ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, May 31, 2025

ದ್ವೇಷದಿಂದ ದೇಶ ಕಟ್ಟಲಾಗದು

ದ್ವೇಷವಿರುವ‌ ಕಡೆ ಜ್ಞಾನ ಬೆಳೆಯೋದಿಲ್ಲ. ಜ್ಞಾನವಿಲ್ಲದ ಕಡೆ ಧರ್ಮ ನಿಲ್ಲೋದಿಲ್ಲ. ಧರ್ಮ ವಿಲ್ಲದ ಕಡೆ ಸತ್ಯವಿರೋದಿಲ್ಲ.ಸತ್ಯವಿಲ್ಲದೆಡೆ ದೈವತ್ವಕ್ಕೆ ಬೆಲೆ ಇರೋದಿಲ್ಲ.
ಹಾಗಾದರೆ  ಯಾವುದು  ಇರಬಾರದು? ಯಾವುದು ಇರಬೇಕು? 
ಪ್ರೀತಿ ವಿಶ್ವಾಸ ಭಕ್ತಿ ಶ್ರದ್ಧೆ  ಭಯ ಇವುಗಳು  ತೋರುಗಾಣಿಕೆಯ ನಾಟಕವಾದಷ್ಟೂ  ಅಪಾಯ ಕಟ್ಟಿಟ್ಟ ಬುತ್ತಿ. ಶಂಖದಿಂದ‌ಬಂದದ್ದಷ್ಟೇ ತೀರ್ಥ ಎಂದರೆ ಶಂಖ ಎಷ್ಟು ಸ್ವಚ್ಚವಿದೆ ಎನ್ನುವ ಜ್ಞಾನವಿದ್ದರೆ ಉತ್ತಮ ತೀರ್ಥ ಪ್ರಸಾದವಾಗಿರುತ್ತದೆ. ಶಂಖನಾದ ಪೂಜೆಗೂ ಮಾಡಬಹುದು.ಯುದ್ದಕ್ಕೂ ಬಳಸಬಹುದು. ಆದರೆ ಇದು ನಮ್ಮ ಮೂಲ  ಧರ್ಮಕ್ಕೆ ವಿರುದ್ದವಿರಬಾರದಷ್ಟೆ.

ಸೇವೆ ಹೇಗಿರಬೇಕು?

ದೇಶಭಕ್ತರು ದೇಶದೊಳಗೆ ಸೇವೆ ಮಾಡಿದರೆ  ದೇಶ ಗೌರವಿಸುವುದಿಲ್ಲ. ಅದೇವಿದೇಶದೊಳಗಿದ್ದು  ಸ್ವದೇಶದ ಸೇವೆ ಮಾಡಿದರೆ ಗೌರವ ಹೆಚ್ಚುವುದು. ಯಾವುದು ಸರಿ?
ಎರಡೂ ಸೇವೆಯೇ ಆಗಿದೆ  ಯಾವುದರಲ್ಲಿ ಪ್ರತಿಫಲಾಪೇಕ್ಷೆ  ಇಲ್ಲವೋ ಅದು ನಿಜವಾದ ಸೇವೆಯಾಗಿರುತ್ತದೆ.
ದೇಶದೊಳಗೆ  ಸೇವೆ ಮಾಡೋದು  ಧರ್ಮ. ಧರ್ಮ ಕಾರ್ಯ ನಿಸ್ವಾರ್ಥ ‌ನಿರಹಂಕಾರದಿಂದ‌ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದರೆ ಪರಮಧರ್ಮ. ಇದು  ಋಣದಿಂದ‌‌ ಬಿಡುಗಡೆ‌ಗೊಳಿಸಿ ಆತ್ಮಕ್ಕೆ ಶಾಂತಿ ಕೊಡುತ್ತದೆ.
ಅಂತರಾತ್ಮನ ಶಾಂತಿಗಾಗಿಯೇ ಪರಮಾತ್ಮನ ಸೇವೆ ಎಂದಾಗ ತಾಯಿ ಸೇವೆ,ಭೂ ಸೇವೆ ಪ್ರಜಾಸೇವೆ,ದೇಶಸೇವೆ,ಸಮಾಜಸೇವೆ, ಸಂಸಾರ ಸೇವೆಯು  ಪರಮಾತ್ಮನಿಗೆ  ಸಲ್ಲಬೇಕೆಂದರೆ  ಸತ್ವ ಸತ್ಯ ತತ್ವದಲ್ಲಿರಬೇಕು.

ಒಳಗಿನಿಂದ ಅರಿವು ಮೂಡುವುದಕ್ಕೂ‌ಹೊರಗಿನಿಂದ ಅರಿವು‌ ಬೆಳೆಯುವುದಕ್ಕೂ  ಅಂತರವಿದ್ದರೂ ಎರಡೂ  ಸೇರಿದಾಗ ಒಂದೇ  ಆಗುತ್ತದೆ. ಜ್ಞಾನ ವಿಜ್ಞಾನ ದ ಅಂತರದಲ್ಲಿ ಸಾಮಾನ್ಯ ಜ್ಞಾನ‌ನಿರ್ಲಕ್ಯ ಮಾಡಿದರೆ  ಮಾನವ‌
ಮಾನವನಾಗಿರೋದಿಲ್ಲ. ಮನುಕುಲಕ್ಕೆ ‌ಮಾಧ್ಯಮವಾಗಿರುವ ಭೂಮಿಯನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಕಾಶಕ್ಕೆ   ಏಣಿ ಹಾಕೋ  ವಿಜ್ಞಾನವೂ ಅಜ್ಞಾನವಾಗುತ್ತದೆ.
ಅಧ್ಯಾತ್ಮ ಸಂಶೋಧನೆಯಾಗದೆ  ಭೌತಿಕದಲ್ಲಿ ಸಂಶೋಧನೆ ಮಾಡುತ್ತಾ ಸೇವೆ ಎಂದರೆ  ಅಸುರರೂ ಬೆಳೆಯುವರು.
ದಾನಧರ್ಮ  ಅಸುರರಿಗೂ  ಇದ್ದರೂ  ಅದರ ಮೂಲ ಗುರಿ ಸ್ವಾರ್ಥ ಅಹಂಕಾರ  ಪ್ರತಿಫಲಾಪೇಕ್ಷೆ  ಆದಾಗ  ಅಧರ್ಮ ಬೆಳೆಯುತ್ತದೆ. ಭ್ರಷ್ಟ ದುಷ್ಟರಲ್ಲಿ‌ಹಣವಿದ್ದರೂ  ಅದರ ದುರ್ಭಳಕೆ ಹೆಚ್ಚಾಗಿರುತ್ತದೆ. ಇತರರಿಗೆ  ಕೊಟ್ಟರೂ  ಅದೂ ಕೂಡ ಪಾಪದ ಹಣವಾಗಿದ್ದು ಪಡೆದವರಿಗೂ ಕಷ್ಟ ನಷ್ಟ.
ಹಾಗಾಗಿ ಹಣದಿಂದ ಸೇವೆ ಮಾಡೋದಕ್ಕೂ ಸತ್ಯಜ್ಞಾನದಿಂದ ಸೇವಕರಾಗೋದಕ್ಕೂ ವ್ಯತ್ಯಾಸವಿದೆ. 
ದೇವರು ಕೇಳಿದ್ದೆಲ್ಲಾ ಕೊಡಬಹುದು. ಕೊಟ್ಟದ್ದನ್ನು ಬಳಸುವ‌ ಜ್ಞಾನ‌ ಮಾನವನಿಗಿರಬೇಕು. ಅಥವಾ  ಏನು ಕೇಳಿದರೆ ಆತ್ಮತೃಪ್ತಿ ಸಿಗಬಹುದೆನ್ನುವ ಆತ್ಮಜ್ಞಾನವಿದ್ದರೆ  ಕೇಳೋದೆ ಇಲ್ಲ. ಕೊಡೋನು‌ ಕೊಡಬಹುದಷ್ಟೆ.
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ‌ನಾಮ ಒಂದಿದ್ದರೆ ಸಾಕು.. ದಾಸರಂತೆ  ಬದುಕುವುದು ಕಷ್ಟ.ಕೊನೆಪಕ್ಷ ದೇಶ ಸೇವೆಯಲ್ಲಿ ದಾಸರಾಗಿ  ಸತ್ಯ ಧರ್ಮ ಕ್ಕೆ ಸಹಕರಿಸುವ‌ಗುಣ ಇದ್ದರೆ ಈ ದಾಸ್ಯತ್ವದಿಂದ  ಬಿಡುಗಡೆ ಸಾಧ್ಯ.
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ? ಪ್ರಜೆಗಳು ಯಾರ ದಾಸರಾಗಿ   ಸೇವಕರಾಗಿದ್ದಾರೆ? 
"ಸರ್ಕಾರದ ಕೆಲಸ ದೇವರ‌ ಕೆಲಸ" ಎಂದರು ಈಗ ಹೇಗಿದೆ?
ದೈವತ್ವದ ವಿರುದ್ದವಿದ್ದರೆ  ಸೇವೆ ಯಾರದ್ದಾಗುತ್ತದೆ?
ಸತ್ಯದ ವಿರುದ್ದವಿದ್ದರೆ  ದೇವರು ಕಾಣುವರೆ?
ದೇಶ ಒಂದೇ ಇದ್ದರೂ  ಅದರ ಒಳಗಿದ್ದು ವಿದೇಶ ಸೇವೆ ಮಾಡಿದರೆ  ಋಣ ತೀರುವುದೆ? ಭೂಮಿಯನ್ನು ಮಾರಿಕೊಂಡು ಹಣಗಳಿಸಿ   ಭೂ ತಾಯಿಯ ಮಕ್ಕಳನ್ನು ಆಳಿದರೆ  ಭೂ ಸೇವೆ ಆಗುವುದೆ? ಹೀಗೇ ಪ್ರತಿಯೊಂದು ಧರ್ಮ , ಜಾತಿ,ಪಂಗಡ,ಭಾಷೆ, ಸಂಸ್ಕೃತಿ ಶಾಸ್ತ್ರ  ಮಾನವನ ಸೃಷ್ಟಿ. ಮೂಲವನ್ನರಿಯದೆ ಹೊರಗೆ ಬೆಳೆದಿರುವ ಹಲವುಗಳು  ಮೂಲಶಕ್ತಿಯಿಂದ ದೂರವಾದಷ್ಟೂ  ಅಜ್ಞಾನ ಆಗುತ್ತದೆ. ಅಂತರ‌ಬೆಳೆದಷ್ಟೂ ಅವಾಂತರ ಸೃಷ್ಟಿ ಮಾಡುವ ಮಧ್ಯವರ್ತಿಗಳು  ಅತಂತ್ರಸ್ಥಿತಿಗೆ  ತಲುಪಿದಾಗ  ಇದನ್ನು ಸರಿಪಡಿಸಲು ಮಹಾತ್ಮರ ಜನ್ಮಗಳಾಗಿವೆ. ಆ ಮಹಾತ್ಮರ ಸೇವೆ ಪರಮಾತ್ಮನೆಡೆಗೆ ನಡೆಸಿತ್ತು .ಯಾವಾಗಿದು ದೇಶ ಬಿಟ್ಟು ವಿದೇಶಕ್ಕೆ  ಹೋಯಿತೋ  ದೇಶ ಹಿಂದುಳಿಯಿತು. ಒಟ್ಟಿನಲ್ಲಿ ತತ್ವದಿಂದ ಸಮಾನತೆ ಬೆಳೆಯಬೇಕು. ಸಮಾನತೆ ಶಾಂತಿಯೆಡೆಗೆ ನಡೆಸುತ್ತದೆ. ಶಾಂತಿಯಿಂದ  ಮನಸ್ಸು ಧ್ಯಾನ ಕ್ಕೆ  ಇಳಿಯುತ್ತದೆ. ಧ್ಯಾನದಿಂದ ಆತ್ಮಜ್ಞಾನ.ಆತ್ಮಜ್ಞಾನದಿಂದ ಆತ್ಮಾವಲೋಕನ. ಆತ್ಮಾವಲೋಕನದಿಂದ ಮಾನವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅರಿವೇ ಗುರು.ಗುರು ಸೇವೆಯೇ  ಶ್ರೇಷ್ಠ ವಾಗಿರುತ್ತದೆ. ಇದರಲ್ಲಿ ತಾಯಿಯೇ ಮೊದಲ ಗುರು.‌ತಂದೆ ಎರಡನೇ ಗುರು.ಯಾವಾಗ ತಂದೆತಾಯಿಯರಿಗೆ  ಜ್ಞಾನ ಬರುವುದೋ ಮಕ್ಕಳು ಅದೇ ಮಾರ್ಗ ಹಿಡಿಯುವರು. ಇದರ ಮೂಲ ಶಿಕ್ಷಣ ವಾಗಿದೆ.
ಒಂದು ದೇಶದ ಸೇವೆ ಮಾಡೋದು ಸುಲಭವಿಲ್ಲ. ಮೊದಲು ಮನೆಯೊಳಗೆ  ಸೇವೆಯ ಅರ್ಥ ತಿಳಿದವರು ಸಮಾಜ ಮತ್ತು ದೇಶ ಸೇವೆಯನ್ನು ಮನೆಯೊಳಗೆ ಇದ್ದೂ ಮಾಡುವರು. ಅಂದರೆ ಇದು ತೋರುಗಾಣಿಕೆಯಾಗಿರದು.

ಸಮಾಧಾನಕ್ಕೆ ಸತ್ವಯುತ ದಾನ ಧರ್ಮ ಅಗತ್ಯ.

ಗುರು ಹಿರಿಯರ ಜ್ಞಾನ ಕಿರಿಯರಿಗೆ ಅಗತ್ಯವಿದೆ.

🚩🔯🌸🌄⚛🌅🌸🔯

*ನ ಸಾ ಸಭಾ ಯತ್ರ ನ ಸಂತಿ ವೃದ್ಧಾ* 
*ನ ತೇ ವೃದ್ಧಾ ಯೇ ನ ವದಂತಿ ಧರ್ಮಮ್ |*
*ನಾಸೌ ಧರ್ಮೊ ಯತ್ರ ನ ಸತ್ಯಮಸ್ತಿ*
*ನ ತತ್ಸತ್ಯಂ ಯಚ್ಛಲೇನಾಭ್ಯುಪೇತಮ್ ||*
(ಮಹಾಭಾರತ)

ಯಾವ ಸಭೆಯಲ್ಲಿ ವೃದ್ಧರಾದವರಿರುವುದಿಲ್ಲವೋ-ಆದು ಸಭೆಯೇ ಅಲ್ಲ. ಅದಕ್ಕೆ ಸಭೆಯೆಂದು ಕರೆಸಿಕೊಳ್ಳುವ ಯೋಗ್ಯತೆಯಿಲ್ಲ. ವೃದ್ಧರಿಂದ ಕೂಡಿರುವ ಸಭೆಯೂ ಆಗಿರಬಹುದು. ಆದರೆ ಧರ್ಮವನ್ನು ಪ್ರತಿಪಾದಿಸದ ವೃದ್ಧರಿರುವ ಒಂದು ಸಭೆಯಲ್ಲಿ ವೃದ್ಧರಿರುವರೆಂದು ಪರಿಗಣಿಸುವ ಸಾಧ್ಯತೆಯಿಲ್ಲ. (ಧರ್ಮವನ್ನು ಪ್ರತಿಪಾದಿಸದವರು ವೃದ್ದರೇ ಅಲ್ಲ.) ಒಂದು ವೇಳೆ ಅವರು ಧರ್ಮವನ್ನೂ ಹೇಳಬಹುದು. ಸತ್ಯಾಂಶವನ್ನು ಬಿಟ್ಟು ಧರ್ಮವನ್ನು ಹೇಳಹೋದರೆ ಅದು ಧರ್ಮವೆನಿಸುವುದಿಲ್ಲ. ವಂಚನೆಯಿಂದ ಕೂಡಿದ, ಕೇವಲ ತೋರಿಕೆಯ ಸತ್ಯವು ಸತ್ಯವೆನಿಸಿಕೊಳ್ಳುವುದಿಲ್ಲ.

ವಯಸ್ಸಿನಲ್ಲಿ ವೃದ್ದರೆಂದು ಕರೆಸಿಕೊಳ್ಳಬಹುದು.ಆದರೆ ಜ್ಞಾನದಲ್ಲಿ ಪ್ರವೃದ್ದರಾಗೋದು ಕಷ್ಟ. ಆದರೂ ಅವರವರ ಸಂಸಾರದ ವಿಚಾರದಲ್ಲಿ ಹೆಚ್ಚಿನ ಅನುಭವವಿರೋದು ಹಿರಿಯರಿಗೇ ಆದ್ದರಿಂದ ಹಿರಿಯರ ಮಾತನ್ನು ಕೇಳಬೇಕೆಂದು  ಕಿರಿಯರಿಗೆ ತಿಳಿಸುವುದು  ರೂಢಿಯಲ್ಲಿದೆ.
ವಾಸ್ತವದಲ್ಲಿ ಸಾಕಷ್ಟು ವಿದ್ಯೆ ಹಣ ಅಧಿಕಾರ ಆಸ್ತಿ ಮಾಡಿದ ಮಕ್ಕಳಿಗೆ ಗುರುಹಿರಿಯರ ಜ್ಞಾನವಿರದೆ  ದೂರ ಮಾಡುವರು.
ಆದರೆ, ಮೂಲಧರ್ಮ ಕರ್ಮ  ಸಿದ್ಧಾಂತಗಳು  ರಕ್ತಗತವಾಗಿ ಒಳಗಿರುವಾಗ ದೈಹಿಕವಾಗಿ  ಸಬಲ ರಾದರೂ  ಅಧ್ಯಾತ್ಮ ದಲ್ಲಿ ದುರ್ಭಲರೆ ಆಗಿರುತ್ತಾರೆ. ಹೀಗಾಗಿ ಅದರ ಫಲ ಕೊನೆಯಲ್ಲಿ ಅನುಭವಿಸುವಾಗ  ತತ್ವದರ್ಶನ ಕಷ್ಟವಾಗಿ ತಂತ್ರಕ್ಕೆ ಜೀವ ಬಲಿಯಾಗುತ್ತದೆ.
ದೇಹದೊಳಗಿರುವ ಅಂಗಾಂಗಗಳನ್ನು ಹೇಗೆ ವೈಧ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯಿಂದ ತಿಳಿಸುವುದೋ ಹಾಗೆ ಅಂಗಾಂಗದೊಳಗಿರುವ ದೈವೀಕ ಶಕ್ತಿಯನ್ನು ಅಧ್ಯಾತ್ಮ ದ ಸಂಶೋಧನೆಯಿಂದ ಗುರುತಿಸಿ ಸಂಸ್ಕಾರಿಸುವ  ವಿದ್ಯೆಯ ಮೂಲಕ  ಆತ್ಮಶುದ್ದಿ ಮಾಡಿಕೊಳ್ಳಲು ಗುರು ಹಿರಿಯರಾದವರು  ತಿಳಿಸಿ‌ ಬೆಳೆಸುವುದೇ‌ ನಿಜವಾದ ಧರ್ಮ
ಶಿಕ್ಷಣ. 
ಎಷ್ಟು  ಓದಿದರೂ ಹೊರಗಿನ  ಆಹಾರ ವಿಹಾರ ವ್ಯವಹಾರ ಶುದ್ದವಿಲ್ಲದಿದ್ದರೆ  ವಯಸ್ಸಾದರೂ  ಜ್ಞಾನ ಬರದು.
ಹಿಂದೂ ಸನಾತನ ಧರ್ಮದಲ್ಲಿ  ಒಳಗಿನ ಶುದ್ದತೆಗೆ ಮೊದಲು ಪ್ರಾಮುಖ್ಯತೆ ಕೊಟ್ಟು ನಂತರ‌ಹೊರಗಿನ ಶುದ್ದತೆಗೆ ಸಹಕಾರ ಕೊಟ್ಟಿರುವ ಕಾರಣದಿಂದ ಒಳಗಿರುವ ಗುರು ಹಿರಿಯರಲ್ಲಿ ಧರ್ಮ ಸೂಕ್ಮತೆ  ಇದ್ದು  ಸಭೆ ಸಮಾರಂಭಗಳಲ್ಲಿ  ಮೊದಲು ಅವರಿಗೆ  ಸ್ಥಾನಮಾನಕೊಟ್ಟು  ಅವರ ಉಪಸ್ಥಿತಿ ಉಪದೇಶ ಆದೇಶ  ಸಹಕಾರದಿಂದ ಕಾರ್ಯಕ್ರಮ ನಡೆಯುತ್ತಿತ್ತು.
ಆದರೆ ಇಂದು  ಹಣವೇ ಎಲ್ಲಾ  ಮೂಲವಾಗಿ ಜ್ಞಾನಕ್ಕೆ ‌ಬೆಲೆ ಇರದೆ  ಅಕ್ರಮವಾಗಿ  ಆಕ್ರಮಣಕ್ಕೆ  ಹೆಸರುವಾಸಿಯಾಗಿರುವವರನ್ನು ಮುಂದೆ ತಂದು ಸಂಸಾರದ ಜೊತೆಗೆ ಸಮಾಜವೂ ಅಶಾಂತಿಯ ಕಡೆಗೆ ನಡೆದಿರೋದು ಅಧರ್ಮ ವಾಗುತ್ತಿದೆ.
ಒಂದು ಸಣ್ಣ  ಹೇಳಿಕೆಯನ್ನು ದೊಡ್ಡ ಮಾಡಿಕೊಂಡು ಹೊರಗೆ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೆ  ದೊಡ್ಡದಾಗಿದ್ದ ಸತ್ಯ ಧರ್ಮ ಹಿಂದುಳಿಯುತ್ತದೆ. ಮೊದಲು ನಮ್ಮ ಕಾಲು‌ಬುಡದ ಕಸ ತೆಗೆದುಕೊಂಡು ಸ್ವಚ್ಚ ವಾದರೆ ಹೊರಗಿನ‌ ಕಸ ಹೆಚ್ಚುವುದಿಲ್ಲ. ನಾವೇ ಸರಿಯಿಲ್ಲದೆ  ಕಿರಿಯರಿಗೆ ಬುದ್ದಿ ಹೇಳೋದರಲ್ಲಿ ಅರ್ಥ ವಿಲ್ಲ. ಇದೇ ಕಾರಣದಿಂದ ಇತ್ತೀಚೆಗೆ ಮಕ್ಕಳು ಗುರು ಹಿರಿಯರಲ್ಲಿ ಭಕ್ತಿ ಭಯವಿಲ್ಲದೆ  ಹೊರಗಿದ್ದಾರೆ. ಇದನ್ನು  ಬೆಳೆಸಿದ ಶಿಕ್ಷಣವನ್ನು  ಸರಿಪಡಿಸುವ ಜವಾಬ್ದಾರಿ ಹಿರಿಯರಿಗಿದೆ. ಕೇವಲ ಮಾತಿನಿಂದ ಕಾಲಹರಣ ಮಾಡದೆ ಕೃತಿ ಮನೆಯೊಳಗೆ ನಡೆಸಿದರೆ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಆಸ್ತಿ ಜ್ಞಾನವಾಗಬಹುದು.
ವಯಸ್ಸಾದಂತೆ ದೈಹಿಕ ಶಕ್ತಿ ಕ್ಷೀಣವಾದರೂ ಅನುಭವ ಜ್ಞಾನ ಇರುತ್ತದೆ. ಅನುಭವ ಅಧ್ಯಾತ್ಮ ದೆಡೆಗೆ ಇದ್ದರೆ  ಉತ್ತಮ.
ಕೇವಲ ಭೌತಿಕಾಸಕ್ತಿಯೇ ಇದ್ದರೆ ಅಧಮ.
ಮಕ್ಕಳು ಮೊಮ್ಮಕ್ಕಳವರೆಗೂ ಆಸ್ತಿ ಮಾಡಲು ಹಣಮಾಡಿದವರ ಕಥೆ ಈಗ ವೃದ್ದಾಶ್ರಮ ಗಳಲ್ಲಿ ಕಾಣಬಹುದು. ಏನೂ ಆಸ್ತಿ ಮಾಡದೆ  ಇದ್ದವರಿಗೂ ಕಷ್ಟ.
ಕಾರಣವಿಷ್ಟೆ  ಆಸ್ತಿ ಮಾಡೋದೇ  ವಿದ್ಯೆಯ ಗುರಿಯಾಗಿದೆ. ಅದರೊಳಗೆ ಸತ್ವ ತತ್ವ ಸತ್ಯವಿದ್ದರೆ ಮಾತ್ರ ಮಾನವನಿಗೆ ‌ಜ್ಞಾನವಿರುತ್ತದೆ .ಜೀವನದ ಗುರಿಕಡೆಗೆ  ನಡೆಯುತ್ತಾ ಉತ್ತಮವಾದ ಕಾರ್ಯದಿಂದ  ಪ್ರವೃದ್ದರಾಗಿ ವೃದ್ದರಾಗುವರು.
ಧರ್ಮ  ಎಂದಾಕ್ಷಣ ಹಲವು ಬರುತ್ತದೆ. ಆದರೆ ಮಾನವನಾಗಿ‌ ಮಹಾತ್ಮರಾಗುವ ಧರ್ಮ ಅಧ್ಯಾತ್ಮ ದಿಂದ ಸಾಧ್ಯ. ಅಧ್ಯಾತ್ಮ ದಲ್ಲಿ ತನ್ನ ತಾನರಿತು ಅಂತರಂಗ ಶುದ್ದಿ ಮಾಡಿಕೊಂಡು  ಪರಮಾತ್ಮನಿಗೆ  ಶರಣಾಗೋದು. ಪರಮಾತ್ಮನ ಸತ್ವ ತತ್ವ ಸತ್ಯವಿದ್ದರೆ  ಅಲ್ಲಿ ಧರ್ಮ ಇರುತ್ತದೆ.
ಆದರೆ ಭೂಮಿಯಲ್ಲಿ  ಧರ್ಮಾಧರ್ಮಗಳ ನಡುವೆ ಅಂತರ ಬೆಳೆದಷ್ಟೂ  ಮದ್ಯವರ್ತಿಗಳು ಬೆಳೆಯುತ್ತಾ ಅರ್ಧ ಸತ್ಯದ ರಾಜಕೀಯ ಮನೆ ಮಾಡಿ ಆಳುತ್ತದೆ. ಇದಕ್ಕೆ ಗುರುಹಿರಿಯರ ಸ್ತ್ರೀ ಯರ ಸಹಕಾರ  ಸಿಕ್ಕಿದರೆ  ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ. ಆದರೆ ವಿಪರ್ಯಾಸವೆಂದರೆ ಈ ಅರ್ಧ ಸತ್ಯವೇ ವ್ಯವಹಾರ ಮಾದ್ಯಮ ವಾದಾಗ  ಹಣಗಳಿಸುವ ಸಾಧನವೇ‌  ಮಹಾಸಾಧನೆಯಾಗುತ್ತದೆ. ಇದೇ ಭ್ರಷ್ಟ ದುಷ್ಟರ ವಶವಾದರೆ ವಯಸ್ಸಾದರೂ ಭ್ರಷ್ಟಚಾರ ಏನು ಎನ್ನುವ ಸತ್ಯ ತಿಳಿಯದೆ  ಮಾನವನ ಜೀವ ಹೋಗುತ್ತದೆ.ಮತ್ತದೇ ಪುನರಾವರ್ತನೆ.. ಕಲಿಕೆಯ ಪ್ರಭಾವವಷ್ಟೆ.
ಪುಸ್ತಕದಿಂದ ಮಸ್ತಕಕ್ಕೆ ಏರಿಸಿಕೊಂಡ ವಿಷಯಗಳು ಹೃದಯಾಂತರಾಳದವರೆಗೆ ಇಳಿಸಿಕೊಂಡು ಜೀವನದ ಸಾರವನ್ನು ಅರ್ಥ ಮಾಡಿಕೊಂಡವರು‌ನಿಜವಾದ ಗುರು ಹಿರಿಯರು. ಕೇವಲ ಓದಿ ಹೊರಗೆ ಪ್ರಚಾರ ಮಾಡಿ ಹಣಗಳಿಸಿ ಮಹಾ ವ್ಯಕ್ತಿಯಾಗಬಹುದು.‌ಮಹಾತ್ಮರಾಗೋದಿಲ್ಲ.

Wednesday, May 28, 2025

ಭೋಗದಿಂದ ಕೊರೊನ ರೋಗ

ಹಿಂದೂ  ಸನಾತನ ಧರ್ಮದ ಪ್ರಕಾರ  ಭೂಮಿಯಲ್ಲಿ ಜನ್ಮ ಪಡೆಯಲು ಕಾರಣ ಭೂಮಿ ಋಣ ತಾಯಿ ಋಣ..
ಭೂ ಸೇವೆಯಿಂದ ಭೂಋಣ ತೀರುವುದು.ಭೂಮಿಯನ್ನು  ದುರ್ಭಳಕೆ ಮಾಡಿಕೊಂಡರೆ ಕೊರೊನ ಹೆಚ್ಚುವುದು.

ಋಣ ಸಂದಾಯ ಮಾಡಲು ಸತ್ಕರ್ಮ ಸ್ವಧರ್ಮ ಸ್ವಾಭಿಮಾನ ಸ್ವಾವಲಂಬನೆ ಸ್ವತಂತ್ರ ಜ್ಞಾನದಿಂದ ಸಾಧ್ಯವೆಂದರು.
ಹಾಗಾದರೆ  ಇಂದು ಇದು ಯಾರಿಗೆ ಸಾಧ್ಯವಾಗಿದೆ? ಶಿಕ್ಷಣವೇ ನಮ್ಮದಲ್ಲದ  ವಿಚಾರವಾದರೆ ಭಾಷೆಯೂ  ಅನ್ಯರದ್ದೆ ಆದರೆ, ವ್ಯವಹಾರವೂ ಹೊರಗಿನವರದ್ದೆ ಹೀಗಿರುವಾಗ ನಮ್ಮ ತಾಯಿ ಋಣ ತೀರುವುದೆ? ಇದರಲ್ಲಿ ಕೇವಲ ಹೆತ್ತ ತಾಯಿ ಮಾತ್ರವಲ್ಲ ದೇಶ, ಭಾಷೆ ,ಸಂಸ್ಕೃತಿ , ಆಚಾರ ವಿಚಾರ‌  ಪ್ರಚಾರಗಳಿಂದ ಸಾಲ ಅಥವಾ ಋಣ ತೀರಿದೆಯೆ ಬೆಳೆದಿದೆಯೆ?
ಸಾಮಾನ್ಯ ಜ್ಞಾನದ ಈ ವಿಚಾರದ ಬಗ್ಗೆ ಚರ್ಚೆ ಆಗದು.
ಅದಕ್ಕಾಗಿ  ಇಂದು ಋಣಭಾರಹೊತ್ತು  ಜೀವ ಹೋಗುತ್ತಿದೆ ಮತ್ತೆ ಮತ್ತೆ ಜನಗಮ ಪಡೆಯುತ್ತದೆ. ಜನಸಂಖ್ಯೆ‌ ಬೆಳೆದಿದೆ
ಜ್ಞಾನಿಗಳ ಸಂಖ್ಯೆ ಇಳಿಯುತ್ತಿದೆ. 
ಏನೇ  ಆದರೂ  ಋಣ ತೀರಿಸಲು ನಿಸ್ವಾರ್ಥ ‌ನಿರಹಂಕಾರ  ದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕೆಂದು ಭಗವದ್ಗೀತೆ ಯಲ್ಲಿ ಸ್ವಯಂ ಪರಮಾತ್ಮನೇ ತಿಳಿಸಿರುವುದಾಗಿದೆ.  ಕಲಿಕೆಯ ಪ್ರಭಾವ ಕಲಿಗಾಲ. ಯೋಗದಿಂದ ಸ್ವಾವಲಂಬನೆ ಭೋಗಕ್ಕಾಗಿ ಪರಾವಲಂಬನೆ  ಹೆಚ್ಚಾಗಿದೆ.

ಭೂ ಸೇವೆಯಿಂದ ಮುಕ್ತಿ

ಹಿಂದೂ  ಸನಾತನ ಧರ್ಮದ ಪ್ರಕಾರ  ಭೂಮಿಯಲ್ಲಿ ಜನ್ಮ ಪಡೆಯಲು ಕಾರಣ ಭೂಮಿ ಋಣ ತಾಯಿ ಋಣ..
ಭೂ ಸೇವೆಯಿಂದ ಭೂಋಣ ತೀರುವುದು.ಭೂಮಿಯನ್ನು  ದುರ್ಭಳಕೆ ಮಾಡಿಕೊಂಡರೆ ಕೊರೊನ ಹೆಚ್ಚುವುದು.

ಋಣ ಸಂದಾಯ ಮಾಡಲು ಸತ್ಕರ್ಮ ಸ್ವಧರ್ಮ ಸ್ವಾಭಿಮಾನ ಸ್ವಾವಲಂಬನೆ ಸ್ವತಂತ್ರ ಜ್ಞಾನದಿಂದ ಸಾಧ್ಯವೆಂದರು.
ಹಾಗಾದರೆ  ಇಂದು ಇದು ಯಾರಿಗೆ ಸಾಧ್ಯವಾಗಿದೆ? ಶಿಕ್ಷಣವೇ ನಮ್ಮದಲ್ಲದ  ವಿಚಾರವಾದರೆ ಭಾಷೆಯೂ  ಅನ್ಯರದ್ದೆ ಆದರೆ, ವ್ಯವಹಾರವೂ ಹೊರಗಿನವರದ್ದೆ ಹೀಗಿರುವಾಗ ನಮ್ಮ ತಾಯಿ ಋಣ ತೀರುವುದೆ? ಇದರಲ್ಲಿ ಕೇವಲ ಹೆತ್ತ ತಾಯಿ ಮಾತ್ರವಲ್ಲ ದೇಶ, ಭಾಷೆ ,ಸಂಸ್ಕೃತಿ , ಆಚಾರ ವಿಚಾರ‌  ಪ್ರಚಾರಗಳಿಂದ ಸಾಲ ಅಥವಾ ಋಣ ತೀರಿದೆಯೆ ಬೆಳೆದಿದೆಯೆ?
ಸಾಮಾನ್ಯ ಜ್ಞಾನದ ಈ ವಿಚಾರದ ಬಗ್ಗೆ ಚರ್ಚೆ ಆಗದು.
ಅದಕ್ಕಾಗಿ  ಇಂದು ಋಣಭಾರಹೊತ್ತು  ಜೀವ ಹೋಗುತ್ತಿದೆ ಮತ್ತೆ ಮತ್ತೆ ಜನಗಮ ಪಡೆಯುತ್ತದೆ. ಜನಸಂಖ್ಯೆ‌ ಬೆಳೆದಿದೆ
ಜ್ಞಾನಿಗಳ ಸಂಖ್ಯೆ ಇಳಿಯುತ್ತಿದೆ. 
ಏನೇ  ಆದರೂ  ಋಣ ತೀರಿಸಲು ನಿಸ್ವಾರ್ಥ ‌ನಿರಹಂಕಾರ  ದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕೆಂದು ಭಗವದ್ಗೀತೆ ಯಲ್ಲಿ ಸ್ವಯಂ ಪರಮಾತ್ಮನೇ ತಿಳಿಸಿರುವುದಾಗಿದೆ.  ಕಲಿಕೆಯ ಪ್ರಭಾವ ಕಲಿಗಾಲ. ಯೋಗದಿಂದ ಸ್ವಾವಲಂಬನೆ ಭೋಗಕ್ಕಾಗಿ ಪರಾವಲಂಬನೆ  ಹೆಚ್ಚಾಗಿದೆ.

ವಾಸ್ತವ ಸತ್ಯ ಅರಿತು ನಡೆಯಬೇಕು

*...🌹.*ಸ್ಪೂರ್ತಿ ಕಿರಣ*✍️
        *ವಾಸ್ತವ ಹೇಗಿದೆಯೋ ಹಾಗೆಯೇ ಅದನ್ನು ಎದುರಿಸಿ. ಅದು ಹೀಗಿರಬೇಕಿತ್ತು, ಹಾಗಿರಬೇಕಿತ್ತು ಅಂತ ಅಂದುಕೊಳ್ಳುವುದು ವ್ಯರ್ಥ. ವಾಸ್ತವ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಸಹನೀಯಗೊಳಿಸುವುದೇ ಬದುಕಿನಲ್ಲಿ ಅಡಗಿರುವ ಸ್ವಾರಸ್ಯ.* *ನನ್ನನ್ನು ನಂಬಿ ಎಂದು ಯಾರನ್ನೂ ಕೇಳಿಕೊಳ್ಳಬಾರದು* *ನಮ್ಮ ನಡೆ-ನುಡಿಯಿಂದ ಬೇರೆಯವರೇ ನಮ್ಮನ್ನು ನಂಬುವಂತಾಗಬೇಕು.ಜೀವನದಲ್ಲಿ ಶಾಂತವಾಗಿರಬೇಕೆಂದರೆ ಮರೆಯಲಾಗದ ವ್ಯಕ್ತಿಗಳನ್ನು ಕ್ಷಮಿಸಿಬಿಡಬೇಕು,ಕ್ಷಮಿಸಲಾಗದ ವ್ಯಕ್ತಿಗಳನ್ನು ಮರೆತುಬಿಡಬೇಕು*. *. 
ಮರೆಯುವುದು ಒಂದು ರೋಗವೆನ್ನುವರು.ಆದರೆ ಕೆಟ್ಟದ್ದನ್ನು ಮರೆಯುವುದು ಆರೋಗ್ಯದ ಲಕ್ಷಣ. ಒಳ್ಳೆಯದನ್ನು ‌ಮರೆಯಬಾರದು. ವಾಸ್ತವದಲ್ಲಿ ಬದುಕೋದಕ್ಕೆ ಭೂತ ಭವಿಷ್ಯದ ಅರಿವಿರೋದು ಉತ್ತಮವಾದರೂ ಅದರೊಳಗೆ ಇದ್ದು  ವಾಸ್ತವ ಮರೆತರೆ  ಕಷ್ಟ.
ಎಷ್ಟೋ ಮಂದಿ  ಜೀವನವಿಡೀ ಹಣಸಂಪಾದನೆಯನ್ನೇ ಗುರಿಯಾಗಿಸಿಕೊಂಡರೆ ಹಲವರಿಗೆ ಹಣದ್ದೇ ಚಿಂತೆ. ಎಷ್ಟು  ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೆಂದರೆ ಹಣದ ಬಳಕೆಯಲ್ಲಿ ದೋಷವಿದೆ ಎಂದಾಗುತ್ತದೆ. ಆಸೆಯೇ ದು:ಖದ ಮೂಲ ಇದು ಅತಿಆಸೆಯಾದಾಗ  ಹಣ ದುರ್ಭಳಕೆ ಆಗುತ್ತದೆ. ಭ್ರಷ್ಟ ದುಷ್ಟರಲ್ಲಿ ಹಣವಿರುತ್ತದೆ ಆದರೆ ಜ್ಞಾನವಿರದ ಕಾರಣದಿಂದಾಗಿ  ಹಣಕ್ಕಾಗಿ  ಅಡ್ಡದಾರಿ ಹಿಡಿದು  ಹಿಂದಿರುಗಲಾಗದೆ  ಅತಂತ್ರಸ್ಥಿತಿಗೆ ತಾವೂ ತಲುಪಿ ಅವರ ಹಿಂದೆ ನಡೆದವರನ್ನೂ ದಾರಿತಪ್ಪಿಸುವರು.
ಹಾಗೆ ದಾರಿತಪ್ಪಿದಾಗ  ಯಾರನ್ನೂ ಕಾರಣವೆನ್ನುವುದು  ತಪ್ಪು ಸರಿದಾರಿ ಹಿಡಿದು ಶಾಂತವಾಗಿದ್ದರೆ  ದಾರಿಸುಗಮವಾಗುತ್ತದೆ. ಅಂತಹ  ಮನಸ್ಥಿತಿ  ಬರಲು  ಕಷ್ಟ.
ಆಗೋದೆಲ್ಲಾ ಒಳ್ಳೆಯದಕ್ಕೆ ಅನುಭವಿಸಿದ ಮೇಲೇ ತಿಳಿಯೋದು ಒಳ್ಳೆಯದು‌ಕೆಟ್ಟದ್ದು ಎರಡೂ ಒಳಗಿರುವ ಬುದ್ದಿ  ಬಳಸಿದಂತಿರುತ್ತದೆಂದು.
ಬುದ್ದಿವಂತಿಕೆ   ಸ್ವಂತ ಜ್ಞಾನದಿಂದ ಬೆಳೆದರೆ ಉತ್ತಮ.

ವಿವೇಚನೆಯಿಂದ ಪಾಂಡಿತ್ಯ

🚩🔯🌸🌄⚛🌅🌸🔯

*ಪರಿಚ್ಛೇದೋ ಹಿ ಪಾಂಡಿತ್ಯಂ* 
*ಯದಾಪನ್ನಾ ವಿಪತ್ತಯಃ ।*
*ಅಪರಿಚ್ಛೇದಕರ್ತೃಣಾಂ* 
*ವಿಪದಃ ಸ್ಯುಃ ಪದೇ ಪದೇ ।।*
(ಸಮಯೋಚಿತ ಪದ್ಯ ಮಾಲಿಕಾ)

ವಿಪತ್ತುಗಳು ಉಂಟಾದರೆ ವಿವೇಚನೆಯಿಂದ ಸಹಿಸುವುದೇ ಪಾಂಡಿತ್ಯ. ವಿವೇಚನೆ ಇಲ್ಲದೆ ಕೆಲಸ ಮಾಡುವವರಿಗೆ 
ಹೆಜ್ಜೆ ಹೆಜ್ಜೆಗೂ ವಿಪತ್ತುಗಳೇ ಉಂಟಾಗುತ್ತವೆ.

ಕೋಪದಿಂದ ಮೂಗು ಕೊಯ್ದುಕೊಂಡರೆ ಮತ್ತೆ ಬರುವುದೆ?ಎನ್ನುವರು. ಕಾಲ ಬದಲಾಗಿದೆ ಮೂಗನ್ನೂ ವೈಧ್ಯಕೀಯ ಜಗತ್ತಿನಲ್ಲಿ ಜೋಡಿಸುವರು.ಆದರೆ ಮೂಲದಲ್ಲಿ ದ್ದ ಮೂಗು ಮತ್ತೆ ಬರೋದಿಲ್ಲ.ಹೀಗೇ ನಮ್ಮ ಮೂಲವನ್ನರಿತು ನಿಧಾನವಾಗಿ  ಮೇಲೇರುವವರಿಗೆವಿವೇಕ ವಿವೇಚನೆ ಇರುತ್ತದೆ. ಬರುವ ಅಡೆಗಡೆಗಳು ವಿಪತ್ತುಗಳನರಿತು ಕೆಲಸ ಮಾಡುವವರಲ್ಲಿ ಸಹನೆಯೂ ಇರುತ್ತದೆ. ಇದನ್ನು ತಾಳಿದವನು ಬಾಳಿಯಾನು ಎಂದಿರುವರು.

ಸಾಯಿಬಾಬಾ ಗುರುವಲ್ಲವೆ?

ಲೇಖನ ಬಹಳ  ದೊಡ್ಡದಾಯಿತು ಓದಲು ಕಷ್ಟ ಎನ್ನುವವರು ಓದುವ ಅಗತ್ಯವಿರದು. ಮಕ್ಕಳ ಶಾಲಾ ಪುಸ್ತಕದ ವಿಷಯಗಳು ನಮಗೆ ಸಂಸಂಬಂಧ ವಿಲ್ಲದಿದ್ದರೂ ಓದಿಕೊಂಡು ಒತ್ತಾಯದಿಂದ ಮಕ್ಕಳ ತಲೆಗೆ ತುಂಬುವ ಕೆಲಸಕ್ಕೆ  ಹಣ  ಕೊಡುವರು. ಆದರೆ  ಅಧ್ಯಾತ್ಮ ಸತ್ಯಕ್ಕೆ  ಬೆಲೆಕಟ್ಟುವುದಿಲ್ಲ   ಹೀಗಾಗಿ   ಅಸತ್ಯ  ಬೇಗನೇ  ಪ್ರಚಾರಕ್ಕೆ‌ ಬರುತ್ತದೆ.  ಪ್ರಚಾರಕ್ಕಾಗಿ   ಗುರುವನ್ನು  ದೇವರನ್ನು  ಬಳಸಿದರೆ  ಜ್ಞಾನ ಬಂದರೆ ಸರಿ.

ಹಿಂದೂಗಳಲ್ಲಿ ಸಾಕಷ್ಟು ಮಂದಿ ಸಾಯಿಬಾಬಾರನ್ನು ಗುರುವೆಂದು  ಅನುಸರಿಸುತ್ತಾರೆ.ಇದನ್ನು ವಿರೋಧಿಸುವವರೂ ಇದ್ದಾರೆ.ಇದರ ಬಗ್ಗೆ  ಚಿಂತನೆ ನಡೆಸಿದರೆ  ಗುರು ಯಾವತ್ತೂ ಒಂದು ವ್ಯಕ್ತಿಯಾಗಿರುವುದಿಲ್ಲ ಶಕ್ತಿಯಾಗಿ  ಜ್ಞಾನವನ್ನು ವಿಜ್ಞಾನವನ್ನು  ಭಕ್ತರಿಗೆ ತಿಳಿಸುತ್ತಲಿರುವರು. ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನ ವಿಶೇಷವಾಗಿರುವ ತಿಳುವಳಿಕೆಯಾಗಿರುತ್ತದೆ.
ವಾಸ್ತವದಲ್ಲಿ ಎಷ್ಟೋ ಗುರುಗಳಿರುವರು.ಭಕ್ತರೂ ಇರುವರು.ಆದರೆ  ಅಧ್ಯಾತ್ಮ ಭೌತ ವಿಜ್ಞಾನದಲ್ಲಿ  ಅಂತರ ಬೆಳೆದು  ಗುರುಗಳ ಶಕ್ತಿಯನರಿತು ತತ್ವದೆಡೆಗೆ ಹೋಗೋರು  ಕಡಿಮೆಯಾಗಿರುವ ಕಾರಣದಿಂದಾಗಿ ಹಣದಿಂದ ಗುರುವನ್ನು ಗೌರವಿಸುವರು.
ಗುರು ಬಯಸೋದು ಜ್ಞಾನ. ಜ್ಞಾನವೇ ಗುರು. ಜ್ಞಾನಸರಸ್ವತಿ ಇಲ್ಲದ ಲಕ್ಮಿಯನ್ನು ಜನ ದುರ್ಭಳಕೆ ಮಾಡಿಕೊಂಡು ಆಳುವರು.
ಇದನ್ನು  ಶ್ರೀ ಶಂಕರಾಚಾರ್ಯರ  ಕಾಲದಲ್ಲಿ  ಶಂಕರರು ಅಧ್ವೈತ ಸಿದ್ದಾಂತವನ್ನು ಪ್ರತಿಪಾದಿಸುವುದರ ಮೂಲಕ ಜನರ ಅಜ್ಞಾನವನ್ನು ಹೋಗಲಾಡಿಸಲೆಂದೇ ಭಾರತದ ನಾಲ್ಕು ದಿಕ್ಕಿನಲ್ಲಿಯೂ ಜ್ಞಾನಪೀಠ ಸ್ಥಾಪನೆ ಮಾಡಿದ್ದರೂ ಇಂದಿಗೂ ಜನರಲ್ಲಿ ವಿಜ್ಞಾನವೆಂದರೆ ಭೌತಿಕ ಸತ್ಯ  ಎನ್ನುವ ಅರ್ಧ ಸತ್ಯದಲ್ಲಿ  ಗುರುವಂದನೆ ನಡೆದಿರೋದು ದುರಂತ.
ಧಾರ್ಮಿಕ  ಕ್ಷೇತ್ರದಲ್ಲಿಯೇ  ಹಣವಿದ್ದರಷ್ಟೆ ಗುರುಗಳನ್ನು ನೇರವಾಗಿ  ಬೇಟಿ ಮಾಡಲು ಅವಕಾಶ ಹಲವು ಕಡೆ ಇದೆ.
ಶ್ರೀ ಸಾಯಿಬಾಬರ ಚರಿತ್ರೆ ಎಲ್ಲರಿಗೂ ತಿಳಿದಿದೆ. ಮುಸ್ಲಿಂ  ಜನಾಂಗದಲ್ಲಿದ್ದು ಅನೇಕ ಪವಾಡಗಳ ಮೂಲಕ ಜನರಿಗೆ ನೀತಿ ಬೋಧನೆ ಮಾಡಿದ್ದ ಮಹಾತ್ಮರು .ಸಾಮಾನ್ಯವಾಗಿ ಬಾಬಾರ ಭಕ್ತರು ಹಣದಿಂದ ಶ್ರೀಮಂತ ರಾಗಿರುವುದನ್ನು ಕಾಣಬಹುದು.
ಹಣವಿದ್ದರೆ  ಜನರಿಗೆ ಸಂಸಾರ ನಡೆಸಲು ಸಾಧ್ಯ.
ಹಾಗೆ ಇವರನ್ನು ಶಿವನ ಅವತಾರವೆನ್ನುವರು. ಶ್ರೀ ಶಂಕರಾಚಾರ್ಯರೂ  ಶಿವನ ಅವತಾರವೇ ಆಗಿದ್ದರಿಂದ ಶಿವಶಕ್ತಿಯ ಸಮಾನತೆಗಾಗಿ ಜ್ಞಾನಯೋಗದ ಮೂಲಕ ಶಕ್ತಿಪೀಠ ಸ್ಥಾಪನೆ ಮಾಡಿದ್ದರಿಂದಾಗಿ ಭಾರತ‌ಇಂದಿಗೂ ವಿಶ್ವ ಗುರು ಎನಿಸಿಕೊಂಡಿದೆ.ಇಲ್ಲಿರುವ ಅಧ್ಯಾತ್ಮ ವಿದ್ಯೆ  ಬೇರೆ ಯಾವ ದೇಶದಲ್ಲೂ ಕಾಣೋದಿಲ್ಲ ಆದರೆ ನಮ್ಮ ಶಿಕ್ಷಣ ಇದರಿಂದ ದೂರವಾಗಿರುವ ಕಾರಣದಿಂದ ದೂರದ ದೇಶದಲ್ಲಿ ಭಾರತೀಯ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ.
ಆದರೆ ಮೂಲದಲ್ಲಿ  ಇರದಿದ್ದರೆ ಮೂಲ ಗುರು ಕಾಣುವರೆ?
ಈ ವಿಚಾರವಾಗಿ   ಚರ್ಚೆ ನಡೆಸದಿದ್ದರೆ  ಗುರು ಗಳಲ್ಲಿಯೇ ಅಂತರ ಬೆಳೆಯುತ್ತಾ  ಗುರಿ ತಲುಪದೆ ಜೀವ ಹೋಗುತ್ತದೆ.
ಒಟ್ಟಿನಲ್ಲಿ ಗುರುವಿನಿಂದ  ಹಣ ಸಿಗುವುದೆ ಜ್ಞಾನವೇ ಎಂದು ಜನ  ಅರ್ಥ ಮಾಡಿಕೊಳ್ಳಲು  ಸತ್ಸಂಗ,ಸದಾಚಾರ,ಸ್ವಾಭಿಮಾನ ಸ್ವಾವಲಂಬನೆ ಸ್ವತಂತ್ರ ಜ್ಞಾನದೆಡೆಗೆ  ನಡೆದಾಗಲೇ ಒಳಗಿದ್ದು ದಾರಿತೋರಿಸುವ ಅರಿವೆಂಬ ಗುರುವಿನ ದರ್ಶನ ಆಗುತ್ತದೆ. ಒಳಗಿರುವ‌ಗುರು ಬಿಟ್ಟು ಹೊರಗಿನ ಗುರುವನ್ನು  ಆಶ್ರಯಿಸಿದರೆ ಹಿಂದಿರುಗಿ ಒಳಗೆ ಬರಲೇಬೇಕೆನ್ನುತ್ತದೆ ಸನಾತನ ಹಿಂದೂಧರ್ಮ.

ಯಾವಾಗ ಒಳಗಿನ ಅರಿವಿಗೆ ವಿರುದ್ದ  ವಿಷಯಗಳು ಹೊರಗಿನಿಂದ  ಒಳಗೆ ಸೇರಿಸುವ ಮಾನವನ ಪ್ರಯತ್ನಕ್ಕೆ ತಕ್ಕಂತೆ ಫಲ ಇಂದು  ಅನುಭವಿಸುವಂತಾಗಿದೆ. ಆದರೆ  ಎಲ್ಲಾ ಒಂದೇ  ಎನ್ನುವ ಹಾಗಿಲ್ಲ. ಇನ್ನೂ ಎಷ್ಟೋ  ಸನಾತನಿಗಳು  ಹಿಂದಿರುವ ವಿಜ್ಞಾನವನ್ನು ಅರಿತು ಇದ್ದಲ್ಲಿ ಯೇ  ಸಾಧಕರಾಗಿದ್ದಾರೆ. ಒಟ್ಟಿನಲ್ಲಿ ಸತ್ವ ರಜಸ್ಸು ತಮಸ್ಸಿನ ಗುಣಗಳಿಂದ  ಜೀವನದಲ್ಲಿ  ಬದಲಾವಣೆಗಳಾಗಿವೆ.
ಎಲ್ಲಾ ಪರಮಾತ್ಮನ ಒಳಗಿದ್ದರೂ ಸತ್ವದಿಂದ ಸತ್ಯವರಿತು ಪರಮಾತ್ಮನ ಸೇರೋದು  ಮೇಲ್ಮಟ್ಟದಲ್ಲಿರುವುದರಿಂದ  ಮೇಲಕ್ಕೆ  ಹೋಗೋದು ಕಷ್ಟ. ಕೆಳಗಿಳಿಯುವುದು ಹಿಂದುಳಿಯುವುದು ಸುಲಭ. ಸುಲಭವಾಗಿರೋದನ್ನು  ನಾವು  ಮಾಡಿದೆವು. ಕಷ್ಟವಾಗಿದ್ದು ಮಹಾತ್ಮರು ಮಾಡಿದ್ದರು. ಪ್ರಯತ್ನ  ನಮ್ಮದು ಫಲ ಭಗವಂತನದು.
ಆಕಾಶಕ್ಕೆ ಏಣಿ ಹಾಕಿ ಏರೋದಕ್ಕೆ ಕಷ್ಟ. ಏರೋಪ್ಲೇನ್  ಮೂಲಕ  ಹೋದರೂ  ಭಗವಂತ ಕಾಣೋದಿಲ್ಲ.
ಹೀಗೇ ನಿರಾಕಾರದಲ್ಲಿರುವ ಶಕ್ತಿಯನರಿತು ನಡೆಯೋದು ಅದ್ವೈತ. ಅದನ್ನು ಸಾಕಾರಕ್ಕೆ ತಂದರೆ ದ್ವೈತ. ಇದರಿಂದ  ಅದ್ವೈತ ದೆಡೆಗೆ  ಸಾಗಿದರೆ ವಿಶಿಷ್ಟಾದ್ವೈತ.

ಹಣದಿಂದ ದೈವತ್ವವಲ್ಲ. ಜ್ಞಾನದಿಂದ ದೈವತ್ವ ಬೆಳೆಸಿದವರು ಗುರುವಾದರು.
ಗುರುವಿನಿಂದ ಶಿಷ್ಯನ ಜ್ಞಾನ ಬೆಳೆದು  ದೇವರನ್ನು ಕಾಣುವ ಭಾಗ್ಯ  ದೊರೆಯಿತು. ಈಗಲೂ  ಗುರುಗಳಿರುವರು.
ನೋಡುವ ದೃಷ್ಟಿ ಕೋನ ಬದಲಾದರೆ  ಅವರಲ್ಲಿ ದೇವರು ಕಾಣುವರು. "ಅಹಂ ಬ್ರಹ್ಮಾಸ್ಮಿ"
ನಾನೇ ಬ್ರಹ್ಮನಾದರೆ ಜೊತೆಗೆ ಜ್ಞಾನ ದೇವತೆ ಇರಬೇಕಲ್ಲವೆ? ನಾನೇ ಎಲ್ಲಾ ಎಂದರೆ  ಎಲ್ಲರಲ್ಲಿಯೂ ನಾನೇ ಇರೋದಲ್ವ?
ನನ್ನಿಂದಲೇ ಎಲ್ಲಾ ನಡೆದಿದೆ ಎಂದರೆ ಭ್ರಷ್ಟಾಚಾರ ವೂ  ಇದರೊಳಗಿದೆಯಲ್ಲ. ಒಟ್ಟಿನಲ್ಲಿ ದೇವಾಸುರರ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ನಾನು ಹೋಗಬೇಕು.
ನಾನಿರುವಾಗಲೇ  ಅರಿವನ್ನು ಬೆಳೆಸಿಕೊಂಡು  ನಾನೆಂಬ ಅಹಂಕಾರ  ಹೋದಾಗಲೇ ನಾನೆಂಬುದಿಲ್ಲ ನಾನು ಕಾರಣಮಾತ್ರನೆನ್ನುವ  ಸತ್ಯದ ಅರಿವಿನಲ್ಲಿದ್ದು ಗುರುಗಳ ಮಾರ್ಗದರ್ಶನದಲ್ಲಿ  ನೇರವಾಗಿ  ಸತ್ಯದೆಡೆಗೆ ಸಾಗಬಹುದು.
ಗುರು ಭಕ್ತರಿಗೆ  ಭೌತಿಕದಲ್ಲಿ ಆಸ್ತಿ ಅಂತಸ್ತು ಹಣ ಅಧಿಕಾರ ಎಲ್ಲಾ ಸುಖವಿದ್ದರೂ ಅದನ್ನು  ಬಳಸುವ  ಜ್ಞಾನವಿದ್ದರೆ ಉತ್ತಮ. ಹಾಗೇ ಎಲ್ಲಾ ಗುರುಗಳ ಶಿಷ್ಯ ವರ್ಗ ಬೇಧ ಬಿಟ್ಟು  ನಡೆಯಲಾಗಿಲ್ಲವೆಂದರೆ  ಹಣ ಬೇರೆ ಜ್ಞಾನ ಬೇರೆಯಾಗಿರುತ್ತದೆ.
ರಾಜಕೀಯ ಕ್ಷೇತ್ರದಲ್ಲಿ ಹಣದ ದುರ್ಭಳಕೆ ಆದರೆ ಜನ ಪ್ರಶ್ನೆ ಮಾಡುತ್ತಾರೆ.ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಆದರೆ ಜನ ಪ್ರಶ್ನೆ ಮಾಡೋದಿಲ್ಲ. ದೇವರು ಉತ್ತರ ಕೊಡುತ್ತಾರೆ.
ಹಾಗೆ ಗುರುವನ್ನು  ದಾರಿತಪ್ಪಿಸಲಾಗದು. ಜನ  ಅರ್ಥ ಮಾಡಿಕೊಳ್ಳದೆ ದಾರಿತಪ್ಪಬಹುದಷ್ಟೆ.
ಭೌತಿಕದ ದೃಷ್ಟಿಯಲ್ಲಿ  ಗುರು ವ್ಯಕ್ತಿಯಾಗಿ ಕಾಣಬಹುದಷ್ಟೆ ಅಧ್ಯಾತ್ಮ ದ ದೃಷ್ಟಿಯಿಂದ ನೋಡಿದಾಗಲೇ ಗುರುವಿನ‌ಶಕ್ತಿ ಅರಿವಿಗೆ ಬರುತ್ತದೆ.
ಬೇಧವಿಲ್ಲದ ತತ್ವವೇ ಅಧ್ವೈತ. ಬೇಧ ಹೆಚ್ಚಾದರೆ ಭಿನ್ನಾಭಿಪ್ರಾಯ ದ್ವೇಷದ ಅಂತರದಲ್ಲಿ ಅಸುರಿ ಶಕ್ತಿಯ ಸಾಮ್ರಾಜ್ಯ ವಾಗುತ್ತದೆ. ಒಟ್ಟಿನಲ್ಲಿ  ಕಣ್ಣಿಗೆ ಕಾಣುವ ದೇವರು ಗುರು. ಮೊದಲ ಗುರು ತಾಯಿ.ತಾಯಿಯನ್ನು ಅರ್ಥ ಮಾಡಿಕೊಳ್ಳಲು  ಜ್ಞಾನ ಬೇಕು.ತಾಯಿಯೇ ಅಜ್ಞಾನದಲ್ಲಿ ಇದ್ದರೆ  ಸರಿಯಾದ ಶಿಕ್ಷಣ ಸ್ತ್ರೀ ಗೆ ಕೊಡಬೇಕಿತ್ತು. ಭಾರತದಲ್ಲಿ  ಇದು ಎಷ್ಟರಮಟ್ಟಿಗೆ ನಡೆದಿದೆ?  
ಹೆಣ್ಣೊಂದು ಕಲಿತರೆ ಸಂಸಾರವೇ  ಕಲಿತಂತೆ ಎಂದರು.ಆದರೆ  ಕಲಿಕೆ  ವಿಚಾರ ಹೊರಗಿನದ್ದಾದರೆ  ಒಳಗಿನ ಸತ್ಯ ತತ್ವ ಸತ್ವ ಹಿಂದುಳಿದಂತೆಯೇ ಸರಿ.
ಪುರಾಣ ಇತಿಹಾಸದ ಕಥೆ ಹಿಡಿದು  ಹಣ ಮಾಡಬಹುದು.
ಆದರೆ ಅದರೊಳಗಿದ್ದ ಧರ್ಮ ಸೂಕ್ಮತೆ ಅರ್ಥ ಆಗಬೇಕಾದರೆ ಸರಿಯಾದ ಆಧ್ಯಾತ್ಮಿಕ ವಿಜ್ಞಾನ ದ ಅರಿವು ಅಗತ್ಯವಿದೆ. ಎಷ್ಟು ಹಣವಿದ್ದರೂ ಸದ್ಬಳಕೆ ಆಗದೆ  ಆಡಂಬರ,ವೈಭೋಗಕ್ಕೆ ಬಳಸಿದರೆ  ಸಾಲ ತೀರದು. ಸಾಲವೇ ಶೂಲ ಯಾವುದಿದರ ಮೂಲ ಎಂದರೆ ಅಜ್ಞಾನವೇ ಇದರ ಮೂಲವಾಗಿದೆ. 
ಇದನ್ನು ಹೊರಗಿನ  ಗುರುವಾಗಲಿ ಸರ್ಕಾರವಾಗಲಿ ದೇವರಾಗಲಿ  ಶಿಕ್ಷಣವಾಗಲಿ ವ್ಯವಹಾರವಾಗಲಿ ಸಾಲವಾಗಲಿ  ತೀರಿಸಲಾಗದು.ಒಳಗಿನವರೆ ಎಚ್ಚರವಾದರೆ ಸಾಧ್ಯವಿದೆ.
ಒಳಗಿರುವ. ಅಸಮಾನ್ಯವಾದ ಅರಿವಿಗೆ ಪೂರಕವಾದ ವಿದ್ಯೆ ಕಲಿಸಿ ನಡೆಸುವವರೆ ಗುರುವಾಗಿರುವರು.
ಹಿಂದೆ ಗುರುಕುಲಗಳಲ್ಲಿ ಶಿಷ್ಯರಲ್ಲಿದ್ದ  ಆಸಕ್ತಿ ಪ್ರತಿಭೆ ಜ್ಞಾನಕ್ಕೆ  ಧರ್ಮ ಶಿಕ್ಷಣ ನೀಡುವ ಮೂಲಕ  ಉತ್ತಮ ಪ್ರಜೆಗಳನ್ನು  ನೀಡುತ್ತಿದ್ದರೆಂದರೆ  ರಾಷ್ಟ್ರ ವಿಶ್ವ ಗುರು ವಾಗಲು  ಅಧ್ಯಾತ್ಮ ವಿದ್ಯೆಯೇ ಮೂಲಾಧಾರವಾಗಿತ್ತು.
ಈಗ ಕಾಲಬದಲಾಗಿದೆ. ಜ್ಞಾನ ವಿಜ್ಞಾನ  ಬೇರೆ ಎಂದಾಗಿದೆ.
ಸ್ತ್ರೀ ಪುರುಷರ ನಡುವೆ ಅಂತರದಲ್ಲಿ ರಾಜಕೀಯ ಮನೆ ಮಾಡಿದೆ. ಅಜ್ಞಾನದೊಳಗಿರುವ ಜ್ಞಾನ,ಅಧರ್ಮದಲ್ಲಿ ಧರ್ಮ, ಅಸತ್ಯದಲ್ಲಿ ಸತ್ಯ,ವಿದೇಶದಲ್ಲಿ ದೇಶವನ್ನು ಸೇರಿಸಿ  ತಾನೇ ಸರಿ ಎನ್ನುವ ಅಹಂಕಾರ  ಸ್ವಾರ್ಥ ಮಾನವನಲ್ಲಿ ಇನ್ನಷ್ಟು ಅಜ್ಞಾನವನ್ನು ಬೆಳೆಸಿಕೊಂಡು   ಗುರುವನ್ನು ಗುರುತಿಸೋದರಲ್ಲಿ ಸೋತಿರುವಾಗ  ಸ್ವಯಂ ಪ್ರಕಾಶಕರಾಗಿ ಬೆಳಗಲು ಕಷ್ಟ. ಮಾನವ‌ ಮನಸ್ಸು ಮಾಡಿದರೆ ಏನು‌ಬೇಕಾದರೂ ಸಾಧನೆ ಮಾಡಬಹುದು. ಆದರೆ ಗುರು  ಆಗೋದಕ್ಕೆ   ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಳಗಿನ ಸತ್ಯ ಧರ್ಮ ದೆಡೆಗೆ ನಡೆಯುವುದು  ಮುಖ್ಯ ಎಂದಿರುವರು ಮಹಾತ್ಮರಾದ ಯೋಗಿಗಳು.
ವ್ಯಕ್ತಿ ಹೋದರೂ ಜ್ಞಾನಶಕ್ತಿ ಇರುವುದು.ಹೀಗಾಗಿ ಎಷ್ಟೋ ಜ್ಞಾನಿಗಳು‌ ಮೌನವಾಗಿಯೇ  ಜಗತ್ತನ್ನು ಅರಿತು  ಗುರಿ ತಲುಪಿದ್ದಾರೆ... ಈಗ ಪ್ರಚಾರವೇ  ಹೆಚ್ಚು.ಆಚಾರ ವಿಚಾರದಲ್ಲಿ  ಶುದ್ದತೆ  ಕುಸಿದಿದೆ ಎಂದರೆ ಪರಮಾತ್ಮನಿಗೆ ತಲುಪಿದೆಯೆ? ಗುರುಕೃಪೆ ಆಗಿದೆಯೆ? ಪ್ರಶ್ನೆ ಮಾಡಿದರೂ ತಪ್ಪು  ಮಾಡದಿದ್ದರೂ ತಪ್ಪು. ಒಟ್ಟಿನಲ್ಲಿ  ನಮಗೆ ತಪ್ಪು ಅರಿವಿಗೆ ಬಂದರೂ ಹಿಂದಿರುಗಿ ಹೋಗಲು ಕಷ್ಟವೆಂದರೆ ಅರ್ಧ ಸತ್ಯದ ಮಧ್ಯವರ್ತಿ ಮಾನವರಿಗೆ ಈ ಕಡೆ ಸುರರು ಇನ್ನೊಂದು ಕಡೆ ಅಸುರರಲ್ಲಿ  ಸರಿ ಯಾರು ಎಂದು ತಿಳಿಯದೆ ಅತಂತ್ರಸ್ಥಿತಿಗೆ ‌ ಜೀವನ‌  ತಲುಪಿದೆ ಎಂದರ್ಥ.
ಏನೂ ಇಲ್ಲ ಅತಿಯಾಗಿದ್ದನ್ನು ಬಿಟ್ಟು ಹೊರಡಬೇಕಷ್ಟೆ.
ಜ್ಞಾನವಾಗಲಿ ಹಣವಾಗಲಿ ಅತಿಯಾದರೆ  ಸ್ವತಂತ್ರವಿರದು.
ಅವರವರ ಮೂಲದ ಗುರುಹಿರಿಯರ ಧರ್ಮ ಕರ್ಮಕ್ಕೆ  ತಕ್ಕಂತೆ  ನಡೆಯೋದನ್ನು ಕಲಿಸದ ವಿದ್ಯೆ  ಅವಿದ್ಯೆಯಾಗಿ ಸಾಲ ಮಿತಿಮೀರಿದೆ. ಭೂಮಿಯನ್ನು ಆಳೋದಕ್ಕೆ ಅಧರ್ಮ ಅನ್ಯಾಯ ಅಸತ್ಯ  ಬೆಳೆದಿದೆ. ತನ್ನ ತಾನರಿತು  ನಡೆಯೋ ಜ್ಞಾನಶಕ್ತಿ ಬೆಳೆಸದ ಶಿಕ್ಷಣ ಹೊರಗಿನಿಂದ  ಪಡಯಲಾಗಿದೆ.
ಹೊರಗಿನಿಂದ  ಪಡೆದದ್ದು ಹೊರಗೆ ಕೊಟ್ಟು ಒಳಗಿಳಿಯಬೇಕು. ಒಳಗಿಳಿದಷ್ಟೂ ಕತ್ತಲೆಯೇ .ಆ ಕತ್ತಲಲ್ಲಿ ಬೆಳಕನ್ನು ತೋರಿಸುವವರೆ ಗುರು. ಗುರುವಾದವರಿಗೆ  ಇದರ ಅನುಭವ ಇದ್ದರೆ ಶಿಷ್ಯರನ್ನು  ಆ ದಾರಿಯಲ್ಲಿ ನಡೆಸಬಹುದು.
ಕಾಲ ಬದಲಾಗಿದೆ. ಹೀಗಾಗಿ ಕಾಲಕ್ಕೆ ತಕ್ಕಂತೆ  ಜ್ಞಾನವೂ ಬದಲಾಗುತ್ತದೆ. ಆದರೆ ಮೂಲ ಸತ್ಯ ಒಂದೇ ಇರುತ್ತದೆ. ಭೂಮಿ ಒಂದೇ, ದೇಶ ಒಂದೇ, ಧರ್ಮ. ದೇವರು, ಜಾತಿ,ಭಾಷೆ ತಾಯಿ ಒಬ್ಬರೆ ಆದರೂ  ಒಂದನ್ನು ಬಿಟ್ಟು ಹೊರಬಂದಾಗ ಹಲವು‌ ಹಲವುಗಳಾಗಿ  ಕವಲು ಒಡೆಯೋದು ಸಹಜ.  ಒಡೆದದ್ದನ್ನು ಒಂದು ಮಾಡೋ ಶಕ್ತಿ ಗುರುಗಳಿಗಿದ್ದರೆ ತತ್ವ. ಇನ್ನಷ್ಟು ಬಿರುಕು ಭಿನ್ನಾಭಿಪ್ರಾಯ  ಬೆಳೆಸಿದರೆ  ತಂತ್ರ ಅತಂತ್ರಸ್ಥಿತಿಗೆ ತಲುಪಿಸುತ್ತದೆ. ಇಷ್ಟೇ ಜೀವನ.

ಊಟ ಉಪಚಾರ‌  ಉಪಕಾರ  ಹೊರಗಿನವರಿಗೆ ಮಾಡಿದರೆ ಪ್ರತಿಯಾಗಿ ಉಡುಗೊರೆ ಸಿಗುತ್ತದೆ. ಆದರೆ ಒಳಗಿನವರಿಗೆ ಮಾಡಿದರೆ ಇನ್ನಷ್ಟು ತಿರಸ್ಕಾರ  ಅವಮಾನ, ಅಪಮಾನಕ್ಕೆ ಗುರಿಯಾದಂತೆಲ್ಲಾ  ಮಾನವನ ಮನಸ್ಸು ಹದಗೆಡುತ್ತದೆ.
ಹೀಗಾಗಿ ತೋರುಗಾಣಿಕೆಯ ನಾಟಕವೇ ಪ್ರಧಾನವಾಗಿ  ಸತ್ಯ ತಿಳಿಯದೆ ಅನುಭವಕ್ಕೆ ಬರದೆ ಜೀವ ಹೋಗುತ್ತದೆ. ಭೂಮಿಯಲ್ಲಿ ಜನಸಂಖ್ಯೆ ಬೆಳೆಯಲು ಅಜ್ಞಾನ ಕಾರಣ. ಜನಸಂಖ್ಯೆ ನಿಯಂತ್ರಣ  ಕಾನೂನಿದೆ ಆದರೆ ಜ್ಞಾನದ ಶಿಕ್ಷಣ ಕಡ್ಡಾಯ ಮಾಡೋ ಕಾನೂನಿನ ಕೊರತೆಯಿದೆ. ಹೀಗಾಗಿ ಗುರಿ ತಲುಪದ ಜೀವಾತ್ಮ  ಅತೃಪ್ತ ಆತ್ಮಗಳಾಗಿ ಅಲೆಯುವಂತಾಗಿದೆ.‌ಕಾಣದ ಆತ್ಮ ಕಾಣುವ‌ ದೇಹದೊಳಗೆ ಸೇರಿಕೊಂಡು  ಕುಣಿಸುತ್ತಿವೆ. ಕುಡಿತ‌ಕುಣಿತದಿಂದ ಪರಮಾತ್ಮ ಕಾಣುವನೆ? 
ಕುರುಡು ಕಾಂಚಾಣ   ಕುಣಿಯುತಲಿತ್ತು‌  ಕಾಲಿಗೆ‌  ಬಿದ್ದವರ ತುಳಿಯುತಲಿತ್ತು...

Sunday, May 18, 2025

ತತ್ವಮಸಿ- ನೀನು ಅದೇ ಆಗಿದ್ದೀಯ

ಅಧ್ಯಾತ್ಮ ಸಂಶೋದನೆಯ ತತ್ವಮಸಿಯ ಅರ್ಥ ತಿಳಿದವರು ನೀನು ಅದೇ ಆಗಿದ್ದೀಯ ಎನ್ನುವ ಸತ್ಯದೆಡೆಗೆ ಬ್ರಹ್ಮಜ್ಞಾನದ ಕಡೆಗೆ ದೈವತ್ವದೆಡೆಗೆ ಸಾಗಿದ್ದರು.
ಈಗಲೂ ತತ್ವಮಸಿ ಪದವಿದೆ.ನಾವೆಲ್ಲರೂ ಅದೇ ಆಗಿದ್ದೇವೆ ಆದರೆ ನಮ್ಮಲ್ಲಿ ತತ್ವವಿಲ್ಲ ತಂತ್ರವಿದೆ. ತಂತ್ರ ಯಾವತ್ತೂ ಅರ್ಧ ಸತ್ಯದೆಡೆಗೆ ನಡೆಸುತ್ತದೆ.ಇದೇ ಕುತಂತ್ರದಿಂದ  ಮುಂದೆ ನಡೆದಾಗ  ನಾವೆಲ್ಲರೂ ಅಸುರರ ವಶದಲ್ಲಿರುವ ಸುರರೆ ಎಂದಾಗಬಹುದು.
ಹಣಕ್ಕಾಗಿ ಅಧಿಕಾರಕ್ಕಾಗಿ ಸ್ಥಾನಕ್ಕಾಗಿ ಮಾನವನು ಏನು‌ಬೇಕಾದರೂ ಮಾಡಬಹುದು. ಆದರೆ  ಅದು ಸಿಕ್ಕಿದ ಮೇಲೆ  ಯಾರು ಏನು ಹೇಳಿದರೂ‌ಕೇಳಲೇಬೇಕಷ್ಡೆ. ಅದಕ್ಕೆ ಅನ್ಯರ ವಶದಲ್ಲಿ ವೈಭೋಗದ ಜೀವನ‌ ನಡೆಸೋದಕ್ಕಿಂತ ತಮ್ಮ ಮನೆಯ ಗಂಜಿ ಅನ್ನವೇ ಶ್ರೇಷ್ಠ ಎಂದಿರುವರು. ಒಳಗೆ ಸೇರಿಸಿಕೊಂಡ ಮೇಲೆ ಹೊರಗೆ ಹಾಕೋದು ಕಷ್ಟ.  ಇದರಲ್ಲಿ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ  ಜೀವ ಹೋದರೂ ಒಳಗೇ ಬೆಳೆಯುತ್ತದೆ. 

ಭ್ರಷ್ಟಾಚಾರ ಮತ್ತು ಭಯೋತ್ಪಾದನೆ  ಎರಡೂ ದೇಶವನ್ನೇ ಹಾಳುಮಾಡುತ್ತಿದೆ.‌ಜನರಿಗೆ ಭ್ರಷ್ಟಾಚಾರ ವನ್ನು ತಡೆಯಲಾಗದಿದ್ದರೆ ಭಯೋತ್ಪಾದನೆ  ಬೆಳೆಯುತ್ತದೆ.

ಭ್ರಷ್ಟಾಚಾರ ಹಿಂದಿನಿಂದ ಜನರನ್ನು ತುಳಿದು ಮೇಲೇಳದಂತೆ ಮಾಡುತ್ತದೆ.
ಭಯೋತ್ಪಾದನೆ ಮುಂದಿನಿಂದ ಕೊಲ್ಲುತ್ತದೆ.  ಒಂದು  ಕಣ್ಣಿಗೆ ಕಾಣದೆ  ರಾಜಾರೋಷವಾಗಿ ನಡೆದರೆ ಇನ್ನೊಂದು ರೋಷದಲ್ಲಿ  ಓಡುತ್ತದೆ. 
 ನಡಿಗೆ  ಸರಿಪಡಿಸಲಾಗದಿದ್ದರೆ ಓಡೋರನ್ನು ತಡೆಯುವುದು ಕಷ್ಟ. ಹಾಗಾಗಿ‌ಮೊದಲು ಮಾನವನಿಗೆ ನಡೆ ನುಡಿಯ ಸಂಸ್ಕಾರ ಅಗತ್ಯವಾಗಿದೆ. ಮಕ್ಕಳಿರುವಾಗಲೇ  ಯಾರು ಇದನ್ನು ಕಲಿಸಿ‌ಬೆಳೆಸಿರುವರೋ ಅವರಿಗೆ  ಭ್ರಷ್ಟಾಚಾರ ದ ಅರ್ಥ ತಿಳಿಯುತ್ತದೆ ಭಯೋತ್ಪಾದಕರು  ಯಾರೆಂಬುದೂ ಅರಿವಿಗೆ ಬರುತ್ತದೆ.
ಕೆಲವರು ತಮ್ಮ  ಸ್ವಾರ್ಥ ಸುಖಕ್ಕಾಗಿ ಜನರಲ್ಲಿ ಭಯಹುಟ್ಟಿಸಿ  ಕೊಂದರೆ  ಕೆಲವರಿಗೆ  ಜೀವಭಯವಿಲ್ಲದೆ ಯಾರೋ  ಕಲಿಸಿದ  ಭಯೋತ್ಪಾದಕ ಕೃತ್ಯದಲ್ಲಿಯೇ  ಕಾಲಕಳೆಯುತ್ತಾ  ಜನರ ಜೀವವನ್ನು  ತೆಗೆಯುವರು.
ಹೀಗಿರುವಾಗ. ಕಾಣದ ಕೈಗಳ  ಭಯೋತ್ಪಾದನೆ  ಜನರನ್ನು ಈ ಕಡೆ  ಒಳ್ಳೆಯದೂ ಮಾಡಲಾಗದೆ ಕೆಟ್ಟದ್ದನ್ನು ಸಹಿಸಿಕೊಂಡು ಇರಲಾಗದೆ  ಇದ್ದಲ್ಲೇ ಸಾಯುವರು.
ಸಾವು ಎಲ್ಲರಿಗೂ ಇದೆ. ಆದರೆ ಹೇಗೆ ಜೀವ ಹೋಯಿತು ಎನ್ನುವುದರ ಮೇಲೇ ಜೀವಾತ್ಮನಿಗೆ ಮುಂದಿನ  ಗತಿ   ದೊರೆಯುವುದು.
ಸತ್ಯ ತಿಳಿದು‌ಹೋದರೆ ಸದ್ಗತಿ. ಧರ್ಮ ಕ್ಕಾಗಿ ಹೋರಾಡಿ‌ ಮಡಿದರೆ  ವೀರಗತಿ. ಎಲ್ಲಾ ತಿಳಿದೂ ಹಾಗೇ ನಡೆದರೆ ಅಧೋಗತಿ. ಹೀಗೇ ಗತಿಸಿದ‌ಮೇಲಿನ ಸ್ಥಿತಿಗತಿಯನ್ನು ಯಾವ  ಭ್ರಷ್ಟಾಚಾರಿ ಭಯೋತ್ಪಾದಕರು  ಕೇಳೋದಿಲ್ಲ. ಜೀವ ಎಲ್ಲರ ಒಳಗಿನ  ಶಕ್ತಿ. ಅದನ್ನು ಹೇಗೆ ಯಾರ ಕೈಗೆ ಯಾಕೆ ಯಾವಾಗ ಒಪ್ಪಿಸಿಕೊಂಡು ಒಪ್ಪಂದ ಮಾಡಿಕೊಂಡರೂ ಅವರ ಪಾಲಾಗಿ ಹೋಗುವುದಷ್ಟೆ.
ಇಲ್ಲಿ ದೇವತೆಗಳು ಮಾನವರು ಅಸುರರು ಎನ್ನುವ ಮೂರು ವರ್ಗವಿದೆ.  ದೇವತೆಗಳಿಗಾಗಿ ಜೀವನ ನಡೆಸೋರು ದೇವರ ವಶ, ಮನುಷ್ಯರಿಗಾಗಿ ಜೀವನ ನಡೆಸಿದರೆ ಮನುಷ್ಯರ ವಶ, ಅಸುರರಿಗಾಗಿ  ಜೀವನ‌ನಡೆಸಿದರೆ ಅಸುರರ ವಶ.
ಅಂದರೆ ಯಾರು ದೈವತ್ವದೆಡೆಗೆ ನಡೆಯಲು ಸತ್ಯ ಧರ್ಮದ ಅರಿವಿನಲ್ಲಿರುವರೋ  ಅವರನ್ನು ದೇವತೆಗಳೇ ನಡೆಸೋದು.
ಭೂಮಿಯಲ್ಲಿ ಜನಸೇವಕರಾಗಿ ಜನರಿಗಾಗಿ ನಡೆಸೋ ಕರ್ಮಕ್ಕೆ ತಕ್ಕಂತೆ ಜನಬಲ ಹಣಬಲ ಅಧಿಕಾರ ಬಲ ಕೊಡೋದು ಜನರೆ ಆಗಿರುವರು.ಇದರಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆದರೆ ಜನರ ಹಿತ ಸಂತೋಷವೆ  ಮುಖ್ಯಗುರಿಯಾದಾಗ ನಾಟಕವಾದರೂ ಸರಿ ಜನ‌ಮೆಚ್ಚುವರು ಇದು ಮಧ್ಯಮವಾಗಿದೆ. ಇನ್ನು ಕೀಳುಮಟ್ಟದ ಕೆಲಸವೆಂದರೆ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ. ಇದನ್ನು ಅಸುರಿ ಗುಣವುಳ್ಳವರು ಹೆಚ್ಚಾಗಿ‌ಮಾಡುವರು.ತಮ್ಮ ಸ್ವಾರ್ಥ ಸುಖವೇ ಇದರ ಮೂಲ ಉದ್ದೇಶ. ಇದಕ್ಕೆ  ಜೀವ ತೆಗೆಯುವುದೇ  ಕೆಲಸ. ತನ್ನ ಜೀವ ರಕ್ಷಣೆ ಮಾಡಿಕೊಳ್ಳಲು  ಸಾಧ್ಯವಿಲ್ಲವೆಂದರೂ ಅನ್ಯರ ಜೀವ ತೆಗೆಯುವುದರಿಂದ ತನ್ನ ಉದ್ದಾರವಾಗುತ್ತದೆನ್ನುವ ಅಜ್ಞಾನ ಇವರಿಗಿರುತ್ತದೆ.
ಇದಕ್ಕೆ ಮಹಾತ್ಮರುಗಳು ತಿಳಿಸಿರೋದು ಅಜ್ಞಾನಕ್ಕಿಂತ ದೊಡ್ಡ ಶತ್ರು ಮಾನವನಿಗೆ ಬೇರೊಂದಿಲ್ಲ.
ಅಜ್ಞಾನ ಎಂದರೆ ತಿಳುವಳಿಕೆಯಿಲ್ಲದಿರೋದು ಮಾತ್ರವಲ್ಲ ಸತ್ಯದ ತಿಳುವಳಿಕೆ ಇಲ್ಲದಿರೋದಾಗುತ್ತದೆ.
ಎಷ್ಟು ಜೀವ ಹತ್ಯೆ ಮಾಡಿದರೂ ಆತ್ಮಕ್ಕೆ ಸಾವಿಲ್ಲ ಎಂದಾಗ ಹತ್ಯೆ ಮಾಡಿ ಪಾಪ ಕಟ್ಟಿಕೊಂಡು ಅನುಭವಿಸುವ‌ಬದಲು ಇದ್ದು ಸತ್ಯ ತಿಳಿಯುವುದೇ ಜೀವನದ ಗುರಿ.
ಇದನ್ನು ಸನಾತನಧರ್ಮ ತಿಳಿಸುತ್ತದೆ. ಕಣ್ಣಿಗೆ ಕಾಣದ ದೇವರು ಅಸುರರು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಲು ಮಧ್ಯವರ್ತಿ ಮಾನವನನ್ನು  ಆಡಿಸುವರು.ಗೊಂಬೆಯಂತೆ ಏನೂ ಅರಿವಿಲ್ಲದೆ ಕುಣಿಯುವುದರಿಂದ ಮನರಂಜನೆ ಸಿಗಬಹುದು.ಆದರೆ ಅದರ ಹಿಂದೆ ಧರ್ಮ ಸತ್ಯವಿಲ್ಲದೆ ಕುಣಿದರೆ ಆತ್ಮವಂಚನೆಗೆ ಗುರಿಯಾಗೋದನ್ನು ಯಾರೂ ತಪ್ಪಿಸಲಾಗದು.
ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿ  ಭಯೋತ್ಪಾದನೆ ಮತ್ತು ಭ್ರಷ್ಟಾಚಾರ  ಬೆಳೆಸಿದರೆ  ಅದಕ್ಕೆ ತಕ್ಕ ಫಲ ಮನುಕುಲ ಅನುಭವಿಸಲೇಬೇಕೆನ್ನುತ್ತದೆ ಕರ್ಮ ಸಿದ್ದಾಂತ.
ಸತ್ಯವನ್ನು ಅಲ್ಲಗೆಳೆದಷ್ಟೂ ಅಲ್ಲ ಅಲ್ಲ ಎನ್ನುವವರೆ ಬೆಳೆಯೋದು.ಅಲ್ಲ ಎನ್ನುವ‌‌ ನಕಾರಾತ್ಮಕ ಶಕ್ತಿ ಎಲ್ಲರಲ್ಲಿಯೂ ಇದೆ.ಕಾರಣ ಅಜ್ಞಾನ. ಅಜ್ಞಾನಕ್ಕೆ ಕಾರಣವೇ  ಸಂಸ್ಕಾರರಹಿತ ಶಿಕ್ಷಣ.ಸಂಸ್ಕಾರವೆಂದರೆ ಶುದ್ದ ಮಾಡೋದು.ಯಾರನ್ನು ಯಾರು ಶುದ್ದಮಾಡಬೇಕು?
ಗುರು ಶಿಷ್ಯನನ್ನು ಶುದ್ದಗೊಳಿಸಬೇಕು.
ಮೊದಲಗುರು ತಾಯಿ‌ಮಗುವಿನ ತಪ್ಪು ತಿದ್ದಿ ಸರಿಪಡಿಸುವುದು  ಧರ್ಮ ಹಾಗೆ ತಂದೆ ಹಿರಿಯರು,ಬಂಧು ಬಾಂಧವರು,ಸ್ನೇಹಿತರು....ಭಯ ಬಿಟ್ಟು ಸತ್ಯ ಧರ್ಮದ ಕಡೆಗೆ ನಡೆದು ನಡೆಸುವುದರಿಂದ  ಭ್ರಷ್ಟಾಚಾರ ಯಾವುದು ಶಿಷ್ಟಾಚಾರ ಯಾವುದು ಸದ್ವಿದ್ಯೆ  ಸುಜ್ಞಾನ ಯಾವುದೆನ್ನುವ ಬಗ್ಗೆ ಅರಿವಿಗೆ‌ಬರುತ್ತದೆ. ಭಯೋತ್ಪಾದನೆ ಹಿಂದಿರುವ ದುಷ್ಟ ಶಕ್ತಿಗಳಿಂದ  ದೂರವಿರುವ ಜ್ಞಾನ‌ಬರುತ್ತದೆ. ಇಲ್ಲವೆಂದರೆ ಭಯ ಹುಟ್ಟಿಸುವವರೆ  ಆಳಿದರೂ ತಿಳಿಯದೆಯೇ ಅವರಿಗೆ ಸಹಕಾರ ಕೊಟ್ಟು ಬೆಳೆಸುವ  ಭಯೋತ್ಪಾದಕರ ಸಂಘಟನೆಗೆ ಬಲ ಬರುತ್ತದೆ.
ಹಣಕ್ಕಾಗಿ ಭಯ ಸೃಷ್ಟಿ ಮಾಡೋದು ಅಧರ್ಮ
ಸತ್ಯಧರ್ಮರಕ್ಷಣೆಗಾಗಿ ಭಯ ಸೃಷ್ಟಿ ಮಾಡೋದು ಧರ್ಮ.
ಇಲ್ಲಿ  ಜೀವಾತ್ಮನಿಗೆ ಪರಮಾತ್ಮನ ದರ್ಶನ ಮಾಡಿಸಲು ಗುರು ಶಿಷ್ಯನಿಗೆ ಭಯ ಭಕ್ತಿಯ ಕಡೆಗೆ ನಡೆಸೋದು ದೇವರು.
ಇದನ್ನು ವಿರೋಧಿಸುತ್ತಾ  ಮಕ್ಕಳನ್ನು ಅಜ್ಞಾನದೆಡೆಗೆ ನಡೆಸಿ ಅಂತರ ಬೆಳೆಸೋದು  ಮಧ್ಯವರ್ತಿಗಳು. ಅಂತರದಲ್ಲಿ ನಿಂತು  ಭಯ ಪ್ರಚಾರ ಮಾಡುತ್ತಾ  ತಾವು ಸುಖವಾಗಿರೋರು ಯಾರು? ಯಾರು ಯಾವ ಗುಂಪಿಗೆ ಸಹಕರಿಸುವರೋ ಅವರ  ಸೇವಕರು ಆಗಿರುವರು.
ಸೇವೆ  ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ಆಳೋದು ಅಧರ್ಮ. ಪರಮಾತ್ಮ ತಿಳಿಸಿದಂತೆ  ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ  ಯಾರು ಯಾವ ರೀತಿಯಲ್ಲಿ ಸೇವೆ ಮಾಡಿದರೂ ನನ್ನನ್ನೇ ಸೇರುವರು ಎಂದರೆ  ನಮಗೇ ತಿಳಿಯದೆಯೇ  ಸೇವೆ ನಡೆಯುತ್ತದೆ. ಆದರೆ ಕಣ್ಣಿಗೆ ಕಾಣೋದು ಮಾತ್ರ  ಮಾನವರಷ್ಟೆ.ಅವನೊಂದಿಗೆ ಯಾವ ರೂಪದಲ್ಲಿ ಯಾವ ಶಕ್ತಿ ಇರುವುದೋ ಯಾರಿಗೂ ತಿಳಿಯದು.ಸದ್ಗುರು ಸೇವೆ ಇದ್ದಂತೆ ದುಷ್ಟರ ಸೇವೆಯೂ ಜನ ಮಾಡುವರು.
ಭ್ರಷ್ಟಾಚಾರ ಎಂದು ತಿಳಿದರೂ ಅದರೊಂದಿಗೆ ಕೆಲಸ ಮಾಡಿ ತಮ್ಮ ಸಂಸಾರ‌ ನಡೆಸೋದು  ಇಂದು ಸಾಮಾನ್ಯರಿಗೆ ಅನಿವಾರ್ಯವಾಗಿದೆ.ಆದರೆ ಅದರ ಫಲವೂ ಜೊತೆಗೆ ಬರುವುದರಿಂದ  ಕಷ್ಟ ನಷ್ಟವನ್ನು ಅನುಭವಿಸಲೇಬೇಕು.
ಕರ್ಮಕ್ಕೆ ತಕ್ಕಂತೆ ಫಲ.
ಪರಮಾತ್ಮನ ಅರಿವಿಲ್ಲದೆ ಏನು ಮಾಡಿದರೂ ಕರ್ಮ ವೆ.
ಅರಿತೂ  ಧರ್ಮ ರಕ್ಷಣೆಗಾಗಿ  ಮಾಡಿದರೆ ಅದರ ಫಲವನ್ನು ಸ್ವಯಂ ಪರಮಾತ್ಮನೇ  ಅನುಭವಿಸುವನೆಂದು ಹಲವು ಪುರಾಣ ಕಥೆಗಳಲ್ಲಿದೆ. ಹೀಗಾಗಿ ಲೋಕಕಂಠಕರನ್ನು ಅಧರ್ಮ ವನ್ನು  ಸದೆಬಡಿಯಲು  ಯುದ್ದಗಳಾಗಿವೆ. ಸಾವು ನೋವುಗಳಾಗಿವೆ. 
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು  ಎನ್ನುವುದು ಸತ್ಯವಾದಾಗ. ಈಗಿನ ಪರಿಸ್ಥಿತಿ ಯು ಪರಮಾತ್ಮನ ಇಚ್ಚೆಯೇ ಕಾರಣವೆಂದಾಯಿತು.
ಪರಮಾತ್ಮ ಇರೋದೆಲ್ಲಿ? ಚರಾಚರದಲ್ಲಿಯೂ ಇರುವ ಶಕ್ತಿಯನ್ನು ಕಾಣಲಸಾಧ್ಯ. ಆದರೆ ಇದನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋದೇ ಮಾನವನಿಗೆ ಕಷ್ಟ  ಎಂದಾಗ ದುರ್ಭಳಕೆ ಮಾಡಿಕೊಂಡು ಆಳೋರು ಬೆಳೆಯುವರು. ಅವರಿಗೆ ಸಹಕಾರ ಕೊಟ್ಟರೆ ಸಂಕಷ್ಟ ತಪ್ಪಿದ್ದಲ್ಲ.
ಸತ್ಸಂಗದಿಂದ ನಿಸ್ಸಂಗದೆಡೆಗೆ ಸಾಗಿದವರು ಮಹಾತ್ಮರಾದರು.
ಸತ್ಸಂಗದೊಳಗಿದ್ದೂ ದುಷ್ಟರಿಗೆ ಸಹಕಾರ ಕೊಟ್ಟವರೆ ಅಸುರರು.

Friday, May 16, 2025

ಅಣು ಪರಮಾಣುಗಳ ಶಸ್ತ್ರ ಅಸ್ತ್ರ ಬಾಣಗಳ ಅಸ್ತ್ರ ಶಸ್ತ್ರ

ಹಿಂದಿನ ಯುದ್ದಕ್ಕೆ ಬಳಸುತ್ತಿದ್ದ ಅಸ್ತ್ರ ಶಸ್ತ್ರ ಸಾಮಾಗ್ರಿಗಳ ಹಿಂದೆ  ಬಹಳಷ್ಟು ದೈವೀಕ ಶಕ್ತಿ ಅಡಗಿದ್ದು ಮಂತ್ರದಿಂದ ದೇವತೆಗಳ ಸಹಕಾರ ಪಡೆದು  ಅಸುರರ  ವಧೆಯಾಗಿತ್ತು.
ಆದರಿಂದು ಮಂತ್ರವಿಲ್ಲ ಯಂತ್ರವಿದೆ. ಯಂತ್ರದಿಂದ  ಅಣು ಪರಮಾಣುಗಳಿವೆ.‌ಇದರಲ್ಲಿಯೂ  ಅಡಗಿರೋದು ಆ ಭಗವಂತನ ಶಕ್ತಿಯೇ ಆಗಿದೆ. ಅಂದು ನೇರವಾಗಿ ಯುದ್ದ ನಡೆದರೆ ಇಂದು ದೂರದಿಂದಲೇ ನಡೆಯುತ್ತದೆ.‌ ಪರೋಕ್ಷವಾಗಿ  ನಾನೇ  ಯುದ್ದ ಮಾಡೋದೆನ್ನುವ ಭಾವನೆ ಇದ್ದರೂ ಅದರ ಹಿಂದೆ ಅಗೋಚರ ಶಕ್ತಿಯ ಕೈವಾಡವೇ ಹೆಚ್ಚಾಗಿರುತ್ತದೆ.
ಜನಸಾಮಾನ್ಯರಿಗೆ  ಕಾಣೋದು  ಕೇವಲ ಅರ್ಧ ಸತ್ಯ.ಪೂರ್ಣ ಸತ್ಯ ಬೇರೆಯೇ ಇರುತ್ತದೆ. ಒಟ್ಟಿನಲ್ಲಿ ಯುದ್ದ ಯುಗಯುಗದಿಂದಲೂ ನಡೆಯುತ್ತಿದೆ. ಅಂದು ತತ್ವವಿತ್ತು ಇಂದು ತಂತ್ರವಿದೆ. ಯಾರದ್ದೋ ಕುತಂತ್ರಕ್ಕೆ ಯಾರದ್ದೋ ಜೀವಬಲಿ. ಇದರಿಂದಾಗಿ ಸ್ವತಂತ್ರ ವಾಗಿರುವ‌ ನಿಜವಾದ ಭ್ರಷ್ಟ ದುಷ್ಟರನ್ನು  ಗಮನಿಸಲೂ ಸಾಧ್ಯವಾಗದು. ಕಾರಣ ಯುದ್ದಕ್ಕೆ ಕರೆಕೊಡೋದು ರಾಜಕೀಯ. ನಡೆಸೋದೂ ರಾಜಕೀಯ ಮಾಡೋರು ಮಾತ್ರ ಸಾಮಾನ್ಯರು ಎನ್ನುವಂತೆ ವರ್ತನೆ ಮಾಡುವ  ಪ್ರತಿ ಪಕ್ಷದ ರಾಜಕೀಯತೆ ಮನೆ ಮಾಡಿರೋದು ದುರಂತವೇ ಸರಿ.
ದೇಶಕ್ಕಾಗಿ ಹೋರಾಡುವ ಸೈನಿಕರ ಜೀವಕ್ಕೂ ದೇಶವಾಳುವ ನಾಯಕರಿಗೂ  ವ್ಯತ್ಯಾಸ ಬೆಳೆದರೆ  ಮಧ್ಯವರ್ತಿಗಳು  ತಮ್ಮ ಬೇಳೆ ಬೇಯಿಸಿಕೊಂಡು ತಿರುಗುವರು.
ಒಟ್ಟಿನಲ್ಲಿ ದ್ವೇಷಕ್ಕೆ  ದ್ವೇಷ ಬೆರೆಸೋದು ದೊಡ್ಡ ಬಾಂಬ್.ಈ ಬಾಂಬ್  ಪ್ರತಿದಿನವೂ ಸಿಡಿಸೋದೆ ಮಧ್ಯವರ್ತಿಗಳ ಕೆಲಸ.
ಅದರಿಂದ  ದೇಶವೇ ಹತ್ತಿ ಉರಿಯಬಹುದೆನ್ನುವ ಸಾಮಾನ್ಯಜ್ಞಾನದ ಕೊರತೆಯೇ ಎಲ್ಲಾ  ರಾಜಕೀಯದ ತಂತ್ರ.
ಯಾರು ಆಳಿದರೇನು ಬಂತು  ಜ್ಞಾನವಿಲ್ಲವಾದರೆ  ಪರಮಾತ್ಮನ ಅರಿಯಲಾಗದು. ವೀರಸ್ವರ್ಗ ಸೇರೋರಿಗೆ  ಯುದ್ದವೇ  ಮುಖ್ಯ. ನರಕ ತೋರಿಸುವುದೊಂದು ಸಾಧನೆಯೆ?  ಯಾರದ್ದೋ ಕುಟುಂಬ  ಯಾರದ್ದೋ ದ್ವೇಷಕ್ಕೆ ಬಲಿಯಾದರೆ  ಏನರ್ಥ?
ಸಂಧಾನ ಮಾಡಿಕೊಂಡರೂ  ಶತ್ರುಗಳಿಗೆ ಸಮಾಧಾನವಿಲ್ಲ. ಯುದ್ದ ಸಮಾಧಾನದಲ್ಲಿ ಯಾವತ್ತೂ ನಡೆಯೋದಿಲ್ಲ.
ಅದಕ್ಕೆ ಹೇಳೋದು  ತಾಳಿದವನು ಬಾಳಿಯಾನು.
ಅತಿಯಾದ ತಾಳ್ಮೆಯೂ‌ ಬಾಳನ್ನು ಹಾಳು ಮಾಡುತ್ತದೆ.
ಅದರ ಫಲವೇ ಭಯೋತ್ಪಾದನೆ.
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ‌ಕಡ್ಡಿಯೂ ಅಲ್ಲಾಡದು ಎಂದಾಗ ಯುದ್ದವೂ ಇದರಲ್ಲಿ ಒಂದು.