ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Tuesday, January 31, 2023
ಸರ್ಕಾರದ ಯೋಜನೆ ಜನರ ಯೋಚನೆಗೆ ಪೂರಕವೆ? ಮಾರಕವೆ?
ಭೂತಕಾಲದ ಅಗತ್ಯವೆಷ್ಟಿದೆ?
'ಅಥಾತೋ ಬ್ರಹ್ಮಜಿಜ್ಞಾಸಾ' ಬ್ರಹ್ಮಸೂತ್ರದ ಮೊದಲ ಸೂತ್ರ೧-೧-೧
ಅಥಾತೋ ಬ್ರಹ್ಮಜಿಜ್ಞಾಸಾ' ಬ್ರಹ್ಮಸೂತ್ರದ ಮೊದಲ ಸೂತ್ರ೧-೧-೧
ಬ್ರಹ್ಮಜ್ಞಾನವು ಕೇವಲ ನಂಬಿಕೆಯಲ್ಲ ಅದು ವಿಚಾರ
ಮಂಥನದಿಂದ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದ ಸತ್ಯವೆಂದು ಪ್ರಾಚೀನ ಋಷಿಗಳು ಮೂಢನಂಬಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ನಿರಾಕರಿಸುವುದಕ್ಕೂ ತಿರಸ್ಕರಿಸುವುದಕ್ಕೂ ವ್ಯತ್ಯಾಸವಿದೆ. ನಿರಾಕರಣೆಯಲ್ಲಿ ಕೇಳುವುದಿರುತ್ತದೆ, ತಿರಸ್ಕಾರದಲ್ಲಿ ಏನು ಹೇಳುತ್ತಿದ್ದಾರೆನ್ನುವುದನ್ನೂ ಕೇಳುವ ಮನಸ್ಸಿರೋದಿಲ್ಲ.
ಇಂದಿನ ಈ ನಮ್ಮ ಸ್ಥಿತಿಗೆ ಸತ್ಯವನ್ನು ತಿರಸ್ಕರಿಸಿ ನಡೆದವರೆ ಕಾರಣವೆನ್ನಬಹುದು. ಬ್ರಹ್ಮಜ್ಞಾನವನ್ನು ಓದಿ ತಿಳಿದವರಿಗೆ ನಿಜವಾದ ಸತ್ಯದ ಅನುಭವವಾಗದೆ ಸಾಮಾನ್ಯಜ್ಞಾನವನ್ನು ತಿರಸ್ಕರಿಸಿ ಅವರ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸೋತು ನಾನೇ ಬ್ರಹ್ಮ ಎನ್ನುವ ಮಟ್ಟಿಗೆ ಮೇಲೇರಿದವರಿಗೆ ವಾಸ್ತವತೆಯ ಅರಿವು ಕಷ್ಟ. ಜನಬಲ,ಹಣಬಲವೆಲ್ಲವೂ ಸುಲಭವಾಗಿ ಸಿಗೋವಾಗ ಸತ್ಯದ ಅರಿವಾಗೋದು ಕಷ್ಟ. ಹೀಗಾಗಿ ಮಾನವನ ಜೀವನ ಅರ್ಧ ಸತ್ಯದ ರಾಜಕೀಯಕ್ಕೆ ಸಿಲುಕಿ ತಾನೂ ಮುಂದೆ ಹೋಗದೆ ಹಿಂದಿರುವವರಿಗೂ ಮುಂದೆ ನಡೆಯಲು ಬಿಡದೆ ಅತಂತ್ರಸ್ಥಿತಿಗೆ ತಲುಪಿದೆ.
ಮೊದಲಿದ್ದ ವರ್ಣ ಪದ್ದತಿಯಲ್ಲಿ ಅವರವರ ಧರ್ಮ ಕರ್ಮಕ್ಕೆ ಪ್ರಾಧಾನ್ಯತೆ ಕೊಟ್ಟು ಸಮಾಜದ ನಾಲ್ಕು ಅಂಗಗಳಿಗೂ ಸ್ವತಂತ್ರ ಜ್ಞಾನವಿತ್ತು. ಯಾವಾಗ ಮೇಲು ಕೀಳೆಂಬ ಅಜ್ಞಾನ ಬೆಳೆಯಿತೋ ವರ್ಣಗಳಲ್ಲಿಯೇ ಜಾತಿ ಬೆಳೆದು ಈಗಿದು ವಿಪರೀತ ಜಾತಿಯಿದೆ ಧರ್ಮ ಕರ್ಮದಲ್ಲಿ ಶುದ್ದತೆಯಿಲ್ಲದೆ ಮಿಶ್ರವರ್ಣದ ಮಿಶ್ರಜಾತಿ, ಮಿಶ್ರ ಪಂಗಡ,ಪಕ್ಷ, ಮಿಶ್ರ ಸರ್ಕಾರದವರೆಗೆಹೊರಟು ರಾಜಯೋಗ
ಹಿಂದುಳಿದು ರಾಜಕೀಯದಲ್ಲಿ ಜೀವ ಸಿಕ್ಕಿಕೊಂಡು ಹೊರಬರಲಾಗದೆ ಅಲ್ಲೇ ಸಾಯುತ್ತಿದೆ. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೆ? ಪರಿಹಾರ ನಮ್ಮೊಳಗಿನ ಸತ್ಯಜ್ಞಾನದಲ್ಲಿತ್ತು. ಈಗಲೂ ಇದೆ ಆದರೆ ನಾವು ಸತ್ಯಕ್ಕೆ ಬೆಲೆ ಕೊಡುವುದಿಲ್ಲ ದೇವರು ಕಾಣೋದಿಲ್ಲ ಆದರೆ ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿಕೊಂಡು ಬದುಕಿದ್ದೇವೆ. ಈ ಬದುಕು ಶಾಶ್ವತವಲ್ಲ. ಹೀಗಾಗಿ ಬ್ರಹ್ಮನ ಸೃಷ್ಟಿ ನಿರಂತರವಾಗಿ ನಡೆದಿದೆ .ಜನಸಂಖ್ಯೆ ಬೆಳೆದಿದೆ ಜ್ಞಾನ ಕುಸಿದಿದೆ.
ಎಲ್ಲಿಯವರೆಗೆ ಸತ್ಯಜ್ಞಾನ ಆಂತರಿಕ ಶುದ್ದಿಯಿಂದ ಸಿಗುವುದಿಲ್ಲವೋ ಅಲ್ಲಿಯವರೆಗೆ ಬ್ರಹ್ಮಜ್ಞಾನದ ಅರ್ಥ ವಾಗದು. ಬ್ರಹ್ಮನ ಸೃಷ್ಟಿ ಗೆ ತಕ್ಕಂತೆ ದೇವಿ ಜ್ಞಾನನೀಡಿರುವಾಗ ಅದನ್ನರಿಯದೆ ಅದಕ್ಕೆ ವಿರುದ್ದದ ಭೌತಿಕ ಜ್ಞಾನದಲ್ಲಿ ಮುಳುಗಿದ್ದರೆ ಸೃಷ್ಟಿ ಗೆ ವಿರುದ್ದ ನಡೆದಂತೆ. ಇದನ್ನು ಯಾವ ಸರ್ಕಾರವೂ ಸರಿಪಡಿಸಲಾಗದು.
ಜ್ಞಾನದೆಡೆಗೆ,ಸತ್ಯದ ಕಡೆಗೆ ಹೋಗುವುದೆಂದರೆ ಭೌತಿಕದ ರಾಜಕೀಯದಿಂದ ದೂರವಿರುವುದಾಗಿತ್ತು.ಕಾರಣ ಅಲ್ಲಿ ಯಾವ ಅಧಿಕಾರ,ಹಣ,ಸ್ಥಾನಮಾನಕ್ಕೆ ಬೆಲೆಯಿರೋದಿಲ್ಲ.
ಆದರೆ ಮಾನವನಿಗೆ ಇದು ಬಹಳ ಕಷ್ಟ. ಹೀಗಾಗಿ ಮಧ್ಯವರ್ತಿಗಳು ಸತ್ಯವನ್ನು ಬಿಟ್ಟು ಮಿಥ್ಯಕ್ಕೆ ಬೆಲೆ ಕೊಟ್ಟು ಮೇಲೇರಿಸಿರುವುದು.ಕಣ್ಣಿಗೆ ಕಾಣದ ಸತ್ಯ ಮಾತ್ರ ಬ್ರಹ್ಮಜ್ಞಾನದೆಡೆಗೆ ನಡೆಸುವುದು ಅದಕ್ಕೆ ನಿರಾಕಾರ ಬ್ರಹ್ಮ ಎಂದರು. ಋಷಿಗಳು ತಮ್ಮ ಅನುಭೂತಿಯಿಂದ 'ಈ ಜಗತ್ತು ಪರಬ್ರಹ್ಮಶಕ್ತಿಯ ಸಾಕಾರರೂಪ.ಇಲ್ಲಿ ಕಾಣೋದೆಲ್ಲ ಅದೇ ಚೈತನ್ಯದ ರೂಪಾಂತರವಷ್ಟೆ ಎಲ್ಲದರ ಮೂಲ ಒಂದೇ ಬ್ರಹ್ಮಶಕ್ತಿ ಇರುವುದು ' ಎಂಬ ನಿಷ್ಕರ್ಷೆಗೆ ಬಂದರು. ಆದರೆ ಇಂದು ಪ್ರಜಾಪ್ರಭುತ್ವದ ಪ್ರಜೆಗಳಲ್ಲಿ ಅಡಗಿದ್ದ ಸಾಮಾನ್ಯಜ್ಞಾನದ ಆ ಬ್ರಹ್ಮನ ಶಕ್ತಿ ಕಾಣದೆ, ನಾನೇ ಪರಬ್ರಹ್ಮ ಎನ್ನುವ ಮಟ್ಟಿಗೆ ಸತ್ಯ ತಿಳಿಯದೆ,ತಿಳಿದರೂ ತಿಳಿಸದೆ ಜನರಿಗೆ ಸರಿಯಾದ ಶಿಕ್ಷಣ ನೀಡದೆ ಆಳುವ ರಾಜಕೀಯವೇ ಇಡೀ ವಿಶ್ವಶಕ್ತಿಗೆ ಮಾಡಿದ ಅವಮಾನ. ಇದು ಕಾಲದ ಪ್ರಭಾವವೆಂದು ಸುಮ್ಮನಿರಬಹುದಾದರೆ ಸರಿ ಸಹಿಸಲಾಗದ ಅಸಹ್ಯಕರ ಬದಲಾವಣೆಯನ್ನು ನೋಡಿ
ಕೊಂಡು ಜೀವನ ನಡೆಸುವುದಕ್ಕೆ ಜ್ಞಾನಿಗಳಿಗೆ ಕಷ್ಟ.
ಅಜ್ಞಾನದಲ್ಲಿರುವವರಿಗೆ ಸತ್ಯ ತಿಳಿಯದ ಕಾರಣ ಇದೇ ಜೀವನ ಎಂದು ಸಹಕರಿಸಬಹುದು.ಆದರೆ ಇದರ ಪ್ರತಿಫಲ ಮಾತ್ರ ಘೋರವಾಗಿರುವಾಗ ಅದನ್ನು ಸಹಿಸಿಕೊಳ್ಳುವ ಆತ್ಮಶಕ್ತಿಯ ಅಗತ್ಯವಿದೆ. ಹೀಗಾಗಿ ಅಧ್ಯಾತ್ಮ ಎಂದರೆ ತನ್ನ ತಾನರಿತು ಸ್ವಾವಲಂಬನೆ, ಸ್ವಾಭಿಮಾನ, ಆತ್ಮಸಾಕ್ಷಿಯ ಕಡೆಗೆ ನಡೆಯೋದೆಂದರೆ ಇದು ಜನಸಾಮಾನ್ಯರ ಸಾಮಾನ್ಯಜ್ಞಾನಕ್ಕೆ ಅರ್ಥ ವಾಗಬಹುದು. ಯಾರೂ ಶಾಶ್ವತವಲ್ಲ.ಯಾವುದೂ ಸ್ಥಿರವಲ್ಲ.ಕಾಲಚಕ್ರ ತಿರುಗುತ್ತದೆ.ಅನುಭವಿಸಿದ ನಂತರವೇ ಸತ್ಯದರ್ಶನ.
ರಾಜಕೀಯ ಭ್ರಷ್ಟಾಚಾರವಾದರೂ ಅಜ್ಞಾನದಿಂದ ಬೆಳೆದಿದೆ ಧಾರ್ಮಿಕ ಭ್ರಷ್ಟಾಚಾರಕ್ಕೆ ಕಾರಣವೇನು? ಕಾಲವೇ ಕಾರಣ.
ಜನಬಲ ಹಣಬಲ ಎಲ್ಲೆಡೆಯೂ ಹರಡಿಕೊಂಡಿದೆ ಜ್ಞಾನಬಲದ ಕೊರತೆ ಸಮಾಜದ ದಾರಿತಪ್ಪಿಸುತ್ತಿದೆ.
ಕರ್ಮಕ್ಕೆ ತಕ್ಕಂತೆ ಫಲ.ಅವರವರ ಮೂಲದ ಧರ್ಮ ಕರ್ಮ ಅವರಿಗೆ ಶ್ರೇಷ್ಠ. ಅದರಲ್ಲಿ ಕಾಲಕ್ಕೆ ತಕ್ಕಂತೆ ಸಂಸ್ಕರಿಸಿಕೊಂಡು ಶುದ್ದ ಮಾಡಿಕೊಳ್ಳುವುದು ಅಗತ್ಯವಿತ್ತು. ಹೊರಗಿನ ಸಂಸ್ಕಾರವು ಒಳಗಿನ ಸಂಸ್ಕಾರದೆಡೆಗೆ ನಡೆಯದೆ ಸ್ವಚ್ಚಭಾರತಕ್ಕೆ ಕೋಟ್ಯಾಂತರ ಹಣ ಬಳಸಿದರೂ ಧಾರ್ಮಿಕವಾಗಿ ಹಿಂದುಳಿದರೆ ಆತ್ಮಸಂಸ್ಕಾರವಾಗದೆ ಅದೂ ರಾಜಕೀಯವಾಗಿರುತ್ತದೆನ್ನಬಹುದೆ? ಅವರವರ ಮನೆಯ ಸಾಲ ತೀರಿಸಲು ಎಲ್ಲಾ ಒಗ್ಗಟ್ಟಿನಿಂದ ಸತ್ಕರ್ಮದೆಡೆಗೆ ನಡೆದು ಧರ್ಮದ ಹಾದಿ ಹಿಡಿಯುವ ಬದಲು ಮನೆಯಿಂದ ಹೊರಬಂದು ವಿದೇಶದ ಕಡೆಗೆ ನಡೆದು ಅಧರ್ಮದ ಹಣಬಲ ಜನಬಲದಿಂದ ನಮ್ಮವರನ್ನೇ ಆಳುವುದು ಪ್ರಜಾಪ್ರಭುತ್ವ ಧರ್ಮಕ್ಕೆ ವಿರುದ್ಧ. ಇದಕ್ಕೆ ನಮ್ಮದೇ ಸಹಕಾರ ವಿರೋವಾಗ ನಾವೇ ಇದಕ್ಕೆ ಕಾರಣ. ಈವರೆಗೆ ಇದೇ ವಿಚಾರದಲ್ಲಿ ಸಾಕಷ್ಟು ಲೇಖನಗಳಲ್ಲಿ ಸಾಮಾನ್ಯಜ್ಞಾನ ಎಷ್ಟು ಮುಖ್ಯ ಎನ್ನುವ ವಿಚಾರವಿತ್ತು. ವಿಪರ್ಯಾಸವೆಂದರೆ ನಾವು ಮಾನವರಾಗಲು ತಯಾರಿಲ್ಲ.ಮಾನವನಿಗೆ ಮಾತ್ರ ಸಾಮಾನ್ಯಜ್ಞಾನವಿರೋದಲ್ಲವೆ ದೇವತೆಗಳು ಅಸುರರು ಅಸಮಾನ್ಯರು. ಅವರ ಕಡೆಗೆ ಹೇಗೆ ಹೋದರೆ ನಮ್ಮ ಸಾಮಾನ್ಯರು ಸಮಾನರಾಗಿರುವರೆಂದು ತಿಳಿಸುವುದೇ ತತ್ವ. ಈ ತತ್ವವೇ ತಂತ್ರದೆಡೆಗೆ ಹೊರಟು ಯಂತ್ರಮಯವಾಗಿದೆ. ಯಾಂತ್ರಿಕ ಜೀವನದಲ್ಲಿ ಸತ್ಯ ಕಾಣೋದಿಲ್ಲ.ಇದೇ ನಮ್ಮ ಹಿಂದೂ ಧರ್ಮದ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ. ಈ ವಿಚಾರದಲ್ಲಿ ವಾದ ವಿವಾದಕ್ಕೇನೂ ಕೊರತೆಯಿಲ್ಲ.
ಚರ್ಚೆಗೆ ಕೊರತೆಯಿದೆ. ಶಾಂತಿಯಿಂದ ಚರ್ಚೆ ನಡೆಸಬಹುದು. ವಾದ ವಿವಾದವು ಕ್ರಾಂತಿಗೆ ಕಾರಣವಾಗುತ್ತದೆ.
ಬ್ರಹ್ಮನಿಗೆ ಆಕಾರವಿಲ್ಲ ಆದರೆ ಬ್ರಹ್ಮನ ಸೃಷ್ಟಿಗೆ ಆಕಾರ ಹೆಚ್ಚಾಗಿ ಅದೇ ಈಗ ಮಾನವನಿಗೆ ಅಧರ್ಮದೆಡೆಗೆ ಅಸತ್ಯದ ಕಡೆಗೆ ನಡೆಸಿದರೆ ಬ್ರಹ್ಮಜ್ಞಾನದ ಉದ್ದೇಶವೇನಿತ್ತು? ಸಾಕಾರದಿಂದ ನಿರಾಕಾರದೆಡೆಗೆ ನಡೆಯುವುದೇ ನಿಜವಾದ ಅಧ್ಯಾತ್ಮ ಸಾಧನೆ. ಆದರೆ, ಅಜ್ಞಾನದಲ್ಲಿರುವವರಿಗೆ ಜ್ಞಾನದ ಶಿಕ್ಷಣ ನೀಡುತ್ತಾ ಭಗವಂತನೆಡೆಗೆ ನಡೆಸುವ ಗುರುವೇ ದೇವರು. ಗುರುವಿನ ಗುರಿ ಅಧ್ಯಾತ್ಮ ಸಾಧನೆ, ಭಾರತದಂತಹ ಮಹಾತ್ಮರ ದೇಶದ ಶಿಕ್ಷಣವು ಭೌತಿಕದ ಗುರುವಿನ ಕಡೆಗೆ ನಡೆದಿರುವ ಈ ಸಮಯದಲ್ಲಿ ಅಧ್ಯಾತ್ಮ ಗುರುಗಳಾದವರು ತಮ್ಮ ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಶಿಕ್ಷಕರನ್ನಾಗಿ ತಮ್ಮ ಶಿಷ್ಯರನ್ನು ನೇಮಿಸುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವ ಕೆಲಸ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ. ಇಲ್ಲವಾದರೆ ತಮ್ಮದೇ ಶಾಲೆ ಕಾಲೇಜ್ ಗಳಲ್ಲಿ ಇರುವ ಯುವಕ ಯುವತಿಯರಿಗೆ ಸನ್ಮಾರ್ಗ ದಲ್ಲಿ ನಡೆಯಲು ಸಹಕರಿಸಬೇಕು. ನಾವೇ ಸೃಷ್ಟಿಸಿದ ಬೇಧಭಾವಕ್ಕೆ ನಮ್ಮಲ್ಲಿಯೇ ಪರಿಹಾರ ಕಂಡುಕೊಂಡರೆ ಯಾವ ಹೊರಗಿನ ರಾಜಕೀಯದ ಅಗತ್ಯವಿಲ್ಲದೆ ಧರ್ಮ ಸ್ವತಂತ್ರ ವಾಗಿರುವುದು. ಸೃಷ್ಟಿಯ ರಹಸ್ಯ ವನ್ನು ಕಂಡುಹಿಡಿಯಲು ಆತ್ಮಜ್ಞಾನದ ಅಗತ್ಯವಿದೆ.
ಆತ್ಮನಿರ್ಭರ ಭಾರತ ಅಧ್ಯಾತ್ಮದ ಸಂಶೋಧನೆಯಲ್ಲಿದೆ.ವೈಜ್ಞಾನಿಕ ಸಂಶೋದನೆಯಿಂದ ಕಷ್ಟ.
ಭೌತಿಕ ಜಗತ್ತಿನಲ್ಲಿ ಎಷ್ಟು ಕಂಡುಹಿಡಿದರೂ ಆತ್ಮಕ್ಕೆ ಶಾಂತಿಯಿಲ್ಲ. ಭೂಮಿ ಮೇಲಿದ್ದು ಭೂ ತತ್ವವನರಿತು ಭೂತಾಯಿಯ ಸೇವೆ ಮಾಡೋದಕ್ಕೆ ಪರಾಶಕ್ತಿಯ ಜ್ಞಾನವಿರಬೇಕು.
ಧರ್ಮರಕ್ಷಣೆಗೆ ಸಾಮಾನ್ಯಜ್ಞಾನದ ಅಗತ್ಯವಿದೆ.
ಹೆಚ್ಚು ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳುವುದರಿಂದ ಧರ್ಮ ಉಳಿಯೋದಿಲ್ಲ. ಕಾರಣ ನಮ್ಮ ತಲೆ ಸರಿಯಿದ್ದರೆ ಮಾತ್ರ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ತಲೆಗೆ ಅಧರ್ಮದ ವಿಚಾರ ಹಾಕಿಕೊಂಡು ಹೊರಗೆ ಧರ್ಮ ರಕ್ಷಣೆ ಮಾಡಲು ಹೊರಡರೆ ತಲೆ ನೋವು ಹೆಚ್ಚು.ಕಾರಣ ಧರ್ಮ ನಮ್ಮ ಹಿಂದಿನವರು ನಡೆಸಿದ್ದೇ ಬೇರೆ ನಾವೀಗ ತಿಳಿದು ನಡೆಯುವುದೇ ಬೇರೆಯಾದಾಗ ಭಿನ್ನಾಭಿಪ್ರಾಯ ವೇ ಹೆಚ್ಚು. ಭಿನ್ನಾಭಿಪ್ರಾಯ ದ್ವೇಷದೆಡೆಗೆ ಹೊರಟರೆ ಶಾಂತಿ ಎಲ್ಲಿರುವುದು? ಎಲ್ಲಿ ಶಾಂತಿಯಿರುವುದೋ ಅಲ್ಲಿ ಸತ್ಯಕ್ಕೆ ಬೆಲೆಯಿರುವುದು. ಅಧ್ಯಾತ್ಮ ಸತ್ಯ ಶಾಂತಿಯಿಂದ ತಿಳಿದರೆ ಭೌತಿಕಸತ್ಯದಲ್ಲಿ ಶಾಂತಿ ಕಾಣಲಾಗದೆ ಕ್ರಾಂತಿಯೇ ಹೆಚ್ಚು. ಹೀಗಾಗಿ ಧರ್ಮದಲ್ಲಿ ಮುಖ್ಯವಾದ ಮಾನವಧರ್ಮದ ಬಗ್ಗೆ ಮಾನವರಾಗಿ ತಿಳಿಯುವ ಪ್ರಯತ್ನ ಅವರವರೆ ಮಾಡಿದರೆ ಮನಸ್ಸಿಗೆ ಶಾಂತಿ,ನೆಮ್ಮದಿ, ತೃಪ್ತಿ ನಂತರವೇ ಮುಕ್ತಿ ಮೋಕ್ಷದ ದಾರಿಯಲ್ಲಿ ನಡೆಯಬಹುದಷ್ಟೆ.
ಇಷ್ಟಕ್ಕೂ ನಾವು ಸಾಮಾನ್ಯಜ್ಞಾನದಿಂದ ತಿಳಿಯಬಹುದಾದ ಸಾಮಾನ್ಯಸತ್ಯವನ್ನೇ ವಿರೋಧಿಸಿದರೆ ಅಸಮಾನ್ಯಸತ್ಯ ತಿಳಿದಾದರೂ ಏನು ಉಪಯೋಗ ವಿದೆ?
ಮೊದಲನೇ ಸತ್ಯ ನಮ್ಮ ಈ ಜನ್ಮಕ್ಕೆ ಕಾರಣ ನಮ್ಮ ಹಿಂದಿನ ಜನ್ಮದ ಋಣ ಮತ್ತು ಕರ್ಮ.
ಋಣ ತೀರಿಸಲು ಸತ್ಕರ್ಮ, ಸ್ವಧರ್ಮ, ಸುಜ್ಞಾನದಿಂದ ಮಾತ್ರ ಸಾಧ್ಯ.
ತಾಯಿಯ ಋಣ ತೀರಿಸಲು ಕಷ್ಟ.ಆದರೆ ಸೇವೆಯಿಂದ ಸಾಧ್ಯವೆಂದರೆ ಭೂ ಸೇವೆ ಸರ್ವ ಶ್ರೇಷ್ಠ ವಾಗಿದೆ.
ಭೂ ತಾಯಿಯ ಮಕ್ಕಳಾದ ಮಾನವರಲ್ಲಿ ಭೂ ಸೇವೆಗೆ ಹತ್ತಿರವಾದವರಲ್ಲಿ ಪ್ರಮುಖರಾದವರೆ ರೈತರು.ನಿಸ್ವಾರ್ಥ ನಿರಹಂಕಾರದ ಪ್ರತಿಫಲಾಪೇಕ್ಷೆ ಯಿಲ್ಲದ ಎಲ್ಲಾ ಕರ್ಮ ಭಗವಂತನ ಸೇವೆಯಾದಾಗ ಭೂ ತಾಯಿಯ ಋಣ ತೀರಿದಂತೆ.
ಭಗವಂತನ ಸೊಂಟದ ಭಾಗದಲ್ಲಿರುವ ಭೂಮಿಯ ಮೇಲೆ ಮನುಕುಲವಿದೆ ಎಂದರೆ ಭೂ ತಾಯಿಯ ಋಣ ತೀರಿಸಲು ಮಾನವರು ತತ್ವಜ್ಞಾನ ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಬಾಳಿ ಬದುಕುವ ಜ್ಞಾನ ಪಡೆಯಬೇಕು.
ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ವೆಂದರು ಕಾರಣವಿಷ್ಟೆ ವಿದ್ಯೆ ಹೊರಗಿನ ವಿಷಯದ ಕಲಿಕೆ ಆ ಕಲಿಕೆಯು ಆಂತರಿಕ ಶಕ್ತಿಯನ್ನು ಬೆಳೆಸುವುದೇ ಜ್ಞಾನ. ಸತ್ಯ ಒಂದೇ ಅದರ ಅನುಭವ ಬೇರೆ ಬೇರೆ ಇದ್ದಂತೆ ಒಂದೇ ವಿದ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿ ಬದುಕುವ ಜ್ಞಾನದಿಂದ ಧರ್ಮ ಉಳಿಯಬೇಕಷ್ಟೆ.
ಭೂಮಿಯ ತತ್ವವನ್ನರಿಯದೆ ಆಕಾಶತತ್ವ ತಿಳಿದರೆ ವ್ಯರ್ಥ.
ಜೀವ ಇದ್ದರೆ ಜೀವನ. ಜೀವಕೊಟ್ಟು ಹೊತ್ತು ಹೆತ್ತ ತಾಯಿ ಜೀವನದ ದಾರಿ ತೋರಿಸಿದ ತಂದೆಯ ಋಣ ತೀರಿಸಲು
ಅವರ ಧರ್ಮ ಕರ್ಮ ಸಿದ್ಧಾಂತ ತತ್ವಜ್ಞಾನ ಮಕ್ಕಳಿಗೆ ತಿಳಿಸಿ ಕಲಿಸಿದ್ದರೆ ಮಾತ್ರ ಸಾಧ್ಯ. ಇಲ್ಲವಾದರೆ ಮುಕ್ತಿ ಯ ಮಾರ್ಗ ಹೊರಗಿನ ಜಗತ್ತಿನಲ್ಲಿ ಹುಡುಕುವ ಹುಡುಕಾಟವಾಗುತ್ತದೆ.
ಭಾರತೀಯರ ಜ್ಞಾನ ಶಕ್ತಿ ಭಾರತೀಯ ಶಿಕ್ಷಣದಲ್ಲಿಯೇ ಕಲಿಸಿ ಬೆಳೆಸಬೇಕು.ವಿದೇಶದಲ್ಲಿ, ವಿದೇಶ ಶಿಕ್ಷಣವಿದ್ದಂತೆ
ಭಾರತದಲ್ಲಿ ಭಾರತೀಯ ಶಿಕ್ಷಣವೇ ಹಿಂದಿನವರ ಬಂಡವಾಳ.
ಬಂಡವಾಳವನ್ನು ಸದ್ಬಳಕೆ ಮಾಡಿಕೊಂಡು ಬೆಳೆಸಬೇಕು. ವ್ಯವಹಾರಕ್ಕೆ ಸೀಮಿತವಾಗಿಸಿಕೊಂಡರೆ ಹಣ,ಅಧಿಕಾರ,ಸ್ಥಾನಮಾನದ ರಾಜಕೀಯವಾಗುತ್ತಾ ಬಂಡವಾಳ ಕರಗಿ ಹೋಗುತ್ತದೆ ಅಂದರೆ ಜ್ಞಾನ ಹಿಂದುಳಿದು ಅಜ್ಞಾನ ಹೆಚ್ಚುವುದು.
ಸತ್ಯಯುಗದಿಂದ ಕಲಿಯುಗದವರೆಗೂ ನಡೆದು ಬಂದ ಈ ಜೀವಾತ್ಮನಿಗೆ ಪರಮಾತ್ಮನ ದರ್ಶನವಾಗಲು ಸತ್ಯದೆಡೆಗೆ ನಡೆಯಬೇಕಷ್ಟೆ. ಧರ್ಮ ಎನ್ನುವುದು ಒಂದೇ ಇದ್ದಾಗ ಸಮಸ್ಯೆಗಳಿರಲಿಲ್ಲ. ಹಾಗೆ ಸತ್ಯವೂ ಒಂದೆ ಆದಾಗ ಎಲ್ಲಾ ಒಂದೇ ಕಾಣುತ್ತದೆ.ಯಾವಾಗ ಅಧ್ಯಾತ್ಮ ಹಾಗು ಭೌತಿಕದ ಸತ್ಯಾಸತ್ಯತೆಯನ್ನು ರಾಜಕೀಯವಾಗಿ ಎಳೆದುಕೊಂಡು ಹೋದರೋ ಆಗಲೇ ಅಧರ್ಮ ಬೆಳೆದು ಧರ್ಮಕುಸಿದಿದೆ. ಯಾರನ್ನೂ ಯಾರೋ ಆಳುವುದಕ್ಕಿಂತ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸ್ವತಂತ್ರ ಇಂದಿನ ಪ್ರಜಾಪ್ರಭುತ್ವ ದೇಶ ಪಡೆದಿತ್ತು.ಆದರೆ, ಹಿಂದಿನ ರಾಜಕೀಯವನ್ನು ಮತ್ತೆ ಬಂಡವಾಳ ಮಾಡಿಕೊಂಡು ಜ್ಞಾನ ನೀಡದ ಶಿಕ್ಷಣದೆಡೆಗೆ ಹೊರಟವರಿಗೆ ಸತ್ಯದರ್ಶನ ವಾಗದೆ ರಾಜಕೀಯತೆ ಬೆಳೆದಿದೆ. ಇದೀಗ ಅದೇ ದೊಡ್ಡ ಸಮಸ್ಯೆ ಕಡೆಗೆ ಜನರನ್ನು ಸಾಲದ ಸುಳಿಗೆ ಎಳೆದು ಆಳುವಾಗ ಪ್ರಜಾಧರ್ಮ ಯಾವುದು? ಎಲ್ಲಿರುವುದು?
ಒಬ್ಬೊಬ್ಬ ಪ್ರಜೆಗಳ ತಲೆಯ ಮೇಲೇ ಸಾಲದ ಹೊರೆ ಏರಿಸಿ ದೇಶ ನಡೆಸಲು ವಿದೇಶಿ ಸಾಲ,ಬಂಡವಾಳ,ವ್ಯವಹಾರಕ್ಕೆ ಕೈಚಾಚಿದರೆ ಇದರಲ್ಲಿ ಸ್ವದೇಶದವರ ಜ್ಞಾನ ಎಲ್ಲಿದೆ? ಧರ್ಮ ಹೇಗೆ ಉಳಿಯುತ್ತದೆ? ಸಾಲ ಹೇಗೆ ತೀರಿಸುವುದು ಎಂದರೆ ನಮ್ಮವರು ಪರಕೀಯರ ಆಳಾಗಿ ದುಡಿಯುವುದು ಪ್ರಗತಿ ಎನ್ನಬಹುದೆ?
ನಾವು ಪುರಾಣ ಕಥೆಗಳಲ್ಲಿದ್ದ ಧರ್ಮ ಸತ್ಯ, ನ್ಯಾಯ, ನೀತಿ ಸಂಸ್ಕೃತಿಯ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದರೂ ನಮ್ಮೆದುರೇ ನಡೆಯುವ ಅಧರ್ಮ, ಅಸತ್ಯದ ಭ್ರಷ್ಟಾಚಾರ ನಮ್ಮ ಸಹಕಾರವಿಲ್ಲದೆ ಬೆಳೆದಿಲ್ಲವೆನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಆತ್ಮಾವಲೋಕನ ಬೇಕಷ್ಟೆ. ಇದನ್ನು ಸರ್ಕಾರವಾಗಲಿ, ಹಣ,ಅಧಿಕಾರ,ಸ್ಥಾನಮಾನವಾಗಲಿ ಸರಿಪಡಿಸಲಾಗದು.ಕಾನೂನಿನ ಪ್ರಕಾರ ನಮ್ಮ ದೇಶದ ಸಂವಿಧಾನವು ಪ್ರಜಾಪ್ರಭುತ್ವದ ಧರ್ಮ ವನ್ನು ಎತ್ತಿಹಿಡಿದು ದೇಶವನ್ನು ಕಟ್ಟುವ ಕೆಲಸ ಮಾಡುವ ಉದ್ದೇಶ ವಿದ್ದರೂ ಅದನ್ನು ಅರ್ಥ ಮಾಡಿಕೊಳ್ಳಲು ಸೋತವರು ದೇಶವನ್ನೇ ವಿದೇಶಮಾಡಿ ಜನರನ್ನು ವಿದೇಶದೆಡೆಗೆ ಸಾಗಿಸುತ್ತಾ ದೇಶದ ಮೂಲ ಶಿಕ್ಷಣವನ್ನು ಹಿಂದುಳಿಸಿ ಪರಕೀಯರ ಜ್ಞಾನದಲ್ಲಿ ಸ್ವದೇಶದ ವೈಜ್ಞಾನಿಕಪ್ರಗತಿಯ ಕಡೆಗೆ ಹೋಗಿದ್ದರೂ ಇದರಿಂದಾಗಿ ಪ್ರಜಾಪ್ರಭುತ್ವ ಸ್ವತಂತ್ರ ವಾಗಿದೆಯೆ?
ಯಾವ ದೇಶದ ಸತ್ಯ,ಧರ್ಮ, ನ್ಯಾಯ ನೀತಿ,ಶಿಕ್ಷಣವು ವ್ಯಾಪಾರದ ಸಗಟಾಗಿರುವುದೋ ಅಲ್ಲಿ ವ್ಯವಹಾರವೇ ಮುಖ್ಯವಾಗಿ ಮೂಲದ ಧರ್ಮ ಕುಸಿದಿರುತ್ತದೆ.ಹಾಗಂತ ಯಾರೂ ಮೂಲ ಬೇರನ್ನು ಕಿತ್ತು ಆಳಲು ಸಾಧ್ಯವಿಲ್ಲ. ಈ ಅರಿವು ಆಳವಾಗಿದ್ದಷ್ಟೂ ಉತ್ತಮ ಪ್ರಗತಿ ಸಾಧ್ಯ.ಇದನ್ನು ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ ವಾಗಿ ಹಿಂದಿನ ಮಹಾತ್ಮರುಗಳು ತಿಳಿದು,ತಿಳಿಸಿ,ಕಲಿಸಿ,ಬೆಳೆಸುವುದರ ಮೂಲಕ ದೇಶವನ್ನು ಜ್ಞಾನದಿಂದ ಕಟ್ಟುವ ಕೆಲಸಮಾಡಿ ಮಹಾತ್ಮರಾಗಿದ್ದರು. ಅವರ ಹೆಸರಿನಲ್ಲಿಯೂ ರಾಜಕೀಯ ಬೆಳೆಸಿಕೊಂಡರೆ ರಾಜಯೋಗದ ಅರ್ಥ ವಾಗೋದು ಕಷ್ಟ.
ಬದಲಾವಣೆ ಆಗುತ್ತಿದೆ, ಆಗುತ್ತದೆ,ಆಗಬೇಕಾದರೆ ನಮ್ಮ ಸಹಕಾರದ ಅಗತ್ಯವಿದೆ.
ಶಿಕ್ಷಣದಲ್ಲಿಯೇ ಮಕ್ಕಳ ಪ್ರತಿಭೆ, ಜ್ಞಾನ,ಆಸಕ್ತಿ ಗುರುತಿಸಿ ಸುಶಿಕ್ಷಣ ನೀಡುವುದಷ್ಟೆ ಪ್ರಜಾಧರ್ಮ. ದೇಶದ ನೆಲ ಜಲ ಬೇಕು ಧರ್ಮಶಿಕ್ಷಣ ಬೇಡವೆ? ಅಧ್ಯಾತ್ಮ ಎಂದರೆ ನಮ್ಮನ್ನು ನಾವರಿತು ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯೋದು. ಇದು ಒಳಗಿನ ಸತ್ಯ,ಧರ್ಮ ಶಿಕ್ಷಣದಲ್ಲಿತ್ತು ಹೊರಗಿರಲಿಲ್ಲ.
ಹೊರದೇಶದ ಶಿಕ್ಷಣ ಹೊರದೇಶವನ್ನು ಬೆಳೆಸುತ್ತದೆ. ನಮ್ಮ ಶಿಕ್ಷಣ ಅವರ ದೇಶದ ಪ್ರಜೆಗಳಿಗೆ ಕೊಡುವರೆ? ಕೊಟ್ಟರೆ ಅಲ್ಲಿಯ ಪ್ರಜೆಗಳೇ ಶ್ರೇಷ್ಠ ವ್ಯಕ್ತಿಗಳಾಗೋದರಲ್ಲಿ ಸಂಶಯವಿಲ್ಲ. ಕಾರಣ ಭಾರತ ಮಾತೆ ವಿಶ್ವಕ್ಕೆಗುರು.ವಿಶ್ವವೇ ಒಪ್ಪಿಕೊಂಡರೂ ಭಾರತೀಯರೆ ವಿರೋಧಿಸಿ ನಡೆದಿರೋದು ದುರಂತವಷ್ಟೆ.
ಕಾಲಮಾನಕ್ಕೆ ತಕ್ಕಂತೆ ಜೀವನವಿದೆ.ಹಾಗೆಯೇ ಧರ್ಮ ವೂ ಬದಲಾಗಿದೆ. ಪ್ರಜಾಧರ್ಮ ಇಂದಿನ ಭಾರತದಂತಹ ಪವಿತ್ರ ದೇಶಕ್ಕೆ ಅಗತ್ಯವಾಗಿದೆ.ಇದಕ್ಕೆ ಜ್ಞಾನದ ಶಿಕ್ಷಣ ಕೊಡಬೇಕಿದೆ.ಆತ್ಮಜ್ಞಾನದ ನಂತರವೇ ಭೌತಿಕ ವಿಜ್ಞಾನದ ವಿಚಾರ ಮಾನವ ತಿಳಿದಾಗಲೇ ಸತ್ಯದರ್ಶನ ಸಾಧ್ಯವಿದೆ.
Monday, January 30, 2023
ಅತಿಯಾದ ಸಾಲದಲ್ಲಿದ್ದವರು ಭೂಮಿ ಆಳಲಾರರು
Sunday, January 29, 2023
ಕೆಟ್ಟದರಿಂದಲೇ ಒಳ್ಳೆಯದರ ಪರಿಚಯವೆ?
ಪ್ರಯತ್ನ ನಮ್ಮದು ಫಲ ಭಗವಂತನದು
Friday, January 27, 2023
ಜ್ಞಾನ ದೇವತೆ ಮತ್ತೆ ಭಾರತದ ಶಿಖರಕ್ಕೇರುವಳು.
ತಿಂದ ಮೇಲೆ ನೀರು ಕುಡಿಯಲೇಬೇಕು
ಭಗವದ್ಗೀತೆಯಲ್ಲಿರುವ ಮೂಲ ಸತ್ಯ ಯಾವುದು ?
Thursday, January 26, 2023
ಗಣತಂತ್ರ ದಿನಾಚರಣೆ= ಗಣರಾಜ್ಯೋತ್ಸವ?
Sunday, January 22, 2023
ಆತ್ಮನಿರ್ಭರ ಭಾರತ ರಾಜಕೀಯದಿಂದ ಸಾಧ್ಯವೆ?
Friday, January 20, 2023
ದೃಷ್ಟಿ ದೋಷ ಸರಿಪಡಿಸುವುದು ಸಾಧ್ಯವೆ?
ತಾಯಂದಿರನ್ನು ರಕ್ಷಿಸಲು ನಾವ್ಯಾರು?
ಇರುತ್ತದೆ. ಕಣ್ಣಿಗೆ ಕಾಣದ ಇದನ್ನು ಸ್ತ್ರೀ ಮನೆಯೊಳಗಿದ್ದೇ ಬೆಳೆಸಿಕೊಂಡರೆ ಯಾವ ರಾಜಕೀಯದ ಸಹಾಯ ಇಲ್ಲದೆಯೇ ಸುರಕ್ಷಿತವಾಗಿರಬಹುದು. ಆದರೆ ಕೆಲವರಿಗೆ ಹೊರಗೆ ಹೋಗಿಯೇ ತಮ್ಮ ಸಂಸಾರ ನಡೆಸಲು ದುಡಿಯುವ ಪರಿಸ್ಥಿತಿ ಬಂದಿರುವುದು ಒಂದು ದುರಂತ. ಒಟ್ಟಿನಲ್ಲಿ ಸ್ತ್ರೀ ಶಕ್ತಿಯನ್ನು ಯಾವ ರಾಜಕೀಯ ಸಾಕುವ,ರಕ್ಷಿಸುವ ಅಗತ್ಯವಿಲ್ಲ.ಸ್ವಯಂ ಶಕ್ತಿಯನ್ನು ಭಾರತಮಾತೆ ಹೊಂದಿರುವಾಗ ಹೊರಗಿನ ಭ್ರಷ್ಟಾಚಾರದ ಕೆಳಗೆ ತಾನೇ ಸಿಲುಕಿರುವಾಗ ಹೇಗೆ ತಾನೇ ದೇವರನ್ನು ತಾಯಿಯನ್ನು ಆಳಬಹುದು?
ಸ್ತ್ರೀ ಗೆ ಸ್ತ್ರೀ ವೈರಿಯಾದರೆ ಯಾರೂ ರಕ್ಷಣೆ ಮಾಡಲಾಗದು.
ಭೌತಿಕದಲ್ಲಿ ಹೆಸರು ಮಾಡಿದವರಿಗೆ ಅಧ್ಯಾತ್ಮದ ಸತ್ಯದ ಅರಿವಿದ್ದರೆ ಉತ್ತಮ ಸಾಧನೆ ಸಾಧ್ಯವಿದೆ.
ಸ್ತ್ರೀ ಶಕ್ತಿಯಿಲ್ಲದೆ ಭೂಮಿಯಿಲ್ಲ.ತಾಯಿಯಿಲ್ಲದೆ ಜನ್ಮವಿಲ್ಲ. ಜನನವಿಲ್ಲದೆ ಜೀವನವೇ ಇಲ್ಲ. ನಾವು ಜೀವಿಸುತ್ತಿರುವುದೆ ಜನನಿಯ ಆಸರೆಯಿಂದ ಎಂದಾಗ ಅಂತಹ ಜನನಿಯನ್ನು ನಾನು ರಕ್ಷಿಸುವೆ ಎನ್ನುವ ವ್ಯಕ್ತಿಯ ಅಗತ್ಯವಿದೆಯೆ? ಇದ್ದರೂ ವ್ಯಕ್ತಿಯ ಹಿಂದಿನ ಶಕ್ತಿ ಯಾವುದು? ನಮ್ಮದೇ ಇರೋವಾಗ ಇದರಲ್ಲಿ ರಾಜಕೀಯವಿದ್ದರೆ ನಾವು ನಮ್ಮ ಸ್ವಂತ ಶಕ್ತಿ ಕಳೆದುಕೊಂಡು ಜೀವನದ ಉದ್ದೇಶ ಮರೆತು ನಡೆದಿರುವುದು ಸತ್ಯ. ಒಳಗೇ ಅಡಗಿರುವ ಅಮೃತವಾದ ಜ್ಞಾನ ಬಿಟ್ಟು ಹೊರಗಿನ ಸತ್ತ ಸತ್ಯವನ್ನು ನಂಬಿದರೆ ಸಿಗೋದು ಸಾವಷ್ಟೆ. ಎಲ್ಲರಿಗೂ ಬರೋದನ್ನು ತಡೆಯಲು ಅಸಾಧ್ಯ.ಹೀಗಿರುವಾಗ ಇದ್ದಾಗಲೇ ಆತ್ಮಜ್ಞಾನದೆಡೆಗೆ ,ಸತ್ಯದ ಕಡೆಗೆ ಸ್ವತಂತ್ರ ವಾಗಿ ನಡೆಯಲು ಸಾಧ್ಯವಾದರೆ ಇದೇ ನಾವು ಆ ತಾಯಿಗೆ ಕೊಡುವ ಗೌರವವಾಗುತ್ತದೆ. ನಾನೇ ದೇಶಕ್ಕಿಂತ ವಿದೇಶದ ವ್ಯಾಮೋಹದಲ್ಲಿ,ವಿದೇಶಿಗಳ ಸಹಕಾರದಲ್ಲಿ,ವಿದೇಶಿಗಳ ಬಂಡವಾಳದಲ್ಲಿ,ಸಾಲದಲ್ಲಿ ಜೀವನ ನಡೆಸಿರುವಾಗ ಸ್ವದೇಶದ ಋಣ ತೀರಿಸಲು ಕಷ್ಟ.ಅದರಲ್ಲೂ ತಾಯಿಯ ಋಣ ತೀರಿಸಲು ಜ್ಞಾನವೇ ಬಂಡವಾಳ. ಜ್ಞಾನದಿಂದ ಕಷ್ಟಪಟ್ಟು ಸಂಪಾದಿಸಿದ ಹಣವು ಧರ್ಮ ರಕ್ಷಣೆಗೆ ಬಳಸಿದರೆ ಋಣ ತೀರುವುದು.
ಹಿಂದಿನ ನಾಲ್ಕು ವರ್ಣಗಳ ಪ್ರಕಾರ ಮೇಲಿನವರ ಆತ್ಮಜ್ಞಾನವು ಕ್ಷತ್ರಿಯರಿಗೆ ಧರ್ಮ ದ ಕಡೆಗೆ ನಡೆಸಿತ್ತು, ಧರ್ಮದ ವ್ಯವಹಾರದಿಂದ ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿದ್ದರು ಮುಂದೆ ಅದೇ ಸೇವಾಕಾರ್ಯ ವಾಗಿ ಸಮಾಜದಲ್ಲಿನ ಸಮಾನತೆಯೆಡೆಗೆ ಕಾಯಕವೇ ಕೈಲಾಸ ಎನ್ನುವ ಮಂತ್ರವಾಯಿತು. ದಾಸ,ಶರಣರ ತತ್ವ ಬೇರೆಯಲ್ಲ ವೇದಸಾರಗಳ ತತ್ವ ಬೇರೆಯಲ್ಲ.ಯಾವಾಗ ಈ ತತ್ವಗಳು ತಂತ್ರವಾಗಿ ಬಳಸಿ ಜನರನ್ನು ಆಳಲು ಹೊರಟವೋ ರಾಜಕೀಯವು ರಾಜಯೋಗವನ್ನು ಮೆಟ್ಟಿ ನಿಂತಿತು.ಈಗಲೂ ನಾವು ಕಾಣುತ್ತಿರುವ ಸತ್ಯ ಇದೇ ಆಗಿದೆ.ಆದರೆ ಆ ಸೂಕ್ನ ಸತ್ಯವನ್ನು ಕಾಣುವ ಜ್ಞಾನ ಕಳೆದುಕೊಂಡಿರುವ ಜನರಿಗೆ ತಿಳಿಸಿ ಹೇಳುವವರಿಲ್ಲದೆ ದೇಶವೇ ಅಧರ್ಮದವರ ಕೈ ಸೇರಿ ಹಿಂದುಳಿದರೆ ಇದಕ್ಕೆ ಕಾರಣವೇ ನಮ್ಮವರ ಸಹಕಾರವು ಅಧರ್ಮದ ರಾಜಕೀಯದ ವಶವಾಗಿರೋದು. ಇದರಿಂದ ನಮ್ಮದೇ ಜ್ಞಾನ ಕುಸಿದರೆ ನಮಗೇ ನಷ್ಟ ಎನ್ನುವ ಸತ್ಯಕ್ಕೆ ಸಾವಿಲ್ಲ. ಸತ್ಯ ಎಷ್ಟೇ ತಿರುಚಿದರೂ ಮೂಲಕ್ಕೆ ಚ್ಯುತಿ ಬರೋದಿಲ್ಲ. ಆಳವಾಗಿರುವ ಬೇರನ್ನು ಕೀಳುವ ಶಕ್ತಿ ರೆಂಬೆಕೊಂಬೆಗಳಿಗೆ ಇರೋದಿಲ್ಲವಲ್ಲ.ಹಾಗೆಯೇ ಪರರು ಎಷ್ಟೇ ಮೇಲಿನ ರಾಜಕೀಯ ನಡೆಸಿದರೂ ಒಳಗಿರುವ ರಾಜಯೋಗದ ಕಡೆಗೆ ನಡೆಯುವುದು ಕಷ್ಟ. ಹೀಗಾಗಿ ಮಾನವರು ಅದರಲ್ಲೂ ಭಾರತೀಯರು ವಿವೇಕಾನಂದರ ರಾಜಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮಗೆ ಸ್ವಾತಂತ್ರ್ಯ ರಾಜಯೋಗದಲ್ಲಿ ಸಿಗುತ್ತದೆ. ಈಗ ನಮ್ಮವರೆ ನಮಗೆ ಶತ್ರುಗಳಾಗಿರೋದೆ ಅಜ್ಞಾನದ ಶಿಕ್ಷಣದ ಪ್ರಭಾವ. ಶಿಕ್ಷಣವೇ ರಾಜಕೀಯದ ವ್ಯವಹಾರಕ್ಕೆ ಇಳಿದರೆ ಜ್ಞಾನ ಎಲ್ಲಿರುತ್ತದೆ?
ರಾಜಕೀಯವು ಯೋಗಿಗಳ ದೇಶವನ್ನು ರೋಗಿಗಳ ದೇಶ ಮಾಡುತ್ತಾ ತಾಯಿಯನ್ನೇ ಆಳಲು ಹೊರಟಿದೆ ಎಂದರೆ ಇದು ಜ್ಞಾನವೆ? ಅಜ್ಞಾನವೆ?
ಅವರವರ ತಾಯಿಯ ಜ್ಞಾನಶಕ್ತಿಯನ್ನು ತಿಳಿಯದೆ ಮುಂದೆ ನಡೆದವರಿಗೆ ವಿಜ್ಞಾನ ಜಗತ್ತು ಮಾತ್ರ ಕಾಣುತ್ತದೆ. ಅಧ್ಯಾತ್ಮ ಜಗತ್ತಿನಲ್ಲಿ ತಾಯಿಯೇ ಮೊದಲ ಗುರು.ವಿಪರ್ಯಾಸವೆಂದರೆ ನಮ್ಮ ಭಾರತದಲ್ಲಿ ಆ ಶಕ್ತಿಗೆ ಬಂಧನವಿದ್ದು ಅವಳನ್ನು ಆಳಲು ಹೊರಟವರಿಗೆ ಅಧಿಕಾರ ಸ್ಥಾನಮಾನ ಹೆಚ್ಚಾಗಿ ಗಣಿದಣಿಗಳಾಗಿದ್ದರೂ ಚಿನ್ನದಂತ ಶುದ್ದ ಮನಸ್ಸಿಲ್ಲದೆ ಹಣದಿಂದ ಭೂಮಿಯನ್ನು ಆಳಲು ಹೊರಟವರೆ ಹೆಚ್ಚು. ಇದಕ್ಕೆ ನಮ್ಮ ದೇಶದ ಸ್ಥಿತಿ ಹೀಗಿದೆ.
ಇಂದು ಜನರಿಗೆ ತಮ್ಮದೇ ಆದ ರೀತಿಯಲ್ಲಿ ಎಲ್ಲಾ ಪಕ್ಷಗಳು ಉಚಿತಗಳ ಭರವಸೆಯನ್ನು ಉಚಿತವಾಗಿ ಕೊಡುತ್ತಿವೆ. ಈ ಉಚಿತ ಕೊಡಲು ತಾವೆಷ್ಟು ದುಡಿದು ಗಳಿಸಿರುವರೆನ್ನುವ ಜ್ಞಾನವಿಲ್ಲದವರಿಂದ ಜನರು ಉಚಿತ ಪಡೆದಷ್ಟೂ ತಮ್ಮ ಸಾಲದ ಹೊರೆ ತಾವೇ ಹೊತ್ತು ಹೋಗುವುದಂತೂ ಖಚಿತ ಎನ್ನುವ ಜ್ಞಾನವಿದ್ದವರು ಸರ್ಕಾರದ ಹಿಂದಿರುವ ಉದ್ದೇಶ ಅರ್ಥ ವಾಗುತ್ತದೆ. ಎಲ್ಲಿಯವರೆಗೆ ಕೊಡುವವರಿರುವರೋ ಅಲ್ಲಿಯವರೆಗೆ ಪಡೆಯುವವರೂ ಇರುತ್ತಾರೆ. ಎಷ್ಟು ಪಡೆಯುವರೋ ಅಷ್ಟು ಸಾಲ ಪಡೆಯುವರು.
ಹಿಂದೆ ರಾಜಪ್ರಭುತ್ವ ವಿತ್ತುಇಂದುಪ್ರಜಾಪ್ರಭುತ್ವವಿದೆ.ಅಂದು ಕ್ಷಾತ್ರ ಧರ್ಮವಿತ್ತು,ಇಂದು ಪ್ರಜಾಧರ್ಮ ವಿದೆ.ಅಂದು ಧಾರ್ಮಿಕ ಶಿಕ್ಷಣವಿತ್ತು.ಇಂದು ಭೌತಿಕ ಶಿಕ್ಷಣವೇ ಜನರನ್ನು ಆಳುತ್ತಿದೆ. ಅಂದಿನ ಜ್ಞಾನ ಆಂತರಿಕ ಶುದ್ದಿಮಾಡಿತ್ತು.ಇಂದು ಭೌತಿಕ ಶುದ್ದಿಗೆ ಹೆಚ್ಚು ಹಣ ವ್ಯಯಿಸುತ್ತಿದೆ.
ಇದರಲ್ಲಿನ ಅಧ್ವೈತ ತತ್ವವನ್ನು ರಾಜಯೋಗದಿಂದ ಮಾತ್ರ ತಿಳಿಯಬಹುದು. ಅಂದರೆ ಯಾವ ಪ್ರಜೆಗಳು ಸ್ವತಂತ್ರ ಜ್ಞಾನದಿಂದ ದೇಶವನ್ನು ಕಾಣುತ್ತಿರುವರೋ ಅವರಿಗೆ ಸತ್ಯ ಅರ್ಥ ವಾಗುತ್ತದೆ. ಪೂರ್ಣ ಸತ್ಯ ತಿಳಿಯದೆ ಮಧ್ಯವರ್ತಿ ಆಗಿರುವವರಿಗೆ ವ್ಯವಹಾರವೇ ಮುಖ್ಯವಾಗುತ್ತದೆ. ವ್ಯವಹಾರದಲ್ಲಿ ಹಣವೇ ಮುಖ್ಯ.ಆತ್ಮ ಜ್ಞಾನವಲ್ಲ. ಇದು ಎಲ್ಲಾ ಕ್ಷೇತ್ರವನ್ನು ರಾಜಕೀಯದೆಡೆಗೆ ನಡೆಸಿದರೆ ರಾಜಯೋಗ ಹಿಂದುಳಿದು ಹಿಂದೂ ಧರ್ಮ ಹಿಂದುಳಿದ ಧರ್ಮ ಆಗುವುದು ಸಹಜ. ನಮ್ಮ ಹಿಂದಿನ ಮಹಾತ್ಮರ ಹಿಂದಿನ ಉದ್ದೇಶ ಜೀವನ್ಮುಕ್ತಿ ಆಗಿದ್ದ ಕಾರಣ ತಮ್ಮ ಕರ್ಮ ವನ್ನು ಸತ್ಯ ಧರ್ಮದಿಂದ ತಿಳಿದು ನಡೆದು ನಡೆಸಿಕೊಂಡು ಬಂದ ಹಣವನ್ನು ಪರಮಾತ್ಮನ ಸೇವೆಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಬಳಸಿದ್ದರು. ಭಗವದ್ಗೀತೆ ಯೂ ಇದನ್ನು ತಿಳಿಸಿದೆ ಹಾಗಾದರೆ ಎಷ್ಟು ಭಾರತೀಯರು ಈ ಮಾರ್ಗ ಹಿಡಿದು ದೇಶ ಸೇವೆ ಮಾಡಿದ್ದಾರೆ.ಸರಳ ಜೀವನ, ಸ್ವಾವಲಂಬನೆ, ಸತ್ಯ ಧರ್ಮ, ನ್ಯಾಯ,ನೀತಿ,ಸಂಸ್ಕೃತಿ, ಸದಾಚಾರದಿಂದ ಆತ್ಮ ನಿರ್ಭರ ಭಾರತ ಸಾಧ್ಯವಾದರೂ ಅದು ಆಂತರಿಕ ಜ್ಞಾನದಿಂದ ಬೆಳೆದಾಗಲೇ ಸಾಧ್ಯ. ಹೊರಗಿನ ವಿಜ್ಞಾನದಿಂದ ತಾತ್ಕಾಲಿಕ ಬದಲಾವಣೆ ಆದರೂ ಮೂಲ ಶುದ್ದಿಯಾಗದೆ ಸ್ವಚ್ಚಭಾರತ ಸಾಧ್ಯವೆ? ಇದಕ್ಕಾಗಿ ಪ್ರಜೆಗಳೆ ಹಿಂದಿರುಗಿ ಒಳಹೊಕ್ಕು ಸತ್ಯ ತಿಳಿಯುವುದು ಅಗತ್ಯವಿತ್ತು. ಆದರೆ ಈ ಸತ್ಯ ಕಣ್ಣಿಗೆ ಕಾಣೋದು ಕಷ್ಟವಾಗಿ ನಮ್ಮವರೆ ನಮಗೆ ಶತ್ರು ಆದರೆ ನಮಗೆ ನಾವೇ ಶತ್ರುಗಳಷ್ಟೆ. ಇದಕ್ಕೆ ಪರಿಹಾರ ಹಣವಲ್ಲ.ಜ್ಞಾನದ ಶಿಕ್ಷಣ. ನಿಮ್ಮ ನಿಮ್ಮ ಮನೆಯ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.
ಗೊತ್ತಿಲ್ಲದೆ ಮಾಡಿದ ಪಾಪಕ್ಕೆ ಕ್ಷಮೆಯಿದೆ.ಗೊತ್ತಿದ್ದೂ ಮಾಡಿದ ಪಾಪಕ್ಕೆ ಶಿಕ್ಷೆಯಿದೆ.
ಬಡತನ ಅಜ್ಞಾನದಿಂದ ಬೆಳೆದಿದೆಯೆ?
ಹಿಂದೂಗಳು ಹಿಂದುಳಿದೇ ಬಡವರಾದರೆ?
ಹಿಂದೂ ಧರ್ಮದಲ್ಲಿ ಬಡತನವನ್ನು ಜ್ಞಾನದ ಆಧಾರದ ಮೇಲೆ ತಿಳಿಯುವುದಿತ್ತು . ಜ್ಞಾನ ಸಂಪಾದನೆಗೆ ಹಣವನ್ನು ದಾನ ಧರ್ಮಕ್ಕೆ ಬಳಸಬೇಕಿತ್ತು. ಹೀಗಾಗಿ ದಿನನಿತ್ಯದ ಕಾಯಕದ ಹಣದಿಂದಲೇ ಮಹಾಬ್ರಾಹ್ಮಣರಾದವರು ಜೀವನ ನಡೆಸಿ ,ಸಂಗ್ರಹಣೆ ಮಾಡುತ್ತಿರಲಿಲ್ಲ.ಹಾಗೆಯೇ ಕಾಯಕ ಯೋಗಿ ರೈತನೂ ತನ್ನ ಜೊತೆಗೆ ಸುತ್ತಮುತ್ತಲಿನವರಿಗೂ ದವಸ ಧಾನ್ಯಗಳನ್ನು ಹಂಚಿಕೊಂಡು ಅತಿಯಾದ ಸಂಗ್ರಹಣೆಯಿಲ್ಲದೆ ನೆಮ್ಮದಿ ಯಾಗಿದ್ದ. ಆ ನೆಮ್ಮದಿ ಶಾಂತಿ ತೃಪ್ತಿಯ ಅನುಭವವಿಲ್ಲದ ಹೊರಗಿನವರು ಬಡ ಬ್ರಾಹ್ಮಣ, ಬಡ ಸೈನಿಕ, ಬಡ ವ್ಯಾಪಾರಿ,ಬಡ ಶಿಕ್ಷಕ,ಬಡ ರೈತನೆಂದು ಕರೆದು ಸಾಲದ. ಹಣ ಕೊಟ್ಟು ಮೇಲೆತ್ತುವ ಮೂಲಕ ಮೂಲದ ಭೂಮಿ ಮಾರಿ ಹೊರಬಂದವರು ಹಣ ಪಡೆದರು, ಕಾಲಾನಂತರ ಬಡತನ ಹಣದಿಂದ ಅಳೆಯುವತ್ತ ನಡೆಯಿತು. ಭೂಮಿಯಲ್ಲಿ ಸಾಕಷ್ಟು ಸಮೃದ್ದಿ ಇದೆ, ಜ್ಞಾನದಿಂದ ಸದ್ಬಳಕೆ ಮಾಡಿಕೊಂಡವನು ಭೂಮಿಯ ಒಡೆಯನಾಗುತ್ತಾನೆ. ಅಂದರೆ ಸ್ತ್ರೀ ಶಕ್ತಿಯನ್ನು ಪ್ರಕೃತಿಯನ್ನು
ಜ್ಞಾನದಿಂದ ಉಳಿಸಿ ಬೆಳೆಸುವುದೇ ನಿಜವಾದ ಮಾನವ ಧರ್ಮ.
ಮನುಕುಲಕ್ಕೆ ಆಸರೆಯಾಗಿರುವ ಈ ಭೂಮಿ ತಾಯಿ ಬಡವಳೆ? ಕಲಿಗಾಲದ ಪ್ರಭಾವ ಎಷ್ಟು ಅಜ್ಞಾನವನ್ನು ಎತ್ತಿಹಿಡಿದು ಮನುಕುಲವನ್ನು ಹಾಳುಮಾಡಿದೆ ಎನ್ನುವುದನ್ನು ಕೇವಲ ಬಾಹ್ಯಚಕ್ಷುವಿನಿಂದ ಅಳೆದರೆ ಸಾಲದು. ಸಾಲದ ಹೊರೆ ಹೊತ್ತು ಹೋಗುತ್ತಿರುವ ಜೀವಕ್ಕೆ ಮುಕ್ತಿ ಸಿಗುವುದು ಜ್ಞಾನದಿಂದ ಮಾತ್ರ ಎನ್ನುವ ಹಿಂದೂ ಧರ್ಮದ ತಿರುಳನ್ನು ಸರಿಯಾಗಿ ತಿಳಿಯದ ಮಧ್ಯವರ್ತಿಗಳು ಸ್ತ್ರೀ ಯನ್ನು ಭೂಮಿಯನ್ನು ಆಳೋದಕ್ಕೆ ತತ್ವ ಬಿಟ್ಟು ತಂತ್ರದಿಂದ ಹಣಸಂಪಾದನೆಗಿಳಿದರು.ಇದರ ಪರಿಣಾಮವೇ ಸ್ತ್ರೀ ಶೋಷಣೆ. ಶೋಷಣೆಯ ಪರಿಣಾಮ ಸ್ತ್ರೀ ಮಾರಿಯಾಗಿ ಹೊರಬಂದು ಜೀವ ಹೊತ್ತು ನಡೆದಿರೋದು.ಇವೆಲ್ಲವೂ ಅಧ್ಯಾತ್ಮ ಸತ್ಯವಾದರೂ ಅದ್ಯಾತ್ಮ ವರ್ಗದವರೆ ವಿರೋಧ ವ್ಯಕ್ತಪಡಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ.ಹಾಗೆ ಶ್ರೀಮಂತ ಸ್ತ್ರೀ ಯರೂ ಇದಕ್ಕೆ ಸಹಕರಿಸಿದರೆ ಭೂಮಿಗೇ ನಷ್ಟ. ಇಲ್ಲಿ ಭೂ ತಾಯಿಯ ಶ್ರೀಮಂತಿಕೆಯು ಅವಳ ಗರ್ಭದಲ್ಲಿದ್ದ ಚಿನ್ನ ದಲ್ಲಿರಲಿಲ್ಲ. ಅದನ್ನು ಹೊರತೆಗೆದವರಿಗೆ ಸ್ತ್ರೀ ಸಹಕಾರ ಹೆಚ್ಚಾದಂತೆ ಭೂಮಿಯ ಸತ್ಯ,ಸತ್ವ,ತತ್ವವೂ ಕೆಳಗಿಳಿಯಿತು. ಈಗಲೂ ನಾವು ಕಾಣುವ ಕೋಟ್ಯಾಧೀಶರು
ದೇವಸ್ಥಾನಮಠಗಳಿಗೆ ಕೊಡುವ ದಾನದಿಂದ ಯಾವ ಧರ್ಮ ಉಳಿಯಿತೋ ಅಳಿಯಿತೋ ಒಟ್ಟಿನಲ್ಲಿ ಕೋಟ್ಯಾಧೀಶ್ವರರು ಇನ್ನಷ್ಟು ಚಿನ್ನದ ಗಣಿಮಾಲೀಕರಾದರು. ಇದೊಂದು ಉದಾಹರಣೆ ಅಷ್ಟೆ.
ಇಲ್ಲಿ ಪ್ರತಿಮೆಯಲ್ಲಿರುವ ಜ್ಞಾನ ದೇವತೆಗೆ ಚಿನ್ನ ಬೆಳ್ಳಿ ಯ ,ಒಡವೆ,ವಸ್ತ್ರ,ಅಲಂಕಾರ ಮಾಡಿದವರಲ್ಲಿ ಜ್ಞಾನ ಬೆಳೆದರೆ ಉತ್ತಮ ಬದಲಾವಣೆ.ಆದರೆ ಅದಕ್ಕೆ ಬದಲಾಗಿ ರಾಜಕೀಯವೇ ಬೆಳೆದು ಕಣ್ಣಿಗೆ ಕಾಣುವ ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಇದರರ್ಥ ಅಜ್ಞಾನದ ಸಂಪಾದನೆಯು ದೇವಿ ಸ್ವೀಕರಿಸಿಲ್ಲವೆಂದು.
ಸಾಮಾನ್ಯ ಜನತೆಗೆ ವೈಭವ ಮಾತ್ರ ಕಾಣುತ್ತದೆ .ಹೀಗಾಗಿ ಮಧ್ಯವರ್ತಿಗಳ ಅಜ್ಞಾನದ ವ್ಯವಹಾರ ಕಾಣದೆ ಇನ್ನಷ್ಟು ಭ್ರಷ್ಟಾಚಾರ ದೇವರ ಹೆಸರಲ್ಲಿ,ಧರ್ಮದ ಹೆಸರಲ್ಲಿ,ಜಾತಿ, ಸಂಸ್ಕೃತಿ, ಭಾಷೆ,ದೇಶದವರೆಗೆ ಹರಡುತ್ತಾ ಕೊನೆಗೆ ಜನ ಸಾಮಾನ್ಯರನ್ನೇ ಆಳುವ ಹಂತಕ್ಕೆ ಬಂದರೆ ಭಾರತ ಮಾತೆ ಬಡವಳೆ? ಸ್ತ್ರೀ ಜ್ಞಾನ ಕೀಳುಮಟ್ಟದ್ದೆ? ಸ್ತ್ರೀ ಯನ್ನು ಯಾವ ರೀತಿಯಲ್ಲಿ ಗೌರವಿಸಿ ಜೀವಿಸಬೇಕೆಂಬ ಜ್ಞಾನಿಗಳಿಗೆ ಮಾತ್ರ ನಿಜವಾದ ದೈವತ್ವ ಸಿಗೋದು. ಈ ಕಾರಣಕ್ಕಾಗಿ ಹಿಂದಿನ ಮಹರ್ಷಿಗಳು ತಮ್ಮ ಜ್ಞಾನವನ್ನು ಲೋಕಕಲ್ಯಾಣಕ್ಕೆ ಬಳಸಿ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದರು.ಇದಕ್ಕೆ ಸ್ತ್ರೀ ಸಹಕಾರವೂ ಇತ್ತು ಕಾರಣ ಅಲ್ಲಿ ಸ್ತ್ರೀ ಗೂ ವೇದ ಪಾರಂಗತೆ ಆಗುವ ಅವಕಾಶವಿತ್ತು.
ಹಿಂದೂ ಧರ್ಮವು ಬೆಳೆದಿರೋದೆ ಸ್ತ್ರೀ ಯರ ಆತ್ಮಜ್ಞಾನದಿಂದ ಎಂದಾಗ ಭೂಮಿ ನಡೆದಿರೋದೆ ಸ್ತ್ರೀ ಸಹಕಾರದಿಂದ. ಇದು ಜ್ಞಾನದಿಂದ ಬೆಳೆದರೆ ಧರ್ಮದ ಸಂಪತ್ತು, ಅಜ್ಞಾನದಿಂದ ಬೆಳೆದರೆ ಅಧರ್ಮದ ಆಪತ್ತು ಸ್ತ್ರೀ ಅನುಭವಿಸುವ ಜೊತೆಗೆ ಇಡೀ ಸಂಸಾರ,ಸಮಾಜ,
ದೇಶ,ವಿಶ್ವವೇ ಅನುಭವಿಸುತ್ತದೆ.ಅಂದರೆಜ್ಞಾನಕ್ಕೆ ಲಿಂಗ ಬೇಧ ವಿಲ್ಲ.ತತ್ವಕ್ಕೆ ಧರ್ಮ ಬೇಧವಿಲ್ಲ, ಈ ಬೇಧಬಾವವೇ ಬಡತನವನ್ನು ಬೆಳೆಸುತ್ತದೆ. ಬಡತನವು ಅಜ್ಞಾನದಲ್ಲಿ ಕಂಡಾಗ ಹಣವೇ ಸರ್ವ ಶ್ರೇಷ್ಠ ವೆನಿಸಿದರೆ,ಜ್ಞಾನಿಗಳಿಗೆ ಸತ್ಯಜ್ಞಾನವೇ ಶ್ರೇಷ್ಠ.
ವಿಪರ್ಯಾಸವೆಂದರೆ ಈಗಿನ ಭಾರತದಲ್ಲಿ ಜ್ಞಾನದ ಶಿಕ್ಷಣ ನೀಡದೆ ಅಜ್ಞಾನದ ರಾಜಕೀಯಕ್ಕೆ ಸಹಕರಿಸುತ್ತಾ ದೇಶಕ್ಕೆ ವಿದೇಶದಿಂದ ಸಾಲ,ಬಂಡವಾಳದ ಮೂಲಕ ವ್ಯವಹಾರಕ್ಕೆ ಕರೆತಂದು ಹೊರಗಿನ ಆಚರಣೆಯು ವೈಭವದಲ್ಲಿದೆ. ಜನರ ಸಾಲ ಮಿತಿಮೀರಿದೆ, ದೈವತ್ವಕುಸಿದಿದೆ, ಅಸುರ ಶಕ್ತಿ ದಿನದಿಂದ ದಿನಕ್ಕೆ ತನ್ನ ಪ್ರಭಾವ ತೋರಿಸುತ್ತಿದೆ. ಆದರೂ ಮಧ್ಯವರ್ತಿಗಳು ಇದಕ್ಕೂ ನಮಗೂ ಏನೂ ಸಂಬಂಧವಿಲ್ಲ
ಎನ್ನುವಂತೆ ಭ್ರಷ್ಟಾಚಾರದ ಮಧ್ಯೆ ಇದ್ದು ಮನರಂಜನೆಯಲ್ಲಿ, ಸಮಾವೇಶದಲ್ಲಿ ಜನರು ಮೈ ಮರೆಯುವಂತೆ ಮಾಡಿಕೊಂಡು ದೇಶವನ್ನು ಲೂಟಿ ಮಾಡಿಯಾದರೂ ತಮ್ಮ ಅಧಿಕಾರ, ಸ್ಥಾನಮಾನ ಉಳಿಸಿಕೊಂಡು ಆಳೋರಿಗೆ ಸಹಕರಿಸುತ್ತಿರುವುದು ದೊಡ್ಡ ದುರಂತ.
ಭೂಮಿಯ ಋಣ ತೀರಿಸಲು ಬಂದ ಸಣ್ಣ ಜೀವ ಉಳಿಸಲು ಸರ್ಕಾರದ ಸಹಾಯಕ್ಕಾಗಿ ಬೇಡೋರಿಗೆ ಸರಿಯಾದ ಜ್ಞಾನ ನೀಡಿ ಸ್ವತಂತ್ರ ವಾಗಿ ಜೀವಿಸಲು ಅವಕಾಶ ನೀಡುವ ಬದಲಾಗಿ ಇನ್ನಷ್ಟು ಸಾಲದ ಹೊರೆ ಹಾಕಿ ರೋಗದಿಂದ ಜೀವ ಹೋಗುವಷ್ಟು ಅಜ್ಞಾನ ತುಂಬುತ್ತಿರುವ ಹಿಂದಿನ
ಶಕ್ತಿ ಬಡತನವನ್ನು ದುರ್ಭಳಕೆ ಮಾಡಿಕೊಂಡಿಲ್ಲವೆ?
ಕೆಲವರು ಉತ್ತಮ ಶಿಕ್ಷಣದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿರಬಹುದು.ಆದರೆ ದೇಶದ ಈ ಸ್ಥಿತಿಗೆ ಕಾರಣವಾಗಿರುವ ಅಜ್ಞಾನದ ಶಿಕ್ಷಣವು ಮುಂದಿನ ಪೀಳಿಗೆಗೆ ಯಾರಿಗೆ ದಾರಿದೀಪವಾಗಬಹುದು? ಒಳಗೇ ಇರುವ ಅಮೃತವಾದ ಜ್ಞಾನ ಸಂಪತ್ತನ್ನು ಬಿಟ್ಟು ಹೊರಗಿನ
ಹಣದ ಸಂಪತ್ತನ್ನು ಪಡೆದಷ್ಟೂ ಅಜ್ಞಾನವೇ ಹೆಚ್ಚುವುದು.
ಮೂಲದ ಜ್ಞಾನವೇ ಬಂಡವಾಳ, ಅದರ ಪ್ರಕಾರ ಧರ್ಮದಿಂದ ಕರ್ಮ ಮಾಡಿದಾಗಲೇ ಮುಕ್ತಿ ಎನ್ನುವ ಹಿಂದೂ ಧರ್ಮವು ಇಂದು ಹೊರಗಿನ ಜ್ಞಾನದಿಂದ ಮುಂದೆ ನಡೆದು ಹಿಂದುಳಿದು ತಿರುಗಿ ಹಿಂದೆ ಬರುವ ಪ್ರಯತ್ನ ಮಾಡಿರುವುದೂ ಒಂದು ಸಣ್ಣ ಬದಲಾವಣೆ ಆದರೆ, ಇಲ್ಲಿ ಬಡವರ ಜ್ಞಾನ ಶ್ರೀಮಂತ ರ ಹಣಕ್ಕೆ ಮಾರಾಟವಾದರೆ ಅಧರ್ಮ. ಶ್ರೀಮಂತ ದೇವತೆಗಳುಬಡ ದೇವತೆಗಳನ್ನು ಕೇವಲವಾಗಿ ಕಂಡರೆ ಸರಿಯೆ? ಹಾಗೆಯೇ ಪ್ರಜಾಪ್ರಭುತ್ವದ ಎಲ್ಲಾ ಪ್ರಜೆಗಳಲ್ಲಿ ಅಡಗಿರುವ ವಿಶೇಷವಾದ ಜ್ಞಾನಶಕ್ತಿ ಸದ್ಬಳಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡದೆ ಅವರನ್ನು ಅಜ್ಞಾನಕ್ಕೆ ತಳ್ಳಿ ನಾನೇ ದೇವರು ಎನ್ನುವಹಂತಕ್ಕೆ ಬಂದರೆ
ದೇವರು ವ್ಯಕ್ತಿಯೆ? ಶಕ್ತಿಯೆ? ಅಗೋಚರ ಶಕ್ತಿಯನ್ನು ಎಷ್ಟೇ ದುರ್ಭಳಕೆ ಮಾಡಿಕೊಂಡರೂ ಅದಕ್ಕೆ ತಕ್ಕ ಶಿಕ್ಷೆಯಿದೆ.ಇದನ್ನು ಕರ್ಮಫಲವೆಂದರು. ಹೀಗಿರುವಾಗ ಹಿಂದೂ ಧರ್ಮದ ಆಳ ಅಗಲ ನೋಡದೆ ಹಿಂದುಳಿದ ಧರ್ಮ ಎಂದು ಹಣದಿಂದ ಬೆಳೆಸುವ ಪ್ರಯತ್ನ ನಡೆಸಿದರೆ ಅಜ್ಞಾನವಷ್ಟೆ.
ಹಣವಿಲ್ಲದೆ ಏನೂ ವ್ಯವಹಾರ ಮಾಡಲಾಗದು.ಹಾಗೆಯೇ ಜ್ಞಾನವಿಲ್ಲದೆ ಯಾವ ಧರ್ಮ ರಕ್ಷಣೆಯೂ ಆಗದು.
ಧರ್ಮ ವಿಲ್ಲದ ವ್ಯವಹಾರದಿಂದ ಋಣ ತೀರದು. ಋಣ ತೀರದೆ ಶಾಂತಿ ತೃಪ್ತಿ ಮುಕ್ತಿ ಸಿಗದು.
ಭಾರತಮಾತೆಯ ಮಕ್ಕಳಲ್ಲಿ ಹೆಣ್ಣಿನ ಜ್ಞಾನವೇ ಸಂಸಾರಕ್ಕೆ ಬಂಡವಾಳವಾಗಿತ್ತು.ಯಾವಾಗ ಜ್ಞಾನದಿಂದ ವಂಚಿತಗೊಳಿಸಿ ಆಳಿದರೋ ಆಗಲೇ ಅಧರ್ಮ ಪ್ರಾರಂಭ
ಈಗಲೂ ಸ್ತ್ರೀ ಶಕ್ತಿಯ ಒಗ್ಗಟ್ಟು ಏನನ್ನಾದರೂ ಬದಲಾವಣೆ ಮಾಡಬಹುದು.ಆದರೆ ಇದು ಆಂತರಿಕ ಶುದ್ದಿಯಿಂದ ಆದರೆ ಮಾತ್ರ ಸಾಧ್ಯ.ಕಾರಣ ಅಧ್ಯಾತ್ಮ ಬಿಟ್ಟು ಭೌತಿಕದೆಡೆಗೆ ಸ್ತ್ರೀ ಹೊರ ನಡೆದಂತೆಲ್ಲಾ ರಾಜಕೀಯ ಬೆಳೆಯುತ್ತದೆ.ರಾಜಯೋಗ ಹಿಂದುಳಿದರೆ ಪರಮಾತ್ಮನ ಶಕ್ತಿ ಹಿಂದುಳಿದು ತಾತ್ಕಾಲಿಕ ಪರಿಹಾರವಾಗಿರುತ್ತದೆ. ಅವರವರ ಕರ್ಮಕ್ಕೆ ತಕ್ಕಂತೆ ಫಲ ಕೊಡುವಾಗ ಅಸತ್ಯ,ಅನ್ಯಾಯ, ಭ್ರಷ್ಟಾಚಾರದ ಸುಳಿಯಲ್ಲಿ ರುವವರ ಹಣ,ಅಧಿಕಾರ,ಸ್ಥಾನವೂ ಭ್ರಷ್ಟರ ಬಂಡವಾಳ. ಒಟ್ಟಿನಲ್ಲಿ ಬದಲಾವಣೆಗೆ ಸತ್ಯಜ್ಞಾನ ಬೇಕು.ಸತ್ಯಕ್ಕಿಂತ ದೊಡ್ಡ ಸಂಪತ್ತು ಯಾವುದಿಲ್ಲ.ಅದು ಆತ್ಮಸಾಕ್ಷಿ ಎಂದರೆ ಸರಿಯಾಗಬಹುದು.
ನಾನು ಜೀವಿಸಬೇಕು ನಿಜ ಆದರೆ ನನ್ನ ಜೀವನದಿಂದ ಬೇರೆಯವರ ಜೀವನಹಾಳಾಗಬಾರದಷ್ಟೆ.ನಾನು ಆತ್ಮಜ್ಞಾನಿ ಆಗೋದಕ್ಕೆ ಒಳಗಿರುವ ಜ್ಞಾನಸಂಪತ್ತನ್ನು ಸರಿಯಾಗಿ ಬಳಸಿದರೆ ಉತ್ತಮ. ಈ ವಿಚಾರದಲ್ಲಿ ಸಾಕಷ್ಟು ಗೊಂದಲ ಹುಟ್ಟಿರುವುದು ಹೊರಗಿನ ರಾಜಕೀಯದಿಂದ ಮಾತ್ರ. ನಾನು ಇದನ್ನೇ ನೋಡಬೇಕು,ಹೇಳಬೇಕು,ಕೇಳಬೇಕು,ಓದಬೇಕು ತಿಳಿಯಬೇಕೆಂಬುದು ನಮ್ಮ ಶಿಕ್ಷಣ ತಿಳಿಸಿದೆ.ಈ ಕಾರಣಕ್ಕಾಗಿ
ನಮ್ಮಮಕ್ಕಳ ಆತ್ಮಜ್ಞಾನ ಬೆಳೆಯದೆ ಭೌತಿಕವಿಜ್ಞಾನದಲ್ಲಿ ಸಾಧಕರಾಗಿ ಹಣಸಂಪಾದಿಸಿ ವಿದೇಶದೆಡೆಗೆ ಹೋಗಿ ಅಲ್ಲಿ ಸೇವೆ ಮಾಡುತ್ತಾ ನಾನು ಭಾರತೀಯನು ಎನ್ನುವುದು ನಮ್ಮ ಗೌರವವಾದರೆ ಇದರಲ್ಲಿ ನಮ್ಮ ದೇಶದ ಗೌರವ ಎಲ್ಲಿದೆ? ನಿಜ ವಿದೇಶಿಗರು ಭಾರತೀಯರನ್ನು ಗೌರವಿಸಲು ಕಾರಣ ಅವರ ಜ್ಞಾನ.ವಿದಗಯಾವಂತ ಬುದ್ದಿವಂತ ಪ್ರಜೆಗೆ ದೇಶದೊಳಗೆ ಸೇವೆ ಮಾಡುವ ಅವಕಾಶವಿಲ್ಲ. ಅವಕಾಶ ಕೊಟ್ಟರೂ ಕೆಲವರಿಗೆ ವಿದೇಶಿ ವ್ಯಾಮೋಹವೇ ಹೆಚ್ಚಾಗಿ ಹೊರಹೋಗಿ ಅಲ್ಲಿಯ ಋಣ ತೀರಿಸುತ್ತಿದ್ದಾರೆ.ನಮ್ಮ ಒಳಗಿನ ವಿಷಯ ನಮ್ಮನ್ನು ನಡೆಸಿದೆ. ಇದರಲ್ಲಿ ಧರ್ಮ ಸತ್ಯ,ನ್ಯಾಯ,ನೀತಿ,ಸಂಸ್ಕೃತಿ ನಮ್ಮದಾಗಿದ್ದರೆ ನಾವು ಆತ್ಮಜ್ಞಾನಿಗಳೆ. ಪರಕೀಯರದ್ದಾದರೆ ? ಹೀಗಾಗಿ ಪೋಷಕರ ಸಮಸ್ಯೆ ಬೆಳೆಯುತ್ತಿದೆ.ನಮ್ಮಮಕ್ಕಳ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡದೆ ಹೊರಗೆ ಕಳಿಸಿದರೆ ಅವರ ಮನಸ್ಸು ಹೊರಮುಖ ಆಗಿರುವಾಗ ಒಳಗಿನ ಸತ್ಯಜ್ಞಾನ ಎಲ್ಲಿರಬೇಕು? ಹಿಂದುಳಿದವರು ಅವರೆ ಆದರೂ, ಹಣದ ಹಿಂದೆ ನಡೆದರೆ ಶ್ರೀಮಂತ ನಾಗಬಹುದೆನ್ನುವ ಮಾನವನಿಗೆ ನಿಜವಾದ ಶ್ರೀಮಂತ ರು ಯಾರು ಬಡವರು ಯಾರೆಂಬುದನ್ನು ತಿಳಿಸಿ ಹೇಳಲಾಗದು.ಅನುಭವಿಸಿಯೇ ತೀರಬೇಕು.ಇದೊಂದು ಪ್ರಾರಬ್ದ ಕರ್ಮ. ಇದನ್ನು ಹಿಂದಿನ ಮಹಾತ್ಮರುಗಳು ತಿಳಿದು ತಿಳಿಸುತ್ತಾ ಪರಮಾತ್ಮನೆಡೆಗೆ ಹೋಗಲು ಜ್ಞಾನ ಪಡೆದು ಹಣವನ್ನು ದಾನಧರ್ಮಕ್ಕೆ ಕೊಡುತ್ತಾ ಒಳಗಿರುವ ಯೋಗ ಶಕ್ತಿಯಿಂದ ಮುಕ್ತರಾದರು. ಈಗ ಅವರ ಪ್ರತಿಮೆಗಳು ಬಂಡವಾಳವಾಗಿದೆ.ತತ್ವ ಬಿಟ್ಟು ತಂತ್ರ ಬೆಳೆದಿದೆ. ತಂತ್ರದ ಸಹಕಾರದಿಂದ ಸಾಕಷ್ಟು ಹಣಗಳಿಸಿದರೂ ಸದ್ಬಳಕೆ ಮಾಡಿಕೊಳ್ಳಲು ಜ್ಞಾನವಿಲ್ಲದೆ ಇನ್ನಷ್ಟು ಸಾಲದ ಕಡೆಗೆ ಮಾನವ ನಡೆದಿರೋದು ಕಾಲದ ಮಹಿಮೆ. ಒಟ್ಟಿನಲ್ಲಿ ಭಾರತ ವಿಶ್ವಗುರು ಆಗಿದ್ದು ಅಧ್ಯಾತ್ಮ ದಿಂದ. ಈಗಲೂ ಅಧ್ಯಾತ್ಮ ಪ್ರಚಾರವಿದೆ.ಆದರೆ ಮಧ್ಯವರ್ತಿಗಳ ಕುತಂತ್ರದಿಂದ ಸ್ವತಂತ್ರ ಜ್ಞಾನದವರೆಗೆ ತಲುಪದೆ ಅತಂತ್ರಸ್ಥಿತಿಗೆ ತಲುಪುತ್ತಿದೆ. ಬದಲಾವಣೆಗೆ ಮಾನವನೆ ಸಹಕರಿಸದಿದ್ದರೆ ದೇವರಾದರೂ ಏನೂ ಮಾಡಲಾಗದು. ಇಲ್ಲಿ ದೇವರು ಮಾನವರು ಅಸುರರು ಇದ್ದರೂ ಮಧ್ಯವರ್ತಿ ಮಾನವನಲ್ಲಿರುವ ದೈವಗುಣಕ್ಕೆ ಶಿಕ್ಷಣ ನೀಡದೆ ಆಳುವವರು ಯಾರು? ಸರ್ಕಾರದ ಹಣ ಜನರ ಋಣ.
ಯಾರೂ ಯಾರದ್ದೋ ಋಣ ತೀರಿಸಲಾಗದ ಮೇಲೆ ಅದರ ಮೂಲ ತಿಳಿದು ತೀರಿಸುವ ಜ್ಞಾನ ಪಡೆಯುವುದೇ ಪರಿಹಾರ
ಬ್ರಹ್ಮಜ್ಞಾನವೆಂದರೆ ಬ್ರಹ್ಮನೊಳಗಿರುವ ಜ್ಞಾನ.ಬ್ರಹ್ಮನ ಸೃಷ್ಟಿ ಯ ಜೊತೆಗೆ ಆ ದೇವಿ ಜ್ಞಾನವನ್ನು ಕೊಟ್ಟಿರುವಾಗ ನಾವೇ ಒಳಗಿನಜ್ಞಾನಕ್ಕೆ ಸೂಕ್ತ ಶಿಕ್ಷಣ ನೀಡುವ ಗುರುವಾದರೆ ಉತ್ತಮ.ಪೋಷಕರು ಮಕ್ಕಳ ಆಸಕ್ತಿ,ಪ್ರತಿಭೆಜ್ಞಾನವನ್ನು ಗುರುತಿಸಿ ಬೆಳೆಸುವ ಗುರುವಾಗಿದ್ದರೆ ಮಕ್ಕಳಿಗೆ ಮನೆಯಲ್ಲಿ ಗುರುದರ್ಶನ. ಇಲ್ಲ ಪೋಷಕರೆ ಜ್ಞಾನಕ್ಕೆ ವಿರುದ್ದ ನಿಂತು ಹೊರಗಿನ ಶಿಕ್ಷಣ ನೀಡಿದರೆ ಪೋಷಕರೆ ಮಕ್ಕಳ ಶತ್ರುವಾಗಲೂಬಹುದು.ಹೀಗಾಗಿ ಪೋಷಕರು ಅದ್ಯಾತ್ಮ ಸತ್ಯ ತಿಳಿಯುವುದೇ ನಿಜವಾದ ಸಂಪತ್ತು. ಇದು ಎಲ್ಲಾ ಆಪತ್ತಿನಿಂದ ಪಾರುಮಾಡುತ್ತದೆ.
Thursday, January 19, 2023
ಭಾರತೀಯರು ಸ್ವತಂತ್ರ ರೆ ಅತಂತ್ರರೆ?
Wednesday, January 18, 2023
ಹೆಸರುವಾಸಿಯಾಗೋದು ಹೇಗೆ?
ವಾಸ್ತವಸತ್ಯ ಸಾಮಾನ್ಯರಿಗೆ ಅರ್ಥ ವಾಗುವುದೆ?
Tuesday, January 17, 2023
ಸಂಕ್ರಾಂತಿ, ಸಮ್ ಕ್ರಾಂತಿ, ಸನ್ ಕ್ರಾಂತಿ
ಸಂಕ್ರಾಂತಿಯನ್ನು ಸಮ್ ಕ್ರಾಂತಿ ,ಸನ್ ಕ್ರಾಂತಿಯೆಂದು
ಕಂಗ್ಲೀಷ್ ನಲ್ಲಿ ಹೇಳಿದರೂ ಸಂಕ್ರಾಂತಿಯ ಸತ್ವ,ಸತ್ಯಕ್ಕೆ
ಚ್ಯುತಿ ಬರೋದಿಲ್ಲ. ಆದರೆ ಮಾನವ ಜ್ಞಾನದಿಂದ ಸಂಕ್ರಾಂತಿ ಆಚರಿಸುವುದಕ್ಕೂ ಅಜ್ಞಾನದಿಂದ ಆಚರಿಸುವುದಕ್ಕೂ ವ್ಯತ್ಯಾಸವಿದೆ. ಪ್ರಕೃತಿಯೊಂದಿಗೆ ಬೆರೆತು ಬಾಳುವುದಕ್ಕೂ ಪ್ರಕೃತಿ ವಿರುದ್ದ ಬಾಳುವುದಕ್ಕೂ ವ್ಯತ್ಯಾಸವಿದ್ದ ಹಾಗೆ ಒಂದು ರಾಜಯೋಗ ಇನ್ನೊಂದು ರಾಜಕೀಯ.
ಕ್ರಾಂತಿಯ ನಂತರವೇ ಶಾಂತಿ ಎನ್ನುವ ಬದಲು ಶಾಂತಿಯಿಂದ ಕ್ರಾಂತಿಗೆ ಕಾರಣ ತಿಳಿಯುವುದು ಜ್ಞಾನ.
ಅತಿಯಾದ ಶಾಂತಿ ಕ್ರಾಂತಿಗೆ ಕಾರಣವಾದಂತೆ ಅತಿಯಾದ ಕ್ರಾಂತಿ ಶಾಂತಿಗೆ ಕಾರಣವಾಗೋದಿಲ್ಲ. ಹೀಗಾಗಿ ಯಾವುದೇ ವಿಚಾರವಿರಲಿ ಮಿತಿಮೀರಿದರೆ ಅಧೋಗತಿ.
ಹಿಂದೂ ಧರ್ಮವನ್ನು ವೇದಗಳಿಗಿಂತ ಹೆಚ್ಚಾಗಿ ಗಾದೆಗಳಿಂದ ಉಳಿಸಿ ಬೆಳೆಸಿದರೆ ಮಾನವನಾಗಿದ್ದು ಭೂಮಿಯಲ್ಲಿ ಹೇಗೆ ಜೀವಿಸಬೇಕೆಂಬುದು ಸರಳವಾಗಿ ಅರ್ಥವಾಗಬಹುದು.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವುದು ಸತ್ಯ. ವೇದಕಾಲದ ಸತ್ಯಾಸತ್ಯತೆಯನ್ನು ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಬಂದು ಅದರ ಅನುಭವವನ್ನು ಗಾದೆ ಮೂಲಕ ಜನಸಾಮಾನ್ಯರು ಅರ್ಥಮಾಡಿಕೊಂಡವರು
ವೇದಕಾಲದಲ್ಲಿದ್ದವರೂ ಕಲಿಯುಗದವರೆಗೂ ಇರುವವರೆಂದರೆ ಮಾನವನ ಮೂಲ ಯಾರೂ ತಿಳಿಸಲಾಗದು. ಅವರವರ ಜನ್ಮಕ್ಕೆ ತಕ್ಕಂತೆ ಧರ್ಮ ಕರ್ಮ ವೂ ಪುರಾಣಕಾಲದಿಂದಲೂ ಇದೆ.ಈಗಲೂ ಇದೆ.ವ್ಯತ್ಯಾಸ ವಿಷ್ಟೆ ಅಂದು ಧರ್ಮ ಕರ್ಮ ದ ಪ್ರಕಾರ ಶಿಕ್ಷಣವಿದ್ದು ಸ್ವತಂತ್ರ ಜ್ಞಾನವಿತ್ತು. ಈಗ ಧರ್ಮ ವೇ ಬೇರೆ ಕರ್ಮವೇ ಬೇರೆ ಶಿಕ್ಷಣವೇ ಬೇರೆ ಒಂದಕ್ಕೊಂದು ಹೊಂದಿಕೆ ಆಗದೆ ಸ್ವತಂತ್ರ ಜ್ಞಾನವಿಲ್ಲದವರು ಪರರ ತಂತ್ರದಲ್ಲಿ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆದಿದೆ.
ಭಗವದ್ಗೀತೆ ಯ ಸಾರ ಕನ್ನಡದ ಭಗವದ್ಗೀತೆ ಎಂದು ಕರೆಯೋ ಡಿ.ವಿ.ಗುಂಡಪ್ಪನವರ ಕಗ್ಗದ ಸಾರ ಒಂದೇ ಆದರೂ ಭಗವದ್ಗೀತೆ ಪವಿತ್ರ ಗ್ರಂಥ ಭಗವಂತನ ವಾಣಿಯು ಜಗತ್ತಿಗೇ ಬೆಳಕನ್ನು ಕೊಡುವ ಮಟ್ಟಿಗೆ ಪ್ರಚಾರವಾಗುತ್ತದೆ.
ಆದರೆ, ಕನ್ನಡದ ಕಗ್ಗ ಅರ್ಥ ಮಾಡಿಕೊಳ್ಳಲು ಕನ್ನಡಿಗರಿಗೇ ಕಷ್ಟವಾದರೂ ಗುಂಡಪ್ಪನವರಂತಹ ಮಹಾತ್ಮರ ವಾಸ್ತವತೆಯ ಸತ್ಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು
ನಾವು ತಯಾರಿಲ್ಲ.ಕಾರಣ. ನಾನಿರುವಾಗ ನನಗೆ ನನ್ನ ವಾಸ್ತವ ಸತ್ಯವನ್ನು ಬೇರೆಯವರು ಹೇಳಿದರೆ ಇಷ್ಟವಾಗೋದಿಲ್ಲ. ಹೀಗಾಗಿ ಸತ್ಯ ನಾನು ಒಪ್ಪೋದಿಲ್ಲ
ವಾದಾಗ ನನಗೆ ನಾನೇ ಸರಿ. ನನ್ನೊಳಗೇ ಇರುವ ಸತ್ಯ ನನಗೇ ವೈರಿಯಾದರೆ ಹಿಂದಿನ ಕಾಲದ ವೇದವಾಗಲಿ ಗಾದೆಯಾಗಲಿ ನನಗೆ ಅರ್ಥ ವಾಗದು. ಇದು ನನ್ನದೇ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವೂ ನನ್ನೊಳಗೇ ಇದೆ. ಹೊರಗಿರುವ ಸತ್ಯಾಸತ್ಯತೆಯನ್ನು ಎಲ್ಲಿಯವರೆಗೆ ನಾನು ಹಿಡಿದುಕೊಂಡು ನಡೆಯುವೆನೋ ಅಲ್ಲಿಯವರೆಗೆ ನನ್ನೊಳಗೇ ಅಡಗಿರುವ ಸತ್ಯಕ್ಕೆ ನಾನು ಸ್ಪಂದಿಸೋದು ಕಷ್ಟ. ಅದರಲ್ಲೂ ಯಾವಾಗ ನನಗೆ ಹೊರಗೆ ಅಸತ್ಯ,ಅನ್ಯಾಯ,
ಭ್ರಷ್ಟಾಚಾರ ಸಹಕರಿಸಿ ಅಧಿಕಾರ,ಹಣ, ಹೆಸರು,ಸ್ಥಾನ ಕೊಡುವುದೋ ನಾನು ಹೊರಗಿನವನಾಗೇ ಇರುತ್ತೇನೆ. ಈ ಕಾರಣಕ್ಕಾಗಿ ನಾನು ಹಿಂದಿನವರೆಡೆಗೆ ಹೋಗದೆ ಮುಂದೆ ನಡೆದು ಮೂಲದಿಂದ ದೂರವಾಗಿ ಪರಕೀಯರ ವಶದಲ್ಲಿ ನಾನಿರುವಾಗ ಒಳಗಿನ ಪರಮಾತ್ಮನನಗೆ ಸಿಗೋದಿಲ್ಲವಲ್ಲ.
ನಾನಿರುವಾಗ ಪರಮಾತ್ಮ ಕಾಣದುಪರಕೀಯತೆ ಹೋದಾಗ
ಪರಮಾತ್ಮನ ದರ್ಶನ. ನನ್ನೊಳಗೇ ಇರುವ ಪರಕೀಯರ
ಜ್ಞಾನವೇ ಭೌತಿಕದೆಡೆಗೆ ಸೆಳೆದಿರುವಾಗ ಅಧ್ಯಾತ್ಮದ
ಪರಮಾತ್ಮನ ಜ್ಞಾನದ ಅನುಭವ ನನಗೆ ಆಗದು.
ಆಳವಾಗಿರುವ ಬೇರನ್ನು ಕೀಳಲಾಗದು. ಬೆಳೆದಿರುವ ರೆಂಬೆ ಕೊಂಬೆಗಳನ್ನು ಮುರಿದರೂ ಬೇರು ಚಿಗುರುತ್ತದೆ. ಹಾಗಾಗಿ ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಶಿಕ್ಷಣದಲ್ಲಿಯೇ ಮಾಡಿ ಭಾರತವನ್ನು ಆಳುವ ತಂತ್ರಕ್ಕೆ ನಮ್ಮವರ ಸಹಕಾರ
ಹೆಚ್ಚಾಗಿರುವಾಗ ಎಷ್ಟೇ ತತ್ವಜ್ಞಾನದ ಪ್ರಚಾರ ಮಾಡಿದರೂ
ತತ್ವವನ್ನು ವೇದದಿಂದಾಗಲಿ,ಗಾದೆಯಿಂದಾಗಲಿ ಅಳವಡಿಸಿಕೊಳ್ಳಲು ಸೋತರೆ ಹಿಂದುಳಿದ ಜನರಷ್ಟೆ ಕಾಣೋದು ಹಿಂದೂ ಧರ್ಮದ ಸಾರವಲ್ಲ. ಒಟ್ಟಿನಲ್ಲಿ ಸಂಸಾರ ಬಿಟ್ಟು ಹೊರಗೆ ಬಂದವರಿಗೆ ಮುಕ್ತಿ ಎನ್ನುವುದು ಅಸತ್ಯ. ಸಂಸಾರದಲ್ಲಿದ್ದು ಅದರ ಸಾರವನ್ನು ಅರ್ಥ ಮಾಡಿಕೊಳ್ಳಲು ಸಂನ್ಯಾಸಿಗಳ ಅಗತ್ಯಕ್ಕಿಂತ ಯೋಗಿಗಳ ಅಗತ್ಯವಿದೆ. ಯೋಗಿಗಳು ಸಂನ್ಯಾಸಿಗಿಂತ ದೊಡ್ಡವರು.
ಯೋಗ್ಯ ಜೀವನ ನಡೆಸೋದು ಯೋಗಿಗಳಾಗುತ್ತಾರೆ.
ಎಲ್ಲವೂ ನಶ್ವರ ಎಂದು ಸತ್ಯ ತಿಳಿಯದೆ ಸಂನ್ಯಾಸಿ
ಯಾದರೂ ಕಾಡಿನಲ್ಲಿದ್ದು ಸಾಧನೆ ಮಾಡಿದವರು
ಶ್ರೇಷ್ಠ ಜ್ಞಾನಿಗಳಾಗುತ್ತಾರೆ. ಅನುಭವಿಸಿಯೇ ಸತ್ಯ ದರ್ಶನ ಎನ್ನುವುದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಇದರಲ್ಲಿ ಅಧ್ಯಾತ್ಮ ಭೌತಿಕ ವಿಜ್ಞಾನದ ಅಂತರ ಹೆಚ್ಚಾದರೆ ಕಷ್ಟ ನಷ್ಟ ಹೆಚ್ಚುತ್ತದೆ. ಆಕಾಶದೊಳಗಿರುವ ಭೂಮಿ,ಭೂಮಿ ಮೇಲಿರುವ ಮಾನವ,ಮಾನವನೊಳಗಿರುವ ಸತ್ಯಜ್ಞಾನದವರೆಗೂ ಒಂದೇ ಶಕ್ತಿ ಇರೋದು. ಆ ಶಕ್ತಿಯನ್ನು ಹೊರಗೆ ತೋರಿಸಲಾಗದು ಒಳಗೇ ತಿಳಿಯುವುದೇ ಅಧ್ಯಾತ್ಮ.
ಸಮಾಜದ ಋಣದಲ್ಲಿರುವ ಎಲ್ಲರೂ ಸಂಸಾರಿಗಳೇ. ಋಣ ಮುಕ್ತನಾಗೋದಕ್ಕೆ ಸೇವೆ ಮಾಡಬೇಕು.ಭೂ ಸೇವೆಯನ್ನು
ನಿಸ್ವಾರ್ಥ ನಿರಹಂಕಾರದಿಂದ ಜ್ಞಾನದಿಂದ ಮಾಡಲು ಸತ್ಯ ತಿಳಿಯಬೇಕು. ಆತ್ಮಸಾಕ್ಷಿಯಂತೆ ನಡೆಯುವವರಿಗೆ ಆತ್ಮಜ್ಞಾನವಾದ ನಂತರವೇ ಎಲ್ಲಾ ಸೇವೆಯಲ್ಲಿ ಪರಮಾತ್ಮನ ಕಾಣಲು ಸಾಧ್ಯವಾಗಿ ನಾನಿರೋದಿಲ್ಲ. ಇದನ್ನು ಅದ್ವೈತ ಸಿದ್ದಾಂತದ ಪ್ರಕಾರ ನಾನೆಂಬುದಿಲ್ಲ ಎಂದರು.
ವಾಸ್ತವದಲ್ಲಿ ಎಲ್ಲಾ ನಡೆದಿರೋದಕ್ಕೆ ನಾನೇ ಕಾರಣವೆಂದಾಗ
ಅದರ ಪ್ರತಿಫಲ ನಾನೇ ಪಡೆಯಬೇಕಷ್ಟೆ.ಒಳ್ಳೆಯದಾದರೆ ಉತ್ತಮ ಫಲ ಕೆಟ್ಟದ್ದಾದರೆ ಕೆಟ್ಟಫಲ.ಹಾಗಾದರೆ ನಾನ್ಯಾರು?
ಜೀವವೋ ? ಪರಮಾತ್ಮವೋ?
ಪರಮಾತ್ಮ ಒಬ್ಬನಾದರೆ ಎಲ್ಲರಲ್ಲಿಯೂ ಇರುವ ನಾನೇ ಪರಮಾತ್ಮನೆ? ಪರಮಾತ್ಮನಲ್ಲಿ ಅಧರ್ಮವಿದೆಯೆ? ಅಸುರತೆ ಇದೆಯೇ? ಅಸತ್ಯ,ಅನ್ಯಾಯ,ಭ್ರಷ್ಟಾಚಾರ ವಿದೆಯೆ? ಎಲ್ಲಾ ಇರುವುದು ಯಾರಲ್ಲಿ? ನನ್ನಲ್ಲಿ. ನಾನೇ ಬೇರೆ ಪರಮಾತ್ಮನೆ ಬೇರೆ ಎನ್ನುವ ದ್ವಂದ್ವ ನಿಲುವಲ್ಲಿ ನನಗೆ ಭೂಮಿ ಮೇಲಿರುವ ಜ್ಞಾನವೂ ಇಲ್ಲ. ಆಕಾಶಕ್ಕೆ ಹಾರೋ ಜ್ಞಾನವೂ ಇಲ್ಲ. ಹೀಗಾಗಿ ಮಧ್ಯೆ ಇರುವ ಮಾನವನಾಗಿರಲು ಸಾಧ್ಯವಾಗದೆ ನನಗೆ ನಾನೇ ಮೋಸ ಹೋದರೂ ಚಿಂತೆಯಿಲ್ಲ. ಸ್ವಾಮಿವಿವೇಕಾನಂದರ ವಿವೇಕದ ರಾಜಯೋಗ ಅರ್ಥ ವಾಗಲ್ಲ. ರಾಜಕೀಯ ಬಿಟ್ಟು ಜೀವನ ನಡೆಸಲಾಗುತ್ತಿಲ್ಲ. ಆದರೂ ನಾನು ಸ್ವತಂತ್ರ ಭಾರತದ ಪ್ರಜೆಯಾಗಿದ್ದು ಸ್ವತಂತ್ರ
ಚಿಂತನೆ ನಡೆಸುವ ಸ್ವಾತಂತ್ರ್ಯ ಇನ್ನೂ ಇರೋದು ಆ ಪರಮಾತ್ಮನ ಕೃಪೆ ನನ್ನ ಮೇಲಿದೆ. ಪರಮಾತ್ಮನಿಲ್ಲದೆ ನಾನಿಲ್ಲ.
ನಾನಿಲ್ಲದ ಪರಮಾತ್ಮನಿಲ್ಲ. ಅದ್ಯಾತ್ಮ ದ ಅನುಭವದಲ್ಲಿ ಸ್ತ್ರೀ ಗಾದ ಅನುಭವ ಪುರುಷರಿಗಾಗಿಲ್ಲ.ಪುರುಷರಿಗಾದ ಅನುಭವ ಸ್ತ್ರೀ ಗಾಗಿಲ್ಲ. ಹೀಗಿರುವಾಗ ಭೂಮಿ ಮೇಲಿರುವ
ಇಬ್ಬರಿಗೂ ಅನುಭವದಲ್ಲಿ ವ್ಯತ್ಯಾಸವಿದೆ.ನಮ್ಮ ಅನುಭವವೇ ನಮಗೆ ಸಮಸ್ಯೆ ಯಾಗಿರುವಾಗ ಬೇರೆಯವರ ಅನುಭವದಿಂದ ಸಮಸ್ಯೆ ನಿವಾರಣೆ ಸಾಧ್ಯವಾಗೋದಾದರೆ ಅದು ಯೋಗಿಗಳ ಅನುಭವವಾಗಿರಬೇಕು.ಅದ್ವೈತ ದಲ್ಲಿದ್ದು
ಸಾಧನೆ ಮಾಡಿರಬೇಕು. ವೇದದ ಜೊತೆಗೆ ಗಾದೆಯ ಸತ್ಯವೂ
ಸೇರಿರಬೇಕು. ಅಂತಹವರಿಗೆ ಪರಮಾತ್ಮನೇ ನೇರವಾಗಿ ನಡೆಸುವಾಗ ಒಂದೇ ಸತ್ಯವಿರುತ್ತದೆ. ಕಾರಣ ಮೂಲ ಒಂದೇ. ಆ ಮೂಲದಕಡೆಗೆ ಹೊರಟವರಿಗೆ ನೆಮ್ಮದಿ ,ಶಾಂತಿ
ತೃಪ್ತಿ ಮುಕ್ತಿ ಸಿಕ್ಕಿದೆ. ಅದನ್ನು ಬಿಟ್ಟು ಹೊರಬಂದವರನ್ನು ಇಲ್ಲಿ ಸಾಧಕರನ್ನಾಗಿಸಿದರೆ ಅಧ್ಯಾತ್ಮ ವಾಗದೆ ರಾಜಕೀಯ
ತಂತ್ರವಷ್ಟೆ ಆಗಿರುತ್ತದೆ. ಯಾರನ್ನೋ ಯಾರೋ ಆಳಲು ಇದು ರಾಜಪ್ರಭುತ್ವದ ದೇಶವಲ್ಲ. ಪ್ರಜಾಪ್ರಭುತ್ವದ ದೇಶ.
ಇದಕ್ಕೆ ಸಹಕರಿಸುವ ಪ್ರಜೆಗಳಿಗೆ ವೇದವೂ ಗೊತ್ತಿಲ್ಲ. ಗಾದೆಯೂ ಅರ್ಥ ವಾಗಿಲ್ಲ. ಅಜ್ಞಾನಿಗಳನ್ನು ಬೆಳೆಸುತ್ತಾ ಹೊರಬಂದ ಶಿಕ್ಷಣವೇ ಇದಕ್ಕೆ ಕಾರಣವಾಗಿದ್ದರೂ ಹೇಳಿದರೂ ಕೇಳಿ ತಿಳಿಯುವ ಜ್ಞಾನವಿಲ್ಲದೆ ಮನೆಯಿಂದ ಹೆಚ್ಚು ಮಹಿಳೆ ಮಕ್ಕಳು ಹೊರಬಂದು ಹೋರಾಟ,ಹಾರಾಟ,
ಮಾರಾಟದ ವ್ಯವಹಾರಿಕ ಹಾಗು ರಾಜಕೀಯದಲ್ಲಿ ದೈವತ್ವವಿಲ್ಲ.
ಕಾಲಚಕ್ರ ತಿರುಗುವಾಗ ಕೆಳಗಿರುವ ಹಿಂದುಳಿದವರು ಮೇಲೆ ಬರುತ್ತಾರೆ.ಮೇಲಿನವರು ಕೆಳಗಿರುತ್ತಾರೆ. ಪರಮಾತ್ಮನಿಗೇನೂ ನಷ್ಟವಿಲ್ಲ. ಜೀವಾತ್ಮನೇ ಎಲ್ಲದ್ದಕ್ಕೂ ಕಾರಣಕರ್ತನಾಗಿರುತ್ತಾನೆ.
ಭಾರತೀಯರಲ್ಲಿ ಭಾರತೀಯತೆ ದೇಶದೊಳಗಿದ್ದರೆ ದೇಶದ ಋಣ ತೀರಿಸಬಹುದು. ದೇಶದ ಹೊರಗೆ ಹೋಗಿದ್ದರೆ ಹೇಗೆ ಋಣ ತೀರಿಸಲಾಗುತ್ತದೆ? ಹಾಗೇ ದೈವತ್ವ ಒಳಗಿದ್ದರೆ ದೇವರ ದರ್ಶನ. ಹೊರಗಿದ್ದರೆ ಪ್ರತಿಮೆಯಷ್ಟೆ ಕಾಣೋದು. ಪ್ರತಿಮೆ ಶಾಶ್ವತವಲ್ಲ. ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿತಾಣವಾಗಿಸುವ ಬದಲು ಯಾತ್ರಸ್ಥಳ ಮಾಡಿದರೆ ಧರ್ಮ, ಎಲ್ಲಿ ವ್ಯವಹಾರವಿರುವುದೋ ಅಲ್ಲಿ ಅಸತ್ಯ,ಅನ್ಯಾಯ, ಅಧರ್ಮ, ನಾನೆಂಬ ರಾಜಕೀಯತೆ ಹೆಚ್ಚು. ಹೀಗಾಗಿ ಹಿಂದಿನ ಭಾರತದಲ್ಲಿ ಮನೆ ಮನೆಯೂ ಗುರುಕುಲವಾಗಿತ್ರು ದೇವಸ್ಥಾನವಿತ್ತು. ಆದರೀಗ ಮನೆ ಬಿಟ್ಟು ಹೊರಗೆ ದೇವರನ್ನು ಹುಡುಕುತ್ತಾ, ಹೊರಗಿನ ಶಿಕ್ಷಣಕ್ಕಾಗಿ ಮನೆ ಬಿಟ್ಟು ನಡೆದವರಿಗೆ ಪೋಷಕರ ಸಹಕಾರ,ಗುರುಗಳ ಆಶೀರ್ವಾದ, ಹಿರಿಯರ ಪ್ರೋತ್ಸಾಹ. ಪುರಸ್ಕಾರ ಸಿಗುತ್ತದೆ. ಮನೆಯೊಳಗಿದ್ದು ಧರ್ಮ ಕರ್ಮ ವನ್ನು ತಿಳಿದವರಿಗೆ ತಿರಸ್ಕಾರವಿದೆ ಎಂದರೆ ಭಾರತೀಯರು ಎಲ್ಲಿರುವರು?
Wednesday, January 11, 2023
ತ್ಯಾಗರಾಜರ ಆರಾಧನೆಯಲ್ಲಿ ತ್ಯಾಗಮನೋಭಾವವಿರಲಿ
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...