ಬೇಕು? ಎಂದಾಗ  ನಮಗೆ ವಿಷಯದೊಳಗಿದ್ದ ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ ಯಿಂದ  ಭೂಮಿಯಲ್ಲಿ ಯಾವ ಸತ್ಯ ಸತ್ವ ಉಳಿಸಬಹುದು ಬೆಳೆಸಬಹುದೆನ್ನುವ  ಜ್ಞಾನ ಹೆಚ್ಚಾಗುವುದಾದರೆ ಇದರ ಅಗತ್ಯವಿದೆ. ಈ. ವಿಚಾರಗಳನ್ನು ಬಳಸಿಕೊಂಡು ವ್ಯವಹಾರ ಬೆಳೆಸಿಕೊಂಡು  ಹಣ,ಅಧಿಕಾರ, ಸ್ಥಾನಮಾನದಿಂದ ಜನರನ್ನು ಆಳೋದಾದರೆ ಇಲ್ಲಿ ಯಾವುದೇ ರಾಜಪ್ರಭುತ್ವ ಇಲ್ಲವೆನ್ನಬಹುದು. ಇದೇ ಅಧರ್ಮಿಗಳಿಗೆ  ಶಕ್ತಿ ಹೆಚ್ಚಿಸಿ ಅಸುರರ ಸಾಮ್ರಾಜ್ಯ ಮಾಡುತ್ತಿದೆ ಎಂದರೆ ತಪ್ಪು ಎನ್ನುವ ನಮಗೆ ಅರ್ಜುನನಿಗಿದ್ದ  ಧರ್ಮ ಸಂಕಟವಿದೆ. ಪಂಚಪಾಂಡವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಆದರೂ  ಯುದ್ದ ಮಾಡಲು ಅರ್ಜುನ ಹಿಂದೇಟು ಹಾಕಿದ್ದನು.ಎಂದಾಗ ನಮಗೆ ದೇಶ ಎಷ್ಟು ಸುಖ,ಸಂತೋಷ ನೀಡಿದ್ದರೂ ದೇಶಕ್ಕೆ ಅಪಾಯ ಬಂದಾಗ ನಮ್ಮ ಸ್ವಾರ್ಥ, ಅಹಂಕಾರ ಬಿಡದೆ, ನಮ್ಮಲ್ಲಿ ಒಗ್ಗಟ್ಟು ಏಕತೆ,ಐಕ್ಯತೆಯನ್ನು ರಾಜಕೀಯವಾಗಿ ಬೆಳೆಸಿಕೊಂಡು ಒಬ್ಬರನ್ನೊಬ್ಬರು ಅವಲಂಬಿಸಿಕೊಂಡು ನಮ್ಮವರು ಮಾಡಿದ ತಪ್ಪನ್ನು ತಿದ್ದದೆ ಬೇರೆಯವರ ತಪ್ಪನ್ನುತಿದ್ದುವ ಪ್ರಯತ್ನದಲ್ಲಿ 
ನಾವೇ ಸೋತಿದ್ದೇವೆ. ಹೀಗಿರುವಾಗ ಎಲ್ಲರಲ್ಲಿಯೂ ಇದ್ದು ಎಲ್ಲರ ಕರ್ಮಕ್ಕನುಗುಣವಾಗಿ ನಡೆಸಿದ ಶ್ರೀ ಕೃಷ್ಣನ ತತ್ವವನ್ನು ನಮ್ಮೊಳಗೇ ತೆಗೆದುಕೊಳ್ಳುವಜ್ಞಾನವಿಲ್ಲದೆ ಭೌತಿಕದಲ್ಲಿ ಸಾಕಷ್ಟು ಮುಂಮದುವರಿದರೂ ಅಧ್ಯಾತ್ಮದ ಪ್ರಕಾರ ಎಲ್ಲರೂ ಹಿಂದುಳಿದ ಹಿಂದೂಗಳೇ . ಭಾರತ ಹಿಂದಿನಿಂದಲೂ ಎಲ್ಲರನ್ನೂ ನಮ್ಮವರೆಂದು ಕರೆದು ಕೂರಿಸಿ ಸ್ವಾಗತಿಸಿದ ಮಹಾದೇಶ. ಅತಿಥಿ ಸತ್ಕಾರಕ್ಕೆ ಹೆಸರಾದ ದೇಶ.ಆದರೆ, ಯಾರಿಗೆ ಅತಿ ಸತ್ಕಾರ ಮಾಡಿ ಒಳಗೇ ಬೆಳೆಸಿದೆವೋ ಅವರೇ ತಿಥಿ  ಮಾಡೋ ಪರಿಸ್ಥಿತಿ ಎದುರಿಸಿದ್ದೂ ಇದೇ ದೇಶ.  ಅರ್ಜುನ ನಿಗೆ ಗುರು ಹಿರಿಯರಲ್ಲಿದ್ದ ಭಕ್ತಿ ಗೌರವ,ಪ್ರೀತಿಯಿಂದ ಯುದ್ದ ಮಾಡಲು ಹಿಂಜರಿಕೆಯಾದರೂ  ಕುರುಕ್ಷೇತ್ರ ಯುದ್ದವು ಧರ್ಮ ಸ್ಥಾಪನೆಯ ಗುರಿ ಹೊಂದಿದ ಕಾರಣ ಅಂದಿನ‌ ಕೌರವರ ಅಧರ್ಮ ಯುಕ್ತ ಆಡಳಿತವನ್ನು  ನಿಲ್ಲಿಸಿ ಧರ್ಮ ಸ್ಥಾಪನೆಗಾಗಿಯೇ  ಜನ್ಮತಳೆದ ಮಹಾ ವೀರರಿಗೆ ಸ್ವರ್ಗ ದೊರುಕುವುದು ಕೇವಲ ಧರ್ಮ ಯುದ್ದದಿಂದಲೇ ಎನ್ನುವ ಸತ್ಯವನ್ನು ಶ್ರೀ ಕೃಷ್ಣ ಪರಮಾತ್ಮನೇ ಮುಂದೆ ನಿಂತು ಭಗವದ್ಗೀತೆ ಯ ಮೂಲಕ ಮಹಾವೀರ ಅರ್ಜುನನ ವಿಷಾಧ ವನ್ನು ತೊಲಗಿಸಿದ್ದ. ದ್ವಾಪರದಿಂದ ಕಲಿಯುಗಕ್ಕೆ ಮನುಕುಲ ಕಾಲಿಟ್ಟಿದೆ.ಅಂದಿನ  ಕ್ಷಾತ್ರಧರ್ಮ ಇಂದಿಲ್ಲ. ಅಂದಿನ ಸತ್ಯಜ್ಞಾನ ಇಂದಿಲ್ಲವಾದರೂ ಜನನ ಮರಣಗಳಿವೆ. ಜೀವನದ ಮುಖ್ಯ ಗುರಿ ಅಧ್ಯಾತ್ಮದ ಪ್ರಕಾರ  ಮುಕ್ತಿ ಪಡೆಯೋದಾದರೆ ಭೌತಿಕದಲ್ಲಿ ಗುರಿಯನ್ನು   ಅನಾವಶ್ಯಕ ವಿಚಾರಗಳನ್ನು ತಿಳಿಯುತ್ತಾ ಒಳಗಿದ್ದ ಗುರು,ಗುರಿ ಕಾಣದೆ ಜನರ ಜೀವನ ನಡೆದಿದೆ. ಪ್ರಜಾಪ್ರಭುತ್ವದ ಪ್ರಜೆಗಳೇ ಇಲ್ಲಿ ರಾಜರು. ರಾಜಯೋಗದಿಂದ ದೇಶವನ್ನು ಆಳುತ್ತಿದ್ದ ಅಂದಿನ ಮೂಲ ಶಿಕ್ಷಣವಿಲ್ಲದೆ ಮೂಲ ದಲ್ಲಿಯೇ ರಾಜಕೀಯ ತೂರಿಸಿಕೊಂಡು ಮಹಿಳೆ ಮಕ್ಕಳು ಹೊರಬಂದರೆ ಇಲ್ಲಿ ಯುದ್ದ ಯಾರ ವಿರುದ್ದ ನಡೆಯುತ್ತಿದೆ? ಮನೆ ಮನೆಯೊಳಗಿನ ರಾಮಾಯಣ,ಮಹಾಭಾರತ ಕಥೆ ರಾಜಕೀಯಕ್ಕೆ ಸೀಮಿತವಾಗಿ ಸ್ತ್ರೀ ಶಕ್ತಿಯನ್ನು ಆಳಲು ಹೊರಟು ಇನ್ನಷ್ಟು ಸಾಲದ ಹೊರೆ ಹೊತ್ತು ದೇಶಕ್ಕೆ ಭಾರ ಭಾರತಕ್ಕೆ ಕಷ್ಟ ನಷ್ಟವಾದರೂ  ಧರ್ಮದ ಅರ್ಥ ತಿಳಿಯದೆ ಮುಂದೆ ಹೋಗಿ ಹಿಂದಿನ ಸತ್ಯ ಸತ್ವ,ತತ್ವವೇ ಇಲ್ಲದೆ  ಯುದ್ದಕ್ಕೆ ನಿಂತರೆ  ಜೀವ ಹೋದರೂ ಜ್ಞಾನ ಬರೋದಿಲ್ಲ. 
ಹಿಂದಿನ ಮಹಾಜ್ಞಾನಿಗಳಲ್ಲಿದ್ದ ತತ್ವಜ್ಞಾನ ಇಂದಿನ ತಂತ್ರಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಕಷ್ಟ.ಸ್ವಲ್ಪ ಮಟ್ಟಿಗೆ ಅಳವಡಿಸಿಕೊಂಡರೆ ಅನುಭವಕ್ಕೆ ಬರುತ್ತದೆ. ಅದ್ವೈತ ಎಂದರೆ ಒಗ್ಗಟ್ಟು, ಒಂದು,ಏಕತೆ,ಐಕ್ಯತೆ ಎಂದಾಗ ದೇವನೊಬ್ಬನೆ ನಾಮ ಹಲವು ಎನ್ನಬಹುದು.ಈ ಹಲವುನಾಮದೊಳಗಿರುವ ಏಕ ಶಕ್ತಿಯನ್ನು ತಿಳಿಯೋದೆ ತತ್ವ. ಇದನ್ನು  ಒಡೆದು ಆಳೋದೇ ತಂತ್ರ. ಹೀಗೆಯೇ ಧರ್ಮ, ಜಾತಿ,ಪಂಗಡ,ಪಕ್ಷಗಳು ಹುಟ್ಟಿಕೊಂಡವು. ಆದರೆ ಈಗ ಇದೇ ಮನುಕುಲಕ್ಕೆ  ಮಾರಕವಾಗುತ್ತಿದೆ.ಅದರಲ್ಲೂ ಭಾರತದಂತಹ ಪವಿತ್ರ ದೇಶವನ್ನು ಅಪವಿತ್ರಗೊಳಸಿ ಆಳಲು  ಹೊರಗಿನವರ ತಂತ್ರವೇ ಕಾರಣ.ಇದಕ್ಕೆ ಸಹಕಾರ ನೀಡಿದ ನಮಗೆ ಈಗ ಧರ್ಮ ಸಂಕಟ. ಹೊರಗಿನವರಿಂದ ಪಡೆದ ಮೇಲೆ ತಿರುಗಿ ಕೊಡಲು ಕಷ್ಟಪಡಬೇಕು.ಇಲ್ಲವಾದರೆ ಒಪ್ಪಿ ನಡೆಯಬೇಕು.ಒಪ್ಪಿದರೆ ಅಧರ್ಮ ಕಷ್ಟಪಡಲು ಶಕ್ತಿ ಇಲ್ಲ. ಹೀಗಾಗಿ  ಮಧ್ಯದಲ್ಲಿ ನಿಂತು ಇನ್ನಷ್ಟು ಗೊಂದಲ ಸೃಷ್ಟಿ ಮಾಡಿದರೂ ಮುಂದೆ ನಡೆಯದಿದ್ದರೆ  ಧರ್ಮರಕ್ಷಣೆ ಕಷ್ಟ.
ಸ್ವಾಮಿ ವಿವೇಕಾನಂದರ ಸಂದೇಶದಲ್ಲಿ ದೇಶಭಕ್ತಿಯಿತ್ತು.ದೇಶ ರಕ್ಷಣೆಗಾಗಿ ಅಧ್ಯಾತ್ಮ ದತ್ತ ನಡೆದು ನಿನ್ನ ನೀ ಆಳಿಕೊಳ್ಳುವ ರಾಜಯೋಗವಿತ್ತು. ನಾನ್ಯಾರೆಂಬುದೇ ಗೊತ್ತಿಲ್ಲ. ಪರಕೀಯರನ್ನು ನಮ್ಮವರೆ ಎಂದು ಸಾಲ ಮಾಡಿದರೆ ತೀರಿಸಲೇಬೇಕು. ಇದೇ ದೊಡ್ಡ ಧರ್ಮ ಸಂಕಟ.ಈ ಕಾರಣದಿಂದ ಎಷ್ಟೋ ನಮ್ಮವರು ಹೊರ ದೇಶಕ್ಕೆ ಹೋಗಿ ದುಡಿಯಬೇಕಾಗಿದೆ. ನಮ್ಮವರನ್ನೇ ನಾವು ದ್ವೇಷ ಮಾಡಿ ದೇಶಕಟ್ಟುವ ಕೆಲಸ ಮಾಡಬಹುದೆ? ಹಿಂದಿನ ಯುಗದಲ್ಲಿದ್ದ ಮೂರು ಮುಖ್ಯ ವರ್ಗವೇ ದೇವರು ಮಾನವರು,ಅಸುರರು. ಇಲ್ಲಿ ಮಧ್ಯವರ್ತಿ ಮಾನವನೊಳಗೇ ದೇವಾಸುರರ ಗುಣಗಳಿವೆ.ದೈವತ್ವ ಬೆಳೆದಂತೆ ತತ್ವಜ್ಞಾನ.ಅಸುರತ್ವ ಬೆಳೆದಂತೆ ತಂತ್ರದ ರಾಜಕೀಯವಾಗುತ್ತದೆ. ರಾಜಕೀಯದಲ್ಲಿ ಹಣ,ಅಧಿಕಾರ ಸ್ಥಾನಮಾನವೇ ಬಂಡವಾಳ.ಇದು ಜನರೇ ಕೊಡೋದು. ಹಿಂದಿರುಗಿಸಲಾಗದೆ ದುಂದುವೆಚ್ಚಮಾಡಿ ಸಾಲ ಮಾಡಿದರೆ ತೀರಿಸಲು ಸಾಧ್ಯವೆ? ಹೀಗೇ ಹಾಸಿಗೆ ಇದ್ದಷ್ಡು ಕಾಲು ಚಾಚು ವಿಚಾರವನ್ನು ವಿರೋಧಿಸಿ ನೇರವಾಗಿ ಆಕಾಶದೆತ್ತರ ಹಾರಲು ಹೋಗಿ ಭೂಮಿಯಲ್ಲಿ  ಸಾಯುತ್ತಿದ್ದರೆ ಭೂಮಿ ಮೇಲಿದ್ದು ಧರ್ಮ ರಕ್ಷಣೆ ಮಾಡಲಾಗುವುದಿಲ್ಲ. 
ನಾನಿದ್ದಾಗ ಕಾಣದ ದೇವರು ನಾನು ಹೋದ ಮೇಲೆ ಕಂಡರೆ ವ್ಯವಹಾರವಾಗುತ್ತದೆ.  ವ್ಯವಹಾರವೇ ಧರ್ಮ ಸಂಕಟಕ್ಕೆ ಕಾರಣವಾದಾಗ ವ್ಯವಹಾರ ಬಿಟ್ಟು ಸತ್ಯದೆಡೆಗೆ ಧರ್ಮ ದೆಡೆಗೆ ಸಾಗುವುದೇ ಉತ್ತಮ ಮಾರ್ಗವಲ್ಲವೆ? ವ್ಯವಹಾರವಿಲ್ಲದ ಜೀವನವಿಲ್ಲ.ಧರ್ಮ ಸೂಕ್ಷ್ಮ ವನ್ನರಿತು  ನಡೆಯಲು  ಇಂದಿನ ಭೌತಿಕ ವಿಜ್ಞಾನ ಬಿಡೋಹಾಗಿಲ್ಲ.ಹಾಗಾಗಿ ನಾವೆಲ್ಲರೂ ಮಧ್ಯವರ್ತಿಗಳಷ್ಟೆ. ಯಾವಕಡೆ ಮುಂದೆ ನಡೆದರೆ  ಉತ್ತಮ ಎನ್ನುವ ಜ್ಞಾನ ಬೇಕಿದೆ. 

Sunday, August 21, 2022

ಅಧ್ಯಾತ್ಮ ದ ಋಣ=ಭೌತಿಕದ ಸಾಲ

ಆತ್ಮಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನವನ್ನು ಮಾನವ ತಿಳಿದರೆ ಸಾಕು ತನ್ನ ಈ ಸಂಕಷ್ಟಗಳಿಗೆ ಕಾರಣವಾಗಿರುವ ಋಣ ಅಥವಾ ಸಾಲವನ್ನು ಹೇಗೆ ತೀರಿಸಿ ಮುಕ್ತಿ ಪಡೆಯಬಹುದೆನ್ನುವುದನ್ನು ತನ್ನೊಳಗಿನ ಅರಿವಿನಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಪುರಾಣ,ಇತಿಹಾಸದ  ಮಧ್ಯೆ ವಾಸ್ತವ ಸತ್ಯವಿದೆ. ನಂತರವೇ ಭವಿಷ್ಯವಾಗೋದು. ಹಿಂದಿನ ಸತ್ಯ ಮುಂದಿನ ಸತ್ಯವನ್ನು ವಾಸ್ತವ ಸತ್ಯದ ಮೂಲಕ ತಿಳಿದಾಗಲೇ ಭವಿಷ್ಯದಲ್ಲಿ ಸತ್ಯಕ್ಕೆ ಬೆಲೆ ಧರ್ಮ ಕ್ಕೆ ನೆಲೆ. ಇಲ್ಲಿ ಸಾಲದ ವಿಚಾರ ಬಂದಾಗ ಇಲ್ಲಿ ಪ್ರತಿಯೊಬ್ಬರೂ ಸಾಲಗಾರರೆ,ಶ್ರೀಮಂತ ಬಡವನ ಪಾಲನ್ನು ಪಡೆದು ದೊಡ್ಡ ಸಾಲಗಾರನಾದರೆ,ಬಡವ ಶ್ರೀಮಂತನ ಬೇಡಿಕೊಂಡು ಸಾಲದ ಸುಳಿಯಲ್ಲಿರುತ್ತಾನೆ.ಇವರಿಬ್ಬರ ನಡುವಿರುವ ಮಧ್ಯವರ್ತಿಗಳು ಈ ಕಡೆ ಶ್ರೀಮಂತನ ಸಾಲ, ಇನ್ನೊಂದು ಕಡೆ ಬಡವನ ಸಾಲವನ್ನು  ಏರಿಸುತ್ತಾ ಹರಿದುಹೋಗುವ  ಹಣದಲ್ಲಿ ತಮ್ಮ ಪಾಲನ್ನು ಸುಲಭವಾಗಿ ಪಡೆದುಕೊಂಡು  ಜೀವನ ನಡೆಸುತ್ತಾನೆ.ಹಾಗಾದರೆ ಸಾಲ ಯಾರಿಂದ ಯಾರಿಗೆ ಹೋಗುತ್ತಿದೆ? ಕಳೆದುಕೊಂಡವರು ಯಾರು? ಇದಕ್ಕಾಗಿ ಅಧ್ಯಾತ್ಮ ಚಿಂತಕರು ಎಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ನಿಸ್ವಾರ್ಥ, ನಿರಹಂಕಾರದಿಂದ ಮುಂದೆ ಸರಳ ಜೀವನ‌ನಡೆಸಿ ಮುಕ್ತಿ ಪಡೆದರು.ಈಗಿನ ಕಾಲದಲ್ಲಿ ಅಂತಹ ಮಹಾತ್ಮರನ್ನು ಹುಡುಕಿದರೂ ಸಿಗೋದು ಕಷ್ಟ.ಕಾರಣ ಮಹಾತ್ಮರ ಹೆಸರಿನಲ್ಲಿಯೇ ವ್ಯವಹಾರ ಬೆಳೆಸಿ ಶ್ರೀಮಂತ ರಾದೋರನ್ನು ಜನರು ದೇವರು, ಮಹಾತ್ಮರು, ಎನ್ನುವ ಮಟ್ಟಿಗೆ ಸಮಾಜ ಬೆಳೆದಿದೆ. ಹಾಗಾದರೆ ಮಧ್ಯವರ್ತಿಗಳು  ದೇವರೆ? ಇಲ್ಲಿ ಮಧ್ಯವರ್ತಿಗಳು ಎಂದಾಗ ಮಾನವರು, ಮಾನವರಲ್ಲಿ ಪುರುಷ,ಸ್ತ್ರೀ, ಮಕ್ಕಳು ಇರುತ್ತಾರೆ. ಮಹಾತ್ಮರುಗಳು ಎಂದರೆ ಆತ್ಮಾನುಸಾರ,ಆತ್ಮಾವಲೋಕನದಲ್ಲಿ,ಸತ್ಯ ಧರ್ಮವನ್ನರಿತು ದೈವತ್ವದೆಡೆಗೆ ನಡೆದವರಾಗುತ್ತಾರೆ. ದೇವರನ್ನು ಯಾರಿಗೂ ತೋರಿಸಲಾಗದು ಕಾರಣ ನಿರಾಕಾರಶಕ್ತಿಯನ್ನು ತೋರಿಸಲಾಗದು.ಆದರೆ ಇಂದು ಸಾಕಷ್ಟು ದೇವಾನುದೇವತೆಗಳು ಹೊರಬಂದಿರೋದರ ಹಿಂದಿನ  ಕಾರಣ ಮಾನವನ ಚಂಚಲ‌ಮನಸ್ಸನ್ನು ಒಂದೆಡೆ ನಿಲ್ಲಿಸಿ ಆಂತರಿಕ ವಾಗಿರುವ ಶಕ್ತಿಯನ್ನು ಜಾಗೃತಗೊಳಿಸುವುದಾಗಿತ್ತು.ಆಗಿದೆಯೆ? ದೇವರಿರೋದೆಲ್ಲಿ? ದೇವರ ಸಾಲ ನಾವು ತೀರಿಸಬಹುದೆ? ತಿರುಪತಿ ತಿಮ್ಮಪ್ಪನಸಾಲವನ್ನು  ತೀರಿಸಬಹುದೆ? ದೇಶದ ಸಾಲ ನಾವು ತೀರಿಸಲು ದೇಶ ಸೇವೆ ನಿಸ್ವಾರ್ಥ ದಿಂದ ಪ್ರತಿಫಲಪೇಕ್ಷೆಯಿಲ್ಲದೆ  ಜ್ಞಾನದಿಂದ ಜೀವನ  ಮಾಡಬೇಕು ಎಂದ ಹಾಗೆ ದೇವರ ಸೇವೆಯೂ ನಡೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ  ಸಾಕಷ್ಟು ಹಣವಿದ್ದರೂ ಸಾಲದ ಹಣವಾಗಿದೆ. ಅದೂ ಕೂಡಾ ವಿದೇಶಿ ಸಾಲ,ಭ್ರಷ್ಟಾಚಾರದ ಹಣದಲ್ಲಿ  ದೈವತ್ವ ಪಡೆಯಲು ದೇವರ ಋಣ ತೀರಿಸಲು ಕಷ್ಟ.ಇದಕ್ಕೆ ಪ್ರತಿಯಾಗಿ ಇನ್ನಷ್ಟು ಭ್ರಷ್ಟಾಚಾರ ಬೆಳೆದು ರಾಜಕೀಯಕ್ಕೆ ಮುಖಮಾಡಿಕೊಂಡು ಜನಸಾಮಾನ್ಯರು ದಿನನಿತ್ಯದ ಕರ್ಮ ಸರಿಯಾಗಿ ಮಾಡದೆ ಸಾಲದ ಮೊರೆ ಹೋಗುತ್ತಿರುವುದು ಜ್ಞಾನಿಗಳ ದೇಶ ಹಿಂದುಳಿಯಲು ಕಾರಣ.ಹಾಗಂತ ದೇಶದ ಆಸ್ತಿಗೇನೂ ಕೊರತೆಯಿಲ್ಲ.ಸರಿಸಮನಾಗಿ ಬಳಕೆಯಾಗಿಲ್ಲ.ಮೂಲದ‌ಶಿಕ್ಷಣವೇ ಸರಿಯಿಲ್ಲವಾದರೆ ಜ್ಞಾನ ಎಲ್ಲಿಂದ ಸಿಗಬೇಕು.ಜ್ಞಾನವಿಲ್ಲದೆ ಹಣಸಂಪಾದಿಸಿದರೆ ಸದ್ಬಳಕೆಯಾಗದೆ ಸಾಲವಾಗಿರುತ್ತದೆ. ಇದೇ ಎಲ್ಲಾ ಮಾನವರ ಸಮಸ್ಯೆಗೆ ಕಾರಣವಾಗುತ್ತಿದೆ.ಇದನ್ನು ತಿಳಿಸಿದರೆ ತಡೆಯುವವರೆ ಅರ್ಧಸತ್ಯದ ವ್ಯವಹಾರದಲ್ಲಿರುವ ಮಧ್ಯವರ್ತಿಗಳು. ಅಂದಾಗ ಮಧ್ಯವರ್ತಿಗಳ ಉದ್ದೇಶ ? ಯಾವತ್ತೂ ಅರ್ಧ ತುಂಬಿದ ಕೊಡವೇಸದ್ದು ಮಾಡೋದು. ಆ ಸದ್ದಿನಿಂದ ಏನಾದರೂ  ಶಾಂತಿ,ತೃಪ್ತಿ, ಮುಕ್ತಿ ಪಡೆಯಲು ಸಾಧ್ಯವೆ? ಈ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು ತಪಸ್ಸಿಗೆ  ಕಾಡಿಗೆ ಹೊರಟು ಮುಕ್ತಿ ಪಡೆದರು.ಈಗ ನಾಡಿನ
ಮಧ್ಯೆ ಕುಳಿತು ರಾಜಕೀಯ ಬಿಡದೆ ಯೋಗ, ದ್ಯಾನ, ಜಪ ಯಾಗ ಯಜ್ಞ, ಪೂಜೆ,ಆರಾಧನೆ,ಇನ್ನಿತರ ಕಾರ್ಯಕ್ರಮದಲ್ಲಿ ಜನರನ್ನು ಮನೆಯಿಂದ ಹೊರಗೆ ಕರೆಸಿಕೊಳ್ಳುತ್ತಾರೆ.ಮನೆಯೊಳಗಿದ್ದೇ  ಯೋಗ್ಯರೀತಿಯಲ್ಲಿ ಜೀವನ‌ನಡೆಸುತ್ತಿದ್ದ ಹಿಂದಿನ ಕಾಲಕ್ಕೂ ಮನೆಹೊರಗೆ ಬಂದು ಹೋರಾಟ ಮಾಡುತ್ತಾ ಸಮಸ್ಯೆಗಳನ್ನು ಒಳಗೆಳೆದುಕೊಂಡು ಜೀವನ ನಡೆಸುವ ಈಗಿನವರಿಗೂ ವ್ಯತ್ಯಾಸವಿಷ್ಟೆ.ಅಂದಿನ ಜನರಿಗೆ ಅರಿವಿನ ಶಿಕ್ಷಣ ಮನೆ ಮನೆಯ ಒಳಗೇ ನೀಡಿದ್ದರು. ಈಗಿನವರಲ್ಲಿದ್ದ ಅಲ್ಪ ಜ್ಞಾನವನ್ನೂ ಗುರುತಿಸದೆ ಹೊರಗಿನ ಶಿಕ್ಷಣ ನೀಡಿ ಅಜ್ಞಾನದಲ್ಲಿ ಆಳುವವರ ಸಂಖ್ಯೆ ಬೆಳೆದಿದೆ.ಇದಕ್ಕೆ ಪರಿಹಾರವಿಷ್ಟೆ "ಹಾಸಿಗೆ ಇದ್ದಷ್ಟು ಕಾಲು" ಚಾಚು," ಕಾಯಕವೇ ಕೈಲಾಸ ಮಂತ್ರ", " ದೇಶ ಸೇವೆಯೇ ಈಶ ಸೇವೆ", " ತಾಳಿದವನು ಬಾಳಿಯಾನು". " ಜನರ ಸೇವೆಯೇ ಜನಾರ್ದನನನ ಸೇವೆ". ಸೇವೆಯನ್ನು ಮಾಡುವಾಗ ಸತ್ಯದ ಅರಿವಿರಬೇಕು.ಧರ್ಮ ತಿಳಿದಿರಬೇಕು. 
ಭ್ರಷ್ಟಾಚಾರದ ಹಣದಲ್ಲಿ, ಸಹಕಾರದಲ್ಲಿದ್ದರೆ ಸಾಲ ತೀರಿಸುವುದಕ್ಕೆ ಕಷ್ಟ.ಕಾರಣ ಅಲ್ಲಿ ಭ್ರಷ್ಟಾಚಾರಕ್ಕೆ ಬಲ,ಬೆಲೆ ಹೆಚ್ಚಾಗಿರುತ್ತದೆ. ಸಮಾಜದ ಋಣ ತೀರಿಸಲು ನಮ್ಮ ಸಾತ್ವಿಕ ಕರ್ಮದಿಂದ ಸಾಧ್ಯ.ಸಮಾಜವಿಲ್ಲದ  ಸಂಸಾರವಿಲ್ಲ. ಸಂಸಾರ ಇಂದು ಸಂನ್ಯಾಸಿ ಗಳಿಗೂ ಇದೆ.ಅಂದರೆ ಅವರೂ ಒಂದು ಚೌಕಟ್ಟಿನಲ್ಲಿರುವಾಗ ಅದರ
ಜವಾಬ್ದಾರಿ ಹೋರಲೇಬೇಕು.ಹಾಗೆಯೇ ದೇಶದೊಳಗಿದ್ದ ಮೇಲೆ ದೇಶದ ಸಾಲ ಪ್ರಜೆಗಳೇ ಹೋರಬೇಕು. ಎಲ್ಲರೂ ಒಂದೇ ಒಬ್ಬರನ್ನೊಬ್ಬರು ಅವಲಂಬಿಸಿ ನಡೆಯುವಾಗ ಒಬ್ಬರ ಸಾಲ ಇನ್ನೊಬ್ಬರು ತೀರಿಸಬೇಕಾದರೆ ಅನಗತ್ಯವಾದ ವಿಷಯ, ವಿಚಾರ,ಹಣ,ಸಂಪತ್ತು,ಜ್ಞಾನವನ್ನು ಬಿಟ್ಟರೆ ಅಗತ್ಯಕ್ಕೆ ತಕ್ಕಂತೆ ಸಿಗುತ್ತದೆ. .ಅದೇ ಪರಮಾತ್ಮನ ಸಾಲ.ಅದನ್ನು ಸದ್ಬಳಕೆ ಮಾಡಿಕೊಂಡರೆ ಸಾಲದಿಂದ ಮುಕ್ತಿ.ದುರ್ಭಳಕೆ ಮಾಡಿಕೊಂಡರೆ ಆತ್ಮಹತ್ಯೆ ಅಂದರೆ ಪರಮಾತ್ಮನಿಗೇ ಮೋಸಮಾಡಿದ ಪ್ರತಿಫಲವೆನ್ನಬಹುದು.  ಚರಾಚರದಲ್ಲಿಯೂ ಅಡಗಿರುವ ಆ ಅಣು ಶಕ್ತಿಯ ಸದ್ಬಳಕೆಯೇ  ಜೀವನ್ಮುಕ್ತಿಗೆ ಮಾರ್ಗ.ಏನೇ ಬರಲಿ ಒಗ್ಗಟ್ಟು ಇರಲಿ ಎನ್ನುವ ಮಂತ್ರದಿಂದ ಹೋರಾಟ ನಡೆಸಿದ್ದ ಜ್ಞಾನಿಗಳ ದೇಶವನ್ನು ತಂತ್ರದಿಂದ  ಮುಂದೆ ನಡೆಸುತ್ತಾ ಯಂತ್ರಮಾನವರ ಸೃಷ್ಟಿ ಹೆಚ್ಚಾಗಿದೆ. ಒಟ್ಟಿನಲ್ಲಿ ಯಾರ ಸಾಲವನ್ನೂ ಯಾರೂ ತೀರಿಸಲಾಗದು.ಅವರವರ ಆತ್ಮಜ್ಞಾನದಿಂದ ಮಾತ್ರ ಬಿಡುಗಡೆ ಸಾಧ್ಯ.ಋಣವನ್ನು ಸತ್ಕರ್ಮದಿಂದ,ಸದಾಚಾರ,ಸತ್ಯ,ಧರ್ಮ,ಸ್ವಾವಲಂಬನೆ, ಸರಳ ಜೀವನ,ಸ್ವಾಭಿಮಾನದಿಂದ ಸ್ವತಂತ್ರ ವಾಗಿದ್ದು ತೀರಿಸಿದ ಹಿಂದಿನ ಮಹಾತ್ಮರ  ಜ್ಞಾನವನ್ನು ಅರ್ಥ ಮಾಡಿಕೊಳ್ಳಲು  ಮಾನವರಿಗೆ ಜ್ಞಾನದ ಶಿಕ್ಷಣ ಬೇಕು. ಭೂಮಿಯಲ್ಲಿ ಧರ್ಮ ರಕ್ಷಣೆ ಜ್ಞಾನಿಗಳಿಂದಾಗಿತ್ತು. ಹಾಗಾದರೆ ಈಗೆಲ್ಲಿರುವರು ಜ್ಞಾನಿಗಳು? ಜ್ಞಾನಕ್ಕೆ ಬೆಲೆಯಿಲ್ಲ ಧರ್ಮಕ್ಕೆ ನೆಲೆಯಿಲ್ಲದೆ ಸಾಲ ಹನುಮಂತನಬಾಲದಂತೆ ಬೆಳೆಸಿಕೊಂಡು ಭೌತಿಕದಲ್ಲಿ ಶ್ರೀಮಂತ ರಾದರೆ ಅಧ್ಯಾತ್ಮ ದ ಪ್ರಕಾರ ಇದೇ  ಅಧೋಗತಿಯ ಸಂಕೇತವೆನ್ನುವರು. ಸತ್ಯವೇ ದೇವರಾದರೆ  ಸತ್ಯ ನುಡಿದು ದೇವರನ್ನು ಕಂಡವರೆಷ್ಟು ?

Saturday, August 20, 2022

ಭಾರತೀಯ ×ಭಾರತೀಯತೆ?

ಭಾರತದೊಳಗಿದ್ದರೆ ಭಾರತೀಯ ,ದೇಹದೊಳಗೆದೇಶದ ತತ್ವ ಜ್ಞಾನವಿದ್ದರೆ  ಭಾರತೀಯತೆ. ಭಾರತದೊಳಗಿದ್ದು ವಿದೇಶ ಜ್ಞಾನದೊಳಗಿದ್ದರೆ ಪರಕೀಯ.

ಆತ್ಮವಿಶ್ವಾಸ ×ಅಹಂಕಾರ

ಪರಮಾತ್ಮನ ನನ್ನೊಳಗೆ ಕಾಣೋ ನಡಿಗೆಯಲ್ಲಿ ಇತರರೊಳಗಿದ್ದು ಸಹಕರಿಸಿದ ಪರಮಾತ್ಮ ಕಾಣದಿದ್ದರೆ  ಪರಿಪೂರ್ಣತೆಯಲ್ಲ. ಅದ್ವೈತ ಸಿದ್ದಾಂತವು  ಆಂತರಿಕ ಹಾಗು ಬಾಹ್ಯ ಮನಸ್ಸಿನ ಸಮಾನತೆಯೆಡೆಗೆ ನಡೆದಿತ್ತು...
ಆತ್ಮವಿಶ್ವಾಸವು ಅಹಂಕಾರದಿಂದ ಪಡೆಯಲಾಗದು.

ಧಾರ್ಮಿಕ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೆ?


"ಧಾರ್ಮಿಕ ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ದ ಹಕ್ಕು"
 ಇದನ್ನು ಈಗ ಬಳಸಬಹುದೆ?.ಆದರೂ ಇದರಲ್ಲಿನ  ಒಳ ರಾಜಕೀಯವಿದ್ದರೆ  ನಷ್ಟವೆ ಗತಿ.
ಪ್ರತಿಯೊಬ್ಬರಿಗೂ ಅವರವರ ಮೂಲ ನೆಲ,ಜಲ,ಧರ್ಮ ಕರ್ಮ ಹುಟ್ಟುವಾಗಲೆ  ಭಗವಂತ ನೀಡಿ ಹುಟ್ಟಿಸಿರುವಾಗ
ಪೋಷಕರಾದವರು ಅದಕ್ಕೆ ವಿರುದ್ದದ ಶಿಕ್ಷಣ ನೀಡಿ ಹೊರಗೆ
ಸ್ವಾತಂತ್ರ್ಯ ಬೇಡಿದರೆ  ಸಿಗುವುದಿಲ್ಲ. ಇದೇ ಕಾರಣಕ್ಕಾಗಿಯೇ
ನಮ್ಮ ಹಿಂದಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿನ ಮಹಾತ್ಮರು  ಸತ್ಯಾಗ್ರಹವನ್ನು ಆಧ್ಯಾತ್ಮಿಕ ಮಾರ್ಗದಿಂದ
ನಡೆಸಿ ಕೊನೆಯಲ್ಲಿ ಸತ್ಯಕ್ಕೆ ಜಯ ಸಿಕ್ಕಿತು.
ಆದರೆ, ನಂತರದ  ರಾಜಕೀಯದಲ್ಲಿ ಬೆಳೆಸಿಕೊಂಡ ಹಲವು
ವಿದೇಶಿ ರೀತಿ ನೀತಿ,ವ್ಯವಹಾರ,ಶಿಕ್ಷಣದಲ್ಲಿಯೇ ದೇಶವಿರೋಧಿ ನೀತಿಯಿದ್ದರೂ  ತಿಳಿಯದೆ ಮುನ್ನೆಡೆದ
ಪರಿಣಾಮವೆ ಇಂದಿನ ಪರಿಸ್ಥಿತಿಗೆ ಕಾರಣ. ಇದನ್ನು ಯಾವ
ರಾಜಕಾರಣಿಗಳೂ ಸರಿಪಡಿಸಲಾಗದು.ಹಾಗೆಯೇ ಯಾವ
ಪ್ರತಿಷ್ಟಿತರೂ  ಸರಿಪಡಿಸಲಾಗದು.ಪ್ರಚಾರ ಮಾಡಬಹುದು
ಅದನ್ನು ಜನಸಾಮಾನ್ಯರು ಎಷ್ಟು ಅರ್ಥ ಮಾಡಿಕೊಂಡು
ನಡೆಯಬಹುದೆಂಬ ಅರಿವು ಅಗತ್ಯವಿದೆ. ಇರುವುದೊಂದೆ ಮಾರ್ಗ  ಶಿಕ್ಷಣದಲ್ಲಿ  ಬದಲಾವಣೆ .ಇದಕ್ಕೆ ಪ್ರಜೆಗಳು ರಾಜಕೀಯ ದ್ವೇಷ ಬಿಟ್ಟು ಸಹಕರಿಸಿದರೆ  ನಿಜವಾದ ಸ್ವಾತಂತ್ರ್ಯ ದ ಉತ್ಸಾಹ, ಉತ್ಸವ  ಮುಂದಿನ ದಿನಗಳಲ್ಲಿ
ಕಾಣಬಹುದು.
ಭ್ರಷ್ಟಾಚಾರ. ಬೆಳೆದಿರೋದೆ ಭ್ರಷ್ಟರ ಸಹಕಾರದಿಂದ. ಇದು
ಎಲ್ಲಾ ಪ್ರಜೆಗಳಲ್ಲಿ  ಕಾಣದೆ ಅಡಗಿರುವಾಗ  ಸ್ವಾತಂತ್ರ್ಯ ಕ್ಕೆ
ಮಹಾತ್ಮರಾಗಬೇಕು. ಸತ್ಯಾಗ್ರಹ  ಈಗ ಅಸತ್ಯದವರಿಂದ
ಹೆಚ್ಚಾಗಿರುವಾಗ. ಶಕ್ತಿ ಎಲ್ಲಿಂದ ಎಲ್ಲಿಗೆ ತಲುಪಿದೆ?ಆಂಗ್ಲರು
ಬ್ರಿಟಿಷ್‌ ರು  ಎಲ್ಲೂ ಹೊರಗಿಲ್ಲ. ನಮ್ಮ ಶಿಕ್ಷಣದಲ್ಲಿಯೇ
ಇದ್ದು ದೇಶದ ಮಕ್ಕಳನ್ನು ,ಮಹಿಳೆಯರನ್ನು  ಹೊರಗೆಳೆದು
ರಾಜಕೀಯದಲ್ಲಿ ಮುಳುಗಿಸಿದ್ದಾರೆ. ವ್ಯಕ್ತಿಯ ಒಳಗಿನ  ಶಕ್ತಿ
ನಮ್ಮ ಮೂಲವನ್ನು  ತಿಳಿಯದೆ ಹೊರಗೆಳೆದಾಗಲೆ ಸ್ವತಂತ್ರ
ಜ್ಞಾನ ಹಿಂದುಳಿಯುವುದು.
ಜ್ಞಾನದ ದೇಶ ವಿಜ್ಞಾನದ,ವಿದೇಶದ ವಿಪರೀತ ಜ್ಞಾನದ ಶಿಕ್ಷಣ
ಪಡೆದ ಪ್ರಜೆಗಳ ಪ್ರಭುತ್ವದಲ್ಲಿದೆ.ಸಾಮಾನ್ಯಜ್ಞಾನದ ಮಾನವ
ಧರ್ಮ ಎಲ್ಲಿದೆ?
ನಮಗಿನ್ನೂ  ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅವಕಾಶ
ಇದೆ ಎಂದರೆ ನಾವಿನ್ನೂ ಪೂರ್ಣ ಪರತಂತ್ರರಲ್ಲವೆಂದು.
ಇದು ಭಾರತಮಾತೆಯ ಶಕ್ತಿ.ತಾಯಿಯನ್ನು ಆಳೋದೇ ಅಧರ್ಮ. ಅದರಲ್ಲೂ ಅಧರ್ಮದಿಂದ ಆಳಿದರೆ ಬಿಡುವಳೆ?

Friday, August 19, 2022

ಧರ್ಮ ಕ್ಷೇತ್ರೇ ಕುರುಕ್ಷೇತ್ರೇ.....

ಧರ್ಮ ಕ್ಷೇತ್ರೇ ಕುರುಕ್ಷೇತ್ರ.... ಇಲ್ಲಿ ಕ್ಷೇತ್ರ  ಎನ್ನುವ ಪದವನ್ನು ಅರ್ಥ ಮಾಡಿಕೊಂಡರೆ ಭಗವದ್ಗೀತೆ ಯ ಉದ್ದೇಶ ಅರ್ಥ ಆಗಬಹುದು. ಸಾಮಾನ್ಯವಾಗಿ ಹಿಂದಿನ ರಾಜಪ್ರಭುತ್ವ ದಲ್ಲಿ ಕಾಣುವ ನಾಲ್ಕು ವರ್ಣಗಳಲ್ಲಿ ನಾಲ್ಕು ಕ್ಣೇತ್ರಗಳಿದ್ದವು. ಧಾರ್ಮಿಕ, ರಾಜಕೀಯ, ಆರ್ಥಿಕ, ಹಾಗು ಸಾಮಾಜಿಕ ಕ್ಷೇತ್ರ. ಇದರಲ್ಲಿ ಮೇಲಿನ ಕ್ಷೇತ್ರದ ಪ್ರಕಾರ ನಡೆಯುವಾಗ  ಹಣವನ್ನು ಧರ್ಮದ ಮಾರ್ಗದಲ್ಲಿ ಸಂಪಾದಿಸಿ  ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರಗತಿಯಾಗುತ್ತಿತ್ತು. ಯಾವಾಗ ಧರ್ಮ ಬಿಟ್ಟು ರಾಜಕೀಯ ಬೆಳೆಯಿತೋ ಆಗಲೇ ಅಧರ್ಮದೆಡೆಗೆ ಮನುಕುಲ ನಡೆದು ಕೊನೆಯ ಕ್ಷೇತ್ರದಲ್ಲಿ ಅಸಮಾನತೆ,ಅಸತ್ಯ,ಅಧರ್ಮ, ಅನೀತಿ
ಅನ್ಯಾಯಗಳು ಬೆಳೆಯುತ್ತಾ ಮನುಕುಲವನ್ನೇ ಹಾಳುಮಾಡಿತು.
ಇದನ್ನು ಸರಿಪಡಿಸಲೆಂದೇ ಧರ್ಮ ಯುದ್ದಗಳಾದವು.ಧರ್ಮ ಸ್ಥಾಪನೆಯಾಯಿತು. ಆದರೆ, ಮಾನವನೊಳಗೇ ಅಡಗಿದ್ದ ಅರಿಷಡ್ವರ್ಗಗಳೇ  ಜನ್ಮ ಜನ್ಮಕ್ಕೂ ಆಳಿದ ಪ್ರಭಾವ ಇಂದಿಗೂ
ಕ್ಷೇತ್ರ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಬೆಳೆದು ನಿಂತಿದೆ.ಹಾಗಾದರೆ ಇದನ್ನು ರಾಜಕೀಯದಿಂದ ಸರಿಪಡಿಸಬಹುದೆ? ರಾಜಯೋಗದಿಂದಲೇ ಎಂದಾಗ ಪ್ರಜಾಪ್ರಭುತ್ವ ದೇಶದ ಪ್ರಜೆಗಳಲ್ಲಿ ರಾಜಯೋಗದ ಜ್ಞಾನವಿದ್ದರೆ ತಮ್ಮನ್ನು ತಾವರಿತು ಇದ್ದಲ್ಲಿಯೇ ಇದ್ದುದರಲ್ಲಿಯೇ  ತಮ್ಮ ಜೀವ ಉಳಿಸಿಕೊಂಡು ಸನ್ಮಾರ್ಗ, ಸ್ವಧರ್ಮ ಸತ್ಕರ್ಮದೆಡೆಗೆ ಹೋಗಲು ಸಾಧ್ಯವಾದರೆ
ಭಗವದ್ಗೀತೆ ಯಲ್ಲಿರುವ ಪ್ರತಿಯೊಂದು ಧರ್ಮ ಸೂಕ್ಷ್ಮ ಅರ್ಥ ಆಗಬಹುದು. ಶಾಲೆ ಕಾಲೇಜುಗಳಲ್ಲಿ ಭಗವದ್ಗೀತೆ ಅಳವಡಿಸಿದ್ದರೂ ಶಿಕ್ಷಕರಲ್ಲಿ,ಗುರುಗಳಲ್ಲಿ,ಪೋಷಕರಲ್ಲಿ ರಾಜಕೀಯವಿದ್ದರೆ ವ್ಯರ್ಥ ಪ್ರಯತ್ನ.ಅಲ್ಲಿರುವ ರಾಜಕೀಯವೇ ಬೇರೆ ಇಲ್ಲಿರುವ‌ರಾಜಕೀಯವೇ ಬೇರೆ.ಅಲ್ಲಿದ್ದ ಕ್ಷತ್ರಿಯ ಧರ್ಮವೆ ಬೇರೆ  ಇಂದಿನ ಪ್ರಜಾಧರ್ಮ ವೇ ಬೇರೆ.ಅಂದಿದ್ದ ವರ್ಣ ಪದ್ದತಿ ಬೇರೆ ಇಂದಿನ ಜಾತಿ ರಾಜಕೀಯವೇ ಬೇರೆ.ಆದರೂ ಓದಿ ತಿಳಿದು ತಿಳಿಸುವಾಗ ಪ್ರತಿಯೊಬ್ಬರಿಗೂ ಒಂದೊಂದು  ಸತ್ಯದ ಅರಿವಾದರೂ ಬೇರೆಯವರಿಗೂ ಅದೇ ಅನುಭವವಾಗದಿರಬಹುದು.ಆದರೆ ಸತ್ಯ ಧರ್ಮ ಒಂದೇ. ಒಂದೇ ದೇಶದಲ್ಲಿ ಅಸಂಖ್ಯಾತ ಧರ್ಮ, ಪಂಗಡ,ಜಾತಿ,ಪಕ್ಷಗಳು ಜನರನ್ನು ಆಳುವುದರಲ್ಲಿ ಧರ್ಮ ಎಲ್ಲಿದೆ? ಯಾರಲ್ಲಿದೆ? ಎಷ್ಟಿದೆ? ಎಂದು ಅಳೆಯಲಾಗದ ಮೇಲೆ ನಮ್ಮೊಳಗಿರುವ ಜ್ಞಾನದಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಜಾಧರ್ಮದ ಪ್ರಕಾರ ದೇಶದ ಸಾಲ ತೀರಿಸುವತ್ತ ನಡೆಯುವುದಷ್ಟೇ ಈಗಿರುವ ಮಾರ್ಗ. ನಾವಂದು ಕೊಂಡ. ಹಾಗೆ ದೇವರು ಹೊರಗಿಲ್ಲ.ಒಳಗೇ ಇರೋದು. ಹುಡುಕಿಕೊಳ್ಳಲು ಜ್ಞಾನ ಬೇಕು. ಸತ್ಯವೇ ದೇವರಾಗಬೇಕು. ಅಸತ್ಯದೆಡೆಗೆ  ನಡೆದಷ್ಟೂ ಹಣ ಸಿಗಬಹುದು.ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕು.ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿರುವ  ಇಂದು ನಾವೆಲ್ಲರೂ ಯಾರದ್ದೋ ಜ್ಞಾನದಲ್ಲಿ ಎಲ್ಲಿ ಅಮ್ಮ ಎಂದು ಹೊರಗೆ ಹುಡುಕುತ್ತಿದ್ದೇವೆ. ನಮ್ಮ  ನಮ್ಮ ಅಮ್ಮ ಒಳಗೇ ಇದ್ದರೂ ಹೊರಗೆ ಹುಡುಕಿದರೆ ಸಿಗುವಳೆ?
ಭಾರತಮಾತೆ,ಕನ್ನಡಮ್ಮ ಎನ್ನುವ  ನಮ್ಮಲ್ಲಿ ಭಾರತೀಯತೆ,ಕನ್ನಡದ ಜ್ಞಾನವಿದೆಯೆ? ವ್ಯವಹಾರಕ್ಕೆ ಬಳಸಿ ಜ್ಞಾನದಿಂದ ದೂರವಾದರೆ ಸರ್ಕಾರ ಕಾರಣವಲ್ಲ.ನಮ್ಮದೇ ಸಹಕಾರವೇ ಕಾರಣ.ಅವರವರ ಮೂಲ ಧರ್ಮ ಕರ್ಮ,ಶಿಕ್ಷಣ,ಭಾಷೆ, ಜನ್ಮಸ್ಥಳ,ಜನ್ಮಭೂಮಿಯನ್ನು ತೊರೆದು ದೂರಹೋಗಿ ತಿರುಗಿ ಬರೋದರ ಬದಲಾಗಿ ಇದ್ದಲ್ಲಿಯೇ ಸರಿಯಾದ ಶಿಕ್ಷಣದಿಂದ ಒಗ್ಗಟ್ಟಿನಿಂದ ನಮ್ಮವರನ್ನು ,ಮಕ್ಕಳು ಮಹಿಳೆಯರನ್ನು ಅರ್ಥ ಮಾಡಿಕೊಂಡರೆ ರಾಜಕೀಯವೇಕೆ? ಭೂಮಿ ಮೇಲೆ ನಿಂತು ಭೂಮಿಯನ್ನು ಆಳೋದರಿಂದ ಮುಕ್ತಿ ಸಿಗುವುದೆ? ಅಥವಾ ಭೂಮಿಯನ್ನು ಬಿಟ್ಟು  ಆಕಾಶದಲ್ಲಿ ಎಷ್ಟು ದಿನ ಹಾರಬಹುದು? ಹಾಗೆಯೇ  ಜನನ ಮರಣದ ನಡುವಿನ‌ ಜೀವನ ಕ್ಷಣಿಕವಾಗಿದೆ. ಇರೋವಾಗಲೇ ಆಂತರಿಕ ಶಕ್ತಿಯಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಋಣ ಅಥವಾ ಸಾಲ ತೀರಿಸಲು ರಾಜಯೋಗದಿಂದ ಸಾಧ್ಯವೆಂದರು ಮಹಾತ್ಮರುಗಳು
ಎಷ್ಟೇ ಮುಂದೆ ಅಧರ್ಮದೆಡೆಗೆ ನಡೆದರೂ ಪರಮಾತ್ಮನನ್ನು ಸೇರದ ಜೀವಕ್ಕೆ ಶಾಂತಿ, ತೃಪ್ತಿ, ಮುಕ್ತಿ ಸಿಗೋದಿಲ್ಲವೆನ್ನುವ ಒಂದೇ ಸತ್ಯವನ್ನು ಮಾನವನು ಪ್ರತಿಕ್ಷಣ ನೆನಪಿಸಿಕೊಂಡರೆ ಹೋಗುವ ದಾರಿ ಸರಿಇರುತ್ತದೆ. ಕಷ್ಟಗಳು ಹೊರಗೂ ಇದೆ ಒಳಗೂ ಇದೆ.ಒಳಗಿನ ಕಷ್ಟ ಪರಮಾತ್ಮನೆಡೆಗೆ ಸಾಗಿಸುತ್ತದೆ.ಹೊರಗಿನ‌ಕಷ್ಟ ಪರದೇಶದೆಡೆಗೆ ನಡೆಸುತ್ತದೆ ಯಾವುದು ಬೇಕು ತೀರ್ಮಾನ ನಮಗೇ ಬಿಟ್ಟದ್ದು. 
ಎಲ್ಲಾ ಕ್ಷೇತ್ರಗಳ ವ್ಯವಹಾರಿಕ ಪ್ರಗತಿ ದೇಶದ ಧರ್ಮ ರಕ್ಷಣೆಗೆ  ತಡೆಯಾದರೆ  ಹಣದಿಂದ ಧರ್ಮ ವೆ? ಧರ್ಮದಿಂದ ಹಣವೆ? ಜ್ಞಾನದಿಂದ  ದೇಶವೆ? ಅಜ್ಞಾನದಿಂದ ದೇಶವೆ? ಇಲ್ಲಿ ಯಾರನ್ನೂ ತಪ್ಪು ಎನ್ನಲಾಗದು. ಕಾರಣ  ಒಬ್ಬರನ್ನೊಬ್ಬರು ಅವಲಂಬಿಸಿ ನಡೆದಿರುವ  ರಾಜಕೀಯದಲ್ಲಿ ಸಹಕರಿಸಿದವರೆ ಪ್ರಜೆಗಳು. ಈಗ ಪ್ರಜೆಗಳ ಸಂಕಷ್ಟಕ್ಕೆ ರಾಜಕೀಯದಲ್ಲಿ ಪರಿಹಾರವಿಲ್ಲ. ಪರಕೀಯರ ಸಾಲವನ್ನು ಪರಮಾತ್ಮ ತೀರಿಸುವುದಾಗಿದ್ದರೆ ಈ ದೇಶದಲ್ಲಿ ಆಚರಣೆಯಲ್ಲಿರುವ ಎಲ್ಲಾ ಧಾರ್ಮಿಕ ಕಾರ್ಯದಿಂದ ದೇಶದ ಸಾಲ ತೀರಬೇಕಿತ್ತು. ಇದನ್ನು ಭೌತಿಕದಲ್ಲಿ ತೀರಿಸಲಾಗದ ಮೇಲೆ ಅಧ್ಯಾತ್ಮ ದೆಡೆಗೆ ಜನರೆ ಹೋಗಬೇಕು. ಅಧ್ಯಾತ್ಮ ಎಂದರೆ ನಮ್ಮ ಸಾಲ ನಾವೇ ತೀರಿಸೋದಕ್ಕಾಗಿ ಆತ್ಮಾನುಸಾರ ಸತ್ಯ ಧರ್ಮದ ಪ್ರಕಾರ ಹಣ ಸಂಪಾದಿಸಿ ಋಣ ತೀರಿಸೋದಷ್ಟೆ.
ನಮ್ಮ ಹಣ ಯಾರ ಋಣವಾಗಿದೆ ಪರೀಕ್ಷಿಸಿಕೊಂಡರೆ ನಾವೇ ಪರಕೀಯರ ಋಣದಲ್ಲಿರುವಾಗ ದೇಶವನ್ನು ಆಳುವುದರಲ್ಲಿ ಅರ್ಥ ವಿಲ್ಲ. ಒಟ್ಟಿನಲ್ಲಿ ಆತ್ಮಾವಲೋಕನ  ಒಂದೊಂದು ಕ್ಷೇತ್ರದಲ್ಲಿ ಆಗಬೇಕಿದೆ. ನಮ್ಮ ನಮ್ಮ ಕ್ಷೇತ್ರದ ಶುದ್ದಿ ನಮ್ಮ ಆತ್ಮಜ್ಞಾನದಿಂದ ಮಾಡಿಕೊಂಡರೆ  ಸ್ವಚ್ಚ ಭಾರತ. ಆತ್ಮನಿರ್ಭರ ಭಾರತ ಸಾಧ್ಯ. ಏನಂತೀರಾ? 
ದೇಶದ ಸಾಮಾನ್ಯಪ್ರಜೆಯಾಗಿದ್ದು  ತಿಳಿಸುವ ಸ್ವಾತಂತ್ರ್ಯ ನಮಗಿದೆ. ಕೆಲವರಿಗೆ  ಇದರಲ್ಲಿ ಸತ್ಯ ಕಾಣದಿರಬಹುದು.ರಾಜಕೀಯದೊಳಗಿರುವ ಮನಸ್ಸಿಗೆ ರಾಜಯೋಗ ಕಾಣೋದಿಲ್ಲ. ಹಾಗೆಯೇ ರಾಜಯೋಗದಲ್ಲಿರುವ ಮನಸ್ಸಿಗೆ ರಾಜಕೀಯ ಹಿಡಿಸೋದಿಲ್ಲ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾದರೂ ವ್ಯವಹಾರಕ್ಕೆ ಬಂದಾಗ ಒಂದೇ ಸಮ ನಡೆಯುತ್ತದೆ.ಆದರೆ ಧರ್ಮದ ಪ್ರಕಾರ ನಡೆಯುವುದಕ್ಕೆ ಎರಡೂ ಸಿದ್ದವಾದರೆ  ಸಮಾನತೆ ಬೆಳೆಯುತ್ತದೆ
ಹಿಂದಿನ  ಪುರಾಣ,ಇತಿಹಾಸದಲ್ಲಿರುವ ಈ ಏರು ಪೇರುಗಳೇ ಕೊನೆಯಲ್ಲಿ ಯುದ್ದಕ್ಕೆ ದಾರಿಮಾಡಿಕೊಟ್ಟಿತು. ಈಗಲೂ ಇದೆ.ಆದರೆ ಯುದ್ದವಿಲ್ಲ.ಇದ್ದರೂ ಸೈನಿಕರಷ್ಟೇ ಮಾಡಬೇಕು.ರಾಜಕೀಯವಿದೆ ರಾಜಧರ್ಮ ವಿಲ್ಲ. ಕ್ಷಾತ್ರವೀರ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ.ಯಾವುದಕ್ಕೆ ಹೋರಾಡಬೇಕಿತ್ತು? ಯಾವುದಕ್ಕಾಗಿ ಹೋರಾಟ ನಡೆದಿದೆ? ನಮ್ಮ ಸಹಕಾರ ಎಷ್ಡಿದೆ ಇದರಿಂದಾಗಿ ಯಾರಿಗೆ ಲಾಭವಾಗುತ್ತಿದೆ? ಮುಂದಿನ ಪೀಳಿಗೆ ಯಾವ ಕಡೆ ನಡೆದಿದೆ?  ನಮ್ಮ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ? ಮಹಾತ್ಮರು ಯಾರು? ದೇವರಿರೋದೆಲ್ಲಿ? ದೇಶದೊಳಗಿರುವ ನಾವ್ಯಾರು? ನಮ್ಮಲ್ಲಿ ಯಾರ ಜ್ಞಾನವಿದೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ಒಳಗಿದ್ದು ಹುಡುಕಿಕೊಳ್ಳಲು ಯೋಗ ಬೇಕಿದೆ.ಯೋಗ ಎಂದರೆ ಸೇರೋದು ಯಾರನ್ನು ಸೇರಬೇಕೆಂದರೆ ಜೀವಾತ್ಮ ಪರಮಾತ್ಮನ ಸೇರಲು ಒಳಹೊಕ್ಕಿ ಸತ್ಯ ತಿಳಿಯಬೇಕಿದೆ. ಹೊರಗಿನ ಸತ್ಯವೇ ಇದನ್ನು ತಡೆಯುತ್ತಿದೆ.  ಇದಕ್ಕೆ ಶಿಕ್ಷಣವೇ ಕಾರಣವಾಗಿದೆ.ಬದಲಾವಣೆ ಶಿಕ್ಷಣದಲ್ಲಿಯೇ ಮಾಡಬೇಕಿದೆ. ಸರ್ಕಾರ ಮಾಡಿದಿದ್ದರೂ ನಮ್ಮ ಸಹಕಾರದಲ್ಲಿ ಬದಲಾವಣೆ ಸಾಧ್ಯವಿಲ್ಲವೆ? ಮಕ್ಕಳಿಗೆ ಉತ್ತಮ ವಿಚಾರ ತಿಳಿಸಿ ಬೆಳೆಸಲು ಪೋಷಕರಲ್ಲಿ ಜ್ಞಾನವಿಲ್ಲವೆ? ಎಲ್ಲಿಗೆ ಹೋಗುತ್ತಿದೆ ಭಾರತ?
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ  ಅಸಹಕಾರ ಚಳುವಳಿಯ ಅಧ್ಯಾತ್ಮ ಸತ್ಯವೆಂದರೆ  ಅಧರ್ಮಕ್ಕೆ ಸಹಕಾರ ನೀಡದಿದ್ದರೆ ಧರ್ಮ ಗೆಲ್ಲುವುದೆನ್ನುವುದಾಗಿತ್ತು.ಅದನ್ನು ಅರ್ಥ ಮಾಡಿಕೊಳ್ಳಲು  ಇಂದು ಸೋತಿರೋದಕ್ಕೆ  ಪ್ರಜೆಗಳ ಅಜ್ಞಾನ ಕಾರಣ.

ಕೃಷ್ಣಂ ವಂದೆ ಜಗದ್ಗುರುಂ

ಶ್ರೀ ಕೃಷ್ಣ,ಶ್ರೀ ರಾಮರಂತಹ ಮಹಾ ದೇವಾನುದೇವತೆಗಳ ಅವತಾರವನ್ನು ಕಂಡಂತಹ ‌ಭರತ ಭೂಮಿಯನ್ನು ಪವಿತ್ರವೆನ್ನಲು  ಕಾರಣ ಸ್ವಯಂ ಪರಮಾತ್ಮನೇ ನಿಂತು ಭೂಮಿಯಲ್ಲಿ  ಧರ್ಮ ರಕ್ಷಣೆ ಮಾಡಿರೋದು.ತ್ರೇತಾಯುಗದಿಂದ ದ್ವಾಪರದವರೆಗೆ  ಆದ ಬೆಳವಣಿಗೆ  ನಂತರದ ಕಲಿಯುಗದಲ್ಲಿ ಅತಿಯಾಗಿದೆ.ಆದರೆ ಅಂದಿನ ಕ್ಷತ್ರಿಯ ಧರ್ಮ  ಇಂದಿನ ಪ್ರಜಾಧರ್ಮದಲ್ಲಿ ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರವೆಂದರಿತು ನಡೆದವರೆ ಹೆಚ್ಚು.ಭೂಮಿಯ  ಸಾತ್ವಿಕ ಸತ್ಯವನ್ನು ಅಲ್ಲಗೆಳೆದು ಆಳಿದವರ ಅಜ್ಞಾನವೇ ಇದಕ್ಕೆಲ್ಲಾ ಕಾರಣ.ಅಜ್ಞಾನಕ್ಕೆ ಶಿಕ್ಷಣ ಕಾರಣ. ಶಿಕ್ಷಣ ನೀಡಬೇಕಾದವರೆ ಭೌತಿಕಾಸಕ್ತಿ ಯಲ್ಲಿ ಮುಳುಗಿದ್ದರೆ  ಯಥಾ ರಾಜ ತಥಾ ಪ್ರಜಾ,ಯಥಾ ಗುರು ತಥಾ ಶಿಷ್ಯರು, ಯಥಾ ಪ್ರಜೆ  ತಥಾ ಪ್ರಜಾಪ್ರಭುತ್ವ ದೇಶ.
ಶ್ರೀ ಕೃಷ್ಣ ನಲ್ಲಿದ್ದ ರಾಜಯೋಗವನ್ನರಿತು ತತ್ವಜ್ಞಾನದಿಂದ
ಮುಂದೆ ನಡೆದವರಿಗೆ ಮುಕ್ತಿ .ತಂತ್ರದಿಂದ ಕೃಷ್ಣನನ್ನು ಆಳಲು ಹೊರಟವರಿಗೆ ಪುನರ್ಜನ್ಮದ  ಪ್ರತಿಫಲ. ಹಾಗಾಗಿ ಇಂದು ಜನಸಂಖ್ಯೆ ಮಿತಿಮೀರಿ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ವ್ಯವಹಾರದಲ್ಲಿ ಲಾಭ‌ ನಷ್ಟವನ್ನರಿತು ಜೀವನ ನಡೆಸೋದು ಸಹಜವಾಗಿದೆ.ಆದರೆ ವ್ಯವಹಾರ ಜೀವನದ ಮೂರನೆ ಅಂಗ.  ವ್ಯವಹಾರದಲ್ಲಿಯೂ ಧಾರ್ಮಿಕವಾಗಿ  ನಡೆಯುವಾಗ  ಜ್ಞಾನ ಹೆಚ್ಚುತ್ತದೆ ಹಣವನ್ನು ಸತ್ಕರ್ಮಕ್ಕೆ  ಉಪಯೋಗಿಸಿ ಶಾಂತಿ ಸಿಗುತ್ತದೆ. ಶ್ರೀ ಕೃಷ್ಣನ ಅರ್ಥ ಮಾಡಿಕೊಳ್ಳಲು ಭಕ್ತರಿಗೆ,ದಾಸ,ಶರಣರಿಗೆ ಸಾದು ಸಂತರಿಗೆ ಮಹಾತ್ಮರಿಗಷ್ಟೆ ಸಾಧ್ಯವೆಂದಾಗ ಇವರೆಲ್ಲರೂ ಜ್ಞಾನವನ್ನು ಬಂಡವಾಳಗಿಟ್ಟುಕೊಂಡಿದ್ದರು
ಇದನ್ನು ನಾವು ಅವರ ನಡೆ ನುಡಿಯಲ್ಲಿದ್ದ ಸದ್ವಿಚಾರ,ಸದಾಚಾರ,ಸತ್ಯ,ಧರ್ಮ, ನ್ಯಾಯ,ನೀತಿ,ಸಮಾನತೆ ,ಸರಳತೆ,ಶಾಂತತೆಯನ್ನರಿತರೆ  ಸಾಧ್ಯ. ಭಗವದ್ಗೀತೆ ಯೂ ಇದನ್ನು ತಿಳಿಸಿದೆ. ಭಗವದ್ಗೀತೆ ಮಹಾಗ್ರಂಥವೆಂದು ಪೂಜಿಸಿ ಓದಿ ಪ್ರಚಾರಮಾಡುವುದರಿಂದಲೂ ಪುಣ್ಯ ಸಂಪಾದನೆ ಸಾಧ್ಯ.ಆದರೆ, ಅದರೊಳಗಿರುವ ಧಾರ್ಮಿಕ ಸೂಕ್ಷ್ಮ  ಸರಳ ವಿಚಾರವನ್ನು ನಾವೆಷ್ಟು ಜೀವನದಲ್ಲಿ ತಿಳಿದು ನಡೆಯಲು ಸಹಕಾರ  ನೀಡಬೇಕಾದ  ನಮ್ಮ ಸಮಾಜ, ಗುರುಹಿರಿಯರು, ರಾಜಕಾರಣಿಗಳು ಇನ್ನಿತರ ಪ್ರತಿಷ್ಠಿತ ಜ್ಞಾನಿಗಳು ಈಗಲೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೆಲವರಿದ್ದರೂ   ಕೇವಲವಾಗಿ ಕಾಣುವ ಸಮಾಜದ ಎದುರು  ಗುರುತಿಸಲಾಗದು.  ಸತ್ಯವೇ ದೇವರು. ಸತ್ಯ ಕಠೋರವಾಗುವುದಕ್ಕೆ ಕಾರಣ ಅದನ್ನು ತಿರಸ್ಕರಿಸಿ ಮುಂದೆ ನಡೆದಿರೋದು.ಸತ್ಯವೇ ದೇವರು ಎಂದಾಗ ದೇವರಿರೋದು ಎಲ್ಲಿ? ಸತ್ಯಕ್ಕೆ ಬೆಲೆಕೊಡದೆ ರಾಜಕೀಯವನ್ನು ಬೆಳೆಸಿದವರಿಗೆ ಇಂದಿನ ರಾಜಕೀಯದೊಳಗೇ ಅಡಗಿರುವ  ಅಧರ್ಮ, ಅಸತ್ಯ,ಅನ್ಯಾಯದ ಭ್ರಷ್ಟಾಚಾರವನ್ನು  ತಡೆಯಲಾಗುತ್ತಿಲ್ಲ.ಕಾರಣವಿಷ್ಟೆ ನಮ್ಮ ಸಹಕಾರದಿಂದಲೇ ಇದು ಬೆಳೆದಿರುವಾಗ ನಮ್ಮೊಳಗೂ ಇದೇ ಇರುತ್ತದೆ.ಮೊದಲು ಒಳಗಿರುವ  ಇದನ್ನು ತೊಳೆದು ಸ್ವಚ್ಚ ಮಾಡಿಕೊಂಡರೆ  ಹೊರಗಿನ ಭ್ರಷ್ಟಾಚಾರ ನಿಧಾನವಾಗಿ ಹೋಗಿ ಸ್ವಚ್ಚ ಭಾರತವಾಗುತ್ತದೆ. ಜಗದ್ಗುರು ಆಗೋ ಮೊದಲು ದೇಶಕ್ಕೆ ಗುರುವಾಗಬೇಕು.ದೇಶಕ್ಕೆ ಗುರು
ವಾಗೋ ಮೊದಲು  ಸಮಾಜಕ್ಕೆ ಗುರುವಾಗಬೇಕು.ಇದಕ್ಕೂ ಮೊದಲು ಸಂಸಾರಕ್ಕೆ ಗುರುವಾಗಬೇಕು. ಇದೂ ಸಾಧ್ಯ ಆಗಬೇಕಾದರೆ ನಮ್ಮನ್ನು ನಾವೇ ಯಾರೆಂದು ಅಧ್ಯಾತ್ಮ ಸತ್ಯ ತತ್ವದಿಂದ ಅರ್ಥ ಮಾಡಿಕೊಳ್ಳಬೇಕೆನ್ನುವುದೇ  ಅದ್ವೈತದ ಅಹಂ ಬ್ರಹ್ಮಾಸ್ಮಿ. ಇಲ್ಲಿ  ನಾನೇ ಬ್ರಹ್ಮನಾಗಿದ್ದರೆ ನಾನೇ ಸೃಷ್ಟಿಸಿದ. ಹಲವು ಧರ್ಮ, ಪಂಗಡ,ಪಕ್ಷ,ಜಾತಿ,‌ಇನ್ನಿತರ ಭೌತಿಕ 'ವಿಷ'ಯ ಗಳಿಂದ  ನಮ್ಮ ಗುರಿ ತಲುಪಲಾಯಿತೆ? ದಾರಿ ತಪ್ಪಿದವರ ಹಿಂದೆ ನಡೆದು ದಾರಿ ತಪ್ಪಿದರೆ ತಪ್ಪು ಯಾರದ್ದು? ಪರಮಾತ್ಮನಿರೋದು ಎಲ್ಲರ ಒಳಗೇ ಎಂದಾಗ
ಒಳಹೊಕ್ಕಿ ನೋಡುವ ಶಿಕ್ಷಣವನ್ನು ಶಿಕ್ಷಕರು,ಗುರುಗಳು ಪೋಷಕರು,ಹಿರಿಯರು, ಜ್ಞಾನಿಗಳು, ಸಾಹಿತಿಗಳು, ಇನ್ನಿತರ
ಅಧಿಕಾರ ಪಡೆದ ಪ್ರತಿಷ್ಡಿತರು ಜನರಿಗೆ ಕೊಡದೆ ಆಳಿದರೆ ಶ್ರೀ ಕೃಷ್ಣನ ಕೃಪೆ ಆಗುವುದೆ? ಕಲಿಗಾಲದ ಪ್ರಭಾವವೆಂದರಿತು ಈಗ ಇದ್ದಲ್ಲಿಯೇ ಮೂಲದ ಧರ್ಮ, ಕರ್ಮ, ಭಾಷೆ ಶಿಕ್ಷಣ ಬೆಳೆಸುವತ್ತ ನಡೆದರೆ ದಾರಿ ಹತ್ತಿರವಿದೆ. ಹಿಂದೆ ಇತ್ತು.ಹಿಂದಿನವರಲ್ಲಿತ್ತು. ಎಲ್ಲಿಯವರೆಗೆ ಮಾನವನ‌ಪ್ರಾಣಿ ಗುಣ ಹೋಗುವುದಿಲ್ಲವೋ ಪ್ರಾಣಕ್ಕೆ ಮುಕ್ತಿ ಯಿಲ್ಲ.ಪ್ರಾಣಿಗಳ ಸ್ವತಂತ್ರ ಜೀವನಕ್ಕೂ  ಮುಳ್ಳಾಗಿರುವ ಮಾನವನಿಗೆ  ದೇವರು ಕಾಣಲು ಕಷ್ಟ ಕಷ್ಟ. ಸತ್ಯವನ್ನು ಸುಳ್ಳು ಮಾಡಿ ರಾಜಕೀಯ ನಡೆಸಿದರೂ ಸತ್ಯಕ್ಕೆ ಸಾವಿಲ್ಲ.ರಾಜಕೀಯದಿಂದ ಮುಕ್ತಿ ಸಿಗೋದಿಲ್ಲ. ಶ್ರೀ ಕೃಷ್ಣ ನ
ಯೋಗ  ಜೀವನ ಧರ್ಮದಾರಿತವಾಗಿತ್ತು. ಸ್ವಯಂ ಭಗವಂತನೆಗೆ  ಭೂಮಿ ಆಳಲಾಗಲಿಲ್ಲ ಕಾರಣ ದೇವಾಸುರರನ್ನು ಒಳಗೇ ಇಟ್ಟುಕೊಂಡಿರುವಾಗ ಯಾರನ್ನೂ ಪೂರ್ಣ ತಪ್ಪಿತಸ್ಥರೆಂದು  ಹೇಳಲಾಗದು.ಕೈ ಕೈ ಸೇರಿದರೆ ಚಪ್ಪಾಳೆ. ಸದ್ದು ಮಾಡುತ್ತಿರುವ ಮಾಧ್ಯಮ,ಮಧ್ಯವರ್ತಿಗಳು
ಮಾನವರಷ್ಟೆ,ಮಹಿಳೆ ಮಕ್ಕಳನ್ನು ಹೊರಗೆಳೆದು ಆಳಿದರೆ ಅಧರ್ಮ. ‌ಹಣದಿಂದ  ಏನಾದರೂ ಜೀವ ಖರೀದಿ ಮಾಡಿದರೂ ಅದರ ಫಲವನ್ನು ಉಣ್ಣುವ ಜೀವ ಒಳಗಿದೆ
ಕರ್ಮಕ್ಕೆ ತಕ್ಕಂತೆ ಪ್ರತಿಫಲ.

Thursday, August 18, 2022

ನಾನ್ಯಾರು?

ಭಾರತದೊಳಗಿದ್ದವರೆಲ್ಲರೂ ಭಾರತೀಯ ಎನ್ನಿಸಿಕೊಳ್ಳಲು ದೇಶಭಕ್ತಿ ಅಗತ್ಯ.ಹಾಗೇ ಶ್ರೀ ಕೃಷ್ಣ ತತ್ವ,ಶ್ರೀ ರಾಮತತ್ವವನ್ನರಿತು ನಡೆದವರಷ್ಟೆ ಭಕ್ತರಾಗಬಹುದು.ದೈವ ಗುಣವಿಲ್ಲದೆ ದೇವರ ಭಕ್ತರಾಗಬಹುದೆ? 
ಹೆತ್ತವರಿಲ್ಲದ  ಜೀವವಿಲ್ಲ. ಭೂಮಿಯಲ್ಲಿ ಜನ್ಮ ತಾಳುವುದಕ್ಕೆ‌ಕಾರಣರಾದವರೆ ತಾಯಿತಂದೆ. ಜೀವನ ನಡೆಸಲು ಉತ್ತಮ ಸಮಾಜದ ಅಗತ್ಯವಿದೆ.ಉತ್ತಮ ಸಮಾಜ ನಿರ್ಮಾಣ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ. ಅದೇ ಸಿಗದಿದ್ದರೆ ?
ದೇಶದೊಳಗೆ ದೇಹವಿದೆ ಮನಸ್ಸು ಹೊರಗಿದೆ, ಹಾಗೆಯೇ  ಮಾನವನ ಜೀವವೂ ಪರಮಾತ್ಮನೊಳಗಿದ್ದರೂ ಮನಸ್ಸು ಪರಮಾತ್ಮನಲ್ಲಿಲ್ಲ ಇದನ್ನು  ಕಂಡುಕೊಳ್ಳಲು ಆಂತರಿಕ ಜ್ಞಾನ ಬೇಕಷ್ಟೆ. ಆಂತರಿಕ ಶುದ್ದಿಯಿಂದ ಆತ್ಮಜ್ಞಾನ.
**ನಾನು ಮೊದಲು ಭಾರತೀಯ, ಕೊನೆಗೂ ಭಾರತೀಯ. ಭಾರತೀಯನಲ್ಲದೆ ಮತ್ತೇನೂ ಅಲ್ಲ' **
     -ಡಾ. ಬಿ. ಆರ್. 

ಮಾನವನ ಶತ್ರು ಹೊರಗಿಲ್ಲ ಒಳಗಿರೋದು.

ತನಗೆ ತಾನೇ ಮೋಸ ಹೋಗುವುದರಲ್ಲಿ ನಿಸ್ಸೀಮನೆಂದು ಮಾನವನಿಗೆ ಹೇಳುತ್ತಾರೆ. ಕಾರಣವಿಷ್ಟೆ ಭೂಮಿಯಲ್ಲಿ ಜನ್ಮ ಪಡೆಯಲು ಮೂಲ ಕಾರಣವೆ ಜೀವನ್ಮುಕ್ತಿ ಎನ್ನುವುದು ನಿರ್ವಿವಾದದ ಸತ್ಯ. ಜೀವಕ್ಕೆ ಮುಕ್ತಿ ಸಿಗಬೇಕಾದರೆ ಆ ಪರಾಶಕ್ತಿ ಪರಮಾತ್ಮನ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸತ್ಯದೆಡೆಗೆ ನಡೆಯಬೇಕು ಎನ್ನುವುದಾದರೆ  ಕಲಿಯುಗದಲ್ಲಿ
ಇದು ಎಷ್ಟರ ಮಟ್ಟಿಗೆ ಸಾಧ್ಯ? ಸಾಧ್ಯವಿಲ್ಲ ಎನ್ನುವವರ ಹಿಂದೆ ನಡೆದವರನ್ನೂ ಮೀರಿ ಸಾಧ್ಯವಾಗಿಸಿಕೊಂಡವರೂ ಕೆಲವರಿದ್ದರೂ ಅವರನ್ನು ಬಿಟ್ಟು ಸಾಧ್ಯವಿಲ್ಲ ಎನ್ನುವವರ ಹಿಂದೆ  ನಿಂತು ನೋಡುವವರೆ ಹೆಚ್ಚು. ನಮಗಿಂತ ಶ್ರೀಮಂತ
ವ್ಯಕ್ತಿಯಲ್ಲಿ ಹಣವಿದ್ದರೂ ಗುಣದ ಅಭಾವವಿರುತ್ತದೆ.ಇಲ್ಲ ಹಣವೂ ನಮ್ಮ ಪಾಲಿನದೇ ಆಗಿದ್ದು ಅದರಲ್ಲಿ ಸ್ವಲ್ಪ ಕೊಟ್ಟು
ಆಳುವುದರಿಂದ ಪರಮಾತ್ಮನೆಡೆಗೆ ಜೀವ ನಡೆಯಬಹುದೆ?
ಅಗೋಚರ ಶಕ್ತಿಯನ್ನು ತೋರಿಸಲಾಗದು ಅನುಭವಿಸಿಯೇ
ಕಾಣಬೇಕು. ಹೊರಗೆ  ನೋಡುತ್ತಾ ಒಳಗಿನ ಶಕ್ತಿ ಬೆಳೆದರೆ ಉತ್ತಮ. ಒಳಗಿನ ಶಕ್ತಿಯೇ ಹಿಂದುಳಿದು ನಾನು ಬೆಳೆದರೆ?
ಹಾಗಂತ ಎಲ್ಲಿ ಸಹಕಾರವಿದೆಯೋ ಅಲ್ಲಿ ಬೆಳವಣಿಗೆಯಿದೆ.
ಸಹಕಾರ ಯಾವುದಕ್ಕೆ ಕೊಡಬೇಕೆಂಬ ಜ್ಞಾನ ಮಾನವನಿಗೆ
ಇದ್ದರೆ ಮನುಕುಲದ ಏಳಿಗೆಯಾಗುತ್ತದೆ. 
ಏನನ್ನು  ಕೊಡುವೆವೋ,ಬೇಡುವೆವೋ,ಮಾಡಿ ತಿಳಿಯುವೆವೋ ,ಓದುವೆವೋ ಪ್ರಚಾರಮಾಡುವೆವೋ ಅದು ತಿರುಗಿ ಬರುತ್ತದೆ. ಒಳ್ಳೆಯದು ಕೆಟ್ಟದ್ದು  ಕಣ್ಣಿನಿಂದ ಅಳೆಯದೆ ಅಂತರಾಳದಿಂದ ತಿಳಿಯೂ ಪ್ರಯತ್ನದಲ್ಲಿ  ಮಾನವನ‌ ಸೋಲು ಗೆಲುವು ಅಡಗಿದೆ .ಅಧ್ಯಾತ್ಮ ಸತ್ಯ ಕಾಣಲ್ಲ.ಭೌತಿಕ ಮಿಥ್ಯ ಕಾಣುತ್ತದೆ ಬೆಳೆಯುತ್ತದೆ.
ಹಿಂದಿನ ಮಹಾತ್ಮರು ಅಧ್ಯಾತ್ಮದತ್ತ ನಡೆದು ಜ್ಞಾನ ಪಡೆದರು.

ಭಾರತದ ಉಳಿತಾಯ

ಉಳಿತಾಯ  ಎಂದರೆ  ಉಳಿಸುವುದಾಗುತ್ತದೆ. ಬೌತಿಕ
ಉಳಿತಾಯಕ್ಕೂ ಆಧ್ಯಾತ್ಮದ ಉಳಿತಾಯಕ್ಕೂ  ವ್ಯತ್ಯಾಸ
ಬಹಳವಿದೆ. ಬೌತಿಕದಲ್ಲಿ  ಹಣವನ್ನು ಉಳಿಸಿ,ಆಪತ್ತಿನಲ್ಲಿ
ಬಳಸುವುದು ಉಳಿತಾಯವಾದರೆ, ಆಧ್ಯಾತ್ಮ ಜಗತ್ತಿನಲ್ಲಿ  ಜ್ಞಾನವನ್ನು ಉಳಿಸಿ ಬೆಳೆಸಬೇಕಿದೆ. ಹಣ ಸಂಪಾದನೆಯನ್ನು ಜ್ಞಾನದಿಂದ ಮಾಡುತ್ತಾ  ಧರ್ಮ ಕರ್ಮಕ್ಕೆ ತಕ್ಕಂತೆ ಜೀವನವನ್ನು ಸರಳವಾಗಿ ಸ್ವಚ್ಚವಾಗಿ
ಜೀವನ ನಡೆಸಿ ಧರ್ಮವನ್ನು ಉಳಿಸಿಕೊಳ್ಳಲು ಸಾಕಷ್ಟು
ಕಷ್ಟಪಡುತ್ತಿದ್ದ ಹಿಂದಿನ ಮಹಾತ್ಮರನ್ನು ನಾವೀಗ ಉಳಿಸಲು  ಅವರ ತತ್ವವನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಸಾಕು ನಾವು ಉಳಿದಂತೆಯೆ.
ಆದರೆ, ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ವಿಶೇಷ ಜ್ಞಾನವಿದೆ. ಅದನ್ನು ಗುರುತಿಸುವ ಕೆಲಸ ಗುರು ಹಿರಿಯರು ಮಾಡಿ ಅದಕ್ಕೆ ತಕ್ಕಂತೆ ಶಿಕ್ಷಣ ನೀಡುವುದರಿಂದ ಮಾತ್ರ ಇದು ಸಾಧ್ಯವಿದೆ. ಭೂಮಂಡಲದ ಮೇಲಿರುವ ಚರಾಚರದಲ್ಲಿಯೂ ಅಡಗಿರುವ ಅಣು,ಪರಮಾಣುಗಳು ಕಣ್ಣಿಗೆ ಕಾಣದಿದ್ದರೂ ಹೇಗೆ ಜ್ಞಾನಿವಿಜ್ಞಾನಿಗಳು ಅದನ್ನು ಗುರುತಿಸಿ ಬಳಸಿಕೊಂಡು ಮನುಕುಲ ನಡೆದಿದೆಯೋ
ಹಾಗೆಯೇ ಅದರಲ್ಲಿ ಒಂದು ಸಣ್ಣ ಶಕ್ತಿ ಪ್ರತಿಯೊಬ್ಬರಲ್ಲಿಯೂ ತನ್ನದೇ ಆದ ವಿಶೇಷ ಶಕ್ತಿಯನ್ನು
ಹೊಂದಿದ್ದು  ಜೀವಾತ್ಮನಾಗಿ ಪರಮಾತ್ಮನ ಸೇರಲು ಬಯಸಿರುತ್ತದೆ. ಆದರೆ, ಅಜ್ಞಾನದಿಂದ  ಅದನ್ನು ತಿಳಿಯದೆ  ಉಳಿತಾಯವನ್ನು ಬೌತಿಕದಲ್ಲಷ್ಟೇ ಮಾಡಿ
ಹೆಚ್ಚು ಹೆಚ್ಚು ಹಣ ಸಂಪಾದಿಸುತ್ತಾ  ಮುಂದೆ ನಡೆದರೆ
ಪರರ ಹಣ ಸಾಲವಾಗುತ್ತದೆ. ಇದನ್ನು ತೀರಿಸಲು ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರದಿಂದ  ಮಾಡಿ  ದಾನ,ಧರ್ಮದ ಕಡೆ ನಡೆಯುವುದರಿಂದ  ನಮ್ಮ
ಜೀವಕ್ಕೆ ಮುಕ್ತಿ ಎಂದರು. ಇಂತಹ ವಿಚಾರಗಳು ಭಾರತ
ದೇಶದ‌ಪುರಾಣ,ಇತಿಹಾಸಗಳಿಂದಷ್ಟೆ ಅಲ್ಲದೆ ವೇದಗಳ ಕಾಲದಲ್ಲಿಂದಲೂ  ಪ್ರಚಾರವಾಗುತ್ತಲೇ ಬಂದಿದೆ. ಆದರೆ
ಬೌತಿಕಾಸಕ್ತಿ ಹೆಚ್ಚಾಗಿ ವಿಜ್ಞಾನ ಜಗತ್ತಿನಲ್ಲಿ  ಉಳಿತಾಯದ ವ್ಯವಹಾರದಲ್ಲಿ ಕೇವಲ ಲಾಭ ನಷ್ಟವನ್ನು
ಹಣದಿಂದ ಅಳೆಯುತ್ತಾ ಒಳಗಿನ ಜ್ಞಾನವನ್ನು ಉಳಿಸಲು
ಸಾಧ್ಯವಾಗದೆ ಮನುಕುಲ ಮುಂದೆ ಬಂದಿರೋದು ಕಾಲ
ಪ್ರಭಾವವೆ. ಈಗಲೂ ಎಷ್ಟೋ ಮಂದಿ ತಮ್ಮ ಅಲ್ಪ ಸಂಪಾದನೆಯಲ್ಲಿಯೇ ಜೀವನ ನಡೆಸಿದ್ದಾರೆ. ಇವರಿಂದ
ಭಾರತ ಉಳಿದಿದೆ. ಅವರೆ ಶ್ರಮಜೀವಿಗಳು. ಭಾರತ ಜ್ಞಾನಿಗಳ ದೇಶವಾಗಿತ್ತು.ನಮ್ಮ ಮೂಲ ಜ್ಞಾನವನ್ನು ಬೆಳೆಸಿ ಉಳಿಸಿಕೊಳ್ಳಲು ಜ್ಞಾನಿಗಳಿಂದ ಸಾಧ್ಯ.ಹಣದಲ್ಲಿ ಬಡವರಾಗಿದ್ದರೂ ಜ್ಞಾನದ ಶ್ರೀಮಂತಿಕೆ ಮನುಕುಲವನ್ನು ಉಳಿಸುತ್ತದೆ. 

Wednesday, August 17, 2022

ಸಮಸ್ಯೆಗೆ ಕಾರಣ

*ತೊಂದರೆಗಳಿಗೆ ಎರಡು ಕಾರಣ. ಒಂದು ಹಿತಶತ್ರುಗಳ ಮೇಲೆ ನಂಬಿಕೆ ಇಡುವುದು, ಇನ್ನೊಂದು ತಮಗೆ ಒಳ್ಳೆಯದನ್ನೇ ಬಯಸುವವರ ಮೇಲೆ ಸಂಶಯ ಪಡುವುದು.**

ಮಾತಿಗಿಂತ ಕೃತಿಯೇ ದೊಡ್ಡದು

ಮೌನಕ್ಕಿಂತ ಮಾತು ದೊಡ್ಡದು ಮಾತಿಗಿಂತ ಕೃತಿ ದೊಡ್ಡದು
ಇಲ್ಲಿ ಮೌನ ಬಂಗಾರ ಮಾತು ಬೆಳ್ಳಿ.ಎನ್ನುವುದನ್ನು ಇಂದಿನ
ಜಗತ್ತಿನಲ್ಲಿ ಯಾರೂ ಒಪ್ಪದ ಸ್ಥಿತಿಗೆ ಸಮಾಜ ತಲುಪಿರುವಾಗ ಯಾವ ಮಾತು ಆಡಿದರೆ  ಈ ಮೌನಕ್ಕಿಂತ
ಉತ್ತಮವೆನ್ನುವ ಬಗ್ಗೆ ತಿಳಿಯುವುದು ಅಗತ್ಯವಿದೆ.
ಅಧ್ಯಾತ್ಮ ತಿಳಿಸುವಂತೆ ಪ್ರತಿಯೊಬ್ಬರೂ ಆ ಪರಾಶಕ್ತಿ,ಪರಮಾತ್ಮನ ಅಂಶವನ್ನು ಹೊಂದಿರುವವರಾದರೂ ಯಾರಿಗೂ ಆ ಶಕ್ತಿಯ ದರ್ಶನ ಆಗದಿರುವಾಗ  ಆ ಶಕ್ತಿಯ ದರ್ಶನವಾದವರು ಮೌನ ಮುರಿದು  ಸರಿಯಾಗಿ ಮಾತನಾಡುವುದು ಅಗತ್ಯವಿದೆ.
ಯಾವಾಗ ಮೌನದಿಂದ ಸುಮ್ಮನಿದ್ದು  ಅಧರ್ಮ, ಅಸತ್ಯ, ಅನ್ಯಾಯಗಳನ್ನು ನೋಡಿಕೊಂಡಿರುವೆವೋ ಆಗಲೇ ಅದು
ನಮ್ಮ ಪ್ರಾರಬ್ದಕರ್ಮ ವಾಗಿ ಬೆಳೆದು ಕಾಲಬುಡ ನಿಲ್ಲುತ್ತದೆ
ಇದು ಪೋಷಕರಿಗಾಗಬಹುದು,ಗುರು ಹಿರಿಯರಿಗಾಗಬಹುದು. ಮಕ್ಕಳು ತಿಳಿಯದೆ ತಪ್ಪು ಮಾಡಿದರೂ ತಪ್ಪನ್ನು ತಿದ್ದದೆ ಬಿಟ್ಟು ಮುಂದೆ ದೊಡ್ಡದಾಗಿ
ಬೆಳೆದಾಗಲೂ ಮೌನವಾಗಿರುವ ಶಕ್ತಿವುಳ್ಳವರು ವಿರಳ.
ಹೀಗಾಗಿ ಇಂದು ಎಲ್ಲರೂ ಮಾತನಾಡುವ ಅಧಿಕಾರಕ್ಕಾಗಿ
ಹೋರಾಟ ಮಾಡಿಯಾದರೂ ಸರಿ ನನ್ನ ಮಾತಿಗೆ ಬೆಲೆ ಬರಬೇಕೆನ್ನುವವರ ಸಂಖ್ಯೆ ಬೆಳೆದಿದೆ.ಆದರೆ, ಯಾವುದರ ಪರವಾಗಿ ಮಾತನಾಡಿದರೆ ಉತ್ತಮ ಶಾಂತಿ ಸಿಗುವುದೆನ್ನುವ
ಜ್ಞಾನವಿಲ್ಲದೆ ಕೇವಲ ರಾಜಕೀಯಕ್ಕೆ ಪರ ನಿಂತು ನಮ್ಮವರ
ತಪ್ಪು ಮುಚ್ಚಿಟ್ಟು ಆಳೋದಕ್ಕೆ  ಮಾತನಾಡಿದರೆ ಅಧರ್ಮ.
ಇದಕ್ಕೆ ಬದಲಾಗಿ ಮೌನವೇ ಉತ್ತಮ ದಾರಿ ತೋರಿಸುತ್ತದೆ
ಮಾತಿಗಿಂತ ಕೃತಿಯೇ ಮೇಲು ಎನ್ನುತ್ತಾರೆ. ಕೆಲವು ವೇಳೆ ಕೃತಿಚೌರ್ಯದಿಂದಾಗುವ  ಅನಾಹುತಗಳು ಮನುಕುಲಕ್ಕೆ
ಮಾರಕವಾಗುವುದರಿಂದ ಸಾಧ್ಯವಾದರೆ ಬದುಕಿದ್ದಾಗಲೆ ಸತ್ಯ ನುಡಿದು ಹೋಗುವುದು ಉತ್ತಮ.
ನಮ್ಮ ಹಿಂದಿನ ಪುರಾಣ,ಇತಿಹಾಸದ ಕಥೆಗಳೇ ಇದಕ್ಕೆ ಸಾಕ್ಷಿ.
ಮಹಾತ್ಮರುಗಳೇನೋ ಬರೆದಿಟ್ಟರು.ಅದನ್ನು ಓದಿ ಅರ್ಥ ಮಾಡಿಕೊಳ್ಳುವವರಿಗೆ  ಸತ್ಯದ ಅರಿವಾಗದಿದ್ದರೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿ ಮಧ್ಯವರ್ತಿಗಳು ಬೆಳೆಯುತ್ತಾರೆ. ಸತ್ಯ ದ ಅನುಭವ ನಮ್ಮ ಜೀವಕ್ಕೆ ಸಿಕ್ಕರೆ
ಸರಿ.ಸಿಗದಿದ್ದರೆ ಅದನ್ನು ಅಸತ್ಯವೆನ್ನುವವರು  ತಿರುಚಿ ಬರೆದು ಮೂಲವನ್ನು ಹಿಂದುಳಿಸಿ ಆಳುತ್ತಾರೆ.ಹೀಗಾಗಿಯೇ
ನಮ್ಮ‌ಹಿಂದಿನ ಮಹಾತ್ಮರ ಹೆಸರಲ್ಲಿ ಸಾಕಷ್ಟು ಕಾರ್ಯಕ್ರಮ
ನಡೆದರೂ ಮಹಾತ್ಮರುಗಳ ಸಂಖ್ಯೆ ಬೆಳೆಯದೆ,ಮಧ್ಯವರ್ತಿಗಳು ಬೆಳೆದು ಅತಂತ್ರಸ್ಥಿತಿಗೆ ತಲುಪಿದೆ ಜಗತ್ತು. ಭಾರತವನ್ನು ಅರ್ಥ ಮಾಡಿಕೊಳ್ಳಲು
ಕಷ್ಟ.ಅದರಲ್ಲೂ ಭಾರತೀಯರನ್ನು ಕಷ್ಟ ಕಷ್ಟ.ಕಾರಣ ಇಲ್ಲಿ
ಮಧ್ಯವರ್ತಿಗಳು ಹೆಚ್ಚಾಗಿ ಈ ಕಡೆ ರಾಜಕೀಯ ಇನ್ನೊಂದು ಕಡೆ ರಾಜಯೋಗ ವನ್ನು  ಅನರ್ಥದಿಂದ ಎಳೆದಾಡಿಕೊಂಡು
ವ್ಯವಹಾರಕ್ಕೆ ಬಳಸುತ್ತಾ ವಿದೇಶದವರೆಗೆ ಪ್ರಚಾರವಾಗಿದ್ದರೂ ನಮ್ಮೊಳಗೇ ಅಡಗಿದ್ದ ಸತ್ಯಕ್ಕೆ ನಾವೇ
ಮೋಸಮಾಡಿಕೊಂಡು ಜೀವನ ನಡೆಸುವಂತಾಗಿದೆ ಎಂದರೆ
ಮೌನವನ್ನು ದುರ್ಭಳಕೆ ಮಾಡಿಕೊಂಡರೂ ಎಲ್ಲಾ ದೇವರೆ
ಸರಿಮಾಡುತ್ತಾನೆಂಬ ಭ್ರಮೆಯಲ್ಲಿ ನಮ್ಮವರ ಸತ್ಯವನ್ನು
ಕೇಳದೆ ಪರಕೀಯರ ಮಿಥ್ಯವನ್ನು ಸ್ವಾಗತಿಸುತ್ತಾ ಮುಂದೆ ನಡೆದಂತೆಲ್ಲಾ ಮೂಲದ ಮೌನ ಮತ್ತೆ ಹುಟ್ಟಿ ಮಾತಾಡೋ
ಪರಿಸ್ಥಿತಿ ಬಂದಿರೋದು.ವಿಗ್ರಹದೊಳಗಿರುವ ಶಕ್ತಿ ಮಾತನಾಡೋದಿಲ್ಲ.ಹತ್ತಿರವೇ ಇರುವ ಮಹಾಶಕ್ತಿಯ ಮಾತು ಕೇಳೋಹಾಗಿಲ್ಲ. ಇವರಿಬ್ಬರ ನಡುವಿನ ಜೀವನ
ಶಾಂತಿಯಿಂದ ಇರಬೇಕಾದರೆ ಸಮಾನತೆ ಇರಬೇಕು.
ಪ್ರತಿಮೆಗೂ ಪ್ರತಿಭೆಗೂ ವ್ಯತ್ಯಾಸವಿಷ್ಟೆ ಒಂದು ಜೀವನಕ್ಕೆ
ದಾರಿ ತೋರಿಸಿದರೆ ಇನ್ನೊಂದು ಜೀವನ ನಡೆಸುತ್ತದೆ.
ಜೀವನದಲ್ಲಿ ಮಾತಿರಬೇಕು.ಮಾತೇ ಜೀವನವಾಗದಂತೆ ನೋಡಿಕೊಳ್ಳಬೇಕು. ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದು ಮತ್ತಿಗೆಹಾಕದಂತಾಗಬಾರದಷ್ಟೆ.ಇತ್ತೀಚಿನ ದಿನಗಳಲ್ಲಿ  ನುಡಿಗಳೇ ಜನರನ್ನು ಮುತ್ತಿಗೆ ಹಾಕುವಂತೆ ಮಾಡಿ  ಜನಸಂಖ್ಯೆ ಬೆಳೆದು  ರಾಜಕೀಯ ಪ್ರಭಾವದಿಂದಾಗಿ
ಭೂಮಿಯಲ್ಲಿ ಕ್ರಾಂತಿಕಾರಿಕ ಬೆಳವಣಿಗೆಗಳಾಗುತ್ತಿರುವುದಕ್ಕೆ
ಕಾರಣ ಎಲ್ಲಾ ತಿಳಿದವರು ನಮಗೂ ದೇಶಕ್ಕೂ ಸಂಬಂಧ ಇಲ್ಲ.ನಮ್ಮ ಧರ್ಮ ಬೇರೆ ದೇಶದ ಧರ್ಮ ಬೇರೆ ಎನ್ನುವ
ವ್ಯವಹಾರದಲ್ಲಿರೋದೆಂದರೂ  ತಪ್ಪಾಗುತ್ತದೆಯೆ?

ನಂಬಿಕೆ, ಮೂಢನಂಬಿಕೆ

ನಂಬಿಕೆ ಹಾಗು ಮೂಢನಂಬಿಕೆಗೆ ವ್ಯತ್ಯಾಸವಿಷ್ಟೆ ನಂಬಿಕೆಯಲ್ಲಿ ಆತ್ಮವಿಶ್ವಾಸವಿರುತ್ತದೆ ಮೂಡನಂಬಿಕೆಯಲ್ಲಿ
ಕಡಿಮೆಯಿದ್ದು ಮೂಢರಂತೆ ವರ್ತಿಸುತ್ತಾರೆ.
ಉದಾಹರಣೆಗೆ, ದೇವರಿದ್ದಾನೆಂಬ ನಂಬಿಕೆಯಲ್ಲಿ ಆಂತರಿಕವಾಗಿ  ಮಾನವ ತನ್ನ ಶುದ್ದಿಗಾಗಿ ಪ್ರಯತ್ನ ಪಡುತ್ತಾ
ಮುಂದೆ ನಡೆದಂತೆಲ್ಲಾ  ದೈವಗುಣವೃದ್ದಿಯಾದಂತೆ  ನಂಬಿಕೆಯೂ ಬಲವಾಗುತ್ತದೆ ದಾಸರು,ಶರಣರು,ಸಂತರು,ಸಾದುಗಳಲ್ಲಿ ನಂಬಿಕೆಯೇ ದೇವರಾಗಿತ್ತು. ಆದರೆ, ಅಂತಹ ಮಹಾತ್ಮರನ್ನು ಮಧ್ಯೆ ನಿಲ್ಲಿಸಿ
ಜನರನ್ನು ತಮ್ಮೆಡೆ ಸೆಳೆಯುವಾಗ  ಜನರೊಳಗೇ ಅಡಗಿದ್ದ ಮೂಲ ನಂಬಿಕೆ ಶ್ರದ್ದೆ ಬಿಟ್ಟು ಹೊರ ಬಂದರೆ  ಮಧ್ಯವರ್ತಿಗಳನ್ನಷ್ಟೆ ನಂಬುತ್ತಾ  ಅವರು ಹೇಳಿದ ತತ್ವವನ್ನು
ಅರ್ಥ ಮಾಡಿಕೊಳ್ಳಲು ಸೋತರೆ ಮೂಢನಂಬಿಕೆಯಾಗುತ್ತದೆ.  ವಿವೇಕಾನಂದರು ಇಂತಹವರನ್ನು  ವಿರೋಧಿಸುತ್ತಿದ್ದರು. ಇಡೀ ಜಗತ್ತಿನ ಮಾನವರೊಳಗಿರುವ ಅಪಾರವಾದ ಆತ್ಮಶಕ್ತಿಯ ಮೇಲೆ ನಂಬಿಕೆ  ಇಟ್ಟರೆ  ಮಾನವನೊಳಗಿರುವ ಅಮೃತವಾದ ಜ್ಞಾನ
ಸದ್ಬಳಕೆ ಆಗುತ್ತದೆ ಎನ್ನುವುದು ಅವರ ಸಂದೇಶ.
ನೀನು ಅಮೃತಪುತ್ರ,ದೇವರ ಪುತ್ರ, ಅಗಾಧವಾದ ಆತ್ಮಶಕ್ತಿ
ನಿನ್ನೊಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗದು.
ಮೂಲ ಶಕ್ತಿಯ ಮೇಲೆ ನಂಬಿಕೆಯಿದ್ದರೆ  ರೆಂಬೆಗಳನ್ನು ಸರಿಯಾದ ಮಾರ್ಗದಲ್ಲಿ  ಬೆಳೆಸಬಹುದು. ಇವೆಲ್ಲವೂ ಇಂದು ಅರ್ಥ ವಾಗದಿದ್ದರೂ ಸತ್ಯವಾಗಿದೆ. ಮಕ್ಕಳ ಆಂತರಿಕ ಜ್ಞಾನಕ್ಕೆ ಪೂರಕವಾದ ಶಿಕ್ಷಣ,ಸಂಸ್ಕಾರವನ್ನು  ಕೊಟ್ಟಾಗಲೇ
ವಿವೇಕ ಬೆಳೆಯೋದು ಆನಂದವನ್ನು ಒಳಗೆ ಕಾಣಬಹುದು.
ಹೊರಗಿನ ಮನರಂಜನೆ ತಾತ್ಕಾಲಿಕವಾದರೆ ಒಳಗಿನ ಆತ್ಮವಿಶ್ವಾಸ,ನಂಬಿಕೆ ಶಾಶ್ವತ. ದೇವರೆಲ್ಲಿರೋದು? ಪ್ರತಿಮೆಯಲ್ಲಿಯೋ ಪ್ರತಿಭೆಯಲ್ಲಿಯೋ? ಎಂದಾಗ ಎರಡೂ ಕಡೆ ಇರುವ ದೇವರನ್ನು ಕಾಣೋದಕ್ಕೆ  ನಂಬಿಕೆ,ಶ್ರದ್ದೆ,ಭಕ್ತಿಯ ಜ್ಞಾನ ಮುಖ್ಯ. ವ್ಯವಹಾರಕ್ಕೆ  ಹೆಚ್ಚಾಗಿ ಬಳಸಿದರೆ ಹಣದ ಹಿಂದೆ ಬರುವ ಋಣವೂ ಹೆಚ್ಚಾಗಿ ನಂಬಿಕೆ ಕುಸಿಯುತ್ತದೆ.
ಒಟ್ಟಿನಲ್ಲಿ ನಂಬಿಕೆಯಿರಲಿ ಅಪನಂಬಿಕೆ ಮೂಢನಂಬಿಕೆ ಬೇಡ. ನಾವಿದ್ದೇವೆಂದರೆ  ನಮ್ಮಲ್ಲಿ ದೈವತ್ವವೂ ಇರುತ್ತದೆ.
ಒಳ್ಳೆಯದನ್ನು ಜನರು ನಂಬೋದಿಲ್ಲವೆಂದರೆ ಅವರಲ್ಲಿ ಕೆಟ್ಟದ್ದು ಹೆಚ್ಚಾಗಿರುತ್ತದೆ ಅಷ್ಟೆ.

ಮಾನವ ಜನ್ಮ ದೊಡ್ಡದು

ಭೂಮಿಯಲ್ಲಿ ಮಾನವ ಜನ್ಮ ಪಡೆಯಲು ಎಷ್ಟೋ ಜನ್ಮದ ಪುಣ್ಯವಿರಬೇಕಂತೆ. ಪುಣ್ಯಮಾಡಿದವರಿಗೆ ಮಾನವ ಜನ್ಮ ಬರೋದಾದರೆ ಪಾಪ ಮಾಡಿದವರಿಗೆ ಯಾವ ಜನ್ಮ?
ಮಾನವ ಜನ್ಮದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರಾ
ಎಂದು ದಾಸರು ತಿಳಿಸಿರೋದರ ಹಿಂದೆ ಜನ್ಮ ಪಡೆದು ಪರಮಾತ್ಮನ  ತಿಳಿಯದಿದ್ದರೆ  ವ್ಯರ್ಥ ಎಂದು. ದೇವರನ್ನು ಬಿಟ್ಟು  ಯಾರೂ ಇಲ್ಲ. ಹಾಗಂತ ದೇವರನ್ನು ಎಲ್ಲಾ ಒಪ್ಪಲು
ಕಷ್ಟ. ಇಡೀ  ಬ್ರಹ್ಮಾಂಡವನ್ನು ಆವರಿಸಿರುವ ಅಣು,ರೇಣು,ತೃಣ,ಕಾಷ್ಠ ವನ್ನಾವರಿಸಿರುವ ಸರ್ವವ್ಯಾಪಿ ಶಕ್ತಿ
ನನ್ನೊಳಗಿಲ್ಲವೆನ್ನುವ ಮಾನವನಿಗೆ  ನಾನೆಂಬುದಿಲ್ಲ ಎನ್ನುವ
ಅದ್ವೈತ ವನ್ನು  ನಾನಿದ್ದಾಗ ತಿಳಿಸಲಾಗದು. ನಾನು ಹೋದರೆ
ಅಲ್ಲಿ ಉಳಿಯುವುದು ದೈವ ಒಂದೇ. ಜನನ ಮರಣಗಳ ನಡುವಿನ ಜೀವನದಲ್ಲಿ ಸಾಧನೆ  ಭೌತಿಕ ಜಗತ್ತಿನಲ್ಲಿ ಕಂಡರೆ
ಅಧ್ಯಾತ್ಮ ಜಗತ್ತು ಕಾಣೋದಿಲ್ಲ. ಹೀಗಾಗಿ  ನಮ್ಮನ್ನು ನಾವೇ
ಒಳಹೊಕ್ಕಿ ನೋಡಿಕೊಳ್ಳಬೇಕೆನ್ನುತ್ತಾರೆ ಮಹಾತ್ಮರು.
ಹೊರಗಿನ ದೇವತೆಗಳನ್ನು  ಹೊರಗೆ ಬಿಟ್ಟು  ಒಳಗಿನ ದೇವರನ್ನು  ಕಾಣೋದಕ್ಕೆ ಪ್ರಯತ್ನ ಪಟ್ಟವರಿಗೆ  ದೇವರ ಅಸ್ತಿತ್ವ  ಸ್ಪಷ್ಟವಾಗಿ ಅರ್ಥ ವಾದರೂ  ಒಳಗೆ ಕಾಣಿಸಿದ ಶಕ್ತಿ
ಹೊರಗೆ ತೋರಿಸಲಾಗದೆ ಮೌನವಾದರು.ಇದನ್ನು ವಿಜ್ಞಾನ ಜಗತ್ತು  ಸೋಲು ಎಂದರೆ ಗೆದ್ದವರು ಯಾರು? ವಿಜ್ಞಾನವೆ,?
ಮಾನವನ ಅಜ್ಞಾನದ ಮಿತಿಮೀರಿದ  ಆವಿಷ್ಕಾರದಿಂದ ಭೂಮಿ ತನ್ನ ಪವಿತ್ರತೆಯನ್ನು ಕಳೆದುಕೊಂಡರೂ  ಅದರ ಮೇಲೇ ನಿಂತು ರಾಜಕೀಯ ನಡೆಸೋರಿಗೇನೂ ಕೊರತೆಯಿಲ್ಲ. ಕೊರತೆಯಿರೋದು ಜ್ಞಾನದಲ್ಲಿ .ಹಣದಿಂದ ಋಣ  ಬೆಳೆಸಿಕೊಂಡು  ಜನ್ಮಜನ್ಮಗಳವರೆಗೆ ತೀರಿಸಲಾಗದೆ
ಅತಂತ್ರ ಆತ್ಮಗಳನ್ನು  ಕಂಡವರ್ಯಾರು?
ದೇಹದಲ್ಲಿ ಚೈತನ್ಯಶಕ್ತಿ ಇರೋವಾಗಷ್ಟೇ ಅಧ್ಯಾತ್ಮ ಸಾಧನೆ ಸಾಧ್ಯ.

ಯಾರಿಗೆ ಸಿಕ್ಕಿತು 75 ವರ್ಷದ ಸ್ವಾತಂತ್ರ್ಯ?

    ಬ್ರಿಟಿಷ್ ಸರ್ಕಾರದ ಅನ್ಯಾಯ,ಅಧರ್ಮ, ಅತ್ಯಾಚಾರ, ಅಸತ್ಯ, ಅನೀತಿಯ ವ್ಯವಹಾರವನ್ನು ವಿರೋಧಿಸಿ ತಮ್ಮ ಜೀವವನ್ನು ಲೆಕ್ಕಿಸದೆ ದೇಶದ ಬಿಡುಗಡೆಗಾಗಿ ಹೋರಾಟದ ದಾರಿ ಹಿಡಿದವರೆಷ್ಟೋ ಮಹಾತ್ಮರುಗಳಿಗೆ ಇಂದಿಗೂ ಸಹ ನಮ್ಮ ಈ ತ್ಯಾಗಕ್ಕೆ ಸಿಕ್ಕ  ಬೆಲೆಯನ್ನು ಹುಡುಕುವ ಹಾಗಾಗಿದೆ ಎಂದರೆ ತಪ್ಪಿಲ್ಲ.
   ದೇಶದೊಳಗಿರುವ ಎಲ್ಲರಿಗೂ ಸ್ವಾತಂತ್ರ್ಯ ಹೋರಾಟಗಾರರ  ವಿಚಾರ ತಿಳಿದಿದೆ. ಪಠ್ಯಪುಸ್ತಕಗಳಲ್ಲಿ, ಪ್ರಚಾರಕರಲ್ಲಿ, ಮಾಧ್ಯಮಗಳಲ್ಲಿ ಮಧ್ಯವರ್ತಿಗಳಲ್ಲಿ  ಈ ವಿಚಾರಗಳನ್ನು ತಿಳಿಸುವ ಸ್ವಾತಂತ್ರ್ಯ ಬಹಳಷ್ಟಿದೆ. ಆದರೆ ತಿಳಿಸಿದವರಿಗೆ ನಿಜವಾದ ಸ್ವಾತಂತ್ರ್ಯದ ಮೂಲಾರ್ಥ ತಿಳಿಯದೆ ಅದನ್ನು ರಾಜಕೀಯವಾಗಿ ಹರಡುತ್ತಾ ದೇಶದ ಜನರೊಳಗಿದ್ದ ದ್ವೇಷ, ರೋಷ, ಅಸೂಯೆ,ತಾರತಮ್ಯ, ಭಿನ್ನಾಭಿಪ್ರಾಯ, ಸೇಡನ್ನು ಇನ್ನಷ್ಟು ದಷ್ಟಪುಷ್ಟವಾಗಿಸಿ  ನಮ್ಮವರನ್ನೇ  ದ್ವೇಷ ಮಾಡುತ್ತಾ ವಿದೇಶಿಗಳ ಕೈಗೆ ಶಿಕ್ಷಣ,ವ್ಯವಹಾರ  ಕೊಟ್ಟು ದೇಶದ ತುಂಬಾ ಜನರಿದ್ದರೂ ದೇಶಭಕ್ತರ ಸಂಖ್ಯೆ ಕಡಿಮೆ.
ಇಷ್ಟಕ್ಕೂ ಪ್ರಜಾಪ್ರಭುತ್ವದ  ದೇಶದಲ್ಲಿ ಪ್ರಜೆಗಳಿಗೆ ಕೊಡಲೇ ಬೇಕಾದ‌ ದೇಶೀಯ ಶಿಕ್ಷಣವನ್ನು ಕೊಡಬೇಕಾದವರೆ ವಿದೇಶಕ್ಕೆ  ಹೊರಟರೆ  ಅವರನ್ನು ದೇವರೆಂದು,ಮಹಾತ್ಮರೆಂದು, ಶ್ರೀಮಂತ ರೆಂದು,ವಿದ್ಯಾವಂತರೆಂದು  ತಿಳಿದು ಅನುಸರಿಸಿದವರ ತಪ್ಪಿಲ್ಲ. ಇಂದಿನ ಭಾರತ ಅಂದಿನ ಭಾರತ ಕ್ಕಿಂತ ‌ಹೆಚ್ಚು ಬದಲಾಗಿಲ್ಲ.ಅಂದು ಹೊರಗಿನಿಂದ ಬಂದು ಆಳಲು ಹೊರಟವರಿಗೆ ಅಂದಿನ ರಾಜರುಗಳ  ಆಂತರಿಕ ದ್ವೇಷವೇ ಸಹಕರಿಸಿತ್ತು.ಈಗ ನಮ್ಮವರನ್ನೇ ನಾವು ದ್ವೇಷ ಮಾಡುತ್ತಾ, ಹೊರಗಿನವರನ್ನು , ಹೊರಗಿನಿಂದ ಕರೆದು ಕೂರಿಸಿ ವ್ಯವಹಾರವನ್ನು ಬೆಳೆಸಲು ಭೂಮಿಯನ್ನು, ಜನರನ್ನು ಕೊಟ್ಟು  ಕರೆಸಿಕೊಳ್ಳುವ ಹಂತಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಬಂದಿದೆ. ಕಾರಣವಿಷ್ಟೆ ಸಾಲ. ಅಧ್ಯಾತ್ಮ ಚಿಂತಕರ ಪ್ರಕಾರ ಮಾನವನ ಸಾಲ ತೀರುವುದು ಸತ್ಕರ್ಮ, ಸ್ವಧರ್ಮ, ಸ್ವಶಿಕ್ಷಣ, ಸುಜ್ಞಾನ, ಸ್ವಾವಲಂಬನೆ, ಸ್ವಾಭಿಮಾನದ ಸ್ವತಂತ್ರ ಜೀವನದಿಂದ. ಹಾಗಾದರೆ ಈಗಿನ ದೇಶದ ಸಾಲವನ್ನು ತೀರಿಸಲು ಇವುಗಳಿಂದ ಸಾಧ್ಯವೆ?
ಇನ್ನಷ್ಟು ಮತ್ತಷ್ಟು ಹೊರಗಿನ ಸಾಲವನ್ನು ಒಳಗೆಳೆದುಕೊಂಡು ಸ್ವತಂತ್ರವಾಗಿ  ಬದುಕಲು ಸಾಧ್ಯವೆ?
ಸಾಮಾನ್ಯರಲ್ಲಿದ್ದ ಜ್ಞಾನವನ್ನು ತಿರಸ್ಕರಿಸಿ ದೇಶವನ್ನೇ ವಿದೇಶ ಮಾಡಿ  ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ನಾವು ಹೊರಟಿರುವಾಗ  ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಸತ್ಯವೆ
ಎನ್ನುವ ಬಗ್ಗೆ ಸಂಶಯ ಮೂಡುತ್ತದೆ. ನಮ್ಮ ಜ್ಞಾನವೇ ನಮ್ಮಿಂದ ದೂರವಾಗುತ್ತಿದೆ,ನಮ್ಮವರೆ ನಮಗೆ ಶತ್ರು ವಾಗಿ
ಅಡ್ಡ ನಿಂತಿದ್ದಾರೆ, ನಮ್ಮ ಮಕ್ಕಳೇ ನಮ್ಮ ದೇಶ ಬಿಟ್ಟು ವಿದೇಶಕ್ಕೆ ಹಾರುತ್ತಿದ್ದಾರೆ.ಇನ್ನು  ಧರ್ಮ, ಸಂಸ್ಕೃತಿ, ಕಲೆ, ಆಚಾರ, ವಿಚಾರ, ಸಾಹಿತ್ಯ, ಸಂಗೀತದಲ್ಲಿಯೂ ಪಾಶ್ಚಾತ್ಯರ ಪ್ರವೇಶವಾಗಿದೆ. ಹಾಗಾದರೆ ಇಲ್ಲಿ ನಮ್ಮದು ಏನಿದೆ? ಶಿಕ್ಷಣದಲ್ಲಿಯೇ  ಹೊರಮುಖವಾಗಿರುವ‌ ಜ್ಞಾನ
ಒಳಗಿನ ಜ್ಞಾನದೆಡೆಗೆ ಬರೋದಕ್ಕೆ  ಬಹಳ ಸಮಯ ಬೇಕು.
ಆದರೆ, ಇರುವವರೆಲ್ಲರೂ ಈ ಸತ್ಯ ತಿಳಿದು ಹಿಂದಿರುಗುವ
ಸ್ವಾತಂತ್ರ್ಯ ಇನ್ನೂ ನಮ್ಮಲ್ಲಿದೆ ಎನ್ನುವ ಆತ್ಮವಿಶ್ವಾಸ  ನಮಗಿದ್ದರೆ  ಮುಂದಿನ ಭಾರತವು ಆತ್ಮಜ್ಞಾನಿಗಳ ಭಾರತ ಆಗಬಹುದೇನೂ. 
ಒಳಗೆಳೆದುಕೊಂಡ  ಕೆಟ್ಟ' ವಿಷ'ಯಗಳಿಂದ ದೇಹದೊಳಗೇ
ನಿಧಾನವಾಗಿ ಹರಡಿದ ವಿಷ  ಜೀವವನ್ನು ಬಲಿತೆಗೆದುಕೊಂಡರೂ  ಮೂಲದಲ್ಲಿದ್ದ ಅಮೃತದಂತಹ
ಜ್ಞಾನದಿಂದ ಮತ್ತೆ ಬದುಕಿಸಬಹುದಲ್ಲವೆ? ಇದಕ್ಕೆ ಸಹಕಾರ
ಸಿಗೋದಕ್ಕೆ  ನಮ್ಮಲ್ಲಿ ಕಷ್ಟ.ಕಾರಣ ಹೊರಗಿನಿಂದ ತುಂಬಿದ
ವಿಷವೇ ದೇಹವನ್ನು ನಡೆಸುತ್ತಿರುವಾಗ ಒಳಗೇ ಇದ್ದ ಅಮೃತವೂ  ವಿಷವಾಗಬಹುದು. ಹೀಗಾಗಿ ಮಕ್ಕಳಿಗೆ ಸ್ವತಂತ್ರ ಜ್ಞಾನ ಹೆಚ್ಚಿಸಿ, ಅವರ ಒಳಗಿನ ಮೂಲದ  ಶಕ್ತಿಗೆ,ಪ್ರತಿಭೆಗೆ,ಆಸಕ್ತಿಗೆ,ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಡುವ ಸ್ವಾತಂತ್ರ್ಯ  ಪೋಷಕರಿಗಿದ್ದರೆ ಉತ್ತಮ.
ಪೇರೆಂಟ್ಸ ಎನ್ನುವ ಆಂಗ್ಲ ಪದಕ್ಕೆ ತಕ್ಕಂತೆ  ಹಣವನ್ನು, ಮಕ್ಕಳನ್ನು  ಕೊಟ್ಟು  ತಮ್ಮ  ಸ್ವಾತಂತ್ರ್ಯ  ಕಳೆದುಕೊಂಡು
ಅನಾವಶ್ಯಕವಾದ ವಿಚಾರಗಳಿಂದ ಮಕ್ಕಳ ಮುಗ್ದ ಮನಸ್ಸನ್ನು ಕೆಡಿಸಿ ಪ್ರಬುದ್ದರನ್ನಾಗಿಸಲು ಹೊರಟವರಿಗೆ ಕೊನೆಗಾಲದಲ್ಲಿ ಹಣವೂ ಇಲ್ಲ,ಮಕ್ಕಳೂ ಇಲ್ಲ, ಜ್ಞಾನವೂ
ಇಲ್ಲವಾದರೆ ಸ್ವಾತಂತ್ರ್ಯ ಯಾರಿಗೆ ಕೊಟ್ಟಿದ್ದೇವೆ. 
ಭೌತಿಕದಲ್ಲಿ  ನಿಜವಾಗಿಯೂ ಎಲ್ಲರೂ ಮುಂದುವರಿದ
ಪ್ರಜೆಗಳಾದರೂ ಅಧ್ಯಾತ್ಮ ದ ಪ್ರಕಾರ  ನಮ್ಮತನ, ನಮ್ಮ ಜ್ಞಾನ,ನಮ್ಮ ಮಕ್ಕಳಿಗೇ ಹಂಚಲಾಗದ ನತದೃಷ್ಟರು ಇಂದು
ಮಕ್ಕಳನ್ನು ವಿದೇಶಕ್ಕೆ ಕಳಿಸುವುದಕ್ಕೇ‌ ತಯಾರಿ ನಡೆಸಿರುವುದಕ್ಕೆ  ಅಜ್ಞಾನದ   ಶಿಕ್ಷಣವೇ ಕಾರಣವಾಗಿದೆ.
ಎಲ್ಲರಿಗೂ  ಹೆಸರು,ಹಣ,ಅಧಿಕಾರ,ಸ್ಥಾನಮಾನಕ್ಕಾಗಿ ವ್ಯವಹಾರದಲ್ಲಿ ಮುಳುಗಿದ್ದರೂ  ವ್ಯವಹಾರದ ಸಾಲವೇ ಬೇರೆ,ದೇಶದ ಸಾಲವೇ ಬೇರೆ. ಅಧ್ಯಾತ್ಮದ  ಋಣವನ್ನು
ತೀರಿಸಲು  ಆಂತರಿಕ ಜ್ಞಾನವೇ ಮೂಲ ಶಕ್ತಿ. ಆದರೆ ಜನ್ಮ ಜನ್ಮಗಳಿಂದ ಹೊತ್ತು ಬಂದದ್ದನ್ನು ಒಂದೇ ಜನ್ಮದಲ್ಲಿ ತೀರಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಸಾಲ ಮಾಡದೆ
ಇದ್ದದ್ದರಲ್ಲಿ  ಉಳಿಸಿ,ಬೆಳೆಸಿ  ತೀರಿಸುವುದಕ್ಕೆ  ಹಿಂದಿನ ಮಹಾತ್ಮರುಗಳು  ಪ್ರಯತ್ನಿಸಿ ಗೆದ್ದರು. ಒಟ್ಟಿನಲ್ಲಿ ಇಡೀ
ಜಗತ್ತಿನಲ್ಲಿ ಯಾರೂ ಸಾಲವಿಲ್ಲದೆ ಬದುಕಿಲ್ಲ.ಆಗೋದೂ
ಇಲ್ಲ.ಕೊನೆಪಕ್ಷ ನಮ್ಮ ಹತ್ತಿರದ ಸಾಲವನ್ನು  ಸ್ವಧರ್ಮ, ಸತ್ಕರ್ಮ, ಸ್ವದೇಶದಲ್ಲಿದ್ದೇ ತೀರಿಸುವ‌ ಜ್ಞಾನವಿದ್ದರೆ ಅದೇ
ಮುಕ್ತಿ. ಸ್ವಾತಂತ್ರ್ಯ ವೆಂಬುದನ್ನು  ಸ್ವೇಚ್ಚಾಚಾರವೆಂದರಿತು
ಮನಸ್ಸಿಗೆ ಬಂದಂತೆ ನಡೆದರೆ  ತಪ್ಪು. ಇದರಿಂದಾಗಿ ಯಾವ
ದೇಶವೂ ಉದ್ದಾರವಾಗೋದಿಲ್ಲ. ಇತರರಿಂದ ಪಡೆದ ಮೇಲೆ
ಕೊಡುವುದೂ ಧರ್ಮ. ಇಲ್ಲವಾದರೆ ಅವರಿಂದ ಪಡೆಯದೆ
ದೂರವಿರಬೇಕಷ್ಟೆ. ಸಂಸಾರ ನಡೆಸಲು ಸಮಾಜದಿಂದ
ಪಡೆಯುವಾಗ  ಸಮಾಜಕ್ಕೆ ತಿರುಗಿ ಕೊಡುವ ಜ್ಞಾನಬೇಕು.ಇಲ್ಲವಾದರೆ ಅದೇ ಋಣವಾಗಿ ಕಾಡುತ್ತದೆ.ಹಾಗೆಯೇ ದೇವರನ್ನು ಬೇಡಿ  ಎಲ್ಲಾ ಪಡೆದ ಮೇಲೆ ದೇವರನ್ನು ಮರೆತರೆ ಅಧರ್ಮ. ದೇಶದಿಂದ ಎಲ್ಲಾ
ಪಡೆದು ವಿದೇಶ ಉದ್ದಾರ ಮಾಡಿದರೂ ಅಧರ್ಮ.
ಸ್ವಾತಂತ್ರ್ಯ ನಮ್ಮ‌ಜನ್ಮ ಸಿದ್ದ ಹಕ್ಕು. ಆದರೆ ಜನ್ಮದ ಮೂಲ
ಧರ್ಮ, ಕರ್ಮ, ಶಿಕ್ಷಣ,ಜ್ಞಾನವನ್ನೇ ಮಕ್ಕಳಿಗೆ ಸ್ವತಂತ್ರ ವಾಗಿ
ತಿಳಿಸದಿದ್ದರೆ  ಹಕ್ಕು  ಯಾರಿಗೆ ಸೇರಿತು? ಇಲ್ಲಿ ಭಾರತವನ್ನು
ಮಾತ್ರ  ತೆಗೆದುಕೊಂಡು ಹೇಳದೆ ಎಲ್ಲಾ ದೇಶಗಳ, ರಾಜ್ಯಗಳ
ಜನರಿಗೆ ಅವರವರ ಮೂಲವನ್ನರಿತು ಅಲ್ಲಿದ್ದೇ ಜೀವನ‌ನಡೆಸಲು ಅವಕಾಶವಿದ್ದರೂ ಅದನ್ನು ಬಿಟ್ಟು ಹೊರ
ಬಂದು ಸ್ವಾತಂತ್ರ್ಯ ಕಳೆದುಕೊಂಡರೆ  ಇದರಲ್ಲಿ ತಪ್ಪು ಯಾರದ್ದು?  ಪೋಷಕರೆಂದಾಗ ದೇಶವನ್ನೂ ಪೋಷಣೆ ಮಾಡೋದಕ್ಕೆ ಮಕ್ಕಳಿಗೆ ದೇಶೀಯ ಶಿಕ್ಷಣ ನೀಡುವುದು
ಧರ್ಮ.ನಂತರವಷ್ಟೆ  ಹೊರಗಿನ ಶಿಕ್ಷಣ. ಒಳಗಿನ‌ಜ್ಞಾನಕ್ಕೆ
ವಿರುದ್ದವಾದ  ಹೊರಗಿನ‌ಜ್ಞಾನ ಮೊದಲೇ ಒಳಗೆ ತುಂಬಿದರೆ
ದೇಹ ನಡೆಸೋದು ಹೊರಗಿನ‌ಜ್ಞಾನವೇ.ಹೀಗೆಯೇ ನಮ್ಮ
ದೇಶದ ಈ ಸ್ಥಿತಿಗೂ  ಇದೇ ಕಾರಣವಾಗಿದೆ. ದೇಶದಲ್ಲಿದ್ದ ಅಗಾಧವಾದ  ಜ್ಞಾನದ ಸಂಪತ್ತನ್ನು ತಿರಸ್ಕರಿಸುತ್ತಾ ಹೊರಗಿನ ವಿಜ್ಞಾನಕ್ಕೆ ತಲೆಬಾಗಿದ ದೇಹವನ್ನು ನಡೆಸಿದ್ದು ವಿಜ್ಞಾನ. ಅತಿಯಾದ  ವೈಜ್ಞಾನಿಕ ಸಂಶೋಧನೆಗಳಿಂದ ಒಳಗಿದ್ದ ಅಧ್ಯಾತ್ಮ ಜ್ಞಾನ ಹಿಂದುಳಿದು  ಹೊರಗಿನವರೆ ನಮ್ಮನ್ನು ಆಳಲು ಬಂದರೂ ಕಾಣಿಸುತ್ತಿಲ್ಲ.ಕಂಡರೂ ಅದನ್ನು ವಿರೋಧಿಸಿದರೂ  ಪ್ರಯೋಜನವಿಲ್ಲ. ಹಲವರ
ದೇಹದೊಳಗೆ ಆವರಿಸಿರುವ ಈ ಶಕ್ತಿಯನ್ನು ವಿರೋಧಿಸಲು
ಆಗದೆ  ಬಿಡಲೂ ಆಗದೆ  ಅತಂತ್ರಸ್ಥಿತಿಗೆ  ತಲುಪಿದೆ ನಮ್ಮ ಸ್ವಾತಂತ್ರ್ಯ. ಒಟ್ಟಿನಲ್ಲಿ ಇಲ್ಲಿ ಎಲ್ಲಾ ಮಾನವರೆ ಆದರೆ ಎಲ್ಲಾ
ಮಹಾತ್ಮರಲ್ಲ.ಎಲ್ಲಾ ಭಾರತೀಯರಾದರೂ ಎಲ್ಲರಲ್ಲಿಯೂ ಭಾರತೀಯರ ಜ್ಞಾನವಿಲ್ಲ. ಎಲ್ಲಾ ಭೂಮಿ ಮೇಲಿದ್ದರೂ ಎಲ್ಲಾ ಭೂಮಿಯ ಋಣ ತೀರಿಸಲಾಗುತ್ತಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿದ್ದರೂ ಎಲ್ಲರೂ ಸತ್ಯ ಹೇಳೋ ಹಾಗಿಲ್ಲ.
ಅಸುರ ಶಕ್ತಿಯ ಹಿಡಿತದಲ್ಲಿರುವ ದೇಹದೊಳಗೆ ಅಡಗಿರುವ
ಮಹಾಶಕ್ತಿಯನ್ನು   ಕಾಣೋದಕ್ಕೆ ಆಗೋದಿಲ್ಲ. ನಾವೇ  ಇಷ್ಟಪಟ್ಟು ಸೇರಿಸಿದ್ದನ್ನು ನಾವೇ ಕಷ್ಟಪಟ್ಟು ಹೊರಹಾಕಲು ಕಷ್ಟವಾದರೆ   ಬೇರೆ ಯಾರಿಗೆ ಸಾಧ್ಯ?  ಪರಮಾತ್ಮ ಎಲ್ಲರಲ್ಲಿಯೂ  ಸರಿಸಮನಾಗಿ  ಆವರಿಸಿದ್ದರೂ ಕೆಲವರಿಗೆ ಮಾತ್ರ ಮೊದಲೇ ಅರಿತು ನಡೆಯೋ ಜ್ಞಾನವಿರುತ್ತದೆ. 
ಕೆಲವರಿಗಷ್ಟೇ ಮಧ್ಯದಲ್ಲಿ ಅರಿವಿಗೆ ಬಂದು ಹಿಂದಿರುಗಿ ಹೋಗಬಹುದು.ಹಲವರಿಗೆ ತಿಳಿಯದೆಯೇ ಮುಂದೆ ಮುಂದೆ ಹೋಗುವಾಗ ತಿಳಿದವರು ನಿಲ್ಲಿಸಿ  ತಿಳಿಸಿದರೆ ಉತ್ತಮ. ಸ್ವತಂತ್ರ ಭಾರತವನ್ನು ಆಳೋದು ಸುಲಭ.ಆದರೆ
ನಮ್ಮನ್ನು ನಾವೇ ಆಳಿಕೊಳ್ಳುವುದು ಕಷ್ಟ.ಒಂದು ರಾಜಕೀಯ ಇನ್ನೊಂದು ರಾಜಯೋಗ.ಯೋಗಿಗಳ ದೇಶಕ್ಕೆ ರಾಜಯೋಗದ ಶಿಕ್ಷಣವಿರಬೇಕಿತ್ತು.ಶಿಕ್ಷಣವೇ ರಾಜಕೀಯಕ್ಕೆ ತಿರುಗಿದರೆ ದೇಶದ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?
ಯೋಗಿಗಳ ದೇಶವನ್ನು ಭೋಗ  ಜೀವನಕ್ಕಾಗಿ  ಪರಕೀಯರ  ಶಿಕ್ಷಣದ ಹಿಂದೆ ನಡೆಸಿ ರೋಗವನ್ನು ಹೆಚ್ಚಿಸುತ್ತಾ ಆಳಿದವರಿಗೆ ಸ್ವಾತಂತ್ರ್ಯ ಸಿಕ್ಕಿದೆ. 
ಸತ್ಯ ಧರ್ಮವಿಲ್ಲದ ಜೀವನ  ಎಷ್ಟು ವರ್ಷ ನಡೆಸಿದರೂ ವ್ಯರ್ಥ. ಇದನ್ನು ನಮ್ಮ ಹಿಂದಿನ ಮಹಾತ್ಮರುಗಳೇ  ತಿಳಿಸಿ
ಹೋಗಿದ್ದಾರೆ. ದೇಶ ರಕ್ಷಣೆ ಕ್ಷತ್ತಿಯರಿಂದಾಗಬೇಕು.ಕ್ಷತ್ರಿಯ
ಈಗೆಲ್ಲಿರುವುದು? ರಾಜರ ಕಾಲ ಹೋಗಿ ಪ್ರಜಾಪ್ರಭುತ್ವ
ಬಂದಿದೆ.ಇಲ್ಲಿ ರಾಜರು ಯಾರು? ಸೇವಕರು ಯಾರು? ಸೈನಿಕರಷ್ಟೇ ದೇಶ ಕಾಯುವ ವೀರರು. ದೇಶದೊಳಗಿರುವ ಶತ್ರುಗಳನ್ನು ಓಡಿಸುವವರು ಯಾರು? ನಮ್ಮೊಳಗೇ ಅಡಗಿರುವ ಅತಿಯಾದ ಸ್ವಾರ್ಥ ಅಹಂಕಾರ ಅಜ್ಞಾನವೇ
ನಮ್ಮ ಹಿತ ಶತ್ರುಗಳಾದಾಗ ಸ್ವಾತಂತ್ರ್ಯ ಕ್ಕೆ  ದಕ್ಕೆ ಆಗೋದು
ಸಹಜ. ಭೌತಿಕದಲ್ಲಿ  ಸ್ವಾತಂತ್ರ್ಯ ಪಡೆದರೂ ಅಧ್ಯಾತ್ಮ ದ ಸ್ವಾತಂತ್ರ್ಯ ಕಳೆದುಕೊಂಡರೆ ತುಂಬಲಾರದ ಕಷ್ಟ ನಷ್ಟ ಮನುಕುಲಕ್ಕೆ ತಾನೇ.