ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Sunday, May 28, 2023
ಹಿಂದೂ ಧರ್ಮದ ರಕ್ಷಣೆಗೆ ತತ್ವವರಿತು ನಡೆದರೆ ಸಾಕು
Friday, May 26, 2023
ಅಸತ್ಯದ ಅಧಿಕಾರ, ಹಣವೇ ಸರ್ವಸ್ವ, ಸರ್ವೋಚ್ಚವೆ?
ಪ್ರಜಾಪ್ರಭುತ್ವದ ಸ್ವತಂತ್ರ ಪ್ರಜೆಗಳಾಗಿ ಯಾವ ಅಧಿಕಾರ ಹಣವಿಲ್ಲದೆಯೇ ನಾವೇನು ಸಾಧನೆ ಮಾಡಬಹುದು ಇದರ ಬಗ್ಗೆ ಚಿಂತನ ಮಂಥನ ನಡೆಸುತ್ತಾ ಮುಂದೆ ಸಾಗೋಣ ಎಲ್ಲರಿಗೂ ಶುಕ್ರವಾರದ ಶುಭಾಶಯಗಳು🙏🙏
ಇದರಲ್ಲಿ ಯಾವ ಅಧಿಕಾರ ಹಣವಿಲ್ಲದೆ ಸಾಧನೆ ಮಾಡಬಹುದೆನ್ನುವುದನ್ನು ಸಾಮಾನ್ಯವಾಗಿ ಹೆಚ್ಚು ಜನರು ಒಪ್ಪಲಾಗದು.ಆದರೂ ಇದು ಸತ್ಯ. ಭೌತಿಕ ಹಾಗು ಅಧ್ಯಾತ್ಮದ ಉನ್ನತಿ ಅವನತಿಗೆ ಕಾರಣವೇ ಈ ಹಣ ಮತ್ತು ಅಧಿಕಾರವೆಂದರೆ ಸರಿ. ಇಲ್ಲಿ ನಮ್ಮ ಜನ್ಮಕ್ಕೆ ಕಾರಣವಾದ ಮಾತಾಪಿತೃಗಳಲ್ಲಿ ಅಧಿಕವಾದ ಹಣವಿದ್ದರೂ ಮಕ್ಕಳ ಜ್ಞಾನ ಬೆಳೆಯದು, ಅತಿಯಾದ ಬಡತನವಿದ್ದರೂ ಬೆಳೆಯುವುದಿಲ್ಲ.
ಹೀಗಾಗಿ ಅವಶ್ಯಕತೆ ಗೆ ತಕ್ಕಂತೆ ಹಣ ಮತ್ತು ಅಧಿಕಾರ ಕೊಟ್ಟು ಭಗವಂತ ಸಮಯಕ್ಕೆ ತಕ್ಕಂತೆ ನಡೆಸುತ್ತಾನೆಂದು ಅಧ್ಯಾತ್ಮ ತಿಳಿಸಿದರೆ ಭೌತಿಕದ ಮನಸ್ಸಿಗೆ ಅಗತ್ಯಕ್ಕಿಂತ ಹೆಚ್ಚು ಅವಶ್ಯಕತೆ ಗಿಂತ ಮಿತಿಮೀರಿದ ಆಸೆ ಆಕಾಂಕ್ಷೆಗಳನ್ನು ತಡೆಯಲಾಗದೆ ಅನಾವಶ್ಯಕ ವಾದ ಸಾಲಕ್ಕೆ ಕೈಯೊಡ್ಡಿ ತನ್ನ ಹಿಂದಿನ ಸಾಲದ ಜೊತೆಗೆ ಇಂದಿನ ಸಾಲದ ಹೊರೆ ತೀರಿಸಲಾಗದೆ ಹೆಚ್ಚು ಹಣ, ಅಧಿಕಾರಕ್ಕಾಗಿ ಪೈಪೋಟಿಗಿಳಿದರೆ ಸುಖವೆಲ್ಲಿರುವುದು?
ಹಾಸಿಗೆಇದ್ದಷ್ಟು ಕಾಲು ಚಾಚು, ನಿಧಾನವೇ ಪ್ರಧಾನ, ಅತಿಆಸೆ ಗತಿಗೇಡು, ತಾಳಿದವನು ಬಾಳಿಯಾನು, ಕಾಯಕವೇ ಕೈಲಾಸ, ...ಇವೆಲ್ಲವೂ ಅನುಭವದ ನುಡಿಮುತ್ತುಗಳು. ಆದರೆ ಇತ್ತೀಚೆಗೆ ನಡೆಯುತ್ತಿರುವ ಭ್ರಷ್ಟಾಚಾರ ಕ್ಕೆ ಕಾರಣ ಇವುಗಳನ್ನು ತಿಳಿಯದೆ ನಡೆದ ನಡೆ.ಆ ನಡೆಯನ್ನು ಪ್ರಗತಿ ಎಂದು ಸಾಧನೆಯೆಂದು ಸಹಕಾರ ನೀಡಿದ ಪೋಷಕರು ಪ್ರಜೆಗಳು ಮಾನವರು ಬೆಳೆಸಿದರು. ಮಹಾತ್ಮರಾದವರು ಸತ್ಯವೇ ದೇವರೆಂದರು. ಮಾನವರು ಸತ್ಯ ಬಿಟ್ಟು ಹಣ ಮಾಡಿ ನಡೆದವರನ್ನು ದೇವರು ಮಾಡಿದರು. ಧರ್ಮ ವೇ ದೇವರೆಂದರು ಅಧರ್ಮದಿಂದ ಹಣ ಅಧಿಕಾರ ಪಡೆದು ಎತ್ತರಕ್ಕೆ ಏರಿದವರ ಹಿಂದೆ ನಡೆದರು.
ಹಾಗಾದರೆ ಈ ಹಣ ಆಧಿಕಾರವಿಲ್ಲದೆ ಸಾಧನೆ ಮಾಡಿದ ಹಿಂದಿನ ಮಹಾತ್ಮರುಗಳು ಎಲ್ಲಿರುವರು? ಅವರಲ್ಲಿದ್ದ ಸತ್ಯ ಧರ್ಮ, ಸತ್ವ,ತತ್ವದಿಂದ ಸುಖವಿಲ್ಲದ ಮೇಲೆ ಅವರನ್ನು ಯಾಕೆ ಮಹಾತ್ಮರೆಂದರು? ಮಾನವ ಮಹಾತ್ಮನಾಗೋದಕ್ಕೆ ಹಣ ಅಧಿಕಾರಕ್ಕಿಂತ ಮುಖ್ಯವಾಗಿರೋದು ಆತ್ಮಜ್ಞಾನ.
ಅಧ್ಯಾತ್ಮ ಸಾಧಕರು ಅದರಿಂದ ದೂರವಿದ್ದು ಪರಮಾತ್ಮನ ಕಂಡಿದ್ದರೆಂದರೆ ಈಗಲೂ ಅದೇ ಪರಮಾತ್ಮನೇ ಮಾನವನ ಜೀವನಕ್ಕೆ ಸಹಾಯ ಮಾಡುತ್ತಿರುವುದು. ಹೊರಗೆ ಕಾಣುವ ಸತ್ಯ ಬೇರೆ ಒಳಗಿರುವ ಸತ್ಯ ಬೇರೆಯಾದಕಾರಣ ಒಂದೇ ಸತ್ಯ ತಿಳಿಯದೆ ಎರಡೂ ಸತ್ಯದ ನಡುವೆ ನಿಂತಿರುವ ನಮ್ಮ ಜೀವನದಲ್ಲಿ ಯಾವ ದಿಕ್ಕಿನ ಸಾಧನೆ ಕಡೆಗೆ ಹೋಗಲಾಗದೆ ಮಧ್ಯವರ್ತಿಗಳ ಮೂಲಕ ಹಾದು ಹೋಗುವುದಕ್ಕೆ ಸಾಕಷ್ಟು ಹಣವಿರಬೇಕು.ಅಧಿಕಾರ ಬೇಕು. ಇಲ್ಲವಾದರೆ ಬೆಲೆಯೇ ಇಲ್ಲವೆನ್ನುವ ಹಂತಕ್ಕೆ ಪ್ರಜೆಗಳು ಭ್ರಷ್ಟಾಚಾರದ ಹಣವನ್ನು ಬಳಸಿಕೊಂಡು ಅಧಿಕಾರ ಪಡೆದು ಇನ್ನಷ್ಟು ಹಣ ಮಾಡುತ್ತಾ ಜನರನ್ನು ಆಳುತ್ತಿದ್ದರೆ ಪ್ರಜಾಪ್ರಭುತ್ವದಲ್ಲಿ ಆಳು ಯಾರು ಅರಸ ಎಲ್ಲಿ?
ರಾಜಪ್ರಭುತ್ವದ ಕಾಲದಲ್ಲಿದ್ದ ಭಾರತೀಯ ಶಿಕ್ಷಣವಿಲ್ಲ. ಪ್ರಜಾಪ್ರಭುತ್ವದ ಅರ್ಥ ತಿಳಿಯದವರನ್ನು ಹಣದಿಂದ ಅಳೆದರೆ ಇದೊಂದು ಅಜ್ಞಾನವಷ್ಟೆ. ಅಂದರೆ ಹಣವಿಲ್ಲದೆ ಜೀವನ ನಡೆಸಲಾಗದು. ಆದರೆ ಹಣದ ಸದ್ಬಳಕೆ ಮಾಡಿದರೆ ಜೀವನ ಸುಗಮವಾಗುವುದು.ಸರಳ ಜೀವನ ಸ್ವಾಭಿಮಾನ, ಸ್ವಾವಲಂಬನೆ, ಸತ್ಯದ ಜೀವನ ಧಾರ್ಮಿಕ ನಡೆ ನುಡಿಯು
ಆತ್ಮಜ್ಞಾನದಿಂದ ಸಿಗೋವಾಗ ಪ್ರಜಾಪ್ರಭುತ್ವದಲ್ಲಿ ಇದನ್ನು ಯಾರು ಕೊಡಬೇಕು? ಯಾರಿಗೆ ಎಷ್ಟು ಯಾವಾಗ ಯಾಕೆ ಕೊಡಬೇಕೆನ್ನುವ ಬಗ್ಗೆ ಸರ್ಕಾರವಾಗಲಿ ಪ್ರಜೆಗಳಾಗಲಿ ಚಿಂತನೆ ನಡೆಸದೆ ನೇರವಾಗಿ ವಿದೇಶಿ ಶಿಕ್ಷಣ ಪಾಶ್ಚಾತ್ಯ ಸಂಸ್ಕೃತಿ, ಭಾಷೆ,ವ್ಯವಹಾರಕ್ಕೆ ಇಳಿದರೆ ಹಣ,ಅಧಿಕಾರವಿದ್ದರೂ ಸದ್ಬಳಕೆ ಮಾಡಿಕೊಳ್ಳುವ ಸತ್ಯಜ್ಞಾನದ ಕೊರತೆಯೇ ಇಡೀ ಸಮಾಜದ ದಾರಿತಪ್ಪಿಸಿ ಆಳುತ್ತದೆ. ಸಾಲವನ್ನು ತೀರಿಸಲು ನಿಸ್ವಾರ್ಥ ನಿರಹಂಕಾರದ ಸೇವೆ ಮಾಡಬೇಕೆನ್ನುವ ಭಗವದ್ಗೀತೆ ಓದುವುದು ಸುಲಭ.
ಆದರೆ ಹಣ ಕೈಗೆ ಬಂದಾಗ ಈ ಅರಿವು ಮೂಡುವುದು ಕಷ್ಟ. ಕಾರಣ ಒಳಗಿರುವ ಪರಮಾತ್ಮನ ಕರುಣೆಯಿಂದ ಸಿಕ್ಕಿದ ಈ ಹಣವನ್ನು ನನ್ನ ಜೀವನಕ್ಕೆ ಬಳಸುವುದಷ್ಟೆ ಮುಖ್ಯ. ಹೀಗೇ
ಎಲ್ಲಾ ಕೆಲಸದಲ್ಲಿ ನಾನು ನನಗಾಗಿ ನನ್ನಿಂದ ನನ್ನವರಿಗೆ ಎನ್ನುವ ಭಾವನೆಯಲ್ಲಿ ಕರ್ಮ ಮಾಡುವಾಗ. ಋಣ ತೀರದೆ ಜೀವ ಹೋಗುತ್ತದೆ. ಇಷ್ಟು ಕಷ್ಟದ ಚಿಂತನೆ ಬರುವುದಕ್ಕೆ ಯೋಗಬೇಕಿದೆ.ಯೋಗವೆಂದರೆ ಸೇರುವುದು ಕೂಡುವುದು.ಇಲ್ಲಿ ಪ್ರತಿಯೊಬ್ಬರೂ ಪರಮಾತ್ಮನ ಪ್ರತಿಬಿಂಬ ಎನ್ನುವ ಭಾವನೆಯಲ್ಲಿ ಸೇವೆ ಮಾಡಿದರೆ ಹಣದ ಸದ್ಬಳಕೆ ಸಾಧ್ಯ. ದುಷ್ಟರು ಹಣವನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ತನ್ನ ಕಡೆಗೆ ಎಳೆದರೆ, ಶಿಷ್ಟರು ಹಣವನ್ನು ಸದ್ಬಳಕೆ ಮಾಡಿಕೊಂಡು ಲೋಕಕಲ್ಯಾಣಕ್ಕಾಗಿ ಬದುಕುವರು.ಇವರಿಗೆ ಹಣ ಹಂಚುವುದೂ ಉತ್ತಮವಾದರೂ ಹಣದ ಮೂಲ ಭ್ರಷ್ಟಾಚಾರ ವಾಗಿದ್ದರೆ ಅದೂ ಕೂಡ ಅಧರ್ಮ ವೆ.
ಒಟ್ಟಿನಲ್ಲಿ ಅತಿಯಾದ ಹಣ ಸಂಪಾದನೆಗೆ ಬದಲಾಗಿ ಹಣವನ್ನು ದಾನಧರ್ಮ ಕಾರ್ಯಕ್ಕೆ ಸದ್ವಿನಿಯೋಗ ಮಾಡುವ ಜ್ಞಾನ ಸಂಪಾದನೆ ಮಾನವನಿಗೆ ಶ್ರೇಯಸ್ಸು ತರುತ್ತದೆ. ಬಡವರಲ್ಲಿ ಇರುವ ಜ್ಞಾನ ಶ್ರೀಮಂತ ರಲ್ಲಿರದು. ಶ್ರೀಮಂತ ರಲ್ಲಿರುವ ಹಣ ಬಡವರಲ್ಲಿರದು. ಇಬ್ಬರೂ ಪರಮಾತ್ಮನ ಪ್ರತಿಬಿಂಬ ವಾದರೂ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ಸೋಲುವರು ಇದೇ ಮಾಯೆಯ ಪ್ರಭಾವ.
ಮಹಾತ್ಮರಾಗಲು ಕಷ್ಟ ಮಹಾಪ್ರಜೆಯಾಗಲು ಸಾಧ್ಯವಿದೆ ಮಹಾರಾಜನಾಗೋದಕ್ಕೆ ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ.ಆದರೂ ಮಹಾರಾಜರಿಗಿಂತ ವೈಭವದ ಜೀವನ ನಡೆಸಿದ್ದಾರೆಂದರೆ ಇದಕ್ಕೆ ಸಹಕಾರ ನೀಡಿದ ಪ್ರಜೆಗಳೇ ಕಾರಣ. ಎಲ್ಲರಿಗೂ ಸೇರಬೇಕಾದದ್ದನ್ನು ಒಬ್ಬರೆ ಕೂಡಿಹಾಕಿಕೊಂಡರೆ ಭ್ರಷ್ಟಾಚಾರ. ಇವರನ್ನು ಸಾಧಕರೆಂದರೆ ಇನ್ನಷ್ಟು ಜನರು ಇವರಂತೆಯೇ ಬೆಳೆಯುವರು. ಹಾಗಾಗಿ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂದಂತೆ ಭ್ರಷ್ಟಾಚಾರವೆಂದು ತಿಳಿದೂ ಭ್ರಷ್ಟರಿಗೆ ಸಹಕಾರ ನೀಡಿದರೆ ಅದರ ಪ್ರತಿಫಲ ಸಹಕಾರ ನೀಡಿದವರೆ ಅನುಭವಿಸೋದು.
ಪ್ರಜಾಪ್ರಭುತ್ವದಲ್ಲಿ ಬಡತನಬೆಳೆದಿರೋದು ಅಜ್ಞಾನದಿಂದ. ಅಜ್ಞಾನವು ಶಿಕ್ಷಣದಲ್ಲಿಯೇ ಬೆಳೆದಿದೆ. ಅಜ್ಞಾನ ಎಂದರೆ ತಿಳುವಳಿಕೆ ಇಲ್ಲವೆಂದಲ್ಲ ಸತ್ಯದ ತಿಳುವಳಿಕೆ ಇಲ್ಲವೆಂದು. ಭೌತಿಕದ ಸತ್ಯವನ್ನು ನಂಬಿ ಅಧ್ಯಾತ್ಮ ಸತ್ಯದ ವಿರುದ್ದ ನಿಂತರೆ
ಹಣ ಇದ್ದರೂ ಶಾಶ್ವತವಾದಶಾಂತಿ ಸುಖ,ನೆಮ್ಮದಿ ತೃಪ್ತಿ ಯ ಕೊರತೆಯಿರುತ್ತದೆ. ಕಾರಣಕ್ಕಾಗಿ ಹಿಂದಿನ ರಾಜಮಹಾರಾಜರು ತಮ್ಮ ಕೊನೆಗಾಲದಲ್ಲಿ ಎಲ್ಲಾ ಅಧಿಕಾರ ತೊರೆದು ವಾನಪ್ರಸ್ಥಾಶ್ರಮಕ್ಕೆ ಹೋಗಿ ಪರಮಾತ್ಮನ ಸೇವೆಯಲ್ಲಿ ಜೀವನ್ಮುಕ್ತಿ ಪಡೆದರು. ಈಗ ವನವಿಲ್ಲ ಕಾಡನ್ನು ನಾಡನ್ನಾಗಿಸಿ ಪ್ರಾಣಿ ಪಕ್ಷಿಗಳಿಗೂ ವಾಸಮಾಡಲಾಗುತ್ತಿಲ್ಲ. ಇನ್ನು ಮಾನವನಿಗೆಲ್ಲಿದೆ ನೆಮ್ಮದಿ? ಆದರೂ ಮನೆಯೊಳಗೆ ಇದ್ದು ಯೋಗಮಾರ್ಗದಿಂದ. ಪರಮಾತ್ಮನ ಕಡೆಗೆ ಹೋಗಲು ಹೆಚ್ಚಿನ ಹಣವೂ ಬೇಡ ಅಧಿಕಾರವೂ ಬೇಡ.ಜ್ಞಾನವಿದ್ದರೆ ಸಾಕು.
ಜೀವನದಲ್ಲಿ ನಿಧಾನವಾಗಿ ಸತ್ಯ ತಿಳಿಯುತ್ತಾ ಏರಬೇಕು. ಒಮ್ಮೆ ಗೇ ಶ್ರೀಮಂತ ರಾಗಲು ಹೊರಗಿನ ಭ್ರಷ್ಟಾಚಾರ ಕ್ಕೆ ಬಲಿಯಾದರೆ ತಿರುಗಿ ಬರೋದಕ್ಕೆ ಕಷ್ಟ. ಹಾಗಾಗಿ ಅಲ್ಪ ಸ್ವಲ್ಪ ಹಣವನ್ನೂ ಸದ್ಬಳಕೆಮಾಡಿಕೊಂಡು ಜೀವನ ಸತ್ಯ ತಿಳಿದು ತಿಳಿಸುತ್ತಾ ಅಧ್ಯಾತ್ಮದ ಕಡೆಗೆ ಹೋದವರನ್ನು ನಾವೀಗಲೂ ಸ್ಮರಿಸಿಕೊಳ್ಳಲು ಕಾರಣ ಅವರಲ್ಲಿದ್ದ ಜ್ಞಾನಶಕ್ತಿಯಷ್ಟೆ.
ಜ್ಞಾನ ಹಂಚಿದರೆ ಬೆಳೆಯುತ್ತದೆ. ಹಂಚುವಾಗ ಯಾವುದೇ ಕೆಟ್ಟ ಸ್ವಾರ್ಥ ಅಹಂಕಾರ ವಿರಬಾರದು. ಪರಮಾತ್ಮನೇ ನೀಡಿದ ಜ್ಞಾನವನ್ನು ಪರಮಾತ್ಮನಿಗೇ ಕೊಡುವುದರಲ್ಲಿ ತೃಪ್ತಿ ಶಾಂತಿ ಮುಕ್ತಿ ಇದೆ. ಈ ತರಹದಲ್ಲಿ ನಾವು ದೇಶದ ಪ್ರಜೆಯಾಗಿ ದೇಶದ ಒಳಗಿದ್ದು ದೇಶದ ನೆಲ ಜಲದ ಋಣ ತೀರಿಸಲು ನಮ್ಮ ಸಂಪಾದನೆಯ ಹಣವನ್ನು ದೇಶಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲು ದೇಶಭಕ್ತಿ ಆಂತರಿಕ ವಾಗಿರಬೇಕಷ್ಟೆ
ತೋರುಗಾಣಿಕೆಯ ನಾಟಕದ ಭಕ್ತಿ ಯಿಂದ ಋಣ ತೀರದು.
ಭ್ರಷ್ಟಾಚಾರ ತಡೆಯಲು ಅಧಿಕಾರ ಹಣವಿಲ್ಲದೆಯೂ ಸಾಧ್ಯ.ಅಂದರೆ ಭ್ರಷ್ಟರಿಗೆ ಸಹಕಾರ ನೀಡದಿದ್ದರೆ ಭ್ರಷ್ಟಾಚಾರ ಇರೋದಿಲ್ಲ.ಕಳ್ಳರಿಗೆ ಸಹಕಾರ ನೀಡದಿದ್ದರೆ ಕಳ್ಳರು ಬೆಳೆಯೋದಿಲ್ಲ. ಆದರೆ ಕಳ್ಳರನ್ನು ಹಿಡಿಯುವ ಪೋಲಿಸ್ ಕಳ್ಳನಿಂದ ಹಣ ಪಡೆದು ಸಹಕಾರ ಕೊಟ್ಟರೆ ಬೇಲಿಯೇ ಎದ್ದು ಹೊಲಮೇಯ್ದಂತೆ.ಹಾಗೆಯೇ ಒಬ್ಬ. ಗುರು ಶಿಕ್ಷಕ ಶಿಷ್ಯನ ಅಥವಾ ವಿದ್ಯಾರ್ಥಿಯ ಹಣ ಹಾಗು ಅಧಿಕಾರ ನೋಡಿ ತಪ್ಪು ತಿದ್ದದೆ ಆಶೀರ್ವಾದ ಮಾಡಿದರೆ ಎಲ್ಲಿದೆ ಧರ್ಮ?
ನಮ್ಮ ಭಾರತದಲ್ಲಿರುವ ಅಸಂಖ್ಯಾತ ಬಡವರಿಗೆ ಅವರಲ್ಲಿನ ಜ್ಞಾನ ಪ್ರತಿಭೆ ಆಸಕ್ತಿ ಗುರುತಿಸಿ ಪೂರಕವಾದ ಶಿಕ್ಷಣ ನೀಡಿ ಹಸಿದ ಹೊಟ್ಟೆಗೆ ಅನ್ನ ದಾನ ಮಾಡಿ ಹಸಿದ ಜ್ಞಾನಿಗಳಿಗೆ ವಿದ್ಯಾದಾನ ಮಾಡಿದರೆಅದೇ ಧರ್ಮ. ಒಟ್ಟಿನಲ್ಲಿ ಈ ದಾನ ದಾನವರಿಂದ ಆಗಬಾರದಷ್ಟೆ. ಸ್ವಚ್ಚ ಭಾರತ ಸ್ವಚ್ಚ ಶಿಕ್ಷಣ ಸ್ವಚ್ಚ ಜ್ಞಾನದಿಂದ ಸಾಧ್ಯ.ಇದಕ್ಕೆ ಸ್ವಚ್ಚ ಹೃದಯವಂತಿಕೆ ಅಗತ್ಯ. ಹೃದಯದ ಕಸಿ ವಿಜ್ಞಾನ ಮಾಡಬಹುದು.ಆದರೆ ಹೃದಯವಂತರನ್ನು ಜ್ಞಾನಿಗಳೇ ಬೆಳೆಸಬೇಕಿತ್ತು. ಇದ್ದಾರೆ ಗುರುತಿಸುವಲ್ಲಿ ಪ್ರಜಾಪ್ರಭುತ್ವ ಸೋತಿದೆ.ಅದಕ್ಕೆ ರಾಜಕೀಯ ದಿಕ್ಕು ತಪ್ಪಿ ನಡೆದಿದೆ. ಇದಕ್ಕೆ ಕಾರಣ ಪ್ರಜಾಸರ್ಕಾರ.
ಅಂದರೆ ನಮ್ಮಲ್ಲಿರುವ ಅಂತರ.ಜ್ಞಾನವಿಜ್ಞಾನ, ಸ್ತ್ರೀ ಪುರುಷ ಭೂಮಿ ಆಕಾಶ, ಬಡವ ಶ್ರೀಮಂತ. ಈ ಅಂತರದಲ್ಲಿ ಮಧ್ಯವರ್ತಿಗಳು ನಿಂತು ಜೀವನವನ್ನು ಅವಾಂತರ
ಮಾಡಿದರೆ ಸರಿಪಡಿಸುವವರು ಯಾರು? ನಮ್ಮ ಸತ್ಯಕ್ಕೆ ಧರ್ಮಕ್ಕೆ ಚ್ಯುತಿ ಬರಲು ಕಾರಣ ನಮ್ಮ ಭೌತಿಕ ಚಿಂತನೆ. ಅಧ್ಯಾತ್ಮ ದ ಹಾದಿಯಲ್ಲಿ ಭೌತಿಕದಲ್ಲಿ ನಡೆದವರು ಮಹಾತ್ಮರಾದರು. ಹಾಗಾದರೆ ಸೋತವರು ಯಾರು? ಗೆದ್ದವರು ಎಲ್ಲಿ? ಅಗೋಚರ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡವರು ಸೋತವರು. ಸದ್ಬಳಕೆ ಮಾಡಿಕೊಂಡವರು ಗೆದ್ದವರು. ಇದೇ ಅಂತರಾತ್ಮಶಕ್ತಿ. ಪರಮಾತ್ಮನ ತಿಳಿದರೆ ಗೆದ್ದಂತೆ. ತಿಳಿಯದೆ ಆಳಿದರೆ ಸೋತಂತೆ.
Thursday, May 25, 2023
ಮಹಾಭಾರತ ಅಂದು ಇಂದು
Tuesday, May 23, 2023
ಸಾಲವೇ ಶೂಲ ಸಹಕಾರವೇ ಇದರ ಮೂಲ
ನವಗ್ರಹ ಮಂತ್ರ ಮತ್ತು ಅದರ ಅರ್ಥ
Monday, May 22, 2023
ಮಾನವ ಸಾಲ ತೀರಿಸಲು ಸಾಧ್ಯವೆ?ಅಥವಾ ಮಹಾತ್ಮರೆ?
Saturday, May 20, 2023
ಭಾರತೀಯ ಸರ್ಕಾರ ಎಡವಿದ್ದೆಲ್ಲಿ?
Friday, May 19, 2023
ಸಾಹಿತ್ಯದ ಸತ್ಯ ಅನುಭವ
Thursday, May 18, 2023
ತತ್ವಶಾಸ್ತ್ರದಿಂದ ಶಾಂತಿ ಸಿಗುವುದೆ ತಂತ್ರದಿಂದಲೆ?
Wednesday, May 17, 2023
ಇದುಆತ್ಮನಿರ್ಭರ ಭಾರತವೆ ಆತ್ಮದುರ್ಭಲ ಭಾರತವೆ?
Tuesday, May 16, 2023
ಮಾನವ ಯಾರನ್ನೂ ಅಜ್ಞಾನದಿಂದ ಆಳಬಾರದು
ಹೊರಗಿನ ರೋಗಕ್ಕೆ ಕಾರಣ ವಿದೇಶಿ ವ್ಯವಹಾರ ಜ್ಞಾನ
ಸತ್ಯಕ್ಕೆ ಚ್ಯುತಿ ಬಂದರೆ ಪರಮಾತ್ಮನೊಲಿಯೋದಿಲ್ಲ
Monday, May 15, 2023
ಹೋರಾಟದ ದಿಕ್ಕು ಬದಲಾವಣೆ ಅಗತ್ಯವಿದೆ
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...