ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Friday, December 19, 2025

ಎಳ್ಳಮಾವಾಸ್ಯೆ

*✒️ಇಂದಿನ ನುಡಿ*

*ಈ ದಕ್ಷಿಣಾಯನ ಮಾರ್ಗಶಿರ ಮಾಸದ ಈ ದಿನ ಎಳ್ಳಮಾವಾಸ್ಯೆಯ ದಿನ.ಋಣ ತೀರಿಸುವ ದಿನ.ದೇವ ಋಣ,ಪಿತೃ ಋಣ,ಋಷಿ ಋಣ,ಮನುಷ್ಯ ಋಣ,ಭೂತದೈವಗಳಪ್ರಾಣಿ ಪಕ್ಷಿ ಪ್ರಕೃತಿಯ ಋಣ ನಮ್ಮ ಮೇಲಿದೆ.ಎಲ್ಲವನ್ನೂ ಉಪಯೋಗಿಸಿಕೊಂಡು ಈ ಭೂಮಿ ಮೇಲೆ ಜೀವಿಸುವವರು ನಾವು.ಬದುಕಿದರೆ ಸಾಕೇ?ಸಹಕಾರ ಪಡೆದದ್ದಕ್ಕೆ ಕೃತಘ್ನರಾಗದೆ,ಉಪಕಾರಕ್ಕೆ ಪ್ರತ್ಯುಪಕಾರ, ಕೃತಜ್ಞತಾ ಸಮರ್ಪಣೆ ಮೂಲಕ ಸ್ಮರಿಸುವ ಕೆಲಸವಾಗಬೇಕು.ರೈತಾಪಿ ವರ್ಗದವರಿಗೆ ಎಳ್ಳು,ನೆಲಕಡಲೆ ಫಸಲು ಮನೆಯಂಗಳಕೆ ಬಂದ ದಿನಗಳಿವು.ಭೂಮಿ ತಾಯಿಗೆ ಕೃತಜ್ಞತೆ ಸಮರ್ಪಿಸುವರು.ಎಳ್ಳು ಬೆಲ್ಲವನ್ನು ಬೆರೆಸಿ ಹೊಲಕ್ಕೆ ಚೆಲ್ಲುವರು(ಚರಗ ಚೆಲ್ಲುವುದೆನ್ನುವರು)ಮಣ್ಣನ್ನು ಮೃದುವಾಗಿಸುವ ಎರೆಹುಳಗಳು ಹೊಲದ ಮಣ್ಣಲ್ಲಿರುವುದು.ಹಾಗೆಯೇ ಬೆಳೆ ನಾಶ ಮಾಡುವ ಕಾಯಿಕೊರಕ ಹುಳಗಳನ್ನು  ಎಳ್ಳು ಬೆಲ್ಲದೊಂದಿಗೆ ತಿನ್ನುವ ಕೆಲಸವನ್ನು ಪಕ್ಷಿಸಂಕುಲ ಮಾಡುವುದು.ಹಬ್ಬ,ಆಚರಣೆಗಳ ಹಿಂದೆ ಇಂತಹ ವೈಜ್ಞಾನಿಕ ಕಾರಣಗಳು ಸಹ ಇದೆ.ನಮ್ಮ ಹಿರಿಯರು ಬುದ್ಧಿವಂತರು.ಐದು ಪಾಂಡವರ ಕಲ್ಲುಗಳನ್ನು ಇಟ್ಟು ,ತಾವು ತಂದ ವಿಶೇಷ ಖಾದ್ಯಗಳನ್ನು ಭೂಮಿತಾಯಿ ಸಹಿತ ನೈವೇದ್ಯ ಮಾಡಿ,ಬನ್ನಿ ಗಿಡ ನೆಟ್ಟು ಜೊತೆಗೆ ಪೂಜಿಸುವರು,ಮುಂದಿನ ದಿನಗಳಲ್ಲಿ ಅಧಿಕ ಫಸಲನ್ನು ನೀಡೆಂದು,ಶನಿದೋಷವಿದ್ದಲ್ಲಿ ಪರಿಹರಿಸೆಂದು ಪ್ರಾರ್ಥಿಸುತ್ತಾ ನಿವೇದಿಸಿಕೊಳ್ಳುವರು. ಈ ಮೂಲಕ ಕೃತಜ್ಞತೆ ಸಲ್ಲಿಸುವರು.ತಯಾರಿಸಿದ ವಿಶೇಷ ಅಡುಗೆಯನ್ನು ತಮ್ಮ ಎತ್ತಿನ ಬಂಡಿಯಲ್ಲಿಟ್ಟು,ಎತ್ತುಗಳನ್ನು ,ಗಾಡಿಯನ್ನು ಸಿಂಗರಿಸಿ,ಮನೆಮಂದಿಯೆಲ್ಲ ಚರಗ ಚೆಲ್ಲಿ ಪೂಜೆಯಾದ ಮೇಲೆ ಸಹಭೋಜನವನ್ನು ಪ್ರಸಾದರೂಪವಾಗಿ ಮಾಡುವರು.ಹೊಲ ಭೂಮಿ ರೈತರ ಬಾಂಧವ್ಯದ ಬೆಸುಗೆಯದು. ಎಲ್ಲೆಲ್ಲೋ ಇರುವ ಮನೆಯ ಸದಸ್ಯರೆಲ್ಲರೂ ಹಬ್ಬದ ಸಂದರ್ಭ ಒಟ್ಟು ಸೇರುವರು.ಹಾಗೆಯೇ ಇಂದು ಪಿತೃ ದೇವತೆಗಳ ಪ್ರೀತ್ಯರ್ಥ ಯಾಂತ್ರಿಕತೆ,ತೋರಿಕೆಯನ್ನು ಬಿಟ್ಟು ಶ್ರದ್ಧಾಭಕ್ತಿಯಿಂದ ಶ್ರಾದ್ಧ,ತಿಲತರ್ಪಣ,ಸತ್ಪಾತ್ರರಿಗೆ ಅನ್ನದಾನ,ಎಳ್ಳುದಾನ ಕೈಂಕರ್ಯಗಳನ್ನು ಮಾಡಬೇಕು.ಸಕಲ ವಿಧದ ಮಂಗಲವು ಉಂಟಾಗುವುದೆಂಬ ನಂಬಿಕೆ.ಸಮುದ್ರ,ನದಿ ಸ್ನಾನವನ್ನೂ ಮಾಡುವರು.ಸಮುದ್ರ ಸ್ನಾನವೆಂಬುದು ಚರ್ಮರೋಗಗಳ ನಿವಾರಣೆಗೂ ಕಾರಣವಾಗಬಹುದು.ಪಿತೃಗಳು ಸಂತುಷ್ಟರಾಗಿ ಹರಸುವರೆಂಬ ವಿಶ್ವಾಸ ಹಿರಿಯರ ಕಾಲದಿಂದಲೂ ಇದೆ.ಪೌರಾಣಿಕವಾಗಿ ನೋಡಿದರೆ ಮಹಾಭಾರತ ದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಮಡಿದವರಿಗೆಲ್ಲ ಈ ಶುಭದಿನದಂದು ತರ್ಪಣ ನೀಡಿ,ಅನ್ನದಾನ ಮಾಡಿದ್ದರಂತೆ.ಕುಟುಂಬದಲ್ಲಿ ಅಳಿದ ಪಿತೃಗಳನ್ನು ಸಂತೃಪ್ತಿಗೊಳಿಸುವ ಪದ್ಧತಿಯಿದೆ.ಇನ್ನೊಂದು ರೀತಿಯಲ್ಲಿ ತಂದೆ ಜಮದಗ್ನಿಯ ಆಣತಿಯಂತೆ ಹೆತ್ತಮ್ಮ ರೇಣುಕೆಯ ಶಿರ ಕತ್ತರಿಸಿದವ ಪರಶುಧರ ಭಾರ್ಗವ ರಾಮ.ಕೊಡಲಿಯ ಬಾಯಿಗಂಟಿದ ರಕ್ತ ಯಾವ ನದಿಯಲ್ಲಿ ತೊಳೆದರೂ ಒಂದು ಬಿಂದು ಉಳಿಯುತ್ತಿತ್ತಂತೆ.ಕೊನೆಗೆ ತುಂಗಾನದಿಯಲ್ಲಿ ಮುಳುಗಿಸಿದಾಗ ಕಲೆ ಹೋಯಿತಂತೆ.ಹಾಗಾಗಿ ಅದೇ ಸ್ಥಳ ಶಿವಮೊಗ್ಗ ಸಮೀಪದ 'ತೀರ್ಥಹಳ್ಳಿ'ಯೆಂದು ಪ್ರಸಿದ್ಧಿಯಾಯಿತೆಂದೂ,ಅಲ್ಲಿ ನದಿ ಸ್ನಾನ ಮಾಡಿ ಪುನೀತರಾಗುತ್ತಾರೆಂದೂ ಉಲ್ಲೇಖವಿದೆ.ಹೆತ್ತವರ ಋಣ ತೀರಿಸಲಾಗದಂತೆ.ಈ ರೀತಿಯಲ್ಲಾದರೂ ಸ್ವಲ್ಪಾಂಶ ತೀರಿಸಿ ಪುಣ್ಯ ಕಟ್ಟಿಕೊಳ್ಳೋಣ.*
.🤝🙏*(ಸಂಗ್ರಹ)*
೧೯-೧೨-೨೫
*✍️ರತ್ನಾ ಕೆ ಭಟ್*

ಜಗದಾದಿಜ: ಜಗತ್+ಆದಿ+ ಜ

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ | ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ॥೧೬॥
ಇಂದಿನ ನಾಮ -

೧೪೭. ಜಗದಾದಿಜಃ ಜಗತ್ತಿನಲ್ಲಿ ಮೊತ್ತಮೊದಲು ಬಂದವನು.

ವಿವರಣೆ : ಜಗತ್+ಆದಿ+ಜ - ಹೀಗೆ ಮೂರು ಶಬ್ದಗಳು ಸೇರಿ ಒಂದು ನಾಮ ಆದದ್ದು. ಈ ಲೋಕಕ್ಕೆ ಮೊದಲು ಬಂದವನು ಎಂದರ್ಥ .ಶೇಷನ ಮೇಲೆಯೋ, ವಟಪತ್ರದ ಮೇಲೆಯೋ ರಾತ್ರಿಯಲ್ಲಿ ಅಂದರೆ ಪ್ರಲಯಕಾಲದಲ್ಲಿ ಮಲಗಿದವನು ನೀನು. ಬೆಳಗಾಗುತ್ತ ಬಂತು. ಸೃಷ್ಟಿ ಮಾಡಬೇಕೆಂದು ತೋರಿತು. ಎಲ್ಲರನ್ನು ಎಬ್ಬಿಸೋಣ ಅಂತ ತೋರಿತು. ಮಲಗಿದವರನ್ನು ಎಬ್ಬಿಸುವ ಕೆಲಸ ದೇವರದ್ದೇ. ಅದಕ್ಕಾಗಿಯೇ ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ ಹಾಕುವುದು. ಮಲಗಿದವರೆಲ್ಲ ಏಳಲಿ ಎಂದು. ಮೊದಲು ಕೃಷ್ಣ ದೇವರು ಏಳುವುದು. ಅದರಿಂದಾಗಿ ಅಕ್ಕಪಕ್ಕದವರೆಲ್ಲ ಏಳಲಿಕ್ಕೆ ಪ್ರಾರಂಭಿಸುವರು.

ಹೀಗೆ ಸೃಷ್ಟಿಯ ಸುಪ್ರಭಾತದಲ್ಲಿ ಎಲ್ಲರನ್ನೂ ಎಬ್ಬಿಸುವುದಕ್ಕಾಗಿ ದೇವರು ಮೊದಲು ತಾನು ಎದ್ದು ಬಂದ. ಹಾಗೆ ಎದ್ದು ಬಂದ ರೂಪವೇ "ಪುರುಷ'. ನಾರಾಯಣರೂಪದಿಂದ ಮಲಗಿದ ಪರಮಾತ್ಮ ಪುರುಷರೂಪದಿಂದ ಎದ್ದು ಬರುವನು. ಜಗತ್ತಿನ ಸೃಷ್ಟಿಗೆ ಅಡಿ ಇಡುವಾಗ ಮೊದಲು ಬರುವವನು ಭಗವಂತ. ಎಲ್ಲರಿಗಿಂತ ಹಿರಿಯ, ಮೊದಲಿಗ ಎಂಬುದು ಒಟ್ಟು ಅಭಿಪ್ರಾಯ. ಚತುರ್ಮುಖನಿಗಿಂತಲೂ ಮೊದಲು ಬಂದವನು. ಆದುದರಿಂದ ದೇವರು ಯಾರಿಂದ ಬಂದ? ಎಂಬ ಪ್ರಶ್ನೆಗೆ ಅವಕಾಶ ಇಲ್ಲ. ಯಾರೂ ಇಲ್ಲದಿದ್ದಾಗ ತನ್ನಿಂದಲೇ ಹೊರಬಂದವನು ಅವನು.

ಹರಿಹರರಲ್ಲಿ ಬೇಧವಿಲ್ಲ ಎನ್ನುವುದು  ಹರಿ ಬೇರೆ ಹರ ಬೇರೆ ಎನ್ನುವುದು. ಬ್ರಹ್ಮಾಂಡದ ಎಲ್ಲಾ ಆಗುಹೋಗುಗಳಿಗೆ ಪರಮಾತ್ಮನೇ ಕಾರಣವೆನ್ನುವುದು  ಎಲ್ಲದ್ದಕ್ಕೂ ನಾನೇ ಕಾರಣವೆನ್ನುವುದು, ನಾನೇ  ಎಲ್ಲರನ್ನೂ ಆಳುವುದು   ಎನ್ನುವ ಅಹಂಕಾರ  ನಾನೆಂಬುದಿಲ್ಲ ಎನ್ನುವ ನಿರಹಂಕಾರ
ಇವೆಲ್ಲವೂ ಪರಮಾತ್ಮನೇ ಶ್ರೇಷ್ಠ ಎನ್ನುವ ಸತ್ಯದೆಡೆಗೆ ನಡೆದಿದೆಯೆ ಅಥವಾ ನಾನೇ ಸತ್ಯ ಎನ್ನುವ ಕಡೆಗಿದೆಯೆ?
ಇಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹಲವು. ಆದರೆ ನಾನಿಲ್ಲ ದೇವರೆ ಎಲ್ಲಾ ಎನ್ನುವ ಸತ್ಯ ಒಂದೇ. ಹಾಗಾಗಿ ಹಲವರಿಗೆ ಒಳಗಿರುವ ಸತ್ಯದ ಅರಿವಾಗದೆ ಹೊರಗಿನ ಸತ್ಯವೇ ಕಣ್ಣಿಗೆ ಕಾಣುತ್ತಾ ಆಗಿ ಹೋಗಿದ್ದನ್ನು ಕೆದಕಿ ಆಗಬಾರದ್ದನ್ನು ಸ್ವಾಗತಿಸುವ  ಮಟ್ಟಿಗೆ ಅಜ್ಞಾನ ಆವರಿಸಿದೆ. 
ಜಗತ್ತಿನಲ್ಲಿ ಮೊಟ್ಟ ಮೊದಲು ಬಂದವನು ಪರಮಾತ್ಮ ಎಂದಾಗ  ನಾವ್ಯಾರು? ಅವನ ಪ್ರತಿಬಿಂಬ ಎಂದಾಗ  ನನಗಿಂತ ಮೊದಲು ಬಂದವರ ಬಗ್ಗೆ ಅರಿವಿರೋದು ಅಗತ್ಯವಿದೆ. ‌ಕೇವಲ ರಾಜಕೀಯ ದಲ್ಲಿ ಮೈ ಮರೆತರೆ  ಮೂಲ ಸತ್ಯ ಅರಿವಾಗದು. ಹೀಗಾಗಿ ತನ್ನ ತಾನರಿಯದೆ  ಅನ್ಯರನ್ನು  ಒಲಿಸಿಕೊಂಡು ತನ್ನವರನ್ನೇ  ದೂರ ಮಾಡಿಕೊಂಡವರಿಗೆ  ಪರಮಾತ್ಮ ಅರ್ಥ ವಾಗದೆ ಅಂತರ ಬೆಳೆಯಿತು. ಆ ಅಂತರವೇ ಅವಾಂತರ ಸೃಷ್ಟಿ ಮಾಡುತ್ತಾ ಮೂಲ ಬ್ರಹ್ಮನನ್ನು  ಅಪಾರ್ಥ  ಮಾಡಿಕೊಂಡು ಆಳಲು ಸಹಕರಿಸಿತು. ಸಹಕಾರದ ಬಲವೇ  ಅಹಂಕಾರ ಕ್ಕೆ ದಾರಿ ಆಯಿತು.ಆ ಅಹಂಕಾರ ದಿಂದ ಸ್ವಾರ್ಥ  ಸೇರಿಕೊಂಡು ಸ್ವತಂತ್ರ ಜ್ಞಾನ ಮರೆಯಾಯಿತು. ಮರೆಯಾದವರು  ಮತ್ತೆ ಜನ್ಮ ಪಡೆದರೂ  ಗುರುತಿಸುವ. ಜ್ಞಾನವಿಲ್ಲದೆ ಅಜ್ಞಾನ ಬೆಳೆಯಿತು. ಅಜ್ಞಾನ ಎಂದರೆ ಅಸತ್ಯದ ತಿಳುವಳಿಕೆಯಾಗಿದೆ.
ಯಾವುದು ಸತ್ಯ? ಕಣ್ಣಿಗೆ ಕಾಣೋದೆಲ್ಲಾ ಸತ್ಯವೇ? ಸತ್ಯವಿದ್ದರೂ ತಾತ್ಕಾಲಿಕ ವಷ್ಟೆ.ಶಾಶ್ವತವಾಗಿರುವ ಯಾವುದಕ್ಕೂ ಅಂಟಿಕೊಳ್ಳದೆ ಸ್ವತಂತ್ರ ವಾಗಿದ್ದು ಜೀವಕೋಟಿಗಳ ಒಳಗಿರುವ ಆ ಮೂಲ ಪುರುಷ ಪರಮಾತ್ಮನೇ ಮೊಟ್ಟಮೊದಲು ಬಂದವನು.
ಜಗದಾದಿಜ:
ಪರಮಾತ್ಮನ ಒಂದೊಂದು ನಾಮವೂ ಅದ್ವೈತ ಸತ್ಯವನ್ನು ತಿಳಿಸುತ್ತದೆ. ‌ಆದರೆ ಅದು ಕಣ್ಣಿಗೆ ಕಾಣದು ಅನುಭವಕ್ಕೆ ಬರೋದೂ ಕಷ್ಟವಾದ್ದರಿಂದ ಮಾಯೆಯ ವಶದಲ್ಲಿ ಮನುಕುಲ  ಭೂಮಿಯನ್ನು ತನ್ನ ವಶದಲ್ಲಿ ಪಡೆಯಲು ಹೆಣವಾಗುತ್ತಿದ್ದಾನೆಂದರೆ ಭೂಮಿ ಪರಮಾತ್ಮನ ವಶವಿರೋವಾಗ ಹುಲುಮಾನವನಿಗೆ ಸಿಗುವಳೆ?
ಹೃದಯದ ಚಿಕಿತ್ಸೆ ಗೆ ಕೊಡುವ ಹಣವನ್ನು ಹೃದಯವಂತಿಕೆ ಬೆಳೆಸೋ ಶಿಕ್ಷಣಕ್ಕೆ ನೀಡಿದ್ದರೆ  ಭೂಮಿಯ ಋಣ ತೀರಿಸುವ ಸೇವಕನಾಗಿ ಪರಮಾತ್ಮನೆಡೆಗೆ ಸಾಗಬಹುದಿತ್ತು. 
ಕಲಿಕೆಯೇ ಋಣದೆಡೆಗೆ ಸಾಗಿರುವಾಗ  ಆ ಭಾರಹೊತ್ತವನಿಗೆ ಮೇಲಿರುವ  ಮೂಲ ಪುರುಷ ಅರ್ಥ ವಾಗೋದಿಲ್ಲ. 
ಕಾಲುಬುಡ ನೋಡದೆ ಮೇಲಕ್ಕೆ ನೋಡುತ್ತಾ ಓಡಿದರೆ ಎಡವೋದು ಸಹಜ. ಭೂಮಿಯ ಸತ್ಯ ಸತ್ವ ತತ್ವ ಬಿಟ್ಟು ಆಕಾಶದೆತ್ತರ ಹಾರುವ ವಿಜ್ಞಾನದಿಂದ ಆತ್ಮಕ್ಕೆ ತೃಪ್ತಿ ಸಿಗದು.
ಇಷ್ಟೇ ಜೀವನದ ಸತ್ಯ.ಇದನ್ನು  ನಾವೇ ಒಳಗಿದ್ದು ತಿಳಿದು ನಡೆಯಬೇಕಿದೆ. ಹೊರಗೆ ಹೋದರೆ ಅತಂತ್ರ ಜೀವನದಲ್ಲಿ  ಹಿಂದೆ ಬರಲೂ ಕಷ್ಟ ಮುಂದೆ ಹೋದರೂ ನಷ್ಟ.

Thursday, December 18, 2025

ದೇವರಿಗೆ ನಿದ್ರೆ ಅಗತ್ಯವೆ?

ದೇವರು ಶ್ರೀಮಂತನೆ ಬಡವನೆ?
ಶ್ರೀಮಂತನಾದರೆ ಬಡವರಿಗೆ ಸಹಕರಿಸುವನು.ಬಡವನಾದರೆ ಶ್ರೀಮಂತನಿಗೆ ನಿದ್ದೆ ಬಿಟ್ಟು ಸಹಕರಿಸುವನು.
ಎಂತಹ ವಿಪರ್ಯಾಸ ಶ್ರೀಮಂತರು ದೇವರನ್ನು ನೋಡಲು ಬರುವರೋ ಅಥವಾ ದೇವರೇ ಶ್ರೀಮಂತರನ್ನು ರಾತ್ರಿ ಕರೆಸಿಕೊಂಡು  ನೋಡುವನೋ ಒಟ್ಟಿನಲ್ಲಿ ಹಣ ಇಬ್ಬರಿಗೂ ಅಗತ್ಯವಿದೆ. ಹಣವಿದ್ದರಷ್ಟೆ ದೇವಸ್ಥಾನ ಅದಕ್ಕೆ  ಶರಣರು ಹೇಳಿರುವುದು ಉಳ್ಳವರು ಶಿವಾಲಯವ ಕಟ್ಟುವರು ನಾನೇನು‌ಮಾಡಲಿ ಬಡವನಯ್ಯ.
ಈಗಿನ‌ಕಾಲದಲ್ಲಿ ಪರಮಾತ್ಮನಿಗೆ ಶರಣಾಗದಿದ್ದರೂ ಸರಿ ಪರಕೀಯರಿಗೆ ಶರಣಾದರೆ ಹಣದ ಹೊಳೆ ಹರಿಯುವುದೆನ್ನುವವರು ದೇವಸ್ಥಾನ ಕಟ್ಟುತ್ತಿರೋದು  ದೈವಶಕ್ತಿ ಕ್ಷೀಣಿಸಲು ಕಾರಣವಾಗುತ್ತಿದೆ. 
ಜನಮರುಳೋ ಜಾತ್ರೆಯೋ ಎನ್ನುವುದು ಸರಿಯಾಗಿದೆ.
ಕಾಯುವ ದೇವರಿಗೆ‌ನಿದ್ರೆ ಬರುವುದೆ? ಬಂದರೆ ಕಾಯೋರು ಯಾರು?
ವಿಜಯವಾಣಿ ಪತ್ರಿಕೆಯಲ್ಲಿ  ಪ್ರಕಟವಾದ ಸುದ್ದಿ ದೇವರಿಗೆ ನಿದ್ದೆ ಮಾಡಲೂ ಪುರುಸೊತ್ತು ಕೊಡದೆ ಶ್ರೀಮಂತ ಭಕ್ತರು  ದೇವಸ್ಥಾನಕ್ಕೆ  ಹೋಗುತ್ತಿರುವರಂತೆ. ಹಾಗಾದರೆ ನಿದ್ರೆ ಮಾಡುತ್ತಿರುವ  ಭಕ್ತರು  ಬೆಳೆದಿರುವರೆ ಅಥವಾ ನಿದ್ರೆ ಬಿಟ್ಟು ದೇವರನ್ನು ನೋಡುವ ಭಕ್ತರು ಬೆಳೆದರೆ?

ಮನೆಯೊಡೆಯನು ಯಾರು? ಆಳು ಅರಸ ಯಾರು?

ಮಾನವರು ಯಾರನ್ನೂ ಆಳಲು ಒಡೆಯನಾಗಲು  ಬಯಸುವುದು  ಸಹಜ ಗುಣ ಆದರೆ ನಮ್ಮನ್ನು ಆಳುತ್ತಿರುವವನೊಬ್ಬ ಮೇಲಿದ್ದಾನೆನ್ನುವ ಅರಿವಿದ್ದರೆ  ನಾವು ನಮ್ಮ ಹಿಡಿತದಲ್ಲಿದ್ದು ಅನ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಒಳ್ಳೆಯ ಹಾಗು ಕೆಟ್ಟ ಶಕ್ತಿಗಳೆರಡೂ ಒಳಗೇ ಇದ್ದು  ಜೀವವನ್ನು  ಉಳಿಸಿ ಬೆಳೆಸಲು ಸಹಕಾರಿಯಾಗಿದ್ದರೂ ಒಮ್ಮೆ ಜೀವ ದೇಹ ಬಿಟ್ಟು ಹೋಗೋದೇ ಎನ್ನುವ ಅರಿವಿದ್ದರೆ  ನಮ್ಮನ್ನು ನಾವರಿತು ಒಳ್ಳೆಯದಕ್ಕೆ ಸಹಾಯ ಮಾಡಿಕೊಂಡು  ಯಾರನ್ನೂ ಆಳದೆ ಸ್ವತಂತ್ರ ಜೀವನ‌ ನಡೆಸಬಹುದು. ಇದಕ್ಕೆ  ಯೋಗ ಅಗತ್ಯವಿದೆ. 
ಪರಮಾತ್ಮನ ಸತ್ಯವರಿಯದೆ ಜೀವಾತ್ಮನಿಗೆ ಯೋಗ ಸಿಗದು. ಒಟ್ಟಿನಲ್ಲಿ ತನ್ನವರನ್ನೇ  ತನ್ನತನವನ್ನೇ ಮರೆತು ಹೊರಗೆ ಆಳುವೆನೆಂದರೆ ಅದು ಅಜ್ಞಾನವಾಗುತ್ತದೆ. ಅದಕ್ಕೆ ತಕ್ಕಂತೆ ಅಸುರಿಗುಣವೂ ಸೇರುತ್ತದೆ.ಇದರಿಂದಾಗಿ  ಅಧರ್ಮ ಅನ್ಯಾಯ ಅಸತ್ಯಗಳು ಹೆಚ್ಚಾದರೆ  ತಾನೇ ಆಳಾಗಿರುವ  ಸತ್ಯ ತಿಳಿಯದೆ ಜೀವ ಹೋಗುತ್ತದೆ.
ಯಾರನ್ನೇ ಆಗಲಿ ಅತಿಯಾಗಿ  ಆಳಲೂಬಾರದು ಆಳಿಸಿಕೊಂಡಿರಲೂಬಾರದು.ಭೂಮಿಮೇಲೆ ನಿಂತು ಭೂಮಿಯೇ ನನ್ನದು ಎಂದರೆ ಹೇಗೋ ಹಾಗೆಯೇ ಸ್ತ್ರೀ ಶಕ್ತಿಯ ಸಹಾಯ ಪಡೆದು ಸ್ತ್ರೀ ಯನ್ನೇ ದುರ್ಭಳಕೆ ಮಾಡಿಕೊಂಡು  ಆಳುವುದು ಅಜ್ಞಾನ. ನಮ್ಮ ಸ್ವಂತ ಬುದ್ದಿ ಜ್ಞಾನ ಕೇವಲ ಸ್ವಲ್ಪ ಆದರೂ ನಮ್ಮ ಜೀವಕ್ಕೆ ಅದೇ ಅನ್ನ ಕೊಡಬಹುದು. ಇದನ್ನು ಬಿಟ್ಟು ಅನ್ಯರ ಬುದ್ದಿ ಜ್ಞಾನವನ್ನು ನನ್ನದೆಂದರೆ ನನ್ನ ಆಳುತ್ತಿರುವುದೇ ಅನ್ಯರು ನಾನು ಹೇಗೆ   ಸ್ವತಂತ್ರ? ಇತ್ತೀಚಿನ ದಿನಗಳಲ್ಲಿ ಯುವಶಕ್ತಿ ಹೊರಗಿನ ರಾಜಕೀಯದಲ್ಲಿ ಅನ್ಯರ  ವ್ಯವಹಾರದಲ್ಲಿ ಮುಳುಗಿ ಹಣಗಳಿಸಿ  ತನ್ನ ಸಂಸಾರದಲ್ಲಿ  ಸಮಸ್ಯೆಗಳನ್ನು ಎದುರಿಸಬೇಕಾದ  ಪರಿಸ್ಥಿತಿ ಹೆಚ್ಚಾಗಿದೆ. ಕಾರಣ ತನ್ನ ನಂಬಿ ಬಂದಿರುವ ಪತ್ನಿಯನ್ನು ಮತ್ತು ನನ್ನ ಸಾಕಿಸಲಹಿದ ಪೋಷಕರನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಿರುವುದು. ಹಣದಿಂದ ಯಾವುದೇ ಆತ್ಮಾವಲೋಕನ ಆಗೋದಿಲ್ಲ. ಹಣವನ್ನು  ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಸೇವೆ ಮಾಡುವ ಮೂಲಕ ಜ್ಞಾನ ಬರುತ್ತದೆ. ‌ಹಾಗಾದರೆ‌ಲಕ್ಮಿ ಎಂದರೆ ಹಣ ಮಾತ್ರವೆ?
ಮಹಾವಿಷ್ಣುವಿನ ಹೃದಯವನ್ನು ಗೆದ್ದಿರುವ ಲಕ್ಮಿಗೆ ಹೃದಯವಂತಿಕೆ ಅಗತ್ಯವಿದೆ. ಎಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಗೌರವವಿರುವುದೋ ಅಲ್ಲಿ  ಜ್ಞಾನ ಲಕ್ಮಿಯ ವಾಸವಿರುತ್ತದೆ. ಜ್ಞಾನದ ನಂತರವೇ  ಹಣದ ಸದ್ಬಳಕೆ ಹೀಗಾಗಿ ಯಾರನ್ನೂ ಆಳೋದಕ್ಕೆ ಹಣವನ್ನು ವ್ಯರ್ಥ ಮಾಡುವ‌ಬದಲಾಗಿ ತನ್ನನ್ನು ಆಳಿಕೊಳ್ಳಲು  ಪರಮಾತ್ಮನ ಸೇವಾಕಾರ್ಯಕ್ಕೆ ಹಣ ಬಳಸಿದರೆ  ನಿಜವಾದ ಅರಸನಂತೆ ಬದುಕಬಹುದು.
ಹಿಂದಿನ ಕಾಲದಲ್ಲಿದ್ದ ಪತಿವ್ರತೆಯರಾಗಲಿ ಧರ್ಮ ಪತ್ನಿಯರಾಗಲಿ  ಪತಿಯಲ್ಲಿ ದೈವತ್ವವನ್ನು ಗುರುತಿಸುವಷ್ಟು ಜ್ಞಾನ ಪಡೆದಿದ್ದರು. ಈಗ ಪತಿಯೇ  ದಾರಿತಪ್ಪಿದ ಹಳಿಯಾಗಿದ್ದು‌ ಕೇವಲ ಆಸ್ತಿ ಅಂತಸ್ತು ಸೌಂದರ್ಯ ದಿಂದ ಸ್ತ್ರೀ ಯನ್ನು  ಅಳೆದು ಆಳಲು ಹೋದರೆ  ಅಧರ್ಮ ವಾಗುತ್ತದೆ. ಸ್ತ್ರೀ ಶಕ್ತಿಯನ್ನು  ಯಾವತ್ತೂ   ಅಜ್ಞಾನದಿಂದ ಕಡೆಗಣಿಸದೆ ಅವಳ  ಜ್ಞಾನವನ್ನು  ಗೌರವಿಸುವುದರಿಂದ ಮುಂದೆ ಬರುವ ಆಪತ್ತಿನಿಂದ ಪಾರಾಗಬಹುದು.

 ಸ್ತ್ರೀ ಯೂ ಹಾಗೆ ಪತಿಯ ಆಂತರಿಕ ಗುಣಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಲು  ಸಹಾಯ ಮಾಡಿದರೆ ಧರ್ಮದಿಂದ  ಸದ್ಗತಿ. ಯಾವಾಗ ಪತಿಯ ಅಧರ್ಮ ಅನ್ಯಾಯಕ್ಕೆ ಬೆಂಬಲವಾಗಿ ನಿಲ್ಲುವಳೋ ದುರ್ಗತಿ ಅನುಭವಿಸಲೇಬೇಕು. ಇದನ್ನು ಕರ್ಮ ಫಲ ಎನ್ನುವರು. ಕಣ್ಣಿಗೆ ಕಾಣದ ಸತ್ಯವನ್ನು  ಅರಿಯಲಾಗದವರಷ್ಟೆ ಈ  ಆಳುವ  ಅರಸನಾಗುವ  ಆಸೆಗೆ ಬಲಿಪಶುವಾಗೋದು.ಹಾಗಾದರೆ ರಾಜಕೀಯವಿಲ್ಲದೆ‌ ಭೂಮಿ‌ನಡೆದಿದೆಯೆ? ಭೂಮಿ ನಡೆದಿರೋದೇ ರಾಜಕೀಯದಲ್ಲಿ  ಆದರೆ ಅದರಲ್ಲಿ ಸತ್ಯ ಧರ್ಮ ವಿರಬೇಕಿದೆ.
ಇದಕ್ಕೆ ರಾಜರಿಗೆ ಧಾರ್ಮಿಕ ಪ್ರಜ್ಞೆ ಇರಬೇಕು. ಅಂತಹ ಶಿಕ್ಷಣ ಗುರುಹಿರಿಯರು ನೀಡಿರಬೇಕು. ಇಲ್ಲದಿದ್ದರೆ ‌ ಸಂಸಾರದಲ್ಲಿ ಕೇವಲ ರಾಜಕೀಯವೇ ಎದ್ದು ಕಾಣುತ್ತದೆ.ತನ್ನ ತಪ್ಪು ಅರ್ಥ ವಾಗದ ಮನಸ್ಸುಗಳಿಂದ ಇನ್ನಷ್ಟು ತಪ್ಪು ನಡೆದಾಗ ಅದನ್ನು  ತಡೆಯಲು  ಯಾರಿಂದಲೂ ಸಾಧ್ಯವಾಗದು. ತಪ್ಪು ಮಾಡೋದು ಸಹಜ ಆದರೆ ಅದನ್ನು ಸರಿ ಎಂದು ವಾದಿಸದೆ ಸರಿಪಡಿಸಿಕೊಂಡರೆ ಅದೇ ನಮ್ಮ ಸಾಮ್ರಜ್ಯಸ್ಥಾಪನೆಗೆ ಬಂಡವಾಳವಾಗುತ್ತದೆ.

ಯಾರನ್ನು ಯಾರೋ ಆಳುವುದರಲ್ಲಿ ಅರ್ಥ ವಿರದು.‌ ಒಟ್ಟಿನಲ್ಲಿ ಆಳುವವನು ಆಳಿಸಿಕೊಳ್ಳುವವನು ಒಂದೇ ಭೂಮಿಯನ್ನು  ಆಳಬಹುದೆ?  ರಾಜಕೀಯ ಎಂದರೆ ಇದೆಯೆ?
ರಾ ರಾವಣ ಜ ಜರಾಸಂಧ ಕೀ ಕೀಚಕ ಯ ಯಮ
ರಾವಣನಂತಹ ಮಹಾಜ್ಞಾನಿ ಶಿವಭಕ್ತ ಒಂದು ಸ್ತ್ರೀ ಯನ್ನು  ಅಪಹರಿಸಿದ ಫಲವೇ ಯಮನ ದರ್ಶನಕ್ಕೆ ಕಾರಣವಾಯಿತು. ಹಾಗೆ ಜರಾಸಂಧನೂ ಒಂದು ರಾಕ್ಷಸ ಸ್ತ್ರೀ ಇಂದ ಪುನರ್ಜನ್ಮ ಪಡೆದರೂ ಅಜ್ಞಾನದೆಡೆಗೆ ನಡೆಯುತ್ತಾ ಅಸುರನಾದ ಅಂದರೆ ಅಹಂಕಾರ ದ ಅಮಲಿನಲ್ಲಿಯೇ ಮರಣಿಸಿದ .ಕೀಚಕನೂ ದ್ರೌಪದಿಯನ್ನು ಕೆಣಕಿ ಮರಣ ಹೊಂದಿದ ಎಲ್ಲರಿಗೂ ಕೊನೆಯಲ್ಲಿ ಯಮನ ದರ್ಶ ನವಾಗಿರೋದು  ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡಿರುವುದು ಕಾರಣವೆಂದರೆ ಭೂಮಿ ತಾಯಿ, ಹೆತ್ತತಾಯಿ,ಸ್ತ್ರೀ ಶಕ್ತಿಯನ್ನು  ಯಾರು  ಸರಿಯಾಗಿ ಅರಿತು ಗೌರವಿಸಿ  ಸಂಸಾರದ  ಜವಾಬ್ದಾರಿ  ಹೊತ್ತು ಧರ್ಮದಲ್ಲಿ ನಡೆಯುವರೋ ಅವರಿಗೆ ಸದ್ಗತಿ.

 ಶ್ರೀ ರಾಮಚಂದ್ರನಂತೆ ರಾಜನಾಗಿಯೂ ಸಾಮಾನ್ಯ ಪ್ರಜೆಯಂತೆ ರಾಜ್ಯಭಾರ ನಡೆಸೋದು ಕಷ್ಟ. ಕಲಿಯುಗದಲ್ಲಿ ಕಲಿಕೆಯೇ ಹೊರಮುಖ ಆಗಿರುವಾಗ ಅಜ್ಞಾನ.ಎಂದರೆ ಸತ್ಯದ ತಿಳುವಳಿಕೆ ,ಕಲಿಕೆ ಇಲ್ಲದೆ ಭೂಮಿಯನ್ನು ಆಳುವುದಾಗುತ್ತದೆ.ಇದಕ್ಕೆ ಸ್ವಯಂ ಸ್ತ್ರೀ ಶಕ್ತಿಯ ಬೆಂಬಲ ಸಹಕಾರ ಸಿಕ್ಕಿದರೆ ಮುಗಿಯಿತು ಕಥೆ.

ಎಲ್ಲಿಯವರೆಗೆ  ಗೃಹಲಕ್ಮಿ ಗೃಹಿಣಿಯಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸನಾತನ ಧರ್ಮ ರಕ್ಷಣೆಯಾಗದು. ಅಂದರೆ ಸ್ತ್ರೀ  ಸತ್ಯಜ್ಞಾನಕ್ಕೆ  ಮನೆಯೊಳಗೆ ಬೆಲೆಯಿರುವುದಿಲ್ಲವೋ  ಅಲ್ಲಿ  ಸಂತೋಷ,ನೆಮ್ಮದಿ ತೃಪ್ತಿಇರದು.‌ ಮಿಥ್ಯಜ್ಞಾನ ಇಂದು ಮಿತಿಮೀರಿದ ಪ್ರಭಾವದಿಂದಾಗಿ ಮನೆಯೊಳಗೆ ವಸ್ತುಗಳು ಸೇರಿದೆ  ವಾಸ್ತು ಪುರುಷನಿಲ್ಲ. 

ಇದು ವಾಸ್ತವ ಸತ್ಯ. ಇದಕ್ಕೆ ಪರಿಹಾರ  ಸತ್ಯಜ್ಞಾನದ ಶಿಕ್ಷಣವೇ ಹೊರತು ಇನ್ನಷ್ಟು ‌ಮಿಥ್ಯವನ್ನರಿತು ಮುಂದೆ  ನಡೆಯೋದಲ್ಲ. ಒಟ್ಟಿನಲ್ಲಿ ಸತ್ಯವಿಲ್ಲದ ಕಡೆ ಧರ್ಮ ವಿರದು.ಧರ್ಮ ಇರದ ಕಡೆ ಶಾಂತಿಯಿರದು. ಶಾಂತಿಯೇ ಇಲ್ಲದ ಜೀವಾತ್ಮನಿಗೆ ಮುಕ್ತಿ ಸಿಗದು.

ಹಿಡಿತವಿರಲಿ  ಆದರೆ ಅದರಲ್ಲಿ ಧರ್ಮವಿರಲಿ. ಇತಿಮಿತಿಯಿರಲಿ. ಅತಿಯಾದರೆ ಗತಿಗೇಡು.

ಪ್ರಜಾಪ್ರಭುತ್ವದ ವಾಸ್ತವ ಸತ್ಯ

" ಕಠೋರವೆನಿಸಿದರೂ ವಾಸ್ತವಸತ್ಯ ಇದಾಗಿದೆ. ಪ್ರಜಾಪ್ರಭುತ್ವ ರಾಜಪ್ರಭುತ್ವವಾಗೋ ಮೊದಲು ಎಚ್ಚರವಾದರೆ ಉತ್ತಮ ತತ್ವ  ಕಾಣಬಹುದಷ್ಟೆ. ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. ಬೇಡದ್ದು ಮಾಡಿದರೆ ಆಗಬಾರದ್ದೇ ಆಗೋದೆನ್ನುವುದು ಎಲ್ಲರಿಗೂ ಅನ್ವಯಿಸುತ್ತದೆ. ಇದನ್ನು ಹಣದಿಂದ ಸರಿಪಡಿಸಲಾಗದು. ಕರ್ಮಕ್ಕೆ ತಕ್ಕಂತೆ ಫಲ.

ಗಾಂಧಿ ಹೆಸರಿನಲ್ಲಿರುವ ಯೋಜನೆಗಳ ಹೆಸರನ್ನು ಬದಲಾಯಿಸಬಹುದು.ಆದರೆ ದೇಶದೊಳಗೆ ಚಲಾವಣೆಯಲ್ಲಿರುವ ನೋಟ್ ಗಳಲ್ಲಿ ಇರುವ ಗಾಂಧೀಜಿ ಚಿತ್ರ ಯಾರಾದರೂ ಅಳಿಸಬಹುದೆ?
ಪ್ರತಿಯೊಂದು ಮನೆಯಲ್ಲಿಯೂ ಪೂಜಿಸಲಾಗುತ್ತಿರುವ ಈ ಹಣವನ್ನು ಬದಲಾಯಿಸುವ ಯೋಜನೆ ಜಾರಿಗೆ ತರಲು ಸಾಧ್ಯವೆ?
ಹಣಕ್ಕಾಗಿಯೇ ರಾಜಕೀಯ ನಡೆಸುವವರನ್ನು ಜನರು ಆಯ್ಕೆ ಮಾಡಿಕೊಂಡು  ಯಾರೋ ವ್ಯಕ್ತಿಯಿಂದ ದೇಶ ಹಾಳಾಗಿದೆ ಎಂದು ಪ್ರಚಾರ ಮಾಡುತ್ತಿದ್ದರೆ ಸತ್ಯ ಹೊರಬರದೆ ಇನ್ನಷ್ಟು ಭ್ರಷ್ಟ ದುಷ್ಟರು ಬೆಳೆಯಬಹುದು.ಎಲ್ಲಿ ನೋಡಿದರೂ  ಹೆಸರಿಗೆ ಹಣಕ್ಕೆ ಅಧಿಕಾರಕ್ಕೆ ಪೈಪೋಟಿ ಇರೋವಾಗ ಜನರೊಳಗೇ ಅಡಗಿರುವ ಜ್ಞಾನವನ್ನು ಗುರುತಿಸದೆ ಅಜ್ಞಾನವೇ ತಾಂಡವವಾಡುತ್ತದೆ.ಇದು ಕಲಿಯುಗ ಬೇಲಿಯೇ ಎದ್ದು ಹೊಲಮೇಯ್ದರೂ ಅದನ್ನು ಕರ್ಮ ಫಲ ಎಂದು ಸುಮ್ಮನಿರಬೇಕೆನ್ನುವವರೆ ಭ್ರಷ್ಟಾಚಾರ ನಡೆಸಿ ಸಹಕರಿಸಿ ಮುಂದೆ ನಡೆಯುವಾಗ ನಮ್ಮ ಹೆಸರಿನಲ್ಲೇ ಅಡಗಿರುವ ದೈವಶಕ್ತಿ ಕಾಣೋದಿಲ್ಲ. ಅದಕ್ಕೆ ಅಸುರರ ಹೆಸರು ಪ್ರಸಿದ್ದವಾಗಿರೋದು.
ಸುಪ್ರಸಿದ್ದ ಕುಪ್ರಸಿದ್ದರಿಬ್ಬರೂ ಪ್ರಸಿದ್ದರೆ ಆದರೂ ಸಿದ್ದಿ ಯಾರಿಂದ ಸಿಕ್ಕಿದೆ ಎನ್ನುವ ಬಗ್ಗೆ ಚಿಂತನೆ ನಡೆಸೋದು ಕಷ್ಟ.
ಎಲ್ಲಿಯವರೆಗೆ ಸಿದ್ದಪುರುಷರ ಜ್ಞಾನದ  ಸದ್ಗುಣಗಳನ್ನು ಗುರುತಿಸುವ  ಆತ್ಮಜ್ಞಾನ ಮಾನವನಲ್ಲಿರದೋ ಅಲ್ಲಿಯವರೆಗೆ ಈ ರೀತಿಯ ನಾಟಕಗಳು ನಡೆಯುತ್ತಲೇ ಇರುತ್ತದೆ. 
ಉದ್ಯೋಗಂ ಪುರುಷಲಕ್ಷಣಂ ಎನ್ನುತ್ತಿದ್ದವರು ಉದ್ಯೋಗಂ ಸ್ತ್ರೀ ಲಕ್ಷಣಂ ಎನ್ನುವ ಹಂತಕ್ಕೆ ಬಂದಿರೋದೇ ಭಾರತೀಯರ ಈ ಸ್ಥಿತಿಗೆ ಕಾರಣ.
ಹಿಂದೆ ದೊಡ್ಡ ಕುಟುಂಬದ ಜವಾಬ್ದಾರಿ ಒಬ್ಬನೇ ಹೊತ್ತು ಹೋಗುತ್ತಿದ್ದರು ಈಗ ಸಂಸಾರ ಬಿಟ್ಟು ಸಮಾಜದ ಋಣದಲ್ಲಿ ಹಣದಲ್ಲಿ ಬಲದಲ್ಲಿ ತನ್ನ ಜೀವ ಉಳಿಸಿಕೊಳ್ಳಲು ಭ್ರಷ್ಟ ದುಷ್ಟರ ಹಿಂದೆ ನಡೆಯುವರೆಂದರೆ ಅಜ್ಞಾನ ಮಿತಿಮೀರಿದೆ.
ಸತ್ಯವನ್ನು ರಾಜಕೀಯದಲ್ಲಿ ತಿಳಿಯುವುದಕ್ಕೂ ರಾಜಯೋಗದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಬಹಳ ಅಂತರವಿದ್ದು ಆ ಅಂತರದಲ್ಲಿ ಕಣ್ಣಿಗೆ ಮಣ್ಣೆರಚಿ ಆಳುವವಗೆ ಅನ್ಯದೇಶದವರಿಗೆ ನಮ್ಮಲ್ಲಿ  ಉಚಿತವಾಗಿ ಸನ್ಮಾನಗಳಾಗುತ್ತಿದೆ. ಯಾವುದೋ ಹೊರದೇಶದ ಪ್ರಸಿದ್ದ ವ್ಯಕ್ತಿಯನ್ನು ಕರೆಸಿಕೊಂಡು ಜನರನ್ನು ದಾರಿತಪ್ಪಿಸುವ ಸ್ವಾತಂತ್ರ್ಯ ರಾಜಕಾರಣಿಗಳು ಪಡೆದಿರುವರೆಂದರೆ ನಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಎಂದರ್ಥ. ಒಟ್ಟಿನಲ್ಲಿ ಎಲ್ಲವೂ ರಾಜಕೀಯದ ಪ್ರೇರಣೆಯಂತೆ ನಡೆದರೂ  ನಮ್ಮ ಸಮಸ್ಯೆ ಗೆ ಪರಿಹಾರ ಸಿಗೋದು  ನಮ್ಮ ಬದಲಾವಣೆಯಿಂದಷ್ಟೆ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿರದು. ಆತ್ಮವೆಂದರೇನೆಂಬುದರ ಅರಿವಿಲ್ಲದವರನ್ನು ಚೆನ್ನಾಗಿ ಆಳಬಹುದು.ಹೀಗಾಗಿ ಅಜ್ಞಾನದ ಜನರಿಗೆ ಇನ್ನಷ್ಟು ಅಜ್ಞಾನ ತುಂಬಿ ಹೊರಗೆ ಕುಣಿಸಿ ಕುಡಿಸಿ ಮೆರೆಸಿದರೆ ಸಂಸಾರ ಹದಗೆಟ್ಟುಹೋಗುವಾಗ ಯಾರೂ ಸರಿಪಡಿಸಲಾಗದು.ಹೊರಗಿನ‌ನ್ಯಾಯಾಲಯದಲ್ಲಿಯೂ ಹಣವಿಲ್ಲದೆ  ನ್ಯಾಯ ನೀಡೋದಿಲ್ಲ ಎಂದಾಗ ಮೇಲಿರುವ ನ್ಯಾಯಾಧೀಶನಿಗೆ ಶರಣಾಗೋದು ಉತ್ತಮ.ಆಗ‌ಹಣವೂ ಸದ್ಬಳಕೆಯಾಗುತ್ತದೆ. 
ಯಾರೋ ಒಬ್ಬ ವ್ಯಕ್ತಿಯಿಂದ ದೇಶ ಹಾಳಾಗೋದಿಲ್ಲ ಉಳಿಯೋದೂ ಇಲ್ಲ. ದೇಶದ ಒಳಗಿರುವ ಎಲ್ಲರ ಜ್ಞಾನಶಕ್ತಿಯಿಂದ  ಎಲ್ಲಾ ‌ನಡೆದಿರುವಾಗ ನಮ್ಮೊಳಗೇ ಇರುವ ವಿದೇಶಿ ವಿಜ್ಞಾನದ ಶಿಕ್ಷಣವು ವ್ಯವಹಾರಕ್ಕೆ ಸಹಕಾರ ಕೊಟ್ಟರೂ ಧರ್ಮದ ಪ್ರಕಾರ ನಮ್ಮ ಆತ್ಮರಕ್ಷಣೆಗೆ ಪೂರಕವಾಗಿದೆಯೆ? ಇದರ ಬಗ್ಗೆ ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರ ಸಾಹಿತ್ಯ ಕ್ಷೇತ್ರ ಗಮನ ಕೊಡುವುದು ಅಗತ್ಯವಿದೆ.
ಅಲ್ಲಿಯೂ ಚುನಾವಣೆಯಲ್ಲಿ  ಹಣದ ಪ್ರಭಾವವೇ ಮೇಲುಗೈ ಸಾಧಿಸಿದರೆ ಜ್ಞಾನಿಗಳ ಗತಿ ಅಧೋಗತಿ.ಭಾರತ ವಿಶ್ವಗುರು ಎನಿಸಿಕೊಂಡಿದ್ದು ಆತ್ಮಜ್ಞಾನದಿಂದ ಆದರೆ ಇಂದಿದು ಹೊರಗಿನವರ ವಿಜ್ಞಾನದೆಡೆಗೆ ಹೊರಟು ದೇಶದಲ್ಲಿ ತನ್ನ ಮೂಲ ಶಿಕ್ಷಣವನ್ನು  ಕೊಡಲಾಗದ ಸ್ಥಿತಿಗೆ ಬಂದಿರೋದು ಆತ್ಮನಿರ್ಭರಕ್ಕೆ   ಪೂರಕವೇ ಮಾರಕವೇ?
ಯಾವುದೇ ಪಕ್ಷ ಬಂದರೂ ದೇವಸ್ಥಾನಗಳನ್ನು ಸರ್ಕಾರದ ವಶದಿಂದ ಬಿಡಿಸಲಾಗಿಲ್ಲ ದೇಶೀಯ ಶಿಕ್ಷಣವನ್ನು ಕೊಡಲಾಗಿಲ್ಲ ಎಂದರೆ ನಮ್ಮ ಚಿತ್ತ ವಿದೇಶಿಯತ್ತ. ಇದರಿಂದ ವಿದೇಶಿಗರಿಗೆ ಸಿಗುತ್ತಿರುವ  ಸನ್ಮಾನ ನಮ್ಮವರಿಗಿಲ್ಲ. 
ಕಣ್ಣೊರೆಸುವ ನಾಟಕವಾಡುವವರಿಗೆ ಕಣ್ಣೀರಿನ ಬೆಲೆ ಕಟ್ಟಲಾಗದು. ಕಣ್ಣೀರಿನ ಫಲವೇ  ಅತೃಪ್ತ ಆತ್ಮಗಳಾಗಿ ನಿಂತು ಬೇಡುತ್ತಿರುವ ಜನರಾಗಿರುವರು. ಇವರನ್ನು ತೃಪ್ತಿ ಪಡಿಸಲು ಉತ್ತಮ  ಜ್ಞಾನದ ಶಿಕ್ಷಣ ನೀಡುವುದೇ ಉಪಾಯ.
ಎಲ್ಲದ್ದಕ್ಕೂ ಪರಮಾತ್ಮನೇ ಉಪಾಯವಾಗಿರುವನು. ಮೇಲಿರುವ ಅವನ ಬಿಂದುಗಳಲ್ಲಿ ಅಡಗಿರುವ ಆತ್ಮಶಕ್ತಿ ಜಾಗೃತವಾದಾಗಲೇ ಭೂಮಿಯಲ್ಲಿ  ಶಾಂತಿ ನೆಲೆಸಲು ಸಾಧ್ಯ.
ಶಿಕ್ಷಣವೇ ಹೊರಮುಖವಾಗಿದ್ದು  ಹಣವೇ ಸರ್ವಸ್ವ ವಾದಾಗ
ಎಲ್ಲಿಯ ಬದಲಾವಣೆ?
ಶ್ರೀ ಕೃಷ್ಣ ನೇ ತಿಳಿಸಿದಂತೆ ಕಲಿಯುಗದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ  ಸತ್ಯದರ್ಶನ  ನಮ್ಮ  ಅಂತರಂಗ ಶುದ್ದಿಯಿಂದಷ್ಟೆ ಕಾಣಬಹುದು. 
ಸ್ವಚ್ಚಭಾರತಕ್ಕೆ ಸ್ವಚ್ಚ ಶಿಕ್ಷಣ ಅಗತ್ಯವಿದೆ. ಪೋಷಕರೆ  ಮಕ್ಕಳ ಜೊತೆಗೆ ‌ಹಣವನ್ನು ಕೊಟ್ಟು  ಗುಲಾಮಗಿರಿಗೆ ಸಹಕರಿಸಿದರೆ  ಗುಲಾಮರಿಂದ ಬಿಡಿಸಿಕೊಳ್ಳಲು ಸಾಧ್ಯವೆ? ಇಲ್ಲಿ ಗುಲಾಮರು ಯಾರು? ವಿದೇಶಿ ಕಂಪನಿ,ವ್ಯವಹಾರ,ಸಾಲ,ಬಂಡವಾಳದ ಜೊತೆಗೆ ಒಪ್ಪಂದಕ್ಕೆ  ನಮ್ಮವರು  ಇಳಿದಾಗ ದೇಶದ ತುಂಬಾ ಅವರದೇ ಸಾಮ್ರಾಜ್ಯ. ಇದನ್ನು ಹಿಂದೆ ಬ್ರಿಟಿಷ್ರೂ   ಮಾಡಿತೋರಿಸಿದ್ದಾರೆ.ಈಗ ಅವರದೇ ಶಿಕ್ಷಣ ವ್ಯವಹಾರ ಭಾಷೆ ಮಾಧ್ಯಮಗಳ ಮೂಲಕ ರಾಜಾರೋಷವಾಗಿ ರಾಜಕಾರಣಿಗಳು ನಡೆಸಿರುವರಷ್ಟೆ.ಇದನ್ನು ಪ್ರಗತಿ ಎನ್ನುವ ಭ್ರಮೆಯಲ್ಲಿ  ನಾವು ಸಹಕಾರ ನೀಡುತ್ತಾ ಮೇಲಕ್ಕೇರಿಸಿ  ನಮ್ಮೊಳಗೇ ಇದ್ದ ಶುದ್ದ ಸತ್ಯ ಸತ್ವ ತತ್ವಕ್ಕೆ  ವಿರುದ್ದವಿರುವಾಗ ನಾವು ಗುಲಾಮಗಿರಿಗೆ  ತಲೆಬಾಗಬೇಕಿದೆ. 
ದೇಶ ಸುತ್ತು ಕೋಶ ಓದು ಎನ್ನುವುದೇ ತಪ್ಪು. ಯಾವ ದೇಶ ಸುತ್ತಬೇಕು ಯಾರ ಕೋಶ ಓದಬೇಕೆಂಬ ಅರಿವಿಲ್ಲದಿದ್ದರೆ ಮನಸ್ಸು ಮನೆಯೊಳಗೆ ಇರೋದಿಲ್ಲ.
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದರೆ ನಮ್ಮಲ್ಲಿ ಆತ್ಮಜ್ಞಾನವಿದೆಯೆ ಇಲ್ಲವೆ ಎನ್ನುವುದು.
ನಾವೇ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸೋತಾಗ ಅನ್ಯರು ಸುಲಭವಾಗಿ ಆಳುವರು. ಇದು ಇಂದಿನ ಭಾರತದ ಸ್ಥಿತಿಗೆ ಕಾರಣ.
ಯಾರು ಹಿತವರು ನಿಮಗೆ ಈ ಮೂವರೊಳಗೆ?
ದೇವರು ಮಾನವರು ಅಸುರರು
ಆಕಾಶ ಭೂಮಿ ಪಾತಾಳ
ಪುರುಷ ಸ್ತ್ರೀ ಮಕ್ಕಳು
ಬ್ರಹ್ಮ ವಿಷ್ಣು ಮಹೇಶ್ವರ

ಈ ಮಧ್ಯವರ್ತಿಗಳು ಆ ಕಡೆ ಈ ಕಡೆ ಸಮಾನವಾಗಿ ನೋಡುವ ಹೊತ್ತಿಗೆ ಕಾಲಮುಗಿದಿರುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವುದನ್ನು ಯಾರಿಗೂ ತಪ್ಪಿಸಲಾಗದು.
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಪುರುಷರ ಅಜ್ಞಾನವು ಸ್ತ್ರೀ ಯರ ಸುಜ್ಞಾನವನ್ನು ಅಲ್ಲಗೆಳೆದಷ್ಟೂ ಸಮಸ್ಯೆಯಿಂದ ಬಿಡುಗಡೆ ಸಿಗದು. ಜ್ಞಾನದೇವತೆಗೇ ಎದುರು ನಿಂತರೆ ಅಜ್ಞಾನವೇ ಬೆಳೆಯೋದಲ್ಲವೆ? ಜ್ಞಾನವನ್ನು ಹಣದಿಂದ ಅಳೆಯಲು ಹೋದರೂ ಅಜ್ಞಾನವೇ ಬೆಳೆಯೋದು.
ಅಜ್ಞಾನವನ್ನು ಯಾವುದೇ ರಾಜಕೀಯ ಶಕ್ತಿಯಿಂದ ಸರಿಪಡಿಸಲಾಗದು. ಯಾವುದೇ ಅಧಿಕಾರ ದರ್ಪ ಅಸತ್ಯ ಅನ್ಯಾಯದಿಂದ  ಜನರನ್ನು ದಾರಿತಪ್ಪಿಸಿ ಆಳಬಹುದು ಆದರೆ ಅದರ ಪ್ರತಿಫಲ ಅಷ್ಟೇ ಕಠೋರವಾಗಿರುತ್ತದೆ ಕಾರಣವಿಷ್ಟೆ ಪರಮಾತ್ಮ ಒಲಿಯೋದು ಜ್ಞಾನಕ್ಕಷ್ಟೆ.ಇದು ಯೋಗಮಾರ್ಗದಲ್ಲಿರಬೇಕು. 
ಜ್ಞಾನಯೋಗ, ರಾಜಯೋಗ,ಭಕ್ತಿಯೋಗ, ಕರ್ಮ ಯೋಗದಲ್ಲಿ ರಾಜಕೀಯವಿತ್ತೆ? ಇದ್ದರೂ ಧರ್ಮ ವಿತ್ತು.ಈಗ ಧರ್ಮ ಎಲ್ಲಿದೆ? ಕಾಣದ ದೇವರನ್ನು ಹಿಡಿದು ದೇವಸ್ಥಾನ ಕಟ್ಟಬಹುದು.ಆದರೆ ದೇವರನ್ನು ಅಲ್ಲಿ ಕೂರಿಸುವಷ್ಟು ಶಕ್ತಿ ನಮಗಿರಬೇಕು.ಹಣಕ್ಕಾಗಿ  ದೇವರನ್ನು ಬೇಡೋ ಮೊದಲು ಜ್ಞಾನಕ್ಕಾಗಿ ಭಗವಂತನ ಸೇವೆ ಮಾಡೋದು ಸನಾತನ ಧರ್ಮದ ಗುರಿಯಾಗಿದೆ. ಇದನ್ನು ಧಾರ್ಮಿಕ ವರ್ಗದವರು ಅರಿತಾಗಲೇ ವಾಸ್ತವದಲ್ಲಿ ನಾವೆತ್ತ ಸಾಗಿದ್ದೇವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. 
ಭೂಮಿಯ ಮೇಲಿರುವ ಮನುಕುಲಕ್ಕೆ ತನ್ನೊಳಗೆ ಇರುವ ದೈವತ್ವದ ಅರಿವಿಲ್ಲದಿದ್ದರೆ ಅಸುರರೆ ದೇಶದ ಜೊತೆಗೆ ದೇಹವನ್ನು ಆಳೋದು. ಇದರಿಂದಾಗಿ ಕಷ್ಟ ನಷ್ಟ ಯಾರಿಗೆ?

ಶತ್ರು ಮಿತ್ರರು ಯಾರು?

" ಜೀವನದಲ್ಲಿಗೆಲ್ಲಬೇಕು ಅಂದ್ರೆಮಿತ್ರರಿರಬೇಕು"
ಜೀವನಪರ್ಯಂತ ಗೆಲ್ಲಬೇಕೆಂದರೆ ಶತ್ರುಗಳಿರಬೇಕು" 
ಜೀವನವೆಂದರೆ‌ಜೀವಿಗಳ ವನ ಇದರಲ್ಲಿ ಗೆಲ್ಲುವುದಕ್ಕೆ ಮಿತ್ರರು  ಸಹಕರಿಸಬಹುದು ಆದರೆ ಇದು ತಾತ್ಕಾಲಿಕವಷ್ಟೆ.
ಯಾವಾಗ ನಮ್ಮ ಸ್ವಂತ ಬುದ್ದಿ ಜ್ಞಾನ ಶ್ರಮದಿಂದ  ಕಷ್ಟಪಟ್ಟು ಮುಂದೆ ನಡೆಯುವವರಿಗೆ ಹೆಚ್ಚಿನ ಶತ್ರುಗಳು. ಕಾರಣವಿಷ್ಟೆ ಅವರಲ್ಲಿ ಸತ್ಯ ನಿಷ್ಟೆ ನ್ಯಾಯ ಧರ್ಮ ವಿರುತ್ತದೆ. ಇದರಿಂದಾಗಿ ಹೆಚ್ಚಿನ ಹಣಸಂಪಾದನೆ ಕಷ್ಟವಾಗುತ್ತ ಬಡವರಾಗಿರುವರು. ಆ ಬಡತನವನ್ನು ಯಾರೋ ಹೊರಗಿನವರು  ಬಂದು ಹಣಕೊಟ್ಟು ಮೇಲಕ್ಕೆ ತರಲು ಸಹಕರಿಸಿದರೆ  ಅವರು ಮಿತ್ರರೆನಿಸುವರು.ಆದರೆ ಒಂದು ಸತ್ಯ  ಅವರವರ ಸಾಲ ಅಥವಾ ಋಣ ತೀರಿಸಲು  ಸ್ವಧರ್ಮ ಸತ್ಕರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯ ಅಗತ್ಯವಿದೆ ಎಂದರೆ  ಇದು ಹೊರಗಿನವರು ಕೊಡಬಹುದೆ? 
ಒಟ್ಟಿನಲ್ಲಿ  ಮಾನವ ತನಗೆ ತಾನೇ ಮೋಸ ಹೋದರೂ  ಹೊರಗಿನವರೆ ಕಾರಣ ಎಂದಾಗುತ್ತದೆ. 
ಅತಿಯಾದ  ಶತ್ರುಗಳೂ ಇರಬಾರದು ಮಿತ್ರರೂ ಇರಬಾರದು.

ಕೃತಕ ಜನ್ಮ ಎಷ್ಟು ಜನ್ಮಕ್ಕೆ ಕಾರಣವಾಗಬಹುದು?

ಜೀವಶಾಸ್ತ್ರ ಮತ್ತು ಪುರಾಣಗಳ ಪ್ರಕಾರ ಪ್ರಾಣಿಗಳು ಅಥವಾ ಜೀವಿಗಳು ಹುಟ್ಟುವ ವಿಧಾನವನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳ ವಿವರ ಇಲ್ಲಿದೆ:
೧. ಅಂಡಜ (Andaja):
ಅರ್ಥ: ಮೊಟ್ಟೆಯಿಂದ ಹುಟ್ಟುವ ಜೀವಿಗಳು (ಅಂಡ ಎಂದರೆ ಮೊಟ್ಟೆ, ಜ ಎಂದರೆ ಹುಟ್ಟು).
ಉದಾಹರಣೆ: ಪಕ್ಷಿಗಳು, ಹಾವುಗಳು, ಹಲ್ಲಿಗಳು ಮತ್ತು ಮೀನುಗಳು.
೨. ಸ್ವೇದಜ (Swedaja):
ಅರ್ಥ: ಬೆವರು ಅಥವಾ ತೇವಾಂಶದಿಂದ ಹುಟ್ಟುವ ಜೀವಿಗಳು (ಸ್ವೇದ ಎಂದರೆ ಬೆವರು). ಇವು ಸಾಮಾನ್ಯವಾಗಿ ಸೂಕ್ಷ್ಮಜೀವಿಗಳಾಗಿರುತ್ತವೆ.
ಉದಾಹರಣೆ: ಪರೋಪಜೀವಿಗಳು, ಬ್ಯಾಕ್ಟೀರಿಯಾ, ನುಸಿ, ಮತ್ತು ಹೇನುಗಳು.
೩. ಉದ್ಭಿಜ (Udbhija):
ಅರ್ಥ: ಭೂಮಿಯನ್ನು ಸೀಳಿಕೊಂಡು ಮೇಲೆ ಬರುವ ಜೀವಿಗಳು (ಉದ್ಭಿಜ ಎಂದರೆ ಮೊಳಕೆಯೊಡೆಯುವುದು).
ಉದಾಹರಣೆ: ಸಸ್ಯಗಳು, ಮರಗಳು, ಬಳ್ಳಿಗಳು ಮತ್ತು ಗಿಡಮೂಲಿಕೆಗಳು.
೪. ಜರಾಯುಜ (Jarayuja):
ಅರ್ಥ: ತಾಯಿಯ ಗರ್ಭದಿಂದ (ಜರಾಯು ಅಥವಾ ಹೊಕ್ಕಳು ಬಳ್ಳಿಯ ಮೂಲಕ) ನೇರವಾಗಿ ಮರಿಗಳಾಗಿ ಹುಟ್ಟುವ ಜೀವಿಗಳು.
ಉದಾಹರಣೆ: ಮನುಷ್ಯರು, ಹಸು, ನಾಯಿ, ಆನೆ ಮುಂತಾದ ಸಸ್ತನಿಗಳು.
ಈ ನಾಲ್ಕು ವಿಧಗಳನ್ನು ಒಟ್ಟಾಗಿ 'ಚತುರ್ವಿಧ ಜೀವರಾಶಿಗಳು' ಎಂದು ಕರೆಯಲಾಗುತ್ತದೆ.
 ವೈಜ್ಞಾನಿಕ ಯುಗದಲ್ಲಿ ಪ್ರಕೃತಿ ಸಹಜವಾದ ಜನನ ಮರಣಗಳನ್ನು   ಮಾನವನು  ಕೃತಕ ವಿಧಾನದಿಂದ ತಡೆಯಲು ಹೊರಟು  ಮಾನವನ ಸಹಜ ಗುಣಧರ್ಮ ವೇ  ಹಿಂದುಳಿಯುತ್ತಿದೆ. ಹಾಗಾದರೆ  ಪರಮಾತ್ಮ ಜೀವಾತ್ಮರಿಗೆ  ಜನನ ಮರಣವಿದೆಯೆ?  ಯಾರು ಯಾರನ್ನು ತಿಳಿದು ನಡೆಯಬೇಕಿದೆ? ನಡೆಯಬೇಕು? ನಡೆಯುತ್ತಿರುವರು? 
ಕಲಿಗಾಲದ ಕಲಿಕೆಯೇ  ಸರಳವಾಗಿರುವ ಸತ್ಯದ ವಿರುದ್ದ ಇರೋವಾಗ  ಪ್ರಕೃತಿ ನಿಯಮ ಮೀರಿ‌ ನಡೆಯೋದು ಸಹಜ.
ಏನಂತೀರ?
ಬದಲಾವಣೆ  ಸಹಜ.ಆದರೂ ಸಮಾಜ ಇದನ್ನು ವಿರೋಧಿಸಿದರೆ  ವಿಕೃತ  ಸ್ವಭಾವದವರ  ಜೀವಿಗಳ ಜನ್ಮವೇ ಹೆಚ್ಚುವುದು.

Wednesday, December 17, 2025

ನೀವಿರೋದೆಲ್ಲಿ? ನಮ್ಮೊಳಗಿರೋದು ಯಾರು?

ಯಾರೊಳಗೆ ಯಾರಿರೋದು?
ಪ್ರಶ್ನೆಗೆ ಉತ್ತರ ಎಲ್ಲಾ ಅವರೊಳಗೆ ಹೊರಗೆ ಹುಡುಕಿಕೊಂಡರೆ ನಾವು ಯಾರ ಅಧೀನದಲ್ಲಿದ್ದೇವೆನ್ನುವ ಸತ್ಯದರ್ಶನ ವಾಗುತ್ತದೆ.
ಅಧ್ಯಾತ್ಮಿಕ ಚಿಂತಕಿಯಾಗಿ ನಾನು ಕಂಡಿರುವ ಸತ್ಯದಲ್ಲಿ  ಪರಮಾತ್ಮನೊಳಗೆ ಜೀವಾತ್ಮನಿದ್ದರೂ ಜೀವಾತ್ಮನಾದ ಮಾನವ ಪರಮಾತ್ಮನನ್ನೇ ತನ್ನ ವಶದಲ್ಲಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿ ಅಧರ್ಮ ಬೆಳೆದಿದೆ.ಇಲ್ಲಿ ಆತ್ಮಕ್ಕೆ ಲಿಂಗಬೇಧ ಜಾತಿಬೇಧ ಪಕ್ಷಬೇಧವಿಲ್ಲ ಆದರೂ ಧರ್ಮದ ಪ್ರಕಾರ ಎಲ್ಲಾ ಒಂದಾಗೋದಕ್ಕಾಗಿಯೇ ಎಲ್ಲಾ ಅವತಾರವನ್ನು ತಾಳಿ ಧರ್ಮ ರಕ್ಷಣೆ ಮಾಡಿದ‌ ಪರಮಾತ್ಮನ ಪುರಾಣ ಕಥೆಗಳಿವೆ. ಪುರಾಣ ಕಥೆಗಳಲ್ಲಿ ನಾವಿದ್ದೇವೆ ಆದರೆ ಅದರ ತತ್ವಗಳು ನಮ್ಮಲ್ಲಿಲ್ಲ. ಎಲ್ಲಾ ಮಹಾತ್ಮರುಗಳನ್ನು ಗೌರವಿಸಿ ಪೂಜಿಸಿದರೂ ನಮ್ಮ ಮಹಾತ್ಮನ ಅರಿವಾಗಿಲ್ಲ.ಅಂದರೆ ಮಹಾತ್ಮನಾಗೋದಕ್ಕೆ ಬೇಕಾದ ತತ್ವಜ್ಞಾನದ ಕೊರತೆಯೇ ನಾವು ಯಾರೊಳಗಿದ್ದೇವೆ? ನಾವ್ಯಾರು? ನಾನ್ಯಾರು ಪ್ರಶ್ನೆ ಮಾಡಿಕೊಳ್ಳದಂತೆ ಮಾಡಿರುವಾಗ ಹೊರಗಿನಿಂದ ಬಂದವರು ನಮ್ಮನ್ನು ಸುಲಭವಾಗಿ ವಶಪಡಿಸಿಕೊಂಡು ಆಳಬಹುದು. ಹಿಂದಿನ ಕಾಲದಿಂದಲೂ  ನಡೆದು ಬಂದಿರುವ ರಾಜಕೀಯ ದ್ವೇಷವು ಮನೆಮನೆಯೊಳಗೆ ಹರಡಿರುವಾಗ ಆ ದ್ವೇಷ ಒಳಗಿನ ಕಿಡಿಯೇ ಅಥವಾ ಹೊರಗಿನ ಕಿಡಿಯೇ ಎಂದು ಪರೀಕ್ಷೆ ಮಾಡಿಕೊಂಡರೆ ಒಳಗಿನದಾದರೆ ಒಳಗಿದ್ದೇ ಆರಿಸುವ ಪ್ರಯತ್ನ ನಡೆಸಬಹುದು.ಹೊರಗಿನದ್ದಾಗಿದ್ದರೆ ಅದರಿಂದ ದೂರವಿದ್ದರೆ ನಂದಿಹೋಗುತ್ತದೆ.
ಈವರೆಗೆ ನಡೆದಿರುವ ಸಾಕಷ್ಟು ಹೋರಾಟ ಹಾರಾಟ ಮಾರಾಟದಿಂದ ದೇಶದೊಳಗೆ ಶಾಂತಿ ನೆಲೆಸಿತೆ ಅಥವಾ ನಮ್ಮನೆಯೊಳಗೆ ಶಾಂತಿ ನೆಲೆಸಿತೆ? ಶಾಂತಿಗಾಗಿ ಧರ್ಮ ಯುದ್ದವಾಗಿದ್ದರೂ  ನಂತರದ ದಿನಗಳಲ್ಲಿ  ಹೋದ ಜೀವ ಮತ್ತೆ  ಜನ್ಮಪಡೆದು ಕ್ರಾಂತಿಯೇ ಬೆಳೆದಿದೆ. ತಾತ್ಕಾಲಿಕ ಪರಿಹಾರ ಯುದ್ದ ಹೋರಾಟ ಹಾರಾಟ ಮಾರಾಟವೆಂದರೆ ನಾವು ಒಪ್ಪೋದಿಲ್ಲ ಕಾರಣ ಅದು ಕೆಲವರಿಗೆ ಸುಖವೆನಿಸಿದರೆ ಹಲವರಿಗೆ ದು:ಖ ಅಸಮಾಧಾನ ಅಸಂತೋಷ ಅಜ್ಞಾನವನ್ನೇ ಬೆಳೆಸಿದೆ. ಹೀಗಿರುವಾಗ ಶಾಂತಿಯಿಂದ ಸತ್ಯ ಹಾಗು ಧರ್ಮ ವನರಿತವರು ಇದರಿಂದ ದೂರವಾಗುತ್ತಾ ಮಹಾತ್ಮರಾಗಿ ಮರೆಯಾದರು. ಆ ಮರೆಯಾದವರ ಹೆಸರಿನಲ್ಲಿ ರಾಜಕೀಯ ನಡೆಸಿದರೆ ನಾವು ಮಹಾತ್ಮರಾಗಬಹುದೆ? ಸಾಧ್ಯವಿಲ್ಲ ಕಾರಣ ಆತ್ಮ ಒಳಗಿನ ಶಕ್ತಿ ಅವರಂತೆ ನಡೆಯುವ ದಾರಿ ಇದ್ದರೆ ಮಾತ್ರ ಅವರ ಹಿಂದೆ ನಡೆಯಬಹುದು. ಅವರು ರಾಜಯೋಗದ ದಾರಿಯಲ್ಲಿ ನಡೆದಿರುವಾಗ ನಾವು ರಾಜಕೀಯದೆಡೆಗೆ ನಡೆದರೆ ವಿರುದ್ದ ಪರಿಣಾಮ ಎದುರಿಸಬೇಕಾಗುತ್ತದೆ. ಇಲ್ಲಿ ಎಲ್ಲರಲ್ಲಿಯೂ ಮಹಾತ್ಮರಿದ್ದರೂ ಎಲ್ಲಾ ಗುರುತಿಸುವ ಶಕ್ತಿ ಪಡೆದಿಲ್ಲವೆಂದಾಗ ಮಹಾತ್ಮರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಂತಲ್ಲವೆ?
ಶ್ರೀ ರಾಮ ಶ್ರೀ ಕೃಷ್ಣನ ಕಾಲದಿಂದಲೂ ಈ ರಾಜಕೀಯ ವಿದೆ.
ರಾಮನ ಕಾಲದಲ್ಲಿ ತತ್ವವಿದ್ದರೆ ಕೃಷ್ಣನ ಕಾಲದಲ್ಲಿ ತಂತ್ರಪ್ರಯೋಗವಾಯಿತು. ಕಾರಣ ದುಷ್ಟರನ್ನು ಸದೆಬಡಿಯಲು ತಂತ್ರ ಅನಿವಾರ್ಯ ವಾಯಿತೆಂದರೆ ಸ್ವಲ್ಪ ಮಟ್ಟಿಗೆ ಅಸತ್ಯ ಸೇರಿಕೊಂಡಿತು ಆದರೆ ಧರ್ಮ ಯುದ್ದ ನಡೆಯಿತು. ಈಗ ಕಲಿಗಾಲ ಇಲ್ಲಿ ತತ್ವದ ಹೆಸರಿನಲ್ಲಿ ತಂತ್ರವಾಗಿ ನಂತರ ಯಂತ್ರದಂತೆ ಜನರನ್ನು ಬಳಸಿಕೊಂಡು ತನ್ನ ಸ್ವತಂತ್ರ ಜ್ಞಾನದ ಜೊತೆಗೆ ಜನರ ಸ್ವತಂತ್ರ ಜ್ಞಾನವೂ ಹಿಂದುಳಿದು ಹಿಂದುಳಿದವರನ್ನು ಆಳುವವರೆ ಹೆಚ್ಚಾಗಿದ್ದಾರೆ. ಸ್ವತಂತ್ರ ಭಾರತಕ್ಕಾಗಿ ತಮ್ಮ ಜೀವ ಪ್ರಾಣವನ್ನು ‌ಬಲಿಕೊಟ್ಟ ವೀರರ ದೇಶದಲ್ಲಿ ಅಜ್ಞಾನವನ್ನು ತಲೆಗೆ ತುಂಬಿಕೊಂಡು ಯಾರೋ ಹೇಳಿದ್ದನ್ನು ಕೇಳಿ,ನೋಡಿ,ಕೂಗಿಕೊಂಡು ಯುವಕಯುವತಿಯರು ಮನೆಯಿಂದ ಹೊರಬಂದು ಹೋರಾಟ ಮಾಡಿದರೆ ಎಲ್ಲಿರುವುದು ಜೀವ? ಒಳಗೋ ಹೊರಗೋ? ಒಟ್ಟಿನಲ್ಲಿ ಜೀವಾತ್ಮನು ಪರಮಾತ್ಮನ ಒಳಗಿದ್ದರೂ  ನಾನೇ ಪರಮಾತ್ಮ ಎನ್ನುವ ಅಸುರ ಶಕ್ತಿಯ ಅಡಿಯಾಳಾಗಿ ಜೀವ ಹೋಗುತ್ತಿದೆ ಎಂದರೆ ಆತ್ಮಜ್ಞಾನದ ಕೊರತೆ ಇದಕ್ಕೆ ಕಾರಣವೆನ್ನಬಹುದಷ್ಟೆ.
ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಣೆ ಮಾಡಿದ್ದರೂ ಕೊನೆಗೆ ಸೀತೆಯನ್ನೂ ಬಿಟ್ಟು ರಾಜಧರ್ಮದ ಪರ ನಿಲ್ಲಬೇಕಾಯಿತು.ಅಂದಾಗ ಕ್ಷತ್ರಿಯನಾಗಿರುವಾಗಿನ ಧರ್ಮ ವೇ ಬೇರೆ,ಮಾನವನಾಗಿ ಸ್ವತಂತ್ರವಾಗಿ ರುವಾಗಿನ ಧರ್ಮ ವೇ ಬೇರೆ. ಹಾಗೆ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದು ದೇಶದೊಳಗೆ ಇರೋವಾಗ  ದೇಶಕ್ಕಾಗಿ ನಾನೇನು ಮಾಡಬಹುದೆನ್ನುವ ಚಿಂತನೆ ಬರಲು ನಿಜವಾದ ದೇಶಭಕ್ತರಿಗಷ್ಟೆ ಸಾಧ್ಯ.ಭಕ್ತಿ ಒಳಗಿನ ಶಕ್ತಿ.ಹಾಗೆಯೇ ದೇವರ ಭಕ್ತರು ದೈವತ್ವ ಪಡೆಯುವುದಕ್ಕಾಗಿ ನಾನೇನು ಸೇವೆ ಮಾಡಬಹುದೆನ್ನುವ ಚಿಂತನೆ ನಡೆಸಿದ್ದರೆ ನಮ್ಮಲ್ಲಿ ಸಾಕಷ್ಟು ಚೈತನ್ಯಶಕ್ತಿ ವೃದ್ದಿಯಾಗಿ ಅದೇ ದೇಶವನ್ನು ಉಳಿಸುತ್ತಿತ್ತು.
ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣವೇ ರಾಜಕೀಯದ ವಶದಲ್ಲಿದೆ. ಯಾರದ್ದೋ ವಿಚಾರವನ್ನು ಯಾರೋ ಹೇಗೋ ಅರ್ಥ ಮಾಡಿಕೊಂಡು ಸಣ್ಣ ಮಕ್ಕಳ ಮುಗ್ದ ಮನಸ್ಸಿಗೆ‌ ಒತ್ತಾಯದಿಂದ ತುಂಬುವ ಕೆಲಸಕ್ಕೆ ಪೋಷಕರ ಸಹಕಾರವಿದೆ. ಆದರೆ ನಮ್ಮ ಮಕ್ಕಳ ಸ್ವತಂತ್ರ ಬುದ್ದಿಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಯ ದುರ್ಭಳಕೆ ಆದಾಗ ಅದರ ಪರಿಣಾಮವನ್ನು ಮುಂದೆ ತಾವೇ ಅನುಭವಿಸುವಾಗ  ಸರ್ಕಾರ ಸರಿಯಿಲ್ಲ ಶಿಕ್ಷಣಸರಿಯಿಲ್ಲ ಸಮಾಜಸರಿಯಿಲ್ಲ ಶಿಕ್ಷಕರು ಸರಿಯಿಲ್ಲ ದೇಶವೇ ಸರಿಯಿಲ್ಲ ಎಂದು ಕೂಗುವವರ ಹಿಂದೆ  ನಿಂತರೆ ನಾವು ಸರಿಯಾಗಲು ಸಾಧ್ಯವೆ?
ವಿಚಾರಗಳು ಅಧ್ಯಾತ್ಮಿಕ ವಾಗಿದ್ದರೂ ಭೌತಿಕದಲ್ಲಿ ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದೆ.ಭೌತವಿಜ್ಞಾನ ಕಣ್ಣಿಗೆ ಕಾಣೋವರೆಗೂ ನಂಬೋದಿಲ್ಲ ಹಾಗಾಗಿ ಇಲ್ಲಿಯವರೆಗೆ ಬೆಳೆಸಿರುವ ನಾವು ಈಗ ನಂಬಲೇಬೇಕಿದೆ.
ದೇಶದೊಳಗೆ ನಾವಿರೋದೇ ನಮ್ಮೊಳಗೇ ದೇಶವಿದೆಯೆ?
ಸತ್ಯ ನಮ್ಮೊಳಗಿದೆಯೇ ಅಥವಾ ನಾವೇ ಸತ್ಯವಂತರೆ
ದೇವರೊಳಗೆ ನಾವಿರೋದೇ ಅಥವಾ ನಾವೇ ದೇವರೆ ?
ಭೂಮಿಯ ಮೇಲಿರುವುದೋ  ಜೀವ? ಒಳಗಿರುವುದೋ?
ಎರಡೂ ಸತ್ಯವೇ ಆದರೂ ಭೂಮಿಗೆ ಬಂದಿರುವ ಜೀವಾತ್ಮನಲ್ಲಿ  ದೇಶಭಕ್ತಿ ದೈವತ್ವ ಸತ್ಯ ಒಳಗೇ ಇಲ್ಲದೆ ಎಲ್ಲೋ ಹೊರಗೆ‌ ಹುಡುಕುವ ಕೆಲಸದಲ್ಲಿ ನಾವಿರೋವಾಗ  ಹುಡುಕಾಟದಲ್ಲಿ  ಜೀವನ ಮುಗಿದುಹೋದರೆ  ಯಾರೊಳಗೆ 
ಏನಿತ್ತೋ ಅದೇ ಮತ್ತೆ ಮತ್ತೆ ಬೆಳೆಯುತ್ತದೆ.
ಅದಕ್ಕೆ ಇದನ್ನು ಕಲಿಗಾಲವೆಂದರು. ಹೊರಗಿನ ಅಜ್ಞಾನವನ್ನು ಒಳಗೆಳೆದುಕೊಂಡ ಮಾನವನಿಗೆ ಮಹಾತ್ಮರ ಪರಿಚಯವಾಗದೆ ಜೀವ ಹೋದರೆ ಅಸುರರ ವಶವಾಗುತ್ತಾನೆ.
ಹಿಂದೂ ಧರ್ಮದಲ್ಲಿ ಜನ್ಮಪಡೆದು ಹಿಂದೂಸ್ತಾನಿ ಎಂದವರು ಹಿಂದೂ ದೇಶ ತೊರೆದರೆ ಹಿಂದೂಗಳ ಸಂಖ್ಯೆ ಕುಸಿಯಿತು.
ಹಾಗಂತ ವಿಶ್ವದಾದ್ಯಂತ ಹರಡಿರುವ ಹಿಂದೂಗಳಲ್ಲಿ ಎಲ್ಲಾ ಹಿಂದುತ್ವದಲ್ಲಿರಲಾಗಿಲ್ಲವೆಂದರೆ ತಪ್ಪು ಮೂಲವನ್ನು ಬಿಟ್ಟು ನಡೆದಿರೋದಷ್ಟೆ.ಇದರ ಫಲ ಅವರು ಅನುಭವಿಸಲೇಬೇಕಾದಾಗ ಇದಕ್ಕೆ ಕಾರಣ ಸರ್ಕಾರ ವಲ್ಲ ದೇವರೂ ಅಲ್ಲ. ಹಾಗಂತ ನಮ್ಮ ದೇಶದೊಳಗೆ ಇದ್ದವರಿಗೆ ಸರಿಯಾದ ಧರ್ಮ ಜ್ಞಾನವಿದ್ದರೆ ದೇಶದ ಉದ್ದಾರ ಸಾಧ್ಯವಿತ್ತು. ನಮಗೆ ಎಲ್ಲಾ ಉಚಿತವಾಗಿ ಸರ್ಕಾರ ಕೊಟ್ಟರೆ ನಮ್ಮ ಕರ್ಮಕ್ಕೆ ಬೆಲೆಯಿರುವುದೆ? ಧರ್ಮದಿಂದ ಸಂಪಾದನೆ ಮಾಡೋದರಿಂದಲೇ ಋಣ ತೀರಿಸಲು ಸಾಧ್ಯ.ಇದು ಯಾವ ಮತವಾದರೂ ಸರಿ ನಾನಿರುವ ನೆಲ ಜಲದ ಋಣ ತೀರಿಸಲು ಧರ್ಮ ಮಾರ್ಗ ವಿರಬೇಕೆನ್ನುತ್ತದೆ ಅಧ್ಯಾತ್ಮ. ಪರರನ್ನು ಶೋಷಣೆ ಮಾಡಿ ನಾನು ಸುಖವಾಗಿರಲು ಅಸಾಧ್ಯ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತವರು ಸಾಮಾನ್ಯ ಜ್ಞಾನವನ್ನು ತಿರಸ್ಕಾರದಿಂದ ನೋಡುತ್ತಾ ಸಾಮಾನ್ಯರ ಸಹಕಾರದಲ್ಲಿಯೇ ಅಸಮಾನ್ಯರಾಗಿ ಬೆಳೆದರೂ ಸಾಲದ ಹೊರೆ ತನ್ನ ಮೇಲೇ ಏರಿಸಿಕೊಂಡಿರುವಾಗ  ಬೇರೆಯವರ ಸಾಲ ತೀರಿಸಲಾಗದು.ಅದೂ ಪರಮಾತ್ಮನ ಸಾಲವಂತೂ‌
ಮಿತಿಮೀರಿದೆ ಎನ್ನಬಹುದು.ಇದರಿಂದ ಬಿಡುಗಡೆ ಪಡೆಯಲು ಸತ್ಯ ಧರ್ಮದೊಳಗಿದ್ದು ಸೇವೆ ಮಾಡಲೇಬೇಕು. ಸೇವೆ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಬೇಕೆಂದು ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನ ಸಂದೇಶವಾಗಿದೆ ಎಂದರೆ ಇಂದಿನ‌ ಸೇವೆ ಯಾವ ರೀತಿಯಲ್ಲಿ ಯಾರ ಹಣದಲ್ಲಿ ಯಾವ ಮಾರ್ಗದಲ್ಲಿ ನಡೆಯುತ್ತಿದೆ ? ಸಾಲಮನ್ನಾ ಮಾಡುವ ಸರ್ಕಾರದ ಹಣವೇ ಜನರ ಋಣ. ಇದನ್ನು ತೀರಿಸಲು ಇನ್ನೊಂದು ಜನ್ಮ. ಒಟ್ಟಿನಲ್ಲಿ ಪರಮಾತ್ಮನ ಋಣ ಕಣ್ಣಿಗೆ ಕಾಣದ ಕಾರಣ  ಮಿತಿಮೀರಿದ ಸಾಲದಲ್ಲಿ ಶ್ರೀಮಂತ ರು ಬೆಳೆದು ಬಡವರನ್ನು ಆಳಿದರೆ  ಅಧರ್ಮ. ದೇಶದ ಒಳಗೆ ಹೊರಗೆ ಆವರಿಸಿರುವ ಎಲ್ಲಾ ದೇವಾನುದೇವತೆಗಳೇ ಇದಕ್ಕೆ ಸಾಕ್ಷಿಯಾಗಿರುವಾಗ ನಮ್ಮ ಆತ್ಮಸಾಕ್ಷಿಗೆ  ವಿರುದ್ದ ಎಷ್ಟೇ ಮುಂದೆ ಹೊರಗೆ ನಡೆದರೂ ಧರ್ಮ ರಕ್ಷಣೆಯಾಗದು. ಸಾಧ್ಯವಾದಷ್ಟು ನಮ್ಮ ಮನೆಯೊಳಗೆ ಮನಸ್ಸಿನೊಳಗೇ ತುಂಬಿರುವ ಅನಗತ್ಯ ಅನಾವಶ್ಯಕ ವಿಷಯ ವಸ್ತು ಒಡವೆ ಆಸ್ತಿಯನ್ನು  ದಾನ ಧರ್ಮದ ಮೂಲಕ ಹೊರ ಹಾಕುವ ಪ್ರಯತ್ನ ನಡೆಸಿದರೆ ಮನಸ್ಸು ಸ್ವಚ್ಚ  ಮನೆಯೂ ಸ್ವಚ್ಚ ಮಂದಿರ ಮಠವೂ ಸ್ವಚ್ಚವಾಗುತ್ತಾ ದೇಶದ ಸಾಲ ತೀರಿಸಿದರೆ ಹೊರಗಿನ ಋಣ ಸಂದಾಯವಾಗಿ‌ ದೇಶದ ತುಂಬಾ ತುಂಬುತ್ತಿರುವ ಪರಕೀಯರ ವ್ಯವಹಾರ ಶಿಕ್ಷಣ ಬಂಡವಾಳ ಸಾಲಕ್ಕೆ ಸ್ಥಾನಮಾನವೇ ಇರದು. ಇಷ್ಟು ವರ್ಷದಿಂದಲೂ ದೇಶ ಆಳಿರುವವರು  ಅಜ್ಞಾನದಲ್ಲಿ ಜನರನ್ನು ಸಾಲದೆಡೆಗೆ ಎಳೆದಿದ್ದಾರೆ. ಆ ಸಾಲ ತೀರಿಸಲು ಇರುವ ಮಾರ್ಗ ಒಳಗೆ ಹುಡುಕಿದರೂ ಸಿಗದಂತೆ  ಹೊರಗಿನವರು ಬಂದು ಕುಳಿತಿರೋದು ದೊಡ್ಡ ಭ್ರಷ್ಟಾಚಾರ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದವರಿಗೆ  ನಾವೆಲ್ಲಿ ಎಡವಿದ್ದೇವೆಂಬ ಅರಿವಿಲ್ಲದೆ ಅದನ್ನೇ ಮತ್ತೆ ಬೆಳೆಸಿದರೆ  ನಮ್ಮ ಜೀವ ಭ್ರಷ್ಟಾಚಾರದ ಲ್ಲಿದೆ ಎಂದರ್ಥ.ಈ ಸಣ್ಣ ಜೀವ ಉಳಿಸಿಕೊಳ್ಳಲು ಅಧರ್ಮ ಅಸತ್ಯ ಅನ್ಯಾಯ  ಅಕರ್ಮ ಅವಿದ್ಯೆ ಗೆ ಶರಣಾದರೆ ಆತ್ಮಹತ್ಯೆ ಯಾಗುತ್ತದೆ. ಇಲ್ಲಿ ಜೀವ ಹೋದರೆ ಸಾವಲ್ಲ ಆತ್ಮಹೋದರೆ ಸಾವು. ಇದ್ದೂ ಸತ್ತಂತೆ ಎಂದರೆ  ಅಧ್ಯಾತ್ಮಿಕ ವಾಗಿ ಮಾನವ ಯಾವಾಗ ತನ್ನ ಸ್ವಾರ್ಥ ಸುಖಕ್ಕಾಗಿ  ಅಧರ್ಮ ಅಸತ್ಯ ಅನ್ಯಾಯದ ಪರ ನಿಲ್ಲುವನೋ  ಆಗವನು ಜೀವಂತ ಶವವಾಗುತ್ತದೆ.ಶಿವನಿಗೆ ಆತ್ಮಜ್ಞಾನವೇ ಮುಖ್ಯ ದೇಹವಲ್ಲ. ಇಷ್ಟು ತಿಳಿದವರು ಈಗ ಚಿಂತನೆ ಮಾಡಿಕೊಂಡರೆ ನಮ್ಮ ಸಹಕಾರದ ಫಲವೇ ದೇಶದ ಈ ಸ್ಥಿತಿಗೆ ಕಾರಣವಾದಾಗ ನಮ್ಮ ಆತ್ಮರಕ್ಷಣೆಗಾಗಿ ಮನೆಯೊಳಗೆ ಇದ್ದವರು ಏನು ಮಾಡಬಹುದು? ಹೊರಗೆ ಬಂದವರು  ಹೇಗೆ ನಡೆಯಬೇಕು? ಎಲ್ಲಾ ಮಾಡೋದೂ ನಮ್ಮ ಭವಿಷ್ಯಕ್ಕಾಗಿಯೇ ಎಂದಾಗ ಮಕ್ಕಳ ಭವಿಷ್ಯವನ್ನು ನಾವು ಯಾವ ರೀತಿಯಲ್ಲಿ  ಅರ್ಥ ಮಾಡಿಕೊಂಡು ಶಿಕ್ಷಣ ನೀಡಿದ್ದೇವೆ.ನೀಡುತ್ತಿದ್ದೇವೆ? ನೀಡಬೇಕಿದೆ ಎನ್ನುವ ಬಗ್ಗೆ ಪೋಷಕರೆ ಆತ್ಮಾವಲೋಕನ ಮಾಡಿಕೊಂಡರೆ ನಮಗೆ ವಿಶ್ವರೂಪದರ್ಶನದ ಹಿಂದಿರುವ ಅಧ್ಯಾತ್ಮಿಕ ವಿಜ್ಞಾನವು ಸ್ವಲ್ಪ ಅರ್ಥ ವಾಗುತ್ತಾ  ನನ್ನದೇನೂ ನಡೆಯುತ್ತಿಲ್ಲ ನನ್ನ ಮೂಲ ಧರ್ಮ ಕರ್ಮ ದ ಪ್ರಕಾರ ನಡೆಯೋದೇ ಜೀವನ ಎನ್ನುವ ಸತ್ಯಜ್ಞಾನ ಬರಬಹುದು.ಬಂದರೂ ನಡೆಯೋ ದಾರಿ ಇಲ್ಲದವರಿಗೇನೂ ಮಾಡಲಾಗದು.ದಾರಿಇದ್ದವರು ಅದೃಷ್ಟ ವಂತರಷ್ಟೆ. ಅದೃಷ್ಟ ನಮ್ಮ ನಡೆ ನುಡಿಯ ಮೇಲಿದೆ. ಅದು ಧರ್ಮ ಹಾಗು ಸತ್ಯದಲ್ಲಿದ್ದರೆ ನಾವು ಪರಮಾತ್ಮನೊಳಗೇ ಇರೋದನ್ನು ಕಾಣಬಹುದು ಇದೇ ಮುಕ್ತಿಯ ಮಾರ್ಗ. ಇದನ್ನು ಸಾಧ್ಯವಾದಷ್ಟು ಶೇರ್ ಮಾಡಿ. ಭಾರತೀಯರು ಎಚ್ಚರವಾದರೆ  ನಮ್ಮೊಡನೆ ಬರುತ್ತಿರುವ ಪರರಿಗೂ ಜ್ಞಾನ ಬರುವುದು. ಇಲ್ಲಿ ಒಂದೇ ದೇಶದಲ್ಲಿ ಹೊಡೆದಾಟ ಮಾಡಿಕೊಂಡು ಸಾಯೋರು ಹೆಚ್ಚು.ಸಾವು ಎಲ್ಲರಿಗೂ ಇದೆ.ಕೆಲವರಿಗೆ ಜ್ಞಾನದ ನಂತರ ಬಂದರೆ ಹಲವರಿಗೆ ಅಜ್ಞಾನದಲ್ಲಿಯೇ ಜೀವ ಹೋಗುತ್ತಿದೆ. ಹೀಗಾಗಿ ಜನಸಂಖ್ಯೆ‌ಮಿತಿಮೀರಿದೆ. ಶಾಂತಿ ಹಿಂದುಳಿದಿದೆ ಕ್ರಾಂತಿಯೇ  ಜೀವನವಾಗುತ್ತಿದೆ. ಇದಕ್ಕೆ ಅರ್ಥ ವಿದೆಯೆ? ಅಸುರರೊಳಗೇ ಸುರರು,ವಿದೇಶದೊಳಗೇ ದೇಶ, ಅಜ್ಞಾನದೊಳಗೇ ಜ್ಞಾನ ಅದ್ವೈತ ದೊಳಗೇ ದ್ವೈತ ಕಣ್ಣಿಗೆ ಕಾಣುತ್ತಿದ್ದರೂ ನನ್ನೊಳಗೇ ಅಡಗಿರುವ  ಆತ್ಮಸಾಕ್ಷಿ ಬಿಟ್ಟು ಹೊರಬಂದರೆ  ನಷ್ಟ ಯಾರಿಗೆ?
ಇದನ್ನು ಓದಿಕೊಂಡು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.ಎಲ್ಲಾ ನಡೆಯಬೇಕಿತ್ತು ನಡೆಯುತ್ತಿದೆ ನಡೆಯುತ್ತದೆ ನಮ್ಮ ನಡಿಗೆ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನದಲ್ಲಿ ಇದೆಯೇ ಇಲ್ಲವೆ ಎನ್ನುವ ಬಗ್ಗೆ  ನಿಂತು ಆಲೋಚನೆ ಮಾಡುವ ಸ್ವತಂತ್ರ ನಮಗಿದ್ದರೆ  ಸಾಕು ನಾವು ಬದಲಾಗಬಹುದು. ಆಗ ಮಕ್ಕಳೂ ಬದಲಾಗುವರು.ದೇಶವನ್ನು ಬದಲಾವಣೆ ಮಾಡಲು ಕಷ್ಟ ಪ್ರಜೆಗಳೇ ಬದಲಾಗಬಹುದಷ್ಟೆ.

Friday, December 5, 2025

ತತ್ವಜ್ಞಾನದಿಂದ ಏಕತೆ

ಯಾವುದೇ ರಾಜಕೀಯ ವ್ಯಕ್ತಿ ತತ್ವದ ಪರ ನಿಲ್ಲೋದು ಕಷ್ಟ. ತತ್ವ ಎಂದರೆ ಒಂದು‌ಮಾಡೋದು. ಅದರಲ್ಲಿ ನಮ್ಮ ದೇಶದ  ಮೂರು ಮತಗಳನ್ನು ಒಂದು ಮಾಡೋದೆಂದರೆ  ದೊಡ್ಡ ಸಾಧನೆಯೇ . ಶ್ರೀ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನವೆಂದು ಆಚರಿಸಲು ಮೋದಿ ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಸುದ್ದಿ  ಬಹಳ ಸಂತೋಷ ಕೊಡುತ್ತದೆ.
ಇದರ‌ಮಧ್ಯೆ ಉಳಿದ ದ್ವೈತ ವಿಶಿಷ್ಟಾದ್ವೈತ ದವರೂ‌ ಇದನ್ನು ಅಷ್ಟೇ  ಸಂತೋಷದಿಂದ. ಒಪ್ಪಿಕೊಳ್ಳಬಹುದೆ?
ದೇಶ ಒಂದೇ ಧರ್ಮ ಒಂದೇ, ದೇವನೊಬ್ಬನೆ, ಪರಮಾತ್ಮನೊಬ್ಬನೆ ಎನ್ನುವ ಅದ್ವೈತ ಸಿದ್ದಾಂತವು ಈಗಿನ ಭಾರತ ಸ್ವೀಕರಿಸಿದರೆ  ನಾವೆಲ್ಲರೂ ಒಂದೇ ಎನ್ನುವ ಸತ್ಯಕ್ಕೆ ಜಯ.
ಆದರೆ  ಮಧ್ಯವರ್ತಿಗಳು ‌ಬಿಡುವರೆ? ಈ ವಿಚಾರ ಹಿಡಿದು ಚರ್ಚೆ  ಮಾಡಬಹುದು ಆದರೆ ವಾದ ವಿವಾದವಾಗಬಾರದಷ್ಟೆ. ವಾದ ಇದ್ದರೆ ವಿವಾದವೂ ಇರುತ್ತದೆ. ವಿರೋಧ‌ಯಾಕೆ ಎಂದರೆ ನನ್ನ  ಅನಿಸಿಕೆ ಬೇರೆ .ಅನಿಸಿಕೆ ಅನುಭವ ಅನುಭವದಿಂದ ‌ಒಗ್ಗಟ್ಟು  ಬೆಳೆದರೆ ಸರಿ.ಇಲ್ಲವೆಂದರೆ  ಇನ್ನಷ್ಟು ಸಮಸ್ಯೆ. ಇಲ್ಲಿ ತತ್ವವು ಒಂದು ಮಾಡೋದಾದರೆ  ಬೇರೆ ಬೇರೆ ಎನ್ನುವುದರಲ್ಲಿ ಅರ್ಥ ಇರದು.
ಹೀಗಾಗಿ ಜ್ಞಾನದಲ್ಲಿ ಎಲ್ಲರೂ  ಒಂದೇ ಎನ್ನುವ ಹಾಗಿಲ್ಲ ಆದರೆ ನಮ್ಮ ಜ್ಞಾನದಿಂದ ಒಂದು ದೇಶವನ್ನು ಉಳಿಸಬಹುದು ಎನ್ನುವ  ವಿಚಾರದಲ್ಲಿ  ಎಲ್ಲಾ ಒಂದಾಗಿ ತತ್ವವನರಿತು ಪರಮಾತ್ಮನೆಡೆಗೆ ಸಾಗುವುದು ಉತ್ತಮ.
ಈವರೆಗೆ ಯಾವುದೇ ರಾಜಕಾರಣಿಗಳಾಗಲಿ ಧಾರ್ಮಿಕ ವರ್ಗವನ್ನು  ಸಂತೈಸುವ  ಕೆಲಸ ಮಾಡಲಾಗಿಲ್ಲದಿರೋದೆ  ನಮ್ಮ ದೇಶ ಅನ್ಯರ ವಶದಲ್ಲಿ ಸಿಲುಕಲು ಕಾರಣವಾಗಿದೆ.
ರಾಜಕೀಯ ಎಂದರೆ ಜನರನ್ನು ಆಳೋದಷ್ಟೆ ಅಲ್ಲ.ಜನರ ಜ್ಞಾನವನ್ನು  ಸದ್ಬಳಕೆ ಮಾಡಿಕೊಂಡು  ಜೀವನ ನಡೆಸಲು ಸಹಕರಿಸುವುದೇ ಸರ್ಕಾರದ  ಗುರಿಯಾಗಬೇಕಿತ್ತು. ಆದರೆ ಧಾರ್ಮಿಕ ವಿಚಾರ ಬಂದಾಗ ನಮ್ಮ ಧರ್ಮ ಅವರ ಧರ್ಮ ಎನ್ನುವ ಅಂತರದಲ್ಲಿ ಸಾಕಷ್ಟು ಅಧರ್ಮ ಗಳೇ ಜನರನ್ನು ಆಳುತ್ತಾ‌  ತತ್ವವಿಲ್ಲದ ತಂತ್ರಕ್ಕೆ ಸಿಲುಕಿ ಅತಂತ್ರಸ್ಥಿತಿಗೆ  ಈಗ ದೇಶ ನಿಂತಿರೋದಕ್ಕೆ  ಮೂಲ ಕಾರಣವಾದ ನಮ್ಮ ಶಿಕ್ಷಣ ವ್ಯವಸ್ಥೆ  ಇಂದಿಗೂ‌ಮಕ್ಕಳಿಗೆ ಜಾತಿ ಮತ,ಪಕ್ಷದ ರಾಜಕೀಯ ವಿಚಾರ ತಿಳಿಸುವ ಪ್ರಯತ್ನದಲ್ಲಿದೆ. ಇದರಿಂದಾಗಿ  ಅಂತರ ಬೆಳೆದಿದೆ. ಮಕ್ಕಳ ಜ್ಞಾನವನ್ನು ಗುರುತಿಸಿ ಅದಕ್ಕೆ ಸರಿಯಾದ ಶಿಕ್ಷಣ. ನೀಡಿದಾಗ ಸುಜ್ಞಾನ ವಾಗುತ್ತದೆ. ನಂತರ ವಿಜ್ಞಾನ ಜಗತ್ತನ್ನು  ಅರಿತು ಬಾಳಬಹುದು.
ಇದು ಸುಲಭವೆ ಎಂದರೆ ಹೊರನೋಟಕ್ಕೆ  ರಾಜಕೀಯದಿಂದ. ಬದಲಾವಣೆ  ಮಾಡಬಹುದೆನಿಸಿದರೂ  ಪ್ರಜೆಗಳ ಒಳಗಿನ ಅಜ್ಞಾನ  ಇದನ್ನು  ಒಪ್ಪಿಕೊಂಡಿರಲು ಕಷ್ಟ.
ಏನೇ ಆದರೂ ಅದು ನಮ್ಮ ಅಂತರಂಗದ ಶುದ್ದಿಗೆ ಪೂರಕ ಇದ್ದರೆ  ಅದರಿಂದ ಆತ್ಮಜ್ಞಾನ ವೃದ್ದಿಯಾಗಿ  ಆತ್ಮರಕ್ಷಣೆಯ ಹಾದಿ ಹಿಡಿದಾಗ ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ದರ್ಶನ ಸಾಧ್ಯ. ನಾನೆಂಬುದಿಲ್ಲ ಎನ್ನುವ ಅದ್ವೈತ ವನ್ನು ನಾನು ತಿಳಿಯುತ್ತೇನೆಂದರೆ  ನಾನಿರುವಾಗ ಪರಮಾತ್ಮ ಕಾಣುವನೆ? ನನಗೆ ಪರಮಾತ್ಮನ ಸತ್ಯ ಅರ್ಥ ಆಗಿದೆ ಎಂದರೆ ಅನ್ಯರಿಗೆ ಅರ್ಥ ಮಾಡಿಸುವ ಶಕ್ತಿ ನನಗಿದೆಯೆ? ಶಕ್ತಿ ಇದ್ದರೂ ಅಧಿಕಾರವಿದೆಯೆ? ಅಧಿಕಾರ ಕೊಡುವುದಕ್ಕೂ ಜನರಲ್ಲಿ ಜ್ಞಾನವಿರಬೇಕು. ಹೀಗೇ ಒಬ್ಬರ ಹಿಂದೆ ಒಬ್ಬರು ಹೋಗಬೇಕಾದರೆ  ತತ್ವವು  ಅಗತ್ಯವಿದೆ. ‌ತಂತ್ರದಿಂದ ಜನರನ್ನು  ಒಂದು ಮಾಡಿದರೂ ತಾತ್ಕಾಲಿಕ ವಷ್ಟೆ.
ಏನೇ ಇರಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ನಮ್ಮನ್ನು ನಮ್ಮವರನ್ನು ಉಳಿಸಿ ಬೆಳೆಸಲು ಈಗ ಎಲ್ಲಾ ತತ್ವ ಸಿದ್ದಾಂತಗಳ. ಹಿಂದಿರುವ ಸತ್ಯ ಒಂದೇ ಪರಮಾತ್ಮ ಒಬ್ಬನೇ
ಎಂದಂತೆ  ನಮಗೆ  ದೇಶ ಒಂದೇ  ಆಗಿರುವುದು ಸತ್ಯವೇ ಆಗಿದೆ.
ಎಲ್ಲಾ ದೇಶದವರನ್ನು ಒಳಗೆ ಕರೆದು ಒಳಗಿದ್ದವರಿಗೆ ಕೆಲಸವಿಲ್ಲದೆ ಹೊರಗೆ ಕಳಿಸಿದರೆ  ಅವರವರ ಮೂಲ ಧರ್ಮ ಕರ್ಮಕ್ಕೆ  ಸ್ಥಾನವಿರುವುದೆ? ಇಲ್ಲದಿದ್ದರೂ  ಒಳಗಿದ್ದೇ ಸಾಧ್ಯವಾದಷ್ಟು  ಅನುಸರಿಸಲು ಉತ್ತಮ ಶಿಕ್ಷಣ ನೀಡುವುದು ಧರ್ಮ. ಭಾರತೀಯರು‌ವಿದೇಶಗಳಲ್ಲಿದ್ದು ನಾವು ಭಾರತೀಯರು ಎಂದರೆ ಅರ್ಧ ಸತ್ಯ. ನಮ್ಮಲ್ಲಿ ಭಾರತೀಯ ತತ್ವಜ್ಞಾನವಿದ್ದರೆ ಅದನ್ನು ಭಾರತದೊಳಗಿದ್ದು‌ಬೆಳೆಸಿದರೆ ಅದ್ವೈತ.  ಹೇಳೋದೊಂದು ಮಾಡೋದೊಂದು ಎಂದಾಗ ಕೇವಲ ತೋರುಗಾಣಿಕೆ.
ತೋರುಗಾಣಿಕೆಯು ತಂತ್ರವಾಗಿದ್ದರೆ ಸ್ವತಂತ್ರ ಜ್ಞಾನವಿರದು.

ಶ್ರೀ ಶಂಕರಾಚಾರ್ಯರು  ಅಧ್ವೈತ ಸಂಸ್ಥಾಪನಾಚಾರ್ಯರು.
ಅಖಂಡ ಭಾರತವನ್ನು ಧಾರ್ಮಿಕವಾಗಿ ಒಂದು ಮಾಡುವ ಮೂಲಕ ನಾಲ್ಕು ದಿಕ್ಕುಗಳಲ್ಲಿ  ಮಠಸ್ಥಾಪಿಸಿ ಜ್ಞಾನದೇವತೆಯನ್ನು  ಎತ್ತಿ ಹಿಡಿಯುವುದೆಂದರೆ  ಅಂದಿನ ಕಾಲದಲ್ಲಿ ಸುಲಭವಿರಲಿಲ್ಲ  ಇವೆಲ್ಲವೂ ಸ್ವಯಂ ಶಂಕರನೇ  ಆಚಾರ್ಯರ  ರೂಪದಲ್ಲಿ ನಿಂತು  ನಡೆಸಿರೋದೆಂದರೆ  ಇದು ಅದ್ವೈತ ವಾಗುತ್ತದೆ.
ಹಾಗೆಯೇ ಭಗವದ್ಗೀತೆ ಯಲ್ಲಿ  ಶ್ರೀ ಕೃಷ್ಣನ ವಿಶ್ವ ರೂಪ ದರ್ಶನ ವೂ ಅದ್ವೈತ ವನ್ನೇ ತೋರಿಸುತ್ತದೆ. ಒಟ್ಟಿನಲ್ಲಿ ಒಂದು ಧರ್ಮ ರಕ್ಷಣೆಗಾಗಿ  ಭಗವಂತ ಯಾವುದೇ ರೂಪ ತಳೆದು ನಿಲ್ಲಬಹುದೆನ್ನುವಾಗ ಎಲ್ಲರೂ ಎಲ್ಲವೂ ಅವನೇ ಆಗಿರುವಾಗ ತತ್ವವಾಗುತ್ತದೆ. ಅಂತರ ಮತ್ತು ಬೇಧಗಳು ಭಿನ್ನಾಭಿಪ್ರಾಯ ಹೆಚ್ಚಿಸಿದಷ್ಟೂ  ಸಮಸ್ಯೆ ಮಿತಿಮೀರಿ  ಜೀವಾತ್ಮನಿಗೆ ಪರಮಾತ್ಮನ ಸತ್ಯ ಅರ್ಥ ಆಗದೆ ಅತೃಪ್ತ ಸ್ಥಿತಿಗೆ ತಲುಪಿ ಅತಂತ್ರಸ್ಥಿತಿಗೆ ತಲುಪುತ್ತದೆ.

ಯಾವುದೇ‌ ಕಾರಣಕ್ಕೂ ಅದ್ವೈತ ಧ್ವೈತ ವಿಶಿಷ್ಟಾದ್ವೈತ ದಲ್ಲಿ  ಬೇಧವಿರದು. ಮಾನವರಿಗೆ ಅದರ ಅನುಭವ ಆಗದಿದ್ದರೆ ಅದನ್ನು ವಿರೋಧಿಸುವುದರಿಂದ ಜ್ಞಾನ ಬೆಳೆಯದು.
ಪರಮಾತ್ಮನ ಒಳಗಿರುವ ಎಲ್ಲಾ ಜೀವಾತ್ಮರನ್ನು  ಒಂದು ಮಾಡೋದು  ಕಷ್ಟವಿದೆ. ಅದರಲ್ಲಿ ಭಾರತೀಯರು  ತತ್ವಕ್ಕೆ ಬೆಲೆಕೊಡುವುದು ಧರ್ಮ ಎನ್ನುವರು. ತಂತ್ರ ಹೊರಗಿನಿಂದ ‌ಬೆಳೆದಿರಬಹುದಷ್ಟೆ. ಆದರೆ  ಒಳಗಿರುವ ದೈವೀಕ ಶಕ್ತಿ ನಮ್ಮನ್ನು  ದೈವತ್ವದೆಡೆಗೆ ಕರೆದೊಯ್ಯುವ ಸಾಧನ. ಹೀಗಾಗಿ ತತ್ವದಿಂದ ದೇಶೋಧ್ದಾರ ಆತ್ಮೋಧ್ದಾರ ಧರ್ಮದ ಉದ್ದಾರ ಆಗಿರೋದನ್ನು ಪುರಾಣಗಳೇ ತಿಳಿಸಿವೆ.
ಭೂಮಿ  ಆಕಾಶದಲ್ಲಿ ತಿರುಗುತ್ತಿದೆ. ಭೂಮಿಯ‌ಮೇಲೆ‌ಮನುಕುಲ ನಿಂತಿದೆ.ಮಾನವನೊಳಗೆ ದೈವತ್ವ ಅಡಗಿದೆ. ಆ ದೈವತ್ವದೆಡೆಗೆ ಹೋದಾಗ ಪರಮಾತ್ಮನ  ದರ್ಶನ ವಾಗಿದೆ ಎಂದರೆ  ಹೋಗದೆ ಹೊರಗೆ ಉಳಿದರೆ ಅನರ್ಥಕ್ಕೆ ಕಾರಣವಾಗಿದೆ.‌ ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ,ಭಾರತೀಯರು,ಕನ್ನಡಿಗರು...ಹೀಗೇ ಪ್ರಚಾರ ಮಾಡಿದಾಕ್ಷಣ ನಮ್ಮ  ಅಂತರಂಗ ಶುದ್ದಿ ಆಗಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ.ಯಾವಾಗ ನಮ್ಮವರನ್ನೇ ಅಧರ್ಮದಿಂದ ಆಳಲು ಹೊರಟು ಅಜ್ಞಾನದ ಶಿಕ್ಷಣ ಬೆಳೆಯಿತೋ ಅದೇ ಇಂದಿಗೂ  ಭಾರತಮಾತೆಗೆ‌  ನುಂಗಲಾರದ ತುತ್ತಾಗಿದೆ.
ದೇಶಭಕ್ತಿಯಿಲ್ಲದ ದೇವರ ಭಕ್ತರು  ಬೇರೆ ಬೇರೆಯಿರುವರು.ಆದರೂ ಇಡೀ ಜಗತ್ತನ್ನು ತನ್ನೊಳಗೇ ಇಟ್ಟುಕೊಂಡು  ಆಡಿಸುವ ಪರಮಾತ್ಮನಿಗೇನೂ ಸಮಸ್ಯೆ ಯಿರದು. ಪಾಪಪುಣ್ಯಗಳ ಗಂಟನ್ನು ಹೊತ್ತು ಹೋಗೋದು ಜೀವಾತ್ಮನೇ ಅಲ್ಲವೆ?  ಸಾಮಾನ್ಯ ಜ್ಞಾನವಿಲ್ಲದ ಮಾನವನಿಗೆ  ಅವನೊಳಗೇ ಇರುವ ಪರಮಾತ್ಮನ ದರ್ಶನ ಆಗಲಾರದು.

ಬದಲಾವಣೆ  ಜಗದ ನಿಯಮ. ಇದು ತತ್ವದೆಡೆಗೆ ನಡೆದರೆ ಆತ್ಮನಿರ್ಭರ ಭಾರತದ ಕನಸು ನನಸಾಗುತ್ತದೆ.
ನಮೋ ನಮ:

Monday, November 10, 2025

ಅಂಗಾಂಗಗಳ ದೈವೀಕ ಶಕ್ತಿ

ದೇವರು ಕೊಟ್ಟರೂ ಪೂಜಾರಿ ಬಿಡೋದಿಲ್ಲ ಎನ್ನುವಂತೆ  ಮಾನವ‌ ಇಂದು ತನ್ನೊಳಗೆ ಇರುವ ದೈವೀಕ ಶಕ್ತಿ‌ಮರೆತು ಹೊರಗೆ ಹೊರಟು ಮಾಡಬಾರದ ಸಾಲ‌ಮಾಡಿ  ಎಷ್ಟು ಇದ್ದರೂ ಸಾಲದು ಎನ್ನುವ ‌ಪರಿಸ್ಥಿತಿಗೆ ಬಂದಿರುವನೆಂದರೆ
 ಇದಕ್ಕೆ ಕಾರಣ ಅಜ್ಞಾನ. ಆಂತರಿಕ ಶಕ್ತಿಯ ದುರ್ಭಳಕೆ  ಒಂದೆಡೆ ಯಾದರೆ  ಅದರ ಅರಿವಿನ ಶಿಕ್ಷಣ ನೀಡದೆ ಆಳುವ ರಾಜಕೀಯ ಇನ್ನೊಂದು ಕಡೆ. 

ದೇಹವೇ ದೇಗುಲ.
ಈ ಚಿಂತನಶೀಲ ವಿಷಯಗಳನ್ನು ಓದಿ ಮತ್ತು ನಿಮ್ಮ ಮನಸ್ಸಿನಿಂದ ಅವುಗಳನ್ನು ಅರ್ಥಮಾಡಿಕೊಳ್ಳಿ.

1. ಟೈರ್‌ಗಳು ಚಾಲನೆ ಮಾಡುವಾಗ ಸವೆದುಹೋಗುತ್ತವೆ, ಆದರೆ ನಿಮ್ಮ ಪಾದಗಳ ಅಡಿಭಾಗವು ಜೀವಿತಾವಧಿಯ ಓಟದ ನಂತರವೂ ಹೊಸದಾಗಿ ಉಳಿಯುತ್ತದೆ.

ದಾರಿ ಉತ್ತಮವಾಗಿದ್ದರೆ‌  ಪಾದರಕ್ಷೆಗೂ ಪೂಜೆ ನಡೆಯುತ್ತದೆ.

2. ದೇಹವು 75% ನೀರಿನಿಂದ ಕೂಡಿದೆ, ಆದರೆ ಅದರ ಲಕ್ಷಾಂತರ ರಂಧ್ರಗಳ ಹೊರತಾಗಿಯೂ, ಒಂದು ಹನಿಯೂ ಸೋರಿಕೆಯಾಗುವುದಿಲ್ಲ.
ಸೋರುತಿಹುದು‌ಮನೆಯ ಮಾಳಿಗೆ ಅಜ್ಞಾನದಿಂದ ಎಂದಿರೋದರ ಅರ್ಥ  ಇದೇ ಆಗಿದೆ.

3. ಬೆಂಬಲವಿಲ್ಲದೆ ಯಾವುದೂ ನಿಲ್ಲಲು ಸಾಧ್ಯವಿಲ್ಲ, ಆದರೆ ದೇಹವು ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಸಹಕಾರ ಬೆಂಬಲ ಎಲ್ಲವೂ ಆಧ್ಯಾತ್ಮಿಕ ವಾಗಿದ್ದರೆ ಜೀವನದಲ್ಲಿ ಸಮಸ್ಯೆ ಬಂದರೂ ಪರಿಹಾರ ಸಿಗುತ್ತದೆ. ವಿರುದ್ದವಿದ್ದರೆ ಅಸಮತೋಲನವೇ ಗತಿ.

4. ಚಾರ್ಜ್ ಮಾಡದೆ ಯಾವುದೇ ಬ್ಯಾಟರಿ ಚಲಿಸಲು ಸಾಧ್ಯವಿಲ್ಲ, ಆದರೆ ಹೃದಯವು ಹುಟ್ಟಿನಿಂದ ಸಾವಿನವರೆಗೆ ನಿರಂತರವಾಗಿ ಬಡಿಯುತ್ತದೆ.

ಹೃದಯದ ಬಡಿತ ನಿರಂತರವಾಗಿ ಇದ್ದಂತೆ ಒಳಗಿನ ಆತ್ಮಚೈತನ್ಯ ಶಕ್ತಿಯನ್ನು ನಿರಂತರವಾಗಿ  ಅರಿತವರು ಹೃದಯವಂತರಾದರು. ಇದಕ್ಕೆ ಚಾರ್ಜ್ ಮಾಡುವ  ಗುರು  ಇಂದು ಅಗತ್ಯವಾಗಿದೆ.

5. ಯಾವುದೇ ಪಂಪ್ ಶಾಶ್ವತವಾಗಿ ಚಲಿಸಲು ಸಾಧ್ಯವಿಲ್ಲ, ಆದರೆ ರಕ್ತವು ದೇಹದಾದ್ಯಂತ ನಿರಂತರವಾಗಿ ಹರಿಯುತ್ತದೆ.

ದೇಹದ ತುಂಬಾ ರಕ್ತವಿದ್ದರೂ ರಕ್ತಹೀನತೆಯಿಂದ ಬಳಲುವವರು ಹೆಚ್ಚಾಗಿರುವರೆಂದರೆ ಅದಕ್ಕೆ ಪೂರಕವಾದ ಆಹಾರ  ಸೇವಿಸದೆ  ಹೊರಗಿನವರ ರಕ್ತ ಪಡೆದರೂ ರೋಗವೇ ಆಗಿರುತ್ತದೆ.

6. ವಿಶ್ವದ ಅತ್ಯಂತ ದುಬಾರಿ ಕ್ಯಾಮೆರಾಗಳು ಸಹ ಸೀಮಿತವಾಗಿವೆ, ಆದರೆ ಕಣ್ಣುಗಳು ಸಾವಿರಾರು ಮೆಗಾಪಿಕ್ಸೆಲ್‌ಗಳ ಗುಣಮಟ್ಟದಲ್ಲಿ ಪ್ರತಿ ದೃಶ್ಯವನ್ನು ಸೆರೆಹಿಡಿಯಬಹುದು.

ಹೊರಗಿನ ದೃಷ್ಟಿ  ಹೆಚ್ಚಾದಷ್ಟೂ ಒಳದೃಷ್ಟಿ ಹಿಂದುಳಿಯುತ್ತದೆ. ಹಾಗಂತ  ದೃಷ್ಟಿ ದೋಷದ ಸಮಸ್ಯೆಗೆ ಕನ್ನಡಕ ಹೊರಗೆ ಪರಿಹಾರವಾದರೆ  ಒಳದೃಷ್ಟಿ ಗೆ ಪರಿಹಾರ ಆಧ್ಯಾತ್ಮ ವಾಗುತ್ತದೆ. 

7. ಯಾವುದೇ ಪ್ರಯೋಗಾಲಯವು ಪ್ರತಿಯೊಂದು ರುಚಿಯನ್ನು ಪರೀಕ್ಷಿಸಲು ಸಾಧ್ಯವಿಲ್ಲ, ಆದರೆ ಯಾವುದೇ ಉಪಕರಣಗಳಿಲ್ಲದೆ ನಾಲಿಗೆಯು ಸಾವಿರಾರು ಅಭಿರುಚಿಗಳನ್ನು ಗುರುತಿಸಬಹುದು.

ಮಾನವನಿಗೆ ನಾಲಿಗೆ ಚೆನ್ನಾಗಿದ್ದರೆ ಜೀವನದಲ್ಲಿ ಸಾರವಿರುತ್ತದೆ. ಕೇವಲ ತಿನ್ನೋದಕ್ಕೆ ನಾಲಿಗೆ ರುಚಿ ಇರಬೇಕು ಆದರೆ  ಮಾತನಾಡಲು ನಾಲಿಗೆಗೆ ತಿಳುವಳಿಕೆಯಿರಬೇಕು.
ಮಾತು ಮನೆಕೆಡಿಸಿತು ತೂತು ಒಲೆಕೆಡಿಸಿತು ಎಂದಂತಾಗಬಾರದು. ಶುದ್ದ  ಸತ್ಯ ಸತ್ವ ತತ್ವಯುತ ನುಡಿಗಳಿಂದ  ಮಾನವ ಮಹಾತ್ಮರೆಡೆಗೆ ಸಾಗಬಹುದು.

8. ಅತ್ಯಂತ ಮುಂದುವರಿದ ಸಂವೇದಕಗಳು ಸಹ ಸೀಮಿತವಾಗಿವೆ, ಆದರೆ ಚರ್ಮವು ಸಣ್ಣದೊಂದು ಸಂವೇದನೆಯನ್ನು ಸಹ ಗ್ರಹಿಸುತ್ತದೆ.

ಚರ್ಮವೇ ದೇಹಕ್ಕೆ ಹೊದಿಕೆಯಾಗಿದೆ  ಒಳಗಿರುವ ಎಲ್ಲಾ ಶ್ರೀಮಂತ  ಅಂಗಾಂಗಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಚರ್ಮ ಎಲ್ಲಾ ಸಂವೇದನೆ ಯನ್ನು ಗ್ರಹಿಸುತ್ತದೆಂದರೆ ನಮ್ಮ ರಕ್ಷಣಾ ಕವಚದ  ವೇದನೆ  ಅನ್ಯರಿಗೆ ತಿಳಿಯದಿದ್ದರೂ ನಮ್ಮ ಅರಿವಿಗೆ  ಬಂದಾಗ  ನಾವೇ ಜಾಗೃತರಾಗಬೇಕು.

9. ಯಾವುದೇ ಉಪಕರಣವು ಪ್ರತಿಯೊಂದು ಶಬ್ದವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಆದರೆ ಗಂಟಲು ಸಾವಿರಾರು ಆವರ್ತನಗಳ ಶಬ್ದಗಳನ್ನು ಉತ್ಪಾದಿಸಬಹುದು.

ಗಂಟಲು  ಕೆಟ್ಟರೆ  ಬೇರೆ ಗಂಟಲನ್ನು ಜೋಡಿಸಬಹುದೆ? ಉಪಕರಣಗಳು ಹೊರಗಿನವರ ಸೃಷ್ಟಿ. ಇದು ತಾತ್ಕಾಲಿಕ ಪರಿಹಾರವಷ್ಟೆ .

10. ಯಾವುದೇ ಸಾಧನವು ಶಬ್ದಗಳನ್ನು ಸಂಪೂರ್ಣವಾಗಿ ಡಿಕೋಡ್ ಮಾಡಲು ಸಾಧ್ಯವಿಲ್ಲ, ಆದರೆ ಕಿವಿಗಳು ಪ್ರತಿಯೊಂದು ಶಬ್ದವನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಅರ್ಥೈಸುತ್ತವೆ.

ಕಿವಿ ಕೇಳಿಸದಿದ್ದರೆ  ಯಂತ್ರವಿಡುವರು. ಕೇಳದಿರೋದಕ್ಕೆ ಕಾರಣ  ಅದರ ದುರ್ಭಳಕೆ. ನಮ್ಮ ಪಂಚ ಇಂದ್ರಿಯ ಗಳು ನಮ್ಮ ಆರೋಗ್ಯ ಕಾಪಾಡುವ  ಮಹಾಶಕ್ತಿ ವರ್ದಕಗಳಾಗಿವೆ.
ಯಾವಾಗಿದನ್ನು  ಸರಿಯಾಗಿ ಅರಿತು‌ಬಳಸದೆ  ಮಾನವನೇ ಯಂತ್ರದ ದಾಸನಾದನೋ ಆಗ. ದೇವರು ಕಾಣದೆ  ಹೋಯಿತು. ದೈವೀಕ ಶಕ್ತಿಯನ್ನು  ಬೆಳೆಸಿಕೊಳ್ಳಲು ದೇಹವನ್ನು ದೇಗುಲವಾಗಿಸಿಕೊಂಡಂತಹ ಮಹರ್ಷಿಗಳಿಗೂ ಖುಷಿಗಾಗಿ  ದೇಹವನ್ನು  ಯಂತ್ರಕ್ಕೆ ಒಪ್ಪಿಸಿಕೊಂಡಿರುವ  ನಮಗೂ  ಅಂತರ‌ಬೆಳೆದಿದೆ. ಇದರ ಮಧ್ಯೆ ನಿಂತು  ನಾಟಕ‌ಮಾಡುವ ಅಸಂಖ್ಯಾತ‌  ಜನರು‌ನೋಡುವ ಜನರು ದೇವರನ್ನು  ಮಧ್ಯೆ ನಿಲ್ಲಿಸಿ ದರೆ ಆರೋಗ್ಯ ರಕ್ಷಣೆ ಆಗುವುದಾಗಿದ್ದರೆ‌ ನಮ್ಮ  ದೇಶದಲ್ಲಿ  ರೋಗಕ್ಕೆ ಸ್ಥಾನವಿರುತ್ತಿರಲಿಲ್ಲ. ದೇಶಕ್ಕೆ  ಕಾಡುತ್ತಿರುವ ಈ ಭ್ರಷ್ಟಾಚಾರ ರೋಗಕ್ಕೆ  ಔಷಧ ಶಿಷ್ಟಾಚಾರದ ಶಿಕ್ಷಣ. ಇದನ್ನು ವಿರೋಧಿಸಿದರೆ  ಭ್ರಷ್ಟಾಚಾರಕ್ಕೆ‌  ಬಲ. 
ಪ್ರಕೃತಿಯ  ಸಣ್ಣ ಬಿಂದು ಪುರುಷಶಕ್ತಿಯನ್ನು ಸೇರಿ ಆದ ಜೀವಾತ್ಮನಿಗೆ  ಇದರ ಅರಿವಿಲ್ಲದಿದ್ದರೆ ಜೀವನ ವ್ಯರ್ಥ ಎಂದರು. ಮನೆ ತುಂಬಾ  ವಸ್ತುವಿದ್ದರೂ‌  ವಾಸ್ತು ಸರಿಯಿಲ್ಲದಿದ್ದರೆ  ಹೇಗೆ ಸಮಸ್ಯೆ ಬೆಳೆಯುವುದೋ‌ಹಾಗೆ ದೇಹದೊಳಗಿರುವ ಆರೋಗ್ಯಕರವಾದ ಅಂಗಾಂಗಗಳ ಒಳಗಿನ ದೈವೀಕ ಶಕ್ತಿ ಅರಿಯದೆ  ಕಲಬೆರೆಕೆಯ ಆಹಾರ ವಿಹಾರ  ಶಿಕ್ಷಣ ಒಳಗೆ ತುಂಬಿದರೆ  ರೋಗದ ಗೂಡಾಗುತ್ತದೆ.
ಕಾಲ ಮೀರಿ ಹೋಗಿದೆ  ಆದರೂ  ಮಕ್ಕಳಿಗೆ  ಅವಕಾಶವಿದೆ.ಸಹಕಾರ ಗುರುಹಿರಿಯರು  ನೀಡಿದರೆ  ಸಾಧ್ಯ.
ಇದಕ್ಕೆ ಹೊರಗಿನ ರಾಜಕೀಯಕ್ಕಿಂತ ಒಳಗಿನ ರಾಜಯೋಗ ಅಗತ್ಯವಿದೆ. ನಮ್ಮೊಳಗೇ ಇರುವ ದೈವೀಕ ಶಕ್ತಿಯನ್ನು  ನಾವು ಸದ್ಬಳಕೆ ಮಾಡಿಕೊಳ್ಳಲು ಸುಜ್ಞಾನ  ಅಗತ್ಯವಿದೆ.

ದೇವರು ನಮಗೆ ನೀಡಿರುವ ಅಮೂಲ್ಯ ವಸ್ತುಗಳಿಗಾಗಿ ಅವನಿಗೆ ಕೃತಜ್ಞರಾಗಿರಿ, ಮತ್ತು ಆತನಿಗೆ ದೂರು ನೀಡಲು ನಮಗೆ ಯಾವುದೇ ಹಕ್ಕಿಲ್ಲ!

ಕನ್ನಡದ ರಕ್ಷಣೆ ಹೇಗೆ?

ಕನ್ನಡ ಪುಸ್ತಕ ಮಾರಾಟಕ್ಕೆ ಇಷ್ಟು ಸಮಸ್ಯೆ ಯಿದೆ  ಅದರಲ್ಲಿ ಬರೆದು ಪ್ರಕಟಿಸೋರಿಗೆ ಇನ್ನೂ ಸಮಸ್ಯೆ ಯಿದೆ. ಕಾರಣವಿಷ್ಟೆ ನಮ್ಮ ಶಿಕ್ಷಣವೇ ಕನ್ನಡದಿಂದ ದೂರವಾಗಿದೆ. ಏನಿದ್ದರೂ ಅನ್ಯಭಾಷಿಗರಿಗಿರುವಷ್ಟು ಭಾಷೆಯ ಮೇಲಿನ ಪ್ರೀತಿ ನಮ್ಮಲ್ಲಿಲ್ಲ.ವ್ಯವಹಾರಕ್ಕೆ ಇಳಿದಾಗ ಲಾಭವಷ್ಟೆ ಮುಖ್ಯ.ಧರ್ಮದ ಪ್ರಶ್ನೆ ಬಂದಾಗ ಜ್ಞಾನ ಮುಖ್ಯ. ಪುಸ್ತಕದ ವಿಷಯಗಳು ಜ್ಞಾನವನ್ನು ನೀಡುತ್ತಿದೆಯೆ ಎನ್ನುವುದು ಮುಖ್ಯ. ಎಷ್ಟೋ ಮನರಂಜನೆಗೆ ಸಾಹಿತ್ಯ ಬಳಕೆಯಾಗುತ್ತವೆ. ಆದರೆ ಸಾಹಿತ್ಯದಲ್ಲಿ ಸತ್ಯ ಮರೆಯಾಗಿರುತ್ತದೆಂದರೆ  ಅಜ್ಞಾನ.
ಯಾಕೆ ಹೀಗೆ ತಿಳಿಸಿದೆನೆಂದರೆ ನಾನೊಬ್ಬಳು ಗೃಹಿಣಿಯಾಗಿ ಕನ್ನಡದ ಲೇಖಕಿಯಾಗಿ  ಲೇಖನಗಳ ‌ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಪುಸ್ತಕ ಬರೆದು ಪ್ರಕಟಿಸಿದರೂ ಅದರಲ್ಲಿನ ವಿಚಾರ ನೋಡದೆ  ಬದಿಗಿಟ್ಟು  ತಮ್ಮ ಸ್ವಾರ್ಥ ನೋಡಿಕೊಂಡಿರೋರೆ ಇಂದು ಹೆಚ್ಚು. ಹಣವಿದ್ದರೆ  ಪುಸ್ತಕ ಖರೀದಿಸಬಹುದು. ಆದರೆ ಜ್ಞಾನವಿದ್ದರಷ್ಟೆ ಪುಸ್ತಕದ ಸತ್ಯ ಸತ್ವ ತತ್ವ ಅರ್ಥ ವಾಗೋದು.ನಮ್ಮನೆ ಪುಸ್ತಕದ ಮಳಿಗೆಯಾಗಿದೆ  ಕಾರಣ  ಸತ್ಯ ಹೊರಬಂದರೆ  ನಮ್ಮ ‌ಮಸ್ತಕಕ್ಕೆ ಏರಿಸಿಕೊಂಡ ಅನಾವಶ್ಯಕ ವಿಷಯಗಳಿಗೆ ಸ್ಥಾನವಿರದು. ಒಟ್ಟಿನಲ್ಲಿ  ಒಳ್ಳೆಯ ಪುಸ್ತಕ  ಲೇಖಕರಿಗೆ ಮತ್ತು ಮಾರಾಟಗಾರರಿಗೆ ಕಾಲವಲ್ಲ ಎನ್ನಬಹುದೆ? ಸತ್ಯ ಧರ್ಮ  ಎಂದು ಹೊಡೆದಾಡುವ ರಾಜಕೀಯಕ್ಕೆ ಬೆಲೆ ಹೊರಗೆ ಕೊಟ್ಟರೆ   ಉತ್ತಮ ಸಾಹಿತ್ಯ ಹೊರಬರದು. 
ಮಕ್ಕಳಿಗೆ ಶಾಲಾಪುಸ್ತಕವೇ ಹೊರೆಯಾಗಿದೆ ಪೋಷಕರಿಗೆ  ಆ ವಿಚಾರ  ತಲೆಗೆ ತುಂಬುವುದೇ ಕರ್ಮವಾಗಿದೆ. ಇದರ ಮಧ್ಯೆ ಸಾಹಿತ್ಯ ಕ್ಷೇತ್ರ ತನ್ನದೇ ಆದ ವ್ಯವಹಾರಕ್ಕೆ ಇಳಿದಿದೆ. ಎಂತಹ ದುರ್ಗತಿ. 
ಅದಕ್ಕೆ ನೇರವಾಗಿ ವಿಚಾರವನ್ನು ಜನರಿಗೆ ಉಚಿತವಾಗಿ ಹಂಚಿ ವಾಸ್ತವದಲ್ಲಿ ಬದುಕುವುದು ಉತ್ತಮ. ಯಾರ ತಲೆ ಯಾರೋ ಆಳಲು ಹೊರಟಿರುವರು. ಕನ್ನಡ ಉಳಿಸಬೇಕೆ ಮೊದಲು‌ಮಕ್ಕಳಿಗೆ ಭಾಷಾ ಶಿಕ್ಷಣ ಕೊಡಬೇಕು.ನಾವೂ ಕರ್ನಾಟಕದಲ್ಲಿ ಇದ್ದೇವೆನ್ನುವ ಅರಿವಿರಬೇಕು. ಹೊರಗಿನವರಿಗೆ ಮಣೆ ಹಾಕೋದನ್ನು ಬಿಡಬೇಕು.ವ್ಯವಹಾರಕ್ಕಿಂತ ಧರ್ಮ ವೇ ಮೇಲೆಂದು ಅರಿತು ಜೀವನದಲ್ಲಿ ಸಾಮರಸ್ಯ ವಿರಬೇಕು. ಇವೆಲ್ಲವೂ ಶಿಕ್ಷಣದಲ್ಲಿಯೇ ಕಲಿಸಬೇಕು. ಯಾವುದೂ ಮಾಡದೆ  ಹಾಳಾಗಿರೋದನ್ನೇ  ಹೇಳುತ್ತಾ ಹರಡುತ್ತಾ ಹೋದರೆ ಪುಸ್ತಕದಲ್ಲೂ ಅದೇ ಇರುತ್ತದೆ. ಸರಿಪಡಿಸೋರಿಲ್ಲದೆ ಬೆಳೆಯುತ್ತದೆ. ಜೀವನ ಯಾತ್ರೆ ಆಗಬೇಕಿತ್ತು ಜಾತ್ರೆಯಾಗಿ ಹೊರಗೆ ನಡೆಯುತ್ತಿದೆ. ಕ್ಷಮಿಸಿ ಸತ್ಯ ಯಾವತ್ತೂ ಕಠೋರ. 
ಸರ್ಕಾರದ ಹಣಪಡೆದು ದುರ್ಭಳಕೆ ಮಾಡೋರೆ  ಹೆಚ್ಚಾದರೆ  ಆಗೋದು ಹೀಗೆ. ಸ್ವಂತ ಹಣ,ಬುದ್ದಿ ಜ್ಞಾನಕ್ಕೆ  ಇಂದು ಬೆಲೆಯಿಲ್ಲ..ಹಾಗಂತ ಇದಕ್ಕೆ ಸೋಲಿಲ್ಲ  ಕನ್ನಡಕ್ಕೆ ಶುಭ ವಾಗಲಿ.  ಮಲಗಿರುವ ಜನತೆ ಎಚ್ಚರವಾಗಲಿ 
ಬಾರಿಸು ಕನ್ನಡ ಡಿಂಡಿಮವ ಶಿಕ್ಷಣದೊಳಗಿರಲಿ.

Monday, October 27, 2025

ಸೋಲೇ ಗೆಲುವಿನ ಮೆಟ್ಟಿಲು

ಸೋಲು ಗೆಲುವು,  ಕಷ್ಟ ಸುಖ ಇವೆರಡೂ ಒಂದೇ ನಾಣ್ಯದ ಎರಡು ಮುಖವಾಗಿದೆ. ಯಾವಾಗ ಮಾನವ ಸತ್ಯದೆಡೆಗೆ ಹೊರಡುವನೋ ಸೋಲಿನ‌ಮುಖ ಹೆಚ್ಚಾಗಿ ಕಾಣುತ್ತದೆ. ಆಗ  ಅಸತ್ಯದೆಡೆಗೆ  ಮುಖ ಮಾಡಿಕೊಂಡು ಜೀವನ‌ ನಡೆಸಲು ಪ್ರಾರಂಭಿಸುವನು. ಆಗಲೂ ಕಷ್ಟಗಳು ನಷ್ಟಗಳು ಎದುರಾದಾಗ ಮತ್ತೆ ಸತ್ಯವನ್ನು ಅರಸುವನು. ಹೀಗೇ ತನ್ನ ಗೆಲುವಿಗಾಗಿ ಸುಖಕ್ಕಾಗಿ  ಪ್ರಯತ್ನ ಪಡುವಾಗ  ಪರಮಾತ್ಮನ  ಸತ್ಯ  ಬಿಟ್ಟು  ಪರಕೀಯರನ್ನು ಸೋಲಿಸುವುದೇ ಮುಖ್ಯ  ಎನಿಸಿದರೆ  ಅದೇ ಮುಂದೆ ದೊಡ್ಡ ದೊಡ್ಡ ಸಮಸ್ಯೆಗೆ ಕಾರಣವಾಗಿ ಕೊನೆಯಲ್ಲಿ ಸೋತು ಹೋಗುವನು. ಮಹಾತ್ಮರು  ಸತ್ಯ ತಿಳಿದು ಗೆಲ್ಲುವರು.

ಒಟ್ಟಿನಲ್ಲಿ ಸೋತವನು ಗೆಲ್ಲಲು ಪ್ರಯತ್ನ ಪಡುವುದು ಸಹಜ.
ಆದರೆ ಆ ಗೆಲುವಿನ ಹಿಂದೆ ಸತ್ಯವಿದೆಯೋ ಅಸತ್ಯವಿದೆಯೋ ಎನ್ನುವ ಜ್ಞಾನ ಅತಿ ಮುಖ್ಯ.
ಯಾರನ್ನೂ ಯಾರೂ ಆಳಲಾಗದು ಎನ್ನುವುದು ಸತ್ಯ ಹೀಗಾಗಿ ಜ್ಞಾನಿಗಳಾದವರು  ಪರಮಾತ್ಮನ ದಾಸರಾಗಿ ಶರಣರಾಗಿ  ಮುಂದೆ ನಡೆದರು. ಹಿಂದಿನ ರಾಜಪ್ರಭುತ್ವದ ರೀತಿ ನೀತಿ ಸಂಸ್ಕೃತಿ ಸಂಸ್ಕಾರದ ಶಿಕ್ಷಣವನ್ನು ನೀಡದೆ  ಜನರನ್ನು ಆಳಲು ಹೋದವರಿಗೆ  ಗೆಲುವು ಸಿಗುತ್ತಿದೆ ಎಂದರೆ ಜನರ ಅಜ್ಞಾನವಷ್ಟೆ. ಅಜ್ಞಾನವೇ ಎಲ್ಲಾ ಸಮಸ್ಯೆಗೆ ಕಾರಣ.
ಉಪದೇಶ ಮಾಡೋದು ತಪ್ಪಲ್ಲ. ಉಪ ಆದೇಶದ ಹಿಂದಿನ ವಿಜ್ಞಾನವನ್ನು ಅರಿತು ನಡೆಯೋದು  ಮುಖ್ಯ. ವಾಸ್ತವದಲ್ಲಿ ದೇಶದ ಸ್ಥಿತಿಗೆ ಕಾರಣವಾಗಿರುವ  ಶಿಕ್ಷಣದ ವಿಚಾರಗಳು ಮಕ್ಕಳನ್ನು  ತಂತ್ರದಿಂದ ಆಳಲು ಹೊರಟಿವೆ. ಸ್ವತಂತ್ರ ಜ್ಞಾನ ಒಳಗೇ ಅಡಗಿದ್ದರೂ ಗುರುತಿಸಲಾಗದ  ಪಠ್ಯ ಪುಸ್ತಕದ ಹೊರೆಯ ಜೊತೆಗೆ  ಆಹಾರವೂ ಕಲಬೆರೆಕೆ ಆಗಿ ಆರೋಗ್ಯ ಹಾಳು ಮಾಡಿದರೆ  ಗೆಲುವು ಯಾರದ್ದು? ಸೋಲುವುದು ಯಾರು? 
ಅಜ್ಞಾನದಲ್ಲಿ ಸೋಲಿಸುವುದು ಸುಲಭದ ಕೆಲಸ. ಆದರೆ ಜ್ಞಾನದ ನಂತರವೇ  ಸೋತವರು ಯಾರು ಗೆದ್ದವರು ಯಾರು ಎನ್ನುವುದು ಅರ್ಥ ವಾಗುವುದು.
ಈಗಲೂ ಭಾರತ ವಿಶ್ವಗುರು ಎನಿಸಿಕೊಂಡಿದೆ .ಆದರೆ ಅದನ್ನು  ದುರ್ಭಳಕೆ ಮಾಡಿಕೊಂಡು  ರಾಜಕೀಯ ನಡೆಸೋರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಗೆಲುವು ಎಂದು  ಹೊರಗೆ  ಸಮಾರಂಭ ನಡೆಸಿದರೆ  ನಿಜವಾದ ಸೋಲು  ಜನರದ್ದೆ ಆಗುತ್ತದೆ. ಎಷ್ಟು ಹೊರಗೆ ಗೆದ್ದರೂ ಒಳಗಿನ ಸೋಲಿನ  ಅನುಭವಿಸೋದನ್ನು ತಡೆಯಲಾಗದು.
ಸ್ಪರ್ಧೆ ನಡೆಸೋದಾದರೆ ಸತ್ಯ ಧರ್ಮ ದಲ್ಲಿರಬೇಕು. ಅಸತ್ಯ ಅಧರ್ಮ ದೆಡೆಗೆ  ನಡೆಸಿದಷ್ಟೂ ಜೀವನದಲ್ಲಿ ಸೋಲುವುದು ಹೆಚ್ಚಾಗುತ್ತದೆ. ಆದರೂ  ಸೋತ ಮೇಲೇ ಗೆಲುವಿನ ರುಚಿ ಹೆಚ್ಚುವುದು. ಸೋಲೇ ಗೆಲುವಿನ‌ಮೆಟ್ಟಿಲು ಎಂದಿರುವರು...
ಭಯ ಹುಟ್ಟಿಸಿ ಭಯೋತ್ಪಾದಕರಾಗಿ  ಜನರನ್ನು ಸೋಲಿಸಬಹುದು  ಆದರೆ  ಇದರಿಂದ  ಆತ್ಮರಕ್ಷಣೆ ಆಗಿದ್ದರೆ ಸರಿ.ಆತ್ಮಹತ್ಯೆಯಾದರೆ? ಆತ್ಮಕ್ಕೆ ಸಾವಿಲ್ಲ , ಆತ್ಮವೇ ದೇವರು, ಸತ್ಯವೇ ದೇವರು...ಅಂದರೆ ಹತ್ಯೆಯಾಗೋದು ಸತ್ಯ. ಸತ್ಯ ಹಿಂದುಳಿದಷ್ಟೂ ಧರ್ಮ ಸಂಕಟವೇ ಹೆಚ್ಚುವುದು.
ಇದನ್ನರಿತು ಮಾನವ ನಡೆದಾಗಲೇ  ಸೋಲು ಗೆಲುವಿನ‌ ಲೆಕ್ಕಾಚಾರ  ಚೆನ್ನಾಗಿ ಅರ್ಥ ವಾಗುತ್ತದೆ.

Wednesday, October 8, 2025

ಕಾಣದ ದೇವರಿರೋದೆಲ್ಲಿ?

ದೇವರಿರೋದೆಲ್ಲಿ? ಒಳಗೋ ಹೊರಗೋ? 

ರಾಮಾಯಣ ಮಹಾಭಾರತ ಭಗವದ್ಗೀತೆ ಯಂತಹ‌
ಮಹಾಗ್ರಂಥಗಳು ಇಂದು ಮಾನವನಿಗೆ ಜೀವನ ನಡೆಸಲು ಆಧಾರವಾಗಿದೆ. ಆಧಾರವಾಗಿದ್ದರೆ ಧರ್ಮ ಉಳಿಯುತ್ತಿತ್ತು ಅದನ್ನೇ ಆಹಾರವಾಗಿ ತಿಂದರೆ  ಗ್ರಂಥ ಹೊಟ್ಟೆಗೆ ಹೋದರೂ ತಲೆಯೊಳಗೆ  ಜ್ಞಾನವಿಲ್ಲದಿದ್ದರೆ ವ್ಯರ್ಥ.

ದೇವರೆಲ್ಲಿರುವುದು  ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಸಿಗದು.ಆದರೆ  ಇಂದಿನ ಜನತೆ ಹೊರಗೇ ಹುಡುಕಿಕೊಂಡು ಕಾಣದೆ ಪರದಾಡುತ್ತಿರುವರು. ಸಾಲದೆನ್ನುವಂತೆ  ಹೋರಾಟ ಹಾರಾಟ ಮಾರಾಟಕ್ಕೆ ಇಳಿದು ಒಳಗೇ ಇರುವ ಆತ್ಮಸಾಕ್ಷಿಗೆ ವಿರುದ್ದ ನಡೆದು ನ್ಯಾಯಾಲಯದವರೆಗೂ ದೇವರನ್ನು  ಕರೆದುಕೊಂಡು ಹೋಗಿ ಇವನಿಗೊಂದು ದೇವಸ್ಥಾನ ಕಟ್ಟಲು ಅನುಮತಿ ಕೊಡಿ ಎಂದರೆ ನ್ಯಾಯಾಧೀಶರೆ ದೇವರಿಗಿಂತ ದೊಡ್ಡವರಾಗಿ ತೀರ್ಪು ನೀಡಲೇಬೇಕು.

ತೀರ್ಪು  ಆಸ್ತಿಕ ನಾಸ್ತಿಕರಿಗೆ ಒಪ್ಪುವಂತೆ ಇರೋದು ಕಷ್ಟ. ಹೀಗಾಗಿ  ನ್ಯಾಯಾಧೀಶರಾಗೋದು  ಬಹಳ ಕಷ್ಟದ ಕೆಲಸ.
ದೇವರಾಗಿರೋದು ಕಷ್ಟ ಅಸುರರಾಗಿರೋದು ಸುಲಭ. ಹೀಗಾಗಿ ಇಂದು ದೇವರ ಹೆಸರಿನಲ್ಲಿ ಅಸುರರು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು  ತಾವೇ ದೇವರಂತೆ ನಟನೆ ಮಾಡಿದರೂ ಕೇಳೋರಿಲ್ಲದ ಪರಿಸ್ಥಿತಿಇದೆ. ಇದಕ್ಕೆ ಕಾರಣವೇ ಅಜ್ಞಾನ ವಾಗಿದೆ. ಎಲ್ಲಿ ಹುಡುಕಬೇಕು ಯಾವುದನ್ನು ಕೆದಕಬೇಕು ಯಾರನ್ನು ಕೇಳಬೇಕು ಯಾರನ್ನು ಬೆಳೆಸಬೇಕು? ಏನು ಬೇಡಬೇಕು? ಎಷ್ಟು ಕೊಡಬೇಕು? ಯಾವುದೂ  ತಿಳಿಯದೆ  ಹೊರಗೆ ಕಂಡದ್ದೇ ಸತ್ಯವೆಂದು ಹಿಂದೆ ನಡೆದರೆ ಹಿಂದೂಗಳಾಗೋದಿಲ್ಲ. ಹಿಂದಿನ ಮಹಾತ್ಮರು ದೇವರನ್ನು ಬೆಳೆಸಿಲ್ಲ ದೈವತ್ವ ಬೆಳೆಸಿಕೊಂಡು ಮುಂದೆ ನಡೆದರು. ಈಗ ಮಕ್ಕಳ ದೈವತ್ವಕ್ಕೆ ಬೆಲೆಕೊಡದ ಶಿಕ್ಷಣ  ಮಕ್ಕಳನ್ನು ಆಳಲು ಹೊರಟಿದೆ. ಇದೇ ಮುಂದೆ ಪೋಷಕರನ್ನು ಗುರು ಹಿರಿಯರನ್ನು ಆಳುವಾಗ ಶಕ್ತಿಹೀನವಾದ  ದೇಹಕ್ಕೆ ಏನೂ ಮಾಡಲಾಗದೆ ಸೋಲುತ್ತದೆ.
ಏನು ಕೊಡುವೆವೋ ಅದೇ ತಿರುಗಿ ಬರೋದು.
ಪುರಾಣ‌ಇತಿಹಾಸ ಓದಿಕೊಂಡು ವಾಸ್ತವದಲ್ಲಿ ಜೀವನ ನಡೆಸುವಾಗ  ಸತ್ಯ ಮತ್ತು ಧರ್ಮ ದ ಅರಿವೇ ಮುಖ್ಯ.
ಸರ್ವಕಾಲಿಕ ಸತ್ಯವೇ ದೇವರು. ಅಂದರೆ ಅಂದು ಇಂದು ಮುಂದು ಇರುವ ಒಂದೇ ಭೂಮಿಯ ಮೇಲಿರುವ ಎಲ್ಲಾ ದೇವಾಸುರರಿಗೆ  ಭೂಮಿ ಆಳೋದೇ ಗುರಿಯಾದರೆ ಭೂಮಿಗೆ ಅಸ್ತಿತ್ವ ಇಲ್ಲವೆ? ಧರ್ಮ ಸತ್ಯವಿಲ್ಲದೆ ಆಳಿದರೆ  ಮಾರಿಯಾಗುವಳಷ್ಟೆ. ಇಷ್ಟು ತಿಳಿದರೆ ಸಾಕು ನಮ್ಮಲ್ಲಿ ಸಾಕಷ್ಟು ಜ್ಞಾನಸಂಪತ್ತಿದೆ.ಅದನ್ನು ಲೋಕಕಲ್ಯಾಣಕ್ಕಾಗಿ
ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಮಹಾತ್ಮರುಗಳು  ಹಿಂದಿನ ಕಾಲದಲ್ಲಿ ನಡೆಸಿದ್ದರೆಂದರೆ ಅದರಲ್ಲಿ ಯೋಗವಿತ್ತು. ಯಾವಾಗಿದು ಭೋಗಕ್ಕೆ ಸೀಮಿತವಾಯಿತೋ ದೈವತ್ವ‌ಕುಸಿಯಿತು. ಹೀಗಾಗಿ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಎಷ್ಟು ಹಣ ಅಧಿಕಾರ ಸ್ಥಾನಪಡೆದರೂ ಆತ್ಮಕ್ಕೆ ತೃಪ್ತಿ ಸಿಗದೆ ಋಣ ಕಳೆಯದೆ‌ಪಾಪಕ್ಕೆ ತಕ್ಕಂತೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪುನರ್ಜನ್ಮ ನಿಶ್ಚಿತ ಎಂದಿರುವರು.
ಧಾರ್ಮಿಕ ವರ್ಗ ಇದನ್ನರಿತಾಗಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಎಷ್ಟು ಮಂತ್ರ ತಂತ್ರ ಯಂತ್ರ ಬಳಸಿದರೂ ಸ್ವತಂತ್ರ ಜ್ಞಾನವಿಲ್ಲದಿದ್ದರೆ ಜೀವನ್ಮುಕ್ತಿ ಸಿಗದು.
 
ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎನ್ನುವರು.
ಹಾಗಾದರೆ ಪರಮಾತ್ಮ ಒಬ್ಬನೇ ಇಬ್ಬರೆ ಹಲವರೆ? ಎಲ್ಲರಲ್ಲಿಯೂ ಅಡಗಿರುವ ಆ ಒಂದೇ ಚೇತನಾಶಕ್ತಿಯನ್ನು  ಅರ್ಥ ಮಾಡಿಕೊಳ್ಳಲು  ನಿರಾಕಾರದೆಡೆಗೆ ನಡೆದವರಿಗೆ ಸಾಧ್ಯವಾಗಿದೆ  ಎಂದರೆ ಮಹಾತ್ಮರಿಗೆ ದೇವರ ದರ್ಶನ ಆಗಿದೆ . ಮಹಾತ್ಮರು ಇರೋದೆಲ್ಲಿ? ಒಳಗೋ ಹೊರಗೋ?
 ಹೋರಾಟ ಹಾರಾಟ ಮಾರಾಟದಲ್ಲಿಯೇ ಮುಳುಗಿರುವ ಮನುಷ್ಯನಿಗೆ  ತನ್ನೊಳಗೆ ಇರುವ ಆ ಮಹಾ ಆತ್ಮದ ದರ್ಶನ ಆಗದಿದ್ದರೆ  ದೇವರಾದರೂ ಏನೂ ಮಾಡಲಾಗದು.
ಒಟ್ಟಿನಲ್ಲಿ  ದೇವರು ಧರ್ಮ, ಜಾತಿ,ಪಂಗಡ,ಪಕ್ಷ,ದೇಶದೊಳಗೇ ಅಡಗಿದೆ. ದೇಶ ಒಂದೇ ಎನ್ನುವ ಸತ್ಯವರಿತರೆ ತನ್ನೊಳಗೆ ಇರುವ ದೈವತ್ವದೆಡೆಗೆ  ಇರುವ  ಒಂದೇ ದೇವರ ನಾಮಸ್ಮರಣೆಯಲ್ಲಿ ತನ್ನ ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಾ ಸ್ವತಂತ್ರ ಜ್ಞಾನದಿಂದ ಸರಳವಾಗಿ ಇರುವ  ದೇವರನ್ನು ಮಾನವ‌ಕಾಣಬಹುದು.

ಇದನ್ನು ತಿಳಿಸೋದು ಸುಲಭವಾದರೂ  ಅದರಂತೆ ನಡೆಯೋದು ಬಹಳ ಕಷ್ಟದ ಕೆಲಸ.ಇದಕ್ಕಾಗಿ ನಾವು ಹೊರಗೆ ಬೆಳೆಸಿಕೊಂಡ  ಅಸಂಖ್ಯಾತ  ಜಾತಿ ಧರ್ಮ ದೇವರುಗಳ  ತಂಟೆಗೆ ಹೋಗದೆ ರಾಜಕೀಯದಿಂದ ದೂರವಿದ್ದು ಪರಮಾತ್ಮ ನಮಗೆ ಕೊಟ್ಟಿರುವ  ಧರ್ಮ ಕರ್ಮ ಕ್ಕೆ ಋಣಿಯಾಗಿ ಸತ್ಸೇವೆ ಸತ್ಸಂಗದಲ್ಲಿ ಜೀವನ ನಡೆಸಬೇಕು.
ಹಿಂದೆ ದಾಸ ಶರಣರು ಮಹಾತ್ಮರುಗಳು  ಯೋಗದಿಂದ ದೇವರನ್ನು ಕಂಡಿದ್ದರೆ ಇಂದು ನಾವು ಭೋಗಕ್ಕಾಗಿ ದೇವರನ್ನು ಬೇಡುತ್ತಾ ಸಾಲದಲ್ಲಿ  ಜೀವನ ನಡೆಸೋ ಪರಿಸ್ಥಿತಿ  ತಂದುಕೊಂಡು  ಅದೇ ದೇವರನ್ನು ಸಾಲ ತೀರಿಸಲು ಆಳಲು ಹೊರಟರೆ  ದೇವರು  ಕಾಣದಿದ್ದರೂ  ಅಸುರರು ಬೆಳೆಯುವರು. 
ರಾಜಕೀಯ ಸರಿಯಿಲ್ಲ  ಎನ್ನುವ  ಜನರಿಗೆ ರಾಜಕೀಯ ಎಂದರೆ ಏನೆಂಬ ಅರಿವಿದ್ದರೆ ಉತ್ತಮ.
ಇನ್ನೊಬ್ಬರನ್ನು ಆಳೋದೇ ರಾಜಕೀಯವಾಗಿರುವ ಇಂದು ತನ್ನ ತಾನರಿತು ನಡೆಯೋ ರಾಜಯೋಗದ ಅರಿವಿಲ್ಲದಿರೋದು ದುರಂತವಷ್ಟೆ.
ದೇವರಿದ್ದರೆ ಇಷ್ಟು ಭ್ರಷ್ಟಾಚಾರ ಹೇಗೆ ಬೆಳೆಯಿತು? ಇಷ್ಟು ಅಸುರಿಗುಣ ಮಾನವನಲ್ಲಿ ಹೇಗೆ ಮನೆ‌ಮಾಡಿತು?
ಇದಕ್ಕೆ ಕಾರಣ ಮಾನವನ ಅತಿಯಾದ ರಾಜಕೀಯ ಬುದ್ದಿ ಸ್ವಾರ್ಥ ಅಹಂಕಾರದ ‌ ವ್ಯವಹಾರಿಕ ಜ್ಞಾನ. ವ್ಯವಹಾರಕ್ಕೆ ಇಳಿದಾಗ ಹಣ ಮಾತ್ರ ಕಾಣೋದು ಜ್ಞಾನದ ದುರ್ಭಳಕೆ ಆದಷ್ಟೂ ಅಜ್ಞಾನ ಬೆಳೆಯುತ್ತದೆ. ಅಂದರೆ ಕಲಿಯುಗದಲ್ಲಿ ಕಲಿಕೆಯೇ  ಅಸತ್ಯದೆಡೆಗೆ ನಡೆದಾಗ ತಲೆಗೆ ತುಂಬಿದ ವಿಷಯವೇ  ಮಾನವನ ನಡೆ ನುಡಿಯಾಗಿ  ನಾನೇ ದೇವರು ಎನ್ನುವ ಅರ್ಧ ಸತ್ಯದಲ್ಲಿ ತಾನೂ ಮುಂದೆ ಹೋಗದೆ ಅನ್ಯರನ್ನೂ  ಸರಿದಾರಿಯಲ್ಲಿ ನಡೆಯಲು ಬಿಡದೆ ಮಧ್ಯೆ ನಿಂತು ಆಳೋದೇ ಸಾಧನೆ ಎನ್ನುವನು.
ಮಧ್ಯಮ ವರ್ಗ, ಮಾಧ್ಯಮ, ಮಾನವ, ಮಹಿಳೆ,ಮಕ್ಕಳ ಈ ಸ್ಥಿತಿಗೆ  ಮೇಲಿರುವ ದೇವರು ಕಾರಣನೆ ಅಥವಾ ಕೆಳಗಿಳಿದ ಅಸುರರೆ? 
ಇಬ್ಬರಿಗೂ ಒಂದೇ ಸ್ಥಾನಮಾನ ಕೊಟ್ಟು ಸಹಕರಿಸಿರುವ ಮನುಷ್ಯನೇ  ಎಲ್ಲದ್ದಕ್ಕೂ ಕಾರಣವಾದಾಗ ಅದರ ಫಲವನ್ನು ಅವನೇ ಉಣ್ಣಬೇಕೆನ್ನುತ್ತದೆ ಕರ್ಮ ಸಿದ್ದಾಂತ.
ಸಿದ್ದರನ್ನು  ಹಿಡಿದು ಯೋಗಿ ಯಾಗೋದು ಕಷ್ಟ.
ಆದರೆ ಅವರ ಹೆಸರನ್ನು ಹಿಡಿದು ತಾನೇ ಯೋಗಿ ಎಂದು ಪ್ರಸಿದ್ದರಾಗೋದು ಸುಲಭ. ಹಣ ಅಧಿಕಾರ ಸ್ಥಾನ ವಿದ್ದರೆ ಜನ ಬಲ ಹಣಬಲವೂ‌  ಬೆಳೆದು  ಅದೇ ಮುಂದೆ ದೇವರಿಲ್ಲ ನಾನೇ ಎಲ್ಲಾ ಎನ್ನುವ ಹಂತಕ್ಕೆ ತರುತ್ತದೆ.
ರಾಮಾಯಣ ದಿಂದ ರಾಮನ ನಡೆಯನ್ನು ಅರ್ಥ ಮಾಡಿಕೊಂಡು ಯೋಗಿಯಾಗಬಹುದು.ಶ್ರೀ ರಾಮಚಂದ್ರನ ಪ್ರಜಾಪರಿಪಾಲನೆ ಧರ್ಮ ಪರಿಪಾಲನೆ  ಇಂದಿನ ಪ್ರಜಾಪ್ರಭುತ್ವದಲ್ಲಿ  ಅರ್ಥ ಮಾಡಿಕೊಳ್ಳಲು  ಸಾಮಾನ್ಯರಂತೆ ಬದುಕಿರಬೇಕಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಾಮಾನ್ಯ ಪ್ರಜೆಗಳೇ ಹೀಗಿರುವಾಗ ‌ಇಲ್ಲಿ ರಾಜರು ಯಾರು?
ರಾಮರಾಜ್ಯದ ಹೆಸರಿನಲ್ಲಿ ಎಷ್ಟು ದೇವಸ್ಥಾನ‌ಕಟ್ಟಿದರೂ ದೈವತ್ವದ ಶಿಕ್ಷಣ ನೀಡದೆ ಜನರನ್ನು ದಾರಿತಪ್ಪಿಸಿ ಆಳಿದರೆ ಅಧರ್ಮ ಕ್ಕೆ ಜಯ.
ಇದನ್ನು  ಪ್ರಗತಿಪರ ಎನ್ನುವವರು ಅರ್ಥ ಮಾಡಿಕೊಳ್ಳಲು ಕಷ್ಟ.ಕಾರಣ ಜನರೆ ಅವರನ್ನು ಎತ್ತಿ ಏಣಿಗೇರಿಸಿ ಮೇಲಕ್ಕೆ ಕೂರಿಸಿ  ಅಧಿಕಾರ ಕೊಟ್ಟಿರುವಾಗ  ಹೊರಗೆ ತಳುಕುಬಳುಕಿನ ಜೀವನ. ಒಳಗಿರುವ ಅಸಮಾನತೆಯ ಶಿಕ್ಷಣ ಜ್ಞಾನ, ಅಜ್ಞಾನದ  ಭೋಗದ ಜೀವನದಲ್ಲಿ ದೇವರು ಕಾಣೋದಿಲ್ಲ. ಹೀಗಾಗಿ ದೇವರನ್ನು ಆಳೋದಕ್ಕೆ  ಜನರನ್ನು ಬಳಸುವರು. ಸತ್ಯವೇ ದೇವರೆನ್ನುವರು,ಧರ್ಮ ವೇ ದೇವರೆನ್ನುವರು, ಹಾಗಾದರೆ ಸತ್ಯ ಎಲ್ಲಿದೆ ಧರ್ಮ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದರೆ ಸಿಗದು.
ಆತ್ಮಾವಲೋಕನದಿಂದ  ಅಧ್ಯಾತ್ಮ ಸಂಶೋದನೆ ಮಾಡಿಕೊಂಡರೆ  ವಾಸ್ತವದಲ್ಲಿ  ನಾವೆತ್ತ ಸಾಗಿದ್ದೇವೆನ್ನುವುದು  ಒಳಗೇ ಅರ್ಥ ವಾಗುತ್ತದೆ. ನಮ್ಮದೇ ಸಹಕಾರದಿಂದ  ಬೆಳೆದಿರುವ ದೇವಾಸುರರು  ನಮಗೇ ಕಾಣದಿದ್ದರೆ ಏನರ್ಥ?
ಈ ಪೋಸ್ಟ್ ಹಂಚಿಕೊಳ್ಳಲು  ನಮಗೆ ದೇವರು ಮನಸ್ಸು ಕೊಡಬೇಕು. ಅಸುರರು  ಒಳ್ಳೆಯದಕ್ಕೆ ಸಹಕರಿಸೋದಿಲ್ಲ ಹೀಗಾಗಿ ಸತ್ಯ ಹಿಂದುಳಿದು ಮಿಥ್ಯ ಹೊರಗೆ ಓಡುತ್ತಿದೆ.
ಎಷ್ಟು ಓಡಿದರೂ ಒಂದೇ ಸತ್ಯದಡಿ ನಿಲ್ಲಬೇಕೆನ್ನುವುದು ಪರಮಾತ್ಮನ ಇಚ್ಚೆ.

ಹಣ ಅಧಿಕಾರ ಸ್ಥಾನವಿದ್ದರೆ  ದೇವರಾಗುವರೆ? ಇಲ್ಲದಿದ್ದರೆ  ಮಾನವರೆ? ಹಾಗಾದರೆ ಅಸುರರು ಯಾರು? ಉತ್ತರ ತಿಳಿದವರು ತಿಳಿಸಬಹುದು..ಕಾರಣ ಉತ್ತರ ತಿಳಿದೂ ತಿಳಿಸದೆ  ಅಸುರರ ಹಿಂದೆ ನಡೆದವರಿಗೆ ದೇವರು ಕಂಡಿಲ್ಲ. ಅಧಿಕಾರ ಸ್ಥಾನ ಹಣ ಸಿಕ್ಕಿದೆಯಷ್ಟೆ.

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕ

ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ
ಪ್ರಶ್ನೋತ್ತರಮಾಲಿಕಾ , ಬದುಕಿನಲ್ಲಿ ಏನನ್ನು
ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ
ಸುಂದರ , ಸರಳವಾಗಿ ತಿಳಿಸುತ್ತದೆ..

ಈ ಲೇಖನವನ್ನು ತಪ್ಪದೇ ಓದಿ..

ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..?
ಪೂಜ್ಯರೇ ಜೀವನದಲ್ಲಿ
ಏನನ್ನು ಅನುಸರಿಸಬೇಕು ?
ಉತ್ತರ - ಗುರುವಚನಮ್
ಜೀವನದಲ್ಲಿ ಗುರು-ಹಿರಿಯರ
ಮಾತನ್ನು ಅನುಸರಿಸಬೇಕು.

ಪ್ರಶ್ನೆ - ಕಃ ಪಥ್ಯತರಃ ?
ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ?
ಉತ್ತರ - ಧರ್ಮಃ
ಧರ್ಮವೇ ಹಿತಕರವಾದದ್ದು.

ಪ್ರಶ್ನೆ - ಕಿಮ್ ವಿಷಮ್ ?
ಯಾವುದು ವಿಷ ?
ಉತ್ತರ - ಅವಧೀರಣಾ ಗುರುಷು
ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ.

ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ?
ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ
ಯಾವುದು ?
ಉತ್ತರ - ಸ್ವಪರಹಿತಾಯ ಉದ್ಯತಂ ಜನ್ಮ
ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ
ಜೀವನವನ್ನು ತೊಡಗಿಸಿಕೊಳ್ಳುವುದು.

ಪ್ರಶ್ನೆ - ಕೇ ಚ ದಸ್ಯವಃ ?
ಕಳ್ಳರು ಯಾರು ?
ಉತ್ತರ - ವಿಷಯಾಃ
ಸುಖಪಭೋಗ
ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ
ಮನಸನ್ನು
ಅಪಹರಿಸುತ್ತವೆ )

ಪ್ರಶ್ನೆ - ಕೋ ವೈರೀ ?
ನಮ್ಮ ಶತ್ರು ಯಾರು ?
ಉತ್ತರ - ಯಸ್ತು ಅನುದ್ಯೋಗಃ
ನಿರುದ್ಯೋಗವೇ ನಮ್ಮ ಶತ್ರು.

ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ?
ಶ್ರೇಷ್ಠತೆಯ ಮೂಲ ಯಾವುದು ?
ಉತ್ತರ - ಯತ್ ಏತತ್ ಅಪ್ರಾರ್ಥನಮ್ ನಾಮ ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ
ಶ್ರೇಷ್ಠತೆ

ಪ್ರಶ್ನೆ - ಕಿಮ್ ದುಃಖಮ್ ?
ದುಃಖವೆಂದರೇನು..?
ಉತ್ತರ - ಅಸಂತೋಷಃ
ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ.

ಪ್ರಶ್ನೆ - ಕಿಮ್ ಜಾಡ್ಯಮ್ ?
ಆಲಸ್ಯತನವು ಯಾವುದು ?
ಉತ್ತರ - ಪಾಠತೋSಪಿ ಅನಭ್ಯಾಸಃ
ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ
ಮಾಡದಿರುವುದು.

ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ 
ಕಿಮ್ ?
ಕಮಲದ ಎಲೆಯ ಮೇಲಿನ ನೀರಿನಂತೆ
ಚಂಚಲವಾದದ್ದು ಯಾವುದು ?
ಉತ್ತರ - ಯೌವ್ವನಂ - ಧನಂ ಚ ಆಯುಃ
ತಾರುಣ್ಯ,ಸಂಪತ್ತು ಮತ್ತು ಆಯುಷ್ಯ
ಇವು ಕಮಲದ ಎಲೆ ಮೇಲಿನ ನೀರಿನಂತೆ
ಚಂಚಲವಾದವುಗಳು.

ಪ್ರಶ್ನೆ - ಕಿಮ್ ಚ ಅನರ್ಘಮ್ ?
ಬೆಲೆ ಕಟ್ಟಲಾಗದ್ದು ಯಾವುದು ?
ಉತ್ತರ - ಯದವಸರೇ ದತ್ತಮ್ ?
ಸರಿಯಾದ ಸಮಯದಲ್ಲಿ ಅನ್ಯರಿಗೆ ದಾನ ಮಾಡಿದ್ದು.

ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ?
ಸಾಯುವವರೆಗೂ ಬಾಣದಂತೆ
ಚುಚ್ಚುತ್ತಲೇ ಇರುವುದು ಯಾವುದು ?
ಉತ್ತರ - ಪ್ರಚ್ಛನ್ನಂ ಯತ್ ಕೃತಂ ಪಾಪಮ್
ಬಚ್ಚಿಟ್ಟುಕೊಂಡ ಪಾಪಕಾರ್ಯ
ಸಾಯುವವರೆಗೂ ಬಾಣದಂತೆ
ಚುಚ್ಚತ್ತಲೇ ಇರುತ್ತದೆ .

ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ?
ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
ಉತ್ತರ - ವಿದ್ಯಾಭ್ಯಾಸೇ ಸದೌಷಧೇ ದಾನೇ
ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ
ಮತ್ತು ದಾನ ಮಾಡುವಲ್ಲಿ ಪ್ರಯತ್ನ
ಮಾಡಬೇಕು..

ಪ್ರಶ್ನೆ - ಕೇನ ಜಿತಂ ಜಗದೇತತ್ ?
ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?
ಉತ್ತರ - ಸತ್ಯ-ತಿತಿಕ್ಷಾವತಾ ಪುಂಸಾ
ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ
ಜಗತ್ತನ್ನು ಗೆಲ್ಲುತ್ತಾನೆ.

ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ?
ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
ಉತ್ತರ - ಸತ್ಯ-ಪ್ರಿಯಭಾಷಿಣೋ ವಿನೀತಸ್ಯ
ಪ್ರಾಣಿ
ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ
ವಿನಯಶಾಲಿಯ ವಶದಲ್ಲಿ ಇರುತ್ತದೆ.

ಪ್ರಶ್ನೆ - ಕ್ವ ಸ್ಥಾತವ್ಯಮ್ ?
ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
ಉತ್ತರ - ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -
ಲಾಭಾಢ್ಯೇ
ದೃಷ್ಟ ಮತ್ತು ಅದೃಷ್ಟ
(ಕಂಡು ಕಾಣದ )ಲಾಭದಿಂದ ಸಮೃದ್ಧವಾದ
ನ್ಯಾಯಯುತವಾದ
ಮಾರ್ಗದಲ್ಲಿ ಸದಾ ನಿಲ್ಲಬೇಕು.

ಪ್ರಶ್ನೆ - ಕಿಮ್ ದಾನಮ್ ?
ದಾನವು ಯಾವುದು ?
ಉತ್ತರ - ಅನಾಕಾಂಕ್ಷಮ್
ಪ್ರತಿಫಲವನ್ನು ಬಯಸದೇ ಮಾಡಿದ
ದಾನವೇ ನಿಜವಾದ ದಾನವು .

ಪ್ರಶ್ನೆ - ಕಿಮ್ ಮಿತ್ರಮ್ ?
ನಿಜವಾದ ಮಿತ್ರನು ಯಾರು ?
ಉತ್ತರ - ಯೋ ನಿವಾರಯತಿ ಪಾಪಾತ್
ಪಾಪ ಕಾರ್ಯಗಳನ್ನು ಮಾಡದಂತೆ
ತಡೆಯುವನು ನಿಜವಾದ ಮಿತ್ರನು.

ಪ್ರಶ್ನೆ - ಕಿಮ್ ಶೋಚ್ಯಮ್ ?
ದುಃಖಕರವಾದುದು ಯಾವುದು ?
ಉತ್ತರ - ಕಾರ್ಪಣ್ಯಮ್
ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು..

ಪ್ರಶ್ನೆ - ಕಃ ಪರಿಹರ್ಯೋ ದೇಶಃ ?
ಎಂತಹ ದೇಶದಿಂದ ದೂರ ಇರಬೇಕು ?
ಉತ್ತರ - ಪಿಶುನಯುತೋ ಲುಬ್ಧಭೂಪಶ್ಚ
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ
ರಾಜನುಳ್ಳ ದೇಶವನ್ನು ತೊರೆಯಬೇಕು.

ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ?
ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ?
ಉತ್ತರ - ಸತ್ಯಪಿ ಭುವನೇ ಯೋ ನ ದಾತಾ
ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ.

ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ?
ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಉತ್ತರ - ಭಗವಚ್ಚರಣಮ್ ನ ಸಂಸಾರಃ
ಹಗಲಿರುಳು ಪರಮಾತ್ಮನ ಚರಣದ ಚಿಂತೆ
ಮಾಡಬೇಕೇ ವಿನಃ ಸಂಸಾರವನ್ನಲ್ಲ .

ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ?
ಮಾನವರು ಏನನ್ನು ಸಂಪಾದಿಸಬೇಕು ?
ಉತ್ತರ - ವಿದ್ಯಾ , ವಿತ್ತಮ್ , ಬಲಂ , ಯಶಃ ,
ಪುಣ್ಯಮ್
ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ
ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .

ಪ್ರಶ್ನೆ - ಕಃ ಸರ್ವಗುಣವಿನಾಶೀ ?
ಎಲ್ಲ
ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಉತ್ತರ - ಲೋಭಃ
ಲೋಭವು ಸರ್ವ ಗುಣಗಳನ್ನು ನಾಶ
ಪಡಿಸುವಂತಹದು.

ಪ್ರಶ್ನೆ - ಶತ್ರುಶ್ಚ ಕಃ ?
ವೈರಿಯು ಯಾರು ?
ಉತ್ತರ - ಕಾಮಃ
ಕಾಮವೇ ವೈರಿಯು .

ಪ್ರಶ್ನೆ - ಕಾ ಸುರಕ್ಷ್ಯಾ
ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
ಉತ್ತರ - ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ
ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ
ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ .

ಪ್ರಶ್ನೆ - ಕಾ ಕಲ್ಪಲತಾ ಲೋಕೇ ?
ಜಗತ್ತಿನ್ನಲ್ಲಿ ಕಲ್ಪಲತೆ ಯಾವುದು ?
(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ಬಳ್ಳಿ )
ಉತ್ತರ - ಸಚ್ಛಿಷ್ಯಾಯ ಅರ್ಪಿತಾ ವಿದ್ಯಾ
ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು
ಜಗತ್ತಿನಲ್ಲಿ ಕಲ್ಪಲತೆ .

ಪ್ರಶ್ನೆ - ಪಾತಕಂ ಚ ಕಿಮ್ ?
ಪಾತಕವು ಯಾವುದು ?
ಉತ್ತರ - ಹಿಂಸಾ
ಹಿಂಸೆಯೇ(ಕ್ರೂರತೆ) ಪಾತಕವು.

ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ?
ಒಳ್ಳೆಯವನಿಗೆ ಸಾವಿಗಿಂತಲೂ
ಹೆಚ್ಚು ದುಃಖದಾಯಕ ಯಾವುದು ?
ಉತ್ತರ - ದುರ್ಯಶೋ ಭವತಿ
ಅಪಕೀರ್ತಿಯು ಮರಣಕ್ಕಿಂತಲೂ
ಹೆಚ್ಚು ದುಃಖದಾಯಕ.

ಪ್ರಶ್ನೆ - ಕೋ ವರ್ಧತೇ ?
ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
ಉತ್ತರ - ವಿನೀತಃ
ವಿನಮ್ರ ನಾದವನು (ವಿನಯಶಾಲಿಯು )
ಪ್ರಗತಿಯನ್ನು ಹೊಂದುತ್ತಾನೆ .

ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ?
ದೇಹಿಗಳಿಗೆ (ಮನುಷ್ಯರಿಗೆ)
ಭಾಗ್ಯವು ಯಾವುದು ?
ಉತ್ತರ - ಆರೋಗ್ಯಮ್
ಆರೋಗ್ಯವೇ ಭಾಗ್ಯವು .

ಪ್ರಶ್ನೆ - ಕೋ ಜಗದ್ಭರ್ತಾ ?
ಜಗತ್ತಿನ ಸಂರಕ್ಷಕನ್ಯಾರು ?
ಉತ್ತರ - ಸೂರ್ಯಃ
ಸೂರ್ಯ.

ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ?
ಎಲ್ಲರ ಬದುಕಿಗೆ ಕಾರಣನು ಯಾರು ?
ಉತ್ತರ - ಸ ಪರ್ಜನ್ಯಃ
ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು .

ಪ್ರಶ್ನೆ - ಕಃ ಶೂರಃ ?
ಶೂರನು ಯಾರು ?
ಉತ್ತರ - ಯೋ ಭೀತತ್ರಾತಾ
ಭೀತನಾದವನನ್ನು ಕಾಪಾಡುವವನು ಶೂರನು .

ಪ್ರಶ್ನೆ - ತ್ರಾತಾ ಚ ಕಃ ?
ಮತ್ತೆ ಕಾಪಾಡುವವನು ಯಾರು ?
ಉತ್ತರ - ಸ ಗುರುಃ
ಗುರುವೇ ಕಾಪಾಡುವವನು.

ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ?
ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
ಉತ್ತರ - ಮಾತಾ
ತಾಯಿಯೇ ಪ್ರತ್ಯಕ್ಷ ದೇವತೆಯು .

ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ?
ಪೂಜ್ಯ ಗುರುವು ಯಾರು ?
ಉತ್ತರ - ತಾತಃ
ತಂದೆಯೇ ಪೂಜ್ಯ ಗುರುವು .

ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ?
ಅನ್ನದಾನಕ್ಕೆ ಅರ್ಹನಾರು ?
ಉತ್ತರ - ಕ್ಷುಧಿತಮ್
ಹಸಿದವನು ಅನ್ನದಾನಕ್ಕೆ ಅರ್ಹನು .

ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಜೀವನದಲ್ಲಿ ಇಷ್ಟು ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡರೆ ಸಾಕು..
ತತ್ವಜ್ಞಾನವನ್ನರಿಯಲು
ಇನ್ನ್ಯಾವ ಶಾಸ್ತ್ರ-ಪುರಾಣಗಳ ಅಗತ್ಯತೆಯಿಲ್ಲ..

ಆ ವಿಷ್ಣುವನ್ನೇ ಕೇಳುವ ಶಕ್ತಿ ಮಾನವನಿಗಿದೆಯೆ?

"ಹೋಗಿ ನಿನ್ನ ದೇವರಾದ ವಿಷ್ಣುವಿಗೇ ಕೇಳು" ಈ ವಾಕ್ಯವನ್ನು ನಾವು‌ಪುರಾಣ ಕಥೆಗಳಲ್ಲಿ ಹೇಳಿದ್ದನ್ನು ತಿಳಿದಿದ್ದೇವೆ. ಅಂದು ದೇವರನ್ನು  ನೋಡಲಾಗದವರು  ದೇವರಿಗೇ ಗೊತ್ತು ಅವನೇ ಎಲ್ಲದ್ದಕ್ಕೂ ಉತ್ತರ ಕೊಡಬೇಕು..ಎಂದೆಲ್ಲಾ ಹೇಳಿ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಿದ್ದರು. ಈಗಲೂ ಇದೇ ನಡೆಯುತ್ತಿದೆ  ಆದರೆ  ಇಂದು ಸ್ವಯಂ ತಾವೇ ಶ್ರೇಷ್ಠ ಎನ್ನುವ ಅಹಂಕಾರ ಬೆಳೆದಿದೆಯಷ್ಟೆ.
ಇಷ್ಟಕ್ಕೂ ದೇವರನ್ನು ತೋರಿಸುವವರು ಎಲ್ಲಿರುವರು?
ಅಂದಿನ ಮಹರ್ಷಿಗಳು ಮಕ್ಕಳಲ್ಲಿನ ದೈವತ್ವವನ್ನು ಬೆಳೆಸುವ ಶಿಕ್ಷಣ ನೀಡಿ  ಸ್ವಯಂ ಗುರುದೇವರಾಗಿದ್ದರು. 
ನ್ಯಾಯ ನೀತಿ ಧರ್ಮ ಸಂಸ್ಕೃತಿಯಿಂದ ದೇವರನ್ನು ಕಾಣಬೇಕೆನ್ನುವ ಸನಾತನ ಧರ್ಮ  ಇಂದು ಹಿಂದುಳಿದವರನ್ನು  ಹಣದಿಂದ ಮೇಲೆತ್ತುವ ಹರಸಾಹಸಕ್ಕೆ ಇಳಿದು  ಇನ್ನಷ್ಟು ಅಜ್ಞಾನ  ಹೆಚ್ಚು ಮಾಡಿದೆ ಎಂದರೆ ಅರ್ಥ ಆದವರು ಮಾತನಾಡೋದಿಲ್ಲ.ಆಗದವರು  ಮಾತಿಗಿಳಿಯಲಾರರು.
ಎಲ್ಲರ‌ಮನೆ ದೋಸೆ ತೂತು ಎಂದಂತೆ ನಮ್ಮ ದೇಶದ ಕಾವಲಿಯನ್ನೇ ತೂತು ಮಾಡಿ ಆಳುವವರಿಗೆ  ಇವೆಲ್ಲವೂ  ಮನರಂಜನೆಯಾಗುತ್ತಿದೆ. 
ಅಂದಿನ‌, ನಚಿಕೇತ,ದ್ರುವ,ಪ್ರಹ್ಲಾದರಂತಹ ಮಹಾಭಕ್ತರು
ಇಂತಹ  ಹೇಳಿಕೆಯನ್ನು  ಸ್ವಯಂ ಪ್ರಕಾಶಕರಾಗಿ ಮಹಾವಿಷ್ಣುವಿನ ಭಕ್ತರಾದರು. ನಚಿಕೇತನಂತೂ ಯಮನ ದರ್ಶನ ಮಾಡಿ ಧರ್ಮ ಜ್ಞಾನಿಯಾದ .ಇಂತಹ  ಪುರಾಣ ಕಥೆ
ಇಂದಿನ‌ಮಕ್ಕಳಿಗೆ  ತಿಳಿಸುವುದಿರಲಿ  ಪೋಷಕರೆ ಕೇಳಿಸಿಕೊಳ್ಳದ ಪರಿಸ್ಥಿತಿ ಯಿದೆ. 
ನ್ಯಾಯ ದೇವತೆಗೆ ಕಣ್ಣಿಗೆ ಬಟ್ಟೆ ಕಟ್ಟಿರುವ. ಹಿಂದಿನ ಉದ್ದೇಶ
ನ್ಯಾಯವನ್ನು  ಸಮಾನವಾಗಿ  ಯಾವುದೇ ಜಾತಿ ಪಂಗಡ ಪಕ್ಷ, ಮತ ಬೇದವಿಲ್ಲದೆ ನೀಡೋದಾದರೆ ಈಗ ನಡೆದಿರೋದು ಏನು? 
ಎಲ್ಲಾ ಹಣ ಅಧಿಕಾರ ಸ್ಥಾನಕ್ಕೆ ಸೀಮಿತವಾಗಿ ಎಲ್ಲರನ್ನೂ ನಡೆಸುತ್ತಿರುವ  ಮಹಾವಿಷ್ಣುವನ್ನೇ ನ್ಯಾಯ ಕೇಳಿ ಎನ್ನುವ ಮಟ್ಟಿಗೆ ನ್ಯಾಯಾಧೀಶರು ಹೇಳುವ ಮೂಲಕ  ಜನರಲ್ಲಿ  ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆನ್ನಬಹುದೆ?

ಒಂದಂತೂ ಸತ್ಯ ಕೆಳಗಿನ ನ್ಯಾಯಾಲಯಕ್ಕೆ ಪರಮಾತ್ಮ ಕಾಣದಿದ್ದರೂ ಮೇಲಿನ  ನ್ಯಾಯಾಲಯವೇ  ಕೆಳಗಿನವರನ್ನು ನಡೆಸಿರೋದು. ಹೀಗಿರುವಾಗ ಮಾನವರಾದವರು ದೇವರನ್ನು  ನ್ಯಾಯದಿಂದ ಗೆಲ್ಲಬೇಕೆ ಅನ್ಯಾಯದಿಂದಲೆ ಎಂದು ಸಾಮಾನ್ಯ ಜ್ಞಾನ ಬಳಸಿದರೆ ಆಗೋದೆಲ್ಲಾ ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು.
ಭಗವಂತನಿಗೇಕೆ ಆಲಯ? ಭಗವಂತನಿಗೇಕೆ ನ್ಯಾಯ?
ಎಲ್ಲಾ ಬೇಕಾಗಿರೋದು ಮಾನವನಿಗಷ್ಟೆ. ಹೀಗಾಗಿ  ಯಾವುದೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳದೆ ವಾದ ವಿವಾದಕ್ಕೆ  ಇಳಿದರೆ  ಇರುವ ಅಲ್ಪ ಸ್ವಲ್ಪ ಶಾಂತಿ ಭಂಗ ಆಗುತ್ತದೆ.
ಹೊರಗಿನ ನ್ಯಾಯಾಲಯದಲ್ಲಿ ಎಷ್ಟು ಹಣಕೊಟ್ಟು ಗೆದ್ದರೂ ಮೇಲಿರುವ ನ್ಯಾಯಾಲಯಕ್ಕೆ ವಿರುದ್ದ ತೀರ್ಪು ನೀಡಿದ್ದರೆ ಶಿಕ್ಷೆ  ಆಗೋದನ್ನು ತಡೆಯಲಾಗದು.
ಅವರು ದೇವರೇ ಇರಲಿ ಮಾನವರೆ ಇರಲಿ ಅಸುರರೆ ಇರಲಿ ಎಲ್ಲರಿಗೂ ಒಂದೇ ನ್ಯಾಯಾಲಯ. 
ಹಿಂದೆಯೂ ಎಷ್ಟೋ ದೇವತೆಗಳು ಇದೇ ಭೂಮಿಯಲ್ಲಿ ಅವತರಿಸಿದ್ದರೂ ಕಷ್ಟ ನಷ್ಟ ತಪ್ಪಿರಲಿಲ್ಲ. ಈಗ ದೇವರ ಮೂರ್ತಿ  ಪುನ: ಪ್ರತಿಷ್ಟಾಪಿಸಲು  ನ್ಯಾಯಲಯದ ಅನುಮತಿ  ಬೇಡುವ ಪರಿಸ್ಥಿತಿ ಬಂದಿರೋದು  ಭಗವಂತನ ಇಚ್ಚೆಯೆ?
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು. ಅದರಲ್ಲಿ  ಹುಲುಮಾನವರೂ ಇರುವರು.
ಈ ರೀತಿಯಲ್ಲಿ ಯಾರೂ ಚಿಂತನೆ ನಡೆಸಲಾರರು. ಹೀಗಾಗಿ ಪ್ರತಿಯೊಂದು  ರಾಜಕೀಯರೂಪ ತಳೆದು ಆಳುತ್ತಿದೆ.

Friday, October 3, 2025

ಜಗನ್ಮಾತೆಯ ಆರಾಧನೆಯಿಂದ ಜ್ಞಾನೋದಯ

ಸ್ತ್ರೀ ಶಕ್ತಿಯನ್ನು ಜ್ಞಾನದಿಂದ ಗೆಲ್ಲಬಹುದೆ
ಹೊರತು ವಿಜ್ಞಾನದಿಂದ  ಕಷ್ಟ.
ಪುರಾಣ,ಇತಿಹಾಸದ ಕಥೆಗಳಲ್ಲಿ ನಾವು ಕಾಣುವ ಸ್ತ್ರೀ ಶಕ್ತಿ
ಅವಳ ಜ್ಞಾನವನ್ನು  ತೋರಿಸುತ್ತದೆ. ಪುರುಷರು  ಜ್ಞಾನಿಗಳಾಗಿ ಧರ್ಮದ ಪರವಾಗಿದ್ದ ಕಾರಣ ಎಷ್ಟೋ ಕಷ್ಟ ನಷ್ಟಗಳನ್ನು ಅನುಭವಿಸಿ ದೈವತ್ವ ಪಡೆದಿದ್ದಾರೆ. ಅಲ್ಲಿಯೂ
ಪುರುಷರ ರಾಜಕೀಯತೆಗೆ ಬಲಿಯಾದ ಸ್ತ್ರೀ ಶಕ್ತಿ ತನ್ನ ರೌದ್ರ
ರೂಪ ತೋರಿಸಿ  ಜೀವ ಬಲಿ,ಪ್ರಾಣ ಬಲಿಗಳಾಗಿರೋದನ್ನು
ನಾವು ಕಾಣುತ್ತೇವೆ.
ಅಂದಿನಿಂದ ಇಂದಿನವರೆಗೂ  ಭೂಮಿಯನ್ನು  ಅರ್ಥ ಮಾಡಿ ಕೊಳ್ಳದೆ ರಾಜಕೀಯ ನಡೆಸಿದವರು  ಈಗಲೂ ಅದೇ‌ಸರಿ ಎಂದು ವಾದ ಮಾಡಿದರೆ  ನಷ್ಟ ಯಾರಿಗೆ?
ಭೂಮಿಯ ಮೇಲೆ ಜೀವನ ಮಾಡಲು ಕಲಿಯದ ಮೇಲೆ ಆಕಾಶದೆತ್ತರ  ಹಾರುವ ಅಜ್ಞಾನ ಬೇಕೆ? ಜೀವ ಹುಟ್ಡಿ ಬೆಳೆದು
ನಡೆದು ಸಾಯೋದು ಭೂಮಿಯ ಮೇಲೆ.ಅದನ್ನು ತಿಳಿಯದ
ಮನುಕುಲ ಈಗ  ಸಮಸ್ಯೆಗಳಿಗೆ ಪರಿಹಾರ ಸಿಗದೆ  ಹೊರಗೆ
ಹುಡುಕುತ್ತಾ, "ಅಂಗೈಯಲ್ಲಿ ‌ಬೆಣ್ಣೆ ಇಟ್ಟುಕೊಂಡು ತುಪ್ಪ ಕ್ಕೆ
ಹುಡುಕಾಡಿದಂತೆ"  ಹೊರಗಿನ ರಾಜಕೀಯಕ್ಕೆ ಸ್ತ್ರೀ ಶಕ್ತಿಯ
ಸಹಕಾರ ಪಡೆದು ಹಿರ ನಡೆದರೆ  ಜೀವಕ್ಕೆ ಮುಕ್ತಿ ಸಿಗುವುದೆ?

ಪುರಾಣ,ಇತಿಹಾಸದ ರಾಜಾದಿರಾಜರ  ಕಥೆಗಳಲ್ಲಿ ಪುರುಷರ
ಹಿಂದೆ ಸ್ತ್ರೀ ಇರುವುದನ್ನು ಉಲ್ಲೇಖಿಸದೆ  ಪುರುಷರನ್ನಷ್ಟೇ
ದೇವರು ,ಮಹಾತ್ಮರು ಎಂದರೆ ಅರ್ಧಸತ್ಯವಷ್ಟೆ.ಇದರಲ್ಲಿ
ರಾಜಕೀಯ ಅಡಗಿದೆಯೇ ಹೊರತು ರಾಜಯೋಗವಿಲ್ಲ.

ಈಗಿನ  ನಮ್ಮ ಭಾರತದಲ್ಲಿ  ಸ್ತ್ರೀ ಯರ ಸಾಧನೆ ಹೊರಮುಖ
ಹೆಚ್ಚಾಗಿರಲು ಕಾರಣವೆ ತನ್ನ ಅಸ್ತಿತ್ವಕ್ಕೆ  ಆದ ಹಿಂದಿನ ಕಾಲದ ಅಪಚಾರ,ಅನಾಚಾರ,ಅತ್ಯಾಚಾರ, ಅನಾಧರ,ಅನಾಥ ಪ್ರಜ್ಞೆ ಈ ಜನ್ಮದಲ್ಲಿ  ಇದಕ್ಕೆ ಅವಕಾಶ  ಸಿಕ್ಕಿದಾಗ ಜೀವ ಬಿಡುವುದೆ?
ಜೀವಕ್ಕೆ ಸ್ತ್ರೀ ಪುರುಷನೆಂಬ ಬೇಧಭಾವ  ಆಧ್ಯಾತ್ಮಿಕ ದಲ್ಲಿಲ್ಲ.
ಭೂಮಿಯನ್ನು ಆಳಿದವರಲ್ಲಿ ಇದನ್ನು ಕಾಣಬಹುದು.
ಇನ್ನು ಸಂನ್ಯಾಸಿಗಳು,ಸಾದು,ಸಂತರು . .. ಹೆಣ್ಣು,ಹೊನ್ನು,ಮಣ್ಣು ಮಾಯೆ ಎಂದು ಸಂಸಾರ ತೊರೆದು
 ಹೊರನಡೆದರು. ಸಂಸಾರಕ್ಕೆ ಬಂದ ಮೇಲೆ ಕೊನೆಯವರೆಗೆ
ಈಸಬೇಕು ಇದ್ದು ಜೈಸಬೇಕು..ಎಂದಂತೆ ಇವರಲ್ಲಿ ನಾವು
ಕಾಣದೆ  ಇದೇ ಸತ್ಯ ಸ್ತ್ರೀ ಬಿಟ್ಟು ನಡೆದರೆ  ಮುಕ್ತಿ ಮೋಕ್ಷ ಎಂದು‌ ಪುರುಷರಿಗೆ ಸಹಕರಿಸುವ ಸಮಾಜ ,ಅದೇ ಸ್ತ್ರೀ
ಸಂಸಾರ ತೊರೆದು  ಆಶ್ರಮ ಸೇರಿದರೆ  ಅಧರ್ಮ ಎನ್ನುತ್ತಾರೆ.
ಅಂದರೆ, ಇಲ್ಲಿ ಕೇವಲ ಲಿಂಗ ಬೇಧ ಮಾತ್ರ ಕಾಣುತ್ತೇವೆ. ಜೀವ ಹಾಗು ಆತ್ಮ  ಇಬ್ಬರಿಗೂ ಒಂದೇ ನ್ಯಾಯ ಒದಗಿಸಿದ್ದರೂ ಭೂಮಿ ಮೇಲೆ ಇದು ನಡೆಯದ ಕಾರಣವೆ
ಇಂದಿನ ಸಮಾಜದಲ್ಲಿ  ಹೊರಗಿನ  ವಿರುದ್ದ ಹೋರಾಟ
ಹೆಚ್ಚಾಗಿದೆ. ಇದನ್ನು ಜ್ಞಾನದಿಂದ ಸರಿಪಡಿಸೋ ಬದಲು ಹಣ
ದಿಂದ ಸರಿಪಡಿಸಿದರೆ ಅಜ್ಞಾನ ಇನ್ನಷ್ಟು ಬೆಳೆದು, ಸಂಸಾರ ಬೀದಿಗೆ ಬರುತ್ತದೆ.
ಮನೆ,ಮಾಧ್ಯಮ, ಮಠ ಇದರಲ್ಲಿರುವ ಮಾನವರಲ್ಲಿ ಮನೆಯ ಒಳಗಿನ ಸ್ತ್ರೀ ಯನ್ನು ಅರ್ಥ ಮಾಡಿಕೊಳ್ಳದೆ  ಅವಳ ವಿರುದ್ದ ಮಾಧ್ಯಮ ಕ್ಕೆ ಹೋದರೆ  ಮಠಗಳಾದರೂ
ಏನು ಮಾಡಲಾಗದು.
ಮನೆಯ ಲಕ್ಮಿ ಯನ್ನು ಅಲಕ್ಷ್ಯ  ಮಾಡಿ, ಮಾಧ್ಯಮಗಳಲ್ಲಿ
ಬರುವ  ಮಹಾಲಕ್ಮೀಯ ಅವತಾರ ಹಾಕಿಕೊಂಡು ನಾಟಕ
ಮಾಡುವವರನ್ನು  ನೋಡಿ, ಮಠ ಮಠಗಳಲ್ಲಿ  ದೇವರನ್ನು
ಬೇಡಿಕೊಂಡಿದ್ದರೆ  ಹೊರಗಿನ ಲಕ್ಮಿ  ಒಳಗೆ ಬಂದರೂ ಮನೆ
ಒಳಗಿರುವ ಲಕ್ಮಿಯ ಕೋಪ ಹೆಚ್ಚಾಗಿ,ಒಂದು ದಿನ  ನಾಶ
ನಷ್ಟ ಕಟ್ಟಿಟ್ಟ ಬುತ್ತಿ.
ಕೊರೊನ ಒಂದು ಕಣ್ಣಿಗೆ ಕಾಣದ ಮಹಾಮಾರಿ. ಇದನ್ನು
ಹಣದಿಂದ ಶಾಂತಗೊಳಿಸಲಾಗದು. ಜ್ಞಾನದಿಂದ ಇದರ
ಹಿಂದಿನ ಆಧ್ಯಾತ್ಮಿಕತೆಯ  ಸತ್ಯವನ್ನು ಸೂಕ್ಷ್ಮ ವಾಗಿ ಅರ್ಥ
ಮಾಡಿಕೊಂಡರೆ  ಮನೆಯೊಳಗೆ ಹೊರಗೆ  ಓಡಾಡುತ್ತಿರುವ ಈ ಸೂಕ್ಷ್ಮ ಶಕ್ತಿಯನ್ನು ಶಾಂತಗೊಳಿಸಬಹುದು. ಆದರೆ ಇದು
ಸಾಕಷ್ಟು ಪ್ರಮಾಣದಲ್ಲಿ  ಬೆಳೆಸಿರುವುದರಿಂದ. ಯಾರ ಜೀವ
ಯಾವಾಗ ಹೋಗುವುದೆನ್ನುವುದು ಯಾರೂ ತಿಳಿಯಲು ಕಷ್ಟ. ಜೀವವನ್ನು  ಉಳಿಸುವ  ನೆಪದಲ್ಲಿ ಮಾನವನ ಜೀವನವೆ ಮುಗಿದರೆ  ಆತ್ಮಹತ್ಯೆಯಲ್ಲವೆ?  ಸಾವು ನೋವು
ಹೆಚ್ಚಾಗುವುದೆಂದು ಯುದ್ದ ಮಾಡದೆ  ಹಿಂದಿನ ರಾಜರು ಕುಳಿತರೆ?  ಆದರೂ ಇಲ್ಲಿ  ಎಲ್ಲಾ ಸಾಮಾನ್ಯರೆ ಇರುವಾಗ
ಸಾಮಾನ್ಯಜ್ಞಾನದಿಂದಲೂ ಸತ್ಯದರ್ಶನ ಮಾಡಿಸಿ,ಅವರ ಜೀವ, ಜೀವನ ನಡೆಸಲು ಬಿಡುವುದೇ ಧರ್ಮ. ಇದಕ್ಕೆ ಮಧ್ಯೆ
ರಾಜಕೀಯ ತೂರಿಸಿಕೊಂಡು ಮಧ್ಯವರ್ತಿಗಳು, ಮಾಧ್ಯಮ
ಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರೆ , ಹೊಟ್ಟೆ ಒಳಗೆ ಸೇರಿದ  ಕರ್ಮಫಲ ಒಂದು ದಿನ ಅನುಭವಿಸೋದು ಜೀವವೆ. ಇದಕ್ಕೆ ಸಹಕರಿಸಿದ  ಸ್ತ್ರೀ ಗೂ ಇದು ತಪ್ಪಿದ್ದಲ್ಲ.
ಅದಕ್ಕೆ ಸ್ತ್ರೀ ಶಕ್ತಿಯ ಜ್ಞಾನವನ್ನು ಹೆಚ್ಚಿಸಲು  ಉತ್ತಮವಾದ
ಶಿಕ್ಷಣವನ್ನು ಸ್ತ್ರೀ ಗೆ ಕೊಡಬೇಕು.ಈಗಿನ ಶಿಕ್ಷಣ ವಿಜ್ಞಾನಕ್ಕೆ
ಸೀಮಿತವಾಗಿದೆ. ಜ್ಞಾನವಿಲ್ಲದ ವಿಜ್ಞಾನ ಕುರುಡು ಪ್ರಪಂಚಕ್ಕೆ
ಸಾಕ್ಷಿಯಾಗಿದೆ. ಇಲ್ಲಿ ಯಾರೂ ಯಾರನ್ನೋ ಆಳೋ ರಾಜಕೀಯ ಬಿಟ್ಟು, ನಮ್ಮನ್ನು ನಾವೇ ಆಳಿಕೊಳ್ಳಲು ಸ್ವತಂತ್ರ
ಜ್ಞಾನದ ಅಗತ್ಯವಿದೆ. ಇದನ್ನು ನಾವೇ ಕಷ್ಟಪಟ್ಟು  ಪಡೆಯಲು
ಸ್ತ್ರೀ ಯರ ಸಹಕಾರ ಬೇಕೆಂದರೆ  ಅವಳಿಗೆ ಜ್ಞಾನ ಬೇಕಿದೆ.
ಸಾಮಾನ್ಯಜ್ಞಾನದಿಂದಲೆ ಈ ಸತ್ಯ ತಿಳಿಯಬಹುದಲ್ಲವೆ?
ನಾವ್ಯಾರು? ಭಾರತೀಯರೆ? ವಿದೇಶಿಗಳೆ?
ಅತಂತ್ರ ಭಾರತಕ್ಕೆ ಸ್ವತಂತ್ರ ಜ್ಞಾನದ ಶಿಕ್ಷಣ  ಬೇಕಿದೆ.ಅದು
ನಮ್ಮ ನಮ್ಮ ಮೂಲ ಗುರು ಹಿರಿಯರು ಬಿಟ್ಟು ನಡೆದ ಧರ್ಮ. ಹಾಗು ಕರ್ಮ(ಕಸುಬು) ದ ಒಳಗಿದೆ. ಮನೆಯಲ್ಲಿದ್ದೇ
ಸಾಧ್ಯವಾದರೆ ಬೆಳೆಸಿ, ಇಲ್ಲವಾದರೆ ಕಲಿಸಿ ಬೆಳೆಸಿ.

ದೇವರಿರೋದೆಲ್ಲಿ?

ದೇವರನ್ನು  ಒಳಗೆ ಹುಡುಕಿದವರಿಗೆ ದೇವರು ಕಂಡಿರುವರೆಂದರು ಮಹಾತ್ಮರು ಆದರೆ ಇಂದಿನ ಜನರು ದೇವರನ್ನು ಹೊರಗೆ ಹುಡುಕುತ್ತಾ ಹೊರಗೆ ಹೊರಟಿರುವರೆಂದರೆ  ದೇವರು  ಹೊರಗಿರುವನೋ ಒಳಗೋ  ಎನ್ನುವುದೇ ಜನರಿಗೆ ಅರಿವಿಲ್ಲದೆ ತಿರುಗುತ್ತಿರುವರು.  ಹಣಕೊಟ್ಟರೆ ದೇವರದರ್ಶನ ಎಂದರೆ ಹಣದಲ್ಲಿರುವನೆ ದೇವರು? ಜನಮರುಳೋ ಜಾತ್ರೆ ಯೋ ಎಂದಂತಹ   ಪರಿಸ್ಥಿತಿ ಯಲ್ಲಿ  ಜನರ ಜಾತ್ರೆ ನಡೆಯುತ್ತಿದೆ...ಕಲಿಯುಗದಲ್ಲಿ  ಜನರು ಹೇಗಿರುವರು ಅರಸರು ಹೇಗಿರುವರು ಎನ್ನುವುದನ್ನು ಶ್ರೀ ಕೃಷ್ಣ ಮೊದಲೇ ತಿಳಿಸಿದಂತೆ ಕೆಲವೆಡೆ  ತೋರಿಸುತ್ತಿದೆ. ಜನಜಾಗೃತರಾಗದೆ  ಯಾವ ದೇವರೂ  ಸರಿಪಡಿಸಲಾಗದು. ಕಾರಣ ಜನರಲ್ಲಿ ದೈವತ್ವವಿದ್ದರಷ್ಟೆ ದೇವರ ದರ್ಶ ನ ಸಾಧ್ಯ. ಅಸುರರ ವಶದಲ್ಲಿ ಇದ್ದರೆ  ಅಸುರರ ದರ್ಶನ. ಇಷ್ಟೇ ಜೀವನ.

ಎಲ್ಲಿರುವನು ಹರಿ? ಎಂದ  ಹಿರಣ್ಯಕಶ್ಯಪುವಿನ ವಧೆ  ಮಾಡೋದಕ್ಕೆ ಎಷ್ಟೋ ವರ್ಷಗಳು ಹಿಡಿದವು ಎಂದರೆ ಹಿರಣ್ಯಕಶ್ಯಪುವಿನ  ಅಧಿಕಾರ ಹಣ ಸ್ಥಾನವನ್ನು  ನೋಡಿ ಜನ ಅವನನ್ನು ದೇವರೆಂದು  ಸಹಕರಿಸಿದ್ದರು. ಇದರಲ್ಲಿ  ತಪ್ಪು ಯಾರದ್ದು? 

ಕೃತಯುಗದಲ್ಲಿದ್ದ ಪ್ರಹ್ಲಾದ ನು ಶ್ರೀ ಹರಿಯ ಒಂದು ರೂಪ.
 ಹಿರಣ್ಯಾಕ್ಷ ಹಿರಣ್ಯಕಷ್ಯಪುವಾಗಿ  ಅಸುರ ಜನ್ಮತಳೆದ   ಜಯವಿಜಯರೂ  ದೇವತೆಗಳೇ ಆಗಿದ್ದವರು. ಅಹಂಕಾರದ ಫಲವಾಗಿ  ಭೂಮಿಯಲ್ಲಿ  ಅಸುರಜನ್ಮತಾಳಬೇಕಾಯಿತೆನ್ನುವ ಪುರಾಣ. ಕಥೆ ಎಲ್ಲರಿಗೂ ತಿಳಿದಿದೆ. ಅಂದರೆ ಅಹಂಕಾರ ವೇ ದೈವತ್ವದಿಂದ ದೂರ ಮಾಡುತ್ತದೆಂದರೆ ನಮ್ಮಲ್ಲಿ ತುಂಬಿರುವ. ಈ ಶಕ್ತಿಯನ್ನು  ಯಾರು ಹೊರಹಾಕಬೇಕು? ಅಜ್ಞಾನದಿಂದ ಅಹಂಕಾರ  ಬೆಳೆದಿರುವಾಗ ಸುಜ್ಞಾನದೆಡೆಗೆ ನಡೆಯೋದೆ ಉತ್ತಮಮಾರ್ಗ. 
ಅಂದಿನ ಕಾಲದಲ್ಲಿ ರಾಜನೇ ಪ್ರಜೆಗಳಿಗೆ ದೇವರು. ಉತ್ತಮ  ಶಿಕ್ಷಣ. ನೀಡುವುದರ ಮೂಲಕ ಜನರಲ್ಲಿ ಜ್ಞಾನವಿತ್ತು.‌ ಈಗ ಹೊರಗಿನ ಜ್ಞಾನವೇ ಬಂಡವಾಳವಾಗಿ ಒಳಗೇ ಇದ್ದ ಸತ್ಯ ಧರ್ಮ ಹಿಂದುಳಿದರೆ  ದೇವರು ಕಾಣೋದಿಲ್ಲ.

ಪ್ರಜಾಪ್ರಭುತ್ವದಲ್ಲಿ  ಯಾರು ದೇವರು?

ಜೀವ ಜೀವನ ನೀಡಿದ ಪೋಷಕರನ್ನೇ  ಬಿಟ್ಟು ಹೊರಗಿನವರನ್ನು ದೇವರೆಂದರೆ  ಅಜ್ಞಾನ. ತನ್ನ ಸ್ವಂತ ಬುದ್ದಿ ಜ್ಞಾನ ವಿದ್ಯೆಗೆ  ವಿರುದ್ದ  ಕೆಲಸ ಮಾಡುತ್ತಾ ಎಷ್ಟು ಹಣಗಳಿಸಿದರೂ ಸಂತೃಪ್ತಿ ಸಮಾಧಾನ ಶಾಂತಿ ಸಿಗಲಿಲ್ಲ ಎಂದರೆ  ಯೋಗವಿಲ್ಲ ಎಂದರ್ಥ. ಅಂದರೆ ಪರಮಾತ್ಮನ ಇಚ್ಚೆಯ ವಿರುದ್ದ ಜೀವಾತ್ಮ ನ ಪಯಣ ನಡೆದಿದೆ ಎಂದರ್ಥ.
ಹೊರಗಿನ  ಸಂಬಂಧ ಒಳಗಿನ ಸಂಬಂಧ ಒಂದು ಮಾಡೋದು ಯೋಗ. ಅಂತರ ಬೆಳೆಸುತ್ತಿದೆ ಎಂದರೆ  ದಾರಿತಪ್ಪಿದೆ ಎಂದಾಗುತ್ತದೆ. ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ವು ಮಾನವನಿಗೆ ವರವಾಗಬೇಕು ಶಾಪವಾಗಬಾರದು. ಯಾವಾಗಿದು ದುರ್ಭಳಕೆ ಆಗುವುದೋ ಶಾಪವಾಗುತ್ತದೆ.ಸಾಲವಾಗುತ್ತದೆ.   ದೇವರ ಸಾಲತೀರಿಸಲು 
ದೈವತ್ವದ  ಶಿಕ್ಷಣ ಕೊಡಬೇಕು. ದೇವರನ್ನು ಆಳಲು ಹೊರಟರೆ  ತಕ್ಕ ಶಿಕ್ಷೆ ಅನುಭವಿಸಲೇಬೇಕು. 
ಜ್ಞಾನವೇ  ದೇವರು, ಅರಿವೇ ಗುರು, ಗುರುವನ್ನು  ಅರಿತ ಮೇಲೆ ದೇವರ ದರ್ಶನ. ಗುರು  ವ್ಯಕ್ತಿಯಲ್ಲ ಆತ್ಮಶಕ್ತಿ.ಎಲ್ಲರಲ್ಲಿಯೂ ಅಡಗಿದ್ದರೂ  ಎಲ್ಲರನ್ನು  ತಿಳಿದೋತಿಳಿಯದೆಯೋ ಸನ್ಮಾರ್ಗ ದಲ್ಲಿ ನಡೆಸುವ ಶಕ್ತಿ ಗುರುವಿನಲ್ಲಿದೆ.  ಗುರುವನ್ನು ಗುರುತಿಸಿಕೊಳ್ಳುವುದೇ ಜೀವನದ ಗುರಿಯಾಗಿದೆ .

ಕಲಿಯುವವರೆಗೆ ಬ್ರಹ್ಮವಿದ್ಯೆ ಕಲಿತ ಮೇಲೆ ಕೋತಿವಿದ್ಯೆಯಾದರೆ  ಜ್ಞಾನಬರೋದಿಲ್ಲ. 

ಇದರಲ್ಲಿ ದೇವಗುರು, ಮಾನವಗುರು, ಅಸುರಗುರು ಇರುವರು. ಗುಣಕರ್ಮಯೋಗದಿಂದ ಅರಿಯಬಹುದು.
ಕೃಷ್ಣಂ ವಂದೆಜಗದ್ಗುರುಂ.
ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವರೆ ಗುರುದೇವರು.
ಅಸತ್ಯದಿಂದ ಸತ್ಯದ ಕಡೆಗೆ ನಡೆಸುವವರೆ ಜಗದ್ಗುರು.
ಸದ್ಗುರುಗಳ ಸೇವೆಯಿಂದ ಪಾಪನಾಶವಾಗುತ್ತದೆ.
ಶ್ರೀ ಗುರುಭ್ಯೋ ನಮ:

Thursday, October 2, 2025

ಭೂಮಿಯಿಲ್ಲದೆ ಮನುಕುಲವಿಲ್ಲ

ಭೂಮಿ‌ ನಡೆದಿರೋದು ಸಂಸಾರಿಗಳಿಂದಲೋ ಸಂನ್ಯಾಸಿಗಳಿಂದಲೋ ಎಂದರೆ ಯಾರಿಂದಲೂ ನಡೆಯುತ್ತಿಲ್ಲ.ಇವರನ್ನು ಹೊತ್ತು ನಡೆಯುತ್ತಿದೆ ಅಷ್ಟೆ.ಇವರಲ್ಲಿ ಸತ್ವ ಗುಣವಿದ್ದರೆ ಶಾಂತಿ ಇಲ್ಲವಾದರೆ ಕ್ರಾಂತಿ.
ಕ್ರಾಂತಿಯಿಂದ  ಯಾವ ಯೋಗವೂ ಕಾಣೋದಿಲ್ಲ.ಹೀಗಾಗಿ ಪರಮಾತ್ಮನ ಜೀವಾತ್ಮ ಸೇರುವ ಯೋಗದಿಂದ ಮಾನವರು ವಂಚಿತರಾಗಿ  ಭೋಗದೆಡೆಗೆ ‌ನಡೆದಷ್ಟೂ ರೋಗದ. ಜೀವನ.

ಭ್ರಷ್ಟಾಚಾರ ಎನ್ನುವ ರೋಗವು ಈಗ ಎಲ್ಲರಲ್ಲಿಯೂ ಅಡಗಿದೆ. ಕಾರಣ  ಸಂಸಾರ ನಡೆಸಲು ಹಣ ಬೇಕು. ಸಂನ್ಯಾಸಿಯಾಗಲು ಜ್ಞಾನ‌ಬೇಕು. ಜ್ಞಾನವೇ ಇಲ್ಲದೆ ಹಣಗಳಿಸಿ  ಶ್ರೀಮಂತ ರಾದವರೂ ಸಂನ್ಯಾಸಿಗಳೆಂದರೆ  ಸಂಸಾರಿಗಳ ಗತಿಏನು?
ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಾಗಿದ್ದರೆ ಎಲ್ಲರೂ ದೇವರೆ ಆಗಬಹುದಿತ್ತು. ದೈವತ್ವವಿಲ್ಲದ ಸಂಸಾರವಾಗಲಿ ಸಂನ್ಯಾಸವಾಗಲಿ  ರಾಜಕೀಯದ ಹಿಂದೆ ನಡೆದಾಗ ಆಳೋದೆ ಗುರಿಯಾಗಿರುತ್ತದೆ. ಯಾರನ್ನು ಯಾರು ಆಳಬೇಕು? 
ರಾಜಪ್ರಭುತ್ವದ  ಕಾಲ ಹೋಗಿ ಪ್ರಜಾಪ್ರಭುತ್ವ ಬಂದರೂ ಪ್ರಜೆಗಳನ್ನು ಆಳೋದೇ  ರಾಜಕೀಯ ಎಂದರೆ  ಕಾಲ ಬದಲಾಗುತ್ತದೆ. ಕಾಲವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ.
ಆದರೂ ತಡೆಯುವ ಪ್ರಯತ್ನದಲ್ಲಿ ಸೋತವರೆ ಹೆಚ್ಚಾಗಿ ಸಂಸಾರಿಗಳ  ಕಷ್ಟ ಸಂನ್ಯಾಸಿಗಳಿಗಿಲ್ಲ ಆದರೆ ಜ್ಞಾನದ ಪ್ರಕಾರ  ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ದೂರವಿರೋದು ಸಂನ್ಯಾಸಿ ಧರ್ಮ. ಪರಮಾತ್ಮನ ದರ್ಶನ  ಸಂನ್ಯಾಸಿಗಳಿಗೆ ಆದಂತೆ ಸಂಸಾರಿಗಳಿಗೆ ಆಗದು. ಒಟ್ಟಿನಲ್ಲಿ ಇಬ್ಬರೂ ಪರಮಾತ್ಮನ ಅಧೀನರೆ  ಆದಾಗ ಅವರವರ ಧರ್ಮ ಕರ್ಮ ದಲ್ಲಿ ಸತ್ಯ ಸತ್ವ ತತ್ವವಿದ್ದರೆ ಮಾತ್ರ ಯೋಗ.ಯೋಗದಿಂದ ಜ್ಞಾನ,ಜ್ಞಾನದಿಂದ ಹಣ ಸಂಪಾದಿಸಿ ಋಣ ತೀರಿಸುವುದರಿಂದ ಭೂಮಿಯಲ್ಲಿ  ಧರ್ಮ ನೆಲೆಸುತ್ತದೆಂದು ಸನಾತನ ಹಿಂದೂ ಧರ್ಮದ ತಿರುಳಾಗಿತ್ತು.
ಹೊರಗಿನ  ಸಿಪ್ಪೆಯನ್ನೇ  ಸರಿಯಾಗಿ ಅರಿತು ನಡೆಯಲಾಗದ ಅಜ್ಞಾನದಲ್ಲಿ  ಇಂದಿಗೂ ಮಾನವನಿಗೆ ಹಣವಿದೆ ಅದರ ಹಿಂದೆ ಬೆಟ್ಟದ್ದಷ್ಟು ಹಿಂದಿನವರ ಋಣವೂ ಇದೆ. ಇದನ್ನು ಹಿಂದಿನ ಮಹಾತ್ಮರ  ಧರ್ಮ ಕರ್ಮ ವನರಿತು  ನಡೆದಾಗಷ್ಟೆ ಅವರಲ್ಲಿದ್ದ ಜ್ಞಾನದ ಅನುಭವವಾಗಲು ಸಾಧ್ಯವೆಂದರೆ ಇದು ಒಳಗಿನಿಂದ  ಬೆಳೆಸುವುದು ಅಗತ್ಯವಿದೆ. ಹೊರಗೆ ತೇಪೆಹಾಕಿ ಒಳಗಿನಹುಳುಕನ್ನು ಮುಚ್ಚಿದರೂ  ಒಂದು ದಿನ ಹೊರಗೆ ಬರುತ್ತದೆ. ಹಿಂದಿನ ಗುರುಕುಲಗಳಲ್ಲಿದ್ದ  ಶಿಕ್ಷಣದಿಂದ ಗುರುಭಕ್ತಿ ಹೆಚ್ಚಾಗಿತ್ತು. ದೇವರನ್ನು ತೋರಿಸುವ ಗುರುವಲ್ಲಿ ಭಕ್ತಿ ಭಯವಿದ್ದರೆ ಮಾತ್ರ ಅಧ್ಯಾತ್ಮ ಸಾಧನೆ ಸಾಧ್ಯ. 
ಹೈಟೆಕ್ ಶಾಲೆ ಹೈಟೆಕ್ ಆಸ್ಪತ್ರೆ ಗಳು  ಬೆಳೆದಿರೋದು ಅಜ್ಞಾನವನ್ನು ತೋರಿಸುತ್ತದೆ. ಸತ್ಯ ರೋಗವಿಲ್ಲದ ಜೀವವಿಲ್ಲ.
ಆ ರೋಗಕ್ಕೆ ಕಾರಣವೇ  ತಾವೇ ಒಳಗೆಳೆದುಕೊಂಡಿರುವ ವಿಷಯುಕ್ತ ನಕಾರಾತ್ಮಕ ವಿಷಯಗಳು,ಆಹಾರ ವಿಹಾರ ಶಿಕ್ಷಣವೇ  ಎಂದರೆ  ನಂಬಲಾಗದು .ಭೂಮಿ ಒಂದು ಮಾಧ್ಯಮ.ಆ ಮಾಧ್ಯಮದ  ವಿಚಾರಗಳು ಸಂಸಾರವನ್ನು ಗಟ್ಟಿ ಮಾಡುತ್ತದೋ ಟೊಳ್ಳು ಮಾಡುತ್ತದೋ  ಅದರ ಮೇಲೆ ಸಮಾಜ ನಿಂತಿದೆ. ಹೊರಗೆಳೆದು ಆಳೋದೆಂದರೆ  ರಾಜಕೀಯ. ಒಳಗಿನಿಂದ ಕೂಡಿ ಬಾಳೋದೆ ರಾಜಯೋಗ.

ಎಲ್ಲವೂ ಕಲಿಗಾಲದ ಪ್ರಭಾವವೆಂದು ಸುಮ್ಮನಿರಬೇಕೆ? ಅಥವಾ ಕಲಿಕೆಯಲ್ಲಿ ಉತ್ತಮ ಬದಲಾವಣೆ ತರಲು ಸಹಕಾರ ಕೊಟ್ಟು ಒಗ್ಗಟ್ಟಿನಿಂದ ಸಂನ್ಯಾಸಿಗಳು ಸಂಸಾರಿಗಳನ್ನು ಬಾಳೋದನ್ನು ಕಲಿಸಬೇಕೆ?
ಹಣವಿದ್ದರಷ್ಟೆ‌ ಜೀವನ. ಆದರೆ ಸತ್ಯಜ್ಞಾನವಿಲ್ಲದ  ಜೀವನದಲ್ಲಿ ಋಣ ತೀರೋದಿಲ್ಲವಾದ್ದರಿಂದ ಇದು ಮರಣ ಎನ್ನುವರು ಮಹಾತ್ಮರು. ಬದಲಾವಣೆ ಜಗದ ನಿಯಮ.
ಅನ್ಯರನ್ನು ಬದಲಾಯಿಸೋ ಮೊದಲು ನಮ್ಮವರನ್ನು ಅರಿತು ನಡೆಯೋದನ್ನು ಕಲಿಯುವುದು ಅಗತ್ಯವಿದೆ.
ಸತ್ಯ ಕಣ್ಣಿಗೆ ಕಾಣೋದಿಲ್ಲವೆಂದರೆ ಸತ್ಯವಿಲ್ಲ. ಎಂದರ್ಥ ವಲ್ಲ.
ಸಂಸಾರಿಗಳಲ್ಲಿಯೂ ಸತ್ಯವಿದ್ದರೂ ಗಮನಕ್ಕೆ ಬರೋದಿಲ್ಲ.
ಏನೇ  ಆದರೂ ಯಾರನ್ನು ಯಾರುನಡೆಸಿರೋದೆಂದರೆ ಭೂಮಿಯೇ ಎಲ್ಲರನ್ನೂ ನಡೆಸಿರೋದು. ಪರಮಾತ್ಮನ ಸೊಂಟದ ಭಾಗದಲ್ಲಿ ರುವ ಭೂತಾಯಿ ಮನುಕುಲಕ್ಕೆ ಆಶ್ರಯ ನೀಡಿರುವಾಗ ಅವಳನ್ನು ಸಂಸಾರಿಗಳು ಸಂನ್ಯಾಸಿಗಳು ಹೇಗೆ ಬಳಸುವರೋ ಹಾಗೆ ಜೀವನವಿರುತ್ತದೆ.
ಎಲ್ಲದ್ದಕ್ಕೂ ಸ್ತ್ರೀ ಶಕ್ತಿ ಕಾರಣ ಎನ್ನುವ ಹಿಂದೆ ಅವಳನ್ನು ಹೇಗೆ  ಬಳಸಿದ್ದೇವೆನ್ನುವ ಅರಿವಿದ್ದರೆ ಈಗಲೂ ಸ್ತ್ರೀ ಇಲ್ಲದೆ ಸಂಸಾರವಿಲ್ಲ.ಜನ್ಮ ಕೊಟ್ಟು ಜೀವನ ನಡೆಸಲು ಬಿಟ್ಟಿರುವ ತಾಯಿಗೆ ಸರಿಯಾದ ಜ್ಞಾನದ ಶಿಕ್ಷಣನೀಡದೆ ಆಳಲು ಹೊರಟರೆ ಅಜ್ಞಾನದಿಂದ ಸಂಸಾರ ಹಾಳಾಗುತ್ತದೆ. ಇದು ಹಿಂದೂ ಗಳು ಅರ್ಥ ಮಾಡಿಕೊಳ್ಳಲು ಸೋತರೆ ಹಣವಿದ್ದರೂ  ದುರ್ಭಳಕೆ ಆಗುತ್ತಲೇ ಇರುತ್ತದೆ.ಜೊತೆಗೆ ಋಣವೂ ಬೆಳೆಯುತ್ತಲೇ  ಜೀವಹೋಗುತ್ತದೆ . ಹೊರಗಿನಿಂದ ದೇವಿಯನ್ನು ಅಲಂಕರಿಸಿ ಒಳಗಿದ್ದ ಜ್ಞಾನಶಕ್ತಿ ಗುರುತಿಸದಿದ್ದರೆ  ಅಜ್ಞಾನವಲ್ಲವೆ?
ಸ್ವತಂತ್ರ ವಾಗಿರುವ  ಸತ್ಯ ಒಂದೇ. ಆ ಒಂದರ ಹಿಂದೆ ಒಳಹೊಕ್ಕು ನೋಡಲು ಸಂನ್ಯಾಸಿಗಳಿಗೆ ಸುಲಭ. ಆದರೆ ಅವರು ಸಂಸಾರಿಗಳಹಿಂದೆ ನಡೆಯುವಂತಾದರೆ ಅಧೋಗತಿ.
ಈಗಲೂ ಎಷ್ಟೋ ಮಹಾತ್ಮರಿದ್ದಾರೆ.ಹಾಗಾಗಿ ಭೂಮಿಯಲ್ಲಿ ಮಳೆಬೆಳೆಗಳಾಗುತ್ತಿದೆ. ಹೊಟ್ಟೆ ತುಂಬಿಸುವ ಅನ್ನದಾಸೋಹ ಚೆನ್ನಾಗಿ ನಡೆದಿದೆ. ಆತ್ಮಕ್ಕೆ ತೃಪ್ತಿ ಕೊಡುವ ಜ್ಞಾನದಾಸೋಹದ ಶಿಕ್ಷಣದಿಂದ  ಆತ್ಮನಿರ್ಭರ ಭಾರತವಾಗಬಹುದು. ಇದರ ಬಗ್ಗೆ ಚರ್ಚೆ ನಡೆಸದೆ  ರಾಜಕೀಯ ಸರಿಯಿಲ್ಲ,ಸರ್ಕಾರ ಸರಿಯಿಲ್ಲ ಎಂದರೆ ನಮ್ಮ ಅಧಿಕಾರ ಸರಿಯಿಲ್ಲ ಸಹಕಾರ ಸರಿಯಿಲ್ಲ ಎಂದರ್ಥ .ಆತ್ಮಾವಲೋಕನ  ಒಳಗಿನಿಂದ ಆಗೋದಕ್ಕೆ  ಹೊರಗಿನ ರಾಜಕೀಯದ ಅಗತ್ಯವಿಲ್ಲ ಅಲ್ಲವೆ?

ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮದಿನದ ವಿಶೇಷ

ದಸರಾ ಶುಭಾಶಯಗಳು. 

ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಯಿಂದ ಲೋಕಕಲ್ಯಾಣವಾಗಲೆಂದು ಪ್ರಾರ್ಥನೆ ಮಾಡೋಣ. 
ನಕಾರಾತ್ಮಕ ಯಾವುದು? ಸಕಾರಾತ್ಮಕ ಯಾವುದೆನ್ನುವ ಸುಜ್ಞಾನ ನೀಡುವ ಭಗವತಿಯನ್ನು  ನಾವು ಹೇಗೆ ಆರಾಧಿಸುವೆವೋ ಹಾಗೇ ನಮ್ಮ ಶಕ್ತಿ ಬೆಳೆಯುತ್ತದೆ. ಅಂದರೆ ಜ್ಞಾನ ಎಲ್ಲರಲ್ಲಿಯೂ ಅಡಗಿರುವ ಶಕ್ತಿಯೇ ಆದರೆ ಅದನ್ನು ಹೇಗೆ ಬಳಸಿದರೆ ಲೋಕಕಲ್ಯಾಣವಾಗುವುದೆನ್ನುವ ಸತ್ಯ ದ  ಅಗತ್ಯತೆ  ಇಂದಿದೆ. ಕಲಿಕೆಯೇ ಅಸತ್ಯದೆಡೆಗೆ ಹೊರಟಾಗ ಕಾಣೋದಷ್ಟೆ ಸತ್ಯ.ಕಾಣದ ಸತ್ಯವನ್ನು ಅರಿಯುವ ಶಕ್ತಿ ಇಲ್ಲದವರಿಗೆ  ತಾನು ಮಾಡೋದಷ್ಟೆ ಉತ್ತಮ ಕಾರ್ಯ ಎನ್ನುವ ಅಹಂಕಾರ ಒಳಗೇ ಬೆಳೆದಾಗ ಅದೇ ಮುಂದೆ ನಕಾರಾತ್ಮಕ ಶಕ್ತಿಗೆ ಪ್ರೇರಣೆ ನೀಡುತ್ತಾ ಹೊರಗಿನ ರಾಜಕೀಯದ ದಾಳವಾಗಿ ಜೀವಾತ್ಮ ನಿಗೆ  ತನ್ನ ತಾನರಿಯದ ಪರಿಸ್ಥಿತಿ ‌ಒದಗುತ್ತದೆ. 
ಹೀಗಾಗಬಾರದೆಂದರೆ ಮೊದಲು ನಮ್ಮ ಅಂತರಂಗದ ಶುದ್ದಿ ಆಗಬೇಕೆಂದು ಮಹಾತ್ಮರುಗಳು ತಿಳಿದು ತಿಳಿಸಿ ನಡೆದಿರುವರು.
ಅವರಲ್ಲೇ ತಪ್ಪನ್ನು ಹುಡುಕಿಕೊಂಡು  ತಾವು ಅವರಿಗಿಂತ ದೊಡ್ಡವರೆನ್ನುವ ಅಜ್ಞಾನವನ್ನು  ಪ್ರದರ್ಶನ ಮಾಡುವಷ್ಟು ‌ಬುದ್ದಿವಂತಿಕೆ ಇಂದಿನ ಮಾನವರಿಗಿದೆ .ಆದರೆ ಒಂದು ಸತ್ಯ ಅರ್ಥ ವಾಗಬೇಕಷ್ಟೆ ಇಲ್ಲಿ ಯಾರೂ ಶ್ರೇಷ್ಠ ರು ಕನಿಷ್ಟರು ಎಂದು ಜನ್ಮ ತಾಳಿರುವುದಿಲ್ಲ.ಎಲ್ಲರಲ್ಲಿಯೂ ಅಡಗಿರುವ ಚೇತನಾತ್ಮ. ಪವಿತ್ರವೇ ಆಗಿದ್ದು  ಸುಜ್ಞಾನದಿಂದ ಜೀವನ ನಡೆಸುವ  ಶಿಕ್ಷಣ ನೀಡುವುದು ಮಾನವ ಧರ್ಮ. ಯಾವಾಗ ಇದನ್ನು  ನಿರ್ಲಕ್ಷ್ಯ ಮಾಡಿ ಲಕ್ಷ ಹಣಗಳಿಸುವ  ವಿಜ್ಞಾನಕ್ಕೆ ನೇರವಾಗಿ  ಏಣಿಏರಿಸುವ ಯೋಚನೆ ಬೆಳೆಯಿತೋ ಏಣಿ ಏರಿದರೂ ಕೆಳಗಿದ್ದ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದೆ ಕೆಳಗೆ ಬಿದ್ದು ಹೋದವರೆ ಬೆಳೆದರು.
ಇಲ್ಲಿ ಕಲಿಗಾಲ ಎಂದರೆ ಕಲಿಯುವುದೇ ಕಾಲ. ಯಾವುದನ್ನು ಕಲಿತರೆ  ಅಧ್ಯಾತ್ಮ ಪ್ರಗತಿಯಾಗುವುದೋ  ಅದನ್ನು ಆತ್ಮಜ್ಞಾನ ಎಂದರೆ  ಭೌತಿಕದಲ್ಲಿ ಪ್ರಗತಿ ಕಾಣುವುದು ವಿಜ್ಞಾನ. ವಿಜ್ಞಾನ ವಿಶೇಷಜ್ಞಾನವಾಗಿದ್ದು  ಸಂಶೋಧನೆಯಿಂದ ಬೆಳೆದಿರುವ ಸತ್ಯವಾಗಿದೆ. ಇದರಲ್ಲಿ ಅಂತರಂಗ ಸಂಶೋಧನೆಯೇ ಬೇರೆ ಸತ್ಯ ತಿಳಿಸಿದರೆಬಹಿರಂಗ ಸಂಶೋಧನೆ ಬೇರೆ ಸತ್ಯ ತಿಳಿಸಿದ್ದರೂ ಎರಡೂ ಮಧ್ಯವರ್ತಿ ಮಾನವನಿಗೆ ಜೀವನದಲ್ಲಿ ಅಗತ್ಯವಿದೆ.
ಯಾವುದೂ ಅತಿಯಾಗದೆ ಇತಿಮಿತಿಗಳನ್ನು ಕಾಯ್ದುಕೊಂಡು ಬಳಸಿದಾಗಲೇ  ಸಮಾಧಾನಕರ ಜೀವನವಾಗುತ್ತದೆ. ಸಮಾಧಾನ ಇಲ್ಲದ ಮನುಷ್ಯನಿಗೆ ಎಲ್ಲರಲ್ಲಿಯೂ ಎಲ್ಲದರಲ್ಲೂ ಅನುಮಾನವೇ ಇದ್ದಾಗ ನಕಾರಾತ್ಮಕ ವಿಷಯವಾಗುತ್ತಾ  ಸತ್ಯ ಹಿಂದುಳಿದು ಧರ್ಮಕ್ಕೆ ಚ್ಯುತಿ ಬಂದಾಗ  ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಅನ್ಯರನ್ನು ಬೇಡೋದೇ ಕೆಲಸವಾಗುತ್ತದೆ. 
ಬೇಡೋನು ದೀನ ಸ್ಮರಿಸೋನೆ ಜಾಣ  ಎಂದ  ಮಹಾತ್ಮರುಗಳು  ಪರಮಾತ್ಮನ ಸ್ಮರಣೆ ಮಾತ್ರದಿಂದ  ಸತ್ಯಜ್ಞಾನ ಪಡೆದು ಏನೂ ಬೇಡದೆಯೇ ಜೀವನ್ಮುಕ್ರರಾದರು.
ಎಲ್ಲಾ ಕ್ಷಣಿಕವಾದರೂ ಜೀವನ‌ನಡೆಸುವಷ್ಟು ಸಂಸಾರ ಸಾಗಿಸುವಷ್ಟು ಸಂಪಾದನೆ ಮಾಡೋದು ಮಾನವನ ಧರ್ಮ ಕರ್ಮ. ಅದರಲ್ಲಿ ಸತ್ಯ ಧರ್ಮ ವಿದ್ದರೆ ಎಲ್ಲಾ ಶುಭವೇ.ಇಲ್ಲವಾದರೆ ನೀರಿನಲ್ಲಿ ಹೋಮಮಾಡಿದಂತಾಗುತ್ತದೆ. ಒಟ್ಟಿನಲ್ಲಿ ಸತ್ಯ ಯಾರೋ ಹೊರಗಿನಿಂದ ತಿಳಿದರೆ ಸಾಲದು ಅಳವಡಿಸಿಕೊಂಡು ಅನುಭವಿಸುವುದರಿಂದ ನಾವೀಗ ಹೊರಗಿನ ರಾಜಕೀಯ ತಂತ್ರದ ವಶದಲ್ಲಿ ನಮ್ಮ ಸ್ವಾತಂತ್ರ್ಯ ಕಳೆದುಕೊಂಡರೂ ಏನೂ ಸಾಧನೆ ಮಾಡಿದಂತೆ ಬೀಗುತ್ತಿರುವ ಸತ್ಯದ ಇನ್ನೊಂದು ಮುಖದರ್ಶನ ಒಳಗೇ ಆದರೂ ನಮ್ಮ ಸಹಕಾರವೇ ಇದಕ್ಕೆ ಕಾರಣವಾಗಿದ್ದರೆ ಅದರ ಫಲ ಅನುಭವಿಸದೆ ವಿಧಿಯಿಲ್ಲ. ಇದನ್ನು ಸಕಾರಾತ್ಮಕ ದೃಷ್ಟಿ ಎಂದರೆ ಕಣ್ಣಿಗೆ  ಕಾಣೋದಿಲ್ಲ ಅರಿವಿಗೆ ಬರುತ್ತದೆ. ನಕಾರಾತ್ಮಕ ಎಂದು ತಿರಸ್ಕರಿಸಿದರೂ ಇನ್ನಷ್ಟು ದೊಡ್ಡದಾಗಿ ಬೆಳೆದು ನಿಲ್ಲುತ್ತದೆ. ಯಾರೂ  ತಡೆಯಲಾಗದು. ತಡೆದವರೂ ಇಲ್ಲ.
ಇಂದು  ಮಹಾತ್ಮರಾಗಿದ್ದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮದಿನ.ಇಬ್ಬರೂ ದೇಶಕ್ಕಾಗಿ ಹೋರಾಟಮಾಡಿದ  ದೇಶಭಕ್ತರಾದರೂ ಇಬ್ಬರನ್ನೂ ನೋಡುವ ದೃಷ್ಟಿ ಬೇರೆಯಾಗಿರಲು ಕಾರಣವೇ ನಮ್ಮ ಸ್ವಾರ್ಥ ಪೂರ್ಣ ರಾಜಕೀಯ ಪ್ರಜ್ಞೆ.
ಇಬ್ಬರೂ ಭಾರತಮಾತೆಯನ್ನು  ಆಂಗ್ಲರಿಂದ ಬಿಡುಗಡೆಗೊಳಿಸಲು ತಮ್ಮದೇ ಆದ ವಿಶೇಷಜ್ಞಾನದಿಂದ ಹೋರಾಟ ನಡೆಸಿದ್ದಾರೆ. ಗಾಂಧಿಯವರು  ಸ್ವಾತಂತ್ರ್ಯ ನಂತರ ಅಧಿಕಾರವಹಿಸಿಕೊಳ್ಳದೆ ಅಮರರಾದವರು.ಶಾಸ್ತ್ರೀಜಿ ದೇಶವನ್ನು ಮತ್ತೆ ಪುನನಿರ್ಮಾಣ ಮಾಡುವ ಕೆಲಸದಲ್ಲಿ ನಿಸ್ವಾರ್ಥ ದಿಂದ ದೇಶದ ಪ್ರಧಾನಮಂತ್ರಿಗಳಾಗಿ ಸರಳ ಜೀವನ‌ನಡೆಸಿರುವ ಮಹಾತ್ಮರು. 
ಆದರೆ ಇಂದಿನ ದೇಶದ ಸ್ಥಿತಿಗೆ ಕಾರಣವಾಗಿರುವ ಭ್ರಷ್ಟದುಷ್ಟರ ಆಡಳಿತ ಅಧಿಕಾರಕ್ಕೆ ಸಹಕಾರ ನೀಡುತ್ತಾ ಇಷ್ಟು ವರ್ಷ ನಡೆದು ಬಂದಿರುವ ಪ್ರಜೆಗಳ ದೃಷ್ಟಿಯಲ್ಲಿ   ಇಬ್ಬರೂ ಬೇರೆಯೇ  ಕಾರಣವಿಷ್ಟೆ  ಅವರ ಆ ಶ್ರಮದ ಹಿಂದೆ ಇದ್ದ ದೇಶಭಕ್ತಿಯಕೊರತೆಯಿದೆ.
ಹಾಗಾದರೆ ದೃಷ್ಟಿ ದೋಷವೇ ಎಲ್ಲದ್ದಕ್ಕೂ ಕಾರಣವೆಂದರೆ  ಅದಕ್ಕೆ ಸರಿಯಾದ  ಔಷಧ ಕೊಡುವುದು ಧರ್ಮ.
ಇದೇ ಸುಶಿಕ್ಷಣ ಸತ್ಯ ಧರ್ಮ ದ ನೈತಿಕ ಶಿಕ್ಷಣ. ಮಾನವರಾಗಿ ಮಹಾತ್ಮರಾಗುವ ಶಿಕ್ಷಣ  ಕೊಡುವುದೇ  ಧರ್ಮ ಕಾರ್ಯ.
ಜ್ಞಾನಕ್ಕೆ ಕೊರತೆಯಿಲ್ಲ ಅದನ್ನು ‌ಬೆಳೆಸುವವರ ಕೊರತೆಯಿದೆ.
ಹೊರಗಿನ ದೃಷ್ಟಿ ಒಳದೃಷ್ಟಿಯನ್ನು  ಹಿಂದುಳಿಸಿದರೆ ಅದನ್ನು ಹಣದಿಂದ ಮೇಲೆತ್ತಲಾಗದು.ಹಾಗೇನಾದರೂ ಮಾಡುತ್ತಿದ್ದರೆ ಅಜ್ಞಾನ ಎಂದಿರುವರು. 
ಇದನ್ನು  ಜನಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸೋತಾಗಲೇ ಅನ್ಯರು  ದೇಶದ ಜೊತೆಗೆ ದೇಹವನ್ನು ಆಳುವರು. ಯಾರು ಎಷ್ಟೇ ಆಳಲು ಹೋದರೂ  ಅಧರ್ಮಕ್ಕೆ ತಕ್ಕಂತೆ ಫಲವೂ ಇರುತ್ತದೆ. ಹಾಗೆ ಧರ್ಮ ದಿಂದ ಆಳಿದವರೂ ಇಂದಿಗೂ ಅಮರರಾಗಿರುವರೆಂದರೆ  ಮರಣವಿಲ್ಲದ ಆತ್ಮವನರಿತರೆ ಸಕಾರಾತ್ಮಕ ದೃಷ್ಟಿ. ಕೇವಲ ದೇಹಕ್ಕೆ  ವ್ಯಕ್ತಿಗೆ ಹಣಕ್ಕೆ ಬೆಲೆಕೊಟ್ಟರೆ ನಕಾರಾತ್ಮಕ ಶಕ್ತಿ ಜಾಗೃತವಾಗಿ  ಎಷ್ಟು ಇದ್ದರೂ ಸಾಲದು. ಸಾಲವೇ ಅದು.
ಏನಂತೀರ?
ಬರೋವಾಗ  ತಂದ ಪಾಪ ಪುಣ್ಯ ದ ಪ್ರಕಾರ ಜೀವನ ನಡೆಯುತ್ತದೆ. ಹೋಗುವಾಗಲೂ  ಪುಣ್ಯ ಹೆಚ್ಚಾಗಿದ್ದರೆ ಸದ್ಗತಿ.ಇಲ್ಲವೆಂದರೆ ದುರ್ಗತಿ.
ಎರಡೂ ಕೊಡೋನು ಒಬ್ಬನೇ . ಎರಡಕ್ಕೂ ಕಾರಣ ಜ್ಞಾನವೇ ಆಗಿದೆ. ಕದಿಯಲಾಗದ ಸಂಪತ್ತು ಜ್ಞಾನವಾಗಿದೆ. ಅನುಭವಿಸಿಯೇ  ತಿಳಿಯಬೇಕು ತೀರಿಸಬೇಕು ತೀರಬೇಕು...

ಭಗವತಿ
ಬೆಂಗಳೂರು

Tuesday, September 30, 2025

ಜಾತಿಯಿಂದ ಸಾಲ ಹೆಚ್ಚುತ್ತದೆ

ಜಾತಿ ಜಾತಿ ಎಂದು ರಾಜಕೀಯಕ್ಕೆ ಸಿಲುಕಿಕೊಂಡು ಎಷ್ಟು ಜನ್ಮ ಎತ್ತಿದರೂ ತೀರಿಸಲಾಗದ ಸಾಲದ ಸುಳಿಯಲ್ಲಿ ಮನುಕುಲಕ್ಕೆ ತನ್ನ ‌ಮಾನವ ಜಾತಿಯ. ಮೂಲ ಗುರಿ ತಲುಪಲಾಗದೆ ಜೀವಾತ್ಮ ಅತಂತ್ರಸ್ಥಿತಿಗೆ  ಬಂದರೂ ಯಾರೂ ಸರಿಯಾದ ಸತ್ಯ ಧರ್ಮದ‌ಬಗ್ಗೆ ಶಿಕ್ಷಣ ನೀಡದೆ ಆಳೋದೇ  ಸಾಧನೆ ಎಂದರೆ ಅಜ್ಞಾನವಷ್ಟೆ.

ಭಾರತ ಜಾತ್ಯಾತೀತ ದೇಶ ಎಂದರೇನು?

ಜಾತಿಯಿಲ್ಲದ ದೇಶವೆನ್ನಬೇಕೋ ಜಾತಿಯೇ  ಮುಖ್ಯವಾದ ದೇಶವೆನ್ನಬೇಕೋ?

ನಮ್ಮ ಕಣ್ಣಿಗೆ ಕಾಣುವ ಪ್ರಕೃತಿ ಯಾವ ಜಾತಿ?  ಲಕ್ಮಿ ಯಾವ ಜಾತಿ? ಭೂಮಿ ಯಾವ ಜಾತಿ?  ಭಾರತಮಾತೆ ಕನ್ನಡಮ್ಮ...ಎಲ್ಲಾ ದೇವತೆಗಳು ಯಾವ ಜಾತಿ? ಎಲ್ಲರೂ  ಆರಾಧಿಸುವ  ದೇವರನ್ನು ಜಾತಿಯ ಹೆಸರಿನಲ್ಲಿ ಪೂಜಿಸಿದರೆ ದೈವತ್ವ ಬರುವುದೆ?
ಹೋಗಲಿ  ನಮ್ಮ ಜನ್ಮ ಒಂದು  ಕುಟುಂಬದೊಳಗೆ ಆಗಿದೆ ಎಂದರೆ ಎಷ್ಟು ಮಂದಿ ಆ ಒಂದೇ ಜಾತಿಯಡಿ ಇದ್ದು ಜೀವನ ನಡೆಸಿರುವರು? ಅನ್ಯಧರ್ಮ ಅನ್ಯಜಾತಿಯವರ ಸಹಕಾರ ಸಹಾಯವಿಲ್ಲದೆ ಸಮಾಜದಲ್ಲಿ ಜೀವನ ನಡೆಸಲು ಅಸಾಧ್ಯ ಎನ್ನುವಾಗ ಮಿಶ್ರ ಜಾತಿ ಮಿಶ್ರ ಧರ್ಮ ಸಮ್ಮಿಶ್ರ ಸರ್ಕಾರ ಹಿಡಿದು  ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆದು ಆಳೋದರಿಂದ ಲಾಭ ಯಾರಿಗಾಗಿದೆ ಎಂದರೆ  ರಾಜಕಾರಣಿಗಳಿಗೆ ಅಧಿಕಾರ ಸಿಕ್ಕಿದೆ .ಜನರ ಸಾಲ ಮಿತಿಮೀರಿದೆ. ದೇಶದಲ್ಲಿ ವಿದೇಶಿ ಸಾಲ ಬಂಡವಾಳ ವ್ಯವಹಾರ ಅನ್ಯಧರ್ಮದವರ ಅಧಿಕಾರವೂ ಹೆಚ್ಚಾಗಿದ್ದು ನಮ್ಮವರೆ ಅವರ ಆಳಾಗಿ ದುಡಿದರೂ ಪ್ರಗತಿ ಎನ್ನುವ ಮಟ್ಟಿಗೆ ಅಜ್ಞಾನ ಬೆಳೆದಿದೆ. ಇದನ್ನು ಪ್ರಗತಿಪರರು ವೈಜ್ಞಾನಿಕ ಪ್ರಗತಿ ಎಂದರೆ ಅಧ್ಯಾತ್ಮ ಚಿಂತಕರು ಅಧೋಗತಿ ಎನ್ನುವರು.
ಅಂದರೆ  ಒಂದು ಮಗು  ಜನ್ಮಪಡೆದಾಗ  ಅದಕ್ಕೆ  ಹೊರಗಿನ ಜಾತಿ ಭಾಷೆ ಧರ್ಮ ದ ಅರಿವಿರದು.ಅದನ್ನು ಪೋಷಕರು ಮಗು  ಬೆಳೆದಂತೆಲ್ಲಾ  ಅನಗತ್ಯವಾಗಿ  ಮಕ್ಕಳ ತಲೆಗೆ ತುಂಬಿ ಒಳಗೇ ಇದ್ದ  ವಿಶೇಷವಾದ ಜ್ಞಾನಶಕ್ತಿಯನರಿಯದೆ ಹೊರಗಿನ ವಿಷಯಗಳ ಹಿಂದೆ ನಡೆಸಿ  ಸಾಲಕ್ಕೆ ಜೀವಾತ್ಮನನ್ನು  ಸಿಲುಕಿಸಿದರೆ  ಇದರ  ಪರಿಣಾಮವೇ ಇಂದಿನ ಪರಿಸ್ಥಿತಿ ಎಂದರೆ ಅರ್ಥ ವಾಗದು.
ಧಾರ್ಮಿಕ ಕ್ಷೇತ್ರವೇ ಇದರ ಹಿಂದೆ ‌ನಡೆದಾಗ  ಬೇರೆಯವರ ಪಾಡೇನು?
ಧರ್ಮ  ಒಂದೇ ಎನ್ನುವ ಹಲವಾರು ಮತಗಳ ನಡುವಿನ ಈ ರಾಜಕೀಯಕ್ಕೆ  ಮಕ್ಕಳು ಮಹಿಳೆಯರು ಮನೆಯಿಂದ ಹೊರಬಂದು ದುಡಿಯುವ‌ಹಂತಕ್ಕೆ ತಲುಪಿರೋದು ಸಾಲ ತೀರಿಸಲು. ಸಾಲ ಎಂದರೆ ಋಣ .ಇದು ಜಾತಿಯಿಂದ ಬೆಳೆಯಿತೆ? ಪ್ರತಿಯೊಂದು ಗಿಡಮರ ಕಲ್ಲು ಮಣ್ಣು ನೀರು ಹೂ  ಹಣ್ಣುಗಳಿಗೂ ಮನುಷ್ಯ ಜಾತಿ ಬೆರೆಸಿ ಬೆಳೆಸಿದ್ದಾನೆ.
ಆದರೆ  ಎಲ್ಲದರಿಂದ ದೂರವಿರುವ ಪರಮಾತ್ಮನ ಕಡೆಗೆ ಹೋಗಲು ಇವುಗಳು ಬಿಡದೆ ಕಾಡುತ್ತಿದೆ ಎಂದರೆ  ನಿಜವಾದ ಜ್ಞಾನಿಗಳು  ಇದಕ್ಕೆ ಸರಿಯಾದ  ರೀತಿಯಲ್ಲಿ ಉತ್ತರ ನೀಡುವುದು ಧರ್ಮ ವಾಗಿದೆ.
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ ಎನ್ನುವಂತೆ
ತಾವೂ ದುಡಿಯದೆ ಇತರರನ್ನು ಸನ್ಮಾರ್ಗದಲ್ಲಿ  ನಡೆಯದಂತೆ ತಡೆದು ಆಳಿದರೆ  ಅಧರ್ಮ ವಷ್ಟೆ.
ಹಿಂದೆ ಮಹಾರಾಜರಿಗೆ ಸರಿಯಾದ ಧಾರ್ಮಿಕ ಶಿಕ್ಷಣ ನೀಡಿ ಋಷಿಮುನಿಗಳು  ಲೋಕಕಲ್ಯಾಣಕ್ಕಾಗಿ  ಶಿಕ್ಷಣದಾಸೋಹ ನೀಡಿದ್ದರು. ಆದರೆ ಇಂದು ಸರ್ಕಾರದ ಹಿಂದೆ ನಡೆದು ಅಜ್ಞಾನವನ್ನು ಜ್ಞಾನವೆಂದು ಪ್ರಚಾರ ಮಾಡಿ ಹಣಗಳಿಸಿ ಅಧಿಕಾರ ಪಡೆದವರಿಗೆ ಕೆಳವರ್ಗದವರ ಜ್ಞಾನದ ಅರಿವಿಲ್ಲದೆ ಅವರನ್ನು ಜಾತಿಯಿಂದ ಹಿಂದುಳಿಸಿ ಸಾಲದ ದವಡೆಗೆ ಸಿಲುಕಿಸಿ  ಇನ್ನಷ್ಟು ಸಮಸ್ಯೆ ಮುಗಿಲುಮುಟ್ಟಿದೆ.
ಒಟ್ಟಿನಲ್ಲಿ  ಅತಿಯಾದರೆ ಗತಿಗೇಡು ಎನ್ನುವಂತೆ  ಇದರಿಂದ  ಮೂಲದ ಧರ್ಮ ಕರ್ಮದಿಂದ  ದೂರವಾದಷ್ಟೂ ಜೀವಾತ್ಮ ಅತಂತ್ರಸ್ಥಿತಿಗೆ ತಲುಪುವುದು ಸಹಜ. ಕಣ್ಣಿಗೆ ಕಾಣದ ಶಕ್ತಿಯ  ಕೆಲಸ ಕಾಣುವ ಶಕ್ತಿಯ ಕೆಲಸದ ನಡುವಿನ ಅಂತರದಲ್ಲಿ ಮಧ್ಯವರ್ತಿಗಳು  ತಮ್ಮದೇ ಆದ ರಾಜಕೀಯ ತಂತ್ರ ಬೆರೆಸಿ ಜನರನ್ನು ಆಳೋದನ್ನು  ಸಾಧನೆ ಎಂದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ.
ಬುದ್ದಿವಂತಿಕೆ ಗೆ ಕೊರತೆಯಿಲ್ಲದ ಕಲಿಯುಗದಲ್ಲಿ ಜ್ಞಾನದ ಕೊರತೆ ಹೆಚ್ಚಾಗಿದೆ. ಹೀಗಾಗಿ  ಎಷ್ಟೋ  ಸಂಸಾರಗಳು  ನಾಶ ಆದರೂ ಸರಿ ಜಾತಿ ಮಾತ್ರ ಬಿಡೋದಿಲ್ಲ ಎನ್ನುವ ಸರ್ಕಾರವ   ಬಿ ನಡೆದರೆ   ತಾವೇ ತೋಡಿಕೊಂಡ ಹೊಂಡದಲ್ಲಿ ತಾವೇ ಬಿದ್ದರೂ  ಸರ್ಕಾರವೇ ಕಾರಣವೆಂದು ಜಾರಿಕೊಳ್ಳುವ ಮಟ್ಟಿಗೆ  ಅಜ್ಞಾನ ಹೆಚ್ಚುವುದು.
ಹಿಂದಿನ ಎಷ್ಟೋ ಮಹಾತ್ಮರುಗಳು ಸಾದು ಸಂತ ಶರಣರು ಯಾವ ಜಾತಿಯಿಂದ  ಪರಮಾತ್ಮನ ಕಾಣಲಿಲ್ಲ. ಅವರಲ್ಲಿದ್ದ ಜ್ಞಾನಶಕ್ತಿಯಿಂದ ಪರಮಾತ್ಮನ ದಾಸ,ಶರಣರಾಗಿ ದೈವತ್ವ ಪಡೆದವರು. ಈಗ ಅವರನ್ನು ಜಾತಿಯ ಪಟ್ಟಿಗೆ ಸೇರಿಸಿ ಜನರನ್ನು ದಾರಿತಪ್ಪಿಸುವುದರಿಂದ  ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗೋದನ್ನು ತಡೆಯಲಾಗದು.
ಇರುವ ಅಲ್ಪ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಸರಳವಾಗಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರ ಜೀವನ ನಡೆಸಲು ಹೊರಗಿನ ಜಾತಿ ಸರ್ಕಾರದ ಅಗತ್ಯವಿದೆಯೆ?
ಸಾಮಾನ್ಯಜ್ಞಾನದ ಕೊರತೆಯಿಂದ ಇಂದು ಜನಸಾಮಾನ್ಯರು ದೊಡ್ಡದೊಡ್ಡ ಸಾಲ ಮಾಡುತ್ತಾ  ಅಜ್ಞಾನದೆಡೆಗೆ ಹೊರಗೆ ನಡೆದಿರೋದು ಕಲಿಕೆಯ ಪ್ರಭಾವ. ಏನೂ ಓದದೆ ಕಲಿಯದೆ ಇದ್ದ  ಮಹಾತ್ಮರುಗಳು ಪರಮಾತ್ಮನ  ಧ್ಯಾನದಿಂದಲೇ ಋಣಮುಕ್ತರಾಗಿ  ಜೀವನ್ಮುಕ್ತಿ ಪಡೆದರೆನ್ನುವುದು ಸರ್ವ ಕಾಲಿಕ ಸತ್ಯ. ಇದನ್ನು ಧಾರ್ಮಿಕ ವರ್ಗ  ಜನಸಾಮಾನ್ಯರಿಗೆ ಅರ್ಥ ಮಾಡಿಸಲು ಸೋತು  ರಾಜಕೀಯದ ಹಿಂದೆ ನಡೆದು ಜಾತಿಯ ವಿಚಾರದಲ್ಲಿ  ವಿರೋಧಿಸುವ ಹಂತಕ್ಕೆ ಬಂದಿರೋದು ದುರಂತವಷ್ಟೆ.
ದೇವರಿಗೆ ಹೊರಗಿನ‌ಜಾತಿ ಧರ್ಮ ಅಲಂಕಾರ ಆಚರಣೆಗಿಂತ ಮೊದಲು ಶುದ್ದವಾಗಿರುವ ಒಳಗಿರುವ ಆತ್ಮಾವಲೋಕನ  ಅಗತ್ಯವಿದೆ. ಒಟ್ಟಿನಲ್ಲಿ ಇದನ್ನು ಯಾವುದೇ ರಾಜಕೀಯದಿಂದ  ಸರಿಪಡಿಸಲಾಗದು. ಸ್ವಯಂ ಪ್ರಯತ್ನ,ಸ್ವಯಂ ಪ್ರಕಾಶಕರಾಗೋದಕ್ಕೆ  ಆತ್ಮಸಾಕ್ಷಿಯ ಕಡೆಗೆ ನಡೆಯೋ ಜ್ಞಾನಶಕ್ತಿ ಅಗತ್ಯವಿದೆ. ಇದಕ್ಕೆ ಸರ್ಕಾರದ ಅಗತ್ಯವಿದೆಯೆ?  ಹಣದಿಂದ ಸಾಧ್ಯವೆ? ಜಾತಿ ಮನುಷ್ಯನ ಸೃಷ್ಟಿ ವರ್ಣ ದೈವಸೃಷ್ಟಿ.
ವರ್ಣದಲ್ಲಿ  ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎನ್ನುವ ನಾಲ್ಕರಲ್ಲಿ  ಬ್ರಾಹ್ಮಣನ ಜ್ಞಾನ, ಕ್ಷತ್ರಿಯನ ಬಾಹುಬಲ, ವೈಶ್ಯರ ವ್ಯವಹಾರ ಶೂದ್ರ ಸೇವೆಯು ಧರ್ಮದ ಹಾದಿಯಲ್ಲಿ ಸತ್ಯದೆಡೆಗೆ ನಡೆದಿತ್ತು. ಈಗಿದು ಮಿಥ್ಯದಲ್ಲಿ ಮುಳುಗಿ ಹಣ ಗಳಿಸಿ ವ್ಯವಹಾರಕ್ಕೆ ಸೀಮಿತವಾಗಿ  ಸಾಲದ ಸುಳಿಯಲ್ಲಿದೆ. ಹೊರಗೆ ಬರಲಾಗದವರು ಇನ್ನಷ್ಟು ಸಾಲ ಬೆಳೆಸಿ ಜಾತಿಒಡೆದು ಧರ್ಮ ಭ್ರಷ್ಟರಾಗಿರೋದು ಕಲಿಯುಗದ ಪ್ರಭಾವವೆಂದು ಸುಮ್ಮನಿರಬಹುದೆ? ಸಾಧ್ಯವೆ? ಹೊರಗಿನ ಹೋರಾಟ ಹಾರಾಟ ಮಾರಾಟವೇ ಜೀವನ ಎಂದರೆ ಕಷ್ಟ.
ಇದರಲ್ಲಿ ಸತ್ಯ ಧರ್ಮ ಇದ್ದರೆ  ಉತ್ತಮ. ಇಲ್ಲದಿದ್ದರೆ ಅಧಮ.
ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿ  ಸಾಲ ತೀರಿಸುವ ಜ್ಞಾನವೂ ಇದೆ ಏರಿಸುವ ಅಜ್ಞಾನವೂ ಇದೆ.ಕಣ್ಣಿಗೆ ಕಾಣುವ ಅಜ್ಞಾನದ ಹಿಂದೆ ನಡೆದಷ್ಟೂ ಕೆಳಮಟ್ಟದ ಪಾತಾಳ ತಲುಪುವುದನ್ನು ಯಾರೂ ತಪ್ಪಿಸಲಾಗದು. ಕಾರಣವಿಷ್ಟೆ ಜನ್ಮ  ಪರಮಾತ್ಮನ ಇಚ್ಚೆಯಂತೆ ನಡೆದರೂ ಎಲ್ಲಿ ಜನಿಸಬೇಕೆಂಬುದು  ಹಿಂದಿನ ಋಣದ ಆಧಾರದಲ್ಲಿರುತ್ತದೆ. ಆ ಋಣ ತೀರಿಸಲು ಸುಜ್ಞಾನದ ಶಿಕ್ಷಣ ನೀಡುವುದು ನಿಜವಾದ ಧರ್ಮ ವಾಗಿತ್ತು. ಧಾರ್ಮಿಕ ವರ್ಗ  ಶಿಕ್ಷಣ ಬಿಟ್ಟು ರಾಜಕೀಯಕ್ಕೆ ಇಳಿದರೆ ಏನರ್ಥ? ಒಟ್ಟಿನಲ್ಲಿ ಮಾನವನಿಗೆ ಮಾನವನೇ ಶತ್ರು. ಮನಸ್ಸೇ ಇದರ ಮೂಲ. ಅಹಂಕಾರ ಸ್ವಾರ್ಥ ಎನ್ನುವುದು ಅತಿಯಾದಷ್ಟೂ ಗತಿಗೇಡು.
ಅಸುರರ ಹಿಂದೆ ಸುರರು ನಡೆದರೆ ಪ್ರಗತಿಯೆ? 
ಇದರಲ್ಲಿ  ತಪ್ಪು ಯಾರದ್ದು? ಸರ್ಕಾರ ನಡೆಸಿರುವವರದ್ದೆ ಸಹಕಾರ ನೀಡಿದವರದ್ದೇ? ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ಅನುಭವಿಸಲೇಬೇಕೆನ್ನುತ್ತದೆ ಕರ್ಮ ಸಿದ್ದಾಂತ. 

Monday, September 29, 2025

ಜ್ಞಾನ ದೇವತೆ ಸರಸ್ವತಿ

ಸ್ವಚ್ಚ ಬಿಳಿ ವಸ್ತ್ರ ದಲ್ಲಿ ಕುಳಿತಿರುವ ಸರಸ್ವತಿ ಜ್ಞಾನದ ಅಧಿದೇವತೆ. ಸುಜ್ಞಾನದಿಂದ ಆತ್ಮೋನ್ನತಿ ಎಂದು ಮಹರ್ಷಿಗಳು  ದೇವಿ ಸರಸ್ವತಿಯನ್ನು ಒಲಿಸಿಕೊಳ್ಳಲು ಮುಕ್ತಿ ಪಥ ಹಿಡಿದರು. ಕಲ್ಲಿನ‌ಮೇಲೆ ಕುಳಿತಿರುವ ಸಂಕೇತ ಸ್ಥಿರ ಶಾಶ್ವತ ಎನ್ನುವ ಅರ್ಥ ಕೊಡುತ್ತದೆ. ಜ್ಞಾನದ ನಂತರವೇ ಹಣಸಂಪಾದನೆ  ಮಾಡಿ ಋಣ. ಕಳೆಯುವ ಸತ್ಕರ್ಮ ದಾನ ಧರ್ಮ ಗಳಿಂದ ಸನಾತನ ಹಿಂದೂ ಬೆಳೆದಿರೋದು.‌ಈಗಲೂ ಜ್ಞಾನವಿದೆ ಆದರೆ ಅದರಲ್ಲಿ ಸತ್ಯದ ಕೊರತೆಯ ಜೊತೆಗೆ ಧರ್ಮ ದ ಕೊರತೆಯೂ ಹೆಚ್ಚಾಗಿದ್ದು ಆಡಂಬರದ ಜೀವನದಲ್ಲಿ  ಕಷ್ಟ ನಷ್ಟಗಳಾದಾಗ ದಾನ ಧರ್ಮ ಪೂಜೆ ಇನ್ನಿತರ ಕಾರ್ಯಕ್ಕೆ ಹಣ ನೀಡಲಾಗುತ್ತದೆ. ಇದರಿಂದಾಗಿ ತಾತ್ಕಾಲಿಕವಾಗಿ  ಸಮಸ್ಯೆ  ತಡೆದರೂ  ಮತ್ತೆ ಮತ್ತೆ ಬಂದಾಗ ಮಾನವನಿಗೆ ದೇವರೆ ಇಲ್ಲ ಎನ್ನುವ  ಮಟ್ಟಿಗೆ ಅನುಮಾನವೂ ಬೆಳೆಯುತ್ತದೆ. ಆದರೆ ಒಂದು ವಿಚಾರ ಮಾನವ‌ಕಾರಣಮಾತ್ರದವನಷ್ಟೆ. ಯಾವಾಗ ಭ್ರಷ್ಟರ ಹಣದಲ್ಲಿ  ದಾನವರು ಬೆಳೆಯುವರೋ  ಆಗ ಸಮಸ್ಯೆ ಒಳಗೆ ಹೊರಗೆ ಬೆಳೆಯುತ್ತಾ ಹೋಗುತ್ತದೆ. ಕಾರಣವಿಷ್ಟೆ ನಮ್ಮ ಪ್ರಾರಭ್ದ ಕರ್ಮ ವನ್ನು ಹಣದಿಂದ ತೀರಿಸುವುದಕ್ಕೂ ಸುಜ್ಞಾನ ಅಗತ್ಯವಿದೆ.ಸುಜ್ಞಾನ ದಲ್ಲಿ ಸತ್ಯ ಧರ್ಮ ಅಗತ್ಯವಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಸುಜ್ಞಾನ ಎಂದು ವಿಜ್ಞಾನ ಶಿಕ್ಷಣ ನೀಡುವರು. ಹೊರಗಿನ ಸತ್ಯ ಕ್ಷಣಿಕವಾದ್ದರಿಂದ ಅಸತ್ಯ ಬೆಳೆದು ಅಧರ್ಮ ಕ್ಕೆ ಸಹಕಾರ ಸಿಕ್ಕಾಗ  ಸಮಸ್ಯೆ ಯ ಜೊತೆಗೆ ಅಜ್ಞಾನವೂ ಬೆಳೆಯುತ್ತದೆ. ಶಿಕ್ಷಣವೇ ಇದರ ಮೂಲ.
ಲಕ್ಮಿ ಗೆ  ಅಲಂಕಾರ ಮಾಡೋದು ಸರಿ ಕಾರಣ ಅವಳಲ್ಲಿ ಅದು ತುಂಬಿಕೊಂಡಿರುತ್ತದೆ. ಅದೇ  ಸರಸ್ವತಿಗೆ ಮಾಡಿದರೆ ಜನರು ನೋಡೋದು ಅಲಂಕಾರವಷ್ಟೆ. ಒಳಗಿರುವ ಜ್ಞಾನ  ಕಾಣೋದಿಲ್ಲ. ದೇವತೆಗಳಿಗೂ ಅವರದೇ ಆದ ವಿಶೇಷ ಶಕ್ತಿ ಇದ್ದಾಗ ಆ ಶಕ್ತಿಗೆ ತಕ್ಕಂತೆ  ನಮ್ಮ ಆಚಾರ ವಿಚಾರ ಪ್ರಚಾರ ಹಾಗೂ ಆಹಾರ ವಿಹಾರವೂ ಅಗತ್ಯವೆನಿಸುತ್ತದೆ.‌ಇಲ್ಲದಿದ್ದರೆ ಆ ಶಕ್ತಿಗೆ  ನಮ್ಮ ಬೇಡಿಕೆ ತಲುಪುವುದೇ ಇಲ್ಲ. ತಲುಪದಿದ್ದರೆ ಬೇಡಿಕೆ ಈಡೇರುವುದಿಲ್ಲ.ಈಡೇರದಿದ್ದರೆ ದೇವರೆ ಇಲ್ಲ ಎನ್ನುವುದು ಯಾರ ತಪ್ಪು?
ನಮ್ಮ ಕೈ ಬೆರಳೇ ಒಂದೇ ಸಮನಾಗಿರೋದಿಲ್ಲ.ಇನ್ನು ಅಗೋಚರ ಶಕ್ತಿ ಒಂದೇ ಸಮನಾಗಿರಬಹುದೆ?
ನಾಸ್ತಿಕ ಆಸ್ತಿಕ ಎಂದರೆ  ದೇವರನ್ನು ನಂಬದಿರೋರು ನಂಬುವವರು ಎನ್ನುವ ಬದಲು ಆಸ್ತಿ ಮಾಡದವರು ಆಸ್ತಿ ಮಾಡುವವರು ಎಂದರೆ ಈಗ ಸರಿಯಾಗಬಹುದು. ಅವರವರ ದೇವರನ್ನು ನಂಬಿ ನಡೆದವರೂ ಆಸ್ತಿ ಕರೆ.
ಆದರೆ ಯಾರು ದೇವರಲ್ಲಿ  ಆಸ್ತಿಗಾಗಿ ಮೊರೆಹೋಗದೆ  ಮಹಾತ್ಮರಾದರೂ  ಅವರು  ಜ್ಞಾನವನೇ ಆಸ್ತಿ ಯಾಗಿ  ಬಿಟ್ಟು ಹೋಗಿರುವರು. ಇದೇ ವಿಶೇಷ ಶಕ್ತಿ.ವಿಶೇಷಜ್ಞಾನ. ಅಧ್ಯಾತ್ಮ ವಿಜ್ಞಾನ

Sunday, September 21, 2025

ಶೈಲಪುತ್ರಿ

ನವರಾತ್ರಿಯ ಶುಭಾಶಯಗಳು
ಮೊದಲದಿನ ಶೈಲಪುತ್ರಿಯಾಗಿ‌ ಜಗನ್ಮಾತೆ ಕಾಣುವಳು.
ಭೌತಿಕ ಸಂಪತ್ತನ್ನು ಬಿಟ್ಟು ಆಧ್ಯಾತ್ಮಿಕ ಸಂಪತ್ತಿನ ಮಹಾದೇವನನ್ನೇ ವರಿಸಿದ ಮಹಾಶಕ್ತಿಯ ಆರಾಧನೆಯಿಂದ ನಮ್ಮಲ್ಲಿಯ ಅಜ್ಞಾನವೆಂಬ  ಅಂಧಕಾರ ಕಳೆಯಲೆಂದು ಪ್ರಾರ್ಥಿಸೋಣ.

 ಸನಾತನಧರ್ಮದಲ್ಲಿ ಸ್ತ್ರೀ ಗೆ ಕೊಟ್ಟಿರುವ ಸ್ಥಾನಮಾನವನ್ನು  ಅವಳ ಆರಾಧನೆ ಮಾಡುವ ಮೂಲಕ ನವರಾತ್ರಿಯಲ್ಲಿ ವಿಶೇಷವಾಗಿ ನವದುರ್ಗೆಯರ ರೂಪದಲ್ಲಿ ಕಾಣಬಹುದು.

ಭೂ ತಾಯಿಯಿಲ್ಲದೆ ಮನುಕುಲವೇ ಇಲ್ಲ. ಹೀಗಿರುವಾಗ ಸ್ತ್ರೀ ಶಕ್ತಿಯನರಿತು ಮಾನವ ಸನ್ಮಾರ್ಗದಲ್ಲಿ ನಡೆಯಲು ಜ್ಞಾನವೇ ಪ್ರಧಾನ.
ಜ್ಞಾನದೇವತೆಯನ್ನು ಹೊರಗಿನಿಂದ ಅಲಂಕರಿಸಿದರೆ ಕಣ್ಣಿಗೆ ಚೆನ್ನಾಗಿ ಕಾಣಬಹುದು. ಅವಳ ಆಂತರಿಕ ಶಕ್ತಿಯನರಿತು ಅದರಂತೆ‌ನಡೆದುಕೊಂಡಾಗಲೇ ಆತ್ಮಜ್ಞಾನದಿಂದ ಆತ್ಮನಿರ್ಭರ ದೆಡೆಗೆ ಸಾಗಬಹುದು.
ಕಾಣದ ಶಕ್ತಿ ಕಾಣುವ ವ್ಯಕ್ತಿಯ ನಡುವೆ ಅಂತರ ಬೆಳೆಸಿರೋದು ಹಣ ಅಧಿಕಾರ ಸ್ಥಾನ. ಆದರೆ ನವರಾತ್ರಿಯ ಮೊದಲ ದಿನದ ದೇವಿ ಶೈಲಪುತ್ರಿಯು ಶಿವನನ್ನು ಒಲಿಸಿಕೊಳ್ಳಲು  ಮಾಡಿದ ತಪಸ್ಸಿನ  ಫಲವಾಗಿ ಶಿವಶಕ್ತಿಯಾಗಿ ಇಂದು ಆರಾಧಿಸಲ್ಪಡಲು ಕಾರಣವೆಂದರೆ ಜ್ಞಾನ ಶಕ್ತಿ. ಜ್ಞಾನದಿಂದ ಧ್ಯಾನ ಧ್ಯಾನದಿಂದ ಜ್ಞಾನೋದಯ .ಜಗನ್ಮಾತೆಯನ್ನು ಬರಿಗಣ್ಣಿನಿಂದ ಅಳೆಯಲಾಗದು. ಹಾಗೆ ಜಗಧೀಶ್ವರನೂ ಆ ಮಾತೆಗೆ ತನ್ನ ಅರ್ಧ ಶರೀರವನ್ನು ಕೊಟ್ಟು ನಡೆಸಿರುವುದರಿಂದ  ಇಬ್ಬರೂ ಸೇರಿದಾಗಲೇ‌ ಜಗತ್ತಿನ‌ ಕಲ್ಯಾಣವಾಗುವುದೆನ್ನುವ ಸಂದೇಶ ಇದರಲ್ಲಿದೆ ಎಂದರೆ ನಮ್ಮ ಇಂದಿನ ಪರಿಸ್ಥಿತಿಗೆ‌ ಕಾರಣ ಮತ್ತು ಪರಿಹಾರವೂ ಇದರಲ್ಲಿದೆ. ಇದನ್ನು  ಧಾರ್ಮಿಕ ವಾಗಿಅರ್ಥ ಮಾಡಿಕೊಳ್ಳಲು ಜ್ಞಾನ ಬೇಕು,ರಾಜಕೀಯವಾಗಿ ತಿಳಿಸಲು‌ ಹಣ ಬೇಕು. ಜ್ಞಾನವಿಲ್ಲದೆ ಹಣಗಳಿಸಿದಷ್ಟೂ ಸತ್ಯ ತಿಳಿಯದೆ ಜೀವ ಹೋಗುತ್ತಿರುತ್ತದೆ.ಮತ್ತದೇ ಅಜ್ಞಾನದ‌ಜನ್ಮ.

ಮನುಷ್ಯನ‌ ಬುದ್ದಿವಂತಿಕೆಗೂ ಜಗನ್ಮಾತೆಯ ಜ್ಞಾನಕ್ಕೂ ಬಹಳ ಅಂತರವಿದೆ. ಬುದ್ದಿ ಹೊರಗಿನಿಂದ ಸೇರಿದ್ದು ಜ್ಞಾನ‌ಒಳಗೇ ಅಡಗಿರೋದು. ಜ್ಞಾನವನ್ನು ಗುರುತಿಸುವ ಗುರುವೇ ದೇವರು.
ಯಾವಾಗ  ಗುರುತಿಸುವ ಕೆಲಸವಾಗದೆ ವ್ಯವಹಾರಕ್ಕೆ ಮಾನವ ತನ್ನ ಬುದ್ದಿವಂತಿಕೆ ಬಳಸುವನೋ ಅಜ್ಞಾನವೇ ಬೆಳೆಯುವುದು.

ಬ್ರಹ್ಮನ ರಾಣಿ ಸರಸ್ವತಿ,ವಿಷ್ಣುಪತ್ನಿ ಲಕ್ಮಿ ಶಿವನ ಅರ್ಧಾಂಗಿ ದುರ್ಗೆಯರಲ್ಲಿ ಯಾರು ಹೆಚ್ಚು ಕಡಿಮೆ ಎನ್ನುವ ಬುದ್ದಿವಂತಿಕೆ ಯಿಂದ  ಜಗನ್ಮಾತೆಯ ಪರಿಚಯವಾಗದು.
ಹೆಣ್ಣು ಒಲಿದರೆ ನಾರಿ‌ಮುನಿದರೆ‌ಮಾರಿ ಎಂದಂತೆ ಯಾವಾಗ ಅಧರ್ಮದಿಂದ ಭೂಮಿಯನ್ನು ತಾಯಿಯನ್ನು ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಳ್ಳುವರೋ ವಿನಾಶ ನಿಶ್ಚಿತ.
ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ.
ಇಡೀ ವಿಶ್ವದ ಗುರುವಾಗಿದ್ದ ಭಾರತಮಾತೆ ನಡೆದಿರೋದೆ ಸ್ತ್ರೀ ಯರ ಜ್ಞಾನ ಶಕ್ತಿಯಲ್ಲಿ ಎಂದಾಗ ಆ ಜ್ಞಾನವನ್ನು ಗುರುತಿಸಿ ಶಿಕ್ಷಣ ನೀಡಬೇಕಾಗಿರೋದು ಇಂದು ಅಗತ್ಯವಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದು ವ್ಯವಹಾರಕ್ಕೆ ಎಳೆದು ಬಳಸಿದರೆ ಜ್ಞಾನ ಬರೋದಿಲ್ಲ. ಸನಾತನಧರ್ಮದ ಈ ಸ್ಥಿತಿಗೆ ಕಾರಣವೇ  ಅತಿಯಾದ ಹೊರಗಿನ ನೋಟ ಆಟ ಪಾಠವಾಗಿದೆ. ಇದೀಗ ಕಾದಾಟಕ್ಕೆ  ದಾರಿಮಾಡಿದೆ. ಹೋರಾಟ ಜ್ಞಾನದಿಂದ ನಡೆದರೆ ಉತ್ತಮ ಅಜ್ಞಾನದೊಂದಿಗೆ ಗುದ್ದಾಡಿದರೂ ಅಜ್ಞಾನವೇ ಕಾಣೋದು.ಅಂತರಂಗ ಶುದ್ದಿ ಆಗದೆ ಬಹಿರಂಗ ಶುದ್ದವಾಗುವುದೆ? 
ಹೊರಗಿನ ಕಸ ತೆಗೆಯುವುದಕ್ಕೆ ಸುರಿಯುವ ಹಣವನ್ನು ಒಳಗಿನ ಕಸ ತೆಗೆದುಕೊಳ್ಳುವ  ಸುಶಿಕ್ಷಣ ದಾನಕ್ಕೆ ಬಳಸಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಅನುಭವಿಸದೆ ಸತ್ಯ ಅರ್ಥ ಆಗದು. ನಡೆಯೋದೆಲ್ಲವೂ ದೇವಿಯ‌ಪ್ರೇರಣೆಯೇ ಎಂದರೆ ದೇವಿ  ಎಲ್ಲರಿಂದಲೂ ತನ್ನ ಕೆಲಸ ಮಾಡಿಕೊಂಡರೂ ನೋಡುವ ಜ್ಞಾನದೃಷ್ಟಿ ಉತ್ತಮವಿರಬೇಕಿದೆ.
ಎಲ್ಲಿರುವರು ದೇವಿಯರು?

ಪರಮಾತ್ಮನಿಗೆ‌ನಮ್ಮ‌ಜೀವ ಮೀಸಲೋ ಸರ್ಕಾರಕ್ಕೋ?

ಪರಮಾತ್ಮನಿಗೆ ಜೀವಾತ್ಮ‌ಮೀಸಲಾಗಿದ್ದರೆ ಜೀವನ್ ಮುಕ್ತಿ  ಎಂದಿರುವ‌ ಸನಾತನಧರ್ಮ ಇಂದು ಹಿಂದುಳಿಯಲು‌ ಕಾರಣವೇ  ಹೊರಗಿನಿಂದ ಮಾನವ ಬೆಳೆಸಿಕೊಂಡಿರುವ‌
ಜಾತಿ‌ ಮೀಸಲಾತಿ. ಯಾರಾದರೂ ‌ ಕೊನೆಗಾಲದಲ್ಲಿ  ನನಗೆ ತೃಪ್ತಿ ಸಿಕ್ಕಿದೆ ಎಂದವರಿದ್ದಾರೆಯೆ? ಆತ್ಮಕ್ಕೆ ತೃಪ್ತಿ ಕೊಡದ  ಸಾಲ ಸೌಲಭ್ಯ ಗಳಾಗಲಿ ಉಚಿತ ಭಾಗ್ಯಗಳಾಗಲಿ  ಮಾನವನ  ಹೊರಗಿನ ಆಸೆಯನ್ನು ಬೆಳೆಸುವಾಗ  ಆಸೆಯೇ ದು:ಖಕ್ಕೆ ಕಾರಣವೆನ್ನುವುದು ಸತ್ಯವಾಗಿರುತ್ತದೆ. 
ಆಸೆ ಇರಲಿ ಅತಿಆಸೆ ಇರಬಾರದು. ಒಂದು ಸಂಸಾರ ಸಾಕಲು ಒಬ್ಬರಿಗೆ  ಸರ್ಕಾರದ ಕೆಲಸ ಸಿಕ್ಕರೆ ಸಾಕು. ಎಲ್ಲರಿಗೂ ಬೇಕು ಎಂದರೆ  ಅದರಲ್ಲಿ ಧರ್ಮ ವಿರಬೇಕು. ಸರ್ಕಾರದ ಸೇವೆ ದೇವರ ಸೇವೆಯಾಗಬೇಕು. ಸೇವೆಯಿಂದ ಪರಮಾತ್ಮನ ಋಣ ತೀರಿಸಲು ಸಾಧ್ಯ. 
ಅರ್ಹರಿಗೆ ಕೆಲಸವಿಲ್ಲದೆ ಅನರ್ಹ ರಿಗೆ ಕೆಲಸ ಕೊಟ್ಟರೆ ಸೇವೆ ಮಾಡೋದಕ್ಕೆ ಜ್ಞಾನ‌ಬೇಡವೆ? ಕೆಲಸ ಮಾಡದೆ ಹಣಪಡೆದರೆ   ಸಾಲವಾಗುತ್ತದೆ. ಸಾಲ ತೀರಿಸದಿದ್ದರೆ  ಕಷ್ಟ ನಷ್ಟಗಳು ರೋಗಗಳು ಹೆಚ್ಚುವುದು. ದುಡಿದ‌ಹಣವೆಲ್ಲವೂ ದುರ್ಭಳಕೆ ಆದರೆ  ಮನಸ್ಸಿಗೆ ಶಾಂತಿ ಸಿಗದು. ಶಾಂತಿಯಿಲ್ಲದ ಮನುಷ್ಯನಿಗೆ  ಪರಮಾತ್ಮನೆಡೆಗೆ  ಹೋಗಲಾಗದು. ಹೀಗೇ ಒಂದರ ಹಿಂದೆ ಒಂದು ಸೇರಿದರೆ‌ ಹಿಂದೆ ಬರೋದು ಕಷ್ಟ.

ಸರ್ಕಾರದ ಸಾಲ ಜನರ ಸಾಲ ಎರಡೂ ಒಂದೇ. ಜನರ ಸಾಲ ತೀರಿಸಲು  ಸರ್ಕಾರದ ಕೆಲಸವನ್ನು ‌ನಿಸ್ವಾರ್ಥ ನಿರಹಂಕಾರದಿಂದ ಧರ್ಮ  ಸತ್ಯದಿಂದ ಮಾಡಬೇಕು. ಹಿಂದಿನ  ಮಹಾತ್ಮರು ದೇಶಭಕ್ತರು  ಈ ರೀತಿಯಲ್ಲಿ ದೇಶಕಟ್ಟುವ ಸೇವೆಯಲ್ಲಿದ್ದರು.‌ ಈಗ ದೇಶಭ್ರಷ್ಟರ ಸೇವೆಗೆ ಜನ ನಿಂತಿರುವರೆಂದರೆ ಅಜ್ಞಾನವಷ್ಟೆ. ಸತ್ಯದ ಅರಿವಿಲ್ಲದೆ ಸಾಲದ ಅರಿವಿಲ್ಲದೆ ಹೊರಗೆ ಬಂದವರಿಗೆ ಕಾಣೋದು ಹಣ‌ಮಾತ್ರ. ಅದರ ಹಿಂದಿನ ಋಣಭಾರ ಅವರ ಮಕ್ಕಳು ಮೊಮ್ಮಕ್ಕಳವರೆಗೂ ಹೊತ್ತು ನಡೆಯಲೇಬೇಕೆನ್ನುವುದು ಅಧ್ಯಾತ್ಮ ಸತ್ಯ. ಇದರ ಬಗ್ಗೆ ಧಾರ್ಮಿಕ ಚಿಂತಕರೂ ಗುರುಗಳಾದವರು ಸರಿಯಾಗಿ ತಿಳಿಸಿ  ಜನರನ್ನು ಎಚ್ಚರಿಸುವ‌ ಕೆಲಸ ಮಾಡಿದ್ದರೆ  ಇಂದು ಈ‌ಮೀಸಲಾತಿ‌ಪರಮಾತ್ಮನ ಅರಿಯುವುದಕ್ಕೆ  ಸಾಧ್ಯವಾಗುತ್ತಿತ್ತು. ದುರಂತ ವೆಂದರೆ  ಸರ್ಕಾರದ ಹಿಂದೆ  ಜಾತಿ ಹಿಡಿದು ನಡೆದಿರೋದು. ಧರ್ಮ ಕರ್ಮಕ್ಕೆ ವಿರುದ್ದ ಸಾಲ ಮಾಡಿರೋದು. ಒಟ್ಟಿನಲ್ಲಿ ಕಲಿಯುವ ಕಾಲ‌ ಕಲಿಗಾಲ. ಅವರವರ ಸಾಲಕ್ಕೆ ಅವರವರೆ  ಹೊಣೆಗಾರರಾದಾಗ  ತೀರಿಸದೆ  ಜೀವಕ್ಕೆ ಶಾಂತಿಯಿರದು.ಶಾಂತಿಸಿಗದೆ ಮುಕ್ತಿಯೂ ಸಿಗದು.‌ 

Wednesday, September 17, 2025

ಸತ್ಯದ ಆ.....ಶ್ರಮ ಯಾವುದು?

ಶ್ರಮಪಡದೆ ಆಶ್ರಮ ಕಟ್ಟಿದರೆ ವ್ಯರ್ಥ.
ಶ್ರಮಿಕರನ್ನು  ತಮ್ಮೆಡೆಗೆಳೆಯಲು ಆಶ್ರಮಗಳನ್ನು ಕಟ್ಟುವ ಬದಲಾಗಿ ಶ್ರಮಪಟ್ಟು ದುಡಿದು ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡು  ಸಮಾಜದಲ್ಲಿ ಎಲ್ಲರೊಳಗೊಂದಾಗಿ ಇರೋದೆ ಉತ್ತಮ. 
ವಿದೇಶಿಗಳ ಹಣದಿಂದ ಏನಾದರೂ ಆಶ್ರಮಗಳು ನಡೆಸುತ್ತಿದ್ದರೆ ಅದರಲ್ಲಿ ಸ್ವದೇಶದ ಜ್ಞಾನವಿದೆಯೆ? ಶ್ರಮ ಇದೆಯೆ? ಎನ್ನುವ ಬಗ್ಗೆ ತಿಳಿದು ನಡೆದರೆ ಸರಿ. ಇಲ್ಲವಾದರೆ ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಇಷ್ಟಕ್ಕೂ ಯಾವ ಯೋಗಿಯಾಗಲಿ,ಸಂನ್ಯಾಸಿಯಾಗಲಿ ಆತ್ಮಜ್ಞಾನ ಪಡೆಯಲು  ಆಶ್ರಮದ ಮೊರೆ ಹೋಗಿದ್ದರು? 
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸ  ಐದರಲ್ಲಿ ಕೊನೆಯ ಸಂನ್ಯಾಸವನ್ನು ನೇರವಾಗಿ ಆರಿಸಿಕೊಂಡರೆ ಉಳಿದ  ನಾಲ್ಕರ ಅನುಭವ ಜ್ಞಾನದ ಕೊರತೆ ಕಾಡಬಹುದು.
ಕಾಲದ ಪ್ರಭಾವ ಎಲ್ಲಾ ವೇಗವಾಗಿ ನಡೆದು ಮುಕ್ತಿ ಪಡೆಯಲು  ಸಾಧ್ಯವೆ? ಕೆಲವರಿಗಷ್ಟೆ ಹಿಂದಿನ ಜನ್ಮದ ಜ್ಞಾನವಿದ್ದು  ಗುರುಮುಖೇನ ಕಲಿತು ನಿಧಾನವಾಗಿ ಮೇಲೆ ಹೋಗಬಹುದು. ಎಲ್ಲಾ  ಒಂದೇ ಎನ್ನುವ  ಪ್ರಚಾರಕ್ಕೆ ಬದಲಾಗಿ  ಎಲ್ಲರನ್ನೂ ಒಂದಾಗಿಸುವ ತತ್ವವನ್ನರಿತರೆ  ಕೆಲವರಿಗೆ ಬಾಲ್ಯದಲ್ಲಿಯೇ ಜ್ಞಾನೋದಯವಾಗಿ ಸಂನ್ಯಾಸಿ ಆಗಬಹುದು ಹಾಗೆ ಯೌವನ,ಸಂಸಾರದಲ್ಲಿಯೂ ನಡೆದಿದೆ. ಒಟ್ಟಿನಲ್ಲಿ ಸಂನ್ಯಾಸಿ ಎಂದರೆ ಸಂಸಾರದಿಂದ ಮನಸ್ಸನ್ನು ದೂರವಿಟ್ಟು ಸ್ವತಂತ್ರ ವಾಗಿ ಜೀವಿಸುವುದಾಗಿತ್ತು. ಕಾಲಬದಲಾಗಿದೆ ಆದರೂ ಮೂಲದ ಸತ್ಯ ಧರ್ಮ ಬದಲಾಗೋದಿಲ್ಲ.ಮಾನವನ ಚಿಂತನೆ ಬದಲಾದರೂ ಆತ್ಮನ ಅರಿವು ಬದಲಾಗದು. ಜೀವ ಬದಲಾದರೂ ಪರಮಾತ್ಮನು ಒಬ್ಬನೇ,ಭೂಮಿಯೂ ಒಂದೇ  ಶ್ರಮವಿಲ್ಲದ ಆಶ್ರಮದಲ್ಲಿ ಧರ್ಮದ ಹುಡುಕಾಟವಿರಬಾರದಷ್ಟೆ.  ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಬದಲಾವಣೆ ಆದರೂ ಕಾಲಕೆಟ್ಟು ಹೋಗದಂತೆ ಎಚ್ಚರವಹಿಸುವ ಜ್ಞಾನ ಮಾನವನಿಗೆ ಅಗತ್ಯವೆನ್ನುತ್ತಾರೆ ಮಹಾತ್ಮರುಗಳು. ಭೌತಿಕದ ಆಶ್ರಮಗಳಲ್ಲಿ ಅಧ್ಯಾತ್ಮದ ಆ- ಶ್ರಮ ಬಹಳ ಮುಖ್ಯ.
ಇಲ್ಲವಾದರೆ ಅನಾಥಾಶ್ರಮ,ವೃದ್ದಾಶ್ರಮ, ಅಬಲಾಶ್ರಮ, ಬಿಕ್ಷುಕರ ಆಶ್ರಮ ಗಳಿಂದ ಭೂಮಿ ನಡುಗಿ ಹೋಗುತ್ತದೆ.
ಬಿಕ್ಷುಗಳ ದೇಶವನ್ನು ಬಿಕ್ಷುಕರ ಆಶ್ರಮದಿಂದ ನಡೆಸುವುದು
ಪ್ರಗತಿಯೆ ಅದೋಗತಿಯೆ?
ಸರಿಯಾದ ಜ್ಞಾನದ ಶಿಕ್ಷಣ ಕೊಟ್ಟು ಕೆಲಸ ಕೊಟ್ಟು ಸ್ವತಂತ್ರ ಜೀವನ ನಡೆಸುವ  ಸಹಕಾರ,ಸರ್ಕಾರ  ನಮ್ಮಲ್ಲಿದ್ದರೆ ಈ ಸ್ಥಿತಿಗೆ  ಮಾನವನ ಜೀವನ ತಲುಪುತ್ತಿರಲಿಲ್ಲ. ಇಲ್ಲಿ ಯಾರನ್ನೂ  ದೂರದೆ  ದೂರದ ಬೆಟ್ಟನುಣ್ಣಗೆ ಎನ್ನುವ ಸಂದೇಶವಿದೆ ಎನ್ನಬಹುದಷ್ಟೆ. ನಿಜವಾದ ಜ್ಞಾನಿಗಳು ಶ್ರಮಪಟ್ಟು ಮುಕ್ತಿ ಪಡೆಯುತ್ತಾರೆ. ಹಣದ ಬಡತನವಿದ್ದರೆ ಜ್ಞಾನದಿಂದ  ಮುಂದೆ ನಡೆದು ಜೀವನ ನಡೆಸುವ ಶಿಕ್ಷಣ  ಕೊಟ್ಟರೆ ಸಾಕು. ಹಣಕೊಟ್ಟು ಮತ್ತಷ್ಟು ಋಣ ಅಥವಾ ಸಾಲದ ಹೊರೆ ಹಾಕಿದರೆ ಎಲ್ಲಿಯ ಜ್ಞಾನ? ಭಾರತೀಯರನ್ನು
ಆಳೋದಕ್ಕೆ ಬಂದವರು  ಶಿಕ್ಷಣವನ್ನೇ ಬುಡಮೇಲು ಮಾಡಿ ಈಗ ಬಿಕ್ಷುಗಳ ದೇಶ ಬಿಕ್ಷುಕರ ದೇಶವಾದರೂ ಅಜ್ಞಾನದ ಕಣ್ಣಿಗೆ ಪ್ರಗತಿಶೀಲ ಎನ್ನುವಂತಾಗಿದೆ. ಅವರವರ ಅನ್ನ ಅವರೆ  ತಯಾರಿಸಿಕೊಳ್ಳಲು ಶ್ರಮ ದ ಅಗತ್ಯವಿದೆ. ಸೋಮಾರಿಗಳಿಂದಲೇ ಮಾರಿಯ ದರ್ಶನವಾದರೆ ಪ್ರಗತಿಯೆ? ಆತ್ಮನಿರ್ಭರ ಭಾರತ ಅಧ್ಯಾತ್ಮ ದಿಂದ  ಮಾತ್ರ ಸಾಧ್ಯವಿದೆ. ರಾಜಕೀಯದಲ್ಲಿ ಅಧ್ಯಾತ್ಮ ವಿದೆಯೆ? ಅಧ್ಯಾತ್ಮ ವೆ ರಾಜಕೀಯ ನಡೆಸಿದೆಯೆ? ಆತ್ಮಾವಲೋಕನ ಅಗತ್ಯ.

Monday, September 15, 2025

ತಾರತಮ್ಯ

" ತಾರತಮ್ಯ...! "

ಎಂಥಾ ವಿಪರ್ಯಾಸ ನೋಡಿ ಮಾರಾಯ್ರೇ....

ಎಲ್ಲಾ ಅಮ್ಮಂದಿರಿಗೂ ತನ್ನ ಮಗ
ಶ್ರೀ ಕೃಷ್ಣನಂತೆ  ಸದಾ ಚೇಷ್ಠೇ, ತಂಟೆ
ಲೀಲೆ, ಅಮೋದ ಪ್ರಮೋದಗಳಿಂದ
ನಲಿದಾಡುತ್ತಿರಲಿ ಅಂತ ಬಯಸ್ತಾರೆ

ಅದೇ...ಆ ಮಗುವಿನ ಅಪ್ಪ ...
ಎಂದೆಂದೂ ಮರ್ಯಾದ ಪುರುಷೋತ್ತಮ
ಶ್ರೀ ರಾಮಚಂದ್ರನ ತರಹ ಮಾತ್ರ 
ಇರಲೆಂದು ಆಶಿಸುತ್ತಾರೆ.

ತ್ರೇತಾಯುಗದ ಶ್ರೀ ರಾಮನೇ ದ್ವಾಪರದಲ್ಲಿ ಶ್ರೀ ಕೃಷ್ಣನಾಗಿ ಅವತಾರವೆತ್ತಿದ ಎನ್ನುವ ಅದ್ವೈತ  ಶ್ರೀ ರಾಮಾವತಾರವೇ ಬೇರೆ ಶ್ರೀ ಕೃಷ್ಣಾವತಾರವೇ ಬೇರೆ ಎನ್ನುವ ಧ್ವೈತ. ಎಲ್ಲವೂ ವಿಷ್ಣುವಿನ ರೂಪವೇ ಎನ್ನುವ ವಿಶಿಷ್ಟಾದ್ವೈತ ಎಲ್ಲದರಲ್ಲೂ ಇರೋನು ಒಬ್ಬನೇ  ಆದರೆ ನಾಮ ರೂಪ ಅವತಾರಗಳು ಬೇರೆ ಬೇರೆ.
ಶ್ರೀ ರಾಮನಂತಹ ಮರ್ಯಾದ ಪುರುಷೋತ್ತಮ ಇಲ್ಲ. ಹೀಗಿರುವಾಗ ಶ್ರೀ ರಾಮರಾಜ್ಯ ಸ್ಥಾಪನೆಗೆ  ಪುರುಷರು ಮರ್ಯಾದೆಯಿಂದ ಇರಬೇಕು. ಯಾವಾಗ ಮರ್ಯಾದೆ ಉಳಿಸಿಕೊಳ್ಳಲು ಪ್ರಯತ್ನಪಡುವರೋ  ಆಗ ಮರ್ಯಾದೆ  ಬಿಟ್ಟು ಹೊರಬರುವವರು ಹೆಚ್ಚಾಗಿ ಕಾಣುವರು. ಅಂದರೆ ಮಾನವ ನೋಡುವುದು ಹೊರಗಿನ‌ ಮರ್ಯಾದೆಯನ್ನು. ನನಗೆ ಮರ್ಯಾದೆ ಕೊಡಬೇಕೆಂಬ ಆಸೆಯಲ್ಲಿ ನಾಟಕ ನಡೆಸುತ್ತಾ ಜನರ ಮುಂದೆ ಮರ್ಯಾದಸ್ಥನಂತೆ ಬದುಕುವ ಎಷ್ಟೋ ಮಂದಿಗೆ ಒಳಗಿದ್ದ ಮರ್ಯಾದ ಪುರುಷೋತ್ತಮನ ದರ್ಶನ ಆಗಿರದು. ಇದು ಸ್ತ್ರೀ ಗೂ ಅನ್ವಯಿಸುತ್ತದೆ. ಶ್ರೀ ರಾಮನ ಕಾಲದಲ್ಲಿದ್ದ ಧರ್ಮ ಸತ್ಯ ನ್ಯಾಯ ನೀತಿ ಸಂಸ್ಕೃತಿ ದ್ವಾಪರದಲ್ಲಿರಲಿಲ್ಲ.ಅಸುರ ಶಕ್ತಿ ಬೆಳೆದಿತ್ತು..ನಂತರದ ಕಲಿಯುಗದಲ್ಲಿ  ಕೇವಲ ರಾಜಕೀಯವೇ ಎಲ್ಲಾ ಕ್ಷೇತ್ರ ಆಳುತ್ತಿದೆ ಎಂದರೆ ರಾವಣ ಜರಾಸಂಧ ಕೀಚಕ ಯಮ..ರ ಪಾತ್ರಧಾರಿಗಳು  ಮಕ್ಕಳು ಮಹಿಳೆಯರನ್ನು ಹೇಗೆ ಕಾಣುವರು?
ಶ್ರೀ ಕೃಷ್ಣ ರಾಧೆಯ ಪವಿತ್ರವಾದ ಸಂಬಂಧ  ವೇಷಹಾಕಿಕೊಂಡರೆ ಅರ್ಥ ವಾಗದು. ಹಾಗೆಯೇ ಭಾರತಮಾತೆಯ ವೇಷ ಹಾಕಿಕೊಂಡರೆ ಭಾರತೀಯ ಮಹಿಳೆ ಆಗೋದಿಲ್ಲ. ಮಕ್ಕಳಿಗೆ ಕೊಡುವ ಶಿಕ್ಷಣವೇ ಅನ್ಯರ ವಶ ಆಗಿರುವಾಗ  ಪುರಾಣಗಳು ವಾದ ವಿವಾದ, ಚರ್ಚೆ ಜೊತೆಗೆ  ಅಪಾರ್ಥಗಳಿಂದ  ಅಧರ್ಮಕ್ಕೆ ಮತ್ತಷ್ಟು ಶಕ್ತಿಬಂದರೆ  ಇದು ಮುಂದಿನ ಪೀಳಿಗೆಗೆ  ವರದಾನವೋ ಶಾಪವೋ.
ಹಿಂದೆ ಮಕ್ಕಳನ್ನು  ಬೆಳೆಸುವ ರೀತಿ ದೈವೀಕತೆಯತ್ತ ನಡೆದಿತ್ತು.ಈಗ ಭೌತಿಕದೆಡೆಗೆ ನಾಟಕದ ಜಗತ್ತಿನೆಡೆಗೆ ನಡೆದಿದೆ. ಇದರಿಂದಾಗಿ ಶ್ರೀ ಕೃಷ್ಣನ ತುಂಟಾಟ ಕಳ್ಳತನ ತಂತ್ರವು  ಹೊರಜಗತ್ತಿನಲ್ಲಿ ಮನರಂಜನೆಯಾದರೆ ಒಳಜಗತ್ತಿನಲ್ಲಿ ಆತ್ಮವಂಚನೆಗೆ ಕಾರಣವಾಗಿದೆ. 
ಕೃಷ್ಣ ಬೇರೆಯಲ್ಲ ಕ್ರೈಸ್ತರು ಬೇರೆಯಲ್ಲ.ರಾಮ ಬೇರೆಯಲ್ಲ ರಹೀಮ ಬೇರೆಯಲ್ಲ ಎನ್ನುವುದು ಸಾಮಾನ್ಯವಾಗಿ  ಒಳಗಿನ ಸತ್ವ ಸತ್ಯ ತತ್ವ ಅರಿಯದೆ  ಮಾನವ ಮುಂದೆ ಮುಂದೆ ಹೋಗಿ ಮೂಲದಿಂದ ಬೇರೆಯಾದಷ್ಟೂ ಅತಂತ್ರಸ್ಥಿತಿಗೆ ಜೀವಾತ್ಮನ‌ಪಯಣ ಕೆಳಮುಖವಾಗಿರುತ್ತದೆ.

ಎಲ್ಲದ್ದಕ್ಕೂ ಕಾರಣ ಸ್ತ್ರೀ ಸಹಕಾರ ಎನ್ನುವಂತೆ  ಸ್ತ್ರೀ ಜ್ಞಾನ ಉತ್ತಮವಿದ್ದರೆ  ಬೇಧವಿರದು. ಅಂದರೆ ಶ್ರೀ ರಾಮನಂತಹ ಪುರುಷನಂತೆ ಶ್ರೀ ಕೃಷ್ಣನಂತಹ ಮಹಾಪುರುಷ ಇದ್ದರೂ ಒಂದು ತತ್ವ ಇನ್ನೊಂದು ತಂತ್ರ ಎರಡೂ ಸೇರಿ ಮಹಾತ್ಮ ಆಗಬಹುದು. ಧರ್ಮ ರಕ್ಷಣೆಗಾಗಿ  ಶ್ರೀ ರಾಮನ‌ನಡೆ ಶ್ರೀ ಕೃಷ್ನ ನುಡಿಯನ್ನು ಅರ್ಥ ಮಾಡಿಕೊಳ್ಳಲು  ಸ್ತ್ರೀ ಶಕ್ತಿಯ ಜ್ಞಾನ ಅಂತರ್ಮುಖವಾಗಿ ಬಹಿರಂಗದೆಡೆಗೆ ನೋಟ ಹರಿಸಿದರೆ ವಾಸ್ತವದಲ್ಲಿ  ತನಗೆ ತಾನೇ ಮೋಸ ಹೋಗುತ್ತಿರುವ ಸತ್ಯ ತಿಳಿಯಬಹುದು. ಜನನಿ ಇಲ್ಲದ ಜನ್ಮವಿಲ್ಲ. ದೈವೀಕ ಶಕ್ತಿ  ಕೇವಲ  ಹೊರಗಿನ  ಆಡಂಬರವಾಗದೆ  ರಾಜಕೀಯದಿಂದ ದೂರವಿದ್ದು  ನೋಡಿದರೆ  ಎಲ್ಲರಲ್ಲಿಯೂ  ಅಡಗಿರುವ ಸತ್ಯ ಅರ್ಥ ವಾದರೂ  ಎಲ್ಲರನ್ನೂ ನಡೆಸುತ್ತಿರುವ ಅಸುರ ಶಕ್ತಿ ಇದನ್ನು ತಡೆಯುತ್ತದೆ. ಇದಕ್ಕೆ ಕಾರಣ ನಮ್ಮದೇ ಸಹಕಾರ.

ಸ್ತ್ರೀ ಯರ ಜ್ಞಾನ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿ ಇಂದಿಗೂ ಸ್ತ್ರೀ ಸತ್ಯ ತಿಳಿಸಿದರೆ ಅಲಕ್ಷ್ಯ. ರಾಜಕೀಯಕ್ಕೆ ಬಳಸಿಕೊಂಡು ಅನ್ಯರನ್ನು ಆಳೋದೇ  ಗುರಿಯಾದರೆ  ಒಳಗಿದ್ದ ಧರ್ಮ ಕ್ಕೆ ಸಂಕಟ. ಈ ಧರ್ಮ ಸಂಕಟವನ್ನು ಹಣದಿಂದ ತಡೆಯಬಹುದೆ?  ಧಾರ್ಮಿಕ , ಶೈಕ್ಷಣಿಕ,ರಾಜಕೀಯ, ಆರ್ಥಿಕ, ಸಾಹಿತ್ಯ ಕ್ಷೇತ್ರಗಳು ಸಮಾಜವನ್ನು ಆಳೋದಕ್ಕೆ ಹೊರಟು  ಸಂಸಾರ ತೊರೆದವರು ಸಂಸಾರಿಗಳ ಹಣದಲ್ಲಿ ಜೀವನ ನಡೆಸುವುದು ಅನಿವಾರ್ಯ. ಕಾರಣ ಅಂದಿನ ವಾನಪ್ರಸ್ತ ಇಂದು  ಆಶ್ರಮ ಗಳಾಗಿವೆ. ಆಶ್ರಮ ನಡೆದಿರೋದೆ ಜನರ ಹಣದಲ್ಲಿ.ಸರ್ಕಾರ ನಡೆದಿರೋದೆ ಜನರ ಹಣದಲ್ಲಿ ಆಚರಣೆಗಳು ಕಾರ್ಯಕ್ರಮಗಳು ದೇವಸ್ಥಾನಗಳು..ಇನ್ನಿತರ ಸಂಘಗಳು ನಡೆದಿರೋದೆ ಜನಬಲ ಹಣಬಲದಲ್ಲಿ ಎಂದಾಗ ಜನರೊಳಗೆ ಯಾರ ಜ್ಞಾನವಿದೆ. ಸಂಪಾದನೆಯ ಮೂಲ ಯಾವುದಿದೆ? ಹಿಂದಿನವರ  ಶಿಕ್ಷಣ ನೀಡಲಾಗಿದೆಯೆ? ಇದ್ದರೆ ಸರಿ.ಇಲ್ಲವೆಂದರೆ  ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವಿಲ್ಲದೆ ರಾಜಕೀಯ ಬೆಳೆದಿಲ್ಲ ಎಂದಾಗ ಶ್ರೀ ರಾಮ ಶ್ರೀ ಕೃಷ್ಣ ಇರೋದೆಲ್ಲಿ?
ದೈವೀಕ ಗುಣದ ಶಿಕ್ಷಣ ನೀಡದೆ ವೇಷ ಹಾಕಿದರೆ ನಾಟಕವಷ್ಟೆ. ಇದಕ್ಕಾಗಿ ಹಣ ಸಮಯ ವ್ಯರ್ಥ ವಾಗದಿದ್ದರೆ ಉತ್ತಮ. ಮಕ್ಕಳಿಗೆ ಮನೆಯೊಳಗೆ  ಸಂಸ್ಕಾರದ ಶಿಕ್ಷಣ ಕೊಟ್ಟರೆ  ದೇವರಂತಾಗುವರು. ಹೊರಗೆ ದೇವರ ವೇಷ ಒಳಗೆ ಅಸುರಗುಣವಿದ್ದರೆ ವ್ಯರ್ಥ. 
ನಾಟಕದಲ್ಲಿ ನಾಟಕ ಮಾಡಿ ಸಾಧಕರಾಗೋದಕ್ಕೆ ಜನಬಲ ಹಣಬಲ ಅಧಿಕಾರ ಬಲ ಇದೆ. ಆದರೆ ದೈವಬಲ ಇದೆಯೆ? ಅಸುರಬಲವೇ ಎನ್ನುವುದು ಪ್ರಶ್ನೆ ಯಾಗುತ್ತಿದೆ. ಎತ್ತ ಸಾಗಿದೆ ಭಾರತ?

ಹಿಂದೂಗಳು ಹಿಂದಿರುಗಬೇಕು. ವಿದೇಶದೆಡೆಗೆ ಮುಂದೆ ನಡೆದಷ್ಟೂ ಖಾಲಿ ಸ್ಥಾನ ತುಂಬಲು ಅನ್ಯರು ಬರೋದನ್ನು ತಡೆಯಲಾಗದು.ಹತ್ತಿರವಿರುವ ಸತ್ಯ ತಿಳಿದರೆ ಸಾಕು.‌ಪ್ರಚಾರ ಮಾಡಿದಷ್ಟು ಸುಲಭವಿಲ್ಲ ಅನುಷ್ಟಾನಕ್ಕೆ ತರೋದು.

Wednesday, September 10, 2025

ಅದ್ವೈತ ದರ್ಶನ ನಾನಿರುವಾಗ ಆಗೋದು ವಿರಳ

ಮೂಲದ ಶಕ್ತಿ ಒಂದೇ ಮೂಲ ಪುರುಷ ಒಬ್ಬನೇ ಆದರೂ ಎಷ್ಟೋ ಶಕ್ತಿ ಪುರುಷ  ಜನ್ಮ ತಳೆದಿವೆ ಭೂಮಿಯು ಇದಕ್ಕೆ ಮಾಧ್ಯಮವಾಗಿದೆ. ಪುರಾಣ ಇತಿಹಾಸ ದ ಕಥೆಗಳು  ಮಾನವನಿಗೆ  ಭೂತ ವರ್ತಮಾನ. ಭವಿಷ್ಯವನ್ನು  ನಿರ್ಧಾರ ಮಾಡಲು ಸ್ವತಂತ್ರ ಜ್ಞಾನದೆಡೆಗೆ‌ನಡೆಯಲು ಕಲಿಸಿವೆ. ಆದರೆ ಸ್ವತಂತ್ರ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ಸ್ವೇಚ್ಚಾಚಾರದೆಡೆಗೆ ನಡೆದವರಿಗೆ ಮೂಲದೆಡೆಗೆ ಸಾಗಲಾಗದೆ ಅದರ ವಿರುದ್ದ ನಡೆದು  ಅಂತ್ಯ ಕಾಣದೆ ಅತಂತ್ರಸ್ಥಿತಿಗೆ ಜೀವಾತ್ಮ ತಲುಪಿದ್ದು ಅತೃಪ್ತ ಆತ್ಮಗಳು  ತಮ್ಮ ಮನಸ್ಸಿಗೆ ಬಂದದ್ದೇ ಸರಿ ಎನ್ನುವ ಹಠದಲ್ಲಿ ಸ್ಪರ್ಧೆ ನಡೆಸುತ್ತಾ ಹೋರಾಟ ಹಾರಾಟ‌ಮಾರಾಟವೇ ಜೀವನವಾಗಿದೆ. ಇದನ್ನು  ತಪ್ಪು ಎಂದರೂ ತಪ್ಪು ಸರಿ ಎಂದರೂ ತಪ್ಪು. ‌ತಪ್ಪು ಯಾರದ್ದು?  ಜೀವಾತ್ಮನದ್ದೆ? ಪರಮಾತ್ಮನದ್ದೆ?
ಪರಮಾತ್ಮನ ಒಳಗಿರುವ ಜೀವಾತ್ಮರಿಗೆ  ತಮ್ಮದೇ ಆದ  ಬುದ್ದಿವಂತಿಕೆ  ಸಾಮಾನ್ಯ ಜ್ಞಾನವಿದ್ದರೂ  ಅದನ್ನು  ಸರಿಯಾಗಿ ಗುರುತಿಸಿ ಬಳಸಿಕೊಳ್ಳುವ  ಗುರುವಿಲ್ಲದಿದ್ದರೆ  ಅದು  ಕರ್ಮಫಲ ಎನ್ನುವರು.
ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ  ಹಣವಿದೆ.ಇಲ್ಲದವರಿಗೆ ಸರ್ಕಾರಗಳು ಉಚಿತವಾಗಿ  ಭಾಗ್ಯ ನೀಡುತ್ತಿದೆ. ಆದರೆ ಸಮಸ್ಯೆ  ಮಿತಿಮೀರಿದೆ. ತೃಪ್ತಿ ಸಿಗದೆ  ಜೀವ ಹೋಗುತ್ತಿದೆ ಎಂದರೆ  ಅಧ್ಯಾತ್ಮ ಚಿಂತನೆ  ಇಲ್ಲ. ತನ್ನ ತಾನರಿಯದೆ ಅನ್ಯರನ್ನು ಅರಿತರೆ  ಆತ್ಮಕ್ಕೆ ತೃಪ್ತಿ ಸಿಗದು ಎನ್ನುತ್ತದೆ ಸನಾತನ ಧರ್ಮ. ಎಷ್ಟು ಪುರಾಣ ಇತಿಹಾಸ ಕೆದಕಿದರೂ ಸತ್ಯ ಸ್ಪಷ್ಟವಾಗಿ ಅರ್ಥ ವಾಗದಿದ್ದರೆ ವ್ಯರ್ಥ. ಒಂದೇ ಸತ್ಯ ಎನ್ನುವುದು  ಸರಿ. ಆ ಒಂದರ ಹಿಂದೆ ನಡೆಯದೆ  ದೂರ ಹೋದವರಿಗೆ  ಸತ್ಯದ ಅರಿವಿರದು.. ದೂರ ಹೋಗಲು ಕಾರಣವೇ‌  ಹಣಸಂಪಾದನೆ. ಅದು ಸತ್ಯಜ್ಞಾನದ ಜೊತೆಗೆ ಆದಾಗ  ಅಂತರ ಬೆಳೆಯದು.
ವಿದೇಶದೊಳಗಿದ್ದು ದೇಶಭಕ್ತಿ  ಇದ್ದರೂ ದೇಶದೊಳಗೆ ಇದ್ದು ಭಕ್ತಿಯೋಗ ದ ಅನುಭವವಾದರೆ ಪೂರ್ಣ. ಹೀಗೇ ಎಷ್ಟೋ  ಸತ್ಯ  ಅರಿವಿಗೆ ಬಂದರೂ  ಅನುಭವಿಸುವ ಅವಕಾಶವಿಲ್ಲದೆ ಅಸತ್ಯ ಬೆಳೆದಿದೆ.ಕಾಲಾಂತರ ಎಲ್ಲವೂ ಮಾಡಿಸುತ್ತದೆ.
ಕಾಲಾಯ ತಸ್ಮೈ ನಮ: ಎಂದು ನಡೆಯೋದಷ್ಟೆ   ಜೀವಾತ್ಮರಿಗಿರುವ  ಮಂತ್ರ.

Tuesday, September 9, 2025

ಅಪ್ರಮೇಯೋ

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ.

ಅಪ್ರಮೇಯೋ ಹೃಷೀಕೇಶ: ಪದ್ಮನಾಭೋಮರಪ್ರಭುಃ | ವಿಶ್ವಕರ್ಮಾ ಮನುಸ್ತ್ರಷ್ಟಾ ಸ್ಥವಿಷ್ಠಃ ಸ್ಥವಿರೋಧ್ರುವಃ ||೬ || 

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ.

ಇಂದಿನ ನಾಮ 
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ

೪೬. ಅಪ್ರಮೇಯಃ - ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗದವನು. ..

ವಿವರಣೆ : ಪರಮಾತ್ಮನನ್ನು ನಖಶಿಖಾಂತ ತಿಳಿದುಕೊಳ್ಳಲು ಸಾಧ್ಯವಿಲ್ಲ. ಯಾರೂ ನಾನು ದೇವರನ್ನು ಪೂರ್ಣವಾಗಿ ಬಲ್ಲವನಾಗಿದ್ದೇನೆ ಎಂದು ಹೇಳುವವರಿಲ್ಲ. 'ಮೇಯ' 'ಪ್ರಮೇಯ'- ಅಪ್ರಮೇಯ, ಮೇಯ ಎಂದರೆ ತಿಳಿದುಕೊಳ್ಳಲು ಯೋಗ್ಯ. ಪ್ರಮೇಯ ಚೆನ್ನಾಗಿ ತಿಳಿದುಕೊಳ್ಳಲು ಯೋಗ್ಯ, ಅಪ್ರಮೇಯ ಎಂದರೆ ಸಮಗ್ರವಾಗಿ ಯಾರನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲವೋ ಅಂತಹವನು.

ಕುರುಡರು ಆನೆಯನ್ನು ಪರಿಚಿಯಿಸಿಕೊಂಡಂತೆಯೋ ಏನೋ ನಮಗೆ ನಿಮಗೆ ಭಗವಂತನ ಪರಿಚಯ. ನಾವು ಬಿಡಿ, ಲಕ್ಷ್ಮೀಯೇ ದೇವರನ್ನು ಸಮಗ್ರವಾಗಿ ತಿಳಿದುಕೊಂಡಿಲ್ಲ. ದಾಸರು ಅಂದರು 'ಬಗೆ ಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳುತಿಪ್ಪುದು ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು" ಹೀಗೆ ಲಕ್ಷ್ಮೀದೇವಿ ಪ್ರತಿನಿತ್ಯ ಬಗೆ ಬಗೆಯ ನೂತನವನ್ನು ತನ್ನ ಪತಿಯಲ್ಲಿ ಕಾಣುತ್ತಿದ್ದಾಳೆ ಎಂದರೆ ಈಗಾಗಲೇ ಸಮಗ್ರವಾಗಿ ಅವನನ್ನು ತಿಳಿಯಲಿಲ್ಲ ಎಂಬುದು ಸ್ಪಷ್ಟ, ಲಕ್ಷ್ಮೀದೇವಿಗೇ ಪೂರ್ಣವಾಗಿ ತಿಳಿದುಕೊಳ್ಳಲಾಗಲಿಲ್ಲ ಎಂದರೆ ನಮಗೆ ಅವನನ್ನು ಹೇಗೆ ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾದೀತು?

ಆದ್ದರಿಂದ ಯಾರ ಮುಂದೆಯೂ ತನ್ನನ್ನು ಪೂರ್ಣವಾಗಿ ತೆರೆದು ಇಡದೆ ಇರುವುದೇ ದೇವರ ದೊಡ್ಡ ಗುಣ. ಯಾರಿಗೂ ಸಮಗ್ರವಾಗಿ ಅರ್ಥವಾಗದಂತೆ ಇರುವಿಕೆಯೇ ಭಗವಂತನ ಗುಣ. ಎಷ್ಟು ಕೆದಕಿದರೂ ತನ್ನ ಪೂರ್ಣ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ - ಎಂದು ನಾವು ಲೋಕದ ಸಾಮಾನ್ಯ ಜನರ ಬಗ್ಗೆ ಹೇಳುವುದಿದೆ. ಹೀಗಿರುವಾಗ ಅನಂತ ಕಲ್ಯಾಣ ಗುಣ ಪರಿಪೂರ್ಣನಾದ ಭಗವಂತನ ಪೂರ್ಣ ಗುಟ್ಟು ಬಿಟ್ಟು ಕೊಡಲ್ಪಟ್ಟತೇ ? ಶ್ರೀ ಕೃಷ್ಣನಲ್ಲಿ ಭೀಷ್ಮರು ಅನ್ನುವರು - ಎಂಟು ನೂರು ವರ್ಷಗಳಾದರೂ ಒಂದನ್ನು ಚೆನ್ನಾಗಿ ತಿಳಿದುಕೊಳ್ಳಲಾಗಲೇ ಇಲ್ಲ. ಅದು ಮತ್ತಾವುದೂ ಅಲ್ಲ, 'ನೀನೇ', ಕೃಷ್ಣ ಮುಗುಳ್ನಕ್ಕು ಅನುಗ್ರಹಿಸಿದೆ.

Saturday, September 6, 2025

ಧಾತಾ- ಧಾರಣೆ ಹಾಗು ಪೋಷಣೆ ಮಾಡುವವನು

ಇಂದಿನ ನಾಮ 
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಸ್ವಯಂಭೂ ಶಂಭುರಾದಿತ್ಯ: ಪುಷ್ಕರಾಕ್ಕೋ ಮಹಾಸ್ವನಃ | ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮ: ||೫|| 
43 ಧಾತಾ - ಧಾರಣೆ ಹಾಗೂ ಪೋಷಣೆ ಮಾಡುವವನು,

ವಿವರಣೆ : ನಾವು ಸಾಯದಂತೆ ನೋಡಿಕೊಳ್ಳುವನು. ಸಾಯಲಿಲ್ಲ. ಇದ್ದೇವೆ. ಆದರೆ ಇದ್ದರೆ ಮಾತ್ರ ಸಾಲದು, ನಮಗೆ ಕಾಲಕಾಲಕ್ಕೆ ಆಹಾರ ಬೇಕಲ್ಲ ? 'ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು ಗಟ್ಟಾಗಿ ಸಲಹುವನು ಇದಕೆ ಸಂಶಯವಿಲ್ಲ, ತಲ್ಲಣಿಸದಿರು ಕಂಡ್ಯ ತಾಳು ಮನವೇ'- ಆನೆಗೈದುಮಣವ ಆಹಾರವ ಯಾರು ಕೊಡುವರು ? - ದಾಸರು ಒಂದು ಕಡೆ ಕೇಳಿದ್ದುಂಟು - ಆನೆ ಐದು ಮಣ ಆಹಾರ ತಿನ್ನುವುದು. ಯಾರು ತಂದು ಕೊಡುವರು ? ನಾವು ತಂದು ಹಾಕುವುದಿಲ್ಲ. ಆದರೂ ಅದಕ್ಕೆ ಆಹಾರ ಸಿಗುವುದು. ಕಲ್ಲಿನ ಮೂಲೆಯಲ್ಲಿ ಕಪ್ಪೆ ಹುಟ್ಟಿರುತ್ತದೆ. ಅಲ್ಲಿಗೇ ಆಹಾರ ಉದಕವ ಯಾರು ತಂದು ಕೊಡುವವು ? ಭೀಷ್ಮರು ಹೇಳ್ತಾರೆ ನೀನೇ ಆಹಾರವನ್ನು ಒದಗಿಸುವವನು. ವ್ಯಕ್ತಿಗಳು ಇರುವಂತೆ ಮಾಡುವುದಷ್ಟೇ ಅಲ್ಲದೆ ಅವರಿಗೆ ಕಾಲಕಾಲಕ್ಕೆ ಆಹಾರವನ್ನು ನೀನೇ ಒದಗಿಸುವಿ. ಆದುದರಿಂದ ನೀನು ‘ಧಾತಾ’

ಅನ್ನದ ಋಣ ಎಲ್ಲಿರುವುದೋ ಯಾರಿಗೂ ತಿಳಿಯದು.ಜನ್ಮಜನ್ಮದ ಋಣ ಹೇಗೆ ತಿಳಿಯಬಹುದು. ಒಟ್ಟಿನಲ್ಲಿ ಪರಮಾತ್ಮನ ಸ್ಮರಣೆಯಲ್ಲಿ ಏನೇ ಕರ್ಮ ಮಾಡಿದರೂ ಸೇವೆಯಾಗುವುದು.ಋಣಕಳೆಯುವುದು.ಇಲ್ಲಿ ಧರ್ಮ ಜಾತಿ ಪಂಗಡ,ದೇಶ,ಪಕ್ಷಪಾತಗಳಿಗೆ ಅವಕಾಶವಿರದು. ಇದು  ಕೇವಲ  ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ  ನಡೆಸಿದಾಗಷ್ಟೆ ಸಾಧ್ಯ ವೆಂದು ಶ್ರೀ ಕೃಷ್ಣ  ತಿಳಿಸಿ ನನಗೂ ಜನ್ಮಗಳಿವೆ ಎಂದೂ ಹೇಳಿರುವಾಗ    ಅವನೊಳಗಿರುವ ಅಸಂಖ್ಯಾತ ಜೀವಾತ್ಮರ ಪಾಡೇನು?.ಎಲ್ಲವನ್ನೂ  ಕೃಷ್ಣಾರ್ಪಣ ಮಾಡಿದಾಗ ಒಳಗಿನ ಜೀವಾತ್ಮರಿಗೂ ಅವನೇ ತಲುಪಿಸೋದಲ್ಲವೆ?

ದೇಶದ ಪ್ರಶ್ನೆ ಬಂದಾಗ  ದೇಶಕ್ಕೆ ಏನು ಕೊಡುವೆವೋ ಅದೇ ನಮಗೂ ತಿರುಗಿ ಬರುತ್ತದೆ. ಇಷ್ಟೇ  ದೊಡ್ಡವರನ್ನು ನಿರ್ಲಕ್ಷ್ಯ ಮಾಡಿದರೂ  ಹಿಂದೆ ಅದೇ ಬರುತ್ತದೆ. ಹಿಂದಿನ ಧರ್ಮ ಕರ್ಮ ಬಿಟ್ಟು ಎಷ್ಟು ದೂರ ನಡೆದರೂ ಹಿಂದೆ ತಿರುಗಿ ಬರೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು.ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದಂತೆ ಪರಮಾತ್ಮನೆಡೆಗೆ ಹೋಗದೆ  ತೃಪ್ತಿ ಇಲ್ಲ ಜೀವನ್ಮುಕ್ತಿ ಇಲ್ಲ.

ಅತಿಆಸೆಯೇ ದು:ಖಕ್ಕೆ ಕಾರಣ

ಉಸಿರು ಹೋಗಿ ಆಸೆ ಉಳಿದರೆ, 
ಅದುವೇ *ಮೃತ್ಯು.*
ಉಸಿರು ಇರುವಾಗಲೇ ಆಸೆ ಅಳಿದರೆ, ಅದುವೇ *ಮುಕ್ತಿ.
ಜೀವನ್ಮುಕ್ತಿ ಸಿಗೋದು ಎನ್ನುವ ಆಸೆಯಲ್ಲಿ ಎಷ್ಟೋ ಧಾರ್ಮಿಕ ಪೂಜೆ ಹೋಮ‌ಹವನ ಯಾಗ ಯಜ್ಞ ಜಪ ತಪ ಎಲ್ಲಾ ಮಾನವ ನಡೆಸುವನು. ಆದರೆ ಮುಕ್ತಿ ಯಾರಿಗೆ ಸಿಕ್ಕಿದೆ ಎನ್ನುವ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಇಂದಿಗೂ  ತಿಳಿದಿಲ್ಲದೆ  ನಾನು ಧರ್ಮ ರಕ್ಷಕ, ಧರ್ಮ ವಂತ ,ಧಾರ್ಮಿಕ  ಗುಣವಂತ, ಜ್ಞಾನಿ, ಎನ್ನುವ ಜನ  ಇದ್ದಾರೆ. ಈ ನಾನು ಯಾರು? ಎಂದು  ತಿಳಿಯುವ ಪ್ರಯತ್ನ ನಡೆಸಿರುವವರು ಜೀವನ್ಮುಕ್ತರಾಗಿದ್ದಾರೆ ಎಂದರೆ  ನಾನು  ಯಾರ ಸೇವಕ? ಯಾರ ಸೇವೆ ಮಾಡಿದೆ? ಯಾರ ಹಣದಿಂದ  ಮಾಡಿದೆ? ಎಷ್ಟು ಮಾಡಿದೆ? ಯಾಕೆ ಮಾಡಿದೆ? ಇವೆಲ್ಲದರ ಹಿಂದೆ ಯಾರಿರೋದು  ಎನ್ನುವುದಕ್ಕೆ ಉತ್ತರ ಒಂದೇ  ಅವನೇ ಪರಮಾತ್ಮ. 

ಪರಮಾತ್ಮನ ಸತ್ಯದೆಡೆಗೆ ನಡೆದಂತೆ  ಈ ಅಧ್ಯಾತ್ಮ ದ ಜ್ಞಾನ ಬೆಳೆಯುತ್ತದೆ  ಅಧ್ಯಾತ್ಮ ದಿಂದ ಜೀವನದ ರಹಸ್ಯವರಿತವರು  ಉಸಿರಿರುವಾಗಲೇ ಆಸೆಯಿಂದ ಮುಕ್ತರಾಗಿರುವರು.
ಆದರೆ ಯಾವಾಗ ಇದು ವ್ಯವಹಾರಕ್ಕೆ ಸೀಮಿತವಾಗುತ್ತಾ ನನ್ನ ದೇವರು ನನ್ನ ಮನೆ,ನನ್ನ ಜಾತಿ,ಧರ್ಮ, ಪಕ್ಷ ಎನ್ನುವ ಹಂತಕ್ಕೆ ಎಳೆದುಕೊಂಡು ಹೊರ ನಡೆಯುತ್ತದೋ ಆಸೆಗೆ ಮಿತಿ ಇಲ್ಲದೆ  ನಾನು ಬೆಳೆದು ಉಸಿರಾಡಲೂ ಪುರುಸೊತ್ತಿಲ್ಲದ  ಜೀವನವಾಗುತ್ತದೆ. 
ಜೀವಕ್ಕೆ ಆಸರೆಯಾಗಿರುವ ವಾಯುವೇ ಉಸಿರು. ವಾಯುಮಾಲಿನ್ಯದಿಂದ ಜೀವಕ್ಕೆ ಅಪಾಯ. ವಾಯುಮಾಲಿನ್ಯ  ಅತಿಆಸೆಯ ಫಲ. ವೈಜ್ಞಾನಿಕ ಚಿಂತನೆಯ ಜೊತೆಗೆ ವೈಚಾರಿಕತೆಯ ಹಿಂದಿನ  ಗುರಿ ಅರ್ಥ ವಾದವರು ಉಸಿರಿರುವರೆಗೂ  ಪರಮಸತ್ಯಧರ್ಮದೊಂದಿಗೆ ನಡೆಯುವರು. ಆದರೆ ಇದರಿಂದ ಇತರರಿಗೆ  ಅನ್ಯಾಯವಾದರೆ ಅಧರ್ಮ ಅಸತ್ಯ ಬೆಳೆದರೆ  ಮೃತ್ಯು.

ಹೆಣ್ಣು ಹೊನ್ನು ‌ಮಣ್ಣಿನ‌ಮೇಲಿರುವ ಆಸೆಯಲ್ಲಿ  ಒಳಗಿರುವ ಪರಮಸತ್ಯ ಧರ್ಮ ತೊರೆದರೆ  ಮೃತ್ಯು. ಸಾವು ಎಲ್ಲರಿಗೂ ಇದೆ. ಯಾರು ಉಸಿರಿರುವಾಗಲೇ  ಪರಮಾತ್ಮನ ಅರಿತು ನಡೆದರೋ ಅವರು ಜೀವನ್ಮುಕ್ತರಾಗಿರುವರು.ಅರಿಯದವರು ಮೃತ್ಯುವಿನ ವಶವಾದರು. ಅದ್ವೈತ ಹೇಳೋದಿಷ್ಟೆ  ನಾನೆಂಬುದಿಲ್ಲ. ಪರಮಾತ್ಮ ಒಬ್ಬನೇ  ಇವೆಲ್ಲವೂ  ಆಂತರಿಕ ಶುದ್ದಿಯಿಂದಲೇ ಅರ್ಥ ವಾಗುವ ಅಧ್ಯಾತ್ಮ ಸತ್ಯ. ಎಲ್ಲಾ ಶೂನ್ಯ ಎಂದಾಗ ಆ ಶೂನ್ಯವನ್ನು ಹಿಡಿದು ಲೆಕ್ಕಹಾಕಿದರೆ‌ ಶೂನ್ಯವೆ .ಅದರ ಮುಂದೆ ಹಿಂದೆ 1 ಸೇರಿಸಿದರೂ  ಲೆಕ್ಕ ಬೆಳೆಯುತ್ತದೆ.
ಲೆಕ್ಕಾಚಾರ ವೇ ಆಸೆಯ ಪ್ರತೀಕ. ಅತಿಯಾದ ಲೆಕ್ಕಾಚಾರವೇ ಋಣ. ಋಣಮುಕ್ತರಾಗದೆ  ಜೀವನ್ಮುಕ್ತಿ ಯಿಲ್ಲ. ಭೂಮಿಯ ಮೇಲಿದ್ದು ಭೂ ಸೇವೆ ಮಾಡದೆ  ಸಾಲ ಏರಿಸಿದರೆ ಆಸೆಯೇ ದು:ಖಕ್ಕೆ ಕಾರಣವಾಗುತ್ತದೆ. ಅತಿಆಸೆ ಗತಿಗೇಡು ಎನ್ನುವರು.

Friday, September 5, 2025

ಶಿಕ್ಷಣದಲ್ಲಿ ಶಿಕ್ಷಕ= ಗುರು?

ಶಿಕ್ಷಕರ ದಿನಾಚರಣೆ ಭಾರತದಲ್ಲಿ ನಡೆಸುವಂತೆ ವಿದೇಶದಲ್ಲಿ ನಡೆಸುವರೆ? ಗುರು ಅಥವಾ ಶಿಕ್ಷಕ ಎರಡೂ ಪದ ಪವಿತ್ರವಾಗಿದೆ. ಪವಿತ್ರವಾಗಿರುವ ವಿಷಯಗಳನ್ನು ಕಲಿಸುವವರು ಗುರುವಾಗಿರುವರು. ವಿಷಯ ಕಲಿಸುವವರು ಶಿಕ್ಷಕರಾಗಿರುವರು. ಅಂದರೆ ವಿಷಯಾಂತರವಾದರೆ ಗುರು ಬೇರೆ ಶಿಕ್ಷಕ ಬೇರೆಯಾಗಿ ಆಚಾರ ವಿಚಾರ ಪ್ರಚಾರದಲ್ಲಿ ಅಂತರ ಬೆಳೆಯುತ್ತದೆ.
ನಮ್ಮ  ಗುರುಪೂರ್ಣಿಮೆಗೂ ಶಿಕ್ಷಕರ ದಿನಾಚರಣೆಗೂ ವ್ಯತ್ಯಾಸವಿದೆ. ಕಾರಣ ವಿಷಯ ಬೇರೆ ಬೇರೆ ಎನ್ನುವುದು.
ಜೀವನ ಶೈಲಿಯನ್ನು  ನೋಡಿದಾಗ  ಧರ್ಮ ಗುರುಗಳ ಜೀವನಕ್ಕೂ ಶಿಕ್ಷಕರಿಗೂ ಬೇರೆಯಾಗಿರುತ್ತದೆ.
ಒಟ್ಟಿನಲ್ಲಿ ಅಂತರ ದಿಂದ ಸಮಸ್ಯೆ ಬೆಳೆಯುತ್ತದೆ. ಅಂತರದಲ್ಲಿ ಮಧ್ಯವರ್ತಿಗಳು ‌ಬೆಳೆಯುವರು. ಅರ್ಧ ಸತ್ಯ  ಮಾತ್ರ ಅರ್ಥ ವಾದರೆ ಅತಂತ್ರಸ್ಥಿತಿಗೆ  ಜೀವ ತಲುಪುವುದು.
ಭಾಋಥಿಯ ಶಿಕ್ಷಣದ ಗುರಿಯೇ ಆತ್ಮೋನ್ನತಿ. ಜೀವೋನ್ನತಿ ಎಂದರೆ ತನ್ನ ಜೀವರಕ್ಷಣೆಯಾಗುತ್ತದೆ. ಜೀವನ‌ನಡೆಸಲು ವಿದ್ಯೆ ಅಗತ್ಯವಿದೆ. ವಿದ್ಯೆ ವಿನಯವನ್ನು‌ಬೆಳೆಸುತ್ತದೆ.ವಿನಯದಿಂದ ಜ್ಞಾನೋದಯವಾಗುತ್ತದೆ.ಹಿಂದಿನ ಕಾಲದಲ್ಲಿದ್ದ ಋಷಿಗಳ ಆಶ್ರಮ ದ ಗುರುಕುಲ ಶಿಕ್ಷಣ ಇಂದು ಹೈಟೆಕ್ ಪದ್ದತಿಯನ್ನು
ಕಾಣುತ್ತದೆ. ಮಕ್ಕಳ  ಮಾನಸಿಕತೆ  ಬೌದ್ದಿಕ ಶಕ್ತಿ ಹೊರನೋಟಕ್ಕೆ  ಸೀಮಿತವಾಗಿ  ಹಣವೇ ಸರ್ವಸ್ವ. ಹೀಗಾಗಿ ಹೊರಗಿನ ವಿದ್ಯೆ ಕಲಿಸುವವರು ಶಿಕ್ಷಕರು ಎನ್ನುವ ಮಟ್ಟಿಗೆ  ಆಚರಣೆ.
ಒಳಗಿನ ಶುದ್ದತೆಯಿಲ್ಲದೆ ಹೊರಗಿನ ಶಿಕ್ಷಣ ನೀಡಿದರೆ  ಸ್ವಚ್ಚ ಭಾರತವಾಗದು. ಇದರಿಂದಾಗಿ ಇಂದಿಗೂ  ಹೊರಗೆ ತಳುಕುಬಳುಕಿನ ಜೀವನ ಒಳಗೆ ಹುಳುಕಿನ ಜೀವನ.
ಎಲ್ಲರೂ ಒಂದೇ ಎನ್ನುವ ಹಾಗಿಲ್ಲ.ಬದಲಾವಣೆ ಆಗುತ್ತಿದೆ. ಇದು ಶಾಲಾಕಾಲೇಜ್ ಗಳಲ್ಲಿ ನಡೆದಾಗ ಹೆಚ್ಚಿನ‌ಬದಲಾವಣೆ ಸಾಧ್ಯವಿದೆ ಎನ್ನುವ ಕಾರಣಕ್ಕಾಗಿ  ರಾಷ್ಟ್ರೀಯ ಶಿಕ್ಷಣ ಪದ್ದತಿ ಜಾರಿಗೆ ಬಂದಿತ್ತು.ಅದರಲ್ಲೂ ರಾಜಕೀಯ ಬೆಳೆಸಿಕೊಂಡು  ಅಂತರ ಸೃಷ್ಟಿ ಮಾಡುತ್ತಾ ಮಕ್ಕಳ ಜ್ಞಾನವನ್ನು ಹೊರಗೆ ತೋರಿಸುವುದೇ ಮುಖ್ಯ ಎಂದರೆ  ತಪ್ಪು.
ನಿಧಾನವಾದರೂ ಸರಿ ಸ್ವತಂತ್ರ ಜ್ಞಾನಕ್ಕೆ ಸರಿಯಾದ ಶಿಕ್ಷಣ ಕೊಡುವುದೇ ಧರ್ಮ. ಇದರಿಂದಾಗಿ ಜ್ಞಾನೋದಯವಾಗುತ್ತದೆ. ಜ್ಞಾನದಿಂದ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗುತ್ತದೆ. ಸಮಾನತೆಯು ಜ್ಞಾನದಿಂದ ಬೆಳೆದಾಗ ಸಮಾಧಾನ ಒಳಗಿರುತ್ತದೆ. ಗುರುಬೇರೆಯಲ್ಲ ಶಿಕ್ಷಕ ಬೇರೆಯಲ್ಲ. ಉತ್ತಮ ವಿಷಯಗಳನ್ನು ತಿಳಿಸುವಾಗ ನಮ್ಮ ಅರಿವು  ನಮಗೆ  ಗುರುವಾಗಿರಬೇಕಿದೆ.ಯಾರದ್ದೋ ವಿಷಯ ಯಾವುದೋ ಕಾಲ ಯಾರದ್ದೋ ಅನುಭವವನ್ನು  ತಿಳಿಸುವಾಗ ದೇಶ‌ಕಾಲಮಾನ ಧರ್ಮ ಸತ್ಯದ  ಅರಿವು ಅಗತ್ಯವಿದೆ. ಪುಸ್ತಕದ ವಿಚಾರ‌ಮಸ್ತಕಕ್ಕೆ ಏರಿಸುವುದಕ್ಕೆ ಶಿಕ್ಷೆ ನೀಡುವಾಗ ಅದರಿಂದ ಹೃದಯವಂತಿಕೆ ಬೆಳೆದರೆ ಸರಿ.ಹೃದಯಹೀನರಾದರೆ ವ್ಯರ್ಥ. 
ಹೃದಯವಂತಿಕೆ ಎನ್ನುವುದು ಹಣದಿಂದ. ಬೆಳೆಸಲಾಗದು
ಸತ್ಯಜ್ಞಾನದಿಂದ ಮಾನವೀಯತೆ ಯ ಮೌಲ್ಯಗಳಿಂದ ಉತ್ತಮ ಆಹಾರ ವಿಹಾರ ಶಿಕ್ಷಣದಿಂದ ಬೆಳೆಸುವವರು ನಿಜವಾದ ಗುರುವೂ ಶಿಕ್ಷಕರೂ ಆಗಿದ್ದರು.‌ಈಗಲೂ ಇದ್ದಾರೆ ಆದರೆ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದವರು ವಿರಳವಾಗಿರುವರು. ಆಚರಣೆಯಲ್ಲಿ  ಸಂತೋಷವಿರುತ್ತದೆ.ಸಂಶೋಧನೆ  ಇರಬೇಕಿದೆ.
ನಮ್ಮನ್ನು ‌ನಾವು ಪರಿಶೋಧನೆ ಮಾಡಿಕೊಳ್ಳಲು  ಎರಡೂ ಕಡೆ  ಸಂಶೋಧನೆ ನಡೆಯುತ್ತಿರುತ್ತದೆ. ಹೊರಗೆ ಹೋದರೆ ಕಷ್ಟ ಒಳಗಿದ್ದರೆ ನಷ್ಟ. ಕಷ್ಟ ನಷ್ಟಗಳ ನಡುವೆ  ಸಂಶೋಧನೆ  ನಡೆಸುವುದೇ‌ ಕ್ಲಿಷ್ಟಕರ. ಅದಕ್ಕೆ ಹೇಳಿರುವುದು ನಿಮ್ಮ‌ನಿಮ್ಮ‌ಮನವ ತನುವ‌ಸಂತೃಸಿಕೊಳ್ಳಿ ಎಂದು. ಎಷ್ಟು ತಂತ್ರಬಳಸಿದರೂ ಸತ್ಯ ಒಂದೇ ಆಗಿರುವುದು.ಆ ಸತ್ಯ ಬಿಟ್ಟು ನಡೆದಷ್ಟೂ ಅಸತ್ಯವೇ  ಬೆಳೆಯುವುದು. ಸತ್ಯವೇ ದೇವರು.
ಸತ್ಯವಿಲ್ಲದ ಶಿಕ್ಷಣ ದೈವತ್ವ ಬೆಳೆಸದು. ಏನೇ ಇರಲಿ ಶಾಂತಿ ಇರಲಿ. ನಿಧಾನವಾದರೂ   ಸತ್ಯ ಪ್ರಧಾನವಿದ್ದರೆ ಜೀವನ ಸಾರ್ಥಕ  ಎನ್ನುವರು ಮಹಾಗುರುಗಳು.ಕಲಿಕೆಯ ಕಾಲ ಕಲಿಗಾಲ. ಕಲಿಕೆ ನಿರಂತರವಾಗಿರುತ್ತದೆ.ಅದು ಒಳಗೆ ಹೊರಗೆ ಒಂದೇ ಸಮನಾಗಿದ್ದರೆ  ಸಮಾಧಾನವಿರುತ್ತದೆ.