ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, September 27, 2022

ನವರಾತ್ರಿಯನ್ನು ಹೀಗೆ ತಿಳಿದರೆ?

ನವರಾತ್ರಿಯಲ್ಲಿ ನವದುರ್ಗೆಯರನ್ನು ನವಶಕ್ತಿಯ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿ ರಾತ್ರಿಯ ವೇಳೆಯಲ್ಲಿ ಬರುವ ಈ ಶಕ್ತಿಯನ್ನು ಪೂಜಿಸುವುದರಿಂದ  ನಕಾರಾತ್ಮಕ ಶಕ್ತಿ  ಕುಸಿದು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ದಿನದ ಬೆಳಕಿಗೂ ರಾತ್ರಿಯ ಬೆಳಕಿಗೂ ಬಹಳ ವ್ಯತ್ಯಾಸವಿದೆ. ರಾತ್ರಿಯಲ್ಲಿ ಸಣ್ಣ ಬೆಳಕಿದ್ದರೂ ಮನಸ್ಸಿಗೆ ಆನಂದ ಕೊಡುತ್ತದೆ.ಹಾಗೆ  ಬೆಳಿಗ್ಗೆ ಯ ಕತ್ತಲು ಅಷ್ಟೇ ದು:ಖವನ್ನು ಕೊಡುತ್ತದೆ. ಅಂದರೆ ನಮ್ಮ ಆತ್ಮ ಜ್ಯೋತಿ ಯೆಡೆಗೆ ಸಾಗಲು
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಅಧ್ಯಾತ್ಮ ಸಾಧನೆ ಬೇಕು.
ಆತ್ಮಜ್ಞಾನದಿಂದ ಮಾತ್ರವೇ ಆತ್ಮಜ್ಯೋತಿಯ ದರ್ಶನ. ಇದು
ಹೊರಗಿನ ಬೆಳಕಿನಲ್ಲಿ ಕಾಣಲಾಗದು.ಒಳಗಿನ  ಬೆಳಕನ್ನು
ತೋರಿಸುವ ಮಹಾಶಕ್ತಿಯೇ  ಆ ತಾಯಿ. ತಾಯಿಯನ್ನು ಹೊರಗಿನ‌ಕಣ್ಣಿನಿಂದ ನೋಡುವುದಕ್ಕೆ ಎಲ್ಲರಿಗೂ ಸಾಧ್ಯ .ಆದರೆ ಒಳಗಣ್ಣಿನಿಂದ ಅವಳನ್ನು ಅರ್ಥ ಮಾಡಿಕೊಳ್ಳಲು ಜ್ಞಾನಿಗಳಿಗಷ್ಟೇ ಸಾಧ್ಯ. ನವರಾತ್ರಿಯಲ್ಲಿ ಆ ತಾಯಿಯು ಈ ರಾತ್ರಿಯಲ್ಲಿರುವ ಅಸುರರ ಸಂಹಾರ ಮಾಡಿ  ಜಗತ್ತಿಗೆ ಬೆಳಕನ್ನು ತೋರಿಸುವತ್ತ ನಡೆಯುತ್ತಾಳೆ.
ಅಸುರ ಗುಣವನ್ನು ಮಾನವರು ಎಷ್ಟು ತಿಳಿದು ದೈವೀ ಗುಣಗಳನ್ನು ಬೆಳೆಸಿಕೊಳ್ಳುವರೋ ಆಗಲೇ ಆತ್ಮಜ್ಞಾನ. ಇಲ್ಲಿ ದೇವಿಯನ್ನು ಸ್ತ್ರೀ ಎನ್ನುವ‌ಮಟ್ಟಿಗೆ ನಿಲ್ಲಿಸಿ ಪೂಜಿಸುವ ಬದಲು  ಇಡೀ ಜಗತ್ತನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿರುವ
ಮಹಾಮಾತೆ ಎನ್ನುವ ಬಾವನೆ ಯಾರಿಗೆ ಬರುವುದೋ ಅವರಿಗಷ್ಟೆ ಆ ತಾಯಿಯನ್ನು ಕಾಣಲು,ಸೇರಲು  ಸಾಧ್ಯ.
ತ್ರಿಮೂರ್ತಿಗಳು ಕೂಡ ಅವರ ಮಕ್ಕಳೆ ಆದಾಗ‌ ಸೃಷ್ಟಿ ಸ್ಥಿತಿ ಲಯದ ಕಾರ್ಯವು ಆ ತಾಯಿಯ ಅಪ್ಪಣೆಯಿಲ್ಲದೆ ಆಗದು.
ಭೂಮಿಯ ಮೇಲಿರುವ ಸ್ತ್ರೀ ಕುಲ ಯಾವಾಗಲೂ ಆ ತಾಯಿಯ ಶಕ್ತಿಯನ್ನರಿತು ಭೂಮಿಯಲ್ಲಿ ಧರ್ಮ. ರಕ್ಷಣೆ ಮಾಡಿದರೆ  ಭೂಮಿಯಲ್ಲಿ ಅಸುರರ ಸಂಖ್ಯೆ ಬೆಳೆಯದು.
ಆದರೆ,ಯಾವಾಗ ಸ್ತ್ರೀ ಗೇ ಅಜ್ಞಾನ ಹೆಚ್ಚಾಗಿ ಅಹಂಕಾರ ಸ್ವಾರ್ಥ ದಿಂದ  ಅಸುರರ ಕೆಟ್ಟಗುಣವನ್ನೂ ಬೆಳೆಸುವಳೋ ಆಗಲೇ ಅದು ತಿರುಗಿ ಹೊಡೆಯುವುದು.ಇಲ್ಲಿ ತಿಳಿದೋ ತಿಳಿಯದೆಯೋ  ಪಾಪ ಪುಣ್ಯ ಕರ್ಮಗಳಾಗುತ್ತಿದ್ದರೂ ಅದರ ಪ್ರತಿಫಲ ಮಾತ್ರ ಜೀವಾತ್ಮನೇ ಅನುಭವಿಸುವುದೆ
ನ್ನುವ ಅರಿವಿರಬೇಕಷ್ಟೆ.ನಾವೆಲ್ಲರೂ ನಮ್ಮ ನಮ್ಮ ಪ್ರಕಾರ ಸರಿದಾರಿಯಲ್ಲಿ ನಡೆದರೂ ನಡೆಯುವಾಗ ಜೊತೆಗೆ ಬರುವವರೂ ಅದನ್ನು ಸರಿದಾರಿ ಎಂದು ತಿಳಿಯಬಹುದು ,ವಿರೋಧಿಸಲೂಬಹುದು.ಹಾಗಂತಒಂದೇ ದಾರಿ ಇದ್ದರೆ
 ಎಲ್ಲಾ ಅದರಲ್ಲಿಯೇ ನಡೆಯಬೇಕು.
ಅನೇಕ ದಾರಿಗಳನ್ನು ಮಾಡಿಕೊಂಡು ಹೋದರೂ ಕೊನೆಗೆ
ಸೇರೋದು ಒಂದು ಮುಖ್ಯರಸ್ತೆ. ಹೀಗಾಗಿ ಅಡ್ಡದಾರಿಗೆ ಹೋದರೂ ಸೀದಾದಾರಿಗೆ ಬರಲೇಬೇಕೆನ್ನುವುದೇ ಆ ತಾಯಿಯ ಉದ್ದೇಶ.ಭೂಮಿಯ ಮೇಲಿದ್ದು ಅವಳನ್ನು ದುರ್ಭಳಕೆ ಮಾಡಿಕೊಂಡು ಆಳಿದರೂ ಕೊನೆಗೆ ಸೇರೋದು ಭೂಮಿಗೆ. ಆ ನಕಾರಾತ್ಮಕ ಶಕ್ತಿ ಹೆಚ್ಚಾದಂತೆ ಶಕ್ತಿಹೀನವಾಗಿ ಮನುಕುಲಕ್ಕೆ ಮಾರಕವಾದ ಅಸುರರು ಹೆಚ್ಚುತ್ತಾರೆ. ಇದೇ
ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರ ದಂತಹ ಕೆಟ್ಟ
ಶಕ್ತಿಯಾಗಿ  ಜೀವನದ ಮುಖ್ಯ ಗುರಿ ತಲುಪದೆ  ಭೌತಿಕದ ಸಾಧನೆಯಲ್ಲಿ ಅಧ್ಯಾತ್ಮದ ಸಾಧನೆಯ ವಿರುದ್ದ ನಡೆದರೆ
ಮಹಾಶಕ್ತಿಯೇ ಮಹಾಕಾಳಿಯಾಗಿ ನಿಂತು ಅಸುರ ಶಕ್ತಿಗೆ ತಡೆಹಾಕಿ ಕೊಲ್ಲಬಹುದು.ಇಂದಿನ ಈ ಪರಿಸ್ಥಿತಿಗೆ ಕಾರಣವೇ
ಅಸುರರ  ಅತಿಯಾದ ವ್ಯವಹಾರ ಜ್ಞಾನ. ಮಾನವನನ್ನು ಮಾನವನೇ ಅಜ್ಞಾನದಿಂದ ಆಳಿದರೆ ಮಹಾತ್ಮರಾಗೋದು ಹೇಗೆ ಸಾಧ್ಯ. ಸತ್ಯವನ್ನು ತಿರುಚಿಕೊಂಡು ಜನರಲ್ಲಿ ಅಸತ್ಯ ತುಂಬಿ ಬೆಳೆಸುವ ಶಿಕ್ಷಣದಿಂದ ಯಾರಲ್ಲಿ ದೈವಶಕ್ತಿ ಹೆಚ್ಚಿದೆ?
ಒಟ್ಟಿನಲ್ಲಿ ಧರ್ಮ, ದೇವರು,ಸಂಸ್ಕೃತಿ, ಸಂಸ್ಕಾರ,ಯೋಗ
ಕೇವಲ ಓದಿನಿಂದ ಬೆಳೆಸಲಾಗದು.ಅದನ್ನು ಸರಿಯಾಗಿ ಅರಗಿಸಿಕೊಂಡರೆ  ದೇಹದೊಳಗೆ ಜೀರ್ಣ ವಾಗಿ ಶಕ್ತಿ
ಹೆಚ್ಚುತ್ತದೆ ಎನ್ನುವುದನ್ನು ನಮ್ಮ ಹಿಂದಿನ ಜ್ಞಾನಿಗಳ ನಡೆ ನುಡಿಗಳಿಂದ ತಿಳಿಯಬಹುದಷ್ಟೆ. ಅವರನ್ನು ವ್ಯವಹಾರದ ಕೇಂದ್ರ ಬಿಂದು ಮಾಡಿಕೊಂಡು ಆಳಿದರೆ ನಮಗೆ ಒಳಗಿನ ಆತ್ಮಜ್ಞಾನ ದೊರೆಯದು. ಹೊರಗಿನಿಂದ ಏನೇ ಪಡೆದರೂ ಅದೊಂದು ಸಾಲವಾಗಿರುತ್ತದೆ.ಆ ಸಾಲ ತೀರಿಸಲು ಸೇವೆ ಮಾಡಬೇಕಿದೆ.ಸೇವೆಯೂ ನಿಸ್ವಾರ್ಥ ನಿರಹಂಕಾರದಿಂದ
ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಿದಾಗಲೇ ಮುಕ್ತಿ ಮೋಕ್ಷ ಎನ್ನುವುದಾದರೆ  ನಮಗೆ ಮುಕ್ತಿ ಮೋಕ್ಷ ಸಿಗುವುದೆ? ಆ ತಾಯಿಯಿಲ್ಲದೆ ಜನ್ಮವಿಲ್ಲ.ಜನನವಾಗದೆ  ಈ ಭೂಮಿಯ ಮೇಲೆ ಮನುಕುಲವಿಲ್ಲ.ಮಾನವನಿಗಷ್ಟೆ ಆರನೇ ಅರಿವಿನ ಶಕ್ತಿ ಇರೋವಾಗ ಆ ಶಕ್ತಿಯನ್ನು ಪಡೆಯಲು ಆ ತಾಯಿಯ ಕೃಪೆ ಅಗತ್ಯವಿದೆ. ಆ ತಾಯಿಯನ್ನು  ಬಿಟ್ಟು ಹೊರಗಿನ  ದೇವರನ್ನು  ಕಾಡಿ ಬೇಡಿ ವರ ಪಡೆದರೂ ಕೊನೆಗೆ ತಾಯಿಯ 
ಕೃಪೆ ಯಿಲ್ಲವಾದರೆ ಭೌತಿಕದಲ್ಲಿಯೇ ಜೀವನ ಮುಗಿಯುತ್ತದೆ. ಯಾವಾಗ ತಾಯಿಯೇ ಅತಿಯಾದ ವ್ಯಾಮೋಹದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡದೆ ಬೆಳೆಸುವಳೋ ಆಗಲೇ ಅಸುರ ಸಂತಾನ ಬೆಳೆಯುತ್ತದೆ. ಇಲ್ಲಿ ಸ್ತ್ರೀ ಯನ್ನು ಜ್ಞಾನಿಯನ್ನಾಗಿಸಲು ಅಧ್ಯಾತ್ಮ ವಿದ್ಯೆ ಅಗತ್ಯವಿತ್ತು. ನಮ್ಮ ಭಾರತದಲ್ಲಿ ಭೌತಿಕ ವಿದ್ಯೆಗೆ ನೀಡಿದ ಸಹಕಾರ ಅಧ್ಯಾತ್ಮ ವಿದ್ಯೆಗೆ ನೀಡದೆ ಸ್ತ್ರೀ ಯನ್ನು  ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಂಡು ಸಂಸಾರದ ಒಳಗೇ ಸಮಸ್ಯೆಗಳು ಬೆಳೆದುನಿಂತು ಈಗಿದು ಸಮಾಜದಿಂದ ದೇಶ ವಿದೇಶ ತಲುಪುತ್ತಿದೆ. ಜ್ಞಾನವಿಲ್ಲದೆ ಹಣಸಂಪಾದಿಸಿದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಕಷ್ಟ. ಆ ಹಣದ ದುರ್ಭಳಕೆ ಸಾಲವಾಗಿ ಕಾಡುತ್ತದೆ. ಸಾಲ ತೀರಿಸಲು ಸತ್ಕರ್ಮ ಸ್ವಧರ್ಮದ ಮಾರ್ಗ ತೋರಿಸುವ ಜಗನ್ಮಾತೆಯ
ಸೇವೆ ಮಾಡುವವರು ಮೊದಲು ತಮ್ಮ ಮೂಲವನ್ನು ಅರ್ಥ ಮಾಡಿಕೊಂಡರೆ  ಉತ್ತಮ. ನವಶಕ್ತಿಯ ಆರಾಧಕರಿಗೆ ರಕ್ಷಣೆ ಹೆಚ್ಚು. ತಾಯಿಯ ಋಣ ತೀರಿಸಲು ಕಷ್ಟ.ಸೇವೆ ಮಾಡಿದರೆ ಸಾಧ್ಯ.ಇದನ್ನು ಬ್ರಾಹ್ಮಣರು ಜ್ಞಾನದಿಂದ, ಕ್ಷತ್ರಿಯರು ದೇಶಸೇವೆಯಿಂದ,ವೈಶ್ಯರು ವ್ಯವಹಾರಿಕ ಧರ್ಮ ಮಾರ್ಗದಿಂದ, ಶೂದ್ರರು ಕಾಯಕವೇ ಕೈಲಾಸವೆಂಬ ಮಹಾಮಂತ್ರದಿಂದ ಹಿಂದಿನ ವರ್ಣಗಳ ಪ್ರಕಾರ ತಿಳಿಸಿದ್ದರು.
ಯಾವಾಗ ಸ್ತ್ರೀ ಯನ್ನು ಬಿಟ್ಟು ಸ್ವತಂತ್ರ ಜೀವನ ನಡೆಸಲು ಅಧರ್ಮ ಮಾರ್ಗ ಹಿಡಿದರೂ ಆಗಲೇ ಭೂಮಿಯನ್ನು  ತನ್ನ ಸೇವೆಗೆ ಬಳಸಿಕೊಂಡು ವ್ಯವಹಾರಕ್ಕೆ ಬೆಲೆಕೊಟ್ಟು  ತನ್ನ ಆತ್ಮವಂಚನೆಗೆ ತಾನೇ ಕಾರಣನಾಗಿದ್ದರೂ ಹೊರಗಿನ ಸಮಾಜವನ್ನು  ದೂರುತ್ತಾ ಕೊನೆಗೆ  ಎಲ್ಲವನ್ನೂ ಬಿಟ್ಟು ಹೋಗಬೇಕಾಯಿತು. ಕಲಿಗಾಲದಲ್ಲಿಯ ಮಾನವರಿಗೆ ಜ್ಞಾನ ಕಡಿಮೆ. ರೆಡಿಮೇಡ್ ಜಗತ್ತು.ಹಿಂದಿನವರು ಮಾಡಿಟ್ಟ ಭೌತಿಕ ಆಸ್ತಿಯಾದ ಹೆಸರು,ಹಣ,ಅಂತಸ್ತು ಹಿಡಿದುಕೊಂಡು ನನ್ನದು ಎನ್ನುವ ಅಹಂಕಾರ ಸ್ವಾರ್ಥ ದಲ್ಲಿ  ಜನರನ್ನು ಆಳಿದರೆ  ಇಲ್ಲಿ ನನ್ನದು ಯಾವುದಿದೆ? ಆತ್ಮ ಶಾಶ್ವತವಾದರೂ ಜೀವವೇ ಮುಖ್ಯವಾಗಿರುವ ಜಗತ್ತಿನಲ್ಲಿ ಜೀವವನ್ನು ಹೊತ್ತು ಹೋಗುತ್ತಿರುವ ನಿರಾಕಾರ ಶಕ್ತಿಯನ್ನು ತಡೆಯಲಾಗದು.
ಕೊರೊನ ಮಹಾಮಾರಿಯ ದರ್ಶನ ,ಪ್ರಕೃತಿ ವಿಕೋಪ,
ಯುದ್ದ,ಹೋರಾಟ,ಹಾರಾಟ,ಮಾರಾಟದಿಂದ ಪಡೆದದ್ದು  ಎಷ್ಟು? ಕಳೆದುಕೊಂಡದ್ದು ಏನು? ಹಣಪಡೆದು ವ್ಯವಹಾರಕ್ಕೆ ಇಳಿದವರೂ ಇಲ್ಲ, ಜ್ಞಾನದಿಂದ ಜೀವನ ನಡೆಸಿದವರೂ ಇಲ್ಲ.ಉಳಿಯೋದು ಕೇವಲ ಒಳ್ಳೆಯ ಕಾರ್ಯದ ಫಲ. ಇದನ್ನು ಯಾರದ್ದೋ ಹಣದಲ್ಲಿ ಮಾಡೋ ಬದಲು ನಮ್ಮ ಶ್ರಮದ ಹಣದಲ್ಲಿ ಮಾಡಿದರೆ ತೃಪ್ತಿ, ಶಕ್ತಿ, ಶಾಂತಿ,ಮುಕ್ತಿ  ನೀಡುವವಳೆ ಆ ಜಗನ್ಮಾತೆ. ಹಾಗಾದರೆ ಜಗನ್ಮಾತೆಗೆ ಜ್ಞಾನದಿಂದ ಸಂಪಾದಿಸಿದ  ಹಣದಿಂದ ಸೇವೆ ಮಾಡಿದರೆ ನಿಜವಾದ ಧರ್ಮ ರಕ್ಷಣೆ ಸಾಧ್ಯ.ಭ್ರಷ್ಟಾಚಾರ ದ ಹಣವನ್ನು ದೇವಿಯ ಮೇಲೇರಿಸಿ ವೈಭವದಿಂದ ಆಚರಣೆ ಮಾಡುವ ಅಗತ್ಯವಿದೆಯೆ? ದೇಶವೇ ಸಾಲದ ಹೊರೆಯಲ್ಲಿದೆ. ಜನರ ಅಜ್ಞಾನ ಮಿತಿಮೀರಿದೆ. ಅಜ್ಞಾನಕ್ಕೆ ಔಷಧವಾಗಿ ಜ್ಞಾನದ
 ಶಿಕ್ಷಣ ನೀಡಬೇಕಿದೆ.ಇದನ್ನು ರಾಜಕೀಯವಾಗಿ ಬಳಸದೆ  ಧರ್ಮದ ಪ್ರಕಾರ ನೀಡುವುದೆ ಆ ತಾಯಿ ಸರಸ್ವತಿಯ ಸೇವೆ.ಸರಸ್ವತಿಯ ನಂತರವೇ ಲಕ್ಮಿ ಯ ಆರಾಧನೆ.ಮೂಲ ಬಿಟ್ಟು ನಡೆದರೆ ದುರ್ಗೆಯ ಅವತಾರ .ಹೀಗೇ ತ್ರಿಮೂರ್ತಿಗಳ  ಸೃಷ್ಟಿ ,ಸ್ಥಿತಿ ಲಯದ ಕಾರ್ಯದಲ್ಲಿ  ತ್ರಿದೇವಿಯರೂ ಇದ್ದಾರೆನ್ನುವ  ಜ್ಞಾನವಿರಲಿ.
ಇದೇ ಸಮಾನತೆ.ರಾತ್ರಿಯ ನಂತರ ಬೆಳಕಾಗುತ್ತದೆ. ಬೆಳಕಿನಲ್ಲಿಯೂ ರಾತ್ರಿಯಿರುತ್ತದೆ ಕಣ್ಣಿಗೆ ಕಾಣೋದಿಲ್ಲವಷ್ಟೆ.
ಭಾರತದಂತಹ ಮಹಾ ಜ್ಞಾನಿಗಳ ದೇಶವನ್ನು ಅಜ್ಞಾನಿಗಳ ವಶಕ್ಕೆ ಬಿಟ್ಟು ರಾಜಕೀಯ ನಡೆಸಿದರೆ  ಯಾವ ಶಕ್ತಿಯ ದರ್ಶನವಾಗೋದಿಲ್ಲ.ತೋರುಗಾಣಿಕೆಯ  ಪ್ರಚಾರದ ಅಗತ್ಯವಿಲ್ಲ. ಆಚರಣೆಯು  ಆತ್ಮಜ್ಞಾನದಿಂದಾದರೆ ಉತ್ತಮ
ಬದಲಾವಣೆ ಸಾಧ್ಯವಿದೆ. ಆಗುತ್ತಿದೆ,ಆಗುತ್ತದೆ ಎನ್ನಬಹುದು
ಆಗೋದೆಲ್ಲಾ ಒಳ್ಳೆಯದಕ್ಕೆ, ಆಗೋದನ್ನು ತಡೆಯಲಾಗದು.
ಆದರೂ ಯಾಕೆ ಆಗುವುದೆನ್ನುವ ಜ್ಞಾನ ಅಗತ್ಯವಾಗಿದೆ. ಸತ್ಯ ಜ್ಞಾನದ ನಂತರವೇ ಮುಕ್ತಿ ಮೋಕ್ಷ. ಹಿಂದಿನ ಮಹಾತ್ಮರಲ್ಲಿ ಯಾರೂ ಹಣದಿಂದ ಶ್ರೀಮಂತ ರಾಗಿ ಗುರುವಾದವರಿಲ್ಲ,ದಾಸರಾಗಿಲ್ಲ,ಶರಣರಾಗಿಲ್ಲ,ಸಂನ್ಯಾಸಿಯಾಗಿಲ್ಲ,ಯೋಗಿಯಾಗಿಲ್ಲ,ಮಹಾತ್ಮರಾಗಿಲ್ಲ,ಭಕ್ತರಾಗಿಲ್ಲ ಎಂದಾಗ ಇಂದು ನಾವು ಅಂತಹವರನ್ನು ಕಾಣುತ್ತಿರುವೆವೆ?
ಎಲ್ಲಿರುವರು ಜ್ಞಾನಿಗಳು? ಮಹಾತ್ಮರುಗಳು? ದೇವರುಗಳು? ಒಳಗೋ ಹೊರಗೂ? ಭೂಮಿ ಮೇಲೋ ಕೆಳಗೋ?
ಜ್ಞಾನವೆನ್ನುವುದು ಯಾರು ಕೊಟ್ಟು ಕೊಳ್ಳುವ ವಸ್ತುವಲ್ಲ.ಅದನ್ನು ನಾವೇ ಕಷ್ಟಪಟ್ಟು ಬೆಳೆಸಿಕೊಳ್ಳಬೇಕಷ್ಟೆ.
ಸಾಮಾನ್ಯಜ್ಞಾನ ಎಲ್ಲರಲ್ಲಿಯೂ ಇದೆ. ಗುರುತಿಸದೆ ಆಳಿದರೆ
ಅಧರ್ಮ ವಾಗುತ್ತದೆ. 

Friday, September 23, 2022

ಯಾಕೆ ಬಡವರಿಗೆ ಕಷ್ಟ ನಷ್ಟ?

ನಮ್ಮ ದೇಶದಲ್ಲಿ ಇತ್ತೀಚೆಗೆ ಸಾಕಷ್ಟು ಪ್ರತಿಮೆಗಳು,
ಪ್ರವಾಸಿತಾಣಗಳು ಇನ್ನಿತರ ಮೇಲ್ವರ್ಗಗಳಿಗೆ ಮನರಂಜನೆ ನೀಡುವ ಕಾರ್ಯಕ್ರಮಗಳಿಗೇನೋ ಕೊರತೆ ಇಲ್ಲ. ಆದರೆ ಇದರಿಂದಾಗಿ ದೇಶಕ್ಕಾಗುತ್ತಿರುವ  ಕಷ್ಟ ನಷ್ಟ
ಅರ್ಥ ಮಾಡಿಕೊಳ್ಳುವ   ಜ್ಞಾನದ ಶಿಕ್ಷಣದ ಕೊರತೆಯಿದೆ.
ಜ್ಞಾನವಿಲ್ಲದೆ ವಿಜ್ಞಾನ ಬೆಳೆದಿದೆ. ವಿದೇಶದೊಳಗೆ ದೇಶ ಸಿಲುಕಿದೆ. ಅಜ್ಞಾನದೊಳಗಿರುವ  ಜ್ಞಾನವನ್ನು ಹೊರ
ತರಲಾಗದೆ ರಾಜಕೀಯದ ಹಿಂದೆ ನಡೆದವರಿಗೆ ತಾವೂ
ಅಜ್ಞಾನಿಗಳ ವಶವಾಗೋ ಸತ್ಯದ ಅರಿವಿಲ್ಲ. ಹಾಗಾದರೆ ಇಲ್ಲಿ ಸ್ವತಂತ್ರ ಯಾರಿಗೆ ಸಿಕ್ಕಿದೆ?  ಭಾರತಕ್ಕೋ ?ವಿದೇಶಕ್ಕೋ?
ಆತ್ಮಾವಲೋಕನ ಮಾಡಿಕೊಳ್ಳಲು ಸೋತಿರುವ ಪ್ರಜೆಗಳಿಗೆ
ನಮಗೆ ನಾವೇ ಶತ್ರುಗಳಾಗಿರುವಾಗ ಹೊರಗಿನ ಶತ್ರುಗಳು
ಸರಿಯಾಗಿ ಪಾಠ ಕಲಿಸುತ್ತಿದ್ದಾರೆ. ಅಂದರೆ ಅದ್ವೈತ ದೊಳಗೇ ದ್ವೈತವಿದ್ದರೂ ಒಂದಾಗಿಲ್ಲ. ತತ್ವವನ್ನು ತಂತ್ರವಾಗಿಸಿಕೊಂಡರೆ ಸ್ವತಂತ್ರ ಎಲ್ಲಿರುವುದು? ಒಳಗಿನ ಸತ್ಯ ಬಿಟ್ಟು ಹೊರಗೆ ದೇವರನ್ನು  ಬೆಳೆಸಿದರೆ ಸಿಗುವನೆ? ಅಥವಾ ಒಳಗಿರುವ ಭಾರತೀಯ ಜ್ಞಾನವನ್ನು ವ್ಯವಹಾರಕ್ಕೆ ಬಳಸಿ ಹೊರಗಿನ  ಶಿಕ್ಷಣದಿಂದ ರಾಜಕೀಯ ನಡೆಸಿದರೆ  ತತ್ವಜ್ಞಾನ  ಬೆಳೆಯೋದಿಲ್ಲ. ಅಂತರದಿಂದ ಬೆಳೆದಿರುವ ಅವಾಂತರಕ್ಕೆ
 ಅಜ್ಞಾನದ ಶಿಕ್ಷಣವೇ ಕಾರಣ.ದೇಶದ ಸಾಲ ತೀರಿಸಲು ವಿದೇಶಿ ಸಾಲ ತರುವುದೆ? ಅಥವಾ ದೇಶದ ಪ್ರಜೆಗಳಿಗೆ ಸೂಕ್ತ
ಶಿಕ್ಷಣ ಕೊಟ್ಟು ಸ್ವತಂತ್ರ ಜೀವನ ನಡೆಸಲು ಬಿಡುವುದೆ? ಈಗ ಕಾಲ ಮಿಂಚಿಹೋಗಿರಬಹುದು. ಮುಂದಿನ ಪೀಳಿಗೆಗಾದರೂ
ನಮ್ಮತನ  ಆತ್ಮವಿಶ್ವಾಸ,ಆತ್ಮಜ್ಞಾನ ಹೆಚ್ಚಾಗಬೇಕಾದರೆ  ಈಗ
ನಮ್ಮ ಸಹಕಾರವೂ  ಅಧ್ಯಾತ್ಮದ ಕಡೆಗೆ ನಡೆಯಬೇಕಿದೆ. ಇಲ್ಲಿ ರಾಜಕೀಯವೇ  ಭ್ರಷ್ಠರ ವಶದಲ್ಲಿದ್ದರೆ  ರಾಜಯೋಗದ ಗತಿ? ಹಿಂದಿನ ಧರ್ಮ ಕರ್ಮ   ಜ್ಞಾನದಲ್ಲಿತ್ತು. ಅದಕ್ಕೆ ಹಿಂದೂ ಧರ್ಮ ಉಳಿದಿತ್ತು. ಈಗ ಅಜ್ಞಾನದ ರಾಜಕೀಯಕ್ಕೆ ಇಳಿದು  ವ್ಯವಹಾರ ನಡೆಸಿದೆ.ಹಣವಿದ್ದರೂ ಇದನ್ನು ಹೇಗೆ ಬಳಸಬೇಕೆಂಬ ಜ್ಞಾನವಿಲ್ಲದೆ  ಹೆಸರು,ಹಣ,ಅಧಿಕಾರದ ದಾಹಕ್ಕೆ ಜೀವ ಬಲಿಯಾಗುತ್ತಿದೆ. ಕೆಲವರಿರಬಹುದು ಆದರೆ
ಇಡೀ ದೇಶ ಕಾಣೋದು ಹಲವರ  ರಾಜಕೀಯ ಮಾತ್ರ.
ಮಧ್ಯವರ್ತಿಗಳು ಮಾಧ್ಯಮಗಳು  ಮಹಿಳೆಯರು ಮಕ್ಕಳು ಮನೆಯಿಂದ ಹೊರಬಂದು ಮನರಂಜನೆಗಾಗಿ  ಸಹಕರಿಸಿದರೆ  ಋಣ ಅಥವಾ ಸಾಲ ತೀರುವುದೆ? ಯೋಗಿಗಳ ದೇಶ ಭೋಗಕ್ಕೆ ಬಳಸಿ ಸಾಲ ಏರಿಸಿ ರೋಗಿಗಳ ದೇಶವಾಗಿಸಿ ಆಳೋರಿಗೆ ನಮ್ಮ ಸಹಕಾರವಿದೆ ಎಂದರೆ ಇದಕ್ಕೆ ಕಾರಣವೇ  ನಮ್ಮ ಸಹಕಾರ. ಕೋಟ್ಯಂತರ ಹಣವನ್ನು
ದುರ್ಭಳಕೆ ಮಾಡಿಕೊಳ್ಳುವವರಿಗೆ ವಿರೋಧಿಗಳಿಲ್ಲ. ಸಣ್ಣ ಪುಟ್ಟ ಕಳ್ಳರಿಗೆ ಕಠಿಣ ಶಿಕ್ಷೆ. 
ಒಟ್ಟಿನಲ್ಲಿ ಶಿಕ್ಷೆ ಎಲ್ಲರಿಗೂ ಇದೆ.ಕೆಲವರಿಗೆ  ಸಣ್ಣದರಲ್ಲಿಯೇ ಶಿಕ್ಷೆಯಾಗಿ ಮುಕ್ತಿ ಕೊಡುವ  ಆ ಪರಮಾತ್ಮನನ್ಯಾಯಾಲಯ 
 ದೊಡ್ಡದಾಗಿ ಬೆಳೆದು ನಿಂತ  ಭ್ರಷ್ಟರಿಗೆ ಶಿಕ್ಷೆ ಕೊಡಲು ಕಷ್ಟವಾಗುತ್ತಿದೆ.ಕಾರಣವಿಷ್ಟೆ ಈ ಸಣ್ಣ ಪುಟ್ಟ ಕಳ್ಳರು ದೊಡ್ಡವರ ಪಕ್ಷವಹಿಸಿ  ನಿಂತು ಪರಮಾತ್ಮನಿಗೆ ಅಡ್ಡ ನಿಲ್ಲುತ್ತಾರೆ. ಇದರ ಪ್ರತಿಫಲವೇ  ಬಡವರಿಗೆ ಶಿಕ್ಷೆ ಹೆಚ್ಚಾಗಿದೆ. ಇನ್ನೊಂದು ಕಾರಣವೆಂದರೆ ಭ್ರಷ್ಟರೆ ಭ್ರಷ್ಟರಿಗೆ ಶಿಕ್ಷೆ ನೀಡಲು
ಸಾಧ್ಯವಿಲ್ಲ. ಅನ್ಯಾಧೀಶರುಗಳು ನ್ಯಾಯವನ್ನು ಹಣದಿಂದ ತಡೆಯಬಹುದಷ್ಟೆ.  ಜ್ಞಾನಿಗಳು  ಅಜ್ಞಾನಿಗಳ ಹಿಂದೆ ನಡೆದರೆ
ಅಧರ್ಮ. 
ಶಿಕ್ಷಣವೇ ಸರಿಯಿಲ್ಲದೆ ಆಳಿದರೆ ಆಗೋದೆ ಹೀಗೆ. ದೊಡ್ಡವರ
ದಡ್ಡತನಕ್ಕೆ  ದೇಶವೇ ಹಿಂದುಳಿಯುತ್ತಿದೆ. ಇದನ್ನು ಎಲ್ಲಾ ಕ್ಷೇತ್ರದಲ್ಲಿ ಕಾಣಬಹುದು. ಸ್ವತಂತ್ರ ವಾಗಿದ್ದವರಿಗೆ ಸ್ಪಷ್ಟವಾಗಿ ಕಾಣುತ್ತದೆ.  ರಾಜಕೀಯ ಭ್ರಷ್ಟಾಚಾರ  ಕಣ್ಣಿಗೆ ಕಾಣುತ್ತದೆ.
ಧಾರ್ಮಿಕ ಭ್ರಷ್ಟಾಚಾರ ಕಣ್ಣಿಗೆ ಕಾಣದೆ ಅನುಭವಕ್ಕೆ ಬರುತ್ತದೆ. ಅನುಭವಿಸಿದ ಮೇಲೇ  ಸತ್ಯದರ್ಶನ ವಾಗುತ್ತದೆ.
ಭಾರತೀಯರಾಗಲು ಭಾರತದೊಳಗಿದ್ದರೆ ಸಾಲದು ಅವಳ ಜ್ಞಾನವಿರಬೇಕಿದೆ. ಹಾಗೆಯೇ  ದೇವರಾಗಲು ದೈವತ್ವದ ಶಿಕ್ಷಣವಿರಬೇಕು. ತತ್ವಜ್ಞಾನ ಬೇಕಿದೆ. ದೇವರು ಅಸಂಖ್ಯ ದೇಶ ಒಂದೇ. ಸತ್ವಗುಣ,ರಜೋಗುಣ,ತಮೋಗುಣದಲ್ಲಿ ಸತ್ವವೇ ಇಲ್ಲವಾದರೆ ಮೂಲಾಧಾರ ಚಕ್ರ ಶುದ್ದವಾಗುವುದೆ?
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ವರ್ಣದ ಧರ್ಮ ಕರ್ಮವು ಜ್ಞಾನಿಗಳಿಂದ ಬೆಳೆದಿತ್ತು. ಇದರಲ್ಲಿ ಮೇಲಿನವರ ಜ್ಞಾನವೇ ಎಲ್ಲರನ್ನೂ ನಡೆಸಿತ್ತು. ಕಾಲಬದಲಾಗಿದೆ.ಹಾಗಂತ ಸತ್ಯ ಒಂದೇ.  ಆ ಸತ್ಯದ ಕಡೆಗೆ ನಡೆಯುವುದೇ ಅಧ್ಯಾತ್ಮ.
ಆದಿ ಆತ್ಮ ವೇ  ಮಕ್ಕಳಿಗೆ ತಂದೆತಾಯಿಯರು. ಜ್ಞಾನವೇ ಆಸ್ತಿ
ಜ್ಞಾನವಿಲ್ಲದೆ ಎಷ್ಟೇ ಭೌತಿಕ ಆಸ್ತಿ ಮಾಡಿದರೂ ಮಕ್ಕಳ ಕಾಲಕ್ಕೆ  ತಕ್ಕ ಶಾಸ್ತಿ ಆಗದಿದ್ದರೆ ಅದೇ ಪುಣ್ಯ.ಅದೃಷ್ಟ.
ಭಗವಂತನೊಳಗೆ  ಶಿಷ್ಟರು,ದುಷ್ಟರು,ಭ್ರಷ್ಟರೂ ಇದ್ದಾರೆ. ಯಾರಿಗೆ ಹೆಚ್ಚು ಸಹಕಾರವಿರುವುದೋ  ಅವರು ಬೆಳೆಯುತ್ತಾರೆ.ಕಾರಣ ಪರಮಾತ್ಮನಿಗೆ ಎಲ್ಲಾ ಒಂದೇ. ಕಷ್ಟಪಟ್ಟು ಭ್ರಷ್ಟಾಚಾರ ನಡೆಸಿದರೂ ಅದರ ಫಲ ಭ್ರಷ್ಟನೇ
ಅನುಭವಿಸಬೇಕು.ಇದಕ್ಕೆ ಸಹಕರಿಸಿದವರಿಗೂ ಇದರ ಫಲ ಸಿಗುತ್ತದೆ.ಹೀಗಾಗಿ ಎಷ್ಟೇ  ಅನ್ಯಾಯ ಮಾಡಿದರೂ ಶಿಕ್ಷೆ ಆಗದೆ ಹೊರಬರುವುದು  ಶ್ರೀಮಂತ ವರ್ಗ. ಆದರೆ ಜೀವನ ಶಾಶ್ವತವಲ್ಲ.ಇದರ ಫಲ ಮತ್ತೊಂದು ಜನ್ಮದಲ್ಲಿ ಪಡೆಯಬೇಕೆನ್ನುವುದೇ ಕರ್ಮ ಸಿದ್ದಾಂತ. ಇದನ್ನು ಸರ್ಕಾರ
ತಡೆಯಲಾಗದು.ಈ ಸಾಮಾನ್ಯಜ್ಞಾನ ಸಾಮಾನ್ಯಜನ ತಿಳಿದರೆ ಮೂಲವನ್ನು ಗಟ್ಟಿಯಾಗಿಸಿಕೊಂಡು ಕಷ್ಟಪಟ್ಟು  ದುಡಿಯಬಹುದು.ಕಾಯಕವೇ ಕೈಲಾಸ,ಕೈಲಾಸದಲ್ಲಿ ಕಾಯಕವಾಗಬಾರದಷ್ಟೆ.  ದೇವರ ಕೋಣೆಯೇ ಬೇರೆ, ಬಚ್ಚಲಮನೆಯೇ ಬೇರೆ. ಎರಡೂ ಶುದ್ದವಾಗಿಟ್ಟರೂ ಅದರ ಕಾರ್ಯದ ಫಲವೇ ಬೇರೆ ಬೇರೆ. ಭ್ರಷ್ಟಾಚಾರದ ಹಣದಲ್ಲಿ ದೇವರ ಪೂಜೆ ಅಗತ್ಯವೆ? ಭ್ರಷ್ಟರ ಹಣದಲ್ಲಿ  ದೇಶಸೇವೆಯೆ?  ವಿದೇಶಿಗಳ ಸಾಲದಲ್ಲಿ  ರಾಜಕೀಯವೆ?
ಹಿಂದಿನ ಕಾಲದಲ್ಲಿ ಶೌಚಾಲಯ ಮನೆಯಿಂದ ಹೊರಗಿತ್ತು.
ಈಗ ಮನೆಯೊಳಗೆ ಶೌಚಾಲಯವೇ ಹೆಚ್ಚು. ದೇವರ ಮನೆಗಿಲ್ಲ ಜಾಗ  ಹೇಗಿದೆ ಬದಲಾವಣೆ.

Wednesday, September 21, 2022

ನಿಜವಾದ ಸ್ವಪ್ರಯತ್ನ ಯಾವುದು?

ನಿಜವಾದ ಸ್ವಪ್ರಯತ್ನ
ಪ್ರತಿಯೊಂದು ಕಾರ್ಯವೂ ಮೂರು ಹಂತಗಳನ್ನು ದಾಟಿ ಹೋಗಬೇಕು ನಿಂದೆ, ವಿರೋಧ,ನಂತರ ಒಪ್ಪಿಗೆ.
ಸ್ಮಾಮಿ ವಿವೇಕಾನಂದ.
ವಿವೇಕವನ್ನು ಬೆಳೆಸಿಕೊಳ್ಳಲು ಈ ಮೂರು ಹಂತ ದಾಟಲೇಬೇಕೆನ್ನುವುದು ಸತ್ಯ. ಮಾನವನಿಗೆ ಎಲ್ಲಿಯವರೆಗೆ ವಿವೇಕ ಬರುವುದಿಲ್ಲವೋ ಅಲ್ಲಿಯವರೆಗೆ ಸ್ವತಂತ್ರ ಜ್ಞಾನವೂ ಸಿಗೋದಿಲ್ಲ.ಪರಾವಲಂಬನೆಯ ದಾರಿ ಹಿಡಿದಿರುವ ಇಂದಿನ ಸ್ಥಿತಿಗೆ ಸ್ವಪ್ರಯತ್ನವಿಲ್ಲದೆಯೇ  ಪರರ ಹಿಂದೆ ನಡೆದಿರುವುದೆ ಕಾರಣ. ಇದು ಶಿಕ್ಷಣದ‌ಮೂಲಕವೇ ನಡೆದು ಸ್ವಂತ ಜ್ಞಾನವಿಲ್ಲದೆ ಹೊರಗಿನ ಸತ್ಯವಷ್ಟೆ ಸತ್ಯವೆಂಬ ಭ್ರಮೆಯಲ್ಲಿ  ಇತರರನ್ನು ನಿಂದಿಸುತ್ತಾ, ವಿರೋಧಿಸುತ್ತಾ ಕೊನೆಗೆ ಅವರೊಂದಿಗೆ ರಾಜಿ ಮಾಡಿಕೊಂಡು ನಮ್ಮತನವನ್ನು ನಮ್ಮ ಪ್ರಯತ್ನವನ್ನು  ಬಿಟ್ಟು ಮುಂದೆ ನಡೆದವರಿಗೆ  ಒಳಗೇ ಸಮಸ್ಯೆಗಳು ಬೆಟ್ಟದಂತೆ ಬೆಳೆಯಿತು.
ಇದನ್ನು  ಪರಿಹರಿಸಿಕೊಳ್ಳಲು ಕಷ್ಟವಾಗಿ ಮತ್ತೆ ಅದೇ ಮಾರ್ಗ  ಹಿಡಿದರೆ  ಸಮಸ್ಯೆಗೆ ಪರಿಹಾರವಿಲ್ಲ.ಹಣದ ಮೂಲಕ ಪರಿಹಾರ ಸಿಗುವಂತಿದ್ದರೆ ಈವರೆಗೆ ಸರ್ಕಾರಗಳು ನೀಡಿದ ಉಚಿತ ವಸತಿ,ವಸ್ತು, ವಸ್ತ್ರ, ಶಿಕ್ಷಣ,ಸಾಲ,ಸೌಲಭ್ಯ
ಪಡೆದವರಲ್ಲಿ  ಸಮಸ್ಯೆಗಳೇ ಇರುತ್ತಿರಲಿಲ್ಲ. ಹೆಚ್ಚು ಸಮಸ್ಯೆ ಇರೋದೇ ಅವರಲ್ಲಿ ಎಂದರೆ  ಪರಿಹಾರವನ್ನು ಹೊರಗೆ ಹುಡುಕಿ ಒಳಗಿದ್ದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೋತಿರುವುದೆಂದರೆ ತಪ್ಪಿಲ್ಲ. ಇದನ್ನು ತಪ್ಪು ಎಂದರೂ ಸರಿಯಲ್ಲ. ಕಾರಣ ಮಾನವ ಸಂಘಜೀವಿ ನಿಜ ಆದರೆ ಸ್ವಂತ ಬುದ್ದಿ,ಜ್ಞಾನವಿರೋದು ಮಾನವನಿಗೆ ಮಾತ್ರ.ಅದನ್ನು ಸತ್ಯ ಧರ್ಮದ ಮೂಲಕ ಬಳಸಿದವರಷ್ಟೆ  ಮಹಾತ್ಮರಾಗಿರೋದು
ಇದು ನಮ್ಮ ಇತಿಹಾಸ ಪುರಾಣ ಕಥೆಗಳೇ ತಿಳಿಸುತ್ತದೆ.
ಸ್ವಾಮಿ ವಿವೇಕಾನಂದರ ದೇಶಭಕ್ತಿಯನ್ನು ಅರ್ಥ ಮಾಡಿ
ಕೊಳ್ಳಲು ನಿಜವಾದ ಸ್ವಪ್ರಯತ್ನದಿಂದ ಮಾತ್ರ ಸಾಧ್ಯವಿತ್ತು.
ಅದೂ ಶಿಕ್ಷಣದಿಂದ ಸಾಧ್ಯವಿತ್ತು. ಯಾವಾಗ ವಿಚಾರಗಳು ಪ್ರಚಾರಕ್ಕಷ್ಟೇ ಸೀಮಿತವಾಗಿ ರಾಜಕೀಯ ರೂಪ ಪಡೆಯಿತೋ ಆಗಲೇ ಅಧರ್ಮಕ್ಕೆ ಬಲ ಹೆಚ್ಚಾಯಿತು.
ವಿವೇಕವೆಂದರೆ ವಿಚಾರವನ್ನು ವೇದನೆಯಿಲ್ಲದೆ ಕಾಣುವುದು
ಆದರೆ ವಿಪರ್ಯಾಸವೆಂದರೆ ಇಂದಿಗೂ ಸದ್ವಿಚಾರ, ಸತ್ಯದ ವಿಚಾರಗಳನ್ನು ಹೇಳುವುದಕ್ಕೆ,ಕೇಳುವುದಕ್ಕೆ ವೇದನೆಯಿದೆ.
ಕಾರಣವಿಷ್ಟೆ ನಮ್ಮೊಳಗಿನ ವಿಚಾರಗಳು ಅದಕ್ಕೆ ಪೂರಕವಿದ್ದರೆ ವೇದನೆಯಾಗದು.ವಿರುದ್ದವಾಗಿದ್ದರೆ ಸಾಕಷ್ಟು  ನಿಂದನೆಗಳು,ವಿರೋಧಗಳು ಬರುವುದು ಸಹಜ.
ನಮ್ಮ ಮೂಲದ ಶಿಕ್ಷಣದ ವಿಚಾರದಲ್ಲಿ ವಿವೇಕವಿತ್ತು.
ಅದನ್ನು ಮಕ್ಕಳಿಗೆ ಶಿಕ್ಷಣದ ಮೂಲಕ ಕೊಡಲು ಸೋತವರು ಭಾರತೀಯರೆ ಹೀಗಾಗಿ ವಿರುದ್ದದ  ವಿಚಾರಗಳನ್ನು ತಲೆಗೆ ತುಂಬಿದಾಗ  ನಿಜವಾದ ಸಾತ್ವಿಕ ವಿಚಾರಗಳನ್ನು ಮನಸ್ಸು ಒಪ್ಪದೆ ವಿರೋಧವೇ ಮಾಡೋದು. ಇದಕ್ಕೆ ಪರಿಹಾರ
ಏನಾದರೂ ಹಣದಿಂದ ಕೊಡಬಹುದೆ? ಬಡತನ ಬೆಳೆದಿರೋದೆ ಅಜ್ಞಾನದ ಶಿಕ್ಷಣದಿಂದ. ಎಷ್ಟು ಹಣದ ಸಾಲ ಮಾಡಿದರೂ ತೀರಿಸುವ ಶಕ್ತಿಯೇ ಇಲ್ಲವಾದರೆ ಸಾಲವೇ 
ಶೂಲವಾಗುತ್ತದೆ. ಇದನ್ನು ಸಾಮಾನ್ಯಜ್ಞಾನದಿಂದಲೇ ಅರ್ಥ ಮಾಡಿಕೊಂಡು ಯಾವ ವಿಶೇಷ ಶಿಕ್ಷಣವೂ ಇಲ್ಲದೆಯೂ ಜೀವನದ ಮುಖ್ಯಗುರಿ ತಲುಪಿದ್ದ ವಿವೇಕವಂತ ನಮ್ಮ ಹಿಂದಿನ ಜ್ಞಾನಿಗಳನ್ನು ನಾವುಯಾವ ಮಾರ್ಗದಲ್ಲಿ ನಡೆದು
 ತಿಳಿಯಲು ಪ್ರಯತ್ನಪಟ್ಟೆವೋ ಆ ಮಾರ್ಗವೇ ರಾಜಕೀಯ
ವಾಗಿತ್ತು. ಅವರು ನಡೆದ ರಾಜಯೋಗದ ಮಾರ್ಗ ವನ್ನು ಇಂದಿಗೂ ಜನರು ತಿರಸ್ಕಾರದಿಂದ ಕಾಣುತ್ತಾರೆಂದರೆ 
ಅಜ್ಞಾ‌ನವಷ್ಟೆ.ಇಲ್ಲಿ ಅಜ್ಞಾನವೆಂದರೆ ಜ್ಞಾನವಿಲ್ಲ ಎಂದರ್ಥ ವಲ್ಲ.ಜ್ಞಾನವಿದ್ದರೂ ನಡೆದಿಲ್ಲ ಅನುಭವದ ಸತ್ಯ ಗೊತ್ತಿಲ್ಲ
ವೆಂದರ್ಥ.ಭಾರತದ ಪ್ರತಿಯೊಬ್ಬ ಪ್ರಜೆಯೊಳಗೂ ಅಡಗಿದ್ದ ಅಪಾರವಾದ ಜ್ಞಾನ ಶಕ್ತಿಯನ್ನು ಗುರುತಿಸದೆ ನೇರವಾಗಿ ಹೊರಗಿನ ಶಿಕ್ಷಣ ನೀಡಿ ಸ್ವಪ್ರಯತ್ನದಿಂದ ಸತ್ಯ ತಿಳಿಯದೆ 
ಯಾರೋ ಹೇಳಿದ್ದಾರೆ, ಮಾಡಿದ್ದಾರೆ,ನಡೆದಿದ್ದಾರೆ ಎನ್ನುವ  ಪ್ರಚಾರ ಮಾಡುತ್ತಾ ತಾನು ನಡೆಯಲಾಗದೆ ನಡೆಯುವವರಿಗೂ ಸಹಕಾರ ನೀಡದೆ ಆಳಿದ ಪ್ರತಿಫಲವೇ ಇಂದಿನ ಯುವ ಜನಾಂಗ ಸರಿದಾರಿ ಕಾಣದೆ ಮಧ್ಯೆ ನಿಂತು  ನಿಂದಿಸೋದು,  ವಿರೋಧಿಸೋದು. ಯಾರು ಅವರಿಗೆ ಹಣ,ಅಧಿಕಾರ,ಸ್ಥಾನಮಾನ ಕೊಡುವರೋ ಅವರನ್ನು ಒಪ್ಪಿಕೊಂಡು  ಮುಂದೆ ನಡೆಯೋದು. ಮುಂದೆ ಎಂದರೆ ವಿದೇಶಕ್ಕೋ? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.
"ಇಂದಿನ‌ ಮಕ್ಕಳೇ ಮುಂದಿನ ದೇಶದ ಪ್ರಜೆಗಳು" ಇದರಲ್ಲಿ ಎರಡರ್ಥ ವಿದೆ.ಯಾರು ದೇಶೀಯ ಜ್ಞಾನ ಪಡೆದು ಮುಂದೆ ನಡೆದರೂ ಅವರು ದೇಶದಲ್ಲಿದ್ದೇ ದೇಶಸೇವೆ ಮಾಡುವ ಜ್ಞಾನಿಗಳಾಗಿ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ.
ಆದರೆ ಯಾರು ನೇರವಾಗಿ ವಿದೇಶಿ ಶಿಕ್ಷಣದ ಗುಲಾಮರಾಗಿ
ಶಿಕ್ಷಣ ಪಡೆದರೋ ಅವರಿಗೆ ಸ್ವಂತ ಬುದ್ದಿಯಿಲ್ಲದೆ ವಿದೇಶಕ್ಕೆ ಹೋಗಿ ದುಡಿಯುವ ಹಾಗಾಗಿದೆ. ಇದರಿಂದಾಗಿ ಮೂಲದ ಧರ್ಮ ಕರ್ಮ ಕ್ಕೆ ಸಿದ್ದಾಂತಕ್ಕೆ ಬೆಲೆಕೊಡಲಾಗದೆ ನಿಂದನೆ
ವಿರೋಧಗಳೇ ಹೆಚ್ಚಾಗಿ ಸಂಸಾರದಲ್ಲಿಯೇ ಸಮಸ್ಯೆ.ಇದು
ಸಾಮಾನ್ಯಜ್ಞಾನದಿಂದಲೇ ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸಮಸ್ಯೆಗೆ ಕಾರಣವೇ  ಅರ್ಧಸತ್ಯದ ರಾಜಕೀಯ.
ರಾಜಕೀಯಕ್ಕೆ ಸಹಕರಿಸುವ ನಾವು ಯಾರ ಆಳಾಗಿದ್ದೇವೆ?
ಅಂದರೆ ಪ್ರಜಾಪ್ರಭುತ್ವ ದೇಶದಲ್ಲಿ ಆಳು ಯಾರು ಅರಸ ಯಾರು? ಯಾರಲ್ಲಿ  ನಿಜವಾದ ಸ್ವಪ್ರಯತ್ನವಿಲ್ಲವೋ ಅವರಲ್ಲಿ ಗೊಂದಲಗಳು,ಸಂಶಯಗಳು,ಅನುಮಾನಗಳು
ಹೆಚ್ಚಾಗಿ ಸತ್ಯವನ್ನು ತಿರಸ್ಕರಿಸುತ್ತಾ ಮಿಥ್ಯವನ್ನು ಹೆಚ್ಚಿಸುತ್ತಾ
ಸಮಾಜದ ಋಣದಲ್ಲಿದ್ದರೂ  ಸಮಾಜವನ್ನು ದಾರಿತಪ್ಪಿಸಿ ಆಳುತ್ತಾರೆ. ಇದಕ್ಕೆ ಸಹಕರಿಸುವವರೂ ಅದೇ  ದಾರಿಯಲ್ಲಿ ನಡೆದರೆ  ಒಮ್ಮೆ ದೇಹ ಮರೆಯಾಗೋದು ಸತ್ಯ.ಹಾಗಂತ
ಸತ್ಯ ನಾಶವಾಗುವುದೆ? ಹಿಂದಿನ ಮಹಾತ್ಮರುಗಳು ನಡೆದ ಸತ್ಯ ಹಾಗು ಧರ್ಮದ  ಹಾದಿಯಲ್ಲಿ ನಡೆಯಲಾಗದವರು
ಪ್ರಚಾರಮಾಡಿದರೂ ಹಾದಿ ಮುಚ್ಚಿಹೋಗಿದ್ದರೆ ಅಥವಾ ತಾವೇ ಆ ಹಾದಿಯಲ್ಲಿ ನಡೆಯದೆ ನಡೆಯುವವರಿಗೂ ಅಡ್ಡ ನಿಂತಿದ್ದರೆ  ಧರ್ಮ ರಕ್ಷಣೆ ಸಾಧ್ಯವಿಲ್ಲ. ಹಿಂದೂ ಧರ್ಮದ ರಕ್ಷಣೆಗೆ ರಾಜಕೀಯದ ಅಗತ್ಯವಿಲ್ಲ. ರಾಜಯೋಗದ ಹಿಂದಿನ ಶಿಕ್ಷಣದ ಅಗತ್ಯವಿತ್ತು. ಅದನ್ನು ಕೊಡುವ ಶಿಕ್ಷಕರು ಗುರು ಹಿರಿಯರೂ  ಧಾರ್ಮಿಕ ವಾಗಿ ಸತ್ಯದಲ್ಲಿ ನಡೆಯುತ್ತಿದ್ದರು. ಅವರ ನಿಜವಾದ ಸ್ವಪ್ರಯತ್ನವೇ ಧರ್ಮ ರಕ್ಷಣೆಗೆ ದಾರಿಯಾಗಿತ್ತು. ಈಗ ನಾವೆಲ್ಲರೂ ಒಗ್ಗಟ್ಟಿನಿಂದ
ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ನಮ್ಮ ನಮ್ಮ ಪ್ರಯತ್ನವಷ್ಟೆ ಉಳಿದಿರೋದು. ಪ್ರಯತ್ನ ನಮ್ಮದು ಫಲ ಭಗವಂತನದು.
ಈ ಲೇಖನದ ಉದ್ದೇಶ  ಹಿಂದೂ ಧರ್ಮದ ಹಿಂದುಳಿದರೆ
ಮುಂದಿನ  ಜೀವನವೇ ಸ್ವತಂತ್ರ ಕಳೆದುಕೊಂಡು ಅತಂತ್ರಸ್ಥಿತಿಗೆ ಬಂದಾಗ  ಯಾವ ಪ್ರಯತ್ನವೂ ವ್ಯರ್ಥ
ಎನ್ನುವುದಾಗಿದೆ.  ಮೌನದಿಂದ  ಧ್ಯಾನ ಮಾಡಬಹುದು. ಧ್ಯಾನದಿಂದ ಜ್ಞಾನವೂ ಸಿಗಬಹುದು.ಜ್ಞಾನಸಿಕ್ಕ ಮೇಲೆ ನನಗೂ ಜಗತ್ತಿಗೂ ಏನೂ ಸಂಬಂಧ ವಿಲ್ಲವೆಂದು ಮೌನವಾಗಿದ್ದು ಅಧರ್ಮ ಬೆಳೆದರೆಇದರಷ್ಟು ತಪ್ಪು ಬೇರೆ 
ಇಲ್ಲ.  ಇದೊಂದು ಅನುಭವದ ಸತ್ಯವಾಗಿದೆ. ಹಲವು ತತ್ವಜ್ಞಾನದ ಸತ್ಯವನ್ನು  ತಿಳಿಸುವ ಪ್ರಯತ್ನದಲ್ಲಿ ನಾನು ಸಾಕಷ್ಟು ನಿಂದನೆ,ವಿರೋಧವನ್ನು ಮೌನದಿಂದ  ಕಂಡಿರುವೆ. ಆದರೆ ಪ್ರಯತ್ನದ ಫಲವಾಗಿ ಸತ್ಯ ದರ್ಶನವಾಗಿದೆ. ಇದನ್ನು ಒಪ್ಪಲಿ ಬಿಡಲಿ  ಇದರಿಂದಾಗಿ ಆತ್ಮರಕ್ಷಣೆ ಧರ್ಮ ರಕ್ಷಣೆಯಂತೂ ಆಗುತ್ತದೆ ಎನ್ನುವ ಬಲವಾದ ನಂಬಿಕೆಯೇ ಈವರೆಗೆ ಲೇಖನಗಳು ಹರಿದುಬಂದಿದೆ. ಹಾಗಂತ ಎಲ್ಲರಿಗೂ ಇದೇ ಅನುಭವ ಆಗೋದಿಲ್ಲ.ಅನುಭವಿಸದೆ ಸತ್ಯ ತಿಳಿಯಲ್ಲ ಇದೇ  ನಮ್ಮ ಹಿಂದುಳಿಯುವಿಕೆಗ ಕಾರಣವಾಗಿದೆ.  ಇಲ್ಲಿ  ಅಜ್ಞಾನದಲ್ಲಿ ರಾಜಕೀಯ ನಡೆಸಿದವರಿಗೆ ಜನಬಲ,ಹಣಬಲ,
ಅಧಿಕಾರ ಬಲ ಹೆಚ್ಚು.ಅದೇ ಜ್ಞಾನದೆಡೆಗೆ ಹೋಗುವವರನ್ನು ಅವರೆ ತಡೆದು ನಿಲ್ಲಿಸುವುದು. ಹೀಗಾದರೆ  ಪ್ರಗತಿ ಯಾವುದರಲ್ಲಿದೆ?  ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ನಮ್ಮ 
ಸಹಕಾರವೇ ಇದಕ್ಕೆ ಕಾರಣ. ಇದಕ್ಕೆ ತಕ್ಕಂತೆ ಪ್ರತಿಫಲ.
ಕೆಲವರಿಗೆ ಸಣ್ಣ ವಯಸ್ಸಿಗೇ ಸಾಕಷ್ಟು ಜನಬಲ,ಹಣಬಲದ ಜೊತೆಗೆ ಅಧಿಕಾರವೂ ಇರುತ್ತದೆ.ಹಾಗಾಗಿ ಸ್ವಪ್ರಯತ್ನದಲ್ಲಿ ಸೋತು  ರಾಜಕೀಯವನ್ನೇ ಬಂಡವಾಳ  ಮಾಡಿಕೊಳ್ಳುತ್ತಾರೆ.
ಕೆಲವರಿಗೆ ಜೀವನದ ಮಧ್ಯೆ ಸತ್ಯ ದರ್ಶನ ವಾದರೆ ಅವರಿಗೆ ಸಾಕಷ್ಟು ನಿಂದನೆ,ವಿರೋಧವೇ ಹೆಚ್ಚು ಇದರಿಂದಾಗಿ ಏನೂ ಬೇಡವೆಂದು ಎಲ್ಲವನ್ನೂ ಒಪ್ಪಿ ನಡೆದರೆ ಸತ್ಯ ಅರ್ಧಕ್ಕೆ ನಿಂತ ನೀರಾಗಿ ಕೊಳೆಯುತ್ತದೆ ಇದರಿಂದಾಗಿ ರೋಗವೂ ಹೆಚ್ಚುತ್ತದೆ. ಇನ್ನೂ ಹಲವರಿಗೆ ಕೊನೆಗಾಲದಲ್ಲಿ ಸತ್ಯದರ್ಶನ ಆದರೂ ವಯಸ್ಸಾದ ಕಾರಣ ಸುಮ್ಮನೆ ಹೋಗುತ್ತಾರೆ.ಮತ್ತೆ
ಜನ್ಮವೆತ್ತಿದಾಗ ಸರಿಯಾದ ಜ್ಞಾನದ ಶಿಕ್ಷಣ ಸಿಕ್ಕಿದರೆ ಉತ್ತಮ
ಆದರೆ ಹಿಂದಿನ ಜನ್ಮದ ಪ್ರಾರಂಭದಿಂದ ಮಧ್ಯದವರೆಗೂ ಮಾಡಿದ ಕರ್ಮಫಲಕ್ಕೆ ತಕ್ಕಂತೆ ಜನ್ಮವಿರುವುದರಿಂದ ಇಲ್ಲಿ
ಸತ್ಯಕ್ಕೆ ಬೆಲೆಯಿರೋದಿಲ್ಲ.ಮಕ್ಕಳಿಗೆ ಸ್ವತಂತ್ರ ಜ್ಞಾನವಿದ್ದರೂ
ಪೋಷಕರ ಹಿಡಿತದಲ್ಲಿ ಅದನ್ನು ಅತಂತ್ರಗೊಳಿಸಬಹುದು.
ಒಟ್ಟಿನಲ್ಲಿ ಯಾರೋ ಯಾರನ್ನೋ ಹೇಗೋ ಆಳಲು ಹೋಗಿ
ನಮ್ಮ ನಮ್ಮ ಸ್ವಪ್ರಯತ್ನ ಕೇವಲ ಭೌತಿಕ ಮಟ್ಟಕ್ಕೆ ನಿಂತಿದೆ.
ಅಧ್ಯಾತ್ಮ ದೆಡೆಗೆ ಹೋದರೆ ನಿಜವಾದ  ದಾರಿ ಕಾಣುತ್ತದೆ.
ಅಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು
ಸತ್ಯಧರ್ಮ ಕ್ಕೆ ಬೆಲೆಕೊಡೋದರ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಲು ಸ್ವ ಪ್ರಯತ್ನ ಅಗತ್ಯವಿದೆ. ರಾಮಾಯಣ ಮಹಾಭಾರತದಂತಹ ಮಹಾಪುರಾಣ ಕಥೆಯನ್ನೇ ತಿರುಚಿ
ತಮ್ಮ ತಮ್ಮ ರೀತಿಯಲ್ಲಿ ಜನರಿಗೆ ಬಿಟ್ಟಿರುವಾಗ ಅದರಲ್ಲಿ ಅಡಗಿದ್ದ ಧರ್ಮ ಸೂಕ್ಮತೆಯ ಅರಿವಾದರೂ ಹೇಗೆ ಬರಲು ಸಾಧ್ಯ.ಹಾಗೆಯೇ ಅಸಂಖ್ಯಾತ ಜನರ ಕಥೆಯೂ ಇದೆ.ಅವರವರ ಕಥೆಯೇ ವ್ಯಥೆಯಾಗಿರುವಾಗ ಅದನ್ನು ಓದಿಕೊಂಡು ಇನ್ನಷ್ಟು ವ್ಯಥೆಪಡೋದರ ಬದಲಾಗಿ ನಮ್ಮ
ಜನ್ಮಕ್ಕೆ ಕಾರಣ ತಿಳಿದು ನಡೆದರೆ ಉತ್ತಮವಲ್ಲವೆ? ಮಾನವ
ಭೂಮಿಯಲ್ಲಿ ಹುಟ್ಟಲು ಕಾರಣವೇ ಹಿಂದಿನ ಜನ್ಮದ ಋಣ ಮತ್ತು ಕರ್ಮ. ಇದನ್ನು ತೀರಿಸಲು ಧರ್ಮ ಹಾಗು ಸತ್ಯದ ಮಾರ್ಗ ಹಿಡಿಯಬೇಕು. ಅವರವರ ಮೂಲ ಧರ್ಮ ಕರ್ಮ ವೇ ಇದಕ್ಕೆ ಸರಿಯಾದ ಮಾರ್ಗ.ಇದನ್ನು ಬಿಟ್ಟು ಹೊರಗೆ ನಡೆದಷ್ಟೂ ಅಧರ್ಮ ಅಕರ್ಮ ವಾಗುವುದಾದರೆ ಇದರ ಪರಿಣಾಮ ಎದುರಿಸೋದು ಒಳಗಿನ ಜೀವ. ಈ ಜೀವಾತ್ಮ
ಪರಮಾತ್ಮನ ಕಡೆಗೆ ನಡೆಯುವಾಗ ಬರುವ ನಿಂದನೆ ,
ವಿರೋಧಕ್ಕೆ ಕಾರಣವೇ ಅಜ್ಞಾನಿಗಳ ಸಹವಾಸ.ಅಜ್ಞಾನಕ್ಕೆ
 ಕಾರಣ ಜ್ಞಾನದ ಶಿಕ್ಷಣದ ಕೊರತೆ. ಯಾರು ಕೊಡಬೇಕಿತ್ತು? ಜ್ಞಾನಿಗಳೆಲ್ಲಿರುವರು? ನಿಜವಾದ ಸ್ವಪ್ರಯತ್ನಆಗಿದೆಯೆ? 
ಇಲ್ಲವೆ? ಇದನ್ನು ಧಾರ್ಮಿಕ ವರ್ಗದವರು ಪ್ರಶ್ನೆ
ಮಾಡಿಕೊಂಡರೆ ಉತ್ತರವಿದೆ. ಪ್ರಶ್ನೆ ಮಾಡೋರಿಲ್ಲ.
ಮಾಡಿದರೂ ಉತ್ತರ ಸಿಗೋದಿಲ್ಲವಲ್ಲ.ನಮ್ಮ ಸಹಕಾರವೇ ಸರಿಯಿಲ್ಲ.ಅಧರ್ಮ, ಅನ್ಯಾಯ, ಭ್ರಷ್ಟಾಚಾರ, ಅಸತ್ಯದಿಂದಲೇ ರಾಜಕೀಯ‌ ನಡೆಸಿದರೆ  ಬೆಳೆಯೋದೂ ಅದೇ. ಆದರೆ ಅದು ಶಾಶ್ವತವಲ್ಲ ಸ್ವಪ್ರಯತ್ನವು ಸತ್ಯ ಧರ್ಮದಲ್ಲಿದ್ದರೆ ಸಾಕಷ್ಟು ಬದಲಾವಣೆ ನಮ್ಮಲ್ಲಿ ಕಾಣಬಹುದು.ನಾನು ಬದಲಾದರೆ  ನಂತರ ಮಕ್ಕಳು ಬದಲಾಗಬಹುದು.  'ಯಥಾ ಗುರು ತಥಾಶಿಷ್ಯ'  'ಯಥಾ ರಾಜ ತಥಾ  ಪ್ರಜೆ'     'ಯಥಾ  ಪ್ರಜಾ ತಥಾ ಪ್ರಜಾಪ್ರಭುತ್ವ'
ನಾವ್ಯಾರು?  ಪ್ರಜೆಗಳೆ ?  ರಾಜರೆ? ಮಾನವರೆ? ದೇವರೆ? ಅಸುರರೆ? 
ಹಾಗಾದರೆ ನಾನ್ಯಾರು?  ಪ್ರಶ್ನೆಗೆ ಆಳವಾದ ಉತ್ತರ ನಾನೆಂಬುದಿಲ್ಲ. ವಾಸ್ತವ ಜಗತ್ತಿನಲ್ಲಿ ನಾನೊಬ್ಬ ಮಾನವನಷ್ಟೆ. ಮಾನವನ‌ಪ್ರಯತ್ನದ ಫಲವೇ ಜಗತ್ತು.ಸೃಷ್ಟಿ ಮಾಡಿದವನೂ,ಸ್ಥಿತಿಗೆ ಕಾರಣನೂ,ಲಯಕ್ಕೂ ನಾನೇ ಕಾರಣವಾದಾಗ  ನಾನು ಹೋದರೆ  ಮುಕ್ತಿ. ಇದ್ದರೆ ?
ನನಗೆ ಸರ್ಕಾರ ಮುಕ್ತಿ ಕೊಡಲು ಸಾಧ್ಯವೆ?ಅಥವಾ ನಾನು ಸರ್ಕಾರದಿಂದ ಮುಕ್ತನಾಗಿರಬೇಕೆ? ನನ್ನ ಪ್ರಯತ್ನದಿಂದ ಸರ್ಕಾರ ಬೆಳೆಯಿತೆ? ನಾನು ಏನೂ ಪ್ರಯತ್ನ ಪಡದೆಯೂ ಸರ್ಕಾರ  ಬೆಳೆಯಿತೆ? ನನ್ನ ಸರ್ಕಾರ ಧರ್ಮದೆಡೆಗೆ ಇತ್ತೆ?
ಹಾಗಾದರೆ ಧರ್ಮ ಹಿಂದುಳಿಯಲು ಕಾರಣವೇನು? ನನ್ನ ಧರ್ಮದ ರಕ್ಷಣೆಗೆ ಸರ್ಕಾರದ ಹಣಬೇಕಿತ್ತೆ? ಅಥವಾ ಸರ್ಕಾರದ ಹಣದಿಂದಲೇ ಧರ್ಮ ರಕ್ಷಣೆಯೆ? ಒಟ್ಟಿನಲ್ಲಿ ಎಲ್ಲರಿಗೂ ಶಿಕ್ಷಣ ಸರಿಯಿಲ್ಲದೆ ದೇಶದಲ್ಲಿ ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರ ಮುಗಿಲುಮುಟ್ಟಿದೆ ಎಂದು ತಿಳಿದರೂ  ಯಾವ ಪೋಷಕರೂ  ಶಿಕ್ಷಣಕ್ಷೇತ್ರದಲ್ಲಾಗಲಿ ಧಾರ್ಮಿಕ ಕ್ಷೇತ್ರದಲ್ಲಾಗಲಿ ನಡೆಯುತ್ತಿರುವ ರಾಜಕೀಯಕ್ಕೆ
ವಿರೋಧ ವ್ಯಕ್ತಪಡಿಸಲಾಗುತ್ತಿಲ್ಲ.ಇಲ್ಲಿ ಸ್ವಪ್ರಯತ್ನದ ಕೊರತೆ ಇದೆ.ಇದು ನಮಗೇ ಕಷ್ಟ ನಷ್ಟ ತಂದುಕೊಡುತ್ತದೆನ್ನುವ ಸತ್ಯ ತಿಳಿದರೆ ಮುಂದಿನ ಪೀಳಿಗೆಗೆ ನಾವು ಹಣದ ಆಸ್ತಿ ಮಾಡಿಡುವ ಬದಲು ಜ್ಞಾನದ ಆಸ್ತಿ ಮಾಡಿಟ್ಟು ಮುಂದೆ ನಡೆಯಬಹುದಷ್ಟೆ. ಸತ್ಯವನ್ನು  ಹಲವು ರೀತಿಯಲ್ಲಿ ತಿರುಚಿ ಬರೆದು ಓದಿ ತಿಳಿಸಿದರೂ ಮೂಲದ ಸತ್ಯ ಒಂದೇ. ಅದೇ ಆತ್ಮಸಾಕ್ಷಿ. ಇದನ್ನು ಯಾವ ಸರ್ಕಾರವೂ ಸರಿಪಡಿಸಲಾಗದು

ವಿಶ್ವಶಾಂತಿ ದಿನದ ಶುಭಾಶಯಗಳು


|| ಅಂತರಾಷ್ಟ್ರೀಯ  ವಿಶ್ವ  ಶಾಂತಿದಿನದ ಶುಭಾಶಯಗಳು. 
ರಾಷ್ಟ್ರೀಯ ಶಾಂತಿಯ ನಂತರವೇ ಅಂತರಾಷ್ಟ್ರೀಯ ಶಾಂತಿ
ಹಾಗೆ ಮನೆಯೊಳಗೆ ಶಾಂತಿ ಸಿಗಲು ಮನಸ್ಸು ಶಾಂತವಾಗಿರಬೇಕು. ಮನಸ್ಸಿನ  ಶಾಂತಿಗೆ  ಯೋಗ

ಇರಬೇಕು. ಅಧ್ಯಾತ್ಮದ ಯೋಗವೇ ಬೇರೆ ಭೌತಿಕದ ಯೋಗವೇ ಬೇರೆ.ಒಟ್ಟಿನಲ್ಲಿ ನಮ್ಮ ಮನಸ್ಸಿಗೆ ಕೂಡುವ,
ಸೇರುವ ವಿಚಾರಗಳಿಂದ ಮನಸ್ಸು ಶಾಂತವಾದರೆ ಅದೇ ಮಹಾಯೋಗ. ಈ ಯೋಗವು ಹೊರಗಿನಿಂದ ಬರುವುದೆ? ಒಳಗಿನಿಂದ  ಬರುವುದೆ? ತಂದೆ ತಾಯಿಯರ ಸಂಯೋಗ
ದಿಂದ  ಮಕ್ಕಳು  ಜನ್ಮತಾಳುವರು. ಅಂದರೆ ಪಿತೃಗಳಿಲ್ಲದೆ 
ಜೀವನವಿಲ್ಲ.ಪಿತೃಪಕ್ಷದ ಈ ದಿನಗಳಲ್ಲಿ  ನಾವು ಪಿತೃಗಳನ್ನು ನೆನಪಿಸಿಕೊಳ್ಳುವುದೆ ಪಿತೃಗಳ ಯೋಗದ ಫಲ.
ಪಕ್ಷಪಕ್ಷದ ನಡುವಿನ‌ ಹಗ್ಗಜಗ್ಗಾಟದಲ್ಲಿ ಜನರ ಮನಸ್ಸನ್ನು ಹೊರಗೆಳೆದು  ಆಳುತ್ತಿರುವ. ರಾಜಕೀಯಕ್ಕೆ  ಬಲಿಯಾದರೆ ಒಳಗಿನ ಪಿತೃಪಕ್ಷವಿಲ್ಲದೆ  ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ.
ಯಾವಾಗ ಪಿತೃಗಳ ಆಶೀರ್ವಾದ ಸಹಕಾರ, ಸಹಾಯ ಧರ್ಮ ಕರ್ಮಗಳಿಂದ ಮಕ್ಕಳು ದೂರವಾಗುತ್ತಾ ಹೊರಗೆ ಹೋಗುವರೋ ಆಗಲೇ ಶಾಂತಿ ಕಳೆದುಕೊಂಡು ದೇಶ ವಿದೇಶದಲ್ಲಿ  ಶಾಂತಿ ಹುಡುಕುವಂತಾಗುತ್ತದೆ.  ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಸುಮ್ಮನಿರಲಾಗದೆ ರಾಜಕೀಯ ನಡೆಸಿಕೊಂಡು ಅಶಾಂತಿಯಿಂದ  ಜೀವನ ನಡೆಸೋದರಲ್ಲಿ  ಶಾಂತಿ ಕಾಣಬಹುದೆ? ಎಲ್ಲಾ ನಿನ್ನೊಳಗೇ
ಅಡಗಿರುವಾಗ ಹೊರಗೆ ಹುಡುಕುವುದೇಕೆ? ಎನ್ನುವರು ಮಹಾತ್ಮರು. ಆದರೆ ಒಳಗೆ ಹುಡುಕಿಕೊಳ್ಳುವುದನ್ನು ಗುರು ಹಿರಿಯರು ಕಲಿಸಿಕೊಡುವುದೇ ನಿಜವಾದ ಶಿಕ್ಷಣವಾಗಿತ್ತು.
ಶಿಕ್ಷಣವೇ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ.
ಆಂತರಿಕವಾಗಿದ್ದ ಜ್ಞಾನದ ಮಟ್ಟ ಕುಸಿಯುತ್ತಾ ಅಶಾಂತಿ  ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇ ನಮ್ಮ ಭೌತಿಕ ಸಹಕಾರ
ಅಧ್ಯಾತ್ಮ ಬಿಟ್ಟು ನಡೆದಿರೋದು. ನಮ್ಮದೇ ಸಹಕಾರಕ್ಕೆ ನಾವೇ ಹೊಣೆಗಾರರಲ್ಲವೆ? ಕರ್ಮಕ್ಕೆ ತಕ್ಕಂತೆ ಫಲ.
  - - - -  
          ಭಗವದ್ಗೀತೆಯ ಯೋಗಗಳಾಗ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗವು
ಪರಮಾತ್ಮನ ಕಡೆಗೆ  ನಡೆಸಿತ್ತು ಭೌತಿಕದ ಯೋಗವು ಪರಕೀಯರ ಕಡೆಗೆ ನಡೆಸುತ್ತಾ  ಭೋಗದಿಂದ ರೋಗವೇ ಹೆಚ್ಚಾಗಿ ಮಾನವನಿಗೆ ಅಶಾಂತಿ ಹೆಚ್ಚಾಗುತ್ತಿದೆ. ಇದನ್ನು ಭೌತಿಕ ವಿಜ್ಞಾನ ಒಪ್ಪಿದರೂ  ಅದನ್ನು ಒಳಗೆಳೆದುಕೊಂಡ ಮಧ್ಯವರ್ತಿಗಳು ಒಪ್ಪದೆ ವ್ಯವಹಾರದಿಂದ  ಶಾಂತಿ ಕಾಣಲು
ಸಾಧ್ಯವೆ?   

Tuesday, September 20, 2022

ಹೆಣ್ಣಿಗೇಕಿಲ್ಲ ಗುರುಕುಲ ಶಿಕ್ಷಣ?

 ಭಾರತ ಮಾತೆ,ಕನ್ನಡಮ್ಮ,ವಿಶ್ವಮಾತೆ,ಜಗದೀಶ್ವರಿ,
ಜ್ಞಾನದೇವತೆ, ಸ್ತ್ರೀ ಶಕ್ತಿಯಿಂದ ನಡೆಯುತ್ತಿರುವ ಈ ಭೂಮಿ ತಾಯಿಯ  ಹೆಣ್ಣು ಮಕ್ಕಳಿಗೆ ಯಾಕೆ ಗುರುಕುಲವಿಲ್ಲದೆ ಆಳಿದರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಯಾವಾಗ ಸ್ತ್ರೀ ಶಕ್ತಿ ಅಧ್ಯಾತ್ಮ ವಿದ್ಯೆಯನ್ನು ಕಲಿಯದೆ ಭೌತಿಕ ವಿದ್ಯೆ  ಕಲಿಯುವಂತಾಯಿತೋ ಆಗಲೇ ಅಸಮಾನತೆ 
ಬೆಳೆಯಿತು.
ಪುರುಷ ಪ್ರಧಾನ ದೇಶವೆಂಬ  ಬೇಧಭಾವದಲ್ಲಿಯೇ  ಹೆಣ್ಣು ತನ್ನ ಸಮಸ್ಯೆಗೆ ಕಾರಣ ತಿಳಿಯುವ ಜ್ಞಾನವನ್ನು ಆಂತರಿಕ ಶಕ್ತಿಯಿಂದ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲದೆ ಹೊರಗೆ ಬರುವಂತಾಗಿದೆ.ಹಿಂದಿನ  ಕಾಲದ ಸಂಸ್ಕಾರಯುತ ಸಮಾಜಮುಖಿಯ  ಶಿಕ್ಷಣದಿಂದ ಮನೆ ಮನೆಯೂ ಗುರುಕುಲವಾಗಿತ್ತು.
ಅಂದಿನ  ಕಾಲದಲ್ಲಿದ್ದ ಗುರುಕುಲಗಳಲ್ಲಿ ಸ್ತ್ರೀ ಯರಿಗೂ ತಿಳಿಯುವ ಅವಕಾಶವಿದ್ದ ಕಾರಣ ಒಂದು ಧಾರ್ಮಿಕ ನೆಲೆ  ಧರ್ಮವನ್ನು ರಕ್ಷಣೆ ಮಾಡುತ್ತಿತ್ತು. ಆದರೂ ಹೆಚ್ಚು ಹೆಚ್ಚು ರಾಜಕೀಯ ಶಕ್ತಿ ಹೆಚ್ಚಾದಂತೆಲ್ಲಾ ಧರ್ಮದಸೂಕ್ಮವು ಅರ್ಥ ಆಗದ ಮನಸ್ಸನ್ನು ತಡೆಹಿಡಿಯಲಾಗದೆ ಸ್ತ್ರೀ ಯೇ ಇದಕ್ಕೆ ಕಾರಣವೆನ್ನುವ ಮಟ್ಟಿಗೆ ತಮ್ಮ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನವಾಯಿತು. ಈಗಲೂ  ಧಾರ್ಮಿಕ ಕ್ಷೇತ್ರ ನಡೆಸೋ ಗುರುಕುಲಗಳಲ್ಲಿ  ಹೆಣ್ಣು ಮಕ್ಕಳಿಗೆ ಅವಕಾಶವಿಲ್ಲ.ಕಾರಣ ಇಷ್ಟೇ ಹೆಣ್ಣಿನ ಚಂಚಲ ಸ್ವಭಾವದಿಂದಾಗಿ  ಸರಿಯಾಗಿ ವಿದ್ಯೆ ಕಲಿಯದೆ ಹೋಗಬಹುದು.ಅಥವಾ ಪುರುಷರನ್ನೇ ಆಳುವ ಶಕ್ತಿ ಹೆಣ್ಣಿಗೆ ಬಂದರೆ ಸಂಸಾರದಲ್ಲಿ ಸಮಸ್ಯೆ ಆಗಬಹುದು.
ಆಳುವ  ಬದಲು ಆಳಾಗಿ ದುಡಿಯುವುದೇ ಉತ್ತಮ ಎನ್ನುವ  ದಾಸ,ಶರಣರ ತತ್ವದಂತೆ ಭೂಮಿಯನ್ನು ಆಳಲು ಹೋಗುವ ಬದಲಾಗಿ ಭೂ ಸೇವೆ ಮಾಡಿಕೊಂಡು ಋಣ ತೀರಿಸುವ ಜ್ಞಾನ  ಮಾನವನಿಗಿದ್ದಿದ್ದರೆ ಸ್ತ್ರೀ ಯನ್ನು  ಹಿಂದೆ ನಿಲ್ಲಿಸಿ ಆಳುವ ರಾಜಕೀಯ ಹೆಚ್ಚಾಗುತ್ತಿರಲಿಲ್ಲ. ಆದರೂ ಸ್ತ್ರೀ ಯನ್ನು ಯಾರು ಆಳಾಗಿಸಿಕೊಂಡರೂ ಅಧರ್ಮ ವೆ. ಇಲ್ಲಿ ಸ್ತ್ರೀ ಶಕ್ತಿಯ ಒಪ್ಪಿಗೆ ಇಲ್ಲದೆ ನಡೆಸೋ ರಾಜಕೀಯ ಹಲವು ದುರಂತಗಳನ್ನು ಕಂಡಿದೆ. ಧರ್ಮಜ್ಞಾನವೇ ಇಲ್ಲದ ಸ್ತ್ರೀ ಯಿಂದ ಭೂಮಿಯಲ್ಲಿ ಧರ್ಮ ನೆಲೆಸುವುದೆ? ಅವಳ ಮಕ್ಕಳಿಗೆ ಅವಳೇ ಮೊದಲ ಗುರುವಾದಾಗ ಅವಳಿಗೇ ಜ್ಞಾನವಿಲ್ಲದೆ ಕಲಿಸುವುದೇನು? ಇಂತಹ ಸಾಮಾನ್ಯ ಪ್ರಶ್ನೆಗೆ
ಉತ್ತರ ಕೊಡಲು ಕಷ್ಟ. ಯಾವಾಗ ಸ್ತ್ರೀ ಯ ಜ್ಞಾನ ಕುಸಿಯುವುದೋ ಆಗ ನಾನೆಲ್ಲಿದ್ದೇನೆಂಬ ಅರಿವಿಲ್ಲದೆ ಮುಂದೆ  ಮನುಕುಲ ನಡೆಯುತ್ತದೆ. ವಾಸ್ತವ ಜಗತ್ತಿನಲ್ಲಿ ಸಾಕಷ್ಟು ವಿದ್ಯಾವಂತರು,ಬುದ್ದಿವಂತರು,ಹಣವಂತರಿದ್ದರೂ ಭೂಮಿಯಲ್ಲಿ ಅಜ್ಞಾನದ ಅಂದಕಾರದ ಅಹಂಕಾರ ಸ್ವಾರ್ಥ ಮಿತಿಮೀರಿ  ಭ್ರಷ್ಟಾಚಾರ ಬೆಳೆದಿದೆ. ಇದರ ಫಲ  ಎಲ್ಲಾ ಅನುಭವಿಸಲೇಬೇಕಾಗಿದೆ. ಎಷ್ಟು ವರ್ಷ ವಾದರೂ ಜ್ಞಾನ ಇಲ್ಲವಾದರೆ  ವಯಸ್ಸಾಗಬಹುದು.ಇದು ಪುರುಷ ಸ್ತ್ರೀ ಇಬ್ಬರೂ ಅರ್ಥ ಮಾಡಿಕೊಳ್ಳಲು ಇಬ್ಬರಿಗೂ ಉತ್ತಮ ಧಾರ್ಮಿಕ ಶಿಕ್ಷಣದ ಅಗತ್ಯವಿತ್ತು. ಪುರುಷರು ಧಾರ್ಮಿಕ ಶಿಕ್ಷಣ ಪಡೆದು ಗೃಹಸ್ಥ ರಾದರೂ ಅವರನ್ನು ಅರ್ಥ ಮಾಡಿಕೊಳ್ಳುವ ಸ್ತ್ರೀ ಗೆ ಧರ್ಮ ಜ್ಞಾನ ವಿಲ್ಲವಾಗಿ ಭೌತಿಕ ವಿದ್ಯೆ ಇದ್ದರೆ  ಹಣಸಂಪಾದನೆಯಷ್ಟೆ ಗುರಿಯಾಗಬಹುದು.
ಒಟ್ಟಿನಲ್ಲಿ ಎಲ್ಲಾ  ನಾವೇ ಮಾಡಿಕೊಂಡು ಬಂದಿರುವ ಅಸಮಾನತೆಯ ಫಲ. ಈಗಲೂ ಸಾಕಷ್ಟು ಹೆಣ್ಣುಮಕ್ಕಳಿಗೆ
ವಿದ್ಯೆ ಇದ್ದರೆ ಜ್ಞಾನವಿಲ್ಲ.ಜ್ಞಾನವಿದ್ದವರಿಗೆ ವಿದ್ಯೆಯಿಲ್ಲ. ಈ ಅನ್ಯಾಯಕ್ಕೆ ಸರಿಯಾದ ನ್ಯಾಯ ಕೊಡುವವರಿಲ್ಲದೆ ಹೆಣ್ಣು ಸರಿಯಿಲ್ಲ.ಗಂಡುಸರಿಯಿಲ್ಲ.ಕುಟುಂಬ ಸರಿಯಿಲ್ಲ,ಸಮಾಜ ಸರಿಯಿಲ್ಲ,ದೇಶ ಸರಿಯಿಲ್ಲ ಎಂದು ಹೊರದೇಶದವರೆಗೆ ಸರಿಪಡಿಸಲು ಹೋದವರು ಅಲ್ಲೇ ಸರಿಯಾಗಿ ಸಂಪಾದನೆ ಗೌರವ ಇದೆ ಎಂದು ಅಲ್ಲಿಯೇ ನೆಲೆಸುತ್ತಾರೆ. ಹಾಗಾದರೆ ಸರಿಯಾಗಿರೋದು  ಯಾರು? ಏನು?  ನಾನೇ ಸರಿ ಎನ್ನುವ ಅಹಂಕಾರ ಸರಿಯಾಗಿ ಬೆಳೆದು ನಿಂತಿದೆ.ಇದರಿಂದಾಗಿ ಭೂಮಿ ಕಾಣದೆ ಆಕಾಶಕ್ಕೆ ಹಾರೋದರಲ್ಲಿಯೇ ವಿಜ್ಞಾನ ಬೆಳೆದಿದೆ. ಜೀವ ಕೊಟ್ಟ ತಾಯಿಯು  ಸರಿಯಿಲ್ಲವೆನ್ನುವ ಮಕ್ಕಳ ಸಂಖ್ಯೆ ಬೆಳೆಯುತ್ತಿದೆ. ಹಣಸಂಪಾದನೆ ಮಾಡಿದರೆ ಮಾತ್ರವೇ ಹೆಣ್ಣಿಗೆ ಗೌರವ ಎನ್ನುವ ಪರಿಸ್ಥಿತಿಯಲ್ಲಿ ಹೆಣ್ಣು ಮನೆಯಿಂದ ಹೊರಹೋಗಿ ದುಡಿದು ತರುವ ಹಾಗಾಗಿದೆ.
ಇವೆಲ್ಲದರ ಹಿಂದೆ ಇರೋದೆ ಅಜ್ಞಾನದ ಶಿಕ್ಷಣ. ಶಿಕ್ಷಣದಲ್ಲಿ ಅಡಗಿರುವ‌  ವಿಷಯಗಳು, ಧಾರ್ಮಿಕ ಕ್ಷೇತ್ರದೊಳಗಿರುವ ವ್ಯವಹಾರ ಜ್ಞಾನ. ಅಸಮಾನತೆಯ ಅಜ್ಞಾನ.ತತ್ವಜ್ಞಾನವನ್ನು ತಂತ್ರವನ್ನಾಗಿಸಲು ಹೋದರೆ ಅಧರ್ಮ. ಕಾರಣ ಒಂದೇ ತತ್ವ,ಒಂದೇ ಧರ್ಮ, ದೇವರು ಎಂದಿರೋದು ಹಲವಾಗಿಸಿದ್ದು ಮಾನವನ ಸ್ವಾರ್ಥ ದ ರಾಜಕೀಯ. ಇದನ್ನು ಸ್ತ್ರೀ ಯನ್ನಾಗಲಿ, ಭೂಮಿಯನ್ನಾಗಲಿ ಆಳಲು ಬಳಸಿದರೂ ಭೂಮಿಯ ಋಣ ತೀರದೆ ಜೀವಕ್ಕೆ ಮುಕ್ತಿ ಸಿಗುವುದೆ? ಅಜ್ಞಾನದಲ್ಲಿಯೇ ಆಳುವ ಬದಲಾಗಿ ಜ್ಞಾನದಿಂದ ಜೀವನ ಸತ್ಯ ತಿಳಿಸುತ್ತಾ  ಮುಂದೆ ನಡೆದಿದ್ದರೆ  ಶಾಂತಿ,ತೃಪ್ತಿ, ಮುಕ್ತಿ ಸಿಗುತ್ತದೆ ಎನ್ನುವ ಸತ್ಯವನ್ನು ಮಾನವರು ಪ್ರತಿಕ್ಷಣ ನೆನಿಸಿ ಕೊಳ್ಳಲು ಕಷ್ಟ. ಅದೂ ಇಂದಿನ ವೈಜ್ಞಾನಿಕ ಚಿಂತನೆಯಲ್ಲಿ ವೈಚಾರಿಕತೆಯ ಹಿಂದಿನ ಉದ್ದೇಶ ಅರ್ಥ ವಾಗದು. ಹೀಗಾಗಿ ಮೊದಲು ಹೆಣ್ಣು ಮಕ್ಕಳಿಗೆ ಆಂತರಿಕ ಜ್ಞಾನ ಬೆಳೆಸಿ ಕಲಿಸಿ, ಗೌರವಿಸಿ ಸಹಕರಿಸಿದರೆ ಧರ್ಮ ರಕ್ಷಣೆಗೆ ಅವಳೂ ಸಹಕಾರ ನೀಡುವಳಲ್ಲವೆ? ಹಿಂದಿನ ಕಾಲದಲ್ಲಿದ್ದ ಸ್ತ್ರೀ ಶಕ್ತಿ ಈಗಿಲ್ಲ. ಹಾಗಂತ ಜ್ಞಾನವಿಲ್ಲವೆ? ಇದನ್ನು ಸರಿಯಾಗಿ ಬಳಸಲು  ಅವಕಾಶ,ಅಧಿಕಾರ ಕೊಡದೆ  ಆಳಿದರೆ  ಅಧರ್ಮವೇ ಬೆಳೆಯೋದು. ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರ ಎಂದು ತಿಳಿಯುವುದೇ ಇಂದಿನ ಯುವಪೀಳಿಗೆಯ ಅಜ್ಞಾನ.
ಇದಕ್ಕೆ ಕಾರಣವೇ ಶಿಕ್ಷಣವಾದಾಗ ಜ್ಞಾನದ ಶಿಕ್ಷಣ ನೀಡಲು ಧಾರ್ಮಿಕ ವರ್ಗ ರಾಜಕೀಯ ಕ್ಷೇತ್ರ ದಲ್ಲಿರುವ ಅಜ್ಞಾನವನ್ನು ಸರಿಪಡಿಸದೆ ಅವರ ಹಿಂದೆ ನಿಂತರೆ  ಯಾರು ಜ್ಞಾನಿಗಳು?
ಕೆಲವರಿಗೆ  ಅತಿಯಾದ  ಆತ್ಮವಿಶ್ವಾಸ, ಅತಿಯಾದ ಅಹಂಕಾರ, ಸ್ವಾರ್ಥ ವೂ  ತಿಳಿಯದೆ ಬೆಳೆದಿದೆ.ಜನರ ಸಹಕಾರವೇ  ಇದಕ್ಕೆ ಇದೆ. ಆದರೆ ಜನರಲ್ಲಿ  ಜ್ಞಾನದ ಕೊರತೆ ಇದೆ. ಎಲ್ಲಾ ಕೊರತೆಯೂ ಒಂದಾಗಿ  ಸಹಕರಿಸಿದರೆ ಇರುವ ಜ್ಞಾನವೂ  ಹಿಂದುಳಿಯಬಹುದು. ಹಾಗಾಗಿ ಜ್ಞಾನ ಒಳಗೆ ಇರಲಿ  ಅದನ್ನು ಒಳಗಿನ ಮನಸ್ಸಿನ ಸಹಕಾರದಿಂದ ಹೆಚ್ಚು ಮಾಡುವ ಬಗ್ಗೆ ಮನೆ ಮನೆಯೊಳಗಿರುವ ಸ್ತ್ರೀ ಶಕ್ತಿಯನ್ನು
ಪ್ರೋತ್ಸಾಹಿಸಿ  ಸಹಕರಿಸಿದರೆ ಹೊರಗಿನ  ರಾಜಕೀಯ  ಬೇಡ.ಇದ್ದರೂ ಒಳಗಿನವರ ಜ್ಞಾನಶಕ್ತಿಯಿಂದ ಹೊರಗಿನ ಶಕ್ತಿಯೂ  ಬೆಳೆಯುವುದು.ಅವರವರ ಸ್ವತಂತ್ರ ಜ್ಞಾನಕ್ಕೆ ಅವರೆ ರಾಜರು. ಪ್ರಜಾಪ್ರಭುತ್ವದ ಪ್ರಜೆಗಳ ಸಾಮಾನ್ಯ ಜ್ಞಾನದಿಂದಲೇ ಇಂದಿನ ಈ ಪರಿಸ್ಥಿತಿ ಗೆ ಕಾರಣ ಮತ್ತು ಪರಿಹಾರ ಮಾರ್ಗ  ಒಳಗಿರುವ ಹೆಣ್ಣು ಮಕ್ಕಳ ಜ್ಞಾನದ ಸಹಕಾರದಿಂದ ತಿಳಿಯಬಹುದು. ಮಿತಿಮೀರಿ ಬೆಳೆದವರ ಹಿಂದೆ ಹೋಗುವ ಬದಲು  ಇನ್ನೂ ಕಣ್ಣು ಬಿಡುತ್ತಿರುವ ಸಣ್ಣ ಮಕ್ಕಳ ಬಗ್ಗೆ  ಎಚ್ಚರವಿರಲಿ.  ಮಕ್ಕಳು ನಾವು ಕುಣಿಸುವ ಗೊಂಬೆಯಲ್ಲ. ಅವರೊಳಗೂ ಮಹಾ ಚೇತನಾಶಕ್ತಿ ಇದೆ.ಅದನ್ನು ಸರಿಯಾದ ಶಿಕ್ಷಣದ ಮೂಲಕ ಬೆಳೆಸಿದರೆ ದೈವಗುಣದಿಂದಲೇ ದೈವತ್ವದೆಡೆಗೆ ನಡೆಯಬಹುದು.ಇದು  ಸಂಸಾರದಲ್ಲಿ ಹೆಣ್ಣಿನ ಜ್ಞಾನದಿಂದ  ಸಾಧ್ಯವಾದಾಗ ಅವಳನ್ನು ದೂರವಿಟ್ಟು  ದೂರಿದರೆ ಧೋಷವೇ ಹೆಚ್ಚು.
ಸ್ವಾಮಿ ವಿವೇಕಾನಂದರಾಗಲಿ,ಶಿವಾಜಿ ಮಹಾರಾಜನಾಗಲಿ
ತಾಯಿಯ ಶಿಕ್ಷಣದಿಂದ  ಮಹಾತ್ಮರಾಗಲು ಸಾಧ್ಯವಾಗಿದ್ದು.
ಭಾರತೀಯ ನಾರಿ ಶಕ್ತಿಯನ್ನು  ದುರ್ಭಳಕೆ ಮಾಡಿಕೊಂಡು ಆಳುವುದೇ ಅಜ್ಞಾನದ ಸಂಕೇತ. ಇದು ಸ್ತ್ರೀ ಕುಲಕ್ಕೆ ನಷ್ಟ.
ಭೂಮಿಗೆ ನಷ್ಟ.  ಜ್ಞಾನ ದೇವತೆಯನ್ನು ಪ್ರತಿಮೆಯ ಮೂಲಕ  ಆರಾಧಿಸುವಾಗ ಪ್ರತಿಭಾಶಕ್ತಿ ಜ್ಞಾನ ಶಕ್ತಿ ಪಡೆದ ಹೆಣ್ಣು ಮಕ್ಕಳು ಕಾಣದಿದ್ದರೆ ವ್ಯರ್ಥ.  ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸದೆ ಇದ್ದ ಕಾಲದಲ್ಲಿ ಸ್ವತಃ ಹೆಣ್ಣು ಹೋರಾಟಮಾಡಿ ತನ್ನ ಅಸ್ತಿತ್ವಕ್ಕೆ ಆದ ಅನ್ಯಾಯ ಕ್ಕೆ ಸಿಡಿದೆದ್ದು ಸಮಾಜ ಸುಧಾರಣೆ ಮಾಡಿದ ಧೀರ ಮಹಿಳೆಯರು ಭಾರತೀಯರು. ಆದರೆ ಇಂದು ಶಿಕ್ಷಣವಿದೆ ಜ್ಞಾನವಿಲ್ಲ.ಅವಶ್ಯಕರವಾದ ವಿಚಾರವೆ
ಇಲ್ಲದ ಅನಗತ್ಯವಾದ ವಿಷಯವನ್ನು ಹೊಂದಿರುವ ಶಿಕ್ಷಣ ಪಡೆದು ದಿನವಿಡೀ  ಕುಳಿತು ಓದಿದರೂ ಆಂತರಿಕ ಶಕ್ತಿ ಹೆಚ್ಚದೆ ಭೌತಿಕಾಸಕ್ತಿ ಬೆಳೆಸುವ ಶಿಕ್ಷಣ ನೀಡಿ ಕೊನೆಯಲ್ಲಿ ತಡೆಗೋಡೆ ಹಾಕುವ‌ ಪ್ರಯತ್ನ ಮಾಡಿದರೆ  ಧರ್ಮ ವೆ? ಇಷ್ಟು ಸಾಲದೆಂಬಂತೆ  ಸಂಸಾರದ ಸಮಸ್ಯೆಗೆ ಹೆಣ್ಣೇ ಕಾರಣ ಎನ್ನುವ ಹಣೆಪಟ್ಟಿ ಕಟ್ಡಿದರೆ ವಿದ್ಯಾವಂತ ಹೆಣ್ಣು ಒಪ್ಪಲು ಕಷ್ಟ. ಇದೇ ರೀತಿ ಪುರುಷನೂ ನಡೆದುಕೊಂಡು ಬಂದರೆ  ಭೂಮಿಯ ಮೇಲೆ  ಶಾಂತಿ ಇರೋದಿಲ್ಲ. ಶಾಂತಿ,ಸಮೃದ್ಧಿ, ಸಂತೋಷ,ಆತ್ಮತೃಪ್ತಿ ಸಿಗೋದು ಆತ್ಮಜ್ಞಾನದಿಂದ ಎಂದ ಮೇಲೆ ಆ ಜ್ಞಾನದಿಂದ ವಂಚಿತಳಾದ ಸ್ತ್ರೀ ಜ್ಞಾನಿ ಆಗಲು ಕಷ್ಟ. ಇಲ್ಲಿ ಹೊರಗಿನಿಂದ ನಡೆಸುತ್ತಿರುವ ರಾಜಕೀಯವೇ ಸಮಸ್ಯೆಗೆ ಕಾರಣವಾದಾಗ ಒಳಗಿನ ರಾಜಯೋಗದ ಶಿಕ್ಷಣ ನೀಡುವುದು ಉತ್ತಮ ದಾರಿ. ಬ್ರಹ್ಮಾಂಡದ  ಎಲ್ಲಾ ವಿಷಯ ಒಂದೇ ಜನ್ಮದಲ್ಲಿ ತಿಳಿಯಲಾಗದು. ಕೊನೆಪಕ್ಷ ಈ ಜನ್ಮದ ಸಮಸ್ಯೆಗೆ  ಕಾರಣ ಒಳಗಿರುವ ಜ್ಞಾನದಿಂದ  ತಿಳಿದು ಸರಿ ಮಾಡಿಕೊಳ್ಳುವ ಮೂಲಕ  ಪರಿಹಾರ ಕಂಡುಕೊಳ್ಳಲು ಸಣ್ಣ ವಯಸ್ಸಿನಲ್ಲಿಯೇ ಇಬ್ಬರಿಗೂ ಗುರುಕುಲ ಶಿಕ್ಷಣದಲ್ಲಿ ಜ್ಞಾನಕ್ಕೆ ಒತ್ತುಕೊಟ್ಟು ಯಾವುದೇ ರೀತಿಯ ಬೇಧಭಾವ ನೋಡದೆ  ಬೆಳೆಸಿ ಅವರಲ್ಲಿರುವ ಅಜ್ಞಾನವನ್ನು ಶಿಕ್ಷೆ ನೀಡಿಯಾದರೂ ಸರಿಪಡಿಸುವ ಶಿಕ್ಷಣವೇ ನಿಜವಾದ ಧರ್ಮ ಶಿಕ್ಷಣ. ಓದಿ ತಿಳಿಯುವುದಕ್ಕೆ  ನೆನಪಿನ ಶಕ್ತಿ ಸಾಕು.ಮಾಡಿ ಕಲಿತು ನಡೆಯುವುದಕ್ಕೆ ಜ್ಞಾನಶಕ್ತಿ ಬೇಕು. ಅವರವರ ಮೂಲ ಧರ್ಮ ಕರ್ಮ ವನ್ನರಿತು ನಡೆಯುವುದೇ ಜ್ಞಾನ. ದೈವಶಕ್ತಿ   ಎಲ್ಲರ ಆತ್ಮಜ್ಞಾನದಲ್ಲಿದೆ.
ದೇವಾನುದೇವತೆಗಳು ಮುಕ್ಕೋಟಿ ದೇವತೆಗಳೂ ಆತ್ಮ ರೂಪದಲ್ಲಿರುವಾಗ  ಅವರನ್ನು ಭೌತಿಕದಲ್ಲಿ ಕಾಣಲಾಗುವುದೆ? ಆಂತರಿಕ ವಾಗಿ  ದೈವೀ ಗುಣ ಬೆಳೆಸುವ ಶಿಕ್ಷಣವಿಲ್ಲದೆ ಹೊರಗೆ ದೇವರನ್ನು ಬೆಳೆಸುವ ಶಕ್ತಿ ಮಾನವನ ವ್ಯವಹಾರಕ್ಕೆ ಸೀಮಿತವಾದರೆ  ಜ್ಞಾನದ ಗತಿ?  ಭೂಮಿಯ ಮೇಲೆ ನಿಂತು ಭೂಮಿಯನ್ನು ಆಳುವುದು  ಹೇಗೆ ಸಾಧ್ಯ?ಧರ್ಮ ಹಾಗು ಸತ್ಯವಿದ್ದರೆ ಭೂತಾಯಿ ಸಹಕರಿಸಬಹುದು. ಹಾಗೆಯೇ ಸ್ತ್ರೀ ಶಕ್ತಿ. ಅಧರ್ಮಕ್ಕೆ ಸಹಕರಿಸಿದರೆ ಪ್ರತಿಫಲ ತಿರುಗಿ ಬರುವುದು. ಕರ್ಮಕ್ಕೆ ತಕ್ಕಂತೆ ಫಲ ಎನ್ನುತ್ತಾರೆ ಮಹಾತ್ಮರು. ನಾವೀಗ ಕೇವಲ ಮಾನವರಷ್ಟೆ. ಆತ್ಮರಕ್ಷಣೆ ಜ್ಞಾನದಿಂದ  ಮಾತ್ರ ಸಾಧ್ಯ. ರಾಮರಾಜ್ಯದ ಹೆಸರಲ್ಲಿ ರಾಮನ ತತ್ವ ಬಿಟ್ಟು ತಂತ್ರದಿಂದ  ಸೀತೆಯರನ್ನು ಆಳಿದರೆ ತಿರುಗಿ ಬೀಳುವುದು ಸೀತೆಯರೆ .ಅತಿಥಿಗಳಾಗಿ  ವಿದೇಶಿಗಳಿಗೆ  ಸ್ಥಾನಮಾನ ಕೊಡುವ ಭಾರತೀಯರಿಗೆ  ಕೊನೆಗೆ  ಅವರೇ ತಿಥಿ ಮಾಡಬಹುದೆನ್ನುವ  ಜ್ಞಾನವಿದ್ದರೆ ಅತಿಯಾಗದೆ ಇತಿಮಿತಿಯಲ್ಲಿರಬಹುದು. ಪರರೆಲ್ಲಾ ನಮ್ಮವರಾದರೆ ಸ್ವರ್ಗ ನಮ್ಮವರೆ ಪರಕೀಯರಾದರೆ ನರಕ.

ವಿದೇಶಿ ಒಪ್ಪಂದ ಎಷ್ಟು ಅಗತ್ಯವಿದೆ?

ವಿದೇಶಿ ಒಪ್ಪಂದಕ್ಕೆ ಒಪ್ಪುವ ನಾವುಗಳು ಸ್ವದೇಶಿಗಳ ಒಪ್ಪಿಗೆಯನ್ನು  ಪಡೆಯುತ್ತಿಲ್ಲವೆ? 
ನಮ್ಮದು ಸ್ವತಂತ್ರ ದೇಶವೆನ್ನುವಾಗ ಯಾರಿಗೆ ಸಿಕ್ಕಿದೆ ಸ್ವಾತಂತ್ರ್ಯ? ಎನ್ನುವ ಪ್ರಶ್ನೆಯೂ ಹುಟ್ಟುತ್ತಿದೆ.ಪ್ರತಿಯೊಂದು ವಿಚಾರಗಳಿಗೂ   ಬೇರೆಯವರ ಒಪ್ಪಿಗೆ ಪಡೆದು ಮುಂದೆ ನಡೆಯುವ ಮಕ್ಕಳ‌ ಒಳಗಿನ‌ ಮನಸ್ಸು ಇದಕ್ಕೆ ಒಪ್ಪಿದೆಯೆ ಎನ್ನುವ ಬಗ್ಗೆ  ಪೋಷಕರು ಚಿಂತನೆ ಮಾಡುವಷ್ಟು ಸಮಯವಿಲ್ಲ. ಪ್ರಾಥಮಿಕ ಶಿಕ್ಷಣವೇ ಪರಕೀಯರ ಭಾಷೆಯಲ್ಲಿ ಕಲಿಸಿ ಮಕ್ಕಳ ಮನಸ್ಸಿಗೆ ಒಪ್ಪಿಗೆ ಆಗದೆ  ಕಲಿಸಿದರೆ  ಇದರಲ್ಲಿ  ರಾಜಕೀಯವಿದೆ.  ಶಿಕ್ಷಣವೇ  ನಮ್ಮ ಮೂಲವಲ್ಲದಿದ್ದರೂ  ವಿದೇಶದವರೆಗೆ ಹೋಗಿ ಕಲಿತು ಬಂದವರ  ಒಪ್ಪಂದಕ್ಕೆ ಸಹಿ ಹಾಕುವ  ನಮಗೆ  ನಮ್ಮೊಳಗೇ ಅಡಗಿದ್ದ  ಶಕ್ತಿಯನ್ನು  ಕೇಳಿ ತಿಳಿಯುವ ಸ್ವಾತಂತ್ರ್ಯ ವಿಲ್ಲವಾಯಿತೆ? ಆದರೂ ಕಾಲದ ಪ್ರಕಾರ ನಡೆಯಲೇ
ಬೇಕು.ಕಾಲವೇ ಇದಕ್ಕೆ ಉತ್ತರಿಸುತ್ತದೆ ಎನ್ನುವ ಹಾಗೆ ಒಪ್ಪಂದದಿಂದ ಸಾಕಷ್ಟು ಭೌತಿಕ ಬದಲಾವಣೆ ಆದರೂ ಅಧ್ಯಾತ್ಮ ದಲ್ಲಿ ಕುಸಿದ ಮನಸ್ಸನ್ನು ಬೆಳೆಸುವ ಕೆಲಸ ತಂತ್ರ ಜ್ಞಾನ ಮಾಡಬಹುದೆ?  ತಂತ್ರದಿಂದ ಯಾರನ್ನಾದರೂ ಅಸತ್ಯ,ಅನ್ಯಾಯ, ಅಧರ್ಮದಿಂದ ಆಳಿದರೆ   ಇದೊಂದು ಕ್ಷಣಿಕವಾದ ಬದಲಾವಣೆ. ಶಾಶ್ವತವಾದ ಬದಲಾವಣೆ ನಮ್ಮ ಮನಸ್ಸಿನ ಚಿಂತನೆ ಯನ್ನು ನಮ್ಮವರ ಒಪ್ಪಿಗೆಯ ಮೇಲೆ ಹೆಚ್ಚಿಸಿಕೊಂಡು ಧರ್ಮ ದ ಪರ ನಿಲ್ಲುವುದಾಗಿದೆ. ಹಾಗಾದರೆ
ನಮ್ಮ ಹಿಂದಿನ ಜನ್ಮದ  ನೆನಪಿಲ್ಲ. ಆದರೆ ಇಂದಿನ‌ ಜನನವಾಗಿದೆ.
ಇಲ್ಲಿಯ ಮೂಲವನ್ನರಿಯುವ ಶಿಕ್ಷಣ ಕೊಡದೆ ವಿದೇಶಿ ಒಪ್ಪಂದಕ್ಕೆ ದೇಶವನ್ನು ಒಪ್ಪಿಸಿದರೆ  ಇದರ ಪರಿಣಾಮ ಏನಾಗಬಹುದು?
ನಮ್ಮವರ ಮಾತಿಗೆ ಬೆಲೆಕೊಡದೆ ಆಳುವವರ ಭವಿಷ್ಯದಲ್ಲಿ
ಯಾರ ಭವಿಷ್ಯವಡಗಿದೆ.  ಇದರಿಂದಾಗಿ ಮಾನವೀಯ ಮೌಲ್ಯಗಳು ,  ತತ್ವಜ್ಞಾನ,  ಸತ್ಯಜ್ಞಾನ,  ದೈವತ್ವ ಬೆಳೆಯುವುದಾದರೆ  ಉತ್ತಮ ಸ್ವತಂತ್ರ ಜೀವನ. ಈಗಲೂ  ಇದೇ ನಿಜವಾದ ಸುಖವೆಂದರಿತು ನಾವೆಲ್ಲರೂ ನಡೆದರೂ ಇದೇ  ಮುಂದಿನ  ದು:ಖಕ್ಕೆ ಕಾರಣವಾಗುವುದಂತೂ  ಸತ್ಯ.
ಹಾಗಾಗಿ ಕಷ್ಟಪಟ್ಟು  ಕೆಲಸ ಮಾಡಿ. ಆಂತರಿಕ ಶಕ್ತಿಯನ್ನು ವಿದೇಶಿ ಒಪ್ಪಂದದ ವ್ಯವಹಾರದಿಂದ ಬೆಳೆಸುವ ಬದಲಾಗಿ ಶಾಶ್ವತವಾಗಿರುವ ಮರೆಯಾಗಿರುವ ಅಗೋಚರ ಶಕ್ತಿಯನ್ನು  ಅಧ್ಯಾತ್ಮ ದ ಪ್ರಕಾರ ತಿಳಿಯಲು ಕೆಲವು ನಮ್ಮ ಒಳಗಿನ ಒಪ್ಪಿಗೆ  ಇರಬೇಕು.ಅದೇ ಪ್ರಕಾರ ಹೊರಗಿನಿಂದ  ತಿಳಿದು
ಎರಡೂ‌  ನಮ್ಮತನವನ್ನು ಕೆಡಸದಂತಿದ್ದರೆ ಒಪ್ಪಿಗೆ ಅಗತ್ಯ.
ಅಂದರೆ ನಮ್ಮ ದೇಶದ ಶಿಕ್ಷಣದಲ್ಲಿ ಸತ್ಯಜ್ಞಾನವಿತ್ತು ಹೊರಗಿನ ಶಿಕ್ಷಣದಲ್ಲಿ ಮಿಥ್ಯಜ್ಞಾನವಿದೆ.ಜ್ಞಾನ ಎರಡೂ ಕಡೆ ಇದ್ದರೂ ಒಂದು ಜೀವಾತ್ಮನಿಗೆ ಇನ್ನೊಂದು ಜೀವನಕ್ಕೆ ಬೇಕಾದ ಶಿಕ್ಷಣ. 
ಯಾವಾಗ ಇವೆರಡೂ ವಿರುದ್ದ ದಿಕ್ಕಿನಲ್ಲಿ ನಡೆಯುವುದೋ ಆಗಲೇ ಯುದ್ದ,ದ್ವೇಷ ಭಯೋತ್ಪಾದನೆಯು  ಹೆಚ್ಚಾಗುತ್ತ ನಮ್ಮ ಜೀವನವೇ  ಒಪ್ಪಿಗೆಯಿಲ್ಲದೆ ನಡೆಸುವ‌ ಸ್ಥಿತಿಗೆ ಬರುತ್ತದೆ. ಒಟ್ಟಿನಲ್ಲಿ  ಅಧ್ಯಾತ್ಮ  ಸತ್ಯವನ್ನು ಒಪ್ಪಿಕೊಳ್ಳಲು
ಅಂತಹ ಶಿಕ್ಷಣವಿದ್ದರೆ ಸಾಧ್ಯವೇ ಹೊರತು ಹೊರಗಿನಿಂದ ಕೇಳಿದಾಕ್ಷಣ ಸಾಧ್ಯವಿಲ್ಲ. ಹಾಗೆಯೇ ಭೌತಿಕದ  ಆ ಕ್ಷಣದ ಸತ್ಯ ಕಣ್ಣಿಗೆ ಗೋಚರಿಸಿದರೂ ಇನ್ನೊಂದು ಕ್ಷಣದಲ್ಲಿ ಬದಲಾಗಬಹುದೆನ್ನುವ ಅರಿವಿರಬೇಕು. 
 ಪುರಾಣದ  ಮಹಾಭಾರತದಲ್ಲಿ ಭೀಷ್ಮಾಚಾರ್ಯರಂತಹ ಮಹಾಜ್ಞಾನಿಗಳಿಗೇ ಬಿಡದ ಧರ್ಮ ಸಂಕಟ ನಮ್ಮಂತಹ ಸಾಮಾನ್ಯರಿಗೆ ಬಿಡುವುದೆ? ಆದರೆ ಅವರಲ್ಲಿದ್ದ ಜ್ಞಾನಶಕ್ತಿ ಧರ್ಮ ದೆಡೆಗೆ ನಡೆಸಿ ಮುಕ್ತಿ ಪಡೆದರು. ನಮ್ಮಲ್ಲಿರುವ ಅಜ್ಞಾನವೇ  ನಮ್ಮನ್ನು ಅಧೋಗತಿಗೆ ಎಳೆಯುತ್ತಿದ್ದರೆ ಎಲ್ಲಿಯ ಧರ್ಮ ರಕ್ಷಣೆ. ಒಟ್ಟಿನಲ್ಲಿ  ದೇವಾಸುರರ ನಡುವೆ ಮನುಕುಲವಿದೆ.ಹಿಂದಿನ ರಾಜಪ್ರಭುತ್ವದ ಒಳ ಒಪ್ಪಂದ
ದಿಂದ  ದ್ವೇಷ ಬೆಳೆದು ಯುದ್ದಗಳಾಗಿ ಕೊನೆಗೆ ಹೊರಗಿನವರ ಪ್ರವೇಶಕ್ಕೆ ಸ್ವಾಗತಿಸುತ್ತಾ,  ಮುಂದೆ ಹೊರಗಿನವರೆ ಆಳಲು ಪ್ರಾರಂಭಿಸಿದರು. 
ಹೀಗಾಗಿ ಹಿಂದಿನ ಭಾರತವನ್ನು ನಿಧಾನವಾಗಿ ಆಕ್ರಮಣ‌ ಮಾಡಿಕೊಂಡ ವಿದೇಶಿಗಳ ವ್ಯವಹಾರಕ್ಕೆ ಒಪ್ಪಂದ  ಮಾಡಿಕೊಂಡ ಭಾರತದ  ಪ್ರಜೆಗಳಿಗೆ ಈಗಲೂ  ನಾವು  ಯಾರ ಕೈ  ಕೆಳಗೆ ಸಾಲದೊಳಗೆ ಇರುವುದೆನ್ನುವ ಸಾಮಾನ್ಯ
ಜ್ಞಾನದ  ಅಗತ್ಯವಿದೆ ಎನಿಸುವುದಿಲ್ಲವೆ?  ಪ್ರಜಾಸರ್ಕಾರ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಸ್ವತಂತ್ರವಾಗಿ  ಕೊಡಲು ಒಪ್ಪದ  ಕಾರಣ  ವಿದೇಶಿಗಳನ್ನೇ  ಒಪ್ಪಂದದ ಮೂಲಕ ಮನೆಯೊಳಗೆ  ಕರೆ ತಂದರೆ ಅವರಿಗೆ ನಮ್ಮ ತಾತ್ವಿಕ ನಿಲುವು ಅರ್ಥವಾಗದು.
ಅದು ಬಿಟ್ಟು  ವ್ಯವಹಾರಕ್ಕೆ ಬದಲಾಗಿ ತಂತ್ರದಿಂದ ಜನರನ್ನೇ ಮನೆಯಿಂದ ಹೊರ ಹಾಕಿ ಆಳಿದರೆ?ಅತಿಥಿ ಸತ್ಕಾರವಿರಲಿ ಆದರೆ ಅವರೇ ನಮ್ಮ ತಿಥಿ ಮಾಡುವಷ್ಟುಅತಿಯಾಗದಿರಲಿ. 
ನಮ್ಮ ಭೌತಿಕ ವಿಜ್ಞಾನಕ್ಕೆ ತಕ್ಕಂತೆ ಜೀವನ ನಡೆಸಲು ಅದೇ ಶಿಕ್ಷಣವನ್ನು ಸಣ್ಣ ವಯಸ್ಸಿಗೇ ನೀಡಿದರೆ ಮಾನವೀಯತೆಯ 
ಅಧ್ಯಾತ್ಮ ಶಿಕ್ಷಣದ ಅರಿವಿಲ್ಲದ ಮನಸ್ಸನ್ನು ತಡೆ ಹಿಡಿಯುವುದು ಕಷ್ಟ. 
ಇದು ಯೋಗದಿಂದ ಮಾತ್ರ ಸಾಧ್ಯ. ಯೋಗ್ಯ ಶಿಕ್ಷಣ ನೈತಿಕ ಶಿಕ್ಷಣ,ಯೋಗಶಿಕ್ಷಣ, ಧಾರ್ಮಿಕ ಶಿಕ್ಷಣವು ನಮ್ಮ ಭಾರತೀಯರ ಮೂಲ ಶಿಕ್ಷಣವಾಗಿತ್ತು. ಈಗ ಕೆಲವೆಡೆ ಪುನರಾರಂಭವಾಗಿದ್ದರೂ  ರಾಜಕೀಯಕ್ಕೆ ಇಳಿದು ವ್ಯವಹಾರಕ್ಕೆ ಬಳಸಿದರೆ  ಕಷ್ಟ. ಅವರವರ ದೇಶದ ಭವಿಷ್ಯ ಅವರವರ ಮೂಲ ಶಿಕ್ಷಣವೇ ನಿರ್ಧಾರ ಮಾಡುತ್ತದೆ. ಇದಕ್ಕೆ ಹೊರಗಿನವರ ಒಪ್ಪಂದ ಒಪ್ಪಿಗೆ ಯಾಕೆ ಬೇಕಿದೆ?  ಹೊರಗಿನವರಿಗೂ  ನಮ್ಮ ಜ್ಞಾನ ಕಲಿಸಿ ಬೆಳೆಸಿ ಆದರೆ ನಮ್ಮವರನ್ನೇ  ಆಳೋವಷ್ಟು ಒಪ್ಪಂದದ ಅಗತ್ಯವಿರಲಿಲ್ಲ.
 ಈ ಕಾರಣಕ್ಕಾಗಿ ನಮ್ಮ ಮೂಲದ ಶಿಕ್ಷಣದ ನಂತರವೇ ಹೊರಗಿನ ಶಿಕ್ಷಣದ ಅಗತ್ಯವಿದೆ. ಮೂಲ ಧರ್ಮ ಕರ್ಮ ಕ್ಕೆ
ದಕ್ಕೆಯಾದರೆ  ಸಮಸ್ಯೆ ಒಳಗೇ ಬೆಳೆಯುತ್ತದೆ. ಒಳಗಿನ ಸಮಸ್ಯೆಗೆ ಪರಿಹಾರ ಹೊರಗೆ ಸಿಗೋದಿಲ್ಲ ಎನ್ನುವ ಸಾಮಾನ್ಯ ಜ್ಞಾನ  ನಮಗಿರಬೇಕು. ಸಾಮಾನ್ಯರ ಸಮಸ್ಯೆಗೆ
ಅಸಮಾನ್ಯರು ಸಾಮಾನ್ಯರಂತೆ  ಬದುಕಿ  ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಇಲ್ಲವೆಂದರೆ ಸಮಸ್ಯೆಗೆ ಪರಿಹಾರ ಕೊಡಲು  ಕಷ್ಟ.ಹಣದಿಂದ ಕೊಟ್ಟರೆ ಮತ್ತಷ್ಟು ಸಾಲದ ಹೊರೆ ಸಾಮಾನ್ಯರೆ ಹೋರಬೇಕೆಂಬುದು ಅಧ್ಯಾತ್ಮ ಸತ್ಯ. ಭೌತಿಕ ಜಗತ್ತಿನಲ್ಲಿ   ಹಣದಿಂದ  ಏನು ಬೇಕಾದರೂ  ಪಡೆಯಬಹುದು ಆದರೆ ಸತ್ಯಜ್ಞಾನ ಆತ್ಮಜ್ಞಾನ ಸಿಗೋದಿಲ್ಲವೆನ್ನುವುದು ಸತ್ಯ. ಬದಲಾವಣೆ  ರಾಜಕೀಯ ಪಕ್ಷದಿಂದ  ಸಾಧ್ಯವಿಲ್ಲ. ಪಿತೃಪಕ್ಷದಿಂದ ಸಾಧ್ಯವಾಗಬಹುದು.
ಹಿಂದಿನ ಗುರು ಹಿರಿಯರ ಋಣ ತೀರಿಸಲು  ಧರ್ಮ ಕರ್ಮದಿಂದ ,ನ್ಯಾಯ,ನೀತಿ,ಸತ್ಯದಿಂದ ಜೀವನ‌ ನಡೆಸುವ
 ಜ್ಞಾನದಿಂದ ಸಾಧ್ಯವೆನ್ನುತ್ತಾರೆ. ಇದನ್ನು ಬಿಟ್ಟು ಎಷ್ಟು ದೂರ ಹೋದರೂ  ಸಾಲದ ಸುಳಿಯಲ್ಲಿರುವ ಜೀವಕ್ಕೆ ಮುಕ್ತಿ ಸಿಗೋದು ಕಷ್ಟ. ಎಲ್ಲಾ ತ್ಯಜಿಸಿ ಸಂನ್ಯಾಸಿ ಆಗೋದಕ್ಕಿಂತ  ಯೋಗಿಯಾಗಿರುವುದೇ ಮೇಲು .ಶ್ರೀ ಕೃಷ್ಣಪರಮಾತ್ಮನು
 ಅರ್ಜುನನ  ವಿಷಾದಕ್ಕೆ  ' ನೀನು ಯೋಗಿಯಾಗು 'ಎಂದಿರುವುದು ಇದೇ ಕಾರಣಕ್ಕಾಗಿ. ನಮ್ಮ ಧರ್ಮಕ್ಕೆ  ಚ್ಯುತಿ ಬಂದರೆ   ಎದ್ದು ಹೋರಾಡಬೇಕೇ ಹೊರತು ಹೇಡಿಗಳಂತೆ  ಒಪ್ಪಂದಕ್ಕೆ  ಶರಣಾಗಬಾರದು.  ಹೋರಾಡಲು ಉತ್ತಮ ಸಹಕಾರವೂ ಅಗತ್ಯ. ಒಪ್ಪಂದ  ನಮ್ಮ ಆತ್ಮಬಲವನ್ನು ಹೆಚ್ಚಿಸಬೇಕಿದೆ. ಆತ್ಮಹತ್ಯೆ ಆಗಬಾರದಷ್ಟೆ.
ಆ ಪಕ್ಷ ಈ ಪಕ್ಷ ದೊಡ್ಡದು ಒಳ್ಳೆಯದು,ಕೆಟ್ಟದ್ದು ಎಂದು ಹೊರಗಿನ ಪಕ್ಷಾಂತರದಲ್ಲಿ ಮೈ ಮರೆತರೆ ನಮ್ಮದೇ ಆದ ಪತೃಪಕ್ಷವೇ ಹಿಂದುಳಿಯುತ್ತದೆ. ಮೂಲವನ್ನರಿತು ನಡೆದರೆ ಧರ್ಮ. ಧರ್ಮವನ್ನು ರಕ್ಷಣೆ ಮಾಡಿದವರನ್ನು  ಧರ್ಮ ವೇ ರಕ್ಷಿಸುತ್ತದೆ. ರಾಜಕೀಯದಲ್ಲಿ ಧರ್ಮ ವಿದೆಯೆ?  ಸತ್ಯ ಎಲ್ಲಿದೆ? ಸತ್ಯವೇ ದೇವರೆನ್ನುತ್ತಾರೆ.

Monday, September 19, 2022

ಹಿಂದೂ ಧರ್ಮದ ಷೋಡಶ ಸಂಸ್ಕಾರಗಳು

ಹಿಂದೂ ಧರ್ಮದ ಷೋಡಶ ಸಂಸ್ಕಾರಗಳು.

1.ಗರ್ಭಾದಾನ, 2.ಪುಂಸವನ, 3.ಸೀಮಂತ, 4 ವಿಷ್ಣುಬಲಿ, 5.ಜಾತಕರ್ಮ, 6 .ನಾಮಕರಣ, 7, ಉಪನಿಷ್ಕ್ರಮಣ 8,.ಅನ್ನಪ್ರಾಶನ, 9,.ಚೌಲ, (ಕರ್ಣವೇಧನ?)10,.ಉಪನಯನ, 11, ಹೋತೃ , 12. ಶುಕ್ರೀಯ 13, ಉಪನಿಷದ್, 14. ಗೋದಾನ, 15. ಸಮಾ ವರ್ತನ, 16. ವಿವಾಹ

ಇಲ್ಲಿ  ಮಕ್ಕಳು ಹುಟ್ಟುವ ಮೊದಲು,  ತಾಯಿಗರ್ಭದ ಸಮಯದಲ್ಲಿ, ಹುಟ್ಟಿದ ನಂತರದಲ್ಲಿ  ಸಂಸ್ಕಾರದ ಮೂಲಕ ಆತ್ಮಶುದ್ದಿ ಮಾಡುವ  ಕಾರ್ಯಕ್ರಮವೇ  ಮಕ್ಕಳು ಮುಂದೆ ಮಹಾತ್ಮರಾಗಿ ದೈವತ್ವದೆಡೆಗೆ ಹೋಗಲು ಸಾಧ್ಯವೆನ್ನುವ ಸತ್ಯ ಇದೆ. ಇದನ್ನು ಮಂತ್ರ,ತಂತ್ರ,ಯಂತ್ರಗಳಿಂದ  ಹಿಂದಿನ ಮಹಾತ್ಮರುಗಳು,ಜ್ಞಾನಿಗಳು ಹೇಗೆ ಮಾಡಬಹುದು ಮಾಡಬೇಕೆಂಬುದನ್ನು  ತಿಳಿಸಿರುವ ಉದ್ದೇಶ ಒಂದೇ. ಜನ್ಮ ಪಡೆದ ಶಿಶುವಿನೊಳಗೆ  ಇರುವ ನಕಾರಾತ್ಮಕ ಗುಣವನ್ನು ಸಣ್ಣ ವಯಸ್ಸಿನಲ್ಲಿಯೇ  ತೆಗೆದುಹಾಕಿ ಸಕಾರಾತ್ಮಕ ದೃಷ್ಟಿಯಿಂದ ಜೀವನವನ್ನು ಸನ್ಮಾರ್ಗದಲ್ಲಿ ನಡೆಸುವುದಾಗಿತ್ತು. ಕಾಲ ಬದಲಾದಂತೆ ಆಚರಣೆಯೂ ಬದಲಾಯಿತು ಕೊನೆಯಲ್ಲಿ ಆಚರಣೆಯ ಉದ್ದೇಶ ತಿಳಿಯದೆ ನಡೆದವು .ಶಿಕ್ಷಣವೂ  ಇದಕ್ಕೆ ವಿರುದ್ದವಾಗಿ ನೀಡಿ ಆಚರಣೆಯಲ್ಲಿ ಕಾಟಾಚಾರವೂ ಬೆರೆಕೆಯಾಯಿತು. ಆದರೆ  ಆಂತರಿಕ ಶುದ್ದಿಯಿಂದ ದೂರವಾದ ಮನಸ್ಸಿಗೆ  ಇದರ ಮೂಲ ಉದ್ದೇಶದ ಅರಿವಿನ ಕೊರತೆಯಿಂದ ಇವೆಲ್ಲವೂ ಮೂಢನಂಬಿಕೆ ಎನ್ನುವ ಮಟ್ಟಕ್ಕೆ  ಬಂದು ಮಾನವ ಸ್ವೇಚ್ಚಾಚಾರದಲ್ಲಿ  ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಸ್ತ್ರೀ ಶಕ್ತಿಗೆ ಸರಿಯಾದ ಶಿಕ್ಷಣ ನೀಡದೆ  ಅವಳ ಜ್ಞಾನವನ್ನು ಬೆಳೆಸದೆ ಮಕ್ಕಳ ಲಾಲನೆ ಪಾಲನೆ ಪೋಷಣೆ ಕೇವಲ ಭೌತಿಕಾಸಕ್ತಿಯಲ್ಲಿ ಮುಂದೆ ನಡೆಯುತ್ತಾ ಒಳಗಿನ ಸಂಸ್ಕಾರ ಹಿಂದುಳಿದು ಹೊರಗಿನ ಸಮಸ್ಯೆ ಬೆಳೆಯಿತು. ಮಂತ್ರದಿಂದ ಮಾವಿನ ಕಾಯಿ ಉರುಳೋದಿಲ್ಲ ಎನ್ನುವ ಕಾರಣಕ್ಕೆ ತಂತ್ರದಿಂದ  ಬೀಳಿಸಿ ಕೊನೆಗೆ ಅಷ್ಟೂ ಹಣ್ಣು ಒಮ್ಮೆಗೆ ಪಡೆದರೆ ಸಾಕಷ್ಟು ಹಣ
ಪಡೆಯಬಹುದೆನ್ನುವ ವ್ಯವಹಾರ ಜ್ಞಾನದಿಂದ ಇಡೀ ಮರವನ್ನು ಯಂತ್ರದಿಂದ ಬೋಳಿಸಿದರೆ  ಸಿಗೋದು ಹಣ ಮಾತ್ರ ಜ್ಞಾನವಲ್ಲ. ಹಾಗೆಯೇ ಮಕ್ಕಳಿಗೆ ಸರಿಯಾದ  ಸಾತ್ವಿಕ ಗುಣವನ್ನು ಸಣ್ಣ ವಯಸ್ಸಿನಲ್ಲಿ ಕಲಿಸಲಾಗದೆ  ಭೌತಿಕ
ಜ್ಞಾನವನ್ನು  ತಂತ್ರದಿಂದ ನೀಡುತ್ತಾ ಅವರಲ್ಲಿದ್ದ ಸ್ವತಂತ್ರ ಜ್ಞಾನ ಹಿಂದುಳಿದರೆ ದೊಡ್ಡವರಾದ ಮೇಲೆ ಅತಂತ್ರಸ್ಥಿತಿಗೆ ತಲುಪಿದವರನ್ನು ಯಂತ್ರದಂತೆ ದುಡಿಸಿಕೊಂಡರೆ  ಜೀವನದಲ್ಲಿ ಸಂತೋಷ ಶಾಂತಿ,ನೆಮ್ಮದಿ ತೃಪ್ತಿ, ಮುಕ್ತಿ ಎಲ್ಲಿರುವುದು?
ನಿಧಾನವೇ ಪ್ರಧಾನ, ತಾಳಿದವನು ಬಾಳಿಯಾನು ಎನ್ನುವುದು ಇಂದಿಗೂ ಸತ್ಯ. ಆದರೆ ಆ ರೀತಿಯಲ್ಲಿ ನಡೆದವರನ್ನು ಸಮಾಜವೇ ತಿರಸ್ಕರಿಸುತ್ತದೆ ಎಂದರೆ ಅಜ್ಞಾನ
 ಅಜ್ಞಾನದೊಳಗಿರುವ ಜ್ಞಾನವನ್ನು ಗುರುತಿಸಿಕೊಳ್ಳಲು ಒಳಗಿನ ಸಂಸ್ಕಾರ ಅಗತ್ಯವಾಗಿತ್ತು.ಇದು ಭಾರತೀಯ ಶಿಕ್ಷಣದ ಗುರಿಯಾಗಿತ್ತು. ಯಾವಾಗ  ಸಂಸ್ಕಾರ ರಹಿತ ಜೀವನ ಕ್ರಮ ಹೆಚ್ಚಾಯಿತೋ ಆಗಲೇ ಅಧರ್ಮ ,ಅಸತ್ಯ,ಅನ್ಯಾಯವೂ ಬೆಳೆಯಿತು. ಈಗಲೂ ಎಷ್ಟೋ ಸಂಸಾರದಲ್ಲಿ ಸಂಸ್ಕಾರವಿದೆ. ಆದರೆ ಅವರ ಹಣದ ಬಡತನವು  ಸಮಾಜಕ್ಕೆ ಕಾಣುತ್ತದೆಯೇ ಹೊರತು ಗುಣದ ಶ್ರೀಮಂತಿಕೆಗೆ ಬೆಲೆಯಿಲ್ಲದೆ ದಾರಿ ತಪ್ಪಿ ನಡೆಯುವವರೆ ಹೆಚ್ಚು. ಸಾಲ ಮಾಡಿ ಏನಾದರೂ  ಕಟ್ಟಬಹುದು, ಕೊಳ್ಳಬಹುದು.ಆದರೆ ಪರಮಸತ್ಯವನ್ನು,ಪರಮಾತ್ಮನನ್ನು  ಕಾಣೋದಕ್ಕೆ ಒಳಗಿನ ಸಂಸ್ಕಾರದ ಅಗತ್ಯವಿದೆ.
ಎಲ್ಲಿಯವರೆಗೆ ಆತ್ಮಶುದ್ದಿಗಾಗಿ ಸಂಸ್ಕಾರಯುತ ಶಿಕ್ಷಣ,
ಕಾರ್ಯಕ್ರಮ, ಸಂಪ್ರದಾಯ,ಶಾಸ್ತ್ರ , ಧರ್ಮಾಚರಣೆಯು  ನಡೆಯುವುದಿಲ್ಲವೋ ಅಲ್ಲಿಯವರೆಗೆ ಆತ್ಮನಿಗೆ ಸ್ವತಂತ್ರ ಜ್ಞಾನ,ಆತ್ಮಜ್ಞಾನ ಸಿಗದು. ಆತ್ಮನಿರ್ಭರ ಭಾರತವನ್ನು ರಾಜಕೀಯದಿಂದ  ಕಟ್ಟುವ ಮೊದಲು ಆತ್ಮಜ್ಞಾನದ ಕಡೆಗೆ ಪ್ರಜೆಗಳ ಶಿಕ್ಷಣವಿದ್ದರೆ ಉತ್ತಮ ಬದಲಾವಣೆ . ಇಲ್ಲಿ ಯಾರೂ ಸ್ವತಂತ್ರ ರಾಗಿಲ್ಲ.ಕಾರಣ ನಮ್ಮೊಳಗೇ ಅಡಗಿರುವ ಮಂತ್ರ,ತಂತ್ರ,ಯಂತ್ರಜ್ಞಾನವೂ ಭೌತಿಕ  ವ್ಯವಹಾರಕ್ಕೆ ಬಳಸಿ ಧಾರ್ಮಿಕತೆ ಹಿಂದುಳಿದರೆ ಇದು ಕಾಲದ ಪ್ರಭಾವವೇ? 
 ಮಾನವ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಇದು ಅಧ್ಯಾತ್ಮದೆಡೆ ಇದ್ದರೆ  ಆತ್ಮಜ್ಞಾನ.
ಭೌತಿಕದೆಡೆ ಸಾಗಿದರೆ ವಿಜ್ಞಾನ.ಇವೆರಡ ನಡುವಿನ ಸಾಮಾನ್ಯಜ್ಞಾನವೇ ಇದರ ತಳಪಾಯ. ಅದನ್ನು ಗಟ್ಟಿಯಾಗಿಸಿಕೊಂಡಾಗಲೇ ಮಾನವ. ಮೊದಲು ಮಾನವನಾಗು ಎಂದರೆ ನನ್ನ ಮನಸ್ಸನ್ನು  ನಾನೇ  ಕಂಡುಕೊಳ್ಳಲು ಸೋತರೆ ಪರರ ವಶದಲ್ಲಿರುವ ಮನಸ್ಸನ್ನು ಅವರು ಆಳುವರೆಂಬುದಾಗಿದೆ.ಮನಸ್ಸನ್ನು  ಹಿಡಿತದಲ್ಲಿಟ್ಟು ಕೊಳ್ಳಲು ಸಂಸ್ಕಾರ ಬೇಕು.ಸರಿ ತಪ್ಪು ಅರಿವಿದ್ದರೆ ತಪ್ಪನ್ನು ಬಿಟ್ಟು ಸರಿದಾರಿ ಹಿಡಿಯಬಹುದು.ಅರಿವೇ ಇಲ್ಲದಿದ್ದರೆ ನಡೆದದ್ದೇ ದಾರಿ. ನೇರದಾರಿಯಲ್ಲಿ ನಿಧಾನವಾಗಿ ಚಲಿಸುವುದು  ಉತ್ತಮ ಅಡ್ಡದಾರಿ ಹಿಡಿದರೆ ಮತ್ತೆ ತಿರುಗಿ ನೇರದಾರಿಗೆ ಬರುವುದು ಸುಲಭವಿಲ್ಲ. ಹೀಗೇ ಪ್ರತಿಯೊಂದು ವಿಚಾರದಲ್ಲಿಯೂ ನಮ್ಮ ನಮ್ಮ ಮೂಲದ ಧರ್ಮ ಕರ್ಮ ದ ಪ್ರಕಾರ  ಜ್ಞಾನವನ್ನು ಹೆಚ್ಚಿಸಿಕೊಂಡು ಒಗ್ಗಟ್ಟಿನಿಂದ  ಸತ್ಯವನ್ನು ತಿಳಿಯಲು  ಸಹಕರಿಸುವ ಗುರುಹಿರಿಯರು ಹಿಂದಿನ ಕಾಲದಲ್ಲಿ ಇದ್ದರು. ಹಂಚಿ ತಿನ್ನುವ ಬುದ್ದಿಶಕ್ತಿ ಸಾಲ ಬೆಳೆಯದಂತೆ ತಡೆದಿತ್ತು.ಆದರೆ ಇಂದು ಭ್ರಷ್ಟಾಚಾರವನ್ನು ಹಂಚಿಕೊಂಡು ತಿನ್ನುವುದರಿಂದ ಸಾಕಷ್ಟು ಸಮಸ್ಯೆಗಳು ಮನೆ ಮನೆಯೊಳಗೆ ಹರಡುತ್ತಿದೆ. ಹಾಗಾದರೆ ಸಂಸ್ಕಾರದ ಉದ್ದೇಶ  ಏನಾಗಿತ್ತು? ಶುದ್ದ ಮಾಡೋದು,ಸ್ವಚ್ಚ
ಮಾಡೋದು
 ಅಂತರಂಗವನ್ನು ಎಂದರೆ  ಬಸವಣ್ಣನವರ ವಚನದ ಪ್ರಕಾರ ಕಲಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯಬೇಡ,ಅನ್ಯರಿಗೆ ಅಸಹ್ಯಪಡಬೇಡ,
ತನ್ನಬಣ್ಣಿಸಬೇಡ ,ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಎಂದಾಗಿದೆ. ಇದನ್ನು ರಾಜಕೀಯದ ಹಿಂದೆ ನಡೆದು ಬೆಳೆಸಲಾಗದು.
ರಾಜಯೋಗದ ಹಿಂದೆ ನಡೆದರೆ ಸಾಧ್ಯವೆಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರ ದೇಶಭಕ್ತಿ  ದೇಶವನ್ನು  ಶಿಕ್ಷಣದಿಂದ ಸಂಸ್ಕರಿಸುವತ್ತ ನಡೆದಿತ್ತು. ವಿಪರ್ಯಾಸವೆಂದರೆ ಸರ್ಕಾರಗಳು ದೇಶವನ್ನೇ ವಿದೇಶ ಮಾಡುವ  ತಂತ್ರಜ್ಞಾನಕ್ಕೆ ಒತ್ತುಕೊಟ್ಟು ತತ್ವಜ್ಞಾನ ಹಿಂದುಳಿದಿದೆ. ಇದನ್ನು ಮತ್ತೆ ತತ್ವದಿಂದ ಮೇಲೆತ್ತುವುದರಿಂದ ಸ್ವತಂತ್ರ ಜ್ಞಾನ ಮಾನವರು ಪಡೆಯಬಹುದು. ಸಮಸ್ಯೆ ಒಳಗಿರುವಾಗ ಪರಿಹಾರವೂ ಒಳಗೇ ಹುಡುಕಿಕೊಳ್ಳಲು ಸಂಸ್ಕಾರಯುತ ಶಿಕ್ಷಣವಿರಬೇಕಷ್ಟೆ.
ಹೊರಗಿನ ಭ್ರಷ್ಟಾಚಾರವನ್ನು ಬೆಳೆಯಲು ಬಿಟ್ಟು ಅದೇ ಹಣದಲ್ಲಿ ಎಷ್ಟೇ  ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ನೀರಿನಲ್ಲಿ ಹೋಮಮಾಡಿದಂತಾಗುತ್ತದೆ. ಒಟ್ಟಿನಲ್ಲಿ ನಮ್ಮ
ಮನಸ್ಸು ಶುದ್ದಿಯಾದರೆ ಆತ್ಮಶುದ್ದಿ. ಇದು ನಿಸ್ವಾರ್ಥ, ನಿರಹಂಕಾರದ  ಸತ್ಯ,ಧರ್ಮ ದ  ಕಾರ್ಯದಿಂದ ಸಾಧ್ಯ. ಇದು ಒಬ್ಬರಿಂದ ಕಷ್ಟ ಪ್ರತಿಯೊಬ್ಬರಿಂದಲೂ ಸಾಧ್ಯ.
ದೇಶದೊಳಗಿರುವ ಪ್ರಜೆಗಳ ಜ್ಞಾನದಿಂದ ದೇಶ ಶುದ್ದ.ಆದರೆ  ನಮ್ಮ ಜ್ಞಾನವೇ ನಮಗೆ  ತಿಳಿಯದೆ ಪರಕೀಯರ ಜ್ಞಾನದಲ್ಲಿ ನಾವಿದ್ದರೆ  ನಾವ್ಯಾರು? ಹಾಗೆ ದೈವತ್ವದೆಡೆಗೆ ನಡೆಯದೇ ನಾನೇ ದೇವರೆಂದರೆ ಸರಿಯಾಗದು. ನಮ್ಮ ಗುಣವನ್ನು ನಾವೇ  ಸಂಸ್ಕರಿಸಿಕೊಳ್ಳದೆ ಮಕ್ಕಳಿಗೆ ಕಲಿಸಲಾಗದು.

ಅಂತರದಿಂದ ಅವಾಂತರ ಪರಿಹಾರ?

ಅಂತರವೆಂಬ ಪಿಡುಗಿಗೆ ಮದ್ದು ಇದೆಯೆ?
ಭೂಮಿ ಆಕಾಶದ ನಡುವಿನ‌ ಅಂತರವನ್ನು ಭೌತಿಕದಿಂದ ಅಳೆದು ತೂಗಿ ಲೆಕ್ಕಾಚಾರದಲ್ಲಿಯೇ ಅಂತರ ಹೆಚ್ಚಿಸಿರುವ
ನಮ್ಮ ಚಿಂತನಗಳೇ ಇಂದು ಬಹು ದೊಡ್ಡ ಚಿಂತೆಗೆ ಕಾರಣ.ಇದೇ ಚಿತೆಯವರೆಗೂ ಹೋಗುತ್ತಿದೆ  ಈ ಅಜ್ಞಾನಕ್ಕೆ ಮದ್ದು ಅಂತರವನ್ನು ಅಳೆಯುವ ಬದಲಾಗಿ ಸಮಾನಾಂತರವಾಗಿ ಒಂದೇ ರೇಖೆಯಲ್ಲಿ  ತಿಳಿದು ತಿಳಿಸಿ ನಡೆದು ನಡೆಸುವುದಾಗಿದೆ. ಸಮಾ-  ಅಂತರ ಬೆಳೆದಷ್ಟೂ ಮಧ್ಯವರ್ತಿಗಳು  ಹೆಚ್ಚಾಗುತ್ತಾ ಅರ್ಧ ಸತ್ಯದ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ ಹೀಗಾಗಿ ತತ್ವಗಳಲ್ಲಿರುವ ಅಂತರವನ್ನು
ಸರಿಯಾಗಿ  ತಿಳಿದು ಜೋಡಿಸುವುದೇ  ತತ್ವಜ್ಞಾನದ ಗುರಿ.
ಇನ್ನು  ಇದೀಗ ತಂತ್ರಜ್ಞಾನದಿಂದ ಸಾಕಷ್ಟು ಬೆಳೆದು ನಿಂತಿದೆ
ಇದರಲ್ಲಿ ಮುಖ್ಯವಾದ ಧರ್ಮಾಂತರ  ,ಜಾತಿಯ ಅಂತರ, ಪಕ್ಷಾಂತರ, ದೇಶಾಂತರದಿಂದ ಯಾರಿಗಾದರೂ ದೇವರು ಕಾಣಿಸಿರಬಹುದೆ? ದೇವನೊಬ್ಬನೆ ನಾಮ ಹಲವು ಎಂದು ಮುಂದೆ ನಡೆದವರಲ್ಲಿಯೇ ಅಂತರವನ್ನು ಸೃಷ್ಟಿ ಮಾಡುತ್ತಾ
ವ್ಯವಹಾರಕ್ಕೆ ಇಳಿದಾಗ ಭೌತಿಕದಲ್ಲಿ ಅಗೋಚರ ಶಕ್ತಿಯನ್ನು ತೋರಿಸಲಾಗದು ಅನುಭವಿಸಿಯೇ ತಿಳಿಯಬೇಕು. ಹೀಗಾಗಿ
ನಮ್ಮೊಳಗೇ ದೈವತ್ವದ ಗುಣ ಜ್ಞಾನ,ವಿದ್ಯೆ ಇಲ್ಲವಾದರೆ ದೇವರಿಲ್ಲ ಎನ್ನುವ  ಅಹಂಕಾರ ಬೆಳೆದು ನಾನೇ ಎಲ್ಲಾ ಎನ್ನುವ ಮಟ್ಟಕ್ಕೆ ಮನಸ್ಸು ಹೊರಮುಖವಾಗಿರುತ್ತದೆ.ಇದು ಜನಸಾಮಾನ್ಯರನ್ನೂ ದಾರಿತಪ್ಪಿಸಿ ಆಳಿದರೆ  ದೈವತ್ವ ವೆಲ್ಲಿ?
ಇನ್ನು ಕೆಲವರಿಗೆ ದೇವರ ಜೊತೆಗೆ ನಾನೂ ಇರೋವಾಗ ಇಬ್ಬರೂ ಸರಿಸಮಾನರೆಂಬ ಮಾನವೀಯ ಗುಣವಿದ್ದರೂ
ಯಾವಾಗ ಆ ಮಾನವನ ಮನಸ್ಸು ಅಹಂಕಾರ ದಿಂದ ಬೆಳೆಯುವುದೋ ಮೇಲು ಕೀಳೆಂಬ ಬಾವನೆಗೆ ತಕ್ಕಂತೆ  ದೈವ ಶಕ್ತಿ  ಕುಸಿಯುತ್ತದೆ. ಪ್ರಾರಂಭದಲ್ಲಿರುವಂತೆಯೇ ಮಾನವ ಕೊನೆಯವರೆಗೂ ಇರಲಸಾಧ್ಯ.ಮೊದಲು  ನಾಸ್ತಿಕ ನಾದವನು ಕೊನೆಗೆ ಆಸ್ತಿಕನಾಗಬಹುದು.ಹಾಗೆ ಆಸ್ತಿಕ ನಾಸ್ತಿಕನಾಗಬಹುದು. ಆದರೆ ಭೌತಿಕದ ಆಸ್ತಿಯಿಂದ ದೈವತ್ವ ಪಡೆಯುವುದು ಕಷ್ಟ. ಅಧ್ಯಾತ್ಮ ಮಾರ್ಗದಲ್ಲಿ ನಡೆಯುವಾಗ  ಎಲ್ಲಿ,ಯಾರು,ಹೇಗೆ ಬದಲಾಗಬಹುದೆನ್ನುವ ಕಲ್ಪನೆ ಮಾಡಲಾಗದು. ಹಾಗಾಗಿ ನಮ್ಮ ಮನಸ್ಸನ್ನು ಒಂದು ಸ್ಥಿಮಿತದಲ್ಲಿಟ್ಟುಕೊಂಡು ಜೀವನ  ನಡೆಸುವುದೇ ಸ್ಥಿತಪ್ರಜ್ಞಾವಂತರ  ಲಕ್ಷಣ ಎಂದಿರುವುದು.
ಇಲ್ಲಿ  ಪರಮಾತ್ಮ ಹಾಗು ಜೀವಾತ್ಮರ ನಡುವಿನ ಅಂತರವೇ
ಅಜ್ಞಾನಕ್ಕೆ ಕಾರಣ. ಈ ನಡುವಿನ ರಾಜಕೀಯದಿಂದ ದೂರ ಇದ್ದವರಿಗೆ ಮಾತ್ರ   ಆತ್ಮಜ್ಞಾನದಿಂದ ಮುಕ್ತಿ ಮೋಕ್ಷವನ್ನು ಪಡೆಯಲು ಸಾಧ್ಯ ಎನ್ನುವ  ಕಾರಣಕ್ಕಾಗಿ ಹಿಂದಿನ ಮಹಾತ್ಮರು,ತಪಸ್ವಿಗಳು,ಸಂನ್ಯಾಸಿಗಳು ಸಾದು,ಸಂತರು
ದಾಸ,ಶರಣರು  ತಮ್ಮ ತತ್ವಜ್ಞಾನದ ಮೂಲಕ ಸತ್ಯ ಹೊರಹಾಕುವ ಪ್ರಯತ್ನ ಮಾಡಿದ್ದರೂ ಅದನ್ನು ರಾಜಕೀಯವಾಗಿ ಬಳಸಿದರೆ ಅಂತರ ಕಡಿಮೆಯಾಗಲು ನಮ್ಮಲ್ಲಿ ಅದರ ಸ್ವಲ್ಪ ಅನುಭವಜ್ಞಾನವಿರಬೇಕಷ್ಟೆ.
ಅಂತರದಿಂದ ಆಂತರಿಕ  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಮ್ಮ
ದೇಹವನ್ನು ಭೌತಿಕದಿಂದ  ಅಧ್ಯಾತ್ಮ ದ ಕಡೆಗೆ ಒಯ್ಯಬೇಕು.
ಹಾಗೆ ಹೋಗುತ್ತಿರುವಾಗ ಸತ್ಯ ಹಾಗು ಧರ್ಮ ದ ಮೂಲದ ಬಗ್ಗೆ ಚಿಂತನೆ ಯಿದ್ದರೆ  ಮೂಲ ತಲುಪುವ ಪ್ರಯತ್ನಮಾಡಲು ಸಾಧ್ಯ. 
ಸತ್ಯವೇ ತಿಳಿಯದ ಧರ್ಮವು ಕುಂಟುತ್ತದೆ ಧರ್ಮ ವಿಲ್ಲದ ಸತ್ಯವು ಕುರುಡು ಜಗತ್ತಿನಲ್ಲಿ ಅಲೆದಾಡುತ್ತದೆ.ಅಂದರೆ ಅಧ್ಯಾತ್ಮ ಸತ್ಯವನ್ನು  ಆಂತರಿಕ ವಾಗಿರುವ ಸತ್ಯದ ಮೂಲಕವೇ ಕಾಣಬಹುದು. ಹೊರಗಿನ ಸತ್ಯದೆಡೆಗೆ ಹೋದಷ್ಟೂ ಅಂತರವೇ ಹೆಚ್ಚುತ್ತದೆ. ಪ್ರತಿಯೊಂದು ಚರಾಚರದಲ್ಲಿಯೂ ಅಡಗಿರುವ ಆ ಶಕ್ತಿ ಕಾಣಲಾಗದು .
ಆದರೂ ಬಳಸುತ್ತೇವೆ. ಅಣು ಪರಮಾಣುಗಳ ಒಕ್ಕೂಟದ ಈ ವೈಜ್ಞಾನಿಕ ಸಂಶೋಧನೆಯಿಂದ ಮಾನವನ ಜೀವನ ನಡೆದಿದೆ.ಹಾಗೆಯೇ ಈ ಸಂಶೋಧನೆಗಳಿಗೆ ಸಹಕರಿಸಿರುವ ಜೀವಾತ್ಮ‌ಪರಮಾತ್ಮರನ್ನು ವಿರೋಧಿಸಿ ನಡೆದರೆ ಅಂತರ ಬೆಳೆಯುತ್ತದೆ. ಅಂದರೆ ಒಕ್ಕೂಟದ ಉದ್ದೇಶ ಒಂದೇ ಆದರೆ ಮಾನವನಿಗೆ ಇದರಲ್ಲಿ ಬೇರೆ ಬೇರೆ ಕಾಣುತ್ತಿದೆ ಎಂದಾಗ ಮಾನವ ಮಧ್ಯವರ್ತಿ ಯಷ್ಟೆ. ಅವನ ಸ್ವಾರ್ಥ ದ ಬದುಕಿಗೆ
ಎರಡೂ ಬಳಸಿದರೂ ಆತ್ಮಕ್ಕೆ ತೃಪ್ತಿ, ಶಾಂತಿ ಮುಕ್ತಿ ಸಿಗಲಿಲ್ಲ
ಎಂದರೆ  ಮನಸ್ಸು ಸಂಪೂರ್ಣ ವಾಗಿ  ಅದರೊಂದಿಗೆ ಸೇರಿಲ್ಲ. ಈ ಸೇರುವಿಕೆಯೇ ಯೋಗ. ಇದು ಅಧ್ಯಾತ್ಮ ಸಾಧನೆಯಿಂದ   ಸಾಧ್ಯ.  ಅಂತರವು  ಸಾಧನೆಗೇ ಅಡ್ಡಿ.
ಹಾಗಾದರೆ  ಮಹಾತ್ಮರುಗಳು ಯಾಕೆ ಎಲ್ಲಾ ಬಿಟ್ಟು ದೂರ ಹೋದರು? ಎಂದರೆ ಮಹಾತ್ಮರುಗಳ ಉದ್ದೇಶ ಜೀವನ್ಮುಕ್ತಿ
ಇದಕ್ಕಾಗಿ ಜೀವಾತ್ಮ ಪರಮಾತ್ಮನೆಡೆಗೆ ಹೋಗಲು ಹೊರಗಿನ
ಸಹಕಾರದ ಅಗತ್ಯವಿರಲಿಲ್ಲ.ಸ್ವತಂತ್ರ ಬದುಕಿನಲ್ಲಿ ನಮ್ಮ ಸಹಾಯಕ್ಕೆ ಒಳಗಿರುವ ಅಗೋಚರ ಆತ್ಮಶಕ್ತಿಯೇ ಪ್ರೇರಕರು. ಇದನ್ನರಿತವರು ಭೌತಿಕದಿಂದ ದೂರವಾದರು.
ಯಾವಾಗ ಜೀವಕ್ಕೆ  ಭೌತಿಕಾಸಕ್ತಿ ಕಡಿಮೆಯಾಗುವುದೋ ಆಗಲೇ ಆಂತರಿಕ ಶಕ್ತಿ ಹೆಚ್ಚಾಗುವುದು.ಇದನ್ನು ವೈರಾಗ್ಯ ಎಂದರು. ಸಂನ್ಯಾಸಿಯಾದ ತಕ್ಷಣ ವೈರಾಗ್ಯವೆಂದರ್ಥ ವಲ್ಲ.
ಸಂಸಾರದಲ್ಲಿರುವವರೆಲ್ಲರೂ   ವೈರಾಗ್ಯದಿಂದ ಜೀವನ ನಡೆಸಬಹುದು. ಆದರೆ ತಮ್ಮದೇ ಆದ ಧರ್ಮ ಕರ್ಮಕ್ಕೆ ವಿರುದ್ದ ನಡೆಯುವುದರಿಂದಲೂ ಅಂತರ ಬೆಳೆಯುತ್ತದೆ.
ಒಟ್ಟಿನಲ್ಲಿ ಅಂತರವು ಅಜ್ಞಾನದಿಂದ ಬೆಳೆದಿರುವುದರಿಂದ
ಜ್ಞಾನದಿಂದ ಇದನ್ನು ಹೊಡೆದೋಡಿಸುವುದೇ ಭಾರತೀಯ ಮೂಲ ಶಿಕ್ಷಣದ ಉದ್ದೇಶವಾಗಿದೆ.
ಹೊರಗಿನ ಸಾಲ ಬೆಳೆದಷ್ಟೂ ಒಳಗಿನ ಸಾಲವೂ ಬೆಳೆಯುತ್ತದೆ. ಎಂದ ಮೇಲೆ ಎರಡೂ ಒಂದೇ ನಾಣ್ಯದ ಎರಡು ಮುಖವಷ್ಟೆ.
ಸ್ತ್ರೀ ಪುರುಷ, ಭೂಮಿ ಆಕಾಶ, ಜ್ಞಾನ ವಿಜ್ಞಾನ,  ದೇಶ ವಿದೇಶ, ಅಧ್ಯಾತ್ಮ ವಿಜ್ಞಾನ, ಭೌತ ವಿಜ್ಞಾನದ  ನಡುವೆ ಬೆಳೆದ ಅಂತರವೇ ಇಂದು ಅವಾಂತರಕ್ಕೆ ಕಾರಣವಾಗಿದೆ.
ಹಿಂದೂ ಧರ್ಮದ ಹಿಂದುಳಿಯುವಿಕೆಗೆ  ಪರಧರ್ಮದ ನಡುವಿನ ಅಂತರ ಕಾರಣ. ಆದರೆ ಈ ಅಂತರವು ಅಜ್ಞಾನದಿಂದ ಬೆಳೆದಿದೆಯೋ ಜ್ಞಾನದಿಂದಲೋ ಎನ್ನುವ ಪ್ರಶ್ನೆ ಹಾಕಿಕೊಂಡರೆ  ನಮಗೆ  ನಮ್ಮ ಧರ್ಮ ದ ತಿರುಳೇ ಅರ್ಥ ವಾಗದೆ ಪರರ ಧರ್ಮವನ್ನು ವಿರೋಧಿಸಿ ಅವರ ಹತ್ತಿರವೇ ಇದ್ದು ವ್ಯವಹಾರಕ್ಕೆ ಮಾತ್ರ ಬಳಸಿದರೆ ಋಣ ತೀರಿಸಲು  ತಿರುಗಿ ಬರಲೇಬೇಕು. ಇಲ್ಲಿ ಪ್ರತಿಯೊಬ್ಬರೂ ಒಂದು ಶಕ್ತಿಯ ಅಧೀನದಲ್ಲಿರುವಾಗ  ಆ ಶಕ್ತಿಯನ್ನು ಬಳಸಿಕೊಂಡು  ಅಧರ್ಮಕ್ಕೆ ಸಹಕರಿಸಿದರೆ  ಇದರ ಫಲ ಅನುಭವಿಸುವಾಗ  ಯಾರೂ ಇರೋದಿಲ್ಲ.ಆತ್ಮಸಾಕ್ಷಿಯಂತೆ
ನಡೆದವರಿಗಷ್ಟೇ ಇಲ್ಲಿ ಸ್ವತಂತ್ರ ಜ್ಞಾನ,ಧರ್ಮ, ಸತ್ಯ,ನ್ಯಾಯ ನೀತಿ  ಅರ್ಥ ವಾಗುತ್ತದೆ. ಹೀಗಾಗಿ ಹಿಂದೂಸ್ತಾನ್ ಒಳಗೆ
ಇದ್ದು ನಾನು ಬೇರೆ ಹಿಂದೂ ಬೇರೆ ಎನ್ನುವ  ಅಂತರದಿಂದ ಹಿಂದುಳಿಯುವುದು ಯಾರು? ಜೀವವಿರುವಾಗಲೇ ಒಂದೇ
ಎನ್ನುವ ತತ್ವದರ್ಶನ ಮಾಡಿಕೊಳ್ಳಲು  ಮಹಾತ್ಮರಿಗೆ ಸಾಧ್ಯ.
ಎಂದರೆ ಮಾನವ‌ ಮಹಾತ್ಮನಾದಾಗಲೇ ಅಂತರದಿಂದ ಬಿಡುಗಡೆ ಸಾಧ್ಯ. ರಾಜಕೀಯದಿಂದ ದೂರನಿಂತು ದೇಶ ನೋಡಿದಾಗಲೇ ದೇಶದ  ಒಳಗೆ ನಡೆಯುತ್ತಿರುವ ಎಲ್ಲಾ ಅಂತರಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ. ಅಜ್ಞಾನಕ್ಕೆ ಕಾರಣವೆ   ಅತಿಯಾದ ಸ್ವಾರ್ಥ, ಅಹಂಕಾರದ  ವ್ಯವಹಾರ ಜ್ಞಾನ.  ವ್ಯವಹಾರದಿಂದ ಹಣದ ಲಾಭ ನಷ್ಟವಾದ ಹಾಗೆ
ಧಾರ್ಮಿಕ  ಕ್ಷೇತ್ರಗಳಲ್ಲಿ ನಡೆಯುತ್ತಿರುವ ದೇವರ ಮೇಲು ಕೀಳುಗಳಿಂದ ಇನ್ನಷ್ಟು ಅಸುರರು ಬೆಳೆದರೆ  ಧರ್ಮ ರಕ್ಷಣೆ
ಸಾಧ್ಯವೆ?  ಪ್ರಜಾಧರ್ಮ ವೇ ಕುಸಿದಿರುವಾಗ ಪ್ರಜಾಪ್ರಭುತ್ವ
ಬೆಳೆಯಲಾಗುವುದೆ? ಒಟ್ಟಾರೆ ಕಟ್ಟುವುದು ಕಷ್ಟ.
ಮೆಟ್ಟುವುದು ಸುಲಭ.ಸುಲಭವಾದ ಕಾರ್ಯಕ್ಕೆ ಎಲ್ಲರ ಸಹಕಾರ ಸುಲಭವಾಗಿ ಸಿಗುತ್ತದೆ. ಆದರೆ‌ ಕಟ್ಟುವ ಕೆಲಸಕ್ಕೆ
ಸಿಗದಿರೋದೆ  ಅಧರ್ಮ ಕ್ಕೆ ದಾರಿ ಮಾಡಿಕೊಡುತ್ತಿದೆ. 
ಕೋಟ್ಯಂತರ ಹಣ ಸುರಿದು  ದೊಡ್ಡ ಬಂಗಲೆಯನ್ನು  ಸಾಲ ಮಾಡಿ ಕಟ್ಟುವುದು ಸುಲಭ ಆದರೆ ಎಲ್ಲಿ ಹೇಗೆ ಯಾರ ಜಾಗದಲ್ಲಿ ,ಯಾವ ಮಾರ್ಗದಲ್ಲಿ ,ಯಾರಿಗಾಗಿ,ಯಾಕೆ ಕಟ್ಟಬೇಕೆಂಬ ಅರಿವಿಲ್ಲದೆ  ಕಟ್ಟಿ ಕೆಟ್ಟರೆ  ಅನುಭವಿಸು ಕಷ್ಟ ನಷ್ಟಕ್ಕೆ ಸರ್ಕಾರ ಜವಾಬ್ದಾರಿ ಎನ್ನುವುದೇ ಅಜ್ಞಾನ,ಅಧರ್ಮ.

ಉದಾಹರಣೆಗೆ ಸರ್ಕಾರದ ಸಾಲ,ಸೌಲಭ್ಯಗಳನ್ನು ಜನರು ಸುಲಭವಾಗಿ ಪಡೆದರೂ ಅದರ ಹಿಂದಿನ  ಸಾಲದ ಭಾರವನ್ನು ಜೀವ ಹೋರಲಾಗದಿದ್ದಾಗ ಯಾರೂ ಹತ್ತಿರ ಬರೋದಿಲ್ಲ.  ಸರ್ಕಾರ  ಸಾಲ ಮನ್ನಾ ಮಾಡಬಹುದು ಆದರೆ, ಮೇಲಿರುವ ಪರಮಾತ್ಮನ ಲೆಕ್ಕದಲ್ಲಿ ಚುಕ್ತಾ ಆಗದಿದ್ದರೆ ಬಡ್ಡಿ ಚಕ್ರಬಡ್ಡಿಯ ಸಮೇತ ಮುಂದಿನ ಪೀಳಿಗೆಯವರೆಗೂ ಸಾಲ ಬೆಳೆಯುತ್ತದೆನ್ನುವ ಅಧ್ಯಾತ್ಮ ಸತ್ಯ ತಿಳಿದರೆ,  ಪಾಲಿಗೆ ಬಂದದ್ದು ಪಂಚಾಮೃತವೆಂದರಿತು  ಸಾಲದಿಂದ ದೂರವಿರಬಹುದು. ಅನಾವಶ್ಯಕ  ಸಾಲವೇ ಶೂಲವಾಗುತ್ತದೆ. ಅಗತ್ಯವಿದ್ದರೆ  ಪಡೆದು ತೀರಿಸುವತ್ತ ನಡೆಯಬೇಕು. ಮನೆಯೊಳಗೇ ಇದ್ದ ಜ್ಞಾನ ಆಸ್ತಿ ಬಿಟ್ಟು ಹೊರಗೆ ನಡೆದಷ್ಟೂ ಅಂತರ ಬೆಳೆದು ತಿರುಗಿ ಮನೆ ಸೇರಲು ಕಷ್ಟ.ಹಾಗೆ   ಭಾರತೀಯರು  ಭಾರತ ಮಾತೆಯನ್ನು ಮರೆತು  ಮುಂದೆ ನಡೆದರೆ  ಸಿಗುವ  ಸಹಕಾರ  ಅವಳ ಶಕ್ತಿಯನ್ನು ಬೆಳೆಸುವುದರಲ್ಲಿ  ಸಿಕ್ಕಿದ್ದರೆ  ಭಾರತ ವಿಶ್ವ ಗುರು ಎನ್ನುವ ಮಾತಿಗೆ ಬೆಲೆಯಿರುತ್ತಿತ್ತು. ಏನೇ  ಇದ್ದರೂ ಅಂತರವೇ ಅವಾಂತರವನ್ನು  ಹೆಚ್ಚಿಸುತ್ತದೆನ್ನುವುದು ಸತ್ಯ. ತತ್ವವೂ ಒಗ್ಗಟ್ಟನ್ನು ಎತ್ತಿ ಹಿಡಿದಿತ್ತು.ತಂತ್ರದಿಂದ ಅಂತರ ಬೆಳೆಯಿತು.
ಇದೇ ಮುಂದೆ ಮಾನವನು ಮಾನವನನ್ನು  ಯಂತ್ರದಂತೆ ಕಾಣುವಂತಾಯಿತು. ಆದರೂ  ಇದನ್ನು ತಪ್ಪಿಸಲು ತಂತ್ರದಿಂದ, ರಾಜಕೀಯದಿಂದ ಅಸಾಧ್ಯ. ತತ್ವದಿಂದ ರಾಜಯೋಗದಿಂದ ಸತ್ಯದೆಡೆಗೆ ನಡೆದರೆ ಸಾಧ್ಯ. ಯಾರಿಗೆ ಗೊತ್ತು  ಈ ಅಂತರವು ಎಷ್ಟು ಜನ್ಮಗಳಿಂದ ಬಂದಿದೆಯೋ ಎಷ್ಟು ಜನ್ಮಗಳವರೆಗೆ ಹೋಗುವುದೋ ಎಷ್ಟು ಮಾನವರ ಅಜ್ಞಾನ ಬೆಳೆಸುವುದೋ. ಮಹಾತ್ಮರ ಯೋಗಿಗಳ ದೇಶ  ಆಳಲು ಬಂದವರ ಅಂತರಜ್ಞಾನವೇ ಸ್ವತಂತ್ರ ಭಾರತವನ್ನು ಅತಂತ್ರಸ್ಥಿತಿಗೆ ತಲುಪಿಸಿದೆ ಎಂದರೂ  ಅರ್ಥ ಆಗುವುದಿಲ್ಲ.ರಾಜಕೀಯದ ದಾಳದಲ್ಲಿ ನಡೆಯುತ್ತಿರುವ ಕಾಲಾಳುಗಳಿಗೆ ಸ್ವತಂತ್ರ ಎಲ್ಲಿರುವುದು? ರಾಜ ಹೋದ ಮೇಲೆ ಹುಟ್ಟಬಹುದು. ಹಾಗಾದರೆ ಪ್ರಜಾಪ್ರಭುತ್ವದ ರಾಜರು ಯಾರು?

Saturday, September 17, 2022

ಪಿತೃಪಕ್ಷದ ವಿಶೇಷ ತರ್ಪಣ


ಪಕ್ಷಮಾಸದ  ತಿಥಿಗಳಲ್ಲಿ  ಯಾರಿಗೆ ಬೇಕಾದರೂ ತರ್ಪಣ ನೀಡಬಹುದು.
ಕಾರಣ, 'ಋಣ' ಕೇವಲ ನಮ್ಮ ಹತ್ತಿರದ ಸಂಬಂಧ ದವರಲ್ಲಿಲ್ಲ ಎಲ್ಲರ ಋಣವೂ ತೀರಿಸಬೇಕೆಂಬುದಾಗಿದೆ. ಪಿತೃಪಕ್ಷ ಎಂದಾಕ್ಷಣ  ಪೋಷಕರು, ಪಿತೃಗಳೆ ಶ್ರೇಷ್ಠ ವೆಂದಾಗುತ್ತದೆ. ಮಾನವ  ಭೂಮಿಯ ಮೇಲೆ ಜೀವನ ನಡೆಸುವಾಗ , ತನ್ನ ಸಂಸಾರಕ್ಕಾಗಿ ಸಮಾಜದ ಋಣವನ್ನು ಹೊತ್ತಿರುವಾಗ ,ಅದರ ಋಣ ತೀರಿಸಲು ಹಲವು ಧಾರ್ಮಿಕ ಕರ್ಮ,ಕ್ರಿಯೆಗೆ  ಮೊರೆಹೋಗಲೇಬೇಕು. ಇದರಲ್ಲಿ ಜಾತಿ ಸೀಮಿತವಾಗಿರುವುದಿಲ್ಲ.ದೇಹ ಬಿಟ್ಟ ಆತ್ಮ ಪರಿಶುದ್ದ.
ಪರಮಾತ್ಮನ ಋಣ ತೀರಿಸಲು ಕಷ್ಟ.ಎಂದಿರುವ ಪ್ರಕಾರ ಇಲ್ಲಿ  ಪರಮಾತ್ಮ  ಚರಾಚರದಲ್ಲಿಯೂ ಅಡಗಿರುವುದು ಸತ್ಯ. ಪಿತೃಗಳಾಗಲಿ,ಪೋಷಕರಾಗಲಿ, ಬಂದು ಮಿತ್ರ ರಾಗಲಿ
 ಪ್ರತಿಯೊಬ್ಬರಿಗೂ  ಜೀವನದಲ್ಲಿ  ನಿಸ್ಸಂಗದಿಂದ ಬದುಕಲು ಕಷ್ಟ. ಸರ್ಕಾರ ಎಂದರೆ ಸಹಕಾರ, ಈ ಸಹಕಾರ ದ ಋಣವನ್ನು ತೀರಿಸುವವರೆಗೆ  ಜೀವಕ್ಕೆ ಮುಕ್ತಿ ಇಲ್ಲವೆಂಬ ಕಾರಣಕ್ಕೆ ಈ ಹೊರಗಿನ  ದಾನ,ಧರ್ಮ, ಆಚಾರ,ವಿಚಾರ,ಪೂಜೆ,ಪುರಸ್ಕಾರ, ದೇವತಾರಾಧನೆ, ...
ಬೆಳೆದು ಬಂದವು. ಯಾರು  ಪ್ರತಿಯೊಂದು ಕಾರ್ಯದಲ್ಲೂ
ಪರಮಾತ್ಮನ  ಕಂಡು ಸೇವೆ ಎಂದು ನಡೆಯುವರೋ ಅವರಿಗೆ  ಮುಕ್ತಿ ಎಂದು  ಮಹಾತ್ಮರು ತಿಳಿಸಿದ್ದಾರೆ. ಈಗ ಎಷ್ಟು ಜನರಿಗೆ ಪ್ರತಿಯೊಬ್ಬರೊಳಗಿರುವ ಪರಮಾತ್ಮನ
ದರ್ಶನ ವಾಗಿದೆ? ಹೀಗಾಗಿ ಅನೇಕ ರೀತಿಯಲ್ಲಿ ಪಾಪಕರ್ಮ
ಬೆಳೆದು,  ಸಾಲ ಬೆಳೆದು, ಅದನ್ನು ತೀರಿಸಲು  ಮುಂದಾಗುತ್ತಾರೆ. ಇದು ಮಕ್ಕಳು ಹುಟ್ಟಿದಾರಂಭದಿಂದಲೇ ತಾಯಿ,ತಂದೆ,ಬಂದು,ಬಳಗ,ಸಮಾಜ,ದೇಶ ವಿಶ್ವದವರೆಗೆ   ಬೆಳೆದ ಋಣವನ್ನು ತೀರಿಸಲು ಕಷ್ಟ. ಇದನ್ನು ಕೇವಲ  ತಮ್ಮ ಮೂಲ ಧರ್ಮ ಕರ್ಮದಲ್ಲಿ  ಸಾತ್ವಿಕತೆಯನ್ನು ಬೆಳೆಸಿಕೊಳ್ಳಲು  ಉತ್ತಮ  ಶಿಕ್ಷಣವನ್ನು, ಪೋಷಕರಾದವರು ಮನೆ  ಒಳಗಿನಿಂದಲೆ  ಕೊಡಲು ಬೇಕು  ಸತ್ಯಜ್ಞಾನ.
ಕಲಿಯುಗದ ಪ್ರಭಾವ, ಮಾನವ ಕೇವಲ ತನ್ನ ಸಂಸಾರದ ಸುಖಕ್ಕೆ ಸಮಾಜದ ಋಣ ಬೆಳೆಸಿಕೊಂಡು  ಪಡಬಾರದ ಕಷ್ಟ ನಷ್ಟಕ್ಕೆ  ಬಲಿಯಾದರೆ  ಇದನ್ನು ಸರ್ಕಾರದಿಂದ  ಸರಿಪಡಿಸಲು  ಅಸಾಧ್ಯ. ಮೊದಲು ಋಣ ಎಂದರೆ ಸಾಲಕರ್ಮ ಎಂದರೆ ಕೆಲಸ ಎಂದರಿತು.ಕಾಯಕವೆ ಕೈಲಾಸವೆಂಬ ಮಂತ್ರದಿಂದ  ದುಡಿದು ಗಳಿಸಿದ ಹಣದಲ್ಲಿ ಪಿತೃಗಳ ಋಣ  ತೀರಿಸಿದರೆ ಶಾಂತಿ,ಮುಕ್ತಿ  ಎರಡೂ
ಇದ್ದಲ್ಲಿಯೇ ಸಿಗುತ್ತದೆ.
ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸಮಾನತೆ, ಕೊಳಚೆಗೆ ಬಿಟ್ಟರೆ ? ಋಣಮುಕ್ತರಾಗಲು ಸಾಧ್ಯವೆ?
ಬ್ರಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಎನ್ನುವ ನಾಲ್ಕು ವರ್ಣಗಳ ಧರ್ಮ ಕರ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಜ್ಞಾನವಿರಬೇಕು.ಅಜ್ಞಾನದಲ್ಲಿಯೇ ಅದನ್ನು ಮೇಲು ಕೀಳೆಂದು ಬೆಳೆಸುತ್ತಾ ಜಾತಿ,ಪಂಗಡ,ಪಕ್ಷಗಳೇನೂ ಬೆಳೆದು ನಿಂತರೂ ಋಣ ಮಾತ್ರ ತೀರಿಸಲಾಗದೆ  ಜೀವ ಮತ್ತೆ ಮತ್ತೆ  ಜನ್ಮಪಡೆದು ಕಷ್ಟ ಅನುಭವಿಸಬೇಕಾಗಿದೆ.ಭೂಮಿಯನ್ನು ಕರ್ಮ ಭೂಮಿ ಎನ್ನಲು ಕಾರಣ ಇಲ್ಲಿ ಮಾತ್ರ ಮಾನವನು ಜನ್ಮ ತಾಳಿ ತನ್ನ ಕರ್ಮದಿಂದ ಮುಕ್ತಿ ಮೋಕ್ಷ ಪಡೆಯುವ ಅವಕಾಶವಿರೋದು.ಇದು ದೇವಾಸುರರಿಗೂ ಇದೆ.ಮೂಲ ಶಕ್ತಿಯನ್ನರಿಯುವುದೇ ಇದಕ್ಕಿರುವ ಮಾರ್ಗ. ಇಲ್ಲಿ ಒಂದೇ ಜನ್ಮದಲ್ಲಿ ಎಲ್ಲಾ ಸಾಧ್ಯವಾಗದ ಕಾರಣ ಸಾಧನೆಯ ಮಾರ್ಗ
ಮಾತ್ರ ತಿಳಿದು ಅದರಂತೆ ಅಧ್ಯಾತ್ಮ ದೆಡೆಗೆ ಸಾಗುವುದೆ ಅಧ್ಯಾತ್ಮ ಸಾಧನೆ. ಹಾಗೆಯೇ ಭೌತಿಕದಲ್ಲಿಯೂ  ಎಲ್ಲರನ್ನೂ ನಡೆಸುವ ಪರಮಾತ್ಮನರಿತು ಉತ್ತಮ ಜೀವನ ನಡೆಸಲು ಪರರಿಗೂ  ಉತ್ತಮ ದಾರಿದೀಪವಾಗುವಂತೆ  ತಾನೂ ನಡೆದು ನಡೆಸುವುದೂ ಸಾಧಕರ ಲಕ್ಷಣ. ಒಂದೇ ತತ್ವದಡಿ ಇದ್ದರೆ ಒಗ್ಗಟ್ಟು ತಂತ್ರಕ್ಕೆ ಒಳಗಾದರೆ ಆಪತ್ತು.
ಗುರು ಹಿರಿಯರ ಜ್ಞಾನವೇ ಕಿರಿಯರಿಗೆ  ಮಾರ್ಗ ದರ್ಶನ.ಎಲ್ಲಿಯವರೆಗೆ ಗುರುಹಿರಿಯರು ಸನ್ಮಾರ್ಗದಲ್ಲಿ ನಡೆಯುವರೋ ಕಿರಿಯರೂ ನಡೆಯಬಹುದು.ಇದನ್ನು ಶಿಕ್ಷಣದಿಂದ ಬೆಳೆಸಲಾಗಿತ್ತು.ಸಂಸ್ಕಾರದಿಂದ ತಿದ್ದಲಾಗಿತ್ತು.
ಸಂಪ್ರದಾಯದಿಂದ ಸರಿಪಡಿಸಲಾಗಿತ್ತು.ಆದರೆ ಅನೇಕ ರೀತಿಯಲ್ಲಿ ಅನೇಕ ಮಾರ್ಗದಲ್ಲಿ ನಡೆಯುವಾಗ ಭಿನ್ನಾಭಿಪ್ರಾಯ ಪ್ರಾರಂಭವಾದ ಕಾರಣ ದ್ವೇಷವೂ ಬೆಳೆದು ಬಿಕ್ಕಟ್ಟು ಹೆಚ್ಚಾಗಿ ಸಂಸಾರವೇ ಬೇರೆ ಸಮಾಜವೇ ಬೇರೆ ದೇಶವೇ ಬೇರೆ,ಧರ್ಮ ವೇ ಬೇರೆ ಎನ್ನುವ ಹಾಗಾಗಿ ಇಂದಿಗೂ ಏಕತೆಯೆಡೆಗೆ ತಿರುಗಲು ಕಷ್ಟ. ಜನರನ್ನು ಒಂದಾಗಿಸಲು ಹಣವನ್ನು ಬಳಸುವಂತಾಗಿದೆ.ಹಣದ ಮೂಲವೇ ಅಧರ್ಮ ವಾಗಿದ್ದರೆ ಬೆಳೆಯುವುದೂ ಅಧರ್ಮ.ಪಿತೃಗಳ  ಜ್ಞಾನ ಧರ್ಮ ಕರ್ಮ ಬಿಟ್ಟು ಆಸ್ತಿ ಮಾತ್ರ ಬಳಸಿದರೆ  ಋಣ ತೀರೋದಿಲ್ಲವೆನ್ನುವುದು  ಸೂಕ್ಷ್ಮ ಸತ್ಯ. ಹಾಗಾದರೆ ಋಣಮುಕ್ತರಾಗಲು ನಾವು ಜನ್ಮ ಪಡೆದ ಕುಟುಂಬದ  ಧರ್ಮ ಕರ್ಮ ವನ್ನರಿತು ಉತ್ತಮ ಸಂಸ್ಕಾರ ಶಿಕ್ಷಣದ ಮೂಲಕ ಜ್ಞಾನ ಬೆಳೆಸಿಕೊಂಡು  ಸಮಾಜದ ಋಣವನ್ನು ತೀರಿಸುವ ಸೇವೆ ಮಾಡಿ ಆ ಪರಮಾತ್ಮನ ನಾಮ ಸ್ಮರಣೆಯಿಂದಲೇ  ಕರ್ಮ ಮಾಡಿದರೆ  ಸಾಲಮನ್ನಾ.
ಹೊರಗಿನ ಆಚರಣೆಯಲ್ಲಿ ನಿಜವಾದ ಶ್ರದ್ದೆ ಭಕ್ತಿ ಜ್ಞಾನ ಇದ್ದರೆ  ಎಲ್ಲಾ ಕರ್ಮವೂ ಶುದ್ದವಾಗುತ್ತದೆ. ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುತ್ತದೆ. ಯಾರಿಗೆ ಗೊತ್ತು ಯಾರ ಮನೆಯ ಮಕ್ಕಳಾಗಿ ಯಾರ ಗುರು ಹಿರಿಯರಿರುವರೋ  ಒಟ್ಟಿನಲ್ಲಿ ಸಂಸ್ಕಾರಯುತ ಧಾರ್ಮಿಕ ಶಿಕ್ಷಣವಿಲ್ಲದೆ  ಜ್ಞಾನ ಸಿಗದು.
ಮಕ್ಕಳಿಗೆ ಭೌತಿಕ ಆಸ್ತಿ ಮಾಡಲು ಹೋಗಿ ಸಾಲದ ಹೊರೆ ಹಾಕದೆ, ಅಧ್ಯಾತ್ಮ ದಿಂದ ಜೀವನ ನಡೆಸುತ್ತಾ ಜ್ಞಾನದ ಆಸ್ತಿ ಮಾಡಿ. ಇದು ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸಬಹುದು. ಜ್ಞಾನವನ್ನು ಯಾವ ಭ್ರಷ್ಟರೂ ಕದಿಯೋದಿಲ್ಲ. ಗುರು ಹಿರಿಯರ ಜ್ಞಾನದಿಂದಲೇ ಧರ್ಮ ರಕ್ಷಣೆ ಹಣದಿಂದಲ್ಲ.ಏನಂತೀರ?

ಆಶ್ರಮದಲ್ಲಿ ಶ್ರಮವಿದೆಯೆ? ಇಲ್ಲವೆ?

ಶ್ರಮಪಡದೆ ಆಶ್ರಮ ಕಟ್ಟಿದರೆ ವ್ಯರ್ಥ.
ಶ್ರಮಿಕರನ್ನು  ತಮ್ಮೆಡೆಗೆಳೆಯಲು ಆಶ್ರಮಗಳನ್ನು ಕಟ್ಟುವ ಬದಲಾಗಿ ಶ್ರಮಪಟ್ಟು ದುಡಿದು ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡು  ಸಮಾಜದಲ್ಲಿ ಎಲ್ಲರೊಳಗೊಂದಾಗಿ ಇರೋದೆ ಉತ್ತಮ. 
ವಿದೇಶಿಗಳ ಹಣದಿಂದ ಏನಾದರೂ ಆಶ್ರಮಗಳು ನಡೆಸುತ್ತಿದ್ದರೆ ಅದರಲ್ಲಿ ಸ್ವದೇಶದ ಜ್ಞಾನವಿದೆಯೆ? ಶ್ರಮ ಇದೆಯೆ? ಎನ್ನುವ ಬಗ್ಗೆ ತಿಳಿದು ನಡೆದರೆ ಸರಿ. ಇಲ್ಲವಾದರೆ ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಇಷ್ಟಕ್ಕೂ ಯಾವ ಯೋಗಿಯಾಗಲಿ,ಸಂನ್ಯಾಸಿಯಾಗಲಿ ಆತ್ಮಜ್ಞಾನ ಪಡೆಯಲು  ಆಶ್ರಮದ ಮೊರೆ ಹೋಗಿದ್ದರು? 
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸ  ಐದರಲ್ಲಿ ಕೊನೆಯ ಸಂನ್ಯಾಸವನ್ನು ನೇರವಾಗಿ ಆರಿಸಿಕೊಂಡರೆ ಉಳಿದ  ನಾಲ್ಕರ ಅನುಭವ ಜ್ಞಾನದ ಕೊರತೆ ಕಾಡಬಹುದು.
ಕಾಲದ ಪ್ರಭಾವ ಎಲ್ಲಾ ವೇಗವಾಗಿ ನಡೆದು ಮುಕ್ತಿ ಪಡೆಯಲು  ಸಾಧ್ಯವೆ? ಕೆಲವರಿಗಷ್ಟೆ ಹಿಂದಿನ ಜನ್ಮದ ಜ್ಞಾನವಿದ್ದು  ಗುರುಮುಖೇನ ಕಲಿತು ನಿಧಾನವಾಗಿ ಮೇಲೆ ಹೋಗಬಹುದು. ಎಲ್ಲಾ  ಒಂದೇ ಎನ್ನುವ  ಪ್ರಚಾರಕ್ಕೆ ಬದಲಾಗಿ  ಎಲ್ಲರನ್ನೂ ಒಂದಾಗಿಸುವ ತತ್ವವನ್ನರಿತರೆ  ಕೆಲವರಿಗೆ ಬಾಲ್ಯದಲ್ಲಿಯೇ ಜ್ಞಾನೋದಯವಾಗಿ ಸಂನ್ಯಾಸಿ ಆಗಬಹುದು ಹಾಗೆ ಯೌವನ,ಸಂಸಾರದಲ್ಲಿಯೂ ನಡೆದಿದೆ. ಒಟ್ಟಿನಲ್ಲಿ ಸಂನ್ಯಾಸಿ ಎಂದರೆ ಸಂಸಾರದಿಂದ ಮನಸ್ಸನ್ನು ದೂರವಿಟ್ಟು ಸ್ವತಂತ್ರ ವಾಗಿ ಜೀವಿಸುವುದಾಗಿತ್ತು. ಕಾಲಬದಲಾಗಿದೆ ಆದರೂ ಮೂಲದ ಸತ್ಯ ಧರ್ಮ ಬದಲಾಗೋದಿಲ್ಲ.ಮಾನವನ ಚಿಂತನೆ ಬದಲಾದರೂ ಆತ್ಮನ ಅರಿವು ಬದಲಾಗದು. ಜೀವ ಬದಲಾದರೂ ಪರಮಾತ್ಮನು ಒಬ್ಬನೇ,ಭೂಮಿಯೂ ಒಂದೇ  ಶ್ರಮವಿಲ್ಲದ ಆಶ್ರಮದಲ್ಲಿ ಧರ್ಮದ ಹುಡುಕಾಟವಿರಬಾರದಷ್ಟೆ.  ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಬದಲಾವಣೆ ಆದರೂ ಕಾಲಕೆಟ್ಟು ಹೋಗದಂತೆ ಎಚ್ಚರವಹಿಸುವ ಜ್ಞಾನ ಮಾನವನಿಗೆ ಅಗತ್ಯವೆನ್ನುತ್ತಾರೆ ಮಹಾತ್ಮರುಗಳು. ಭೌತಿಕದ ಆಶ್ರಮಗಳಲ್ಲಿ ಅಧ್ಯಾತ್ಮದ ಆ- ಶ್ರಮ ಬಹಳ ಮುಖ್ಯ.
ಇಲ್ಲವಾದರೆ ಅನಾಥಾಶ್ರಮ,ವೃದ್ದಾಶ್ರಮ, ಅಬಲಾಶ್ರಮ, ಬಿಕ್ಷುಕರ ಆಶ್ರಮ ಗಳಿಂದ ಭೂಮಿ ನಡುಗಿ ಹೋಗುತ್ತದೆ.
ಬಿಕ್ಷುಗಳ ದೇಶವನ್ನು ಬಿಕ್ಷುಕರ ಆಶ್ರಮದಿಂದ ನಡೆಸುವುದು
ಪ್ರಗತಿಯೆ ಅದೋಗತಿಯೆ?
ಸರಿಯಾದ ಜ್ಞಾನದ ಶಿಕ್ಷಣ ಕೊಟ್ಟು ಕೆಲಸ ಕೊಟ್ಟು ಸ್ವತಂತ್ರ ಜೀವನ ನಡೆಸುವ  ಸಹಕಾರ,ಸರ್ಕಾರ  ನಮ್ಮಲ್ಲಿದ್ದರೆ ಈ ಸ್ಥಿತಿಗೆ  ಮಾನವನ ಜೀವನ ತಲುಪುತ್ತಿರಲಿಲ್ಲ. ಇಲ್ಲಿ ಯಾರನ್ನೂ  ದೂರದೆ  ದೂರದ ಬೆಟ್ಟನುಣ್ಣಗೆ ಎನ್ನುವ ಸಂದೇಶವಿದೆ ಎನ್ನಬಹುದಷ್ಟೆ. ನಿಜವಾದ ಜ್ಞಾನಿಗಳು ಶ್ರಮಪಟ್ಟು ಮುಕ್ತಿ ಪಡೆಯುತ್ತಾರೆ. ಹಣದ ಬಡತನವಿದ್ದರೆ ಜ್ಞಾನದಿಂದ  ಮುಂದೆ ನಡೆದು ಜೀವನ ನಡೆಸುವ ಶಿಕ್ಷಣ  ಕೊಟ್ಟರೆ ಸಾಕು. ಹಣಕೊಟ್ಟು ಮತ್ತಷ್ಟು ಋಣ ಅಥವಾ ಸಾಲದ ಹೊರೆ ಹಾಕಿದರೆ ಎಲ್ಲಿಯ ಜ್ಞಾನ? ಭಾರತೀಯರನ್ನು
ಆಳೋದಕ್ಕೆ ಬಂದವರು  ಶಿಕ್ಷಣವನ್ನೇ ಬುಡಮೇಲು ಮಾಡಿ ಈಗ ಬಿಕ್ಷುಗಳ ದೇಶ ಬಿಕ್ಷುಕರ ದೇಶವಾದರೂ ಅಜ್ಞಾನದ ಕಣ್ಣಿಗೆ ಪ್ರಗತಿಶೀಲ ಎನ್ನುವಂತಾಗಿದೆ. ಅವರವರ ಅನ್ನ ಅವರೆ  ತಯಾರಿಸಿಕೊಳ್ಳಲು ಶ್ರಮ ದ ಅಗತ್ಯವಿದೆ. ಸೋಮಾರಿಗಳಿಂದಲೇ ಮಾರಿಯ ದರ್ಶನವಾದರೆ ಪ್ರಗತಿಯೆ? ಆತ್ಮನಿರ್ಭರ ಭಾರತ ಅಧ್ಯಾತ್ಮ ದಿಂದ  ಮಾತ್ರ ಸಾಧ್ಯವಿದೆ. ರಾಜಕೀಯದಲ್ಲಿ ಅಧ್ಯಾತ್ಮ ವಿದೆಯೆ? ಅಧ್ಯಾತ್ಮ ವೆ ರಾಜಕೀಯ ನಡೆಸಿದೆಯೆ? ಆತ್ಮಾವಲೋಕನ ಅಗತ್ಯ.
ಭೌತಿಕ ಸತ್ಯವನ್ನು  ಅಧ್ಯಾತ್ಮ ದಿಂದ ಅಳೆದಾಗಲೇ  ಅಸತ್ಯ ಕಾಣುವುದು. ಅದಕ್ಕೆ ಜಗತ್ತನ್ನು ಮಿಥ್ಯ ಎಂದರು. ಆದರೆ ಭೂಮಿ ಮೇಲಿದ್ದೇ  ಅಧ್ಯಾತ್ಮ ಹಾಗು ಭೌತಿಕ ಸಾಧನೆ ಮಾಡಬೇಕು.ಎರಡೂ   ಇತಿಮಿತಿಯಲ್ಲಿದ್ದರೆ  ಸಮಸ್ಯೆಯಿಲ್ಲ.ಅತಿಯಾಗಿ  ಶ್ರಮರಹಿತವಾದರೆ ಸಮಸ್ಯೆ.

Wednesday, September 14, 2022

ಪರಮಾತ್ಮನ ಸಾಲ ತೀರಿಸಲು ತತ್ವಜ್ಞಾನ ಅಗತ್ಯ.

ಎಂತಹ ಭ್ರಷ್ಟಾಚಾರದ ಭ್ರಮೆಯಲ್ಲಿ ನಾವಿದ್ದೇವೆಂದರೆ ಜೀವನ್ಮುಕ್ತಿ ಪಡೆಯಲು ಆಳಾಗಿರಬೇಕೆನ್ನುವ ತತ್ವವನ್ನು
ಅರ್ಥ ಮಾಡಿಕೊಳ್ಳದೆ ಆಳುವವರ ಹಿಂದೆ ನಡೆದು ಇನ್ನಷ್ಟು ಸಾಲದ ಸುಳಿಯಲ್ಲಿ ಜೀವ ಜಡವಾದರೆ ಆತ್ಮ ಮೇಲಕ್ಕೆ ಹೋಗಲು ಸಾಧ್ಯವೆ? 
ದಾಸರು,ಶರಣರು,ಸಂತರು,ಸಂನ್ಯಾಸಿಗಳು ಮಹಾತ್ಮರುಗಳು ಮಹಾಗುರುಗಳು,ತತ್ವಜ್ಞಾನಿಗಳು  ತಂತ್ರದಿಂದ  ನೀನು ಮುಕ್ತಿ ಪಡೆಯಬಹುದೆಂದಿರೋದನ್ನು ಕಾಣೋದಿಲ್ಲ.
 ಆದರೆ ಇಂದಿನ ತಂತ್ರಜ್ಞಾನದಿಂದ ಸಾಕಷ್ಟು ವಿಷಯ ಸಂಗ್ರಹಮಾಡಿದ ಹಾಗೆ ಹಣವನ್ನೂ ಸಂಗ್ರಹಣೆ ಮಾಡುತ್ತಾ ಹೊರಗಿನ ರಾಜಕೀಯದಲ್ಲಿರುವ ಮಾನವನಿಗೆ
ತನ್ನೊಳಗೇ ಅಡಗಿದ್ದ ಆ ಸಣ್ಣ ಬಿಂದುವಿನೆಡೆಗೆ ಸಾಗಲು  ಪರಿಶ್ರಮ ಪಡಲಾಗುತ್ತಿಲ್ಲ. ಇದ್ದಲ್ಲಿಯೇ ಇದ್ದು ಭಗವಂತನ ಕಾಣೋ ಯೋಗಶಕ್ತಿ  ಎಲ್ಲೆಡೆಯೂ ತಿರುಗಿದರೆ ಸಿಗದು. ಇದೇ ದೊಡ್ಡ ದೊಡ್ಡ ಸಮಸ್ಯೆಗಳಿಗೆ ದಾರಿಮಾಡಿಕೊಟ್ಟು ಮೂಲ ಶಕ್ತಿಯಿಂದಲೇ ದೂರಮಾಡುತ್ತಾ  ಜೀವಾತ್ಮನಿಗೆ ಅತಂತ್ರಸ್ಥಿತಿ  ತಲುಪಿಸಿ ಆಳುತ್ತಿದೆ.ಸ್ವತಂತ್ರ ವಾಗಿದ್ದ ಹಿಂದಿನ ಮಹಾತ್ಮರೆಲ್ಲಿ? ಅತಂತ್ರಸ್ಥಿತಿಗೆ ತಲುಪಿಸಿ ಆಳುವ ಮಹೋದಯ,ಮಹಾ ಪುರುಷ,ಸ್ತ್ರೀ ಯರೆಲ್ಲಿ?  ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ.
ಪರಮಾತ್ಮನೆಡೆಗೆ ಹೋಗೋದಕ್ಕೆ ಸಂಘಟನೆಯಲ್ಲಿ ತತ್ವ ಬೇಕು.ಸ್ವತಂತ್ರ ಜ್ಞಾನ ಬೇಕು.ಸತ್ಯ ಬೇಕು.ಅವರವರ ಧರ್ಮ ದಿಂದ ಶಾಂತಿ,ತೃಪ್ತಿ ಮುಕ್ತಿ ಸಿಗುವಂತಿರಬೇಕಿತ್ತು.ಈಗ ಧರ್ಮ
ಬಿಟ್ಟು ಹೊರನಡೆದವರಿಗೆ  ಸಹಕಾರ,ಸಹಾಯ,ಅವಕಾಶ ಅಧಿಕಾರ,ಸ್ಥಾನಮಾನ,ಗೌರವ,ಜನಬಲ,ಹಣಬಲ ಎಲ್ಲಾ ಸಿಗುತ್ತಿದೆ ಎಂದರೆ  ಅಜ್ಞಾನ ಮಿತಿಮೀರಿದೆ ಎಂದರ್ಥ. 
ಜನನ ಮರಣದ ನಡುವಿನ‌ ಜೀವನದಲ್ಲಿ ಜೀವಿಗಳ ವನವಿದೆ.ಎಲ್ಲಾ ಜೀವಕ್ಕೂ ಅಸ್ತಿತ್ವ ವಿದೆ.ಅಸ್ತಿತ್ವಕ್ಕೆ ದಕ್ಕೆ ಆದರೆ ಅದೇ  ವಿರುದ್ದ ನಿಲ್ಲುತ್ತದೆ.  ವಿರೋಧವಿದ್ದ ಕಡೆ ಶಾಂತಿಯಾಗಲಿ ಒಗ್ಗಟ್ಟು ಆಗಲಿ ಬೆಳೆಯೋದಿಲ್ಲ. ಹೀಗಾಗಿ ಇಂದಿನ ಒಂದೇ ದೇಶದಲ್ಲಿ ಹಲವಾರು ಸಂಘ,ಸಂಸ್ಥೆ, ಧರ್ಮ, ಜಾತಿ,ಪಂಗಡ,ಪಕ್ಷ,ದೇವರುಗಳ ಹೆಸರಲ್ಲಿ ರಾಜಕೀಯ ಬೆಳೆಸಿಕೊಂಡು ಜನರನ್ನು ಆಳಲು ಹೊರಟು ಆಳುಗಳೇ ಹೆಚ್ಚಾಗಿದ್ದರು ಪರಮಾತ್ಮನ ಆಳಾಗದೆ,
ದಾಸರಾಗದೆ,ಶರಣರಾಗದೆ,ಭಕ್ತರಾಗದೆ,ಯೋಗಿಗಳಾಗದೆ, ಮಹಾತ್ಮರಾಗದೆ ಹೋದ ಜೀವಕ್ಕೆ ಮುಕ್ತಿ ಎಲ್ಲಿದೆ? ಸ್ವಾವಲಂಬನೆ ಹೆಸರಲ್ಲಿ ಪರಕೀಯರ ಕೈಕೆಳಗೆ ದುಡಿಯಲು ಭೂಮಿಯನ್ನು ಮಾರಿ ಹೋದರೆ ಭೂಮಿಯ ಋಣ ತೀರಿಸಲು ಕಷ್ಟ. ಹಾಗೆಯೇ ಭಗವಂತನ ಹೆಸರಲ್ಲಿ ತನ್ನ ತಾನರಿಯದೆ ನಾನೇ ದೇವರೆಂದು ಜನರನ್ನು ಅಧರ್ಮ ಅಸತ್ಯ,ಅನ್ಯಾಯದ ರಾಜಕೀಯಕ್ಕೆ ಎಳೆದರೂ ಮುಕ್ತಿ ಯಿಲ್ಲ. ಮಧ್ಯವರ್ತಿಗಳ ಮಧ್ಯೆ ಸಿಲುಕಿದ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗೋದು ಕಷ್ಟ.ಹೀಗಾಗಿ ಹಿಂದಿನ ಮಹಾತ್ಮರುಗಳು ನೇರವಾಗಿ ಪರಮಾತ್ಮನೆಡೆಗೆ ನಡೆದರು. ಈಗ ಅವರನ್ನು ಮಧ್ಯೆ ನಿಲ್ಲಿಸಿ  ಜನರನ್ನು ತಮ್ಮೆಡೆ ಎಳೆಯೋ ಬದಲಾಗಿ ಅವರಲ್ಲಿದ್ದ  ಸತ್ಯಜ್ಞಾನವನ್ನು ಅರ್ಥ ಮಾಡಿಸುವ ಶಿಕ್ಷಣವನ್ನು ನೀಡಿದರೆ  ಒಳಗಿರುವ ಅರಿವೆಂಬ ದೈವವೇ ಸ್ವತಂತ್ರ ಬುದ್ದಿ ಜ್ಞಾನಕೊಟ್ಟು ನಡೆಸಬಹುದಿತ್ತು.
ವಿಪರ್ಯಾಸವೆಂದರೆ ನಮ್ಮ ಭಾರತೀಯ ಶಿಕ್ಷಣವೂ ಇಂದು ವ್ಯಾಪಾರದ ವಸ್ತುವಂತಾಗಿ ಜ್ಞಾನವನ್ನು  ತಿರಸ್ಕಾರದಿಂದ ಕಂಡು ವೈಜ್ಞಾನಿಕ ಜಗತ್ತಿನಲ್ಲಿ ಜನರನ್ನು ತಂತ್ರದಿಂದ ಆಳಲು ಹೊರಟು ಅತಂತ್ರಸ್ಥಿತಿಗೆ ದೇಶವನ್ನು ನಡೆಸುತ್ತಿದೆ ಎಂದರೆ ಒಪ್ಪೋದಿಲ್ಲ. ಕಾರಣ ನಾವೂ ತಂತ್ರದೊಳಗೇ ಜೀವನ ನಡೆಸೋ  ತಂತ್ರಜ್ಞಾನಿಗಳು.  ತತ್ವದೆಡೆಗೆ ಹೋಗಲು ಹಿಂದೆ ತಿರುಗಬೇಕಿದೆ. ಹಿಂದಿನವರ ಧರ್ಮ ವೇ ಹಿಂದೂ ಧರ್ಮ.
ಇಂದು ಇಸ್ಲಾಂ  ಶಿಕ್ಷಣದ ತಂತ್ರವಾಗಿದೆ.ಮುಂದೆ ಹೀಗೇ ನಡೆದರೆ  ಮುಸ್ಲಿಂ ರ ಯಾಂತ್ರಿಕ ಜೀವನದ ಯಂತ್ರಮಾನವ
ಎಲ್ಲವನ್ನೂ ಆ ಮೇಲಿನ ಶಕ್ತಿಯೇ ಸೃಷ್ಟಿ ಮಾಡಿದ್ದರೂ ಕೆಳಗಿನ ಮಾನವನಿಗೆ ಯಾವುದು ಸ್ವತಂತ್ರ ಯಾವುದು ಅತಂತ್ರವೆನ್ನುವ ಜ್ಞಾನವಿಲ್ಲದೆ  ಜನನ ಮರಣಗಳ ಸರಪಳಿಯಿಂದ  ಬಿಡುಗಡೆ ಕಾಣೋದು ಕಷ್ಟಕರವಾಗಿದೆ.
ಎಲ್ಲೋ ಮೂಲೆಯಲ್ಲಿರುವ ಜೀವಕ್ಕೆ ಮುಕ್ತಿ ಸಿಗಬಹುದು.
ಕಾರಣ  ಇದು ಸ್ವತಂತ್ರ ವಾಗಿ ಪರಮಾತ್ಮನೆಡೆಗೆ ಜೀವನ ನಡೆಸಬಹುದು. ಹಾಗಾಗಿ ಯಾರನ್ನು ಆಳಬೇಕು ಅಳಿಸಬೇಕು ಎನ್ನುವ ಅಜ್ಞಾನದಿಂದ ಹೊರಬಂದು ಮಾನವ  ನಾನ್ಯಾರ ಅಡಿಯಾಳಾಗಿರುವೆನೆಂಬ ಸತ್ಯ ತಿಳಿದರೆ  ಒಳಗಿರುವ ಮಹಾ ಶಕ್ತಿಯನ್ನು   ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಪಡಬಹುದು. ಎಷ್ಟೋ ಜನ್ಮಗಳ ಪರಾವಲಂಬನೆಯ ಸಾಲದ ಹೊರೆಯನ್ನು ತೀರಿಸಲು ಕಷ್ಟಪಟ್ಟು ದುಡಿಯುವುದು   ಸರಿಯಾದ ಮಾರ್ಗ. ಆದರೆ ಇದು ಧರ್ಮ ದ ಮಾರ್ಗದಲ್ಲಿರುವುದು ಅಗತ್ಯ. ಏನೇ ಆದರೂ ಮಾಡಿದ ಸಾಲ ತೀರೋವರೆಗೆ ಮುಕ್ತಿ ಯಿಲ್ಲ. ಎಲ್ಲಾ ಸಾಲಗಾರರೆ.ಅದನ್ನು ತೀರಿಸಲು ಬಂದ ಜೀವದ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿ ಹೋಗುತ್ತಿರುವ ಸರ್ಕಾರಗಳಿಂದ ದೇಶ ಉಳಿಯಬಹುದೆ? ಎಷ್ಟು ಪ್ರಜೆಗಳು ಸ್ವತಂತ್ರ ಜ್ಞಾನದಿಂದ ಪರಮಾತ್ಮನ ಸೇವಾ ಕಾರ್ಯದಲ್ಲಿದ್ದು ದೇಶದ ಋಣ ತೀರಿಸಲು ಸಾಧ್ಯವಾಗಿದೆ?  
 ಮಹಾವಿಷ್ಣು ವಿನ ಅವತಾರವೆಲ್ಲವೂ  ಧರ್ಮ ಸ್ಥಾಪನೆಗಾಗಿ
ಆಗಿದ್ದರೂ ಆ ಮಹಾವಿಷ್ಣುವನ್ನೇ ರಾಜಕೀಯಕ್ಕೆ ಬಳಸಿದರೆ
ಭಕ್ತಿ ಎಲ್ಲಿರುತ್ತದೆ? ಶ್ರದ್ದೆ,ಭಯವೂ ಇಲ್ಲದ ಯಾವುದೇ ಕರ್ಮ ದಿಂದ ಪರಮಾತ್ಮ ಒಲಿಯುವುದಿಲ್ಲ ಎಂದರೆ ಅಸುರ
ಶಕ್ತಿಯನ್ನು ತಿಳಿಯದೆಯೇ  ಬೆಳೆಸಿಕೊಂಡು ನಾನು ಬೆಳೆದೆ.
ತತ್ವವನ್ನು ತಂತ್ರವಾಗಿಸಿ ನನ್ನ ಸ್ವಾರ್ಥ ಅಹಂಕಾರ ಬೆಳೆದರೆ
ಅತಂತ್ರಸ್ಥಿತಿಗೆ  ಜೀವ ತಲುಪುತ್ತದೆ. ಅತಂತ್ರವನ್ನು ಸ್ವತಂತ್ರ ಮಾಡುವ ಶಕ್ತಿಯೂ ಹಿಂದೂ ಸಂಸ್ಕಾರ,ಸಂಸ್ಕೃತಿ, ಧರ್ಮ ತಿಳಿಸಿದೆ. ಇದನ್ನು ಅವರವರ ಆತ್ಮಶುದ್ದಿಗಾಗಿ ಶಿಕ್ಷಣದ ಮೂಲಕ  ತಿಳಿಸಿ ಬೆಳೆಸುವುದೇ ನಿಜವಾದ ಧರ್ಮ ರಕ್ಷಣೆ.
ಅದರಲ್ಲೂ  ಬೇಧ ಭಾವದ ಭಿನ್ನಾಭಿಪ್ರಾಯ ದ ದ್ವೇಷ ಬೆಳೆದರೆ  ಯಾರಿಗೆ ಮುಕ್ತಿ?
ತಿಳಿದವರಿಗೆ ತಿಳಿಸಬಾರದು,ಅರ್ಧ ತಿಳುವಳಿಕೆಯವರನ್ನು ಪ್ರಶ್ನೆ ಮಾಡಬಾರದು,ಏನೂ ತಿಳಿಯದವರನ್ನು ಆಳಬಾರದು.  ಮಾಡಬಾರದ್ದನ್ನು ಮಾಡಿದರೆ ಆಗಬಾರದು ಆಗುತ್ತದೆ ಇದರ ಫಲವೇ ಇಂದಿನ ಸಮಾಜ.
ಈ ದಿನ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ  ಇಂಜಿನಿಯರ್ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಅವರ ಆ ಪರಿಶ್ರಮದಿಂದಾದ ಆಣೆಕಟ್ಟಿನಿಂದಾಗಿ ಜನಜೀವನದಲ್ಲಿ ಸಾಕಷ್ಟು ಸುಖ,ಸಮೃದ್ದಿ
ಶಾಂತಿ ಬೆಳೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಇದು ಕುಸಿಯಲು ಕಾರಣ  ನೀರಿನ ದುರ್ಭಳಕೆ ಕಾರಣ.ನೀರಿನ ವಿಚಾರದಲ್ಲಿ ರಾಜಕೀಯ ಶಕ್ತಿ ಪ್ರವೇಶ ಮಾಡಿ  ದ್ವೇಷ ಹೆಚ್ಚಾಗಿ  ಸರಿಯಾದ ಕೆಲಸ ಮಾಡದೆಯೇ  ಪ್ರತಿಫಲ ಕೇಳಿ ಪರಮಾತ್ಮನು ಸರಿಯಾಗಿ ಪ್ರತಿಫಲ ನೀಡುವುದರ ಮೂಲಕ
ಪ್ರಕೃತಿ ವಿಕೋಪಕ್ಕೆ ಜೀವ ಹೋಗುತ್ತಿದೆ. ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಸಾಲ ಹೆಚ್ಚಾಗಿ ತೀರಿಸಲಾಗದೆ ಆತ್ಮಹತ್ಯೆ ಬೆಳೆಯುತ್ತಿದೆ. ಸರ್ಕಾರಗಳಂತೂ ಉಚಿತ ಯೋಜನೆಗಳಿಂದ  ಸೋಮಾರಿಗಳು ಬೆಳೆದು ಮಧ್ಯವರ್ತಿಗಳ  ಕುತಂತ್ರದಿಂದ  ಬೇಸತ್ತು ಹೋಗುತ್ತಿದ್ದಾರೆ. ಈಗಲೂ ಯಾವ ಪಕ್ಷ ನಮಗೆ ಹೆಚ್ಚು ಕೊಡುತ್ತದೆ ಎನ್ನುವ ಅಜ್ಞಾನದಿಂದ ಹೊರಬರದಿದ್ದರೆ ಹಿಂದೆ ಇರುವ ಪಿತೃಪಕ್ಷ  ದೂರವಾಗಿ ಜೀವ ಅತಂತ್ರವಾಗುತ್ತದೆ. ಹೀಗಾಗಿ ಹಿಂದೂ ಧರ್ಮ ವನ್ನು  ಅರ್ಥ ಮಾಡಿಕೊಳ್ಳದೆ  ಮುಂದೆ ನಡೆಯಬಾರದು.   ಹಿಂದೆ ನಮ್ಮ ಹಿಂದಿನವರ ಧರ್ಮ ಕರ್ಮ ವೇ ನಮಗೆ ಪ್ರಾರಂಭದ ಬಂಡವಾಳವಾಗಿತ್ತು. ಇದು ತತ್ವದ ಪ್ರಕಾರವಿದ್ದರೆ ಒಗ್ಗಟ್ಟು. ತಂತ್ರವಾದರೆ ಬಿಕ್ಕಟ್ಟು. ಸ್ವತಂತ್ರ ವಾಗಿದ್ದರೆ  ಶ್ರಮಪಟ್ಟು ಮುಂದೆ ನಡೆಯಬಹುದಲ್ಲವೆ?

Tuesday, September 13, 2022

ಸಾಧನೆ ಯಾವುದು?

ಹೋರಾಟ,ಹಾರಾಟ,ಮಾರಾಟಗಳಿಂದ  ಏನಾದರೂ  ಸಾಧನೆ ಆಗಿದ್ದರೆ ಅದರಿಂದ  ಯಾರಿಗೆ  ಒಳ್ಳೆಯದಾಗಿದೆ ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕು. ಭೌತಿಕದಲ್ಲಿ ಮಾಡುವ ಸಾಧನೆಯು ಅಧ್ಯಾತ್ಮದೆಡೆಗೆ  ನಡೆಸುತ್ತಿದ್ದರೆ ಉತ್ತಮ. ಅಧ್ಯಾತ್ಮ ಸಾಧನೆಯು ಭೌತಿಕದೆಡೆಗೆ ಎಳೆಯುತ್ತಿದ್ದರೆ  ಅಧಮ.   ಅಧ್ಯಾತ್ಮ  ಆತ್ಮನ ಅರಿವು.ತನ್ನ ತಾನರಿಯೋದು, ನಾನ್ಯಾರೆಂಬುದರ ಪ್ರಶ್ನೆಗೆ ಉತ್ತರ ಹುಡುಕಿದರೂ ಪರಿಪೂರ್ಣ ಉತ್ತರ ಸಿಗೋದಿಲ್ಲ ಕಾರಣ ನಾನೆಂಬುದಿಲ್ಲ.ಅಗೋಚರ ಶಕ್ತಿಯಾದ ಚೈತನ್ಯವೇ ನನ್ನ ನಡೆಸಿರುವಾಗ ಚೈತನ್ಯವನ್ನು  ಅರ್ಥ ಮಾಡಿಕೊಳ್ಳಲು ನಾನು ಹೋಗಬೇಕು. ಇದನ್ನರಿಯಲು  ಆಂತರಿಕ ಸಾಧನೆ ಮಾಡೋದು ಕಷ್ಟ ಗುರುವಿನ ಸಹಕಾರ,ಅನುಗ್ರಹ ಮುಖ್ಯ...ಇದಕ್ಕೆ ಜನಬಲ ಹಣಬಲವೇ ಮುಖ್ಯವಾದರೆ ವ್ಯರ್ಥ ಪ್ರಯತ್ನ ಜ್ಞಾನಬಲವಿದ್ದರೆ  ಉತ್ತಮ. ಅಂದರೆ ದೇವರನ್ನು ಹೊರಗೆ ಕಾಣೋ ಪ್ರಯತ್ನ ವ್ಯರ್ಥ. ಕಾರಣ ದೇವರು ನಿರಾಕಾರದ ಶಕ್ತಿಯೇ ಹೊರತು ವ್ಯಕ್ತಿ,ವಸ್ತುವಲ್ಲ.  ಪ್ರಾರಂಭದ ಹಂತದಲ್ಲಿ ಸಾಕಾರವಿದ್ದರೂ ಅಂತ್ಯದಲ್ಲಿ ನಿರಾಕಾರವಾದರೆ ನಿಜವಾದ ಸಾಧಕರಾಗಬಹುದು.ಹಾಗಾಗಿ ನಿರಾಕಾರ ಬ್ರಹ್ಮನ ಅರಿಯೋ ಸಾಧಕರು ಸ್ವತಂತ್ರ ವಾಗಿದ್ದು ,ಆತ್ಮಾವಲೋಕನ ದಿಂದ  ನಡೆದು ಸಮಾಜದ ಮಧ್ಯೆ ಇದ್ದರೂ ಇಲ್ಲದಂತೆ ತಮ್ಮ ಅಧ್ಯಾತ್ಮ ಸಾಧನೆಯಲ್ಲಿ ತಮ್ಮನ್ನು ತಾವರಿಯೋ ಪ್ರಯತ್ನದಿಂದ ಒಳಗೂ  ಹೊರಗೂ ಆವರಿಸಿರುವ  ಆ ಮಹಾಶಕ್ತಿಯನ್ನು  ಅರ್ಥ ಮಾಡಿಕೊಂಡು ಪರರಿಗೂ  ತಿಳಿಸುತ್ತಾ  ನಡೆದರು. ಅಂತಹ ಮಹಾತ್ಮರಿಂದ ಭೂಮಿಯಲ್ಲಿ ಧರ್ಮ ರಕ್ಷಣೆಯಾಗಿತ್ತು. 
ದೇಶರಕ್ಷಣೆಯ ವಿಚಾರದಲ್ಲಿಯೂ ಇದೇ ರೀತಿಯಲ್ಲಿ ನಾವು ಅರ್ಥ ಮಾಡಿಕೊಂಡರೆ ಉತ್ತಮ.ವಿದೇಶದಲ್ಲಿ ದೇವರನ್ನು ಕಾಣೋರು ಸ್ವದೇಶದಲ್ಲಿ ಕಾಣಲಿಲ್ಲವೆಂದರೆ ಅಜ್ಞಾನ. ಹಾಗೆ ಯಾವ ದೇಶದ  ಮೂಲ ಶಿಕ್ಷಣದಿಂದ ದೇಶದ ಪ್ರಜೆಗಳಲ್ಲಿ ಜ್ಞಾನ ಬೆಳೆದಿದೆಯೋ ಆ ದೇಶದ ಬುಡವನ್ನು ಅಲ್ಲಾಡಿಸಲು ಕಷ್ಟ.ಯಾವಾಗ ದೇಶದ ಪ್ರಜೆಗಳೆ  ಮೂಲವನ್ನು ಅರಿಯದೆ ಹೊರಗೆ ನಡೆಯುವರೋ ಆಗಲೇ ಪರಕೀಯರ ಆಕ್ರಮಣಕ್ಕೆ
ದೇಶ ಸಿಲುಕುತ್ತದೆ. ಇದನ್ನು ವಿರೋಧಿಸಿ ಹೊರಗೆ ಹೋರಾಟ ಮಾಡಿದಷ್ಟೂ ಇನ್ನಷ್ಟು ಸಾವು ನೋವು ಅಶಾಂತಿ,ಕ್ರಾಂತಿಯ ಮೂಲಕ ಜೀವ ಹೋಗಬಹುದಷ್ಟೆ.ಜೀವ ಇರೋವಾಗಲೇ ತಪ್ಪನ್ನು ತಿಳಿದು ತನ್ನ ತಾನು  ಅರ್ಥ ಮಾಡಿಕೊಳ್ಳಲು ಸಾಧ್ಯ.ಹಿಂದಿರುಗಿ ಬರುವುದೇ ಇದಕ್ಕಿರುವ ಮಾರ್ಗ. ನಮ್ಮ ಕಾಲಕ್ಕೆ ಆಗದಿದ್ದರೂ ಮಕ್ಕಳ ಕಾಲಕ್ಕಾದರೂ ಇದು ಸಾಧ್ಯ ಎನ್ನುವುದಾದರೆ  ಇದಕ್ಕೆ ಸಹಕರಿಸುವುದೇ ಪ್ರಜಾಧರ್ಮ. ಇದರಲ್ಲಿ ಯಾವುದೇ ರಾಜಕೀಯತೆ ಇರಬಾರದು.
ವಾಸ್ತವದಲ್ಲಿ ಪ್ರಜಾಪ್ರಭುತ್ವ ದೇಶದ ಈ ಸ್ಥಿತಿಗೆ ಅಜ್ಞಾನದ  ರಾಜಕೀಯವೆ ಕಾರಣ. ಧರ್ಮ ರಕ್ಷಣೆ ರಾಜಕೀಯದಿಂದ ಕಷ್ಟ.ಹಿಂದಿನ ರಾಜರ ಕಾಲದಲ್ಲಿ ರಾಜನೇ ಸ್ವತಃ ಹೋರಾಟಮಾಡಿ  ರಾಜ್ಯರಕ್ಷಣೆ ಮಾಡಿದಂತೆ ಈಗಿನ ರಾಜಕಾರಣಿಗಳಿಗೆ ಅಸಾಧ್ಯ.ಆದರೂ  ಅವರು ಜನರಿಗಾಗಿ ಸಾಕಷ್ಟು  ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದರೂ ಯಾಕಿಷ್ಟು ಬಡತನ,ಅಜ್ಞಾನ,ಹಿಂಸೆಯ ರಾಜಕೀಯ ಎಂದರೆ
ಅವರಿಗೆ ಧಾರ್ಮಿಕ ಜ್ಞಾನದ ಕೊರತೆಯಿದೆ. ಧಾರ್ಮಿಕ ಶಿಕ್ಷಣ ನೀಡದೆ ಜನರನ್ನು ಆಳಿದರೆ ಅಧರ್ಮ. ಮಂತ್ರ,ತಂತ್ರ,ಯಂತ್ರಗಳನ್ನು ಮಧ್ಯೆ ನಿಲ್ಲಿಸಿ ವ್ಯವಹಾರದಲ್ಲಿ ಹಣದ ಲಾಭ ಮಾಡಿಕೊಂಡರೆ ರಾಜಕೀಯ.ಜ್ಞಾನವನ್ನು ಪಡೆದರೆ ರಾಜಯೋಗ.ಇಷ್ಟೇ ವ್ಯತ್ಯಾಸ. ಒಂದು ಆಂತರಿಕ ಶಕ್ತಿ, ಇನ್ನೊಂದು ಭೌತಿಕ ಶಕ್ತಿ. ಹಣವಿಲ್ಲದೆ ಜ್ಞಾನಗಳಿಸಬಹುದು.ಜ್ಞಾನವಿಲ್ಲದೆ ಹಣಗಳಿಸಿದರೆ  ವ್ಯರ್ಥ.
ಶಿಕ್ಷಣವು  ವ್ಯಾಪಾರವಾದರೆ ಆಗೋದೇ ಹೀಗೆ.ಅದರಲ್ಲೂ ಪರಕೀಯರ ಶಿಕ್ಷಣದಿಂದ  ವ್ಯಾಪಾರ ಹೆಚ್ಚಾಗಿದೆ.
ಸಧೃಡ ಭಾರತ ನಿರ್ಮಾಣವಾಗಬೇಕಾದರೆ ಹೊರಗಿನ ಕಾರ್ಯ ಕ್ರಮಕ್ಕಿಂತ ಒಳಗಿನ ಕಾರ್ಯ ಕ್ರಮಬದ್ದ
ವಾಗಿರಬೇಕು. ಅದು ಜ್ಞಾನದಿಂದ ಮಾತ್ರ ಸಾಧ್ಯವೆನ್ನುತ್ತಾರೆ ಮಹಾತ್ಮರುಗಳು.  ಯಾರನ್ನೂ ಆಳಲು ಹೋಗದೆ  ನಾವು ಯಾರ ಆಳಾಗಿದ್ದೇವೆಂಬ ಅರಿವಿನಲ್ಲಿದ್ದರೆ ಮುಕ್ತಿ.  ಒಟ್ಟಿನಲ್ಲಿ ಅಜ್ಞಾನದಲ್ಲಿ  ಮಾಡಿದ ಯಾವುದೇ ಕಾರ್ಯ ಕ್ರಮ ಕ್ರಮಬದ್ದವಾಗಿರೋದು ಕಷ್ಟ. ನೋಡುಗರಿಗೆ ಮನರಂಜನೆ ನೀಡಬಹುದು.ಆತ್ಮವಂಚನೆಯಾಗಬಾರದಷ್ಟೆ.

Sunday, September 11, 2022

ಪಿತೃಗಳ ಋಣ ತೀರಿಸಬೇಕೆ?

ಪಿತೃ ಪಕ್ಷದಲ್ಲಿ  ಪಿತೃಕಾರ್ಯ ಮಾಡಿ
ಋಣ ತೀರಿಸಲಾಗುವುದಂತೆ. ನಮ್ಮ ಸನಾತನ ಧರ್ಮ ಸಂಸ್ಕಾರ,ಸಂಸ್ಕೃತಿ ಯ ಮೂಲ ಉದ್ದೇಶವೆ ಋಣ ತೀರಿಸಿ
ಮುಕ್ತಿ ಪಡೆಯುವುದಾಗಿದೆ. ಋಣ ಎಂದರೆ ಸಾಲ ಎಂದರ್ಥ.
ಪಿತೃಋಣ ತೀರಿಸದೆ ದೇವರ ಋಣ ತೀರಿಸಲಾಗದು ಎಂದು
ವೈದಿಕ ಪರಂಪರೆ ಹುಟ್ಟಿಕೊಂಡಿತು. ಆದರೆ, ಇದನ್ನು ಯಾವ
ರೀತಿಯಲ್ಲಿ ಎನ್ನುವ ಬಗ್ಗೆ  ಈಗಲೂ ಚರ್ಚೆಗಳು ನಡೆದಿದೆ.
"ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ
ಬಡವನಯ್ಯಾ" ಎಂದ ಹಾಗೆ ಪಿತೃಗಳ ಋಣವೂ ಮಕ್ಕಳು ತೀರಿಸಬೇಕಾದರೆ  ಅವರು ಆಸ್ತಿ ಮಾಡಿರಬೇಕು. ಆಸ್ತಿ ಎಂದರೆ ಬೌತಿಕ ಜಗತ್ತಿನ ಆಸ್ತಿ ಎಂದಲ್ಲ.ಧಾರ್ಮಿಕ ಜಗತ್ತಿನ
ಆಸ್ತಿ ಮಾಡಿದವರ ಋಣ ಇದ್ದಾಗಲೆ ಸಂದಾಯವಾಗಿರುತ್ತದೆ.
ಆದರೂ ಮಕ್ಕಳಾದವರು  ಅದನ್ನು ಶ್ರದ್ಧೆಯಿಂದ, ಭಕ್ತಿಯಿಂದ   ತಿಳಿದು  ಬೆಳೆಸಿಕೊಂಡು  ಮುನ್ನೆಡೆದು ಇನ್ನಷ್ಟು   ಜ್ಞಾನದಿಂದ  ಸತ್ಕರ್ಮ ಮಾಡಿದರೆ ಸಾಲ ತೀರಿದಂತೆ. ಆದರೆ, ಇಲ್ಲಿ ಕೇವಲ ಬೌತಿಕ ಆಸ್ತಿಯನ್ನು  ಬಳಸಿಕೊಂಡು  ಅದೂ
 ತನ್ನದೇ ಎನ್ನುವಂತೆ ಜೀವನ ನಡೆಸುವಾಗ,ಹಿಂದಿನ 
ಹಿರಿಯರ ನಡೆ ನುಡಿಯಲ್ಲಿಅಡಗಿದ್ದ ಧರ್ಮ ಸತ್ಯ,ನ್ಯಾಯ,
ನೀತಿ ಅರ್ಥವಾಗುವುದಿಲ್ಲ.
ಎಲ್ಲಾ ಕಾಲಪ್ರಭಾವದ ಸುಳಿಯಲ್ಲಿ ಸಿಲುಕಿರುವಾಗ ಯಾರೂ
ಹೊರಬಂದು ಸತ್ಯ ತಿಳಿಯಲಾಗದು.ಕೊನೆಪಕ್ಷ ತಮ್ಮ ತಮ್ಮ
ಕಾಲು ಬುಡದ  ಕೊಳಕನ್ನು ಸ್ವಚ್ಚ ಮಾಡಿಕೊಳ್ಳಲು ಪ್ರಯತ್ನ
ಪಟ್ಟರೆ  ಸ್ವಚ್ಚಭಾರತ ಸಾಧ್ಯವಿದೆ. ಇದನ್ನು ಸರ್ಕಾರ ಮಾಡಲಿ
ಎಂದು ಬಿಟ್ಟರೆ  ಕೆಸರಲ್ಲಿ  ಅರಳುವ ಕಮಲವನ್ನು  ಕೀಳಲು ಹೋಗಿ ಮೈಯೆಲ್ಲಾ ಕೆಸರಾಗಿಸಿಕೊಂಡ ಹಾಗೇ ಆಗುತ್ತದೆ.
"ಕೈ ಕೆಸರಾದರೆ ಬಾಯಿ ಮೊಸರು" ಮೈಯನ್ನೇ ಕೆಸರಲ್ಲಿಟ್ಟು
ರಾಜಕೀಯ ನಡೆಸಿದರೆ?
ತಮ್ಮ ತಮ್ಮ ಗುರು ಹಿರಿಯರ ಜ್ಞಾನವನ್ನು ಪ್ರತಿಭೆಯನ್ನು ಮಕ್ಕಳೊಳಗೆ ತಮ್ಮೊಳಗೇ  ಬೆಳೆಸಿಕೊಂಡರೆ ಎಲ್ಲಿಯ ಋಣ?
ಅದು ಬಿಟ್ಟು ಅವರ ಪ್ರತಿಮೆಯಾಗಲಿ, ಚಿತ್ರಪಟವಾಗಲಿ ಇಟ್ಟು ಒಮ್ಮೆ ನೆನಿಸಿಕೊಂಡರೆ ವ್ಯರ್ಥ.
ಜ್ಞಾನದಿಂದ ಮಾತ್ರ ಋಣ ತೀರಿಸಲು ಸಾಧ್ಯ. ಅದೂ ಆಂತರಿಕ ಜ್ಞಾನಶಕ್ತಿಯನ್ನು ಬೆಳೆಸುವ ಶಿಕ್ಷಣದಿಂದ ಸಾಧ್ಯ. ಭೌತಿಕ ವಿಜ್ಞಾನವು  ಒಂದೇ ಸ್ಥಿರವಾಗಿರದು. ಬದಲಾಗುವ ಅಸತ್ಯಕ್ಕಿಂತ ಬದಲಾಗದ ಸತ್ಯವೇ ದೇವರು. ಪಿತೃಗಳನ್ನು ದೇವರೆನ್ನುವ  ನಮ್ಮ ಹಿಂದೂ ಧರ್ಮ ವು ಸನಾತನ ಕಾಲದ ಜ್ಞಾನದೊಳಗಿತ್ತು. ಈಗಿನ ವೈಜ್ಞಾನಿಕ ಚಿಂತನೆ ಇದನ್ನು ಒಪ್ಪದಿದ್ದರೂ  ಸತ್ಯ ಅಸತ್ಯವಾಗದು.  ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದರೆ ನಿಮ್ಮತನವನ್ನು ನೀವು ಉಳಿಸಿಕೊಳ್ಳಿ ಎಂದರ್ಥ. ಪಿತೃಗಳು ನಿಮಗಾಗಿ ಜೀವನ ನಡೆಸಿ ಹೋದರು. ನೀವು ಯಾರಿಗಾಗಿ ಜೀವನ ನಡೆಸಿದರೂ ನಿಮ್ಮತನುಮನಧನವು ಧರ್ಮದಲ್ಲಿ ಇದ್ದರೆ  ಸಾಕು ಅದೇ ಮುಕ್ತಿ.

Friday, September 9, 2022

ಸಂನ್ಯಾಸಿ ×ಸಂಸಾರಿ?

ಅದ್ವೈತ ಸಿದ್ದಾಂತ ವನ್ನು ಸಂನ್ಯಾಸಿಯಾಗಿದ್ದುತಿಳಿಯುವುದೇ ಬೇರೆ,ಸಂಸಾರದಲ್ಲಿದ್ದು ತಿಳಿಸುವುದೇ ಬೇರೆ. ಶ್ರೀ ಶ್ರೀ ಶಂಕರಾಚಾರ್ಯರಂತಹ ಮಹಾಯೋಗಿಗಳ  ಅನುಭವವನ್ನು ಈಗಿನ   ರಾಜಕೀಯದಿಂದ ಅರ್ಥ ಮಾಡಿಕೊಳ್ಳಲು ಕಷ್ಟ.ರಾಜಯೋಗದಿಂದ ಸಾಧ್ಯವಿದೆ. ತತ್ವಜ್ಞಾನವನ್ನು ತಂತ್ರಜ್ಞಾನದ ಮಾಧ್ಯಮದಿಂದ ಪ್ರಚಾರ ಮಾಡಬಹುದು. ಅದರ ಆಳಕ್ಕೆ ಇಳಿಯಲು ಸ್ವತಂತ್ರ ಜ್ಞಾನದ ಅಗತ್ಯವಿದೆ. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ
ಅಗತ್ಯವಾಗಿ ಇಂದು ಬೇಕಾಗಿದೆ. ರಾಜಯೋಗ ತನ್ನ ತಾನರಿತು ನಡೆಯೋದಕ್ಕೆ ಪರಮಾತ್ಮನೆಡೆಗೆ ನಡೆಸುತ್ತದೆ.
ರಾಜಕೀಯ ತನ್ನ ತಾನರಿಯದೆ ಪರರನ್ನು  ನಡೆಸುವತ್ತ ನಡೆಸಿ ಪರಕೀಯರಾಗಿಸಬಹುದು. ಅಧರ್ಮ,ಅಸತ್ಯ,ಅನ್ಯಾಯ,ವಿದೇಶ, ಅಜ್ಞಾನ,ಅದ್ವೈತ ಹೀಗೇ  ಮೊದಲನೆಯ ಅ ಪದವನ್ನು  ಬಿಟ್ಟು ಆ ಕಡೆ ನಡೆದವರು ಮಹಾತ್ಮರು. ಅಹಂಕಾರ, ಅಸಹಕಾರ,
ಅಸಹಾಯಕತೆಯೇ  ಇದಕ್ಕೆ ಕಾರಣ.ಇದನ್ನು ಆತ್ಮವಿಶ್ವಾಸ
,ಆತ್ಮಸಮಾಲೋಚನೆ,ಆತ್ಮಾವಲೋಕನ ದಿಂದ
ಮೆಟ್ಟಿ ನಿಂತು  ಆತ್ಮಜ್ಞಾನದ ಸಾಧನೆ ಮಾಡಿದ್ದಾರೆ ಮಹಾತ್ಮರು.

ಮೊದಲು ಮಾನವನಾಗು.

ಈವರೆಗೆ  ಲೇಖನಗಳಲ್ಲಿ ಯಾವುದೇ ಒಂದು ಧರ್ಮ, ಭಾಷೆ,ಪಕ್ಷ,ಜಾತಿಯಾಗಿ ಎತ್ತಿಹಿಡಿದಿಲ್ಲ. ಕಾರಣ ತತ್ವವೂ ಇದನ್ನು ತಿಳಿಸಿದೆ. ಹಿಂದಿನ ಧರ್ಮ  ಒಂದೇ ಇತ್ತು.ಅದರಲ್ಲಿ ದೈವಗುಣವುಳ್ಳವರನ್ನು  ದೇವರೆಂದು ಕರೆಯಲಾಯಿತು. ಮಾನವೀಯ ಗುಣವುಳ್ಳವರನ್ನು ಮಹಾತ್ಮರೆಂದರು ಅಸುರೀ ಗುಣವುಳ್ಳವರನ್ನು ರಾಕ್ಷಸರೆಂದರು. ಹಾಗಂತ ಅವರು ಭೂಮಿಯಲ್ಲಿ ಜೀವನ ನಡೆಸುವಾಗ ಎಲ್ಲಾ ಮಾನವರಾಗೇ ಇದ್ದರು. ಹೀಗಾಗಿ  ಅಂದಿನ ಧರ್ಮ ಒಂದೇ ಶಿಕ್ಷಣದ ತಳಪಾಯದಲ್ಲಿ ಬೆಳೆದು ನಂತರದಲ್ಲಿ ಅವರವರ ಗುಣಜ್ಞಾನದ  ಬೆಳವಣಿಗೆ ಮೇಲೇ ಮುಂದುವರಿಯಿತು. ಈಗಲೂ ಎಲ್ಲಾ ಮಾನವರಾದರೂ ಇಲ್ಲಿರುವ ಅಸಂಖ್ಯಾತ ಧರ್ಮ, ಪಂಗಡ, ಜಾತಿ ಪಕ್ಷದ ಹಿಂದಿನ ಉದ್ದೇಶ ರಾಜಕೀಯವಾಗಿ ಬೆಳೆದು ನಿಂತು ನಿಜವಾದ ಜ್ಞಾನವುಳ್ಳವರಿಗೆ ಶಿಕ್ಷಣ  ನೀಡದೆ ಆಳುವವರೆ ಹೆಚ್ಚಾಗಿ  ಅಸುರ ಶಕ್ತಿ ಬೆಳೆದು ಮಾನವೀಯತೆ ಅಳಿದು ದೈವಗುಣವೇ ಹಿಂದುಳಿದರೆ  ಯಾರನ್ನು ದ್ವೇಷ ಮಾಡಿ ಏನೂ ಪ್ರಯೋಜನವಿಲ್ಲ. ದ್ವೇಷವೇ ಮಾನವನ ಶತ್ರು. . ಶತ್ತುದೇಶಗಳನ್ನು ಮಿತ್ರರಾಗಿಸ ಹೋಗಿ ನಮ್ಮವರನ್ನೇ ಶತ್ರುಗಳಾಗಿಸಿಕೊಂಡರೆ ಅತಿಥಿಗಳೇ ತಿಥಿ ಮಾಡೋ ಕಾಲ ಬರುತ್ತದೆ. ಆದರೆ ಅವರಿಗೆ ಸಂಸ್ಕಾರ,ಧರ್ಮವೇ ಗೊತ್ತಿಲ್ಲದೆ ಹೋದರೆ  ಜೀವ ಅತಂತ್ರಸ್ಥಿತಿಗೆ ತಲುಪುತ್ತದೆ. ಭೂತ ಪ್ರೇತ,ಪಿಶಾಚಿಗಳೆಂದು ಕರೆಯಲ್ಪಡುವ ಶಕ್ತಿಯಿಂದ ಶಾಂತಿ ಪಡೆಯಬಹುದೆ? 
ನಾವು ಯಾರನ್ನೇ ಆಗಲಿ  ಅರ್ಥ ಮಾಡಿಕೊಳ್ಳಲು ಜ್ಞಾನದ ಅಗತ್ಯವಿದೆ.ಎಲ್ಲರಲ್ಲಿಯೂ ಅಡಗಿರುವ ಸಾಮಾನ್ಯಜ್ಞಾನ ದಿಂದ ಆಂತರಿಕ ಶುದ್ದಿ ಮಾಡಿಕೊಂಡ ನಂತರ ವಿಶೇಷ
ಜ್ಞಾನವನ್ನರಿತು ಸದ್ಬಳಕೆ ಮಾಡಿಕೊಂಡರೆ  ಸಮಾನತೆ. ಅಸಮಾನತೆಗೆ ಕಾರಣವೇ  ರಾಜಕೀಯ. ಇಲ್ಲಿ ಪ್ರಜಾಪ್ರಭುತ್ವ ಇರೋವಾಗ ಯಾರನ್ನು ಯಾರು ಆಳಬೇಕಿತ್ತು. ಹೇಗೆ ಜ್ಞಾನ ಪಡೆದು ಜ್ಞಾನಿಗಳಾಗಿ ಯೋಗಿಗಳಂತೆ ಜೀವಿಸಬೇಕಿತ್ತು.
ಇವೆಲ್ಲವೂ ಹಿಂದಿನ ಮಹಾತ್ಮರೆ ನಡೆದು ನುಡಿದು ಹೋಗಿರುವಾಗ ಅದರ ಸಾರಾಂಶ,ತತ್ವವೇ ನಮಗೆ ರಸಾಯನವಾದರೆ ಉತ್ತಮ ಬದಲಾವಣೆ. ಭಾರತವನ್ನು ವಿದೇಶಮಾಡೋದು ಅಜ್ಞಾನ.
ವಿದೇಶದಲ್ಲಿರುವ  ಭಾರತೀಯರನ್ನು  ಕರೆತರಲು ಸಾಧ್ಯವೆ?
ಎಲ್ಲಿಗೆ ಹೋಗುತ್ತಿದೆ ಭಾರತ? ನಾವ್ಯಾರು? ಪ್ರತಿಭಾವಂತರಿಗೆ
ಅವಕಾಶ ನೀಡದೆ ಪ್ರತಿಮೆಗಳಿಗೆ ಹಣ ಸುರಿದರೆ  ದೇಶಕ್ಕೆ ನಷ್ಟ. ಆತ್ಮಾವಲೋಕನ ಅಗತ್ಯವಿದೆ. ನೆಲಜಲ  ವ್ಯವಹಾರ ಬೇಕು ಧರ್ಮ ಶಿಕ್ಷಣ ಬೇಡವೆ?

Thursday, September 8, 2022

ಪ್ರತಿಮೆಗೂ ಪ್ರತಿಭೆಗಿರುವ ವ್ಯತ್ಯಾಸ

ಪ್ರತಿಮೆಗಳಿಂದ ಪ್ರತಿಭಾವಂತರು ಬೆಳೆದರೆ ಉತ್ತಮ ಪ್ರಗತಿ.
ಪ್ರತಿಮೆಗಳನ್ನು ಬಳಸಿಕೊಂಡು  ರಾಜಕೀಯಕ್ಕೆ ಇಳಿದಾಗ ಜನರು ಪ್ರತಿಮೆಯನ್ನಷ್ಟೇ ನೋಡಲು ಬರಬಹುದು.ಆ ಪ್ರತಿಮೆಯೊಳಗಿರುವ ಶಕ್ತಿ ಕಾಣೋದು ಕಷ್ಟವಾಗಬಹುದು.
ದೇವತಾರಾಧನೆಯಲ್ಲಿ ನಿರಾಕಾರ ಬ್ರಹ್ಮನ ಕಾಣುವ ಶಕ್ತಿ ಕೆಲವರಲ್ಲಿ ಇದ್ದರೂ ಯಾವಾಗ ಆಕಾರಗಳು ಬದಲಾಗುತ್ತಾ
ಹೆಚ್ಚು ಹೆಚ್ಚು ಪ್ರತಿಮೆಗಳು ಅನಾವರಣವಾಗುವುದೋ ಹೊರಗಿನ ಕಣ್ಣು ತೆರೆದುಕೊಂಡಷ್ಟೂ ಒಳಗಣ್ಣು ಕಾಣದೆ ಹಿಂದುಳಿಯುವ ಸಾಧ್ಯತೆಗಳಿವೆ.  ದೇವತಾರಾಧನೆಯಿಂದ ದೈವತ್ವ ಬೆಳೆಯುವುದು ಜ್ಞಾನದ ಲಕ್ಷಣ. ಹಿಂದಿನ ದೇವಾನುದೇವತೆಗಳ ಕಾಲದಲ್ಲಿದ್ದ   ಮಹಾತ್ಮರು ಇಂದಿಲ್ಲ.ಇಂದಿನ ಜನಸಂಖ್ಯೆ ಅಂದಿರಲಿಲ್ಲ.ಹಾಗಾದರೆ ಈ
ಜನಸಂಖ್ಯೆಯನ್ನು  ತಡೆಯಲು ಜ್ಞಾನದಿಂದ ಸಾಧ್ಯವಿತ್ತು. ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಂಡು  ಪ್ರತಿಮೆಯೊಳಗಿದ್ದ ತತ್ವವನ್ನು  ತಿಳಿಯುತ್ತಾ ದೈವತ್ವದ ಕಡೆಗೆ ನಡೆದವರು ಮುಕ್ತಿ
ಪಡೆಯುತ್ತಿದ್ದ ಕಾರಣ ಜನಸಂಖ್ಯೆ  ಕಡಿಮೆಯಿತ್ತು. ಆದರೆ ಕಲಿಗಾಲದ ಪ್ರಭಾವದಿಂದಾಗಿ ಜನರಲ್ಲಿ  ಅಜ್ಞಾನ ಬೆಳೆದು
ದೈವತ್ವ ಕುಸಿಯುತ್ತಾ ದೇವರನ್ನು ವ್ಯವಹಾರಕ್ಕೆ ಬಳಸಿ ಪ್ರತಿಮೆಗಳೇನೂ ಸಾಕಷ್ಟಿದೆ.ಆದರೆ ನಮ್ಮೊಳಗೇ ಇರುವ ಆ ದೈವಶಕ್ತಿಯನ್ನು ಬೆಳೆಸುವ ವಿದ್ಯೆಯಿಲ್ಲದೆ ಅವಿದ್ಯಾವಂತರಿಗೆ
ಪ್ರತಿಮೆಗಳು  ಸಹಕಾರಿಯಾಗುತ್ತಿದೆ ಎಂದರೆ ತಪ್ಪು ಎನ್ನಬಹುದಾದರೂ ಕೆಲವೆಡೆ ಮಾತ್ರ ಪ್ರತಿಮೆಗಳಿಂದ ಜನ
ಪ್ರೇರಿತರಾಗಿ ದೇಶಭಕ್ತರಾಗಿರಬಹುದು,
ದೇವರಭಕ್ತರಾಗಿರಬಹುದು.ಆದರೆ ಹಲವರಿಗೆ ಇದನ್ನು  ಹೇಗೆ ಬಳಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂಬ ಅರಿವಿಲ್ಲದೆ ತಮ್ಮ ತಮ್ಮ ಸನ್ಮಾನಕ್ಕಾಗಿ ಇದನ್ನು ಬಳಸಿಕೊಂಡು ಜನರ ದಾರಿ ತಪ್ಪಿಸಿದರೆ ಕಷ್ಟ ನಷ್ಟ. ಯಾವುದೇ  ಸ್ಥಳವನ್ನು ವೀಕ್ಷಣೆ ಮಾಡಲು ಹೊರಟರೆ ಪ್ರವಾಸವಾಗುತ್ತದೆ. ಹಾಗೆ ಯಾತ್ರೆಯಾಗಿ ಪವಿತ್ರ ಸ್ಥಳವಾಗಿ
ಕಂಡರೆ ಯಾತ್ರಾಸ್ಥಳ ವಾಗುತ್ತದೆ. ಹಣವಿಲ್ಲದೆ ಪ್ರವಾಸ,
ಯಾತ್ರೆ ಮಾಡಲಾಗದು. ಹಣದ ಮೂಲವೂ ಜ್ಞಾನದಿಂದ  ಇದ್ದರೆ ನಿಜವಾದ  ಧರ್ಮ ವಾಗುತ್ತದೆ.
ಜ್ಞಾನೋದಯವಾಗುತ್ತದೆ.ಪ್ರತಿಯೊಂದು ಪ್ರತಿಮೆಯ  ಆಂತರಿಕ ಶಕ್ತಿ  ಅಗಾಧ ವಾಗಿರುತ್ತದೆ. ಇದನ್ನು ಯಾವ ಮಣ್ಣಿನಿಂದ, ಲೋಹದಿಂದ ಮಾಡಿರುದೆನ್ನುವ ಬಗ್ಗೆ
ಪ್ರವಾಸಿಗರು ಯಾತ್ರಿಗಳು ಗಮನಿಸದೆ ಆ ಪ್ರತಿಮೆಯ ರೂಪ ತಾಳಿದ‌ ಮಹಾತ್ಮರಲ್ಲಿದ್ದ ಜ್ಞಾನಶಕ್ತಿಯನ್ನು ಅರ್ಥ ಮಾಡಿಕೊಳ್ಳಲು  ನಮಲ್ಲಿ ಜ್ಞಾನವಿದ್ದರೆ ಮಾತ್ರ ಸಾಧ್ಯ. ಹಾಗೆ ಮಕ್ಕಳೂ ಕೂಡ ಒಂದು ಬೊಂಬೆಯ ಹಾಗೆ ಹೇಳಿದಂತೆ ಕೇಳುತ್ತಾರೆ.ಅವರೊಳಗೇ ಅಡಗಿರುವ ಪ್ರತಿಭೆ ಜ್ಞಾನವನ್ನು
ಗುರುತಿಸಿ ಪೂರಕವಾದ ಶಿಕ್ಷಣ ನೀಡಿದಾಗಲೇ ಪ್ರತಿಭಾವಂತರಾಗಿ ಬೆಳೆಯುವುದು. ಇದಕ್ಕೆ ವಿರುದ್ದ ಶಿಕ್ಷಣ ನೀಡಿ ಶಿಕ್ಷಿಸಿದರೆ ಮುಂದೆ ಅವರೇ ತಿರುಗಿ ಶಿಕ್ಷೆ ನೀಡುವಾಗ
ಮಕ್ಕಳು ಸರಿಯಿಲ್ಲ ಎನ್ನುವ ಬದಲಾಗಿ ಪೋಷಕರು ನೀಡಿದ ಶಿಕ್ಷಣ ಸರಿಯಿಲ್ಲವೆನ್ನುವುದು ಸೂಕ್ತ. ಹೀಗಾಗಿ ಪ್ರತಿಭೆ ಯನ್ನು ಗುರುತಿಸಲೂ ಜ್ಞಾನವಿರಬೇಕು. ಒಂದು ದೇವದೇವಿಯರ ,ವ್ಯಕ್ತಿಯನ್ನು ಪ್ರತಿಮೆಯಾಗಿಸುವುದೂ  ಅವರ ದೈವತ್ವದ ಜ್ಞಾನವನ್ನು ಗುರುತಿಸುವುದಕ್ಕೆ ಹೊರತು ವ್ಯವಹಾರಕ್ಕೆ, ರಾಜಕೀಯಕ್ಕೆ  ಇಳಿಸಬಾರದೆನ್ನುವರು ಮಹಾತ್ಮರು.
ಪ್ರತಿಮೆಯಾಗಿರಲೂ ಜ್ಞಾನದಿಂದಲೇ ಸಾಧ್ಯ.ಆದರೆ ಅದನ್ನು ಗುರುತಿಸಲು ಜ್ಞಾನವಿಲ್ಲವಾದರೆ ಪ್ರತಿಮೆಯೂ ವ್ಯರ್ಥ, ಪ್ರತಿಭೆಯೂ ವ್ಯರ್ಥ.
ಪ್ರತಿಮೆಯು ಭೌತಿಕ ಜಗತ್ತಿನ ಒಂದು ರೂಪ.ಪ್ರತಿಭೆ ಆಂತರಿಕ ಶಕ್ತಿಯ ಒಂದು ರೂಪ. ಯಾವಾಗ ಪ್ರತಿಭೆಯನ್ನು
ಬೆಳೆಸದೆ ಪ್ರತಿಮೆಗಳಿಗೆ ಹಣ ಸುರಿಯಲಾಗುವುದೋ ಅದು
ಸಾಲವಾಗಿ  ಕಾಡುತ್ತದೆ. ಜನರೊಳಗಿರುವ ಜ್ಞಾನ ಹೆಚ್ಚಲು
ಅವರವರ ಪ್ರತಿಭೆಗನುಸಾರವಾಗಿ ಶಿಕ್ಷಣ ಪಡೆಯುವ  ಅವಕಾಶ ಇದ್ದರೆ ಇದ್ದಲ್ಲಿಯೇ  ಶಕ್ತಿಶಾಲಿಗಳಾಗಬಹುದು.
ಸಾಕಾರದಿಂದ ನಿರಾಕಾರದೆಡೆಗೆ ಸಾಗುವಾಗ ಸಾಲ ತೀರಬೇಕು. ಇದನ್ನು ನಿಜವಾದ ಜ್ಞಾನವೆಂದಿದ್ದಾರೆ.  ದೇಶ ದೇಹ ವೆರಡೂ ಒಂದೇ ನಾಣ್ಯದ ಎರಡು ಮುಖಗಳು.
ಇದರಲ್ಲಿ ದೇಶಕ್ಕಾಗಿ ದೇಹತ್ಯಾಗ ಮಾಡುವುದು
ದೇಶಭಕ್ತರ  ಪ್ರತಿಭೆ. ದೇಹಕ್ಕಾಗಿ ದೇಶತ್ಯಾಗ ಮಾಡುವುದು
ದೇಶಭ್ರಷ್ಟರ ಪ್ರಗತಿ. ಪ್ರತಿಮೆಗಳಿಂದ  ದೇಶದ ಉದ್ದಾರ ಆಗಬೇಕಾದರೆ ದೇಹದೊಳಗೆ ಪ್ರತಿಮೆಯೊಳಗಿರುವ ಆತ್ಮಶಕ್ತಿ   ಬೆಳೆಯಬೇಕು.ಆತ್ಮಶಕ್ತಿ ಬೆಳೆಸಿಕೊಳ್ಳಲು ಅಧ್ಯಾತ್ಮ ಶಿಕ್ಷಣವಿರಬೇಕು.ಅಧ್ಯಾತ್ಮ ಶಿಕ್ಷಣವನ್ನು ನೀಡದೆ
ಪ್ರತಿಮೆಯನ್ನಷ್ಟೇ   ಬೆಳೆಸುತ್ತಿದ್ದರೆ ಜನರ ಅಜ್ಞಾನ ಬೆಳೆಯುತ್ತಾ ಕೊನೆಗೊಮ್ಮೆ ಪ್ರತಿಮೆಯನ್ನು  ಹಾಳುಮಾಡಿ
ತಮ್ಮೊಳಗಿನ ಅಜ್ಞಾನವನ್ನು ಪ್ರದರ್ಶನ ಮಾಡವಂತಾಗ
ಬಾರದು.ಎಲ್ಲರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಇದಕ್ಕೆ ಕಾರಣ ಅಸಮಾನತೆಯ ರಾಜಕಾರಣ.ಈ ರಾಜಕಾರಣದಿಂದ ಬೆಳೆಯುವ ಪ್ರತಿಮೆಗಳು  ನಿಜವಾದ ಪ್ರತಿಭೆಯನ್ನು ಗುರುತಿಸದೆ ಆಳಿದರೆ  ಎಲ್ಲಾ ವ್ಯರ್ಥ. ಸಾಕಷ್ಟು  ಹಳೆಯ ದೇವಾನುದೇವತೆಗಳ ವಿಗ್ರಹಗಳು ಮೂಲೆ ಸೇರಿದೆ. ಹೊಸಹೊಸ ಪ್ರತಿಮೆಗಳು ತಯಾರಾಗಿ ಹೊರಬರುತ್ತಿದೆ. ಹಾಗಾದರೆ ಧರ್ಮ ರಕ್ಷಣೆ ಆಗಿದೆಯೆ? 
ಸತ್ಯಕ್ಕೆ ಬೆಲೆಯಿದೆಯೆ? ಮಹಾತ್ಮರುಗಳೆಲ್ಲಿ?
ದೇಶದಲ್ಲಿ ಶಾಂತಿ ನೆಲೆಸಲು ಜ್ಞಾನವನ್ನು ಹೆಚ್ಚಿಸಿಕೊಳ್ಳಲು
ಪ್ರಜೆಗಳು ಮುಂದಾಗಬೇಕಿದೆ.  ಹಿಂದಿನ ದೇವತೆಗಳು,
ಮಹಾತ್ಮರುಗಳು, ದಾಸ,ಶರಣ,ಸಂತರ ತತ್ವಜ್ಞಾನ ಬಿಟ್ಟು 
ತಂತ್ರದಿಂದ  ಎಷ್ಟೇ ರಾಜಕೀಯ ಪ್ರತಿಮೆಗಳು ಹೊರ
ಬಂದರೂ ಅದೂ ಕೂಡ ದೇಶದ ಸಾಲವೇ.ಆ ಸಾಲ ತೀರಿಸಲು ಪ್ರತಿಮೆಯೊಳಗಿರುವ‌ ಮಹಾಶಕ್ತಿಯನ್ನು ಜನರು ಅರ್ಥ ಮಾಡಿಕೊಳ್ಳಲು ಜ್ಞಾನವಿರಬೇಕಿದೆ.ಅಜ್ಞಾನದಲ್ಲಿಯೇ
ಜನರನ್ನು ಆಳೋದಕ್ಕೆ ಸುಲಭ.ಕಣ್ಣಿಗೆ ಕಾಣುವ ಪ್ರತಿಮೆಗೂ
ಕಾಣದ ಪ್ರತಿಭೆಗೂ ವ್ಯತ್ಯಾಸವಿಷ್ಟೆ. ಒಂದಕ್ಕೆ ಹಣಬೇಕು.
ಇನ್ನೊಂದು ಜ್ಞಾನಬೇಕು. ಒಂದು ಎಲ್ಲರಿಗೂ ಕಾಣಬಹುದು.
ಇನ್ನೊಂದು ಯಾರಿಗೂ ಕಾಣದಿರಬಹುದು.
ಒಂದನ್ನು  ಎರಡಾಗಿಸಲಾಗದು.ಆದರೆ ಪ್ರತಿಭೆಯನ್ನು  ಎಷ್ಟು ಬೇಕಾದರೂ ಬೆಳೆಸಿಕೊಂಡು ಹಂಚಿಕೊಳ್ಳಲು ಸಾಧ್ಯ.
ಈ ಹಂಚಿಕೆಯಿಂದ ಮುಕ್ತಿ ಸಿಗಬಹುದು.ಯಾವಾಗ ಜ್ಞಾನ
 ಸರಿಯಾಗಿ ಹಂಚಿಕೆಯಾಗುವುದೋ ಆಗ ಯಾವ ಪ್ರತಿಮೆ
ಇಲ್ಲದೆಯೂ ನಿರಾಕಾರ ಬ್ರಹ್ಮನೆಡೆಗೆ ಮನಸ್ಸು ಹರಿಯುತ್ತದೆ
ಒಟ್ಟಿನಲ್ಲಿ ಪ್ರತಿಮೆಗಳು  ರಾಜಕೀಯವನ್ನು ಬೆಳೆಸದೆ ರಾಜಯೋಗಿಗಳನ್ನು ಬೆಳೆಸುವಂತಾದರೆ  ಯೋಗಿಗಳ ದೇಶ
ಪ್ರತಿಭಾವಂತ ಜ್ಞಾನಿಗಳಿಂದ ಪ್ರಗತಿ ಹೊಂದಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಬಾರದಷ್ಟೆ.
ದೇಶದ ತುಂಬಾ ತುಂಬಿರುವ ಅಜ್ಞಾನವನ್ನು ಹೊಡೆದೋಡಿಸಲು ಜ್ಞಾನದ ಶಿಕ್ಷಣ ನೀಡುವುದು ಧರ್ಮ. ಶಿಕ್ಷಣ ಪಡೆಯುವುದು ಪ್ರಜಾಧರ್ಮ. ಎಲ್ಲಿಯವರೆಗೆ ಪ್ರಜೆಗಳು  ಪ್ರತಿಮೆಗಳನ್ನು ವ್ಯವಹಾರಕ್ಕೆ ಬಳಸಿಕೊಂಡು ಜೀವನ ನಡೆಸುವರೋ ಅಲ್ಲಿಯವರೆಗೆ ಜ್ಞಾನ ಬರೋದಿಲ್ಲ.
ಜ್ಞಾನವಿದ್ದರೂ ವ್ಯವಹಾರವೇ ಧರ್ಮ ಕ್ಕಿಂತ ಮುಖ್ಯ ಎನ್ನುವುದಾದರೆ  ಹಣ ಸಿಕ್ಕರೂ  ಜ್ಞಾನ ಕುಸಿಯುತ್ತದೆ.
ಭಾರತವನ್ನು  ಪ್ರತಿಮೆಗಳಿಂದ ಬೆಳೆಸುವ ಜೊತೆಗೆ ಪ್ರತಿಭಾವಂತರನ್ನು ಸರಿಯಾದ ಶಿಕ್ಷಣ ನೀಡುವುದರ ಮೂಲಕ ಬೆಳೆಸಿದರೆ ಜ್ಞಾನಿಗಳ ದೇಶವಾಗುತ್ತದೆ. ಯಾವುದೇ ಆಗಲಿ ಅತಿಯಾಗಬಾರದಷ್ಟೆ. ಸರ್ಕಾರದ ಹಣ ಪ್ರಜೆಗಳ ಹಣ,ಸರ್ಕಾರದ ಸಾಲ ಪ್ರಜೆಗಳ ಸಾಲ. ಸಾಲ ತೀರಿಸಲು ಜ್ಞಾನದಿಂದ, ಪ್ರತಿಭೆಯಿಂದ ಸಾಧ್ಯವಿದೆ. ಯಾರೋ ಒಬ್ಬರಿಂದ  ಧರ್ಮ ರಕ್ಷಣೆ, ದೇಶ ರಕ್ಷಣೆ ಅಸಾಧ್ಯ.
ಪ್ರತಿಯೊಬ್ಬರಿಂದಲೂ ಪ್ರತಿಭಾವಂತರಿಂದಲೂ ಸಾಧ್ಯವಿದೆ.
ಆದರೆ ಇದನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ. ಹಣದಿಂದ ದೇಶವಲ್ಲ.ಜ್ಞಾನದಿಂದ ದೇಶ ಕಟ್ಟಬೇಕು. ಪ್ರತಿಮೆಯಿಂದ  ಭಕ್ತಿ ಜ್ಞಾನ  ಬೆಳೆಯುವ ಜೊತೆಗೆ ಪ್ರತಿಭೆಗೆ ಪ್ರೋತ್ಸಾಹ ನೀಡಿ
,ಶಿಕ್ಷಣ ನೀಡಿ  ಜ್ಞಾನದಿಂದ ನಡೆಯಲು ಬಿಡಬೇಕಿದೆ. ಆಳುವ ಅರಸನಿಗಿಂತಲೂ ಆಳಾಗಿ ದುಡಿಯುವ ಪರಮಾತ್ಮನ  ದಾಸರೆ ಶ್ರೇಷ್ಠರು. ಏನಂತೀರ? ಇದಕ್ಕೆ ಉತ್ತರವಿದೆಯೆ? 
ಎಲ್ಲರೂ  ಪರಮಾತ್ಮನ ದಾಸರಾಗಲಾಗದು  ಅದು ಬಿಟ್ಟು ಎಲ್ಲಾ ಪರಕೀಯರ ದಾಸರಾದರೆ ? ಪ್ರತಿಮೆಗಳ ಜೊತೆಗೆ  ಪ್ರತಿಭೆಗಳೂ ಮೋಸಹೋಗುತ್ತವೆ. ರಾಜಯೋಗಿಗಳ ಪ್ರತಿಮೆಗಳಿಂದ  ರಾಜಕೀಯ ಬೆಳೆಯಬಾರದು. 

Tuesday, September 6, 2022

ಬೇರು ದೊಡ್ಡದೋ ರೆಂಬೆಕೊಂಬೆಗಳೋ

ವಿವೇಕಾನಂದರ ರಾಜಯೋಗ

ವಿವೇಕಾನಂದರು ತಿಳಿಸಿದ ರಾಜಯೋಗವೆ ಬೇರೆ ಇಂದಿನ ರಾಜಕೀಯವೆ ಬೇರೆ.ರಾಜಯೋಗದಿಂದ ಮುಕ್ತಿ ಮೋಕ್ಷ ಪಡೆಯಬಹುದು.ಇದರಲ್ಲಿ 8 ಮೆಟ್ಟಿಲುಗಳಿವೆ. ಮೊದಲನೆಯದು ಯಮ,ಅಹಿಂಸೆ,ಅಸ್ತೇಯ,ಬ್ರಹ್ಮಚರ್ಯ ಮತ್ತು ಅಪರಿಗ್ರಹ.
ಎರಡನೆಯದು ನಿಯಮ,ಶುಚಿ,ತೃಪ್ತಿ, ತಪಸ್ಸು, ಅಧ್ಯಯನ ಮತ್ತು ಈಶ್ವರನಲ್ಲಿ ಶರಣಾಗತಿ,
ನಂತರ ಆಸನ,ಆನಂತರ ಪ್ರಾಣಾಯಾಮ  ಮುಂದಿನದು
ಪ್ರತ್ಯಾಹಾರ ಅಥವಾ ಇಂದ್ರಿಯ ಗಳನ್ನು ಅವಕ್ಕೆ ಸಂಬಂಧ ಪಟ್ಟ ವಸ್ತುಗಳಿಂದ ಹಿಂಪಡೆಯುವುದು.ಆನಂತರ  ಧಾರಣ ಅಥವಾ ಮನಸ್ಸನ್ನು ಒಂದು ವಸ್ತುವಿನ ಮೇಲೆ ಏಕಾಗ್ರಗೊಳಿಸುವುದು. ಇದರ ನಂತರ ಬರುವುದೆ ದ್ಯಾನ ಮತ್ತು ಸಮಾಧಿ.
ನಮಗೆ ಕಾಣುವಂತೆ ಯಮ ಮತ್ತು ನಿಯಮಗಳು ನೈತಿಕ ಶಿಕ್ಷಣ.ಇವುಗಳ ತಳಹದಿಯಿಲ್ಲದೆ ಯಾವ ಯೋಗಾಭ್ಯಾಸವೂ ಜಯಪ್ರದವಾಗುವುದಿಲ್ಲ.ಯಮ ನಿಯಮ ಪಳಗಿದ ಮೇಲೆ ಯೋಗಿಯು ತನ್ನ ಸಾಧನೆಯ ಫಲವನ್ನು ಪಡೆಯುತ್ತಾನೆ. ಇವುಗಳಿಲ್ಲದೆ ಯೋಗವೆಂದಿಗೂ
ಫಲಕಾರಿಯಾಗದು.ಯೋಗಿಯು ಮಾತು,ಕೃತಿ,ಆಲೋಚನೆಯಿಂದಲೂ ಕೂಡ ಯಾರನ್ನೂ ಹಿಂಸಿಸಬಾರದು,ದಯೆ ಮಾನವನಿಗೆ ಮಾತ್ರವಲ್ಲ ಇದು ಈ ಹಂತವನ್ನೂ ಮೀರಿಹೋಗಿ ಇಡೀ ವಿಶ್ವವನ್ನೇ ಆಲಿಂಗನ ಮಾಡಬೇಕಾಗುವುದು.ಆನಂತರ ದ ಮೆಟ್ಟಿಲೇ ಆಸನ.ಉತ್ತಮ ಮಾನಸಿಕ ಸ್ಥಿತಿಗೆ ಏರವವರೆಗೂ ಪ್ರತಿದಿನ ಶಾರೀರಿಕ ಮತ್ತು ಮಾನಸಿಕ ಸಾಧನೆಯನ್ನು ಪ್ರತಿದಿನ ಮಾಡಬೇಕು.ಎಂದು ರಾಜಯೋಗದಲ್ಲಿ ತಿಳಿಸಿದ್ದಾರೆ.ಈಗಿನ
ಯೋಗಿಗಳಲ್ಲಿ ಯೋಗ ಕೇಂದ್ರಗಳಲ್ಲಿ   ಆಸನಗಳು ಪ್ರಾಣಾಯಾಮಗಳು ಇದ್ದರೂ ಹೊರಗಿನ ರಾಜಕೀಯದಲ್ಲಿ ಮುಳುಗಿರುವ ಮನಸ್ಸನ್ನು ತಡೆಹಿಡಿಯಲಾಗದವರೆ ಹೆಚ್ಚಾಗಿ
ಯೋಗ ಕೇಂದ್ರಕ್ಕೆ ಬರುತ್ತಿರುವುದನ್ನು ಗಮನಿಸಿದರೆ ನಮ್ಮ ರೋಗಕ್ಕೆ  ಕಾರಣವಾಗಿರುವ  ರಾಜಕೀಯವನ್ನು ಬಿಡಲು ಸಾಧ್ಯವೆ? ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸ್ವಲ್ಪ ಜ್ಞಾನ ಒಳಗಿತ್ತು.ಅದನ್ನು ಬಿಟ್ಟು ಹೊರಗಿನಿಂದ ವಿಶೇಷ ಜ್ಞಾನ ಒಳಗೆ ತುಂಬಿಕೊಂಡು  ಅಗತ್ಯಕ್ಕೆ ಮೀರಿದಹಣ ಸಂಪಾದನೆ  ಮಾಡಿ ಋಣವನ್ನು ಬೆಳೆಸಿಕೊಂಡು  ಮೂಲದಿಂದ ದೂರವಾದ ಮನಸ್ಸನ್ನು ತಡೆಹಿಡಿಯಲಾಗದೆ
ತಿರುಗಿ ಬರುವ ಪ್ರಯತ್ನವಾಗಿದೆ.ಇದಕ್ಕೆ ಹೊರಗಿನ ಸರ್ಕಾರ ಏನೂ ಮಾಡಲಾಗದು.
ರಾಜಯೋಗದ ಮೊದಲ ಮೆಟ್ಟಿಲನ್ನು ಹತ್ತಲು ಪ್ರಯತ್ನವೇ ಪಡದೆ ರಾಜಕೀಯ ನಡೆಸಿದರೆ ಯೋಗಿಯಾಗಲು ಅಸಾಧ್ಯ.
ಸಂನ್ಯಾಸಿಗಳಾದರೂ ಆಗಬಹುದು.ಯೋಗಿಯಾಗುವುದೇ ಬಹಳ ಕಷ್ಟ. ಎಲ್ಲವನ್ನೂ ಎಲ್ಲರನ್ನೂ ತೊರೆದು ಹೋಗಬಹುದು. ಇದ್ದೂ ಇಲ್ಲದಂತಿರುವ ಸ್ಥಿತಪ್ರಜ್ಞಾವಂತರು ಇಂದು ಕಾಣುವುದು ಕಷ್ಟ.ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ. ಕಾಣದಿರೋದೆ ಸತ್ಯ.ಆ ಸತ್ಯವನ್ನು ಯೋಗ್ಯ ಮಾರ್ಗದಲ್ಲಿ ಆಂತರಿಕ ಶಕ್ತಿಯಿಂದ ತಿಳಿದವರೆ ಮಹಾಯೋಗಿಗಳು.ಕಲಿಗಾಲದಲ್ಲಿ ಜನರನ್ನು ದಾರಿತಪ್ಪಿಸಿ ಆಳುವವರೆ ಹೆಚ್ಚು.ತಾವೇ ಆಳಾಗಿದ್ದರೂ ಇತರರನ್ನು ಆಳಿ ಅಳಿಸಿದರೆ  ಪರಮಾತ್ಮ ಒಲಿಯುವನೆ? ನಾನೇ ದೇವರೆಂದರೆ ದೇವರು ಕಾಣುವನೆ? ದೇಶದೊಳಗಿರುವ ಎಲ್ಲರಿಗೂ ದೇಶ ಕಾಣೋದಿಲ್ಲ ಕಾರಣ ನಾನೇ ಬೇರೆ ದೇಶ ಬೇರೆ ಎಂದು ಅದರೊಳಗೇ ಇದ್ದು ದೇಶ ಆಳೋ ರಾಜಕೀಯವಿದೆ. ಇದೇ ಭಾರತೀಯರ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ. ಒಟ್ಟಿನಲ್ಲಿ  ಯೋಗವನ್ನು ರಾಜಕೀಯದಿಂದ  ಪಡೆಯಲಾಗದು.
ಹೃದಯರೋಗಕ್ಕೆ ಹೃದಯವಂತಿಕೆಯ ಗುಣಜ್ಞಾನ ಹೆಚ್ಚಬೇಕು. ವೈಜ್ಞಾನಿಕ ಜಗತ್ತಿನಲ್ಲಿ ಹೃದಯದ ಕಸಿ ಮಾಡಿ ಜೀವ ಉಳಿಸಬಹುದಷ್ಟೆ.ಹೃದಯವಂತರನ್ನು ಬೆಳೆಸುವ  ರಾಜಯೋಗದ ಶಿಕ್ಷಣವನ್ನು ನೀಡದೆ ಹೃದಯ ಶುದ್ದಿಯಾಗಲು ಕಷ್ಟ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಒತ್ತಡದ ಕಾರಣಕ್ಕೆ ಹೃದಯರೋಗ ಹೆಚ್ಚಾಗಿದೆ. ನಮ್ಮ ಭಾರತೀಯ ಶಿಕ್ಷಣವು ಹೃದಯವಂತಿಕೆಯನ್ನು ಬೆಳೆಸುವತ್ತ ಸಾಗುವುದು ಉತ್ತಮ. 

Monday, September 5, 2022

ಅದ್ವೈತ ದೊಳಗಿನ ಧ್ವೈತ ಒಂದೆ?

ಅದ್ವೈತ ಸಿದ್ದಾಂತ ವನ್ನು ಸಂನ್ಯಾಸಿಯಾಗಿದ್ದುತಿಳಿಯುವುದೇ ಬೇರೆ,ಸಂಸಾರದಲ್ಲಿದ್ದು ತಿಳಿಸುವುದೇ ಬೇರೆ. ಶ್ರೀ ಶ್ರೀ ಶಂಕರಾಚಾರ್ಯರಂತಹ ಮಹಾಯೋಗಿಗಳ  ಅನುಭವವನ್ನು ಈಗಿನ   ರಾಜಕೀಯದಿಂದ ಅರ್ಥ ಮಾಡಿಕೊಳ್ಳಲು ಕಷ್ಟ.ರಾಜಯೋಗದಿಂದ ಸಾಧ್ಯವಿದೆ. ತತ್ವಜ್ಞಾನವನ್ನು ತಂತ್ರಜ್ಞಾನದ ಮಾಧ್ಯಮದಿಂದ ಪ್ರಚಾರ ಮಾಡಬಹುದು. ಅದರ ಆಳಕ್ಕೆ ಇಳಿಯಲು ಸ್ವತಂತ್ರ ಜ್ಞಾನದ ಅಗತ್ಯವಿದೆ. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ
ಅಗತ್ಯವಾಗಿ ಇಂದು ಬೇಕಾಗಿದೆ. ರಾಜಯೋಗ ತನ್ನ ತಾನರಿತು ನಡೆಯೋದಕ್ಕೆ ಪರಮಾತ್ಮನೆಡೆಗೆ ನಡೆಸುತ್ತದೆ.
ರಾಜಕೀಯ ತನ್ನ ತಾನರಿಯದೆ ಪರರನ್ನು  ನಡೆಸುವತ್ತ ನಡೆಸಿ ಪರಕೀಯರಾಗಿಸಬಹುದು. ಅಧರ್ಮ,ಅಸತ್ಯ,ಅನ್ಯಾಯ,ವಿದೇಶ, ಅಜ್ಞಾನ,ಅದ್ವೈತ ಹೀಗೇ  ಮೊದಲನೆಯ ಅ ಪದವನ್ನು  ಬಿಟ್ಟು ಆ ಕಡೆ ನಡೆದವರು ಮಹಾತ್ಮರು. ಅಹಂಕಾರ, ಅಸಹಕಾರ,
ಅಸಹಾಯಕತೆಯೇ  ಇದಕ್ಕೆ ಕಾರಣ. ಇದನ್ನು ಆತ್ಮವಿಶ್ವಾಸ,ಆತ್ಮಸಮಾಲೋಚನೆ,ಆತ್ಮಾವಲೋಕನದಿಂದ
ಮೆಟ್ಟಿ ನಿಂತು  ಆತ್ಮಜ್ಞಾನದ ಸಾಧನೆ ಮಾಡಿದ್ದಾರೆ ಮಹಾತ್ಮರು. ಭಾರತ, ಹಿಂದೂಸ್ತಾನ್, ಇಂಡಿಯವಾಗಿದೆ.
ಇದರಲ್ಲಿ  ನಾನ್ಯಾರು? ನಾವ್ಯಾರು?

Sunday, September 4, 2022

ಗುರುಗಳು×ಶಿಕ್ಷಕರು?

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. ಡಾ. ರಾಧಾಕೃಷ್ಣನ್ ರಂತಹ‌ ಮಹಾಶಿಕ್ಷಕರಲ್ಲಿದ್ದ  ಮಹಾಜ್ಞಾನವನ್ನು ಸ್ವಲ್ಪ ಮಟ್ಟಿಗೆ ಎಲ್ಲಾ ಶಿಕ್ಷಕರಲ್ಲಿಯೂ ಕಾಣಬಹುದು. ಗುರುವೇ ಬೇರೆ ಶಿಕ್ಷಕರೆ ಬೇರೆ ಎನ್ನುವ ಭಾವನೆಯಲ್ಲಿ ಮಕ್ಕಳು ಭೌತಿಕದಲ್ಲಿ ನಡೆದಿರುವ ಭಾರತ ಇಂದಿಗೂ ಎಲ್ಲಿ ತಪ್ಪಿರುವುದೆನ್ನುವ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿಯೇ ಕಾಲ ಹಾಕುತ್ತಿದೆ.ಕೆಲವರು ತಿರುಗಿ ಬರುವ ಪ್ರಯತ್ನದಲ್ಲಿರೋದು  ಸಂತೋಷಕರ ವಿಚಾರವಾದರೂ ಸಮಾಜದ ಕಟ್ಟಕಡೆಯ ಪ್ರಜೆಗಳವರೆಗೆ ಈ  ಬದಲಾವಣೆ ಆದಾಗಲೇ ಭಾರತ ಆತ್ಮನಿರ್ಭರ ವಾಗಲು ಸಾಧ್ಯ.ಆತ್ಮಜ್ಞಾನದಿಂದ  ವೈಜ್ಞಾನಿಕ  ಪ್ರಗತಿ ಕಾಣುತ್ತಾ ಮುಂದೆ ನಡೆದಂತೆಲ್ಲಾ ಅಧ್ಯಾತ್ಮ ವೇ ಹಿಂದುಳಿದಾಗಲೇ ಅಜ್ಞಾನ ಬೆಳೆಯುವುದು. ಮತ್ತೆ ಅಧ್ಯಾತ್ಮ ವನ್ನು ಬೆಳೆಸುವುದಷ್ಟೆ ಇದಕ್ಕೆ ಪರಿಹಾರ.ಆದರೆ ಇದರಲ್ಲಿ ರಾಜಕೀಯವಿರದೆ  ರಾಜಯೋಗವಿದ್ದರೆ ಶಿಕ್ಷಕರು ಗುರುಗಳು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬಹುದು.ಹಿಂದಿನ ಕಾಲದ ಶಿಕ್ಷಣದ ವಿಚಾರದ ಜೊತೆಗೆ ಶಿಕ್ಷಕರೂ ಪರಿಶುದ್ದವಾಗಿದ್ದು ಮಕ್ಕಳು ಅವರಲ್ಲಿ ಭಕ್ತಿ ಭಯವನ್ನಿಟ್ಟುಕೊಂಡಿದ್ದರು.ಈಗಿದು ಮರೆಯಾಗುತ್ತಿದೆ.
ಭಾರತೀಯ ಶಿಕ್ಷಣದ ಮೂಲ ಉದ್ದೇಶ  ಜ್ಞಾನವನ್ನು ಬೆಳೆಸಿ ಯೋಗಿಗಳಂತೆ ಜೀವನ ನಡೆಸುವುದಾಗಿದೆ. ಎಲ್ಲೋ ಒಂದೆಡೆ ಎಡವಿದ ಈ ಶಿಕ್ಷಣ ಪದ್ದತಿ ಇಂದು ಭೋಗ ಜೀವನಕ್ಕಾಗಿ, ಹಣ ಸಂಪಾದನೆಯ ಗುರಿಯಲ್ಲಿ  ಮುಂದೆ ನಡೆದು ಭೌತಿಕ ಜಗತ್ತಿನಲ್ಲಿ  ಶಿಕ್ಷಣ  ವಿದೇಶದವರೆಗೆ ಹರಡಿದೆ. ಶಿಕ್ಷಣ ಎಂದರೆ ಶಿಕ್ಷೆ ನೀಡುವ ಕ್ಷಣ ಎನ್ನುವ ಮಟ್ಟಿಗೆ ಮಕ್ಕಳಲ್ಲಿ ಭಯ ಹುಟ್ಟಿಸುವಂತಾಗಬಾರದಷ್ಟೆ. ಶಿಕ್ಷೆ  ಇಲ್ಲದೆ ಯಾವುದೇ  ಶಿಷ್ಯನ ಉದ್ದಾರ ಆಗೋದಿಲ್ಲ.ಆದರೂ ಯಾವ ವಿಷಯವನ್ನು ಕಲಿಯದಿದ್ದರೆ ಯಾವ   ವಿಚಾರದಲ್ಲಿ ಆಸಕ್ತಿ ತೋರದಿದ್ದರೆ ಶಿಕ್ಷೆ ನೀಡಿ ಕಲಿಸಲಾಗುತ್ತಿತ್ತೋ ಅದನ್ನು ಬಿಟ್ಟು
ಅನಾವಶ್ಯಕ, ಪ್ರಭುದ್ದ ವಿಚಾರಗಳನ್ನು ತಲೆಗೆ ನೇರವಾಗಿ ತುಂಬಿದಾಗ  ಮಕ್ಕಳು ಆಸಕ್ತಿ ತೋರದಿದ್ದರೆ ಶಿಕ್ಷೆ ನೀಡುವ ಮೂಲಕ  ಕಲಿಸುವುದರಿಂದ ಮಕ್ಕಳ ಮನಸ್ಸಿಗಾಗಲಿ ಭವಿಷ್ಯಕ್ಕಾಗಲಿ,ಜ್ಞಾನಕ್ಕಾಗಲಿ  ಸಮಸ್ಯೆ ಹೆಚ್ಚಾಗುತ್ತಿದೆ.ಶಿಕ್ಷಕ ಎನ್ನುವ ಪದವನ್ನು ಶಿ- ಶಿಸ್ತಿನಿಂದ, ಕ್ಷ-ಕ್ಷಮಿಸುತ್ತಾ,ಕ-ಕಲಿಸುವವರು ಎಂದಾದರೆ ಮಕ್ಕಳಲ್ಲಿ ಯಾವುದೇ ಶಿಸ್ತು,ವಿನಯ ಉತ್ತಮ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾ
ರೆಂದರೆ ಪೋಷಕರು,ಶಿಕ್ಷಕರು,ಶಿಕ್ಷಣ ಸಂಸ್ಥೆ, ಸರ್ಕಾರ ಚಿಂತನೆ ನಡೆಸುವುದು ಇಂದು ಅಗತ್ಯವಾಗಿದೆ. ಯಾವುದನ್ನು ಕಲಿತರೆ ಶಿಷ್ಟಾಚಾರ ಬೆಳೆಯುವುದೋ ಅದೇ ನಿಜವಾದ ಶಿಕ್ಷಣ. ಯಾರು ಶಿಷ್ಟಾಚಾರವನ್ನು ಕಲಿಸುವರೋ ಅವರು ಶಿಕ್ಷಕರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಚರಿತ್ರೆ  ಗಮನಿಸಿದರೆ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು  ಶಿಕ್ಷಣ ಪಡೆದು ಮಹಾಶಿಕ್ಷಕರಾಗಿದ್ದು  ಸೇವೆಯನ್ನು ನಿಸ್ವಾರ್ಥ ನಿರಹಂಕಾರದಿಂದ  ಮಾಡಿದವರು. ಹಾಗೆಯೇ ದೇಶದ ರಾಜಕೀಯದಲ್ಲಿದ್ದು ದೇಶದ ಭವಿಷ್ಯಕ್ಕಾಗಿ ತಮ್ಮ ಸೇವೆಯ ಮೂಲಕ  ಜನರಲ್ಲಿ ಅರಿವನ್ನು ಹೆಚ್ಚಿಸಿದ ಮಹಾವ್ಯಕ್ತಿತ್ವದ ಮಹಾತ್ಮರೆನ್ನಬಹುದು. ಅವರ  ಶಿಕ್ಷಣವು ಅಧ್ಯಾತ್ಮದ ಕಡೆಗೆ ನಡೆಸಿರೋದೆ  ಇದಕ್ಕೆ ಕಾರಣ.ಇಲ್ಲಿ ಅಧ್ಯಾತ್ಮ ಎಂದರೆ ತನ್ನ ಆತ್ಮಾನುಸಾರ  ನಡೆಯಲು, ತನ್ನ ತಾನರಿತು ನಡೆಯಲು  ಬೇಕಾದ  ಒಂದು ತತ್ವ ಜ್ಞಾನವೆನ್ನಬಹುದು.ತಂತ್ರಜ್ಞಾನದಿಂದ ನಮ್ಮ ಶಿಕ್ಷಣವು ಬೆಳೆದಿದೆ.ಮೂಲದ ತತ್ವದೆಡೆಗೆ ನಡೆದರೆ  ಬದಲಾವಣೆ ಸಾಧ್ಯವಿದೆ. ಸ್ವದೇಶವನ್ನು ವಿದೇಶ ಮಾಡೋದರಿಂದ ಅಧರ್ಮ  ಬೆಳೆದರೆ, ಸ್ವದೇಶವನ್ನು ಸ್ವದೇಶವನ್ನಾಗಿಸಿ  ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವುದೆ ನಿಜವಾದ ಧರ್ಮ ಶಿಕ್ಷಣ. ಧರ್ಮ ಶಿಕ್ಷಣವೆಂದರೆ ಪುರಾಣ,ಇತಿಹಾಸ,ವೇದ ವಿದ್ಯೆಯಷ್ಟೆ ಎನ್ನುವ ಮಟ್ಟಿಗೆ
ಬೆಳೆದು ಭೌತಿಕ ವಿಜ್ಞಾನದಿಂದ ದೂರವಾಗುತ್ತಾ ಅಂತರದಲ್ಲಿ ವಿದೇಶಿಗಳ ಪ್ರವೇಶವಾದ ಮೇಲೆ  ಮಧ್ಯವರ್ತಿಗಳು  ತಮ್ಮ ಸ್ಥಾನಮಾನವನ್ನು  ಬೆಳೆಸಿಕೊಂಡರೆ  ಇದರಿಂದಾಗಿ ಶಿಕ್ಷಣದ ಸತ್ವ ಕುಸಿಯುತ್ತದೆ.ನೈತಿಕತೆ ಮಾಯವಾದರೆ  ಅನೈತಿಕತೆ ಹೆಚ್ಚುತ್ತದೆ. ಸತ್ಯ ಹಿಂದುಳಿದರೆ ಅಸತ್ಯವೇ ಮಕ್ಕಳನ್ನು ಆಳುತ್ತದೆ. ಸತ್ಯವಿಲ್ಲದ ಧರ್ಮ ಕುಂಟುತ್ತದೆ.  ಈ ಕುಂಟು ಕುರುಡರ  ನಡುವೆ  ರಾಜಕೀಯ ಸೇರಿಸಿಕೊಂಡರೆ ಶಿಕ್ಷೆಯೇ ಗತಿ. ಒಟ್ಟಿನಲ್ಲಿ ಬದಲಾವಣೆ ಶಿಕ್ಷಣದಲ್ಲಿಯೇ  ಮಾಡದೆ ಜನರನ್ನು ಆಳೋದರಲ್ಲಿ,ಮಕ್ಕಳನ್ನು ಅಳಿಸುವುದರಲ್ಲಿ ಯಾವ ಅರ್ಥ ವೂ ಇಲ್ಲ.
ಕ್ಷಮಿಸಿ, ಶಿಕ್ಷಣ ಕ್ಷೇತ್ರದಲ್ಲಿ  ನಡೆಯುತ್ತಿರುವ   ಮಕ್ಕಳ ಮೇಲಿನ ದೌರ್ಜನ್ಯ  ಕೇವಲ ಕೆಲವರಿಗಷ್ಟೇ ಕಾಣಬಹುದು.
ಆಧ್ಯಾತ್ಮ ಹಾಗು ಭೌತಿಕದ ನಡುವಿರುವ  ಸಾಮಾನ್ಯರ ಸಾಮಾನ್ಯ ಜ್ಞಾನವಿಲ್ಲದೆ ‌ಮಕ್ಕಳಿಗೆ ವಿಶೇಷ ಜ್ಞಾನವನ್ನು ಹೊರಗಿನಿಂದ ಒತ್ತಾಯದಿಂದ ತುಂಬುವುದು ಸುಲಭವಲ್ಲ. 
ಅದನ್ನು ಸುಲಭವಾಗಿಸಲು ಶಿಕ್ಷಕರಾದವರು ಮೊದಲು ಮಕ್ಕಳ ಮೂಲ  ಪ್ರತಿಭೆ,ಆಸಕ್ತಿ,ಯೋಗ್ಯತೆಯನ್ನು
ಪ್ರೀತಿಯಿಂದ ಪೋಷಕರ ಸಹಕಾರದಿಂದ ಕಂಡುಕೊಂಡು ಮನೆಯೊಳಗೆ  ಹೊರಗೆ ಏಕರೀತಿಯ ಶಿಕ್ಷಣ ನೀಡಿದರೆ ಅಲ್ಪ ಸಮಯದಲ್ಲಿ ಸರಳವಾಗಿರುವ‌ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಮಕ್ಕಳು ಯಾವುದೇ ಶಿಕ್ಷೆಯಿಲ್ಲದೆ
ಕಲಿಯಬಹುದು.ಇದಕ್ಕೆ ಪೋಷಕರು ,ಶಿಕ್ಷಕರು ತಯಾರಾಗಬೇಕು. ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು.ಇಲ್ಲಿ  ನಮ್ಮ ದೇಶದ ಪ್ರಜೆಯಾಗಿ ಸೇವೆ ಸಲ್ಲಿಸಲು ಬೇಕಾದ ಯೋಗ್ಯ ಶಿಕ್ಷಣ ನೀಡುವುದು ಧರ್ಮ. ಮುಂದಿನ ದೇಶ ಅಂದರೆ ವಿದೇಶ ಶಿಕ್ಷಣ ನೀಡಿ ಬೆಳೆಸಿದರೆ ಅವರಿಗೆ ಕೆಲಸವೂ ವಿದೇಶಿ ಕಂಪನಿಗಳೇ ಕೊಡಬೇಕು.ವಿದೇಶದಲ್ಲಿ ದುಡಿಯಬೇಕು.ಇದು ದೇಶ ಸೇವೆಯಾಗಲಾರದಲ್ಲವೆ?
ಇದೊಂದು ಸಾಮಾನ್ಯಜ್ಞಾನದ ಸತ್ಯ. ನಮ್ಮಲ್ಲಿರುವ ಅಗಾಧವಾದ ಅಧ್ಬುತ ಪ್ರತಿಭೆ,ಜ್ಞಾನಶಕ್ತಿ ನಾವೇ ತಿರಸ್ಕರಿಸಿ
ನಡೆದರೆ ತಪ್ಪು ಯಾರದ್ದು? ಮಕ್ಕಳದ್ದೆ? ಪೋಷಕರದ್ದೇ? ಶಿಕ್ಷಕರದ್ದೆ? ಎಲ್ಲರಿಗೂ ಹಣವೇ ಮುಖ್ಯವಾದರೆ ಗುಣಜ್ಞಾನ ಇಲ್ಲದೆ ಹಣವನ್ನು ದುರ್ಭಳಕೆ ಮಾಡಿಕೊಂಡು ಜೀವನ ನಡೆಸೋದೂ ಸಹಜ. ಪ್ರಜಾಪ್ರಭುತ್ವದ ಜವಾಬ್ದಾರಿ ಪ್ರಜೆ ಎಂದರೆ ಶಿಕ್ಷಕರು.ಶಿಕ್ಷಣದ ಮೇಲೆ ದೇಶದ ಭವಿಷ್ಯ ನಿಂತಿದೆ. ಯೋಗಿಗಳಂತಿದ್ದ ಅಂದಿನ ಶಿಕ್ಷಕರ ಗುರಿ ದೇಶವನ್ನು ಯೋಗ್ಯ ರೀತಿಯಲ್ಲಿ ನಡೆಸುವುದಾಗಿತ್ತು.ಈಗಲೂ ಸಾಕಷ್ಟು ಗುರುಕುಲಗಳಿವೆ.ಆದರೆ ಸಾಮಾನ್ಯರ ಮಕ್ಕಳಿಗೆ ಮರೀಚಿಕೆ ಯಾಗಿದೆ. ಕೆಲವು ಕಡೆ ರಾಜಕೀಯಕ್ಕೆ  ಸಹಕರಿಸಿ ಮುಂದೆ ನಡೆದಿದೆ.ರಾಜಕೀಯದಲ್ಲಿ ಭ್ರಷ್ಟಾಚಾರ ಅಡಗಿದೆ.
ಭ್ರಷ್ಟಾಚಾರವನ್ನು   ಶಿಕ್ಷಣದಿಂದ  ದೂರಮಾಡಬೇಕಿದೆ. ಆದರೆ, ಹಣದ ಮೂಲವೇ ಭ್ರಷ್ಟಾಚಾರ ವಾಗಿದ್ದರೆ ಸರಿಪಡಿಸುವವರು ಯಾರು? ಕೆಲವರು ಮನೆಯೊಳಗೆ ಉತ್ತಮ ಶಿಕ್ಷಣ ನೀಡಿದರೂ ಹೊರಗಿನ ಶಿಕ್ಷಣ ತದ್ವಿರುದ್ಧವಾಗಿ ದ್ದರೆ ಮಕ್ಕಳ ಗತಿ? ಒಟ್ಟಿನಲ್ಲಿ  ಶಿಕ್ಷಣ  ಮಕ್ಕಳಿಗೆ ಉತ್ತಮ  ಭವಿಷ್ಯ ರೂಪಿಸುವ ಕ್ಷಣ ವಾಗಿರಲು  ದೇಶೀಯ ಧರ್ಮ, ಸಂಸ್ಕೃತಿ, ಭಾಷೆಯ ಉಳಿಯುವಿಕೆಯತ್ತ ನಡೆದಾಗಲೇ  ಉಳಿತಾಯ.ಎಲ್ಲರ ಉಳಿವು ಅಳಿವು  ಇದು ಶಿಕ್ಷಣದಲ್ಲಿದೆ.ಶಿಕ್ಷಕರು  ವ್ಯವಹಾರಕ್ಕೆ ಸೀಮಿತವಾಗದೆ ಧಾರ್ಮಿಕವಾಗಿ  ಅರ್ಥ ಮಾಡಿಕೊಳ್ಳಲು ಶಿಕ್ಷಕರಿಗೂ ಧರ್ಮ ಶಿಕ್ಷಣವಿರಬೇಕು.ಡಾ. ರಾಧಾಕೃಷ್ಣನ್ ರವರಂತಹ ಮಹಾ ದೇಶಭಕ್ತರ ಶಿಕ್ಷಕರ ಸಂಖ್ಯೆ ಸಾವಿರವಾಗಲಿ.ಅವರಂತಹ ಶಿಕ್ಷಕರನ್ನು ಪಡೆಯುವ ಮಕ್ಕಳ ಸಂಖ್ಯೆ ಕೋಟಿಯಾಗಲಿ. ಕೋಟಿ ಜನಸಂಖ್ಯಯಿರುವ ಈ ದೇಶ ಇಂದು ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರದಲ್ಲಿದೆ ಎಂದಾಗ ನಮಗೇ ತಿಳಿಯದೆ ನೀಡಿದ  ಶಿಕ್ಷಣದ ವಿಷಯವೇ ಕಾರಣವೆನ್ನಬಹು
ದಲ್ಲವೆ? 
ಕಾಲ ಮುಗಿಯುತ್ತದೆ.ಬದಲಾವಣೆ ಪ್ರಾರಂಭವಾಗುತ್ತದೆ.
ಬದಲಾವಣೆಗೆ ಸಹಕರಿಸುವುದಷ್ಟೆ ನಮ್ಮೆಲ್ಲರ ಧರ್ಮ. ಧರ್ಮ ವನ್ನು ರಕ್ಷಣೆ ಮಾಡೋರನ್ನು ಧರ್ಮ ವೇ ರಕ್ಷಿಸುತ್ತದೆ. ನಮ್ಮ ಭಾರತೀಯ ಶಿಕ್ಷಣವು ಅಧ್ಯಾತ್ಮದೊಳಗಿನಿಂದ ಭೌತಿಕ ವಿಜ್ಞಾನ ವನ್ನು  ಬೆಳೆಸಿತ್ತು.ಈಗಿದು ಇವೆರಡರ ಅಂತರದಲ್ಲಿ ಪರಕೀಯ ಜ್ಞಾನ ಸೇರಿಕೊಂಡು ರಾಜಕೀಯಕ್ಕೆ ಇಳಿದಾಗ ಒಳಗಿರುವ ಮಕ್ಕಳ ಜ್ಞಾನವನ್ನು  ಬೆಳೆಸಲಾಗುವುದೆ? ಆತ್ಮಾವಲೋಕನದಿಂದ ಮುಂದಿನ ಪ್ರಜೆಗಳಿಗೆ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿ ಬೆಳೆಸುವುದು ಇಂದಿಗೆ ಅಗತ್ಯವಾಗಿದೆ.

Saturday, September 3, 2022

ಎಲ್ಲಿರೋದು ರಾಮರಾವಣರು?

ಸತ್ಯ ಕಠೋರವಾಗುವುದು ಅಸತ್ಯ ಬೆಳೆದಾಗ ಮಾತ್ರ.ಹಾಗೆ ನೋವು ಹೆಚ್ಚಾಗುವುದು ಅಧರ್ಮ ಬೆಳೆದಾಗ ಇನ್ನು ಭೌತಿಕ ವಿಜ್ಞಾನ ಬೆಳೆಯೋದು ಅಧ್ಯಾತ್ಮ ದ ಹಿಂದಿರುವ ಸತ್ಯ ತಿಳಿಯುವ ಪ್ರಯತ್ನ ನಡೆಯದಿದ್ದಾಗ.ಇದಕ್ಕೆ ಕಾರಣವೇ ಅರ್ಧ ಸತ್ಯದ ರಾಜಕೀಯ ಪ್ರಭಾವ. ಇದು ಧಾರ್ಮಿಕ ಕ್ಷೇತ್ರವನ್ನೇ ಆವರಿಸಿದರೆ ಸದ್ಗತಿ ದೊರೆಯುವುದು ಬಹಳ ಕಷ್ಟ.ದೇಶ ಹಿಂದುಳಿಯೋದು ವಿದೇಶ ವ್ಯಾಮೋಹದಿಂದ.
ಅಸುರರೊಳಗಿರುವ ಸುರ, ಅಜ್ಞಾನದೊಳಗಿನ ಜ್ಞಾನ, ಅಧರ್ಮದೊಳಗಿನ ಧರ್ಮ, ಅಸತ್ಯದೊಳಗಿನ ಸತ್ಯವು
ಜೊತೆಗಿದ್ದರೂ  ಬೇರೆ ಬೇರೆ ಕಾಣುತ್ತದೆ ಹಾಗೆ ಅದ್ವೈತ ದ ಜೊತೆಗೆ ದ್ವೈತ ವೂ ಇದೆ. ಇದನ್ನು ಒಳಹೊಕ್ಕಿ ನೋಡಲು ಬೇಕು ಸ್ವತಂತ್ರ ಜ್ಞಾನ.ರಾಮರಾವಣರನ್ನು ಮಾನವರು ಬೇರೆ ಬೇರೆ ಕಂಡರೂ ರಾಮನೊಳಗೇ ರಾವಣನಿರೋವಾಗ ಬೇರೆ ಮಾಡಲು  ನಮ್ಮೊಳಗಿನ ಅಸುರಿ ಗುಣಬಿಡಬೇಕಷ್ಟೆ. ಇಡೀ ಬ್ರಹ್ಮಾಂಡದ  ಸೃಷ್ಟಿ, ಸ್ಥಿತಿ ಲಯವನ್ನು ತಡೆಯಲಾಗದು. 

ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ

ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ.
ಮೆಟ್ಟಿಲುಗಳನ್ನು ಕಟ್ಟಿಕೊಂಡು ಮೇಲೆ ಮೇಲೆ ಹೋಗಿ ದೇವಸ್ಥಾನ ತಲುಪಿದ ಹಿಂದಿನ ಮಹಾತ್ಮರುಗಳನ್ನು ಅರ್ಥ ಮಾಡಿಕೊಳ್ಳಲು ಸೋತಿರುವ  ನಾವು ಯಾವ ಮೆಟ್ಟಿಲನ್ನೂ ಹತ್ತದೆ ನೇರವಾಗಿ ಮಂತ್ರ,ತಂತ್ರ,ಯಂತ್ರದ ಸಹಾಯ ಪಡೆದು ಮೇಲೇರಿರುವವರಿಂದ ದೇವಸ್ಥಾನದಲ್ಲಿ ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರವು ಪ್ರವೇಶ ಮಾಡಿದರೆ ದೇವರಿರಲು ಕಷ್ಟ. ನಿರಾಕಾರ ಬ್ರಹ್ಮನ ಸಾಕಾರದಲ್ಲಿ  ಕಾಣುವುದು ಸುಲಭ.ಆದರೆ ಇದು ನಿರಾಕಾರದ ಕಡೆಗೆ ನಡೆದರೆ ದೈವತ್ವವಾಗುತ್ತದೆ.ತತ್ವದಿಂದ ದೈವತ್ವವನ್ನು  ಬೆಳೆಸಿಕೊಂಡು  ಜನರಲ್ಲಿ ಅರಿವು ಮೂಡಿಸಲು ಪ್ರಯತ್ನ ಪಟ್ಟವರನ್ನೇ ಮಟ್ಟಿಲಾಗಿ ಬಳಸಿ ಮಧ್ಯೆ ನಿಂತು ಮುಂದೆ ಹೋಗುವವರನ್ನು ತಡೆಯುವುದು ಮಧ್ಯವರ್ತಿಗಳ ವ್ಯವಹಾರವಾದರೆ  ವ್ಯವಹಾರದಲ್ಲಿ ಸಾಲಪವಿದೆ. ಸಾಲವನ್ನು ತೀರಿಸಲು ಪುನರ್ಜನ್ಮ ಪಡೆಯಬೇಕು.ಹೀಗಾಗಿ ಕಲಿಯುಗದಲ್ಲಿ ಹೆಚ್ಚು ಹೆಚ್ಚು ದೇವಾಲಯವಿದ್ದರೂ ದೈವತ್ವದ ಕೊರತೆ ಮಾನವನಿಗೆ ಸಾಕಷ್ಟು  ಸಮಸ್ಯೆಗಳನ್ನು  ಸೃಷ್ಟಿ ಮಾಡುತ್ತಾ  ಅದೇ ಸ್ಥಿತಿಗೆ ಬಂದು ಕೊನೆಯಲ್ಲಿ ಲಯವಾದರೂ  ಸಮಸ್ಯೆಯ ಮೂಲ ತಿಳಿಯದೆ ಹೋದ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ಬಂದರೆ  ಜೀವನ್ಮುಕ್ತಿ  ಯಾರಿಗಿದೆ? ಒಟ್ಟಿನಲ್ಲಿ ಮೆಟ್ಟಿಲುಗಳ ಉದ್ದೇಶ  ಸಾತ್ವಿಕವಾಗಿತ್ತು.ಅದನ್ನು ಕಟ್ಟುವುದಕ್ಕೆ ಸಾಕಷ್ಟು ಶ್ರಮವಹಿಸಿ ಜ್ಞಾನದ ಬಳಕೆಯಾಗಿತ್ತು.ಪರಮಾತ್ಮನ ಕಾಣೋದಕ್ಕೆ ಆಂತರಿಕ ಶಕ್ತಿಯಿಂದ, ಜ್ಞಾನದಿಂದ ಮಾತ್ರ ಸಾಧ್ಯವೆನ್ನುವುದನ್ನು ನಡೆ ನುಡಿಯ ಮೂಲಕ ತೋರಿಸಿ ಹೋದವರು  ಎಲ್ಲಿರುವರು? ಮಟ್ಟಿಲ ಮೇಲಿರುವರೆ ?ಮೇಲೆ ಹತ್ತಿ ಹೋಗಿ ದೇವಸ್ಥಾನ ತಲುಪಿಲ್ಲವೆ? ಅಂದಿನಂತೆಯೇ ಇಂದಿಗೂ ಭೂಮಿಯ ಮೇಲಿರುವ‌ ಮನುಕುಲಕ್ಕೆ ಈ ಮೆಟ್ಟಿಲು  ಇದ್ದರೂ ಅವಸರದ ಜೀವನದಲ್ಲಿ ಏರಲಾಗದೆ ನೇರವಾಗಿ ಯಂತ್ರದ ಸಹಾಯದಿಂದ ಮೇಲೆ ಹಾರಿ ದೇವಸ್ಥಾನ ನೋಡಿ ಬರುವುದರಿಂದ ಯಾವುದೇ ಮೆಟ್ಟಿಲಿನಮೇಲಿದ್ದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಿದೆ. ಇರಲಿ,ಮೇಲೆ ಹಾರಿ ಹೋಗಿ ದೇವಸ್ಥಾನ ತಲುಪಿ ತಿರುಗಿ ಕೆಳಗೆ ಬಂದರೆ  ದೈವತ್ವ ಬರುವುದಾದರೆ ಸರಿ. ಹೀಗಾಗಿ ಇಂದು ಎಲ್ಲರಲ್ಲಿಯೂ ಅಡಗಿರುವ ಒಂದೇ ದೇವರನ್ನು ಅರ್ಥ ಮಾಡಿಕೊಳ್ಳಲು ಸೋತು ಅಸಂಖ್ಯಾತ ದೇವತೆಗಳು ಸೃಷ್ಟಿ ಮಾಡಿಕೊಂಡ ಮಾನವನಿಗೆ ಅಧ್ಯಾತ್ಮದ  ಮೆಟ್ಟಿಲಿನಲ್ಲಿದ್ದ  ಸಾತ್ವಿಕ ಶಕ್ತಿಯ ಅರಿವಾಗದೆ  ಮೆಟ್ಟಿಲು ಹತ್ತದೆ ದೇವಸ್ಥಾನ  ತಲುಪುವುದಕ್ಕೆ   ಮಂತ್ರ,ತಂತ್ರ,ಯಂತ್ರದ  ಬಳಕೆಯಾದರೂ ಇವುಗಳಿಂದ ಸ್ವತಂತ್ರ ಜ್ಞಾನದ ಕೊರತೆ ಹೆಚ್ಚುವುದು. ಪರಾವಲಂಬನೆಯೇ ನರಕ ಸ್ವಾವಲಂಬನೆ ಸ್ವರ್ಗ ಎಂದಿದ್ದಾರೆ.ನಮ್ಮ ಶಿಕ್ಷಣವೇ ಪರಾವಲಂಬನೆಯ ಹಾದಿಯಲ್ಲಿರುವಾಗ ಒಳಗೇ ಇರುವ ದೈವತ್ವದೆಡೆಗೆ  ಮನಸ್ಸು ಹರಿಸಿಕೊಳ್ಳಲು ಕಷ್ಟ. ಹೋಗಲಿ ಹೊರಗಿನ‌  ಅಧ್ಯಾತ್ಮ ಪುಸ್ತಕಗಳನ್ನು ಅವಲಂಬಿಸಿ ನಡೆಯಲು ಸಹಕಾರವಿದೆಯೆ? ಇಲ್ಲವಾದರೆ ಎಲ್ಲಿಯ ಸ್ವತಂತ್ರ ಜ್ಞಾನ. ಅನುಭವವಿಲ್ಲದೆ ಯಾವ ಮಟ್ಟಿಲಲ್ಲಿ ನಿಂತರೂ ಅದೊಂದು ಕಲ್ಲಿನ‌ಮೆಟ್ಟಿಲಷ್ಟೆ.ಚಪ್ಪಲಿ ಬಿಟ್ಟು ಮೇಲೆ ಹೋದರೂ  ಕಾಲುಬುಡದ ಕಸವನ್ನು  ಸ್ವಚ್ಚಗೊಳಿಸಿಕೊಂಡರೂ  ಒಳಗಿನ ಕಲ್ಮಶ ಮನಸ್ಸನ್ನು ಸ್ವಚ್ಚ ಮಾಡೋದಕ್ಕೆ  ಮಾನವನಿಗೆ ಕಷ್ಟ. ಇದಕ್ಕೆ ಜ್ಞಾನದ ಶಿಕ್ಷಣ ಬೇಕು.ಶಿಷ್ಟಾಚಾರದ ಕ್ಷಣ ಶಿಕ್ಷಣ. ಭ್ರಷ್ಟಾಚಾರದ ಹಣದಲ್ಲಿ ಶಿಕ್ಷಣ ಪಡೆದರೂ  ಕಷ್ಟ. ಹೀಗಾಗಿ ಮಹಾತ್ಮರುಗಳನ್ನು ಅರ್ಥ ಮಾಡಿಕೊಳ್ಳಲು ಅವರು ಏರಿದ‌ ಮೆಟ್ಟಿಲನ್ನು ಸ್ವಚ್ಚವಾಗಿ ಬಳಸಿದರೆ  ಇನ್ನೂ ಮೇಲಿನ‌ ಮೆಟ್ಟಲಿನೆಡೆಗೆ ಹೋಗಬಹುದೆನ್ನಬಹುದು. ಭಾರತವನ್ನು ಸ್ವಚ್ಚ ಮಾಡಲು ರಾಜಕೀಯದಿಂದ ಕಷ್ಟ. ಯಾರ ಮನೆಯಲ್ಲಿ ರಾಜಕೀಯ ಇರುವುದೋ ಅಲ್ಲಿ ಮೇಲು ಕೀಳೆಂಬ ಅಜ್ಞಾನದ ಅಹಂಕಾರ ಇರುವುದು.ಸಮಾನತೆಗೆ  ಆತ್ಮಶುದ್ದಿಯಾಗಿರಬೇಕು.ಎಂದು ಒಂದೊಂದು  ಮೆಟ್ಟಲಿನಲ್ಲಿರುವ ಅಶುದ್ದತೆಯನ್ನು ತೊಳೆದು
ಮೇಲಿನ‌ ಮೆಟ್ಟಿಲವರೆಗೆ ಸ್ವಚ್ಚ ಮಾಡುತ್ತಾ ಹೋದವರಿಗಷ್ಟೆ ಒಬ್ಬನೇ ಪರಮಾತ್ಮನ ದರ್ಶನವಾಗಿ ಮೋಕ್ಷಗಳಿಸಿದ್ದಾರೆ. ಕಲಿಗಾಲದ ಪ್ರಭಾವ,ಅಲ್ಪ ಆಯಸ್ಸಿನಲ್ಲಿ ಅಲ್ಪ ಪ್ರಮಾಣದ ಜ್ಞಾನದಲ್ಲಿ ಜೀವನ ನಡೆಸುವಾಗ ಹೊರಗಿನ ಸ್ವಚ್ಚತೆಯನ್ನು ಮಾಡೋದಕ್ಕೆ ಸಮಯವಿಲ್ಲ ಇನ್ನು ಒಳಹೊಕ್ಕಿ ನೋಡಲು ಕಷ್ಟ.ಯೋಗದ ಮೂಲಕ  ಮಾಡಬಹುದು.ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಆಂತರಿಕ ಶುದ್ದಿಗಾಗಿ ಯೋಗ್ಯ ಶಿಕ್ಷಣ ನೀಡಿ ಪೋಷಕರೂ ಮೆಟ್ಟಿಲುಗಳನ್ನು ಹತ್ತುವುದರಿಂದ  ಬದಲಾವಣೆ ನಿಧಾನವಾದರೂ  ಸಾಧ್ಯ. ಈಗಾಗಲೇ ಎಲ್ಲೆಡೆ ನಡೆಯುತ್ತಿದೆ.ಒಗ್ಗಟ್ಟಿನ ಅಭಾವದಿಂದ ಪೂರ್ಣ ಪ್ರಮಾಣದಲ್ಲಿ ಮುಂದೆ ಬರದೆ ಮಧ್ಯವರ್ತಿಗಳು  ತಮ್ಮ ತಮ್ಮ ಸ್ವಾರ್ಥ ದ ಬೇಳೆ  ಬೇಯಿಸಿಕೊಂಡು ಇರುವ ಮೆಟ್ಟಿಲನ್ನೂ  ಅಶುದ್ದಗೊಳಿಸುವ ಪ್ರಯತ್ನದಲ್ಲಿ ಯಶಸ್ಸು
ಕಾಣುತ್ತಿರುವುದಕ್ಕೆ ಕಾರಣವೆ ನಮ್ಮ  ಅತಿಯಾದ ವ್ಯವಹಾರ ಜ್ಞಾನ.ವ್ಯವಹಾರದಿಂದ ಹಣದ ಲಾಭವಾದರೂ ಜ್ಞಾನದ ನಷ್ಟವಿದೆ. ಇದನ್ನು ಪರಕೀಯರು ಕಂಡುಕೊಂಡಿದ್ದಾರೆ.ಹಣ ನೀಡಿ ಜ್ಞಾನಿಗಳನ್ನು ತಮ್ಮೆಡೆ ಸೆಳೆಯುತ್ತಾ  ನೇರವಾಗಿ ಮೇಲೆ ಏರಿಸುವ ಕೆಲಸ ಮಾಡಿದರೆ ಕೆಳಗಿರುವ ಮೆಟ್ಟಿಲುಗಳನ್ನು ಅರ್ಥ ಮಾಡಿಕೊಳ್ಳಲು ಸೋತಂತೆ.ತಿರುಗಿ ಕೆಳಗಿಳಿಯೋ ಬದಲಾಗಿ ನಿಧಾನವಾದರೂ ಸರಿ ಮೆಟ್ಟಿಲನ್ನು
ಹತ್ತುವಾಗ ನಮ್ಮವರನ್ನು ಒಗ್ಗೂಡಿಸುವ ಕೆಲಸವಾದರೆ ಸರಿ.
ಮೇಲೇರುವವರನ್ನು ತಡೆಯಬಾರದು. ಕೆಳಗಿದ್ದವರಿಗೆ ಅವಕಾಶ ನೀಡೋ ಮೊದಲು ಅವರಿಗೆ ಮೆಟ್ಟಿಲುಗಳ ಶುದ್ದತೆ ಬಗ್ಗೆ ತಿಳುವಳಿಕೆಯಿದ್ದರೆ ಎಲ್ಲರಲ್ಲಿಯೂ ಅಡಗಿರುವ ದೈವಶಕ್ತಿ ಜಾಗೃತವಾಗುತ್ತದೆ.ಅಸುರೀ ಶಕ್ತಿಯ ಹಿಂದೆ ನಿಂತು ಎಷ್ಟೇ ದೇವತಾಕಾರ್ಯ ನಡೆಸಿದರೂ ವ್ಯರ್ಥ. ಹೀಗಾಗಿ ಹಿಂದಿನವರಲ್ಲಿದ್ದ ಅಗಾಧವಾದ ಜ್ಞಾನ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ಆಳೋ ಬದಲಾಗಿ ಮಹಾತ್ಮರ ಆಳಾಗಿದ್ದರೆ ಪರಮಾತ್ಮನೆಡೆಗೆ ಹೋಗಬಹುದು.
ಹಾಗಂತ. ಎಲ್ಲರಿಗೂ ಮೆಟ್ಟಿಲನ್ನು ಕಟ್ಟುವ ಶಕ್ತಿಯಿಲ್ಲ.ಕಟ್ಟಿದ ಮೆಟ್ಟಿಲನ್ನು ಏರುವ ಶಕ್ತಿಯಿದೆ. ಈ ಏರುವಾಗ  ಸ್ವಚ್ಚ ಮನಸ್ಸು ಬೆಳೆದರೆ ದೈವತ್ವವನ್ನು ಒಳಗಿನಿಂದ ಪಡೆಯಬಹುದೆನ್ನಬಹುದು. ಮಾನವನಿಗೂ ದೇವರಿಗೂ ವ್ಯತ್ಯಾಸವಿಷ್ಟೆ. ಮಾನವ ವ್ಯಕ್ತಿ ದೇವರು ಶಕ್ತಿ. ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಮಹಾತ್ಮರು.ಮಕ್ಕಳಲ್ಲಿರುವ ಈ ಶಕ್ತಿಯನ್ನು ಸರಿಯಾದ ಶಿಕ್ಷಣದಿಂದ  ಮೇಲೇರಿಸುವುದು ಪೋಷಕರ ಧರ್ಮ . ಯೋಗಿ ಬಯಸಿದ್ದು ಯೋಗಿಗೆ.ಭೋಗಿ ಬಯಸಿದ್ದು ಭೋಗಿಗೆ. ಯೋಗಾಭೋಗದ ವ್ಯತ್ಯಾಸದಲ್ಲಿ ರೋಗವಿದೆ. ಯಾವುದೂ ಅತಿಯಾದರೆ ಗತಿಗೇಡು ಎನ್ನುವುದು ಸತ್ಯ.ಮೇಲೇರಿದವರು ಕೆಳಗಿಳಿಯೋದಿಲ್ಲ.
ಕೆಳಗಿದ್ದವರಿಗೆ ಮೇಲಿರುವ ಸತ್ಯ ತಿಳಿದಿಲ್ಲ
ಮಧ್ಯವರ್ತಿಗಳು ವ್ಯವಹಾರದಿಂದ  ಬಿಡುಗಡೆ ಪಡೆಯಲಾಗಿಲ್ಲ. ಹೀಗಾಗಿ ವ್ಯವಹಾರಿಕ ಜೀವನದ ಮಧ್ಯೆ
ಒಮ್ಮೊಮ್ಮೆ ಈ ಮೆಟ್ಟಿಲುಗಳ ಕಡೆಗೆ ಗಮನವಿಟ್ಟು ಹತ್ತಿ ಇಳಿದು ಮಾಡೋವಾಗ ಸ್ವಚ್ಚತೆ ಕಡೆಗೆ ಮನಸ್ಸು ಹರಿಸುವುದು ಅಗತ್ಯವಾಗಿದೆ. ಆತ್ಮನಿರ್ಭರ ಭಾರತವಾಗಲು ಮೆಟ್ಟಿಲುಗಳಿಂದ ಆತ್ಮರಕ್ಷಣೆ ಯಾಗಬೇಕಿದೆ. ಮಕ್ಕಳಿಗೆ  ಮೂಲ ಶಿಕ್ಷಣವೇ ಮೊದಲ ಮೆಟ್ಟಿಲು.ಇದರಲ್ಲಿ ರಾಜಕೀಯಕ್ಕೆ  ಇಳಿದರೆ  ಆತ್ಮಹತ್ಯೆ ಹೆಚ್ಚಾಗಬಹುದಷ್ಟೆ.ಅಂದರೆ ದೇವರನ್ನು ನಾವು ಆಳೋದಕ್ಕೂ ದೈವತ್ವವನ್ನು ಬೆಳೆಸಿಕೊಂಡು ಮುಂದೆ ಹತ್ತುವುದಕ್ಕೂ ವ್ಯತ್ಯಾಸವಿದೆ. ಒಬ್ಬನೇ ದೇವರಿಗೆ ಸಾಕಷ್ಟು
ಮೆಟ್ಟಿಲಿದ್ದರೂ ನಮ್ಮ‌ಹತ್ತಿರದ ಮೆಟ್ಟಲನ್ನು ನಾವೇ ಹತ್ತಬೇಕು. ಅದನ್ನು ಬೇರೆಯವರಿಗೆ ಬಿಟ್ಟು ಹೊರಗೆ ನಡೆದರೆ? ನಮ್ಮ‌ಹಿಂದಿನ ಮಹಾತ್ಮರುಗಳು ತೋರಿಸಿದ ದಾರಿ ಮುಚ್ಚಿ ಹೊರಗಿನವರ ದಾರಿಯಲ್ಲಿ ನಡೆದರೆ ಹಿಂದೂ ಧರ್ಮ ವಾಗುವುದೆ? ಹಿಂದಿನ  ಕಾಲಕ್ಕೆ ಹೋಗಲಾಗದು.ಆದರೆ ಹಿಂದಿನ ಸತ್ಯ ತಿಳಿಯಬಹುದು.ಹೊರಗೆ ಎಷ್ಟು ನಡೆದರೂ  ಸತ್ಯ ಕಾಣದು ಅದೇ ಒಳಗಿರುವ ಸತ್ಯಕ್ಕೆ ಬೆಲೆಕೊಟ್ಟರೆ  
 ಸತ್ಯವೇ ದೇವರಾಗುತ್ತದೆ.ಇದಕ್ಕೆ  ಅವರವರ ಹಿಂದಿನ ಗುರು ಹಿರಿಯರಸತ್ಯ,ನ್ಯಾಯ,ನೀತಿ,ಸಂಸ್ಕೃತಿ,ಸದಾಚಾರ,ಸಾತ್ವಿಕತೆ, 
ಆಹಾರಪದ್ದತಿ  ಸಾಧ್ಯವಾದರೆ ತಿಳಿದು ತಿರುಗಲು  ಪ್ರಯತ್ನ
ಪಟ್ಟರೆ  ಹಿಂದಿನ ಸಾಲದಿಂದ ಮುಕ್ತಿ.ಇದು ಸಮಾಜಕ್ಕಾಗಲಿ ದೇಶಕ್ಕಾಗಲಿ ನಷ್ಟವಾಗೋ ಹಾಗಿದ್ದರೆ  ವ್ಯರ್ಥ. ಸಾಲ ತೀರಿಸಲು ಬಂದ ಜೀವಕ್ಕೆ ಮತ್ತಷ್ಟು ಸಾಲದ ಹೊರೆ ಏರಿಸುವ ಮೆಟ್ಟಿಲುಗಳಿಂದ ಏನು ಪ್ರಯೋಜನವಿಲ್ಲ. ಆಧುನಿಕತೆಯ ವೈಭವದ ಮೆಟ್ಟಿಲು ಸಾಲದ ಹೊರೆ ಹಾಕುತ್ತಿದೆ. ದೇವಸ್ಥಾನವು ಸಾಲದಿಂದ ಬಿಡುಗಡೆ  ಪಡೆಯಲು ಕಟ್ಟಿದ ಮಹಾಕ್ಷೇತ್ರವಾಗಿರಬೇಕಾದರೆ
 ಅದನ್ನು  ಪ್ರವಾಸಿತಾಣ ಮಾಡಬಾರದು. ಯಾತ್ರೆ ಶುದ್ದವಾಗಿದ್ದಷ್ಟೂ ಜೀವನಯಾತ್ರೆ ಸುಲಭ. ಜೀವನದಮೆಟ್ಟಿಲುಗಳಲ್ಲಿ  ಆ ದೈವ ಶಕ್ತಿ ಜಾಗೃತವಾಗಲು ಕಷ್ಟಪಡಬೇಕೆನ್ನುವ ಕಾರಣಕ್ಕಾಗಿ  ದೇವರೆ ಇಲ್ಲ ನಾನೇ ಎಲ್ಲಾ ಎನ್ನುವ ಅಹಂಕಾರ ಸ್ವಾರ್ಥ ದ  ಅಸುರಿತನ ಮಾನವನಿಗೆ ಇನ್ನಷ್ಟು ಸಮಸ್ಯೆ  ಬೆಳೆಸುವಂತಾಗಿದೆ. ಹಾಗಾದರೆ ನಾವ್ಯಾರು?  ಅಸುರರಾದರೆ ದೇವಸ್ಥಾನ ಶುದ್ದ ಆಗಿರುವುದೆ?  ನಾನೇ ದೇವರಾಗಿದ್ದರೆ ದೇವಸ್ಥಾನ ಬೇಕೆ?
ಒಂದೇ ದೇವರನ್ನು ಎಲ್ಲಾ ಒಂದಾಗಿ ಕಾಣಬಹುದೆ? ಇಲ್ಲ ಎಂದಾಗ ಅವರವರ ದೇವರನ್ನು  ಕಾಣಲು ಬಿಡಬಹುದು.
ಇದಕ್ಕೆ ರಾಜಕೀಯ ಬೇಕೆ? ಇದಕ್ಕಾಗಿ ಶಿಕ್ಷಣವು ಬದಲಾದರೆ ಒಳಗಿರುವ ಆತ್ಮಶಕ್ತಿಯನ್ನು ಮೆಟ್ಟಿಲಿನ ಸಹಾಯದಿಂದ ನಿಧಾನವಾಗಿ ಮೇಲೆ ಹತ್ತಿಸುವ ಕೆಲಸ ನಿಜವಾದ ಗುರು, 
ಹಿರಿಯರು,ಜ್ಞಾನಿಗಳು ಮಾಡಲು ಸಾಧ್ಯವೆ?  ಭಕ್ತರ, ಶಿಷ್ಯರ,ಪ್ರಜೆಗಳ  ಹಣದಿಂದ  ದೇವರು ಕಾಣೋದಿಲ್ಲ. ಅವರ ನ್ನು ಜ್ಞಾನದಿಂದ  ಮೆಟ್ಟಿಲು  ಹತ್ತಲು ಜ್ಞಾನಿಗಳಾದವರು  ದಾರಿ ತೋರಿಸಿ ಬಿಟ್ಟರೆ  ಆಗಬಹುದು. ಆದರೆ ಕೆಲವೆಡೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯುವವರು ಯಾರು? ಎಲ್ಲರೂ ಹಾಗಿಲ್ಲ. ಹಾಗಾಗಿ ಮೆಟ್ಟಿಲನ್ನು  ಹತ್ತುವಾಗ  ಜೋಪಾನವಾಗಿದ್ದರೆ ಉತ್ತಮ ಜ್ಞಾನ.