ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Sunday, April 30, 2023
ಸಮಸ್ಯೆಗೆ ಸ್ತ್ರೀ ಕಾರಣವೋ ವ್ಯಕ್ತಿಯೋ?
Saturday, April 29, 2023
ಭಾರತೀಯರು ಎಡವಿಬಿದ್ದದ್ದೆಲ್ಲಿ? ಬಿದ್ದಲ್ಲಿಂದ ಏಳಬೇಕು.
Thursday, April 27, 2023
ಭಾರತೀಯರ ಭವಿಷ್ಯ ತತ್ವದಲ್ಲಿದೆ
Wednesday, April 26, 2023
ಹಣದಿಂದ ಭಗವಂತನ ಪರೀಕ್ಷೆಯನ್ನು ಗೆಲ್ಲಬಹುದೆ?
Tuesday, April 25, 2023
ಮಹಾ ತತ್ವಜ್ಞಾನಿಗಳಿಗೆ ನಮೋ ನಮಃ
Sunday, April 23, 2023
ಮಾನವರಲ್ಲಿ ಅಕ್ಷಯವಾಗಲಿ ಮಹಾತ್ಮರುಗಳ ತತ್ವಜ್ಞಾನ
ಅಕ್ಷಯವಾಗಬೇಕಾದದ್ದು ಯಾವುದು?
Saturday, April 22, 2023
ಒಗ್ಗಟ್ಟು ರಾಜಯೋಗದಲ್ಲಿದ್ದರೆ ಧರ್ಮ ರಕ್ಷಣೆ
Friday, April 21, 2023
ವಿಜ್ಞಾನದಿಂದ ಆತ್ಮನಿರ್ಭರ ಭಾರತ ಸಾಧ್ಯವೆ?
Thursday, April 20, 2023
ಪಾತಂಜಲಿಯೋಗ ಸೂತ್ರದ ನಿಜವಾದ ವೈರಾಗ್ಯ
ಪತಂಜಲಿ ಯೋಗ ಸೂತ್ರ .
ಅಧ್ಯಾಯ 1, ಸೂತ್ರ 16
ತತ್ – ಪರಂ – ಪುರುಷಃ ಖ್ಯಾತೇಃ – ಗುಣವೈತ್ರ್ಯಂ
ಗುಣಗಳಿಗೆ ಅಸಡ್ಡೆ ಅಥವಾ ಪುರುಷನ ಸ್ವಭಾವದ ಜ್ಞಾನದ ಮೂಲಕ ಸಾಧಿಸಿದ ತತ್ವಗಳನ್ನು ಪರವೈರಾಗ್ಯ ಎಂದು ಕರೆಯಲಾಗುತ್ತದೆ
ಪಾತಂಜಲಿ ಯೋಗ ಸೂತ್ರ16 ರಲ್ಲಿ ಗುಣಗಳನ್ನೂ ಯಾವುದು ತ್ಯೆಜಿಸುವುದೋ ಅದು ಪರಮ ವೈರಾಗ್ಯ ಎಂದಿದ್ದಾರೆ.ಇದು ಪುರುಷನ ನೈಜ ಸ್ವರೂಪ ಜ್ಞಾನದಿಂದ ಬರುತ್ತದೆ.ಗುಣಗಳಾಸೆಯ ಕಡೆಗೂ ಮನಸ್ಸು ಯಾವಾಗ ಹೋಗುವುದಿಲ್ಲವೋ ಅದೇ ಪರಮವೈರಾಗ್ಯದ ಚಿಹ್ನೆ. ಇಲ್ಲಿ ಪುರುಷನೆಂದರೆ, ಯೋಗ ಶಾಸ್ತ್ರ ದ ಪ್ರಕಾರ ಪ್ರಕೃತಿಯು ಮೂರು ಗುಣದಿಂದ ಕೂಡಿದ್ದು ಅದು ತಮಸ್ಸು, ರಜಸ್ಸು, ಸತ್ವ.ಇವು ಜಗತ್ತಿನಲ್ಲಿ ಅಜ್ಞಾನ ಅಥವಾ ಜಡತೆ,ಆಕರ್ಷಣೆ ಅಥವಾ ವಿಕರ್ಷಣೆ ಮತ್ತು ಸಮತ್ವ ಎಂಬ ಮೂರು ರೂಪಗಳನ್ನು ತಾಳಿದೆ.ಪ್ರಕೃತಿ ಈ ಮೂರೂ ಗುಣಗಳ ಮಿಶ್ರಣ. ಸಾಂಖ್ಯರು ಇದನ್ನು ತತ್ವಗಳಾಗಿ ವಿಂಗಡಿಸಿ ಆತ್ಮ ಅಂದರೆ ಪುರುಷ ಇದನ್ನೆಲ್ಲಾ ಮೀರಿದ್ದು, ಪ್ರಕೃತಿಯನ್ನೇ ಮೀರಿದ್ದು,ಸ್ವಯಂ ಪ್ರಕಾಶ ಪರಿಶುದ್ದ ಪೂರ್ಣವಾಗಿದ್ದು ಜಗತ್ತಿನಲ್ಲಿ ಕಾಣುವ ಎಲ್ಲಾ ಚೇತನವೂಪ್ರಕೃತಿಯ ಮೇಲೆ ಬಿದ್ದಿರುವ ಆತ್ಮನ ಪ್ರತಿಬಿಂಬವಷ್ಟೆ.ಪರಮಾತ್ಮನೊಬ್ಬನೆ ಜೀವಾತ್ಮರು ಅವನ ಪ್ರತಿಬಿಂಬವೆಂದರು. ಪ್ರಕೃತಿ ಜಡವಾಗಿದ್ದು ಮನಸ್ಸು ಅದರಲ್ಲಿ ಸೇರಿ ಆಲೋಚನೆಯಲ್ಲಿರುವುದು. ಭೂಮಿಯಲ್ಲಿ ಆಲೋಚನೆಯಿಂದ ಹಿಡಿದು ಅತಿಸೂಕ್ಷ್ಮ ಜಡವಸ್ತುವಿನವರೆಗೂ ಎಲ್ಲಾ ಪ್ರಕೃತಿಯ ಅಭಿವ್ಯಕ್ತಿ. ಈ ಪ್ರಕೃತಿಯೇ ಮಾನವನ ಆತ್ಮವನ್ನು ಮುಚ್ಚಿದೆ ಮುಸುಕು ತೆಗೆದ ಮೇಲೇ ಆತ್ಮ ಸ್ವಯಂ ಪ್ರಕಾಶವಾಗಿ ಪ್ರಕಾಶಿಸುವುದು. ವೈರಾಗ್ಯವು ವಸ್ತು ಮತ್ತು ಪ್ರಕೃತಿಯ ಸ್ವಾಧೀನದಲ್ಲಿರುವ ಕಾರಣ ಆತ್ಮನ ಸ್ವಯಂ ಜ್ಯೋತಿಯ ಪ್ರಕಾಶಕ್ಕೆ ಎಲ್ಲಾ ಗುಣಗಳನ್ನು ತ್ಯೆಜಿಸುವುದು ಬಹಳ ವೈರಾಗ್ಯಕ್ಕೆ ಸಹಾಯಕವಾಗಿದೆ ಎಂದಿದ್ದಾರೆ.
ಇಲ್ಲಿ ಆತ್ಮಜ್ಞಾನದೆಡೆಗೆ ಮಾನವ ನಡೆಯಬೇಕಾದರೆ ಯೋಗದಿಂದ ಮಾತ್ರ ಸಾಧ್ಯವೆನ್ನಬಹುದು.ಭೋಗದೆಡೆಗೆ ನಡೆದಂತೆಲ್ಲಾ ಜಡಶಕ್ತಿ ಒಳಹೊಕ್ಕಿ ಆಂತರಿಕ ಸ್ವಯಂ ಪ್ರಕಾಶದಿಂದ ದೂರವಾಗುತ್ತದೆ. ಈ ಕಾರಣಕ್ಕಾಗಿ ಮಹಾತ್ಮರುಗಳು ಯೋಗಸಾಧಕರಾಗಿದ್ದು ಉನ್ನತ ಅದ್ವೈತ ದರ್ಶನ ಮಾಡಿಕೊಂಡು ಜಗತ್ತು ಮಿಥ್ಯಬ್ರಹ್ಮ ಸತ್ಯ.ಆತ್ಮ ಬ್ರಹ್ಮನ ಒಂದು ಶಕ್ತಿಯಾಗಿದೆ. ಆತ್ಮಜ್ಞಾನದಿಂದ ಮಾತ್ರ ಜೀವನ್ಮುಕ್ತಿ.
ಮನಸ್ಸು ಎಷ್ಟು ಅಂತರ್ಮುಖಿಯಾಗಿರುವುದೋ ಅಷ್ಟು ಜ್ಞಾನೋದಯವಾಗುವುದೆಂದರ್ಥ. ಬಹಿರ್ಮುಖದ ವ್ಯಕ್ತಿತ್ವವನ್ನು ಎಲ್ಲಾ ಕಾಣಬಹುದಷ್ಟೆ ಆದರೆ ಅಂತರ್ಮುಖಿಗಳ ತತ್ವ ಕಾಣೋದಿಲ್ಲ. ಭಾರತದಂತಹ ಮಹಾದೇಶದ ಜನಸಂಖ್ಯೆ ಮಿತಿಮೀರಿ ಬೆಳೆದಿದೆಯೆಂದರೆ ಇದಕ್ಕೆ ಕಾರಣವೇ ಜೀವನ್ಮುಕ್ತಿ ಪಡೆಯದ ಅತೃಪ್ತ ಆತ್ಮಗಳು.
ಜಗತ್ತಿನಲ್ಲಿ ಎಷ್ಟು ಜನರಿದ್ದಾರೆ ದೇಶದಲ್ಲಿ ಎಷ್ಟು ಪ್ರಜೆಗಳಿದ್ದಾರೆ ಮನೆಯಲ್ಲಿ ಎಷ್ಟು ಮಕ್ಕಳಿದ್ದಾರೆನ್ನುವ ಲೆಕ್ಕಾಚಾರದಲ್ಲಿ ಆಯಸ್ಸು ಮುಗಿಯುತ್ತಿದೆ.ಆದರೆ ಆ ಜನರ ಒಳಗೆ ಅಡಗಿರುವ ಆತ್ಮನ ಅರಿವಿಗಾಗಿ ಎಷ್ಟು ಜನ ಅಂತರ್ಮುಖಿಯಾಗಿದ್ದಾರೆನ್ನುವ ಪ್ರಶ್ನೆಗೆ ಉತ್ತರವಿಲ್ಲ.ಇಲ್ಲಿ ಕಾಣೋದು ದೇಹ ಮಾತ್ರ.ಅದರ ಲಾಲನೆ ಪೋಷಣೆಗಾಗಿ ಹೊರಗಿನಜಗತ್ತು ನಡೆದಿದೆ.ಒಮ್ಮೆ ಮರೆಯಾಗುವ ಶರೀರಕ್ಕೆ ಬೆಲೆಕೊಡುವ ಮಾನವರು ಮರೆಯಾದರೂಬೆಲೆಯಿರುವ ಆತ್ಮನಿಗೆ ಬೆಲೆಕೊಟ್ಟು ಆತ್ಮಜ್ಞಾನದೆಡೆಗೆ ಸ್ವತಂತ್ರ ಜ್ಞಾನದಿಂದ ನಡೆದರೆ ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನುವ ಸತ್ಯ ಅರಿವಾಗಬಹುದು. ನಮಗೆ ಎಲ್ಲಾ ರೀತಿಯಲ್ಲಿ ಅಧ್ಯಾತ್ಮದ ಕಡೆಗೆ ಹೋಗಲು ಅವಕಾಶ ಅಧಿಕಾರ ಸ್ವತಂತ್ರ ಆ ಭಗವಂತ ನೀಡಿ ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವ ವಿದ್ದರೂ ಯಾರದ್ದೋ ಮಾತಿಗೆ ಬೆಲೆಕೊಟ್ಟು ನಮ್ಮವರನ್ನೇ ದೂರಮಾಡಿ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ಆಶ್ರಮ ಸೇರಿದರೂ ನಿಜವಾದ ವೈರಾಗ್ಯ ಬರೋದಿಲ್ಲ.
ಸಂಸಾರದೊಳಗಿದ್ದು ವೈರಾಗ್ಯ ಬೆಳೆಯೋದು ಕಷ್ಟ ಹಾಗಾಗಿ ಸಂನ್ಯಾಸಧರ್ಮ ಶ್ರೇಷ್ಠ ವೆಂದರು.ಸಂನ್ಯಾಸ ಸ್ವೀಕರಿಸಿ ಜನಬಲ ಹಣಬಲ ಅಧಿಕಾರ ಬಲದ ಹಿಂದೆ ಇದ್ದರೆ ವೈರಾಗ್ಯ ಎಲ್ಲಿಂದ ಸಿಗಬೇಕು? ಒಟ್ಟಿನಲ್ಲಿ ಪಾತಂಜಲಿ ಮಹರ್ಷಿಯವರ ಯೋಗವನ್ನು, ವಿವೇಕಾನಂದರ ರಾಜಯೋಗವನ್ನು ಅರ್ಥ ಮಾಡಿಕೊಳ್ಳಲಾಗದವರು ಯೋಗಿಯಾಗಲಾರರು. ಭಾರತೀಯರ ಒಂದು ದೊಡ್ಡ ಸಮಸ್ಯೆಯೆಂದರೆ ಇಲ್ಲಿ ನಮ್ಮವರ ಸತ್ಯಕ್ಕೆ ವಿರೋಧಿಸಿ ಪರಕೀಯರ ಮಿಥ್ಯವನ್ನು ಸ್ವಾಗತಿಸಿ ಪೋಷಣೆ ಮಾಡುವ ರಾಜಕೀಯ ಬುದ್ದಿ ಸತ್ವ ಸತ್ಯವನ್ನು ಹಾಳುಮಾಡಲು ಹೊರಟಿದೆ.ಸ್ವಾಮಿ ವಿವೇಕಾನಂದರು ಹಿಂದೆಯೇ ಇದನ್ನು ತಿಳಿಸಿದ್ದರು. ಅವರು ಭಾರತವನ್ನು ಅಧ್ಯಾತ್ಮ ಶಿಕ್ಷಣದಿಂದ ಆತ್ಮನಿರ್ಭರ ಭಾರತ ಮಾಡಲು ಅಂದೇ ತಯಾರಿ ನಡೆಸಿದ್ದರು. ಆದರೆ ಪ್ರಜಾಪ್ರಭುತ್ವದ ಪ್ರಜೆಗಳನ್ನು ಆಳಲು ಬಂದವರು ಭೌತಿಕದ ವಿಜ್ಞಾನವನ್ನು ಬೆಳೆಸುತ್ತಾ ವಿದೇಶದ ಶಿಕ್ಷಣ ನೀಡುತ್ತಾ ಸ್ವದೇಶದವರನ್ನು ದೂರಮಾಡುತ್ತಾ ನಡೆದರೂ ಪ್ರಜೆಗಳ ಸಹಕಾರ ಅದನ್ನು ಪ್ರೋತ್ಸಾಹ ಮಾಡಿ ಈಗಲೂ ನಮಗೆ ಎಲ್ಲಿ ತಪ್ಪಿದ್ದೇವೆನ್ನುವ ಪ್ರಶ್ನೆಗೆ ಉತ್ತರ ಸಿಗದು.ಕಾರಣ ತಪ್ಪು ಒಳಗೆ ನಡೆದಿದೆ.ಹೊರಗಿನ ತಪ್ಪನ್ನು ಎತ್ತಿ ಹಿಡಿಯುತ್ತಲೇ ಇದ್ದರೆ ಇನ್ನಷ್ಟು ತಪ್ಪು ಹೆಚ್ಚಾಗಿ ಜೀವ ತೆಪ್ಪಗೆ ಹೋಗುತ್ತದೆ.
ಸತ್ಯವೇ ದೇವರು,ಸತ್ಯಕ್ಕೆ ಸಾವಿಲ್ಲ ಎನ್ನುವ ಹಿಂದೂಗಳ ಸನಾತನ ಧರ್ಮ ಇಂದು ಹಿಂದುಳಿಯಲು ಕಾರಣವೇ ಹಿಂದೂಗಳು. ಸತ್ಯ ಕಠೋರವಾಗಿರಲು ಕಾರಣವೇ ಸತ್ಯ ಹಿಂದೆ ಬಿಟ್ಟು ಮಿಥ್ಯ ಮುಂದೆ ನಡೆದಿರೋದು.ಇದಕ್ಕೆ ಹಿಂದೂಗಳೇ ಸಹಕಾರ ನೀಡಿರುವಾಗ ತಪ್ಪು ಯಾರದ್ದು? ಸತ್ಯ ಕಹಿಯಾಗಿರುವುದೆಂದು ಹೇಳಬಾರದೆಂದು ಸಿಹಿಯಾದ ಮಿಥ್ಯ ಮುಂದೆ ನಡೆಯಿತು.ಅತಿಯಾದ ಸಿಹಿ ಎಲ್ಲಾ ಹಂಚಿಕೊಂಡು ರೋಗಕ್ಕೆ ತುತ್ತಾದರು. ಅದಕ್ಕೆ ಕಹಿಯಾದ ಔಷಧ ಸೇವನೆಯೇ ಬೇಕಾಯಿತು.ಇದು ಹೊರಗಿನ ಚಿಕಿತ್ಸೆ. ಆದರೆ ಒಳಗಿದ್ದ ಅಜ್ಞಾನವೆಂಬ ರೋಗಕ್ಕೆ ಅಧ್ಯಾತ್ಮ ಚಿಕಿತ್ಸೆ ನೀಡದೆ ಭೌತಿಕದ ವಿಜ್ಞಾನದೆಡೆಗೆ ನಡೆದಂತೆಲ್ಲಾ ಭೂಮಿಯ ಮೇಲಿರುವ ಸತ್ಯವನ್ನು ಮರೆತ ಮಾನವ ಆಕಾಶದೆತ್ತರ ಹಾರಿದರೂ ರೋಗಕ್ಕೆ ಔಷಧ ಸಿಗಲಿಲ್ಲ.ಕಾರಣ ರೋಗ ಒಳಗಿನಿಂದ ಬೆಳೆದಿರುವಾಗ ಚಿಕಿತ್ಸೆ ಒಳಗೆ ನಡೆಯಬೇಕು.
ಒಳಗಿದ್ದವರನ್ನೂ ಬಿಡದೆ ಹೊರಗೆಳೆದು ರಾಜಕೀಯ ನಡೆಸಿ ಆಳಿದರೆ ರೋಗ ಇನ್ನಷ್ಟು ಹರಡಿದೆ.ಈಗ ಪರಿಹಾರ ಒಳಗೆ ಕಾಣಲು ಸಾಧ್ಯವೆ? ಸಾಧ್ಯವಾದವರು ಪ್ರಯತ್ನಪಟ್ಟರೆ ಫಲವಿದೆ. ಒಟ್ಟಿನಲ್ಲಿ ಹಣದಿಂದ ಜ್ಞಾನ ವೈರಾಗ್ಯ ಸಿಗದು.
ಭಾರತೀಯರಾಗಿ ಭಾರತಮಾತೆಯ ಋಣ ತೀರಿಸಲು ಬೇಕಾದ ಸಂಸ್ಕಾರಯುತ ವಿದ್ಯೆ ಜ್ಞಾನ ಕೊಡದೆ ಎಷ್ಟೇ ಜನರನ್ನು ಆಳಿದರೂ ವ್ಯರ್ಥ.
ತಾಳಿದವನು ಬಾಳಿಯಾನು.ಆಳಿದವನು ಆಳಾಗುವನು.
ವಾಸ್ತವದಲ್ಲಿ ಪ್ರಜಾಪ್ರಭುತ್ವದಲ್ಲಿ ಯಾರನ್ನು ಯಾರು ಯಾಕೆ ಹೇಗೆ ಆಳುತ್ತಿರುವರೆಂದು ಸೂಕ್ಮವಾಗಿ ಗಮನಿಸಿದರೆ ಹಿಂದೂಗಳೆ ಹಿಂದೂಗಳಿಗೆ ವೈರಿಗಳಾಗಿದ್ದು ಪರಕೀಯರ ವಶದಲ್ಲಿ ಭಾರತವನ್ನು ಬಿಟ್ಟು ವಿದೇಶಿ ವಿಜ್ಞಾನದೆಡೆಗೆ ವ್ಯವಹಾರ ನಡೆಸುತ್ತಾ ದೇಶವನ್ನು ವಿದೇಶ ಮಾಡುವಲ್ಲಿ ಯಶಸ್ವಿಯಾದವರನ್ನು ನಮಗೆ ನಾವೇ ಮೋಸಹೋಗಿದ್ದರೂ ಬೆನ್ನುತಟ್ಟಿ ಸ್ವಾಗತಿಸುವ ಮಟ್ಟಕ್ಕೆ ರಾಜಕೀಯ ಬೆಳೆದಿದೆ.ಇದು ಎಲ್ಲಾ ಕ್ಷೇತ್ರವನ್ನು ಆವರಿಸಿ ಜನಸಾಮಾನ್ಯರೊಳಗಿದ್ದ ಸಾಮಾನ್ಯಜ್ಞಾನ ಹಿಂದುಳಿದಿದೆ.
ಇದನ್ನು ಸರಿಪಡಿಸಲು ಹೊರಗಿನವರಿಂದ ಒಳಗಿನವರಿಂದ ಕಷ್ಟವಾಗಿರುವುದಕ್ಕೆ ಕಾರಣವೇ ಮಧ್ಯವರ್ತಿಗಳು ,
ಮಾಧ್ಯಮಗಳು ಪ್ರಚಾರ ಮಾಡುತ್ತಿರುವ ಅರ್ಧಸತ್ಯದ ವಿಷಯ. ವಿಷಯದಲ್ಲಿ ಸ್ವಾರ್ಥ ಅಹಂಕಾರದ 'ವಿಷ 'ವಿದ್ದರೆ ಒಳಗಿನ ಅಮೃತತ್ವ ಸಿಗೋದಿಲ್ಲ. ವೇದ ಶಾಸ್ತ್ರ ಪುರಾಣದ ಅಧ್ಯಯನ ವು ಯೋಗದಿಂದ ಸಿಗುತ್ತದೆ. ಅದನ್ನು ಭೋಗಕ್ಕೆ ಬಳಸಿ ಹೆಸರು,ಹಣ ಅಧಿಕಾರ ಪಡೆದರೂ ರೋಗದಿಂದ ಮುಕ್ತಿಯಿಲ್ಲ.ಹೀಗಾಗಿ ಜ್ಞಾನಿಗಳಾದವರು ದೇಶಭಕ್ತರು ದೇವರ ಭಕ್ತರು ಆಂತರಿಕ ಶುದ್ದಿಯಿಂದ ಆತ್ಮನಿರ್ಭರ ಭಾರತದೆಡೆಗೆ ಹೋಗುವುದಾದರೆ ವೈರಾಗ್ಯದ ಅರ್ಥ ತಿಳಿಯುವುದು ಇಂದು ಅಗತ್ಯವಾಗಿದೆ.
ಧಾರ್ಮಿಕ ಸೇವೆ ರಾಜಕೀಯ ಸೇವೆಯಾಗಬಾರದು
ಪರಮಾತ್ಮನ ಸಾಲಮನ್ನಾ ಸಾಧ್ಯವೆ?
Saturday, April 15, 2023
ಆತ್ಮಜ್ಞಾನ ಇರೋದೆಲ್ಲಿ?
ಯಾವುದೂ ಸ್ಥಿರವಲ್ಲ.ಯಾರೂ ಶಾಶ್ವತವಲ್ಲ
ದೈವಭಕ್ತರಿಗೇಕೆ ಕಷ್ಟ ನಷ್ಟ?
Sunday, April 9, 2023
ಯಾರು ಭಾರ ಹೋರಬೇಕು?
ಭಕ್ತಿಯೋಗದಲ್ಲಿ ದೇಶಭಕ್ತಿ ಇಲ್ಲವೆ?
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...