ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, June 24, 2023

ಆಹಾರದಿಂದ ವಿಹಾರದಲ್ಲಿ ವ್ಯತ್ಯಾಸ

ಮಹಾಮಂತ್ರಿ ಮಹೋದಯರೊಬ್ಬರು  ಸಸ್ಯದಲ್ಲೂ‌
ಜೀವವಿರೋವಾಗ  ಗೋ ಮಾಂಸಕ್ಕೆ ವಿರೋಧವೇಕೆ? ಎನ್ನುವ  ಮೂಲಕ ಜನರೊಳಗಿರುವ ಸಾತ್ವಿಕ ಬಾವನೆಗೆ ದಕ್ಕೆ ತರುವ ಪ್ರಶ್ನೆ ಹಾಕಿದ್ದಾರೆಂದರೆ  ಕಣ್ಣಿಗೆ ಕಂಡದ್ದಷ್ಟೇ ಸತ್ಯವಲ್ಲ ಕಾಣದ ಸತ್ಯ ತಿಳಿದು  ಜನನಾಯಕನಾಗಬೇಕಿದೆ.
ಮಾಂಸಹಾರಕ್ಕೂ ಸಸ್ಯಾಹಾರಕ್ಕೂ ವ್ಯತ್ಯಾಸ ತಿಳಿಯದವರು ಜನರನ್ನು ತಿನ್ನೊದಕ್ಕೆ ಹುಟ್ಟಿರೋದೆಂದು ಬಳಸಿಕೊಂಡು ಬೆಳೆಯುತ್ತಿದ್ದಾರೆಂದರೆ ಇದೊಂದು ಅಜ್ಞಾನವಷ್ಟೆ.
ಸಸ್ಯಾಹಾರದಲ್ಲಿರುವ ಜೀವಶಕ್ತಿಗೂ ಮಾಂಸಾಹಾರ
ದಲ್ಲಿರುವ ಪ್ರಾಣಶಕ್ತಿಗೂ ವ್ಯತ್ಯಾಸವಿಲ್ಲವೆ? 
ಪ್ರಾಣಿಗಳ ಮನಸ್ಸಿಗೂ ಸಸ್ಯಕ್ಕೂ ವ್ಯತ್ಯಾಸವಿಲ್ಲವೆ? ಪ್ರಕೃತಿಗೂ ಪ್ರಾಣಿಗೂ ವ್ಯತ್ಯಾಸವಿಲ್ಲವೆ? ಪ್ರಕೃತಿಯ ಒಂದು ಸಣ್ಣ ಕಣದಿಂದ ಜೀವಸೃಷ್ಟಿಯಾಗಿ ಬೆಳೆಯುತ್ತದೆ .ಇದು ಪ್ರಾಣಿ ಪಕ್ಷಿ ಜೀವ ಜಂತುಗಳಲ್ಲಿ  ಆಹಾರದ ಮೂಲಕ ಸೇರಿದಾಗ  ಅದರಲ್ಲಿ ಸತ್ವ,ರಜಸ್ಸು,ತಮಸ್ಸಾಗಿ ಪರಿವರ್ತನೆ ಆಗುವುದು ಎಲ್ಲರಿಗೂ ತಿಳಿದ ವಿಚಾರ. ಈ ಗುಣ ಲಕ್ಷಣ ಕಾಣದಿದ್ದರೂ  ಮಾನವನೊಳಗೇ ಶಕ್ತಿ ಯಾಗಿರುತ್ತದೆ. ಆರನೇ ಅರಿವಿನೆಡೆಗೆ  ಹೋಗಲು ಸಾಧ್ಯವಾಗುವ ಮಾನವನಿಗಷ್ಟೆ  ಆಹಾರದಲ್ಲಿ  ವ್ಯತ್ಯಾಸ ಕಾಣೋದು. 
ಹೊಟ್ಟೆ ತುಂಬಿದ ಮೇಲೂ ತಿನ್ನೋದು ಮಾನವನೆ.ಹೀಗಾಗಿ ತನ್ನ ಆರೋಗ್ಯಕ್ಕೆ ತಾನೇ ಆಹಾರ  ತಯಾರಿಸಿಕೊಂಡು ಸತ್ಕರ್ಮದಿಂದ  ಹಣಗಳಿಸಿ ಸ್ವಾವಲಂಬನೆ ಕಡೆಗೆ ನಡೆಯುವುದು ಮಾನವ ಧರ್ಮ ವಾಗಿದೆ.ಪ್ರಕೃತಿ ಎಲ್ಲರಿಗೂ ಸರಿಸಮನಾಗಿ ಜೀವಿಸಲು ಅವಕಾಶ ಕೊಟ್ಟರೂ ತನ್ನ ಬುದ್ದಿವಂತಿಕೆ ಯನ್ನು ಬಳಸಿ ಇತರರ  ಜೀವನಕ್ಕೆ ಒಳ್ಳೆಯದೂ ಮಾಡಬಹುದು.ಹಾಳೂ ಮಾಡಬಹುದು.
ಇದಕ್ಕೆ ಕಾರಣ ಒಳಗಿರುವ ಮನಸ್ಸು. ಹೀಗಾಗಿ ಮನಸ್ಸಿನ‌
ನಿಗ್ರಹಕ್ಕೆ ಸಾತ್ವಿಕ ಆಹಾರವಾದ ಸಸ್ಯವನ್ನು  ಬಳಸಿದ್ದರು. ಸಸ್ಯಾಹಾರದಲ್ಲಿಯೂ  ಸಾತ್ವಿಕ ರಾಜಸಿಕ ತಾಮಸಿಕ ಗುಣವಿರೋದನ್ನು ಸೂಕ್ಮವಾಗಿ ಗಮನಿಸಿದವರು  ಆಹಾರ ಬಿಟ್ಟು  ತಪಶ್ಯಕ್ತಿಯಿಂದ ಸಾವಿರಾರು ವರ್ಷ  ಭೂಮಿಯಲ್ಲಿ ಜೀವಿಸಿದ್ದರೆಂದರೆ  ದೇಹ ಒಂದು ಮಾಧ್ಯಮವಷ್ಟೆ.ಇಲ್ಲಿ ಆತ್ಮೋದ್ದಾರಕ್ಕೆ  ಸಹಕಾರಿಯಾಗುವ ಧರ್ಮ ಕರ್ಮವನರಿತು ನಡೆದವರನ್ನು ಮಹಾತ್ಮರೆಂದರು. ಭೌತಿಕದ ರಾಜಕೀಯಕ್ಕೂ ಅಧ್ಯಾತ್ಮದ ರಾಜಯೋಗಕ್ಕೂ ಹೇಗೆ ವ್ಯತ್ಯಾಸವೆದೆಯೋ ಹಾಗೇ  ಸಸ್ಯಾಹಾರ ಮಾಂಸಾಹಾರಕ್ಕೆ ವ್ಯತ್ಯಾಸವಿದೆ. ಮನಸ್ಸು ಒಳಗೆ ನಡೆದಷ್ಟೂ  ಸತ್ಯದರ್ಶನ ಹೊರಗೆ ಹೊರಟಷ್ಟೂ ಮಿಥ್ಯದರ್ಶನ. ಭೌತಿಕ ವಿಜ್ಞಾನ ಬೆಳೆದಂತೆಲ್ಲಾ 
ಕಾಲಾನಂತರದಲ್ಲಿ  ಬದಲಾವಣೆ ಆದರೂ ಹಿಂದಿನ  ಸಾತ್ವಿಕ ಮನಸ್ಸು ಇಂದಿಲ್ಲ.ಅಂದಿನ ಶಿಕ್ಷಣಪದ್ದತಿ,ಆಹಾರಪದ್ದತಿ ಇಂದಿಲ್ಲ ಹೀಗಾಗಿ ಏನು ಮಾಡಿದರೂ ಸರಿ ಎನ್ನುವ ಹಂತಕ್ಕೆ ಮಾನವ ಬೆಳೆದು ನಿಂತು ತನ್ನ ಪಾಪಕ್ಕೆ ತಾನೇ ಶಿಕ್ಷೆ ಅನುಭವಿಸುವಂತಾಗಿದೆ.  ಪ್ರಾಣಿಗಳ ಗುಣಲಕ್ಷಣಕ್ಕೂ ಜೀವಿಗಳ ಗುಣಲಕ್ಷಣಕ್ಕೂ ವ್ಯತ್ಯಾಸವಿದೆ. ಸಾತ್ವಿಕ ರಾಜಸಿಕ ತಾಮಸಿಕ ಗುಣದಿಂದಲೇ ಈ ಜಗತ್ತು ನಡೆದಿರೋದು.ಇದು ಆಹಾರ ವಿಹಾರದಲ್ಲಿಯೇ ಕಾಣಬಹುದು. ಒಟ್ಟಿನಲ್ಲಿ ಮಾನವ ತಿನ್ನುವುದಕ್ಕಾಗಿ ಬದುಕಬಾರದು ಬದುಕಲು ತಿನ್ನಬೇಕಷ್ಟೆ.ಹಿಂದಿನ ಮಹರ್ಷಿಗಳುತಪಸ್ವಿಗಳು,ಯೋಗಿ,,
ಜ್ಞಾನಿ,ಸಂಸಾರದಲ್ಲಿದ್ದೂ ತಮ್ಮ ಆಹಾರದಲ್ಲಿ ಕಟ್ಟುನಿಟ್ಟಿನ ನಿಯಮ ಹೊಂದಿದ್ದು ಆತ್ಮಜ್ಞಾನದಿಂದ  ಜೀವನ್ ಮುಕ್ತಿ ಪಡೆದರೆಂದರೆ  ದೇಹದೊಳಗೆ ಸೇರಿಸುವ ಪ್ರತಿಯೊಂದು ವಿಷಯ ಆಹಾರವೇ  ಜೀವನದ ಸುಖ ದು:ಖಕ್ಕೆ ಕಾರಣವೆನ್ನುವುದು ಸ್ಪಷ್ಟವಾಗಿ ತಿಳಿಯಬಹುದು.  ಭೂಮಿಯ ಋಣ ತೀರಿಸುವುದಕ್ಕಾಗಿ  ಸತ್ಕರ್ಮ, ಸ್ವಧರ್ಮದ ಜೊತೆಗೆ ಸುಜ್ಞಾನದಿಂದ ಜೀವನ ನಡೆಸುತ್ತಾ ಸಾತ್ವಿಕ ಆಹಾರ ಸೇವಿಸಿ ಜೀರ್ಣಿಸಿಕೊಂಡವರು ಯೋಗಿಗಳಾದರು. ಪರಮಾತ್ಮನ ಪ್ರಸಾದವೆಂದರಿತು  ಆಹಾರ ಸೇವನೆ ನಡೆಸಿದವರ  ಜ್ಞಾನಕ್ಕೂ, ಪ್ರಕೃತಿ ಭೂಮಿ ತನ್ನ ಸ್ವತ್ತು ಎಂದರಿತು  ಜೀವನ ನಡೆಸುವುದಕ್ಕೂ ವ್ಯತ್ಯಾಸವಿದೆ. ಹೊರಗಿನಿಂದ ಏನೇ ಹಾಕಿದರೂ  ಒಳಗೆ ಹೋದಮೇಲೆ ಅದರ ಪ್ರಭಾವ ತಿಳಿಯೋದು.  ಈಗ ವಿದೇಶಿ ಸಾಲವಾಗಲಿ ಶಿಕ್ಷಣವಾಗಲಿ ಆಹಾರ ವಿಹಾರವಾಗಲಿ ಹೇಗೆ ನಮ್ಮನ್ನು  ಸಮಸ್ಯೆಕಡೆಗೆ ಕರೆದೊಯ್ದು ಸಾಲದ ಜೊತೆಗೆ ಆರೋಗ್ಯದ  ಸಮಸ್ಯೆ ಹೆಚ್ಚಾಗಿದೆಯೋ ಹಾಗೇ ಹೊರಗಿನಿಂದ ಪಡೆಯುವಾಗ ಒಳಗೇ ಇರುವ ಶಕ್ತಿಯನ್ನರಿಯದಿದ್ದರೆ ವಿರುದ್ದ ದಿಕ್ಕಿನ  ಪ್ರಭಾವ ಮಾನವನಿಗೆ  ಸತ್ಯದ ಅರಿವಾಗದೆ  ಅಸತ್ಯವೇ ಬೆಳೆದು ನಿಂತು ಹೊರಗಿನ ಸಾಲ ಬೆಳೆಯುತ್ತದೆ.‌ ಹೀಗಾಗಿ ಹಿಂದೆ  ಬೇರೆಯವರಿಂದ ಪಡೆದದ್ದನ್ನು ಸಾಲವೆಂದರಿತು  ಅದರಿಂದ ದೂರವಿರುತ್ತಿದ್ದರು. ಸ್ವಾವಲಂಬನೆ, ಸ್ವಾಭಿಮಾನ,ಸ್ವತಂತ್ರ ಜ್ಞಾನದ ಜೊತೆಗೆ ಸ್ವಾನುಭವದಿಂದಲೇ ಸತ್ಯ ತಿಳಿಯುತ್ತಾ ಧರ್ಮ ರಕ್ಷಣೆಗಾಗಿ  ಸರಳ ಜೀವನ ನಡೆಸುತ್ತಿದ್ದ ಭಾರತದ ಯೋಗಿಗಳ ದೇಶ ಇಂದು ಭೋಗದೆಡೆಗೆ ನಡೆಸುವ ವಿಜ್ಞಾನದೆಡೆಗೆ ವೇಗವಾಗಿ ಹೋಗಿ ರೋಗಿಗಳ ದೇಶವಾಗುತ್ತಿದೆ ಎಂದರೆ ಆರೋಗ್ಯಕರ ಶಿಕ್ಷಣವೂ ಕೊಡದೆ ಆಹಾರದಲ್ಲಿಯೂ ವಿಷ ಬೆರೆಸಿ  ಪ್ರಾಣಿಪಕ್ಷಿ ಜೀವಜಂತುಗಳ ಸ್ವಾತಂತ್ರ್ಯ ಹರಣಮಾಡಿ ಪ್ರಕೃತಿಯನ್ನು ವಿಕೃತಗೊಳಿಸುವಷ್ಟು ರಾಜಕೀಯತೆ ಮಾನವನಲ್ಲಿ ಮನೆ ಮಾಡಿದ್ದರೆ  ಇದಕ್ಕೆ ಕಾರಣ ಅಜ್ಞಾನವಷ್ಟೆ. ಸತ್ಯ ಬಿಟ್ಟು ಮಿಥ್ಯ ಬೆಳೆದಷ್ಟೂ  ಸಮಸ್ಯೆ ಹೆಚ್ಚುವುದೆನ್ನುವುದು ಮಹಾತ್ಮರ ಸಂದೇಶವಾಗಿತ್ತು.ಹಾಗಾದರೆ ಸತ್ಯ ಯಾವುದು? ಆತ್ಮಜ್ಞಾನವೇ ಸತ್ಯ ವಿಜ್ಞಾನ ಮಿಥ್ಯ. ಸಾಧ್ಯವಾದವರು ಬದಲಾಗಬಹುದಷ್ಟೆ.ಯಾರನ್ನೂ ಬದಲಾಯಿಸಲಾಗದು.

Friday, June 23, 2023

ಶುದ್ದಾಶುದ್ದತೆಗೆ ಮಡಿಮೈಲಿಗೆಗೆ ಕಾರಣವೇ ಮನಸ್ಸು

ಹಿಂದಿನ ಸನಾತನ ಧರ್ಮದ ಮಡಿ‌ಮೈಲಿಗೆ ಎಲ್ಲಿಯವರೆಗಿತ್ತು ಎಂದರೆ ಪರರ ಸ್ವತ್ತು ಆಸ್ತಿ ಅಂತಸ್ತು  ಮನೆ ಮಡದಿ ಮಕ್ಕಳ ಬಗ್ಗೆ  ಚಿಂತಿಸುವುದೇ  ಮನಸ್ಸಿನ‌ಮೈಲಿಗೆ ಎನ್ನುವ ಹಂತದಲ್ಲಿತ್ತು ಅಂದರೆ ಪರಮಾತ್ಮ ನನಗೆ ಏನು ಕೊಟ್ಟಿದ್ದನೊ ಅಷ್ಟೇ  ಶುದ್ದ ಭಕ್ತಿಯಿಂದ ಸ್ವೀಕರಿಸಿ ತನ್ನ ಜೀವನ ನಡೆಸಿದರೆ ಮಾತ್ರ ಪರಮಾತ್ಮನಲ್ಲಿ ಜೀವಾತ್ಮ ಐಕ್ಯವಾಗಲು ಸಾಧ್ಯ ಎನ್ನುವ  ಶುದ್ದ ಜ್ಞಾನಿಗಳು ಹೊರಗಿನಿಂದ ಏನೇ ಬಂದರೂ ನನ್ನದಲ್ಲದ್ದನ್ನು ಪಡೆಯುತ್ತಿರಲಿಲ್ಲ. ಕಾಲಾನಂತರದಲ್ಲಿ ಮಾನವನ ಆಸೆ ಭೌತಿಕ ಜಗತ್ತಿನಲ್ಲಿ ಹರಿದಾಡುತ್ತಾ  ಮನಸ್ಸು ಹೊರಗೆ ಹೋಗುತ್ತಾ ಪರರನ್ನು ಕಾಡಿಬೇಡಿಯಾದರೂ  ಹಣ,ಆಸ್ತಿ ಮಾಡುವ ಹಂತಕ್ಕೆ ಬಂದಾಗ ‌ಯಾವ ಧರ್ಮ, ಜಾತಿ  ಬರಲಿಲ್ಲ. ಆಹಾರ ವಿಹಾರದಲ್ಲೂ  ಎಲ್ಲರ ಜೊತೆಗೆ ಹಂಚಿಕೊಂಡು  ಬದುಕುವಾಗ ಒಳಗೇ ಅಡಗಿದ್ದ  ಜೀವಾತ್ಮನ  ಕೇಳಲಿಲ್ಲ. ಹೀಗೇ ಬೆಳೆದಂತೆಲ್ಲಾ ಋಣ ಹೆಚ್ಚಾಯಿತು.ಋಣ ತೀರಿಸಲು ಜನ್ಮ ಗಳು ಹೆಚ್ಚಾದವು.ಜನ್ಮ ಹೆಚ್ಚಾದಂತೆ ಜನಸಂಖ್ಯೆ ಬೆಳೆಯಿತು.ಜನಸಂಖ್ಯೆ ಬೆಳೆದಾಗ ಆಹಾರದ ಕೊರತೆ ಆಹಾರಕ್ಕಾಗಿ ಬಿಕ್ಷೆ ಬೇಡುವುದಾಯಿತು. ಜೀವ ಉಳಿದರೂ ಆತ್ಮಕ್ಕೆ ಸಿಗಬೇಕಾದ ಜ್ಞಾನದ ಶಿಕ್ಷಣ ಸಿಗದೆ‌ ಮನಸ್ಸು  ಅಶುದ್ದವಾಗುತ್ತಾ ಹೊರಗೆ ಮಡಿ ಮೈಲಿಗೆಯ ಆಚಾರ ವಿಚಾರ ಪ್ರಚಾರವಾಯಿತು. ಹಣ ಮಾತ್ರ ಯಾವತ್ತೂ ಶುದ್ದವೆನ್ನುವಂತೆ ಎಲ್ಲಾ ಕಡೆ ಹರಿದಾಡಿತು.ಜ್ಞಾನವಿಲ್ಲದೆ ಹಣದ ದುರ್ಭಳಕೆ ಆದಂತೆಲ್ಲಾ  ಮಡಿಯೂ ಇಲ್ಲ ಮೈಲಿಗೆಯೂ ಇಲ್ಲದೆ ಎಲ್ಲೆಂದರಲ್ಲಿ  ಸ್ವತಂತ್ರ ವಾಗಿ  ಮಾನವನ ದೃಷ್ಟಿ  ಹೋಗುತ್ತಾ  ಈಗ ದೇಶದ ಶುದ್ದತೆಗೆ‌  ಹಿಂದಿನ ಶುದ್ದ ಶಿಕ್ಷಣವೇ ಇಲ್ಲ ವಿದೇಶದವರ ಶಿಕ್ಷಣ ಪಡೆದರೂ ಅವರನ್ನು  ನಮ್ಮವರೆಂದು ಹೇಳಲಾಗದ  ಮನಸ್ಥಿತಿ. ಇನ್ನೂ ಮುಂದೆ ಮುಂದೆ ನಡೆದವರಿಗಂತೂಹಿಂದೆ ಏನಾಗಿತ್ತೆಂಬ ಅರಿವೇ ಇಲ್ಲ. ಹೀಗೆ ಹಿಂದೂ ಇಸ್ಲಾಂ ಮುಸ್ಲಿಂ ಎಂಬ ಮೂರು  ತಮ್ಮ ಒಂದೇ ಮೂಲವನರಿಯದೆ ಶುದ್ದ ಅಶುದ್ದತೆಯನ್ನು ಹೊರಗೆ ಕಾಣುತ್ತಾ  ವ್ಯವಹಾರ ನಡೆಸುವಾಗ ಎಲ್ಲಾ ಒಂದೇ ನಾಣ್ಯ ಬಳಸೋದು ನೋಟಿಗೆ ಮೈಲಿಗೆಇಲ್ಲ.ದೇವರ ಗರ್ಭ ಗುಡಿಯವರೆಗೆ ಭ್ರಷ್ಟರ ಹಣ ಹೋದರೂ ಕಾಣೋದಿಲ್ಲ. ದೇವರಿಗೇನೂ  ಸಮಸ್ಯೆಯಿಲ್ಲ ಮಾನವನಿಗೇ ಸಮಸ್ಯೆ ಹೆಚ್ಚಾಗಿರೋದು. ಕಾರಣ ಮನಸ್ಸು ಮಾನವನದ್ದೆ.ಅದು ಶುದ್ದವಾಗಿಟ್ಟುಕೊಳ್ಳಲು ಮಾಡಿಕೊಂಡು ಬಂದಿರುವ‌ ಆಚರಣೆಯಿಂದ ಶುದ್ದವಾಗಿದ್ದರೆ‌ ಸರಿ.ಇನ್ನಷ್ಟು ಅಶುದ್ದ ಮೈಲಿಗೆಯಾಗಿದ್ದರೆ‌ಕಾರಣ ತಿಳಿಯಬೇಕಿದೆ.  ಸತ್ಯಕ್ಕೆ  ಯಾವ‌ ಶುದ್ದತೆಯ ಅಗತ್ಯವಿಲ್ಲ ಕಾರಣ ಸತ್ಯ ಯಾವತ್ತೂ ಒಂದೇ ಇದ್ದು ಸ್ಥಿರವಾಗಿರುತ್ತದೆ.ಯಾವುದು ಬದಲಾಗುವುದೋ ಅದೇ ಅಶುದ್ದ. ನಮ್ಮೊಳಗೇ ಪರಕೀಯರ ಪ್ರವೇಶವಾದರೆ ಅಶುದ್ದ.ನಮ್ಮೊಳಗೇ ಪರಮಾತ್ಮನ ದರ್ಶನ ವಾದರೆ ಶುದ್ದ. ಆ ಪರಮಾತ್ಮನ ದರ್ಶನ ಮಾಡೋದಕ್ಕಾಗಿ ನಮ್ಮ‌ಮಹಾತ್ಮರುಗಳು  ಪರರ ವಸ್ತು  ಒಡವೆ,ಸ್ತ್ರೀ ಮಕ್ಕಳು ‌ಮನೆಯ   ಬಗ್ಗೆ  ವಿಚಾರ ಪ್ರಚಾರ ನಡೆಸದೆ ಸದಾ ಪರಮಾತ್ಮನ ಸ್ಮರಣೆಯಲ್ಲಿ ತಮ್ಮ ಆತ್ಮಶುದ್ದಿ ಮಾಡಿಕೊಂಡು ಹೊರಗಿನಿಂದ ‌ಬೆಳೆದಿರುವ ಎಲ್ಲಾ ಮಡಿ ಮೈಲಿಗೆಯ ಬಗ್ಗೆ  ಪ್ರಶ್ನೆ ಮಾಡಿದ್ದರು.ಆದರೂ ಮನಸ್ಸು ಸ್ವಚ್ಚವಾಗಲು  ಮಾನವನಿಗೆ ಶುದ್ದ ಜಪತಪ ಅನುಷ್ಠಾನ ತಪಸ್ಸು ದ್ಯಾನ‌ಮಂತ್ರ, ಯೋಗದ ಅಗತ್ಯವಿದೆ.ಎಲ್ಲಾ ಕಾಣೋದಕ್ಕೆ ಮಾನವರಾದರೂ ಕೆಲವರಲ್ಲಿ ದೈವಗುಣ ಕೆಲವರಲ್ಲಿ ಮಾನವೀಯ ಮೌಲ್ಯ,ಕೆಲವರಲ್ಲಿ ಅಸುರಿ ಶಕ್ತಿ  ಇರೋವಾಗ  ನಮ್ಮ ಸಂಗ ಸತ್ಯದಲ್ಲಿದ್ದರೆ ಸತ್ಸಂಗ. ಅದು ನಮ್ಮನ್ನು  ಆಂತರಿಕ ವಾಗಿ ಶುದ್ದತೆ ಕಡೆಗೆ ಕರೆದೊಯ್ಯಬೇಕಷ್ಟೆ.ಭೌತಿಕದಲ್ಲಿದ್ದೇ‌ ವ್ಯವಹಾರವನ್ನು  ಎಲ್ಲರೊಂದಿಗೆ ನಡೆಸಿ ಧರ್ಮದ ವಿಚಾರದಲ್ಲಿ  ಬೇಡವೆಂದರೆ ಋಣ ತೀರಿಸಲಾಗದು. ಋಣವೇ ಮಾನವನ ಜನ್ಮಕ್ಕೆ ಕಾರಣ.ಇದನ್ನು ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆ ಇಲ್ಲದೆ  ನಡೆಸುವ ಕಾರ್ಯದಿಂದ ಋಣ ತೀರುತ್ತಾ ಕೊನೆಗೆ ಒಳಗೇ ಅಡಗಿರುವ‌ ಪರಾಶಕ್ತಿಯ ದರ್ಶನ ವಾಗಿತ್ತು. 
ವಾಸ್ತವದಲ್ಲಿ ನಮ್ಮ ಹಿಂದೂ ಮುಸ್ಲಿಂ  ಇಸ್ಲಾಂ ಶಿಕ್ಷಣದಲ್ಲಿಯೇ ಬಹಳ ವ್ಯತ್ಯಾಸವಿದೆ. ಹಾಗಂತ ವ್ಯವಹಾರಕ್ಕೆ ಎಲ್ಲಾ ಕೈಜೋಡಿಸಿ ಹಣ ಅಧಿಕಾರ ಸ್ಥಾನಮಾನಕ್ಕೆ ಧರ್ಮ ಕ್ಕೆ ಹೋರಾಟ ನಡೆಸಿದರೆ  ಇದ್ದ ಸ್ವಲ್ಪ ಶುದ್ದ ಮನಸ್ಸಿಗೂ ಘಾಸಿಯಾಗುತ್ತದೆ. ಶಿಕ್ಷಣದಿಂದ ಮನಸ್ಸು ಆತ್ಮ ಸೇರಬೇಕಿತ್ತು. ಈಗ ಮನಸ್ಸಿಲ್ಲದೆಯೇ ಕಲಿಯಲೇಬೇಕಾದ ಅನಗತ್ಯ ವಿಚಾರ ವಿಚಾರ ಪ್ರಚಾರವೇ  ಮನಸ್ಸಿನ ಮೈಲಿಗೆ ಹೆಚ್ಚಿಸಿ  ಸಂಕುಚಿತವಾಗಿಸಿ ಆಳೋರು ಹೆಚ್ಚಾಗಿರೋದು ಭಾರತಕ್ಕೆ  ಸಮಸ್ಯೆ ತಂದಿದೆ. ಒಟ್ಟಿನಲ್ಲಿ  ಸ್ವಚ್ಚಭಾರತಕ್ಕೆ ಸತ್ಯದ ಶಿಕ್ಷಣದ ನಂತರ ಮಿಥ್ಯದ ಶಿಕ್ಷಣ ವಿರಬೇಕಿದೆ. ಪೋಷಕರು  ಎಚ್ಚರವಾದರೆ ಉತ್ತಮ ಬದಲಾವಣೆ. 
ಈ ಮಡಿ ವಿಚಾರ ಯಾಕೆ ಬಂದಿತೆಂದರೆ ನಿನ್ನೆ ನಾನು ನನ್ನ ಹೊಸ ಪುಸ್ತಕ ಹಿಡಿದು ರಾಯರ ಗುಡಿಯಲ್ಲಿ  ಪೂಜೆ ಮಾಡಿಕೊಡಲು  ಕೇಳಿದರೆ , ಅಲ್ಲಿದ್ದವರು ಅವರು ಮಡಿಯಲ್ಲಿರುವರು ಆಗೋದಿಲ್ಲವೆಂದರು, ಹಾಗೆಯೇ  ಇನ್ನೊಂದು  ಮಠಕ್ಕೆ ಹೋದಾಗ ಅವರು  ಪೂಜೆ ಮಾಡಿಕೊಟ್ಟರು ಇದನ್ನು  ಮೇಲಿನವರಿಗೆ ತಲುಪಿಸಬೇಕಿತ್ತು ಧರ್ಮದ ವಿಚಾರವಿದೆ ಎಂದಾಗ ಇಲ್ಲ ನೀವೇ ಹೋಗಿ ಕೊಡಬೇಕೆಂದರು ಸರಿ ಎಂದು ಬಂದೆ.ಇನ್ನೊಂದು ಕಡೆ  ಗುರುಗಳ ಶಿಷ್ಯರಿಗೆ  ಲೇಖನ‌ನೀಡಿ ನನಗೆ ಅಲ್ಲಿಯವರೆಗೆ ಬರೋದಕ್ಕೆ  ಸಾಧ್ಯವಾಗದ ಕಾರಣ ಇದನ್ನು ದಯವಿಟ್ಟು ತಲುಪಿಸಿ ಎಂದರೆ  ನೀವೇ ಆಶ್ರಮಕ್ಕೆ ಬರಬೇಕೆಂದರು.
ಲೇಖನಗಳು ಜನಸಾಮಾನ್ಯರಿಗೆ  ತಲುಪಿಸುವ  ಅವಕಾಶವಿದೆ. ಆದರೆ  ಮಹಾಗುರುಗಳವರೆಗೆ ತಲುಪಿಸಲು ಸಮಸ್ಯೆಯಾಗುತ್ತದೆ ಎಂದರೆ  ಮಹಾಭಾರತದ ಪರಿಸ್ಥಿತಿ  ಹೇಗಾಗಿದೆ. ಮಧ್ಯವರ್ತಿಗಳು  ತಮ್ಮ ಸ್ವಾರ್ಥ ಕ್ಕಾಗಿ  ಜನರಿಗೆ ಸತ್ಯ ತಿಳಿಸಲು ಹಿಂದುಳಿದರೆ, ಸತ್ಯ ತಿಳಿದೂ ತಿಳಿಸಲಾಗದ ಜನಸಾಮಾನ್ಯರು  ಇನ್ನೂ ಹಿಂದುಳಿಯುವರು ಹೀಗಾಗಿ ಸತ್ಯ ಹಿಂದುಳಿದು ದೈವತ್ವವಿಲ್ಲದೆ ದೇವರನ್ನು ಕಾಣದಾಗಿದೆ.  ಸತ್ಯ ಒಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದಿಲ್ಲ.
ಮೈ ಮನಸ್ಸು ಶುದ್ದ ಮಾಡಿಕೊಳ್ಳಲು ಹಣಕ್ಕಿಂತ ಜ್ಞಾನವೇ ಮುಖ್ಯವೆನ್ನಬಹುದಾದರೂ ಎಷ್ಟೋ  ಮಂದಿಯ ಆಹಾರವೇ   ಶುದ್ದವಾಗಿರದೆ ಮನಸ್ಸು ಶುದ್ದಿಯಾಗುವುದು ಕಷ್ಟ. ಕೆಲವರ ಆಹಾರ ಶುದ್ದವಿದ್ದರೂ ಸಂಪಾದನೆಯ ಮಾರ್ಗ ಶುದ್ದವಿರದು.ಹೀಗೇ ಅಧರ್ಮ, ಅಸತ್ಯ,ಅನ್ಯಾಯ ಭ್ರಷ್ಟಾಚಾರ ದಿಂದ ಗಳಿಸಿದ ಹಣದಿಂದ  ಮನಸ್ಸು ಶುದ್ದವಾಗದೆ ಆತ್ಮವೂ ಶುದ್ದವಾಗಿರದು. 
ಇಂತಹ ಸಾಕಷ್ಟು ಅನುಭವಗಳಾಗಿದ್ದರೂ ಪ್ರಶ್ನೆ ಮಾಡಲಾಗದು. ಒಂದು ಚೌಕಟ್ಟನ್ನು ಹಾಕಿಕೊಂಡಾಗ ಹೊರಗೆ ಬೇರೆ ಕಾಣೋದು. ಹೀಗಾಗಿ ಒಂದು ಚೌಕಟ್ಟನ್ನು ಶುದ್ದಿಗೊಳಿಸಿಕೊಳ್ಳುವಾಗ ಹೊರಗಿನವರನ್ನು ಸೇರಿಸಿಕೊಳ್ಳದೆ ದೂರವಿಟ್ಟು ಮಡಿ ಮೈಲಿಗೆ  ಬಂದಿತು. ಆದರೆ ಮನಸ್ಸು ಕೇಳಬೇಕೇ  ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದರೆ  ದೇಹ ಮಾತ್ರ ಚೌಕಟ್ಟಿನಲ್ಲಿರಲು  ಸಾಧ್ಯವಾಗದೆ‌ಹೊರಬರುತ್ತದೆ.  ಭಾರತದ  ಹಲವು ಆಚಾರ ವಿಚಾರಗಳ ಹಿಂದೆ  ಆತ್ಮಶುದ್ದಿಯ ಉದ್ದೇಶವಿತ್ತು. ವಿದೇಶ ಪ್ರಯಾಣವನ್ನು ಅಶುದ್ದವೆಂದಿದ್ದರು ಅಂದರೆ, ಒಳಗಿನಿಂದ ಹೊರಗೆ ಮನಸ್ಸು ನಡೆದಷ್ಟೂ ಮನಸ್ಸು ಚಂಚಲವಾಗುತ್ತಾ ಭೌತಿಕಾಸಕ್ತಿ ಹೆಚ್ಚಾದರೆ   ಆತ್ಮಜ್ಞಾನಕ್ಕೆ  ಸಮಸ್ಯೆ ಎನ್ನುವ ಕಾರಣವಿದೆ. ಈಗ ಶಿಕ್ಷಣವೇ ಹೊರಗಿನಿಂದ  ಒಳಗೆ ಸೇರಿಸಿರುವಾಗ ಒಳಗೇ ಅಡಗಿದ್ದ ಮೂಲದ ಸತ್ಯಧರ್ಮ ಜ್ಞಾನ ಬೆಳೆಸುವವರಿಲ್ಲದೆ  ಈ ಮಡಿ ಮೈಲಿಗೆಯ ಹಿಂದಿನ ಉದ್ದೇಶ ಅರ್ಥ ವಾಗದು. ಲೇಖನವು ಸತ್ಯಶುದ್ದವಿದ್ದರೂ  ಪುಸ್ತಕ ಹೊರಗಿನಿಂದ  ಬಂದಿದ್ದರಿಂದ  ಮಡಿ  ಹೋಗುವುದಾದರೆ  ಎಲ್ಲಾ  ಸಾಮಾಗ್ರಿಗಳನ್ನು   ಶುದ್ದಗೊಳಿಸಿಯೇ  ಪೂಜೆಗೆ ಬಳಸಬೇಕು. ಹಾಗೆಯೇ ಹಣವೂ ಕೂಡ.  ಲೇಖನ  ನೇರವಾಗಿ ಹೋಗಿ ಕೊಟ್ಟಿದ್ದರೂ  ನೀವ್ಯಾರು?  ನಿಮಗೇನಿದೆ ಅಧಿಕಾರ? ಎನ್ನುವ ಪ್ರಶ್ನೆ  ಬಂದಾಗ ಸಾಮಾನ್ಯರಲ್ಲಿರುವ‌ ಸತ್ಯಜ್ಞಾನ  ಶುದ್ದವಾಗಿ ಕಾಣದು. ಅನುಭವಕ್ಕೆ ಬರದೆ ಸತ್ಯ ಶುದ್ದವಾಗಿರದು ಇದಕ್ಕೆ  ನಮಗೆ ಈ ರೀತಿಯಲ್ಲಿ  ನಡೆಸಿ, ತಿಳಿಸಿ ,ಕಲಿಸುವುದೂ ಆ ಒಬ್ಬನೇ ಪರಮಾತ್ಮನಾದಾಗ  ಯಾರದ್ದೂ ತಪ್ಪು ಒಪ್ಪು ಎನ್ನಲಾಗದಲ್ಲವೆ? ಒಟ್ಟಿನಲ್ಲಿ ಇರುವ ಒಂದೇ ಸತ್ಯದೆಡೆಗೆ ಹೋಗೋದಕ್ಕೆ  ಆಂತರಿಕ ವ್ಯಕ್ತಿತ್ವ  ಅಗತ್ಯವಿದೆ. ಭೌತಿಕದಲ್ಲಿ ವ್ಯಕ್ತಿಯನ್ನು ಬೆಳೆಸಿದಷ್ಟೂ ಅಶುದ್ದವಾಗುವುದು ಮನಸ್ಸು.
.ಇಲ್ಲಿ  ಸತ್ಯ ಒಂದೇ ದೇವನೊಬ್ಬನೇ ಧರ್ಮ ಒಂದೇ  ನಾವೆಲ್ಲರೂ ಒಂದೇ ಎನ್ನುವಾಗ ನಮ್ಮೊಳಗೇ ಅಡಗಿರುವ ಬೇರೆ ಬೇರೆ‌ ಧರ್ಮ, ಜಾತಿ,ಪಂಥ,ಪಂಗಡ,ಪಕ್ಷ  ನಮ್ಮತನ ಗುರುತಿಸಿಕೊಳ್ಳಲು  ಆಗದಂತೆ ಮಾಡುತ್ತಾ ಹೊರಗಿರುವ ಅನೇಕ ಸತ್ಯದೆಡೆಗೆ  ಹೋಗಿ ಎಲ್ಲದರಲ್ಲೂ ಅಡಗಿರುವ ಆ ಒಂದೇ ಶಕ್ತಿಯನ್ನು ಗುರುತಿಸದಂತೆ ಮಾಡಿದೆ. ಇದನ್ನು ತಪ್ಪು ಎನ್ನಲಾಗದು ಕಾರಣ ಕಾಲಿಗೆ ಅಂಟಿರುವ‌ ಕೊಳೆಯನ್ನು ತೊಳೆದು ಹಾಕಬಹುದು.ತಲೆಗೆ ಅಂಟಿರುವ ಕೊಳೆಯನ್ನು ಅಷ್ಟು ಸುಲಭವಾಗಿ ತೊಳೆಯಲಾಗದು.ಇದನ್ನು ಸತ್ಯ ಧರ್ಮದಿಂದ ಸತ್ಕರ್ಮದಿಂದ, ಸದಾಚಾರ,ಸಾಮರಸ್ಯ, ಸಹನೆ, ಸಮಾಧಾನದಿಂದ  ನಿಧಾನವಾಗಿ ಹೊರಹಾಕಬೇಕು.
ಹೀಗಾಗಿ  ಜಗತ್ತನ್ನು ತಿದ್ದಲಾಗದು.ನಮ್ಮೊಳಗಿನ ಜಗತ್ತನ್ನು ನಾವೇ ನೋಡಲಾಗದು.ಹೀಗಿರುವಾಗ  ಶುದ್ದತೆ ಮೊದಲು ಒಳಗೆ ನಡೆದಾಗಲೇ ಹೊರಗಿನ  ಸ್ವಚ್ಚತೆಗೆ ಸುರಿಯುತ್ತಿರುವ ಕೋಟ್ಯಾಂತರ ಹಣ ಉಳಿಸಬಹುದು.  ಉಳಿತಾಯಕ್ಕೆ ಶುದ್ದ ಜ್ಞಾನದ  ಶಿಕ್ಷಣದ ಅಗತ್ಯವಿದೆ. ಜ್ಞಾನ ಒಳಗಿದ್ದರೂ ಗುರುತಿಸುವ ಗುರು ಹಿರಿಯರನ್ನು  ಕಾಣೋದಕ್ಕೂ ಸಮಯ ಬರಬೇಕಿದೆ. ಕಾಲಕೂಡಿಬಂದಾಗ ಆಗಲೇ ಬೇಕು ಆಗುತ್ತದೆ. ಯೋಗವೆಂದರೆ ಇದೇ ಅಲ್ಲವೆ?  ಆಗೋದನ್ನು ತಡೆಯಲಾಗದು ಆದರೆ ಯಾಕೆ ಆಗುತ್ತಿದೆ ಎಂದು ತಿಳಿಯಬಹುದು.
ಏನಂತೀರಾ? 

ಭವಿಷ್ಯ ಬದಲಾಗದು ಹವ್ಯಾಸ ಬದಲಾವಣೆ ಸಾಧ್ಯ.ಮನಸ್ಸಿರಬೇಕು

ಭಾರತೀಯರ ದೋಷವೆಂದರೆ  ನಮ್ಮತನ ನಮ್ಮವರನ್ನು ನಾವು ಗುರುತಿಸದೆ ಪರರನ್ನು ಪ್ರೀತಿಸಿ ಬೆಳೆಸೋದು ಇದಕ್ಕೆ ರಾಜಕಾರಣಿಗಳೂ ಅದೇ ದಾರಿ ಹಿಡಿದಿರೋದು ಇದರಿಂದ ಲಾಭವಾಗಿದ್ದು ಪರರಿಗೇ ತಾನೇ?
 ಇದೊಂದು ಹಿಂದಿನಿಂದಲೂ ಬೆಳೆದು  ಬಂದಿರುವ ರಾಜಕೀಯ ತಂತ್ರವಾಗಿದೆ.ತತ್ವದಿಂದ ಧರ್ಮ ಬೆಳೆದರೆ ತಂತ್ರದಿಂದ ಅಧರ್ಮ ವೇ ಬೆಳೆದುಬಂದಿದೆ. ತಂತ್ರಜ್ಞಾನದಿಂದ ಆತ್ಮನಿರ್ಭರ ಭಾರತ ಮಾಡಲು ಹೊರಟವರು ವಿದೇಶಿಗಳನ್ನು ಸುತ್ತಿದರೂ ಭಾರತೀಯತೆ ಭಾರತದ ಪ್ರಜೆಗಳಲ್ಲೇ ಮಾಯವಾಗುತ್ತಿದ್ದರೆ ಆತ್ಮದುರ್ಭಲ ಭಾರತವಷ್ಟೆ. ಇಲ್ಲಿ ನಾವು ರಾಜಕೀಯದಿಂದ ಜನರನ್ನು ಬದಲಾವಣೆ ಮಾಡುವ ಬದಲಾಗಿ ರಾಜಯೋಗದ ಸತ್ಯದ ಕಡೆಗೆ ನಡೆದಿದ್ದರೆ  ನಮ್ಮೊಳಗೇ ಅಡಗಿರುವ ಭ್ರಷ್ಟಾಚಾರ  ಹೋಗಿ ಶಿಷ್ಟಾಚಾರ ಹೆಚ್ಚಾಗಿ ಶಾಂತಿ ಸಮಾಧಾನ,ನೆಮ್ಮದಿ ತೃಪ್ತಿ  ಇದ್ದಲ್ಲಿಯೇ ಇದ್ದುದರಲ್ಲಿಯೇ  ಪಡೆಯಬಹುದಿತ್ತು. ಆದರೆ ವಿಪರ್ಯಾಸವೆಂದರೆ  ಯಾರಲ್ಲಿ ಸತ್ಯವಿತ್ತೋ ಧರ್ಮ ವಿತ್ತೋ ಅದನ್ನು ಗುರುತಿಸದೆ ಗುರುಹಿರಿಯರೇ  ಹೊರಗಿನ ರಾಜಕೀಯದೆಡೆಗೆ ನಡೆಯುತ್ತಾ  ಹೊರಗೆ ಬಂದರೆ ಒಳಗಿದ್ದ ಸತ್ಯವಾಗಲಿ ಧರ್ಮ ವಾಗಲಿ ಸಹಕಾರವಿಲ್ಲದೆ ಹಿಂದುಳಿಯುತ್ತದೆ. ಈಗ ಭಾರತೀಯರ ಸ್ಥಿತಿಯೂ ಇದೇ ಆಗಿದೆ.
ಮಕ್ಕಳ ಒಳಗಿರುವ ಮಹಾತ್ಮರನ್ನು  ಗುರುತಿಸದ ಶಿಕ್ಷಣವನ್ನು ಕೊಡುತ್ತಾ ತಾವೂ ಹೊರಗಿನ ರಾಜಕೀಯದ ದಾಸರಾಗಿ ಸಾಲ ಮಾಡುತ್ತಾ ವಿದೇಶದವರೆಗೆ  ಹೋದವರಿಗೆ ತಿರುಗಿ ಬರಲಾಗದೆ ಅಲ್ಲಿ ನೆಲೆನಿಂತು ದೇಶದ ಹುಳುಕನ್ನು ಎತ್ತಿ ಹಿಡಿದು ಶಾಂತಿಯಿಂದ ಬದುಕಿದವರ ನೆಮ್ಮದಿ ಕೆಡಿಸಿದರೆ ದೇಶದ ಋಣ ತೀರಿಸಲಾಗದು. ಒಟ್ಟಿನಲ್ಲಿ ತಾವೇ ಸರಿಯಿಲ್ಲದೆ  ಮಕ್ಕಳು ಮಹಿಳೆಯರನ್ನು ಸರಿಪಡಿಸಹೋದರೆ ನಾರಿ ಮಾರಿಯಾಗುತ್ತಾಳೆ.ಮಕ್ಕಳು ಪೋಷಕರನ್ನೇ ಶೋಷಣೆ ಮಾಡುತ್ತಾರೆ. ಕರ್ಮಕ್ಕೆ ತಕ್ಕಂತೆ ಪ್ರತಿಫಲ .ಇದನ್ನು ಯಾರೂ ತಪ್ಪಿಸಲಾಗದ ಮೇಲೆ ನಮ್ಮ ಕರ್ಮವು ಧರ್ಮದ ಜೊತೆಗೆ ಸತ್ಯವನ್ನರಿತು ನಡೆಸಿದರೆ ಆತ್ಮನಿರ್ಭರ ಭಾರತ ಸಾಧ್ಯ. ಇದಕ್ಕೆ  ಹೊಂದಿಕೊಳ್ಳದ ಯಾವುದೇ ರಾಜಕೀಯ ದೇಶವನ್ನು ಹಿಂದುಳಿಸುವುದರ ಜೊತೆಗೆ ವಿದೇಶಿಗಳನ್ನು ಸ್ವಾಗತಿಸುವ ಮೂಲಕ  ವಿದೇಶದ ಕೈಕೆಳಗೆ ದೇಶ ಬಿಟ್ಟು  ಹೋಗುವುದು ಸತ್ಯ.ಇದು ಅಧ್ಯಾತ್ಮ ಸತ್ಯವಾಗಿರುವ‌ಕಾರಣ ಹಣ ಅಧಿಕಾರ ಸ್ಥಾನಮಾನ ಪಡೆದವರು ಒಪ್ಪಿಕೊಳ್ಳಲು ಕಷ್ಟ ಕಾರಣ ಅವರ ಜೀವನ ನಡೆದಿರೋದೆ ವಿದೇಶಿ ವಿಜ್ಞಾನದಿಂದ ಹೀಗಿರುವಾಗ ಸತ್ಯ  ತಿಳಿಯಲು ಆಂತರಿಕ ಶುದ್ದಿಯಿರಬೇಕು. ಈಗಿನ‌ಪರಿಸ್ಥಿತಿಯಲ್ಲಿ ಕಷ್ಟವಿದೆ. ಆದರೂ ಪ್ರಯತ್ಮ ಪಟ್ಟರೆ ಸಾಧ್ಯವಿದೆ. ಆಡಂಬರದ ವೈಭೋಗದ ಜೀವನಕ್ಕೆ ಬಳಸುವ ಹಣವನ್ನು ಕಡಿತಗೊಳಿಸಿ ದೇಶದ ಸಾಲ ತೀರಿಸುವತ್ತ ಅಥವಾ ನಮ್ಮವರ   ಹಿಂದಿನ ಜ್ಞಾನದೆಡೆಗೆ  ನಡೆಯುವುದರ ಮೂಲಕ ನಮ್ಮೊಳಗೇ ಅಡಗಿರುವ ಅಜ್ಞಾನವನ್ನು  ಕಡಿಮೆಗೊಳಿಸಿಕೊಂಡರೆ ಸದ್ಗತಿ . ಇಲ್ಲವಾದರೆ ಅಧೋಗತಿ. ಮಾನವನೊಳಗಿರುವ‌  ದೇವಾಸುರರ ಗುಣವು ಹೊರಗಿನ ಶಿಕ್ಷಣದಿಂದ ಪಡೆದಿದ್ದರೂ ಯಾವ ಗುಣ ನಮ್ಮ ಜೀವನ ದಲ್ಲಿ ಶಾಶ್ವತ ಶಾಂತಿ ಕೊಡುವುದೆನ್ನುವ ಅರಿವಿದ್ದರೆ ಉತ್ತಮ .ಅರಿವೇ ಇಲ್ಲದೆ ಯಾರೋ ಹೇಳಿದ್ದಷ್ಟೆ ಸತ್ಯವೆಂದು ನಡೆದರೆ ಒಳಗಿರುವ ಸತ್ಯ ಅರ್ಥ ವಾಗದು. ಇದೇ ಮಾನವನ ಸಮಸ್ಯೆಗೆ ಕಾರಣವಾಗುತ್ತದೆ. ಲೋಕಕಲ್ಯಾಣಕ್ಕಾಗಿ ಹಿಂದಿನ ಮಹಾತ್ಮರುಗಳು  ತಮ್ಮ ಸುತ್ತಮುತ್ತಲಿನ  ಕಸ ಕಡ್ಡಿ ಮುಳ್ಳುಗಳನ್ನು  ಸ್ವಚ್ಚ ಮಾಡಿಕೊಂಡು  ಬದುಕಲು ತಿಳಿಸಿದ್ದರೆ ಈಗ  ಆ ಮುಳ್ಳುಗಳನ್ನು  ಬಳಸಿಕೊಂಡು  ಎಲ್ಲರಿಗೂ ಹಂಚಿ  ಚುಚ್ಚಿದರೂ  ನೋವಾಗಿಲ್ಲವೆನ್ನುವ ನಾಟಕವಾಡಿದರೆ ಅಸತ್ಯ. ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂದಂತೆ ನಮ್ಮ ಮಕ್ಕಳು ಏನು ಮಾಡಿದರೂ ಸರಿ. ಅದೇ ಬೇರೆಯವರ ಮಕ್ಕಳು ಮಾಡಿದರೆ ತಪ್ಪಾಗುವುದೇಕೆ? ಸತ್ಯ ಒಂದೇ ಆದಾಗ ನಮ್ಮ ದೃಷ್ಟಿ ಒಂದೇ ಸಮನಾಗಿರದ ಕಾರಣ ಇಲ್ಲಿ ಅಧರ್ಮ ಹೆಚ್ಚಾಗಿರೋದು.
ಒಂದು ಮಠದಲ್ಲಿ ಕೆಲಸ ಮಾಡೋದಕ್ಕೂ ಸೇವೆ ಮಾಡೋದಕ್ಕೂ ವ್ಯತ್ಯಾಸವಿದ್ದ ಹಾಗಿದೆ. ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಕೆಲಸವೇ  ಪರಮಾತ್ಮನ ಸೇವೆ. ಇಲ್ಲವಾದರೆ ಇದೊಂದು ವ್ಯವಹಾರಿಕ ಪರಕೀಯರ ಸೇವೆ. ಋಣ ತೀರದು. ಕಲಿಗಾಲ ಇಷ್ಟು  ಸ್ವಚ್ಚವಾಗಿರಲು ಕಷ್ಟವಿದೆ.ಕೊನೆಪಕ್ಷ ನಮ್ಮವರ ಸತ್ಯ ಧರ್ಮದ ವಿಚಾರಕ್ಕೆ ಸ್ಪಂದಿಸುವ ಗುಣವಾದರೂ ಇದ್ದರೆ ಬದಲಾವಣೆ ಸಾಧ್ಯವಿತ್ತು. ನಮ್ಮ ಸ್ವಾರ್ಥ ಸಂತೋಷವೇ ಮುಖ್ಯಗುರಿಯಾಗಿಸಿಕೊಂಡು ಜನರನ್ನು ಆಳೋದರಿಂದ  ಮುಂದೆ ಆಳಾಗಿ ದುಡಿಯಲೇಬೇಕು. ಆಳು ಅರಸನಾಗಲು ಆತ್ಮಜ್ಞಾನ ಅಗತ್ಯ.
ಇದಕ್ಕೆ ಮಾನವ ಅ ದಿಂದ ಆ ಕಡೆಗೆ ಹೊರಟು ಮ ದ ಮಧ್ಯಸ್ಥಿಕೆ ಯಲ್ಲಿ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಂಡು ಸತ್ಯದ ಕಡೆಗೆ ಹೊರಟರೆ ಜ್ಞ ಎಂಬ ಕೊನೆಮುಟ್ಟಲು ಸಾಧ್ಯವಿದೆ.
ಇಲ್ಲಿ ಅ ಮೊದಲಕ್ಷರದಲ್ಲಿರುವ ಅಹಂಕಾರ, ಅಸಹಕಾರ, ಅಸಹಾಯಕತೆ,ಅಜ್ಞಾನ,ಅತಿಆಸೆ ಬಿಟ್ಟು  ಮುಂದಿನ 'ಆ'  ಅಂದರೆ ಆತ್ಮವಿಶ್ವಾಸ, ಆತ್ಮಸಂಶೋಧನೆ,ಆತ್ಮಪರಿಶೀಲನೆ
,ಆತ್ಮಸಮಾಲೋಚನೆ,ಆಧ್ಯಾತ್ಮದ ಆತ್ಮಜ್ಞಾನದೆಡೆಗೆ ಹೊರಟರೆ ಆನಂದದ  ಜೀವನ ನಡೆಸುತ್ತಾ ಮಧ್ಯದಲ್ಲಿ ಬರುವ  ಮಧ್ಯವರ್ತಿಗಳ ಅರ್ಧ ಸತ್ಯ ಅರ್ಧ ಮಿಥ್ಯವನರಿತು ಸತ್ಯಕ್ಕೆ ಸಹಕಾರ ಕೊಟ್ಟವರಷ್ಟೇ  ನಿಜವಾದ ಆತ್ಮಜ್ಞಾನಿ
ಗಳಾಗಿರಬಹುದು. ಇಲ್ಲಿ ಓದಿ ತಿಳಿದ ಸಾಕಷ್ಟು ವಿಷಯಗಳಲ್ಲಿ ಅಡಗಿರುವ ರಾಜಕೀಯತೆ ಬಿಟ್ಟರೆ ಅದರಲ್ಲಿ ಸತ್ಯ ಸತ್ವ ತತ್ವ ಅರ್ಥ ವಾಗುತ್ತದೆ. ಎಷ್ಟು ಹಣ ಸಂಪಾದಿಸಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕಿದೆ. ವಿಜ್ಞಾನ ಜಗತ್ತಿನಲ್ಲಿ ಹಣವನ್ನು ಹೊಳೆಯಾಗಿಸಿ ಹರಿಸಿದ್ದರೂ  ಸತ್ಯ ಜ್ಞಾನದ ಕೊರತೆ ಮಾನವನಿಗೆ ಆಪತ್ತು ತರುತ್ತಿದೆ ಎಂದರೆ ನಮ್ಮ  ನಡೆ ನುಡಿಯು ವ್ಯವಹಾರಕ್ಕೆ ಸೀಮಿತವಾಗಿದೆ .ಮೂಲ ಧರ್ಮ ಕರ್ಮ ಬಿಟ್ಟು ಹೊರಗೆ ನಡೆದವರಿಗೆ ಮೂಲದೆಡೆಗೆ ಬರಲಾಗದಿದ್ದರೆ ಬಿಟ್ಟು ಬಿಡಬೇಕು. ಹಿಂದೆ ನಡೆದು ಬರುವ‌ಮಕ್ಕಳು ಮಹಿಳೆಯರಿಗೆ ಉತ್ತಮ ದಾರಿದೀಪವಾದರೆ ಸಾಕು. ಇದು ಬಿಟ್ಟು ಹೊರಗೆ ಹೋದವರಿಗೇ ಮಣೆಹಾಕುತ್ತಾ ತಾವೂ ಹೊರಗೆ ಹೋದರೆ  ಅಧರ್ಮ ವಲ್ಲವೆ? 
ವಾಸ್ತವ ಸತ್ಯ ವಾಸ್ತವದಲ್ಲಿದ್ದೇ ತಿಳಿಯಬೇಕಷ್ಟೆ.ಪುರಾಣ ತಿಳಿದು ಭವಿಷ್ಯ ನಿರ್ಧಾರ ಮಾಡಿದರೂ ವಾಸ್ತವ ಸತ್ಯ ಅರ್ಥ ಆಗದಿದ್ದರೆ ನೀರಿನಲ್ಲಿ ಹೋಮಮಾಡಿದಂತೆ. ಕುಟ್ಟಿ ಕುಂದಾಪುರಕ್ಕೆ ಹೋಗಿಬಂದಂತಾಗುವುದು.ಅಂದರೆ ಯಾರೋ  ಹೇಳಿದರೆಂದು ಅದರ ಮೂಲ ತಿಳಿಯದೆ ವಾಸ್ತವ ಸರಿಯದೆ ಭವಿಷ್ಯದ ಚಿಂತನೆ ಮಾಡಿದರೆ ವ್ಯರ್ಥ.
ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಇದಕ್ಕೆ ತಕ್ಕಂತೆ ಲಯವಾಗುತ್ತದೆ. ಒಂದು ಸರಿಯಿಲ್ಲವೆಂದರೂ ಇನ್ನೊಂದು ಸರಿಯಾಗದು.
ಮೂಲದ ಸೃಷ್ಟಿ  ಅರ್ಥ ವಾದರೆ ಉತ್ತಮಸ್ಥಿತಿ.ಅಜ್ಞಾನದ ಸೃಷ್ಟಿ ಅಜ್ಞಾನದ ಸ್ಥಿತಿಗೆ ಕಾರಣವಾಗಿ ಲಯವೂ ಅಜ್ಞಾನ
ದಲ್ಲೇ ಆಗುವುದು. ಇದಕ್ಕೆ ಪರಿಹಾರ ಮೂಲ ಶಿಕ್ಷಣದಲ್ಲಿಯೇ ಸೃಷ್ಟಿಯ ರಹಸ್ಯಜ್ಞಾನವಿದ್ದರೆ ಮನುಕುಲದ ಸ್ಥಿತಿಗೆ ಕಾರಣ ತಿಳಿದು ಲಯದ ಮುಕ್ತಿ ಕಡೆಗೆ ಆನಂದದಿಂದ  ಜೀವದ ಪಯಣವಿರುವುದು. 
ನಮ್ಮ ಪ್ರತಿಯೊಂದು ಕರ್ಮದ ಹಿಂದೆ ಕಾರಣವಿರುತ್ತದೆ.
ಇದನ್ನು ರಾಜಕೀಯವಾಗಿ ತಿಳಿಯಲಾಗದು. ಹಾಗಾಗಿ ಜ್ಞಾನಕ್ಕೆ ರಾಜಯೋಗದ ಅಗತ್ಯವಿದೆ. ತನ್ನ ತಾನರಿತು ನಡೆಯಲು ಆತ್ಮಾವಲೋಕನ ಅಗತ್ಯವಿದೆ. ಹೆಚ್ಚು ಹಳೇ ಗಾಯ  ಕೆದಕಿ ಹುಣ್ಣು ಮಾಡಿಕೊಂಡರೆ  ನೋವು ದೇಹಕ್ಕೆ ಅಲ್ಲವೆ? ಹಾಗೆಯೇ ಹಿಂದೆ ನಡೆದ ವಿಚಾರದಲ್ಲಿ  ಅಧರ್ಮ ಅಸತ್ಯ,ಅನ್ಯಾಯದ ರಾಜಕೀಯವೇ ಇದ್ದರೆ ಅಧರ್ಮ ವೇ ಹೆಚ್ಚುತ್ತಾ ಶಾಂತಿಕಾಣದೆ ಜೀವ ಹೋಗುವುದು. ಇಷ್ಟಕ್ಕೂ ಭೂಮಿಗೆ ಬಂದಿರುವ ಉದ್ದೇಶ ಸಾಲ ತೀರಿಸುವುದಾದರೆ  ಸತ್ಕರ್ಮ ಸ್ವಧರ್ಮ ಸುಜ್ಞಾನ,ಸತ್ಯದ  ಕಡೆಗೆ ನಡೆಯಲೇಬೇಕು. ರಾಜಕಾರಣಿಗಳಲ್ಲಿ ರಾಜಕೀಯದಲ್ಲಿ  ಇವುಗಳಿದೆಯೆ? ಕಣ್ಣಿಗೆ ಕಂಡದ್ದೇ ಸತ್ಯವೆನ್ನುವ ಅಜ್ಞಾನ ಮಿತಿಮೀರಿದೆ. ಇದಕ್ಕೆ ಹಣ,ಅಧಿಕಾರ,ಸ್ಥಾನಮಾನ,
ಸನ್ಮಾನ,ಜನರ ಸಹಕಾರ ಸಿಕ್ಕಿದರಂತೂ ಮುಗಿದೇ
ಹೋಯಿತು.ಅಸುರಕುಲದಿಂದ ಭೂಮಿ  ನಡುಗುತ್ತದೆ.ಇದಕ್ಕೆ ಭೂಕಂಪ.ಪ್ರಕೃತಿವಿಕೋಪ, ನದಿಗಳ ದುರ್ಭಳಕೆಯಿಂದ ಪ್ರಳಯಾಂತಕ  ಸುನಾಮಿ ಹೀಗೇ ಜೀವ ಹೋಗುತ್ತಿರುವುದು. ಸರ್ಕಾರ ಜೀವ ಉಳಿಸಬಹುದೆ? ಜೀವಕ್ಕೆ ಬೆಲೆ ಕಟ್ಟಿ ಹಣ ಕೊಟ್ಟರೂ  ಸಾಲವೆ .ತೀರಿಸಲು ಬರಲೇಬೇಕು.ಕಾಣದ ಸತ್ಯ ಹೇಳಿದರೂ ಅರ್ಥ ವಾಗಲು ಆತ್ಮ ಜ್ಞಾನ ಬೇಕಿದೆ. ಇದು ಎಲ್ಲರೊಳಗಿರುವ ಪರಮಾತ್ಮನ ಶಕ್ತಿಯಾಗಿದೆ. 
ತತ್ವದಿಂದ  ಒಗ್ಗಟ್ಟು  ಮೂಡಬೇಕಿತ್ತು ಅದೇ ತಂತ್ರದ ವಶದಲ್ಲಿ ಇದ್ದರೆ  ಬಿಕ್ಕಟ್ಟು  ಹೆಚ್ಚಾಗಿ ಹೊರಗಿನ ಹೋರಾಟ ಹಾರಾಟ ಮಾರಾಟದಲ್ಲಿಯೇ ಜೀವ ಹೋಗುತ್ತದೆ. 

ಪುರಾಣ ಕಥೆಯಲ್ಲಿ  ಅಸುರರ ತಪಸ್ಸಿಗೆ ಮೆಚ್ಚಿ ದೇವತೆಗಳು ವರನೀಡಿ ಕೊನೆಗೆ ದೇವಲೋಕವನ್ನೇ ಆಳಲು ಅಸುರರು ಹೊರಟಾಗ  ದೇವತೆಗಳು ಮೊರೆಹೋಗಿದ್ದು ತ್ರಿಮೂರ್ತಿಗಳನ್ನೇ  ಅವರಿಂದಲೂ ಸಾಧ್ಯವಾಗದಿರುವಾಗ ಸ್ವಯಂ ಶಕ್ತಿಯೇ ಅವತಾರವೆತ್ತಬೇಕಾಯಿತು. ಅಂದರೆ ಭೂ ಶಕ್ತಿಯ ದುರ್ಭಳಕೆ  ಹೆಚ್ಚಾಗುವುದೆ ಸ್ತ್ರೀ ಯರು ಅಸುರರಿಗೆ ಸಹಕರಿಸಿದಾಗ  ಅದರ ಪ್ರತಿಫಲ ತಿರುಗಿ ಬರೋವಾಗ  ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ  ದೇವತೆಗಳೆಲ್ಲರ ಒಗ್ಗಟ್ಟು ಅಗತ್ಯವಾದರೂ ,ಸ್ತ್ರೀ ಶಕ್ತಿಯ ಸಹಕಾರವಿಲ್ಲದಿದ್ದರೆ  ಏನೂ ಸಾಧ್ಯವಿಲ್ಲ ಎನ್ನುವ  ಸಂದೇಶ ಇದರಲ್ಲಿದೆ.  ಈಗಲೂ ಸಾಕಷ್ಟು ದೇವತಾರಾಧನೆ ನಡೆದಿದೆಯಾದರೂ ನಮ್ಮ ಸಹಕಾರ ಮಾತ್ರ ಭ್ರಷ್ಟಾಚಾರದ ಸರ್ಕಾರಕ್ಕೆ ಇದ್ದಾಗ ಧರ್ಮ ರಕ್ಷಣೆ ಹೀಗಾಗುತ್ತದೆ? ಜೊತೆಗೆ  ಭ್ರಷ್ಟಾಚಾರದ ಹಣದಲ್ಲಿಯೇ ಧಾರ್ಮಿಕ ಕಾರ್ಯ ನಡೆಸಿದರೆ ಶಿಷ್ಟಾಚಾರಕ್ಕೆ ಯಾರೂ ಬೆಲೆಕೊಡದೆ ಹಿಂದುಳಿದವರೂ ಭ್ರಷ್ಟಾಚಾರದ ವಶಕ್ಕೆ ಬರುತ್ತಾರೆ. ಯಾವೊಬ್ಬ ವ್ಯಕ್ತಿಯಿಂದ ದೇಶ ನಡೆದಿಲ್ಲ ಹಾಳಾಗಲೂ ಇಲ್ಲ ಬೆಳೆದೂ ಇಲ್ಲ ಪ್ರಜಾಸರ್ಕಾರದಿಂದ ಎಲ್ಲಾ ನಡೆದಿರುವಾಗ ಪ್ರಜೆಗಳ ಒಳಗೆ  ಇದ್ದು ನಡೆಸೋ ಶಕ್ತಿ ಯಾವುದು? ದೈವಶಕ್ತಿಯೋ ಅಸುರಶಕ್ತಿಯೋ? ಕಣ್ಣಿಗೆ ಕಾಣದಿದ್ದರೂ ಗುಣದಿಂದ ಅರ್ಥ ಮಾಡಿಕೊಳ್ಳಲು ಜ್ಞಾನ ಬೇಕಷ್ಟೆ. ಹಣದಿಂದ ಗುಣವನ್ನು ಅಳೆಯುವುದೇ ಅಜ್ಞಾನ.
ಹಿಂದಿನ  ಕಾಲದಲ್ಲಿದ್ದ  ಪರಿಸ್ಥಿತಿ ಇಂದಿಲ್ಲ ಇಂದಿರುವ ಸ್ವಾತಂತ್ರ್ಯ ಮುಂದೆ ಇರುವುದೋ ಇಲ್ಲವೋ ಗೊತ್ತಿಲ್ಲ. ಈಗ ಸಿಕ್ಕಿರುವ ಸ್ವಾತಂತ್ರ್ಯ ವನ್ನು  ಸಾತ್ವಿಕ ವಿಚಾರಗಳನ್ನು ತಿಳಿದು ತಿಳಿಸಿ ಬೆಳೆಸಲು ಅವಕಾಶವಿದ್ದರೆ  ಉತ್ತಮ ಬದಲಾವಣೆ ಆಂತರಿಕ ವಾಗಿ ಆಗಬಹುದು. ಭೌತಿಕಜಗತ್ತನ್ನಾಗಲಿ, ಅಧ್ಯಾತ್ಮ ಜಗತ್ತನ್ನಾಗಲಿ  ಯಾರೂ ಪೂರ್ಣ ಆಳಲಾಗದು. ಕಾರಣ  ಅದರೊಳಗಿರುವ ಸಣ್ಣ ಜೀವ ಪಡೆದು  ಬೆಳೆದಿರುವ  ಹುಲುಮಾನವ  ಜೀವ ಇರೋವರೆಗಷ್ಟೆ ಜೀವನ ನಡೆಸೋದು  ಜೀವಾತ್ಮನ ಬಿಟ್ಟು ಪರಮಾತ್ಮನಿಲ್ಲವಾದರೂ ಪರಮಾತ್ಮನ ಮರೆತು ಜೀವಾತ್ಮ ಭೂಮಿ ಮೇಲಿರುವುದು ಸತ್ತ. ಹಾಗಾದರೆ  ಯಾರಿಂದ ಯಾರು ? ದೇಶದೊಳಗೆ ಪ್ರಜೆಗಳಿದ್ದರೂ ಪ್ರಜೆಗಳಲ್ಲಿ ದೇಶಭಕ್ತಿಯಿಲ್ಲವಾದರೆ  ಸಾಲ ತೀರದು. ಹೀಗೇ ಪರಮಾತ್ಮ ಜೀವಾತ್ಮರ ಕಥೆಯಾಗಿದೆ. ದೇಶ ಬಿಟ್ಟು ವಿಶ್ವ ಗುರುವಾಗಲು ಹೊರಟರೆ  ದೇಶ ಗುರುತಿಸೋದು ಯಾರು? ಹೀಗೇ ನಿಮ್ಮ ನಿಮ್ಮ ತನುವ ಸಂತೈಸಿಕೊಂಡು ವಾಸ್ತವದ ಸತ್ಯ  ತಿಳಿದು ಹಿಂದಿನವರಲ್ಲಿದ್ದ ದೇಶಭಕ್ತಿ ಆಂತರಿಕ ವಾಗಿ  ಬಿತ್ತಿ ಬೆಳೆಸುವವರೂ ಶುದ್ದತೆ ಕಡೆಗೆ ನಡೆಯಲೇಬೇಕೆನ್ನುವರು.ಶುದ್ದವಾದ ಶಿಕ್ಷಣವೇ ಇದಕ್ಕೆ ಪರಿಹಾರ. ಹೊರಗೆ ಕೊಡಲಾಗದವರು ಮನೆಯೊಳಗೆ ಕೊಟ್ಟು ತಮ್ಮ ಮಕ್ಕಳ ಜ್ಞಾನ   ಬೆಳೆಸುವ ಸ್ವಾತಂತ್ರ್ಯ ಭಾರತೀಯ ಪೋಷಕರಿಗಿಲ್ಲವೆ? 

Tuesday, June 20, 2023

ಯೋಗವೆಂದರೇನು? ಯೋಗದಿನಾಚರಣೆಯ ಶುಭಾಶಯಗಳು

ಯೋಗ ದಿನಾಚರಣೆಯ ಶುಭಾಶಯಗಳು.
ಭಾರತ. ಯೋಗಿಗಳ ದೇಶವಾಗಿತ್ತು.ಈಗ ಭೋಗದೆಡೆಗೆ ನಡೆದು ರೋಗಿಗಳ ದೇಶವಾಗಿ ತಿರುಗಿ ಬರಲು ಯೋಗವನ್ನು ಒಂದು ದಿನದ ಆಚರಣೆಯಾಗಿಸಿಕೊಂಡು ರಾಜಕೀಯ ನಡೆದಿದೆ. ಇಷ್ಟಕ್ಕೂ ಯೋಗ ಎಂದರೇನು? 
ಯೋಗವೆಂದರೆ ಕೂಡುವುದು,ಸೇರುವುದು, ಒಂದಾಗುವುದು ಎಂದಾದಾಗ ಯಾರನ್ನು ಯಾರು ಸೇರುವುದು? ಪರಮಾತ್ಮನ ಜೀವಾತ್ಮ ಸೇರುವುದೇ ಮಹಾಯೋಗ.
ಪರಮಾತ್ಮ ಇರೋದೆಲ್ಲಿ? ಚರಾಚರದಲ್ಲಿಯೂ ಅಡಗಿರುವ ಈ ಶಕ್ತಿಯನ್ನು ಸೇರುವುದೆಂದರೆ ಕಣ್ಣಿಗೆ ಕಾಣದ ಈ ಶಕ್ತಿ ಒಳಗೂ ಹೊರಗೂ ಆವರಿಸಿರುವಾಗ ನಮ್ಮ ಉಸಿರಿನಲ್ಲಿಯೇ ಆ ಪರಮಾತ್ಮನ ದ್ಯಾನ ಜಪ ಇದ್ದರೆ ಮಾತ್ರ ಪರಮಾತ್ಮನ ಸತ್ಯ ಅರ್ಥ ವಾಗುವುದು.ಸತ್ಯವೇ ದೇವರೆಂದರೂ ಅಸತ್ಯದಲ್ಲಿ ಪರಮಾತ್ಮನ ಕಾಣಲು ಹೋದರೆ ಸಿಗೋದಿಲ್ಲ.ಒಳಗೇ ಇದ್ದರೂ ಹೊರಗೆ ಹುಡುಕುತ್ತಿದ್ದರೆ ಸಿಗೋದಿಲ್ಲ. ಧರ್ಮ ವೇ ದೇವರೆಂದರೂ ಪರಧರ್ಮದ ಬಗ್ಗೆ  ಟೀಕೆ ಟಿಪ್ಪಣಿ ವಿರೋಧ ಮಾಡುತ್ತಿದ್ದರೆ  ಧರ್ಮ  ಬೆಳೆಯದು, ತಾಯಿ ತಂದೆಯೇ ದೇವರೆಂದರೂ ಅವರ ಧರ್ಮ ಕರ್ಮ ವನರಿಯದೆ  ಋಣ ತೀರದು. ಹೀಗೇ ಮನಸ್ಸು,ಮನೆ,ಮಂದಿರ,ಮಠ,ಮಾಧ್ಯಮ ,ಮಹಿಳೆ ಮಕ್ಕಳವರೆಗೆ ಆವರಿಸಿರುವ ಈ ಪರಮಾತ್ಮನ ಶಕ್ತಿಯನ್ನು  ಮಾನವನಾದವನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಯೋಗವಿರಬೇಕು.
ಭಗವದ್ಗೀತೆ ಯಲ್ಲಿರುವ ಪ್ರಮುಖವಾದ‌ ನಾಲ್ಕು ಯೋಗ
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗ
ಜ್ಞಾನಯೋಗ ಸತ್ಯಜ್ಞಾನದಿಂದ ಬೆಳೆದಿತ್ತು. ದೈವತತ್ವ ವು ಮಾನವನ ತಂತ್ರಕ್ಕೆ ಒಳಗಾದಾಗ  ಹೊರಗಿನ ರಾಜಕೀಯ ಬೆಳೆಯಿತು. ಕ್ಷತ್ರಿಯ ಧರ್ಮದ ಪ್ರಕಾರ ತನ್ನ ತಾನರಿತಾಗಲೇ
ಭೂಮಿಯ ರಕ್ಷಣೆಗಾಗಿ ಧರ್ಮ ರಕ್ಷಣೆಗಾಗಿ  ದುಷ್ಟ ಸಂಹಾರಕ್ಕಾಗಿ ಯುದ್ದಗಳಾಗಿದ್ದವು. ಪರಮಾತ್ಮನ ಮೇಲಿರುವ ಆಂತರಿಕ ಭಕ್ತಿಯಿಂದಷ್ಟೆ ಭಕ್ತಿಯೋಗ
ವಾಗುವುದು ಇದರಲ್ಲಿ ದೇಶಭಕ್ತಿ ಒಂದು ಭಾಗವಾಗಿದೆ.
ಅಂದರೆ ದೇಶದೊಳಗೆ ಇರುವ ಪ್ರಜೆಗಳಿಗೆ ಯಾವಾಗ  ಸ್ವಾರ್ಥ ಅಹಂಕಾರ ಮಿತಿಮೀರುವುದೋ ಆಗ ದೇಶ ವಿದೇಶದ ವಶವಾದರೂ ಚಿಂತೆಯಿಲ್ಲ ನಾನು ಕ್ಷೇಮವಾಗಿರಬೇಕೆಂಬ ಆಸೆ ಹೆಚ್ಚಾಗುತ್ತದೆ ಇದನ್ನು ಅಜ್ಞಾನ ಎನ್ನುವರು.  ಜೀವ ಶಾಶ್ವತವಲ್ಲ ಆತ್ಮ ಶಾಶ್ವತವೆನ್ನುವ ಮಹಾತ್ಮರು ಜೀವ ಹೋದರೂ ಪರಮಾತ್ಮನ ಮೇಲಿನ ಭಕ್ತಿ ಬಿಡೋದಿಲ್ಲವೆಂದಂತೆ ದೇಶಭಕ್ತರೂ ಜೀವದ ಹಂಗುತೊರೆದು ದೇಶರಕ್ಷಣೆಗೆ ನಿಲ್ಲುವರು 
ವಾಸ್ತವದಲ್ಲಿ ದೇಶದೊಳಗೆ ಜನಸಂಖ್ಯೆ ಮಿತಿಮೀರಿದ್ದರೂ ದೇಶಭಕ್ತರ ಸಂಖ್ಯೆ ಕಡಿಮೆಯಾಗಿದೆ.ವಿದೇಶದೆಡೆಗೆ ಹೋಗಿ ದೇಶದ ಹುಳುಕನ್ನು ಎತ್ತಿ ಹಿಡಿದು ಒಳಗಿರುವ ದೇಶವಾಸಿಗಳಲ್ಲಿ ಒಡಕು ತಂದು ತಾವು ಮನರಂಜನೆಯಲ್ಲಿ ಬದುಕುವವರುಭಾರತೀಯರೆಂದರೆಇದರಲ್ಲಿದೇಶಭಕ್ತಿಯಿಲ್ಲ.
ಯೋಗವೇ ಇಲ್ಲ. ದೇಶದೊಳಗೆ ಸೇರಿಕೊಂಡು, ಕೂಡಿಕೊಂಡು ಒಗ್ಗಟ್ಟಿನಿಂದ ದೇಶವನ್ನು ಕಟ್ಟುವುದೇ ಯೋಗಿಗಳ ಲಕ್ಷಣ.ಅಂದರೆ ಯಾರಲ್ಲಿದೆ? ನಿಸ್ವಾರ್ಥ ನಿರಹಂಕಾರದಿಂದ  ಯಾವ ಪ್ರಜೆ ಸ್ವತಂತ್ರವಾಗಿ  ದೇಶದಲ್ಲಿ ಜೀವನ ನಡೆಸಲಾಗಿದೆ? 
ಪರಕೀಯರ ಸಾಲ ಬಂಡವಾಳ ವ್ಯವಹಾರದ ಜೊತೆಗೆ ಶಿಕ್ಷಣವೇ  ನಮ್ಮೊಳಗೇ ಇದ್ದು ಆಳುತ್ತಿರುವಾಗ ಯೋಗ ಮಾಡಿ  ಪರಮಾತ್ಮನ  ಸೇರಬಹುದೆ?
ಸ್ವಾಮಿ ವಿವೇಕಾನಂದರು  ಅಂದೇ ತಿಳಿಸಿದಂತೆ ಭಾರತೀಯರ ಒಂದು ದೋಷವೆಂದರೆ ಅಧಿಕಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರೋದು. ತನ್ನ ನಂತರದಲ್ಲಿ  ಭವಿಷ್ಯ ಏನಾಗಬಹುದೆನ್ನುವ ಚಿಂತನೆ ಇಲ್ಲದೆ  ಅಧಿಕಾರ ದುರ್ಭಳಕೆ ಮಾಡಿಕೊಂಡು ಆಳಿದರೆ ಮುಂದಿನ ಜನಾಂಗವೂ ಅದೇ ಮಾರ್ಗ ಹಿಡಿದಾಗ ಅಧರ್ಮ ಇನ್ನಷ್ಟು ಬೆಳೆಸಿದಂತೆ.
ಯಾರು ಧರ್ಮ ರಕ್ಷಿಸುವರೋ ಅವರನ್ನು ಧರ್ಮ ವೇ ರಕ್ಷಣೆ ಮಾಡುತ್ತದೆ.ಅಂದರೆ ದೇವರನ್ನು ಧರ್ಮ ಮಾರ್ಗದಲ್ಲಿ ನಡೆದಾಗಲೇ ಸೇರುವುದು ಸಾಧ್ಯ.
ದೇವರೆಂದಾಗ ನಮಗೆ ಕೋಟ್ಯಾಂತರ ದೇವತೆಗಳು ಕಾಣುವರು. ನಿಜವಾಗಿಯೂ ದೇವರಿರೋದೆಲ್ಲಿ ? ಒಳಗಿರುವ  ಸದ್ಗುಣ,ಸುಜ್ಞಾನ,ಸತ್ಯ,ಧರ್ಮ ವೇ ದೇವರು.
ಅದನ್ನು ಶಿಕ್ಷಣದ ಮೂಲಕ ಬೆಳೆಸಿದಾಗಲೇ ದೈವತ್ವ ಬೆಳೆದು ಮಹಾತ್ಮರಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ.ಈ ಸಾಕ್ಷಾತ್ಕಾರಕ್ಕೆ ಮಾನವನಿಗೆ ಯೋಗವಿರಬೇಕು.ಅಂದರೆ ತನ್ನ ತಾನರಿತು ನಡೆಯೋದಕ್ಕೆ ಮಾನವನ‌ಮನಸ್ಸು ಆಂತರ್ಮುಖ ಆಗಿದ್ದರೆ ಮಾತ್ರ ಯೋಗಿಯಾಗಬಹುದು.
ಯಾವಾಗಲೂ ರಾಜಕೀಯದೆಡೆಗೆ ಮನಸ್ಸಿದ್ದು ಹೊರಗಿನ ಸತ್ಯಕ್ಕೆ ಬೆಲೆಕೊಟ್ಟು ಮನಸ್ಸು ಹೊರಗೇ ಹೋರಾಟ,ಹಾರಾಟ ಮಾರಾಟದಲ್ಲಿದ್ದರೆ  ಪರಮಾತ್ಮನ ಹೆಸರಿನಲ್ಲಿ ದೇವರ ಹೆಸರಲ್ಲಿ ಸಾಹಿತ್ಯದಲ್ಲಿ ರಾಜಕೀಯವೇ ಹೆಚ್ಚಾಗುತ್ತಾ ಒಳಗಿದ್ದ ಯೋಗಶಕ್ತಿ ಕ್ಷೀಣವಾಗಿ ಕೊನೆಗೊಮ್ಮೆ ಜೀವ ಹೋಗುತ್ತದೆ. ಪರಮಾತ್ಮನಲ್ಲಿ ಜೀವಾತ್ಮ ಸೇರಬೇಕಾದರೆ  ಒಳಗಿರುವ ರಾಜಕೀಯ ಬಿಟ್ಟು  ನಡೆಯಬೇಕೆಂದರು.ರಾಜಕೀಯದಲ್ಲಿ ನಾನು ನಾನೇ ಸರಿ ಎನ್ನುವ ಅಹಂಕಾರ ಸ್ವಾರ್ಥ ಇರುವಾಗ ಪರಮಾತ್ಮನ  ಸ್ಮರಣೆ ಮಾಡಲೂ ಸಾಧ್ಯವಿಲ್ಲ.ಆದರೂ ತಾತ್ಕಾಲಿಕ ವಾಗಿರುತ್ತದೆ. ಹೆಸರು,ಹಣ ಸ್ಥಾನಮಾನ
ಸನ್ಮಾನದ ಹಿಂದೆ ಜನಬಲ ಹಣಬಲ ಅಧಿಕಾರಬಲವಿದ್ದ ಮಾನವನಿಗೆ ಹೇಗೆತಾನೇ  ದೇವರು ಎಲ್ಲಾ ನಡೆಸಿರೋದೆನ್ನುವ ಸತ್ಯ ತಿಳಿಯಬಹುದು? ಮನಸ್ಸು ಶಾಂತವಾಗಿರಲು ಯೋಗ,ದ್ಯಾನ ತಪಸ್ಸು ,ಉಪವಾಸ,ವ್ರತ ನಿಯಮ ನಿಷ್ಟೆ,ಶ್ರದ್ದೆ  ಜ್ಞಾನ,ಭಕ್ತಿ , ಕರ್ಮಾನುಷ್ಟಾನದಲ್ಲಿ ಶುದ್ದಿಯಿರಬೇಕು ಎನ್ನುವರು. ಹೊರಗಿನ ರಾಜಕೀಯದಲ್ಲಿ ಮನಸ್ಸೇ ಹಾಳಾಗುತ್ತಿರುವಾಗ ಯೋಗವನ್ನೂ ರಾಜಕೀಯಕ್ಕೆ ಬಳಸಿದರೆ  ಒಂದುದಿನದ ಕಾರ್ಯಕ್ರಮ ಆಗುತ್ತದೆ.ಆದರೂ ಆ ಒಂದು ದಿನದಲ್ಲಿ ಸಾಕಷ್ಟು ಮಂದಿ ಯೋಗಾಸನ ಮಾಡಿ ತಮ್ಮ ಯೋಗವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾದರೆ ಉತ್ತಮ. ಇದಕ್ಕಾಗಿ  ಸರ್ಕಾರದ ಹಣವನ್ನು  ಬಳಸದೆ ಸ್ವಂತ ಹಣವನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ. 
ಯೋಗಶಕ್ತಿ ಯಾವಾಗ ಯಾರಲ್ಲಿ ಹೇಗೆ ಸೇರುವುದು ಎನ್ನುವುದು  ಗೊತ್ತಾಗುವುದಿಲ್ಲ. ಸಿರಿವಂತ ಕೆಳಗಿಳಿದು ಎಲ್ಲಾ ತ್ಯೆಜಿಸಿ ಯೋಗಿಯಾಗಲೂಬಹುದು. ಬಡವ ಎಲ್ಲಾ ಪಡೆದು ಮೇಲೇರಬಹುದು.ಇಲ್ಲಿ ಕೊಟ್ಟುಪಡೆಯುವ ವ್ಯವಹಾರವೇ ಯೋಗದಿಂದ ದೂರ ಮಾಡಿರುವುದು.ಆದರೂ ಜಗತ್ತು ನಡೆದಿರೋದೆ ವ್ಯವಹಾರದಲ್ಲಿ.ಇತಿಮಿತಿಗಳನ್ನು ಕಾಯ್ದುಕೊಂಡು ತಾನೂ ಬದುಕಿ ಇತರರನ್ನೂ ಸ್ವತಂತ್ರವಾಗಿ ಬದುಕಲು ಬಿಡುವುದೇ ಯೋಗ. ಅತಿಯಾದ ಹಸಿದವನಿಗೆ ಯೋಗವಿರದು ಅತಿಯಾಗಿ ಹೊಟ್ಟೆತುಂಬಿದವನಿಗೂ ಯೋಗವಿರದು. ಕಾರಣ ಜ್ಞಾನವಿಜ್ಞಾನದ ಸಮಾನತೆಯ ಯೋಗ  ಮನುಕುಲಕ್ಕೆ ಅಗತ್ಯವಿದೆ.ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನ ಎಂದರೆ ವಿಶೇಷವಾದ ತಿಳುವಳಿಕೆ.ಯಾವ ತಿಳುವಳಿಕೆ ಎಂದರೆ ಪರಮಾತ್ಮ ಹಾಗು ಪರಾಶಕ್ತಿಯ ತಿಳುವಳಿಕೆ, ಆಕಾಶ ಭೂ ತತ್ವದ ತಿಳುವಳಿಕೆ, ಪುರುಷ ಸ್ತ್ರೀ ಶಕ್ತಿಯ ಅರಿವು ಸಮಾನವಾಗಿದ್ದರೆ ಮನಸ್ಸು ಶಾಂತವಾಗಿರುವುದು.ಯಾವಾಗ ಭೂಮಿಯನ್ನು ಆಳಲು ಅಧರ್ಮ, ಅನ್ಯಾಯ, ಅಸತ್ಯದ ಬಳಕೆಯಾಗುವುದೋ ಕ್ರಾಂತಿಯಾಗಿ ಜೀವ ಹೋಗುವುದು.ಅದೇ ಮನಸ್ಥಿತಿ ಯಲ್ಲಿ ಮತ್ತೆ ಜನ್ಮಪಡೆದಾಗ ಭೌತಿಕದಲ್ಲಿನ ಸತ್ಯವಷ್ಟೆ ಕಾಣುವುದು ಅದರ ಹಿಂದಿರುವ ಪರಮಾತ್ಮನ ಸತ್ಯ ಅರ್ಥ ವಾಗದೆ ಜನ್ಮ ಜನ್ಮಕ್ಕೂ ಹೋರಾಟವೇ. ಹೀಗಾಗಿ ಈ ಹೋರಾಟ ಕ್ಷತ್ರಿಯಧರ್ಮ ವೆಂದು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಅಂದಿನ ದುಷ್ಟರನ್ನು  ಸದೆಬಡಿಯಲು ಯುದ್ದ ಮಾಡಲೇಬೇಕೆಂಬ ಉಪದೇಶದ ಭಗವದ್ಗೀತೆ ಹಿಂದೂಗಳ ಧರ್ಮ ಗ್ರಂಥವಾಗಿದೆ. ವಾಸ್ತವದಲ್ಲಿ ಪ್ರಜಾಪ್ರಭುತ್ವದ ದೇಶವಿದೆ.ಪ್ರಜೆಗಳಲ್ಲಿ ಧರ್ಮ ಜ್ಞಾನವೇ ಇಲ್ಲ. ಶಿಕ್ಷಣವೇ ನಮ್ಮದಲ್ಲದಿರೋವಾಗ ಯೋಗವೆಲ್ಲಿರುವುದು? ಹೀಗಾಗಿ ಕೆಲವರಷ್ಟೆ ಯೋಗಿಗಳಾಗಿ ಸ್ವತಂತ್ರವಾಗಿ ಜೀವನ ನಡೆಸಿರಬಹುದು. ಮೊದಲು ಯೋಗ್ಯ ಶಿಕ್ಷಣ ನೀಡಿದರೆ ನಿಜವಾದ ಯೋಗದಿನಾಚರಣೆಗೆ ಅರ್ಥ ವಿರುವುದು. ಪ್ರತಿದಿನವೂ ಮಕ್ಕಳಿಗೆ ಯೋಗಶಿಕ್ಷಣವಿರಬೇಕು,ಯೋಗ್ಯ ವಿಷಯಜ್ಞಾನ ಕೊಡಬೇಕು,ಯೋಗ್ಯ ಶಿಕ್ಷಕರು ಬೇಕು.ಮನೆಯಲ್ಲಿರುವ ಮೊದಲ ಗುರು ತಾಯಿಗೆ  ಅಧ್ಯಾತ್ಮ ಸತ್ಯದ ಜ್ಞಾನವಿರಬೇಕು.ಭಾರತಮಾತೆ ಅಧ್ಯಾತ್ಮ ಗುರು.ಅವಳ ಮಕ್ಕಳಿಗೇ ಅಧ್ಯಾತ್ಮ ಶಿಕ್ಷಣವಿರದೆ ಎಷ್ಟೇಭೂಮಿ ಆಳಿದರೂ ಆಳಾಗಿಯೇ ಜನ್ಮಪಡೆಯುವುದು ಕರ್ಮಯೋಗ. ಅಂದರೆ ಕರ್ಮಕ್ಕೆ ತಕ್ಕಂತೆ ಜನ್ಮ. ಇದನ್ನು ತಡೆಯಲು  ಹಣದಿಂದ ,ರಾಜಕೀಯದಿಂದ ಅಸಾಧ್ಯವೆಂದು ಎಲ್ಲಾ ಜ್ಞಾನಿಗಳಿಗೂ ತಿಳಿದ ವಿಚಾರವಾದರೂ  ರಾಜಕೀಯದ ಹಿಂದೆ ನಿಂತು ತಾವು ಬದಲಾಗದೆ,ಶಿಕ್ಷಣ ಬದಲಾಯಿಸದೆ  ಇದ್ದರೆ  ಯೋಗದ ಆಚರಣೆ ಕೇವಲ ತೋರುಗಾಣಿಕೆಯಾಗಿರುತ್ತದೆ. ವಿಶ್ವವೇ ಯೋಗದೆಡೆಗೆ ನಡೆದಿದೆ  ಎಂದರೆ  ಭಾರತ ಯೋಗಿಗಳ ದೇಶವಾಗಿತ್ತು.ಈಗ ಭೋಗದೆಡೆಗೆ   ನಡೆದವರು ಯೋಗ ಹೇಳಿಕೊಡುವುದನ್ನು
 ರಾಜಕೀಯವೆನ್ನಬಹುದೆ? ಅಥವಾ ರಾಜಯೋಗವೇ? ಏನೇ ಇರಲಿ ಬದಲಾವಣೆಗೆ  ಸಹಕಾರವಿರಲಿ ಇದು ಶಾಶ್ವತವಾಗಿರಲಿ ಎಂದು  ನಡೆಯೋಣ. ಯಾರೂ ಯಾರನ್ನೂ ಬದಲಾಯಿಸುವುದು  ಸುಲಭವಿಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳಲೂ ಸುಲಭವಿಲ್ಲ ಆದರೆ ಸಾಧ್ಯವಿದೆ.  ಇದಕ್ಕೆ ರಾಜಕೀಯದಲ್ಲಿ ಸತ್ಯ ಧರ್ಮ ದ ಅಗತ್ಯವಿದೆ . 
ಪ್ರತಿಕ್ಷಣವೂ ನಮ್ಮನ್ನು ನಡೆಸುವ ಆ ಪರಮಾತ್ಮನ ಕಾಣೋದಕ್ಕೆ ಪ್ರತಿಕ್ಷಣದ ಉಸಿರಿನಲ್ಲಿ ಯೋಗವಿರಬೇಕು. ಇದಕ್ಕೆ ಧ್ಯಾನಯೋಗ  ದಾರಿಯಾಗಿದೆ.ಹಾಗಂತ ಈಗಿನ ಪರಿಸ್ಥಿತಿಯಲ್ಲಿ ಮನಸ್ಸು ಧ್ಯಾನಕ್ಕೆ ಹೋಗಲು ಬಹಳ ಕಷ್ಟವಿದೆ. ಮಕ್ಕಳಿಗೆ ಸಾಧ್ಯವಿದೆ.ಶಿಕ್ಷಣದಲ್ಲಿಯೇ ಯೋಗದೆಡೆಗೆ ನಡೆಸಬಹುದಷ್ಟೆ. ಕೆಲವು ಶಾಲೆಗಳಲ್ಲಿ ಕಲಿಸಲಾಗುತ್ತಿದೆ.ಪೋಷಕರ ಸಹಕಾರವಿದ್ದರೆ ಒತ್ತಾಯವಿದ್ದರೆ ಎಲ್ಲಾ ಶಾಲೆಗಳಲ್ಲಿಯೂ 
ನಡೆಸಬಹುದು.ಇದು ನಮ್ಮ‌ಮಕ್ಕಳ ಭವಿಷ್ಯವಾಗಿದೆ.
ಮಂತ್ರ ತಂತ್ರ ಯಂತ್ರಗಳನ್ನು ಬಳಸುತ್ತಾ ಯೋಗದೆಡೆಗೆ ನಡೆಯುವಾಗ. ನಮ್ಮ ಮನಸ್ಸು ಆಂತರಿಕ ವಾಗಿ ಶುದ್ದವಾದರೆ  ರಾಜಯೋಗ ಮನಸ್ಸು ದ್ವೇಷ ಅಸೂಯೆ, ಭಿನ್ನಾಭಿಪ್ರಾಯ, ಅಶಾಂತಿಯ ಗೂಡಾಗುತ್ತಿದ್ದರೆ ಅದರಲ್ಲಿ ಸ್ವಾರ್ಥ ಅಹಂಕಾರದ ಮಿಶ್ರಣವಿದೆ ಎಂದರ್ಥ. ಪರಮಾತ್ಮನ ಸೇರಲು ಶುದ್ದ ಮನಸ್ಸಿನ ಯೋಗದಿಂದ ಸಾಧ್ಯವಿದೆ. ಇದಕ್ಕೆ ತತ್ವದ  ಸಮಾನತೆ, ಒಗ್ಗಟ್ಟು, ಏಕತೆ,ಐಕ್ಯತೆ ಅಗತ್ಯವಿದೆ. ತಂತ್ರದಲ್ಲಿ ದ್ವಂದ್ವವೇ ಹೆಚ್ಚಾಗುತ್ತದೆ.ಕಾರಣ ಅಲ್ಲಿ ಒಂದಿರದು .ಆತ್ಮನೊಂದಿಗೆ ಮನಸ್ಸೂ  ಬೆರೆತಾಗಲೇ ಯೋಗವಾಗುವುದು.
ನಮ್ಮ ಒಳಗಿನ ಸತ್ಯಜ್ಞಾನದೊಂದಿಗೆ ಧರ್ಮ ವೂ ಕೂಡಿದರೆ ಯೋಗ.
ನನ್ನ ನಾನರಿತು ಪರಮಾತ್ಮನ ಎಲ್ಲರಲ್ಲಿಯೂ ಕಾಣುವುದೇ ಯೋಗ
ನನ್ನ ಜೊತೆಗೆ ಜೀವನ‌ನಡೆಸೋರೆಲ್ಲರೂ ಸರಿಸಮನಾಗಿ ಬದುಕಲಾಗದಿದ್ದರೂ ಅವರನ್ನು ಬದುಕಲುಬಿಟ್ಟರೆ ಉತ್ತಮ.
ನನ್ನ ಸಾಲ ತೀರಿಸಲು  ನನ್ನ ದೇಹವನ್ನು ದೇಗುಲವಾಗಿಟ್ಟುಕೊಂಡು  ಕಾಯಕವೇ ಕೈಲಾಸವೆನ್ನುವ ಭಕ್ತಿ ಶ್ರದ್ದೆ ಆತ್ಮವಿಶ್ವಾಸ ದಿಂದ  ದುಡಿದು ಬದುಕಿದವರೆ ಕರ್ಮ ಯೋಗಿ.
ಭಕ್ತಿಯೆನ್ನು ಹೊರಗೆ ತೋರಿಸಲಾಗದು. ಹಾಗೇನಾದರೂ ತೋರುಗಾಣಿಕೆಯಿದ್ದರೆ ಅದು ಯೋಗವಾಗಲಾರದು. 
ಹೀಗೇ ಆಂತರಿಕ ಶಕ್ತಿಯನ್ನು ಅನುಭವದಿಂದ  ಅರ್ಥ ಮಾಡಿಕೊಂಡು  ಆತ್ಮಾನುಸಾರ ಸತ್ಯ ಧರ್ಮ ದೆಡೆಗೆ ಸ್ವಂತ ಬುದ್ದಿ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು  ಪರಮಾತ್ಮನ ಕಡೆಗೆ ನಡೆದವರೆ ಯೋಗಿಗಳಾಗಿರೋದು.
ಸಂನ್ಯಾಸಿಗಳಾದರೂ ಒಬ್ಬರೆ ಸಂಸಾರ ಬಿಟ್ಟು ಇರಬಹುದು.ಸಂಸಾರದೊಳಗಿದ್ದು  ಸಮಾಜವೂದೇಶವೂ ವಿಶ್ವವೂ  ಒಂದೇ ಶಕ್ತಿಯ ಅಧೀನದಲ್ಲಿರುವ ಸತ್ಯವನ್ನು ಅರ್ಥ ಮಾಡಿಕೊಂಡು ತನ್ನ ಆತ್ಮರಕ್ಷಣೆಗಾಗಿ  ಪರಮಸತ್ಯ ಧರ್ಮದೊಡನೆ  ನಡೆದವರು ಬ್ರಹ್ಮಜ್ಞಾನಿಗಳಾಗಿದ್ದರು.ಅವರಿಗೆ ಸೃಷ್ಟಿ ಯ ರಹಸ್ಯ ತಿಳಿದ ಕಾರಣ  ಸೃಷ್ಟಿ ಉತ್ತಮವಾಗಿತ್ತು ನಂತರ ಸ್ಥಿತಿ ಲಯವೂ ಉತ್ತಮ ಧರ್ಮದ ಮಾರ್ಗದಲ್ಲಿ ನಡೆದಿತ್ತು. ಅಂದಿನ  ಶಿಕ್ಷಣವೇ ಯೋಗದೆಡೆಗಿದ್ದ ಕಾರಣ ಸಮಸ್ಯೆಯ ಮೂಲ ತಿಳಿದು ಪರಿಹಾರವನ್ನೂ ಒಳಗಿನಿಂದಲೇ  ಕಂಡುಕೊಂಡು ಜೀವನ  ಸನ್ಮಾರ್ಗದಲ್ಲಿ ನಡೆಸಲಾಗಿತ್ತು.ಇದನ್ನರಿಯದ ಅಜ್ಞಾನಿಗಳೇ  ಅಸುರರಾಗಿ ಭೂಮಿಯನ್ನು ಹಾಳು ಮಾಡಿ ಆಳಲು ಹೊರಟಿದ್ದರು.ಅಸುರ ಸಂಹಾರಕ್ಕಾಗಿ ದೇವತೆಗಳು
ಮಹಾಶಕ್ತಿಯ ಮೊರೆಹೋಗಿ  ಯುದ್ದಗಳಾಗಿತ್ತು. ಇದು ಸರ್ವ ಕಾಲಕ್ಕೂ  ನಡೆಯುತ್ತದೆ ಆದರೆ , ನಮ್ಮ ದೃಷ್ಟಿಕೋನ ಒಂದೇ ಆಗಿರದ ಕಾರಣ  ಎಷ್ಟೇ ಲಯಕಾರ್ಯ ವಾದರೂ ಅಜ್ಞಾನದ ಸೃಷ್ಟಿ ಯೇ  ಆಗುತ್ತಿದ್ದರೆ ಮುಗಿಯದ ಕಥೆ.
ಅಂದರೆ ಮಾನವನಿಗೆ ಸಿಗುವ ಜ್ಞಾನವಿಜ್ಞಾನದ ವಿಷಯದಲ್ಲಿ ವಿಷವೇ ಹೆಚ್ಚಾಗಿದ್ದರೆ ಸಾವೇ ಗತಿ. ಅಮೃತತತ್ವ ಇದ್ದರೆ ಮುಕ್ತಿ ಮೋಕ್ಷದ ಯೋಗ. ಏನೇ ಬರಲಿ ಒಗ್ಗಟ್ಟು ಇರಲಿ ಎಂದಿದ್ದ ಭಾರತೀಯ ಧರ್ಮ ಸಂಸ್ಕೃತಿ ಭಾಷೆ  ಇಂದು ರಾಜಕೀಯ ದ ವಶವಾಗುತ್ತಾ ಬಿಕ್ಕಟ್ಟು ಬೆಳೆಸಿ ಆಳುವುದೇ ಸಾಧನೆ ಎನ್ನುವ ಅಜ್ಞಾನ ಆವರಿಸಿದೆ. ಯೋಗದಿಂದ ಭ್ರಷ್ಟಾಚಾರದ ರೋಗ ನಿಂತರೆ ಉತ್ತಮ. ದೇಹದ ರೋಗ ಒಬ್ಬರಿಗೆ ಸಮಸ್ಯೆ.ದೇಶಕ್ಕೆ ಅಂಟಿಕೊಂಡಿರುವ  ಭ್ರಷ್ಟಾಚಾರದ ರೋಗ ಯೋಗಾಸನದಿಂದ ತಡೆಯಬಹುದೆ? ಯೋಗ್ಯ ಶಿಕ್ಷಣದಿಂದ ತಡೆಯಬೇಕಿದೆ. ಗುರು ಶಿಕ್ಷಕರೆ  ರೋಗಿಗಳ ಹಿಂದೆ ನಡೆದರೆ ಕಾಯೋರು ಯಾರು? ಬದಲಾವಣೆ ನಿಧಾನವಾದರೂ ಸಾಧ್ಯವಿದೆ. ಆಗುತ್ತದೆ ನಮ್ಮ ಸಹಕಾರದ ಅಗತ್ಯವಿದೆ.ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಕೈ ಸರ್ಕಾರಕ್ಕೆ ಕೊಟ್ಟರೆ ರೋಗವೆ ಗತಿ.

Monday, June 19, 2023

ಕಗ್ಗದೊಳಗಿನ ಕಗ್ಗಂಟು ಬಿಚ್ಚಿದರೆ ಸಿಗುವುದು ಜನಕ್ಕೆ ಜ್ಞಾನದ ಗಂಟು

*ಕಗ್ಗ - 668*
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ..!।
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ॥
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು।
ಕಡಿದಲ್ಲವರ್ಗೆ ಬಾಳ್.

                                      *- ಮಂಕುತಿಮ್ಮ.*

 *Translation.*
The carpenters, the farmers and other hard workers are fortunate and saints in their own way. All their mental energy is focused on the work at hand. They do not have any spare time for gossip, jealousy and other worries. They get returns for their work and don't have to depend on others for food. Life is not seem 'tough' for them.
                                     *- Mankutimma.*

 *ವಾಚ್ಯಾರ್ಥ,*
ಕರ್ಮಿಗರೇನು = ಕರ್ಮಿಗರು+ಏನು, 
ಮುಡುಪವರ = ಮುಡುಪು+ಅವರ, 
ಬಿಡುವಿರದು = ಬಿಡುವು+ಇರದು, 
ಹಂಗಿರದು = ಹಂಗು+ಇರದು, 
ಕಡಿದಲ್ಲವರ್ಗೆ = ಕಡಿದು+ಅಲ್ಲ,
ಅವರ್ಗೆಕರ್ಮಿಗರು = ಕುಶಲ ಕರ್ಮಿಗಳು, 
ಮುಡುಪು = ಮೀಸಲು,
ಬುತ್ತಿ = ಊಟ,
ಕಡಿದು = ಕಷ್ಟತರವಾದದ್ದು.

 *ಭಾವಾರ್ಥ:-*
ಬಡಗಿ, ರೈತ, ಕಮ್ಮಾರ, ಕುಂಬಾರ ಮುಂತಾದ ಕುಶಲ ಕರ್ಮಿಗಳೆಲ್ಲ ‘ಯೋಗ’ವನ್ನು ಕಲಿತವರೇನು..? ಅವರ ಜೀವನವೆಲ್ಲ ಮೈಬಗ್ಗಿಸಿ ಮಾಡುವ ದುಡಿತಕ್ಕೆ ಮೀಸಲಾಗಿರುತ್ತದೆ. ಬಿಡುವಿಲ್ಲದ ಕೆಲಸಕಾರ್ಯಗಳ ಮಧ್ಯೆ ಅವರಿಗೆ ವ್ಯರ್ಥ ಹರಟೆಗೆ ಸಮಯವಿರುವುದಿಲ್ಲ. ಅವರು ಸದಾ ದುಡಿದು ತಿನ್ನುವವರಾದ್ದರಿಂದ, ಅವರಿಗೆ ಯಾರ ಹಂಗೂ ಇರುವುದಿಲ್ಲ. ಅಂತಹವರಿಗೆ ಬಾಳು ದುರ್ಗಮವೆನಿಸುವುದಿಲ್ಲ..! ಎಂದು ‘ಕಾಯಕ’ದ ಮಹತ್ವವನ್ನು ಬಹಳ ಸುಂದರವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

 *ವ್ಯಾಖ್ಯಾನ,*
ಅಂತಹ ಕುಶಲ ಕರ್ಮಿಗಳಿಗೆ ಅವರ ಕೆಲಸವೇ ಒಂದು ಯೋಗ. ಅವರು ಯೋಗಿಗಳಲ್ಲದಿದ್ದರೂ, ಯೋಗಿಗಳು. ಯೋಗವೆಂದರೆ 
*‘ಚಿತ್ತವೃತ್ತಿ ನಿರೋಧಕ’* ಎಂದರೆ ಮನಸ್ಸನ್ನು ಹಲವಾರು ಕಡೆಗೆ ಹರಿದು ಹೋಗದಂತೆ ಇಟ್ಟುಕೊಳ್ಳುವುದೇ ‘ಯೋಗ’ ಇದೇ ರೀತಿ, ಕಮ್ಮಾರ, ಚಮ್ಮಾರ, ಬಡಗಿ, ಶಿಲ್ಪಿ, ಚಿತ್ರಕಾರ ಮುಂತಾದ ಕುಶಲ ಕರ್ಮಿಗಳು ತಮ್ಮ ವಿಧ್ಯೆಯನ್ನು ಕಲಿಯುವುದು ಒಂದು ‘ತಪಸ್ಸು’ ಜ್ಞಾನಾರ್ಜನೆಗೆ ಮನದಲ್ಲಿ ತಪಿಸುವುದೇ ‘ತಪಸ್ಸು’ ಅವರು ತಪಸ್ವಿಗಳು. ಹಾಗಾಗಿಯೇ ಅವರು ತಮ್ಮ ಏಕಾಗ್ರತೆಯಿಂದ ಸೃಷ್ಟಿಸುವ ‘ಕೃತಿ’ಗಳು ನೂರಾರು ಅಥವಾ ಸಾವಿರಾರು ವರ್ಷಗಳು ಸಮಾಜಕ್ಕೆ ಸಂತೋಷವನ್ನು ನೀಡುತ್ತದೆ. ಅವರ ಜೀವನವೆಲ್ಲ ಅಂತಹ ಕಲಾಕೃತಿಗಳ ಮೂಲಕ ಜಗತ್ತಿನ ಸಂತೋಷಕ್ಕಾಗಿಯೇ ಮುಡುಪಾಗಿಡುತ್ತಾರೆ. ಅವರಿಗೆ ವ್ಯರ್ಥಕಾಲಯಾಪನೆ ಮಾಡಲು ಸಮಯವೇ ಇರುವುದಿಲ್ಲ. ಅವರು ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳ್ಳುತ್ತಾರೆ. ಅವರು ಆಹಾರಕ್ಕಾಗಿ ಯಾರ ಹಂಗಿಗೂ ಬೀಳುವುದಿಲ್ಲ . ಅವರಿಗೆ ಬಾಳು ಕಷ್ಟಗಳ ಪ್ರಯಾಣವಾಗುವುದಿಲ್ಲ. ಹಾಗಾಗಿ ಯಾರೇ ಆಗಲಿ ತಮ್ಮ ಪಾಲಿಗೆ ಬಂದ ಕೆಲಸವನ್ನು ಕರ್ತವ್ಯವೆಂದು ಅರಿತು, ಒಪ್ಪಿಕೊಂಡು ತಮ್ಮನ್ನು ತಾವು ಸಂಪೂರ್ಣವಾಗಿ ಅದರಲ್ಲೇ ತೊಡಗಿಸಿಕೊಂಡರೆ, ಅದನ್ನೊಂದು ತಪ್ಪಸ್ಸೆಂದು ಆಚರಿಸಿದರೆ, ಆಗ ಯಾರಿಗೂ ವ್ಯರ್ಥವಾಗಿ ಕಾಲ ಕಳೆಯುವ ಅವಕಾಶವೇ ಸಿಗುವುದಿಲ್ಲ. ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ, ಆ ಕೆಲಸವನ್ನು ಪೂರ್ಣಗೊಳಿಸಿದರೆ ಒಂದು ಸಂತೃಪ್ತ ಭಾವವಿರುತ್ತದೆ. ಒಬ್ಬ ಚಿತ್ರಕಾರನನ್ನೋ ಒಬ್ಬ ಶಿಲ್ಪಿಯನ್ನೋ ನಾವು ಗಮನಿಸಿದರೆ, ಅವರು ತಾವು ಸೃಷ್ಟಿಸಿದ ಕಲಾಕೃತಿಯನ್ನು ತಾವೇ ನೋಡಿ ನೋಡಿ ಆನಂದಿಸಿ ತೃಪ್ತರಾಗುವುದನ್ನು ಮತ್ತು ಅದು ಅನ್ಯರಿಗೆ ಸಂತಸವನ್ನಿತ್ತರೆ ಅನ್ಯರ ಸಂತೋಷವನ್ನು ಕಂಡು ಸಂತೋಷಪಡುವಂತಹ ಯೋಗಿಗಳು ಅವರು. ಅಂತಹವರಿಗೆ ಅನಾವಶ್ಯಕ ಮಾತು ಮತ್ತು ಕಾಡು ಹರಟೆಯಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ಅಂತಹ ಮನೋಭಾವವನ್ನು ಬೆಳೆಸಿಕೊಂಡರೆ, ನಾವು ಮಾಡುವ ಕೆಲಸ ನಮಗೆ ತೃಪ್ತಿಯನ್ನು ನೀಡುತ್ತದೆ. ಆದರೆ ಇಂದಿನ ಸಮಾಜದ ಪರಿಸ್ಥಿತಿಯಲ್ಲಿ, ನಮ್ಮ ಮನಸ್ಸನ್ನು ಸೆಳೆಯುವ ನೂರಾರು ಸೆಳೆತಗಳ ಮಧ್ಯೆಯೂ ನಾವು ಅಂತಹ ಮನೋಭಾವವನ್ನು ಬೆಳೆಸಿಕೊಂಡು, ನಾವು ಮಾಡುವ ಕೆಲಸವನ್ನು ನಿಷ್ಥೆಯಿಂದ ಮಾಡಿ ತೃಪ್ತರಾದರೆ ನಮಗೂ ಸಹ ‘ಕಡಿದಲ್ಲವರ್ಗೆ ಬಾಳ್’ ಎಂದು ಗುಂಡಪ್ಪನವರು ಹೇಳುವಂತೆ ಬದುಕು ಸುಗಮವಾಗುತ್ತದೆ ಅಲ್ಲವೇ..?..

ವಾಟ್ಸಪ್ ಕೃಪೆ 

ಕಗ್ಗ ಒಂದು ಕಗ್ಗಂಟು. ಆದರೆ ಆ ಗಂಟು ಬಿಚ್ಚಿದರೆ  ಅದರೊಳಗಿರುವ  ಜ್ಞಾನದ ಗಂಟು ಅರ್ಥ ವಾಗುತ್ತದೆ. ಅದರೊಳಗೆ ಹೊಕ್ಕಿ ನೋಡುವುದೇ  ದೊಡ್ಡ ನಂಟು. 
ಸಂಬಂಧ ಜೋಡಿಸುವ ಗಂಟನ್ನು ಕಟ್ಟಿಕೊಂಡರೆ  ಜ್ಞಾನ
ಒಡೆಯುವ  ಗಂಟನ್ನು  ಕಟ್ಟಿದರೆ  ಅಜ್ಞಾನ
ನೆಂಟರಿಷ್ಟರು  ನಮ್ಮ ಒಗ್ಗಟ್ಟನ್ನು  ಹೆಚ್ಚಿಸಬೇಕು ಒಡೆಯಬಾರದಷ್ಟೆ.
ಹಿಂದಿನ ಕಾಲದಲ್ಲಿ ತಮ್ಮ ಮೂಲ ಧರ್ಮ ಕರ್ಮಕ್ಕೆ ಚ್ಯುತಿ ಬರದಂತೆ ಜೀವನದಲ್ಲಿ ತತ್ವವಿತ್ತು ಸತ್ಯವಿತ್ತು. ಯಾವುದೇ ಸರ್ಕಾರಗಳಿಲ್ಲದೆಯೂ ಸ್ವತಂತ್ರವಾಗಿ ಜೀವನ‌ನಡೆಸುವ ಆತ್ಮಜ್ಞಾನವಿತ್ತು. ಕಾಲಾನಂತರದ  ಶಿಕ್ಷಣದ ಅಂತರದಲ್ಲಿ ಇಂದಿಗೂ  ಕಲೆ ಸಾಹಿತ್ಯ ಸಂಗೀತ ಇನ್ನಿತರ  ವಿದ್ಯೆಗಳಿವೆ.
ಆದರೆ ಅಂದಿನ ತತ್ವವಿಲ್ಲದೆ ತಂತ್ರವೇ ಹೆಚ್ಚಾಗಿ ನಮ್ಮ ಆತ್ಮಸಂತೋಷಕ್ಕಾಗಿ ಜೀವನ‌ನಡೆಸಲಾಗದೆ ಪರಕೀಯರ ಸಂತೋಷಕ್ಕಾಗಿ ನಮ್ಮ ಜೀವನ ನಡೆದಿದೆ.ಕಾರಣ ನಮ್ಮೊಳಗೇ ಹೆಚ್ಚಾದ  ಅಜ್ಞಾನದ ಅಹಂಕಾರ ಸ್ವಾರ್ಥ ಬುದ್ದಿವಂತಿಕೆ. ಜ್ಞಾನದಿಂದ ಆತ್ಮಶುದ್ದಿಯಾಗುತ್ತಿದ್ದ ಹಿಂದಿನ ಧರ್ಮ ಕ್ಕೂ  ಆತ್ಮದುರ್ಭಲತೆ ಕಡೆಗೆ ನಡೆಯುತ್ತಿರುವ ಇಂದಿನ ಕರ್ಮ ಕ್ಕೂ ವ್ಯತ್ಯಾಸವೆಂದರೆ ಅಂದಿನ‌ಮಹಾತ್ಮರು ದೇಶದೊಳಗೆ ದೇವರೊಳಗೆ ನಾವಿದ್ದೇವೆಂಬ ಅರಿವಿನಲ್ಲಿ  ಋಣ ತೀರಿಸುವ ಜ್ಞಾನಿಗಳಾಗಿದ್ದರು.ಈಗ ನಮ್ಮಿಂದಲೇ ದೇವರು ದೇಶವಿರೋದೆಂದು ಅಜ್ಞಾನದ ಅಹಂಕಾರ ಸ್ವಾರ್ಥ ಹೆಚ್ಚಾಗಿ   ಸಾಲ ಮಾಡುತ್ತಾ ಹೊರದೇಶ ಉದ್ದಾರ ಮಾಡುತ್ತಿರುವುದು ಪರಧರ್ಮ ಎತ್ತಿಹಿಡಿದಿರೋದೇ  ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೆಂದರೆ ವಿರೋಧಿಸುವುದೂ ನಮ್ಮವರೆ   ಎಂದರೆ ಇದನ್ನು ಸರಿಪಡಿಸಲಾಗದು. 

                 🌹🙏

ಸತ್ಯಕ್ಕೆ ಸಾವಿಲ್ಲ ಸುಳ್ಳು ಸಾಯುತ್ತದೆ

ಸತ್ಯ ಮತ್ತು ಸುಳ್ಳು  ಎರಡೂ ತನ್ನ  ಸ್ಥಾನಮಾನಕ್ಕಾಗಿ  ಪೈಪೋಟಿ ನಡೆಸುತ್ತಲೇಇರುತ್ತದೆ.ಆದರೆ ಸತ್ಯ ಒಂದೇ ಆದಾಗ ಕದಲದೆ ಸ್ಥಿರವಾಗಿ ನಿಂತರೆ ಸುಳ್ಳು ಎಲ್ಲಾ ಕಡೆ ಸುತ್ತಿಬಳಲಿ ಬೆಂದು ಸಾಯುತ್ತದೆ ಕೊನೆಗೆ ಉಳಿಯೋದು ಸತ್ಯ ಮಾತ್ರ ಅದಕ್ಕೆ ಸತ್ಯವೇ ದೇವರು ಎಂದಿರೋದು.ಆದರೆ ಮಾನವ ಮಾತ್ರ ಅಸತ್ಯದ ಹಿಂದೆ ನಡೆದು ದಿನದಿನವೂ ಸಾಯುವುದು ತಪ್ಪಿಲ್ಲ.ಕಾರಣ ಸತ್ಯ ಒಳಗಿದೆ ಸುಳ್ಳು ಹೊರಗಿದೆ. ಹೊರಗೆ ನಡೆದಷ್ಟೂ ಸಾವು. ಒಳಗೆ ನಡೆದಷ್ಟೂ ಜೀವನ್ಮುಕ್ತಿ. ಸತ್ಯನಾಶ ಮಾಡಿದಷ್ಟೂ ಅಸತ್ಯ ಬೆಳೆಯುತ್ತದೆ ಇದರಿಂದಾಗಿ  ಸಾವೇ ಹೆಚ್ಚುವುದು. ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷ ಕಾಲ ಎಂದ ದಾಸಾನುದಾಸರನ್ನೂ   ಬಿಡದೆ ಕಾಡಿದ  ಅಸತ್ಯದ ಜಗತ್ತನ್ನು ಗೆದ್ದವರು ವಿರಳ. ಒಟ್ಟಿನಲ್ಲಿ ಕಾಲವನ್ನು ಸುಭಿಕ್ಷ ಮಾಡಲು ಸತ್ಯದೆಡೆಗೆ ನಡೆಯಲೇಬೇಕು. ಸುಳ್ಳಿನಿಂದ ಸುಭಿಕ್ಷ ಮಾಡಲು ಹೋದರೆ ಸಾಲವೇ ಬೆಳೆದು ಬಿಕ್ಷುಕರ ಸಂಖ್ಯೆಯನ್ನು ತಡೆಯಲಾಗದೆ ಸಾವು ಬರುವುದು.ಸಾವು ನಿಶ್ಚಿತ ಆದರೆ  ಇದರ ಹಿಂದೆ ಸಾಲವೂ ಖಚಿತ.ಇದನ್ನು ತೀರಿಸದೆ ಮುಕ್ತಿ ಯಿಲ್ಲವೆನ್ನುವುದು ಅಧ್ಯಾತ್ಮ ಸತ್ಯವಾದಾಗ ಭಾರತದ ರಾಜಕೀಯತೆ ಎತ್ತ ಸಾಗುತ್ತಿದೆ? ನಿಜವಾದ ಜ್ಞಾನಿಗಳಲ್ಲಿ ಸತ್ಯ ಇದೆಯೆ? ಹಾಗಾದರೆ  ಬಿಕ್ಷುಗಳ ದೇಶ ಬಿಕ್ಷುಕರ ದೇಶವಾಗಲು ಕಾರಣಕರ್ತರು ಯಾರು? ಆತ್ಮಾವಲೋಕನ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಅಗತ್ಯವಿದೆ. ಪುರಾಣ ಸತ್ಯದ ಬಂಡವಾಳ  ಹಿಡಿದುಕೊಂಡು ಹಣ ಮಾಡಿದರೂ ಸಾಲವೇ ಕಾರಣ ಇದನ್ನು ಒಳಗೆ ಅಳವಡಿಸಿಕೊಳ್ಳದೆ  ಹೊರಗೆ ಹಂಚಿದರೆ  ಒಳಗೆ ಸತ್ಯ ಬೆಳೆಯದು. ಹೀಗಾಗಿ ಆತ್ಮನಿರ್ಭರ ಭಾರತ ಆತ್ಮದುರ್ಭಲ  ಪ್ರಜೆಗಳನ್ನು ಹೊತ್ತು ನಡೆದಿದೆ.
ಶಂಖದಿಂದ ಬಂದರೆ ತೀರ್ಥ . ಕಾಲ ಕೂಡಿಬರಬೇಕಿದೆ ಅಂದರೆ  ಕಾಲವನ್ನು ತಡೆಯೋರಿಲ್ಲ ಗಾಳಿಯನ್ನು ಹಿಡಿಯಲೂ ಆಗುತ್ತಿಲ್ಲವೆಂದರೆ ಕಾಲದ ಪ್ರಭಾವವಷ್ಟೆ.ಗಾಳಿಸುದ್ದಿಗಳಲ್ಲಿ ಅಡಗಿರುವ ಅಸತ್ಯ,ಅನ್ಯಾಯ,ಅಧರ್ಮ, ಭ್ರಷ್ಟಾಚಾರ, ಕೊಲೆ ಸುಲಿಗೆಗಳಿಂದ  ಇನ್ನಷ್ಟು  ಅಸತ್ಯವಂತರೆ ಬೆಳೆಯುತ್ತಿದ್ದರೆ ನಮ್ಮಲ್ಲಿ ಸತ್ಯವೆಲ್ಲಿರುತ್ತದೆ? ಮಾಧ್ಯಮಗಳು ಮಧ್ಯವರ್ತಿಗಳು ಮಹಿಳೆ ಮಕ್ಕಳೆನ್ನದೆ ಹೊರಗೆ ಬಂದು ಎಷ್ಟೇ ಹೋರಾಟ,ಹಾರಾಟ ಮಾರಾಟಕ್ಕೆ ಇಳಿದರೂ ಇರೋದು ಒಂದೇ ಸತ್ಯ ಅದೇ ನಮ್ಮ ಆತ್ಮಸಾಕ್ಷಿ. ನಾನೇನು ಮಾಡಿದ್ದೇನೆ ದೇಶಕ್ಕೆ? ಸಮಾಜಕ್ಕೆ? ಸಂಸಾರಕ್ಕೆ? ಧರ್ಮಕ್ಕೆ ಎನ್ನುವ ಪ್ರಶ್ನೆ ಒಳಗೆ ಹಾಕಿಕೊಂಡರೆ ಉತ್ತರ ಸಿಗುತ್ತದೆ. ಮಾಡಿದ್ದರೂ ಅದರಲ್ಲಿ ನನ್ನ ಸ್ವಾರ್ಥ ಚಿಂತನೆ ಅಹಂಕಾರ ವೇ ಹೆಚ್ಚಾಗಿದ್ದರೆ  ಅಧರ್ಮ. ಹಣಕ್ಕಾಗಿ ಹೆಣವನ್ನೂ ಮಾರುವ ಪರಿಸ್ಥಿತಿ ಗೆ ಮಾನವ ಬಂದಿದ್ದರೆ ಇದರಷ್ಟು  ಅಜ್ಞಾನ ಮತ್ತೊಂದು ಇಲ್ಲ.
ಹಿಂದೆ  ಧರ್ಮ ರಕ್ಷಣೆಗಾಗಿ ಮಹಾತ್ಮರುಗಳು ತಮ್ಮ ದೇಹವನ್ನು ದಾನ ಮಾಡಿದ್ದರು. ಅದೂ ಸ್ವ ಇಚ್ಚೆಯಿಂದ ಜ್ಞಾನದಿಂದ ನೀಡಿದ ದಾನವಾಗಿತ್ತು.ಆದರೆ ಇತ್ತೀಚೆಗೆ ಅಮಾಯಕರ ಅಂಗಾಂಗಗಳಿಗೂ ಕನ್ನ ಹಾಕುವ ವೈಧ್ಯಕೀಯ  ಸಂಶೋಧನೆಗಳು  ಮೂಲದ ಸತ್ಯ ಧರ್ಮ ಮರೆತು ಮಾನವ ಮಾನವನಿಗೇ ಶತ್ರುವಾಗಿರೋದು ದೊಡ್ಡ ದುರಂತ. ಆಪರೇಷನ್ ಮೂಲಕ ಬೇರೆಯವರ ಅಂಗ ಜೋಡಿಸಿಕೊಂಡು ಬದುಕಬಹುದಷ್ಟೆ ಆದರೆ  ಸತ್ಯ ಜ್ಞಾನವಿಲ್ಲದೆ ಎಷ್ಟು ವರ್ಷ ಬದುಕಿದರೂ ಭೂಮಿಗೆ ಭಾರ. ಹೀಗಾಗಿ ಧಾರ್ಮಿಕ ವರ್ಗ ಎಚ್ಚರವಾದರೆ ಉತ್ತಮ.ನಮ್ಮ ರಕ್ತ ಸಂಬಂಧ ಬಿಟ್ಟು ಹೊರಗೆ ಹೋದರೂ ಸತ್ಯ ಒಂದೇ. ತಿರುಗಿ ಬರದೆ ಸಾಲಮನ್ನಾ ಆಗದು ಎನ್ನುವ ಕಾರಣಕ್ಕಾಗಿ ಹಿಂದಿನ  ಕೂಡುಕುಟುಂಬವು  ಧರ್ಮ ಹಾಗು ಸತ್ಯ ಬಿಟ್ಟು ನಡೆಯುವುದಕ್ಕೆ ಭಯಪಡುತ್ತಿದ್ದರು.ಕಾಲ ಬದಲಾದರೂ ಮೂಲ ಸತ್ಯ ಬದಲಾಗದು.ಮಿಥ್ಯದ ಜಗತ್ತಿನಲ್ಲಿ ಸಾಧನೆ ಮಾಡುವಾಗ ಸತ್ಯ ತಿಳಿದರೆ ಉತ್ತಮ ಸಮಾಜನಿರ್ಮಾಣ ಸಾಧ್ಯ. ಹೇಳೋದು ಸುಲಭ.ಸತ್ಯ ನುಡಿದು ನಡೆಯೋದೆ ಕಷ್ಟ ಹೀಗಿರುವಾಗ ಸುಖವಾಗಿ ಸುಳ್ಳು ಹೇಳುತ್ತಾ ತಿರುಗಿದರೆ  ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ. ಕಾರಣ ಅಸತ್ಯ ಯಾವತ್ತೂ ಸತ್ಯವಾಗದು.
ಅಸತ್ಯದ ಜಗತ್ತಿನಲ್ಲಿ ಹೆಸರು,ಹಣ,ಅಧಿಕಾರಕ್ಕಾಗಿ ಹೊಡೆದಾಟ ಮಾಡಿಕೊಂಡು ಹೋದರೆ ಜೀವ ಅತಂತ್ರಸ್ಥಿತಿಗೆ ತಲುಪುವುದನ್ನು ಯಾವ ಭೌತಿಕ ಸರ್ಕಾರ ತಡೆಯಲಾಗದು.
ಇದನ್ನು ತಡೆಯಲು ಅದ್ಯಾತ್ಮ ಸರ್ಕಾರ ಸತ್ಯದೆಡೆಗೆ ಬಂದರೆ ಸಾಧ್ಯವಿದೆ. ಇದೇ ಭೌತಿಕ ಸರ್ಕಾರದ ಹಿಂದೆ ಹೊರಟರೆ ಬೇಲಿಯೇ ಎದ್ದು ಹೊಲಮೇಯ್ದಂತಾಗುತ್ತದೆ. ಯಾರ ಸತ್ಯ ಯಾರನ್ನೋ ಸಾಯಿಸಲಾಗದು.ಆದರೆ, ಯಾರದ್ದೋ ಅಸತ್ಯ ಸುಳ್ಳು ಎಲ್ಲರನ್ನೂ  ಸಾವಿನೆಡೆಗೆ ನಡೆಸಬಹುದು. ಸತ್ಯವೇ ದೇವರು  ದೇವರಿಗೆ ಸಾವಿಲ್ಲ.ಸುಳ್ಳು ಅಸುರ ಸಂಪತ್ತು ಅಸುರರಿಗೆ ಸಾವಿದೆ. ಯಾರ ಕಡೆಗೆ ಹೋಗಬೇಕೆಂಬ ಅರಿವಿದ್ದರೆ  ಮನುಕುಲಕ್ಕೆ  ಒಳ್ಳೆಯದು.

Sunday, June 18, 2023

ಅಪ್ಪಂದಿರ ದಿನದ ಶುಭಾಶಯಗಳು

ಜೂನ್18 ಅಪ್ಪಂದಿರ ದಿನಾಚರಣೆ. ಇತ್ತೀಚೆಗೆ ಆಚರಣೆಗಳು ಬೆಳೆದಿರೋದಕ್ಕೆ ಕಾರಣ ಸಂಬಂಧ ದ ಜೊತೆಗೆ ಅವರ ಧರ್ಮ ಕರ್ಮ ವನ್ನೂ ತಿಳಿದು ನಡೆಯಲೆಂಬುದಾಗಿದೆ. ಹಿಂದಿನ ಕಾಲದಲ್ಲಿದ್ದ ಕೂಡುಕುಟುಂಬ ವ್ಯವಸ್ಥೆ ಇಂದಿಲ್ಲ  ಅಂದಿನ ಗುರು ಹಿರಿಯರು  ಅವರವರ ಕರ್ತವ್ಯವನ್ನು  ನಮ್ಮ  ಧರ್ಮ ವೆಂದರಿತು ಯಾವುದೇ ಪ್ರಚಾರಪ್ರಿಯರಾಗದೆ ಸ್ವಪ್ರಯತ್ನದಿಂದ ಸ್ವಾವಲಂಬನೆ ಯ ಜೀವನ ನಡೆಸುತ್ತಾ ಸತ್ಯ ಧರ್ಮದ ಕಡೆಗೆ ಸರಳ ಜೀವನ ನಡೆಸಿಕೊಂಡು ಸಮಾಜದಲ್ಲಿ ಉತ್ತಮ ಹೊಂದಾಣಿಕೆಯಿತ್ತು.
ಈಗ ಇದಕ್ಕೆ ವಿರುದ್ದ ನಡೆದವರಿಗೆ ಮೂಲದ ಸತ್ಯ ಧರ್ಮ ದ ಜ್ಞಾನವಿಲ್ಲದೆಯೇ ಮಕ್ಕಳಿಗೂ ತಿಳಿಸದೆ ತಾವೂ‌ ತಿಳಿಯದೆ ಮುಂದೆ ಹೋದಾಗ ತನ್ನ ತಂದೆಯ  ಮೇಲೇ ಇರದಪ್ರೀತಿ ವಿಶ್ವಾಸ ಹೊರಗಿನವರಲ್ಲಿ  ಇಟ್ಟರೆ  ಅಧರ್ಮ . ಹೀಗಾಗಿ ನಮ್ಮ ಹಿಂದಿನ ಧರ್ಮದ ಜೊತೆಗೆ ಇಂದಿನ  ಧರ್ಮವೂ ಸೇರಿದರೆ  ಸ್ವಲ್ಪ ಮಟ್ಟಿಗೆ ಬದಲಾವಣೆಯ ಗಾಳಿ ಬೀಸಲು ಸಾಧ್ಯ. ಇಲ್ಲಿ ಹಿಂದಿನ ಧರ್ಮ ವೆಂದರೆ  ಗುರುಹಿರಿಯರ  ನಡೆ ನುಡಿಯ ಜ್ಞಾನ ಇಂದಿನ ಧರ್ಮ  ನಮ್ಮ ನಡೆ ನುಡಿಯಲ್ಲಿರುವ ವಿಜ್ಞಾನ. ಜ್ಞಾನವಿಲ್ಲದ ವಿಜ್ಞಾನ ಜಗತ್ತು  ಹೊರಗಿನ ಸತ್ಯ ತೋರಿಸಿ ನಡೆಸುತ್ತದೆ. ಹೀಗಾಗಿ ತಾಯಿ ತಂದೆಯರು ನಮಗೆ ಕಣ್ಣಿಗೆ ಕಾಣುವ ದೇವರು ಎಂದಿದ್ದಾರೆ. ತಂದೆತಾಯಿಯರ ನಡೆ ನುಡಿಯೇ ಮಕ್ಕಳ ಭವಿಷ್ಯದ ಅಡಿಪಾಯ. ನಮ್ಮತನವನ್ನು  ಉಳಿಸಿಕೊಂಡು  ನಡೆಯುವುದೇ ನಿಜವಾದ ಜೀವನ. 
ಜ್ಞಾನಿ ವಿಜ್ಞಾನಿ, ಅಮ್ಮ ಅಪ್ಪ, ಭೂಮಿ ಆಕಾಶ, ಸ್ತ್ರೀ ಪುರುಷ  ಎರಡೂ ಒಂದೇ ನಾಣ್ಯದ ಎರಡು ಮುಖ.ಒಂದೇ ದೇಹದ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದರೆ ಅಧರ್ಮ. ಆದರೂ ಜ್ಞಾನ ಆಂತರಿಕ ಶಕ್ತಿ.ವಿಜ್ಞಾನ ಭೌತಿಕ ಶಕ್ತಿ ಎನ್ನುವಂತಹ ಸ್ಥಿತಿಯಲ್ಲಿ  ಮಕ್ಕಳು ಬೆಳೆದಿರುವುದು ಅಜ್ಞಾನವಾಗಿದೆ. ಆಂತರಿಕವಾಗಿರುವ ಶಕ್ತಿ ಸ್ತ್ರೀ ಯರಲ್ಲಿರುವಷ್ಟು ಪುರುಷರಲ್ಲಿರದಿದ್ದರೂ  ವಿಶೇಷವಾಗಿರುವ ಅಧ್ಯಾತ್ಮ ವಿಷಯವನ್ನು ಹೊರಗಿನಿಂದ ಗಳಿಸಿಕೊಂಡು ಕಾಲಮಾನಕ್ಕೆ ತಕ್ಕಂತೆ ಜೀವನ ನಡೆಸುವ ಶಕ್ತಿ ಪುರುಷರಲ್ಲಿ ಹೆಚ್ಚಾಗಿದ್ದು ಒಂದು ಸಂಸಾರವನ್ನು ನಡೆಸುವ ಪೂರ್ಣ ಜವಾಬ್ದಾರಿ ಹೊತ್ತು ಜೀವಮಾನವಿಡೀ ಕಷ್ಟಪಡುವುದು ಪುರುಷರ  ಶಕ್ತಿಯಾಗಿದೆ. ಕಾಲಬದಲಾಗಿದೆ ಸ್ತ್ರೀ ಕೂಡಾ ಸಂಸಾರದ‌ಜವಾಬ್ದಾರಿ ಹೊತ್ತು ನಡೆಯುತ್ತಾಳೆ ಆದರೆ, ಎರಡೂ ಚಕ್ರಗಳ ಸಮತೋಲನ ಅಗತ್ಯ.ಒಂದು ಚಕ್ರ ವಿರುದ್ದ ದಿಕ್ಕಿನಲ್ಲಿ ಹೋಗಲಾಗದು  ಜೀವನ ಚಕ್ರ ಒಂದೇ ಮಾರ್ಗದಲ್ಲಿ  ನಡೆಯುವಾಗ ಹಿಂದೆ ಬಂದ ಮಾರ್ಗ ತಿರುಗಿ  ನೋಡದಿದ್ದರೆ  ಸಂಬಂಧ ಉಳಿಯದು. 
ಒಟ್ಟಿನಲ್ಲಿ ಅಪ್ಪನ ಶ್ರಮದ ಫಲ  ಸಂಸಾರದ ಭವಿಷ್ಯವಾಗಿರುತ್ತದೆ. ಆ ಶ್ರಮಕ್ಕೆ ಬೆಲೆಕಟ್ಟಲು ಅಸಾಧ್ಯ. ಹೀಗಾಗಿ ವರ್ಷ ಕ್ಕೊಮ್ಮೆ ಅಪ್ಪಂದಿರ ದಿನಾಚರಣೆ  ಮಾಡಿ  ಅವರ ಋಣ ತೀರಿಸಲಾಗದು.ಅವರ  ಧರ್ಮಾಚರಣೆ
ಯಲ್ಲಿದ್ದ ಪರಿಶ್ರಮವನ್ನರಿತು  ಶ್ರಮವಹಿಸಿ   ತಮ್ಮ ಮಕ್ಕಳ ಪಾಲನೆ ಪೋಷಣೆ ಮಾಡಲು  ನಮಗೂ ಸಾಧ್ಯವಾದರೆ ಅವರು ಗತಿಸಿದ ಮೇಲೂ  ಅಮರರಾಗಿರುತ್ತಾರೆ. ಇದು ಭಾರತೀಯ ಧರ್ಮ, ಸಂಸ್ಕೃತಿಯೊಳಗಿರುವ  ಶಕ್ತಿ.ಕಣ್ಣಿಗೆ ಕಾಣದ  ಪರಿಶ್ರಮ ಕಣ್ಣಿಗೆ ಕಾಣುವ ಅಪ್ಪ ಒಂದೇ ಆದರೂ ಅನುಭವಿಸಿದ ಮೇಲೇ  ಶಕ್ತಿಯೇ ಬೇರೆ ವ್ಯಕ್ತಿಯೇ ಬೇರೆ ಎಂದು ತಿಳಿಯುವುದು. ಒಟ್ಟಿನಲ್ಲಿ  ವ್ಯಕ್ತಿಯೊಳಗಿರುವ ಶಕ್ತಿ ಅರಿತು ಗೌರವಿಸಿದರೆ  ಉತ್ತಮ ಆಚರಣೆಯಾಗುತ್ತದೆ. 
ಎಲ್ಲರಂತಲ್ಲ ನಮ್ಮಪ್ಪ. ಎಲ್ಲರಿಗೂ ಅವರದೇ ಆದ ವಿಶೇಷ ಶಕ್ತಿಯಿರುತ್ತದೆ. ಅವರವರ ಸಂಸಾರದ ಜವಾಬ್ದಾರಿ ಹೊತ್ತು ನಡೆಯುವುದೇ ನಿಜವಾದ ಧರ್ಮ. 
ನಮ್ಮ  ಸಂಸಾರದ ಜವಾಬ್ದಾರಿಯನ್ನು ‌ಸರ್ಕಾರ ಹೊತ್ತು ನಡೆಯಲೆಂಬುದೇ ಬೇಜವಾಬ್ದಾರಿತನ.

ಶಿಕ್ಷಕವೃತ್ತಿಯನ್ನು ಧರ್ಮದ ಮಾರ್ಗದಲ್ಲಿ ನಡೆಸಿಕೊಂಡು ಸಮಾಜದಲ್ಲಿ ಗೌರವದಿಂದ ಬಾಳಿ ಬದುಕಿದ  ನಮ್ಮ ಅಪ್ಪ ಅಷ್ಟೂ ಹೆಣ್ಣುಮಕ್ಕಳಾದರೂ ಹೊರೆ ಎಂದೆಣಿಸದೆ ಸರಿಯಾದ  ಮಾರ್ಗದರ್ಶನದ ಶಿಕ್ಷಣ ನೀಡಿ ಅಮರರಾಗಿದ್ದಾರೆ. ಆದರೂ ನಮ್ಮ  ಭಾರತದಲ್ಲಿರುವ ರಾಜಕೀಯದ  ಭಿನ್ನಾಭಿಪ್ರಾಯದಿಂದ  ಈಗಲೂ ಉತ್ತಮ ಶಿಕ್ಷಕರನ್ನು ಗುರುತಿಸುವಲ್ಲಿ ಸೋತಿರುವುದು ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರಕ್ಕೆ ಕಾರಣವೆಂದರೆ ತಪ್ಪಿಲ್ಲ. ಶಿಕ್ಷಣದ  ದಿಕ್ಕೇ ಬದಲಾಗಿರುವಾಗ  ಸಂಬಂಧಗಳೂ  ಬದಲಾಗುತ್ತಲೇ ಇರುತ್ತದೆ. ಯಾರು ಎಷ್ಟೇ ದಿಕ್ಕುತಪ್ಪಿಸಿದರೂ‌ ಹಿಂದಿರುಗದೆ ಹಿಂದಿನ ಧರ್ಮ ಕಾಣೋದಿಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದಿರೋದು ಇದಕ್ಕೆ ಅಲ್ಲವೆ?
ಜನ್ಮದಾತರಿಲ್ಲದೆ  ಜನ್ಮವೇ ಇಲ್ಲ. 
2013ರ ಹೊತ್ತಿಗೆ  ನನ್ನ ಸಣ್ಣ ಪುಟ್ಟ ಲೇಖನ  ಪ್ರಕಟಿಸಲು ಸಹಾಯ ಮಾಡಿದ  ನಮ್ಮ ಊರಿನವರಾದ ಶ್ರೀ  ಉಮೇಶ್ ಚಂದ್ರನ್  ಅದೇ ವರ್ಷ  ಸ್ವರ್ಗಸ್ಥರಾದ ನಮ್ಮ ತಂದೆಯವರ ವಿಚಾರವನ್ನು ಸಣ್ಣದಾಗಿ  ಬರೆದು ಪ್ರಕಟಿಸಿದರು. ಇದನ್ನು ತಿಳಿಸಬೇಕೆನಿಸಿತು .ಓದಿ ಪ್ರತಿಕ್ರಿಯಿಸಿ ಸ್ನೇಹಿತರೆ

Saturday, June 17, 2023

ದ್ವೇಷದಿಂದ ದೇಶಕಟ್ಟಲಾಗದು

ದ್ವೇಷ ರೋಷ ಭಿನ್ನಾಭಿಪ್ರಾಯ ದಿಂದ ಬೆಳೆದ ಅಂತರದ ಅಜ್ಞಾನದಿಂದ  ಯಾರಿಗೆ ಲಾಭ ನಷ್ಟ?  ಇವುಗಳ ಮೂಲವೇ ಪ್ರಚಾರಕರು. ಪ್ರಚಾರಕರಿಗೆ ಯಾವುದೇ ನಷ್ಟಕಷ್ಟವಿಲ್ಲ ಕಾರಣ ಮಧ್ಯವರ್ತಿಗಳು ಎರಡೂ ಕಡೆಯವರನ್ನು ಓಲೈಸಿಕೊಂಡು  ಸಹಕಾರ ಪಡೆದು ತಮ್ಮ ಜೀವನ ನಡೆಸಿದ್ದಾರೆಂದರೆ  ಇದೊಂದು ಅಧರ್ಮ.
ಸಾಕಷ್ಟು ಪುರಾಣ ಇತಿಹಾಸದ ಕಥೆಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವುದರಲ್ಲಿ ಎಷ್ಟು  ಯಶಸ್ಸು ಗಳಿಸಿದ್ದಾರೆಂಬ ಪ್ರಶ್ನೆಗೆ ಉತ್ತರ  ತಮ್ಮ ತಮ್ಮ ಹೆಸರು ಹಣ ಅಧಿಕಾರ ಸ್ಥಾನಮಾನ ಬೆಳೆಸಿಕೊಂಡವರಿದ್ದರೂ ಜನರಲ್ಲಿ ಧರ್ಮ  ಯಾವುದು ಸತ್ಯ ಯಾವುದು ಎನ್ನುವ ಅರಿವಿರದೆ ದೇವರನ್ನು  ಹೊರಗೆ ಹುಡುಕಿದರೂ ಸಿಗದೆ ಸರ್ಕಾರದ ಹಿಂದೆ ನಿಂತು ಬೇಡುತ್ತಿರೋದೆ ಆತ್ಮನಿರ್ಭರ ಭಾರತವೆಂದರೆ ತಪ್ಪು.
ಆತ್ಮಜ್ಞಾನದಿಂದ ಆತ್ಮನಿರ್ಭರ ಭಾರತ ಮಾಡೋದಕ್ಕೆ ಈ ದ್ವೇಷದ ರಾಜಕೀಯದ ಅಗತ್ಯವಿರಲಿಲ್ಲ. ಶಾಂತಿಯಿಂದ ದೇಶದ ಸ್ವಾತಂತ್ರ್ಯ ಗಳಿಸಲು ಹೋರಾಡಿದ ಮಹಾತ್ಮರನ್ನು ಸರಿಯಿಲ್ಲವೆನ್ನುವ ಜನರಿದ್ದಾರೆಂದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿದಿಲ್ಲ. ಮಹಾತ್ಮರ ಸಂದೇಶಗಳಲ್ಲಿ ದೇಶದ ಹಿತ ಕಾಣಬೇಕಾದರೆ ದೇಶದೊಳಗೆ ಇದ್ದು ಸತ್ಯ ತಿಳಿಯುವುದು ಅಗತ್ಯವಿತ್ತು.ಆದರೆ ವಿದೇಶಸುತ್ತಿ ಬಂದವರು ದೇಶದ ಹಿತ ವಿದೇಶದ ವಿಜ್ಞಾನದಲ್ಲಿದೆ ಎನ್ನುವಂತಾದರೆ  ಅಜ್ಞಾನವಷ್ಟೆ.
ಇಲ್ಲಿ ಯಾರನ್ನು  ಸರಿಯಿಲ್ಲವೆನ್ನುವ ಮೊದಲು ನಾನೆಷ್ಟು ಸರಿ ಎನ್ನುವ ಪ್ರಶ್ನೆ ಹಾಕಿಕೊಂಡವರು ಕಡಿಮೆಯಾಗಿ ಯಾರೋ ಹೇಳಿದ್ದೇ ಸತ್ಯವೆಂದು ಸಹಕಾರ ನೀಡಿ ತಾನೂ ಅದೇ ಅಸತ್ಯಕ್ಕೆ ಶರಣಾಗಿ ನಮ್ಮ ನಮ್ಮವರನ್ನೇ ದ್ವೇಷ ಮಾಡುತ್ತಾ ವಿದೇಶದವರೆಗೆ ಹೋದರೆ  ಪ್ರಗತಿ ಎನ್ನುವ ಅಜ್ಞಾನಕ್ಕೆ ಮದ್ದಿಲ್ಲ. ಹಿಂದೂ ಧರ್ಮದ ರಕ್ಷಣೆಗೆ ಹಿಂದೂಗಳ ಒಗ್ಗಟ್ಟು ಅಗತ್ಯವಿತ್ತು. ಪರಕೀಯರ ಕೈ ಕುಲುಕಿ ನಮ್ಮವರ ವಿರುದ್ದದ ರಾಜಕೀಯ ಬೆಳೆದಿರುವಾಗ ಪರಕೀಯರಲ್ಲಿ ಹಿಂದೂ ಧರ್ಮ ಇದೆಯೆ? ನಮ್ಮ ಶಿಕ್ಷಣ ಅವರಲ್ಲಿದೆಯೆ?  ಬಂಡವಾಳ ಸಾಲದ ಹಣವನ್ನು ದೇಶದ ತುಂಬಾ ತುಂಬಿಕೊಂಡು ಅಭಿವೃದ್ಧಿ ಎಂದರೆ ಹಣ ಶಾಶ್ವತವೆ? ಸಾಲ ತೀರಿಸುವ ಯೋಗ್ಯತೆ ಪ್ರಜೆಗಳಿಗಿದೆಯೆ?  ಎಲ್ಲಾ ಪ್ರಶ್ನೆಗೆ ಉತ್ತರ ಪ್ರಜೆಗಳೆ  ಕೊಡಬೇಕು. ಇಲ್ಲಿ ಹಣ ಮಾತ್ರ ಬೇಕು ಕೆಲಸ ಬೇಡ. ಕಷ್ಟ ಪಡದೆ ಸುಖ ಅನುಭವಿಸಿದರೆ ಕಷ್ಟಬಂದಾಗ  ಹೋರಾಡಿ  ಸತ್ತರೆ  ಜೀವಕ್ಕೆ ಮುಕ್ತಿ ಸಿಗದು. ಆಂತರಿಕ ಶುದ್ದಿಯಿಂದ ಆಂತರಿಕ ಬುದ್ದಿ ಶಕ್ತಿಯನ್ನು  ಆಂತರಿಕ ವಾಗಿದ್ದು  ಸದ್ಬಳಕೆ ಮಾಡಿಕೊಂಡು  ಸನಾತನ ಹಿಂದೂ ಧರ್ಮ  ನಿಧಾನವಾಗಿ ಬೆಳೆದಿರುವಾಗ ಯಾರೋ ಹೊರಗಿನವರು ಬಂದು  ಹೊರಗಿನ ಆಸೆ ಆಮಿಷಗಳಿಗೆ  ಜೀವನವೇ  ಹಾಳಾಗುವಷ್ಟು  ಬಲಿಯಾಗಿಸಿಕೊಂಡು ಅಜ್ಞಾನ  ಬೆಳೆದಿರುವಾಗ  ಇದನ್ನು ಸರಿಪಡಿಸಲು ಜ್ಞಾನದ ಶಿಕ್ಷಣದ ಅಗತ್ಯವಿತ್ತು. ಆದರೆ ತಿಳಿದವರು ಧಾರ್ಮಿಕ ವರ್ಗ ಬೇರೆ ರಾಜಕೀಯ ಕ್ಷೇತ್ರ ಬೇರೆ ಎಂದು ಒಂದೇ ದೇಶದಲ್ಲಿ ಹಲವಾರು ಧರ್ಮ, ಪಕ್ಷಗಳನ್ನು ಸೃಷ್ಟಿ ಮಾಡಿದರೆ  ಒಂದೇ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಇದರಲ್ಲಿ ದ್ವೇಷ, ಸೇಡು,ಭಿನ್ನಾಭಿಪ್ರಾಯ, ನಾಟಕವೇ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ  ಇದಕ್ಕೂ ನನಗೂ ಸಂಬಂಧ ವಿಲ್ಲವೆಂದು ರಾಜಕೀಯ ನಡೆಸಿದರೆ ಪ್ರಜಾಪ್ರಭುತ್ವಕ್ಕೆ ವಿರುದ್ದ.
ಅಧ್ಯಾತ್ಮ ದಿಂದ ದ್ವೇಷ ಹೋಗಬೇಕೇ ಹೊರತು ಬೆಳೆದರೆ ಅಧರ್ಮ ವಾಗುತ್ತದೆ. ಇದನ್ನು  ಸರಿ ಎನ್ನುವ ಪ್ರಜೆಗಳ ಸಹಕಾರವಿದ್ದರೆ  ದ್ವೇಷವೇ ಬೆಳೆಯೋದಷ್ಟೆ.
ಕ್ಷಮೆ,ಕರುಣೆ,ದಯೆ,ದಾಕ್ಷಿಣ್ಯವಿಲ್ಲದ ಧರ್ಮ ಯಾವುದಿದೆ?
ವ್ಯಕ್ತಿಯ ಹಣಕ್ಕೆ ಬೆಲೆಕೊಟ್ಟು ಜ್ಞಾನಕ್ಕೆ ಬೆಲೆಯಿಲ್ಲದೆ ಇಂದಿನ ದಿನಗಳಲ್ಲಿ ಮನೆಮನೆಯ ಒಡಕು ಏರಿದೆ.
ಒಂದು ಮನೆಯಿಂದ ಇನ್ನೊಂದು ಮನೆಗೆ ಲಕ್ಮಿಯಂತೆ ಬಂದ ಪತ್ನಿಯನ್ನು, ಸೊಸೆಯನ್ನು  ಹೇಗೆ ಕಾಣಬೇಕೆಂಬ ಜ್ಞಾನವಿಲ್ಲದೆ  ಆಳಾಗಿ ಕಂಡರೆ ಹಾಳಾಗೋದು ಸಂಬಂಧವೆ. ಹಾಗೆಯೇ ಬೇರೆ ಮನೆಗೆ ಹೋದ ಮೇಲೆ ಅಲ್ಲಿಯ ರೀತಿ ನೀತಿಗಳನ್ನು ತಿಳಿಯುವುದೂ ಅಗತ್ಯವಿದೆ.ಇದನ್ನರಿತು  ಸಮಾಧಾನದಿಂದ ತಾಳ್ಮೆಯಿಂದ  ಬದುಕುವುದಕ್ಕೆ ಜ್ಞಾನಬೇಕಿದೆ.
ಜೋಡಿಸುವ ಕೆಲಸ ಮಾಡುವ ದೈವತ್ವಕ್ಕೂ ಬಿಡಿಸಿ ಆಳುವ ಅಸರತ್ವಕ್ಕೂ ವ್ಯತ್ಯಾಸವಿಷ್ಟೆ.
ಎಲ್ಲಿಯವರೆಗೆ  ಪ್ರಜೆಗಳಲ್ಲಿ ದ್ವೇಷ ಇರುವುದೋ ಅಲ್ಲಿಯವರೆಗೆ ವಿದೇಶಿಗಳಿಗೆ,ಪರಧರ್ಮದವರಿಗೆ ಖುಷಿ.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವುದು ಸತ್ಯವಾಗಿದೆ.
ಸರ್ಕಾರ  ಜನರ ಜೀವ ಉಳಿಸಬಹುದೆ? ಸಾಲ ತೀರಿಸಬಹುದೆ? ದೇಶ ಉಳಿಸಬಹುದೆ?  ಧರ್ಮ ರಕ್ಷಿಸಬಹುದೆ? ಸತ್ಯ ತಿಳಿಸಬಹುದೆ? ಯಾವುದೂ ಈವರೆಗೆ ಸಾಧ್ಯವಾಗಿಲ್ಲ ಕೇವಲ ಸಾಲ ಮಾಡಿಕೊಂಡು ‌ನಡೆಯುತ್ತಿದೆ ಎಂದರೆ ನಮ್ಮ ಸಹಕಾರದಲ್ಲಿ ಅಧರ್ಮ, ಅನ್ಯಾಯ,ಅಸತ್ಯ, ಅಜ್ಞಾನವಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಅಂತರಾತ್ಮ ಶುದ್ದಿಯಿಂದ ಸಾಧ್ಯ ಅಂತರಾಷ್ಟ್ರೀಯ ವ್ಯವಹಾರದಿಂದ ಅಸಾಧ್ಯ.  
ನಮ್ಮವರ ಸಂಬಂಧ ಗಟ್ಟಿಯಾಗಿಸದೆ ವಿದೇಶಿಗಳ ಸಂಬಂಧ ಬೆಳೆಸಿದರೆ  ಅತಿಥಿಗಳ  ಮಧ್ಯೆ ಪ್ರವೇಶ ಅಂತರಕ್ಕೆ ಕಾರಣ.
ಈಗಲೂ ವಿದೇಶಿ ಒಪ್ಪಂದ ಗಳು ಮಿತಿಮೀರಿದೆ.ಆರ್ಥಿಕ ಪ್ರಗತಿಯಾದರೂ ಧಾರ್ಮಿಕ ಪ್ರಗತಿ ಕುಂಟುತ್ತಿದೆ ಎಂದರೆ ಹಣವನ್ನು ದುರ್ಭಳಕೆ ಮಾಡಿಕೊಂಡು ಮನರಂಜನೆ ಕಡೆಗೆ ನಡೆದ ಮನಸ್ಸು ಆತ್ಮವಂಚನೆಯನ್ನು ನಿರ್ಲಕ್ಷ್ಯ ಮಾಡಿದೆ.
ಇದೇ ಮುಂದೆ  ಅಜ್ಞಾನದ ದ್ವೇಷ,ಅಸೂಯೆ,ಜಗಳ,ಕ್ರಾಂತಿಗೆ ಕಾರಣ.ಕ್ರಾಂತಿಯಿಂದ ಹೋದ ಜೀವಕ್ಕೆ ಶಾಂತಿ ಸಿಗದೆ ಮತ್ತೆ
ಜನ್ಮತಳೆದು ಹೋರಾಟವೇ ಜೀವನವಾಗಿದೆ ಎಂದರೆ ಹಿಂದೂ  ಧರ್ಮದ  ರಕ್ಷಣೆಗೆ ಶಾಂತಿ‌ಮುಖ್ಯವೆ? ಕ್ರಾಂತಿಯೆ?
ಅಜ್ಞಾನದ ಅಹಂಕಾರ ಸ್ವಾರ್ಥ ದಲ್ಲಿ ಜಗತ್ತನ್ನು ಆಳಲು ಹೊರಟು ಒಳಗಿದ್ದ ಜ್ಞಾನದ ಜಗತ್ತು ಕಣ್ಣಿಗೆ ಕಾಣದಾಗಿದೆ.
ಕಂಡಿದ್ದೆಲ್ಲಾ ಶಾಶ್ವತವಲ್ಲ ಸತ್ಯವೂ ಅಲ್ಲ. ಕಾಣದ ಜಗತ್ತನ್ನು ಅರಿತಾಗಲೇ  ನಿಜವಾದ ದ್ವೇಷ ಮರೆತು ಸ್ನೇಹ ಪ್ರೀತಿ ವಿಶ್ವಾಸ ದ  ಬದುಕು ಸಾಧ್ಯವೆಂದಿರುವರು ಮಹಾತ್ಮರುಗಳು. ಯಾರಿಗೆ ಗೊತ್ತು ಒಳಗೆ ಯಾವ ದೈವಶಕ್ತಿ ಅಡಗಿದೆಯೆಂದು.
ಅದರ ವಿರುದ್ದ ನಡೆದಷ್ಟೂ ಅಂತರ ಹೆಚ್ಚಾಗುತ್ತಾ ಜೀವನ ಅವಾಂತರವಾಗುತ್ತದೆ.

Friday, June 16, 2023

ಧರ್ಮ ಅಂದು ,ಇಂದು ,ಮುಂದು...ಒಂದೆ?

ಹಿಂದಿನ ಧರ್ಮ ರಕ್ಷಣೆಗೂ ಈಗಿನ ಧರ್ಮ ರಕ್ಷಣೆಗೂ ವ್ಯತ್ಯಾಸವೇನು?
ಹಿಂದಿನ ಧರ್ಮ ಆಂತರಿಕ ಶುದ್ದಿಯಿಂದ ನಡೆದು ಭೌತಿಕದಲ್ಲಿ ರಕ್ಷಣಾಕಾರ್ಯ ವಿತ್ತು.ಈಗ ಭೌತಿಕದೆಡೆಗೆ  ನಡೆಯುತ್ತಾ ಆಂತರಿಕ ಶುದ್ದಿಯಿಲ್ಲದ ಆಚರಣೆಯಾಗಿದೆ.ಅಂದು ಹಣ ಸಂಪಾದನೆಯಿಲ್ಲದೆಯೇ ಜ್ಞಾನಸಂಪಾದನೆಗೆ  ಒಲವಿತ್ತು ಈಗ ಹಣವಿಲ್ಲದೆ ಜ್ಞಾನಕ್ಕೆ ಬೆಲೆಯೇ ಇಲ್ಲ.ಅಂದಿನ ಶಿಕ್ಷಣವು ಸತ್ಯ ಶುದ್ದ ಧರ್ಮ ಜ್ಞಾನವಾಗಿತ್ತು. ಇಂದು ಅಸತ್ಯ ಅಶುದ್ದವಾದ ವಿಷಯಜ್ಞಾನವಾಗಿದೆ. ಅಂದಿನ ವಿಜ್ಞಾನ ಅಧ್ಯಾತ್ಮ ಬಿಟ್ಟು ಹೋಗಿರಲಿಲ್ಲ ಇಂದಿನ ವಿಜ್ಞಾನ ಅಧ್ಯಾತ್ಮದ ವಿರುದ್ದವೇ ನಿಂತು  ಮುಂದೆ ಹೋಗಿದೆ. ಅಂದಿನ. ಸಂನ್ಯಾಸಿಗಳಿಗೆ ಯಾವ ಸಂಸಾರಿಗಳ ಸಹಾಯದ ಅಗತ್ಯವಿರಲಿಲ್ಲ.ಇಂದು ಸಂನ್ಯಾಸ ಸ್ವೀಕರಿಸುವುದಕ್ಕೂ ಸಂಸಾರಿಗಳ ಸಹಕಾರ ಬೇಕು.ಅಂದಿನ ಭಾರತದಲ್ಲಿ ರಾಜಾಡಳಿತವಿತ್ತು ಇಂದಿನ ಭಾರತ ಪ್ರಜಾಪ್ರಭುತ್ವ ವಾಗಿದೆ. ಅಂದಿನ ಶ್ರೀಮಂತ ರಾಜರು ಸ್ವಧರ್ಮ, ಸ್ವರಾಜ್ಯಕ್ಕಾಗಿ ಸ್ವತಃ ಜೀವಭಯಬಿಟ್ಟು ಯುದ್ದ ದಲ್ಲಿ ಹೋರಾಟ ಮಾಡಿ  ಕ್ಷಾತ್ರಧರ್ಮ ಉಳಿಸಿದ್ದರು.ಇಂದಿನ ರಾಜಕಾರಣಿಗಳಿಗರ ತಮ್ಮ ಜೀವಕ್ಕಾಗಿ ಅಧಿಕಾರಕ್ಕಾಗಿ  ಸ್ವಧರ್ಮ ಬಿಟ್ಟರೂ ಸರಿ  ರಾಜ್ಯ ಹೋದರೂ ಸರಿ  ಅಧಿಕಾರ ಮಾತ್ರ ಬಿಡೋದಿಲ್ಲವೆನ್ನುವ ಹೋರಾಟದಲ್ಲಿರುವರು.

ಇವೆಲ್ಲವೂ  ನಮಗೆ ಕಾಣುವ ಸತ್ಯ.ಹಾಗಾದರೆ ತಪ್ಪು ಯಾರದ್ದು ಎಲ್ಲಿದೆ? ಎನ್ನುವ ಪ್ರಶ್ನೆಗೆ ಉತ್ತರ ಒಳಗಿರುವ ತಪ್ಪು ಕಣ್ಣಿಗೆ ಕಾಣುತ್ತಿಲ್ಲ.ಹೊರಗಿನ ತಪ್ಪು ಕಾಣುತ್ತಿದೆ‌.ಹೊರಗೆ ಹೋರಾಟ ನಡೆಸಿದರೂ ಒಳಗಿನ ತಪ್ಪು ಸರಿಯಾಗದೆ ಹೋರಾಟ ವ್ಯರ್ಥ. ಹಣವನ್ನು  ದುರ್ಭಳಕೆ ಮಾಡಿಕೊಂಡು  ಎಷ್ಟೇ ಹೋರಾಡಿದರೂ ಸಾಲವಾಗುತ್ತಾ ತಿರುಗಿ ಬರೋವಾಗ  ಒಳಗಿರುವ ತಪ್ಪಿಗೆ ಶಿಕ್ಷೆ ಹೆಚ್ಚಾಗುವುದು.
ಇದೇ ಕಾರಣಕ್ಕಾಗಿ ಭಾರತ ಬಡತನದಿಂದ  ದೂರವಾಗದೆ ಇನ್ನಷ್ಟು ಸಾಲದೆಡೆಗೆ ನಡೆದಿದೆ.ಆಂತರಿಕ ಶುದ್ದಿಗಾಗಿ ನೀಡುವ ಶಿಕ್ಷಣ ಕೊಡಬೇಕಾದವರೆ ಭ್ರಷ್ಟರ ಹಿಂದೆ ನಿಂತು ಬೇಡಿದರೆ  ಭ್ರಷ್ಟಾಚಾರ ಹೋಗುವುದೆ? ಹಣದ ಶ್ರೀಮಂತ ರಲ್ಲಿರುವ ಜನರ ಋಣ ತೀರಿಸಲು  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆಇಲ್ಲದೆ ದಾನ ಧರ್ಮ ಕಾರ್ಯ ನಡೆಸಬೇಕೆಂದು ಹಿಂದೂ ಧರ್ಮ ತಿಳಿಸುತ್ತದೆ ಆದರೆ ಆಗಿರೋದೇನು ದೇಶವನ್ನು  ಆಧುನಿಕತೆಯಿಂದ ಶೃಂಗಾರ ಮಾಡಲು ಸ್ಮಾರ್ಟ್  ಆಗಿ ಕಾಣೋದಕ್ಕೆ ವಿದೇಶಿ ತಂತ್ರಜ್ಞಾನ ಬಳಸುತ್ತಾ ಒಳಗೇ ಅಡಗಿದ್ದ ಸರಳ ಸುಂದರ ಸಾತ್ವಿಕ ಶಕ್ತಿಗೆ ಅವಮಾನ  ಮಾಡುವ ಮೂಲಕ   ದೇಶದ ಸ್ತ್ರೀ ಯರ ಆಂತರಿಕ ಜ್ಞಾನಶಕ್ತಿಯನರಿಯದೆ ಸರಿಯಾದ ಶಿಕ್ಷಣ ನೀಡದೆ
ಭೌತಿಕದೆಡೆಗೆ ಎಳೆದರೆ  ಭಾರತಮಾತೆ ಕಾಣೋದಿಲ್ಲ.ವಿದೇಶಿ ಮಹಿಳೆಯಾಗಬಹುದು.  ಒಟ್ಟಿನಲ್ಲಿ ಸರಳವಾಗಿ ಜೀವನ ನಡೆಸಿದ ಭಾರತೀಯರಿಗೂ  ವೈಭೋಗದಲ್ಲಿ ಜೀವನ‌ನಡೆಸುವ ವಿದೇಶಿ ನಾಗರೀಕತೆಗೂ  ವ್ಯತ್ಯಾಸವಿಷ್ಟೆ. ಭಾರತೀಯತೆಯಿಂದ  ಋಣಮುಕ್ತರಾಗಿ ಜೀವನ್ಮುಕ್ತಿ ಸಿಗುತ್ತದೆ. ವಿದೇಶಿವಿಜ್ಞಾನದ ಹಿಂದೆ ನಡೆದರೆ ಇನ್ನಷ್ಟು ಸಾಲ ಬೆಳೆದು  ಜೀವನವೇ ವ್ಯರ್ಥ ವಾಗುತ್ತದೆ. ಆದರೆ ಇತ್ತೀಚೆಗೆ ವಿದೇಶಿಗರು ಭಾರತೀಯ ಧರ್ಮ ಸಂಸ್ಕೃತಿ ಕಡೆಗೆ ಒಲವು ತೋರಿಸಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಪ್ರಯತ್ನ ಪಟ್ಟರೂ ಭಾರತೀಯರೆ‌ ವಿದೇಶದೆಡೆಗೆ ಹೋಗುತ್ತಾ ಸಾಧಕರಂತೆ  ನಟನೆ ಮಾಡಿಕೊಂಡು ಮನೆಯೊಳಗಿದ್ದ ಮಕ್ಕಳು ಮಹಿಳೆಯರನ್ನು ಕೀಳಾಗಿ ಕಾಣುತ್ತಿರುವುದೆ ದುರಂತ. ಒಟ್ಟಿನಲ್ಲಿ ಅಂದಿನ  ರಾಜಯೋಗದ  ಆತ್ಮಜ್ಞಾನ ಇಂದಿನ ರಾಜಕೀಯದ  ವಿಜ್ಞಾನ ಒಂದರ ಮುಖ ಇನ್ನೊಂದು ನೋಡದೆ ವಿರುದ್ದ ದಿಕ್ಕಿನಲ್ಲಿ ನಡೆದರೂ ವ್ಯವಹಾರದ ವಿಷಯದಲ್ಲಿ ಎರಡೂ ಹಣವೇ ಸರ್ವಸ್ವ ಎಂದರೆ ಜ್ಞಾನದ ಗತಿ ಅಧೋಗತಿ. ಭೂಮಿಯ ಮೇಲಿದ್ದೇ  ನಭೋಮಂಡಲದ ಸಂಶೋಧನೆ ನಡೆಸಿ ಮನುಕುಲ ರಕ್ಷಣೆ ಮಾಡಿದ್ದ ಋಷಿಪರಂಪರೆಗೂ  ಭೂಮಿಯನ್ನೇ ಸಿಡಿಸಿ ಪ್ರಕೃತಿ ವಿರುದ್ದ ನಡೆದು ಆಕಾಶದೆತ್ತರ ಹಾರುತ್ತಾ ಮನುಕುಲ ಭಕ್ಷಣೆಯಾದರೂ ಸರಿ  ಎನ್ನುವ ಇಂದಿನ ಸಂಶೋಧನೆಗೂ ಬಹಳ ವ್ಯತ್ಯಾಸವಿದೆ. ಮೊದಲು ಮಾನವನಾಗಿ ನಂತರ ಮಹಾತ್ಮರಾಗುತ್ತಿದ್ದ ಕಾಲ ಹೋಗಿ ಮೊದಲೇ ಅಸುರಶಕ್ತಿಗೆ ದಾಸರಾಗುವ  ಮಾನವನಿಗೆ ದೈವತ್ವದೆಡೆಗೆ ಹೋಗಲು ಕಷ್ಟ. ಒಳಗೇ ಅಡಗಿರುವ ದೇವಾಸುರ ಗುಣಜ್ಞಾನದಿಂದ ಮಾನವ ಜೀವನ‌ ನಡೆಸಿರೋವಾಗ ಯಾವ ಶಕ್ತಿಯನ್ನು ಹೆಚ್ಚಿಸಿ ಕೊಂಡರೆ  ಜೀವನ ಸಾರ್ಥ ಕ ಎನ್ನುವ ಸಾಮಾನ್ಯಜ್ಞಾನ ಇದ್ದರೆ‌  ಎಲ್ಲಾ ಸಮಸ್ಯೆಯ ಮೂಲವೇ  ನಮ್ಮ ಅಜ್ಞಾನ.
ಅತಿಯಾದ ಜ್ಞಾನವೂ ಅಜ್ಞಾನವಾಗಬಹುದು. ಅತಿಯಾದ ಅಜ್ಞಾನವೂ ಜ್ಞಾನದೆಡೆಗೆ ಎಳೆಯಬಹುದು. ಅಂದರೆ ಕೆಲವರಿಗಷ್ಟೆ  ಇಂತಹ ಬದಲಾವಣೆ ಸಾಧ್ಯ.
ಭಗವಾನ್ ಬುಧ್ದನ ಮುಂದೆ ನಿಂತ ಅಂಗುಲಿಮಾಲ ಹೇಗೆ ಸಾತ್ವಿಕ ಶಕ್ತಿ ಬದಲಾಯಿಸಿತೋ ಹಾಗೆ ಮಾನವನೊಳಗಿರುವ ಸತ್ವ ರಜಸ್ಸು ತಮಸ್ಸಿನ ಶಕ್ತಿ ಯ ಮೇಲೇ ಅವನ ಮುಂದಿನ ಜನ್ಮದ ನಿರ್ಧಾರ. ಕೆಲವರಿಗೆ  ನಿಧಾನವಾಗಿ ಆತ್ಮಜ್ಞಾನ ಸಿಕ್ಕರೆ,ಕೆಲವರಿಗೆ ಬೇಗ ಸಿಗಬಹುದು.ಆದರೆ ಅದನ್ನು ಹೇಗೆ ಬಳಸುವರೋ ಅದೇ ಮುಖ್ಯ. ವ್ಯವಹಾರವೇ ಮುಖ್ಯವಾದರೆ ಹಣದ ಶ್ರೀಮಂತ ಧರ್ಮ ವೇ ಮುಖ್ಯವಾದರೆ ಜ್ಞಾನದ ಶ್ರೀಮಂತ. ಈಗ ಎಲ್ಲಾ ತರಹದ ವ್ಯಕ್ತಿಗಳಿರುವರು.ಆದರೂ ಅಧರ್ಮ ಮುಗಿಲುಮುಟ್ಟಿದೆ ಎಂದರೆ ಜ್ಞಾನ ಸದ್ಬಳಕೆಯಾಗದೆ ದುರ್ಭಳಕೆ ಆಗಿದೆ ಎಂದರ್ಥ. ಇದರ ಫಲ ಅನುಭವಿಸೋದೂ ಒಳಗಿನ ಜೀವವೇ.ಪರಮಾತ್ಮನಿಗೆ ಏನೂ ಆಗದು.ಕಾರಣ ಅವನು ಸರ್ವಾಂತರ್ಯಾಮಿ. 
ಭಾರತವನ್ನು  ವಿದೇಶ ಮಾಡೋದು ಅಜ್ಞಾನವಷ್ಟೆ.
ವಿದೇಶವನ್ನು ಭಾರತ ಮಾಡೋದು ಜ್ಞಾನ.ಹಾಗಾಗಿ ನಾವೀಗ ಏನು ಮಾಡುತ್ತಿರೋದೆಂದು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣದಲ್ಲಿಯೇ ತಿಳಿಯಬಹುದು.‌ಇದನ್ನು  ನಾವೇ  ಕೊಡುತ್ತಿರುವಾಗ ಇದರ ಫಲ ನಮಗೆ ಮುಂದೆ ಸಿಗುತ್ತದೆ.
ಈಗ ಕಷ್ಟವಾದರೂ ಮುಂದೆ ಸುಖವಿರುತ್ತದೆ.ಈಗ ಸುಖವಿದ್ದರೆ ಮುಂದೆ ಕಷ್ಟವಿರುತ್ತದೆ. ಆಯಸ್ಸು ಆರೋಗ್ಯವಿದ್ದಾಗಲೇ ಕಷ್ಟಪಟ್ಟು ಒಳ್ಳೆಯ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಸುಖವಿರುತ್ತದೆ. ಮುಂದೆ ಮಾಡೋಣ
ವೆಂದರೆ  ಆಯಸ್ಸು ಆರೋಗ್ಯ ಹೇಗಿರುವುದೆಂದು ಹೇಳಲಾಗದು. ಒಟ್ಟಿನಲ್ಲಿ ಕಷ್ಟಪಟ್ಟರೆ ಸುಖವಿದೆ.ಅದು ಅಧ್ಯಾತ್ಮದ ದಾರಿಯಾಗಿದ್ದರೆ ಆತ್ಮತೃಪ್ತಿ.
 ಭಗವಂತನ ಇಚ್ಚೆಯಿಲ್ಲದೆ  ಏನೂ ನಡೆಯದು ಹಾಗಾದರೆ ಭಗವಂತ ಇರೋದೆಲ್ಲಿ? ಅಧರ್ಮ ಧರ್ಮ,ಸತ್ಯ ಅಸತ್ಯದ ಮಾನವನಲ್ಲಿ. ಪ್ರಾಣಿಪಕ್ಷಿ ಜೀವಜಂತು ಪ್ರಕೃತಿಯ ಚರಾಚರದಲ್ಲಿಯೂ ಅಡಗಿರುವ  ಮಹಾಶಕ್ತಿಯನ್ನು  ದುರ್ಭಳಕೆ ಮಾಡಿಕೊಂಡು ಆಳಿದರೆ ಅಸುರೀಶಕ್ತಿ ಬೆಳೆಯುವುದು. ಅವುಗಳನ್ನು ಸ್ವತಂತ್ರವಾಗಿ ಬಿಟ್ಟು ತನ್ನ ತಾನರಿತು  ಬದುಕಲು ಕಲಿತರೆ ಅದೇ ದೈವಶಕ್ತಿಯಾಗುತ್ತದೆ.
ಇದಕ್ಕೆ ಸತ್ಯ ಹಾಗೂ ಧರ್ಮ ದಿಂದ ಆಂತರಿಕ ಶುದ್ದಿಯ ಅಗತ್ಯವಿತ್ತು. ಇದನ್ನು ಹಣದಿಂದ ಖರೀದಿಸಲಾಗದು.ಸ್ವಪ್ರಯತ್ನ ಅಗತ್ಯ.ರಾಜಕೀಯದಿಂದ ಕಷ್ಟ ರಾಜಯೋಗದಿಂದ ಸಾಧ್ಯವಿದೆ. ನರೇಂದ್ರರು ನರರನ್ನು ಆಳಲಿಲ್ಲ.ವಿವೇಕದಿಂದ ತನ್ನ ತಾನರಿತು ವಿವೇಕಾನಂದರಾದರು. ಯಾವ ಇಂದ್ರನೇ ಆಗಲಿ ಜ್ಞಾನದಿಂದ ರಾಜನಾದರೆ ಉತ್ತಮ ದೇವಲೋಕ ಸೃಷ್ಟಿ ಯಾಗುತ್ತದೆ. ವಿಜ್ಞಾನದ ಅಮಲಿನಲ್ಲಿ  ನಡೆದರೆ ಅಜ್ಞಾನವೇ ಅಸುರರಿಗೆ  ದಾರಿಮಾಡಿಕೊಡುವುದಲ್ಲವೆ? ಹಿಂದೆಯೂ ಇದೇ ರೀತಿಯಲ್ಲಿ  ದೇವತೆಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ಮೈಮರೆತಿರುವಾಗ  ಅಸುರರು ದೇವಲೋಕವನ್ನು  ಗೆದ್ದು ದೇವತೆಗಳನ್ನು ಆಳಿದ ಎಷ್ಟೋ ಪುರಾಣಕಥೆಗಳಿವೆ ಎಂದರೆ ಈಗ ನಾವ್ಯಾರು? ಅಸುರರೆಲ್ಲಿರೋದು? ನಮ್ಮೊಳಗೇ ಇರುವ ಅತಿಯಾದ ಸ್ವಾರ್ಥ ಅಹಂಕಾರದಿಂದ ದೈವಶಕ್ತಿ ಕ್ಷೀಣಿಸಿ ಅಸುರಶಕ್ತಿಗೆ ನಾವೇ ಸಹಕಾರ ಕೊಟ್ಟು ನಮ್ಮವರನ್ನೇ ದ್ವೇಷ ಮಾಡುತ್ತಾ ಪರಕೀಯರೆಡೆಗೆ ದೇಶವನ್ನು ನಡೆಸಿದರೆ ಇದು ಅಧರ್ಮ.  ಸರ್ಕಾರಗಳು ಜನರ ಬೇಡಿಕೆಗಳನ್ನು ಪೂರೈಸಲು ಸಾಲ ಮಾಡಿದರೂ ಅದನ್ನು ತೀರಿಸದೆ  ಜನರ ಸಮಸ್ಯೆ ತೀರದು. ಹಾಗಾಗಿ ಸರಳ ಜೀವನ ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ಜ್ಞಾನವೇ  ಈಗಿರುವ ದಾರಿ.ಬಡತನ ನಿವಾರಣೆಗೆ ಹಣ ಕ್ಕಿಂತ ಜ್ಞಾನವೇ ಮುಖ್ಯ. ಹಸಿದ ಹೊಟ್ಟೆಗೆ ಒಂದು ಹೊತ್ತಿನ ಊಟ ಕೊಟ್ಟು ಕೆಲಸಕೊಟ್ಟರೆ  ಮಾನವ ಮಹಾತ್ಮನಾಗಬಹುದು. ಮೂರೂ ಹೊತ್ತು ಉಚಿತತಿಂದು ಮಲಗಿದರೆ ಮರಣವೇ ಗತಿ. ಸೋ'ಮಾರಿ' ಒಳಗಿರುವ ಮಾರಿಯನ್ನು  ಒಳಗಿನಿಂದ  ಓಡಿಸಲು  ಜ್ಞಾನದಿಂದ ಸಾಧ್ಯ.ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿ ರೋಗಿಗಳ ದೇಶ ಮಾಡುತ್ತಾ ವೈದ್ಯರನ್ನು ಆಸ್ಪತ್ರೆ ಗಳನ್ನು ಕಟ್ಟುವ ಕೆಲಸ ಮಾಡಲು ಸಾಕಷ್ಟು ಹಣ ಬೇಕು.ಆದರೆ ಅದೇ ರೋಗ ನಿವಾರಣೆಗೆ‌ ಉತ್ತಮವಾದ ಸತ್ಯ ಸಾತ್ವಿಕ ತತ್ವಜ್ಞಾನದ ಶಿಕ್ಷಣ ನೀಡುತ್ತಾ ಒಳಗಿದ್ದ ನಕಾರಾತ್ಮಕ  ಶಕ್ತಿಯನ್ನು  ಸಕಾರಾತ್ಮಕ ಶಕ್ತಿಯಿಂದ  ಹೋಗಲಾಡಿಸಿ ದೇಹದ ಜೊತೆಗೆ ಆತ್ಮಶುದ್ದಿ ಮಾಡಿದ್ದರೆ  ಈಗ ಇಂತಹ ಸ್ಥಿತಿಗೆ ಭಾರತದೇಶ ಬರುತ್ತಿರಲಿಲ್ಲ.ಈಗಲೂ ಇದಕ್ಕೆ  ಅವಕಾಶ ನೀಡದೆ  ವಿರುದ್ದ ನಿಂತಿರುವ ಪೋಷಕರಿಗೆ  ಜೀವನದ ಸತ್ಯ ಅರ್ಥ ಮಾಡಿಸೋ ಬದಲು ತಿಳಿದವರು ತಿರುಗಿ ಬಂದು ಮಕ್ಕಳ ಆತ್ಮಶುದ್ದಿಗೆ ತಾವೂ ಅಧ್ಯಾತ್ಮದ  ಕಡೆಗೆ ನಡೆದರೆ ಬದಲಾವಣೆ ಒಳಗೆ ಆಗುತ್ತದೆ. ಇದಕ್ಕೆ  ಹಣವನ್ನು  ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿರಬೇಕು.ಹೊರಗಿನ ಆಸ್ತಿ ಅಂತಸ್ತು ಮಾನವರು ಗುರುತಿಸಬಹುದು.ಒಳಗಿನ ಜ್ಞಾನದ ಆಸ್ತಿ ಅಂತಸ್ತು ಒಳಗಿನ ದೇವರಷ್ಟೆ ಕಾಣಬಹುದು. ಯಾರ ಕಡೆಗೆ ಮನಸ್ಸು ನಡೆದರೆ ಸುಖ ಶಾಂತಿ ತೃಪ್ತಿ ಮುಕ್ತಿ ಸಿಗುತ್ತದೆ?
16 ವರ್ಷಗಳ ಲೇಖನಗಳಲ್ಲಿ  ಅಧ್ಯಾತ್ಮ ಸತ್ಯವಿದ್ದರೂ ಭೌತಿಕದ ರಾಜಕೀಯಕ್ಕೆ  ಬಲಿಯಾದವರಿಗೆ ಸತ್ಯ ಕಾಣಲಿಲ್ಲ ಎಂದರೂ ಸತ್ಯ ಯಾವತ್ತೂ ಬದಲಾಗದು. ಒಂದೇ ಸತ್ಯ ಅದೇ ನಮ್ಮ ಆತ್ಮಸಾಕ್ಷಿಯಾಗಿದೆ. ಇದೇ ನಮ್ಮ ಜನ್ಮ ಜನ್ಮದ ಕಥೆಯಾಗಿರುತ್ತದೆ. ಕಥೆ ಬರೆಯುವವರಿಗೆ ಹಣ ಸಿಕ್ಕರೂ ಒಳಗಿದ್ದ ಜ್ಞಾನ ಸಿಗದಿದ್ದರೆ ವ್ಯಥೆಯೇ ಹೆಚ್ಚು. ಕಷ್ಟ ಸುಖ ನಿರಂತರವಾಗಿ  ಹರಿದಾಡುತ್ತದೆ.ಆದರೆ  ಅದನ್ನು ಹೇಗೆ ಸ್ವೀಕಾರ ಮಾಡಿದರೆ ಒಳ್ಳೆಯದೆಂದು ಮಾನವನಿಗೆ ತಿಳಿಸುವ ಮಹಾತ್ಮರ ಕೊರತೆಯಿದೆ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಇದು ನಮ್ಮ ದೇಶದ ಕಥೆಯಾಗಬಾರದಷ್ಟೆ.
ದ್ವೇಷ ಭಿನ್ನಾಭಿಪ್ರಾಯ, ಅಸೂಯೆ,ಕಲಹ,ಕ್ರಾಂತಿಕಾರಕ ಬೆಳವಣಿಗೆಯಲ್ಲಿ ಧರ್ಮ ಎಲ್ಲಿದೆ? ಸತ್ಯ ಯಾವುದು?
ರಾಜಕೀಯ ಬಿಟ್ಟು ದೇಶ ನೋಡಿದರೆ ಸತ್ಯದರ್ಶನ ಸಾಧ್ಯ.
ನಮ್ಮ ಮುಂದಿನ‌ನಡಿಗೆ ಮೇಲಿದೆ ಭಾರತದ ಭವಿಷ್ಯ. ನಡಿಗೆ ಒಳಗಿದ್ದರೆ ಧರ್ಮ ರಕ್ಷಣೆ  ಸಾಧ್ಯ. ಮತ್ತಷ್ಟು ಹೊರಗೆ ಹೋದರೆ ತಿರುಗಿ ಬರೋದು ಕಷ್ಟ. ಆದರೂ ಮುಂದೆ ನಡೆದವರನ್ನು ತಡೆಯಬಾರದು.ಹಿಂದೆ ನಡೆಯುವವರನ್ನು ಸರಿದಾರಿಯಲ್ಲಿ ನಡೆಯಲು ಬಿಟ್ಟರೆ ಸಾಕು ಆತ್ಮನಿರ್ಭರ ಭಾರತವಾಗುವುದು. ಮಧ್ಯವರ್ತಿಗಳ ಕುತಂತ್ರದಿಂದ ಅತಂತ್ರಸ್ಥಿತಿಗೆ ಜನಜೀವನವಾಗುತ್ತಿದೆ. ಉಚಿತವಾದ ಸಲಹೆ ಸೂಚನೆ ಯೋಜನೆ ಭಾಗ್ಯಗಳೇ ಎಲ್ಲಾ ಸಮಸ್ಯಯ ಮೂಲ.
ಉಚಿತವಾಗಿ ಪಡೆದಷ್ಟೂ ಸಾಲ ಖಚಿತ. ಕೆರೆಯನೀರನು ಕೆರೆಗೆ ಚೆಲ್ಲಿ ಎಂದರೆ ಕೊಳಚೆ ನೀರನು  ಶುದ್ದವಾಗಿದ್ದ ನದಿಗೆ ಬಿಟ್ಟರೆ ರೋಗವೇ ಹೆಚ್ಚುವುದು.ಹಾಗೆ ಸ್ತ್ರೀ ಯರಲ್ಲಿದ್ದ ಶುದ್ದವಾದ ಜ್ಞಾನಕ್ಕೆ ಬೆಲೆಕೊಡದೆ ಆಳಲು ಹೋದರೆ ಮನುಕುಲ ಅಸುರಕುಲವಾಗುತ್ತದೆ.

ಜ್ಞಾನಯೋಗ ಕರ್ಮಯೋಗ ಯಾವುದು ಶ್ರೇಷ್ಠ?

ಶ್ರೀ ಶಂಕರ ಭಗವತ್ಪಾದರು  ಮಂಡನಮಿಶ್ರರ ಜೊತೆಗೆ ಜ್ಞಾನಯೋಗ ಕರ್ಮ ಯೋಗಕ್ಕಿಂತ ಶ್ರೇಷ್ಠ ವೆಂಬ ವಾದದಲ್ಲಿ ಗೆದ್ದು ಸರ್ವ ಜ್ಞರಾಗಿದ್ದರು. ಇದು ನಡೆದು ಎಷ್ಟೋ ವರ್ಷದ ನಂತರದಲ್ಲಿ ಈಗ ನಾವು ಕರ್ಮ ಯೋಗವೇ ಜ್ಞಾನಕ್ಕಿಂತ ದೊಡ್ಡದು ಎನ್ನುವ ಹೋರಾಟದಲ್ಲಿದ್ದೇವೆಂದರೆ  ಇದರಲ್ಲಿ ಸತ್ಯ ಯಾವುದು ಅಸತ್ಯ ಎಲ್ಲಿದೆ?

ಆತ್ಮ ಜ್ಞಾನವನ್ನು  ಆಂತರಿಕ ಶುದ್ದಿಯಿಂದ ಸ್ವತಂತ್ರ ಜೀವನದಿಂದ  ಆತ್ಮಾನುಸಾರ ಸತ್ಯದ ಮಾರ್ಗದಲ್ಲಿ  ನಡೆದ  ಮಹರ್ಷಿಗಳು  ಜ್ಞಾನಯೋಗವೇ ಶ್ರೇಷ್ಠ ಎಂದರು.
ಜ್ಞಾನವನ್ನು ಕಾಯಕದ  ಮೂಲಕ ಶುದ್ದೀಕರಿಸಿ  ಕಷ್ಟಪಟ್ಟು  ಸಂಸಾರದಲ್ಲಿದ್ದೇ‌  ಜೀವನ ಸತ್ಯವನರಿತ ಎಷ್ಟೋ ಮಹಾತ್ಮರುಗಳು  ಭೌತಿಕದಲ್ಲಿದ್ದೂ ಅಧ್ಯಾತ್ಮ ದ ಪ್ರಕಾರ ಸತ್ಯಾಸತ್ಯತೆಯನ್ನು  ಅರ್ಥ ಮಾಡಿಕೊಂಡವರೂ ಜ್ಞಾನಯೋಗಿಗಳೆ. ಆದರೆ  ಸ್ವತಂತ್ರ ಜೀವನ  ನಡೆಸುವಾಗ ಸಂನ್ಯಾಸಧರ್ಮ  ಅಗತ್ಯವಿದೆ. ಸಂನ್ಯಾಸ ಸ್ವೀಕಾರ ಮಾಡಿಯೂ ಸ್ವತಂತ್ರ ವಾಗಿರುವ‌‌ ಜ್ಞಾನವನ್ನು  ಹೊರಹಾಕದಿದ್ದರೆ  ಅಧರ್ಮ ಕ್ಕೆ ದಾರಿಯಾಗುತ್ತದೆ. ಹಾಗಾಗಿ ಹಿಂದಿನ ಸಂನ್ಯಾಸಿಗಳಲ್ಲಿದ್ದ ಸ್ವತಂತ್ರ ಜ್ಞಾನದ ಜೊತೆಗೆ ಸ್ವತಂತ್ರ ಜೀವನ ಇಂದಿಲ್ಲ.ಇಲ್ಲಿ  ಒಂದು ಚೌಕಟ್ಟನ್ನು ಹಾಕಿ ತನ್ನ ಕರ್ಮ ಅಥವಾ ಕರ್ತವ್ಯ  ನಿರ್ವಹಿಸಲು  ಅವಕಾಶ ವಿದೆ.ಚೌಕಟ್ಟು ಮೀರಿದರೆ ಹೊರಗಿನವರೆ  ವಿರೋಧಿಸುವರು.
ಹೀಗಾಗಿ ಬ್ರಹ್ಮಾಂಡವನರಿತರೂ  ಅದನ್ನು ತಿಳಿಸುವುದು ಕಷ್ಟ.
ಪ್ರಜಾಪ್ರಭುತ್ವದ  ಪ್ರತಿಯೊಂದು ಸಮಸ್ಯೆಗೆ ಕಾರಣವೇ ತಂತ್ರ.
ತತ್ವದ ಪ್ರಕಾರ ಎಲ್ಲಾ ಒಂದೇ. ಆದರೆ ತಂತ್ರದಲ್ಲಿ ಬೇರೆ ಬೇರೆ.
ಚತುವರ್ಣ, ಚತುರ್ವೇದ,  ಬ್ರಹ್ಮನ  ಚತುರ್ಮುಖ ಒಂದನ್ನು ಒಂದು ನೋಡದಿರುವಾಗ  ಇದರಿಂದ ಸೃಷ್ಟಿ ಯಾದ ಅಸಂಖ್ಯಾತ ಧರ್ಮ ಕರ್ಮ , ಜಾತಿ ,ಭಾಷೆಯ ಜನರನ್ನು ಒಂದು ಮಾಡೋದರಲ್ಲಿ ಅರ್ಥ ವಿಲ್ಲ. ನಾವೇನಾದರೂ ಹೊರಗಿನಿಂದ ಓದಿ ಪುರಾಣ ಇತಿಹಾಸ ಇನ್ನಿತರ ಅಧ್ಯಾತ್ಮ ಸತ್ಯ ತಿಳಿಯುತ್ತಿದ್ದರೆ  ಒಂದಕ್ಕೊಂದು  ಹೊಂದಿಕೊಳ್ಳಲು ಕಷ್ಟ
ಆದರೆ ಸತ್ಯ ಒಂದೇ ಅದು ನಮ್ಮ ಆತ್ಮಸಾಕ್ಷಿ. ಇದರ ಪ್ರಕಾರ ಸತ್ಯಜ್ಞಾನದೆಡೆಗೆ  ಒಳಗೆ ನಡೆದಾಗಲೇ  ಆಂತರಿಕ ವಾಗಿ ಶುದ್ದಿ ಆಗಿ  ಒಳಗಿರುವ  ಆ ಮೂಲ ಸತ್ಯ ಸತ್ವ ತತ್ವದ ಅರಿವಾಗುವುದು.ಈ ಕಾರಣಕ್ಕಾಗಿ  ಅಂದು ಶ್ರೀ ಶಂಕರಾಚಾರ್ಯರು  ಸಂಸಾರದಲ್ಲಿದ್ದು ಮಹಾಜ್ಞಾನ ಪಡೆದ ಮಂಡನಮಿಶ್ರರಿಗೆ ಜ್ಞಾನಯೋಗವೇ ಶ್ರೇಷ್ಠ ವೆಂದು ಅವರನ್ನು ಸಂನ್ಯಾಸ ದೀಕ್ಷೆ  ಪಡೆಯುವಂತೆ ಮಾಡಿದ್ದರು. ಆದರೆ ಅಂದಿನ ಕಾಲದ ಸಂನ್ಯಾಸಕ್ಕೂ ಈಗಿನ. ರಾಜಕೀಯದ ಸಂನ್ಯಾಸಕ್ಕೂ ವ್ಯತ್ಯಾಸವಿದ್ದರೂ ಕೆಲವರಷ್ಟೇ ಯಾವುದೇ ರಾಜಕೀಯದ ಸುಳಿಗೆ ಸಿಗದೆ  ತಮ್ಮ ಧಾರ್ಮಿಕ ಕಾರ್ಯ ನಡೆಸಿರೋದು. ಹಲವರಿಗೆ ಇದು ಕಷ್ಟವಾಗಿ ರಾಜಕಾರಣಿಗಳ ಹಿಂದೆ ನಡೆದು  ಸತ್ಯ ಧರ್ಮ ದ ಸಂಶೋಧನೆ ಹೊರಗೆ ನಡೆಸುವಂತಾಗಿದೆ. ಒಟ್ಟಿನಲ್ಲಿ ಕಣ್ಣಿಗೆ ಕಾಣುವ ವಿಜ್ಞಾನ ಸಂಶೋಧನೆಯು ಕಣ್ಣಿಗೆ ಕಾಣದ ಜ್ಞಾನದ ಸಂಶೋಧನೆಗೆ ವಿರುದ್ದ ನಿಂತು ನಾನೇ ಶ್ರೇಷ್ಠ ನೀನು ಕನಿಷ್ಟವೆಂದರೆ ಕರ್ಮ ವಿಲ್ಲದ ಜ್ಞಾನವಿಲ್ಲ. ಜ್ಞಾನವೇ ಇಲ್ಲದ ಕರ್ಮ ವ್ಯರ್ಥ.
ಅದ್ವೈತ ವಿಲ್ಲದ ದ್ವೈತ ವಿಲ್ಲ. ದ್ವೈತ ವಿಲ್ಲವಾಗಿದ್ದರೆ ಅದ್ವೈತಕ್ಕೆ ಬೆಲೆಯೇ ಇರುತ್ತಿರಲಿಲ್ಲ.
ಭೂಮಿಯಿಲ್ಲದೆ ಮನುಕುಲವಿರುತ್ತಿರಲಿಲ್ಲ ಆಗ ದೇವರಾಗಲಿ ಪರಮಾತ್ಮನಾಗಲಿ  ಧರ್ಮ ಸತ್ಯವಾಗಲಿ ತಿಳಿಯುವ ಅಗತ್ಯವಿರುವುದೆ? ಭೂಮಿಗೆ ಬಂದ ಮೇಲೆ  ತಿರುಗಿ ಹೋಗಲು  ಜ್ಞಾನವಿಜ್ಞಾನ ಅಗತ್ಯ.ವಿಶೇಷವಾದ  ಅಧ್ಯಾತ್ಮಜ್ಞಾನವಿಲ್ಲದೆ ಭೌತಿಕ ವಿಜ್ಞಾನ ಬೆಳೆದರೆ ಭೂಮಿಗೇ ಜೀವ ಭಾರ.ಹೀಗಾಗಿ ಭೂ ಕಂಪ ಪ್ರಕೃತಿ ವಿಕೋಪ.ಹೀಗೇ ಹಿಂದಿನ ಯುಗಯುಗದಿಂದಲೂ  ನಡೆದು ಬಂದಿರುವ ಮನುಕುಲಕ್ಕೆ  ಜ್ಞಾನಯೋಗ ಮುಖ್ಯ. ಜ್ಞಾನದ ನಂತರವೇ ನಿಜವಾದ ಜೀವನದ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಯಾರದ್ದೋ ಜ್ಞಾನವನ್ನು ನನ್ನದೆಂದರೆ ಅಸತ್ಯ.ಹಾಗೆ ಯಾರದ್ದೋ ಹೆಸರಿನಲ್ಲಿ ನನ್ನ ಜೀವನ ನಡೆಸಿದರೂ  ಜ್ಞಾನಬರದು. ಹೀಗಾಗಿ ಅವರವರ ಮೂಲ ಧರ್ಮ ಕರ್ಮ ದ ಪ್ರಕಾರ ಒಗ್ಗಟ್ಟಿನಿಂದ  ಸತ್ಯವನರಿತು ನಡೆದಾಗಲೇ ತತ್ವದರ್ಶ ನ.ಅದರಲ್ಲಿ ಭಿನ್ನಾಭಿಪ್ರಾಯ, ದ್ವೇಷದ ಬಿಕ್ಕಟ್ಟು ಬೆಳೆದಂತೆಲ್ಲಾ ತಂತ್ರವಾಗಿ ಜೀವ ಅತಂತ್ರಸ್ಥಿತಿಗೆ ತಲುಪುತ್ತದೆ. ವ್ಯಕ್ತಿ ಪೂಜೆ,ಮೂರ್ತಿ ಪೂಜೆಯಿಂದ ವ್ಯಕ್ತಿತ್ವ ಜ್ಞಾನೋದಯವಾಗುವಂತಿದ್ದರೆ ಉತ್ತಮ.  ಇವುಗಳು  ಮಾನವನನ್ನು ಮಹಾತ್ಮನಾಗಿಸುವಂತಿದ್ದರೆ ಧರ್ಮ . ಮಾನವನಿಗೆ ಮಾನವನೇ ಶತ್ರುವಾಗಿಸಿದರೆ ಅಧರ್ಮ.  ಹೇಳುವಷ್ಟು ಕೇಳುವಷ್ಟು,ನೋಡುವಷ್ಟು  ಸುಲಭವಾಗಿದ್ದರೆ ಜ್ಞಾನ ಎಲ್ಲರೂ ಪಡೆಯಬಹುದು. ಕಷ್ಟಪಟ್ಟು  ಗಳಿಸಿದ ಜ್ಞಾನ  ಇಂದು ನಮಗೆ ಸುಲಭವಾಗಿ  ಓದಿ ತಿಳಿಯಬಹುದು.ಅದರ ಒಳಹೊಕ್ಕಿ  ಸತ್ಯದರ್ಶನವಾದರೆ  ಅದೇ ನಿಜವಾದ ಜ್ಞಾನ. ಮಕ್ಕಳಲ್ಲಿರುವ ಶುದ್ದಾತ್ಮನಿಗೆ  ಸಣ್ಣವಯಸ್ಸಿನಲ್ಲಿಯೇ ಶಿಕ್ಷಣದ ಮೂಲಕ  ಜ್ಞಾನ  ನೀಡುತ್ತಿದ್ದ ನಮ್ಮ ಋಷಿಗಳ  ಕಾಲ  ಹಿಂದುಳಿದಿದೆ.  ನಮ್ಮ ನಮ್ಮ ಖುಷಿಗಾಗಿ‌  ಹೊರಗಿನ ಶಿಕ್ಷಣ ನೀಡುವ ಕಾಲಬಂದಿದೆ.  ಅದರಲ್ಲಿಯೂ  ಅಧ್ಯಾತ್ಮ ಶಿಕ್ಷಣ  ಅನುಭವರಹಿತವಾಗಿದ್ದರೆ  ಭಿನ್ನಾಭಿಪ್ರಾಯದ ವಾದ ವಿವಾದವೇ ಹೆಚ್ಚು ಇದರಿಂದ ಅಂತರ ಬೆಳೆದು ಈ ಅಂತರವೇ  ಎಲ್ಲಾ ಸಮಸ್ಯೆಗೆ ಕಾರಣವಾಗುತ್ತಿದೆ. ನಾನೆಂಬುದೇ ಇಲ್ಲ ಎನ್ನುವ ಜ್ಞಾನಕ್ಕೂ ನಾನೇ ಎಲ್ಲಾ ಎನ್ನುವ ಅಜ್ಞಾನಕ್ಕೂ ವ್ಯತ್ಯಾಸವಿದೆ. ಕಾಲಕ್ಕೆ ತಕ್ಕಂತೆ ಜೀವನ. ರಾಜಕೀಯದಿಂದ ಧರ್ಮ ರಕ್ಷಣೆಯಾಗದು.
ಭಗವಂತ ನೀಡಿದ ದೇಹದೊಳಗಿರುವ‌ ಆ ಚೇತನಾಶಕ್ತಿ
ಯನರಿತು  ನಡೆಯಲು ರಾಜಕೀಯದಿಂದ ಕಷ್ಟ.
ಎಲ್ಲಾ ಧಾರ್ಮಿಕ ಕ್ಷೇತ್ರ ಒಂದಾಗಿಸಲು  ರಾಜಕೀಯದಿಂದ ಅಸಾಧ್ಯವಾದಾಗ ಒಂದೇ ದೇಶದಲ್ಲಿ  ಏಕರೀತಿ ಶಿಕ್ಷಣ, ಏಕತೆ,ಐಕ್ಯತೆ,ಸಮಾನತೆಯ ಮಂತ್ರ ತಂತ್ರ ಯಂತ್ರದ ಬಳಕೆ ಭೌತಿಕದಲ್ಲಿ  ಜ್ಞಾನವೆನಿಸಿದರೂ ಅಧ್ಯಾತ್ಮದ ಪ್ರಕಾರ  ಇದರಲ್ಲಿ ರಾಜಯೋಗವಿರಬೇಕಿದೆ ಅಂದರೆ  ನಾವು ಬದಲಾಗಬೇಕಿದೆ. ಬೇರೆಯವರನ್ನು ಬದಲಾಯಿಸೋ ಮೊದಲು ನಾವು ಸತ್ಯ ತಿಳಿಯುವುದು ಅಗತ್ಯವಿದೆ. ಇಲ್ಲವಾದರೆ  ಅಸತ್ಯದ ರಾಜಕೀಯವಾಗುತ್ತದೆ.

Thursday, June 15, 2023

ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು

ಗಂಡಹೆಂಡಿರ‌ಜಗಳದಲ್ಲಿ ಕೂಸು ಬಡವಾಯಿತು. ದೇಶದ ಎರಡು ಪ್ರಮುಖ ಪಕ್ಷದ ದ್ವೇಷಕ್ಕೆ  ದೇಶವೇ ಬಡತನಕ್ಕೆ ಬರುತ್ತಿದೆ ಎಂದರೆ ಇಲ್ಲಿ ಶ್ರೀಮಂತ ರು ಯಾರು?  ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟ ಬಿಜೆಪಿಯ ಸೋಲಿಗೆ‌ ಮತಬೇಟೆ ನಡೆಯಿತು. ನಂತರದ‌ ಉಚಿತ ಭಾಗ್ಯದ ಹೆಸರಿನಲ್ಲಿ  ಜನಸಾಮಾನ್ಯ ಮಹಿಳೆಯರನ್ನೂ ಮನೆಯಿಂದ ಹೊರಗೆ ಬರುವಂತೆ ಮಾಡಿ  ಕೋಟ್ಯಾಂತರ ರೂಗಳ ಉಚಿತ ಫಲಾನುಭವಿಗಳಿಂದ  ರಾಜ್ಯಕ್ಕಾಗುವ ಕಷ್ಟ ನಷ್ಟವನ್ನು ತುಂಬಲು  ರಾಜಕೀಯದಿಂದ ಅಸಾಧ್ಯ.
ದ್ವೇಷದಿಂದ ದೇಶಕಟ್ಟಿದವರಿಲ್ಲ.ಧರ್ಮದಿಂದ  ದೇಶ ಉಳಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ವ್ಯವಹಾರಕ್ಕೆ  ದೇಶವನ್ನು ದೇಶವಾಸಿಗಳನ್ನು ಬಳಸುತ್ತಾ  ಸ್ಮಾರ್ಟ್ ಯೋಜನೆಗಳು ಬೆಳೆದಿರುವಾಗ  ಅದರ ಹಿಂದಿನ ಸಾಲ ಗುರುತಿಸುವ ಜ್ಞಾನವಿಲ್ಲವಾದರೆ  ಆತ್ಮದುರ್ಭಲ ಭಾರತ. ಹಿಂದೂ ರಾಷ್ಟ್ರ ವಾಗಲು ಹೊರಗಿರುವ ಹಿಂದೂಗಳನ್ನು  ಕರೆತರಬೇಕಿತ್ತು ಅವರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ದುಡಿಯಲು ಉದ್ಯೋಗ ನಮ್ಮಲ್ಲೇ ಕೊಡದೆ ಬದಲಾಗಿ ಪರಧರ್ಮದವರನ್ನು ಒಳಗೆಳೆದುಕೊಂಡು ಬಂಡವಾಳ,ಸಾಲಕ್ಕೆ ಕೈಚಾಚಿದರೆ ಇದು ಮುಂದಿನ ಪೀಳಿಗೆಯವರೂ  ಸಾಲ ತೀರಿಸಲಾಗದು. 
ವಿವೇಕಾನಂದರು ಯುವಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮೊದಲು ಅವರಲ್ಲಿದ್ದ  ಜ್ಞಾನವನ್ನು  ಬೆಳೆಸುವ  ಆತ್ಮಜ್ಞಾನಿಗಳಾಗಿದ್ದರು. ಭೌತಿಕದೆಡೆಗೆ  ನಡೆದ ಭಾರತ ಭೂತಕಾಲದ ಧರ್ಮ ಬಿಟ್ಟು ವಾಸ್ತವದ ಸ್ಥಿತಿಯರಿಯದೆ ಭವಿಷ್ಯಕ್ಕಾಗಿ ಸಾಲ ಮಾಡಿದರೆ  ಆತ್ಮನಿರ್ಭರ ಆಗದು. ಒಟ್ಟಿನಲ್ಲಿ ಭಾರತ ವಿಶ್ವಗುರುವಾಗಲು ಅಧ್ಯಾತ್ಮ  ಸತ್ಯವರಿಯಬೇಕಿತ್ತು.ತಾವೇ ಸಾಲದಲ್ಲಿರುವಾಗ ಬೇರೆಯವರ ಸಾಲ ತೀರಿಸಲಾಗುವುದೆ? ಕೊನೆಪಕ್ಷ ಬಡವರು ಬದುಕಲು ಬಿಟ್ಟರೆ ಉತ್ತಮ. ಸ್ತ್ರೀ ಯರ ರಕ್ಷಣೆ ಮನೆಯೊಳಗೆ ಆದರೆ ಅತ್ಯುತ್ತಮ. ಸ್ತ್ರೀ ಶಕ್ತಿಯನ್ನು ವಿಗ್ರಹದಲ್ಲಿ ಪೂಜಿಸುವವರೆ ಸ್ತ್ರೀ ಯರನ್ನು ದ್ವೇಷ‌ಮಾಡುತ್ತಾ ಹಿಂದೆ ತಳ್ಳಿದರೆ ಅಧರ್ಮ. ಮಕ್ಕಳ ರಕ್ಷಣೆಗೆ ಆತ್ಮಜ್ಞಾನದ ಶಿಕ್ಷಣ ನೀಡಿದರೆ  ಮುಂದೆ ವೈಜ್ಞಾನಿಕ ಜಗತ್ತನ್ನು ಹೇಗೆ ನಡೆಸಿದರೆ  ಜೀವನ ಸುಖವಾಗಿರುವುದೆಂಬ ಅರಿವಿರುತ್ತದೆ. ಅಜ್ಞಾನದಿಂದ ಸಾಲ ಮಾಡುತ್ತಾ ಉಚಿತವಾಗಿ ಸಾಲದ ಹಣವನ್ನು ಹಂಚಿಕೊಂಡರೆ  ದುಡಿಯುವವರು ಯಾರು?
ಕಾಯಕವೇ ಕೈಲಾಸವೆಂದವರನ್ನು ಪ್ರತಿಮೆ ಮಾಡಿ ನಿಲ್ಲಿಸಿ  ಅದರಲ್ಲಿ ವ್ಯವಹಾರ ನಡೆಸಿ ಹಣಸಂಪಾದನೆ ಮಾಡಿದರೆ ಜ್ಞಾನ ಬರದು.
ಮಹಾತ್ಮರನ್ನು ರಾಜಕೀಯಕ್ಕೆ ಬಳಸಿ  ಅಧರ್ಮ ಅನ್ಯಾಯದಿಂದ ಜನರನ್ನು ಆಳಿದರೆ  ಆತ್ಮನಿರ್ಭರವಾಗದು.
ಶಿಕ್ಷಣದೊಳಗೇ ಭ್ರಷ್ಟಾಚಾರ ತುಂಬಿಕೊಂಡು  ಮಕ್ಕಳ ಮೇಲೆ ಸಾಲದ ಹೊರೆಹಾಕಿ ಹೊರಗಿನ ವಿಚಾರ ತುಂಬಿದಷ್ಟೂ ಸ್ವೇಚ್ಚಾಚಾರದೆಡೆಗೆ  ಮಕ್ಕಳು ನಡೆಯುವರು.
ಧಾರ್ಮಿಕ ಕ್ಷೇತ್ರವೇ ರಾಜಕೀಯದ ಕೆಳಗೆ ನಿಂತು ಬೇಡುವುದು ಆತ್ಮದುರ್ಭಲತೆಯಾಗಿದೆ.
ದೇಶದ ಸಂಪತ್ತಿಗೇನೂ ಕೊರತೆಯಿಲ್ಲವಾದರೂ  ಆ ಸಂಪತ್ತನ್ನು ದುರ್ಭಳಕೆ ಮಾಡಿಕೊಂಡವರು ಸಿರಿವಂತರಾದರು..ಆದರೂ ದೇಶದ ಸಾಲ ತೀರಿಸಲು ಮುಂದೆ ಬರದೆ ವಿದೇಶದವರೆಗೆ  ಹೊರಟಿದ್ದಾರೆಂದರೆ ಇವರಲ್ಲಿ ದೇಶಭಕ್ತಿಯಿಲ್ಲ.ಇನ್ನು ದೇವರ ಹೆಸರಿನಲ್ಲಿ ನಡೆಸೋ ವ್ಯವಹಾರವೇ ಭ್ರಷ್ಟಾಚಾರದ ಹಣವಾಗಿದ್ದರೆ ದೈವತ್ವ ಎಲ್ಲಿದೆ?
ಕೆಲವರಿಗೆ ಎಚ್ಚರವಾಗಿದ್ದರೂ  ಸರ್ಕಾರಕ್ಕೆ ತಿಳಿಸುವ ಅಧಿಕಾರವಿಲ್ಲ.ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲುಕಡ್ಡಿ ಅಲ್ಲಾಡದು ಎನ್ನುವುದಾದರೆ ಈಗಿನ ಹೋರಾಟ ಹಾರಾಡ ಮಾರಾಟದ ಹಿಂದೆ ಇರುವ ಸ್ವಾರ್ಥ ಅಹಂಕಾರದ ಅಜ್ಞಾನ  ಹೋಗದು.ಶಿಕ್ಷಣ ಬದಲಾವಣೆಗಾಗಿ ಸಾಕಷ್ಟು ವಾದ ವಿವಾದವಾಗುತ್ತದೆ.ಅದರೆ ಮನೆಯೊಳಗೆ ಇರುವ ಮಕ್ಕಳಿಗೆ ಸರಿಯಾದ ಸದ್ವಿಚಾರ ಹೇಳಲು ಸಮಯವಿಲ್ಲದ ಪೋಷಕರು ಹಣಕೊಟ್ಟು  ಅಜ್ಞಾನದೆಡೆಗೆ ನಡೆಸಿದರೆ ಇದು ಸರ್ಕಾರದ ತಪ್ಪಲ್ಲ.ನಮ್ಮದೇ ಸಹಕಾರದ ತಪ್ಪು ಇದನ್ನು ನಾವೇ ಸರಿಪಡಿಸದಿದ್ದರೆ  ಫಲವನ್ನು ಅನುಭವಿಸಬೇಕಿದೆ.
ಕೆಟ್ಟದ್ದನ್ನು ಹೇಳೋದು,ನೋಡೋದು,ಮಾಡೋದು,ಮಾತನಾಡೋದರಿಂದ ಅದೇ ಸಮಾಜದಲ್ಲಿ ಬೆಳೆಯುತ್ತದೆ ಎನ್ನುವ ಸಾಮಾನ್ಯ ಜ್ಞಾನವಿದ್ದರೆ ಸಾತ್ವಿಕ ವಿಚಾರದಿಂದ ಸರಳ ಜೀವನ ನಡೆಸಿ ತನ್ನ ಹಿಂದಿನ ಸಾಲದ ಜೊತೆಗೆ ಇಂದಿನ ಸಾಲವೂ ಮನ್ನಾ ಆಗುತ್ತದೆ.ಸರ್ಕಾರ ಕೊಡುವ ಉಚಿತ ಸಾಲ ತೀರಿಸಲು ಪರಮಾತ್ಮನ  ಕಡೆಗೆ ನಡೆಯಬೇಕೇ ಹೊರತು ಪರದೇಶದ ಕಡೆಗೆ ನಡೆದರೆ ನಾವು ವಿದೇಶದವರೆ. ದೇಶದಿಂದ ಏನು ಸಿಕ್ಕಿದೆ ಎನ್ನುವ ಮಂದಿಗೆ  ಸಾಲ ಕೊಟ್ಟರೆ  ದೇಶಭಕ್ತರು ಬೆಳೆಯೋದಿಲ್ಲ. ಇರಲಿ ಅವಶ್ಯಕತೆ ಇದ್ದವರಿಗೆ ಬಳಸಿ ತಿರುಗಿ ಕೊಡುವಂತಿದ್ದರೆ ಭವಿಷ್ಯ ಉತ್ತಮವಾಗಿರುವುದು.
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನು ಆಸ್ತಿ ಮಾಡಿದರೆ ಉತ್ತಮ.
ಇಲ್ಲಿ ಯಾರೋ ಒಬ್ಬರಿಂದ ಸಾಲ ಬೆಳೆದಿಲ್ಲ.ಪ್ರತಿಯೊಬ್ಬರ  ವೈಭೋಗದ ಜೀವನದಿಂದ ಸಾಲ ಬೆಳೆದಿದೆ. ಒಂದು ಮನೆ ಕಟ್ಟಲು  ಸಾಲ ಮಾಡಿದರೂ ತೀರಿಸುವ ತನಕ ಆ ಮನೆ ನಮ್ಮದಾಗದು. ಹೀಗಿರುವಾಗ ಅನಾವಶ್ಯಕವಾಗಿ ಸಾಲ ಮಾಡಿ‌ಹಲವು ಮನೆಯ ಒಡೆಯನಾದರೂ ಅದೂ ದೇಶದ ಸಾಲವೇ. ಹೀಗೆ ಪ್ರಜೆಗಳು ಚಿಂತನೆ ನಡೆಸಿದರೆ ಸಮಸ್ಯೆಗಳಿಗೆ ಸಾಲವೇ‌ ಮೂಲ ಕಾರಣ. ಪ್ರಜೆಗಳ ಹಣದಲ್ಲಿ ಸತ್ಕರ್ಮದ ಮಾರ್ಗದಲ್ಲಿ  ನಡೆದವರು ವಿರಳ. ಹಣವನ್ನು ದುರ್ಭಳಕೆ ಮಾಡಿಕೊಂಡು ಆಳಿದವರೆ ಹೆಚ್ಚಾಗಿದ್ದಾರೆಂದರೆ‌ ಇಲ್ಲಿ ಪ್ರಗತಿ ಕಣ್ಣಿಗೆ ಕಾಣುವ ವಸ್ತು ಒಡವೆ ವೈಭೋಗದೆಡೆಗೆ ನಡೆದಿದೆ. ಭಾರತದ ಸ್ಥಿತಿ  ಅಧ್ಯಾತ್ಮದ ಪ್ರಕಾರ ಸಂಕಟದಲ್ಲಿದೆ.
ಯಾರೋ ಯಾರನ್ನೋ ಆಳೋದಕ್ಕೆ ಯಾರದ್ದೋ ಹಣ‌ ಪಡೆದು  ಸಾಲ ಮಾಡುತ್ತಾ  ಹೋಗುವುದು ಅಜ್ಞಾನವಷ್ಟೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ  ಮಕ್ಕಳು ಮಹಿಳೆಯರು ಸುರಕ್ಷಿತವಾಗಿ ಮನೆಯೊಳಗಿರಲು ಕಷ್ಟವಿದೆ. ಸಾಲವಿದ್ದರೆ ನೆಮ್ಮದಿಯಿರದು,ನೆಮ್ಮದಿಯಿಲ್ಲದ ಮನೆಯಲ್ಲಿ  ಸ್ತ್ರೀಗೆ ಶಾಂತಿ ಸಿಗದು. ಶಾಂತಿಗಾಗಿ ಅಧ್ಯಾತ್ಮದ ಕಡೆಗೆ ಹೋದರೆ ಉತ್ತಮ.ಅದು ಬಿಟ್ಟು ಹೊರಗೆ ಬಂದರೆ ಕುಟುಂಬ ವ್ಯವಸ್ಥೆ ಹಾಳಾಗುತ್ತದೆ.ಉತ್ತಮ ವಿದ್ಯಾಭ್ಯಾಸವಿದ್ದವರಿಗೆ ಉತ್ತಮ ಉದ್ಯೋಗ ಸಿಗಬಹುದು. ಆದರೆ ಮನೆಯೊಳಗೆ ಹೊರಗೆ ದುಡಿಯುವುದರಿಂದ ಅನಾರೋಗ್ಯ ಹೆಚ್ಚುವುದು. ಆರೋಗ್ಯ ರಕ್ಷಣೆಗಾಗಿ ಯೋಗದೆಡೆಗೆ ಬರಬೇಕಿದೆ. ಎಲ್ಲರಿಗೂ  ಸಮಯವಿರದ ಕಾರಣ. ವೈದ್ಯರಿಗೆ  ಒಳ್ಳೆಯ  ಅವಕಾಶ. ವೈದ್ಯನಿಗೆ ರೋಗಿಗಳ ಸಂಖ್ಯೆ ಬೆಳೆದರೆ ಸಂತೋಷ. ಇದರಲ್ಲಿ ಧರ್ಮ ರಕ್ಷಣೆಯಾಗುವುದೆ?
ದೇಶದ  ಹಣ ಪ್ರಜೆಗಳ ಋಣವಾಗಿದ್ದರೆ ತೀರಿಸಬಹುದು ಆದರೆ ವಿದೇಶಿಗಳ ಋಣವಾಗಿದ್ದರೆ ಅವರ ಧರ್ಮ ಕರ್ಮ ಕ್ಕೆ ತಕ್ಕಂತೆ  ಜನ ಕುಣಿಯಲೇಬೇಕು. ಮನರಂಜನ ಮಾಧ್ಯಮಗಳು  ಒಂದೊಂದು ಕಾರ್ಯಕ್ರಮಕ್ಕೆ ಬಳಸುವ ಕೋಟ್ಯಾಂತರ ಹಣವು ಯಾರದ್ದು?ಇದರಲ್ಲಿ ಬರುವ ಸಂದೇಶದಿಂದ ಏನಾದರೂ  ನೈತಿಕವಾಗಿ ಧಾರ್ಮಿಕವಾಗಿ  ಬದಲಾವಣೆ ಆಗುತ್ತಿದೆಯೆ? ಆಗಿಲ್ಲವೆಂದರೆ ಇದರ ಉದ್ದೇಶ ಏನು? ಇಂತಹ ಪ್ರಶ್ನೆ ಹಾಕದವರು ರಾಜಕಾರಣಿಗಳ ತಪ್ಪು ಎತ್ತಿ ಹಿಡಿದು ಆಟವಾಡುತ್ತಿರುವುದು ದುರಂತ ವಷ್ಟೆ.
ಜನರ ಬೇಡಿಕೆಗಳನ್ನು ಪೂರೈಸಲು ಪಕ್ಷಗಳು ಸಾಲ ಮಾಡುತ್ತಿವೆ. ಬೇಡಿಕೆಯೇ ಅಜ್ಞಾನದಲ್ಲಿದ್ದರೆ ಸಾಲ ತೀರಿಸಲು ಕಷ್ಟ. ಉತ್ತಮವಾದ ಶಿಕ್ಷಣ ನೀಡದೆ  ಈ ರೀತಿಯಲ್ಲಿ ಜನರ ಭೂಮಿ  ಬಳಸಿ ರೈತರನ್ನು ದಾರಿತಪ್ಪಿಸಿ ಸಾಲ ಸೌಲಭ್ಯಗಳನ್ನು ಕೊಟ್ಟರೆ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದೆ ಜೀವ ಸಾಲದ ಜೊತೆಗೆ ಹೋಗುತ್ತದೆ. ಸಾಲ ತೀರಿಸದೆ ಮುಕ್ತಿ ಯಿಲ್ಲ ಎಂದರೆ ಹೋದ ಜೀವ ದ ಸಾಲ ತೀರಿಸಲು  ಕಷ್ಟಪಟ್ಟು ಧರ್ಮ ಮಾರ್ಗ ಹಿಡಿಯಲೇಬೇಕು. ಜನ್ಮ ಜನ್ಮಾಂತರದ ಈ ಋಣ ತೀರಿಸಲು ಬಂದಿರುವ ಮಾನವನಿಗೆ ಜ್ಞಾನವೇ ಆಸ್ತಿ.
ಎಷ್ಟು ಉಚಿತಪಡೆದರೂ ಸಾಲ ಖಚಿತ.  ಕಷ್ಟಪಟ್ಟು ದುಡಿದು ಜೀವಿಸುವವರೆ ಮಹಾತ್ಮರು. ಪರಮಾತ್ಮನ ಋಣ ತೀರಿಸಲು ಅವರಿಂದ ಸಾಧ್ಯ. ಬಡತನವು ಜ್ಞಾನದಿಂದ ಕಡಿಮೆಮಾಡಲು ಉತ್ತಮ ಜ್ಞಾನದ ಶಿಕ್ಷಣ ಕೊಡಬೇಕಿದೆ. ಇದೂ ಉಚಿತವಾಗಿದ್ದರೂ  ಅದನ್ನು ತೀರಿಸುವ  ಬಗೆ ತಿಳಿಸುವ‌
ಶಿಕ್ಷಣವಿದ್ದರೆ ಆತ್ಮನಿರ್ಭರ ಭಾರತವಾಗುವುದು.
ವಿದೇಶಿಗಳನ್ನು ಮನಮೆಚ್ಚಿಸುವ  ಬದಲು ನಮ್ಮವರ ಮನೆ ಮನ ಉಳಿಸುವ ಕೆಲಸ ನಾವು ಮಾಡುವುದೇ ಧರ್ಮ.
ಪರರೆಲ್ಲಾ ನಮ್ಮವರಾದರೆ ಸರಿ ಆದರೆ ನಮ್ಮವರನ್ನೇ ಪರಕೀಯರ ವಶಕ್ಕೆ ಬಿಟ್ಟರೆ ಅಧರ್ಮ ವಾಗುತ್ತದೆ. ಅಧರ್ಮದಿಂದ ಸಾಲ ತೀರಿಸಲಾಗದು. ರಾಜಕೀಯದಿಂದ ಸಾಲ ಬೆಳೆಯುತ್ತದೆ. ರಾಜಯೋಗದಿಂದ ಸಾಲ ಕಳೆಯುತ್ತದೆ.
ಇಬ್ಬರ ನಡುವಿನ ದ್ವೇಷದ ರಾಜಕೀಯಕ್ಕೆ ದೇಶವೇ ಸಾಲಕ್ಕೆ ಬಲಿಯಾಗುತ್ತಿದ್ದರೂ ಆತ್ಮನಿರ್ಭರ ಭಾರತದ ಕನಸನ್ನು ಕಾಣುತ್ತಾ ಒಂದು ಪಕ್ಷವಹಿಸಿದರೆ  ನಮ್ಮದೇ ಆತ್ಮದುರ್ಭಲ ವಾಗಿರುತ್ತದೆ. 
ಸರ್ಕಾರದ ಒಂದು ಉಚಿತ ಯೋಜನೆಯೇ  ರಾಜ್ಯವನ್ನು ದಿವಾಳಿಯತ್ತ ನಡೆಸಿರುವಾಗ ಎರಡನೇ ಉಚಿತ ಭಾಗ್ಯ ಬಂದರೆ  ಗತಿಯೇನು? "
ಹೆಂಡತಿಯೊಬ್ಬಳು ಮನರಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಹೆಂಡತಿ ಒಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಇದರರ್ಥ ಗೃಹಿಣಿಯರಿಗೆ ಜ್ಞಾನ ಸಂಪತ್ತಿದ್ದರೆ ಕೋಟಿ ರುಪಾಯಿ ಸಾಲ ತೀರಿಸಬಹುದೆಂದು.ಮನೆ ಬಿಟ್ಟು ಹೊರಗೆ ಹೋದಷ್ಟೂ ಸಾಲ ತೀರದು.ಅದೂ ಉಚಿತ ಭಾಗ್ಯ ಸಾಲವಾಗಿರುತ್ತದೆ. ಅಧ್ಯಾತ್ಮ ಸತ್ಯವರಿಯದ ರಾಜಕೀಯದ ಬೆಳವಣಿಗೆಯು  ದೇಶವನ್ನು ಲೂಟಿ ಮಾಡಿದರೂ ಕೇಳದ ಪ್ರಜೆಗಳ ಅಜ್ಞಾನದ ಸಹಕಾರದಿಂದ ಬೆಳೆದಿರುವಾಗ  ಬದಲಾವಣೆ ಪ್ರಜೆಗಳಿಂದಲೇ ಆಗಬೇಕಿದೆ. ಅಧ್ಯಾತ್ಮ ಸತ್ಯ ಬಿಟ್ಟು ಭೌತಿಕ ಮಿಥ್ಯ  ಬೆಳೆದರೆ  ಅಧೋಗತಿ. 

Wednesday, June 14, 2023

ದೃಷ್ಟಿಕೋನ ಬದಲಾದರೆ ಸೃಷ್ಟಿ ಯ ರಹಸ್ಯ ಬಯಲಾಗುತ್ತದೆ

ವಿಷ್ಣು ಸಹಸ್ರನಾಮ
 *೧೦೨.ಅಮೇಯಾತ್ಮಾ* 

*ನಮ್ಮ ಮನಸ್ಸು, ಬುದ್ಧಿಗೆ ಒಂದು ಸೀಮೆ ಇದೆ.  ಅದರಿಂದಾಚೆಗೆ ನಾವು ಗ್ರಹಿಸಲಾರೆವು.  ಭಗವಂತನನ್ನು ನಮ್ಮ ಬುದ್ದಿಯಿಂದ  ಅಳಿಯಲು ಅಸಾಧ್ಯ.*  

*ಇಂತಹ ಭಗವಂತ ಅಮೇಯಾತ್ಮಾ ಭಗವಂತನನ್ನು ನಮಗೆ ತಿಳಿಯಲು ಅಸಾಧ್ಯವಾದರೂ ಕೂಡ ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೆ ತುಂಬಿದ್ದಾನೆ.  ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು ನಮಗೆ ತಿಳಿದಿರುವುದು ಮಣ್ಣು, ನೀರು, ಬೆಂಕಿ,ಗಾಳಿ, ಆಕಾಶ ಹಾಗೂ ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ.  ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆಯೇ ನಮಗಿಲ್ಲ.*

*ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ.*
ನಮ್ಮ ದೃಷ್ಟಿ ಕೋನ‌ಬದಲಾದರೆ ಸೃಷ್ಟಿ ಯ ರಹಸ್ಯ ಅರ್ಥ ಆಗುತ್ತದೆ. ಸೃಷ್ಟಿ ಯೇ  ಸರಿಯಿಲ್ಲದೆ ಸ್ಥಿತಿ  ಸರಿಯಾಗಿರದು.ಜ್ಞಾನದ ದೃಷ್ಟಿ ವಿಜ್ಞಾನದ ದೃಷ್ಟಿಯ ನಡುವೆ ಅಂತರ ಬೆಳೆದಷ್ಟೂ ಅಜ್ಞಾನ  ಅಂತರವನ್ನು ಇನ್ನಷ್ಟು ಬೆಳೆಸಿ ಆಳುತ್ತದೆ. ಈ ಅಜ್ಞಾನದೊಳಗೆ ಅಡಗಿರುವ ಜ್ಞಾನವನ್ನು ಕಂಡುಕೊಳ್ಳಲು 'ಅ' ದಿಂದ 'ಆ' ಕಡೆಗೆ ನಡೆಯುವ ಪ್ರಯತ್ನ ಮಾನವ ಮಾಡಬೇಕಿದೆ.
'ಅ'  ಇದರಲ್ಲಿ  ಅರಿವಿದ್ದರೂ ಅಹಂಕಾರ, ಅಸಹಕಾರ,ಅವಿದ್ಯೆ ಯಿಂದ  ಆಂತರಿಕ ಶುದ್ದಿಯಾಗದೆ ಭೌತಿಕಶುದ್ದಿಗೆ ಹೆಚ್ಚಿನ ಮಹತ್ವವಿರುತ್ತದೆ. ಹೀಗಾಗಿ ಅರ್ಧ ಸತ್ಯ ಅರ್ಧ ಮಿಥ್ಯದ ಅತಂತ್ರಸ್ಥಿತಿಗೆ  ಜೀವಾತ್ಮ ತಲುಪಬಹುದು. ಇದರಿಂದ  ದೂರವಾಗಲು ಒಳಗಿನ ಸತ್ಯ ಅಗತ್ಯ ಅಂದರೆ ಆತ್ಮಸಾಕ್ಷಿ ಅಗತ್ಯ. ಆಗ 'ಆ' ಜ್ಞಾನದೆಡೆಗೆ ನಡೆಯಬಹುದು. ಆತ್ಮವಿಶ್ವಾಸ, ಆತ್ಮಸಂತೋಷ, ಆತ್ಮಪರಿಶೀಲನೆ, ಆತ್ಮಸಮಾಲೋಚನೆ,ಆಧ್ಯಾತ್ಮ ದ ಆದಿ ಆತ್ಮ ಆದಿ ಪುರಾಣ,ಆದಿ ಶಕ್ತಿ,ಆದಿ ಪುರುಷ,ಆದಿ ಗುರುಗಳ ಕಡೆಗೆ  ನಿದಾನವಾಗಿ  ನಡೆದವರಿಗಷ್ಟೆ  ಆತ್ಮಜ್ಞಾನ ಲಭಿಸಿರೋದು. ಇದರಿಂದಾಗಿ ಬ್ರಹ್ಮಾಂಡದ ರಹಸ್ಯದ ಜೊತೆಗೆ ಪ್ರಕೃತಿಯ ರಹಸ್ಯವೂ ತಿಳಿದಿದ್ದರು. ಒಂದು ಸಣ್ಣ ಬಿಂದು ಗಾತ್ರದ  ಜೀವಶಕ್ತಿ ಬ್ರಹ್ಮಾಂಡ ಶಕ್ತಿಯನರಿಯಲು ಆಂತರಿಕ ಶುದ್ದಿಯಿಂದ ಮಾತ್ರ ಸಾಧ್ಯವೆನ್ನುವುದು ಹಿಂದೂ ಸನಾತನಧರ್ಮ , ಆದರೆ ಈ ಧರ್ಮ ವನ್ನೇ  ಅಸತ್ಯವೆಂದು ವಾದ ವಿವಾದದಿಂದ ಗೆದ್ದು ನಿಲ್ಲುವುದರಿಂದ ಭೂಮಿಯಲ್ಲಿ ಹೆಸರು,ಹಣ,ಅಧಿಕಾರಸ್ಥಾನಮಾನ ಸಿಕ್ಕರೂ‌ಕೊನೆಯಲ್ಲಿ ಎಲ್ಲಾ ಇಲ್ಲೇ ಬಿಟ್ಟು  ನಡೆಯೋದಂತೂ ತಪ್ಪಲ್ಲ. ಆದರೂ ವಿಜ್ಞಾನ ಜಗತ್ತನ್ನು  ಆತ್ಮಜ್ಞಾನದ‌ಜಗತ್ತಿನಿಂದ ಕಂಡವರು ಮಹರ್ಷಿಗಳಾದರು. ಆತ್ಮಜ್ಞಾನದ ಜಗತ್ತನ್ನು ವಿಜ್ಞಾನ ಜಗತ್ತು  ನೋಡಲಾಗದಿದ್ದರೆ  ಇದು ನಮ್ಮ ದೃಷ್ಟಿ ದೋಷವಷ್ಟೆ ಇದಕ್ಕಾಗಿ  ಎಷ್ಟೇ ಹೊರಗಿನ ಹೋರಾಟ ಹಾರಾಟ ಮಾರಾಟ    ನಡೆದರೂ  ಕಾದಾಟದ ಯುದ್ದವೇ ನಡೆಯೋದು. ಯುದ್ದದಿಂದ ಜೀವ ಹೋಗಿ ಜನ್ಮಪಡೆಯಬಹುದಷ್ಟೆ. ಜ್ಞಾನದಿಂದ  ಜೀವ
ಹೋಗುವುದಕ್ಕೂ ಅಜ್ಞಾನದಿಂದ ಜೀವ ಹೋಗುವುದಕ್ಕೂ ಇಷ್ಟೇ ವ್ಯತ್ಯಾಸ. ಒಂದು ಅಂತರ್ದೃಷ್ಟಿಯ  ಸದ್ಗತಿ ಇನ್ನೊಂದು ಭೌತಿಕದೃಷ್ಟಿಯ  ಮರಣ.

ಮನಸ್ಸಿನ ನಿಗ್ರಹದಿಂದ ಆತ್ಮಜ್ಞಾನ,ಆತ್ಮಜ್ಞಾನದಿಂದ  ಸತ್ಯದರ್ಶನ, ಸತ್ಯದರ್ಶನವಾದರೆ ಧರ್ಮದರ್ಶನ. ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.
ಹಾಗಾದರೆ  ಮಾನವನಿಗೆ ಮನಸ್ಸು ಶತ್ರುವೂ  ಹೌದು ಮಿತ್ರನೂ  ಹೌದು. ಮನಸ್ಸನ್ನು ರಾಜಕೀಯದೆಡೆಗೆ ಎಳೆದರೆ ಹೊರಗಿರುತ್ತದೆ.ರಾಜಯೋಗದೆಡೆಗೆ ನಡೆಸಿದರೆ ಒಳಗಿರುವ ಪರಾಶಕ್ತಿಯ ಜೊತೆಗೆ ಪರಮಾತ್ಮನ ಕಾಣುತ್ತದೆ. 
ಒಟ್ಟಿನಲ್ಲಿ  ಆತ್ಮಸಾಕ್ಷಿಯಂತೆ ನಡೆದರೆ  ಪರಮಾತ್ಮನ ದರ್ಶನ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯ ಬೇರೊಂದು ಇಲ್ಲ.ಇದರಲ್ಲಿ 
ದೇವತೆಗಳು, ಮಾನವರು,ಅಸುರರು  ತಮ್ಮದೇ ಆದ ಲೋಕ ಸೃಷ್ಟಿ ಮಾಡಿಕೊಂಡು  ನಾನೇ ಸರಿ ನೀನು ಸರಿಯಿಲ್ಲವೆಂದಾಗ ಎಲ್ಲರೊಳಗಿದ್ದು ನಡೆಸೋ ಆ ಒಬ್ಬ ಏನು ಮಾಡಲಾಗದು .
ಅದಕ್ಕೆ  ಮಹರ್ಷಿಗಳು ತಿಳಿಸಿರೋದು ಪರಮಾತ್ಮನಿಗೆ ಏನೂ ಅಂಟುವುದಿಲ್ಲ ಅವನು ಸ್ಥಿರ,ಶುದ್ದ, ಅಣುರೇಣುತೃಣಕಾಷ್ಟ
ದಲ್ಲಿಯೂ  ಅಡಗಿರುವ‌ ಮಹಾಶಕ್ತಿ  ಭಗವಂತ.ಅವನ ಒಂದು ಅಂಗದೊಳಗಿರುವ ಭೂಮಿ ಭೂಮಿಯಲ್ಲಿರುವ ಮನುಕುಲ ಮನುಕುಲದೊಳಗಿರುವ ಜ್ಞಾನ ವಿಜ್ಞಾನದ ಜಗತ್ತನ್ನು  ಅಂತರ್ದೃಷ್ಟಿಯಿಂದ ಕಂಡವರು ಮಹರ್ಷಿಗಳು.
ಮಹಾ ಋಷಿ ಗಳ ಯೋಗಶಕ್ತಿಯೇ ಇದಕ್ಕೆ ಕಾರಣ. 
 ದೇವತೆಗಳು ದೈವತತ್ವದೆಡೆಗೆ ನಡೆದರೆ, ಮಾನವರು ಮಾನವೀಯ ತತ್ವ ಮೌಲ್ಯಗಳಿಂದ ನಡೆದರು ಅಸುರರಿಗೆ ತತ್ವಕ್ಕಿಂತ ತಂತ್ರವೇ  ಹೆಚ್ಚಾಗಿ  ಭೂಮಿಯನ್ನು ಆಳಲು ಹೊರಟು ಭೂಮಿಯ ಋಣ ತೀರಿಸಲಾಗದೆ  ಜನಸಂಖ್ಯೆ ಬೆಳೆದರೂ ಜ್ಞಾನ ಬೆಳೆಯಲಿಲ್ಲ.‌ಕಲಿಗಾಲದಲ್ಲಿ ಅಜ್ಞಾನ ಮಿತಿಮೀರಿದ ಕಾರಣ  ಒಳಗಿರುವ ಸತ್ಯಕ್ಕೆ ಬೆಲೆಯಿಲ್ಲ. ಹೊರಗಿನ ಮಿಥ್ಯಕ್ಕೆ ಬೆಲೆಕೊಟ್ಟು ಸಾಲ ಬೆಳೆದಿದೆ.ಸಾಲ ತೀರಿಸಲು ಬಂದ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ತಲುಪಿದೆ ಜೀವನ. 
ಭೂಮಿಯ ಮೇಲಿರುವ  ಈ   ಮೂವರ  ಮೇಲು ಕೀಳುಗಳ 
ದೃಷ್ಟಿ ದೋಷದ  ರಾಜಕೀಯದ ಪ್ರಭಾವ  ಮೂವರೂ ಅನುಭವಿಸಲೇಬೇಕು.
ಯಾರಿಗೂ ಲಾಭವೂ ಇಲ್ಲ ನಷ್ಟವೂ ಇಲ್ಲ. ಮೇಲೇರಿದವ ಕೆಳಗಿಳಿಯಬಹುದು.ಕೆಳಗಿಳಿದವ ಮೇಲೇರಬಹುದು.
ಮಧ್ಯದಲ್ಲಿದ್ದವ ಮಧ್ಯದಲ್ಲೇ ಅತಂತ್ರಸ್ಥಿತಿಗೆ  ಹೋಗಬಹುದು. ತ್ರಿಶಂಕು  ಸ್ಥಿತಿಯ ನರಕವನ್ನು  ಸ್ವರ್ಗವೆಂಬ   ಭ್ರಮೆ ಹಾಗು ಮಾಯಾಲೋಕದಲ್ಲಿರೋದೆ ಮನುಕುಲದಮಾನವ. ಇದರಲ್ಲಿ  ವಿಷ್ಣುವಿನವತಾರ
ದಲ್ಲಿಯೇ  ಭೇದ ಭಾವ        ಹರಿಹರ, ಬ್ರಹ್ಮಾದಿ
ದೇವಾನುದೇವತೆಗಳ  ವಿಚಾರದಲ್ಲಿಯೇ  ಭಿನ್ನಾಭಿಪ್ರಾಯ ದ್ವೇಷ ಅಹಂಕಾರ ಸ್ವಾರ್ಥ ವಿರೋವಾಗ ‌  ಹುಲುಮಾನವನ ಅವತಾರ ಕೇಳಬೇಕೆ?
ಒಟ್ಟಿನಲ್ಲಿ ಪರಮಾತ್ಮನ ನೋಡುವ ಅಂತರ್ದೃಷ್ಟಿ  ಇಲ್ಲದೆ ಪರದೇಶದೆಡೆಗೆ  ಮನಸ್ಸು ಹೋದರೂ  ದೃಷ್ಟಿ ಸರಿಯಿಲ್ಲದೆ ಸೃಷ್ಟಿ ಸರಿಯಾಗದು ಸ್ಥಿತಿಗೆ ಕಾರಣ ಮತ್ತು ಪರಿಹಾರ ಸಿಗದು.

Saturday, June 10, 2023

ಭೌತಿಕ ಸಾಲ ಅಧ್ಯಾತ್ಮ ಸಾಲ ತೀರಿಸಲು ಬೇಕಿದೆ ಜ್ಞಾನ

ವಿಜ್ಞಾನವಿತ್ತು. ವಿದೇಶಿಗರು ಭಾರತೀಯರಿಗೆ ಭೌತಿಕವಿಜ್ಞಾನ ಉಚಿತವಾಗಿ ಹಂಚಿಕೊಂಡು ಮುಂದೆ ನಡೆದರು.ಭಾರತೀಯರು ಮಾತ್ರ ಅಧ್ಯಾತ್ಮ ಜ್ಞಾನ ಹಂಚಿಕೊಳ್ಳಲಾಗದೆ ಹಿಂದುಳಿದರು.ಈಗಲೂ ಇದೇ ಭೌತ ಶಾಸ್ತ್ರದ ತಂತ್ರಜ್ಞಾನ  ಮಾನವರನ್ನು ಆಳುತ್ತಿದೆ ಆದರೆ ಆಧ್ಯಾತ್ಮ ಶಾಸ್ತ್ರ ಅರ್ಥ ವಾಗದೆ  ಹೊರಗೆ ಹೋರಾಟ ನಡೆಸುತ್ತಿದೆ. ಒಳಗೇ ಹೋರಾಟ ನಡೆಸಿದರೆ ಆತ್ಮನಿರ್ಭರ ಭಾರತ ಸಾಧ್ಯವಿದೆ. ವಿದೇಶಿಗರಲ್ಲಿ ಭೌತಿಕ ವಿಜ್ಞಾನವಿತ್ತು ಭಾರತೀಯರಲ್ಲಿ ಅಧ್ಯಾತ್ಮ ನಮ್ಮ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸೋತವರು ಬೇರೆಯವರ ಮಕ್ಕಳ ದಾರಿತಪ್ಪಿಸಿ  ಆಳುವುದರಲ್ಲಿ ಧರ್ಮ ವಿಲ್ಲ. ಇದು ತಿರುಗಿ ಬರೋವಾಗ  ನಮ್ಮ ಮಕ್ಕಳೇ ನಮ್ಮಬಳಿ ಇರೋದಿಲ್ಲ.
ಅದಕ್ಕಾಗಿ  ಅವರವರ  ಸಂಸಾರದ ಜವಾಬ್ದಾರಿ
ಅವರೆ ಹೊತ್ತು ನಡೆಯುವಾಗ ಹೊರಗಿನವರ ತಂತ್ರದ ಅಗತ್ಯವಿಲ್ಲ.ಸ್ವತಂತ್ರ ಭಾರತೀಯ ಪ್ರಜೆಗಳಲ್ಲಿ ಅಡಗಿರುವ ತತ್ವಜ್ಞಾನವನ್ನು  ಅರ್ಥ ಮಾಡಿಸುವ ಗುರು ಹಿರಿಯರು ರಾಜಕೀಯ ಬಿಟ್ಟು ಸತ್ಯ ತಿಳಿದರೆ ಉತ್ತಮ ಬದಲಾವಣೆ.ತಾವೇ ಸಾಲದಲ್ಲಿದ್ದರೆ ಬೇರೆಯವರ ಸಾಲ ತೀರಿಸಲಾಗದು. ಭೂಮಿಯ ಋಣ ತೀರಿಸಲು ಬಂದ ಸಣ್ಣ ಜೀವ  ಉಳಿಸಿಕೊಳ್ಳಲು  ಹೊರಗಿನ ಸಾಲ ಬೇಕೆ? ಇದರಿಂದ ಆತ್ಮರಕ್ಷಣೆ ಸಾಧ್ಯವೆ? ಬಡತನವನ್ನು ಹಣದಿಂದ ಅಳೆಯುವ ಅಜ್ಞಾನ  ತೊಲಗಿದರೆ ಒಳಗಿರುವ ಸುಜ್ಞಾನದಿಂದ ಸ್ವತಂತ್ರ ಜೀವನ‌ ನಡೆಸಬಹುದು. ದೇಶದೊಳಗಿರಲಿ ವಿದೇಶದೊಳಗಿರಲಿ  ಅತಿಯಾದ ಅಹಂಕಾರ ಸ್ವಾರ್ಥ ದ ಜೀವನದಿಂದ  ನಿಜವಾದ ಸುಖ,ನೆಮ್ಮದಿ,ಶಾಂತಿ,ತೃಪ್ತಿ ಸಿಗದು
ನಿಜವಾದ ಪ್ರಜಾಧರ್ಮ  ಪಾಲನೆ ಮಾಡುವ  ದೇಶಸೇವಕರು ಯಾರ ಅಡಿಯಾಳಾಗಿರದೆ ಸ್ವತಂತ್ರ ಜೀವನ ನಡೆಸಿ ಹಣವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುತ್ತಾರೆ. ಜನರ ಹಣವನ್ನು ಬಳಸಿ ಜನರನ್ನೇ ಆಳುತ್ತಾ ಹಣವನ್ನು  ಹಂಚಿದರೆ  ಇದರಲ್ಲಿ ನಮ್ಮ ಸಂಪಾದನೆ ಏನಿದೆ?
ಮಧ್ಯವರ್ತಿಗಳು ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ.

ಉಚಿತ ಯೋಜನೆಗಳ ಹಿಂದೆ  ಕೆಲವರಿಗೆ ಸುಖವಿರಬಹುದು ಹಲವರಿಗೆ ದು:ಖವೂ ಇರಬಹುದು.ಆದರೆ ಯೋಜನೆಯನ್ನು ಮಾತ್ರ ಎಲ್ಲರೂ ಪಡೆಯುವುದು ಖಚಿತ. ಯಾವ ಪಕ಼್ದ ಬಂದರೂ ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ಯೋಜನೆಗಳಿಂದ ಜನರನ್ನು ತಮ್ಮೆಡೆ ಸೆಳೆಯುತ್ತಾರೆ. ಅದು ಯಶಸ್ಸು  ಪಡೆಯಲು  ಜನಸಹಕಾರವೇ ಕಾರಣ. ಅದರಿಂದ ನಷ್ಟವಾಗುವುದು ಲಾಭವಾಗುವುದೂ ಜನರಿಗೇ ಅಂದರೆ ಸರ್ಕಾರ ಕೊಡುವ ಸಾಲ  ದೇಶ ವಿದೇಶದ ಸಾಲವಾದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳದೆ ದುರ್ಭಳಕೆ ಮಾಡಿಕೊಂಡವರ ಸಾಲ ಬೆಳೆದು ಸಂಸಾರದೊಳಗೇ ಸಮಸ್ಯೆ ಬೆಳೆಯುತ್ತದೆ. ಹೀಗಾಗಿ ಯಾವುದನ್ನು ಹೇಗೆ ಬಳಸಿದರೆ  ಉಳಿತಾಯವಾಗುವುದೆನ್ನುವ ಜ್ಞಾನವಿದ್ದವರು ಸಾಲ ಬೆಳೆಸದೆ  ಬಂದ ಹಣವನ್ನು ದ್ವಿಗುಣ ಮಾಡಿಕೊಂಡು ಸಾಲ ತೀರುಸುವತ್ತ ನಡೆಯುವರು.ಆದರೆ ಅಂತಹ ಸುಜ್ಞಾನ ಎಷ್ಟು ಮಂದಿಗೆ ನೀಡಲಾಗಿದೆ? ಇದರ ಬಗ್ಗೆ  ಚಿಂತನೆ ನಡೆಸಲೂ ತಯಾರಿಲ್ಲದ ಜನಸಂಖ್ಯೆ ಮಿತಿಮೀರಿ ಪರಕೀಯರ ಸಾಲದ ಹಣದಲ್ಲಿ  ಮನರಂಜನೆ ನಡೆದಿದೆ ಎಂದರೆ ತಪ್ಪಾಗಲಾರದು.
ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ.
ಸರ್ಕಾರದ ಯೋಜನೆಗಳಲ್ಲಿ ಸ್ತ್ರೀ ಯರಿಗೆ ಉಚಿತ ಪ್ರಯಾಣ
1 ಎಷ್ಟೋ ಬಡಮಹಿಳೆಯರಿಗೆ ಅನುಕೂಲಕರವಾಗಿದೆ.ಉಳ್ಳವರಿಗೆ  ಅಗತ್ಯವಿರಲಿಲ್ಲ.
2.   ಗೃಹಲಕ್ಮಿ  ಯೋಜನೆಯೂ ಉತ್ತಮವೆ ಆದರೂ ಮನೆಯೊಳಗೆ ಜೊತೆಗೆ ಇದ್ದ ಅತ್ತೆ ಸೊಸೆಯರ ನಡುವೆ ಕಲಹ‌ಬರದಿದ್ದರೆ ಸಾಕು.
3. ವಿದ್ಯುತ್ ಯೋಜನೆಯಿಂದ ಮಿತವಾಗಿ ವಿದ್ಯುತ್ ಬಳಸುವವರಿಗೆ ಅನುಕೂಲವಾದರೂ ಉಳಿದವರಿಗೆ ಬಿಲ್  ಬೆಲೆ  ಅತಿಯಾಗಿ ಏರಿಸಿರೋದು  ಸರಿಕಾಣದು.
4.  ಪದವೀಧರ ವಿದ್ಯಾರ್ಥಿಗಳಿಗೆ ಕೊಡುವ  ಹಣವು ದುರ್ಭಳಕೆ ಆಗುವ ಸಾಧ್ಯತೆ ಹೆಚ್ಚಾಗಿದೆ.ಸಾಮಾನ್ಯವಾಗಿ ಪದವಿಯವರೆಗೆ ಹೋದವರಲ್ಲಿ ಹಣವಿರುತ್ತದೆ.ಜೊತೆಗೆ ತಂತ್ರಜ್ಞಾನವೂ ಇರುತ್ತದೆ.ಅದರಿಂದ ಸ್ವಲ್ಪ ಮಟ್ಟಿಗೆ ಹಣ ಸಂಪಾದಿಸುವ ಜ್ಞಾನವೂ ಇರುತ್ತದೆ.ಹೀಗೆ ಸರ್ಕಾರ ಉಚಿತ ಹಣ ನೀಡಿದರೆ ಅದನ್ನು ಇನ್ನಾವುದೋ ಮನರಂಜನೆಗೆ ಬಳಸಿ ಸಮಯಕಳೆದರೆ  ದುರ್ಭಳಕೆ ಹೆಚ್ಚಾಗುವ ಜೊತೆಗೆ ವಿದ್ಯಾರ್ಥಿಗಳಿಗೆ ಹಣದ ಬೆಲೆ ತಿಳಿಯುವುದಿಲ್ಲ. ಈಗಾಗಲೇ ಇದು ಪೋಷಕರ ಅರಿವಿಗೆ ಬಂದಿದೆ. 
5. ಅನ್ನಭಾಗ್ಯವಂತೂ ಈಗಾಗಲೇ ಸಾಕಷ್ಟು ಜನರು ಪಡೆದಿದ್ದರೂ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಇದನ್ನು ಹೆಚ್ಚಿನ ಬೆಲೆಗೆ ಮಾರಿಕೊಳ್ಳುವವರಿದ್ದಾರೆಂದರೆ ಬಡವರು ಯಾರೆಂಬ ಪ್ರಶ್ನೆ ಮೂಡುತ್ತದೆ.
ಒಟ್ಟಿನಲ್ಲಿ ಯಾವುದೂ ಅತಿಯಾದರೆ ಗತಿಗೇಡು. ಸರ್ಕಾರಗಳ  ಯೋಜನೆಯಿಂದ ದೇಶದ ಜೊತೆಗೆ ಪ್ರಜೆಗಳ ಸಾಲ ತೀರಿಸುವಂತಿದ್ದರೆ ಉತ್ತಮ ಬದಲಾವಣೆ.ಆದರೆ ಈ ಯೋಜನೆಯಲ್ಲಿ ಸಾಲ ಮಿತಿಮೀರಿದರೆ ಜನರ ಸಮಸ್ಯೆ ಇನ್ನಷ್ಟು ಬೆಳೆದು ದೇಶದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗುವುದು. ಇಂತಹ ಯೋಜನೆಗಳು  ಹೊರಗಿನಿಂದ  ಸರಿಯೆನಿಸಿದರೂ  ಒಳಗಿನ ದೃಷ್ಟಿಯಿಂದ ನೋಡಿದಾಗ  ಭಾರತವನ್ನು ಸ್ಮಾರ್ಟ್ ಮಾಡಲು ಹೋಗಿ short ಆಗುವಂತಿದೆ. ಇಷ್ಟು ವರ್ಷದಿಂದಲೂ ಸರ್ಕಾರಗಳ ಯೋಜನೆಗಳಿಂದ ಭ್ರಷ್ಟಾಚಾರ ಬೆಳೆದಿರೋದಕ್ಕೆ ಕಾರಣವೆ ಯೋಜನೆಯನ್ನು ಜನರು ದುರ್ಭಳಕೆ ಮಾಡಿಕೊಂಡಿರೋದು.ಇದಕ್ಕೆ ಮಧ್ಯವರ್ತಿಗಳ ಸಹಕಾರ ಬೇರೆ.ಯಾವುದೇ ಯೋಜನೆ ಸಮರ್ಪಕವಾಗಿ ಸದ್ಬಳಕೆ ಆಗಬೇಕಾದರೆ  ಜನರಲ್ಲಿ ಜ್ಞಾನವಿರಬೇಕಿತ್ತು.ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದಂತೆ  ಹಿತವಾಗಿ ಮಿತವಾಗಿ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ ಸಾಲ ಬೆಳೆಯದು.
ದೇವರು ಕೇಳಿದ್ದೆಲ್ಲಾ ಕೊಡುತ್ತಾನೆ ಆದರೂ ಯಾಕೆ ನೆಮ್ಮದಿ ಸುಖವಿಲ್ಲ? ಅಂದರೆ ಯಾವುದನ್ನು ಬೇಡಿದರೆ ಆತ್ಮಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗೋದೆಂಬ ಆತ್ಮಜ್ಞಾನವಿಲ್ಲ.ಹೀಗಾಗಿ ಎಲ್ಲಾ ಸಾಲವಾಗುತ್ತಾ ಅದೇ ಮುಂದೆ ಶೂಲವಾಗಿ ತಿರುಗಿ ತಿವಿಯುವಾಗ  ತಿರುಗಿ ಬರಲಾಗದೆ ಜೀವ ಆತ್ಮಹತ್ಯೆ ಕಡೆಗೆ ನಡೆಯುತ್ತದೆ. ಆತ್ಮಹತ್ಯೆ ಮಹಾಪಾಪ ಎಂದರು.ಮಾನವ ಜನ್ಮ ದೊಡ್ಡದೆಂದರು.ಮಾನವ ಜನ್ಮದಲ್ಲಿ ಮಾತ್ರ ಮುಕ್ತಿ ಮೋಕ್ಷ ಪಡೆಯಬಹುದೆಂದರು.ಸಾಲ ತೀರಿಸಲು ಬಂದ ಜೀವಕ್ಕೆ ಮೇಲೆ ಮೇಲೆ ಸಾಲದ ಹೊರೆ ಹಾಕಿದರೆ ಹೇಗೆ ತೀರಿಸಲಾಗುವುದು? ಭ್ರಷ್ಟಾಚಾರ ದಿಂದ ಸಾಲ ತೀರದು.ಶಿಷ್ಟಾಚಾರ ದಿಂದ ಮಾತ್ರ ಸಾಲ ತೀರುವುದೆಂದಾಗ
ಕಷ್ಟಪಟ್ಟು  ಆತ್ಮವಿಶ್ವಾಸದಿಂದ ದುಡಿದು ಜೀವಿಸಲು ಜ್ಞಾನ ಬೇಕು. ವಿಜ್ಞಾನ ಜಗತ್ತು  ಅಧ್ಯಾತ್ಮ ವನ್ನು ವಿರೋಧಿಸಿ ಮುಂದೆ ನಡೆದಿದ್ದರೂ ಅಸತ್ಯ ಅನ್ಯಾಯ ಅಧರ್ಮ ವೆ.
ಹೀಗಾಗಿ ಭೂಮಿಯ ಜನಸಂಖ್ಯೆ ಮಿತಿಮೀರಿದೆ. ಅಜ್ಞಾನದ ಸಂಪಾದನೆಯು ದುರ್ಭಳಕೆ ಆಗುತ್ತಿದೆ. ದುರ್ಭಲ ಮನಸ್ಸಿನವರನ್ನು ಆಳುತ್ತಿದ್ದಾರೆ. ಮಾನವ ಮಾನವನಿಗೇ ಶತ್ರುವಾದರೆ ಇದನ್ನು  ಪ್ರಗತಿ ಎನ್ನಬೇಕೋ ಅಧೋಗತಿಯೋ? ನಿನ್ನ ನೀ ಆಳಿಕೊಳ್ಳಲು  ಹಣ ಬೇಕೆ ಜ್ಞಾನವೆ?  ಜ್ಞಾನದಿಂದ ಹಣಸಂಪಾದನೆ ಮಾಡಿ ದಾನ ಧರ್ಮಕ್ಕೆ ಬಳಸಿದ್ದ ನಮ್ಮ ಮಹಾತ್ಮರುಗಳು ರಾಜಕೀಯ ನಡೆಸಿರಲಿಲ್ಲ. ರಾಜಕೀಯದ ಹಿಂದೆ ನಡೆದಿರಲಿಲ್ಲ ಎಂದರೆ ಇಂದಿನ ಪ್ರಜಾಪ್ರಭುತ್ವದ ಪ್ರಜೆಗಳು ಎತ್ತ ನಡೆದಿರೋದು?.ಸರ್ಕಾರ  ಎತ್ತ ಸಾಗುತ್ತಿದೆ? ನಮ್ಮ ಸಹಕಾರ ಇಲ್ಲದೆಯೇ ಸರ್ಕಾರ ನಡೆದಿದೆಯೆ? ಸಾಲ ಬೆಳೆಯಲು ಸರ್ಕಾರದ ಯೋಜನೆಗಳು ಕಾರಣವೆಂದರೆ ಅದರ ಫಲಾನುಭವಿಗಳು ಯಾರು? ಉತ್ತಮ ಯೋಜನೆಗಳಿಂದ  ಉತ್ತಮ ಬದಲಾವಣೆ ಆಗಬೇಕಿತ್ತು ಆಗಿಲ್ಲವೆಂದರೆ ಕಾರ್ಯವೇ ಕ್ರಮಬದ್ದವಾಗಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ.ಮಧ್ಯವರ್ತಿಗಳು ಜನರನ್ನು ದಾರಿತಪ್ಪಿಸಿ  ತಮ್ಮ ಸ್ವಾರ್ಥ ಕ್ಕೆ ಮನರಂಜನೆಗೆ ಬಳಸಿದರೆ  ಅಧರ್ಮ. ಅಧರ್ಮಕ್ಕೆ ತಕ್ಕಂತೆ ಶಿಕ್ಷೆಯಿದೆ. ಶಿಕ್ಷೆ ಅನುಭವಿಸುವಾಗ ಯಾವ ದೇವರೂ ರಾಜಕಾರಣಿಗಳೂ ಜೊತೆಗಿರುವವರೂ ಬರೋದಿಲ್ಲವೆನ್ನುವ ಸತ್ಯ ತಿಳಿದರೆ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ  ಜೀವನಕ್ಕೆ ಎಷ್ಟು ಬೇಕೋ ಅಷ್ಟು ಸಂಪಾದಿಸಿ ಉಳಿತಾಯಮಾಡಿ ಸಾಲ ತೀರಿಸುವ ಜ್ಞಾನ ಬರುತ್ತದೆ. ಆದರೂ ಲೋಕವನ್ನು ತಿದ್ದುವ ಕೆಲಸ ಯಾರಿಗೂ ಸಾಧ್ಯವಿಲ್ಲ.ಕಾರಣ ನಡೆಸೋ ಶಕ್ತಿ ಅಗೋಚರವಾಗಿರುವಾಗ
ಆ ಶಕ್ತಿಯನರಿತು ನಡೆಯಬೇಕಿದೆ.ಪ್ರತಿಯೊಬ್ಬರೊಳಗೂ ಇರುವ ಆತ್ಮಶಕ್ತಿ ಹೆಚ್ಚಾಗಲು ಆತ್ಮಜ್ಞಾನದ ಶಿಕ್ಷಣವನ್ನು ಉಚಿತವಾಗಿ ಕೊಡಬೇಕಿತ್ತು.ಅದನ್ನು  ಕೊಡದೆ  ಹಣಕೊಟ್ಟು   ಆಳಿದರೆ ಸಾಲವಾಗುತ್ತದೆ. ಒಟ್ಟಿನಲ್ಲಿ  ಸಾಲ ಮಾಡೋದು ತಪ್ಪಲ್ಲ ತೀರಿಸದೆ ನಡೆಯೋದು ತಪ್ಪು. ತೀರಿಸುವ ಚೈತನ್ಯ ಶಕ್ತಿ  ಹೆಚ್ಚಿಸುವ  ಜ್ಞಾನದ ಶಿಕ್ಷಣ ಕೊಡುವುದೇ ನಿಜವಾದ ಪರಿಹಾರ. ಯಾರ ಸಾಲ ಯಾರೋ ತೀರಿಸಲಾಗದು.
ಬಡತನಕ್ಕೆ ಕಾರಣವೇ ಅಜ್ಞಾನದ ಜೀವನ ಶೈಲಿ. ಯಾರಿಗೆ ಗೊತ್ತು ಯಾರ ದೇಹದಲ್ಲಿ ಯಾವ ಮಹಾತ್ಮರಿದ್ದರೋ? ಮಹಾತ್ಮರನ್ನು ಗುರುತಿಸದ ಶಿಕ್ಷಣ ಕೊಟ್ಟು  ಆಳುವುದೇ ಅಸುರಿತನ. ಅಂದರೆ ದೈವಶಕ್ತಿಯಿದ್ದರೆ ಹಣ ಸದ್ಬಳಕೆ.ಅಸುರಿಶಕ್ತಿ ಹೆಚ್ಚಾದರೆ ದುರ್ಭಳಕೆ ಹೆಚ್ಚಾಗಿ ಭೂಮಿಯಲ್ಲಿ  ಅಶಾಂತಿ ಸೃಷ್ಟಿಯಾಗುವುದು.ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಮತ್ತು ಲಯದ ಕಾರ್ಯ ನಡೆಯುವುದು. ಒಟ್ಟಿನಲ್ಲಿ ಉತ್ತಮ ಸೃಷ್ಟಿ ಗೆ ಉತ್ತಮ ಜ್ಞಾನದ ಶಿಕ್ಷಣ ಉಚಿತವಾಗಿ ಕೊಟ್ಟರೆ ಉತ್ತಮ ಬದಲಾವಣೆ ಸಾಧ್ಯವಿದೆ. ಇದಕ್ಕೆ ಉತ್ತಮ ಸರ್ಕಾರ ಅಗತ್ಯ.ಇಲ್ಲಿ ಸರ್ಕಾರ ಎಂದರೆ ಪ್ರಜಾ
ಸಹಕಾರ.ನಾವೆಲ್ಲರೂ ಭಾರತೀಯ ಪ್ರಜೆಗಳಾಗಿ ಭಾರತ ಮಾತೆಯ ಮಕ್ಕಳಾಗಿ ಆ ತಾಯಿಯ ಋಣ ತೀರಿಸಲು  ವಿದೇಶಿ ಸಾಲ ಬಂಡವಾಳ ವ್ಯವಹಾರಕ್ಕೆ ಕೈ ಜೋಡಿಸಿರೋದು ಧರ್ಮ ವೆ? ಅಧರ್ಮವೆ? ಆತ್ಮಾವಲೋಕನ ಅಗತ್ಯವಿದೆ. ವಿಪರೀತ ಬೆಳೆಯೋ ಮೊದಲು ಎಚ್ಚರವಾದರೆ ಉತ್ತಮ .ಮಹಿಳೆ ಮಕ್ಕಳ ಮೇಲೆ ಉಚಿತ ಸಾಲದ ಹೊರೆ ಹಾಕಿದಷ್ಟೂ ಮನೆಯಿಂದ ಹೊರಗೆ ಹೋಗಿ ದುಡಿದು ತೀರಿಸದೆ ಮನೆಯಲ್ಲಿ ಶಾಂತಿಯಿರದು. ಸಾಲ  ಯಾವತ್ತೂ  ಸಾಲವೇ.
ಯೋಜನೆಗಳ ಪ್ರಾರಂಭದ ಕಾರ್ಯಕ್ರಮಕ್ಕೆ ಸರ್ಕಾರದ ಕೋಟ್ಯಾಂತರ ಹಣ ಬಳಸಿದರೆ  ಅದೂ ಸಾಲವೇ
ಅಗತ್ಯವಿದ್ದವರು ಯೋಜನೆಗಳ ಸದ್ಬಳಕೆ ಮಾಡಿಕೊಂಡರೆ ಉತ್ತಮ. ಅನಗತ್ಯ  ವಸ್ತು ಒಡವೆ ಆಹಾರ ವಿಹಾರವೇ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಿದೆ.ಆಸೆ ಇರಲಿ ಅತಿಆಸೆ ಬೇಡ. ಒಟ್ಟಿನಲ್ಲಿ ದೇಶದ ಸ್ಥಿತಿ ಸಂಕಟದಲ್ಲಿದೆ. ಲಯವೂ ಮುಂದೆ ನಡೆಯುವ ಸೂಚನೆಯಾಗಿದೆ.ಎಲ್ಲಾ ನಡೆಯುತ್ತಿದೆ ನಡೆಯುತ್ತದೆ.ಮಾನವ ಕಾರಣಮಾತ್ರದವನಷ್ಟೆ. ಒಳಗಿದ್ದು ನಡೆಸೋ ದೇವಾಸುರರ ಶಕ್ತಿಯನ್ನು  ಗುರುತಿಸುವ ಜ್ಞಾನಬೇಕಿದೆ. ಪುರಾಣ ಇತಿಹಾಸವೂ ಇದಕ್ಕೆ ಹೊರತಾಗಿಲ್ಲ. ಅಂದು ಸತ್ಯಜ್ಞಾನದ ಜೊತೆಗೆ ಧರ್ಮ ವಿತ್ತು.ಇಂದು ಧರ್ಮದ ಜೊತೆಗೆ ಸತ್ಯವಿಲ್ಲ.

ಯಾಕೆ ಹೀಗಾಯಿತು ದೇಶದ ಸ್ಥಿತಿ?

ಯಾಕೆ ಹೀಗಾಯಿತು? ಒಂದು ಪಕ್ಷದ ದುರಾಡಳಿತವನ್ನು ವಿರೋಧಿಸಿ ಇನ್ನೊಂದು ಪಕ್ಷ ಬಂದು  ಉತ್ತಮ ಆಡಳಿತ ನಡೆಸುತ್ತೇವೆಂದು ಮುಂದೆ ನಡೆದರೂ ಜನರೆ ತಿರುಗಿ ಹಿಂದಿನ ಆಡಳಿತವೇ ಉತ್ತಮ ಎನ್ನುವ ಸ್ಥಿತಿಗೆ ಬಂದಿರೋದರ ಹಿಂದೆ ಸ್ವಾತಂತ್ರ್ಯ ವಿದೆಯೆ? ಪರತಂತ್ರವಿದೆಯೆ?  ತಂತ್ರದಿಂದಲೇ ಅಧಿಕಾರ ಪಡೆದು ರಾಜಕೀಯ  ನಡೆಸೋದು.ಯಾರೂ ಸ್ವತಂತ್ರ ವಾಗಿದ್ದು  ತತ್ವದಿಂದ  ರಾಜಕೀಯ ನಡೆಸಲಾಗದು.ಕಾರಣ ನಮ್ಮೊಳಗೇ  ತತ್ವಜ್ಞಾನವೇ ಇಲ್ಲ.ಹೊರಗಿನ ತಂತ್ರಕ್ಕೆ ಬೆಲೆಕೊಟ್ಟು ಜೀವನ ನಡೆಸುವಾಗ ಸ್ವತಂತ್ರ ಜ್ಞಾನ ಎಲ್ಲಿರುವುದು?
ಪ್ರಜಾಪ್ರಭುತ್ವ ದೇಶದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ರಾಜಕಾರಣಿಗಳಿಗಷ್ಟೆ.ಇವರಿಗಿಂತ  ಹೆಚ್ಚು ಸ್ವಾತಂತ್ರ್ಯ ಮಧ್ಯವರ್ತಿಗಳು ಮಾಧ್ಯಮಗಳು ಪಡೆದಿವೆ. ಸತ್ಯವನ್ನು ತಿರುಚಿ ಹರಡಿದರೆ  ಅಸತ್ಯವೇ ಹರಡೋದು.ಹೀಗಾಗಿ ಯಾವ ಸರ್ಕಾರ ಬಂದರೂ ತಮ್ಮ ಪಾಲನ್ನು ಮಾತ್ರ ಬಿಡದೆ  ಪಡೆಯುವ ಎಷ್ಟೋ ಮಧ್ಯವರ್ತಿಗಳಿಗೆ  ಹಿಂದಿನ ಸರ್ಕಾರ ಕಡಿವಾಣ ಹಾಕಿ ಭ್ರಷ್ಟಾಚಾರ  ತಡೆಯೋ ಪ್ರಯತ್ನನಡೆಸಿ ಸೋತಿದೆ ಎಂದರೆ ಜನರಲ್ಲಿರುವ ಅಜ್ಞಾನ ಕಾರಣ.ನಮ್ಮದೇಶವನ್ನೇ ನಮ್ಮವರನ್ನೇ  ದ್ವೇಷ ಮಾಡುತ್ತಾ ವಿದೇಶ ಸಾಲ ಮಾಡುತ್ತಾ  ಜನರಿಗೆ ಉಚಿತ ಹಂಚಿಕೊಂಡರೆ
ಅಧಿಕಾರವೇನೂ ಸಿಗಬಹುದು. ಆದರೆ  ಇದರಿಂದ  ದೇಶದ ಜೊತೆಗೆ ಪ್ರಜೆಗಳ ಸಾಲ ಮಿತಿಮೀರಿದರೆ  ಸಾಲವೇ ಶೂಲ.
ಕೋಟ್ಯಾಂತರ ರೂಗಳಿಂದ ನಡೆಸೋ ವೈಭೋಗದ ಕಾರ್ಯಕ್ರಮಕ್ಕೆ ಕಡಿವಾಣವಿಲ್ಲ. ಜನರ ಹೊಟ್ಟೆ ಹಸಿವಿಗೆ  ಬರಗಾಲವಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗೋ ಎಷ್ಟೋ ಕಾರ್ಯಕ್ರಮಕ್ಕೆ ಸುರಿಯುವ ಕೋಟ್ಯಾಂತರ ಹಣವು ಯಾರ ಕೊಡುಗೆ? ಸರ್ಕಾರ ಕೊಡುತ್ತಿಲ್ಲವೆಂದರೆ  ಜನರ ಹಣವೇ ಮನರಂಜನೆಗೆ ಬಳಕೆಯಾಗಿದೆ. ಇದರಿಂದಾಗಿ ಜ್ಞಾನ ಬಂದರೆ ಉತ್ತಮ ಸಮಾಜ ಅಜ್ಞಾನ ಬೆಳೆದರೆ ಸಮಾಜನಿರ್ನಾಮ.
ಒಟ್ಟಿನಲ್ಲಿ ರಾಜಕೀಯ ಬೆಳೆದಿರೋದು ಮಧ್ಯವರ್ತಿಗಳ ಕುತಂತ್ರದಿಂದ  ಇದರಿಂದಾಗಿ ದೇಶದ ಜನತೆಯ ಆಂತರಿಕ ಶಕ್ತಿ ವೃದ್ದಿಯಾದರೆ ಆತ್ಮನಿರ್ಭರ. ಭೌತಿಕಾಸಕ್ತಿ ಬೆಳೆದರೆ ಆತ್ಮದುರ್ಭಲ ಭಾರತ. ಸರ್ಕಾರ  ಜನಬಲ ಹಣಬಲವಿಲ್ಲದೆ ನಡೆದಿಲ್ಲವಾದರೆ ಎಲ್ಲಾ  ಬದಲಾವಣೆಗೆ ಕಾರಣವೇ  ನಮ್ಮ ಸಹಕಾರವಷ್ಟೆ.
ಯಾವುದಕ್ಕೆ  ಸಹಕರಿಸಬೇಕೆಂಬುದೇ ತಿಳಿಯದವರು ಸರ್ಕಾರ ಸರಿಯಿಲ್ಲವೆಂದು ಜಾರಿಕೊಂಡರೂ ಸತ್ಯ ಒಂದೇ ನಮ್ಮ ಸಹಕಾರ ಸರಿಯಿಲ್ಲ. ನಮ್ಮಲ್ಲಿ ಸತ್ಯವಿಲ್ಲದೆ ಸತ್ಯ ಕಾಣದು.ನಮ್ಮಲ್ಲಿ ಧರ್ಮ ವಿಲ್ಲದೆ ಧರ್ಮ ಬೆಳೆಯದು.
ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ತತ್ವಜ್ಞಾನ ಅರ್ಥ ವಾಗದು.
ದೋಷ ಒಳಗಿರುವಾಗ ಹೊರಗೆ ತೇಪೆ ಹಾಕಿದರೆ  ದೋಷ ಹೋಗದು.  ರಾಜಪ್ರಭುತ್ವದ  ರಾಜಕೀಯ ಧರ್ಮ ಪ್ರಜಾಪ್ರಭುತ್ವ ದ ಪ್ರಜಾಧರ್ಮ ದಲ್ಲಿರಲು ಪ್ರಜೆಗಳೊಳಗೆ ಧಾರ್ಮಿಕ ಪ್ರಜ್ಞೆ ಇರಬೇಕಿತ್ತು. ಇರೋದು ದೇಶದೊಳಗೆ ನೋಡೋದು ವಿದೇಶವನ್ನು. ಹೀಗಾಗಿ ಯಾವ ಸರ್ಕಾರ ಸರಿ ತಪ್ಪು ಎನ್ನುವ ಬದಲಾಗಿ ನಮ್ಮ ಸಹಕಾರದಲ್ಲಿರುವ ದೋಷ ಸರಿಪಡಿಸಿಕೊಂಡರೆ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆ. ಅಮೃತವನ್ನು ಬಿಟ್ಟು ವಿಷದೆಡೆಗೆ ಹೋದರೆ ಸಾವು ನಿಶ್ಚಿತ. ಇದನ್ನು ಯಾವ ಸರ್ಕಾರ ತಡೆಯಲಾಗದು.
ಹಾಗಂತ ರಾಜಕೀಯ ಬಿಟ್ಟು ಬದುಕಲಾಗದು.ಅದರಲ್ಲಿ ಉತ್ತಮವಾದದ್ದು ಹುಡುಕಿದರೆ  ಎಲ್ಲಾ ಸರಿಯಾಗಿ ಅರ್ಥ ವಾಗಬಹುದು. ಭ್ರಷ್ಟಾಚಾರ ಒಳಗಿದೆ ಹೊರಗೆ ಹೋರಾಟ ಹಾರಾಟ ಮಾರಾಟ ನಡೆದಿದೆ.ಇದಕ್ಕೆ ನಮ್ಮದೇ ಸಹಕಾರವಿದೆ.ಇದೇ ರೀತಿಯಲ್ಲಿ ಶಿಷ್ಟಾಚಾರ ಕ್ಕೆ ಸಹಕಾರ ನೀಡಿದರೆ ಪರಿಹಾರ ಇದ್ದಲ್ಲೇ ಸಿಗಬಹುದು.ಪ್ರಯತ್ನ ನಮ್ಮದು ಫಲ ಭಗವಂತನದು.ಭಗವಂತನೊಳಗೇ ಇರುವ ಭ್ರಷ್ಟರು ಶಿಷ್ಟರ ನಡುವಿನ ಹೋರಾಟ ನಿರಂತರವಾಗಿ ನಡೆದರೂ  ಯಾರ ಬಲ ಹೆಚ್ಚಿರುವುದೋ ಅವರು ಗೆಲ್ಲುವರು. ಇದು ಪ್ರಕೃತಿ ನಿಯಮ. ಪ್ರಕೃತಿಯನ್ನು  ವಿಕೃತವಾಗಿ ಬಳಸಿದರೆ ಪ್ರಕೃತಿವಿಕೋಪವೇ ಹೆಚ್ಚಾಗುವುದು.
ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ದೇಶ ನಡೆಸಿದರೆ ದೇಶಕ್ಕೆ ನಷ್ಟ. 
ಅಧ್ಯಾತ್ಮ ಸಾಧನೆ ತೋರುಗಾಣಿಕೆಯಾಗಬಾರದು.ಭೌತಿಕ ಸಾಧನೆ ತೋರುಗಾಣಿಕೆಯಾಗಿದೆ. ಮಕ್ಕಳು ಮಹಿಳೆಯರು ಮನರಂಜನೆಯ ಸಾಧನವಲ್ಲ. ಸತ್ಯಜ್ಞಾನ ಒಳಗಿದೆ ಮಿಥ್ಯಜ್ಞಾನ ಹೊರಗೆ ಬೆಳೆದಿದೆ. ಒಳಗಿನ ಸಂಶೋಧನೆಯಾಗದೆ ಹೊರಗಿನ ಸಂಶೋಧನೆಗೆ ಸಹಕಾರ ಹೆಚ್ಚಾಗಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಪರರನ್ನು ಮೆಚ್ಚಿಸುವ ಮೊದಲು ಪರಮಾತ್ಮನ ತಿಳಿಯದಿರೋದೆ ಎಲ್ಲಾ ಅನರ್ಥಕ್ಕೆ ಕಾರಣ.

Friday, June 9, 2023

ಉಚಿತ ಭಾಗ್ಯಜ್ಯೋತಿ ಉತ್ತಮ ಬೆಳಕಿನೆಡೆಗೆ ನಡೆಯಬೇಕಿತ್ತು

ಸರ್ಕಾರ ಕೊಡುವ‌ಉಚಿತ  ಭಾಗ್ಯವನ್ನು ಎಷ್ಟು ಮಂದಿ ಸ್ವಾಗತಿಸುವರೋ ಎಷ್ಟು ಮಂದಿ ವಿರೋಧಿಸುವರೋ ಲೆಕ್ಕ ಸಿಗಲ್ಲ.ಆದರೆ ಯೋಜನೆಯ ಫಲಾನುಭವಿಗಳಲ್ಲಿ
ವಿರೋಧಿಗಳೂ ಇರುವುದಂತೂ ಸತ್ಯ.

ಹಿಂದಿನ ಸರ್ಕಾರವಾಗಲಿ ಈಗಿನ ಸರ್ಕಾರವಾಗಲಿ ಏನು ಕೊಟ್ಟಿದೆಯೋ ಎಲ್ಲಾ ಪ್ರಜೆಗಳೂ ಒಟ್ಟಿಗೆ ಪಕ್ಷಪಾತವಿಲ್ಲದೆ ಪಡೆದರೂ  ಪಕ್ಷ ಬದಲಾವಣೆಯಾದರೂ ಅದೇ ಯೋಜನೆ. ಸ್ವಲ್ಪ ಮಟ್ಟಿಗೆ ಬದಲಾಗಿದೆ . ಒಂದು ದೇಶಕ್ಕೆ ಬಂಡವಾಳದ ಸುರಿಮಳೆಯನ್ನು ತಂದರೆ ಇನ್ನೊಂದು ಬಂಡವಾಳವನ್ನು ಸುಲಿಗೆ ಮಾಡಿ  ರಾಜಕೀಯ ನಡೆಸಲು ಹೊರಟಿರೋದು ಪ್ರಜೆಗಳ ಸಹಕಾರದಿಂದ. 
ಕೊಡುವವರಿದ್ದಾಗ ಪಡೆಯುವವರೂ ಇರುವರು.ಅದೂ ಉಚಿತವಾದ ಸಾಲವಷ್ಟೆ.ಆ ಸಾಲವನ್ನು ತೀರಿಸಲು  ಮತ್ತಷ್ಟು ವಿದೇಶಿ ಬಂಡವಾಳ ವ್ಯವಹಾರ, ಶಿಕ್ಷಣ ಹೆಚ್ಚಾದಂತೆಲ್ಲಾ  ದೇಶ ವಿದೇಶಗಳಿಂದ  ಸಾಲವೇ ಶೂಲವಾಗುತ್ತದೆ.

ಧಾರ್ಮಿಕವಾಗಿ  ಈ ವಿಚಾರವನ್ನು  ಪರಿಶೀಲನೆ ಮಾಡಿದರೆ ಪ್ರಜಾಧರ್ಮ ಪ್ರಜಾಪ್ರಭುತ್ವದ ವಿರುದ್ದ ರಾಜಕೀಯ ವಿದೆ.
ಕೇಳಿದ್ದನ್ನು ಕೊಡುವುದು ಧರ್ಮವಾಗಿದ್ದರೆ ಕರ್ಣನಿಗೆ ಕೊಟ್ಟು ಕೆಟ್ಟ ಎನ್ನುವ ಬಿರುದು  ಬರುತ್ತಿರಲಿಲ್ಲ.ಆದರೆ ಅಂದಿನ ಕ್ಷತ್ರಿಯ ಧರ್ಮ ಕ್ಕೂ ಇಂದಿನ ಪ್ರಜಾಧರ್ಮಕ್ಕೂ ವ್ಯತ್ಯಾಸವಿದೆ.
ಇಷ್ಟು ವರ್ಷ ಆಡಳಿತ‌ ನಡೆಸಿದ ಯಾವ ಪಕ್ಷ ಉಚಿತವಾಗಿ ಶಿಕ್ಷಣ ನೀಡಲು ಸಾಧ್ಯವಾಯಿತು. ಅದರಲ್ಲೂ ಜ್ಞಾನದ ಶಿಕ್ಷಣ ನೀಡಿದ್ದರೆ ಇಂತಹ ಅಜ್ಞಾನದ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ.
ಪ್ರಜೆಗಳೇ ದೇಶವನ್ನು ಸಾಲದ  ಕಡೆಗೆ ಎಳೆದಿರುವಾಗ ಬೇಲಿಯೇ ಎದ್ದುಹೊಲಮೇಯ್ದಂತಲ್ಲವೆ?
 ರಾಜಕಾರಣಿಗಳಾಗಲಿ ಪ್ರತಿಷ್ಟಿತರಾಗಲಿ,ಧಾರ್ಮಿಕ ವರ್ಗ ವಾಗಲಿ  ದೇಶದ ಋಣದಲ್ಲಿಯೇ ಜೀವನ ನಡೆಸಿರೋದು.
ಪ್ರಜೆಗಳ ಹಣ ಅವರ ಮತವಿಲ್ಲದೆ ಯಾವುದಾದರೂ ಸಂಘ ಸಂಸ್ಥೆ, ಮಠ,ಮಂದಿರ  ಇನ್ನಿತರ ಸೇವಾ ಕೇಂದ್ರಗಳಿವೆಯೆ?
ಇಷ್ಟಕ್ಕೂ ಸೇವೆ ಯಾರ ಹಣದಲ್ಲಿ ಯಾರಿಗೆ ನಡೆದಿದೆ.ಯಾರ ಸಾಲ ಯಾರು ತೀರಿಸಲಾಗಿದೆ? ಯಾರ ದೇಶವನ್ನು ಯಾರನ್ನು ಯಾರು ಆಳುತ್ತಿರುವುದು?ಸ್ವಾತಂತ್ರ್ಯ ಯಾರಿಗೆ ಯಾರು ಯಾವಾಗ ಕೊಟ್ಟರೋ ದೇವರಿಗಷ್ಟೆ ಗೊತ್ತು.
ರಾತ್ರಿ ವೇಳೆಯಲ್ಲಿ  ಸಿಕ್ಕಿದ ಸ್ವಾತಂತ್ರ್ಯ  ಕತ್ತಲೆಯಲ್ಲಿದ್ದವರಿಗಷ್ಟೆ ಸಿಕ್ಕಿದೆ. ಬೆಳಕಿನ ಕಡೆಗೆ ಬರುವವರೆಗೆ
 ವಿದೇಶಿ ಸಾಲ ತೀರದು. ಅವರ ಶಿಕ್ಷಣವನ್ನು ಬಂಡವಾಳ ಮಾಡಿಕೊಂಡರೆ ತಂತ್ರವಾಗಿರುತ್ತದೆ.ತತ್ವವಾಗದು
ಜ್ಞಾನಜ್ಯೋತಿ ಯೋಜನೆ ಜಾರಿಗೆ ತಂದಿದ್ದರೆ ಎಲ್ಲಾ ಭಾರತೀಯ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬಹುದು.
ಆಗ ಈ ಕತ್ತಲೆಯ ಸಾಮ್ರಾಜ್ಯದ  ಅಜ್ಞಾನ  ಬೆಳಕಿಗೆ ಬಂದರೆ ರಾಜಕೀಯ ಮೂಲೆ ಸೇರುವುದಲ್ಲವೆ? ಇದಕ್ಕೆ ರಾಜಕಾರಣಿಗಳ ಸಹಕಾರವಿಲ್ಲ.  ಇದೊಂದು  ಅಜ್ಞಾನ. 
 ಇಷ್ಟು ಸತ್ಯ ನಿಜವಾದ ದೇಶಭಕ್ತರು ಅರ್ಥ ಮಾಡಿಕೊಂಡರೆ ಸಾಕು  ನಮ್ಮವರ ಅಜ್ಞಾನವನ್ನು ನಾವೇ ಸಹಕಾರ ಕೊಟ್ಟು ಬೆಳೆಸಿ ಇನ್ನಷ್ಟು ಮೋಸ ಹೋಗಿರುವಾಗ ಯಾರ ವಿರುದ್ದ ಹೋರಾಟ ನಡೆಸಬೇಕು? ಹೋರಾಟ  ಯಾವ ದಿಕ್ಕಿನಲ್ಲಿರಬೇಕಿತ್ತು? ಈಗ ಯಾವ ದಿಕ್ಕಿನಲ್ಲಿ ನಡೆದಿದೆ?
ಅಧ್ಯಾತ್ಮ ಚಿಂತಕರು  ಶಿಕ್ಷಣ ಕ್ಷೇತ್ರದ ಅಧರ್ಮವನ್ನು ಎತ್ತಿ ಹಿಡಿಯದೆ  ತಾವೂ ಅದರಲ್ಲಿ ಸೇರಿದ್ದರೆ ಭಾರತದ ಸಾಲಕ್ಕೆ ಕಾರಣವೇ  ಪ್ರಜಾಸಹಕಾರ.
 ಸಾಲ ಮಾಡಿ ಕೆಟ್ಟ ಸಾಲವೇ ಶೂಲ ಯಾವುದಿದರ ಮೂಲ ಸರ್ಕಾರ ಅಥವಾ ಸಹಕಾರವೇ ಇದರ ಮೂಲ. ಈಗಲೂ ಉಚಿತ ಬೇಕೆ? ಉಚಿತವಾಗಿ ಪಡೆಯುವವರನ್ನು ಎಚ್ಚರಿಸಲಾಗುವುದೆ? ಬಡತನ ಬೆಳೆದಿರೋದು ಅಜ್ಞಾನದಿಂದ ಅಜ್ಞಾನವು ಬೆಳೆದಿರೋದು ಶಿಕ್ಷಣದಿಂದ.
ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ  ಅಭಿವೃದ್ಧಿ. ಇದೇ ಅನಾರೋಗ್ಯಕರವಾಗಿದ್ದರೆ ಅಧೋಗತಿ. ಆರೋಗ್ಯಕರ ಶಿಕ್ಷಣ ನೀಡದೆ ಮಕ್ಕಳ ಮನಸ್ಸನ್ನು ಹಾಳುಮಾಡಿ ರೋಗ ಹೆಚ್ಚಿಸಿದರೆ  ರೋಗವೇ ಹರಡೋದು. ಶಿಕ್ಷಣವೇ ನಮ್ಮದಲ್ಲದ ಮೇಲೆ ನಮ್ಮೊಳಗಿನ ಜ್ಞಾನವೂ ನಮ್ಮದಲ್ಲ. ಜ್ಞಾನಕ್ಕೆ ತಕ್ಕಂತೆ ವಿಜ್ಞಾನ ಜಗತ್ತಿದೆ.ವಿಜ್ಞಾನ ಹೊರಗಿನ ಜಗತ್ತಿನ  ಸತ್ಯ. ಆದರೆ ಭಾರತೀಯರ ವಿಜ್ಞಾನ ಅಧ್ಯಾತ್ಮ ಜಗತ್ತಿನಲ್ಲಿತ್ತು. ತನ್ನ ಸಾಲಕ್ಕೆ ತನ್ನ ಕರ್ಮ ವೇ ಕಾರಣವಾಗಿತ್ತು.ಈಗ ಸರ್ಕಾರ ಕಾರಣವೆನ್ನುವುದರಲ್ಲಿ ಸತ್ಯವಿದೆಯೆ? ಇದರಲ್ಲಿ ಸಾಲಕ್ಕೆ ಕೈ ಚಾಚಿದ ತನ್ನ ಸಹಕಾರವೆ ಕಾರಣ.  ಹೀಗಿರುವಾಗ ಕೈಕೆಸರಾದರೆ ಬಾಯಿಮೊಸರು ಎನ್ನುವಂತಿಲ್ಲ. ತನ್ನ ಕೈ ಕೆಲಸಮಾಡದೆಯೇ ಬಾಯಿಗೆ ಮೊಸರು ಸಿಗೋವಾಗ ಯಾರು ಕೆಸರಿನೆಡೆಗೆ ಹೋಗುವರು?
ಕೈಯನ್ನು ದ್ವೇಷ ಮಾಡಿ  ಆಪರೇಷನ್ ಮೂಲಕ ಕೈಬೆರಳನ್ನು
ಸೇರಿಸಿಕೊಂಡರೂ  ಬೆರಳುಗಳ ಹಿಂದಿನ ಆಟ ನಿಲ್ಲಲಿಲ್ಲ. ಹೀಗಾಗಿ ಯಾವುದೇ ಒಂದು ಪಕ್ಷದಿಂದ ದೇಶದ ಸಾಲ ತೀರಿಸಲಾಗದು.ಪ್ರಜೆಗಳೇ ತಮ್ಮ ತಮ್ಮ ಸಾಲಕ್ಕೆ ಹೊಣೆಗಾರರು.ಎಷ್ಟು ಹೊರಗಿನ ಸಾಲ ಬೆಳೆಸಿದರೂ ತೀರಿಸದೆ  ಬಡತನ ನಿವಾರಣೆ ಆಗದು. ಇದಕ್ಕಾಗಿ ಉತ್ತಮ ಶಿಕ್ಷಣದ ಅಗತ್ಯವಿದೆ.ಇತ್ತೀಚಿನ ದಿನಗಳಲ್ಲಿ ವಿದೇಶಿ ಶಿಕ್ಷಣ ನೀಡಲು ಪೋಷಕರಾದವರು ಮಕ್ಕಳ ಮೇಲೆ ಮಾಡುವ
ಸಾಲಕ್ಕೆ ಮಿತಿಯಿಲ್ಲ.ಅದನ್ನು ತೀರಿಸಲು ಹೊರಗೆ ದುಡಿಯಲೇಬೇಕು. ಮಕ್ಕಳಿಗೆ ಮನೆಯೇ ಮೊದಲಪಾಠ
ಶಾಲೆಯಾಗಿದ್ದ ಭಾರತದಲ್ಲಿ  ಮಕ್ಕಳನ್ನು ಬಿಟ್ಟು ಹೊರಗೆ ಹೋಗುವ ಪೋಷಕರಿಗೆ ಪಾಠ ಹೇಳಿಕೊಡಲು ಸಾಧ್ಯವೆ? ಸಾಲದ ಹೊರೆ ಏರಿಸಿ ರಾಜಕೀಯ ನಡೆಸೋ ರಾಜಕಾರಣಿಗಳೊಂದೆಡೆ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುವ ಪೋಷಕರು ಮತ್ತೊಂದು ಕಡೆ.ಒಟ್ಟಿನಲ್ಲಿ ಸಾಲ ಮಾಡದೆಯೇ ಜೀವನವೇ ನಡೆಸೋಹಾಗಿಲ್ಲ ಎನ್ನುವ ಸ್ಥಿತಿಗೆ ಬಂದಿರುವ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಾಲದ ಅರ್ಥ ತಿಳಿಸುವ ಶಿಕ್ಷಣದ ಅಗತ್ಯವಿದೆ.
ಇದನ್ನು ಕೊಡದೆ ಆಳುವುದೇ ಅಧರ್ಮ, ಅನ್ಯಾಯ. ಇದರ ಬಗ್ಗೆ ಯಾರೂ ಪ್ರಶ್ನೆ ಮಾಡೋದಿಲ್ಲವೆಂದರೆ ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳಲು ಕಷ್ಟ.ಹೀಗಿರುವಾಗ  ನಮ್ಮ ಸಹಕಾರದಿಂದ ಅಧಿಕಾರ ಪಡೆದವರಿಗೆ ಅರ್ಥ ವಾಗುವುದೆ?ಯಥಾ ಪ್ರಜಾ ತಥಾ ರಾಜಕೀಯ. 
ಉಚಿತದಿಂದ ಸಾಲ ಖಚಿತ.ಸಾಲದಿಂದ  ಸಮಸ್ಯೆ ಹೆಚ್ಚುವುದು. ಅನಗತ್ಯವಾದವರು  ಸಾಲದಿಂದ ದೂರವಿದ್ದರೆ ಉತ್ತಮ. ಶ್ರೀಮಂತ ರೆ  ಸರ್ಕಾರದ ಸಾಲ ಬೇಡಿದರೆ ಬಡತನ ಯಾರಿಗಿದೆ? 
ವೈಚಾರಿಕತೆಯನ್ನು ವಿರೋಧಿಸಿ ವೈಜ್ಞಾನಿಕತೆ ಮುಂದೆ ನಡೆದರೂ ಅಜ್ಞಾನವೇ ಬೆಳೆಯೋದು. 
ನಮ್ಮ ಹಿಂದಿನ ಮಹಾತ್ಮರುಗಳು ದೇಶಕ್ಕಾಗಿ  ಉಚಿತ ಸೇವೆ ಮಾಡುತ್ತಿದ್ದರು. ಈಗಿನವರು  ದೇಶವನ್ನೇ  ಸಾಲಕ್ಕೆ ತಳ್ಳಿ ಉಚಿತ ಯೋಜನೆಗಳಿಗೆ ಕೈ ಚಾಚುತ್ತಿರೋದು ಆತ್ಮನಿರ್ಭರ ಭಾರತದ ಲಕ್ಷಣವೆ? ವಿದೇಶಿ ಸಾಲ ತೀರಿಸಬೇಕಾದವರು ವಿದೇಶಿಗಳನ್ನು  ಬಂಡವಾಳದಿಂದ ಒಳಗೆ ಕರೆಸಿಕೊಂಡರೆ ದೇಶದ ಆರ್ಥಿಕ ಸ್ಥಿತಿ ತಾತ್ಕಾಲಿಕ ವಾಗಿ ಸುಧಾರಿಸಿದರೂ ಧಾರ್ಮಿಕವಾಗಿ  ಸುಧಾರಣೆಯಾಗುವುದೆ?
ಅಧ್ಯಾತ್ಮ ಸತ್ಯ ತಿಳಿಯದೆ ಭೌತಿಕದೆಡೆಗೆ ನಡೆದರೆ ಸಾಲವೇ ಶೂಲವಾಗುವುದು.
ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು. ಸಾಲ ಅದು.